Communal Harmony : ದರ್ಗಾದಲ್ಲೇ ಗಣಪತಿ ಪ್ರತಿಷ್ಠಾಪನೆ; ಘಂಟೆ ಬಡಿದು ಜೈ ಗಣೇಶ ಎಂದ ಮುಸ್ಲಿಮರು, ಎಂಥಾ ಸೌಹಾರ್ದ! - Vistara News

ಕರ್ನಾಟಕ

Communal Harmony : ದರ್ಗಾದಲ್ಲೇ ಗಣಪತಿ ಪ್ರತಿಷ್ಠಾಪನೆ; ಘಂಟೆ ಬಡಿದು ಜೈ ಗಣೇಶ ಎಂದ ಮುಸ್ಲಿಮರು, ಎಂಥಾ ಸೌಹಾರ್ದ!

Communal Harmony : ಬೆಳಗಾವಿಯ ಬೈಲಹೊಂಗಲದ ಕಂಠಿ ಗಲ್ಲಿಯ ದರ್ಗಾದಲ್ಲಿ ಮುಸ್ಲಿಮರೇ ಗಣೇಶನನ್ನು ಪ್ರತಿಷ್ಠಾಪಿಸಿ ಪೂಜೆ ಮಾಡುತ್ತಾರೆ. ಹಿಂದುಗಳು ಜತೆಯಾಗಿ ನಿಂತು ಪ್ರಾರ್ಥಿಸುತ್ತಾರೆ. ಭಾರತದ ಸೌಹಾರ್ದ ಪರಂಪರೆ ಅತ್ಯುತ್ತಮ ನಿದರ್ಶನವೊಂದು ಈಗಲೂ ಜೀವಂತವಾಗಿದೆ.

VISTARANEWS.COM

on

Bailahongala dargah Ganeshothsava
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಳಗಾವಿ: ಜಾತಿ, ಧರ್ಮಗಳ ಸಂಘರ್ಷ, ಅಪನಂಬಿಕೆ, ದ್ವೇಷಗಳೇ ತುಂಬಿಕೊಳ್ಳುತ್ತಿರುವ ಕಾಲದಲ್ಲಿ ಮನುಷ್ಯ ನಿಜವಾಗಿಯೂ ಬದುಕಬೇಕಾದ ಬಗೆಗಳು ಆಗಾಗ, ಅಲ್ಲಲ್ಲಿ ತೆರೆದುಕೊಳ್ಳುತ್ತವೆ. ಹಿಂದು-ಮುಸ್ಲಿಮರ ಸ್ನೇಹ ಭಾವದ ಕಾಲವಳಿದು ದ್ವೇಷ ಭಾವವೇ ಉಕ್ಕೇರುತ್ತಿರುವ ಹಂತದಲ್ಲಿ ನಡೆಯುತ್ತಿರುವ ಈ ವಿದ್ಯಮಾನಗಳು (Communal Harmony) ನಿಜಾರ್ಥದಲ್ಲಿ ಕತ್ತಲ ಸುರಂಗದ ಕೊನೆಯಲ್ಲಿರುವ ಬೆಳಕಿನ ಹಣತೆಗಳು ಅನಿಸುತ್ತವೆ. ಇಷ್ಟೊಂದು ಖುಷಿಯಿಂದ ವಿಚಾರವನ್ನು ಹೇಳುವುದಕ್ಕೆ ನಿಜಕ್ಕೂ ಒಂದು ಕಾರಣವಿದೆ.

ಬೆಳಗಾವಿ ಜಿಲ್ಲೆಯ (Belagavi News) ಬೈಲಹೊಂಗಲ ಪಟ್ಟಣದ ಕಂಠಿ ಗಲ್ಲಿಯಲ್ಲಿ (Kanti galli in Bailahongala) ಮುಸ್ಲಿಮರೇ ಮುಂದೆ ನಿಂತು ತಮ್ಮದೇ ದರ್ಗಾದಲ್ಲಿ ಗಣೇಶನನ್ನು ಪ್ರತಿಷ್ಠಾಪಿಸಿ (Ganeshothsava at Dargah) ತಾವೇ ಪೂಜೆ ಮಾಡಿ, ತಾವೇ ಘಂಟಾಘೋಷ ಮೊಳಗಿಸಿ ಜೈಗಣೇಶ (Muslims Chanted Jai Ganesha) ಎಂದು ಭಕ್ತಿಯಿಂದ, ಹೃದಯಾಂತರಾಳದಿಂದ ಜಯೋಘೋಷ ಮಾಡಿದ್ದಾರೆ. ಇದಕ್ಕೆ ಅಲ್ಲಿನ ಎಲ್ಲ ಹಿಂದುಗಳು ಸಹವರ್ತಿಗಳಾಗಿ, ಸಾಕ್ಷಿಗಳಾಗಿ ಸಂಭ್ರಮಿಸಿದ್ದಾರೆ.

Bailahongala dargah Ganeshothsava communal harmony 2
ಈ ಗಣೇಶನಿಗೆ ಮುಸ್ಲಿಮರಿಂದಲೇ ಆರತಿ ನಡೆಯುತ್ತದೆ, ಹಿಂದೂಗಳು ಮಾರ್ಗದರ್ಶನ ಮಾಡುತ್ತಾರೆ

ಬೈಲಹೊಂಗಲ ಪಟ್ಟಣದ ಕಂಠಿ ಗಲ್ಲಿಯಲ್ಲಿರುವ ಫಕ್ಕೀರಸ್ವಾಮಿ ದರ್ಗಾದಲ್ಲಿ (Fakeeraswamy Dargah at Kantigalli) ನಡೆದಿರುವ ವಿದ್ಯಮಾನ ಇದು. ಹಾಗಂತ ಇದೇನು ಹೊಸ ಸಂಪ್ರದಾಯ ಹುಟ್ಟು ಹಾಕಿದ್ದಲ್ಲ. ಯಾವಾಗ ಬಾಲ ಗಂಗಾಧರ ತಿಲಕರು ಸಾರ್ವಜನಿಕ ಗಣೇಶೋತ್ಸವದ ಪರಿಕಲ್ಪನೆ ಸೃಷ್ಟಿಸಿದರೋ ಅಥವಾ ಬೆಳಗಾವಿಯಲ್ಲಿ ಗಣೇಶೋತ್ಸವದ ಸಂಭ್ರಮ ಯಾವಾಗ ಶುರುವಾಯಿತೋ ಅಂಥ ಸ್ವಾತಂತ್ರ್ಯ ಪೂರ್ವ ಕಾಲದಿಂದಲೇ ಹಿಂದು ಮತ್ತು ಮುಸ್ಲಿಮರು ಸೇರಿ ಆಚರಿಸುವ ವಿಶೇಷ ಗಣೇಶೋತ್ಸವವಾಗಿ ಇದು ಗಮನ ಸೆಳೆದಿದೆ.

Bailahongala dargah Ganeshothsava communal harmony

ಜಗತ್ತಿನಲ್ಲಿ, ಸುತ್ತಮುತ್ತ ಏನೇ ನಡೆದರೂ ಅದೆಷ್ಟು ತಲಾಂತರಗಳು ಕಳೆದರೂ, ಪೀಳಿಗೆಗಳು ಬದಲಾದದರೂ ಸೌಹಾರ್ದತೆಯ ಈ ಪರಂಪರೆ ಮಾತ್ರ ಯಾವ ಕಲ್ಮಶಕ್ಕೂ ಒಳಗಾಗದೆ, ಯಾವ ಮಾಲಿನ್ಯಕ್ಕೂ ಕಿವಿಗೊಡದೆ ವರ್ಷ ವರ್ಷವೂ ಇನ್ನಷ್ಟು ಸಮೃದ್ಧವಾಗುತ್ತಿದೆ ಎನ್ನುವುದು ಹಿತವಾದ ಸುದ್ದಿ.

