Plastic Ban : ಸರ್ಕಾರಿ ಸಭೆ - ಸಮಾರಂಭ, ಕಚೇರಿಗಳಲ್ಲಿ ಪ್ಲಾಸ್ಟಿಕ್ ಬಾಟಲ್ ಬ್ಯಾನ್! - Vistara News

ಕರ್ನಾಟಕ

Plastic Ban : ಸರ್ಕಾರಿ ಸಭೆ – ಸಮಾರಂಭ, ಕಚೇರಿಗಳಲ್ಲಿ ಪ್ಲಾಸ್ಟಿಕ್ ಬಾಟಲ್ ಬ್ಯಾನ್!

Plastic Ban : ಇನ್ನು ಮುಂದೆ ಸರ್ಕಾರಿ ಸಭೆ – ಸಮಾರಂಭಗಳಲ್ಲಿ ಪ್ಲಾಸ್ಟಿಕ್‌ ಬಾಟಲ್‌ಗಳನ್ನು ನಿಷೇಧ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ಇದಕ್ಕೆ ಬದಲಿ ವ್ಯವಸ್ಥೆ ಮಾಡಿಕೊಳ್ಳುವಂತೆ ಸೂಚನೆ ನೀಡಿದೆ.

VISTARANEWS.COM


on

Plastic Ban in Karnataka
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಸರ್ಕಾರದ ಅಧಿಕೃತ ಸಭೆ, ಸಮಾರಂಭ ಹಾಗೂ ಸರ್ಕಾರಿ ಕಚೇರಿಗಳಲ್ಲಿ ಪ್ಲಾಸ್ಟಿಕ್ ಬಾಟಲ್ (Plastic bottle) ಮತ್ತು ಲೋಟಗಳನ್ನು (Plastic cup) ನಿಷೇಧ ಮಾಡಿ (Plastic Ban) ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. 2018ರಲ್ಲಿ ಮಾಡಿದ್ದ ಆದೇಶ ಪಾಲನೆ ಮಾಡದ ಹಿನ್ನೆಲೆಯಲ್ಲಿ ಸರ್ಕಾರದ ಮುಖ್ಯ ಕಾರ್ಯದರ್ಶಿಯವರಿಂದ ಈ ಆದೇಶ ಹೊರಬಿದ್ದಿದೆ.

ಪ್ರಸ್ತಾವನೆಯಲ್ಲಿ ವಿವರಿಸಲಾಗಿರುವ ಅಂಶಗಳ ಹಿನ್ನೆಲೆಯಲ್ಲಿ ರಾಜ್ಯಾದ್ಯಂತ ಸರ್ಕಾರಿ ಹಾಗೂ ಸರ್ಕಾರಿ ಸ್ವಾಮ್ಯದ ಮಂಡಳಿ, ನಿಗಮ, ವಿಶ್ವವಿದ್ಯಾನಿಲಯಗಳು ಮತ್ತು ಸರ್ಕಾರದಿಂದ ಅನುದಾನ ಪಡೆಯುವಂತಹ ಯಾವುದೇ ಸಂಸ್ಥೆಗಳ ವತಿಯಿಂದ ಏರ್ಪಡಿಸಲ್ಪಡುವ ಸಭೆ-ಸಮಾರಂಭಗಳಲ್ಲಿ ಏಕಬಳಕೆಯ ಪ್ಲಾಸ್ಟಿಕ್ ಬಾಟಲ್‌ನ (Single use packaged water bottles) ನೀರಿನ ಬಳಕೆ/ಸರಬರಾಜು ಮಾಡುವುದನ್ನು ತಕ್ಷಣದಿಂದ ಜಾರಿಗೆ ಬರುವಂತೆ ನಿಷೇಧಿಸಲಾಗಿದೆ.

ಇದನ್ನೂ ಓದಿ: Drought in Karnataka : ರಾಜ್ಯದಲ್ಲಿ 42 ಲಕ್ಷ ಹೆಕ್ಟೇರ್‌ ಬೆಳೆ ಹಾನಿ; 6 ಸಾವಿರ ಕೋಟಿಗಾಗಿ ಕೇಂದ್ರಕ್ಕೆ ಮೊರೆ

ಇಂತಹ ಸಭೆ-ಸಮಾರಂಭಗಳಲ್ಲಿ ಕುಡಿಯುವ ನೀರನ್ನು ಸಂದರ್ಭಾನುಸಾರ ಶುಚಿತ್ವ ರೀತಿಯಲ್ಲಿ ಗ್ಲಾಸ್, ಸ್ಟೀಲ್, ಪೇಪರ್ ಮತ್ತಿತರ ಪ್ಲಾಸ್ಟಿಕ್ ಅಲ್ಲದ ಲೋಟಗಳಲ್ಲಿ ಸರಬರಾಜು ಮಾಡಲು ಕ್ರಮ ವಹಿಸಬೇಕು. ಜತೆಗೆ ಸಾಮೂಹಿಕ ಕುಡಿಯುವ ನೀರು ವಿತರಣಾ ವ್ಯವಸ್ಥೆಯನ್ನು (Common drinking Water dispensing system) ಮಾಡಬೇಕು ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

ನೀರಿನ ಬಳಕೆ ಬಗ್ಗೆ ಇರುವ ಸೂಚನೆ ಏನು?

ಸರ್ಕಾರಿ ಹಾಗೂ ಸರ್ಕಾರಿ ಸ್ವಾಮ್ಯದ ಮಂಡಳಿ, ನಿಗಮ, ವಿಶ್ವವಿದ್ಯಾನಿಲಯಗಳು ಹಾಗೂ ಸರ್ಕಾರದಿಂದ ಅನುದಾನ ಪಡೆಯುವಂತಹ ಸಂಸ್ಥೆಗಳ ವತಿಯಿಂದ ಏರ್ಪಡಿಸಲ್ಪಡುವ ಸಭೆ- ಸಮಾರಂಭ, ಕಾರ್ಯಾಗಾರ, ಸೆಮಿನಾರ್, ಇತ್ಯಾದಿಗಳಲ್ಲಿ 20 ಲೀಟರ್ ಅಥವಾ ಅದಕ್ಕೂ ಹೆಚ್ಚಿನ ಸಾಮರ್ಥ್ಯದ ಕ್ಯಾನ್‌ಗಳಲ್ಲಿ ಶುದ್ಧೀಕರಿಸಿದ ಕುಡಿಯುವ ನೀರಿನ ವಿತರಣಾ ವ್ಯವಸ್ಥೆಯನ್ನು ಮಾಡಬೇಕು.

ಕಚೇರಿಗಳಲ್ಲಿ ಸಾಮಾನ್ಯವಾಗಿ ಆಗಾಗ ಸಭೆ-ಸಮಾರಂಭಗಳು ಏರ್ಪಡುವ ಸಮಿತಿ ಕೊಠಡಿಗಳು, ಇತ್ಯಾದಿ ಸಭಾಂಗಣಗಳಲ್ಲಿ ಕೇಂದ್ರ ಸರ್ಕಾರದ ಜಾಲತಾಣ ದಲ್ಲಿ ಅನುಮೋದಿಸಲ್ಪಟ್ಟಿರುವ ಅಥವಾ ರಾಜ್ಯ ಸರ್ಕಾರದಿಂದ ಅಂಗೀಕರಿಸಲ್ಪಟ್ಟಿರುವ ಸಂಸ್ಥೆಗಳಿಂದ ಖರೀದಿಸಿದ ಆರ್‌ಒ (RO) ಮತ್ತು ನೀರು ಶುದ್ಧೀಕರಣ ಘಟಕಗಳನ್ನು ಅನುಸ್ಥಾಪಿಸಿ, ಗಾಜಿನ ಲೋಟ ಅಥವಾ ಸ್ಟೀಲ್ ಲೋಟ ಇಲ್ಲವೇ ಪೇಪರ್ ಲೋಟ ಇಲ್ಲವೇ ಇತರೆ ಪ್ಲಾಸ್ಟಿಕ್ ಅಲ್ಲದ ಲೋಟಗಳಲ್ಲಿ ನೀರು ಕುಡಿಯುವುದಕ್ಕೆ ವ್ಯವಸ್ಥೆ ಮಾಡಬೇಕು.

ಇದನ್ನೂ ಓದಿ: Krishna ByreGowda : ಅಕ್ಟೋಬರ್‌ 1ರಿಂದ ಶೇ. 30ರಷ್ಟು ಆಸ್ತಿ ಮಾರ್ಗಸೂಚಿ ದರ ಹೆಚ್ಚಳ!

