Traffic Jam: ಬೆಂಗಳೂರು ಆಯ್ತು ಇದೀಗ ಗುರುಗ್ರಾಮದಲ್ಲೂ ಟ್ರಾಫಿಕ್‌ ಜಾಮ್‌; ಸಾರ್ವಜನಿಕ ವಾಹನ ಬಳಸಿ ಎಂದು ನೆಟ್ಟಿಗರು - Vistara News

ವೈರಲ್ ನ್ಯೂಸ್

Traffic Jam: ಬೆಂಗಳೂರು ಆಯ್ತು ಇದೀಗ ಗುರುಗ್ರಾಮದಲ್ಲೂ ಟ್ರಾಫಿಕ್‌ ಜಾಮ್‌; ಸಾರ್ವಜನಿಕ ವಾಹನ ಬಳಸಿ ಎಂದು ನೆಟ್ಟಿಗರು

Traffic Jam: ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಸಂಭವಿಸಿದ್ದ ಟ್ರಾಫಿಕ್‌ ಜಾಮ್‌ ಭಾರೀ ಸದ್ದು ಮಾಡಿತ್ತು. ಇದೀಗ ಗುರುಗ್ರಾಮದ ಸರದಿ. ಈ ಮಹಾನಗರವೂ ಕೆಟ್ಟ ಟ್ರಾಫಿಕ್‌ ಜಾಮ್‌ಗೆ ಸಾಕ್ಷಿಯಾಗಿದೆ.

VISTARANEWS.COM


on

gurugarama
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಗುರುಗ್ರಾಮ: ಸಿಲಿಕಾನ್‌ ಸಿಟಿ ಬೆಂಗಳೂರು ಕೆಟ್ಟ ಟ್ರಾಫಿಕ್‌ ಕಾರಣಕ್ಕೂ ಆಗಾಗ ಸುದ್ದಿಯಾಗುತ್ತದೆ (Bengaluru Traffic). ಇದೀಗ ಇನ್ನೊಂದು ಮಹಾನಗರ ಹರಿಯಾಣದ ಗುರುಗ್ರಾಮದಲ್ಲಿಯೂ ಬಹುದೊಡ್ಡ ಟ್ರಾಫಿಕ್‌ ಜಾಮ್‌ (Traffic Jam) ಸಂಭವಿಸಿದ್ದು, ಈ ವಿಡಿಯೊ ವೈರಲ್‌ ಆಗಿದೆ. ಈಗ ಇದನ್ನು ಬೆಂಗಳೂರು ಟ್ರಾಫಿಕ್‌ನೊಂದಿಗೆ ಹೋಲಿಸಿ ಚರ್ಚೆ ಆರಂಭವಾಗಿದೆ. ಗುರುಗ್ರಾಮದ ಟ್ರಾಫಿಕ್‌ ಅನ್ನು ಪ್ರದರ್ಶಿಸುವ ಈ ಪುಟ್ಟ ವಿಡಿಯೊದಲ್ಲಿ ರಸ್ತೆಯ ಉದ್ದಕ್ಕೂ ಕಾರುಗಳು ಸಿಲುಕಿಕೊಂಡಿರುವುದು ಕಂಡು ಬರುತ್ತಿದೆ. ಈ ವಾಹನಗಳ ಸಾಲು ಮುಗಿಯುವುದೇ ಇಲ್ಲ. ಎಕ್ಸ್‌ನಲ್ಲಿ ಈ ವಿಡಿಯೊವನ್ನು ಕನ್ನಡಿಗ ವಿಲಾಸ್‌ ನಾಯಕ್‌ ಹಂಚಿಕೊಂಡಿದ್ದು, ʼನಾನು ಹಿಂದೆ ಬೆಂಗಳೂರಿನ ಟ್ರಾಫಿಕ್‌ ಬಗ್ಗೆ ಹೇಳಿದ್ದೆ. ಇದೀಗ ಗುರುಗ್ರಾಮದ ಸರದಿʼ ಎಂದು ಬರೆದಿದ್ದಾರೆ.

ಈ ವಿಡಿಯೊ ಇದೀಗ ನೆಟ್ಟಿಗರನ್ನು ಸೆಳೆದಿದೆ. ಈಗಾಗಲೇ 2 ಲಕ್ಷಕ್ಕಿಂತಲೂ ಅಧಿಕ ಮಂದಿ ಈ ವಿಡಿಯೊವನ್ನು ವೀಕ್ಷಿಸಿದ್ದಾರೆ. ಹಲವರು ಕಮೆಂಟ್‌ ಮಾಡಿದ್ದಾರೆ. ನೆಟ್ಟಿಗರೊಬ್ಬರು ʼʼಗುರುಗ್ರಾಮದಲ್ಲಿ ಕೆಲವೊಮ್ಮೆ ಇಂತಹ ಟ್ರಾಫಿಕ್‌ ಜಾಮ್‌ ಸಂಭವಿಸುತ್ತದೆ. ಆದರೆ ಬೆಂಗಳೂರಿನಲ್ಲಿ ಹಾಗಲ್ಲ. ಅಲ್ಲಿನ ಟ್ರಾಫಿಕ್‌ ಯಾವತ್ತೂ ಕೆಟ್ಟದಾಗಿರುತ್ತದೆ. ಇದು ಬೆಂಗಳೂರು ಮತ್ತು ಗುರುಗ್ರಾಮಕ್ಕಿರುವ ವ್ಯತ್ಯಾಸʼʼ ಎಂದಿದ್ದಾರೆ. ʼʼದಿಲ್ಲಿ-ಗುರುಗ್ರಾಮ ಹೆದ್ದಾರಿಯಲ್ಲಿ ಪ್ರತಿದಿನ ಇಂತಹ ಘಟನೆ ನಡೆಯುತ್ತದೆ. ಬೆಳಗ್ಗೆ ದಿಲ್ಲಿಯ ವಾಹನಗಳು ಒಂದು ಬದಿಯ ರಸ್ತೆಯನ್ನು ಬ್ಲಾಕ್‌ ಮಾಡಿದರೆ ಸಂಜೆ ಗುರುಗ್ರಾಮದ ವಾಹನಗಳು ಇನ್ನೊಂದು ಬದಿಯ ಜಾಮ್‌ಗೆ ಕಾರಣವಾಗುತ್ತವೆ. ಗುರುಗ್ರಾಮದಲ್ಲಿ ವಾಸಿಸುತ್ತಿರುವ, ಮತ್ತು ಉದ್ಯೋಗಕ್ಕಾಗಿ ದಿಲ್ಲಿಗೆ ಪ್ರಯಾಣಿಸುವವರು ಅದೃಷ್ಟವಂತರುʼʼ ಎಂದಿದ್ದಾರೆ ಮತ್ತೊಬ್ಬರು. ʼʼಸಾರ್ವಜನಿಕ ವಾಹನಗಳನ್ನು ನಿರ್ಲಕ್ಷಿಸಿದ ಪರಿಣಾಮವಿದು. ಪ್ರತಿಯೊಂದು ಕುಟುಂಬದಲ್ಲಿ 3-4 ವಾಹನಗಳಿರುತ್ತವೆ. ಹೀಗಾಗಿ ಈ ರೀತಿಯ ಪರಿಸ್ಥಿತಿ ಉದ್ಘವಿಸುತ್ತದೆʼʼ ಎಂದು ಇನ್ನೊಬ್ಬರು ಕಾರಣ ವಿವರಿಸಿದ್ದಾರೆ.

