VISTARA TOP 10 NEWS : ಮಂಡ್ಯದಲ್ಲಿ ಕಾವೇರಿ ಕಿಚ್ಚು, ಚಂದ್ರಯಾನವನ್ನು ಲೇವಡಿ ಮಾಡಿದ ಪ್ರಕಾಶ್​ ರಾಜ್ ಬೆಂಡೆತ್ತಿದ ನೆಟ್ಟಿಗರು ಇತ್ಯಾದಿ ಪ್ರಮುಖ ಸುದ್ದಿಗಳು - Vistara News

ಕರ್ನಾಟಕ

VISTARA TOP 10 NEWS : ಮಂಡ್ಯದಲ್ಲಿ ಕಾವೇರಿ ಕಿಚ್ಚು, ಚಂದ್ರಯಾನವನ್ನು ಲೇವಡಿ ಮಾಡಿದ ಪ್ರಕಾಶ್​ ರಾಜ್ ಬೆಂಡೆತ್ತಿದ ನೆಟ್ಟಿಗರು ಇತ್ಯಾದಿ ಪ್ರಮುಖ ಸುದ್ದಿಗಳು

VISTARA TOP 10 NEWS : ಇಂದಿರಾ ಕ್ಯಾಂಟೀನ್ ಊಟದ ದರವನ್ನು ಏಕಾಏಕಿ ಏರಿಸಲಾಗಿದೆ. ಇದೂ ಸೇರಿದಂತೆ ದಿನದ ಪ್ರಮುಖ ಬೆಳವಣಿಗೆಗಳಲ್ಲಿ ಟಾಪ್‌ 10 ಸುದ್ದಿಗಳ ಗುಚ್ಛ ಇದು ವಿಸ್ತಾರ ಟಾಪ್‌ 10 ನ್ಯೂಸ್‌

VISTARANEWS.COM


on

Top 10 Aug 21
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

1. Education Policy : ರಾಜ್ಯದಲ್ಲಿ NEP ರದ್ದು; ಹೊಸ ರಾಜ್ಯ ಶಿಕ್ಷಣ ನೀತಿ CBSE, ICSEಗೆ ಅನ್ವಯ ಆಗುತ್ತಾ?
ಬೆಂಗಳೂರು: ರಾಜ್ಯದಲ್ಲಿ ಬಿಜೆಪಿ ಸರ್ಕಾರ ಜಾರಿಗೆ ತಂದಿದ್ದ ರಾಷ್ಟ್ರೀಯ ಶಿಕ್ಷಣ ನೀತಿಯನ್ನು (National Education Policy – NEP) ಅಧಿಕೃತವಾಗಿ ರದ್ದು ಮಾಡುವ ತೀರ್ಮಾನವನ್ನು ರಾಜ್ಯ ಸರ್ಕಾರ ಸೋಮವಾರ (ಆಗಸ್ಟ್‌ 21) ಪ್ರಕಟಿಸಿದೆ. ಅಲ್ಲದೆ, ನೂತನ ರಾಜ್ಯ ಶಿಕ್ಷಣ ನೀತಿಯನ್ನು (State Education Policy -SEP) ಕರ್ನಾಟಕದಲ್ಲಿ ಅಳವಡಿಸುವುದಾಗಿಯೂ ಘೋಷಣೆ ಮಾಡಿದೆ. ಆದರೆ, ರಾಜ್ಯ ಶಿಕ್ಷಣ ನೀತಿಯು ಸಿಬಿಎಸ್‌ಇ, ಐಸಿಎಸ್‌ಇ ಬೋರ್ಡ್‌ಗೆ (CBSE, ICSE Board)ಅನ್ವಯ ಆಗುವುದಿಲ್ಲ. ಅದು ಕೇಂದ್ರ ಸರ್ಕಾರದ ವ್ಯಾಪ್ತಿಗೆ ಬರುವುದರಿಂದ ಅದರಲ್ಲಿ ಯಾವುದೇ ಹಸ್ತಕ್ಷೇಪ ಮಾಡಲು ರಾಜ್ಯಕ್ಕೆ ಅಧಿಕಾರ ಇಲ್ಲ. ಇದರ ಜತೆಗೆ ಕೇಂದ್ರೀಯ ವಿವಿಗಳು, ಖಾಸಗಿ ವಿವಿಗಳಿಗೂ ಈ ನೀತಿ ಅನ್ವಯ ಆಗುವುದಿಲ್ಲ. ಹಾಗಾಗಿ ನೂತನ ಶೈಕ್ಷಣಿಕ ನೀತಿ (Education Policy) ಬಗ್ಗೆ ಎಲ್ಲರೂ ಭಯ ಬೀಳಬೇಕಿಲ್ಲ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
ಈ ಸುದ್ದಿಯನ್ನೂ ಓದಿ: Education Policy : ರಾಜ್ಯದಲ್ಲಿ NEP ಇನ್ನಿಲ್ಲ, SEP ಜಾರಿ ಎಂದ ಸರ್ಕಾರ; ಸಿಡಿದೆದ್ದ ಬಿಜೆಪಿಯಿಂದ ಪ್ರತಿತಂತ್ರ

2. Cauvery Water Dispute: ಮಂಡ್ಯದಲ್ಲಿ ಧಗಧಗಿಸಿದ ಕಾವೇರಿ ಕಿಚ್ಚು; ಹೆದ್ದಾರಿ ತಡೆದು ಬಿಜೆಪಿ ಕಾರ್ಯಕರ್ತರ ಆಕ್ರೋಶ
ಮಂಡ್ಯ: ಕೃಷ್ಣರಾಜ ಸಾಗರ ಜಲಾಶಯದಿಂದ (ಕೆಆರ್‌ಎಸ್‌) ತಮಿಳುನಾಡಿಗೆ ಕಾವೇರಿ ಬಿಡುಗಡೆ ಮಾಡುತ್ತಿರುವುದನ್ನು ಖಂಡಿಸಿ ನಗರದಲ್ಲಿ ಬಿಜೆಪಿಯಿಂದ ಸೋಮವಾರ ಬೃಹತ್‌ ಪ್ರತಿಭಟನೆ (Cauvery Water Dispute) ನಡೆಸಲಾಯಿತು. ಸಂಜಯ್‌ ವೃತ್ತದಲ್ಲಿ ಹೆದ್ದಾರಿ ತಡೆ ನಡೆಸಿದ ಬಿಜೆಪಿ ಕಾರ್ಯಕರ್ತರು, ರಾಜ್ಯ ಸರ್ಕಾರದ ವಿರುದ್ಧ ಧಿಕ್ಕಾರದ ಘೋಷಣೆಗಳನ್ನು ಕೂಗಿ ಆಕ್ರೋಶ ಹೊರಹಾಕಿದರು. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.

3. Prakash Raj: ಚಂದ್ರಯಾನ 3 ಯಶಸ್ಸಿಗೆ ಪ್ರಾರ್ಥನೆ ಬೆನ್ನಲ್ಲೇ ಪ್ರಕಾಶ್‌ ರಾಜ್‌ ವ್ಯಂಗ್ಯ; ರೋಗಿಷ್ಟ ಮನಸ್ಥಿತಿ ಅಂದ್ರು ಜನ
ಬೆಂಗಳೂರು: ನಟನೆಗಿಂತ ಇತ್ತೀಚೆಗೆ ವಿವಾದಗಳಿಂದಲೇ ಜಾಸ್ತಿ ಸುದ್ದಿಯಲ್ಲಿರುವ ಬಹುಭಾಷಾ ನಟ ಪ್ರಕಾಶ್‌ ರಾಜ್‌ (Prakash Raj) ಅವರೀಗ ಮತ್ತೆ ವಿವಾದಕ್ಕೆ ಸಿಲುಕಿದ್ದಾರೆ. ಚಂದ್ರಯಾನ 3 (Chandrayaan 3) ಮಿಷನ್‌ ಕಳುಹಿಸಿದ ಫೋಟೊ ಎಂದು ಇಸ್ರೋ ಮಾಜಿ ಅಧ್ಯಕ್ಷ ಕೆ.ಶಿವನ್‌ (K Sivan) ಅವರನ್ನು ಅಣಕ ಮಾಡಲು ಸಾಮಾಜಿಕ ಜಾಲತಾಣವಾದ ಎಕ್ಸ್‌ನಲ್ಲಿ (X) ಫೋಟೊ ಹಂಚಿಕೊಂಡ ಕಾರಣ ಜನ ಅವರಿಗೆ ಟೀಕೆಗಳ ಮೂಲಕ ಚಳಿ ಬಿಡಿಸಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
ಚಂದ್ರಯಾನ ಕುರಿತ ಇನ್ನಷ್ಟು ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.

