Domestic Violence : ಕಪ್ಪು ಎಂದು ಹೀಯಾಳಿಸುವ ಪತ್ನಿ ಜತೆ ಬದುಕು ಕಷ್ಟ; ಡೈವೋರ್ಸ್‌ ದಯಪಾಲಿಸಿದ ಹೈಕೋರ್ಟ್ - Vistara News

ಕರ್ನಾಟಕ

Domestic Violence : ಕಪ್ಪು ಎಂದು ಹೀಯಾಳಿಸುವ ಪತ್ನಿ ಜತೆ ಬದುಕು ಕಷ್ಟ; ಡೈವೋರ್ಸ್‌ ದಯಪಾಲಿಸಿದ ಹೈಕೋರ್ಟ್

Domestic Violence : ಕಪ್ಪು ಎಂದು ಹೀಯಾಳಿಸುತ್ತಿದ್ದ ಪತ್ನಿಯಿಂದ ಗಂಡನಿಗೆ ಹೈಕೋರ್ಟ್‌ ಮುಕ್ತಿ ನೀಡಿದೆ. ಇದು ದೊಡ್ಡ ಕ್ರೌರ್ಯ ಎಂದು ಹೇಳಿದೆ. ಅದು ನೀಡಿದ ಕಾರಣಗಳ ಸಂಪೂರ್ಣ ವಿವರ ಈ ವರದಿಯಲ್ಲಿದೆ.

VISTARANEWS.COM


on

Karnataka high court teachers appointment
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಹೆಂಡತಿಯೊಬ್ಬಳು ಗಂಡನನ್ನು ಪದೇಪದೆ ಅವನ ಚರ್ಮದ ಬಣ್ಣದ ಆಧಾರದಲ್ಲಿ (Condemning on the Basis of skin colour) ಹೀಯಾಳಿಸುವುದು ಕ್ರೌರ್ಯವಾಗುತ್ತದೆ (Cruelty) ಎಂದು ಹೈಕೋರ್ಟ್‌ (Karnataka High court) ಅಭಿಪ್ರಾಯಪಟ್ಟಿದೆ. ಮಾತ್ರವಲ್ಲ, ಅಂಥ ಹೆಂಡತಿಯೊಂದಿಗೆ ಬಾಳ್ವೆ ನಡೆಸುವುದು ಕಷ್ಟ ಎಂದು ಹೇಳಿ ಡೈವೋರ್ಸ್‌ ದಯಪಾಲಿಸಿದೆ. ಈ ಘಟನೆ ನಡೆದಿರುವುದು‌ (Domestic Violence) ಕರ್ನಾಟಕ ಹೈಕೋರ್ಟ್‌ನಲ್ಲಿ.

ಮದುವೆಯಾಗಿ ಐದೇ ವರ್ಷದಲ್ಲಿ ಅವರಿಬ್ಬರು ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ, ಇಂಥ ಸಣ್ಣ ವಿಷಯಕ್ಕೆಲ್ಲ ಡೈವೋರ್ಸ್‌ ಕೊಡಲು ಸಾಧ್ಯವಿಲ್ಲ ಎಂದು ಕೌಟುಂಬಿಕ ನ್ಯಾಯಾಲಯ ಅವಕಾಶ ಕೊಟ್ಟಿರಲಿಲ್ಲ. ಇದನ್ನು ಪ್ರಶ್ನಿಸಿ ಪತಿ ಹೈಕೋರ್ಟ್‌ ಮೆಟ್ಟಿಲು ಏರಿದ್ದರು. ಈಗ ಹೈಕೋರ್ಟ್‌ ಡೈವೋರ್ಸ್‌ ನೀಡಿದೆ.

ಏನಿದು ಕಪ್ಪು ಚರ್ಮದ ನಿಂದನೆ ಪ್ರಕರಣ?

ಬೆಂಗಳೂರಿನ ನಿವಾಸಿಗಳಾಗಿದ್ದ ಅವರಿಬ್ಬರಿಗೆ ಮದುವೆಯಾಗಿದ್ದು 2007ರಲ್ಲಿ. ಕೆಲವೇ ವರ್ಷಗಳಲ್ಲಿ ಅವರಿಬ್ಬರ ಸಂಬಂಧ ಹಳಸಿತ್ತು. ಹೆಂಡತಿ ಪದೇಪದೆ ನಾನು ಕಪ್ಪು ಕಪ್ಪು ಎಂದು ಹೀಯಾಳಿಸುತ್ತಿದ್ದರು ಎಂದು ಆಪಾದಿಸಿ 2012ರಲ್ಲಿ ಪತಿ ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ್ದರು. ಆದರೆ, ಬೆಂಗಳೂರಿನ 2ನೇ ಹೆಚ್ಚುವರಿ ಪ್ರಧಾನ ಕೌಟುಂಬಿಕ ನ್ಯಾಯಾಲಯ 2017ರ ಜ.13ರಂದು ಡೈವೋರ್ಸ್‌ ನಿರಾಕರಿಸಿತ್ತು.

ಕೌಟುಂಬಿಕ ನ್ಯಾಯಾಲಯದಲ್ಲಿ ಗಂಡನ ಆರೋಪಗಳೇನು?

  1. ವಿವಾಹ ನಂತರ ಪತ್ನಿ ಸದಾ ನನ್ನನ್ನು ಕಪ್ಪು ಚರ್ಮದವರೆಂದು ಹೇಳುತ್ತಾ ಅವಮಾನಿಸುತ್ತಿದ್ದಳು. ಆದರೆ, ಮಗಳಿಗಾಗಿ ನಾನು ಆ ಅವಮಾನ ಸಹಿಕೊಳ್ಳುತ್ತಿದ್ದೆ.
  2. 2011ರ ಅ.29ರಂದು ಪತ್ನಿಯು ನನ್ನ ಹಾಗೂ ವೃದ್ಧ ತಾಯಿ ಸೇರಿ ಕುಟುಂಬ ಸದಸ್ಯರೆಲ್ಲರ ವಿರುದ್ಧ ಕಿರುಕುಳ ಮತ್ತು ಕೌಟುಂಬಿಕ ದೌರ್ಜನ್ಯ ಆರೋಪದಡಿ ಪ್ರಕರಣ ದಾಖಲಿಸಿದ್ದರು.
  3. ಆ ದೂರಿನ ಸಂಬಂಧ ಪೊಲೀಸರು ನನಗೆ ಸಾಕಷ್ಟು ಕಿರುಕುಳ ನೀಡಿದ್ದಾರೆ. ಹಲವು ದಿನಗಳ ಕಾಲ ಪೊಲೀಸ್‌ ಠಾಣೆ ಮತ್ತು ಕೋರ್ಚ್‌ಗೆ ಅಲೆದಾಡುವಂತಾಯಿತು.
  4. ಇಷ್ಟೆಲ್ಲ ಗಲಾಟೆಗಳಾದ ಬಳಿಕ ಆಕೆ ನನ್ನನ್ನು ತೊರೆದು ತವರು ಮನೆ ಸೇರಿದವರು ವಾಪಸಾಗಿಲ್ಲ.
  5. ಅವಳಿಗೆ ನನ್ನೊಂದಿಗೆ ದಾಂಪತ್ಯ ಜೀವನ ಮುಂದುವರಿಸಲು ಆಸಕ್ತಿ ಇಲ್ಲ.
  6. ಆಕೆ ನಾನು ಉದ್ಯೋಗ ಮಾಡುವ ಕಂಪನಿಗೂ ದೂರು ನೀಡಿದ್ದು, ಅವರು ಕೂಡಾ ನನ್ನನ್ನು ವಿಚಾರಣೆ ನಡೆಸಿದ್ದಾರೆ. ಇದರಿಂದ ನನಗೆ ಮಾನಸಿಕ ಯಾತನೆ ನೀಡಿದೆ.
  7. ಆಕೆ ವಿಧವಿಧವಾಗಿ ನನಗೆ ಹಿಂಸೆ ನೀಡುತ್ತಿರುವುದಿಂದ ಇದನ್ನು ಕ್ರೌರ್ಯ ಪರಿಗಣಿಸಿ ವಿಚ್ಛೇದನ ಮಂಜೂರು ಮಾಡಬೇಕು.

