Karnataka Rajyotsava : ಕನ್ನಡ ರಾಜ್ಯೋತ್ಸವ ಆಮಂತ್ರಣ ಪತ್ರಿಕೆಯಲ್ಲಿ ಅನ್ನದಾನೀಶ್ವರ ಶ್ರೀಗಳಿಗೆ ಅಪಮಾನ; ಡಿಸಿಗೆ ಮನವಿ - Vistara News

ಕರ್ನಾಟಕ

Karnataka Rajyotsava : ಕನ್ನಡ ರಾಜ್ಯೋತ್ಸವ ಆಮಂತ್ರಣ ಪತ್ರಿಕೆಯಲ್ಲಿ ಅನ್ನದಾನೀಶ್ವರ ಶ್ರೀಗಳಿಗೆ ಅಪಮಾನ; ಡಿಸಿಗೆ ಮನವಿ

Karnataka Rajyotsava : ಕನ್ನಡ ರಾಜ್ಯೋತ್ಸವ ಆಮಂತ್ರಣ ಪತ್ರಿಕೆಯಲ್ಲಿ ಮುಂಡರಗಿ ಸಂಸ್ಥಾನಮಠದ ಜ.ನಾಡೋಜ ಡಾ.ಅನ್ನದಾನೀಶ್ವರ ಮಹಾಶಿವಯೋಗಿಗಳ ಹೆಸರನ್ನು ಕೊನೆಯಲ್ಲಿ ಹಾಕಿ ಅವಮಾನ ಮಾಡಲಾಗಿದೆ ಎಂದು ಭಕ್ತವೃಂದ ಆಕ್ರೋಶಗೊಂಡಿದೆ. ಈ ಸಂಬಂಧ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿ ಮುಂದೆ ಇಂತಹ ಪ್ರಮಾದ ಆಗದಂತೆ ಕ್ರಮ ವಹಿಸಲು ಒತ್ತಾಯಿಸಿವೆ.

VISTARANEWS.COM


on

Mundaragi Dr Annadaneshwara Mahashivayogi Swamiji
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಗದಗ: ಕನ್ನಡ ಸಾಹಿತ್ಯ ಲೋಕಕ್ಕೆ ಇಡೀ ಜೀವನವನ್ನೇ ಸವೆಸಿದ, ನಡೆದಾಡುವ ವಿಶ್ವವಿದ್ಯಾಲಯವೆಂದೇ ಖ್ಯಾತಿ ಪಡೆದಿರುವ ಹಿರಿಯ ಮಠಾಧೀಶರಾದ ಮುಂಡರಗಿ ಸಂಸ್ಥಾನಮಠದ ಜ. ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳಿಗೆ (Dr Annadaneshwara Mahashivayogi Swamiji) ಮುಂಡರಗಿ ತಾಲೂಕು ಆಡಳಿತವು ಅಗೌರವ ತೋರಿದೆ ಎಂದು ಜನಾಕ್ರೋಶ ವ್ಯಕ್ತವಾಗಿದೆ. ನವೆಂಬರ್‌ 1ರಂದು ತಾಲೂಕು ಆಡಳಿತದ ವತಿಯಿಂದ ನಡೆದ ಕನ್ನಡ ರಾಜ್ಯೋತ್ಸವ (Karnataka Rajyotsava) ಕಾರ್ಯಕ್ರಮದ ಆಮಂತ್ರಣ ಪತ್ರಿಕೆಯಲ್ಲಿ ಮಹಾ ಸ್ವಾಮೀಜಿಯವರ ಹೆಸರನ್ನು ಸಾಮಾನ್ಯರ ಸಾಲಿನಲ್ಲಿ ಮುದ್ರಣ ಮಾಡಿರುವುದು ಈಗ ತಾಲೂಕು ಜನತೆಯ ಅಸಮಾಧಾನಕ್ಕೆ ಕಾರಣವಾಗಿದೆ. ಇದು ಸ್ವಾಮೀಜಿಯವರಿಗೆ ತೋರಿದ ಅಗೌರವ ಎಂದು ಆಕ್ರೋಶವನ್ನು ಹೊರಹಾಕಿದ್ದಾರೆ. ಅಲ್ಲದೆ, ಮುಂದೆ ಇಂತಹ ಅಚಾತುರ್ಯ ನಡೆಯದಂತೆ ಎಚ್ಚರಿಕೆ ವಹಿಸುವಂತೆ ಜಿಲ್ಲಾಧಿಕಾರಿಗಳಿಗೂ ಮನವಿ ಸಲ್ಲಿಸಲಾಗಿದೆ.

ಗದಗ ಜಿಲ್ಲೆ ಮುಂಡರಗಿ ಸಂಸ್ಥಾನಮಠದ ಜ.ನಾಡೋಜ ಡಾ. ಅನ್ನದಾನೀಶ್ವರ ಮಹಾಶಿವಯೋಗಿಗಳು ನಡೆದಾಡುವ ವಿಶ್ವವಿದ್ಯಾಲಯವೆಂದೇ ಖ್ಯಾತಿ ಪಡೆದಿದ್ದಾರೆ.ನೂರಾರು ಕೃತಿಗಳ ರಚನೆ, ಪ್ರಕಟಣೆ ಸೇರಿದಂತೆ ಕನ್ನಡ ಸಾಹಿತ್ಯ ಕ್ಷೇತ್ರಕ್ಕೆ ಶ್ರೀಗಳ ಕೊಡುಗೆ ಅನನ್ಯವಾಗಿದೆ.

Mundaragi Dr Annadaneshwara Mahashivayogi Swamiji

ಇದನ್ನೂ ಓದಿ: Fraud Case : ಎನ್ವಿ ಗ್ರೀನ್ ಕಂಪನಿ ಮಾಲೀಕನ ವಿರುದ್ಧ ಎಫ್ಐಆರ್; ಕೋಟಿ ವಂಚಿಸಿದ್ರಾ ಅಶ್ವತ್ಥ್‌ ಹೆಗ್ಡೆ?

ಡಾ. ಅನ್ನದಾನೀಶ್ವರ ಶ್ರೀಗಳು ಮಠಾಧೀಶರಾದರೂ ಧಾರ್ಮಿಕ ಕ್ಷೇತ್ರದ ಜತೆ ಜತೆಗೆ ಶಿಕ್ಷಣ, ಸಾಹಿತ್ಯ, ಕೃಷಿ, ಸಮಾಜ ಸೇವೆ, ವಿಜ್ಞಾನ, ಆರೋಗ್ಯ ಮೊದಲಾದ ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಶ್ರೀಗಳು ರಚಿಸಿರುವ ಗ್ರಂಥಗಳು ಇಂಗ್ಲಿಷ್ ಭಾಷೆ ಸೇರಿದಂತೆ ಹಲವು ಭಾಷೆಗಳಿಗೆ ಭಾಷಾಂತರಗೊಂಡಿವೆ. ಡಾ. ಅನ್ನದಾನೀಶ್ವರ ಸ್ವಾಮೀಜಿಗಳ ಸಾಹಿತ್ಯ ಕೃಷಿಯನ್ನು ಪರಿಗಣಿಸಿ ಧಾರವಾಡ ಕರ್ನಾಟಕ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಪದವಿ ಹಾಗೂ ಹಂಪಿ ಕನ್ನಡ ವಿಶ್ವವಿದ್ಯಾಲಯದ ವತಿಯಿಂದ ನಾಡೋಜ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ. ಅಲ್ಲದೆ, ಹಲವಾರು ಪ್ರಶಸ್ತಿ ಪುರಸ್ಕಾರಗಳು ಶ್ರೀಗಳನ್ನು ಅರಸಿ ಬಂದಿವೆ.

Mundaragi Dr Annadaneshwara Mahashivayogi Swamiji
ತಾಲೂಕು ಆಡಳಿತಕ್ಕೆ ಮನವಿ ನೀಡಿದ ಭಕ್ತ ವೃಂದ

ಮಹಿಳಾ ವಿವಿಯಲ್ಲಿ ಜಗದ್ಗುರು ಅನ್ನದಾನೀಶ್ವರ ಅಧ್ಯಯನ ಪೀಠ

ಡಾ. ಅನ್ನದಾನೀಶ್ವರ ಶ್ರೀಗಳ ಸಮಗ್ರ ಸಾಹಿತ್ಯದ ಮೇಲೆ 19 ಸಂಪುಟಗಳು ಬಿಡುಗಡೆಗೊಂಡಿದ್ದು, ಶ್ರೀಗಳ ಸಾಹಿತ್ಯದ ಮೇಲೆ ಈಗಾಗಲೇ ಐದು ಜನ ಪಿಎಚ್.ಡಿ ಪದವಿ ಹಾಗೂ ಹಲವು ಜನ ಎಂಫಿಲ್ ಪದವಿ ಪಡೆದಿದ್ದಾರೆ. ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದಲ್ಲಿ ಜಗದ್ಗುರು ಅನ್ನದಾನೀಶ್ವರ ಅಧ್ಯಯನ ಪೀಠವನ್ನು ತೆರೆಯಲಾಗಿದೆ‌.

