Yatnal Vs Moulvi : ಕೊಲೆ ಆರೋಪಿ ಮೌಲ್ವಿ ದೇಶ ಬಿಟ್ಟು ಪಲಾಯನ ಸಾಧ್ಯತೆ; ಯತ್ನಾಳ್‌ ಹೊಸ ಬಾಂಬ್‌ - Vistara News

ಕರ್ನಾಟಕ

Yatnal Vs Moulvi : ಕೊಲೆ ಆರೋಪಿ ಮೌಲ್ವಿ ದೇಶ ಬಿಟ್ಟು ಪಲಾಯನ ಸಾಧ್ಯತೆ; ಯತ್ನಾಳ್‌ ಹೊಸ ಬಾಂಬ್‌

Yatnal Vs Moulvi : ತನ್ವೀರ್‌ ಪೀರಾ ಕೊಲೆ ಪ್ರಕರಣದಲ್ಲಿ ಆರೋಪಿಯಾಗಿದ್ದಾನೆ. ಕೊನೆಗೆ ಅವನ ಹೆಸರನ್ನು ಜಾರ್ಜ್‌ಶೀಟ್‌ನಿಂದ ತೆಗೆಸಲಾಗಿದೆ. ಈಗ ಆತ ದೇಶ ಬಿಟ್ಟು ಪಲಾಯನ ಮಾಡುವ ಸಾಧ್ಯತೆ ಇದೆ ಎಂದು ಯತ್ನಾಳ್‌ ಹೇಳಿದ್ದಾರೆ.

VISTARANEWS.COM


on

Basanagowda Pateel Yatnal Tanveer peera
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ವಿಜಯಪುರ/ಬೆಳಗಾವಿ: ವಿಜಯಪುರದ ಧರ್ಮಗುರು, ಮೌಲ್ವಿ ಸಯ್ಯದ್ ಮೊಹಮ್ಮದ್ ತನ್ವೀರ್ ಪೀರಾ ಹಾಷ್ಮಿ (Tanveer Peera) ಮತ್ತು ಅವರ ವಠಾರದಲ್ಲೇ ವಾಸವಾಗಿರುವ, ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ (Basanagowda pateel Yatnal) ನಡುವಿನ ʻಐಸಿಸ್‌ ಯುದ್ಧʼ ಇನ್ನಷ್ಟು (Yatnal Vs Moulvi) ಜೋರಾಗಿದೆ.

ತನ್ವೀರ್‌ ಪೀರಾ ಅವರಿಗೆ ಐಸಿಎಸ್‌ ಸಂಪರ್ಕವಿದೆ ಎಂದು ಆರೋಪ ಮಾಡಿದ್ದ ಯತ್ನಾಳ್‌, ಅದರ ಜತೆಗೇ ಆತನ ಕೊಲೆ ಪ್ರಕರಣವೊಂದರ ಆರೋಪಿ ಎಂದೂ ಹೇಳಿದ್ದರು. ಈಗ ಕೊಲೆ ಆರೋಪಿ ಎಂಬುದಕ್ಕೆ ಪೂರಕವಾಗಿ ಕೊಲೆಯಾದವನ ಪತ್ನಿ ನೀಡಿದ ದೂರನ್ನು ಲಗತ್ತಿಸಿ ಟ್ವೀಟ್‌ ಮಾಡಿದ್ದಾರೆ. ಅದರ ಜತೆಗೆ ತನ್ವೀರ್‌ ಪೀರ್‌ ದೇಶ ಬಿಟ್ಟು ಓಡಿ ಹೋಗುವ ಅಪಾಯವೂ ಇದೆ ಎಂದು ಎಚ್ಚರಿಸಿದ್ದಾರೆ.

ಯತ್ನಾಳ್‌ ಸರಣಿ ಟ್ವೀಟ್‌ ನಲ್ಲಿ ಹೇಳಿರುವುದೇನು?

1.ಹುಬ್ಬಳ್ಳಿಯಲ್ಲಿ ನಡೆದ ಸಮಾರಂಭವೊಂದರಲ್ಲಿ ಸಿದ್ದರಾಮಯ್ಯ ಅವರೊಂದಿಗೆ ವೇದಿಕೆ ಹಂಚಿಕೊಂಡ ತನ್ವೀರ್ ಪೀರಾ ಕೊಲೆ ಕೇಸ್ ಒಂದರಲ್ಲಿ ಆರೋಪಿತನಾಗಿದ್ದು, ಕೊಲೆಯಾದ ವ್ಯಕ್ತಿಯ ಪತ್ನಿಯು ಸಾಕ್ಷಿ ನಾಶ ಮಾಡುವುದಲ್ಲದೆ, ನಮ್ಮ ಕುಟುಂಬಕ್ಕೆ, ಕಾರ್ಯಕರ್ತರಿಗೆ ಬೆದರಿಕೆ ಒಡ್ಡುತ್ತಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಿರುವ ಪತ್ರ.

2.ಕೊಲೆ ಕೇಸಿನಲ್ಲಿ ಈತನ ಮೇಲೆ ಪೊಲೀಸರು ಹಾಕಿದ್ದ ದೋಷಾರೋಪ ಪಟ್ಟಿ (ಚಾರ್ಜಶೀಟ್) ನಿಂದ ಈತನ ಹೆಸರು ಕೈಬಿಟ್ಟಿದ್ದು ಏಕೆ ? ಯಾರ ಒತ್ತಡದಿಂದ ಈತನ ಹೆಸರನ್ನು ಚಾರ್ಜಶೀಟ್ ನಿಂದ ತೆಗಿಸಲಾಯಿತು..

3.ತನಿಖೆ ವೇಳೆ ಕೊಲೆಯಲ್ಲಿ ಈತ ಭಾಗಿಯಾಗಿದ್ದ ಎಂಬ ಶಂಕೆಯಿಂದ ಚಾರ್ಜಶೀಟ್ ನಲ್ಲಿ ಮೊದಲು ಈತನ ಹೆಸರನ್ನು ಹಾಕಿ, ನಂತರ ತೆಗೆದು ಹಾಕಿದ್ದು ಯಾರ ಒತ್ತಡದಿಂದ ಎಂದು ಸರ್ಕಾರ ಹೇಳಲಿ

4.ವೇದಿಕೆ ಮೇಲೆ ಕೊಲೆ ಆರೋಪಿತನಿಗೆ ಏನು ಕೆಲಸ ? ಇವನನ್ನು ವೇದಿಕೆ ಮೇಲೆ ಏಕೆ ಬಿಟ್ಟರು ? ಒಂದು ಬಡ ಕುಟುಂಬಕ್ಕೆ ಬೆದರಿಕೆ ಒಡ್ಡುವ ವ್ಯಕ್ತಿ/ವ್ಯಕ್ತಿಗಳೊಂದಿಗೆ ವೇದಿಕೆ ಹಂಚಿಕೊಳ್ಳುವ ಅವಶ್ಯಕತೆ ಏನಿತ್ತು..

5.ಈತನ ಬಗ್ಗೆ ಇನ್ನಷ್ಟು ಮಾಹಿತಿ ಅತಿ ಶೀಘ್ರಧಲ್ಲಿ ಹಂಚಿಕೊಳ್ಳಲಿದ್ದೇನೆ..ಈತ ದೇಶದಿಂದ ಪೇರಿಕಿತ್ತಲು ಸಾಧ್ಯತೆಗಳಿದ್ದು ಪೊಲೀಸರು ಹಾಗೂ ಗುಪ್ತಚರ ಇಲಾಖೆ ಪೀರನ ಮೇಲೆ ನಿಗಾ ವಹಿಸಬೇಕು.

