Ramanagar News : ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ಹೂವಿನ ವ್ಯಾಪಾರಿ! - Vistara News

ಕ್ರೈಂ

Ramanagar News : ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ಹೂವಿನ ವ್ಯಾಪಾರಿ!

Self Harming : ಫುಟ್‌ಪಾತ್‌ನಲ್ಲಿ ಹೂವಿನ ವ್ಯಾಪಾರ ಮಾಡುತ್ತಿದ್ದ ಯುವಕನೊರ್ವ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ರಾಮನಗರದಲ್ಲಿ (Ramanagar News) ನಡೆದಿದೆ.

VISTARANEWS.COM


on

Ravichandhra and family Cryimg
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ರಾಮನಗರ: ಕನಕಪುರ ತಾಲೂಕಿನ ದೊಡ್ಡಾಲಹಳ್ಳಿ ಗ್ರಾಮದಲ್ಲಿ ವಿಷ ಸೇವಿಸಿ ಯುವಕನೊರ್ವ ಆತ್ಮಹತ್ಯೆಗೆ (Self Harming) ಶರಣಾಗಿದ್ದಾನೆ. ರವಿಚಂದ್ರ (35) ಆತ್ಮಹತ್ಯೆಗೆ ಶರಣಾದ ಯುವಕ.

ರವಿಚಂದ್ರ ಫುಟ್‌ಪಾತ್‌ನಲ್ಲಿ ಹೂವಿನ ವ್ಯಾಪಾರ ಮಾಡುತ್ತಿದ್ದ. ಇತ್ತೀಚೆಗೆ ವ್ಯಾಪಾರದ ವಿಚಾರವಾಗಿ ಬಾಡಿಗೆ ಅಂಗಡಿಯವರಿಗೂ ರವಿಚಂದ್ರನಿಗೂ ಗಲಾಟೆ ನಡೆದಿತ್ತು.ಈ ಘಟನೆಯಿಂದ ಮನನೊಂದು ಶುಕ್ರವಾರ ಬೆಳಗ್ಗೆ ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾಗಿದ್ದಾನೆ.

Protest
ಕುಟುಂಬಸ್ಥರ ಆಕ್ರೋಶ

ಇತ್ತ ರಸ್ತೆಯಲ್ಲಿ ಮೃತ ಯುವಕನ ಶವವಿಟ್ಟು ಕುಟುಂಬಸ್ಥರ ಪ್ರತಿಭಟನೆ ನಡೆಸಿದ್ದಾರೆ. ಟೈರ್‌ಗೆ ಬೆಂಕಿ ಹಚ್ಚಿ ಆಕ್ರೋಶ ಹೊರಹಾಕಿರುವ ಘಟನೆ ಸಾತನೂರು ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಇದನ್ನೂ ಓದಿ: Assault Case : ಅಪ್ಪನ ಹಳೇ ದ್ವೇಷಕ್ಕೆ ಲಾಂಗು ಬೀಸಿದ ಮಗ; ವ್ಯಕ್ತಿಯ ಹೆಬ್ಬೆರಳು ಕಟ್‌!

ಸಾಯಲೆಂದೇ ಧರ್ಮಸ್ಥಳಕ್ಕೆ ಹೋಗಿದ್ದ ಆಕೆ ಮರಳಿ ಬಂದು ಕಟ್ಟಡದಿಂದ ಜಿಗಿದಳು!

ಆಕೆ ಸಾಯಲೆಂದೇ ನಿರ್ಧಾರ ಮಾಡಿದಂತಿದೆ. ಅದಕ್ಕಾಗಿ ಆಕೆ ಯಾರಿಗೂ ಹೇಳದೆ ಒಬ್ಬಂಟಿಯಾಗಿ ಧರ್ಮಸ್ಥಳಕ್ಕೂ (Dharmasthala Kshetra) ಹೋಗಿದ್ದಳು. ಆದರೆ, ಯಾವುದೋ ಕಾರಣಕ್ಕೆ ಆಗಿರಲಿಲ್ಲ. ಮರಳಿ ಬೆಂಗಳೂರಿಗೆ ಬಂದಿದ್ದ ಆಕೆ ಈಗ ದೊಡ್ಡ ಕಟ್ಟಡವೊಂದರಿಂದ ಜಿಗಿದು ಪ್ರಾಣ ಕಳೆದುಕೊಂಡಿದ್ದಾಳೆ (Girl ends life by jumping from Building). ಏನೋ ಹೇಳಲಾಗದ ನೋವು, ಯಾತನೆ, ಖಿನ್ನತೆ (Suffering from Depression) 17 ವರ್ಷ ಹುಡುಗಿಯ (17 year old girl) ಜೀವನವನ್ನು ಕಸಿದುಕೊಂಡಿದೆ (Self Harming).

ಹೀಗೆ ಆತ್ಮಹತ್ಯೆ ಮಾಡಿಕೊಂಡ 17 ವರ್ಷದ ವಿದ್ಯಾರ್ಥಿನಿಯ (17 year old girl) ಹೆಸರು ವಿಜಯಲಕ್ಷ್ಮಿ. ಪ್ರಥಮ ಪಿಯುಸಿ (PUC Student) ಓದುತ್ತಿದ್ದ ಆಕೆ ಈಗ ಹೆಣವಾಗಿದ್ದಾಳೆ.

ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದು ಬ್ಯಾಟರಾಯನಪುರ ಬಳಿ ಇರುವ ಬ್ರೈಡ್ ಅಪಾರ್ಟ್ಮೆಂಟ್ ಕಟ್ಟಡದ ಮೇಲಿಂದ ಜಿಗಿದು. ಮುಂದೇನು ಎನ್ನುವ ಪ್ರಶ್ನೆ ಗಾಢವಾಗಿ ಕಾಡಿದಂತಿದ್ದ ಆಕೆ ಸಾವೇ ಎಂಬ ತೀರ್ಮಾನಕ್ಕೆ ಬಂದು ಈ ರೀತಿ ಮಾಡಿಕೊಂಡಂತಿದೆ.

ಕೆಲವು ದಿನಗಳ ಹಿಂದೆ ಹಿಂದೆ ಆಕೆ ಮನೆ ಬಿಟ್ಟು ಹೋಗಿದ್ದಳು. ಹದಿಹರೆಯದ ಮಗಳು ಒಮ್ಮೆಲೇ ಮಿಸ್ಸಿಂಗ್‌ ಅಂತ ಆದಾಗ ಆಕೆಯ ತಾಯಿ ಜ್ಞಾನ ಭಾರತಿ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಒಂದಿಷ್ಟು ಖಿನ್ನತೆಯಲ್ಲಿ, ನೋವಿನಲ್ಲಿದ್ದಂತಿದ್ದಳು ಎಂದು ಮಗಳ ಬಗ್ಗೆ ಠಾಣೆಯಲ್ಲಿ ತಾಯಿ ಹೇಳಿಕೊಂಡಿದ್ದರು.

ಇತ್ತ ಮನೆಯಿಂದ ಕಣ್ಮರೆಯಾಗಿದ್ದ ವಿಜಯಲಕ್ಷ್ಮಿ ಬಹುಶಃ ಸಾಯುವ ಉದ್ದೇಶದಿಂದಲೇ ಧರ್ಮಸ್ಥಳಕ್ಕೆ ಹೋಗಿದ್ದಾರೆ. ಅಲ್ಲಿ ಸಾಯುವುದೆಲ್ಲಿ ಎಂದು ಹುಡುಕಾಟದಲ್ಲೇ ಕಾಲ ಕಳೆದಿದ್ದಾಳೆ. ಅದೊಂದು ಕಡೆಯಲ್ಲಿ ಆಕೆಯನ್ನು ಅನುಮಾನಾಸ್ಪದವಾಗಿ ನೋಡಿದ ವೃದ್ಧರೊಬ್ಬರು ಆಕೆಯನ್ನು ತಡೆದಿದ್ದರು. ಆಕೆ ತಾನು ಸಾಯಬೇಕು ಎನ್ನುವುದನ್ನು ಅವರ ಮುಂದೆ ಹೇಳಿಕೊಂಡಿದ್ದಳು. ಅವಳು ಆಕೆಗೆ ಬುದ್ಧಿವಾದ ಹೇಳಿದ್ದರು. ಯುವತಿಯ ಬಳಿಯಲ್ಲಿ ಫೋನ್‌ ನಂಬರ್‌ ಇರಲಿಲ್ಲ. ಹೀಗಾಗಿ ವೃದ್ಧರು ಏನೇ ಸಮಸ್ಯೆಯಾದರೂ ನನಗೆ ಫೋನ್‌ ಮಾಡು ಎಂದು ಆಕೆಗೆ ಚೀಟಿಯೊಂದರಲ್ಲಿ ತಮ್ಮ ನಂಬರ್‌ ಬರೆದುಕೊಟ್ಟಿದ್ದರು.

ಇತ್ತ ಯುವತಿ ಆ ವೃದ್ಧನ ಮಾತಿನಿಂದ ಸ್ವಲ್ಪ ಸಮಾಧಾನಗೊಂಡು ಮರಳಿ ಬೆಂಗಳೂರಿಗೆ ಬಂದಿದ್ದಳು. ಗುರುವಾರ ಬೆಳಗ್ಗೆ ಬೆಂಗಳೂರು ತಲುಪಿದ ಆಕೆ ಮನೆ ಕಡೆಗೆ ಹೊರಟಿದ್ದಳು.

ಅದೇನನಿಸಿತೋ ಏನೋ.. ತನ್ನ ತಂದೆಗೆ‌ ಯಾವುದೋ ಫೋನ್‌ ಬೂತ್‌ನ ಲ್ಯಾಂಡ್‌ ಲೈನ್‌ನಿಂದ ಕರೆ ಮಾಡಿದ್ದಾಳೆ. ಆದರೆ, ಏನನ್ನೂ ಮಾತನಾಡದೆ ಕಾಲ್‌ ಕಟ್‌ ಮಾಡಿದ್ದಾಳೆ. ತಂದೆಯ ಬಳಿ ಏನು ಹೇಳಬೇಕಾಗಿತ್ತೋ ಗೊತ್ತಿಲ್ಲ. ಆದರೆ ಏನೂ ಹೇಳಲು ಆಕೆಗೆ ಸಾಧ್ಯವಾಗಿಲ್ಲ. ಅಸಹಾಯಕಳಾಗಿ ಕರೆ ಕತ್ತರಿಸಿದ್ದಾರೆ. ಬಳಿಕ ಮತ್ತೆ ನಡೆಯುತ್ತಾ ಮುಂದೆ ಸಾಗಿದ್ದಾಳೆ. ಅಲ್ಲಿಂದ ಸ್ವಲ್ಪ ದೂರದಲ್ಲೇ ಇದೆ ಬ್ರೈಡ್‌ ಅಪಾರ್ಟ್‌ಮೆಂಟ್‌.

Girl jumping from building

ಅದರ ಹತ್ತಿರ ಹೋಗುತ್ತಿದ್ದಂತೆಯೇ ಆಕೆಗೆ ಮತ್ತೆ ಸಾವಿನದೇ ನೆನಪಾಗಿದೆ. ಮನೆಯ ಹಾದಿಯನ್ನು ಬಿಟ್ಟು ಆಕೆ ಆ ಅಪಾರ್ಟ್‌ಮೆಂಟ್‌ ಹತ್ತಿದ್ದಾಳೆ. ಆ ಕಟ್ಟಡದ ಲಿಫ್ಟ್‌ ಮೂಲಕ ಕೊನೆಯ ಮಹಡಿಯನ್ನು ಹತ್ತಿ ನಿಂತಿದ್ದಾಳೆ. ಅಲ್ಲಿಂದ ಜಿಗಿದು ಪ್ರಾಣವನ್ನೇ ಕಳೆದುಕೊಂಡಿದ್ದಾಳೆ. ಅನಾಥ ಶವವಾಗಿ ನೆಲಕ್ಕೆ ಉರುಳಿದ್ದಾಳೆ.

ಹುಡುಗಿಯೊಬ್ಬಳು ಕಟ್ಟಡದ ಮೇಲಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂಬುದನ್ನು ತಿಳಿದು ಭಯಗೊಂಡ ಆ ಕಟ್ಟಡದ ನಿವಾಸಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಪೊಲೀಸರು ಬಂದು ನೋಡಿದಾಗ ಅಪರಿಚಿತ ಯುವತಿ ಎನ್ನುವುದು ಗೊತ್ತಾಗಿದೆ.

