Koppala News: ಕುಮ್ಮಟದುರ್ಗದ ಕೋಟೆಯಲ್ಲಿ 400 ಅಡಿ ಎತ್ತರದಲ್ಲಿ ಗಾಳಿಪಟದಂತೆ ಹಾರಾಡಿದ ತಿರಂಗ - Vistara News

ಕರ್ನಾಟಕ

Koppala News: ಕುಮ್ಮಟದುರ್ಗದ ಕೋಟೆಯಲ್ಲಿ 400 ಅಡಿ ಎತ್ತರದಲ್ಲಿ ಗಾಳಿಪಟದಂತೆ ಹಾರಾಡಿದ ತಿರಂಗ

Koppala News: ಗಂಗಾವತಿ ಕ್ಷೇತ್ರದ ವ್ಯಾಪ್ತಿಯ ನಿಸರ್ಗ ನಿರ್ಮಿತ ಗಂಡುಗಲಿ ಕುಮಾರರಾಮನ ಕುಮ್ಮಟದುರ್ಗದ ಕೋಟೆಯಲ್ಲಿ ಸಮಾನ ಮನಸ್ಕ ಯುವಕರ ತಂಡದಿಂದ ತಿರಂಗವನ್ನು ಗಾಳಿಪಟದಂತೆ ಬಾನೆತ್ತರಕ್ಕೆ ಹಾರಿಸುವ ಮೂಲಕ ಗಮನ ಸೆಳೆಯಿತು.

VISTARANEWS.COM


on

Tiranga flying like a kite at a height of 400 feet in Kummadadurga fort at Gangavathi
ಗಂಗಾವತಿ ಕ್ಷೇತ್ರದ ವ್ಯಾಪ್ತಿಯ ಕುಮ್ಮಟದುರ್ಗದ ಕೋಟೆಯಲ್ಲಿ ಸಮಾನ ಮನಸ್ಕ ಯುವಕರ ತಂಡದಿಂದ ತಿರಂಗವನ್ನು ಗಾಳಿಪಟದಂತೆ ಬಾನೆತ್ತರಕ್ಕೆ ಹಾರಿಸುವ ಮೂಲಕ ಗಮನ ಸೆಳೆಯಿತು.
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಗಂಗಾವತಿ: ಕ್ಷೇತ್ರದ ವ್ಯಾಪ್ತಿಯ ನಿಸರ್ಗ ನಿರ್ಮಿತ ಗಂಡುಗಲಿ ಕುಮಾರರಾಮನ ಕುಮ್ಮಟದುರ್ಗದ ಕೋಟೆಯಲ್ಲಿ (Kummadadurga fort) ಸಮಾನ ಮನಸ್ಕ ಯುವಕರ ತಂಡವು ತಿರಂಗವನ್ನು (National Flag) ಗಾಳಿಪಟದಂತೆ (kite) ಬಾನೆತ್ತರಕ್ಕೆ ಹಾರಿಸುವ ಮೂಲಕ ಗಮನ ಸೆಳೆದಿದ್ದಾರೆ.

ಗಾಳಿಪಟ ಹಾರಿಸುವಲ್ಲಿ ಪರಿಣಿತರಾದ ಪ್ರಸನ್ನ ಮಿಶ್ರಿಕೋಟೆ ನೇತೃತ್ವದಲ್ಲಿ ಜಿ.ಆರ್. ಅರ್ಜುನ್‌ (ದ್ರೋಣ್), ರಮೇಶ, ಹರನಾಯಕ ಮತ್ತು ವಾದಿರಾಜ ದೇಸಾಯಿ ಎಂಬುವವರು ವಿಭಿನ್ನ ಯತ್ನ ಮಾಡಿದ್ದಾರೆ.

ಸ್ವತಂತ್ರ್ಯೋತ್ಸವದ ಅಂಗವಾಗಿ ಕುಮ್ಮಟದುರ್ಗದಲ್ಲಿ ಮೂರು ಮೀಟರ್ ಅಗಲದ ಬಟ್ಟೆಯಲ್ಲಿ ವಿಶೇಷವಾಗಿ ವಿನ್ಯಾಸ ಮಾಡಿಸಲಾದ ತ್ರಿವರ್ಣ ಧ್ವಜವನ್ನು ನೆಲದಿಂದ 400 ಅಡಿ ಎತ್ತರದಲ್ಲಿ ವಿಶೇಷ ಸಾಧನ ಬಳಿಸಿ ಗಾಳಿಪಟದಲ್ಲಿ ಹಾರಿಸಲಾಗಿದೆ.

ಇದನ್ನೂ ಓದಿ: Independence Day 2023 : ಭಾರತದ ಹೆಮ್ಮೆಯಿದು ತ್ರಿವರ್ಣ; ನಮ್ಮ ಧ್ವಜದ ಕುರಿತ ಈ ಸಂಗತಿಗಳು ತಿಳಿದಿರಲಿ…

ಈ ತ್ರಿವರ್ಣ ಧ್ವಜದ ಗಾಳಿಪಟವನ್ನು ಕೋಟೆಯ ಎತ್ತರದ ಗಿರಿಶಿಖರದಿಂದ ಹಾರಿಸಲಾಯಿತು, ಇದು ಸುತ್ತಮುತ್ತಲಿನ ಜನರ ಗಮನ ಸೆಳೆಯಿತು.

ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಯುವಕ ಅರ್ಜುನ್, ಕುಮ್ಮಟದುರ್ಗದಲ್ಲಿ ಕೇವಲ ಪ್ರಯೋಗ ಮಾಡಲಾಗಿದೆ. ಆಗಸ್ಟ್ 15ರಂದು ಗಂಗಾವತಿಯಲ್ಲಿ ಸ್ವಾತಂತ್ರ್ಯ ದಿನಾಚರಣೆಯ ಧ್ವಜಾರೋಹಣದ ಬಳಿಕ ತಾಲೂಕು ಕ್ರೀಡಾಂಗಣದಲ್ಲಿ ತ್ರಿವರ್ಣ ಧ್ವಜವನ್ನು ಗಾಳಿಪಟದಂತೆ ಎತ್ತರಕ್ಕೆ ಹಾರಿಸಲಾಗುತ್ತಿದೆ ಎಂದರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Monsoon : ಮಳೆ ವರದಿ; ಕರ್ನಾಟಕದಲ್ಲಿ ಜೂನ್ 1ರಂದೇ ಮಾನ್ಸೂನ್ ಮಳೆ ಆರಂಭ

Monsoon: ಜೂನ್ ಮೊದಲ ವಾರದವರೆಗೂ ಬೆಂಗಳೂರಿನಲ್ಲಿ ಮುಂಗಾರು ಪೂರ್ವ ಮಳೆಯಾಗಲಿದೆ. ಕಳೆದ ಕೆಲವು ದಿನಗಳಿಂದ ಬೆಂಗಳೂರಿನಲ್ಲಿ ಮಳೆ ನಿಂತಿದ್ದರೂ, ಈ ತಿಂಗಳ ಅಂತ್ಯದ ವೇಳೆಗೆ ನಗರಕ್ಕೆ ಮತ್ತೆ ಮಳೆ ಮರಳಲಿದೆ. ಜೂನ್ ಎರಡನೇ ವಾರದಲ್ಲಿ ಮುಂಗಾರು ನಗರಕ್ಕೆ ಆಗಮಿಸಲಿದೆ.

