ವಾಮಾಚಾರದ ಶಂಕೆ; 30 ವರ್ಷದ ಆದಿವಾಸಿ ಮಹಿಳೆಯನ್ನು ಜೀವಂತವಾಗಿ ಸುಟ್ಟ ನೀಚರು - Vistara News

ಕ್ರೈಂ

ವಾಮಾಚಾರದ ಶಂಕೆ; 30 ವರ್ಷದ ಆದಿವಾಸಿ ಮಹಿಳೆಯನ್ನು ಜೀವಂತವಾಗಿ ಸುಟ್ಟ ನೀಚರು

ವಾಮಾಚಾರದಲ್ಲಿ ಭಾಗಿಯಾಗಿದ್ದಾರೆ ಎಂಬ ಶಂಕೆಯಿಂದ ಅಸ್ಸಾಂನಲ್ಲಿ ಹಲವು ದುಷ್ಕರ್ಮಿಗಳು ಆದಿವಾಸಿ ಮಹಿಳೆಯೊಬ್ಬರ ಮೇಲೆ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾರೆ. ಇದಾದ ಬಳಿಕ ಮಹಿಳೆಯನ್ನು ಜೀವಂತವಾಗಿ ಸುಟ್ಟಿದ್ದಾರೆ ಎಂದು ತಿಳಿದುಬಂದಿದೆ.

VISTARANEWS.COM


on

Fire
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ದಿಸ್ಪುರ: ಆಧುನಿಕ ಜಗತ್ತಿನಲ್ಲೂ ಜನ ವಾಮಾಚಾರವನ್ನು (Practising Witchcraft) ನಂಬುವವರಿದ್ದಾರೆ. ಇದೇ ವಾಮಾಚಾರದ ಮೂಲಕ ಅಂದುಕೊಂಡಿದ್ದನ್ನು ಸಾಧಿಸಲು ಮನುಷ್ಯರನ್ನು, ಮಕ್ಕಳನ್ನು ಬಲಿ ಕೊಡುವ ದುಷ್ಟರು ಕೂಡ ಇದ್ದಾರೆ. ಇದೇ ವಾಮಾಚಾರಕ್ಕೆ ಅಸ್ಸಾಂನಲ್ಲಿ (Assam) ಆದಿವಾಸಿ ಮಹಿಳೆಯೊಬ್ಬರು (Adivasi Woman) ಬಲಿಯಾಗಿದ್ದಾರೆ. ವಾಮಾಚಾರದಲ್ಲಿ ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಅಸ್ಸಾಂನಲ್ಲಿ ದುಷ್ಕರ್ಮಿಗಳು ಆದಿವಾಸಿ ಮಹಿಳೆಯೊಬ್ಬರನ್ನು ಜೀವಂತವಾಗಿ ಸುಟ್ಟುಹಾಕಿದ್ದಾರೆ. ಮಹಿಳೆಯು ಮೂರು ಮಕ್ಕಳ ತಾಯಿ ಎಂದು ತಿಳಿದುಬಂದಿದೆ.

ಅಸ್ಸಾಂನ ಸೋನಿತ್‌ಪುರ ಜಿಲ್ಲೆಯ ನಿಜ್‌ ಬಾಹ್‌ಬರಿ ಗ್ರಾಮದ ಹೊರವಲಯದಲ್ಲಿ 30 ವರ್ಷದ ಸಂಗೀತಾ ಕಾಟಿ ಎಂಬ ಆದಿವಾಸಿ ಮಹಿಳೆಯನ್ನು ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಮಹಿಳೆಯು ವಾಮಾಚಾರದಲ್ಲಿ ತೊಡಗಿದ್ದಾರೆ, ಇದರಿಂದ ನಮಗೆ ಕೆಡಕಾಗುತ್ತದೆ ಎಂದು ಭಾವಿಸಿದ ದುಷ್ಕರ್ಮಿಗಳು ಮಹಿಳೆಯ ಮೇಲೆ ಮೊದಲು ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿದ್ದಾರೆ. ಮಹಿಳೆಯ ಪತಿಯನ್ನು ಕಟ್ಟಿಹಾಕಿ, ಆತನ ಎದುರೇ ಮಹಿಳೆ ಮೇಲೆ ಹಲ್ಲೆ ನಡೆಸಿದ್ದಾರೆ. ಇದಾದ ಬಳಿಕ ಜೀವಂತವಾಗಿ ಸುಟ್ಟುಹಾಕಿದ್ದಾರೆ ಎಂಬುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.

ಪಕ್ಕದ ಮನೆಯವರೇ ಕುಡಿದ ಮತ್ತಿನಲ್ಲಿ ಆದಿವಾಸಿ ಮಹಿಳೆಯನ್ನು ಹತ್ಯೆ ಮಾಡಿದ್ದಾರೆ ಎಂದು ತಿಳಿದುಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಈಗಾಗಲೇ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ. ಅಲ್ಲದೆ, ತಲೆಮರೆಸಿಕೊಂಡಿರುವ ಮತ್ತಿಬ್ಬರಿಗಾಗಿ ಬಲೆ ಬೀಸಿದ್ದಾರೆ. “ಮಹಿಳೆಯು ವಾಮಾಚಾರದಲ್ಲಿ ತೊಡಗಿದ್ದಾಳೆ ಎಂದು ಹಲವು ದುಷ್ಕರ್ಮಿಗಳು ಕುಡಿದ ಮತ್ತಿನಲ್ಲಿ ಮಹಿಳೆ ಮೇಲೆ ಹಲ್ಲೆ ನಡೆಸಿದ್ದಾರೆ. ಹಲ್ಲೆ ಬಳಿಕ ಆಕೆಯನ್ನು ಜೀವಂತವಾಗಿ ಸುಟ್ಟಿದ್ದಾರೆ” ಎಂದು ಹೆಚ್ಚುವರಿ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಮಧುರಿಮಾ ದಾಸ್‌ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: Physical Abuse: ಮನೆಗೆಲಸಕ್ಕೆ ಬಂದ ದಲಿತ ಮಹಿಳೆ ಮೇಲೆ ಅತ್ಯಾಚಾರ; ದೇಹ ತುಂಡರಿಸಿದ ಕಟುಕರು

