Reservation Politics : ರಾಜ್ಯ ಕಾಂಗ್ರೆಸ್‌ ಸರ್ಕಾರಕ್ಕೆ ಮೀಸಲಾತಿ ಸಂಕಷ್ಟ; ಸರ್ಕಾರದ ವಿರುದ್ಧ ಸಚಿವರ ʼಮುನಿʼ - Vistara News

ಕರ್ನಾಟಕ

Reservation Politics : ರಾಜ್ಯ ಕಾಂಗ್ರೆಸ್‌ ಸರ್ಕಾರಕ್ಕೆ ಮೀಸಲಾತಿ ಸಂಕಷ್ಟ; ಸರ್ಕಾರದ ವಿರುದ್ಧ ಸಚಿವರ ʼಮುನಿʼ

Reservation Politics : ರಾಜ್ಯ ಸರ್ಕಾರಕ್ಕೆ ಮತ್ತೆ ಒಳ ಮೀಸಲಾತಿ ಸಂಕಷ್ಟ ಎದುರಾಗಿದೆ. ಕಳೆದ ಬಿಜೆಪಿ ಸರ್ಕಾರಕ್ಕೆ ಪಂಚಮಸಾಲಿ ಸಮುದಾಯದ ಹೋರಾಟ ಬಿಸಿ ಮುಟ್ಟಿಸಿತ್ತು. ಈಗ ಎಡಗೈ ಸಮುದಾಯದವರು ಮೀಸಲಾತಿ ಜಾರಿಗೆ ಪಟ್ಟು ಹಿಡಿದಿದ್ದಾರೆ. ಸಚಿವ ಕೆ.ಎಚ್.‌ ಮುನಿಯಪ್ಪ ಇದರ ಮುಂದಾಳತ್ವವನ್ನು ತೆಗೆದುಕೊಂಡಿದ್ದಾರೆ. ಹೀಗಾಗಿ ಈ ವಿಚಾರವನ್ನು ರಾಜಕೀಯವಾಗಿ ಕುತೂಹಲಕ್ಕೆ ಕಾರಣವಾಗಿದೆ.

VISTARANEWS.COM


on

KH Muniyappa and CM Siddaramaiah
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ರಾಜ್ಯ ಕಾಂಗ್ರೆಸ್‌ ಸರ್ಕಾರಕ್ಕೆ (Congress Government) ಮೀಸಲಾತಿ ಸಂಕಷ್ಟ (Reservation crisis) ಎದುರಾಗಿದೆ. ಕಾಂಗ್ರೆಸ್‌ ಸರ್ಕಾರ ಬಂದ ತಕ್ಷಣ ಮೀಸಲಾತಿ ಪಾಲಿಟಿಕ್ಸ್ (Reservation Politics) ಶುರುವಾಗಿತ್ತು. ಈಗ ಹಲವು ಸಮುದಾಯಗಳಿಂದ ಮೀಸಲಾತಿ ರಾಜಕಾರಣ ಆರಂಭವಾಗಿದೆ. ಅಲ್ಲದೆ, ಈ ಸಂಬಂಧ “ತಾವು ಯಾರಿಗೂ ಹೆದರುವುದಿಲ್ಲ. ಎಲ್ಲದಕ್ಕೂ ಸಿದ್ಧನಿದ್ದೇನೆ” ಎಂಬ ಸಚಿವ ಕೆ.ಎಚ್.‌ ಮುನಿಯಪ್ಪ ಅವರ ಬಹಿರಂಗ ಎಚ್ಚರಿಕೆಯು ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಈ ಮೂಲಕ ರಾಜ್ಯ ರಾಜಕೀಯದಲ್ಲಿ (Reservation Politics) ಮತ್ತೊಂದು ಸಮರಕ್ಕೆ ಮುನ್ನುಡಿ ಬರೆದಿದ್ದಾರೆ.

ಡಾ. ಜಿ.ಎಂ. ಪರಮೇಶ್ವರ್‌‌‌ ಸಿಎಂ ರೇಸ್‌ಗೆ ಎಂಟ್ರಿ ಆದ ತಕ್ಷಣ ಎಡಗೈ ಸಮುದಾಯ ಅಲರ್ಟ್‌‌ ಆಗಿದೆ. ಎಡಗೈ ಸಮುದಾಯದ ನಾಯಕರಿಂದ ಒಗ್ಗಟ್ಟು ಪ್ರದರ್ಶನ ಮಾಡಲಾಗಿದೆ. ಎಡಗೈ ಸಮುದಾಯದಿಂದ ಸಿಎಂ, ಡಿಸಿಎಂ ಹುದ್ದೆಗಾಗಿ ಬೇಡಿಕೆ ಇಡಲಾಗಿದೆ. ಸೋಮವಾರ ಬೆಂಗಳೂರಿನಲ್ಲಿ ನಡೆದಿದ್ದ ದುಂಡು ಮೇಜಿನ ಸಭೆಯಲ್ಲಿ ಈ ನಿರ್ಧಾರವನ್ನು ಕೈಗೊಳ್ಳಲಾಗಿದೆ.

ಸರ್ಕಾರದ ವಿರುದ್ಧ ತೊಡೆ ತಟ್ಟಿದ ಕೆ.ಎಚ್‌‌. ಮುನಿಯಪ್ಪ

ರಾಜ್ಯ ಕಾಂಗ್ರೆಸ್‌ ಸರ್ಕಾರ ಸಂಪೂರ್ಣ ಬಹುಮತವನ್ನು ಪಡೆದುಕೊಂಡರೂ ಒಂದಲ್ಲ ಒಂದು ರೀತಿಯ ಕಿರಿಕಿರಿಯನ್ನು ಅನುಭವಿಸುತ್ತಲೇ ಬಂದಿದೆ. ಅಲ್ಲದೆ, ಸರ್ಕಾರದ ವಿರುದ್ಧ ಶಾಸಕರು – ಸಚಿವರಿಂದಲೇ ಅಸಮಾಧಾನಗಳು ವ್ಯಕ್ತವಾಗುತ್ತಾ ಬಂದಿದ್ದವು. ಇನ್ನು ಸಿಎಂ – ಡಿಸಿಎಂ ಹುದ್ದೆ ಸಹ ಸಾಕಷ್ಟು ಸದ್ದು ಮಾಡಿತ್ತು. ಈ ಬಗ್ಗೆ ಕಾಂಗ್ರೆಸ್‌ ಶಾಸಕರಾದಿಯಾಗಿ ಸಚಿವರು ಹೇಳಿಕೆ ನೀಡುತ್ತಲೇ ಬಂದಿದ್ದರು. ಬಳಿಕ ಹೈಕಮಾಂಡ್‌ ಮಧ್ಯ ಪ್ರವೇಶಿಸಿ ಪರಿಸ್ಥಿತಿಯನ್ನು ತಣ್ಣಗಾಗಿಸುವ ಪ್ರಯತ್ನವನ್ನು ಮಾಡಿತ್ತು. ಈಗ ಮತ್ತೆ ಮೀಸಲಾತಿ ಸಂಕಷ್ಟ ಎದುರಾಗಿದೆ. ಅದೂ ಸರ್ಕಾರದ ಭಾಗವಾಗಿರುವ ಸಚಿವರ ಹೇಳಿಕೆಯು ರಾಜ್ಯ ಸರ್ಕಾರಕ್ಕೆ ಬಿಸಿ ತುಪ್ಪವಾಗಿದೆ. ಈಗ ಸರ್ಕಾರದ ವಿರುದ್ಧ ಕೆ.ಎಚ್.‌ ಮುನಿಯಪ್ಪ ತೊಡೆ ತಟ್ಟಿದ್ದಾರೆ.

ಬಿಜೆಪಿ ಸರ್ಕಾರದಲ್ಲಿ ಆಗಿನ ಸಿಎಂ ಬಸವರಾಜ ಬೊಮ್ಮಾಯಿಗೆ ಪಂಚಮಸಾಲಿ ಸಮುದಾಯದವರ ಮೀಸಲಾತಿ ಹೋರಾಟ ಸಂಕಷ್ಟ ತಂದಿತ್ತು. ಪಂಚಮಸಾಲಿ ಮೀಸಲಾತಿ ಹೋರಾಟದಿಂದ ಬಿಜೆಪಿ ಕಂಗೆಟ್ಟಿತ್ತು. ಈಗ ಕಾಂಗ್ರೆಸ್‌ ಸರ್ಕಾರಕ್ಕೆ ಎಡಗೈ ಮೀಸಲಾತಿ ಸಮಸ್ಯೆ ಎದುರಾಗಿದೆ. ಸದಾಶಿವ ಆಯೋಗ ವರದಿ ಯಥಾವತ್ತು ಜಾರಿಗೆ ಆಗ್ರಹ ಮಾಡಲಾಗಿದೆ. ಅಲ್ಲದೆ, ಈ ಹಿಂದೆ ಬಸವರಾಜ ಬೊಮ್ಮಾಯಿ ಸರ್ಕಾರ ಕೊಟ್ಟ ಮೀಸಲಾತಿಯನ್ನು ತಿರಸ್ಕಾರ ಮಾಡುವಂತೆ ಒತ್ತಾಯ ಮಾಡಲಾಗಿದೆ. ನಮ್ಮ ಸಮುದಾಯದ ಜನಸಂಖ್ಯೆಗೆ ತಕ್ಕಂತೆ ಮೀಸಲಾತಿ ಕೊಡಿ ಎಂಬ ಆಗ್ರಹವನ್ನು ಇಡಲಾಗಿದೆ.

ನಾವು ಸಿಎಂ, ಡಿಸಿಎಂ ರೇಸ್‌ನಲ್ಲಿ ಇದ್ದೇವೆ ಎಂದು ಮುನಿಯಪ್ಪ ಇದೇ ವೇಳೆ ಹೇಳಿದ್ದಾರೆ. ನಾನು ಯಾರಿಗೂ ಹೆದರಲ್ಲ ಎಂದು ಪರೋಕ್ಷವಾಗಿ ಸಚಿವರಾದ ಡಾ. ಜಿ. ಪರಮೇಶ್ವರ್‌‌, ಪ್ರಿಯಾಂಕ್‌ ಖರ್ಗೆಗೆ ಸಂದೇಶವನ್ನು ರವಾನೆ ಮಾಡಿದ್ದಾರೆ. ಹಾಗಾಗಿ ಕಾಂತರಾಜು ವರದಿ ಬೆನ್ನಲ್ಲೇ ಸದಾಶಿವ ಆಯೋಗದ ಸಂಕಷ್ಟ ಸಹ ಈ ಸರ್ಕಾರಕ್ಕೆ ಶುರುವಾಗಿದೆ.

ಇದನ್ನೂ ಓದಿ: Murder Case : ಪುತ್ತೂರಿನ ಹುಲಿವೇಷ ತಂಡದ ಮುಖ್ಯಸ್ಥನ ಬರ್ಬರ ಹತ್ಯೆ; ರಸ್ತೆಯಲ್ಲೇ ಅಟ್ಟಾಡಿಸಿ ಕೊಲೆ

