CET Seat allottment : ರಾತ್ರಿ ಸೀಟ್ ಹಂಚಿಕೆ, ಬೆಳಗ್ಗೆಯೇ Admission; ಕೆಇಎ ಅವ್ಯವಸ್ಥೆಯಿಂದ ವಿದ್ಯಾರ್ಥಿಗಳು, ಹೆತ್ತವರು ಕಂಗಾಲು - Vistara News

ಕರ್ನಾಟಕ

CET Seat allottment : ರಾತ್ರಿ ಸೀಟ್ ಹಂಚಿಕೆ, ಬೆಳಗ್ಗೆಯೇ Admission; ಕೆಇಎ ಅವ್ಯವಸ್ಥೆಯಿಂದ ವಿದ್ಯಾರ್ಥಿಗಳು, ಹೆತ್ತವರು ಕಂಗಾಲು

CET Seat allottment : ಸೀಟು ಹಂಚಿಕೆಗೂ ಪ್ರವೇಶಾತಿ ಪ್ರಕ್ರಿಯೆಗೂ ನಡುವೆ ಅಂತರವೇ ಇಲ್ಲದೆ ಹಲವಾರು ವಿದ್ಯಾರ್ಥಿಗಳು ಮತ್ತು ಹೆತ್ತವರು ಕಂಗಾಲಾಗಿದ್ದಾರೆ. ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಇದರ ಬಗ್ಗೆ ಗಮನ ಹರಿಸಬೇಕು ಎಂದು ಮನವಿ ಮಾಡಿದ್ದಾರೆ.

VISTARANEWS.COM


on

Girl running towards KEA
ಪ್ರವೇಶ ಪ್ರಕ್ರಿಯೆ ಸಂಬಂಧ ಓಡುತ್ತಿರುವ ವಿದ್ಯಾರ್ಥಿನಿ
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಕರ್ನಾಟಕ ಪರೀಕ್ಷಾ ಪ್ರಾಧಿಕಾರ (Karantaka Examination Authority) ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆ (Common Entrance test -CET) ಮೂಲಕ ನಾನಾ ಕೋರ್ಸ್‌ಗಳಿಗೆ ಪರೀಕ್ಷೆ ಬರೆದ ವಿದ್ಯಾರ್ಥಿಗಳು ಮತ್ತು ಹೆತ್ತವರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ರಾತ್ರಿ ಸೀಟು ಹಂಚಿಕೆಯನ್ನು ಪ್ರಕಟಿಸಿ (CET Seat allottment) ಮರುದಿನವೇ ಪ್ರವೇಶ ಪ್ರಕ್ರಿಯೆಗಳನ್ನು ಮುಗಿಸಿಕೊಳ್ಳಬೇಕಾದ ಅವಸರದ ಡೆಡ್‌ಲೈನ್‌ಗೆ ಸಿಲುಕಿ ಅವರು ಕಂಗಾಲಾಗಿದ್ದಾರೆ. ಒಂದು ಪ್ರವೇಶ ಪ್ರಕ್ರಿಯೆ ಹೇಗಿರುತ್ತದೆ ಎನ್ನುವ ಸಾಮಾನ್ಯ ಜ್ಞಾನವಾಗಲೀ, ಬ್ಯಾಂಕ್‌ ರಜೆಗಳ ಅವಗಾಹನೆಯಾಗಲೀ ಇಲ್ಲದೆ ಬೇಕಾಬಿಟ್ಟಿ ನಿರ್ಧಾರ ಮಾಡಲಾಗುತ್ತದೆ ಎಂಬ ಗಂಭೀರ ಆರೋಪ ಕೇಳಿಬಂದಿದೆ.

ಸೆಪ್ಟೆಂಬರ್‌ 7ರಂದು ರಾತ್ರಿ ಎಂಟು ಗಂಟೆಗೆ ಕರ್ನಾಟಕ ಪರೀಕ್ಷಾ ಪ್ರಾಧಿಕಾರವು ಎಂಜಿನಿಯರಿಂಗ್‌, ಆರ್ಕಿಟೆಕ್ಚರ್‌, ಬಿ-ಫಾರ್ಮಾ, ಬಿಎಸ್‌ಸಿ ನರ್ಸಿಂಗ್‌ ಮತ್ತು ಇತರ ಕೋರ್ಸ್‌ಗಳ ಎರಡನೇ ಸುತ್ತಿನ ಸೀಟು ಹಂಚಿಕೆಯನ್ನು ಪ್ರಕಟಿಸಿತ್ತು. ಸೀಟು ಆಯ್ಕೆಯನ್ನು ಸೆಪ್ಟೆಂಬರ್‌ 8ರಿಂದ 10ರವರೆಗೆ ಮಧ್ಯಾಹ್ನ 1 ಗಂಟೆಯಿಂದ ರಾತ್ರಿ 11.59ರವರೆಗೆ ನಡೆಸಬಹುದು, ಸೆಪ್ಟೆಂಬರ್‌ 11ರಂದು ಬ್ಯಾಂಕಿಂಗ್‌ ಅವಧಿಯಲ್ಲಿ ನಡೆಸಬಹುದು ಎಂದು ಸೂಚಿಸಲಾಗಿತ್ತು.

ಸೀಟು ಹಂಚಿಕೆಯ ಪಟ್ಟಿ ಪ್ರತಿ ಬಾರಿಯೂ ರಾತ್ರಿ ಎಂಟು ಗಂಟೆಯ ನಂತರವೇ ಪ್ರಕಟವಾಗುತ್ತದೆ ಮತ್ತು ಮರುದಿನವೇ ಅಡ್ಮಿಷನ್‌ ಪ್ರಕ್ರಿಯೆ ಆರಂಭ ಮಾಡಲಾಗುತ್ತದೆ. ಇದರಿಂದ ವಿದ್ಯಾರ್ಥಿಗಳು ಮತ್ತು ಹೆತ್ತವರ ಮೇಲೆ ಭಾರಿ ಒತ್ತಡ ಸೃಷ್ಟಿ ಮಾಡುತ್ತದೆ ಎಂದು ಪೋಷಕರು ಹೇಳಿದ್ದಾರೆ. ʻʻಅವರು ಲಿಸ್ಟ್‌ ಬಿಡುಗಡೆ ಮಾಡಿದ್ದು ಗುರುವಾರ ರಾತ್ರಿ. ಶುಕ್ರವಾರಕ್ಕೆ ಚಲನ್‌ ಲಿಸ್ಟ್‌ ಮಾಡಿದ್ದಾರೆ. ಆದರೆ, ಫೀಸು ತುಂಬಲು ಡೆಡ್‌ ಲೈನ್‌ ಇರುವುದು ಸೋಮವಾರಕ್ಕೆ. ಯಾರು ಹೇಗೆ ತಾನೇ ಈ ಪ್ರಕ್ರಿಯೆಗಳನ್ನು ಅಷ್ಟು ವೇಗವಾಗಿ ಮುಗಿಸುವುದು? ಶನಿವಾರ ಮತ್ತು ಭಾನುವಾರ ಬ್ಯಾಂಕ್‌ಗಳಿಗೆ ರಜೆ ಇರುತ್ತದೆ. ಅವರು ಸರಿಯಾಗಿ ಪ್ಲ್ಯಾನ್‌ ಮಾಡಬಹುದಿತ್ತುʼʼ ಎಂದು ಮೆಕ್ಯಾನಿಕಲ್‌ ಎಂಜಿನಿಯರಿಂಗ್‌ ಕೋರ್ಸ್‌ಗೆ ಅರ್ಜಿ ಸಲ್ಲಿಸಿದ ಹುಡುಗನ ಹೆತ್ತವರು ಹೇಳಿದರು.

ಕೆಲವು ಪೋಷಕರ ಪ್ರಕಾರ, ಇದು ಅಂತಲ್ಲ. ಒಟ್ಟಾರೆ ಪ್ರವೇಶ ಪ್ರಕ್ರಿಯೆಯೇ ಈ ವರ್ಷ ಭಾರಿ ಕಿರಿಕಿರಿಗಳಿಂದ ಕೂಡಿದೆ. ಈಗಾಗಲೇ ಕಾಮೆಡ್‌ ಕೆ ಕೂಡಾ ಮುಗಿದಿರುವುದರಿಂದ ಹುಡುಗರಿಗೆ ಬೇರೆ ಆಯ್ಕೆಗಳು ಕೂಡಾ ಇಲ್ಲ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

ಪರೀಕ್ಷಾ ಪ್ರಾಧಿಕಾರದ ನಿರ್ದೇಶಕರು ಹೇಳುವುದೇನು?

