Tumkur News : ನಿಲ್ಲದ ಗೊಲ್ಲರ ಮೈಲಿಗೆ ಸಂಪ್ರದಾಯ! ಮಗು-ಬಾಣಂತಿಯ ರಕ್ಷಿಸಿದ ಗುಬ್ಬಿ ನ್ಯಾಯಾಧೀಶೆ - Vistara News

ಕರ್ನಾಟಕ

Tumkur News : ನಿಲ್ಲದ ಗೊಲ್ಲರ ಮೈಲಿಗೆ ಸಂಪ್ರದಾಯ! ಮಗು-ಬಾಣಂತಿಯ ರಕ್ಷಿಸಿದ ಗುಬ್ಬಿ ನ್ಯಾಯಾಧೀಶೆ

Tumkur News : ಕಾಡುಗೊಲ್ಲರ ಸೂತಕದ ಸಂಪ್ರದಾಯಕ್ಕೆ (kadugollara Tradition) ಮಗುವೊಂದು ಬಲಿಯಾಗಿತ್ತು. ಈ ಘಟನೆ ಮಾಸುವ ಮುನ್ನವೇ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ಖಚಿತ ಮಾಹಿತಿ ಮೇರೆಗೆ ಗುಬ್ಬಿ ನ್ಯಾಯಾಲಯದ ನ್ಯಾಯಾಧೀಶೆ (Gubbi Court Judge) ಉಂಡಿ ಮಂಜುಳ ಶಿವಪ್ಪ ಭೇಟಿ ನೀಡಿ ಮಗು ಬಾಣಂತಿಯನ್ನು ರಕ್ಷಣೆ ಮಾಡಿದ್ದಾರೆ.

VISTARANEWS.COM


on

tradition of the unending gollas! Gubbi judge rescues baby mother
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ತುಮಕೂರು: ದೇವರಿಗೆ ಮೈಲಿಗೆ ಆಗುತ್ತೆ, ಸೂತಕವು ಆಗಿ ಬರುವುದಿಲ್ಲ ಎಂದು ಬಾಣಂತಿ, ಹಸುಗೂಸನ್ನೇ ಊರಿನಿಂದ ಹೊರಗಿಟ್ಟ ಮೌಡ್ಯ ಆಚರಣೆಯಿಂದಾಗಿ ಮಗುವೊಂದು ತುಮಕೂರಲ್ಲಿ (Tumkur News) ಬಲಿಯಾಗಿತ್ತು. ಈ ಘಟನೆ ಮಾಸುವ ಮುನ್ನವೇ ಮತ್ತೊಂದು ಪ್ರಕರಣ ಬೆಳಕಿಗೆ ಬಂದಿದೆ. ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ವರದೇನಹಳ್ಳಿ ಗೊಲ್ಲರಹಟ್ಟಿಯಲ್ಲಿ (kadugollara Tradition) ಕಳೆದ ಕೆಲವು ದಿನಗಳಿಂದ ಮಗು ಬಾಣಂತಿಯನ್ನು ಊರಿಂದಾಚೆಗೆ ಇಡಲಾಗಿದೆ. ಪ್ರಾಣಿಗಳಿಗೂ ಯೋಗ್ಯವಲ್ಲದ ಚಿಕ್ಕ ಗುಡಿಸಲಿನಲ್ಲಿ ಮಗು ಬಾಣಂತಿಯನ್ನು ಇರಿಸಲಾಗಿದೆ.

tradition of the unending gollas! Gubbi judge rescues baby mother in tumkur

ಖಚಿತ ಮಾಹಿತಿ ಮೇರೆಗೆ ಗುಬ್ಬಿ ನ್ಯಾಯಾಲಯದ ನ್ಯಾಯಾಧೀಶೆ (Gubbi Court Judge) ಉಂಡಿ ಮಂಜುಳ ಶಿವಪ್ಪ ಗ್ರಾಮಕ್ಕೆ ಭೇಟಿ ನೀಡಿ ಮಗು ಮತ್ತು ಬಾಣಂತಿಯನ್ನು ರಕ್ಷಣೆ ಮಾಡಿದ್ದಾರೆ. ಮಗುವನ್ನು ತಾವೇ ಕೈಗೆತ್ತಿಕೊಂಡು ಮನೆಗೆ ಕರೆತಂದಿದ್ದಾರೆ. ಸರಿಯಾದ ಸಮಯಕ್ಕೆ ಸ್ಥಳಕ್ಕೆ ಭೇಟಿ ನೀಡಿ ಮಗು ಮತ್ತು ಬಾಣಂತಿಯನ್ನು ಮನೆಗೆ ಬಿಟ್ಟು ಬಿದ್ದಿದ್ದಾರೆ.

Gubbi judge rescues baby mother after warning to people

ಮತ್ತೆ ಮರುಕಳಿಸಿದರೆ ಕಾನೂನು ಕ್ರಮದ ಎಚ್ಚರಿಕೆ

ಮಗು-ಬಾಣಂತಿಯನ್ನು ಮನೆಗೆ ಬಿಟ್ಟು ಬಂದ ಬಳಿಕ ಕುಟುಂಬಸ್ಥರಿಗೆ ನ್ಯಾಯಾಧೀಶೆ ಉಂಡಿ ಮಂಜುಳ ಶಿವಪ್ಪನವರು ವಾರ್ನಿಂಗ್‌ ನೀಡಿದ್ದಾರೆ. ಈ ರೀತಿಯ ಘಟನೆ ಮತ್ತೆ ಏನಾದರೂ ಮರುಕಳಿಸಿದರೆ ಕಾನೂನು ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿ ಬಂದಿದ್ದಾರೆ. ಸದ್ಯ ಮನೆಯೊಳಗೆ ಮಗು ಮತ್ತು ಬಾಣಂತಿ ಸುರಕ್ಷಿತವಾಗಿದ್ದಾರೆ.

