Navaratri Dandiya: ನವರಾತ್ರಿ ದಾಂಡಿಯಾ ಸಂಭ್ರಮಕ್ಕಷ್ಟೇ ಅಲ್ಲ, ಆರೋಗ್ಯಕ್ಕೂ ಹೇಗೆ ಪ್ರಯೋಜನ ನೋಡಿ! - Vistara News

ಆರೋಗ್ಯ

Navaratri Dandiya: ನವರಾತ್ರಿ ದಾಂಡಿಯಾ ಸಂಭ್ರಮಕ್ಕಷ್ಟೇ ಅಲ್ಲ, ಆರೋಗ್ಯಕ್ಕೂ ಹೇಗೆ ಪ್ರಯೋಜನ ನೋಡಿ!

Navaratri Dandiya: ಹಬ್ಬದ ನೆವದಲ್ಲಿ ಹೆಚ್ಚಿದ್ದ ಕೊಬ್ಬನ್ನು ಕರಗಿಸಲು, ಒತ್ತಡ ಕಡಿಮೆ ಮಾಡಲು, ಕಾಲು, ತೋಳುಗಳಿಗೆ ಮಾತ್ರವಲ್ಲದೆ ಇಡೀ ದೇಹದ ವ್ಯಾಯಾಮಕ್ಕೆ ಅನುಕೂಲವಾದಂಥದ್ದು ದಾಂಡಿಯಾ. ನವರಾತ್ರಿಯ ದಾಂಡಿಯಾದಲ್ಲಿ (dandiya) ಪಾಲ್ಗೊಳ್ಳುವ ಲಾಭಗಳೇನು ಎಂಬುದನ್ನು ನೋಡೋಣ.

VISTARANEWS.COM


on

Dandiya dance
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವರಾತ್ರಿಯೆಂದರೆ ಭಾರತದ ಉದ್ದಗಲಕ್ಕೂ ನಾನಾ ರೀತಿಯಲ್ಲಿ ಆಚರಣೆ ನಡೆಯುತ್ತದೆ. ಕೆಲವೆಡೆ ಗೊಂಬೆ ಕೂರಿಸಿದರೆ, ಕೆಲವೆಡೆ ಬೃಹತ್‌ ಮೂರ್ತಿಯನ್ನಿಟ್ಟು ದುರ್ಗಾಪೂಜೆ. ಕೆಲವೆಡೆ ಉಪವಾಸ-ವ್ರತ, ಹಲವೆಡೆ ತರಹೇವಾರಿ ತಿಂಡಿಗಳ ಮೇಳ. ಇನ್ನು ಕೆಲವು ಭಾಗಗಳಲ್ಲಿ ಬಣ್ಣದ ಧಿರಿಸುಗಳನ್ನು ಧರಿಸಿ, ರಂಗಿನ ಕೋಲುಗಳನ್ನು ಹಿಡಿದು ದಾಂಡಿಯಾ (Navaratri Dandiya) ಮಾಡುವ ಸಮಯ. ಗುಜರಾತ್‌ನ ಜನಪದೀಯ ಲಯಗಳಿಗೆ ಸಾಂಪ್ರದಾಯಿಕ ಅಲಂಕಾರದಲ್ಲಿ, ಬಣ್ಣದ ಕೋಲಿನೊಂದಿಗೆ ಹೆಜ್ಜೆ ಹಾಕುವ ಪದ್ಧತಿ ಈಗ ಭಾರತದ ಹಲವೆಡೆಗಳಿಗೆ ವ್ಯಾಪಿಸಿದೆ.

ಯಾವುದೇ ಕಲೆಗಳು ಮನಕ್ಕೆ ಮುದ ನೀಡುತ್ತವೆ. ಅದರಲ್ಲೂ ಸರಳ ಲಯಕ್ಕೆ ಸೊಬಗಿನಿಂದ ಹೆಜ್ಜೆ ಹಾಕುವುದು ಮನಸ್ಸಿನ ಒತ್ತಡ ಕಡಿಮೆ ಮಾಡುವ ಅದ್ಭುತವಾದ ಮಾರ್ಗ. ಹೆಣ್ಣು-ಗಂಡೆಂಬ ಭೇದವಿಲ್ಲದೆ, ಮಕ್ಕಳು-ಮುದುಕರೆಂಬ ವ್ಯತ್ಯಾಸವಿಲ್ಲದೆ ತಾಸುಗಟ್ಟಲೆ ನರ್ತಿಸುವುದು ಮನಸ್ಸಿಗೆ ಮಾತ್ರವಲ್ಲ, ದೇಹಕ್ಕೂ ಅಗತ್ಯ ವ್ಯಾಯಾಮ ನೀಡುತ್ತದೆ. ಸ್ನೇಹಿತರು ಬಣ್ಣದ ಕೋಲು ಹಿಡಿದು ಕುಣಿಯುವಾಗ ಎದುರಾದರೆ ಅಥವಾ ಇಲ್ಲೆಲ್ಲೊ ಸಿಕ್ಕವರೇ ಮುಂದೆ ಸ್ನೇಹಿತರಾದರೆ- ಹೀಗೆ ಹಬ್ಬದ ಬೆನ್ನಿಗಿರುವ ಕಲೆಯೊಂದು ಬದುಕಿನ ಆಯಾಮವನ್ನೂ ಬದಲಿಸಬಲ್ಲದು.

ಇದನ್ನೂ ಓದಿ | Dandiya Fashion: ನವರಾತ್ರಿಯ ದಾಂಡಿಯಾ ಸಂಭ್ರಮಕ್ಕೆ ಸಾಥ್‌ ನೀಡುವ 3 ಟ್ರೆಡಿಷನಲ್‌ ಎಥ್ನಿಕ್‌ವೇರ್ಸ್

Dandiya by childrens

ಹಬ್ಬದ ನೆವದಲ್ಲಿ ಹೆಚ್ಚಿದ್ದ ಕೊಬ್ಬನ್ನು ಕರಗಿಸಲು, ಒತ್ತಡ ಕಡಿಮೆ ಮಾಡಲು, ಕಾಲು, ತೋಳುಗಳಿಗೆ ಮಾತ್ರವಲ್ಲದೆ ಇಡೀ ದೇಹದ ವ್ಯಾಯಾಮಕ್ಕೆ ಅನುಕೂಲವಾದಂಥದ್ದು ದಾಂಡಿಯಾ. ಹೃದಯದ ಕ್ಷಮತೆಯನ್ನೂ ಹೆಚ್ಚಿಸುವಂಥ ಸರಳ ಕಾರ್ಡಿಯೊ ಕೂಡಾ ಹೌದು. ನವರಾತ್ರಿಯ ನೆವದಲ್ಲಿ ದಾಂಡಿಯಾದಲ್ಲಿ (dandiya) ಪಾಲ್ಗೊಳ್ಳುವ ಲಾಭಗಳೇನು ಎಂಬುದನ್ನು ನೋಡೋಣ.

ಹೃದಯಕ್ಕೆ ಪೂರಕ

ದಾಂಡಿಯಾ ಆಡುವುದಕ್ಕೆ ದೊಡ್ಡ ನರ್ತಕರೇ ಆಗಬೇಕೆಂದಿಲ್ಲ ಅಥವಾ ಅದೇನು ನರ್ತಿಸುವ ಸ್ಪರ್ಧೆಯೂ ಅಲ್ಲ. ಸರಳ ಲಯಕ್ಕೆ ಒಂದಿಷ್ಟು ಹೆಜ್ಜೆ ಹಾಕುವುದಕ್ಕೆ ಬಂದರೆ ಸಾಕು. ಹೀಗೆ ಆವರ್ತನಗಳಿಗೆ ಹೆಜ್ಜೆ ಹಾಕುವುದರಿಂದ ದೇಹದಲ್ಲಿ ರಕ್ತ ಸಂಚಾರ ವೃದ್ಧಿಸುತ್ತದೆ. ಇದರಿಂದ ಉಸಿರಾಟವೂ ತೀವ್ರವಾಗಿ, ಹೆಚ್ಚಿನ ಆಮ್ಲಜನಕ ಪೂರೈಕೆಯಾಗುತ್ತದೆ. ಇವೆಲ್ಲವುಗಳ ಪರಿಣಾಮ, ಹೃದಯಕ್ಕೆ ಅಗತ್ಯವಾದ ಕಾರ್ಡಿಯೊ ವ್ಯಾಯಾಮದಂತೆ ಇದು ಪರಿಣಾಮ ಬೀರುತ್ತದೆ

ಬಲವರ್ಧನೆ

ದೇಹ ಮತ್ತು ಮನಸ್ಸುಗಳ ಸಮನ್ವಯಕ್ಕೆ ಇಂದಿನ ದಿನಗಳಲ್ಲಿ ಬಹಳಷ್ಟು ಮಹತ್ವವಿದೆ. ದೇಹದ ಒಂದೊಂದೇ ಸ್ನಾಯುಗಳನ್ನು ಗುರಿಯಾಗಿಸಿ ಬಲವರ್ಧನೆ ಮಾಡುವುದು ಬೇರೆ. ಅದಕ್ಕೆ ಜಿಮ್‌ ಅಥವಾ ವ್ಯಾಯಾಮ ತರಗತಿಗೆ ಸೇರುವುದು ಅಗತ್ಯ. ಇಲ್ಲಿ ಹಾಗಲ್ಲ, ಕೈ-ಕಾಲುಗಳ ಚಲನೆಯ ಜೊತೆಗೆ ಮನಸ್ಸಿನ ಸಮನ್ವಯವೆಂಬ ಅತಿ ಸಾಮಾನ್ಯ ಪ್ರಕ್ರಿಯೆಯಷ್ಟೇ ಜರುಗುವುದು. ಆದರೆ ದೇಹದ ದೊಡ್ಡ ಸ್ನಾಯುಗಳ ಬಲವರ್ಧನೆಗೆ ಇದು ಸಹಕಾರಿಯಾಗುತ್ತದೆ.