4. ಮೈಚಳಿ ಬಿಡಿ, ಸರ್ಕಾರಕ್ಕೆ ಬಿಸಿ ಮುಟ್ಟಿಸಲು 224 ಕ್ಷೇತ್ರದಲ್ಲಿ ಪ್ರತಿಭಟಿಸಿ; ಕೋರ್‌ ಕಮಿಟಿಯಲ್ಲಿ ಬಿಎಸ್‌ವೈ ಗುಡುಗು
ಬೆಂಗಳೂರು: ರಾಜ್ಯ ರಾಜಕೀಯದಲ್ಲಿ (Karnataka Politics) ಆಪರೇಷನ್‌ ಹಸ್ತ ಭಾರಿ ಸದ್ದು ಮಾಡುತ್ತಿದೆ. ಬಿಜೆಪಿಯಿಂದ ಕೆಲವು ಹಾಲಿ ಹಾಗೂ ಮಾಜಿ ಶಾಸಕರು ಪಕ್ಷ ಬಿಡುತ್ತಾರೆ ಎಂಬ ಬಗ್ಗೆಯೂ ಸುದ್ದಿಯಾಗಿತ್ತು. ಅಲ್ಲದೆ, ಬಿಜೆಪಿಯಲ್ಲಿ ಎಲ್ಲವೂ ಸರಿ ಇಲ್ಲ (BJP Politics) ಎಂಬಂತೆ ಚರ್ಚೆ ಹುಟ್ಟಿಕೊಂಡ ಬೆನ್ನಲ್ಲೇ ಮಾಜಿ ಸಿಎಂ ಬಿ.ಎಸ್.‌ ಯಡಿಯೂರಪ್ಪ (Former CM BS Yediyurappa) ಅಖಾಡಕ್ಕೆ ಧುಮುಕಿದ್ದರು. ಈಗ ಬಿಜೆಪಿ ಕೋರ್ ಕಮಿಟಿ ಸಭೆ (BJP core committee meeting) ನಡೆಸಿ, ಪಕ್ಷದ ನಾಯಕರಿಗೆ ಬಿಸಿ ಮುಟ್ಟಿಸಿದ್ದಾರೆ. ಪಕ್ಷ ಸಂಘಟನೆ ವಿಚಾರದಲ್ಲಿ ಆಗುತ್ತಿರುವ ತಾತ್ಸಾರದ ವಿರುದ್ಧ ಕೆಂಡಕಾರಿದ್ದಾರೆ. ಆಡಳಿತ ಪಕ್ಷಕ್ಕೆ ನಾವೇ ಆಹಾರವಾಗುವುದು ಎಂದರೆ ಏನು? ಅವರ ವೈಫಲ್ಯ ಮುಚ್ಚಿಕೊಳ್ಳಲು ಆಪರೇಷನ್‌ ಭೂತವನ್ನು ಛೂ ಬಿಟ್ಟಿದ್ದಾರೆ. ಇನ್ನಾದರೂ ಸಜ್ಜಾಗಿ, ಜ್ವಲಂತ ಸಮಸ್ಯೆಗಳನ್ನು ಕೈಗೆತ್ತಿಕೊಳ್ಳಿ, ಈಗ ಸರ್ಕಾರದ ಚಳಿ ಬಿಡಿಸುವ ಕಾಲ ಬಂದಿದೆ. ಸರ್ಕಾರದ ವೈಫಲ್ಯವನ್ನು 224 ಕ್ಷೇತ್ರದಲ್ಲೂ ಜನರಿಗೆ ಮುಟ್ಟಿಸಲು ಪ್ರತಿಭಟನೆ ನಡೆಸಿ ಎಂದು ಕರೆ ಕೊಟ್ಟಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್​ ಮಾಡಿ.

5.ಏಷ್ಯಾಕಪ್‌ಗೆ ಭಾರತ ತಂಡ ಪ್ರಕಟ; ಇಬ್ಬರು ಕನ್ನಡಿಗರಿಗೆ ಒಲಿದ ಅದೃಷ್ಟ, ಇಲ್ಲಿದೆ ಪಟ್ಟಿ
ಮುಂಬೈ: ಆಗಸ್ಟ್‌ 30ರಿಂದ ಆರಂಭವಾಗುವ ಏಷ್ಯಾ ಕಪ್‌ ಕ್ರಿಕೆಟ್‌ ಟೂರ್ನಿಗೆ (Asia Cup 2023) ಭಾರತ ತಂಡವನ್ನು ಪ್ರಕಟಿಸಲಾಗಿದೆ. 17 ಆಟಗಾರರಿರುವ ಟೀಮ್‌ ಇಂಡಿಯಾವನ್ನು ಆಯ್ಕೆ ಸಮಿತಿಯು ಘೋಷಿಸಿದ್ದು, ಕನ್ನಡಿಗರಾದ ಕೆ.ಎಲ್‌.ರಾಹುಲ್‌ (K L Rahul) ಹಾಗೂ ಪ್ರಸಿದ್ಧ್‌ ಕೃಷ್ಣ ಸ್ಥಾನ ಪಡೆದಿದ್ದಾರೆ. ಐಪಿಎಲ್‌ ವೇಳೆ ಗಾಯಗೊಂಡಿದ್ದ ಕೆ.ಎಲ್‌.ರಾಹುಲ್‌ ಅವರು ಚೇತರಿಸಿಕೊಂಡಿದ್ದು, ಸ್ಥಾನ ಪಡೆಯುವಲ್ಲಿ ಸಫಲರಾಗಿದ್ದಾರೆ. ಪೂರ್ಣ ಸುದ್ದಿಗೆ ಇಲ್ಲಿ ಕ್ಲಿಕ್ ಮಾಡಿ.
ಈ ಸುದ್ದಿಯನ್ನೂ ಓದಿ: KL Rahul : ತಂಡಕ್ಕೆ ಆಯ್ಕೆಗೊಂಡರೂ ರಾಹುಲ್​ ತಂಡದಲ್ಲಿ ಸ್ಥಾನ ಪಡೆಯೋದು ಡೌಟು?

6. Nag Panchami : ಹಾವಿನ ಡಾಕ್ಟ್ರ ಮನೆಯಲ್ಲಿ ಹಾವಿಗೇ ಪೂಜೆ; ಜಲಾಭಿಷೇಕ, ಆರತಿಗೆ ಫುಲ್‌ ಖುಷ್‌!

7. Mobile App : ಈ ಆ್ಯಪ್​ಗಳು ನಿಮ್ಮ ಮೊಬೈಲ್​ನಲ್ಲಿ ಇದ್ದರೆ ತಕ್ಷಣ ಡಿಲೀಟ್​ ಮಾಡಿ ಎನ್ನುತ್ತಿದೆ ಗೂಗಲ್​ ಪ್ಲೇಸ್ಟೋರ್​​

8. Donald Trump: ಗೆದ್ದು ಬಂದರೆ ಭಾರತಕ್ಕೆ ಸೇಡಿನ ತೆರಿಗೆ ವಿಧಿಸುವೆ: ಡೊನಾಲ್ಡ್‌ ಟ್ರಂಪ್

9. Kashmir Encounter: ಕಾಶ್ಮೀರದಲ್ಲಿ ಸೇನೆ ಭರ್ಜರಿ ಬೇಟೆ; ಲಷ್ಕರೆ ಕಮಾಂಡರ್‌ ಸೇರಿ ಇಬ್ಬರು ಉಗ್ರರ ಮಟಾಶ್

10. ಅಜ್ಜಿ I Love you! ಒಂಟಿಯಾಗಿರುವೆ ಜಂಟಿಯಾಗು ಎಂದು ಪಟಾಯಿಸಿದ್ದ ಅಜ್ಜ ಕೈಕೊಟ್ಟʼನಲ್ಲʼ!
ಮತ್ತಷ್ಟು ವೈರಲ್‌ ಸುದ್ದಿಗಳಿಗಾಗಿ ಕ್ಲಿಕ್‌ ಮಾಡಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

Signal-Free Corridor: ಬೆಂಗಳೂರಿಗೆ 17 ಸಿಗ್ನಲ್ ಮುಕ್ತ ಕಾರಿಡಾರ್‌; ಯಾವ ಮಾರ್ಗಗಳಲ್ಲಿ ನೋಡಿ

ನಾವು ಸುಮಾರು 17 ಸ್ಥಳಗಳನ್ನು ಗುರುತಿಸಿದ್ದೇವೆ. ಇವುಗಳನ್ನು ಯಶಸ್ವಿ ರಾಜಾಜಿನಗರ- ಕೆಆರ್ ಸರ್ಕಲ್ ಸಿಗ್ನಲ್-ಮುಕ್ತ ಕಾರಿಡಾರ್ (Signal-Free Corridor) ಮಾದರಿಯಲ್ಲಿ ರೂಪಿಸಲಾಗುವುದು ಎಂದು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್‌ ಹೇಳಿದರು.

VISTARANEWS.COM


on

signal free corridor
Koo

ಬೆಂಗಳೂರು: ನಗರದ ಟ್ರಾಫಿಕ್ ದಟ್ಟಣೆಯನ್ನು (Bangalore Traffic congestion) ನಿವಾರಿಸುವ ಪ್ರಯತ್ನದಲ್ಲಿ, ಬೆಂಗಳೂರಿನ 17 ಸ್ಥಳಗಳಲ್ಲಿ ಸುಮಾರು 100 ಕಿಲೋಮೀಟರ್‌ನಷ್ಟು ಉದ್ದದ ಸಿಗ್ನಲ್-ಮುಕ್ತ ಕಾರಿಡಾರ್‌ (Signal-Free Corridor) ಅಭಿವೃದ್ಧಿಪಡಿಸುವ ಯೋಜನೆಯನ್ನು ಕರ್ನಾಟಕ ಸರ್ಕಾರ (Karnataka Govt) ಪ್ರಕಟಿಸಿದೆ.

