Vistara News Impact : ಬುಡಕಟ್ಟು ಸಮುದಾಯ, ಸಾಗುವಳಿದಾರರಿಗಿಲ್ಲ ಮೀಸಲು ಅರಣ್ಯ ಕಂಟಕ; 3 ತಿಂಗಳಲ್ಲಿ ಹಕ್ಕು ಪತ್ರ - Vistara News

ಕರ್ನಾಟಕ

Vistara News Impact : ಬುಡಕಟ್ಟು ಸಮುದಾಯ, ಸಾಗುವಳಿದಾರರಿಗಿಲ್ಲ ಮೀಸಲು ಅರಣ್ಯ ಕಂಟಕ; 3 ತಿಂಗಳಲ್ಲಿ ಹಕ್ಕು ಪತ್ರ

Vistara News Impact : ಸರ್ಕಾರ ಅಧಿಕಾರಕ್ಕೆ ಬಂದ 120 ದಿನಗಳಲ್ಲೇ 5,729 ಎಕರೆ ಪ್ರದೇಶವನ್ನು ಮೀಸಲು ಅರಣ್ಯ ಎಂದು ಘೋಷಿಸಿತ್ತು. ಅಲ್ಲದೆ, ಅರಣ್ಯ ಪ್ರದೇಶವನ್ನು ಶೇ.22 ರಿಂದ ಶೇ.33ಕ್ಕೆ ಹೆಚ್ಚಿಸುವ ತೀರ್ಮಾನವನ್ನು ಅರಣ್ಯ ಸಚಿವ ಈಶ್ವರ್‌ ಖಂಡ್ರೆ ಪ್ರಕಟಿಸಿದ್ದರು. ಇದರಿಂದಾಗಿ ಅರಣ್ಯ ಇಲಾಖೆ ಸಿಬ್ಬಂದಿ ಒತ್ತುವರಿ ತೆರವುಗೊಳಿಸುವ ಮತ್ತು ಅರಣ್ಯ ಪ್ರದೇಶಗಳಲ್ಲಿ ನಿರ್ಬಂಧಗಳನ್ನು ಹೇರುವುದನ್ನು ಚುರುಕುಗೊಳಿಸಿದ್ದರು. ಇದರಿಂದ ಅರಣ್ಯ ಪ್ರದೇಶದಲ್ಲಿ ಮತ್ತು ಅಂಚಿನಲ್ಲಿ ವಾಸಿಸುವ ರೈತರಿಗೆ, ಕೃಷಿ ಕಾರ್ಮಿಕರಿಗೆ ತೊಂದರೆಯಾಗುತ್ತಿತ್ತು. ಈ ಕುರಿತು ವಿಸ್ತಾರ ನ್ಯೂಸ್‌ ಕ್ಯಾಂಪೇನ್‌ ಆರಂಭಿಸಿತ್ತು. ಈಗ ಸ್ವತಃ ಈಶ್ವರ ಖಂಡ್ರೆ ವಿಸ್ತಾರ ನ್ಯೂಸ್‌ಗೆ ಪ್ರತಿಕ್ರಿಯೆ ನೀಡಿದ್ದು, ಬುಡಕಟ್ಟು ನಿವಾಸಿಗಳಿಗೆ ಹಾಗೂ ಸಾಗುವಳಿದಾರರಿಗೆ ತೊಂದರೆ ನೀಡುವುದಿಲ್ಲ ಎಂದು ಹೇಳಿದ್ದಾರೆ.

VISTARANEWS.COM


on

Eshwar Khandre
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo
Vistara impact

ಬೆಂಗಳೂರು: ಅರಣ್ಯೇತರ ಉದ್ದೇಶಗಳಿಗೆ ಪರಿವರ್ತಿಸಲಾಗಿದ್ದಂತಹ ಅರಣ್ಯ ಭೂಮಿಯ (Forest Land) ಪೈಕಿ ಶೇಕಡಾ 40ರಷ್ಟು ಭೂಮಿಯನ್ನು ಮರಳಿ ಮೀಸಲು ಅರಣ್ಯವಾಗಿ (Reserve Forest) ಪರಿವರ್ತನೆ ಮಾಡುವ ರಾಜ್ಯ ಸರ್ಕಾರದ (State Government) ನಿರ್ಧಾರದ ವಿರುದ್ಧ ಜನಾಕ್ರೋಶ ವ್ಯಕ್ತವಾಗಿತ್ತು. ಈ ಸಂಬಂಧ ವಿಸ್ತಾರ ನ್ಯೂಸ್‌ ಮಂಗಳವಾರ ಅಭಿಯಾನ (Vistara News Campaign‌) ಆರಂಭಿಸಿತ್ತು. ಸರ್ಕಾರದ ಕ್ರಮವನ್ನು ಬಲವಾಗಿ ಖಂಡಿಸಿತ್ತು. ಈಗ ಈ ಬಗ್ಗೆ ಸ್ವತಃ ಅರಣ್ಯ ಸಚಿವ ಈಶ್ವರ ಖಂಡ್ರೆ ಪ್ರತಿಕ್ರಿಯೆ ನೀಡಿದ್ದು, ದೊಡ್ಡ ಪ್ರಮಾಣದಲ್ಲಿ ಒತ್ತುವರಿ ಆಗಿದ್ರೆ ಮಾತ್ರ ತೆರವುಗೊಳಿಸಲಾಗುವುದು. ಬುಡಕಟ್ಟು ಸಮುದಾಯ, ಸಾಗುವಳಿದಾರರಿಗೆ (Tribal community and cultivators) ಸಮಸ್ಯೆ ಮಾಡುವುದಿಲ್ಲ ಎಂದು ಹೇಳಿದ್ದಾರೆ. ಇನ್ನು 3 ತಿಂಗಳಲ್ಲಿ ಹಕ್ಕು ಪತ್ರ ಕೊಡುವ ಕೆಲಸ ಮಾಡುತ್ತೇವೆ ಎಂದು ಹೇಳಿದ್ದಾರೆ. ಈ ಮೂಲಕ ವಿಸ್ತಾರ ನ್ಯೂಸ್‌ ಅಭಿಯಾನಕ್ಕೆ (Vistara News Impact) ಸರ್ಕಾರ ಸ್ಪಂದನೆ ನೀಡಿದೆ.

ಈ ಬಗ್ಗೆ ವಿಸ್ತಾರ ನ್ಯೂಸ್‌ಗೆ ಪ್ರತಿಕ್ರಿಯೆ ನೀಡಿರುವ ಸಚಿವ ಈಶ್ವರ ಖಂಡ್ರೆ, ದೊಡ್ಡ ಪ್ರಮಾಣದಲ್ಲಿ ಒತ್ತುವರಿ ಆಗಿದ್ದರೆ ಮಾತ್ರ ತೆರವುಗೊಳಿಸುವಂತೆ ಸರ್ಕಾರ ಸ್ಪಷ್ಟವಾಗಿ ಹೇಳಿದೆ. ಸ್ವಹಿತಾಸಕ್ತಿ, ರಾಜಕೀಯ ಕಾರಣಕ್ಕಾಗಿ ಒಕ್ಕಲೆಬ್ಬಿಸಲಾಗುತ್ತಿದೆ ಎಂಬ ಆರೋಪ ಸುಳ್ಳು. ಬುಡಕಟ್ಟು ಸಮುದಾಯ, ಉಳುಮೆ ಮಾಡುವವರನ್ನು ಒಕ್ಕಲೆಬ್ಬಿಸದೆ ಹಕ್ಕು ಪತ್ರ ನೀಡುವಂತೆ ಸೂಚನೆ ನೀಡಲಾಗಿದೆ. 3 ತಿಂಗಳಲ್ಲಿ ಹಕ್ಕು ಪತ್ರ ಕೊಡುವ ಕೆಲಸ ಮಾಡುತ್ತೇವೆ. ಸಿಎಂ ಸಿದ್ದರಾಮಯ್ಯ ಕೂಡಾ ಇದಕ್ಕೆ ಸ್ಪಂದಿಸಿದ್ದಾರೆ ಎಂದು ಹೇಳಿದ್ದಾರೆ.

Eshwar Khandre react on vistara news

‘ಅರಣ್ಯ ರೋದನ’ ಎಂಬ ಅಭಿಯಾನವನ್ನು ವಿಸ್ತಾರ ನ್ಯೂಸ್‌ ಕೈಗೊಂಡಿತ್ತು. ಸರ್ಕಾರದ ಹಾಗೂ ಅರಣ್ಯ ಇಲಾಖೆಯ ತಪ್ಪುಗಳ ಬಗ್ಗೆ ಬೆಳಕು ಚೆಲ್ಲಿತ್ತು. ಕರಾವಳಿ, ಮಲೆನಾಡು ಸೇರಿದಂತೆ ಮೀಸಲು ಅರಣ್ಯ ಘೋಷಣೆಯಿಂದ ಬಾಧಿತವಾದ ಜನರ ಸಂಕಷ್ಟಗಳನ್ನು ತೋರಿಸಿತ್ತು. ಸರ್ಕಾರದ ಈ ದಿಢೀರ್‌ ನಿರ್ಧಾರವನ್ನು ಪ್ರಶ್ನೆ ಮಾಡಿತ್ತು. ಅಲ್ಲದೆ, ಸರಣಿ ಕ್ಯಾಂಪೇನ್‌ಗೂ ಮುಂದಾಗಿತ್ತು. ಆದರೆ, ಈಗ ಇದಕ್ಕೆ ಅರಣ್ಯ ಸಚಿವ ಈಶ್ವರ ಖಂಡ್ರೆ ಪ್ರತಿಕ್ರಿಯೆ ನೀಡಿದ್ದು, ಬುಡಕಟ್ಟು ಸಮುದಾಯ, ಉಳುಮೆ ಮಾಡುವವರನ್ನು ಒಕ್ಕಲೆಬ್ಬಿಸುವುದಿಲ್ಲ ಎಂಬ ಅಭಯವನ್ನು ನೀಡಿದ್ದಾರೆ.

