CM Siddaramaiah : ಶೀಘ್ರವೇ ಸರ್ಕಾರಿ ನೌಕರರ ವೇತನ ಪರಿಷ್ಕರಣೆ?: ಸಿದ್ದರಾಮಯ್ಯ ಭರವಸೆ ಏನು? - Vistara News

ಕರ್ನಾಟಕ

CM Siddaramaiah : ಶೀಘ್ರವೇ ಸರ್ಕಾರಿ ನೌಕರರ ವೇತನ ಪರಿಷ್ಕರಣೆ?: ಸಿದ್ದರಾಮಯ್ಯ ಭರವಸೆ ಏನು?

CM siddaramaiah : ಏಳನೇ ವೇತನ ಆಯೋಗದ ವರದಿಯನ್ನು ಪರಿಶೀಲಿಸಿ ಸರ್ಕಾರಿ ನೌಕರರ ವೇತನ ಹೆಚ್ಚಳದ ಬಗ್ಗೆ ತೀರ್ಮಾನ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದ್ದಾರೆ ಸಿಎಂ ಸಿದ್ದರಾಮಯ್ಯ.

VISTARANEWS.COM


on

Sidddaramaiah-CM-CS-Shadakshari-Meeting1
ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳ ಜತೆ ಸಿಎಂ ಸಿದ್ದರಾಮಯ್ಯ ಮಾತುಕತೆ
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಏಳನೇ ವೇತನ ಆಯೋಗದ (Seventh Pay Commission) ಅಂತಿಮ ವರದಿ ಬಂದ ನಂತರ ಸರ್ಕಾರಿ ನೌಕರರ ವೇತನ ಪರಿಷ್ಕರಣೆ (Govt Employees Pay Hike) ಬಗ್ಗೆ ತೀರ್ಮಾನ ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಭರವಸೆ ನೀಡಿದ್ದಾರೆ. ಕರ್ನಾಟಕ ರಾಜ್ಯ ಸರ್ಕಾರಿ ನೌಕರರ ಸಂಘದ (Karnataka State govt Employees Association) ಅಧ್ಯಕ್ಷ ಸಿ.ಎಸ್‌. ಷಡಾಕ್ಷರಿ (CS Shadakshari) ಅವರ ನೇತೃತ್ವದ ನಿಯೋಗವು ಮಂಗಳವಾರ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ ಸಂದರ್ಭದಲ್ಲಿ ಅವರು ಮಾತನಾಡಿದರು.

ಏಳನೇ ವೇತನ ಆಯೋಗ ರಚನೆಯಾಗಿ 12 ತಿಂಗಳಾಗಿದೆ. ಮಾರ್ಚ್ ವರೆಗೆ ಕಾಲಾವಧಿ ವಿಸ್ತರಣೆಯಾಗಿದ್ದು, ಚುನಾವಣಾ ನೀತಿ ಸಂಹಿತೆ ಘೋಷಣೆಯಾಗುವ ಮೊದಲೇ ವೇತನ ಪರಿಷ್ಕರಣೆ ಮಾಡಿ ಘೋಷಣೆ ಮಾಡುವಂತೆ ನಿಯೋಗ ಮನವಿ ಮಾಡಿತು.

ಹೊಸ ಪಿಂಚಣಿ ಯೋಜನೆಯ ವ್ಯಾಪ್ತಿಯಲ್ಲಿದ್ದ 11366 ಜನರಿಗೆ ಹಳೆ ಪಿಂಚಣಿ ಯೋಜನೆಗೆ ಸೇರ್ಪಡೆ ಗೊಳಿಸಲಾಗಿದೆ. ಉಳಿದವರನ್ನೂ ಹಳೆ ಪಿಂಚಣಿ ಯೋಜನೆಗೆ ವ್ಯಾಪ್ತಿಗೆ ಸೇರಿಸಿ, ಪಿಂಚಣಿಗೆ ನೀಡುತ್ತಿರುವ ಕೊಡುಗೆಯನ್ನು ನಿಲ್ಲಿಸಲು ಆದೇಶಿಸಲು ನಿಯೋಗ ಕೋರಿಕೆ ಸಲ್ಲಿಸಿತು.

Sidddaramaiah CM CS Shadakshari Meeting

ತೀವ್ರತರವಾದ ಏಳು ಕಾಯಿಲೆಗಳಿಗೆ ಚಿಕಿತ್ಸೆ ಒದಗಿಸುವ ಜ್ಯೋತಿ ಸಂಜೀವಿನಿ ಆರೋಗ್ಯ ಯೋಜನೆಗೆ ಚಾಲನೆ ನೀಡಲಾಗಿತ್ತು. ಸರ್ಕಾರಿ ನೌಕರರ ಕುಟುಂಬದವರಿಗೆ ಉಚಿತ ಆರೋಗ್ಯ ಯೋಜನೆಯನ್ನು ಅನುಷ್ಠಾನ ಗೊಳಿಸಬೇಕು ಎಂದು ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಷಡಕ್ಷರಿ ಅವರು ಮನವಿ ಮಾಡಿದರು.

ಇದನ್ನು ಓದಿ : Vijayanagara News: 7ನೇ ವೇತನ ಆಯೋಗ ಜಾರಿ, ಎನ್‌ಪಿಎಸ್ ರದ್ದತಿಗೆ ಆಗ್ರಹಿಸಿ ಮನವಿ

ಇದಕ್ಕೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಏಳನೇ ವೇತನ ಆಯೋಗದ ವರದಿ ಬಂದ ಬಳಿಕ ವೇತನ ಪರಿಷ್ಕರಣೆಯ ಬಗ್ಗೆ ಅಂತಿಮ ನಿರ್ಧಾರ ಮಾಡಲಾಗುವುದು ಎಂದು ಹೇಳಿದರು. ರಾಜ್ಯ ಸರ್ಕಾರವು ಸರ್ಕಾರಿ ನೌಕರರ ಹಿತರಕ್ಷಣೆಗೆ ಬದ್ಧವಾಗಿದೆ ಎಂದು ಅವರು ಈ ಸಂದರ್ಭದಲ್ಲಿ ಭರವಸೆ ನೀಡಿದರು.

ವಿವಿಧ ಸರ್ಕಾರಿ ನೌಕರರ ಸಂಘದ ಪದಾಧಿಕಾರಿಗಳು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

ಬಜೆಟ್‌ನಲ್ಲಿ ಘೋಷಣೆಯಾಗುತ್ತಾ?

ರಾಜ್ಯ ಸರ್ಕಾರ ಹಲವಾರು ಗ್ಯಾರಂಟಿ ಯೋಜನೆಗಳ ಜಾರಿಯಲ್ಲಿ ವ್ಯಸ್ತವಾಗಿರುವುದರಿಂದ ಏಳನೇ ವೇತನ ಆಯೋಗವು ವರದಿ ನೀಡಿದರೂ ಈ ಬಾರಿ ವೇತನ ಹೆಚ್ಚಳ ಆಗುವುದು ಖಚಿತವಿಲ್ಲ ಎಂಬ ಅಭಿಪ್ರಾಯ ನೌಕರರ ವಲಯದಲ್ಲಿದೆ. ಆದರೆ ಈಗ ಸಿದ್ದರಾಮಯ್ಯ ಅವರು ನೀಡಿರುವ ಭರವಸೆಯಿಂದ ಸಣ್ಣಮಟ್ಟಿಗಿನ ಆಶಾವಾದ ಕುದುರಿದೆ. ಹಾಗಿದ್ದರೆ ಬಜೆಟ್‌ನಲ್ಲಿ ವೇತನ ಹೆಚ್ಚಳ ಪ್ರಕಟಿಸುತ್ತಾರಾ ಎಂದು ಕಾದು ನೋಡಬೇಕಾಗಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
2 Comments

2 Comments

  1. B N NAGESH

    16 January 2024, 9:59 PM at 9:59 pm

    We are retired from government service & we receving pension amount with interim relief announced by the earlier government pension amount fixed is not at all an amount to lead the life in thi metropolitan city we requested to fix the revised scales as recommended by the 7 th pay commission & please announce this in budget speech of 2024_ 25_ since the honarable chief minister siddaramaiah sir seems to be finance minister also producing 15 or 16 th annual budget no ministers in India did this

  2. Siddalingegowda

    18 January 2024, 9:09 AM at 9:09 am

    ಸರಕಾರಿ ನೌಕರರು ಹೆಚ್ಚು ಬ್ರಷ್ಟಾಚಾರದಲ್ಲಿ ಮಳುಗಿಹೋಗಿದ್ದಾರೆ ಕಲವೇ ಕೆಲು ಸರಕಾರಿ ಕೆಲವೇ ಕೆಲವು ಪ್ರಾಮಾಣಿಕ ಅಧಿಕಾರಿಗಳಿದ್ದಾರೆ ಆದ್ದರಿಂದ ಎಲ್ಲಾ ಜಿಲ್ಲಾ ಮಟ್ಟದ ಅಧಿಕಾರಿಗಳು ಕೆಳ ಹಂತದ ನೌಕರರಿಂದ ತಿಂಗಳ ಅಪ್ತಾ ವಸೂಲಿ ಮಾಡುತ್ತಿರುತ್ತಾರೆ ಇವರುಗಳ ಆಸ್ತಿಗ ಮೌಲ್ಯಮಾಪನ ಮಾಡಿಸಿ ಇವರು ಅನೇಕ ಅಕ್ರಮ ಆಸ್ತಿಗಳನ್ನ ಮಾಡಿರುತ್ತಾರೆ ಮತ್ತು ಕೆಲ ತಾಲ್ಲೂಕು ಮಟ್ಟದ ಅಧಿಕಾರಗಳು ಕೂಡ ಆದ್ದರಿಂದ ಪ್ರತೀ ಐದು ವರ್ಷಕ್ಕೆ ಇವರಿಗೆ ಸಂಬಳ ಜಾಸ್ತಿ ಮಾಡುವುದು ಬೇಡವೇ ಬೇಡ ಇವರು ಲಂಚಕೇಳುವುದನ್ನ ಬಿಡಬೇಕು ಅಲ್ಲಿಯವರೆಗೆ ಯಾವುದೇ ವೇತನ ಜಾಸ್ತಿ ಮಾಡಿ ಸರಕಾರಕ್ಕೆ ಹೊರೆಯಾಗುವುದು ಬೇಡ ಸರ್ವೆ ಇಲಾಖೆ ಕಂದಾಯ ಇಲಾಖೆ ಸಾರಿಗೆ ಇಲಾಖೆ ಪೋಲಿಸ್ ಇಲಾಖೆ ಕೃಷಿ ಇಲಾಖೆ ಎಲ್ಲಾ ಇಲಾಖೆಗಳ ಅಧಿಕಾರಿಗಳ ಅಕ್ರಮ ಆಸ್ತಿಗಳನ್ನ ಮುಟ್ಟುಗೋಲು ಹಾಕಿ ನಂತರ ವೇತನ ಜಾಸ್ತಿ ಮಾಡಿ ದಯವಿಟ್ಟು ಇದರ ಬಗ್ಗೆ ಪ್ರಾಮಾಣಿಕ ತನಿಖೆಯಾಗಬೇಕು

Leave a Reply

Your email address will not be published. Required fields are marked *

ಪರಿಸರ

Cheetah Safari: ಬನ್ನೇರುಘಟ್ಟದಲ್ಲಿ ʻಚಿರತೆ ಸಫಾರಿʼ ಶುರು; ಚಿರತೆಗಳನ್ನು ಕಾಡೊಳಗೇ ನೋಡಿ ಆನಂದಿಸಿ!