ಮುಂಡರಗಿಗೆ ನೀಡಿದ ಕೊಡುಗೆ ಅನನ್ಯ

ಇದೇ ಮುಂಡರಗಿ ಪಟ್ಟಣದ ಕನ್ನಡ ಸಾಹಿತ್ಯ ಪರಿಷತ್ತಿನ ಭವನಕ್ಕೆ, ವಿಜ್ಞಾನ ಭವನಕ್ಕೆ ಹಾಗೂ ಆಸ್ಪತ್ರೆ, ಕ್ರೀಡಾಂಗಣ, ಸೇರಿದಂತೆ ಹಲವು ಗ್ರಾಮಗಳಲ್ಲಿನ ಶಾಲಾ ಕಾಲೇಜು, ವಸತಿ ನಿಲಯದ ಕಟ್ಟಡಗಳಿಗೆ ಉಚಿತವಾಗಿ ಭೂಮಿ ಸೇರಿದಂತೆ ಹಣದ ಸಹಾಯ, ಸಹಕಾರವನ್ನು ಡಾ. ಅನ್ನದಾನೀಶ್ವರ ಸ್ವಾಮೀಜಿಗಳು ನೀಡಿದ್ದಾರೆ.

ಆಮಂತ್ರಣ ಪತ್ರಿಕೆಯಲ್ಲಿ ಕೊನೆಯ ಸಾಲು!

ಈಗ ಮುಂಡರಗಿ ತಾಲೂಕು ಆಡಳಿತ ವ್ಯವಸ್ಥೆ ಹಾಗೂ ತಾಲೂಕು ರಾಜ್ಯೋತ್ಸವ ಸಮಿತಿಯು ಡಾ. ಅನ್ನದಾನೀಶ್ವರ ಶ್ರೀಗಳ ಹೆಸರನ್ನು ಕೊನೆಯ ಸಾಲಿನಲ್ಲಿ ಹಾಕಿ ಪ್ರಮಾದ ಎಸಗಿದೆ. ಶ್ರೀಗಳ ಹೆಸರನ್ನು ಕರ್ನಾಟಕ ರಾಜ್ಯೋತ್ಸವದ ಸಂಭ್ರಮದ ಆಮಂತ್ರಣ ಪತ್ರಿಕೆಯಲ್ಲಿ ಮೊದಲಿನ ಸಾನಿಧ್ಯ ಸ್ಥಾನವನ್ನು ನೀಡುವುದು ಇದುವರೆಗೆ ನಡೆದುಕೊಂಡು ಬಂದ ಪದ್ಧತಿಯಾಗಿತ್ತು. ಆದರೆ, ಈಗ ಆಮಂತ್ರಣ ಪತ್ರಿಕೆಯಲ್ಲಿ ಕಾರ್ಯಕ್ರಮದ ಪಟ್ಟಿಯ ಕೊನೇ ಸಾಲಿನಲ್ಲಿ ಮುದ್ರಿಸಿರುವುದು ಭಕ್ತವೃಂದದ ಆಕ್ರೋಶಕ್ಕೆ ಕಾರಣವಾಗಿದೆ.

ಇದನ್ನೂ ಓದಿ: Chaitra Fraud Case : ಚೈತ್ರಾ ವಂಚನೆ ಪ್ರಕರಣ; ಸಿಸಿಬಿ ತನಿಖೆ ಪೂರ್ಣ, ಮುಂದಿನ ವಾರ ಚಾರ್ಜ್‌ಶೀಟ್‌?

ಅಲ್ಲದೆ, ಈ ವಿಚಾರದ ಬಗ್ಗೆ ರಾಜ್ಯೋತ್ಸವಕ್ಕೆ ಆಗಮಿಸಿದ್ದ ಕಾರ್ಯಕ್ರಮದಲ್ಲಿಯೇ ಸ್ವತಃ ಡಾ. ಅನ್ನದಾನೀಶ್ವರ ಶ್ರೀಗಳು ಅಸಮಾಧಾನ ವ್ಯಕ್ತಪಡಿಸಿದ್ದು, ಈ ಅಪಮಾನವು ಕನ್ನಡ ತಾಯಿಗೆ ಮಾಡಿರುವುದಾಗಿದೆ ಎಂದು ಹೇಳಿದ್ದರು.

ಹಾರಿಕೆ ಉತ್ತರ ನೀಡುತ್ತಿರುವ ಅಧಿಕಾರಿಗಳು

ಈ ವಿಚಾರಕ್ಕೆ ತಾಲೂಕಿನ ದಂಡಾಧಿಕಾರಿಯನ್ನು ಪ್ರಶ್ನೆ ಮಾಡಿದಾ, ಸರ್ಕಾರಿ ಶಿಷ್ಟಾಚಾರದ ಪ್ರಕಾರವಾಗಿ ಆಮಂತ್ರಣ ಪತ್ರಿಕೆಯನ್ನು ಮುದ್ರಿಸಲಾಗಿದೆ. ಕಳೆದ ವರ್ಷದ ಆಮಂತ್ರಣ ಪತ್ರಿಕೆಯನ್ನು ನೋಡಿಯೇ ಈ ವರ್ಷವೂ ಅದೇ ರೀತಿ ಮುದ್ರಿಸಲಾಗಿದೆ. ಮುಂಬರುವ ಸರ್ಕಾರಿ ಕಾರ್ಯಕ್ರಮಗಳಲ್ಲಿ ಜಿಲ್ಲಾಡಳಿತದೊಂದಿಗೆ ಚರ್ಚಿಸಿ ಶಿಷ್ಟಾಚಾರ ನಿಯಮವನ್ನು ಬದಲಾಯಿಸಿಕೊಳ್ಳುತ್ತೇವೆ ಎಂದು ಹಾರಿಕೆ ಉತ್ತರ ನಿಡಿದ್ದಾರೆ.

ಜಿಲ್ಲಾಧಿಕಾರಿಗೆ ಮನವಿ

ಈಗ ಡಾ. ಅನ್ನದಾನೀಶ್ವರ ಶ್ರೀಗಳ ಭಕ್ತವೃಂದದವರು ಜಿಲ್ಲಾಧಿಕಾರಿಗೆ ಮನವಿ ನೀಡಿದ್ದು, ಇನ್ನು ಮುಂದೆ ನಡೆಯುವ ಸರ್ಕಾರಿ ಕಾರ್ಯಕ್ರಮಗಳಲ್ಲಿ ಶ್ರೀಗಳಿಗೆ ಸೂಕ್ತ ಸ್ಥಾನಮಾನ ನೀಡಬೇಕು ಎಂದು ಮನವಿ ಮಾಡಿದ್ದಾರೆ.

Mundaragi Dr Annadaneshwara Mahashivayogi Swamiji
ಜಿಲ್ಲಾಧಿಕಾರಿಗೆ ಮನವಿ ನೀಡಿದ ಭಕ್ತವೃಂದ

ಜಿಲ್ಲಾಧಿಕಾರಿಗೆ ಸಲ್ಲಿಸಿದ ಮನವಿ ಪತ್ರದಲ್ಲೇನಿದೆ?

ಮುಂಡರಗಿಯ ಪರಮ ಪೂಜ್ಯ ಜಗದ್ಗುರು ನಾಡೋಜ ಡಾ|| ಅನ್ನದಾನೀಶ್ವರ ಮಹಾಶಿವಯೋಗಿಗಳು ಈ ನಾಡು ಕಂಡ ಅಪರೂಪ ಜಗದ್ಗುರುಗಳು. ತ್ರಿಭಾಷಾ ಪಂಡಿತರಾದ ಜಗದ್ಗುರುಗಳು ಈ ನಾಡಿನ ಸರ್ವಶ್ರೇಷ್ಠ ಸಾಹಿತಿಗಳಾಗಿ ಒಂದು ನೂರಾ ಐವತ್ತಕ್ಕಿಂತ ಹೆಚ್ಚು ಕೃತಿಗಳನ್ನು ರಚಿಸಿ ಈ ನಾಡಿನ ಸಾಹಿತ್ಯ ದೇವಿಯ ಸಿರಿವಂತಿಕೆಯನ್ನು ಹೆಚ್ಚಿಸಿದ್ದಾರೆ. ಪೂಜ್ಯರ ಸಾಹಿತ್ಯವನ್ನು ಕುರಿತು ಐದು ಜನ ವಿದ್ವಾಂಸರು ಮಹಾಪ್ರಬಂಧಗಳನ್ನು ರಚಿಸಿ ವಿಶ್ವವಿದ್ಯಾಲಯಗಳಿಂದ ಡಾಕ್ಟರೇಟ್‌ ಪದವಿಯನ್ನು ಪಡೆದುಕೊಂಡಿದ್ದಾರೆ. ಶ್ರೀ ಮಠದಿಂದ ಸುಮಾರು ಎರಡು ನೂರಾ ಅರವತ್ತು ಪುಸ್ತಕಗಳನ್ನು ಪ್ರಕಟಿಸಿ ಸಾಹಿತ್ಯ ಜಗದ್ಗುರುಗಳು ಎಂಬ ಪ್ರಸಿದ್ಧಿಯನ್ನು ಪಡೆದುಕೊಂಡಿದ್ದಾರೆ.