ತೂಕ ಇಳಿಕೆ

ಯಾವುದೇ ವ್ಯಾಯಾಮವನ್ನು ಕ್ರಮಬದ್ಧವಾಗಿ ಮಾಡಿದರೆ, ದೇಹದಲ್ಲಿ ಒಂದಿಷ್ಟು ಕೊಬ್ಬು ಕರಗುವುದು ನಿಶ್ಚಿತ. ದಾಂಡಿಯಾವನ್ನು ಸಹ ವ್ಯಾಯಾಮವೆಂದೇ ಪರಿಗಣಿಸಿ, ನಿಯಮಿತವಾಗಿ ಮಾಡಿದರೆ ಅಥವಾ ಅದಕ್ಕೆಂದೇ ಇರುವ ಕ್ಲಾಸುಗಳಿಗೆ ಸೇರಿದರೆ ಒಂದಿಷ್ಟು ತೂಕ ಇಳಿಯುವುದು ಖಚಿತ. ಹಬ್ಬದ ಹೊತ್ತಿನಲ್ಲಿ ಒಂದೆರಡು ದಿನ ಮಾಡಿದ್ದಕ್ಕೆ ತೂಕ ಇಳಿಯುವುದೆಂಬ ಭ್ರಮ ಅನಗತ್ಯ. ಇದಕ್ಕೆ ಹೆಚ್ಚಿನ ಅಭ್ಯಾಸ ಬೇಕು. ಅದರಲ್ಲೂ, ನವರಾತ್ರಿಯ ನೆವದಲ್ಲಿ ಹಲವು ಬಗೆಯ ಸಿಹಿಗಳನ್ನು ತಿನ್ನುವಾಗಲಂತೂ ಒಂಬತ್ತೂ ದಿನ ತಪ್ಪದೆ ದಾಂಡಿಯ ಆಡುವುದು ಅನುಕೂಲವಾಗಬಹುದು.

ನಮ್ಯತೆ ವೃದ್ಧಿ

ಕೆಳಗೆ ಕೂರುವುದಕ್ಕಾಗದು, ನೆಲಕ್ಕೆ ಕೈ ಕೊಡದೆ ಮೇಲೆ ಏಳುವುದಕ್ಕಾಗದು ಎಂದೆಲ್ಲಾ ವಯಸ್ಸಾದವರು ಹೇಳಿದರೆ ಹೆಚ್ಚಲ್ಲ. ಆದರೆ ನಲವತ್ತರ ಒಳಗಿನವರೇ ಈ ಮಾತುಗಳನ್ನು ಹೇಳುವಾಗ, ದೇಹದ ಸ್ನಾಯುಗಳ ನಮ್ಯತೆ ಅಥವಾ ಫ್ಲೆಕ್ಸಿಬಿಲಿಟಿ ಕಡಿಮೆಯಾಗಿರುವುದು ತಿಳಿಯುತ್ತದೆ. ದೈಹಿಕ ಕೆಲಸಗಳು ಕಡಿಮೆಯಾದಂತೆ ದೇಹ ಬಿಗಿಯುವುದು ಸಹಜ. ಅವಕ್ಕೆಲ್ಲ ಉಪಾಯವೆಂದರೆ ಇಂಥ ನೃತ್ಯಗಳಲ್ಲಿ ತೊಡಗಿಸಿಕೊಳ್ಳುವುದು. ಇದೀಗ ವ್ಯಾಯಾಮ ಅನಿಸದೆಯೂ ನಮ್ಮ ದೇಹದ ಬಿಗಿಯನ್ನು ಕಳೆದು, ನಮ್ಯತೆಯನ್ನು ಹೆಚ್ಚಿಸುತ್ತದೆ.

ಇದನ್ನೂ ಓದಿ | Navaratri Yellow Colour Fashion Tips: ನವರಾತ್ರಿ 5 ನೇ ದಿನದ ಹಳದಿ ವರ್ಣದ ಎಥ್ನಿಕ್‌ಲುಕ್‌ ಜಾದೂ

ಮನಸ್ಸಿನ ಬಲವರ್ಧನೆ

ಈವರೆಗೆ ಹೇಳಿದ್ದೆಲ್ಲಾ ದೈಹಿಕ ಪ್ರಯೋಜನಗಳಾದವು. ಇದರಷ್ಟೇ ಅಥವಾ ಇದಕ್ಕೂ ಮೀರಿ ಮಾನಸಿಕ ಲಾಭಗಳು ಹಲವಾರಿವೆ. ಸಾಮಾಜಿಕ ತಾಣಗಳ ಭರಾಟೆಯಲ್ಲಿ ತಾನೊಬ್ಬ ಸಮಾಜಜೀವಿ ಎನ್ನುವುದನ್ನೇ ಮನುಷ್ಯ ಮರೆತಿರುವಾಗ- ಮತ್ತೆ ಸಮಾಜಮುಖಿಯಾಗಲು ಇಂಥ ಕೂಟಗಳು ಪ್ರೇರಣೆ ನೀಡುತ್ತವೆ. ಬಂಧು-ಮಿತ್ರರ ಜೊತೆಗಿನ ಭೇಟಿ, ಒಟ್ಟಿಗೇ ನಲಿಯುವುದು, ತಿನ್ನುವುದು- ಇವೆಲ್ಲಾ ಸಾಮಾಜಿಕ ನಂಟುಗಳನ್ನು ಬೆಸೆಯುತ್ತವೆ. ಸಂಬಂಧಗಳು ವೃದ್ಧಿಸುತ್ತವೆ. ಇವೆಲ್ಲವುಗಳ ಪರಿಣಾಮ ಮನಸ್ಸಿನ ಭಾರವೂ ಇಳಿಯುತ್ತದೆ, ಒತ್ತಡ ತಾನೇತಾನಾಗಿ ಕರಗುತ್ತದೆ… ಏನು! ದಾಂಡಿಯಾ ಆಡುವುದಕ್ಕೆ ಸಿದ್ಧವೇ?

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಆರೋಗ್ಯ

Egg Benefits: ನೀವು ಮೊಟ್ಟೆ ಪ್ರಿಯರೆ? ಹಾಗಾದರೆ ಮೊಟ್ಟೆ ತಿನ್ನಬಹುದು ಎಂಬುದೂ ಅರಿವಿರಲಿ!

ಬಹಳಷ್ಟು ಮನೆಗಳಲ್ಲಿ ನಿತ್ಯದ ಬೆಳಗಿನ ಆಹಾರವಾಗಿ ಮೊಟ್ಟೆ ಸೇವನೆ ರೂಢಿಯಲ್ಲಿದೆ. ಬೆಳಗ್ಗೆದ್ದ ಕೂಡಲೇ ಉಪಹಾರಕ್ಕೆ ಮೊಟ್ಟೆಯ ಆಮ್ಲೆಟ್‌ ಬಹಳ ಸರಳವೂ ಸುಲಭವೂ ಆಗಿ ಮಾಡಿಕೊಳ್ಳಬಹುದಾದ್ದರಿಂದ ಅನೇಕರು ಇದನ್ನು ಅವಲಂಬಿಸಿರುತ್ತಾರೆ. ಹೆಚ್ಚು ಶ್ರಮ ಬೇಡದ, ಪೌಷ್ಟಿಕಾಂಶವೂ ಇರುವ ಆಹಾರ ಇದಾದ್ದರಿಂದ ಯಾವ ಯೋಚನೆಯೂ ಇಲ್ಲದೆ, ಮೊಟ್ಟೆಯ (Egg Benefits) ಬಗೆಬಗೆಯ ಆಹಾರಗಳನ್ನು ನಿತ್ಯವೂ ತಯಾರಿಸುತ್ತಾರೆ. ಆದರೆ…