ಎಲ್ಲ ಸರ್ಕಾರಿ ಹಾಗೂ ಸರ್ಕಾರಿ ಸ್ವಾಮ್ಯದ ಮಂಡಳಿ, ನಿಗಮ, ವಿಶ್ವವಿದ್ಯಾನಿಲಯಗಳು ಹಾಗೂ ಸರ್ಕಾರದಿಂದ ಅನುದಾನ ಪಡೆಯುವಂತಹ ಸಂಸ್ಥೆಗಳ ಕಚೇರಿಗಳಲ್ಲಿ ಸಾರ್ವಜನಿಕರಿಗಾಗಿ ಶುದ್ಧ ಕುಡಿಯುವ ನೀರು ಸರಬರಾಜಿಗಾಗಿ ಕೇಂದ್ರ ಸರ್ಕಾರದ ಜಾಲತಾಣ ದಲ್ಲಿ ಅನುಮೋದಿಸಲ್ಪಟ್ಟಿರುವ ಸಂಸ್ಥೆಗಳಿಂದ ಖರೀದಿಸಿದ ಅಥವಾ ಯಾವುದಾದರೂ ಉತ್ತಮ RO ಶುದ್ಧ ನೀರಿನ ಘಟಕಗಳನ್ನು ವ್ಯವಸ್ಥಾಪನೆಗೊಳಿಸಬೇಕು ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

    ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
    ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
    Continue Reading
    Click to comment

    Leave a Reply

    Your email address will not be published. Required fields are marked *

    ಯಾದಗಿರಿ

    Murder case : ಯಾದಗಿರಿಯಲ್ಲಿ ಹಸುಗೂಸನ್ನು ಬಾವಿಗೆ ಎಸೆದು ಕೊಂದರು ಹಂತಕರು

    Murder case : ತಾಯಿ ಮಡಿಲಿನಲ್ಲಿ ಬೆಚ್ಚಗೆ ಮಲಗಬೇಕಿದ್ದ ಮಗುವೊಂದನ್ನು ಹಂತಕರು ಬಾವಿಗೆ ಎಸೆದು ಕೊಲೆ ಮಾಡಿದ್ದಾರೆ. ಬಾವಿಯೊಳಗೆ ಶವ ಪತ್ತೆಯಾಗಿದ್ದು, ಪೊಲೀಸರು ದೌಡಾಯಿಸಿದ್ದಾರೆ. ಈ ಕೃತ್ಯವೆಸಗಿದವರು ಯಾರು ಎಂಬುದು ತಿಳಿದು ಬಂದಿಲ್ಲ.

    VISTARANEWS.COM


    on

    By

    Murder case
    Koo

    ಯಾದಗಿರಿ: ಬಾವಿಗೆ ಎಸೆದು ಹಸುಗೂಸನ್ನು ಕೊಲೆ (Murder case) ಮಾಡಲಾಗಿದೆ. ಯಾದಗಿರಿ ನಗರದ ಅಂಬೇಡ್ಕರ್ ಬಡಾವಣೆಯಲ್ಲಿ ಅಮಾನವೀಯ ಘಟನೆ ನಡೆದಿದೆ. ಮೀನಾಕ್ಷಿ (2 ತಿಂಗಳು) ಮೃತ ದುರ್ದೈವಿ.

    ನಾಗೇಶ್ ಹಾಗೂ ಚಿಟ್ಟೆಮ್ಮ ದಂಪತಿಯ ಮಗು ಮೀನಾಕ್ಷಿಯನ್ನು ಕೊಲೆ ಯಾರು ಮಾಡಿದ್ದಾರೆ? ಯಾಕೆ‌‌ ಮಾಡಿದ್ದಾರೆ ಎಂಬುದು ಗೊತ್ತಿಲ್ಲ. ಬಡಾವಣೆಯ ಹೊರ ಭಾಗದ ನಿರ್ಜನ ಪ್ರದೇಶದಲ್ಲಿರುವ ಬಾವಿಗೆ ಬಿಸಾಡಿ ಹೋಗಿದ್ದಾರೆ.

    ಹೆಣ್ಣು ಮಗು ಎಂಬ ಕಾರಣಕ್ಕೆ ಕೊಲೆ ನಡೆದಿರುವ ಶಂಕೆ ವ್ಯಕ್ತವಾಗಿದೆ. ಸ್ಥಳದಲ್ಲಿ ಮಗುವಿನ ಪೋಷಕರು ಕಣ್ಣೀರು ಹಾಕುತ್ತಿದ್ದು, ಆಕ್ರಂದನ ಮುಗಿಲು ಮುಟ್ಟಿದೆ. ಸ್ಥಳಕ್ಕೆ ಯಾದಗಿರಿ ನಗರ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

    ಬಾವಿಯಲ್ಲಿದ್ದ ಮೃತದೇಹವನ್ನು ಮೇಲೆ ಎತ್ತಿದ್ದು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ಕಳುಹಿಸಲಾಗಿದೆ. ಯಾದಗಿರಿ ನಗರ ಠಾಣೆಯಲ್ಲಿ ಈ ಸಂಬಂಧ ಕೇಸ್ ದಾಖಲಾಗಿದ್ದು, ಪೊಲೀಸರು ತನಿಖೆಯನ್ನು ಕೈಗೊಂಡಿದ್ದಾರೆ.

    ಇದನ್ನೂ ಓದಿ: Cow Smugglers: ಮಣ್ಣೆತ್ತಿನ ಅಮಾವಾಸ್ಯೆ ದಿನವೇ ಜಾನುವಾರುಗಳ ಪ್ರಾಣಹರಣಕ್ಕೆ ಸ್ಕೆಚ್‌!

    ಮದುವೆಯಾಗಲು ನಿರಾಕರಿಸಿದ ಪ್ರಿಯಕರನ ಆ ʼಅಂಗʼಕ್ಕೆ ಕತ್ತರಿ ಹಾಕಿದ ಪ್ರಿಯತಮೆ

    ಪಾಟ್ನಾ: ಪ್ರೀತಿಸಿ ಯುವತಿಯರನ್ನು ಬಳಸಿಕೊಂಡು ಮೋಸ ಮಾಡುವಂತಹ ಯುವಕರ ಸಂಖ್ಯೆ ಹೆಚ್ಚಾಗುತ್ತಿದೆ. ಯುವಕರ ಮೋಸದ ಪ್ರೀತಿಗೆ ಎಷ್ಟೋ ಯುವತಿಯರ ಜೀವನ ಹಾಳಾಗಿದೆ. ಹಾಗಾಗಿ ಇವರಲ್ಲಿ ಕೆಲವು ಯುವತಿಯರು ಮಾನ ಮರ್ಯಾದೆಗೆ ಅಂಜಿ ಜೀವ ಕಳೆದುಕೊಂಡಿದ್ದಾರೆ, ಆದರೆ ಇಲ್ಲೊಬ್ಬ ಯುವತಿ ಪ್ರೀತಿಸಿ (Viral News) ಮೋಸ ಮಾಡಿದವನಿಗೆ ತಕ್ಕ ಶಿಕ್ಷೆ ವಿಧಿಸಿದ್ದಾಳೆ.

    ಬಿಹಾರದ ಸರನ್ ಜಿಲ್ಲೆಯಲ್ಲಿ ಮಹಿಳಾ ವೈದ್ಯೆಯೊಬ್ಬಳು ಪ್ರೀತಿಸಿ ತನ್ನ ಜೊತೆ ಸಂಬಂಧ ಬೆಳೆಸಿ ಮದುವೆಯಾಗಲು ನಿರಾಕರಿಸಿದ ಗೆಳೆಯನ ಖಾಸಗಿ ಭಾಗವನ್ನು ಕತ್ತರಿಸಿದ ಘಟನೆ ಜುಲೈ 1ರಂದು ನಡೆದಿದೆ. ಸಂತ್ರಸ್ತ ಪ್ರಕಾಶ್ ಅಲಿಯಾಸ್ ವಿಕಾಶ್ ಸಿಂಗ್ ಎಂದು ಗುರುತಿಸಲಾಗಿದ್ದು, ಈತ ಮಧೌರಾ ಬ್ಲಾಕ್‌ನ ವಾರ್ಡ್ ಸಂಖ್ಯೆ 12ರ ಕೌನ್ಸಿಲರ್ ಆಗಿದ್ದ ಎನ್ನಲಾಗಿದೆ. ಕಳೆದ ಐದು ವರ್ಷಗಳಿಂದ ಆತ ಯುವತಿಯೊಂದಿಗೆ ಸಂಬಂಧ ಹೊಂದಿದ್ದನು. ಆದರೆ ಅವನು ಅವಳನ್ನು ಮದುವೆಯಾಗಲು ನಿರಾಕರಿಸುತ್ತಿದ್ದನು. ತಾನು ಸಂಬಂಧ ಬೆಳೆಸಿದ ತಪ್ಪಿಗೆ ಯುವತಿ ಹೇಗೋ ನ್ಯಾಯಾಲಯದಲ್ಲಿ ಮದುವೆಯಾಗಲು ಅವನನ್ನು ಮನವೊಲಿಸಿದಳು. ಆದರೆ ಅಂದು ಆತ ಮದುವೆಯಾಗಲು ನ್ಯಾಯಾಲಯಕ್ಕೆ ಬರದೆ ತಪ್ಪಿಸಿಕೊಂಡ. ಇದರಿಂದ ಕೋಪಗೊಂಡ ಯುವತಿ ಆ ವ್ಯಕ್ತಿಯನ್ನು ತನ್ನ ಮನೆಗೆ ಕರೆಸಿಕೊಂಡು, ಅವನ ಖಾಸಗಿ ಭಾಗವನ್ನು ಕತ್ತರಿಸಿದ್ದಾಳೆ ಎನ್ನಲಾಗಿದೆ.