Cheetah Safari: ಬೆಂಗಳೂರಿನಲ್ಲೇ ಇರುವ, ಆದರೆ ವನ್ಯಮೃಗಗಳನ್ನು ಅವುಗಳ ಆವಾಸಸ್ಥಾನದಲ್ಲೇ ನೋಡಿ ಬರಬಹುದಾದ ಸಫಾರಿಯೂ ಬೆಂಗಳೂರಿನ ಬನ್ನೇರುಘಟ್ಟದಲ್ಲಿರುವುದು ವಿಶೇಷ. ಈಗ ವನ್ಯಜೀವಿ ಪ್ರಿಯರಿಗೆ ಇನ್ನೂ ಒಂದು ಹೊಸ ಖುಷಿಯ ಸುದ್ದಿಯನ್ನು ಬನ್ನೇರುಘಟ್ಟ ನೀಡಿದೆ. ಇದೇ ಮೊದಲ ಬಾರಿಗೆ ʻಚಿರತೆ ಸಫಾರಿʼಯನ್ನೂ ಆರಂಭಿಸಿದೆ. ಈ ಕುರಿತ ಮಾಹಿತಿ ಇಲ್ಲಿದೆ.

VISTARANEWS.COM


on

Cheetah Safari
Koo

ಬೆಂಗಳೂರು ಆಧುನಿಕ ಪ್ರವಾಸಿಗರ ಸ್ವರ್ಗ. ಇಲ್ಲೇ ಸುತ್ತಾಡಿದರೂ ಮುಗಿಯದಷ್ಟು ಸ್ಥಳಗಳಿವೆ. ಎಲ್ಲ ಬಗೆಯ ಪ್ರವಾಸಿಗರಿಗೂ ಖುಷಿಯಿಂದ ಕಾಲ ಕಳೆಯಬಹುದಾದಂತಹ ಜಾಗಗಳಿವೆ. ಇಂತಹ ಜಾಗಗಳ ಪೈಕಿ ಮಕ್ಕಳಾದಿಯಾಗಿ ಮುದುಕರವರೆಗೂ ನೋಡಬಹುದಾದ ತಾಣ ಎಂದರೆ ಅದು ಬನ್ನೇರುಘಟ್ಟ. ಬೆಂಗಳೂರಿನಲ್ಲೇ ಇರುವ ಆದರೆ ವನ್ಯಮೃಗಗಳನ್ನು ಅವುಗಳ ಆವಾಸಸ್ಥಾನದಲ್ಲೇ ನೋಡಿ ಬರಬಹುದಾದ ಸಫಾರಿಯೂ ಬನ್ನೇರುಘಟ್ಟದಲ್ಲಿರುವುದು ವಿಶೇಷ. ಈಗ ವನ್ಯಜೀವಿ ಪ್ರಿಯರಿಗೆ ಇನ್ನೂ ಒಂದು ಹೊಸ ಖುಷಿಯ ಸುದ್ದಿಯನ್ನು ಬನ್ನೇರುಘಟ್ಟ ನೀಡಿದೆ. ಇದೇ ಮೊದಲ ಬಾರಿಗೆ ʻಚಿರತೆ ಸಫಾರಿʼಯನ್ನೂ (Cheetah Safari) ಆರಂಭಿಸಿದೆ.

Cheetah

ದಕ್ಷಿಣ ಭಾರತದಲ್ಲೇ ಮೊದಲು

ದಕ್ಷಿಣ ಭಾರತದಲ್ಲೇ ಇದು ಮೊದಲನೆಯದಾಗಿದ್ದು, ನಮ್ಮ ಬಾರತದ ಅತ್ಯಂತ ದೊಡ್ಡ ಚಿರತೆ ಸಫಾರಿ ಇದಾಗಿದೆ. 20 ಹೆಕ್ಟೇರ್‌ ಕಾಡಿನಲ್ಲಿ ಈ ಸಫಾರಿಗೆ ಅವಕಾಶ ಮಾಡಿಕೊಡಲಾಗಿದ್ದು, ಇದರಲ್ಲಿ ಚಿರತೆ ವೀಕ್ಷಣೆಯ ಸಾಧ್ಯತೆ ಅತ್ಯಂತ ಹೆಚ್ಚಿದೆ. ರಕ್ಷಣೆಗಾಗಿ, ಎಲ್ಲ ಸುರಕ್ಷತಾ ಕ್ರಮಗಳನ್ನು ಬನ್ನೇರುಘಟ್ಟ ವನ್ಯಜೀವಿಧಾಮ ಕೈಗೊಂಡಿದ್ದು, ಸುರಕ್ಷತಾ ಬೇಲಿಗಳನ್ನು ಎಲ್ಲಡೆ ಹಾಕಲಾಗಿದೆ. ಹಾಗೂ ಯಾವುದೇ ತೊಂದರೆಯಾಗದಂತೆ ಸಫಾರಿಯನ್ನು ಮಾಡಿ ಬರಲು ಅನುಕೂಲಕರ ಸೌಲಭ್ಯಗಳನ್ನು ಇಲ್ಲಿ ಒದಗಿಸಲಾಗುತ್ತದೆ.
ಬೆಂಗಳೂರಿನ ಹೊರವಲಯಗಳಲ್ಲಿ ಅನೇಕ ಕಡೆ, ಚಿರತೆಗಳ ಸಂಚಾರ ಸಾಮಾನ್ಯವಾಗಿದ್ದರೂ, ಚಿರತೆಗಳನ್ನು ಅವುಗಳ ಆವಾಸ ಸ್ಥಾನದಲ್ಲೇ ನೋಡುವ ರೋಮಾಂಚನ ವನ್ಯಜೀವಿ ಪ್ರಿಯರಿಗಷ್ಟೇ ಗೊತ್ತು. ಇದನ್ನು ಗಮನದಲ್ಲಿಟ್ಟುಕೊಂಡು ಚಿರತೆಗಳ ದರ್ಶನಕ್ಕಾಗಿಯೇ ವಿಶೇಷವಾಗಿ ಈ ಸಫಾರಿ ಆಯೋಜಿಸಲಾಗಿದೆ. ತುಂಬ ಹತ್ತಿರದಿಂದ ಚಿರತೆಗಳನ್ನು ಕಾಣುವ ಸೌಭಾಗ್ಯ ಈ ಸಫಾರಿಯಲ್ಲಿ ಎಲ್ಲರಿಗೂ ಲಭ್ಯವಾಗಲಿದೆ.

ಇದನ್ನು ಓದಿ: Wildlife Sanctuaries: ಮಳೆ ಬರುವ ಮುನ್ನ ಈ ವನ್ಯಜೀವಿಧಾಮಗಳನ್ನು ನೋಡಲು ಪ್ರಯತ್ನಿಸಿ

