Dowry Case: 5 ತಿಂಗಳ ಹಿಂದಷ್ಟೇ ಮದುವೆ ಆಗಿದ್ದ ನವವಿವಾಹಿತೆ ನೇಣಿಗೆ ಶರಣು; ವರದಕ್ಷಿಣೆಗಾಗಿ ಜೀವ ಹಿಂಡಿದ ಕಿರಾತಕರು - Vistara News

ಕ್ರೈಂ

Dowry Case: 5 ತಿಂಗಳ ಹಿಂದಷ್ಟೇ ಮದುವೆ ಆಗಿದ್ದ ನವವಿವಾಹಿತೆ ನೇಣಿಗೆ ಶರಣು; ವರದಕ್ಷಿಣೆಗಾಗಿ ಜೀವ ಹಿಂಡಿದ ಕಿರಾತಕರು

Dowry Case : ಆಕೆಯ ಕನಸುಗಳೆಲ್ಲ ಮದುವೆಯಾದ ಕೆಲವೇ ದಿನಗಳಲ್ಲಿ ಮಣ್ಣಾಗಿದ್ದವು. ಈಗ ಆಕೆಯೇ ಶವವಾಗಿದ್ದಾಳೆ. ಧನದಾಹಿ ಗಂಡ ಮತ್ತು ಆತನ ಕುಟುಂಬ ಆಕೆಯ ಪ್ರಾಣವನ್ನೇ ಕಿತ್ತುಕೊಂಡಿದೆ.

VISTARANEWS.COM


on

Dowry harrassment woman ends life
ಉಮಾ ಮತ್ತು ವಿಷ್ಣು... ಎಷ್ಟು ಚೆಂದದ ಜೋಡಿ.. ಆದರೆ...
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಗದಗ: ವರದಕ್ಷಿಣೆ (Dowry Case) ಎನ್ನುವ ಪೆಡಂಭೂತ ಇವತ್ತಿಗೂ ಹೆಣ್ಣು ಮಕ್ಕಳ ಬದುಕನ್ನು ಹೇಗೆ ಸರ್ವನಾಶ ಮಾಡುತ್ತಿದೆ ಎನ್ನುವುದಕ್ಕೆ ಪಕ್ಕಾ ಉದಾಹರಣೆ ಇಲ್ಲಿದೆ. ಇಲ್ಲಿ ಕೇವಲ ಐದು ತಿಂಗಳ ಹಿಂದಷ್ಟೇ ಹೊಸ ಕನಸುಗಳೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದ ಹೆಣ್ಮಗಳೊಬ್ಬಳು ಆತ್ಮಹತ್ಯೆ (Newly married woman ends life) ಮಾಡಿಕೊಂಡಿದ್ದಾಳೆ. ಹಣ ಹಣ (Dowry Case) ಎಂದು ಬಾಯಿ ಬಿಡುವ ಗಂಡನ ಮನೆಯವರು (Harrassment by husband and family) ಈಕೆಯನ್ನು ಹೆಣವಾಗಿಸಿದ್ದಾರೆ ಎಂಬ ಆರೋಪ ಜೋರಾಗಿ ಕೇಳಿಬಂದಿದೆ.

ಇದು ಗದಗ ತಾಲೂಕಿನ (Gadaga News) ತಿಮ್ಮಾಪುರ ಗ್ರಾಮದಲ್ಲಿ ಘಟನೆ. ಉಮಾ ವಿಷ್ಣು ಎಮ್ಮಿ (23) ಆತ್ಮಹತ್ಯೆ‌ ಮಾಡಿಕೊಂಡ ದುರ್ದೈವಿ ಹೆಣ್ಮಗಳು. ಮಂಗಳವಾರ ರಾತ್ರಿ ಈಕೆ ಬೆಡ್ ರೂಮ್‌ನಲ್ಲಿರುವ ಫ್ಯಾನ್ ಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ನಾಲ್ಕು ಲಕ್ಷದಲ್ಲಿ ಬರೀ 50 ಸಾವಿರ ಬಾಕಿ ಇತ್ತು! ಆದರೂ ಬಿಡಲಿಲ್ಲ ಕಿರಾತಕರು!

ನೂರಾರು ಕನಸುಗಳೊಂದಿಗೆ ಕೇವಲ ಐದು ತಿಂಗಳ ಹಿಂದಷ್ಟೇ ಹೊಸ ಬದುಕಿಗೆ ಕಾಲಿಟ್ಟಿದ್ದಳು ಉಮಾ. ವಿಷ್ಣು ಎಂಬ ಸುಂದರ ಹೆಸರಿನ ಹುಡುಗನ ಜತೆಗೆ ಆಕೆಯ ಮದುವೆ ನಡೆದಿತ್ತು. ಆದರೆ, ತಾನು ಕಾಲಿಟ್ಟಿದ್ದು ಸ್ವರ್ಗಕ್ಕಲ್ಲ, ನರಕಕ್ಕೆ ಎಂದು ತಿಳಿಯಲು ಆಕೆಗೆ ಹೆಚ್ಚು ದಿನ ಬೇಕಾಗಿರಲಿಲ್ಲ.

woman suicide at Gadag
Protest by Uma family

ಮದುವೆಯ ಸಂದರ್ಭದಲ್ಲೇ ಸಾಕಷ್ಟು ಹಣ ಮತ್ತು ಒಡವೆಗಳನ್ನು ಕೊಟ್ಟು ಕ್ರಮಬದ್ಧವಾಗಿ ಮದುವೆ ಮಾಡಿಸಿದ್ದರು ಉಮಾಳ ತಾಯಿ-ತಂದೆ. ಆದರೆ, ಮದುವೆಯಾಗಿ ಕೆಲವೇ ದಿನಗಳಲ್ಲಿ ತವರುಮನೆಯಿಂದ ಹೆಚ್ಚಿನ ವರದಕ್ಷಿಣೆ, ಬಂಗಾರ ತರುವಂತೆ ಮಾನಸಿಕ ಕಿರುಕುಳ ಶುರುವಾಗಿತ್ತು.

ಗಂಡನ ಮನೆಯವರು ಹೊಸದಾಗಿ ಇಟ್ಟ ಬೇಡಿಕೆ ನಾಲ್ಕು ಲಕ್ಷ ರೂಪಾಯಿ. ಉಮಾ ಈ ವಿಷಯವನ್ನು ಮನೆಯಲ್ಲಿ ತಿಳಿಸಿದ್ದಳು. ಮಗಳ ಬದುಕು ಚೆನ್ನಾಗಿರಲಿ ಎಂದು ತವರು ಮನೆಯವರು ಕಷ್ಟಪಟ್ಟು 3.5 ಲಕ್ಷ ರೂ.ಯನ್ನು ಆಗಲೇ ಕೊಟ್ಟಿದ್ದರು. ಆದರೆ, ಬಾಕಿ 50 ಸಾವಿರ ರೂಪಾಯಿ ಹಣ ತರುವಂತೆ ಗಂಡ ಹಾಗೂ ಅತ್ತೆಯಿಂದ ಕಿರುಕುಳ ಮುಂದುವರಿದಿತ್ತು.

