Pradeep Eshwar : ಪ್ರದೀಪಾ.. ನೀನು ಡೈಲಾಗ್‌ ಹೊಡ್ದು ಗೆದ್ದಿದ್ದೀ, ನನ್ಮುಂದೆ ನೀನು ಬಚ್ಚಾ; ಸಂಸದ ಮುನಿಸ್ವಾಮಿ - Vistara News

ಕರ್ನಾಟಕ

Pradeep Eshwar : ಪ್ರದೀಪಾ.. ನೀನು ಡೈಲಾಗ್‌ ಹೊಡ್ದು ಗೆದ್ದಿದ್ದೀ, ನನ್ಮುಂದೆ ನೀನು ಬಚ್ಚಾ; ಸಂಸದ ಮುನಿಸ್ವಾಮಿ

Pradeep Eshwar : ಪ್ರದೀಪ್‌ ಈಶ್ವರ್‌ ನನ್ನ ಮುಂದೆ ಬಚ್ಚಾ ಎಂದಿದ್ದಾರೆ ಸಂಸದ ಮುನಿಸ್ವಾಮಿ. ನಾವು ವಿರೋಧ ಮಾಡಿದ್ದಕ್ಕೆ ಬಿಗ್‌ ಬಾಸ್‌ ಬಿಟ್ಟು ಓಡಿ ಬಂದಿದ್ದಾನೆ ಅಂತಾನೂ ಹೇಳಿದ್ದಾರೆ.

VISTARANEWS.COM


on

Pradeep Eshwar Muniswami
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಚಿಕ್ಕಬಳ್ಳಾಪುರ: ʻʻಪ್ರದೀಪಾ.. ನೀನು ಡೈಲಾಗ್ ಹೊಡೆದು ಬಂದಿದ್ದೀಯಾ.. ಮುನಿಸ್ವಾಮಿ ಏನೂ ಅಲ್ಲ ಅಂತ ಹೇಳ್ತೀಯಾ.? ನೀನು ಹುಟ್ಟಿದಾಗಲೇ ನಾನು ಗ್ರಾಮ ಪಂಚಾಯತಿ ಸದಸ್ಯ. ನನ್ನ ಮುಂದೆ ನೀನು ಬಚ್ಚಾ…: ಹೀಗೆಂದು ಚಿಕ್ಕಬಳ್ಳಾಪುರದ ಕಾಂಗ್ರೆಸ್‌ ಶಾಸಕ ಪ್ರದೀಪ್‌ ಈಶ್ವರ್‌ (Pradeep Eshwar) ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ ಕೋಲಾರ ಸಂಸದ ಮುನಿಸ್ವಾಮಿ (MP Muniswamy).

ಚಿಕ್ಕಬಳ್ಳಾಪುರದಲ್ಲಿ ನಡೆದ ರೈತರ ಬೃಹತ್‌ ಮೆರವಣಿಗೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಮೂರು ಸಾವಿರ ಕೋಟಿ ಹಣ ತಂದು ಅಭಿವೃದ್ಧಿ ಮಾಡಿದವರನ್ನ ಬಿಟ್ಟು. ಬಿಗ್ ಬಾಸ್‌ಗೆ ಹೋಗಿ ಸಿದ್ದರಾಮಯ್ಯ, ಡಿ.ಕೆ ಶಿವಕುಮಾರ್‌ ಅವರನ್ನು ಹೊಗೋಳೋನಿಗೆ ಓಟ್ ಹಾಕ್ಬಿಟ್ರಿ. ಇನ್ನೆರಡು ದಿನ ಅಲ್ಲೇ ಬಿಡಬೇಕಿತ್ತು ಅವರನ್ನು. ನಾವು ವಿರೋಧ ಮಾಡ್ತಿದ್ದಂತೆ ವಾಪಸ್ ಓಡಿ ಬಂದಿದ್ದಾನೆʼʼ ಎಂದು ಹೇಳಿದರು.

ʻʻಮರಳು ದಂಧೆ, ಯಾವ ಅಕ್ರಮ, ಎಲ್ಲಿ ನೋಡಿದ್ರೂ ಯಾವ ಆಫೀಸ್‌ನಲ್ಲಿ ನೋಡಿದರೂ ಅವರ ಕಡೆಯವರೆ.. ಎಲ್ಲಿ ನೋಡಿದ್ರೂ ಕಾಸು, ಕಾಸು, ಕಾಸುʼʼ ಎಂದು ಪ್ರದೀಪ್‌ ಈಶ್ವರ್‌ ಮೇಲೆ ವಾಗ್ದಾಳಿ ನಡೆಸಿದರು.

ʻʻʻಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಇರೋರನ್ನು ಡಾಕ್ಟರ್ ಮಾಡ್ತೀನಿ ಅಂದೆ, ಎಷ್ಟು ಜನರನ್ನು ಡಾಕ್ಟರ್ ಮಾಡಿದ್ಯಪ್ಪ ಈಶ್ವರೂ..?ʼʼ ಎಂದು ಪ್ರಶ್ನಿಸಿದ ಮುನಿಸ್ವಾಮಿ, ಇಲ್ಲಿರೋ ಪ್ರದೀಪ್ ಈಶ್ವರ್‌ಗೆ ಪ್ರಶ್ನೆ ಮಾಡ್ತೀನಿ. ಸಿಎಂ‌ ಅವರಿಂದ ಒಂದು ಕೋಟಿ ಅನುದಾನ ಪಡೆದ ಒಂದೇ ಒಂದು ಲೆಟರ್ ತೋರಿಸುʼʼ ಎಂದು ಸವಾಲು ಹಾಕಿದರು. ʻʻಒಂದೋ ನೀನು ತೋರಿಸು.. ಇಲ್ಲದಿದ್ದರೆ ಪ್ರತೀ ಕಚೇರಿಯಲ್ಲಿ ವಸೂಲಿ ಮಾಡ್ತಿರೋದನ್ನು ನಾನು ತೋರಿಸ್ತೇನೆ. ನೀನು ಕೂಡಲೇ ನಿನ್ನ ಸ್ಥಾನಕ್ಕೆ ರಾಜೀನಾಮೆ ಕೊಡಬೇಕುʼʼ ಎಂದರು.

ʻʻವಿಧಾನಸಭೆಗೆ ಇವತ್ತು ಚುನಾವಣೆ ನಡೆದ್ರೂ 135 ಸ್ಥಾನ ಬಿಜೆಪಿ ಗೆಲ್ಲುತ್ತೆ. ಚಿಕ್ಕಬಳ್ಳಾಪುರದಲ್ಲಿ ಲಕ್ಷ ಮತಗಳಿಂದ ಸುಧಾಕರ್ ಗೆಲ್ತಾರೆʼʼ ಎಂದು ಹೇಳಿದ ಮುನಿಸ್ವಾಮಿ, ʻʻನಮ್ಮ ಪ್ರಧಾನಿ ಮೋದಿ ಮಾಡಿದ ಯೋಜನೆ ಇಂದು ಇಲ್ಲಿ ಎಲ್ಲರ ಕೈ ಹಿಡೀತಿದೆ. ಅಭಿವೃದ್ಧಿ ಮಾಡಿದವರನ್ನ ಬಿಟ್ಟು, ಅವನ್ಯಾರೋ ಕೈ ಹಿಡಿದ್ರಿʼʼ ಎಂದು ಮತ್ತೆ ಹೇಳಿದರು.