ಇದನ್ನೂ ಓದಿ: ಉಗ್ರರ ಪರವೆಂದು ಸಾಬೀತಾದ್ರೆ ದೇಶ ತೊರೆಯುವೆ; ಯತ್ನಾಳ್‌ಗೆ ಮುಸ್ಲಿಂ ಧರ್ಮಗುರು ಸವಾಲ್‌

ಕೊಲೆಯಾದವನ ಹೆಂಡತಿ ಬರೆದ ಪತ್ರದಲ್ಲಿ ಏನಿದೆ?

ವಿಜಯಪುರ ಮಹಾನಗರಪಾಲಿಕೆ ಸದಸ್ಯೆಯಾಗಿದ್ದ ನಿಶಾತ ಹೈದರ್‌ ಅವರ ಪತಿ ಹೈದರ್‌ ಅಲಿ ನದಾಫ್‌ ಅವರನ್ನು 2023ರ ಮೇ 6ರಂದು ಕೊಲೆಯಾಗಿತ್ತು. ತನ್ನ ಗಂಡನ ಹಂತಕರು ಜೈಲಿನಿಂದ ಜಾಮೀನು ಮೂಲಕ ಹೊರಗೆ ಬಂದಿದ್ದಾರೆ. ಪ್ರಕರಣದ ಆರೋಪಿಗಳಾದ ಅಸೀಮುಲ್ಲಾ ಖಾದ್ರಿ, ತನ್ವೀರ್‌ ಪೀರಾ ಪಿರಜಾದೆ ಮತ್ತು ರಾಜೀವ್‌ ಪೀರಾ ಪಿರಜಾದೆ ಸಾಕ್ಷ್ಯಗಳನ್ನು ನಾಶ ಮಾಡಲು ಯತ್ನಿಸುತ್ತಿದ್ದಾರೆ ಎಂದು ಪೊಲೀಸ್‌ ಮಹಾನಿರ್ದೇಶಕರಿಗೆ ಬರೆದ ಪತ್ರದಲ್ಲಿ ಆರೋಪಿಸಿದ್ದರು. ಪೀರಜಾದೆಯ ಬೆಂಬಲಿಗರು ತಮ್ಮ ಮೇಲೆ ಹಲ್ಲೆ ಮಾಡಿದ್ದಾಗಿಯೂ ದೂರಿನಲ್ಲಿ ಉಲ್ಲೇಖವಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಮಳೆ

Karnataka Weather : ತೊಯ್ದು ತೊಪ್ಪೆಯಾದ ಪುತ್ತೂರು; ನಾಳೆ ಮಳೆ ಅಬ್ಬರ 17 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌

Rain News : ಹಲವೆಡೆ ಮಳೆಯು ಅಬ್ಬರಿಸುತ್ತಿದೆ. ಸೋಮವಾರ ಪುತ್ತೂರಿನಲ್ಲಿ ಸುರಿದ ಅರ್ಧ ಗಂಟೆ ಮಳೆಗೆ (Karnataka Weather Forecast) ನದಿಯಂತಾಗಿತ್ತು. ಬೆಳಗಾವಿಯಲ್ಲೂ ನಿರಂತರ ಮಳೆಯಾಗಿದ್ದು, ಕೊಡಗಿಗೆ ಎನ್‍ಡಿಆರ್‍ಎಫ್ ತಂಡ ಭೇಟಿ ನೀಡಿದೆ. ಮುಂದಿನ 24 ಗಂಟೆಗಳಲ್ಲಿ ಭಾರಿ ಮಳೆಯಾಗಲಿದ್ದು, 17 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌ (Heavy Rain ) ಘೋಷಣೆ ಮಾಡಲಾಗಿದೆ.

VISTARANEWS.COM


on

By

karnataka weather Forecast Putur rain
ಪುತ್ತೂರಿನಲ್ಲಿ ಮಳೆ ಅಬ್ಬರಕ್ಕೆ ನದಿಯಂತಾದ ರಸ್ತೆಗಳು
Koo

ಮಂಗಳೂರು/ಬೆಂಗಳೂರು: ರಾಜ್ಯಾದ್ಯಂತ ಕಳೆದ ಮೂರು ದಿನಗಳಿಂದ ಭಾರಿ (Heavy Rain) ಮಳೆಯಾಗುತ್ತಿದ್ದು, ಅವಾಂತರವನ್ನೇ ಸೃಷ್ಟಿಸಿದೆ. ಜೂ.4ರಂದು ಗುಡುಗು ಸಹಿತ ಭಾರೀ ಮಳೆಯೊಂದಿಗೆ (Karnataka Weather forecast) ಗಂಟೆಗೆ 40-50 ಕಿ.ಮೀ ವೇಗದಲ್ಲಿ ಗಾಳಿ ಬೀಸಲಿದೆ. ಹೀಗಾಗಿ ದಕ್ಷಿಣ ಕನ್ನಡ, ಉಡುಪಿ, ಬೆಳಗಾವಿ, ಧಾರವಾಡ, ಗದಗ, ಹಾವೇರಿ, ಕೊಪ್ಪಳ, ವಿಜಯಪುರ, ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಿಕ್ಕಮಗಳೂರು, ಹಾಸನ, ಮಂಡ್ಯ, ರಾಮನಗರ, ಶಿವಮೊಗ್ಗ ಮತ್ತು ತುಮಕೂರು ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌ ಘೋಷಣೆ ಮಾಡಲಾಗಿದೆ.

ನದಿಯಂತಾದ ಪುತ್ತೂರಿನ ರಸ್ತೆಗಳು

ಸೋಮವಾರ ಸಂಜೆ ಪುತ್ತೂರಿನಲ್ಲಿ ಗುಡುಗು ಸಿಡಿಲಿನ ಭಾರೀ ಮಳೆಯಾಗಿದೆ. ಮಳೆಯ ಆರ್ಭಟಕ್ಕೆ ಪುತ್ತೂರಿನ ಅಂಗಡಿ ಮುಂಗಟ್ಟುಗಳಿಗೆ ನೀರು ನುಗ್ಗಿತ್ತು. ಪುತ್ತೂರಿನ ದರ್ಬೆಯ ಅಂಗಡಿ ಹಾಗೂ ಕೋರ್ಟ್ ರೋಡ್ ಬಳಿಯ ಜ್ಯುವೆಲ್ಲರಿ ಅಂಗಡಿಗಳು ಜಲಾವೃತಗೊಂಡಿತ್ತು. ಭಾರೀ ಮಳೆಗೆ ಪುತ್ತೂರಿನ ರಸ್ತೆಗಳು ನದಿಯಂತಾಗಿ, ಜನ ಜೀವನ ಅಸ್ತವ್ಯಸ್ತವಾಗಿತ್ತು. ಸರಿಯಾದ ಚರಂಡಿ ವ್ಯವಸ್ಥೆ ಇಲ್ಲದೇ ಇರುವುದೆ ಈ ಅವಾಂತರಕ್ಕೆ ಕಾರಣ ಎಂದು ಕಿಡಿಕಾರಿದರು.

karnataka weather Forecast

ಬೆಳಗಾವಿಯಲ್ಲೂ ಧಾರಾಕಾರ ಮಳೆ

ಬೆಳಗಾವಿಯಲ್ಲಿ ಸುರಿದ ಧಾರಾಕಾರ ಮಳೆಗೆ ಜನಜೀವನ ಅಸ್ತವ್ಯಸ್ತವಾಗಿತ್ತು. ಬೆಳಗಾವಿ ನಗರ ಸೇರಿ ಜಿಲ್ಲೆಯ ಹಲವಡೆ ಭಾರಿ ಮಳೆಗೆ ಬೀದಿ ಬದಿ ವ್ಯಾಪಾರಸ್ಥರು ಹೈರಾಣಾದರಿ. ಕಳೆದ ಹಲವು ದಿನಗಳಿಂದ ಬಿಸಿಲಿಗೆ ತತ್ತರಿಸಿದ ಜನಕ್ಕೆ ವರುಣ ತಂಪೆರೆದಿದ್ದಾನೆ.