ಈ ವಿಚಾರವಾಗಿ ಈಗಾಗಲೇ ಹಲವು ಬಾರಿ ರಾಜಿ ಸಂಧಾನ ಮಾಡಿಸಲಾಗಿತ್ತು. ಆದರೆ, ಆ ಕ್ಷಣಕ್ಕೆ ಒಪ್ಪಿಕೊಳ್ಳುವ ವಿಷ್ಣು ಮತ್ತು ಮನೆಯವರು ಬಳಿಕ ಮತ್ತೆ ಹಿಂಸೆಗೆ ಇಳಿಯುತ್ತಿದ್ದರು. ಇದನ್ನೆಲ್ಲ ಸಹಿಸಲು ಸಾಧ್ಯವೇ ಇಲ್ಲದೆ ಉಮಾ ನೆಯಲ್ಲಿನ ಬೆಡ್ ರೂಮ್‌ನಲ್ಲಿರುವ ಫ್ಯಾನ್‌ಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಈ ಬಗ್ಗೆ ಮಾಹಿತಿ ಪಡೆದು ಧಾವಿಸಿದ ಉಮಾಳ ಸಹೋದರ ಗದಗ ಗ್ರಾಮೀಣ ಠಾಣೆಯಲ್ಲಿ ದೂರು ನೀಡಿದ್ದಾನೆ.

ಉಮಾ ಆತ್ಮಹತ್ಯೆ ತಿಳಿಯುತ್ತಿದ್ದಂತೆಯೇ ಗಂಡ, ಅತ್ತೆ-ಮಾವ ಎಸ್ಕೇಪ್‌!

ಈ ನಡುವೆ ಉಮಾ ಆತ್ಮಹತ್ಯೆ ಮಾಡಿಕೊಂಡಿರುವ ವಿಷಯ ತಿಳಿಯುತ್ತಿದ್ದಂತೆಯೇ ಗಂಡ ವಿಷ್ಣು, ಅತ್ತೆ ಮತ್ತು ಇತರರು ಎಸ್ಕೇಪ್‌ ಆಗಿದ್ದಾರೆ! ವಿಷ್ಣುವಿನ ತಾಯಿ ಗಿರಿಜಾ ಕೂಡಾ ಈ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದು ಸೊಸೆಯ ಸಾವಿನ ಹೆದರಿಕೆಯಿಂದ ಆಕೆ ತಪ್ಪಿಸಿಕೊಂಡಿದ್ದಾಳೆ.

Uma family stops Ambulance
ಗಂಡನ ಮನೆಯವರು ಬಾರದೆ ಹೆಣ ಒಯ್ಯಲು ಬಿಡಲ್ಲ ಎಂದು ಆಂಬ್ಯುಲೆನ್ಸ್‌ ಮುಂದೆ ಮಲಗಿದ ಮನೆಯವರು

ಗಂಡ, ಅತ್ತೆಯನ್ನು ಕರೆತನ್ನಿ: ಆಂಬ್ಯುಲೆನ್ಸ್‌ಗೆ ಅಡ್ಡ ಮಲಗಿ ಪ್ರತಿಭಟನೆ

ಈ ನಡುವೆ, ಪರಾರಿಯಾಗಿರುವ ಉಮಾಳ ಅತ್ತೆ, ಮಾವನನ್ನು ಕರೆದುಕೊಂಡು ಬಾರದಿದ್ದರೆ ಹೆಣವನ್ನು ತೆಗೆಯಲು ಬಿಡುವುದಿಲ್ಲ ಎಂದು ಉಮಾಳ ಹೆತ್ತವರು ಹೇಳಿದ್ದಾರೆ. ಮಾತ್ರವಲ್ಲ, ಹೆಣ ಒಯ್ಯಲು ಬಂದ ಆಂಬ್ಯುಲೆನ್ಸ್‌ ಅಡ್ಡ ಮಲಗಿ ಪ್ರತಿಭಟನೆ ನಡೆಸಿದ್ದಾರೆ. ಇದೀಗ ಆಕೆಯ ಶವವನ್ನು ಒಯ್ಯುವುದಕ್ಕಾಗಿ ಮನೆಯವರನ್ನು ಸಮಾಧಾನ ಪಡಿಸಲು ಪೊಲೀಸರು ಹರಸಾಹಸ ನಡೆಸಬೇಕಾಗಿದೆ. ಗದಗ ಗ್ರಾಮೀಣ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Protest by Uma family
Protest by Uma family

ಇದನ್ನೂ ಓದಿ : Husband Harrassed: ಗಂಡನ ಮೇಲೆ ಮೆಣಸಿನ ಹುಡಿ ಮಿಶ್ರಿತ ಬಿಸಿ ನೀರು ಎರಚಿದ ಸಂಶಯ ಪಿಶಾಚಿ ಹೆಂಡತಿ!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

ನಿಮ್ಮ ಮಿಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

ಬೆಂಗಳೂರು

Murder Case : ನಿದ್ದೆಗೆ ಜಾರಿದ 13 ವರ್ಷದ ಬಾಲಕಿಯನ್ನು ಕೊಂದಿದ್ಯಾರು? ನಿಗೂಢ ಸಾವಿನ ಬೆನ್ನಟ್ಟಿದ ಪೊಲೀಸರು

Murder Case : ನಿದ್ದೆಗೆ ಜಾರಿದ 13 ವರ್ಷದ ಬಾಲಕಿಯೊಬ್ಬಳು ನಿಗೂಢವಾಗಿ ಮೃತಪಟ್ಟಿದ್ದಾಳೆ. ಮೊದಮೊದಲು ಯುಡಿಆರ್‌ ಆಗಿದ್ದ ಪ್ರಕರಣ ಇದೀಗ ಕೊಲೆ ಕೇಸ್‌ ದಾಖಲಿಸಿಕೊಂಡಿರುವ ಪೊಲೀಸರು ತನಿಖೆಗಿಳಿದಿದ್ದಾರೆ.