ʻʻಚಿಕ್ಕಬಳ್ಳಾಪುರದಲ್ಲಿ ವೀರಪ್ಪ ಮೊಯ್ಲಿ ಅವರು ತಂದಿದ್ದ ಕಾನೂನು ಜಾತಿ. ಆದರೆ ಮೋದಿ ತಂದ ಯಾವುದೇ ಯೋಜನೆಯಲ್ಲಿ ನೀವು ಯಾವ ಜಾತಿ ಅಂತ ಕೇಳಲಿಲ್ಲ. ಬೆಂಗಳೂರು ಅಭಿವೃದ್ಧಿ ಮಾಡಿದವರು ಕೆಂಪೇಗೌಡರು. ಕೆಂಪೇಗೌಡರಿಗೆ ಅವಮಾನ ಮಾಡಿದವರಿಗೆ ನೀವು ಓಟ್ ಹಾಕಿದ್ದೀರಿʼʼ ಎಂದು ಮುನಿಸ್ವಾಮಿ ಹೇಳಿದರು.

ಇದನ್ನೂ ಓದಿ: BJP Protest : ರೈತರಿಗೆ 7 ಗಂಟೆ ಕರೆಂಟ್‌ ಕೊಡದಿದ್ದರೆ ವಿದ್ಯುತ್‌ ಕಚೇರಿಗಳಿಗೆ ಬೀಗ: ಬೊಮ್ಮಾಯಿ

ನಾವು ಊರಿಗೊಂದು ಆಸ್ಪತ್ರೆ ಮಾಡಿದ್ರೆ ಇವರು ಮದ್ಯದಂಗಡಿ ಮಾಡ್ತಾರೆ!

ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಸಚಿವ ಕೆ. ಸುಧಾಕರ್‌ ಅವರು, ನಾನು ಊರಿಗೊಂದು ಆಸ್ಪತ್ರೆ ಮಾಡಿದರೆ ಇವರು ಊರಿಗೊಂದು ಮದ್ಯದಂಗಡಿ ಮಾಡುತ್ತಿದ್ದಾರೆ ಎಂದು ಗೇಲಿ ಮಾಡಿದರು.

ʻʻಚಿಕ್ಕಬಳ್ಳಾಪುರ ಮಂಚೇನಹಳ್ಳಿಯಲ್ಲಿ ತಾಯಿ ಮಗುವಿನ ಆಸ್ಪತ್ರೆ ಮಾಡಿಕೊಟ್ಟಿದ್ದೇನೆ. ವೈದ್ಯಕೀಯ ಕಾಲೇಜು ಬೇರೆ ಜಿಲ್ಲೆಗೆ ಹೋಗಬೇಕಿತ್ತು. ಆದರೆ ನಮ್ಮ‌ ಜಿಲ್ಲೆಯ ಜನತೆಗೆ ತಂದು ಕೊಟ್ಟಿದ್ದೇನೆ. ಸಿದ್ಧವಾಗಿರೋ ಕಾಲೇಜು, ಆಸ್ಪತ್ರೆಯನ್ನು ಇನ್ನೂ ಉದ್ಘಾಟನೆ ಮಾಡಿಲ್ಲ. ಶಾಸಕ ಆಗಲು ನಿಮಗೆ ನಾಚಿಕೆ ಆಗಲ್ವಾ.?ʼʼ ಎಂದು ಶಾಸಕ ಪ್ರದೀಪ್‌ ಈಶ್ವರ್‌ ಅವರನ್ನು ಪ್ರಶ್ನೆ ಮಾಡಿದರು. ʻʻನಾನು ಮಾಡಿದ ಕೆಲಸಗಳನ್ನು ಇವರು ಹೋಗಿ ಟೇಪ್ ಕಟ್ ಮಾಡೋದು. ಅಷ್ಟೇ ಇವರ ಕೆಲಸʼʼ ಎಂದು ಸುಧಾಕರ್‌ ಕೆಂಡ ಕಾರಿದರು.

ನವೆಂಬರ್‌ 30ರೊಳಗೆ ಚಿಕ್ಕಮಗಳೂರಿಗೆ ಹಾಲು ಒಕ್ಕೂಟ ರಚಿಸಬೇಕು, ಇಲ್ಲದಿದ್ದರೆ ಡಿಸೆಂಬರ್‌ನಲ್ಲಿ ವಿಧಾನಸೌಧ ಚಲೋ ನಡೆಸುವುದಾಗಿ ಸುಧಾಕರ್‌ ಹೇಳಿದರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೈಂ

Rameshwaram Cafe Blast: ರಾಮೇಶ್ವರಂ ಕೆಫೆ ಬ್ಲಾಸ್ಟ್ ಪ್ರಕರಣದ 5ನೇ ಆರೋಪಿಗೆ ಲಷ್ಕರ್–ಎ–ತಯ್ಬಾ ಜತೆ ಲಿಂಕ್‌!

Rameshwaram Cafe Blast: ದಿ ರಾಮೇಶ್ವರಂ ಕೆಫೆ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಎನ್‌ಐಎ ಅಧಿಕಾರಿಗಳು ದಿನೇ ದಿನೆ ತಮ್ಮ ತನಿಖೆಯನ್ನು ಚುರುಕುಗೊಳಿಸುತ್ತಾ ಬಂದಿದ್ದರು. ಮೂರು ದಿನಗಳ ಹಿಂದೆ ಎನ್.ಐ.ಎ ಅಧಿಕಾರಿಗಳು ಹುಬ್ಬಳ್ಳಿಯಲ್ಲಿ ನಡೆಸಿದ್ದ ದಾಳಿಯಲ್ಲಿ ಇಬ್ಬರು ಆರೋಪಿಗಳು ಲಾಕ್ ಆಗಿದ್ದರು. ಅವರಲ್ಲಿ ಹುಬ್ಬಳ್ಳಿ ಮೂಲದ ಶೋಯಬ್‌ ಅಹ್ಮದ್ ಮಿರ್ಜಾ @ಛೋಟು ಬಂಧಿತ ಆರೋಪಿಯಾಗಿದ್ದಾನೆ. ಈತ ಈಗ ರಾಮೇಶ್ವರಂ ಕೆಫೆ ಬ್ಲಾಸ್ಟ್ ಪ್ರಕರಣದ 5ನೇ ಆರೋಪಿಯಾಗಿದ್ದಾನೆ.