    ಆತ ಅಳುವುದನ್ನು ಕೇಳಿದ ನೆರೆಹೊರೆಯವರು ಬಂದು ನೋಡಿದಾಗ ಆತ ರಕ್ತದ ಮಡುವಿನಲ್ಲಿ ಹಾಸಿಗೆಯ ಮೇಲೆ ಬಿದ್ದಿರುವುದನ್ನು ಕಂಡು ಸರನ್ ಜಿಲ್ಲೆಯ ಮಧೌರಾ ಠಾಣೆಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಸ್ಥಳಕ್ಕೆ ಬಂದ ಪೊಲೀಸರು ವ್ಯಕ್ತಿಯನ್ನು ಚಿಕಿತ್ಸೆಗಾಗಿ ಪಾಟ್ನಾ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಗೆ (ಪಿಎಂಸಿಎಚ್) ದಾಖಲಿಸಿದ್ದಾರೆ. ಆತನ ಸ್ಥಿತಿ ಚಿಂತಾಜನಕವಾಗಿದೆ ಎನ್ನಲಾಗಿದೆ.

    ಹಾಗೇ ಕೊಲೆ ಯತ್ನದ ಸಂಬಂಧಿತ ವಿಭಾಗಗಳ ಅಡಿಯಲ್ಲಿ ಪೊಲೀಸರು ಯುವತಿಯನ್ನು ಬಂಧಿಸಿ, ತನಿಖೆ ನಡೆಸುತ್ತಿದ್ದಾರೆ. ಯುವತಿ ಹಾಜಿಪುರದ 25 ವರ್ಷದ ಅವಿವಾಹಿತ ವೈದ್ಯೆಯಾಗಿದ್ದು, ಮಧೌರಾದಲ್ಲಿ ವೈದ್ಯಕೀಯ ಶಿಕ್ಷಣ ಅಭ್ಯಾಸ ಮಾಡುತ್ತಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ. ವಿಚಾರಣೆ ವೇಳೆ ತಮ್ಮಿಬ್ಬರ ನಡುವೆ ಸಂಬಂಧವಿದ್ದು, ಆತ ಮದುವೆಯಾಗಲು ನಿರಾಕರಿಸಿದ್ದಕ್ಕೆ ಅವನ ಖಾಸಗಿ ಭಾಗ ಕತ್ತರಿಸಿರುವುದಾಗಿ ಯುವತಿ ಒಪ್ಪಿಕೊಂಡಿದ್ದಾಳೆ ಎಂಬುದಾಗಿ ತಿಳಿದುಬಂದಿದೆ.

    ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

    Continue Reading

    ಬಾಗಲಕೋಟೆ

    Cow Smugglers: ಮಣ್ಣೆತ್ತಿನ ಅಮಾವಾಸ್ಯೆ ದಿನವೇ ಜಾನುವಾರುಗಳ ಪ್ರಾಣಹರಣಕ್ಕೆ ಸ್ಕೆಚ್‌!

    Cow Smugglers: ಮಹಾರಾಷ್ಟ್ರಕ್ಕೆ ಅಕ್ರಮವಾಗಿ ಗೋ ಸಾಗಾಟ ಮಾಡುತ್ತಿದ್ದ ಲಾರಿಯನ್ನು ಬೆನ್ನಟ್ಟಿದ ಹಿಂದೂ ಜಾಗೃತಿ ಕಾರ್ಯಕರ್ತರು ಜಾನುವಾರುಗಳನ್ನು ರಕ್ಷಿಸಿದ್ದಾರೆ. ಆರೋಪಿಗಳನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ.

    VISTARANEWS.COM


    on

    By

    Cow Smugglers
    Koo

    ಬಾಗಲಕೋಟೆ: ಮಣ್ಣೆತ್ತಿನ ಅಮಾವಾಸ್ಯೆ ದಿನವೇ ಜಾನುವಾರಗಳ (Cow Smugglers) ಪ್ರಾಣಹರಣಕ್ಕೆ ಸ್ಕೆಚ್‌ ಹಾಕಿದ್ದ ದುರುಳರು ಜೈಲುಪಾಲಾಗಿದ್ದಾರೆ. ಈ ಮೂಲಕ ಕಸಾಯಿಖಾನೆಗೆ ಸಾಗಿಸುತ್ತಿದ್ದ 13 ಜಾನುವಾರಗಳ ರಕ್ಷಣೆ ಮಾಡಲಾಗಿದೆ. ಬಾಗಲಕೋಟೆ ಜಿಲ್ಲೆಯ ಬೀಳಗಿ ಪಟ್ಟಣದಲ್ಲಿ ತಡರಾತ್ರಿ ಘಟನೆ ನಡೆದಿದೆ.

    ಹಿಂದು ಜಾಗೃತಿ ವೇದಿಕೆ ಕಾರ್ಯಕರ್ತರು ಜಾನುವಾರುಗಳನ್ನು ತುಂಬಿದ್ದ ಲಾರಿಯನ್ನು ಹಿಂಬಾಲಿಸಿ ತಡೆದಿದ್ದಾರೆ. 13 ಎತ್ತುಗಳನ್ನು ಲಾರಿಯಲ್ಲಿ ಸಾಗಿಸುತ್ತಿದ್ದ ಐವರು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಇನ್ನೂ ರಕ್ಷಣೆ ಮಾಡಿದ ಜಾನುವಾರುಗಳನ್ನು ನವನಗರದ ಗೋ ಶಾಲೆಗೆ ಒಪ್ಪಿಸಿದ್ದಾರೆ.

    ಬೀಳಗಿಯಿಂದ ಮಹಾರಾಷ್ಟ್ರಕ್ಕೆ ಲಾರಿ ಮೂಲಕ ಎತ್ತುಗಳ ಸಾಗಿಸುತ್ತಿದ್ದರು ಎನ್ನಲಾಗಿದೆ. ಗೋ ಹತ್ಯೆ ನಿಷೇಧ ಕಾಯ್ದೆ ಜಾರಿ ಇದ್ದರೂ, ನಿರಂತರವಾಗಿ ಗೋವುಗಳ ಸಾಗಾಟ ನಡೆಯುತ್ತಿದೆ.‌ ವಶಕ್ಕೆ ಪಡೆದ ಐವರು ಆರೋಪಿಗಳ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿದ್ದಾರೆ.

