caste reservation: ಪರಿಶಿಷ್ಟ ಪಂಗಡಕ್ಕೆ ಅಂಬಿಗ ಸಮುದಾಯ; ಕೂಡಲೇ ಕೇಂದ್ರಕ್ಕೆ ಸ್ಪಷ್ಟೀಕರಣ ನೀಡುತ್ತೇವೆ: ಸಿಎಂ ಸಿದ್ದರಾಮಯ್ಯ - Vistara News

ಕರ್ನಾಟಕ

caste reservation: ಪರಿಶಿಷ್ಟ ಪಂಗಡಕ್ಕೆ ಅಂಬಿಗ ಸಮುದಾಯ; ಕೂಡಲೇ ಕೇಂದ್ರಕ್ಕೆ ಸ್ಪಷ್ಟೀಕರಣ ನೀಡುತ್ತೇವೆ: ಸಿಎಂ ಸಿದ್ದರಾಮಯ್ಯ

caste reservation: ನಾವು ಶಿಫಾರಸು ಮಾಡಿದ ನಂತರದಲ್ಲಿ ಅಂಬಿಗ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಪ್ರಕ್ರಿಯೆಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕ್ರಮ ವಹಿಸಬೇಕು. 96-97 ರಲ್ಲಿಯೇ ದಿವಂಗತ ಶಾಸಕ ನಾರಾಯಣ ರಾವ್ ಎಸ್.ಟಿ ಸಮುದಾಯಕ್ಕೆ ಸೇರಿಸಲು ಪ್ರಯತ್ನಿಸಿದ್ದರು ಎಂಬುದನ್ನು ಮರೆಯಬಾರದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.

VISTARANEWS.COM


on

CM siddaramaiah in Ambiga community prograamme
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಹಾವೇರಿ: ಅಂಬಿಗ ಸಮುದಾಯವನ್ನು (Ambiga community) ಪರಿಶಿಷ್ಟ ಪಂಗಡಕ್ಕೆ (Scheduled Tribe) ಸೇರಿಸಲು ಈಗಾಗಲೇ ಎರಡು ಬಾರಿ ರಾಜ್ಯ ಸರ್ಕಾರವು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದೆ. ಮೀಸಲಾತಿ ಸಂಬಂಧ (caste reservation) ಪರಿಶಿಷ್ಟ ವರ್ಗಕ್ಕೆ (Scheduled Castes) ಸೇರಲು ಸಮುದಾಯ ಸಂಪೂರ್ಣ ಅರ್ಹತೆ ಪಡೆದಿದ್ದು, ಕೇಂದ್ರ ಸರ್ಕಾರ ಈಗ ಪುನಃ ಕೇಳಿರುವ ಸ್ಪಷ್ಟೀಕರಣವನ್ನು ಕೂಡಲೇ ಮಾಹಿತಿ ತರಿಸಿ ಸ್ಪಷ್ಟೀಕರಣ ನೀಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಭರವಸೆ ನೀಡಿದರು.

ಅವರು ಸೋಮವಾರ ಶ್ರೀ ನಿಜ ಶರಣ ಅಂಬಿಗರ ಚೌಡಯ್ಯನವರ 6ನೇ ಶರಣ ಸಂಸ್ಕೃತಿ ಉತ್ಸವ ಹಾಗೂ ನಿಜಶರಣ ಅಂಬಿಗರ ಚೌಡಯ್ಯನವರ 904ನೇ ಜಯಂತ್ಯುತ್ಸವ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದರು.

CM siddaramaiah in Ambiga community prograamme

ನಾವು ಶಿಫಾರಸು ಮಾಡಿದ ನಂತರದಲ್ಲಿ ಅಂಬಿಗ ಸಮುದಾಯವನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸುವ ಪ್ರಕ್ರಿಯೆಯಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಕ್ರಮ ವಹಿಸಬೇಕು. 96-97 ರಲ್ಲಿಯೇ ದಿವಂಗತ ಶಾಸಕ ನಾರಾಯಣ ರಾವ್ ಎಸ್.ಟಿ ಸಮುದಾಯಕ್ಕೆ ಸೇರಿಸಲು ಪ್ರಯತ್ನಿಸಿದ್ದರು ಎಂಬುದನ್ನು ಮರೆಯಬಾರದು ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಅಂಬಿಗರ ಚೌಡಯ್ಯ ನಿಜಶರಣ

ದೋಣಿ ನಡೆಸುವುದು ಹಾಗೂ ಮೀನು ಹಿಡಿಯುವ ಕಾಯಕ ಅಂಬಿಗರದ್ದು. ಕಾಯಕದಲ್ಲಿ ಮೇಲುಕೀಳು ಎಂಬುದಿಲ್ಲ. ಮನುಷ್ಯರ ನಡುವೆ ತಾರತಮ್ಯ ಇರಬಾರದು. ಕಾಯಕವನ್ನು ಆಧರಿಸಿ ಮೇಲು ಕೀಳು ಎಂದು ತಾರತಮ್ಯ ಮಾಡಿದ್ದರ ವಿರುದ್ಧ ಬಸವಾದಿ ಶರಣರು ಹೋರಾಟ ಮಾಡಿದರು. ಅಂಬಿಗರ ಚೌಡಯ್ಯ ಮೊದಲನೇ ಸಾಲಿನಲ್ಲಿ ನಿಲ್ಲುತ್ತಾರೆ. ಅದಕ್ಕೆ ಬಸವಣ್ಣನವರು ಇವರಿಗೆ ನಿಜಶರಣ ಎಂದು ಕರೆದರು ಎಂದು ಸಿಎಂ ಸಿದ್ದರಾಮಯ್ಯ ವಿವರಿಸಿದರು.

ಆರ್ಥಿಕ, ಸಾಮಾಜಿಕ ಶಕ್ತಿ ಪ್ರತಿಯೊಬ್ಬರೂ ಬರಬೇಕು

ಅಂಬಿಗರ ಚೌಡಯ್ಯ ಅಭಿವೃದ್ಧಿ ನಿಗಮ ಸ್ಥಾಪನೆಯನ್ನು ಹಿಂದೆ ನಮ್ಮ ಅವಧಿಯಲ್ಲಿಯೇ ಮಾಡಲಾಯಿತು. ಆರ್ಥಿಕ ಶಕ್ತಿ ಇಲ್ಲದ ಸಮಾಜ ಮುಖ್ಯ ವಾಹಿನಿಗೆ ಬರಲು ಸಾಧ್ಯವಿಲ್ಲ. ಸಮಸಮಾಜದ ಕನಸು ನನಸಾಗಲು ಆರ್ಥಿಕ, ಸಾಮಾಜಿಕ ಶಕ್ತಿ ಪ್ರತಿಯೊಬ್ಬರೂ ಬರಬೇಕು. ಬಸವಾದಿ ಶರಣರು ಕಾಯಕ ಮತ್ತು ದಾಸೋಹ ಎಂಬ ಎರಡು ತತ್ವಗಳನ್ನು ನೀಡಿದ್ದಾರೆ. ಕಾಯಕ ಎಂದರೆ ಉತ್ಪಾದನೆ, ದಾಸೋಹ ಎಂದರೆ ವಿತರಣೆ. ಕಾಯಕದಲ್ಲಿ ಎಲ್ಲರೂ ತೊಡಗಿ ಉತ್ಪಾದನೆಯನ್ನು ಎಲ್ಲರೂ ಹಂಚಿಕೊಳ್ಳಬೇಕು ಎನ್ನುವುದು ಇದರ ಅರ್ಥ. ಇನ್ನೂಬ್ಬರ ಗಳಿಕೆಯನ್ನು ಕುಳಿತು ಅನುಭವಿಸಬಾರದು. ಜಾತಿ ವ್ಯವಸ್ಥೆಗೆ ಚಾಲನೆ ಇಲ್ಲದಿರುವುದು ಆರ್ಥಿಕ, ಸಾಮಾಜಿಕ ಚಟುವಟಿಕೆ ಇಲ್ಲದಿರುವುದರಿಂದ. ಇದಕ್ಕೆ ಚಾಲನೆ ನೀಡಬೇಕೆಂದು ಬಸವಾದಿ ಶರಣರು ಹೇಳಿದ್ದರು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದರು.

