Agneepath Recruitment 2022 | ಅಗ್ನಿಪಥ್‌ ಮೂಲಕ ನೇಮಕ; ಕನ್ನಡದಲ್ಲಿ ನಡೆಯೋಲ್ಲ ನೇಮಕಾತಿ ಪರೀಕ್ಷೆ - Vistara News

ಉದ್ಯೋಗ

Agneepath Recruitment 2022 | ಅಗ್ನಿಪಥ್‌ ಮೂಲಕ ನೇಮಕ; ಕನ್ನಡದಲ್ಲಿ ನಡೆಯೋಲ್ಲ ನೇಮಕಾತಿ ಪರೀಕ್ಷೆ

ಭಾರತೀಯ ಸೇನೆಗೆ ಅಗ್ನಿಪಥ್‌ ಯೋಜನೆ ಮೂಲಕ ರಾಜ್ಯದಲ್ಲಿಯೂ ನೇಮಕಾತಿ ಆರಂಭವಾಗಿದೆ. ಇದಕ್ಕಾಗಿ ನಡೆಸಲಾಗುತ್ತಿರುವ ರ‍್ಯಾಲಿಯಲ್ಲಿ ಇಂಗ್ಲಿಷ್‌ ಮತ್ತು ಹಿಂದಿಯಲ್ಲಿ ಮಾತ್ರ ಲಿಖಿತ ಪರೀಕ್ಷೆ ನಡೆಸಲಾಗುತ್ತಿದ್ದು, ಗ್ರಾಮೀಣ ಭಾಗದ ಅಭ್ಯರ್ಥಿಗಳಿಗೆ ಕಷ್ಟವಾಗುತ್ತಿದೆ. ಕನ್ನಡದಲ್ಲಿಯೂ ಪರೀಕ್ಷೆ ನಡೆಸಬೇಕೆಂಬ ಕೂಗು ಎದ್ದಿದ್ದು, ಈ ಕುರಿತ ವಿಸ್ತಾರ ನ್ಯೂಸ್‌ನ ವಿಶೇಷ ವರದಿ ಇಲ್ಲಿದೆ.

VISTARANEWS.COM


on

agneepath recruitment 2022
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ರಾಮಸ್ವಾಮಿ ಹುಲಕೋಡು
ಬೆಂಗಳೂರು:
ಕೇಂದ್ರ ಸರ್ಕಾರ ಇತ್ತೀಚೆಗೆ ಪ್ರಕಟಿಸಿದ ನೇಮಕಾತಿ ಯೋಜನೆ ʼಅಗ್ನಿಪಥ್‌ʼ ಮೂಲಕ ಭಾರತೀಯ ಸೇನೆಯು ನೇಮಕ ಪ್ರಕ್ರಿಯೆಯನ್ನು ರಾಜ್ಯದಲ್ಲಿಯೂ (Agneepath Recruitment 2022) ಆರಂಭಿಸಿದೆ. ಆದರೆ ಈ ನೇಮಕಾತಿ ರ‍್ಯಾಲಿಯಲ್ಲಿ ನಡೆಸುವ ಲಿಖಿತ ಪರೀಕ್ಷೆಯನ್ನು ಹಿಂದಿ ಅಥವಾ ಇಂಗ್ಲಿಷ್‌ನಲ್ಲಿ ಮಾತ್ರ ಬರೆಯಲು ಅವಕಾಶ ನೀಡಿರುವುದು ರಾಜ್ಯದ ಅಭ್ಯರ್ಥಿಗಳಿಗೆ ನಿರಾಸೆ ಮೂಡಿಸಿದೆ.