    Cow Smugglers

    ಇದನ್ನೂ ಓದಿ: Karnataka Rain : ಭಾರಿ ಗಾಳಿ- ಮಳೆಗೆ ಹಾರಿದ ಅಂಗಡಿಯ ತಗಡು; ಮಾಗುಂಡಿ-ಬಾಳೆಹೊನ್ನೂರು ಮಾರ್ಗ ಬಂದ್

    ಆಮ್ಲೇಟ್‌ನಲ್ಲಿ ಕಲ್ಲು ಸಿಕ್ಕಿದ್ದನ್ನು ಪ್ರಶ್ನಿಸಿದ್ದಕ್ಕೆ ಗ್ರಾಹಕನ ತಲೆಬುರುಡೆ ತೂತು ಮಾಡಿದ ಸಪ್ಲೇಯರ್‌

    ಆನೇಕಲ್: ಆಮ್ಲೇಟ್‌ನಲ್ಲಿ ಕಲ್ಲು ಸಿಕ್ಕಿದ್ದನ್ನು ಗ್ರಾಹಕನೊಬ್ಬ ಪ್ರಶ್ನಿಸಿದ್ದಕ್ಕೆ ಬಾರ್‌ ಕ್ಯಾಶಿಯರ್‌ ಹಾಗೂ ಸಪ್ಲೇಯರ್‌ ಸೇರಿ ಹಲ್ಲೆ (Assault Case) ನಡೆಸಿದ್ದಾರೆ. ಬೆಂಗಳೂರು ಗ್ರಾಮಾಂತರದ ಜಿಗಣಿ ಪೊಲೀಸ್ ಠಾಣಾ ವ್ಯಾಪ್ತಿಯ ಪ್ರೀತಿಧಾಮ ಬಾರ್‌ನಲ್ಲಿ ಘಟನೆ ನಡೆದಿದೆ.

    ಕೊಪ್ಪಗೇಟ್ ನಿವಾಸಿ ಬಾಬು(30) ಹಲ್ಲೆಗೊಳಗಾದವರು. ಬಾರ್ ಕ್ಯಾಶಿಯರ್ ಸಮಂತ್ ಗೌಡ, ಸಪ್ಲೇಯರ್ ಜೀವನ್ ಗೌಡ ಎಂಬುವವರು ಹಲ್ಲೆ ನಡೆಸಿದ್ದಾರೆ ಎಂಬ ಆರೋಪವಿದೆ.

    ನಿನ್ನೆ ಶುಕ್ರವಾರ ಸಂಜೆ 8ಗಂಟೆ ಸುಮಾರಿಗೆ ಬಾಬು ಬಾರ್‌ಗೆ ಹೋಗಿದ್ದರು. ಈ ವೇಳೆ ಮದ್ಯದ ಜತೆಗೆ ನೀಡಿದ್ದ ಆಮ್ಲೇಟ್‌ನಲ್ಲಿ ಕಲ್ಲು ಸಿಕ್ಕಿದೆ. ಇದರಿಂದ ಸಿಟ್ಟಾದ ಬಾಬು ಆಮ್ಲೇಟ್‌ನಲ್ಲಿ ಕಲ್ಲು ಸಿಕ್ಕಿದ್ದನ್ನು ಸಪ್ಲೇಯರ್‌ ಬಳಿ ಪ್ರಶ್ನಿಸಿದ್ದಾನೆ. ಇದರಿಂದ ಸಿಟ್ಟಾದ ಸಪ್ಲೇಯರ್‌ ಜೀವನ್‌ ಗೌಡ ಏಕಾಏಕಿ ಹಲ್ಲೆ ನಡೆಸಿದ್ದಾನೆ.

    ಅಲ್ಲೇ ಇದ್ದ ಬಿಯರ್‌ ಬಾಟಲಿಯಿಂದ ತಲೆಗೆ ಹೊಡೆದಿದ್ದು, ಬಾಬು ತಲೆ ತೂತಾಗಿದೆ. ಇತ್ತ ಜೀವನ್‌ಗೆ ಬಾರ್‌ ಕ್ಯಾಶಿಯರ್‌ ಸಮಂತ್‌ ಗೌಡ ಸಾಥ್‌ ನೀಡಿದ್ದು, ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ. ಗಂಭೀರವಾಗಿ ಗಾಯಗೊಂಡಿದ್ದ ಬಾಬು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.

    ಇತ್ತೀಚೆಗೆ ಆನೇಕಲ್ ತಾಲೂಕಿನಲ್ಲಿ ಹಲ್ಲೆ, ಕೊಲೆ ಮತ್ತು ಕೊಲೆ ಯತ್ನ ಪ್ರಕರಣಗಳು ಹೆಚ್ಚಾಗುತ್ತಿವೆ. ಏಯ್ ಹೋಗೋ ಅಂದಿದ್ದಕ್ಕೆ ವಿಶೇಷ ಚೇತನನ ಮೇಲೆ ಜಿಗಣಿ ಪೊಲೀಸ್ ಠಾಣಾ ವ್ಯಾಪ್ತಿಯ ವಾಬಸಂದ್ರದಲ್ಲಿ ಡೆಡ್ಲಿ ಅಟ್ಯಾಕ್ ನಡೆದಿತ್ತು. ಇದೀಗ ಆಮ್ಲೇಟ್‌‌ನಲ್ಲಿ ಕಲ್ಲು ಸಿಕ್ಕಿದ್ದನ್ನು ಪ್ರಶ್ನಿಸಿದ್ದಕ್ಕೆ ಬಿಯರ್ ಬಾಟಲಿಯಿಂದ ಹಲ್ಲೆ ನಡೆಸಲಾಗಿದೆ.

    ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

    Continue Reading

    ಕರ್ನಾಟಕ

    MyMUL President: ಸಚಿವ ಕೆ.ವೆಂಕಟೇಶ್ ಕಿರುಕುಳದಿಂದಲೇ ಮೈಮುಲ್‌ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ: ಪಿ.ಎಂ.ಪ್ರಸನ್ನ

    MyMUL President: ಮೈಸೂರು ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟ (ಮೈಮುಲ್) ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ ಹಿನ್ನೆಲೆಯಲ್ಲಿ ಪಿ.ಎಂ.ಪ್ರಸನ್ನ ಅವರು ಸುದ್ದಿಗೋಷ್ಠಿ ನಡೆಸಿ ಸ್ಪಷ್ಟನೆ ನೀಡಿದ್ದಾರೆ.

    VISTARANEWS.COM


    on

    MyMUL President
    Koo

    ಮೈಸೂರು: ಮೈಸೂರು ಜಿಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳ ಒಕ್ಕೂಟದ (ಮೈಮುಲ್-Mysuru Milk Union Ltd) ಅಧ್ಯಕ್ಷ ಸ್ಥಾನಕ್ಕೆ ದಿಢೀರನೆ ರಾಜೀನಾಮೆ ನೀಡಿರುವ ಕುರಿತು ಪಿ.ಎಂ.ಪ್ರಸನ್ನ ಅವರು ಸ್ಪಷ್ಟನೆ ನೀಡಿದ್ದಾರೆ. ಪಶು ಸಂಗೋಪನೆ ಸಚಿವ ಕೆ.ವೆಂಕಟೇಶ್ ಕಿರುಕುಳದಿಂದಲೇ ರಾಜೀನಾಮೆ ನೀಡಿದ್ದೇನೆ ಎಂದು ಅರೋಪಿಸಿರುವ ಅವರು, ಸಚಿವರು ರಾಜಕೀಯ ಕಾರಣಕ್ಕೆ ನನಗೆ ಬಹಳ ಕಿರುಕುಳ ಕೊಡುತ್ತಿದ್ದಾರೆ. ಹೀಗಾಗಿ ಮೈಮುಲ್‌ ಅಧ್ಯಕ್ಷ (MyMUL President) ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ ಎಂದು ಪಿ.ಎಂ.ಪ್ರಸನ್ನ ತಿಳಿಸಿದ್ದಾರೆ.

    ನಗರದಲ್ಲಿ ಶನಿವಾರ ಸುದ್ದಿಗೋಷ್ಠಿ ನಡೆಸಿರುವ ಅವರು, ವಾಸಸ್ಥಳ ದೃಢೀಕರಣ ಪತ್ರದ ವಿಚಾರದಲ್ಲಿ ಪದೇ ಪದೇ ನೋಟಿಸ್ ಕೊಟ್ಟು ಕಿರುಕುಳ ನೀಡಲಾಗಿದೆ. ನಾನು ರಾಜೀನಾಮೆ ಕೊಡದೆ ಇದ್ದರೆ ಎಲ್ಲಾ ಪದಾಧಿಕಾರಿಗಳ ವಜಾಕ್ಕೆ ವಾಮಮಾರ್ಗದ ಮೂಲಕ ಯತ್ನಿಸಲು ಮುಂದಾಗಿದ್ದಾರೆ. ಈ ಕಾರಣಕ್ಕೆ ರಾಜೀನಾಮೆ ಕೊಟ್ಟಿದ್ದೇನೆ ಎಂದು ಹೇಳಿದ್ದಾರೆ.