ಇದನ್ನೂ ಓದಿ: Snake Rescue: ಮಳೆ ನೀರಿನಲ್ಲಿ ಹರಿದು ಬಂದು ಬೈಕ್‌ನಲ್ಲಿ ಸೇರಿಕೊಂಡ ಹಾವು; ಮನೆಗಳಲ್ಲೂ ಪ್ರತ್ಯಕ್ಷ

ಕೊಡಗಿಗೆ ಎನ್‍ಡಿಆರ್‍ಎಫ್ ತಂಡ ಭೇಟಿ

ಮುಂಗಾರು ಸಂದರ್ಭದಲ್ಲಿ ಸಂಭವಿಸಬಹುದಾದ ಪ್ರಾಕೃತಿಕ ವಿಕೋಪವನ್ನು ಎದುರಿಸುವಲ್ಲಿ ಅಗತ್ಯ ಮುನ್ನೆಚ್ಚರಿಕೆಯನ್ನು ವಹಿಸುವ ಸಂಬಂಧ ಈಗಾಗಲೇ ಎನ್‍ಡಿಆರ್‍ಎಫ್ ತಂಡ ಆಗಮಿಸಿದೆ. ಈ ಹಿನ್ನೆಲೆಯಲ್ಲಿ ಎನ್‌ಡಿಆರ್‌ಎಫ್‌ ತಂಡವು ಸೋಮವಾರ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರನ್ನು ಭೇಟಿ ಆಗಿದೆ. ಈ ವೇಳೆ ಎನ್‍ಡಿಆರ್‍ಎಫ್‍ನ ಅಜಯ್ ಕುಮಾರ್ ನೇತೃತ್ವದ ತಂಡವು ಜಿಲ್ಲಾಧಿಕಾರಿ ಜತೆಗೆ ಮಳೆಗಾಲದಲ್ಲಿ ಅನುಸರಿಸಬೇಕಾದ ಕಾರ್ಯ ಚಟುವಟಿಕೆ ಬಗ್ಗೆ ಚರ್ಚಿಸಿದರು.

karnataka weather Forecast

ಬಳಿಕ ಜಿಲ್ಲಾಧಿಕಾರಿ ವೆಂಕಟ್ ರಾಜಾ ಅವರು ಮಾತನಾಡಿ, ಮಳೆ ಸಂಬಂಧ ಹವಾಮಾನ ಇಲಾಖೆಯಿಂದ ಕಾಲಕಾಲಕ್ಕೆ ಬಿಡುಗಡೆ ಆಗುವ ಮಾಹಿತಿಯನ್ನು ಅಪ್‍ಡೇಟ್ ಮಾಡಲಾಗುತ್ತದೆ. ಆ ನಿಟ್ಟಿನಲ್ಲಿ ಪ್ರವಾಹ ಪೀಡಿತ ಪ್ರದೇಶಗಳಲ್ಲಿ ಎಚ್ಚರವಹಿಸಿ, ರಕ್ಷಣಾ ಕಾರ್ಯಗಳನ್ನು ಕೈಗೊಳ್ಳಬೇಕು ಎಂದರು. ಇದೇ ವೇಳೆ ಜಿಲ್ಲಾ ವಿಪತ್ತು ನಿರ್ವಹಣಾ ಪರಿಣತರಾದ ಅನನ್ಯ ವಾಸುದೇವ, ಎನ್‍ಡಿಆರ್‍ಎಫ್ ತಂಡ ಪ್ರಮುಖರು ಇದ್ದರು. ಎನ್‍ಡಿಆರ್‍ಎಫ್ ತಂಡವು ಬೆಂಗಳೂರಿನ ಆರ್‍ಆರ್‍ಸಿ ವಿಭಾಗದಿಂದ ಆಗಮಿಸಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಪ್ರಮುಖ ಸುದ್ದಿ

Bangalore Rain: ರಾಜಕಾಲುವೆ ಒತ್ತುವರಿ; ಮುಲಾಜಿಲ್ಲದೆ ತೆರವು ಮಾಡಲು ಡಿಕೆಶಿ ಸೂಚನೆ

Bangalore Rain: ಬೆಂಗಳೂರಿನಲ್ಲಿ ಭಾರಿ ಮಳೆ ಹಿನ್ನೆಲೆಯಲ್ಲಿ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು ಬಿಬಿಎಂಪಿ, ಬೆಸ್ಕಾಂ, ಜಲಮಂಡಳಿ ಹಾಗೂ ಅಗ್ನಿಶಾಮಕ ಇಲಾಖೆ ಅಧಿಕಾರಿಗಳ ಸಭೆ ನಡೆಸಿದರು. ಮಳೆ ಹಾನಿ ನಿರ್ವಹಣೆಗೆ ಎಲ್ಲ ಇಲಾಖೆಗಳು ಸಮನ್ವಯದಿಂದ ಕೆಲಸ ಮಾಡಬೇಕು ಎಂದು ಸೂಚಿಸಿದ್ದಾರೆ.

VISTARANEWS.COM


on

Bangalore Rain
Koo

ಬೆಂಗಳೂರು: ರಾಜಧಾನಿಯಲ್ಲಿ ಮಳೆ ಅವಾಂತರ (Bangalore Rain) ಹಿನ್ನೆಲೆಯಲ್ಲಿ ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಡಿಸಿಎಂ, ಬೆಂಗಳೂರು ನಗರಾಭಿವೃದ್ಧಿ ಸಚಿವ ಡಿ.ಕೆ. ಶಿವಕುಮಾರ್ ಅವರು ಸೋಮವಾರ ಅಧಿಕಾರಿಗಳ ಸಭೆ ನಡೆಸಿದರು. ಈ ವೇಳೆ ಬಿಬಿಎಂಪಿ, ಬೆಸ್ಕಾಂ, ಜಲಮಂಡಳಿ ಹಾಗೂ ಅಗ್ನಿಶಾಮಕ ಇಲಾಖೆ ಅಧಿಕಾರಿಗಳು ಒಗ್ಗೂಡಿ ಮಳೆ ಹಾನಿ ನಿರ್ವಹಣೆ ಮಾಡಬೇಕು. ರಾಜಕಾಲುವೆ ಸರ್ಕಾರದ ಜಾಗ, ಒತ್ತುವರಿಯಾಗಿದ್ದರೆ ಮುಲಾಜಿಲ್ಲದೆ ತೆರವು ಮಾಡಿ ಎಂದು ಅಧಿಕಾರಿಗಳಿಗೆ ಡಿಸಿಎಂ ಡಿ.ಕೆ.ಶಿವಕುಮಾರ್‌ ಸೂಚಿಸಿದ್ದಾರೆ.

