Tiger 3 Trailer Out: ಇಮ್ರಾನ್ ಹಶ್ಮಿ-ಸಲ್ಮಾನ್‌ ಮುಖಾಮುಖಿ; 'ಟೈಗರ್ 3' ಟ್ರೈಲರ್ ಔಟ್‌ - Vistara News

ಬಾಲಿವುಡ್

Tiger 3 Trailer Out: ಇಮ್ರಾನ್ ಹಶ್ಮಿ-ಸಲ್ಮಾನ್‌ ಮುಖಾಮುಖಿ; ‘ಟೈಗರ್ 3’ ಟ್ರೈಲರ್ ಔಟ್‌

Tiger 3 Trailer Out: ಅಂತಿಮವಾಗಿ ಅಭಿಮಾನಿಗಳಿಗೆ ಟ್ರೈಲರ್‌ ಗಿಫ್ಟ್‌ ನೀಡಿದ್ದಾರೆ ಸಲ್ಲು. ಇಮ್ರಾನ್ ಹಶ್ಮಿ ಚಿತ್ರದಲ್ಲಿ ಸಲ್ಮಾನ್‌ ಅವರ ಪ್ರತಿಸ್ಪರ್ಧಿ. ಟ್ರೈಲರ್‌ನಲ್ಲಿ ಸಲ್ಮಾನ್‌ ಅವರ ಡೈಲಾಗ್‌ಗೆ ಫ್ಯಾನ್ಸ್‌ ಫಿದಾ ಆಗಿದ್ದಾರೆ.

VISTARANEWS.COM


on

Tiger 3 Salman Khan
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಸಲ್ಮಾನ್ ಖಾನ್ ಅಭಿನಯದ ‘ಟೈಗರ್ 3‘ ಟ್ರೈಲರ್ (Tiger 3 Trailer Out) ಬಿಡುಗಡೆಯಾಗಿದೆ. ನಾಯಕ ಸಲ್ಮಾನ್ ಖಾನ್ ಮತ್ತು ಕತ್ರಿನಾ ಕೈಫ್ ಅವರ ಫಸ್ಟ್ ಲುಕ್ ಪೋಸ್ಟರ್‌ ಬಿಡುಗಡೆಯಾದಾಗಿನಿಂದಲೂ ಸಿನಿಮಾ ಟ್ರೈಲರ್‌ ಬಗ್ಗೆ ಸಿನಿರಸಿಕರು ಕಾದಿದ್ದರು. ಅಂತಿಮವಾಗಿ ಅಭಿಮಾನಿಗಳಿಗೆ ಟ್ರೈಲರ್‌ ಗಿಫ್ಟ್‌ ನೀಡಿದ್ದಾರೆ ಸಲ್ಲು. ಇಮ್ರಾನ್ ಹಶ್ಮಿ ಚಿತ್ರದಲ್ಲಿ ಸಲ್ಮಾನ್‌ ಅವರ ಪ್ರತಿಸ್ಪರ್ಧಿ. ಟ್ರೈಲರ್‌ನಲ್ಲಿ ಸಲ್ಮಾನ್‌ ಅವರ ಡೈಲಾಗ್‌ಗೆ ಫ್ಯಾನ್ಸ್‌ ಫಿದಾ ಆಗಿದ್ದಾರೆ.

3 ನಿಮಿಷದ ಟ್ರೈಲರ್‌ನಲ್ಲಿ ಆ್ಯಕ್ಷನ್ ಪ್ಯಾಕ್ಡ್‌ ಸಿಕ್ವೆನ್ಸ್‌ ಹೊಂದಿದೆ. ಟ್ರೈಲರ್‌ನಲ್ಲಿ ಸಲ್ಮಾನ್ ದೇಶವನ್ನು ಉಳಿಸುವತ್ತ ಹೋರಾಟ ಮತ್ತು ಕುಟುಂಬವನ್ನು ರಕ್ಷಿಸಲು ಪ್ರಯತ್ನಿಸುತ್ತಿರುವ ಕತ್ರಿನಾ ಕೈಫ್ ಬಗ್ಗೆ ಇರುವಂತಿದೆ. ಸಲ್ಮಾನ್‌ ಖಾನ್‌ (Salman Khan ) ಅವರು ಯಶ್‌ರಾಜ್‌ಫಿಲ್ಮ್ಸ್‌ ಸ್ಪೈ ಯುನಿವರ್ಸ್‌ನಲ್ಲಿ ಏಜೆಂಟ್‌ ಟೈಗರ್‌ ಆಗಿ ಮರಳಿದ್ದಾರೆ. ಅಮೆಜಾನ್ ಪ್ರೈಮ್ ಟೈಗರ್ 3 ಒಟಿಟಿ ಹಕ್ಕುಗಳನ್ನು ಬರೋಬ್ಬರಿ 200 ಕೋಟಿ ರೂ.ಗೆ ಪಡೆದುಕೊಂಡಿದೆ. ಮನೀಶ್ ಶರ್ಮಾ ನಿರ್ದೇಶನದ ‘ಟೈಗರ್ 3’ ದೀಪಾವಳಿಳಿ ಸಮಯದಲ್ಲಿ ನವೆಂಬರ್ 10 ರಂದು ಬಿಡುಗಡೆಯಾಗಲಿದೆ. ಕತ್ರಿನಾ ಕೈಫ್ ನಾಯಕಿಯಾಗಿ ನಟಿಸಿದ್ದಾರೆ. ವರದಿಯ ಪ್ರಕಾರ, ಅಮೆಜಾನ್ ಪ್ರೈಮ್ ವಿಡಿಯೊ ಟೈಗರ್ 3 ಡಿಜಿಟಲ್ ಹಕ್ಕುಗಳನ್ನು ಪಡೆದುಕೊಂಡಿದೆ. ಶಾರುಖ್ ಖಾನ್ ಅವರ ಜವಾನ್ ಸಿನಿಮಾವನ್ನು ನೆಟ್‌ಫ್ಲಿಕ್ಸ್ ಸ್ವಾಧೀನಪಡಿಸಿಕೊಂಡಂತೆಯೇ ಇದೂ ಕೂಡ ಒಪ್ಪಂದವನ್ನು ಮಾಡಿದೆ. ಟೈಗರ್ 3 ಚಿತ್ರದ OTT ಹಕ್ಕನ್ನು 200 ಕೋಟಿ ರೂ. ಅಮೆಜಾನ್ ಪ್ರೈಮ್ ಪಡೆದುಕೊಂಡಿದೆ. ಚಿತ್ರದ ಒಟಿಟಿ ಬಿಡುಗಡೆ ದಿನಾಂಕ ಮತ್ತು ಒಟಿಟಿ ಹಕ್ಕುಗಳ ಕುರಿತ ಹೆಚ್ಚಿನ ವಿವರಗಳನ್ನು ಸಿನಿಮಾ ಬಿಡುಗಡೆಯಾದ ಬಳಿಕ ಚಿತ್ರತಂಡ ಮಾಹಿತಿ ಹಂಚಿಕೊಳ್ಳಲಿದೆ.