ಸುದ್ದಿಗಾರರೊಂದಿಗೆ ಈ ಕುರಿತು ಮಾತನಾಡಿದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್‌ (DCM DK Shivakumar), ನಗರದ ಮೂಲಸೌಕರ್ಯ ಅಭಿವೃದ್ಧಿ ಯೋಜನೆಗಳ ಕುರಿತು ಎಲ್ಲಾ ರಾಜಕೀಯ ಪಕ್ಷಗಳ ಶಾಸಕರೊಂದಿಗೆ ಚರ್ಚಿಸಲಾಗಿದೆ ಎಂದು ತಿಳಿಸಿದರು. ನಾವು ಸುಮಾರು 17 ಸ್ಥಳಗಳನ್ನು ಗುರುತಿಸಿದ್ದೇವೆ. ಇವುಗಳನ್ನು ಯಶಸ್ವಿ ರಾಜಾಜಿನಗರ- ಕೆಆರ್ ಸರ್ಕಲ್ ಸಿಗ್ನಲ್-ಮುಕ್ತ ಕಾರಿಡಾರ್ (Signal-Free Corridor) ಮಾದರಿಯಲ್ಲಿ ರೂಪಿಸಲಾಗುವುದು ಎಂದು ಅವರು ಹೇಳಿದರು.

ನಗರದ ಸಂಪೂರ್ಣ ಸಂಚಾರ ವಿಶ್ಲೇಷಣೆ, ಮುಂದಿನ ಕೆಲವು ವರ್ಷಗಳ ಯೋಜಿತ ಬೆಳವಣಿಗೆಯ ಮಾದರಿಗಳನ್ನು ಆಧರಿಸಿ ಈ ಸ್ಥಳಗಳನ್ನು ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (BBMP) ಆಯ್ಕೆ ಮಾಡಿದೆ. ಈ ಮಹತ್ವಾಕಾಂಕ್ಷೆಯ ಯೋಜನೆಗೆ 12,000 ಕೋಟಿ ರೂ. ವೆಚ್ಚವಾಗಲಿದೆ.

“ಇವುಗಳ ಅಗತ್ಯವನ್ನು ನಿರ್ಧರಿಸಲು ಟ್ರಾಫಿಕ್ ಪರಿಸ್ಥಿತಿಯನ್ನು ಎಚ್ಚರಿಕೆಯಿಂದ ಅಧ್ಯಯನ ಮಾಡಲಾಗಿದೆ. ವಿಶ್ಲೇಷಕರು 2044ರವರೆಗೆ ನಿರೀಕ್ಷಿತ ಲೇನ್ ಅವಶ್ಯಕತೆಗಳನ್ನು ಸೂಚಿಸಿದ್ದಾರೆ. ನಿರ್ಣಾಯಕ ಜಂಕ್ಷನ್‌ಗಳಲ್ಲಿ ಸಿಗ್ನಲ್-ಮುಕ್ತ ಕಾರಿಡಾರ್‌ಗಳನ್ನು ಸೂಚಿಸಿದ್ದಾರೆ. ಅದನ್ನು ಈಗ ಜಾರಿಗೆ ಪ್ರಸ್ತಾಪಿಸಲಾಗಿದೆ” ಎಂದು ಬಿಬಿಎಂಪಿ ಹಿರಿಯ ಅಧಿಕಾರಿಯೊಬ್ಬರು ವಿವರಿಸಿದ್ದಾರೆ.

ಟ್ರಾಫಿಕ್ ಅಧ್ಯಯನದ ಮೂಲಕ ಕಂಡುಬಂದ ವಿಚಾರ ಎಂದರೆ, ಆಯ್ದ ಕಾರಿಡಾರ್‌ಗಳಲ್ಲಿ ಹೆಚ್ಚಿನ ಟ್ರಾಫಿಕ್ ಹರಿವು ಕಂಡುಬರುತ್ತದೆ. ಈ ಮಾರ್ಗಗಳಲ್ಲಿ ವೇಗ ಗಂಟೆಗೆ 15-20 ಕಿಲೋಮೀಟರ್‌ಗಳಷ್ಟು ಕಡಿಮೆಯಾಗಿದೆ. ಇದರಿಂದ ಇಂಧನ ವ್ಯರ್ಥವಾಗುತ್ತಿದೆ ಹಾಗೂ ಉತ್ಪಾದಕತೆ ನಷ್ಟವಾಗುತ್ತಿದೆ.

“ಪ್ರಸ್ತುತ ಈ ಕಾರಿಡಾರ್‌ಗಳಲ್ಲಿ ಹಲವು ನಾಲ್ಕು ಅಥವಾ ಆರು ಲೇನ್‌ಗಳಿವೆ. ಪ್ರಸ್ತುತ ಟ್ರಾಫಿಕ್ ಸಾಂದ್ರತೆಯ ಪ್ರಕಾರ ಇಲ್ಲಿ ಕನಿಷ್ಠ ಎಂಟು ಲೇನ್‌ಗಳ ಅವಶ್ಯಕತೆಯಿದೆ. 2044ರ ವೇಳೆಗೆ 12 ಲೇನ್‌ಗಳಿಗೆ ಹೆಚ್ಚಿಸುವ ಅವಶ್ಯಕತೆಯಿದೆ. ರಸ್ತೆ ಅಗಲೀಕರಣ, ಎಲಿವೇಟೆಡ್ ಕಾರಿಡಾರ್‌ಗಳು ಅಥವಾ ಅಂಡರ್‌ಪಾಸ್‌ಗಳ ನಿರ್ಮಾಣದ ಅವಶ್ಯಕತೆಯಿದೆ” ಎಂದು ವರದಿ ಬಹಿರಂಗಪಡಿಸಿದೆ.

ಯೋಜಿಸಲಾದ ಕೆಲವು ಪ್ರಮುಖ ಸಿಗ್ನಲ್-ಮುಕ್ತ ಕಾರಿಡಾರ್‌ಗಳು ಹೀಗಿವೆ:

1) ಕೆ.ಆರ್‌ ಪುರದಿಂದ ಯಶವಂತಪುರ- ಗೊರಗುಂಟೆಪಾಳ್ಯವರೆಗಿನ 23 ಕಿಲೋಮೀಟರ್ ವ್ಯಾಪ್ತಿಯ ಕಾರಿಡಾರ್.‌
2) ಆನೆಪಾಳ್ಯದಿಂದ ಸಿಲ್ಕ್ ಬೋರ್ಡ್‌ವರೆಗಿನ 5.5 ಕಿಲೋಮೀಟರ್ ಹೊಸೂರು ರಸ್ತೆ ಕಾರಿಡಾರ್
3) ಮಾರೇನಹಳ್ಳಿಯಿಂದ ಕನಕಪುರ ರಸ್ತೆ-ತಲಘಟ್ಟಪುರ ನೈಸ್ ರಸ್ತೆವರೆಗೆ 10 ಕಿಲೋಮೀಟರ್ ಎಲಿವೇಟೆಡ್ ಕಾರಿಡಾರ್
4) ಮಿನರ್ವದಿಂದ ಕಬ್ಬನ್ ಪಾರ್ಕ್‌ವರೆಗೆ 2.7 ಕಿಲೋಮೀಟರ್ ಎತ್ತರದ ರಸ್ತೆಯನ್ನು ಪ್ರಸ್ತಾಪಿಸಲಾಗಿದೆ.

ಟ್ರಾಫಿಕ್‌ ಪೊಲೀಸರಿಂದ ಬೆಂಗಳೂರಿನ ರಸ್ತೆಗಳಲ್ಲಿ ಮೊಳೆಗಳ ಸಂಗ್ರಹ

ಬೆಂಗಳೂರು: ಬೆಂಗಳೂರಿನ ಬೀದಿ ಬೀದಿಗಳಲ್ಲಿ ರಾಶಿಗಟ್ಟಲೆ ಮೊಳೆ (Nails) ಬಿಸಾಡಿ ವಾಹನಗಳ ಟಯರ್‌ ಪಂಕ್ಚರ್‌ (Puncture) ಆಗುವಂತೆ ಮಾಡಿ ದುಡ್ಡ ಮಾಡುವ ಮಾಫಿಯಾ (Mafia) ಕಾರ್ಯಪ್ರವೃತ್ತವಾಗಿದೆಯಾ ಎಂಬ ಅನುಮಾನ ಹೆಡೆಯೆತ್ತಿದೆ. ಜಾಲಹಳ್ಳಿಯ ಕುವೆಂಪು ವೃತ್ತದ (Kuvempu Circle) ಕೆಳಸೇತುವೆಯಲ್ಲಿ ಮುಷ್ಟಿಗಟ್ಟಲೆ ಮೊಳೆಗಳು ಒಂದೆಡೆಯೇ ಪತ್ತೆಯಾಗಿದ್ದು, ಸ್ವತಃ ಟ್ರಾಫಿಕ್‌ ಪೊಲೀಸರೇ (Traffic Police) ಇವುಗಳನ್ನು ಸ್ಥಳದಿಂದ ತೆಗೆದು ಕ್ಲೀನ್‌ ಮಾಡುವ ಅಭಿಯಾನ ನಡೆಸಿದ್ದಾರೆ. ಅದೀಗ ವೈರಲ್‌ (Viral Video) ಆಗಿದೆ.