    ರಾಜೀನಾಮೆ ಕೊಟ್ಟ ನಂತರವೂ ತನಿಖೆಗೆ ನೋಟಿಸ್ ಕೊಟ್ಟಿದ್ದಾರೆ. ಪಿರಿಯಾಪಟ್ಟಣದಲ್ಲಿ ಸಿಎಂ ಆಪ್ತ ಸಚಿವ ಕೆ.ವೆಂಕಟೇಶ್ ದ್ವೇಷ ರಾಜಕಾರಣ ಮಾಡುತ್ತಿದ್ದಾರೆ. ಮುಂದಿನ ದಿನಗಳಲ್ಲಿ ನಾನು ಅವರಿಗೆ ಪ್ರತಿಸ್ಪರ್ಧಿಯಾಗುತ್ತೇನೆ ಎಂದು ಈ ರೀತಿ ಮಾಡುತ್ತಿದ್ದಾರೆ. ನಾನು ಇರುವವರೆಗೂ ಅವರ ವಿರುದ್ಧವೇ ಹೋರಾಟ ಮಾಡುತ್ತೇನೆ. ನಾನು ರಾಜಕೀಯವಾಗಿ ಅವರ ಮಗನಿಗೆ ಎದುರಾಳಿಯಾಗುತ್ತೇನೆ ಎಂದು ಈ ರೀತಿ ನನ್ನ ಮತ್ತು ನನ್ನ ಕುಟುಂಬದ ಜೊತೆ ದ್ವೇಷ ಸಾಧಿಸುತ್ತಿದ್ದಾರೆ. ನಾನು ಇದಕ್ಕೆ ಹೆದರಲ್ಲ, ನನ್ನ ನಂಬಿ, ನನ್ನನ್ನು ಈ ಸ್ಥಾನಕ್ಕೆ ಕೂರಿಸಿರುವ ಒಕ್ಕೂಟದ ಸದಸ್ಯರಿಗೆ ಯಾವುದೇ ತೊಂದರೆ ಆಗಬಾರದು ಅಂತ ನಾನು ರಾಜೀನಾಮೆ ಸಲ್ಲಿಸಿದ್ದೇನೆ ಎಂದು ತಿಳಿಸಿದ್ದಾರೆ.

    ಇದನ್ನೂ ಓದಿ | Closure of Madrasas: ಮದರಸಾಗಳನ್ನು ಮುಚ್ಚಲು ನಿರ್ಣಯ ಮಂಡನೆ; ಕಾಂಗ್ರೆಸ್‌ ಕಿಡಿ

    ಸಹಕಾರಿ ಕ್ಷೇತ್ರದಲ್ಲಿ ನಮಗೆ ಜಿ.ಟಿ. ದೇವೇಗೌಡರೇ ಗುರುಗಳು. ಅವರ ಗಮನಕ್ಕೆ ತಂದು ರಾಜೀನಾಮೆ ಕೊಟ್ಟಿದ್ದೇನೆ. ಅವರು ಬೇಡ ಇರು ಅಂತ ಹೇಳಿದರು, ಆದೂ ನಾನು ರಾಜೀನಾಮೆ ಕೊಟ್ಟಿದ್ದೇನೆ ಎಂದು ಹೇಳಿದ್ದಾರೆ.

    ದಲಿತ ಸಮುದಾಯಕ್ಕೆ ಮೋಸ ಮಾಡುತ್ತಿರುವ ರಾಜ್ಯ ಸರಕಾರ: ಬೊಮ್ಮಾಯಿ

    Petrol Diesel Price Hike

    ಹಾವೇರಿ: ರಾಜ್ಯ ಸರಕಾರ ದಿವಾಳಿ ಆಗಿರುವುದು ಪ್ರತಿಯೊಂದು ಹೆಜ್ಜೆಯಲ್ಲಿ ಪ್ರದರ್ಶನ ಮಾಡುತ್ತಿದೆ. ಇದೀಗ ದಲಿತ ಸಮುದಾಯಕ್ಕೆ ಮೀಸಲಿಡಬೇಕಾದ ಹಣವನ್ನು ಗ್ಯಾರಂಟಿ ಯೋಜನೆಗಳಿಗೆ (Guarantee Schemes) ವೆಚ್ಚ ಮಾಡಿದ್ದು, ಆ ಮೂಲಕ ಎಸ್‌ಸಿ/ಎಸ್‌ಟಿ (SC/ST) ಜನಾಂಗಕ್ಕೆ ಮೋಸ ಮಾಡಿದೆ ಎಂದು ಸಂಸದ, ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ಹರಿಹಾಯ್ದಿದ್ದಾರೆ.

    ಶಿಗ್ಗಾಂವಿಯಲ್ಲಿ ಸಂಸದ ಬಸವರಾಜ್ ಬೊಮ್ಮಾಯಿ ಸುದ್ದಿಗೋಷ್ಠಿ ನಡೆಸಿ ಈ ಬಗೆಗೆ ಹೇಳಿಕೆ ನೀಡಿದರು. ಎಸ್ಸಿ ಎಸ್ಟಿಯವರ ಹಣ 14 ಸಾವಿರ ಕೋಟಿಯನ್ನು ಗ್ಯಾರಂಟಿ ಯೋಜನೆಗಳಿಗೆ ವರ್ಗಾವಣೆ ಮಾಡಿದ್ದಾರೆ. ಎಸ್ಸಿ ಎಸ್ಟಿ ಜನಾಂಗಕ್ಕೆ ಸರಕಾರ ಮೋಸ ಮಾಡುತ್ತಿದೆ. ಈ ಹಣ ದಲಿತ ಜನಾಂಗದ ಅಭಿವೃದ್ಧಿಗೆ ಬಳಕೆ ಆಗಬೇಕಿತ್ತು. ಆ ಎಲ್ಲಾ ಹಣ ಗ್ಯಾರಂಟಿಗೆ ಹೋಗುತ್ತಿದೆ ಎಂದು ಬೊಮ್ಮಾಯಿ ಟೀಕಿಸಿದರು.

    ಹಿಂದುಳಿದ ವರ್ಗಗಳ ಚಾಂಪಿಯನ್ ಅಂತ ಹೇಳುತ್ತಾರೆ. ಹಿಂದುಳಿದ ವರ್ಗಗಳಿಗೆ ಕಡಿಮೆ ಹಣ ಇಟ್ಟಿದ್ದಾರೆ. ಎಸ್ಸಿ ಎಸ್ಟಿ ಹಣ ಬಳಕೆಯಲ್ಲಿ ಕಾನೂನು ಉಲ್ಲಂಘನೆ ಆಗಿದೆ. ರಾಜಕಾರಣಕ್ಕಾಗಿ, ವೋಟಿಗಾಗಿ ಎಸ್ಸಿ ಎಸ್ಟಿ ಹಣ ದುರ್ಬಳಕೆ ಆಗುತ್ತಿದೆ. ಖಜಾನೆ ಸುಭದ್ರವಾಗಿದೆ ಅಂತಾರೆ, ಹಾಗಾದ್ರೆ ಎಸ್ಸಿ ಎಸ್ಟಿಯವರ ಜೇಬಿಗೆ ಯಾಕೆ ಕೈ ಹಾಕಿದ್ದೀರಿ? ಎಂದು ಬೊಮ್ಮಾಯಿ ಪ್ರಶ್ನಿಸಿದರು.

    ಡೆಂಗ್ಯು ಜ್ವರ ಪ್ರಕರಣದಲ್ಲಿ ಜಿಲ್ಲಾಡಳಿತ ಮುಂಜಾಗ್ರತಾ ಕ್ರಮ ಕೈಗೊಳ್ತಿಲ್ಲ. ಮಂತ್ರಿಗಳು ಕೇವಲ ಸಭೆ ಮಾಡುತ್ತಿದ್ದಾರೆ. ಚಿಕಿತ್ಸೆ ಸಿಗದಿದ್ದರೆ ಸಾವು ನೋವುಗಳಾಗುತ್ತದೆ, ಜನ ಪರದಾಡುತ್ತಿದ್ದಾರೆ. ಆರೋಗ್ಯ ಇಲಾಖೆ ಸಂಪೂರ್ಣ ವಿಫಲವಾಗಿದೆ, ಡಿಹೆಚ್‌ಓ ವರ್ಗಾವಣೆ ಮಾಡಬೇಕು ಎಂದು ಅವರು ಒತ್ತಾಯಿಸಿದ್ದಾರೆ.