ʼʼಅರೋಗ್ಯ ಸಮಸ್ಯೆ ಕಾಡಿದವರು ಅದರಲ್ಲೂ ಮಧುಮೇಹಿಗಳು ಈ ಟ್ರಾಫಿಕ್‌ ಮಧ್ಯೆ ಸಿಲುಕಿಕೊಂಡರೆ ಅವರ ಪರಿಸ್ಥಿತಿ ಹೇಗಿರುತ್ತದೆ ಎನ್ನುವುದನ್ನು ಒಮ್ಮೆ ಆಲೋಚಿಸಿʼʼ ಎಂದು ಹೇಳಿ ಮಗದೊಬ್ಬರು ಗಂಭೀರ ಚಿಂತನೆಗೆ ಹಚ್ಚಿದ್ದಾರೆ. ʼʼರಸ್ತೆ ಹೆಚ್ಚಾದಂತೆ ವಾಹನಗಳೂ ಹೆಚ್ಚುತ್ತವೆ ಎಂದು ಅಧ್ಯಯನ ತಿಳಿಸುತ್ತದೆ. ನಮಗೆ ಉತ್ತಮ ಸಾರ್ವಜನಿಕ ಸಾರಿಗೆ ವ್ಯವಸ್ಥೆಯ ಅಗತ್ಯವಿದೆʼʼ ಎನ್ನುವುದು ಮತ್ತೊಬ್ಬರ ಅಭಿಮತ. ʼʼತಾಂತ್ರಿಕವಾಗಿ ಈ ಗುರುಗ್ರಾಮ ನಗರದ ರಚನೆ ಸಮರ್ಪಕವಾಗಿಲ್ಲʼʼ ಎಂದು ಇನ್ನೊಬ್ಬ ನೆಟ್ಟಿಗರೊಬ್ಬರು ಹೇಳಿದ್ದಾರೆ.

ಇದನ್ನೂ ಓದಿ: Bengaluru Traffic: ಟ್ರಾಫಿಕ್‌ ಚಕ್ರವ್ಯೂಹಕ್ಕೆ ಸಿಲುಕಿ 12 ಕಿ.ಮೀ ನಡೆದು ಮನೆ ತಲುಪಿದ ವ್ಯಕ್ತಿ!

ವೈರಲ್‌ ಆಗಿದ್ದ ಬೆಂಗಳೂರು ಟ್ರಾಫಿಕ್‌ ಜಾಮ್‌ ವಿಡಿಯೊ

ಇತ್ತೀಚೆಗೆ ಬೆಂಗಳೂರಿನ ಹೊರ ವರ್ತುಲ ರಸ್ತೆಯಲ್ಲಿ ಭಾರಿ ಜಾಮ್ ಉಂಟಾಗಿ ಪ್ರಯಾಣಿಕರು ತೊಂದರೆ ಅನುಭವಿಸಿದ್ದರು. ಆಗ ಎಷ್ಟು ವಾಹನಗಳು ಸಿಕ್ಕಿ ಹಾಕಿಕೊಂಡಿದ್ದವು ಎಂದರೆ ಕೆಲವೇ ಕಿ.ಮೀ. ಅಂತರದಲ್ಲಿದ್ದವರು ಮನೆಗೆ ತಲುಪಲು 4-5 ಗಂಟೆ ಬೇಕಾಯಿತಂತೆ. ವ್ಯಕ್ತಿಯೊಬ್ಬರು ಯಾವುದೇ ವಾಹನ ಸಿಗದೆ ಸುಮಾರು 12 ಕಿ.ಮೀ. ನಡೆದು ಮನೆಗೆ ಸೇರಿದ್ದರಂತೆ. ಈ ವಿಚಾರವನ್ನು ಅವರ ಸ್ನೇಹಿತರೊಬ್ಬರು ಹಂಚಿಕೊಂಡಿದ್ದು ವೈರಲ್‌ ಆಗಿತ್ತು. ಒಟ್ಟಿನಲ್ಲಿ ನಗರಗಳಲ್ಲಿನ ಟ್ರಾಫಿಕ್‌ ವ್ಯವಸ್ಥೆ ಸರಿಪಡಿಸುವುದು ಕೂಡ ಜೀವನ ಸುಧಾರಣೆಗೆ ಅಗತ್ಯ ಎಂದು ಹಲವರು ಅಭಿಪ್ರಾಯ ವ್ಯಕ್ತಪಡಿಸುತ್ತಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ವೈರಲ್ ನ್ಯೂಸ್

Viral News: ಜಗಳವಾಡಿಕೊಂಡು ನಡುರಸ್ತೆಯಲ್ಲಿ ಬೆತ್ತಲೆ ಓಡಾಟ; ಜೋಡಿಯ ಹುಚ್ಚಾಟ ಮೊಬೈಲ್‌ನಲ್ಲಿ ಸೆರೆ; ಭಾರೀ ಆಕ್ರೋಶ ವ್ಯಕ್ತ

Viral News: ನಗರದ ಲಕ್ಷ್ಮೀನಗರ ಚೌಕ್ ಬಳಿ ಘಟನೆ ನಡೆದಿದ್ದು, ಈ ಘಟನೆ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ. ಈ ವಿಡಿಯೋದಲ್ಲಿ ದಂಪತಿಗಳು ನಗ್ನ ಸ್ಥಿತಿಯಲ್ಲಿ ಕಾರಿನಿಂದ ಇಳಿದು ರಸ್ತೆಯಲ್ಲಿ ಓಡಾಡುತ್ತಿರುವುದು ಕಂಡುಬಂದಿದೆ. ಈ ದೃಶ್ಯವನ್ನು ಅಲ್ಲೇ ಹಾದು ಹೋಗುತ್ತಿದ್ದ ನಗರದ ಕೆಲ ಯುವಕರು ತಮ್ಮ ಮೊಬೈಲ್‌ನಲ್ಲಿ ವಿಡಿಯೋ ಮಾಡಿದ್ದಾರೆ.

VISTARANEWS.COM


on

Koo

ನಾಗ್ಪುರ: ಕಾರು-ಬೈಕುಗಳಲ್ಲಿ ಜೋಡಿಗಳ ರೊಮ್ಯಾನ್ಸ್‌, ಅಶ್ಲೀಲ ಕೃತ್ಯಗಳು ಇತ್ತೀಚಿನ ದಿನಗಳಲ್ಲಿ ಸರ್ವೇ ಸಾಮಾನ್ಯ ಎನ್ನುವ ರೀತಿಯಲ್ಲಿ ಆಗಾಗ ಬೆಳಕಿಗೆ ಬರುತ್ತಿರುತ್ತವೆ. ಮಹಾರಾಷ್ಟ್ರದ ಉಪ-ರಾಜಧಾನಿ ನಾಗ್ಪುರದಲ್ಲಿ ಇದೀಗ ಅಂತಹದ್ದೇ ಮತ್ತೊಂದು ಘಟನೆ ಜನರನ್ನು ಬೆಚ್ಚಿ ಬೀಳಿಸುವಂತಿದೆ. ಜೋಡಿಯೊಂದು ನಗ್ನ ಸ್ಥಿತಿಯಲ್ಲಿ ಕಾರಿನಿಂದ ಇಳಿದು ರಸ್ತೆಯಲ್ಲಿ ತಿರುಗಾಡಿದ್ದಾರೆ. ಇದನ್ನು ಕಂಡು ಜನ ಶಾಕ್‌ ಆಗಿದ್ದು, ಈ ಘಟನೆಗೆ ಖಂಡನೆ ವ್ಯಕ್ತವಾಗಿದೆ(Viral News).

