Wife Missing in Bengaluru : 4 ತಿಂಗಳ ಗರ್ಭಿಣಿ ನಾಪತ್ತೆ; ಗಲ್ಲಿ ಗಲ್ಲಿಯಲ್ಲಿ ಪತ್ನಿಗಾಗಿ ಪತಿಯ ಅಲೆದಾಟ - Vistara News

ಕರ್ನಾಟಕ

Wife Missing in Bengaluru : 4 ತಿಂಗಳ ಗರ್ಭಿಣಿ ನಾಪತ್ತೆ; ಗಲ್ಲಿ ಗಲ್ಲಿಯಲ್ಲಿ ಪತ್ನಿಗಾಗಿ ಪತಿಯ ಅಲೆದಾಟ

Women Missing : ಹಾಲು ತರಲು ಮನೆಯಿಂದ ಹೊರ ಹೋದ 4 ತಿಂಗಳ ಗೃಹಿಣಿಯೊಬ್ಬರು (Wife Missing) ನಾಪತ್ತೆಯಾಗಿದ್ದಾರೆ. ಪತ್ನಿಗಾಗಿ ಹಗಲು-ರಾತ್ರಿ ಎನ್ನದೆ ಪತಿ ಕಣ್ಣೀರಿಡುತ್ತಾ ಹುಡುಕಾಡುತ್ತಿದ್ದಾರೆ.

VISTARANEWS.COM


on

Shalini A women missing in Bengaluru
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಮನೆಬಿಟ್ಟು ಹೋಗಿರುವ (Women Missing) ಪತ್ನಿಗಾಗಿ ಪತಿಯೊಬ್ಬರು ಬೆಂಗಳೂರಿನ ಗಲ್ಲಿ ಗಲ್ಲಿಯಲ್ಲಿ ಅಲೆದಾಡಿ ಹುಡುಕಾಡುತ್ತಿದ್ದಾರೆ. ಸ್ವಾಮಿ ಎಂಬುವವರು ಹಗಲು- ರಾತ್ರಿ ಎನ್ನದೇ ಮನದಾಕೆ ಶಾಲಿನಿಗಾಗಿ (Wife Missing in Bengaluru) ಕಣ್ಣೀರಿಡುತ್ತಿದ್ದಾರೆ.

ಶಾಲಿನಿ ಹಾಗೂ ಸ್ವಾಮಿ ದಂಪತಿ ತಾವರೆಕೆರೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿರುವ ಕಾಮತ್ ಲೇಔಟ್‌ನಲ್ಲಿ ವಾಸವಾಗಿದ್ದಾರೆ. ಈ ದಂಪತಿಗೆ 5 ವರ್ಷದ ಮಗುವಿದ್ದು, ಇತ್ತೀಚೆಗೆ ಶಾಲಿನಿ 4 ತಿಂಗಳ ಗರ್ಭಿಣಿಯಾಗಿದ್ದಳು. ಎಂದಿನಂತೆ ಬೆಳಗ್ಗೆ 6 ಗಂಟೆ ಸುಮಾರಿಗೆ ಶಾಲಿನಿ ಹಾಲು ತರಲು 30 ರೂ. ಹಣದೊಂದಿಗೆ ಹೊರಗೆ ಹೋಗಿದ್ದಾರೆ. ಆದರೆ 8 ಗಂಟೆ ಆದರೂ ಮನೆಗೆ ವಾಪಸ್‌ ಬಾರದೇ ಇದ್ದಾಗ ಕುಟುಂಸ್ಥರು ಗಾಬರಿ ಆಗಿದ್ದಾರೆ.

ಇದನ್ನೂ ಓದಿ: Physical Abuse : ಹಾನಗಲ್‌ ಕೇಸ್‌; ದುಡ್ಡು ಕೊಟ್ಟು ಮುಚ್ಚಿಹಾಕಲು ಯತ್ನ ಎಂದ ಬಸವರಾಜ ಬೊಮ್ಮಾಯಿ

ಕೂಡಲೇ ಮನೆ ಸುತ್ತಮುತ್ತ ಹುಡುಕಾಡಲು ಶುರು ಮಾಡಿದ್ದಾರೆ. ಆದರೆ ಎಲ್ಲೂ ಕಾಣಿಸಿಲ್ಲ. ಮೆಜೆಸ್ಟಿಕ್ ಹಾಗೂ ಬಿಎಂಟಿಸಿ ಬಸ್ ಸ್ಟ್ಯಾಂಡ್‌, ಕೆ.ಆರ್ ಮಾರ್ಕೆಟ್, ಸ್ಯಾಟ್ ಲೈಟ್ ಬಸ್ ಸ್ಟ್ಯಾಂಡ್‌ನಲ್ಲೂ ಶಾಲಿನಿಗಾಗಿ ಕುಟುಂಬಸ್ಥರು ಹುಡುಕಾಡಿದ್ದಾರೆ. ಬೆಳಗ್ಗೆಯಿಂದ ಮಧ್ಯರಾತ್ರಿವರೆಗೂ ಹುಡುಕಾಟ ನಡೆಸಿದ್ದರು, ಪತ್ನಿಯ ಸುಳಿವು ಮಾತ್ರ ಸಿಕ್ಕಿಲ್ಲ.

ಈ ವೇಳೆ ಅಕ್ಕ-ಪಕ್ಕದ ಮನೆಗಳ ಸಿಸಿ ಟಿವಿಯನ್ನು ಪರಿಶೀಲಿಸಿದ್ದಾರೆ. ಆಗ ಪತ್ನಿ ಶಾಲಿನಿ ‌ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿರುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮತ್ತಷ್ಟು ಸಿಸಿಟಿವಿ ಪರಿಶೀಲನೆ ಮಾಡಿದಾಗ ಪತ್ನಿ ಬಿಎಂಟಿಸಿ ಬಸ್ ಹತ್ತಿ ತೆರಳುವುದು ಗೊತ್ತಾಗಿದೆ. ಇನ್ನು ನಡೆದು ಹೋಗುವಾಗ ಧರಿಸಿದ್ದ ಚಪ್ಪಲಿಯನ್ನು ರಸ್ತೆ ಮಧ್ಯೆ ಬಿಟ್ಟಿದ್ದಾಳೆ. ಆದರೆ ಬಸ್‌ ಹತ್ತಿದ ಶಾಲಿನಿ 5 ವರ್ಷದ ಮಗವನ್ನು ಬಿಟ್ಟು ಎಲ್ಲಿಗೆ ತೆರಳಿದ್ದರೂ? ಯಾಕಾಗಿ ಮನೆ ಬಿಟ್ಟು ಹೋಗಿದ್ದಾರೆ ಎಂಬುದು ತಿಳಿದಿಲ್ಲ.