ಇದನ್ನೂ ಓದಿ: Power Point with HPK : ಸಿಎಂ ಸಿದ್ದರಾಮಯ್ಯಗೆ ಮಾಮ ಎಂದು ಕರೆಯುವ ಶಿವರಾಜಕುಮಾರ್!

3 ತಿಂಗಳಲ್ಲಿ ಹಕ್ಕು ಪತ್ರ ವಿತರಣೆ

ಬೆಂಗಳೂರು ಸೇರಿದಂತೆ ಅನೇಕ ಕಡೆ ಅರಣ್ಯ ಭೂಮಿ ಒತ್ತುವರಿಯಾಗಿದೆ. ಇದರ ಬಗ್ಗೆ ನಾವು ಕಠಿಣವಾಗಿ ಕ್ರಮ ಕೈಗೊಳ್ಳುತ್ತೇವೆ. ಆದರೆ, ಬುಡಕಟ್ಟು ಸಮುದಾಯ, ಉಳುಮೆ ಮಾಡುವವರನ್ನು ಒಕ್ಕಲೆಬ್ಬಿಸದಂತೆ ಸೂಚನೆ ನೀಡಿದ್ದೇವೆ. ಇಂಥವರಿಗೆ ಇನ್ನು ಮೂರು ತಿಂಗಳಲ್ಲಿ ಹಕ್ಕು ಪತ್ರವನ್ನು ವಿತರಣೆ ಮಾಡುತ್ತೇವೆ. ಇದಕ್ಕೆ ಸಿಎಂ ಸಿದ್ದರಾಮಯ್ಯ ಸಹ ಒಪ್ಪಿಗೆ ನೀಡಿ ಸೂಚನೆಯನ್ನು ನೀಡಿದ್ದಾರೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಪ್ರತಿಕ್ರಿಯೆ ನೀಡಿದ್ದಾರೆ.

ಅರಣ್ಯ ಇಲಾಖೆ ಜತೆ ನಡೆದಿತ್ತು ಜನರ ಸಂಘರ್ಷ!

ಅರಣ್ಯ ಇಲಾಖೆ ಸಿಬ್ಬಂದಿ ಮತ್ತು ಅರಣ್ಯದಂಚಿನ ಗ್ರಾಮಸ್ಥರ ನಡುವಿನ ಸಂಘರ್ಷ ಮತ್ತೆ ಜೋರಾಗಿದೆ. ಬೆಳ್ತಂಗಡಿಯ ಅಮ್ಮಿನಡ್ಕದಲ್ಲಿ ಅರಣ್ಯ ಇಲಾಖೆಯ ಅಧಿಕಾರಿಗಳ ವಿರುದ್ಧ ಜನಪ್ರತಿನಿಧಿಗಳು ತಿರುಗಿಬಿದ್ದಿದ್ದರು. ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಏಳಪಟ್ಟಿ ಗ್ರಾಮದಲ್ಲಿ ಒತ್ತುವರಿ ಭೂಮಿ ಸರ್ವೇಗೆ ಹೋದ ಅರಣ್ಯ ಇಲಾಖೆ ಸಿಬ್ಬಂದಿ ಮೇಲೆ ಸ್ಥಳೀಯರು ಕಲ್ಲು ತೂರಾಟ ನಡೆಸಿದ್ದರು. ನಮ್ಮ ಹಕ್ಕನ್ನು ಏಕೆ ಕಿತ್ತುಕೊಳ್ಳುತ್ತೀರಿ ಎಂದು ಪ್ರಶ್ನೆ ಮಾಡಿದ್ದರು. ಅಲ್ಲದೆ, ಚಿಕ್ಕಮಗಳೂರು, ಕೊಡಗಿನಲ್ಲಿಯೂ ಆಕ್ರೋಶ ವ್ಯಕ್ತವಾಗಿತ್ತು. ಅರಣ್ಯ ಇಲಾಖೆ ಹಾಗೂ ಅರಣ್ಯ ಇಲಾಖೆ ಸಚಿವ ಈಶ್ವರ ಖಂಡ್ರೆ ವಿರುದ್ಧ ಮಲೆನಾಡು, ಕರಾವಳಿ ಜಿಲ್ಲೆಗಳ ಶಾಸಕರಿಂದ ಪಕ್ಷಾತೀತವಾದ ಹೋರಾಟಕ್ಕೆ ಮುಂದಾಗಿದ್ದರು. ಈ ಕುರಿತು ಸಿಎಂ ಸಿದ್ದರಾಮಯ್ಯ ಅವರಿಗೆ ದೂರು ನೀಡಲೂ ಮುಂದಾಗಿದ್ದರು. ಇದೇ ವೇಳೆ ವಿಸ್ತಾರ ನ್ಯೂಸ್‌ ಸಹ ಅಭಿಯಾನ ಕೈಗೊಂಡು ಜನರ ಪರವಾಗಿ ಧ್ವನಿ ಎತ್ತಿತ್ತು. ಈ ಹಿನ್ನೆಲೆಯಲ್ಲಿ ಎಚ್ಚೆತ್ತ ಸರ್ಕಾರ, ಈಗ ಸಣ್ಣ ಬುಡಕಟ್ಟು ಜನಾಂಗ ಹಾಗೂ ಉಳುಮೆ ಮಾಡುವವರನ್ನು ಈಗಿನ ಕ್ರಮದಿಂದ ದೂರ ಇಡುತ್ತಿರುವುದಾಗಿ ತಿಳಿಸಿದೆ.

ಪರಿಸ್ಥಿತಿ ಹದಗೆಡಲು ಏನು ಕಾರಣ?

ಕರ್ನಾಟಕ ಅರಣ್ಯ ಕಾಯ್ದೆ 1963ರ ಸೆಕ್ಷನ್ 4ರ ಕಲಂ 4 (1) ಅಡಿ ಯಾವುದೇ ಭೂ ಪ್ರದೇಶವನ್ನು ʻಮೀಸಲು ಅರಣ್ಯ’ ಎಂದು ಸರ್ಕಾರ ಘೋಷಿಸಲು ಅವಕಾಶವಿದೆ. ಇದನ್ನು ಬಳಸಿಕೊಂಡು ಅರಣ್ಯ ಇಲಾಖೆ ʻಮೀಸಲು ಅರಣ್ಯʼ ಅಧಿಸೂಚನೆಯನ್ನು ಹೊರಡಿಸಿತ್ತು. ಸರ್ಕಾರ ಅಧಿಕಾರಕ್ಕೆ ಬಂದ 120 ದಿನಗಳಲ್ಲೇ 5,729 ಎಕರೆ ಪ್ರದೇಶವನ್ನು ಮೀಸಲು ಅರಣ್ಯ ಎಂದು ಘೋಷಿಸಿತ್ತು. ಇದನ್ನು ಸರ್ಕಾರ ಬಹುದೊಡ್ಡ ಸಾಧನೆ ಎಂಬಂತೆ ಬಿಂಬಿಸಿಕೊಂಡಿತ್ತು. ಹೀಗಾಗಿ ಅರಣ್ಯ ಇಲಾಖೆ ಅಧಿಕಾರಿಗಳು ಕಾಡಂಚಿನ ನಿವಾಸಿಗಳ ತೆರವಿಗೆ ಮುಂದಾಗಿದ್ದರು. ಇದು ಸಂಘರ್ಷಕ್ಕೆ ಕಾರಣವಾಗಿತ್ತು.

ಈ ಮೊದಲು ಈಶ್ವರ್‌ ಖಂಡ್ರೆ ಏನು ಹೇಳಿದ್ದರು?

ಅರಣ್ಯೇತರ ಉದ್ದೇಶಗಳಿಗೆ ಪರಿವರ್ತನೆ ಮಾಡಲಾಗಿದ್ದ ಅರಣ್ಯ ಭೂಮಿಯಲ್ಲಿ ಶೇ.40 ಭೂಮಿಯನ್ನು ಮರಳಿ ಮೀಸಲು ಅರಣ್ಯವನ್ನಾಗಿ ಪರಿವರ್ತಿಸುವ ಐತಿಹಾಸಿಕ ನಿರ್ಧಾರವನ್ನು ನಮ್ಮ ಸರ್ಕಾರ ಕೈಗೊಂಡಿದೆ ಎಂದು ಕಾಂಗ್ರೆಸ್‌ ಸೋಷಿಯಲ್‌ ಮೀಡಿಯಾ “ಎಕ್ಸ್‌” (ಟ್ವಿಟರ್‌) ನಲ್ಲಿ ಹೇಳಿಕೊಂಡಿತ್ತು. ಅರಣ್ಯ ಸಚಿವ ಈಶ್ವರ್‌ ಖಂಡ್ರೆ ಈಗಿರುವ ಶೇ.22ರಷ್ಟು ಅರಣ್ಯವನ್ನು ಶೇ.30ಕ್ಕಿಂತ ಹೆಚ್ಚಿಸುವ ನಿರ್ಧಾರವನ್ನು ಇಲಾಖೆ ತೆಗೆದುಕೊಂಡಿದ್ದು, ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಿದೆ ಎಂದು ಅರಣ್ಯ ಇಲಾಖೆಯ ಕ್ರಮವನ್ನು ಸಮರ್ಥಿಸಿಕೊಂಡಿದ್ದರು. ಇದು ವ್ಯಾಪಕ ಆಕ್ರೋಶಕ್ಕೆ ಕಾರಣವಾಗಿತ್ತು.