ಘಟನೆ ವಿವರ:

ನಗರದ ಲಕ್ಷ್ಮೀನಗರ ಚೌಕ್ ಬಳಿ ಘಟನೆ ನಡೆದಿದ್ದು, ಈ ಘಟನೆ ದೃಶ್ಯ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿದೆ. ಈ ವಿಡಿಯೋದಲ್ಲಿ ದಂಪತಿಗಳು ನಗ್ನ ಸ್ಥಿತಿಯಲ್ಲಿ ಕಾರಿನಿಂದ ಇಳಿದು ರಸ್ತೆಯಲ್ಲಿ ಓಡಾಡುತ್ತಿರುವುದು ಕಂಡುಬಂದಿದೆ. ಈ ದೃಶ್ಯವನ್ನು ಅಲ್ಲೇ ಹಾದು ಹೋಗುತ್ತಿದ್ದ ನಗರದ ಕೆಲ ಯುವಕರು ತಮ್ಮ ಮೊಬೈಲ್‌ನಲ್ಲಿ ವಿಡಿಯೋ ಮಾಡಿದ್ದಾರೆ.

ಸಿಕ್ಕಿರುವ ಮಾಹಿತಿ ಪ್ರಕಾರ ಶನಿವಾರ ರಾತ್ರಿ 2 ಗಂಟೆ ಸುಮಾರಿಗೆ ಲಕ್ಷ್ಮೀನಗರ ಚೌಕ್‌ನಿಂದ ಶ್ರದ್ಧಾನಂದಪೇಟ್ ಚೌಕ್‌ಗೆ ಹೋಗುವ ರಸ್ತೆಯಲ್ಲಿ ಜೋಡಿಯೊಂದು ಜಗಳ ಮಾಡಿಕೊಂಡು ಯುವಕನೊಬ್ಬ ಕಾರಿನಿಂದ ಇಳಿದಿದ್ದಾನೆ. ಅವನ ಮೈಮೇಲೆ ಒಂದೇ ಒಂದು ಬಟ್ಟೆಯೂ ಇರಲಿಲ್ಲ. ಸ್ವಲ್ಪ ಸಮಯದ ನಂತರ ಅದೇ ಸ್ಥಿತಿಯಲ್ಲಿದ್ದ ಯುವತಿಯೊಬ್ಬಳು ಕೂಡ ಕಾರಿನಿಂದ ಇಳಿದು ಯುವಕನ ಬಳಿ ಕ್ಷಮೆ ಯಾಚಿಸುತ್ತಿರುವುದು ಕಂಡು ಬಂದಿದೆ. ಇದಾದ ಬಳಿಕ ಯುವಕ ಫುಟ್ ಪಾತ್ ಬದಿಯಲ್ಲಿದ್ದ ತೆರೆದ ಮನೆಯತ್ತ ತೆರಳಿದ್ದಾನೆ. ಆಗ ರಸ್ತೆಯಲ್ಲಿ ಕೆಲವೇ ವಾಹನಗಳು ಸಂಚರಿಸುತ್ತಿದ್ದವು. ಹೀಗಿರುವಾಗ ಎರಡು ಬೈಕ್‌ಗಳಲ್ಲಿ ಹೋಗುತ್ತಿದ್ದ ಕೆಲ ಹುಡುಗರು ಈ ದೃಶ್ಯವನ್ನು ವಿಡಿಯೋ ಮಾಡಿ ವೈರಲ್ ಮಾಡಿದ್ದಾರೆ.

ಪೊಲೀಸರು ಹೇಳೋದೇನು?

ಬಜಾಜ್ ನಗರ ಪೊಲೀಸ್ ಠಾಣೆಯ ಹಿರಿಯ ಇನ್ಸ್‌ಪೆಕ್ಟರ್ ವಿಠಲ್ ರಜಪೂತ್ ದಂಪತಿಯನ್ನು ಭಾನುವಾರ ಬೆಳಿಗ್ಗೆ ಗುರುತಿಸಲಾಯಿತು ಆದರೆ ಅವರು ಮಾನಸಿಕವಾಗಿ ಅಸ್ವಸ್ಥರಾಗಿರುವಂತೆ ತೋರುತ್ತಿದ್ದರಿಂದ ಯಾವುದೇ ಕಾನೂನು ಕ್ರಮವನ್ನು ತೆಗೆದುಕೊಂಡಿಲ್ಲ. ಘಟನೆ ಬಗ್ಗೆ ಪರಿಶೀಲಿಸಲಾಗಿದೆ. “ನಾವು ದಂಪತಿಗಳು ಮತ್ತು ಅವರ ಕುಟುಂಬ ಸದಸ್ಯರನ್ನು ಕರೆಸಿದ್ದೇವೆ, ಸಾರ್ವಜನಿಕ ಸ್ಥಳಗಳಲ್ಲಿ ಇಂತಹ ಅನಿಯಂತ್ರಿತ ನಡವಳಿಕೆಯ ವಿರುದ್ಧ ಸಮರ್ಪಕವಾಗಿ ಸಲಹೆ ನೀಡಲಾಯಿತು. ದಂಪತಿಗೆ ಮಾನಸಿಕ ಆರೋಗ್ಯ ಸಮಸ್ಯೆಗಳಿರುವುದರಿಂದ ಪೊಲೀಸರು ಕ್ರಮ ಕೈಗೊಳ್ಳಲಿಲ್ಲ ಎಂದು ಅವರು ವರದಿಯಲ್ಲಿ ತಿಳಿಸಿದ್ದಾರೆ.

ಈ ಹಿಂದೆಯೂ ನಡೆದಿತ್ತು ಇಂತಹದ್ದೇ ಘಟನೆ

ಇತ್ತೀಚೆಗಷ್ಟೇ ನಗರದಲ್ಲಿ ಚಲಿಸುತ್ತಿರುವ ಕಾರಿನಲ್ಲಿ ಜೋಡಿಯೊಂದು ರೋಮ್ಯಾನ್ಸ್ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ಇದಾದ ಬಳಿಕ ಸೀತಾಬುಲ್ಡಿ ಪೊಲೀಸರು ಯುವಕ ಹಾಗೂ ಯುವತಿಯ ವಿರುದ್ಧ ಪ್ರಕರಣ ದಾಖಲಿಸಿಕೊಂಡು ಕುಟುಂಬ ಸಮೇತ ಠಾಣೆಗೆ ಕರೆಸಿ ಇಬ್ಬರಿಗೂ ವಾರ್ನಿಂಗ್‌ ಮಾಡಿದ್ದರು. ಇದಾದ ಬಳಿಕ ಬೈಕ್‌ನಲ್ಲಿ ರೊಮ್ಯಾನ್ಸ್ ಮಾಡುತ್ತಿರುವ ವಿಡಿಯೋ ವೈರಲ್ ಆಗಿತ್ತು.