ಆದರೆ, ಇದಿಷ್ಟನ್ನೇ ಇಟ್ಟುಕೊಂಡು ಡೈವೋರ್ಸ್‌ ನೀಡಲಾಗದು ಎಂದು ಕೌಟುಂಬಿಕ ನ್ಯಾಯಾಲಯ ಹೇಳಿತ್ತು. ಇದನ್ನು ಪ್ರಶ್ನಿಸಿ ಪತಿ ಹೈಕೋರ್ಟ್‌ ಮೆಟ್ಟಿಲೇರಿದ್ದರು.

ಹೈಕೋರ್ಟ್‌ನಲ್ಲಿ ಪತ್ನಿ ಹೇಳಿದ್ದೇನು?

ಕೌಟುಂಬಿಕ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿದ ಪತಿ ಸಲ್ಲಿಸಿದ ಅರ್ಜಿಗೆ ಪ್ರತಿಯಾಗಿ ಪತ್ನಿಯೂ ದಾವೆ ಸಲ್ಲಿಸಿದ್ದರು. ʻʻನನ್ನ ಗಂಡನಿಗೆ ಬೇರೊಂದು ಮಹಿಳೆಯೊಂದಿಗೆ ಅಕ್ರಮ ಸಂಬಂಧವಿತ್ತು. ಅವರ ಸಂಬಂಧದಲ್ಲಿ ಒಂದು ಮಗು ಕೂಡಾ ಇದೆ. ನಾನು ಮೊದಲಿಗೆ ಗಂಡನ ಮನೆಯಲ್ಲಿಯೇ ಅತ್ತೆ, ನಾದಿನಿ ಮತ್ತು ಮೈದುನನ ಜೊತೆಗೆ ವಾಸವಾಗಿದ್ದೆ. 2011ರ ಏ.7ರಂದು ಪ್ರತ್ಯೇಕ ಮನೆ ಮಾಡಿದಾಗಲೂ ಗಂಡನ ಕುಟುಂಬ ಸದಸ್ಯರು ಮನೆಗೆ ಬರುತ್ತಿದ್ದರು. ಆದರೆ, ಗಂಡ ನನ್ನ ಜತೆ ಕೆಟ್ಟದಾಗಿ ವರ್ತಿಸುತ್ತಿದ್ದರು. ನಿತ್ಯ ಮನೆಗೆ ರಾತ್ರಿ ತಡವಾಗಿ ಬರುತ್ತಿದ್ದರು. ನನ್ನನ್ನು ಮನೆಯಿಂದ ಹೊರಗೆ ಹೋಗಲು ಬಿಡುತ್ತಿರಲಿಲ್ಲʼʼ ಎಂದು ದೂರು ಸಲ್ಲಿಸಿದ್ದರು.

ಹೈಕೋರ್ಟ್‌ ಡೈವೋರ್ಸ್‌ ಕೊಡಲು ಕಾರಣವೇನು?

  1. ಪತಿಯ ಅಕ್ರಮ ಸಂಬಂಧ ಕುರಿತಂತೆ ಪತ್ನಿ ಆಧಾರರಹಿತ ಆರೋಪ ಮಾಡಿದ್ದಾರೆ. ಆದರೆ, ಇದಕ್ಕೆ ಪೂರಕವಾದ ಸಾಕ್ಷಿಗಳಿಲ್ಲ. ಆದರೆ, ಇಂತಹ ಆರೋಪ ಮಾಡುವ ಮೂಲಕ ಕ್ರೂರವಾಗಿ ವರ್ತಿಸಿದ್ದಾರೆ.
  2. ಮಹಿಳೆ ತನ್ನ ಪತಿ ಮತ್ತವರ ಕುಟುಂಬ ಸದಸ್ಯರ ವಿರುದ್ಧ ಹಲವು ಕ್ರಿಮಿನಲ್‌ ಕೇಸು ದಾಖಲಿಸಿದ್ದಾರೆ.
  3. ‘ಕಪ್ಪು ಚರ್ಮದವರು’ ಎಂದು ಸದಾ ಹೇಳುವ ಮೂಲಕ ಪತಿಗೆ ಪತ್ನಿ ಅವಮಾನ ಮಾಡುತ್ತಿದ್ದರು.
  4. ಸಕಾರಣವಿಲ್ಲದಿದ್ದರೂ ಪತಿಯ ಜೊತೆ ಇರದೇ ಪತ್ನಿ ತವರು ಮನೆ ಸೇರಿದ್ದಾರೆ.
  5. ಹಲವು ವರ್ಷಗಳಿಂದ ಪತಿಯ ಸಂಪರ್ಕದಲ್ಲಿ ಇಲ್ಲದ ಪತ್ನಿ, ಪತಿಯೊಂದಿಗೆ ಸಹಬಾಳ್ವೆ ನಡೆಸಲು ಸಿದ್ಧಳಿದ್ದೇನೆ. ಆದರೆ, ಯಾವ ಕಾರಣಕ್ಕೂ ಅವರ ವಿರುದ್ಧ ದಾಖಲಿಸಿರುವ ದೂರು ಹಿಂಪಡೆಯವುದಿಲ್ಲ ಎಂದು ಸ್ಪಷ್ಟವಾಗಿ ಹೇಳಿದ್ದಾರೆ. ಹೀಗಾಗಿ ಅವರು ಪತಿಯೊಂದಿಗೆ ಬಾಳುವ ಆಸಕ್ತಿ ಹೊಂದಿಲ್ಲ ಎನ್ನುವುದು ಸ್ಪಷ್ಟ.
  6. ಅವರ ಸಂಬಂಧದಲ್ಲಿ ದೊಡ್ಡ ಬಿರುಕು ಇರುವುದು ಸ್ಪಷ್ಟವಾಗುತ್ತದೆ. ಆದ್ದರಿಂದ ಕ್ರೌರ್ಯದ ಆಧಾರದ ಮೇಲೆ ಪತಿಗೆ ವಿಚ್ಛೇದನ ಮಾಡಬಹುದಾಗಿದೆ.
  7. ಒಂದು ವೇಳೆ ಪತ್ನಿ ಜೀವನಾಂಶ ಕೋರಿ ಅರ್ಜಿ ಸಲ್ಲಿಸಿದರೆ ಕೌಟುಂಬಿಕ ನ್ಯಾಯಾಲಯ ಪರಿಶೀಲಿಸಿ ನಿರ್ಧರಿಸಬೇಕು ಎಂದು ಹೈಕೋರ್ಟ್‌ ಆದೇಶದಲ್ಲಿ ತಿಳಿಸಿದೆ.