VISTARANEWS.COM


on

Mansoon
Koo

ಬೆಂಗಳೂರು: ಜೂನ್ ಮೊದಲ ವಾರದಲ್ಲಿ ಕರ್ನಾಟಕಕ್ಕೆ ಮುಂಗಾರು ಪ್ರವೇಶಿಸಲಿದ್ದು, ಜೂನ್ 13 ಅಥವಾ 14ರಂದು ಬೆಂಗಳೂರಿನಲ್ಲಿ ಮಾನ್ಸೂನ್​ ಮಳೆಗಾಲ (Monsoon) ಆರಂಭವಾಲಿದೆ ಎಂದು ಹವಾಮಾನ ಇಲಾಖೆ (Weather Forcast) ತಿಳಿಸಿದೆ. ಬಂಗಾಳಕೊಲ್ಲಿಯಲ್ಲಿ ಚಂಡಮಾರುತ ಕಾಣಿಸಿಕೊಂಡರೆ ಮಾನ್ಸೂನ್ ಆಗಮನವನ್ನು ತಡವಾಗಬಹುದು ಎಂಬುದಾಗಿ ಎಂದು ಅಧಿಕಾರಿಗಳು ಒತ್ತಿ ಹೇಳಿದರು. ವರದಿಯ ಪ್ರಕಾರ, ನೈಋತ್ಯ ಮಾನ್ಸೂನ್ ಈಗಾಗಲೇ ಅಂಡಮಾನ್ ಮತ್ತು ನಿಕೋಬಾರ್ ದ್ವೀಪಗಳಲ್ಲಿ ಕ್ರೊಡೀಕರಣಗೊಂಡಿದೆ. ನೈಋತ್ಯ ಮುಂಗಾರು ಜೂನ್ 1 ಅಥವಾ 2ರಂದು ಕೇರಳ ಕರಾವಳಿಗೆ ತಲುಪುವ ಸಾಧ್ಯತೆ ಇದೆ. ಇದು ಜೂನ್ 6 ಅಥವಾ 7 ರಂದು ದಕ್ಷಿಣ ಕನ್ನಡದ ಮೂಲಕ ಕರ್ನಾಟಕ ಕರಾವಳಿಯನ್ನು ಪ್ರವೇಶಿಸಲಿದ್ದು, ಜೂನ್ 14 ರ ವೇಳೆಗೆ ಕ್ರಮೇಣ ದಕ್ಷಿಣ ಒಳನಾಡಿನ ಪ್ರದೇಶಗಳಿಗೆ ಹರಡಲಿದೆ ಎಂದು ಹಿರಿಯ ಹವಾಮಾನ ತಜ್ಞ ಸಿ.ಎಸ್.ಪಾಟೀಲ್ ಹೇಳಿದ್ದಾರೆ.

ಜೂನ್ ಮೊದಲ ವಾರದವರೆಗೂ ಬೆಂಗಳೂರಿನಲ್ಲಿ ಮುಂಗಾರು ಪೂರ್ವ ಮಳೆಯಾಗಲಿದೆ. ಕಳೆದ ಕೆಲವು ದಿನಗಳಿಂದ ಬೆಂಗಳೂರಿನಲ್ಲಿ ಮಳೆ ನಿಂತಿದ್ದರೂ, ಈ ತಿಂಗಳ ಅಂತ್ಯದ ವೇಳೆಗೆ ನಗರಕ್ಕೆ ಮತ್ತೆ ಮಳೆ ಮರಳಲಿದೆ. ಜೂನ್ ಎರಡನೇ ವಾರದಲ್ಲಿ ಮುಂಗಾರು ನಗರಕ್ಕೆ ಆಗಮಿಸಲಿದೆ.

ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (ಬಿಬಿಎಂಪಿ) ಈಗಾಗಲೇ ಮಳೆಗಾಲವನ್ನು ಎದುರಿಸಲು ಸಜ್ಜಾಗುತ್ತಿದೆ, ಏಕೆಂದರೆ ನಗರವು ಪ್ರವಾಹ ಮತ್ತು ಜಲಾವೃತತೆಗೆ ಸಾಕ್ಷಿಯಾಗುವ ಸಾಧ್ಯತೆಯಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರು ಬುಧವಾರ ನಗರದ ಪ್ರವಾಹ ಪೀಡಿತ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು ಮತ್ತು ಮಳೆಗಾಲದಲ್ಲಿ ಯಾವುದೇ ರೀತಿಯ ಪರಿಸ್ಥಿತಿಯನ್ನು ಎದುರಿಸಲು ಸಿದ್ಧರಾಗುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಕರಾವಳಿಯಲ್ಲಿ ಬಿರುಗಾಳಿ ಮಳೆ; ಕಡಲಿಗಿಳಿಯದಂತೆ ಮೀನುಗಾರರಿಗೆ ಅಲರ್ಟ್!

ಬೆಂಗಳೂರು: ರಾಜ್ಯಾದ್ಯಂತ ವರುಣಾರ್ಭಟ ಮುಂದುವರಿದಿದ್ದು, ಗುಡುಗು, ಮಿಂಚು ಸಹಿತ (Rain News) ಬಿರುಗಾಳಿಯೊಂದಿಗೆ ಮಳೆಯಾಗಲಿದೆ. ಕರಾವಳಿಯ ಉಡುಪಿ, ಉತ್ತರ ಕನ್ನಡ ಜಿಲ್ಲೆಯ ಹೆಚ್ಚಿನ ಸ್ಥಳಗಳಲ್ಲಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಗಾಳಿ ವೇಗವು ಗಂಟೆಗೆ 40-50 ಕಿ.ಮೀ ವ್ಯಾಪ್ತಿಯಲ್ಲಿ (Karnataka Weather Forecast) ಬೀಸಲಿದೆ.

ಇದನ್ನೂ ಓದಿ: Superstar Rajinikanth : ನಟ ರಜನಿಕಾಂತ್​​ಗೆ ವಿಶೇಷ ಗಿಫ್ಟ್​ ಕೊಟ್ಟ ಲುಲು ಮಾಲ್​ನ ಮಾಲೀಕ ಯೂಸುಫ್​​ ಅಲಿ

ಇನ್ನೂ ದಕ್ಷಿಣ ಒಳನಾಡಿನ ಬೆಂಗಳೂರು, ಬೆಂಗಳೂರು ಗ್ರಾಮಾಂತರ, ಚಾಮರಾಜನಗರ, ಚಿಕ್ಕಮಗಳೂರು, ದಾವಣಗೆರೆ, ಹಾಸನ, ಕೋಲಾರ, ಮಂಡ್ಯ, ರಾಮನಗರ ಮತ್ತು ಶಿವಮೊಗ್ಗದಲ್ಲೂ ವ್ಯಾಪಕ ಮಳೆಯಾಗಲಿದೆ.

ಉತ್ತರ ಒಳನಾಡಿನ ಬಾಗಲಕೋಟೆ, ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಕಲಬುರಗಿ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಕೆಲವು ಸ್ಥಳಗಳಲ್ಲಿ ಗುಡುಗು ಸಹಿತ ಗಾಳಿಯೊಂದಿಗೆ (40-50 ಕಿಮೀ) ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.

ಬಳ್ಳಾರಿ, ಚಿತ್ರದುರ್ಗ, ಚಿಕ್ಕಬಳ್ಳಾಪುರದ ಹಲವು ಕಡೆಗಳಲ್ಲಿ ಗಾಳಿಯು ರಭಸವಾಗಿ ಬೀಸಲಿದ್ದು, ಗುಡುಗು ಸಹಿತ ಮಳೆ ಲಘು ಮಳೆಯಾಗಲಿದೆ. ತುಮಕೂರು ಮತ್ತು ವಿಜಯನಗರ ಸೇರಿದಂತೆ ಬೀದರ್, ಕೊಪ್ಪಳ, ರಾಯಚೂರು ಮತ್ತು ಯಾದಗಿರಿಯಲ್ಲೂ ಗಾಳಿ ಸಹಿತ ಭಾರಿ ಮಳೆಯಾಗಲಿದೆ.

Continue Reading

ಬೆಂಗಳೂರು

Waste Disposal: ಕಸ ವಿಲೇವಾರಿ ಇನ್ನು ಬಿಬಿಎಂಪಿ ಕೆಲಸ ಅಲ್ಲ! ಅದಕ್ಕಾಗಿಯೇ ಬರುತ್ತಿದೆ ಹೊಸ ಸಂಸ್ಥೆ

Waste Disposal: ನಗರದಲ್ಲಿ ಕಸದ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಹೊಸ ಯೋಜನೆ ಜಾರಿಯಾಗುತ್ತಿದ್ದು, ಕಸ ವಿಲೇವಾರಿಗಾಗಿಯೇ (garbage disposal) ಒಂದು ಕಂಪನಿಯನ್ನು ರಾಜ್ಯ ಸರ್ಕಾರ ಸ್ಥಾಪಿಸಿದೆ. “ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಕಂಪನಿ ನಿಯಮಿತ” ಹೆಸರಿನ ಈ ಕಂಪನಿ ಘನತ್ಯಾಜ್ಯ ನಿರ್ವಹಣೆಯನ್ನು ಕೈಗೆತ್ತಿಕೊಳ್ಳಲಿದೆ.