VISTARANEWS.COM


on

Egg Benefits
Koo

ಮೊಟ್ಟೆ ಅತ್ಯಂತ ಪೌಷ್ಟಿಕವಾದ ಆಹಾರಗಳಲ್ಲಿ ಒಂದು ಎಂಬುದರ ಬಗ್ಗೆ ಯಾವ ಅನುಮಾನಗಳೂ ಇಲ್ಲ. ಇದರಲ್ಲಿ ದೇಹಕ್ಕೆ ಅಗತ್ಯವಾದ ಸಾಕಷ್ಟು ಒಳ್ಳೆಯ ಪೋಷಕಾಂಶಗಳು ಇರುವ ಹಾಗೆಯೇ ಕೊಬ್ಬೂ ಇವೆ. ಬಹಳಷ್ಟು ಮನೆಗಳಲ್ಲಿ ನಿತ್ಯದ ಬೆಳಗಿನ ಆಹಾರವಾಗಿ ಮೊಟ್ಟೆ ಸೇವನೆ ರೂಢಿಯಲ್ಲಿದೆ. ಬೆಳಗ್ಗೆದ್ದ ಕೂಡಲೇ ಉಪಹಾರಕ್ಕೆ ಮೊಟ್ಟೆಯ ಆಮ್ಲೆಟ್‌ ಬಹಳ ಸರಳವೂ ಸುಲಭವೂ ಆಗಿ ಮಾಡಿಕೊಳ್ಳಬಹುದಾದ್ದರಿಂದ ಅನೇಕರು ಇದನ್ನು ಅವಲಂಬಿಸಿರುತ್ತಾರೆ. ಹೆಚ್ಚು ಶ್ರಮ ಬೇಡದ, ಪೌಷ್ಟಿಕಾಂಶವೂ ಇರುವ ಆಹಾರ ಇದಾದ್ದರಿಂದ ಯಾವ ಯೋಚನೆಯೂ ಇಲ್ಲದೆ, ಮೊಟ್ಟೆಯ ಬಗೆಬಗೆಯ ಆಹಾರಗಳನ್ನು ನಿತ್ಯವೂ ತಯಾರಿಸುತ್ತಾರೆ. ತೂಕ ಇಳಿಸುವ ಮಂದಿ, ದೇಹದಾರ್ಢ್ಯ ಬಲಪಡಿಸುವ ಮಂದಿ, ಜಿಮ್‌ಗೆ ಹೋಗಿ ವರ್ಕೌಟ್‌ ಮಾಡುವ ಮಂದಿ ಎಲ್ಲರಿಗೂ ಮೊಟ್ಟೆಯೇ ಆರಾಧ್ಯ ದೈವ. ಧಾವಂತದ ಬದುಕಿಗೆ ಹೇಳಿ ಮಾಡಿಸಿದ ಆಹಾರ ಇದಾದರೂ, ಮೊಟ್ಟೆಯನ್ನು ಎಷ್ಟು ತಿನ್ನಬೇಕು, ಹೇಗೆ ತಿನ್ನಬೇಕು ಎಂಬ ಬಗ್ಗೆ ಹೆಚ್ಚು ಯಾರೂ ತಲೆಕೆಡಿಸಿಕೊಳ್ಳುವುದಿಲ್ಲ. ಮೊಟ್ಟೆ ಒಳ್ಳೆಯದೆಂದು ಕೇವಲ ಮೊಟ್ಟೆಯೊಂದನ್ನೇ ತಿಂದರೆ ಅದರಿಂದ ಖಂಡಿತ ಅಡ್ಡ ಪರಿಣಾಮಗಳೂ ಆದೀತು ಎಂಬುದನ್ನು ಪ್ರತಿಯೊಬ್ಬರೂ ನೆನಪಿಡಬೇಕು. ಯಾಕೆಂದರೆ ಮೊಟ್ಟೆಯಲ್ಲಿ ಪ್ರೊಟೀನ್‌ ಇರುವಂತೆಯೇ, ನಮ್ಮ ದೇಹದಲ್ಲಿ ಕೊಲೆಸ್ಟೆರಾಲ್‌ ಕೂಡಾ ಹೆಚ್ಚಿಸುವ ಅಪಾಯವಿದೆ. ಹಾಗಾಗಿ ಮೊಟ್ಟೆ ಎಷ್ಟು ತಿನ್ನಬೇಕು, ಹೇಗೆ ತಿನ್ನಬೇಕು ಎಂಬ ಅರಿವು (Egg Benefits) ಅತ್ಯಂತ ಅಗತ್ಯ.

the egg

ಮೊಟ್ಟೆಯಲ್ಲಿ ಏನೇನಿವೆ?

ಪ್ರೊಟೀನ್‌ನ ಜೊತೆಜೊತೆಗೇ, ಪೊಟಾಶಿಯಂ, ನಿಯಾಸಿನ್‌, ರೈಬೋ ಫ್ಲೇವಿನ್‌, ಮೆಗ್ನೀಷಿಯಂ, ಸೋಡಿಯಂ, ಫಾಸ್ಪರಸ್‌, ಕಬ್ಬಿಣಾಂಶ, ಝಿಂಕ್ ಮತ್ತಿತರ ಖನಿಜಾಂಶಗಳೂ, ವಿಟಮಿನ್‌ ಎ, ವಿಟಮಿನ್‌ ಡಿ, ವಿಟಮಿನ್‌ ಬಿ6, ಬಿ12, ಫೋಲಿಕ್‌ ಆಸಿಡ್‌, ಪ್ಯಾಂಟೋಥೆನಿಕ್‌ ಆಸಿಡ್‌, ಥೈಮೀನ್‌ ಇತ್ಯಾದಿಗಳೆಲ್ಲವೂ ಇವೆ. ಇವೆಲ್ಲವುಗಳ ಜೊತೆಗೆ, ಒಂದು ಮೊಟ್ಟೆಯಲ್ಲಿ 180ರಿಂದ 300 ಮಿಲಿಗ್ರಾಂಗಳಷ್ಟು ಕೊಲೆಸ್ಟೆರಾಲ್‌ ಇವೆ. ಇದು ಮೊಟ್ಟೆಯ ಹಳದಿ ಭಾಗವಾದ ಯೋಕ್‌ನಲ್ಲಿರುವುದರಿಂದ ಮೊಟ್ಟೆ ತಿನ್ನುವಾಗ ಇದನ್ನು ನೆನಪಿನಲ್ಲಿಟ್ಟಿರಬೇಕು. ಪ್ರತಿ ದಿನಕ್ಕೆ 300 ಎಂಜಿಗಿಂತ ಹೆಚ್ಚು ಕೊಲೆಸ್ಟೆರಾಲ್‌ ಸೇವನೆ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲವೆಂದು ತಜ್ಞರ ಲೆಕ್ಕಾಚಾರ. ಮೊಟ್ಟೆಯ ಬಿಳಿಲೋಳೆಯಲ್ಲಿ ಯಾವ ಕೊಲೆಸ್ಟೆರಾಲ್‌ ಕೂಡಾ ಇರುವುದರಿಂದ ಇದನ್ನು ಸೇವಿಸುವುದರಿಂದ ತೊಂದರೆಯಿಲ್ಲ. ಆದರೆ ಹಳದಿ ಭಾಗವನ್ನು ಸೇರಿಸಿಕೊಂಡು ನಿತ್ಯವೂ ಆಮ್ಲೆಟ್‌ ಮಾಡಿ ಸೇವಿಸುತ್ತಿದ್ದರೆ ಯೋಚನೆ ಮಾಡಲೇಬೇಕು. ಹೆಚ್ಚು ತಿನ್ನುವುದರಿಂದ ಕೊಲೆಸ್ಟೆರಾಲ್‌ ಅಗತ್ಯಕ್ಕಿಂತ ಹೆಚ್ಚು ದೇಹ ಸೇರಿ, ಹೃದಯದ ಸಮಸ್ಯೆ, ರಕ್ತದೊತ್ತಡ, ಪಾರ್ಶ್ವವಾಯು ಮತ್ತಿತರ ಸಮಸ್ಯೆಗಳು ಬರುವ ಅಪಾಯವೂ ಇವೆ.

Eggs with protein and micronutrients are also healthy for eyes Ophthalmia

ದಿನಕ್ಕೆ ಎಷ್ಟು ಮೊಟ್ಟೆ ತಿನ್ನಬಹುದು?

