BY Vijayendra: ಬಿ.ಎಸ್.‌ ಯಡಿಯೂರಪ್ಪ ಮಾದರಿಯಲ್ಲಿ ಸಮಾಜದ ಕಣ್ಣಿನಂತೆ ಕೆಲಸ ‌ಮಾಡುತ್ತೇನೆ: ವಿಜಯೇಂದ್ರ - Vistara News

ಕರ್ನಾಟಕ

BY Vijayendra: ಬಿ.ಎಸ್.‌ ಯಡಿಯೂರಪ್ಪ ಮಾದರಿಯಲ್ಲಿ ಸಮಾಜದ ಕಣ್ಣಿನಂತೆ ಕೆಲಸ ‌ಮಾಡುತ್ತೇನೆ: ವಿಜಯೇಂದ್ರ

BY Vijayendra: ವೇದಿಕೆಯ ಮೇಲಿರುವವರ ಮುಂದೆ ನಾನು ಹೇಳುತ್ತೇನೆ‌‌. ಯಾವ ರೀತಿ ನನ್ನ ತಂದೆಯವರು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗಿದ್ದಾರೋ ಅದೇ ರೀತಿ‌ ನೀವೆಲ್ಲ ಹೆಮ್ಮೆ ಪಡುವಂತೆ ಕೆಲಸ ಮಾಡುತ್ತೇನೆ. ಸಮಾಜದ ಕಣ್ಣಾಗಿ, ಹೆಗಲಿಗೆ ಹೆಗಲು ಕೊಟ್ಟು ಕೆಲಸ ಮಾಡುತ್ತೇನೆ. ಬಿ.ವೈ. ವಿಜಯೇಂದ್ರ ಬಗ್ಗೆ ಸಮಾಜದವರು, ನೀವೆಲ್ಲರೂ ಹೆಮ್ಮೆಪಡುವ ಕೆಲಸ ‌ಮಾಡುತ್ತೇನೆ ಎಂದು ಹೇಳಿದ್ದಾರೆ.

VISTARANEWS.COM


on

BY Vijayendra at Veerashaiva Lingayat conference
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ದಾವಣಗೆರೆ: ಮಾಜಿ ಮುಖ್ಯಮಂತ್ರಿ ಬಿ.ಎಸ್.‌ ಯಡಿಯೂರಪ್ಪ (BS Yediyurappa) ಅವರ ಮಾದರಿಯಲ್ಲಿ ಸಮಾಜದ ಕಣ್ಣಿನಂತೆ ಕೆಲಸ ‌ಮಾಡುತ್ತೇನೆ. ಯಡಿಯೂರಪ್ಪ ಅವರು ನಾಲ್ಕು ಭಾರಿ ಸಿಎಂ ಆಗಿ ಪ್ರಮಾಣ ವಚನ ಸ್ವೀಕಾರ ಮಾಡಿದ್ದಾರೆ‌. ಎಲ್ಲ ಸಮುದಾಯದವರನ್ನು ಜತೆಗೆ ತೆಗೆದುಕೊಂಡು ಹೋಗಿರುವ ಕೀರ್ತಿ ಅವರಿಗೆ ಸಲ್ಲುತ್ತದೆ. ಯಡಿಯೂರಪ್ಪ ಅವರ ರಾಜಕೀಯ ಜೀವನ ಮುಗಿಯಿತು ಎಂದು ಎಲ್ಲರೂ ಭಾವಿಸಿದ್ದರು. ಅವರನ್ನು ರಾಜಕೀಯದಿಂದ ಮುಗಿಸುವ ಷಡ್ಯಂತ್ರ ನಡೆಯಿತು. ಆದರೆ, ಅವರು ಬೆನ್ನು ತೋರಿಸಿ ಓಡಿಹೋಗಿಲ್ಲ. ಧೈರ್ಯವಾಗಿ ‌ಎದುರಿಸಿದರು. ಹಾಗೆಯೇ ನಾನು ಕೆಲಸ ಮಾಡುತ್ತೇನೆ. ಸಮಾಜದ ಕಣ್ಣಾಗಿ, ಹೆಗಲಿಗೆ ಹೆಗಲು ಕೊಟ್ಟು ಕೆಲಸ ಮಾಡುತ್ತೇನೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ (BY Vijayendra) ಹೇಳಿದರು.

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾದ 24ನೇ ಅಧಿವೇಶನದಲ್ಲಿ ಮಹಿಳಾ ಮತ್ತು ಯುವ ಅಧಿವೇಶನದ ಅಧ್ಯಕ್ಷತೆ ವಹಿಸಿ ಮಾತನಾಡಿದ ಬಿ.ವೈ. ವಿಜಯೇಂದ್ರ, ಎಲ್ಲ ಸಮಾಜದ ಏಳ್ಗೆಗಾಗಿ ಬಿ.ಎಸ್.‌ ಯಡಿಯೂರಪ್ಪ ಅವರು ಶ್ರಮಿಸಿದ್ದಾರೆ. ಹೀಗಾಗಿ ‌ಈಗ ಯಾವುದೇ ಹುದ್ದೆ ಇಲ್ಲದೆ ಹೋದರೂ ಜನ ತಮ್ಮ ಮನಸ್ಸಿನಲ್ಲಿ ಮನೆ ಕಟ್ಟಿ ಕೊಟ್ಟಿದ್ದಾರೆ. ಆರ್ಥಿಕವಾಗಿ ಏನೇ ಟೀಕೆ ಬಂದರೂ ಮಠಗಳಿಗೆ ಅನುದಾನ ನೀಡಿದ್ದಾರೆ ಎಂದು ಹೇಳಿದರು.

BY Vijayendra at Veerashaiva Lingayat conference and meets Shamanur Shivashankarappa

ಇದನ್ನೂ ಓದಿ: Caste Census: ಜಾತಿ ಗಣತಿ ಬಗ್ಗೆ ಅನುಮಾನವಿದೆ; ಸರ್ಕಾರ ಹಠಕ್ಕೆ ಬೀಳಬಾರದು: ಶಾಮನೂರು ಎಚ್ಚರಿಕೆ

ಈ ವೇದಿಕೆಯ ಮೇಲಿರುವವರ ಮುಂದೆ ನಾನು ಹೇಳುತ್ತೇನೆ‌‌. ಯಾವ ರೀತಿ ನನ್ನ ತಂದೆಯವರು ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಹೋಗಿದ್ದಾರೋ ಅದೇ ರೀತಿ‌ ನೀವೆಲ್ಲ ಹೆಮ್ಮೆ ಪಡುವಂತೆ ಕೆಲಸ ಮಾಡುತ್ತೇನೆ. ಸಮಾಜದ ಕಣ್ಣಾಗಿ, ಹೆಗಲಿಗೆ ಹೆಗಲು ಕೊಟ್ಟು ಕೆಲಸ ಮಾಡುತ್ತೇನೆ. ಬಿ.ವೈ. ವಿಜಯೇಂದ್ರ ಬಗ್ಗೆ ಸಮಾಜದವರು, ನೀವೆಲ್ಲರೂ ಹೆಮ್ಮೆಪಡುವ ಕೆಲಸ ‌ಮಾಡುತ್ತೇನೆ. ಸಮಾಜದ ಶಕ್ತಿಯಾಗಿ ಕೆಲಸ ಮಾಡುತ್ತೇನೆ ಎಂದು ಬಿ.ವೈ. ವಿಜಯೇಂದ್ರ ಹೇಳಿದರು.