VISTARANEWS.COM


on

bbmp waste disposal
Koo

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ (Bengaluru) ಕಸ ವಿಲೇವಾರಿ (waste disposal) ಸಮಸ್ಯೆ ಬೃಹತ್‌ ಆಗಿ ಬೆಳೆದು ನಿಂತಿದೆ. ಬಿಬಿಎಂಪಿಯಲ್ಲಿ (BBMP) ಸಾಕಷ್ಟು ಎಂಜಿನಿಯರ್‌ಗಳು (Engineers) ಇದಕ್ಕಾಗಿಯೇ ಇದ್ದರೂ ಇದನ್ನು ನಿರ್ವಹಿಸುವುದು ಸವಾಲೇ ಆಗಿದೆ. ಹೀಗಾಗಿ, ರಾಜ್ಯ ಸರ್ಕಾರದಿಂದ ಕಸ ವಿಲೇವಾರಿಗೆ ಇದೇ ಜೂನ್‌ 1ರಿಂದ ಹೊಸ ಯೋಜನೆ ಜಾರಿಯಾಗುತ್ತಿದೆ.

ನಗರದಲ್ಲಿ ಕಸದ ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಹೊಸ ಯೋಜನೆ ಜಾರಿಯಾಗುತ್ತಿದ್ದು, ಕಸ ವಿಲೇವಾರಿಗಾಗಿಯೇ (garbage disposal) ಒಂದು ಕಂಪನಿಯನ್ನು ರಾಜ್ಯ ಸರ್ಕಾರ ಸ್ಥಾಪಿಸಿದೆ. “ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಕಂಪನಿ ನಿಯಮಿತ” ಹೆಸರಿನ ಈ ಕಂಪನಿ ಘನತ್ಯಾಜ್ಯ ನಿರ್ವಹಣೆಯನ್ನು ಕೈಗೆತ್ತಿಕೊಳ್ಳಲಿದ್ದು, ಇನ್ನು ಮುಂದೆ ನಗರದಲ್ಲಿ ಕಸದ ಸಮಸ್ಯೆ ಕಂಡುಬಂದರೆ ಅದನ್ನು ಈ ಕಂಪನಿಯ ಮುಂದೆ ಪ್ರಶ್ನಿಸಬೇಕಾಗಲಿದೆ.

ರಾಜ್ಯ ಸರ್ಕಾರ ಹಾಗೂ ಬೃಹತ್‌ ಬೆಂಗಳೂರು ಮಹಾನಗರಪಾಲಿಕೆ ಜಂಟಿಯಾಗಿ ಈ ಸಂಸ್ಥೆಯನ್ನು ನಿರ್ಮಾಣ ಮಾಡಿವೆ. ಇನ್ನು ಮುಂದೆ ಈ ಕಂಪನಿಯಿಂದಲೇ ಕಸ ಸಂಗ್ರಹಣೆ, ಸಾಗಾಣಿಕೆ ಹಾಗೂ ಹಾಗೂ ವಿಲೇವಾರಿ ಕಾರ್ಯ ನಡೆಯಲಿದೆ. ಜೂನ್ 1ರಿಂದ ಮನೆಮನೆಯಿಂದ ಅಟೋದಲ್ಲಿ ಕಸ ಸಂಗ್ರಹಣೆ, ಸಂಗ್ರಹಿಸಿದ ಕಸವನ್ನು ಟಿಪ್ಪರ್ ಲಾರಿಗಳ ಮೂಲಕ ಕಸದ ಸಂಸ್ಕರಣಾ ಘಟಕ ಅಥವಾ ಕ್ಯಾರಿಗಳಿಗೆ ಸಾಗಿಸುವುದು ಈ ಸಂಸ್ಥೆಯ ಹೊಣೆ.

ಬಿಬಿಎಂಪಿ ಅಡಿಯಲ್ಲಿ ತ್ಯಾಜ್ಯ ವಿಲೇವಾರಿ ಕಾರ್ಯ ನಿರ್ವಹಿಸುತ್ತಿರುವ ಅಟೋ, ಟಿಪ್ಪರ್, ಕಾಂಪ್ಯಾಕ್ಟರ್ ಚಾಲಕರು, ಸಹಾಯಕರು ಕಂಪನಿ ವ್ಯಾಪ್ತಿಗೆ ಬರಲಿದ್ದಾರೆ. ಘನತ್ಯಾಜ್ಯ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಧಿಕಾರಿಗಳು, ವಾರ್ಡ್‌ ಮಟ್ಟದ ಎಂಜಿನಿಯರ್‌ಗಳು, ಸಿಬ್ಬಂದಿಗಳು ಹಾಗೂ ಮಾರ್ಷಲ್‌ಗಳು ಕಂಪನಿ ಅಧೀನಕ್ಕೆ ಬರಲಿದ್ದಾರೆ. ಈ ಅಧಿಕಾರಿಗಳ, ಸಿಬ್ಬಂದಿಗಳ ವೇತನವನ್ನು ಕಂಪನಿಯೇ ಪಾವತಿ ಮಾಡಲಿದೆ.

ನಗರದಲ್ಲಿ ಇರುವ 7 ಕಸ ಸಂಸ್ಕರಣಾ ಘಟಕಗಳು ಕಂಪನಿ ವ್ಯಾಪ್ತಿಗೆ ಬರಲಿವೆ. ರಾಜ್ಯ ಸರ್ಕಾರ ಹಾಗೂ ಬಿಬಿಎಂಪಿ ಪ್ರತಿ ವರ್ಷ ಕಂಪನಿಗೆ ಅಂತ ಅನುದಾನ ನೀಡಲಿವೆ. ಪೌರ ಕಾರ್ಮಿಕರು, ಗುತ್ತಿಗೆ ಪೌರಕಾರ್ಮಿಕರು ಬಿಬಿಎಂಪಿ ಅಧೀನದಲ್ಲಿ ಕಾರ್ಯ ನಿರ್ವಹಿಸಲಿದ್ದು, ಇವರಿಗೆ ಬಿಬಿಎಂಪಿಯಿಂದ ವೇತನ ದೊರೆಯಲಿದೆ. ಪೌರಕಾರ್ಮಿಕರು ಕೇವಲ ಕಸ ಗುಡಿಸುವುದು, ಸಾರ್ವಜನಿಕ ಸ್ಥಳಗಳನ್ನು ಕ್ಲೀನ್ ಮಾಡುವುದು ಮಾಡಲಿದ್ದಾರೆ.

ಘನತ್ಯಾಜ್ಯ ಇಲಾಖೆಯನ್ನು ಆರೋಗ್ಯ ಇಲಾಖೆ ಜೊತೆ ವಿಲೀನ ಮಾಡಿ ಅದೇಶ ಹೊರಡಿಸಲಾಗಿದ್ದು, ಇನ್ನು ಮುಂದೆ ಆರೋಗ್ಯ ಮತ್ತು ನೈರ್ಮಲ್ಯ ಇಲಾಖೆ ಎಂದು ಕರೆಯಲಾಗುತ್ತದೆ. ಈ ಬದಲಾವಣೆಗಳಿಂದ ಮುಂದಿನ ದಿನಗಳಲ್ಲಿ ಸಿಲಿಕಾನ್ ಸಿಟಿಯಲ್ಲಿ ಕಸದ ಸಮಸ್ಯೆ ಇರವುದಿಲ್ಲವೇ, ಗಾರ್ಬೆಜ್ ಸಿಟಿ ಗಾರ್ಡನ್ ಸಿಟಿ ಆಗಲಿದೆಯೇ ಎಂಬ ಪ್ರಶ್ನೆಗಳಿಗೆ ಉತ್ತರ ಕಾದು ನೋಡಬೇಕಿದೆ.