ಚಿರತೆ ಸಂತತಿ ಹೇರಳ

ಬನ್ನೇರುಘಟ್ಟದ ಈ ಭಾಗದಲ್ಲಿ ಚಿರತೆಗಳ ಸಂತತಿ ಹೇರಳಾಗಿದ್ದು, ಹಲವು ವರ್ಷಗಳಿಂದ ಇದು ಸಮತೋಲನವನ್ನು ಕಾಯ್ದುಕೊಂಡಿದೆ. ಬೆಂಗಳೂರು ಸುತ್ತಮುತ್ತಲ ಹಳ್ಳಿಗಳಿಗೆ ದಾಳಿ ಮಾಡುತ್ತಿದ್ದ ಚಿರತೆಗಳನ್ನು ರಕ್ಷಿಸಿ ಇಲ್ಲಿಗೆ ತರಲಾಗಿದ್ದು ಈ ಸಂಖ್ಯೆ ಇದೀಗ ವೃದ್ಧಿಸಿದೆ. ಹಾಗೂ ಬನ್ನೇರುಘಟ್ಟದ ಈ ವ್ಯಾಪ್ತಿಯ ನೈಸರ್ಗಿಕ ಪರಿಸರದಲ್ಲಿ ಓಡಾಡಿಕೊಂಡಿದ್ದು, ತಮ್ಮ ಎಂದಿನ ಶೈಲಿಯ ಬದುಕನ್ನು ಕಾಣುತ್ತಿವೆ. ಹೀಗಾಗಿ, ಅವುಗಳ ನೈಸರ್ಗಿಕವಾದ ಸಹಜ ಬದುಕನ್ನು ಹತ್ತಿರದಿಂದ ಕಾಣಲು ಈ ಸಫಾರಿ ಅತ್ಯಂತ ಸೂಕ್ತವಾದ ಮಾಧ್ಯಮವಾಗಿದೆ.
ಬನ್ನೇರುಘಟ್ಟದಲ್ಲಿ ಮೃಗಾಲಯವೂ ಇದ್ದು, ಅಲ್ಲಿ ಬಗೆಬಗೆಯ ಪ್ರಾಣಿ ಪಕ್ಷಿಗಳನ್ನು ನೋಡಬಹುದಾದರೂ, ಈ ಸಫಾರಿಯಲ್ಲಿ, ಅವುಗಳ ನೈಸರ್ಗಿಕ ಪರಿಸರದಲ್ಲೇ ವೀಕ್ಷಿಸಲು ಸಾಧ್ಯವಾಗುವುದು ವಿಶೇಷ.
ಬನ್ನೇರುಘಟ್ಟ ರಾಷ್ಟೀಯ ಉದ್ಯಾನದ ಇನ್ನೊಂದು ಬಹುಮುಖ್ಯ ವಿಶೇಷತೆ ಎಂದರೆ ಇಲ್ಲಿನ ಚಿಟ್ಟೆ ಪಾರ್ಕ್‌. ಸುಮಾರು 7.5 ಎಕರೆ ಪ್ರದೇಶದವನ್ನು ಚಿಟ್ಟೆ ಪಾರ್ಕ್‌ ಆಗಿ ಅಭಿವೃದ್ಧಿಗೊಳಿಸಲಾಗಿದ್ದು, ಇಲ್ಲಿ ನಾನಾ ಬಗೆಯ ಚಿಟ್ಟೆಗಳನ್ನು ವೀಕ್ಷಿಸಬಹುದು. ಬನ್ನೇರುಘಟ್ಟದಲ್ಲಿಯೇ ರಾತ್ರಿ ಕಳೆಯಬೇಕೆಂದರೆ, ಇಲ್ಲಿ ಟೆಂಟೆಡ್‌ ಕಾಟೇಜ್‌, ಹಟ್‌ಗಳ ಸೌಲಭ್ಯಗಳೂ ಇವೆ. ಸದ್ಯದಲ್ಲೇ ಬನ್ನೇರುಘಟ್ಟದ ಜೀವವೈವಿಧ್ಯದ ವಿಶೇಷ ವೀಕ್ಷಣೆಗಾಗಿ ಸ್ಕೈವಾಕ್‌ ಅನ್ನೂ ಅಭಿವೃದ್ಧಿ ಪಡಿಸಲಾಗುತ್ತಿದೆ.
ಪ್ರತಿ ಮಂಗಳವಾರ ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನ ಮುಚ್ಚಿರುತ್ತದೆ. ಇದನ್ನು ಹೊರತುಪಡಿಸಿ ಪ್ರತಿದಿನ 9.30ರಿಂದ ಸಂಜೆ 5ರವರೆಗೆ ಪ್ರವಾಸಿಗರಿಗಾಗಿ ಇದು ತೆರೆದಿರುತ್ತದೆ.

Continue Reading

ಕ್ರೈಂ

Drowned: ಪೊಲೀಸರಿಂದ ತಪ್ಪಿಸಿಕೊಳ್ಳಹೋಗಿ ನೀರುಪಾಲು; ಕೃಷ್ಣಾ ನದಿಯಲ್ಲಿ ತೆಪ್ಪ ಮಗುಚಿ 1 ಸಾವು, ಇಬ್ಬರ ರಕ್ಷಣೆ, ಇನ್ನೂ ಐವರು ನಾಪತ್ತೆ

Drowned: ಪೊಲೀಸರು ದಾಳಿ ನಡೆಸಿದ್ದು ನೋಡಿ ಆರೋಪಿಗಳು ತರಾತುರಿಯಿಂದ ತೆಪ್ಪದ ಮೂಲಕ ಎಸ್ಕೇಪ್ ಆಗಲು ಯತ್ನಿಸಿದ್ದರು. ಗಾಳಿ ವ್ಯತಿರಿಕ್ತವಾಗಿದ್ದುದರಿಂದ ಹಾಗೂ ತೆಪ್ಪದಲ್ಲಿ ಮಿತಿ ಮೀರಿದ ಜನ ತುಂಬಿದ್ದರಿಂದ ತೆಪ್ಪ ನದಿಯೊಳಗೆ ಮುಗುಚಿಕೊಂಡಿದೆ.

VISTARANEWS.COM


on

krishna river drowned death
Koo

ವಿಜಯಪುರ: ಜುಗಾರಿ ಆಡುತ್ತಿರುವಾಗ ಪೊಲೀಸರು (Police Attack) ದಾಳಿ ಮಾಡಿದ್ದರಿಂದ ಭಯಭೀತರಾಗಿ ಎಸ್ಕೇಪ್ ಆಗಲು ತೆಪ್ಪ ಏರಿ ಪಲಾಯನ ಮಾಡಿದ ಎಂಟು ಮಂದಿ ಕೃಷ್ಣಾ ನದಿಯಲ್ಲಿ (Krishna River) ತೆಪ್ಪ ಮಗುಚಿಕೊಂಡು (Drowned) ನೀರುಪಾಲಾಗಿದ್ದಾರೆ. ಇವರಲ್ಲಿ ಒಬ್ಬನ ಶವ ದೊರೆತಿದೆ. ಇಬ್ಬರನ್ನು ರಕ್ಷಿಸಲಾಗಿದ್ದು, ಇನ್ನೂ ಐದು ಮಂದಿಗಾಗಿ ಶೋಧ ನಡೆದಿದೆ.

ಆಲಮಟ್ಟಿ ಜಲಾಶಯದ ಕೊಲ್ಹಾರ ಬಳಿಯ ಕೃಷ್ಣಾ ನದಿ ಹಿನ್ನೀರು ಪ್ರದೇಶದ ಬಳೂತಿ ಗ್ರಾಮದ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಪುಂಡಲೀಕ ಯಂಕಂಚಿ (35) ಸಾವಿಗೀಡಾದ ವ್ಯಕ್ತಿ.

ನಿನ್ನೆ ಸಂಜೆ ಇವರು ಜೂಜಾಟ ಆಡುತ್ತಿವಾಗ ಕೊಲ್ಹಾರ ಪೊಲೀಸರಿಗೆ ಮಾಹಿತಿ ಬಂದಿತ್ತು. ಪೊಲೀಸರು ದಾಳಿ ನಡೆಸಿದ್ದು ನೋಡಿ ಆರೋಪಿಗಳು ತರಾತುರಿಯಿಂದ ತೆಪ್ಪದ ಮೂಲಕ ಎಸ್ಕೇಪ್ ಆಗಲು ಯತ್ನಿಸಿದ್ದರು. ಗಾಳಿ ವ್ಯತಿರಿಕ್ತವಾಗಿದ್ದುದರಿಂದ ಹಾಗೂ ತೆಪ್ಪದಲ್ಲಿ ಮಿತಿ ಮೀರಿದ ಜನ ತುಂಬಿದ್ದರಿಂದ ತೆಪ್ಪ ನದಿಯೊಳಗೆ ಮುಗುಚಿಕೊಂಡಿದೆ. ಕಾಪಾಡಿ ಕಾಪಾಡಿ ಎಂದು ಕೂಗಿದಾಗ ಸುತ್ತಲಿನ ಜಮೀನಿನಲ್ಲಿದ್ದವರು ಹಾಗೂ ಮೀನುಗಾರರು ಧಾವಿಸಿ ಬಂದಿದ್ದು, ರಕ್ಷಣಾ ಕಾರ್ಯಾಚರಣೆ ನಡೆಸಲಾಗಿದೆ. ಇಬ್ಬರನ್ನು ಕಾಪಾಡಲಾಯಿತು. ಒಬ್ಬನ ಶವ ಸಿಕ್ಕಿದೆ. ರಕ್ಷಣೆಯಾದ ಇಬ್ಬರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ನಿನ್ನೆ ರಾತ್ರಿಯಾದ ಹಿನ್ನೆಲೆಯಲ್ಲಿ ಇಂದು ಬೆಳಿಗ್ಗೆ 6 ಗಂಟೆಯಿಂದ ರಕ್ಷಣಾ ಕಾರ್ಯಾಚರಣೆ ಮರು ಆರಂಭಿಸಲಾಯಿತು. ಕಲಬುರ್ಗಿಯಿಂದ ಎಸ್‌ಡಿಆರ್‌ಎಫ್ ತಂಡ, ಅಗ್ನಿಶಾಮಕ ದಳ ಸಿಬ್ಬಂದಿ ಬಂದು ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ. ಸ್ಥಳಕ್ಕೆ ವಿಜಯಪುರ ಎಸ್ಪಿ ಋಷಿಕೇಶ್ ಸೋನಾವಣೆ, ಅಧಿಕಾರಿಗಳು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಸದ್ಯ ನದಿಯಲ್ಲಿ ಮುಳುಗಿರಬಹುದಾದ ಐವರಿಗಾಗಿ ಶೋಧ ನಡೆಯುತ್ತಿದೆ. ಇವರಲ್ಲಿ ಕೆಲವರು ಈಜಿ ಆಚೆ ದಡ ಸೇರಿರಲೂಬಹುದು ಎಂದು ತರ್ಕಿಸಲಾಗಿದೆ.

ಅಗ್ನಿಶಾಮಕ ಸಿಬ್ಬಂದಿ ನಾಲ್ಕು ಬೋಟ್ ಮೂಲಕ ಕಾರ್ಯಾಚರಣೆ ನಡೆಸುತ್ತಿದ್ದು, ಸ್ಥಳೀಯ ಮೀನುಗಾರರು ಸಹ ಪಾಲ್ಗೊಂಡಿದ್ದಾರೆ. ಎಸ್ಪಿ ಋಷಿಕೇಶ ಸೋನಾವಣೆ ಸ್ಥಳದಲ್ಲಿಯೇ ಬೀಡುಬಿಟ್ಟಿದ್ದಾರೆ.

ಮಗನ ಕುಡಿತದ ಚಟಕ್ಕೆ ಬೇಸತ್ತು ಆತ್ಮಹತ್ಯೆ ಮಾಡಿಕೊಂಡ ಅಪ್ಪ, ಅಮ್ಮ

ಬೆಂಗಳೂರು: ಮಗನ ಕುಡಿತದಿಂದ ಉಂಟಾಗಿರುವ ಕೌಟುಂಬಿಕ ಸಮಸ್ಯೆಗಳಿಂದ ಬೇಸತ್ತು ಹಿರಿಯ ವಯಸ್ಸಿನ ಪೋಷಕರು ಆತ್ಮಹತ್ಯೆ (Suicide News ) ಮಾಡಿಕೊಂಡ ಘಟನೆ ಬೆಂಗಳೂರಿನಲ್ಲಿ ನಡೆದಿದೆ. ಬೈಯಪ್ಪನಹಳ್ಳಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸೋಮವಾರ ಘಟನೆ ನಡೆದಿದೆ. ಚಂದ್ರಶೇಖರ್ (54) ಹಾಗೂ ಶಾರದಮ್ಮ ಆತ್ಮಹತ್ಯೆ ಮಾಡಿಕೊಂಡ ದಂಪತಿ.