ಮಲೆನಾಡು ಶಾಸಕರ ಆಕ್ರೋಶ

ʻʻ120 ದಿನದಲ್ಲಿ 5,000 ಸಾವಿರ ಎಕರೆ ಕಾಡನ್ನು ಈ ಅರಣ್ಯ ಇಲಾಖೆಯೇನೂ ಬೆಳೆಸಿಲ್ಲ. ಇರುವ ಕಾಡನ್ನೇ ಮೀಸಲು ಎಂದು ಸಹಿ ಹಾಕಿದ್ದಾರೆ. ಈ ಸಹಿ ಹಾಕಲು 120 ದಿನ ಏಕೆ, ಬರೀ 120 ಸೆಕೆಂಡ್ ಸಾಕು. ಇದೊಂದು ವಿವೇಚನಾ ರಹಿತ ನಿರ್ಧಾರವಾಗಿದೆ. ಇದನ್ನು ಸರ್ಕಾರ ತನ್ನ ಸಾಧನೆ ಎಂದು ಬಿಂಬಿಸಿಕೊಳ್ಳುತ್ತಿರುವುದು ನಾಚಿಕೆಗೇಡು ಎಂದು ಮಲೆನಾಡು ಭಾಗದ ರೈತರು ಸಾಮಾಜಿಕ ಜಾಲತಾಣಗಳಲ್ಲಿ ಸರ್ಕಾರವನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದಾರೆ.
ಬಯಲು ನಾಡು ಬೀದರ್‌ನ ಈಶ್ವರ್ ಖಂಡ್ರೆ‌ ಅವರಿಗೆ ಮಲೆನಾಡಿನ ಜನ ಜೀವನ, ಸಮಸ್ಯೆಗಳ ಬಗ್ಗೆ ಏನು ಗೊತ್ತು? ಅವರು ಅಧಿಕಾರಿಗಳು ಕೊಟ್ಟ ಫೈಲ್‌ಗೆ ಸಹಿ ಹಾಕುತ್ತಿದ್ದಾರೆ. ಸಮಸ್ಯೆ ಹೇಳಲು ಹೋದರೆ ಕೇಳಿಸಿಕೊಳ್ಳದೆ ಉದ್ಧಟತನದಿಂದ ವರ್ತಿಸುತ್ತಿದ್ದಾರೆ ಎಂದು ಮಲೆನಾಡು ಭಾಗದ ಕಾಂಗ್ರೆಸ್‌ ಶಾಸಕರು ಕಿಡಿಕಾರಿದ್ದರು.

ಖಾರವಾಗಿ ಪ್ರಶ್ನೆ ಮಾಡಿದ್ದ ವಿಸ್ತಾರ ನ್ಯೂಸ್‌

1. ಸರ್ಕಾರ ಈಗ ಮೀಸಲು ಅರಣ್ಯವನ್ನು ಘೋಷಣೆ ಮಾಡಿದೆ. ಆದರೆ, ಇದರ ಮುಂದಿನ ಪರಿಣಾಮ ಏನು ಎಂಬುದನ್ನು ನೋಡಬೇಕಲ್ಲವೇ? ಮೀಸಲು ಅರಣ್ಯ ಎಂದು ಘೋಷಣೆ ಮಾಡಿದರೆ ಸಾಕೇ? ನಾಗರಿಕರ ಹಕ್ಕುಗಳನ್ನು ಕಾಪಾಡುವುದು ಸರ್ಕಾರದ ಕರ್ತವ್ಯ ಅಲ್ಲವೇ?

2. ಮೀಸಲು ಅರಣ್ಯ ಎಂದು ಘೋಷಿಸಲ್ಪಟ್ಟ ಸ್ಥಳಗಳಲ್ಲಿ ಈಗಾಗಲೇ ಮನೆ ಕಟ್ಟಿಕೊಂಡಿದ್ದರೆ ಅಥವಾ ತೋಟವನ್ನೋ ಇನ್ನೇನೋ ಕೃಷಿ ಚಟುವಟಿಕೆಯನ್ನು ಮಾಡಿಕೊಂಡಿದ್ದರೆ ಅಂತಹ ಜಾಗವನ್ನು ವಾಪಸ್‌ ಪಡೆಯುವುದು ಹೇಗೆ? ಎಂಬುದನ್ನು ಮೊದಲು ಸ್ಪಷ್ಟಪಡಿಸಬೇಕು. ಅಂಥವರಿಗೆ ಪುನರ್ವಸತಿ ಯೋಜನೆ ಏನು? ಏಕಾಏಕಿ ಮನೆ ಕೆಡವಿ, ನೀವು ಜಾಗ ಖಾಲಿ ಮಾಡಿ ಎಂದರೆ ಅವರು ಹೇಗೆ ಹೋಗಲು ಸಾಧ್ಯ?

3. ಈಗಾಗಲೇ ಶೇಕಡಾ 20ರಷ್ಟು ಇರುವ ಅರಣ್ಯವನ್ನು ಶೇಕಡಾ 30ಕ್ಕೆ ಹೆಚ್ಚಳ ಮಾಡುವ ಗುರಿಯನ್ನು ಹಾಕಿಕೊಳ್ಳಲಾಗಿದೆ. ಇದು ಒಳ್ಳೆಯ ಉದ್ದೇಶವೇ ಸರಿ. ಅದೇ ರೀತಿಯಾಗಿ ಇರುವ ಇನ್ನಿತರ ಪರ್ಯಾಯ ಮಾರ್ಗಗಳನ್ನೂ ನೋಡಬಹುದಲ್ಲವೇ? ಅಕೇಶಿಯಾ ನೆಡುತೋಪುಗಳನ್ನು ನೀವು ಬಳಸುವುದನ್ನು ನಿಲ್ಲಿಸಿ ಅಲ್ಲಿ ಅರಣ್ಯೀಕರಣವನ್ನು ಮಾಡಬಹುದಲ್ಲವೇ?

4. ರಸ್ತೆಯುದ್ದಕ್ಕೂ ಅಕ್ಕಪಕ್ಕದಲ್ಲಿ ಸಾಲು ಸಾಲು ಜಾಗಗಳಿವೆ. ಅಲ್ಲಿ ಸರಿಯಾಗಿ ಗಿಡಗಳನ್ನು ಬೆಳೆಸಿ ನಿರ್ವಹಣೆ ಮಾಡಿದ್ದೇ ಆದಲ್ಲಿ ಈಗ ಹಾಕಿಕೊಂಡಿರುವ ಗುರಿಗಿಂತಲೂ ಹೆಚ್ಚಳವಾಗುವುದಿಲ್ಲವೇ? ಇದು ಕ್ಲಿಷ್ಟಕರ ದಾರಿ ಎಂದು ಬಿಡಲಾಗಿದೆಯೇ?

5. ಸಮೀಕ್ಷೆಯನ್ನು ನಡೆಸದೆ, ಸರ್ವೆ ನಡೆಸದೇ ನಮ್ಮ ಬಳಿ ಸರ್ಕಾರದ ಆದೇಶ ಇದೆ ಎಂದು ಏಕಾಏಕಿ ನುಗ್ಗಿದರೆ ಜನರು ಸುಮ್ಮನಿರುತ್ತಾರೆಯೇ? ಜನರಿಂದಲೇ ಆಡಳಿತ ಎಂಬುದು ಮರೆತು ಹೋಯಿತೇ?

6. ಕೊನೆಯದಾಗಿ ಹೇಳಬೇಕೆಂದರೆ, ಅರಣ್ಯ ಜಾಗವನ್ನು ಹೆಚ್ಚಳ ಮಾಡುವ ನಿರ್ಧಾರಕ್ಕೆ ವಿಸ್ತಾರ ನ್ಯೂಸ್‌ ಸಹಮತ ಇದೆ. ಆದರೆ, ಈಗ ಕೈಗೊಂಡಿರುವ ಏಕಾಏಕಿ ನಿರ್ಧಾರ ಸರಿಯಲ್ಲ. ಪರ್ಯಾಯ ಮಾರ್ಗಗಳು ಏನು? ಈಗಿರುವವರಿಗೆ ಪರ್ಯಾಯ ನೆಲೆ ಏನು? ಎಂಬುದನ್ನು ಸ್ಪಷ್ಟಪಡಿಸದೇ ಕೈಗೊಂಡಿರುವ ನಿರ್ಧಾರವನ್ನು ಜನಸಾಮಾನ್ಯರ ಪರವಾಗಿ ಖಂಡಿಸಲಾಗುತ್ತಿದೆ ಎಂದು ವಿಸ್ತಾರ ನ್ಯೂಸ್‌ ಅಭಿಯಾನ ಮಾಡಿ ರಾಜ್ಯ ಸರ್ಕಾರದ ಗಮನ ಸೆಳೆದಿತ್ತು.

ಯಾವ ಜಿಲ್ಲೆಯಲ್ಲಿ ಎಷ್ಟು ಎಕರೆ ಪ್ರದೇಶ ಮೀಸಲು ಅರಣ್ಯವಾಗಿ ಘೋಷಣೆ?

  • ಚಿಕ್ಕಮಗಳೂರು-4,589
  • ಚಿತ್ರದುರ್ಗ-391
  • ಬೀದರ್‌-261
  • ಬೆಳಗಾವಿ-153
  • ಬಳ್ಳಾರಿ-105
  • ಮಂಡ್ಯ-49
  • ಶಿವಮೊಗ್ಗ-25

ಮೀಸಲು ಅರಣ್ಯ ಘೋಷಣೆಯಿಂದ ಏನೇನು ತೊಂದರೆ?

  • ಪ್ರದೇಶದಲ್ಲಿ ಅರಣ್ಯೇತರ ಚಟುವಟಿಕೆ ನಡೆಸುವಂತಿಲ್ಲ. ಅಂದರೆ ಕೃಷಿ, ಕೃಷಿಗೆ ಸಂಬಂಧಿಸಿದ ಯಾವುದೇ ಚಟುವಟಿಕೆ ನಡೆಸುವಂತಿಲ್ಲ.
    – ಈ ಜಾಗವನ್ನು ಯಾವುದೇ ಮಂಜೂರಾತಿ, ಅಧಿಭೋಗದಾರಿಕೆಗೆ ಆದೇಶ ನೀಡುವಂತಿಲ್ಲ.
    – ಸರಿಯಾಗಿ ಸರ್ವೆ ನಡೆಯದೇ ಇರುವುದರಿಂದ ದಾಖಲೆ ಇದ್ದರೂ ಕೋರ್ಟ್‌ – ಕಚೇರಿ ಅಲೆಯುವ ಸಂಕಷ್ಟ
  • ಜಾನುವಾರು ಮೇಯಿಸಲು, ದರಕು ಗುಡಿಸಲು ನಿರ್ಬಂಧ
    – ಹೊಸ ರಸ್ತೆ ನಿರ್ಮಾಣ, ಹಳೇ ರಸ್ತೆ ದುರಸ್ತಿ, ವಿದ್ಯುತ್‌ ಸಂಪರ್ಕ ಕಲ್ಪಿಸಲು ಅಡ್ಡಿ. ಸರ್ಕಾರದ ಬಳಕೆಗೂ ಈ ಜಾಗ ದೊರೆಯದು.

