Shivamogga News: ನ್ಯಾಯಯುತ ಹಕ್ಕುಗಳನ್ನು ಪಡೆಯಲು ಈಡಿಗ ಸಮುದಾಯ ಸಂಘಟಿತವಾಗಬೇಕು: ಯೋಗೇಂದ್ರ ಗುರೂಜಿ - Vistara News

ಕರ್ನಾಟಕ

Shivamogga News: ನ್ಯಾಯಯುತ ಹಕ್ಕುಗಳನ್ನು ಪಡೆಯಲು ಈಡಿಗ ಸಮುದಾಯ ಸಂಘಟಿತವಾಗಬೇಕು: ಯೋಗೇಂದ್ರ ಗುರೂಜಿ

Shivamogga News: ಈಡಿಗ ಸಮುದಾಯ, ನ್ಯಾಯಯುತ ಹಕ್ಕುಗಳನ್ನು ಪಡೆಯಲು ಸಂಘಟಿತವಾಗಬೇಕು ಎಂದು ಸಾರಗನಜಡ್ಡು ಕಾರ್ತಿಕೇಯ ಕ್ಷೇತ್ರದ ಅವಧೂತರಾದ ಯೋಗೇಂದ್ರ ಗುರೂಜಿ ತಿಳಿಸಿದ್ದಾರೆ.

VISTARANEWS.COM


on

ediga Community program inauguarated by swamijis at Shivamogga
ಶಿವಮೊಗ್ಗ ನಗರದ ಈಡಿಗ ಭವನದಲ್ಲಿ ಶ್ರೀ ನಾರಾಯಣಗುರು ವಿಚಾರ ವೇದಿಕೆಯು ಆಯೋಜಿಸಿದ್ದ ಚಿಂತನಮಂಥನ ಸಮಾರಂಭಕ್ಕೆ ಚಾಲನೆ ನೀಡಲಾಯಿತು.
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಶಿವಮೊಗ್ಗ: ಈಡಿಗ ಸಮುದಾಯ (Ediga Community), ನ್ಯಾಯಯುತ ಹಕ್ಕುಗಳನ್ನು (Rights) ಪಡೆಯಲು ಸಂಘಟಿತವಾಗಬೇಕು ಎಂದು ಸಾರಗನಜಡ್ಡು ಕಾರ್ತಿಕೇಯ ಕ್ಷೇತ್ರದ ಅವಧೂತರಾದ ಯೋಗೇಂದ್ರ ಗುರೂಜಿ ಹೇಳಿದರು.

ಶ್ರೀ ನಾರಾಯಣಗುರು ವಿಚಾರ ವೇದಿಕೆಯು ನಗರದ ಈಡಿಗ ಭವನದಲ್ಲಿ ಆಯೋಜಿಸಿದ್ದ ಚಿಂತನಮಂಥನ ಸಮಾರಂಭದಲ್ಲಿ ಸಾನಿಧ್ಯ ವಹಿಸಿ ಅವರು ಆಶೀರ್ವಚನ ನೀಡಿದರು.

ಈಡಿಗ ಸಮುದಾಯ, ಸಾಕಷ್ಟು ಕಷ್ಟ ನೋಡಿದೆ. ನೊಂದು ಬೆಂದಿರುವ ಈ ಸಮುದಾಯಕ್ಕೆ ಇಂದು ದಾರಿದ್ರ್ಯ ಬಂದಿಲ್ಲ. ಸಂಘಟನಾತ್ಮಕವಾಗಿ ನ್ಯಾಯವಾಗಿ ಧಕ್ಕಬೇಕಿರುವುದನ್ನು ಪಡೆಯಬೇಕಿದೆ. ಈ ನೆಲೆಯಲ್ಲಿ ಸಮಾಜ ಸಂಘಟನೆಯಾಗಬೇಕು ಎಂದು ತಿಳಿಸಿದರು.

ಇದನ್ನೂ ಓದಿ: ICC World Cup: ಏಕದಿನ ವಿಶ್ವಕಪ್​ಗೆ ಬಲಿಷ್ಠ ತಂಡ ಪ್ರಕಟಿಸಿದ ಆಸ್ಟ್ರೇಲಿಯಾ

ಎಲ್ಲವನ್ನೂ ಅರಗಿಸಿಕೊಳ್ಳುವ ಶಕ್ತಿ ಇಂದು ಈಡಿಗ ಸಮಾಜಕ್ಕೆ ಬಂದಿದೆ. ನಮ್ಮ ಜನಸಂಖ್ಯೆಗನುಗುಣವಾಗಿ ರಾಜಕೀಯ ಪ್ರಾತಿನಿಧ್ಯ ಸಿಕ್ಕಿಲ್ಲ. ಸಮಾಜದ ಹಲವು ಸಂಘಟನೆಗಳಿದ್ದು, ಎಲ್ಲವೂ ಅವರವರ ನೆಲೆಯಲ್ಲಿ ಸಮಾಜದ ಕೆಲಸ ಮಾಡುತ್ತಿದೆ. ಈಗ ಎಲ್ಲರನ್ನೂ ಒಗ್ಗೂಡಿಸಿ ಸರ್ಕಾರಕ್ಕೆ ನಮ್ಮ ಹಕ್ಕೊತ್ತಾಯಗಳನ್ನು ಮಂಡಿಸಿ ನ್ಯಾಯ ಪಡೆಯಬೇಕಿದೆ. ಚಿಂತನ ಮಂಥನವೊದು ಪ್ರತಿ ಜಿಲ್ಲೆಯಲ್ಲಿ ನಡೆದು ಮುಂದೆ ಒಂದು ಹೋರಾಟವಾಗಲಿದೆ ಎಂದು ಹೇಳಿದರು.

ಸೋಲೂರು ರೇಣುಕಾ ಪೀಠದ ಶ್ರೀ ವಿಖ್ಯಾತಾನಂದ ಸ್ವಾಮೀಜಿ ಮಾತನಾಡಿ, ಈಡಿಗ ಸಮುದಾಯದ ಎಲ್ಲಾ ಸ್ವಾಮೀಜಿಗಳ ನಡುವೆ ಒಂದು ಒಗ್ಗಟ್ಟು ಮೂಡಿದೆ. ಹಿಂದಿನ ಸರ್ಕಾರದ ಅವಧಿಯಿಂದಲೂ ನಮ್ಮ ಬೇಡಿಕೆ ಮಂಡಿಸಿದ್ದೇವೆ. ಅವುಗಳ ಅನುಷ್ಠಾನಕ್ಕೆ ಹೋರಾಟ ಮುಂದುವರಿಯಲಿದೆ. ಸಮಾಜದ ಜನರು ಹೆಚ್ಚು ವಿದ್ಯಾವಂತರಾಗಬೇಕು ಎಂದು ತಿಳಿಸಿದರು.

ನಿಪ್ಪಾಣಿಯ ಮಹಾಕಾಳಿ ಪೀಠದ ಅರುಣಾನಂದ ತೀರ್ಥ ಸ್ವಾಮೀಜಿ ಮಾತನಾಡಿ, ನಾರಾಯಣ ಗುರು ವಿಚಾರ ವೇದಿಕೆಯ ಸಾರಥ್ಯದಲ್ಲಿ ಐಕ್ಯತೆಯ ಹೋರಾಟ ನಡೆಬೇಕಿದೆ. ಸಮಾಜದ ದುರ್ಬಲರನ್ನು ಮುಖ್ಯವಾಹಿನಿಗೆ ತರುವಲ್ಲಿ ಸರ್ವ ಸಂಘಟನೆಗಳು ಶ್ರಮಿಸಬೇಕು. ಈಡಿಗ ಸಮಾಜದ ಸರ್ವತೋಮುಖ ಅಭಿವೃದ್ಧಿಗೆ ಮಠಾಧೀಶರ ನಡುವೆ ಸಮನ್ವಯತೆ ಮೂಡಿದೆ ಎಂದು ಹೇಳಿದರು.

ಬೆಂಗಳೂರಿನ ಶಿ.ಗ ಫೌಂಡೇಷನ್ ಗುರುಮೂರ್ತಿ ಗುರೂಜಿ ಮಾತನಾಡಿ, ಸಮಾಜದ ಭಾವನೆಗಳು ಮತ್ತು ಚಿಂತನೆಗಳು ಬದಲಾಗಬೇಕು. ಎಲ್ಲರನ್ನೂ ಒಗ್ಗೂಡಿಸಿ ಧಾರ್ಮಿಕ ಮತ್ತು ಆಧ್ಯಾತ್ಮಿಕ ನೆಲೆಯಲ್ಲಿ ಸಮಾಜ ಬಲಗೊಳ್ಳಬೇಕು. ಈಡಿಗ ಸಮಾಜದ ಯುವಕರು ಸಂಸ್ಕಾರಯುತವಾದ ಜೀವನ ಮೌಲ್ಯ ಅಳವಡಿಸಿಕೊಳ್ಳಬೇಕು. ಈ ಸಮಾಜದಲ್ಲಿ ಹುಟ್ಟಿದ ಮೇಲೆ ಈ ಜನರ ಸೇವೆಗೆ ಕಂಕಣಬದ್ಧರಾಗಬೇಕು ಎಂದು ಹೇಳಿದರು.

