Viral News : ಬಾರ್ಬಿಯಾಗಿ ಮಿಂಚುತ್ತಿದ್ದಾರೆ ದಕ್ಷಿಣ ಭಾರತದ ನಟಿಯರು! - Vistara News

ವೈರಲ್ ನ್ಯೂಸ್

Viral News : ಬಾರ್ಬಿಯಾಗಿ ಮಿಂಚುತ್ತಿದ್ದಾರೆ ದಕ್ಷಿಣ ಭಾರತದ ನಟಿಯರು!

ತಮಿಳಿನ ನಟಿಯರನ್ನು ಬಾರ್ಬಿಗಳಾಗಿ ಮಾಡಿರುವ ಪೋಸ್ಟ್‌ ಒಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ಭಾರೀ ವೈರಲ್‌ ಆಗಿದೆ.

VISTARANEWS.COM


on

actress as barbies
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಚೆನ್ನೈ: ಸಾಮಾಜಿಕ ಜಾಲತಾಣಗಳಲ್ಲಿ ಬಾರ್ಬಿಯದ್ದೇ ಹವಾ. ಹೆಣ್ಣು ಮಕ್ಕಳೆಲ್ಲರೂ ಗುಲಾಬಿ ಬಣ್ಣದ ಬಟ್ಟೆ ತೊಟ್ಟುಕೊಂಡು ಬಾರ್ಬಿ ಗರ್ಲ್‌ ಹಾಡಿಗೆ ರೀಲ್ಸ್‌ ಮಾಡಲಾರಂಭಿಸಿದ್ದಾರೆ. ಹಾಗೆಯೇ ನಮ್ಮ ಸಿನಿಮಾ ತಾರೆಗಳೂ ಬಾರ್ಬಿಗಳಾಗಿ ಕಾಣಿಸಿಕೊಂಡರೆ ಹೇಗೆ ಕಾಣುತ್ತಾರೆ ಎನ್ನುವ ಪ್ರಶ್ನೆ ನಿಮ್ಮಲ್ಲೂ ಮೂಡಿರಬಹುದು. ಅದಕ್ಕೆ ಉತ್ತರವೆನ್ನುವಂತೆ ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ ತಮಿಳಿನ ನಟಿಯರನ್ನು ಬಾರ್ಬಿಗಳಾಗಿ ಬದಲಾಯಿಸಿ ತೋರಿಸಿದೆ. ಆ ಪೋಸ್ಟ್‌ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್‌ ಆಗಿದೆ.

ಜತುರ್ಸನ್ ಪಿರಬಾಕರನ್ ಎಂಬುವರು ಈ ರೀತಿ ನಟಿಯರನ್ನು ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ ಮೂಲಕ ಬಾರ್ಬಿಗಳಾಗಿ ಬದಲಾಯಿಸಿದ್ದಾರೆ. ನಟಿ ತಮನ್ನಾ ಭಾಟಿಯಾ, ಶ್ರುತಿ ಹಾಸನ್‌, ತೃಷಾ ಕೃಷ್ಣನ್‌, ಸಮಂತಾ ರುಥ್‌ ಪ್ರಭು, ಕಾಜಲ್‌ ಅಗರ್‌ವಾಲ್‌ ಮತ್ತು ನಯನತಾರಾರನ್ನು ಬಾರ್ಬಿಯನ್ನಾಗಿ ಬದಲಾಯಿಸಲಾಗಿದೆ. ಎಲ್ಲರಿಗೂ ಗುಲಾಬಿ ಬಣ್ಣದ ಬಟ್ಟೆ ತೊಡಿಸಿ, ಕೂದಲ ಬಣ್ಣವನ್ನೂ ಬದಲಾಯಿಸಿ, ಬಾರ್ಬಿ ವರ್ಲ್ಡ್‌ನಲ್ಲೇ ಅವರಿರುವಂತೆ ತೋರಿಸಲಾಗಿದೆ.

ಇದನ್ನೂ ಓದಿ: Viral Video: ಕಣ್ಣೀರು ಸುರಿಸಿದ ಅಲ್ಕರಾಜ್‌, ಜೆರ್ಸಿ ಹರಿದು ಸಂಭ್ರಮಿಸಿದ ಜೊಕೋವಿಕ್‌
ನಟಿಯರ ಬಾರ್ಬಿ ಫೋಟೋವನ್ನು ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡ ಜತುರ್ಸನ್ ಪಿರಬಾಕರನ್ ಅವರು “ಕಾಲಿವುಡ್‌ ಬಾರ್ಬು ಡ್ರೀಮ್‌ಹೌಸ್‌ ಅನ್ನು ಸೇರಿಕೊಳ್ಳುವುದನ್ನು ಊಹಿಸಿಕೊಳ್ಳಿ. ಕಾಲಿವುಡ್‌ನ ಬಾರ್ಬಿಗಳನ್ನು ಪರಿಚಯಿಸುತ್ತಿದ್ದೇನೆ. ನಿಮಗೆ ಯಾರು ಜಾಸ್ತಿ ಇಷ್ಟವಾದರು ಎನ್ನುವುದನ್ನು ಕಮೆಂಟ್‌ ಮಾಡಿ” ಎಂದು ಪೋಸ್ಟ್‌ಗೆ ಕ್ಯಾಪ್ಶನ್‌ ಮಾಡಿದ್ದಾರೆ.

ಈ ಪೋಸ್ಟ್‌ ಅನ್ನು ಆಗಸ್ಟ್‌ 12ರಂದು ಇನ್‌ಸ್ಟಾಗ್ರಾಂ ಪೇಜ್‌ನಲ್ಲಿ ಹಂಚಿಕೊಳ್ಳಲಾಗಿದೆ. ಅಂದಿನಿಂದ ಇಂದಿನವರೆಗೆ ಈ ಪೋಸ್ಟ್‌ ಅನ್ನು ಲಕ್ಷಾಂತರ ಮಂದಿ ವೀಕ್ಷಣೆ ಮಾಡಿದ್ದಾರೆ. 45 ಸಾವಿರಕ್ಕೂ ಅಧಿಕ ಮಂದಿ ಪೋಸ್ಟ್‌ಗೆ ಲೈಕ್‌ ಮಾಡಿದ್ದಾರೆ. ಹಾಗೆಯೇ ಸಾವಿರಾರು ಮಂದಿ ಪೋಸ್ಟ್‌ ಅನ್ನು ತಮ್ಮ ಸ್ನೇಹಿತರೊಂದಿಗೆ, ಕುಟುಂಬಸ್ಥರೊಂದಿಗೆ ಹಂಚಿಕೊಂಡಿದ್ದಾರೆ. ನೂರಾರು ಮಂದಿ ಪೋಸ್ಟ್‌ಗೆ ತರೇವಾರು ಕಮೆಂಟ್‌ಗಳನ್ನು ಮಾಡಿದ್ದು, ಈ ಕಾಲಿವುಡ್‌ ಬಾರ್ಬಿಗಳ ಬಗ್ಗೆ ತಮ್ಮ ಅಭಿಪ್ರಾಯಗಳನ್ನು ತಿಳಿಸಿದ್ದಾರೆ.