ಹತ್ಯೆ ಮಾಡಿದವರು ಪಕ್ಕದ ಮನೆಯವರು ಎಂದು ತಿಳಿದುಬಂದಿದೆ. ಕೆಲ ತಿಂಗಳಿಂದ ಮಹಿಳೆಯ ಕುಟುಂಬಸ್ಥರು ಹಾಗೂ ಪಕ್ಕದ ಮನೆಯವರ ಮಧ್ಯೆ ಗಲಾಟೆ ನಡೆದಿತ್ತು. ಎರಡೂ ಕುಟುಂಬಗಳು ದ್ವೇಷ ಕಾರುತ್ತಿದ್ದವು. ಇದೇ ಕಾರಣದಿಂದಾಗಿ ಮಹಿಳೆಯು ವಾಮಾಚಾರ ಮಾಡಿಸುತ್ತಿದ್ದಾಳೆ. ನಮ್ಮ ಕುಟುಂಬವನ್ನು ಹಣಿಯುತ್ತಾಳೆ ಎಂದು ಭಾವಿಸಿದ ದುಷ್ಕರ್ಮಿಗಳು ಬೆಂಕಿ ಹಚ್ಚಿ ಸುಟ್ಟಿದ್ದಾರೆ ಎಂದು ಮೂಲಗಳು ತಿಳಿಸಿವೆ. ಡಿಸೆಂಬರ್‌ನಲ್ಲಿಯೇ ನಾಗ್ಪುರದಲ್ಲಿ ವಾಮಾಚಾರದ ಭಾಗವಾಗಿ ವೃದ್ಧ ದಂಪತಿ ಹಾಗೂ ಅವರ ಮೊಮ್ಮಗಳನ್ನು ದುಷ್ಕರ್ಮಿಗಳು ಕೊಲೆ ಮಾಡಿದ್ದರು. ಇದೇ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಒಂಬತ್ತು ಆರೋಪಿಗಳನ್ನು ಬಂಧಿಸಿದ್ದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಬೆಂಗಳೂರು

Traffic Violation : ಬೆಂಗಳೂರಿಗರೇ ದಿನಗಟ್ಟಲೇ ರಸ್ತೆ ಬದಿ ವಾಹನ ಪಾರ್ಕ್‌ ಮಾಡಿದ್ರೆ ಸೀಜ್‌ ಆಗುತ್ತೆ ಎಚ್ಚರ

Traffic Violation : ದಿನಗಟ್ಟಲೆ ಒಂದೇ ಸ್ಥಳದಲ್ಲಿ ವಾಹನವನ್ನು ನಿಲ್ಲಿಸುವ ಸವಾರರಿಗೆ ಬೆಂಗಳೂರು ಸಂಚಾರಿ ಪೊಲೀಸರು ಬಿಸಿ ಮುಟ್ಟಿಸುತ್ತಿದ್ದಾರೆ. ಸುದೀರ್ಘವಾಗಿ ಪಾರ್ಕ್ ಮಾಡಿರುವ ವಾಹನಗಳನ್ನು ಕಿಡಿಗೇಡಿಗಳು ಕಳವು ಮಾಡಿ ಕ್ರಿಮಿನಲ್ ಪ್ರಕರಣಗಳಿಗೆ ಬಳಸುವ ಸಾಧ್ಯತೆ ಇದೆ. ಹೀಗಾಗಿ ಅಂತಹ ವಾಹನಗಳನ್ನು ಸೀಜ್‌ (Vehicle‌ seize) ಮಾಡಲಾಗುತ್ತಿದೆ.

VISTARANEWS.COM


on

By

Traffic Violation Vehicle‌ seize
ಸಾಂದರ್ಭಿಕ ಚಿತ್ರ
Koo

ಬೆಂಗಳೂರು: ಬೆಂಗಳೂರು ನಗರದಲ್ಲಿ ಮೊದಲೇ ಪಾರ್ಕಿಂಗ್‌ (Traffic Violation) ಸಮಸ್ಯೆ ಹೆಚ್ಚಿದೆ. ಹೀಗಿರುವಾಗ ದಿನವಿಡೀ ಒಂದೇ ಸ್ಥಳದಲ್ಲಿ ವಾಹನವನ್ನು ಪಾರ್ಕ್‌ ಮಾಡಿ (Vehicle Parking) ಹೋಗುವವರಿಗೆ ಇನ್ಮೇಲೆ ಸಂಕಷ್ಟ ಎದುರಾಗಲಿದೆ. ಬೆಂಗಳೂರು ಸಂಚಾರಿ ಪೊಲೀಸರು (Bengaluru Traffic Police) ಬಿಸಿ ಮುಟ್ಟಿಸಲು ಶುರು ಮಾಡಿದ್ದಾರೆ.

ನಗರದಲ್ಲಿ ಟೋಯಿಂಗ್ ನಿಂತು ಹೋಗಿದೆ. ಬಹುತೇಕ ಡಿಜಿಟಲ್ ಆಗಿರುವ ಕಾರಣ ಟ್ರಾಫಿಕ್ ಫೈನ್‌ಗಳೂ ಕೂಡ ಡಿಜಿಟಲೈಸ್ ಆಗಿದೆ. ಇದರಿಂದ ಡಿಡಿ ಕೇಸ್‌ಗಳು ಬಿಟ್ಟು ಬೇರೆ ಟ್ರಾಫಿಕ್ ಅಫೆನ್ಸ್‌ಗಳಿಗಾಗಿ ಪೊಲೀಸರು ರಸ್ತೆಯ ತಿರುವಿನಲ್ಲಿ ಕೂಡ ನಿಲ್ಲುತ್ತಿಲ್ಲ. ಇದನ್ನೇ ಕೆಲವರು ದುರುಪಯೋಗ ಮಾಡಿಕೊಳ್ಳುತ್ತಿದ್ದಾರೆ.

ಈ ಹಿಂದೆ ಟೋಯಿಂಗ್ ಅವರು ಹಿಂಸೆ ಕೊಡುತ್ತಾರೆ ಎಂದು ಎಲ್ಲೆಡೆ ವ್ಯಾಪಕವಾಗಿ ಆಕ್ರೋಶ ವ್ಯಕ್ತವಾಗಿತ್ತು. ಆದರೆ ಕೆಲವರು ಈಗಲೂ ನಡು ರಸ್ತೆಯಲ್ಲಿ ಅಡ್ಡಾದಿಡ್ಡಿ ವಾಹನಗಳನ್ನು ನಿಲ್ಲಿಸಿ, ಉಳಿದ ವಾಹನ ಸವಾರರಿಗೆ ತೊಂದರೆ ಕೊಡುತ್ತಿರುವುದಂತೂ ಸತ್ಯ. ಒಂದೇ ಸ್ಥಳದಲ್ಲಿ ದಿನವಿಡೀ ವಾಹನ ಪಾರ್ಕಿಂಗ್ ಮಾಡೋದ್ರಿಂದ, ಅಗತ್ಯ ಇರುವ ಇತರೆ ಸವಾರರಿಗೆ ನಿಜಕ್ಕೂ ತೊಂದರೆ ಆಗುತ್ತಿದೆ.

ಇದನ್ನೂ ಓದಿ: Traffic Violation : ಪೆಟ್ರೋಲ್ ಖಾಲಿಯಾಗಿ ರಸ್ತೆಯಲ್ಲಿ ವಾಹನ ನಿಂತುಬಿಟ್ಟರೆ ಚಾಲಕನ ಮೇಲೆ ಕೇಸ್!

ಸದ್ಯ ದಿನಗಟ್ಟಲೆ ವಾಹನವನ್ನು ಒಂದೇ ಕಡೆ ನಿಲ್ಲಿಸಿದವರಿಗೆ ಸಂಚಾರಿ ಪೊಲೀಸರು ಬಿಸಿ ಮುಟ್ಟಿಸಿದ್ದಾರೆ. ಪಾರ್ಕಿಂಗ್ ಸ್ಥಳವು ತುರ್ತು ಇದ್ದವರಿಗೆ ಉಪಯೋಗ ಆಗುತ್ತಿಲ್ಲ. ಪಾರ್ಕಿಂಗ್ ಜಾಗ ಇದೆ ಎಂದು ಕೆಲವರು ದಿನಗಟ್ಟಲೆ ವಾಹನಗಳನ್ನು ನಿಲ್ಲಿಸಿ ಹೋಗುವುದನ್ನು ಸಂಚಾರಿ ಪೊಲೀಸರು ಗಮನಿಸಿದ್ದಾರೆ.

