World Chocolate Day: ವಿಶ್ವ ಚಾಕೊಲೇಟ್‌ ದಿನಕ್ಕೊಂದಿಷ್ಟು ಸಿಹಿ! - Vistara News

ಫ್ಯಾಷನ್

World Chocolate Day: ವಿಶ್ವ ಚಾಕೊಲೇಟ್‌ ದಿನಕ್ಕೊಂದಿಷ್ಟು ಸಿಹಿ!

ಚಾಕೊಲೇಟ್‌ ಅಂದರೆ ಎಲ್ಲರಿಗೂ ಇಷ್ಟ. ಇದಕ್ಕೆ ಸುದೀರ್ಘ ಇತಿಹಾಸವಿದೆ. ಚಾಕೊಲೇಟ್ ದಿನದ ಸಂದರ್ಭದಲ್ಲಿ ಈ ಬಗ್ಗೆ ಒಂದಿಷ್ಟು ಮಾಹಿತಿಯನ್ನು ತಿಳಿಯೋಣ.

VISTARANEWS.COM


on

ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಎಲ್ಲದಕ್ಕೂ ಒಂದೊಂದು ದಿನ ಎಂದು ಮೀಸಲಿರುವುದು ಈ ಕಾಲದ ನಿಯಮ. ಅಂಥದ್ದರಲ್ಲಿ ಎಲ್ಲರ ಬಾಯಲ್ಲಿ ನೀರೂರಿಸುವ ಚಾಕೊಲೇಟ್‌ಗೊಂದು ದಿನ ಅಂತ ಬೇಡವೆ? ಈ ಪ್ರಶ್ನೆ ಬಂದಿದ್ದೇಕೆ ಎಂದರೆ ಜುಲೈ ತಿಂಗಳ ಏಳನೇ ದಿನ ಚಾಕೊಲೇಟ್‌ಗಾಗಿಯೇ ಮೀಸಲು. ಅಂದರೆ, ವಿಶ್ವ ಚಾಕೊಲೇಟ್‌ ದಿನ.

ಇವತ್ತೇ ಏಕೆ?: ಒಳ್ಳೆಯ ಪ್ರಶ್ನೆ! ಏನೂ ಮಾಡುವುದಾದರೂ ಅದಕ್ಕೊಂದು ಕಾರಣ ಎಂಬುದು ಬೇಕಲ್ಲ! ವಿಷಯ ಏನೆಂದರೆ, ಕ್ರಿಸ್ತ ಶಕ 1550ನೇ ಇಸವಿಯ ಇದೇ ದಿನದಂದು ಈ ಸಿಹಿ ಐರೋಪ್ಯ ಖಂಡವನ್ನು ಪ್ರವೇಶಿಸಿತು ಎಂದು ನಂಬಲಾಗಿದೆ. ಜುಲೈ ತಿಂಗಳ 7ನೇ ತಾರೀಖನ್ನು ಈ ಲೆಕ್ಕದಲ್ಲಿ ನೆನಪಿಸಿಕೊಳ್ಳಲಾಗುತ್ತಿದೆ. ಅಂದಹಾಗೆ ಮೊದಲ ಬಾರಿಗೆ ವಿಶ್ವ ಚಾಕೊಲೇಟ್‌ ದಿನವನ್ನು ಆಚರಿಸಿದ್ದು 2009ರಲ್ಲಿ.

ಚಾಕೊಲೇಟ್‌ ಇಹ-ಪರ

ದಕ್ಷಿಣ ಮತ್ತು ಮಧ್ಯ ಅಮೆರಿಕ ಖಂಡದ ಕೊಕೊ ಮರಗಳ ಹಣ್ಣಿನಿಂದ ತಯಾರಾಗುವ ತಿನಿಸು ಇದು. ಹಣ್ಣುಗಳ ಒಳಗಿರುವ, ಸ್ವಲ್ಪ ಕಹಿ ಎನ್ನಬಹುದಾದ ರುಚಿಯ ಕೊಕೊ ಬೀಜಗಳನ್ನು ಒಣಗಿಸಿ, ಹುದುಗು ಬರಿಸಿ, ಅದರಿಂದ ಪೇಯ ತಯಾರಿಸುತ್ತಿದ್ದ ಮಾಹಿತಿ ಮೆಕ್ಸಿಕೊದ ಅಜ್‌ಟೆಕ್‌ ನಾಗರಿಕತೆಯ ಕಾಲದಲ್ಲೇ ದೊರೆಯುತ್ತದೆ. ಆದರೆ ಕೊಕೊ ಬಳಸಿದ್ದು ಆ ನಾಗರಿಕತೆಯಲ್ಲೇ ಮೊದಲೇನಲ್ಲ. ಕ್ರಿಸ್ತಪೂರ್ವ 1100ರ ಕಾಲದಲ್ಲೇ ಮಧ್ಯ ಅಮೆರಿಕದಲ್ಲಿ ಕೊಕೊ ಬಳಕೆಯಲ್ಲಿದ್ದ ಮಾಹಿತಿಯಿದೆ. ತೀರಾ ನಂತರದ ಕಾಲದಲ್ಲಿ ಅದು ಯುರೋಪ್‌ ಖಂಡದ ದಿಕ್ಕಿಗೆ ಪಸರಿಸಿ, ಚಾಕೊಲೇಟ್‌ ರೂಪದಲ್ಲಿ ಜನಪ್ರಿಯವಾಯಿತು.

ಚಾಕೊಲೇಟ್‌ ಸಿಪ್ಪೆ ಬಿಚ್ಚುತ್ತಾ ಹೋದಂತೆ…

  • ದಕ್ಷಿಣ ಮತ್ತು ಮಧ್ಯ ಅಮೆರಿಕ ಮೂಲದಿಂದ ಇವು ಬಂದಿದ್ದು ಹೌದಾದರೂ, ಇವತ್ತು ಶೇ. 70ರಷ್ಟು ಕೊಕೊ ಬೆಳೆಯುತ್ತಿರುವುದು ಆಫ್ರಿಕಾ ಖಂಡದಲ್ಲಿ.
  • ಮೊದಲ ಚಾಕೊಲೇಟ್‌ ಬಾರ್‌ ತಯಾರಿಸಿದ್ದು ಫ್ರಾನ್ಸಿಸ್‌ ಫ್ರೈ ಎಂಬಾತ ಕ್ಯಾಡ್‌ಬರಿ ಮತ್ತು ಮಾರ್ಸ್‌ ಎಂಬ ಹೆಸರಿನಲ್ಲಿ. ಮೊದಲ ಬಿಳಿ ಚಾಕಲೇಟ್‌ ತಯಾರಿಸಿದ್ದು ನೆಸ್ಲೆ, 1930ರಲ್ಲಿ.
  • ಒಂದು ಪೌಂಡ್‌ (ಸುಮಾರು 450 ಗ್ರಾಂ) ಚಾಕೊಲೇಟ್‌ ಮಾಡುವುದಕ್ಕೆ 400 ಕೊಕೊ ಬೀಜಗಳು ಬೇಕು. ಹಾಗೆಯೇ ಹಾಲಿನ ಚಾಕೊಲೇಟ್‌ ವಿಧಾನವು ಹದಕ್ಕೆ ಬರಲು ಒಂಬತ್ತು ವರ್ಷಗಳ ಕಾಲ ಬೇಕಾಯಿತಂತೆ.
  • ಚಾಕೊಲೇಟ್‌ಗೂ ಪ್ರೇಮಿಗಳಿಗೂ ಅದೇನು ಅಂಟೊ! ಪ್ರತಿವರ್ಷ ವ್ಯಾಲಂಟೈನ್‌ ದಿನದಂದು ಸುಮಾರು ಮೂರೂವರೆ ಕೋಟಿ ಹೃದಯಾಕಾರದ ಚಾಕೊಲೇಟ್‌ ಡಬ್ಬಿಗಳು ಮಾರಾಟವಾಗುತ್ತವಂತೆ.
  • ಮೊದಲಿಗೆ ಇದು ಶ್ರೀಮಂತರ ಬಾಯನ್ನು ಮಾತ್ರವೇ ಸಿಹಿ ಮಾಡುತ್ತಿತ್ತಂತೆ. ಕೈಗಾರಿಕಾ ಕ್ರಾಂತಿಯಲ್ಲಿ ದೊಡ್ಡ ಪ್ರಮಾಣದಲ್ಲಿ ಚಾಕಲೇಟ್‌ ತಯಾರಿಕೆ ಆರಂಭವಾದ ನಂತರ ಇದು ಎಲ್ಲರ ಮನ ತಣಿಸುವಂತಾಯ್ತ
  • ವಿಶ್ವದ ದುಬಾರಿ ಚಾಕೊಲೇಟ್‌ ತಯಾರಿಸಿದ್ದು ಫೆಬೆಲೆ ಎಕ್ಸ್‌ಕ್ವಿಜಿಟ್‌ ಚಾಕೊಲೇಟ್ಸ್‌ ಸಂಸ್ಥೆ 2019ರಲ್ಲಿ. ಟ್ರಿನಿಟಿ-ಟ್ರಫಲ್‌ ಹೆಸರಿನ ಈ ಚಾಕೊಲೇಟ್‌ನ ಬೆಲೆ ಕೆ.ಜಿ. ಗೆ 4.3 ಲಕ್ಷ ರೂ!