ಇದನ್ನೂ ಓದಿ: Vistara News Campaign‌: ಕಾಡು ಕಾಪಾಡಿದ ಜನರ ಕಾಡುವ ಸರ್ಕಾರ; ರಣಾಂಗಣವಾಯ್ತು ‘ಮೀಸಲು ಅರಣ್ಯ’

ಈಗ ಸರ್ಕಾರ ತೆಗೆದುಕೊಂಡಿರುವ ನಿರ್ಧಾರದಲ್ಲಿ ಕೆಲವು ಮಾರ್ಪಾಡು ಮಾಡಿಕೊಳ್ಳುವುದಾಗಿ ಹೇಳಿಕೊಂಡಿದೆ. ಹೀಗಾಗಿ ಬುಡಕಟ್ಟು ನಿವಾಸಿಗಳು ಹಾಗೂ ಸಾಗುವಳಿ ಮಾಡುತ್ತಿರುವವರಿಗೆ ಯಾವುದೇ ತೊಂದರೆ ಮಾಡದೆ, ಅವರಿಗೆ ಹಕ್ಕು ಪತ್ರ ನೀಡುವುದಾಗಿ ಘೋಷಣೆ ಮಾಡಿದೆ. ಈ ನಿಟ್ಟಿನಲ್ಲಿ ವಿಸ್ತಾರ ನ್ಯೂಸ್‌ ಮಾಡಿದ ಅಭಿಯಾನವು ಸಾರ್ಥಕವಾಗಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

CM Siddaramaiah: ಡಿಸಿಎಂ ವಿಚಾರದಲ್ಲಿ ಮತ್ತೆ ಒಡೆದುಹೋದ ಕಾಂಗ್ರೆಸ್‌; ಸಿದ್ದು- ಡಿಕೆಶಿ ಬಣದ ನಡುವೆ ಡಿಶುಂ ಡಿಶುಂ

CM Siddaramaiah: ಸಿಎಂ ಸಿದ್ದರಾಮಯ್ಯ ಬಣದಿಂದ ಸಮುದಾಯಕ್ಕೊಂದು ಡಿಸಿಎಂ ಹುದ್ದೆ ಸೃಷ್ಟಿ ಬಗ್ಗೆ ಮಾತುಗಳು ಕೇಳಿಬರುತ್ತಿವೆ. ಕೆ.ಎನ್ ರಾಜಣ್ಣ, ತಿಮ್ಮಾಪುರ್, ಜಮೀರ್ ಅಹಮದ್ ಖಾನ್ ಅವರಿಂದ ಡಿಸಿಎಂ ಹುದ್ದೆ ಜಪ ಮುಂದುವರಿದಿದೆ.

VISTARANEWS.COM


on

cm siddaramaiah DK Shivakumar power fight
Koo

ಬೆಂಗಳೂರು: ಲೋಕಸಭೆ ಚುನಾವಣೆಯ (Lok Sabha Election 2024) ಸಂದರ್ಭದಲ್ಲಿ ಮೈತ್ರಿ ಪಕ್ಷಗಳನ್ನು ಎದುರಿಸಲು ತಾತ್ಕಾಲಿಕವಾಗಿ ಒಂದಾಗಿದ್ದ ಸಿಎಂ ಸಿದ್ದರಾಮಯ್ಯ (CM Siddaramaiah) ಹಾಗೂ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್‌ (DK Shivakumar) ಬಣ ಮತ್ತೆ ಎರಡಾಗಿ ಹೋಗಿದ್ದು, ಡಿಸಿಎಂ (DCM) ನೇಮಕಾತಿ ವಿಚಾರದಲ್ಲಿ ಗುದ್ದಾಡತೊಡಗಿವೆ.

ರಾಜ್ಯ ಕಾಂಗ್ರೆಸ್ ಸರ್ಕಾರದ ಡಿಸಿಎಂ ಹುದ್ದೆ ವಿಚಾರದಲ್ಲಿ ಕಾಂಗ್ರೆಸ್‌ನಲ್ಲಿ ಇದೀಗ ಬಣ ಪಾಲಿಟಿಕ್ಸ್ ರಂಗೇರಿದೆ. ಇನ್ನಷ್ಟು ಡಿಸಿಎಂ ಹುದ್ದೆ ಸೃಷ್ಟಿ ಆಗಬೇಕು ಅಂತ ಒಂದು ಬಣ ಪಟ್ಟು ಹಿಡಿದಿದ್ದರೆ, ಅದಕ್ಕೆ ತಡೆ ಹಾಕಲು ಮತ್ತೊಂದು ಬಣ ಬೇರೊಂದು ಪಟ್ಟು ಹಾಕುತ್ತಿದೆ.

ಸಿಎಂ ಸಿದ್ದರಾಮಯ್ಯ ಬಣದಿಂದ ಸಮುದಾಯಕ್ಕೊಂದು ಡಿಸಿಎಂ ಹುದ್ದೆ ಸೃಷ್ಟಿ ಬಗ್ಗೆ ಮಾತುಗಳು ಕೇಳಿಬರುತ್ತಿವೆ. ಕೆ.ಎನ್ ರಾಜಣ್ಣ, ತಿಮ್ಮಾಪುರ್, ಜಮೀರ್ ಅಹಮದ್ ಖಾನ್ ಅವರಿಂದ ಡಿಸಿಎಂ ಹುದ್ದೆ ಜಪ ಮುಂದುವರಿದಿದೆ. ಸಮುದಾಯಕ್ಕೊಂದು ಡಿಸಿಎಂ ಹುದ್ದೆ ಕೊಟ್ಟರೆ ಚುನಾವಣೆ ಸಂದರ್ಭದಲ್ಲಿ ಅನುಕೂಲ. ಅಧಿಕಾರ ಕೆಲ ಸಮುದಾಯಗಳಿಗೆ ಮಾತ್ರ ಸೀಮಿತವಾಗಬಾರದು. ದಲಿತ, ಮುಸ್ಲಿಂ, ಲಿಂಗಾಯತ ಸಮುದಾಯಗಳನ್ನು ಸೆಳೆಯಲು ಡಿಸಿಎಂ ಹುದ್ದೆ ಅನಿವಾರ್ಯ ಎಂದು ಪಟ್ಟು ಹಿಡಿದಿದ್ದಾರೆ.

ದಿನಕ್ಕೊಬ್ಬ ಸಚಿವರು ಈ ಬಗ್ಗೆ ಬಹಿರಂಗ ಹೇಳಿಕೆ ನೀಡುತ್ತಿದ್ದಾರೆ. ಈ ಮೂವರು ಸಚಿವರು ಸಹ ಸಿದ್ದರಾಮಯ್ಯ ಬಣಕ್ಕೆ ಸೇರಿದವರು. ಇದರ ಹಿಂದೆ, ಡಿಕೆಶಿ ಪ್ರಭಾವವನ್ನು ಕಡಿಮೆ ಮಾಡುವ ಚಿಂತನೆಯೂ ಇದೆ ಎನ್ನಲಾಗಿದೆ.

ಇತ್ತ ಸಿದ್ದರಾಮಯ್ಯ ಬಣದಿಂದ ಹೇಳಿಕೆ ಬಂದ ತಕ್ಷಣ ಡಿಕೆಶಿ ಬಣದಿಂದಲೂ ತಿರುಗೇಟು ಬರಲಾರಂಭಿಸಿದೆ. ಡಿಕೆ ಸುರೇಶ್ ಕೂಡಲೇ ಕೌಂಟರ್ ನೀಡಿದ್ದಾರೆ. ಮೂರಲ್ಲ ಐದಕ್ಕೂ ಹೆಚ್ಚು ಡಿಸಿಎಂ ಹುದ್ದೆ ಸೃಷ್ಟಿ ಆಗಬೇಕು ಎಂದಿದ್ದಾರೆ. ಜಮೀರ್ ಅಹಮದ್ ಖಾನ್, ರಾಜಣ್ಣ, ತಿಮ್ಮಾಪುರ, ಕೃಷ್ಣ ಬೈರೇಗೌಡ, ಚಲುವರಾಯಸ್ವಾಮಿಗೂ ಡಿಸಿಎಂ ಹುದ್ದೆ ಕೊಡಬೇಕು ಎಂದು ವ್ಯಂಗ್ಯವಾಡಿದ್ದಾರೆ.

ಅತ್ತ ಪ್ರಿಯಾಂಕ್ ಖರ್ಗೆ ಅವರಿಂದಲೂ ತಿರುಗೇಟು ಬಂದಿದೆ. ಸಚಿವರಲ್ಲದವರನ್ನೆಲ್ಲ ಡಿಸಿಎಂ ಮಾಡೋಣ, ಕೆಲಸ ಮಾಡೋದು ಬೇಡ- ಡಿಸಿಎಂ ಹುದ್ದೆ ಕೋಡೋಣ ಎಂದು ಪ್ರಿಯಾಂಕ್ ಖರ್ಗೆ ಟಾಂಗ್‌ ಕೊಟ್ಟಿದ್ದಾರೆ.

