VISTARA TOP 10 NEWS: ರಾಜ್ಯಕ್ಕೆ ಮತ್ತೆ ಕಾವೇರಿ ಹೊಡೆತ, ಸಚಿವ ಡಿ. ಸುಧಾಕರ್‌ಗೆ ಜಾತಿ ನಿಂದನೆ ದುಬಾರಿಯಾಗುತ್ತಾ? - Vistara News

ಕರ್ನಾಟಕ

VISTARA TOP 10 NEWS: ರಾಜ್ಯಕ್ಕೆ ಮತ್ತೆ ಕಾವೇರಿ ಹೊಡೆತ, ಸಚಿವ ಡಿ. ಸುಧಾಕರ್‌ಗೆ ಜಾತಿ ನಿಂದನೆ ದುಬಾರಿಯಾಗುತ್ತಾ?

Vistara Top 10 News : ಡಿ.ಸುಧಾಕರ್‌ ಎದುರಿಸುತ್ತಿರುವ ಜಾತಿ ನಿಂದನೆ ಪ್ರಕರಣ ದುಬಾರಿಯಾಗುತ್ತದಾ ಎಂಬ ಪ್ರಶ್ನೆ ಎದುರಾಗಿದೆ. ಇತ್ತ ಕಾವೇರಿ ವಿಚಾರದಲ್ಲಿ ರಾಜ್ಯಕ್ಕೆ ಮತ್ತೆ ಹೊಡೆತ ಬಿದ್ದಿದೆ. ಹೀಗೆ ದಿನದ ಬೆಳವಣಿಗೆಗಳ ಸುತ್ತುನೋಟವೇ ವಿಸ್ತಾರ ಟಾಪ್‌ 10 ನ್ಯೂಸ್‌

VISTARANEWS.COM


on

Vistara Top 10 News 1209
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

1.ದಲಿತ ನಿಂದನೆ, ಆಸ್ತಿ ಕಬಳಿಕೆ ಸುಳಿಯಲ್ಲಿ ಸಚಿವ ಸುಧಾಕರ್‌; ರಾಜೀನಾಮೆಗೆ ಹೆಚ್ಚಿದ ಒತ್ತಡ
ದಲಿತರ ಆಸ್ತಿ ಕಬಳಿಕೆ, ಹಲ್ಲೆ ಹಾಗೂ ಜಾತಿ ನಿಂದನೆ (Property grabbing, assault and casteist slurs) ಆರೋಪದ ಅಡಿಯಲ್ಲಿ ಸಚಿವ ಡಿ. ಸುಧಾಕರ್‌ (Minister D Sudhakar)​ ಮೇಲೆ ದಾಖಲಾಗಿರುವ ಎಫ್‌ಐಆರ್‌ (FIR registered) ಪ್ರಕರಣವು ಬಹಳ ಗಂಭೀರವಾಗಿದೆ. ಆದರೆ, ಇವರು ಸಚಿವರು ಎಂಬ ಕಾರಣಕ್ಕೆ ಕ್ರಮ ಕೈಗೊಳ್ಳಲು ಹಿಂದೇಟು ಹಾಕಲಾಗುತ್ತಿದೆ ಎಂಬ ಆರೋಪವೂ ಕೇಳಿಬಂದಿದೆ. ಸುಧಾಕರ್‌ ರಾಜೀನಾಮೆ ನೀಡಲೇಬೇಕು ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಒತ್ತಾಯಿಸಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

ಪೂರಕ ವರದಿ 1: ಸಿಎಂ ದಲಿತ ಉದ್ಧಾರಕರಾ? ದಲಿತರಿಗೆ ಧಮ್ಕಿ ಹಾಕಿದ ಸುಧಾಕರ್‌ರನ್ನು ಬಂಧಿಸಿ: ಎಚ್‌ಡಿಕೆ
ಪೂರಕ ವರದಿ 2: ಡಿ ಸುಧಾಕರ್‌ ಮೇಲೆ ಜಾತಿ ನಿಂದನೆ ಕೇಸ್‌ ದಾಖಲಾಗಿದೆಯಾ ಎಂದು ಕೇಳಿದ ಸಿಎಂ

2. ರಾಜ್ಯಕ್ಕೆ ಮತ್ತೆ ಕಾವೇರಿ ಹೊಡೆತ; ಇನ್ನೂ 15 ದಿನ 5000 ಕ್ಯೂಸೆಕ್‌ ನೀರು ಬಿಡಲು cwrc ಆದೇಶ
ಈಗಾಗಲೇ ತಮಿಳುನಾಡಿಗೆ ನೀರು ಬಿಟ್ಟು ಸುಸ್ತಾಗಿರುವ ರಾಜ್ಯಕ್ಕೆ ಮತ್ತೆ 15 ದಿನಗಳ ಕಾಲ ಪ್ರತಿ ದಿನ 5000 ಕ್ಯೂಸೆಕ್‌ ನೀರು (5000 cusec water per day) ಹರಿಸಬೇಕು ಎಂದು ಕಾವೇರಿ ನೀರು ನಿಯಂತ್ರಣ ಸಮಿತಿ ಆದೇಶ ನೀಡಿದೆ. ಮಂಗಳವಾರ ದಿಲ್ಲಿಯಲ್ಲಿ ನಡೆದ ಸಭೆಯಲ್ಲಿ ಈ ಆದೇಶ ಹೊರಡಿಸಲಾಗಿದ್ದು, ಕರ್ನಾಟಕದ (karnataka state) ಸಂಕಟವನ್ನು ಯಾರೂ ಕೇಳುವವರೇ ಇಲ್ಲದಂತಾಗಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ
ಪೂರಕ ಸುದ್ದಿ 1: CWRCಗೆ ತಲೆ ಸರಿ ಇದೆಯಾ? KRSನಲ್ಲಿರುವ ನೀರಿನ ಪ್ರಮಾಣ ನೋಡಿ ನೀವೇ Decide ಮಾಡಿ

3. ಅಧಿಕಾರಿಗಳಿಗೆ ವರ್ಕ್‌ ಫ್ರಂ ಹೋಮ್‌ ಇಲ್ಲ; ಕಚೇರಿಗೇ ಬರ್ಬೇಕು, ಪ್ರವಾಸ ಮಾಡ್ಬೇಕು; ಸಿಎಂ ಕಟ್ಟಾಜ್ಞೆ
ಇನ್ನು ಮುಂದೆ ಯಾವ ಅಧಿಕಾರಿಗಳೂ ಮನೆಯಲ್ಲೇ ಇದ್ದೇನೆ, ಆಫೀಸ್‌ ಕೆಲಸ ಮಾಡುತ್ತಿದ್ದೇನೆ ಎಂದು ಹೇಳುವ ಹಾಗಿಲ್ಲ. ಯಾಕೆಂದರೆ ಸಿಎಂ ಸಿದ್ದರಾಮಯ್ಯ ಅವರು ಅಧಿಕಾರಿಗಳು ಕಚೇರಿಗೆ ಹೋಗಲೇಬೇಕು, ವರ್ಕ್‌ ಫ್ರಂ ಹೋಮ್‌ ಮಾಡುವಂತಿಲ್ಲ ಎಂದು ಆದೇಶ ನೀಡಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

ಪೂರಕ ಸುದ್ದಿ 1: ವಾರಕ್ಕೊಮ್ಮೆ ತಾಲೂಕು ಮಟ್ಟದಲ್ಲಿ ಜನ ಸಂಪರ್ಕ ಸಭೆ; ಡಿಸಿ, ಜಿಪಂ ಸಿಇಒಗಳಿಗೆ ಸಿಎಂ ಆದೇಶ
ಪೂರಕ ಸುದ್ದಿ 2: ವಿಲೇಜ್‌ ಅಕೌಂಟೆಂಟ್‌ಗಳು ಕಚೇರಿಯಲ್ಲೇ ಇರಬೇಕು ಮತ್ತು ಸಿಎಂ ಅವರ 25 ಸೂಚನೆಗಳು