ಈ ಸಮಸ್ಯೆಯ ಬಗ್ಗೆ ಪ್ರತಿಕ್ರಿಯಿಸಿರುವ ಪರೀಕ್ಷಾ ಪ್ರಾಧಿಕಾರದ ನಿರ್ದೇಶಕಿ ರಮ್ಯಾ ಎಸ್‌ ಅವರು, ʻʻಶುಲ್ಕ ಪಾವತಿಗೆ ನಾವು ಬ್ಯಾಂಕ್‌ಗಳನ್ನೇ ಅವಲಂಬಿಸಬೇಕಾಗಿಲ್ಲ. ಶುಲ್ಕ ಒಂದು ಲಕ್ಷ ರೂ.ಯ ಒಳಗೆ ಇರುವುದರಿಂದ ಆನ್‌ಲೈನ್‌ ಮೂಲಕವೂ ಪಾವತಿಸಬಹುದು. ಎಲ್ಲರೂ ಚಲನ್‌ ತೆಗೆದುಕೊಳ್ಳಬೇಕಾದ ಅವಶ್ಯಕತೆಯೇನೂ ಬರುವುದಿಲ್ಲ. NEFT ಮೂಲಕ ಅತ್ಯಂತ ಸುಲಭದಲ್ಲಿ ಹಣ ವರ್ಗಾವಣೆ ಮಾಡಬಹುದು. ಯಾರಿಗಾದರೂ ಇದು ಕಷ್ಟ ಅನಿಸಿದರೆ ಪರಿಸ್ಥಿತಿಯನ್ನು ಅವಲಂಬಿಸಿ ಒಂದೆರಡು ದಿನ ಹೆಚ್ಚುವರಿ ಕಾಲಾವಕಾಶವನ್ನು ನೀಡಬಹುದುʼʼ ಎಂದು ಹೇಳಿದ್ದಾರೆ.

ಸೀಟು ಹಂಚಿಕೆ ಪಟ್ಟಿ ರಾತ್ರಿ ಎಂಟು ಗಂಟೆಯ ನಂತರವೇ ಬಿಡುಗಡೆಯಾಗುತ್ತಿರುವ ಬಗ್ಗೆ ವಿವರಣೆ ನೀಡಿದ ಅವರು, ನಮ್ಮ ಸಾಫ್ಟ್‌ವೇರ್‌ ನಿರಂತರವಾಗಿ ಕೆಲಸ ಮಾಡುತ್ತಿರುತ್ತದೆ. ಇಲ್ಲಿ ಹಲವಾರು ಕೋರ್ಸ್‌ ಮತ್ತು ಸೀಟುಗಳು ಇರುವುದರಿಂದ ಒಂದು ಕೋರ್ಸ್‌ನಿಂದ ಹೆಸರು ತೆಗೆದು ಮತ್ತೊಂದು ಕೋರ್ಸ್‌ಗೆ ಹಾಕುವುದು ಮೊದಲಾದ ಕೆಲಸಗಳೆಲ್ಲ ಸಮಯ ತೆಗೆದುಕೊಳ್ಳುತ್ತದೆʼʼ ಎಂದರು.

ಈಗ ಆಗಿರುವ ಸಮಸ್ಯೆಗಳನ್ನು ಗಮನದಲ್ಲಿಟ್ಟುಕೊಳ್ಳುತ್ತೇವೆ. ಸುತ್ತೋಲೆಗಳನ್ನು ಮುಂಚಿತವಾಗಿಯೇ ನೀಡಲಾಗುತ್ತದೆ. ಯಾರೂ ತಲೆ ಕೆಡಿಸಿಕೊಳ್ಳಬೇಕಾಗಿಲ್ಲ ಎಂದು ಭರವಸೆ ನೀಡಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೈಂ

Murder case : ಜಸ್ಟ್‌ ಗುರಾಯಿಸಿದ್ದಕ್ಕೆ ಯುವಕನ ಬರ್ಬರ ಹತ್ಯೆ; ಸಾವಿನ ಕೊನೆ ಕ್ಷಣ ಸೆರೆ

Murder case : ಮೈಸೂರಿನಲ್ಲಿ ಯುವಕನೊಬ್ಬ ಕ್ಷುಲ್ಲಕ ವಿಚಾರಕ್ಕೆ (Mysuru Murder) ನಡುರಸ್ತೆಯಲ್ಲೇ ಕೊಲೆಯಾಗಿ ಹೋಗಿದ್ದಾನೆ. ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ ಪರಿಣಾಮ ರಕ್ತಕಾರಿದ ದೃಶ್ಯವು ಸ್ಥಳೀಯರ ಮೊಬೈಲ್‌ನಲ್ಲಿ ಸೆರೆಯಾಗಿದೆ.

VISTARANEWS.COM


on

By

Murder Case in Mysuru
Koo

ಮೈಸೂರು: ಮೈಸೂರಿನಲ್ಲಿ ಗುರಾಯಿಸಿದ್ದಕ್ಕೆ ಯುವಕನ (Murder case) ಕೊಲೆಯಾಗಿದೆ. ಯುವಕನ ಸಾವಿನ ಕೊನೆ ಕ್ಷಣದ ವಿಡಿಯೊಗಳು ಸ್ಥಳೀಯರ ಮೊಬೈಲ್‌ನಲ್ಲಿ ಸೆರೆಯಾಗಿದೆ. ಅರ್ಬಾಜ್ ಖಾನ್ (18) ಕೊಲೆಯಾದವನು.

ಮೈಸೂರಿನ ಉದಯಗಿರಿ ಪೊಲೀಸ್ ಠಾಣಾ ವ್ಯಾಪ್ತಿಯ ಶಾಂತಿನಗರದಲ್ಲಿ ಘಟನೆ ನಡೆದಿದೆ. ಶಾಂತಿನಗರದ ಲಾಲ್ ಮಸೀದಿ ಬಳಿ ಅರ್ಬಾಜ್ ಖಾನ್ ಗುರಾಯಿಸಿದ ಎಂಬ ಕಾರಣಕ್ಕೆ ಯುವಕರ ಮಧ್ಯೆ ಗಲಾಟೆ ಶುರುವಾಗಿತ್ತು. ಗಲಾಟೆ ವಿಕೋಪಕ್ಕೆ ತಿರುಗಿತ್ತು. ನೋಡನೋಡುತ್ತಲೇ ನಾಲ್ವರು ಆರೋಪಿಗಳು ಮಾರಕಾಸ್ತ್ರಗಳಿಂದ ಮಾರಣಾಂತಿಕ ಹಲ್ಲೆ ನಡೆಸಿದ್ದರು.

ಈ ವೇಳೆ ಕುತ್ತಿಗೆಗೆ ಸೀಳಿದ ಕಾರಣಕ್ಕೆ ಅರ್ಬಾಜ್‌ ಖಾನ್‌ ನಡುರಸ್ತೆಯಲ್ಲಿ ರಕ್ತಕಾರುತ್ತಾ ಒದ್ದಾಡುತ್ತಿದ್ದ. ಸ್ಥಳೀಯ ಮಾಹಿತಿ ಮೇರೆಗೆ ಸ್ಥಳಕ್ಕಾಗಮಿಸಿದ ಪೊಲೀಸರು, ಕೂಡಲೇ ಆಟೋದಲ್ಲಿ ಗಾಯಾಳು ಅರ್ಬಾಜ್‌ ಖಾನ್‌ನನ್ನು ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಆದರೆ ತೀವ್ರ ರಕ್ತಸ್ರಾವವಾಗಿ ಆಸ್ಪತ್ರೆಯಲ್ಲಿ ಅರ್ಬಾಜ್‌ ಖಾನ್‌ ಮೃತಪಟ್ಟಿದ್ದಾನೆ. ವಿಷಯ ತಿಳಿಯುತ್ತಿದ್ದಂತೆ ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು.