ಇದನೂ ಓದಿ: Tiger 3 teaser: ‘ಟೈಗರ್‌ 3’ ಡಿಜಿಟಲ್ ಹಕ್ಕು ಅಮೆಜಾನ್ ಪ್ರೈಮ್ ಪಾಲು; ಭಾರಿ ಮೊತ್ತಕ್ಕೆ ಮಾರಾಟ!

ಚಿತ್ರವು ಈ ದೀಪಾವಳಿಗೆ ವಿಶ್ವಾದ್ಯಂತ ಬಿಡುಗಡೆಯಾಗಲಿದೆ. ʻಈಗಾಗಲೇ ಯಶ್‌ ರಾಜ್‌ ಫಿಲ್ಮ್ಸ್‌ 2012 ರಲ್ಲಿ ಏಕ್ ಥಾ ಟೈಗರ್ ನಂತರ ಟೈಗರ್ ಜಿಂದಾ ಹೈ (2017), ವಾರ್ (2019), ಮತ್ತು ಪಠಾಣ್‌ (2023) ಸಿನಿಮಾವನ್ನು ನೀಡಿತ್ತು. ಎಲ್ಲವೂ ಹಿಟ್‌ ಚಿತ್ರಗಳೇ ಆಗಿದೆ. ಟೈಗರ್ 3 ನವೆಂಬರ್‌ನಲ್ಲಿ ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಈ ತಿಂಗಳ ಆರಂಭದಲ್ಲಿ, ಸಲ್ಮಾನ್ ಖಾನ್ ಮತ್ತು ಕತ್ರಿನಾ ಕೈಫ್, ಚಿತ್ರದ ಹೊಸ ಪೋಸ್ಟರ್‌ನೊಂದಿಗೆ ಸುದ್ದಿಯನ್ನು ಹಂಚಿಕೊಂಡಿದ್ದರು.

ಟೈಗರ್‌ 3 ಸಿನಿಮಾವು ನವೆಂಬರ್‌ 10ರಂದು ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಬಿಡುಗಡೆಯಾಗಲಿದೆ. ಕನ್ನಡದಲ್ಲಿ ಬಿಡುಗೆಡೆಯಾಗುತ್ತಿಲ್ಲ. ಈ ಸಿನಿಮಾದಲ್ಲಿ ಪಠಾಣ್‌ ಸಿನಿಮಾದ ಮುಂದುವರಿದ ಭಾಗವಾಗಿ ಶಾರೂಖ್‌ ಖಾನ್‌ ಕೂಡ ಕಾಣಿಸಿಕೊಳ್ಳಲಿದ್ದಾರೆ ಎಂದು ಕೆಲವು ವರದಿಗಳು ತಿಳಿಸಿವೆ. ಸಲ್ಮಾನ್‌ ಖಾನ್‌, ಕತ್ರಿನಾ ಕೈಫ್‌, ಇಮ್ರಾನ್‌ ಹಶ್ಮಿ ಮುಖ್ಯ ಪಾತ್ರದಲ್ಲಿ ಈ ಚಿತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಬಾಲಿವುಡ್

Sushant Singh: ಕೇದಾರನಾಥಕ್ಕೆ ಭೇಟಿ ಕೊಟ್ಟಾಗ ಸುಶಾಂತ್ ಸಿಂಗ್ ನೆನೆದು ಕಣ್ಣೀರಿಟ್ಟ ಸಹೋದರಿ!

Sushant Singh: ನಟ ಸುಶಾಂತ್‌ ಸಿಂಗ್‌ (Sushant Singh Rajput) ಅವರು 2020ರ ಜೂನ್‌ 14ರಂದು ಆತ್ಮಹತ್ಯೆಗೆ ಶರಣಾಗಿದ್ದರು. ಸುಶಾಂತ್ ಸಿಂಗ್ ರಜಪೂತ್ ಅವರ ಕುರಿತಾಗಿ ಅವರ ಸಹೋದರಿಯರು ಯಾವಾಗಲೂ ಮಾಧ್ಯಮಗಳ ಸಂದರ್ಶನದಲ್ಲಿ ಅನೇಕ ವಿಚಾರಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ.ಸಹೋದರಿ ಶ್ವೇತಾ ಸಿಂಗ್ ಕೀರ್ತಿ ಅವರು ತಮ್ಮ ಹೊಸ ಪುಸ್ತಕ “ಪೇನ್: ಎ ಪೋರ್ಟಲ್ ಟು ಎನ್‌ಲೈಟ್‌ಮೆಂಟ್” (Pain: A Portal to Enlightenment) ನಲ್ಲಿ ಸುಶಾಂತ್ ಅವರ ಬಗ್ಗೆ ಬರೆದಿದ್ದಾರೆ. ಪುಸ್ತಕ ಬಿಡುಗಡೆ ಕೂಡ ಆಗಿದೆ.

VISTARANEWS.COM


on

Sushant Singh Rajput's sister cries as she visits Kedarnath
Koo

ಬೆಂಗಳೂರು: ದಿವಂಗತ ನಟ ಸುಶಾಂತ್ ಸಿಂಗ್ (Sushant Singh) ರಜಪೂತ್ ಅವರ ಸಹೋದರಿ ಶ್ವೇತಾ ಸಿಂಗ್ ಕೀರ್ತಿ ಅವರು ಕೇದಾರನಾಥಕ್ಕೆ ಭೇಟಿ ಕೊಟ್ಟ ಫೋಟೊಗಳನ್ನು ಶೇರ್‌ ಮಾಡಿಕೊಂಡಿದ್ದಾರೆ. ಜತೆಗೆ ಸಹೋದರ ಸುಶಾಂತ್ ಸಿಂಗ್ ಅವರನ್ನು ನೆನೆಸಿ ಭಾವುಕ ಪೋಸ್ಟ್‌ ಶೇರ್‌ ಮಾಡಿದ್ದಾರೆ. ಈ ಮುಂಚೆ ಸುಶಾಂತ್‌ ಅವರು ಕೇದಾರನಾಥಕ್ಕೆ ಭೇಟಿ ಕೊಟ್ಟ ಫೋಟೊಗಳನ್ನು ಶೇರ್‌ ಮಾಡಿಕೊಂಡಿದ್ದಾರೆ. ಹಳೆಯ ಫೋಟೊದಲ್ಲಿ ಸುಶಾಂತ್‌ ದೇಗುಲದ ಮುಂದೆ ‘ಸಾಧು ಜತೆ ಪೋಸ್ ನೀಡಿದ್ದಾರೆ.