4. ಸರ್ಕಾರದ ವಿರುದ್ಧ ಮುಗಿ ಬೀಳಲು ಬಿಜೆಪಿ ಸಜ್ಜು; ಬಿಎಸ್‌ವೈ ನೇತೃತ್ವದಲ್ಲಿ ಮಹತ್ವದ ಸಭೆ
ರಾಜ್ಯ ಸರ್ಕಾರದ ವಿರುದ್ಧ ಜನಾಂದೋಲನ ಮಾಡಲು ಬಿಜೆಪಿ ಸಜ್ಜಾಗಿದೆ. ಬಿ.ಎಸ್‌. ಯಡಿಯೂರಪ್ಪ ಅವರ ರಾಜ್ಯ ಪ್ರವಾಸದ ರೂಪುರೇಷೆ ಬಗ್ಗೆ ಮಂಗಳವಾರ ಸಭೆ ನಡೆಸಿ ತೀರ್ಮಾನಿಸಲಾಗಿದೆ. ಮುಂದಿನ ಹೋರಾಟ ತೀವ್ರಗೊಳ್ಳಲಿದೆ ಎಂದು ಯಡಿಯೂರಪ್ಪ ಹೇಳಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

5. ಅಶೋಕ ಸಾಮ್ರಾಜ್ಯದಲ್ಲಿ ಆಪರೇಷನ್‌ ಹಸ್ತ; ಸಾಮ್ರಾಟ್‌ ಕೈಬಿಟ್ಟ ಬಲಗೈ ಬಂಟರು
ಮಾಜಿ ಡಿಸಿಎಂ, ಪದ್ಮನಾಭನಗರ ಶಾಸಕ ಆರ್.‌ ಅಶೋಕ್‌ ಕ್ಷೇತ್ರಕ್ಕೆ ಈಗ ಆಪರೇಷನ್‌ ಹಸ್ತ ಭೀತಿ ಎದುರಾಗಿದೆ. ಅಶೋಕ್‌ ಪರಮಾಪ್ತರನ್ನು ಡಿ.ಕೆ. ಶಿವಕುಮಾರ್‌ ಕಾಂಗ್ರೆಸ್‌ಗೆ ಸೆಳೆದಿದ್ದಾರೆ. ಮುಂಬರುವ ಚುನಾವಣೆಗಳನ್ನು ಟಾರ್ಗೆಟ್‌ ಮಾಡಿ ಈ ಬೆಳವಣಿಗೆಗಳು ನಡೆದಿವೆ ಎನ್ನಲಾಗಿದೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

6. ಏಷ್ಯಾ ಕಪ್‌ : ಸೂಪರ್‌ 4 ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಭಾರತಕ್ಕೆ ಸೂಪರ್‌ ಜಯ
ಕೊಲಂಬೊದ ಆರ್‌ ಪ್ರೇಮದಾಸ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಏಷ್ಯಾ ಕಪ್‌ ಸೂಪರ್‌ 4 ಪಂದ್ಯದಲ್ಲಿ ಭಾರತ ಶ್ರೀಲಂಕಾ ವಿರುದ್ಧ 41 ರನ್‌ಗಳ ಜಯ ಗಳಿಸಿತು. ಗೆಲ್ಲಲು 214 ರನ್‌ಗಳ ಗುರಿ ಪಡೆದ ಲಂಕಾ 172 ರನ್‌ಗಳಿಗೆ ಆಲೌಟ್‌ ಆಯಿತು. ಲಂಕಾ ಪರ ಐದು ವಿಕೆಟ್‌ಗಳ ಗೊಂಚಲು ಧರಿಸಿದ್ದ ಯುವ ಆಲ್‌ರೌಂಡರ್‌ ದುನಿತ್‌ ವೆಲ್ಲಾಲಗೆ ಬ್ಯಾಟಿಂಗ್‌ನಲ್ಲೂ ಮಿಂಚಿದರು. 42 ರನ್‌ ಗಳಿಸಿ ಅಜೇಯರಾಗುಳಿದ ದುನಿತ್‌ ಆಟ ಇಡೀ ಮ್ಯಾಚ್‌ನಲ್ಲಿ ಆಕರ್ಷಣೆಯಾಗಿತ್ತು. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

ಪೂರಕ ಸುದ್ದಿ: ಸಚಿನ್‌ ದಾಖಲೆ ಮುರಿದು 10 ಸಾವಿರ ರನ್‌ ಎಲೈಟ್‌ ಪಟ್ಟಿ ಸೇರಿದ ರೋಹಿತ್‌ ಶರ್ಮಾ

7. ಹೊಸ ಸಂಸತ್‌ನಲ್ಲಿ ಸಿಬ್ಬಂದಿಗೆ ಹೊಸ ʼಭಾರತೀಯʼ ಸಮವಸ್ತ್ರ; ಏನೇನು ಬದಲಾವಣೆ?
ನೂತನ ಪಾರ್ಲಿಮೆಂಟ್‌ ಭವನದಲ್ಲಿ ಮುಂದಿನ ವಾರ ನಡೆಯಲಿರುವ ವಿಶೇಷ ಅಧಿವೇಶನದಲ್ಲಿ (Special Parliament session) ಸಂಸತ್ತಿನ ಸಿಬ್ಬಂದಿ ಎರಡೂ ಸದನಗಳ ಒಳಗೆ ಮತ್ತು ಹೊರಗೆ ಹೊಸ ಸಮವಸ್ತ್ರಗಳನ್ನು ಧರಿಸಲಿದ್ದಾರೆ ಎಂದು ಲೋಕಸಭೆಯ ಅಧಿಕಾರಿಗಳು ತಿಳಿಸಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

8. ಸನಾತನ ಧರ್ಮ ನಿರ್ನಾಮಕ್ಕಾಗಿಯೇ I.N.D.IA ಮೈತ್ರಿಕೂಟ ರಚನೆ- ಡಿಎಂಕೆ ಸಚಿವನ ಮತ್ತೊಂದು ವಿವಾದ
ಸನಾತನ ಧರ್ಮವನ್ನು ಡೆಂಗೆ, ಮಲೇರಿಯಾಗೆ ಹೋಲಿಸಿದ್ದ ಉದಯನಿಧಿ ವಿರುದ್ದ ಹಲವು ಪ್ರಕರಣಗಳ ದಾಖಲಾಗಿವೆ. ಇದೀಗ, ಡಿಎಂಕೆ ಸರ್ಕಾರದ ಮತ್ತೊಬ್ಬ ಸಚಿವರು ಈ ವಿವಾದಕ್ಕೆ ಎಂಟ್ರಿ ಕೊಟ್ಟಿದ್ದಾರೆ. ತಮಿಳುನಾಡು ಉನ್ನತ ಸಚಿವ ಕೆ ಪೊನ್ಮುಡಿ ಅವರು, ಇಂಡಿಯಾ ಕೂಟ(ಪ್ರತಿಪಕ್ಷಗಳ ಮೈತ್ರಿ ಕೂಟ INIDA Bloc)ವನ್ನು ಸನಾತನ ಧರ್ಮದ ವಿರುದ್ಧ ಹೋರಾಡಲು ರಚಿಸಲಾಗಿದೆ ಎಂದಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

9. ಲೋಕಸಭೆ ಚುನಾವಣೆ ಮೊದ್ಲೇ ಪಿಒಕೆ ಭಾರತ ಸೇರುತ್ತಾ?- ಸಲ್ವ ದಿನ ಕಾದು ನೋಡಿ ಎಂದ ಕೇಂದ್ರ ಸಚಿವ
ಶೀಘ್ರದಲ್ಲೇ ಪಾಕಿಸ್ತಾನ ಆಕ್ರಮಿತ ಕಾಶ್ಮೀರ ಭಾರತದೊಂದಿಗೆ (India) ವಿಲೀನಗೊಳಿಸಲಾಗುವುದು ಭಾರತೀಯ ಸೇನಾ ಮಾಜಿ ಮುಖ್ಯಸ್ಥರೂ ಆಗಿರುವ ಕೇಂದ್ರ ಸಚಿವ ವಿ ಕೆ ಸಿಂಗ್ (Union Minister VK Singh) ಅವರು ಹೇಳಿದ್ದಾರೆ. ಭಾರತದ ಗಡಿ ಪ್ರವೇಶಕ್ಕೆ ಶಿಯಾ ಮುಸ್ಲಿಮರು ಕಾರ್ಗಿಲ್ ಮೂಲಕ ಅವಕಾಶ ಕಲ್ಪಿಸಬೇಕೆಂಬ ಬೇಡಿಕೆ ಕುರಿತು ಪ್ರತಿಕ್ರಿಯಿಸುವಾಗ ಕೇಂದ್ರ ಸಚಿವರು, ಈ ಕ್ಲೇಮ್ ಮಾಡಿದ್ದಾರೆ. ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