VISTARANEWS.COM


on

Koo

ಬೆಂಗಳೂರು: ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣ (Rameshwaram Cafe Blast) ಸಂಬಂಧ ಹುಬ್ಬಳ್ಳಿ ನಗರದಲ್ಲಿ ಮೂರು ದಿನಗಳ ಹಿಂದೆ ಇಬ್ಬರು ಆರೋಪಿಗಳನ್ನು ಎನ್‌ಐಎ ಅಧಿಕಾರಿಗಳು ವಶಕ್ಕೆ ಪಡೆದಿದ್ದರು. ಈ ಇಬ್ಬರ ವಿಚಾರಣೆ ವೇಳೆ ಆಘಾತಕಾರಿ ವಿಚಾರವೊಂದು ಬಯಲಾಗಿದೆ. ವಶಕ್ಕೆ ಪಡೆದವರಲ್ಲಿ ಒಬ್ಬ ಈ ಹಿಂದೆ ಲಷ್ಕರ್‌ ಇ ತೋಯ್ಬಾ (Lashkar-e-Taiba) ಪ್ರಕರಣದಲ್ಲಿ ಬಂಧಿತನಾಗಿ ಬಿಡುಗಡೆಯಾಗಿದ್ದ ಎಂಬುದು ಗೊತ್ತಾಗಿದೆ.

ದಿ ರಾಮೇಶ್ವರಂ ಕೆಫೆ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಪಟ್ಟಂತೆ ಎನ್‌ಐಎ ಅಧಿಕಾರಿಗಳು ದಿನೇ ದಿನೆ ತಮ್ಮ ತನಿಖೆಯನ್ನು ಚುರುಕುಗೊಳಿಸುತ್ತಾ ಬಂದಿದ್ದರು. ಮೂರು ದಿನಗಳ ಹಿಂದೆ ಎನ್.ಐ.ಎ ಅಧಿಕಾರಿಗಳು ಹುಬ್ಬಳ್ಳಿಯಲ್ಲಿ ನಡೆಸಿದ್ದ ದಾಳಿಯಲ್ಲಿ ಇಬ್ಬರು ಆರೋಪಿಗಳು ಲಾಕ್ ಆಗಿದ್ದರು. ಅವರಲ್ಲಿ ಹುಬ್ಬಳ್ಳಿ ಮೂಲದ ಶೋಯಬ್‌ ಅಹ್ಮದ್ ಮಿರ್ಜಾ @ಛೋಟು ಬಂಧಿತ ಆರೋಪಿಯಾಗಿದ್ದಾನೆ. ಈತ ಈಗ ರಾಮೇಶ್ವರಂ ಕೆಫೆ ಬ್ಲಾಸ್ಟ್ ಪ್ರಕರಣದ 5ನೇ ಆರೋಪಿಯಾಗಿದ್ದಾನೆ.

ಅಲ್ಲದೆ, ಶೋಯಬ್‌ ಅಹ್ಮದ್ ಮಿರ್ಜಾನನ್ನು ಈ ಹಿಂದೆ ಲಷ್ಕರ್–ಎ–ತಯ್ಬಾಕ್ಕೆ (ಎಲ್‌ಇಟಿ) ಸಂಬಂಧಪಟ್ಟಂತೆ ಪ್ರಕರಣವೊಂದರಲ್ಲಿ ಬಂಧಿಸಿ, ಸೂಕ್ತ ಸಾಕ್ಷ್ಯಾಧಾರಗಳಿಲ್ಲದೆ ಬಿಡುಗಡೆ ಮಾಡಲಾಗಿತ್ತು ಎಂದು ತಿಳಿದುಬಂದಿದೆ.

ಬ್ಲಾಸ್ಟ್ ಪ್ರಕರಣದ ಮಾಸ್ಟರ್‌ ಮೈಂಡ್‌ ಅಬ್ದುಲ್‌ ಮತೀನ್ ತಾಹನ ಸ್ನೇಹಿತನಾಗಿದ್ದ ಶೋಯೆಬ್‌ ಅಹ್ಮದ್ ರಾಮೇಶ್ವರಂ ಕೆಫೆ ಬ್ಲಾಸ್ಟ್‌ಗೆ ಸಹಕರಿಸಿದ್ದ. ಈತ ವಿದೇಶಿ ಮೂಲದ ಹ್ಯಾಂಡ್ಲರ್‌ಗಳನ್ನು ಪರಿಚಯಿಸಿದ್ದ ಎಂದು ತಿಳಿದುಬಂದಿದೆ. ಹ್ಯಾಂಡ್ಲರ್ ಮತ್ತು ಮತೀನ್ ತಾಹ ನಡುವೆ ಇ-ಮೇಲ್‌ ಮುಖಾಂತರ ಸಂಪರ್ಕಿಸುತ್ತಿದ್ದ ಎಂದು ತಿಳಿದುಬಂದಿದೆ.

ಇನ್ನೊಬ್ಬ ಅಜೀಜ್ ಅಹಮದ್ ಮಿರ್ಜಾ

ಕಸಬಾಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಶೋಯಬ್ ಮಿರ್ಜಾನನ್ನು ಬಂಧಿಸಲಾಗಿದ್ದ, ಆತನ ಜತೆಗಿದ್ದ ಸಹೋದರ ಅಜೀಜ್ ಅಹಮದ್ ಮಿರ್ಜಾ ಎಂಬಾತನನ್ನೂ ವಶಕ್ಕೆ ಪಡೆಯಲಾಗಿತ್ತು. ಈಗ ಈತನ ಪಾತ್ರ ಏನಿದೆ ಎಂಬ ಬಗ್ಗೆಯೂ ತೀವ್ರವಾಗಿ ವಿಚಾರಣೆ ನಡೆಸಲಾಗುತ್ತಿದೆ.

ಇದನ್ನೂ ಓದಿ: Excise revenue: ಇದು ಎಣ್ಣೆ ಮಹಿಮೆ! ಟಾರ್ಗೆಟ್‌ ಮೀರಿ ಹೋದ ಅಬಕಾರಿ ಇಲಾಖೆ; 15 ಪರ್ಸೆಂಟ್‌ ಹೆಚ್ಚು ವರಮಾನ

ಹುಬ್ಬಳ್ಳಿ ಸೇರಿ 4 ರಾಜ್ಯಗಳ ಹಲವೆಡೆ ದಾಳಿ ನಡೆಸಿ 11 ಶಂಕಿತ ಉಗ್ರರು ವಶಕ್ಕೆ ಪಡೆದಿದ್ದ ಎನ್‌ಐಎ

ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿ ರಾಷ್ಟ್ರೀಯ ತನಿಖಾ ದಳವು ಮಂಗಳವಾರ (ಮೇ 21) ಕರ್ನಾಟಕ ಸೇರಿ 4 ರಾಜ್ಯಗಳ 11 ಸ್ಥಳಗಳಲ್ಲಿ ದಾಳಿ ನಡೆಸಿ, 11 ಶಂಕಿತ ಉಗ್ರರನ್ನು ವಶಕ್ಕೆ ಪಡೆದಿತ್ತು. ಈ ಪ್ರಕರಣದಲ್ಲಿ ಭಾಗಿಯಾಗಿರುವ ಇತರ ಸಂಚುಕೋರರನ್ನು ಪತ್ತೆ ಮಾಡಲು ತನಿಖೆಯನ್ನು ಮತ್ತಷ್ಟು ಚುರುಕುಗೊಳಿಸಲಾಗಿದೆ.