ಇದನ್ನೂ ಓದಿ: Rakhi Sawant: ಮಗುವನ್ನು ಹೆರಲು ನಾನು ಸಮರ್ಥಳು ಎಂದ ರಾಖಿ ಸಾವಂತ್!

ವಿಪರೀತ ಶೀತದಿಂದ ಮೃತಪಟ್ಟಿದ್ದ ಮಗು

ತುಮಕೂರು (Tumkur News) ಸಮೀಪದ ಮಲ್ಲೇನಹಳ್ಳಿ ಗೊಲ್ಲರಹಟ್ಟಿಯಲ್ಲಿ (kadugollara Tradition) ಕಳೆದ ಜುಲೈ 26ರಂದು ಸೂತಕದ ಸಂಪ್ರದಾಯಕ್ಕೆ ಮಗುವೊಂದು ಮೃತಪಟ್ಟಿತ್ತು. ಸಿದ್ದೇಶ್ ಮತ್ತು ವಸಂತ ದಂಪತಿಯ ಮಗು ವಿಪರೀತ ಶೀತದಿಂದ (cold weather) ಬಳಲಿ ಮೃತಪಟ್ಟಿತ್ತು.

ಶೀತ ಹೆಚ್ಚಾಗಿದ್ದರಿಂದ ಮಗುವನ್ನು ತುಮಕೂರು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿತ್ತು. ಜಿಲ್ಲಾಸ್ಪತ್ರೆಯ ಐಸಿಯುನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಹಸುಗೂಸು ಜು.26ರಂದು ಪ್ರಾಣಬಿಟ್ಟಿತ್ತು. ತಮ್ಮ ದೇವರಿಗೆ ಸೂತಕ ಆಗಲ್ಲ ಎಂದು ಬಾಣಂತಿ, ಮಗುವನ್ನು ಕುಟುಂಬಸ್ಥರು ಊರ ಹೊರಗಿಟ್ಟಿದ್ದರು. ಮಳೆ, ಗಾಳಿಯಿದ್ದರೂ ತಾಯಿ, ಮಗು ಊರ ಹೊರಗಿನ ಚಿಕ್ಕ ಗುಡಿಸಲಿನಲ್ಲಿಯೇ ವಾಸವಿದ್ದರು. ಆದರೆ ಮೌಡ್ಯತೆಯೇ ಮಗುವಿನ ಜೀವ ತೆಗೆದಿತ್ತು.

ದೇವರ ಹೆಸರಲ್ಲಿ ಮೌಢ್ಯ

ಮನುಷ್ಯ ಎಷ್ಟೇ ಆಧುನಿಕತೆಯತ್ತ ಮುಖ ಮಾಡುತ್ತಿದ್ದರೂ, ಚಂದ್ರನ ಮೇಲೆ ರಾಕೆಟ್‌ ಹಾರಿದರೂ ಕೆಲವು ಕಡೆಗಳಲ್ಲಿ ಮೌಡ್ಯಾಚರಣೆಗಳು ಮಾತ್ರ ಇಂದಿಗೂ ರೂಢಿಯಲ್ಲಿವೆ. ದೇವರು, ಸಂಪ್ರದಾಯದ ಹೆಸರಿನಲ್ಲಿ ಮನುಷ್ಯರನ್ನೇ ಕೀಳಾಗಿ ಕಾಣುವ ಪರಿಪಾಠ ಇನ್ನೂ ಕೆಲವು ಸಮುದಾಯಗಳಲ್ಲಿ ಹಾಗೆಯೇ ಇದೆ. ಗೊಲ್ಲರಹಟ್ಟಿಯಲ್ಲಿ ವಾಸಿಸುವ ಕಾಡುಗೊಲ್ಲರಲ್ಲಿ ಇಂದಿಗೂ ಕೂಡ ಸೂತಕದ ಸಂಪ್ರದಾಯ ಆಚರಣೆಯಲ್ಲಿದೆ. ತಮ್ಮ ದೇವರಿಗೆ ಸೂತಕ ಆಗಲ್ಲ ಎಂದು ಬಾಣಂತಿ ಮತ್ತು ಹಸುಗೂಸನ್ನೇ ಊರಿನಿಂದ ಹೊರಗಿಡುತ್ತಾರೆ. ಎರಡು ತಿಂಗಳು ಊರ ಹೊರಗೆ ನಿರ್ಮಿಸಿರುವ ಚಿಕ್ಕ ಗುಡಿಸಲಿನಲ್ಲಿಯೇ ಇರಬೇಕು.

ಊರಿಗೆ ಕೇಡು ಬರುವ ಭೀತಿ

ನಮ್ಮ ದೇವರಿಗೆ ಸೂತಕ ಆಗಲ್ಲ. ಹಾಗಾಗಿ ನಾವು ಬಾಣಂತಿಯನ್ನು ಒಳಗೆ ಬಿಟ್ಟುಕೊಳ್ಳುವುದಿಲ್ಲ. ಸೂತಕದ ಬಾಣಂತಿ ಊರಿಗೆ ಬಂದರೆ ಕೇಡು ಆಗುತ್ತದೆ ಎಂಬುದು ಈ ಊರಿನವರ ನಂಬಿಕೆ. ಕಾಡುಗೊಲ್ಲರ ಜುಂಜಪ್ಪ ಹಾಗೂ ಯತ್ತಪ್ಪ ದೇವರಿಗೆ ಸೂತಕ ಆಗಲ್ಲ. ಹಿಂದಿನಿಂದಲ್ಲೂ ಈ ಆಚರಣೆ ಮಾಡಿಕೊಂಡು ಬರಲಾಗುತ್ತಿದೆ. ಮಳೆ, ಗಾಳಿ ಏನೇ ಬರಲಿ, ಅವರು ಇದ್ದರೂ, ಸತ್ತರೂ ಊರಿಂದ ಆಚೆಯೇ ಇರಬೇಕು. ಮನೆಯೊಳಗೆ ಬಿಟ್ಟುಕೊಳ್ಳಲು ಸಾಧ್ಯವೇ ಇಲ್ಲ ಎಂಬುದು ಊರಿನವರ ಉತ್ತರವಾಗಿತ್ತು.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