ಇದನ್ನೂ ಓದಿ : ರಾಜ ಮಾರ್ಗ ಅಂಕಣ : ಇಂಚಿಂಚಾಗಿ ಕೊಲ್ಲುವ ಖಿನ್ನತೆ, ಅದರಿಂದ ಹೊರಬರಲು ಇಲ್ಲಿವೆ ಸರಳ ಸೂತ್ರಗಳು

ಆಕೆಯ ಕೈಯಲ್ಲಿತ್ತು ಅದೊಂದು ನಂಬರ್‌

ಈ ನಡುವೆ, ಆಕೆಯ ಬಳಿ ಸಂಪರ್ಕ ಮಾಡುವ ಯಾವ ಕ್ಲೂಗಳೂ ಇರಲಿಲ್ಲ. ಆಕೆಯ ಕೈಯಲ್ಲಿ ಅದೊಂದು ಚೀಟಿಯಲ್ಲಿ ನಂಬರ್‌ ಇತ್ತು. ಅದಕ್ಕೆ ಕರೆ ಮಾಡಿದಾಗ ಧರ್ಮಸ್ಥಳದ ಅಜ್ಜ ಅಲ್ಲಿ ಆತ್ಮಹತ್ಯೆಗೆ ಯತ್ನಿಸಿದ ಕಥೆ ಹೇಳಿದ್ದಾರೆ.

ಇತ್ತ ಜ್ಞಾನಭಾರತಿ ಠಾಣೆಗೆ ಈ ವಿಷಯ ತಲುಪಿದಾಗ ಅವರು ವಿಜಯಲಕ್ಷ್ಮಿಯ ಅಮ್ಮ ಕೊಟ್ಟ ಫೋಟೊವನ್ನು ಚೆಕ್‌ ಮಾಡಿದ್ದಾರೆ. ಹೌದು ಅವಳೇ ಇವಳು ಅನಿಸಿದಾಗ ಹೆತ್ತವರನ್ನು ಬರಲು ಹೇಳಿದ್ದಾರೆ. ಆಗ ಓಡೋಡಿ ಬಂದ ಹೆತ್ತವರಲ್ಲಿ ಅಪ್ಪ, ನನಗೊಂದು ಮಿಸ್‌ ಕಾಲ್‌ ಬಂದಿತ್ತು ಎಂದು ಹೇಳಿದರು. ನೋಡಿದರೆ ಅದು ಬ್ರೈಡ್‌ ಅಪಾರ್ಟ್‌ಮೆಂಟ್‌ನ ಪಕ್ಕದ ಒಂದು ನಂಬರ್‌ ಆಗಿತ್ತು. ಆಗ ಸ್ಪಷ್ಟವಾಯಿತು, ಮಗಳು ಕೊನೆಯ ಬಾರಿಗೆ ಅಪ್ಪನಿಗೆ ಕರೆ ಮಾಡಿದ್ದಾಳೆ. ಆದರೆ ಏನೂ ಹೇಳಲಾಗದೆ ಕಟ್‌ ಮಾಡಿದ್ದಾಳೆ.

ಆ ಒಂದು ಫೋನ್‌ ಕರೆಯಲ್ಲಿ ಮಗಳು ಒಂದು ಮಾತು ಆಡಿದ್ದರೆ ನಾನು ಅವಳನ್ನು ಬದುಕಿಸಿಕೊಳ್ಳುತ್ತಿದ್ದೆನಾ ಎಂದು ಈಗ ತಂದೆ ಪರಿತಪಿಸುತ್ತಿದ್ದಾರೆ. ಅತ್ತ ಧರ್ಮಸ್ಥಳದ ಅಜ್ಜನಿಗೂ ಅದೇ ಸಂಕಟ. ನಾನು ಆಕೆಯನ್ನು ಇಲ್ಲೇ ಉಳಿಸಿಕೊಂಡು ಹೆತ್ತವರಿಗೆ ತಿಳಿಸಿದ್ದರೆ ಆಕೆ ಬದುಕಿ ಉಳಿಯುತಿದ್ದಳಾ? ಖಿನ್ನತೆ ಎಂಬ ಭೂತ ಆಕೆಯನ್ನು ಆವರಿಸಿ ಪ್ರಾಣ ಕಳೆಯಿತಾ? ಅಥವಾ ಯಾರಿಗೂ ಹೇಳಲಾಗದ ನೋವು ಅವಳನ್ನು ಕಾಡುತ್ತಿತ್ತಾ? ಉತ್ತರ ಹೇಳಲು ಅವಳಿಲ್ಲ. ಈಗ ಉಳಿದಿರುವುದು ವಯಸ್ಸಿಗೆ ಬಂದ ಮಗಳನ್ನು ಕಳೆದುಕೊಂಡ ಹೆತ್ತವರ ಕಣ್ಣೀರು ಮಾತ್ರ. ಬ್ಯಾಟರಾಯನಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲು ಮಾಡಿಕೊಂಡು ತನಿಖೆ ಮಾಡುತ್ತಿದ್ದಾರೆ.

ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್‌ ಕ್ಲಿಕ್‌ ಮಾಡಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೈಂ

Physical Abuse: ದಲಿತ ಯುವತಿಯ ಮೇಲೆ ಅತ್ಯಾಚಾರ ಎಸಗಿ ಪರಾರಿಯಾದ ಸದ್ದಾಂ ಹುಸೇನ್‌ ಕಾಲಿಗೆ ಗುಂಡೇಟು

Physical Abuse: ಸದ್ದಾಂ ಹುಸೇನ್ ಬಂಧಿತ ಆರೋಪಿ. ಹುಬ್ಬಳ್ಳಿ (Hubli news) ನವನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿತ್ತು. ಅಪ್ರಾಪ್ತೆಯನ್ನು ಗರ್ಭಿಣಿ ಮಾಡಿದ್ದ ಯುವಕ, ಇದರ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ ಎನ್ನಲಾಗಿದೆ. ಯುವಕನ ವಿರುದ್ಧ ಹಿಂದುಪರ ಸಂಘಟನೆಗಳು ಆಕ್ರೋಶ ಹೊರಹಾಕಿ, ಆರೋಪಿಯನ್ನು ಕೂಡಲೇ ಬಂಧಿಸುವಂತೆ ಶುಕ್ರವಾರ ಸಂಜೆ ನವನಗರ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದ್ದರು.

VISTARANEWS.COM


on

saddam hussain pocso case culprit hubli
Koo

ಹುಬ್ಬಳ್ಳಿ: ಹುಬ್ಬಳ್ಳಿಯಲ್ಲಿ ದಲಿತ ಸಮುದಾಯದ (Dalit Girl) ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ (Physical Abuse) ಆಕೆಯನ್ನು ಗರ್ಭಿಣಿ ಮಾಡಿ ಪರಾರಿಯಾಗಿದ್ದ (Pocso Case) ಆರೋಪಿ ಸದ್ದಾಂ ಹುಸೇನ್ ಕಾಲಿಗೆ ಪೊಲೀಸರು ಗುಂಡೇಟು (Shooting) ಹೊಡೆದು ಬಂಧಿಸಿದ್ದಾರೆ. ಬಂಧನದ‌ ವೇಳೆ ಪೊಲೀಸರ ಮೇಲೆ ದಾಳಿ ಮಾಡಿ‌ ತಪ್ಪಿಸಿಕೊಳ್ಳಲು ಯತ್ನಿಸಿದಾಗ ಗುಂಡು ಹಾರಿಸಲಾಗಿದೆ.

ಸದ್ದಾಂ ಹುಸೇನ್‌ನನ್ನು ಬಂಧಿಸಿ ಸ್ಥಳ ಮಹಜರು ಮಾಡಲು ಕರೆದೊಯ್ಯುತ್ತಿದ್ದಾಗ ಪೊಲೀಸರ ಮೇಲೆ ದಾಳಿ ಮಾಡಿ, ತಪ್ಪಿಸಿಕೊಳ್ಳಲು ಯತ್ನಿಸಿದ್ದ. ಆಗ ಧಾರವಾಡ ವಿದ್ಯಾಗಿರಿ ಠಾಣೆಯ ಸಿಪಿಐ ಸಂಗಮೇಶ ದಿಡಿಗನಾಳ ಅವರು ಆರೋಪಿ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ. ಸದ್ಯ ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಸದ್ದಾಂ ಹುಸೇನ್‌‌ಗೆ ಚಿಕಿತ್ಸೆ ನೀಡಾಗುತ್ತಿದೆ.

ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಬಾಲಕಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋದಾಗ ವೈದ್ಯರು ಆಘಾತಕಾರಿ ವಿಷಯ ತಿಳಿಸಿದ್ದರು. ಮಗಳು ಗರ್ಭಿಣಿಯಾದ ಸುದ್ದಿ ತಿಳಿದು ಪೋಷಕರು ಕಂಗಾಲಾಗಿದ್ದರು. ಹೀಗಾಗಿ ಆರೋಪಿ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ಹಿಂದು ಸಂಘಟನೆಗಳು ಪ್ರತಿಭಟನೆ ನಡೆಸಿದ ಬೆನ್ನಲ್ಲೇ ಪರಾರಿಯಾಗಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಸದ್ದಾಂ ಹುಸೇನ್ ಬಂಧಿತ ಆರೋಪಿ. ಹುಬ್ಬಳ್ಳಿ (Hubli news) ನವನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿತ್ತು. ಅಪ್ರಾಪ್ತೆಯನ್ನು ಗರ್ಭಿಣಿ ಮಾಡಿದ್ದ ಯುವಕ, ಇದರ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ ಎನ್ನಲಾಗಿದೆ. ಹೀಗಾಗಿ ಯುವಕನ ವಿರುದ್ಧ ಹಿಂದುಪರ ಸಂಘಟನೆಗಳು ಆಕ್ರೋಶ ಹೊರಹಾಕಿ, ಆರೋಪಿಯನ್ನು ಕೂಡಲೇ ಬಂಧಿಸುವಂತೆ ಶುಕ್ರವಾರ ಸಂಜೆ ನವನಗರ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದ್ದರು.

Physical Abuse

ಇದನ್ನೂ ಓದಿ | Prajwal Revanna Case: ಪೆನ್‌ಡ್ರೈವ್‌ ಲೀಕ್‌ ಮಾಡಿದ್ದು ಯಾರು? ಎಸ್‌ಐಟಿಗೆ ಸಾಕ್ಷಿ ಕೊಟ್ಟ ದೇವರಾಜೇಗೌಡ!

ಸದ್ಯ ಕಿಮ್ಸ್ ಆಸ್ಪತ್ರೆಯಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕಿಗೆ ಚಿಕಿತ್ಸೆ ಕೊಡಿಸಲಾಗುತ್ತಿದೆ. ಅಪ್ರಾಪ್ತೆ ಆಸ್ಪತ್ರೆಗೆ ಹೋಗಿದ್ದನ್ನು ಅರಿತ ಯುವಕ, ಆಕೆ ಕುಟುಂಬಸ್ಥರಿಗೆ ಕರೆ ಮಾಡಿ ಜೀವ ಬೆದರಿಕೆ ಹಾಕಿದ್ದ. ಹೀಗಾಗಿ ಯುವಕನ ವಿರುದ್ಧ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಹಿಂದು ಪರ ಸಂಘಟನೆಗಳ ಆಕ್ರೋಶ ಹೊರಹಾಕಿವೆ.

ಗಾಂಜಾ ಮತ್ತಲ್ಲಿ ಆರ್ಮಿ ಆಫೀಸರ್ ಮಗನನ್ನೇ ಕಿಡ್ನ್ಯಾಪ್ ಮಾಡಿದ ಗೆಳೆಯರು

Kidnap case in Bengaluru

ಬೆಂಗಳೂರು: ಹಣಕ್ಕಾಗಿ ಯುವಕನೊಬ್ಬ ತನ್ನ ಸಹಚರರೊಂದಿಗೆ ಸೇರಿ ಗೆಳೆಯನನ್ನೇ ಕಿಡ್ನ್ಯಾಪ್‌ ಮಾಡಿ (Kidnap Case) ಜೈಲುಪಾಲಾಗಿದ್ದಾನೆ. ಕೇರಳ ಮೂಲದ ಸಾಹೀಲ್ ಸಲೀಂ ಕಿಡ್ನ್ಯಾಪ್‌ ಆದವನು. ಪ್ರಮುಖ ಆರೋಪಿ ಮುಬಾರಕ್‌ ಎಂಬಾತ ತನ್ನ ಸ್ನೇಹಿತ ಸುಂದರ್‌ ಜತೆಗೆ ಮತ್ತೊಂದಿಷ್ಟು ಜನರೊಟ್ಟಿಗೆ ಪ್ಲ್ಯಾನ್‌ ಮಾಡಿ ಸಾಹೀಲ್‌ನನ್ನು ಕಿಡ್ನ್ಯಾಪ್‌ ಮಾಡಿದ್ದರು.