ಇದನ್ನೂ ಓದಿ: Physical Abuse : ರೇಪ್‌ ಕೇಸ್‌ನಲ್ಲಿ ಕಾಂಗ್ರೆಸ್‌‌ ರಾಜಕಾರಣ; ಸಂತ್ರಸ್ತೆಯೇ ಕಿಡ್ನ್ಯಾಪ್‌ ಎಂದ ಬಿಜೆಪಿ

ಸದ್ಯ ತಾವರೆಕೆರೆ ಪೊಲೀಸ್ ಠಾಣೆಗೆ ಶಾಲಿನಿ ಪತಿ ಸ್ವಾಮಿ ದೂರು ನೀಡಿದ್ದಾರೆ. ಪ್ರಕರಣವನ್ನು ದಾಖಲಿಸಿಕೊಂಡಿರುವ ಪೊಲೀಸರು ಕೌಟುಂಬಿಕ ಸಮಸ್ಯೆ ಏನಾದರೂ ಇತ್ತಾ? ಕುಟುಂಬದಲ್ಲಿ ಕಲಹ ನಡೆದಿತ್ತಾ ಎಂಬುದರ ಕುರಿತು ತನಿಖೆಯನ್ನು ನಡೆಸುತ್ತಿದ್ದಾರೆ. ಜತೆಗೆ ಮತ್ತಷ್ಟು ಸಿಸಿಟಿವಿಗಳನ್ನು ಪರಿಶೀಲಿಸಿ ಶಾಲಿನಿಗಾಗಿ ಹುಡುಕಾಟ ನಡೆಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಸಿನಿಮಾ

Yuva Rajkumar: ವಿಚ್ಛೇದನ ಅರ್ಜಿ ಸಿಕ್ಕಾಗ ಉತ್ತರಿಸುವೆ; ಯುವ ನೋಟಿಸ್‌ಗೆ ಪತ್ನಿ ಶ್ರೀದೇವಿ ಫಸ್ಟ್‌ ರಿಯಾಕ್ಷನ್!

Yuva Rajkumar: Yuva Rajkumar: ಯುವ ಮದುವೆಯಾಗಿ ನಾಲ್ಕು ವರ್ಷಗಳ ಬಳಿಕ ಡಿವೋರ್ಸ್‌ ಪಡೆದುಕೊಳ್ಳಲು ಮುಂದಾಗಿದ್ದಾರೆ. ಶ್ರೀದೇವಿ ಅವರು ರಾಜ್ ಅಕಾಡೆಮಿ ನಡೆಸಿಕೊಂಡು ಹೋಗುತ್ತಿದ್ದರು. ಮೈಸೂರು ಮೂಲದ ಹುಡುಗಿ ಶ್ರೀದೇವಿಯನ್ನ ವರಿಸಿದ್ದ ಯುವ ಈಗ ಪತ್ನಿ ಮಾನಸಿಕವಾಗಿ ಟಾರ್ಚರ್ ಕೊಡುತ್ತಿದ್ದಾರೆ ಎಂದು ಆರೋಪ ಮಾಡಿ ಕೇಸ್ ಕೂಡ ದಾಖಲಿಸಿದ್ದಾರೆ. ಶ್ರೀದೇವಿಗೆ ಈಗಾಗಲೇ ಯುವ ನೋಟಿಸ್‌ ಕೊಟ್ಟಿದ್ದಾರೆ. ಇದರ ಮಧ್ಯೆಯೇ, ಶ್ರೀದೇವಿ ಭೈರಪ್ಪ ಅವರು ಮೊದಲ ಪ್ರತಿಕ್ರಿಯೆ ನೀಡಿದ್ದಾರೆ.

VISTARANEWS.COM


on

Yuva Rajkumar
Koo

ಬೆಂಗಳೂರು: ಡಾ.ರಾಜ್‌ಕುಮಾರ್‌ ಅವರ ಕುಟುಂಬದ ಕುಡಿ, ಸ್ಯಾಂಡಲ್‌ವುಡ್‌ ನಟ ಯುವ ರಾಜ್‌ಕುಮಾರ್‌ ಅವರು ಪತ್ನಿ ಶ್ರೀದೇವಿ ಭೈರಪ್ಪ ಅವರಿಗೆ ಡಿವೋರ್ಸ್‌ ನೋಟಿಸ್‌ ನೀಡಿರುವ ಪ್ರಕರಣ ಭಾರಿ ಸುದ್ದಿಯಾಗಿದೆ. ಇದರ ಬೆನ್ನಲ್ಲೇ, ಡಿವೋರ್ಸ್‌ ನೋಟಿಸ್‌ ಕುರಿತು ಮೊದಲ ಪ್ರತಿಕ್ರಿಯೆ ನೀಡಿದ್ದಾರೆ. “ನನಗೆ ವಿಚ್ಛೇದನದ ಕುರಿತು ನೋಟಿಸ್‌ ಸಿಕ್ಕಿಲ್ಲ. ನೋಟಿಸ್‌ ಸಿಕ್ಕ ಬಳಿಕ ಉತ್ತರಿಸುವೆ” ಎಂಬುದಾಗಿ ಶ್ರೀದೇವಿ ಭೈರಪ್ಪ ಪ್ರತಿಕ್ರಿಯಿಸಿದ್ದಾರೆ.