ಶಾಸಕರ ಮನೆಗಳಿಗೆ ಮುತ್ತಿಗೆ ಹಾಕಲು ಮುನಿಯಪ್ಪ ಕರೆ

ಮಾದಿಗ ಸಮುದಾಯದ ಮುಖಂಡರ ಸಭೆಯಲ್ಲಿ ಸೋಮವಾರ ಮಾತನಾಡಿದ್ದ ಕೆ.ಎಚ್. ಮುನಿಯಪ್ಪ, ಒಳ ಮೀಸಲಾತಿ ಸಂಬಂಧ ನಿರಂತರ ಹೋರಾಟ ನಡೆಯಲಿದೆ. ಈ ಹಿಂದಿನ ಬಿಜೆಪಿ ಸರ್ಕಾರ ಒಳ ಮೀಸಲಾತಿ ಹಂಚಿಕೆ ಮಾಡಿದ್ದರೂ ಅದು ಅವೈಜ್ಞಾನಿಕವಾಗಿತ್ತು. ಅದು ಸುಪ್ರೀಂ ಕೋರ್ಟ್‌ನಲ್ಲಿ ನಿಲ್ಲುವುದಿಲ್ಲ. ಏಕೆಂದರೆ ಮೀಸಲಾತಿ ಪ್ರಮಾಣ ಶೇಕಡಾ 50 ಮೀರುವ ಹಾಗಿಲ್ಲ. ಈ ನಿಟ್ಟಿನಲ್ಲಿ ಮುಂದಿನ ದಾರಿ ಕಂಡುಕೊಳ್ಳಬೇಕು. ಹೀಗಾಗಿ ನಮ್ಮ ಸಮುದಾಯದವರ ಹೋರಾಟ ಒಗ್ಗಟ್ಟಿನಲ್ಲಿ ಸಾಗಬೇಕು. ನಿಮ್ಮ ಕ್ಷೇತ್ರಗಳ ಶಾಸಕರ ಮನೆಗಳಿಗೆ ಮುತ್ತಿಗೆ ಹಾಕುವಂತೆ ಹೋರಾಟ ಮಾಡಬೇಕು. ಹೋರಾಟ ತೀವ್ರ ಸ್ವರೂಪ ಕಾಣಬೇಕು. ಸಚಿವರಿಗೆ ಒಂದೊಂದು ಸಾವಿರ ಜನ ಹೋಗಿ ಮನವಿ ಕೊಡಿ. ಆಗ ನಿಮ್ಮ ಮನೆ ಬಾಗಿಲಿಗೆ ಬರುತ್ತಾರೆ. ನಾನು ಸಚಿವನಾಗಿ ಈ ಮಾತು ಹೇಳುತ್ತಿದ್ದೇನೆ, ಹೀಗೆ ಹೇಳುವ ಸಂದರ್ಭ ಬಂದಿದೆ. ನಾನು ಈಗ ಸಚಿವನಾಗಿದ್ದೇನೆ, ನಾನಿದ್ದ ಮೇಲೆ ಬೇರೆಯವರ ಆಟ ನಡೆಯುವುದಿಲ್ಲ. ನಾನು ಎಲ್ಲದಕ್ಕೂ ಸಿದ್ಧವಾಗಿದ್ದೇನೆ ಎಂದು ಕೆ.ಎಚ್.‌ ಮುನಿಯಪ್ಪ ಗುಡುಗಿದ್ದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೈಂ

Prajwal Revanna case: ಸುಳ್ಳು ಕೇಸ್‌ ಹಾಕಲು ಮಹಿಳೆಯನ್ನು SIT ಸಂಪರ್ಕ ಮಾಡಿಲ್ಲ; ಕಾಟ ಕೊಟ್ಟವನನ್ನು ಬಿಡಲ್ಲ!

Prajwal Revanna case: ಈಗ ರಕ್ಷಣೆ ಕೋರಿ ಮಹಿಳಾ ಆಯೋಗಕ್ಕೆ ಪತ್ರ ಬರೆದಿರುವ ಮಹಿಳೆಯನ್ನು ಎಸ್‌ಐಟಿಯಿಂದ ಈ ಹಿಂದೆ ಸಂಪರ್ಕಿಸಿಲ್ಲ. ಮಹಿಳಾ ಆಯೋಗಕ್ಕೆ ದೂರು ನೀಡಿದ ಮಹಿಳೆಯು ನಮಗೆ ಯಾವುದೇ ದೂರು ನೀಡಿಲ್ಲ. ಮಹಿಳೆಗೆ ಕರೆ ಮಾಡಿದ ವ್ಯಕ್ತಿಯ ಗುರುತು ತಿಳಿಯಲು ಎಸ್‌ಐಟಿ ವಿಚಾರಣೆ ಆರಂಭಿಸಿದೆ. ಅಂತಹವರ ವಿರುದ್ಧ ಅಗತ್ಯ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಸ್‌ಐಟಿ ಅಧಿಕಾರಿಗಳು ತಿಳಿಸಿದ್ದಾರೆ. ಮೂವರು ಸಿವಿಲ್ ಡ್ರೆಸ್‌ನಲ್ಲಿ ಬಂದವರು ಒತ್ತಡ ಹಾಕಿದ್ದು, ಇಲ್ಲದಿದ್ದರೆ ಗಂಭೀರ ಪರಿಣಾಮ ಎದುರಿಸಬೇಕಾದೀತು ಎಂದು ಬೆದರಿಕೆ ಹಾಕಿದ್ದಾರೆ. ನನ್ನ ಕುಟುಂಬಕ್ಕೆ ಸೂಕ್ತ ಭದ್ರತೆ ನೀಡಿ ಎಂದು ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ಮಹಿಳೆ ಪತ್ರ ಬರೆದಿದ್ದರು.

VISTARANEWS.COM


on

Prajwal Revanna case SIT did not contact woman to file false case
Koo

ಬೆಂಗಳೂರು: ಈಗಾಗಲೇ ಲೈಂಗಿಕ ದೌರ್ಜನ್ಯ (Physical abuse) ಆರೋಪ ಎದುರಿಸುತ್ತಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ (Prajwal Revanna case) ವಿರುದ್ಧ ಸುಳ್ಳು ಕೇಸ್ (Fake case) ಹಾಕಲು ತನಗೆ ಒತ್ತಾಯಿಸಲಾಗುತ್ತಿದೆ ಎಂದು ರಾಷ್ಟ್ರೀಯ ಮಹಿಳಾ ಆಯೋಗಕ್ಕೆ (National Commission for Women) ಮಹಿಳೆಯೊಬ್ಬರು ನೀಡಿರುವ ದೂರು ಹೊಸ ತಿರುವನ್ನು ಪಡೆದುಕೊಂಡಿದೆ. ಎಸ್‌ಐಟಿಯಿಂದ ಯಾರೂ ಆಕೆಯನ್ನು ಸಂಪರ್ಕಿಸಿಲ್ಲ ಎಂದು ಸ್ಪಷ್ಟನೆ ನೀಡಲಾಗಿದೆ. ಆದರೆ, ಸಂಪರ್ಕ ಮಾಡಿದವರ ಬಗ್ಗೆ ಪತ್ತೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಎಸ್‌ಐಟಿ ತಿಳಿಸಿದೆ.

ಸಂತ್ರಸ್ತ ಮಹಿಳೆಗೆ ಎಸ್ಐಟಿ ಅಧಿಕಾರಿ ಎಂದು ಕರೆ ಮಾಡಿ ತೊಂದರೆ ಮಾಡಿರುವ ಆರೋಪ ವಿಚಾರವಾಗಿ ಎಸ್ಐಟಿ ಉನ್ನತ ಮೂಲಗಳು ಸ್ಪಷ್ಟನೆ ನೀಡಿದೆ. ಅಲ್ಲದೆ, ಎನ್‌ಸಿಡಬ್ಲ್ಯು ದೂರನ್ನು ಎಸ್‌ಐಟಿಗೆ ರವಾನಿಸಿದೆ. ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಎಸ್‌ಐಟಿ, ಗುರುವಾರವಷ್ಟೇ ಈ ಮಹಿಳೆಯ ಬಗ್ಗೆ ಎಸ್‌ಐಟಿಗೆ ತಿಳಿದುಬಂದಿದೆ.

ಎಸ್‌ಐಟಿಯಿಂದ ಯಾರೂ ಆಕೆಯನ್ನು ಈ ಹಿಂದೆ ಸಂಪರ್ಕಿಸಿಲ್ಲ. ಮಹಿಳಾ ಆಯೋಗಕ್ಕೆ ದೂರು ನೀಡಿದ ಮಹಿಳೆಯು ನಮಗೆ ಯಾವುದೇ ದೂರು ನೀಡಿಲ್ಲ. ಮಹಿಳೆಗೆ ಕರೆ ಮಾಡಿದ ವ್ಯಕ್ತಿಯ ಗುರುತು ತಿಳಿಯಲು ಎಸ್‌ಐಟಿ ವಿಚಾರಣೆ ಆರಂಭಿಸಿದೆ. ಅಂತಹವರ ವಿರುದ್ಧ ಅಗತ್ಯ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಸ್‌ಐಟಿ ಅಧಿಕಾರಿಗಳು ತಿಳಿಸಿದ್ದಾರೆ.

ಭದ್ರತೆ ಕೋರಿ ಮಹಿಳಾ ಆಯೋಗಕ್ಕೆ ಪತ್ರ ಬರೆದಿರುವ ಮಹಿಳೆ

ಪ್ರಜ್ವಲ್‌ ರೇವಣ್ಣ ಹಾಗೂ ಎಚ್‌.ಡಿ ರೇವಣ್ಣ (HD revanna jailed) ಅವರ ವಿರುದ್ಧ ರಾಜಕೀಯ ಪ್ರೇರಿತ ಸುಳ್ಳು ದೂರುಗಳನ್ನು ದಾಖಲಿಸಲಾಗುತ್ತಿದೆ ಎಂದು ಜೆಡಿಎಸ್‌ (JDS) ಪ್ರತಿಭಟನೆ ನಡೆಸುತ್ತಿರುವುದರ ಹಿನ್ನೆಲೆಯಲ್ಲಿ ಈ ದೂರು ಮಹತ್ವ ಪಡೆದುಕೊಂಡಿದೆ. ಸೂಕ್ತ ಭದ್ರತೆಗೆ ಕೋರಿ ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ಮಹಿಳೆಯೊಬ್ಬರು ಪತ್ರ ಬರೆದಿದ್ದಾರೆ.

ಪ್ರಜ್ವಲ್ ರೇವಣ್ಣ ವಿರುದ್ಧ ದೂರು ನೀಡುವಂತೆ ನನಗೆ ಒತ್ತಡ ಹಾಕಲಾಗುತ್ತಿದೆ. ಮೂವರು ಸಿವಿಲ್ ಡ್ರೆಸ್‌ನಲ್ಲಿ ಬಂದವರು ಒತ್ತಡ ಹಾಕಿದ್ದು, ಇಲ್ಲದಿದ್ದರೆ ಗಂಭೀರ ಪರಿಣಾಮ ಎದುರಿಸಬೇಕಾದೀತು ಎಂದು ಬೆದರಿಕೆ ಹಾಕಿದ್ದಾರೆ. ನನ್ನ ಕುಟುಂಬಕ್ಕೆ ಸೂಕ್ತ ಭದ್ರತೆ ನೀಡಿ ಎಂದು ರಾಷ್ಟ್ರೀಯ ಮಹಿಳಾ ಆಯೋಗಕ್ಕೆ ಮಹಿಳೆ ಪತ್ರ ಬರೆದಿದ್ದಾರೆ.

ಮಹಿಳೆ ಪತ್ರ ಬರೆದಿರುವ ಬಗ್ಗೆ ವಿಸ್ತಾರ ನ್ಯೂಸ್‌ಗೆ ರಾಷ್ಟ್ರೀಯ ಮಹಿಳಾ ಆಯೋಗ ಮಾಹಿತಿ ನೀಡಿದೆ. ಹಾಸನ ಮೂಲದ ಮಹಿಳೆ ಪತ್ರ ಬರೆದಿದ್ದು, ಪತ್ರಕ್ಕೆ ಸಂಬಂಧಿಸಿದಂತೆ ಕರ್ನಾಟಕ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಮಾಹಿತಿ ನೀಡಲಾಗಿದೆ. ದೂರಿನ ಪ್ರತಿ ಹಾಗೂ ಸೂಕ್ತ ಭದ್ರತೆಗೆ ಮನವಿ ಮಾಡಲಾಗಿದೆ.

ಪ್ರಜ್ವಲ್ ಕೇಸ್‌ನಲ್ಲಿ ಮಹಿಳೆಗೆ ದೂರು ನೀಡುವಂತೆ ಒತ್ತಡ ಹಾಕಲಾಗುತ್ತಿದೆ ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ. ಆಯೋಗದಿಂದ ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆಗೆ ಇಂದು ಮತ್ತೆ ಪತ್ರ ಬರೆಯುತ್ತೇವೆ. ಆಯೋಗದ ಅಧಿಕಾರಿಗಳು ಪತ್ರ ಬರೆದ ಮಹಿಳೆಯನ್ನು ಭೇಟಿ ಮಾಡುತ್ತೇವೆ ಎಂದು ರಾಷ್ಟ್ರೀಯ ಮಹಿಳಾ ಆಯೋಗ ತಿಳಿಸಿದೆ.

ರೇವಣ್ಣ ಜಾಮೀನು ಅರ್ಜಿ ಸೋಮವಾರಕ್ಕೆ: ಎಸ್‌ಐಟಿಗೆ ಹಿಗ್ಗಾಮುಗ್ಗಾ ತರಾಟೆ; ವಕೀಲ ನಾಗೇಶ್‌ ವಾದ ಹೀಗಿತ್ತು!