ಇದನ್ನೂ ಓದಿ: Gold Rate today: ಏರಿಳಿಕೆ ಕಾಣದ ಬಂಗಾರದ ಬೆಲೆ, 24 ಕ್ಯಾರೆಟ್‌ ಬೆಲೆ ₹ 6,016

ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ನಾರಾಯಾಣಗುರು ವಿಚಾರ ವೇದಿಕೆ ರಾಜ್ಯಾಧ್ಯಕ್ಷ ಸತ್ಯಜಿತ್ ಸುರತ್ಕಲ್ ಮಾತನಾಡಿ, ಶಿವಮೊಗ್ಗದಲ್ಲಿ ಹಿಂದೆ ಹಕ್ಕೊತ್ತಾಯ ಸಮಾವೇಶ ಮಾಡಿದಾಗ ಸಮಾಜದ ಐದು ಪ್ರಮುಖ ಬೇಡಿಕೆಗಳನ್ನು ಸರ್ಕಾರದ ಮುಂದೆ ಮಂಡಿಸಲಾಗಿತ್ತು. ಅಂದು ಈಡಿಗ ಅಭಿವೃದ್ಧಿ ನಿಗಮ ರಚನೆ ಮಾಡಿದ್ದು, ಮುಂದುವರಿದ ಚಟುವಟಿಕೆಗಳು ಈಗ ಆಗಬೇಕಿದೆ. ನೂತನ ಸರ್ಕಾರದ ಮೇಲೆ ಒತ್ತಡ ಹೇರಲು ನಾವು ಏನು ಮಾಡಬೇಕೆಂಬ ಉದ್ದೇಶ ಮತ್ತು ಸಮಾಜದ ಸಂಘಟನೆಯ ದೃಷ್ಟಿಯಿಂದ ಚಿಂತನ ಮಂಥನ ಕಾರ್ಯಕ್ರಮ ನಡೆಸಲಾಗುತ್ತಿದೆ.

ಮುಂದಿನ ದಿನಗಳಲ್ಲಿ ಸಮಾಜದಿಂದ ಆಯ್ಕೆಯಾದ ಎಲ್ಲಾ ಶಾಸಕರು ಮತ್ತು ಸಚಿವರನ್ನು ಸನ್ಮಾನಿಸಲಾಗುವುದು. ರಾಜ್ಯದ ಎಲ್ಲಾ ಜಿಲ್ಲೆಗಳಲ್ಲಿಯೂ ಸಂಘಟನೆ ಪ್ರಬಲವಾಗಿದ್ದು, ಧಾರ್ಮಿಕ ನಾಯಕರ ಮಾರ್ಗದರ್ಶನದಲ್ಲಿ ಸಮಾಜಮುಖಿ ಕಾರ್ಯ ಮಾಡಲಾಗುವುದು ಎಂದು ಹೇಳಿದರು.

ಈಡಿಗ ಸಮಾಜದ 26 ಪಂಗಡಗಳ ಪ್ರಮುಖರು ಪಾಲ್ಗೊಂಡಿದ್ದರು. ಮಾಜಿ ಶಾಸಕ ಡಾ.ಜಿ.ಡಿ. ನಾರಾಯಣಪ್ಪ, ಸಂಶೋಧಕ ಮಧು ಗಣಪತಿ ಮಡೆನೂರು, ಡಾ.ಮೋಹನ್ ಚಂದ್ರಗುತ್ತಿ, ಡಾ.ಅಣ್ಣಪ್ಪ ಮಳೀಮಠ್, ಪ್ರಮುಖರಾದ ಕಲಗೋಡು ರತ್ನಾಕರ್, ಸುರೇಶ್ ಬಾಳೇಗುಂಡಿ ಸೇರಿದಂತೆ ಅನೇಕರು ಭಾಗವಹಿಸಿದ್ದರು.

ಮಾನಸ ಹೆಬ್ಬೂರು ಕಾರ್ಯಕ್ರಮ ನಿರೂಪಿಸಿದರು. ಪ್ರಿಯ ಭಾಷಿಣಿ ಪ್ರಾರ್ಥಿಸಿದರು. ಸಂಘಟನೆ ಜಿಲ್ಲಾಧ್ಯಕ್ಷ ಪ್ರವೀಣ್ ಹಿರೇ ಇಡಗೋಡು ಸ್ವಾಗತಿಸಿದರು.

ಇದನ್ನೂ ಓದಿ: Weather report : ಬೆಂಗಳೂರು ಸೇರಿ ಇಲ್ಲೆಲ್ಲ ಸಂಜೆ ವೇಳೆಗೆ ಮಳೆ ಕಾಟ

ಈಡಿಗ ಸಮುದಾಯದ ಎಲ್ಲ ಉಪ ಪಂಗಡಗಳು ಒಂದಾಗಿವೆ. ಇನ್ನೂ ಬೇಡಿಕೆ ಈಡೇರಿಕೆಗೆ ಸಂಘಟಿತರಾಗಬೇಕು. ಸಮಾಜದ ಮಕ್ಕಳಿಗೆ ಉತ್ತಮ ಶಿಕ್ಷಣ ನೀಡಬೇಕು. ಸಂಘಟನಾತ್ಮಕವಾಗಿ ಮುಂದೆ ಬಂದು ನ್ಯಾಯಯುತವಾಗಿ ಸಿಗಬೇಕಾದ ಬೇಡಿಕೆಗಳನ್ನು ಪಡೆಯಬೇಕು. ಸಮಾಜದ ಸಂಘಟನೆ ಸ್ವಾಮೀಜಿಗಳು ಒಂದಾಗಿರುವುದು ಸಂತೋಷದ ಸಂಗತಿ. ಸಮಾಜ ಸಂಘಟನೆ ಮತ್ತು ಸೇವಾ ಕಾರ್ಯಗಳಿಗೆ ಯಾವತ್ತೂ ಬೆಂಬಲವಾಗಿ ನಿಲ್ಲುತ್ತೇವೆ.

-ಡಾ.ಎಸ್.ರಾಮಪ್ಪ, ಧರ್ಮದರ್ಶಿಗಳು, ಶ್ರೀ ಕ್ಷೇತ್ರ ಸಿಗಂದೂರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕರ್ನಾಟಕ

Guarantee Schemes: ಗ್ಯಾರಂಟಿ ಯೋಜನೆಗಳಿಗೆ ದಲಿತರ 14 ಸಾವಿರ ಕೋಟಿ ರೂ. ಕೊಟ್ಟ ಸಿದ್ದರಾಮಯ್ಯ!

Guarantee Schemes: 2024-25ನೇ ಹಣಕಾಸು ವರ್ಷಕ್ಕಾಗಿ ಪರಿಶಿಷ್ಟ ಜಾತಿಗಳ ಉಪ ಯೋಜನೆ ಮತ್ತು ಪಂಗಡದ ಉಪ ಯೋಜನೆಗೆ (ಎಸ್‌ಸಿಎಸ್‌ಪಿ-ಟಿಎಸ್‌ಪಿ) ಮೀಸಲಿಟ್ಟಿದ್ದ 39,171 ಕೋಟಿ ರೂಪಾಯಿ ಅನುದಾನದಲ್ಲಿ 14,282 ಕೋಟಿ ರೂಪಾಯಿಯನ್ನು ಗ್ಯಾರಂಟಿ ಯೋಜನೆಗಳಿಗೆ ವರ್ಗಾಯಿಸಿದೆ. ಇದು ಈಗ ಭಾರಿ ವಿವಾದಕ್ಕೆ ಕಾರಣವಾಗಿದೆ.

VISTARANEWS.COM


on

Guarantee Schemes
Koo

ಬೆಂಗಳೂರು: ಕರ್ನಾಟಕದಲ್ಲಿ ಗ್ಯಾರಂಟಿ ಯೋಜನೆಗಳನ್ನು ಜಾರಿಗೆ ತಂದು, ಅವುಗಳನ್ನು ಮುಂದುವರಿಸಲು ಹೆಣಗಾಡುತ್ತಿರುವ ಸಿದ್ದರಾಮಯ್ಯ (Siddaramaiah) ನೇತೃತ್ವದ ಕಾಂಗ್ರೆಸ್‌ ಸರ್ಕಾರವು (Karnataka Government) ಹಲವು ರೀತಿಯಲ್ಲಿ ಸಂಪನ್ಮೂಲ ಕ್ರೋಡೀಕರಣ ಮಾಡುತ್ತಿದೆ. ಗ್ಯಾರಂಟಿ ಯೋಜನೆಗಳಿಗೆ (Guarantee Schemes) ಹಣ ಹೊಂದಿಸಲು ಕೆಲವು ದಿನಗಳ ಹಿಂದಷ್ಟೇ ಪೆಟ್ರೋಲ್ ಹಾಗೂ ಡೀಸೆಲ್‌ ಬೆಲೆಯನ್ನು ಏರಿಕೆ ಮಾಡಿದ್ದ ರಾಜ್ಯ ಸರ್ಕಾರವೀಗ, ದಲಿತರಿಗಾಗಿ ಮೀಸಲಿಟ್ಟಿದ್ದ 14,282 ಕೋಟಿ ರೂಪಾಯಿಯನ್ನು ಗ್ಯಾರಂಟಿ ಯೋಜನೆಗಳಿಗೆ ವರ್ಗಾಯಿಸಿದೆ.