ನಟ ಸುಶಾಂತ್‌ ಸಿಂಗ್‌ (Sushant Singh Rajput) ಅವರು 2020ರ ಜೂನ್‌ 14ರಂದು ಆತ್ಮಹತ್ಯೆಗೆ ಶರಣಾಗಿದ್ದರು. ಸುಶಾಂತ್ ಸಿಂಗ್ ರಜಪೂತ್ ಅವರ ಕುರಿತಾಗಿ ಅವರ ಸಹೋದರಿಯರು ಯಾವಾಗಲೂ ಮಾಧ್ಯಮಗಳ ಸಂದರ್ಶನದಲ್ಲಿ ಅನೇಕ ವಿಚಾರಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ. ಸುಶಾಂತ್‌ ಸಿಂಗ್‌ ಅವರ ಪರವಾಗಿ ನಿಲ್ಲುತ್ತಾರೆ. ನಾಲ್ಕನೇ ವರ್ಷದ ಪುಣ್ಯತಿಥಿಯಂದು ಸಹೋದರನನ್ನು ನೆನಪಿಸಿಕೊಂಡು ಶ್ವೇತಾ ಹೀಗೆ ಬರೆದಿದ್ದಾರೆ.

“ಇದು ಜೂನ್ 1, ಮತ್ತು ನಾಲ್ಕು ವರ್ಷಗಳ ಹಿಂದೆ ಈ ತಿಂಗಳ 14 ರಂದು ಸುಶಾಂತ್ ಬಾರದ ಲೋಕಕ್ಕೆ ಹೋದ. ಆ ದುರಂತದ ದಿನ ಏನಾಯಿತು ಎಂಬುದರ ಕುರಿತು ನಾವು ಇನ್ನೂ ಉತ್ತರಗಳನ್ನು ಹುಡುಕುತ್ತಲೇ ಇದ್ದೇವೆ. ಇತ್ತೀಚೆಗೆ ಕೇದಾರನಾಥಕ್ಕೆ ಪ್ರಾರ್ಥನೆ ಸಲ್ಲಿಸಲು ಹೋಗಿದ್ದೆ. ಸಹೋದರ ಸುಶಾಂತ್‌ ನೆನಪಾದ. ನಾನು ಕೇದಾರನಾಥಕ್ಕೆ ಇಳಿದ ತಕ್ಷಣ ಕಣ್ಣೀರಿಟ್ಟೆ. ಆ ಕ್ಷಣ ನನ್ನೊಂದಿಗೆ ಅವನು ಇದ್ದಿದ್ದರೆ ಚೆಂದ ಎನಿಸಿತು. .ಅವನು ಧ್ಯಾನಿಸಿದ ಸ್ಥಳದಲ್ಲಿ ನಾನು ಕುಳಿತು ಧ್ಯಾನಿಸಿದೆ, ಮತ್ತು ಆ ಕ್ಷಣಗಳಲ್ಲಿ, ಅವನು ಇನ್ನೂ ನನ್ನೊಂದಿಗೆ, ನನ್ನೊಳಗೆ, ನನ್ನ ಮೂಲಕ ವಾಸಿಸುತ್ತಿದ್ದಾನೆ ಎಂದು ನಾನು ಭಾವಿಸಿದೆʼʼಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Adah Sharma: ಸುಶಾಂತ್ ಸಿಂಗ್ ರಜಪೂತ್  ಆತ್ಮಹತ್ಯೆ ಮಾಡಿಕೊಂಡ ಮನೆ ಖರೀದಿಸಿದ್ರಾ `ದಿ ಕೇರಳ ಸ್ಟೋರಿ’ ನಟಿ?

ಸುಶಾಂತ್‌ ಅವರು ಕೇದಾರನಾಥ್ (2018) ಸಿನಿಮಾದಲ್ಲಿ ಸಾರಾ ಅಲಿ ಖಾನ್ ಅವರೊಂದಿಗೆ ನಟಿಸಿದ್ದರು. ಸುಶಾಂತ್‌ ಕೇದಾರನಾಥ್‌ಗೆ ಆಗಗ ಶೂಟಿಂಗ್‌ಗಾಗಿ ಹೋಗುತ್ತಲೇ ಇರುತ್ತಿದ್ದರು.

ಸಹೋದರಿ ಶ್ವೇತಾ ಸಿಂಗ್ ಕೀರ್ತಿ ಅವರು ತಮ್ಮ ಹೊಸ ಪುಸ್ತಕ “ಪೇನ್: ಎ ಪೋರ್ಟಲ್ ಟು ಎನ್‌ಲೈಟ್‌ಮೆಂಟ್” (Pain: A Portal to Enlightenment) ನಲ್ಲಿ ಸುಶಾಂತ್ ಅವರ ಬಗ್ಗೆ ಬರೆದಿದ್ದಾರೆ. ಪುಸ್ತಕ ಬಿಡುಗಡೆ ಕೂಡ ಆಗಿದೆ.

ಶ್ವೇತಾ ಸಿಂಗ್ ಕೀರ್ತಿ ಅವರು ತಮ್ಮ ಪುಸ್ತಕಲ್ಲಿ ಸುಶಾಂತ್‌ ಅವರ ವೃತ್ತಿ ಜೀವನ, ವೈಯಕ್ತಿಕ ಜೀವನ ಬಗ್ಗೆ ಬರೆದುಕೊಂಡಿದ್ದಾರೆ. ʻಸುಶಾಂತ್ ಬಾಲಿವುಡ್‌ನಲ್ಲಿ ಬ್ಯುಸಿಯಾಗಿಬಿಟ್ಟಿದ್ದ. ನನಗೆ ಅವನನ್ನು ಭೇಟಿ ಮಾಡಲು ಸಾಧ್ಯವಾಗುತ್ತಿರಲ್ಲಿಲ್ಲ. 2014 ರಿಂದ 2017 ರವರೆಗೆ ನಾನು ಪ್ರತಿ ವರ್ಷ ಭಾರತಕ್ಕೆ ತೆರಳಿ ಅವನನ್ನು ಭೇಟಿಯಾಗುತ್ತಿದ್ದೆ. ದುರದೃಷ್ಟವಶಾತ್, 2018 ಮತ್ತು 2019ರಲ್ಲಿ ಭೇಟಿ ನೀಡಲು ಸಾಧ್ಯವಾಗಲಿಲ್ಲ. ಜನವರಿ 2020ರಲ್ಲಿ ಪ್ಲ್ಯಾನ್‌ ಕೂಡ ಮಾಡಿಕೊಂಡಿದ್ದೆ. ಕೊನೆಗೂ ಅವನನ್ನು ಮೀಟ್‌ ಆಗಲು ಆಗಲೇ ಇಲ್ಲ. 2020 ರ ಜೂನ್‌ 14ರಂದು ಅವನು ಬಾರದ ಲೋಕಕ್ಕೆ ಹೋಗೆ ಬಿಟ್ಟಿದ್ದ. ಸಾವಿಗೂ ಮುಂಚೆ ನಾಲ್ಕು ದಿನಗಳ ಮೊದಲು ನಾನು ಕಾಲ್‌ ಮಾಡಿದ್ದೆ, ಅಮೆರಿಕಾಗೆ ಬರುವಂತೆ ಹೇಳಿದ್ದೆ. ಜೂನ್‌ 13ರ ರಾತ್ರಿ ನನಗೆ ಸುಶಾಂತ್‌ ಮೃತಪಟ್ಟ ಸುದ್ದಿ ತಿಳಿಯಿತು. ನಾನು ಕೂಗಾಡಲಿಲ್ಲ. ಅಳಲಿಲ್ಲ. ಅಲ್ಲಿಯೇ ಆಘಾತದಲ್ಲಿ ಕುಸಿದು ಬಿದ್ದೆʼʼ ಎಂದು ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ.