ಜನರಹಿತ ಪ್ರದೇಶಗಳಿಗೆ ಕಸ ವಿಲೇವಾರಿ ಘಟಕಗಳ ಸ್ಥಳಾಂತರ: ಡಿಕೆಶಿ

ಜನ ಸಾಮಾನ್ಯರ ತೊಂದರೆ ನಿವಾರಣೆಗೆ ಯಶವಂತಪುರ ವಿಧಾನಸಭೆ ಕ್ಷೇತ್ರದ 5, ಬ್ಯಾಟರಾಯನಪುರದ 2, ದಾಸರಹಳ್ಳಿ, ಆನೇಕಲ್, ಮಹದೇವಪುರ ಕ್ಷೇತ್ರದಲ್ಲಿನ ಕಸ ವಿಲೇವಾರಿ ಘಟಕಗಳನ್ನು (Waste Disposal Unit) ಬೆಂಗಳೂರಿನ ಹೊರಭಾಗದಲ್ಲಿ ಜನರಹಿತ ಬೆಟ್ಟ ಗುಡ್ಡ ಪ್ರದೇಶಕ್ಕೆ ಸ್ಥಳಾಂತರಿಸಲು ತೀರ್ಮಾನಿಸಲಾಗಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಈ ಹಿಂದೆ ತಿಳಿಸಿದ್ದರು.

ಬೆಂಗಳೂರು ಅಪಾರವಾಗಿ ಬೆಳೆದ ಪರಿಣಾಮ ಕಸ ವಿಲೇವಾರಿ ಘಟಕಗಳು ನಗರದ ಹೃದಯ ಭಾಗಕ್ಕೆ ಬಂದಿವೆ. ಈ ಘಟಕಗಳ ಸುತ್ತಮುತ್ತ ನಾಲ್ಕೈದು ಕಿ.ಮೀ. ವರೆಗೆ ನಾಗರಿಕರು ನರಕಯಾತನೆ ಅನುಭವಿಸುತ್ತಿದ್ದಾರೆ. ಬ್ಯಾಟರಾಯಣಪುರ ಶಾಸಕ, ಸಚಿವ ಕೃಷ್ಣಬೈರೇಗೌಡ, ಯಶವಂತಪುರ ಶಾಸಕ ಎಸ್.ಟಿ. ಸೋಮಶೇಖರ್ ಮತ್ತಿತರರು ಕಸ ವಿಲೇವಾರಿ ಘಟಕ ಸ್ಥಳಾಂತರದ ವಿಚಾರವಾಗಿ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು. ನಾನು ಕೂಡ ಖುದ್ದು ಸ್ಥಳ ಪರಿಶೀಲನೆ ನಡೆಸಿದ್ದೆ. ಮುಂದಿನ ದಿನಗಳಲ್ಲಿ ಜನರಿಗೆ ಕಸದ ವಾಸನೆ ಬರಬಾರದು ಎಂಬ ಉದ್ದೇಶದಿಂದ ನಗರದ ಹೊರವಲಯಕ್ಕೆ ಈ ಘಟಕಗಳ ಸ್ಥಳಾಂತರಕ್ಕೆ ನಿರ್ಧರಿಸಿದ್ದೇವೆ ಎಂದು ತಿಳಿಸಿದರು.

ಇದನ್ನೂ ಓದಿ: Bengaluru News: ಬೆಂಗಳೂರು ಸೇರಿದಂತೆ ಎಲ್ಲೆಡೆ ಕುಡಿಯುವ ನೀರಿನ ಪರೀಕ್ಷೆಗೆ ಸೂಚನೆ ನೀಡಿದ ಡಿ.ಕೆ.ಶಿವಕುಮಾರ್

Continue Reading

ಕಲಬುರಗಿ

Drowned in water : ಕುಡಿದ ಮತ್ತಿನಲ್ಲಿ ಈಜಲು ಹೋದ ಯುವಕ ನೀರುಪಾಲು; ಸಾವಿನ ಕೊನೆ ಕ್ಷಣ ಮೊಬೈಲ್‌ನಲ್ಲಿ ಸೆರೆ

Drowned in Water : ಗೆಳೆಯರೊಟ್ಟಿಗೆ ಜಾತ್ರೆಗೆ ಹೊರಟ್ಟಿದ್ದ ಯುವಕನೊರ್ವ ಕುಡಿದು ಮಸ್ತ್‌ ಮಜಾ ಮಾಡಿದ್ದ. ಅದೇ ಮತ್ತಿನಲ್ಲಿ ಮಾರ್ಗ ಮಧ್ಯೆ ಸಿಕ್ಕ ಬ್ಯಾರೇಜ್‌ನಲ್ಲಿ ಈಜಲು ಹೋಗಿ ನೀರುಪಾಲಾಗಿದ್ದಾನೆ. ಇನ್ನು ಯುವಕನ ಸಾವಿನ ಕೊನೆ ಕ್ಷಣವನ್ನು ಜತೆಗಿದ್ದ ಗೆಳೆಯರು ಸೆರೆಹಿಡಿದಿದ್ದಾರೆ.

VISTARANEWS.COM


on

By

Drowned in water
ಸಾಂದರ್ಭಿಕ ಚಿತ್ರ
Koo

ಕಲಬುರಗಿ: ಕುಡಿದ ಮತ್ತಿನಲ್ಲಿ ಈಜಲು ಹೋಗಿ (Drowned in Water) ಯುವಕನೊರ್ವ ನೀರುಪಾಲಾಗಿದ್ದಾನೆ. ಕಲಬುರಗಿ ಜಿಲ್ಲೆ ಕಮಲಾಪುರ ತಾಲೂಕಿನ ಪಟವಾಡ ಗ್ರಾಮದ ಬಳಿ ಘಟನೆ ನಡೆದಿದೆ. ಹೈದ್ರಾಬಾದ್ ಮೂಲದ ಮಹ್ಮದ್ ಸಾಜೀದ್ ಮೃತ ದುರ್ದೈವಿ.

ಮಹ್ಮದ್‌ ತನ್ನ ಗೆಳೆಯರೊಂದಿಗೆ ಕಮಲಾಪುರ ಪಕ್ಕದ ದರ್ಗಾ ಜಾತ್ರೆಗೆ ಹೊರಟಿದ್ದ. ಮಾರ್ಗ ಮಧ್ಯೆ ಬ್ರಿಜ್ ಕಂ ಬ್ಯಾರೇಜಲ್ಲಿ ಈಜಲು ನೀರಿಗೆ ಇಳಿದಿದ್ದ. ಕಂಠ ಪೂರ್ತಿ ಕುಡಿದು ಅದೇ ಮತ್ತಿನಲ್ಲಿ ಈಜಲು ಹೋದ ಮಹ್ಮದ್‌ ನೀರಿನಲ್ಲಿ ಮುಳುಗಿದ್ದ. ಗೆಳೆಯರ ಕಣ್ಣೆದುರೇ ನೀರಲ್ಲಿ ಮುಳುಗಿ ಸಾವನ್ನಪ್ಪುವ ದೃಶ್ಯ ಮೊಬೈಲ್‌ನಲ್ಲಿ ಸೆರೆಯಾಗಿತ್ತು.

ಬ್ರಿಜ್ ಮೇಲಿದ್ದ ಮಹ್ಮದ್‌ ಈಜುವುದನ್ನು ಇನ್ನೊಬ್ಬ ಗೆಳೆಯ ತನ್ನ ಮೊಬೈಲ್‌ನಲ್ಲಿ ರೆಕಾರ್ಡ್‌ ಮಾಡಿದ್ದ. ನೋಡನೋಡುತ್ತಿದ್ದಂತೆ ಮಹ್ಮದ್‌ ಈಜಲು ಆಗದೆ ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದ. ಇನ್ನೂ ಮಹ್ಮದ್‌ ಸಾವಿಗೆ ಶಂಕೆ ವ್ಯಕ್ತಪಡಿಸಿ ಮೃತನ ಸಹೋದರ ದೂರು ನೀಡಿದ್ದಾನೆ. ಕಮಲಾಪುರ ಪೊಲೀಸ್‌ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಲಾಗಿದೆ.

ಇದನ್ನೂ ಓದಿ: Road Accident: ಸೇತುವೆಯಿಂದ ಪಲ್ಟಿ ಹೊಡೆದ ಕಾರು, ತಿರುಪತಿಗೆ ಹೋಗುತ್ತಿದ್ದ 4 ಮಂದಿ ದುರ್ಮರಣ

ವಕೀಲೆಯ ಅನುಮಾನಾಸ್ಪದ ಸಾವಿನ ಪ್ರಕರಣ; ಪೋಸ್ಟ್ ಮಾರ್ಟಮ್ ರಿಪೋರ್ಟ್ ಹೇಳಿದ್ದೇನು?