ತರುಣನಂತೆ ಕೆಲಸ ಮಾಡುತ್ತಿರುವ ಶಾಮನೂರು

ಶಾಮನೂರು ಶಿವಶಂಕರಪ್ಪ ಅವರು 18 ವರ್ಷದ ತರುಣನಂತೆ ಸಮಾಜದ ಕಾರ್ಯವನ್ನು ಮಾಡುತ್ತಿದ್ದಾರೆ. ಕೆಲವರು ವೀರಶೈವ ಲಿಂಗಾಯತ ಸಮಾಜವನ್ನು ಒಡೆದು ಆಳಲು ಹೊರಟರು. ಪ್ರತ್ಯೇಕ ಧರ್ಮ ಅಂತ ಒಡೆಯಲು ಹೊರಟಾಗ ಶಾಮನೂರು ಶಿವಶಂಕರಪ್ಪ ಅವರು ಅದರ ವಿರುದ್ಧವಾಗಿ ನಿಂತರು. ತಮಗೆ ರಾಜಕಾರಣ ಮುಖ್ಯ ಅಲ್ಲ. ಸಮಾಜದ ಏಳಿಗೆ ಮುಖ್ಯ ಎಂದು ಧ್ವನಿ ಎತ್ತಿದರು ಎಂದು ಬಿ.ವೈ. ವಿಜಯೇಂದ್ರ ಹೇಳಿದರು.

ಇದನ್ನೂ ಓದಿ: ಯಾವುದೇ ಧರ್ಮದ ಅತಿ ಓಲೈಕೆ ಬೇಡ; ಲಿಂಗಾಯತ ಅಧಿಕಾರಿಗಳಿಗೆ ಸ್ಥಾನ ನೀಡಿ: ಸಚಿವರಿಗೆ ಬಿಎಸ್‌ವೈ ತಾಕೀತು

ಇಂದು ವೀರಶೈವ ಲಿಂಗಾಯತ ‌ಸಮಾಜವು ಕವಲುದಾರಿಯಲ್ಲಿ ಹೋಗುತ್ತಿದೆ. ನಾವು ಇದರ ವಿರುದ್ಧ ಧ್ವನಿ ಎತ್ತಬೇಕು. ಎತ್ತದಿದ್ದಲ್ಲಿ ಈ ಸಮಾಜ ಇತಿಹಾಸದ ಪುಟದಲ್ಲಿ ಸೇರುತ್ತದೆ ಎಂದು ಬಿ.ವೈ. ವಿಜಯೇಂದ್ರ ಎಚ್ಚರಿಸಿದರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಬೆಂಗಳೂರು

Kidnap case : ಕೋಟಿ ಆಸೆಗೆ ಸಿನಿಮಾ ಸ್ಟೈಲ್‌ನಲ್ಲಿ ಸ್ಟಾಕ್‌ ಮಾರ್ಕೆಟ್‌ ವಂಚಕನ ಕಿಡ್ನ್ಯಾಪ್‌

Kidnap case : ವಂಚನೆ ಕೇಸ್‌ನಲ್ಲಿ ಅರೆಸ್ಟ್‌ ಆಗಿ ಜಾಮೀನಿನ ಮೇಲೆ ಹೊರ ಬಂದವನ್ನು ಖತರ್ನಾಕ್‌ ಗ್ಯಾಂಗ್‌ವೊಂದು ಸಿನಿಮಾ ಸ್ಟೈಲ್‌ನಲ್ಲಿ ಕಿಡ್ನ್ಯಾಪ್‌ ಮಾಡಿದೆ. ಬೆಂಗಳೂರಿನಲ್ಲಿ ಕಿಡ್ನ್ಯಾಪ್‌ ಮಾಡಿ ತೆಲಂಗಾಣದ ಫಾರ್ಮ್‌ ಹೌಸ್‌ನಲ್ಲಿ ಕೂಡಿ ಹಾಕಿ ಹಲ್ಲೆ ಮಾಡಿದೆ.

VISTARANEWS.COM


on

By

kidnap Case
Koo

ಬೆಂಗಳೂರು: ಕೋಟಿ ಕೋಟಿ ಹಣಕ್ಕಾಗಿ ಪ್ರಭಾವಿಗಳ ಹೆಸರು ಹೇಳಿ, ಬೆದರಿಕೆ ಹಾಕಿ ಅಪಹರಣ (Kidnap case) ಮಾಡಿರುವ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ತೆಲಂಗಾಣ ಮೂಲದ ಅಜ್ಮೀರ್ ರಾಜು ಎಂಬಾತನನ್ನು ಕಿಡ್ನ್ಯಾಪ್ ಮಾಡಲಾಗಿತ್ತು. ಆತನ ಮೇಲೆ ಹಲ್ಲೆ ನಡೆಸಿ ಆತನಿಂದ ದುಡ್ಡು ಕೀಳುವ ಪ್ರಯತ್ನ ಕೂಡ ನಡೆದಿತ್ತು ಎನ್ನಲಾಗಿದೆ.

ತೆಲಂಗಾಣ ನಿವಾಸಿಯಾಗಿರುವ ಅಜ್ಮೀರ್ ರಾಜು ದುಬೈನಲ್ಲಿ ಇರುವುದು. ಆನ್‌ಲೈನ್‌ನಲ್ಲಿ ಅನಾಯಸವಾಗಿ ದುಡ್ಡು ಮಾಡುವ ಬುದ್ಧಿವಂತ. ಸ್ಟಾಕ್ ಮಾರ್ಕೆಟ್‌ನಲ್ಲಿ ಹೂಡಿಕೆ ಮಾಡಿಸಿ ಅದನ್ನು ನಾನಾ ಕಾರಣದಿಂದ ರಿಟರ್ನ್ ಬಾರದ ರೀತಿ ನೋಡಿಕೊಂಡು ಜನರಿಗೆ ವಂಚನೆ ಮಾಡುತ್ತಿದ್ದ. ಆದರೆ ಆತನ ಟೈಂ ಕೆಟ್ಟಿತ್ತು, ಬೆಂಗಳೂರಿಗೆ ಬಂದ ಕೂಡಲೇ ಅರೆಸ್ಟ್‌ ಆಗಿದ್ದ.

ಕಳೆದ ವರ್ಷ ಐಪಿಎಲ್ ನೋಡಲು ಬಂದಿದ್ದ ಅಜ್ಮೀರ್‌ನನ್ನು ಪೊಲೀಸರು ಬಂಧಿಸಿದ್ದರು. ಸುಮಾರು ಮೂರು ತಿಂಗಳ ಬಳಿಕ ಜೈಲಿನಿಂದ ಹೊರ ಬಂದಿದ್ದ ಅಜ್ಮೀರ್‌ ರಾಜು, ಎಂಜಿ ರೋಡ್ ಬಳಿ ಇರುವ ಖಾಸಗಿ ಹೋಟೆಲ್‌ನಲ್ಲಿ ತಂಗಿದ್ದ. ಈ ವೇಳೆ ಅಜ್ಮೀರ್‌ ರಾಜುಗೆ ಸಾತ್ವಿಕ್‌ ಎಂಬಾತ ಪರಿಚಯವಾಗಿದ್ದ.