ಸುಶಾಂತ್‌ ಸಿಂಗ್‌ ಅವರು ʻಕಾಯ್‌ ಪೋ ಚೆʼ, ʻಎಂಎಸ್ ಧೋನಿʼ, ʻದಿ ಅನ್‌ ಟೋಲ್ಡ್ ಟೇಲ್ʼ, ʻಕೇದಾರನಾಥ್ʼ ಮತ್ತು ʻಚಿಚೋರೆʼಯಂತಹ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದರು. ಸುಶಾಂತ್ ಅವರ ವೈವಿಧ್ಯಮಯ ಸಿನಿಮಾ ಜೀವನ 2020 ರಲ್ಲಿ ಕೊನೆಗೊಂಡಿತು. 2020ರ ಜೂನ್ 14ರಂದು ಬಾಂದ್ರಾದ ತಮ್ಮ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಾಗ ಅವರ ವಯಸ್ಸು 34 ಅಷ್ಟೇ. ಈ ಸಾವು ದೇಶಾದ್ಯಂತ ಭಾರಿ ಆಘಾತವನ್ನುಂಟು ಮಾಡಿತ್ತು.

ಸುಶಾಂತ್‌ ಸಿಂಗ್‌ ರಜಪೂತ್‌ ಸಾವಿನ ಬಗ್ಗೆ ಹಲವಾರು ಅನುಮಾನಗಳು ಇದ್ದವು. ಚಿತ್ರರಂಗದಲ್ಲಿ ನಡೆಯುತ್ತಿರುವ ಸ್ವಜನ ಪಕ್ಷಪಾತದಿಂದ ಅವರಿಗೆ ಅನ್ಯಾಯವಾಗುತ್ತಿದೆ. ಆ ಕಾರಣಕ್ಕೆ ಪ್ರಾಣವನ್ನೇ ಕಳೆದುಕೊಂಡಿದ್ದಾರೆ ಎನ್ನುವುದು ಒಂದು ಅನುಮಾನವಾದರೆ, ಯಾರೋ ಆತ್ಮೀಯರೇ ಕೊಲೆ ಮಾಡಿದ್ದಾರೆ ಎಂಬ ವಾದವೂ ಇತ್ತು. ಸಾವಿನ ಸುತ್ತ ಮಾದಕ ವ್ಯಸನ, ಡ್ರಗ್ಸ್‌ ಜಾಲ ಮತ್ತು ಅಕ್ರಮ ಹಣ ವರ್ಗಾವಣೆ ಹೀಗೆ ಹಲವು ಸಂಶಯದ ಹುತ್ತಗಳು ಬೆಳೆದಿದ್ದವು. ಸಿಬಿಐ, ಇ.ಡಿ, ಎನ್‌ಸಿಬಿ ಸೇರಿದಂತೆ ಹಲವು ತನಿಖಾ ತಂಡಗಳು ನಾನಾ ಆಯಾಮಗಳಲ್ಲಿ ತನಿಖೆಯನ್ನು ನಡೆಸುತ್ತಿವೆ. ಪೋಸ್ಟ್‌ ಮಾರ್ಟಂ ವರದಿಗಳ ಪ್ರಕಾರ ಸುಶಾಂತ್‌ ಆತ್ಮಹತ್ಯೆಯೇ ಹೌದಾಗಿದ್ದರೂ ಅದರ ಹಿಂದಿನ ಶಕ್ತಿಗಳು, ಸಿನಿಮಾ ರಾಜಕಾರಣ ಹೊರಬರಬೇಕು ಎನ್ನುವುದು ಅಭಿಮಾನಿಗಳ ಆಗ್ರಹವಾಗಿತ್ತು.

Continue Reading

ಬಾಲಿವುಡ್

Raveena Tandon: ರವೀನಾ ಟಂಡನ್ ಕಾರು ಅಪಘಾತ; ನಟಿ ಹೊಡೆಯಬೇಡಿ ಪ್ಲೀಸ್ ಎನ್ನುತ್ತಿರುವ ವಿಡಿಯೊ ನೋಡಿ!

Raveena Tandon: ಆರಂಭಿಕ ಮಾಹಿತಿಯ ಪ್ರಕಾರ, ರಿಜ್ವಿ ಕಾಲೇಜು ಬಳಿಯ ಕಾರ್ಟರ್ ರಸ್ತೆಯಲ್ಲಿ ರವೀನಾ ಅವರ ಚಾಲಕ ಅಜಾಗರೂಕತೆಯಿಂದ ಚಾಲನೆ ಮಾಡಿ ಮೂವರಿಗೆ ಡಿಕ್ಕಿ ಹೊಡೆದಿದ್ದಾನೆ ಎನ್ನಲಾಗಿದೆ. ನಟಿ ಕುಡಿದ ಅಮಲಿನಲ್ಲಿ ತನ್ನ ಕಾರಿನಿಂದ ಇಳಿದು ಸಂತ್ರಸ್ತರಿಗೆ ನಿಂದಿಸಿ ಹಲ್ಲೆ ನಡೆಸಿರುವುದಾಗಿಯೂ ವರದಿಯಾಗಿದೆ. ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಸಂತ್ರಸ್ತರು ಮತ್ತು ಸ್ಥಳೀಯರು ರವೀನಾಳನ್ನು ಸುತ್ತುವರಿದು ಪೊಲೀಸರಿಗೆ ಕರೆ ಮಾಡಿರುವುದನ್ನು ಕಾಣಬಹುದು.

VISTARANEWS.COM


on

Raveena Tandon attacked In Mumbai After Being Accused Of Rash Driving
Koo

ಮುಂಬೈ: ಮುಂಬೈನ ಬಾಂದ್ರಾ ಉಪನಗರದಲ್ಲಿ ಶನಿವಾರ ತಡರಾತ್ರಿ ಬಾಲಿವುಡ್ ನಟಿ ರವೀನಾ ಟಂಡನ್ ಸಂಚರಿಸುತ್ತಿದ್ದ ಕಾರು ಅಪಘಾತಕ್ಕೀಡಾಗಿದೆ. ರವೀನಾ ಮದ್ಯ ಕುಡಿದಿದ್ದರು ಎನ್ನಲಾಗಿದೆ. ಸಾರ್ವಜನಿಕರು ರವೀನಾ ಮೇಲೆ ಹಲ್ಲೆ ನಡೆಸಿರುವುದಾಗಿ (Raveena Tandon) ವರದಿಯಾಗಿದೆ. ಸ್ಥಳೀಯರು ನಟಿಯನ್ನು ಸುತ್ತುವರೆದು ಹಲ್ಲೆ ಮಾಡಿರುವ ವಿಡಿಯೊ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್ ಆಗಿದೆ.