Bailahongala dargah Ganeshothsava communal harmony
ಗಣೇಶೋತ್ಸವ ಆಚರಿಸಿದ ಖುಷಿಯಲ್ಲಿ ಅಲ್ಲಿನ ಜನರು

ಇಲ್ಲಿ ಎಲ್ಲ ಜಾತಿ, ಜನಾಂಗದವರು ದರ್ಗಾದ ಆಚರಣೆ ಮತ್ತು ಪರಂಪರೆಗೆ ಹೊಂದಿಕೊಂಡು ಬದುಕುತ್ತಿದ್ದಾರೆ. ದರ್ಗಾದಲ್ಲಿ ನಡೆಯುವ ಪ್ರತಿ ಧಾರ್ಮಿಕ ಆಚರಣೆ, ವಿಧಿ, ವಿಧಾನಗಳಿಗೆ ತಲೆ ಬಾಗಿ ನಡೆದುಕೊಳ್ಳುವ ಸಂಸ್ಕೃತಿ, ಪರಂಪರೆ ಇಲ್ಲಿಯ ಜನರದ್ದಾಗಿದೆ.

ಕೋಮು ಸೌಹಾರ್ದತೆಗೆ ಸಾಕ್ಷಿ ಗಣಪನ ಪ್ರತಿಷ್ಠಾಪನೆ

ಕಂಠಿ ಗಲ್ಲಿಯಲ್ಲಿರುವ ನಿವಾಸಿಗಳು ಪ್ರತಿ ವರ್ಷ ಒಟ್ಟಿಗೆ ಸೇರಿ ಮೊಹರಂ ಆಚರಣೆ ಮಾಡುತ್ತಾರೆ. ಜೊತೆಗೆ ಗಣೇಶ ಚತುರ್ಥಿಯನ್ನು ಅಷ್ಟೇ ನಯ, ವಿನಯ, ಭಕ್ತಿಭಾವದಿಂದ ಬರ ಮಾಡಿಕೊಂಡು ಗಣೇಶನ ಹಬ್ಬ ಆಚರಣೆ ಮಾಡಿಕೊಂಡು ಬಂದಿದ್ದಾರೆ.

Bailahongala dargah Ganeshothsava communal harmony

ಮುಸ್ಲಿಂ ಬಾಂಧವರಿಂದ ಗಣಪನಿಗೆ ಜೈಘೋಷ

ಹಿಂದೂ, ಮುಸ್ಲಿಂ ಬಾಂಧವರು ಗಣಪನಿಗೆ ಹೂವು ಮಾಲೆ ಹಾಕಿ, ಕಾಯಿ, ಕರ್ಪೂರ ಬೆಳಗಿ, ಗಂಟೆ ಬಾರಿಸಿ, ಆರತಿ ಮಾಡಿ, ನೈವೇದೆ ಸಲ್ಲಿಸಿ ಪ್ರಾರ್ಥಿಸಿದರು. ಅರ್ಚಕರು ಬೋಧಿಸಿದ ಮಂತ್ರ ಘೋಷವನ್ನು ಮುಸ್ಲಿಂ ಬಾಂಧವರು ಭಕ್ತಿಯಿಂದ ನುಡಿದು ಗಜಾನನ ಮಹರಾಜಕೀ ಜೈ ಎಂದು ಘೋಷಣೆ ಹಾಕಿದರು.

ಊರ ಹಿರಿಯರು, ಊರ ಹಿರಿಯರು, ಸಹೃದಯಿಗಳ ಶಕ್ತಿ ಇದು

ಊರಿನ ಹಿರಿಯರಾದ ಮಹಾಂತೇಶ ಹಂಚಿನಮನಿ, ಈರಪ್ಪ ಬೆಂಡಿಗೇರಿ, ಪ್ರಕಾಶ ಪಾಗಾದ, ಅಶೋಕ ಪಾಗಾದ, ವಿಶಾಲ ರೊಡಬಸನವರ, ಸಚಿನ ಹಣಮಶೇಟ, ಕಿರಣ ಪಾಗಾದ, ಉಳವೇಶ ಪಾಗಾದ, ಬಾಬು ಅಡಿಮನಿ, ಶಫೀಕ ಬಡಿಮನಿ, ಜರ್ ನದಾಫ, ಶಿವಲಿಂಗ ಹೂಗಾರ, ಕುಮಾರ ಹೂಗಾರ, ಪ್ರಜ್ವಲ ಹೂಗಾರ, ಅನೇಕರು ಗಣೇಶ ಪ್ರತಿಷ್ಠಾಪನೆ ಜವಾಬ್ದಾರಿ ಹೊತ್ತುಕೊಂಡು ಯಶಸ್ವಿಗೊಳಿಸಿದ್ದಾರೆ.

Bailahongala dargah Ganeshothsava communal harmony
ಪೂಜೆ ಮತ್ತು ಪ್ರಾರ್ಥನೆಯ ಗಳಿಗೆ

ಇದನ್ನೂ ಓದಿ : Communal Harmony : ಗಣೇಶ ಬಪ್ಪ ಮೋರಯಾ ಎಂದ ಮುಸ್ಲಿಮರು; ಗಣಪನ ಶೋಭಾಯಾತ್ರೆಗಾಗಿ ಈದ್‌ ಮೆರವಣಿಗೆಯೇ ಮುಂದಕ್ಕೆ!

ಬೆಳಗಾವಿಯ ಬೈಲಹೊಂಗಲದ ಈ ಪರಂಪರೆಯಂತೆಯೇ ಇನ್ನೂ ಹಲವು ಕಡೆ ಹಿಂದು ಮುಸ್ಲಿಂ ಸೌಹಾರ್ದತೆಯ ನೂರಾರು ಉದಾಹರಣೆಗಳು ದೊರೆಯುತ್ತವೆ. ಇದು ಇನ್ನಷ್ಟು ಬೆಳೆಯಬೇಕು ಮತ್ತು ಹೊಸ ಹೊಸ ಸೌಹಾರ್ದದ ನಿದರ್ಶನಗಳು ಹುಟ್ಟಿಕೊಳ್ಳಬೇಕು ಎನ್ನುವುದೇ ಅಲ್ಲಿನ ಜನ ಆಶಯ.

Bailahongala dargah Ganeshothsava communal harmony in 2022
2022ರಲ್ಲಿ ನಡೆದ ಗಣೇಶೋತ್ಸವದ ಒಂದು ನೋಟ

ಈದ್‌ ಮೆರವಣಿಗೆಯನ್ನೇ ಮುಂದಕ್ಕೆ ಹಾಕಿದ ಬೆಳಗಾವಿಯ ಮುಸ್ಲಿಮರು

ಬೆಳಗಾವಿಯ ಸೌಹಾರ್ದ ಪರಂಪರೆ ಅದೆಷ್ಟು ಶಕ್ತಿಶಾಲಿಯಾಗಿದೆ ಎನ್ನುವುದಕ್ಕೆ ಇನ್ನೊಂದು ಉದಾಹರಣೆ ಇಲ್ಲಿದೆ. ಬೆಳಗಾವಿಯಲ್ಲಿ ಗಣೇಶೋತ್ಸವ ಅದ್ದೂರಿಯಾಗಿ ನಡೆಯುತ್ತದೆ. ಈ ಬಾರಿ ಸೆ. 28ರಂದು ಸಾರ್ವಜನಿಕ ಗಣೇಶೋತ್ಸವವ ಬೃಹತ್‌ ಶೋಭಾಯಾತ್ರೆ ನಡೆಯುತ್ತದೆ. ಈ ಬಾರಿ ಅಂದೇ ಈದ್‌ ಮಿಲಾದ್‌ ಹಬ್ಬವೂ ಬಂದಿದೆ. ಮುಸ್ಲಿಮರು ಕೂಡಾ ನಗರ ಮೆರವಣಿಗೆ ಮೂಲಕ ಇದನ್ನು ಸಂಭ್ರಮಿಸುತ್ತಾರೆ. ಆದರೆ ಎರಡನ್ನೂ ಒಂದೇ ದಿನ ಆಚರಿಸಿದರೆ ವ್ಯವಸ್ಥೆ ಮಾಡುವುದು ಕಷ್ಟವಾಗುತ್ತದೆ, ಕಾನೂನು ಭಂಜಕರಿಗೆ ಅವಕಾಶವಾದೀತು ಎಂದು ಭಾವಿಸಿದ ಮುಸ್ಲಿಂ ಹಿರಿಯರು ತಮ್ಮ ಈದ್‌ ಮೆರವಣಿಗೆಯನ್ನು ಅಕ್ಟೋಬರ್‌ ಒಂದಕ್ಕೆ ಮುಂದೂಡಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕರ್ನಾಟಕ