ಪ್ರಜ್ವಲ್‌ ರೇವಣ್ಣ (Prajwal Revanna Case) ಅವರದ್ದು ಎನ್ನಲಾದ ಅಶ್ಲೀಲ ವಿಡಿಯೊ ಪ್ರಕರಣಕ್ಕೆ ಸಂಬಂಧಪಟ್ಟಂತೆ ಮೈಸೂರಿನ ಕೆ.ಆರ್.‌ ನಗರದ ಸಂತ್ರಸ್ತ ಮಹಿಳೆಯನ್ನು ಕಿಡ್ನ್ಯಾಪ್‌ ಮಾಡಿದ ಆರೋಪದ ಮೇಲೆ ಬಂಧಿತರಾಗಿರುವ ಮಾಜಿ ಸಚಿವ ಎಚ್‌.ಡಿ. ರೇವಣ್ಣ (HD Revanna) ಅವರಿಗೂ ಗುರುವಾರ ಸಹ ಜಾಮೀನು ಸಿಕ್ಕಿಲ್ಲ. ಸಾಕಷ್ಟು ವಾದ – ಪ್ರತಿವಾದದ ಬಳಿಕ ಜನಪ್ರತಿನಿಧಿಗಳ ಕೋರ್ಟ್, ಜಾಮೀನು ಅರ್ಜಿ ವಿಚಾರಣೆ ಸೋಮವಾರಕ್ಕೆ ಮುಂದೂಡಿದಿದೆ.

ಎಚ್.ಡಿ. ರೇವಣ್ಣ ಜಾಮೀನು ಅರ್ಜಿ ವಿಚಾರಣೆ ನಡೆಸಿದ ಜನಪ್ರತಿನಿಧಿಗಳ ಕೋರ್ಟ್, ಸೋಮವಾರ ಬೆಳಗ್ಗೆ 11.30ಕ್ಕೆ ರೇವಣ್ಣ ಜಾಮೀನು ಅರ್ಜಿ ವಿಚಾರಣೆ ನಡೆಸುವುದಾಗಿ ಮುಂದೂಡಿದೆ. ಕೋರ್ಟ್‌ಗೆ ಮಹತ್ವದ ಮಾಹಿತಿಯನ್ನು ನೀಡಬೇಕಾಗಿದೆ. ಸೋಮವಾರ ಸಮಯ ವ್ಯರ್ಥ ಮಾಡದೆ ಮಾಹಿತಿ ನೀಡುತ್ತೇವೆ. ಸೋಮವಾರದವರೆಗೆ ವಿಚಾರಣೆ ಮುಂದೂಡಬೇಕೆಂದು ವಿಶೇಷ ಸಾರ್ವಜನಿಕ ಅಭಿಯೋಜಕರು (ಎಸ್‌ಪಿಪಿ) ನ್ಯಾಯಾಧೀಶರಿಗೆ ಮನವಿ ಮಾಡಿದ ಹಿನ್ನೆಲೆಯಲ್ಲಿ ಸೋಮವಾರಕ್ಕೆ ಮುಂದೂಡಿಕೆ ಮಾಡಿ ನ್ಯಾಯಾಧೀಶರಾದ ಸಂತೋಷ್ ಗಜಾನನ ಭಟ್ ಆದೇಶವನ್ನು ನೀಡಿದ್ದಾರೆ.

ಎಸ್ಐಟಿ ಪರ ಎಸ್‌ಪಿಪಿ ಜಯ್ನಾ ಕೊಠಾರಿ ವಾದ ಮಂಡನೆ ಮಾಡಿದ್ದು, ನಾವು ಆಕ್ಷೇಪಣೆ ಸಲ್ಲಿಸಿದ್ದೇವೆ, ವಿಳಂಬದ ಉದ್ದೇಶವಿಲ್ಲ. ನಾವು ವಾದ ಮಂಡಿಸಲು ಸ್ವಲ್ಪ ಸಮಯಾವಕಾಶ ಬೇಕಾಗಿದೆ ಎಂದು ಕೋರ್ಟ್‌ ಮುಂದೆ ಕೋರಿದರು. ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ನ್ಯಾಯಾಧೀಶರು, ನೀವು ಹಿರಿಯ ವಕೀಲರು ಇದ್ದೀರಿ, ವಿಳಂಬ ಮಾಡಬೇಡಿ
ಎಸ್‌ಐಟಿ ಪರ ವಕೀಲರಿಗೆ ಸೂಚಿಸಿದರು. ಅದಕ್ಕೆ ಒಪ್ಪಿದ ಜಯ್ನಾ ಕೊಠಾರಿ, ಕೋರ್ಟ್‌ಗೆ ಮತ್ತಷ್ಟು ಮಹತ್ವದ ಮಾಹಿತಿಯನ್ನು ನೀಡಬೇಕಾಗಿದೆ. ಯಾವುದೇ ಕಾರಣಕ್ಕೂ ಸೋಮವಾರ ‌ಸಮಯ ವ್ಯರ್ಥ ಮಾಡಲ್ಲ ಎಂದು ಮನವಿ ಮಾಡಿದರು.

ಇದಕ್ಕೂ ಮೊದಲು ವಾದ ಮಂಡಿಸಿದ ರೇವಣ್ಣ ಪರ ಹಿರಿಯ ವಕೀಲ ಸಿ.ವಿ.ನಾಗೇಶ್, ನನ್ನ 56 ವರ್ಷಗಳ ವಕೀಲ ವೃತ್ತಿಯಲ್ಲಿ ತಪ್ಪು ಮಾಹಿತಿ ನೀಡಿಲ್ಲ. ಬೇಲ್ ಅರ್ಜಿ ಊರ್ಜಿತವಲ್ಲವೆಂದು ಎಸ್‌ಪಿಪಿ ವಾದ ಮಂಡಿಸಿದ್ದಾರೆ. ಇದು ಹೇಗೆ ಸಾಧ್ಯ? ಎಂದು ‘ಸುಪ್ರೀಂ’ ತೀರ್ಪುಗಳನ್ನು ಉಲ್ಲೇಖಿಸಿ ವಾದ ಮಂಡಿಸಿದರು. 2023ರ ತೀಸ್ತಾ ಸೆಟಲ್ ವಾಡ್‌ ಪ್ರಕರಣದ ಬಗ್ಗೆ ಪ್ರಸ್ತಾಪ ಮಾಡಿದ ನಾಗೇಶ್‌, ಸೆಟಲ್ ವಾಡ್ ಪ್ರಕರಣದಲ್ಲಿ ಸುಪ್ರೀಂಕೋರ್ಟ್ ತೀರ್ಪು ಇದೆ. ನಿರಂಜನ್ ಸಿಂಗ್ ಕೇಸ್‌ನಲ್ಲಿಯೂ ಜಾಮೀನು ಉಲ್ಲೇಖವಿದೆ. 22 ತೀರ್ಪುಗಳಲ್ಲಿ ನಿರಂಜನ್ ಕೇಸ್‌ ಅನ್ನು ಅನುಸರಿಸಲಾಗಿದೆ. ಕಸ್ಟಡಿಯಲ್ಲಿದ್ದಾಗಲೂ ಜಾಮೀನು ನೀಡಿರುವ ಉಲ್ಲೇಖವಿದೆ. ಒಂದೊಂದು ದಿನ ಒಬ್ಬೊಬ್ಬರನ್ನು ಎಸ್‌ಪಿಪಿಯಾಗಿ ನೇಮಕ ಮಾಡಲಾಗುತ್ತಿದೆ. ಮೊದಲು ಜಗದೀಶ್ ಇದ್ದರು, ಈಗ ಜಯ್ನಾ ಕೊಠಾರಿ ಇದ್ದಾರೆ. ಎಸ್‌ಪಿಪಿ ನೇಮಕಕ್ಕೂ ಕಾನೂನಿನಲ್ಲಿ ಕೆಲ ಕ್ರಮಗಳಿವೆ ಎಂದು ವಾದಿಸಿದರು.

ಈ ವೇಳೆ ವಾದ ಮಂಡನೆಗೆ ಜಯ್ನಾ ಕೊಠಾರಿ ಕಾಲಾವಕಾಶ ಕೋರಿದರು. ಅದಕ್ಕೆ ಅಸಮಾಧಾನ ವ್ಯಕ್ತಪಡಿಸಿದ ಜಡ್ಜ್‌, ಈಗಾಗಲೇ ಆಕ್ಷೇಪಣೆಗೆ 3 ಬಾರಿ ಸಮಯ ನೀಡಲಾಗಿದೆ. ಇನ್ನೂ ಹೆಚ್ಚು ಸಮಯ ನೀಡಲು ಸಾಧ್ಯವಿಲ್ಲ ಎಂದು ಹೇಳಿದರು.

ಎಸ್‌ಐಟಿ ಕಾರ್ಯವೈಖರಿಗೆ ತೀವ್ರ ಆಕ್ಷೇಪ

ಈ ವೇಳೆ ವಾದ ಮುಂದುವರಿಸಿದ ನಾಗೇಶ್‌, ಪ್ರಕರಣದಲ್ಲಿ ಹಾಕಿದ ಸೆಕ್ಷನ್‌ಗಳ ಬಗ್ಗೆ ಉಲ್ಲೇಖಿದರು. ಸಂತ್ರಸ್ತೆ ಎಲ್ಲಿದ್ದಾರೆ, ಸಂತ್ರಸ್ತೆಗೆ ಏನಾದರೂ ಗಾಯವಾಗಿದೆಯಾ? ಸಂತ್ರಸ್ತೆಯ ಪರಿಸ್ಥಿತಿಯ ಬಗ್ಗೆ ಎಸ್‌ಐಟಿ ಮಾತನಾಡುತ್ತಿಲ್ಲ. ಸಂತ್ರಸ್ತೆ ಪತ್ತೆಯಾಗದ ಕಾರಣ ನಿರೀಕ್ಷಣಾ ಜಾಮೀನು ರಿಜೆಕ್ಟ್ ಆಗಿತ್ತು. ಮಹಿಳೆಯ ಸುರಕ್ಷತೆ ಸಂಬಂಧ ನಿರೀಕ್ಷಣಾ ಜಾಮೀನು ನಿರಾಕರಣೆ ಮಾಡಲಾಗಿತ್ತು. 364(a), 365 ಅಡಿ ಕೇಸ್ ದಾಖಲಿಸುವ ಅಗತ್ಯವೇ ಇರಲಿಲ್ಲ ಎಂದು ವಕೀಲರಾದ ನಾಗೇಶ್‌ ಅವರು ಎಸ್‌ಐಟಿ ಕಾರ್ಯವೈಖರಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ವಿಮಾನ ಹೈಜಾಕ್ ಪ್ರಕರಣದ ಉಲ್ಲೇಖ

ಈ ವೇಳೆ ವಿಮಾನ ಹೈಜಾಕ್ ಪ್ರಕರಣವನ್ನು ಉಲ್ಲೆಖಿಸಿದ ಹಿರಿಯ ವಕೀಲ ಸಿ.ವಿ. ನಾಗೇಶ್, ಈ ಹಿಂದೆ ವಿಮಾನ ಹೈಜಾಕ್ ಮಾಡಿ ಉಗ್ರನ ಬಿಡುಗಡೆಗೆ ಕೋರಿದ್ದರು. ವಿಮಾನ ಹೈಜಾಕ್ ಸಮಯದಲ್ಲಿ ಜಸ್ವಂತ್ ಸಿಂಗ್ ಮಂತ್ರಿ ಆಗಿದ್ದರು. ಆಗ ಉಗ್ರರನ್ನು ಬಿಟ್ಟು ವಿಮಾನದಲ್ಲಿದ್ದ ಪ್ರಯಾಣಿಕರನ್ನು ಬಿಡಿಸಿದ್ದರು. ಇದಾದ ಬಳಿಕವೇ ಸೆಕ್ಷನ್ 364(a) ಸೇರಿಸಲಾಯಿತು. ಇಲ್ಲಿ ಇಂತಹ ಘಟನೆ ನಡೆದಿಲ್ಲವಾದರೂ ಸೆಕ್ಷನ್ 364(a) ಸೇರಿಸಲಾಗಿದೆ. ನಮ್ಮ ಕಕ್ಷಿದಾರ ರೇವಣ್ಣ ವಿರುದ್ಧ 364(a) ದಾಖಲು ಮಾಡಿದ್ದಾರೆ. ಕಿಡ್ನ್ಯಾಪ್ ಪ್ರಕರಣದಲ್ಲಿ ಸಂತ್ರಸ್ತೆಯ 21 ವರ್ಷದ ಮಗ ದೂರು ನೀಡಿದ್ದಾನೆ ಎಂದು ವಾದ ಮಂಡಿಸಿದರು.

ಸಿಎಂ ಮೇಲೆ ಕಿಡ್ನ್ಯಾಪ್ ಕೇಸ್ ಹಾಕಲು ‌ಸಾಧ್ಯವೇ?