CM Siddaramaiah: ʼಮುಡಾದ ತಪ್ಪು, ನಾನು ಸಿಎಂ ಅಂತ ಸೈಟ್‌ ಬಿಡೋಕೆ ಆಗುತ್ತಾ?ʼ ಸಿಎಂ ಸಿದ್ದರಾಮಯ್ಯ

CM Siddaramaiah: ʼಬಿಜೆಪಿಯವರಿಗೆ ಏನೂ ವಿಷಯ ಇಲ್ಲ. ಅವರು ಆರ್. ಎಸ್.ಎಸ್ ಹೇಳಿದಂತೆ ಕೇಳ್ತಾರೆ. ಮುಡಾದಲ್ಲಿ ಏನು ವಿಷಯ ಇದೆ? ಬಿಜೆಪಿ ಅವರೇ ಕೊಟ್ಟು ಅವರೇ ಆರೋಪ ಮಾಡಿದರೆ, ಕಾನೂನು ಬಾಹಿರ ಎಂದು ಹೇಳಿದರೆ ಹೇಗೆ? ನಾನೇಕೆ ರಾಜೀನಾಮೆ ನೀಡಲಿ?’ ಎಂದು ಸಿಎಂ ಪ್ರಶ್ನಿಸಿದರು.

VISTARANEWS.COM


on

cm siddaramaiah MUDA scam
Koo

ಬೆಂಗಳೂರು: ಮುಡಾ (MUDA) ಸೈಟ್‌ ಪ್ರಕರಣದ ಬಗ್ಗೆ ಬಿಜೆಪಿ (BJP) ನಡೆಸುತ್ತಿರುವ ಆರೋಪಗಳ ಸುರಿಮಳೆ ಹಾಗೂ ಪ್ರತಿಭಟನೆಗೆ ಸಂಬಂಧಿಸಿ ಸಿಎಂ ಸಿದ್ದರಾಮಯ್ಯ (CM Siddaramaiah) ಇಂದು ಸಚಿವ ಸಂಪುಟ (Cabinet) ಸಭೆಯಲ್ಲಿ ಸ್ಪಷ್ಟನೆ ನೀಡಿದರು. ಮುಡಾ ಹಗರಣದ ಕುರಿತು ಕೇಳಿಬರುತ್ತಿರುವ ಆರೋಪಗಳೆಲ್ಲ ಊಹಾಪೋಹಗಳು ಎಂದು ಸ್ಪಷ್ಟನೆ ನೀಡಿದರಲ್ಲದೆ, ʼನಾನು ಸಿಎಂ ಅನ್ನುವ ಕಾರಣಕ್ಕೆ ನನ್ನ ಸೈಟ್‌ ಬಿಡೋಕೆ ಆಗುತ್ತಾ?ʼ ಎಂದು ಪ್ರಶ್ನಿಸಿದರು.

ʼಕಾನೂನಿನ ಅನ್ವಯ ಪರಿಹಾರ ರೂಪದ ನಿವೇಶನ ಪಡೆದಿರುವುದು ಸ್ಪಷ್ಟ. ಬಿಜೆಪಿ ಸರ್ಕಾರದ ಕಾಲದಲ್ಲೇ ಇದರ ನಡಾವಳಿ ಆಗಿದೆ, ಪರಿಹಾರಕ್ಕೆ ಒಪ್ಪಿಗೆ ಸಿಕ್ಕಿದೆ. ನಮ್ಮ ಸರ್ಕಾರ ಬಂದ ಮೇಲೆ ಅಂದರೆ 2023, ಅಕ್ಟೋಬರ್‌ನಲ್ಲೇ ನಗರಾಭಿವೃದ್ಧಿ ಇಲಾಖೆ ಆದೇಶ ಹೊರಡಿಸಿದ್ದು, ಅದಕ್ಕೂ‌ ಮುನ್ನವೇ ಪರಿಹಾರ ರೂಪದ ನಿವೇಶನ ನೀಡಲಾಗಿದೆ. ಯಾವುದೇ ಕಾನೂನು ಮೀರಿಲ್ಲ. ನಮ್ಮ ಮೇಲೆ ಬರುತ್ತಿರುವ ಆರೋಪಗಳೆಲ್ಲವೂ ಸುಳ್ಳುʼ ಎಂದು ಕ್ಯಾಬಿನೆಟ್‌ಗೆ ಸಿಎಂ ಸಿದ್ದರಾಮಯ್ಯ ಸ್ಪಷ್ಟನೆ ನೀಡಿದರು.

ನಂತರ ಅವರು ಮಾಧ್ಯಮಗಳ ಮುಂದೆ ಮಾತನಾಡಿದರು. ʼಬಿಜೆಪಿಯವರಿಗೆ ಏನೂ ವಿಷಯ ಇಲ್ಲ. ಅವರು ಆರ್. ಎಸ್.ಎಸ್ ಹೇಳಿದಂತೆ ಕೇಳ್ತಾರೆ. ಮುಡಾದಲ್ಲಿ ಏನು ವಿಷಯ ಇದೆ? ಬಿಜೆಪಿ ಅವರೇ ಕೊಟ್ಟು ಅವರೇ ಆರೋಪ ಮಾಡಿದರೆ, ಕಾನೂನು ಬಾಹಿರ ಎಂದು ಹೇಳಿದರೆ ಹೇಗೆ? ನಾನೇಕೆ ರಾಜೀನಾಮೆ ನೀಡಲಿ? ಎಂದು ಸಿಎಂ ಪ್ರಶ್ನಿಸಿದರು.