ಈ ಹಿನ್ನೆಲೆಯಲ್ಲಿ ನಗರದ ವಿವಿಧೆಡೆ ಕಾರ್ಯಾಚರಣೆ ನಡೆಸಿ ಹಲವು ಬೈಕ್‌ಗಳನ್ನು ಪೊಲೀಸರು ಜಪ್ತಿ ಮಾಡಿದ್ದಾರೆ. ಸಿಸಿಟಿವಿ ವಿಡಿಯೊ ಧರಿಸಿ ಸಮಯವನ್ನು ಪತ್ತೆ ಮಾಡಿರುವ ಪೊಲೀಸರು, ಚಾಲಕರ ವಿರುದ್ಧ ಕ್ರಮ ಕೈಗೊಂಡಿದ್ದಾರೆ. ಅಷ್ಟೆ ಅಲ್ಲದೆ ವಾಹನ ಅಡ್ಡಾದಿಡ್ಡಿ ನಿಲ್ಲಿಸಿದ ಕಾರಣ ಫುಟ್ ಪಾತ್‌ನಲ್ಲಿ ಓಡಾಡುವವರಿಗೆ ತೊಂದರೆ ಆಗುತ್ತಿದೆ. ಹೀಗಾಗಿ ಅಂತಹ ವಾಹನಗಳನ್ನು ಜಪ್ತಿ ಮಾಡಲಾಗಿದೆ.

ಈ ಕಾರ್ಯಾಚರಣೆಯಲ್ಲಿ ಇಲ್ಲಿಯವರೆಗೆ 1,300 ಬೈಕ್‌ಗಳನ್ನು ಜಪ್ತಿ ಮಾಡಲಾಗಿದೆ. ಜಪ್ತಿ ಮಾಡಿದ ವಾಹನಗಳನ್ನು ಬಿಡಿಸಿಕೊಂಡು ಹೋಗದೆ ಇದ್ದರೆ ಅದನ್ನು ಹರಾಜು ಹಾಕಲಾಗುತ್ತಿದೆ. ಕಳೆದ ಮೂರು ತಿಂಗಳಲ್ಲಿ 1,500 ವಾಹನಗಳನ್ನು ಜಪ್ತಿ ಮಾಡಲಾಗಿದ್ದು, 1,388 ಮಾಲೀಕರು ದಂಡಕಟ್ಟಿ ವಾಹನವನ್ನು ಬಿಡಿಸಿಕೊಂಡು ಹೋಗಿದ್ದಾರೆ. ಇನ್ನೂ ನಂಬರ್ ಪ್ಲೇಟ್ ಇಲ್ಲದ 64 ವಾಹನಗಳು ಮೈಲಸಂದ್ರ ಪಾರ್ಕಿಂಗ್ ಯಾರ್ಡ್‌ಗೆ ಹಸ್ತಾಂತರ ಮಾಡಲಾಗಿದೆ. ಮಾಲೀಕರು ಪತ್ತೆಯಾಗದ ವಾಹನಗಳನ್ನು ನ್ಯಾಯಾಲಯದ ಅನುಮತಿ ಪಡೆದು ಹರಾಜು ಹಾಕಲಾಗುತ್ತದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಬಳ್ಳಾರಿ

Bellary VIMS Hospital : ಲೇಡಿ ಡಾಕ್ಟರ್‌ ಜುಟ್ಟು ಹಿಡಿದು ಎಳೆದಾಡಿ ಹೊಡೆದ; ವಿಮ್ಸ್‌ ಆಸ್ಪತ್ರೆಯಲ್ಲಿ ದಿಢೀರ್‌ ಪ್ರತಿಭಟನೆ

VIMS Hospital : ತಂದೆ ಸಾವಿನಿಂದ ಸಿಟ್ಟಾದ ವ್ಯಕ್ತಿಯೊಬ್ಬ ವಿಮ್ಸ್‌ ಆಸ್ಪತ್ರೆಯ ವೈದ್ಯೆಗೆ ಹಲ್ಲೆ ನಡೆಸಿದ್ದಾನೆ. ಮಹಿಳಾ ವೈದ್ಯೆಯ ಜುಟ್ಟು ಹಿಡಿದು ಎಳೆದಾಡಿ ಮಾರಣಾಂತಿಕ ಹಲ್ಲೆ (Assault Case) ನಡೆಸಿದ್ದು, ಇದನ್ನೂ ವಿರೋಧಿಸಿ ವೈದ್ಯಕೀಯ ವಿದ್ಯಾರ್ಥಿಗಳು (Bellary VIMS Hospital) ಪ್ರತಿಭಟಿಸಿದ್ದಾರೆ.

VISTARANEWS.COM


on

By

Bellary VIMS Hospital
Koo

ಬಳ್ಳಾರಿ: ವಿಮ್ಸ್‌ ಆಸ್ಪತ್ರೆಯಲ್ಲಿ (Bellary VIMS Hospital) ಚಿಕಿತ್ಸೆ ಪಡೆಯುತ್ತಿದ್ದ ತಂದೆ ವೈದ್ಯರ ನಿರ್ಲಕ್ಷ್ಯದಿಂದಲೇ (Medical Negligence) ಸಾವನ್ನಪ್ಪಿದ್ದಾರೆ ಎಂದು ಸಿಟ್ಟಾದ ಮಗನೊಬ್ಬ ವಿಮ್ಸ್‌ನ ಮಹಿಳಾ (VIMS Hospital ) ವೈದ್ಯೆ ಮೇಲೆ ಹಲ್ಲೆ (Assault Case) ನಡೆಸಿದ್ದಾನೆ. ವೈದ್ಯೆಯ ತಲೆ ಜುಟ್ಟು ಹಿಡಿದು ಎಳೆದಾಡಿ ಹಲ್ಲೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದಿದೆ. ವೈದ್ಯೆ ಮೇಲಿನ ಹಲ್ಲೆ ಖಂಡಿಸಿ ಬಳ್ಳಾರಿಯ ವಿಮ್ಸ್ ತುರ್ತು ಚಿಕಿತ್ಸಾ ಘಟಕದ ಮುಂದೆ ವೈದ್ಯಕೀಯ ವಿದ್ಯಾರ್ಥಿಗಳು ಸೋಮವಾರ ತಡರಾತ್ರಿ ದಿಢೀರ್ ಪ್ರತಿಭಟಿಸಿದರು. ವೈದ್ಯರ ರಕ್ಷಣೆ ಕೋರಿ ವಿದ್ಯಾರ್ಥಿಗಳು ಪ್ರತಿಭಟಿಸಿದರು.