ರಸ್ತೆ ಮಧ್ಯದಲ್ಲಿ ಮೊಳೆಗಳನ್ನು ಎಸೆದು ವಾಹನಗಳ ಪಂಕ್ಚರ್ ಮಾಡಿಸಲಾಗುತ್ತಿದೆ ಎಂಬ ವದಂತಿ ಮೊದಲಿನಿಂದಲೂ ಇದೆ. ಇದೀಗ ಸ್ವತಃ ಟ್ರಾಫಿಕ್ ಪೊಲೀಸರಿಂದಲೇ ರಾಶಿಗಟ್ಟಲೆ ಮೊಳೆಗಳ ಸಂಗ್ರಹ ನಡೆದಿದ್ದು, ಅನುಮಾನ ರುಜುವಾತು ಆದಂತಾಗಿದೆ. ನಗರದಲ್ಲಿ ಎಲ್ಲೆಂದರಲ್ಲಿ ವಾಹನಗಳು ಪಂಕ್ಚರ್ ಆಗುತ್ತಿದ್ದು, ಸಮೀಪದಲ್ಲಿರುವ ಪಂಕ್ಚರ್ ಅಂಗಡಿಗಳಿಗೆ ಸಾಕಷ್ಟು ವ್ಯಾಪಾರವಂತೂ ಆಗುತ್ತಿದೆ.

ನಿನ್ನೆ ಕುವೆಂಪು ವೃತ್ತದ ಅಂಡರ್‌ಪಾಸ್‌ನಲ್ಲಿ ರಾಶಿಗಟ್ಟಲೆ ಲೋಹದ ಮೊಳೆಗಳನ್ನು ಪತ್ತೆಹಚ್ಚಿದ ಬೆಂಗಳೂರು ಟ್ರಾಫಿಕ್‌ ಪೊಲೀಸರು ಅವುಗಳನ್ನು ಸ್ವಚ್ಛಗೊಳಿಸಿದರು. ಬೆಂಗಳೂರು ಟ್ರಾಫಿಕ್ ಪೊಲೀಸ್ ಅಧಿಕಾರಿಗಳು ಕುವೆಂಪು ಸರ್ಕಲ್ ಅಂಡರ್‌ಪಾಸ್‌ನಲ್ಲಿ ರಸ್ತೆಯನ್ನು ಗುಡಿಸುವ ವೀಡಿಯೊವನ್ನು ಎಕ್ಸ್‌ನಲ್ಲಿ ಅಪ್‌ಲೋಡ್‌ ಮಾಡಲಾಗಿದ್ದು, ಅದೀಗ ವೈರಲ್‌ ಆಗಿದೆ.

ಇದನ್ನೂ ಓದಿ: DK Shivakumar: ಬೆಂಗಳೂರಿನ ನೈಸ್‌ ರಸ್ತೆ ಬಳಿ ದೇಶದ ಅತಿ ಎತ್ತರದ ಸ್ಕೈಡೆಕ್!

Continue Reading

ಮಳೆ

Karnataka rain: ಪ್ರವಾಹದ ಭೀಕರತೆ; ಹಳ್ಳದಲ್ಲಿ ತೇಲಿಬಂದ ಎಮ್ಮೆಗಳ ಕಳೇಬರ

Karnataka rain: ಮಳೆಯು ನಾನಾ ಅವಾಂತರವೇ ಸೃಷ್ಟಿಯಾಗಿದೆ. ಹಳ್ಳ-ಕೊಳ್ಳದಲ್ಲಿ ಎಮ್ಮೆಗಳ ಕಳೇಬರ ಪತ್ತೆಯಾಗಿದೆ. ಒಂಟಗೋಡಿ ಗ್ರಾಮಕ್ಕೆ ಘಟಪ್ರಭಾ ನೀರು ನುಗ್ಗಿದ್ದು, ಬೆಳಗಾವಿಯ ಸುರೇಬಾನ-ರಾಮದುರ್ಗ ಸಂಪರ್ಕ ಸೇತುವೆ ಜಲಾವೃತ, ಚಿಕ್ಕೊಳಿ ಸೇತುವೆ ಸಂಚಾರಕ್ಕೆ ಮುಕ್ತವಾಗಿದೆ.

VISTARANEWS.COM


on

By

karnataka rain
Koo

ಬೆಳಗಾವಿ: ಸತತ ಮಳೆಗೆ (Karnataka rain) ಹಲವು ಜಿಲ್ಲೆಗಳು ನಲುಗಿ ಹೋಗಿವೆ. ಗುಡ್ಡ ಕುಸಿತ, ಸೇತುವೆಗಳು ಮುಳುಗಡೆ, ಮನೆಗಳು ಕುಸಿದು ಬೀಳುವ ಸಾಧ್ಯತೆ ಇದೆ. ಈ ನಡುವೆ ಪ್ರವಾಹದ ಭೀಕರತೆಗೆ ಜನರು ಬೆಚ್ಚಿ ಬೀಳುವಂತಾಗಿದೆ. ಹಳ್ಳ-ಕೊಳ್ಳಗಳಲ್ಲಿ ಎಮ್ಮೆಗಳ ಕಳೇಬರ ತೇಲಿ ಬರುತ್ತಿವೆ. ಬೆಳಗಾವಿ ಜಿಲ್ಲೆಯ ಮೂಡಲಗಿ ತಾಲೂಕಿನ ವಡೇರಹಟ್ಟಿ ಗ್ರಾಮದ ಹಳ್ಳದಲ್ಲಿ ಎಮ್ಮೆಗಳ ಮೃತದೇಹ ತೇಲಿ ಬಂದಿದೆ. ಮೂರು ಎಮ್ಮೆಗಳು ತೇಲಿ ಬಂದ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ. ನದಿ ದಾಟಲು ಹೋಗಿ ಅಥವಾ ನೀರು ಹೆಚ್ಚಾಗಿ ಕೊಚ್ಚಿಕೊಂಡು ಬಂದಿರುವ ಶಂಕೆ ಇದೆ.

ತೆರವುಗೊಳಿಸಿದ ಜಾಗದಲ್ಲೆ ಮಣ್ಣು ಕುಸಿತ

ಕೊಡಗು ಜಿಲ್ಲೆಯಾದ್ಯಂತ ಮಳೆ ಕೊಂಚ ತಗ್ಗಿದೆ. ಮಳೆ ಕಡಿಮೆಯಾದರೂ ಮಳೆ ಅನಾಹುತ ಇನ್ನೂ ನಿಂತಿಲ್ಲ. ಮಡಿಕೇರಿ ಮಾದಪು ರಸ್ತೆಯಲ್ಲಿ ಅಲ್ಲಲ್ಲಿ ಗುಡ್ಡ ಕುಸಿಯುವ ಭೀತಿ ಹೆಚ್ಚಾಗಿದೆ. ಮಾದಪುರದಿಂದ 2ಕಿ.ಮೀ ದೂರದಲ್ಲಿ ಗುಡ್ಡದ ಮಣ್ಣು ಕುಸಿಯುತ್ತಿದೆ. ಮಣ್ಣು ತೆರವು ಗೊಳಿಸಿದ ಜಾಗದಲ್ಲೆ ಪದೆಪದೇ ಮಣ್ಣು ಬೀಳುತ್ತಿದೆ. 2018ರಲ್ಲಿ ಭಾರಿ ಪ್ರಮಾಣದಲ್ಲಿ ಗುಡ್ಡ ಕುಸಿದು ಹಾನಿಯಾಗಿದ್ದ ಸ್ಥಳದಲ್ಲೆ ಮತ್ತೆ ಅಪಾಯ ಎದುರಾಗಿದೆ. ಮಳೆ ಹೆಚ್ಚಾಗಿ ಮತ್ತಷ್ಟು ಮಣ್ಣು‌ಕುಸಿದಲ್ಲಿ ಮಾದಪುರ ಮಡಿಕೇರಿ ರಸ್ತೆ ಬಂದ್ ಆಗುವ ಸಾಧ್ಯತೆ ಇದೆ.

ಟಿಬಿ ಡ್ಯಾಂನಲ್ಲಿ ಪ್ರವಾಸಿಗರ ಹುಚ್ಚಾಟ

ಕೊಪ್ಪಳ ತಾಲೂಕಿನ ಮುನಿರಾಬಾದ್ ಬಳಿತುಂಗಭದ್ರಾ ಜಲಾಶಯ ಭರ್ತಿ ಹಿನ್ನೆಲೆಯಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಿದೆ. ಆದರೆ ಜಲಾಶಯದ ಹಿನ್ನೀರಿನಲ್ಲಿ ಚಿಕ್ಕ ಚಿಕ್ಕ ಮಕ್ಕಳೊಂದಿಗೆ ನೀರಿಗಿಳಿದು ಹುಚ್ಚಾಟ ತೋರುತ್ತಿದ್ದಾರೆ. ರಭಸವಾಗಿ ನೀರು ಬರುತ್ತಿದ್ದರೂ, ಸೆಲ್ಫಿ ತೆಗೆದುಕೊಳ್ಳುತ್ತಿದ್ದಾರೆ.

