Dhruva Sarja: 3 ವರ್ಷಗಳ ಬಳಿಕ ಧ್ರುವ ಸರ್ಜಾ ಬರ್ತ್‌ಡೇ ಆಚರಣೆ; ಶಾಲಾ ಮಕ್ಕಳಿಗೆ ಆ್ಯಕ್ಷನ್ ಪ್ರಿನ್ಸ್‌ ಸಹಾಯ! - Vistara News

South Cinema

Dhruva Sarja: 3 ವರ್ಷಗಳ ಬಳಿಕ ಧ್ರುವ ಸರ್ಜಾ ಬರ್ತ್‌ಡೇ ಆಚರಣೆ; ಶಾಲಾ ಮಕ್ಕಳಿಗೆ ಆ್ಯಕ್ಷನ್ ಪ್ರಿನ್ಸ್‌ ಸಹಾಯ!

Dhruva Sarja: 3 ವರ್ಷಗಳ ನಂತರ ಎಲ್ಲ ವಿಐಪಿ ಅಭಿಮಾನಿಗಳು ಹಾಗೂ ಹಿತೈಷಿಗಳ ಕೋರಿಕೆಯ ಮೇರೆಗೆ ಆಚರಿಸಲು ನಿರ್ಧರಿಸಿದ್ದೇವೆ ಎಂದು ಧ್ರುವ ಹೇಳಿಕೊಂಡಿದ್ದಾರೆ.

VISTARANEWS.COM


on

Dhruva Sarja
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಅಕ್ಟೋಬರ್ 6ರಂದು ಧ್ರುವ ಸರ್ಜಾ (Dhruva Sarja) 34ನೇ ವಸಂತಕ್ಕೆ ಕಾಲಿಡಲಿದ್ದಾರೆ. ಕಳೆದ 3 ವರ್ಷಗಳಿಂದ ಆ್ಯಕ್ಷನ್ ಪ್ರಿನ್ಸ್ ಅಭಿಮಾನಿಗಳ ಜತೆ ಹುಟ್ಟುಹಬ್ಬ ಆಚರಿಸಿರಲಿಲ್ಲ (dhruva sarja birthday). ಆದರೆ ಈ ಬಾರಿ ಅಭಿಮಾನಿಗಳನ್ನು ಭೇಟಿ ಮಾಡಲಿದ್ದಾರೆ .3 ವರ್ಷಗಳ ನಂತರ ಎಲ್ಲಾ ವಿಐಪಿ ಅಭಿಮಾನಿಗಳು ಹಾಗೂ ಹಿತೈಷಿಗಳ ಕೋರಿಕೆಯ ಮೇರೆಗೆ ಆಚರಿಸಲು ನಿರ್ಧರಿಸಿದ್ದೇವೆ ಎಂದು ಧ್ರುವ ಹೇಳಿಕೊಂಡಿದ್ದಾರೆ.

ಈ ತಮ್ಮ ಹುಟ್ಟುಹಬ್ಬದ ದಿನ ಧ್ರುವ ಕಡೆಯಿಂದ ವಿಐಪಿಗಳಲ್ಲಿ ವಿಶೇಷ ಮನವಿ ಇದೆ. “ಧ್ರುವ ಸರ್ಜಾ ಅವರ ಎಲ್ಲಾ ವಿಐಪಿ ಅಭಿಮಾನಿಗಳಿಗೆ, ಸ್ನೇಹಿತರಿಗೆ ಹಾಗೂ ಹಿತೈಷಿಗಳಿಗೆ ತಿಳಿಸುವುದೇನೆಂದರೆ, ಇದೇ ಅಕ್ಟೋಬರ್ 05, 2023 ರಂದು ರಾತ್ರಿ 11.00 ರಿಂದ ಧ್ರುವ ಸರ್ಜಾರವರ ಹುಟ್ಟುಹಬ್ಬವನ್ನು ಅವರ ಮನೆಯ ಬಳಿ ಅದ್ಧೂರಿಯಾಗಿ ಆಚರಿಸುತ್ತೇವೆ. ಚಿರು ಅಣ್ಣನವರ ನಿಧನ ನಂತರ ಧ್ರುವ ಸರ್ಜಾರವರ ಹುಟ್ಟು ಹಬ್ಬವನ್ನು ಆಚರಿಸಲು ಸಾಧ್ಯವಾಗಿರಲಿಲ್ಲ. 3 ವರ್ಷಗಳ ನಂತರ ಎಲ್ಲಾ ವಿಐಪಿ ಅಭಿಮಾನಿಗಳು ಹಾಗೂ ಹಿತೈಷಿಗಳ ಕೋರಿಕೆಯ ಮೇರೆಗೆ ಆಚರಿಸಲು ನಿರ್ಧರಿಸಿದ್ದೇವೆ”

“ಈ ಮೂಲಕ ತಿಳಿಯಪಡೆಸುವುದೇನೆಂದರೆ, ಹುಟ್ಟು ಹಬ್ಬದ ಆಚರಣೆಗೆ ಆಗಮಿಸುತ್ತಿರುವ ಎಲ್ಲಾ ವಿಐಪಿ ಅಭಿಮಾನಿಗಳು ಹಾಗೂ ಹಿತೈಷಿಗಳು ಯಾವುದೇ ರೀತಿಯ ಕೇಕ್‌ಗಳು, ಹೂಗುಚ್ಚಗಳು ಹಾಗೂ ಉಡುಗೊರೆಗಳನ್ನು ತರದೆ, ಬದಲಿಗೆ ಶಾಲಾ ಮಕ್ಕಳಿಗೆ ಉಪಯುಕ್ತವಾಗುವಂತಹ ಪುಸ್ತಕಗಳು, ಪೆನ್ನುಗಳು ಹಾಗೂ ಶಾಲಾ ಬ್ಯಾಗ್‌ಗಳನ್ನು ನೀಡಿ ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಾಯ ಮಾಡಿ ಎಂದು ಕೋರಿಕೊಳ್ಳುತ್ತೇವೆ, ಹಾಗೂ ನಾವು ಅವುಗಳನ್ನು ನೇರವಾಗಿ ಸರ್ಕಾರಿ ಶಾಲಾ ಮಕ್ಕಳಿಗೆ ತಲುಪಿಸುತ್ತೇವೆ. ಜೈ ಆಂಜನೇಯ” ಎಂದು ಧ್ರುವ ತಂಡದ ಕಡೆಯಿಂದ ಅಭಿಮಾನಿಗಳಿಗೆ ವಿಶೇಷ ಸಂದೇಶ ರವಾನೆಯಾಗಿದೆ.

ಆ ಹಣದಿಂದ ಶಾಲಾ ಮಕ್ಕಳ ವಿದ್ಯಾಭ್ಯಾಸಕ್ಕೆ ಸಹಾಯ ಮಾಡುವ ಒಂದೊಳ್ಳೆ ನಿರ್ಧಾರ ಕೈಗೊಂಡಿದ್ದಾರೆ. ಇನ್ನು ಧ್ರುವ ಸರ್ಜಾ ದಂಪತಿ 2ನೇ ಮಗುವಿನ ನಿರೀಕ್ಷೆಯಲ್ಲಿದೆ. ಇತ್ತೀಚೆಗಷ್ಟೆ ಪ್ರೇರಣಾಗೆ ಅದ್ಧೂರಿಯಾಗಿ ಸೀಮಂತ (dhruva sarja wife baby shower) ಕಾರ್ಯಕ್ರಮ ನೆರವೇರಿಸಲಾಗಿತ್ತು.

ಧ್ರುವ ಸರ್ಜಾ ಜನುಮದಿನದಂದೇ ಚಿರಂಜೀವಿ ಸರ್ಜಾ ಸಿನಿಮಾ ರಿಲೀಸ್‌!