ಗೂಡಾರ್‌ನಗರ ನಾಗೇಶ್ ಎಂಬಾತ ಕರ್ತವ್ಯ ನಿರತ ವೈದ್ಯೆ ಮೇಲೆ ಹಲ್ಲೆ ನಡೆಸಿದ್ದಾನೆ. ನಾಗೇಶ್‌ನ ತಂದೆ ಅನಾರೋಗ್ಯದಿಂದ ವಿಮ್ಸ್‌ಗೆ ದಾಖಲಾಗಿದ್ದರು. ಆದರೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಕ್ಕೆ ಆಕ್ರೋಶಗೊಂಡ ನಾಗೇಶ್‌ ಕರ್ತವ್ಯದಲ್ಲಿದ್ದ ವೈದ್ಯೆ ಮೇಲೆ ಏಕಾಏಕಿ ಹಲ್ಲೆ ನಡೆಸಿದ್ದಾರೆ.

ಸೆಕ್ಯುರಿಟಿ ಸಮಸ್ಯೆಯಿಂದಲೇ ಹೀಗೆ ವೈದ್ಯರ ಮೇಲೆ ಹಲ್ಲೆ ನಡೆಯುತ್ತಿದೆ. ವಿಮ್ಸ್‌ನಲ್ಲಿ ಭದ್ರತಾ ಸಿಬ್ಬಂದಿ ಹೆಚ್ಚಳ ಮಾಡಬೇಕೆಂದು ಆಗ್ರಹಿಸಿದರು. ವಿಷಯ ತಿಳಿಯುತ್ತಿದ್ದಂತೆ ತಡರಾತ್ರಿ ಘಟನಾ ಸ್ಥಳಕ್ಕೆ ಆಗಮಿಸಿದ ವಿಮ್ಸ್ ನಿರ್ದೇಶಕ ಡಾ.ಗಂಗಾಧರ‌ಗೌಡ್ ಹಾಗೂ ಕೌಲ್‌ಬಜಾರ್ ಪೊಲೀಸರು ಪರಿಸ್ಥಿತಿಯನ್ನು ತಿಳಿಗೊಳಿಸಿದರು.

ಹಲ್ಲೆ ನಡೆಸಿದವರ ವಿರುದ್ಧ ಕ್ರಮವಹಿಸಲಾಗುವುದು. ಜತೆಗೆ ವಿಮ್ಸ್‌ ಆಸ್ಪತ್ರೆಯಲ್ಲಿ ಕೆಲಸ ಮಾಡುವವರಿಗೆ ಸೂಕ್ತ ರೀತಿಯ ಭದ್ರತೆಯನ್ನು ವಹಿಸಲಾಗುವುದು ಎಂದು ಭರವಸೆ ನೀಡಿದರು. ಹೀಗಾಗಿ ದಿಢೀರ್‌ ಕೈಗೊಂಡ ಪ್ರತಿಭಟನೆಯನ್ನು ಕೈಬಿಟ್ಟಿದ್ದಾರೆ.

ಇದನ್ನೂ ಓದಿ: Election Results 2024: ಜಯನಗರ ಮತ ಎಣಿಕೆ ಕೇಂದ್ರದಲ್ಲಿ ಟಿ ಶರ್ಟ್‌ ಕಿರಿಕ್‌; ಕೆಆರ್‌ಎಸ್ ಪಾರ್ಟಿಯ ಅಭ್ಯರ್ಥಿ ಔಟ್‌

ಪ್ರತ್ಯೇಕ ಕಡೆ‌ ಕರೆಂಟ್‌ ಶಾಕ್‌ಗೆ ಲೈನ್‌ಮ್ಯಾನ್‌ ಸೇರಿ ಹಸು ಬಲಿ

ಉಡುಪಿ/ ಆನೇಕಲ್‌: ವಿದ್ಯುತ್ ಟ್ರಾನ್ಸ್‌ಫಾರ್ಮರ್ ರಿಪೇರಿ ಮಾಡುವ ವೇಳೆ ವಿದ್ಯುತ್ ಪ್ರವಹಿಸಿ (Electric shock) ಲೈನ್‌ಮ್ಯಾನ್ ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ. ಉಡುಪಿಯ ಬೈಂದೂರು ತಾಲೂಕಿನ ತಗ್ಗರ್ಸೆ ಗ್ರಾಮದ ಹೆಗ್ಗೇರಿಯಲ್ಲಿ ಅವಘಡ ನಡೆದಿದೆ.

ಲೈನ್ ಮ್ಯಾನ್ ಸಲೀಂ (38) ಮೃತ ದುರ್ದೈವಿ. ಟ್ರಾನ್ಸ್‌ಫಾರ್ಮರ್ ಬಳಿ ವಿದ್ಯುತ್ ಸಂಪರ್ಕ ರಿಪೇರಿ ಮಾಡುವಾಗ ಶಾಕ್‌ ಹೊಡೆದಿದೆ ಪರಿಣಾಮ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಉತ್ತರ ಕರ್ನಾಟಕದ ಮುಂಡಗೋಡು ನಿವಾಸಿಯಾಗಿರುವ ಸಲೀಂ, ಬೈಂದೂರು ಮೆಸ್ಕಾಂನಲ್ಲಿ ಕಳೆದ ಎಂಟು ವರ್ಷದಿಂದ ಸೇವೆ ಸಲ್ಲಿಸುತ್ತಿದ್ದಾರೆ. ಬೈಂದೂರಿನಲ್ಲಿ ಸಲೀಂ ಜನಸ್ನೇಹಿ ಲೈನ್‌ಮ್ಯಾನ್ ಆಗಿದ್ದರು.

ಇದನ್ನೂ ಓದಿ: Road Accident : ಎದುರಿಗೆ ಬಂದ ಬೈಕ್‌ ತಪ್ಪಿಸಲು ಹೋಗಿ ಮಹಿಳೆಗೆ ಗುದ್ದಿದ ಕಾರು; ಎಗರಿ ಬಿದ್ದವಳು ಸ್ಥಳದಲ್ಲೇ ಸಾವು

ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಮೂಕಜೀವಿ ಬಲಿ

ಬೆಂಗಳೂರು ಹೊರವಲಯ ಜಿಗಣಿ ಸಮೀಪದ ಮಂಚನಹಳ್ಳಿಯಲ್ಲಿ ವಿದ್ಯುತ್ ಶಾಕ್‌ನಿಂದ ಹಸುವೊಂದು ದಾರುಣವಾಗಿ ಮೃತಪಟ್ಟಿದೆ. ಕರೆಂಟ್ ಶಾಕ್‌ನಿಂದ ಹಸು ಮೃತಪಡುವ ದೃಶ್ಯ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಕರಗಪ್ಪ ಎಂಬುವವರು ಹಸುಗಳನ್ನ ಮೇಯಿಸಿಕೊಂಡು ರಸ್ತೆಯಲ್ಲಿ ನಡೆದು ಬರುತ್ತಿದ್ದರು. ಈ ವೇಳೆ ವಿದ್ಯುತ್ ಕಂಬದ ಬಳಿ ಕರೆಂಟ್ ಗ್ರೌಂಡಿಂಗ್ ಆಗಿ ಹಸು ಮೃತಪಟ್ಟಿದೆ. ಇದೇ ರೀತಿ ನಾಲ್ಕೈದು ಹಸುಗಳಿಗೆ ಅದೇ ಜಾಗದಲ್ಲಿ ಗ್ರೌಂಡಿಂಗ್‌ನಿಂದ ಶಾಕ್ ಆಗಿದೆ.