Dr C N Manjunath: ಮತ್ತೆ ವೈದ್ಯ ವೃತ್ತಿಗೆ ಮರಳಿದ್ದಾರೆ ಹೃದ್ರೋಗ ತಜ್ಞ ಡಾ.ಸಿ.ಎನ್‌. ಮಂಜುನಾಥ್‌

Dr C N Manjunath: ಬೆಂಗಳೂರಿನ ಜಯನಗರದ ಸೌತ್‌ ಎಂಡ್‌ ಸರ್ಕಲ್‌ನಲ್ಲಿರುವ ʼಬೆಂಗಳೂರು ಆಸ್ಪತ್ರೆʼಯ ಹೃದ್ರೋಗ ವಿಭಾಗದ ಮುಖ್ಯಸ್ಥರಾಗಿ ಡಾ. ಸಿ ಎನ್‌ ಮಂಜುನಾಥ್‌ (Dr C N Manjunath) ಕಾರ್ಯಾರಂಭ ಮಾಡಿದ್ದಾರೆ. ಅನಿವಾಸಿ ಭಾರತೀಯ ಕೃಷ್ಣ ಸ್ವರೂಪ ಅವರು ಈ ಆಸ್ಪತ್ರೆಯನ್ನು ಖರೀದಿಸಿ ಇದಕ್ಕೆ ಅತ್ಯಾಧುನಿಕತೆಯ ಸ್ಪರ್ಶ ನೀಡುತ್ತಿದ್ದಾರೆ. ಯಶಸ್ವಿನಿ, ಸುವರ್ಣ ಆರೋಗ್ಯ ಇತ್ಯಾದಿ ಸರ್ಕಾರಿ ವೈದ್ಯಕೀಯ ಯೋಜನೆಗಳು ಈ ಆಸ್ಪತ್ರೆಯಲ್ಲಿ ರೋಗಿಗಳಿಗೆ ಲಭ್ಯ ಆಗಲಿವೆ.

VISTARANEWS.COM

on

Dr C N Manjunath
ಬೆಂಗಳೂರಿನ ಜಯನಗರದ ಸೌತ್‌ ಎಂಡ್‌ ಸರ್ಕಲ್‌ನಲ್ಲಿರುವ ʼಬೆಂಗಳೂರು ಆಸ್ಪತ್ರೆʼಯ ಹೃದ್ರೋಗ ವಿಭಾಗದ ಮುಖ್ಯಸ್ಥರಾಗಿ ಡಾ.ಸಿ.ಎನ್‌ ಮಂಜುನಾಥ್‌ ಕಾರ್ಯಾರಂಭ ಮಾಡಿದ ಸಂದರ್ಭದಲ್ಲಿ ದಿ ಸಿಟಿ ಇನ್‌ಸ್ಟಿಟ್ಯೂಟ್‌ ಉಪಾಧ್ಯಕ್ಷರಾದ ಎಸ್‌ ಸಿ ಚಂದ್ರಶೇಖರ್‌ ಅವರು ಹೂಗುಚ್ಛ ನೀಡಿ ಶುಭ ಕೋರಿದರು.
Koo

ಬೆಂಗಳೂರು: ಬಿಜೆಪಿ ಅಭ್ಯರ್ಥಿಯಾಗಿ ಬೆಂಗಳೂರು ಗ್ರಾಮಾಂತರ ಕ್ಷೇತ್ರದಿಂದ ಸ್ಪರ್ಧಿಸಿದ್ದ ಜಯದೇವ ಹೃದ್ರೋಗ ಆಸ್ಪತ್ರೆಯ ನಿವೃತ್ತ ನಿರ್ದೇಶಕ ಡಾ. ಸಿ.ಎನ್‌. ಮಂಜುನಾಥ್‌ (Dr C N Manjunath) ಅವರು ಫಲಿತಾಂಶ ಬರುವ ಮೊದಲೇ ವೈದ್ಯ ವೃತ್ತಿಗೆ ಮರಳಿದ್ದಾರೆ. ಬೆಂಗಳೂರಿನ ಜಯನಗರದ ಸೌತ್‌ ಎಂಡ್‌ ಸರ್ಕಲ್‌ನಲ್ಲಿರುವ ʼಬೆಂಗಳೂರು ಆಸ್ಪತ್ರೆʼಯ ಹೃದ್ರೋಗ ವಿಭಾಗದ ಮುಖ್ಯಸ್ಥರಾಗಿ ಅವರು ಕಾರ್ಯಾರಂಭ ಮಾಡಿದ್ದಾರೆ.

ʼಬೆಂಗಳೂರು ಆಸ್ಪತ್ರೆʼಯಲ್ಲಿ ಹೊಸದಾಗಿ ಕಾರ್ಡಿಯಾಲಜಿ ವಿಭಾಗ ಆರಂಭಿಸಲಾಗಿದ್ದು, ಇಲ್ಲಿ ಡಾ.ಸಿ.ಎನ್‌. ಮಂಜುನಾಥ್‌ ಅವರು ಸೇವೆ ಸಲ್ಲಿಸಲು ಆರಂಭಿಸಿದ್ದಾರೆ. ಇವರು ವಾರದಲ್ಲಿ ಮೂರು ದಿನ ಈ ಆಸ್ಪತ್ರೆಯಲ್ಲಿ ಹೃದ್ರೋಗಿಗಳಿಗೆ ಲಭ್ಯರಾಗಲಿದ್ದಾರೆ.

ಅನಿವಾಸಿ ಭಾರತೀಯ ಕೃಷ್ಣ ಸ್ವರೂಪ ಅವರು ಈ ಆಸ್ಪತ್ರೆಯನ್ನು ಖರೀದಿಸಿ ಇದಕ್ಕೆ ಅತ್ಯಾಧುನಿಕತೆಯ ಸ್ಪರ್ಶ ನೀಡುತ್ತಿದ್ದಾರೆ. ಬಡವರಿಗೆ ಇಲ್ಲಿ ರಿಯಾಯಿತಿ ದರದಲ್ಲಿ ಚಿಕಿತ್ಸೆ ಸಿಗಲಿದೆ. ಯಶಸ್ವಿನಿ, ಸುವರ್ಣ ಆರೋಗ್ಯ ಇತ್ಯಾದಿ ಸರ್ಕಾರಿ ವೈದ್ಯಕೀಯ ಯೋಜನೆಗಳು ಈ ಆಸ್ಪತ್ರೆಯಲ್ಲಿ ರೋಗಿಗಳಿಗೆ ಲಭ್ಯ ಆಗಲಿವೆ. ಇದು 150 ಬೆಡ್‌ಗಳ ಆಸ್ಪತ್ರೆಯಾಗಿದೆ. ಅತ್ಯಾಧುನಿಕ ಉಪಕರಣಗಳನ್ನು ಅಳವಡಿಸಲಾಗಿದೆ.