ವಿಧಾನಸೌಧದಲ್ಲಿ ಅಧಿಕಾರಿಗಳ ಸಭೆ ಬಳಿಕ ಮಾತನಾಡಿದ ಡಿಸಿಎಂ ಡಿ.ಕೆ. ಶಿವಕುಮಾರ್‌ ಅವರು, ಬೆಂಗಳೂರಿನಲ್ಲಿ 133 ವರ್ಷದ ನಂತರ ಭಾರಿ ಮಳೆಯಾಗಿದೆ. 261 ವಿದ್ಯುತ್ ಕಂಬಗಳು ಉರುಳಿದ್ದು, ಮೂವರಿಗೆ ಗಾಯಗಳಾಗಿವೆ. ನೆಲಕ್ಕುರುಳಿದ 96 ಮರಗಳನ್ನು ತೆರವು ಮಾಡಿದ್ದು, ನಾನೇ ಖುದ್ದು ಪರಿಶೀಲನೆ ಮಾಡಿದ್ದೇನೆ. ಮಳೆ ಹಾನಿ ಬಗ್ಗೆ 695 ದೂರುಗಳು ಬಂದಿವೆ. ಬಿಬಿಎಂಪಿ, ಜಲಮಂಡಳಿ, ಬೆಸ್ಕಾಂ ಎಲ್ಲರೂ ಒಟ್ಟಾಗಿ ಮಳೆ ಹಾನಿ ನಿರ್ವಹಣೆ ಮಾಡಬೇಕು ಎಂದು ಸೂಚಿಸಲಾಗಿದೆ. ರಾಜಕಾಲುವೆ ಒತ್ತುವರಿಯಾಗಿದ್ದರೆ ಮುಲಾಜಿಲ್ಲದೆ ತೆರವು ಮಾಡಲು ಅಧಿಕಾರಿಗಳಿಗೆ ಹೇಳಿರುವುದಾಗಿ ತಿಳಿಸಿದ್ದಾರೆ.

ಹಳೆಯ ಕಟ್ಟಡಗಳು ಬೀಳದಂತೆ ನೋಡಿಕೊಳ್ಳಬೇಕು. ಶಿಥಿಲಾವಸ್ಥೆ ಇರುವ ಕಟ್ಟಡಗಳನ್ನು ತೆರವು ಮಾಡಬೇಕು. ಒಣಗಿರುವ ಮರಗಳನ್ನು ಸಹ ಗುರುತಿಸಿ ತೆಗೆದು ಹಾಕಬೇಕು. ಪ್ರತಿ ವಾರ್ಟ್‌ನಲ್ಲಿ ಮೋಟಾರ್ ಪಂಪ್‌ ಇಟ್ಟುಕೊಂಡು ನೀರು ತೆರವು ಮಾಡಬೇಕು. ಇದಕ್ಕೆ ದೊಡ್ಡ ಟೀಂ ಮಾಡಿ ಅಂತ ಹೇಳಿದ್ದೇನೆ. ವಿಶೇಷವಾಗಿ ಮಹದೇವಪುರ ವ್ಯಾಪ್ತಿಯಲ್ಲಿ ಸಮಸ್ಯೆ ಇದೆ. ಎನ್‌ಡಿಆರ್‌ಎಫ್‌ ಟೀಂ ಜತೆ ಟಚ್‌ನಲ್ಲಿ ಇರಬೇಕು. ಇನ್ನು ಮುಂದಿನ 24 ಗಂಟೆಗಳಲ್ಲಿ ದೊಡ್ಡ ಮಟ್ಟದ ಮಳೆ ಆಗುವ ಸಂಭವ ಇದೆ ಹೀಗಾಗಿ ಎಲ್ಲರೂ 24/7 ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.

ಯಾವುದೇ ಕಾರಣಕ್ಕೂ ಆಸ್ತಿ ಪಾಸ್ತಿ ಹಾನಿ, ಪ್ರಾಣಾಪಾಯ ಆಗಬಾರದು. ಮೆಟ್ರೋ ಹಳಿ ಮೇಲೆ ಮರ ಬಿದ್ದು ಹೋಗಿತ್ತು, ಈಗ ಸರಿಯಾಗಿದೆ. ಹೀಗಾಗಿ 1533 ಸಂಖ್ಯೆಗೆ ಕರೆ ಮಾಡಿ ಜನರು ಸಮಸ್ಯೆ ಹೇಳಿಕೊಳ್ಳಬಹುದು ಎಂದು ತಿಳಿಸಿದರು.

ಇದನ್ನೂ ಓದಿ | Karnataka Rain : 133 ವರ್ಷದ ರೆಕಾರ್ಡ್ ಬ್ರೇಕ್ ಮಾಡಿದ ʻಬೆಂಗಳೂರು ಮಳೆʼ

‌ಬಿಬಿಎಂಪಿ ಚುನಾವಣೆ ಬಗ್ಗೆ ಪ್ರತಿಕ್ರಿಯಿಸಿ, ಕಾರ್ಪೊರೇಟರ್ ಏನು ಕೆಲಸ ಮಾಡುತ್ತಾರೆ. ಜನ ಸೇವೆ ಅಂದಾಗ ಎಲ್ಲರೂ ಕೆಲಸ ಮಾಡುತ್ತಾರೆ. ಪ್ರಜಾಪ್ರಭುತ್ವದಲ್ಲಿ ಪಂಚಾಯತ್‌ನಿಂದ ಪಾರ್ಲಿಮೆಂಟ್‌ವರೆಗೂ ಜನಪ್ರತಿನಿಧಿ ಬೇಕು. ಪಾರ್ಲಿಮೆಂಟ್ ಚುನಾವಣೆ ಮುಗಿಯಲಿ, ಎಲ್ಲ ರೆಡಿ‌ ಮಾಡೋಣ, ಚುನಾವಣೆಗೆ ಶುಭ ಮುಹೂರ್ತ ಫಿಕ್ಸ್ ಮಾಡೋಣ ಎಂದು ಹೇಳಿದರು.

ಮಳೆ ಹಾನಿ ಬಗ್ಗೆ ಬೆಸ್ಕಾಂಗೆ ದೂರುಗಳ ಸುರಿಮಳೆ; 133 ವರ್ಷಗಳ ರೆಕಾರ್ಡ್ ಬ್ರೇಕ್ ಮಾಡಿದ ನೆನ್ನೆಯ ಮಳೆ!

Bangalore Rain

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಭಾನುವಾರ ತಡರಾತ್ರಿ ಸುರಿದ ಧಾರಾಕಾರ ಮಳೆಯು (Bangalore Rain) ಸಾಕಷ್ಟು ಅವಾಂತರ ಸೃಷ್ಟಿಸಿದೆ. ಹೀಗಾಗಿ ಬೆಸ್ಕಾಂ ಹೆಲ್ಪ್ ಲೈನ್‌ 1912ಗೆ ದೂರುಗಳ ಸುರಿಮಳೆಯೇ ಬಂದಿದ್ದು, ವಿದ್ಯುತ್‌ ಕಂಬಗಳು ಉರುಳಿರುವುದು, ಮರಗಳು ಬಿದ್ದಿರುವುದು, ವಿದ್ಯುತ್‌ ಕಡಿತ ಸೇರಿ ಹಲವು ಸಮಸ್ಯೆಗಳ ಬಗ್ಗೆ ಬರೋಬ್ಬರಿ 8745 ದೂರುಗಳು ದಾಖಲಾಗಿವೆ. ಮತ್ತೊಂದೆಡೆ ಬೆಂಗಳೂರಿನಲ್ಲಿ ಭಾನುವಾರ (ಜೂ.2) ಸುರಿದ ಮಳೆಯು (Heavy Rain) 133 ವರ್ಷಗಳ ರೆಕಾರ್ಡ್ ಬ್ರೇಕ್ ಮಾಡಿರುವುದು ಕಂಡುಬಂದಿದೆ.