ಪದವಿ ವ್ಯಾಸಂಗ ಮಾಡುತ್ತಿದ್ದ ಸಾಹೀಲ್‌ ಬೆಂಗಳೂರಿನ ಸಂಪಿಗೆಹಳ್ಳಿಯ ಪಿಜಿವೊಂದರಲ್ಲಿ ವಾಸವಿದ್ದ. ಮುಬಾರಕ್ ಹಾಗೂ ಸಾಹೀಲ್ ಇಬ್ಬರು ಪಿಯುಸಿಯಲ್ಲಿ ಕ್ಲಾಸ್ ಮೇಟ್ಸ್ ಆಗಿದ್ದರು. ಸಾಹೀಲ್ ಆರ್ಮಿ ಆಫೀಸರ್‌ ಮಗ.. ಆತನ ಬಳಿ ಸಿಕ್ಕಾಪಟ್ಟೆ ಹಣ ಇರುತ್ತೆ ಎಂದು ಕಿಡ್ನ್ಯಾಪ್‌ ಪ್ಲಾನ್ ಮಾಡಿದ್ದ. ಪಿಜಿಯಲ್ಲಿದ್ದ ಸಾಹೀಲ್‌ನನ್ನು ಕರೆಸಿ ಶೆಡ್‌ವೊಂದರಲ್ಲಿ ಕೂಡಿ ಹಾಕಿ ಹಲ್ಲೆ ನಡೆಸಿದ್ದರು. ಈ ವೇಳೆ ಸಾಹೀಲ್‌ನಿಂದ 25 ಸಾವಿರ ರೂ. ಹಣ ಪಡೆದು ಬಿಟ್ಟು ಕಳಿಸಿದ್ದರು. ಇದರಿಂದ ಹೆದರಿದ ಸಾಹೀಲ್‌ ಕೇರಳ ಸೇರಿದ್ದ.

ಮಗ ಪಿಜಿ ತೊರೆದು ಮನೆ ಸೇರಿದ್ದು ಪೋಷಕರಿಗೆ ಅನುಮಾನ ಮೂಡಿಸಿತ್ತು. ಹೀಗಾಗಿ ವಿಚಾರಿಸಿದಾಗ ಸಾಹಿಲ್‌ ತನ್ನ ತಂದೆ ಬಳಿ ನಡೆದಿದ್ದನ್ನು ತಿಳಿಸಿದ್ದ. ಸದ್ಯ ಸಾಹೀಲ್ ತಂದೆ ನೀಡಿದ ದೂರಿನನ್ವಯ ಸಂಪಿಗೆಹಳ್ಳಿ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಉಳಿದ ಮೂವರು ಆರೋಪಿಗಳಿಗಾಗಿ ಬಲೆಬೀಸಿದ್ದಾರೆ.

6 ವರ್ಷದ ಬಾಲಕಿಯ ಅಪಹರಿಸಲು ಯತ್ನಿಸಿದ ದುಷ್ಟ

ಯಾದಗಿರಿ: ಹಾಡಹಗಲೆ ದುಷ್ಕರ್ಮಿಯೊಬ್ಬ ಶಾಲಾ ವಿದ್ಯಾರ್ಥಿನಿಯನ್ನು ಅಪಹರಿಸಲು (kidnap case) ಯತ್ನಿಸಿದ್ದಾರೆ. ಯಾದಗಿರಿಯ ಅಜೀಜ್ ಕಾಲೋನಿಯಲ್ಲಿ ಘಟನೆ (Crime News) ನಡೆದಿದೆ. 6 ವರ್ಷದ ಸಂಜನಾ ಎಂಬಾಕೆ ಎಂದಿನಂತೆ ಸ್ನೇಹಿತೆ ಮನೆಯಿಂದ ಟ್ಯೂಶನ್‌ಗೆ ತೆರಳುತ್ತಿದ್ದಳು.

ಇದನ್ನೂ ಓದಿ: Bengaluru Rains:‌ ಅಬ್ಬಾಬ್ಬ ಲಾಟ್ರಿ.. ಕಂಗ್ರಾಜುಲೇಷನ್ ಬ್ರದರ್.. ಬೆಂಗಳೂರು ಮಳೆಗೆ ನೆಟ್ಟಿಗರ ವಿಷ್‌, ಫುಲ್ ಖುಷ್‌

ಈ ವೇಳೆ ಮಾಸ್ಕ್ ಧರಿಸಿ ಬಂದ ದುಷ್ಕರ್ಮಿಯೊರ್ವ ಬಾಲಕಿಯ ಕಣ್ಣಿಗೆ ಸ್ಪ್ರೇ ಮಾಡಿದ್ದಾನೆ. ಬಳಿಕ ಅಪಹರಿಸಲು ಯತ್ನಿಸಿದಾಗ ಬಾಲಕಿ ಆತನಿಂದ ತಪ್ಪಿಸಿಕೊಂಡು ಮನೆಗೆ ಓಡಿ ಬಂದಿದ್ದಾಳೆ. ಸದ್ಯ ಪೋಷಕರ ದೂರಿನ ಮೇರೆಗೆ ಘಟನಾ ಸ್ಥಳಕ್ಕೆ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸುತ್ತಮುತ್ತಲ ಸಿಸಿ ಕ್ಯಾಮೆರಾಗಳನ್ನು ಪರಿಶೀಲನೆ ನಡೆಸಲಾಗುತ್ತಿದೆ.

Continue Reading

ಕರ್ನಾಟಕ

Rain News: ಪ್ರತ್ಯೇಕ ಮಳೆ ಅವಘಡ; ಸಿಡಿಲು ಬಡಿದು ನವ ವಿವಾಹಿತ ಸಾವು, ಕಾರ್ಮಿಕನ ಸ್ಥಿತಿ ಗಂಭೀರ

Rain News: ದಕ್ಷಿಣ ಕನ್ನಡ ಜಿಲ್ಲೆ ಕಡಬ ತಾಲೂಕಿನ ಸುಬ್ರಹ್ಮಣ್ಯದಲ್ಲಿ ಸಿಡಿಲು ಬಡಿದು ನವವಿವಾಹಿತ ಮೃತಪಟ್ಟಿದ್ದು, ಕೊಡಗು ಜಿಲ್ಲೆಯ ಮಡಿಕೇರಿ ಸಮೀಪದ ಬೆಟ್ಟಗೇರಿಯಲ್ಲಿ ಕಾರ್ಮಿಕ ಗಂಭೀರವಾಗಿ ಗಾಯಗೊಂಡಿದ್ದಾನೆ.

VISTARANEWS.COM


on

Rain News
ಕಡಬ ತಾಲೂಕಿನ ಸುಬ್ರಹ್ಮಣ್ಯದ ಗ್ರಾಮದ ಪರ್ವತಮುಖಿಯಲ್ಲಿ ಸಿಡಿಲು ಬಡಿದು‌ ಮೃತಪಟ್ಟ ಸೋಮಸುಂದರ್.
Koo

ಮಂಗಳೂರು/ ಕೊಡಗು: ಪ್ರತ್ಯೇಕ ಮಳೆ (Rain News) ಅವಘಡಗಳಲ್ಲಿ ಸಿಡಿಲು ಬಡಿದು (lightning strike) ನವ ವಿವಾಹಿತ ಮೃತಪಟ್ಟು, ಕಾರ್ಮಿಕ ಗಂಭೀರವಾಗಿ ಗಾಯಗೊಂಡಿರುವ ಘಟನೆ ಶುಕ್ರವಾರ ನಡೆದಿದೆ. ದಕ್ಷಿಣ ಕನ್ನಡ ಜಿಲ್ಲೆ ಕಡಬ ತಾಲೂಕಿನ ಸುಬ್ರಹ್ಮಣ್ಯದಲ್ಲಿ ನವವಿವಾಹಿತ ಮೃತಪಟ್ಟಿದ್ದರೆ, ಕೊಡಗು ಜಿಲ್ಲೆಯ ಮಡಿಕೇರಿ ಸಮೀಪದ ಬೆಟ್ಟಗೇರಿಯಲ್ಲಿ ಕಾರ್ಮಿಕ ಗಂಭೀರವಾಗಿ ಗಾಯಗೊಂಡಿದ್ದಾನೆ.

ಸುಬ್ರಹ್ಮಣ್ಯದಲ್ಲಿ ನವ ವಿವಾಹಿತ ಮೃತ್ಯು

ದಕ್ಷಿಣ ಕನ್ನಡ ಜಿಲ್ಲೆ ಕಡಬ ತಾಲೂಕಿನ ಸುಬ್ರಹ್ಮಣ್ಯದ ಗ್ರಾಮದ ಪರ್ವತಮುಖಿಯಲ್ಲಿ ಸಿಡಿಲು ಬಡಿದು ಸೋಮಸುಂದರ್ (34) ಸಾವು ಮೃತಪಟ್ಟಿದ್ದಾನೆ. ಈತ ಹತ್ತು ದಿನಗಳ ಹಿಂದೆಯಷ್ಟೇ ವಿವಾಹವಾಗಿದ್ದ. ಸಂಜೆ ವೇಳೆ ಸುಬ್ರಮಣ್ಯ ಭಾಗದಲ್ಲಿ ಗುಡುಗು ಸಿಡಿಲು ಸಹಿತ ಮಳೆ ಮುನ್ಸೂಚನೆ ಹಿನ್ನೆಲೆಯಲ್ಲಿ ಮನೆ ಅಂಗಳದಲ್ಲಿ ಅಡಿಕೆಯನ್ನು ಯುವಕ ರಾಶಿ ಮಾಡುತ್ತಿದ್ದ. ಈ ವೇಳೆ ಸೋಮ ಸುಂದರ್‌ಗೆ ಸಿಡಿಲು ಬಡಿದಿದ್ದರಿಂದ ಮೃತಪಟ್ಟಿದ್ದಾನೆ.

ಮಡಿಕೇರಿಯಲ್ಲಿ ಕಾರ್ಮಿಕನ ಸ್ಥಿತಿ ಗಂಭೀರ

ಕೊಡಗು: ಸಿಡಿಲು ಬಡಿದು ಅಸ್ಸಾಂ ಮೂಲದ ಕಾರ್ಮಿಕ ಗಂಭೀರವಾಗಿ ಗಾಯಗೊಂಡಿರುವ ಘಟನೆ ಜಿಲ್ಲೆಯ ಮಡಿಕೇರಿ ಸಮೀಪದ ಬೆಟ್ಟಗೇರಿಯಲ್ಲಿ ನಡೆದಿದೆ. ಕಾರ್ಮಿಕ ಪ್ರಮಾತ್ ಗರ್ಮಾನಿ (37) ಗಾಯಾಳು. ಮನೆಯ ಹೊರಭಾಗದಲ್ಲಿ ನಿಂತಿದ್ದಾಗ ಕಾರ್ಮಿಕನಿಗೆ ಸಿಡಿಲು ಬಡಿದಿದೆ. ಕಾರ್ಮಿಕನಿಗೆ ಮಡಿಕೇರಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಅಬ್ಬಬ್ಬಾ ಲಾಟ್ರಿ.. ಕಂಗ್ರಾಜುಲೇಷನ್ ಬ್ರದರ್.. ಬೆಂಗಳೂರು ಮಳೆಗೆ ನೆಟ್ಟಿಗರ ವಿಷ್‌, ಫುಲ್ ಖುಷ್‌

Bengaluru Rains

ಬೆಂಗಳೂರು: ರಾಜ್ಯದ ಹಲವು ಜಿಲ್ಲೆಗಳಲ್ಲಿ (Karnataka Rains) ಬಿರುಗಾಳಿ ಸಹಿತ ಮಳೆ ಬಂದು ಹೋಯಿತು. ಆದರೆ ರಾಜಧಾನಿ ಬೆಂಗಳೂರಲ್ಲಿ ಒಂದು ಸಣ್ಣ ಹನಿಯು (Karnataka weather Forecast) ಬೀಳಲಿಲ್ಲ. ಬೆಂಗಳೂರು ಕರಗ ಸಮಯದಲ್ಲಿ ಸಣ್ಣ ಪ್ರಮಾಣದಲ್ಲಿ ಆದರೂ ಮಳೆ ಬಂದೇ ಬರುತ್ತೆ ಎಂಬ ನಂಬಿಕೆ ಇದೆ. ಆದರೆ ಆಗಲೂ ಮಳೆಯು ಕಾಣಲಿಲ್ಲ. ಇದೀಗ ಬಿಸಿಲ ಧಗೆಯಿಂದ ಸುಸ್ತಾಗಿದ್ದ ಮಂದಿಗೆ ಮಳೆಯು ತನ್ನ ಭರ್ಜರಿ ಪ್ರದರ್ಶನ (Bengaluru Rains) ತೋರಿದೆ.