“ವಿಷಯ ಏನೆಂದು ಚಿತ್ರರಂಗ ಹಾಗೂ ಮಾಧ್ಯಮದಲ್ಲಿ ಅನೇಕರಿಗೆ ತಿಳಿದಿದೆ. ನಾನು ಈಗಾಗಲೇ ಲೀಗಲ್‌ ನೋಟಿಸ್‌ಗೆ ಉತ್ತರ ನೀಡಿದ್ದೇನೆ. ವಿಚ್ಛೇದನ ಅರ್ಜಿಯು ಇನ್ನೂ ನನಗೆ ತಲುಪಿಲ್ಲ. ಸಿಕ್ಕಾಗ ನ್ಯಾಯಾಲಯಕ್ಕೆ ಉತ್ತರಿಸುತ್ತೇನೆ. ಸದ್ಯಕ್ಕೆ ನಾನು ಬೇರೇನೂ ಮಾತನಾಡುವ ಪರಿಸ್ಥಿತಿಯಲ್ಲಿ ಇಲ್ಲ. ನೀವೆಲ್ಲರೂ ಇದನ್ನು ಅರ್ಥ ಮಾಡಿಕೊಂಡು ನನ್ನ ಹಾಗೂ ನನ್ನ ಕುಟುಂಬದ ಖಾಸಗಿತನವನ್ನು ಗೌರವಿಸುತ್ತೀರಿ ಎಂದು ಭಾವಿಸಿದ್ದೇನೆ” ಎಂಬುದಾಗಿ ಶ್ರೀದೇವಿ ಬೈರಪ್ಪ ಅವರು ಡಿವೋರ್ಸ್‌ ನೋಟಿಸ್‌ ಕುರಿತು ಮೊದಲ ಪ್ರತಿಕ್ರಿಯೆ ನೀಡಿದ್ದಾರೆ. ಸದ್ಯ, ಅವರು ಅಮೆರಿಕದಲ್ಲಿದ್ದಾರೆ ಎಂದು ತಿಳಿದುಬಂದಿದೆ.

ಶ್ರೀದೇವಿ ತಂದೆ ಭೈರಪ್ಪ ಹೇಳಿದ್ದಿಷ್ಟು

ಮೈಸೂರಿನಲ್ಲಿ ಬಿ. ಭೈರಪ್ಪ ಅವರು ವಿಸ್ತಾರ ನ್ಯೂಸ್‌ ಜತೆ ಮಾತನಾಡಿದರು. “ಯುವ ರಾಜ್‌ಕುಮಾರ್‌ ಹಾಗೂ ಶ್ರೀದೇವಿ ಪ್ರೀತಿಸಿ ಮದುವೆಯಾಗಿದ್ದರು. ನನ್ನ ಮಗಳನ್ನು ಅವರೇ ಉನ್ನತ ವ್ಯಾಸಂಗಕ್ಕಾಗಿ ವಿದೇಶಕ್ಕೆ ಕಳುಹಿಸಿದ್ದರು. ವಿದ್ಯಾಭ್ಯಾಸ ಮುಗಿಸಿ ಬಂದ ಬಳಿಕ ಇಬ್ಬರೂ ವಿಚ್ಛೇದನ ಪಡೆಯಲಿದ್ದಾರೆ. ವಿಚ್ಛೇದನದ ಬಗ್ಗೆ ನಮಗೆ ಮೊದಲೇ ಗೊತ್ತಿತ್ತು” ಎಂಬುದಾಗಿ ಯುವ ರಾಜ್‌ಕುಮಾರ್‌ ಅವರ ಮಾವ ಬಿ.ಭೈರಪ್ಪ ತಿಳಿಸಿದ್ದಾರೆ.

“ಯುವ ರಾಜ್‌ಕುಮಾರ್‌ ಮೈಸೂರಿಗೆ ಬಂದಿದ್ದ. ಆದರೆ, ಇದರ ಬಗ್ಗೆ ಆತ ಯಾವುದೇ ಮಾತನಾಡಿರಲಿಲ್ಲ. ಶ್ರೀದೇವಿ, ವಿಚ್ಛೇದನದ ಕುರಿತು ಮಾತನಾಡಿರಲಿಲ್ಲ. ಈಗ ಡಿವೋರ್ಸ್‌ ನೋಟಿಸ್‌ ಕಳುಹಿಸಿದ್ದಾನೆ. ನಾವು ಕೂಡ ಕಾನೂನಿನ ಮೂಲಕ ಉತ್ತರ ನೀಡುತ್ತೇವೆ” ಎಂದು ಭೈರಪ್ಪ ಹೇಳಿದ್ದಾರೆ.

ಯುವ ರಾಜ್‌ಕುಮಾರ್‌ ಅವರು ಪತ್ನಿ ಶ್ರೀದೇವಿಯಿಂದ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದಾರೆ. ರಾಘವೇಂದ್ರ ರಾಜಕುಮಾರ್ ಅವರ ಪುತ್ರ ಯುವ ರಾಜ್‌ಕುಮಾರ್‌ ಭಾರತೀಯ ವಿವಾಹ ಕಾಯ್ದೆ 13(1)ಅಡಿ ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಜೂನ್​ 6ರಂದು ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು ಎಂದು ವರದಿಯಾಗಿದೆ. ಹೆಂಡತಿಯಿಂದ ಅಗೌರವ ಹಾಗೂ ಮಾನಸಿಕ ಕ್ರೌರ್ಯ ಎದುರಿಸುತ್ತಿದ್ದೆ ಎಂದು ಯುವ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಪತ್ನಿ ಮಾನಸಿಕವಾಗಿ ಟಾರ್ಚರ್ ಕೊಡುತ್ತಿದ್ದಾರೆ ಎಂದು ಆರೋಪ ಮಾಡಿ ಯುವ ಕೇಸ್ ಕೂಡ ದಾಖಲು ಮಾಡಿದ್ದಾರೆ. ನೋಟಿಸ್ ಜಾರಿ ಮಾಡಿರುವ ನ್ಯಾಯಾಲಯವು ಜುಲೈ 4ಕ್ಕೆ ವಿಚಾರಣೆ ಮುಂದೂಡಿದೆ.

ಇದನ್ನೂ ಓದಿ: Yuva Rajkumar: ಯುವ-ಶ್ರೀದೇವಿ ಡಿವೋರ್ಸ್‌ ಬಗ್ಗೆ ಮೊದಲೇ ಗೊತ್ತಿತ್ತು; ಶ್ರೀದೇವಿ ತಂದೆ ಭೈರಪ್ಪ ಹೇಳಿಕೆ

Continue Reading

ತುಮಕೂರು

Suspension Order : ಕ್ರಿಮಿನಲ್‌ಗಳಿಗೆ ಮಾಹಿತಿ ಸೋರಿಕೆ; ಐವರು ಪೊಲೀಸ್‌ ಸಿಬ್ಬಂದಿ ಅಮಾನತು

Suspension Order : ಕ್ರಿಮಿನಲ್ಸ್‌ಗಳಿಗೆ ಮಾಹಿತಿ ಸೋರಿಕೆ ಮಾಡುತ್ತಿದ್ದ ಐವರು ಪೊಲೀಸ್‌ ಸಿಬ್ಬಂದಿಯನ್ನು ತುಮಕೂರು ಎಸ್‌ಪಿ ಅಮಾನತು ಮಾಡಿ ಆದೇಶಿಸಿದ್ದಾರೆ.