ಇದನ್ನೂ ಓದಿ| National Doctors day | ವೈದ್ಯರ ಮೇಲೆ ಒತ್ತಡ ಹೆಚ್ಚಿಸಿದ ಈಡಿಯಟ್‌ ಸಿಂಡ್ರೋಮ್‌: ಡಾ. ಸಿ. ಎನ್‌. ಮಂಜುನಾಥ್‌ ಕಳವಳ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಫ್ಯಾಷನ್

Wedding men’s jewel Fashion: ವೆಡ್ಡಿಂಗ್‌ ಮೆನ್ಸ್‌ ಜ್ಯುವೆಲರಿ ಫ್ಯಾಷನ್‌ಗೆ ಕಾಲಿಟ್ಟ ಆರ್ಟಿಫಿಶಿಯಲ್‌ ಪರ್ಲ್‌ ಹಾರ!

Wedding men’s jewel Fashion ವೆಡ್ಡಿಂಗ್‌ ಸೀಸನ್‌ನಲ್ಲಿ ಇದೀಗ ಕೈಗೆಟಕುವ ಬೆಲೆಯಲ್ಲಿ ದೊರೆಯುವ ಕೃತಕ ಪರ್ಲ್‌ ಲೇಯರ್‌ ಹಾರಗಳು ಮದುಮಗನನ್ನು ಸಿಂಗರಿಸುತ್ತಿವೆ. ಮದುವೆಯ ಆರತಕ್ಷತೆಯಲ್ಲಿ ಧರಿಸುವ ಶೆರ್ವಾನಿ, ಬಂದ್ಗಾಲ ಹಾಗೂ ಕುರ್ತಾಗಳೊಂದಿಗೆ ಸಾಥ್‌ ನೀಡುತ್ತಿವೆ. ಯಾವ್ಯಾವ ಬಗೆಯವು ಹೆಚ್ಚು ಚಾಲ್ತಿಯಲ್ಲಿವೆ ಎಂಬುದರ ಬಗ್ಗೆ ಇಲ್ಲಿದೆ ಡಿಟೇಲ್ಸ್.‌

VISTARANEWS.COM


on

Wedding men's jewel Fashion Artificial pearl necklace has entered
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು

ವೆಡ್ಡಿಂಗ್‌ ಮೆನ್ಸ್‌ ಜ್ಯುವೆಲರಿ ಫ್ಯಾಷನ್‌ನಲ್ಲಿ ಇದೀಗ ಆರ್ಟಿಫಿಶಿಯಲ್‌ ಪರ್ಲ್‌ ಹಾರಗಳು ಎಂಟ್ರಿ (Wedding mens jewel Fashion) ನೀಡಿವೆ. ಮದುವೆಯ ರಿಸಪ್ಷನ್‌ನಲ್ಲಿ ಯುವಕರು ಧರಿಸುವ ಶೆರ್ವಾನಿ, ಬಂದ್ಗಾಲ ಹಾಗೂ ಡಿಸೈನರ್‌ ಕುರ್ತಾಗಳಿಗೆ ಸಾಥ್‌ ನೀಡುತ್ತಿವೆ. ಅಷ್ಟು ಮಾತ್ರವಲ್ಲ, ರಾಯಲ್‌ ಲುಕ್‌ ಕಲ್ಪಿಸುತ್ತಿವೆ.

ರಾಯಲ್‌ ಲುಕ್‌ಗಾಗಿ ಪರ್ಲ್‌ ಹಾರ

ವೆಡ್ಡಿಂಗ್‌ನಲ್ಲಿ ಮದುಮಗನ ರಾಯಲ್‌ ಲುಕ್‌ಗಾಗಿ ಈ ಭಾರಿ ಡಿಸೈನ್‌ನ ಪರ್ಲ್‌ ಹಾರಗಳನ್ನು ಬಳಸಲಾಗುತ್ತಿದೆ. ಅದರಲ್ಲೂ ರಿಸಪ್ಷನ್‌ ಅಂದರೇ ಆರತಕ್ಷತೆಯಲ್ಲಿ ಮದುಮಗ ಧರಿಸುವ ಗ್ರ್ಯಾಂಡ್‌ ಔಟ್‌ಫಿಟ್‌ಗೆ ಮ್ಯಾಚ್‌ ಆಗುವಂತಹ ಡಿಸೈನ್‌ನವನ್ನು ಧರಿಸುವುದು ಕಂಡು ಬರುತ್ತಿದೆ. ಇದಕ್ಕಾಗಿ ಹೆಚ್ಚು ಬೆಲೆ ತೆತ್ತು ರಿಯಲ್‌ ಪರ್ಲ್‌ ಹಾರಗಳನ್ನು ಖರೀದಿಸುವುದರ ಬದಲು ಥೇಟ್‌ ಮುತ್ತಿನ ಹಾರಗಳಂತೆ ಕಾಣುವ ಆರ್ಟಿಫೀಶಿಯಲ್‌ ಪರ್ಲ್‌ವನ್ನು ಇತ್ತೀಚೆಗೆ ಹುಡುಗರು ಆಯ್ಕೆ ಮಾಡಿಕೊಳ್ಳುತ್ತಿದ್ದಾರೆ. ಕೇವಲ ಒಂದು ದಿನಕ್ಕಾಗಿ ಧರಿಸುವ ಈ ಮೆನ್ಸ್‌ ಗ್ರ್ಯಾಂಡ್‌ ಮುತ್ತಿನ ಹಾರಗಳು ಮತ್ತೊಮ್ಮೆ ಬಳಕೆಯಾಗುವುದು ಕಡಿಮೆ. ಬಳಸಿದರೂ ಮತ್ತೊಮ್ಮೆ ಕುಟುಂಬದವರೇ ಧರಿಸಬೇಕಾಗುತ್ತದೆ. ಹಾಗಾಗಿ ಇವುಗಳನ್ನು ಆಯ್ಕೆ ಮಾಡುವವರು ಹೆಚ್ಚಾಗಿದ್ದಾರೆ ಎನ್ನುತ್ತಾರೆ ವೆಡ್ಡಿಂಗ್‌ ಜ್ಯುವೆಲರಿ ಡಿಸೈನರ್ಸ್.‌

ಇದನ್ನೂ ಓದಿ: Turbo Trailer Out: ಮಮ್ಮುಟ್ಟಿ ನಟನೆಯ ‘ಟರ್ಬೋ’ ಟ್ರೈಲರ್‌ ಔಟ್‌: ರಾಜ್‌ ಬಿ ಶೆಟ್ಟಿ ಖದರ್‌ಗೆ ಫ್ಯಾನ್ಸ್‌ ಫಿದಾ!