VISTARANEWS.COM


on

By

Murder case
Koo

ಬೆಂಗಳೂರು: ಬೆಂಗಳೂರಿನಲ್ಲಿ ನಡೆದ ಅದೊಂದು ಕೊಲೆ ಪೊಲೀಸರಿಗೆ ತಲೆನೋವಾಗಿದೆ. 13 ವರ್ಷದ ಬಾಲಕಿಯ ನಿಗೂಢ ಸಾವಿನ ಸುತ್ತ ಅನುಮಾನದ ಹುತ್ತ ಮೂಡಿದೆ. ಗರ್ಗಿ ಮುರುಳೀಧರ್ ಎಂಬಾಕೆ ನಿಗೂಢವಾಗಿ ಮೃತಪಟ್ಟವಳು. ನಿದ್ದೆಗೆ ಜಾರಿದ 13 ವರ್ಷದ ಬಾಲಕಿಯನ್ನ ಕೊಂದಿದ್ಯಾರು? ಎಂಬ ಪ್ರಶ್ನೆ ಕಾಡುತ್ತಿದೆ. ಅಸಹಜ ಸಾವು ಅಂದುಕೊಂಡಿದ್ದ ಪೊಲೀಸರಿಗೆ ಪಿಎಂ ಹಾಗೂ ಎಫ್‌ಎಸ್‌ಎಲ್ ರಿಪೋರ್ಟ್ ಅದೊಂದು ಸುಳಿವು ನೀಡಿತ್ತು. ಎರಡು ತಿಂಗಳ ಹಿಂದೆ ಯುಡಿಆರ್ ಆಗಿದ್ದ ಪ್ರಕರಣ ನಂತರ ಕೊಲೆ ಕೇಸ್ ಆಗಿ ಬದಲಾಗಿದೆ.

ಮುರುಳೀಧರ್ ಹಾಗೂ ಶೃತಿ ದೇಶಪಾಂಡೆ ದಂಪತಿಯ ಒಬ್ಬಳೇ ಮಗಳು ಗರ್ಗಿ ಎಂಬಾಕೆ ತಿಲಕನಗರ ಪೊಲೀಸ್ ಠಾಣಾ ವ್ಯಾಪ್ತಿಯ ಜಯನಗರ ಉಷಾ ಅಪಾರ್ಟ್ಮೆಂಟ್‌ನಲ್ಲಿ ವಾಸವಿದ್ದರು. ಖಾಸಗಿ ಶಾಲೆಯಲ್ಲಿ 8ನೇ ತರಗತಿ ಓದುತ್ತಿದ್ದ ಗರ್ಗಿ ಮುರಳೀಧರ್, ಬೇಸಿಗೆ ರಜೆ ಹಿನ್ನೆಲೆಯಲ್ಲಿ ಎರಡು ತಿಂಗಳು ಟ್ಯೂಷನ್‌ಗೆ ತೆರಳುತ್ತಿದ್ದಳು. ಕೃಷ್ಣ ಮೂರ್ತಿ ಎಂಬುವವರ ಬಳಿ ಗಣಿತ ಟ್ಯೂಷನ್‌ಗೆ ತೆರಳುತ್ತಿದ್ದಳು. ಕಳೆದ ಮೇ 22ರಂದು ಬೆಳಗ್ಗೆ 8:45 ಗರ್ಗಿ ತನ್ನ ಅಮ್ಮನ ಜತೆ ಅಶೋಕನಗರದಲ್ಲಿರುವ ತಾತನ ಮನೆಗೆ ತೆರಳಿದ್ದಳು. ಸಂಜೆ 5:30 ಕ್ಕೆ ತಾಯಿ ಶೃತಿ ದೇಶಪಾಂಡೆ ಹಾಗೂ ಗರ್ಗಿ ಮುರುಳೀಧರ್ ವಾಪಸ್ ಆಗಿದ್ದಳು.

ಸಂಜೆ 7ಕ್ಕೆ ಶೃತಿ ದೇಶಪಾಂಡೆ, ಮಗಳು ಗರ್ಗಿ ಹಾಗೂ ಶೃತಿ ಸಹೋದರಿ ಚಾಟ್ಸ್ ತಿನ್ನಲು ಹೊರಗೆ ಹೋಗಿದ್ದರು. ವಾಪಸ್ 8 ಗಂಟೆಗೆ ಬಂದವರೇ ಗರ್ಗಿ ರಾತ್ರಿ 10:30ಕ್ಕೆ ಮಲಗಲು ರೂಂಗೆ ತೆರಳಿದ್ದಳು. ಎಂದಿನಂತೆ ಬೆಳಗ್ಗೆ 7 ನೋಡಿದಾಗ ಗರ್ಗಿ ಮಲಗಿದ್ದಲೇ ಮೂತ್ರ ವಿಸರ್ಜನೆ ಮಾಡಿಕೊಂಡಿದ್ದಳು. ಎಷ್ಟೇ ಕೂಗಿ ಎಬ್ಬಿಸಿಲು ಪ್ರಯತ್ನಿಸಿದ್ದರು ಎದ್ದೇಳದೆ ಇದ್ದಾಗ ಪೋಷಕರು ಗಾಬರಿಗೊಂಡಿದ್ದರು. ಕೂಡಲೇ ಅಪಾರ್ಟ್‌ಮೆಂಟ್‌ನಲ್ಲಿದ್ದ ವೈದ್ಯರನ್ನು ಕರೆದು ಪರೀಕ್ಷಿಸಿದ್ದಾರೆ. ಕೂಡಲೇ ಆಸ್ಪತ್ರೆಗೆ ಕರೆದುಕೊಂಡು ಹೋಗುವಂತೆ ತಿಳಿಸಿದ್ದಾರೆ. ಆದರೆ ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದಾಗ ದಾರಿ ಮಧ್ಯೆ ಮೃತಪಟ್ಟಿದ್ದಾಗಿ ವೈದ್ಯರು ಖಚಿತ ಪಡಿಸಿದ್ದಾರೆ.

ಇದನ್ನೂ ಓದಿ: Murder case : ಬೆಂಗಳೂರಲ್ಲಿ ಬಿಹಾರಿ ಮೂಲದ ವ್ಯಕ್ತಿಯನ್ನು ದೊಣ್ಣೆಯಿಂದ ಹೊಡೆದು ಭೀಕರ ಹತ್ಯೆ

ಘಟನೆ ಸಂಬಂಧ ತಿಲಕನಗರ ಪೊಲೀಸ್ ಠಾಣೆಯಲ್ಲಿ ಯುಡಿಆರ್ ದಾಖಲಾಗಿತ್ತು. ಆದರೆ ಮಗಳ ದಿಢೀರ್‌ ಸಾವಿನಿಂದ ಪೋಷಕರು ಅನುಮಾನ ವ್ಯಕ್ತಪಡಿಸಿದ್ದರು. ಆರೋಗ್ಯವಾಗಿದ್ದ ಮಗಳು ಹೀಗೆ ರಾತ್ರಿ ಕಳೆದು ಬೆಳಗಾಗುವಷ್ಟರಲ್ಲಿ ಮೃತಪಟ್ಟಿರುವುದರಿಂದ ಹಲವು ಅನುಮಾನಗಳು ಮೂಡುತ್ತಿವೆ. ಹೀಗಾಗಿ ತನಿಖೆಯನ್ನು ನಡೆಸುವಂತೆ ದೂರು ನೀಡಿದ್ದರು. ಗರ್ಗಿಯ ಮರಣೋತ್ತರ ಪರೀಕ್ಷೆಯನ್ನು ನಡೆಸಿದಾಗ, ಬಾಲಕಿ ಉಸಿರುಗಟ್ಟಿ ಮೃತಪಟ್ಟಿದ್ದಾಳೆ ಎಂದು ವರದಿ ಬಂದಿದೆ.