ಡಾ.ಸಿ.ಎನ್‌. ಮಂಜುನಾಥ್‌ ಅವರಂಥ ಅಪರೂಪದ ಹೃದ್ರೋಗ ತಜ್ಞರ ಸೇವೆ ಸಾಮಾನ್ಯ ಜನರಿಗೆ ಸಿಗಬೇಕು ಎಂಬ ಉದ್ದೇಶದಿಂದ ಆಸ್ಪತ್ರೆಯ ನೆಲ ಮಹಡಿಯಲ್ಲಿ 50 ಬೆಡ್‌ ಸಾಮರ್ಥ್ಯದ ಹೃದ್ರೋಗ ವಿಭಾಗ ತೆರೆಯಲಾಗಿದೆ. ಮಾಸ್ಟರ್‌ ಹೆಲ್ತ್‌ ಚೆಕಪ್‌ ಸೌಲಭ್ಯವೂ ಇಲ್ಲಿದೆ. ಹೊಸ ತಂತ್ರಜ್ಞಾನದ ಸಿಟಿ ಸ್ಕ್ಯಾನ್‌ ಕೂಡ ಇದೆ ಎಂದು ಈ ಆಸ್ಪತ್ರೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ಅಭಿಷೇಕ್‌ ತಿಳಿಸಿದ್ದಾರೆ.

ಇದನ್ನೂ ಓದಿ | Dietary Guidelines: ಕಡಿಮೆ ದೈಹಿಕ ಚಟುವಟಿಕೆ ಇರುವವರಿಗೆ ಯಾವ ರೀತಿಯ ಆಹಾರ ಸೂಕ್ತ?

Continue Reading

ಕರ್ನಾಟಕ

Murder Case: ಬೆಂಗಳೂರಿನಲ್ಲಿ ಒಂಟಿ ಮಹಿಳೆಯ ಕತ್ತು ಹಿಸುಕಿ ಕೊಲೆ; ಮನೆ ಬಾಡಿಗೆ ಕೇಳುವ ನೆಪದಲ್ಲಿ ಕೃತ್ಯ

Murder Case: ಬೆಂಗಳೂರು ಹೊರವಲಯದ ಕೆಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ ಕೋನಸಂದ್ರದಲ್ಲಿ ಮಹಿಳೆಯ ಹತ್ಯೆ ನಡೆದಿದೆ. ಮಹಿಳೆಯ ಕತ್ತು ಹಿಸುಕಿ ಕೊಲೆ ಮಾಡಿದ ಬಳಿಕ ಆಕೆಯ ಚಿನ್ನದ ಸರವನ್ನು ಕದ್ದು ದುಷ್ಕರ್ಮಿ ಪರಾರಿಯಾಗಿದ್ದಾನೆ.

VISTARANEWS.COM

on

Murder Case
Koo

ಬೆಂಗಳೂರು: ಒಂಟಿ ಮಹಿಳೆಯ ಕತ್ತು ಹಿಸುಕು ಕೊಲೆ‌ (Murder Case) ಮಾಡಿರುವ ಘಟನೆ ನಗರದ ಹೊರವಲಯದ ಕೆಂಗೇರಿ ಪೊಲೀಸ್ ಠಾಣಾ ವ್ಯಾಪ್ತಿಯ ಕೋನಸಂದ್ರದಲ್ಲಿ ನಡೆದಿದೆ. ಮನೆ ಬಾಡಿಗೆ ಕೇಳುವ ನೆಪದಲ್ಲಿ ದುಷ್ಕರ್ಮಿಯೊಬ್ಬ ಕೃತ್ಯ ಎಸಗಿದ್ದಾರೆ. ಸ್ಥಳಕ್ಕೆ ಕೆಂಗೇರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ದಿವ್ಯಾ (32) ಕೊಲೆಯಾದ ಮಹಿಳೆ. ಮಹಿಳೆಯ ಗಂಡ ಗುರುಮೂರ್ತಿ ಕೆಲಸಕ್ಕೆಂದು ಸಲೂನ್‌ ಹೋಗಿದ್ದರು. ಈ ವೇಳೆ ಆರೋಪಿ, ಮಹಿಳೆಯ ಕತ್ತು ಹಿಸುಕಿ ಕೊಲೆಗೈದು ಕುತ್ತಿಯಲ್ಲಿದ್ದ ಚೈನ್ ಕದ್ದು ಪರಾರಿಯಾಗಿದ್ದಾನೆ. ಮಹಿಳೆಯ ಮೃತದೇಹವನ್ನು ಆರ್.ಆರ್. ಆಸ್ಪತ್ರೆಗೆ ರವಾನಿಸಲಾಗಿದೆ.

ಇದನ್ನೂ ಓದಿ | Absence Video: ಅಶ್ಲೀಲ ವಿಡಿಯೋ ಶೇರ್‌, ಅಪ್ಲೋಡ್‌ ಮಾಡುತ್ತಿದ್ದ ಪ್ರಜ್ವಲ್‌ ಮೇಲೆ ಕುದುರೆಮುಖದಲ್ಲಿ ಕೇಸ್‌ ದಾಖಲು!

ಪ್ರೀತಿಸಲು ಓಕೆ, ಮದುವೆಗೆ ನೋ ಎಂದ ಪ್ರಿಯಕರ; ಮನನೊಂದು ಯುವತಿ ಆತ್ಮಹತ್ಯೆ

ಕಲಬುರಗಿ: ಪ್ರಿಯಕರ ಮದುವೆಗೆ ನಿರಾಕರಿಸಿದ್ದಕ್ಕೆ ಯುವತಿ ಮನನೊಂದು ಆತ್ಮಹತ್ಯೆ (Self Harming) ಮಾಡಿಕೊಂಡಿರುವ ಘಟನೆ ಜಿಲ್ಲೆಯ ಕೋಟನೂರು (ಡಿ) ಬಳಿ ಶುಕ್ರವಾರ ನಡೆದಿದೆ.

ಪುಷ್ಪಾ (26) ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಯುವತಿ. ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಕೌಲಗಾ ಗ್ರಾಮದ ಪುಷ್ಪಾ ಪದವಿ ವ್ಯಾಸಂಗ ಮುಗಿಸಿದ್ದು, ಆಳಂದ ತಾಲೂಕಿನ ಕೌಲಗಾ ಗ್ರಾಮದಿಂದ ಕಲಬುರಗಿ ನಗರಕ್ಕೆ ಬಂದು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದಳು. ಹೀಗಾಗಿ ಕೋಟನೂರು ಬಳಿ ಬಾಡಿಗೆ ರೂಮ್‌ ಪಡೆದು ವಾಸವಾಗಿದ್ದಳು. ಈಕೆಯು ಕಳೆದ ನಾಲ್ಕು‌ ವರ್ಷದಿಂದ ಕಲಬುರಗಿಯ ಗಾಂಧಿನಗರದ ನಿವಾಸಿ ಕಿರಣ್ ಎಂಬುವರೊಂದಿಗೆ ಪರಸ್ಪರ ಪ್ರೀತಿಸುತ್ತಿದ್ದರು ಎಂದು ತಿಳಿದುಬಂದಿದೆ.

ಇದನ್ನೂ ಓದಿ: Tata Motors: Tata Ace EV 1000 ಬಿಡುಗಡೆ ಮಾಡಿದ ಟಾಟಾ ಮೋಟರ್ಸ್‌; ಏನಿದರ ವಿಶೇಷತೆ? ದರ ಎಷ್ಟು?