ಇದನ್ನೋ ಓದಿ: Viral News: ಕಾಲಿಗೆ ಕಬ್ಬಿಣದ ಸರಪಳಿ.. ಕೈಯಲ್ಲಿ ಅಮೆರಿಕ ಪಾಸ್‌ಪೋರ್ಟ್‌..ದಟ್ಟ ಕಾಡಿನಲ್ಲಿ ಮಹಿಳೆ ಪತ್ತೆ-ವಿಡಿಯೋ ವೈರಲ್‌

Continue Reading

ವೈರಲ್ ನ್ಯೂಸ್

Viral Video: ಕಾರಿನಲ್ಲೇ ಸೆಕ್ಸ್‌.. ಡಿವೈಡರ್‌ಗೆ ಡಿಕ್ಕಿ; ನಗ್ನ ಸ್ಥಿತಿಯಲ್ಲಿದ್ದ ಇಬ್ಬರು ಯುವಕರು, ಯುವತಿಯನ್ನು ಕಂಡು ಜನ ಶಾಕ್‌-ವಿಡಿಯೋ ಇದೆ

Viral Video: ಮಕ್ಕಳನ್ನು ಕೂರಿಸಿಕೊಂಡು ಇಬ್ಬರು ಯುವಕರು ಮತ್ತು ಒಬ್ಬ ಮಹಿಳೆ ಕಾರಿನಲ್ಲೇ ಅಸಹಜ ಲೈಂಗಿಕ ಕ್ರಿಯೆ ನಡೆಸಿದ್ದಾರೆ. ಕುಡಿದ ಮತ್ತಿನಲ್ಲಿ ವೇಗವಾಗಿ ಕಾರು ಚಲಾಯಿಸುತ್ತಾ, ಮಹಿಳೆಯ ಜೊತೆ ಲೈಂಗಿಕ ಕ್ರಿಯೆ ನಡೆಸಿದ್ದಾರೆ. ಹೀಗಾಗಿ ಕಾರು ನಿಯಂತ್ರಣ ತಪ್ಪಿ ಡಿವೈಡರ್‌ಗೆ ಗುದ್ದಿದೆ. ಘಟನೆಯಲ್ಲಿ ಮಹಿಳೆ ಮತ್ತು ಮಕ್ಕಳಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

VISTARANEWS.COM


on

Viral video
Koo

ಕಾನ್ಪುರ: ಜನನಿಬಿಡ ಪ್ರದೇಶದಲ್ಲಿ ಅತ್ಯಂತ ವೇಗವಾಗಿ ಬಂದ ಕಾರೊಂದು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿತ್ತು. ಅಯ್ಯೋ ಕಾರು ಅಪಘಾತವಾಯಿತಲ್ಲಾ ಅಂತಾ ಅಲ್ಲಿದ್ದ ಜನ ಸಹಾಯಕ್ಕೆಂದು ಧಾವಿಸುತ್ತಾರೆ. ಹಾಗೆ ಬಂದ ಜನ ಕಾರಿನ ಬಳಿ ಬರುತ್ತಿದ್ದಂತೆ ಒಂದು ಕ್ಷಣಕ್ಕೆ ದಂಗಾಗಿ ಬಿಡ್ತಾರೆ. ಹಾಗಿದ್ದರೆ ಅಂತಹದ್ದೇನಿತ್ತು ಆ ಕಾರಿನಲ್ಲಿ ಅಂತ ನೋಡೋದಾದ್ರೆ ಅರೆಬೆತ್ತಲೆಯಾಗಿ ಇಬ್ಬರು ಯುವಕರು, ಪೂರ್ತಿ ನಗ್ನ ಸ್ಥಿತಿಯಲ್ಲಿ ಮಹಿಳೆಯೊಬ್ಬಳು ಕಾರಿನೊಳಗೆ ಇರುವುದನ್ನು ಕಂಡು ಜನ ಶಾಕ್‌ ಆಗಿದ್ದಾರೆ. ಸಾಲದೆನ್ನುವಂತೆ ನಾಲ್ಕು ಮಕ್ಕಳೂ ಕಾರಿನಲ್ಲಿದ್ದಾರೆ. ಘಟನೆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಫುಲ್‌ ವೈರಲ್‌(Viral Video) ಆಗುತ್ತಿದೆ.

ಹೌದು.. ಇಂತಹದ್ದೊಂದು ಘಟನೆ ಕಾನ್ಪುರದಲ್ಲಿ ವರದಿಯಾಗಿದೆ. ಮಕ್ಕಳನ್ನು ಕೂರಿಸಿಕೊಂಡು ಇಬ್ಬರು ಯುವಕರು ಮತ್ತು ಒಬ್ಬ ಮಹಿಳೆ ಕಾರಿನಲ್ಲೇ ಅಸಹಜ ಲೈಂಗಿಕ ಕ್ರಿಯೆ ನಡೆಸಿದ್ದಾರೆ. ಕುಡಿದ ಮತ್ತಿನಲ್ಲಿ ವೇಗವಾಗಿ ಕಾರು ಚಲಾಯಿಸುತ್ತಾ, ಮಹಿಳೆಯ ಜೊತೆ ಲೈಂಗಿಕ ಕ್ರಿಯೆ ನಡೆಸಿದ್ದಾರೆ. ಹೀಗಾಗಿ ಕಾರು ನಿಯಂತ್ರಣ ತಪ್ಪಿ ಡಿವೈಡರ್‌ಗೆ ಗುದ್ದಿದೆ. ಘಟನೆಯಲ್ಲಿ ಮಹಿಳೆ ಮತ್ತು ಮಕ್ಕಳಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಜಾಜ್‌ಮೌ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿರುವ ಜೆ ಕೆ ಚೌರಾ ಪ್ರದೇಶದಲ್ಲಿ ಜು.27ರಂದು ಈ ಘಟನೆ ನಡೆದಿದೆ. ಮಹಿಳೆ ಒಂದೇ ಸಮಯದಲ್ಲಿ ಇಬ್ಬರು ಯುವಕರ ಜೊತೆ ನಾಲ್ಕು ಮಕ್ಕಳ ಎದುರೇ ಲೈಂಗಿಕ ಕ್ರಿಯೆ ನಡೆಸುತ್ತಿದ್ದಳು. ಈ ವೇಳೆ ಕಾರು ಅಪಘಾತಕ್ಕೀಡಾಗಿದೆ ಎನ್ನಲಾಗಿದೆ. ಸ್ಥಳೀಯರಿಗೆ ಕಾರಿನಲ್ಲಿ ಮದ್ಯದ ಬಾಟಲಿಗಳು, ಇತರೆ ವಸ್ತುಗಳು ಪತ್ತೆಯಾಗಿದೆ. ಸ್ಥಳೀಯರು ಪೊಲೀಸರು ದೂರು ನೀಡಿದ್ದು, ಇಬ್ಬರು ಯುವಕರನ್ನು ಅರೆಸ್ಟ್‌ ಮಾಡಿದ್ದಾರೆ. ಮಹಿಳೆ ಮತ್ತು ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಅಪಘಾತಕ್ಕೀಡಾಗಿರುವ ಕಾರಿನ ಸಮೀಪ ಜನ ಜಮಾಯಿಸಿ ಯುವಕರನ್ನು ವಿಚಾರಿಸುತ್ತಿರುವುದನ್ನು, ಚಾಲಕ ಕಾರಿನಿಂದ ಕೆಳಗಿಳಿದು ಸ್ಥಳೀಯರೊಂದಿಗೆ ವಾಗ್ವಾದಕ್ಕಿಳಿದಿರುವುದನ್ನು ವಿಡಿಯೋದಲ್ಲಿ ಕಾಣಬಹುದು. ನಂತರ ಅವರು ಕಾರಿನೊಳಗೆ ಕುಳಿತುಕೊಳ್ಳುತ್ತಾರೆ. ಪೊಲೀಸರು ಆರೋಪಿಗಳನ್ನು ವಶಕ್ಕೆ ಪಡೆದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ ಶಾಂತಿ ಕದಡುವ ಆರೋಪ ಹೊರಿಸಿದ್ದಾರೆ. ಅವರಿಗೆ ದಂಡ ವಿಧಿಸಲಾಯಿತು ಮತ್ತು ನಂತರ ಹೋಗಲು ಅನುಮತಿಸಲಾಗಿದೆ ಎಂದು ವರದಿಯಾಗಿದೆ. ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ನಂತರ ಮಹಿಳೆಯನ್ನು ಆಕೆಯ ಕುಟುಂಬಕ್ಕೆ ಹಸ್ತಾಂತರಿಸಲಾಗಿದೆ ಎನ್ನಲಾಗಿದೆ. ಇನ್ನು ಕಾರಿನಲ್ಲಿದ್ದ ಮಕ್ಕಳು ಯಾರದ್ದು ಎಂಬ ಬಗ್ಗೆ ಮಾಹಿತಿ ಸಿಕ್ಕಿಲ್ಲ.