ಧ್ರುವ ಸರ್ಜಾ (Dhruva Sarja) ಅವರ ಜನುಮದಿನದ ನಿಮಿತ್ತ ರಿಲೀಸ್‌ ಆಗಲಿದೆ. ಅಕ್ಟೋಬರ್‌ 6ರಂದು ರಾಜ್ಯಾದ್ಯಂತ ಸಿನಿಮಾ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ. ಇದೀಗ ಚಿತ್ರತಂಡ ಪ್ರಚಾರ ಕಣಕ್ಕಿಳಿದಿದೆ. ಚಿರಂಜೀವಿ ಸರ್ಜಾ (chiranjeevi sarja) ನಟನೆಯ ಕೊನೆಯ ಸಿನಿಮಾ ರಾಜಮಾರ್ತಾಂಡ (rangamarthanda). ಇದೀಗ ಈ ಚಿತ್ರ ಬಿಡುಗಡೆಯ ಹಂತಕ್ಕೆ ಬಂದು ನಿಂತಿದೆ.

ವಿಶೇಷ ಏನೆಂದರೆ, ಧ್ರುವ ಸರ್ಜಾ (rajamarthanda release date) ಅವರ ಬರ್ತ್‌ಡೇ ದಿನವೇ ಈ ಸಿನಿಮಾ ರಿಲೀಸ್‌ ಆಗಲಿದೆ. ಚಿರಂಜೀವಿ ಸರ್ಜಾ ಅವರು ನಿಧನರಾದಾಗ ಚಿತ್ರದ ಡಬ್ಬಿಂಗ್‌ ಆಗಿರಲಿಲ್ಲ. ಸಹೋದರ ಧ್ರುವ ಸರ್ಜಾ ಧ್ವನಿ ನೀಡಿ ಜೀವ ತುಂಬಿದ್ದರು. ಶಿವಕುಮಾರ್ ನಿರ್ಮಾಣದ ಚಿತ್ರ ಇದಾಗಿದೆ. ಇದೊಂದು ರೊಮ್ಯಾಂಟಿಕ್ ಆ್ಯಕ್ಷನ್ ಚಿತ್ರವಾಗಿದ್ದು ಚಿರಂಜೀವಿ ಸರ್ಜಾ, ದೀಪ್ತಿ ಸತಿ, ತ್ರಿವೇಣಿ ರಾವ್ ಮುಖ್ಯ ಭೂಮಿಕೆಯಲ್ಲಿ ನಟಿಸಿದ್ದಾರೆ. ಈಗಾಗಲೇ ಚಿತ್ರದ ಟೀಸರ್, ಟ್ರೈಲರ್ ಹಾಗೂ ಹಾಡುಗಳು ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದ್ದು ಅರ್ಜುನ್ ಜನ್ಯ ಸಂಗೀತ ಸಂಯೋಜನೆ ಈ ಚಿತ್ರಕ್ಕಿದೆ.

ಧರ್ಮವಿಶ್ ಅವರ ಹಿನ್ನೆಲೆ ಸಂಗೀತ ಚಿತ್ರಕ್ಕಿದೆ. ಕೆ. ಗಣೇಶ್ ಛಾಯಾಗ್ರಹಣ, ವೆಂಕಟೇಶ್ ಯು.ಡಿ.ವಿ ಅವರ ಸಂಕಲನ, ವಿನೋದ್, ಪಳನಿರಾಜ್ ಸಾಹಸ ನಿರ್ದೇಶನ ಹಾಗೂ ಭೂಷಣ್, ಹರ್ಷ ಅವರ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ. ಭಜರಂಗಿ ಲೋಕಿ, ಚಿಕ್ಕಣ್ಣ, ದೇವರಾಜ್, ಸುಮಿತ್ರ, ಶಂಕರ್ ಅಶ್ವಥ್, ವಿನೀತ್ ಕುಮಾರ್ ಪಾತ್ರವರ್ಗದಲ್ಲಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

ಸಿನಿಮಾ

Actor Darshan : ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ನಟ ದರ್ಶನ್‌ ಆ್ಯಂಡ್ ಗ್ಯಾಂಗ್‌ಗೆ ಸೆ.30ರವರೆಗೆ ನ್ಯಾಯಾಂಗ ಬಂಧನ ವಿಸ್ತರಣೆ

Actor Darshan : ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ನಟ ದರ್ಶನ್‌ ಆ್ಯಂಡ್ ಗ್ಯಾಂಗ್‌ಗೆ ಸೆ.30ರವರೆಗೆ ನ್ಯಾಯಾಂಗ ಬಂಧನ ವಿಸ್ತರಣೆ ಮಾಡಿ ಕೋರ್ಟ್‌ ಆದೇಶಿಸಿದೆ. ವಿನಯ್‌ ಮೊಬೈಲ್‌ ಮತ್ತೊಮ್ಮೆ ಎಫ್‌ಎಸ್‌ಎಲ್‌ಗೆ ರವಾನೆ ಮಾಡಲು ಒಪ್ಪಿಗೆ ನೀಡಿದೆ.

VISTARANEWS.COM


on

By

Actor Darshan
Koo

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ (Renukaswamy murder case) ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದರ್ಶನ್‌ ಆ್ಯಂಡ್ ಗ್ಯಾಂಗ್‌ಗೆ (Actor Darshan) ಸೆ. 30ರವರೆಗೆ ನ್ಯಾಯಾಂಗ ಬಂಧನ ವಿಸ್ತರಣೆ ಮಾಡಿ ಕೋರ್ಟ್‌ ಆದೇಶಿಸಿದೆ. ಮಂಗಳವಾರ ತನಿಖಾಧಿಕಾರಿ ಚಂದನ್ ಅವರು ನ್ಯಾಯಾಲಯಕ್ಕೆ ಹಾರ್ಡ್ ಡಿಸ್ಕ್‌ಗಳಲ್ಲಿ ಟೆಕ್ನಿಕಲ್ ಎವಿಡೇನ್ಸ್ ಹಾಗೂ 17 ಪ್ರತಿಗಳನ್ನು ಸಲ್ಲಿಕೆ ಮಾಡಿದರು.

ಈ ವೇಳೆ ಸಿಎಫ್‌ಎಸ್‌ಎಲ್‌ ವರದಿಯನ್ನು ತೆರೆಯಲು ವಕೀಲರು ಅನುಮತಿ ಕೋರಿದರು. ಸಿಎಸ್‌ಎಫ್‌ಎಲ್ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ನೀಡಿದ್ದೇವೆ. ನೀವು ಅನುಮತಿ ಕೊಟ್ಟರೆ ಪ್ರಕರಣದ 17 ಆರೋಪಿಗಳಿಗೂ ಸೀಲ್ ಓಪನ್ ಮಾಡಿ ಜೆರಾಕ್ಸ್‌ ಮಾಡಿ ಕಾಪಿ ಕೊಡುತ್ತೇವೆ ಎಂದು ಪಬ್ಲಿಕ್ ಪ್ರಾಸಿಕ್ಯೂಟರ್ ತಿಳಿಸಿದರು. ಈ ವೇಳೆ ಮುಂದಿನ ವಿಚಾರಣೆಯ ಒಳಗೆ ಸಿಎಸ್‌ಎಫ್‌ಎಲ್ ಜೆರಾಕ್ಸ್‌ ಪ್ರತಿ ನೀಡುವಂತೆ ನ್ಯಾಯಾಧೀಶರು ಆದೇಶಿಸಿದರು.

ವಿನಯ್‌ ಮೊಬೈಲ್‌ ಮತ್ತೊಮ್ಮೆ ಎಫ್‌ಎಸ್‌ಎಲ್‌ಗೆ ರವಾನೆ

ಬಳಿಕ A10 ಆರೋಪಿ ವಿನಯ್‌ ಅವರ ಮೊಬೈಲ್‌ ಅನ್ನು ಮತ್ತೊಮ್ಮೆ ಎಫ್‌ಎಸ್‌ಎಲ್‌ಗೆ ಕಳುಹಿಸಲು ಕೋರ್ಟ್‌ಗೆ ತನಿಖಾಧಿಕಾರಿ ಮನವಿ ಮಾಡಿದರು. ಮೊಬೈಲ್‌ನಲ್ಲಿ ಇನ್ನು‌ ಕೆಲ ಸಾಕ್ಷ್ಯಗಳ ಸಂಗ್ರಹ ಆಗಬೇಕಿದೆ ಎಂದಾಗ ನ್ಯಾಯಾಧೀಶರು ಮನವಿಗೆ ಸಮ್ಮತಿಸಿದರು.