ನಾವೇನು ಇಂತಹ ಕಡೆ ಕೊಡಿ ಎಂದು ಕೇಳಿದ್ದೇವಾ? ನಾವು ಇಂತಹ ಕಡೆ ಎಂದು ಕೇಳಿಲ್ಲ. ಅದು ಕೊಟ್ಟಿರುವುವರ ತಪ್ಪು. ಹಾಗಾದರೆ ಪರಿಹಾರ ಕೊಟ್ಟು ಬಿಡಲಿ. 62 ಸಾವಿರ ಕೋಟಿ ಬೆಲೆ ಬಾಳುವ ಜಮೀನು ಹೋಗಿದೆ. ನಮ್ಮ ಕೇಸ್ ಪ್ರತ್ಯೇಕ. ನನಗೆ ಕಡಿಮೆ ಸಿಕ್ಕಿದೆ. ನಾನು ಸಿಎಂ ಅಂತ ಸುಮ್ಮನೆ ಬಿಡಲು ಆಗುತ್ತಾ?ʼ ಎಂದು ಪ್ರಶ್ನಿಸಿದರು.

ʼಮುಡಾದವರು ನಮ್ಮ 3 ಎಕರೆ 16 ಗುಂಟೆ ಜಮೀನು ಒತ್ತುವರಿ ಮಾಡಿದ್ದಾರೆ. ಕಾನೂನು ಬಾಹಿರವಾಗಿ ಒತ್ತುವರಿ ಮಾಡಿದ್ದಾರೆ ಅವರು. ನಮ್ಮ ಜಮೀನು ಸೈಟ್, ಪಾರ್ಕ್ ಮಾಡಿದ್ದಾರೆ. ಇದು ಮುಡಾದ ತಪ್ಪು. ಆ ತಪ್ಪನ್ನು ಮುಡಾದವರು ಸಭೆಯಲ್ಲಿ ಒಪ್ಪಿಕೊಂಡಿದ್ದಾರೆ. ನಾನು ಸಿಎಂ ಅಂತ ಬಿಡಲು ಆಗುತ್ತಾ? ನಾವು 50:50 ನಿಯಮ ಒಪ್ಪಿಕೊಂಡಿದ್ದೇವೆ. ನಾವೇನು ಇಂತಹ ಕಡೆ ಕೊಡಿ ಎಂದು ಕೇಳಿಲ್ಲ. ನಾವೇನು ವಿಜಯನಗರದ 3-4ನೇ ಹಂತದಲ್ಲಿ ಕೊಡಿ ಎಂದು ಕೇಳಿಲ್ಲ. ಅಲ್ಲಿ ಜಾಗ ಇಲ್ಲ ಅಂತ ಇಲ್ಲಿ ಕೊಟ್ಟಿದ್ದಾರೆ. ಈಗ ಕೊಟ್ಟ ಸೈಟ್ ದರ ಎಷ್ಟಿದೆ ಎಂದು ಕೂಡ ನನಗೆ ಗೊತ್ತಿಲ್ಲ. ನಂತರ 50:50 ರದ್ದು ಮಾಡಿ ಎಂದು ಆದೇಶ ಮಾಡಿದ್ದಾರೆ. ಹಾಗಾದರೆ ಸೈಟ್ ವಾಪಸ್ ತೆಗೆದುಕೊಂಡು ಪರಿಹಾರ ನೀಡಲಿ. ನನಗೆ 62 ಕೋಟಿ ಪರಿಹಾರ ಕೊಟ್ಟು ಬಿಡಲಿ. ಒಂದು ಎಕರೆಗಿಂತ ಕಡಿಮೆ ಕೊಟ್ಟಿದ್ದಾರೆ. ಸಚಿವರು ಯಾವ ಫೈಲೂ ತಂದಿಲ್ಲ. ಇದೆಲ್ಲ ರಾಜಕೀಯ ಪ್ರೇರಿತ ಆರೋಪಗಳುʼ ಎಂದು ಸಿಎಂ ವಿವರಿಸಿದರು.

ಇದನ್ನೂ ಓದಿ: MUDA site scandal: ಮುಡಾ ಸೈಟ್ ಅಕ್ರಮ; ನಾನು ಯಾಕಪ್ಪ ರಾಜೀನಾಮೆ ಕೊಡಲಿ, ನನ್ನ ಪಾತ್ರ ಏನಿದೆ ಎಂದ ಸಿಎಂ!

Continue Reading

ಬೆಂಗಳೂರು

Bengaluru News: ಬೆಂಗಳೂರಿನಲ್ಲಿ ಜು.5ರಂದು ಸತ್ಸಂಗ ಕಾರ್ಯಕ್ರಮ

Bengaluru News: ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದಿಂದ ಇದೇ ಜು.5 ರಂದು ಶುಕ್ರವಾರ ಸಂಜೆ 5 ಗಂಟೆಗೆ ಬೆಂಗಳೂರಿನ ಬಸವೇಶ್ವರ ನಗರದ ಗಂಗಮ್ಮ ತಿಮ್ಮಯ್ಯ ಕನ್ವೆನ್‌ಷನ್‌ ಹಾಲ್‌ನಲ್ಲಿ ಸತ್ಸಂಗ (ಸದ್ವಿಚಾರಗಳ ಸಂಪ್ರೋಕ್ಷಣೆ) ಕಾರ್ಯಕ್ರಮ ಏರ್ಪಡಿಸಲಾಗಿದೆ.

VISTARANEWS.COM


on

Satsang programme on 5th July in Bengaluru
Koo

ಬೆಂಗಳೂರು: ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದಿಂದ ಜು.5ರಂದು ಶುಕ್ರವಾರ ಸಂಜೆ 5 ಗಂಟೆಗೆ ನಗರದ (Bengaluru News) ಬಸವೇಶ್ವರ ನಗರದ ಗಂಗಮ್ಮ ತಿಮ್ಮಯ್ಯ ಕನ್ವೆನ್‌ಷನ್‌ ಹಾಲ್‌ನಲ್ಲಿ ಸತ್ಸಂಗ (ಸದ್ವಿಚಾರಗಳ ಸಂಪ್ರೋಕ್ಷಣೆ) ಕಾರ್ಯಕ್ರಮ ಏರ್ಪಡಿಸಲಾಗಿದೆ.