ಆರ್ಟಿಫಿಶಿಯಲ್‌ ಮುತ್ತಿನ ಹಾರಗಳ ವಿನ್ಯಾಸ

ವೆಡ್ಡಿಂಗ್‌ ಮೆನ್ಸ್‌ ಜ್ಯುವೆಲರಿ ಡಿಸೈನ್‌ಗಳಲ್ಲಿ ಇದೀಗ ನಾನಾ ಬಗೆಯ ಕೃತಕ ಪರ್ಲ್‌ ಹಾರಗಳು ಟ್ರೆಂಡಿಯಾಗಿದ್ದು, ಅವುಗಳಲ್ಲಿ ಮೂರು, ಐದು, ಏಳು ಎಳೆಯ ಹಾರಗಳು ಚಾಲ್ತಿಯಲ್ಲಿವೆ. ಇನ್ನು ಇವುಗಳಲ್ಲೆ ಮಿಕ್ಸ್‌ ಮ್ಯಾಚ್‌ ಮಾಡಿರುವ ಪ್ರಿಶಿಯಸ್‌ ಬೀಡ್ಸ್ನಂತೆ ಕಾಣುವ ಲೇಯರ್‌ ಮಣಿಗಳವು ಬಂದಿವೆ. ಇನ್ನು ಗೋಲ್ಡನ್‌ ಬೀಡ್ಸ್‌ ಜೊತೆಗೆ ಪರ್ಲ್‌ನಂತೆ ಕಾಣುವ ಆರ್ಟಿಫಿಶಿಯಲ್‌ ಪರ್ಲ್‌ ಹಾರಗಳು ಹೆಚ್ಚು ಬೇಡಿಕೆ ಸೃಷ್ಟಿಸಿಕೊಂಡಿವೆ.

ಕೈಗೆಟಕುವ ಬೆಲೆ

ಫ್ಯಾನ್ಸಿ ಶಾಪ್‌ಗಳಲ್ಲಿ ದೊರಕುವ ಈ ಮೆನ್ಸ್‌ ಆರ್ಟಿಫಿಶೀಯಲ್‌ ವೆಡ್ಡಿಂಗ್‌ ಜ್ಯುವೆಲರಿಗಳು ಅಂತಹ ದುಬಾರಿ ದರ ಹೊಂದಿರುವುದಿಲ್ಲ. ಬ್ರಾಂಡೆಡ್‌ನದ್ದಾದಲ್ಲಿ ದರ ಹೆಚ್ಚಿರುತ್ತವೆ. ಇನ್ನು ಲೋಕಲ್‌ ಬ್ರಾಂಡ್‌ಗಳದ್ದಾದಲ್ಲಿ ಸಾವಿರ ರೂ.ಗಳ ಒಳಗೆ ದೊರಕುತ್ತವೆ. ಕೆಲವು ಯೂನಿಸೆಕ್ಸ್‌ ಡಿಸೈನ್‌ ಹೊಂದಿರುತ್ತವೆ. ಇವನ್ನು ಮದುವೆಯ ಆರತಕ್ಷತೆಯ ನಂತರ ಕುಟುಂಬದ ಇತರೇ ಮಹಿಳೆಯರು ಧರಿಸಬಹುದು. ಮರು ಬಳಕೆ ಮಾಡಬಹುದು ಎಂದು ಟಿಪ್ಸ್‌ ನೀಡುತ್ತಾರೆ ಜ್ಯುವೆಲರಿ ಸ್ಟೈಲಿಸ್ಟ್ ಗಳು.

ಮದುಮಗನ ಪರ್ಲ್‌ ಹಾರ ಆಯ್ಕೆಗೆ 7 ಸೂತ್ರ:

  • ಆರತಕ್ಷತೆಯಲ್ಲಿ ಧರಿಸುವ ಔಟ್‌ಫಿಟ್‌ಗೆ ಮ್ಯಾಚ್‌ ಆಗುವಂತಿರಬೇಕು.
  • ಮರುಬಳಕೆ ಮಾಡುವಂತಹ ಪರ್ಲ್‌ ಹಾರವನ್ನು ಖರೀದಿಸಿ.
  • ಒಂದೇ ಶೇಡ್‌ನದ್ದಾದಲ್ಲಿ ಯಾರೂ ಬೇಕಾದರೂ ಧರಿಸಬಹುದು.
  • ಮಿಕ್ಸ್‌ ಮ್ಯಾಚ್‌ ಮಾಡಿರುವ ಬೀಡ್ಸ್‌ ಇರುವಂತಹ ಪರ್ಲ್‌ ಹಾರ ಎದ್ದು ಕಾಣುತ್ತವೆ.
  • ಸಾದಾ ಡಿಸೈನ್‌ನ ಔಟ್‌ಫಿಟ್‌ಗೆ ಕಲರ್‌ ಬೀಡ್ಸ್‌ ಮಿಕ್ಸ್‌ ಮಾಡಿರುವಂತವನ್ನು ಧರಿಸುವುದು ಉತ್ತಮ.
  • ಗ್ರ್ಯಾಂಡ್‌ ಡಿಸೈನ್‌ನವಕ್ಕೆ ಸಿಂಪಲ್‌ ಒಂದೇ ಕಲರ್‌ನವನ್ನು ಚೂಸ್‌ ಮಾಡಬೇಕು.
  • ಆದಷ್ಟೂ ಉದ್ದ ಇರುವಂತಹ ಲೇಯರ್‌ ಹಾರ ಖರೀದಿಸುವುದು ಬೆಸ್ಟ್.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

Continue Reading

ಫ್ಯಾಷನ್

Star saree fashion: ಯುವತಿಯರನ್ನು ಸೆಳೆಯುತ್ತಿದೆ ನಟಿ ಭಾವನಾ ರಾವ್‌ ಸ್ಯಾಟೀನ್‌ ಸಿಲ್ಕ್‌ ಸೀರೆ

Star saree fashion: ನಟಿ ಭಾವನಾ ರಾವ್‌ ಮಲ್ಟಿ ಶೇಡ್‌ನ ಸ್ಯಾಟಿನ್‌ ಸಿಲ್ಕ್‌ ಸೀರೆಯಲ್ಲಿ ಮನಮೋಹಕವಾಗಿ ಕಾಣಿಸಿಕೊಂಡಿದ್ದು, ಯುವತಿಯರ ಮನ ಸೆಳೆದಿದೆ. ನಾನಾ ಪ್ರಿಂಟ್ಸ್‌ನಲ್ಲಿ ದೊರೆಯುತ್ತಿರುವ ವೆರೈಟಿ ವಿನ್ಯಾಸದ ಬಗ್ಗೆ ಸೀರೆ ಎಕ್ಸ್ಪರ್ಟ್ಸ್‌ ಒಂದಿಷ್ಟು ವಿವರ ನೀಡಿದ್ದಾರೆ.

VISTARANEWS.COM


on

Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು

ಸ್ಯಾಟೀನ್‌ ಸೀರೆಯಲ್ಲಿ ನಟಿ ಭಾವನಾ ರಾವ್‌ (Star saree fashion) ಮನಮೋಹಕವಾಗಿ ಕಾಣಿಸಿಕೊಂಡಿದ್ದು, ಸೀರೆ ಪ್ರಿಯ ಯುವತಿಯರನ್ನು ಸೆಳೆದಿವೆ.

ನೀರೆಯರ ಸೆಳೆದ ಸ್ಯಾಟೀನ್‌ ಸೀರೆ

ಇದರಿಂದಾಗಿ ತೆರೆ-ಮರೆಗೆ ಸರಿದಿದ್ದ ಈ ಸ್ಯಾಟೀನ್‌ ಸೀರೆಯ ಟ್ರೆಂಡ್‌ಗೆ ನಾಂದಿ ಹಾಡಿದಂತಾಗಿದೆ. ಹೌದು, ಕೆಲವು ಸೀರೆಗಳು ಮಾರುಕಟ್ಟೆಯಲ್ಲಿ ಇರುತ್ತವೆಯಾದರೂ, ಹೆಚ್ಚಾಗಿ ಬೇಡಿಕೆ ಸೃಷ್ಠಿಸಿಕೊಂಡಿರುವುದಿಲ್ಲ! ಆದರೆ, ಸಿನಿಮಾ ತಾರೆಯರು ಉಟ್ಟು, ಒಂದಿಷ್ಟು ಫೋಟೋಶೂಟ್‌ ಮಾಡಿಸಿ, ಸೋಷಿಯಲ್‌ ಮೀಡಿಯಾದಲ್ಲಿ ಅಪ್‌ಲೋಡ್‌ ಮಾಡಿದಾಕ್ಷಣಾ, ಆ ಸೀರೆಗಳು ನೀರೆಯರ ಮನಸೆಳೆಯುತ್ತವೆ. ಇದ್ದಕ್ಕಿದ್ದಂತೆ ಬೇಡಿಕೆ ಹೆಚ್ಚಿಸಿಕೊಳ್ಳುತ್ತವೆ. ಆ ಸಾಲಿಗೆ ಇದೀಗ ಭಾವನಾ ಉಟ್ಟ ಮಲ್ಟಿ ಶೇಡ್‌ನ ಸ್ಯಾಟೀನ್‌ ಸೀರೆ ಕೂಡ ಸೇರಿಕೊಂಡಿದೆ ಎನ್ನುತ್ತಾರೆ ಸೀರೆ ವಿಮರ್ಶಕರು.