10. ಕಸ ಮಾರಿ ಚಂದ್ರಯಾನದ ಬಜೆಟ್‌ನಷ್ಟು ಕಾಸು ಗಳಿಸಿದ ಸರ್ಕಾರ
ಚಂದ್ರಯಾನ- 3 ಮಿಷನ್‌ನ ಬಜೆಟ್‌ಗೆ ಸಮನಾದ ಮೊತ್ತವನ್ನು ಕೇಂದ್ರ ಸರ್ಕಾರ ಕಸ ಮಾರಿಯೇ ಗಳಿಸಿದೆ! ಇದು ಹೇಗೆ ಅಂತೀರಾ? ಈ ವರದಿ ಓದಿ ಪೂರ್ಣ ವರದಿಗೆ ಈ ಲಿಂಕ್‌ ಕ್ಲಿಕ್‌ ಮಾಡಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಕರ್ನಾಟಕ

Kabzaa movie: ಅತಿ ಹೆಚ್ಚು ತೆರಿಗೆ ಪಾವತಿ; ಆರ್. ಚಂದ್ರು ನಿರ್ಮಾಣ ಸಂಸ್ಥೆಗೆ ಕೇಂದ್ರದಿಂದ ಪ್ರಶಂಸಾ ಪತ್ರ!

Kabzaa movie: ಆರ್. ಚಂದ್ರು ನಿರ್ಮಾಣ ಹಾಗೂ ನಿರ್ದೇಶನದಲ್ಲಿ ಮೂಡಿಬಂದ ಪ್ಯಾನ್ ಇಂಡಿಯಾ ಚಿತ್ರ “ಕಬ್ಜ” ದೇಶಾದ್ಯಂತ ಜನಮನ್ನಣೆ ಪಡೆದಿತ್ತು. ಈಗ ಈ ಚಿತ್ರವನ್ನು ನಿರ್ಮಿಸಿದ್ದ ಶ್ರೀ ಸಿದ್ದೇಶ್ವರ ಎಂಟರ್‌ಪ್ರೈಸಸ್ ಸಂಸ್ಥೆ ಅತೀ ಹೆಚ್ಚು ತೆರಿಗೆ ಪಾವತಿಸಿದ ಕೀರ್ತಿಗೆ ಭಾಜನವಾಗಿದೆ. ದಾಖಲೆ ಮೊತ್ತದ ಹಣವನ್ನು‌ “ಕಬ್ಜ” ಚಿತ್ರದ ಸಲುವಾಗಿ ಆರ್. ಚಂದ್ರು ಕೇಂದ್ರ ತೆರಿಗೆ ಇಲಾಖೆಗೆ ಪಾವತಿಸಿದ್ದಾರೆ‌. ಯಾವುದೇ ತೆರಿಗೆ ಉಳಿಸಿಕೊಳ್ಳದೇ ಅಧಿಕ ಮೊತ್ತದ ತೆರಿಗೆಯನ್ನು ಪಾವತಿಸಿರುವುದಕ್ಕಾಗಿ ಕೇಂದ್ರ ಹಣಕಾಸು ಸಚಿವಾಲಯದಿಂದ ಪ್ರಶಂಸಾ ಪತ್ರ ಕೂಡ ದೊರಕಿದೆ.

VISTARANEWS.COM


on

Kabzaa movie Appreciation Letter from Union Finance Ministry to Sri siddeshwar Enterprises
Koo

ಬೆಂಗಳೂರು: ಆರ್. ಚಂದ್ರು ನಿರ್ಮಾಣ ಹಾಗೂ ನಿರ್ದೇಶನದಲ್ಲಿ ಮೂಡಿಬಂದ ಪ್ಯಾನ್ ಇಂಡಿಯಾ ಚಿತ್ರ “ಕಬ್ಜ” ದೇಶಾದ್ಯಂತ ಜನಮನ್ನಣೆ ಪಡೆದಿತ್ತು. ಈಗ ಈ ಚಿತ್ರವನ್ನು ನಿರ್ಮಿಸಿದ್ದ ಶ್ರೀ ಸಿದ್ದೇಶ್ವರ ಎಂಟರ್‌ಪ್ರೈಸಸ್ ಸಂಸ್ಥೆ ಅತೀ ಹೆಚ್ಚು ತೆರಿಗೆ ಪಾವತಿಸಿದ ಕೀರ್ತಿಗೆ ಭಾಜನವಾಗಿದೆ. ದಾಖಲೆ ಮೊತ್ತದ ಹಣವನ್ನು‌ “ಕಬ್ಜ” ಚಿತ್ರದ (Kabzaa movie) ಸಲುವಾಗಿ ಆರ್. ಚಂದ್ರು ಕೇಂದ್ರ ತೆರಿಗೆ ಇಲಾಖೆಗೆ ಪಾವತಿಸಿದ್ದಾರೆ‌.

ಯಾವುದೇ ತೆರಿಗೆ ಉಳಿಸಿಕೊಳ್ಳದೇ ಅಧಿಕ ಮೊತ್ತದ ತೆರಿಗೆಯನ್ನು ಪಾವತಿಸಿರುವುದಕ್ಕಾಗಿ ಕೇಂದ್ರ ಹಣಕಾಸು ಸಚಿವಾಲಯದಿಂದ ಪ್ರಶಂಸಾ ಪತ್ರ ಕೂಡ ದೊರಕಿದೆ. ಸರ್ಕಾರಕ್ಕೆ ದೊಡ್ಡ ಮೊತ್ತದ ತೆರಿಗೆ ಪಾವತಿಸಿದ ಸಾಲಿಗೆ ಕನ್ನಡದ “ಕಬ್ಜ” ಚಿತ್ರ ಸೇರಿದೆ.

ಇದನ್ನೂ ಓದಿ: Press Day: ಸುಳ್ಳು ಸುದ್ದಿಗಳ ಮೇಲೆ ನಿಗಾ ಇಡಲು ಪ್ರತೀ ಜಿಲ್ಲೆಗಳಲ್ಲೂ ವಿಶೇಷ ಘಟಕ: ಸಿದ್ದರಾಮಯ್ಯ

ಇತ್ತೀಚೆಗೆ ನಡೆದ ಪ್ರಜಾವಾಣಿ ಕನ್ನಡ ‌ಸಿನಿ ಸಮ್ಮಾನ ಸಮಾರಂಭದಲ್ಲಿ ‌ಅತ್ಯುತ್ತಮ ವಿಎಫ್ಎಕ್ಸ್ ಪೋಸ್ಟ್ ಪ್ರೊಡಕ್ಷನ್ ಹಾಗೂ ಅನಿಮೇಷನ್ ಚಿತ್ರ ಪ್ರಶಸ್ತಿಗೆ “ಕಬ್ಜ” ಚಿತ್ರ ಭಾಜನವಾಗಿದೆ.

ಇದನ್ನೂ ಓದಿ: New Rules: ಐಟಿಆರ್‌ನಿಂದ ಕ್ರೆಡಿಟ್ ಕಾರ್ಡ್‌ವರೆಗೆ; ಈ ತಿಂಗಳಲ್ಲಿ ಹಲವು ಹೊಸ ಬದಲಾವಣೆ

ಈ ಎಲ್ಲಾ ಖುಷಿಯ ವಿಚಾರಗಳ ನಡುವೆ ಆರ್. ಚಂದ್ರು ಅವರ ಆರ್.ಸಿ. ಸ್ಟುಡಿಯೋಸ್ ನಿರ್ಮಾಣದ ಐದು ಚಿತ್ರಗಳಲ್ಲಿ ಒಂದಾದ ಡಾರ್ಲಿಂಗ್ ಕೃಷ್ಣ, ಪ್ರಕಾಶ್ ರೈ ಮುಂತಾದವರು ನಟಿಸುತ್ತಿರುವ “ಫಾದರ್” ಚಿತ್ರಕ್ಕೆ ಮೈಸೂರಿನಲ್ಲಿ‌ ಮೊದಲ ಹಂತದ ಚಿತ್ರೀಕರಣ ಅದ್ಧೂರಿಯಾಗಿ ನಡೆಯುತ್ತಿದೆ.

Continue Reading

ಕರ್ನಾಟಕ

Reliance Jio: ಮೊಬೈಲ್‌ ಶುಲ್ಕ ಏರಿಕೆ; ಯಾವ ಕಂಪನಿಯ ಪ್ಲ್ಯಾನ್‌ ಸೂಕ್ತ?