ಬೆಂಗಳೂರು: ವಕೀಲೆ (Advocate) ಚೈತ್ರಾ ಗೌಡ ಅನುಮಾನಾಸ್ಪದ ಸಾವು (Suspicious Death) ಪ್ರಕರಣದಲ್ಲಿ ತನಿಖೆ ಮುಂದುವರಿಸಿರುವ ಪೊಲೀಸರು ಪೋಸ್ಟ್‌ ಮಾರ್ಟಮ್‌ (post mortem) ರಿಪೋರ್ಟ್‌ ಅನ್ನು ಪಡೆದಿದ್ದು, ತನಿಖೆ ಮುಗಿಸಿರುವ ಬಗ್ಗೆ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಚೈತ್ರಾ ಸಾವು ಆತ್ಮಹತ್ಯೆಯಿಂದಲೇ (Self Harming) ಆಗಿದೆ ಎಂಬುದು ದೃಢಪಟ್ಟಿದೆ.

ಮೇ 11ರಂದು ಸಂಜಯನಗರ ಅಣ್ಣಯ್ಯಪ್ಪ ಲೇ ಔಟ್‌ನಲ್ಲಿ ಚೈತ್ರಾ ಶವ ಪತ್ತೆಯಾಗಿತ್ತು. ಚೈತ್ರಾ ಕುಟುಂಬಸ್ಥರು ಇದು ಕೊಲೆ ಎಂದು ಆರೋಪಿಸಿ ಪೊಲೀಸರಿಗೆ ದೂರು ನೀಡಿದ್ದರು. ದೂರಿನನ್ವಯ ಚೈತ್ರಾ ಪತಿ,‌ ಕೆಎಎಸ್ ಅಧಿಕಾರಿ ಶಿವಕುಮಾರ್ ಅವರನ್ನು ಪೊಲೀಸರು ವಿಚಾರಣೆ ಮಾಡಿದ್ದರು.

ವಿಚಾರಣೆ ವೇಳೆ, ಪತ್ನಿಯೊಂದಿಗೆ ಯಾವುದೇ ವೈಷಮ್ಯ ಇರಲಿಲ್ಲ. ಜೊತೆಗೆ ಯಾವುದೇ ಹಣಕಾಸಿನ ಸಮಸ್ಯೆ ಕೂಡ ಇರಲಿಲ್ಲ ಎಂದು ಶಿವಕುಮಾರ್‌ ತಿಳಿಸಿದ್ದರು. ಆದರೆ ಪ್ರಾಪರ್ಟಿ ವಿಚಾರವಾಗಿ ಆಗಾಗ್ಗೆ ಸ್ವಲ್ಪ ಜಗಳ ನಡೀತಾ ಇತ್ತು. ಇದರಿಂದ ಖಿನ್ನತೆಗೊಳಗಾಗಿದ್ದಳು ಎಂದು ಮಾಹಿತಿ ನೀಡಿದ್ದರು.

ಮರಣೋತ್ತರ ಪರೀಕ್ಷೆಯಲ್ಲೂ ಇದು ಆತ್ಮಹತ್ಯೆ ಎಂದು ಕಂಡುಬಂದಿದೆ. ಜೊತೆಗೆ ಮನೆಯಲ್ಲಿ ಸಿಕ್ಕ ಡೆತ್ ನೋಟ್ ಕೂಡ ಚೈತ್ರಾ ಬರೆದಿರುವುದು ಖಚಿತವಾಗಿದೆ. ಚೈತ್ರಾ, ತಮ್ಮ ಕುಟುಂಬಸ್ಥರ ಬಳಿ ಮೂರು ತಿಂಗಳ ಹಿಂದೆಯೇ ತಾವು ಸಾಯುವುದಾಗಿ ಮಾತಾಡಿದ್ದರು. ಈ ಮಾತಾಡಿದ ಬಳಿಕವೇ ಡೆತ್‌ ನೋಟ್‌ ಬರೆದಿಟ್ಟಿರುವುದು ಗೊತ್ತಾಗಿದೆ. 10 ದಿನಗಳ‌ ತನಿಖೆ ಬಳಿಕ ಹಿರಿಯ ಅಧಿಕಾರಿಗಳಿಗೆ ಸಂಜಯನಗರ ಪೊಲೀಸರು ಮಾಹಿತಿ ನೀಡಿದ್ದಾರೆ.

ಏನಿದು ಪ್ರಕರಣ?

2016ರಲ್ಲಿ ಮದುವೆ ಆಗಿದ್ದ ಶಿವಕುಮಾರ್ ಹಾಗೂ ಚೈತ್ರಾ ದಂಪತಿಗೆ 5 ವರ್ಷದ ಒಂದು ಮಗು ಇದೆ. ಈ ದಂಪತಿ ಬೆಂಗಳೂರಿನ ಸಂಜಯ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಾಸವಾಗಿದ್ದರು. ಚೈತ್ರಾ ಹೈಕೋರ್ಟ್ ವಕೀಲೆ ಆಗಿದ್ದರೆ, ಶಿವಕುಮಾರ್ ಕೆಐಡಿಬಿಯಲ್ಲಿ ಉಪವಿಭಾಗಾಧಿಕಾರಿ ಆಗಿದ್ದರು. ಅಪಾರ್ಟ್‌ಮೆಂಟ್‌ನ ಮೂರು ಫ್ಲಾಟ್‌ನಲ್ಲಿ ಒಂದರಲ್ಲಿ ಚೈತ್ರಾ ಕುಟುಂಬ ಹಾಗೂ ಇನ್ನೊಂದು ಫ್ಲಾಟ್‌ನಲ್ಲಿ ಮೃತಳ ತಮ್ಮ ವಾಸವಾಗಿದ್ದರು. ಶನಿವಾರ ಬೆಳಗ್ಗೆ ಹತ್ತು ಗಂಟೆ ಸುಮಾರಿಗೆ ಪತಿ ಶಿವಕುಮಾರ್ ಜತೆ ನಂತರ ತಮ್ಮನನೊಟ್ಟಿಗೂ ಚೈತ್ರಾ ಮಾತನಾಡಿದ್ದಾರೆ. 11 ಗಂಟೆ ಸುಮಾರಿಗೆ ಚೈತ್ರಾಳ ತಮ್ಮ ಕರೆದಾಗ ಸ್ಪಂದಿಸಿಲ್ಲ. ಹೀಗಾಗಿ ಕಿಟಕಿಯಲ್ಲಿ ನೋಡಿದಾಗ ಫ್ಯಾನ್‌ಗೆ ವೇಲ್‌ನಿಂದ ನೇಣು ಬಿಗಿದುಕೊಂಡಿರುವುದು ಕಂಡು ಬಂದಿದೆ. ಕೂಡಲೇ ಚೈತ್ರಾಳ ಸಹೋದರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಚೈತ್ರಾರ ಬೆಡ್‌ ರೂಮಿನಲ್ಲಿ ಒಂದು ಪುಟದ ಡೆತ್ ನೋಟ್ ಪತ್ತೆಯಾಗಿದೆ. ಮೂರು ತಿಂಗಳ ಹಿಂದೆ ಅಂದರೆ ಮಾರ್ಚ್ 11ರಂದು ಇದನ್ನು ಬರೆಯಲಾಗಿತ್ತು. ಡೆತ್‌ನೋಟ್‌ನಲ್ಲಿ, ನನ್ನ ಪತಿ ತುಂಬಾ ಒಳ್ಳೆಯವರು. ನೀವೂ ಜೀವನವನ್ನು ಎಂಜಾಯ್ ಮಾಡಿ. ಮಗಳನ್ನು ಚೆನ್ನಾಗಿ ನೋಡಿಕೊಳ್ಳಿ. ನಾನು ಡಿಪ್ರೆಶನ್‌ನಿಂದ ಬಳಲುತ್ತಿದ್ದೇನೆ. ಅದರಿಂದ ಹೊರ ಬರಲು ಸಾಕಷ್ಟು ಪ್ರಯತ್ನ ಪಟ್ಟಿದ್ದೇನೆ. ಆದರೆ ಆಗುತ್ತಿಲ್ಲ, ನಾನು ನನ್ನ ಜೀವನವನ್ನು ಇಲ್ಲಿಗೆ ಕೊನೆಗೊಳಿಸುತ್ತಿದ್ದೆನೆ. ಮಗುವನ್ನು ಚೆನ್ನಾಗಿ ನೋಡಿಕೊಂಡು ಲೈಫ್ ಎಂಜಾಯ್ ಮಾಡಿ. ನಾನು ಸೂಸೈಡ್ ಮಾಡಿಕೊಳ್ಳುವುದು ತಪ್ಪು ಎಂದು ಗೊತ್ತಿದೆ. ಆದರೂ ಸಹ ಆತ್ಮಹತ್ಯೆಯನ್ನು ಮಾಡಿಕೊಂಡು ನನ್ನ ಜೀವನಕ್ಕೆ ಅಂತ್ಯವಾಡಿದ್ದೇನೆ ಎಂದು ಬರೆದಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಕ್ರೈಂ

Suspicious Death: ವಕೀಲೆಯ ಅನುಮಾನಾಸ್ಪದ ಸಾವಿನ ಪ್ರಕರಣ; ಪೋಸ್ಟ್ ಮಾರ್ಟಮ್ ರಿಪೋರ್ಟ್ ಹೇಳಿದ್ದೇನು?