ಮಹಿಳೆಯನ್ನು ಅಪಹರಿಸಿ ವಿದೇಶಕ್ಕೆ ಕರೆದೊಯ್ದರೆ ಈ ಸೆಕ್ಷನ್‌ಗಳು ಅಪ್ಲೇ ಆಗುತ್ತವೆ. ಪ್ರಕರಣದಲ್ಲಿ ರೇವಣ್ಣ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ನ ಸಾರಾಂಶ ಉಲ್ಲೇಖಿಸಿದ ನಾಗೇಶ್‌, ದೂರುದಾರ ಮಗನಿಗೆ ಸುಳ್ಳು ಹೇಳಿ ಕರೆದುಕೊಂಡು ಹೋಗಿದ್ದಾರೆಂದು ಹೇಳಿದ್ದಾರೆ. ದೂರುದಾರನಿಗೆ ಸುಳ್ಳು ಹೇಳಿ ಕರೆದುಕೊಂಡು ಹೋಗಿದ್ದರೆ ಆಕ್ಷೇಪಣೆ ಸಲ್ಲಿಸಬಹುದು. ದೂರಿನಲ್ಲಿ ಇರುವ ಸತೀಶ್ ಬಾಬು ಹೇಳಿಕೆಯನ್ನು ಗಮನಿಸೋಣ. ಅದರಲ್ಲಿ “ನಿನ್ನ ತಾಯಿ ಮೇಲೆ ಪೊಲೀಸ್ ಕೇಸ್ ಆಗುತ್ತದೆ. ರೇವಣ್ಣ ಕರೆದಿದ್ದಾರೆಂದು ಹೇಳಿ ಕರೆದುಕೊಂಡು ಹೋದರು” ಎಂದು ಆರೋಪ ಮಾಡಲಾಗಿದೆ. ಹಾಗಾದರೆ, ಸಿಎಂ ಹೇಳಿದ್ದಾರೆ ಎಂದು ಕರೆದೊಯ್ದರೆ ಸಿಎಂ ಮೇಲೆ ಕಿಡ್ನ್ಯಾಪ್ ಕೇಸ್ ಹಾಕಲು ‌ಸಾಧ್ಯವೇ? ರೇವಣ್ಣ ಸಾಹೇಬರು ಹೇಳಿದ್ದಾರೆ ಎಂದು ಕರೆದೊಯ್ದರೆ ಅದು ಅಪಹರಣವೇ? ಇದರಲ್ಲಿ ಮೋಸವಿದೆಯೇ? ಬಲ ಪ್ರಯೋಗವಿದೆಯೇ? ಹೀಗಾಗಿ ಇಲ್ಲಿ ಅಪಹರಣದ ಯಾವುದೇ ಅಂಶಗಳು ಅನ್ವಯವಾಗುವುದಿಲ್ಲ ಎಂದು ವಾದ ಮಂಡಿಸಿದರು.

ಪೊಲೀಸರು ಹಲ್ಲಿಲ್ಲದ ಹಾವುಗಳು

ಈ ಪ್ರಕರಣದಲ್ಲಿ ಅಪಹರಣಕ್ಕೊಳಗಾದವರೇ ಆಕ್ಷೇಪಣೆ ಸಲ್ಲಿಸಬೇಕು. ಬೇರೆ ಯಾರೂ ಆಕ್ಷೇಪಣೆ ಸಲ್ಲಿಸಲಾಗುವುದಿಲ್ಲ. 365 ಅಕ್ರಮ ಬಂಧನ‌ ಸೆಕ್ಷನ್ ಕೂಡ ಅನ್ವಯ ಆಗುವುದಿಲ್ಲ. ಇಲ್ಲಿ ಏನು ಡಿಮ್ಯಾಂಡ್ ಇದೆ? ಅಪಹರಣವೂ ಇಲ್ಲ,‌ ಅಕ್ರಮ ಬಂಧನವೂ ಇಲ್ಲ. ನಾಳೆ‌ ಯಾರಿಂದಲಾದರೂ ಹೇಳಿಕೆ ಪಡೆದು ಸಾಕ್ಷ್ಯ ಸೃಷ್ಟಿಸಬಹುದು. ಏಕೆಂದರೆ ಪೊಲೀಸರು ಹಲ್ಲಿಲ್ಲದ ಹಾವುಗಳು. ಪೊಲೀಸರಿಗೆ ಸೆಕ್ಷನ್ 161 ಹೇಳಿಕೆ ಎಂಬ ಅಸ್ತ್ರ ಇದೆ. ಇನ್ನು ಎಚ್.ಡಿ.ರೇವಣ್ಣ ರಾಜಕೀಯ ಪಕ್ಷದಲ್ಲಿದ್ದಾರೆ ಎಂದು ನಾಗೇಶ್‌ ವಾದಿಸಿದರು.

ಇದನ್ನೂ ಓದಿ: Prajwal Revanna Case: ಎಚ್‌ಡಿಕೆ ಕಿಂಗ್‌ ಆಫ್‌ ಬ್ಲ್ಯಾಕ್‌ಮೇಲ್‌; ತಿರುಗಿಬಿದ್ದ ಡಿ.ಕೆ. ಶಿವಕುಮಾರ್!

ಪ್ರಚೋದನೆಯಿಂದ ಕೂಡಿದ ಕೇಸ್‌ ಇದು

ಏಪ್ರಿಲ್ 29ರಂದು ಕಿಡ್ನ್ಯಾಪ್ ಆಗುತ್ತೆ, 4 ದಿನ ಬಿಟ್ಟು ಎಫ್‌ಐಆರ್‌ ದಾಖಲು ಮಾಡಲಾಗುತ್ತದೆ. ಏ.29ಕ್ಕೆ ಘಟನೆ ನಡೆದಿದೆ ಎಂದು ಉಲ್ಲೇಖಿಸಿದ್ದು, ಮೇ 2ರಂದು ಕೇಸ್ ದಾಖಲು ಮಾಡಲಾಗಿದೆ. ಮೊದಲು ಹೊಳೆನರಸೀಪುರ ಠಾಣೆಯಲ್ಲಿ ‌ಕೇಸ್ ದಾಖಲಾಗಿತ್ತು. ಅಲ್ಲಿ ಎಲ್ಲವೂ ಜಾಮೀನು ನೀಡಬಹುದಾದ ಸೆಕ್ಷನ್‌ಗಳು ಇತ್ತು. ನಂತರ ಪೊಲೀಸರು 41A ಅಡಿ ನೋಟಿಸ್ ಜಾರಿ ಮಾಡಿದ್ದಾರೆ. ಮೇ 3ರಂದು ನೋಟಿಸ್ ನೀಡಿ ಮೇ 4ರಂದು ವಿಚಾರಣೆಗೆ ಬರಲು ಹೇಳಿದ್ದಾರೆ. ರೇವಣ್ಣ ವಿರುದ್ಧ ದಾಖಲಾದ ಕೇಸ್ ಪ್ರಚೋದನೆಯಿಂದ ಆಗಿದೆ. ಪ್ರಚೋದನೆಯಿಂದ ಕೇಸ್ ಹಾಕಿರುವುದು ಸ್ಪಷ್ಟವಾಗಿ ಕಂಡುಬರುತ್ತಿದೆ. ರೇವಣ್ಣಗೆ ಜಾಮೀನು ನೀಡಬೇಕೆಂದು ಸಿ.ವಿ.ನಾಗೇಶ್ ಬಲವಾಗಿ ವಾದ ಮಂಡಿಸಿದರು.

ಸುಪ್ರೀಂ ಕೋರ್ಟ್‌ ಏನು ಹೇಳಿದೆ?

ತನಿಖೆಗೆ ಸಹಕರಿಸುತ್ತಿಲ್ಲ ಅಂತಾರೆ, ಯಾವ ರೀತಿ ಸಹಕರಿಸಬೇಕು. ಎಚ್.ಡಿ. ರೇವಣ್ಣ ಅವರ ತನಿಖೆ ಬಹುತೇಕ ಮುಗಿದಿದೆ. ಸುಪ್ರೀಂ ಕೋರ್ಟ್ ಒಂದು ಪ್ರಕರಣದಲ್ಲಿ ಆದೇಶವನ್ನು ನೀಡಿದೆ. ಕಸ್ಟಡಿಯಲ್ಲಿದ್ದಾಗ ತನಿಖೆ ಮುಗಿದಿದ್ದರೆ ಬೇಲ್ ನೀಡಬಹುದೆಂದು ಹೇಳಿದೆ. ರೇವಣ್ಣರನ್ನು ಕಸ್ಟಡಿಗೆ ತೆಗೆದುಕೊಂಡು ಹೇಳಿಕೆ ಪಡೆದಿದ್ದಾರೆ. ಎಸ್‌ಐಟಿ ಏನೆಲ್ಲ ಸಾಕ್ಷಿ ಸಂಗ್ರಹಿಸಿದೆ ಎಂದು ಹೇಳಬೇಕು.

ಸಂತ್ರಸ್ತೆಯನ್ನು ಎಲ್ಲಿಂದ ಕರೆದುಕೊಂಡು ಬಂದರು? ಯಾವುದನ್ನು ನಂಬಬೇಕು?

ಕಿಡ್ನ್ಯಾಪ್ ಸಂತ್ರಸ್ತೆಗೆ ಏನಾದರೂ ಗಾಯಗಳಾಗಿವೆಯಾ? ಕಿಡ್ನ್ಯಾಪ್ ಸಂತ್ರಸ್ತೆಗೆ ಯಾವುದೇ ಚಿಕಿತ್ಸೆಯನ್ನು ಕೊಡಿಸಿಲ್ಲ. ಸಂತ್ರಸ್ತೆಯನ್ನು ನ್ಯಾಯಾಧೀಶರ ಮುಂದೆಯೂ ಹಾಜರುಪಡಿಸಿಲ್ಲ. 164 ಅಡಿಯಲ್ಲಿ ಹೇಳಿಕೆಯೂ ದಾಖಲಿಸಿಲ್ಲ. ಇಷ್ಟು ದಿನವಾದ್ರು ಯಾಕೆ 164 ಸ್ಟೇಟ್ಮೆಂಟ್ ಮಾಡಿಸಿಲ್ಲ. ಎಸ್‌ಐಟಿಯವರು ಕಳೆದ 6 ದಿನಗಳಿಂದ ಏನ್ ಮಾಡುತ್ತಿದ್ದಾರೆ? ಸಂತ್ರಸ್ತೆ ಪತ್ತೆಯಾದ ಸ್ಥಳದ ಕಂದಾಯ ದಾಖಲೆ ಪಡೆಯಬೇಕಂತಾರೆ. ಮುಂದಿನ ತನಿಖೆ ನಡೆಸಲಾಗುವುದು ಎಂದು ಹೇಳುತ್ತಾರೆ, ಇದರರ್ಥವೇನು? ಸಂತ್ರಸ್ತೆ ಕೂಡಿಹಾಕಿದ್ದ ಸ್ಥಳ ಪರಿಶೀಲಿಸಬೇಕು ಎಂದು ಹೇಳುತ್ತಾರೆ. ಹಾಗಾದರೆ ಇವರು ಸಂತ್ರಸ್ತೆಯನ್ನು ಎಲ್ಲಿಂದ ಕರೆದುಕೊಂಡು ಬಂದರು? ಸಂತ್ರಸ್ತೆಯನ್ನು ಕರೆದೊಯ್ದ ವಾಹನ ಪತ್ತೆ ಹಚ್ಚಬೇಕು ಎಂದು ಹೇಳುತ್ತಾರೆ. ವಾಹನ ಸೀಜ್ ಮಾಡಬೇಕಿದೆ ಎಂದು ಕೂಡ ಹೇಳಿದ್ದಾರೆ. ರಿಮ್ಯಾಂಡ್ ಅಪ್ಲಿಕೇಶನ್‌ನಲ್ಲಿ ಗಾಡಿ ಸೀಜ್ ಬಗ್ಗೆ ತಿಳಿಸಿದ್ದಾರೆ. ಇವರು ಎಷ್ಟು ವಾಹನಗಳನ್ನು ಸೀಜ್ ಮಾಡಬೇಕು? ಆರೋಪಿ ಕೃತ್ಯಕ್ಕೆ ಬಳಸಿದ ಬೈಕ್, ಮೊಬೈಲ್ ಸೀಜ್ ಆಗಿದೆ ಎಂದು ಎಸ್‌ಐಟಿಯವರು ಕೋರ್ಟ್‌ಗೆ ಮಾಹಿತಿ ನೀಡಿದ್ದಾರೆ. ಒಂದು ಕಡೆ ಸೀಜ್ ಮಾಡಬೇಕು ಎಂದು ಹೇಳಿಕೆ ಕೊಡುತ್ತಾರೆ. ಮತ್ತೊಂದು ಕಡೆ ವಾಹನ ಸೀಜ್ ಮಾಡಿರುವುದಾಗಿ ಅವರು ಹೇಳುತ್ತಾರೆ. ಯಾವುದನ್ನು ನಂಬಬೇಕು ಎಂದು ಹಿರಿಯ ವಕೀಲ ಸಿ.ವಿ. ನಾಗೇಶ್ ಪ್ರಶ್ನೆ ಮಾಡಿದರು.