ಇನ್ನೂ ಪರಸ್ಪರ ಗಲಾಟೆಯಲ್ಲಿ ಆರೋಪಿ ಶಹಬಾಜ್‌ ಎಂವಾತನಿಗೂ ಗಾಯವಾಗಿದ್ದ, ಆತನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸದ್ಯ ಪ್ರಕರಣ ಸಂಬಂಧ ಉದಯಗಿರಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ನಡೆಸುತ್ತಿದ್ದಾರೆ.

ಇದನ್ನೂ ಓದಿ: Shatru Bhairavi Yaga: ಶತ್ರು ಭೈರವಿ ಯಾಗ ನಡೆದಿಲ್ಲ, ಪ್ರಾಣಿಬಲಿಯೂ ಇಲ್ಲ: ಕೇರಳ ಸರಕಾರದಿಂದಲೇ ತನಿಖೆ, ಸ್ಪಷ್ಟನೆ

ಬಿಹಾರದಲ್ಲಿ ಬಿಸಿಲಾಘಾತ; ಶಾಖಕ್ಕೆ 10 ಮತಗಟ್ಟೆ ಸಿಬ್ಬಂದಿ ಸೇರಿ 14 ಮಂದಿ ಬಲಿ

ಪಟನಾ: ದೇಶದಲ್ಲಿ ಕಂಡು ಕೇಳರಿಯದ ಪ್ರಮಾಣದಲ್ಲಿ ಉಷ್ಣಾಂಶ ಹೆಚ್ಚಾಗುತ್ತಿದೆ. ಜತೆಗೆ ಉತ್ತರ ಭಾರತದ ವಿವಿಧ ಭಾಗದಲ್ಲಿ ಬಿಸಿಗಾಳಿ (Heat Wave) ಬೀಸುತ್ತಿದ್ದು ಜನ ಜೀವನ ಅಸ್ತವ್ಯಸ್ತವಾಗಿದೆ. ಅದರಲ್ಲಿಯೂ ಬಿಹಾರ(Bihar)ದಲ್ಲಿ ಬಿಸಿಗಾಳಿಯ ಶಾಖಕ್ಕೆ ಜನ ತತ್ತರಿಸಿ ಹೋಗಿದ್ದಾರೆ. 24 ಗಂಟೆಗಳಲ್ಲಿ 10 ಮತಗಟ್ಟೆ ಸಿಬ್ಬಂದಿ ಸೇರಿ ಸುಮಾರು 14 ಮಂದಿ ಬಿಸಿಲಿನ ಶಾಖಕ್ಕೆ ಬಲಿಯಾಗಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿಪತ್ತು ನಿರ್ವಹಣಾ ಇಲಾಖೆ ಹೊರಡಿಸಿದ ಪ್ರಕಟಣೆಯಲ್ಲಿ ಈ ವಿವರಗಳನ್ನು ನೀಡಲಾಗಿದೆ. ಹೆಚ್ಚಿನ ಸಾವು ನೋವು ಭೋಜ್‌ಪುರದಲ್ಲಿ ನಡೆದಿದ್ದು, ಅಲ್ಲಿ ಚುನಾವಣಾ ಕರ್ತವ್ಯದಲ್ಲಿ ನಿರತರಾಗಿದ್ದ 5 ಮಂದಿ ಮೃತಪಟ್ಟಿದ್ದಾರೆ. ರೋಹ್ಟಾಸ್‌ನಲ್ಲಿ ಮೂವರು ಚುನಾವಣಾ ಅಧಿಕಾರಿಗಳು, ಕೈಮೂರ್ ಮತ್ತು ಔರಂಗಾಬಾದ್ ಜಿಲ್ಲೆಗಳಲ್ಲಿ ತಲಾ ಒಬ್ಬರು ಜೀವ ಕಳೆದುಕೊಂಡಿದ್ದಾರೆ ಎಂದು ಮೂಲಗಳು ಮಾಹಿತಿ ನೀಡಿವೆ.

ಇದನ್ನೂ ಓದಿ: Heat Wave: ಬಿಸಿಗಾಳಿ ಶಾಖಕ್ಕೆ ಉತ್ತರ ಭಾರತ ಸಂಪೂರ್ಣ ತತ್ತರ; ಎಮರ್ಜೆನ್ಸಿ ಘೋಷಣೆ ಆಗುತ್ತಾ?

ಜತೆಗೆ ರಾಜ್ಯದ ವಿವಿಧ ಭಾಗಳಲ್ಲಿಯೂ ಅನೇಕರು ಬಿಸಿಲಿನ ಝಳಕ್ಕೆ ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದು, ಮೃತರ ಕುಟುಂಬಗಳಿಗೆ ಪರಿಹಾರ ನೀಡಲಾಗುವುದು ಎಂದು ಹೇಳಿದ್ದಾರೆ. ರಾಜ್ಯದ ಹಲವೆಡೆ ತಾಪಮಾನ 44 ಡಿಗ್ರಿ ಸೆಲ್ಸಿಯಸ್‌ಗೆ ತಲುಪಿದೆ. ಗುರುವಾರ ಬಕ್ಸಾರ್‌ನಲ್ಲಿ ಅತೀ ಹೆಚ್ಚು 47.1 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿತ್ತು. ಬಿಸಿ ಗಾಳಿ ವ್ಯಾಪಕವಾಗಿ ಬೀಸುತ್ತಿರುವ ಪರಿಣಾಮ ಎಲ್ಲ ಶಾಲೆಗಳು, ಕೋಚಿಂಗ್‌ ಸೆಂಟರ್‌ಗಳು ಮತ್ತು ಅಂಗನವಾಡಿಗಳಿಗೆ ಜೂನ್‌ 8ರ ತನಕ ರಜೆ ಸಾರಲಾಗಿದೆ.

ಪ್ರತಿಪಕ್ಷ ನಾಯಕ ತೇಜಸ್ವಿ ಯಾದವ್ ಶಾಲೆಗಳಿಗೆ ಶಿಕ್ಷಕರು ಬರಬೇಕು ಎನ್ನುವ ಸರ್ಕಾರದ ಆದೇಶದ ವಿರುದ್ಧ ತಿರುಗಿ ಬಿದ್ದಿದ್ದಾರೆ. ಈ ಬಗ್ಗೆ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿ “ಪ್ರತಿಪಕ್ಷಗಳ ಒತ್ತಡದಿಂದಾಗಿ ಸರ್ಕಾರಿ ಶಾಲೆಗಳನ್ನು ಈಗಾಗಲೇ ಮುಚ್ಚಲಾಗಿದೆ. ಈ ತೀವ್ರ ಶಾಖದ ಅಲೆ ಎಲ್ಲೆಡೆ ವ್ಯಾಪಿಸಿರುವಾಗ ಶಿಕ್ಷಕರನ್ನು ಶಾಲೆಗಳಿಗೆ ಬರಲು ಏಕೆ ಹೇಳಲಾಗುತ್ತಿದೆ? ವಿದ್ಯಾರ್ಥಿಗಳು ಸ್ವತಃ ಶಾಲೆಯಲ್ಲಿ ಇಲ್ಲದಿದ್ದಾಗ ಶಿಕ್ಷಕರು ಏನು ಮಾಡುತ್ತಾರೆ? ಈ ಸುಡುವ ಬಿಸಿಲಿನಲ್ಲಿ ಶಿಕ್ಷಕರಿಗೂ ರಜೆ ನೀಡಬೇಕುʼʼ ಎಂದು ಆಗ್ರಹಿಸಿದ್ದಾರೆ. ಲೋಕಸಭಾ ಚುನಾವಣೆ ಕೊನೆಯ ಹಂತದ ಮತದಾನ ಇಂದು (ಶನಿವಾರ) ನಡೆಯುತ್ತಿದ್ದು, ಉಷ್ಣಾಂಶದ ಹೆಚ್ಚಳ ಪರಿಣಾಮ ಬೀರುವ ಸಾಧ್ಯತೆ ಇದೆ.