VISTARANEWS.COM


on

By

Suspension Order tumkur News
ಅಮಾನತು ಆದವರು
Koo

ತುಮಕೂರು: ಭ್ರಷ್ಟ ಪೊಲೀಸ್ ಸಿಬ್ಬಂದಿಗೆ ತುಮಕೂರು ಎಸ್‌ಪಿ (Tumkur SP) ಸಿಂಹಸ್ವಪ್ನವಾಗಿದ್ದಾರೆ. ಒಂದೇ ದಿನ ಐವರು ಸಿಬ್ಬಂದಿಯನ್ನು ಅಮಾನತು ಮಾಡಿ (Suspension Order) ಎಸ್‌ಪಿ ಅಶೋಕ್‌ ಕೆ.ವಿ ಆದೇಶಿಸಿದ್ದಾರೆ. ಅಮಾನತಾಗಿರುವ ಸಿಬ್ಬಂದಿ ಕ್ರಿಮಿನಲ್‌ಗಳಿಗೆ ಪೊಲೀಸ್ ಇಲಾಖೆಯ ಮಾಹಿತಿ ಸೋರಿಕೆ ಮಾಡುತ್ತಿದ್ದರು ಎನ್ನಲಾಗಿದೆ.

ಕ್ಯಾತಸಂದ್ರ ಪೊಲೀಸ್ ಠಾಣೆಯ ಇಬ್ಬರು, ಜಯನಗರ ಠಾಣೆಯ ಓರ್ವ, ಟ್ರಾಫಿಕ್ ಠಾಣೆಯ ಕಾನ್‌ಸ್ಟೇಬಲ್, ಎಸ್‌ಪಿ ಕಚೇರಿಯ ಓರ್ವ ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ. ಕ್ಯಾತಸಂದ್ರ ಠಾಣೆಯ ಸಿಬ್ಬಂದಿ‌ ಮಂಜು, ಅಹೋಬಲ ನರಸಿಂಹಮೂರ್ತಿ, ಜಯನಗರ ಠಾಣೆ ಸಿಬ್ಬಂದಿ ಮನು ಎಸ್.ಗೌಡ, ಟ್ರಾಫಿಕ್ ಪೊಲೀಸ್ ಠಾಣೆ ರಾಮಕೃಷ್ಣ ಹಾಗೂ ಎಸ್‌ಪಿ ಕಚೇರಿಯ ಸುರೇಶ್ ಅಮಾನತುಗೊಂಡವರು.

Suspension Order
ಪ್ರಕರಣಗಳ ಮಾಹಿತಿ ಪಡೆಯುತ್ತಿದ್ದ ಆರೋಪಿಗಳು

ಆರೋಪಿಗಳಾದ ಮಂಜುನಾಥ್ ರೆಡ್ಡಿ, ನವೀನ್, ನರಸಿಂಹ ಮೂರ್ತಿಗೆ ಈ ಐವರು ಮಾಹಿತಿ ಸೋರಿಕೆ ಮಾಡುತ್ತಿದ್ದರು. ಈ ಆರೋಪಿಗಳಿಗೆ ಠಾಣೆಯ ಪ್ರಕರಣಗಳ‌ ಬಗ್ಗೆ ಮಾಹಿತಿ ನೀಡುತ್ತಿದ್ದರು. ಈ ಮೂವರು ಆರೋಪಿಗಳ‌ ವಿರುದ್ಧ ದಂಡಿನಶಿವರ ಹಾಗೂ ತಿಲಕ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಮೂವರ ವಿರುದ್ಧ ಕೊಲೆಗೆ ಸಂಚು, ಹಲ್ಲೆ ಆರೋಪದ ಮೇಲೆ‌ ಕೇಸ್ ದಾಖಲಾಗಿತ್ತು. ವಾಟ್ಸ್ ಆ್ಯಪ್ ಮೂಲಕ ಆರೋಪಿಗಳಿಗೆ ಮಾಹಿತಿಯನ್ನು ರವಾನಿಸುತ್ತಿದ್ದರು. ಪ್ರಕರಣವೊಂದರಲ್ಲಿ ಮಂಜುನಾಥ್ ರೆಡ್ಡಿ ಮೊಬೈಲ್ ವಶಕ್ಕೆ ಪಡೆದು ಪರಿಶೀಲನೆ ಮಾಡಿದಾಗ ಪ್ರಕರಣ ಬೆಳಕಿಗೆ ಬಂದಿದೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಸಿನಿಮಾ

Yuva Rajkumar: ಹೆಣ್ಣು ಹೆತ್ತವರು ಏನ್‌ ಮಾಡೋದು ಹೇಳಿ; ಡಿವೋರ್ಸ್‌ ನೋಟಿಸ್‌ಗೆ ಶ್ರೀದೇವಿ ತಂದೆ ಭೈರಪ್ಪ ಬೇಸರ

Yuva Rajkumar: ಯುವ ಮದುವೆಯಾಗಿ ನಾಲ್ಕು ವರ್ಷಗಳ ಬಳಿಕ ಡಿವೋರ್ಸ್‌ ಪಡೆದುಕೊಳ್ಳಲು ಮುಂದಾಗಿದ್ದಾರೆ. ಶ್ರೀದೇವಿ ಅವರು ರಾಜ್ ಅಕಾಡೆಮಿ ನಡೆಸಿಕೊಂಡು ಹೋಗುತ್ತಿದ್ದರು. ಮೈಸೂರು ಮೂಲದ ಹುಡುಗಿ ಶ್ರೀದೇವಿಯನ್ನ ವರಿಸಿದ್ದ ಯುವ ಈಗ ಪತ್ನಿ ಮಾನಸಿಕವಾಗಿ ಟಾರ್ಚರ್ ಕೊಡುತ್ತಿದ್ದಾರೆ ಎಂದು ಆರೋಪ ಮಾಡಿ ಕೇಸ್ ಕೂಡ ದಾಖಲಿಸಿದ್ದಾರೆ. ಶ್ರೀದೇವಿಗೆ ಈಗಾಗಲೇ ಯುವ ನೋಟಿಸ್‌ ಕೊಟ್ಟಿದ್ದಾರೆ.