ಮಗ ಪ್ರಶಾಂತನಿಗೆ ವರ್ಷಗಳ ಹಿಂದೆ ಮದುವೆ ಮಾಡಿದ್ದರು. ಆದರೆ ಮಗ ಕುಡಿತದಿಂದ ಮನೆ ಬರೋದು ಕಡಿಮೆ ಮಾಡಿದ್ದ, ಇದರಿಂದ ನೊಂದು ಕಳೆದ ಮೂರು ತಿಂಗಳ ಹಿಂದೆ ಪ್ರಶಾಂತನ ಹೆಂಡತಿ ಮನೆ ಬಿಟ್ಟು ತವರು ಮನೆ ಸೇರಿದ್ದರು. ಇದರಿಂದ‌ ಮಗನ‌ ಬಾಳು ಹೀಗಾಯಿತು ಎಂದು ನೊಂದು ಕೊಂಡಿದ್ದರು.

ಸೋಮವಾ ಎರಡನೇ‌ ಮಗನನ್ನ ಅಂಗಡಿ ಕಳಿಸಿ ದಂಪತಿ ನೇಣಿಗೆ ಶರಣಾಗಿದ್ದರು. ಮಗ ಮನೆಗೆ ಬಂದು ನೋಡಿದಾಗ ಘಟನೆ ಬೆಳಕಿಗೆ ಬಂದಿದೆ. ಆತ್ಮಹತ್ಯೆ ಮಾಡಿಕೊಂಡವರು ಹೊಸಕೋಟೆ ಮೂಲದವರು. ಅವರು ಹಲವು ವರ್ಷಗಳಿಂದ‌ ಹಳೆ ಬೈಯಪ್ಪನಹಳ್ಳಿ ಯಲ್ಲಿ ವಾಸ ಮಾಡಿಕೊಂಡಿದ್ದರು. ಬೆಂಗಳೂರಿನಲ್ಲೊ ಕೂಲಿ ಕೆಲಸ ಮಾಡಿಕೊಂಡಿದ್ದರು. ಬೈಯಪ್ಪನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Hemant Nimbalkar: ವಾರ್ತಾ ಇಲಾಖೆ ಆಯುಕ್ತರಾಗಿ ಐಪಿಎಸ್​ ಅಧಿಕಾರಿ ಹೇಮಂತ್ ನಿಂಬಾಳ್ಕರ್ ಮರು ನೇಮಕ

Continue Reading

ಪ್ರಮುಖ ಸುದ್ದಿ

IPS Transfer: ರಾಜ್ಯದ 25 ಐಪಿಎಸ್ ಅಧಿಕಾರಿಗಳ ವರ್ಗಾವಣೆ

IPS Transfer: ಕಾನೂನು ಸುವ್ಯವಸ್ಥೆ, ಪೊಲೀಸ್‌ ಇಲಾಖೆ ಆಂತರಿಕ ಹಾಗೂ ಬಾಹ್ಯ ಆಡಳಿತ ನಿರ್ವಹಣೆಗಳಿಗೆ ಸಂಬಂಧಿಸಿ ಈ ವರ್ಗಾವಣೆಗಳನ್ನು ಮಾಡಲಾಗಿದ್ದು, ವರ್ಗವಾದ ಅಧಿಕಾರಿಗಳು ಈ ವಾರದಲ್ಲಿಯೇ ನೂತನ ಸ್ಥಳದಲ್ಲಿ ಕೆಲಸದ ಆದೇಶ ವಹಿಸಿಕೊಳ್ಳಲಿದ್ದಾರೆ.

VISTARANEWS.COM


on

IPS transfer
Koo

ಬೆಂಗಳೂರು: ರಾಜ್ಯದ 25 ಐಪಿಎಸ್‌ ಅಧಿಕಾರಿಗಳನ್ನು (IPS Officers) ನಾನಾ ಕಡೆಗಳಿಗೆ ವರ್ಗಾವಣೆ (IPS Transfer) ಮಾಡಿ ಸರ್ಕಾರ (Karnataka Govt) ಆದೇಶ ಹೊರಡಿಸಿದೆ. ಕಾನೂನು ಸುವ್ಯವಸ್ಥೆ, ಪೊಲೀಸ್‌ ಇಲಾಖೆ ಆಂತರಿಕ ಹಾಗೂ ಬಾಹ್ಯ ಆಡಳಿತ ನಿರ್ವಹಣೆಗಳಿಗೆ ಸಂಬಂಧಿಸಿ ಈ ವರ್ಗಾವಣೆಗಳನ್ನು ಮಾಡಲಾಗಿದ್ದು, ವರ್ಗವಾದ ಅಧಿಕಾರಿಗಳು ಈ ವಾರದಲ್ಲಿಯೇ ನೂತನ ಸ್ಥಳದಲ್ಲಿ ಕೆಲಸದ ಆದೇಶ ವಹಿಸಿಕೊಳ್ಳಲಿದ್ದಾರೆ.

ವರ್ಗಾವಣೆಗೊಂಡ ಅಧಿಕಾರಿಗಳ ವಿವರ ಇಲ್ಲಿದೆ:

ಲಾಭೂರಾಮ್ : ಐಜಿಪಿ ಕೇಂದ್ರ ವಲಯ
ಬಿ.ಆರ್ ರವಿಕಾಂತೇಗೌಡ : ಐಜಿಪಿ ಹೆಡ್ ಕಾರ್ಟರ್ -1 ಬೆಂಗಳೂರು (ಡಿಜಿ ಕಛೇರಿ)
ಡಾ.ಕೆ ತ್ಯಾಗರಾಜನ್ : ಐಜಿಪಿ ,ಐಎಸ್ ಡಿ.
ಎನ್ ಶಶಿಕುಮಾರ್, ಹುಬ್ಬಳ್ಳಿ ಧಾರವಾಡ ಪೊಲೀಸ್ ಕಮಿಷನರ್.
ಬಿ ರಮೇಶ್ : ಡಿಐಜಿಪಿ ಈಸ್ಟರ್ನ್ ರೇಂಜ್ ದಾವಣಗೆರೆ .
ಸೀಮಾ ಲಾಟ್ಕರ್: ಪೊಲೀಸ್ ಆಯುಕ್ತರು ಮೈಸೂರು ನಗರ
ರೇಣುಕಾ ಸುಕುಮಾರ್ : ಎಐಜಿಪಿ ( ಡಿಜಿ ಕಛೇರಿ)
ಸಿಕೆ ಬಾಬಾ: ಎಸ್‌ಪಿ ಬೆಂಗಳೂರು ಗ್ರಾಮಾಂತರ.
ಎನ್ ವಿಷ್ಣುವರ್ಧನ್ : ಎಸ್‌ಪಿ ಮೈಸೂರು ಜಿಲ್ಲೆ.
ಸುಮನ್ ಡಿ ಪೆನ್ನೆಕರ್ : ಎಸ್ ಪಿ , ಬಿಎಂಟಿಎಫ್.
ಸಿ.ಬಿ ರಿಷ್ಯಂತ್: ಎಸ್ ಪಿ ವೇರ್ ಲೆಸ್ .
ಚನ್ನಬಸವಣ್ಣ : ಎಐಜಿಪಿ, (ಆಡಳಿತ ) ಡಿಜಿ ಕಛೇರಿ.
ನಾರಾಯಣ್ ಎಂ, : ಎಸ್ ಪಿ ಉತ್ತರ ಕನ್ನಡ.
ಸಾರ ಫಾತಿಮಾ: ಡಿಸಿಪಿ ಆಗ್ನೇಯ ವಿಭಾಗ , ಬೆಂಗಳೂರು ನಗರ
ಅರುಣಾಂಗ್ಷು ಗಿರಿ : ( Arunngshu giri ) SP ,CID
ನಾಗೇಶ್ ಡಿ ಎಲ್ : ಡಿಸಿಪಿ , ಸಿ ಎ ಆರ್ ಹೆಡ್ ಕ್ವಾರ್ಟರ್ಸ್. ಬೆಂಗಳೂರು ನಗರ .
ಪದ್ಮಿನಿ ಸಾಹೋ :ಡಿಸಿಪಿ ಆಡಳಿತ , ಬೆಂಗಳೂರು ನಗರ.
ಪ್ರದೀಪ್ ಗುಂಟಿ: ಎಸ್ ಪಿ ಬೀದರ್ ಜಿಲ್ಲೆ.
ಯತೀಶ್ ಎನ್ : ಎಸ್ ಪಿ ದಕ್ಷಿಣ ಕನ್ನಡ ಜಿಲ್ಲೆ.
ಮಲ್ಲಿಕಾರ್ಜುನ ಬಾಲದಂಡಿ, ಎಸ್ ಪಿ ಮಂಡ್ಯ ಜಿಲ್ಲೆ.
ಡಾ ಶೋಭಾ ರಾಣಿ ವಿ.ಜೆ. ಎಸ್ ಪಿ .ಬಳ್ಳಾರಿ ಜಿಲ್ಲೆ.
ಡಾ ಕವಿತಾ ಟಿ: ಎಸ್ ಪಿ ಚಾಮರಾಜನಗರ ಜಿಲ್ಲೆ.
ನಿಖಿಲ್ ಬಿ : ಎಸ್ ಪಿ ಕೋಲಾರ ಜಿಲ್ಲೆ.
ಕುಶಾಲ್ ಚೌಕ್ಸಿ : ಎಸ್ ಪಿ ಚಿಕ್ಕಬಳ್ಳಾಪುರ ಜಿಲ್ಲೆ.
ಮಹಾನಿಂಗ್ ನಂದಗಾವಿ ಡಿಸಿಪಿ ( ಕಾನೂನು ಸುವ್ಯವಸ್ಥೆ) ಹುಬ್ಬಳ್ಳಿ ಧಾರವಾಡ

ಇದನ್ನೂ ಓದಿ: BBMP Scam: ನಕಲಿ ಸೊಸೈಟಿಗಳಿಗೆ ಬಿಬಿಎಂಪಿ 102 ಕೋಟಿ ರೂ. ವರ್ಗಾವಣೆ; ಬಯಲಾಯ್ತು ಮತ್ತೊಂದು ಹಗರಣ!