ಲೇಟ್‌ ಆದರೂ ಲೇಟೆಸ್ಟ್‌ ಆಗಿ ಮಳೆರಾಯ ಬೆಂಗಳೂರಿಗೆ ಎಂಟ್ರಿ ಕೊಟ್ಟಿದ್ದಾನೆ. ಇದರಿಂದಾಗಿ ಸೋಶಿಯಲ್‌ ಮೀಡಿಯಾದಲ್ಲಿ ನೆಟ್ಟಿಗರು ಅಬ್ಬಬ್ಬಾ ಲಾಟ್ರಿ.. ಕಂಗ್ರಾಜುಲೇಷನ್ ಬ್ರದರ್ ಎಂದು ಬೆಂಗಳೂರಿಗರಿಗೆ ವಿಷ್‌ ಮಾಡಿದ್ದಾರೆ. ಜತೆಗೆ ಟ್ವಿಟರ್‌, ಇನ್ಸ್ಟಾಗ್ರಾಂನಲ್ಲಿ Bengaluru rains ಹ್ಯಾಶ್‌ ಟ್ಯಾಗ್‌ ಹಾಕಿ ಸಂತಸವನ್ನು ಹಂಚಿಕೊಳ್ಳುತ್ತಿದ್ದಾರೆ. ಅಂತೂ-ಇಂತೂ ಬೆಂಗಳೂರಲ್ಲಿ ಮಳೆ ಬಂತಲ್ಲ ಎಂದು ನಿಟ್ಟುಸಿರು ಬಿಟ್ಟಿದ್ದಾರೆ.

ಶಿವಾಜಿನಗರ, ಮಲ್ಲೇಶ್ವರಂ, ವಿಧಾನಸೌಧ, ರಾಜಾಜಿನಗರ, ರೇಸ್ ಕೋರ್ಸ್, ಮೆಜೆಸ್ಟಿಕ್, ಮಹಾರಾಣಿ ಕಾಲೇಜು, ಸಿಐಡಿ ಆಫೀಸ್, ಪ್ಯಾಲೇಸ್ ರಸ್ತೆಯಲ್ಲಿ ಗುಡುಗು ಸಹಿತ ಮಳೆಯಾಗುತ್ತಿದೆ. ಮಧ್ಯಾಹ್ನ ಮೂರು ಗಂಟೆ ಸಮಯವು ರಾತ್ರಿಯಂತೆ ಕತ್ತಲೆ ಆವರಿಸಿತ್ತು. ದಿಢೀರ್ ಮಳೆಗೆ ದ್ವಿಚಕ್ರ ವಾಹನ ಸವಾರರು ಸೇತುವೆ ಕೆಳಗೆ ಹಾಗೂ ಬಸ್‌ ನಿಲ್ದಾಣದಲ್ಲಿ ಆಶ್ರಯ ಪಡೆದರು.

ಚಲಿಸುತ್ತಿದ್ದ ಕಾರಿನ ಮೇಲೆ ಬಿದ್ದ ಮರ

ಇನ್ನೂ ಬೆಂಗಳೂರಿನ ಆರ್‌.ಟಿ‌ ನಗರದಲ್ಲಿ ಮರವು ಉರುಳಿ ಬಿದ್ದಿತ್ತು. ಇನೋವಾ ಹಾಗೂ ಓಮಿನಿ ಕಾರು ಜಖಂಗೊಂಡಿತ್ತು. ರವೀಂದ್ರನಾಥ್ ಠಾಗೋರ್ ಸರ್ಕಲ್‌ನಲ್ಲಿ ಚಲಿಸುತ್ತಿದ್ದ ಕಾರಿನ ಮೇಲೆ ಮರ ಬಿದ್ದಿತ್ತು. ಅದೃಷ್ಟವಶಾತ್‌ ಕಾರಿನಲ್ಲಿ ಇದ್ದವರಿಗೆ ಯಾವುದೇ ತೊಂದರೆ ಆಗಿಲ್ಲ. ಸ್ಥಳಕ್ಕೆ ಅಗ್ನಿಶಾಮಕ ದಳ, ಬಿಬಿಎಂಪಿ ಸಿಬ್ಬಂದಿ ದೌಡಾಯಿಸಿದ್ದು, ಮರ ತೆರವು ಮಾಡುತ್ತಿದ್ದಾರೆ. ಇತ್ತ ಕೊತ್ತನೂರು ಬಳಿ ಕಾರಿನ ಮೇಲೆ ವಿದ್ಯುತ್‌ ಕಂಬ ಬಿದ್ದು ಕಾರಿನ ಬ್ಯಾನೆಟ್ ಹಾಳಾಗಿತ್ತು. ವಿದ್ಯುತ್‌ ಕಂಬ ಕಳಚಿ ಬಿದ್ದ ಕಾರಣ ಕರೆಂಟ್‌ ಕಟ್ಟ್‌ ಆಗಿತ್ತು.

Bengaluru Rains

ಮೈಸೂರು, ಮಂಡ್ಯದಲ್ಲಿ ಗುಡುಗು ಸಹಿತ ಬಿರುಗಾಳಿ ಮಳೆ

ಮಂಡ್ಯದಲ್ಲಿ ಗುಡುಗು ಸಹಿತ ಬಿರುಗಾಳಿ ಮಳೆಯಾಗುತ್ತಿದೆ. ಹಲವು ದಿನಗಳಿಂದ ಮಳೆ ಇಲ್ಲದೆ ಕಂಗಾಲಾಗಿದ್ದ ಮಂಡ್ಯ ಜನರು ಖುಷಿಯಾಗಿದ್ದಾರೆ. ಭಾರಿ ಶಬ್ಧದೊಂದಿಗೆ ಗುಡುಗು, ಮಿಂಚು ಸಹಿತ ಮಳೆಯಾಗುತ್ತಿದೆ. ಮೈಸೂರಿನಲ್ಲಿ ಬಿಸಿಲ ಬೇಗೆಯಿಂದ ಕಂಗಾಲಾಗಿದ್ದ ಜನರಿಗೆ ವರುಣ ಸಿಂಚನವಾಗಿದೆ. ತಿ.ನರಸೀಪುರ ತಾಲೂಕಿನ ಹಲವೆಡೆ ಧಾರಾಕಾರ ಮಳೆಯಾಗಿದೆ. ಕೆಲವೆಡೆ ಜೋರು ಗಾಳಿ ನಡುವೆ ಆಲಿಕಲ್ಲು ಮಳೆಯಾಗಿದೆ.

ಟ್ರಾನ್ಸ್ ಫಾರ್ಮರ್ ಸ್ಫೋಟ

ಬೆಂಗಳೂರಿನ ಐಟಿಐ ಲೇಔಟ್‌ನಲ್ಲಿ ಮಳೆಗೆ ಟ್ರಾನ್ಸ್ ಫಾರ್ಮರ್ ಸ್ಫೋಟಗೊಂಡಿದೆ. ಗಾಳಿ ಮಳೆಗೆ ಮರಗಳ ಎಲೆ ತಾಗಿ ಟ್ರಾನ್ಸ್ ಫಾರ್ಮನರ್‌ನಲ್ಲಿ ಬೆಂಕಿ ಕಾಣಿಸಿಕೊಂಡು ಬ್ಲಾಸ್ಟ್‌ ಆಗಿದೆ. ಸದ್ಯ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ. ಟ್ರಾನ್ಸ್‌ಫಾರ್ಮನರ್‌ ಸ್ಫೋಟದಿಂದಾಗಿ ವಿದ್ಯುತ್‌ ಕಡಿತವಾಗಿದೆ.

ಹೊಸಕೋಟೆಯಲ್ಲೂ ಬಿರುಗಾಳಿ ಮಳೆ

ಬಿಸಿಲ ಬೇಗೆಯಿಂದ ಕಂಗೆಟ್ಟಿದ್ದ ಜನರಿಗೆ ಮಳೆರಾಯ ತಂಪೆರೆದಿದ್ದಾನೆ. ಬೆಂಗಳೂರು ಗ್ರಾಮಾಂತರದ ಹೊಸಕೋಟೆ ಸುತ್ತಮುತ್ತ ಬಿರುಗಾಳಿ ಸಹಿತ ಮಳೆಯಾಗಿದೆ. ವರ್ಷದ ಮೊದಲ ಮಳೆ ಕಂಡು ಜನರು ಸಂತಸಗೊಂಡಿದ್ದಾರೆ. ಇನ್ನೂ ಗಾಳಿ ಸಹಿತ ಮಳೆಯಿಂದಾಗಿ ದೇವಸ್ಥಾನ ಜೀರ್ಣೋದ್ಧಾರದ ಕಾರ್ಯಕ್ರಮಕ್ಕೆ ಹಾಕಿದ್ದ ಪೆಂಡಲ್ ಎಲ್ಲಾ ಚೆಲ್ಲಾಪಿಲ್ಲಿಯಾಗಿದ್ದವು. ಊಟ ಮಾಡುತ್ತಿದ್ದವರೆಲ್ಲೂ ಎಲೆ ಬಿಟ್ಟು, ಓಡಿ ಹೋದರು. ಟೇಬಲ್ ಮೇಲಿನ ಊಟವೆಲ್ಲ ನೀರುಪಾಲಾಗಿತ್ತು‌. ಹೊಸಕೋಟೆ ತಾಲೂಕಿನ ದಾಸರಹಳ್ಳಿ ಗ್ರಾಮದಲ್ಲಿ ಘಟನೆ ನಡೆದಿದೆ.

ಚಾಮರಾಜನಗರದಲ್ಲೂ ಮಳೆಯ ಸಿಂಚನ

ಚಾಮರಾಜನಗರದಲ್ಲೂ ವರುಣ ಭೂ ಸ್ಪರ್ಶಿಸಿದ್ದಾನೆ. ಚಾಮರಾಜನಗರ ತಾಲೂಕಿನ ಅಂಕಶೆಟ್ಟಿಪುರ, ಚೆನ್ನಪ್ಪಪುರ, ಅರಕಲವಾಡಿ ವೆಂಕಟಯ್ಯನ ಛತ್ರ ಸೇರಿದಂತೆ ವಿವಿಧೆಡೆ ಮಳೆಯಾಗಿದೆ. ಬೇಸಿಗೆಯಿಂದ ಬೇಸತ್ತಿದ್ದ ರೈತರ ಮುಖದಲ್ಲಿ ಕೊಂಚ ಮಂದಹಾಸ ಮೂಡಿದೆ. ಚಾಮರಾಜನಗರ ತಾಲೂಕಿನ ತಮ್ಮಡಹಳ್ಳಿ, ಉಡಿಗಾಲ, ಕೆಂಗಾಕಿ, ಕುಮಚಹಳ್ಳಿ ಗ್ರಾಮದಲ್ಲಿ ಗಾಳಿಯ ಅಬ್ಬರದೊಂದಿಗೆ ಮಳೆಯಾಗಿದೆ.

ರಾಮನಗರದಲ್ಲೂ ತಂಪೆರೆದ ಮಳೆ

ಬರಗಾಲದಿಂದ ಬೇಸತ್ತಿದ್ದ ರೇಷ್ಮೆನಾಡು ರಾಮನಗರ ಜಿಲ್ಲೆಯಲ್ಲೂ ಹಲವೆಡೆ ವರುಣ ದರ್ಶನ ಕೊಟ್ಟಿದ್ದಾನೆ. ಗುಡುಗು ಸಹಿತ ಮಳೆಯಾಗಿದ್ದು, ರೈತರ ಮೊಗದಲ್ಲಿ ಮಂದಹಾಸ ಮೂಡಿದೆ. ಪೂರ್ವಜರ ನಂಬಿಕೆಯಂತೆ ಭರಣಿ ಮಳೆ ಆಗಮಿಸಿದೆ. ಭರಣಿ ಮಳೆ ಬಂದರೆ ರೈತರ ಕೃಷಿ ಚುಟುವಟಿಕೆ ಆರಂಭಿಸಲು ಯಶಸ್ವಿ ಎಂಬ ನಂಬಿಕೆ ಇದೆ. ಸದ್ಯ ಭರಣಿ ಮಳೆಯ ಸಿಂಚನದಿಂದ ಅನ್ನದಾತನ ಮೊಗದಲ್ಲಿ ಮಂದಹಾಸ ಮೂಡಿದೆ.