VISTARANEWS.COM


on

Yuva Rajkumar
Koo

ಬೆಂಗಳೂರು: ಡಾ.ರಾಜ್‌ಕುಮಾರ್‌ ಅವರ ಕುಟುಂಬದ ಕುಡಿ, ರಾಘವೇಂದ್ರ ರಾಜ್‌ಕುಮಾರ್‌ (Raghavendra Rajkumar) ಅವರ ಮೊಮ್ಮಗ ಯುವ ರಾಜ್‌ಕುಮಾರ್‌ (Yuva Rajkumar) ಅವರು ಪತ್ನಿ ಶ್ರೀದೇವಿ ಭೈರಪ್ಪ ಅವರಿಗೆ ಡಿವೋರ್ಸ್‌ ನೋಟಿಸ್‌ ಕಳುಹಿಸಿದ್ದಾರೆ. ಸ್ಯಾಂಡಲ್‌ವುಡ್‌ನ ಚಂದನ್‌ ಶೆಟ್ಟಿ ಹಾಗೂ ನಿವೇದಿತಾ ಗೌಡ ಅವರ ವಿಚ್ಛೇದನದ ಬೆನ್ನಲ್ಲೇ ದೊಡ್ಮನೆಯ ಕುಡಿಯೂ ಪತ್ನಿಗೆ ವಿಚ್ಛೇದನ ನೀಡಲು ಮುಂದಾಗಿರುವುದು ಭಾರಿ ಸುದ್ದಿಯಾಗಿದೆ. ಇದರ ಮಧ್ಯೆಯೇ, ಶ್ರೀದೇವಿ ಅವರ ತಂದೆ ಬಿ. ಭೈರಪ್ಪ ಅವರು ವಿಸ್ತಾರ ನ್ಯೂಸ್‌ ಜತೆ ಮಾತನಾಡಿದ್ದು, “ವಿಚ್ಛೇದನದ ವಿಚಾರ ನಮಗೆ ಮೊದಲೇ ಗೊತ್ತಿತ್ತು” ಎಂದು ತಿಳಿಸಿದ್ದಾರೆ.

ಮೈಸೂರಿನಲ್ಲಿ ಬಿ. ಭೈರಪ್ಪ ಅವರು ವಿಸ್ತಾರ ನ್ಯೂಸ್‌ ಜತೆ ಮಾತನಾಡಿದರು. “ಯುವ ರಾಜ್‌ಕುಮಾರ್‌ ಹಾಗೂ ಶ್ರೀದೇವಿ ಪ್ರೀತಿಸಿ ಮದುವೆಯಾಗಿದ್ದರು. ನನ್ನ ಮಗಳನ್ನು ಅವರೇ ಉನ್ನತ ವ್ಯಾಸಂಗಕ್ಕಾಗಿ ವಿದೇಶಕ್ಕೆ ಕಳುಹಿಸಿದ್ದರು. ವಿದ್ಯಾಭ್ಯಾಸ ಮುಗಿಸಿ ಬಂದ ಬಳಿಕ ಇಬ್ಬರೂ ವಿಚ್ಛೇದನ ಪಡೆಯಲಿದ್ದಾರೆ. ವಿಚ್ಛೇದನದ ಬಗ್ಗೆ ನಮಗೆ ಮೊದಲೇ ಗೊತ್ತಿತ್ತು” ಎಂಬುದಾಗಿ ಯುವ ರಾಜ್‌ಕುಮಾರ್‌ ಅವರ ಮಾವ ಬಿ.ಭೈರಪ್ಪ ತಿಳಿಸಿದ್ದಾರೆ.

“ಯುವ ರಾಜ್‌ಕುಮಾರ್‌ ಮೈಸೂರಿಗೆ ಬಂದಿದ್ದ. ಆದರೆ, ಇದರ ಬಗ್ಗೆ ಆತ ಯಾವುದೇ ಮಾತನಾಡಿರಲಿಲ್ಲ. ಶ್ರೀದೇವಿ, ವಿಚ್ಛೇದನದ ಕುರಿತು ಮಾತನಾಡಿರಲಿಲ್ಲ. ಈಗ ಡಿವೋರ್ಸ್‌ ನೋಟಿಸ್‌ ಕಳುಹಿಸಿದ್ದಾನೆ. ನಾವು ಕೂಡ ಕಾನೂನಿನ ಮೂಲಕ ಉತ್ತರ ನೀಡುತ್ತೇವೆ. ಹೆಣ್ಣು ಹೆತ್ತವರು ಏನ್‌ ಮಾಡ್ಬೇಕು ಹೇಳಿ. ಯಾರೂ ದುಡುಕಬಾರದು. ನನ್ನ ಮಗಳಿಂದ ಯಾವುದೇ ಕಿರುಕುಳ ಆಗಿಲ್ಲ.” ಎಂದು ಭೈರಪ್ಪ ಹೇಳಿದ್ದಾರೆ.

ಯುವ ರಾಜ್‌ಕುಮಾರ್‌ ಅವರು ಪತ್ನಿ ಶ್ರೀದೇವಿಯಿಂದ ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದಾರೆ. ರಾಘವೇಂದ್ರ ರಾಜಕುಮಾರ್ ಅವರ ಪುತ್ರ ಯುವ ರಾಜ್‌ಕುಮಾರ್‌ ಭಾರತೀಯ ವಿವಾಹ ಕಾಯ್ದೆ 13(1)ಅಡಿ ವಿಚ್ಚೇದನಕ್ಕೆ ಅರ್ಜಿ ಸಲ್ಲಿಸಿದ್ದಾರೆ. ಜೂನ್​ 6ರಂದು ಕೌಟುಂಬಿಕ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು ಎಂದು ವರದಿಯಾಗಿದೆ. ಹೆಂಡತಿಯಿಂದ ಅಗೌರವ ಹಾಗೂ ಮಾನಸಿಕ ಕ್ರೌರ್ಯ ಎದುರಿಸುತ್ತಿದ್ದೆ ಎಂದು ಯುವ ಅರ್ಜಿ ಸಲ್ಲಿಕೆ ಮಾಡಿದ್ದಾರೆ. ಪತ್ನಿ ಮಾನಸಿಕವಾಗಿ ಟಾರ್ಚರ್ ಕೊಡುತ್ತಿದ್ದಾರೆ ಎಂದು ಆರೋಪ ಮಾಡಿ ಯುವ ಕೇಸ್ ಕೂಡ ದಾಖಲು ಮಾಡಿದ್ದಾರೆ. ನೋಟಿಸ್ ಜಾರಿ ಮಾಡಿರುವ ನ್ಯಾಯಾಲಯವು ಜುಲೈ 4ಕ್ಕೆ ವಿಚಾರಣೆ ಮುಂದೂಡಿದೆ.