ರೈತನ ಜೀವನಾಧಾರೆಯಾಗಿದ್ದ ಹಸು ಮೃತಪಟ್ಟಿದ್ದಕ್ಕೆ ಜಿಗಣಿ ಬೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಕಾರಣವೆಂದು ಆರೋಪಿಸಿದ್ದಾರೆ. ಒಂದು ಲಕ್ಷಕ್ಕೂ ಬೆಲೆಬಾಳುವ ಹಸುವನ್ನು ಕಳೆದುಕೊಂಡ ರೈತ ಕಂಗಾಲಾಗಿದ್ದಾರೆ. ಬೆಸ್ಕಾಂ ಇಲಾಖೆ ಸೂಕ್ತ ಪರಿಹಾರ ಕಲ್ಪಿಸಿಕೊಡಬೇಕೆಂದು ಕರಗಪ್ಪ ಒತ್ತಾಯಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಕರ್ನಾಟಕ

Road Accident: ಕೊಲ್ಹಾಪುರದಲ್ಲಿ ಭೀಕರ ಅಪಘಾತ; ಬೈಕ್‌ಗಳಿಗೆ ಕಾರು ಡಿಕ್ಕಿಯಾಗಿ ಪಲ್ಟಿ, ಮೂವರ ದುರ್ಮರಣ

Road Accident: ಮಹಾರಾಷ್ಟ್ರದ ಕೊಲ್ಹಾಪುರ ನಗರದಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಮೂವರು ಮೃತಪಟ್ಟಿದ್ದಾರೆ.

VISTARANEWS.COM


on

Road Accident
Koo

ಬೆಳಗಾವಿ: ಮಹಾರಾಷ್ಟ್ರದ ಕೊಲ್ಹಾಪುರ ನಗರದಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ (Road Accident) ಮೂವರು ಮೃತಪಟ್ಟು, ಮೂವರಿಗೆ ಗಂಭೀರ ಗಾಯಗಳಾಗಿರುವ ಘಟನೆ ಸೋಮವಾರ ನಡೆದಿದೆ. ವೇಗವಾಗಿ ಬಂದು ಬೈಕ್ ಸವಾರರ ಮೇಲೆ ಸ್ಯಾಂಟ್ರೋ ಕಾರು ಹರಿದಿದ್ದರಿಂದ ದುರಂತ ಸಂಭವಿಸಿದೆ.

ಅಪಘಾತದಲ್ಲಿ ಇಬ್ಬರು ಬೈಕ್ ಸವಾರರು ಹಾಗೂ ಕಾರು ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕೊಲ್ಹಾಪುರ ನಗರದ ಸೈಬರ್ ಚೌಕದಲ್ಲಿ ಘಟನೆ ನಡೆದಿದ್ದು, ಅತಿ ವೇಗವಾಗಿ ಬಂದ ಕಾರು ಮೂರು ಬೈಕ್‌ಗಳಿಗೆ ಡಿಕ್ಕಿ ಹೊಡೆದಿದೆ. ನಂತರ ಮುಂದೆ ಹೋಗಿ ಕಾರು ಗೋಡೆಗೆ ಗುದ್ದಿದ್ದರಿಂದ ಚಾಲಕ ಮೃತಪಟ್ಟಿದ್ದಾನೆ. ಭಯಾನಕ ಅಪಘಾತದ ದೃಶ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಕಾರು ಡಿಕ್ಕಿಯಾದ ರಭಸಕ್ಕೆ ಇಬ್ಬರು ಬೈಕ್ ಸವಾರರು ಹಾರಿ ಹೋಗಿ ಬಿದ್ದು ಪ್ರಾಣ ಬಿಟ್ಟಿದ್ದಾರೆ.

ಇನ್ನುಳಿದ ಮೂವರು ಗಾಯಾಗಳುಗಳಿಗೆ ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಕಾರಿನ ಬ್ರೆಕ್ ಫೇಲ್ ಆದ ಹಿನ್ನೆಲೆಯಲ್ಲಿ ಅಪಘಾತ ನಡೆದಿರುವ ಶಂಕೆ ವ್ಯಕ್ತವಾಗಿದೆ. ಕೊಲ್ಹಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಳ್ಳತನ ಆರೋಪ ಹೊರಿಸಿದ್ದಕ್ಕೆ ಸೆಕ್ಯೂರಿಟಿ ಗಾರ್ಡ್‌ ಆತ್ಮಹತ್ಯೆ

ಮೈಸೂರು: ಕಳ್ಳತನ ಆರೋಪ ಹೊರಿಸಿದ್ದಾರೆ ಎಂದು ಮನನೊಂದು ಸೆಕ್ಯೂರಿಟಿ ಗಾರ್ಡ್‌ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಂಜನಗೂಡು ಟೌನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮಾಡದ ತಪ್ಪಿಗೆ ನನ್ನ ಹೊಣೆ ಮಾಡಿದ್ದಾರೆ ಎಂದು ಆರೋಪಿಸಿ, ವಿಡಿಯೊ ಮಾಡಿ ವ್ಯಕ್ತಿ ಆತ್ಮಹತ್ಯೆಗೆ ಶರಣಾಗಿದ್ದಾರೆ.

ಇದನ್ನೂ ಓದಿ | Viral News: ಕದಿಯಲು ಬಂದ ಮನೆಯಲ್ಲೇ ನಿದ್ದೆಹೋದ ಕಳ್ಳ; ಪೊಲೀಸರೇ ಎಬ್ಬಿಸಬೇಕಾಯಿತು!

ಮಹದೇವ ನಗರದ ನಿವಾಸಿ ನಂಜೇಶ್ ಮೃತರು. ಕಲ್ಮಲ್ಲಿ ವ್ಯಾಪ್ತಿಯ ಕೈಗಾರಿಕಾ ಪ್ರದೇಶದ ರೆಹಾನ್ಸ್ ಕಾರ್ಖಾನೆಯಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿದ್ದ ನಂಜೇಶ್, ಫ್ಯಾಕ್ಟರಿ ಆವರಣದಲ್ಲೇ ನೇಣು ಬಿಗಿದುಕೊಂಡು ಅತ್ಮಹತ್ಯೆ ಮಾಡಿಕೊಂಡಿದ್ದಾರೆ. ನಾನು ಮಾಡದ ತಪ್ಪಿಗೆ ನನ್ನ ಹೊಣೆ ಮಾಡಿದ್ದಾರೆ. ಹೆಂಡತಿ, ಮಕ್ಕಳಿಗೆ ಕ್ಷಮೆಯಾಚಿಸುವೆ. ಗೋವಿಂದ, ರಾಜು ಹಾಗೂ ಪೊಲೀಸರು ಕಿರುಕುಳ ನೀಡಿದ್ದಾರೆ ಎಂದು ಸಾವಿಗೂ ಮುನ್ನ ವಿಡಿಯೊದಲ್ಲಿ ಆರೋಪಿಸಿದ್ದಾರೆ.