ಹೀಗಾಗಿ ಯುಡಿಆರ್‌ ದಾಖಲಿಸಿಕೊಂಡಿದ್ದ ಪೊಲೀಸರು ಇದೀಗ ಕೊಲೆಕೇಸ್‌ ದಾಖಲಿಸಿಕೊಂಡಿದ್ದಾರೆ. ಆದರೆ ಮನೆಯೊಳಗೆ ಮಲಗಿದ್ದ ಬಾಲಕಿಯನ್ನು ಉಸಿರುಗಟ್ಟಿಸಿ ಕೊಂದವರು ಯಾರು ಎಂಬ ಪ್ರಶ್ನೆ ಹಾಗೇ ಉಳಿದಿದೆ. ಜುಲೈ 18 ರಂದು ಯುಎಇಆರ್ ಪ್ರಕರಣ 302 ಅಡಿಯಲ್ಲಿ ಎಫ್ಐಆರ್ ಆಗಿ ದಾಖಲಿಸಿಕೊಂಡಿರುವ ಪೊಲೀಸರು, ಕುಟುಂಬಸ್ಥರ ವಿಚಾರಣೆ ನಡೆಸುತ್ತಿದ್ದಾರೆ. ಪಿಎಂ ರಿಪೋರ್ಟ್‌ನಲ್ಲಿ ಬಾಲಕಿ ಕಿವಿಯನ್ನು ಬಲವಾಗಿ ಒತ್ತಿದ್ದಾರೆ. ದಿಂಬು ಅಥವಾ ಬೇರೆ ವಸ್ತುವಿನಿಂದ ಉಸಿರುಗಟ್ಟಿಸಿಕೊಂದಿದ್ದಾರೆಂಬ ಮಾಹಿತಿ ಇದೆ. ಪ್ರಕರಣ ಸೂಕ್ಷ್ಮತೆ ಅರಿತ ಡಿಸಿಪಿ ಪ್ರಕರಣವನ್ನು ಎಸಿಪಿಗೆ ರವಾನೆ ಮಾಡಿದ್ದಾರೆ. ಸದ್ಯ ಈ ಪ್ರಕರಣವನ್ನು ಸವಾಲಾಗಿ ಸ್ವೀಕರಿಸಿರುವ ಪೊಲೀಸರು ಆರೋಪಿಯ ಹುಡುಕಾಟದಲ್ಲಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಬೆಂಗಳೂರು

Murder case : ಬೆಂಗಳೂರಲ್ಲಿ ಬಿಹಾರಿ ಮೂಲದ ವ್ಯಕ್ತಿಯನ್ನು ದೊಣ್ಣೆಯಿಂದ ಹೊಡೆದು ಭೀಕರ ಹತ್ಯೆ

Murder case : ಬೆಂಗಳೂರಲ್ಲಿ ಬಿಹಾರಿ ಮೂಲದ ವ್ಯಕ್ತಿಯನ್ನು ದೊಣ್ಣೆಯಿಂದ ಹೊಡೆದು ಭೀಕರ ಹತ್ಯೆ ನಡೆಸಲಾಗಿದೆ.

VISTARANEWS.COM


on

By

murder case
ಮೃತ ಸಜಿತ್
Koo

ಬೆಂಗಳೂರು: ಎಣ್ಣೆ ಮತ್ತಲ್ಲಿ ಬಿಹಾರಿ ಗೆಳೆಯರ ನಡುವೆ ಕಿರಿಕ್ ನಡೆದಿದ್ದು, ಕೊಲೆಯಲ್ಲಿ‌ (Murder case) ಅಂತ್ಯವಾಗಿದೆ. ಬೆಂಗಳೂರಲ್ಲಿ ಬಿಹಾರಿ ಮೂಲದ ವ್ಯಕ್ತಿ ಭೀಕರವಾಗಿ ಹತ್ಯೆಯಾಗಿದ್ದಾನೆ. ಸಜಿತ್ (34) ಕೊಲೆಯಾದ ದುರ್ದೈವಿ. ಬೆಂಗಳೂರಿನ ಮೈಕೋ ಲೇಔಟ್ ಬಳಿಯ ಕುಟ್ಟಪ್ಪ ಗಾರ್ಡನ್‌ನಲ್ಲಿ ಘಟನೆ ನಡೆದಿದೆ.

ಸಜೀತ್ ಇಂಟೀರಿಯರ್ ಡಿಸೈನ್ ಗೋಡೌನ್‌ನಲ್ಲಿ ಕೆಲಸ ಮಾಡುತ್ತಿದ್ದ. ಮೂವರು ಬಿಹಾರ ಮೂಲದವರು ಸೇರಿ ನಿನ್ನೆ ರಾತ್ರಿ ಪಾರ್ಟಿ ಮಾಡಿದ್ದರು. ಈ ವೇಳೆ ಕುಡಿದ ಮತ್ತಿನಲ್ಲಿ ಮಾತಿನ ಚಕಮಕಿ ನಡೆದಿದೆ. ಗಲಾಟೆ ವಿಕೋಪಕ್ಕೆ ತಿರುಗಿದ್ದು ಜತೆಗೆ ಇದ್ದವರೇ ಮರದ ದೊಣ್ಣೆಗಳಿಂದ ಹಲ್ಲೆ ಮಾಡಿ ಭೀಕರವಾಗಿ ಕೊಂದು ಹಾಕಿದ್ದಾರೆ.

ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಸೊಕೋ ಮತ್ತು ಎಫ್.ಎಸ್.ಎಲ್ ಟೀಂ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೈಕೊಲೇಔಟ್ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ. ಪ್ರಕರಣ ಸಂಬಂಧ ಇಬ್ಬರನ್ನು ಮೈಕೋ ಲೇಔಟ್ ಪೊಲೀಸರು ಬಂಧಿಸಿದ್ದಾರೆ.