ಸದ್ಯ ಶ್ರೀದೇವಿ ಅಮೆರಿಕದಲ್ಲಿ ಇದ್ದಾರೆ ಎನ್ನಲಾಗಿದೆ. ಇಬ್ಬರ ಮದುವೆಗೆ ರಾಘವೇಂದ್ರ ದಂಪತಿಯ ವಿರೋಧ ಇತ್ತು ಎಂದು ಮೂಲ ತಿಳಿಸಿದೆ. ಇಬ್ಬರ ಮದುವೆಗೆ ರಾಘವೇಂದ್ರ ದಂಪತಿಯ ವಿರೋಧ ಇದ್ದರೂ, ಪುನೀತ್‌ ರಾಜ್ ಕುಮಾರ್ ಮುಂದೆ ನಿಂತು ಮದುವೆ ಮಾಡಿಸಿದ್ದರು ಎನ್ನಲಾಗಿದೆ. 2019ರಲ್ಲಿ ಈ ಜೋಡಿ ಪ್ರೀತಿಸಿ ಮದುವೆಯಾಗಿತ್ತು. ಅಂದಹಾಗೆ ಶ್ರೀದೇವಿ ಮತ್ತು ಯುವ ರಾಜ್ ಕುಮಾರ್ ಪರಸ್ಪರ 7 ವರ್ಷಗಳಿಂದ ಪರಿಚಿತರಾಗಿದ್ದರು. ಶ್ರೀದೇವಿ ಅವರು ವಿನಯ್ ರಾಜ್ ಕುಮಾರ್ ಅಭಿನಯದ ರನ್ ಆಂಟನಿ ಸಿನಿಮಾದ ಪ್ರಚಾರದಲ್ಲೂ ಭಾಗಿಯಾಗಿದ್ದರು. ಇನ್ನೂ ಪವರ್ ಸ್ಟಾರ್‌ ಪುನೀತ್‌ ನಿಧನರಾದಾಗ ಮುಂದೆ ನಿಂತು ಸಾಕಷ್ಟು ಕೆಲಸಗಳು ಮಾಡಿದ್ದರು. ಕೆಲವು ದಿನಗಳಿಂದ ಇಬ್ಬರೂ ಎಲ್ಲಿಯೂ ಒಟ್ಟಿಗೆ ಕಾಣಿಸಿಕೊಂಡಿಲ್ಲ. ಇನ್ನೂ ಯುವ ಸಿನಿಮಾ ಪ್ರಚಾರದಲ್ಲಿ ಪತ್ನಿ ಶ್ರೀದೇವಿ ಎಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ಕಳೆದ ಆರೇಳು ತಿಂಗಳಿಂದ ದೊಡ್ಮನೆಯಿಂದ ಶ್ರೀದೇವಿ ಭೈರಪ್ಪ ದೂರವಾಗಿದ್ದರು ಎಂದು ತಿಳಿದುಬಂದಿದೆ.

ಇದನ್ನೂ ಓದಿ: Yuva Rajkumar: ರಾಘಣ್ಣ ದಂಪತಿ ವಿರೋಧದ ನಡುವೆಯೂ ಯುವನಿ​ಗೆ ಮದ್ವೆ ಮಾಡಿಸಿದ್ದು ‘ಅಪ್ಪು’!

Continue Reading

ಪ್ರಮುಖ ಸುದ್ದಿ

K S Bhagavan: ರಾಮ ದಶರಥನ ಮಗನೇ ಅಲ್ಲ, ಪುರೋಹಿತನಿಗೆ ಹುಟ್ಟಿದವನು: ಪ್ರೊ. ಭಗವಾನ್ ವಿವಾದಿತ ಹೇಳಿಕೆ

K S Bhagavan: ದಾವಣಗೆರೆ ಜಿಲ್ಲೆಯ ಹರಿಹರದ ಪ್ರೊ ಕೃಷ್ಣಪ್ಪ ಭವನದಲ್ಲಿ ನಡೆದ ಡಾ. ಅಂಬೇಡ್ಕರ್, ಕೃಷ್ಣಪ್ಪ‌ ಜಯಂತಿ ಕಾರ್ಯಕ್ರಮದಲ್ಲಿ ಶ್ರೀರಾಮನ ಹುಟ್ಟಿನ ಬಗ್ಗೆ ಸಾಹಿತಿ ಕೆ.ಎಸ್‌. ಭಗವಾನ್‌ ವಿವಾದಿತ ಹೇಳಿಕೆ ನೀಡಿದ್ದಾರೆ.

VISTARANEWS.COM


on

K S Bhagavan
Koo

ದಾವಣಗೆರೆ:‌ ಶ್ರೀರಾಮ ಹಾಗೂ ಹಿಂದು ಧರ್ಮದ ಬಗ್ಗೆ ಸದಾ ವಿವಾದಾತ್ಮಕ ಹೇಳಿಕೆಗಳು ನೀಡುವ ಸಾಹಿತಿ ಪ್ರೊ.ಕೆ.ಎಸ್‌. ಭಗವಾನ್ (K S Bhagavan) ಅವರು ಮತ್ತೊಂದು ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ. ಶ್ರೀರಾಮನ ಹುಟ್ಟಿನ ಬಗ್ಗೆ ಮಾತನಾಡಿರುವ ಸಾಹಿತಿ ಭಗವಾನ್‌, ಶ್ರೀ ರಾಮ ದಶರಥನ ಮಗನೇ ಅಲ್ಲ, ಪುರೋಹಿತನಿಗೆ ಹುಟ್ಟಿದವನು ಎಂದು ಹೇಳಿದ್ದಾರೆ.

ಹರಿಹರದ ಪ್ರೊ. ಕೃಷ್ಣಪ್ಪ ಭವನದಲ್ಲಿ ನಡೆದ ಡಾ. ಅಂಬೇಡ್ಕರ್, ಕೃಷ್ಣಪ್ಪ‌ ಜಯಂತಿ ಕಾರ್ಯಕ್ರಮದಲ್ಲಿ ಮಾತನಾಡಿರುವ ಅವರು, ಶ್ರೀ ರಾಮ ದಶರಥನಿಗೆ ಹುಟ್ಟೇ ಇಲ್ಲ, ಪುರೋಹಿತರಿಗೆ ಹುಟ್ಟಿದವನು. ಇದು ವಾಲ್ಮೀಕಿ ರಾಮಾಯಣದಲ್ಲೇ ಇದೆ, ಓದಿ. ರಾಮ ರಾಜ್ಯಭಾರ ಮಾಡೇ ಇಲ್ಲ, ರಾಮನ ತಮ್ಮ ಭರತ ರಾಜ್ಯಭಾರ ಮಾಡಿದ್ದ. ರಾಮ ಬೆಳಗ್ಗೆ ಪುರೋಹಿತರ ಜೊತೆ ಸೇರಿ ಪೂಜೆ ಮಾಡುತ್ತಿದ್ದ. ಮಧ್ಯಾಹ್ನವಾದರೆ ಸಾಕು ಹುಡುಗಿಯರ ಜತೆ ಸೇರಿ ಹೆಂಡ ಕುಡಿಯುತ್ತಿದ್ದ. ರಾಮ ಮಧು ಮೇರೆ ಎಂಬ ಹೆಂಡ ಕುಡಿಯುತ್ತಿದ್ದ ಎಂದು ಹೇಳಿದ್ದಾರೆ.