ಈ ವಿಷಯದಲ್ಲಿ ರೇವಣ್ಣ ಅವರಿಗೆ ಅನ್ಯಾಯ ಮಾಡುತ್ತಿದ್ದಾರೆ. ಅನ್ಯಾಯಕ್ಕೂ ಒಂದು ಮಿತಿ ಇರಬೇಕು. ತನಿಖಾಧಿಕಾರಿಗಳು ನಾಲ್ಕು ದಿನಗಳಿಂದ ಏನು ಮಾಡುತ್ತಿದ್ದಾರೆ. ಎಸ್‌ಐಟಿಯವರು ಸ್ಥಳ ಮಹಜರು ಮಾಡಬೇಕು ಎಂದು ಹೇಳುತ್ತಾರೆ. ಆರೋಪಿ ಸತೀಶ್ ಬಾಬಣ್ಣ ಸಂತ್ರಸ್ತೆಯನ್ನು ಕರೆದೊಯ್ದ ಸ್ಥಳ, ಸಂತ್ರಸ್ತೆಯನ್ನ ಕೂಡಿಹಾಕಿದ ಸ್ಥಳ ಮಹಜರು ಮಾಡಬೇಕಂತಾರೆ. ಹಾಗಾದರೆ ಸ್ಥಳೀಯ ಪೊಲೀಸರು ಏನು ಮಾಡುತ್ತಾರೆ? ಸ್ಥಳೀಯ ಪೊಲೀಸರಿಂದ ಒಂದು ಸಲ ಸ್ಥಳ ಮಹಜರು, ಎಸ್‌ಐಟಿ ಒಂದು ಸಲ ಸ್ಥಳ ಮಹಜರು ಮಾಡಬೇಕಾ? ಎಸ್ಐಟಿ ಯಾವ ಕಾರಣಕ್ಕೆ ಪೊಲೀಸ್ ಕಸ್ಟಡಿಗೆ ಕೇಳಿತ್ತು ಎಂದು ರಿಮ್ಯಾಂಡ್ ಅರ್ಜಿಯನ್ನು ವಕೀಲ ಸಿ.ವಿ.ನಾಗೇಶ್ ಓದಿ ಹೇಳಿದರು. ಪೊಲೀಸರು ನೀಡಿದ್ದ ಕಾರಣಗಳನ್ನು ಇದೇ ವೇಳೆ ಪ್ರಶ್ನಿಸಿದರು.

ಸಂತ್ರಸ್ತೆಯಿಂದ‌ 164 ಹೇಳಿಕೆ‌ ದಾಖಲಿಸಬೇಕಿದೆ ಎಂದು ಎಸ್ಐಟಿ ಹೇಳಿದೆ. ಸಂತ್ರಸ್ತೆಯನ್ನು ರಕ್ಷಿಸಿದ ಎಸ್‌ಐಟಿ ಇಷ್ಟು ದಿನ ಏನು ಮಾಡುತ್ತಲಿದೆ? ಎಂದು ನಾಗೇಶ್‌ ಪ್ರಶ್ನೆ ಮಾಡಿದರು.

ಇಡೀ ಪ್ರಕರಣದ ಟೈಂ ಲೈನ್‌ ಹೇಳಿದ ಜಯ್ನಾ ಕೊಠಾರಿ

ಆಗ ಎಸ್ಐಟಿ ಪರ ಎಸ್‌ಪಿಪಿ ಜಯ್ನಾ ಕೊಠಾರಿ ವಾದ ಮಂಡಿಸಿ, ಎಚ್‌.ಡಿ. ರೇವಣ್ಣಗೆ ಜಾಮೀನು ನೀಡಲು ಎಸ್‌ಪಿಪಿಯಿಂದ ಆಕ್ಷೇಪವಿದೆ. ಸಂತ್ರಸ್ತೆ ಪುತ್ರನಿಗೆ ಮೊದಲು ಸಂತ್ರಸ್ತೆ ವಿಡಿಯೊ ಬಗ್ಗೆ ತಿಳಿಯುತ್ತದೆ. ಸಾಕಷ್ಟು ಮಹಿಳೆಯರೊಂದಿಗಿರುವ ಅಶ್ಲೀಲ ವಿಡಿಯೊಗಳೂ ಕಾಣುತ್ತದೆ. ಅದಾದ ಬಳಿಕ ‌ಮಹಿಳಾ ‌ಆಯೋಗಕ್ಕೆ ದೂರು ನೀಡುತ್ತಾರೆ. ಹೊಳೆನರಸೀಪುರ ಠಾಣೆಯಲ್ಲಿ ಒಂದು ‌ಪ್ರಕರಣ ದಾಖಲಾಗುತ್ತದೆ. ಬಳಿಕ ಸರ್ಕಾರದಿಂದ ಎಸ್‌ಐಟಿ ರಚನೆಯಾಗಿದೆ ಎಂದು ಇಡೀ ಪ್ರಕರಣದ ಟೈಂ ಲೈನ್‌ ಅನ್ನು ಹೇಳಿದರು.

ಸಂತ್ರಸ್ತೆಯ ಅಶ್ಲೀಲ ವಿಡಿಯೊ ಇದೆ

ಸಂತ್ರಸ್ತೆ ಆರೋಪಿ ಮನೆಯಲ್ಲಿ 6 ವರ್ಷದಿಂದ ಕೆಲಸ ಮಾಡುತ್ತಿದ್ದರು. ಏಪ್ರಿಲ್ 28ರ ರಾತ್ರಿ ಸಂತ್ರಸ್ತೆಯನ್ನು ಬಲವಂತವಾಗಿ ಕರೆದೊಯ್ದಿದ್ದಾರೆ. ಅದಾದ ಬಳಿಕ ಆಕೆ ಪತ್ತೆಯಾಗಿರಲಿಲ್ಲ. ಸಂತ್ರಸ್ತೆ ಪುತ್ರ ಹಲವರಿಗೆ ಕರೆ ಮಾಡಿ ತಾಯಿ ಬಗ್ಗೆ ಮಾಹಿತಿ ಕೇಳಿದ್ದಾರೆ. ಬಳಿಕ‌ ತನ್ನ ತಾಯಿ‌ ‌ತೊಂದರೆಯಲ್ಲಿದ್ದಾಳೆಂದು ದೂರು ನೀಡಿದ್ದಾರೆ. ಅಶ್ಲೀಲ‌ ವಿಡಿಯೋಗಳಲ್ಲಿ ಸಂತ್ರಸ್ತೆ ಗುರುತು ಸಿಗುವಂತೆ ರೆಕಾರ್ಡ್ ಆಗಿದೆ. ಬಳಿಕ ತನಿಖೆ ಕೈಗೊಂಡ ಬಳಿಕ ಎಸ್‌ಐಟಿ ಸಂತ್ರಸ್ತೆಯನ್ನು ರಕ್ಷಣೆ ಮಾಡಿದೆ. ಸಂತ್ರಸ್ತೆಯನ್ನು ಅಪಹರಿಸಿ 40 ಕಿ.ಮೀ. ದೂರದಲ್ಲಿ ಕೂಡಿ ಹಾಕಲಾಗಿತ್ತು. ಸಂತ್ರಸ್ತೆಯನ್ನು ಕೂಡಿಹಾಕಿದ್ದ ಸ್ಥಳ ಆರೋಪಿ ಸಂಬಂಧಿಗೆ ಸೇರಿದ್ದಾಗಿದೆ. ಪ್ರಜ್ವಲ್ ಪೆನ್‌ಡ್ರೈವ್ ಪ್ರಕರಣದಲ್ಲಿ ಸಂತ್ರಸ್ತೆಯ ಅಶ್ಲೀಲ ವಿಡಿಯೊ ಇದೆ ಎಂದು ಜಯ್ನಾ ಕೊಠಾರಿ ವಾದ ಮಂಡಿಸಿದರು.

ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು

ಸಿಆರ್‌ಪಿಸಿ 161 ಅಡಿ ಹೇಳಿಕೆ ದಾಖಲಿಸಲಾಗಿದೆ. ಸಾಕ್ಷಿಗಳ ಹೇಳಿಕೆಯಲ್ಲೂ ರೇವಣ್ಣ ಹೆಸರು ಉಲ್ಲೇಖವಾಗಿದೆ. ಇದು ಸ್ಪಷ್ಟವಾಗಿ ಕಿಡ್ನ್ಯಾಪ್, ಒತ್ತೆಯಾಳಾಗಿಟ್ಟುಕೊಂಡ ಪ್ರಕರಣವಾಗಿದೆ. ಸಂತ್ರಸ್ತೆಯ ಪುತ್ರ ನೀಡಿರುವ ದೂರಿನಲ್ಲಿ ಹೇಳಿರೋದು ಸತ್ಯ. ಎಚ್.ಡಿ.ರೇವಣ್ಣ ವಿರುದ್ಧ ಸೆಕ್ಷನ್ 364(a) ಅನ್ವಯವಾಗುತ್ತದೆ. 364(a) ಅಡಿಯಲ್ಲಿ ದಾಖಲಾಗಿರೋ ಕೆಲ‌ ಪ್ರಕರಣಗಳಲ್ಲಿ ಶಿಕ್ಷೆಯಾಗಿದೆ. ಹೀಗಾಗಿ ನಾವು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಬೇಕು. ಈ ಪ್ರಕರಣದ ತೀವ್ರತೆಯೂ ಜಾಸ್ತಿ ಇದೆ. ಆರೋಪಿಯ ತಪ್ಪು ಕಂಡುಬಂದಾಗ ಬಹುತೇಕ ಈ ಸೆಕ್ಷನ್‌ಗಳನ್ನೇ ಹಾಕಲಾಗುತ್ತದೆ ಎಂದು ಜಯಾ ಕೊಠಾರಿ ಹೇಳಿದರು.

ರೇವಣ್ಣ ನಾಪತ್ತೆಯಾದರೆ? ಸಂತ್ರಸ್ತೆಯರ ಕಿಡ್ನ್ಯಾಪ್‌ ಮಾಡಿಸಿದರೆ?

ಆರೋಪಿಯ ಪುತ್ರ ಪ್ರಜ್ವಲ್‌ ರೇವಣ್ಣ ನಾಪತ್ತೆಯಾಗಿದ್ದಾರೆ. ಆರೋಪಿ ಪುತ್ರನ ಪತ್ತೆಗೆ ಬ್ಲೂಕಾರ್ನರ್ ನೋಟಿಸ್ ನೀಡಲಾಗಿದೆ. ಆದರೂ ಇಲ್ಲಿಯವರೆಗೆ ಆರೋಪಿ ಪುತ್ರ ಎಲ್ಲಿದ್ದಾರೆಂದು ಪತ್ತೆಯಾಗಿಲ್ಲ. ಈವರೆಗೆ ವಾಪಸ್ ಕೂಡ ಬಂದಿಲ್ಲ. ಈ ಆರೋಪಿಯೂ ನಾಪತ್ತೆಯಾದರೆ ಏನು ಮಾಡುವುದು? ಅದಲ್ಲದೆ, ಆರೋಪಿ‌ ರೇವಣ್ಣ ತುಂಬಾನೇ ಪ್ರಭಾವಿಯಾಗಿದ್ದಾರೆ. ಈ ಹಂತದಲ್ಲಿ ಜಾಮೀನು ನೀಡಿದ್ರೆ ಸಾಕ್ಷ್ಯ ಹಾಳು‌ ಮಾಡುತ್ತಾರೆ. ಜಾಮೀನು‌ ನೀಡಿದರೆ ಸಂತ್ರಸ್ತೆ ಜೀವಕ್ಕೆ ಯಾರು ಗ್ಯಾರಂಟಿ ನೀಡ್ತಾರೆ? ಜಾಮೀನು ಪಡೆದು ಬೇರೆ ಮಹಿಳೆಯರನ್ನು ಕಿಡ್ನ್ಯಾಪ್‌ ಮಾಡಬಹುದು ಎಂದು ಜಯಾ ಕೊಠಾರಿ ಆತಂಕ ವ್ಯಕ್ತಪಡಿಸಿದರು.