ಅನೇಕರು ಈ ಕಾಲಿವುಡ್‌ ಬಾರ್ಬಿಗಳಲ್ಲಿ ತಮಗೆ ಯಾವ ಬಾರ್ಬಿ ಇಷ್ಟವಾದರು ಎನ್ನುವುದನ್ನು ಕಾಮೆಂಟ್‌ಗಳಲ್ಲಿ ತಿಳಿಸಿದ್ದಾರೆ. ಹಾಗೆಯೇ ಈ ರೀತಿ ವಿಶೇಷ ಪ್ರಯತ್ನವನ್ನು ಮಾಡಿರುವ ಜತುರ್ಸನ್ ಪಿರಬಾಕರನ್ ಅವರ ಬಗ್ಗೆ ಮೆಚ್ಚುಗೆಯನ್ನೂ ವ್ಯಕ್ತಪಡಿಸಿದ್ದಾರೆ. ಹಾಗೆಯೇ ಅನೇಕರು ಬಿಟ್ಟು ಹೋದ ಇನ್ನೂ ಅನೇಕ ನಾಯಕ ನಟಿಯರ ಫೋಟೋಗಳನ್ನೂ ಈ ರೀತಿ ಬಾಬಿ ವರ್ಲ್ಡ್‌ಗೆ ಪರಿಚಯಿಸಿ ಎಂದು ಕೇಳಿಕೊಂಡಿದ್ದಾರೆ.

ಇದನ್ನೂ ಓದಿ: Viral Video : ಕಾವಾಲಯ್ಯ ಹಾಡಿಗೆ ಮುಂಬೈ ಪೊಲೀಸ್ ಅಧಿಕಾರಿಯ ಸಖತ್‌ ಸ್ಟೆಪ್ಸ್‌!
ಇತ್ತೀಚೆಗೆ ಈ ರೀತಿಯ ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌ನ ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಭಾರೀ ವೈರಲ್‌ ಆಗುತ್ತಿವೆ. ರಾಜಕಾರಣಿಗಳಿಂದ ಹಿಡಿದು ಪ್ರಸಿದ್ಧ ಕಂಪನಿಗಳ ಸಿಇಒಗಳವರೆಗೆ ಎಲ್ಲರನ್ನೂ ಒಂದಲ್ಲ ಒಂದು ರೀತಿಯಲ್ಲಿ ಎಐ ತಂತ್ರಜ್ಞಾನದಲ್ಲಿ ಬದಲಾವಣೆ ಮಾಡಿ ತೋರಿಸಲಾಗುತ್ತಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

Tej Pratap Yadav: ಶಿವಲಿಂಗವನ್ನು ತಬ್ಬಿ ಕುಳಿತು ಭಕ್ತಿ ಪ್ರದರ್ಶಿಸಿದ ಲಾಲು ಪ್ರಸಾದ್‌ ಯಾದವ್ ಪುತ್ರ; Video ಇಲ್ಲಿದೆ

Tej Pratap Yadav: ಶಿವಲಿಂಗವನ್ನು ತಬ್ಬಿಕೊಂಡು ಕುಳಿತ ವಿಡಿಯೊವನ್ನು ತೇಜ್‌ ಪ್ರತಾಪ್‌ ಯಾದವ್‌ ಅವರೇ ಹಂಚಿಕೊಂಡಿದ್ದಾರೆ. ಇದರ ಜತೆಗೆ ಅವರು ಒಕ್ಕಣೆಯನ್ನೂ ಬರೆದುಕೊಂಡಿದ್ದಾರೆ. “ಮಹಾದೇವನು ಪರಮ ಸತ್ಯದ ಪ್ರತೀಕ. ಮಹಾದೇವನನ್ನು ಅಪ್ಪಿಕೊಳ್ಳುವುದು ಎಂದರೆ, ನಮ್ಮ ಮನಸ್ಸಿನ ಆಳವನ್ನು ನಾವೇ ತಲುಪಿದಂತೆ” ಎಂದು ಅವರು ಪೋಸ್ಟ್‌ ಮಾಡಿದ್ದಾರೆ. ಈ ವಿಡಿಯೊ ಈಗ ಭಾರಿ ವೈರಲ್‌ ಆಗಿದೆ.

VISTARANEWS.COM


on

Tej Pratap Yadav
Koo

ಪಟನಾ: ಬಿಹಾರ ಮಾಜಿ ಮುಖ್ಯಮಂತ್ರಿ, ಆರ್‌ಜೆಡಿ ವರಿಷ್ಠ ಲಾಲು ಪ್ರಸಾದ್ ಯಾದವ್‌ (Lalu Prasad Yadav) ಅವರ ಪುತ್ರ ತೇಜ್‌ ಪ್ರತಾಪ್‌ ಯಾದವ್‌ (Tej Pratap Yadav) ಅವರು ದೈವಭಕ್ತರು. ನನ್ನ ಕನಸಿನಲ್ಲಿ ಶ್ರೀರಾಮ ಬಂದಿದ್ದ, ನನ್ನ ತಂದೆಯೇ ಬಂದು ಹೀಗೆ ಹೇಳಿದರು ಎಂಬುದಾಗಿ ಇದಕ್ಕೂ ಮೊದಲು ಅವರು ತಿಳಿಸಿದ್ದಾರೆ. ಈಗ ತೇಜ್‌ ಪ್ರತಾಪ್‌ ಯಾದವ್‌ ಅವರು ದೇವಾಲಯವೊಂದರಲ್ಲಿ ಶಿವಲಿಂಗವನ್ನು ತಬ್ಬಿ ಕುಳಿತು ಭಕ್ತಿಯನ್ನು ಪ್ರದರ್ಶಿಸಿದ್ದಾರೆ. ಅವರು ಎಕ್ಸ್‌ನಲ್ಲಿ ಹಂಚಿಕೊಂಡ ವಿಡಿಯೊ ಈಗ ವೈರಲ್‌ (Viral Video) ಆಗಿದೆ.

ಹೌದು, ತೇಜ್‌ ಪ್ರತಾಪ್‌ ಯಾದವ್‌ ಅವರು ಶಿವಲಿಂಗವನ್ನು ತಬ್ಬಿಕೊಂಡು ಕುಳಿತಿದ್ದಾರೆ. ಅವರ ಮೈಮೇಲೆ ಹಾಲಿನ ಕ್ಷೀರಾಭಿಷೇಕ ನಡೆದಿದೆ. ಒಂದು ನಿಮಿಷಕ್ಕೂ ಹೆಚ್ಚು ಅವಧಿವರೆಗೆ ಅಭಿಷೇಕ ನಡೆದಿದ್ದು, ಮುಗಿಯುವವರೆಗೂ ತೇಜ್‌ ಪ್ರತಾಪ್‌ ಯಾದವ್‌ ಅವರು ಶಿವಲಿಂಗವನ್ನು ತಬ್ಬಿಕೊಂಡೇ ಕುಳಿತಿದ್ದರು. ಆದರೆ, ತೇಜ್‌ ಪ್ರತಾಪ್‌ ಯಾದವ್‌ ಅವರು ಯಾವ ದೇವಾಲಯದಲ್ಲಿ ಹೀಗೆ ಶಿವಲಿಂಗವನ್ನು ತಬ್ಬಿಕೊಂಡು ಕುಳಿತಿದ್ದರು ಎಂಬ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.