ಆರಂಭಿಕ ಮಾಹಿತಿಯ ಪ್ರಕಾರ, ರಿಜ್ವಿ ಕಾಲೇಜು ಬಳಿಯ ಕಾರ್ಟರ್ ರಸ್ತೆಯಲ್ಲಿ ರವೀನಾ ಅವರ ಚಾಲಕ ಅಜಾಗರೂಕತೆಯಿಂದ ಚಾಲನೆ ಮಾಡಿ ಮೂವರಿಗೆ ಡಿಕ್ಕಿ ಹೊಡೆದಿದ್ದಾನೆ ಎನ್ನಲಾಗಿದೆ. ನಟಿ ಕುಡಿದ ಅಮಲಿನಲ್ಲಿ ತನ್ನ ಕಾರಿನಿಂದ ಇಳಿದು ಸಂತ್ರಸ್ತರಿಗೆ ನಿಂದಿಸಿ ಹಲ್ಲೆ ನಡೆಸಿರುವುದಾಗಿಯೂ ವರದಿಯಾಗಿದೆ. ಇದೀಗ ವೈರಲ್ ಆಗಿರುವ ವಿಡಿಯೋದಲ್ಲಿ ಸಂತ್ರಸ್ತರು ಮತ್ತು ಸ್ಥಳೀಯರು ರವೀನಾಳನ್ನು ಸುತ್ತುವರಿದು ಪೊಲೀಸರಿಗೆ ಕರೆ ಮಾಡಿರುವುದನ್ನು ಕಾಣಬಹುದು. “ನೀವು ಈ ರಾತ್ರಿ ಜೈಲಿನಲ್ಲಿ ಕಳೆಯಬೇಕಾಗುತ್ತದೆ. ನನ್ನ ಮೂಗಿನಿಂದ ರಕ್ತ ಸುರಿಯುತ್ತಿದೆ” ಎಂದು ಸಂತ್ರಸ್ತರಲ್ಲಿ ಒಬ್ಬರು ಹೇಳುವುದನ್ನು ಕೇಳಬಹುದು.

ವಿಡಿಯೊಗಳನ್ನು ರೆಕಾರ್ಡ್ ಮಾಡಬೇಡಿ ಎಂದು ರವೀನಾ ನೆರದವರಲ್ಲಿ ವಿನಂತಿಸಿದ್ದಾರೆ. “ತಳ್ಳಬೇಡಿ, ದಯವಿಟ್ಟು ನನಗೆ ಹೊಡೆಯಬೇಡಿ” ಎಂದು ರವೀನಾ ಮೊರೆ ಇಡುತ್ತಿರುವುದು ವಿಡಿಯೊದಲ್ಲಿ ಕೇಳಬಹುದು.

ನಂತರ ಮಹಮ್ಮದ್ ಎನ್ನುವ ವ್ಯಕ್ತಿ ಈ ಘಟನೆಯನ್ನು ವಿವರಿಸಿದ್ದಾರೆ. ಇಡೀ ಘಟನೆಯನ್ನು ವಿಡಿಯೊ ಮೂಲಕ ತಿಳಿಸಿದ್ದಾರೆ. ವಿಡಿಯೋದಲ್ಲಿ ಮಾತನಾಡಿದ ವ್ಯಕ್ತಿ ʻʻತನ್ನ ತಾಯಿ, ತಂಗಿ ಹಾಗೂ ಸೊಸೆ ರಿಜ್ವಿ ಕಾಲೆಜು ಬಳಿಯಲ್ಲಿ ಹೋಗುತ್ತಿರುವಾಗ ರವೀನಾ ಅವರ ಡ್ರೈವರ್ ತನ್ನ ತಾಯಿಗೆ ಡಿಕ್ಕಿ ಹೊಡೆದಿದ್ದಾನೆʼʼ ಎಂದಿದ್ದಾರೆ.

ಇದನ್ನೂ ಓದಿ: Actor Suriya: ಹೊಸ ಸಿನಿಮಾ ಶೂಟಿಂಗ್‌ ಶುರು ಮಾಡಿದ ನಟ ಸೂರ್ಯ!

ʻʻಚಾಲಕ ನನ್ನ ಸೊಸೆ ಮತ್ತು ನನ್ನ ತಾಯಿಯ ಮೇಲೂ ಹಲ್ಲೆ ನಡೆಸಿದ್ದಾನೆ. ನಂತರ ರವೀನಾ ಕೂಡ ಮದ್ಯದ ಅಮಲಿನಲ್ಲಿ ಹೊರಬಂದು ನನ್ನ ತಾಯಿಗೆ ಹೊಡೆದಿದ್ದರಿಂದ ಆಕೆಯ ತಲೆಗೆ ಗಂಭೀರ ಗಾಯಗಳಾಗಿವೆ. ನಾಲ್ಕು ಗಂಟೆಗಳ ಕಾಲ ಖಾರ್ ಪೊಲೀಸ್ ಠಾಣೆಯಲ್ಲಿ ಕಾಯುತ್ತಿದ್ದರೂ ಅವರ ದೂರನ್ನು ಸ್ವೀಕರಿಸುತ್ತಿಲ್ಲ . ರವೀನಾ ಪೊಲೀಸ್ ಠಾಣೆಯಲ್ಲಿ ಕೇಸ್‌ವನ್ನು ಇತ್ಯರ್ಥಪಡಿಸುವಂತೆ ನಮ್ಮಲ್ಲಿ ಮನವಿ ಮಾಡಿದರು. ಆದರೆ ನಾವು ಏಕೆ ಇತ್ಯರ್ಥಗೊಳಿಸಬೇಕು? ನನ್ನ ತಾಯಿಯ ಮೇಲೆ ಹಲ್ಲೆ ಮಾಡಲಾಗಿದೆ ಮತ್ತು ನಾನು ನ್ಯಾಯಕ್ಕಾಗಿ ಹೋರಾಡುತ್ತೇನೆ” ಎಂದು ಹೇಳಿಕೆ ನೀಡಿದ್ದಾರೆ. ಘಟನೆ ಕುರಿತು ರವೀನಾ ಇನ್ನೂ ಅಧಿಕೃತ ಹೇಳಿಕೆ ನೀಡಿಲ್ಲ.

Continue Reading

ಬಾಲಿವುಡ್

Deepika Padukone: ಫ್ಯಾಮಿಲಿ ಜತೆ ಜಾಲಿ ಮಾಡುತ್ತಿರುವ ಪ್ರೆಗ್ನೆಂಟ್‌ ದೀಪಿಕಾ ಪಡುಕೋಣೆ

Deepika Padukone: ಶುಕ್ರವಾರವೂ ದೀಪಿಕಾ ಕುಟುಂಬದ ಜತೆ ಡಿನ್ನರ್‌ ಪಾರ್ಟಿಯಲ್ಲಿ ಕಂಡಿದ್ದರು. ತನ್ನ ತಾಯಿಯೊಂದಿಗೆ ರೆಸ್ಟೋರೆಂಟ್‌ನಿಂದ ನಿರ್ಗಮಿಸುತ್ತಿರುವುದು ಕಂಡುಬಂದಿತ್ತು ಸೆಪ್ಟೆಂಬರ್‌ನಲ್ಲಿ ಮಗು ಜನಿಸಲಿದೆ ಎಂದು ದೀಪಿಕಾ ದಂಪತಿ ಹೇಳಿಕೊಂಡಿದ್ದಾರೆ. ಆರು ವರ್ಷಗಳ ಕಾಲ ಡೇಟಿಂಗ್ ಮಾಡಿದ ನಂತರ ರಣವೀರ್-ದೀಪಿಕಾ 2018ರಂದು ಇಟಲಿಯ ಲೇಕ್ ಕೊಮೊದಲ್ಲಿ ಮದುವೆಯಾಗಿದ್ದರು.