ಶಿಕ್ಷಣ ಪ್ರೇಮಿಗಳಾದ ಶ್ರೀ ಜಗದ್ಗುರು ಅನ್ನದಾನೀಶ್ವರ ಮಹಾಸ್ವಾಮಿಗಳು ಶೈಕ್ಷಣಿಕವಾಗಿ ತೀರಾ ಹಿಂದುಳಿದ ಮುಂಡರಗಿಯಲ್ಲಿ ಆರಂಭ ಮಾಡಿ ಬಡ ಮಕ್ಕಳಿಗೆ ನಿರಂತರವಾಗಿ ಜ್ಞಾನದಾಸೋಹ ಹಾಗೂ ಉಚಿತ ಪ್ರಸಾದ ದಾಸೋಹವನ್ನು ನೀಡಿ ಈ ಭಾಗ ಬಡ ವಿದ್ಯಾರ್ಥಿಗಳ ಕಾಮಧೇನು ಕಲ್ಪವೃಕ್ಷವಾಗಿದ್ದಾರೆ. ಪೂಜ್ಯರ ಅಹರ್ನಿಶಿ ಪ್ರಯತ್ನದಿಂದ ಇಂದು ನಾಡಿನಾದ್ಯಾಂತ ಮೂವತ್ತೆರಡು ಅಂಗ ಸಂಸ್ಥೆಗಳು ಕಾರ್ಯ ನಿರ್ವಹಿಸುತ್ತಿರುವುದು ಅವರ ಶಿಕ್ಷಣ ಪ್ರೇಮ ಹಾಗೂ ಕಾರ್ಯದಕ್ಷತೆಗೆ ಕನ್ನಡಿ ಹಿಡಿಯುತ್ತದೆ. ಇಂತಹ ವಿದ್ಯಾ ಸಂಸ್ಥೆಗಳನ್ನು ಗ್ರಾಮೀಣ ಭಾಗದಲ್ಲಿ ನಡೆಸುವುದರಿಂದ ಅನೇಕರಿಗೆ ಉದ್ಯೋಗವನ್ನು ನೀಡಿ ಅವರ ಬಾಳಿಗೆ ದಾರಿ ದೀಪವಾಗಿದ್ದಾರೆ.

ಕೋಡಗೈ ದಾನಿಗಳಾದ ಪರಮ ಪೂಜ್ಯ ಜಗದ್ಗುರು ಅನ್ನದಾನೀಶ್ವರ ಮಹಾಶಿವಯೋಗಿಗಳು ಈ ಭಾಗದ ಸಮಗ್ರ ಅಭಿವೃದ್ಧಿಗಾಗಿ ಸದಾ ಧನಸಹಾಯ ನೀಡುವುದರೊಂದಿಗೆ ಸುಮಾರು ಒಂದು ನೂರು ಎಕರೆ ಭೂಮಿಯನ್ನು ದಾನ ಮಾಡಿ ಈ ಭಾಗದ ಪುಣ್ಯಪುರುಷರೆಂಬ ಖ್ಯಾತಿಯನ್ನು ಪಡೆದುಕೊಂಡಿದ್ದಾರೆ.

ಪರಮ ಪೂಜ್ಯ ಜಗದ್ಗುರು ಅನ್ನದಾನೀಶ್ವರ ಮಹಾಶಿವಯೋಗಿಗಳು ಎಂಬತ್ತರ ಇಳಿ ವಯಸ್ಸಿನಲ್ಲಿಯೂ ಧರ್ಮ ಪ್ರಸಾರ ಹಾಗೂ ಸಮಾಜ ಸೇವೆಯಲ್ಲಿ ತಮ್ಮನ್ನು ತಾವು ನಿರಂತರವಾಗಿ ತೊಡಗಿಸಿಕೊಂಡು ಭಕ್ತ ಜನರನ್ನು ಧರ್ಮದ ಹಾದಿಯಲ್ಲಿ ನಡೆಸಿದ್ದಾರೆ. ಸಮಾಜ ಸೇವೆಯೆ ಶಿವಪೂಜೆ ಎಂದು ಭಾವಿಸಿ ಹಗಲಿರುಳು ಸಮಾಜದ ಅಭಿವೃದ್ಧಿಗೆ ಶ್ರಮಿಸುತ್ತಿರುವುದು ಆದರ್ಶವಾಗಿದೆ.

ಇದನ್ನೂ ಓದಿ: Karnataka Politics : 6 ತಿಂಗಳಾದರೂ ಸುಧಾರಿಸದ ಸರ್ಕಾರ, ಹಿಡಿತವಿಲ್ಲದ ಸಿಎಂ; ಬಿಜೆಪಿಯಿಂದ ಉಗ್ರ ಹೋರಾಟ: ಬಿಎಸ್‌ವೈ

ಪರಮ ಪೂಜ್ಯ ಜಗದ್ಗುರು ಅನ್ನದಾನೀಶ್ವರ ಮಹಾಶಿವಯೋಗಿಗಳು ಸಾಹಿತ್ಯಿಕ, ಶೈಕ್ಷಣಿಕ, ಸಾಮಾಜಿಕ ಹಾಗೂ ಧಾರ್ಮಿಕ ಸಾಧನೆಗಳನ್ನು ಗುರುತಿಸಿ ಕರ್ನಾಟಕ ವಿಶ್ವವಿದ್ಯಾಲಯ ಗೌರವ ಡಾಕ್ಟರೇಟ್‌ ಪದವಿಯನ್ನು ನೀಡಿದರೆ, ಹಂಪಿಯ ಕನ್ನಡ ವಿಶ್ವವಿದ್ಯಾಲಯ ನಾಡೋಜ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ. ಕನ್ನಡ ನಾಡಿಗೆ ಇಂತಹ ಮಹದುಪಕಾರವನ್ನು ಮಾಡಿದ ಪರಮ ಪೂಜ್ಯ ಜಗದ್ಗುರುಗಳಿಗೆ 2023ರ ನವೆಂಬರ್‌ 1ರಂದು ಜರುಗಿದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಸೂಕ್ತ ಸ್ಥಾನ ಮಾನವನ್ನು ನೀಡದೆ, ತಾಲೂಕು ಆಡಳಿತ ಅವರಿಗೆ ಅಗೌರವವನ್ನು ಮಾಡಿದೆ. ಈ ಕಾರ್ಯವೈಖರಿಯಿಂದ ಪೂಜ್ಯ ಜಗದ್ಗುರುಗಳ ಮನಸ್ಸಿಗೆ ನೋವಾಗಿದೆ. ಈ ಭಾಗದ ಭಕ್ತರಿಗೂ ಬಹಳಷ್ಟು ಬೇಸರವಾಗಿದೆ. ಆದ ಕಾರಣ ಭವಿಷ್ಯದಲ್ಲಿ ಇಂತಹ ಅವಘಡಗಳಿಗೆ ಅವಕಾಶ ಕೊಡದೆ ಸರ್ಕಾರಿ ಕಾರ್ಯಕ್ರಮಗಳನ್ನು ಸಂಯೋಜಿಸಬೇಕೆಂದು ಈ ಭಾಗದ ಸಮಗ್ರ ಜನತೆಯ ಪರವಾಗಿ ತಮ್ಮಲ್ಲಿ ನಮ್ರವಾಗಿ ವಿನಂತಿಸುತ್ತೇವೆ” ಎಂದು ಮುಂಡರಗಿಯ ಭಕ್ತ ಸಮೂಹವು ಜಿಲ್ಲಾಧಿಕಾರಿಗೆ ಮನವಿಯನ್ನು ಸಲ್ಲಿಸಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೈಂ

Road Accident : ತಿರುವಿನಲ್ಲಿದ್ದ ಜವರಾಯ; ಸ್ಪೀಡಾಗಿ ಬಂದು ಫೆನ್ಸಿಂಗ್ ಕಂಬಕ್ಕೆ ಡಿಕ್ಕಿ, ಬೈಕ್‌ ಸವಾರ ಸಾವು

Road Accident : ಪ್ರತ್ಯೇಕ ಕಡೆಗಳಲ್ಲಿ ರಸ್ತೆ ಅಪಘಾತಗಳು ವರದಿ ಆಗಿವೆ. ಆನೇಕಲ್‌ನಲ್ಲಿ ಬೈಕ್‌ ಸವಾರನೊಬ್ಬ ಅತಿವೇಗ ಚಾಲನೆಗೆ ಪ್ರಾಣವನ್ನು ಕಳೆದುಕೊಂಡಿದ್ದಾರೆ. ಬೆಂಗಳೂರಲ್ಲಿ ಇಬ್ಬರು ಪಾದಚಾರಿಗಳು ಅಪಘಾತದಲ್ಲಿ ಮೃತಪಟ್ಟಿದ್ದಾರೆ.