ಇದನ್ನೂ ಓದಿ: Leopard attack : ರಸ್ತೆ ಮೇಲೆ ಸತ್ತಂತೆ ಬಿದ್ದಿದ್ದ ಚಿರತೆ; ಮುಟ್ಟಲು ಹೋದ ಬೈಕ್‌ ಸವಾರ, ಕ್ಯಾಬ್‌ ಚಾಲಕನ ಮೇಲೆ ದಾಳಿ

ಕಿಡ್ನ್ಯಾಪ್ ಆದ ದಿನ ತಡರಾತ್ರಿ ಊಟಕ್ಕೆಂದು ಸಾತ್ವಿಕ್‌ ಜತೆಗೆ ಬೈಕ್‌ನಲ್ಲಿ ಹೊರಹೋಗಿದ್ದ. ಊಟ ಸಿಗದ ಕಾರಣ ನೇರವಾಗಿ ಟ್ರಿನಿಟಿ ಸರ್ಕಲ್ ಬಳಿ ಇರುವ ಮೆಟ್ರೋ ನಿಲ್ದಾಣಕ್ಕೆ ಬಂದಿದ್ದರು. ಈ ವೇಳೆ ತಾವು ಹೋದಲೆಲ್ಲ ಒಂದು ಸ್ಕಾರ್ಪಿಯೋ ಹಿಂಬಾಲಿಸಿಕೊಂಡು ಬರುತ್ತಿರುವುದನ್ನು ಕಂಡು ಅನುಮಾನಗೊಂಡ ಅಜ್ಮೀರ್‌ ರಾಜು, ಕಾರು ಚಾಲಕನ ಬಳಿ ಕೇಳಿದ್ದಾನೆ.

ಆಗ ಕಾರಲಿದ್ದ ಆರೇಳು ಜನರು ಏಕಾಏಕಿ ಮುಗಿ ಬಿದ್ದು, ಅಜ್ಮೀರ್‌ನನ್ನು ಸಿನಿಮೀಯ ಶೈಲಿಯಲ್ಲಿ ಕಿಡ್ನ್ಯಾಪ್ ಮಾಡಿದ್ದಾರೆ. ನಂತರ ನೇರವಾಗಿ ತೆಲಂಗಾಣಕ್ಕೆ ಕರೆದೊಯ್ದು ಅಲ್ಲಿನ ಫಾರ್ಮ್ ಹೌಸ್‌ನಲ್ಲಿ ಕೂಡಿ ಹಾಕಿದ್ದಾರೆ. ಕಿಡ್ನ್ಯಾಪರ್ಸ್‌ ಐದು ಕೋಟಿಗೆ ಬೇಡಿಕೆ ಇಟ್ಟಿದ್ದಾರೆ. ಹಣವಿಲ್ಲ ಎಂದಾಗ ಬಿಟ್ ಕಾಯಿನ್‌ಗಳನ್ನು ಟ್ರಾನ್ಸ್‌ಫರ್‌ ಮಾಡು ಎಂದು ಪಟ್ಟು ಹಿಡಿದಿದ್ದಾರೆ. ಇಂಟರ್ ನ್ಯಾಷನಲ್ ಅಕೌಂಟ್‌ನಲ್ಲಿರುವ ಹಣವನ್ನೂ ವರ್ಗಾವಣೆ ಮಾಡುವಂತೆ ಕುತ್ತಿಗೆ ಮೇಲೆ ಚಾಕು ಇಟ್ಟಿದ್ದರಂತೆ.

ಇನ್ನು ಪೊಲೀಸರಿಗೆ ದೂರು ನೀಡದಂತೆ ಬೆದರಿಕೆ ಹಾಕಿದ್ದರಂತೆ. ದೂರು ನೀಡಿದರೆ ನಮಗೆ ತೆಲಂಗಾಣ ಎಂಪಿ, ಎಂಎಲ್‌ಎ ಗೊತ್ತು. ಈ ಕೇಸ್ ನಿಲ್ಲದೆ ಇರುವ ಹಾಗೆ ಮಾಡಿ ನಿನ್ನ ಕೊಲೆ ಮಾಡುತ್ತೀವಿ ಎಂದು ಕೊಲೆ ಬೆದರಿಕೆಯನ್ನೂ ಹಾಕಿದ್ದರಂತೆ. ಸದ್ಯ ಅಜ್ಮೀರ್‌ ಸ್ನೇಹಿತ ಸಾತ್ವಿಕ್‌ ನೀಡಿದ ದೂರಿನ ಮೇರೆಗೆ ಹಲಸೂರು ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ. ಇತರೆ ಆರೋಪಿಗಳಿಗಾಗಿ ಹುಡುಕಾಟ ನಡೆಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಕರ್ನಾಟಕ

CM Post: ಬಿ.ಕೆ.ಹರಿಪ್ರಸಾದ್‌ರನ್ನು ಸಿಎಂ ಮಾಡಲು ಪ್ರಣವಾನಂದ ಶ್ರೀ ಒತ್ತಾಯ; ಕೇಳೋದ್ರಲ್ಲಿ ತಪ್ಪಿಲ್ಲ ಎಂದ ಜಮೀರ್‌

CM Post: ಬಿ.ಕೆ.ಹರಿಪ್ರಸಾದ್ ಅವರು ಕಾಂಗ್ರೆಸ್ ಪಕ್ಷದ ನಿಷ್ಠಾವಂತರು. ಮೂಲತಃ ಅವರು ಕಾಂಗ್ರೆಸ್ಸಿಗರು, ಯಾವುದೇ ವಲಸೆ ನಾಯಕರಲ್ಲ. ಹೀಗಾಗಿ ಅವರಿಗೆ ಸಿಎಂ ಸ್ಥಾನ ನೀಡಬೇಕು ಎಂದು ಈಡಿಗ ಸಮುದಾಯದ ಪ್ರಣವಾನಂದ ಸ್ವಾಮೀಜಿ ಆಗ್ರಹಿಸಿದ್ದಾರೆ.