ಸ್ಯಾಟೀನ್‌ ಸೀರೆಯ ವಿಶೇಷತೆ

ನೋಡಲು ಕಲರ್‌ಫುಲ್‌ ಆಗಿರುವ ಈ ಸ್ಯಾಟೀನ್‌ ಸೀರೆಗಳು ಅಂತಹ ದುಬಾರಿಯೇನೂ ಅಲ್ಲ! ಹಾಗಾಗಿ ಸಾಕಷ್ಟು ಯುವತಿಯರನ್ನು ಸೆಳೆದಿವೆ. ಅಲ್ಲದೇ, ಇವು ಲೈಟ್‌ವೈಟ್‌ ಹಾಗೂ ಸಿಂಪಲ್‌ ಕಲರ್‌ಫುಲ್‌ ಪ್ರಿಂಟ್ಸ್ ಹೊಂದಿರುತ್ತವೆ. ಉಡಲು ಸುಲಭ ಹಾಗೂ ನಾನಾ ಬಗೆಯಲ್ಲೂ ಡ್ರೇಪಿಂಗ್‌ ಮಾಡಬಹುದು. ಈಸಿಯಾಗಿ ಕ್ಯಾರಿ ಮಾಡಬಹುದು. ಇವೆಲ್ಲಾ ಕಾರಣಗಳಿಂದಾಗಿ ಈ ಸೀರೆಗಳು ಮಾನಿನಿಯರನ್ನು ಮತ್ತೊಮ್ಮೆ ಸೆಳೆಯುತ್ತಿವೆ. ಸೀರೆ ಫ್ಯಾಷನ್‌ನಲ್ಲಿ ಮರುಕಳಿಸಿವೆ ಎನ್ನುತ್ತಾರೆ ಫ್ಯಾಷನ್‌ ವಿಮರ್ಶಕರಾದ ವಿದ್ಯಾ. ಅವರ ಪ್ರಕಾರ, ಇಂತಹ ಸೀರೆಗಳು ಟ್ರಾವೆಲ್‌ ಮಾಡುವಾಗ ಹೊತ್ತೊಯ್ಯಲು ಕೂಡ ಆರಾಮ ಎಂದೆನಿಸುತ್ತವೆ. ಉಟ್ಟಾಗ ಕಂಫರ್ಟಬಲ್‌ ಫೀಲ್‌ ನೀಡುತ್ತವೆ ಎನ್ನುತ್ತಾರೆ.

ಇದನ್ನೂ ಓದಿ: Akshaya Tritiya Jewellery: ಅಕ್ಷಯ ತೃತೀಯಕ್ಕೆ ಬಂದಿವೆ ವೈವಿಧ್ಯಮಯ ಫ್ಯಾಷನ್‌ ಜ್ಯುವೆಲರಿಗಳು!

ಲೈಟ್‌ವೈಟ್‌ ಸ್ಯಾಟೀನ್‌ ಸೀರೆ

ಸ್ಯಾಟೀನ್‌ ಸೀರೆಗಳು ಇವತ್ತಿನ ಫ್ಯಾಷನ್‌ನವಲ್ಲ! ಬಹಳ ಹಿಂದಿನಿಂದಲೂ ಸೀರೆ ಫ್ಯಾಷನ್‌ನಲ್ಲಿವೆ. ಆಗಾಗ್ಗೆ ಹೊಸ ಡಿಸೈನ್‌ನಲ್ಲಿ ಹಾಗೂ ಕಂಟೆಂಪರರಿ ವಿನ್ಯಾಸದಲ್ಲಿ ಮರುಕಳಿಸಿ ಎಂಟ್ರಿ ನೀಡುತ್ತಲೇ ಇರುತ್ತವೆ. ವಿನೂತನ ಪ್ರಿಂಟ್ಸ್‌ನಲ್ಲಿ ರೀ ಎಂಟ್ರಿ ನೀಡುತ್ತಿರುತ್ತವೆ. ಇದೇ ಈ ಸೀರೆಗಳ ಪ್ಲಸ್‌ ಪಾಯಿಂಟ್‌. ಎಲ್ಲಾ ಸೀರೆಗಳ ಪ್ರಿಂಟ್ಸ್‌ ಒಂದೇ ತರಹದ್ದಾಗಿರುವುದಿಲ್ಲ. ಯಾರೇ ಸೀರೆ ಉಟ್ಟರೂ ಒಬ್ಬೊಬ್ಬರಿಗೂ ಒಂದೊಂದು ಬಗೆಯಲ್ಲಿ ಕಾಣಿಸುತ್ತವೆ. ಇದು ಈ ಸೀರೆಗಳ ಮತ್ತೊಂದು ಸ್ಪೆಷಾಲಿಟಿ. ಅಲ್ಲದೇ. ಇವುಗಳ ನಿರ್ವಹಣೆಯೂ ಕೂಡ ಅತಿ ಸುಲಭ. ಹಾಗಾಗಿ ಪ್ರತಿ ಮಹಿಳೆಯ ಬಳಿಯೂ ಇಂತಹದ್ದೊಂದು ಸೀರೆ ಇದ್ದೇ ಇರುತ್ತದೆ ಎನ್ನುತ್ತಾರೆ ಸ್ಯಾರಿ ಸ್ಪೆಷಲಿಸ್ಟ್‌ಗಳು.

ಅಪ್ಪ ಕೊಟ್ಟ ಸೀರೆ

ನಟಿ ಭಾವನಾ ರಾವ್‌ ಹೇಳಿಕೊಂಡಿರುವಂತೆ, ಈ ಮಲ್ಟಿ ಶೇಡ್‌ನ ಸ್ಯಾಟೀನ್‌ ಸೀರೆ ಅಪ್ಪ ಗಿಫ್ಟ್‌ ಕೊಟ್ಟ ಸೀರೆಯಂತೆ. ಸ್ಟೈಲಿಸ್ಟ್‌ ಜೋಹಾ ಅವರ ಸ್ಟೈಲಿಂಗ್‌ನಲ್ಲಿ ಕಾಣಿಸಿಕೊಂಡಿರುವ ಭಾವನಾ ಮೇಕಪ್‌ ಶೃತಿ ಅಶ್ವಥ್‌ ಮಾಡಿದ್ದಾರೆ. ಇನ್ನು ರಾಜೀ ಡಿಸೈನ್‌ ಸ್ಟುಡಿಯೋ ಅವರು ಬ್ಲೌಸ್‌ ಡಿಸೈನ್‌ ಮಾಡಿದ್ದಾರಂತೆ. ಸೀರೆ ಮೇಲಿನ ಪ್ರೀತಿ ಅವರನ್ನು ಮತ್ತಷ್ಟು ಸುಂದರ ಹಾಗೂ ಆಕರ್ಷಕವಾಗಿ ಬಿಂಬಿಸಿದೆಯಂತೆ.

ಸ್ಯಾಟೀನ್‌ ಸೀರೆ ಆಯ್ಕೆ ಹೀಗಿರಲಿ:

  • ಆದಷ್ಟೂ ವೈಟ್‌ ಶೇಡ್‌ ಇರುವಂತಹ ಸ್ಯಾಟೀನ್‌ ಸೀರೆಯಲ್ಲಿ ಆಯ್ಕೆ ಮಾಡಿ.
  • ಟ್ರೆಂಡಿ ಪ್ರಿಂಟ್ಸ್‌ ಸೆಲೆಕ್ಟ್‌ ಮಾಡಿ.
  • ಡಾರ್ಕ್‌ ಪ್ರಿಂಟ್ಸ್‌ ಇರುವಂತವು ಹೈಲೈಟಾಗುತ್ತವೆ.
  • ಬಿಗ್‌ ಬಾರ್ಡರ್‌ ಆಯ್ಕೆ ಬೇಡ.
  • ಜೀಬ್ರಾ ಪ್ರಿಂಟ್ಸ್‌, ಲೈನ್ಸ್‌ ಈ ಸೀಸನ್‌ನಲ್ಲಿದೆ.
  • ಬ್ಲ್ಯಾಕ್‌ & ವೈಟ್‌ ಹೆಚ್ಚು ಪ್ರಚಲಿತದಲ್ಲಿವೆ.