VISTARANEWS.COM


on

By

Road Accident in Anekal
Koo

ಆನೇಕಲ್: ನಿಯಂತ್ರಣ ತಪ್ಪಿ ಫೆನ್ಸಿಂಗ್ ಕಂಬಕ್ಕೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಸವಾರ ಸ್ಥಳದಲ್ಲಿಯೇ (Road Accident ) ಮೃತಪಟ್ಟಿದ್ದಾರೆ. ಆನೇಕಲ್‌ನ ಕಗ್ಗಲೀಪುರ ರಸ್ತೆಯ ಬ್ಯಾಲಮರನದೊಡ್ಡಿ ಕ್ರಾಸ್ ಬಳಿ ಅಪಘಾತ ಸಂಭವಿಸಿದೆ. ಶಾನಭೋಗನಹಳ್ಳಿ ನಿವಾಸಿ ರಾಮಚಂದ್ರ (22) ಮೃತ ದುರ್ದೈವಿ.

ಸೋಮವಾರ ರಾತ್ರಿ ಬೈಕ್‌ನಲ್ಲಿ ಬರುವಾಗ ತಿರುವಿನಲ್ಲಿ ಅತಿ ವೇಗವಾಗಿ ಬಂದಿದ್ದೆ ಅವಘಡಕ್ಕೆ ಕಾರಣ ಎನ್ನಲಾಗಿದೆ. ವೇಗವಾಗಿ ಬರುತ್ತಿದ್ದಾಗ ಬೈಕ್‌ನ ನಿಯಂತ್ರಣ ತಪ್ಪಿ ಫೆನ್ಸಿಂಗ್ ಕಂಬಕ್ಕೆ ಡಿಕ್ಕಿಯಾಗಿದೆ. ಫೆನ್ಸಿಂಗ್ ಕಂಬ ಮತ್ತು ಮುಳ್ಳಿನ ತಂತಿ ಬೇಲಿ ತಗುಲಿ ರಾಮಚಂದ್ರ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ.

ಕುಡಿದ ಮತ್ತಿನಲ್ಲಿ ಬೈಕ್‌ ಚಲಾಯಿಸಿರಬಹುದು ಎಂದು ಶಂಕಿಸಲಾಗಿದೆ. ಸ್ಥಳಕ್ಕೆ ಬನ್ನೇರುಘಟ್ಟ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನ ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಬನ್ನೇರುಘಟ್ಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Road Accident

ಇದನ್ನೂ ಓದಿ: Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

ಕಾರು ಡಿಕ್ಕಿ ಪಾದಚಾರಿ ಮಹಿಳೆ ಸಾವು

ಬೆಂಗಳೂರಿನ ಮಾರತ್ ಹಳ್ಳಿ ಸಮೀಪದ ಬೋರ್ ವೆಲ್ ಜಂಕ್ಷನ್ ಬಳಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಗೆ ಕಾರೊಂದು ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ತಲೆಗೆ ಗಂಭೀರ ಗಾಯಗೊಂಡ ಪಾದಚಾರಿಯನ್ನು ಕೂಡಲೇ ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು.

ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಣಿಪಾಲ್ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಸ್ಥಳಕ್ಕೆ ಎಚ್ಎಎಲ್ ಟ್ರಾಫಿಕ್ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು,ಈ ಸಂಬಂಧ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಪ್ರಕರಣ ಸಂಬಂಧ ಕಾರು ಚಾಲಕನ ವಶಕ್ಕೆ ಪಡೆದು ತನಿಖೆ ನಡೆಸಲಾಗುತ್ತಿದೆ.

ಕೆಎಸ್ಆರ್‌ಟಿಸಿ ಬಸ್ ಹರಿದು ಪಾದಚಾರಿ ಸಾವು

ಬೆಂಗಳೂರಿನ ಮೆಜೆಸ್ಟಿಕ್ ಬಸ್ ನಿಲ್ದಾಣದ ಟರ್ಮಿನಲ್ 3 ಬಳಿ ಕೆಎಸ್‌ಆರ್‌ಟಿಸಿ ಬಸ್‌ ಹರಿದು ಪಾದಚಾರಿಯೊಬ್ಬರು ಮೃತಪಟ್ಟಿದ್ದಾರೆ. ಸೋಮವಾರ ರಾತ್ರಿ 11 ಗಂಟೆ ಸುಮಾರಿಗೆ ಅಪಘಾತ ನಡೆದಿದೆ. ಮೃತ ವ್ಯಕ್ತಿಯು 25 ವರ್ಷದ ಆಸುಪಾಸಿನಲ್ಲಿದ್ದು, ಹೆಸರು ಪತ್ತೆಯಾಗಿಲ್ಲ. ಉಪ್ಪಾರಪೇಟೆ ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ನಡೆಸಲಾಗುತ್ತಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ತುಮಕೂರು

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

Murder Case : ತುಮಕೂರಿನಲ್ಲಿ ಭೀಕರ ಹತ್ಯೆಯೊಂದು (Tumkur Murder) ನಡೆದಿದೆ. ಪತಿಯೊಬ್ಬ ಪತ್ನಿಯ ಕತ್ತು ಹಾಗೂ ದೇಹದ ಅಂಗಾಂಗಗಳನ್ನು ಕತ್ತರಿಸಿ ಬಿಸಾಡಿದ್ದಾನೆ. ಈತನ ಕ್ರೌರ್ಯತೆಗೆ ಜನರು ಬೆಚ್ಚಿ ಬಿದ್ದಿದ್ದಾರೆ.

VISTARANEWS.COM


on

By

tumkur murder
ಕೊಲೆ ಸುದ್ದಿ ಕೇಳಿ ಮನೆ ಮುಂದೆ ಜಮಾಯಿಸಿದ ಜನರು
Koo

ತುಮಕೂರು : ಪತಿಯಿಂದಲೇ ಪತ್ನಿಯ ಭೀಕರ (Murder Case) ಕೊಲೆಯಾಗಿದೆ. ಪತ್ನಿಯ ಕತ್ತು ಹಾಗೂ ದೇಹದ ಅಂಗಾಂಗಗಳನ್ನು ಪಾಪಿ ಪತಿ ಕತ್ತರಿಸಿದ್ದಾನೆ. ಪುಷ್ಪ (32) ಹತ್ಯೆಯಾದ ದುರ್ದೈವಿ. ತುಮಕೂರಿನ ಕುಣಿಗಲ್ ತಾಲೂಕಿನ ಹುಲಿಯೂರುದುರ್ಗ ಪಟ್ಟಣದ ಹೊಸಪೇಟೆಯಲ್ಲಿ (Tumkur Murder) ಈ ದುರ್ಘಟನೆ ನಡೆದಿದೆ.

ಹುಲಿಯೂರುದುರ್ಗ ಬಳಿಯ ಸುಗ್ಗನಹಳ್ಳಿ ನಿವಾಸಿಯಾದ ಶಿವರಾಮ್ ಕೊಲೆಗಾರನಾಗಿದ್ದಾನೆ. ಶಿವಮೊಗ್ಗ ಜಿಲ್ಲೆಯ ಸಾಗರ ಮೂಲದ ಪುಷ್ಪಾಳನ್ನು ಶಿವರಾಮ್‌ ಮದುವೆಯಾಗಿದ್ದ. ಹುಲಿಯೂರುದುರ್ಗ ಪಟ್ಟಣದಲ್ಲಿ ಪತ್ನಿ ಹಾಗೂ 8 ವರ್ಷದ ಮಗುವಿನೊಂದಿಗೆ ಬಾಡಿಗೆ ಮನೆಯಲ್ಲಿ ವಾಸವಿದ್ದ.