ಶಿವಲಿಂಗವನ್ನು ತಬ್ಬಿಕೊಂಡು ಕುಳಿತ ವಿಡಿಯೊವನ್ನು ತೇಜ್‌ ಪ್ರತಾಪ್‌ ಯಾದವ್‌ ಅವರೇ ಹಂಚಿಕೊಂಡಿದ್ದಾರೆ. ಇದರ ಜತೆಗೆ ಅವರು ಒಕ್ಕಣೆಯನ್ನೂ ಬರೆದುಕೊಂಡಿದ್ದಾರೆ. “ಮಹಾದೇವನು ಪರಮ ಸತ್ಯದ ಪ್ರತೀಕ. ಮಹಾದೇವನನ್ನು ಅಪ್ಪಿಕೊಳ್ಳುವುದು ಎಂದರೆ, ನಮ್ಮ ಮನಸ್ಸಿನ ಆಳವನ್ನು ನಾವೇ ತಲುಪಿದಂತೆ. ಮನಸ್ಸಿನ ತುಂಬ ತುಂಬಿರುವ ಅಶಾಂತಿಯನ್ನು ನಿರ್ಮೂಲನೆ ಮಾಡಬೇಕು ಎಂದರೆ, ಮಹಾದೇವನ ಮೊರೆಹೋಗಿ” ಎಂಬುದಾಗಿ ತೇಜ್‌ ಪ್ರತಾಪ್‌ ಯಾದವ್‌ ಅವರು ಪೋಸ್ಟ್‌ ಮಾಡಿದ್ದಾರೆ.

ರಾಮ ಕನಸಲ್ಲಿ ಬಂದ ಎಂದಿದ್ದ ತೇಜ್‌ ಪ್ರತಾಪ್‌ ಯಾದವ್‌

ರಾಮಮಂದಿರ ಉದ್ಘಾಟನೆಗೂ ಮೊದಲು “ರಾಮ ನನ್ನ ಕನಸಲ್ಲಿ ಬಂದಿದ್ದ” ಎಂಬುದಾಗಿ ತೇಜ್‌ ಪ್ರತಾಪ್‌ ಯಾದವ್‌ ಹೇಳಿದ್ದರು. “ಚುನಾವಣೆಗಳು ಮುಗಿದ ಬಳಿಕ ಭಗವಾನ್‌ ಶ್ರೀರಾಮನನ್ನು ಮರೆಯುತ್ತಾರೆ. ಜನವರಿ 22ರಂದೇ ಶ್ರೀರಾಮನು ರಾಮಮಂದಿರವನ್ನು ಪ್ರವೇಶಿಸುತ್ತಾನೆಯೇ? ಹಾಗಂತ ನಿಯಮಗಳೇನಾದರೂ ಇವೆಯೇ? ಭಗವಾನ್‌ ಶ್ರೀರಾಮನು ನಾಲ್ವರು ಶಂಕರಾಚಾರ್ಯರ ಕನಸಿನಲ್ಲಿ ಬಂದಿದ್ದಾನೆ. ಆತನು ನನ್ನ ಕನಸಿನಲ್ಲೂ ಬಂದಿದ್ದು, ರಾಮಮಂದಿರ ಲೋಕಾರ್ಪಣೆ ಕಾರ್ಯಕ್ರಮಕ್ಕೆ ಹೋಗುವುದಿಲ್ಲ ಎಂದಿದ್ದಾನೆ. ರಾಮಮಂದಿರ ಉದ್ಘಾಟನೆ ಕಾರ್ಯಕ್ರಮದಲ್ಲಿ ಕಪಟತನ ಇರುವುದರಿಂದ ಹೋಗುವುದಿಲ್ಲ ಎಂದು ಹೇಳಿದ್ದಾನೆ” ಎಂದು ತೇಜ್‌ ಪ್ರತಾಪ್‌ ಯಾದವ್‌ ಹೇಳಿದ್ದರು.

ಇದನ್ನೂ ಓದಿ: Bhai Bhatijavaad | ಮೋದಿ ʼಪರಿವಾರವಾದʼ ಟೀಕೆ ಬೆನ್ನಲ್ಲೇ ತೇಜ್‌ ಪ್ರತಾಪ್‌ ಯಾದವ್‌ ಸಭೆಯಲ್ಲಿ ಅವರ ಬಾವ ಭಾಗಿ!

Continue Reading

Latest

Viral News: ಎಮ್ಮೆಗಾಗಿ ಮಾಲೀಕರ ಕಿತ್ತಾಟ; ಮಾಲೀಕನ ಹುಡುಕಲು ಎಮ್ಮೆಯ ಮೊರೆ ಹೋದ ಪೊಲೀಸರು!

Viral News: ಎಮ್ಮೆ ಕಳ್ಳತನದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ವ್ಯಕ್ತಿಗಳು ಎಮ್ಮೆ ಮಾಲೀಕನೆಂದು ಕಿತ್ತಾಡುತ್ತಿದ್ದ ಕಾರಣ ಎಮ್ಮೆ ಯಾರದೆಂದು ಕಂಡುಕೊಳ್ಳಲು ಪೊಲೀಸರು ಹೊಸ ತಂತ್ರವನ್ನು ಪ್ರಯೋಗಿಸಿ ಯಶಸ್ವಿಯಾಗಿದ್ದಾರೆ. ಎಮ್ಮೆಗಾಗಿ ಇಬ್ಬರೂ ಕಿತ್ತಾಡುತ್ತಿರುವುದರಿಂದ ಪೊಲೀಸರು ತಮ್ಮ ಮಾಲೀಕನನ್ನು ಪತ್ತೆಹಚ್ಚುವ ನಿರ್ಧಾರವನ್ನು ಎಮ್ಮೆಗೆ ಬಿಟ್ಟರು ಮತ್ತು ಇದಕ್ಕೆ ಗ್ರಾಮಸ್ಥರು ಸಹ ಒಪ್ಪಿಗೆ ನೀಡಿದರು. ಕೊನೆಗೆ ಸಮಸ್ಯೆ ಬಗೆಹರಿಯಿತು.

VISTARANEWS.COM


on

Viral News
Koo

ಕೆಲವು ಹಳ್ಳಿ ಪ್ರದೇಶಗಳಲ್ಲಿ ಹಸು, ಎಮ್ಮೆ, ಮುಂತಾದ ಪ್ರಾಣಿಗಳನ್ನು ಕಳ್ಳತನ ಮಾಡುವುದು ಸಾಮಾನ್ಯ. ಇಂತಹ ಪ್ರಕರಣಗಳಲ್ಲಿ ಆ ಪ್ರಾಣಿ ಯಾರದೆಂದು ಪತ್ತೆ ಹಚ್ಚುವುದು ಬಹಳ ಕಷ್ಟದ ಕೆಲಸ. ಯಾಕೆಂದರೆ ಎಲ್ಲಾ ಪ್ರಾಣಿಗಳು ನೋಡಲು ಬಹುತೇಕ ಒಂದೇ ರೀತಿ ಇರುತ್ತವೆ. ಆದರೆ ಉತ್ತರ ಪ್ರದೇಶದ ಮಹೇಶ್‍ಗಂಜ್ ಠಾಣಾ ಪೊಲೀಸರು ಇಂತಹ ಪ್ರಕರಣವನ್ನು ಬಹಳ ಸುಲಭವಾಗಿ ಬಗೆಹರಿಸಿದ್ದಾರೆ. ಠಾಣೆಯಲ್ಲಿ ಎಮ್ಮೆ ಕಳ್ಳತನದ ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರು ವ್ಯಕ್ತಿಗಳು ಎಮ್ಮೆ ಮಾಲೀಕನೆಂದು ಕಿತ್ತಾಡುತ್ತಿದ್ದ ಹಿನ್ನೆಲೆಯಲ್ಲಿ ಎಮ್ಮೆ ಯಾರದೆಂದು ಎಂದು ಕಂಡುಕೊಳ್ಳಲು ಪೊಲೀಸರು ಹೊಸ ತಂತ್ರವನ್ನು ಪ್ರಯೋಗಿಸಿ ಯಶಸ್ವಿಯಾಗಿದ್ದಾರೆ. ಇದು ಈಗ ಎಲ್ಲಾ ಕಡೆ ವೈರಲ್‌ (Viral News) ಆಗಿದೆ.