ಹೌದು, 2024-25ನೇ ಹಣಕಾಸು ವರ್ಷಕ್ಕಾಗಿ ಪರಿಶಿಷ್ಟ ಜಾತಿಗಳ ಉಪ ಯೋಜನೆ ಮತ್ತು ಪಂಗಡದ ಉಪ ಯೋಜನೆಗೆ (ಎಸ್‌ಸಿಎಸ್‌ಪಿ-ಟಿಎಸ್‌ಪಿ) ಮೀಸಲಿಟ್ಟಿದ್ದ 39,171 ಕೋಟಿ ರೂಪಾಯಿ ಅನುದಾನದಲ್ಲಿ 14,282 ಕೋಟಿ ರೂಪಾಯಿಯನ್ನು ಗ್ಯಾರಂಟಿ ಯೋಜನೆಗಳಿಗೆ ವರ್ಗಾಯಿಸಿದೆ. ಪರಿಶಿಷ್ಟ ಜಾತಿ, ಬುಡಕಟ್ಟು ಸಮುದಾಯದವರ ಕಲ್ಯಾಣಕ್ಕಾಗಿ ಮೀಸಲಿಟ್ಟ ಹಣವನ್ನು ಉಚಿತ ಯೋಜನೆಗಳಿಗೆ ರಾಜ್ಯ ಸರ್ಕಾರ ವರ್ಗಾಯಿಸಿರುವುದು ಈಗ ಭಾರಿ ವಿವಾದಕ್ಕೆ ಕಾರಣವಾಗಿದೆ.

congress 5 Guarantee schemes

ನಿರುದ್ಯೋಗ ಯುವಕ-ಯುವತಿಯರಿಗೆ ಹಣಕಾಸು ನೆರವು ಒದಗಿಸುವ ಯುವ ನಿಧಿ ಯೋಜನೆಗೆ ಎಸ್‌ಸಿಎಸ್‌ಪಿ-ಟಿಎಸ್‌ಪಿಯ ಸುಮಾರು 75 ಕೋಟಿ ರೂಪಾಯಿಗಳನ್ನು ಬಳಸಿಕೊಂಡಿದೆ. ಇನ್ನು, ಅನ್ನಭಾಗ್ಯ ಯೋಜನೆಗೆ 104 ಕೋಟಿ ರೂಪಾಯಿಯನ್ನು ಎಸ್‌ಸಿಎಸ್‌ಪಿ-ಟಿಎಸ್‌ಪಿ ಅನುದಾನದಿಂದಲೇ ಬಳಸಿಕೊಂಡಿದೆ. ಹೀಗೆ ಗ್ಯಾರಂಟಿ ಯೋಜನೆಗಳಿಗೆ ಎಸ್‌ಸಿಎಸ್‌ಪಿ-ಟಿಎಸ್‌ಪಿ ಅನುದಾನದ 14,282 ಕೋಟಿ ರೂಪಾಯಿಗಳನ್ನು ವರ್ಗಾವಣೆ ಮಾಡಿದೆ. ಮೂಲಗಳ ಪ್ರಕಾರ, ಎಸ್‌ಸಿ, ಎಸ್‌ಟಿ ಸಮುದಾಯದ ವರ್ಗಗಳ ಗ್ಯಾರಂಟಿ ಫಲಾನುಭವಿಗಳಿಗೆ ಮಾತ್ರ ಹಣ ಮೀಸಲಿರಿಸಲಾಗಿದೆ ಎಂದು ತಿಳಿದುಬಂದಿದೆ.

ಕೆಲ ದಿನಗಳ ಹಿಂದಷ್ಟೇ ರಾಜ್ಯದಲ್ಲಿ ಒಂದು ಲೀಟರ್‌ ಪೆಟ್ರೋಲ್‌ಗೆ 3 ರೂ. ಹಾಗೂ ಡೀಸೆಲ್‌ಗೆ 3.5 ರೂ. ಏರಿಕೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಇದರಿಂದ ರಾಜ್ಯ ಸರ್ಕಾರಕ್ಕೆ ವರ್ಷಕ್ಕೆ 3 ಸಾವಿರ ಕೋಟಿ ರೂ. ಹೆಚ್ಚುವರಿ ಆದಾಯ ಬರಲಿದೆ ಎಂದು ತಿಳಿದುಬಂದಿದೆ. ಇದಾದ ಕೆಲವೇ ದಿನಗಳಲ್ಲಿ ನಂದಿನಿ ಹಾಲಿನ ಬೆಲೆಯನ್ನೂ 2 ರೂಪಾಯಿ ಏರಿಕೆ ಮಾಡಿದ್ದು, ರಾಜ್ಯಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿದೆ. ಬಿಜೆಪಿ ನಾಯಕರು ಕೂಡ ರಾಜ್ಯ ಸರ್ಕಾರದ ತೀರ್ಮಾನವನ್ನು ಖಂಡಿಸಿದ ಪ್ರತಿಭಟನೆ ನಡೆಸಿದ್ದಾರೆ.

ಇದನ್ನೂ ಓದಿ: CM Siddaramaiah: ಸಿದ್ದರಾಮಯ್ಯ ಈಗ ಕನ್ನಡ ಮೇಷ್ಟ್ರು; ಶಾಲೆಗೆ ಭೇಟಿ ನೀಡಿ ವ್ಯಾಕರಣ ಪಾಠ ಮಾಡಿದ ಸಿಎಂ!

Continue Reading

ಕರ್ನಾಟಕ

Satish Jarkiholi: ಜನತಾ ದರ್ಶನಕ್ಕೆ ಅಧಿಕಾರಿಗಳು ಗೈರಾಗುವುದು ತಪ್ಪು; ಎಚ್‌ಡಿಕೆ ಪರ ಸಚಿವ ಸತೀಶ್ ಜಾರಕಿಹೊಳಿ ಬ್ಯಾಟಿಂಗ್!

Satish Jarkiholi: ಮಂಡ್ಯದಲ್ಲಿ ಅಧಿಕಾರಿಗಳು ಜನತಾ ದರ್ಶನಕ್ಕೆ ಯಾಕೆ ಹೋಗಿಲ್ಲವೋ ಗೊತ್ತಿಲ್ಲ. ಯಾರು ಆದೇಶ ಮಾಡಿದ್ದಾರೋ ತಿಳಿಯದು ಎಂದು ಸಚಿವ ಸತೀಶ ಜಾರಕಿಹೊಳಿ ಹೇಳಿದ್ದಾರೆ.

VISTARANEWS.COM


on

Koo

ಬೆಂಗಳೂರು: ಮಂಡ್ಯದಲ್ಲಿ ಜನತಾ ದರ್ಶನಕ್ಕೆ ಅಧಿಕಾರಿಗಳು ಹೋಗದಂತೆ ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿದೆ ಎಂದು ಕೇಂದ್ರ ಸಚಿವ ಎಚ್‌.ಡಿ.ಕುಮಾರಸ್ವಾಮಿ (HD Kumaraswamy) ಅವರು ಶುಕ್ರವಾರ ಬೆಳಗ್ಗೆ ಆರೋಪಿದ್ದರು. ಈ ವಿಚಾರದಲ್ಲಿ ಇದೀಗ ಎಚ್‌ಡಿಕೆ ಪರ ಬ್ಯಾಟ್‌ ಬೀಸಿರುವ ಸಚಿವ ಸತೀಶ್ ಜಾರಕಿಹೊಳಿ (satish jarkiholi) ಅವರು, ಕೇಂದ್ರ ಸಚಿವ ಹಾಗೂ ಸಂಸದರು ಸಭೆ ಕರೆದರೆ ಅಧಿಕಾರಿಗಳು ಹೋಗಬೇಕಾಗುತ್ತದೆ. ಅಧಿಕಾರಿಗಳು ಹೋಗದಿರುವುದು ತಪ್ಪಾಗುತ್ತದೆ ಎಂದು ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಬೆಳಗಾವಿ ಎಂಪಿ ಜಗದೀಶ್ ಶೆಟ್ಟರ್ ಸಭೆ ಕರೆದಾಗ ಡಿಸಿ, ಎಸ್‌ಪಿ ಅಧಿಕಾರಿಗಳು ಹೋಗಿದ್ದರು. ಮಂಡ್ಯದಲ್ಲಿ ಯಾಕೆ ಅಧಿಕಾರಿಗಳು ಹೋಗಿಲ್ಲ ಅಂತ ಗೊತ್ತಿಲ್ಲ. ಯಾರು ಆದೇಶ ಮಾಡಿದ್ದಾರೋ ಗೊತ್ತಿಲ್ಲ. ಸಂಸದರು ಕರೆದ ಸಭೆಗೆ ಅಧಿಕಾರಿಗಳು ಗೈರಾಗುವುದು ತಪ್ಪು ಎಂದು ಅಭಿಪ್ರಾಯ ತಿಳಿಸಿದ್ದಾರೆ.