ಇದನ್ನೂ ಓದಿ: High court :‌ ಪತ್ನಿ, ಮಕ್ಕಳ ಪಾಲನೆ ಗಂಡನ ಧರ್ಮ ; ಜೀವನಾಂಶ ಕೊಡಲೊಪ್ಪದವನಿಗೆ ಕುರಾನ್‌ ಪಾಠ ಮಾಡಿದ ನ್ಯಾ. ದೀಕ್ಷಿತ್

ಬೆಂಗಳೂರು: ಹೆಂಡತಿಯೊಬ್ಬಳು ಗಂಡನನ್ನು ಪದೇಪದೆ ಅವನ ಚರ್ಮದ ಬಣ್ಣದ ಆಧಾರದಲ್ಲಿ (Condemning on the Basis of skin colour) ಹೀಯಾಳಿಸುವುದು ಕ್ರೌರ್ಯವಾಗುತ್ತದೆ (Cruelty by wife) ಎಂದು ಹೈಕೋರ್ಟ್‌ (Karnataka High court) ಅಭಿಪ್ರಾಯಪಟ್ಟಿದೆ. ಮಾತ್ರವಲ್ಲ, ಅಂಥ ಹೆಂಡತಿಯೊಂದಿಗೆ ಬಾಳ್ವೆ ನಡೆಸುವುದು ಕಷ್ಟ ಎಂದು ಹೇಳಿ ಡೈವೋರ್ಸ್‌ ದಯಪಾಲಿಸಿದೆ. ಈ ಘಟನೆ ನಡೆದಿರುವುದು‌ (Domestic Violence) ಕರ್ನಾಟಕ ಹೈಕೋರ್ಟ್‌ನಲ್ಲಿ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕರ್ನಾಟಕ

Udupi Gang War: ಉಡುಪಿ ಗ್ಯಾಂಗ್ ವಾರ್ ಪ್ರಕರಣ; ಮತ್ತೆ ಮೂವರು ಆರೋಪಿಗಳ ಬಂಧನ

Udupi Gang War: ಉಡುಪಿ ಗ್ಯಾಂಗ್ ವಾರ್ ಪ್ರಕರಣ ಸಂಬಂಧ ಈ ಮೊದಲು ಮೂವರು ಆರೋಪಿಗಳನ್ನು ಬಂಧಿಸಲಾಗಿತ್ತು. ಇದೀಗ ಮತ್ತೆ ಮೂವರನ್ನು ಸೆರೆ ಹಿಡಿಯಲಾಗಿದೆ.

VISTARANEWS.COM


on

Udupi Gang War
Koo

ಉಡುಪಿ: ನಗರದಲ್ಲಿ ನಡೆದ ಗ್ಯಾಂಗ್ ವಾರ್ ಪ್ರಕರಣದಲ್ಲಿ (Udupi Gang War) ಮತ್ತೆ ಮೂವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಕಾಪು ಮೂಲದ ಗರುಡ ಗ್ಯಾಂಗ್‌ನ ಎರಡು ಗುಂಪುಗಳ ನಡುವೆ ಹೊಡೆದಾಟ ನಡೆದಿತ್ತು. ಇದಕ್ಕೆ ಸಂಬಂಧಪಟ್ಟಂತೆ ಈ ಮೊದಲು ಮೂವರು ಆರೋಪಿಗಳನ್ನು ಬಂಧಿಸಲಾಗಿತ್ತು. ಇದೀಗ ಮತ್ತೆ ಮೂವರನ್ನು ಸೆರೆ ಹಿಡಿಯಲಾಗಿದೆ.

ಗರುಡ ಗ್ಯಾಂಗ್‌ನ ಮಜೀದ್, ಅಲ್ಫಾಜ್, ಶರೀಫ್ ಬಂಧಿತರು. ಈ ಮೊದಲು ಆಶಿಕ್, ರಾಕೀಬ್, ಸಕ್ಲೈನ್ ಎಂಬುವವರನ್ನು ಬಂಧಿಸಲಾಗಿತ್ತು. ಘಟನೆಯ ಗಂಭೀರತೆ ಮತ್ತು ಸಾರ್ವಜನಿಕರ ಆಗ್ರಹದ ನಡುವೆ ಪೊಲೀಸರು ಕಾರ್ಯಾಚರಣೆ ನಡೆಸಿ, ಮತ್ತೆ ಮೂವರನ್ನು ಬಂಧಿಸಿದ್ದಾರೆ. ಇದುವರೆಗೆ ಪ್ರಕರಣದಲ್ಲಿ ಒಟ್ಟು ಆರು ಜನರನ್ನು ಬಂಧಿಸಿದಂತಾಗಿದೆ.

ಇದನ್ನೂ ಓದಿ | Road Accident : ಕಾರು ಡ್ರೈವಿಂಗ್‌ ಕಲಿಯುವಾಗ ಬ್ರೇಕ್‌ ಬದಲು ಎಕ್ಸಿಲೇಟರ್‌ ತುಳಿದಳು; ಡೆಡ್ಲಿ ಆಕ್ಸಿಡೆಂಟ್‌ಗೆ ಬಾಲಕಿ ಬಲಿ

ಏನಿದು ಪ್ರಕರಣ?

ಮೇ 18 ರಂದು ತಡರಾತ್ರಿ ಉಡುಪಿಯ ಶಾರದಾ ಕಲ್ಯಾಣ ಮಂಟಪಕ್ಕೆ ತೆರಳುವ ರಸ್ತೆಯ ಬಳಿ ನಡೆದಿದ್ದ ಗ್ಯಾಂಗ್ ವಾರ್ (Udupi Gang War) ನಗರವನ್ನು ಬೆಚ್ಚಿಬೀಳಿಸಿತ್ತು. ಎರಡು ಕಾರುಗಳಲ್ಲಿ ಬಂದ ಯುವಕರ ನಡುವೆ ನಡುರಸ್ತೆಯಲ್ಲಿ ಮಾರಾಮಾರಿ ನಡೆದಿತ್ತು. ಎರಡು ತಂಡಗಳ 6 ಯುವಕರು ಪರಸ್ಪರ ಕಾರುಗಳಿಂದ ಡಿಕ್ಕಿ ಹೊಡೆದುಕೊಂಡು, ಕೈಗೆ ಸಿಕ್ಕ ವಸ್ತುಗಳಿಂದ ಹಲ್ಲೆ ಮಾಡಿಕೊಂಡ ದೃಶ್ಯ ಸ್ಥಳೀಯರ ಮೊಬೈಲ್‌ನಲ್ಲಿ ಸೆರೆಯಾಗಿಯತ್ತು.

ಎರಡು ಕಾರುಗಳಲ್ಲಿ ಬಂದ ಯುವಕರ ನಡುವೆ ನಡುರಸ್ತೆಯಲ್ಲಿ ಮಾರಾಮಾರಿ ನಡೆದಿತ್ತು. ಒಂದು ಕಾರಿಗೆ ಇನ್ನೊಂದು ಕಾರು ಡಿಕ್ಕಿ ಹೊಡೆದು, ಅಡ್ಡ ಬಂದ ತಂಡದ ಒಬ್ಬ ಸದಸ್ಯನಿಗೂ ಕಾರು ಗುದ್ದಿತ್ತು. ಕಾಪು ಮೂಲದ ಎರಡು ತಂಡಗಳ ನಡುವೆ ಹೊಡೆದಾಟ ನಡೆದಿತ್ತು. ಯುವಕರ ಮಾರಾಮಾರಿಯನ್ನು ಹತ್ತಿರದ ಕಟ್ಟಡ ಮೇಲಿಂದ ಸ್ಥಳೀಯರು ವಿಡಿಯೊ ಚಿತ್ರೀಕರಣ ಮಾಡಿದ್ದರು.

ಲಾಕಪ್‌ ಡೆತ್‌ ಕೇಸ್; ಸಹಜ‌ ಸ್ಥಿತಿಯತ್ತ ಚನ್ನಗಿರಿ ಪಟ್ಟಣ

ದಾವಣಗೆರೆ: ಯುವಕನ ಲಾಕಪ್‌ ಡೆತ್‌ ಪ್ರಕರಣದಿಂದ ಉದ್ವಿಗ್ನಗೊಂಡಿದ್ದ ಜಿಲ್ಲೆಯ ಚನ್ನಗಿರಿ ಪಟ್ಟಣ ಸಹಜ‌ ಸ್ಥಿತಿಯತ್ತ ಮರಳುತ್ತಿದೆ. ಪೊಲೀಸ್‌ ಠಾಣೆ ಮೇಲೆ ಕಲ್ಲು ತೂರಾಟ ನಡೆದಿದ್ದರಿಂದ ಆಯ ಕಟ್ಟಿನ ಸ್ಥಳಗಳಲ್ಲಿ ಪೊಲೀಸ್ ಬಂದೋಬಸ್ತ್ ಮುಂದುವರಿದಿದೆ. ಕಲ್ಲು ತೂರಾಟ ಮಾಡಿದ ಹಿನ್ನೆಲೆಯಲ್ಲಿ ನೆನ್ನೆ ರಾತ್ರಿಯೇ ಹತ್ತು ಜನರನ್ನ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ಆರಂಭಿಸಿದ್ದಾರೆ.