ಲೋಕಸಭಾ ಚುನಾವಣೆ ಫಲಿತಾಂಶದ ಬಳಿಕ ಹೆಚ್ಚಿನ ಡಿಸಿಎಂ ಹುದ್ದೆ ಸೃಷ್ಟಿ ವಿಚಾರ ಗೊಂದಲವೆಬ್ಬಿಸಿದೆ. ಅತ್ತ ಹಳೆ ಮೈಸೂರು ಭಾಗದಲ್ಲಿ ಕಾಂಗ್ರೆಸ್‌ಗೆ ಹಿನ್ನಡೆ ಆದ ತಕ್ಷಣ ಕಾಂಗ್ರೆಸ್‌ನಲ್ಲಿ ಬಣ ಬಡಿದಾಟ ಭುಗಿಲೆದ್ದಿದೆ. ಹೆಚ್ಚುವರಿ ಡಿಸಿಎಂ ಹುದ್ದೆ ಸೃಷ್ಟಿ ಮಾಡಿ ಸಮುದಾಯಗಳಿಗೆ ಮಣೆ ಹಾಕಿ ಅಂತ ಪಟ್ಟು ಹಿಡಿಯಲಾಗಿದೆ. ಪಕ್ಷದ ಪರವಾಗಿ ನಿಲ್ಲದ ಸಮುದಾಯಕ್ಕೆ ಮಣೆ ಹಾಕುವುದಕ್ಕಿಂತಲೂ, ಪಕ್ಷದ ಪರವಾಗಿ ನಿಂತ ಸಮುದಾಯಗಳಿಗೆ ಮಣೆ ಹಾಕುವಂತೆ ಒತ್ತಾಯ

ಹೆಚ್ಚುವರಿ ಡಿಸಿಎಂ ಹುದ್ದೆ ಸೃಷ್ಟಿ ಆದರೆ ಡಿಕೆಶಿ ಅವರ ಪ್ರಭಾವವನ್ನು ಕಡಿಮೆ ಮಾಡಬಹುದು ಎನ್ನುವ ಚಿಂತನೆ ಸಿದ್ದರಾಮಯ್ಯ ಬಳಗದಲ್ಲಿದೆ. ಇತ್ತ ಹೆಚ್ಚುವರಿ ಡಿಸಿಎಂ ಹುದ್ದೆ ಸೃಷ್ಟಿ ಮಾಡದಂತೆ ಡಿಕೆಶಿ ಬಣದಿಂದ ತಿರುಗೇಟು ನೀಡಲಾಗುತ್ತಿದೆ. ಅತ್ತ ಬಿಜೆಪಿ ಕೂಡ ಕಾಂಗ್ರೆಸ್‌ನೊಳಗಿನ ಡಿಸಿಎಂ ವಿವಾದವನ್ನು ತನ್ನ ಅನುಕೂಲಕ್ಕೆ ತಕ್ಕಂತೆ ಬಳಸಿಕೊಳ್ಳಲು ಮುಂದಾಗಿದ್ದು, ಈ ವಿವಾದವನ್ನು ಜೀವಂತವಾಗಿಡಲು ಶ್ರಮಿಸುತ್ತಿದೆ.

ʼಈ ಸಂಘರ್ಷ ಕೆಲವೇ ತಿಂಗಳಲ್ಲಿ ತಾರ್ಕಿಕ ಅಂತ್ಯ ತಲಪಲಿದೆʼ ಎಂದು ಮಾಜಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ. “ಡಿಸಿಎಂ ವಿಚಾರ ಇದೇ ಮೊದಲ ಬಾರಿ ಅಲ್ಲ, ಹಲವು ಬಾರಿ ಚರ್ಚೆ ಆಗಿದೆ. ಆದರೆ ಇವತ್ತು ನಡೆಯುತ್ತಿರುವ ಡಿಸಿಎಂ ಗುದ್ದಾಟ ಆಂತರಿಕ ಗುಂಪಿನದ್ದು. ಕಾಂಗ್ರೆಸ್‌ನಲ್ಲಿ ಎರಡು ಆಂತರಿಕ ಗುಂಪು ಇದೆ. ಒಂದು ಗುಂಪು ಮುಖ್ಯಮಂತ್ರಿಗಳದ್ದು, ಮತ್ತೊಂದು ಗುಂಪು ಉಪಮುಖ್ಯಮಂತ್ರಿಗಳದ್ದು. ಒಂದು ಗುಂಪು ಅಧಿಕಾರ ಉಳಿಸಿಕೊಳ್ಳಲು ಪ್ರಯತ್ನ ಮಾಡ್ತಿದೆ. ಮತ್ತೊಂದು ಗುಂಪು ಹೆಚ್ಚಿನ ಅಧಿಕಾರ ಪಡೆದುಕೊಳ್ಳಲು ಪ್ರಯತ್ನ ಮಾಡ್ತಿದೆ. ಈ ಸಂಘರ್ಷ ಕೆಲವೇ ತಿಂಗಳಲ್ಲಿ ತಾರ್ಕಿಕ ಅಂತ್ಯ ತಲಪಲಿದೆ” ಎಂದಿದ್ದಾರೆ.

ಇದನ್ನೂ ಓದಿ: DK Shivakumar: ವಿವಿಧ ಸಮಸ್ಯೆ ಹೊತ್ತು ಬಂದವರಿಗೆ ಸ್ಥಳದಲ್ಲೇ ಪರಿಹಾರ ಒದಗಿಸಿದ ಡಿ.ಕೆ. ಶಿವಕುಮಾರ್

Continue Reading

ಕರ್ನಾಟಕ

Udhayanidhi Stalin: ಸನಾತನ ಧರ್ಮದ ವಿರುದ್ಧ ಹೇಳಿಕೆ; ಇಂದು ಬೆಂಗಳೂರು ಕೋರ್ಟ್‌ನಲ್ಲಿ ಉದಯನಿಧಿ ಸ್ಟಾಲಿನ್‌ ವಿಚಾರಣೆ

Udhayanidhi Stalin: ಸನಾತನ ಧರ್ಮದ ವಿರುದ್ಧ ಅವಹೇಳನಕಾರಿ ಭಾಷಣ ಮಾಡಿದ ವಿಚಾರಕ್ಕೆ ಸಂಬಂಧಿಸಿ ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್‌ (Udhayanidhi Stalin) ಇಂದು (ಜೂನ್‌ 25) ಬೆಂಗಳೂರಿನ 42ನೇ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರಾಗಿದ್ದಾರೆ. ಉದಯನಿಧಿ ಸ್ಟಾಲಿನ್ ಕಳೆದ ವರ್ಷ ನೀಡಿದ್ದ ಹೇಳಿಕೆ ಸಂಬಂಧ ಪರಮೇಶ್ ಎಂಬವರು ನ್ಯಾಯಾಲಯಕ್ಕೆ ಖಾಸಗಿ ದೂರು ಸಲ್ಲಿಸಿದ್ದರು.

VISTARANEWS.COM


on

Udhayanidhi Stalin
Koo

ಬೆಂಗಳೂರು: ಸನಾತನ ಧರ್ಮದ ವಿರುದ್ಧ ಅವಹೇಳನಕಾರಿ ಭಾಷಣ ಮಾಡಿದ ವಿಚಾರಕ್ಕೆ ಸಂಬಂಧಿಸಿ ತಮಿಳುನಾಡು ಸಚಿವ ಉದಯನಿಧಿ ಸ್ಟಾಲಿನ್‌ (Udhayanidhi Stalin) ಇಂದು (ಜೂನ್‌ 25) ಬೆಂಗಳೂರಿನ 42ನೇ ಎಸಿಎಂಎಂ ನ್ಯಾಯಾಲಯಕ್ಕೆ ಹಾಜರಾಗಿದ್ದಾರೆ. ಉದಯನಿಧಿ ಸ್ಟಾಲಿನ್ ಕಳೆದ ವರ್ಷ ನೀಡಿದ್ದ ಹೇಳಿಕೆ ಸಂಬಂಧ ಪರಮೇಶ್ ಎಂಬವರು ನ್ಯಾಯಾಲಯಕ್ಕೆ ಖಾಸಗಿ ದೂರು ಸಲ್ಲಿಸಿದ್ದರು. ಈ ಹಿನ್ನಲೆಯಲ್ಲಿ ಕೋರ್ಟ್‌ ಸಮನ್ಸ್ ಜಾರಿ ಮಾಡಿತ್ತು. ಹೀಗಾಗಿ ಉದಯನಿಧಿ ಸ್ಟಾಲಿನ್ ನ್ಯಾಯಾಲಯಕ್ಕೆ ಹಾಜರಾಗಿದ್ದಾರೆ.

ಉದಯನಿಧಿ ಸ್ಟಾಲಿನ್ ಆಗಮನದ ಹಿನ್ನೆಲೆಯಲ್ಲಿ ಕೋರ್ಟ್‌ ಆವರಣದಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಮೂವರು ಇನ್ಸ್‌ಪೆಕ್ಟರ್‌ ಸೇರಿದಂತೆ 70ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿದೆ.

ಏನಿದು ವಿವಾದ?

ತಮಿಳುನಾಡಿನ ಸಿಎಂ ಎಂ.ಕೆ.‌ ಸ್ಟಾಲಿನ್ ಪುತ್ರ ಹಾಗೂ ಕ್ರೀಡಾ ಸಚಿವರಾಗಿರುವ ಉದಯನಿಧಿ ಸ್ಟಾಲಿನ್‌ 2023ರ ಸೆ. 4ರಂದು ಚೆನ್ನೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಈ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಪ್ರಗತಿಪರ ಲೇಖಕರು, ಕಲಾವಿದರ ಸಂಘದಿಂದ ಆಯೋಜಿಸಿದ್ದ “ಸನಾತನ ನಿರ್ಮೂಲನಾ ಸಮಾವೇಶ”ದಲ್ಲಿ ಮಾತನಾಡಿದ್ದ ಉದಯನಿಧಿ ಸ್ಟಾಲಿನ್‌ ಸನಾತನ ಧರ್ಮದ ಉಲ್ಲೇಖ ಮಾಡಿದ್ದರು. “ ಸನಾತನ ಧರ್ಮ ಕೊರೊನಾ, ಡೆಂಗ್ಯೂ, ಮಲೇರಿಯಾ ಇದ್ದಂತೆ. ಇಂತಹ ವಿಶೇಷ ಕಾರ್ಯಕ್ರಮದಲ್ಲಿ ಮಾತನಾಡಲು ನನಗೆ ಅವಕಾಶ ನೀಡಿದ್ದಕ್ಕಾಗಿ ಧನ್ಯವಾದಗಳು. ನೀವು “ಸನಾತನ ವಿರೋಧಿ ಸಮ್ಮೇಳನ” ಎಂಬುದಾಗಿ ಆಯೋಜಿಸುವ ಬದಲು “ಸನಾತನ ನಿರ್ಮೂಲನಾ ಸಮ್ಮೇಳನ” ಎಂಬುದಾಗಿ ಕಾರ್ಯಕ್ರಮ ಆಯೋಜಿಸಿದ್ದು ನನಗೆ ಇಷ್ಟವಾಯಿತು” ಎಂದು ಹೇಳಿದ್ದರು.