ಇದನ್ನೂ ಓದಿ | Channaptna By Election: ಚನ್ನಪಟ್ಟಣಕ್ಕೆ ನಾನೇ ಮೈತ್ರಿ ಅಭ್ಯರ್ಥಿ, ಎಚ್‌ಡಿಕೆ ಇದನ್ನು ಘೋಷಿಸಲಿ: ಸಿಪಿ ಯೋಗೇಶ್ವರ್‌

ಎಚ್‌ಡಿಕೆ ಏನು ಹೇಳಿದ್ದರು?

ಮಂಡ್ಯ: ಜನತಾ ದರ್ಶನಕ್ಕೆ ಅಧಿಕಾರಿಗಳು ಹೋಗದಂತೆ ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿದೆ. ನೆನ್ನೆ ಕ್ಯಾಬಿನೆಟ್‌ ಸಭೆಯಲ್ಲಿ ಒಂದು ಸುತ್ತೋಲೆ ಹೊರಡಿದ್ದಾರೆ. ಮುಖ್ಯಮಂತ್ರಿ, ಸಚಿವರಿಗೆಷ್ಟೇ ಜನತಾ ದರ್ಶನಕ್ಕೆ ಅವಕಾಶವಿದೆ ಎಂದಿದ್ದಾರೆ. ಅಧಿಕಾರಿಗಳಿಗೆ ಈಗಾಗಲೇ ಆ ಕುರಿತು ಸೂಚನೆ‌ ಕೊಟ್ಟಿದ್ದಾರೆ ಎಂದು ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ಆರೋಪಿಸಿದ್ದರು.

ಈ ಸರ್ಕಾರದವರು ಚುನಾವಣೆಗೆ ಮುಂಚೆ ರಾಮನಗರದಲ್ಲಿ ಹೇಗೆ ನಡೆದುಕೊಂಡರು? ಡಿ.ಕೆ.ಸುರೇಶ್ ಈ ಹಿಂದೆ ಜಿಲ್ಲಾಧಿಕಾರಿ ಕಚೇರಿಯಲ್ಲಿ ಸಭೆ ನಡೆಸಿದರು. ಜನಸ್ಪಂದನ ಹೆಸರಲ್ಲಿ ಅಧಿಕಾರಿಗಳನ್ನು ಹಳ್ಳಿಹಳ್ಳಿ‌ ತಿರುಗಿಸಿದರು. ಉಸ್ತುವಾರಿ ಸಚಿವರು ಮಾಡಬೇಕಾದ ಸಭೆಗಳನ್ನು ಮಾಡಿದರು. ಅದಕ್ಕೆ ಅನುಮತಿ ಕೊಟ್ಟವರು ಯಾರು, ಯಾವ ರೂಲ್ಸ್ ಇತ್ತು ಎಂದು ಪ್ರಶ್ನಿಸಿದ್ದರು.

ಇವತ್ತು ಕೇಂದ್ರದ ಒಬ್ಬ ಮಂತ್ರಿ, ಜನರ ಅಹವಾಲು ಸ್ವೀಕರಿಸಲು ಬಂದಿದ್ದೇನೆ. ಹೊಸ ನಿಯಾಮವಳಿ ಮೂಲಕ ತಡೆಯಲು ಮುಂದಾಗಿದ್ದಾರೆ. ಇದರಿಂದ ಅವರಿಗೆ ಏನು ದೊರಕಲ್ಲ ಎಂದು ಕಿಡಿಕಾರಿದ್ದರು.

ಸಿಎಂ ಕುರ್ಚಿ ಮೇಲೆ ಟವಲ್‌ ಹಾಕಿದವರಿಂದಲೇ ಮುಡಾ ಹಗರಣ ಬಯಲು: ಎಚ್‌ಡಿಕೆ

ಮೈಸೂರು: ಸಿಎಂ ಕುರ್ಚಿ ಮೇಲೆ ಕಣ್ಣಿಟ್ಟವರಿಂದಲೇ ಮುಡಾ ಹಗರಣ (MUDA Scam) ಬಯಲಿಗೆ ಬಂದಿದೆ. ಇಲ್ಲವಾದರೆ ಇಷ್ಟು ದಿನ ಹೊರಗೆ ಬಾರದ ಹಗರಣ ಈಗ ಬಂದಿದ್ದು ಯಾಕೆ ಎಂದು ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ (HD Kumaraswamy) ಸ್ಫೋಟಕ ಹೇಳಿಕೆ ನೀಡಿದ್ದಾರೆ.

ಮಂಡ್ಯದಲ್ಲಿ (Mandya News) ಇಂದು ಜನತಾದರ್ಶನ (Janata Darshana) ನಡೆಸಿದ ಎಚ್‌ಡಿಕೆ, ಅದಕ್ಕೂ ಮುನ್ನ ದೇವಾಲಯ ಭೇಟಿ ನೀಡುವ ಸಂದರ್ಭದಲ್ಲಿ ಮಾಧ್ಯಮಗಳ ಮುಂದೆ ಮಾತನಾಡಿದರು. ʼನನ್ನ ಜನತಾ ದರ್ಶನ ಕಾರ್ಯಕ್ರಮ ನಿಲ್ಲಿಸಲು ಯಾರಿಂದಲೂ ಸಾಧ್ಯವಿಲ್ಲʼ ಎಂದು ಗುಡುಗಿದರು.

ಮುಡಾ ಹಗರಣ ಬಯಲು ಹಿಂದೆ, ಸಿಎಂ ಕುರ್ಚಿ ಮೇಲೆ ಟವಲ್ ಹಾಕಿರುವವರ ಪಾತ್ರ ಇದೆ. ಬಿಜೆಪಿಯವರು ಹೋರಾಟ ಮಾಡುತ್ತಿದ್ದಾರೆ ಅಷ್ಟೇ. ಆದರೆ ಹಗರಣ ಆಚೆ ಬರಲು ಕಾಂಗ್ರೆಸ್‌ನವರೇ ಒಳಗಿನಿಂದ ಕುಮ್ಮಕ್ಕು ಕೊಡುತ್ತಿದ್ದಾರೆ. ಈಗ ಸಿಡಿ ಫ್ಯಾಕ್ಟರಿ ಕ್ಲೋಸ್ ಆಗಿದೆ, ಮುಡಾ ವಿಚಾರ ಶುರುವಾಗಿದೆ. ಈ ಬಗ್ಗೆ ನನಗೆ ಮಾಹಿತಿ ಇದೆ. ಸಿಎಂ ಸಿದ್ದರಾಮಯ್ಯ ಪತ್ನಿಗೆ ಆ ಜಾಗ ಹೇಗೆ ಬಂತು ಅಂತಲೂ ನನಗೆ ಗೊತ್ತಿದೆ ಎಂದು ಕುಮಾರಸ್ವಾಮಿ ಟೀಕಿಸಿದ್ದಾರೆ.

ಸಿಎಂ ತಾವು ಕಳೆದುಕೊಂಡ ಸೈಟಿಗೆ 62 ಕೋಟಿ ರೂ. ಪರಿಹಾರ ಕೇಳುತ್ತಿದ್ದಾರೆ. ಇವರಿಗೆ ಬಡವರ ಕಷ್ಟ ಗೊತ್ತಿದೆಯಾ? ಹಾಗೆ ಕೇಳುವ ಸಿಎಂ ಭೂಮಿ ಕಳೆದುಕೊಂಡು ಬೀದಿಯಲ್ಲಿ ನಿಂತಿರುವ ಇತರ ರೈತರಿಗೂ ಹಾಗೇ ಪರಿಹಾರ ಕೊಡಿಸಲಿ. ಕೊಡಿಸ್ತಾರಾ? ಎಂದು ಅವರು ಸವಾಲು ಹಾಕಿದರು.