ಕಳೆದ ಕೆಲ ದಿನಗಳಿಂದ ಮೃತ ಯುವತಿ ಪುಷ್ಪಾ, ಕಿರಣ್‌ನನ್ನು‌ ಮದುವೆ ಮಾಡಿಕೊಳ್ಳುವಂತೆ ಒತ್ತಾಯ ಮಾಡುತ್ತಿದ್ದಳು. ಆದರೆ ಕಿರಣ್ ಸದ್ಯ ಈಗಲೇ ಬೇಡ ಎಂದು ನಿರಾಕರಣೆ ಮಾಡಿದ್ದ. ಇದರಿಂದ ಆಕೆ ಬೇಸರಗೊಂಡಿದ್ದಳು ಎನ್ನಲಾಗಿದೆ. ಶುಕ್ರವಾರ ಬೆಳಗ್ಗೆಯಿಂದ ರೂಮ್‌ನಿಂದ ಹೊರ ಬಾರದ ಪುಷ್ಪಾಳ‌ ಮೇಲೆ ಅನುಮಾನಗೊಂಡು ಪಕ್ಕದ‌ ಮನೆಯವರು ರೂಮ್‌ಗೆ ಬಂದು ನೋಡಿದಾಗ ನೇಣು ಬಿಗಿದುಕೊಂಡು‌ ಆತ್ಮಹತ್ಯೆ ಮಾಡಿಕೊಂಡಿರುವುದು ತಿಳಿದುಬಂದಿದೆ. ಕೂಡಲೇ ವಿಶ್ವವಿದ್ಯಾಲಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ವಿಶ್ವವಿದ್ಯಾಲಯ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Self Harming : ಕೊಡಗಿನಲ್ಲಿ ಬಾಲಕಿಯ ರುಂಡ ಕತ್ತರಿಸಿದ್ದ ಪ್ರೇಮಿ ನೇಣಿಗೆ ಶರಣು

ಯುವಕನೊಬ್ಬ ಬಾಲಕಿಯನ್ನು ಎಳೆದೊಯ್ದು ರುಂಡ ಕತ್ತರಿಸಿ ಕೊಲೆ (Murder Case) ಮಾಡಿದ್ದ. ಈ ಘಟನೆಯಿಂದ ಕೊಡಗಿನ ಸೋಮವಾರಪೇಟೆಯ ಸುರ್ಲಬ್ಬಿ ಗ್ರಾಮಸ್ಥರು ಬೆಚ್ಚಿಬಿದ್ದಿದ್ದರು. ಮೀನಾ ಎಂಬಾಕೆಯನ್ನು ಕೊಲೆ ಮಾಡಿ ತಲೆಮರೆಸಿಕೊಂಡಿದ್ದ ಆರೋಪಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದರು. ಇದೇ ವೇಳೆ ಆರೋಪಿ ಪ್ರಕಾಶ್‌ ತನ್ನ ಮನೆಯ ಸಮೀಪದಲ್ಲೆ ನೇಣಿಗೆ (Self Harming) ಶರಣಾಗಿದ್ದಾನೆ. ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಹಮ್ಮಿಯಾಲದಲ್ಲಿ ಘಟನೆ ನಡೆದಿದೆ.

ಬಾಲಕಿಯ ಹತ್ಯೆ ಪ್ರಕರಣದ ಆರೋಪಿ ಪ್ರಕಾಶ್‌ ರುಂಡ ಸಮೇತ ನಾಪತ್ತೆಯಾಗಿದ್ದ. ಆದರೆ ಶುಕ್ರವಾರ ಆತನ ಮನೆಯ ಸಮೀಪದಲ್ಲೇ ನೇಣು ಬಿಗಿದ ಸ್ಥಿತಿಯಲ್ಲಿ ಮೃತದೇಹವು ಪತ್ತೆಯಾಗಿದೆ. ಆದರೆ ಪ್ರಕಾಶ್ ತೆಗೆದುಕೊಂಡು ಹೋಗಿದ್ದ ಬಾಲಕಿಯ ರುಂಡ ಪತ್ತೆಯಾಗಿಲ್ಲ. ಸದ್ಯ ಬಾಲಕಿಯ ರುಂಡ ಪತ್ತೆಗೆ ಪೊಲೀಸರು ಶೋಧ ಆರಂಭಿಸಿದ್ದಾರೆ. ಜತೆಗೆ ಆರೋಪಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ.

ಇದನ್ನೂ ಓದಿ: Karnataka Weather : ಬಿರುಗಾಳಿ ಸಹಿತ ಭಾರಿ ಮಳೆ; ಸಿಡಿಲು ಬಡಿದು ಮಹಿಳೆ ಸೇರಿ ಶ್ವಾನ ಸಾವು‌, ಮತ್ತೊಬ್ಬ ಗಂಭೀರ

ಏನಿದು ಘಟನೆ?

ಮೀನಾ ಇನ್ನೂ ಹತ್ತನೇ ಕ್ಲಾಸ್‌ ಓದುತ್ತಿದ್ದ ಅಪ್ರಾಪ್ತೆ ಆಗಿದ್ದಳು. ಹೀಗಾಗಿ ಗುರುವಾರ ಮಧ್ಯಾಹ್ನ ಪೊಲೀಸರ ಸಮ್ಮುಖದಲ್ಲಿ ಮದುವೆ ನಿಶ್ಚಿತಾರ್ಥ ರದ್ದಾಗಿತ್ತು. ಸಂಜೆ ವೇಳೆ ಆಕೆಯ ಮನೆಗೆ ನುಗ್ಗಿದ ಆರೋಪಿ ಪ್ರಕಾಶ್‌ ಮೀನಾಳನ್ನು ಎಳೆದೊಯ್ದು ಕತ್ತು ಕೊಯ್ದಿದ್ದ. ನಂತರ ದೇಹವನ್ನು ಬಿಸಾಡಿ ರುಂಡ ಕೊಂಡೊಯ್ದಿದ್ದ. ಭೀಕರ ಘಟನೆಯು ಸುತ್ತಲಿನ ಜನರನ್ನು ಬೆಚ್ಚಿ ಬೀಳಿಸಿತ್ತು.

ಆಕೆ ಎಸ್​ಎಸ್​ಎಲ್​ಸಿ ಪರೀಕ್ಷೆ ಬರೆದು ಗುರುವಾರವಷ್ಟೇ ಫಲಿತಾಂಶ ಪ್ರಕಟಗೊಂಡಿತ್ತು. ಇದೇ ವೇಳೆ ನಿಶ್ಚಿತಾರ್ಥ ನಿಗದಿಯಾಗಿತ್ತು. ಅಪ್ರಾಪ್ತ ವಯಸ್ಸಿನವಳಾಗಿದ್ದ ಕಾರಣ ಮೀನಾ ಮದುವೆ ನಿಶ್ಚಿತಾರ್ಥವನ್ನು ರದ್ದು ಮಾಡಲಾಗಿತ್ತು. ಪೊಲೀಸರೇ ಮುಂದೆ ನಿಂತು ಮದುವೆಯನ್ನು ಕೊನೆಗೊಳಿಸಿದ್ದರು. ಆದರೆ ಸಂಜೆ ವೇಳೆಗೆ ಆಕೆಯನ್ನು ಎಳೆದೊಯ್ದು ಪ್ರಕಾಶ್‌ ಕೊಲೆ ಮಾಡಿದ್ದ.

ಬಾಲಕಿಯನ್ನು ಆರೋಪಿ ಪ್ರಕಾಶ್‌ ಪ್ರೀತಿಸುತ್ತಿದ್ದ ಎನ್ನಲಾಗಿದೆ. ಆದರೆ, ಅವರ ಮದುವೆಗೆ ಒಪ್ಪಿಗೆ ಸಿಕ್ಕಿರಲಿಲ್ಲ. ಬಾಲಕಿಗೆ ಮದುವೆಯ ಕಾನೂನುಬದ್ಧ ವಯಸ್ಸಾಗದ ಕಾರಣ ಪೊಲೀಸರು ಅದಕ್ಕೆ ತಡೆಯೊಡ್ಡಿದ್ದರು ಎನ್ನಲಾಗಿದೆ. ಇದರಿಂದ ಆರೋಪಿ ಕೆರಳಿದ್ದ. ಸಂಜೆ ವೇಳೆ ಬಾಲಕಿಯ ಮನೆಗೆ ನುಗ್ಗಿದ ಆತ ಅಲ್ಲಿಂದ ಎಳೆದೊಯ್ದಿದ್ದ. ಬಳಿಕ ಕತ್ತು ಕತ್ತರಿಸಿ ಕೊಲೆ ಮಾಡಿ ರುಂಡವನ್ನು ತೆಗೆದುಕೊಂಡು ಹೋಗಿದ್ದ.