ಆಲಿಕಲ್ಲು ಸಹಿತ ಮಳೆಯಾರ್ಭಟ

ಇನ್ನೂ ರಾಜ್ಯ ಗಡಿ ಡೆಂಕಣಿಕೋಟೆ ಭಾಗದಲ್ಲಿ ಆಲಿಕಲ್ಲು ಸಹಿತ ಮಳೆಯಾಗಿದೆ. ತಮಿಳುನಾಡಿನ ಡೆಂಕಣಿಕೋಟೆ, ಹೊಸೂರು, ಸೂಲಗಿರಿ ಭಾಗದಲ್ಲಿ ಧಾರಾಕಾರ ಮಳೆ ಆಗುತ್ತಿದೆ. ಆನೇಕಲ್, ಎಲೆಕ್ಟ್ರಾನಿಕ್ ಸಿಟಿ, ಚಂದಾಪುರ, ಅತ್ತಿಬೆಲೆ, ಹೆಬ್ಬಗೋಡಿ ಸೇರಿದಂತೆ ಜೋರು ಮಳೆಯಾಗುತ್ತಿದೆ.

Bengaluru rains

ಬ್ಯಾರಿಕೇಡ್ ಹಾಕಿ ಅಂಡರ್‌ಪಾಸ್‌ ಕ್ಲೋಸ್‌

ಅರ್ಧ ಗಂಟೆಗೂ ಹೆಚ್ಚು ಸಮಯ ಸುರಿದ ಮಳೆಯಿಂದಾಗಿ ಬೆಂಗಳೂರಿನ ರಸ್ತೆಗಳು ನದಿಯಂತಾಗಿತ್ತು. ವಿಧಾನಸೌಧ ಪಕ್ಕದಲ್ಲಿರುವ ಎಂ.ಎಸ್ ಬಿಲ್ಡಿಂಗ್ ಸುತ್ತಮುತ್ತಲಿನ ರಸ್ತೆಯಲ್ಲಿ ನೀರು ಹರಿಯುತ್ತಿದೆ. ಎಂಎಸ್‌ ಬಿಲ್ಡಿಂಗ್‌ ಸಮೀಪವೇ ಇರುವ ಅಂಡರ್ ಪಾಸ್‌ಗಳಿಗೆ ಬ್ಯಾರಿಕೇಟ್ ಹಾಕಿ ಕ್ಲೋಸ್ ಮಾಡಲಾಗಿದೆ.

ಧರೆಗೆ ಬಿದ್ದ ಮರಗಳು

ಮಳೆಯಿಂದ ಬೆಂಗಳೂರು ನಗರದಲ್ಲಿ ಮೂರು ಕಡೆ ಬೃಹತ್ ಗಾತ್ರದ ಮರ ಧರೆಗೆ ಬಿದ್ದಿದೆ. ಕೆ.ಆರ್.ಪುರಂನ ಕಸ್ತೂರಿ ನಗರ, ಆರ್‌ಟಿ ನಗರದಲ್ಲಿ ಮಳೆಗೆ ಮರ ಬಿದ್ದಿದೆ. ಇನ್ನೂ ನಾರಾಯಣಪುರದಲ್ಲಿ ಮರ ಬಿದ್ದು, ಕಾರು, ಬೈಕ್ ಜಖಂಗೊಂಡಿದೆ. ಸದ್ಯ ರಸ್ತೆಗೆ ಬಿದ್ದಿದ ಮರವನ್ನು ಬಿಬಿಎಂಪಿ ಸಿಬ್ಬಂದಿ ತೆರವು ಮಾಡಿದ್ದಾರೆ. ಮೆಜೆಸ್ಟಿಕ್‌ನ ಕೆಂಪೇಗೌಡ ಬಸ್ ನಿಲ್ದಾಣದ ಎಟಿಎಂ ಕೊಠಡಿಗೆ ಮಳೆ ನೀರು ನುಗ್ಗಿತ್ತು.

Continue Reading

ವಿಜಯಪುರ

Honor Killing: ಮರ್ಯಾದೆಗಾಗಿ ಗರ್ಭಿಣಿಯನ್ನು ಸುಟ್ಟು ಕೊಂದ ಇಬ್ಬರಿಗೆ ಗಲ್ಲು ಶಿಕ್ಷೆ, 6 ಮಂದಿಗೆ ಜೀವಾವಧಿ‌ ಶಿಕ್ಷೆ

Honor Killing: 2017ರಲ್ಲಿ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಹಾಳಾಗುಂಡಕನಾಳ ಗ್ರಾಮದಲ್ಲಿ ಗರ್ಭಿಣಿಯ ಹತ್ಯೆ ಪ್ರಕರಣ ನಡೆದಿತ್ತು. ಪ್ರೀತಿಸಿ ಮದುವೆಯಾಗಿದ್ದರಿಂದ ಮಹಿಳೆಗೆ ಪೋಷಕರೇ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಕೊಂದಿದ್ದರು.

VISTARANEWS.COM


on

honour killing
Koo

ವಿಜಯಪುರ: ಮರ್ಯಾದಾ ಹತ್ಯೆ ಪ್ರಕರಣದ (Honor Killing) ಇಬ್ಬರು ಅಪರಾಧಿಗಳಿಗೆ ಗಲ್ಲು ಶಿಕ್ಷೆ ಹಾಗೂ ಇತರ 6 ಮಂದಿಗೆ ಜೀವಾವಧಿ ಶಿಕ್ಷೆ ಹಾಗೂ ದಂಡ ವಿಧಿಸಿ ವಿಜಯಪುರ ಜಿಲ್ಲಾ ಎರಡನೇ ಅಪರ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ ಆದೇಶ ನೀಡಿದೆ. 2017ರಲ್ಲಿ ಗರ್ಭಿಣಿಯನ್ನು ಸುಟ್ಟು ಕೊಂದಿದ್ದ ಪೋಷಕರು ಹಾಗೂ ಸಂಬಂಧಿಕರಿಗೆ ಇದೀಗ ಶಿಕ್ಷೆ ನೀಡಲಾಗಿದೆ.

ಇಬ್ರಾಹಿಂ ಸಾಬ್ ಅತ್ತಾರ, ಅಕ್ಬರಸಾಬ್ ಅತ್ತಾರ ಗಲ್ಲು ಶಿಕ್ಷೆಗೆ ಒಳಗಾದವರು. ರಮಜಾನಭೀ ಅತ್ತಾರ, ದಾವಲಭೀ ಜಮಾದಾರ್, ಅಜಮಾ ದಖನಿ, ಜಿಲಾನಿ‌ ದಖನಿ, ಅಬ್ದುಲ್ ಖಾದರ್ ದಖನಿ, ದಾವಲಭಿ ಧನ್ನೂರಗೆ ಜೀವಾವಧಿ‌ ಶಿಕ್ಷೆ ಹಾಗೂ 4.19 ಲಕ್ಷ ದಂಡ ವಿಧಿಸಲಾಗಿದೆ.

2017ರಲ್ಲಿ ವಿಜಯಪುರ ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ ಹಾಳಾಗುಂಡಕನಾಳ ಗ್ರಾಮದಲ್ಲಿ ಗರ್ಭಿಣಿಯ ಹತ್ಯೆ ಪ್ರಕರಣ ನಡೆದಿತ್ತು. ಹಾಳಗುಂಡಕನಾಳ ಗ್ರಾಮದ ಬಾನು ಬೇಗಂ ಅತ್ತಾರ್ ಹಾಗೂ ಸಾಯಬಣ್ಣ ಕೊಣ್ಣೂರ ಎಂಬುವರು 2017ರಲ್ಲಿ ಪ್ರೀತಿಸಿ ಮದುವೆಯಾಗಿದ್ದರು. ಇದು ಬಾನುಬೇಗಂ ಮನೆಯವರ ಕೆಂಗಣ್ಣಿಗೆ ಗುರಿಯಾಗಿತ್ತು. ಮದುವೆಯಾದ ಬಳಿಕ ಬೇರೆ ನಗರದಲ್ಲಿ ಬಾನು ಬೇಗಂ ಹಾಗೂ ಸಾಯಬಣ್ಣ ವಾಸವಿದ್ದರು. ಈ ವೇಳೆ ಬಾನು ಬೇಗಂ ಗರ್ಭಿಣಿಯಾದ ಕಾರಣ ಹೆರಿಗೆಗಾಗಿ ಗಂಡನ ಮನೆಗೆ ಬಂದಿದ್ದಳು. ಇದನ್ನೇ ಕಾಯುತ್ತಿದ್ದ ಆಕೆಯ ಪೋಷಕರು ಬಾನುಬೇಗಂ ಹಾಗೂ ಸಾಹೇಬಣ್ಣರನ್ನ ಕೊಲೆ ಮಾಡಲು ಮುಂದಾಗಿದ್ದರು. ಪತಿ ಮತ್ತು ಪತ್ನಿ ಮೇಲೆ ಹಲ್ಲೆ ಮಾಡುವ ವೇಳೆ ಹಲ್ಲೆಗೊಳಗಾಗಿ ಬಾನು ಬೇಗ ಮೂರ್ಚೆ ಹೋಗಿದ್ದಳು. ಮೂರ್ಚೆ ಹೋದ ಗರ್ಭಿಣಿಯ ಮೇಲೆ ಸೀಮೆಎಣ್ಣೆ ಸುರಿದು ಬೆಂಕಿ ಹಚ್ಚಿ ಕೊಲೆ ಮಾಡಲಾಗಿತ್ತು.

ಇದನ್ನೂ ಓದಿ | Prajwal Revanna Case: ರೇವಣ್ಣ ಮೇಲೆ ಕಿಡ್ನ್ಯಾಪ್‌ ಕೇಸ್;‌ ನಿರೀಕ್ಷಣಾ ಜಾಮೀನು ಅರ್ಜಿ ಮುಂದೂಡಿಕೆ, ನಾಳೆ SIT ಮುಂದೆ ಹಾಜರ್‌?

ಘಟನೆ ವೇಳೆ ಹಲ್ಲೆಕೋರರಿಂದ ಸಾಯಬಣ್ಣನನ್ನು ರಕ್ಷಣೆ ಮಾಡಲಾಗಿತ್ತು. ಬಾನುಬೇಗಂ ತಂದೆ-ತಾಯಿ ಹಾಗೂ ಅವರ ಸಂಬಂಧಿಕರು ಈ ಕೃತ್ಯ ಎಸಗಿದ್ದರು. ಈ ಪ್ರಕರಣ ಕುರಿತು ತನಿಖೆ ನಡೆಸಿ ತಾಳಿಕೋಟೆ ಪೊಲೀಸರು ನ್ಯಾಯಾಲಯಕ್ಕೆ ತನಿಖಾ ವರದಿ ಸಲ್ಲಿಸಿದ್ದರು. ಸುಧೀರ್ಘ ವಾದ-ವಿವಾದ ಆಲಿಸಿದ ನ್ಯಾಯಾಧೀಶ ಸತೀಶ್ ಎಲ್.ಪಿ. ಅವರು ಅಪರಾಧಿಗಳಿಗೆ ಶಿಕ್ಷೆ ಪ್ರಕಟಿಸಿದ್ದಾರೆ. ಸರ್ಕಾರದ ಪರವಾಗಿ ಅಭಿಯೋಜಕ ಎಸ್.ಎಸ್. ಲೋಕೂರ ವಾದ ಮಂಡಿಸಿದ್ದರು.

ದಲಿತ ಬಾಲಕಿಯನ್ನು ಗರ್ಭಿಣಿ ಮಾಡಿ ಎಸ್ಕೇಪ್ ಆಗಿದ್ದ ಸದ್ದಾಂ ಹುಸೇನ್ ಅರೆಸ್ಟ್‌

Physical Abuse

ಹುಬ್ಬಳ್ಳಿ: ದಲಿತ ಬಾಲಕಿಯನ್ನು ಗರ್ಭಿಣಿ ಮಾಡಿ ಎಸ್ಕೇಪ್ ಆಗಿದ್ದ ಅನ್ಯಕೋಮಿ‌ನ ಯುವಕನನ್ನು ಪೊಲೀಸರು ಬಂಧಿಸಿದ್ದಾರೆ. ಹೊಟ್ಟೆ ನೋವಿನಿಂದ ಬಳಲುತ್ತಿದ್ದ ಬಾಲಕಿಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋದಾಗ ವೈದ್ಯರು ಆಘಾತಕಾರಿ ವಿಷಯ ತಿಳಿಸಿದ್ದರು. ಮಗಳು ಗರ್ಭಿಣಿಯಾದ ಸುದ್ದಿ ತಿಳಿದು ಪೋಷಕರು ಕಂಗಾಲಾಗಿದ್ದರು. ಹೀಗಾಗಿ ಆರೋಪಿ ವಿರುದ್ಧ ಕಠಿಣ ಕ್ರಮಕ್ಕೆ ಆಗ್ರಹಿಸಿ ಹಿಂದು ಸಂಘಟನೆಗಳು ಪ್ರತಿಭಟನೆ ನಡೆಸಿದ ಬೆನ್ನಲ್ಲೇ ಪರಾರಿಯಾಗಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.