ಒಂಟಗೋಡಿ ಗ್ರಾಮಕ್ಕೆ ನುಗ್ಗಿದ ಘಟಪ್ರಭಾ ನೀರು

ಮಹಾರಾಷ್ಟ್ರದಲ್ಲಿ ಭಾರಿ ಮಳೆ ಹಿನ್ನೆಲೆಯಲ್ಲಿ ಘಟಪ್ರಭಾ ನದಿ ಅಬ್ಬರ ಜೋರಾಗಿದೆ. ಬಾಗಲಕೋಟೆ ಜಿಲ್ಲೆಯ ಮುಧೋಳ ತಾಲ್ಲೂಕಿನ ಒಂಟಗೋಡಿ ಗ್ರಾಮಕ್ಕೆ ನೀರು ನುಗ್ಗಿದೆ. ಗ್ರಾಮದಲ್ಲಿ ಹತ್ತಾರು ಮನೆಗಳು ಜಲಾವೃತಗೊಂಡಿದ್ದು, ಸರಕಾರಿ ಪ್ರಾಥಮಿಕ ಶಾಲೆಗೆ ನೀರು ನುಗ್ಗಿದೆ. ಶಾಲೆ ಮೈದಾನ ನೀರಿಂದ ಭರ್ತಿಯಾಗಿದ್ದು, ಕೆರೆಯಂತಾಗಿದೆ.

ಬೆಳಗಾವಿಯ ಸುರೇಬಾನ-ರಾಮದುರ್ಗ ಸಂಪರ್ಕ ಸೇತುವೆ ಜಲಾವೃತ

ಇತ್ತ ಮಲಪ್ರಭಾ ನದಿ ಅಬ್ಬರ ರಾಮದುರ್ಗ ಪಟ್ಟಣ ಸೇರಿ ಹಳ್ಳಿಗಳಲ್ಲಿ ಪ್ರವಾಹ ಭೀತಿ ಎದುರಾಗಿದೆ. ರಾಮದುರ್ಗ ಪಟ್ಟಣದ ತೇರ ಬಜಾರ್ ಬಳಿಯ ಸಂಪರ್ಕ ಸೇತುವೆ ಜಲಾವೃತಗೊಂಡಿದೆ. ಸುರೇಬಾನ-ರಾಮದುರ್ಗ ಸಂಪರ್ಕ ಸೇತುವೆ ಮುಳುಗಡೆಯಾಗಿದೆ. ಮುಳುಗಿದ ಸೇತುವೆ ಮೇಲೆ ಕಾಲೇಜು ವಿದ್ಯಾರ್ಥಿಗಳು, ಶಾಲಾ ವಾಹನ, ಜನರ ಓಡಾಡುವಂತಾಗಿದೆ. ಖಾನಾಪುರ, ಕಣಕುಂಬಿ ಭಾಗದಲ್ಲಿ ಮಳೆ ಅಬ್ಬರ ಹಿನ್ನೆಲೆಯಲ್ಲಿ ಸವದತ್ತಿ ತಾಲೂಕಿನ ಮುನವಳ್ಳಿ ಬಳಿಯ ನವಿಲು ತೀರ್ಥ ಜಲಾಶಯ ಭರ್ತಿಯಾಗಿದೆ. ಜಲಾಶಯದಿಂದ ಐದು ಸಾವಿರ ಕ್ಯೂಸೆಕ್ ನೀರು ಮಲಪ್ರಭಾ ನದಿಗೆ ಬಿಡುಗಡೆ ಮಾಡಲಾಗಿದೆ.

ಇದನ್ನೂ ಓದಿ: Viral video: ರಸ್ತೆಯಿಂದ ರಾಶಿಗಟ್ಟಲೆ ಮೊಳೆ ಹೆಕ್ಕಿ ತೆಗೆದ ಟ್ರಾಫಿಕ್‌ ಪೊಲೀಸರು; ಪಂಕ್ಚರ್‌ ಮಾಫಿಯಾ ಸಕ್ರಿಯ?

ಚಿಕ್ಕೊಳಿ ಸೇತುವೆ ಸಂಚಾರಕ್ಕೆ ಮುಕ್ತ

ಪಶ್ಚಿಮ ಘಟ್ಟಗಳಲ್ಲಿ ಮಳೆ ಅಬ್ಬರ ಕೊಂಚ ತಣ್ಣಗಾಗಿದೆ. ಬೆಳಗಾವಿಯ ಒಂದು ಸೇತುವೆ ಸಂಚಾರಕ್ಕೆ ಮುಕ್ತ ವಾಗಿದೆ. ಬೆಳಗಾವಿ ಜಿಲ್ಲೆಯ ಗೋಕಾಕ ಪಟ್ಟಣದ ಹೊರವಲಯದ ಚಿಕ್ಕೊಳಿ ಸೇತುವೆ ಸಂಚಾರಕ್ಕೆ ಮುಕ್ತವಾಗಿದೆ. ಲೋಕೊಪಯೋಗಿ,ಕಂದಾಯ,ಹಾಗೂ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸೇತುವೆ ಪರಿಸ್ಥಿತಿಯ ಪರಿಶೀಲಿಸಿದ ನಂತರ ಭಾರಿ ವಾಹನಕ್ಕೆ ಅವಕಾಶ ನೀಡಲಿದ್ದಾರೆ. ರಾಯಬಾಗ ತಾಲೂಕಿನ ಚಿಂಚಲಿ ಗ್ರಾಮದ ಹೊರ ವಲಯದ ಕೃಷ್ಣ ನದಿಯಲ್ಲಿ ಬೃಹತ್ ಗಾತ್ರದ ಮೀನು ಕಾಣಿಸಿಕೊಂಡಿದೆ. ಸುಮಾರು 500 ಕೆ.ಜಿ ತೂಕವಿರುವ ಸಾಧ್ಯತೆ ಇದೆ. ಸ್ಥಳೀಯರ ಮೊಬೈಲ್‌ನಲ್ಲಿ ಬೃಹತ್ ಗಾತ್ರದ ಮೀನು ಸೆರೆಯಾಗಿದೆ.

ಘಟಪ್ರಭೆಯ ಅಬ್ಬರಕ್ಕೆ ನಲುಗುತ್ತಿರುವ ಕುಟುಂಬಗಳು

ಘಟಪ್ರಭೆಯ ಅಬ್ಬರಕ್ಕೆ ಕುಟುಂಬಗಳು ನಲುಗುತ್ತಿವೆ. ಬೆಳಗಾವಿಯ ಗೋಕಾಕ ನಗರಕ್ಕೆ ನೀರು ನುಗ್ಗಿದ್ದರಿಂದ ಉಟ್ಟ ಬಟ್ಟೆಯಲ್ಲಿ ಮನೆ ಬಿಟ್ಟ ಅಜ್ಜಿ ಕುಟುಂಬ ಕಣ್ಣೀರು ಹಾಕುತ್ತಿದೆ. ಗೋಕಾಕ ನಗರದ ಬೋಜಗರ್ ಗಲ್ಲಿಯಲ್ಲಿರುವ ಮೈರಾಬಿ ಬೋಜಗಾ ಎಂಬುವವರು ಮೊಮ್ಮಮ್ಮಕ್ಕಳು ಮಗಳ ಜತೆಗೆ ಕಾಳಜಿ ಕೇಂದ್ರದಲ್ಲಿದ್ದಾರೆ.

ತನ್ನೆರಡು ಗಂಡು ಮಕ್ಕಳ ಅಕಾಲಿಕ ಸಾವಿನಿಂದ ಕಂಗೆಟ್ಟಿರುವ ಅಜ್ಜಿ ಮೈರಾಬಿ, ಗಂಡು ಮಕ್ಕಳಿದಿದ್ದರೆ ಮನೆಯ ವಸ್ತುಗಳೆಲ್ಲ ಹೊರಗೆ ತರುತ್ತಿದ್ದರು. ನನ್ನ ಮಕ್ಕಳು ತೀರಿ ಹೋಗಿದ್ದಾರೆ, ಮನೆಯ ವಸ್ತುಗಳು ನೀರಲ್ಲಿವೆ ಎಂದು ರೋಧಿಸಿದ್ದಾರೆ. ಚುರುಮುರಿ ಭಟ್ಟಿಯಲ್ಲಿ ಕೆಲಸ ಮಾಡಿ ಬಡ ಕುಟುಂಬ ಜೀವನ ಸಾಗಿಸುತ್ತಿದ್ದಾರೆ. ಸದ್ಯ ಕಾಳಜಿ ‌ಕೇಂದ್ರದಲ್ಲಿ ದಿಕ್ಕೆ ತೋಚದಂತ ಸ್ಥಿತಿಯಲ್ಲಿದ್ದಾರೆ.

ಕೃಷ್ಣಾ ನದಿ ತೀರದ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಮಾಂಜರಿ ಗ್ರಾಮದ ಇಟ್ಟಂಗಿ ನಿರ್ಮಾಣ ಘಟಕಗಳು ಜಲಾವೃತಗೊಂಡಿದೆ. ನೀರಿನ ಒಳ ಹರಿವು ಹೆಚ್ಚಾದರೇ ಮಾಂಜರಿ ಗ್ರಾಮಕ್ಕೂ ನೀರು ನುಗ್ಗಲಿದೆ. ಹುಣಶ್ಯಾಳ ಪಿ ಜಿ ಗ್ರಾಮದ ಲಕ್ಷ್ಮಿ ದೇವಾಲಯ ಸೇರಿ 200ಕ್ಕೂ ಅಧಿಕ ಮನೆಗಳು ‌ನೀರಿನಲ್ಲಿ ಮುಳುಗಡೆಯಾಗಿದೆ. ಐದು ಕಾಳಜಿ ಕೇಂದ್ರ ಓಪನ್ ಮಾಡಿ ಇಡೀ ಗ್ರಾಮದ ಜನರನ್ನು ರವಾನಿಸಲಾಗಿದೆ.