ಇದನ್ನೂ ಓದಿ: Viral News: ಕಾಲಿಗೆ ಕಬ್ಬಿಣದ ಸರಪಳಿ.. ಕೈಯಲ್ಲಿ ಅಮೆರಿಕ ಪಾಸ್‌ಪೋರ್ಟ್‌..ದಟ್ಟ ಕಾಡಿನಲ್ಲಿ ಮಹಿಳೆ ಪತ್ತೆ-ವಿಡಿಯೋ ವೈರಲ್‌

Continue Reading

ದೇಶ

Rahul Gandhi: ರಾಹುಲ್‌ ಮಾತಿಗೆ ಹಣೆ ಚಚ್ಚಿಕೊಂಡು, ಮುಖ ಮುಚ್ಚಿಕೊಂಡ ಸಚಿವೆ ನಿರ್ಮಲಾ: ಭಾರೀ ವೈರಲಾಗ್ತಿದೆ ಈ ವಿಡಿಯೋ

Rahul Gandhi: ಕೇಂದ್ರ ಬಜೆಟ್ ಕುರಿತು ಮಾತನಾಡುತ್ತಿದ್ದ ರಾಹುಲ್ ಗಾಂಧಿ, ಹಲ್ವಾ ಕಾರ್ಯಕ್ರಮ(Halwa Ceremony)ದ ಫೋಟೋ ಪ್ರದರ್ಶನ ಮಾಡಿದಾಗ ನಿರ್ಮಲಾ ಸೀತಾರಾಮನ್ ಅವರು ನಗುತ್ತಾ ಮುಖ ಮುಚ್ಚಿಕೊಂಡರು. ಇದೀಗ ಈ ವಿಡಿಯೋ ಎಲ್ಲೆಡೆ ವೈರಲ್ ಆಗತೊಡಗಿದೆ ಅಲ್ಲದೇ ಹಲವು ಪರ ವಿರೋಧ ಟೀಕೆಗಳು ವ್ಯಕ್ತವಾಗಿವೆ.

VISTARANEWS.COM


on

Rahul Gandhi
Koo

ನವದೆಹಲಿ: ಇಂದು ಸಂಸತ್ತಿನ ಮುಂಗಾರು ಅಧಿವೇಶನ(Parliament Session)ದ ಒಂಬತ್ತನೇ ದಿನ. ಇಂದು ದೆಹಲಿ ಕೋಚಿಂಗ್‌ ಸೆಂಟರ್‌ ದುರಂತ, ಅಗ್ನಿಪಥ್‌ ಯೋಜನೆ ಸೇರಿದಂತೆ ಹಲವು ವಿಚಾರಗಳನ್ನಿಟ್ಟುಕೊಂಡು ವಿಪಕ್ಷ ನಾಯಕ ರಾಹುಲ್‌ ಗಾಂಧಿ(Rahul Gandhi) ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಈ ವೇಳೆ ರಾಹುಲ್‌ ಆರೋಪಕ್ಕೆ ಕೇಂದ್ರ ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್‌(Nirmala Seetharaman) ಮುಖ ಮುಚ್ಚಿಕೊಂಡ ಅಪರೂಪದ ಘಟನೆಗೆ ಸದನ ಸಾಕ್ಷಿಯಾಯಿತು.

ಕೇಂದ್ರ ಬಜೆಟ್ ಕುರಿತು ಮಾತನಾಡುತ್ತಿದ್ದ ರಾಹುಲ್ ಗಾಂಧಿ, ಹಲ್ವಾ ಕಾರ್ಯಕ್ರಮ(Halwa Ceremony)ದ ಫೋಟೋ ಪ್ರದರ್ಶನ ಮಾಡಿದಾಗ ನಿರ್ಮಲಾ ಸೀತಾರಾಮನ್ ಅವರು ನಗುತ್ತಾ ಮುಖ ಮುಚ್ಚಿಕೊಂಡರು. ಇದೀಗ ಈ ವಿಡಿಯೋ ಎಲ್ಲೆಡೆ ವೈರಲ್ ಆಗತೊಡಗಿದೆ ಅಲ್ಲದೇ ಹಲವು ಪರ ವಿರೋಧ ಟೀಕೆಗಳು ವ್ಯಕ್ತವಾಗಿವೆ. ಕೇಂದ್ರ ಬಜೆಟ್ ನ್ನು ಮಧ್ಯಮ ವರ್ಗ, ಹಿಂದುಳಿದ ವರ್ಗಗಳ ವಿರೋಧಿ ಬಜೆಟ್ ಎಂದು ರಾಹುಲ್ ಗಾಂಧಿ ತಮ್ಮ ಭಾಷಣದಲ್ಲಿ ಟೀಕಾ ಪ್ರಹಾರ ನಡೆಸಿದರು.