ಕರ್ನಾಟಕ, ತಮಿಳುನಾಡು, ತೆಲಂಗಾಣ ಮತ್ತು ಆಂಧ್ರಪ್ರದೇಶದ 11 ಸ್ಥಳಗಳಲ್ಲಿ ಶೋಧ ನಡೆಸಲಾಗಿತ್ತು. ಮಂಗಳವಾರ ಪತ್ತೆಯಾದ 11 ಮಂದಿ ಶಂಕಿತರಲ್ಲಿ ಬೆಂಗಳೂರು ಮತ್ತು ಹುಬ್ಬಳ್ಳಿ ಜಿಲ್ಲೆಗಳಲ್ಲಿ 2012ರ ಲಷ್ಕರ್–ಎ–ತಯ್ಬಾ (ಎಲ್‌ಇಟಿ) ಪಿತೂರಿ ಪ್ರಕರಣದಲ್ಲಿ ಶಿಕ್ಷೆಗೊಳಗಾದ ವ್ಯಕ್ತಿಗಳೂ ಸೇರಿದ್ದಾರೆ. ದಾಳಿ ವೇಳೆ ಡಿಜಿಟಲ್ ಪರಿಕರಗಳು ಮತ್ತು ದಾಖಲೆಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಇನ್ನು ಎನ್‌ಐಎ ಈ ಕೇಸ್‌ ಸಂಬಂಧ ದೇಶಾದ್ಯಂತ 29 ಸ್ಥಳಗಳಲ್ಲಿ ಶೋಧ ನಡೆಸಿದೆ.

Continue Reading

ಕರ್ನಾಟಕ

Hosanagara News: ಹೊಸನಗರದಲ್ಲಿ ಬಿಎಸ್‌ಎನ್‌ಎಲ್‌ ನೆಟ್‌ವರ್ಕ್‌ ಸಮಸ್ಯೆ; ಟವರ್‌ ಏರಿ ಪ್ರತಿಭಟನೆಗೆ ಮುಂದಾದ ವಕೀಲ!

Hosanagara News: ಹೊಸನಗರ ತಾಲೂಕಿನ ಬಿಎಸ್ಎನ್ಎಲ್ ಮೊಬೈಲ್ (BSNL Mobile) ಗ್ರಾಹಕರ ಸಂಕಷ್ಟಕ್ಕೆ ಪರಿಹಾರವೆಂಬುದು ದಶಕಗಳಿಂದ ಮರೀಚಿಕೆಯಾಗಿಯೇ ಉಳಿದಿದೆ. ನೆಟ್ವರ್ಕ್ ಸಮಸ್ಯೆ ಪರಿಹಾರಕ್ಕಾಗಿ ಒತ್ತಾಯಿಸಿ, ಮೇ 27ರಂದು ಮತ್ತಿಮನೆ ಗ್ರಾಮದಲ್ಲಿನ ಬಿಎಸ್ಎನ್ಎಲ್ ಟವರ್ ಏರಿ ಪ್ರತಿಭಟನೆ ನಡೆಸಲಾಗುವುದು ಎಂದು ವಕೀಲ ಮೋಹನ್ ಶೆಟ್ಟಿ ಎಚ್ಚರಿಕೆ ನೀಡಿದ್ದಾರೆ.

VISTARANEWS.COM


on

BSNL network problem in Hosanagara The lawyer decided to climb the tower and protest
Koo

ಹೊಸನಗರ: ತಾಲೂಕಿನ ಬಿಎಸ್ಎನ್ಎಲ್ ಮೊಬೈಲ್ (BSNL Mobile) ಗ್ರಾಹಕರ ಸಂಕಷ್ಟಕ್ಕೆ ಪರಿಹಾರವೆಂಬುದು ದಶಕಗಳಿಂದ ಮರೀಚಿಕೆಯಾಗಿಯೇ ಉಳಿದಿದೆ. ನೆಟ್‌ವರ್ಕ್ ಸಮಸ್ಯೆ ಪರಿಹಾರಕ್ಕಾಗಿ ಒತ್ತಾಯಿಸಿ, ಮೇ 27ರಂದು ಮತ್ತಿಮನೆ ಗ್ರಾಮದಲ್ಲಿನ (Hosanagara News) ಬಿಎಸ್ಎನ್ಎಲ್ ಟವರ್ ಏರಿ ಪ್ರತಿಭಟನೆ ನಡೆಸಲಾಗುವುದು ಎಂದು ವಕೀಲ ಮೋಹನ್ ಶೆಟ್ಟಿ ಎಚ್ಚರಿಕೆ ನೀಡಿದ್ದಾರೆ.

ಈ ಕುರಿತು ಪಟ್ಟಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಹೊಸನಗರ ತಾಲೂಕಿನ ಮತ್ತಿಮನೆ, ಸಂಪೆಕಟ್ಟೆ, ನಿಟ್ಟೂರು, ನಗರ, ಮಾಸ್ತಿಕಟ್ಟೆ, ಯಡೂರು ಭಾಗದಲ್ಲಿ ಸಾವಿರಾರು ಗ್ರಾಹಕರು ಬಿಎಸ್ಎನ್ಎಲ್ ಸಿಮ್ ಪಡೆದುಕೊಂಡಿದ್ದಾರೆ. ಪ್ರತಿ ತಿಂಗಳು 250 ರಿಂದ 499 ರೂ. ತನಕ ರೀಚಾರ್ಜ್ ಮಾಡಿಕೊಳ್ಳುತ್ತಾರೆ ಆದರೆ ಬಿಎಸ್‌ಎನ್‌ಎಲ್‌ನ ನೆಟ್‌ವರ್ಕ್ ಸರಿಯಾಗಿ ಇಲ್ಲದೆ ಗ್ರಾಹಕರು ವಂಚಿತರಾಗುತ್ತಿದ್ದಾರೆ. ಮಲೆನಾಡಿನ ಭಾಗದಲ್ಲಿ ಬಿಎಸ್ಎನ್ಎಲ್ ಸಂಸ್ಥೆ ಸಾರ್ವಜನಿಕ ಸೇವೆ ನೀಡುವಲ್ಲಿ ಸಂಪೂರ್ಣ ವಿಫಲವಾಗಿದೆ ಎಂದು ಅವರು ಆರೋಪಿಸಿದರು.

ಇದನ್ನೂ ಓದಿ: Indian 2: ಜು.12ಕ್ಕೆ ಕಮಲ್ ಹಾಸನ್ ಅಭಿನಯದ ‘ಇಂಡಿಯನ್ 2’ ಚಿತ್ರ ರಿಲೀಸ್‌

ಸರ್ಕಾರಿ ಕಚೇರಿಯಲ್ಲಿ ಸರ್ವರ್ ಇಲ್ಲದೆ ಪ್ರತಿನಿತ್ಯ ಸಾರ್ವಜನಿಕರ ಸಮಯ ಮತ್ತು ಹಣ ವ್ಯರ್ಥವಾಗುತ್ತಿದೆ. ಈ ಎಲ್ಲ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿ ಪ್ರತಿಭಟನೆ ನಡೆಸಲು ತೀರ್ಮಾನಿರುವುದಾಗಿ ಅವರು ತಿಳಿಸಿದರು.