Continue Reading

ಮಳೆ

Karnataka Weather : ಬೆಂಗಳೂರಲ್ಲಿ ಮರೆಯಾಗುವ ಸೂರ್ಯ; ಕರಾವಳಿ, ಮಲೆನಾಡಿನಲ್ಲಿ ವರುಣಾರ್ಭಟ

Karnataka Weather Forecast: ಬೆಂಗಳೂರಲ್ಲಿ ಸೂರ್ಯ ಮರೆಯಾಗಲಿದ್ದು, ಅಲ್ಲಲ್ಲಿ ಸಾಧಾರಣ ಮಳೆಯಾಗಲಿದೆ. ಕರಾವಳಿ ಹಾಗೂ ಮಲೆನಾಡು ಭಾಗದಲ್ಲಿ ಮಳೆಯು (Rain news) ಅಬ್ಬರಿಸಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆಯನ್ನು ನೀಡಿದೆ

VISTARANEWS.COM


on

By

karnataka weather Forecast
ಸಾಂದರ್ಭಿಕ ಚಿತ್ರ
Koo

ಬೆಂಗಳೂರು: ಬುಧವಾರ ಕರ್ನಾಟಕದ ಕರಾವಳಿಯಲ್ಲಿ ಮಳೆಯು (Heavy rain) ಅಬ್ಬರಿಸಲಿದ್ದು, ಮಲೆನಾಡು ಜಿಲ್ಲೆಗಳಲ್ಲಿ ಚದುರಿದಂತೆ ಹಗುರದಿಂದ ಸಾಧಾರಣ ಮಳೆಯಾಗುವ ನಿರೀಕ್ಷೆಯಿದೆ. ದಕ್ಷಿಣ ಹಾಗೂ ಉತ್ತರ ಒಳನಾಡಿನ ಪ್ರತ್ಯೇಕ ಕಡೆಗಳಲ್ಲಿ ಮಧ್ಯಮ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ (karnataka weather Forecast) ಮುನ್ಸೂಚನೆಯನ್ನು ನೀಡಿದೆ.

ದಕ್ಷಿಣ ಒಳನಾಡಿನ ಬಳ್ಳಾರಿ, ಬೆಂಗಳೂರು ಗ್ರಾಮಾಂತರ, ಬೆಂಗಳೂರು ನಗರ, ಚಾಮರಾಜನಗರ, ಚಿಕ್ಕಬಳ್ಳಾಪುರ, ಚಿತ್ರದುರ್ಗ, ದಾವಣಗೆರೆ, ಕೋಲಾರ, ಮಂಡ್ಯ, ಮೈಸೂರು ಸೇರಿದಂತೆ ರಾಮನಗರ, ತುಮಕೂರು, ವಿಜಯನಗರದಲ್ಲಿ ಪ್ರತ್ಯೇಕವಾಗಿ ಹಗುರದಿಂದ ಮಧ್ಯಮ ಮಳೆಯಾಗುವ ಸಾಧ್ಯತೆಯಿದೆ.

ಉತ್ತರ ಒಳನಾಡಿನ ಬೆಳಗಾವಿ ಜಿಲ್ಲೆಯಲ್ಲಿ ಚದುರಿದಂತೆ ಸಾಧಾರಣ ಮಳೆಯಾಗಲಿದ್ದು, ಬೀದರ್, ಕಲಬುರಗಿ, ಧಾರವಾಡ ಮತ್ತು ಹಾವೇರಿ ಜಿಲ್ಲೆಗಳಲ್ಲಿ ಸಣ್ಣ ಪ್ರಮಾಣದಲ್ಲಿ ಮಳೆಯಾಗಲಿದೆ. ವಿಜಯಪುರ, ಗದಗ, ಕೊಪ್ಪಳ, ರಾಯಚೂರು, ಯಾದಗಿರಿ, ಬಾಗಲಕೋಟೆಗೆ ಯಾವುದೇ ಮಳೆ ಸೂಚನೆ ಇಲ್ಲ.

ಮಲೆನಾಡಿನ ಶಿವಮೊಗ್ಗ, ಹಾಸನ, ಚಿಕ್ಕಮಗಳೂರು, ಕೊಡಗು ಜಿಲ್ಲೆಯಲ್ಲಿ ಚದುರಿದಂತೆ ಮಧ್ಯಮ ಮಳೆಯಾಗುವ ಸಾಧ್ಯತೆಯಿದೆ. ಕರಾವಳಿಯ ದಕ್ಷಿಣ ಕನ್ನಡ, ಉತ್ತರ ಕನ್ನಡ, ಉಡುಪಿಯಲ್ಲಿ ವ್ಯಾಪಕ ಲಘುದಿಂದ ಸಾಧಾರಣ ಮಳೆಯಾಗುವ ಸಾಧ್ಯತೆಯಿದೆ.

ಬೆಂಗಳೂರಿನಲ್ಲೂ ಸಾಧಾರಣ ಮಳೆ

ರಾಜಧಾನಿ ಬೆಂಗಳೂರಿನಲ್ಲಿ ಮೋಡ ಕವಿದ ವಾತಾವರಣ ಇರಲಿದೆ. ಕೆಲವೊಮ್ಮೆ ಪ್ರತ್ಯೇಕ ಕಡೆಗಳಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ. ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ 27 ಹಾಗೂ 21 ಡಿಗ್ರಿ ಸೆಲ್ಸಿಯಸ್‌ ಇರಲಿದೆ.

40 ಕಿ.ಮೀ ವೇಗದಲ್ಲಿ ಬೀಸಲಿದೆ ಗಾಳಿ

ಗುಡುಗು ಸಹಿತ ಭಾರಿ ಮಳೆಯೊಂದಿಗೆ ಗಾಳಿ ವೇಗವು 40-50 ಕಿ.ಮೀ ವ್ಯಾಪ್ತಿಯಲ್ಲಿ ಬೀಸಲಿದೆ. ಹೀಗಾಗಿ ದಕ್ಷಿಣ ಕನ್ನಡ, ಉಡುಪಿ, ಉತ್ತರ ಕನ್ನಡ, ಚಿಕ್ಕಮಗಳೂರು ಮತ್ತು ಶಿವಮೊಗ್ಗ ಜಿಲ್ಲೆಗಳಲ್ಲಿ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಕರ್ನಾಟಕ ಕರಾವಳಿಯಲ್ಲಿ ಗಂಟೆಗೆ 35 ಕಿ.ಮೀ ನಿಂದ 45 ಕಿ.ಮೀ ವೇಗದಲ್ಲಿ ಗಾಳಿ ಬೀಸುವ ಸಾಧ್ಯತೆಯಿದೆ. ಹೀಗಾಗಿ ಮೀನುಗಾರರಿಗೂ ಎಚ್ಚರಿಕೆ ನೀಡಲಾಗಿದೆ.

ಇದನ್ನೂ ಓದಿ: Wild Animals Attack : ಕರೆಯದೆ ಬಂದ ಅತಿಥಿ; ವರನ ಪಕ್ಕ ಕುಳಿತು ಮದುವೆಗೆ ಅಡ್ಡಿಪಡಿಸಿದ ಕೋತಿ!ಮುಂದೇನಾಯ್ತು?

ಮಳೆಗಾಲದಲ್ಲಿ ಭೇಟಿ ನೀಡಬಹುದಾದ ಕರ್ನಾಟಕದ 15 ರಮಣೀಯ ತಾಣಗಳು

ಕರ್ನಾಟದಲ್ಲಿ ಮಳೆಗಾಲ ಆರಂಭವಾಗಿದೆ. ಕೆಲವು ಪ್ರವಾಸಿ (Karnataka Tour) ತಾಣಗಳಂತೂ ನಯನ ಮನೋಹರವಾಗಿ ಕಂಗೊಳಿಸುತ್ತಿವೆ. ಮಾಂತ್ರಿಕವಾಗಿ ಸಿಂಗಾರಗೊಂಡಂತಿವೆ. ದೂರದೂರದ ಪ್ರವಾಸಿಗರನ್ನು (tourists) ತನ್ನತ್ತ ಆಕರ್ಷಿಸುತ್ತಿವೆ. ಒಂದೆಡೆ ಪಶ್ಚಿಮ ಘಟ್ಟಗಳು (Western Ghats), ಇನ್ನೊಂದೆಡೆ ಅರಬ್ಬಿ ಸಮುದ್ರದ (arabian sea) ಸಮೀಪವಿರುವ ಕರಾವಳಿ ಪ್ರದೇಶಗಳು ಮಳೆಯ ಧಾರೆಯಲ್ಲಿ ತೋಯ್ದು ತನ್ನನ್ನು ತಾನು ಸ್ವಚ್ಛ, ಸುಂದರ ಮತ್ತಷ್ಟು ಸಿಂಗಾರಗೊಳಿಸಿದಂತೆ ಭಾಸವಾಗುತ್ತಿದೆ.

ಭಾರೀ ಮಳೆಯ ಆರಂಭದ ದಿನಗಳಲ್ಲಿ ಕರ್ನಾಟಕದ ಹವಾಮಾನವು ಆರ್ದ್ರವಾಗಿರುತ್ತದೆ ಮತ್ತು ಆಹ್ಲಾದಕರವಾಗಿರುತ್ತದೆ. ಕರ್ನಾಟಕದ ಕರಾವಳಿ ಪ್ರದೇಶಗಳು ಮತ್ತು ದಕ್ಷಿಣ ಪ್ರದೇಶಗಳಲ್ಲಿ ಹಸಿರಿನಿಂದ ಚಿತ್ರಿಸಲ್ಪಟ್ಟಂತೆ ಭಾಸವಾಗುತ್ತದೆ. ಪಶ್ಚಿಮ ಘಟ್ಟಗಳಂತೂ ಆಕರ್ಷಣೆಯ ಕೇಂದ್ರವಾಗುತ್ತದೆ.