ನಟ ದರ್ಶನ್‌ಗೆ ಬೆನ್ನು ನೋವು

ನಟ ದರ್ಶನ್‌ಗೆ ತುಂಬಾ ಬೆನ್ನು ನೋವು ಇದೆ. ನೆಲದ ಮೇಲೆ ಕೂರಲು ಆಗುತ್ತಿಲ್ಲ. ಚೇರ್ ಕೊಡುವಂತೆ ಕೇಳಿದ್ದರೂ ಚೇರ್ ಕೊಟ್ಟಿಲ್ಲ. ದಯವಿಟ್ಟು ಪ್ಲ್ಯಾಸ್ಟಿಕ್ ಚೇರ್ ವ್ಯವಸ್ಥೆ ಮಾಡಿಕೊಡಿ ಎಂದು ದರ್ಶನ್‌ ಪರ ವಕೀಲರು ಮನವಿ ಮಾಡಿದರು. ಈ ಸಂಬಂಧ ಜೈಲಾಧಿಕಾರಿಗಳ ಬಳಿಯೇ ಮನವಿ ಮಾಡಿ ಎಂದು ನ್ಯಾಯಾಧೀಶರು ತಿಳಿಸಿದರು. ಜೈಲಾಧಿಕಾರಿಗಳಿಗೆ ಮನವಿ ಮಾಡಿದರೂ ಅವರು ಪ್ರತಿಕ್ರಿಯೆ ಕೊಡುತ್ತಿಲ್ಲ ಎಂದು ದರ್ಶನ್ ಪರ ವಕೀಲರು ಉತ್ತರಿಸಿದಾಗ, ಜೈಲಿನ ಮ್ಯಾನುವಲ್‌ ಪ್ರಕಾರ ಕೊಡುತ್ತಾರೆ ಬಿಡಿ ಎಂದು ನ್ಯಾಯಾಧೀಶರು ತಿಳಿಸಿದರು.

ಪವಿತ್ರಗೌಡ ಪರ ವಕೀಲರು ಕುಟುಂಬ ಸದಸ್ಯರಿಗೆ ಭೇಟಿಯಾಗಲು ಜೈಲಾಧಿಕಾರಿಗಳು ಬಿಡುತ್ತಿಲ್ಲ ಎಂದು ಗಮನಕ್ಕೆ ತಂದರು. ಆ ಸಂಬಂಧ ಎಲ್ಲ ಸರಿ ಮಾಡೋಣಾ ಬಿಡಿ, ಊಟ-ತಿಂಡಿಗೆ ಏನಾದರೂ ಸಮಸ್ಯೆ ಇದೇಯಾ ಎಂದು ಕೇಳಿ ವಿಚಾರಣೆಯನ್ನು ಸೆ.30ಕ್ಕೆ ಮುಂದೂಡಲಾಯಿತು.

ರೇಣುಕಾಸ್ವಾಮಿ ಕೊಲೆ ಕೇಸ್‌ನ A13 ಆರೋಪಿ ಶಾಸಕ ಮುನಿರತ್ನ ಸಂಬಂಧಿ!

ರೇಣುಕಾಸ್ವಾಮಿ ಹತ್ಯೆ ಪ್ರಕರಣಕ್ಕೆ ಸ್ಫೋಟಕ ತಿರುವು ಸಿಕ್ಕಿದೆ. ಪ್ರಕರಣದಲ್ಲಿ ಆರ್‌ಆರ್ ನಗರ ಶಾಸಕ ಮುನಿರತ್ನ ಹೆಸರು ಕೇಳಿ ಬಂದಿದೆ. ಮುನಿರತ್ನ ಸಂಬಂಧಿ ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಎ13ನೇ ಆರೋಪಿ ಆಗಿದ್ದಾನೆ. ದರ್ಶನ್ ಗ್ಯಾಂಗ್‌ನ‌ ಎ13 ಆರೋಪಿ ದೀಪಕ್ ಎಂಬಾತ ಶಾಸಕ ಮುನಿರತ್ನರ ಸಂಬಂಧಿಯಾಗಿದ್ದಾನೆ.

ಆರೋಪಿ ದೀಪಕ್ ರೇಣುಕಾಸ್ವಾಮಿ ಹತ್ಯೆ ಮಾಡಿದ ಬಳಿಕ ವಿಡಿಯೊ ಮಾಡಿ ಅದನ್ನು ಶಾಸಕ ಮುನಿರತ್ನ ಅವರಿಗೆ ಕಳಿಸಿದ್ದ ಎನ್ನಲಾಗಿದೆ. ಅದೇ ವಿಡಿಯೊವನ್ನು ಶಾಸಕರ ಸೂಚನೆ ಮೇರೆಗೆ ಕೇಂದ್ರ ಸಚಿವರಿಗೆ ರವಾನೆ ಮಾಡಿರುವ ಆರೋಪ ಕೇಳಿ ಬಂದಿದೆ. ಬಳಿಕ ಕೇಂದ್ರ ಸಚಿವರನ್ನ ಬಳಸಿಕೊಂಡು ನಗರ ಪೊಲೀಸ್ ಆಯುಕ್ತರಿಗೆ ಬ್ಲ್ಯಾಕ್‌ ಮೇಲ್ ಮಾಡಲಾಗಿದೆ ಎನ್ನಲಾಗಿದೆ. ಶಾಸಕ ಮುನಿರತ್ನ ಅವರ ವೈಯಕ್ತಿಕ ಲಾಭಕ್ಕೆ ದಯಾನಂದ್ ಅವರಿಗೆ ಕರೆ ಮಾಡಿ ಬ್ಲ್ಯಾಕ್‌ ಮೇಲ್ ಮಾಡಿದ್ದಾರೆ ಎನ್ನಲಾಗಿದೆ.

ಸಿಬಿಐ ಹೆಸರು ಹೇಳಿ ಅವರಿಂದ ದಾಳಿ ಮಾಡಿಸುವುದಾಗಿ ಬೆದರಿಕೆ ಹಾಕಿದ್ದರಂತೆ. ಈ ಮೂಲಕ ನಗರ ಪೊಲೀಸರನ್ನು ಬೆದರಿಸಿದ್ದರಂತೆ. ರೇಣುಕಾಸ್ವಾಮಿ ಹತ್ಯೆಯ ಬಗ್ಗೆ ಗೊತ್ತಿದ್ದರೂ ಕಾನೂನು ಕ್ರಮದ ಬಗ್ಗೆ ಶಾಸಕರು ಒತ್ತಾಯ ಮಾಡಿದ್ದರಂತೆ. ತನ್ನ ವೈಯಕ್ತಿಕ ವಿಚಾರ ಇತ್ಯಾರ್ಥ ಪಡಿಸಿಕೊಳ್ಳಲು ನಗರ ಪೊಲೀಸರಿಗೆ ಬೆದರಿಕೆ ಹಾಗೂ ತನ್ನ ಸಂಬಂಧಿ ದೀಪಕ್‌ನನ್ನು ಪ್ರಕರಣದಿಂದ ಕೈ ಬಿಡಲು 5 ಕೋಟಿ ರೂ. ನೀಡುವುದಾಗಿ ಆಮಿಷವೊಡ್ಡಿದ್ದರಂತೆ. ಈ ಬಗ್ಗೆ ಬಂದ ಮೌಖಿಕ ಮಾಹಿತಿ ಆಧಾರಿತವಾಗಿ ದೂರು ದಾಖಲಾಗಿದೆ. ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ ಶಾಸಕ ಮುನಿರತ್ನ ಕೈವಾಡದ ಬಗ್ಗೆ ತನಿಖೆ ನಡೆಸುವಂತೆ ವಕೀಲ ಜಗದೀಶ್ ಅವರಿಂದ ನಗರ ಪೊಲೀಸ್ ಆಯುಕ್ತರಿಂದ ಇ-ಮೇಲ್ ಮೂಲಕ ದೂರು ನೀಡಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಸಿನಿಮಾ

Kaalapatthar Film Review : ಕಾಲಾಪತ್ಥರ್ : ಕಪ್ಪು ಕಲ್ಲಿನ ಪುತ್ಥಳಿ ಸುತ್ತಲು ವಿಸ್ಮಯ ಕಥನ

Kaalapatthar Film Review : ಸೆ.13ಕ್ಕೆ ತೆರೆ ಕಂಡ ಕಾಲಾಪತ್ಥರ್‌ ಕನ್ನಡ ಚಿತ್ರಕ್ಕೆ ಪ್ರೇಕ್ಷಕರಿಂದ ಉತ್ತಮ ಪ್ರತಿಕ್ರಿಯೆ (Film Review) ವ್ಯಕ್ತವಾಗಿದೆ. ಈ ಚಿತ್ರದಲ್ಲಿ ವಿಕ್ಕಿವರುಣ್ ನಿರ್ದೇಶಕನಾಗಿ ಸೈ ಎನಿಸಿಕೊಳ್ಳುವುದರ ಜತೆಗೆ ನಟನೆಯನ್ನೂ ನಿರ್ವಹಿಸಿರುವುದು ಪ್ರಶಂಸನೀಯ.