ಆರೋಗ್ಯಕರ ಆಹಾರ ಆಭ್ಯಾಸದ ಪ್ರಕಾರ, ಒಬ್ಬ ವ್ಯಕ್ತಿ ದಿನಕ್ಕೊಂದು ಮೊಟ್ಟೆಯಂತೆ ವಾರದಲ್ಲಿ ಮೂರರಿಂದ ನಾಲ್ಕು ಬಾರಿ ತಿನ್ನಬಹುದು. ಅಂದರೆ ವಾರಕ್ಕೆ ಹೆಚ್ಚೆಂದರೆ ನಾಲ್ಕು ಮೊಟ್ಟೆ ಸೇವನೆ ಆರೋಗ್ಯಕರ. ಮಕ್ಕಳು ದಿನಕ್ಕೊಂದರಂತೆ ಮೊಟ್ಟೆ ಸೇವಿಸಬಹುದು. ಹೃದ್ರೋಗ, ಅತಿಯಾದ ಕೊಲೆಸ್ಟೆರಾಲ್‌ ಇರುವ ಮಂದಿ ವಾರಕ್ಕೆ ಮೂರಕ್ಕಿಂತ ಹೆಚ್ಚು ಮೊಟ್ಟೆ ತಿನ್ನುವುದು ಒಳ್ಳೆಯದಲ್ಲ. ಆದರೆ ಮೊಟ್ಟೆಯ ಹಳದಿ ಭಾಗವನ್ನು ತೆಗೆದು ಕೇವಲ ಬಿಳಿ ಭಾಗವನ್ನು ಮಾತ್ರ ನೀವು ತಿನ್ನುವುದಾದರೆ ಈ ಸಂಖ್ಯೆಯನ್ನು ಅನುಸರಿಸಬೇಕಾಗಿಲ್ಲ.

ಇದನ್ನೂ ಓದಿ: Health Benefits Of Okra: ಬೆಂಡೆಕಾಯಿ ತಿನ್ನುತ್ತೀರಿ ನಿಜ; ಅದರಿಂದಾಗುವ ಪ್ರಯೋಜನಗಳೇನು ಗೊತ್ತಿದೆಯಾ?

Continue Reading

ಆರೋಗ್ಯ

World Thyroid Day: ಇಂದು ವಿಶ್ವ ಥೈರಾಯ್ಡ್‌ ದಿನ; ‘ಗಂಟಲ ಚಿಟ್ಟೆ’ಯ ಬಗ್ಗೆ ಈ ಸಂಗತಿ ನಿಮಗೆ ಗೊತ್ತೆ?

ಥೈರಾಯ್ಡ್‌ ಚೋದಕದ ಅಸಮತೋಲನದ ಸಮಸ್ಯೆ ವಿಶ್ವದೆಲ್ಲೆಡೆ ಯದ್ವಾತದ್ವಾ ಹೆಚ್ಚಿದೆ. ಹಾಗಾಗಿ ಥೈರಾಯ್ಡ್‌ ಆರೋಗ್ಯದ ಬಗ್ಗೆ ಹೆಚ್ಚಿನ ಅರಿವು ಮೂಡಿಸುವ ಉದ್ದೇಶದಿಂದ, ಮೇ 25ರಂದು ವಿಶ್ವ ಥೈರಾಯ್ಡ್‌ ದಿನವನ್ನು (World Thyroid Day) ಆಚರಿಸಲಾಗುತ್ತದೆ. ಈ ಹಿನ್ನೆಲೆಯಲ್ಲಿ ಥೈರಾಯ್ಡ್ ಕುರಿತ ಮಾಹಿತಿ ಇಲ್ಲಿದೆ.

VISTARANEWS.COM


on

World Thyroid Day
Koo

ಗಂಟಲ ಮುಂಭಾಗದಲ್ಲಿ ಸಣ್ಣ ಚಿಟ್ಟೆಯಂಥ ಗ್ರಂಥಿಯದು- ಹೆಸರು ಥೈರಾಯ್ಡ್‌ ಗ್ರಂಥಿ. ಗ್ರಂಥಿ ಚಿಕ್ಕದಾದರೂ ಅದರ ಕೆಲಸ ದೊಡ್ಡದು. ದೇಹದ ಚಯಾಪಚಯ ನಿರ್ವಹಿಸುವುದು, ಶಕ್ತಿ ಸಂಚಯನ, ಎಲ್ಲ ಚೋದಕಗಳ ಸಮತೋಲನ- ಹೀಗೆ ಒಂದಿಷ್ಟು ಮುಖ್ಯವಾದ ಕಾರ್ಯಗಳನ್ನಿದು ನೋಡಿಕೊಳ್ಳುತ್ತದೆ. ಬೇರೆಯ ಚೋದಕಗಳ ಮೇಲುಸ್ತುವಾರಿ ನೋಡಿಕೊಳ್ಳುವ ಹಾರ್ಮೋನಿನ ಸಮತೋಲನವೇ ತಪ್ಪಬಾರದಲ್ಲ. ಒಂದೊಮ್ಮೆ ತಪ್ಪಿದರೂ, ಅದರಿಂದ ದೇಹದ ಮೇಲಾಗುವ ಲಕ್ಷಣ ಮತ್ತು ಪರಿಣಾಮಗಳನ್ನು ಅರಿತುಕೊಂಡರೆ, ತ್ವರಿತವಾಗಿ ಚಿಕಿತ್ಸೆ ತೆಗೆದುಕೊಳ್ಳುವುದು ಸಾಧ್ಯ.
ಈ ನಿಟ್ಟಿನಲ್ಲಿ, ಥೈರಾಯ್ಡ್‌ ಕುರಿತಾಗಿ ಜನರಲ್ಲಿ ಜಾಗೃತಿ ಹೆಚ್ಚಿಸುವ ಉದ್ದೇಶದಿಂದ ಮೇ ತಿಂಗಳ 25ನೇ ದಿನವನ್ನು ವಿಶ್ವ ಥೈರಾಯ್ಡ್‌ ದಿನವೆಂದು (World Thyroid Day) ಗುರುತಿಸಲಾಗಿದೆ. ಎಂಥ ಲಕ್ಷಣಗಳ ಬಗ್ಗೆ ಜಾಗ್ರತೆ ವಹಿಸಬೇಕು? ಯಾವೆಲ್ಲ ಸಮಸ್ಯೆಗಳು ತಲೆದೋರಿದರೆ ಥೈರಾಯ್ಡ್‌ ಕ್ಷಮತೆಯ ಬಗ್ಗೆ ವೈದ್ಯರಲ್ಲಿ ಸಮಾಲೋಚನೆ ಅಗತ್ಯವಾಗುತ್ತದೆ? ಆರಂಭದಲ್ಲೇ ಈ ಸಮಸ್ಯೆಯನ್ನು ಪತ್ತೆ ಮಾಡಿ, ಚಿಕಿತ್ಸೆ ಪಡೆಯುವುದರ ಲಾಭಗಳೇನು ಎಂಬಿತ್ಯಾದಿ ವಿವರಗಳನ್ನು ಈ ಲೇಖನದಲ್ಲಿ ನೀಡಲಾಗಿದೆ.

Weight Loss Tips

ತೂಕದಲ್ಲಿ ವ್ಯತ್ಯಾಸ

ಯಾವುದೇ ಸರಿಯಾದ ಕಾರಣವಿಲ್ಲದಂತೆ ತೂಕದಲ್ಲಿ ವ್ಯತ್ಯಾಸವಾಗುತ್ತಿದೆ ಎಂದಾದರೆ ಎಚ್ಚರ ಅಗತ್ಯ. ಅಂದರೆ, ಆಹಾರ ಅಥವಾ ವ್ಯಾಯಾಮದಲ್ಲಿ ಯಾವುದೇ ವ್ಯತ್ಯಯವಾಗಿಲ್ಲದಿದ್ದರೂ ತೂಕ ಹೆಚ್ಚಿದೆ ಎಂದಾದರೆ ಹೈಪೋಥೈರಾಯ್ಡ್‌ (ಅಂದರೆ ಕಡಿಮೆ ಇಲ್ಲವೇ ಅಸಮರ್ಪಕ ಥೈರಾಯ್ಡ್‌ ಹಾರ್ಮೋನುಗಳು) ಇಲ್ಲವೆಂಬುದನ್ನು ಖಾತ್ರಿ ಪಡಿಸಿಕೊಳ್ಳಿ. ವ್ಯಾಯಾಮ ಹೆಚ್ಚಿಸಿಲ್ಲ, ತಿನ್ನುವುದನ್ನೂ ಕಡಿಮೆ ಮಾಡಿಲ್ಲ ಎಂದಾದರೂ ತೂಕ ಇಳಿಯುತ್ತಿದೆ ಎಂದಾದರೆ ಹೈಪರ್‌ (ಹೆಚ್ಚಿನ) ಥೈರಾಯ್ಡ್‌ ಇದೆಯೇ ಪರೀಕ್ಷಿಸಿಕೊಳ್ಳಿ.