ನನ್ನ ಜನತಾ ದರ್ಶನ ವಿಚಾರದಲ್ಲಿ ರಾಜ್ಯ ಸರ್ಕಾರ ದ್ವೇಷದ ರಾಜಕಾರಣ ಮಾಡುತ್ತಿದೆ. ಜನತಾ ದರ್ಶನದ ಬಗ್ಗೆಯೇ ಸಚಿವ ಸಂಪುಟದ ಸಭೆ ಕರೆದು ಚರ್ಚೆ ಮಾಡಿದ್ದಾರೆ. ನೀವು ಅಧಿಕಾರಿಗಳನ್ನು ಇದರಿಂದ ದೂರು ಇಡಬಹುದು. ಆದರೆ ಜನರನ್ನು ನನ್ನಿಂದ ದೂರ ಮಾಡಲು ಸಾಧ್ಯವಿಲ್ಲ. ಈ ಹಿಂದೆ ಬೆಂಗಳೂರು ಗ್ರಾಮಂತರದ ಸಂಸದರು ಈ ರೀತಿ ಸಭೆ ಮಾಡಿದ್ದಾಗ ಏನು ಮಾಡ್ತಿದ್ರಿ? ಚುನಾವಣೆಗೆ ಬಂದು ಜನ ಸ್ಪಂದನ ಕಾರ್ಯಕ್ರಮ ಮಾಡಿದಾಗ ಎಲ್ಲಿ ಹೋಗಿದ್ರು? ಈಗ ಜನತಾ ದರ್ಶನ ತಪ್ಪಿಸಲು ಸರ್ಕಾರ ಮುಂದಾಗಿದೆ. ಯಾವುದೇ ಕಾರಣಕ್ಕೂ ಜನತಾ ದರ್ಶನ ನಿಲ್ಲಿಸಲು ಸಾಧ್ಯವಿಲ್ಲ ಎಂದು ಅವರು ನುಡಿದರು.

ಇದನ್ನೂ ಓದಿ: Prajwal Revanna Case: ಪ್ರಜ್ವಲ್‌ ರೇವಣ್ಣ ಜಾಮೀನು ಅರ್ಜಿ ವಿಚಾರಣೆ 2 ವಾರ ಮುಂದೂಡಿಕೆ

ಇದಕ್ಕೂ ಮುನ್ನ ಅವರು ಮಂಡ್ಯ ಕಾಳಿಕಾಂಬ ದೇವಾಲಯಕ್ಕೆ ಭೇಟಿ ನೀಡಿದರು. ಅಲ್ಲಿ ದೇವಾಲಯದ ಮುಂದೆ ಬಿಜೆಪಿ ನಾಯಕರು ಲೋಕಸಭೆ ಚುನಾವಣೆ ಸಂದರ್ಭದಲ್ಲಿ ಬಿಲ್ವ ಮರಕ್ಕೆ ಕಟ್ಟಿದ್ದ ಗೆಲುವಿನ ಗಂಟು ಬಿಚ್ಚಿ ದೇವಿಗೆ ಪೂಜೆ ಸಲ್ಲಿಸಿದರು. ಚುನಾವಣೆ ವೇಳೆ ಕುಮಾರಸ್ವಾಮಿ ಗೆಲುವಿಗಾಗಿ ಪ್ರಾರ್ಥಿಸಿ ಕಾರ್ಯಕರ್ತರು ಈ ಹರಕೆ ಕಟ್ಟಿದ್ದರು. ಕಾಳಿಕಾಂಬ ದೇವಾಲಯದಲ್ಲಿ ಪೂಜೆ ಸಲ್ಲಿಕೆ ಬಳಿಕ ಅಂಬೇಡ್ಕರ್ ಭವನದಲ್ಲಿ ನಡೆದ ಜನತಾ ದರ್ಶನ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಸಾವಿರಾರು ಮಂದಿ ಮುಂಜಾನೆಯಿಂದಲೇ ಕೇಂದ್ರ ಸಚಿವರ ಜನತಾ ದರ್ಶನಕ್ಕಾಗಿ ಆಗಮಿಸಿದ್ದಾರೆ.

Continue Reading

ಚಿಕ್ಕಬಳ್ಳಾಪುರ

Lovers Fighting: ಪ್ರೀತಿಸಿ ಕೈಕೊಟ್ಟವನಿಗೆ ನಡುರಸ್ತೆಯಲ್ಲೇ ಚಳಿ ಬಿಡಿಸಿದ ಗರ್ಭಿಣಿ

Lovers Fighting: ಪ್ರೀತಿಸುವ ನೆಪದಲ್ಲಿ ಯುವತಿ ಜತೆಗೆ ಪಾರ್ಕ್‌, ಸಿನಿಮಾ ಅಂತ ಸುತ್ತಾಡಿದ್ದ. ಬಳಿಕ ಆಕೆಯನ್ನು ಗರ್ಭಿಣಿ ಮಾಡಿದ ಪ್ರಿಯಕರ ಮದುವೆ ಅಂದರೆ ಒಲ್ಲೆ ಎಂದವನಿಗೆ ನಡು ರಸ್ತೆಯಲ್ಲೇ ಚಳಿ ಬಿಡಿಸಿದ್ದಾಳೆ. ಪ್ರೇಮಿಗಳ ರಂಪಾಟವನ್ನು ಸ್ಥಳೀಯರು ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಾರೆ.

VISTARANEWS.COM


on

By

Lovers Fighting
Koo

ಚಿಕ್ಕಬಳ್ಳಾಪುರ: ಪ್ರಿಯಕರನೊಬ್ಬ ಪ್ರೀತಿಸುವ ನಾಟಕವಾಡಿ ಏಳು ತಿಂಗಳ ಗರ್ಭಿಣಿ ಮಾಡಿ ಕೈಕೊಟ್ಟಿರುವ (Lovers Fighting) ಘಟನೆ ಚಿಕ್ಕಬಳ್ಳಾಪುರದ ಬಾಗೇಪಲ್ಲಿಯಲ್ಲಿ ನಡೆದಿದೆ. ನಡುರಸ್ತೆಯಲ್ಲೇ ಪ್ರೇಮಿಗಳು ರಂಪಾಟ ನಡೆಸಿದ್ದು, ಬಳಿಕ ಪರಿಸ್ಥಿತಿ ಹೊಡೆದಾಟ ಬಡೆದಾಟಕ್ಕೂ (Cheating Case) ಹೋಗಿದೆ. ಬಾಗೇಪಲ್ಲಿ ತಾಲೂಕಿನ ಮಲ್ಲಸಂದ್ರ ಗ್ರಾಮದ ನಿವಾಸಿಗಳಾದ ಸೂರ್ಯಪ್ರಕಾಶ್‌, ಗಗನ ಎಂಬುವವರ ರಂಪಾಟವನ್ನು ಸ್ಥಳೀಯರು ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಾರೆ.

ಸೂರ್ಯಪ್ರಕಾಶ ಹಾಗೂ ಗಗನ ಇಬ್ಬರು ಪರಸ್ಪರ ಪ್ರೀತಿಸುತ್ತಿದ್ದರು. ಗಗನ ಯಾವಾಗ ಮದುವೆ ವಿಷಯ ಪ್ರಸ್ತಾಪ ಮಾಡಿದ್ದಳೋ ಆಗ ಅಂತರ ಕಾಯ್ದುಕೊಳ್ಳಲು ಮುಂದಾಗಿದ್ದ. ಸೂರ್ಯಪ್ರಕಾಶ್ ಮದುವೆಯನ್ನು ನಿರಾಕರಿಸಿದಾಗ ಆತನ ವಿರುದ್ಧ ಗಗನ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಳು.

ದೂರು ದಾಖಲಾಗುತ್ತಿದ್ದಂತೆ ಸೂರ್ಯ ಪ್ರಕಾಶ್‌ ಪೋಷಕರು ಮದುವೆ ಮಾಡಿಸುವುದಾಗಿ ನಂಬಿಸಿ ಬೇಲ್ ಪೇಪರ್ ಮೇಲೆ ಸಹಿ ಮಾಡಿಸಿಕೊಂಡಿದ್ದರು. ಬೇಲ್ ಪಡೆದ ಬಳಿಕ ಪ್ರಿಯಕರನ ಪೋಷಕರು ಉಲ್ಟಾ ಹೊಡೆದಿದ್ದರು. ಇದರಿಂದ ರೋಸಿ ಹೋದ ಗಗನ ಮದುವೆಯಾಗುವಂತೆ ಸೂರ್ಯನನ್ನು ನಡುಬೀದಿಯಲ್ಲಿ ನಿಲ್ಲಿಸಿದ್ದಳು. ಪ್ರೇಮಿಗಳ ನಡುವಿನ ಮಾತಿನ ಚಕಮಕಿ ಹಾಗೂ ಪರಸ್ಪರ ಹೊಡೆದಾಟ ಬಡೆದಾಟವನ್ನು ಸ್ಥಳೀಯರು ವಿಡಿಯೊ ಮಾಡಿಕೊಂಡಿದ್ದರು.

ಠಾಣೆ ಮೆಟ್ಟಿಲೇರಿದ್ದ ಯುವತಿ

ಪ್ರೀತಿ ಹೆಸರಲ್ಲಿ ತನ್ನನ್ನು ಗರ್ಭಿಣಿ (Pregnant) ಮಾಡಿ ವಂಚಿಸಿ (Fraud Case) ಪ್ರಿಯಕರ ಪರಾರಿಯಾಗಿದ್ದಾನೆ ಎಂದು ಚಿಕ್ಕಬಳ್ಳಾಪುರ ಜಿಲ್ಲೆಯ ಬಾಗೇಪಲ್ಲಿ ತಾಲ್ಲೂಕಿನ ಗಗನ ಪೊಲೀಸರಿಗೆ ದೂರು ನೀಡಿದ್ದಳು. ಇದೀಗ ಆಕೆ ಗರ್ಭಿಣಿ ಆಗಿದ್ದು, ಪ್ರಿಯಕರನನ್ನು ಹುಡುಕಿ ಕೊಡುವಂತೆ ಪೊಲೀಸ್ ಠಾಣೆಗೆ ದೂರು ನೀಡಿದ್ದಳು.