VISTARANEWS.COM


on

By

Kaalapatthar film
Koo
Shivaraj DNS

-ಶಿವರಾಜ್ ಡಿ.ಎನ್.ಎಸ್

ಸಾಮಾನ್ಯ ಮನುಷ್ಯನೊಬ್ಬನ ಜೀವನದಲ್ಲಿ ನಡೆಯುವ ವಿಚಿತ್ರ ಘಟನೆ. ಪರಿವರ್ತನೆಯೋ, ಪರಿಸ್ಥಿತಿಯೋ ಏನೋ ಇವತ್ತು ಹೊಗಳುವವರು, ನಾಳೆ ಉಗುಳುತ್ತಾರೆ. ಸೈನಿಕ ಅಂದರೆ ಬಂದೂಕು ಹಿಡಿದು ಗಡಿಯಲ್ಲಿ ಎದೆಯೊಡ್ಡಿ ನಿಲ್ಲುವವರಷ್ಟೆ ಅಲ್ಲ, ಸೇನೆಯ ಅಡುಗೆ ಕೋಣೆಯಲ್ಲಿ ಸೌಟ್ ಹಿಡಿಯುವರು, ಯುದ್ಧ ಭೂಮಿಯಲ್ಲಿ ಸ್ಟೇರಿಂಗ್ ಹಿಡಿಯುವವರೂ ಸೈನಿಕರೆ. ಊರಿನ ಒಳಿತಿಗಾಗಿ ಏನಾದರೂ ತ್ಯಾಗ ಮಾಡಬಹುದು ಆದರೆ ನಮ್ಮ ಜೀವವನ್ನೆ ತ್ಯಾಗ ಮಾಡುವಂತ ಸ್ಥಿತಿ ಎದುರಾದರೆ.? ಇಂತಹ ಹತ್ತಾರು ಗಮನಾರ್ಹ ವಿಷಯಗಳ ಸುತ್ತ ಸುತ್ತುವ ಕಥೆಯೇ ಕಾಲಾಪತ್ಥರ್‌ (Kaalapatthar Film Review).

ಸಿನಿಮಾ ಅದ್ಭುತ ಛಾಯಗ್ರಹಣದೊಂದಿಗೆ ಒಂದು ಸುಂದರ ಹಳ್ಳಿಯ ವಾತಾವರಣ ಸೃಷ್ಟಿಸುತ್ತ ತೆರೆದುಕೊಳ್ಳುತ್ತದೆ. ಕಥೆ ಸಾಗುತ್ತ ಬರಡು ಬಯಲು ಪ್ರದೇಶದ ಕುಗ್ರಾಮದ ಯುವಕ ಶಂಕರ್ ಸೇನೆಯಲ್ಲಿದ್ದಾನೆ. ಅವನ ಊರಿನಲ್ಲಿ ನೀರು, ರಸ್ತೆ, ರಾಜಕೀಯ ಮುಂತಾದ ಸಮಸ್ಯೆಗಳಿವೆ. ಅಣ್ಣಾವ್ರ ಅಭಿಮಾನಿಯಾಗಿರುವ ಶಂಕರ್‌ಗೂ ಅವನದೇ ಆದ ಸಮಸ್ಯೆಯ ಜತೆಗೆ ಅವನಿಗಾಗಿ ಕಾಯತ್ತಿರುವ ಪ್ರೇಯಸಿಯೂ ಇದ್ದಾಳೆ. ಇಂತಹ ವಿಷಯ ಮಂಡನೆ ಮಾಡಿ ಪ್ರೇಕ್ಷಕರೊಂದಿಗೆ ಕನೆಕ್ಟಾಗಲೂ ಶುರುವಾಗುತ್ತದೆ. ಬಂದೂಕು ಹಿಡಿಯುವ ಆಸೆ ಇರುವ ಶಂಕರ್‌ನ ಕೈಯಿಗೆ ಸೇನೆಯಲ್ಲಿ ಸೌಟ್ ಕೊಟ್ಟಿದ್ದಾರೆ. ಅದು ಯಾಂತ್ರಿಕವಾದರು ಆನಂದದಿಂದ ಅನುಭವಿಸುತ್ತಲೆ, ಏನೆ ಮಾಡಿದರೂ ಸ್ಟೈಲಾಗಿ ಮಾಡುತ್ತ, ತನ್ನ ಪಾಡಿಗೆ ತಾನು ಕಾರ್ಯನಿರ್ವಹಿಸುತ್ತಿರುತ್ತಾನೆ.

ಹೀಗೆ ಒಮ್ಮೆ ಸಮಯ ನೋಡಿ ಕ್ಯಾಂಪಿಗೆ ನುಗ್ಗಿ ಏನೊ ಕಿತಾಪತಿ ಮಾಡಲು ಮುಂದಾಗಿದ್ದ ವೈರಿಗಳನ್ನು ಕಾಣುವ ಶಂಕರ ಏಕಾಂಗಿಯಾಗಿ ಸ್ಟೋರ್ ರೂಮು, ಅಡುಗೆ ಕೋಣೆಯನ್ನೆಲ್ಲ ಅಟ್ಟಾಡಿಸಿ, ತನ್ನ ಚಮಚ-ಸೌಟು ಬಕೇಟಿನಲ್ಲಿ ಬಡಿದಾಡಿ ಹೆಡೆಮುರಿಕಟ್ಟಿ, ತಾನೂ ಗಾಯಗೊಂಡು ಆಸ್ಪತ್ರೆ ಸೇರುತ್ತಾನೆ. ಹೀಗೆ ವೈರಿಗಳೊಂದಿಗೆ ಹೋರಾಡಿದ ಕುರಿತು ವಿಶೇಷ ಕಾರ್ಯಕ್ರಮ ಮಾಡಿ ಬಿತ್ತರಿಸುವ ನ್ಯೂಸ್ ಚಾನೆಲ್‌ಗಳೆಲ್ಲ ಶಂಕರನ ಹೀರೋ ಮಾಡುವುದರ ಜತೆಗೆ ಅವನ ಊರನ್ನೂ ತಲುಪಿ, ದೇಶಕ್ಕಾಗಿ ಇಷ್ಟೆಲ್ಲ ಮಾಡಿರುವ ನಿಮ್ಮೂರಿನ ಯೋಧನಿಗಾಗಿ ಗ್ರಾಮಸ್ಥರು ಏನ್ಮಾಡ್ತಿರಿ.? ಎನ್ನುವ ಪ್ರಶ್ನೆ ಮಾಡುತ್ತಾರೆ. ಆಗ ಊರ ಗೌಡರು ಊರು ಕಾಯೋ ಶಿವ ಬೇರೆಯಲ್ಲ, ದೇಶ ಕಾಯೊ ಶಂಕರ ಬೇರೆಯಲ್ಲ, ಅವನದೂ ನಮ್ಮೂರಿನಲ್ಲೊಂದು ಪ್ರತಿಮೆಯನ್ನೇ ಮಾಡಿ ನಿಲ್ಲಿಸುತ್ತೇವೆ ಎಂದು ತೀರ್ಮಾನಿಸುತ್ತಾರೆ.