ಪೊಲೀಸ್ ವಶದಲ್ಲಿದ್ದ ಆದಿಲ್ (32) ಎಂಬ ವ್ಯಕ್ತಿ ಸಾವಿಗೀಡಾದ ಹಿನ್ನೆಲೆಯಲ್ಲಿ ಲಾಕಪ್ ಡೆತ್ ಆರೋಪ ಕೇಳಿಬಂದಿತ್ತು. ಇದರಿಂದ ರೊಚ್ಚಿಗೆದ್ದ ಕೆಲ ಕಿಡಿಗೇಡಿಗಳು ಚನ್ನಗಿರಿ ಪೊಲೀಸ್ ಠಾಣೆ ಮೇಲೆ ಕಲ್ಲು ತೂರಾಟ ಮಾಡಿದ್ದರು. ಈ ವೇಳೆ ಐದು ಪೊಲೀಸ್ ವಾಹನ‌‌ ಜಖಂಗೊಂಡು, ಹನ್ನೊಂದು ಪೊಲೀಸರಿಗೆ ಗಾಯಗಳಾಗಿದ್ದವು. 200ಕ್ಕೂ ಹೆಚ್ಚು ಜನರಿಂದ ಏಕಕಾಲಕ್ಕೆ ದಾಳಿಯಾದ ಹಿನ್ನೆಲೆ ಚನ್ನಗಿರಿ ಪಟ್ಟಣದಲ್ಲಿ ಉದ್ವಿಗ್ನ ಪರಿಸ್ಥಿತಿ ಏರ್ಪಟ್ಟಿತ್ತು.

ಈಗ ಶವ ಪರೀಕ್ಷೆ ವರದಿ ಮೇಲೆ ಎಲ್ಲರ ಚಿತ್ತ ನೆಟ್ಟಿದೆ. ಆದಿಲ್‌ ಪೊಲೀಸ್ ಠಾಣೆಯಲ್ಲಿದ್ದದ್ದು ಕೇವಲ‌ ಏಳು ನಿಮಿಷ. ಈ ವೇಳೆ ಕಡಿಮೆ ರಕ್ತದೊತ್ತಡದಿಂದ ಹೃದಯಾಘಾತವಾಗಿ ಸಾವನ್ನಪ್ಪಿರುವ ಶಂಕೆ ವ್ಯಕ್ತವಾಗಿದೆ. ಇಂದು ವೈದ್ಯರು ಪ್ರಾಥಮಿಕ ವರದಿ ನೀಡುವ ಸಾಧ್ಯತೆ ಇದೆ.

Continue Reading

ಕ್ರೈಂ

Road Accident : ಕಾರು ಡ್ರೈವಿಂಗ್‌ ಕಲಿಯುವಾಗ ಬ್ರೇಕ್‌ ಬದಲು ಎಕ್ಸಿಲೇಟರ್‌ ತುಳಿದಳು; ಡೆಡ್ಲಿ ಆಕ್ಸಿಡೆಂಟ್‌ಗೆ ಬಾಲಕಿ ಬಲಿ

Road Accident : ಮನೆ ಮುಂದೆ ಆಟವಾಡುತ್ತಿದ್ದ ಬಾಲಕಿಗೆ ಕಾರೊಂದು ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಗಂಭೀರ ಗಾಯಗೊಂಡ ಬಾಲಕಿ ಸ್ಥಳದಲ್ಲೇ ಅಸುನೀಗಿದ್ದಾಳೆ. ಮಹಿಳೆಯೊಬ್ಬರು ಕಾರು ಕಲಿಯಲು ಹೋಗಿ ದುರ್ಘಟನೆ ಸಂಭವಿಸಿದೆ ಎನ್ನಲಾಗಿದೆ.

VISTARANEWS.COM


on

By

Road Accident in Bengaluru
Koo

ಬೆಂಗಳೂರು: ಮಹಿಳೆಯೊಬ್ಬರು ಕಾರು ಕಲಿಯುವಾಗ (Car Driving) ನಿಯಂತ್ರಣ ತಪ್ಪಿದ್ದು, ಮನೆ ಮುಂದೆ ಆಟವಾಡುತ್ತಿದ್ದ ಬಾಲಕಿಗೆ ಗುದ್ದಿದೆ. ಪರಿಣಾಮ ಕಾರು ಡಿಕ್ಕಿ ಹೊಡೆದ ರಭಸಕ್ಕೆ ಬಾಲಕಿಗೆ (Road Accident) ಗಂಭೀರ ಗಾಯವಾಗಿದ್ದು, ಸ್ಥಳದಲ್ಲೇ ಮೃತಪಟ್ಟಿದೆ. ಬೆಂಗಳೂರು ದಕ್ಷಿಣ ತಾಲೂಕಿನ ಕಗ್ಗಲೀಪುರ ಗ್ರಾಮದಲ್ಲಿ ಅಪಘಾತ ನಡೆದಿದೆ.

ಕಗ್ಗಲೀಪುರದ ನಿವಾಸಿಗಳಾದ ವೆಂಕಟೇಶ್‌ ಮತ್ತು ಲಕ್ಷ್ಮೀ ದಂಪತಿಯ ಮಗಳು ನಾಗಲಕ್ಷ್ಮೀ (7) ಮೃತ ದುರ್ದೈವಿ. ಪಕ್ಕದ ಮನೆಯ ಮಹಿಳೆಯೊಬ್ಬರು ಕಾರು ಕಲಿಯಲು ಮುಂದಾಗಿದ್ದರು. ಇದೇ ವೇಳೆ ನಾಗಲಕ್ಷ್ಮೀ ಮನೆ ಮುಂದೆ ಆಟವಾಡುತ್ತಿದ್ದಳು. ಕಾರು ಓಡಿಸುವಾಗ ನಿಯಂತ್ರಣ ತಪ್ಪಿದ್ದು ಏಕಾಏಕಿ ವೇಗವಾಗಿ ಬಂದು ನಾಗಲಕ್ಷ್ಮಿಗೆ ಗುದ್ದಿ, ಮನೆಯೊಂದರ ತಡೆಗೋಡೆ ಡಿಕ್ಕಿ ಹೊಡೆದು ನಿಂತಿದೆ. ನಾಗಲಕ್ಷ್ಮೀ ತಲೆಗೆ ಪೆಟ್ಟು ಬಿದ್ದಿದ್ದು, ರಕ್ತಸ್ರಾವವಾಗಿ ಮೃತಪಟ್ಟಿದ್ದಾಳೆ. ಬ್ರೇಕ್‌ ಬದಲು ಎಕ್ಸಿಲೇಟರ್‌ ತುಳಿದಿದ್ದೆ ಈ ಅವಘಡಕ್ಕೆ ಕಾರಣ ಎನ್ನಲಾಗಿದೆ.

Road Accident

ಮೃತಳ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಸ್ಥಳಕ್ಕೆ ಕಗ್ಗಲೀಪುರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮರಣೋತ್ತರ ಪರೀಕ್ಷೆ ಬಳಿಕ ಮೃತದೇಹವನ್ನು ಪೋಷಕರಿಗೆ ಹಸ್ತಾಂತರ ಮಾಡಲಾಗಿದೆ. ಅಪಘಾತ ಮಾಡಿದ ಮಹಿಳೆಯನ್ನು ವಶಕ್ಕೆ ಪಡೆದು ಕಾರನ್ನು ಸೀಜ್‌ ಮಾಡಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ.