ಉದಯನಿಧಿ ಸ್ಟಾಲಿನ್‌ ಅವರು ಈ ಹೇಳಿಕೆ ನೀಡಿದ ಬಳಿಕ ದೇಶಾದ್ಯಂತ ಸಂಚಲನ ಮೂಡಿಸಿತ್ತು. ಪರ-ವಿರೋಧ ಚರ್ಚೆಗಳು ಆರಂಭವಾಗಿದ್ದವು. ಬಿಜೆಪಿ ನಾಯಕರಂತೂ ಉದಯನಿಧಿ ಸ್ಟಾಲಿನ್‌ ಅವರ ಮೇಲೆ ಮುಗಿಬಿದ್ದಿದ್ದರು. ಪ್ರಧಾನಿ ನರೇಂದ್ರ ಮೋದಿ ಅವರೇ, “ಸನಾತನ ಧರ್ಮವನ್ನು ನಿರ್ಮೂಲನೆ ಮಾಡಲೆಂದೇ ಪ್ರತಿಪಕ್ಷಗಳು ಒಗ್ಗೂಡಿ ಇಂಡಿಯಾ ಎಂಬ ಒಕ್ಕೂಟ ರಚಿಸಿವೆ” ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ನಂತರ ಹೇಳಿಕೆಯನ್ನು ಸಮರ್ಥಿಸಿಕೊಂಡಿದ್ದ ಉದಯನಿಧಿ ಸ್ಟಾಲಿನ್‌, ನನ್ನ ಹೇಳಿಕೆಗೆ ನಾನು ಬದ್ಧನಾಗಿದ್ದೇನೆ. ಕಾನೂನು ಹೋರಾಟಕ್ಕೂ ಸಿದ್ಧನಾಗಿದ್ದೇನೆ ಎಂದು ಹೇಳಿದ್ದರು.

ಈ ವಿವಾದ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿತ್ತು. ಉದಯನಿಧಿ ಸ್ಟಾಲಿನ್‌ ಹಾಗೂ ತಮಿಳುನಾಡು ಸರ್ಕಾರ ಸೇರಿ 16 ಜನರಿಗೆ ಸುಪ್ರೀಂ ಕೋರ್ಟ್‌ ನೋಟಿಸ್‌ ಜಾರಿಗೊಳಿಸಿತ್ತು. ತಮಿಳುನಾಡು ಸರ್ಕಾರ, ಉದಯನಿಧಿ ಸ್ಟಾಲಿನ್‌, ಮತ್ತೊಬ್ಬ ಸಚಿವ ಎ. ರಾಜಾ ಸೇರಿ 16 ಜನರಿಗೆ ಸುಪ್ರೀಂ ಕೋರ್ಟ್‌ ನೋಟಿಸ್‌ ಜಾರಿಗೊಳಿಸಿತ್ತು. ಇವರ ವಿರುದ್ಧ ಎಫ್‌ಐಆರ್‌ ದಾಖಲಿಸಬೇಕು ಎಂದು ಕೋರಿ ಸಲ್ಲಿಸಲಾಗಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಾಲಯವು, ಪ್ರತಿಕ್ರಿಯೆ ನೀಡುವಂತೆ ತಮಿಳುನಾಡು ಸರ್ಕಾರ ಹಾಗೂ 15 ಜನರಿಗೆ ನೋಟಿಸ್‌ ಜಾರಿಗೊಳಿಸಿತ್ತು. ಎ.ರಾಜಾ ಕೂಡ ಸನಾತನ ಧರ್ಮದ ಕುರಿತು ವಿವಾದಾತ್ಮಕ ಹೇಳಿಕೆ ನೀಡಿದ್ದರು. ಇವರ ವಿರುದ್ಧ ಚೆನ್ನೈ ಮೂಲದ ಬಿ. ಜಗನ್ನಾಥ್‌ ಕೋರ್ಟ್‌ ಮೊರೆ ಹೋಗಿದ್ದರು.

ಇದನ್ನೂ ಓದಿ: Udhayanidhi Stalin: ಸಂಸತ್‌ಗೆ ಮುರ್ಮುರನ್ನು ಆಹ್ವಾನಿಸದಿರುವುದೇ ಸನಾತನ ಧರ್ಮ ಎಂದ ಉದಯನಿಧಿ

Continue Reading

ಕ್ರೈಂ

Physical Abuse: ಅಪ್ರಾಪ್ತ ಮಗಳನ್ನು ಗರ್ಭಿಣಿ ಮಾಡಿದ ಕಾಮಪಿಶಾಚಿ ಅಪ್ಪನಿಗೆ ಗೂಸಾ

Physical Abuse: ಮಂಡ್ಯ ನಗರದ ಗುತ್ತಲಿನಲ್ಲಿ ಈ ಘಟನೆ ನಡೆದಿದೆ. ಮುನೀರ್ ತನ್ನ ಅಪ್ರಾಪ್ತ ಮಗಳನ್ನು ಪುಸಲಾಯಿಸಿ ಆಕೆಯ ಮೇಲೆ ಅತ್ಯಾಚಾರ ಮಾಡಿ ಗರ್ಭ ಧರಿಸುವಂತೆ ಮಾಡಿದ್ದಾನೆ. ಗರ್ಭಿಣಿಯಾದ ಬಾಲಕಿ ನಿನ್ನೆ ಈ ಬಗ್ಗೆ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದು, ಇದನ್ನು ಕೇಳಿ ಕೆರಳಿ ಕೆಂಡವಾದ ಗ್ರಾಮಸ್ಥರು ಮುನೀರ್‌ಗೆ ನಡು ರಸ್ತೆಯಲ್ಲೇ ಹಿಗ್ಗಾ ಮುಗ್ಗಾ ಥಳಿಸಿದ್ದಾರೆ.

VISTARANEWS.COM


on

physical abuse mandya
Koo

ಮಂಡ್ಯ: ಅಪ್ರಾಪ್ತ ವಯಸ್ಸಿನ ಮಗಳನ್ನು ಅಪ್ಪನೇ ಗರ್ಭಿಣಿ (Physical abuse) ಮಾಡಿರುವ ಆರೋಪ ಮಂಡ್ಯ (Mandya news) ಗುತ್ತಲಿನ ಮುನೀರ್‌ ಎಂಬಾತನ ಮೇಲೆ ಬಂದಿದೆ. ಈ ಕೃತ್ಯದಿಂದ ರೊಚ್ಚಿಗೆದ್ದ ಗ್ರಾಮಸ್ಥರು ಮುನೀರ್‌ನನ್ನು ಹಿಡಿದು ಥಳಿಸಿ ಪೊಲೀಸರಿಗೆ ಒಪ್ಪಿಸಿದ್ದಾರೆ.

ಮಂಡ್ಯ ನಗರದ ಗುತ್ತಲಿನಲ್ಲಿ ಈ ಘಟನೆ ನಡೆದಿದೆ. ಮುನೀರ್ ತನ್ನ ಅಪ್ರಾಪ್ತ ಮಗಳನ್ನು ಪುಸಲಾಯಿಸಿ ಆಕೆಯ ಮೇಲೆ ಅತ್ಯಾಚಾರ ಮಾಡಿ ಗರ್ಭ ಧರಿಸುವಂತೆ ಮಾಡಿದ್ದಾನೆ. ಗರ್ಭಿಣಿಯಾದ ಬಾಲಕಿ ನಿನ್ನೆ ಈ ಬಗ್ಗೆ ಕುಟುಂಬಸ್ಥರಿಗೆ ಮಾಹಿತಿ ನೀಡಿದ್ದು, ಇದನ್ನು ಕೇಳಿ ಕೆರಳಿ ಕೆಂಡವಾದ ಗ್ರಾಮಸ್ಥರು ಮುನೀರ್‌ಗೆ ನಡು ರಸ್ತೆಯಲ್ಲೇ ಹಿಗ್ಗಾ ಮುಗ್ಗಾ ಥಳಿಸಿದ್ದಾರೆ.

ಮುನೀರ್‌ನನ್ನು ಪ್ರಶ್ನಿಸಿದಾಗ ಆತ ತಪ್ಪೊಪ್ಪಿಕೊಂಡಿದ್ದಾನೆ. ವಿಚಾರ ತಿಳಿದ ಮಂಡ್ಯ ಈಸ್ಟ್ ಪೊಲೀಸ್ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಸಾರ್ವಜನಿಕರ ಕೈಯಿಂದ ಆರೋಪಿ ಮುನೀರ್‌ನನ್ನು ಬಿಡಿಸಿ ತಮ್ಮ ವಶಕ್ಕೆ ಪಡೆದಿದ್ದಾರೆ. ಮಗಳಿಗೆ ಅಗತ್ಯ ಚಿಕಿತ್ಸೆ ನೀಡಲಾಗಿದ್ದು, ವೈದ್ಯಕೀಯ ಪರೀಕ್ಷೆ ನಡೆಸಲಾಗುತ್ತಿದೆ.