Kaalapatthar Film

ಸೈನಿಕ ಶಂಕರ ಮನೆಗಷ್ಟೆ ಅಲ್ಲ, ಊರಿಗೆ ಊರೆ ಹೆಮ್ಮೆಪಡುವಂತ ಶಂಕರ್ರಣ್ಣನಾಗಿ ನಿಲ್ಲುತ್ತಾನೆ. ಕೋಟೆ ಬಾಗಿಲ ಬಳಿ ಕರಿಕಲ್ಲಿನಿಂದ ಕೆತ್ತುವ ಅವನ ಪ್ರತಿಮೆಯೂ ನಿಲ್ಲುತ್ತದೆ. ಅದು ಅಲ್ಲಿಯ ರಾಜಕಾರಣಿಗೆ ಹಿಡಿಸುವುದಿಲ್ಲ. ಹೀಗೆ ಕಥೆಯ ವೈಚಿತ್ರ್ಯ ತೆರದು ಕೊಳ್ಳುತ್ತಾ,.. ಪ್ರೇಕ್ಷಕರ ಕುತೂಹಲವನ್ನೂ ಕೆರಳಿಸುತ್ತ ಸಾಗುತ್ತದೆ. ಅಲ್ಲಿಂದಾಚೆಗೆ ಶಂಕರನ ಹಾಗೂ ಊರಿನ ಒಳಗೊರಗೆ ಏನಾಗುತ್ತದೆ ಎನ್ನುವುದೇ ಸಿನಿಮಾ.

ಸಾಮಾನ್ಯವಾಗಿ ಯಾವಾಗ ಮನೆಗೆ ಬರ್ತಿಯಪ್ಪ ಮಗನೇ ಅಂತಾ ತಂದೆ-ತಾಯಿ ಕಣ್ಣೀರು ಹಾಕೋದು ನೋಡಿರುವ ಪ್ರೇಕ್ಷಕರು, ನೀನು ಮನೆಯಿಂದ ಯಾವಾಗ ಹೋಗ್ತಿಯಪ್ಪ ಅಂತ ಕಣ್ಣೀರು ಹಾಕುತ್ತ ಕೈ ಮುಗಿದು ಕೇಳಿಕೊಳ್ಳುವುದನ್ನು ಈ ಸಿನಿಮಾದಲ್ಲಿ ನೋಡಬಹುದು. ನಿಜ ಜೀವನದಲ್ಲಿಯೂ ನಡೆಯಬಹುದಾದ ಕೆಲ ವಿಚಿತ್ರ ಘಟನೆಗಳು ಯಾರೊಬ್ಬರಿಗೂ ಹೇಳಿಕೊಳ್ಳಲಾಗದ, ಹೇಳಿಕೊಂಡರೂ ನಂಬಲಾಗದ ಸಂದಿಗ್ಧ ಸ್ಥಿತಿಗೆ ತಲುಪುವ ಮನುಷ್ಯನ ಪಾಡು, ಕಾಯಕವೇ ಕೈಲಾಸ ಎನ್ನುವ ತತ್ವ ಖುದ್ದು ಅಣ್ಣಾವ್ರೆ (ಡಾ. ರಾಜಕುಮಾರ್‌) ತೆರೆಗೆ ಬಂದು ಹೇಳುವಂತ ವಿಶೇಷ ದೃಶ್ಯವನ್ನೂ ಈ ಸಿನಿಮಾದಲ್ಲಿ ಕಾಣಬಹುದು.

ಕಾಕತಾಳಿಯವೋ, ವಿಧಿ ಲಿಖಿತವೊ, ಕೆಲ ಅಹಂಕಾರ ಪ್ರದರ್ಶನ ದೃಶ್ಯದಲ್ಲಿ ಪ್ರಸ್ತುತದಲ್ಲಿರುವ ಮನಸ್ಥಿತಿಯೊಂದರ ಪರಿಸ್ಥಿತಿಗೆ ಕೈಗನ್ನಡಿ ಅನ್ನಿಸಬಹುದು. ಅಣ್ಣಾವ್ರು ಅಭಿಮಾನಿಗಳನ್ನು ದೇವರು ಎಂದದ್ದು ಯಾಕೆ ಎನ್ನುವುದರ ಹಿಂದಿನ ಸತ್ಯವೂ ಈ ಚಿತ್ರದಲ್ಲಿ ಹೇಳಿರುವಂತೆಯೇ ಇರಬಹುದೇನೂ ಅನಿಸುತ್ತದೆ. ರಾವಣಾ ಕೃತಿಯನ್ನು ಬಹಿರಂಗವಾಗಿ ಒಪ್ಪದ ಒಬ್ಬ ಮನುಷ್ಯ ಅಂತರಂಗದಲ್ಲಿ ತನಗೆ ಗೊತ್ತಿಲ್ಲದಂತೆ ಅಪ್ಪಿಕೊಂಡಿರುತ್ತಾನೆ ಎನ್ನುವ ವಿಷಯ, ದುಡಿಮೆಯೇ ದೇವರು ಎನ್ನುವ ಬರಹದ ಅಡಿಯಲ್ಲಿ ಇಸ್ಪೀಟು ಆಡುವ ದೃಶ್ಯ ನೆನಪಿನಲ್ಲಿ ಉಳಿಯುತ್ತದೆ.

ನಿರ್ದೇಶಕನಾಗುವ ಕನಸು ಹೊತ್ತು ಚಿತ್ರರಂಗ ಪ್ರವೇಶಿಸಿ ಕೆಂಡಸಂಪಿಗೆ ಚಿತ್ರದ ಮೂಲಕ ನಟನಾಗಿ ಸೈ ಎನಿಸಿಕೊಂಡಿದ್ದ ವಿಕ್ಕಿವರುಣ್, ಈ ಚಿತ್ರದಲ್ಲಿ ನಿರ್ದೇಶಕನಾಗಿ ಸೈ ಎನಿಸಿಕೊಳ್ಳುವುದರ ಜತೆಗೆ ನಟನೆಯನ್ನೂ ನಿರ್ವಹಿಸಿರುವುದು ಪ್ರಶಂಸನೀಯ. ನಾಯಕಿಯಾಗಿ ಧನ್ಯ ರಾಮ್ ಕುಮಾರ್, ಊರ ಗೌಡನಾಗಿ ಟಿ.ಎಸ್. ನಾಗಾಭರಣ , ರಾಜಕಾರಣಿಯ ಪಾತ್ರದ ರಾಜೇಶ್ ನಟರಂಗ, ನಟನ ಅಪ್ಪನ ಪಾತ್ರದಲ್ಲಿ ಶಿವಪ್ರಸಾದ್ ಎಲ್ಲರೂ ಪಾತ್ರಗಳಿಗೆ ವಿಶೇಷ ಮೆರಗು ನೀಡಿದ್ದಾರೆ.

ಪ್ರೀತಿ-ಪ್ರೇಮ-ಪ್ರಣಯಕ್ಕೆ ಇನ್ನೂ ತುಸು ಜಾಗ ನೀಡಬೇಕಿತ್ತು ಅನಿಸಬಹುದು. ಆದರೆ ಸಿನಿಮಾದ ಮುಖ್ಯ ಕಥೆ ಅದಲ್ಲದೇ ಇರುವುದರಿಂದ ಈಗ ಎಷ್ಟು ಇದ್ಯೋ ಅಷ್ಟೇ ಚೆಂದ. ಇತ್ತ ಹಳೆ ಮೈಸೂರು ಅಲ್ಲ, ಅತ್ತ ಉತ್ತರ ಕರ್ನಾಟಕದ ಹಳ್ಳಿಯೂ ಅಲ್ಲ. ಅಂತಹದ್ದೇ ಯಾವುದೊ ಹಳ್ಳಿ ಎನ್ನಬಹುದಾದ ಒಂದು ಕಾಲ್ಪನಿಕ ಹಳ್ಳಿಯಲ್ಲಿ ನಡೆಯುವ ಕಥೆ ಎನ್ನುವಂತೆ ಡೈರೆಕ್ಟರ್ ಗಟ್ಟಿ ಮನಸ್ಸು ಮಾಡಿ ಒಂದು ಪ್ರಾದೇಶಿಕತೆಯೊಂದಿಗೆ ಹೆಣೆದಿದ್ದರೇ ಚಿತ್ರ ಇನ್ನೂ ಗಂಭೀರ ಆಗಬಹುದಿತ್ತೇನೊ. ಕೆಲವು ಕಡೆ ಕಲಾ ನಿರ್ದೇಶಕರೂ ಇನ್ನೂ ತುಸು ಶ್ರಮವಹಿಸಬೇಕಿತ್ತು ಅನಿಸಬಹುದು.