Continue Reading

ಕರ್ನಾಟಕ

Rave Party: ರೇವ್‌ ಪಾರ್ಟಿ ಕೇಸ್‌ನಲ್ಲಿ ತೆಲುಗು ನಟಿ ಹೇಮಾಗೆ 12 ದಿನ ನ್ಯಾಯಾಂಗ ಬಂಧನ

Rave Party: ಮೇ 19ರಂದು ಎಲೆಕ್ಟ್ರಾನಿಕ್‌ ಸಿಟಿಯಲ್ಲಿ ನಡೆದಿದ್ದ ರೇವ್‌ ಪಾರ್ಟಿ ಪ್ರಕರಣದಲ್ಲಿ 103 ಮಂದಿ ವಿರುದ್ಧ ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿತ್ತು. ಮಾದಕ ವಸ್ತು ಸೇವನೆ ಆರೋಪದಲ್ಲಿ ತೆಲುಗು ನಟಿ ಹೇಮಾ ಅವರನ್ನು ಬಂಧಿಸಲಾಗಿದೆ.

VISTARANEWS.COM


on

Rave Party
Koo

ಬೆಂಗಳೂರು: ರೇವ್‌ ಪಾರ್ಟಿ ಪ್ರಕರಣದಲ್ಲಿ (Rave Party) ಬಂಧನವಾಗಿದ್ದ ತೆಲುಗು ನಟಿ ಹೇಮಾ ಅವರಿಗೆ 12 ದಿನ ನ್ಯಾಯಾಂಗ ಬಂಧನ ವಿಧಿಸಲಾಗಿದೆ. ಪ್ರಕರಣದ ವಿಚಾರಣೆ ನಡೆಸಿದ ಬಳಿಕ ಆನೇಕಲ್‌ನ 4ನೇ ಹೆಚ್ಚುವರಿ ಸಿವಿಲ್ ಮತ್ತು ಜೆ.ಎಮ್.ಎಫ್.ಸಿ ನ್ಯಾಯಾಧೀಶೆ ಸಲ್ಮಾ .ಎ.ಎಸ್ ಅವರು, ನಟಿ ಹೇಮಾ ಅವರನ್ನು ಜೂನ್‌ 14ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲು ಆದೇಶಿಸಿದ್ದಾರೆ.

ಮೇ 19ರಂದು ಎಲೆಕ್ಟ್ರಾನಿಕ್‌ ಸಿಟಿಯ (Electronic city) ಫಾರ್ಮ್‌ ಹೌಸ್‌ನಲ್ಲಿ ನಡೆದ ರೇವ್‌ ಪಾರ್ಟಿಯಲ್ಲಿ ಭಾಗಿಯಾಗಿದ್ದ 103 ಮಂದಿ ವಿರುದ್ಧ ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್‌ ದಾಖಲಾಗಿತ್ತು. ವೈದ್ಯಕೀಯ ತಪಾಸಣೆಯಲ್ಲಿ ನಟಿ ಹೇಮಾ ಸೇರಿ 86 ಮಂದಿ ಮಾದಕ ವಸ್ತು ಸೇವನೆ ಮಾಡಿರುವುದು ದೃಢಪಟ್ಟಿತ್ತು. ಹೀಗಾಗಿ ವಿಚಾರಣೆಗೆ ಹಾಜರಾಗುವಂತೆ ನೋಟಿಸ್ ನೀಡಿದ್ದ ಹಿನ್ನೆಲೆಯಲ್ಲಿ ಸಿಸಿಬಿ ಕಚೇರಿಗೆ ಸೋಮವಾರ ಸಂಜೆ ನಟಿ ಹೇಮಾ ಹಾಜರಾಗಿದ್ದರು. ಈ ವೇಳೆ ಅವರನ್ನು ಅಧಿಕಾರಿಗಳು ಬಂಧಿಸಿದ್ದರು.

ರೇವ್ ಪಾರ್ಟಿಯಲ್ಲಿ ಮಾದಕ ವಸ್ತು ಸೇವಿಸಿದ ಹಿನ್ನೆಲೆಯಲ್ಲಿ ತೆಲುಗು ನಟಿ ಹೇಮಾ (Telugu actress Hema) ಅವರನ್ನು ಸಿಸಿಬಿ ಪೊಲೀಸರು ಅರೆಸ್ಟ್‌ ಮಾಡಿದ್ದರು. ಚಾಮರಾಜಪೇಟೆ ಬಳಿ ಇರುವ ಸಿಸಿಬಿ ಕಚೇರಿಗೆ ನಟಿ ಹೇಮಾ ಹಾಜರಾದಾಗ ಅವರನ್ನು ಬಂಧಿಸಲಾಗಿತ್ತು. ವೈದ್ಯಕೀಯ ಪರೀಕ್ಷೆ ಬಳಿಕ ರಾತ್ರಿ ಆನೇಕಲ್‌ನ 4ನೇ ಹೆಚ್ಚುವರಿ ಸಿವಿಲ್ ಮತ್ತು ಜೆ.ಎಮ್.ಎಫ್.ಸಿ ನ್ಯಾಯಾಧೀಶೆ ಅವರ ಮುಂದೆ ನಟಿಯನ್ನು ಹಾಜರುಪಡಿಸಲಾಗಿತ್ತು. ಈ ವೇಳೆ ನ್ಯಾಯಾಧೀಶೆ, ನಟಿಗೆ 14 ದಿನ ನ್ಯಾಯಾಂಗ ಬಂಧನಕ್ಕೆ ಆದೇಶಿಸಿದ್ದಾರೆ.

ಡ್ರಗ್ಸ್ ಮತ್ತು ರೇವ್ ಪಾರ್ಟಿ ಆಯೋಜನೆಯಲ್ಲಿ ನಟಿ ಪ್ರಮುಖ ಪಾತ್ರ ವಹಿಸಿದ್ದರು. ಹಾಗೆಯೇ ತಾವು ಬೇರೆ ಕಡೆ ಇರುವುದಾಗಿ ವಿಡಿಯೊ ಮಾಡಿ ಪೊಲೀಸರ ತನಿಖೆಯ ದಿಕ್ಕು ತಪ್ಪಿಸಲು ಯತ್ನಿಸಿದ್ದರಿಂದ ನಟಿಯನ್ನು ಬಂಧಿಸಲಾಗಿದೆ.