VISTARANEWS.COM


on

Koo

ಯಾದಗಿರಿ: ಬಿ.ಕೆ. ಹರಿಪ್ರಸಾದ್ ಅವರನ್ನು ಸಿಎಂ ಮಾಡುವಂತೆ ಈಡಿಗ ಸಮುದಾಯದ ಪ್ರಣವಾನಂದ ಸ್ವಾಮೀಜಿ (Pranavananda Swamiji) ಅವರು ಪುನರುಚ್ಚರಿಸಿದ್ದಾರೆ. ಬಿ.ಕೆ. ಹರಿಪ್ರಸಾದ್‌ರನ್ನು (BK hariprasad) ಸಿಎಂ ಅಥವಾ ಡಿಸಿಎಂ ಮಾಡುವಂತೆ ಒತ್ತಾಯ ಮಾಡಿರುವ ಅವರು, ಈಡಿಗ ಸಮುದಾಯವು ತನ್ನದೇ ರಾಜಕೀಯ ಪ್ರಾಬಲ್ಯ ಹೊಂದಿದೆ. ಮುಖ್ಯಮಂತ್ರಿ ಸ್ಥಾನ ಬದಲಾವಣೆ ಮಾಡುವುದಿದ್ದರೆ ಬಿ.ಕೆ.ಹರಿಪ್ರಸಾದ್ ಅವರನ್ನೇ ಸಿಎಂ (CM Post) ಎಂದು ಘೋಷಣೆ ಮಾಡಬೇಕು ಎಂದು ಆಗ್ರಹಿಸಿದರು.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿ.ಕೆ.ಹರಿಪ್ರಸಾದ್ ಅವರ ಹಿಂದೆ ಹಿಂದುಳಿದ ಸಮಾಜ ಇದೆ, ಹರಿಪ್ರಸಾದ್ ಅವರ ಪರವಾಗಿ ಗಟ್ಟಿ ಧ್ವನಿಯಲ್ಲಿ ಹೇಳುತ್ತೇನೆ. ಸಿಎಂ, ಡಿಸಿಎಂ ಸ್ಥಾನ ಬದಲಾದರೆ ಬಿ.ಕೆ.ಹರಿಪ್ರಸಾದ್ ಅವರಿಗೆ ಸಿಎಂ ಸ್ಥಾನ‌ ನೀಡಬೇಕು. ಇಲ್ಲದಿದ್ದರೆ ಡಿಸಿಎಂ ಆಗಿ ತೆಗೆದುಕೊಳ್ಳಬೇಕು. ಕೆಪಿಸಿಸಿ ಅಧ್ಯಕ್ಷ ಸ್ಥಾನ ಬದಲಾವಣೆ ಮಾಡುವುದಾದರೆ ಹರಿಪ್ರಸಾದ್ ಅವರಿಗೆ ನೀಡಬೇಕು ಎಂದು ಒತ್ತಾಯಿಸಿದರು.

ಇದನ್ನೂ ಓದಿ | Actor Darshan:  ದರ್ಶನ್‌‌‌‌‌‌ ವಿರುದ್ಧ ಪರೋಕ್ಷವಾಗಿ ಕೌಂಟರ್‌ ಕೊಟ್ಟ ನಟ ಜಗ್ಗೇಶ್!

ಸ್ವಾಮೀಜಿಗಳು ರಾಜಕೀಯಕ್ಕೆ ಬರಬೇಡಿ ಎಂಬ ಡಿಕೆಶಿ ಹೇಳಿಕೆಗೆ ಪ್ರತಿಕ್ರಿಯಿಸಿ, ಸ್ವಾಮೀಜಿಗಳು ಅವರ ಅಭಿಪ್ರಾಯ ವ್ಯಕ್ತಪಡಿಸುವಾಗ ಮಂತ್ರಿಗಳು, ರಾಜಕೀಯ ನಾಯಕರು ಅಪಮಾನ ಮಾಡಬಾರದು. ಅಪಮಾನ ಮಾಡಿದರೆ ಮುಂದಿನ ದಿನಗಳಲ್ಲಿ ನೀವು ಮಠಕ್ಕೆ ಕಾಲಿಡಬೇಡಿ. ನೀವು ಮಾಡಿದ್ದೆಲ್ಲಾ ಸರಿ ಅಂತ ಒಪ್ಪಿಕೊಳ್ಳೋಕೆ ಸಮುದಾಯದ ಸ್ವಾಮೀಜಿಗಳು ಸಿದ್ಧರಿಲ್ಲ. ನೀವು ಧೈರ್ಯವಾಗಿ ಹೇಳಿ ಮಠಕ್ಕೆ ಕಾಲಿಡಲ್ಲ ಅಂತ, ಆಗ ನಾವು ರಾಜಕೀಯಕ್ಕೆ ಬರಲ್ಲ ಎಂದು ಸವಾಲು ಹಾಕಿದರು.

ಚಂದ್ರಶೇಖರ ಸ್ವಾಮೀಜಿಗಳು ಹೇಳಿದಾಗ ಎಲ್ಲರೂ ಸ್ವಾಗತ ಮಾಡಿದರು. ಡಿ.ಕೆ.ಸುರೇಶ್‌, ಬಾಲಕೃಷ್ಣ ಹಾಗೂ ಚಲುವರಾಯಸ್ವಾಮಿ ಸ್ವಾಗತ ಮಾಡಿದರು. ಒಂದು ಕಡೆ ಸ್ವಾಗತ ಮಾಡೋದು, ಮತ್ತೊಂದು ಕಡೆ ರಾಜಕೀಯಕ್ಕೆ ಬರಬೇಡಿ ಅಂತ ಹೇಳೋದು. ಇದು ಡಿ.ಕೆ.ಶಿವಕುಮಾರ ಅವರ ರಾಜಕೀಯ ಗಿಮಿಕ್, ನಮಗೆ ನೋವಾಗಿದ್ದಕ್ಕೆ ನಾವು ಹೇಳುತ್ತಿದ್ದೇವೆ. ನಮಗೆ ಯಾರು ಡಿಸಿಎಂ ಸ್ಥಾನ ಕೊಟ್ಟಿಲ್ಲ, ಈಗಾಗಲೇ ಡಿಕೆಶಿ ಡಿಸಿಎಂ ಇದ್ದಾರೆ. ಜೊತೆಗೆ ಒಕ್ಕಲಿಗ ಸಮುದಾಯದ ಸಚಿವರು ಇದ್ದಾರೆ. ಚಂದ್ರಶೇಖರ ಸ್ವಾಮೀಜಿಯವರು ಅವರ ಸಮುದಾಯದ ಬಗ್ಗೆ ಮಾತನಾಡಿದ್ದಾರೆ. ಆದರೆ ಡಿ.ಕೆ.ಶಿವಕುಮಾರ ಅವರದ್ದು ರಾಜಕೀಯ ಗಿಮಿಕ್‌ನ ಭಾಗ ಎಂದು ಕಿಡಿಕಾರಿದರು.

ಯಾರು ಬೇಕಾದ್ರು ಅಭಿಪ್ರಾಯ ಹೇಳಬಹುದು ಎಂದ ಜಮೀರ್‌ ಅಹ್ಮದ್‌

ರಾಜ್ಯದಲ್ಲಿ ಸಿಎಂ ಬದಲಾವಣೆ ವಿಚಾರಕ್ಕೆ ಮಂಡ್ಯದಲ್ಲಿ ಸಚಿವ ಜಮೀರ್ ಅಹ್ಮದ್ ಪ್ರತಿಕ್ರಿಯಿಸಿ, ಯಾರು ಬೇಕಾದರೂ ಅವರ ಅಭಿಪ್ರಾಯ ಹೇಳಬಹುದು. ಆದರೆ ನಿರ್ಧಾರ ಮಾಡುವುದು ಪಕ್ಷದ ಹೈ ಕಮಾಂಡ್. ಸದ್ಯಕ್ಕೆ ಸಿಎಂ ಕುರ್ಚಿ ಖಾಲಿ ಇಲ್ಲ. ಖಾಲಿ‌ ಇದ್ದಾಗ ಆ ಬಗ್ಗೆ ಚರ್ಚೆ ಮಾಡಬಹುದು ಎಂದು ಹೇಳಿದ್ದಾರೆ.