ಉತ್ತರ ಪ್ರದೇಶದ ಪ್ರತಾಪ್‍ಗಢ ಜಿಲ್ಲೆಯ ಮಹೇಶ್‍ಗಂಜ್ ಪೊಲೀಸ್ ಠಾಣೆ ವ್ಯಾಪ್ತಿಯ ರಾಯ್ ಅಸ್ಕರನ್ಪುರ ಗ್ರಾಮದ ನಿವಾಸಿ ನಂದಲಾಲ್ ಸರೋಜ್ ಅವರ ಎಮ್ಮೆ ಕೆಲವು ದಿನಗಳ ಹಿಂದೆ ಕಾಣೆಯಾಗಿದ್ದು, ದಾರಿ ತಪ್ಪಿದ ಎಮ್ಮೆಯನ್ನು ಪುರೆ ಹರಿಕೇಶ್ ಗ್ರಾಮದ ನಿವಾಸಿ ಹನುಮಾನ್ ಸರೋಜ್ ಎಂಬವರು ಕಟ್ಟಿಹಾಕಿಕೊಂಡಿದ್ದರು.

ಮೂರು ದಿನಗಳ ನಂತರ ನಂದಲಾಲ್ ತಮ್ಮ ಎಮ್ಮೆಯನ್ನು ಹನುಮಾನ್ ಮನೆಯಲ್ಲಿ ಪತ್ತೆಹಚ್ಚಿದ್ದರು. ಆದರೆ ಹನುಮಾನ್ ಎಮ್ಮೆಯನ್ನು ಹಿಂದಿರುಗಿಸಲು ನಿರಾಕರಿಸಿದರು. ನಂತರ ನಂದಲಾಲ್ ಮಹೇಶ್‍ಗಂಜ್ ಪೊಲೀಸ್ ಠಾಣೆಯನ್ನು ಸಂಪರ್ಕಿಸಿ ಹನುಮಾನ್ ಸರೋಜ್ ವಿರುದ್ಧ ದೂರು ದಾಖಲಿಸಿದ್ದಾರೆ. ಆಗ ಪೊಲೀಸರು ಗುರುವಾರ ಇಬ್ಬರೂ ಹಕ್ಕುದಾರರನ್ನು ಪೊಲೀಸ್ ಠಾಣೆಗೆ ಕರೆಸಿ ವಿಚಾರಣೆ ಮಾಡಿದ್ದಾರೆ. ಆದರೆ ಈ ವಿಷಯದ ಬಗ್ಗೆ ಹಲವಾರು ಗಂಟೆಗಳ ಕಾಲ ಪಂಚಾಯತಿ ನಡೆದಿದ್ದರೂ, ಇಬ್ಬರೂ ಎಮ್ಮೆಯನ್ನು ತಮ್ಮದು ಎಂದು ಹೇಳಿಕೊಳ್ಳುತ್ತಲೇ ಇದ್ದರು. ಆಗ ಮಹೇಶ್‍ಗಂಜ್ ಪೊಲೀಸ್ ಠಾಣೆಯ ಎಸ್ಎಚ್ಒ ಶ್ರವಣ್ ಕುಮಾರ್ ಸಿಂಗ್ ಅವರು ಈ ವಿವಾದವನ್ನು ಪರಿಹರಿಸಲು ಒಂದು ಮಾರ್ಗವನ್ನು ಸೂಚಿಸಿದರು.

ಇದನ್ನೂ ಓದಿ:  ಕದ್ದುಮುಚ್ಚಿ ಸರಸವಾಡುತ್ತಿದ್ದ ಮಹಿಳೆ ಸಿಕ್ಕಿಬಿದ್ದಾಗ ಗಂಡನನ್ನೇ ಕೊಂದಳು!

ಪಂಚಾಯತಿಯಿಂದ ಸಮಸ್ಯೆಯನ್ನು ಪರಿಹರಿಸಲು ಸಾಧ್ಯವಾಗದ ಕಾರಣ, ಪೊಲೀಸರು ತಮ್ಮ ಮಾಲೀಕನನ್ನು ಪತ್ತೆಹಚ್ಚುವ ನಿರ್ಧಾರವನ್ನು ಎಮ್ಮೆಗೆ ಬಿಟ್ಟರು ಮತ್ತು ಇದಕ್ಕೆ ಗ್ರಾಮಸ್ಥರು ಸಹ ಒಪ್ಪಿಗೆ ನೀಡಿದರು. ನಂತರ ಎಮ್ಮೆಯನ್ನು ಒಂಟಿಯಾಗಿ ರಸ್ತೆಯಲ್ಲಿ ಬಿಟ್ಟರು. ಸ್ವಲ್ಪ ಸಮಯದ ನಂತರ, ಎಮ್ಮೆ ತನ್ನ ಮಾಲೀಕರಾದ ನಂದಲಾಲ್ ಸರೋಜ್ ಮನೆಗೆ ನಡೆದುಕೊಂಡು ಹೋಯಿತು. ಆ ಮೂಲಕ ಈ ಸಮಸ್ಯೆಯನ್ನು ಬಗೆಹರಿಸಲಾಗಿದೆ.
ಈ ಪ್ರಕರಣದಲ್ಲಿ ಎಮ್ಮೆ ತನ್ನದೆಂದು ಸುಳ್ಳು ಹೇಳಿದ ಹನುಮಾನ್ ಅವರನ್ನು ಗ್ರಾಮಸ್ಥರು ಮತ್ತು ಪೊಲೀಸರು ತರಾಟೆಗೆ ತೆಗೆದುಕೊಂಡಿದ್ದಾರೆ.