ಮರದ ಸಾಮಿಲ್ ಒಂದರಲ್ಲಿ ಹೆಲ್ಪರ್ ಆಗಿ ಕೆಲಸ ಮಾಡುತ್ತಿದ್ದ ಶಿವರಾಮ್, ಕ್ಷುಲ್ಲಕ ಕಾರಣಕ್ಕೆ ಪತ್ನಿ ಪುಷ್ಪಾ ನಡುವೆ ಆಗಾಗ ಗಲಾಟೆ ನಡೆಯುತ್ತಿತ್ತು ಎನ್ನಲಾಗಿದೆ. ನಿನ್ನೆ ಸೋಮವಾರ ರಾತ್ರಿಯೂ (ಮೇ 27) ಗಲಾಟೆಯಾಗಿದ್ದು, ಅದು ವಿಕೋಪಕ್ಕೆ ತಿರುಗಿದೆ. ಬಳಿಕ ಕೋಪದ ಕೈಗೆ ಬುದ್ಧಿ ಕೊಟ್ಟ ಶಿವರಾಮ್‌ ಅಡುಗೆ ಮನೆಯಲ್ಲಿದ್ದ ಪತ್ನಿಯ ಕತ್ತು ಹಾಗೂ ದೇಹದ ಅಂಗಾಂಗ ಕತ್ತರಿಸಿ ಕೊಲೆ ಮಾಡಿದ್ದಾನೆ. ಶಿವರಾಮ್‌ ತನ್ನ ಮಗುವಿನ ಎದುರಿಗೆ ಕ್ರೌರ್ಯತೆಯನ್ನು ತೋರಿದ್ದಾನೆ.

ಪುಷ್ಫಾಳ ಕೂಗಾಟ ಕೇಳಿ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ ಎನ್ನಲಾಗಿದೆ. ವಿಚಾರ ತಿಳಿಯುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಹುಲಿಯೂರುದುರ್ಗ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ತುಂಡು ತುಂಡಾಗಿ ಬಿದ್ದಿದ್ದ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.

ಘಟನೆ ಸಂಬಂಧ ಹುಲಿಯೂರುದುರ್ಗ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕೊಲೆಗೈದ ಪತಿ ಶಿವರಾಮ್‌ನನ್ನು ಬಂಧಿಸಿ ಹೆಚ್ಚಿನ ತನಿಖೆಗೆ ಒಳಪಡಿಸಿದ್ದಾರೆ.

ಇದನ್ನೂ ಓದಿ: Deepfake Case: ವಿದ್ಯಾರ್ಥಿನಿಯ ಡೀಪ್‌ ಫೇಕ್‌ ಫೋಟೋ ಸೃಷ್ಟಿ ಮಾಡಿದ ಅದೇ ಶಾಲೆಯ 2 ಹುಡುಗರು ಡಿಬಾರ್

ಎಮ್ಮೆ ಮಾರಿ ಬಂದ ಕಾಸಿನಿಂದ ಕುಡಿತಕ್ಕೆ ಖರ್ಚು; ಕೇಳಿದ್ದಕ್ಕೆ ಹೆಂಡತಿಯ ಕೊಂದು ನೇಣು ಹಾಕಿಕೊಂಡ

ಬೆಳಗಾವಿ: ಇದ್ದ ಒಂದು ಎಮ್ಮೆಯನ್ನೂ ಮಾರಿ ಅದರಿಂದ ಬಂದ ಕಾಸನ್ನು ಕುಡಿತಕ್ಕೆ ಖರ್ಚು ಮಾಡಿದ ಭಂಡ ಗಂಡನನ್ನು ಆಕ್ಷೇಪಿಸಿದ್ದಕ್ಕೆ ಹೆಂಡತಿಯನ್ನು ಕೊಂದು (Murder Case) ತಾನೂ ನೇಣಿಗೆ (Self harming) ಶರಣಾಗಿದ್ದಾನೆ. ಈ ಘಟನೆ ಬೆಳಗಾವಿ (Belagavi news) ಜಿಲ್ಲೆ ಮೂಡಲಗಿ ತಾಲೂಕಿನ ಪುಲಗಡ್ಡಿ ಎಂಬ ಗ್ರಾಮದಲ್ಲಿ ನಡೆದಿದೆ.

ಅಣ್ಣಪ್ಪ ನಂದಿ, ಯಲ್ಲವ್ವ ನಂದಿ (41) ದುರಂತ ಅಂತ್ಯ ಕಂಡ ಗಂಡ ಹೆಂಡತಿ. ತನ್ನಲ್ಲಿದ್ದ ಎಮ್ಮೆಯನ್ನು‌ ಮಾರಿ ಬಂದ ಹಣದಿಂದ ಅಣ್ಣಪ್ಪ ಕಂಠಪೂರ್ತಿ ಕುಡಿದು ಬಂದಿದ್ದ. ನಿನ್ನೆ ಸೋಮವಾರ ಸಂಜೆ ವೇಳೆ ಹೊಲದಲ್ಲಿ ಕೆಲಸ ಮಾಡುತ್ತಿದ್ದ ಪತ್ನಿ ಯಲ್ಲವ್ವ ನಂದಿ, ಗಂಡನ ಈ ನಡತೆಯನ್ನು ಆಕ್ಷೇಪಿಸಿದ್ದಳು.

ಇದರಿಂದ ಜಗಳ ಹುಟ್ಟಿಕೊಂಡಿದೆ. ಹೆಂಡತಿಯ ಮೇಲೆ‌ ಮೊದಲೇ ಸಂಶಯ ಪಡುತ್ತಿದ್ದ ಪಾಪಿ ಅಣ್ಣಪ್ಪ, ಹೆಂಡತಿ ಪ್ರಶ್ನೆ ಮಾಡುತ್ತಿದ್ದಂತೆ ಆಕೆಯನ್ನು ಕೊಂದು ಹಾಕಿದ್ದಾನೆ, ನಂತರ ಮನೆಗೆ ಬಂದು ಮನೆಯ ಹೊರ ಭಾಗದ ತಗಡಿನ ಶೆಡ್‌ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕುಲಗೋಡ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಕ್ರೈಂ

Deepfake Case: ವಿದ್ಯಾರ್ಥಿನಿಯ ಡೀಪ್‌ ಫೇಕ್‌ ಫೋಟೋ ಸೃಷ್ಟಿ ಮಾಡಿದ ಅದೇ ಶಾಲೆಯ 2 ಹುಡುಗರು ಡಿಬಾರ್

Deep Fake Case: ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಶಾಲಾ ಪ್ರಿನ್ಸಿಪಾಲರು ಅಮಾನತು ಮಾಡಿದ್ದಾರೆ. ಡೀಪ್ ಫೇಕ್ ತಂತ್ರಜ್ಞಾನ ಬಳಸಿ ತಮ್ಮ ಶಾಲೆಯ ವಿದ್ಯಾರ್ಥಿನಿಯೊಬ್ಬರ ಅರೆನಗ್ನ ಫೋಟೋ ಸೃಷ್ಟಿಸಿ ಅದನ್ನು ವಿದ್ಯಾರ್ಥಿಗಳೇ ಇರುವ ಇನ್‌ಸ್ಟಗ್ರಾಂ ಗ್ರೂಪ್‌ ಒಂದರಲ್ಲಿ ಹಂಚಿಕೊಂಡು ವೈರಲ್‌ ಮಾಡಿದ ಆರೋಪ ಇವರ ಮೇಲಿದೆ.

VISTARANEWS.COM


on

deep fake case
Koo

ಬೆಂಗಳೂರು: ಖಾಸಗಿ ಶಾಲೆಯ (private school) ವಿದ್ಯಾರ್ಥಿನಿಯೊಬ್ಬರ ಫೋಟೋವನ್ನು ಡೀಪ್‌ ಫೇಕ್‌ ಮೂಲಕ ನಗ್ನವಾಗಿ ಕ್ರಿಯೇಟ್‌ ಮಾಡಿ (student Deepfake Photo case) ಇನ್‌ಸ್ಟಾಗ್ರಾಂನಲ್ಲಿ (Instagram) ಹಂಚಿಕೊಂಡ ಪ್ರಕರಣದಲ್ಲಿ, ಅದೇ ಶಾಲೆಯ 2 ವಿದ್ಯಾರ್ಥಿಗಳನ್ನು ಅಮಾನತು (debar) ಮಾಡಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಇಬ್ಬರನ್ನು ಶಾಲಾ ಪ್ರಿನ್ಸಿಪಾಲರು ಅಮಾನತು ಮಾಡಿದ್ದಾರೆ. ಡೀಪ್ ಫೇಕ್ ತಂತ್ರಜ್ಞಾನ ಬಳಸಿ ತಮ್ಮ ಶಾಲೆಯ ವಿದ್ಯಾರ್ಥಿನಿಯೊಬ್ಬರ ಅರೆನಗ್ನ ಫೋಟೋ ಸೃಷ್ಟಿಸಿ ಅದನ್ನು ವಿದ್ಯಾರ್ಥಿಗಳೇ ಇರುವ ಇನ್‌ಸ್ಟಗ್ರಾಂ ಗ್ರೂಪ್‌ ಒಂದರಲ್ಲಿ ಹಂಚಿಕೊಂಡು ವೈರಲ್‌ ಮಾಡಿದ ಆರೋಪ ಇವರ ಮೇಲಿದೆ.