ಇದನ್ನೂ ಓದಿ | Pradeep Eshwar: ವಿಪಕ್ಷ ನಾಯಕರು ಸಿದ್ದರಾಮಯ್ಯ ಬಳಿ ಕೋಚಿಂಗ್‌ ಪಡೆಯಲಿ: ಅಶೋಕ್‌ಗೆ ಪ್ರದೀಪ್‌ ಈಶ್ವರ್‌ ಸಲಹೆ

ಸ್ವಾಮೀಜಿ‌ ಅವರು ಅವರ ಅಭಿಪ್ರಾಯ ಹೇಳಿದ್ದಾರೆ. ಯಾರು ಬೇಕಾದ್ರು ಅವರ ಅಭಿಪ್ರಾಯ ಹೇಳಬಹುದು. ಹೈ ಕಮಾಂಡ್ ತೀರ್ಮಾನ ಮಾಡಿ ಸಿದ್ದರಾಮಯ್ಯರನ್ನು ಸಿಎಂ ಮಾಡಿದ್ದಾರೆ. ಎಲ್ಲಾ ಸಮುದಾಯದವರೂ ಸಿಎಂ ಸ್ಥಾನ ಕೇಳುತ್ತಾರೆ, ಅದು ಅವರವರ ಅಭಿಪ್ರಾಯ. ಸಿಎಂ ಅಧಿಕಾರ ಹಂಚಿಕೆಯ ಬಗ್ಗೆ ಯಾವುದೇ ಒಪ್ಪಂದವಾಗಿಲ್ಲ ಎಂದು ತಿಳಿಸಿದ್ದಾರೆ.

Continue Reading

ಬೆಂಗಳೂರು

Leopard attack : ರಸ್ತೆ ಮೇಲೆ ಸತ್ತಂತೆ ಬಿದ್ದಿದ್ದ ಚಿರತೆ; ಮುಟ್ಟಲು ಹೋದ ಬೈಕ್‌ ಸವಾರ, ಕ್ಯಾಬ್‌ ಚಾಲಕನ ಮೇಲೆ ದಾಳಿ

Leopard attack: ರಸ್ತೆ ಮೇಲೆ ಸತ್ತಂತೆ ಬಿದ್ದಿದ್ದ ಚಿರತೆಯನ್ನು ಮುಟ್ಟಲು ಹೋದ ಬೈಕ್‌ ಸವಾರ, ಕ್ಯಾಬ್‌ ಚಾಲಕನ ಮೇಲೆ ದಾಳಿ ಮಾಡಿದೆ. ಇತ್ತ ಬೈಕ್‌ನಲ್ಲಿ ತೆರಳಿದ್ದ ತಾಯಿ-ಮಗನಿಗೆ ಟಾಟಾ ಎಸ್‌ ವಾಹನವೊಂದು ಡಿಕ್ಕಿ ಹೊಡೆದಿದೆ. ಅಪಘಾತದಲ್ಲಿ ತಾಯಿ ಮೃತಪಟ್ಟರೆ, ಮಗ ಗಂಭೀರ ಗಾಯಗೊಂಡಿದ್ದಾನೆ.

VISTARANEWS.COM


on

By

Leopard attack bike rider and cab driver
Koo

ಬೆಂಗಳೂರು/ಚಿಕ್ಕೋಡಿ: ಬೈಕ್ ಸವಾರ ಹಾಗೂ ಕಾರು ಚಾಲಕನ ಮೇಲೆ ಚಿರತೆಯೊಂದು (Leopard attack) ದಾಳಿ ಮಾಡಿದೆ. ನಿನ್ನೆ ಶನಿವಾರ ರಾತ್ರಿ 8:30ರ ಸುಮಾರಿಗೆ ಮಾಗಡಿ ರಸ್ತೆಯ ಸಾವನದುರ್ಗದ ಬಳಿ ನಡೆದಿದೆ. ಬೈಕ್‌ಗೆ ಹಾಗೂ ಕಾರಿಗೆ ಮುಖಾಮುಖಿಯಾದ ಚಿರತೆಯು ರಸ್ತೆ ಬದಿ ಬಿದ್ದಿತ್ತು.

ಚಿರತೆ ಸತ್ತು ಹೋಗಿದೆ ಎಂದು ತಿಳಿದ ಬೈಕ್ ಸವಾರ ಹತ್ತಿರ ತೆರಳಿ ಮುಟ್ಟಲು ಹೋಗಿದ್ದ. ಈ ವೇಳೆ ಸತ್ತಂತೆ ಬಿದ್ದಿದ್ದ ಚಿರತೆ ಏಕಾಏಕಿ ದಾಳಿ ಮಾಡಿದೆ. ಬೈಕ್ ಹಾಗೂ ಕ್ಯಾಬ್ ಚಾಲಕನ ಮೇಲೆ ಚಿರತೆ ದಾಳಿ ಮಾಡಿದ್ದು, ಸ್ಥಳೀಯರು ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಬೈಕ್‌ಗೆ ಟಾಟಾ ಎಸ್‌ ಡಿಕ್ಕಿ-ಮಹಿಳೆ ಸಾವು

ಬೈಕ್ ಗೆ ಟಾಟಾ ಎಸ್ ಡಿಕ್ಕಿ ಹೊಡೆದ ಪರಿಣಾಮ ಮಹಿಳೆಯೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಚಿಂಚಿಣಿ ಟೋಲ್ ಬಳಿ ಘಟನೆ ನಡೆದಿದೆ. ನಿಪ್ಪಾಣಿ ಮಾಹಾಲಿಂಗಪುರ ರಾಜ್ಯ ಹೆದ್ದಾರಿಯಲ್ಲಿ ಟಾಟಾ ಎಸ್ ವಾಹನ ಬೈಕ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಬೈಕ್‌ನಲ್ಲಿದ್ದ ಮಹಿಳೆ ಸ್ಥಳದಲ್ಲೇ ಮೃತಪಟ್ಟರೆ, ವ್ಯಕ್ತಿಯೊಬ್ಬರು ಗಂಭೀರ ಗಾಯಗೊಂಡಿದ್ದಾರೆ.

ಅಪಘಾತವಾಗುತ್ತಿದ್ದಂತೆ ಚಾಲಕ ಟಾಟಾ ಎಸ್ ವಾಹನದೊಂದಿಗೆ ಪರಾರಿ ಆಗಿದ್ದಾನೆ. ಅಪಘಾತದಲ್ಲಿ ಮಹಾದೇವಿ ಶಿರಗುಪ್ಪಿ (೫೪) ಮೃತಪಟ್ಟರೆ, ಮಗ ಮಹಾಂತೇಶ ಶಿರಗುಪ್ಪಿ (೨೯) ಗಂಭೀರ ಗಾಯಗೊಂಡಿದ್ದಾರೆ. ಸಿಸಿಟಿವಿಯಲ್ಲಿ ವಾಹನ ವಿಡಿಯೊ ಆಧರಿಸಿದ ಚಿಕ್ಕೋಡಿ ಪೊಲೀಸರು ವಾಹನಕ್ಕೆ ಹುಡುಕಾಟ ನಡೆಸಿದ್ದಾರೆ.