ಅನೂಪ್ ಸೀಳಿನ್ 2.0 ಸಂಗೀತ, ವಿ.ನಾಗೇಂದ್ರ ಪ್ರಸಾದ್ ಹಾಗು ಪ್ರಮೋದ್ ಮರವಂತೆ ಅವರ ಸಾಹಿತ್ಯ, ಸಂಭಾಷಣೆ, ಸತ್ಯಪ್ರಕಾಶ್ ಅವರ ಕತೆ ಎಲ್ಲವೂ ವಾವ್ ಎನಿಸುತ್ತದೆ. ಎಲ್ಲ ಕಲಾವಿದರೂ ಅಭಿನಯವೂ ಅಚ್ಚುಕಟ್ಟಾಗಿದೆ, ಛಾಯಾಗ್ರಹಣವು ಇಷ್ಟವಾಗುತ್ತದೆ. ವಿಷಯಗಳಿಗೆ ಪ್ರಮುಖ್ಯತೆ ಕೊಟ್ಟು ಕಟ್ಟಿರುವ ‘ಕಾಲಾಪತ್ಥರ್’ ಒಟ್ಟಾರೆಯಾಗಿ ಎಲ್ಲ ವರ್ಗದ ಪ್ರೇಕ್ಷಕರನ್ನು ರಂಜಿಸಬಹುದಾದ ಸಿ‌ನಿಮಾ ಎನ್ನಬಹುದು. ಯಾವುದೇ ನಿರೀಕ್ಷೆ ಇಲ್ಲದೆ ಚಿತ್ರಮಂದಿರಕ್ಕೆ ಭೇಟಿ ಕೊಟ್ಟರೆ ಕ್ಲಾಸ್ ಸಿನಿ ಪ್ರೇಮಿಗಳಿಗೂ ಇಲ್ಲಿರುವ ಮಾಸ್ ಕೂಡ ಇಷ್ಟವಾಗುತ್ತದೆ.

Continue Reading

ಬೆಂಗಳೂರು

Actor Darshan : ರೇಣುಕಾಸ್ವಾಮಿ ಕೊಲೆ ಕೇಸ್‌; ಸೆ.17ರವರೆಗೆ ದರ್ಶನ್‌ ಆ್ಯಂಡ್ ಗ್ಯಾಂಗ್‌ಗೆ ನ್ಯಾಯಾಂಗ ಬಂಧನ

Actor Darshan : ಸೆ.17ರವರೆಗೆ ದರ್ಶನ್‌ ಆ್ಯಂಡ್ ಗ್ಯಾಂಗ್‌ಗೆ ನ್ಯಾಯಾಂಗ ಬಂಧನ ಮುಂದುವರಿದಿದ್ದು, ನಾಲ್ಕು ದಿನಗಳು ಜೈಲೆಗತಿಯಾಗಿದೆ.

VISTARANEWS.COM


on

By

Actor darshan
Koo

ಬೆಂಗಳೂರು: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶುಕ್ರವಾರ ನ್ಯಾಯಾಲಯದಲ್ಲಿ ವಿಚಾರಣೆ ನಡೆಯಿತು. ಅರ್ಜಿ ಸಂಬಂಧ ನ್ಯಾಯಾಲಯದ ಒಂದಷ್ಟು ಕಾರ್ಯವಿಧಾನಗಳು ಬಾಕಿ ಇರುವ ಕಾರಣ ಮತ್ತಷ್ಟು ದಿನಗಳವರೆಗೆ ದರ್ಶನ್‌ ಗ್ಯಾಂಗ್‌ಗೆ (Actor Darshan) ಜೈಲೇ ದಿಕ್ಕು . ಜಾಮೀನು ಅರ್ಜಿಗೆ ರಜೆ ದಿನಗಳೇ ಅಡ್ಡಿಯಾಗಿದೆ.

ಚಾರ್ಜ್ ಶೀಟ್ ಸಲ್ಲಿಕೆಯಾದ ಬಳಿಕ ಮೂರು ದಿನಗಳ ಕಾಲ ನ್ಯಾಯಾಲಯವು ದರ್ಶನ್ ಆ್ಯಂಡ್ ಗ್ಯಾಂಗ್‌ಗೆ ನ್ಯಾಯಾಂಗ ಬಂಧನ ಆದೇಶ ನೀಡಿತ್ತು. ನಿನ್ನೆ ಗುರುವಾರ ಕೂಡ ಒಂದು ದಿನ ಜ್ಯೂಡಿಷಿಯಲ್ ಕಷ್ಟಡಿಗೆ ಒಳಪಡಿಸಲಾಗಿತ್ತು. ಇಂದು ಶುಕ್ರವಾರ ಮತ್ತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾತಿ ಪಡೆದ ಕೋರ್ಟ್‌ ಸೆ.17ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ.

ಇದನ್ನೂ ಓದಿ: Nagamangala Case : ನಾಗಮಂಗಲ ಗಲಭೆ; ದುಷ್ಕರ್ಮಿಗಳ ಕೃತ್ಯಕ್ಕೆ ಬೀದಿಗೆ ಬಿದ್ದ ಕುಟುಂಬಗಳು

ಚಾರ್ಜ್ ಶೀಟ್ ಸಲ್ಲಿಕೆಯಾದ ಬಳಿಕ ಗಣೇಶ ಹಬ್ಬ ಹಾಗು ರಜಾದಿನಗಳು ಬ್ಯಾಕ್ ಟು ಬ್ಯಾಕ್ ಬಂದ ಹಿನ್ನೆಲೆಯಲ್ಲಿ ಚಾರ್ಜ್ ಶೀಟ್ ಕೂಡ ಆರೋಪಿಗಳ ಕೈ ಸೇರಿರಲಿಲ್ಲ . ಸೋಮವಾರ ಆರೋಪಿಗಳಿಗೆ ಚಾರ್ಜ್ ಶೀಟ್ ಸಿಕ್ಕಿದರೂ ಮುಖ್ಯವಾಗಿ ಬೇಕಾದ ಟೆಕ್ನಿಕಲ್ ಎವಿಡೆನ್ಸ್‌ಗಳು ಹಾಗು ಅದರ ವರದಿ ಸಿಕ್ಕಿರಲಿಲ್ಲ, ಈಗಲೂ ಸಿಕ್ಕಿಲ್ಲ. ಇದೆಲ್ಲಾವೂ ಜಾಮೀನು ಅರ್ಜಿ ಸಲ್ಲಿಕೆ ಮಾಡಲು ವಿಳಂಬವಾಗುತ್ತಿದೆ.

ಇನ್ನು ಚಾರ್ಜ್ ಶೀಟ್ ಹಾಗೂ ಡಿಜಿಟಲ್ ಎವಿಡೆನ್ಸ್ ವರದಿಗಳನ್ನು ಅನಾಲೈಝ್ ಮಾಡಿದ ಬಳಿಕವಷ್ಟೇ ಮೂವ್ ಆಗಬಹುದು. ಅದಾದ ಬಳಿಕ ಈ ಪ್ರಕರಣವನ್ನು ಸೆಷನ್ ಕೋರ್ಟ್‌ಗೆ ವರ್ಗಾವಣೆಯಾಗಿ, ಅಲ್ಲಿ ನ್ಯಾಯಾಲಯದ ಅನುಮತಿ ಪಡೆದು ಜಾಮೀನು ಅರ್ಜಿ ಸಲ್ಲಿಕೆ ಮಾಡಬೇಕು. ಇನ್ನು ಇದೇ ವೇಳೆ ದರ್ಶನ್ ಪರ ವಕೀಲ ಆದಷ್ಟು ಬೇಗ ವರದಿಗಳನ್ನು ನೀಡಬೇಕು ಜಾಮೀನು ಸಲ್ಲಿಕೆ ಮಾಡುವುದು ಆರೋಪಿಯ ಫಂಡಮೆಂಟಲ್ ರೈಟ್ಸ್ ಎಂದು ವಾದ ಮಂಡಿಸಿದರು. ಸದ್ಯ ನಾಲ್ಕು ದಿನಗಳಲ್ಲಿ ಕೋರ್ಟ್‌ನ ಪೆಂಡಿಂಗ್ ಕೆಲಸಗಳು ಕ್ಲಿಯರ್ ಆದರೆ ಜಾಮೀನು ಅರ್ಜಿ ಸಲ್ಲಿಕೆ ಮಾಡುವ ಸಾಧ್ಯತೆ ಇದೆ. ಅಲ್ಲಿವರೆಗೂ ಕೊಲೆ ಆರೋಪಿಗಳಿಗೆ ಜೈಲೇ ಗತಿಯಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಸಿನಿಮಾ

Assault Case : ಹುಡುಗರನ್ನು ಬಿಟ್ಟು ಜಿಮ್‌ ಟ್ರೈನರ್‌ಗೆ ಹೊಡೆಸಿದ್ದಕ್ಕೆ ನಟ ಧ್ರುವ ಸರ್ಜಾ ಮ್ಯಾನೇಜರ್‌ ಬಂಧನ

Assault Case : ನಟ ಧ್ರುವ ಸರ್ಜಾ (Dhruva Sarja) ಅವರ ಜಿಮ್‌ ಟ್ರೈನರ್‌ ಪ್ರಶಾಂತ್‌ ಪೂಜಾರಿ (Gym Trainer) ಮೇಲೆ ಹಲ್ಲೆ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದರ ಮಾಸ್ಟರ್‌ ಮೈಂಡ್‌ ಸರ್ಜಾ ಅವರ ಮ್ಯಾನೇಜರ್ ಅಶ್ವಿನ್ (Manager) ಎಂಬಾತನನ್ನು ಬನಶಂಕರಿ ಪೊಲೀಸರು ಬಂಧಿಸಿದ್ದಾರೆ.

VISTARANEWS.COM


on

By

Assault case Actor Dhruva Sarjas manager arrested for hitting gym trainer
Koo

ಬೆಂಗಳೂರು: ನಟ ಧ್ರುವ ಸರ್ಜಾ (Dhruva Sarja) ಮ್ಯಾನೇಜರ್ (Manager) ಅಶ್ವಿನ್‌ ಎಂಬಾತನನ್ನು ಬನಶಂಕರಿ ಪೊಲೀಸರು (Banashankari Police) ಬಂಧನ ಮಾಡಿದ್ದಾರೆ. ಪ್ರಶಾಂತ್ ಪೂಜಾರಿ ಎಂಬಾತನ ಮೇಲೆ ಹಲ್ಲೆ (Assault case) ನಡೆಸಲು ಈತ ಕೂಡ ಕಾರಣ ಎಂಬ ವಿಚಾರ ತನಿಖೆಯಿಂದ ಗೊತ್ತಾದ ಹಿನ್ನೆಲೆಯಲ್ಲಿ ಅಶ್ವಿನ್‌ನನ್ನು ಬಂಧನ ಮಾಡಲಾಗಿದೆ.

ಮೂರು ತಿಂಗಳ ಹಿಂದೆ ಅಂದರೆ ಮೇ 26ರಂದು ಕನಕಪುರ ಮೂಲದ ಹರ್ಷ ಹಾಗೂ ಸುಭಾಷ್ ಎಂಬುವವರು ಪ್ರಶಾಂತ್ ಪೂಜಾರಿ ಮೇಲೆ ಹಲ್ಲೆ ಮಾಡಿದ್ದರು. ದೂರು ದಾಖಲಿಸಿದ ಬಳಿಕ ಅವರಿಬ್ಬರನ್ನು ಬಂಧನ ಮಾಡಲಾಗಿತ್ತು. ಇದೀಗ ತನಿಖೆ ವೇಳೆ ಹಲ್ಲೆ ಹಿಂದಿನ ಮಾಸ್ಟರ್ ಮೈಂಡ್ ನಟ ಧ್ರುವ ಸರ್ಜಾ ಮ್ಯಾನೇಜರ್ ಆಗಿರುವ ಅಶ್ವಿನ್ ಎಂದು ತಿಳಿದುಬಂದಿದೆ. ಬಂಧಿತ ಅಶ್ವಿನ್‌ ಸೇರಿ ಇಲ್ಲಿವರೆಗೆ ನಾಲ್ವರನ್ನು ಬಂಧನ ಮಾಡಲಾಗಿದೆ.

ಜಿಮ್‌ ಟ್ರೈನರ್‌ ಪ್ರಶಾಂತ್‌ ಪೂಜಾರಿಗೆ ಸರ್ಪೈಸ್‌ ಗಿಫ್ಟ್‌ ಕೊಟ್ಟಿದ್ದ ಸರ್ಜಾ

ಈ ಅಶ್ವಿನ್ ಹಲವು ವರ್ಷಗಳಿಂದ ನಟ ಧೃವ ಸರ್ಜಾ ಬಳಿ ಮ್ಯಾನೇಜರ್ ಆಗಿ ಕೆಲಸ ಮಾಡಿಕೊಂಡಿದ್ದ. ಹಲ್ಲೆಗೊಳಗಾದ ಪ್ರಶಾಂತ್ ಪೂಜಾರಿ ಜಿಮ್ ಟ್ರೈನರ್ ಆಗಿದ್ದು, ನಟ ಧೃವ ಸರ್ಜಾ ಅವರಿಗೆ ಇತ್ತೀಚಿಗೆ ಹತ್ತಿರವಾಗಿದ್ದ. ಜಿಮ್ ವಿಚಾರದಲ್ಲಿ ಧೃವ ಸರ್ಜಾರನ್ನು ಕೇರ್ ಮಾಡುತ್ತಿದ್ದ . ಹೀಗಾಗಿ ಸಹಜವಾಗಿಯೇ ನಟ ಧೃವ ಸರ್ಜಾಗೆ ಪ್ರಶಾಂತ್‌ ಪೂಜಾರಿ ಆತ್ಮೀಯನಾಗಿದ್ದ.‌ ಮಾತ್ರವಲ್ಲ ನಟ ಧೃವ ಸರ್ಜಾಗೆ ಪ್ರಶಾಂತ್ ಒಳ್ಳೆತನ ಕಂಡು ದುಬಾರಿ ಬೆಲೆಯ ಕಾರನ್ನು ಸರ್ಪೈಸ್‌ ಆಗಿ ಕೊಟ್ಟಿದ್ದರು‌.

Actor Dhruva Sarjas manager arrested for hitting gym trainer
Actor Dhruva Sarjas manager arrested for hitting gym trainer

ಇದು ಮ್ಯಾನೇಜರ್‌ ಅಶ್ವಿನ್‌ ಹಾಗೂ ಆತನ ಆಪ್ತ ವಲಯಕ್ಕೆ ಸಹಿಸಲು ಸಾಧ್ಯವಾಗಿಲ್ಲ. ಈ ಹಿನ್ನೆಲೆಯಲ್ಲಿ ಧೃವ ಸರ್ಜಾ ಜತೆಗಿನ ಆತ್ಮೀಯತೆಯನ್ನು ಹೇಗಾದರೂ ಕಟ್ ಮಾಡಬೇಕು ಎಂದು ಕೊಂಡಿದ್ದರು. ಈ ಕಾರಣಕ್ಕೆ ನಟ ಧೃವ ಸರ್ಜಾ ಕಾರು ಚಾಲಕ ನಾಗೇಂದ್ರನ ಜತೆ ಸೇರಿ ಪ್ಲಾನ್ ಮಾಡಿ ಕನಕಪುರದ ಇಬ್ಬರು ಹುಡುಗರನ್ನು ಬಿಟ್ಟು ಪ್ರಶಾಂತ್ ಪೂಜಾರಿ ಮೇಲೆ ಹಲ್ಲೆ ನಡೆಸಿದ್ದರು. ಈ ಮೊದಲು ಡ್ರೈವರ್‌ ನಾಗೇಂದ್ರನೇ ಮಾಸ್ಟರ್ ಮೈಂಡ್ ಎಂದು ಹೇಳಲಾಗಿತ್ತು. ಆದರೆ ಆತನ ಜತೆ ಅಶ್ವಿನ್‌ ಕೂಡ ಇರುವುದು ತನಿಖೆಯಿಂದ ಸಾಬೀತಾಗಿದೆ. ಪ್ರಶಾಂತ್ ಪೂಜಾರಿ ಹಲ್ಲೆ ಪ್ರಕರಣದಲ್ಲಿ ನಾಲ್ವರು ಬಂಧನ ಮಾಡಲಾಗಿದೆ. ಈ ಸಂಬಂಧ ಬನಶಂಕರಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading
Advertisement
Siddeshwara Temple
ಬೆಂಗಳೂರು2 ಗಂಟೆಗಳು ago