VISTARANEWS.COM


on

Deepika Padukone clicks selfies with fans dinner outing with family
Koo

ಬೆಂಗಳೂರು: ಸೆಪ್ಟೆಂಬರ್‌ನಲ್ಲಿ ದೀಪಿಕಾ ಪಡುಕೋಣೆ (Deepika Padukone) ಮಗುವಿಗೆ ಜನ್ಮ ನೀಡಲಿದ್ದಾರೆ. ಸದ್ಯ ನಟಿ ಆಗಾಗ ಕುಟುಂಬದ ಜತೆ ಡಿನ್ನರ್‌ ಪಾರ್ಟಿಯಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ನಟ ತಾಯಿ ಉಜ್ಜಲಾ ಪಡುಕೋಣೆ ಮತ್ತು ಮುಂಬೈನಲ್ಲಿರುವ ಅವರ ಸಂಬಂಧಿಕರೊಂದಿಗೆ ಸತತ ಎರಡನೇ ಬಾರಿಗೆ ಡಿನ್ನರ್ ಡೇಟ್‌ನಲ್ಲಿ ಭಾಗಿಯಾಗಿದ್ದಾರೆ. ಇದಕ್ಕೂ ಮುಂಚೆ ನಟಿ ಕುಟುಂಬದ ಜತೆ ಕಾಣಿಸಿಕೊಂಡಿದ್ದರು.

ನಟಿಯ ಹಲವು ಫೋಟೊ ಹಾಗೂ ವಿಡಿಯೊಗಳು ವೈರಲ್‌ ಆಗಿವೆ. ಶನಿವಾರ ರಾತ್ರಿಯೂ ಸಹ ದೀಪಿಕಾ ತನ್ನ ಕುಟುಂಬದೊಂದಿಗೆ ರೆಸ್ಟೋರೆಂಟ್‌ನಿಂದ ಹೊರಬರುತ್ತಿರುವುದು ಕಂಡುಬಂದಿತ್ತು. ಹೂವಿನ ಪ್ರಿಂಟೆಡ್‌ ಟಾಪ್, ಡೆನಿಮ್ಸ್ ಮತ್ತು ಬಿಳಿ ಸ್ನೀಕರ್ಸ್‌ನಲ್ಲಿ ನಟಿ ಕಾಣಿಸಿಕೊಂಡರು.

ದೀಪಿಕಾ ತನ್ನ ಕಾರಿನೊಳಗೆ ಹಗುವ ಮೊದಲು ಕ್ಯೂಟ್‌ ಸ್ಲೈಲ್‌ ಕೊಟ್ಟಿದ್ದಾರೆ. ವಿಡಿಯೊಗೆ ಪ್ರತಿಕ್ರಿಯಿಸಿದ ಅಭಿಮಾನಿಯೊಬ್ಬರು, “ನಟಿ ಸುಂದರವಾಗಿ ಕಾಣುತ್ತಿದ್ದಾರೆʼʼ ಎಂದು ಕಮೆಂಟ್‌ ಮಾಡಿದ್ದಾರೆ. ಇನ್ನೊಬ್ಬರು, “ನೀವು ಪ್ರತಿ ದಿನವೂ ಹೆಚ್ಚು ಗ್ಲೋ ಆಗಿ ಕಾಣುತ್ತೀರಿʼʼಎಂದು ಕಮೆಂಟ್‌ ಮಾಡಿದ್ದಾರೆ. ಶುಕ್ರವಾರವೂ ದೀಪಿಕಾ ಕುಟುಂಬದ ಜತೆ ಡಿನ್ನರ್‌ ಪಾರ್ಟಿಯಲ್ಲಿ ಕಂಡಿದ್ದರು. ತನ್ನ ತಾಯಿಯೊಂದಿಗೆ ರೆಸ್ಟೋರೆಂಟ್‌ನಿಂದ ನಿರ್ಗಮಿಸುತ್ತಿರುವುದು ಕಂಡುಬಂದಿತ್ತು ಸೆಪ್ಟೆಂಬರ್‌ನಲ್ಲಿ ಮಗು ಜನಿಸಲಿದೆ ಎಂದು ದೀಪಿಕಾ ದಂಪತಿ ಹೇಳಿಕೊಂಡಿದ್ದಾರೆ. ಆರು ವರ್ಷಗಳ ಕಾಲ ಡೇಟಿಂಗ್ ಮಾಡಿದ ನಂತರ ರಣವೀರ್-ದೀಪಿಕಾ 2018ರಂದು ಇಟಲಿಯ ಲೇಕ್ ಕೊಮೊದಲ್ಲಿ ಮದುವೆಯಾಗಿದ್ದರು.

ಇದನ್ನೂ ಓದಿ: Deepika Padukone: ವೋಟ್‌ ಮಾಡಿದ ದೀಪಿಕಾ ಪಡುಕೋಣೆ; ಅವರ ಹೊಟ್ಟೆ ನೋಡಿ ಗಂಡು ಮಗು ಎಂದ ನೆಟ್ಟಿಗರು!

ಸಿನಿಮಾ ವಿಚಾರಕ್ಕೆ ಬಂದರೆ ದೀಪಿಕಾ ಅವರು ರೋಹಿತ್ ಶೆಟ್ಟಿ ಅವರ ʻಸಿಂಗಮ್ ಅಗೇನ್‌ʼನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ಅಜಯ್ ದೇವಗನ್, ಕರೀನಾ ಕಪೂರ್, ರಣವೀರ್ ಸಿಂಗ್, ಅಕ್ಷಯ್ ಕುಮಾರ್, ಟೈಗರ್ ಶ್ರಾಫ್ ಮತ್ತು ಅರ್ಜುನ್ ಕಪೂರ್ ಜೊತೆಗೆ ಲೇಡಿ ಸಿಂಗಮ್ ಪಾತ್ರಕ್ಕೆ ದೀಪಿಕಾ ಹೆಜ್ಜೆ ಹಾಕಿದ್ದಾರೆ. ಅಮಿತಾಭ್ ಬಚ್ಚನ್, ಕಮಲ್ ಹಾಸನ್, ಪ್ರಭಾಸ್ ಮತ್ತು ದಿಶಾ ಪಟಾನಿ ಅಭಿನಯದ ಕಲ್ಕಿ 2898 AD ಸಿನಿಮಾದಲ್ಲಿಯೂ ಕಾಣಿಸಿಕೊಳ್ಳಲಿದ್ದಾರೆ. ಜತೆಗೆ ಅಮಿತಾಭ್‌ ಬಚ್ಚನ್ ಅವರೊಂದಿಗೆ ʻದಿ ಇಂಟರ್ನ್ʼ ಸಿನಿಮಾ ಕೂಡ ಹೊಂದಿದ್ದಾರೆ.