ಧಾರಕಾರ ಮಳೆ ಹಿನ್ನೆಲೆಯಲ್ಲಿ ಅತಿ ಹೆಚ್ಚಿನ ದೂರುಗಳು ಬಂದಿದ್ದು, ಬೆಸ್ಕಾಂ ವ್ಯಾಪ್ತಿಯಲ್ಲಿ 74 ವಿದ್ಯುತ್ ಕಂಬಗಳು ಧರೆಗುರುಳಿದ್ದು, 102 ವಿದ್ಯುತ್ ಕಂಬಗಳ ಮೇಲೆ ಮರಗಳು ಬಿದ್ದಿವೆ. ಇನ್ನು 9 ಟ್ರಾನ್ಸ್‌ಫಾರ್ಮರ್‌ಗಳಿಗೆ ಮಳೆಯಿಂದ ಹಾನಿಯಾಗಿದೆ. ಭಾರಿ ಮಳೆಗೆ ಬೆಸ್ಕಾಂ ತತ್ತರಿಸಿದ್ದು, ತಡರಾತ್ರಿ ಸುರಿದ ಮಳೆಯಿಂದ ಬೆಸ್ಕಾಂಗೆ ಕೋಟ್ಯಂತರ ರೂ. ನಷ್ಟವಾಗಿದೆ.

ಬೆಂಗಳೂರಿನಲ್ಲಿ ಭಾನುವಾರ 111.2 ಮಿ.ಮೀ ಮಳೆ

ಬೆಂಗಳೂರಿನಲ್ಲಿ ಭಾನುವಾರ ಸಂಜೆ ಸುರಿದ ಮಳೆಯು 133 ವರ್ಷಗಳ ದಾಖಲೆಯನ್ನು ಮುರಿದಿದೆ. ರಾಜಧಾನಿಯಲ್ಲಿ ಮೇ 2ರಂದು 111.2 ಮಿ.ಮೀ ಮಳೆ ಸುರಿದಿದ್ದು, ಜೂನ್ ತಿಂಗಳಲ್ಲಿ ಆದ ದಾಖಲೆಯ ಮಳೆ ಇದಾಗಿದೆ. 1891 ಜೂನ್ 16 ರಂದು 101.6 ಮಿ.ಮೀ ಮಳೆಯಾಗಿತ್ತು. ಆದರೆ, ನೆನ್ನೆ ಸುರಿದ ಜೂನ್ ತಿಂಗಳ ಮಳೆ 133 ವರ್ಷಗಳ ದಾಖಲೆ ಮುರಿದಿದೆ ಎಂದು ವಿಸ್ತಾರನ್ಯೂಸ್‌ಗೆ ಹವಾಮಾನ ಇಲಾಖೆ ಮಾಹಿತಿ ನೀಡಿದೆ.

ಇದನ್ನೂ ಓದಿ: Karnataka Weather : ಬೆಂಗಳೂರಿಗೆ ಆವರಿಸಿದ ಮುಂಗಾರು; ಹಲವೆಡೆ ಇಂದು ಗಾಳಿಯೊಂದಿಗೆ ಭಯಂಕರ ಮಳೆ

1891 ಜೂನ್ 16 ರಂದು 101.6 ಮಿ.ಮೀ ಮಳೆಯಾಗಿತ್ತು. 2013 ಜೂನ್ 1 ರಂದು 100 ಮಿ.ಮೀ ಮಳೆ ಹಾಗೂ 2009 ಜೂನ್ 11 ರಂದು 89.6 ಮಿ.ಮೀ ಮಳೆಯಾಗಿತ್ತು.

Continue Reading

ಧಾರವಾಡ

Dharwad Lok Sabha Constituency: ಜೋಶಿ vs ಅಸೂಟಿ; ಯಾವ ಅಭ್ಯರ್ಥಿಗೆ ಧಾರವಾಡ ಪೇಡಾ?

Dharwad Lok Sabha Constituency: ಧಾರವಾಡ ಲೋಕಸಭೆ ಕ್ಷೇತ್ರದಲ್ಲಿ ಪ್ರಲ್ಹಾದ್‌ ಜೋಶಿ ಅವರು ಸತತ ನಾಲ್ಕು ಬಾರಿ ಗೆಲುವು ಸಾಧಿಸಿ, ಐದನೇ ಬಾರಿಗೆ ಬಿಜೆಪಿಯಿಂದ ಕಣಕ್ಕಿಳಿದಿದ್ದಾರೆ. ಇವರಿಗೆ ಹೊಸಮುಖವಾದ ಆನಂದ್‌ ಅಸೂಟಿ ಅವರು ಕಾಂಗ್ರೆಸ್‌ನಿಂದ ಸ್ಪರ್ಧೆಯೊಡ್ಡಿದ್ದಾರೆ. ತೀವ್ರ ಪೈಪೋಟಿ, ಪ್ರತಿಷ್ಠೆಯ ಕಣವಾದಲ್ಲಿ ಧಾರವಾಡದಲ್ಲಿ ಯಾರು ಗೆಲುವು ಸಾಧಿಸಲಿದ್ದಾರೆ ಎಂಬ ಕುತೂಹಲ ಹೆಚ್ಚಾಗಿದೆ.

VISTARANEWS.COM


on

Dharwad Lok Sabha Constituency
Koo

ಧಾರವಾಡ: ಪೇಡಾಗಳಿಗೆ ಹೆಸರುವಾಸಿಯಾಗಿರುವ ಧಾರವಾಡ ಲೋಕಸಭೆ ಕ್ಷೇತ್ರದಲ್ಲಿ (Dharwad Lok Sabha Constituency) ಸತತ ನಾಲ್ಕು ಚುನಾವಣೆಗಳಲ್ಲಿ ಗೆಲುವು ಸಾಧಿಸಿ, ಐದನೇ ಬಾರಿಗೆ ಗೆದ್ದು ದಾಖಲೆ ಸೃಷ್ಟಿಸಲು ಹಂಬಲಿಸುತ್ತಿರುವ ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ (Pralhad Joshi) ಅವರಿಗೆ ಕ್ಷೇತ್ರದಲ್ಲಿ ಕಾಂಗ್ರೆಸ್‌ನ ಆನಂದ್‌ ಅಸೂಟಿ (Anand Asooti) ಅವರು ಸವಾಲೊಡ್ಡಿದ್ದಾರೆ. ಹಾಗಾಗಿ, ಈ ಬಾರಿ ಧಾರವಾಡ ಕ್ಷೇತ್ರದಲ್ಲಿ ಜಿದ್ದಾಜಿದ್ದಿನ ಕದನ ಏರ್ಪಟ್ಟಿದ್ದು, ವಿಜಯದ ಮಾಲೆ ಯಾರ ಕೊರಳಿಗೆ ಎಂಬ ಕುತೂಹಲ ಹೆಚ್ಚಾಗಿದೆ.