ಮಕ್ಕಳು ವಿದ್ಯೆಯಿಂದ ವಂಚಿತರಾಗಬಾರದು

ಅಂಬಿಗರ ಚೌಡಯ್ಯನವರ ಹಾದಿಯಲ್ಲಿ ನಡೆಯುವುದು ನಾವು ಅವರಿಗೆ ಸಲ್ಲಿಸುವ ನಿಜವಾದ ಗೌರವವಾಗಿದೆ. ಅವರ ವಿಚಾರಗಳನ್ನು ಜನರಿಗೆ ತಿಳಿಸಲು ಜಯಂತ್ಯುತ್ಸವವನ್ನು ಆಚರಿಸಲಾಗುತ್ತದೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಇದನ್ನೂ ಓದಿ: BJP Karnataka: 2024ಕ್ಕೆ ಮತ್ತೊಮ್ಮೆ ಮೋದಿ; ಗೋಡೆ ಬರಹ ಬರೆದ ವಿಜಯೇಂದ್ರ

ನಮ್ಮ ಮಕ್ಕಳು ಯಾವ ಕಾರಣದಿಂದಲೂ ವಿದ್ಯೆಯಿಂದ ವಂಚಿತರಾಗಬಾರದು. ಸಮಾಜದ ಅಸಮಾನತೆಯನ್ನು ಹೋಗಲಾಡಿಸಬೇಕು. ಪಟ್ಟಭದ್ರ ಹಿತಾಸಕ್ತಿಯ ವಿರುದ್ಧ ನಿಲ್ಲಬೇಕಾಗುತ್ತದೆ. ಬದಲಾವಣೆ ಬಯಸದ ಜನ ಆಗಲೂ ಇದ್ದರು, ಈಗಲೂ ಇದ್ದಾರೆ. ಹಿಂದುಳಿದ ಸಮಾಜದೊಂದಿಗೆ ನಾನು ಸದಾ ಇರುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಭರವಸೆ ನೀಡಿದರು. ಇದೇ ಸಂದರ್ಭದಲ್ಲಿ ಅಂಬಿಗರ ಚೌಡಯ್ಯನವರ ಬಗ್ಗೆ ರಾಷ್ಟ್ರ ಕವಿ ಜಿ.ಎಸ್. ಶಿವರುದ್ರಪ್ಪನವರ ಕವಿತೆಯನ್ನು ಸಿಎಂ ವಾಚಿಸಿದರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಮಳೆ

Karnataka Rain: ಧಾರಾಕಾರ ಮಳೆ; ಚಿತ್ತಾಪುರ ತಾಲೂಕಿನ ತರ್ಕಸ್‌ಪೇಟೆ ಗ್ರಾಮ ತತ್ತರ

Karnataka Rain: ಕಲಬುರಗಿ, ಆಳಂದ, ಚಿತ್ತಾಪುರ, ಶಹಾಬಾದ್, ವಾಡಿ ಸೇರಿ ಹಲವು ಭಾಗದಲ್ಲಿ ಮಳೆಯ ಆರ್ಭಟ ಜೋರಾಗಿದೆ. ಜಿಲ್ಲೆಯಲ್ಲಿ ಅಬ್ಬರಿಸಿದ ಮಳೆಯಿಂದಾಗಿ ಚಿತ್ತಾಪುರ ತಾಲೂಕಿನ ಕಟ್ಟಕಡೆಯ ಗ್ರಾಮ ತರ್ಕಸ್ ಪೇಟೆ ತತ್ತರಿಸಿ ಹೋಗಿದೆ. ಗುರುವಾರ ಸುರಿದ ಧಾರಾಕಾರ ಮಳೆಯಿಂದ ಮನೆಗಳಿಗೆ ನೀರು ನುಗ್ಗಿದ್ದು, ಗ್ರಾಮದ ರಸ್ತೆಗಳು ಜಲಾವೃತಗೊಂಡಿವೆ.

VISTARANEWS.COM


on

Due to heavy rain water entered the houses of Tharkas Pet village of Chittapur taluk
Koo

ಕಲಬುರಗಿ: ಕಲಬುರಗಿ, ಆಳಂದ, ಚಿತ್ತಾಪುರ, ಶಹಾಬಾದ್, ವಾಡಿ ಸೇರಿದಂತೆ ಹಲವು ಭಾಗದಲ್ಲಿ ಮಳೆಯ ಆರ್ಭಟ ಜೋರಾಗಿದೆ. ಜಿಲ್ಲೆಯಲ್ಲಿ ಅಬ್ಬರಿಸಿದ ಮಳೆಗೆ (Karnataka Rain) ಚಿತ್ತಾಪುರ ತಾಲೂಕಿನ ಕಟ್ಟಕಡೆಯ ಗ್ರಾಮ ತರ್ಕಸ್ ಪೇಟೆ ತತ್ತರಿಸಿ ಹೋಗಿದೆ. ಗುರುವಾರ ಸುರಿದ ಧಾರಾಕಾರ ಮಳೆಯಿಂದ (Rain Effect) ಮನೆಗಳಿಗೆ ನೀರು ನುಗ್ಗಿದ್ದು, ಗ್ರಾಮದ ರಸ್ತೆಗಳು ಜಲಾವೃತಗೊಂಡಿವೆ.

ಸತತ ಮೂರು ತಾಸು ಸುರಿದ ಮಳೆಯಿಂದ ಗ್ರಾಮದ ಹಲವು ಮನೆಗಳಿಗೆ ಭಾರಿ ಪ್ರಮಾಣದಲ್ಲಿ ನೀರು ನುಗ್ಗಿ ಜನ ಜೀವನ ಅಸ್ತವ್ಯಸ್ತಗೊಂಡಿದೆ. ಮನೆಯ ಪಾತ್ರೆಗಳು ನೀರಲ್ಲಿ ತೇಲಾಡಿದರೆ, ಶೇಖರಿಸಿಟ್ಟ ಜೋಳ ಮತ್ತು ಬೇಳೆಕಾಳುಗಳು ನೀರು ಪಾಲಾಗಿ, ಬಡ ಕುಟುಂಬಗಳು ತೀವ್ರ ನಷ್ಟ ಅನುಭವಿಸುವಂತಾಗಿದೆ. ಮನೆಗೆ ನುಗ್ಗಿದ ಮಳೆ ನೀರನ್ನು ಹೊರ ಚೆಲ್ಲುವಲ್ಲಿ ಗ್ರಾಮಸ್ಥರು ಹರಸಾಹಸ ಪಡಬೇಕಾಯಿತು.

ಇದನ್ನೂ ಓದಿ: Bus Accident : ವಾಹನ ಚಲಾಯಿಸುತ್ತಿದ್ದಾಗಲೇ ಚಾಲಕನಿಗೆ ತಲೆಸುತ್ತು; ರಸ್ತೆ ಬಿಟ್ಟು ಜಮೀನಿಗೆ ನುಗ್ಗಿದ ಬಸ್‌

ನಾಲವಾರ ವಲಯದ ಕೊಲ್ಲೂರು, ರಾಂಪುರಹಳ್ಳಿ, ಶಾಂಪುರಹಳ್ಳಿ ಸೇರಿದಂತೆ ತರ್ಕಸ್ ಪೇಟೆ ಗ್ರಾಮಗಳಲ್ಲಿ ಉತ್ತಮ ಮಳೆಯಾಗಿದೆ. ಕಳೆದ ಹತ್ತು ದಿನಗಳಿಂದ ನಾಲವಾರ ವಲಯದಲ್ಲಿ ಮಳೆಯಾಗುತ್ತಿದೆ.