ಕಾಲೇಜಿನಲ್ಲಿ ಓದುವಾಗಲೇ ಈ ಜೋಡಿ ಪರಸ್ಪರ ಪ್ರೀತಿಸಿದ್ದರು. ತನ್ನನ್ನು ವಿವಾಹ ಆಗುವುದಾಗಿ ನಂಬಿಸಿ ತನ್ನನ್ನು ಬಳಸಿಕೊಂಡಿದ್ದು, ಇದೀಗ ತಾನು ಗರ್ಭಿಣಿಯಾಗಿದ್ದೇನೆ. ಆತನನ್ನು ಹುಡುಕಿಕೊಡಿ ಎಂದು ಗಗನ ಬಾಗೇಪಲ್ಲಿ ಪೊಲೀಸ್ ಠಾಣೆಯಲ್ಲಿ ಪ್ರಕರಣವನ್ನೂ ದಾಖಲಿಸಿದ್ದಳು. ಆದರೆ ಹೀಗೆ ಪೊಲೀಸರಿಗೆ ಲಾಕ್‌ ಆಗಿದ್ದ ಸೂರ್ಯ ಮದುವೆ ಆಗುವುದಾಗಿ ಹೇಳಿ ಮತ್ತೆ ಕೈಕೊಟ್ಟಿದ್ದಾನೆ.

ಇದನ್ನೂ ಓದಿ: Medical negligence: ಸಿಸೇರಿಯನ್ ಮಾಡುವಾಗ ಶಿಶುವಿನ ಮರ್ಮಾಂಗವನ್ನೇ ಕತ್ತರಿಸಿ ಸಾಯಿಸಿದ ವೈದ್ಯ!

ಧಾರವಾಡದಲ್ಲಿ ತಂದೆಯನ್ನು ಹುಡುಕಿಕೊಡುವಂತೆ ಮಗನ ಅಳಲು

ತಂದೆಯನ್ನು ಹುಡುಕಿಕೊಡುವಂತೆ ಮಗನೊಬ್ಬ ಎಸ್‌ಪಿ ಕಚೇರಿಗೆ ಆಗಮಿಸಿದ್ದಾನೆ. ಧಾರವಾಡ ಜಿಲ್ಲೆಯ ಮಾರಡಗಿ ಗ್ರಾಮದ ದ್ಯಾಮಪ್ಪ ಹಡಪದ ಕಳೆದ ಮೇ 19ರಂದು ಏಕಾಏಕಿ ಕಾಣೆಯಾಗಿದ್ದರಿ. ಕಳೆದ 50 ದಿನಗಳಿಂದ ತಂದೆ ಕಾಣುತ್ತಿಲ್ಲ ಎಂದು ಮಗ ಪ್ರವೀಣ್‌ ಅಳಲು ತೊಡಿಕೊಂಡಿದ್ದಾರೆ. ಧಾರವಾಡ ಎಸ್‌ಪಿ ಕಚೇರಿಗೆ ಆಗಮಿಸಿ ತಂದೆಯನ್ನು ಹುಡುಕಿಕೊಡುವಂತೆ ಪ್ರವೀಣ್ ಮನವಿ ಮಾಡಿದ್ದಾರೆ. ನಮ್ಮ ತಂದೆಗೆ ಏನಾಗಿದೆ ಅಂತಲೇ ಗೊತ್ತಿಲ್ಲ, ಅವರನ್ನ ಹುಡುಕಿಕೊಡಿ ಒತ್ತಾಯಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಕರ್ನಾಟಕ

Bengaluru News: ಬೆಂಗಳೂರಿನಲ್ಲಿ ಜು. 6,7ರಂದು ʼನಟನ ತರಂಗಿಣಿʼ 20ನೇ ವರ್ಷೋತ್ಸವ

Bengaluru News: ಬೆಂಗಳೂರಿನ ಕುಮಾರಸ್ವಾಮಿ ಬಡಾವಣೆಯ ನಟನ ತರಂಗಿಣಿ ಸ್ಕೂಲ್ ಆಫ್ ಮ್ಯೂಸಿಕ್ ಆ್ಯಂಡ್ ಡಾನ್ಸ್ ಸಂಸ್ಥೆಯ 20ನೇ ವರ್ಷದ ಸಂಭ್ರಮೋತ್ಸವದ ಅಂಗವಾಗಿ ಜುಲೈ 6 ಮತ್ತು 7 ರಂದು ‘ನಾದ ನೃತ್ಯಾನುಭವʼ ವಿಶೇಷ ಗಾಯನ, ವಾದನ ಮತ್ತು ನೃತ್ಯ ಕಾರ್ಯಕ್ರಮ ಆಯೋಜಿಸಿದೆ.

VISTARANEWS.COM


on

natana Tarangini 20th anniversary celebration on July 6 and 7 in Bengaluru
Koo

ಬೆಂಗಳೂರು: ನಗರದ ಕುಮಾರಸ್ವಾಮಿ ಬಡಾವಣೆಯ ನಟನ ತರಂಗಿಣಿ ಸ್ಕೂಲ್ ಆಫ್ ಮ್ಯೂಸಿಕ್ ಆ್ಯಂಡ್ ಡಾನ್ಸ್ ಸಂಸ್ಥೆಯ 20ನೇ ವರ್ಷದ ಸಂಭ್ರಮೋತ್ಸವದ ಅಂಗವಾಗಿ ಜುಲೈ 6 ಮತ್ತು 7 ರಂದು ‘ನಾದ ನೃತ್ಯಾನುಭವʼ ವಿಶೇಷ ಗಾಯನ, ವಾದನ ಮತ್ತು ನೃತ್ಯ ಕಾರ್ಯಕ್ರಮ (Bengaluru News) ಆಯೋಜಿಸಿದೆ.

ಬೆಂಗಳೂರಿನ ಜಯನಗರ 8ನೇ ಬಡಾವಣೆಯ ಶ್ರೀ ಜಯರಾಮ ಸೇವಾ ಮಂಡಳಿ ಸಭಾಂಗಣದಲ್ಲಿ ಎರಡು ದಿನಗಳ ಕಾಲ ನಡೆಯಲಿರುವ ಕಾರ್ಯಕ್ರಮದಲ್ಲಿ ನಟನ ತರಂಗಿಣಿ ಅಕಾಡೆಮಿಯ 5ನೇ ವಾರ್ಷಿಕೋತ್ಸವವೂ ಸಂಗಮಗೊಂಡಿದೆ. ಜು. 6ರ ಶನಿವಾರ ಮಧ್ಯಾಹ್ನ 2.30ಕ್ಕೆ ನಟನ ತರಂಗಣಿ ವಿದ್ಯಾರ್ಥಿಗಳಿಂದ ಗಾಯನ ಮತ್ತು ವಾದ್ಯ ಸಂಗೀತ ಕಾರ್ಯಕ್ರಮದ ಮೂಲಕ ವಾರ್ಷಿಕೋತ್ಸವ ಆರಂಭವಾಗಲಿದೆ.

ಇದನ್ನೂ ಓದಿ: Kalki 2898 AD: “ಕಲ್ಕಿ 2898 ಎಡಿ” ಸಿನಿಮಾ ನೋಡಲು ಜಪಾನ್‌ನಿಂದ ಹೈದರಾಬಾದ್‌ಗೆ ಬಂದ ಫ್ಯಾನ್ಸ್‌!

ಸಂಜೆ 5ಕ್ಕೆ ನಡೆಯುವ ಸಭಾ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಉಡುಪಿಯ ರಂಜನಿ ಮೆಮೋರಿಯಲ್ ಟ್ರಸ್ಟ್ ಅಧ್ಯಕ್ಷ ಪ್ರೊ. ಅರವಿಂದ ಹೆಬ್ಬಾರ್, ಶಿವಮೊಗ್ಗದ ಸಂಗೀತ ಕಾರ್ಯಕ್ರಮಗಳ ಸಂಘಟಕ ಸುಬ್ರಹ್ಮಣ್ಯ ಶಾಸ್ತ್ರಿ, ಚೆನ್ನೈನ ದಾಸಪ್ರಕಾಶ್ ಕುಟುಂಬದ ಕೆ. ಗಂಗಾ ಪ್ರಸಾದ್, ಪುತ್ತೂರಿನ ಕರ್ನಾಟಕ ಬ್ಯಾಂಕ್ ಮುಖ್ಯ ವ್ಯವಸ್ಥಾಪಕ ಶ್ರೀಹರಿ ಭಾಗವಹಿಸಲಿದ್ದಾರೆ.