ಬಾಗಲಕೋಟೆ ಜಿಲ್ಲೆ ಮುಧೋಳ ತಾಲ್ಲೂಕಿನ ಮಿರ್ಜಿವು ನಲುಗಿ ಹೋಗಿದೆ. ಮಿರ್ಜಿ ಗ್ರಾಮಕ್ಕೆ ನದಿ ನೀರು ನುಗ್ಗಿ ಅವಾಂತರವೇ ಸೃಷ್ಟಿಯಾಗಿದೆ. 87ಕ್ಕೂ ಹೆಚ್ಚು ಮನೆಗಳು ನೀರಲ್ಲಿ ಜಲಾವೃತಗೊಂಡಿದೆ. 87 ಕುಟುಂಬಗಳ 300ಕ್ಕೂ ಹೆಚ್ಚು ಜನರು ಕಾಳಜಿ ಕೇಂದ್ರಕ್ಕೆ ಶಿಫ್ಟ್‌ ಆಗಿದ್ದಾರೆ. ಮಿರ್ಜಿ ಗ್ರಾಮದ ಎತ್ತರ ಪ್ರದೇಶದಲ್ಲಿರುವ ಬಿಬಿ ಮುಧೋಳ, ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿರುವ ಕಾಳಜಿ ಕೇಂದ್ರಗಳನ್ನು ತೆರಯಲಾಗಿದೆ. ಸಾವಿರಾರು ಎಕರೆ ಜಮೀನಿನಲ್ಲಿ ಬೆಳೆದ ಕಬ್ಬು, ಉದ್ದು, ಸೇರಿ ಹಲವು ಬೆಳೆಗಳು ಮುಳುಗಡೆಯಾಗಿದೆ. ಶಾಶ್ವತ ಸ್ಥಳಾಂತರಕ್ಕೆ ಮಿರ್ಜಿ ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಕರ್ನಾಟಕ

BJP-JDS Padayatra: ಬಿಜೆಪಿ-ಜೆಡಿಎಸ್‌ ಪಾದಯಾತ್ರೆಗೆ ಅನುಮತಿ ಕೊಡಲ್ಲ: ಗೃಹ ಸಚಿವ ಪರಮೇಶ್ವರ್‌

BJP-JDS Padayatra: ಈ ಹಿಂದೆ ನಮಗೂ ಅನುಮತಿ ಕೊಟ್ಟಿರಲಿಲ್ಲ, ಆದರೂ ನಾವು ಪಾದಯಾತ್ರೆ ಮಾಡಿದ್ದೆವು. ಅವರು ಪ್ರತಿಭಟನೆ ಮಾಡಲಿ, ತಡೆ ಹಾಕಲು ಹೋಗುವುದಿಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ತಿಳಿಸಿದ್ದಾರೆ.

VISTARANEWS.COM


on

BJP-JDS Padayatra
Koo

ಬೆಂಗಳೂರು: ಬಿಜೆಪಿ, ಜೆಡಿಎಸ್ ಪಾದಯಾತ್ರೆಗೆ (BJP-JDS Padayatra) ನಾವು ಅನುಮತಿ ಕೊಡುವುದಿಲ್ಲ, ಬೇಕಿದ್ದರೆ ಪ್ರತಿಭಟನೆ ಮಾಡಿಕೊಳ್ಳಲಿ. ಈ ಹಿಂದೆ ನಮಗೂ ಅನುಮತಿ ಕೊಟ್ಟಿರಲಿಲ್ಲ, ಆದರೂ ನಾವು ಪಾದಯಾತ್ರೆ ಮಾಡಿದ್ದೆವು. ಅವರು ಪ್ರತಿಭಟನೆ ಮಾಡಲಿ, ತಡೆ ಹಾಕಲು ಹೋಗುವುದಿಲ್ಲ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ್‌ ತಿಳಿಸಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಪಕ್ಷದ ವತಿಯಿಂದ ರಾಜಕೀಯ ಮಾಡುತ್ತೇವೆ. ಆದರೆ ಸರ್ಕಾರ ಉಪಯೋಗಿಸಿ ರಾಜಕೀಯ ಮಾಡಲ್ಲ. ಅವರು ರಾಜಕೀಯ ಮಾಡುತ್ತಿದ್ದಾರೆ, ನಾವೂ ರಾಜಕೀಯ ಮಾಡಬೇಕಾಗುತ್ತದೆ. ಮುಡಾ ಹಗರಣ ತನಿಖೆಗೆ ಆಯೋಗ ರಚನೆ ಮಾಡಿದ್ದೇವೆ. ವರದಿಯಲ್ಲಿ ತಪ್ಪು ಅಂತ ಬಂದರೆ ಕ್ರಮ ತೆಗೆದುಕೊಳ್ಳುತ್ತೇವೆ. ಬಿಜೆಪಿ, ಜೆಡಿಎಸ್ ಪಾದಯಾತ್ರೆಗೆ ಮಾತ್ರ ಅನುಮತಿ ಕೊಡುವುದಿಲ್ಲ, ಆದರೂ ಪಾದಯಾತ್ರೆ ಮಾಡಲು ಮುಂದಾದರೆ ತಡೆಯಲು ಹೋಗಲ್ಲ ಎಂದು ಹೇಳಿದ್ದಾರೆ.

ಕಾಂಗ್ರೆಸ್‌ನಿಂದ ಕೌಂಟರ್ ಪಾದಯಾತ್ರೆ ಬಗ್ಗೆ ಪ್ರತಿಕ್ರಿಯಿಸಿ, ಆ ಬಗ್ಗೆ ಪಕ್ಷದ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ರಣನೀತಿ ಮಾಡುತ್ತಿದ್ದಾರೆ ಎಂದು ಹೇಳಿದರು.

ಇದನ್ನೂ ಓದಿ | OBC Reservation: ಒಬಿಸಿ ಮೀಸಲಾತಿ ಹೆಚ್ಚಳಕ್ಕೆ ಸುಪ್ರೀಂ ಕೋರ್ಟ್‌ ತಡೆ; ನಿತೀಶ್‌ ಕುಮಾರ್‌ಗೆ ಮುಖಭಂಗ!ಇದನ್ನೂ ಓದಿ |

ರಾಜ್ಯದಲ್ಲಿ ಭಯದ ವಾತವರಣದ ಕಾರಣ ಬಂಡವಾಳ ಬರುತ್ತಿಲ್ಲ ಎಂಬ ನಿರ್ಮಲಾ ಸೀತಾರಾಮನ್ ಹೇಳಿಕೆಗೆ ಪ್ರತಿಕ್ರಿಯಿಸಿ, ಅನೇಕ ಕಾರಣಗಳಿಂದ ಕಂಪನಿಗಳು, ಆಯ್ಕೆಗಳನ್ನು ಇಟ್ಟುಕೊಂಡೇ ಬರುತ್ತವೆ. ಚೆನ್ನೈ, ಕರ್ನಾಟಕ, ಮಹಾರಾಷ್ಟ್ರ ಅಂತ ಆಯ್ಕೆ ಇರುತ್ತವೆ. ಅವರಿಗೆ ಎಲ್ಲಿ ಹೆಚ್ಚು ಸೌಲಭ್ಯಗಳು ಸಿಗುತ್ತವೋ ಅದರ ಪ್ರಕಾರ ತೀರ್ಮಾನ ಮಾಡುತ್ತಾರೆ. ಇಲ್ಲಿಯವರೆಗೆ ಯಾರು ಬಂದು ಹೊರಗೆ ಹೋಗುತ್ತೇವೆ ಎಂದು ಹೇಳಿಲ್ಲ. ಸುಮ್ಮನೆ ಇಲ್ಲಸಲ್ಲದ ಆಪಾದನೆ ಮಾಡುವುದು ಸರಿಯಲ್ಲ ಎಂದರು.

ಬಜೆಟ್‌ನಲ್ಲಿ ಆಂಧ್ರ ಸಿಎಂ ಚಂದ್ರಬಾಬು ನಾಯ್ಡುಗೆ 15 ಸಾವಿರ ಕೋಟಿ ಕೊಟ್ಟಿದ್ದಾರೆ. ಕೊಡಬೇಡಿ ಎನ್ನಲ್ಲ, ಆದರೆ ಎಲ್ಲರಿಗೂ ಸರಿ ಸಮಾನವಾಗಿ ಕೊಡಬೇಕು. ನಮ್ಮ ಪಾಲನ್ನು ನಮಗೆ ಕೊಡಿ ಅಂತ ದೆಹಲಿ, ಸುಪ್ರೀಂ ಕೋರ್ಟ್‌ವರೆಗೆ ತಲುಪಿದ್ದೇವೆ. ಕೊಟ್ಟಿದ್ದೀವಿ, ಕೊಟ್ಟಿದ್ದೀವಿ ಎನ್ನುತ್ತಾರೆ. ಏನು ಕೊಟ್ಟಿದ್ದೀವಿ ಅಂತ ಹೇಳಬೇಕಲ್ಲವೇ? ಭದ್ರಾ ಯೋಜನೆಗೆ ಹಣಕೊಡಬೇಕಿತ್ತು, ಕೊಟ್ಟಿಲ್ಲ. ಈ ರೀತಿ ಮಲತಾಯಿ ದೋರಣೆ ತೋರಿಸಿ, ಬೆಂಗಳೂರಿಗೆ ಬಂದು ಎಲ್ಲಾ ಕೊಟ್ಟಿದ್ದೀವಿ ಎಂದರೆ ಹೇಗೆ ಎಂದು ಪ್ರಶ್ನಿಸಿದರು.