Agneepath Recruitment 2022

ಬಹುತೇಕವಾಗಿ ಗ್ರಾಮೀಣ ಭಾಗದ ಅಭ್ಯರ್ಥಿಗಳೇ ಸೇನೆ ಸೇರಲು ಮುಂದಾಗುತ್ತಾರೆ. ಕನ್ನಡ ಮಾಧ್ಯಮದಲ್ಲಿ ಓದಿರುವ ಈ ವಿದ್ಯಾರ್ಥಿಗಳಿಗೆ ಇಂಗ್ಲಿಷ್‌ ಅಥವಾ ಹಿಂದಿಯಲ್ಲಿ ಪರೀಕ್ಷೆ ಬರೆಯುವುದು ದೊಡ್ಡ ಸವಾಲಾಗಿ ಪರಿಣಮಿಸಿದೆ. ಹೀಗಾಗಿ ಸೇನೆ ಸೇರುವ ಕನಸು ಹೊತ್ತ ಸಾವಿರಾರು ಅಭ್ಯರ್ಥಿಗಳಿಗೆ ಅಗ್ನಿವೀರರಾಗಲು ಸಾಧ್ಯವಾಗುತ್ತಿಲ್ಲ.

ಅಗ್ನಿಪಥ್‌ ಮಾತ್ರವಲ್ಲ, ಈ ಹಿಂದೆ ನಡೆಯುತ್ತಿದ್ದ ಸೇನಾ ನೇಮಕಾತಿ ರ‍್ಯಾಲಿಗಳಲ್ಲಿ ಕೂಡ ಲಿಖಿತ ಪರೀಕ್ಷೆಯನ್ನು ಇಂಗ್ಲಿಷ್‌ ಅಥವಾ ಹಿಂದಿಯಲ್ಲಿ ಮಾತ್ರ ನಡೆಸಲಾಗುತ್ತಿತ್ತು. ಆದರೆ ರ‍್ಯಾಲಿ ನೇಮಕಗೊಂಡರೆ ಸೇನೆಯಲ್ಲಿ ಕಾಯಂ ಆಗಿ ಕೆಲಸ ಸಿಗುತ್ತದೆ ಎಂದು ಅಭ್ಯರ್ಥಿಗಳು ಕೋಚಿಂಗ್‌ಗೆ ಸೇರಿ, ಕಷ್ಟಪಟ್ಟು ಹಿಂದಿಯನ್ನು ಕಲಿತು ರ‍್ಯಾಲಿಯಲ್ಲಿ ಭಾಗವಹಿಸುತ್ತಿದ್ದರು. ಆದರೆ ಈ ಹೊಸ ಅಗ್ನಿಪಥ್‌ ಯೋಜನೆಯಲ್ಲಿ ಉದ್ಯೋಗದ ಖಾತ್ರಿ ಇಲ್ಲ. ಕೇವಲ ನಾಲ್ಕು ವರ್ಷ ಸೇನೆಯಲ್ಲಿ ಸೇವೆ ಸಲ್ಲಿಸಲು ಒಂದೆರಡು ವರ್ಷ ಕೋಚಿಂಗ್‌ಗೆ ಸೇರುವುದೇಕೆ ಎಂದು ಗ್ರಾಮೀಣ ಅಭ್ಯರ್ಥಿಗಳು ಯೋಚಿಸುವಂತಾಗಿದೆ.

ಕೇಂದ್ರ ಸರ್ಕಾರ ಇತ್ತೀಚೆಗೆ ಎಲ್ಲ ಹುದ್ದೆಗಳ ನೇಮಕಕ್ಕೆ ಸ್ಥಳೀಯ ಭಾಷೆಯಲ್ಲಿ ಪರೀಕ್ಷೆ ನಡೆಸುತ್ತಿದೆ. ಬ್ಯಾಂಕ್‌ ಹುದ್ದೆಗಳಿಗೆ ಐಬಿಪಿಎಸ್‌, ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳಲ್ಲಿನ ಹುದ್ದೆಗಳಿಗೆ ಎಸ್‌ಎಸ್‌ಸಿ, ರೈಲ್ವೆ ಇಲಾಖೆಯ ಹುದ್ದೆಗಳಿಗೆ ಆರ್‌ಆರ್‌ಬಿ ಸ್ಥಳೀಯ ಭಾಷೆಗಳಲ್ಲಿಯೇ ಪರೀಕ್ಷೆ ನಡೆಸುತ್ತಿವೆ. ಇದೇ ಪ್ರಕಾರವಾಗಿ ಸೇನೆ ಕೊನೆಯ ಪಕ್ಷ ಅಗ್ನಿಪಥ್‌ ಯೋಜನೆಯ ಮೂಲಕ ಮಾಡಿಕೊಳ್ಳುವ ಸೈನಿಕ ಹುದ್ದೆಗಳಿಗಾದರೂ ಕನ್ನಡದಲ್ಲಿ ಪರೀಕ್ಷೆ (Common Entrance Examination- CEE) ನಡೆಸಬೇಕೆಂಬುದು ಅಭ್ಯರ್ಥಿಗಳ ಒತ್ತಾಯವಾಗಿದೆ.