ಇದನ್ನೂ ಓದಿ: Toyota Kirloskar Motor: ಮೊಬಿಲಿಟಿ ಎಂಜಿನಿಯರಿಂಗ್ ಲ್ಯಾಬ್ ಸ್ಥಾಪಿಸಲು ಐಐಎಸ್‌ಸಿಯೊಂದಿಗೆ ಕೈಜೋಡಿಸಿದ ಟಿಕೆಎಂ

ಕಾರ್ಯಕ್ರಮದಲ್ಲಿ ಶ್ರೀ ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷ ಡಾ. ನಿರ್ಮಲಾನಂದನಾಥ ಮಹಾಸ್ವಾಮೀಜಿ ದಿವ್ಯ ಸಾನಿಧ್ಯ ವಹಿಸುವರು. ಸೌಮ್ಯನಾಥ ಸ್ವಾಮೀಜಿ ಉಪಸ್ಥಿತರಿರುವರು.

ಇದನ್ನೂ ಓದಿ: Stock Market: ಷೇರು ಮಾರುಕಟ್ಟೆಯಲ್ಲಿ ಮುಂದುವರಿದ ಗೂಳಿಯ ಅಬ್ಬರ; ಸಾರ್ವಕಾಲಿಕ ಎತ್ತರಕ್ಕೆ ಜಿಗಿದ ಸೆನ್ಸೆಕ್ಸ್

ಬ್ರಹ್ಮಚಾರಿ ಶ್ರೀ ಸಾಯಿ ಕೀರ್ತಿನಾಥ್‌ಜಿ ಮತ್ತು ತಂಡದವರಿಂದ ಭಜನೆ ಕಾರ್ಯಕ್ರಮ ಏರ್ಪಡಿಸಲಾಗಿದೆ. ಸಂಕ್ರಮಣ ಗುರುವಂದನ ಬಳಗ ಕಾರ್ಯಕ್ರಮ ಆಯೋಜನೆ ಮತ್ತು ನಿರ್ವಹಿಸಲಿದ್ದಾರೆ.

Continue Reading

ಹಾಸನ

Hassan News: ಆಲೂರಿನಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ಉಚಿತ ನೋಟ್‌ಬುಕ್‌, ಬ್ಯಾಗ್‌ ವಿತರಣೆ

Hassan News: ಬೆಂಗಳೂರಿನ ಹಂಜಳಿಗೆ ಕಾಳಿಂಗಪ್ಪ ವೆಲ್ಪೇರ್‌ ಅಸೋಸಿಯೇಷನ್‌ನ ಸಂಸ್ಥಾಪಕ ಎಚ್‌.ಕೆ. ಮಂಜುನಾಥ್‌, 30 ಸಾವಿರ ನೋಟ್ ಪುಸ್ತಕಗಳು, 1100 ಶಾಲಾ ಬ್ಯಾಗ್‌ಗಳನ್ನು ಹಾಸನ ಜಿಲ್ಲೆಯ ಆಲೂರು ತಾಲೂಕಿನ ಎಲ್ಲ ಸರ್ಕಾರಿ ಕಿರಿಯ ಹಾಗೂ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಉಚಿತವಾಗಿ ವಿತರಿಸಿದ್ದಾರೆ.

VISTARANEWS.COM


on

Hassan News Distribution of free notebook bag to government primary schools in Alur
Koo

ಹಾಸನ: ಬೆಂಗಳೂರಿನ ಹಂಜಳಿಗೆ ಕಾಳಿಂಗಪ್ಪ ವೆಲ್ಪೇರ್‌ ಅಸೋಸಿಯೇಷನ್ ವತಿಯಿಂದ ಹಾಸನ ಜಿಲ್ಲೆಯ (Hassan News) ಆಲೂರು ತಾಲೂಕಿನ ಎಲ್ಲ ಸರ್ಕಾರಿ ಕಿರಿಯ ಹಾಗೂ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ಉಚಿತ ನೋಟ್ ಪುಸ್ತಕ, ಶಾಲಾ ಬ್ಯಾಗ್‌ಗಳನ್ನು ವಿತರಿಸಲಾಯಿತು.

ಬೆಂಗಳೂರಿನ ಹಂಜಳಿಗೆ ಕಾಳಿಂಗಪ್ಪ ವೆಲ್ಪೇರ್‌ ಅಸೋಸಿಯೇಷನ್‌ನ ಸಂಸ್ಥಾಪಕ ಎಚ್‌.ಕೆ. ಮಂಜುನಾಥ್‌ ಅವರು, “ನಮ್ಮ ನಡಿಗೆ ಸರ್ಕಾರಿ ಶಾಲೆಯ ಕಡೆಗೆ ” ಎಂಬ ಅಭಿಯಾನವನ್ನು ಹಮ್ಮಿಕೊಂಡು ಸರ್ಕಾರಿ ಶಾಲೆಗಳ ಸಬಲೀಕರಣಗೊಳಿಸಲು ಕಳೆದ 12 ವರ್ಷಗಳಿಂದ ಈ ಕಾಯಕವನ್ನು ಮಾಡಿಕೊಂಡು ಬರುತಿದ್ದಾರೆ.

ಅಸೋಸಿಯೇಷನ್‌ನ ಸಂಸ್ಥಾಪಕ ಎಚ್‌.ಕೆ. ಮಂಜುನಾಥ್‌, 30 ಸಾವಿರ ನೋಟ್ ಪುಸ್ತಕಗಳು, 1100 ಶಾಲಾ ಬ್ಯಾಗ್‌ಗಳನ್ನು ಆಲೂರು ತಾಲೂಕಿನ ಎಲ್ಲ ಸರ್ಕಾರಿ ಕಿರಿಯ ಹಾಗೂ ಹಿರಿಯ ಪ್ರಾಥಮಿಕ ಶಾಲೆಯ ಮಕ್ಕಳಿಗೆ ನೋಟ್ ಪುಸ್ತಕಗಳನ್ನು, ಬ್ಯಾಗ್‌ಗಳನ್ನು ಉಚಿತವಾಗಿ ವಿತರಿಸಿದರು.