ಮೇ 24ರಂದು 9ನೇ ತರಗತಿಯ ವಿದ್ಯಾರ್ಥಿನಿಯರ ಫೋಟೋ ಇನ್‌ಸ್ಟಾಗ್ರಾಂನಲ್ಲಿ ವೈರಲ್ ಆಗಿತ್ತು. ಇದರಿಂದ ವಿದ್ಯಾರ್ಥಿನಿಯರು ಹಾಗೂ ಅವರ ಪೋಷಕರು ಬೆಚ್ಚಿ ಬಿದ್ದಿದ್ದರು. ವಿದ್ಯಾರ್ಥಿನಿಯರು ಶಾಕ್‌ಗೆ ಒಳಗಾಗಿ, ಖಿನ್ನತೆಗೆ ಜಾರುವ ಪರಿಸ್ಥಿತಿ ತಲುಪಿದ್ದರು. ಆತಂಕಿತಗೊಂಡ ವಿದ್ಯಾರ್ಥಿನಿಯ ಪೋಷಕರು ಸೈಬರ್ ಸೆಲ್‌ಗೆ ದೂರು ನೀಡಿದ್ದರು.

ಪ್ರಕರಣವನ್ನು ಶಾಲೆ ಆಡಳಿತ ಮಂಡಳಿ ಹಾಗೂ ಸೈಬರ್‌ ಪೊಲೀಸರು ಗಂಭೀರವಾಗಿ ಪರಿಗಣಿಸಿದ್ದಾರೆ. ಪ್ರಕರಣದಲ್ಲಿ ಇಬ್ಬರು ವಿದ್ಯಾರ್ಥಿಗಳು ಈ ಕೃತ್ಯವನ್ನು ತಾವೇ ಎಸಗಿದ್ದಾಗಿ ತಪ್ಪೊಪ್ಪಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಅವರನ್ನು ಸಸ್ಪೆಂಡ್ ಮಾಡಲಾಗಿದೆ. ಅರೆನಗ್ನ ಫೋಟೋಗೆ ಹಲವು ಮಂದಿ ವಿಕೃತವಾದ, ಆತಂಕಪಡಿಸುವಂಥ ಕಾಮೆಂಟ್‌ಗಳನ್ನೂ ಹಾಕಿದ್ದಾರೆ. ಇವರನ್ನೂ ಹುಡುಕಿ ತನಿಖೆಗೆ ಒಳಪಡಿಸಲಾಗುತ್ತದೆ ಎಂದು ಸೈಬರ್‌ ಪೊಲೀಸರು ತಿಳಿಸಿದ್ದಾರೆ. ಈ ವಿದ್ಯಾರ್ಥಿಗಳಿಗೆ ಡೀಪ್‌ ಫೇಕ್‌ ತಂತ್ರಜ್ಞಾನ ನೀಡಿದವರು ಯಾರು, ಈ ಬಗೆಯ ಫೋಟೋ ಸೃಷ್ಟಿಸಲು ತರಬೇತಿ ನೀಡಿದವರು ಯಾರು, ಇವರಿಗೆ ಇರಬಹುದಾದ ಹೊರಗಿನ ಬೆಂಬಲ ಇತ್ಯಾದಿಗಳ ಬಗ್ಗೆಯೂ ಗಮನ ಹರಿಸಲಾಗುತ್ತಿದೆ.‌

ಸಿಬಿಐ ಅಧಿಕಾರಿಗಳೆಂದು ಹೇಳಿಕೊಂಡು ವೈದ್ಯರಿಗೆ ಲಕ್ಷಗಟ್ಟಲೆ ರೂಪಾಯಿ ವಂಚನೆ

ಕಲಬುರಗಿ: ಸಿಬಿಐ ಅಧಿಕಾರಿಗಳ (CBI Officers) ಹೆಸರಿನಲ್ಲಿ ಸಂಪರ್ಕಿಸಿ ಪ್ರತಿಷ್ಠಿತ ಆಸ್ಪತ್ರೆಯ ವೈದ್ಯರೊಬ್ಬರಿಂದ 76 ಲಕ್ಷ ರೂ.ಗಳಷ್ಟು ಹಣವನ್ನು ವಂಚಿಸಿದ (Cyber Crime) ಘಟನೆ ನಡೆದಿದೆ. ಕಲಬುರಗಿಯ (Kalaburagi news) ಪ್ರತಿಷ್ಠಿತ ವೈದ್ಯ ಪಿ. ಎಸ್ ಶಂಕರ್ ಎಂಬವರು ಹೀಗೆ ವಂಚನೆಗೆ (Fraud Case) ಒಳಗಾಗಿ 76 ಲಕ್ಷ ರೂ. ಕಳೆದುಕೊಂಡಿದ್ದಾರೆ.

ಡಾ. ಪಿ‌.ಎಸ್ ಶಂಕರ್ ಅವರು ಕಲಬುರಗಿ ನಗರದ ಕೆಬಿಎನ್ ಆಸ್ಪತ್ರೆಯಲ್ಲಿ ಎಮಿರೆಟ್ಸ್ ಆಫೀಸರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಮೇ 14ರಂದು ವೈದ್ಯರಿಗೆ ವಿಜಯ್ ಕುಮಾರ್ ಚೌಬೆ ಎಂಬಾತ ಕರೆ ಮಾಡಿದ್ದು, ತಾನು ಮುಂಬಯಿ ಕ್ರೈಂ ಬ್ರಾಂಚ್ ಆಫೀಸರ್ ಎಂದು ಪರಿಚಯ ಮಾಡಿಕೊಂಡಿದ್ದಾನೆ. ಮುಂಬಯಿಯಲ್ಲಿ ನಿಮ್ಮ ವಿರುದ್ಧ ಮನಿ ಲಾಂಡ್ರಿಂಗ್ ಕೇಸ್ ಆಗಿದೆ ಎಂದು ಬೆದರಿಸಿದ್ದಾನೆ.

ಮನಿ ಲಾಂಡ್ರಿಂಗ್ (Money Laundering) ಕೇಸ್ ಸಂಬಂಧ ನಿಮ್ಮನ್ನು ವಿಚಾರಣೆ ಮಾಡಬೇಕಾಗಿದೆ. ನಿಮ್ಮ ಹೆಸರಲ್ಲಿ ಎಲ್ಲೆಲ್ಲಿ ಬ್ಯಾಂಕ್ ಅಕೌಂಟ್ ಇದೆ, ಯಾವ್ಯಾವ ಬ್ಯಾಂಕ್‌ನಲ್ಲಿ ಎಷ್ಟು ಹಣ ಇದೆ ಎಂದು ಮಾಹಿತಿ ನೀಡಿ ಎಂದು ಬೆದರಿಸಿ ಮಾಹಿತಿ ಪಡೆದಿದ್ದಾನೆ. ಈ ವಿಚಾರ ಹೊರಗಡೆ ಎಲ್ಲೂ ಹೇಳದಂತೆ ಹಾಗೂ ತಾವಿರುವ ಸ್ಥಳ ಬಿಟ್ಟು ಹೋಗದಂತೆ ಸೂಚನೆ ನೀಡಿದ್ದಾನೆ. ಬಳಿಕ, ನಿಮ್ಮ ವಿರುದ್ಧ ಸುಪ್ರೀಂ ಕೋರ್ಟ್ ಆರೆಸ್ಟ್ ವಾರೆಂಟ್ ಜಾರಿ ಮಾಡಿದೆ, ಸಿಬಿಐನವರು ನಿಮ್ಮನ್ನು ಆರೆಸ್ಟ್ ಮಾಡಬಹುದು ಎಂದು ಹೆದರಿಸಿದ್ದಾನೆ.

ನಿಮಗೆ ತೊಂದರೆ ಆಗಬಾರದು ಅಂದರೆ ಸಿಬಿಐ ಹಿರಿಯ ಅಧಿಕಾರಿಗಳಿಗೆ ಪ್ರಿಯಾರಿಟಿ ಎನ್‌ಕ್ವೈಯರಿ ಮಾಡುವಂತೆ ಮನವಿ ಮಾಡಿಕೊಳ್ಳಬೇಕು ಎಂದಿದ್ದಾನೆ. ಅದರಂತೆ ಸಿಬಿಐ ಅಧಿಕಾರಿಗಳಿಗೆ ಪತ್ರ ಬರೆಯಲು ಮುಂದಾದ ವೈದ್ಯ ಶಂಕರ್‌ಗೆ, ಸಿಬಿಐ ಅಧಿಕಾರಿ ಆಕಾಶ್ ಪುಲ್ಹರಿ ಎಂಬ ಹೆಸರಿನವನನ್ನು ಪರಿಚಯಿಸಿದ್ದಾನೆ. ಪುಲ್ಹರಿಗೆ ಪತ್ರ ಬರೆದು ವೈದ್ಯರು ಮನವಿ ಮಾಡಿಕೊಂಡಿದ್ದಾರೆ. ಸ್ಕೈಪ್ ಆಪ್ ಮೂಲಕ ವೈದ್ಯರನ್ನು ಸಂಪರ್ಕಿಸಿದ ಆಕಾಶ್ ಪುಲ್ಹರಿ, ಬಳಿಕ ವೈದ್ಯರ ವಿರುದ್ಧ ಸುಪ್ರೀಂ ಕೋರ್ಟ್‌ನಲ್ಲಿ ಕೇಸ್ ದಾಖಲಾಗಿರುವುದಾಗಿ ನಂಬಿಸಿದ್ದಾನೆ.