Continue Reading

ಕ್ರಿಕೆಟ್

Viral Video: ಲಂಡನ್​ನ ಇಸ್ಕಾನ್​ ಮಂದಿರದ ಸಂಕೀರ್ತನೆಯಲ್ಲಿ ಪಾಲ್ಗೊಂಡ ವಿರಾಟ್​ ಕೊಹ್ಲಿ-ಅನುಷ್ಕಾ ಶರ್ಮಾ

Viral Video: ಮಹಿಯಾ ಎನ್ನುವ ನೆಟ್ಟಿಗರೊಬ್ಬರು ತಮ್ಮ ಟ್ವಿಟರ್​ ಎಕ್ಸ್​ ಖಾತೆಯಲ್ಲಿ ವಿರಾಟ್​ ಕೊಹ್ಲಿ ಮತ್ತು ಅನುಷ್ಕಾ ಲಂಡನ್​ನಲ್ಲಿ ನಡೆದ ಕೃಷ್ಣ ದಾಸ್ ಅವರ ಭಜನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವ ವಿಡಿಯೊವನ್ನು ಹಂಚಿಕೊಂಡಿದ್ದಾರೆ. ಈ ವಿಡಿಯೊ ವೈರಲ್​ ಆಗಿದೆ.

VISTARANEWS.COM


on

Viral Video
Koo

ಲಂಡನ್​: ಟೀಮ್​ ಇಂಡಿಯಾದ ಸ್ಟಾರ್​ ಆಟಗಾರ ವಿರಾಟ್​ ಕೊಹ್ಲಿ(virat kohli) ಮತ್ತು ಅವರ ಪತ್ನಿ ಅನುಷ್ಕಾ ಶರ್ಮ(Anushka Sharma) ಭಾರತ ತೊರೆದು ಲಂಡನ್​ನಲ್ಲಿ ವಾಸವಾಗಲಿದ್ದಾರೆ ಎಂಬ ಸುದ್ದಿಯ ಬೆನ್ನಲ್ಲೇ ಕೊಹ್ಲಿ ಮತ್ತು ಅನುಷ್ಕಾ ಲಂಡನ್​ನಲ್ಲಿರುವ ಇಸ್ಕಾನ್​ ಮಂದಿರದಲ್ಲಿ ನಡೆದ ಸಂಕೀರ್ತನೆಯಲ್ಲಿ ಕಾಣಿಸಿಕೊಂಡ ವಿಡಿಯೊವೊಂದು(Viral Video) ವೈರಲ್ ಆಗಿದೆ.

ಮಹಿಯಾ ಎನ್ನುವ ನೆಟ್ಟಿಗರೊಬ್ಬರು ತಮ್ಮ ಟ್ವಿಟರ್​ ಎಕ್ಸ್​ ಖಾತೆಯಲ್ಲಿ ವಿರಾಟ್​ ಕೊಹ್ಲಿ ಮತ್ತು ಅನುಷ್ಕಾ ಲಂಡನ್​ನಲ್ಲಿ ನಡೆದ ಕೃಷ್ಣ ದಾಸ್ ಅವರ ಭಜನೆ ಕಾರ್ಯಕ್ರಮದಲ್ಲಿ ಪಾಲ್ಗೊಂಡಿರುವ ವಿಡಿಯೊವನ್ನು ಹಂಚಿಕೊಂಡಿದ್ದು. ಎಲ್ಲರೂ ಮುಕೇಶ್‌ ಅಂಬಾನಿ ಅವರ ಪುತ್ರ ಅನಂತ್‌ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್‌ ಅವರ ವಿವಾಹಪೂರ್ವ ಕಾರ್ಯಕ್ರಮದಲ್ಲಿ ಬ್ಯೂಸಿಯಾಗಿದ್ದರೆ, ನನ್ನ ರೋಲ್​ ಮಾಡಲ್​ ವಿರಾಟ್​ ಕೊಹ್ಲಿ ಲಂಡನ್​ನ ಇಸ್ಕಾನ್​ ಮಂದಿರದಲ್ಲಿದ್ದಾರೆ ಎಂದು ಬರೆದುಕೊಂಡಿದ್ದಾರೆ. ಸದ್ಯ ವೈರಲ್​ ಆಗುತ್ತಿರುವ ಈ ವಿಡಿಯೊ ಹೊಸತೋ ಅಲ್ಲ ಹಳೆಯದ್ದೋ ಎನ್ನುವುದು ಖಚಿತತೆ ಇಲ್ಲ.

ಕ್ರಿಕೆಟ್​ಗೆ​ ಪದಾರ್ಪಣೆ ಮಾಡಿದ ಆರಂಭಿಕ ದಿನಗಳಲ್ಲಿ ದೇವರ ಮೇಲೆ ಹೆಚ್ಚು ನಂಬಿಕೆ ಇಲ್ಲ ಎಂದು ಹೇಳಿದ್ದ ವಿರಾಟ್​ ಕೊಹ್ಲಿ ಇತ್ತೀಚಿನ ದಿನಗಳಲ್ಲಿ ಆಧ್ಯಾತ್ಮಿಕದ ಮೇಲೆ ಹೆಚ್ಚಿನ ಒಲವು ತೋರುತ್ತಿದ್ದಾರೆ. ದೇವಾಲಯಗಳಿಗೆ ಭೇಟಿ ಕೊಡುವುದು, ಧಾರ್ಮಿಕ ಕಾರ್ಯಕ್ರಮಗಳಲ್ಲಿ ಭಾಗಿಯಾಗುವುದು ಸಾಮಾನ್ಯವಾಗಿಬಿಟ್ಟಿದೆ.

ಲಂಡನ್​ಗೆ ಶಿಫ್ಟ್​ ಆಗಲಿದ್ದಾರಾ ಕೊಹ್ಲಿ


ವಿರಾಟ್​ ಕೊಹ್ಲಿ ಅವರು ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ವಿದಾಯ ಹೇಳಿದ ಬಳಿಕ ಭಾರತ ತೊರೆದು ಕುಟುಂಬ ಸಮೇತರಾಗಿ ಲಂಡನ್​ನಲ್ಲಿ ನೆಲೆಯಾಗಲಿದ್ದಾರೆ ಎಂಬ ಮಾತುಗಳು ಕೇಳಿಬಂದಿದೆ. ಟಿ20 ವಿಶ್ವಕಪ್​ ಗೆದ್ದು ಭಾರತಕ್ಕೆ ಬಂದ ದಿನವೇ ಕೊಹ್ಲಿ ಮುಂಬೈನಲ್ಲಿ ಏರ್ಪಡಿಸಿದ್ದ ಅಭಿನಂದನಾ ಕಾರ್ಯಕ್ರಮ ಮುಗಿಸಿ ರಾತ್ರೋರಾತ್ರಿ ಲಂಡನ್​ಗೆ ವಿಮಾನ ಏರಿದ್ದರು. ಹೀಗಾಗಿ ಕೆಲ ನೆಟ್ಟಿಗರುವ ಕೊಹ್ಲಿ ಇನ್ನು ಮುಂದೆ ಲಂಡನ್​ನಲ್ಲಿಯೇ ವಾಸಿಸುವ ಸಾಧ್ಯತೆ ಇದೆ ಎಂದಿದ್ದರು. ಬಾಲಿವುಡ್ ಕಾರ್ಯಕ್ರಮಗಳು ಮತ್ತು ಚಲನಚಿತ್ರಗಳಿಂದಲೂ ಅನುಷ್ಕಾ ಶರ್ಮಾ ದೂರ ಉಳಿದಿರುವುದು ಕೂಡ ಊಹಾಪೋಹಗಳಿಗೆ ಕಾರಣವಾಗಿದೆ.