ತಾಲೂಕಿನ ಕುಗ್ರಾಮಗಳಾದ ಮತ್ತಿಮನೆ, ಬಸವಾಪುರ, ಬೇಗದಳ್ಳಿ, ಬೇಳೂರು, ಬ್ರಾಹ್ಮಣತರುವೆ, ಬೈದೂರು, ದೊಬ್ಯಾಳು, ಗಿಣಿಕಲ್, ಗುಬ್ಬಿಗ, ಗುಡೋಡಿ, ರಿಪ್ಪನ್ ಪೇಟೆ, ಹೆದ್ದಾರಿಪುರ, ಗರ್ತಿ ಕೆರೆ, ಹುಂಚಹೊಳಗೋಡು, ಹೊರೊಯತಿಗೆ, ಕಳಸೆ, ಕಾನಗೋಡು, ಕರಿಗಲ್ಲು, ಕಟ್ಟೆಕೊಪ್ಪ, ಕಟ್ಟಿನಹೊಳೆ, ಕೆ.ಹೊನ್ನೆಕೊಪ್ಪ, ಕಿಲಂದೂರು ಜಂಗಲ್, ಕೊಳವಾಡಿ, ಕೊರನಕೋಟೆ, ಮಾಗೋಡಿ, ಮಳಲಿ, ಮನಸೆಟ್ಟೆ, ಮಸ್ಕಾನಿ, ನೀಲಕಂಠನ ತೋಟ, ನೆಲಗಳಲೆ, ಪಿ.ಕಲ್ಲುಕೊಪ್ಪ, ರಾವೆ, ತೋಟದ ಕೊಪ್ಪ ಸೇರಿದಂತೆ ಗ್ರಾಮೀಣ ಭಾಗದಲ್ಲಿ ಬಿಸ್ಎಸ್‌ಎನ್‌ಎಲ್ ನೆಟ್‌ವರ್ಕ್ ಅತ್ಯಂತ ಕಳಪೆಯಾಗಿದೆ.

ಇದನ್ನೂ ಓದಿ: Kannada New Movie: ಸಿನಿಮಾ ಆಗುತ್ತಿದೆ ʼಪೆನ್‌ಡ್ರೈವ್ʼ! ಕುತೂಹಲಭರಿತ ಪೋಸ್ಟರ್

ಈ ಭಾಗದ ಗ್ರಾಹಕರನ್ನು ಹಲವು ದಶಕಗಳಿಂದ ಬಿಎಸ್‌ಎನ್‌ಎಲ್‌ ವಂಚಿಸುತ್ತಾ ಬಂದಿದೆ. ತಾಲೂಕಿನ ಶೇ.60 ರಷ್ಟು ಗ್ರಾಮ ಪಂಚಾಯಿತಿಗಳಲ್ಲಿ ಇಂಟರ್ನೆಟ್ ಸಂಪರ್ಕ ಸಮರ್ಪಕವಾಗಿಲ್ಲ ಇದರಿಂದ ಗ್ರಾಮ ಪಂಚಾಯಿತಿ ಕಾರ್ಯಕ್ಷಮತೆಗೆ ಸಮಸ್ಯೆ ಉಂಟಾಗುತ್ತಿದೆ. ಈ ಬಗ್ಗೆ ಇಲಾಖೆಗೆ ಹಲವು ಬಾರಿ ಮನವಿ ಮಾಡಿದರೂ ಸ್ಪಂದಿಸುತ್ತಿಲ್ಲ ಎಂದು ವಕೀಲ ಮೋಹನ್ ಶೆಟ್ಟಿ ಆಕ್ರೋಶ ವ್ಯಕ್ತಪಡಿಸಿದರು.

Continue Reading

ಕರ್ನಾಟಕ

MLC Election: ಜಗತ್ತು ತೆವಳುತ್ತಿದ್ದರೆ ಮೋದಿ ಭಾರತ ಓಡುತ್ತಿದೆ; ಸಚಿವ ಪ್ರಲ್ಹಾದ್‌ ಜೋಶಿ ವ್ಯಾಖ್ಯಾನ

MLC Election: ಕಾಂಗ್ರೆಸ್ ಆಡಳಿತದ 60 ವರ್ಷಗಳಲ್ಲಿ ಭ್ರಷ್ಟ ರಾಜಕಾರಣದಿಂದಾಗಿ ಭಾರತ ಜಗತ್ತಿನ 5 ಅತ್ಯಂತ ದುರ್ಬಲ ರಾಷ್ಟ್ರಗಳಲ್ಲಿ ಒಂದಾಗಿತ್ತು. ಆದರೆ, 2014ರಲ್ಲಿ ಮೋದಿ ಪ್ರಧಾನಿಯಾದ ಬಳಿಕ ಈಗ 2024ರ ಹೊತ್ತಿಗೆ ಭಾರತವನ್ನು ಜಗತ್ತಿನ 5ನೇ ಅತ್ಯಂತ ಆರ್ಥಿಕ ಪ್ರಬಲ ರಾಷ್ಟ್ರವನ್ನಾಗಿಸಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಹೇಳಿದ್ದಾರೆ.

VISTARANEWS.COM


on

union minister pralhad joshi spoke in North East Graduate Constituency Electoral Convention at ballari
Koo

ಹುಬ್ಬಳ್ಳಿ: ಇಡೀ ಜಗತ್ತು ನಿಧಾನಗತಿಯಲ್ಲಿ ಸಾಗುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಆಡಳಿತದಲ್ಲಿ ಭಾರತವೊಂದೇ ವೇಗವಾಗಿ ದಾಪುಗಾಲು ಹಾಕುತ್ತಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ (MLC Election) ಹೇಳಿದರು.

ಬಳ್ಳಾರಿಯಲ್ಲಿ ಶುಕ್ರವಾರ ವಿಧಾನ ಪರಿಷತ್ ಈಶಾನ್ಯ ಪದವೀಧರರ ಕ್ಷೇತ್ರದ ಅಭ್ಯರ್ಥಿ ಪರ ಮತದಾರರ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ದೇಶದಲ್ಲಿ ವಿಮಾನ ನಿಲ್ದಾಣಗಳನ್ನು ಹೆಚ್ಚಿಸಲಾಗಿದೆ. ಅಂತೆಯೇ ಭಾರತೀಯರಿಗೆ ಹೆಚ್ಚಿನ ಸೌಲಭ್ಯಗಳನ್ನೂ ಕಲ್ಪಿಸಲಾಗಿದೆ. ಭಾರತ 1000 ವಿಮಾನಗಳ ಆರ್ಡರ್ ಕೊಟ್ಟಿದೆ ಎಂದು ಹೇಳಿದರು.