ಇನ್ನು ಮಹಾಭಾರತ ವಿಷಯಕ್ಕೆ ಬಂದರೆ, ಶಾಪಗ್ರಸ್ಥ ರಾಜ ಪಾಂಡು, ಐವರು ಪಾಂಡವರ ತಂದೆ ಎಂದು ಹೇಳಲಾಗುತ್ತಿದ್ದರೂ ಪಾಂಡವರು ಹುಟ್ಟಿದ್ದು ಮಾತ್ರ ದೇವತೆಗಳಿಂದ ಎಂದು ಮಹಾಭಾರತದಲ್ಲೇ ಇದೆ’ ಎಂದು ತಿಳಿಸಿದ್ದಾರೆ.

ಪುರಾಣಗಳನ್ನು ಅಭ್ಯಾಸ ಮಾಡುವುದರಿಂದ ಯಾವುದೇ ಪ್ರಯೋಜನವಿಲ್ಲ. ಈ ಪುರಾಣಗಳು ಹಾಗೂ ಮನುಸ್ಮೃತಿಯಲ್ಲಿ ಬ್ರಾಹ್ಮಣರನ್ನು ಬಿಟ್ಟು ಉಳಿದೆಲ್ಲ ಜಾತಿ, ಜನಾಂಗದವರನ್ನು ಶೂದ್ರರೆಂದು ಕರೆದಿವೆ. ಶೂದ್ರರೆಲ್ಲಾ ಬ್ರಾಹ್ಮಣರ ಸೇವಕರು ಎಂಬುದನ್ನು ಸಾರಿ ಹೇಳಿದೆ. ಮನುಷ್ಯರನ್ನು ಮನುಷ್ಯರಂತೆ ಕಾಣದ ಇಂತಹ ಪುರಾಣ, ಮನುಸ್ಮೃತಿಯಿಂದ ದೇಶದ ಬಹುಸಂಖ್ಯಾತರಿಗೆ ಏನೂ ಪ್ರಯೋಜನವಿಲ್ಲ, ಆದರೆ ಕೆಲವರು ಪುರಾಣ, ಮನುಸ್ಮೃತಿಯನ್ನು ತಲೆ ಮೇಲೆ ಹೊತ್ತು ಅದರ ಪ್ರಕಾರ ಆಡಳಿತ ನಡೆಸುತ್ತೇವೆಂದು ಕುಣಿಯುತ್ತಾರೆ ಎಂದು ಟೀಕಿಸಿದ್ದಾರೆ.

ಇದನ್ನೂ ಓದಿ | ಧವಳ ಧಾರಿಣಿ ಅಂಕಣ: ಸಾಕೇತದ ಅಮಾತ್ಯ ಸುಮಂತ್ರ, ರಾಮಾಯಣದ ರಹಸ್ಯನಿಧಿ

ಈ ಹಿಂದೆ ಭಗವಾನ್‌ ಅವರು, ಅಯೋಧ್ಯೆಯ ಅರಸನಾಗಿದ್ದ ಶ್ರೀರಾಮನು ಮದ್ಯ ಸೇವಿಸುತ್ತಿದ್ದ. ಆತ ಪತ್ನಿಯನ್ನು ಕಾಡಿಗೆ ಅಟ್ಟಿದ್ದ. ಹೀಗಾಗಿ ಆತನ ದೇವರೇ ಅಲ್ಲ ಎಂದು ಹೇಳಿದ್ದರು. ಇತ್ತೀಚೆಗೆ ಒಕ್ಕಲಿಗರು ಸಂಸ್ಕೃತಿ ಹೀನರು ಅಥವಾ ಅವರು ಹೀನ ಸಂಸ್ಕೃತಿಯುಳ್ಳವರು. ಈ ಮಾತು ನಾನು ಹೇಳಿದ್ದಲ್ಲ, ಕುವೆಂಪು ಅವರೇ ಹೇಳಿರೋದು ಎಂದು ಹೇಳುವ ಮೂಲಕ ವಿವಾದಕ್ಕೀಡಾಗಿದ್ದರು. ಭಗವಾನ್‌ ವಿವಾದಿತ ಹೇಳಿಕೆಗಳ ವಿರುದ್ಧ ಈ ಹಿಂದೆ ಹಿಂದುಪರ ಸಂಘಟನೆಗಳು ಪ್ರತಿಭಟನೆ ನಡೆಸಿ ಆಕ್ರೋಶ ಹೊರಹಾಕಿದ್ದವು.

Continue Reading
Advertisement
Rakshit Shetty Richard Anthony Produce By Hombale
ಸಿನಿಮಾ1 second ago

Chandan Shetty: ನಮ್ಮ ಖುಷಿ ಮೇಲೆ ಪ್ರಶಾಂತ್‌ ಸಂಬರಿಗೆ ಕಣ್ಣು; ಟಾಂಗ್‌ ಕೊಟ್ಟ ಚಂದನ್‌ ಶೆಟ್ಟಿ

Health Benefits of Mango Leaves
ಆರೋಗ್ಯ7 mins ago

Health Benefits of Mango Leaves: ಮಾವಿನೆಲೆಗಳು ತೋರಣ ಕಟ್ಟಲಷ್ಟೇ ಅಲ್ಲ, ಆರೋಗ್ಯಕ್ಕೂ ಒಳ್ಳೆಯದು!

Yuva Rajkumar
ಸಿನಿಮಾ8 mins ago

Yuva Rajkumar: ವಿಚ್ಛೇದನ ಅರ್ಜಿ ಸಿಕ್ಕಾಗ ಉತ್ತರಿಸುವೆ; ಯುವ ನೋಟಿಸ್‌ಗೆ ಪತ್ನಿ ಶ್ರೀದೇವಿ ಫಸ್ಟ್‌ ರಿಯಾಕ್ಷನ್!