ರಾಹುಲ್ ಗಾಂಧಿ ಬಜೆಟ್ ಪೂರ್ವದಲ್ಲಿ ನಡೆಯುವ ಸಾಂಪ್ರದಾಯಿಕ ಹಲ್ವಾ ಸಮಾರಂಭದ ಪೋಸ್ಟರ್ ನ್ನು ಪ್ರದರ್ಶಿಸಿದ್ದು, ಬಜೆಟ್ ತಯಾರಿಕೆಯ ತಂಡದಲ್ಲಿದ್ದ 20 ಅಧಿಕಾರಿಗಳ ಪೈಕಿ ದಲಿತರು, ಒಬಿಸಿ, ಆದಿವಾಸಿಗಳು ಇಲ್ಲವೇ ಇಲ್ಲ. 20 ಅಧಿಕಾರಿಗಳ ಪೈಕಿ ಯಾರೊಬ್ಬರೂ ಹಿಂದುಳಿದ ವರ್ಗ, ದಲಿತ ಹಾಗೂ ಆದಿವಾಸಿ ಸಮುದಾಯಕ್ಕೆ ಸೇರಿದವರು ಇಲ್ಲ. ನಾನು ಬೇಕಿದ್ದರೆ ಅವರ ಹೆಸರುಗಳನ್ನೂ ಹೇಳಬಲ್ಲೆ ಎಂದರು. ಈ ವೇಳೆ ರಾಹುಲ್ ಗಾಂಧಿ ಈ ಹೇಳಿಕೆ ನೀಡುತ್ತಿದ್ದಂತೆ ನಿರ್ಮಲಾ ಸೀತಾರಾಮನ್ ಅವರು ಹಣೆ ಚಚ್ಚಿಕೊಂಡು, ತಮ್ಮ ಎರಡೂ ಕೈಗಳಿಂದ ಮುಖ ಮುಚ್ಚಿಕೊಂಡು ನಕ್ಕರು.

ಮಹಾಭಾರತದ ಚಕ್ರವ್ಯೂಹವನ್ನು ಉಲ್ಲೇಖಿಸಿದ ರಾಹುಲ್‌ ಗಾಂಧಿ ಅವರು ನರೇಂದ್ರ ಮೋದಿ (Narendra Modi) ಹಾಗೂ ಬಿಜೆಪಿ ವಿರುದ್ಧ ವಾಗ್ಬಾಣ ಪ್ರಯೋಗಿಸಿದ್ದಾರೆ. “ಮಹಾಭಾರತದ ಚಕ್ರವ್ಯೂಹದಂತೆ (Chakravyuh) ಈಗಲೂ ಒಂದು ಚಕ್ರವ್ಯೂಹ ರಚಿಸಲಾಗಿದೆ. ದೇಶದ ಜನರು ಆ ಚಕ್ರವ್ಯೂಹಕ್ಕೆ ಸಿಲುಕಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ಸೇರಿ 6 ಮಂದಿಯು ಈ ಚಕ್ರವ್ಯೂಹವನ್ನು ನಿಯಂತ್ರಿಸುತ್ತಿದ್ದಾರೆ” ಎಂದು ಹೇಳಿದ್ದಾರೆ.

“ಸಾವಿರಾರು ವರ್ಷಗಳ ಹಿಂದೆ, ಹರಿಯಾಣದಲ್ಲಿ ಕುರುಕ್ಷೇತ್ರ ನಡೆಯುವಾಗ 6 ಜನ ಸೇರಿ ಚಕ್ರವ್ಯೂಹವನ್ನು ರಚಿಸಿದ್ದರು. ಆರು ಜನ ಸೇರಿ ಆ ಚಕ್ರವ್ಯೂಹದಲ್ಲಿ ಅಭಿಮನ್ಯುವಿನನ್ನು ಸಿಲುಕಿಸಿ ಕೊಲೆ ಮಾಡಿದರು. ನಾನು ಚಕ್ರವ್ಯೂಹದ ಕುರಿತು ಸಣ್ಣದೊಂದು ಸಂಶೋಧನೆ ಮಾಡಿದ್ದೇನೆ. ಚಕ್ರವ್ಯೂಹವನ್ನು ಪದ್ಮವ್ಯೂಹ ಎಂದೂ ಕರೆಯಲಾಗುತ್ತದೆ. ಪದ್ಮವ್ಯೂಹ ಎಂದರೆ ಕಮಲದ ರಚನೆಯಾಗಿದೆ. ಚಕ್ರವ್ಯೂಹ ಕೂಡ ಕಮಲದ ಆಕಾರದಲ್ಲಿದೆ” ಎಂಬುದಾಗಿ ಬಿಜೆಪಿಯನ್ನು ಕುಟುಕಿದರು.

ಇದನ್ನೂ ಓದಿ: Rahul Gandhi: ನೀಟ್‌ನಲ್ಲಿ ‘ಎಷ್ಟು ವೋಟ್‌’ ಪಡೆದಿರಿ ಎಂದು ವಿದ್ಯಾರ್ಥಿಗಳಿಗೆ ಕೇಳಿದ ರಾಹುಲ್‌ ಗಾಂಧಿ; Video ವೈರಲ್

Continue Reading

Latest

Viral Video: ಕಚೇರಿಯ ಟೇಬಲ್‌ನೊಳಗೆ ಅಡಗಿದ್ದ ಬೃಹತ್‌ ಹಾವನ್ನು ಹಿಡಿದ ಮಹಿಳಾ ಸಿಬ್ಬಂದಿ! ವಿಡಿಯೊ ನೋಡಿ

Viral Video: ಹಾವೆಂದರೆ ಒಂದು ಮೈಲಿ ಹಾರುವವರನ್ನು ನೋಡಿದ್ದೇವೆ. ಆದರೆ ಇಲ್ಲೊಬ್ಬಳು ಮಹಿಳೆ ಯಾವುದೇ ಅಂಜಿಕೆ, ಅಳುಕು ಇಲ್ಲದೇ ಹಾವನ್ನು ಎತ್ತಿ ಚೀಲದೊಳಗೆ ತುಂಬಿದ್ದಾಳೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗಿದೆ. ಹಾವು ಕಚ್ಚುತ್ತದೆ ಎಂಬ ಭಯವು ಇಲ್ಲದೇ ಅದನ್ನು ಚೀಲದಲ್ಲಿ ತುಂಬಿಸಿ ದಿನಸಿ ಸಾಮಗ್ರಿಗಳನ್ನು ತೆಗೆದುಕೊಂಡು ಹೋಗುವಂತೆ ಹೊರಗೆ ತೆಗೆದುಕೊಂಡು ಬಂದಿದ್ದಾಳೆ.

VISTARANEWS.COM


on

Viral Video
Koo


ಸಾಮಾನ್ಯವಾಗಿ ಮಹಿಳೆಯರು ಹಾವನ್ನು ನೋಡಿದರೆ ಭಯಬೀಳುತ್ತಾರೆ. ಒಂದು ಚಿಕ್ಕ ಹುಳ ಮೈಮೇಲೆ ಹರಿದಾಡಿದರೆ ದೊಡ್ಡ ಹಾವು ಮೈಮೇಲೆ ಬಿದ್ದಂತೆ ಕಿರುಚುತ್ತಾ ಓಡುತ್ತಾರೆ. ಅಂತಹದರಲ್ಲಿ ಮಹಿಳೆಯೊಬ್ಬಳು ಯಾವುದೇ ಭಯವಿಲ್ಲದೆ ದೊಡ್ಡ ಗಾತ್ರದ ಹಾವನ್ನೇ ಕೈಯಲ್ಲಿ ಸಲೀಸಾಗಿ ಹಿಡಿದಿದ್ದಾಳೆ. ಮಹಿಳೆ ಕಚೇರಿಯಲ್ಲಿ ಕೈಯಲ್ಲಿ ಹಾವನ್ನು ಹಿಡಿದು ಸ್ಟಂಟ್ ಮಾಡುತ್ತಿರುವ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್(Viral Video) ಆಗಿದೆ.