ಚಿತ್ರಗಳು: ಭಾವನಾ ರಾವ್‌, ನಟಿ.
ಫೋಟೋಗ್ರಫಿ: ರೋಹನ್‌ ಫೋಟೋಗ್ರಫಿ

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

Continue Reading

ಫ್ಯಾಷನ್

Fashion Trend: ಯುವತಿಯರನ್ನು ಸೆಳೆದಿರುವ 3 ಶೈಲಿಯ ವೈಟ್‌ ಪ್ಯಾಂಟ್‌ಗಳಿವು!

ಈ ಸಮ್ಮರ್‌ ಸೀಸನ್‌ನಲ್ಲಿ ವೈಟ್‌ ಪ್ಯಾಂಟ್‌ ಫ್ಯಾಷನ್‌ಗೆ (Fashion Trend) ಮರಳಿದ್ದು, ಅವುಗಳಲ್ಲಿ 3 ಶೈಲಿಯವು ಹೆಚ್ಚು ಟ್ರೆಂಡಿಯಾಗಿವೆ. ಅವು ಯಾವುವು? ಹೇಗೆಲ್ಲಾ ಮಿಕ್ಸ್‌ ಮ್ಯಾಚ್‌ ಮಾಡಿ ಧರಿಸಬಹುದು ಎಂಬುದರ ಬಗ್ಗೆ ಸ್ಟೈಲಿಸ್ಟ್‌ಗಳು ಇಲ್ಲಿ ತಿಳಿಸಿದ್ದಾರೆ.

VISTARANEWS.COM


on

Fashion Trend
ಚಿತ್ರಕೃಪೆ : ಪಿಕ್ಸೆಲ್‌
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಈ ಬಾರಿಯ ಸಮ್ಮರ್‌ ಸೀಸನ್‌ನಲ್ಲಿ ಶ್ವೇತ ವರ್ಣದ ವೈಟ್‌ ಪ್ಯಾಂಟ್‌ ಫ್ಯಾಷನ್‌ (Fashion Trend) ಮರಳಿದೆ. ನಾನಾ ವಿನ್ಯಾಸದ ಫ್ಯಾಬ್ರಿಕ್‌ನ ವೈಟ್‌ ಪ್ಯಾಂಟ್‌ಗಳು ಇದೀಗ ಉದ್ಯೋಗಸ್ಥ ಮಹಿಳೆಯರ ಹಾಗೂ ಯುವತಿಯರ ವಾರ್ಡ್ರೋಬ್‌ಗೆ ಸೇರಿವೆ. ಕಚೇರಿ, ಔಟಿಂಗ್‌, ಮೀಟಿಂಗ್‌ ಹೀಗೆ ನಾನಾ ಸಂದರ್ಭಗಳಿಗೆ ಮ್ಯಾಚ್‌ ಆಗುವಂತಹ ಕಾನ್ಸೆಪ್ಟ್‌ ನಲ್ಲಿ ಬಿಡುಗಡೆಗೊಂಡಿವೆ. ನೋಡಲು ಕ್ಲಾಸಿ ಲುಕ್‌ ನೀಡುತ್ತಿವೆ. ಅವುಗಳಲ್ಲಿ 3 ಶೈಲಿಯವು ಅತಿ ಹೆಚ್ಚು ಟ್ರೆಂಡಿಯಾಗಿವೆ.

Fashion Trend

ವೈಟ್‌ ಪ್ಯಾಂಟ್‌ ಪ್ರೇಮ

ಅಂದಹಾಗೆ, ಮೊದಲೆಲ್ಲಾ ವೈಟ್‌ ಪ್ಯಾಂಟ್‌ ಧರಿಸುವವರು ತೀರಾ ಕಡಿಮೆಯಾಗಿದ್ದರು. ಕಾರಣ, ಅದನ್ನು ಮೇಂಟೆನ್‌ ಮಾಡುವುದು ಕಷ್ಟವಾಗಿತ್ತು. ಧರಿಸಿದರೂ ತೀರಾ ಕಡಿಮೆ ಮಹಿಳೆಯರು ಧರಿಸುತ್ತಿದ್ದರು. ಎಲ್ಲದಕ್ಕಿಂತ ಹೆಚ್ಚಾಗಿ ಕಾಲೇಜು ಹುಡುಗಿಯರು ಮಾತ್ರ ಫ್ರಿಫರ್‌ ಮಾಡುತ್ತಿದ್ದರು. ಹೆಚ್ಚು ಕೆಲಸ ಮಾಡದೇ, ಧೂಳಿನಲ್ಲಿ ಓಡಾಡದೇ ಇರುವಂತಹ ಹುಡುಗಿಯರು ಧರಿಸುತ್ತಿದ್ದರು. ಹೆಚ್ಚು ಹೊರಗಡೆ ಓಡಾಡುವರು ಹಾಗೂ ಹೆಚ್ಚು ಕೆಲಸ ಮಾಡುವವರು ಧರಿಸುತ್ತಿರಲಿಲ್ಲ. ಕೊಂಚ ಗಲೀಜಾದರೂ ಕಲೆಯು ಉಳಿಯುವುದು ಹಾಗೂ ನೀಟಾಗಿ ನಿರ್ವಹಣೆ ಮಾಡಲು ಸಾಧ್ಯವಾಗದಿರುವುದು ಇದಕ್ಕೆ ಕಾರಣವಾಗಿತ್ತು. ಆದರೆ, ಇದಕ್ಕೆಲ್ಲಾ ಉತ್ತರ ಎಂಬಂತೆ, ಇದೀಗ ನಾನಾ ಬಗೆಯ ಕಂಫರ್ಟಬಲ್‌ ಫೀಲ್‌ ನೀಡುವ ವೈಟ್‌ ಪ್ಯಾಂಟ್‌ಗಳು ಫ್ಯಾಷನ್‌ ಲೋಕಕ್ಕೆ ಕಾಲಿಟ್ಟಿವೆ. ಕೆಲವಂತೂ ಕಲೆಯಾದರೂ ಸುಲಭವಾಗಿ ವಾಶ್‌ ಮಾಡಬಹುದಾದಂತವು, ರಿಂಕಲ್‌ ಫ್ರೀ ಇರುವಂತವು ಹಾಗೂ ಮಾಡರ್ನ್‌ ಫಾರ್ಮಲ್‌ ಪ್ಯಾಂಟ್‌ ವಿನ್ಯಾಸದವು ಕಾಲಿಟ್ಟಿವೆ ಎನ್ನುತ್ತಾರೆ ಫ್ಯಾಷನಿಸ್ಟ್‌ ರಾಜ್‌.

Fashion Trend

ಆ್ಯಂಕೆಲ್‌ ಲೆಂಥ್‌ ಜೀನ್ಸ್‌ ವೈಟ್‌ ಪ್ಯಾಂಟ್‌

ಪಾದದ ಮೇಲೆ ನಿಲ್ಲುವ ಆ್ಯಂಕೆಲ್‌ ಲೆಂಥ್‌ ಶೈಲಿಯ ವೈಟ್‌ ಪ್ಯಾಂಟ್‌ಗಳು ಈ ಸೀಸನ್‌ನಲ್ಲಿ ಹುಡುಗಿಯರನ್ನು ಸವಾರಿ ಮಾಡತೊಡಗಿವೆ. ಯಾವುದೇ ಶೇಡ್‌ನ ಕ್ರಾಪ್‌ ಟಾಪ್‌ನೊಂದಿಗೆ ಧರಿಸಬಹುದಾದ ಇವು ನೋಡಲು ಮಾಡರ್ನ್‌ ಲುಕ್‌ ನೀಡುತ್ತವೆ. ಫ್ಲೇರ್‌ ಹಾಗೂ ಸ್ಕಿನ್‌ ಟೈಟ್‌ ಎರಡು ಶೈಲಿಯವು ಪಾಪುಲರ್‌ ಆಗಿವೆ.