ಇದನ್ನೂ ಓದಿ: Manisha Koirala: ಕ್ಯಾನ್ಸರ್‌ ವಿರುದ್ಧ ಹೋರಾಡಿದ್ದು ಹೇಗೆ? ಅನುಭವ ಹಂಚಿಕೊಂಡ ಮನೀಶಾ ಕೊಯಿರಾಲ

ಎಸ್​ಎಸ್​ಎಲ್​ಸಿ ಪಾಸಾಗಿದ್ದ ಬಾಲಕಿ

ಕರ್ನಾಟಕ ಪ್ರೌಢ ಶಿಕ್ಷಣ ಮಂಡಳಿ ಗುರುವಾರವಷ್ಟೇ ಫಲಿತಾಂಶ ಪ್ರಕಟಿಸಿತ್ತು. ಅಂತೆಯೇ ಸುರ್ಲಬ್ಬಿ ಸರ್ಕಾರಿ ಹೈಸ್ಕೂಲ್​ನ ಏಕೈಕ 10ನೇ ತರಗತಿ ವಿದ್ಯಾರ್ಥಿನಿಯಾಗಿದ್ದ ಮೀನಾ ಪರೀಕ್ಷೆಯಲ್ಲಿ ಪಾಸಾಗಿದ್ದರು. ಆಕೆ ತೇರ್ಗಡೆಗೊಂಡಿರುವ ಸಂಗತಿ ಶಾಲಾ ಅಧ್ಯಾಪಕರಿಗೆ ಸಂತಸ ತಂದಿದ್ದು. ಅಲ್ಲದೆ ಶಾಲೆಯಲ್ಲಿ ಶೇಕಡಾ 100 ಫಲಿತಾಂಶ ಬಂದಿತ್ತು. ಆದರೆ ಸಂಜೆಯ ವೇಳೆಗೆ ಬಾಲಕಿ ಭಯಾನಕವಾಗಿ ಕೊಲೆಯಾಗಿದ್ದಳು.

Continue Reading

ಕಲಬುರಗಿ

Self Harming: ಪ್ರೀತಿಸಲು ಓಕೆ, ಮದುವೆಗೆ ನೋ ಎಂದ ಪ್ರಿಯಕರ; ಮನನೊಂದು ಯುವತಿ ಆತ್ಮಹತ್ಯೆ

Self Harming: ಪ್ರಿಯಕರ ಮದುವೆಗೆ ನಿರಾಕರಿಸಿದ್ದಕ್ಕೆ ಯುವತಿ ಮನನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಲಬುರಗಿ ಜಿಲ್ಲೆಯ ಕೋಟನೂರು (ಡಿ) ಬಳಿ ಶುಕ್ರವಾರ ನಡೆದಿದೆ. ಕಲಬುರಗಿ ಜಿಲ್ಲೆಯ ಆಳಂದ ತಾಲೂಕಿನ ಕೌಲಗಾ ಗ್ರಾಮದ ಪುಷ್ಪಾ (26) ಎಂಬ ಯುವತಿ ರೂಮ್‌ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

VISTARANEWS.COM

on

Lover refused to marriage Young woman committed suicide in kalaburagi

Prajwal Revanna Case: ರೇವಣ್ಣ ಬಸವನಗುಡಿ ನಿವಾಸದಲ್ಲಿ 2ನೇ ಬಾರಿ ಸ್ಥಳ ಮಹಜರು

Prajwal Revanna Case: ರೇವಣ್ಣ ಅವರ ಬಸವನಗುಡಿಯ ಶಿವಸ್ಮಿತ ನಿವಾಸಕ್ಕೆ ಎಸ್ಐಟಿ‌ ಅಧಿಕಾರಿಗಳು ತೆರಳಿ ಸ್ಥಳ ಮಹಜರು ನಡೆಸಿದ್ದಾರೆ.

VISTARANEWS.COM

on

Prajwal Revanna Case
Koo

ಬೆಂಗಳೂರು: ಹಾಸನ ಅಶ್ಲೀಲ ವಿಡಿಯೊ ಪ್ರಕರಣ ಸಂಬಂಧಪಟ್ಟಂತೆ ಎಚ್.ಡಿ. ರೇವಣ್ಣ ನಿವಾಸದಲ್ಲಿ ನಡೆದಿದೆ ಎನ್ನಲಾದ ಅತ್ಯಾಚಾರ ಪ್ರಕರಣದ ತನಿಖೆ ಭಾಗವಾಗಿ ರೇವಣ್ಣ ಅವರ ಬಸವನಗುಡಿಯ ನಿವಾಸದಲ್ಲಿ ಎಸ್‌ಐಟಿ 2ನೇ ಬಾರಿ ಸ್ಥಳ ಮಹಜರು ನಡೆಸಿದೆ. ಕಳೆದ ನಾಲ್ಕು ದಿನಗಳ ಹಿಂದಷ್ಟೇ ಅಧಿಕಾರಿಗಳು ಸ್ಥಳ ಮಹಜರು ನಡೆಸಿದ್ದರು, ಇದೀಗ 2ನೇ ಬಾರಿ ಸಂತ್ರಸ್ತೆ ಸಮ್ಮುಖದಲ್ಲಿ ಎಸ್‌ಐಟಿ ತಂಡ ಮಹಜರು ಕೈಗೊಂಡಿದೆ.

ರೇವಣ್ಣ ಅವರ ಬಸವನಗುಡಿಯ ಶಿವಸ್ಮಿತ ನಿವಾಸಕ್ಕೆ ಎರಡು ಜೀಪ್‌ಗಳಲ್ಲಿ ಎಸ್ಐಟಿ‌ ಅಧಿಕಾರಿಗಳು ತೆರಳಿ ಪರಿಶೀಲನೆ ನಡೆಸಿದ್ದಾರೆ. ಸಂತ್ರಸ್ತೆ ಸಮ್ಮುಖದಲ್ಲಿ ವಿಡಿಯೊ ರೆಕಾರ್ಡ್ ಸಹಿತ ಅಧಿಕಾರಿಗಳು ಮಹಜರು ನಡೆಸಿದ್ದಾರೆ.
ಮನೆಯ ಹಾಲ್, ಪಾರ್ಕಿಂಗ್, ಅಡುಗೆಮನೆ, ಬಾಲ್ಕನಿ ಸೇರಿ ಹಲವು ಕಡೆ ಪರಿಶೀಲನೆ ನಡೆಸಿ, ಸಂತ್ರಸ್ತೆಯಿಂದ ಮಾಹಿತಿ ಪಡೆದಿದ್ದಾರೆ.

ಇದನ್ನೂ ಓದಿ | Prajwal Revanna Case: ಸೋಮವಾರ ರೇವಣ್ಣ ಜಾಮೀನು ಅರ್ಜಿ ವಿಚಾರಣೆ: SIT ವಾದ ಏನು? ವಕೀಲ ನಾಗೇಶ್‌ ಕೌಂಟರ್‌ ಏನು?

ಸಿಐಡಿ ಸೈಬರ್‌ಸೆಲ್‌ನಲ್ಲಿ ದಾಖಲಾಗಿದ್ದ ಅತ್ಯಾಚಾರ ಪ್ರಕರಣದ ಸ್ಥಳವನ್ನು ಎಸ್‌ಐಟಿ ಅಧಿಕಾರಿಗಳು ಮಹಜರು ಮಾಡಿದ್ದಾರೆ. ಈಗಾಗಲೇ ನ್ಯಾಯಾಧೀಶರ ಎದುರು ಕಳೆದ ಶುಕ್ರವಾರ (ಮೇ 3) ಸಿಎಆರ್‌ಪಿಸಿ 164 ಅಡಿಯಲ್ಲಿ ಸಂತ್ರಸ್ತ ಮಹಿಳೆ ತಮ್ಮ ಹೇಳಿಕೆಯನ್ನು ದಾಖಲಿಸಿದ್ದರು. ವಿಚಾರಣೆ ವೇಳೆ ತನ್ನನ್ನು ಹಾಸನದ ಎಂಪಿ ಕ್ವಾರ್ಟರ್ಸ್‌ ಮಾತ್ರವಲ್ಲದೆ ಬೆಂಗಳೂರಿನ ನಿವಾಸದಲ್ಲಿ ಸಹ ಅತ್ಯಾಚಾರ ಎಸಗಿದ್ದಾರೆ ಎಂದು ಹೇಳಿದ್ದರು. ಹೀಗಾಗಿ ಅತ್ಯಾಚಾರ ಪ್ರಕರಣದ ಬಗ್ಗೆ ಬೆಂಗಳೂರಿನಲ್ಲಿರುವ ಎಚ್.ಡಿ. ರೇವಣ್ಣ ಅವರ ಬಸವನಗುಡಿ ನಿವಾಸದಲ್ಲಿ 2ನೇ ಬಾರಿ ಮಹಜರು ಮಾಡಲಾಗಿದೆ.