ಮಹಿಳೆಯ ಈ ಧೈರ್ಯಶಾಲಿ ಕೆಲಸವನ್ನು ಕಂಡು ಅಲ್ಲಿದ್ದ ಜನರು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಈ ಧೈರ್ಯಶಾಲಿ ಮಹಿಳೆ ಕಚೇರಿಯಲ್ಲಿ ಇರುವ ದೊಡ್ಡ ಗಾತ್ರದ ಹಾವನ್ನು ಯಾವುದೇ ಸುರಕ್ಷತಾ ಉಡುಗೆ ಅಥವಾ ಅಗತ್ಯ ಉಪಕರಣಗಳಿಲ್ಲದೆ ಬಹಳ ಸುಲಭವಾಗಿ ಹಿಡಿದಿದ್ದಾಳೆ.ಇದಕ್ಕೆ ಸಂಬಂಧಪಟ್ಟ ವಿಡಿಯೊವನ್ನು @moronhumor ಎಕ್ಸ್ (ಹಿಂದೆ ಟ್ವಿಟರ್) ನಲ್ಲಿ ಪೋಸ್ಟ್ ಮಾಡಿದ್ದಾರೆ, ವಿಡಿಯೊದಲ್ಲಿ ಮಹಿಳೆ ಒಬ್ಬ ವ್ಯಕ್ತಿಯೊಂದಿಗೆ ಬರುತ್ತಿದ್ದು, ಅಲ್ಲಿ ಕಂಪ್ಯೂಟರ್ ಕೇಬಲ್ ಅನ್ನು ಸರಿಪಡಿಸುತ್ತಿದ್ದಾಳೆ ಎಂದು ವೀಕ್ಷಕರು ಭಾವಿಸುವಂತಿದೆ.

ಆದರೆ ಆಕೆ ಸಡನ್ ಆಗಿ ಹಾವಿನ ತಲೆಯನ್ನು ಹಿಡಿದು ಮೇಲಕ್ಕೆ ಎತ್ತಿದ್ದಾಳೆ. ನಂತರ ಹಾವು ಕಚ್ಚುತ್ತದೆ ಎಂಬ ಭಯವು ಇಲ್ಲದೇ ಅದನ್ನು ಚೀಲದಲ್ಲಿ ತುಂಬಿಸಿ ದಿನಸಿ ಸಾಮಾಗ್ರಿಗಳನ್ನು ತೆಗೆದುಕೊಂಡು ಹೋಗುವಂತೆ ಹೊರಗೆ ತೆಗೆದುಕೊಂಡು ಬಂದಿದ್ದಾಳೆ. ಆ ವೇಳೆ ಅವಳ ಮುಖದಲ್ಲಿ ಭಯದ ಬದಲು ನಗು ಕಂಡುಬಂದಿದೆ. ಅಲ್ಲದೇ ಮಹಿಳೆ ಈ ವೇಳೆ ಹಾವಿನ ಬಗ್ಗೆ ಕೆಲವು ಸಲಹೆಗಳನ್ನು ಸಹ ಹಂಚಿಕೊಳ್ಳುತ್ತಾಳೆ. ಹಾವು ವಿಷಕಾರಿಯಲ್ಲ ಎಂದು ಅವಳು ತನ್ನ ಸಹೋದ್ಯೋಗಿಗಳಿಗೆ ಹೇಳಿದಳು. ಅವಳು ಹಾವುಗಳ ವಿವಿಧ ಲಕ್ಷಣಗಳು ಮತ್ತು ಹಾವನ್ನು ನಿರ್ವಹಿಸುವ ವಿಧಾನದ ಬಗ್ಗೆ ಜನರಿಗೆ ಮಾರ್ಗದರ್ಶನ ನೀಡಿದ್ದಾಳೆ. ಅಲ್ಲಿ ಹಾಜರಿದ್ದ ಜನರು ಆಕೆ ಸುಲಭವಾಗಿ ಹಾವನ್ನು ಹಿಡಿಯುವುದನ್ನು ಕಂಡು ಆಶ್ಚರ್ಯಚಕಿತರಾದರು. ಈ ವಿಡಿಯೊ ಅನೇಕರ ಗಮನವನ್ನು ಸೆಳೆದಿದೆ ಮತ್ತು ಅನೇಕರು ಕಾಮೆಂಟ್ ಮಾಡಿದ್ದಾರೆ. ನೆಟ್ಟಿಗರು ಮಹಿಳೆಯ ವೀಡಿಯೊವನ್ನು ಕಂಡು ಅವಳ ಶಾಂತ, ಧೈರ್ಯಶಾಲಿ ಕಾರ್ಯವನ್ನು ಕಂಡು ಹೊಗಳಿದ್ದಾರೆ.

ಬಳಕೆದಾರರೊಬ್ಬರು ಅವಳ ಕಾರ್ಯಕ್ಕೆ ಮತ್ತು ಅವಳ ತಿಳಿವಳಿಕೆಯನ್ನು ಕಂಡು ಆಕೆಯನ್ನು ರಾಕ್‌ಸ್ಟಾರ್‌ ಎಂದು ಕಾಮೆಂಟ್ ಮಾಡಿದ್ದಾರೆ. ಇನ್ನೊಬ್ಬರು, ಈ ಮೊದಲು ಸೋಶಿಯಲ್ ಮೀಡಿಯಾದಲ್ಲಿ ಯಾವುದೇ ಹೆಣ್ಣು ಹಾವು ಹಿಡಿಯುವುದನ್ನು ನೋಡಿಲ್ಲ ಎಂದು ಹೇಳಿ ಮಹಿಳೆಗೆ ಅಭಿನಂದನೆ ಸಲ್ಲಿಸಿದ್ದಾರೆ. ಮೂರನೆಯವರು ಈಕೆ ನಿಜವಾದ ನಾಯಕಿ. ಹೀರೋಗಳಿಗಿಂತ ಒಂದು ಹೆಜ್ಜೆ ಮುಂದೆ ಎಂದು ಹೊಗಳಿದ್ದಾರೆ.

Continue Reading
Advertisement
NEET-UG
ಪ್ರಮುಖ ಸುದ್ದಿ2 hours ago

NEET-UG : ಆಗಸ್ಟ್ 14ರಿಂದ ನೀಟ್-ಯುಜಿ ಕೌನ್ಸೆಲಿಂಗ್ ಆರಂಭ

ವೈರಲ್ ನ್ಯೂಸ್2 hours ago

Viral News: ಜಗಳವಾಡಿಕೊಂಡು ನಡುರಸ್ತೆಯಲ್ಲಿ ಬೆತ್ತಲೆ ಓಡಾಟ; ಜೋಡಿಯ ಹುಚ್ಚಾಟ ಮೊಬೈಲ್‌ನಲ್ಲಿ ಸೆರೆ; ಭಾರೀ ಆಕ್ರೋಶ ವ್ಯಕ್ತ

Paris Olympics 2024
ಕ್ರೀಡೆ2 hours ago

Paris Olympics 2024 : ಒಲಿಂಪಿಕ್ಸ್​ನಲ್ಲಿ ಬೆಳ್ಳಿ ಪದಕ ಗೆದ್ದ ಈಜುಪಟುವಿಗೆ ಕೊರೊನಾ ಸೋಂಕು!