ಶ್ರೀನಿವಾಸ್‌ಗೆ ನಾದಶ್ರೀ ಪ್ರಶಸ್ತಿ ಪ್ರದಾನ

ಬೆಂಗಳೂರಿನ ಮೃದಂಗ ಮತ್ತು ತಬಲಾ ತಯಾರಕ ವಿದ್ವಾನ್ ಶ್ರೀನಿವಾಸ ಅನಂತ ರಾಮಯ್ಯ ಅವರಿಗೆ ‘ನಾದ ಶ್ರೀʼ ಪ್ರಶಸ್ತಿ ನೀಡಿ, ಸನ್ಮಾನಿಸಲಾಗುವುದು. ಸಂಜೆ 5:30ಕ್ಕೆ ನಟನ ತರಂಗಣಿ ಸಂಸ್ಥೆಯ ವಿದ್ಯಾರ್ಥಿಗಳಿಂದ ವಿಶೇಷ ನೃತ್ಯ ಪ್ರದರ್ಶನವಿದೆ. ಮೃದಂಗ ಪಕ್ಕವಾದ್ಯದಲ್ಲಿ ವಿದ್ವಾನ್ ಕೆ.ಕೆ. ಭಾನುಪ್ರಕಾಶ್ ಸಹಕಾರ ನೀಡಲಿದ್ದಾರೆ. ಸಂಜೆ 7.30 ಕ್ಕೆ ವಿಶೇಷ ನೃತ್ಯ ಪ್ರಸ್ತುತಿಯಲ್ಲಿ ಚೆನ್ನೈನ ಖ್ಯಾತ ಕಲಾವಿದೆ ವಿದುಷಿ ದಿವ್ಯಾ ವೇಣುಗೋಪಾಲ್ ಭರತನಾಟ್ಯ ಜರುಗಲಿದೆ.

ವಿದ್ಯಾರ್ಥಿಗಳಿಂದ ವಾದ್ಯ ವೈಭವ

ಜುಲೈ 7 ರ ಮಧ್ಯಾಹ್ನ 2 ಗಂಟೆಗೆ ನಟನ ತರಂಗಿಣಿ ಸಂಸ್ಥೆ ವಿದ್ಯಾರ್ಥಿಗಳಿಂದ ಗಾಯನ ಮತ್ತು ವಾದ್ಯ ನೆರವೇರಲಿದೆ. ಸಂಜೆ 6ಕ್ಕೆ ನಡೆಯುವ ಸಭಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಹಿರಿಯ ಜ್ಯೋತಿಷ್ಯ ಶಾಸ್ತ್ರಜ್ಞ, ಬೇಕಲ್ ಗೋಕುಲಂ ಗೋಶಾಲೆ ಸಂಸ್ಥಾಪಕ ವಿಷ್ಣು ಪ್ರಸಾದ ಹೆಬ್ಬಾರ್ ಮತ್ತು ನಾಗರತ್ನಾ ಹೆಬ್ಬಾರ್, ಬೆಂಗಳೂರಿನ ರಾಮಸೇವಾ ಮಂಡಳಿ ಕಾರ್ಯನಿರ್ವಾಹಕ ಅಭಿಜಿತ್ ವಾದಿರಾಜ್, ಉಡುಪಿಯ ಹಿರಿಯ ಸಂಗೀತ ತಜ್ಞ, ಸಂಯೋಜಕ, ರಂಜನಿ ಮೆಮೋರಿಯಲ್ ಟ್ರಸ್ಟ್ ಅಧ್ಯಕ್ಷ ಅರವಿಂದ ಹೆಬ್ಬಾರ್ ಮುಖ್ಯ ಅತಿಥಿಗಳಾಗಿ ಆಗಮಿಸಲಿದ್ದಾರೆ. ನಟನ ತರಂಗಿಣಿ ಸಂಸ್ಥಾಪಕ ಅಧ್ಯಕ್ಷೆ ಡಾ. ವೈ.ಜಿ. ಪರಿಮಳಾ, ಕಾರ್ಯದರ್ಶಿಗಳಾದ ವಿದ್ವಾನ್ ನಿಕ್ಷಿತ್ ಪುತ್ತೂರು ಮತ್ತು ವಿದುಷಿ ವೈ. ಜಿ. ಶ್ರೀ ಲತಾ ಉಪಸ್ಥಿತರಿರಲಿದ್ದಾರೆ.

ಸುಬ್ರಹ್ಮಣ್ಯ ಶಾಸ್ತ್ರಿಗೆ ಕಲಾಶ್ರಯ ಪ್ರಶಸ್ತಿ

ಶಿವಮೊಗ್ಗದ ಹಿರಿಯ ಸಂಗೀತ ಸಂಘಟಕ, ಕಲಾ ಪ್ರೇಮಿ ಸುಬ್ರಹ್ಮಣ್ಯ ಶಾಸ್ತ್ರಿ ಅವರಿಗೆ ಇದೇ ವೇದಿಕೆಯಲ್ಲಿ ‘ಕಲಾಶ್ರಯʼ ಪ್ರಶಸ್ತಿ ನೀಡಿ ಸನ್ಮಾನಿಸಲಾಗುವುದು. ನಂತರ ನಡೆಯಲಿರುವ ದ್ವಂದ್ವ ಗಾಯನದಲ್ಲಿ ಲತಾಂಗಿ ಸಹೋದರಿಯರು ಎಂದೇ ಖ್ಯಾತರಾದ ಅರ್ಚನಾ ಮತ್ತು ಸಮನ್ವಿ ಕರ್ನಾಟಕ ಶಾಸ್ತ್ರೀಯ ಸಂಗೀತ ಸುಧೆ ಹರಿಸಲಿದ್ದಾರೆ. ಪಕ್ಕವಾದ್ಯದಲ್ಲಿ ವಿದುಷಿ ಸಿ.ವಿ. ಶ್ರುತಿ (ಪಿಟೀಲು), ವಿದ್ವಾನ್ ಆನೂರು ಅನಂತ ಕೃಷ್ಣ ಶರ್ಮ(ಮೃದಂಗ), ವಿದುಷಿ ಸುಕನ್ಯಾ ರಾಮಗೋಪಾಲ್ (ಘಟಂ) ಮತ್ತು ವಿದ್ವಾನ್ ಪಯ್ಯನೂರ್ ಗೋವಿಂದ ಪ್ರಸಾದ್ (ಮೋರ್ಸಿಂಗ್) ಸಾಥ್ ನೀಡಲಿರುವುದು ವಿಶೇಷ. ಕಲಾರಸಿಕರು ಭಾಗವಹಿಸುವಂತೆ ಸಂಗೀತ ಮತ್ತು ನೃತ್ಯ ‘ಉಭಯ ಕಲಾ ವಿದುಷಿʼ ವೈ.ಜಿ. ಶ್ರೀಲತಾ ಕೋರಿದ್ದಾದ್ದಾರೆ.

ಇದನ್ನೂ ಓದಿ: Edu Guide: ವಿದ್ಯಾರ್ಥಿಗಳಿಗೆ ಗುಡ್‌ನ್ಯೂಸ್‌: IDFC FIRST ಬ್ಯಾಂಕ್‌ನಿಂದ 2 ಲಕ್ಷ ರೂ. ಸ್ಕಾಲರ್‌ಶಿಪ್‌; ಹೀಗೆ ಅಪ್ಲೈ ಮಾಡಿ

ಸಂಗೀತ ಶಿಕ್ಷಣ ವ್ಯಕ್ತಿತ್ವಕ್ಕೆ ಸಂಸ್ಕಾರ ರೂಢಿಸಿ ಬದುಕನ್ನು ಎತ್ತರಕ್ಕೆ ಕೊಂಡೊಯ್ಯುತ್ತದೆ. ಮನಸ್ಸಿನ ಕಲಾತ್ಮಕ ಭಾಗವನ್ನು ವ್ಯಕ್ತಪಡಿಸಲು ಅನುವು ಮಾಡಿಕೊಡುತ್ತದೆ. ವ್ಯಕ್ತಿಯ ಭಾವನಾತ್ಮಕ, ಬೌದ್ಧಿಕ ಮತ್ತು ಆಧ್ಯಾತ್ಮಿಕ ಯೋಗಕ್ಷೇಮದ ನಡುವೆ ಸಮತೋಲನವನ್ನು ತರುತ್ತದೆ. ಸಂಗೀತ ಕಲಿಕೆ ಒಂದು ಸೌಹಾರ್ದ ಮತ್ತು ಸುಂದರ ಸಮಾಜದ ಬೆಳವಣಿಗೆಗೆ ಅತ್ಯಗತ್ಯ. ನಾನು ನಟನ ತರಂಗಿಣಿ-ಕಲಾ ಶಾಲೆಯನ್ನು ಪ್ರಾರಂಭಿಸಲು ಇದೇ ಸ್ಫೂರ್ತಿ. 20 ವರ್ಷದಿಂದ ಭಗವಂತನ ಸೇವೆ ಎಂದೇ ಭಾವಿಸಿ ಸಾವಿರಾರು ಮಕ್ಕಳಿಗೆ ಬೋಧನೆ ಮಾಡಿದ್ದೇನೆ. ಈ ಕೈಂಕರ್ಯ ನನಗೆ ಧನ್ಯತೆ ನೀಡಿದೆ.