    ಇದನ್ನೂ ಓದಿ | Dengue Fever: ಡೆಂಗ್ಯುಗೆ ಕೋವಿಡ್‌ ಮಾದರಿ ಉಚಿತ ಚಿಕಿತ್ಸೆ ಕೊಡಿ, ಮೆಡಿಕಲ್‌ ಎಮರ್ಜೆನ್ಸಿ ಘೋಷಿಸಿ: ಡಾ. ಮಂಜುನಾಥ್

    ಅಶೋಕ‌ ಅವರ ನೇತೃತ್ವದಲ್ಲಿ ಶಿಗ್ಗಾಂವಿ ಉಪಚುನಾವಣೆ ವಿಚಾರ ಸಮಿತಿ ಮಾಡಿದ್ದೇವೆ. ಧನ್ಯವಾದ ಯಾತ್ರೆ ಶಿಗ್ಗಾಂವಿಯಲ್ಲಿ ಮಾಡುತ್ತೇನೆ. ಜುಲೈ 12ರಿಂದ ಯಾತ್ರೆ ಆರಂಭ ಮಾಡುತ್ತೇನೆ. ಒಂದುವರೆ ತಿಂಗಳುಗಳ‌ ಕಾಲ ಕ್ಷೇತ್ರದಲ್ಲಿ ಯಾತ್ರೆ ನಡೆಯಲಿದೆ. ಶಿಗ್ಗಾಂವಿಯಲ್ಲಿ ಪೋಸ್ಟರ್ ಭರಾಟೆ ನಡೆಯುವುದಿಲ್ಲ ಎಂದರು.

    Continue Reading

    ಮಳೆ

    Karnataka Rain : ಭಾರಿ ಗಾಳಿ- ಮಳೆಗೆ ಹಾರಿದ ಅಂಗಡಿಯ ತಗಡು; ಮಾಗುಂಡಿ-ಬಾಳೆಹೊನ್ನೂರು ಮಾರ್ಗ ಬಂದ್

    Karnataka Rain : ಬಿರುಗಾಳಿ ಸಹಿತ ಭಾರಿ ಮಳೆಗೆ ಆಕಾಶದೆತ್ತರಕ್ಕೆ ಅಂಗಡಿಯ ತಗಡು ಹಾರಿ ಹೋಗಿದೆ. ಮತ್ತೊಂದು ಕಡೆ ರಸ್ತೆಗೆ ಮರವೊಂದು ಉರುಳಿದ ಪರಿಣಾಮ ಮಾಗುಂಡಿ-ಬಾಳೆಹೊನ್ನೂರು ಮಾರ್ಗ ಬಂದ್‌ ಆಗಿದೆ.

    VISTARANEWS.COM


    on

    By

    karnataka Rain
    Koo

    ಚಿಕ್ಕಮಗಳೂರು/ಮಂಗಳೂರು: ಚಿಕ್ಕಮಗಳೂರಿನಲ್ಲಿ ಗಾಳಿ-ಮಳೆ ಅಬ್ಬರಕ್ಕೆ (Karnataka Rain) ಬೃಹತ್‌ ಮರವೊಂದು ರಸ್ತೆಗುರುಳಿದೆ. ಪರಿಣಾಮ ಮಾಗುಂಡಿ-ಬಾಳೆಹೊನ್ನೂರು ಮಾರ್ಗ ಬಂದ್ ಆಗಿದೆ. ಎನ್ಆರ್‌ ಪುರ ತಾಲೂಕಿನಿಂದ ಕಳಸ ತಾಲೂಕಿಗೆ ಈ ಮಾರ್ಗ ಸಂಪರ್ಕ ಕಲ್ಪಿಸಲಿದೆ. ಮರ ಬಿದ್ದ ಪರಿಣಾಮ ಶನಿವಾರ ಬೆಳ್ಳಂಬೆಳಗ್ಗೆಯೇ ಬಾಳೆಹೊನ್ನೂರು-ಕಳಸ ರಸ್ತೆ, ಹೊರನಾಡಿಗೆ ಹೋಗಿ-ಬರುವ ಮಾರ್ಗವೂ ಬಂದ್ ಆಗಿತ್ತು. ಸುಮಾರು ಒಂದು ಗಂಟೆ ಕಾಲ ಟ್ರಾಫಿಕ್ ಜಾಮ್‌ ಉಂಟಾಗಿದ್ದರಿಂದ ಸ್ಥಳೀಯರೇ ಮರ ತೆರವು ಮಾಡಿದರು.

    ಚಾರ್ಮಾಡಿಯಲ್ಲಿ ಮತ್ತೆ ಆತಂಕ ಮೂಡಿಸಿದ ರಸ್ತೆ ಬಿರುಕು

    ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಚಾರ್ಮಾಡಿ ಹೆದ್ದಾರಿಯಲ್ಲಿ ಮತ್ತೆ ರಸ್ತೆ ಬಿರುಕು ಬಿಡುವ ಆತಂಕ ಹೆಚ್ಚಿದೆ. ರಸ್ತೆ ಬಿರುಕು ಕಾಣಿಸಿಕೊಳ್ಳದಂತೆ ಮರೆಮಾಚಲು ಅಧಿಕಾರಿಗಳ ಯತ್ನಿಸುತ್ತಿದ್ದಾರೆ. ಹೆದ್ದಾರಿಯ ಹಲವು ತಿರುವುಗಳಲ್ಲಿ ಬಿರುಕು ಕಾಣಿಸಿಕೊಂಡಿದ್ದು, ಕಾಂಕ್ರೀಟ್ ಮೂಲಕ ತೇಪೆ ಹಚ್ಚುತ್ತಿದ್ದಾರೆ. ಕೆಲವೇ ದಿನಗಳ ಹಿಂದೆ ನಡೆದಿರುವ ಕೋಟಿ ವೆಚ್ಚದ ಕಾಮಗಾರಿಯು, ಮಳೆಯಿಂದ ಹಾನಿಯಾಗಿದೆ.

    ಉಕ್ಕಿ ಹರಿದ ತುಂಗಾಭದ್ರಾ ನದಿ; ಅಂಗಡಿಗಳು ಮುಳುಗಡೆ

    ಮಲೆನಾಡಿನಲ್ಲಿ ಸುರಿಯುತ್ತಿರುವ ಭಾರಿ ಮಳೆಯಿಂದಾಗಿ ತುಂಗಾಭದ್ರಾ ನದಿ ಪಾತ್ರದಲ್ಲಿ ನೀರಿನ ಮಟ್ಟ ಹೆಚ್ಚಿದೆ. ದಾವಣಗೆರೆ ಜಿಲ್ಲೆಯ ಉಕ್ಕಡಗಾತ್ರಿ ಸಮೀಪ ತುಂಗಾಭದ್ರಾ ನದಿ ಉಕ್ಕಿ ಹರಿದಿದೆ. ಉಕ್ಕಡಗಾತ್ರಿ ಸಮೀಪದ ಸ್ನಾನಘಟ್ಟದವರೆಗು ನೀರು ನುಗ್ಗಿದ್ದು, ಹತ್ತಾರು ಪೂಜಾಸಾಮಾಗ್ರಿ ಅಂಗಡಿಗಳು ಮುಳುಗಡೆಯಾಗಿವೆ. ಉಕ್ಕಡಗಾತ್ರಿ ಆಗಮಿಸುವ ಭಕ್ತರಿಗೆ ದೇವಸ್ಥಾನದ ಟ್ರಸ್ಟ್‌ನಿಂದ ತುಂಗಾಭದ್ರಾ ನದಿ ಪಾತ್ರಕ್ಕೆ ಸ್ನಾನ ಸೇರಿದಂತೆ ಇತರೇ ಕಾರಣಗಳಿಗೆ ನೀರಿಗೆ ಇಳಿಯದಂತೆ ಸೂಚನೆ ನೀಡಿದೆ.