ನಂತರ ವೈದ್ಯರ ಅಕೌಂಟ್‌ನಲ್ಲಿರುವ ಹಣದ ಬಗ್ಗೆ ಮಾಹಿತಿ ಪಡೆದು, ತಕ್ಷಣ ತನ್ನ ಅಕೌಂಟ್‌ಗೆ ಹಣ ಟ್ರಾನ್ಸ್‌ಫರ್ ಮಾಡಿಸಿಕೊಂಡಿದ್ದಾನೆ. ಹಣ ಕಳೆದುಕೊಂಡ ಬಳಿಕ ವೈದ್ಯರಿಗೆ ತಾವು ಮೋಸ ಹೋಗಿರುವ ಕುರಿತು ಜ್ಞಾನೋದಯವಾಗಿದೆ. ಈ ಬಗ್ಗೆ ದೂರು ದಾಖಲು ಮಾಡಿದ್ದಾರೆ. ಕಲಬುರಗಿಯ ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಲಾಗಿದ್ದು, ಪೊಲೀಸರು ನಕಲಿ ಸಿಬಿಐ ಅಧಿಕಾರಿಗಳ ಕುರಿತು ತನಿಖೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: Deep fake Scam : ಸೆಲೆಬ್ರಿಟಿಗಳ ಬಳಿಕ ಈಗ ಬೆಂಗಳೂರು ಶಾಲಾ ವಿದ್ಯಾರ್ಥಿನಿಯರಿಗೆ ಡೀಪ್‌ಫೇಕ್‌ ಕಾಟ; ನಗ್ನ ಫೋಟೋ ವೈರಲ್

Continue Reading

ಕ್ರೈಂ

Murder Case: ಎಮ್ಮೆ ಮಾರಿ ಬಂದ ಕಾಸಿನಿಂದ ಕುಡಿದ; ಆಕ್ಷೇಪಿಸಿದ ಹೆಂಡತಿಯ ಕೊಂದು ನೇಣು ಹಾಕಿಕೊಂಡ

Murder Case: ಅಣ್ಣಪ್ಪ ನಂದಿ, ಯಲ್ಲವ್ವ ನಂದಿ(41) ದುರಂತ ಅಂತ್ಯ ಕಂಡ ಗಂಡ ಹೆಂಡತಿ. ತನ್ನಲ್ಲಿದ್ದ ಎಮ್ಮೆಯನ್ನು‌ ಮಾರಿ ಬಂದ ಹಣದಿಂದ ಅಣ್ಣಪ್ಪ ಕಂಠಪೂರ್ತಿ ಕುಡಿದು ಬಂದಿದ್ದ. ನಿನ್ನೆ ಸಂಜೆ ವೇಳೆ ಹೊಲದಲ್ಲಿ ಕೆಲಸ ಮಾಡುತ್ತಿದ್ದ ಪತ್ನಿ ಯಲ್ಲವ್ವ ನಂದಿ, ಗಂಡನ ಈ ನಡತೆಯನ್ನು ಆಕ್ಷೇಪಿಸಿದ್ದಳು.

VISTARANEWS.COM


on

murder case belagavi news
Koo

ಬೆಳಗಾವಿ: ಇದ್ದ ಒಂದು ಎಮ್ಮೆಯನ್ನೂ ಮಾರಿ ಅದರಿಂದ ಬಂದ ಕಾಸನ್ನು ಕುಡಿತಕ್ಕೆ ಖರ್ಚು ಮಾಡಿದ ಭಂಡ ಗಂಡ, ಇದನ್ನು ಆಕ್ಷೇಪಿಸಿದ ಹೆಂಡತಿಯನ್ನು ಕೊಂದು (Murder Case) ತಾನೂ ನೇಣಿಗೆ (Self harming) ಶರಣಾಗಿದ್ದಾನೆ. ಈ ಘಟನೆ ಬೆಳಗಾವಿ (Belagavi news) ಜಿಲ್ಲೆ ಮೂಡಲಗಿ ತಾಲೂಕಿನ ಪುಲಗಡ್ಡಿ ಎಂಬ ಗ್ರಾಮದಲ್ಲಿ ನಡೆದಿದೆ.

ಅಣ್ಣಪ್ಪ ನಂದಿ, ಯಲ್ಲವ್ವ ನಂದಿ(41) ದುರಂತ ಅಂತ್ಯ ಕಂಡ ಗಂಡ ಹೆಂಡತಿ. ತನ್ನಲ್ಲಿದ್ದ ಎಮ್ಮೆಯನ್ನು‌ ಮಾರಿ ಬಂದ ಹಣದಿಂದ ಅಣ್ಣಪ್ಪ ಕಂಠಪೂರ್ತಿ ಕುಡಿದು ಬಂದಿದ್ದ. ನಿನ್ನೆ ಸಂಜೆ ವೇಳೆ ಹೊಲದಲ್ಲಿ ಕೆಲಸ ಮಾಡುತ್ತಿದ್ದ ಪತ್ನಿ ಯಲ್ಲವ್ವ ನಂದಿ, ಗಂಡನ ಈ ನಡತೆಯನ್ನು ಆಕ್ಷೇಪಿಸಿದ್ದಳು.

ಇದರಿಂದ ಜಗಳ ಹುಟ್ಟಿಕೊಂಡಿದೆ. ಹೆಂಡತಿಯ ಮೇಲೆ‌ ಮೊದಲೇ ಸಂಶಯ ಪಡುತ್ತಿದ್ದ ಪಾಪಿ ಅಣ್ಣಪ್ಪ, ಹೆಂಡತಿ ಪ್ರಶ್ನೆ ಮಾಡುತ್ತಿದ್ದಂತೆ ಆಕೆಯನ್ನು ಕೊಂದು ಹಾಕಿದ್ದಾನೆ, ನಂತರ ಮನೆಗೆ ಬಂದು ಮನೆಯ ಹೊರ ಭಾಗದ ತಗಡಿನ ಶೆಡ್‌ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಕುಲಗೋಡ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನಿರ್ಲಕ್ಷ್ಯ ಚಾಲನೆ ಪ್ರಶ್ನಿಸಿದ ಹಿಂದೂ ಯುವಕರಿಗೆ ಮುಸ್ಲಿಂ ಗುಂಪಿನಿಂದ ಹಲ್ಲೆ