ನಾಡಿನ ಏಳಿಗೆಗೆ ಬಿಜೆಪಿ ನಾಯಕತ್ವ ಅಗತ್ಯ

ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಭಾರತ ಇಂದು ಅತ್ಯಂತ ಪ್ರಬಲ ರಾಷ್ಟ್ರವಾಗಿ ಹೊರ ಹೊಮ್ಮುತ್ತಿದೆ. ನಾಡಿನ ಏಳಿಗೆಗೆ ಬಿಜೆಪಿ ನಾಯಕತ್ವ ಅಗತ್ಯವಾಗಿದೆ ಎಂದು ಪ್ರತಿಪಾದಿಸಿದರು.

ಇದನ್ನೂ ಓದಿ: Bengaluru News: ಬೆಂಗಳೂರಿನಲ್ಲಿ ಮೇ 26ರಂದು ʼಭಾರತದ ಧೀರ ಚೇತನಗಳುʼ ಕೃತಿ ಲೋಕಾರ್ಪಣೆ

ಕಾಂಗ್ರೆಸ್ ಆಡಳಿತದ 60 ವರ್ಷಗಳಲ್ಲಿ ಭ್ರಷ್ಟ ರಾಜಕಾರಣದಿಂದಾಗಿ ಭಾರತ ಜಗತ್ತಿನ 5 ಅತ್ಯಂತ ದುರ್ಬಲ ರಾಷ್ಟ್ರಗಳಲ್ಲಿ ಒಂದಾಗಿತ್ತು. ಆದರೆ, 2014ರಲ್ಲಿ ಮೋದಿ ಪ್ರಧಾನಿಯಾದ ಬಳಿಕ ಈಗ 2024ರ ಹೊತ್ತಿಗೆ ಭಾರತವನ್ನು ಜಗತ್ತಿನ 5ನೇ ಅತ್ಯಂತ ಆರ್ಥಿಕ ಪ್ರಬಲ ರಾಷ್ಟ್ರವನ್ನಾಗಿಸಿದ್ದಾರೆ ಎಂದು ಜೋಶಿ ಹೇಳಿದರು.

ಕಳೆದು ಹೋಗುತ್ತಿದೆ ಕಾಂಗ್ರೆಸ್

ದೇಶದಾದ್ಯಂತ ಎಲ್ಲ ರಾಜ್ಯಗಳಲ್ಲಿ ಕಾಂಗ್ರೆಸ್ ಕಳೆದು ಹೋಗುತ್ತಿದೆ. ತನ್ನ ಸ್ಥಾನಗಳನ್ನೆಲ್ಲ ಕಳೆದುಕೊಳ್ಳುತ್ತಿದೆ. ಅಧಿಕೃತ ವಿರೋಧ ಪಕ್ಷವಾಗುವತ್ತ ವಾಲುತ್ತಿದೆ ಎಂದ ಅವರು, ಕಾಂಗ್ರೆಸ್ ಆಡಳಿತದ ಎಲ್ಲ ರಾಜ್ಯಗಳಲ್ಲಿ ಅಪರಾಧಗಳ ಸಂಖ್ಯೆ ಮಿತಿ ಮೀರಿದೆ. ಕರ್ನಾಟಕದಲ್ಲೇ ಕಳೆದ ಕೆಲ ತಿಂಗಳುಗಳಲ್ಲಿ 400ಕ್ಕೂ ಹೆಚ್ಚು ಪ್ರಕರಣಗಳು ಘಟಿಸಿವೆ ಎಂದು ಸಚಿವ ಜೋಶಿ ಕಳವಳ ವ್ಯಕ್ತಪಡಿಸಿದರು.

ಕಾಂಗ್ರೆಸ್ ಪಕ್ಷವನ್ನು ಜನರೇ ಧಿಕ್ಕರಿಸುತ್ತಿದ್ದಾರೆ. ವಿಧಾನಪರಿಷತ್ ಚುನಾವಣೆಯಲ್ಲಿ ಪದವೀಧರರು ಎಚ್ಚೆತ್ತುಕೊಂಡು ಮತ ಚಲಾಯಿಸಬೇಕು. ಸುಭದ್ರ ದೇಶಕ್ಕಾಗಿ ತಮ್ಮ ಆಯ್ಕೆ ಬಿಜೆಪಿ ಆಗಿರಬೇಕು ಎಂದು ಅವರು ಕರೆ ನೀಡಿದರು.

ಇದನ್ನೂ ಓದಿ: Toothpaste Hacks: ಟೂತ್‌ಪೇಸ್ಟ್‌ನಿಂದ ಯಾವೆಲ್ಲ ವಸ್ತುಗಳನ್ನು ಹೊಳೆಯುವಂತೆ ಮಾಡಬಹುದು ನೋಡಿ!

ಸಮಾವೇಶದಲ್ಲಿ ಮಾಜಿ ಸಚಿವ ಬಿ.ಶ್ರೀರಾಮುಲು, ಜಿ.ಸೋಮಶೇಖರರೆಡ್ಡಿ, ಮುಖಂಡರಾದ ಮಹಿಪಾಲ್, ರಾಮಲಿಂಗಪ್ಪ, ಗುರುಲಿಂಗನಗೌಡ ಹಾಗೂ ಬಿಜೆಪಿ ಮತ್ತು ಜೆಡಿಎಸ್ ಪಕ್ಷದ ಪ್ರಮುಖರು, ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.

Continue Reading

ಕರ್ನಾಟಕ

Crocodile Attack: ಕೃಷ್ಣಾ ನದಿಯಲ್ಲಿ ಬಾಲಕನನ್ನು ಎಳೆದೊಯ್ದ ಮೊಸಳೆ

Crocodile Attack: ರಾಯಚೂರು ತಾಲೂಕಿನ ಗಂಜಳ್ಳಿ ಗ್ರಾಮದ ಕೃಷ್ಣಾ ನದಿಯಲ್ಲಿ ಬಾಲಕನನ್ನು ಮೊಸಳೆ ಬಲಿ ಪಡೆದಿದೆ. ಬಾಲಕನ ಮೃತದೇಹಕ್ಕಾಗಿ ಶೋಧಕಾರ್ಯ ನಡೆಯುತ್ತಿದೆ.

VISTARANEWS.COM


on

Crocodile Attack
Koo

ರಾಯಚೂರು: ಕೃಷ್ಣಾ ನದಿಯಲ್ಲಿ ಬಾಲಕನನ್ನು ಮೊಸಳೆ ಎಳೆದೊಯ್ದ ಘಟನೆ ರಾಯಚೂರು ತಾಲೂಕಿನ ಗಂಜಳ್ಳಿ ಗ್ರಾಮದಲ್ಲಿ ನಡೆದಿದೆ. ಕುರಿಗಳಿಗೆ ನೀರು ಕುಡಿಸಲು ನದಿಗೆ ಇಳಿದಿದ್ದ ಬಾಲಕನನ್ನು ಮೊಸಳೆ ಬಲಿ (Crocodile Attack) ಪಡೆದಿದೆ. ಗಂಜಳ್ಳಿ ಗ್ರಾಮದ ವಿಶ್ವ (12) ಮೃತ ಬಾಲಕ. ಸ್ಥಳಕ್ಕೆ ರಾಯಚೂರು ಗ್ರಾಮಾಂತರ ಪೋಲಿಸರು ದೌಡಾಯಿಸಿದ್ದು, ಅಗ್ನಿ ಶಾಮಕ ದಳದ ಸಿಬ್ಬಂದಿಯಿಂದ ಬಾಲಕನ ಮೃತದೇಹಕ್ಕಾಗಿ ಶೋಧಕಾರ್ಯ ನಡೆಯುತ್ತಿದೆ.