ಮೇ 11ರಂದು ಸಂಜಯನಗರ ಅಣ್ಣಯ್ಯಪ್ಪ ಲೇ ಔಟ್‌ನಲ್ಲಿ ಚೈತ್ರಾ ಶವ ಪತ್ತೆಯಾಗಿತ್ತು. ಚೈತ್ರಾ ಕುಟುಂಬಸ್ಥರು ಇದು ಕೊಲೆ ಎಂದು ಆರೋಪಿಸಿ ಪೊಲೀಸರಿಗೆ ದೂರು ನೀಡಿದ್ದರು. ದೂರಿನನ್ವಯ ಚೈತ್ರಾ ಪತಿ,‌ ಕೆಎಎಸ್ ಅಧಿಕಾರಿ ಶಿವಕುಮಾರ್ ಅವರನ್ನು ಪೊಲೀಸರು ವಿಚಾರಣೆ ಮಾಡಿದ್ದರು.

VISTARANEWS.COM


on

suspicious death Self Harming By Hight court lawyer
Koo

ಬೆಂಗಳೂರು: ವಕೀಲೆ (Advocate) ಚೈತ್ರಾ ಗೌಡ ಅನುಮಾನಾಸ್ಪದ ಸಾವು (Suspicious Death) ಪ್ರಕರಣದಲ್ಲಿ ತನಿಖೆ ಮುಂದುವರಿಸಿರುವ ಪೊಲೀಸರು ಪೋಸ್ಟ್‌ ಮಾರ್ಟಮ್‌ (post mortem) ರಿಪೋರ್ಟ್‌ ಅನ್ನು ಪಡೆದಿದ್ದು, ತನಿಖೆ ಮುಗಿಸಿರುವ ಬಗ್ಗೆ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ಚೈತ್ರಾ ಸಾವು ಆತ್ಮಹತ್ಯೆಯಿಂದಲೇ (Self Harming) ಆಗಿದೆ ಎಂಬುದು ದೃಢಪಟ್ಟಿದೆ.

ಮೇ 11ರಂದು ಸಂಜಯನಗರ ಅಣ್ಣಯ್ಯಪ್ಪ ಲೇ ಔಟ್‌ನಲ್ಲಿ ಚೈತ್ರಾ ಶವ ಪತ್ತೆಯಾಗಿತ್ತು. ಚೈತ್ರಾ ಕುಟುಂಬಸ್ಥರು ಇದು ಕೊಲೆ ಎಂದು ಆರೋಪಿಸಿ ಪೊಲೀಸರಿಗೆ ದೂರು ನೀಡಿದ್ದರು. ದೂರಿನನ್ವಯ ಚೈತ್ರಾ ಪತಿ,‌ ಕೆಎಎಸ್ ಅಧಿಕಾರಿ ಶಿವಕುಮಾರ್ ಅವರನ್ನು ಪೊಲೀಸರು ವಿಚಾರಣೆ ಮಾಡಿದ್ದರು.

ವಿಚಾರಣೆ ವೇಳೆ, ಪತ್ನಿಯೊಂದಿಗೆ ಯಾವುದೇ ವೈಷಮ್ಯ ಇರಲಿಲ್ಲ. ಜೊತೆಗೆ ಯಾವುದೇ ಹಣಕಾಸಿನ ಸಮಸ್ಯೆ ಕೂಡ ಇರಲಿಲ್ಲ ಎಂದು ಶಿವಕುಮಾರ್‌ ತಿಳಿಸಿದ್ದರು. ಆದರೆ ಪ್ರಾಪರ್ಟಿ ವಿಚಾರವಾಗಿ ಆಗಾಗ್ಗೆ ಸ್ವಲ್ಪ ಜಗಳ ನಡೀತಾ ಇತ್ತು. ಇದರಿಂದ ಖಿನ್ನತೆಗೊಳಗಾಗಿದ್ದಳು ಎಂದು ಮಾಹಿತಿ ನೀಡಿದ್ದರು.

ಮರಣೋತ್ತರ ಪರೀಕ್ಷೆಯಲ್ಲೂ ಇದು ಆತ್ಮಹತ್ಯೆ ಎಂದು ಕಂಡುಬಂದಿದೆ. ಜೊತೆಗೆ ಮನೆಯಲ್ಲಿ ಸಿಕ್ಕ ಡೆತ್ ನೋಟ್ ಕೂಡ ಚೈತ್ರಾ ಬರೆದಿರುವುದು ಖಚಿತವಾಗಿದೆ. ಚೈತ್ರಾ, ತಮ್ಮ ಕುಟುಂಬಸ್ಥರ ಬಳಿ ಮೂರು ತಿಂಗಳ ಹಿಂದೆಯೇ ತಾವು ಸಾಯುವುದಾಗಿ ಮಾತಾಡಿದ್ದರು. ಈ ಮಾತಾಡಿದ ಬಳಿಕವೇ ಡೆತ್‌ ನೋಟ್‌ ಬರೆದಿಟ್ಟಿರುವುದು ಗೊತ್ತಾಗಿದೆ. 10 ದಿನಗಳ‌ ತನಿಖೆ ಬಳಿಕ ಹಿರಿಯ ಅಧಿಕಾರಿಗಳಿಗೆ ಸಂಜಯನಗರ ಪೊಲೀಸರು ಮಾಹಿತಿ ನೀಡಿದ್ದಾರೆ.

ಏನಿದು ಪ್ರಕರಣ?