Image Of Mental Health

ಸುಸ್ತು, ಆಯಾಸ

ರಾತ್ರಿಯಿಡೀ ಸರಿಯಾಗಿ ನಿದ್ದೆ ಮಾಡಿದ್ದರೂ ಬೆಳಗ್ಗೆ ಏಳುವಾಗ ಆಯಾಸ ಎನಿಸುತ್ತಿದೆ. ಊಟ-ಉಪಚಾರಗಳು ಸರಿಯಾಗಿಯೇ ಇದ್ದರೂ ಸುಸ್ತು ಬಿಡುತ್ತಿಲ್ಲ ಎಂದಾದರೆ ಥೈರಾಯ್ಡ್‌ ಪರೀಕ್ಷಿಸಿಕೊಳ್ಳುವುದು ಸೂಕ್ತ. ದೇಹದ ಚಯಾಪಚಯದಲ್ಲಿ ಏರಿಳಿತ ಆಗಿದ್ದಕ್ಕಾಗಿ ಕಾಡುವ ಸುಸ್ತು, ಆಯಾಸಗಳಿವು. ಥೈರಾಯ್ಡ್‌ ಏರಿಳಿತದ ಮುಖ್ಯ ಲಕ್ಷಣಗಳಲ್ಲಿ ಇದೂ ಒಂದು.

ಮೂಡ್‌ ಬದಲಾವಣೆ

ಥೈರಾಯ್ಡ್‌ ಅಸಮತೋಲನದಿಂದ ಮಾನಸಿನ ಆರೋಗ್ಯದಲ್ಲೂ ವ್ಯತ್ಯಾಸ ಕಾಣುವುದು ಸಹಜ. ಥೈರಾಯ್ಡ್‌ ಚೋದಕದ ಉತ್ಪಾದನೆ ಕಡಿಮೆಯಾದರೆ ಬೇಸರ, ಖಿನ್ನತೆ, ಶಕ್ತಿ ಸೋರಿದ ಭಾವಗಳು ಕಾಡುತ್ತವೆ. ಥೈರಾಯ್ಡ್‌ ಚೋದಕದ ಉತ್ಪಾದನೆ ಹೆಚ್ಚಾದರೆ, ಆತಂಕ, ಒತ್ತಡ, ಕಿರಿಕಿರಿ, ಕೋಪಗೊಳ್ಳುವ ಕ್ರಿಯೆಗಳು ಹೆಚ್ಚುತ್ತವೆ. ದೈನಂದಿನ ಚಟುವಟಿಕೆಯಲ್ಲಿ ಯಾವುದೇ ಬದಲಾವಣೆ ಇಲ್ಲದಿದ್ದರೂ ಮೂಡ್‌ ಮಾತ್ರ ಬದಲಾಗುತ್ತಿದೆ ಎಂದಾದರೆ ವೈದ್ಯರಲ್ಲಿ ಸಮಾಲೋಚನೆ ಅಗತ್ಯ.

Heart Health Tea Benefits

ಹೃದಯ ಬಡಿತ ಏರುಪೇರು

ಥೈರಾಯ್ಡ್‌ ಏರುಪೇರಾಗುವುದು ನೇರವಾಗಿ ಹೃದಯದ ಬಡಿತದ ಮೇಲೂ ಪರಿಣಾಮ ಬೀರುತ್ತದೆ. ಹೈಪೊ ಥೈರಾಯ್ಡ್‌ ಸಂದರ್ಭದಲ್ಲಿ ಬಡಿತ ನಿಧಾನವಾದರೆ, ಹೈಪರ್‌ ಥೈರಾಯ್ಡ್‌ ಇದ್ದಾಗ ಬಡಿತ ತೀವ್ರವಾಗುತ್ತದೆ. ಇವುಗಳನ್ನು ವೈದ್ಯರ ಮಾಮೂಲಿ ದೈಹಿಕ ತಪಾಸಣೆಯಲ್ಲೂ ಪತ್ತೆ ಮಾಡಬಹುದು. ಬಡಿತ ಜೋರಾಗಿದ್ದು ಅನುಭವಕ್ಕೂ ಬರಬಹುದು. ಹಾಗಾಗನಿ ನಿಯಮಿತವಾಗಿ ವೈದ್ಯರ ತಪಾಸಣೆ ಅಗತ್ಯ.

Hyperthyroidism

ಕುತ್ತಿಗೆ ದಪ್ಪ

ಥೈರಾಯ್ಡ್‌ ಸಮಸ್ಯೆ ಇದ್ದಾಗ ಕುತ್ತಿಗೆಯ ಭಾಗ ಊದಿಕೊಂಡಂತೆ ಕಾಣಬಹುದು. ಅಯೋಡಿನ್‌ ಕೊರತೆಯಾದಾಗ (ಗೊಯಿಟ್ರ್ ರೋಗ), ಥೈರಾಯ್ಡ್‌ ಹಿಗ್ಗಿದಾಗ ಅಥವಾ ಥೈರಾಯ್ಡ್‌ನಲ್ಲಿ ಟ್ಯೂಮರ್‌ಗಳಿದ್ದಾಗ ಕುತ್ತಿಗೆಯ ಭಾಗ ಊದಿಕೊಂಡಂತೆ ಅಥವಾ ದಪ್ಪವಾದಂತೆ ಕಾಣುತ್ತದೆ. ಹೀಗೆ ಕಂಡಾಗಲೂ ವೈದ್ಯರಲ್ಲಿ ತಪಾಸಣೆ ಮಾಡಿಸಿಕೊಳ್ಳುವುದು ಅಗತ್ಯ.

ಬಿಸಿ-ತಣ್ಣ ಹೆಚ್ಚು

ಈ ಎರಡೂ ಹೆಚ್ಚಾಗುತ್ತದೆ. ಚಯಾಪಚಯ ಹೆಚ್ಚಿದಾಗ ಅಥವಾ ಕಡಿಮೆಯಾದಾಗ ಉಷ್ಣತೆ ಮತ್ತು ಚಳಿ ಎರಡನ್ನೂ ಸಹಿಸಿಕೊಳ್ಳುವ ಸಾಮರ್ಥ್ಯ ಕಡಿಮೆಯಾಗುತ್ತದೆ. ವಾತಾವರಣದ ಉಷ್ಣತೆಗೆ ವಿರುದ್ಧವಾಗಿ ಚಳಿ ಅಥವಾ ಸೆಕೆಯ ಅನುಭವ ಆಗುತ್ತಿದ್ದರೆ, ಅತಿಯಾಗಿ ಬೆವರುತ್ತಿದ್ದರೆ, ಸೆಕೆ ಅಸಹನೀಯ ಎನಿಸಿದರೆ ಥೈರಾಯ್ಡ್‌ ಪರೀಕ್ಷಿಸಿಕೊಳ್ಳುವುದಕ್ಕೆ ಸಕಾಲ.

ಇದನ್ನೂ ಓದಿ: Fruit Juice Side Effects: ಹಣ್ಣು ತಿಂದರೆ ಒಳ್ಳೆಯದೋ, ಹಣ್ಣಿನ ಜ್ಯೂಸ್‌ ಕುಡಿದರೆ ಒಳ್ಳೆಯದೋ?

ಕೂದಲು, ಚರ್ಮ

ಇವುಗಳಲ್ಲೂ ವ್ಯತ್ಯಾಸ ಕಾಣುತ್ತದೆ. ಹೈಪೊ ಥೈರಾಯ್ಡ್‌ ಇದ್ದಾಗ ಕೂದಲು ಮತ್ತು ಚರ್ಮ ಒಣಗಿ ಒರಟಾಗುತ್ತವೆ. ಕೂದಲು ಉದುರುವುದು ಸಾಮಾನ್ಯ. ಹೈಪರ್‌ ಥೈರಾಯ್ಡ್‌ ಇದ್ದರೆ ಕೂದಲು ಉದುರಿ, ಸಪೂರವಾಗುತ್ತದೆ. ಕೂದಲು ಮತ್ತು ಚರ್ಮದ ಆರೋಗ್ಯ ಸರಿಯಾಗಿರುವುದಕ್ಕೂ ಥೈರಾಯ್ಡ್‌ ಚೋದಕಗಳು ಅಗತ್ಯವಾಗಿ ಬೇಕು.

Continue Reading

ಉತ್ತರ ಕನ್ನಡ

Uttara Kannada News: ಸಾಂಕ್ರಾಮಿಕ ರೋಗಗಳ ಜಾಗೃತಿ ಮೂಡಿಸಲು ಯಲ್ಲಾಪುರ ತಹಸೀಲ್ದಾರ್ ಸೂಚನೆ

Uttara Kannada News: ಮಳೆಗಾಲ ಪ್ರಾರಂಭವಾಗುತ್ತಿದ್ದು, ಕಲುಷಿತ ನೀರಿನಿಂದ ಹರಡುವ ಸಾಂಕ್ರಾಮಿಕ ರೋಗಗಳ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು ಎಂದು ಯಲ್ಲಾಪುರ ತಹಸೀಲ್ದಾರ್ ತನುಜಾ ಟಿ. ಸವದತ್ತಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

VISTARANEWS.COM


on

Yallapur Tehsildar Tanuja T savadatti instructed to create awareness about infectious diseases
Koo

ಯಲ್ಲಾಪುರ: ಮಳೆಗಾಲ ಪ್ರಾರಂಭವಾಗುತ್ತಿದ್ದು, ಕಲುಷಿತ ನೀರಿನಿಂದ ಹರಡುವ ಸಾಂಕ್ರಾಮಿಕ ರೋಗಗಳ (infectious diseases) ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಬೇಕು ಎಂದು ತಹಸೀಲ್ದಾರ್ ತನುಜಾ ಟಿ ಸವದತ್ತಿ (Uttara Kannada News) ಹೇಳಿದರು.