ಹವಾಮಾನ ಇಲಾಖೆಯ ಮಾಹಿತಿ ಪ್ರಕಾರ ಮುಂದಿನ ದಿನಗಳಲ್ಲಿ ಇನ್ನಷ್ಟು ಮಳೆಯಾಗುವ ಸಾಧ್ಯತೆಯಿದ್ದು, ಮಹಾರಾಷ್ಟ್ರದಲ್ಲಿ ಮಳೆ ಆಗುತ್ತಿರುವುದರಿಂದ ಭೀಮಾನದಿಗೆ ಯಾವುದೇ ಸಮಯದಲ್ಲಿ ಹೆಚ್ಚಿನ ನೀರು ಹರಿದು ಬರುವ ಸಾಧ್ಯತೆ ಇದೆ. ಆದ್ದರಿಂದ ಜನ-ಜಾನುವಾರುಗಳ ಸುರಕ್ಷತೆ ಅತ್ಯವಶ್ಯಕವಾಗಿದೆ. ನದಿ ತೀರದ ಜನರು ಸಾಕಷ್ಟು ಎಚ್ಚರಿಕೆ ವಹಿಸಬೇಕಿದೆ.

ಇದನ್ನೂ ಓದಿ: Bengaluru News: ಬೆಂಗಳೂರಿನಲ್ಲಿ ಜೂ.15ರಂದು ʼನಾರಿ ಸಮ್ಮಾನ್‌ʼ ಪ್ರಶಸ್ತಿ ಪ್ರದಾನ

ರೈತರು ತಮ್ಮ ಜಾನುವಾರುಗಳನ್ನು ನದಿ ತೀರಕ್ಕೆ ತರಬಾರದು. ಗುಡುಗು ಸಿಡಿಲು ಮಿಂಚು ಆರ್ಭಟಿಸುವ ಸಮಯದಲ್ಲಿ ಜಾನುವಾರುಗಳನ್ನು ಮರದ ಕೆಳಗೆ ಕಟ್ಟಬಾರದು. ಮಳೆಗಾಲದ ಸಂದರ್ಭದಲ್ಲಿ ಜಾನುವಾರುಗಳ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ಪಶುಪಾಲನಾ ಇಲಾಖೆಯ ಚಿತ್ತಾಪುರ ತಾಲೂಕು ಸಹಾಯಕ ನಿರ್ದೇಶಕ ಶಂಕರ್ ಕಣ್ಣಿ ತಿಳಿಸಿದ್ದಾರೆ.

Continue Reading

ಕರ್ನಾಟಕ

Actor Darshan: ಸಸ್ಯಾಹಾರಿ ಅಂದ್ರೂ ರೇಣುಕಾಸ್ವಾಮಿ ಬಾಯಿಗೆ ಬಿರಿಯಾನಿ ಮೂಳೆ ತುರುಕಿದ್ದ ಆರೋಪಿಗಳು!

Actor Darshan: ಬಲವಂತ ಮಾಡಿದಾಗ ಬಿರಿಯಾನಿ ತಿನ್ನದೆ ಕೆಳಗೆ ಉಗಿದಿದ್ದರಿಂದ ರೇಣುಕಾ ಸ್ವಾಮಿಯನ್ನು ಹಿಗ್ಗಾಮುಗ್ಗಾ ಥಳಿಸಲಾಗಿತ್ತು ಎಂದು ಆರೋಪಿಯೊಬ್ಬ ವಿಚಾರಣೆ ವೇಳೆ ಬಾಯ್ಬಿಟ್ಟಿದ್ದಾನೆ.

VISTARANEWS.COM


on

Actor Darshan
Koo

ಬೆಂಗಳೂರು: ರೇಣುಕಾಸ್ವಾಮಿ ಹತ್ಯೆ ಪ್ರಕರಣದಲ್ಲಿ (Renuka Swamy murder case) ಇನ್ನಿಬ್ಬರು ಆರೋಪಿಗಳು ಪೊಲೀಸರಿಗೆ ಶರಣಾಗಿದ್ದಾರೆ. ಈ ನಡುವೆ ಪ್ರಕರಣದಲ್ಲಿ (Actor Darshan) ಹೇಗೆಲ್ಲಾ ರೇಣುಕಾಸ್ವಾಮಿಗೆ ಚಿತ್ರಹಿಂಸೆ ನೀಡಲಾಗಿತ್ತು ಎಂಬ ವಿಷಯಗಳು ಒಂದೊಂದಾಗೆ ಬೆಳಕಿಗೆ ಬರುತ್ತಿವೆ. ಕಿಡ್ನ್ಯಾಪ್‌ ಆಗಿದ್ದ ದಿನ ಊಟ ಕೊಡಿಸಿದ್ದ ಡಿ ಗ್ಯಾಂಗ್, ನಾನು ಶಾಖಾಹಾರಿ ಎಂದರೂ ಬಿಡದೇ ರೇಣುಕಾಸ್ವಾಮಿ ಬಾಯಿಗೆ ಬಿರಿಯಾನಿ ಮೂಳೆ ತುರುಕಿದ್ದರು ಎನ್ನಲಾಗಿದೆ.

ಚಿತ್ರದುರ್ಗದಿಂದ ಜೂನ್‌ 8ರಂದು ರೇಣುಕಾಸ್ವಾಮಿಯನ್ನು ಕಿಡ್ನ್ಯಾಪ್‌ ಮಾಡಿ ಬೆಂಗಳೂರಿಗೆ ಕರೆತರಲಾಗಿತ್ತು. ನಂತರ ಆತನನ್ನು ಪಟ್ಟಣಗೆರೆ ಶೆಡ್‌ನಲ್ಲಿ ಕೂಡಿಹಾಕಿ ಟಾರ್ಚರ್‌ ನೀಡಲಾಗಿದೆ. ಮಧ್ಯಾಹ್ನ ಊಟ ಕೊಡಿಸಿದಾಗ ನಾನು ಸಸ್ಯಹಾರಿ ಎಂದು ರೇಣುಕಾಸ್ವಾಮಿ ಹೇಳಿದ್ದಾನೆ. ಆದರೂ ಬಿಡದೆ ಆರೋಪಿಗಳು ಬಿರಿಯಾನಿ ತಿನ್ನಿಸಿದ್ದಾರೆ.

ಇದನ್ನೂ ಓದಿ | Actor Darshan: ಚಿನ್ನುಮರಿ ತಂಟೆಗೆ ಹೋದ್ರೆ ಒದೆ, ಪವಿತ್ರಾ ಗೌಡ ತಂಟೆಗೆ ಬಂದ್ರೆ ಕೊಲೆ; ಟ್ರೋಲ್ ಆಗುತ್ತಿದೆ ​ ದರ್ಶನ್​ ಕೊಲೆ ಕೇಸ್​​

ಬಲವಂತ ಮಾಡಿದಾಗ ಬಿರಿಯಾನಿ ತಿನ್ನದೆ ಕೆಳಗೆ ಉಗಿದಿದ್ದರಿಂದ ರೇಣುಕಾ ಸ್ವಾಮಿಯನ್ನು ಹಿಗ್ಗಾಮುಗ್ಗಾ ಥಳಿಸಿದ್ದ ಗ್ಯಾಂಗ್, ಬಾಸ್ ಬರುತ್ತಾರೆ ಒದೆ ತಿನ್ನಲು ರೆಡಿಯಾಗು. ಬಿರಿಯಾನಿ ತಿಂದ್ರೆ ಶಕ್ತಿ ಬರುತ್ತೆ ಎಂದು ಬಿರಿಯಾನಿ ತಿನ್ನಿಸಲು ಯತ್ನಿಸಿದ್ದಾರೆ. ಈ ಬಗ್ಗೆ ಪೊಲೀಸರ ಮುಂದೆ ಆರೋಪಿ ದೀಪಕ್ ಹೇಳಿಕೆ ಕೊಟ್ಟಿದ್ದಾನೆ.