ಭವಾನಿ ರೇವಣ್ಣಗೆ SIT 2ನೇ ನೋಟಿಸ್‌; ರೇವಣ್ಣ ಫ್ಯಾಮಿಲಿಗೆ ಭಾರಿ ಸಂಕಷ್ಟ!

Prajwal Revanna Case SIT issues 2nd notice to Bhavani Revanna Big trouble for Revanna family

ಬೆಂಗಳೂರು: ಪ್ರಜ್ವಲ್‌ ರೇವಣ್ಣ (Prajwal Revanna Case) ಅವರದ್ದು ಎನ್ನಲಾದ ಅಶ್ಲೀಲ ವಿಡಿಯೊ ಪ್ರಕರಣಕ್ಕೆ ಸಂಬಂಧಪಟ್ಟಂತೆ ಹಾಗೂ ಮೈಸೂರಿನ ಕೆ.ಆರ್.‌ ನಗರದ ಸಂತ್ರಸ್ತೆಯನ್ನು ಅಪಹರಣ ಮಾಡಿದ ಕೇಸ್‌ ದಿನೇ ದಿನೆ ಜಟಿಲವಾಗುತ್ತಿದೆ. ಇನ್ನು ಈ ಪ್ರಕರಣಗಳ ಸಂಬಂಧ ಎಚ್‌.ಡಿ. ರೇವಣ್ಣ (HD Revanna) ಅವರ ಪತ್ನಿ ಭವಾನಿ ರೇವಣ್ಣ (Bhavani Revanna) ಅವರಿಗೆ ವಿಚಾರಣೆಗೆ ಹಾಜರಾಗುವಂತೆ ಎಸ್‌ಐಟಿ ಎರಡನೇ ನೋಟಿಸ್ ನೀಡಿದೆ.

ಮೊದಲ ನೋಟಿಸ್ ಉತ್ತರಿಸದ ಹಿನ್ನೆಲೆಯಲ್ಲಿ ಎರಡನೇ ನೋಟಿಸ್ ಜಾರಿ ಮಾಡಲಾಗಿದೆ. ರೇವಣ್ಣ ಮೇಲೆ ಕೇಳಿ ಬಂದಿರುವ ಅಪಹರಣ ಪ್ರಕರಣದಲ್ಲಿ ಕೇಸ್‌ನಲ್ಲಿ ಕುಮ್ಮಕ್ಕು ಕೊಟ್ಟ ಆರೋಪವನ್ನು ಭವಾನಿ ರೇವಣ್ಣ ಹೊತ್ತಿದ್ದಾರೆ. ಈ ಸಂಬಂಧ ಹಲವಾರು ಪ್ರಶ್ನೆಗಳನ್ನು ಕೇಳಲು ಎಸ್‌ಐಟಿ ಸಿದ್ಧವಾಗಿದೆ. ಆದರೆ, ಭವಾನಿ ವಿಚಾರಣೆಗೆ ಹಾಜರಾಗದೆ ತಪ್ಪಿಸಿಕೊಳ್ಳುತ್ತಿದ್ದಾರೆ. ಈ ಬಾರಿಯೂ ಭವಾನಿ ವಿಚಾರಣೆಗೆ ಹಾಜರಾಗದಿದ್ದರೆ ಎಸ್‌ಐಟಿ ಮುಂದಿನ ಕ್ರಮಗಳನ್ನು ತೆಗೆದುಕೊಳ್ಳಲು ಸಿದ್ಧತೆ ನಡೆಸಿದೆ. ಈ ಹಿನ್ನೆಲೆಯಲ್ಲಿ ರೇವಣ್ಣ ಕುಟುಂಬಕ್ಕೆ ಮತ್ತಷ್ಟು ಸಂಕಷ್ಟ ಎದುರಾಗಲಿದೆ.

ಈಗಾಗಲೇ ಕಿಡ್ನ್ಯಾಪ್ ಪ್ರಕರಣದಲ್ಲಿ ಎಚ್‌.ಡಿ. ರೇವಣ್ಣ ಜೈಲು ಸೇರಿದ್ದಾರೆ. ಜಾಮೀನು ಸಿಗುವವರೆಗೂ ರೇವಣ್ಣಗೆ ಬಿಡುಗಡೆ ಭಾಗ್ಯ ಇಲ್ಲ. ಆದರೆ, ಎಸ್‌ಐಟಿ ಪರ ವಕೀಲರು ಯಾವುದೇ ಕಾರಣಕ್ಕೂ ಎಚ್.ಡಿ. ರೇವಣ್ಣ ಅವರಿಗೆ ಬೇಲ್‌ ಕೊಡಬಾರದು ಎಂದು ಮನವಿ ಮಾಡಿದ್ದಾರೆ. ಇವರು ಪ್ರಭಾವಿ ರಾಜಕಾರಣಿಯಾಗಿದ್ದು, ಬೇಲ್ ಸಿಕ್ಕರೆ ಸಾಕ್ಷಿ ನಾಶ ಮಾಡುತ್ತಾರೆ ಎಂದು ವಾದ ಮಂಡಿಸಿದ್ದಾರೆ.

ಇನ್ನು ಪ್ರಜ್ವಲ್ ರೇವಣ್ಣ ಅವರ ಬಂಧನಕ್ಕೆ ಮೊದಲು ಎಚ್.ಡಿ. ರೇವಣ್ಣ ಅವರ ಬಿಡುಗಡೆ ಅಸಾಧ್ಯ ಎಂದು ಹೇಳಲಾಗುತ್ತಿದೆ. ಪ್ರಜ್ವಲ್ ಎಸ್ಐಟಿಗೆ ಸಿಗುವವರೆಗೂ ರೇವಣ್ಣ ಅವರಿಗೆ ಜಾಮೀನು ಅನುಮಾನವಾಗಿದೆ. ಇನ್ನು ಪ್ರಜ್ವಲ್ ಯಾವುದೇ ಕ್ಷಣದಲ್ಲಿ ದೇಶಕ್ಕೆ ಬಂದರೂ ಎಸ್ಐಟಿ ಬಂಧಿಸುವುದು ಪಕ್ಕಾ ಆಗಿದೆ.