ಮಹಿಳೆ ಕಾಲಿನ ಮೇಲೆ ಹರಿದ ಬಸ್ ಚಕ್ರ

ವಿಜಯಪುರ: ಬಸ್ ಹತ್ತುವ ವೇಳೆ ಆಯುತಪ್ಪಿ ಬಿದ್ದ ಮಹಿಳೆ ಕಾಲಿನ ಮೇಲೆ ಬಸ್ ಚಕ್ರ ಹರಿದ ಘಟನೆ ವಿಜಯಪುರ ನಗರದ ಕೇಂದ್ರ ಬಸ್ ನಿಲ್ದಾಣದಲ್ಲಿ ನಡೆದಿದೆ. ಘಟನೆಯಲ್ಲಿ ಮಹಿಳೆ ಕಾಲಿಗೆ ತೀವ್ರ ಗಾಯಗಳಾಗಿವೆ.

ವಿಜಯಪುರ ಜಿಲ್ಲೆ ಇಂಡಿ ತಾಲೂಕಿನ ಸಾಲುಟಗಿ ಗ್ರಾಮದ ಸಾವಿತ್ರಿಬಾಯಿ ಬಿರಾದಾರ ಗಾಯಗೊಂಡವರು. ವಿಜಯಪುರದಿಂದ ಇಂಡಿಗೆ ತೆರಳುವ KA 28 F 2492 ಸಂಖ್ಯೆಯ ಬಸ್ ಹರಿದಿದ್ದರಿಂದ ಮಹಿಳೆ ಗಾಯಗೊಂಡಿದ್ದು, ಅವರನ್ನು ಆಂಬ್ಯುಲೆನ್ಸ್ ಮೂಲಕ ಜಿಲ್ಲಾಸ್ಪತ್ರೆಗೆ ರವಾನೆ ಮಾಡಲಾಗಿದೆ.

ಇದನ್ನೂ ಓದಿ | Road Accident: ಬೈಕ್‌ಗಳ ಅಪಘಾತ; ಮಗನ ಕಣ್ಣೆದುರೇ ರಕ್ತಕಾರಿ ತಾಯಿ ಮೃತ್ಯು; ಮೂವರು ಗಂಭೀರ

ಮೂಡಿಗೆರೆಯಲ್ಲಿ ಮೆಸ್ಕಾಂ ಲಾರಿ-ಓಮ್ನಿ ನಡುವೆ ಭೀಕರ ಅಪಘಾತ; ಸ್ಥಳದಲ್ಲೇ ನಾಲ್ವರ ದುರ್ಮರಣ

ಚಿಕ್ಕಮಗಳೂರು: ಮೆಸ್ಕಾಂ ಲಾರಿ- ಓಮ್ನಿ ಮುಖಾಮುಖಿ ಡಿಕ್ಕಿಯಾಗಿ ಸ್ಥಳದಲ್ಲೇ ನಾಲ್ವರು ದುರ್ಮರಣ ಹೊಂದಿ, 9ಕ್ಕೂ ಹೆಚ್ಚು ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ (Road Accident) ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಣಕಲ್-ಕೊಟ್ಟಿಗೆಗಾರ ಮಧ್ಯೆ ನಡೆದಿದೆ. ಮೆಸ್ಕಾಂ ಲಾರಿ- ಓಮ್ನಿ ಡಿಕ್ಕಿಯಾದ ಬಳಿಕ ಹಿಂದಿನಿಂದ ವೇಗವಾಗಿ ಬಂದ ಓಮ್ನಿಗೆ ಆಲ್ಟೋ ಕಾರು ಕೂಡ ಡಿಕ್ಕಿಯಾಗಿದೆ. ಇದರಿಂದ ಓಮ್ನಿಯಲ್ಲಿದ್ದ ನಾಲ್ವರು ಮೃತಪಟ್ಟಿದ್ದು, ಆಲ್ಟೋ ಕಾರಿನಲ್ಲಿದ್ದವರಿಗೆ ಗಂಭೀರ ಗಾಯಗಳಾಗಿವೆ.

ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲೂಕಿನ ಚನ್ನಪಟ್ಟಣ ಗ್ರಾಮದ ಹಂಪಯ್ಯ (65), ಪ್ರೇಮ (58), ಮಂಜಯ್ಯ (60), ಪ್ರಭಾಕರ್ (45) ಮೃತರು. ಆಲ್ಟೊ ಕಾರಿನಲ್ಲಿದ್ದ ನಾಗರಾಜಯ್ಯ, ಪೂಜಾ, ಸೃಜನ್, ಚಂದನ್, ವೀರೇಶ್, ಮಂಜುನಾಥ್, ಅಕ್ಕಮ್ಮ ಗಾಯಾಳುಗಳು.

ಧರ್ಮಸ್ಥಳದಿಂದ ಚಿತ್ರದುರ್ಗಕ್ಕೆ ಹೋಗುತ್ತಿದ್ದ ಓಮ್ನಿ ಹಾಗೂ ಮೂಡಿಗೆರೆಯಿಂದ ಕೊಟ್ಟಿಗೆಹಾರಕ್ಕೆ ಹೋಗುತ್ತಿದ್ದ ಮೆಸ್ಕಾಂ ಲಾರಿ ನಡುವೆ ಅಪಘಾತ ಸಂಭವಿಸಿದ್ದು, ಮೂರು ಜನ ಸ್ಥಳದಲ್ಲೇ ಮೃತಪಟ್ಟಿದ್ದು, ಮತ್ತೊಬ್ಬರು ಆಸ್ಪತ್ರೆಗೆ ಕರೆದೊಯ್ಯುವ ವೇಳೆ ಮಾರ್ಗ ಮಧ್ಯೆ ಪ್ರಾಣ ಬಿಟ್ಟಿದ್ದಾರೆ. ಲಾರಿ ಡಿಕ್ಕಿಯ ರಭಸಕ್ಕೆ ಓಮ್ನಿ ಸಂಪೂರ್ಣವಾಗಿ ಜಖಂಗೊಂಡಿದ್ದು, ಆಲ್ಟೋ ಕಾರಿನ ಮುಂಭಾಗ ನುಜ್ಜುಗುಜ್ಜಾಗಿದೆ.