ಚಿಕ್ಕೋಡಿಯಲ್ಲಿ ಸರಣಿ ಅಪಘಾತ; ಮೂವರ ಸ್ಥಿತಿ ಗಂಭೀರ

ಬೆಳಗಾವಿ ಜಿಲ್ಲೆ ಚಿಕ್ಕೋಡಿ ಪಟ್ಟಣದ ಹೊರವಲಯದ ಮಾಹಲಿಂಗಪುರ-ನಿಪ್ಪಾಣಿ ರಾಜ್ಯ ಹೆದ್ದಾರಿಯಲ್ಲಿ ಸರಣಿ ಅಪಘಾತ ಸಂಭವಿಸಿದೆ. ಬೃಹತ್ ಲಾರಿ- ಕಾರು ಹಾಗೂ ಎರಡು ಬೈಕುಗಳ ನಡುವೆ ಅಪಘಾತ ನಡೆದಿದೆ. ಅಪಘಾತ ತೀವ್ರತೆಗೆ ಮೂವರ ಸ್ಥಿತಿ ಗಂಭೀರವಾಗಿದೆ. ಸ್ಥಳಕ್ಕೆ ಚಿಕ್ಕೋಡಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಗಾಯಾಳುಗಳನ್ನು ಚಿಕ್ಕೋಡಿ ಖಾಸಗಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಚಿಕ್ಕೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಪಘಾತ ನಡೆದಿದೆ.

ಇದನ್ನೂ ಓದಿ: Hassan Accident: ಹಾಸನದಲ್ಲಿ ಭೀಕರ ಅಪಘಾತ: ಸ್ಥಳದಲ್ಲೇ ಐವರ ದುರ್ಮರಣ

ಬಸ್‌ಗೆ ಸ್ಕೂಟರ್‌ ಡಿಕ್ಕಿ; ಸವಾರನ ಪ್ರಾಣವನ್ನೇ ಕಸಿದ ಅತಿ ವೇಗ ಚಾಲನೆ

ಕಾರವಾರ: ಬಸ್‌ಗೆ ಸ್ಕೂಟರ್‌ ಡಿಕ್ಕಿಯಾಗಿದ್ದು, ಸವಾರರೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಉತ್ತರ ಕನ್ನಡದ ಹೊನ್ನಾವರದ ರಾಷ್ಟ್ರೀಯ ಹೆದ್ದಾರಿ 66ರ ಹಳದೀಪುರ ಗ್ರಾಮದ ಬಳಿ ಘಟನೆ (Road Accident) ನಡದಿದೆ. ಸವಾರ ಶಂಕರ ಹೆಗಡೆ (50) ಮೃತ ದುರ್ದೈವಿ.

ಕೆಎಸ್‌ಆರ್‌ಟಿಸಿ ಬಸ್‌ ಭಟ್ಕಳ ಭಾಗದಿಂದ ಕುಮಟಾದತ್ತ ತೆರಳುತ್ತಿತ್ತು. ಈ ವೇಳೆ ಎದುರಿನಿಂದ ವೇಗವಾಗಿ ಬಂದ ಸ್ಕೂಟರ್‌ ಬಸ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಸ್ಕೂಟರ್‌ ಸಂಪೂರ್ಣ ನಜ್ಜುಗುಜ್ಜಾಗಿದ್ದು, ಗಂಭೀರ ಗಾಯಗೊಂಡ ಶಂಕರ ಅವರು ರಕ್ತಸ್ರಾವವಾಗಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಹೊನ್ನಾವರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಘಟನೆ ಸಂಬಂಧ ಹೊನ್ನಾವರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಪಘಾತದಲ್ಲಿ ಬಸ್‌ ಮುಂಭಾಗ ಹಾನಿಯಾಗಿದ್ದು, ಅದೃಷ್ಟವಶಾತ್‌ ಬಸ್ಸಿನಲ್ಲಿದ್ದ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಕರ್ನಾಟಕ

Gold Rate Today: ಇಂದೂ ಯಥಾಸ್ಥಿತಿ ಕಾಯ್ದುಕೊಂಡ ಚಿನ್ನ, ಬೆಳ್ಳಿ ದರ

Gold Rate Today:ಇಂದು ನೀವು ಬೆಂಗಳೂರಿನಲ್ಲಿ ಒಂದು ಗ್ರಾಂ 22 ಕ್ಯಾರಟ್‌ ಚಿನ್ನವನ್ನು ₹6,640ಕ್ಕೆ ಖರೀದಿಸಬಹುದು. ಎಂಟು ಗ್ರಾಂ ಬೆಲೆ ₹53,120 ಇದೆ. 10 ಗ್ರಾಂ ಮತ್ತು 100 ಗ್ರಾಂನ 22 ಕ್ಯಾರಟ್‌ ಚಿನ್ನವನ್ನು ₹66,400 ಮತ್ತು ₹6,64,000 ದರದಲ್ಲಿ ಖರೀದಿಸಬಹುದು. ಒಂದು ಗ್ರಾಂ 24 ಕ್ಯಾರಟ್‌ ಚಿನ್ನದ ಬೆಲೆ ₹7,244 ಆಗಿದ್ದರೆ, ಎಂಟು ಗ್ರಾಂ ಬೆಲೆ ₹57,952 ಆಗಿದೆ. 10 ಗ್ರಾಂ ಮತ್ತು 100 ಗ್ರಾಂ 24 ಕ್ಯಾರಟ್‌ ಚಿನ್ನವನ್ನು ಖರೀದಿಸಲು ಕ್ರಮವಾಗಿ ₹72,440 ಮತ್ತು ₹7,24,400 ವೆಚ್ಚವಾಗಲಿದೆ.

VISTARANEWS.COM


on

Gold Rate Today
Koo

ಬೆಂಗಳೂರು: ರಾಜ್ಯದ ಚಿನ್ನದ ಮಾರುಕಟ್ಟೆಯಲ್ಲಿ ಶುಕ್ರವಾರ 22 ಕ್ಯಾರಟ್‌ ಮತ್ತು 24 ಕ್ಯಾರಟ್‌ ಬಂಗಾರದ ಧಾರಣೆ (Gold Rate Today) ನಿನ್ನೆಯಂತೆ ಯಥಾಸ್ಥಿತಿ ಕಾಪಾಡಿಕೊಂಡಿವೆ. ನಿನ್ನೆ (ಶುಕ್ರವಾರ) 10 ಗ್ರಾಂ 22 ಕ್ಯಾರಟ್‌ ಮತ್ತು 24 ಕ್ಯಾರಟ್‌ ಚಿನ್ನದ ಬೆಲೆ ಕ್ರಮವಾಗಿ ₹900 ಹಾಗೂ ₹980 ಇಳಿಕೆಯಾಗಿದ್ದವು. ಮೊನ್ನೆಯೂ (ಗುರುವಾರ) 10 ಗ್ರಾಂಗೆ 1000 ರೂ. ಮೀರಿ ಇಳಿಕೆಯಾಗಿತ್ತು. ಇಂದಿನ ಬೆಂಗಳೂರು ಸುವರ್ಣ ಮಾರುಕಟ್ಟೆಯ ದರಗಳು ಹೀಗಿವೆ.

ಇಂದು ನೀವು ಬೆಂಗಳೂರಿನಲ್ಲಿ ಒಂದು ಗ್ರಾಂ 22 ಕ್ಯಾರಟ್‌ ಚಿನ್ನವನ್ನು ₹6,640ಕ್ಕೆ ಖರೀದಿಸಬಹುದು. ಎಂಟು ಗ್ರಾಂ ಬೆಲೆ ₹53,120 ಇದೆ. 10 ಗ್ರಾಂ ಮತ್ತು 100 ಗ್ರಾಂನ 22 ಕ್ಯಾರಟ್‌ ಚಿನ್ನವನ್ನು ₹66,400 ಮತ್ತು ₹6,64,000 ದರದಲ್ಲಿ ಖರೀದಿಸಬಹುದು. ಒಂದು ಗ್ರಾಂ 24 ಕ್ಯಾರಟ್‌ ಚಿನ್ನದ ಬೆಲೆ ₹7,244 ಆಗಿದ್ದರೆ, ಎಂಟು ಗ್ರಾಂ ಬೆಲೆ ₹57,952 ಆಗಿದೆ. 10 ಗ್ರಾಂ ಮತ್ತು 100 ಗ್ರಾಂ 24 ಕ್ಯಾರಟ್‌ ಚಿನ್ನವನ್ನು ಖರೀದಿಸಲು ಕ್ರಮವಾಗಿ ₹72,440 ಮತ್ತು ₹7,24,400 ವೆಚ್ಚವಾಗಲಿದೆ.