ಮಂಡ್ಯ : ಅತಿ ವೇಗದಲ್ಲಿ ಕಾರು ಚಾಲನೆ ಮಾಡಿದ್ದನ್ನು ಪ್ರಶ್ನಿಸಿದ್ದ ಅಭಿಲಾಷ್​ ಎಂಬುವರ ಮೇಲೆ ಮುಸ್ಲಿಂ ಸಮುದಾಯಕ್ಕೆ ಸೇರಿದ್ದ ಯುವಕರ ಗುಂಪೊಂದು ಹಲ್ಲೆ ಮಾಡಿದ ಘಟನೆ ಮಂಡ್ಯ ಜಿಲ್ಲೆಯ (Mandya News) ನಾಗಮಂಗಲ ತಾಲೂಕಿನ ಬೆಳ್ಳೂರಿನಲ್ಲಿ ಸೋಮವಾರ ಸಂಜೆ ವೇಳೆ ನಡೆದಿದೆ. ಘಟನೆ ಬಳಿಕ ಬೆಳ್ಳೂರು ಪೊಲೀಸ್​ ಠಾಣಾ ವ್ಯಾಪ್ತಿಯಲ್ಲಿ ಪ್ರಕ್ಷುಬ್ಧ ಪರಿಸ್ಥಿತಿ ಉಟಾಗಿದ್ದು ಪೊಲೀಸರು ಪರಿಸ್ಥಿತಿಯನ್ನು ನಿಯಂತ್ರಿಸಲು ಶ್ರಮ ವಹಿಸುತ್ತಿದ್ದಾರೆ. ಗಂಭೀರವಾಗಿ ಪೆಟ್ಟು ತಿಂದಿರುವ ಅಭಿಲಾಷ್​ ಅವರನ್ನು ಬೆಳ್ಳೂರಿನ ಏಮ್ಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಕಳೆದ ಶುಕ್ರವಾರ ಮುಸ್ಲಿಂ ಯುವಕರ ಗುಂಪು ಬೆಳ್ಳೂರಿನ ಸಂತೆ ಬೀದಿಯಲ್ಇ ಅತಿ ವೇಗದಲ್ಲಿ ಪಟ್ಟಣದೊಳಗೆ ಕಾರು ಓಡಿಸಿಕೊಂಡು ಹೋಗಿದೆ. ಅಪಾಯಕಾರಿ ರೀತಿಯಲ್ಲಿ ವಾಹನ ಓಡಿಸಿದ್ದನ್ನು ಹಲ್ಲೆಗೆ ಒಳಗಾಗಿರುವ ಅಭಿಲಾಷ್ ಹಾಗೂ ಅವರ ಜತೆಗಾರ ನಾಗೇಶ್​ ಎಂಬುವರು ಪ್ರಶ್ನಿಸಿದ್ದರು. ಮಿತಿ ಮೀರಿದ ವೇಗದಲ್ಲಿ ಕಾರು ಓಡಿಸದಂತೆ ಆ ಗುಂಪಿಗೆ ಬುದ್ಧಿವಾದ ಹೇಳಿದ್ದರು. ಈ ವೇಳೆ ಸಣ್ಣ ಮಟ್ಟಿನ ಮಾತಿನ ಚಕಮಕಿ ನಡೆದಿತ್ತು. ಅದೇ ದ್ವೇಷವನ್ನು ಇಟ್ಟುಕೊಂಡಿದ್ದ ಮುಸ್ಲಿಂ ಯುವಕರ ಗುಂಪಿ ಇನ್ನಷ್ಟು ದೊಡ್ಡ ಗುಂಪನ್ನು ಕಟ್ಟಿಕೊಂಡು ಬಂದು ಸೋಮವಾರ ಸಂಜೆ ಹಲ್ಲೆ ಮಾಡಿದ್ದಾರೆ.

ದೊಡ್ಡ ಗುಂಪಿನಿಂದ ಏಟು ತಿಂದಿರುವ ಅಭಿಲಾಷ್​ ಅವರಿಗೆ ಬಹು ವಿಧದಲ್ಲಿ ಗಾಯಗಳಾಗಿವೆ ಎಂದು ಅವರ ಆಪ್ತರು ಹೇಳಿದ್ದಾರೆ. ತಕ್ಷಣ ಸ್ಥಳೀಯರು ಅವರನ್ನು ಏಮ್ಸ್​ ಆಸ್ಪತ್ರೆಗೆ ದಾಖಲಿಸಿದ್ದಾರೆ. ಘಟನೆ ಸುದ್ದಿಯಾದ ಬಳಿಕ ಬೆಳ್ಳೂರು ಪಟ್ಟಣದಲ್ಲಿ ಆತಂಕ ಮನೆ ಮಾಡಿದೆ. ಪಟ್ಟಣದಲ್ಲಿ ಪ್ರಕ್ಷುಬ್ದ ವಾತಾವರಣ ಉಂಟಾಗಿದ್ದು ಗಲಾಟೆ ಸಂಭವಿಸುವ ಸಾಧ್ಯತೆಗಳನ್ನು ಮನಗಂಡಿರುವ ಪೊಲೀಸರು ಬೆಳ್ಳೂರು ಪಟ್ಟಣ ಹಾಗೂ ಬಿಜಿಎಸ್ ಆಸ್ಪತ್ರೆಗೆ ಬಿಗಿ ಪೊಲೀಸ್ ಭದ್ರತೆ. ಒದಗಿಸಿದ್ದಾರೆ. ಬೆಳ್ಳೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

ಇದನ್ನೂ ಓದಿ: Assault Case: ಹಿಂಡಲಗಾ ಜೈಲಿನಲ್ಲಿ ಕೈದಿಯಿಂದಲೇ ಮಾರಣಾಂತಿಕ ಹಲ್ಲೆ; ಭಯದಲ್ಲಿ ಬದುಕುತ್ತಿರುವ ಸಿಬ್ಬಂದಿ!

Continue Reading
Advertisement
Road Accident in Anekal
ಕ್ರೈಂ17 mins ago

Road Accident : ತಿರುವಿನಲ್ಲಿದ್ದ ಜವರಾಯ; ಸ್ಪೀಡಾಗಿ ಬಂದು ಫೆನ್ಸಿಂಗ್ ಕಂಬಕ್ಕೆ ಡಿಕ್ಕಿ, ಬೈಕ್‌ ಸವಾರ ಸಾವು

T20 World Cup 2024
ಕ್ರೀಡೆ18 mins ago

T20 World Cup 2024: ಟಿ20 ವಿಶ್ವಕಪ್​ ಇತಿಹಾಸದಲ್ಲಿ ಎಂದೂ ಮರೆಯದ ಸ್ಮರಣೀಯ ಸನ್ನಿವೇಶಗಳಿವು

Human trafficking
ದೇಶ27 mins ago

Human trafficking Case: ದೇಶಾದ್ಯಂತ NIA ರೇಡ್‌; ಮಾನವ ಕಳ್ಳಸಾಗಣೆ ಜಾಲ ಬಯಲು

Stone Quarry Collapses
ದೇಶ31 mins ago

Stone Quarry Collapses: ಕಲ್ಲಿನ ಗಣಿ ಕುಸಿದು 10 ಮಂದಿ ಜೀವಂತ ಸಮಾಧಿ; ರಕ್ಷಣಾ ಕಾರ್ಯಾಚರಣೆಗೆ ಭೀಕರ ಮಳೆ ಅಡ್ಡಿ

tumkur murder
ತುಮಕೂರು45 mins ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

deep fake case
ಕ್ರೈಂ1 hour ago

Deepfake Case: ವಿದ್ಯಾರ್ಥಿನಿಯ ಡೀಪ್‌ ಫೇಕ್‌ ಫೋಟೋ ಸೃಷ್ಟಿ ಮಾಡಿದ ಅದೇ ಶಾಲೆಯ 2 ಹುಡುಗರು ಡಿಬಾರ್

Rashmika Mandanna
South Cinema1 hour ago

Rashmika Mandanna: ವಿಜಯ್‌ ದೇವರಕೊಂಡ ಹೆಸರು ಕೇಳುತ್ತಲೇ ನಾಚಿ ನೀರಾದ ರಶ್ಮಿಕಾ; ಸದ್ಯದಲ್ಲೇ ಗುಡ್‌ನ್ಯೂಸ್‌?

T20 World Cup 2024
ಕ್ರೀಡೆ1 hour ago

T20 World Cup 2024: ಟಿ20 ವಿಶ್ವ ಕಪ್​ನಲ್ಲಿ ಟೀಮ್​ ಇಂಡಿಯಾದ ಮುಂದಿರುವ ಸವಾಲುಗಳೇನು?

murder case belagavi news
ಕ್ರೈಂ2 hours ago

Murder Case: ಎಮ್ಮೆ ಮಾರಿ ಬಂದ ಕಾಸಿನಿಂದ ಕುಡಿದ; ಆಕ್ಷೇಪಿಸಿದ ಹೆಂಡತಿಯ ಕೊಂದು ನೇಣು ಹಾಕಿಕೊಂಡ

Pune Porsche Accident
ದೇಶ2 hours ago

Pune Porsche Accident: ಆರೋಪಿಯ ರಕ್ತದ ಮಾದರಿ ಬದಲಿಸಲು 3 ಲಕ್ಷ ರೂ. ಲಂಚ ಪಡೆದಿದ್ದ ವೈದ್ಯರು; ಆಸ್ಪತ್ರೆ ಜವಾನ ಅರೆಸ್ಟ್‌

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Weather Forecast
ಮಳೆ18 hours ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ2 days ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

Basavanagudi News
ಬೆಂಗಳೂರು2 days ago

Basavanagudi News : ಪೂಜಾ ಸಾಮಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

Karnataka Rain
ಮಳೆ3 days ago

Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

dina bhavishya read your daily horoscope predictions for May 23 2024
ಭವಿಷ್ಯ5 days ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ6 days ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ7 days ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

Love Case Father throws hot water on man who loved his daughter for coming home
ಕೊಡಗು7 days ago

Love Case : ಮನೆಗೆ ಬಂದ ಪ್ರೇಮಿಗೆ ಕೊತ ಕೊತ ಕುದಿಯುವ ನೀರು ಎರಚಿದ ಯುವತಿ ತಂದೆ!

Contaminated Water
ಮೈಸೂರು1 week ago

Contaminated Water : ಡಿ ಸಾಲುಂಡಿಯಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡಿದ್ದ ಯುವಕ ಸಾವು

Karnataka Rain
ಮಳೆ1 week ago

Karnataka Rain : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

ಟ್ರೆಂಡಿಂಗ್‌