Fashion Trend

ರಿಂಕಲ್‌ ಫ್ರೀ ವೈಟ್‌ ಪ್ಯಾಂಟ್‌

ಇಸ್ತ್ರೀ ಮಾಡದೇಯೂ ಧರಿಸಬಹುದಾದ ಇವು ರಿಂಕಲ್‌ ಫ್ರೀ ಪ್ಯಾಂಟ್‌ಗಳಿವು. ಅತಿ ಹೆಚ್ಚು ಯುವತಿಯರು ಇಂತಹ ಪ್ಯಾಂಟ್‌ಗಳನ್ನು ಧರಿಸತೊಡಗಿದ್ದಾರೆ. ಯಾವುದೇ ಬಗೆಯ ಟಾಪ್‌ಗಳಿಗಾದರೂ ಇವನ್ನು ಧರಿಸಬಹುದು. ಆಕ್ಸೆಸರೀಸ್‌ ಕೂಡ ಅಷ್ಟೇ ಯಾವುದನ್ನು ಬೇಕಾದರೂ ಇವಕ್ಕೆ ಮಿಕ್ಸ್‌ ಮ್ಯಾಚ್‌ ಮಾಡಬಹುದು.

ಇದನ್ನೂ ಓದಿ: Fashion Trend: ಜೆನ್‌ ಜಿ ಹುಡುಗ-ಹುಡುಗಿಯರ ಆವರಿಸಿದ ಚಿತ್ರ-ವಿಚಿತ್ರ ಡ್ರಾಗನ್‌ ಜ್ಯುವೆಲರಿಗಳು!

ಫಾರ್ಮಲ್‌ ವೈಟ್‌ ಪ್ಯಾಂಟ್‌

ಕಾರ್ಪೋರೇಟ್‌ ಕ್ಷೇತ್ರದ ಹೆಣ್ಣು ಮಕ್ಕಳು ಅತಿ ಹೆಚ್ಚು ಧರಿಸುವ ಹಾಗೂ ಪ್ರಿಫರ್‌ ಮಾಡುವ ಫಾರ್ಮಲ್‌ ಪ್ಯಾಂಟ್‌ಗಳಿವು. ನೋಡಲು ಕ್ಲಾಸಿ ಲುಕ್‌ ನೀಡುತ್ತವೆ. ಇವುಗಳಲ್ಲಿ ಹಾಫ್‌, ವೈಟ್‌, ಕ್ರೀಮ್‌ ವೈಟ್‌ ಅತಿ ಹೆಚ್ಚು ಬೇಡಿಕೆ ಪಡೆದುಕೊಂಡಿವೆ. ಶಾರ್ಟ್‌ ಟಾಪ್‌ಗಳು ಹೊಂದುತ್ತವೆ. ಪಾಸ್ಟೆಲ್‌ ಶೇಡ್‌ನವು ಇದೀಗ ಟ್ರೆಂಡಿ ಮಿಕ್ಸ್‌ ಮ್ಯಾಚ್‌ ಟ್ರೆಂಡ್‌ನಲ್ಲಿವೆ.

(ಲೇಖಕಿ ಫ್ಯಾಷನ್‌ ಪತ್ರಕರ್ತೆ )

Continue Reading

ಫ್ಯಾಷನ್

Fashion Trend: ಜೆನ್‌ ಜಿ ಹುಡುಗ-ಹುಡುಗಿಯರ ಆವರಿಸಿದ ಚಿತ್ರ-ವಿಚಿತ್ರ ಡ್ರಾಗನ್‌ ಜ್ಯುವೆಲರಿಗಳು!

ಜೆನ್‌ ಜಿ ಹುಡುಗ-ಹುಡುಗಿಯರ (Jen G is a boy-girl) ಕ್ರೇಜಿ ಫಂಕಿ ಫ್ಯಾಷನ್‌ ಲಿಸ್ಟ್‌ಗೆ (Fashion Trend) ಇದೀಗ ಡ್ರಾಗನ್‌ ಜ್ಯುವೆಲರಿಗಳು ಸೇರಿವೆ. ನೋಡಲು ಚಿತ್ರ-ವಿಚಿತ್ರವಾಗಿ ಕಾಣಿಸುವ ಈ ಆಕ್ಸೆಸರೀಸ್‌ಗಳು ಸದ್ಯ ಯಂಗ್‌ಸ್ಟರ್ಸ್‌ ಫಂಕಿ ಲುಕ್‌ಗೆ ಸಾಥ್‌ ನೀಡುತ್ತಿವೆ. ಇದೇನಿದು ಡ್ರಾಗನ್‌ ಜ್ಯುವೆಲರಿ ಕ್ರೇಝ್‌? ಇಲ್ಲಿದೆ ವಿವರ.

VISTARANEWS.COM


on

Image-Fantastic Dragon Jewellery!
ಚಿತ್ರಕೃಪೆ: ಪಿಕ್ಸೆಲ್‌
Koo

ಶೀಲಾ ಸಿ. ಶೆಟ್ಟಿ, ಬೆಂಗಳೂರು
ಜೆನ್‌ ಜಿ ಹುಡುಗ-ಹುಡುಗಿಯರ (Jen G is a boy-girl) ಕ್ರೇಝಿ ಫ್ಯಾಷನ್‌ಗೆ (Fashion Trend) ಇದೀಗ ಡ್ರಾಗನ್‌ ಜ್ಯುವೆಲರಿಗಳು ಸೇರಿವೆ. ನೋಡಲು ಚಿತ್ರ-ವಿಚಿತ್ರವಾಗಿ ಕಾಣಿಸುವ ಈ ಆಕ್ಸೆಸರೀಸ್‌ಗಳು ಸದ್ಯ ಫಂಕಿ ಲುಕ್‌ಗೆ ಸಾಥ್‌ ನೀಡುತ್ತಿವೆ. ಜೆನ್‌ ಜಿ ಹುಡುಗ – ಹುಡುಗಿಯರ ಸ್ಟೈಲ್‌ ಆಕ್ಸೆಸರೀಸ್‌ ಲಿಸ್ಟ್‌ನಲ್ಲಿ ಸದ್ಯ ಟಾಪ್‌ನಲ್ಲಿವೆ.

Dragon Jewellery!

ಏನಿದು ಡ್ರಾಗನ್‌ ಜ್ಯುವೆಲರಿ?

ಡ್ರಾಗನ್‌ ಎಂಬುದು ಚೀನಾ ರಾಷ್ಟ್ರದಲ್ಲಿ ಸಾಕಷ್ಟು ಸ್ಥಾನ-ಮಾನ ಪಡೆದಿರುವ ಪೌರಾಣಿಕ ಹಿನ್ನೆಲೆಯುಳ್ಳ ಜನಮನದಲ್ಲಿರುವ ಇಮ್ಯಾಜೀನೇಷನ್‌ನಲ್ಲಿರುವ ಒಂದು ಪ್ರಾಣಿ ಎನ್ನಬಹುದು. ಕೆಲವೆಡೆ ಇದಕ್ಕೆ ದೇವರ ಸ್ಥಾನವನ್ನು ನೀಡಲಾಗಿದೆ. ಇನ್ನು, ಕಾರ್ಟೂನ್‌ ಸೇರಿದಂತೆ ಚೀನಾ ದೇಶದ ಬಹಳಷ್ಟು ಸಿನಿಮಾಗಳಲ್ಲಿ ಈ ಡ್ರಾಗನ್‌ ಕ್ಯಾರೆಕ್ಟರ್‌ಗಳನ್ನು ಕಾಣಬಹುದು. ಚೀನಾ ಮಾತ್ರವಲ್ಲ, ಸುತ್ತಮುತ್ತಲ ದೇಶಗಳಲ್ಲೂ ಇವುಗಳ ಮೂರ್ತಿ, ಮಿನಿಯೇಚರ್ಸ್‌, ಶೋ ಪೀಸ್‌ ಎಲ್ಲವನ್ನೂ ಕಾಣಬಹುದು. ಇದೀಗ ಈ ಡ್ರಾಗನ್‌ ಕಾನ್ಸೆಪ್ಟ್‌ನ ಮಿನಿಯೇಚರ್‌ ಡಿಸೈನ್‌ನ ಆಭರಣಗಳು ಜ್ಯುವೆಲರಿ ಲೋಕಕ್ಕೂ ಲಗ್ಗೆ ಇಟ್ಟಿವೆ. ಹುಡುಗ-ಹುಡುಗಿಯರು ಧರಿಸುವ ಚೈನ್‌ನ ಪೆಂಡೆಂಟ್‌, ಉಂಗುರ, ಬ್ರೇಸ್‌ಲೆಟ್‌, ಇಯರಿಂಗ್‌, ನೆಕ್‌ಪೀಸ್ ಹೀಗೆ ಬಂಗಾರೇತರ ಮೆಟಲ್‌ನಲ್ಲಿ ರೂಪುಗೊಂಡು ಆವರಿಸಿಕೊಂಡಿವೆ.