ಇದನ್ನೂ ಓದಿ: Prajwal Revanna Case: ಪೆನ್‌ಡ್ರೈವ್ ಹಂಚಿಕೆದಾರರ ಬಂಧಿಸಿ; ಸಿಎಂ, ಡಿಸಿಎಂ ವಿರುದ್ಧ ಮಹಿಳಾ ಜೆಡಿಎಸ್‌ ಗರಂ!

ತನ್ನ ತಾಯಿಯನ್ನು ಕಾಪಾಡುವಂತೆ ಸಂತ್ರಸ್ತೆ ಮಗ ದೂರು ನೀಡಿದ್ದಾರೆ. ಯಾವುದೇ ಕಾರಣಕ್ಕೂ ಆರೋಪಿಗೆ ಜಾಮೀನು ನೀಡಬಾರದು. ಎಚ್.ಡಿ.ರೇವಣ್ಣ ವಿರುದ್ದ ಎರುಡು ಎಫ್ಐಆರ್ ದಾಖಲಾಗಿವೆ. ರೇವಣ್ಣ ವಿರುದ್ಧ ಲೈಂಗಿಕ‌ ದೌರ್ಜನ್ಯವೆಸಗಿರುವ ಆರೋಪವೂ ಇದೆ. ಲೈಂಗಿಕ‌ ದೌರ್ಜನ್ಯವೆಸಗುವ ಆರೋಪಿಗಳಿಗೆ ಸಂದೇಶ ರವಾನೆಯಾಗಬೇಕು. ಹೀಗಾಗಿ ಆರೋಪಿಗೆ ಜಾಮೀನು ನೀಡಬಾರದು. ಕೋರ್ಟ್‌ಗೆ ಮತ್ತಷ್ಟು ಮಹತ್ವದ ಮಾಹಿತಿಯನ್ನು ನೀಡಬೇಕಾಗಿದೆ. ಹೀಗಾಗಿ ವಿಚಾರಣೆಯನ್ನು ಸೋಮವಾರಕ್ಕೆ ಮುಂದೂಡಿ ಎಂದು ಜಯಾ ಕೊಠಾರಿ ಮನವಿ ಮಾಡಿದರು. ವಾದ – ಪ್ರತಿವಾದ ಆಲಿಸಿದ ನ್ಯಾಯಾಧೀಶರು, ಸೋಮವಾರ ವರದಿ ಸಲ್ಲಿಸಲು ಸೂಚಿಸಿದ್ದಲ್ಲದೆ, ಮತ್ತೆ ಸಮಯ ವ್ಯರ್ಥ ಮಾಡದಂತೆ ಸೂಚಿಸಿ ಸೋಮವಾರಕ್ಕೆ ವಿಚಾರಣೆಯನ್ನು ಮುಂದೂಡಿದರು.

Continue Reading

ಕ್ರೈಂ

Murder case : ತೃತೀಯ ಲಿಂಗಿಯನ್ನು ಕೊಂದ ಮಹಿಳೆ; ಮಗನಿಗೆ ನಾಯಿ ಚೈನ್‌ ಹಾಕಿ ಎಳೆಯುವಾಗ ಸಾವು

Murder case : ಪತಿ ಕಳೆದುಕೊಂಡ ಮಹಿಳೆಯು ತೃತೀಯ ಲಿಂಗಿಯೊಂದಿಗೆ ವಾಸವಾಗಿದ್ದಳು. ಆದರೆ ಅವರಿಬ್ಬರ ನಡುವೆ ನಡೆದ ಚಿಕ್ಕ ಗಲಾಟೆಯು ಕೊಲೆಯಲ್ಲಿ ಅಂತ್ಯವಾಗಿತ್ತು. ತೃತೀಯ ಲಿಂಗಿಯನ್ನು ಉಸಿರುಗಟ್ಟಿ ಕೊಂದು ಪರಾರಿ ಆಗಿದ್ದ ಆರೋಪಿತೆಯನ್ನು ಪೊಲೀಸರು ಬಂಧಿಸಿದ್ದಾರೆ.

VISTARANEWS.COM


on

By

Murder case
ಕೊಲೆಯಾದ ಮಂಜಿ ಬಾಯ್ ಹಾಗೂ ಪ್ರೇಮ ಕೊಲೆ ಆರೋಪಿ
Koo

ಬೆಂಗಳೂರು: ಸಣ್ಣದಾಗಿ ಶುರುವಾದ ಜಗಳವು ವಿಕೋಪಕ್ಕೆ ತಿರುಗಿತ್ತು. ತನ್ನ ಪ್ರಾಣ ಉಳಿಸಿಕೊಳ್ಳಲು ಆ ಮಹಿಳೆ ಮತ್ತೊಬ್ಬರ ಪ್ರಾಣವನ್ನೇ (Murder case) ತೆಗೆದು ಕಾಲ್ಕಿತ್ತಿದ್ದಳು. ಆದರೆ ಪ್ರಕರಣ ದಾಖಲಿಸಿಕೊಂಡು ತನಿಖೆಗಿಳಿದ ಪೊಲೀಸರು ಕೊಲೆ ಆರೋಪಿಯನ್ನು ಬಂಧಿಸಿದ್ದಾರೆ. ತೃತೀಯ ಲಿಂಗಿಯನ್ನು ಹತ್ಯೆ ಮಾಡಿದ್ದ ಮಹಿಳೆಯ ಬಂಧನವಾಗಿದೆ.

ತೃತೀಯ ಲಿಂಗಿ ಮಂಜಿ ಬಾಯ್ ಅಲಿಯಾಸ್‌ ಮಂಜ ನಾಯ್ಕ್ (42) ಕೊಲೆಯಾದವರು. ಕಳೆದ ಏ. 3ರಂದು ಜೆ.ಬಿ.ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮನೆಯೊಂದರಲ್ಲಿ ಕೊಳೆತ ಸ್ಥಿತಿಯಲ್ಲಿ ಮಂಜಿ ಬಾಯ್ ಶವ ಪತ್ತೆಯಾಗಿತ್ತು. ಈ ಬಗ್ಗೆ ಮೊದಲಿಗೆ ಪೊಲೀಸರು ಯುಡಿಆರ್‌ (UDR) ಪ್ರಕರಣವನ್ನು ದಾಖಲಿಸಿಕೊಂಡಿದ್ದರು.

ನಂತರ ಮರಣೋತ್ತರ ಪರೀಕ್ಷೆ ವೇಳೆ ಉಸಿರುಗಟ್ಟಿಸಿ ಕೊಲೆ ಮಾಡಿರುವುದು ಬಯಲಾಗಿತ್ತು. ಹೀಗಾಗಿ ಮಂಜಿ ಬಾಯ್‌ ಜತೆ ವಾಸವಿದ್ದ ಪ್ರೇಮ (51) ಎಂಬ ಮಹಿಳೆಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು.

ವಿಚಾರಣೆ ವೇಳೆ ಪ್ರೇಮಾ ತಾನೇ ಮಂಜಿಯನ್ನು ಕೊಲೆ ಮಾಡಿದ್ದಾಗಿ ಹೇಳಿ ನಂತರ ಕಾರಣವನ್ನು ಬಾಯ್ಬಿಟ್ಟಿದ್ದಳು. ಪ್ರೇಮ ತನ್ನ ಪತಿಯನ್ನು ಕಳೆದುಕೊಂಡ ಮೇಲೆ ಕಳೆದ 20 ವರ್ಷದಿಂದ ತೃತೀಯ ಲಿಂಗಿ ಮಂಜಿ ಬಾಯ್‌ ಜತೆ ವಾಸವಿದ್ದಳು. ಮಂಜಿ ಬಾಯ್ ಕಂಪನಿಯೊಂದರ ಕ್ಯಾಂಟಿನ್‌ನಲ್ಲಿ ಕೆಲಸ ಮಾಡುತ್ತಿದ್ದರೆ, ಪ್ರೇಮಾ ಹೌಸ್ ಕೀಪಿಂಗ್ ಕೆಲಸ ಮಾಡುತ್ತಿದ್ದಳು.

ಈ ನಡುವೆ ಚೆನ್ನಾಗಿಯೇ ಇದ್ದ ಅವರಿಬ್ಬರು ಕಳೆದ ಏ.26ರಂದು ಮನೆಯಲ್ಲಿದ್ದಾಗ ಇಬ್ಬರ ನಡುವೆ ಯಾವುದೋ ವಿಚಾರಕ್ಕೆ ಜಗಳ ಆಗಿತ್ತು. ಇವರಿಬ್ಬರ ಗಲಾಟೆ ವಿಕೋಪಕ್ಕೆ ತಿರುಗಿದ್ದು, ಮಂಜಿ ಬಾಯ್‌ ಪ್ರೇಮಾಳಿಗೆ ಚಾಕುವಿನಿಂದ ಚುಚ್ಚಲು ಮುಂದಾಗಿದ್ದ.ತನ್ನ ಪ್ರಾಣ ಉಳಿಸಿಕೊಳ್ಳಲು ಪ್ರೇಮಾ ಟವಲ್‌ನಿಂದ ಮಂಜಿಬಾಯ್ ಕುತ್ತಿಗೆ ಬಿಗಿದಿದ್ದಳು. ಅಷ್ಟೇ ಉಸಿರುಗಟ್ಟಿ ಮಂಜಿ ಬಾಯ್‌ ಕ್ಷಣಾರ್ಧದಲ್ಲೇ ಮೃತಪಟ್ಟಿದ್ದ. ಸದ್ಯ ಆರೋಪಿತೆ ಪ್ರೇಮಾಳನ್ನು ಬಂಧಿಸಿರುವ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.

ಇದನ್ನೂ ಓದಿ: Murder Case : ಕಾಂಗ್ರೆಸ್‌ಗೆ ವೋಟ್‌ ಹಾಕಿದ್ದಕ್ಕೆ ಅಮಾವಾಸ್ಯೆ ದಿನ ಕರೆದು ಕೊಂದರು

ಮಂಗಳೂರಲ್ಲಿ ಯುವಕ ಅನುಮಾನಾಸ್ಪದ ಸಾವು

ಮಂಗಳೂರಿನ ಪುತ್ತೂರಿನ ಬೆಟ್ಟಂಪ್ಪಾಡಿಯ ಪಾರೆ ಎಂಬಲ್ಲಿ ಯುವಕನೊಬ್ಬ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾನೆ. ಚೇತನ್ (33) ಮೃತ ದುರ್ದೈವಿ. ಮೃತ ಚೇತನ್ ತಾಯಿ ಉಮಾವತಿ ನೇಣು ಬಿಗಿದು ಸಾವನ್ನಪ್ಪಿರುವ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರು. ಆದರೆ ಪೊಲೀಸರ ಪರಿಶೀಲನೆ ವೇಳೆ ಪ್ರಕರಣ ಸಂಬಂಧ ಅನುಮಾನ ಮೂಡಿದರಿಂದ ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಂಡಿದ್ದರು.

ನಿನ್ನೆ ಗುರುವಾರ ರಾತ್ರಿ ಚೇತನ್‌ ಕಂಠಪೂರ್ತಿ ಕುಡಿದು ಮನೆಗೆ ಬಂದಿದ್ದ. ಈ ವೇಳೆ ತಾಯಿ ಜತೆ ಜಗಳವಾಡಿ ಹೊರನಡೆದ ಚೇತನ್‌, ಮನೆ ಪಕ್ಕದಲ್ಲಿರುವ ಯೂಸುಫ್ ಎನ್ನುವವರ ಮನೆ ಬಾಗಿಲು ಬಡಿದಿದ್ದ. ಹೀಗಾಗಿ ಯೂಸುಫ್, ಚೇತನ್ ಅವರ ತಾಯಿ ಉಮಾವತಿಗೆ ಕರೆ ಮಾಡಿ ವಿಷಯ ತಿಳಿಸಿದ್ದರು.

murder case

ಕೂಡಲೇ ಅಲ್ಲಿಗೆ ಬಂದ ಚೇತನ್ ತಾಯಿ ಉಮಾವತಿ, ನಾಯಿಯನ್ನು ಕಟ್ಟುವ ಸಂಕೋಲೆಯನ್ನು ಮಗನ ಸೊಂಟಕ್ಕೆ ಹಾಕಿ ಕರೆದುಕೊಂಡು ಹೋಗಲು ಯತ್ನಿಸಿದ್ದಾರೆ. ಚೇತನ್‌ ಮತ್ತಷ್ಟು ಹಠಕ್ಕೆ ಬಿದ್ದಾಗ ಯೂಸುಫ್ ಹಾಗೂ ಸ್ಥಳೀಯ ನಿವಾಸಿಗಳು ಸೇರಿ ಚೇತನ್‌ನನ್ನು ಮನೆಗೆ ಎಳೆದೊಯ್ದಿದ್ದಾರೆ.