ಶುಕ್ರವಾರ ಮಿನಿ ವಿಧಾನಸೌಧದಲ್ಲಿ ಸಾಂಕ್ರಾಮಿಕ ಕಾಯಿಲೆಗಳ ನಿಯಂತ್ರಣ ಕುರಿತು ಇಲಾಖೆಗಳ ಸಮನ್ವಯ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಶುದ್ಧ ಕುಡಿಯುವ ನೀರು ಮತ್ತು ನೈರ್ಮಲ್ಯ ನಿರ್ವಹಣೆ ತುರ್ತು ಅವಶ್ಯಕತೆಯಾಗಿದೆ. ಗ್ರಾಮ ಪಂಚಾಯಿತಿ ಮತ್ತು ಪಟ್ಟಣ ಪಂಚಾಯಿತಿಗಳು ತಮ್ಮ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಟ್ಯಾಂಕ್‌ಗಳನ್ನು ಬ್ಲೀಚಿಂಗ್ ಪೌಂಡರ್ ಬಳಸಿ ಸ್ವಚ್ಛಗೊಳಿಸುವುದು, ಕುಡಿಯುವ ನೀರು ಕಲುಷಿತವಾಗದಂತೆ ಪೂರೈಕೆ ವ್ಯವಸ್ಥೆಯಲ್ಲಿ ಸೋರುವಿಕೆಗಳನ್ನು ಗುರುತಿಸಿ ತಕ್ಷಣ ದುರಸ್ತಿಗೊಳಿಸಬೇಕು. ಡೆಂಗ್ಯೂ, ಚಿಕುನ್‌ಗುನ್ಯ, ಮಲೇರಿಯಾ, ಆನೆಕಾಲುರೋಗ, ಮೆದುಳು ಜ್ವರಗಳ ಬಗ್ಗೆ ಕ್ಷೇತ್ರ ಮಟ್ಟದಲ್ಲಿ ಆಶಾ ಹಾಗೂ ಅಂಗನವಾಡಿ ಕಾರ್ಯಕರ್ತೆಯರು ಮಾಹಿತಿ ನೀಡಬೇಕು ಎಂದು ಸೂಚಿಸಿದರು.

ಇದನ್ನೂ ಓದಿ: Indian 2: ಜು.12ಕ್ಕೆ ಕಮಲ್ ಹಾಸನ್ ಅಭಿನಯದ ‘ಇಂಡಿಯನ್ 2’ ಚಿತ್ರ ರಿಲೀಸ್‌

ತಾಲೂಕು ಆರೋಗ್ಯಾಧಿಕಾರಿ ಡಾ. ನರೇಂದ್ರ ಪವಾರ ಮಾತನಾಡಿ, ಕಲುಷಿತ ನೀರಿನಿಂದ ವಾಂತಿ, ಭೇದಿ, ಅತಿಸಾರ ಭೇದಿ, ಕಾಲರಾ, ಕರುಳು ಬೇನೆ, ಕಾಮಾಲೆ ರೋಗಗಳು ಕಾಣಿಸಿಕೊಳ್ಳುವ ಸಂಭವ ಇರುತ್ತದೆ. ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಕಾಯಿಸಿ ಆರಿಸಿದ ನೀರನ್ನೇ ಕುಡಿಯುವುದು ಸೂಕ್ತ. ಇಲಾಖಾ ಸಿಬ್ಬಂದಿಗಳು ಮನೆ ಭೇಟಿ ನೀಡಿದಾಗ ಜ್ವರ ಮತ್ತು ಇತರೆ ಕಾಯಿಲೆಗಳಿದ್ದರೆ ಸರಿಯಾಗಿ ಮಾಹಿತಿ ನೀಡಬೇಕು ಎಂದ ಅವರು, ಓ.ಆರ್.ಎಸ್. ತಯಾರಿಸಿ ಬಳಸುವ ವಿಧಾನ, ಸೊಳ್ಳೆ ನಿಯಂತ್ರಣ, ವೈಯಕ್ತಿಕ ಸ್ವಚ್ಛತೆ, ಮನೆಯ ಸುತ್ತಮುತ್ತ ಶುಚಿತ್ವ ಕಾಪಾಡಿಕೊಳ್ಳುವ ಕುರಿತು ಸಾರ್ವಜನಿಕರು ಜಾಗೃತಿ ವಹಿಸಬೇಕು ಎಂದರು.

ಸಾಂಕ್ರಾಮಿಕ ರೋಗಗಳ ನಿಯಂತ್ರಣದಲ್ಲಿ ಎಲ್ಲ ಇಲಾಖೆಗಳ ಸಹಕಾರ ಮತ್ತು ಸಮನ್ವಯತೆ ಬಹಳ ಮುಖ್ಯವಾಗಿದೆ. ಪ್ರಾಥಮಿಕ ಆರೋಗ್ಯ ಕೇಂದ್ರಗಳ ವ್ಯಾಪ್ತಿಯಲ್ಲಿ ಕ್ಷಿಪ್ರ ಪ್ರತಿಕ್ರಿಯಾ ತಂಡ ರಚಿಸಲಾಗಿದ್ದು ಯಾವುದೇ ಗ್ರಾಮದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಾಯಿಲೆಗಳು ಕಂಡು ಬಂದರೆ ಅಲ್ಲಿಯೇ ಚಿಕಿತ್ಸೆ ನೀಡಲಾಗುತ್ತದೆ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ನಡೆದ ಲಸಿಕಾ ಕಾರ್ಯಪಡೆಯ ಸಭೆಯಲ್ಲಿ ಮಾತನಾಡಿದ ಜಿಲ್ಲಾ ಆರ್‌.ಸಿ.ಎಚ್.‌ ಅಧಿಕಾರಿ ಡಾ. ನಟರಾಜ್‌ ಕೆ., ಯಾವುದೇ ಮಗು ಲಸಿಕೆಯಿಂದ ವಂಚಿತವಾಗದಂತೆ ನೋಡಿಕೊಳ್ಳಬೇಕು. ಲಸಿಕೆಯಿಂದ ತಡೆಗಟ್ಟಬಹುದಾದ ರೋಗಗಳಲ್ಲಿ ದಡಾರ ಕೂಡ ಒಂದಾಗಿದ್ದು, ದಡಾರ ನಿರ್ಮೂಲನೆಗೆ ಗುರಿ ಹಾಕಿಕೊಳ್ಳಲಾಗಿದೆ ಎಂದು ತಿಳಿಸಿದರು.

ಇದನ್ನೂ ಓದಿ: Washing Machine Cleaning Tips: ವಾಷಿಂಗ್ ಮೆಷಿನ್ ಹೆಚ್ಚು ಬಾಳಿಕೆ ಬರಬೇಕೆ? ಈ ರೀತಿ ಸ್ವಚ್ಛಗೊಳಿಸಿ

ಸಭೆಯಲ್ಲಿ ಬಿಪಿಎಂ ಎಸ್‌.ಎಸ್‌. ಪಾಟೀಲ್‌ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು. ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಮಹೇಶ ತಾಳಿಕೋಟೆ ಸ್ವಾಗತಿಸಿದರು. ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಎಸ್‌.ಟಿ. ಭಟ್ಟ ವಂದಿಸಿದರು.

Continue Reading

ಲೈಫ್‌ಸ್ಟೈಲ್

Washing Machine Cleaning Tips: ವಾಷಿಂಗ್ ಮೆಷಿನ್ ಹೆಚ್ಚು ಬಾಳಿಕೆ ಬರಬೇಕೆ? ಈ ರೀತಿ ಸ್ವಚ್ಛಗೊಳಿಸಿ

ಮನೆಯಲ್ಲಿರುವ ವಾಷಿಂಗ್ ಮೆಷಿನ್ ಅನ್ನು ತಿಂಗಳಿಗೊಮ್ಮೆಯಾದರೂ ಚೆನ್ನಾಗಿ ಸ್ವಚ್ಛ ಮಾಡಲೇಬೇಕು. ಇಲ್ಲವಾದರೆ ಇದು ಸೋಂಕು ಹರಡುವ ಮೂಲವಾಗಬಹುದು. ವಾಷಿಂಗ್ ಮೆಷಿನ್ ಸ್ವಚ್ಛಗೊಳಿಸಲು ಕೆಲವು ಸರಳ ಟಿಪ್ಸ್ (Washing Machine Cleaning Tips) ಇಲ್ಲಿದೆ.