ಹಗಲಿನಲ್ಲಿ ತಾಪಮಾನವು 28 ಡಿಗ್ರಿ ಸೆಲ್ಸಿಯಸ್‌ಗೆ ಇಳಿದರೆ ರಾತ್ರಿಯಲ್ಲಿ ತಾಪಮಾನವು 20 ಡಿಗ್ರಿ ಸೆಲ್ಸಿಯಸ್‌ನಷ್ಟು ಕಡಿಮೆಯಾಗುವುದು. ಹಗಲು ಸುರಿಯುವ ಮಳೆಯಲ್ಲೂ ಹೊರಗೆ ಸುತ್ತಾಡಲು ಮನ ಬಯಸಿದರೆ, ರಾತ್ರಿ ತಂಪನೆಯ ವಾತಾವರಣ ಬೆಚ್ಚನೆ ಹೊದಿಕೆ ಹೊದ್ದು ಮಲಗಲು ಪ್ರೇರೇಪಿಸುತ್ತದೆ.

ಜಲಪಾತ, ಗಿರಿಧಾಮ, ಕಡಲ ತೀರಗಳು ಮಳೆಗಾಲದಲ್ಲಿ ಅನ್ವೇಷಿಸಬಹುದಾದ ಸಾಕಷ್ಟು ಆಕರ್ಷಣೆಗಳು ಕರ್ನಾಟಕದಲ್ಲಿವೆ. ಮಾನ್ಸೂನ್ ನಲ್ಲಿ ಈ ಸ್ಥಳಗಳ ಮಾಂತ್ರಿಕ ಮೋಡಿಯನ್ನು ಮಾಡುವುದು. ಮಳೆಗಾಲದಲ್ಲಿ ಕರ್ನಾಟಕದಲ್ಲಿ ನೋಡಲೇ ಬೇಕಾದ 15 ಪ್ರಮುಖ ಸ್ಥಳಗಳಿವೆ. ಇದರ ಸೌಂದರ್ಯವನ್ನು ಈ ಮಳೆಗಾಲದಲ್ಲಿ ಅನುಭವಿಸದೇ ಇದ್ದರೆ ಮುಂದಿನ ಮಳೆಗಾಲದವರೆಗೂ ಕಾಯಬೇಕಾಗುವುದು.


1. ಹಂಪಿ

ಹಂಪಿ ಕರ್ನಾಟಕದ ಅತ್ಯುತ್ತಮ ಮಾನ್ಸೂನ್ ಸ್ಥಳಗಳಲ್ಲಿ ಒಂದಾಗಿದೆ. ಇದ್ದಕ್ಕಿದ್ದಂತೆ, ಹಂಪಿಯ ಶುಷ್ಕ ಪ್ರದೇಶಗಳು ಹಸಿರು ವಿಸ್ತಾರವಾದ ಹುಲ್ಲುಗಾವಲುಗಳಾಗಿ ಬದಲಾಗುತ್ತವೆ. ಹಂಪಿಯ ರಮಣೀಯ ಭೂದೃಶ್ಯವನ್ನು ಹೊಂದಿರುವ ಹೇರಳವಾದ ದೇವಾಲಯಗಳು ಮಳೆಯಲ್ಲಿ ರುದ್ರರಮಣೀಯವಾಗಿ ಕಾಣುತ್ತವೆ. ಇಲ್ಲಿನ ಆಹ್ಲಾದಕರ ವಾತಾವರಣವು ಅದ್ಭುತವಾದ ಫೋಟೋಗಳನ್ನು ಒದಗಿಸುವುದು. ಮೋಡ ಕವಿದ ಆಕಾಶವು ದೇವಾಲಯಗಳ ಫೋಟೋಗಳಿಗೆ ಅದ್ಭುತವಾದ ಹಿನ್ನೆಲೆಯನ್ನು ಉಂಟು ಮಾಡುತ್ತದೆ. ಪ್ರಬಲವಾದ ಹಂಪಿ ನದಿಯಲ್ಲಿ ಕೊರಾಕಲ್ ದೋಣಿ ಸವಾರಿ ಮತ್ತು ರಾಕ್ ಕ್ಲೈಂಬಿಂಗ್ ಹೆಚ್ಚು ರೋಮಾಂಚನಕಾರಿಯಾಗಿರುತ್ತದೆ.


2. ಮರವಂತೆ

ಕರ್ನಾಟಕದ ಎನ್ ಹೆಚ್ 66ರಲ್ಲಿರುವ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಒಂದು ಸಣ್ಣ ಹಳ್ಳಿ ಮರವಂತೆಯಲ್ಲಿ ಸಮುದ್ರ ಮತ್ತು ನದಿ ಒಟ್ಟಿಗೆ ಸೇರುವ ದೃಶ್ಯ ನಯನಮನೋಹರವಾಗಿರುತ್ತದೆ. ಒಂದು ಕಡೆ ಗ್ರಾಮವು ಅರಬ್ಬೀ ಸಮುದ್ರದಿಂದ ಆವೃತವಾಗಿದ್ದರೆ ಇನ್ನೊಂದು ಬದಿಯಲ್ಲಿ ಸೌಪರ್ಣಿಕಾ ನದಿಯು ಶಾಂತವಾಗಿ ಹರಿಯುತ್ತಿರುತ್ತದೆ. ಮಾನ್ಸೂನ್ ಸಮಯದಲ್ಲಿ ಮರವಂತೆಯ ಬೀಚ್ ರಸ್ತೆಯಲ್ಲಿ ನಡೆಯುವುದು ಅತ್ಯುತ್ತಮ ಅನುಭವವನ್ನು ಕೊಡುವುದು.


3. ಆಗುಂಬೆ

ಆಗುಂಬೆಯು ಹಲವಾರು ಜಲಪಾತಗಳು, ನೈಸರ್ಗಿಕ ವೈಭವ ಮತ್ತು ಶ್ರೀಮಂತ ಜೀವವೈವಿಧ್ಯಕ್ಕೆ ಹೆಸರುವಾಸಿಯಾಗಿದೆ. ಶಿವಮೊಗ್ಗ ಜಿಲ್ಲೆಯ ಎತ್ತರದ ಗ್ರಾಮವನ್ನು ‘ದಕ್ಷಿಣದ ಚಿರಾಪುಂಜಿ’ ಎಂದೂ ಕರೆಯುತ್ತಾರೆ. ಯಾಕೆಂದರೆ ಇದು ಕರ್ನಾಟಕದಲ್ಲಿ ಅತಿ ಹೆಚ್ಚು ಮಳೆ ಬೀಳುವ ಸ್ಥಳವಾಗಿದೆ. ಅನೇಕ ಜಲಪಾತಗಳಾದ ಒನಕೆ ಅಬ್ಬಿ, ಜೋಗಿ ಗುಂಡಿ ಜಲಪಾತ ಮತ್ತು ಬರ್ಕಾನ ಜಲಪಾತಗಳು ಕರ್ನಾಟಕದಲ್ಲಿ ಮಾನ್ಸೂನ್ ಸಮಯದಲ್ಲಿ ಅದ್ಭುತಗಳಾಗಿ ರೂಪಾಂತರಗೊಳ್ಳುತ್ತವೆ. ಹಚ್ಚ ಹಸಿರಿನ ಮಳೆಕಾಡುಗಳಲ್ಲಿನ ಹಲವಾರು ಟ್ರೆಕ್ಕಿಂಗ್ ಟ್ರೇಲ್‌ಗಳು ಈ ಸ್ಥಳವನ್ನು ಒದಗಿಸುವ ಇತರ ಆಹ್ಲಾದಕರ ಸಂಗತಿಯಾಗಿದೆ.


4. ಬೀದರ್ ಕೋಟೆ

ಒಂದು ಕಾಲದಲ್ಲಿ ದಕ್ಷಿಣದ ರಾಜಧಾನಿಯಾಗಿದ್ದು 98 ಸ್ಮಾರಕಗಳನ್ನು ಹೊಂದಿರುವ ಜನಪ್ರಿಯ ತಾಣವಾಗಿದೆ. ಬೆಟ್ಟದ ತುದಿಯಲ್ಲಿ ನೆಲೆಸಿರುವ ‘ಸಿಟಿ ಆಫ್ ವಿಸ್ಪರಿಂಗ್ ಸ್ಮಾರಕಗಳು’ ಕರ್ನಾಟಕದಲ್ಲಿ ಮಾನ್ಸೂನ್ ಸಮಯದಲ್ಲಿ ಭೇಟಿ ನೀಡಲು ಅತ್ಯುತ್ತಮ ಸ್ಥಳಗಳಲ್ಲಿ ಒಂದಾಗಿದೆ. 500 ವರ್ಷಗಳಷ್ಟು ಹಳೆಯದಾದ ಬೀದರ್ ಕೋಟೆಯು ಭಾರತದ ಪುರಾತತ್ತ್ವ ಭೂಪಟದಲ್ಲಿ ಪ್ರಮುಖ ಸ್ಥಾನವನ್ನು ಗಳಿಸಿದೆ.


5. ಕೊಡಗು

ಮಳೆಗಾಲದಲ್ಲಿ ಭೇಟಿ ನೀಡಲು ಅತ್ಯುತ್ತಮ ತಾಣ ಕೊಡಗು. ದಟ್ಟವಾದ ಮಂಜಿನ ವಾತಾವರಣದಲ್ಲಿ ಹಸಿರು ಕಾಫಿ ತೋಟಗಳು ತುಂಬಾ ಆಕರ್ಷಣೀಯವಾಗಿ ಕಾಣುತ್ತದೆ. ಮಡಿಕೇರಿ ಪಟ್ಟಣದ ಅತ್ಯುನ್ನತ ಸ್ಥಳವಾದ ರಾಜಾ ಸೀಟ್‌ನಿಂದ ಮಳೆಯಲ್ಲಿ ಮುಳುಗಿರುವ ನಗರ ಸೌಂದರ್ಯವನ್ನು ವೀಕ್ಷಿಸುವುದು ರೋಮಾಂಚಕ ಅನುಭವವನ್ನು ಕೊಡುತ್ತದೆ.