ಕಿಡ್ನ್ಯಾಪ್ ಮಾಡಿಕೊಂಡು ಹೋಗುತ್ತಿದ್ದ ಸಿಸಿಟಿವಿ ಫುಟೇಜ್‌ ಲಭ್ಯ

ಡಿ ಗ್ಯಾಂಗ್‌ನಿಂದ ದುರ್ಗದ ಹುಡುಗನ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ರೇಣುಕಾಸ್ವಾಮಿಯನ್ನು ಕಿಡ್ನ್ಯಾಪ್‌ ಮಾಡಿದ್ದ ಸಂದರ್ಭದ ಸ್ಫೋಟಕ ವಿಡಿಯೊ ವಿಸ್ತಾರ ನ್ಯೂಸ್‌ಗೆ ಲಭ್ಯವಾಗಿದೆ. KA-11-B-7939 ಕಾರಿನಲ್ಲಿ ಜೂನ್ 8 ಬೆಳಗ್ಗೆ 11:30ಕ್ಕೆ ಗುಯಿಲಾಳ್ ಟೋಲ್ ಅನ್ನು ಗ್ಯಾಂಗ್ ಕ್ರಾಸ್ ಮಾಡಿತ್ತು. ಕಾರಿನ ಮುಂಭಾಗ ಡ್ರೈವರ್ ರವಿ ಮತ್ತು ರಾಘವೇಂದ್ರ ಕೂತಿರುವ ದೃಶ್ಯ ಸೆರೆಯಾಗಿದೆ.

ಇದನ್ನೂ ಓದಿ | Darshan Arrested : ಅನ್ನಪೂರ್ಣೇಶ್ವರಿ ನಗರ ಪೊಲೀಸ್​ ಠಾಣೆಯಲ್ಲಿ ಬೀಗರೂಟವೇ? ಶಾಮಿಯಾನ ಹಾಕಿದ ಪೊಲೀಸರ ನಡೆ ಫುಲ್ ಟ್ರೋಲ್​!

ಹಿರಿಯೂರು ಮಾರ್ಗವಾಗಿ ಬೆಂಗಳೂರು ಕಡೆ ಪ್ರಯಾಣ ಮಾಡಿದ್ದ ಟೀಂ, ಟೋಲ್‌ನಲ್ಲಿ ವಿಐಪಿ ಕಾರ್ಡ್ ಪ್ರದರ್ಶನ ಮಾಡಿ, ದರ್ಶನ್ ಅಭಿಮಾನಿಗಳ ಸಂಘದ ಅಧ್ಯಕ್ಷ ಎಂದು ರಾಘವೇಂದ್ರ ಬಿಲ್ಡಪ್ ಕೊಟ್ಟು ಹೋಗಿದ್ದರು. ಬೆಂಗಳೂರಿಗೆ ಬಿಟ್ಟು ವಾಪಸ್ ಹೋಗುವಾಗ ಡ್ರೈವರ್ ರವಿ ಮಾತ್ರ ವಾಹನದಲ್ಲಿ ಕಾಣಿಸಿಕೊಂಡಿದ್ದಾರೆ. ಜೂನ್‌ 9 ಬೆಳಗಿನ ಜಾವ 4:30 ಕ್ಕೆ ಚಿತ್ರದುರ್ಗದತ್ತ ರವಿ ತೆರಳಿದ್ದ. ಈತ ಇನ್ನುಳಿದ ನಾಲ್ಕು ಮಂದಿ ಜೊತೆ ರೇಣುಕಾಸ್ವಾಮಿಯನ್ನು ಬೆಂಗಳೂರಿಗೆ ಬಿಟ್ಟು ಹೋಗಿದ್ದ.

Continue Reading

ಬೆಂಗಳೂರು

Actor Darshan : ರೇಣುಕಾಸ್ವಾಮಿಯನ್ನು ಕಿಡ್ನ್ಯಾಪ್ ಮಾಡಿ ಕರೆತರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ!

Actor Darshan : ಅಶ್ಲೀಲ ಮೆಸೇಜ್‌ ಕಳಿಸಿದ್ದಕ್ಕೆ ರೇಣುಕಾಸ್ವಾಮಿಯನ್ನು ಕಿಡ್ನ್ಯಾಪ್ ಮಾಡಿಕೊಂಡು ಗುಯಿಲಾಳ್ ಟೋಲ್ ಕ್ರಾಸ್‌ ಮಾಡಿ ಹೋಗುತ್ತಿದ್ದ ದೃಶ್ಯವು ಸಿಸಿಟಿವಿಯಲ್ಲಿ ಸೆರೆಯಾಗಿದೆ.

VISTARANEWS.COM


on

By

Actor Darshan
Koo

ಬೆಂಗಳೂರು: ನಟ ದರ್ಶನ್‌ (Actor Darshan) ಗೆಳತಿ, ನಟಿಯೂ ಆದ ಪವಿತ್ರಾ ಗೌಡ (Pavithra Gowda) ಅವರ ಕುರಿತು ಅಶ್ಲೀಲ ಮೆಸೇಜ್‌ ಮಾಡಿದ ಹಿನ್ನೆಲೆಯಲ್ಲಿ ನಡೆದ ರೇಣುಕಾಸ್ವಾಮಿ ಕೊಲೆ (murder case) ಪ್ರಕರಣಕ್ಕೆ ಕ್ಷಣಕ್ಕೊಂದು ತಿರುವುಗಳು ಸಿಗುತ್ತಿವೆ. ಈಗಾಗಲೇ ಮತ್ತಿಬ್ಬರು ಆರೋಪಿಗಳು ಚಿತ್ರದುರ್ಗದ ಪೊಲೀಸರಿಗೆ ಶರಣಾಗಿದ್ದು, ಆರೋಪಿಗಳ ಸಂಖ್ಯೆ 16ಕ್ಕೆ ಏರಿಕೆ ಆಗಿದೆ. ಈ ನಡುವೆ ರೇಣುಕಾಸ್ವಾಮಿಯನ್ನು ಕಿಡ್ನ್ಯಾಪ್‌ ಮಾಡಿ ಕರೆತರುವ ದೃಶ್ಯವು ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಜೂನ್ 8ರ ಬೆಳಗ್ಗೆ 11:30ಕ್ಕೆ ಗುಯಿಲಾಳ್ ಟೋಲ್ ಬಳಿ ಕಾರಿನಲ್ಲಿ ಕಿಡ್ನ್ಯಾಪ್‌ ಮಾಡಿಕೊಂಡು ಹೋಗುತ್ತಿರುವ ದೃಶ್ಯ ಸೆರೆಯಾಗಿದೆ. ಕಾರಿನ ಮುಂಭಾಗ ಡ್ರೈವರ್ ರವಿ ಹಾಗೂ ರಾಘವೇಂದ್ರ ಕುಳಿತಿದ್ದರು. ಹಿರಿಯೂರು ಮಾರ್ಗವಾಗಿ ಬೆಂಗಳೂರು ಕಡೆ ಪ್ರಯಾಣ ಮಾಡಿರುವ ಈ ಗ್ಯಾಂಗ್‌ ವಿಐಪಿ ಕಾರ್ಡ್ ತೋರಿಸಿ ಹೋಗಿದ್ದಾರೆ.