Fashion Trend Image-Fantastic Dragon Jewellery!

ಕೊರಿಯನ್‌ ಸ್ಟಾರ್ಸ್‌ ಪ್ರೇರಣೆ

ಮೊದಲೆಲ್ಲಾ ಕೇವಲ ಸಿನಿಮಾಗಳಲ್ಲಿ ಹಾಗೂ ಫ್ಯಾಷನ್‌ ಶೋಗಳಲ್ಲಿ ಮಾತ್ರ ಇವುಗಳ ಛಾಯೆ ನೋಡಬಹುದಾಗಿತ್ತು. ಇದೀಗ ಕೊರಿಯನ್‌ ಹುಡುಗ-ಹುಡುಗಿಯರು ಧರಿಸಲಾರಂಭಿಸಿದ್ದು, ಅದರಲ್ಲೂ ಕೆ – ಡ್ರಾಮಾ ಸ್ಟಾರ್‌ಗಳು ಬಳಸಲಾರಂಭಿಸಿದ್ದು, ಈ ಟ್ರೆಂಡ್‌ ಜಾಗತೀಕ ಮಟ್ಟದಲ್ಲಿ ವ್ಯಾಪಿಸಲು ಕಾರಣವಾಗಿದೆ. ಪರಿಣಾಮ, ಸಾಮಾನ್ಯ ಹುಡುಗ-ಹುಡುಗಿಯರು ಕೂಡ ಈ ಜ್ಯುವೆಲರಿ ಫ್ಯಾಷನ್‌ಗೆ ಮನಸೋತಿದ್ದು, ಅವರಂತೆಯೇ ಧರಿಸಲಾರಂಭಿಸಿದ್ದಾರೆ. ಇದಕ್ಕೆ ಪೂರಕ ಎಂಬಂತೆ, ನಮ್ಮ ಸ್ಥಳೀಯ ಮಾರುಕಟ್ಟೆಯಲ್ಲಿ ಬ್ಲ್ಯಾಕ್‌ ಮೆಟಲ್‌, ವೈಟ್‌ ಮೆಟಲ್‌ ಹಾಗೂ ಸಿಲ್ವರ್‌ ಜ್ಯುವೆಲರಿಗಳಲ್ಲಿ ನಾನಾ ಡಿಸೈನ್‌ನ ಈ ಡ್ರಾಗನ್‌ ಆಕ್ಸೆಸರೀಸ್‌ಗಳು ಎಂಟ್ರಿ ನೀಡಿವೆ.

Image-Fantastic Dragon Jewellery!

ಟ್ರೆಂಡ್‌ನಲ್ಲಿರುವ ಡ್ರಾಗನ್‌ ಆಕ್ಸೆಸರೀಸ್‌

ಅತಿ ಹೆಚ್ಚು ಟ್ರೆಂಡ್‌ನಲ್ಲಿರುವ ಡ್ರಾಗನ್‌ ಆಕ್ಸೆಸರೀಸ್‌ಗಳೆಂದರೇ, ಪೆಂಡೆಂಟ್‌ಗಳು. ಇವು ಲೆಕ್ಕವಿಲ್ಲದಷ್ಟು ಡಿಸೈನ್‌ನಲ್ಲಿ ದೊರೆಯುತ್ತಿವೆ. ಹಾರುವ ಡ್ರಾಗನ್‌ನಿಂದಿಡಿದು ನಿಂತಿರುವ ಡ್ರಾಗನ್‌, ಕುಳಿತಿರುವ, ವಾಲಿರುವ ಹೀಗೆ ನಾನಾ ಪೋಸಿಶನ್‌ನ ಡ್ರಾಗನ್‌ ಚಿತ್ತಾರವಿರುವ ಪೆಂಡೆಂಟ್‌ಗಳು ಬೇಡಿಕೆ ಹೆಚ್ಚಿಸಿಕೊಂಡಿವೆ.

ಡ್ರಾಗನ್‌ ಫಿಂಗರ್‌ ರಿಂಗ್ಸ್‌

ಬೆರಳನ್ನು ಹೆಬ್ಬಾವಿನಂತೆ ಸುತ್ತುವರಿದಂತೆ ಕಾಣುವ ಡ್ರಾಗನ್‌ ಕೈ ಉಂಗುರಗಳು ಹುಡುಗರ ಬಿಗ್‌ ಫಿಂಗರ್‌ ರಿಂಗ್‌ಗಳಾಗಿ ಕಾಣಿಸಿಕೊಂಡಿವೆ. ನೋಡಲು ಭಯಾನಕ ಡಿಸೈನ್‌ನಲ್ಲಿ ಮೂಡಿ ಬಂದಿರುವಂತವು ವಿಯರ್ಡ್‌ ಲುಕ್‌ ನೀಡುವಂತವು ಹೆಚ್ಚು ಮಾರಾಟವಾಗುತ್ತಿವೆ ಎನ್ನುತ್ತಾರೆ ಮಾರಾಟಗಾರರು.

ಇದನ್ನೂ ಓದಿ: Summer Fashion: ನೇಲ್‌ ಆರ್ಟ್‌ನಲ್ಲಿ ಟ್ರೆಂಡಿಯಾದ ಸನ್‌ ಕಲರ್‌ ಶೇಡ್ಸ್‌

ಆನ್‌ಲೈನ್‌ನಲ್ಲಿ ಡ್ರಾಗನ್‌ ಆಕ್ಸೆಸರೀಸ್‌ಗೆ ಹೆಚ್ಚಿದ ಬೇಡಿಕೆ

ಆನ್ಲೈನ್‌ ಶಾಪ್‌ಗಳಲ್ಲಿ ಡ್ರಾಗನ್‌ ಆಕ್ಸೆಸರೀಸ್‌ಗಳು ಊಹೆಗೂ ಮೀರಿದ ಡಿಸೈನ್‌ನಲ್ಲಿ ದೊರೆಯುತ್ತಿವೆ. ಮಿನಿ ಡ್ರಾಗನ್‌, ಸುತ್ತುವರಿದಂತಹ ಭಯಾನಕ ಡ್ರಾಗನ್‌ ವಿನ್ಯಾಸದವನ್ನು ಹುಡುಗರು ಹೆಚ್ಚಾಗಿ ಖರೀದಿಸಿ ಧರಿಸುತ್ತಿದ್ದಾರೆ ಎನ್ನುವ ಸ್ಟೈಲಿಸ್ಟ್‌ ರಾಜ್‌ ಪ್ರಕಾರ, ಹುಡುಗಿಯರು ಮಾತ್ರ ಸುಂದರವಾಗಿರುವ ಕ್ಯೂಟ್‌ ಡ್ರಾಗನ್‌ ಪೆಂಡೆಂಟ್‌ ಚೈನ್‌ಗಳನ್ನು ಧರಿಸುತ್ತಿದ್ದಾರಂತೆ.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

Continue Reading
Advertisement
Lok Sabha Election 2024
Lok Sabha Election 20246 mins ago

Lok Sabha Election 2024: ನಾಲ್ಕು ಹಂತಗಳ ಮತದಾನ ಅಂತ್ಯ; ಕಾಂಗ್ರೆಸ್ ಆಂತರಿಕ ವರದಿಯಲ್ಲೇನಿದೆ?

isis link ummer abdul rehman mariyam
ಕ್ರೈಂ9 mins ago

ISIS link: ಐಸಿಸ್‌ ಲಿಂಕ್ ಕೇಸ್‌ನಲ್ಲಿ ಮಾಜಿ ಶಾಸಕ ಇದಿನಬ್ಬ ಮೊಮ್ಮಗನಿಗೆ ದಿಲ್ಲಿ ಹೈಕೋರ್ಟ್‌ ಜಾಮೀನು; ಕೋರ್ಟ್‌ ಕೊಟ್ಟ ಕಾರಣ ನೋಡಿ!