ಇಸ್ಪೀಟ್‌ ಅಡ್ಡೆ ಮೇಲೆ ದಾಳಿ; 11 ಜನ ಆರೋಪಿಗಳ ಬಂಧನ

ಶಿರಾ: ಇಸ್ಪೀಟ್‌ ಜೂಜಾಟದ ಅಡ್ಡೆ ಮೇಲೆ ಪೊಲೀಸರು ದಾಳಿ ನಡೆಸಿ, 11 ಆರೋಪಿಗಳನ್ನು ಬಂಧಿಸಿ, 1,06,180 ರೂ. ನಗದು, 13 ಮೊಬೈಲ್ ಹಾಗೂ 7 ಬೈಕ್‌ಗಳನ್ನು ವಶಪಡಿಸಿಕೊಂಡಿದ್ದಾರೆ. ತಾಲೂಕಿನ ಮಾಗೋಡು ಕೆರೆ ಬಳಿಯ ದೊಡ್ಡನಹಳ್ಳಿ ಗ್ರಾಮದ ಸಮೀಪದಲ್ಲಿ ಭಾನುವಾರ (Gambling Case) ಈ ಘಟನೆ ನಡೆದಿದೆ.

ಖಚಿತ ಮಾಹಿತಿಯ ಮೇರೆಗೆ ತುಮಕೂರು ಸೆನ್ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ರಾಮಕೃಷ್ಣಯ್ಯ ಅವರ ನೇತೃತ್ವದಲ್ಲಿ ಪೊಲೀಸರು ದಾಳಿ ಮಾಡಿ, ಇಸ್ಪೀಟ್‌ ಜೂಜಾಟದಲ್ಲಿ ತೊಡಗಿದ್ದ 11 ಜನ ಆರೋಪಿಗಳನ್ನು ಬಂಧಿಸಿ, ಅವರಿಂದ 1,06,180 ರೂ. ನಗದು, 13 ಮೊಬೈಲ್‌ಗಳು ಹಾಗೂ ಏಳು ಬೈಕ್‌ಗಳನ್ನು ವಶಪಡಿಸಿಕೊಂಡಿದ್ದಾರೆ.

ತುಮಕೂರು ಸೆನ್ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ರಾಮಕೃಷ್ಣಯ್ಯ ಹಾಗೂ ಸಿಬ್ಬಂದಿ ನಡೆಸಿದ ಈ ದಾಳಿಗೆ ಶಿರಾ ತಾಲೂಕಿನ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಈ ಕುರಿತು ಶಿರಾ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Karnataka Weather : ಕರಾವಳಿಯಲ್ಲಿ ಮುಂದುವರಿದ ವರುಣಾರ್ಭಟ; ಸಾಂಪ್ರದಾಯಿಕ ಮೀನುಗಾರಿಕೆಗೂ ಬ್ರೇಕ್

Continue Reading

ಕ್ರೀಡೆ

Paris Olympics 2024: ಪ್ಯಾರಿಸ್​ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಕರ್ನಾಟಕದ ಅದಿತಿ ಅಶೋಕ್

Paris Olympics 2024: ನಾಲ್ಕು ಮಂದಿಯ ಭಾರತದ ಗಾಲ್ಫ್​ ತಂಡದಲ್ಲಿ 24ನೇ ರ್‍ಯಾಂಕ್‌ನೊಡನೆ ಅದಿತಿ ಅರ್ಹತೆ ಪಡೆದರೆ, ದೀಕ್ಷಾ 40ನೇ ರ್‍ಯಾಂಕ್‌ನೊಡನೆ ಅವಕಾಶ ಪಡೆದರು. ಪುರುಷರ ವಿಭಾಗದಲ್ಲಿ ಅಗ್ರಮಾನ್ಯ ಗಾಲ್ಫರ್ ಶುಭಂಕರ್ ಶರ್ಮಾ ಮತ್ತು ಗಗನ್‌ಜೀತ್‌ ಭುಲ್ಲರ್ ಈಗಾಗಲೇ ಅರ್ಹತೆ ಪಡೆದಿದ್ದಾರೆ.

VISTARANEWS.COM


on

Paris Olympics 2024
Koo

ನವದೆಹಲಿ: ಕಳೆದ ವರ್ಷ ಚೀನಾದ ಹ್ಯಾಂಗ್ ಝೂ ನಲ್ಲಿ ನಡೆದಿದ್ದ ಏಷ್ಯನ್ ಗೇಮ್ಸ್ ಕ್ರೀಡಾಕೂಟದಲ್ಲಿ ಐತಿಹಾಸಿಕ ಪದಕ ಗೆದ್ದ ಕರ್ನಾಟಕದ ಗಾಲ್ಫರ್ ಅದಿತಿ ಅಶೋಕ್(Aditi Ashok) ಅವರು ಇದೀಗ ಪ್ಯಾರಿಸ್ ಒಲಿಂಪಿಕ್ಸ್‌ಗೆ(Paris Olympics 2024) ಅರ್ಹತೆ ಪಡೆದಿದ್ದಾರೆ. ಇವರ ಜತೆಗೆ ದೀಕ್ಷಾ ದಾಗರ್(Diksha Dagar) ಕೂಡ ಅರ್ಹತೆ ಪಡೆದಿದ್ದಾರೆ. ವಿಶ್ವ ರ್‍ಯಾಂಕಿಂಗ್ ಮೂಲಕ ಉಭಯ ಆಟಗಾರ್ತಿಯರಿಗೆ ಒಲಿಂಪಿಕ್ಸ್‌ ಟಿಕೆಟ್​ ಲಭಿಸಿದೆ.

ನಾಲ್ಕು ಮಂದಿಯ ಭಾರತದ ಗಾಲ್ಫ್​ ತಂಡದಲ್ಲಿ 24ನೇ ರ್‍ಯಾಂಕ್‌ನೊಡನೆ ಅದಿತಿ ಅರ್ಹತೆ ಪಡೆದರೆ, ದೀಕ್ಷಾ 40ನೇ ರ್‍ಯಾಂಕ್‌ನೊಡನೆ ಅವಕಾಶ ಪಡೆದರು. ಪುರುಷರ ವಿಭಾಗದಲ್ಲಿ ಅಗ್ರಮಾನ್ಯ ಗಾಲ್ಫರ್ ಶುಭಂಕರ್ ಶರ್ಮಾ ಮತ್ತು ಗಗನ್‌ಜೀತ್‌ ಭುಲ್ಲರ್ ಈಗಾಗಲೇ ಅರ್ಹತೆ ಪಡೆದಿದ್ದಾರೆ.

ಬೆಂಗಳೂರಿನ ಅದಿತಿ ಅಶೋಕ್ ಏಷ್ಯನ್ ಗೇಮ್ಸ್​ನಲ್ಲಿ ಬೆಳ್ಳಿ ಪದಕ ಗೆದ್ದು ಈ ಕ್ರೀಡಾಕೂಟದ ಗಾಲ್ಫ್ ಕ್ರೀಡೆಯಲ್ಲಿ ಪದಕ ಗೆದ್ದ ಭಾರತದ ಮೊದಲ ಮಹಿಳಾ ಕ್ರೀಡಾಪಟು ಎಂಬ ದಾಖಲೆ ಬರೆದಿದ್ದರು. ಮುಂದಿನ ತಿಂಗಳು ನಡೆಯುವ ಪ್ಯಾರಿಸ್​ ಒಲಿಂಪಿಕ್ಸ್​ನಲ್ಲಿಯೂ ಅವರು ಐತಿಹಾಸಿಕ ಚಿನ್ನ ಗೆಲ್ಲುವಂತಾಗಲಿ ಎನ್ನುವುದು ಭಾರತೀಯರ ಮತ್ತು ಕನ್ನಡಿಗ ಹಾರೈಕೆ. ಕಳೆದ ಟೋಕಿಯೊ ಒಲಿಂಪಿಕ್ಸ್‌ನಲ್ಲಿಯೂ ಅದಿತಿ ಅಮೋಘ ಪ್ರದರ್ಶನ ತೋರಿ 4 ನೇ ಸ್ಥಾನ ಗಳಿಸಿ ದೇಶದ ಗಮನ ಸೆಳೆದಿದ್ದರು. 27 ವರ್ಷ ವಯಸ್ಸಿನ ಶರ್ಮಾ ಮತ್ತು 36 ವರ್ಷ ವಯಸ್ಸಿನ ಭುಲ್ಲರ್ ಅವರಿಗೆ ಇದು ಮೊದಲ ಒಲಿಂಪಿಕ್ಸ್‌ ಆಗಿದೆ.

ಇದನ್ನೂ ಓದಿ Paris Olympics 2024: ಅಧಿಕೃತವಾಗಿ ಪ್ಯಾರಿಸ್​ ಒಲಿಂಪಿಕ್ಸ್ ಟಿಕೆಟ್​ ಪಡೆದ ಸುಮಿತ್‌ ನಗಾಲ್‌

ಪ್ಯಾರಿಸ್​ ಒಲಿಂಪಿಕ್ಸ್​ ಉದ್ಘಾಟನಾ ಸಮಾರಂಭ(paris olympics 2024 opening ceremony) ಜುಲೈ 26ರಂದು ಸೀನ್ ನದಿಯಲ್ಲಿ ಸಂಜೆ 7.30ಕ್ಕೆ ಅದ್ಧೂರಿ ಕಾರ್ಯಕ್ರಮದೊಂದಿಗೆ ನೆರವೇರಲಿದೆ. ಕ್ರೀಡಾಕೂಟ ಜುಲೈ 26ರಿಂದ ಆರಂಭವಾಗಿ, ಆಗಸ್ಟ್‌ 11ರವರೆಗೆ ನಡೆಯಲಿದೆ. ಪ್ಯಾರಾಲಿಂಪಿಕ್ಸ್‌ ಆಗಸ್ಟ್‌ 28 ರಿಂದ ಸೆಪ್ಟೆಂಬರ್‌ 8ರವರೆಗೆ ನಿಗದಿಯಾಗಿದೆ. ಇದಕ್ಕೆ ಬೇಕಾದ ಎಲ್ಲ ಸಿದ್ಧತೆಯನ್ನು ಈಗಾಗಲೇ ಕ್ರೀಡಾಕೂಟದ ಆಯೋಜಕರು ಮಾಡಿದ್ದಾರೆ. ಗೇಮ್ಸ್‌ಗಾಗಿಯೇ ಇಲ್ಲಿನ ಸೀನ್‌ ನದಿಯನ್ನು ಸಾರ್ವಜನಿಕ ನಿಧಿಯಿಂದ ಭಾರೀ ಪ್ರಮಾಣದಲ್ಲಿ ಹೂಡಿಕೆ ಮಾಡಿ ಈ ನದಿಯನ್ನು ಸ್ನಾನಮಾಡಲು ಯೋಗ್ಯವೆನಿಸುವ ರೀತಿಯಲ್ಲಿ ಸ್ವಚ್ಛ ಮಾಡಲಾಗಿದೆ.