ಬೆಂಗಳೂರು ದೇಶದ ಪ್ರತಿಷ್ಠಿತ ನಗರ, ಇದನ್ನ ಪ್ರಪಂಚಕ್ಕೆ ತೋರಿಸಬೇಕಲ್ವಾ? ನೀತಿ ಆಯೋಗಕ್ಕೆ ಮಮತಾ ಹೋಗಿ ವಾಕ್ ಔಟ್ ಮಾಡಿ ಬಂದಿದ್ದಾರೆ. ನಾವು ಹೋಗಿ ವಾಕ್ ಔಟ್ ಮಾಡಬೇಕಿತ್ತಾ? ರಾಜ್ಯ-ಕೇಂದ್ರದ ನಡುವಿನ ಸಂಬಂಧ ಚೆನ್ನಾಗಿರಬೇಕು. ಅದಕ್ಕೆ ರಾಜ್ಯವನ್ನು ಚೆನ್ನಾಗಿ ನಡೆಸಿಕೊಳ್ಳಬೇಕಲ್ವಾ ಎಂದರು.

ಬೆಂಗಳೂರಿನಲ್ಲಿ ನಾಯಿ ಮಾಂಸ ದಂಧೆ ಆರೋಪದ ಬಗ್ಗೆ ಪ್ರತಿಕ್ರಿಯಿಸಿ, ರೈಲ್ವೆ ನಿಲ್ದಾಣದಲ್ಲಿ ಗಲಾಟೆ ಆಗಿದೆ. ಇದಾದ ಮೇಲೆ ಆರೋಗ್ಯ ಇಲಾಖೆಯವರು, ಪೊಲೀಸರು ಸ್ಯಾಂಪಲ್‌ ಅನ್ನು ಲ್ಯಾಬ್‌ಗೆ ಕಳುಹಿಸಿದ್ದರು. ವರದಿಯಲ್ಲಿ ಮೇಕೆ ಮಾಂಸ ಎಂದು ಬಂದಿದೆ. ಸುಳ್ಳು ಆರೋಪ ಮಾಡಿದ್ದ ಪುನೀತ್ ಕೆರೆಹಳ್ಳಿ ಮತ್ತು ತಂಡದ ಮೇಲೆ ಕ್ರಮ ತೆಗೆದುಕೊಂಡಿದ್ದೇವೆ. ಗೊಂದಲ ಸೃಷ್ಟಿ ಮಾಡಬಾರದು ಎಂದು ಕ್ರಮ ಆಗಿದೆ. ಹೊರ ರಾಜ್ಯದಿಂದ ಮಾಂಸ ತಂದು ಮಾರೋದು ಹೊಸದಲ್ಲ, ಜನರಿಗೆ ಗೊಂದಲ ಬೇಡ, ಬಂದಿದ್ದು ಮೇಕೆ ಮಾಂಸ ಎಂದು ಸ್ಪಷ್ಟನೆ ನೀಡಿದರು.

Continue Reading

ಹಾಸನ

Train services: ಎಡಕುಮೇರಿಯಲ್ಲಿ ಭೂಕುಸಿತ; ಆಗಸ್ಟ್‌ 4ರವರೆಗೆ 14 ರೈಲುಗಳ ಸಂಚಾರ ರದ್ದು

Train services: ಯಡಕುಮೇರಿ ನಡುವೆ ಭೂಕುಸಿತ (landslide) ಸಂಭವಿಸಿದ ಕಾರಣ ಸುಮಾರು 14 ರೈಲುಗಳ ಸಂಚಾರವನ್ನು ಆಗಸ್ಟ್‌ 4ರವರೆಗೆ ರದ್ದುಪಡಿಸಲಾಗಿದೆ. ಈ ಕುರಿತು ನೈರುತ್ಯ ರೈಲ್ವೆಯ ಮೈಸೂರು ವಿಭಾಗದ ಕಡಗರವಳ್ಳಿ ವಿಭಾಗದ ಅಧಿಕಾರಿಗಳು (trains are Cancelled) ತಿಳಿಸಿದ್ದಾರೆ.

VISTARANEWS.COM


on

By

train service
Koo

ಹಾಸನ/ಮೈಸೂರು: ಕಳೆದ ಜು.27ರಂದು ಹಾಸನ ಜಿಲ್ಲೆಯ (Hassan news) ಮಲೆನಾಡು ‌ಭಾಗದಲ್ಲಿ ಮಳೆಯ ಆರ್ಭಟಕ್ಕೆ (Karnataka Rain News) ಶಿರಾಡಿ ಘಾಟಿಯ (Shiradi Ghat) ರೈಲ್ವೆ ಹಳಿಯ (Railway Track) ಮೇಲೆ ಮಣ್ಣು (landslide) ಕುಸಿದಿತ್ತು. ಸಕಲೇಶಪುರ (Sakaleshpur) ತಾಲ್ಲೂಕಿನ ಕಡಗರವಳ್ಳಿ-ಎಡಕುಮೇರಿ ಮಧ್ಯೆ ರೈಲ್ವೆ ಹಳಿಯ ಮೇಲೆ ಮಣ್ಣು ಕುಸಿದ ಪರಿಣಾಮ ರೈಲು ಓಡಾಟ ಬಂದ್‌ (Train services) ಆಗಿದೆ.

Train Services
train services

ನೈರುತ್ಯ ರೈಲ್ವೆಯ ಮೈಸೂರು ವಿಭಾಗದ ಯಡಕುಮೇರಿ ಮತ್ತು ಕಡಗರವಳ್ಳಿ ವಿಭಾಗದ ನಡುವೆ ಭೂಕುಸಿತ ಸಂಭವಿಸಿದ ಕಾರಣಕ್ಕೆ ಆ.4ರವರೆಗೆ 14 ರೈಲುಗಳ ಓಡಾಟ (trains are Cancelled) ರದ್ದುಪಡಿಸಲಾಗಿದೆ. ಯಾವ್ಯಾವ ರೈಲುಗಳ ಓಡಾಟ ಸ್ಥಗಿತವಾಗಿದೆ ಎಂಬುದರ ಮಾಹಿತಿ ಇಲ್ಲಿದೆ..

train services
train services

ಇದನ್ನೂ ಓದಿ: Shiradi Landslide: ಹಳಿ ಮೇಲೆ ಭೂಕುಸಿತ, ಬೆಂಗಳೂರು- ಮಂಗಳೂರು ರೈಲುಗಳು 15 ದಿನ ಬಂದ್, 400 ಕಾರ್ಮಿಕರಿಂದ ತೆರವು ಕಾರ್ಯಾಚರಣೆ

  1. ರೈಲು ಸಂಖ್ಯೆ 16511 ಕೆಎಸ್ಆರ್ ಬೆಂಗಳೂರು – ಕಣ್ಣೂರು ರೈಲು ಜು. 29 ರಿಂದ ಆ.03ರವರೆಗೆ ರದ್ದು
  2. ರೈಲು ಸಂಖ್ಯೆ 16512 ಕಣ್ಣೂರು – ಕೆಎಸ್ಆರ್ ಬೆಂಗಳೂರು 30.07.2024 ರಿಂದ 04.08.2024 ರದ್ದು
  3. ರೈಲು ಸಂಖ್ಯೆ 16595 ಕೆಎಸ್ಆರ್ ಬೆಂಗಳೂರು – ಕಾರವಾರ 29.07.2024 ರಿಂದ 03.08.2024 ರದ್ದು
  4. ರೈಲು ಸಂಖ್ಯೆ 16596 ಕಾರವಾರ – ಕೆಎಸ್ಆರ್ ಬೆಂಗಳೂರು 30.07.2024 ರಿಂದ 04.08.2024 ರದ್ದು
  5. ರೈಲು ಸಂಖ್ಯೆ 16585 SMVT ಬೆಂಗಳೂರು – ಮುರ್ಡೇಶ್ವರ 29.07.2024 ರಿಂದ 03.08.2024 ರದ್ದು
  6. ರೈಲು ಸಂಖ್ಯೆ 16586 ಮುರ್ಡೇಶ್ವರ – SMVT ಬೆಂಗಳೂರು 30.07.2024 ರಿಂದ 04.08.2024 ರದ್ದು
  7. ರೈಲು ಸಂಖ್ಯೆ 07377 ವಿಜಯಪುರ – ಮಂಗಳೂರು ಕೇಂದ್ರ 29.07.2024 ರಿಂದ 03.08.2024 ರದ್ದು
Train services
train services
  1. ರೈಲು ಸಂಖ್ಯೆ 07378 ಮಂಗಳೂರು ಸೆಂಟ್ರಲ್ – ವಿಜಯಪುರ 30.07.2024 ರಿಂದ 04.08.2024 ರದ್ದು
  2. ರೈಲು ಸಂಖ್ಯೆ 16515 ಯಶವಂತಪುರ – ಕಾರವಾರ 29.07.2024, 31.07.2024 & 02.08.2024 ರದ್ದುಗೊಂಡಿದೆ
  3. ರೈಲು ಸಂಖ್ಯೆ 16516 ಕಾರವಾರ – ಯಶವಂತಪುರ 30.07.2024, 01.08.2024 &03.08.2024 ರದ್ದುಗೊಂಡಿದೆ
  4. ರೈಲು ಸಂಖ್ಯೆ 16575 ಯಶವಂತಪುರ – ಮಂಗಳೂರು ಜಂಕ್ಷನ್ 30.07.2024 ಮತ್ತು 01.08.2024 ರದ್ದು
  5. ರೈಲು ಸಂಖ್ಯೆ 16576 ಮಂಗಳೂರು ಜಂಕ್ಷನ್ – ಯಶವಂತಪುರ 31.07.2024 ಮತ್ತು 02.08.2024 ರದ್ದು
  6. ರೈಲು ಸಂಖ್ಯೆ 16539 ಯಶವಂತಪುರ – ಮಂಗಳೂರು ಜಂಕ್ಷನ್ 03.08.2024 ರದ್ದು
  7. ರೈಲು ಸಂಖ್ಯೆ 16540 ಮಂಗಳೂರು ಜಂಕ್ಷನ್ – ಯಶವಂತಪುರ 04.08.2024 ರದ್ದು
train services
train services