Reliance Jio: ಜಿಯೋ ಸೇರಿದಂತೆ ಏರ್‌ಟೆಲ್‌ ಹಾಗೂ ವಿ ಟೆಲಿಕಾಂ ಸಂಸ್ಥೆಗಳು ಸಹ ತಮ್ಮ ಯೋಜನೆಗಳ ಬೆಲೆ ಏರಿಕೆ ಮಾಡಿವೆ. ಅದಾಗ್ಯೂ, ಜಿಯೋದ ಪ್ರೀಪೇಯ್ಡ್‌ ರೀಚಾರ್ಜ್‌ ಯೋಜನೆಗಳು ಪ್ರತಿಸ್ಪರ್ಧಿಗಳಿಗಿಂತ ಶೇ. 20 ಪ್ರತಿಶತದಷ್ಟು ಕಡಿಮೆ ಬೆಲೆಯಲ್ಲಿ ಲಭ್ಯ ಇವೆ. ಹಾಗೆಯೇ ಜಿಯೋ ಸಂಸ್ಥೆಯ ಅತ್ಯಂತ ಕಡಿಮೆ ಪೋಸ್ಟ್‌ಪೇಯ್ಡ್ ಯೋಜನೆಯು ಹತ್ತಿರದ ಪ್ರತಿಸ್ಪರ್ಧಿಯ ಪೋಸ್ಟ್ ಪೇಯ್ಡ್ ಪ್ಲಾನ್‌ಗಿಂತ ಶೇ. 29% ಪ್ರತಿಶತದಷ್ಟು ಕಡಿಮೆಯಾಗಿದೆ ಎಂದು ಈ ಕಂಪನಿ ಹೇಳಿಕೊಂಡಿದೆ.

VISTARANEWS.COM


on

Reliance Jio
Koo

ಬೆಂಗಳೂರು: ದೇಶದ ಖಾಸಗಿ ಟೆಲಿಕಾಂ ಸಂಸ್ಥೆಗಳಾದ ರಿಲಯನ್ಸ್ ಜಿಯೋ, ಭಾರ್ತಿ ಏರ್‌ಟೆಲ್‌ ಹಾಗೂ ವಿ ಟೆಲಿಕಾಂ ಕಂಪನಿಗಳು ತಮ್ಮ ರೀಚಾರ್ಜ್ ಯೋಜನೆಗಳ ಬೆಲೆಯಲ್ಲಿ (ಟಾರೀಫ್‌ ದರಪಟ್ಟಿಯನ್ನು) ಹೆಚ್ಚಳ ಮಾಡಿವೆ. ಮೂರು ಟೆಲಿಕಾಂಗಳ ಬೆಲೆ ಏರಿಕೆ ಕಂಡ ಯೋಜನೆಗಳ ಹೊಸ ದರಗಳನ್ನು ಹೋಲಿಸಿ ನೋಡಿದರೆ ನಮ್ಮ ಕಂಪನಿಯ ದರವೇ ಕಡಿಮೆ ಎಂದು ರಿಲಯನ್ಸ್‌ ಜಿಯೋ ಟೆಲಿಕಾಂ (Reliance Jio) ಹೇಳಿಕೊಂಡಿದೆ.

ಜಿಯೋ ಸೇರಿದಂತೆ ಏರ್‌ಟೆಲ್‌ ಹಾಗೂ ವಿ ಟೆಲಿಕಾಂ ಸಂಸ್ಥೆಗಳು ಸಹ ತಮ್ಮ ಯೋಜನೆಗಳ ಬೆಲೆ ಏರಿಕೆ ಮಾಡಿವೆ. ಅದಾಗ್ಯೂ, ಜಿಯೋದ ಪ್ರೀಪೇಯ್ಡ್‌ ರೀಚಾರ್ಜ್‌ ಯೋಜನೆಗಳು ಪ್ರತಿಸ್ಪರ್ಧಿಗಳಿಗಿಂತ ಶೇ. 20 ಪ್ರತಿಶತದಷ್ಟು ಕಡಿಮೆ ಬೆಲೆಯಲ್ಲಿ ಲಭ್ಯ ಇವೆ. ಹಾಗೆಯೇ ಜಿಯೋ ಸಂಸ್ಥೆಯ ಅತ್ಯಂತ ಕಡಿಮೆ ಪೋಸ್ಟ್‌ಪೇಯ್ಡ್ ಯೋಜನೆಯು ಹತ್ತಿರದ ಪ್ರತಿಸ್ಪರ್ಧಿಯ ಪೋಸ್ಟ್ ಪೇಯ್ಡ್ ಪ್ಲಾನ್‌ಗಿಂತ ಶೇ. 29% ಪ್ರತಿಶತದಷ್ಟು ಕಡಿಮೆಯಾಗಿದೆ ಎಂದು ಈ ಕಂಪನಿ ಹೇಳಿದೆ.

ಇದನ್ನೂ ಓದಿ: New Rules: ಐಟಿಆರ್‌ನಿಂದ ಕ್ರೆಡಿಟ್ ಕಾರ್ಡ್‌ವರೆಗೆ; ಈ ತಿಂಗಳಲ್ಲಿ ಹಲವು ಹೊಸ ಬದಲಾವಣೆ

ಪ್ರವೇಶ ಮಟ್ಟದ ಬಳಕೆದಾರರಿಗೆ 28 ದಿನಗಳ ಪ್ರಿಪೇಯ್ಡ್ ಯೋಜನೆಯು (2G ಬಳಕೆದಾರರು ಇಲ್ಲಿಯವರೆಗೆ) ಏರ್‌ಟೆಲ್‌ ಹಾಗೂ ವಿ ಟೆಲಿಕಾಂನಲ್ಲಿ 199 ರೂ. ಆಗಿದೆ. ಆದರೆ ಜಿಯೋಫೋನ್‌ ಅಥವಾ ಜಿಯೋಭಾರತ್ ಬಳಕೆದಾರರು 28 ದಿನಗಳವರೆಗೆ 91 ರೂ.ಗಳ ಬೆಲೆಗೆ ಯೋಜನೆಗಳನ್ನು ಪಡೆಯಬಹುದು. ಇನ್ನು ದೈನಂದಿನ 1GB ಡೇಟಾ ಪ್ರಯೋಜನದ ಮಾಸಿಕ ಪ್ಲ್ಯಾನ್‌ ಜಿಯೋದಲ್ಲಿ 249 ರೂ. ಗಳಿಗೆ ಲಭ್ಯ ಇದೆ. ಆದರೆ ಇದೇ ಸೌಲಭ್ಯದ ಪ್ಲ್ಯಾನ್‌ ಏರ್‌ಟೆಲ್‌ ಹಾಗೂ ವಿ ಟೆಲಿಕಾಂನಲ್ಲಿ 299 ರೂ. ಗಳ ದರದಲ್ಲಿ ಇವೆ. ಹೀಗಾಗಿ ಜಿಯೋ ಗ್ರಾಹಕರಿಗೆ ಈ ಯೋಜನೆಯಲ್ಲಿ ಸುಮಾರು 50ರೂ. ಉಳಿತಾಯ ಆದಂತೆ. ಹಾಗೆಯೇ ದಿನಕ್ಕೆ 1.5GB ಡೇಟಾ ಸೌಲಭ್ಯದ ಯೋಜನೆ ಬೆಲೆ ಜಿಯೋದಲ್ಲಿ 299 ರೂ. ಇದೆ. ಏರ್‌ಟೆಲ್‌ ಹಾಗೂ ವಿ ಟೆಲಿಕಾಂನಲ್ಲಿ 349 ರೂ. ಗಳು ಆಗಿದೆ. ಅದೇ ರೀತಿ ದೈನಂದಿನ 2GB ಡೇಟಾ ಪ್ರಯೋಜನದ ಪ್ರೀಪೇಯ್ಡ್‌ ಪ್ಲ್ಯಾನ್‌ ಜಿಯೋದಲ್ಲಿ 349 ರೂ. ಗಳು ಆಗಿದೆ. ಇನ್ನು ಏರ್‌ಟೆಲ್‌ ಹಾಗೂ ವಿ ಟೆಲಿಕಾಂನಲ್ಲಿ 2GB ಡೇಟಾ ಪ್ರಯೋಜನದ ಪ್ರೀಪೇಯ್ಡ್‌ ಪ್ಲ್ಯಾನ್‌ ಬೆಲೆಯು 379ರೂ. ಗಳು ಆಗಿದೆ. ಹಾಗೆಯೇ ಪ್ರತಿದಿನ 2.5GB ಡೇಟಾ ಸೌಲಭ್ಯದ ಮಾಸಿಕ ಪ್ಲ್ಯಾನ್‌ ಜಿಯೋದಲ್ಲಿ 399 ರೂ. ಗಳಿಗೆ ಲಭ್ಯ ಇದೆ. ಆದರೆ ಏರ್‌ಟೆಲ್‌ ಹಾಗೂ ವಿ ಟೆಲಿಕಾಂನಲ್ಲಿ 409 ರೂ. ಗಳಿಗೆ ಲಭ್ಯ ಎಂದು ಜಿಯೊ ಹೇಳಿದೆ.