ಸ್ಥಳಕ್ಕೆ ಚಿಕ್ಕೋಡಿ ಸಿಪಿಐ ಮತ್ತು ಸಂಚಾರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಚಿಕ್ಕೋಡಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪರಾರಿ ಆಗಿರುವ ಚಾಲಕನಿಗಾಗಿ ಹುಡುಕಾಟ ನಡೆಸಿದ್ದಾರೆ.

ಇದನ್ನೂ ಓದಿ: Bike Wheeling: ಹೈವೇಯಲ್ಲಿ ಭಯಾನಕ ವ್ಹೀಲಿಂಗ್‌ ಜತೆಗೆ ಯುವತಿಗೆ ಕೀಟಲೆ ಮಾಡಿದ ಪುಂಡರು!

ಬೆಂಗಳೂರಲ್ಲಿ ಬೈಕ್‌ ಸವಾರರಿಬ್ಬರ ಪ್ರಾಣ ಕಸಿದ ಹೈ ಸ್ಪೀಡ್‌

ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಇಬ್ಬರು ಬೈಕ್‌ ಸವಾರರು ರಸ್ತೆ ಅಪಘಾತದಲ್ಲಿ (Road Accident ) ಪ್ರಾಣವನ್ನು ಕಳೆದುಕೊಂಡಿದ್ದಾರೆ. ಕಾಂಕ್ರೀಟ್ ಮಿಕ್ಸಿಂಗ್ ಲಾರಿಗೆ ಬೈಕ್‌ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಬೈಕ್ ಸವಾರ ಮೃತಪಟ್ಟಿದ್ದಾನೆ. ಬೆಂಗಳೂರಿನ ಹೆಬ್ಬಾಳ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಜರ್ನಾಧನ (25) ಮೃತ ದುರ್ದೈವಿ.

ತಡರಾತ್ರಿ 2.30ರ ಸಮಯಕ್ಕೆ ಈ ಅಪಘಾತ ಸಂಭವಿಸಿದೆ. ಬೈಕ್‌ನಲ್ಲಿ ಬರುತ್ತಿದ್ದ ಜರ್ನಾಧನ ರಸ್ತೆ ಬದಿ ನಿಂತಿದ್ದ ಕಾಂಕ್ರೀಟ್ ಮಿಕ್ಸಿಂಟ್ ಲಾರಿಗೆ ಹಿಂಬದಿಯಿಂದ ಗುದ್ದಿದ್ದಾನೆ. ಗುದ್ದಿದ ರಭಸಕ್ಕೆ ಹಾರಿ ಕೆಳಗೆ ಬಿದ್ದ ಜರ್ನಾಧನನ ತಲೆಗೆ ಗಂಭೀರ ಪೆಟ್ಟಾಗಿದೆ.

ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಜನಾರ್ಧನನನ್ನು ಆಸ್ಪತ್ರೆಗೆ ಸಾಗಿಸುವ ವೇಳೆ ಮೃತಪಟ್ಟಿದ್ದಾನೆ. ಬೆಂಗಳೂರಿನ ಮುತ್ಯಾಲ ನಗರ ನಿವಾಸಿಯಾಗಿರುವ ಜರ್ನಾಧನ ರಾತ್ರಿ ಕೆಲಸ ಮುಗಿಸಿ ಮನೆಗೆ ವಾಪಸ್‌ ಆಗುತ್ತಿದ್ದಾಗ ಈ ಘಟನೆ ನಡೆದಿದೆ. ಹೆಬ್ಬಾಳ ಸಂಚಾರಿ ಪೊಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಬೆಳಗಾವಿ

Road Accident : ಬೈಕ್‌ಗೆ ಟಾಟಾ ಏಸ್‌ ಡಿಕ್ಕಿ; ಮಗನ ಕಣ್ಣೆದುರೇ ತಾಯಿ ಸಾವು

Road Accident : ಬೈಕ್‌ಗೆ ಟಾಟಾ ಏಸ್‌ ಡಿಕ್ಕಿ ಹೊಡೆದಿದ್ದು, ಮಗನ ಕಣ್ಣೆದುರೇ ತಾಯಿ ಮೃತಪಟ್ಟಿದ್ದಾರೆ. ಅಪಘಾತ ಮಾಡಿ ಚಾಲಕ ನಾಪತ್ತೆಯಾಗಿದ್ದಾನೆ.

VISTARANEWS.COM


on

By

Road Accident
Koo

ಬೆಳಗಾವಿ: ಬೈಕ್‌ಗೆ ಟಾಟಾ ಏಸ್ ಡಿಕ್ಕಿ ಹೊಡೆದ (Road Accident) ಪರಿಣಾಮ ಮಹಿಳೆಯೊಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಚಿಂಚಿಣಿ ಟೋಲ್ ಬಳಿ ಘಟನೆ ನಡೆದಿದೆ. ನಿಪ್ಪಾಣಿ ಮಾಹಾಲಿಂಗಪುರ ರಾಜ್ಯ ಹೆದ್ದಾರಿಯಲ್ಲಿ ಟಾಟಾ ಏಸ್ ವಾಹನವೊಂದು ಬೈಕ್‌ಗೆ ಡಿಕ್ಕಿ ಹೊಡೆದಿದೆ. ಡಿಕ್ಕಿ ರಭಸಕ್ಕೆ ಬೈಕ್‌ನಲ್ಲಿದ್ದ ಮಹಿಳೆ ಸ್ಥಳದಲ್ಲೇ ಮೃತಪಟ್ಟರೆ, ಯುವಕನೊಬ್ಬ ಗಂಭೀರ ಗಾಯಗೊಂಡಿದ್ದಾರೆ.

ಅಪಘಾತವಾಗುತ್ತಿದ್ದಂತೆ ಚಾಲಕ ಟಾಟಾ ಏಸ್ ವಾಹನದೊಂದಿಗೆ ಪರಾರಿ ಆಗಿದ್ದಾನೆ. ಅಪಘಾತದಲ್ಲಿ ಮಹಾದೇವಿ ಶಿರಗುಪ್ಪಿ (೫೪) ಮೃತಪಟ್ಟರೆ, ಮಗ ಮಹಾಂತೇಶ ಶಿರಗುಪ್ಪಿ (೨೯) ಗಂಭೀರ ಗಾಯಗೊಂಡಿದ್ದಾರೆ. ಸಿಸಿಟಿವಿಯಲ್ಲಿ ವಾಹನ ವಿಡಿಯೊ ಆಧರಿಸಿದ ಚಿಕ್ಕೋಡಿ ಪೊಲೀಸರು ವಾಹನಕ್ಕೆ ಹುಡುಕಾಟ ನಡೆಸಿದ್ದಾರೆ. ತಾಯಿ ಮಗ ಬೈಕ್‌ನಲ್ಲಿ ಬರುತ್ತಿದ್ದಾಗ ಈ ಅಪಘಾತ ಸಂಭವಿಸಿದೆ.

ಸ್ಥಳಕ್ಕೆ ಚಿಕ್ಕೋಡಿ ಸಿಪಿಐ ಮತ್ತು ಸಂಚಾರ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಚಿಕ್ಕೋಡಿ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪರಾರಿ ಆಗಿರುವ ಚಾಲಕನಿಗಾಗಿ ಹುಡುಕಾಟ ನಡೆಸಿದ್ದಾರೆ.