ನಗರ22 ಕ್ಯಾರಟ್24 ಕ್ಯಾರಟ್
ದಿಲ್ಲಿ66,55072,590
ಮುಂಬಯಿ66,40072,440
ಬೆಂಗಳೂರು66,40072,440
ಚೆನ್ನೈ66,50072,550

ಒಂದು ಗ್ರಾಂ ಬೆಳ್ಳಿಯ ಬೆಲೆ (Silver rate today) ₹92, ಎಂಟು ಗ್ರಾಂ ₹736 ಮತ್ತು 10 ಗ್ರಾಂ ₹920ರಷ್ಟಿದೆ. 100 ಗ್ರಾಂಗೆ ಗ್ರಾಹಕರು ₹9,200 ಮತ್ತು 1 ಕಿಲೋಗ್ರಾಂಗೆ ₹92,000 ಪಾವತಿಸಬೇಕಿದೆ. ಇಲ್ಲಿ ನೀಡಲಾದ ದರಗಳು GST, TCS ಮತ್ತು ಇತರ ಲೆವಿಗಳನ್ನು ಒಳಗೊಂಡಿಲ್ಲ.

ಮೊದಲ ಬಾರಿಗೆ ಚಿನ್ನದ ಆಭರಣವನ್ನು ಖರೀದಿಸುವಾಗ ಏನು ತಿಳಿದಿರಬೇಕು?

ನೀವು ಚಿನ್ನಕ್ಕಾಗಿ ಹಣವನ್ನು ಖರ್ಚು ಮಾಡಲು ಮುಂದಾಗುವ ಮೊದಲು ಅದರ ಬಗ್ಗೆ ಜ್ಞಾನವನ್ನು ಹೊಂದಿರುವುದು ಉತ್ತಮ. ಚಿನ್ನದಂತಹ ಅಮೂಲ್ಯ ವಸ್ತು ಹಾಗೂ ಹೂಡಿಕೆಗೆ ಸಂಬಂಧಿಸಿದ ವಸ್ತುವನ್ನು ಖರೀದಿಸುವ ಮೊದಲು ನೀವು ಪರಿಶೀಲಿಸಬೇಕಾದ ವಿಷಯಗಳು ಇಲ್ಲಿವೆ.

1) ಮೊದಲನೆಯದು ಶುದ್ಧತೆ. ಬೆಂಗಳೂರಿನಲ್ಲಿ ಸಾಮಾನ್ಯವಾಗಿ ಮಾರಾಟವಾಗುವ ಆಭರಣಗಳು 22 ಕ್ಯಾರೆಟ್ ಚಿನ್ನದ ಆಭರಣ. ಬೆಂಗಳೂರಿನಲ್ಲಿ ಆ ದಿನದ ಚಿನ್ನದ ದರ ಎಷ್ಟಿದೆ ಎಂಬುದನ್ನು ಮೊದಲು ಗಮನದಲ್ಲಿಟ್ಟುಕೊಳ್ಳಬೇಕು. ಬೆಂಗಳೂರಿನಲ್ಲಿ ಚಿನ್ನದ ದರಗಳು ಪ್ರತಿದಿನ ಬದಲಾಗುತ್ತಿರುತ್ತವೆ. ನಿಖರವಾದ ಮಾಹಿತಿ ನೀಡುವ ವೆಬ್‌ಸೈಟ್ ಅನ್ನು ಅವಲಂಬಿಸುವುದು ಉತ್ತಮ.

2) ನೀವು ಖರೀದಿಸುವ ಆಭರಣಗಳ ಮೇಲಿರುವ ಬಿಐಎಸ್ ಹಾಲ್ಮಾರ್ಕ್ ಅನ್ನು ಪರಿಶೀಲಿಸುವುದು ಬಹಳ ಮುಖ್ಯ. ಚಿನ್ನಾಭರಣ ಖರೀದಿಸುವಾಗ BIS ಹಾಲ್‌ಮಾರ್ಕ್ ಅನ್ನು ಪಡೆಯಲಾಗಿದೆ ಎಂದು ಖಚಿತಪಡಿಸಿಕೊಳ್ಳಬೇಕು. ಭಾರತ ಸರ್ಕಾರವು ಚಿನ್ನವು ಅದರ ಮೇಲೆ ನಮೂದಿಸಲಾದ ಕ್ಯಾರಟ್‌ಗಳಷ್ಟೇ ಶುದ್ಧವಾಗಿದೆ ಎಂದು ಆ ಮೂಲಕ ಪ್ರಮಾಣೀಕರಿಸುತ್ತದೆ.

3) ಚಿನ್ನಾಭರಣಕ್ಕೆ ಮೇಕಿಂಗ್ ಚಾರ್ಜ್ ಮತ್ತು ವೇಸ್ಟೇಜ್ ಚಾರ್ಜ್ ಎಂದು ಇರುತ್ತದೆ. ಇದನ್ನು ಪ್ರತಿ ಆಭರಣ ವ್ಯಾಪಾರಿಯೂ ವಿಧಿಸುತ್ತಾರೆ. ನೀವು ಆಭರಣ ವ್ಯಾಪಾರಿಯನ್ನು ಈ ಬಗ್ಗೆ ಕೇಳಿ ಪರಿಶೀಲಿಸುವುದು ಉತ್ತಮ. ಎಲ್ಲಾ ಆಭರಣಗಳಿಗೆ ಮೇಕಿಂಗ್ ಅಥವಾ ವೇಸ್ಟೇಜ್ ಶುಲ್ಕಗಳು ಒಂದೇ ಆಗಿರುತ್ತವೆ ಎಂಬುದನ್ನು ಗಮನಿಸಿ. ಎಷ್ಟು ಶುಲ್ಕ ವಿಧಿಸಲಾಗಿದೆ ಎಂಬುದನ್ನು ದಯವಿಟ್ಟು ಖಚಿತಪಡಿಸಿಕೊಳ್ಳಿ.

4) ನೀವು ದುಬಾರಿ ವಹಿವಾಟು ಮಾಡುತ್ತಿರುವುದರಿಂದ ಚಿನ್ನಾಭರಣದ ಅಸಲಿತನ ಖಚಿತಪಡಿಸಿಕೊಳ್ಳುವುದು ಉತ್ತಮ. ಯಾಕೆಂದರೆ ನೀವು ಖರೀದಿಸುತ್ತಿರುವುದು ಬಹುಕಾಲ ಉಳಿಯುವ, ಹೂಡಿಕೆ ಎಂದು ಪರಿಗಣಿಸಬಹುದಾದ ವಸ್ತು. ಎಲ್ಲೇ ಆಗಲಿ ಚಿನ್ನ ಖರೀದಿಸುವ ಮುನ್ನ ಗುಣಮಟ್ಟದ ಬಗ್ಗೆ ಗಮನ ಹರಿಸಬೇಕು. ಕೆಲವು ದಶಕಗಳ ಹಿಂದೆ, ಚಿನ್ನವನ್ನು ಖರೀದಿಸುವಾಗ ಸುಲಭವಾಗಿ ಮೋಸ ಹೋಗಬಹುದಾಗಿತ್ತು. ಆದರೆ ಇಂದು ಹೆಚ್ಚಿನ ಚಿನ್ನವು ಹಾಲ್ಮಾರ್ಕ್ ಆಗಿದೆ. ಪ್ರತಿಷ್ಠಿತ ಅಂಗಡಿಗಳಲ್ಲಿ ಈ ಬಗ್ಗೆ ಹೆಚ್ಚಿನ ಎಚ್ಚರ ಇರುತ್ತದೆ.