Shocked Young Man with Smartphone

ಹಾಗೆಯೇ ಪ್ರತಿದಿನ 2.5GB ಡೇಟಾ ಜತೆಗೆ ವಾರ್ಷಿಕ ವ್ಯಾಲಿಡಿಟಿ ಸೌಲಭ್ಯದ ಯೋಜನೆಯ ಹೊಸ ದರ ಜಿಯೋದಲ್ಲಿ 3599 ರೂ. ಗಳು ಆಗಿದೆ. ಇನ್ನು ಏರ್‌ಟೆಲ್‌ ಹಾಗೂ ವಿ ಟೆಲಿಕಾಂಗಳ 3599 ರೂ. ಬೆಲೆಯ ಪ್ಲ್ಯಾನಿನಲ್ಲಿ ಗ್ರಾಹಕರಿಗೆ ವಾರ್ಷಿಕ ವ್ಯಾಲಿಡಿಟಿ ಪ್ರಯೋಜನ ಲಭ್ಯವಾದರೂ, ಪ್ರತಿದಿನ 2GB ಡೇಟಾ ಸೌಲಭ್ಯ ಸಿಗಲಿದೆ. ಈ ವಾರ್ಷಿಕ ವ್ಯಾಲಿಡಿಟಿ ಯೋಜನೆಯಲ್ಲಿ ಜಿಯೋ ಗ್ರಾಹಕರಿಗೆ ಶೇ. 20% ರಷ್ಟು ಹೆಚ್ಚುವರಿ ಡೇಟಾ ಸಿಗಲಿದೆ.

ಇದನ್ನೂ ಓದಿ: Karnataka Rain :‌ ಮುಂದುವರಿದ ಮಳೆ ಅಬ್ಬರ; ಸಿಡಿಲು ಬಡಿದು ಹೊತ್ತಿ ಉರಿದ ಮನೆ, ಸೇತುವೆ ಮುಳುಗಡೆ

ಅದೇ ರೀತಿ ಜಿಯೋ ಟೆಲಿಕಾಂನ 30GB ಡೇಟಾ ಸೌಲಭ್ಯದ ಪೋಸ್ಟ್‌ಪೇಯ್ಡ್ ಯೋಜನೆಯ ಬೆಲೆಯು 349ರೂ.ಆಗಿದೆ. ಆದರೆ ಏರ್‌ಟೆಲ್‌ ಹಾಗೂ ವಿ ಟೆಲಿಕಾಂಗಳ ಆರಂಭಿಕ ಪೋಸ್ಟ್‌ಪೇಯ್ಡ್‌ ಯೋಜನೆಯು 449ರೂ. ಗಳ ದರದಲ್ಲಿ ಕಾಣಿಸಿಕೊಂಡಿವೆ. ಹಾಗೆಯೇ ಜಿಯೋದ 75GB ಡೇಟಾ ಸೌಲಭ್ಯದ ಪೋಸ್ಟ್‌ಪೇಯ್ಡ್ ಪ್ಲ್ಯಾನ್‌ ಬೆಲೆಯು 449 ರೂ. ಆಗಿದೆ. ಆದರೆ ಏರ್‌ಟೆಲ್‌ ಹಾಗೂ ವಿ ಟೆಲಿಕಾಂನ 75GB ಡೇಟಾ ಪ್ರಯೋಜನದ ಪೋಸ್ಟ್‌ಪೇಯ್ಡ್ ಪ್ಲ್ಯಾನ್‌ ಬೆಲೆಯು 549 ರೂ. ಗಳು ಆಗಿದೆ ಎಂದು ಜಿಯೊ ಪ್ರಕಟಣೆ ತಿಳಿಸಿದೆ.

Continue Reading

ಕರ್ನಾಟಕ

MUDA site scandal: ಮುಡಾ ನಿವೇಶನಗಳ ಹಂಚಿಕೆ ರದ್ದು; ಬಹುಕೋಟಿ ಹಗರಣದ ತನಿಖೆಗೆ ಸರ್ಕಾರ ಆದೇಶ

MUDA site scandal: ಮುಡಾದಲ್ಲಿ 5000ಕ್ಕೂ ಹೆಚ್ಚು ನಿವೇಶನಗಳನ್ನು ಅಕ್ರಮವಾಗಿ ಹಂಚಿಕೆ ಮಾಡಿದ ಆರೋಪಗಳು ಕೇಳಿಬಂದಿರುವ ಬಗ್ಗೆ ಎಂದು ವಿಸ್ತಾರ ನ್ಯೂಸ್‌ ವಿಶೇಷ ವರದಿ ಪ್ರಸಾರ ಮಾಡಿತ್ತು. ಇದಕ್ಕೆ ರಾಜ್ಯ ಸರ್ಕಾರ ಸ್ಪಂದಿಸಿ ಹಗರಣದ ತನಿಖೆಗೆ ಆದೇಶ ನೀಡಿದೆ.

VISTARANEWS.COM


on

MUDA site scandal
Koo

ಮೈಸೂರು: ನಿಯಮಬಾಹಿರವಾಗಿ ಹಂಚಿಕೆಯಾದ ಮುಡಾ ನಿವೇಶನಗಳನ್ನು ರಾಜ್ಯ ಸರ್ಕಾರ ರದ್ದು ಮಾಡಿದ್ದು, ಮುಡಾ ನಿವೇಶನ ಹಂಚಿಕೆ ಹಗರಣದ (MUDA site scandal) ತನಿಖೆಗೆ ಆದೇಶ ಹೊರಡಿಸಿದೆ. ಈ ಸಂಬಂಧ ತನಿಖಾ ತಂಡ ರಚಿಸಿ ನಗರಾಭಿವೃದ್ಧಿ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಕೆ. ಲತಾ ಆದೇಶ ಹೊರಡಿಸಿದ್ದಾರೆ. ಹಗರಣದ ಬಗ್ಗೆ 15 ದಿನಗಳ ಒಳಗೆ ಸಮಗ್ರ ವರದಿ ನೀಡಲು ತನಿಖಾ ತಂಡಕ್ಕೆ ಸೂಚನೆ ನೀಡಲಾಗಿದ್ದು, ತನಿಖಾ ವರದಿಯೊಂದಿಗೆ ತೆಗೆದುಕೊಳ್ಳಬಹುದಾದ ಕ್ರಮಗಳ ಕುರಿತು ಸ್ಪಷ್ಟ ಅಭಿಪ್ರಾಯ ನೀಡಲು ತನಿಖಾ ತಂಡಕ್ಕೆ ಸೂಚಿಸಲಾಗಿದೆ.