ನಾಗ್ಪುರದಲ್ಲಿ 56 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ದಾಖಲೆಯ 52.9 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಾಗಿರುವ ಎರಡು ದಿನಗಳ ನಂತರ ಮಹಾರಾಷ್ಟ್ರದ ನಾಗ್ಪುರದಲ್ಲಿ ತಾಪಮಾನ 50 ಡಿಗ್ರಿ ಸೆಲ್ಸಿಯಸ್ ಮೀರಿದೆ. ಗುರುವಾರ ಇದು 56 ಡಿಗ್ರಿ ಸೆಲ್ಸಿಯಸ್ ತಲುಪಿದೆ. ಇದು ಸಾರ್ವಕಾಲಿಕ ದಾಖಲೆಯಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮಹಾರಾಷ್ಟ್ರದ ಉತ್ತರ ಅಂಬಾಜಾರಿ ರಸ್ತೆಯ ರಾಮದಾಸ್​ಪೇಟ್​​ನ ಪಿಡಿಕೆವಿಯಲ್ಲಿರುವ 24 ಹೆಕ್ಟೇರ್ ತೆರೆದ ಕೃಷಿ ಕ್ಷೇತ್ರದಲ್ಲಿರುವ ಹವಾಮಾನ ಕೇಂದ್ರದಲ್ಲಿ 56 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಸೋನೆಗಾಂವ್​ನ ಪ್ರಾದೇಶಿಕ ಹವಾಮಾನ ಕೇಂದ್ರದಲ್ಲಿ 54 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ದಾಖಲಿಸಿದೆ. ವಾರ್ಧಾ ರಸ್ತೆಯ ಖಾಪ್ರಿಯಲ್ಲಿರುವ ಸೆಂಟ್ರಲ್ ಇನ್ಸ್​ಟಿಟ್ಯೂಟ್​ ಆಫ್ ಕಾಟನ್ ರಿಸರ್ಚ್ ಪ್ರದೇಶದ ಹೊಲಗಳಲ್ಲಿನ ಅಂಗನವಾಡಿ ಕೇಂದ್ರವು 44 ಡಿಗ್ರಿ ಸೆಲ್ಸಿಯಸ್ ಮತ್ತು ರಾಮ್ಟೆಕ್ ಎಡಬ್ಲ್ಯೂಎಸ್ 44 ಡಿಗ್ರಿ ಸೆಲ್ಸಿಯಸ್ ಉಷ್ಣಾಂಶ ಕಂಡು ಬಂದಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಪ್ರಮುಖ ಸುದ್ದಿ

CM Siddaramaiah: ಸಿಎಂ, ಡಿಸಿಎಂ ಕೂಡ ಇಂದು ಕೋರ್ಟ್‌ ಕಟಕಟೆಯಲ್ಲಿ! ಏನಿದು ಕೇಸ್?‌

CM Siddaramaiah: ಪ್ರಕರಣದಲ್ಲಿ A1 ಕೆಪಿಸಿಸಿ, A2 ಡಿಕೆ ಶಿವಕುಮಾರ್, A3 ಆರೋಪಿಯಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ A4 ಆರೋಪಿಯಾಗಿ ರಾಹುಲ್ ಗಾಂಧಿ ಅವರನ್ನು ಹೆಸರಿಸಲಾಗಿದೆ. ಐಪಿಸಿ ಸೆಕ್ಷನ್ 499 ಹಾಗೂ 500 ಅಡಿಯಲ್ಲಿ ಖಾಸಗಿ ದೂರು ದಾಖಲಾಗಿದೆ.‌ ಡಿಕೆ ಶಿವಕುಮಾರ್ ಪರ ವಕೀಲರಾದ ದೀಪು 42ನೇ ಎಸಿಎಂಎಂ ಕೋರ್ಟ್‌ಗೆ ಹಾಜರಾಗಿದ್ದಾರೆ.

VISTARANEWS.COM


on

cm Siddaramaiah And DK Shivakumar
Koo

ಬೆಂಗಳೂರು: ಸಿಎಂ ಸಿದ್ದರಾಮಯ್ಯ (CM Siddaramaiah) ಹಾಗೂ ಡಿಸಿಎಂ ಡಿಕೆ ಶಿವಕುಮಾರ್‌ (DCM DK Shivakumar) ಇಬ್ಬರೂ ಇಂದು ಮಾನನಷ್ಟ ಮೊಕದ್ದಮೆಯೊಂದಕ್ಕೆ (Defamation case) ಸಂಬಂಧಿಸಿ ಎಸಿಎಂಎಂ ನ್ಯಾಯಾಲಯಕ್ಕೆ (ACMM court) ಹಾಜರಾಗಲಿದ್ದಾರೆ. ಬೆಳಗ್ಗೆ ಇಬ್ಬರೂ ಹಾಜರಾಗಿ ಜಾಮೀನು ಅರ್ಜಿ (bail plea) ಸಲ್ಲಿಸಲಿದ್ದಾರೆ.

ವಿಧಾನ ಪರಿಷತ್‌ ಸದಸ್ಯ, ಬಿಜೆಪಿ (BJP) ಮುಖಂಡ ಕೇಶವ ಪ್ರಸಾದ್ ಅವರು ಸಲ್ಲಿಸಿರುವ ಖಾಸಗಿ ದೂರು ವಿಚಾರಣೆಗೆ ಬಂದಿದ್ದು, ಇಂದು ನ್ಯಾಯಾಧೀಶರ ಮುಂದೆ ಸಿಎಂ, ಡಿಸಿಎಂ ಹಾಜರ್ ಆಗುತ್ತಿದ್ದಾರೆ. ವಿಧಾನಸಭೆ ಚುನಾವಣೆ (Assembly election) ಸಂದರ್ಭದಲ್ಲಿ ಬಿಜೆಪಿ ವಿರುದ್ಧ ಆರೋಪಿಸಿದ್ದ ಕೈ ನಾಯಕರ ಮೇಲೆ ಮಾನನಷ್ಟ ಮೊಕದ್ದಮೆ ಹಾಕಲಾಗಿದೆ.

“2500 ಕೋಟಿ ರೂಪಾಯಿ ಬಿಜೆಪಿ ಹೈಕಮಾಂಡ್‌ಗೆ ಕೊಟ್ಟರೆ ಸಿಎಂ ಹುದ್ದೆ ಸಿಗುತ್ತದೆ” ಎಂದಿದ್ದ ಆರೋಪ, ಕೋವಿಡ್ ಕಿಟ್ ಖರೀದಿ ಹಗರಣ, 40% ಕಮಿಷನ್ ಆರೋಪಗಳನ್ನು ಮಾಡಿದ್ದ ಕೈ ನಾಯಕರ ಮೇಲೆ ಕೇಶವ ಪ್ರಸಾದ್‌ ಮಾನನಷ್ಟ ಮೊಕದ್ದಮೆ ಹಾಕಿದ್ದರು. 08-05-2023ರಂದು 42ನೇ ವಿಶೇಷ ನ್ಯಾಯಾಲಯದಲ್ಲಿ ಖಾಸಗಿ ದೂರ ದಾಖಲು ಮಾಡಿದ್ದರು. ಈ ಪ್ರಕರಣದ ಕುರಿತು ಇಂದು ನಡೆಯುವ ವಿಚಾರಣೆಗೆ ಸಿಎಂ, ಡಿಸಿಎಂ ಹಾಜರ್ ಆಗಲಿದ್ದಾರೆ.

ಪ್ರಕರಣದಲ್ಲಿ A1 ಕೆಪಿಸಿಸಿ, A2 ಡಿಕೆ ಶಿವಕುಮಾರ್, A3 ಆರೋಪಿಯಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ A4 ಆರೋಪಿಯಾಗಿ ರಾಹುಲ್ ಗಾಂಧಿ ಅವರನ್ನು ಹೆಸರಿಸಲಾಗಿದೆ. ಐಪಿಸಿ ಸೆಕ್ಷನ್ 499 ಹಾಗೂ 500 ಅಡಿಯಲ್ಲಿ ಖಾಸಗಿ ದೂರು ದಾಖಲಾಗಿದೆ.‌ ಡಿಕೆ ಶಿವಕುಮಾರ್ ಪರ ವಕೀಲರಾದ ದೀಪು 42ನೇ ಎಸಿಎಂಎಂ ಕೋರ್ಟ್‌ಗೆ ಹಾಜರಾಗಿದ್ದಾರೆ.