VISTARANEWS.COM


on

By

Washing Machine Cleaning Tips
Koo

ಮನೆಯಲ್ಲಿರುವ ವಾಷಿಂಗ್ ಮೆಷಿನ್ (Washing Machine Cleaning Tips) ಚೆನ್ನಾಗಿ ಕೆಲಸ ಮಾಡುತ್ತಿದ್ದರೂ ಅದು ಸೂಕ್ಷ್ಮಜೀವಿಗಳಿಂದ (germs) ಮುಕ್ತವಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳುವುದು ಬಹುಮುಖ್ಯ, ಇಲ್ಲವಾದರೆ ಬಟ್ಟೆಯ (cloth) ಮೂಲಕ ಅದು ನಮ್ಮ ದೇಹವನ್ನು ಪ್ರವೇಶಿಸಬಹುದು. ಇದರಿಂದ ಚರ್ಮದ ಕಾಯಿಲೆಗಳು (skin problem) ಕಾಣಿಸಿಕೊಳ್ಳಬಹುದು. ಹೀಗಾಗಿ ವಾಷಿಂಗ್ ಮೆಷಿನ್ ಅನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಮುಖ್ಯವಾಗಿದೆ.

ವಾಷಿಂಗ್ ಮೆಷಿನ್ ಚೆನ್ನಾಗಿ ಕಾರ್ಯ ನಿರ್ವಹಿಸಲು ಆಗಾಗ್ಗೆ ಸ್ವಚ್ಛಗೊಳಿಸುವುದು ಅತ್ಯಗತ್ಯ. ತಿಂಗಳಿಗೊಮ್ಮೆ ಸ್ವಚ್ಛಗೊಳಿಸಿದರೆ ಉತ್ತಮ. ಇದಕ್ಕಾಗಿ ಕೆಲವೊಂದು ಸರಳ ವಿಧಾನಗಳಿವೆ.

ಯಾವುದರಿಂದ ಸ್ವಚ್ಛಗೊಳಿಸಬಹುದು?

ವಾಷಿಂಗ್ ಮೆಷಿನ್ ಅನ್ನು ಸ್ವಚ್ಛಗೊಳಿಸುವ ಮೊದಲು ಯಾವುದರಿಂದ ಸ್ವಚ್ಛ ಮಾಡುವುದು ಎಂಬುದನ್ನು ನೋಡಿಕೊಳ್ಳಿ. ವಾಷಿಂಗ್ ಮೆಷಿನ್ ಸ್ವಚ್ಛಗೊಳಿಸಲು ಬಿಳಿ ವಿನೆಗರ್, ಅಡಿಗೆ ಸೋಡಾ, ಮೈಕ್ರೋಫೈಬರ್ ಬಟ್ಟೆ ಅಥವಾ ಸ್ಪಾಂಜ್, ಹಳೆಯ ಹಲ್ಲುಜ್ಜುವ ಬ್ರಷ್, ಬಿಸಿ ನೀರು, ಸೌಮ್ಯವಾದ ಸಾಬೂನು ಮತ್ತು ಬಕೆಟ್ ಅಗತ್ಯವಾಗಿರುತ್ತದೆ.

ಡ್ರಾಯರ್‌ಗಳನ್ನು ಸ್ವಚ್ಛಗೊಳಿಸಿ

ವಾಷಿಂಗ್ ಮೆಷಿನ್‌ನಲ್ಲಿ ಮೊದಲು ಡ್ರಾಯರ್‌ಗಳನ್ನು ತೆಗೆದು ಸ್ವಚ್ಛಗೊಳಿಸಿ. ಬಿಸಿ ಸಾಬೂನು ನೀರಿನಿಂದ ಚೆನ್ನಾಗಿ ತೊಳೆಯಿರಿ. ಯಾವುದೇ ಕಲೆಗಳು ಇದ್ದರೆ ಸ್ಕ್ರಬ್ ಮಾಡಲು ಹಳೆಯ ಟೂತ್ ಬ್ರಷ್ ಅನ್ನು ಬಳಸಿ. ಡ್ರಾಯರ್‌ಗಳನ್ನು ಚೆನ್ನಾಗಿ ತೊಳೆಯಿರಿ ಮತ್ತು ಅವುಗಳನ್ನು ಯಂತ್ರಕ್ಕೆ ಮರುಸೇರಿಸುವ ಮೊದಲು ಒಣಗಲು ಬಿಡಿ.

ವಿನೆಗರ್‌ನೊಂದಿಗೆ ಬಿಸಿ ನೀರು

ಎರಡು ಕಪ್ ಬಿಳಿ ವಿನೆಗರ್ ಅನ್ನು ನೇರವಾಗಿ ವಾಷಿಂಗ್ ಮೆಷಿನ್‌ಗೆ ಹಾಕಿ. ಬಿಸಿ ನೀರು ಹಾಕಿ ತಿರುಗಿಸಿ. ವಿನೆಗರ್ ಮೆಷಿನ್‌ನ ಒಳಗೆ ಇರುವ ಶಿಲೀಂಧ್ರವನ್ನು ಕರಗಿಸಲು ಸಹಾಯ ಮಾಡುತ್ತದೆ. ಜೊತೆಗೆ ಅಹಿತಕರ ವಾಸನೆಯನ್ನು ತೊಡೆದುಹಾಕುತ್ತದೆ.

ಬಾಗಿಲನ್ನು ಸ್ವಚ್ಛಗೊಳಿಸಿ

ವಾಷಿಂಗ್ ಮೆಷಿನ್‌ನ ಬಾಗಿಲಿನ ಸಂಧುಗಳನ್ನು ಸ್ವಚ್ಛಗೊಳಿಸಲು ಮರೆಯದಿರಿ. ಇದಕ್ಕಾಗಿ ಸ್ಪ್ರೇ ಬಾಟಲಿಯಲ್ಲಿ ನೀರು ಮತ್ತು ವಿನೆಗರ್‌ ಅನ್ನು ಸಮ ಪ್ರಮಾಣದಲ್ಲಿ ಹಾಕಿ ದ್ರಾವಣವನ್ನು ಬಾಗಿಲಿಗೆ ಸಿಂಪಡಿಸಿ. ಬಳಿಕ ಮೈಕ್ರೋಫೈಬರ್ ಬಟ್ಟೆ ಅಥವಾ ಸ್ಪಂಜನ್ನು ಬಳಸಿ ಉಜ್ಜಿ. ಕೊಳಕು ಸಂಗ್ರಹಗೊಳ್ಳುವ ಭಾಗಗಳತ್ತ ವಿಶೇಷ ಗಮನಕೊಡಿ.

ಇದನ್ನೂ ಓದಿ: Toothpaste Hacks: ಟೂತ್‌ಪೇಸ್ಟ್‌ನಿಂದ ಯಾವೆಲ್ಲ ವಸ್ತುಗಳನ್ನು ಹೊಳೆಯುವಂತೆ ಮಾಡಬಹುದು ನೋಡಿ!

ಫಿಲ್ಟರ್ ತೆಗೆದು ಸ್ವಚ್ಛಗೊಳಿಸಿ

ವಾಷಿಂಗ್ ಮೆಷಿನ್‌ನಲ್ಲಿ ತೆಗೆಯಬಹುದಾದ ಫಿಲ್ಟರ್ ಹೊಂದಿದ್ದರೆ ಅದನ್ನು ಪತ್ತೆ ಮಾಡಿ. ಅದರಲ್ಲಿರುವ ಸಂಗ್ರಹವಾಗಿರುವ ಕೊಳಕು ವಸ್ತುಗಳನ್ನು ತೆಗೆಯಿರಿ. ಫಿಲ್ಟರ್ ಅನ್ನು ಸ್ವಚ್ಛಗೊಳಿಸಲು ಬಿಸಿ ಸಾಬೂನು ನೀರು ಮತ್ತು ಬ್ರಷ್ ಅನ್ನು ಬಳಸಿ. ಅನಂತರ ಅದನ್ನು ಮರುಸ್ಥಾಪಿಸುವ ಮೊದಲು ಅದನ್ನು ಸಂಪೂರ್ಣವಾಗಿ ತೊಳೆಯಿರಿ.

ಬೇಕಿಂಗ್ ಸೋಡಾ ಬಳಸಿ

ವಿನೆಗರ್‌ನಿಂದ ಸ್ವಚ್ಛಗೊಳಿಸಿದ ಬಳಿಕ ಒಂದು ಕಪ್ ಅಡಿಗೆ ಸೋಡಾವನ್ನು ನೇರವಾಗಿ ತೊಳೆಯುವ ಯಂತ್ರಕ್ಕೆ ಹಾಕಿ ಬಿಸಿ ನೀರು ಬೆರೆಸಿ ತಿರುಗಿಸಿ. ಇದು ವಾಷಿಂಗ್ ಮೆಷಿನ್‌ನಲ್ಲಿರುವ ದುರ್ಗಂಧವನ್ನು ದೂರ ಮಾಡುತ್ತದೆ.