ಇದನ್ನೂ ಓದಿ Virat Kohli : ನಿವೃತ್ತಿ ಬಳಿಕ ಪತ್ನಿ ಜತೆ ಲಂಡನ್​ಗೆ ತೆರಳಿ ನೆಲೆಸಲಿದ್ದಾರೆ ವಿರಾಟ್​ ಕೊಹ್ಲಿ,

ಹಿಂದೂಸ್ತಾನ್ ಟೈಮ್ಸ್ ವರದಿ ಪ್ರಕಾರ, ಅನುಷ್ಕಾ ಮತ್ತು ವಿರಾಟ್ ಯುಕೆ ಮೂಲದ ಕಂಪನಿಯ ನಿರ್ದೇಶಕರಾಗಿದ್ದಾರೆ. ಯುಕೆ ಸರ್ಕಾರದ ಫೈಂಡ್ ಅಂಡ್ ಅಪ್ಡೇಟ್ ಕಂಪನಿಯ ಮಾಹಿತಿ ಸೇವೆಯ ಪ್ರಕಾರ, ದಂಪತಿಗಳು ಮ್ಯಾಜಿಕ್ ಲ್ಯಾಂಪ್​​ನ ಮೂವರು ನಿರ್ದೇಶಕರಲ್ಲಿ ಇಬ್ಬರು. ಇದು ಆಗಸ್ಟ್ 1, 2022 ರಂದು ಆರಂಭಗೊಂಡ ಸಲಹಾ ಸಂಸ್ಥೆಯಾಗಿದೆ. ಕಂಪನಿಯ ಅಧಿಕೃತ ಕಚೇರಿ ವಿಳಾಸವು ಯುಕೆಯ ವೆಸ್ಟ್ ಯಾರ್ಕ್​ಶೈರ್​ನಲ್ಲಿದೆ.

ಟಿ20ಗೆ ವಿದಾಯ ಹೇಳಿದ ಕೊಹ್ಲಿ


ವಿರಾಟ್​ ಕೊಹ್ಲಿ ಅವರು ಟಿ20 ವಿಶ್ವಕಪ್​ ಸ್ಮರಣೀಯ ಗೆಲುವಿನ ಬಳಿಕ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್​ಗೆ ವಿದಾಯ ಹೇಳಿದ್ದರು. ಫೈನಲ್​ ಪಂದ್ಯದಲ್ಲಿ 76 ರನ್​ ಬಾರಿಸಿ ಪಂದ್ಯಶ್ರೇಷ್ಠ ಪ್ರಶಸ್ತಿ ಸ್ವೀಕರಿಸಿದ ವೇಳೆ ಕೊಹ್ಲಿ ತಮ್ಮ ನಿವೃತ್ತಿ ಘೋಷಿಸಿದ್ದರು. ‘ದೇವರು ದೊಡ್ಡವನು. ಭಾರತಕ್ಕಾಗಿ ಇದು ನನ್ನ ಕೊನೆಯ ಟಿ20 ಪಂದ್ಯವಾಗಿತ್ತು. ನಾವು ಆ ಕಪ್ ಎತ್ತಲು ಬಯಸಿದ್ದೆ. ಇದು ಸಾಕಾರಗೊಂಡಿದೆ. ಮುಂದಿನ ಪೀಳಿಗೆಗೆ ಟಿ20 ಆಟವನ್ನು ಮುಂದಕ್ಕೆ ಕೊಂಡೊಯ್ಯುವ ಸಮಯ ಇದು. ಅದ್ಭುತ ದಿನದಂದು ವಿದಾಯ ಹೇಳುವ ಸೌಭಾಗ್ಯ ನನಗೆ ಒದಗಿದ್ದು ನಿಜ್ಜಕ್ಕೂ ಸಂತಸ ತಂದಿದೆ” ಎಂದಿದ್ದರು. ಕೊಹ್ಲಿ ತಮ್ಮ 125 ಪಂದ್ಯಗಳ ಟಿ 20 ಅಂತಾರಾಷ್ಟ್ರೀಯ ವೃತ್ತಿಜೀವನವನ್ನು ಭಾರತದ ಎರಡನೇ ಅತಿ ಹೆಚ್ಚು ರನ್ ಗಳಿಸಿದ ಸ್ವರೂಪದಲ್ಲಿ ಕೊನೆಗೊಳಿಸಿದ್ದಾರೆ. 4188 ರನ್, 48.69 ಸರಾಸರಿ ಮತ್ತು ಸ್ಟ್ರೈಕ್ ರೇಟ್ 137.04 ಹೊಂದಿದ್ದಾರೆ.

Continue Reading

Latest

Viral Video: ಹೃಷಿಕೇಶದ ಗಂಗಾ ಘಾಟ್‌ನಲ್ಲಿ ಬಿಕಿನಿ ಧರಿಸಿದ ವಿದೇಶಿಯರ ಮೋಜು ಮಸ್ತಿ!

Viral Video: ಉತ್ತರಾಖಂಡದ ಹೃಷಿಕೇಶದಲ್ಲಿನ ಪವಿತ್ರ ಗಂಗಾ ಘಾಟ್‌ನಲ್ಲಿ ವಿದೇಶಿಗರು ಬಿಕಿನಿ ಧರಿಸಿ ಮೋಜು ಮಾಡುತ್ತಿರುವ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಅನೇಕರ ಕೋಪಕ್ಕೆ ಕಾರಣವಾಗಿದೆ. ವಿದೇಶಿ ಮಹಿಳೆಯರು ಬಿಕಿನಿ ಧರಿಸಿ ಮತ್ತು ಪುರುಷರು ಶಾರ್ಟ್ಸ್ ಧರಿಸಿ ನದಿಯಲ್ಲಿ ಆನಂದಿಸುತ್ತಿರುವುದನ್ನು ಸೆರೆಹಿಡಿಯಲಾಗಿದೆ, ಈ ವಿಡಿಯೊಗೆ ಹಲವಾರು ಜನರು ಟೀಕೆ ಮಾಡಿದ್ದಾರೆ. ಆಧ್ಯಾತ್ಮಿಕತೆಯ ಕೇಂದ್ರವಾಗಿದ್ದ ಸ್ಥಳಗಳಲ್ಲಿ ಸಂಪ್ರದಾಯಗಳು ಮಾಯವಾಗುತ್ತಿದೆ ಎಂದು ಕೆಲವರು ಟೀಕಿಸಿದ್ದಾರೆ. ಇಲ್ಲಿನ ಸ್ಥಳೀಯರು ಈ ನಡವಳಿಕೆಯನ್ನು ಪವಿತ್ರ ನದಿಯ ಪಾವಿತ್ರ್ಯಕ್ಕೆ ಅಗೌರವವೆಂದು ಕಿಡಿಕಾರಿದ್ದಾರೆ.