ಒಲಿಂಪಿಕ್ಸ್​ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಕ್ರೀಡಾಂಗಣದ ಹೊರಗಡೆ ನಡೆಯುವ ಉದ್ಘಾಟನಾ ಸಮಾರಂಭ ಇದಾಗಿದೆ. 10,500ಕ್ಕೂ ಹೆಚ್ಚು ಅಥ್ಲೀಟ್‌ಗಳು ಪ್ಯಾರಿಸ್‌ನಿಂದ ಸುಮಾರು 6 ಕಿಲೋಮೀಟರ್‌ ವರೆಗೆ ಬೋಟ್‌ಗಳಲ್ಲೇ ಪರೇಡ್‌ ನಡೆಸಿ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ಕ್ರೀಡಾಕೂಟ ಜುಲೈ 26ರಿಂದ ಆಗಸ್ಟ್ 11ರವರೆಗೆ ನಡೆಯಲಿದೆ. ಪ್ಯಾರಿಸ್ ಆತಿಥ್ಯದಲ್ಲಿ ನಡೆಯುತ್ತಿರುವ ಮೂರನೇ (1900 ಮತ್ತು 1924ರ ನಂತರ) ಟೂರ್ನಿ ಇದಾಗಿದೆ. 32 ಕ್ರೀಡೆಗಳು ಮತ್ತು 329 ಈವೆಂಟ್‌ಗಳನ್ನು ಯೋಜಿಸಲಾಗಿದೆ.

Continue Reading
Advertisement
cm siddaramaiah DK Shivakumar power fight
ಪ್ರಮುಖ ಸುದ್ದಿ3 mins ago

CM Siddaramaiah: ಡಿಸಿಎಂ ವಿಚಾರದಲ್ಲಿ ಮತ್ತೆ ಒಡೆದುಹೋದ ಕಾಂಗ್ರೆಸ್‌; ಸಿದ್ದು- ಡಿಕೆಶಿ ಬಣದ ನಡುವೆ ಡಿಶುಂ ಡಿಶುಂ

Viral Video
Latest5 mins ago

Viral Video: ವೃದ್ಧ ರೋಗಿಯ ಮೇಲೆ ದರ್ಪ ತೋರಿದ ಆಸ್ಪತ್ರೆ ಸಿಬ್ಬಂದಿ; ಆಘಾತಕಾರಿ ವಿಡಿಯೊ

LeT Associate killed
ದೇಶ12 mins ago

LeT Associate killed: ಪ್ರಚೋದನಕಾರಿ ಧರ್ಮ ಪ್ರಚಾರಕ ಖ್ವಾರಿ ಇದ್ರಿಸ್‌ ಹತ್ಯೆ; ವಿಷಪೂರಿತ ಸೂಜಿಯಿಂದ ದಾಳಿ!

Udhayanidhi Stalin
ಕರ್ನಾಟಕ39 mins ago

Udhayanidhi Stalin: ಸನಾತನ ಧರ್ಮದ ವಿರುದ್ಧ ಹೇಳಿಕೆ; ಇಂದು ಬೆಂಗಳೂರು ಕೋರ್ಟ್‌ನಲ್ಲಿ ಉದಯನಿಧಿ ಸ್ಟಾಲಿನ್‌ ವಿಚಾರಣೆ

AFG vs BAN
ಕ್ರೀಡೆ42 mins ago

AFG vs BAN: ರೋಚಕ ಗೆಲುವು ಸಾಧಿಸಿ ಸೆಮಿಫೈನಲ್​ಗೆ ಲಗ್ಗೆಯಿಟ್ಟ ಆಫ್ಘನ್​; ಟೂರ್ನಿಯಿಂದ ಹೊರಬಿದ್ದ ಆಸೀಸ್​

Mamata Banerjee
ದೇಶ1 hour ago

Mamata Banerjee: ಬಾಂಗ್ಲಾದೇಶದೊಂದಿಗೆ ಜಲ ಹಂಚಿಕೆಯ ಮಾತುಕತೆ: ಮಮತಾ ಬ್ಯಾನರ್ಜಿ ವಿರೋಧ; ಪ್ರಧಾನಿಗೆ ಪತ್ರ

physical abuse mandya
ಕ್ರೈಂ1 hour ago

Physical Abuse: ಅಪ್ರಾಪ್ತ ಮಗಳನ್ನು ಗರ್ಭಿಣಿ ಮಾಡಿದ ಕಾಮಪಿಶಾಚಿ ಅಪ್ಪನಿಗೆ ಗೂಸಾ

Paris Olympics 2024
ಕ್ರೀಡೆ2 hours ago

Paris Olympics 2024: ಪ್ಯಾರಿಸ್​ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಕರ್ನಾಟಕದ ಅದಿತಿ ಅಶೋಕ್

Hunger Strike
ದೇಶ2 hours ago

Hunger Strike: ಉಪವಾಸ ಸತ್ಯಾಗ್ರಹ ಮಾಡ್ತಿದ್ದ ದಿಲ್ಲಿ ಸಚಿವೆ ಆಸ್ಪತ್ರೆಗೆ ದಾಖಲು

Suraj Revanna Case
ಪ್ರಮುಖ ಸುದ್ದಿ2 hours ago

Suraj Revanna Case: ತಮ್ಮನಿಗೆ ಮೂರು ಸಲ; ಈಗ ಅಣ್ಣನಿಗೂ ಪುರುಷತ್ವ ಪರೀಕ್ಷೆ! ಇದೇ ಬೇರೆ ಥರ!

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Weather Forecast
ಮಳೆ17 hours ago

Karnataka Weather : ಕರಾವಳಿಯಲ್ಲಿ ಮುಂದುವರಿದ ವರುಣಾರ್ಭಟ; ಸಾಂಪ್ರದಾಯಿಕ ಮೀನುಗಾರಿಕೆಗೂ ಬ್ರೇಕ್

karnataka weather Forecast
ಮಳೆ4 days ago

Karnataka Weather : ರಭಸವಾಗಿ ಹರಿಯುವ ನೀರಲ್ಲಿ ಸಿಲುಕಿದ ಬೊಲೆರೋ; ಬಿರುಗಾಳಿ ಸಹಿತ ಮಳೆ ಎಚ್ಚರಿಕೆ

International Yoga Day 2024
ಕರ್ನಾಟಕ4 days ago

International Yoga Day 2024: ಎಲ್ಲೆಲ್ಲೂ ಯೋಗಾಯೋಗ‌ಕ್ಕೆ ಮಂಡಿಯೂರಿದ ಜನತೆ

Karnataka Weather Forecast
ಮಳೆ5 days ago

Karnataka Weather : ಬಾಗಲಕೋಟೆ, ಬೆಂಗಳೂರು ಸೇರಿ ಚಿಕ್ಕಮಗಳೂರಲ್ಲಿ ಸುರಿದ ಗಾಳಿ ಸಹಿತ ಮಳೆ

Actor Darshan
ಮೈಸೂರು1 week ago

Actor Darshan : ಕೊಲೆ ಕೇಸ್‌ ಬೆನ್ನಲ್ಲೇ ನಟ ದರ್ಶನ್‌ ಸೇರಿ ಪತ್ನಿ ವಿಜಯಲಕ್ಷ್ಮಿಗೆ ಬಾರ್ ಹೆಡೆಡ್ ಗೂಸ್ ಸಂಕಷ್ಟ!

Bakrid 2024
ಬೆಂಗಳೂರು1 week ago

Bakrid 2024 : ಮತ್ತೊಂದು ಧರ್ಮವನ್ನೂ ಪ್ರೀತಿಸಿ; ಬಕ್ರೀದ್‌ ಪ್ರಾರ್ಥನೆಯಲ್ಲಿ ಸಿಎಂ ಸಿದ್ದರಾಮಯ್ಯ ಕರೆ

Renukaswamy murder case The location of the accused is complete
ಸಿನಿಮಾ1 week ago

Renuka Swamy murder : ಭೀಕರವಾಗಿ ಕೊಂದರೂ ಆರೋಪಿಗಳಿಗೆ ಕಾಡುತ್ತಿಲ್ವಾ ಪಾಪಪ್ರಜ್ಞೆ? ನಗುತ್ತಲೇ ಹೊರಬಂದ ಪವಿತ್ರಾ ಗೌಡ, ಪವನ್‌

Renuka swamy murder
ಚಿತ್ರದುರ್ಗ1 week ago

Renuka swamy Murder : ರೇಣುಕಾಸ್ವಾಮಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಾಳೆಹೊನ್ನೂರು ಶ್ರೀಗಳು

Vijayanagara News
ವಿಜಯನಗರ1 week ago

Vijayanagara News : ಕೆಲಸಕ್ಕೆ ಚಕ್ಕರ್, ಸಂಬಳಕ್ಕೆ ಹಾಜರ್! ಹಾರಕನಾಳು ಗ್ರಾಪಂ ಪಿಡಿಓಗಾಗಿ ಗ್ರಾಮಸ್ಥರ ಹುಡುಕಾಟ

Actor Darshan
ಯಾದಗಿರಿ1 week ago

Actor Darshan : ಬಾಸ್‌ ಅಂತ ಯಾಕ್‌ ಬಕೆಟ್‌ ಹಿಡಿಯುತ್ತೀರಾ ಅಂದವನಿಗೆ ದರ್ಶನ್ ಅಭಿಮಾನಿಯಿಂದ ಜೀವ ಬೆದರಿಕೆ!

ಟ್ರೆಂಡಿಂಗ್‌