ಮೈಕೋ ಲೇಔಟ್ ಕೊಲೆ ಪ್ರಕರಣ ಸಂಬಂಧ ಆಗ್ನೇಯ ವಿಭಾಗ ಡಿಸಿಪಿ ಸಾರಾ ಫಾತಿಮಾ ಮಾಹಿತಿ ನೀಡಿದ್ದಾರೆ. ಲಿಖಿತ್ ಇಂಟೀರಿಯರ್ ಡಿಸೈನ್ಸ್ ಎಂಬ ಶಾಪ್ ಬಳಿ ನಿನ್ನೆ ರಾತ್ರಿ 8 ಗಂಟೆ ಸುಮಾರಿಗೆ ಒಂದು ಗಲಾಟೆ ನಡೆದಿದೆ. ಮೂರು ಜನ ಸೇರಿ ಗಲಾಟೆ ಮಾಡಿಕೊಂಡಿದ್ದು, ಕೊಲೆಯಲ್ಲಿ ಅಂತ್ಯವಾಗಿದೆ. ಪ್ರಕರಣ ಸಂಬಂಧ ಇಬ್ಬರನ್ನು ಬಂಧನ ಮಾಡಿದ್ದೀವಿ. ಮೂವರು ಬಿಹಾರ ಮೂಲದ ಅಕ್ಕಪಕ್ಕದ ಹಳ್ಳಿಯವರು ಎಂದು ತಿಳಿದು ಬಂದಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಬೆಂಗಳೂರು

Wall collapse : ಕಾಂಪೌಂಡ್ ಗೋಡೆ ಕುಸಿದು ಕೂಲಿ ಕಾರ್ಮಿಕ ಸಾವು; ಮತ್ತೊಬ್ಬ ಗಂಭೀರ

Wall collapse : ಕಾಂಪೌಂಡ್ ಗೋಡೆ ಕುಸಿದು ಕೂಲಿ ಕಾರ್ಮಿಕ ಮೃತಪಟ್ಟರೆ, ಮತ್ತೊಬ್ಬ ಗಂಭೀರ ಗಾಯಗೊಂಡಿದ್ದಾನೆ. ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

VISTARANEWS.COM


on

By

Wall Collapse
Koo

ಆನೇಕಲ್: ಕಾಂಪೌಂಡ್ ಗೋಡೆ ಕುಸಿದು (Wall collapse) ಬಿದ್ದು ಕೂಲಿ ಕಾರ್ಮಿಕನೊರ್ವ ಮೃತಪಟ್ಟರೆ, ಮತ್ತೋರ್ವ ಕಾರ್ಮಿಕ ಗಂಭೀರ ಗಾಯಗೊಂಡಿದ್ದಾರೆ. ಬೆಂಗಳೂರು ಹೊರವಲಯ ಆನೇಕಲ್ ತಾಲ್ಲೂಕಿನ ಬೊಮ್ಮಸಂದ್ರ ಕೈಗಾರಿಕಾ ಪ್ರದೇಶದಲ್ಲಿ ನಿನ್ನೆ ಗುರುವಾರ ಘಟನೆ ನಡೆದಿದೆ. ರಾಯಚೂರಿನ ದೇವದುರ್ಗ ಮೂಲದ ಪರಶುರಾಮ್ (24) ಮೃತ ದುರ್ದೈವಿ.

ಪೈಪ್ ಲೈನ್ ಹಾಕಲು ಮಣ್ಣು ತೆಗೆಯುತ್ತಿದ್ದ ವೇಳೆ ಕಾಂಪೌಂಡ್ ಗೋಡೆ ಕುಸಿದಿದೆ. ಕಾಂಪೌಂಡ್ ಗೋಡೆ ಪಕ್ಕದಲ್ಲಿಯೇ ಗುಂಡಿ ತೆಗೆಯುತ್ತಿದ್ದಾಗ ಈ ಅವಘಡ ಸಂಭವಿಸಿದೆ. ರಾಯಚೂರು ಮೂಲದ ಐದಾರು ಮಂದಿ ಮಣ್ಣು ಕೆಲಸ ಮಾಡುತ್ತಿದ್ದರು. ಈ ವೇಳೆ ಏಕಾಏಕಿ ಕಾರ್ಮಿಕ ಮೇಲೆಯೇ ಗೋಡೆ ಕುಸಿದಿದೆ. ಹೊಟ್ಟೆಪಾಡಿಗೆ ದೂರದ ರಾಯಚೂರಿನಿಂದ ಬಂದಿದ್ದ ಪರಶುರಾಮ್‌ ಮಣ್ಣಿನಡಿ ಸಿಲುಕಿ ಮೃತಪಟ್ಟಿದ್ದಾನೆ.

ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಮೃತ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ.

ನಿವೇಶನ ಮಾಲೀಕ ಮತ್ತು ಗುತ್ತಿಗೆದಾರನ ನಿರ್ಲಕ್ಷ್ಯಕ್ಕೆ ಕಾರ್ಮಿಕ ಬಲಿಯಾಗಿದ್ದಾನೆ ಎಂಬ ಆರೋಪ ಕೇಳಿ ಬಂದಿದೆ.
ಈಗಾಗಲೇ ಎರಡು ಕಡೆ ಕಾಂಪೌಂಡ್ ಕುಸಿದು ಬಿದ್ದಿತ್ತು. ಆದರೂ ಶಿಥಿಲಗೊಂಡಿದ್ದ ಕಾಂಪೌಂಡ್ ತೆರವುಗೊಳಿಸದೇ ಕಾಮಗಾರಿ ನಡೆಸಿದ್ದಾರೆ. ಯಮಸ್ವರೂಪಿ ಕಾಂಪೌಂಡ್ ಪಕ್ಕದಲ್ಲಿ ಕಾರ್ಮಿಕರು ಕೆಲಸ ಮಾಡುತ್ತಿದ್ದರು. ಕಾಂಪೌಂಡ್ ಪಕ್ಕದಲ್ಲಿಯೇ ಜೆಸಿಬಿ ಮೂಲಕ ಗುಂಡಿ ತೆಗೆದಿದ್ದ. ಗುಂಡಿ ಸಮತಟ್ಟು ವೇಳೆ ಆರು ಅಡಿ ಎತ್ತರದ ಹಾಲೋಬ್ಲಾಕ್ ಕಾಂಪೌಂಡ್ ಕುಸಿದಿದೆ.