ಸದ್ದಾಂಹುಸೇನ್ ಬಂಧಿತ ಆರೋಪಿ. ಹುಬ್ಬಳ್ಳಿ ನವನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿತ್ತು. ಅಪ್ರಾಪ್ತೆಯನ್ನು ಗರ್ಭಿಣಿ ಮಾಡಿದ್ದ ಯುವಕ, ಇದರ ಬಗ್ಗೆ ಪೊಲೀಸ್ ಠಾಣೆಗೆ ದೂರು ನೀಡಿದರೆ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದ ಎನ್ನಲಾಗಿದೆ. ಹೀಗಾಗಿ ಯುವಕನ ವಿರುದ್ಧ ಹಿಂದುಪರ ಸಂಘಟನೆಗಳು ಆಕ್ರೋಶ ಹೊರಹಾಕಿ, ಆರೋಪಿಯನ್ನು ಕೂಡಲೇ ಬಂಧಿಸುವಂತೆ ಶುಕ್ರವಾರ ಸಂಜೆ ನವನಗರ ಪೊಲೀಸ್ ಠಾಣೆ ಎದುರು ಪ್ರತಿಭಟನೆ ನಡೆಸಿದ್ದರು.

Physical Abuse

ಇದನ್ನೂ ಓದಿ | Prajwal Revanna Case: ಪೆನ್‌ಡ್ರೈವ್‌ ಲೀಕ್‌ ಮಾಡಿದ್ದು ಯಾರು? ಎಸ್‌ಐಟಿಗೆ ಸಾಕ್ಷಿ ಕೊಟ್ಟ ದೇವರಾಜೇಗೌಡ!

ಸದ್ಯ ಕಿಮ್ಸ್ ಆಸ್ಪತ್ರೆಯಲ್ಲಿ ಅಪ್ರಾಪ್ತ ವಯಸ್ಸಿನ ಬಾಲಕಿಗೆ ಚಿಕಿತ್ಸೆ ಕೊಡಿಸಲಾಗುತ್ತಿದೆ. ಅಪ್ರಾಪ್ತೆ ಆಸ್ಪತ್ರೆಗೆ ಹೋಗಿದ್ದನ್ನು ಅರಿತ ಯುವಕ, ಆಕೆ ಕುಟುಂಬಸ್ಥರಿಗೆ ಕರೆ ಮಾಡಿ ಜೀವ ಬೆದರಿಕೆ ಹಾಕಿದ್ದ. ಹೀಗಾಗಿ ಯುವಕನ ವಿರುದ್ಧ ಕಠಿಣ ಕಾನೂನು ಕ್ರಮ ತೆಗೆದುಕೊಳ್ಳಬೇಕು ಎಂದು ಹಿಂದು ಪರ ಸಂಘಟನೆಗಳ ಆಕ್ರೋಶ ಹೊರಹಾಕಿವೆ.

Continue Reading

ಕ್ರೈಂ

Prajwal Revanna Case: ಪ್ರಜ್ವಲ್‌ ವಿಡಿಯೊ ಪೆನ್‌ಡ್ರೈವ್ ಕಿಂಗ್‌ಪಿನ್ ಯಾರು? ಬೆನ್ನತ್ತಿ ಹೊರಟಿದೆ ಎಚ್‌ಡಿಕೆ ಟೀಂ!

Prajwal Revanna Case: ಪೆನ್‌ಡ್ರೈವ್ ಮಾಡಿದ್ದು ಎಲ್ಲಿ? ಇದರಲ್ಲಿ ಪ್ರಜ್ವಲ್‌ ರೇವಣ್ಣ ಅವರ ಮಾಜಿ ಕಾರು ಚಾಲಕ ಕಾರ್ತಿಕ್ ಪಾತ್ರವೇನು? ಕಾರ್ತಿಕ್ ಯಾರು ಯಾರನ್ನು ಸಂಪರ್ಕ‌ ಮಾಡಿದ್ದ? ಇದರಲ್ಲಿ ಬಿಜೆಪಿ ಮುಖಂಡ, ವಕೀಲ ದೇವರಾಜೇಗೌಡ ಪಾತ್ರವೇನು? ಮೂಲ ಪೆನ್‌ಡ್ರೈವ್ ಸೃಷ್ಟಿ ಆಗಿದ್ದು ಎಲ್ಲಿ? ಅದನ್ನು ಮೊದಲು ಯಾರ ಕೈಗೆ ಕೊಡಲಾಯಿತು? ಈ ಎಲ್ಲ ಸಂಚಿನ ಹಿಂದೆ ಇರುವ ರಾಜಕಾರಣಿ ಯಾರು? ವ್ಯೂಹ ಎಲ್ಲಿ ಸಿದ್ಧವಾಯಿತು? ಚುನಾವಣೆ ಸಮಯದಲ್ಲಿ ಏಕೆ ಹೊರಬಂತು? ಎಂಬಿತ್ಯಾದಿ ವಿಷಯಗಳ ಬಗ್ಗೆ ಮಾಹಿತಿ ಸಂಗ್ರಹಿಸಲು ಎಚ್‌ಡಿಕೆ ಟೀಮ್ ಮುಂದಾಗಿದೆ.

VISTARANEWS.COM


on

Prajwal Revanna Case Who is the kingpin of Prajwal video pen drive HDK team is on its way
Koo

ಬೆಂಗಳೂರು: ಹಾಸನ ಸಂಸದ (Hassan MP), ಮಾಜಿ ಸಚಿವ ಎಚ್.ಡಿ. ರೇವಣ್ಣ ಪುತ್ರ ಪ್ರಜ್ವಲ್ ರೇವಣ್ಣ (Prajwal Revanna Case) ಅಶ್ಲೀಲ ವಿಡಿಯೊ ಎನ್ನಲಾದ ಪೆನ್‌ಡ್ರೈವ್‌ ಪ್ರಕರಣದಲ್ಲಿ (Hassan Pen Drive Case) ರಾಜ್ಯಾದ್ಯಂತ ಹಂಚಿಕೆ ಮಾಡಿದವರು ಯಾರು ಎಂಬುದು ದೊಡ್ಡ ಪ್ರಶ್ನೆಯಾಗಿ ಉಳಿದುಕೊಂಡಿದೆ. ಈ ವಿಷಯಕ್ಕೆ ಸಂಬಂಧಿಸಿದಂತೆ ಡಿಸಿಎಂ, ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಮೇಲೆ ಎಚ್‌.ಡಿ. ಕುಮಾರಸ್ವಾಮಿ (HD Kumaraswamy) ನೇರ ಆರೋಪವನ್ನು ಈಗಾಗಲೇ ಮಾಡಿದ್ದಾರೆ. ಇದರ ಜತೆಗೆ ಎಚ್‌ಡಿಕೆ ಮತ್ತು ತಂಡ “ಪೆನ್‌ಡ್ರೈವ್ ಡಿಸ್ಟ್ರಿಬ್ಯೂಟರ್” ಬೆನ್ನು ಬಿದ್ದಿದೆ.

ಪೆನ್‌ಡ್ರೈವ್ ಮಾಡಿದ್ದು ಎಲ್ಲಿ? ಇದರಲ್ಲಿ ಪ್ರಜ್ವಲ್‌ ರೇವಣ್ಣ ಅವರ ಮಾಜಿ ಕಾರು ಚಾಲಕ ಕಾರ್ತಿಕ್ ಪಾತ್ರವೇನು? ಕಾರ್ತಿಕ್ ಯಾರು ಯಾರನ್ನು ಸಂಪರ್ಕ‌ ಮಾಡಿದ್ದ? ಇದರಲ್ಲಿ ಬಿಜೆಪಿ ಮುಖಂಡ, ವಕೀಲ ದೇವರಾಜೇಗೌಡ ಪಾತ್ರವೇನು? ಮೂಲ ಪೆನ್‌ಡ್ರೈವ್ ಸೃಷ್ಟಿ ಆಗಿದ್ದು ಎಲ್ಲಿ? ಅದನ್ನು ಮೊದಲು ಯಾರ ಕೈಗೆ ಕೊಡಲಾಯಿತು? ಈ ಎಲ್ಲ ಸಂಚಿನ ಹಿಂದೆ ಇರುವ ರಾಜಕಾರಣಿ ಯಾರು? ವ್ಯೂಹ ಎಲ್ಲಿ ಸಿದ್ಧವಾಯಿತು? ಚುನಾವಣೆ ಸಮಯದಲ್ಲಿ ಏಕೆ ಹೊರಬಂತು? ಎಂಬಿತ್ಯಾದಿ ವಿಷಯಗಳ ಬಗ್ಗೆ ಮಾಹಿತಿ ಸಂಗ್ರಹಿಸಲು ಎಚ್‌ಡಿಕೆ ಟೀಮ್ ಮುಂದಾಗಿದೆ.

ಇನ್ನೊಂದೇ ವಾರಕ್ಕೆ ಎಲ್ಲ ಮಾಹಿತಿ ಬಹಿರಂಗ?

ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರು ಒಂದು ವಾರದ ಒಳಗೆ ಪೆನ್‌ಡ್ರೈವ್ ಕಿಂಗ್‌ಪಿನ್ ಬಗ್ಗೆ ಸುದ್ದಿಗೋಷ್ಠಿ ನಡೆಸಿ ಎಲ್ಲವನ್ನೂ ಬಹಿರಂಗ ಮಾಡಲಿದ್ದಾರೆ ಎನ್ನಲಾಗಿದೆ. ಈ ನಿಟ್ಟಿನಲ್ಲಿ ಅವರು ತಮ್ಮೆಲ್ಲ ಶಕ್ತಿ ಹಾಗೂ ಯುಕ್ತಿಯನ್ನು ಬಳಕೆ ಮಾಡುತ್ತಿದ್ದಾರೆ ಎನ್ನಲಾಗಿದೆ.

ಎಚ್‌ಡಿಕೆ ಸಿಟ್ಟಿಗೆದ್ದಿರುವುದು ಏಕೆ?

ಪ್ರಜ್ವಲ್‌ ರೇವಣ್ಣ ಅವರದ್ದು ಎನ್ನಲಾದ ವಿಡಿಯೊವನ್ನು ಬಿಡುಗಡೆ ಮಾಡಿದಾಗಲಿಂದಲೂ ಎಚ್‌.ಡಿ. ದೇವೇಗೌಡರ ಕುಟುಂಬ ಟಾರ್ಗೆಟ್‌ ಆಗಿದೆ. ಅಲ್ಲದೆ, ಇದನ್ನು ಎಚ್.ಡಿ. ಕುಮಾರಸ್ವಾಮಿ ಅವರೇ ಮಾಡಿಸಿದ್ದಾರೆ ಎಂದು ಡಿ.ಕೆ. ಸಹೋದರರು ಮೇಲಿಂದ ಮೇಲೆ ಆರೋಪ ಮಾಡುತ್ತಾ ಬರುತ್ತಿದ್ದಾರೆ. ಹೀಗಾಗಿ ಎಚ್‌ಡಿಕೆ ಸಿಟ್ಟಾಗಿದ್ದು, ಇದರ ಎಲ್ಲ ಸತ್ಯಾಸತ್ಯತೆಯನ್ನು ಬಯಲಿಗೆಳೆಯಬೇಕು ಎಂದು ಹಠ ತೊಟ್ಟಿದ್ದಾರೆ.

ಈ ಪ್ರಕರಣದಲ್ಲಿ ಅಸಲಿ, ನಕಲಿ ಏನು? ಎಂಬ ಬಗ್ಗೆ ಪೂರ್ತಿ ವಿಷಯವನ್ನು ತಿಳಿಯಲು ಮುಂದಾಗಿದ್ದಾರೆ. ಪೆನ್‌ಡ್ರೈವ್ ಸೃಷ್ಟಿ ಮಾಡಿದವರಲ್ಲಿ ಮೊದಲ ಅನುಮಾನ ಕಾರ್ತಿಕ್‌ ಮೇಲಿದ್ದರೆ, ಎರಡನೇ ಅನುಮಾನ ದೇವರಾಜೇಗೌಡ ಅವರ ಮೇಲಿದೆ. ಇವರಿಬ್ಬರ ಜಾಡು ಬೆನ್ನತ್ತಿ ಎಚ್ಡಿಕೆ ಟೀಮ್ ಹೊರಟಿದೆ.