2016ರಲ್ಲಿ ಮದುವೆ ಆಗಿದ್ದ ಶಿವಕುಮಾರ್ ಹಾಗೂ ಚೈತ್ರಾ ದಂಪತಿಗೆ 5 ವರ್ಷದ ಒಂದು ಮಗು ಇದೆ. ಈ ದಂಪತಿ ಬೆಂಗಳೂರಿನ ಸಂಜಯ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ವಾಸವಾಗಿದ್ದರು. ಚೈತ್ರಾ ಹೈಕೋರ್ಟ್ ವಕೀಲೆ ಆಗಿದ್ದರೆ, ಶಿವಕುಮಾರ್ ಕೆಐಡಿಬಿಯಲ್ಲಿ ಉಪವಿಭಾಗಾಧಿಕಾರಿ ಆಗಿದ್ದರು. ಅಪಾರ್ಟ್‌ಮೆಂಟ್‌ನ ಮೂರು ಫ್ಲಾಟ್‌ನಲ್ಲಿ ಒಂದರಲ್ಲಿ ಚೈತ್ರಾ ಕುಟುಂಬ ಹಾಗೂ ಇನ್ನೊಂದು ಫ್ಲಾಟ್‌ನಲ್ಲಿ ಮೃತಳ ತಮ್ಮ ವಾಸವಾಗಿದ್ದರು. ಶನಿವಾರ ಬೆಳಗ್ಗೆ ಹತ್ತು ಗಂಟೆ ಸುಮಾರಿಗೆ ಪತಿ ಶಿವಕುಮಾರ್ ಜತೆ ನಂತರ ತಮ್ಮನನೊಟ್ಟಿಗೂ ಚೈತ್ರಾ ಮಾತನಾಡಿದ್ದಾರೆ. 11 ಗಂಟೆ ಸುಮಾರಿಗೆ ಚೈತ್ರಾಳ ತಮ್ಮ ಕರೆದಾಗ ಸ್ಪಂದಿಸಿಲ್ಲ. ಹೀಗಾಗಿ ಕಿಟಕಿಯಲ್ಲಿ ನೋಡಿದಾಗ ಫ್ಯಾನ್‌ಗೆ ವೇಲ್‌ನಿಂದ ನೇಣು ಬಿಗಿದುಕೊಂಡಿರುವುದು ಕಂಡು ಬಂದಿದೆ. ಕೂಡಲೇ ಚೈತ್ರಾಳ ಸಹೋದರ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಚೈತ್ರಾರ ಬೆಡ್‌ ರೂಮಿನಲ್ಲಿ ಒಂದು ಪುಟದ ಡೆತ್ ನೋಟ್ ಪತ್ತೆಯಾಗಿದೆ. ಮೂರು ತಿಂಗಳ ಹಿಂದೆ ಅಂದರೆ ಮಾರ್ಚ್ 11ರಂದು ಇದನ್ನು ಬರೆಯಲಾಗಿತ್ತು. ಡೆತ್‌ನೋಟ್‌ನಲ್ಲಿ, ನನ್ನ ಪತಿ ತುಂಬಾ ಒಳ್ಳೆಯವರು. ನೀವೂ ಜೀವನವನ್ನು ಎಂಜಾಯ್ ಮಾಡಿ. ಮಗಳನ್ನು ಚೆನ್ನಾಗಿ ನೋಡಿಕೊಳ್ಳಿ. ನಾನು ಡಿಪ್ರೆಶನ್‌ನಿಂದ ಬಳಲುತ್ತಿದ್ದೇನೆ. ಅದರಿಂದ ಹೊರ ಬರಲು ಸಾಕಷ್ಟು ಪ್ರಯತ್ನ ಪಟ್ಟಿದ್ದೇನೆ. ಆದರೆ ಆಗುತ್ತಿಲ್ಲ, ನಾನು ನನ್ನ ಜೀವನವನ್ನು ಇಲ್ಲಿಗೆ ಕೊನೆಗೊಳಿಸುತ್ತಿದ್ದೆನೆ. ಮಗುವನ್ನು ಚೆನ್ನಾಗಿ ನೋಡಿಕೊಂಡು ಲೈಫ್ ಎಂಜಾಯ್ ಮಾಡಿ. ನಾನು ಸೂಸೈಡ್ ಮಾಡಿಕೊಳ್ಳುವುದು ತಪ್ಪು ಎಂದು ಗೊತ್ತಿದೆ. ಆದರೂ ಸಹ ಆತ್ಮಹತ್ಯೆಯನ್ನು ಮಾಡಿಕೊಂಡು ನನ್ನ ಜೀವನಕ್ಕೆ ಅಂತ್ಯವಾಡಿದ್ದೇನೆ ಎಂದು ಬರೆದಿದ್ದಾರೆ.

ಹಣಕ್ಕಾಗಿ ಕಿಡ್ನ್ಯಾಪ್‌; ಮೂವರನ್ನು ಬೆತ್ತಲೆ ಮಾಡಿ ಮರ್ಮಾಂಗಕ್ಕೆ ಕರೆಂಟ್ ಶಾಕ್ ಕೊಟ್ಟು ಟಾರ್ಚರ್‌!

ಕಲಬುರಗಿ: ಹಣಕ್ಕಾಗಿ‌ ಸೆಕೆಂಡ್‌ ಹ್ಯಾಂಡ್‌ ಕಾರು ವ್ಯಾಪಾರಿ ಮತ್ತು ಆತನ ಸ್ನೇಹಿತರಿಬ್ಬರನ್ನು ಅಪಹರಿಸಿರುವ (Kidnap Case) ಘಟನೆ ನಡೆದಿದೆ. ರೂಮಿನಲ್ಲಿ ಮೂವರನ್ನು ಕೂಡಿ ಹಾಕಿ ಬೆತ್ತಲೆ ಮಾಡಿ ಮರ್ಮಾಂಗಕ್ಕೆ ವಿದ್ಯುತ್ ಶಾಕ್ ಕೊಟ್ಟು ಟಾರ್ಚರ್ ನೀಡಿ, ಹಣವನ್ನು ಲಪಟಾಯಿಸಿರುವ ಘಟನೆ (Assault Case) ಕಲಬುರಗಿಯಲ್ಲಿ ನಡೆದಿದೆ.

ಕಲಬುರಗಿ ಜಿಲ್ಲೆಯ ಸೇಡಂ ತಾಲೂಕಿನ ದೇವನೂರ ಗ್ರಾಮದ ನಿವಾಸಿ ಅರ್ಜುನ್‌ ಮಡಿವಾಳ ಎಂಬಾತನಿಗೆ ಹಲ್ಲೆ ನಡೆಸಲಾಗಿದೆ. ಅರ್ಜುನ್‌ ಬೆಂಗಳೂರಿನಿಂದ ಸೆಕೆಂಡ್ ಹ್ಯಾಂಡ್ ಕಾರುಗಳನ್ನು ತಂದು ಮಾರಾಟ ಮಾಡುತ್ತಿದ್ದರು. ಮೇ 5ರಂದು ಪರಿಚಯಸ್ಥನಾಗಿದ್ದ ರಮೇಶ್ ಎಂಬಾತನಿಗೆ ಸೆಕೆಂಡ್ ಹ್ಯಾಂಡ್ ಕಾರು ತೋರಿಸಲು ಅರ್ಜುನ್‌ ತನ್ನಿಬ್ಬರು ಸ್ನೇಹಿತರಾದ ಎಂ.ಡಿ ಸಮೀರೊದ್ದಿನ್, ಅಬ್ದುಲ್ ರಹೇಮಾನ್ ಜತೆಗೆ ಹೋಗಿದ್ದರು.

ಇದನ್ನೂ ಓದಿ: Murder case : ಕೊಟ್ಟ ಹಣ ಕೇಳಿದ್ದಕ್ಕೆ ಗೆಳೆಯನನ್ನೇ ಕೊಂದಿದ್ದ ದ್ರೋಹಿ ಅರೆಸ್ಟ್‌

ಈ ವೇಳೆ ಆರೋಪಿ ರಮೇಶ್‌ ಕಾರಿನ ಟೆಸ್ಟ್‌ ಡ್ರೈವ್‌ ಮಾಡಿ, ಕಾರಿಗೆ ಹಣ ನೀಡುವವರು ಕಲಬುರಗಿ ನಗರದ ಹಾಗರಗಾ ಕ್ರಾಸ್ ಬಳಿ ಇದ್ದಾರೆ. ಅಲ್ಲಿಗೆ ಹೋಗೋಣಾ ಎಂದು ಮೂವರನ್ನು ಕರೆದುಹೋಗಿದ್ದಾರೆ. ನಂತರ ಯಾವುದೋ ಮನೆ ಬಳಿ ಕಾರು ನಿಲ್ಲಿಸಿದಾಗ ಸುಮಾರು ಹತ್ತಾರು ಮಂದಿ ಅರ್ಜುನ್‌ ಹಾಗೂ ಮತ್ತಿಬ್ಬರನ್ನು ಬಲವಂತದಿಂದ ಎಳೆದುಹೋಗಿ ಕೂಡಿ ಹಾಕಿ ಹಲ್ಲೆ ನಡೆಸಿದ್ದಾರೆ. ರಮೇಶ್‌ ಸೇರಿ ಇಮ್ರಾನ್ ಪಟೇಲ್, ಮಹಮ್ಮದ್ ಮತೀನ್ ಸೇರಿ ಹಲವರು ಹಲ್ಲೆ ನಡೆಸಿದ್ದಾರೆ.