ಮುಡಾದಲ್ಲಿ 5000ಕ್ಕೂ ಹೆಚ್ಚು ನಿವೇಶನಗಳನ್ನು ಅಕ್ರಮವಾಗಿ ಹಂಚಿಕೆ ಮಾಡಿದ ಆರೋಪಗಳು ಕೇಳಿಬಂದಿರುವ ಬಗ್ಗೆ ಎಂದು ವಿಸ್ತಾರ ನ್ಯೂಸ್‌ ವಿಶೇಷ ವರದಿ ಪ್ರಸಾರ ಮಾಡಿತ್ತು. ಇದಕ್ಕೆ ರಾಜ್ಯ ಸರ್ಕಾರ ಸ್ಪಂದಿಸಿ, ತನಿಖೆಗೆ ಆದೇಶ ನೀಡಿದೆ. ತನಿಖಾ ತಂಡಕ್ಕೆ ನಗರ ಮತ್ತು ಗ್ರಾಮಾಂತರ ಯೋಜನಾ ಆಯುಕ್ತಾಲಯದ ಆಯುಕ್ತ ವೆಂಕಟಾಚಲಪತಿ ಅಧ್ಯಕ್ಷರಾಗಿದ್ದು, ಹೆಚ್ಚುವರಿ ನಿರ್ದೇಶಕ ಎಂ.ಸಿ. ದಿನೇಶ್, ಶಶಿಕುಮಾರ್, ಜಂಟಿ ನಿರ್ದೇಶಕಿ ಶಾಂತಲಾ, ಉಪ ನಿರ್ದೇಶಕ ಪ್ರಕಾಶ್ ಸದಸ್ಯರಾಗಿದ್ದಾರೆ. ಇನ್ನು ತನಿಖಾ ತಂಡಕ್ಕೆ ನೆರವು ನೀಡಲು ಮುಡಾ ಆಯುಕ್ತರಿಗೆ ಕಟ್ಟಪ್ಪಣೆ ನೀಡಲಾಗಿದೆ. ಮುಡಾಕ್ಕೆ ನಿಯಮ ಬಾಹಿರವಾಗಿ ನಷ್ಟ ಉಂಟು ಮಾಡಿದ ಬಗ್ಗೆ ದೂರು ಬಂದ ಹಿನ್ನೆಲೆ ತನಿಖೆಗೆ ರಾಜ್ಯ ಸರ್ಕಾರ ಕ್ರಮ ಕೈಗೊಂಡಿದೆ.

ಅಧಿಕಾರಿಗಳ ತಲೆದಂಡ

50:50 ಅನುಪಾತದಡಿ ಹಂಚಿಕೆ ಆಗಿರುವ ನಿವೇಶನಗಳ ರದ್ದು ಮಾಡಲು ನಗರಾಭಿವೃದ್ಧಿ ಸಚಿವ ಭೈರತಿ ಸುರೇಶ್ ದಿಟ್ಟ ಕ್ರಮ ಕೈಗೊಂಡಿದ್ದಾರೆ. ಮುಡಾ ಆಯುಕ್ತ, ಕಾರ್ಯದರ್ಶಿ, ಇಂಜಿನಿಯರ್ ತಲೆದಂಡ ಆಗಿದ್ದು, ಆಯುಕ್ತ ಜಿ.ಟಿ.ದಿನೇಶ್ ಕುಮಾರ್, ಕಾರ್ಯದರ್ಶಿ ಶೇಖರ್ ಸೇರಿದಂತೆ ಶಾಮೀಲಾದ ಅಧಿಕಾರಿಗಳ ಎತ್ತಂಗಡಿಗೆ ಸರ್ಕಾರ ಆದೇಶ ನೀಡಿದೆ.

ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮುಡಾ)ದಲ್ಲಿ ನಿವೇಶನ ಹಗರಣ ಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಇಂದು ಸಚಿವ ಭೈರತಿ ಸುರೇಶ ಅವರು ಇಂದು ದಿಢೀರ್‌ ಮೈಸೂರಿಗೆ ಧಾವಿಸಿದ್ದರು. ಅವರು ಮುಡಾ ಸದಸ್ಯರು, ಅಧಿಕಾರಿಗಳ ಸಭೆ ನಡೆಸಿ ಮಾಹಿತಿ ಪಡೆದ ಬೆನ್ನಲ್ಲೇ ಹಗರಣದ ತನಿಖೆಗೆ ಸರ್ಕಾರ ಆದೇಶಿಸಿದೆ.

ನಂತರ ಸುದ್ದಿಗೋಷ್ಠಿಯಲ್ಲಿ ಸಚಿವ ಭೈರತಿ ಸುರೇಶ್ ಮಾತನಾಡಿ, ನಾನು ರೈತರ ಪರವಾಗಿದ್ದೇನೆ. ರೈತನಿಗೆ ಅನ್ಯಾಯವಾಗಿದ್ದರೆ ಶಿಸ್ತುಕ್ರಮ ಆಗುತ್ತೆ. ಜನಪ್ರತಿನಿಧಿ, ಅಧಿಕಾರಿಗಳು ಯಾರೇ ಆಗಿರಲಿ ಕ್ರಮ ಕೈಗೊಳ್ಳುತ್ತೇವೆ. ಒಂದು ತಿಂಗಳವರೆಗೆ ಪ್ರಾಧಿಕಾರದ ಸಭೆ ನಡೆಸುವಂತಿಲ್ಲ.‌ ರಸ್ತೆ, ನೀರು, ವೇತನದಂತಹ ವಿಷಯದಲ್ಲಿ ತೀರ್ಮಾನ ಕೈಗೊಳ್ಳಬಹುದು. ಸೈಟ್ ಕೊಡುವಂತಹ ಯಾವುದೇ ತೀರ್ಮಾನ ಕೈಗೊಳ್ಳುವಂತಿಲ್ಲ ಎಂದು ಹೇಳಿದರು.

ಇದನ್ನೂ ಓದಿ | Karave Protest: ಕನ್ನಡಿಗರಿಗೆ ಉದ್ಯೋಗ ನೀಡಲು ಕರವೇ ನಾರಾಯಣ ಗೌಡ ನಿಯೋಗ ಮನವಿ; ಶೀಘ್ರವೇ ಕ್ರಮ ಎಂದ ಸಿಎಂ

ಹಗರಣದಲ್ಲಿ ಡಾ.ಯತೀಂದ್ರ ಸಿದ್ದರಾಮಯ್ಯ ಅವರ ಪಾತ್ರ ಕಿಂಚಿತ್ತೂ ಇಲ್ಲ. ಸಾಕ್ಷ್ಯ ಇದ್ದರೆ ವಿಶ್ವನಾಥ್ ಕೊಡಲಿ. ಗಾಳಿಯಲ್ಲಿ ಗುಂಡು ಹೊಡೆಯಬಾರದು. ವಿಶ್ವನಾಥ್‌ ನನ್ನ ಬಳಿಯೇ ಪೈಲ್ ತಗೊಂಡು ಬಂದಿದ್ದರು. ಅವರು ಎಲ್ಲರ ಮೇಲೂ ಆಪಾದನೆ ಮಾಡಿದ್ದಾರೆ. ವಯಸ್ಸಿನಲ್ಲಿ ವಿಶ್ವನಾಥ್ ದೊಡ್ಡವರು. ಅವರ ಮಟ್ಟಕ್ಕೆ ಇಳಿದು ನಾನು ಮಾತನಾಡಲ್ಲ ಎಂದು ಟಾಂಗ್ ನೀಡಿದರು.

Continue Reading

ಮಳೆ

Karnataka Weather : ಕೊಡಗು, ದಾವಣಗೆರೆಯಲ್ಲಿ ಮಳೆಯಾಟ; ಬೆಂಗಳೂರಲ್ಲಿ ಮೋಡ ಕವಿದ ವಾತಾವರಣ

Karnataka Weather Forecast : ಸೋಮವಾರ ದಾವಣಗೆರೆ, ಕೊಡಗು ಸುತ್ತಮುತ್ತ ಮಳೆಯಾಗಿದ್ದು, ಬೆಂಗಳೂರಲ್ಲಿ ಮೋಡ ಕವಿದ ವಾತಾವರಣ ಇತ್ತು. ಜು.2ರಂದು ರಾಜ್ಯಾದ್ಯಂತ ಮಳೆಯಾಗುವ (Rain News) ಮುನ್ಸೂಚನೆಯನ್ನು ನೀಡಲಾಗಿದೆ.

VISTARANEWS.COM


on

By

karnataka Weather Forecast
Koo

ಬೆಂಗಳೂರು/ದಾವಣಗೆರೆ: ಕರಾವಳಿ, ಮಲೆನಾಡು ಹಾಗೂ ಒಳನಾಡು ಭಾಗದಲ್ಲಿ ಮಳೆಯು (Rain News) ಅಬ್ಬರಿಸುತ್ತಿದೆ. ಸೋಮವಾರ (ಜು.1) ದಾವಣಗೆರೆಯಲ್ಲಿ ಅರ್ಧ ಗಂಟೆಗೂ ಹೆಚ್ಚು ಸಮಯ (Karnataka weather Forecast) ಮಳೆಯಾಗಿದೆ. ನಗರದ ಕೆಬಿ ಬಡಾವಣೆ, ಪಿಜೆ ಬಡಾವಣೆಯ ರಸ್ತೆಗಳಲ್ಲಿ ನೀರು ತುಂಬಿ ಹರಿದಿದೆ. ಇತ್ತ ಕೊಡಗಿನಲ್ಲೂ ಆರಿದ್ರಾ ಮಳೆ ಅಬ್ಬರಕ್ಕೆ ನದಿ ತೋರೆ, ಹಳ್ಳ-ಕೊಳ್ಳಗಳು ತುಂಬಿ ಹರಿಯುತ್ತಿದೆ. ತಲಕಾವೇರಿ ಭಾಗಮಂಡಲ ವ್ಯಾಪ್ತಿಯಲ್ಲೂ ಉತ್ತಮ ಮಳೆಯಾಗುತ್ತಿದೆ. ಕಾವೇರಿ ನದಿ ನೀರಿನ ಮಟ್ಟದಲ್ಲೂ ಗಣನೀಯ ಏರಿಕೆ ಕಂಡಿದೆ.