ಇದನ್ನೂ ಓದಿ: Stock Market: ಷೇರು ಮಾರುಕಟ್ಟೆಯಲ್ಲಿ ಮುಂದುವರಿದ ಗೂಳಿಯ ಅಬ್ಬರ; ಸಾರ್ವಕಾಲಿಕ ಎತ್ತರಕ್ಕೆ ಜಿಗಿದ ಸೆನ್ಸೆಕ್ಸ್

ನೋಟ್ ಬುಕ್ಸ್‌ನ ಕವರ್ ಪೇಜ್‌ನಲ್ಲಿ ಮುದ್ರಿಸಿರುವ 5 ಪಂಚ ಸೂತ್ರಗಳು ವಿದ್ಯಾರ್ಥಿಗಳಿಗೆ ಸೂಕ್ತ ಮಾಹಿತಿಯನ್ನು ನೀಡುವುದಲ್ಲದೇ ಪ್ರತಿ ಶಾಲೆಯಲ್ಲಿ ಪ್ರಮಾಣ ವಚನ ಬೋಧಿಸುವುದರೊಂದಿಗೆ ನೀಡಲಾಯಿತು. ಗುರುಹಿರಿಯರಲ್ಲಿ ಭಕ್ತಿ ಭಾವ, ವಿನಯ, ತಂದೆ ತಾಯಿಯನ್ನು ಕೊನೆಯವರೆಗೂ ನೋಡಿಕೊಳ್ಳುವುದು, ಯಾವುದೇ ದುಶ್ಚಟಗಳಿಗೆ ಬಲಿಯಾಗದೆ ಇರುವುದು, ಶಾಲೆಯೊಂದಿಗೆ ನಿಕಟ ಸಂಪರ್ಕ, ಯಾವುದೇ ಸಂದರ್ಭದಲ್ಲಿಯೂ ಹಣದ ಆಮಿಷಕ್ಕೆ ಒಳಗಾಗದೆ ಇರುವುದು ಇವು ಪಂಚ ಸೂತ್ರಗಳಾಗಿವೆ.

ಈ ಸಂದರ್ಭದಲ್ಲಿ ಹಂಜಳಿಗೆ ಕಾಳಿಂಗಪ್ಪ ವೆಲ್ಪೇರ್‌ ಅಸೋಸಿಯೇಷನ್‌ನ ಸಂಸ್ಥಾಪಕ ಎಚ್‌.ಕೆ. ಮಂಜುನಾಥ್, ಸರ್ಕಾರಿ ಶಾಲಾ ವಿದ್ಯಾರ್ಥಿಗಳಿಗೆ ನೋಟ್‌ ಪುಸ್ತಕ, ಬ್ಯಾಗ್‌ಗಳನ್ನು ವಿತರಣೆ ಮಾಡಿ, ಬಳಿಕ ಮಾತನಾಡಿದರು.

ಇದನ್ನೂ ಓದಿ: Toyota Kirloskar Motor: ಮೊಬಿಲಿಟಿ ಎಂಜಿನಿಯರಿಂಗ್ ಲ್ಯಾಬ್ ಸ್ಥಾಪಿಸಲು ಐಐಎಸ್‌ಸಿಯೊಂದಿಗೆ ಕೈಜೋಡಿಸಿದ ಟಿಕೆಎಂ

ಕಾರ್ಯಕ್ರಮದಲ್ಲಿ ಪಿಯು ಕಾಲೇಜು ಪ್ರಾಚಾರ್ಯ ಕುಮಾರಪ್ಪ, ಎಚ್‌.ಎಂ. ಮಹಾದೇವಪ್ಪ, ಎಸ್‌ಡಿಎಂಸಿಯ ಶೇಖರ್, ಕಾಂತರಾಜ್, ರಾಜಣ್ಣ, ಶಾಲಾ ಶಿಕ್ಷಕರು, ಪೋಷಕರು ಪಾಲ್ಗೊಡಿದ್ದರು.

Continue Reading

ಬೆಂಗಳೂರು

DK Suresh: ರಾಜ್ಯದ ರೈಲ್ವೆ ಯೋಜನೆಗಳನ್ನು ಪೂರ್ಣಗೊಳಿಸಿ; ಕೇಂದ್ರಕ್ಕೆ ಡಿ.ಕೆ. ಸುರೇಶ್ ಮನವಿ

DK Suresh: ದೆಹಲಿಯಲ್ಲಿ ಕೇಂದ್ರ ರೈಲ್ವೆ ಹಾಗೂ ಜಲಶಕ್ತಿ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅವರನ್ನು ಬುಧವಾರ ಭೇಟಿ ಮಾಡಿದ ಮಾಜಿ ಸಂಸದ ಡಿ.ಕೆ. ಸುರೇಶ್ ಅವರು, ರಾಜ್ಯದ ಬಾಕಿ ರೈಲ್ವೆ ಹಾಗೂ ಜಲ ಮಿಷನ್ ಯೋಜನೆಗಳನ್ನು ಆದಷ್ಟು ಶೀಘ್ರ ಪೂರ್ಣಗೊಳಿಸಲು ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದಾರೆ.

VISTARANEWS.COM


on

To complete pending railway projects in the state former MP DK Suresh appeals central government
Koo

ನವದೆಹಲಿ: ರಾಜ್ಯದ ಬಾಕಿ ರೈಲ್ವೆ ಹಾಗೂ ಜಲ ಜೀವನ್‌ ಮಿಷನ್ ಯೋಜನೆಗಳನ್ನು ಆದಷ್ಟು ಶೀಘ್ರ ಪೂರ್ಣಗೊಳಿಸಲು ಕ್ರಮ ಕೈಗೊಳ್ಳುವಂತೆ ಕೇಂದ್ರ ಸರ್ಕಾರಕ್ಕೆ ಮಾಜಿ ಸಂಸದ ಡಿ.ಕೆ. ಸುರೇಶ್ (DK Suresh), ಮನವಿ ಮಾಡಿದ್ದಾರೆ.