ಏನು ಹೇಳಿದ್ದರು?

“ಬಿಜೆಪಿ ಸರ್ಕಾರ 2019ರಿಂದ 2023ರವರೆಗೆ ಭ್ರಷ್ಟ ಆಡಳಿತ ನಡೆಸಿತ್ತು. ಆಗಿನ ಸಿಎಂ ಹುದ್ದೆ ರೂ. 2500 ಕೋಟಿಗೆ ಮಾರಾಟವಾಗಿತ್ತು. ಮಂತ್ರಿಗಳ ಹುದ್ದೆ ರೂ. 500 ಕೋಟಿ ಬಿಜೆಪಿ ಹೈಕಮಾಂಡ್‌ಗೆ ನೀಡಿ ಪಡೆದಿದ್ದಾರೆ. ಈ ಮೂಲಕ ಭ್ರಷ್ಟಾಚಾರ ಮಾಡಿದ್ದಾರೆ. ಇದಲ್ಲದೆ ಕೋವಿಡ್ ಕಿಟ್ ಪೂರೈಕೆ ಟೆಂಡರ್‌ನಲ್ಲಿ 75% ಡೀಲ್ ನಡೆದಿದೆ. ಪಿಡಬ್ಲ್ಯೂಡಿ ಗುತ್ತಿಗೆ ಟೆಂಡರ್‌ಗಳಲ್ಲಿ 40% ಡೀಲ್, ಮಠಕ್ಕೆ ನೀಡುವ ಅನುದಾನದಲ್ಲಿ 30% ಡೀಲ್, ಉಪಕರಣಗಳ ಪೂರೈಕೆಯಲ್ಲಿ 40% ಡೀಲ್, ಮಕ್ಕಳಿಗೆ ನೀಡುವ ಮೊಟ್ಟೆ ಪೂರೈಕೆಯ ಟೆಂಡರ್‌ನಲ್ಲಿ 30% ಡೀಲ್, ರಸ್ತೆ ಕಾಮಗಾರಿಗಳ ಟೆಂಡರ್‌ನಲ್ಲಿ 40% ಡೀಲ್ ನಡೆದಿದೆ” ಎಂದು ಆರೋಪಿಸಿದ್ದರು.

ಪರ್ಸೆಂಟೇಜ್ ಲೆಕ್ಕದಲ್ಲಿ ಕಮಿಷನ್ ಪಡೆದ ಆರೋಪ ಮಾಡಿ ಈ ಬಗ್ಗೆ ಅನೇಕ ಜಾಹೀರಾತುಗಳನ್ನೂ ಕಾಂಗ್ರೆಸ್‌ ನೀಡಿತ್ತು. ಇದರಿಂದ ಬಿಜೆಪಿ ಪಕ್ಷಕ್ಕೆ ಅಪಮಾನವಾಗಿದೆ ಎಂದು ಕಾಂಗ್ರೆಸ್ ಪಕ್ಷದ ಮುಖಂಡರ ವಿರುದ್ಧ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎಸ್. ಕೇಶವ ಪ್ರಸಾದ್ ಐಪಿಸಿ 499, 500 ಅಡಿ ಖಾಸಗಿ ದೂರು ದಾಖಲು ಮಾಡಿದ್ದರು. ಈ ಬಗ್ಗೆ ವಾದ ಆಲಿಸಿ ಆರೋಪಿಗಳನ್ನು ಹಾಜರು ಪಡಿಸಲು ಕೋರ್ಟ್‌ ಸೂಚಿಸಿತ್ತು.

ಇದನ್ನೂ ಓದಿ: DK Shivakumar: ಸಿಎಂ, ನನ್ನ ಮೇಲೆ ಶತ್ರು ಭೈರವಿ ಯಾಗ ನಡೆಯುತ್ತಿದೆ; ಡಿಕೆಶಿ ಹೊಸ ಬಾಂಬ್

Continue Reading

ಪ್ರಮುಖ ಸುದ್ದಿ

Shatru Bhairavi Yaga: ಶತ್ರು ಭೈರವಿ ಯಾಗ ನಡೆದಿಲ್ಲ, ಪ್ರಾಣಿಬಲಿಯೂ ಇಲ್ಲ: ಕೇರಳ ಸರಕಾರದಿಂದಲೇ ತನಿಖೆ, ಸ್ಪಷ್ಟನೆ

Shatru Bhairavi Yaga: ಕೇರಳ ರಾಜ್ಯ ಗುಪ್ತಚರ ಹಾಗೂ ಪೊಲೀಸ್ ಇಲಾಖೆ (Kerala police) ಈ ಕುರಿತು ವಿಶೇಷ ತನಿಖಾ ತಂಡ (SIT) ರಚಿಸಿದ್ದು, ಅದರ ಮೂಲಕ ತನಿಖೆ ನಡೆಸಲಾಗಿದೆ. ಕೇರಳ ರಾಜ್ಯದ ಕಣ್ಣೂರು, ತಳಿಪರಂಬ ಭಾಗದಲ್ಲಿ ಓಡಾಡಿ ಕೇರಳ ಪೊಲೀಸರು ಮಾಹಿತಿ ಸಂಗ್ರಹಿಸಿದ್ದಾರೆ.

VISTARANEWS.COM


on

shatru bhairavi yaga
ತಳಿಪರಂಬ ಶ್ರೀ ರಾಜರಾಜೇಶ್ವರ ದೇವಾಲಯ
Koo

ಮಂಗಳೂರು: ʼತಮ್ಮನ್ನು ಮುಗಿಸಲು ಕೇರಳದಲ್ಲಿ ಶತ್ರು ಭೈರವಿ ಯಾಗ (Shatru Bhairavi Yaga) ನಡೆದಿದೆʼ ಎಂದು ಡಿಸಿಎಂ ಡಿಕೆ ಶಿವಕುಮಾರ್‌ (DCM DK Shivakumar) ನೀಡಿದ್ದ ಹೇಳಿಕೆ ಕೇರಳದಲ್ಲಿ (Kerala) ಸಂಚಲನ ಸೃಷ್ಟಿಸಿದ್ದು, ಈ ಬಗ್ಗೆ ಅಲ್ಲಿನ ಸರ್ಕಾರ ತನಿಖೆ ನಡೆಸಿದೆ. ಅಂಥ ಯಾವುದೇ ಯಾಗ ನಡೆದಿಲ್ಲ, ಪ್ರಾಣಿ ಬಲಿ (animal sacrifice) ನೀಡಲಾಗಿಲ್ಲ ಎಂದು ಸ್ಪಷ್ಟನೆ ನೀಡಿದೆ.

ಕೇರಳ ರಾಜ್ಯ ಗುಪ್ತಚರ ಹಾಗೂ ಪೊಲೀಸ್ ಇಲಾಖೆ (Kerala police) ಈ ಕುರಿತು ವಿಶೇಷ ತನಿಖಾ ತಂಡ (SIT) ರಚಿಸಿದ್ದು, ಅದರ ಮೂಲಕ ತನಿಖೆ ನಡೆಸಲಾಗಿದೆ. ಕೇರಳ ರಾಜ್ಯದ ಕಣ್ಣೂರು, ತಳಿಪರಂಬ ಭಾಗದಲ್ಲಿ ಓಡಾಡಿ ಕೇರಳ ಪೊಲೀಸರು ಮಾಹಿತಿ ಸಂಗ್ರಹಿಸಿದ್ದಾರೆ. ಪ್ರಾಣಿ ಬಲಿ ಕೊಟ್ಟು ಶತ್ರು ಭೈರವಿ ಯಾಗ ನಡೆದಿದೆಯಾ ಎಂದು ತನಿಖೆ ನಡೆಸಿ ಸಮಗ್ರ ಮಾಹಿತಿ ಸಂಗ್ರಹಿಸಿ ಕೇರಳ ಡಿಜಿಪಿಗೆ ವಿಶೇಷ ತನಿಖಾ ತಂಡ ವರದಿ ಸಲ್ಲಿಸಿದೆ.