ಪ್ರಧಾನಿ ನರೇಂದ್ರ ಮೋದಿ ಅವರ ಅಲೆ, ಧಾರವಾಡ ಕ್ಷೇತ್ರದಲ್ಲಿ ಪ್ರಬಲ ಸಮುದಾಯಗಳ ಬೆಂಬಲ, ಕೇಂದ್ರ ಸಚಿವರಾಗಿ ಕ್ಷೇತ್ರಕ್ಕೆ ತಂದಿರುವ ಅಭಿವೃದ್ಧಿ ಯೋಜನೆಗಳು, ವಂದೇ ಭಾರತ್‌ ರೈಲು ಸೇರಿ ಹಲವು ಮೂಲ ಸೌಕರ್ಯಗಳು ಪ್ರಲ್ಹಾದ್‌ ಜೋಶಿ ಅವರಿಗೆ ವರದಾನವಾಗುವ ಲಕ್ಷಣಗಳಿವೆ. ಕಳೆದ ನಾಲ್ಕು ಬಾರಿ ಗೆದ್ದು, ಕ್ಷೇತ್ರದ ಜನರ ಬೆಂಬಲ, ವಿಶ್ವಾಸ ಗಳಿಸಿರುವ ಪ್ರಲ್ಹಾದ್‌ ಜೋಶಿ ಅವರು ಸತತ ಐದನೇ ಬಾರಿಗೆ ಜಯಿಸುವ ವಿಶ್ವಾಸದಲ್ಲಿದ್ದಾರೆ. ‌

Pralhad Joshi

ಗದಗ ಜಿಲ್ಲೆ ಶಿರಹಟ್ಟಿಯ ಭಾವೈಕ್ಯ ಪೀಠದ ದಿಂಗಾಲೇಶ್ವರ ಸ್ವಾಮೀಜಿ ಅವರ ವಿರೋಧದಿಂದಾಗಿ ಪ್ರಲ್ಹಾದ್‌ ಜೋಶಿ ಅವರಿಗೆ ತುಸು ಹಿನ್ನಡೆಯುಂಟಾಗಿತ್ತು. ಪಕ್ಷೇತರರಾಗಿ ದಿಂಗಾಲೇಶ್ವರ ಸ್ವಾಮೀಜಿ ಅವರು ಕಣಕ್ಕೂ ಇಳಿದಿದ್ದರು. ಆದರೆ, ಕೊನೆಯ ಕ್ಷಣದಲ್ಲಿ ಅವರು ಚುನಾವಣೆಯಿಂದ ಹಿಂದೆ ಸರಿದರೂ ಅವರ ಬೆಂಬಲವು ಕಾಂಗ್ರೆಸ್‌ ಅಭ್ಯರ್ಥಿಗಿದೆ. ಇದು ಜೋಶಿ ಅವರಿಗೆ ಹಿನ್ನಡೆ ತಂದರೂ ಅಚ್ಚರಿ ಇಲ್ಲ ಎನ್ನಲಾಗುತ್ತಿದೆ.

ಖಾತೆ ತೆರೆಯುವರೇ ಆನಂದ್?

2018ರಲ್ಲಿ ನವಲಗುಂದ ವಿಧಾನಸಭೆ ಕ್ಷೇತ್ರದಲ್ಲಿ ಸ್ಪರ್ಧಿಸಿ ಸೋಲನುಭವಿಸಿದ್ದ ಆನಂದ್‌ ಅಸೂಟಿಯವರು ಮೊದಲ ಬಾರಿಗೆ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿದ್ದಾರೆ. ಈ ಬಾರಿ ಕಾಂಗ್ರೆಸ್‌ ಲಿಂಗಾಯತರ ಬದಲು ಕುರುಬ ಸಮುದಾಯದ ಆನಂದ್‌ ಅಸೂಟಿ ಅವರಿಗೆ ಟಿಕೆಟ್‌ ನೀಡಿದೆ. ಇದು ಕ್ಷೇತ್ರದಲ್ಲಿ ಹಿಂದುಳಿದವರ ಮತ ಸೆಳೆಯಲು ಕಾರಣವಾಗಲಿದೆ ಎಂಬುದು ಪಕ್ಷದ ರಣತಂತ್ರವಾಗಿದೆ. ಗ್ಯಾರಂಟಿ ಯೋಜನೆಗಳಂತೂ ಸಕಾರಾತ್ಮಕ ಪ್ರಭಾವವನ್ನೇ ಬೀರಿವೆ.

2019, 2014ರ ಫಲಿತಾಂಶ ಏನಾಗಿತ್ತು?

2019ರ ಲೋಕಸಭೆ ಚುನಾವಣೆಯಲ್ಲಿ ಪ್ರಲ್ಹಾದ್‌ ಜೋಶಿ ಅವರು ಕಾಂಗ್ರೆಸ್‌ನ ವಿನಯ್‌ ಕುಲಕರ್ಣಿ ಅವರ ವಿರುದ್ಧ 2.05 ಲಕ್ಷ ಮತಗಳ ಅಂತರದಿಂದ ಭರ್ಜರಿ ಗೆಲುವು ಸಾಧಿಸಿದ್ದರು. 2014ರ ಸಾರ್ವತ್ರಿಕ ಚುನಾವಣೆಯಲ್ಲೂ ಪ್ರಲ್ಹಾದ್‌ ಜೋಶಿ ಅವರೇ ಜಯಿಸಿದ್ದರು. ಇವರು ವಿನಯ್‌ ಕುಲಕರ್ಣಿ ಅವರ ವಿರುದ್ಧ 1 ಲಕ್ಷಕ್ಕೂ ಅಧಿಕ ಮತಗಳ ಅಂತರಗಿಂದ ಜಯಭೇರಿ ಬಾರಿಸುವ ಮೂಲಕ ಕ್ಷೇತ್ರದಲ್ಲಿ ಬಿಜೆಪಿ ಹಿಡಿತವನ್ನು ಮತ್ತಷ್ಟು ಬಿಗಿಗೊಳಿಸಿದ್ದರು. ನರೇಂದ್ರ ಮೋದಿ ಅವರ ಅಲೆಯೂ ಪ್ರಲ್ಹಾದ್‌ ಜೋಶಿ ಅವರಿಗೆ ವರದಾನವಾಗಿತ್ತು.

ಇದನ್ನೂ ಓದಿ: Haveri Lok Sabha Constituency: ಹಾವೇರಿಯಲ್ಲಿ ಅನುಭವಿ vs ಉತ್ಸಾಹಿ; ಯಾರಿಗೆ ಜಯದ ಮಾಲೆ?

Continue Reading

ವಿಜಯಪುರ

Vijaypur Lok Sabha Constituency: ವಿಜಯಪುರದಲ್ಲಿ ಅಧಿಕಾರದ ‘ಗೋಲ ಗುಮ್ಮಟ’ ಯಾರಿಗೆ?

Vijaypur Lok Sabha Constituency: ಪರಿಶಿಷ್ಟ ಜಾತಿಗೆ ಮೀಸಲಾಗಿರುವ ವಿಜಯಪುರ ಲೋಕಸಭೆ ಕ್ಷೇತ್ರದಲ್ಲಿ ನಾಲ್ಕನೇ ಬಾರಿಗೆ ವಿಜಯ ಪತಾಕೆ ಹಾರಿಸಲು ರಮೇಶ್‌ ಜಿಗಜಿಣಗಿ ಸಜ್ಜಾಗಿದ್ದಾರೆ. ಇವರಿಗೆ ಪ್ರಬಲ ಬಲಗೈ ಸಮಾಜದ ಮುಖಂಡ ಪ್ರೊ. ರಾಜು ಆಲಗೂರ ಅವರು ಸೆಡ್ಡು ಹೊಡೆದಿದ್ದು, ಗೆಲುವು ಯಾರಿಗೆ ಸಿಗಲಿದೆ ಎಂಬುದಕ್ಕೆ ಇನ್ನೂ ಕೆಲವು ಗಂಟೆ ಕಾಯಲಬೇಕಿದೆ. ಕ್ಷೇತ್ರದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್‌ ಮಧ್ಯೆ ನೇರ ಪೈಪೋಟಿ ಏರ್ಪಟ್ಟಿತ್ತು.