ದೆಹಲಿಯಲ್ಲಿ ಕೇಂದ್ರ ರೈಲ್ವೆ ಹಾಗೂ ಜಲಶಕ್ತಿ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅವರನ್ನು ಬುಧವಾರ ಭೇಟಿ ಮಾಡಿ, ಮನವಿ ಸಲ್ಲಿಸಿದ ಮಾಜಿ ಸಂಸದ ಡಿ.ಕೆ. ಸುರೇಶ್ ಅವರು, ಹೆಜ್ಜಾಲ, ಕನಕಪುರ ಹಾಗೂ ಚಾಮರಾಜನಗರ ಹೊಸ ರೈಲ್ವೆ ಮಾರ್ಗ ಈ ಹಿಂದೆಯೇ ಮಂಜೂರಾಗಿ, ಟೆಂಡರ್ ಪ್ರಕ್ರಿಯೆ ಆಗಿದ್ದರೂ ಕಾಮಗಾರಿ ಮಾತ್ರ ಆರಂಭವಾಗಿಲ್ಲ.

ಇದನ್ನೂ ಓದಿ: Stock Market: ಷೇರು ಮಾರುಕಟ್ಟೆಯಲ್ಲಿ ಮುಂದುವರಿದ ಗೂಳಿಯ ಅಬ್ಬರ; ಸಾರ್ವಕಾಲಿಕ ಎತ್ತರಕ್ಕೆ ಜಿಗಿದ ಸೆನ್ಸೆಕ್ಸ್

ಅದೇ ರೀತಿ ರಾಜ್ಯದ ಅನೇಕ ರೈಲ್ವೆ ಯೋಜನೆಗಳು ಹತ್ತು ವರ್ಷಗಳಿಂದ ನೆನೆಗುದಿಗೆ ಬಿದ್ದಿವೆ. ಈ ಯೋಜನೆಗಳಿಗೆ ಅನುದಾನ ನೀಡಿ ಆದಷ್ಟು ಬೇಗ ಕಾಮಗಾರಿ ಪೂರ್ಣಗೊಳಿಸಿ ಎಂದು ಅವರು ಕೋರಿದರು.

ಇದನ್ನೂ ಓದಿ: Karnataka Rain : ಉಕ್ಕಿ ಹರಿದ ಚಂಡಿಕಾ ಹೊಳೆಯಲ್ಲಿ ಸಿಲುಕಿಕೊಂಡ ಬಸ್‌; ಪ್ರಯಾಣಿಕರು ಕಂಗಾಲು

ಜಲ ಜೀವನ್ ಮಿಷನ್ ಅಡಿಯಲ್ಲಿ ಕುಡಿಯುವ ನೀರು ಯೋಜನೆಗಳಿಗೆ ಸಲ್ಲಿಸಿರುವ ಪ್ರಸ್ತಾವನೆಗಳು ಆರು ತಿಂಗಳಿಂದ ಬಾಕಿ ಉಳಿದಿವೆ. ಅವುಗಳಿಗೆ ಮಂಜೂರಾತಿ ಕೊಡಿ ಎಂದು ಡಿ.ಕೆ. ಸುರೇಶ್ ಮನವಿ ಮಾಡಿದ್ದು, ಸಚಿವ ಸೋಮಣ್ಣ ಅವರು ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ.

Continue Reading
Advertisement
Sumalatha Ambareesh First Reaction To Darshan Arrest And Renuka Swamy Murder Case
ಸ್ಯಾಂಡಲ್ ವುಡ್1 min ago

Sumalatha Ambareesh: ಕಾನೂನು ವ್ಯವಸ್ಥೆಯ ಮೇಲೆ ನಂಬಿಕೆ ಇರಲಿ ; ದರ್ಶನ್​ ಬಗ್ಗೆ ಸುಮಲತಾ ಅಂಬರೀಶ್‌​ ಮೊದಲ ಪ್ರತಿಕ್ರಿಯೆ

cm siddaramaiah MUDA scam
ಪ್ರಮುಖ ಸುದ್ದಿ2 mins ago

CM Siddaramaiah: ʼಮುಡಾದ ತಪ್ಪು, ನಾನು ಸಿಎಂ ಅಂತ ಸೈಟ್‌ ಬಿಡೋಕೆ ಆಗುತ್ತಾ?ʼ ಸಿಎಂ ಸಿದ್ದರಾಮಯ್ಯ

Satsang programme on 5th July in Bengaluru
ಬೆಂಗಳೂರು20 mins ago

Bengaluru News: ಬೆಂಗಳೂರಿನಲ್ಲಿ ಜು.5ರಂದು ಸತ್ಸಂಗ ಕಾರ್ಯಕ್ರಮ

Hassan News Distribution of free notebook bag to government primary schools in Alur
ಹಾಸನ22 mins ago

Hassan News: ಆಲೂರಿನಲ್ಲಿ ಸರ್ಕಾರಿ ಪ್ರಾಥಮಿಕ ಶಾಲೆಗಳಿಗೆ ಉಚಿತ ನೋಟ್‌ಬುಕ್‌, ಬ್ಯಾಗ್‌ ವಿತರಣೆ

To complete pending railway projects in the state former MP DK Suresh appeals central government
ಬೆಂಗಳೂರು24 mins ago