Continue Reading

ಬಾಲಿವುಡ್

Shah Rukh Khan: ಮಗಳ ಜತೆ ಶಾರುಖ್ ಅಭಿನಯಿಸಲಿರುವ ಸಿನಿಮಾ ದೃಶ್ಯ ಲೀಕ್‌!

Shah Rukh Khan : ಆರ್ಯನ್ ಮತ್ತು ಸುಹಾನಾ ವಿಮಾನ ನಿಲ್ದಾಣದಲ್ಲಿ ಒಂದೇ ಕಾರಿನಲ್ಲಿ ಬಂದಿರುವುದು ಕಂಡುಬಂದಿತ್ತು. ಅವರೊಂದಿಗೆ ಗೌರಿ ಖಾನ್, ಪೂಜಾ ಮತ್ತು ಅವರ ಇಡೀ ತಂಡವಿತ್ತು. ನಟ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚಂಟ್‌ ಅವರ ವಿವಾಹಪೂರ್ವ ಕ್ರೂಸ್ ಪಾರ್ಟಿಗೆ ಹೋಗುತ್ತಿದ್ದಾರೆ ಎನ್ನಲಾಗಿತ್ತು. ಆದರೀಗ ಸಿನಿಮಾ ಶೂಟಿಂಗ್‌ಗೆ ಹೋಗಿದ್ದಾರೆ ಎಂದು ವರದಿಯಾಗಿದೆ.

VISTARANEWS.COM


on

Shah Rukh Khan shooting for King in Spain
Koo

ಬೆಂಗಳೂರು: ಸುಜೋಯ್‌ ಘೋಷ್‌ ಮತ್ತು ಸಿದ್ಧಾರ್ಥ್‌ ಆನಂದ್‌ ನಿರ್ದೇಶನದ ʼಕಿಂಗ್‌ʼ ಟೈಟಲ್‌ನ ಸಿನಿಮಾದಲ್ಲಿ ಶಾರುಖ್‌ (Shah Rukh Khan) ಹಾಗೂ ಮಗಳು ಸುಹಾನಾ ಖಾನ್ ಅಭಿನಯಿಸುತ್ತಿದ್ದಾರೆ. 2023ರಲ್ಲಿ ಬ್ಯಾಕ್‌ ಟು ಬ್ಯಾಕ್‌ ಹಿಟ್‌ ಸಿನಿಮಾಗಳನ್ನು ನೀಡಿದ ಬಳಿಕ ಶಾರುಖ್‌ ʻಕಿಂಗ್‌ʼ ಸಿನಿಮಾ ಮೇಲೆ ಗಮನ ಹರಿಸಿದ್ದಾರೆ. ಇದೀಗ ಶಾರುಖ್‌ ಸ್ಪೇನ್‌ನಲ್ಲಿ ಚಿತ್ರದ ಚಿತ್ರೀಕರಣದಲ್ಲಿದ್ದಾರೆ ಎಂದು ವರದಿಯಾಗಿದೆ. ಜತೆಗೆ ಶೂಟ್‌ ಮಾಡುತ್ತಿರುವ ದೃಶ್ಯವೊಂದು ಲೀಕ್‌ ಕೂಡ ಆಗಿದೆ. ಈ ಪೋಟೊ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.

ಚಿತ್ರದಲ್ಲಿ, ಶಾರುಖ್ ಗುಂಪಿನಲ್ಲಿ ಸಂಭಾಷಣೆಯಲ್ಲಿ ಮುಳುಗಿರುವುದನ್ನು ಕಾಣಬಹುದು. ಲೀಕ್‌ ಆದ ಫೋಟೊದಲ್ಲಿ ನೀಲಿ ಸೂಟ್ ಧರಿಸಿ ಕಾಣಿಸಿಕೊಂಡಿದ್ದಾರೆ. ಆದರೆ ಚಿತ್ರತಂಡ ಈ ಬಗ್ಗೆ ಅಧಿಕೃತ ಮಾಹಿತಿ ಹಂಚಿಕೊಂಡಿಲ್ಲ. ಕಳೆದ ವಾರ ಸುಹಾನಾ ಜತೆ ಶಾರುಖ್ ಮುಂಬೈನಿಂದ ತೆರಳಿದ್ದು ಕುತೂಹಲ ಮೂಡಿಸಿತ್ತು. ಮೇ 30 ರಂದು, ಶಾರುಖ್ ಐಪಿಎಲ್ ಟ್ರೋಫಿಯನ್ನು ಗೆದ್ದ ನಂತರ ಮಗಳ ಜತೆ ಮುಂಬೈನ ಕಲಿನಾ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದರು.

ಆರ್ಯನ್ ಮತ್ತು ಸುಹಾನಾ ವಿಮಾನ ನಿಲ್ದಾಣದಲ್ಲಿ ಒಂದೇ ಕಾರಿನಲ್ಲಿ ಬಂದಿರುವುದು ಕಂಡುಬಂದಿತ್ತು. ಅವರೊಂದಿಗೆ ಗೌರಿ ಖಾನ್, ಪೂಜಾ ಮತ್ತು ಅವರ ಇಡೀ ತಂಡವಿತ್ತು. ನಟ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚಂಟ್‌ ಅವರ ವಿವಾಹಪೂರ್ವ ಕ್ರೂಸ್ ಪಾರ್ಟಿಗೆ ಹೋಗುತ್ತಿದ್ದಾರೆ ಎನ್ನಲಾಗಿತ್ತು. ಆದರೀಗ ಸಿನಿಮಾ ಶೂಟಿಂಗ್‌ಗೆ ಹೋಗಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ: Shah Rukh Khan : ಶಾರುಖ್​ ಖಾನ್ ಆರೋಗ್ಯದಲ್ಲಿ ಏರುಪೇರು; ಆಸ್ಪತ್ರೆಗೆ ದಾಖಲು

ಈ ಚಿತ್ರವನ್ನು ಶಾರುಖ್ ಅವರ ರೆಡ್ ಚಿಲ್ಲೀಸ್ ಎಂಟರ್‌ಟೈನ್‌ಮೆಂಟ್ ಮತ್ತು ಅವರ ಪಠಾಣ್ ನಿರ್ದೇಶಕ ಸಿದ್ಧಾರ್ಥ್ ಆನಂದ್ ಅವರ ಮಾರ್ಫ್ಲಿಕ್ಸ್ ಪಿಕ್ಚರ್ಸ್ ಸಹ-ನಿರ್ಮಾಣ ಮಾಡಿದ್ದಾರೆ.