VISTARANEWS.COM


on

Vijaypur Lok Sabha Constituency
Koo

ವಿಜಯಪುರ: ಗುಮ್ಮಟಗಳಿಗೆ ಪ್ರಸಿದ್ಧವಾದ ವಿಜಯಪುರ ಲೋಕಸಭೆ ಕ್ಷೇತ್ರದಲ್ಲಿ ಕಳೆದ ಬಾರಿಯಂತೆ ಈ ಬಾರಿಯೂ ಬಿಜೆಪಿ ಹಾಗೂ ಕಾಂಗ್ರೆಸ್‌ ಮಧ್ಯೆ ನೇರ ಪೈಪೋಟಿ ಎದುರಾಗಿದೆ. ಪರಿಶಿಷ್ಟ ಜಾತಿಗೆ ಮೀಸಲಾಗಿರುವ ಕ್ಷೇತ್ರದಲ್ಲಿ (Vijaypur Lok Sabha Constituency) ಬಿಜೆಪಿಯಿಂದ ಸತತ ನಾಲ್ಕನೇ ಬಾರಿಗೆ ರಮೇಶ್‌ ಜಿಗಜಿಣಗಿ (Ramesh Jigajinagi) ಕಣಕ್ಕಿಳಿದಿದ್ದರೆ, ಪ್ರಯೋಗಕ್ಕೆ ಮುಂದಾಗಿರುವ ಕಾಂಗ್ರೆಸ್‌, ಬಲಗೈ ಸಮಾಜದ ಪ್ರೊ.ರಾಜು ಆಲಗೂರ (Raju Algur) ಅವರನ್ನು ಕಣಕ್ಕಿಳಿಸಿದೆ. ಹಾಗಾಗಿ, ವಿಜಯಪುರ ಲೋಕಸಭೆ ಕ್ಷೇತ್ರದಲ್ಲಿ ಯಾರು ಗೆಲುವಿನ ಮಾಲೆಗೆ ಕೊರಳೊಡ್ಡಲಿದ್ದಾರೆ ಎಂಬ ಕುತೂಹಲ ಜಾಸ್ತಿಯಾಗಿದೆ.

ಜಿಗಜಿಣಗಿಗೆ ತೀವ್ರ ಪೈಪೋಟಿ

ರಮೇಶ್‌ ಜಿಗಜಿಣಗಿ ಅವರು ಕಳೆದ ಮೂರು ಚುನಾವಣೆಗಳಲ್ಲಿ ಗೆಲುವು ಸಾಧಿಸಿ ವಿಜಯಪುರ ಕ್ಷೇತ್ರದ ಜನರ ನಾಡಿಮಿಡಿತವನ್ನು ಅರಿತಿದ್ದಾರೆ. ಸುಮಾರು 1 ಲಕ್ಷ ಕೋಟಿ ರೂ. ಮೌಲ್ಯದ ಯೋಜನೆಗಳನ್ನು ಕ್ಷೇತ್ರಕ್ಕೆ ತಂದಿದ್ದೇನೆ ಎಂಬುದಾಗಿ ಹೇಳುತ್ತ ಪ್ರಚಾರ ಮಾಡಿರುವ ಅವರಿಗೆ ಕ್ಷೇತ್ರದಲ್ಲಿ ಲಿಂಗಾಯತ ಸಮುದಾಯದವರ ಮತಗಳ ಬೆಂಬಲ ಇದೆ. ನರೇಂದ್ರ ಮೋದಿ ಅವರ ಅಲೆ, ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಅವರೊಂದಿಗಿನ ಮುನಿಸು ಶಮನವಾಗಿರುವುದು ರಮೇಶ್‌ ಜಿಗಜಿಣಗಿ ಅವರಿಗೆ ಪ್ಲಸ್‌ ಪಾಯಿಂಟ್‌ ಆಗಿದೆ.

Mp Ramesh Jigajinagi

ಆದರೆ, ಸತತ ಮೂರು ಬಾರಿ ಇವರೇ ಸಂಸದರಾಗಿದ್ದು, ಕ್ಷೇತ್ರದ ಪರವಾಗಿ ಸಂಸತ್ತಿನಲ್ಲಿ ಧ್ವನಿ ಎತ್ತಿಲ್ಲ ಎಂಬ ಕೊರಗು ಜನರಲ್ಲಿದೆ. ಆಡಳಿತ ವಿರೋಧಿ ಅಲೆಯೂ ತುಸು ಹೆಚ್ಚೇ ಇದೆ. ಅವರು ಇದೇ ನನ್ನ ಕೊನೆಯ ಚುನಾವಣೆ ಎಂದು ಹೇಳಿ ಅನುಕಂಪ ಗಿಟ್ಟಿಸಿಕೊಳ್ಳಲು ಮುಂದಾಗಿದ್ದು ಕೂಡ ಅಸಮಾಧಾನಕ್ಕೆ ಕಾರಣವಾಗಿದೆ ಎನ್ನಲಾಗಿದೆ. ಕಳೆದ ಬಾರಿಗಿಂತ ಈ ಬಾರಿ ಕ್ಷೇತ್ರದಲ್ಲಿ ಕಾಂಗ್ರೆಸ್‌ ಬಲಿಷ್ಠವಾಗಿರುವುದೂ ಜಿಗಜಿಣಗಿ ಅವರಿಗೆ ಹಿನ್ನಡೆ ತರಲಿದೆ ಎಂದೇ ಹೇಳಲಾಗುತ್ತಿದೆ.

ಫಲ ಕೊಡುವುದೇ ಕಾಂಗ್ರೆಸ್‌ ಪ್ರಯೋಗ?

ಕಳೆದ ಮೂರು ಚುನಾವಣೆಗಳಲ್ಲೂ ಬಂಜಾರ ಸಮುದಾಯದ ಅಭ್ಯರ್ಥಿಗೆ ಟಿಕೆಟ್‌ ನೀಡಿದ್ದ ಕಾಂಗ್ರೆಸ್‌ ಈ ಬಾರಿ ಬಲಗೈ ಸಮಾಜದ ಪ್ರೊ. ರಾಜು ಆಲಗೂರ ಅವರಿಗೆ ಟಿಕೆಟ್‌ ನೀಡುವ ಮೂಲಕ ಹೊಸ ಪ್ರಯೋಗಕ್ಕೆ ಮುಂದಾಗಿದೆ. ಕ್ಷೇತ್ರದಲ್ಲಿರುವ ಆಡಳಿತ ವಿರೋಧಿ ಅಲೆಯನ್ನು ಸಮರ್ಥವಾಗಿ ಬಳಸಿಕೊಂಡಿರುವ ರಾಜು ಆಲಗೂರ ಅವರಿಗೆ ಸಚಿವ ಎಂ.ಬಿ.ಪಾಟೀಲ್‌ ಅವರ ಬೆಂಬಲ, ಸಹಕಾರ ಇದೆ. ಗ್ಯಾರಂಟಿ ಯೋಜನೆಗಳನ್ನೂ ಕ್ಷೇತ್ರದ ಜನ ಮೆಚ್ಚಿಕೊಂಡಿದ್ದಾರೆ. ಹಾಗಾಗಿ, ಚುನಾವಣೆ ಫಲಿತಾಂಶವು ಹೆಚ್ಚಿನ ಕುತೂಹಲ ಕೆರಳಿಸಿದೆ.