DK Suresh: ರಾಜ್ಯದ ರೈಲ್ವೆ ಯೋಜನೆಗಳನ್ನು ಪೂರ್ಣಗೊಳಿಸಿ; ಕೇಂದ್ರಕ್ಕೆ ಡಿ.ಕೆ. ಸುರೇಶ್ ಮನವಿ

ದೇಶ32 mins ago

Hemant Soren: ಹೇಮಂತ್‌ ಸೊರೆನ್‌ಗೆ ಮತ್ತೆ ಒಲಿದ ಸಿಎಂ ಪಟ್ಟ; ಜು.7ರಂದು ಪ್ರಮಾಣ ವಚನ- ರಾಜ್ಯಪಾಲರಿಂದ ಗ್ರೀನ್‌ ಸಿಗ್ನಲ್‌

drivers protest
ಪ್ರಮುಖ ಸುದ್ದಿ42 mins ago

Drivers Protest: ಆಟೋ, ಕ್ಯಾಬ್ ಚಾಲಕರಿಂದ ದಿಢೀರ್‌ ರಸ್ತೆ ತಡೆ, ಸಾರಿಗೆ ಇಲಾಖೆ ಕಚೇರಿಗೆ ಮುತ್ತಿಗೆ, ಸಂಚಾರ ಅಸ್ತವ್ಯಸ್ತ

Viral News
ವೈರಲ್ ನ್ಯೂಸ್1 hour ago

Viral News: ಇವನು ಅಂತಿಂತಾ ಕಳ್ಳನಲ್ಲ…ಮನೆ ಎಲ್ಲಾ ದೋಚಿ, ಲೆಟರ್‌ ಬರೆದಿಟ್ಟು ಕ್ಷಮೆ ಕೇಳ್ತಾನೆ!

Chikkaballapura News
ಚಿಕ್ಕಬಳ್ಳಾಪುರ1 hour ago

Chikkaballapura News : ಒಂದು ವರ್ಷದ ಮಗು ಬಿಟ್ಟು ಕ್ಷಣಾರ್ಧದಲ್ಲಿ ತಾಯಿ ಎಸ್ಕೇಪ್!

Team India
ಕ್ರೀಡೆ1 hour ago

Team India: ಟೀಮ್‌ ಇಂಡಿಯಾ ಆಟಗಾರರನ್ನು ಸನ್ಮಾನಿಸಿದ ಪ್ರಧಾನಿ ಮೋದಿ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Chikkaballapura News
ಚಿಕ್ಕಬಳ್ಳಾಪುರ1 hour ago

Chikkaballapura News : ಒಂದು ವರ್ಷದ ಮಗು ಬಿಟ್ಟು ಕ್ಷಣಾರ್ಧದಲ್ಲಿ ತಾಯಿ ಎಸ್ಕೇಪ್!

karnataka Rain
ಮಳೆ2 hours ago

Karnataka Rain : ಧಾರಾಕಾರ ಮಳೆಗೆ ಗುಡ್ಡ ಕುಸಿತ; ಹೊನ್ನಾವರ-ಬೆಂಗಳೂರು ಹೆದ್ದಾರಿ ಬಂದ್

Karnataka Rain
ಮಳೆ3 hours ago

Karnataka Rain : ಉಕ್ಕಿ ಹರಿದ ಚಂಡಿಕಾ ಹೊಳೆಯಲ್ಲಿ ಸಿಲುಕಿಕೊಂಡ ಬಸ್‌; ಪ್ರಯಾಣಿಕರು ಕಂಗಾಲು

Tornado Effect in Udupi
ಉಡುಪಿ4 hours ago

Tornado Effect : ಉಡುಪಿಯ ರಟ್ಟಾಡಿಯಲ್ಲಿ ಭಾರಿ ಶಬ್ದದೊಂದಿಗೆ ಅಪ್ಪಳಿಸಿದ ಸುಂಟರಗಾಳಿ

karnataka weather Forecast
ಮಳೆ2 days ago

Karnataka Weather : ಮಳೆ ಅಬ್ಬರಕ್ಕೆ ಹೆಚ್ಚಾದ ಗುಡ್ಡ ಕುಸಿತ; ಬಂಗ್ರ ಕೂಳೂರಿನಲ್ಲಿ ರಸ್ತೆ ಬಂದ್‌

karnataka Weather Forecast
ಮಳೆ3 days ago

Karnataka Weather : ಕೊಡಗು, ದಾವಣಗೆರೆಯಲ್ಲಿ ಮಳೆಯಾಟ; ಬೆಂಗಳೂರಲ್ಲಿ ಮೋಡ ಕವಿದ ವಾತಾವರಣ

karnataka Weather Forecast
ಮಳೆ4 days ago

Karnataka Weather : ಬೆಂಗಳೂರು, ಕಲಬುರಗಿ ಸೇರಿದಂತೆ ಹಲವೆಡೆ ವರ್ಷಧಾರೆ; ನಾಳೆಗೂ ಮಳೆ ಅಲರ್ಟ್‌

Actor Darshan
ಬೆಂಗಳೂರು4 days ago

Actor Darshan : ಖೈದಿ ನಂ.6106ಕ್ಕೆ ಡಿಮ್ಯಾಂಡ್‌! ದರ್ಶನ್‌ ಫ್ಯಾನ್ಸ್‌ಗೆ ಕಾನೂನು ಕಂಟಕ, ರೂಲ್ಸ್‌ ಬ್ರೇಕ್‌ ಮಾಡಿದ್ರೆ ಬೀಳುತ್ತೆ ಕೇಸ್‌‌!

karnataka weather Forecast
ಮಳೆ5 days ago

Karnataka Weather : ಮಳೆಗೆ ಸ್ಕಿಡ್‌ ಆಗಿ ಹೇಮಾವತಿ ನದಿಗೆ ಹಾರಿದ ಕಾರು; ಕರಾವಳಿಗೆ ಎಚ್ಚರಿಕೆ ಕೊಟ್ಟ ತಜ್ಞರು

karnataka Rain
ಮಳೆ5 days ago

Karnataka Rain: ಭಾರಿ ಮಳೆಗೆ ಮನೆಗಳ ಗೋಡೆ ಕುಸಿತ; ಕೂದಲೆಳೆ ಅಂತರದಲ್ಲಿ ವೃದ್ಧ ಪಾರು

ಟ್ರೆಂಡಿಂಗ್‌