    ಮಳೆಯಿಂದಾಗಿ ಸೋರುತ್ತಿರುವ ಸರ್ಕಾರಿ ಆಸ್ಪತ್ರೆ

    ವಿಜಯನಗರ ಜಿಲ್ಲೆಯಲ್ಲಿ ರಾತ್ರಿಯಿಡಿ ಜಿಟಿ ಜಿಟಿ ಮಳೆಯಿಂದಾಗಿ ಸರ್ಕಾರಿ ಆಸ್ಪತ್ರೆ ರೋಗಿಗಳು ರಾತ್ರಿಯಿಡಿ ಜಾಗರಣೆ ಮಾಡಬೇಕಾಯಿತು. ಮಳೆಯಿಂದಾಗಿ ಕೊಟ್ಟೂರು ತಾಲೂಕಿನ ಸರ್ಕಾರಿ ಆಸ್ಪತ್ರೆ ಸೋರುತ್ತಿದೆ. ಜನ ಸ್ಪಂದನ ಕಾರ್ಯಕ್ರಮ ಮಾಡಿದ್ದ ಡಿಸಿ ದಿವಾಕರ್ ಆಸ್ಪತ್ರೆಗೆ ಭೇಟಿ ನೀಡಬಹುದು ಎಂದು ಸಿಬ್ಬಂದಿ ಸ್ವಚ್ಚತೆ ಮಾಡಿದ್ದರು. ಆದರೆ ರಾತ್ರಿಯಿಡಿ ಜಿಟಿಜಿಟಿ ಮಳೆಯಿಂದ ರೋಗಿಗಳು ಮಲಗುವ ಬೆಡ್ ಮೇಲೆ ನೀರು ಸೋರಿದೆ. ಇದರ ಮಧ್ಯೆ ರಾತ್ರಿಯಿಡೀ ಆಸ್ಪತ್ರೆಯಲ್ಲಿ ವಿದ್ಯುತ್ ಸಂಪರ್ಕ ಕಡಿತಗೊಂಡು ಪರದಾಡಬೇಕಾಯಿತು. ಆಸ್ಪತ್ರೆಯ ಶೌಚಾಲಯ ಕೂಡಾ ಬ್ಲಾಕ್ ಆಗಿದೆ ಎಂದು ಆಸ್ಪತ್ರೆ ಅವ್ಯವಸ್ಥೆ ಸರಿಪಡಿಸದ ಇಲಾಖೆಯ ವಿರುದ್ಧ ರೋಗಿಗಳು ಹಿಡಿಶಾಪ ಹಾಕಿದರು.

    ಮೂರು ಸಂಪರ್ಕ ಸೇತುವೆಗಳು ಮುಳುಗಡೆ

    ಮಹಾರಾಷ್ಟ್ರ ಮತ್ತು ಪಶ್ಚಿಮ ಘಟ್ಟ ಪ್ರದೇಶದಲ್ಲಿ ಮಳೆ ಮುಂದುವರಿದಿದ್ದು, ಚಿಕ್ಕೋಡಿ ಉಪವಿಭಾಗ ವ್ಯಾಪ್ತಿಯ ಮೂರು ಸಂಪರ್ಕ ಸೇತುವೆಗಳು ಮುಳುಗಡೆಯಾಗಿವೆ. ಕೃಷ್ಣಾ ವೇದಗಂಗಾ ಹಾಗೂ ದೂದಗಂಗಾ ನದಿ ಮೈದುಂಬಿ ಹರಿಯುತ್ತಿದ್ದು, ನಿಪ್ಪಾಣಿ ತಾಲೂಕಿನ ಕುನ್ನೂರ-ಬಾರವಾಡ ಸಂಪರ್ಕಿಸುವ ಸೇತುವೆ ಜಲಾವೃತಗೊಂಡಿದೆ. ವೇದಗಂಗಾ ನದಿಗೆ ಅಡ್ಡಲಾಗಿ ಇರುವ ಕೆಳ ಹಂತದ ಸೇತುವೆ ಮುಳುಗಡೆಯಾಗಿದೆ. ದೂದಗಂಗಾ ನದಿಯಿಂದ ಕಾರದಗಾ-ಬೋಜ್, ಕುನ್ನೂರ-ಭೋಜವಾಡಿ ಸಂಪರ್ಕಿಸುವ ಸೇತುವೆ ಜಲಾವೃತವಾಗಿದೆ. ನದಿಗೆ ಇಳಿಯದಂತೆ ಬೆಳಗಾವಿ ಜಿಲ್ಲಾಡಳಿತ ಮನವಿ ಮಾಡಿದೆ.

    ಭಾರೀ ಮಳೆಗೆ ಕುಸಿದ ಸೇತುವೆ ಬದಿ ಮಣ್ಣು

    ಉತ್ತರ ಕನ್ನಡ ಜಿಲ್ಲೆಯ ಕಾರವಾರ ತಾಲೂಕಿನ ಕಡವಾಡದ ಬೇಳೂರು ಗ್ರಾಮದ ಸಂಪರ್ಕ ಸೇತುವೆ ಬದಿಯ ಮಣ್ಣು ಕುಸಿದಿದೆ. ಇನ್ನೂ ಉದ್ಘಾಟನೆಯಾಗಬೇಕಿದ್ದ ನೂತನ ಸೇತುವೆ ಧಾರಾಕಾರ ಮಳೆಗೆ ಸೇತುವೆಯ ಎರಡೂ ಭಾಗದ ಮಣ್ಣು, ಕಾಂಕ್ರೀಟ್ ಕುಸಿದಿದೆ. ಸುಮಾರು 40 ಲಕ್ಷ ವೆಚ್ಚದಲ್ಲಿ ಲೋಕೋಪಯೋಗಿ ಇಲಾಖೆಯಿಂದ ಕಿರುಸೇತುವೆ ನಿರ್ಮಾಣವಾಗಿತ್ತು. ಆದರೆ ಕರಾವಳಿಯಲ್ಲಿ ಸುರಿಯುತ್ತಿರುವ ಮಳೆಗೆ ಸೇತುವ ಪಕ್ಷದ ಗುಡ್ಡದಲ್ಲಿ ಹೆಚ್ಚು ನೀರು ಹರಿದು ಗುಡ್ಡ ಕುಸಿದಿದ್ದು, ಗುಡ್ಡದ ಮಣ್ಣು ಸೇತುವೆ ಭಾಗಕ್ಕೆ ಬಿದ್ದಿದೆ. ಪರಿಣಾಮ ಸೇತುವೆಯ ಎರಡೂ ಭಾಗದ ಸಂಪರ್ಕಕ್ಕೆ ಹಾಕಿದ್ದ ಮಣ್ಣು ಹಾಗೂ ಕಾಂಕ್ರೀಟ್ ಕಿತ್ತುಹೋಗಿದೆ. ಇದರಿಂದಾಗಿ ವಾಹನ ಸಂಚಾರಕ್ಕೆ ಅವ್ಯವಸ್ಥೆ ಉಂಟಾಗಿದ್ದು ಗ್ರಾಮಸ್ಥರು ಆತಂಕಗೊಳ್ಳುವಂತಾಗಿದೆ.

    ಮಳೆ ನಿಂತರೂ ಮತ್ತೆ ಭೂ ಕುಸಿತದ ಆತಂಕ!

    ಮಳೆ ನಿಂತರೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮತ್ತೆ ಭೂ ಕುಸಿತದ ಆತಂಕ ಕಡಿಮೆ ಆಗಿಲ್ಲ. ಮಂಗಳೂರು-ಸೋಲಾಪುರ ರಾಷ್ಟ್ರೀಯ ಹೆದ್ದಾರಿ 169ರ ಸಮೀಪದಲ್ಲೇ ಭಾರೀ ಗುಡ್ಡ ಕುಸಿತ ಉಂಟಾಗಿದೆ. ಮಂಗಳೂರಿನ ವಾಮಂಜೂರು ಕೆತ್ತಿಕಲ್ ಬಳಿ ಭೂ ಕುಸಿತದ ಭೀತಿ ಎದುರಾಗಿದೆ. ಚತುಷ್ಪಥ‌ ಹೆದ್ದಾರಿ ಕಾಮಗಾರಿಗಾಗಿ ಗುಡ್ಡ ಕೊರೆದ ಪರಿಣಾಮ ಹೆದ್ದಾರಿಗೆ ತಾಗಿಕೊಂಡೇ ಇರೋ ಗುಡ್ಡದಲ್ಲಿ ಆಗಾಗ್ಗೆ ಮಣ್ಣು ಕುಸಿಯುತ್ತಿದೆ. ಗುಡ್ಡದ ತುದಿ ಭಾಗದಲ್ಲಿ ಭಾರೀ ಗಾತ್ರದ ಬಂಡೆಗಳು ಉರುಳಿ ಬೀಳುವ ಆತಂಕ ಇದೆ. ಇತ್ತ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಅಜಿಲಮೊಗರು ಸಮೀಪ ಗಾಳಿ ಸಹಿತ ಮಳೆಯಾಗಿದೆ. ಏಕಾಎಕಿ ಬಂದ ಗಾಳಿಗೆ ಅಂಗಡಿಯ ಶಿಟ್‌ಗಳು ಹಾರಿ ಹೋಗಿದ್ದವು.

    ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

    Continue Reading
    Advertisement
    Union Budget 2024
    ದೇಶ1 min ago

    Union Budget 2024: ಜುಲೈ 23ರಂದು ಕೇಂದ್ರ ಬಜೆಟ್‌ ಮಂಡನೆ; ಸಾಮಾನ್ಯ ಜನರಿಗೆ ಏನಿದೆ ನಿರೀಕ್ಷೆ?