ಇದನ್ನೂ ಓದಿ:Cyclone Remal: ರೆಮಲ್‌ ಚಂಡ ಮಾರುತದ ಅಬ್ಬರ ಶುರು; ಬಾಂಗ್ಲಾದೇಶ, ಪ.ಬಂಗಾಳ ಸೇರಿದಂತೆ ಹಲವಡೆ ಭಾರೀ ಮಳೆ, ಭೂಕುಸಿತ ಸಾಧ್ಯತೆ

Continue Reading

ಮೈಸೂರು

Tiger Attack : ಮೈಸೂರಲ್ಲಿ ಹುಲಿ ದಾಳಿ; ಮಹಿಳೆಯನ್ನು ಹೊತ್ತೊಯ್ದು ಕೊಂದ ವ್ಯಾಘ್ರ

Tiger Attack: ಕಾಡು ಬಿಟ್ಟು ನಾಡಿಗೆ ಬರುತ್ತಿರುವ ಕಾಡು ಪ್ರಾಣಿಗಳು ಸಿಕ್ಕ ಸಿಕ್ಕವರ ಮೇಲೆ ದಾಳಿ ಮಾಡುತ್ತಿವೆ. ಸದ್ಯ ಮೈಸೂರಿನಲ್ಲಿ ಮೇಕೆ ಮೇಯಿಸುತ್ತಿದ್ದ ಮಹಿಳೆ ಮೇಲೆ ಹುಲಿಯೊಂದು ದಾಳಿ ಮಾಡಿ, ಬಳಿಕ ಆಕೆಯನ್ನು ಹೊತ್ತೊಯ್ದು ಕೊಂದು ಹಾಕಿದೆ.

VISTARANEWS.COM


on

By

Tiger attack
Koo

ಮೈಸೂರು: ಹುಲಿ ದಾಳಿಯಿಂದಾಗಿ ಮೇಕೆಗಾಹಿ ಮಹಿಳೆ ಮೃತಪಟ್ಟಿರುವ ಘಟನೆ ಮೈಸೂರಿನ ಮೂರ್ಬಾಂದ್ ಬೆಟ್ಟದ ಸಮೀಪ (Tiger Attack) ನಡೆದಿದೆ. ಚಿಕ್ಕಿ (48) ಹುಲಿ ದಾಳಿಗೆ ಸಿಲುಕಿ ಮೃತಪಟ್ಟ ನತದೃಷ್ಟ ಮಹಿಳೆ. ಮೇ 25ರ ಶನಿವಾರ ಸಂಜೆ ಮೇಕೆ ಮೇಯಿಸುತ್ತಿದ್ದಾಗ ಹುಲಿಯೊಂದು ಹಠಾತ್ ದಾಳಿ ನಡೆಸಿ, ಮಹಿಳೆಯನ್ನು ಹೊತ್ತೊಯ್ದಿದೆ.

ಚಿಕ್ಕಿ ಎಚ್‌ಡಿ ಕೋಟೆ ತಾಲೂಕಿನ ಎನ್.ಬೇಗೂರು ಸಮೀಪದ ಮಾಳದ ಹಾಡಿ ನಿವಾಸಿಯಾಗಿದ್ದರು. ಘಟನಾ ಸ್ಥಳಕ್ಕೆ ಎನ್.ಬೇಗೂರು ಅರಣ್ಯ ಇಲಾಖೆ ಅಧಿಕಾರಿಗಳು ಭೇಟಿ ನೀಡಿ ಮೃತದೇಹಕ್ಕಾಗಿ ಹುಡುಕಾಟ ನಡೆಸುತ್ತಿದ್ದಾರೆ. ಎಚ್‌ಡಿ ಕೋಟೆ ತಾಲೂಕಿನ ಅಂತರಸಂತೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ಕೊಡಗಿನಲ್ಲಿ ಹುಲಿ ದಾಳಿಗೆ ವಿದೇಶಿ ತಳಿಯ 2 ನಾಯಿಗಳು ಬಲಿ

ಕೊಡಗಿನಲ್ಲಿ ಹುಲಿ ದಾಳಿ ಮುಂದುವರಿದಿದೆ. ಹುಲಿ ದಾಳಿಗೆ ವಿದೇಶಿ ತಳಿಯ 2 ನಾಯಿಗಳು ಬಲಿಯಾಗಿದೆ. ಕೊಡಗಿನ ವಿರಾಜಪೇಟೆ ಹೊರವಲಯದ ಕುಟ್ಟಂದಿ ಬಳಿ ಘಟನೆ ನಡೆದಿದೆ. ಕುಟ್ಟಂದಿಯ ಕೆ.ಕೆ. ಗ್ರೂಪ್ ಎಸ್ಟೇಟ್‌ನಲ್ಲಿದ್ದ ಹಸ್ಕಿ ಮತ್ತು ಫಿಟ್ ಬುಲ್ ತಳಿಯ 2 ನಾಯಿಗಳು ಮೃತಪಟ್ಟಿವೆ.

ತೋಟದ ಮಾಲೀಕರು ಹುಲಿ ಹೆಜ್ಜೆಯನ್ನು ಪತ್ತೆ ಹಚ್ಚಿದ್ದಾರೆ. ಇಷ್ಟು ದಿನ ದನ ಕರುಗಳ ಮೇಲೆ ಅಟ್ಯಾಕ್ ಮಾಡುತ್ತಿದ್ದ ಹುಲಿ ಇದೀಗ ನಾಯಿ ಮೇಲೆ ದಾಳಿ ಮಾಡುತ್ತಿದೆ. ಹುಲಿ ಸುದ್ದಿ ಕೇಳಿ ಗ್ರಾಮದ ಸುತ್ತ ಮುತ್ತ ಆತಂಕದ ವಾತವರಣ ನಿರ್ಮಾಣವಾಗಿದೆ. ಹುಲಿ ಸೆರೆ ಹಿಡಿಯುವಂತೆ ಅರಣ್ಯ ಇಲಾಖೆಗೆ ತೋಟದ ಮಾಲೀಕರು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: Road Accident : ಬಸ್‌ಗೆ ಸ್ಕೂಟರ್‌ ಡಿಕ್ಕಿ; ಸವಾರನ ಪ್ರಾಣವನ್ನೇ ಕಸಿದ ಅತಿ ವೇಗ ಚಾಲನೆ

ಕೊಡಗಿನಲ್ಲಿ ಕಾಡಾನೆ ಸಾವು

ಸಂಶಯಾಸ್ಪದ ರೀತಿಯಲ್ಲಿ ಕಾಡಾನೆಯ ಮೃತದೇಹ ಪತ್ತೆಯಾದ ಘಟನೆ ಕೊಡಗು ಜಿಲ್ಲೆ ಸಿದ್ದಾಪುರ ಸಮೀಪದ ವಾಲ್ನೂರು ತ್ಯಾಗತ್ತೂರು ಗ್ರಾಮದಲ್ಲಿ ನಡೆದಿದೆ. ತ್ಯಾಗತ್ತೂರು ಗ್ರಾಮದ ಎಂಎಂ ಗಿರೀಶ್ ಎಂಬುವರ ಕಾಫಿ ತೋಟದ ಒಳಗೆ ಕಾರ್ಮಿಕರು ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ದುರ್ವಾಸನೆ ಬರುತ್ತಿತ್ತು.