Continue Reading
Advertisement
IPL 2024
ಕ್ರೀಡೆ10 mins ago

IPL 2024 : “ಶಾರುಖ್​ ಎಂದೂ ನಮ್ಮನ್ನು ಪ್ರಶ್ನಿಸಿಲ್ಲ”, ಎಲ್​ಎಸ್​​ಜಿ ಮಾಲೀಕನಿಗೆ ತಿರುಗೇಟು ಕೊಟ್ಟ ಗಂಭೀರ್​

Dr C N Manjunath
ಕರ್ನಾಟಕ10 mins ago

Dr C N Manjunath: ಮತ್ತೆ ವೈದ್ಯ ವೃತ್ತಿಗೆ ಮರಳಿದ್ದಾರೆ ಹೃದ್ರೋಗ ತಜ್ಞ ಡಾ.ಸಿ.ಎನ್‌. ಮಂಜುನಾಥ್‌

Murder Case
ಕರ್ನಾಟಕ35 mins ago

Murder Case: ಬೆಂಗಳೂರಿನಲ್ಲಿ ಒಂಟಿ ಮಹಿಳೆಯ ಕತ್ತು ಹಿಸುಕಿ ಕೊಲೆ; ಮನೆ ಬಾಡಿಗೆ ಕೇಳುವ ನೆಪದಲ್ಲಿ ಕೃತ್ಯ

Akbar Nagar
ದೇಶ41 mins ago

Akbar Nagar: ಉತ್ತರ ಪ್ರದೇಶದ ಅಕ್ಬರ್‌ ನಗರದ ಅಕ್ರಮ ಮನೆಗಳ ಧ್ವಂಸಕ್ಕೆ ಸುಪ್ರೀಂ ಕೋರ್ಟ್‌ ಅಸ್ತು!

Colin Munro
ಪ್ರಮುಖ ಸುದ್ದಿ58 mins ago

Colin Munro : ನ್ಯೂಜಿಲ್ಯಾಂಡ್​ ಟಿ20 ಸ್ಪೆಷಲಿಸ್ಟ್​ ಅಟಗಾರ ನಿವೃತ್ತಿ; ಈ ಆಟಗಾರನ ಸಾಧನೆಗಳ ವಿವರ ಇಲ್ಲಿದೆ

T20 world cup
ಕ್ರೀಡೆ1 hour ago

T20 World Cup : ವಿಶ್ವ ಕಪ್​ಗೆ ಭಾರತ ತಂಡ ಪ್ರಯಾಣಿಸುವ ದಿನಾಂಕ ಪ್ರಕಟಿಸಿದ ಜಯ್​ ಶಾ

Dietary Guidelines
Latest2 hours ago

Dietary Guidelines: ಕಡಿಮೆ ದೈಹಿಕ ಚಟುವಟಿಕೆ ಇರುವವರಿಗೆ ಯಾವ ರೀತಿಯ ಆಹಾರ ಸೂಕ್ತ?

Lover refused to marriage Young woman committed suicide in kalaburagi
ಕಲಬುರಗಿ2 hours ago

Self Harming: ಪ್ರೀತಿಸಲು ಓಕೆ, ಮದುವೆಗೆ ನೋ ಎಂದ ಪ್ರಿಯಕರ; ಮನನೊಂದು ಯುವತಿ ಆತ್ಮಹತ್ಯೆ

Jay Shah
ಪ್ರಮುಖ ಸುದ್ದಿ2 hours ago

Jay Shah : ”ನಾನವನಲ್ಲ, ನಾನವನಲ್ಲ”; ಶ್ರೇಯಸ್​, ಇಶಾನ್ ವಿವಾದಕ್ಕೆ ಸ್ಪಷ್ಟನೆ ನೀಡಿದ ಜಯ್​ ಶಾ

Naxals K
ದೇಶ2 hours ago

Naxals Encounter: ಛತ್ತೀಸ್‌ಗಢದಲ್ಲಿ ಭದ್ರತಾ ಸಿಬ್ಬಂದಿ ಭರ್ಜರಿ ಬೇಟೆ; 12 ನಕ್ಸಲರ ಹತ್ಯೆ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Physical Abuse The public prosecutor called the client woman to the lodge
ಕ್ರೈಂ7 hours ago

Physical Abuse : ಲೈಂಗಿಕ ದೌರ್ಜನ್ಯ; ಕಕ್ಷಿದಾರ ಮಹಿಳೆಯನ್ನು ಮಂಚಕ್ಕೆ ಕರೆದ ಪಬ್ಲಿಕ್ ಪ್ರಾಸಿಕ್ಯೂಟರ್!

murder case kalaburagi
ಕಲಬುರಗಿ8 hours ago

Murder Case : ಕಾಂಗ್ರೆಸ್‌ಗೆ ವೋಟ್‌ ಹಾಕಿದ್ದಕ್ಕೆ ಅಮಾವಾಸ್ಯೆ ದಿನ ಕರೆದು ಕೊಂದರು

Rain Effect In karnataka
ಮಳೆ10 hours ago

Rain Effect : ಬಿರುಗಾಳಿ ರಭಸಕ್ಕೆ ಮನೆಯ ಗೇಟ್ ಬಿದ್ದು ಬಾಲಕಿ ಸಾವು; ಸಿಡಿಲಿಗೆ ಎತ್ತುಗಳು ಬಲಿ

Dina Bhavishya
ಭವಿಷ್ಯ16 hours ago

Dina Bhavishya: ಶುಭ ಶುಕ್ರವಾರ ಈ ರಾಶಿಯವರಿಗೆ ಖುಲಾಯಿಸಲಿದೆ ಲಕ್‌

Prajwal Revanna case Revanna bail plea to be heard on Monday Advocate Nagesh argument was as follows
ಕ್ರೈಂ23 hours ago

Prajwal Revanna Case: ರೇವಣ್ಣ ಜಾಮೀನು ಅರ್ಜಿ ಸೋಮವಾರಕ್ಕೆ: ಎಸ್‌ಐಟಿಗೆ ಹಿಗ್ಗಾಮುಗ್ಗಾ ತರಾಟೆ; ವಕೀಲ ನಾಗೇಶ್‌ ವಾದ ಹೀಗಿತ್ತು!

Prajwal Revanna Case Hasanambe is going to destroy this government HD Kumaraswamy curse
ರಾಜಕೀಯ1 day ago

Prajwal Revanna Case: ಈ ಸರ್ಕಾರವನ್ನು ಹಾಸನಾಂಬೆ ಧ್ವಂಸ ಮಾಡಲಿದ್ದಾಳೆ: ಎಚ್‌ಡಿಕೆ ಶಾಪ

Prajwal Revanna Case DK Shivakumar alleged mastermind in 25000 pen drive allotment
ಹಾಸನ1 day ago

Prajwal Revanna Case: 25,000 ಪೆನ್ ಡ್ರೈವ್ ಹಂಚಿಕೆಯಲ್ಲಿ ಡಿ.ಕೆ. ಶಿವಕುಮಾರ್ ಮಾಸ್ಟರ್ ಮೈಂಡ್ ಎಂದು ರಾಜ್ಯಪಾಲರಿಗೆ ದೂರು!

SSLC Result 2024 what is the reason for most of the students fail in SSLC
ಕರ್ನಾಟಕ1 day ago

SSLC Result 2024: ಎಸ್‌ಎಸ್‌ಎಲ್‌ಸಿಯಲ್ಲಿ ಹೆಚ್ಚಿನ ಮಕ್ಕಳು ಫೇಲ್‌ ಆಗಲು ಶಿಕ್ಷಣ ಇಲಾಖೆಯ ಈ ನಿರ್ಧಾರವೇ ಕಾರಣ!

Sslc exam Result 2024
ಶಿಕ್ಷಣ1 day ago

SSLC Result 2024 : ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಫೇಲಾದರೂ, ಕಡಿಮೆ ಅಂಕ ಬಂದರೂ ಡೋಂಟ್‌ ವರಿ; ಇನ್ನೂ ಇದೆ ಎರಡು ಚಾನ್ಸ್‌!

SSLC Result 2024 secret behind 20 percent grace marks
ಕರ್ನಾಟಕ1 day ago

SSLC Result 2024: ಎಸ್‌ಎಸ್‌ಎಲ್‌ಸಿಯಲ್ಲಿ ಈ ಬಾರಿ ನೂರಕ್ಕೆ 25 ಅಂಕ ಪಡೆದವರೂ ಪಾಸ್! ಶೇ. 20 ಗ್ರೇಸ್ ಮಾರ್ಕ್ಸ್ ಕೊಟ್ಟಿದ್ದರ ಹಿಂದಿದೆ ಇಂಟರೆಸ್ಟಿಂಗ್ ಕತೆ!

ಟ್ರೆಂಡಿಂಗ್‌