ಈ ವೇಳೆ ಕೆಲಸ ಮಾಡುತ್ತಿದ್ದ ಮೂವರು ಕಾರ್ಮಿಕರ ಮೇಲೆ ಕಾಂಪೌಂಡ್ ಗೋಡೆ ಬಿದ್ದಿದೆ. ಏಕಾಏಕಿ ಕಾಂಪೌಂಡ್ ಕುಸಿದ ಪರಿಣಾಮ ಓರ್ವ ಸ್ಥಳದಲ್ಲಿಯೇ ಮೃತಪಟ್ಟರೆ, ಓರ್ವ ಮಹಿಳೆ ಸೇರಿದಂತೆ ಇಬ್ಬರು ಕಾರ್ಮಿಕರಿಗೆ ಗಾಯವಾಗಿದೆ. ಕಾಂಪೌಂಡ್ ಕುಸಿದಾಗ ಮಾಲೀಕ‌ ಅಥವಾ ಗುತ್ತಿಗೆದಾರ ಸ್ಥಳದಲ್ಲಿ ಇರಲಿಲ್ಲ. ಕೂಡಲೇ ಸಮೀಪದ ಕಾರ್ಖಾನೆಯವರು ಆಂಬ್ಯುಲೆನ್ಸ್ ವ್ಯವಸ್ಥೆ ಮಾಡಿದ್ದಾರೆ. ಆದರೆ ಓರ್ವ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾಗಿ ಪ್ರತ್ಯಕ್ಷದರ್ಶಿ ಹೇಳಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಬೆಂಗಳೂರು

Parappana Agrahara : ಜೈಲಲ್ಲಿ ನಟ ದರ್ಶನ್‌ಗೆ ರಾಜಾತಿಥ್ಯ ಕೇಸ್; ಕ್ಲೈ ಮ್ಯಾಕ್ಸ್ ಹಂತದಲ್ಲಿ ರಿವೈಲ್ ಆಯ್ತು ಜೈಲಿನೊಳಗಿನ ಅಂದರ್ ಕಿ ದರ್ಬಾರ್!

Parappana Agrahara : ಜೈಲಲ್ಲಿ ನಟ ದರ್ಶನ್‌ಗೆ (Actor Darshan) ರಾಜಾತಿಥ್ಯ ಕೇಸ್ ಸಂಬಂಧ ತನಿಖೆಯು ಕ್ಲೈ ಮ್ಯಾಕ್ಸ್ ಹಂತದಲ್ಲಿದ್ದು, ಇದೀಗ ಜೈಲಿನೊಳಗಿನ ಅಂದರ್ ಕಿ ದರ್ಬಾರ್ ಬೆಳಕಿಗೆ ಬಂದಿದೆ.

VISTARANEWS.COM


on

By

Actor Darshan
Koo

ಬೆಂಗಳೂರು: ಪರಪ್ಪನ ಅಗ್ರಹಾರ (Parappana Agrahara) ಜೈಲಿನಲ್ಲಿ ನಟ ದರ್ಶನ್ (Actor Darshan) ಇದ್ದ ವೇಳೆ ಸಿಕ್ಕ ರಾಜಾತಿಥ್ಯದ ತನಿಖೆ ಕೊನೆಗೂ ಮುಕ್ತಾಯದ ಹಂತ ತಲುಪಿದೆ. ವಿಶೇಷ ಸವಲತ್ತುಗಳ ಜಾಡು ಹಿಡಿದ ಖಾಕಿಗೆ ರಾಜಾತಿಥ್ಯದ ಪಿನ್ ಟು ಪಿನ್ ಸಾಕ್ಷಿ ದೊರೆತಿದ್ದು, ಇದರ ಹೊರತಾಗಿ ಜೈಲಿನಲ್ಲಿ ಸಿಗುವ ಮದ್ಯದ ಬಾಟೆಲ್‌ಗಳ ಮತ್ತೊಂದು ಕಹಾನಿ ಬೆಳಕಿಗೆ ಬಂದಿದೆ.

ಜೈಲಿನೊಳಗೆ ದರ್ಶನ್‌ಗೆ ಸಿಕ್ಕ ರಾಜಾತಿಥ್ಯದ ಸಂಬಂಧ ದಾಖಲಾಗಿದ್ದ ಎರಡು ಎಫ್‌ಐಆರ್‌ಗಳ ತನಿಖೆ ಬಹುತೇಕ ಪೂರ್ಣಗೊಂಡಿದೆ. ಎಲೆಕ್ಟ್ರಾನಿಕ್ ಸಿಟಿ ಉಪ ವಿಭಾಗದ ಪೊಲೀಸರು ನಡೆಸಿದ ತನಿಖೆ ವೇಳೆ ರಾಜಾತಿಥ್ಯದ ಮಹತ್ವದ ಸಾಕ್ಷಿಗಳು ಲಭ್ಯವಾಗಿವೆ. ಜತೆಗೆ ಇದಕ್ಕೆ ಕಾರಾಗೃಹದ ಸಿಬ್ಬಂದಿ ಸಹಕರಿಸಿರುವ ಸಂಗತಿ ಸಹ ಬಯಲಾಗಿದೆ. ಸದ್ಯ ಈ ಎಲ್ಲಾ ಮಾಹಿತಿಗಳನ್ನು ಆರೋಪ ಪಟ್ಟಿಯಲ್ಲಿ ಸೇರಿಸಿರುವ ಪೊಲೀಸರು ಕೋರ್ಟ್‌ಗೆ ಚಾರ್ಜ್ ಶೀಟ್ ಸಲ್ಲಿಸುವ ತಯಾರಿಯಲ್ಲಿದ್ದಾರೆ.

ಜೈಲಿನ ಒಳಗಡೆ ದರ್ಶನ್ ರೌಂಡ್ ಟೇಬಲ್‌ನಲ್ಲಿ ಟೀ ಪಾರ್ಟಿ ಮಾಡಿದ್ದು, ಜೈಲಿನೊಳಗೆ ಹೊರಗಿನ ವ್ಯಕ್ತಿ ಜತೆ ವಿಡಿಯೊ ಕಾಲ್ ಸಂಭಾಷಣೆ ನಡೆಸಿದ್ದ ಈ ಎರಡು ಪ್ರಕರಣ ಸಂಬಂಧ ತನಿಖೆ ಕೈಗೊಂಡ ಪೊಲೀಸರು ವಿಸ್ತೃತ ಆರೋಪ ಪಟ್ಟಿ ತಯಾರಿಸಿದ್ದಾರೆ. ಸದ್ಯ ಈ ಆರೋಪ ಪಟ್ಟಿ ಅಂತಿಮ ಹಂತದ ತಯಾರಿಯಲ್ಲಿದ್ದು, ಪೊಲೀಸರು ಅಂತಿಮ ಪರಾಮರ್ಶೆಗೆಂದು ಕಾನೂನು ತಜ್ಞರ ಮೊರೆ ಹೋಗಿದ್ದಾರೆ. ಈ ಮೂಲಕ ಕಾನೂನು ತಜ್ಞರ ಅಭಿಪ್ರಾಯ ಪಡೆದು ಶೀಘ್ರದಲ್ಲೇ ಚಾರ್ಜ್ ಶೀಟ್ ಸಲ್ಲಿಸಲಿದ್ದಾರೆ.