ಮಾತ್ರವಲ್ಲದೇ ದರ್ಶನ್ ಸಂಘದ ಅಧ್ಯಕ್ಷ ಎಂದು ಬಿಲ್ಡಪ್ ಕೊಟ್ಟು ಹೋಗಿರುವ ದೃಶ್ಯವೆಲ್ಲವೂ ಹಿರಿಯೂರು ಗುಯಿಲಾಳ್ ಟೋಲ್ ಸಮೀಪದ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಇನ್ನುಳಿದ ನಾಲ್ಕು ಮಂದಿ ಜತೆ ರೇಣುಕಾಸ್ವಾಮಿಯನ್ನು ಬೆಂಗಳೂರಿಗೆ ಬಿಟ್ಟು ಜೂನ್‌ 9ರ ಬೆಳಗಿನ ಜಾವ 4:30ಕ್ಕೆ ಚಿತ್ರದುರ್ಗದತ್ತ ಚಾಲಕ ರವಿ ವಾಪಸ್‌ ಆಗಿದ್ದಾನೆ.

ಇದನ್ನೂ ಓದಿ: Actor Darshan: ರೇಣುಕಾಸ್ವಾಮಿ ಕೊಲೆ ಕೇಸ್; ಆರೋಪಿಗಳಿಗೆ ನೀಡಲು ರೆಸ್ಟೋರೆಂಟ್‌ನಲ್ಲಿ ಇಟ್ಟಿದ್ದ 30 ಲಕ್ಷ ಸೀಜ್

ಶರಣಾಗತಿಯಾಗಿದ್ದ ಆರೋಪಿಗಳು

ಇನ್ನೂ ತಾವೇ ಸರೆಂಡರ್ ಆಗಿರುವ ಕಾರು ಚಾಲಕ ರವಿ ಜತೆಗೆ ಹೇಮಂತ್ ಹಾಗೂ ಪುನೀತ್‌ರನ್ನು ಪೊಲೀಸರು ಶುಕ್ರವಾರ ನ್ಯಾಯಾಲಯಕ್ಕೆ ಕರೆದುಕೊಂಡು ಹೋದರು. ರೇಣುಕಾಸ್ವಾಮಿಯನ್ನು ಕಿಡ್ನ್ಯಾಪ್‌ ಮಾಡಿಕೊಂಡು ಬಂದಾಗ ರವಿ ಕಾರು ಚಲಾಯಿಸಿದ್ದ. ಸ್ಕಾರ್ಪಿಯೋ ಮಾಲೀಕ ಪುನೀತ್ ಹಾಗೂ ಶವ ಸಾಗಿಸಿದ ಬಳಿಕ ಹೇಮಂತ್ ಕಾರನ್ನು ವಾಶ್ ಮಾಡಿದ್ದ. ಇದೀಗ ಈ ಮೂವರನ್ನು ನ್ಯಾಯಾಲಯಕ್ಕೆ ಕರೆದುಕೊಂಡು ಹೋಗಿದ್ದಾರೆ.

ಆರೋಪಿಗಳ ಸಂಖ್ಯೆ 16ಕ್ಕೆ ಏರಿಕೆ

ಬೆಂಗಳೂರು/ಚಿತ್ರದುರ್ಗ: ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ನಟ ದರ್ಶನ್‌ (Actor Darshan) ಸೇರಿ ಹಲವರು ಸೆರೆಯಾಗಿದ್ದು, ಇದೀಗ ಮತ್ತಿಬ್ಬರು ಆರೋಪಿಗಳು ಪೊಲೀಸರಿಗೆ ಶರಣಾಗಿದ್ದಾರೆ. ಚಿತ್ರದುರ್ಗದ ಅನುಕುಮಾರ್ ಅಲಿಯಾಸ್‌ ಅನು, ಜಗದೀಶ್ ಅಲಿಯಾಸ್‌ ಜಗ್ಗು ಸರೆಂಡರ್ ಆಗಿದ್ದಾರೆ.

ಚಿತ್ರದುರ್ಗದ ಡಿವೈಎಸ್‌ಪಿ ಪಿ.ಕೆ ದಿನಾಕರ್ ಅವರಿಗೆ ಶರಣಾಗಿದ್ದಾರೆ. ಅನು ಚಿತ್ರದುರ್ಗದ ಸಿಹಿನೀರ ಹೊಂಡ ನಿವಾಸಿಯಾದರೆ, ಜಗದೀಶ್ ಚಿತ್ತದುರ್ಗದ ರೈಲ್ವೆ ಸ್ಟೇಶನ್ ಏರಿಯಾ ನಿವಾಸಿಯಾಗಿದ್ದಾನೆ. ಸದ್ಯ ಇಬ್ಬರು ಆರೋಪಿಗಳನ್ನು ಕಾಮಾಕ್ಷಿಪಾಳ್ಯ ಪೊಲೀಸರಿಗೆ ಒಪ್ಪಿಸಿದ್ದಾರೆ. ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ನಟ ದರ್ಶನ್‌ ಸೇರಿ ಒಟ್ಟು 16 ಮಂದಿ ಆರೋಪಿಗಳು ಹತ್ಯೆ ಪ್ರಕರಣದಲ್ಲಿ ಬಂಧಿಯಾಗಿದ್ದಾರೆ.

ಪವಿತ್ರಗೌಡ ನೋಡಲು ಬಂದ ಸಂಬಂಧಿಕರು

ರೇಣುಕಾ ಸ್ವಾಮಿ ಕೊಲೆ ಪ್ರಕರಣದಲ್ಲಿ ಎ1 ಆರೋಪಿಯಾಗಿರುವ ಪವಿತ್ರಗೌಡ ಭೇಟಿಗೆ ಆಕೆಯ ಸಹೋದರಿ ಹಾಗೂ ಸಂಬಂಧಿ ಬಂದಿದ್ದರು. ಅನ್ನಪೂರ್ಣೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿರುವ ಕೊಲೆ ಆರೋಪಿ ಪವಿತ್ರಗೌಡ ಭೇಟಿಗೆ ಪೊಲೀಸರು ನಿರಾಕರಿಸಿದರು. ಫೋನ್ ಮಾಡಿಸಿ ಒಳಗಡೆ ಹೋಗಲು ಪ್ರಯತ್ನಿಸಿದರು. ಆದರೆ ಬಂದ ದಾರಿಗೆ ಸುಂಕ ಎಲ್ಲ ಎಂಬಂತೆ ಬರಿಗೈಯ್ಯಲ್ಲಿ ಹೋದರು. ಈ ಮೊದಲು ಸಾಂತ್ವನ ಕೇಂದ್ರಕ್ಕೆ ಹೋಗಿದ್ದಾಗ ಠಾಣೆಯಲ್ಲಿ ಭೇಟಿ ಮಾಡುವಂತೆ ಸೂಚಿಸಿ ಕಳಿಸಲಾಗಿತ್ತು. ಈಗ ಠಾಣೆಗೆ ಬಂದು ಮನವಿ ಮಾಡಿಕೊಂಡರು ಪವಿತ್ರಗೌಡ ಭೇಟಿಗೆ ಪೊಲೀಸರು ಅವಕಾಶ ಮಾಡಿಕೊಟ್ಟಿಲ್ಲ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಪ್ರಮುಖ ಸುದ್ದಿ

BS Yediyurappa: ಪೋಕ್ಸೊ ಕೇಸ್‌ನಲ್ಲಿ ಯಡಿಯೂರಪ್ಪಗೆ ಬಿಗ್‌ ರಿಲೀಫ್‌; ಬಂಧಿಸದಂತೆ ಕೋರ್ಟ್‌ ಆದೇಶ

BS Yediyurappa: ಪೋಕ್ಸೊ ಕೇಸ್‌ನಲ್ಲಿ ನಿರೀಕ್ಷಣಾ ಜಾಮೀನು ನೀಡಬೇಕು ಹಾಗೂ ದಾಖಲಾಗಿರುವ ಪೋಕ್ಸೊ ಕೇಸ್‌ಅನ್ನು ರದ್ದುಗೊಳಿಸಬೇಕು ಎಂಬುದಾಗಿ ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅದರಂತೆ, ಕರ್ನಾಟಕ ಹೈಕೋರ್ಟ್‌ ವಿಚಾರಣೆ ನಡೆಸಿತು.