2019, 2014ರ ಫಲಿತಾಂಶ

2019ರ ಸಾರ್ವತ್ರಿಕ ಚುನಾವಣೆಯಲ್ಲಿ ಬಿಜೆಪಿಯ ರಮೇಶ್‌ ಜಿಗಜಿಣಗಿ ಅವರು ವಿಜಯಪುರ ಲೋಕಸಭೆ ಕ್ಷೇತ್ರದಲ್ಲಿ ಗೆಲುವು ಸಾಧಿಸಿದ್ದರು. ಇವರು ತಮ್ಮ ಪ್ರತಿಸ್ಪರ್ಧಿ ಸುನೀತಾ ದೇವಾನಂದ ಚೌಹಾಣ್‌ ಅವರ ವಿರುದ್ಧ 2.58 ಲಕ್ಷ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು. 2014ರ ಲೋಕಸಭೆ ಚುನಾವಣೆಯು ತೀವ್ರ ಜಿದ್ದಾಜಿದ್ದಿನಿಂದ ಕೂಡಿತ್ತು. ಆದರೂ, ರಮೇಶ್‌ ಜಿಗಜಿಣಗಿ ಅವರು ಕಾಂಗ್ರೆಸ್‌ನ ಪ್ರಕಾಶ್‌ ರಾಥೋಡ್‌ ಅವರ ವಿರುದ್ಧ 69 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು.

ಇದನ್ನೂ ಓದಿ: Lok Sabha Election 2024: ಮೈಸೂರು ಕ್ಷೇತ್ರದಲ್ಲಿ ಗೆಲುವು ಯಾರಿಗೆ? ಶ್ವಾನದಿಂದ ಅಚ್ಚರಿಯ ಭವಿಷ್ಯ!

Continue Reading
Advertisement
karnataka weather Forecast Putur rain
ಮಳೆ3 mins ago

Karnataka Weather : ತೊಯ್ದು ತೊಪ್ಪೆಯಾದ ಪುತ್ತೂರು; ನಾಳೆ ಮಳೆ ಅಬ್ಬರ 17 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌

IND vs PAK
ಕ್ರಿಕೆಟ್21 mins ago

IND vs PAK: ಭಾರತ ವಿರುದ್ಧ ಶಾಂತ ಚಿತ್ತರಾಗಿ ಆಡುವ ಉಪಾಯ ಮಾಡಿದ ಕುತಂತ್ರಿ ಪಾಕ್​

Bangalore Rain
ಪ್ರಮುಖ ಸುದ್ದಿ28 mins ago

Bangalore Rain: ರಾಜಕಾಲುವೆ ಒತ್ತುವರಿ; ಮುಲಾಜಿಲ್ಲದೆ ತೆರವು ಮಾಡಲು ಡಿಕೆಶಿ ಸೂಚನೆ

Stock Market
ವಾಣಿಜ್ಯ39 mins ago

Stock Market: ಮತ್ತೊಮ್ಮೆ ಮೋದಿ ಸರ್ಕಾರದ ನಿರೀಕ್ಷೆ; ಸೆನ್ಸೆಕ್ಸ್ 2,600 ಪಾಯಿಂಟ್ಸ್‌ ಏರಿಕೆ

Dharwad Lok Sabha Constituency
ಧಾರವಾಡ47 mins ago

Dharwad Lok Sabha Constituency: ಜೋಶಿ vs ಅಸೂಟಿ; ಯಾವ ಅಭ್ಯರ್ಥಿಗೆ ಧಾರವಾಡ ಪೇಡಾ?

Anant Ambani Radhika Merchant Pre Wedding
ಫ್ಯಾಷನ್1 hour ago

Anant Ambani Radhika Merchant Pre Wedding: ಅಂಬಾನಿ ಫ್ಯಾಮಿಲಿಯ ಕ್ರ್ಯೂಸ್ ಟೂರ್‌ನಲ್ಲಿ ಸ್ಟಾರ್‌ಗಳ ಮಕ್ಕಳ ಲುಕ್‌ ಹೇಗಿದೆ ನೋಡಿ!

Vijaypur Lok Sabha Constituency
ವಿಜಯಪುರ1 hour ago

Vijaypur Lok Sabha Constituency: ವಿಜಯಪುರದಲ್ಲಿ ಅಧಿಕಾರದ ‘ಗೋಲ ಗುಮ್ಮಟ’ ಯಾರಿಗೆ?

IND vs PAK
ಕ್ರಿಕೆಟ್1 hour ago

IND vs PAK: ಸ್ನೈಪರ್ ಗನ್​ ಕಣ್ಗಾವಲಿನಲ್ಲಿ ಭಾರತ-ಪಾಕ್ ಟಿ20​ ವಿಶ್ವಕಪ್​ ಪಂದ್ಯ

Lok Sabha Election Result 2024
ದೇಶ1 hour ago

Lok Sabha Election Result 2024: ನಾಳೆ ಲೋಕಸಭೆ ಚುನಾವಣೆ ಫಲಿತಾಂಶ; ಯಾರಿಗೆ ಅಧಿಕಾರ? ನಿಮ್ಮ ಅಭಿಪ್ರಾಯ ತಿಳಿಸಿ

Maldives
ವಿದೇಶ2 hours ago

Maldives: ಇಸ್ರೇಲಿಗರ ಪ್ರವೇಶವನ್ನು ನಿಷೇಧಿಸಿದ ಮಾಲ್ಡೀವ್ಸ್‌; ಭಾರತದ ಬೀಚ್‌ಗೆ ತೆರಳಿ ಎಂದು ತಿರುಗೇಟು ನೀಡಿದ ಇಸ್ರೇಲ್‌

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ3 hours ago

Karnataka Rain : 133 ವರ್ಷದ ರೆಕಾರ್ಡ್ ಬ್ರೇಕ್ ಮಾಡಿದ ʻಬೆಂಗಳೂರು ಮಳೆʼ

Snake Rescue Snakes spotted in heavy rain
ಮಳೆ4 hours ago

Snake Rescue: ಮಳೆ ನೀರಿನಲ್ಲಿ ಹರಿದು ಬಂದು ಬೈಕ್‌ನಲ್ಲಿ ಸೇರಿಕೊಂಡ ಹಾವು; ಮನೆಗಳಲ್ಲೂ ಪ್ರತ್ಯಕ್ಷ

Karnataka Rain
ಮಳೆ1 day ago

Karnataka Rain : ವೀಕೆಂಡ್‌ ಮೋಜಿಗೆ ವರುಣ ಅಡ್ಡಿ; ಭಾನುವಾರ ಸಂಜೆಗೆ ಮಳೆ ಕಾಟ

Liquor ban
ಬೆಂಗಳೂರು2 days ago

Liquor Ban : ಮುಂದಿನ ಏಳು ದಿನಗಳಲ್ಲಿ ನಾಲ್ಕೂವರೆ ದಿನ ಬಾರ್ ಕ್ಲೋಸ್; ಎಣ್ಣೆ ಸಿಗೋದು ಯಾವ ದಿನ?

Assault Case in Shivamogga
ಕ್ರೈಂ4 days ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ6 days ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

tumkur murder
ತುಮಕೂರು6 days ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

Karnataka Weather Forecast
ಮಳೆ1 week ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ1 week ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

Basavanagudi News
ಬೆಂಗಳೂರು1 week ago

Basavanagudi News : ಪೂಜಾ ಸಾಮಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

ಟ್ರೆಂಡಿಂಗ್‌