Murder case in davangere
ದಾವಣಗೆರೆ10 mins ago

Murder case : ಕೊಳೆತ ಶವದಲ್ಲಿದ್ದ ಕಿವಿಯೋಲೆಯಿಂದಲೇ ಸಿಕ್ಕಿಬಿದ್ದರು ಹಂತಕರು

Terrorists Killed
ದೇಶ17 mins ago

Terrorists Killed:ಭಾರತೀಯ ಸೇನೆಯ ಭರ್ಜರಿ ಬೇಟೆ- ನಾಲ್ವರು ಉಗ್ರರು ಮಟ್ಯಾಶ್‌!

Startup Investment
ವಾಣಿಜ್ಯ20 mins ago

Startup Investment : ಡ್ರಿಂಕ್​​ಪ್ರೈಮ್​ ವಿಸ್ತರಣಾ ಯೋಜನೆಯಲ್ಲಿ ಎಸ್​​ಐಡಿಬಿಐ ಹಣಕಾಸು ಸಂಸ್ಥೆಯ ಹೂಡಿಕೆ

Virat Kohli
ಕ್ರೀಡೆ25 mins ago

Virat Kohli: ನಿವೃತ್ತಿಯ ಬಗ್ಗೆ ಮಹತ್ವದ ಹೇಳಿಕೆ ನೀಡಿದ ವಿರಾಟ್​ ಕೊಹ್ಲಿ; ಅಭಿಮಾನಿಗಳಿಗೆ ಆತಂಕ

Bhavani Singh pankaj shivanna couple expecting-their first child
ಕಿರುತೆರೆ34 mins ago

Bhavani Singh: ಮೊದಲ ಮಗುವಿನ ನಿರೀಕ್ಷೆಯಲ್ಲಿ ʻಸುಬ್ಬಲಕ್ಷ್ಮಿ ಸಂಸಾರʼ ಧಾರಾವಾಹಿ ನಟ!

ರಾಜಕೀಯ49 mins ago

HD Revanna: ಬಸವನಗುಡಿ ನಿವಾಸದಿಂದ ದೂರವೇ ಉಳಿದ ಎಚ್‌ ಡಿ ರೇವಣ್ಣ; ಜ್ಯೋತಿಷಿಗಳ ಕಟ್ಟೆಚ್ಚರ?

Bomb threat
ದೇಶ59 mins ago

Bomb threat: ಏರ್‌ ಇಂಡಿಯಾ ವಿಮಾನಕ್ಕೆ ಬಾಂಬ್‌ ಬೆದರಿಕೆ; ಟಿಶ್ಯೂ ಪೇಪರ್‌ನಲ್ಲಿ ಬಂದಿತ್ತು ಸಂದೇಶ

sunil chhetri
ಕ್ರೀಡೆ1 hour ago

Sunil Chhetri: ಮೈ ಬ್ರದರ್, ನಿಮ್ಮ ಬಗ್ಗೆ ಹೆಮ್ಮೆಯಿದೆ ಎಂದು ಚೆಟ್ರಿಗೆ ಶುಭ ಹಾರೈಸಿದ ಗೆಳೆಯ ವಿರಾಟ್​ ಕೊಹ್ಲಿ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Prajwal Revanna Case
ಕರ್ನಾಟಕ1 day ago

Prajwal Revanna Case: ಪ್ರಜ್ವಲ್‌ ರೇವಣ್ಣ ಇಂದೇ ಜರ್ಮನಿಯಿಂದ ಭಾರತಕ್ಕೆ? ಎಸ್‌ಐಟಿ ಅಲರ್ಟ್‌

Dina Bhavishya
ಭವಿಷ್ಯ1 day ago

Dina Bhavishya : ಭೂ ವ್ಯವಹಾರಕ್ಕೆ ಇದು ಸೂಕ್ತ ಸಮಯ; ವ್ಯಾಪಾರದಲ್ಲಿ ಡಬಲ್‌ ಲಾಭ

HD Revanna Released first reaction after release will be acquitted of all charges
ರಾಜಕೀಯ2 days ago

HD Revanna Released: ರಿಲೀಸ್‌ ಬಳಿಕ ರೇವಣ್ಣ ಫಸ್ಟ್‌ ರಿಯಾಕ್ಷನ್;‌ ನ್ಯಾಯಾಂಗದ ಮೇಲೆ ನಂಬಿಕೆ ಇದೆ; ಆರೋಪ ಮುಕ್ತನಾಗುವೆ

CM Siddaramaiah says Our government is stable for 5 years BJP will disintegrate
Lok Sabha Election 20242 days ago

CM Siddaramaiah: ನಮ್ಮ ಸರ್ಕಾರ 5 ವರ್ಷ ಸುಭದ್ರ; ಚುನಾವಣೆ ಬಳಿಕ ಬಿಜೆಪಿ ಛಿದ್ರ ಎಂದ ಸಿಎಂ ಸಿದ್ದರಾಮಯ್ಯ!

I dont want to go to other states for Lok Sabha Election 2024 campaign for Congress says CM Siddaramaiah
Lok Sabha Election 20242 days ago

CM Siddaramaiah: ಕಾಂಗ್ರೆಸ್‌ ಪರ ಬೇರೆ ರಾಜ್ಯಗಳಿಗೆ ಪ್ರಚಾರಕ್ಕೆ ಹೋಗಲು ನನಗೆ ಇಷ್ಟವಿಲ್ಲ: ಸಿಎಂ ಸಿದ್ದರಾಮಯ್ಯ!

HD Revanna Bail I am not happy that Revanna has been released says HD Kumaraswamy
ರಾಜಕೀಯ2 days ago

HD Revanna Bail: ರೇವಣ್ಣ ಬಿಡುಗಡೆಯಾಗಿದ್ದಕ್ಕೆ ನಾನಂತೂ ಖುಷಿ ಪಡಲ್ಲ ಎಂದ ಎಚ್‌ಡಿಕೆ!

karnataka Rain Effected
ಬೆಂಗಳೂರು2 days ago

Karnataka Rain: ಮಿಡ್‌ನೈಟ್‌ ಮಳೆ ಅವಾಂತರ; ಮರಗಳು, ವಿದ್ಯುತ್‌ ಕಂಬಗಳು ಧರೆಗೆ, ಕುಸಿದು ಬಿದ್ದ ಮನೆ

Dina Bhavishya
ಭವಿಷ್ಯ2 days ago

Dina Bhavishya : ಉದ್ಯೋಗದ ಸ್ಥಳದಲ್ಲಿ ನಿಮ್ಮ ವಿರುದ್ಧ ಪಿತೂರಿ ಮಾಡ್ಬಹುದು ಎಚ್ಚರ!

HD Revanna Bail Revanna will not leave the country condition imposed by the court
ಕ್ರೈಂ3 days ago

HD Revanna Bail: ರೇವಣ್ಣ ದೇಶ ಬಿಡಂಗಿಲ್ಲ, ಕೆ.ಆರ್‌. ನಗರಕ್ಕೆ ಎಂಟ್ರಿ ಕೊಡಂಗಿಲ್ಲ! ಕೋರ್ಟ್‌ ವಿಧಿಸಿದ ಷರತ್ತು ಏನು?

HD Revanna Bail
ಕ್ರೈಂ3 days ago

HD Revanna Bail: ಎಚ್‌.ಡಿ ರೇವಣ್ಣಗೆ ಕೊನೆಗೂ ಜಾಮೀನು; ಎಸ್‌ಐಟಿಗೆ ಮುಖಭಂಗ!

ಟ್ರೆಂಡಿಂಗ್‌