Suspension Order tumkur News
ತುಮಕೂರು15 mins ago

Suspension Order : ಕ್ರಿಮಿನಲ್‌ಗಳಿಗೆ ಮಾಹಿತಿ ಸೋರಿಕೆ; ಐವರು ಪೊಲೀಸ್‌ ಸಿಬ್ಬಂದಿ ಅಮಾನತು

Niveditha Gowda Chandan Shetty Divorce Case
ಸಿನಿಮಾ23 mins ago

Niveditha Gowda: ಸೃಜನ್‌, ಸಂಬರಗಿ, ಜೀವನಾಂಶ, ಮಗು; ಎಲ್ಲದಕ್ಕೂ ಸ್ಪಷ್ಟನೆ ಕೊಟ್ಟ ಚಂದನ್‌-ನಿವೇದಿತಾ!

Yuva Rajkumar
ಸಿನಿಮಾ25 mins ago

Yuva Rajkumar: ಹೆಣ್ಣು ಹೆತ್ತವರು ಏನ್‌ ಮಾಡೋದು ಹೇಳಿ; ಡಿವೋರ್ಸ್‌ ನೋಟಿಸ್‌ಗೆ ಶ್ರೀದೇವಿ ತಂದೆ ಭೈರಪ್ಪ ಬೇಸರ

K S Bhagavan
ಪ್ರಮುಖ ಸುದ್ದಿ30 mins ago

K S Bhagavan: ರಾಮ ದಶರಥನ ಮಗನೇ ಅಲ್ಲ, ಪುರೋಹಿತನಿಗೆ ಹುಟ್ಟಿದವನು: ಪ್ರೊ. ಭಗವಾನ್ ವಿವಾದಿತ ಹೇಳಿಕೆ

Karnataka weather Forecast
ಮಳೆ48 mins ago

Karnataka Weather : ಭಾರಿ ಮಳೆಗೆ ಮನೆ ಗೋಡೆ ಕುಸಿದು ಎಮ್ಮೆಗಳು ಸಾವು; ಆಕಳಿನ ಜೀವ ತೆಗೆದ ವಿದ್ಯುತ್‌ ತಂತಿ

IND vs PAK
ಕ್ರೀಡೆ1 hour ago

IND vs PAK : ಭಾರತ ವಿರುದ್ಧ ಸೋಲುವುದಕ್ಕಾಗಿ ಮ್ಯಾಚ್ ಫಿಕ್ಸಿಂಗ್ ಮಾಡಿದ ಪಾಕ್​ ಆಟಗಾರ; ಆರೋಪ

Tshering Tobgay
ದೇಶ1 hour ago

Tshering Tobgay: ಮೋದಿ ನನ್ನ ಗುರು, ದೊಡ್ಡಣ್ಣ;‌ ಭೂತಾನ್‌ ಪ್ರಧಾನಿ ತ್ಶೆರಿಂಗ್‌ ತೋಬ್ಗೆ ಬಹುಪರಾಕ್!

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka weather Forecast
ಮಳೆ48 mins ago

Karnataka Weather : ಭಾರಿ ಮಳೆಗೆ ಮನೆ ಗೋಡೆ ಕುಸಿದು ಎಮ್ಮೆಗಳು ಸಾವು; ಆಕಳಿನ ಜೀವ ತೆಗೆದ ವಿದ್ಯುತ್‌ ತಂತಿ

Karnataka weather Forecast
ಮಳೆ3 days ago

Karnataka weather : ಮಳೆಯಲ್ಲೆ ತಪಸ್ಸಿಗೆ ಕುಳಿತ ವೃದ್ಧ; ಇನ್ನೊಂದು ವಾರ ನಾನ್‌ ಸ್ಟಾಪ್‌ ವರುಣನ ಅಬ್ಬರ

Sigandur launch
ಶಿವಮೊಗ್ಗ3 days ago

Sigandur launch: ಸಿಗಂದೂರು ಲಾಂಚ್‌ನಲ್ಲಿ ಭಾರಿ ವಾಹನಗಳಿಗೆ ನಿರ್ಬಂಧ

Karnataka Rain
ಮಳೆ4 days ago

Karnataka Rain : ಭಾರಿ ಮಳೆಗೆ ಮರ ಬಿದ್ದು ಮೇಕೆಗಳು ಸಾವು; ಸಿಡಿಲಿಗೆ ಎಲೆಕ್ಟ್ರಿಕ್‌ ಅಂಗಡಿ ಸುಟ್ಟು ಭಸ್ಮ

Lok Sabha Election Result 2024 Live
ದೇಶ6 days ago

Lok Sabha Election Result 2024 Live: ಲೋಕಸಭೆ ಚುನಾವಣೆ ಫಲಿತಾಂಶದ ಲೈವ್‌ ಇಲ್ಲಿ ವೀಕ್ಷಿಸಿ

Karnataka Rain
ಮಳೆ1 week ago

Karnataka Rain : 133 ವರ್ಷದ ರೆಕಾರ್ಡ್ ಬ್ರೇಕ್ ಮಾಡಿದ ʻಬೆಂಗಳೂರು ಮಳೆʼ

Snake Rescue Snakes spotted in heavy rain
ಮಳೆ1 week ago

Snake Rescue: ಮಳೆ ನೀರಿನಲ್ಲಿ ಹರಿದು ಬಂದು ಬೈಕ್‌ನಲ್ಲಿ ಸೇರಿಕೊಂಡ ಹಾವು; ಮನೆಗಳಲ್ಲೂ ಪ್ರತ್ಯಕ್ಷ

Karnataka Rain
ಮಳೆ1 week ago

Karnataka Rain : ವೀಕೆಂಡ್‌ ಮೋಜಿಗೆ ವರುಣ ಅಡ್ಡಿ; ಭಾನುವಾರ ಸಂಜೆಗೆ ಮಳೆ ಕಾಟ

Liquor ban
ಬೆಂಗಳೂರು1 week ago

Liquor Ban : ಮುಂದಿನ ಏಳು ದಿನಗಳಲ್ಲಿ ನಾಲ್ಕೂವರೆ ದಿನ ಬಾರ್ ಕ್ಲೋಸ್; ಎಣ್ಣೆ ಸಿಗೋದು ಯಾವ ದಿನ?

Assault Case in Shivamogga
ಕ್ರೈಂ2 weeks ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

ಟ್ರೆಂಡಿಂಗ್‌