VISTARANEWS.COM


on

BS Yediyurappa
Koo

ಬೆಂಗಳೂರು: 17 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪದಲ್ಲಿ ದಾಖಲಾದ ಪೋಕ್ಸೊ ಕೇಸ್‌ನಲ್ಲಿ (POCSO Case) ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ (BS Yediyurappa) ಅವರಿಗೆ ಕರ್ನಾಟಕ ಹೈಕೋರ್ಟ್‌ ಬಿಗ್‌ ರಿಲೀಫ್‌ ನೀಡಿದೆ. ಹೈಕೋರ್ಟ್‌ನ ಮುಂದಿನ ವಿಚಾರಣೆವರೆಗೆ ಬಿ.ಎಸ್.ಯಡಿಯೂರಪ್ಪ ಅವರನ್ನು ಬಂಧಿಸಬಾರದು ಎಂದು ಕರ್ನಾಟಕ ಹೈಕೋರ್ಟ್‌ನ ನ್ಯಾಯಮೂರ್ತಿ ಕೃಷ್ಣ ದೀಕ್ಷಿತ್ ಅವರ ಏಕಸದಸ್ಯ ಪೀಠವು ಆದೇಶ ಹೊರಡಿಸಿದೆ. ಇದರಿಂದಾಗಿ, ಸಿಐಡಿ ಅಧಿಕಾರಿಗಳಿಂದ ಬಂಧನದ ಭೀತಿಯಲ್ಲಿ ಯಡಿಯೂರಪ್ಪ ಅವರಿಗೆ ತಾತ್ಕಾಲಿಕ ರಿಲೀಫ್‌ ಸಿಕ್ಕಿದೆ. ಆದರೆ, ಜೂನ್‌ 17ರಂದು ಸಿಐಡಿ ಅಧಿಕಾರಿಗಳ ಎದುರು ವಿಚಾರಣೆಗೆ ಹಾಜರಾಗಬೇಕು ಎಂದು ಯಡಿಯೂರಪ್ಪ ಅವರಿಗೆ ಕೋರ್ಟ್‌ ಸೂಚಿಸಿದೆ. ವಿಚಾರಣೆಯನ್ನು ಎರಡು ವಾರ ಮುಂದೂಡಲಾಗಿದೆ.

ಬಿ.ಎಸ್‌.ಯಡಿಯೂರಪ್ಪ ಅವರ ಪರವಾಗಿ ಹಿರಿಯ ವಕೀಲ ಸಿ.ವಿ. ನಾಗೇಶ್‌ ಅವರು ವಾದ ಮಂಡಿಸಿದರು. “ಪೋಕ್ಸೊ ಕೇಸ್‌ಗೆ ಸಂಬಂಧಿಸಿದಂತೆ ಎರಡು ಅರ್ಜಿಗಳನ್ನು ಸಲ್ಲಿಸಲಾಗಿದೆ. ಒಂದು ಪ್ರಕರಣವನ್ನು ರದ್ದುಗೊಳಿಸುವಂತೆ ಹಾಗೂ ಇನ್ನೊಂದು ನಿರೀಕ್ಷಣಾ ಜಾಮೀನು ನೀಡುವಂತೆ ಕೋರಿ ಅರ್ಜಿ ಸಲ್ಲಿಸಲಾಗಿದೆ. ಪ್ರಕರಣದಲ್ಲಿ ದೂರುದಾರೆಗೆ ಬ್ಲ್ಯಾಕ್‌ಮೇಲ್‌ ಮಾಡುವುದೇ ಕೆಲಸವಾಗಿದೆ. ಪ್ರಕರಣದಲ್ಲಿ ಸಂತ್ರಸ್ತೆಯ ತಾಯಿ ದೂರು ನೀಡಿದ್ದಾರೆ. ಆಕೆಯ ವೃತ್ತಿಯೇ ಬೇರೆಯವರ ವಿರುದ್ಧ ಕೇಸ್‌ ದಾಖಲಿಸುವುದಾಗಿದೆ. ಇದುವರೆಗೆ ಮಹಿಳೆಯು ಸುಮಾರು 53 ಪ್ರಕರಣಗಳನ್ನು ದಾಖಲಿಸಿದ್ದಾರೆ. ಇಲ್ಲಿ ಭಾವನಾತ್ಮಕ ಅಂಶಗಳಿಗಿಂತ ವಾಸ್ತವಾಂಶಕ್ಕೆ ಹೆಚ್ಚಿನ ಆದ್ಯತೆ ನೀಡಬೇಕಿದೆ” ಎಂದು ಹೇಳಿದರು.

Medical Ethics

ಆಗ ನ್ಯಾಯಾಧೀಶರು, “ಎಫ್‌ಐಆರ್‌ ದಾಖಲಿಸಿದ್ದು ಯಾರು?” ಎಂದು ಪ್ರಶ್ನಿಸಿದರು. ಆಗ ನಾಗೇಶ್‌, “ಸಂತ್ರಸ್ತೆಯ ತಾಯಿ” ಎಂದರು. “ಆಕೆಯ ಉದ್ಯೋಗ ಏನು” ಎಂದು ಜಡ್ಜ್‌ ಕೇಳಿದ ಪ್ರಶ್ನೆಗೆ, “ಬೇರೆಯವರ ವಿರುದ್ಧ ಕೇಸ್‌ ಹಾಕುವುದೇ ಆಕೆಯ ಕೆಲಸವಾಗಿದೆ” ಎಂದು ನಾಗೇಶ್‌ ಹೇಳಿದರು. “ಉದ್ಯೋಗ ಏನು ಅಂತ ನಮೂದಿಸಿದ್ದಾರೆ” ಎಂದು ಜಡ್ಜ್‌ ಕೇಳಿದ್ದಕ್ಕೆ “ಉದ್ಯಮಿ” ಎಂದು ನಾಗೇಶ್‌ ಹೇಳಿದರು. ಆಗ ನ್ಯಾಯಾಲಯವು, “ಮಹಿಳಾ ಉದ್ಯಮಿ ಎಂದೇ ಪರಿಗಣಿಸಲಾಗುತ್ತದೆ” ಎಂದಿತು. “ಸಿಐಡಿ ನೋಟಿಸ್‌ ಬಳಿಕ ವಿಚಾರಣೆಗೆ ಹಾಜರಾಗಿದ್ದಾರೆ. ಧ್ವನಿ ಪರೀಕ್ಷೆಗೂ ಯಡಿಯೂರಪ್ಪ ಅವರು ಸಹಕಾರ ನೀಡಿದ್ದಾರೆ. ಹಾಗಾಗಿ, ಪ್ರಕರಣದಲ್ಲಿ ಯಡಿಯೂರಪ್ಪ ಅವರನ್ನು ಬಂಧಿಸುವ ಅವಶ್ಯಕತೆ ಇಲ್ಲ” ಎಂದು ನಾಗೇಶ್‌ ಹೇಳಿದರು.