ಪಂಚಗಂಗಾ ನದಿಗೆ ಅಡ್ಡಲಾಗಿ ನಿರ್ಮಿಸಿದ್ದ ಸೇತುವೆ ಮುಳುಗಡೆ

ಮಹಾರಾಷ್ಟ್ರದ ಪಶ್ಚಿಮ ಘಟ್ಟಗಳಲ್ಲಿ ಮಳೆ ಮುಂದುವರಿದಿದೆ. ನಿರಂತರ ಮಳೆಯಿಂದ ಪಂಚಗಂಗಾ ಒಳಹರಿವಿನ ಪ್ರಮಾಣ ಹೆಚ್ಚಳಗೊಂಡಿದೆ. ಪಂಚಗಂಗಾ ನದಿಗೆ ಅಡ್ಡಲಾಗಿ ನಿರ್ಮಿಸಿದ್ದ ಬ್ರಿಡ್ಜ್ ಕಮ್ ಬ್ಯಾರೇಜ್ ಮುಳುಗಡೆಯಾಗಿದೆ. ಕೊಲ್ಹಾಪುರ ಜಿಲ್ಲೆಯ ಶಿಂಗನಾಪುರ ಬಳಿ ಇರುವ ಸೇತುವೆ ಮುಳುಗಡೆಗೊಂಡಿದ್ದು, ವಾಹಗಳ ಸಂಚಾರಕ್ಕೆ ತೊಂದರೆಯುಂಟಾಗಿದೆ. ಇತ್ತ ಯಾವುದೇ ಮುನ್ನೆಚ್ಚರಿಕೆ ಕ್ರಮ ಕೈಗೊಳ್ಳದ ಕೊಲ್ಹಾಪುರ ಜಿಲ್ಲಾಡಳಿತ ಹಾಗೂ ಪೊಲೀಸರ ವಿರುದ್ಧ ಜನರು ಆಕ್ರೋಶ ಹೊರಹಾಕಿದ್ದಾರೆ.

ಇದನ್ನೂ ಓದಿ: Inspirational Story: ಕಣ್ಣೆದುರೆ ಸುಟ್ಟು ಕರಕಲಾದ ಮಗಳ ದುರಂತ ಅಂತ್ಯ; ಬಡಮಕ್ಕಳಿಗೆ ದಾರಿದೀಪವಾದ ಎಎಸ್‌ಐ

ಒಳನಾಡಿನಲ್ಲಿ ಮುಂಗಾರು ಸಕ್ರಿಯ

ನೈರುತ್ಯ ಮುಂಗಾರು ಒಳನಾಡಿನಲ್ಲಿ ಸಕ್ರಿಯವಾಗಿದ್ದರೆ, ಕರಾವಳಿಯಲ್ಲಿ ಸಾಧಾರಣವಾಗಿತ್ತು. ಕೊಡಗಿನ ವಿರಾಜಪೇಟೆಯಲ್ಲಿ 13 ಸೆಂ.ಮೀ ಮಳೆಯಾಗಿದೆ. ಜತೆಗೆ ಭಾಗಮಂಡಲ 11, ಆಗುಂಬೆ 9, ಸಿದ್ದಾಪುರ 8, ಕಮ್ಮರಡಿ 8 ಹಾಗೂ ಕುಂದಾಪುರ 7 ಸೆಂ.ಮೀ ಮಳೆಯಾಗಿದೆ. ಉಳಿದಂತೆ ರಾಜ್ಯಾದ್ಯಂತ ಬಹುತೇಕ ಕಡೆಗಳಲ್ಲಿ ಮಳೆಯಾಗಿರುವ ವರದಿ ಆಗಿದೆ.

ಕರಾವಳಿಯಲ್ಲಿ ತಗ್ಗಿದ ಮಳೆ ಅಬ್ಬರ

ಜು.2ರಂದು ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಮಳೆ ಅಬ್ಬರವು ತಗ್ಗಿದೆ. ಉತ್ತರ ಒಳನಾಡಿನ ಕೆಲವೆಡೆ ಹಗುರದಿಂದ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಆದರೆ ಗಾಳಿ ವೇಗವು ಗಂಟೆಗೆ 30-40 ಕಿ.ಮೀ ವ್ಯಾಪ್ತಿಯಲ್ಲಿ ತಲುಪಲಿದೆ. ದಕ್ಷಿನ ಒಳನಾಡಿನ ಹಲವೆಡೆ ಸಣ್ಣ ಪ್ರಮಾಣದಲ್ಲಿ ಮಳೆಯಾಗುವ ಮುನ್ಸೂಚನೆ ಇದೆ. ಬೆಂಗಳೂರಿನಲ್ಲಿ ಸಾಮಾನ್ಯವಾಗಿ ಮೋಡ ಕವಿದ ವಾತಾವರಣ ಇರಲಿದೆ. ಸಣ್ಣ ಪ್ರಮಾಣದಲ್ಲಿ ಮಳೆಯಾಗಲಿದ್ದು, ಗರಿಷ್ಟ ಹಾಗೂ ಕನಿಷ್ಠ ಉಷ್ಣಾಂಶವು ಕ್ರಮವಾಗಿ 27 ಹಾಗೂ 21 ಡಿ.ಸೆ ಇರಲಿದೆ.

ಚಾರ್ಮಾಡಿ ಘಾಟ್‌ನಲ್ಲಿ ಪ್ರವಾಸಿಗರ ಹುಚ್ಚಾಟ

ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಘಾಟ್‌ನಲ್ಲಿ ಜಾರುವ ಬಂಡೆಗಳ ಮೇಲೆ ಪ್ರವಾಸಿಗರು ಹುಚ್ಚಾಟ ಮೆರೆದಿದ್ದಾರೆ. ಜಲಪಾತಗಳ ಮಧ್ಯೆ ಹೋಗಿ ಜಾರುವ ಬಂಡೆಗಳ ಮೇಲೆ ಸ್ವಲ್ಪ ಯಾಮಾರಿದರೂ ಅಪಾಯ ಕಟ್ಟಿಟ್ಟ ಬುತ್ತಿ. ಬಂಡೆಗಳ ಮೇಲೆ ಹತ್ತಿ ಅಪಾಯದ ಸ್ಥಳದಲ್ಲಿ ಡ್ಯಾನ್ಸ್ ಮಾಡುತ್ತಾ ಮೋಜು ಮಸ್ತಿ ಮಾಡುತ್ತಿದ್ದಾರೆ. ನಿರಂತರವಾಗಿ ನೀರು ಹರಿದು ಬಂಡೆ ತೀವ್ರವಾಗಿ ಜಾರುತ್ತಿರುತ್ತೆ. ಈ ಹಿಂದೆಯೂ ಬಿದ್ದು ಕೈ-ಕಾಲು ಮುರಿದುಕೊಂಡಿದ್ದಾರೆ, ಜೀವ ಕಳೆದುಕೊಂಡಿದ್ದಾರೆ. ಬಂಡೆಗಳ ಮೇಲೆ ಹತ್ತದಂತೆ ನಾಮಫಲಕ ಇದ್ದರೂ ಪ್ರವಾಸಿಗರು ಮಾತ್ರ ಡೋಂಟ್ ಕೇರ್ ಎನ್ನುತ್ತಿದ್ದಾರೆ. ಇತ್ತ ಪೊಲೀಸರು ಗಸ್ತು ತಿರುಗುತ್ತಿದ್ದರೂ ಕಣ್ತಪ್ಪಿಸಿ ಬಂಡೆ ಹತ್ತುತ್ತಿದ್ದಾರೆ. ಜಲಪಾತಗಳ ಬಳಿ ಕಾರು ನಿಲ್ಲಿಸಿಕೊಂಡು ರಸ್ತೆ ಬದಿಯೂ ಕುಣಿದು ಕುಪ್ಪಳಿಸುತ್ತಾ, ಇತರೆ ವಾಹನಗಳಿಗೂ ಅಡ್ಡಿಯಾಗಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading
Advertisement
UPSC 2024
ಪ್ರಮುಖ ಸುದ್ದಿ1 min ago

UPSC 2024: ಯುಪಿಎಸ್ಸಿ ಸಿಎಸ್ಇ ಪ್ರಿಲಿಮ್ಸ್ ಫಲಿತಾಂಶ ಪ್ರಕಟ; ಪರಿಶೀಲಿಸುವುದು ಹೇಗೆ?