VISTARANEWS.COM


on

Viral Video
Koo

ಹೃಷಿಕೇಶ: ಸಾಮಾನ್ಯವಾಗಿ ಬಿಕಿನಿ ಧರಿಸಿದ ವಿದೇಶಿ ಮಹಿಳೆಯರು ಗೋವಾ ಬೀಚ್‍ನಂತಹ ಸ್ಥಳಗಳಲ್ಲಿ ಹೆಚ್ಚು ಕಂಡುಬರುತ್ತಾರೆ. ಗೋವಾ ಬೀಚ್‍ನಂತಹ ಸ್ಥಳಗಳಲ್ಲಿ ಈ ಉಡುಗೆ ಶೋಭೆ ತರಬಹುದು. ಆದರೆ ಇದನ್ನು ಭಕ್ತಾಧಿಗಳು ಸ್ನಾನ ಮಾಡುವಂತಹ ಪವಿತ್ರ ನದಿಗಳಲ್ಲಿ ಜಲಕ್ರೀಡೆ ಆಡಲು ಧರಿಸಿದರೆ ಹೇಗೆ? ಅದು ಭಕ್ತರ ಕೋಪಕ್ಕೆ ಕಾರಣವಾಗುವುದು ಸಹಜ. ಇದೀಗ ಅಂತಹದೊಂದು ಘಟನೆ ಉತ್ತರಾಖಂಡದ ಹೃಷಿಕೇಶದಲ್ಲಿ ನಡೆದಿದೆ. ಇಲ್ಲಿನ ಪವಿತ್ರ ಗಂಗಾ ಘಾಟ್‍ನಲ್ಲಿ ವಿದೇಶಿಗರು ಬಿಕಿನಿ ಧರಿಸಿ ಮೋಜು ಮಾಡುತ್ತಿರುವ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video )ಆಗಿದ್ದು, ಅನೇಕರ ಕೋಪಕ್ಕೆ ಕಾರಣವಾಗಿದೆ.

“ಹಿಮಾಲಯನ್ ಹಿಂದೂ” ಎಂಬ ಹ್ಯಾಂಡಲ್‌ನಲ್ಲಿ ಬಳಕೆದಾರರೊಬ್ಬರು ಈ ವಿಡಿಯೊ ಹಂಚಿಕೊಂಡಿದ್ದು, ಈ ವಿಡಿಯೊಗೆ “ಪೂಜ್ಯ ಗಂಗಾ ನದಿಯನ್ನು ಗೋವಾದಂತೆ ಕಡಲತೀರವಾಗಿ ಪರಿವರ್ತಿಸಿದೆ” ಎಂದು ಶೀರ್ಷಿಕೆ ನೀಡಿ ಟೀಕಿಸಿದ್ದಾರೆ. ಈ ಕ್ಲಿಪ್ ನಲ್ಲಿ ವಿದೇಶಿ ಮಹಿಳೆಯರು ಬಿಕಿನಿ ಧರಿಸಿ ಮತ್ತು ಪುರುಷರು ಶಾರ್ಟ್ಸ್ ಧರಿಸಿ ನದಿಯಲ್ಲಿ ಆನಂದಿಸುತ್ತಿರುವುದನ್ನು ಸೆರೆಹಿಡಿಯಲಾಗಿದೆ, ಈ ವಿಡಿಯೊಗೆ ಹಲವಾರು ಜನರು ಟೀಕೆ ಮಾಡಿದ್ದಾರೆ. ಆಧ್ಯಾತ್ಮಿಕತೆಯ ಕೇಂದ್ರವಾಗಿದ್ದ ಸ್ಥಳಗಳಲ್ಲಿ ಸಂಪ್ರದಾಯಗಳು ಮಾಯವಾಗುತ್ತಿದೆ ಎಂದು ಕೆಲವರು ಟೀಕಿಸಿದ್ದಾರೆ. ಇಲ್ಲಿನ ಸ್ಥಳೀಯರು ಈ ನಡವಳಿಕೆಯನ್ನು ಪವಿತ್ರ ನದಿಯ ಪಾವಿತ್ರ್ಯಕ್ಕೆ ಅಗೌರವವೆಂದು ಕಿಡಿಕಾರಿದ್ದಾರೆ.

ಈಗ ಹೃಷಿಕೇಶದಲ್ಲಿ ನಡೆಯುತ್ತಿರುವ ಈ ಘಟನೆ ಶೀಘ್ರದಲ್ಲೇ ಇದನ್ನು ಮಿನಿ ಬ್ಯಾಂಕಾಕ್ ಆಗಿ ಮಾಡಲಿದೆ ಎಂದು ಒಬ್ಬರು ಕಾಮೆಂಟ್ ಮಾಡಿದ್ದಾರೆ. ಪಾಶ್ಚಿಮಾತ್ಯ ಸಂಸ್ಕೃತಿ ಹೆಚ್ಚುತ್ತಿರುವ ಪ್ರಭಾವದಿಂದ ಹೃಷಿಕೇಶದ ಸಾಂಸ್ಕೃತಿಕ ಪರಂಪರೆ ನಾಶವಾಗುತ್ತಿದೆ ಎಂದು ಇನ್ನೊಬ್ಬರು ತಿಳಿಸಿದ್ದಾರೆ. ಇನ್ನು ಮುಂದೆ ಹೃಷಿಕೇಶ್ ಆಧ್ಯಾತ್ಮಿಕ ಸ್ಥಳವಾಗಿ ಉಳಿಯುವುದಿಲ್ಲ ಎಂದು ಮತ್ತೊಬ್ಬರು ಬೇಸರ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:1.92 ಲಕ್ಷ ರೂ. ಬೆಲೆಯ ʼಹುಕುಮ್‌ ಕಿ ರಾಣಿʼ ಸೀರೆಯಲ್ಲಿ ಮಿಂಚಿದ ದೀಪಿಕಾ ಪಡುಕೋಣೆ!

ಈ ಘಟನೆ ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಹುಟ್ಟು ಹಾಕಿದೆ. ಕೆಲವರು ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟಾಗಿರುವ ಬಗ್ಗೆ ಟೀಕಿಸಿದರೆ, ಇನ್ನೂ ಕೆಲವರು ಜನರು ಪಾಶ್ಚಿಮಾತ್ಯರ ಕಡೆಗೆ ವಾಲುತ್ತಿರುವ ಬಗ್ಗೆ ವಾದ ಮಾಡಿದ್ದಾರೆ. ಸ್ಥಳೀಯ ಮೌಲ್ಯಗಳೊಂದಿಗೆ ರಾಜಿ ಮಾಡಿಕೊಂಡು ಪ್ರವಾಸೋದ್ಯಮ ಮಾದರಿಯನ್ನು ಅಧಿಕಾರಿಗಳು ಉತ್ತೇಜಿಸುತ್ತಿದ್ದಾರೆ ಎಂದು ಅನೇಕರು ಆರೋಪಿಸಿದ್ದಾರೆ

Continue Reading
Advertisement
Paris Olympics 2024
ಕ್ರೀಡೆ6 mins ago

Paris Olympics 2024: ಪ್ಯಾರಿಸ್ ಒಲಿಂಪಿಕ್ಸ್‌ಗೆ ಸಿಂಧು, ಶರತ್ ಕಮಲ್ ಭಾರತದ ಧ್ವಜಧಾರಿ

MLA Satish Sail visited the flood affected areas of Karwar taluk
ಉತ್ತರ ಕನ್ನಡ18 mins ago

Uttara Kannada News: ಕಾರವಾರ ತಾಲೂಕಿನ ನೆರೆ ಪೀಡಿತ ಪ್ರದೇಶಗಳಿಗೆ ಶಾಸಕ ಸತೀಶ ಕೆ. ಸೈಲ್ ಭೇಟಿ

Union Budget 2024
ದೇಶ38 mins ago

Union Budget 2024: ಕೇಂದ್ರ ಬಜೆಟ್;‌ 8ನೇ ವೇತನ ಆಯೋಗ ಸೇರಿ 7 ಬೇಡಿಕೆ ಇಟ್ಟ ಸರ್ಕಾರಿ ನೌಕರರು!