-ವಿದುಷಿ ವೈ.ಜಿ. ಪರಿಮಳ, ನಟನ ತರಂಗಿಣಿ ಸಂಸ್ಥೆ ಸಂಸ್ಥಾಪಕ ಅಧ್ಯಕ್ಷೆ.

Continue Reading
Advertisement
Team India
ಕ್ರೀಡೆ1 min ago

Team India: ರೋಹಿತ್​, ಸೂರ್ಯಕುಮಾರ್​, ದುಬೆ, ಜೈಸ್ವಾಲ್​ಗೆ ಸನ್ಮಾನ ಮಾಡಿದ ಸಿಎಂ ಏಕನಾಥ್​ ಶಿಂಧೆ

Guarantee Schemes
ಕರ್ನಾಟಕ2 mins ago

Guarantee Schemes: ಗ್ಯಾರಂಟಿ ಯೋಜನೆಗಳಿಗೆ ದಲಿತರ 14 ಸಾವಿರ ಕೋಟಿ ರೂ. ಕೊಟ್ಟ ಸಿದ್ದರಾಮಯ್ಯ!

T20 World Cup
ಪ್ರಮುಖ ಸುದ್ದಿ2 mins ago

T20 World Cup :​ ವಿಜಯೋತ್ಸವದ ಕ್ಷಣಗಳನ್ನು ಉಲ್ಲೇಖಿಸಿ ಬಿಸಿಸಿಐಗೆ ಕುಟುಕಿದ ಆದಿತ್ಯ ಠಾಕ್ರೆ

Sexual Harassment
Latest13 mins ago

Sexual Harassment: 80 ವರ್ಷದ ಅಜ್ಜಿಯ ಮೇಲೆ ನಿರಂತರ ಅತ್ಯಾಚಾರ; ಮೊಮ್ಮಗನಿಗೆ ಜೀವಾವಧಿ ಶಿಕ್ಷೆ

ಕರ್ನಾಟಕ21 mins ago

Satish Jarkiholi: ಜನತಾ ದರ್ಶನಕ್ಕೆ ಅಧಿಕಾರಿಗಳು ಗೈರಾಗುವುದು ತಪ್ಪು; ಎಚ್‌ಡಿಕೆ ಪರ ಸಚಿವ ಸತೀಶ್ ಜಾರಕಿಹೊಳಿ ಬ್ಯಾಟಿಂಗ್!

Kangana Ranaut Madhavan's Hilarious Reaction To Double-Meaning
ಬಾಲಿವುಡ್21 mins ago

Kangana Ranaut: ನಿಮ್ಮೊಳಗೆ ರಾಷ್ಟ್ರೀಯ ಪ್ರಶಸ್ತಿ ಇದೆಯಾ ಎಂದು ಕಂಗನಾಗೆ ಡಬಲ್‌ ಮೀನಿಂಗ್‌ ಪ್ರಶ್ನೆ;ಬಿದ್ದು ಬಿದ್ದು ನಕ್ಕ ಆರ್ ಮಾಧವನ್!

Lovers Fighting
ಚಿಕ್ಕಬಳ್ಳಾಪುರ22 mins ago

Lovers Fighting: ಪ್ರೀತಿಸಿ ಕೈಕೊಟ್ಟವನಿಗೆ ನಡುರಸ್ತೆಯಲ್ಲೇ ಚಳಿ ಬಿಡಿಸಿದ ಗರ್ಭಿಣಿ

Defence Production
ದೇಶ27 mins ago

Defence Production: ರಕ್ಷಣಾ ಕ್ಷೇತ್ರದಲ್ಲಿ ಭಾರತ ಆತ್ಮನಿರ್ಭರ; ರಕ್ಷಣಾ ಉತ್ಪಾದನೆ ದಾಖಲೆಯ ಶೇ.16ರಷ್ಟು ಏರಿಕೆ

Georgina Rodriguez
ಕ್ರೀಡೆ47 mins ago

Georgina Rodriguez : ಬಿಕಿನಿ ದಿನದಂದು ಬಗೆಬಗೆಯ ಬಿಕಿನಿಗಳಲ್ಲಿ ಮೈಮಾಟ ತೋರಿಸಿದ ಕ್ರಿಸ್ಟಿಯಾನೊ ರೊನಾಲ್ಡೊ ಪ್ರೇಯಸಿ ಜಾರ್ಜಿಯಾ ರೋಡ್ರಿಗಸ್​

Stock Market
ವಾಣಿಜ್ಯ52 mins ago

Stock Market: 1 ಲಕ್ಷ ಪಾಯಿಂಟ್‌ ಮೈಲಿಗಲ್ಲಿನತ್ತ ಸೆನ್ಸೆಕ್ಸ್‌; ಅಂಕಿ-ಅಂಶ ಹೇಳೋದೇನು?

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Lovers Fighting
ಚಿಕ್ಕಬಳ್ಳಾಪುರ22 mins ago

Lovers Fighting: ಪ್ರೀತಿಸಿ ಕೈಕೊಟ್ಟವನಿಗೆ ನಡುರಸ್ತೆಯಲ್ಲೇ ಚಳಿ ಬಿಡಿಸಿದ ಗರ್ಭಿಣಿ

karnataka rain
ಮಳೆ3 hours ago

Karnataka Rain: ಮಳೆಗೆ ಮನೆಗಳಿಗೆ ನುಗ್ಗುತ್ತಿವೆ ಹಾವುಗಳು! ಕುಸಿದು ಬಿತ್ತು ಮನೆಗಳು

Elephant attack in Hassan and Chikmagalur
ಹಾಸನ4 hours ago

Elephant Attack : ಕಾಫಿ ತೋಟದ‌ ಕೆಲಸಗಾರನನ್ನು ಸೊಂಡಿಲಿನಿಂದ ಎತ್ತಿ ಬಿಸಾಡಿದ ಒಂಟಿ ಸಲಗ

Physical Abuse
ಬೆಂಗಳೂರು5 hours ago

Physical Abuse : ಇವಳೇನು ಶಿಕ್ಷಕಿಯೋ ಕಾಮುಕಿಯೋ; ಬಾಲಕಿಯ ಖಾಸಗಿ ಅಂಗಾಂಗ ಮುಟ್ಟಿ ವಿಕೃತಿ

Self Harming in bengaluru
ಬೆಂಗಳೂರು6 hours ago

Self Harming : ವರದಕ್ಷಿಣೆ ಟಾರ್ಚರ್‌; ಫ್ಯಾನಿಗೆ ನೇಣು ಬಿಗಿದುಕೊಂಡು ಟೆಕ್ಕಿ ಸೂಸೈಡ್‌

karnataka Weather Forecast Rain
ಮಳೆ10 hours ago

Karnataka Weather : ಕರಾವಳಿ, ಮಲೆನಾಡಿನಲ್ಲಿ ಮಳೆ ಅಬ್ಬರ; ಇಲ್ಲೆಲ್ಲ ಕಾದಿದೆ ಗಂಡಾಂತರ

karnataka Weather Forecast
ಮಳೆ22 hours ago

Karnataka Weather : ಭಾರಿ ಮಳೆಗೆ ಗುಡ್ಡ ಕುಸಿತ; ಮಣ್ಣಿನ ಅಡಿ ಸಿಲುಕಿದ ಮಹಿಳೆ ಉಸಿರುಗಟ್ಟಿ ಸಾವು

karnataka Rain
ಮಳೆ24 hours ago

Karnataka Rain : ಮಳೆಗೆ ಜಾರಿ ಮುಖಾಮುಖಿ ಡಿಕ್ಕಿಯಾದ ಲಾರಿಗಳು; ಕಾರಿನ ಮೇಲೆ ಬಿದ್ದ ಬೃಹತ್‌ ಮರ

wild animal attack
ಬೆಂಗಳೂರು ಗ್ರಾಮಾಂತರ1 day ago

Wild Animal Attack : ಮಾಗಡಿಯಲ್ಲಿ ರೈತನ ತಲೆ ಬಗೆದ ಕರಡಿ; ಮಲೆನಾಡಿನಲ್ಲಿ ಆನೆಗಳ ಹಾವಳಿ

Chikkaballapura News
ಚಿಕ್ಕಬಳ್ಳಾಪುರ1 day ago

Chikkaballapura News : ಒಂದು ವರ್ಷದ ಮಗು ಬಿಟ್ಟು ಕ್ಷಣಾರ್ಧದಲ್ಲಿ ತಾಯಿ ಎಸ್ಕೇಪ್!

ಟ್ರೆಂಡಿಂಗ್‌