ನಾನೇನು ತಪ್ಪು ಮಾಡಿಲ್ಲ ಎಂದ ನಟಿ

ಕೋರ್ಟ್‌ಗೆ ಹಾಜರುಪಡಿಸುವಾಗ ನಟಿ ಹೇಮಾ ಮಾತನಾಡಿ, ನಾನೇನು ತಪ್ಪು ಮಾಡಿಲ್ಲ. ನಾನು ನಿಜವಾಗಿಯೂ ಹೈದರಾಬಾದ್‌ನಿಂದಲೇ ವಿಡಿಯೊ ಕಳುಹಿಸಿದ್ದೆ. ಬರ್ತ್ ಡೇ ಕೇಕ್ ಕಟ್ ಮಾಡಿ ಹೈದರಾಬಾದ್‌ಗೆ ಹೋಗಿಬಿಟ್ಟಿದ್ದೆ. ನಮ್ಮ ಮನೆಯಿಂದ ಬಿರಿಯಾನಿ ಮಾಡುವ ವಿಡಿಯೊ ಹಾಕಿದ್ದೆ. ನಾನು ಡ್ರಗ್ಸ್ ತೆಗೆದುಕೊಂಡಿಲ್ಲ. ಅವರು ಎಲ್ಲಾ ಟೆಸ್ಟ್‌ಗಳನ್ನು ಮಾಡಿದ್ದಾರೆ. ಸುಖಾಸುಮ್ಮನೆ ನನ್ನನ್ನು ಸಿಲುಕಿಸುವ ಕೆಲಸ ಆಗುತ್ತಿದೆ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ | Rave Party: ರೇವ್ ಪಾರ್ಟಿ ಪ್ರಕರಣ; ವಿಚಾರಣೆಗೆ ಹಾಜರಾದ ತೆಲುಗು ನಟಿ ಹೇಮಾ ಅರೆಸ್ಟ್‌

ಎಂಡಿಎಂಎ ಸೇವಿಸಿದ್ದ ನಟಿ

ನಟಿ ಹೇಮಾ ಯಾವ ಡ್ರಗ್ಸ್ ಸೇವಿಸಿದ್ದಾರೆ ಎಂಬ ಮಾಹಿತಿಯೂ ಲಭ್ಯವಾಗಿದೆ. ಅವರು ಎಂಡಿಎಂಎ ಎಂಬ ಡ್ರಗ್ಸ್ ಅನ್ನು ಸೇವನೆ ಮಾಡಿದ್ದರು ಎಂದು ವರದಿ ಹೇಳುತ್ತಿದೆ. ಮಾತ್ರೆ ರೂಪದಲ್ಲಿ ಇರುವ ಈ ಡ್ರಗ್ಸ್ ಅನ್ನು ಪಾರ್ಟಿಯಲ್ಲಿ ನೀಡಲಾಗಿತ್ತು. ಹೇಮಾ ಅವರು ಈ ಎಂಡಿಎಂಎ ಮಾತ್ರೆಯನ್ನು ತೆಗೆದುಕೊಂಡಿದ್ದಾರೆ ಎಂಬುದು ಗೊತ್ತಾಗಿದೆ.

ಸದ್ಯ ಈ ಪಾರ್ಟಿಯನ್ನು ಆಯೋಜನೆ ಮಾಡಿರುವ ಐವರನ್ನು ಪೊಲೀಸರು ಬಂಧಿಸಿದ್ದಾರೆ. ಆ ಐವರನ್ನು ಈಗ ವಶಕ್ಕೆ ಪಡೆದುಕೊಳ್ಳಲು ಸಿಸಿಬಿ ಅರ್ಜಿ ಸಲ್ಲಿಸಲು ಮುಂದಾಗಿದೆ. ಅವರನ್ನು ಮತ್ತಷ್ಟು ವಿಚಾರಣೆಗೊಳಪಡಿಸಲು ಪ್ಲ್ಯಾನ್‌ ಮಾಡಿದ್ದು, ಈ ಡ್ರಗ್ಸ್‌ಗಳು ಎಲ್ಲಿಂದ ಬಂದವು? ಯಾರು ವಿತರಣೆ ಮಾಡುತ್ತಿದ್ದಾರೆ? ಇದರ ಜಾಲ ಯಾವುದು? ಎಂಬಿತ್ಯಾದಿ ಅಂಶಗಳನ್ನು ಬಯಲಿಗೆಳೆಯಲು ತಯಾರಿ ನಡೆಸಲಾಗಿದೆ.

ಬಿಲ್ಡಪ್‌ ಕೊಡಲು ಹೋಗಿ ಲಾಕ್‌ ಆಗಿದ್ದ ತೆಲುಗು ನಟಿ ಹೇಮಾ!

ರೇವ್‌ ಪಾರ್ಟಿಗೆ ಸಂಬಂಧಪಟ್ಟಂತೆ ತೆಲುಗು ನಟಿ ಹೇಮಾ ಅವರು ಪೊಲೀಸರ ಮುಂದೆ ಬಿಲ್ಡಪ್‌ ಕೊಡಲು ಹೋಗಿ ಲಾಕ್‌ ಆಗಿದ್ದಾರೆ ಎಂಬ ಸಂಗತಿ ಗೊತ್ತಾಗಿದೆ. ನಾನು ತೆಲುಗಿನ ಫೇಮಸ್‌ ನಟಿ ಎಂದು ಹೇಳಿಕೊಂಡಿದ್ದೇ ಅವರಿಗೆ ಮುಳುವಾಗಿದೆ ಎನ್ನಲಾಗಿದೆ.

ನಗರದ ಹೊರವಲಯದಲ್ಲಿ ನಡೆದಿದ್ದ ರೇವ್ ಪಾರ್ಟಿಯಲ್ಲಿ ಅಪಾರ ಪ್ರಮಾಣದ ಮಾದಕ ವಸ್ತು ಸಿಕ್ಕಿರುವ ಕೇಸ್‌ನ ತನಿಖೆಯನ್ನು ಚುರುಕುಗೊಳಿಸಲಾಗಿದೆ. ಎರಡು ದಿನ ಎಗ್ಗಿಲ್ಲದೆ ಪಾರ್ಟಿ ನಡೆದಿದೆ. ಹೀಗಾಗಿ ಆ ಜೋಶ್‌ನಲ್ಲಿದ್ದ ನಟಿ ಹೇಮಾ ಅವರು ಪೊಲೀಸರು ದಾಳಿ ಮಾಡಿದ ವೇಳೆ ತಮ್ಮ ಬಗ್ಗೆ ಹೇಳಿಕೊಂಡು ಸರಿಯಾಗಿ ಸಿಕ್ಕಿಬಿದ್ದರು ಎಂದು ಹೇಳಲಾಗುತ್ತಿದೆ. ಹೀಗಾಗಿ ತಾವು ದೊಡ್ಡ ಹಳ್ಳ ತೋಡಿ ಬಚಾವ್‌ ಆಗುತ್ತೇನೆ ಎಂದು ಮಾಡಿದ ಪ್ಲ್ಯಾನ್‌ ಫ್ಲಾಪ್‌ ಆಗಿದ್ದು, ಆ ಹಳ್ಳಕ್ಕೆ ಅವರೇ ಬಿದ್ದಂತೆ ಆಗಿದೆ.

ಇದನ್ನೂ ಓದಿ | Viral News: ಕದಿಯಲು ಬಂದ ಮನೆಯಲ್ಲೇ ನಿದ್ದೆಹೋದ ಕಳ್ಳ; ಪೊಲೀಸರೇ ಎಬ್ಬಿಸಬೇಕಾಯಿತು!