ಕೂರ್ಗ್‌ನ ಮತ್ತೊಂದು ಪ್ರಸಿದ್ಧ ಪ್ರವಾಸಿ ಆಕರ್ಷಣೆಯಾಗಿರುವ ಅಬ್ಬೆ ಜಲಪಾತ. ಜಲಪಾತದ ಸೌಂದರ್ಯ ಸವಿಯುತ್ತಾ ಬಿಸಿಬಿಸಿ ಕಪ್ ಕಾಫಿ ಸೇವನೆ ಮಾಡುತ್ತ ಕೂರ್ಗ್‌ ನಲ್ಲಿ ಬೈಕ್ ಸವಾರಿ ಮಾಡುವುದು ಅತ್ಯಂತ ಅದ್ಭುತವಾದ ಅನುಭವವನ್ನು ಕೊಡುತ್ತದೆ.


6. ದಾಂಡೇಲಿ

ಕರ್ನಾಟಕದಲ್ಲಿ ಮಾನ್ಸೂನ್ ಸಮಯದಲ್ಲಿ ಸಸ್ಯ ಮತ್ತು ಪ್ರಾಣಿಗಳ ಸೌಂದರ್ಯ ಸವಿಯಲು ದಾಂಡೇಲಿಯ ಕಾಡುಗಳು ಅತ್ಯುತ್ತಮ ಸ್ಥಳಗಳಲ್ಲಿ ಒಂದಾಗಿದೆ. ದಾಂಡೇಲಿ ವನ್ಯಜೀವಿ ಅಭಯಾರಣ್ಯವು ಕರ್ನಾಟಕದ ಎರಡನೇ ಅತಿ ದೊಡ್ಡ ವನ್ಯಜೀವಿ ಅಭಯಾರಣ್ಯವಾಗಿದೆ. ಮಳೆಗಾಲದಲ್ಲಿ ಅನೇಕ ಸರೀಸೃಪಗಳು, ಪಕ್ಷಿಗಳು ಮತ್ತು ಕಾಡು ಪ್ರಾಣಿಗಳ ಆವಾಸಸ್ಥಾನವಾಗಿದೆ. ಕಪ್ಪು ಪ್ಯಾಂಥರ್, ಚಿರತೆ ಅಥವಾ ಆನೆಯನ್ನು ಇಲ್ಲಿ ಕಾಣಬಹುದು.


7. ಮೈಸೂರು

ಮಳೆಗಾಲದಲ್ಲಿ ಪ್ರವಾಸ ಹೊರಡುವ ಯೋಚನೆ ಇದ್ದರೆ ಮೈಸೂರನ್ನು ಆಯ್ಕೆ ಮಾಡಬಹುದು. ವಾರಾಂತ್ಯವನ್ನು ಮೈಸೂರಿನ ಐಷಾರಾಮಿ ರೆಸಾರ್ಟ್‌ನಲ್ಲಿ ಕಳೆಯುವುದು ಅದ್ಭುತ ಆಯ್ಕೆಯಾಗಿದೆ. ಹೊರಗೆ ಮಳೆ ಸುರಿಯುವಾಗ ಬಲಿನೀಸ್, ಸ್ವೀಡಿಷ್ ಮತ್ತು ಆಯುರ್ವೇದಿಕ್ ಸ್ಪಾ ಚಿಕಿತ್ಸೆಗಳ ಆನಂದ ಸವಿಯಬಹುದು.


8. ನಂದಿ ಹಿಲ್‌

ಮಾನ್ಸೂನ್ ಸಮಯದಲ್ಲಿ ನಂದಿ ಬೆಟ್ಟದಲ್ಲಿ ಮಂತ್ರಮುಗ್ಧಗೊಳಿಸುವ ದೃಶ್ಯಗಳನ್ನು ಕಣ್ತುಂಬಿಕೊಳ್ಳಬಹುದು. ನಯನಮನೋಹರ ಸೂರ್ಯಾಸ್ತ, ಸೂರ್ಯೋದಯದ ದೃಶ್ಯಾವಳಿಗಳು ಮನದಲ್ಲಿ ವರ್ಣಚಿತ್ರದಂತೆ ಅಚ್ಚಳಿಯದೆ ಉಳಿಯುವುದು. ಮಳೆಗಾಲದಲ್ಲಿ ಬೈಕ್ ಸವಾರರು ಬೆಟ್ಟಗಳ ಮೇಲೆ ಹೋಗಿ ಪ್ರಕೃತಿಯ ಸೌಂದರ್ಯ ಸವಿಯಬಹುದು.


9. ಸ್ಕಂದಗಿರಿ ಬೆಟ್ಟ

ಸ್ಕಂದಗಿರಿ ಬೆಟ್ಟಗಳ ಶಿಖರದಲ್ಲಿ ನಿಂತಿರುವಾಗ ಮೋಡಗಳ ಮೇಲೆ ಏರಿದಂತ ಅನುಭವ ಕೊಡುತ್ತದೆ. ಆಗಸ್ಟ್‌ನಲ್ಲಿ ಇಲ್ಲಿ ಚಾರಣಕ್ಕೆ ಹೋಗಲು ಸೂಕ್ತ ಸಮಯ. ಹತ್ತಿಯಂತೆ ಕಾಣುವ ಮೋಡಗಳು ಅಲೌಕಿಕವಾಗಿ ಕಾಣುತ್ತವೆ. ಸ್ಕಂದಗಿರಿಯಿಂದ ಸೂರ್ಯೋದಯದ ಸುಂದರ ದೃಶ್ಯವನ್ನು ಕಣ್ತುಂಬಿಕೊಳ್ಳಬಹುದು. ರಾತ್ರಿ ಆಕಾಶದ ಅದ್ಭುತಗಳ ಅಡಿಯಲ್ಲಿ ಕ್ಯಾಂಪಿಂಗ್ ಮಾಡುವುದು ಉತ್ತಮ ಅನುಭವವನ್ನು ನೀಡುತ್ತದೆ.


10. ಗೋಕರ್ಣ

ಹಿಪ್ಪಿಗಳ ಸ್ವರ್ಗ ಗೋಕರ್ಣದ ಕಡಲತೀರಗಳು ರಮಣೀಯ ದೃಶ್ಯಗಳಿಗೆ ಹೆಸರುವಾಸಿಯಾಗಿದೆ. ಒಂದು ಕಡೆ ಕಲ್ಲಿನ ಪರ್ವತ ಮತ್ತು ಇನ್ನೊಂದು ಕಡೆ ಅರೇಬಿಯನ್ ಸಮುದ್ರದೊಂದಿಗೆ ಇರುವ ಧಾರ್ಮಿಕ ಪಟ್ಟಣವು ಅತ್ಯಂತ ಸುಂದರವಾದ ಭೂದೃಶ್ಯಗಳನ್ನು ನೀಡುತ್ತದೆ.

11. ಜೋಗ ಜಲಪಾತ

ಮಳೆಗಾಲದಲ್ಲಿ ತುಂಬಿ ಹರಿಯುವ ಜೋಗ ಜಲಪಾತವು ಕನಸಿನ ಪ್ರಪಂಚವನ್ನು ಮಳೆಗಾಲದಲ್ಲಿ ತೋರಿಸುತ್ತದೆ. ಮಾನ್ಸೂನ್ ಸಮಯದಲ್ಲಿ ಆಗೊಮ್ಮೆ ಈಗೊಮ್ಮೆ ಮಳೆಬಿಲ್ಲುಗಳೊಂದಿಗೆ ಭವ್ಯವಾದ ಪ್ರಕೃತಿಯನ್ನು ಇಲ್ಲಿ ಆನಂದಿಸಬಹುದು. ಶರಾವತಿ ನದಿಯಿಂದ ರೂಪುಗೊಂಡಿರುವ ಜಲಪಾತವು ಕರ್ನಾಟಕದ ಅತ್ಯಂತ ಪ್ರಸಿದ್ಧವಾದ ಜಲಪಾತಗಳಲ್ಲಿ ಒಂದಾಗಿದೆ ಮತ್ತು ಭಾರತದ ಅತಿ ಎತ್ತರದ ಜಲಪಾತಗಳಲ್ಲಿ ಒಂದಾಗಿದೆ.

ಇದನ್ನೂ ಓದಿ: Assam Tour: ಅಸ್ಸಾಂನ ಪೆಲ್ಲಿಂಗ್‌ನಲ್ಲಿ ಮೋಡಿ ಮಾಡುವ 8 ಆಕರ್ಷಕ ಸಂಗತಿಗಳಿವು


12. ಕೆಮ್ಮಣ್ಣುಗುಂಡಿ

ಕರ್ನಾಟಕದ ಪ್ರಸಿದ್ಧ ಗಿರಿಧಾಮಗಳಲ್ಲಿ ಒಂದಾಗಿರುವ ಕೆಮ್ಮಣ್ಣುಗುಂಡಿ ಚಿಕ್ಕಮಗಳೂರು ಜಿಲ್ಲೆಯಲ್ಲಿರುವ ಸುಂದರವಾದ ಗಿರಿಧಾಮವಾಗಿದೆ. ಇಲ್ಲಿ ನೋಡುವಂತ ಹಲವಾರು ಭೂದೃಶ್ಯಗಳು ಮತ್ತು ಸೊಂಪಾದ ಪ್ರದೇಶಗಳಿವೆ. ಕೆಮ್ಮನಗುಂಡಿಯಲ್ಲಿರುವ ಇತರ ಕೆಲವು ಪ್ರಮುಖ ಆಕರ್ಷಣೆಗಳೆಂದರೆ ಹೆಬ್ಬೆ ಜಲಪಾತ, ಶಾಂತಿ ಜಲಪಾತ, ಝೆಡ್ ಪಾಯಿಂಟ್ ಮತ್ತು ಅತ್ಯಂತ ಪ್ರಸಿದ್ಧವಾದ ಬಾಬಾ ಬುಡನ್ ಗಿರಿ ಮತ್ತು ಮುಳ್ಳಯ್ಯನಗಿರಿ ಬೆಟ್ಟಗಳು.