Dengue Cases
ಕರ್ನಾಟಕ46 mins ago

Dengue Cases: ರಾಜ್ಯದಲ್ಲಿ ಸೋಮವಾರ 197 ಡೆಂಗ್ಯೂ ಕೇಸ್‌ಗಳು ಪತ್ತೆ, ಒಬ್ಬರ ಸಾವು

ಕ್ರೀಡೆ50 mins ago

Kuldeep Yadav: ಕುಲ್​ದೀಪ್ ಯಾದವ್​ರನ್ನು​ ಅಭಿನಂದಿಸಿದ ಯೋಗಿ ಆದಿತ್ಯನಾಥ್

Channappa Gowda Mosambi elected as new District President of Akhila bharata Veerashaiva Mahasabha
ಯಾದಗಿರಿ1 hour ago

Yadgiri News: ಅಖಿಲ ಭಾರತ ವೀರಶೈವ ಮಹಾಸಭಾ ನೂತನ ಜಿಲ್ಲಾಧ್ಯಕ್ಷರಾಗಿ ಚನ್ನಪ್ಪಗೌಡ ಮೋಸಂಬಿ ಅವಿರೋಧ ಆಯ್ಕೆ

Maharashtra Rain
Latest1 hour ago

Maharashtra Rain: ಮಹಾರಾಷ್ಟ್ರದಲ್ಲಿ ವರುಣನ ಅಬ್ಬರ; ರಾಯಗಢ ಕೋಟೆಯಲ್ಲಿ ಪ್ರವಾಸಿಗರಿಗೆ ಪ್ರಾಣ ಸಂಕಟ; ವಿಡಿಯೊ ನೋಡಿ

Money Guide
ಮನಿ-ಗೈಡ್1 hour ago

Money Guide: ಕಡಿಮೆ ಅವಧಿಯಲ್ಲಿ 1 ಕೋಟಿ ರೂ. ಗಳಿಸುವುದು ಹೇಗೆ? ಇಲ್ಲಿದೆ ಹೂಡಿಕೆಯ ಲೆಕ್ಕಾಚಾರ

land fraud
ಕರ್ನಾಟಕ1 hour ago

land fraud: ಭೂ ವಂಚನೆ ತಡೆಗೆ ಪಹಣಿ-ಆಧಾರ್‌ ಜೋಡಣೆ ಪ್ರಕ್ರಿಯೆ ಶೀಘ್ರ ಪೂರ್ಣಗೊಳಿಸಿ: ಸಿಎಂ ಸಿದ್ದರಾಮಯ್ಯ

Golden Star Ganesh starring Krishnam Pranaya Sakhi movie releasing on 15th August
ಕರ್ನಾಟಕ2 hours ago

Kannada New Movie: ಗಣೇಶ್‌ ವೃತ್ತಿಜೀವನದ ಬಿಗ್ ಬಜೆಟ್ ಚಿತ್ರ ʼಕೃಷ್ಣಂ ಪ್ರಣಯ ಸಖಿʼ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Rain Effect
ಮಳೆ5 hours ago

Rain Effect : ಭಾರಿ ಮಳೆಗೆ ನೀರಲ್ಲಿ ಕೊಚ್ಚಿ ಹೋದ ಪಾನ್‌ ಶಾಪ್‌, ಕಾರು! ಉಡುಪಿಯ ಶಾಲಾ-ಕಾಲೇಜುಗಳಿಗೆ ನಾಳೆಯೂ ರಜೆ

Karnataka Rain Effect
ಮಳೆ7 hours ago

Karnataka Rain : ಮಳೆ ಅವಾಂತರ; ಮರ ಬಿದ್ದು ಕಾರು ಜಖಂ, ಕುಸಿದು ಬಿದ್ದ ಪಾವಂಜೆ ಮಹಾಗಣಪತಿ ದೇವಸ್ಥಾನದ ತಡೆಗೋಡೆ

Karnataka Rain
ಮಳೆ9 hours ago

Karnataka Rain : ಭಾರಿ ಮಳೆಗೆ ಉಕ್ಕಿ ಹರಿಯುತ್ತಿರುವ ಹಳ್ಳ; ಪ್ರಾಣದ ಹಂಗು ತೊರೆದು ಶಾಲೆಗೆ ಹೋಗಬೇಕು!

Karnataka weather Forecast
ಮಳೆ9 hours ago

Karnataka Rain : ರಕ್ಕಸ ಅಲೆಗಳ ಮಧ್ಯೆ ಈಜಲು ಹೋದ ಪ್ರವಾಸಿಗರಿಗೆ ಬಿತ್ತು ಬಿಸಿ ಬಿಸಿ ಕಜ್ಜಾಯ‌!

Murder case
ಬೆಂಗಳೂರು11 hours ago

Murder case : ಕುಡಿದ ಅಮಲಿನಲ್ಲಿ ಶುರುವಾದ ಜಗಳ ಯುವಕನ ಕೊಲೆಯಲ್ಲಿ ಅಂತ್ಯ

karnataka weather Forecast
ಮಳೆ1 day ago

Karnataka weather : ನಾಳೆ ಭಾರಿ ಮಳೆ ಎಚ್ಚರಿಕೆ; ಕರಾವಳಿಯ ಈ ಶಾಲಾ-ಕಾಲೇಜುಗಳಿಗೆ ರಜೆ

Davanagere news
ಮಳೆ1 day ago

Davanagere News : ಆ ಗ್ರಾಮಕ್ಕೆ ಕಾಲಿಡದ ವರುಣ! ಮಳೆಗಾಗಿ ಗ್ರಾಮಸ್ಥರಿಂದ ಕಂತೆ ಭಿಕ್ಷೆ

Karnataka Rain
ಮಳೆ1 day ago

Karnataka Rain : ವೀಕೆಂಡ್‌ನಲ್ಲಿ ಸಿಲಿಕಾನ್‌ ಸಿಟಿಯಲ್ಲಿ ಮಳೆ ಮೋಡಿ; ಮತ್ತೆ ಗುಡ್ಡ ಕುಸಿತ ಶುರು

karnataka weather Forecast
ಮಳೆ2 days ago

Karnataka Weather : ವೇಗವಾಗಿ ಬೀಸುವ ಗಾಳಿ ಜತೆಗೆ ಅಬ್ಬರಿಸಲಿದೆ ಮಳೆ; ಈ ಜಿಲ್ಲೆಗಳಿಗೆ ಎಚ್ಚರಿಕೆ

karnataka weather Forecast
ಮಳೆ2 days ago

Karnataka Weather : ಚಾರಣಪ್ರಿಯರಿಗೆ ಶಾಕ್‌; ಭಾರಿ ಮಳೆಯಿಂದಾಗಿ ಈ ಜಾಗಗಳಿಗೆ ಟ್ರೆಕ್ಕಿಂಗ್‌ ನಿಷೇಧ

ಟ್ರೆಂಡಿಂಗ್‌