ದೇಶ ಬಿಟ್ಟು ಹೋಗಲು ಸಜ್ಜಾದರೇ ಎಚ್.ಡಿ. ರೇವಣ್ಣ? ಲುಕ್‌ಔಟ್‌ ನೋಟಿಸ್‌ ಜಾರಿ ಮಾಡಿದ SIT!

ಎಚ್‌.ಡಿ. ರೇವಣ್ಣ (HD Revanna) ವಿರುದ್ಧವೂ ಈಗ ಎಸ್‌ಐಟಿ ಲುಕ್‌ಔಟ್‌ ನೋಟಿಸ್‌ ಜಾರಿ ಮಾಡಿದೆ. ದೇಶ ಬಿಟ್ಟು ಹೋಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಲುಕ್‌ಔಟ್ ನೋಟಿಸ್ (Lookout Notice) ಜಾರಿ ಮಾಡಲಾಗಿದೆ ಎನ್ನಲಾಗಿದೆ.

ಈಗಾಗಲೇ ಮಾಜಿ ಸಚಿವ ಎಚ್.ಡಿ. ರೇವಣ್ಣ ವಿರುದ್ಧವೂ ಲೈಂಗಿಕ ದೌರ್ಜನ್ಯ ಹಾಗೂ ಅಪಹರಣ ಪ್ರಕರಣ ದಾಖಲಾಗಿದೆ. ಕಳೆದ ಎರಡು ದಿನಗಳಿಂದ ಎಚ್.ಡಿ. ರೇವಣ್ಣ ಕಾಣಿಸಿಕೊಂಡಿಲ್ಲ. ಈ ಹಿನ್ನೆಲೆಯಲ್ಲಿ ಎಸ್‌ಐಟಿ ಅಧಿಕಾರಿಗಳು ಲುಕ್‌ಔಟ್ ನೋಟಿಸ್‌ ಅನ್ನು ಜಾರಿ ಮಾಡಿದ್ದಾರೆ.

ಕೆ. ಆರ್. ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದಡಿ ಲುಕ್ ಔಟ್ ನೋಟಿಸ್‌ ಅನ್ನು ಜಾರಿ ಮಾಡಲಾಗಿದೆ. ಈಗ ಎಚ್.ಡಿ. ರೇವಣ್ಣ ಸಹ ತಲೆಮರೆಸಿಕೊಂಡಿದ್ದಾರೆ ಎನ್ನಲಾಗಿದ್ದು, ದೇಶ ಬಿಟ್ಟು ಹೋಗುವ ಸಾಧ್ಯತೆ ಇದೆ. ಒಂದು ವೇಳೆ ಅವರು ದೇಶ ಬಿಟ್ಟು ಹೋದರೆ ರಾಜ್ಯ ಸರ್ಕಾರಕ್ಕೆ ತೀವ್ರ ಮುಖಭಂಗವಾಗಲಿದೆ. ಇದೊಂದು ಹೈಪ್ರೊಫೈಲ್‌ ಕೇಸ್‌ ಆಗಿದ್ದು, ಸೂಕ್ಷ್ಮವಾಗಿ ತನಿಖೆ ನಡೆಸಬೇಕಿದೆ. ಹೀಗಾಗಿ ಎಸ್‌ಐಟಿ ಅಧಿಕಾರಿಗಳು ಎಲ್ಲ ಆಯಾಮಗಳಲ್ಲಿಯೂ ತನಿಖೆ ಮಾಡುತ್ತಿದ್ದಾರೆ.

ಇದರ ಜತೆಗೆ ರೇವಣ್ಣ ಅವರಿಗೆ ಈಗಾಗಲೇ ವಿಚಾರಣೆಗೆ ಹಾಜರಾಗುವಂತೆ ಹಲವು ಬಾರಿ ನೋಟಿಸ್‌ ನೀಡುತ್ತಲೇ ಬರಲಾಗಿದೆ. ಇಷ್ಟಾದರೂ ಅವರು ಎಲ್ಲಿಯೂ ಕಾಣಿಸಿಕೊಂಡಿಲ್ಲ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಎಸ್‌ಐಟಿ ಲುಕ್‌ಔಟ್‌ ನೋಟಿಸ್‌ ಜಾರಿಗೊಳಿಸಿದೆ.

ಏನಿದು ಲುಕ್ ಔಟ್ ನೋಟಿಸ್? ಜಾರಿ ಅಧಿಕಾರ ಯಾರಿಗೆ? ಇದಕ್ಕೂ ತಡೆ ತರಬಹುದಾ?

ಲುಕ್‌ಔಟ್ ನೋಟಿಸ್‌ಗಳನ್ನು ಲುಕ್‌ಔಟ್ ಸರ್ಕ್ಯುಲರ್‌ಗಳು (LOC) ಎಂದೂ ಕರೆಯಲಾಗುತ್ತದೆ. ತಲೆಮರೆಸಿಕೊಂಡಿರುವ ಅಪರಾಧಿಗಳನ್ನು ಪತ್ತೆಹಚ್ಚಲು ಇವುಗಳನ್ನು ಇಶ್ಯೂ ಮಾಡಲಾಗುತ್ತದೆ. ಇದನ್ನು ದೇಶದ ವಲಸೆ ಬ್ಯೂರೋ (Bureau of Immigration) ಹಾಗೂ ಗೃಹ ಸಚಿವಾಲಯ (MHA) ಮಾತ್ರ ನೀಡಬಹುದು. ವಿಮಾನ ನಿಲ್ದಾಣ (Airport) ಮತ್ತಿತರ ಸಂಚಾರ ಪಾಯಿಂಟ್‌ಗಳಲ್ಲಿ ಕಾನೂನು ಜಾರಿ ಅಧಿಕಾರಿಗಳಿಗೆ ಅಗತ್ಯವಿರುವ ವ್ಯಕ್ತಿಗಳ ಪ್ರವೇಶ ಮತ್ತು ನಿರ್ಗಮನದ ಮೇಲೆ ನಿಗಾ ಇಡಲು, ಪರಿಣಾಮಕಾರಿಯಾಗಿ ತಡೆಗಟ್ಟಲು ಇದನ್ನು ಹೊರಡಿಸಲಾಗುತ್ತದೆ.

ಒಂದು ದೇಶದ ವಲಸೆ ಅಧಿಕಾರಿಗಳು ಯಾವುದೇ ತಲೆಮರೆಸಿಕೊಂಡಿರುವ ಅಪರಾಧಿಯ ವಿರುದ್ಧ ಲುಕ್‌ಔಟ್ ಸುತ್ತೋಲೆ ಹೊರಡಿಸಿದರೆ, ಆ ವ್ಯಕ್ತಿಯನ್ನು ಅಧಿಕಾರಿಗಳು ಬಂಧಿಸಬಹುದು. ಅಪರಾಧಿಗಳು ಇದರಿಂದಾಗಿ ವಿಮಾನ ನಿಲ್ದಾಣ ಅಥವಾ ಬಂದರಿನಲ್ಲಿ ಸಿಕ್ಕಿಬಿದ್ದಿರುವ ಸುದ್ದಿಯನ್ನು ನಾವು ಆಗಾಗ ಕೇಳುತ್ತಿರುತ್ತೇವೆ.

ಮಾರ್ಗಸೂಚಿಗಳು

ಭಾರತೀಯ ನಾಗರಿಕರಿಗೆ ಸಂಬಂಧಿಸಿದ ಈ ಸರ್ಕ್ಯುಲರ್‌ಗಳ ಮೂಲ ಮಾರ್ಗಸೂಚಿಗಳನ್ನು ಗೃಹ ವ್ಯವಹಾರಗಳ ಸಚಿವಾಲಯ (MHA) ಹೊರಡಿಸಿದೆ. ಈ ಮಾರ್ಗಸೂಚಿಗಳು ಹೀಗಿವೆ:

1) LOC ನೀಡುವ ವಿನಂತಿಯನ್ನು ಭಾರತ ಸರ್ಕಾರದ ಉಪ ಕಾರ್ಯದರ್ಶಿ, ರಾಜ್ಯ ಸರ್ಕಾರದ ಜಂಟಿ ಕಾರ್ಯದರ್ಶಿ, ಜಿಲ್ಲಾ ಮಟ್ಟದಲ್ಲಿ ಸಂಬಂಧಿಸಿದ ಪೊಲೀಸ್ ವರಿಷ್ಠಾಧಿಕಾರಿಗಳ ಶ್ರೇಣಿಯ ಅಧಿಕಾರಿಗಳು ಮಾತ್ರ ಮಾಡಬಹುದು.

2) ಯಾವುದೇ ಭಾರತೀಯ ವ್ಯಕ್ತಿಯ ವಿರುದ್ಧ ಎಲ್ಲ ವಲಸೆ ಚೆಕ್‌ಪೋಸ್ಟ್‌ಗಳಿಗೆ ಲುಕ್‌ಔಟ್ ನೋಟಿಸ್ ಅನ್ನು ಗೃಹ ಸಚಿವಾಲಯ ಸಿದ್ಧಪಡಿಸಿದ ಸ್ವರೂಪದಲ್ಲಿ ಮಾತ್ರ ನೀಡಬಹುದು.

3) ನೋಟಿಸ್ ನೀಡುವ ಏಜೆನ್ಸಿಯು ಆರೋಪಿಯ ಸಂಪೂರ್ಣ ಗುರುತಿನ ವಿವರಗಳನ್ನು ನಿಗದಿತ ನಮೂನೆಯಲ್ಲಿ ನೀಡಬೇಕು. ಆರೋಪಿಯ ಹೆಸರನ್ನು ಹೊರತುಪಡಿಸಿ ಮೂರಕ್ಕಿಂತ ಕಡಿಮೆ ಗುರುತಿನ ಮಾನದಂಡಗಳಿದ್ದಲ್ಲಿ LOC ನೀಡಲಾಗುವುದಿಲ್ಲ.

4) ಸಾಮಾನ್ಯವಾಗಿ ಲುಕ್‌ಔಟ್ ನೋಟೀಸ್ ವಿತರಣೆಯ ದಿನಾಂಕದಿಂದ ಒಂದು ವರ್ಷದವರೆಗೆ ಮಾನ್ಯವಾಗಿರುತ್ತದೆ. ಏಜೆನ್ಸಿಯು ಈ ಸೂಚನೆಯ ಅವಧಿಯನ್ನು ಹೆಚ್ಚಿಸಲು ಬಯಸಿದರೆ, ಒಂದು ವರ್ಷ ಪೂರ್ಣಗೊಳ್ಳುವ ಮೊದಲು ಮಾಡಬಹುದು. ಒಂದು ವರ್ಷದ ನಿಗದಿತ ಅವಧಿಯೊಳಗೆ LOCಯನ್ನು ವಿಸ್ತರಿಸಲು ಯಾವುದೇ ವಿನಂತಿ ಮಾಡದಿದ್ದರೆ, LOC ಅನ್ನು ಅಮಾನತುಗೊಳಿಸಲು ಸಂಬಂಧಿಸಿದ ವಲಸೆ ಅಧಿಕಾರಿಗೆ ಅಧಿಕಾರವಿದೆ.

ಕೋರ್ಟ್ ಮತ್ತು ಇಂಟರ್‌ಪೋಲ್‌ನಿಂದ ಲುಕ್‌ಔಟ್ ನೋಟಿಸ್‌ಗಳನ್ನು ನೀಡಿದರೆ, ಲುಕ್‌ಔಟ್ ನೋಟಿಸ್‌ಗಳು ಒಂದು ವರ್ಷದೊಳಗೆ ಮುಕ್ತಾಯಗೊಳ್ಳುವುದಿಲ್ಲ.

ಲುಕ್‌ಔಟ್ ನೋಟಿಸ್‌ನ ದುರ್ಬಳಕೆ

ಹಲವು ಪ್ರಕರಣಗಳಲ್ಲಿ ಲುಕ್‌ಔಟ್‌ ನೋಟಿಸ್‌ ದುರ್ಬಳಕೆಯಾಗಿದೆ. ಯಾರ ವಿರುದ್ಧ ಲುಕ್‌ಔಟ್ ನೋಟಿಸ್ ಜಾರಿಯಾಗಿದೆಯೋ ಅವರಿಗೂ ಲುಕ್‌ಔಟ್ ನೋಟಿಸ್ ಬಗ್ಗೆ ಕೆಲವೊಮ್ಮ ತಿಳಿದಿರುವುದಿಲ್ಲ. ವ್ಯಕ್ತಿ ತನ್ನ ವಿರುದ್ಧ ಲುಕ್‌ಔಟ್ ನೋಟಿಸ್ ಜಾರಿ ಮಾಡಿರುವುದನ್ನು ನಿರೀಕ್ಷಿಸದೇ ಇರಬಹುದು. ವಿಮಾನ ನಿಲ್ದಾಣ/ಗಡಿ ಇತ್ಯಾದಿಗಳಲ್ಲಿ ವಲಸೆ ಅಧಿಕಾರಿಗಳು ತಡೆದಾಗ ಅಥವಾ ಬಂಧಿಸಿದಾಗ ಮಾತ್ರ ಆರೋಪಿಗೆ ತಿಳಿಯುತ್ತದೆ.