ತಳಿಪರಂಬ ಶ್ರೀ ರಾಜರಾಜೇಶ್ವರಿ ದೇವರು

ತಳಿಪರಂಬ, ರಾಜರಾಜೇಶ್ವರಂ ಹಾಗೂ ಕಣ್ಣೂರು ಸುತ್ತಮುತ್ತ ಪ್ರದೇಶದಲ್ಲಿ ತನಿಖೆ ನಡೆಸಿದ ಕೇರಳ ಟೀಂ, ಅಂಥ ಯಾವುದೇ ಪ್ರಾಣಿ ಬಲಿ ಯಾಗ ನಡೆದಿಲ್ಲ ಎಂದು ಕೇರಳ ಡಿಜಿಪಿಗೆ ವರದಿ ಸಲ್ಲಿಸಿದೆ. ಈ ನಡುವೆ ಕರ್ನಾಟಕ ಪೊಲೀಸ್ ವಿಶೇಷ ತಂಡದಿಂದಲೂ ಗುಪ್ತವಾಗಿ ಮಾಹಿತಿ ಸಂಗ್ರಹ ನಡೆದಿದೆ. ಆದರೆ ಯಾರ ತನಿಖೆಯಲ್ಲೂ ಯಾಗದ ಕುರಿತು ಸುಳಿವು ದೊರೆತಿಲ್ಲ.

ಕೇರಳ ಸಚಿವರಿಂದಲೂ ಸ್ಪಷ್ಟನೆ

ಕೇರಳದ ದೇವಸ್ವಂ ಬೋರ್ಡ್ ಸಚಿವ ರಾಧಾಕೃಷ್ಣನ್ ಅವರೂ ಡಿಕೆ ಶಿವಕುಮಾರ್ ಆರೋಪವನ್ನು ನಿರಾಕರಿಸಿದ್ದಾರೆ. ನಮ್ಮ ರಾಜ್ಯದ ಯಾವುದೇ ದೇವಸ್ಥಾನಗಳಲ್ಲೂ ಪ್ರಾಣಿ ಬಲಿ ನಡೆಯಲ್ಲ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.

ದೇವಳ ಆಡಳಿತ ಮಂಡಳಿ ನಿರಾಕರಣೆ

“ದೇವಸ್ವಂ ಬೋರ್ಡ್ ಅಧೀನದಲ್ಲಿರುವ ಯಾವುದೇ ದೇವಾಲಯಗಳಲ್ಲಿ ಪ್ರಾಣಿ ಬಲಿಯನ್ನು ಒಳಗೊಂಡ ಯಾವುದೇ ಪೂಜೆ ಅಥವಾ ನೈವೇದ್ಯಗಳು ನಡೆಯುವುದಿಲ್ಲ. ಕೇರಳದ ಮಲಬಾರ್ ದೇವಸ್ವಂ ಬೋರ್ಡ್ ಅಧೀನದಲ್ಲಿರುವ ರಾಜರಾಜೇಶ್ವರಂ ದೇವಸ್ಥಾನದ ಹೆಸರಿನ ಬಗ್ಗೆ ದೃಶ್ಯ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಸುದ್ದಿ ಸಂಪೂರ್ಣ ಅಸತ್ಯ ಮತ್ತು ದುರದೃಷ್ಟಕರ” ಎಂದು ಅಧಿಕೃತ ಪತ್ರಿಕಾ ಹೇಳಿಕೆ‌ ಮೂಲಕ ದೇವಸ್ಥಾನದ ಆಡಳಿತ ಮಂಡಳಿ ಸ್ಪಷ್ಟನೆ ನೀಡಿದೆ.

ದೇವಾಲಯ ಆಡಳಿತ ಮಂಡಳಿ ಸ್ಪಷ್ಟನೆ

“ಶ್ರೀ ರಾಜರಾಜೇಶ್ವರಿ ದೇವಸ್ಥಾನವು ಕೇರಳದ ಅತ್ಯಂತ ಹಳೆಯ ಮತ್ತು ಪ್ರಸಿದ್ಧ ದೇವಾಲಯಗಳಲ್ಲಿ ಒಂದಾಗಿದೆ. ಕಣ್ಣೂರು ತಳಿಪರಂಬ ಶ್ರೀ ರಾಜರಾಜೇಶ್ವರಂ ದೇವಸ್ಥಾನಕ್ಕೆ ಸಂಬಂಧಿಸಿದಂತೆ ಅಂತಹ ಯಾವುದೇ ಪೂಜೆ ಅಥವಾ ಶತ್ರು ಭೈರವಿ ಯಾಗವನ್ನು ನಡೆಸಲಾಗುವುದಿಲ್ಲ. ಮಲಬಾರ್ ದೇವಸ್ವಂ ಬೋರ್ಡ್ ಅಧೀನದಲ್ಲಿರುವ ಯಾವುದೇ ದೇವಾಲಯಗಳಲ್ಲಿ ಪ್ರಾಣಿ ಬಲಿಯನ್ನು ಒಳಗೊಂಡ ಯಾವುದೇ ಪೂಜೆ ಅಥವಾ ನೈವೇದ್ಯಗಳಿಲ್ಲ. ದೇವಾಲಯದ ಹಿತಾಸಕ್ತಿಗಳ ವಿರುದ್ಧದ ಪ್ರಚಾರಗಳನ್ನು ಸಂಪೂರ್ಣವಾಗಿ ತಿರಸ್ಕರಿಸಲಾಗಿದೆ” ಎಂದು ಪತ್ರಿಕಾ ಹೇಳಿಕೆ ಮೂಲಕ ತಳಿಪರಂಬ ಶ್ರೀ ರಾಜರಾಜೇಶ್ವರಂ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಹೇಳಿಕೆ ನೀಡಿದ್ದಾರೆ.

ಡಿಕೆಶಿ ಆರೋಪ ಏನಿತ್ತು?

ಕೇರಳ ರಾಜ್ಯದ ಕಣ್ಣೂರು ಜಿಲ್ಲೆಯ ತಳಿಪರಂಬ ಶ್ರೀ ರಾಜರಾಜೇಶ್ವರಂ ದೇವಸ್ಥಾನದಲ್ಲಿ ಸಿಎಂ ಹಾಗೂ ನನ್ನ ವಿರುದ್ಧ ಶತ್ರು ಭೈರವಿ ಯಾಗ ಮಾಡಲಾಗುತ್ತಿದೆ ಎಂದು ಡಿಸಿಎಂ ಡಿಕೆಶಿ ಮೊನ್ನೆ ಹೇಳಿದ್ದರು. “ಇದು ಶತ್ರು ಸಂಹಾರಕ್ಕಾಗಿ ಮಾಡುತ್ತಿರುವ ಶತ್ರು ಭೈರವಿ ಯಾಗವಾಗಿದ್ದು, ಇದನ್ನು ಮಾಡಿಸುತ್ತಿರುವವರು ಯಾರೆಂದು ಗೊತ್ತಿದೆ. ರಾಜಕೀಯ ವೈರಿಗಳು ಮಾಡಿಸುತ್ತಿದ್ದಾರೆ. ಯಾಗದಲ್ಲಿ ಮೇಕೆ, ಹಂದಿ, ಕುರಿ, ಹೀಗೆ ಪಂಚಬಲಿ ಕೊಟ್ಟಿದ್ದಾರೆ. ಅಘೋರಿಗಳು ಇದರಲ್ಲಿ ಪಾಲ್ಗೊಂಡಿದ್ದಾರೆ. ಕೇರಳದ ರಾಜರಾಜೇಶ್ವರಿ ದೇವಸ್ಥಾನದ ಆಸುಪಾಸು ಚೆಕ್ ಮಾಡಿ, ನಿಮಗೇ ಗೊತ್ತಾಗುತ್ತೆ. ಇದರಲ್ಲಿ ಭಾಗವಹಿಸಿದವರೇ ನನಗೆ ಮಾಹಿತಿ ನೀಡಿದ್ದಾರೆ” ಎಂದು ಡಿಕೆಶಿ ಆರೋಪಿಸಿದ್ದರು.