ಸಂಕೋಲೆ ಎಳೆಯುವ ಸಮಯದಲ್ಲಿ ಚೇತನ್‌ ಕುತ್ತಿಗೆಗೆ ಸುತ್ತಿಕೊಂಡಿದೆ. ಈ ವೇಳೆ ಕುತ್ತಿಗೆಗೆ ಸಂಕೋಲೆ ಬಿಗಿದು ಚೇತನ್‌ ಮೃತಪಟ್ಟಿದ್ದಾನೆ. ಸದ್ಯ ಘಟನೆಗೆ ಸಂಬಂಧಿಸಿದಂತೆ ತಾಯಿ ಉಮಾವತಿ ಸೇರಿದಂತೆ ಮೂವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಮಂಗಳೂರಿಗೆ ರವಾನೆ ಮಾಡಲಾಗಿದೆ. ಪುತ್ತೂರು ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಕರ್ನಾಟಕ

Madara Channaiah Gurupeeta: ಮಾದಾರ ಚನ್ನಯ್ಯ ಗುರುಪೀಠಕ್ಕೆ ನೂತನ ವಟು ಸ್ವೀಕಾರ

Madara Channaiah Gurupeeta: ಚಿತ್ರದುರ್ಗ ಹೊರವಲಯದ ಶಿವಶರಣ ಮಾದಾರ ಚನ್ನಯ್ಯ ಗುರುಪೀಠದಲ್ಲಿ ಮಾದಾರ ಶ್ರೀಗಳು ನೂತನ ವಟುವನ್ನು ಸ್ವೀಕಾರ ಮಾಡಿದ್ದಾರೆ.

VISTARANEWS.COM


on

Madara Channaiah Gurupeeta
Koo

ಚಿತ್ರದುರ್ಗ: ನಗರದ ಹೊರವಲಯದ ಶಿವಶರಣ ಮಾದಾರ ಚನ್ನಯ್ಯ ಗುರುಪೀಠಕ್ಕೆ (Madara Channaiah Gurupeeta) ಶುಕ್ರವಾರ ನೂತನ ವಟು ಸ್ವೀಕಾರ ಮಾಡಲಾಗಿದೆ. ನೂತನ ವಟುವಿಗೆ ಜಯಬಸವ ದೇವರು ಎಂದು ನಾಮಕರಣ ಮಾಡಲಾಗಿದೆ.

ಮಠದ ಆವರಣದ ಬಸವಾದಿ ಶರಣರ ಧರ್ಮ ಸಂಸತ್ ಸಭಾ ಮಂಟಪದಲ್ಲಿ ಬೆಳಗ್ಗೆ ನಡೆದ ವಟು ಸ್ವೀಕಾರ ಸಮಾರಂಭದಲ್ಲಿ ಲಿಂಗಧೀಕ್ಷೆ, ವಿಭೂತಿ ಧಾರಣೆ, ಲಿಂಗಧಾರಣೆ, ಹಸ್ತಮಸ್ತಕ ಸಂಯೋಜನೆ, ಪಾದಪೂಜೆ ಸೇರಿ ಬಸವ ತತ್ತ್ವದ ಪ್ರಕಾರ ಧಾರ್ಮಿಕ ವಿಧಿ ವಿಧಾನ ನೆರವೇರಿದವು. ಈ ವೇಳೆ ಮಾದಾರ ಶ್ರೀಗಳು ವಟು ಸ್ವೀಕಾರ ಮಾಡಿದರು.

ಮಾದಾರ ಚನ್ನಯ್ಯ ಗುರುಪೀಠಕ್ಕೆ ಸ್ವೀಕಾರ ಮಾಡಿರುವ ವಟು ಜಯಬಸವ ದೇವರ ಅವರು ಬಾಗಲಕೋಟೆ ಜಿಲ್ಲೆ ಮಹಾಲಿಂಗಪುರದವರು. ಸವಿತಾ, ಮಹಾಲಿಂಗಪ್ಪ ದಂಪತಿ ದ್ವಿತೀಯ ಪುತ್ರ 9 ವರ್ಷದ ಲಖನ್ ಮಠಕ್ಕೆ ವಟು ಆಗಿದ್ದಾರೆ. ಈ ದಂಪತಿಗೆ ಒಟ್ಟು ನಾಲ್ವರು ಮಕ್ಕಳಿದ್ದು, ಇಬ್ಬರು ಪುತ್ರಿಯರು, ಇಬ್ಬರು ಪುತ್ರರು. ಇದರಲ್ಲಿ ಎರಡನೇ ಮಗ ಲಖಬ್ ಅವರನ್ನು ಮಠಕ್ಕೆ ನೀಡಲಾಗಿದೆ.

ಇದನ್ನೂ ಓದಿ | PM Narendra Modi: ವಿಡಿಯೋ ಸಂದೇಶ ಮೂಲಕ ಬಸವೇಶ್ವರ ಜಯಂತಿಗೆ ಶುಭ ಕೋರಿದ ಪಿಎಂ

ಕಾರ್ಯಕ್ರಮದಲ್ಲಿ ಭೋವಿ ಗುರುಪೀಠದ ಶ್ರೀ ಇಮ್ಮಡಿ ಸಿದ್ದರಾಮೇಶ್ವರ ಸ್ವಾಮೀಜಿ, ಹೊಸದುರ್ಗ ಕುಂಚಿಟಿಗ ಮಹಾಸಂಸ್ಥಾನ ಮಠದ ಶ್ರೀ ಶಾಂತವೀರ ಮಹಾಸ್ವಾಮಿಜಿ, ಭಗಿರಥ ಗುರುಪೀಠದ ಶ್ರೀ ಪುರುಷೋತ್ತಮಾನಂದಪುರಿ ಸ್ವಾಮೀಜಿ ಹೊಸದುರ್ಗ, ಕನಕ ಗುರುಪೀಠದ ಶ್ರೀ ಈಶ್ವರಾನಂದಪುರಿ ಸ್ವಾಮೀಜಿ, ಕಬೀರಾನಂದ ಆಶ್ರಮದ ಶ್ರೀ ಶಿವಲಿಂಗಾನಂದ ಸ್ವಾಮೀಜಿ, ಹಂಪಿಯ ಮಾತಂಗಮುನಿ ಮಠದ ಶ್ರೀ ಮಾತಂಗಮುನಿ ಸ್ವಾಮೀಜಿ, ಲಂಬಾಣಿ ಗುರುಪೀಠದ ಶ್ರೀ ನಂದ ಮಸಂದ ಸ್ವಾಮಿಗಳು, ಚಿತ್ರದುರ್ಗದ ಶ್ರೀ ವೇದಾರ ಗುರುಪೀಠದ ಕೇತೇಶ್ವರ ಸ್ವಾಮೀಜಿ, ಕೊರಟಗೆರೆಯ ಶ್ರೀ ಮಹಾಲಿಂಗ ಸ್ವಾಮಿಗಳು, ರಾಣೆಬೆನ್ನೂರಿನ ಶ್ರೀ ಗಜದಂಡ ಸ್ವಾಮಿಗಳು, ಸಿದ್ದಾರೂಢ ಆಶ್ರಮದ ಶ್ರೀ ಜಯದೇವ ಸ್ವಾಮಿಗಳು, ತಿಳುವಳ್ಳಿಯ ಶ್ರೀ ನಿರಂಜನಾಂದ ಸ್ವಾಮಿಗಳು ಶ್ರೀ ತಿಪ್ಪೇರುದ್ರ ಸ್ವಾಮಿಗಳು ಸತ್ಯಕ್ಕ ಜಯದೇವಿತಾಯಿ ಶ್ರೀ ಪೂರ್ಣಾನಂದ ಸ್ವಾಮಿಗಳು ಇದ್ದರು.

ಬಸವ ಜಯಂತಿ: ಧಾರವಾಡದಲ್ಲಿ ಗಮನಸೆಳೆದ ಬಣ್ಣ ಬಣ್ಣದ ರಂಗೋಲಿ ಚಿತ್ತಾರ

ಧಾರವಾಡ: ಬಸವ ಜಯಂತಿ ಪ್ರಯುಕ್ತ ತಾಲೂಕಿನ ಉಪ್ಪಿನ ಬೆಟಗೇರಿ ಗ್ರಾಮದಲ್ಲಿ ರಂಗೋಲಿ ಸ್ಪರ್ಧೆ ನಡೆಯಿತು. ಸ್ಪರ್ಧೆಯಲ್ಲಿ ಬಣ್ಣ ಬಣ್ಣದ ರಂಗೋಲಿ ಚಿತ್ತಾರಗಳು ಗಮನಸೆಳೆದವು. ಗ್ರಾಮದ ಮೂರು ಸಾವಿರ ವಿರಕ್ತಮಠದ ಸ್ವಾಮೀಜಿಗಳ ಜನ್ಮದಿನ ಅಂಗವಾಗಿ ಸ್ಪರ್ಧೆ ಏರ್ಪಡಿಸಲಾಗಿತ್ತು. ವಿರಕ್ತಮಠದ ಆವರಣದಲ್ಲಿ ಮಹಿಳೆಯೊಬ್ಬರು ಬಿಡಿಸಿದ ಬಸವೇಶ್ವರ ಚಿತ್ರ ಎಲ್ಲರ ಗಮನಸೆಳೆಯಿತು.

Continue Reading

ಕರ್ನಾಟಕ

Pralhad Joshi: ದೇಶದಲ್ಲಿ ಹಿಂದೂ ಜನಸಂಖ್ಯೆ ಕುಸಿತ ಆತಂಕಕಾರಿ: ಸಚಿವ ಪ್ರಲ್ಹಾದ್‌ ಜೋಶಿ

Pralhad Joshi: ದೇಶದಲ್ಲಿ ಹಿಂದೂ ಜನಸಂಖ್ಯೆ ಕುಸಿತ ತೀವ್ರ ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಕಳವಳ ವ್ಯಕ್ತಪಡಿಸಿದ ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ, ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈಗಲೇ ಎಚ್ಚೆತ್ತುಕೊಂಡು ಪರ್ಯಾಯ ಕ್ರಮ ಕೈಗೊಳ್ಳಬೇಕಿದೆ ಎಂದು ತಿಳಿಸಿದ್ದಾರೆ.

VISTARANEWS.COM


on

Union Minister Pralhad Joshi latest Statement in hubli
Koo

ಹುಬ್ಬಳ್ಳಿ: ದೇಶದಲ್ಲಿ ಹಿಂದೂ ಜನಸಂಖ್ಯೆ ಕುಸಿತ ತೀವ್ರ ಆತಂಕಕಾರಿ ಬೆಳವಣಿಗೆಯಾಗಿದೆ ಎಂದು ಕಳವಳ ವ್ಯಕ್ತಪಡಿಸಿರುವ ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ (Pralhad Joshi), ಈ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಈಗಲೇ ಎಚ್ಚೆತ್ತುಕೊಂಡು ಪರ್ಯಾಯ ಕ್ರಮ ಕೈಗೊಳ್ಳಬೇಕಿದೆ ಎಂದು ತಿಳಿಸಿದ್ದಾರೆ.

ಹುಬ್ಬಳ್ಳಿಯಲ್ಲಿ ಶುಕ್ರವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಭಾರತದಲ್ಲಿ ಹಿಂದೂಗಳ ಜನಸಂಖ್ಯೆ ಕ್ಷಿಣಿಸುತ್ತಿರುವ ಬಗ್ಗೆ ತಕ್ಷಣಕ್ಕೆ ಯಾವುದೇ ನಿರ್ಧಾರಕ್ಕೆ ಬರಲಾಗುವುದಿಲ್ಲ. ಆದರೆ ಸಮಗ್ರ ಅಧ್ಯಯನ ನಡೆಸಬೇಕಿದೆ ಎಂದರು.

ಇದನ್ನೂ ಓದಿ: Star Suvarna: ಬಹುಮಾನದ ಜತೆಗೆ ಮನೋರಂಜನೆ ಹೊತ್ತು ಬರುತ್ತಿದೆ ʼಸುವರ್ಣ ಗೃಹಮಂತ್ರಿʼ; ಯಾವಾಗ ಪ್ರಸಾರ?