ಜೈಲಿನಲ್ಲಿರುವ ರೌಡಿಗಳಿಗೆ ಸಪ್ಲೈ ಆಗುತ್ತಿದೆಯಾ ಕಾಸ್ಟ್ಲಿ ಡ್ರಿಂಕ್ಸ್

ಪರಪ್ಪನ ಅಗ್ರಹಾರ ಜೈಲಿನಲ್ಲಿ ದರ್ಶನ್‌ಗೆ ಸಿಕ್ಕಿದ್ದ ರಾಜಾತಿಥ್ಯ ತನಿಖೆ ಕೈಗೊಂಡಿದ್ದ ಪೊಲೀಸರಿಗೆ ಈಗ ಹೊಸದಂದು ಸಂಗತಿ ಕೇಳಿ ಬಂದಿದೆ. ಜೈಲಿನಲ್ಲಿರುವ ಕೆಲ ರೌಡಿಗಳಿಗೆ ಕಾಸ್ಟ್ಲಿ ಡ್ರಿಂಕ್ಸ್ ಸರಬರಾಜು ಆಗುತ್ತಿದೆ ಎನ್ನಲಾಗಿದೆ. ಅದು ಮೂರು ಹಂತಗಳಲ್ಲಿ ಹೊರಗಿನಿಂದ ಜೈಲಿನೊಳಗೆ ಮದ್ಯ ತಲುಪುತ್ತಿದೆ ಎನ್ನಲಾಗಿದೆ. ಇನ್ನು ಮದ್ಯದ ಬಾಟಲ್‌ನ ಅಸಲಿ ಬೆಲೆ 2 ಸಾವಿರ ಇದ್ದರೆ ಅದನ್ನು ಜೈಲಿನೊಳಗೆ ಕೊಡಲು 25 ಸಾವಿರ ನೀಡಲಾಗುತ್ತಿದೆ ಎನ್ನಲಾಗಿದೆ.

ಬಾಟಲ್‌ನ ಓರ್ವ ಹೊರಗಡೆಯಿಂದ ತಂದರೆ, ಅದನ್ನು ಜೈಲಿನ ಒಳಗೆ ತೆಗೆದುಕೊಂಡು ಹೋಗುವವನು ಮತ್ತೊಬ್ಬನಂತೆ.. ಬಳಿಕ ಅದನ್ನು ರೌಡಿಗೆ ತಲುಪಿಸುವವನು ಮತ್ತೋಬ್ಬ.. ಇನ್ನು ಈ ಸರಬರಾಜು ಪ್ರಕ್ರಿಯೆಯಲ್ಲಿ ಜೈಲಿನ ಕೆಲ ಸಿಬ್ಬಂದಿ ಹಾಗೂ ಕೆಲ ಸಜಾ ಬಂಧಿಗಳು ಭಾಗಿಯಾಗಿದ್ದಾರೆ ಎನ್ನಲಾಗಿದೆ. ಹೀಗೆ ಒಳಗೆ ಸಪ್ಲೈ ಮಾಡಿ ಎಣ್ಣೆಗೆ ಹಣ ಹೊರಗಡೆಯೇ ಪಡೆಯಲಾಗುತ್ತಿದೆ. ಯಾರ್ಯಾರು ಎಣ್ಣೆ ತಂದು ಕೊಡುತ್ತಿದ್ದರು ಎಂಬ ಬಗ್ಗೆ ತನಿಖೆ ಆರಂಭಿಸಿರುವ ಆಗ್ನೇಯ ವಿಭಾಗದ ಪೊಲೀಸರು ಕೆಲವರಿಗೆ ನೋಟಿಸ್ ನೀಡಿ ವಿಚಾರಣೆ ನಡೆಸಲು ಮುಂದಾಗಿದ್ದಾರೆ.

ಇದೆಲ್ಲದರ ನಡುವೆ ನಗರ ಪೊಲೀಸ್ ಆಯುಕ್ತರು ಜೈಲಿನ ರಾಜಾತಿಥ್ಯದ ಬಗ್ಗೆ ವರದಿ ನೀಡುವಂತೆ ಆಗ್ನೇಯ ವಿಭಾಗದ ಡಿಸಿಪಿ ಸಾರಾ ಫಾರಿಮಾಗೆ ಸೂಚಿಸಿದ್ದರು. ಅದರಂತೆ ತನಿಖೆ ವೇಳೆ ಕಂಡು ಬಂದ ಅಂಶಗಳ ಸಹಿತ ರಾಜಾತಿಥ್ಯದ ವರದಿ ನಗರ ಪೊಲೀಸ್ ಆಯುಕ್ತರಿಗೆ ಸಲ್ಲಿಸಿದ್ದಾರೆ. ಸದ್ಯ ರಾಜಾತಿಥ್ಯದ ತನಿಖೆ ಕೈಗೊಂಡಿದ್ದ ಪೊಲೀಸರು ಬಹುತೇಕ ತನಿಖೆ ಮುಕ್ತಾಯಗೊಳಿಸಿದ್ದು, ಶೀಘ್ರದಲ್ಲೇ ಕೋರ್ಟ್‌ಗೆ ಚಾರ್ಜ್ ಶೀಟ್ ಸಲ್ಲಿಸಲಿದ್ದಾರೆ. ಆ ಬಳಿಕ ಜೈಲಿನ ಅಕ್ರಮ ಚಟುವಟಿಕೆಗಳ ಮತ್ತಷ್ಟು ಸಂಗತಿ ಬಯಲಾಗಲಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading
Advertisement
Namma metro ticket prices will be hiked soon
ಬೆಂಗಳೂರು57 ನಿಮಿಷಗಳು ago

Namma Metro : ಸಿಟಿ ಮಂದಿಗೆ ಮತ್ತೊಂದು ಶಾಕ್‌; ಶೀಘ್ರದಲ್ಲೆ ನಮ್ಮ ಮೆಟ್ರೋ ಟಿಕೆಟ್‌ ದರ ಏರಿಕೆಯ ಬರೆ!