ಕಿರಾತಕರು ಮೂವರನ್ನು ಬೆತ್ತಲೆ ಮಾಡಿ ಮರ್ಮಾಂಗಕ್ಕೆ ಕರೆಂಟ್ ಶಾಕ್ ಕೊಟ್ಟು ಹಲ್ಲೆ ನಡೆಸಿದ್ದಾರೆ. ಕರೆಂಟ್ ಶಾಕ್ ಬಳಿಕ ಬಡಿಗೆಯಿಂದ ಹಲ್ಲೆ ಮಾಡಿದ್ದಾರೆ. ಮಾತ್ರವಲ್ಲದೆ ಹಲ್ಲೆ ಮಾಡುವ ದೃಶ್ಯವನ್ನು ವಿಡಿಯೊ ಮಾಡಿಕೊಂಡಿದ್ದಾರೆ. ಹಲ್ಲೆ ಮಾಡಿ ಹಣ ಹಾಕಿಸಿಕೊಂಡು, ಬಳಿಕ ಪ್ರತಿ ಬಾರಿ ಕಾರು ಮಾರಾಟ ಮಾಡಿದಾಗ ಕಮಿಷನ್‌ ರೂಪದಲ್ಲಿ ಒಂದು ಲಕ್ಷ ರೂ. ಹಣ ಕೊಡಬೇಕು ಎಂದಿದ್ದಾರೆ. ಕೊಡದೆ ಹೋದರೆ ಮನೆಗೆ ನುಗ್ಗಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ. ಸದ್ಯ ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಹಲ್ಲೆ ಮಾಡಿದ ಆರೋಪಿಗಳನ್ನು ಬಂಧಿಸಲಾಗಿದೆ.

ಇದನ್ನೂ ಓದಿ: Bengaluru News : ಕೆಎಎಸ್‌ ಅಧಿಕಾರಿ ಪತ್ನಿ ಅನುಮಾನಾಸ್ಪದ‌ ಸಾವು; ಹೈಕೋರ್ಟ್‌ ವಕೀಲೆಗೆ ಕಾಡಿದ್ದೇನು?

Continue Reading
Advertisement
Maarige Daari
ಪ್ರಮುಖ ಸುದ್ದಿ4 mins ago

Maarige Daari : ‘ಮಾರಿಗೆ ದಾರಿ” ಫಸ್ಟ್ ಲುಕ್ ಟೀಸರ್ ಬಿಡುಗಡೆ, ಇಲ್ಲಿದೆ ವಿಡಿಯೊ

Mansoon
ಪ್ರಮುಖ ಸುದ್ದಿ17 mins ago

Monsoon : ಮಳೆ ವರದಿ; ಕರ್ನಾಟಕದಲ್ಲಿ ಜೂನ್ 1ರಂದೇ ಮಾನ್ಸೂನ್ ಮಳೆ ಆರಂಭ

bbmp waste disposal
ಬೆಂಗಳೂರು32 mins ago

Waste Disposal: ಕಸ ವಿಲೇವಾರಿ ಇನ್ನು ಬಿಬಿಎಂಪಿ ಕೆಲಸ ಅಲ್ಲ! ಅದಕ್ಕಾಗಿಯೇ ಬರುತ್ತಿದೆ ಹೊಸ ಸಂಸ್ಥೆ

Aishwarya Rai
Latest37 mins ago

Aishwarya Rai : ಮುದ್ದಿನ ಮಗಳು ಆರಾಧ್ಯಳ ಜತೆ ಅಮ್ಮನ ಬರ್ತ್​​ಡೇ ಆಚರಿಸಿದ ಐಶ್ವರ್ಯಾ ರೈ; ಇಲ್ಲಿವೆ ಚಿತ್ರಗಳು

Drowned in water
ಕಲಬುರಗಿ39 mins ago

Drowned in water : ಕುಡಿದ ಮತ್ತಿನಲ್ಲಿ ಈಜಲು ಹೋದ ಯುವಕ ನೀರುಪಾಲು; ಸಾವಿನ ಕೊನೆ ಕ್ಷಣ ಮೊಬೈಲ್‌ನಲ್ಲಿ ಸೆರೆ

Viral Video
ಪ್ರಮುಖ ಸುದ್ದಿ1 hour ago

Viral Video: ಚಲಿಸುವ ಬೈಕ್​ನಲ್ಲಿ ಆಲಿಂಗನ, ಬಿಸಿ ಚುಂಬನ; ಲಜ್ಜೆಯಿಲ್ಲದ ಜೋಡಿಯ ಸ್ಟಂಟ್​ ವಿಡಿಯೊ ವೈರಲ್​

suspicious death Self Harming By Hight court lawyer
ಕ್ರೈಂ2 hours ago

Suspicious Death: ವಕೀಲೆಯ ಅನುಮಾನಾಸ್ಪದ ಸಾವಿನ ಪ್ರಕರಣ; ಪೋಸ್ಟ್ ಮಾರ್ಟಮ್ ರಿಪೋರ್ಟ್ ಹೇಳಿದ್ದೇನು?

bulldozer justice
ಪ್ರಮುಖ ಸುದ್ದಿ2 hours ago

Bulldozer justice : ಅಸ್ಸಾಂ ಸರ್ಕಾರಕ್ಕೆ ತಿರುಗುಬಾಣವಾದ ಬುಲ್ದೋಜರ್ ನ್ಯಾಯ! ನೆಲಸಮಗೊಳಿಸಿದ ಮನೆ ಮಾಲೀಕರಿಗೆ 30 ಲಕ್ಷ ಪರಿಹಾರ!

assault case koratagere
ಕ್ರೈಂ2 hours ago

Assault Case: ಗೃಹ ಸಚಿವರ ಕ್ಷೇತ್ರದಲ್ಲಿ ಭೂಸೇನೆ ಯೋಧನ ಮೇಲೆಯೇ ಮಾರಣಾಂತಿಕ ಹಲ್ಲೆ; ಇಲ್ಲಿ ಕೇಳೋರೇ ಇಲ್ವಾ?

Rameshwaram Cafe
ಪ್ರಮುಖ ಸುದ್ದಿ2 hours ago

Rameshwaram Cafe : ಅವಧಿ ಮುಗಿದ ವಸ್ತುಗಳಲ್ಲಿ ತಿಂಡಿ ತಯಾರಿ, ರಾಮೇಶ್ವರಂ ಕೆಫೆ ಮೇಲೆ ಆಹಾರ ಸುರಕ್ಷತಾ ಅಧಿಕಾರಿಗಳ ದಾಳಿ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

dina bhavishya read your daily horoscope predictions for May 23 2024
ಭವಿಷ್ಯ1 day ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ2 days ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ3 days ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

Love Case Father throws hot water on man who loved his daughter for coming home
ಕೊಡಗು3 days ago

Love Case : ಮನೆಗೆ ಬಂದ ಪ್ರೇಮಿಗೆ ಕೊತ ಕೊತ ಕುದಿಯುವ ನೀರು ಎರಚಿದ ಯುವತಿ ತಂದೆ!

Contaminated Water
ಮೈಸೂರು3 days ago

Contaminated Water : ಡಿ ಸಾಲುಂಡಿಯಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡಿದ್ದ ಯುವಕ ಸಾವು

Karnataka Rain
ಮಳೆ4 days ago

Karnataka Rain : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

Karnataka Rain
ಮಳೆ5 days ago

Karnataka Rain : ಒಂದೇ ಮಳೆಗೆ ಹೊಳೆಯಂತಾದ ಬೆಂಗಳೂರು ರಸ್ತೆಗಳು! ಕಳಸದಲ್ಲೂ ಮುಂದುವರಿದ ಅಬ್ಬರ

Karnataka rain
ಮಳೆ5 days ago

Karnataka Rain : ವಿಜಯನಗರದಲ್ಲಿ ಸಿಡಿಲಿಗೆ ಜಾನುವಾರು ಬಲಿ; ಬೆಂಗಳೂರು ಸೇರಿ ಹಲವೆಡೆ ಭಾರಿ ಮಳೆ

Karnataka Rain
ಮಳೆ5 days ago

Karnataka Rain: ಧಾರಾಕಾರ ಮಳೆಗೆ ಕಾಂಪೌಂಡ್ ಕುಸಿದು 4 ಬೈಕ್‌ಗಳು ಜಖಂ; ಮದುವೆ ಮಂಟಪಕ್ಕೆ ನುಗ್ಗಿದ ನೀರು‌

Prajwal Revanna Case JDS calls CD Shivakumar pen drive gang
ರಾಜಕೀಯ7 days ago

Prajwal Revanna Case: CD ಶಿವಕುಮಾರ್ ಪೆನ್ ಡ್ರೈವ್ ಗ್ಯಾಂಗ್ ಎಂದ ಕುಟುಕಿದ ಜೆಡಿಎಸ್‌!

ಟ್ರೆಂಡಿಂಗ್‌