Siddheshwar Temple : ಸೊಲ್ಲಾಪುರದ ಸಿದ್ದೇಶ್ವರ ದೇಗುಲದ ಆವರಣದಲ್ಲಿ ವಚನಕಾರ ಸಿದ್ದರಾಮನ ವಚನಗಳ ಅಳವಡಿಕೆಗೆ ಕಸಾಪ ಆಗ್ರಹ

school admission
ಬೆಂಗಳೂರು3 ಗಂಟೆಗಳು ago

School Admissions : ಗಲ್ಲಿಗೊಂದು ಹುಟ್ಟಿಕೊಂಡ ಖಾಸಗಿ ಶಾಲೆಗಳು; ವಿದ್ಯಾರ್ಥಿಗಳ ಆಡ್ಮಿನ್‌ಗಾಗಿ ಹೊಸ ತಂತ್ರ

karnataka weather Forecast
ಮಳೆ9 ಗಂಟೆಗಳು ago

Karnataka Weather : ಕರಾವಳಿ ಸೇರಿ ಉತ್ತರ ಒಳನಾಡಿನ ಈ ಭಾಗದಲ್ಲಿ ಭರ್ಜರಿ ಮಳೆ; ಯೆಲ್ಲೊ ಅಲರ್ಟ್‌ ಘೋಷಣೆ

Dina Bhavishya
ಭವಿಷ್ಯ9 ಗಂಟೆಗಳು ago

Dina Bhavishya : ಈ ರಾಶಿಯವರಿಗೆ ಅನಿರೀಕ್ಷಿತ ಲಾಭವು ದುಪ್ಪಟ್ಟು ಖುಷಿ ಸಿಗಲಿದೆ

Murder case
ಬೆಂಗಳೂರು21 ಗಂಟೆಗಳು ago

Bengaluru Murder : ಮಹಿಳೆಯನ್ನು 50 ತುಂಡಾಗಿ ಕತ್ತರಿಸಿದವನು ಒಡಿಶಾದ ಸ್ಮಶಾನದಲ್ಲಿ ನೇಣಿಗೆ ಶರಣು!

assault case
ಹಾವೇರಿ22 ಗಂಟೆಗಳು ago

Assault Case : ಮನೆಗೆ ಬಾರದ ಪತ್ನಿ; ಸಿಟ್ಟಾಗಿ ಮಾವ ಬೆಳೆದ ಅಡಿಕೆ ಗಿಡಗಳನ್ನು ನಾಶ ಮಾಡಿದ ಅಳಿಯ!

Murder case
ದಾವಣಗೆರೆ22 ಗಂಟೆಗಳು ago

Murder Case : ಪತಿಗೆ ನಿದ್ರೆ ಮಾತ್ರೆ ಕೊಟ್ಟು ರಾತ್ರಿ ಹೊತ್ತು ಪ್ರಿಯಕರನ ಸೇರುತ್ತಿದ್ದಳು ಮಳ್ಳಿ! ಪತ್ನಿಯ ಅಕ್ರಮ ಸಂಬಂಧಕ್ಕೆ ಪತಿ ಬಲಿ

new serial
ಬೆಂಗಳೂರು1 ದಿನ ago

New Serial : ಡಿಫರೆಂಟ್ ಕಥೆಯೊಂದಿಗೆ ಕಿರುತೆರೆಯಲ್ಲಿ ಶುರುವಾಗ್ತಿದೆ ʻನಿನ್ನ ಜೊತೆ ನನ್ನ ಕಥೆʼ

World Retinal Day 2024
ಪ್ರಮುಖ ಸುದ್ದಿ1 ದಿನ ago

World Retinal Day 2024 : ಶಾಕಿಂಗ್‌ ನ್ಯೂಸ್‌; ಜಾಗತಿಕವಾಗಿ 1 ಬಿಲಿಯನ್ ಜನರು ತಮ್ಮ ದೃಷ್ಟಿಯನ್ನು ಕಳೆದುಕೊಳ್ಳುತ್ತಿದ್ದರಂತೆ!

MUda Scam
ರಾಜಕೀಯ1 ದಿನ ago

Muda Scam : ಸಿದ್ದರಾಮಯ್ಯ ರಾಜೀನಾಮೆಗೆ ಹೆಚ್ಚಾದ ಒತ್ತಡ; ಫ್ರೀಡಂ ಪಾರ್ಕ್‌ನಲ್ಲಿ ಜೆಡಿಎಸ್‌ ಪ್ರತಿಭಟನೆ

Kannada Serials
ಕಿರುತೆರೆ12 ತಿಂಗಳುಗಳು ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Sharmitha Gowda in bikini
ಕಿರುತೆರೆ12 ತಿಂಗಳುಗಳು ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ12 ತಿಂಗಳುಗಳು ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

galipata neetu
ಕಿರುತೆರೆ10 ತಿಂಗಳುಗಳು ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Bigg Boss- Saregamapa 20 average TRP
ಕಿರುತೆರೆ11 ತಿಂಗಳುಗಳು ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ12 ತಿಂಗಳುಗಳು ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ11 ತಿಂಗಳುಗಳು ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ10 ತಿಂಗಳುಗಳು ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ1 ವರ್ಷ ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ10 ತಿಂಗಳುಗಳು ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Sudeep's birthday location shift
ಸ್ಯಾಂಡಲ್ ವುಡ್4 ವಾರಗಳು ago

Kichcha Sudeepa: ಸುದೀಪ್‌ ಬರ್ತ್‌ ಡೇ ಲೊಕೇಶನ್‌ ಶಿಫ್ಟ್; ದರ್ಶನ್‌ ಭೇಟಿಗೆ ಬಳ್ಳಾರಿ ಜೈಲಿಗೆ ಹೋಗ್ತಾರಾ ಕಿಚ್ಚ

Actor Darshan
ಸ್ಯಾಂಡಲ್ ವುಡ್4 ವಾರಗಳು ago

Actor Darshan : ಬಿಗಿ ಭದ್ರತೆಯಲ್ಲಿ ಪರಪ್ಪನ ಅಗ್ರಹಾರದಿಂದ ದರ್ಶನ್‌ ಬಳ್ಳಾರಿಗೆ ಸ್ಥಳಾಂತರ; ಸೆಲ್‌ನಲ್ಲಿ ಏನೆಲ್ಲ ವ್ಯವಸ್ಥೆ ಇದೆ ಗೊತ್ತಾ?

ಮಳೆ1 ತಿಂಗಳು ago

Karnataka rain : ವಿಜಯನಗರದಲ್ಲಿ ಮಳೆ ಅವಾಂತರ; ಹರಿಯುವ ಹಳ್ಳದಲ್ಲೇ ಶವ ಸಾಗಿಸಿದ ಗ್ರಾಮಸ್ಥರು

karnataka Weather Forecast
ಮಳೆ2 ತಿಂಗಳುಗಳು ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ2 ತಿಂಗಳುಗಳು ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ2 ತಿಂಗಳುಗಳು ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು2 ತಿಂಗಳುಗಳು ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ2 ತಿಂಗಳುಗಳು ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ2 ತಿಂಗಳುಗಳು ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

karnataka rain
ಮಳೆ2 ತಿಂಗಳುಗಳು ago

Karnataka Rain : ಕಾರವಾರದ ಸುರಂಗ ಮಾರ್ಗದಲ್ಲಿ ಕುಸಿದ ಕಲ್ಲು; ಟನೆಲ್‌ ಬಂದ್‌ ಮಾಡಿದ ಪೊಲೀಸರು

ಟ್ರೆಂಡಿಂಗ್‌