ಇದನ್ನೂ ಓದಿ | ಹನಿ ಟ್ರ್ಯಾಪ್‌ ಮಾಡಿ ಕೋಲ್ಕತಾಗೆ ಕರೆಸಿಕೊಂಡು ಬಾಂಗ್ಲಾದೇಶ ಸಂಸದನ ಕೊಲೆ; ಚರ್ಮ ಸುಲಿದು, ದೇಹ ಪೀಸ್‌ ಪೀಸ್‌

ಓವರ್‌ಟೇಕ್ ಮಾಡಲು ಹೋಗಿ ಅಪಘಾತ ನಡೆದಿದ್ದು, ಗಾಯಾಳುಗಳಿಗೆ ಮೂಡಿಗೆರೆ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಮೂಡಿಗೆರೆ ತಾಲೂಕಿನ ಬಣಕಲ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Continue Reading
Advertisement
Former DGP Arrested
ಕ್ರೈಂ11 mins ago

Former DGP Arrested: ವಿಚ್ಛೇದಿತ ಪತ್ನಿಯ ದೂರು; ಮಾಜಿ ಡಿಜಿಪಿ ಜೈಲು ಪಾಲು

ಕ್ರೈಂ11 mins ago

Rameshwaram Cafe Blast: ರಾಮೇಶ್ವರಂ ಕೆಫೆ ಬ್ಲಾಸ್ಟ್ ಪ್ರಕರಣದ 5ನೇ ಆರೋಪಿಗೆ ಲಷ್ಕರ್–ಎ–ತಯ್ಬಾ ಜತೆ ಲಿಂಕ್‌!

CSK vs RC
ಕ್ರೀಡೆ16 mins ago

CSK vs RCB: ಮತ್ತೆ ಆರ್​ಸಿಬಿ, ಕೊಹ್ಲಿಯ ಬಗ್ಗೆ ಕಿಡಿಕಾರಿದ ಚೆನ್ನೈ ತಂಡದ ಮಾಜಿ ಆಟಗಾರ

BSNL network problem in Hosanagara The lawyer decided to climb the tower and protest
ಕರ್ನಾಟಕ19 mins ago

Hosanagara News: ಹೊಸನಗರದಲ್ಲಿ ಬಿಎಸ್‌ಎನ್‌ಎಲ್‌ ನೆಟ್‌ವರ್ಕ್‌ ಸಮಸ್ಯೆ; ಟವರ್‌ ಏರಿ ಪ್ರತಿಭಟನೆಗೆ ಮುಂದಾದ ವಕೀಲ!

union minister pralhad joshi spoke in North East Graduate Constituency Electoral Convention at ballari
ಕರ್ನಾಟಕ23 mins ago

MLC Election: ಜಗತ್ತು ತೆವಳುತ್ತಿದ್ದರೆ ಮೋದಿ ಭಾರತ ಓಡುತ್ತಿದೆ; ಸಚಿವ ಪ್ರಲ್ಹಾದ್‌ ಜೋಶಿ ವ್ಯಾಖ್ಯಾನ

Crocodile Attack
ಕರ್ನಾಟಕ29 mins ago

Crocodile Attack: ಕೃಷ್ಣಾ ನದಿಯಲ್ಲಿ ಬಾಲಕನನ್ನು ಎಳೆದೊಯ್ದ ಮೊಸಳೆ

Washing Machine Cleaning Tips
ಲೈಫ್‌ಸ್ಟೈಲ್30 mins ago

Washing Machine Cleaning Tips: ವಾಷಿಂಗ್ ಮೆಷಿನ್ ಹೆಚ್ಚು ಬಾಳಿಕೆ ಬರಬೇಕೆ? ಈ ರೀತಿ ಸ್ವಚ್ಛಗೊಳಿಸಿ

Ebola Virus
ಪ್ರಮುಖ ಸುದ್ದಿ39 mins ago

Ebola Virus: ಲ್ಯಾಬ್‌ನಲ್ಲಿ ಮತ್ತೊಂದು ಡೆಡ್ಲಿ ವೈರಸ್‌ ಸೃಷ್ಟಿಸಿದ ಚೀನಾ; ಈ ಲಕ್ಷಣ ಕಂಡರೆ ಮರಣ ನಿಶ್ಚಿತ!

Karnataka Weather Forecast
ಮಳೆ47 mins ago

Karnataka Weather : ಕೈಯಲ್ಲಿ ಛತ್ರಿ ಹಿಡಿದು ಬಸ್ ಡ್ರೈವಿಂಗ್; ಮಳೆಗೆ ಕುಸಿದು ಬಿದ್ದ ಮಾಳಿಗೆ ಮನೆ

Murder Attempt
ಕ್ರೈಂ48 mins ago

Murder Attempt: ಮಗು ಹೆಣ್ಣೋ ಗಂಡೋ ನೋಡಲು ಹೆಂಡತಿಯ ಹೊಟ್ಟೆ ಸೀಳಿದವನಿಗೆ ಜೀವಾವಧಿ ಶಿಕ್ಷೆ!

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

dina bhavishya read your daily horoscope predictions for May 23 2024
ಭವಿಷ್ಯ2 days ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ3 days ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ3 days ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

Love Case Father throws hot water on man who loved his daughter for coming home
ಕೊಡಗು3 days ago

Love Case : ಮನೆಗೆ ಬಂದ ಪ್ರೇಮಿಗೆ ಕೊತ ಕೊತ ಕುದಿಯುವ ನೀರು ಎರಚಿದ ಯುವತಿ ತಂದೆ!

Contaminated Water
ಮೈಸೂರು3 days ago

Contaminated Water : ಡಿ ಸಾಲುಂಡಿಯಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡಿದ್ದ ಯುವಕ ಸಾವು

Karnataka Rain
ಮಳೆ4 days ago

Karnataka Rain : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

Karnataka Rain
ಮಳೆ5 days ago

Karnataka Rain : ಒಂದೇ ಮಳೆಗೆ ಹೊಳೆಯಂತಾದ ಬೆಂಗಳೂರು ರಸ್ತೆಗಳು! ಕಳಸದಲ್ಲೂ ಮುಂದುವರಿದ ಅಬ್ಬರ

Karnataka rain
ಮಳೆ5 days ago

Karnataka Rain : ವಿಜಯನಗರದಲ್ಲಿ ಸಿಡಿಲಿಗೆ ಜಾನುವಾರು ಬಲಿ; ಬೆಂಗಳೂರು ಸೇರಿ ಹಲವೆಡೆ ಭಾರಿ ಮಳೆ

Karnataka Rain
ಮಳೆ5 days ago

Karnataka Rain: ಧಾರಾಕಾರ ಮಳೆಗೆ ಕಾಂಪೌಂಡ್ ಕುಸಿದು 4 ಬೈಕ್‌ಗಳು ಜಖಂ; ಮದುವೆ ಮಂಟಪಕ್ಕೆ ನುಗ್ಗಿದ ನೀರು‌

Prajwal Revanna Case JDS calls CD Shivakumar pen drive gang
ರಾಜಕೀಯ7 days ago

Prajwal Revanna Case: CD ಶಿವಕುಮಾರ್ ಪೆನ್ ಡ್ರೈವ್ ಗ್ಯಾಂಗ್ ಎಂದ ಕುಟುಕಿದ ಜೆಡಿಎಸ್‌!

ಟ್ರೆಂಡಿಂಗ್‌