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading
Advertisement
signal free corridor
ಪ್ರಮುಖ ಸುದ್ದಿ26 seconds ago

Signal-Free Corridor: ಬೆಂಗಳೂರಿಗೆ 17 ಸಿಗ್ನಲ್ ಮುಕ್ತ ಕಾರಿಡಾರ್‌; ಯಾವ ಮಾರ್ಗಗಳಲ್ಲಿ ನೋಡಿ

karnataka rain
ಮಳೆ12 mins ago

Karnataka rain: ಪ್ರವಾಹದ ಭೀಕರತೆ; ಹಳ್ಳದಲ್ಲಿ ತೇಲಿಬಂದ ಎಮ್ಮೆಗಳ ಕಳೇಬರ

Tharun Sudhir and Sonal modeled by eco-friendly invitations
ಸ್ಯಾಂಡಲ್ ವುಡ್16 mins ago

Tharun Sudhir: ಪರಿಸರ ಸ್ನೇಹಿ ಇನ್ವಿಟೇಷನ್ ಮೂಲಕ ಮಾದರಿಯಾದ ಸೋನಾಲ್ ಮತ್ತು ತರುಣ್!

Ranbir Kapoor
ದೇಶ23 mins ago

Ranbir Kapoor: ಮೋದಿಯದ್ದು ‘ಆಯಸ್ಕಾಂತದಂಥ ವ್ಯಕ್ತಿತ್ವ’ ಎಂದ ರಣಬೀರ್‌ ಕಪೂರ್;‌ ಕನ್ನಡಿಗನಿಗೆ ನಟ ಹೇಳಿದ ಕತೆ ಏನು?

Viral News
ವೈರಲ್ ನ್ಯೂಸ್35 mins ago

Viral News: ಮನೆಯೊಳಗೆ ವಿಚಿತ್ರ ವಾಸನೆ, ಇಡೀ ಕುಟುಂಬ ಅಸ್ವಸ್ಥ; ರಹಸ್ಯ ಕೆಮೆರಾದಲ್ಲಿತ್ತು ಶಾಕಿಂಗ್‌ ದೃಶ್ಯ!

Actor Dhanush Shares FIRST Post After Speech
ಕಾಲಿವುಡ್52 mins ago

Actor Dhanush: ಮನೆ ಬಗ್ಗೆ ಮಾತಾಡಿ ಸಿಕ್ಕಾಪಟ್ಟೆ ಟ್ರೋಲ್ ಆದ ಬೆನ್ನಲ್ಲೇ ಹೊಸ ಪೋಸ್ಟ್‌ ಹಂಚಿಕೊಂಡ ನಟ ಧನುಷ್‌!

Curry Leaves
ಆರೋಗ್ಯ54 mins ago

Curry Leaves: ಇದರ ಮಹತ್ವ ತಿಳಿದರೆ ನೀವು ಇನ್ನೆಂದೂ ಕರಿ ಬೇವಿನ ಎಲೆಯನ್ನು ಪಕ್ಕಕ್ಕೆ ಎತ್ತಿಡುವುದಿಲ್ಲ!

BPNL Recruitment 2024
ಉದ್ಯೋಗ1 hour ago

BPNL Recruitment 2024: ಭಾರತೀಯ ಪಶುಪಾಲನಾ ನಿಗಮದಲ್ಲಿದೆ 2,250 ಹುದ್ದೆ; 10ನೇ ತರಗತಿ ಪಾಸಾದವರೂ ಅಪ್ಲೈ ಮಾಡಿ

BJP-JDS Padayatra
ಕರ್ನಾಟಕ1 hour ago

BJP-JDS Padayatra: ಬಿಜೆಪಿ-ಜೆಡಿಎಸ್‌ ಪಾದಯಾತ್ರೆಗೆ ಅನುಮತಿ ಕೊಡಲ್ಲ: ಗೃಹ ಸಚಿವ ಪರಮೇಶ್ವರ್‌

Physical Abuse
ದೇಶ1 hour ago

Physical Abuse: ತಂಗಿ ಮೇಲೆ 13 ವರ್ಷದ ಬಾಲಕನಿಂದ ಅತ್ಯಾಚಾರ, ಕೊಲೆ; ಕೇಸ್‌ ಮುಚ್ಚಲು ತಾಯಿಯೇ ಸಾಥ್!

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka rain
ಮಳೆ12 mins ago

Karnataka rain: ಪ್ರವಾಹದ ಭೀಕರತೆ; ಹಳ್ಳದಲ್ಲಿ ತೇಲಿಬಂದ ಎಮ್ಮೆಗಳ ಕಳೇಬರ

Tungabhadra Dam
ಕೊಪ್ಪಳ20 hours ago

Tungabhadra Dam: ಕಾಲುವೆಯಲ್ಲಿ ಬಾಲಕರ ಈಜಾಟ; ಅಧಿಕಾರಿಗಳಿಗೆ ಪೀಕಲಾಟ!

Elephant attack
ಮಳೆ22 hours ago

Elephant attack : ಮಳೆ ಮಧ್ಯೆ ಮಲೆನಾಡಿನಲ್ಲಿ ಕಾಡಾನೆಗಳ ಕಾಟ; ಪ್ರವಾಹಕ್ಕೆ ಸಿಲುಕಿದ ಪಟಗುಂದಿ ಗ್ರಾಮ

karnataka Rain
ಮಳೆ24 hours ago

Karnataka Rain : ಮಳೆ ನಿಂತರೂ ಕಡಿಮೆಯಾಗದ ಅನಾಹುತ; ಮಾದಪುರ ಟೌನ್ ಸಮೀಪ ಗುಡ್ಡ ಕುಸಿತ

karnataka Rain
ಮಳೆ1 day ago

Karnataka Rain : ರಭಸವಾಗಿ ಬೀಸಿದ ಗಾಳಿಗೆ ಮನೆ ಮೇಲೆ ಬಿದ್ದ ತೆಂಗಿನ ಮರ; ನದಿ ನೀರು ಸೇವಿಸದಂತೆ ಸೂಚನೆ

Karnataka weather Forecast
ಮಳೆ2 days ago

Karnataka Weather : ವೀಕೆಂಡ್‌ ಮೋಜಿಗೆ ಮಳೆರಾಯ ಅಡ್ಡಿ; ಬೆಂಗಳೂರಲ್ಲಿ ಮೋಡ ಕವಿದ ವಾತಾವರಣ

ramanagara news
ರಾಮನಗರ2 days ago

Ramanagar News : ರಾಮನಗರದಲ್ಲಿ ಎರಡು ಜಡೆ ಹಾಕಿಲ್ಲವೆಂದು ವಿದ್ಯಾರ್ಥಿನಿಯರ ಕೂದಲು ಕತ್ತರಿಸಿದ ಶಿಕ್ಷಕರು ಅಮಾನತು

karnataka rain
ಮಳೆ2 days ago

Karnataka Rain : ಕಾವೇರಿ ನದಿ ತೀರದಲ್ಲಿ ಪ್ರವಾಹ ಭೀತಿ; ಮುತ್ತತ್ತಿಗೆ ಪ್ರವಾಸಿಗರ ನಿಷೇಧ, ಶ್ರೀರಂಗಪಟ್ಟಣದಲ್ಲಿ ಪಿಂಡ ಪ್ರದಾನಕ್ಕೆ ಬ್ರೇಕ್

Ankola landslide
ಉತ್ತರ ಕನ್ನಡ3 days ago

Ankola landslide: ಅಂಕೋಲಾ-ಶಿರೂರು ಗುಡ್ಡ ಕುಸಿತ; ನಾಳೆಯಿಂದ ಪ್ಲೋಟಿಂಗ್ ಪ್ಲಾಟ್‌ಫಾರಂ ಕಾರ್ಯಾಚರಣೆ

karnataka rain
ಮಳೆ3 days ago

Karnataka Rain : ಉಕ್ಕಿ ಹರಿಯುವ ನೇತ್ರಾವತಿ ನದಿಯಲ್ಲಿ ತೇಲಿ ಬಂದ ಜೀವಂತ ಹಸು

ಟ್ರೆಂಡಿಂಗ್‌