ಅಸಲಿಗೆ ಸಿಸಿಬಿ ಪೊಲೀಸರಿಗೆ ಹೇಮಾ ಒಬ್ಬರು ನಟಿ ಎಂಬುದೇ ಗೊತ್ತಾಗಿರಲಿಲ್ಲ. ಸಾಮಾನ್ಯವಾಗಿ ಎಲ್ಲರನ್ನು ವಿಚಾರಣೆ ನಡೆಸುವಂತೆಯೇ ಹೇಮಾರನ್ನೂ ವಿಚಾರಿಸುತ್ತಿದ್ದರು. ಈ ವೇಳೆ ಪೊಲೀಸರರ ಮುಂದೆ ಹೇಮಾ ನಾನು ದೊಡ್ಡ ನಟಿ ಇದ್ದೇನೆ. ಸಾವಿರಕ್ಕೂ ಅಧಿಕ ಚಿತ್ರಗಳಲ್ಲಿ ನಟಿಸಿದ್ದೇನೆ ಎಂದು ಹೇಳಿಕೊಂಡಿದ್ದರು. ಆಗ ಪೊಲೀಸರು ಪರಿಶೀಲನೆ ಮಾಡಿದಾಗ ಆಕೆ ನಟಿ ಅನ್ನೋದು ಗೊತ್ತಾಗಿದೆ.

Continue Reading
Advertisement
Narendra Modi Election
ದೇಶ26 mins ago

Narendra Modi Election: ಚುನಾವಣೆ ಫಲಿತಾಂಶದ ಬಳಿಕ ತಾಯಿಯ ನೆನೆದು ಭಾವುಕರಾದ ಮೋದಿ

Karnataka Election Results 2024
ಕರ್ನಾಟಕ26 mins ago

Karnataka Election Results 2024: ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ, ಜೆಡಿಎಸ್‌ ಮೈತ್ರಿ ಆಗಿದ್ರೆ ಕಾಂಗ್ರೆಸ್‌ ಅಧಿಕಾರಕ್ಕೆ ಬರ್ತಿರಲಿಲ್ಲ: ಎಚ್‌ಡಿಕೆ

Novak Djokovic
ಕ್ರೀಡೆ35 mins ago

Novak Djokovic: ಫ್ರೆಂಚ್ ಓಪನ್‌ ಟೂರ್ನಿಯಿಂದ ಹಿಂದೆ ಸರಿದ ಜೊಕೊವಿಕ್

Election Results 2024
Lok Sabha Election 202451 mins ago

Election Results 2024: ತ.ನಾಡಿನಲ್ಲಿ ಪೈಪೋಟಿ ನೀಡಿ ಸೋತ ಅಣ್ಣಾಮಲೈ; ಬಿಜೆಪಿ ಮತ ಪ್ರಮಾಣ ಶೇ. 3.57ರಿಂದ 11.04ಕ್ಕೆ ಜಿಗಿತ!

Narendra Modi Election
ದೇಶ58 mins ago

Narendra Modi Election: 3ನೇ ಅವಧಿಯಲ್ಲಿ ಹೊಸ ಅಧ್ಯಾಯ ಸೃಷ್ಟಿ; ಫಲಿತಾಂಶದ ಬೆನ್ನಲ್ಲೇ ಮೋದಿ ವಿಶ್ವಾಸ

Hanuma Vihari
ಕ್ರಿಕೆಟ್1 hour ago

Hanuma Vihari: 2 ತಿಂಗಳ ಬಳಿಕ ನಿರಾಕ್ಷೇಪಣಾ ಪತ್ರ ಪಡೆದ ಹನುಮ ವಿಹಾರಿ

NEET UG Result 2024
ಕರ್ನಾಟಕ2 hours ago

NEET UG Result 2024 : ಮೊದಲ ರ‍್ಯಾಂಕ್‌ ಪಡೆದ 100 ವಿದ್ಯಾರ್ಥಿಗಳಲ್ಲಿ ಕರ್ನಾಟಕದ ಆರು ಮಂದಿ ನೀಟ್‌ ಟಾಪರ್ಸ್‌

Mysore election results 2024
ಕರ್ನಾಟಕ2 hours ago

Mysore Election Result 2024: ಮೈಸೂರು-ಕೊಡಗು ಲೋಕಸಭಾ ಚುನಾವಣೆ; ಯಾವ ವಿಧಾನಸಭಾ ಕ್ಷೇತ್ರದಲ್ಲಿ ಯಾರಿಗೆ ಎಷ್ಟು ಮತ?

Election Results 2024
Lok Sabha Election 20242 hours ago

Election Results 2024: ಶಶಿ ತರೂರ್‌ ವಿರುದ್ಧ ವೀರೋಚಿತ ಸೋಲು ಕಂಡ ಬಿಜೆಪಿಯ ರಾಜೀವ್‌ ಚಂದ್ರಶೇಖರ್‌

Election Results 2024
ಕ್ರಿಕೆಟ್2 hours ago

Election Results 2024: ಪಶ್ಚಿಮ ಬಂಗಾಳದಲ್ಲಿ ಮಾಜಿ ಕ್ರಿಕೆಟಿಗ ಕೀರ್ತಿ ಆಜಾದ್​ಗೂ ಜಯಭೇರಿ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Lok Sabha Election Result 2024 Live
ದೇಶ15 hours ago

Lok Sabha Election Result 2024 Live: ಲೋಕಸಭೆ ಚುನಾವಣೆ ಫಲಿತಾಂಶದ ಲೈವ್‌ ಇಲ್ಲಿ ವೀಕ್ಷಿಸಿ

Karnataka Rain
ಮಳೆ1 day ago

Karnataka Rain : 133 ವರ್ಷದ ರೆಕಾರ್ಡ್ ಬ್ರೇಕ್ ಮಾಡಿದ ʻಬೆಂಗಳೂರು ಮಳೆʼ

Snake Rescue Snakes spotted in heavy rain
ಮಳೆ1 day ago

Snake Rescue: ಮಳೆ ನೀರಿನಲ್ಲಿ ಹರಿದು ಬಂದು ಬೈಕ್‌ನಲ್ಲಿ ಸೇರಿಕೊಂಡ ಹಾವು; ಮನೆಗಳಲ್ಲೂ ಪ್ರತ್ಯಕ್ಷ

Karnataka Rain
ಮಳೆ2 days ago

Karnataka Rain : ವೀಕೆಂಡ್‌ ಮೋಜಿಗೆ ವರುಣ ಅಡ್ಡಿ; ಭಾನುವಾರ ಸಂಜೆಗೆ ಮಳೆ ಕಾಟ

Liquor ban
ಬೆಂಗಳೂರು3 days ago

Liquor Ban : ಮುಂದಿನ ಏಳು ದಿನಗಳಲ್ಲಿ ನಾಲ್ಕೂವರೆ ದಿನ ಬಾರ್ ಕ್ಲೋಸ್; ಎಣ್ಣೆ ಸಿಗೋದು ಯಾವ ದಿನ?

Assault Case in Shivamogga
ಕ್ರೈಂ5 days ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ1 week ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

tumkur murder
ತುಮಕೂರು1 week ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

Karnataka Weather Forecast
ಮಳೆ1 week ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ1 week ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

ಟ್ರೆಂಡಿಂಗ್‌