Kabzaa movie Appreciation Letter from Union Finance Ministry to Sri siddeshwar Enterprises
ಕರ್ನಾಟಕ31 mins ago

Kabzaa movie: ಅತಿ ಹೆಚ್ಚು ತೆರಿಗೆ ಪಾವತಿ; ಆರ್. ಚಂದ್ರು ನಿರ್ಮಾಣ ಸಂಸ್ಥೆಗೆ ಕೇಂದ್ರದಿಂದ ಪ್ರಶಂಸಾ ಪತ್ರ!

Parliament Sessions
ಪ್ರಮುಖ ಸುದ್ದಿ39 mins ago

Parliament Sessions : ರಾಹುಲ್ ಗಾಂಧಿಯಿಂದ ಹಿಂದೂಗಳಿಗೆ ಅವಮಾನ: ಬಿಜೆಪಿ ಆರೋಪ

Reliance Jio
ಕರ್ನಾಟಕ47 mins ago

Reliance Jio: ಮೊಬೈಲ್‌ ಶುಲ್ಕ ಏರಿಕೆ; ಯಾವ ಕಂಪನಿಯ ಪ್ಲ್ಯಾನ್‌ ಸೂಕ್ತ?

Parliament Sessions
ದೇಶ56 mins ago

Parliament Sessions: ಮೋದಿ ಆತ್ಮದ ಜೊತೆ ಪರಮಾತ್ಮನ ಸಂವಹನ; ರಾಹುಲ್‌ ಗಾಂಧಿ ವ್ಯಂಗ್ಯ

MUDA site scandal
ಕರ್ನಾಟಕ1 hour ago

MUDA site scandal: ಮುಡಾ ನಿವೇಶನಗಳ ಹಂಚಿಕೆ ರದ್ದು; ಬಹುಕೋಟಿ ಹಗರಣದ ತನಿಖೆಗೆ ಸರ್ಕಾರ ಆದೇಶ

Fashion Show News
ಫ್ಯಾಷನ್1 hour ago

Fashion Show News: ಸಿಇಎಸ್‌ ಫ್ಯಾಷನ್‌ ಡಿಸೈನಿಂಗ್‌ ವಿದ್ಯಾರ್ಥಿಗಳ ರ‍್ಯಾಂಪ್‌ ಶೋ

karnataka Weather Forecast
ಮಳೆ2 hours ago

Karnataka Weather : ಕೊಡಗು, ದಾವಣಗೆರೆಯಲ್ಲಿ ಮಳೆಯಾಟ; ಬೆಂಗಳೂರಲ್ಲಿ ಮೋಡ ಕವಿದ ವಾತಾವರಣ

Medha Patkar
ದೇಶ2 hours ago

Medha Patkar: ನರ್ಮದಾ ಬಚಾವೋ ಹೋರಾಟಗಾರ್ತಿ ಮೇಧಾ ಪಾಟ್ಕರ್‌ಗೆ ಜೈಲು; 10ಲಕ್ಷ ರೂ. ದಂಡ

Karave Protest
ಕರ್ನಾಟಕ2 hours ago

Karave Protest: ಕನ್ನಡಿಗರಿಗೆ ಉದ್ಯೋಗ ನೀಡಲು ಕರವೇ ನಾರಾಯಣ ಗೌಡ ನಿಯೋಗ ಮನವಿ; ಶೀಘ್ರವೇ ಕ್ರಮ ಎಂದ ಸಿಎಂ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Weather Forecast
ಮಳೆ2 hours ago

Karnataka Weather : ಕೊಡಗು, ದಾವಣಗೆರೆಯಲ್ಲಿ ಮಳೆಯಾಟ; ಬೆಂಗಳೂರಲ್ಲಿ ಮೋಡ ಕವಿದ ವಾತಾವರಣ

karnataka Weather Forecast
ಮಳೆ1 day ago

Karnataka Weather : ಬೆಂಗಳೂರು, ಕಲಬುರಗಿ ಸೇರಿದಂತೆ ಹಲವೆಡೆ ವರ್ಷಧಾರೆ; ನಾಳೆಗೂ ಮಳೆ ಅಲರ್ಟ್‌

Actor Darshan
ಬೆಂಗಳೂರು1 day ago

Actor Darshan : ಖೈದಿ ನಂ.6106ಕ್ಕೆ ಡಿಮ್ಯಾಂಡ್‌! ದರ್ಶನ್‌ ಫ್ಯಾನ್ಸ್‌ಗೆ ಕಾನೂನು ಕಂಟಕ, ರೂಲ್ಸ್‌ ಬ್ರೇಕ್‌ ಮಾಡಿದ್ರೆ ಬೀಳುತ್ತೆ ಕೇಸ್‌‌!

karnataka weather Forecast
ಮಳೆ2 days ago

Karnataka Weather : ಮಳೆಗೆ ಸ್ಕಿಡ್‌ ಆಗಿ ಹೇಮಾವತಿ ನದಿಗೆ ಹಾರಿದ ಕಾರು; ಕರಾವಳಿಗೆ ಎಚ್ಚರಿಕೆ ಕೊಟ್ಟ ತಜ್ಞರು

karnataka Rain
ಮಳೆ2 days ago

Karnataka Rain: ಭಾರಿ ಮಳೆಗೆ ಮನೆಗಳ ಗೋಡೆ ಕುಸಿತ; ಕೂದಲೆಳೆ ಅಂತರದಲ್ಲಿ ವೃದ್ಧ ಪಾರು

karnataka Weather Forecast
ಮಳೆ3 days ago

Karnataka Weather : ಅಬ್ಬಬ್ಬಾ.. ಮುಲ್ಕಿಯಲ್ಲಿ 30 ಸೆಂ.ಮೀ ಮಳೆ ದಾಖಲು; ವಾರಾಂತ್ಯದಲ್ಲೂ ಭಾರಿ ವರ್ಷಧಾರೆ

karnataka Rain
ಮಳೆ3 days ago

Karnataka Rain : ಭಾರಿ ಮಳೆಗೆ ಪಾತಾಳ ಸೇರಿದ ಬಾವಿ; ಅಲೆಗಳ ಹೊಡೆತಕ್ಕೆ ಸಮುದ್ರಪಾಲಾದ ಮನೆ

Karnataka Weather Forecast
ಮಳೆ4 days ago

Karnataka Weather : ಭಾರಿ ಮಳೆ ಹಿನ್ನೆಲೆ ದಕ್ಷಿಣ ಕನ್ನಡಕ್ಕೆ ರೆಡ್ ಅಲರ್ಟ್; ಶುಕ್ರವಾರವೂ ಶಾಲೆಗಳಿಗೆ ರಜೆ ಘೋಷಣೆ

karnataka Weather Forecast
ಮಳೆ4 days ago

Karnataka Weather : ಭಾರಿ ಮಳೆಗೆ ಸೇತುವೆಯಿಂದ ಹೊಳೆಗೆ ಬಿದ್ದ ಕಾರು; ಮರ ಹಿಡಿದು ಪ್ರಾಣ ಉಳಿಸಿಕೊಂಡ ಸವಾರರು

Heart Attack
ಕೊಡಗು4 days ago

Heart Attack : ಕೊಡಗಿನಲ್ಲಿ ಹೃದಯಾಘಾತಕ್ಕೆ ಯುವತಿ ಬಲಿ; ಹೆಚ್ಚಾಯ್ತು ಅಲ್ಪಾಯುಷ್ಯದ ಭಯ

ಟ್ರೆಂಡಿಂಗ್‌