ಇದನ್ನೂ ಓದಿ: ಮಾರಣ ಶತ್ರು ಭೈರವಿ ಯಾಗ ಎದುರಿಸಲು ರಕ್ಷಣಾಕವಚ ಮಾಡಿಸಿದ ಡಿಕೆಶಿ! ಹೀಗಿರುತ್ತೆ ನೋಡಿ ಯಾಗ

Continue Reading

ಕರ್ನಾಟಕ

Hum Do Humare Barah: ʼಹಮ್ ದೋ, ಹಮಾರೇ ಬಾರಹ್ʼ ಚಿತ್ರ ಬಿಡುಗಡೆಗೆ ಮುಸ್ಲಿಮರ ವಿರೋಧ: “ಪೆನ್‌ಡ್ರೈವ್‌ ಕೇಸ್‌ ಮೇಲೆ ಮಾಡಿ” ಎಂದು ಗರಂ!

Hum Do Humare Barah:ʼಹಮ್‌ ದೋ, ಹಮಾರೇ ಬಾರಹ್ʼ (hum do humare barah) ಚಿತ್ರ ನಿಗದಿಯಂತೆ ಜೂನ್ 7ರಂದು ಬಿಡುಗಡೆಯಾಗಬೇಕಿದೆ. ಆದರೆ ಬಾಲಿವುಡ್ ಹಿರಿಯ ನಟ ಅನ್ನು ಕಪೂರ್ ಅಭಿನಯದ ಈ ಚಿತ್ರದ ಸುತ್ತ ಈಗಲೇ ವಿವಾದದ ಕಾರ್ಮೋಡ ಕವಿದಿದೆ.

VISTARANEWS.COM


on

hum do humare barah
Koo

ವಿಜಯನಗರ: ಮುಸ್ಲಿಂ ಸಮುದಾಯವನ್ನು (muslim community) ಕೇಂದ್ರೀಕರಿಸಿದ ಚಿತ್ರಕತೆ (Screen play) ಹೊಂದಿರುವ ʼಹಮ್‌ ದೋ, ಹಮಾರೇ ಬಾರಹ್ʼ (Hum Do Humare Barah) ಚಿತ್ರ ಬಿಡುಗಡೆಗೆ ಆಕ್ಷೇಪಣೆ ವ್ಯಕ್ತವಾಗಿದೆ. ಹೊಸಪೇಟೆಯ ಅಂಜುಮನ್ ಖಿದ್ಮತೆ ಇಸ್ಲಾಂ ಸಂಘಟನೆ ಮತ್ತು ಮುಸ್ಲಿಂ ಸಮಾಜದಿಂದ ವಿರೋಧ ವ್ಯಕ್ತವಾಗಿದ್ದು, ರಾಜ್ಯದಲ್ಲಿ ಇದರ ಬಿಡುಗಡೆ ತಡೆಯುವಂತೆ ವಿಜಯನಗರ ಜಿಲ್ಲಾಧಿಕಾರಿ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಮಾಡಲಾಗಿದೆ.

ಯಾವುದೀ ಸಿನಿಮಾ?

ʼಹಮ್‌ ದೋ, ಹಮಾರೇ ಬಾರಹ್ʼ (hum do humare barah) ಚಿತ್ರ ನಿಗದಿಯಂತೆ ಜೂನ್ 7ರಂದು ಬಿಡುಗಡೆಯಾಗಬೇಕಿದೆ. ಆದರೆ ಬಾಲಿವುಡ್ ಹಿರಿಯ ನಟ ಅನ್ನು ಕಪೂರ್ ಅಭಿನಯದ ಈ ಚಿತ್ರದ ಸುತ್ತ ಈಗಲೇ ವಿವಾದದ ಕಾರ್ಮೋಡ ಕವಿದಿದೆ. ಒಂದೆಡೆ, ಚಿತ್ರದ ಪಾತ್ರವರ್ಗ ಮತ್ತು ಸಿಬ್ಬಂದಿಗೆ ಕೊಲೆ ಮತ್ತು ಅತ್ಯಾಚಾರದ ಬೆದರಿಕೆಗಳು ಬರುತ್ತಿವೆ. ಮಹಾರಾಷ್ಟ್ರದಲ್ಲಿ ಅಜಿತ್ ಪವಾರ್ ಅವರ ನ್ಯಾಷನಲಿಸ್ಟ್ ಕಾಂಗ್ರೆಸ್ ಪಾರ್ಟಿ (ಎನ್‌ಸಿಪಿ) ಕೂಡ ಇದರ ವಿರುದ್ಧ ಪ್ರತಿಭಟನೆಗೆ ಮುಂದಾಗಿದೆ. ಚಿತ್ರದ ಬಿಡುಗಡೆಯನ್ನು ನಿಷೇಧಿಸುವಂತೆ ಎನ್‌ಸಿಪಿ ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದೆ. ನಟ ಅನ್ನು ಕಪೂರ್ ಮಹಾರಾಷ್ಟ್ರ ಪೊಲೀಸ್ ಮತ್ತು ಗೃಹ ಸಚಿವಾಲಯದಿಂದ ಭದ್ರತೆಯನ್ನು ಕೋರಿದ್ದಾರೆ.

ಕಮಲ್ ಚಂದ್ರ ನಿರ್ದೇಶನದ ಈ ಚಿತ್ರದಲ್ಲಿ ಅನ್ನು ಕಪೂರ್ ಹೊರತಾಗಿ ಪಾರ್ಥ್ ಸಮಾನ್, ಅಶ್ವಿನಿ ಕಲ್ಸೇಕರ್ ಮತ್ತು ಪರಿತೋಷ್ ತಿವಾರಿ ಪ್ರಮುಖ ಪಾತ್ರಗಳಲ್ಲಿದ್ದಾರೆ. ಇತ್ತೀಚೆಗೆ ಈ ಚಿತ್ರವು ಕಾನ್ ಚಲನಚಿತ್ರೋತ್ಸವದಲ್ಲಿ ಪ್ರಥಮ ಪ್ರದರ್ಶನಗೊಂಡಿತು. ಅಲ್ಲಿ ಅದು ಪ್ರಶಂಸಿಸಲ್ಪಟ್ಟಿದೆ. ಈ ಚಿತ್ರದ ಟೀಸರ್ ನೋಡಿದ ಮೇಲೆ ನಮಗೆ, ನಮ್ಮ ಕಲಾವಿದರಿಗೆ ಹಾಗೂ ನಿರ್ದೇಶಕರಿಗೆ ಜೀವ ಬೆದರಿಕೆ ಬರುತ್ತಿದೆ ಎಂದು ಅನ್ನು ಕಪೂರ್ ಹೇಳಿದ್ದಾರೆ. “ಐಸಿಸ್‌ ಮಾದರಿಯಲ್ಲಿ ಶಿರಚ್ಛೇದ ಮಾಡಿ ಕೊಲ್ಲುವುದಾಗಿ ಬೆದರಿಕೆ ಹಾಕಲಾಗುತ್ತಿದೆ. ನಮ್ಮ ಚಿತ್ರಕ್ಕೆ ಸಂಬಂಧಿಸಿದ ಎಲ್ಲಾ ಕಲಾವಿದರಿಗೆ ರಕ್ಷಣೆ ನೀಡುವಂತೆ ನಾನು ಮಹಾರಾಷ್ಟ್ರ ಪೊಲೀಸರು, ಗೃಹ ಸಚಿವರು ಮತ್ತು ಗೃಹ ಸಚಿವಾಲಯವನ್ನು ಕೋರುತ್ತೇನೆ” ಎಂದಿದ್ದಾರೆ.

“ನಮಗೆ ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಫೋನ್ ಮೂಲಕ ಬೆದರಿಕೆ ಹಾಕಲಾಗುತ್ತಿದೆ. ಆದರೆ ಭಯಪಡುವ ಅಗತ್ಯವಿಲ್ಲ ಎಂದು ನನ್ನ ಚಿತ್ರತಂಡಕ್ಕೆ ಹೇಳುತ್ತೇನೆ. ಸಿನಿಮಾ ನೋಡದೆ ಅದರ ಬಗ್ಗೆ ಯಾವುದೇ ಅಭಿಪ್ರಾಯ ಮೂಡಿಸಿಕೊಳ್ಳಬೇಡಿ ಎಂದು ಸಾರ್ವಜನಿಕರಲ್ಲಿ ಮನವಿ ಮಾಡುತ್ತೇನೆ. ನಮ್ಮ ಸಿನಿಮಾ ಮಹಿಳಾ ಸಬಲೀಕರಣದ ಬಗ್ಗೆ ಮಾತನಾಡುತ್ತದೆ. ಇದು ಜನಸಂಖ್ಯೆ ನಿಯಂತ್ರಣದ ಬಗ್ಗೆ ಮಾತನಾಡುತ್ತದೆ. ಯಾವುದೇ ಧರ್ಮವನ್ನು ಅವಮಾನಿಸುವುದು ಅಥವಾ ಮಾನಹಾನಿ ಮಾಡುವುದು ನಮ್ಮ ಉದ್ದೇಶವಲ್ಲ” ​​ಎಂದು ಅನ್ನು ಕಪೂರ್‌ ಹೇಳಿದ್ದಾರೆ.