    Rahul Gandhi
    ದೇಶ8 mins ago

    Rahul Gandhi: “ಮೋದಿ ಅಯೋಧ್ಯೆಯಲ್ಲಿ ಸ್ಪರ್ಧಿಸಿದ್ದರೆ…” ಪ್ರಧಾನಿಯನ್ನು ಮತ್ತೆ ಕೆಣಕಿದ ರಾಹುಲ್‌

    Murder case
    ಯಾದಗಿರಿ11 mins ago

    Murder case : ಯಾದಗಿರಿಯಲ್ಲಿ ಹಸುಗೂಸನ್ನು ಬಾವಿಗೆ ಎಸೆದು ಕೊಂದರು ಹಂತಕರು

    Pet Dog
    ದೇಶ18 mins ago

    Pet Dog: ಮುದ್ದಿನ ನಾಯಿಗೆ 2.5 ಲಕ್ಷ ರೂ. ಚಿನ್ನದ ಸರ ಹಾಕಿದ ಮಹಿಳೆ; ನಿಮ್ಮದು ‘ಚಿನ್ನ’ದಂತ ಮನಸ್ಸು ಎಂದ ಜನ!

    Manushi Chhillar Dating Veer Pahariya After Breakup
    ಬಾಲಿವುಡ್23 mins ago

    Manushi Chhillar: ಬ್ರೇಕಪ್‌ ಬಳಿಕ ವೀರ್ ಪಹಾರಿಯಾ ಜತೆ ಮಾನುಷಿ ಚಿಲ್ಲರ್‌ ಡೇಟಿಂಗ್‌?

    Cow Smugglers
    ಬಾಗಲಕೋಟೆ35 mins ago

    Cow Smugglers: ಮಣ್ಣೆತ್ತಿನ ಅಮಾವಾಸ್ಯೆ ದಿನವೇ ಜಾನುವಾರುಗಳ ಪ್ರಾಣಹರಣಕ್ಕೆ ಸ್ಕೆಚ್‌!

    Mukesh Ambani music video with grandkids
    ಬಾಲಿವುಡ್53 mins ago

    Mukesh Ambani: 60ರ ದಶಕದ ಹಾಡನ್ನು ಮೊಮ್ಮಕ್ಕಳೊಂದಿಗೆ ರೀ ಕ್ರಿಯೇಟ್ ಮಾಡಿದ ಮುಕೇಶ್ – ನೀತಾ ದಂಪತಿ; ಕ್ಯೂಟ್‌ ವಿಡಿಯೊ ಇಲ್ಲಿದೆ!

    MyMUL President
    ಕರ್ನಾಟಕ1 hour ago

    MyMUL President: ಸಚಿವ ಕೆ.ವೆಂಕಟೇಶ್ ಕಿರುಕುಳದಿಂದಲೇ ಮೈಮುಲ್‌ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ: ಪಿ.ಎಂ.ಪ್ರಸನ್ನ

    karnataka Rain
    ಮಳೆ1 hour ago

    Karnataka Rain : ಭಾರಿ ಗಾಳಿ- ಮಳೆಗೆ ಹಾರಿದ ಅಂಗಡಿಯ ತಗಡು; ಮಾಗುಂಡಿ-ಬಾಳೆಹೊನ್ನೂರು ಮಾರ್ಗ ಬಂದ್

    ಕ್ರೀಡೆ1 hour ago

    Rajeev Shukla: ಆದಿತ್ಯ ಠಾಕ್ರೆ ಹೇಳಿಕೆಗೆ ತಿರುಗೇಟು ನೀಡಿದ ಬಿಸಿಸಿಐ ಉಪಾಧ್ಯಕ್ಷ ರಾಜೀವ್‌ ಶುಕ್ಲಾ

    Sharmitha Gowda in bikini
    ಕಿರುತೆರೆ9 months ago

    Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

    Kannada Serials
    ಕಿರುತೆರೆ9 months ago

    Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

    Bigg Boss- Saregamapa 20 average TRP
    ಕಿರುತೆರೆ9 months ago

    Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

    galipata neetu
    ಕಿರುತೆರೆ7 months ago

    Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

    Kannada Serials
    ಕಿರುತೆರೆ9 months ago

    Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

    Kannada Serials
    ಕಿರುತೆರೆ9 months ago

    Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

    Bigg Boss' dominates TRP; Sita Rama fell to the sixth position
    ಕಿರುತೆರೆ8 months ago

    Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

    geetha serial Dhanush gowda engagement
    ಕಿರುತೆರೆ7 months ago

    Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

    varun
    ಕಿರುತೆರೆ8 months ago

    Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

    Kannada Serials
    ಕಿರುತೆರೆ10 months ago

    Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

    karnataka Rain
    ಮಳೆ1 hour ago

    Karnataka Rain : ಭಾರಿ ಗಾಳಿ- ಮಳೆಗೆ ಹಾರಿದ ಅಂಗಡಿಯ ತಗಡು; ಮಾಗುಂಡಿ-ಬಾಳೆಹೊನ್ನೂರು ಮಾರ್ಗ ಬಂದ್

    Food Poisoning
    ರಾಯಚೂರು3 hours ago

    Food Poisoning : ಮೊರಾರ್ಜಿ ವಸತಿ ಶಾಲೆ ಅವ್ಯವಸ್ಥೆ; ಊಟ ಸೇವಿಸಿದ 25ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥ

    Wild Animal Attack Elephant attack
    ರಾಮನಗರ5 hours ago

    Wild Animal Attack : ತೋಟದಲ್ಲಿ ನೀರು ಹಾಯಿಸುತ್ತಿದ್ದವನ ತುಳಿದು ಸಾಯಿಸಿದ ಆನೆ

    karnataka Weather Forecast
    ಮಳೆ10 hours ago

    Karnataka Weather : ಕರಾವಳಿ, ಮಲೆನಾಡಿನಲ್ಲಿ ಇಂದು ನಾನ್‌ ಸ್ಟಾಪ್‌ ಮಳೆ; ಬೆಂಗಳೂರಲ್ಲಿ ಹೇಗೆ?

    karnataka Weather Forecast
    ಮಳೆ22 hours ago

    Karnataka Weather: ಧಾರಾಕಾರ ಮಳೆಗೆ ಜನರ ಒದ್ದಾಟ- ಸೇತುವೆಗಳು ಮುಳುಗಿ ಪರದಾಟ; ಶಾಲಾ-ಕಾಲೇಜುಗಳಿಗೆ ರಜೆ

    Lovers Fighting
    ಚಿಕ್ಕಬಳ್ಳಾಪುರ24 hours ago

    Lovers Fighting: ಪ್ರೀತಿಸಿ ಕೈಕೊಟ್ಟವನಿಗೆ ನಡುರಸ್ತೆಯಲ್ಲೇ ಚಳಿ ಬಿಡಿಸಿದ ಗರ್ಭಿಣಿ

    Medical negligence
    ದಾವಣಗೆರೆ1 day ago

    Medical negligence: ಸಿಸೇರಿಯನ್ ಮಾಡುವಾಗ ಶಿಶುವಿನ ಮರ್ಮಾಂಗವನ್ನೇ ಕತ್ತರಿಸಿ ಸಾಯಿಸಿದ ವೈದ್ಯ!

    karnataka rain
    ಮಳೆ1 day ago

    Karnataka Rain: ಮಳೆಗೆ ಮನೆಗಳಿಗೆ ನುಗ್ಗುತ್ತಿವೆ ಹಾವುಗಳು! ಕುಸಿದು ಬಿತ್ತು ಮನೆಗಳು

    Elephant attack in Hassan and Chikmagalur
    ಹಾಸನ1 day ago

    Elephant Attack : ಕಾಫಿ ತೋಟದ‌ ಕೆಲಸಗಾರನನ್ನು ಸೊಂಡಿಲಿನಿಂದ ಎತ್ತಿ ಬಿಸಾಡಿದ ಒಂಟಿ ಸಲಗ

    Physical Abuse
    ಬೆಂಗಳೂರು1 day ago

    Physical Abuse : ಇವಳೇನು ಶಿಕ್ಷಕಿಯೋ ಕಾಮುಕಿಯೋ; ಬಾಲಕಿಯ ಖಾಸಗಿ ಅಂಗಾಂಗ ಮುಟ್ಟಿ ವಿಕೃತಿ

    ಟ್ರೆಂಡಿಂಗ್‌