ಅಡ್ವೊಕೇಟ್‌ ಜನರಲ್‌ ವಾದವೇನಿತ್ತು?

ಅಡ್ವೊಕೇಟ್‌ ಜನರಲ್‌ (AG) ಶಶಿಕಿರಣ್‌ ಶೆಟ್ಟಿ ಅವರು ಸಿಐಡಿ ಪರ ವಾದ ಮಂಡಿಸಿದರು. “ಮಹಿಳೆಯು 53 ಕೇಸ್‌ಗಳನ್ನು ದಾಖಲಿಸಿದ್ದಾರೆ ಎಂಬುದಾಗಿ ಅರ್ಜಿದಾರರು (ಬಿಎಸ್‌ವೈ) ಹೇಳಿದ್ದಾರೆ. ಆದರೆ, ಮಹಿಳೆಯು ಆರು ಕೇಸ್‌ಗಳನ್ನು ಮಾತ್ರ ದಾಖಲಿಸಿದ್ದಾರೆ. ದೂರು ನೀಡಿದ ಮಹಿಳೆಯು ಕೆಲ ದಿನಗಳ ಹಿಂದೆ ಮೃತಪಟ್ಟಿದ್ದಾರೆ” ಎಂದರು. ಆಗ ನ್ಯಾ.ಕೃಷ್ಣ ದೀಕ್ಷಿತ್‌, “ಮಹಿಳೆ ಯಾವಾಗ ಮೃತಪಟ್ಟರು” ಎಂದು ಪ್ರಶ್ನಿಸಿದರು. “2024ರ ಮೇ 27ರಂದು ಮಹಿಳೆ ಮೃತಪಟ್ಟಿದ್ದಾರೆ” ಎಂದು ಎ.ಜಿ ತಿಳಿಸಿದರು. “ಮೃತಪಡಲು ಕಾರಣವೇನು” ಎಂದು ನ್ಯಾಯಮೂರ್ತಿ ಕೇಳಿದ ಪ್ರಶ್ನೆಗೆ, “ಕ್ಯಾನ್ಸರ್‌ನಿಂದ ಮೃತಪಟ್ಟಿದ್ದಾರೆ” ಎಂದು ಶಶಿಕಿರಣ್‌ ಶೆಟ್ಟಿ ತಿಳಿಸಿದರು.

“ಅರೆಸ್ಟ್‌ ವಾರಂಟ್‌ ಏಕೆ” ಎಂದು ಕೋರ್ಟ್‌ ಪ್ರಶ್ನೆ ಕೇಳಿತು. “ಆರೋಪಿಯು ದೆಹಲಿಯಲ್ಲಿದ್ದಾರೆ. ಪ್ರಕರಣದ ವ್ಯಾಪ್ತಿಯಿಂದ ಅವರು ಹೊರಗಿದ್ದಾರೆ. ಹಾಗಾಗಿ, ಅರೆಸ್ಟ್‌ ವಾರಂಟ್”‌ ಎಂದು ಎ.ಜಿ ತಿಳಿಸಿದರು. ಅಷ್ಟೇ ಅಲ್ಲ, “ವಿಧಿವಿಜ್ಞಾನ ಪ್ರಯೋಗಾಲಯದ ವರದಿ ಬಂದಿದೆ. ಸಿಐಡಿ ನೋಟಿಸ್‌ ಕಳುಹಿಸಿದರೂ (ಜೂನ್‌ 11) ಆರೋಪಿಯು ವಿಚಾರಣೆಗೆ ಹಾಜರಾಗಿಲ್ಲ. ಅವರು ದೆಹಲಿಗೆ ತೆರಳಿದ್ದರು” ಎಂದು ಕೋರ್ಟ್‌ ತಿಳಿಸಿದರು.

ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯವು “ಬಿ.ಎಸ್.ಯಡಿಯೂರಪ್ಪ ಅವರು ಮಾಜಿ ಮುಖ್ಯಮಂತ್ರಿಯಾಗಿದ್ದಾರೆ. ಅವರು ಜೂನ್‌ 17ರಂದು ವಿಚಾರಣೆಗೆ ಹಾಜರಾಗುವುದಾಗಿ ತಿಳಿಸಿದ್ದರೂ ಕೋರ್ಟ್‌ ಹೋಗಿ ಅರೆಸ್ಟ್‌ ವಾರಂಟ್‌ ತಂದಿದ್ದೀರಿ. ನಾಲ್ಕು ದಿನ ತಡವಾಗಿ ವಿಚಾರಣೆಗೆ ಹಾಜರಾಗಿದ್ದರೆ ಆಕಾಶವೇನೂ ಕಳಚಿ ಬೀಳುತ್ತಿರಲಿಲ್ಲ. ಹಾಗಾಗಿ, ಅರೆಸ್ಟ್‌ ವಾರಂಟ್‌ ಬಗ್ಗೆ ನಮಗೆ ಅನುಮಾನವಿದೆ. ಮುಂದಿನ ವಿಚಾರಣೆವರೆಗೂ ಯಡಿಯೂರಪ್ಪ ಅವರನ್ನು ಬಂಧಿಸಬಾರದು” ಎಂಬುದಾಗಿ ಏಕಸದಸ್ಯ ಪೀಠವು ಆದೇಶ ಹೊರಡಿಸಿತು.

ಏನಿದು ಪ್ರಕರಣ?

2024ರ ಫೆಬ್ರವರಿ 2ರಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು 17 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ್ದಾರೆ ಎಂದು ಮಾರ್ಚ್‌ 14ರಂದು ಪೋಕ್ಸೊ ಕಾಯ್ದೆ ಅಡಿಯಲ್ಲಿ ಸದಾಶಿವನಗರ ಪೊಲೀಸ್‌ ಠಾಣೆಯಲ್ಲಿ ಎಫ್‌ಐಆರ್ ದಾಖಲಿಸಲಾಗಿತ್ತು. ಇದಾದ ಬಳಿಕ ಬಿ.ಎಸ್.ಯಡಿಯೂರಪ್ಪ ಅವರು ಸಿಐಡಿ ಅಧಿಕಾರಿಗಳ ವಿಚಾರಣೆಗೂ ಹಾಜರಾಗಿದ್ದರು. ಆದರೆ, ಎಫ್‌ಐಆರ್‌ ದಾಖಲಾದ ಮೂರು ತಿಂಗಳ ಬಳಿಕ ಪ್ರಕರಣವೀಗ ಮತ್ತೆ ಮುನ್ನೆಲೆಗೆ ಬಂದಿದೆ. ಜೂನ್‌ 12ರಂದೇ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗಬೇಕು ಎಂಬುದಾಗಿ ಜೂನ್‌ 11ರಂದೇ ಸಿಐಡಿ ಅಧಿಕಾರಿಗಳು ನೋಟಿಸ್‌ ನೀಡಿದ್ದರು.

ಇದನ್ನೂ ಓದಿ: BS Yediyurappa: ಪೋಕ್ಸೊ ಕೇಸ್; ಯಡಿಯೂರಪ್ಪ ವಿರುದ್ಧ ಅರೆಸ್ಟ್‌ ವಾರಂಟ್

Continue Reading
Advertisement
Due to heavy rain water entered the houses of Tharkas Pet village of Chittapur taluk
ಮಳೆ19 mins ago

Karnataka Rain: ಧಾರಾಕಾರ ಮಳೆ; ಚಿತ್ತಾಪುರ ತಾಲೂಕಿನ ತರ್ಕಸ್‌ಪೇಟೆ ಗ್ರಾಮ ತತ್ತರ

Pawan Kalyan
Latest26 mins ago

Akira Nandan: ಅಕಿರಾ ನಂದನ್‌; ಆರೂವರೆ ಅಡಿ ಎತ್ತರದ ಪವನ್ ಕಲ್ಯಾಣ್ ಪುತ್ರನಿಗೆ ಭಾರಿ ಡಿಮ್ಯಾಂಡ್‌!