ಕರ್ನಾಟಕದಲ್ಲೂ ಆಕ್ಷೇಪ

ಹೊಸಪೇಟೆಯ ಅಂಜುಮನ್ ಖಿದ್ಮತೆ ಇಸ್ಲಾಂ ಸಂಘಟನೆ, “ಈ ಚಿತ್ರದ ನಿರ್ದೇಶಕ ಮತ್ತು ನಿರ್ಮಾಪಕರ ಮೇಲೆ ಕಾನೂನು ಕ್ರಮ ಜರುಗಿಸಬೇಕು. ಶಾಂತಿ ಸೌಹಾರ್ದತೆ ಕದಡುವ ಕೆಲಸ ಈ ಸಿನಿಮಾದಿಂದ ಮಾಡಲಾಗುತ್ತಿದೆ. ಚಿತ್ರೀಕರಣ ಮಾಡಬೇಕು ಅಂದ್ರೆ ಪ್ರಜ್ವಲ್ ರೇವಣ್ಣರವರ ಪೆನ್ ಡ್ರೈವ್ ವಿಷಯ ಮೇಲೆ ಚಿತ್ರ ಮಾಡಲಿ. ಸಮಾಜದಲ್ಲಿ ಹೆಣ್ಣು ಮಕ್ಕಳ ಮೇಲೆ ನಡೆಯುತ್ತಿರುವ ದೌರ್ಜನ್ಯದ ಬಗ್ಗೆ ಚಿತ್ರ ಮಾಡಲಿ. ಸಾಮಾನ್ಯ ಜನರು ಪಡುತ್ತಿರುವ ಕಷ್ಟಗಳನ್ನು ಅರ್ಥ ಮಾಡಿಕೊಂಡು ಚಿತ್ರೀಕರಣ ಮಾಡಲಿ. ಧರ್ಮವನ್ನು ಮುಂದಿಟ್ಟು ಚಿತ್ರೀಕರಣ ಮಾಡೋದು ಎಷ್ಟರ ಮಟ್ಟಿಗೆ ಸರಿ? ರಾಜ್ಯ ಸರ್ಕಾರ ಚಿತ್ರ ಬಿಡುಗಡೆಗೆ ತಡೆ ಹಾಕಬೇಕು” ಎಂದು ಒತ್ತಾಯಿಸಿದೆ.‌

ಇದನ್ನೂ ಓದಿ: Pralhad Joshi: ಕನ್ನಡಿಗರ ತೆರಿಗೆಯಲ್ಲಿ ಕೇರಳಿಗರನ್ನು ಸಾಕುತ್ತಿದ್ದಾರೆ ಸಿದ್ದರಾಮಯ್ಯ: ಜೋಶಿ ಆರೋಪ

Continue Reading
Advertisement
OpenAI
Lok Sabha Election 202411 mins ago

OpenAI: ಇಸ್ರೇಲ್‌ನ ಸಂಸ್ಥೆಯಿಂದ ಬಿಜೆಪಿ ವಿರುದ್ಧ ಪ್ರಚಾರ; ಶಾಕಿಂಗ್‌ ಮಾಹಿತಿ ಹಂಚಿಕೊಂಡ ಓಪನ್ಎಐ

Murder Case in Mysuru
ಕ್ರೈಂ12 mins ago

Murder case : ಜಸ್ಟ್‌ ಗುರಾಯಿಸಿದ್ದಕ್ಕೆ ಯುವಕನ ಬರ್ಬರ ಹತ್ಯೆ; ಸಾವಿನ ಕೊನೆ ಕ್ಷಣ ಸೆರೆ

Ambati Rayudu
ಕ್ರೀಡೆ13 mins ago

Ambati Rayudu: ಸ್ಟಾಂಡರ್ಡ್​ ಕಮ್ಮಿ ಮಾಡಿದರೆ ಉತ್ತಮ ಎಂದು ಕೊಹ್ಲಿಯ ಕಾಲೆಳೆದ ರಾಯುಡು

cm Siddaramaiah And DK Shivakumar
ಪ್ರಮುಖ ಸುದ್ದಿ17 mins ago

CM Siddaramaiah: ಸಿಎಂ, ಡಿಸಿಎಂ ಕೂಡ ಇಂದು ಕೋರ್ಟ್‌ ಕಟಕಟೆಯಲ್ಲಿ! ಏನಿದು ಕೇಸ್?‌

Cannes Film Festival Ukrainian model Sawa Pontyjska assault by security guard
ಸಿನಿಮಾ19 mins ago

Cannes Film Festival:  ಮಾಡೆಲ್‌ನನ್ನು ಒರಟಾಗಿ ಹೊರ ದಬ್ಬಿದ ಕಾನ್‌ ಚಲನಚಿತ್ರೋತ್ಸವ ಸಂಘಟಕರು; ವಿಡಿಯೊ ವೈರಲ್‌!

shatru bhairavi yaga
ಪ್ರಮುಖ ಸುದ್ದಿ56 mins ago

Shatru Bhairavi Yaga: ಶತ್ರು ಭೈರವಿ ಯಾಗ ನಡೆದಿಲ್ಲ, ಪ್ರಾಣಿಬಲಿಯೂ ಇಲ್ಲ: ಕೇರಳ ಸರಕಾರದಿಂದಲೇ ತನಿಖೆ, ಸ್ಪಷ್ಟನೆ

Bigg Boss OTT 3 Anil Kapoor Replaces Salman Khan As Host
ಒಟಿಟಿ1 hour ago

Bigg Boss OTT 3: ಶುರುವಾಗಲಿದೆ ಬಿಗ್​ ಬಾಸ್​ ಒಟಿಟಿ 3: ನಿರೂಪಣೆಗೆ ಸಲ್ಮಾನ್​ ಖಾನ್​ ಬದಲು ಅನಿಲ್​ ಕಪೂರ್!

Lok Sabha Election
Lok Sabha Election 20241 hour ago

Lok Sabha Election: ವಾರಾಣಸಿಯಲ್ಲಿ ಮೋದಿ ವಿರುದ್ಧ ಕಣಕ್ಕಿಳಿದಿರುವ 6 ಅಭ್ಯರ್ಥಿಗಳ ಸಾಮರ್ಥ್ಯ ಎಷ್ಟಿದೆ?

IND vs PAK
ಕ್ರೀಡೆ1 hour ago

IND vs PAK T20 World Cup: ಪಾಕಿಸ್ತಾನ​ ವಿರುದ್ಧ ಭಾರತಕ್ಕೆ ಗೆಲುವು ಖಚಿತ ಎಂದ ಪಾಕ್​ ಆಟಗಾರ

Lok Sabha Election 2024 Mithun Chakraborty casting his vote
ಬಾಲಿವುಡ್1 hour ago

Lok Sabha Election 2024: ಕೊನೇ ಹಂತದ ಮತದಾನ; ವೋಟ್‌ ಮಾಡಿದ ನಟ ಮಿಥುನ್ ಚಕ್ರವರ್ತಿ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Assault Case in Shivamogga
ಕ್ರೈಂ2 days ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ4 days ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

tumkur murder
ತುಮಕೂರು4 days ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

Karnataka Weather Forecast
ಮಳೆ5 days ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ6 days ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

Basavanagudi News
ಬೆಂಗಳೂರು6 days ago

Basavanagudi News : ಪೂಜಾ ಸಾಮಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

Karnataka Rain
ಮಳೆ7 days ago

Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

dina bhavishya read your daily horoscope predictions for May 23 2024
ಭವಿಷ್ಯ1 week ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ1 week ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ2 weeks ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

ಟ್ರೆಂಡಿಂಗ್‌