ಹೊರಭಾಗ ಸ್ವಚ್ಛತೆ

ವಾಷಿಂಗ್ ಮೆಷಿನ್‌ನ ಮೇಲ್ ಭಾಗವನ್ನು ಸ್ವಚ್ಛವಾದ ಒದ್ದೆ ಬಟ್ಟೆಯಿಂದ ಚೆನ್ನಾಗಿ ಒರೆಸಿ. ಇದರಲ್ಲಿರುವ ಬಟನ್ ಗಳ ಬಗ್ಗೆ ಎಚ್ಚರವಿರಲಿ. ಯಾಕೆಂದರೆ ಈ ಪ್ರದೇಶಗಳು ಕಾಲಾನಂತರದಲ್ಲಿ ಧೂಳು ಮತ್ತು ಕೊಳೆಯನ್ನು ಸಂಗ್ರಹಿಸಬಹುದು.

ಗಾಳಿಯಲ್ಲಿ ಒಣಗಲು ಬಿಡಿ

ವಾಷಿಂಗ್ ಮೆಷಿನ್ ಸ್ವಚ್ಛತೆ ಪೂರ್ಣಗೊಂಡ ಬಳಿಕ ಒಳಭಾಗವನ್ನು ಗಾಳಿಯಲ್ಲಿ ಸಂಪೂರ್ಣವಾಗಿ ಒಣಗಲು ಬಿಡಿ. ಇದಕ್ಕಾಗಿ ಬಾಗಿಲು ತೆರೆದಿಡಿ. ಇದು ಶಿಲೀಂಧ್ರ ಬೆಳವಣಿಗೆಯನ್ನು ತಡೆಯಲು ಸಹಾಯ ಮಾಡುತ್ತದೆ.

ವಾಷಿಂಗ್ ಮೆಷಿನ್ ಅನ್ನು ತಿಂಗಳಿಗೊಮ್ಮೆಯಾದರೂ ಈ ರೀತಿ ಸ್ವಚ್ಛ ಮಾಡಿದರೆ ಇದು ವಾಷಿಂಗ್ ಮೆಷಿನ್ ಹೆಚ್ಚು ಕಾಲ ಬಾಳಿಕೆ ಬರಲು ಸಹಾಯ ಮಾಡುವುದು.

Continue Reading
Advertisement
ರಾಜಮಾರ್ಗ ಅಂಕಣ euthanasia zoraya ter beek
ಅಂಕಣ12 mins ago

ರಾಜಮಾರ್ಗ ಅಂಕಣ: ಸಾವನ್ನೇ ಆಹ್ವಾನಿಸಿದ ಸುಂದರಿ ಝೋರಯಾ ಟರ್ ಬ್ರೀಕ್

lockup death channagiri
ಕ್ರೈಂ46 mins ago

Lockup Death: ಪೊಲೀಸ್‌ ವಶದಲ್ಲಿದ್ದ ವ್ಯಕ್ತಿ ಸಾವು, ರೊಚ್ಚಿಗೆದ್ದ ಸಂಬಂಧಿಕರಿಂದ ಠಾಣೆ ಧ್ವಂಸ

Lok Sabha Election
ದೇಶ1 hour ago

Lok Sabha Election: ಇಂದು 6ನೇ ಹಂತದಲ್ಲಿ 58 ಕ್ಷೇತ್ರಗಳಿಗೆ ಮತದಾನ; ಖಟ್ಟರ್‌, ಕನ್ಹಯ್ಯ ಸೇರಿ ಹಲವರ ಭವಿಷ್ಯ ನಿರ್ಧಾರ

Egg Benefits
ಆರೋಗ್ಯ2 hours ago

Egg Benefits: ನೀವು ಮೊಟ್ಟೆ ಪ್ರಿಯರೆ? ಹಾಗಾದರೆ ಮೊಟ್ಟೆ ತಿನ್ನಬಹುದು ಎಂಬುದೂ ಅರಿವಿರಲಿ!

karnataka Weather Forecast
ಮಳೆ2 hours ago

Karnataka Weather : ವಾರಾಂತ್ಯಕ್ಕೆ ಗುಡುಗು ಸಹಿತ ಭಾರಿ ಮಳೆ ; 11 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌

World Thyroid Day
ಆರೋಗ್ಯ3 hours ago

World Thyroid Day: ಇಂದು ವಿಶ್ವ ಥೈರಾಯ್ಡ್‌ ದಿನ; ‘ಗಂಟಲ ಚಿಟ್ಟೆ’ಯ ಬಗ್ಗೆ ಈ ಸಂಗತಿ ನಿಮಗೆ ಗೊತ್ತೆ?

Dina bhavishya
ಭವಿಷ್ಯ3 hours ago

Dina Bhavishya : ಕುಟುಂಬದ ಆಪ್ತರಿಂದ ಈ ರಾಶಿಯವರಿಗೆ ಸಿಗಲಿದೆ ಗುಡ್‌ ನ್ಯೂಸ್‌

Narendra Modi
ದೇಶ8 hours ago

Narendra Modi: ನನ್ನನ್ನು ನಾಶಪಡಿಸಲು ಯಾರಿಂದಲೂ ಸಾಧ್ಯವಿಲ್ಲ; ಮಮತಾ ಬ್ಯಾನರ್ಜಿಗೆ ಮೋದಿ ಚಾಟಿ

ಕರ್ನಾಟಕ8 hours ago

Driving Bus With Umbrella: ಛತ್ರಿ ಹಿಡಿದು ಬಸ್ ಚಾಲನೆ; ಮೋಜಿಗಾಗಿ ವಿಡಿಯೊ ಮಾಡಿದ ಡ್ರೈವರ್‌, ಕಂಡಕ್ಟರ್‌ ಸಸ್ಪೆಂಡ್‌!

Vistara editorial
ಬೆಂಗಳೂರು8 hours ago

ವಿಸ್ತಾರ ಸಂಪಾದಕೀಯ: ಕಸ ವಿಲೇವಾರಿಗೆ ಹೊಸ ಸಂಸ್ಥೆ, ಜಾರಿಕೊಳ್ಳುವ ನೆಪ ಆಗದಿರಲಿ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

dina bhavishya read your daily horoscope predictions for May 23 2024
ಭವಿಷ್ಯ2 days ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ3 days ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ4 days ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

Love Case Father throws hot water on man who loved his daughter for coming home
ಕೊಡಗು4 days ago

Love Case : ಮನೆಗೆ ಬಂದ ಪ್ರೇಮಿಗೆ ಕೊತ ಕೊತ ಕುದಿಯುವ ನೀರು ಎರಚಿದ ಯುವತಿ ತಂದೆ!

Contaminated Water
ಮೈಸೂರು4 days ago

Contaminated Water : ಡಿ ಸಾಲುಂಡಿಯಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡಿದ್ದ ಯುವಕ ಸಾವು

Karnataka Rain
ಮಳೆ5 days ago

Karnataka Rain : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

Karnataka Rain
ಮಳೆ6 days ago

Karnataka Rain : ಒಂದೇ ಮಳೆಗೆ ಹೊಳೆಯಂತಾದ ಬೆಂಗಳೂರು ರಸ್ತೆಗಳು! ಕಳಸದಲ್ಲೂ ಮುಂದುವರಿದ ಅಬ್ಬರ

Karnataka rain
ಮಳೆ6 days ago

Karnataka Rain : ವಿಜಯನಗರದಲ್ಲಿ ಸಿಡಿಲಿಗೆ ಜಾನುವಾರು ಬಲಿ; ಬೆಂಗಳೂರು ಸೇರಿ ಹಲವೆಡೆ ಭಾರಿ ಮಳೆ

Karnataka Rain
ಮಳೆ6 days ago

Karnataka Rain: ಧಾರಾಕಾರ ಮಳೆಗೆ ಕಾಂಪೌಂಡ್ ಕುಸಿದು 4 ಬೈಕ್‌ಗಳು ಜಖಂ; ಮದುವೆ ಮಂಟಪಕ್ಕೆ ನುಗ್ಗಿದ ನೀರು‌

Prajwal Revanna Case JDS calls CD Shivakumar pen drive gang
ರಾಜಕೀಯ1 week ago

Prajwal Revanna Case: CD ಶಿವಕುಮಾರ್ ಪೆನ್ ಡ್ರೈವ್ ಗ್ಯಾಂಗ್ ಎಂದ ಕುಟುಕಿದ ಜೆಡಿಎಸ್‌!

ಟ್ರೆಂಡಿಂಗ್‌