Asia Cup cricket
ಪ್ರಮುಖ ಸುದ್ದಿ2 hours ago

Asia Cup Cricket : ಭಾರತದಲ್ಲಿ ನಡೆಯಲಿದೆ 2025ರ ಏಷ್ಯಾ ಕಪ್ ಕ್ರಿಕೆಟ್​, ಇಲ್ಲಿದೆ ಪೂರ್ಣ ವಿವರ

Viral video
ವೈರಲ್ ನ್ಯೂಸ್3 hours ago

Viral Video: ಕಾರಿನಲ್ಲೇ ಸೆಕ್ಸ್‌.. ಡಿವೈಡರ್‌ಗೆ ಡಿಕ್ಕಿ; ನಗ್ನ ಸ್ಥಿತಿಯಲ್ಲಿದ್ದ ಇಬ್ಬರು ಯುವಕರು, ಯುವತಿಯನ್ನು ಕಂಡು ಜನ ಶಾಕ್‌-ವಿಡಿಯೋ ಇದೆ

Rohan Bopanna
ಕ್ರೀಡೆ3 hours ago

Rohan Bopanna : ಅಂತಾರಾಷ್ಟ್ರೀಯ ಟೆನಿಸ್​ಗೆ ವಿದಾಯ ಘೋಷಿಸಿದ ಕನ್ನಡಿಗ ರೋಹನ್ ಬೋಪಣ್ಣ

CM Siddaramaiah demands to Pm for drop the Nirmala Sitharaman from the cabinet
ಕರ್ನಾಟಕ3 hours ago

CM Siddaramaiah: ಬಜೆಟ್ ಮೂಲಪಾಠವೇ ಗೊತ್ತಿಲ್ಲದ ನಿರ್ಮಲಾ ಸೀತಾರಾಮನ್; ಸಂಪುಟದಿಂದ ಕೈಬಿಡಲು ಸಿಎಂ ಒತ್ತಾಯ

Parliament session
ದೇಶ3 hours ago

Parliament Session: ಅಗ್ನಿಪಥ್‌ ಯೋಜನೆ ಬಗ್ಗೆ ರಾಹುಲ್‌ ನಿಗಿ ನಿಗಿ ಕೆಂಡ; ರಾಜನಾಥ್‌ ಸಿಂಗ್‌ ಸಖತ್‌ ಟಾಂಗ್‌

Minister Lakshmi Hebbalkar reviewed the flood situation and provided individual financial assistance to the victims
ಕರ್ನಾಟಕ3 hours ago

Lakshmi Hebbalkar: ಪ್ರವಾಹ ಸಂತ್ರಸ್ತರ ಕಣ್ಣೀರು ಒರೆಸಿದ ಸಚಿವೆ ಲಕ್ಷ್ಮೀ ಹೆಬ್ಬಾಳಕರ್

Union Minister Pralhad Joshi statement on tomato price
ಕರ್ನಾಟಕ3 hours ago

Pralhad Joshi: ಟೊಮೆಟೊ ಬೆಲೆ ಸ್ಥಿರತೆಗೆ ಕ್ರಮ; ಕೆಜಿಗೆ 60 ರೂ. ನಿಗದಿ: ಪ್ರಲ್ಹಾದ್‌ ಜೋಶಿ

Sharmitha Gowda in bikini
ಕಿರುತೆರೆ10 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ10 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ8 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ10 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ8 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ11 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Rain
ಮಳೆ8 hours ago

Karnataka Rain: ಮತ್ತೆ ಶುರು ಮಳೆ ಅಬ್ಬರ; ಗಾಳಿಗೆ ಹಾರಿ ಹೋದ ಮನೆಗಳ ಚಾವಣಿ, ಶಿರಾಡಿಘಾಟ್‌ನಲ್ಲಿ ಮತ್ತೆ ಭೂ ಕುಸಿತ

Elephant combing Makna elephant captured near Bannerghatta
ಬೆಂಗಳೂರು ಗ್ರಾಮಾಂತರ9 hours ago

Elephant combing: ಭೀಮ, ಮಹೇಂದ್ರರ ಮುಂದೆ ಮಂಡಿಯೂರಿದ ಮಕ್ನಾ ಆನೆ; ಹೇಗಿತ್ತು ಗೊತ್ತಾ ಕಾರ್ಯಾಚರಣೆ

karnataka rain
ಮಳೆ12 hours ago

Karnataka rain: ಪ್ರವಾಹದ ಭೀಕರತೆ; ಹಳ್ಳದಲ್ಲಿ ತೇಲಿಬಂದ ಎಮ್ಮೆಗಳ ಕಳೇಬರ

Tungabhadra Dam
ಕೊಪ್ಪಳ1 day ago

Tungabhadra Dam: ಕಾಲುವೆಯಲ್ಲಿ ಬಾಲಕರ ಈಜಾಟ; ಅಧಿಕಾರಿಗಳಿಗೆ ಪೀಕಲಾಟ!

Elephant attack
ಮಳೆ1 day ago

Elephant attack : ಮಳೆ ಮಧ್ಯೆ ಮಲೆನಾಡಿನಲ್ಲಿ ಕಾಡಾನೆಗಳ ಕಾಟ; ಪ್ರವಾಹಕ್ಕೆ ಸಿಲುಕಿದ ಪಟಗುಂದಿ ಗ್ರಾಮ

karnataka Rain
ಮಳೆ1 day ago

Karnataka Rain : ಮಳೆ ನಿಂತರೂ ಕಡಿಮೆಯಾಗದ ಅನಾಹುತ; ಮಾದಪುರ ಟೌನ್ ಸಮೀಪ ಗುಡ್ಡ ಕುಸಿತ

karnataka Rain
ಮಳೆ2 days ago

Karnataka Rain : ರಭಸವಾಗಿ ಬೀಸಿದ ಗಾಳಿಗೆ ಮನೆ ಮೇಲೆ ಬಿದ್ದ ತೆಂಗಿನ ಮರ; ನದಿ ನೀರು ಸೇವಿಸದಂತೆ ಸೂಚನೆ

Karnataka weather Forecast
ಮಳೆ2 days ago

Karnataka Weather : ವೀಕೆಂಡ್‌ ಮೋಜಿಗೆ ಮಳೆರಾಯ ಅಡ್ಡಿ; ಬೆಂಗಳೂರಲ್ಲಿ ಮೋಡ ಕವಿದ ವಾತಾವರಣ

ramanagara news
ರಾಮನಗರ2 days ago

Ramanagar News : ರಾಮನಗರದಲ್ಲಿ ಎರಡು ಜಡೆ ಹಾಕಿಲ್ಲವೆಂದು ವಿದ್ಯಾರ್ಥಿನಿಯರ ಕೂದಲು ಕತ್ತರಿಸಿದ ಶಿಕ್ಷಕರು ಅಮಾನತು

karnataka rain
ಮಳೆ3 days ago

Karnataka Rain : ಕಾವೇರಿ ನದಿ ತೀರದಲ್ಲಿ ಪ್ರವಾಹ ಭೀತಿ; ಮುತ್ತತ್ತಿಗೆ ಪ್ರವಾಸಿಗರ ನಿಷೇಧ, ಶ್ರೀರಂಗಪಟ್ಟಣದಲ್ಲಿ ಪಿಂಡ ಪ್ರದಾನಕ್ಕೆ ಬ್ರೇಕ್

ಟ್ರೆಂಡಿಂಗ್‌