ಇದನ್ನೂ ಓದಿ: Bike Wheeling: ಹೈವೇಯಲ್ಲಿ ಭಯಾನಕ ವ್ಹೀಲಿಂಗ್‌ ಜತೆಗೆ ಯುವತಿಗೆ ಕೀಟಲೆ ಮಾಡಿದ ಪುಂಡರು

ಮೈಸೂರಿನಲ್ಲಿ ತಿರುವಿನಲ್ಲಿ ಕಂದಕಕ್ಕೆ ಉರುಳಿದ ಬಸ್‌

ಮೈಸೂರು: ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿದ್ದು ಸಾರಿಗೆ ಬಸ್‌ವೊಂದು ಕಂದಕಕ್ಕೆ (Road Accident ) ಉರುಳಿದೆ. ಚಾಲಕ ಸೇರಿ ಮೂವರು ಗಂಭೀರ ಗಾಯಗೊಂಡಿದ್ದು, ಉಳಿದ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಮೈಸೂರಿನ ನಂಜನಗೂಡಿನ ತಾಲೂಕಿನ ಮರಡಿಹುಂಡಿ ಗ್ರಾಮದ ಸಮೀಪ ಅಪಘಾತ ನಡೆದಿದೆ.

ಬಿಳುಗಲಿ ಗ್ರಾಮದಿಂದ ಎಸ್.ಹೊಸಕೋಟೆ ಮಾರ್ಗವಾಗಿ ಬಸ್‌ ಮೈಸೂರಿಗೆ ತೆರಳುತ್ತಿತ್ತು. ವೇಗವಾಗಿ ಬಂದು ತಿರುವು ಪಡೆದುಕೊಳ್ಳುತ್ತಿದ್ದಾಗ ಚಾಲಕನ ನಿಯಂತ್ರಣ ತಪ್ಪಿ ಕಂದಕಕ್ಕೆ ಬಸ್ ಪಲ್ಟಿ ಹೊಡೆದಿದೆ. ಸುಮಾರು 25ಕ್ಕೂ ಹೆಚ್ಚು ಪ್ರಯಾಣಿಕರಿಗೆ ಸಣ್ಣ-ಪುಟ್ಟ ಗಾಯವಾಗಿದೆ. ಗಾಯಾಳುಗಳನ್ನು ಮೈಸೂರಿನ ಕೆ.ಆರ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಸ್ಥಳಕ್ಕೆ ವರುಣ ಪೊಲೀಸ್ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಂದಕ್ಕೆ ಬಿದ್ದ ಬಸ್‌ ಅನ್ನು ತೆರವು ಮಾಡಲಾಗಿದೆ.

ಡಿವೈಡರ್‌ಗೆ ಕಾರು ಡಿಕ್ಕಿ ಇಬ್ಬರು ಸಾವು

ವಿಜಯನಗರ: ಕೂಡ್ಲಿಗಿಯ ಎನ್‌ಎಚ್‌ 50 (NH 50) ರಸ್ತೆ ಮೃತ್ಯಕೂಪವಾಗಿ ಪರಿಣಮಿಸುತ್ತಿದೆ. ಈ ರಸ್ತೆ ಪದೇ ಪದೆ ಅಪಘಾತಗಳಿಂದ ಸದ್ದು ಮಾಡುತ್ತಿದೆ. ಇದೀಗ ರಸ್ತೆ ವಿಭಜಕಕ್ಕೆ ಕಾರು ಡಿಕ್ಕಿಯಾಗಿ ಇಬ್ಬರು ಮೃತಪಟ್ಟಿದ್ದು, 5 ಮಂದಿ ಗಾಯಗೊಂಡಿದ್ದಾರೆ (Road Accident).

ಇತ್ತೀಚೆಗೆ ಕೂಡ್ಲಿಗಿಯ ಎನ್‌ಎಚ್‌ 50ರಲ್ಲಿ ಟಿಟಿ ಟ್ರಾವೆಲರ್‌ ಅಪಘಾತವಾಗಿ ಓರ್ವ ಮೃತಪಟ್ಟಿದ್ದರು. ಅದು ಮಾಸುವ ಮುನ್ನ ಈಗ ಮತ್ತೆ ಅದೇ ರೀತಿಯ ಅಪಫಾತ ನಡೆದು ಇಬ್ಬರನ್ನು ಬಲಿ ಪಡೆದಿದೆ. ವಿಜಯನಗರ ಜಿಲ್ಲೆಯ ಕೂಡ್ಲಿಗಿ ಪಟ್ಟಣದ ಹೊರವಲಯದ ರಾಷ್ಟ್ರೀಯ ಹೆದ್ದಾರಿ 50ರಲ್ಲಿ ಅಪಘಾತ ನಡೆದಿದ್ದು, ಮೃತರನ್ನು ಕಾರು ಚಾಲಕ ವಿನಯ್ (27) ಮತ್ತು ಚನ್ನವಸವ (27) ಎಂದು ಗುರುತಿಸಲಾಗಿದೆ.

ರಾಯಚೂರಿನ ಲಿಂಗಸೂಗೂರಿನಿಂದ ಕೇರಳದ ವಯನಾಡಿಗೆ ಹೊರಟಿದ್ದ ಗೆಳೆಯರ ತಂಡವಿದ್ದ ಕಾರು ಪಲ್ಟಿ ಹೊಡೆದು ಅವಘಡ ನಡೆದಿದೆ. ಅತೀ ವೇಗದಿಂದ ಬಂದ ಕಾರು ರಸ್ತೆ ವಿಭಜಕಕ್ಕೆ ಡಿಕ್ಕಿ ಹೊಡೆದಿತ್ತು. ಗಾಯಗೊಂಡ 5 ಮಂದಿಯನ್ನು ಕೂಡ್ಲಿಗಿ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಿ ಪ್ರಥಮ ಚಿಕಿತ್ಸೆ ನೀಡಲಾಗಿದೆ. ಹೆಚ್ಚಿನ ಚಿಕಿತ್ಸೆಗಾಗಿ ಮೂವರನ್ನು ಕೊಪ್ಪಳ ಜಿಲ್ಲಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೂಡ್ಲಿಗಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading
Advertisement
Ravindra jadeja
ಪ್ರಮುಖ ಸುದ್ದಿ10 mins ago

Ravindra Jadeja : ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ಆಲ್​ರೌಂಡರ್​ ರವೀಂದ್ರ ಜಡೇಜಾ ವಿದಾಯ

IND vs SA Final
ಕ್ರೀಡೆ24 mins ago

IND vs SA Final: 40 ಸಾವಿರ ಅಡಿ ಎತ್ತರದಲ್ಲಿಯೂ ಮೊಳಗಿದ ವಿಶ್ವಕಪ್​ ಗೆಲುವಿನ ಸಂಭ್ರಮ; ವಿಡಿಯೊ ವೈರಲ್​

Kids Fashion: Bunny Ears Head Bands for Kids' Cute Look!
ಫ್ಯಾಷನ್25 mins ago

Kids Fashion: ಮಕ್ಕಳ ಕ್ಯೂಟ್‌ ಲುಕ್‌ಗೆ ಸಾಥ್‌ ನೀಡುವ ಬನ್ನಿ ಇಯರ್ಸ್ ಹೆಡ್‌ ಬ್ಯಾಂಡ್ಸ್!