ಆದರೆ ಮಾಹಿತಿ ತಂತ್ರಜ್ಞಾನ ಕ್ರಾಂತಿಯ ಯುಗದಲ್ಲಿ ಹೀಗಾಗದು. ಕೆಲವೊಮ್ಮೆ ಲುಕ್‌ಔಟ್ ನೋಟಿಸ್‌ಗಳನ್ನು ಎಲ್ಲಾ ನಿಯಮಗಳ ಪಾಲನೆಯಾಗದೆ ನೀಡಲಾಗುತ್ತದೆ. ಈ ಪ್ರಕರಣಗಳು ಶಂಕಿತ ವ್ಯಕ್ತಿಗಳು, ದೇಶ ವಿರೋಧಿ ಅಂಶಗಳು ಇತ್ಯಾದಿಗಳೊಂದಿಗೆ ಸಂಬಂಧ ಹೊಂದಿವೆ. ಇಂತಹ ಪ್ರಕರಣಗಳಿಂದ ಬಾಧಿತರಾದ ಯಾವುದೇ ವ್ಯಕ್ತಿ ಮಾನಸಿಕ ಮತ್ತು ದೈಹಿಕ ಕಿರುಕುಳಕ್ಕೆ ಪರಿಹಾರ ಪಡೆಯಲು ಮಾನವ ಹಕ್ಕುಗಳ ಆಯೋಗ ಅಥವಾ ಹೈಕೋರ್ಟ್‌ಗಳನ್ನು ಸಂಪರ್ಕಿಸಬಹುದು. ಆದರೆ ಈ ಪ್ರಕ್ರಿಯೆ ಹಲವು ವರ್ಷಗಳನ್ನು ತೆಗೆದುಕೊಳ್ಳಬಹುದು ಮತ್ತು ತುಂಬಾ ದುಬಾರಿಯಾಗಬಹುದು.

ಇದನ್ನೂ ಓದಿ: Prajwal Revanna Case: ವಿಡಿಯೊದಲ್ಲಿ ಪ್ರಜ್ವಲ್‌ ಮುಖ ಕಾಣಲ್ಲ; ಗಂಡಸ್ತನವಿದ್ದರೆ ರಾಹುಲ್‌ ಗಾಂಧಿಗೆ ನೋಟಿಸ್‌ ಕೊಡಿ: ಸಿಎಂಗೆ ಎಚ್‌ಡಿಕೆ ಸವಾಲು

ಲುಕ್‌ಔಟ್ ನೋಟಿಸ್‌ಗಳು ಅಪರಾಧಿಗಳಲ್ಲಿ ಭಯವನ್ನು ಉಂಟುಮಾಡುತ್ತವೆಯೇ? ಅನೇಕ ಪ್ರಕರಣಗಳಲ್ಲಿ ಅನೇಕ ಅಪರಾಧಿಗಳು ಮತ್ತು ಆರೋಪಿಗಳು ವಿದೇಶದಲ್ಲಿ ವಾಸಿಸುತ್ತಿದ್ದಾರೆ. ಅವರ ವಿರುದ್ಧ ಭಾರತದಲ್ಲಿ ಲುಕ್‌ಔಟ್ ನೋಟಿಸ್‌ಗಳನ್ನು ಹೊರಡಿಸಲಾಗಿದೆ. ಆದರೆ ಇದರಿಂದ ಅವರು ವಿಚಲಿತರಾದಂತಿಲ್ಲ. ಇಲ್ಲಿಯವರೆಗೆ ಎಷ್ಟು ಲುಕ್‌ಔಟ್ ನೋಟಿಸ್‌ಗಳನ್ನು ನೀಡಲಾಗಿದೆ ಎಂಬುದಕ್ಕೆ ಯಾವುದೇ ಅಧಿಕೃತ ಮಾಹಿತಿ ಲಭ್ಯವಿಲ್ಲ.

Continue Reading
Advertisement
Mallikarjuna Kharge
ದೇಶ11 seconds ago

Mallikarjuna Kharge: ಪ್ರಧಾನಿ ಮೋದಿ ವಡೋದರಾ ಬಿಟ್ಟು ವಾರಣಾಸಿಗೆ ಓಡಲಿಲ್ಲವೇ?; ಖರ್ಗೆ ಕಿಡಿ

RCB vs GT
ಕ್ರೀಡೆ58 seconds ago

RCB vs GT: ಆರ್​ಸಿಬಿ ಅಭಿಮಾನಿಗಳಿಗೆ ಇಂದು ಶೇ.99ರಷ್ಟು ನಿರಾಸೆ ಖಚಿತ; ಪಂದ್ಯ ನಡೆಯುವುದೇ ಅನುಮಾನ

rahul gandhi gary Kasparov
ವೈರಲ್ ನ್ಯೂಸ್14 mins ago

Rahul Gandhi: ರಾಹುಲ್‌ ಗಾಂಧಿಗೆ “ಮೊದಲು ರಾಯ್‌ಬರೇಲಿಯಿಂದ ಗೆಲ್ಲಿ…” ಎಂದ ಚೆಸ್‌ ದಂತಕಥೆ ಗ್ಯಾರಿ ಕಾಸ್ಪರೋವ್!

Lok Sabha Election 2024
Lok Sabha Election 202441 mins ago

Lok Sabha Election 2024: ಚುನಾವಣಾ ಪ್ರಚಾರದ ವೇಳೆ ಮಹಿಳೆಯ ಕೆನ್ನೆಗೆ ಹೊಡೆದ ಕಾಂಗ್ರೆಸ್‌ ಅಭ್ಯರ್ಥಿ; ವಿಡಿಯೊ ಇಲ್ಲಿದೆ

Viral News
ವೈರಲ್ ನ್ಯೂಸ್48 mins ago

Viral News: ಹೆರಿಗೆಯಾದ ಮೂರು ಗಂಟೆಗಳಲ್ಲೇ ಅಪಾರ್ಟ್‌ಮೆಂಟ್‌ ಮೇಲಿಂದ ಮಗುವನ್ನೇ ಎಸೆದ್ಳಾ?

king dasharatha kaikeyi dhavala dharini column
ಅಂಕಣ1 hour ago

ಧವಳ ಧಾರಿಣಿ ಅಂಕಣ: ರಾಮಪಟ್ಟಾಭಿಷೇಕ ಭಂಗ

Weight Loss Tips
ಆರೋಗ್ಯ2 hours ago

Weight Loss Tips: ಸುಸ್ಥಿರವಾಗಿ ತೂಕ ಇಳಿಸಬೇಕೆ?; ಇಲ್ಲಿದೆ ದಾರಿ!

saddam hussain pocso case culprit hubli
ಕ್ರೈಂ2 hours ago

Physical Abuse: ದಲಿತ ಯುವತಿಯ ಮೇಲೆ ಅತ್ಯಾಚಾರ ಎಸಗಿ ಪರಾರಿಯಾದ ಸದ್ದಾಂ ಹುಸೇನ್‌ ಕಾಲಿಗೆ ಗುಂಡೇಟು

Karnataka Weather Forecast
ಮಳೆ2 hours ago

Karnataka Weather: ಯೆಲ್ಲೋ ಅಲರ್ಟ್‌; ಬೆಂಗಳೂರು ಸೇರಿ ಹಲವೆಡೆ ಗುಡುಗು ಸಹಿತ ಭಾರಿ ಮಳೆ ಎಚ್ಚರಿಕೆ

Pakistan PM
ಸಂಪಾದಕೀಯ3 hours ago

ವಿಸ್ತಾರ ಸಂಪಾದಕೀಯ: ಪಾಕಿಸ್ತಾನ ಮೊದಲು ತನ್ನ ತಟ್ಟೆಯಲ್ಲಿ ಬಿದ್ದಿರುವ ನೊಣ ತೆಗೆಯಲಿ, ಪಾಠ ಕಲಿಯಲಿ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ7 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ6 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Dina Bhavishya
ಭವಿಷ್ಯ4 hours ago

Dina Bhavishya: ವೀಕೆಂಡ್‌ನಲ್ಲೂ ಬಾಸ್‌ ಕಾಟ ತಪ್ಪಲ್ಲ; ಈ ರಾಶಿಯವರಿಗೆ ಇಡೀ ದಿನ ಕೆಲಸದ ಒತ್ತಡ

Bengaluru Rains
ಮಳೆ16 hours ago

Bengaluru Rains:‌ ಅಬ್ಬಾಬ್ಬ ಲಾಟ್ರಿ.. ಕಂಗ್ರಾಜುಲೇಷನ್ ಬ್ರದರ್.. ಬೆಂಗಳೂರು ಮಳೆಗೆ ನೆಟ್ಟಿಗರ ವಿಷ್‌, ಫುಲ್ ಖುಷ್‌

Dina Bhavishya
ಭವಿಷ್ಯ1 day ago

Dina Bhavishya: ಈ ರಾಶಿಯ ವಿವಾಹ ಅಪೇಕ್ಷಿತರಿಗೆ ಸಿಗಲಿದೆ ಗುಡ್‌ ನ್ಯೂಸ್‌

Prajwal Revanna Case Another victim gives statement before judge Will Revanna get anticipatory bail
ಕ್ರೈಂ2 days ago

Prajwal Revanna Case: ನ್ಯಾಯಾಧೀಶರ ಮುಂದೆ 2 ಗಂಟೆ ಹೇಳಿಕೆ ನೀಡಿದ ಮತ್ತೊಬ್ಬ ಸಂತ್ರಸ್ತೆ; ರೇವಣ್ಣಗೆ ಸಿಗುತ್ತಾ ನಿರೀಕ್ಷಣಾ ಜಾಮೀನು?

Dina Bhavishya
ಭವಿಷ್ಯ2 days ago

Dina Bhavishya : ದಿನದ ಕೊನೆಯಲ್ಲಿ ಈ ರಾಶಿಯವರು ಯಾವುದಾದರೂ ಶುಭ ಸುದ್ದಿ ಕೇಳುವಿರಿ

dina bhavishya read your daily horoscope predictions for April 30 2024
ಭವಿಷ್ಯ4 days ago

Dina Bhavishya: ಈ ರಾಶಿಗಳ ಉದ್ಯೋಗಿಗಳಿಗೆ ಇಂದು ಒತ್ತಡ ಹೆಚ್ಚಲಿದೆ!

PM Narendra modi in Bagalakote and Attack on Congress
Lok Sabha Election 20245 days ago

PM Narendra Modi: ಒಬಿಸಿಗೆ ಇದ್ದ ಮೀಸಲಾತಿ ಪ್ರಮಾಣಕ್ಕೆ ಮುಸ್ಲಿಮರನ್ನು ಸೇರಿಸಲು ಕಾಂಗ್ರೆಸ್‌ ಷಡ್ಯಂತ್ರ: ಮೋದಿ ವಾಗ್ದಾಳಿ

PM Narendra modi in Bagalakote for Election Campaign and here is Live telecast
Lok Sabha Election 20245 days ago

PM Narendra Modi Live: ಇಂದು ಬಾಗಲಕೋಟೆಯಲ್ಲಿ ನರೇಂದ್ರ ಮೋದಿ ಹವಾ; ಲೈವ್‌ಗಾಗಿ ಇಲ್ಲಿ ವೀಕ್ಷಿಸಿ

dina bhavishya read your daily horoscope predictions for April 29 2024
ಭವಿಷ್ಯ5 days ago

Dina Bhavishya : ಈ ರಾಶಿಯವರಿಗೆ ಇಂದು ಸಂತೋಷವೇ ಸಂತೋಷ! ಹೂಡಿಕೆಯಲ್ಲಿ ಲಾಭ ಯಾರಿಗೆ?

Vote Jihad
Lok Sabha Election 20246 days ago

PM Narendra Modi: ಇವಿಎಂ ದೂರುವ ಕಾಂಗ್ರೆಸ್‌ಗೆ ಸೋಲಿನ ಭೀತಿ; ಕರ್ನಾಟಕದಲ್ಲಿ 1 ಸೀಟನ್ನೂ ಗೆಲ್ಲಲ್ಲವೆಂದ ಮೋದಿ!

ಟ್ರೆಂಡಿಂಗ್‌