ಇನ್ನು ಶಾರುಖ್‌ ಮಗಳು ಕಳೆದ ವರ್ಷ ಬಿಡುಗಡೆಯಾದ ʻದಿ ಆರ್ಚೀಸ್ʼ (The Archies) ಸಿನಿಮಾ ಮೂಲಕ ಬಣ್ಣದ ಲೋಕ ಪ್ರವೇಶಿಸಿದರು. ಜೋಯಾ ಅಖ್ತರ್ ಮತ್ತು ರೀಮಾ ಕಾಗ್ತಿ ನಿರ್ದೇಶನದ ‘ದಿ ಆರ್ಚೀಸ್’ ಸಿನಿಮಾದಲ್ಲಿ ಸುಹಾನಾ ಜತೆಗೆ ಅಮಿತಾಭ್‌ ಬಚ್ಚನ್ ಮತ್ತು ಜಯಾ ಬಚ್ಚನ್ ಅವರ ಮೊಮ್ಮಗ ಅಗಸ್ತ್ಯ ನಂದಾ ಕೂಡ ನಟಿಸಿದ್ದರು. ಈ ವೇಳೆ ಅವರಿಬ್ಬರು ಡೇಟಿಂಗ್ ನಡೆಸುತ್ತಿದ್ದರು ಎನ್ನುವ ಗುಸುಗುಸು ಹಬ್ಬಿತ್ತು. ಆದರೆ ಈ ಬಗ್ಗೆ ಇನ್ನೂ ಸ್ಪಷ್ಟನೆ ಸಿಕ್ಕಿಲ್ಲ. ಸುಹಾನಾ ಖಾನ್‌ ಅಭಿನಯದ ಮೊದಲ ಚಿತ್ರ ‘ದಿ ಆರ್ಚೀಸ್’ ಒಟಿಟಿಯಲ್ಲಿ ತೆರೆಕಂಡು ಪ್ರೇಕ್ಷಕರಿಂದ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿತ್ತು.

Continue Reading
Advertisement
Bangalore Rain
ಕರ್ನಾಟಕ1 min ago

Bangalore Rain: ಬೆಂಗಳೂರಲ್ಲಿ ವರುಣನ ಅಬ್ಬರ; ಅಂಡರ್ ಪಾಸ್‌ನಲ್ಲಿ ಸಿಲುಕಿದ ಬಸ್‌, 20 ಪ್ರಯಾಣಿಕರ ರಕ್ಷಣೆ

Kannada New Movie
ಸಿನಿಮಾ3 mins ago

Kannada New Movie: ಎಸ್. ನಾರಾಯಣ್ ನಿರ್ದೇಶನದ ಹೊಸ ಚಿತ್ರದಲ್ಲಿ ಒಂದಾದ ದುನಿಯಾ ವಿಜಯ್, ಶ್ರೇಯಸ್ ಮಂಜು

Koppal Lok Sabha Constituency
ಕೊಪ್ಪಳ6 mins ago

Koppal Lok Sabha Constituency: ಮಾಜಿ ಶಾಸಕರ ಪುತ್ರರ ನಡುವಿನ ಸ್ಪರ್ಧೆಯಲ್ಲಿ ಯಾರಾಗುವರು ಸಂಸದ?

kolar lok sabha constituency
ಪ್ರಮುಖ ಸುದ್ದಿ33 mins ago

Kolar lok sabha constituency : ಕೋಲಾರವನ್ನು ವಾಪಸ್​ ತನ್ನ ತೆಕ್ಕೆಗೆ ತೆಗೆದುಕೊಳ್ಳುವುದೇ ಕಾಂಗ್ರೆಸ್​

Money Guide
ಮನಿ-ಗೈಡ್34 mins ago

Money Guide: ಗೃಹಸಾಲದ ಕಂತು ಪೂರ್ತಿಯಾಯ್ತೆ? ನಿಲ್ಲಿ, ನಿಮ್ಮ ಜವಾಬ್ದಾರಿ ಇನ್ನೂ ಇದೆ!

mandya lok sabha constituency
ಪ್ರಮುಖ ಸುದ್ದಿ37 mins ago

Mandya Lok Sabha Constituency : ಜಿದ್ದಾಜಿದ್ದಿನ ಸ್ಪರ್ಧೆಯಲ್ಲಿ ಕುಮಾರಸ್ವಾಮಿಗೆ ಗೆಲುವು ಸಿಗುವುದೇ?

Bellary Lok Sabha Constituency
ಬಳ್ಳಾರಿ59 mins ago

Bellary Lok Sabha Constituency: ಶ್ರೀರಾಮುಲು vs ತುಕಾರಾಮ್;‌ ಗಣಿ ನಾಡಲ್ಲಿ ಯಾರು ಧಣಿ?

YouTube channels
ವೈರಲ್ ನ್ಯೂಸ್1 hour ago

YouTube channels: ಅತಿ ಹೆಚ್ಚು ಸಬ್‌ಸ್ಕ್ರೈಬರ್‌ಗಳನ್ನು ಹೊಂದಿರುವ ಟಾಪ್‌ 10 ಯುಟ್ಯೂಬ್‌ ಚಾನೆಲ್‌ಗಳಿವು!

Highest Paying Companies
ವಾಣಿಜ್ಯ1 hour ago

Highest Salary Paying Companies: ಎಂಜಿನಿಯರ್‌ಗಳಿಗೆ ಅತೀ ಹೆಚ್ಚು ಸಂಬಳ ಕೊಡುವ ಕಂಪನಿಗಳ ಪಟ್ಟಿ ಇಲ್ಲಿದೆ

Pro-Palestinian Protest
ಕರ್ನಾಟಕ1 hour ago

Pro-Palestinian Protest: ಬೆಂಗಳೂರಲ್ಲಿ ಪ್ಯಾಲೆಸ್ತೀನ್ ಬೆಂಬಲಿಸಿ ಪ್ರತಿಭಟನೆ; ಮಹಿಳೆಯರು ಸೇರಿ ಹಲವರು ವಶಕ್ಕೆ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ10 hours ago

Karnataka Rain : ವೀಕೆಂಡ್‌ ಮೋಜಿಗೆ ವರುಣ ಅಡ್ಡಿ; ಭಾನುವಾರ ಸಂಜೆಗೆ ಮಳೆ ಕಾಟ

Liquor ban
ಬೆಂಗಳೂರು1 day ago

Liquor Ban : ಮುಂದಿನ ಏಳು ದಿನಗಳಲ್ಲಿ ನಾಲ್ಕೂವರೆ ದಿನ ಬಾರ್ ಕ್ಲೋಸ್; ಎಣ್ಣೆ ಸಿಗೋದು ಯಾವ ದಿನ?

Assault Case in Shivamogga
ಕ್ರೈಂ3 days ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ5 days ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

tumkur murder
ತುಮಕೂರು5 days ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

Karnataka Weather Forecast
ಮಳೆ6 days ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ1 week ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

Basavanagudi News
ಬೆಂಗಳೂರು1 week ago

Basavanagudi News : ಪೂಜಾ ಸಾಮಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

Karnataka Rain
ಮಳೆ1 week ago

Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

dina bhavishya read your daily horoscope predictions for May 23 2024
ಭವಿಷ್ಯ2 weeks ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

ಟ್ರೆಂಡಿಂಗ್‌