Ram Mandir
ದೇಶ26 mins ago

Ram Mandir: ರಾಮಮಂದಿರ ಸ್ಫೋಟಿಸುವ ಉಗ್ರರ ಬೆದರಿಕೆ ಆಡಿಯೊ ವೈರಲ್; ಅಯೋಧ್ಯೆಯಲ್ಲಿ ಹೈ ಅಲರ್ಟ್‌

Celebrity Ethnic Fashion
ಫ್ಯಾಷನ್26 mins ago

Celebrity Ethnic Fashion: ನಟ ಧನುಷ್‌ ಗೌಡರ ಗ್ರ್ಯಾಂಡ್‌ ಎಥ್ನಿಕ್‌ ಜಾಕೆಟ್‌ ವಿಶೇಷತೆ ಏನು?

Actor Darshan
ಕರ್ನಾಟಕ37 mins ago

Actor Darshan: ಸಸ್ಯಾಹಾರಿ ಅಂದ್ರೂ ರೇಣುಕಾಸ್ವಾಮಿ ಬಾಯಿಗೆ ಬಿರಿಯಾನಿ ಮೂಳೆ ತುರುಕಿದ್ದ ಆರೋಪಿಗಳು!

Actor Darshan
ಬೆಂಗಳೂರು38 mins ago

Actor Darshan : ರೇಣುಕಾಸ್ವಾಮಿಯನ್ನು ಕಿಡ್ನ್ಯಾಪ್ ಮಾಡಿ ಕರೆತರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ!

Samarjit Lankesh Dhool Yebsava Video Song Out
ಸ್ಯಾಂಡಲ್ ವುಡ್48 mins ago

Samarjit Lankesh: ʻಗೌರಿʼ ಚಿತ್ರದ ಹುಬ್ಬಳ್ಳಿ ಜವಾರಿ ಶೈಲಿಯ `ಧೂಳ್ ಎಬ್ಬಿಸಾವ’ ಸಾಂಗ್ ರಿಲೀಸ್!

Viral Video
ಕ್ರಿಕೆಟ್49 mins ago

Viral Video: ‘ಹಿಟ್​ ದಿ ಟಾರ್ಗೆಟ್’​ ಎಂದು ಬೌಲಿಂಗ್​ ಅಭ್ಯಾಸ ಆರಂಭಿಸಿದ ಮೊಹಮ್ಮದ್ ಶಮಿ

BS Yediyurappa
ಪ್ರಮುಖ ಸುದ್ದಿ52 mins ago

BS Yediyurappa: ಪೋಕ್ಸೊ ಕೇಸ್‌ನಲ್ಲಿ ಯಡಿಯೂರಪ್ಪಗೆ ಬಿಗ್‌ ರಿಲೀಫ್‌; ಬಂಧಿಸದಂತೆ ಕೋರ್ಟ್‌ ಆದೇಶ

World Blood Donor Day Awareness Jatha in Bengaluru
ಕರ್ನಾಟಕ59 mins ago

World Blood Donors Day: ವಿಶ್ವ ರಕ್ತದಾನಿಗಳ ದಿನ; ಜಾಗೃತಿ ಜಾಥಾಕ್ಕೆ ದಿನೇಶ್ ಗುಂಡೂರಾವ್‌ ಚಾಲನೆ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Actor Darshan
ಬೆಂಗಳೂರು38 mins ago

Actor Darshan : ರೇಣುಕಾಸ್ವಾಮಿಯನ್ನು ಕಿಡ್ನ್ಯಾಪ್ ಮಾಡಿ ಕರೆತರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ!

karnataka weather Forecast
ಮಳೆ3 days ago

Karnataka Weather : ಭಾರಿ ಮಳೆಗೆ ಗುಡ್ಡದಿಂದ ಉರುಳಿ ಬಿದ್ದ ಬಂಡೆಗಲ್ಲು; ಬೆಂಗಳೂರಲ್ಲೂ ಸಂಜೆ ವರ್ಷಧಾರೆ

actor Darshan
ಚಿತ್ರದುರ್ಗ3 days ago

Actor Darshan: ರೇಣುಕಾ ಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್‌ ಅರೆಸ್ಟ್‌; ಪ್ರಕರಣವನ್ನು ಸಿಬಿಐಗೆ ವಹಿಸಲು ಒತ್ತಾಯ

Actor Darshan gets a series of questions from the police
ಸಿನಿಮಾ3 days ago

Actor Darshan : ಪವಿತ್ರಗೌಡ ಬಗ್ಗೆ ಪೋಸ್ಟ್‌ ಮಾಡಿದ್ರೆ ನಿಮಗ್ಯಾಕೆ ಕೋಪ? ದರ್ಶನ್‌ಗೆ ಪೊಲೀಸರ ಪ್ರಶ್ನೆಗಳ ಸುರಿಮಳೆ

Actor Darshan
ಸಿನಿಮಾ3 days ago

Actor Darshan : ದರ್ಶನ್‌ ಜೈಲಿಗೆ ಹೋಗುತ್ತಿರುವುದು ಇದೇ ಮೊದಲಲ್ಲ; ನಟನ ಮೇಲಿವೆ ಹತ್ತಾರು ಕೇಸ್‌ಗಳು!

Saptami Gowda
ಸಿನಿಮಾ3 days ago

Saptami Gowda : ಯುವ ಪತ್ನಿ ಶ್ರೀದೇವಿ ವಿರುದ್ಧ ಮಾನಹಾನಿ ಕೇಸ್; ಕಾನೂನು ಹೋರಾಟಕ್ಕೆ ಮುಂದಾದ ನಟಿ ಸಪ್ತಮಿ ಗೌಡ!

Karnataka weather Forecast
ಮಳೆ4 days ago

Karnataka Weather : ಭಾರಿ ಮಳೆಗೆ ಮನೆ ಗೋಡೆ ಕುಸಿದು ಎಮ್ಮೆಗಳು ಸಾವು; ಆಕಳಿನ ಜೀವ ತೆಗೆದ ವಿದ್ಯುತ್‌ ತಂತಿ

Karnataka weather Forecast
ಮಳೆ7 days ago

Karnataka weather : ಮಳೆಯಲ್ಲೆ ತಪಸ್ಸಿಗೆ ಕುಳಿತ ವೃದ್ಧ; ಇನ್ನೊಂದು ವಾರ ನಾನ್‌ ಸ್ಟಾಪ್‌ ವರುಣನ ಅಬ್ಬರ

Sigandur launch
ಶಿವಮೊಗ್ಗ1 week ago

Sigandur launch: ಸಿಗಂದೂರು ಲಾಂಚ್‌ನಲ್ಲಿ ಭಾರಿ ವಾಹನಗಳಿಗೆ ನಿರ್ಬಂಧ

Karnataka Rain
ಮಳೆ1 week ago

Karnataka Rain : ಭಾರಿ ಮಳೆಗೆ ಮರ ಬಿದ್ದು ಮೇಕೆಗಳು ಸಾವು; ಸಿಡಿಲಿಗೆ ಎಲೆಕ್ಟ್ರಿಕ್‌ ಅಂಗಡಿ ಸುಟ್ಟು ಭಸ್ಮ

ಟ್ರೆಂಡಿಂಗ್‌