Murder case
ಬೆಂಗಳೂರು1 ಗಂಟೆ ago

Murder Case : ನಿದ್ದೆಗೆ ಜಾರಿದ 13 ವರ್ಷದ ಬಾಲಕಿಯನ್ನು ಕೊಂದಿದ್ಯಾರು? ನಿಗೂಢ ಸಾವಿನ ಬೆನ್ನಟ್ಟಿದ ಪೊಲೀಸರು

murder case
ಬೆಂಗಳೂರು2 ಗಂಟೆಗಳು ago

Murder case : ಬೆಂಗಳೂರಲ್ಲಿ ಬಿಹಾರಿ ಮೂಲದ ವ್ಯಕ್ತಿಯನ್ನು ದೊಣ್ಣೆಯಿಂದ ಹೊಡೆದು ಭೀಕರ ಹತ್ಯೆ

Wall Collapse
ಬೆಂಗಳೂರು3 ಗಂಟೆಗಳು ago

Wall collapse : ಕಾಂಪೌಂಡ್ ಗೋಡೆ ಕುಸಿದು ಕೂಲಿ ಕಾರ್ಮಿಕ ಸಾವು; ಮತ್ತೊಬ್ಬ ಗಂಭೀರ

karnataka Weather Forecast
ಮಳೆ9 ಗಂಟೆಗಳು ago

Karnataka Weather : ಇಂದು ಅಬ್ಬರಿಸಲಿದೆ ಗುಡುಗು ಸಹಿತ ಭಾರಿ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌

Dina Bhavishya
ಭವಿಷ್ಯ9 ಗಂಟೆಗಳು ago

Dina Bhavishya : ಈ ರಾಶಿಯವರಿಗೆ ದೀರ್ಘಕಾಲದ ಕೆಲಸ ಕಾರ್ಯಗಳಲ್ಲಿ ಯಶಸ್ಸು ಸಿಗಲಿದೆ

Action Prince Dhruva Sarja much awaited film Martin to hit the screens on October 11
ಸಿನಿಮಾ19 ಗಂಟೆಗಳು ago

Martin Movie : ಆ್ಯಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ ಅಭಿನಯದ ಬಹು ನಿರೀಕ್ಷಿತ ʻಮಾರ್ಟಿನ್ʼ ಚಿತ್ರ ಅಕ್ಟೋಬರ್ 11ರಂದು ತೆರೆಗೆ

Actor Darshan
ಬೆಂಗಳೂರು20 ಗಂಟೆಗಳು ago

Parappana Agrahara : ಜೈಲಲ್ಲಿ ನಟ ದರ್ಶನ್‌ಗೆ ರಾಜಾತಿಥ್ಯ ಕೇಸ್; ಕ್ಲೈ ಮ್ಯಾಕ್ಸ್ ಹಂತದಲ್ಲಿ ರಿವೈಲ್ ಆಯ್ತು ಜೈಲಿನೊಳಗಿನ ಅಂದರ್ ಕಿ ದರ್ಬಾರ್!

Bengaluru News
ಬೆಂಗಳೂರು22 ಗಂಟೆಗಳು ago

Bengaluru News : ಮತ್ತೆ ಮೂವರು ಪಾಕ್ ಪ್ರಜೆಗಳ ಬಂಧನ; ಅಕ್ರಮವಾಗಿ ಬೆಂಗಳೂರಿನಲ್ಲಿ ನೆಲೆಸಿದ್ದ ಕುಟುಂಬ

HD kumaraswamy And Vijayetata
ಬೆಂಗಳೂರು23 ಗಂಟೆಗಳು ago

HD Kumaraswamy : ಎಲೆಕ್ಷನ್‌ಗೆ 50 ಕೋಟಿ ರೂ.ಗೆ ಡಿಮ್ಯಾಂಡ್‌ ಮಾಡಿ ಉದ್ಯಮಿಗೆ ಬೆದರಿಕೆ; ಎಚ್‌ಡಿ ಕುಮಾರಸ್ವಾಮಿ ವಿರುದ್ಧ ದೂರು ದಾಖಲು

Kannada Serials
ಕಿರುತೆರೆ12 ತಿಂಗಳುಗಳು ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Sharmitha Gowda in bikini
ಕಿರುತೆರೆ12 ತಿಂಗಳುಗಳು ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

galipata neetu
ಕಿರುತೆರೆ10 ತಿಂಗಳುಗಳು ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ1 ವರ್ಷ ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Bigg Boss- Saregamapa 20 average TRP
ಕಿರುತೆರೆ12 ತಿಂಗಳುಗಳು ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ12 ತಿಂಗಳುಗಳು ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ11 ತಿಂಗಳುಗಳು ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ10 ತಿಂಗಳುಗಳು ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ1 ವರ್ಷ ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ11 ತಿಂಗಳುಗಳು ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Action Prince Dhruva Sarja much awaited film Martin to hit the screens on October 11
ಸಿನಿಮಾ19 ಗಂಟೆಗಳು ago

Martin Movie : ಆ್ಯಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ ಅಭಿನಯದ ಬಹು ನಿರೀಕ್ಷಿತ ʻಮಾರ್ಟಿನ್ʼ ಚಿತ್ರ ಅಕ್ಟೋಬರ್ 11ರಂದು ತೆರೆಗೆ

Sudeep's birthday location shift
ಸ್ಯಾಂಡಲ್ ವುಡ್1 ತಿಂಗಳು ago

Kichcha Sudeepa: ಸುದೀಪ್‌ ಬರ್ತ್‌ ಡೇ ಲೊಕೇಶನ್‌ ಶಿಫ್ಟ್; ದರ್ಶನ್‌ ಭೇಟಿಗೆ ಬಳ್ಳಾರಿ ಜೈಲಿಗೆ ಹೋಗ್ತಾರಾ ಕಿಚ್ಚ

Actor Darshan
ಸ್ಯಾಂಡಲ್ ವುಡ್1 ತಿಂಗಳು ago

Actor Darshan : ಬಿಗಿ ಭದ್ರತೆಯಲ್ಲಿ ಪರಪ್ಪನ ಅಗ್ರಹಾರದಿಂದ ದರ್ಶನ್‌ ಬಳ್ಳಾರಿಗೆ ಸ್ಥಳಾಂತರ; ಸೆಲ್‌ನಲ್ಲಿ ಏನೆಲ್ಲ ವ್ಯವಸ್ಥೆ ಇದೆ ಗೊತ್ತಾ?

ಮಳೆ1 ತಿಂಗಳು ago

Karnataka rain : ವಿಜಯನಗರದಲ್ಲಿ ಮಳೆ ಅವಾಂತರ; ಹರಿಯುವ ಹಳ್ಳದಲ್ಲೇ ಶವ ಸಾಗಿಸಿದ ಗ್ರಾಮಸ್ಥರು

karnataka Weather Forecast
ಮಳೆ2 ತಿಂಗಳುಗಳು ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ2 ತಿಂಗಳುಗಳು ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ2 ತಿಂಗಳುಗಳು ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು2 ತಿಂಗಳುಗಳು ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ2 ತಿಂಗಳುಗಳು ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ2 ತಿಂಗಳುಗಳು ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

ಟ್ರೆಂಡಿಂಗ್‌