ಪ್ರಜಾಪ್ರಭುತ್ವಕ್ಕೆ ಧಕ್ಕೆ

ದೇಶದಲ್ಲಿ ಹಿಂದೂಗಳ ಜನಸಂಖ್ಯೆ ಕಡಿಮೆಯಾದಂತೆ ಕಾಲಕ್ರಮೇಣ ಪ್ರಜಾಪ್ರಭುತ್ವವೇ ಬದಲಾಗುವ ಸ್ಥಿತಿ ಎದುರಾಗಲಿದೆ. ಅಲ್ಲದೇ, ಜಾತ್ಯತೀತವಾಗಿ ಉಳಿಯುವುದಿಲ್ಲ ಎಂದು ಜೋಶಿ ತೀವ್ರ ಆತಂಕ ವ್ಯಕ್ತಪಡಿಸಿದರು.

ಜಗತ್ತಿನಲ್ಲೇ ಏಕೈಕ ಜಾತ್ಯತೀತ ರಾಷ್ಟ್ರ ಭಾರತ. ಪಕ್ಕಾ ಜಾತ್ಯತೀತ ದೇಶವಾಗಿದೆ. ಜಾತ್ಯತೀತತೆ ಎನ್ನುವುದು ಭಾರತೀಯರ ರಕ್ತ, ಸ್ವಭಾವದಲ್ಲೇ ಬಂದಿದೆ. ಮುಂದೊಂದು ದಿನ ಇದಕ್ಕೆ ಧಕ್ಕೆ ಉಂಟಾಗಬಹುದು ಎಂದರು.

ಭಾರತ ವಿವಿಧತೆಯಲ್ಲಿ ಏಕತೆ ಕಂಡ ದೇಶವಾಗಿದೆ. ನಾನಾ ಧರ್ಮ, ಸಂಸ್ಕೃತಿ ಆಚರಣೆಗೆ ಮುಕ್ತ ಅವಕಾಶ ಕೊಟ್ಟ ರಾಷ್ಟ್ರ. ಈ ಪರಂಪರೆಯೆ ಮುಂದುವರಿಯಬೇಕು ಎಂದು ಸಚಿವ ಜೋಶಿ ಆಶಿಸಿದರು.

ಪ್ರಮುಖವಾಗಿ ಹಿಂದೂಗಳ ದೇಶವೆಂದರೂ ಸರ್ವ ಧರ್ಮೀಯರನ್ನು ಒಳಗೊಂಡಿದೆ. ಆದರೆ, ಈಗ ಹಿಂದೂಗಳ ಸಂಖ್ಯೆಯೇ ಕುಸಿಯುತ್ತಿದೆ ಎಂದರೆ ಸರ್ಕಾರ ಮತ್ತು ಸಮಾಜ ಗಂಭೀರವಾಗಿ ಚಿಂತಿಸಬೇಕಾದ ಸಂಗತಿ ಎಂದು ತಿಳಿಸಿದರು.

ಇದನ್ನೂ ಓದಿ: Gold Rate Today: ಅಕ್ಷಯ ತದಿಗೆಯಂದು ಚಿನ್ನದ ಬೆಲೆಯಲ್ಲಿ ಭಾರೀ ಏರಿಕೆ; ಬಂಗಾರ ಕೊಳ್ಳಲು ಮುಗಿಬಿದ್ದ ಜನ; ದರಗಳು ಹೀಗಿವೆ

ಬಸವಣ್ಣನ ಕಲ್ಪನೆಯ ಸಮಾಜ ನಿರ್ಮಾಣ ಆಗಬೇಕು

ಪ್ರಜಾಪ್ರಭುತ್ವದ ರೂವಾರಿ, ಸಾಮಾಜಿಕ ಸಮಾನತೆಯ ಹರಿಕಾರ ಬಸವಣ್ಣ. ಇಂದು ಅವರ ಕಲ್ಪನೆಯ ಸಮಾಜ ನಿರ್ಮಾಣ ಮತ್ತು ಆಡಳಿತ ವ್ಯವಸ್ಥೆ ಬರಬೇಕಿದೆ ಎಂದು ಸಚಿವ ಪ್ರಲ್ಹಾದ್‌ ಜೋಶಿ ಇದೇ ವೇಳೆ ಪ್ರತಿಪಾದಿಸಿದರು.

Continue Reading
Advertisement
IPL 2024
ಕ್ರೀಡೆ12 mins ago

IPL 2024 : ಆರ್​ಸಿಬಿಯ ಪ್ಲೇಆಫ್​ ಚಾನ್ಸ್​ ಇದೆಯೇ? ಇಲ್ಲಿದೆ ನೋಡಿ ಲೆಕ್ಕಾಚಾರ

Prajwal Revanna case SIT did not contact woman to file false case
ಕ್ರೈಂ15 mins ago

Prajwal Revanna case: ಸುಳ್ಳು ಕೇಸ್‌ ಹಾಕಲು ಮಹಿಳೆಯನ್ನು SIT ಸಂಪರ್ಕ ಮಾಡಿಲ್ಲ; ಕಾಟ ಕೊಟ್ಟವನನ್ನು ಬಿಡಲ್ಲ!

Murder case
ಕ್ರೈಂ21 mins ago

Murder case : ತೃತೀಯ ಲಿಂಗಿಯನ್ನು ಕೊಂದ ಮಹಿಳೆ; ಮಗನಿಗೆ ನಾಯಿ ಚೈನ್‌ ಹಾಕಿ ಎಳೆಯುವಾಗ ಸಾವು

IPL 2024
ಪ್ರಮುಖ ಸುದ್ದಿ36 mins ago

IPL 2024 : ರಾಹುಲ್ ದ್ರಾವಿಡ್ ಸೃಷ್ಟಿಸಿದ್ದ 14 ವರ್ಷಗಳ ಹಿಂದಿನ ದಾಖಲೆ ಮುರಿದ ದಿನೇಶ್ ಕಾರ್ತಿಕ್

Madara Channaiah Gurupeeta
ಕರ್ನಾಟಕ39 mins ago

Madara Channaiah Gurupeeta: ಮಾದಾರ ಚನ್ನಯ್ಯ ಗುರುಪೀಠಕ್ಕೆ ನೂತನ ವಟು ಸ್ವೀಕಾರ

Viral News
ವೈರಲ್ ನ್ಯೂಸ್46 mins ago

Viral News: ಕುಡಿದ ಮತ್ತಿನಲ್ಲಿ ಪೊಲೀಸ್‌ ಪೇದೆಯ ಕೈ ಕಚ್ಚಿ, ಬಟ್ಟೆ ಹರಿದು ಹಲ್ಲೆ ಮಾಡಿದ ಮಹಿಳೆಯರು

Laila Khan
ಸಿನಿಮಾ56 mins ago

Laila Khan: ಮಲತಂದೆಯಿಂದಲೇ ಹತ್ಯೆಯಾದ ಜಗ್ಗೇಶ್‌ ಚಿತ್ರದ ನಾಯಕಿ; 13 ವರ್ಷಗಳ ಬಳಿಕ ತೀರ್ಪು ಪ್ರಕಟ

Kantilal Bhuria
ದೇಶ56 mins ago

Kantilal Bhuria: ಒಬ್ಬನಿಗೆ ಇಬ್ಬರು ಹೆಂಡತಿಯರು ಇದ್ದರೆ ಕಾಂಗ್ರೆಸ್‌ನಿಂದ 2 ಲಕ್ಷ ರೂ. ಎಂದ ಕೈ ನಾಯಕ; ಬಿಜೆಪಿ ಟೀಕೆ

Union Minister Pralhad Joshi latest Statement in hubli
ಕರ್ನಾಟಕ1 hour ago

Pralhad Joshi: ದೇಶದಲ್ಲಿ ಹಿಂದೂ ಜನಸಂಖ್ಯೆ ಕುಸಿತ ಆತಂಕಕಾರಿ: ಸಚಿವ ಪ್ರಲ್ಹಾದ್‌ ಜೋಶಿ

Rahul gandhi
ದೇಶ1 hour ago

Rahul Gandhi: “ಅದಾನಿ-ಅಂಬಾನಿ… ಕಾಪಾಡಿ..ಕಾಪಾಡಿ ಅಂತಿದ್ದಾರೆ ಪ್ರಧಾನಿ ಮೋದಿ” ; ರಾಹುಲ್‌ ಗಾಂಧಿ ವ್ಯಂಗ್ಯ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ5 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Physical Abuse The public prosecutor called the client woman to the lodge
ಕ್ರೈಂ3 hours ago

Physical Abuse : ಲೈಂಗಿಕ ದೌರ್ಜನ್ಯ; ಕಕ್ಷಿದಾರ ಮಹಿಳೆಯನ್ನು ಮಂಚಕ್ಕೆ ಕರೆದ ಪಬ್ಲಿಕ್ ಪ್ರಾಸಿಕ್ಯೂಟರ್!

murder case kalaburagi
ಕಲಬುರಗಿ4 hours ago

Murder Case : ಕಾಂಗ್ರೆಸ್‌ಗೆ ವೋಟ್‌ ಹಾಕಿದ್ದಕ್ಕೆ ಅಮಾವಾಸ್ಯೆ ದಿನ ಕರೆದು ಕೊಂದರು

Rain Effect In karnataka
ಮಳೆ5 hours ago

Rain Effect : ಬಿರುಗಾಳಿ ರಭಸಕ್ಕೆ ಮನೆಯ ಗೇಟ್ ಬಿದ್ದು ಬಾಲಕಿ ಸಾವು; ಸಿಡಿಲಿಗೆ ಎತ್ತುಗಳು ಬಲಿ

Dina Bhavishya
ಭವಿಷ್ಯ12 hours ago

Dina Bhavishya: ಶುಭ ಶುಕ್ರವಾರ ಈ ರಾಶಿಯವರಿಗೆ ಖುಲಾಯಿಸಲಿದೆ ಲಕ್‌

Prajwal Revanna case Revanna bail plea to be heard on Monday Advocate Nagesh argument was as follows
ಕ್ರೈಂ19 hours ago

Prajwal Revanna Case: ರೇವಣ್ಣ ಜಾಮೀನು ಅರ್ಜಿ ಸೋಮವಾರಕ್ಕೆ: ಎಸ್‌ಐಟಿಗೆ ಹಿಗ್ಗಾಮುಗ್ಗಾ ತರಾಟೆ; ವಕೀಲ ನಾಗೇಶ್‌ ವಾದ ಹೀಗಿತ್ತು!

Prajwal Revanna Case Hasanambe is going to destroy this government HD Kumaraswamy curse
ರಾಜಕೀಯ20 hours ago

Prajwal Revanna Case: ಈ ಸರ್ಕಾರವನ್ನು ಹಾಸನಾಂಬೆ ಧ್ವಂಸ ಮಾಡಲಿದ್ದಾಳೆ: ಎಚ್‌ಡಿಕೆ ಶಾಪ

Prajwal Revanna Case DK Shivakumar alleged mastermind in 25000 pen drive allotment
ಹಾಸನ21 hours ago

Prajwal Revanna Case: 25,000 ಪೆನ್ ಡ್ರೈವ್ ಹಂಚಿಕೆಯಲ್ಲಿ ಡಿ.ಕೆ. ಶಿವಕುಮಾರ್ ಮಾಸ್ಟರ್ ಮೈಂಡ್ ಎಂದು ರಾಜ್ಯಪಾಲರಿಗೆ ದೂರು!

SSLC Result 2024 what is the reason for most of the students fail in SSLC
ಕರ್ನಾಟಕ1 day ago

SSLC Result 2024: ಎಸ್‌ಎಸ್‌ಎಲ್‌ಸಿಯಲ್ಲಿ ಹೆಚ್ಚಿನ ಮಕ್ಕಳು ಫೇಲ್‌ ಆಗಲು ಶಿಕ್ಷಣ ಇಲಾಖೆಯ ಈ ನಿರ್ಧಾರವೇ ಕಾರಣ!

Sslc exam Result 2024
ಶಿಕ್ಷಣ1 day ago

SSLC Result 2024 : ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಫೇಲಾದರೂ, ಕಡಿಮೆ ಅಂಕ ಬಂದರೂ ಡೋಂಟ್‌ ವರಿ; ಇನ್ನೂ ಇದೆ ಎರಡು ಚಾನ್ಸ್‌!

SSLC Result 2024 secret behind 20 percent grace marks
ಕರ್ನಾಟಕ1 day ago

SSLC Result 2024: ಎಸ್‌ಎಸ್‌ಎಲ್‌ಸಿಯಲ್ಲಿ ಈ ಬಾರಿ ನೂರಕ್ಕೆ 25 ಅಂಕ ಪಡೆದವರೂ ಪಾಸ್! ಶೇ. 20 ಗ್ರೇಸ್ ಮಾರ್ಕ್ಸ್ ಕೊಟ್ಟಿದ್ದರ ಹಿಂದಿದೆ ಇಂಟರೆಸ್ಟಿಂಗ್ ಕತೆ!

ಟ್ರೆಂಡಿಂಗ್‌