13. ಕುದುರೆಮುಖ

ಕುದುರೆಮುಖ ಗಿರಿಧಾಮ ಮಾನ್ಸೂನ್ ಸಮಯದಲ್ಲಿ ಉತ್ತಮ ಅನುಭವವನ್ನು ನೀಡುತ್ತದೆ. ಕುದುರೆಮುಖ ರಾಷ್ಟ್ರೀಯ ಉದ್ಯಾನವನದಲ್ಲಿರುವ ಶೋಲಾ ಹುಲ್ಲುಗಾವಲು ಮತ್ತು ಕಾಡುಗಳು ಮಾನ್ಸೂನ್ ಸಮಯದಲ್ಲಿ ಭೇಟಿ ನೀಡಲು ಅತ್ಯಂತ ಆಸಕ್ತಿದಾಯಕ ತಾಣಗಳಾಗಿವೆ. ಹನುಮಾನ್ ಗುಂಡಿ ಮತ್ತು ಕದಂಬಿ ಜಲಪಾತ ಇಲ್ಲಿನ ಎರಡು ಪ್ರಮುಖ ತಾಣಗಳಾಗಿವೆ. ಮಾನ್ಸೂನ್ ಸಮಯದಲ್ಲಿ ಕರ್ನಾಟಕದಲ್ಲಿ ಭೇಟಿ ನೀಡಲು ಇದು ಅತ್ಯಂತ ಸುಂದರವಾದ ಸ್ಥಳಗಳಲ್ಲಿ ಒಂದಾಗಿದೆ.


14. ಬಾಲೂರು

ಚಿಕ್ಕಮಗಳೂರು ಜಿಲ್ಲೆಯ ಒಂದು ಗ್ರಾಮವಾದ ಬಾಲೂರು ಮಾನ್ಸೂನ್ ಋತುವಿನಲ್ಲಿ ಭೇಟಿ ನೀಡಲು ಅತ್ಯುತ್ತಮ ತಾಣವಾಗಿದೆ. ವಿಶಾಲವಾದ ಕಾಫಿ ಎಸ್ಟೇಟ್ ಗಳು ಭೂಮಿಯ ಮೇಲಿನ ಅತ್ಯಂತ ಪರಿಶುದ್ಧ ಸ್ಥಳ ಎಂಬಂತೆ ಭಾಸವಾಗುತ್ತದೆ. ಚಾರ್ಮಾಡಿ ಘಾಟ್, ಚಾರ್ಮಾಡಿ ಜಲಪಾತ ಮತ್ತು ಕೊಡೆ ಕಲ್ಲು ಇಲ್ಲಿನ ಅದ್ಭುತ ಸ್ಥಳಗಳಾಗಿವೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading
Advertisement
Cheetah Safari
ಪರಿಸರ2 mins ago

Cheetah Safari: ಬನ್ನೇರುಘಟ್ಟದಲ್ಲಿ ʻಚಿರತೆ ಸಫಾರಿʼ ಶುರು; ಚಿರತೆಗಳನ್ನು ಕಾಡೊಳಗೇ ನೋಡಿ ಆನಂದಿಸಿ!

Viral News
Latest2 mins ago

Viral News: ನೀವೂ ಕೂಡ ನಿಮ್ಮ ಹೆಂಡತಿಯನ್ನು ಇವರಂತೆ ಪ್ರೀತಿಸಬಲ್ಲಿರಾ? ಈ ಫೋಟೊ, ವಿಡಿಯೊ ನೋಡಿ ಹೇಳಿ!

Hathras Stampede
ಪ್ರಮುಖ ಸುದ್ದಿ17 mins ago

Hathras Stampede: ಹತ್ರಾಸ್‌ ಕಾಲ್ತುಳಿತದಲ್ಲಿ ಮೃತರ ಸಂಖ್ಯೆ 116ಕ್ಕೆ ಏರಿಕೆ; ಸತ್ಸಂಗ ನಡೆಸಿದ ಭೋಲೆ ಬಾಬಾ ನಾಪತ್ತೆ

krishna river drowned death
ಕ್ರೈಂ32 mins ago

Drowned: ಪೊಲೀಸರಿಂದ ತಪ್ಪಿಸಿಕೊಳ್ಳಹೋಗಿ ನೀರುಪಾಲು; ಕೃಷ್ಣಾ ನದಿಯಲ್ಲಿ ತೆಪ್ಪ ಮಗುಚಿ 1 ಸಾವು, ಇಬ್ಬರ ರಕ್ಷಣೆ, ಇನ್ನೂ ಐವರು ನಾಪತ್ತೆ

IPS transfer
ಪ್ರಮುಖ ಸುದ್ದಿ1 hour ago

IPS Transfer: ರಾಜ್ಯದ 25 ಐಪಿಎಸ್ ಅಧಿಕಾರಿಗಳ ವರ್ಗಾವಣೆ

karnataka weather Forecast
ಮಳೆ2 hours ago

Karnataka Weather : ಬೆಂಗಳೂರಲ್ಲಿ ಮರೆಯಾಗುವ ಸೂರ್ಯ; ಕರಾವಳಿ, ಮಲೆನಾಡಿನಲ್ಲಿ ವರುಣಾರ್ಭಟ

Dharamshala Tour
ಪ್ರವಾಸ2 hours ago

Dharamshala Tour: ಪರಿಪೂರ್ಣ ಪ್ರವಾಸದ ಅನುಭವ ಕೊಡುವ ಧರ್ಮಶಾಲಾ

Vastu Tips
ಧಾರ್ಮಿಕ2 hours ago

Vastu Tips: ಮನೆ, ಅಂಗಡಿಯಲ್ಲಿ ಧನಾತ್ಮಕ ಶಕ್ತಿ ಆಹ್ವಾನಿಸಿ; ಸುಖ, ಶಾಂತಿ, ಸಮೃದ್ಧಿ ವೃದ್ಧಿಸಿ

Sour Curd
ಆರೋಗ್ಯ3 hours ago

Sour Curd: ಹುಳಿ ಬಂದ ಮೊಸರಿನ ಸೇವನೆ ಆರೋಗ್ಯಕ್ಕೆ ಒಳ್ಳೆಯದೋ ಕೆಟ್ಟದ್ದೋ?

Dina Bhavishya
ಭವಿಷ್ಯ3 hours ago

Dina Bhavishya : ಒತ್ತಡಗಳು ದೂರವಾಗಿ ಹರ್ಷದಿಂದ ಕಾಲ ಕಳೆಯುವಿರಿ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka weather Forecast
ಮಳೆ13 hours ago

Karnataka Weather : ಮಳೆ ಅಬ್ಬರಕ್ಕೆ ಹೆಚ್ಚಾದ ಗುಡ್ಡ ಕುಸಿತ; ಬಂಗ್ರ ಕೂಳೂರಿನಲ್ಲಿ ರಸ್ತೆ ಬಂದ್‌

karnataka Weather Forecast
ಮಳೆ2 days ago

Karnataka Weather : ಕೊಡಗು, ದಾವಣಗೆರೆಯಲ್ಲಿ ಮಳೆಯಾಟ; ಬೆಂಗಳೂರಲ್ಲಿ ಮೋಡ ಕವಿದ ವಾತಾವರಣ

karnataka Weather Forecast
ಮಳೆ3 days ago

Karnataka Weather : ಬೆಂಗಳೂರು, ಕಲಬುರಗಿ ಸೇರಿದಂತೆ ಹಲವೆಡೆ ವರ್ಷಧಾರೆ; ನಾಳೆಗೂ ಮಳೆ ಅಲರ್ಟ್‌

Actor Darshan
ಬೆಂಗಳೂರು3 days ago

Actor Darshan : ಖೈದಿ ನಂ.6106ಕ್ಕೆ ಡಿಮ್ಯಾಂಡ್‌! ದರ್ಶನ್‌ ಫ್ಯಾನ್ಸ್‌ಗೆ ಕಾನೂನು ಕಂಟಕ, ರೂಲ್ಸ್‌ ಬ್ರೇಕ್‌ ಮಾಡಿದ್ರೆ ಬೀಳುತ್ತೆ ಕೇಸ್‌‌!

karnataka weather Forecast
ಮಳೆ4 days ago

Karnataka Weather : ಮಳೆಗೆ ಸ್ಕಿಡ್‌ ಆಗಿ ಹೇಮಾವತಿ ನದಿಗೆ ಹಾರಿದ ಕಾರು; ಕರಾವಳಿಗೆ ಎಚ್ಚರಿಕೆ ಕೊಟ್ಟ ತಜ್ಞರು

karnataka Rain
ಮಳೆ4 days ago

Karnataka Rain: ಭಾರಿ ಮಳೆಗೆ ಮನೆಗಳ ಗೋಡೆ ಕುಸಿತ; ಕೂದಲೆಳೆ ಅಂತರದಲ್ಲಿ ವೃದ್ಧ ಪಾರು

karnataka Weather Forecast
ಮಳೆ5 days ago

Karnataka Weather : ಅಬ್ಬಬ್ಬಾ.. ಮುಲ್ಕಿಯಲ್ಲಿ 30 ಸೆಂ.ಮೀ ಮಳೆ ದಾಖಲು; ವಾರಾಂತ್ಯದಲ್ಲೂ ಭಾರಿ ವರ್ಷಧಾರೆ

karnataka Rain
ಮಳೆ5 days ago

Karnataka Rain : ಭಾರಿ ಮಳೆಗೆ ಪಾತಾಳ ಸೇರಿದ ಬಾವಿ; ಅಲೆಗಳ ಹೊಡೆತಕ್ಕೆ ಸಮುದ್ರಪಾಲಾದ ಮನೆ

Karnataka Weather Forecast
ಮಳೆ6 days ago

Karnataka Weather : ಭಾರಿ ಮಳೆ ಹಿನ್ನೆಲೆ ದಕ್ಷಿಣ ಕನ್ನಡಕ್ಕೆ ರೆಡ್ ಅಲರ್ಟ್; ಶುಕ್ರವಾರವೂ ಶಾಲೆಗಳಿಗೆ ರಜೆ ಘೋಷಣೆ

karnataka Weather Forecast
ಮಳೆ6 days ago

Karnataka Weather : ಭಾರಿ ಮಳೆಗೆ ಸೇತುವೆಯಿಂದ ಹೊಳೆಗೆ ಬಿದ್ದ ಕಾರು; ಮರ ಹಿಡಿದು ಪ್ರಾಣ ಉಳಿಸಿಕೊಂಡ ಸವಾರರು

ಟ್ರೆಂಡಿಂಗ್‌