T20 World Cup 2024
ಕ್ರಿಕೆಟ್28 mins ago

T20 World Cup 2024 : ಚಾಂಪಿಯನ್ ಭಾರತಕ್ಕೆ ಪಾಕಿಸ್ತಾನ ಆಟಗಾರರು ಶುಭ ಕೋರಿದ್ದು ಹೀಗೆ…

Samarjit Lankesh gowri movie kannada release date announce
ಸ್ಯಾಂಡಲ್ ವುಡ್30 mins ago

Samarjit Lankesh: ಇಂದ್ರಜಿತ್ ಲಂಕೇಶ್ ಪುತ್ರ ಸಮರ್ಜಿತ್ ಅಭಿನಯದ `ಗೌರಿ’ ಸಿನಿಮಾ ರಿಲೀಸ್‌ ಡೇಟ್‌ ಅನೌನ್ಸ್‌!

kidnap Case
ಬೆಂಗಳೂರು35 mins ago

Kidnap case : ಕೋಟಿ ಆಸೆಗೆ ಸಿನಿಮಾ ಸ್ಟೈಲ್‌ನಲ್ಲಿ ಸ್ಟಾಕ್‌ ಮಾರ್ಕೆಟ್‌ ವಂಚಕನ ಕಿಡ್ನ್ಯಾಪ್‌

ಕರ್ನಾಟಕ35 mins ago

CM Post: ಬಿ.ಕೆ.ಹರಿಪ್ರಸಾದ್‌ರನ್ನು ಸಿಎಂ ಮಾಡಲು ಪ್ರಣವಾನಂದ ಶ್ರೀ ಒತ್ತಾಯ; ಕೇಳೋದ್ರಲ್ಲಿ ತಪ್ಪಿಲ್ಲ ಎಂದ ಜಮೀರ್‌

Actor Darshan case Jaggesh reaction about this
ಕ್ರೈಂ47 mins ago

Actor Darshan:  ದರ್ಶನ್‌‌‌‌‌‌ ವಿರುದ್ಧ ಪರೋಕ್ಷವಾಗಿ ಕೌಂಟರ್‌ ಕೊಟ್ಟ ನಟ ಜಗ್ಗೇಶ್!

Religion Conversion
ದೇಶ56 mins ago

Religion Conversion: 30 ಮುಸಲ್ಮಾನರು ಹಿಂದೂ ಧರ್ಮಕ್ಕೆ ಮತಾಂತರ

Job alert
ಉದ್ಯೋಗ58 mins ago

Job Alert: 10ನೇ ತರಗತಿ ಪಾಸಾದವರಿಗೆ ಸುವರ್ಣಾವಕಾಶ; ಕೋಸ್ಟ್‌ ಗಾರ್ಡ್‌ನಲ್ಲಿದೆ ಉದ್ಯೋಗಾವಕಾಶ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Actor Darshan
ಬೆಂಗಳೂರು5 hours ago

Actor Darshan : ಖೈದಿ ನಂ.6106ಕ್ಕೆ ಡಿಮ್ಯಾಂಡ್‌! ದರ್ಶನ್‌ ಫ್ಯಾನ್ಸ್‌ಗೆ ಕಾನೂನು ಕಂಟಕ, ರೂಲ್ಸ್‌ ಬ್ರೇಕ್‌ ಮಾಡಿದ್ರೆ ಬೀಳುತ್ತೆ ಕೇಸ್‌‌!

karnataka weather Forecast
ಮಳೆ1 day ago

Karnataka Weather : ಮಳೆಗೆ ಸ್ಕಿಡ್‌ ಆಗಿ ಹೇಮಾವತಿ ನದಿಗೆ ಹಾರಿದ ಕಾರು; ಕರಾವಳಿಗೆ ಎಚ್ಚರಿಕೆ ಕೊಟ್ಟ ತಜ್ಞರು

karnataka Rain
ಮಳೆ1 day ago

Karnataka Rain: ಭಾರಿ ಮಳೆಗೆ ಮನೆಗಳ ಗೋಡೆ ಕುಸಿತ; ಕೂದಲೆಳೆ ಅಂತರದಲ್ಲಿ ವೃದ್ಧ ಪಾರು

karnataka Weather Forecast
ಮಳೆ2 days ago

Karnataka Weather : ಅಬ್ಬಬ್ಬಾ.. ಮುಲ್ಕಿಯಲ್ಲಿ 30 ಸೆಂ.ಮೀ ಮಳೆ ದಾಖಲು; ವಾರಾಂತ್ಯದಲ್ಲೂ ಭಾರಿ ವರ್ಷಧಾರೆ

karnataka Rain
ಮಳೆ2 days ago

Karnataka Rain : ಭಾರಿ ಮಳೆಗೆ ಪಾತಾಳ ಸೇರಿದ ಬಾವಿ; ಅಲೆಗಳ ಹೊಡೆತಕ್ಕೆ ಸಮುದ್ರಪಾಲಾದ ಮನೆ

Karnataka Weather Forecast
ಮಳೆ3 days ago

Karnataka Weather : ಭಾರಿ ಮಳೆ ಹಿನ್ನೆಲೆ ದಕ್ಷಿಣ ಕನ್ನಡಕ್ಕೆ ರೆಡ್ ಅಲರ್ಟ್; ಶುಕ್ರವಾರವೂ ಶಾಲೆಗಳಿಗೆ ರಜೆ ಘೋಷಣೆ

karnataka Weather Forecast
ಮಳೆ3 days ago

Karnataka Weather : ಭಾರಿ ಮಳೆಗೆ ಸೇತುವೆಯಿಂದ ಹೊಳೆಗೆ ಬಿದ್ದ ಕಾರು; ಮರ ಹಿಡಿದು ಪ್ರಾಣ ಉಳಿಸಿಕೊಂಡ ಸವಾರರು

Heart Attack
ಕೊಡಗು3 days ago

Heart Attack : ಕೊಡಗಿನಲ್ಲಿ ಹೃದಯಾಘಾತಕ್ಕೆ ಯುವತಿ ಬಲಿ; ಹೆಚ್ಚಾಯ್ತು ಅಲ್ಪಾಯುಷ್ಯದ ಭಯ

karnataka Rains Effected
ಮಳೆ3 days ago

Karnataka Rain : ಧಾರಾಕಾರ ಮಳೆಗೆ ಸಡಿಲಗೊಂಡ ಗುಡ್ಡಗಳು; ಧರೆ ಕುಸಿದು ಮಣ್ಣಿನಡಿ ಸಿಲುಕಿದ ಇಬ್ಬರು ಮಕ್ಕಳು

karnataka Weather Forecast
ಮಳೆ6 days ago

Karnataka Weather : ಕರಾವಳಿಯಲ್ಲಿ ಮುಂದುವರಿದ ವರುಣಾರ್ಭಟ; ಸಾಂಪ್ರದಾಯಿಕ ಮೀನುಗಾರಿಕೆಗೂ ಬ್ರೇಕ್

ಟ್ರೆಂಡಿಂಗ್‌