Elephant Death in kodagu

ಈ ಹಿನ್ನೆಲೆಯಲ್ಲಿ ತೋಟದ ಒಳಭಾಗದಲ್ಲಿ ಪರಿಶೀಲಿಸಿದಾಗ ಕೊಳೆತ ಸ್ಥಿತಿಯಲ್ಲಿ ಕಾಡಾನೆಯ ಮೃತದೇಹ ಪತ್ತೆಯಾಗಿದೆ. ಕೂಡಲೇ ಅರಣ್ಯ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಅಧಿಕಾರಿಗಳು ಪರಿಶೀಲಿಸಿ, ಕಾಡಾನೆಗಳ ನಡುವಿನ‌ ಕಾದಾಟದಲ್ಲಿ ಅಂದಾಜು 18 ರಿಂದ 20 ವರ್ಷ ಪ್ರಾಯದ ಗಂಡಾನೆ ಸಾವನ್ನಪ್ಪಿದೆ ಎಂದು ಮೇಲ್ನೋಟಕ್ಕೆ ಕಂಡು ಬಂದಿದೆ.

ಒಂದು ವಾರಗಳ ಹಿಂದೆ ಸಾವನ್ನಪ್ಪಿರುವ ಬಗ್ಗೆ ಅರಣ್ಯ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ. ಸ್ಥಳಕ್ಕೆ ಡಿಸಿಎಫ್ ಶಂಕರ, ಎಸಿಎಫ್ ಎ ಎ ಗೋಪಾಲ್, ವಲಯ ಅರಣ್ಯ ಅಧಿಕಾರಿ ರತನ್ ಕುಮಾರ್ ಹಾಗೂ ವೈದ್ಯಾಧಿಕಾರಿ ಚಿಟ್ಟಿಯಪ್ಪ ಇನ್ನಿತರ ಸಿಬ್ಬಂದಿಗಳು ಭೇಟಿ ನೀಡಿದ್ದು, ಮರಣೋತ್ತರ ಪರೀಕ್ಷೆ ನಡೆಸಿ ಕಳೆ ಬರಹಗಳನ್ನು ಸ್ಥಳದಲ್ಲಿ ಅಂತ್ಯ ಸಂಸ್ಕಾರ ನೆರವೇರಿಸಿದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading
Advertisement
IT Raid
ದೇಶ2 mins ago

IT Raid: ಚಿನ್ನದ ವ್ಯಾಪಾರಿಗಳಿಗೆ ಐಟಿ ಶಾಕ್‌; ಬೆಳ್ಳಂಬೆಳಗ್ಗೆ ರೇಡ್‌, ಕೋಟಿ ಕೋಟಿ ಹಣ ಜಪ್ತಿ!

Udupi Gang War
ಕರ್ನಾಟಕ10 mins ago

Udupi Gang War: ಉಡುಪಿ ಗ್ಯಾಂಗ್ ವಾರ್ ಪ್ರಕರಣ; ಮತ್ತೆ ಮೂವರು ಆರೋಪಿಗಳ ಬಂಧನ

T20 World Cup 2024
ಕ್ರೀಡೆ20 mins ago

T20 World Cup 2024: ನ್ಯೂಯಾರ್ಕ್​ಗೆ ಪ್ರಯಾಣಿಸಿದ ಮೊದಲ ಬ್ಯಾಚ್​; ವಿರಾಟ್​ ಕೊಹ್ಲಿ ಗೈರು, ಅಭ್ಯಾಸ ಪಂದ್ಯಕ್ಕೂ ಅನುಮಾನ

Road Accident in Bengaluru
ಕ್ರೈಂ22 mins ago

Road Accident : ಕಾರು ಡ್ರೈವಿಂಗ್‌ ಕಲಿಯುವಾಗ ಬ್ರೇಕ್‌ ಬದಲು ಎಕ್ಸಿಲೇಟರ್‌ ತುಳಿದಳು; ಡೆಡ್ಲಿ ಆಕ್ಸಿಡೆಂಟ್‌ಗೆ ಬಾಲಕಿ ಬಲಿ

Teenage boy arrested
ಕ್ರೈಂ36 mins ago

Teenage Boy Arrested: ತನ್ನನ್ನು ಅತ್ಯಾಚಾರ ಮಾಡಿ ಬ್ಲ್ಯಾಕ್ ಮೇಲ್ ಮಾಡುತ್ತಿದ್ದವನನ್ನು ಕೊಂದ ಬಾಲಕ!

Janhvi Kapoor on paparazzi culture
ಬಾಲಿವುಡ್43 mins ago

Janhvi Kapoor: ಪಾಪರಾಜಿಗಳ ಅಸಲಿ ಮುಖ ರಿವೀಲ್‌ ಮಾಡಿದ ಜಾನ್ವಿ ಕಪೂರ್!

Gold Rate Today
ಕರ್ನಾಟಕ48 mins ago

Gold Rate Today: ಇಂದೂ ಯಥಾಸ್ಥಿತಿ ಕಾಯ್ದುಕೊಂಡ ಚಿನ್ನ, ಬೆಳ್ಳಿ ದರ

Tiger attack
ಮೈಸೂರು1 hour ago

Tiger Attack : ಮೈಸೂರಲ್ಲಿ ಹುಲಿ ದಾಳಿ; ಮಹಿಳೆಯನ್ನು ಹೊತ್ತೊಯ್ದು ಕೊಂದ ವ್ಯಾಘ್ರ

IPL 2024 Final
ಕ್ರೀಡೆ1 hour ago

IPL 2024 Final: ಐಪಿಎಲ್​ ವಿನ್ನರ್​ & ರನ್ನರ್​ಗೆ ಸಿಗುವ ಮೊತ್ತವೆಷ್ಟು? ಈ ಬಾರಿ ಆರೆಂಜ್​ ಕ್ಯಾಪ್​, ಪರ್ಪಲ್​ ಕ್ಯಾಪ್​ ಯಾರಿಗೆ ಸಿಗಲಿದೆ?

Cyclone Remal
ದೇಶ1 hour ago

Cyclone Remal: ರೆಮಲ್‌ ಚಂಡ ಮಾರುತದ ಅಬ್ಬರ ಶುರು; ಬಾಂಗ್ಲಾದೇಶ, ಪ.ಬಂಗಾಳ ಸೇರಿದಂತೆ ಹಲವಡೆ ಭಾರೀ ಮಳೆ, ಭೂಕುಸಿತ ಸಾಧ್ಯತೆ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ21 hours ago

Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

dina bhavishya read your daily horoscope predictions for May 23 2024
ಭವಿಷ್ಯ3 days ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ4 days ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ5 days ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

Love Case Father throws hot water on man who loved his daughter for coming home
ಕೊಡಗು5 days ago

Love Case : ಮನೆಗೆ ಬಂದ ಪ್ರೇಮಿಗೆ ಕೊತ ಕೊತ ಕುದಿಯುವ ನೀರು ಎರಚಿದ ಯುವತಿ ತಂದೆ!

Contaminated Water
ಮೈಸೂರು5 days ago

Contaminated Water : ಡಿ ಸಾಲುಂಡಿಯಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡಿದ್ದ ಯುವಕ ಸಾವು

Karnataka Rain
ಮಳೆ6 days ago

Karnataka Rain : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

Karnataka Rain
ಮಳೆ7 days ago

Karnataka Rain : ಒಂದೇ ಮಳೆಗೆ ಹೊಳೆಯಂತಾದ ಬೆಂಗಳೂರು ರಸ್ತೆಗಳು! ಕಳಸದಲ್ಲೂ ಮುಂದುವರಿದ ಅಬ್ಬರ

Karnataka rain
ಮಳೆ7 days ago

Karnataka Rain : ವಿಜಯನಗರದಲ್ಲಿ ಸಿಡಿಲಿಗೆ ಜಾನುವಾರು ಬಲಿ; ಬೆಂಗಳೂರು ಸೇರಿ ಹಲವೆಡೆ ಭಾರಿ ಮಳೆ

Karnataka Rain
ಮಳೆ7 days ago

Karnataka Rain: ಧಾರಾಕಾರ ಮಳೆಗೆ ಕಾಂಪೌಂಡ್ ಕುಸಿದು 4 ಬೈಕ್‌ಗಳು ಜಖಂ; ಮದುವೆ ಮಂಟಪಕ್ಕೆ ನುಗ್ಗಿದ ನೀರು‌

ಟ್ರೆಂಡಿಂಗ್‌