ಮಾಹಿತಿಯೂ ಕನ್ನಡದಲ್ಲಿಲ್ಲ!
ಕೇಂದ್ರ ಸರ್ಕಾರ ಅಗ್ನಿಪಥ್‌ ಯೋಜನೆ ಪ್ರಕಟಿಸುತ್ತಿದ್ದಂತೆಯೇ ಈ ಬಗ್ಗೆ ದೇಶಾದ್ಯಂತ ಯುವಕರು ಆಕ್ರೋಶ ವ್ಯಕ್ತಪಡಿಸಿದ್ದರು. ಈ ಯೋಜನೆ ಕುರಿತು ಅಭ್ಯರ್ಥಿಗಳಲ್ಲಿ ಈಗಲೂ ಸಾಕಷ್ಟು ಗೊಂದಲವಿದೆ. ಆದರೆ ಈ ಯೋಜನೆಯ ಮಾಹಿತಿ ಕೂಡ ಕನ್ನಡದಲ್ಲಿ ಲಭ್ಯವಿಲ್ಲ. ಸದ್ಯ ರ‍್ಯಾಲಿಯ ಅಧಿಸೂಚನೆ ಹೊರಡಿಸಿರುವ ಬೆಂಗಳೂರು ಮತ್ತು ಮಂಗಳೂರು ನೇಮಕಾತಿ ಘಟಕಗಳ ಸಹಾಯವಾಣಿಗೆ ಕರೆ ಮಾಡಿದರೂ ಹಿಂದಿ ಅಥವಾ ಇಂಗ್ಲಿಷ್‌ನಲ್ಲಿಯೇ ಪ್ರಶ್ನೆ ಕೇಳಿ ಎನ್ನುತ್ತಾರೆ. ಬೇಕಾದ ಮಾಹಿತಿಯನ್ನು ಹಿಂದಿಯಲ್ಲಿ ಮಾತ್ರ ನೀಡುತ್ತಾರೆ. ಹೀಗಾದರೆ ಹೆಚ್ಚಿನ ಸಂಖ್ಯೆಯಲ್ಲಿ ಕನ್ನಡಿಗರು ಈ ಯೋಜನೆಯ ಲಾಭ ಪಡೆಯವುದಾದರೂ ಹೇಗೆ?

ʼʼನಾನು ಸೇನೆ ಸೇರಬೇಕೆಂದುಕೊಂಡಿದ್ದೆ. ಇದಕ್ಕಾಗಿ ಪ್ರತಿನಿತ್ಯ ಕಸರತ್ತು ನಡೆಸಿ ಸಹಿಷ್ಣುತೆ ಮತ್ತು ದೇಹದಾಢ್ಯತೆ ಪರೀಕ್ಷೆ ಸಿದ್ಧವಾಗಿದ್ದೆ. ಹಾವೇರಿಯಲ್ಲಿ ಈ ಹಿಂದೆ ನಡೆದ ರ‍್ಯಾಲಿ ಭಾಗವಹಿಸಿ ಅಂದುಕೊಂಡಂತೆ ದೈಹಿಕ ಪರೀಕ್ಷೆಯಲ್ಲಿ ಅರ್ಹತೆಯನ್ನೂ ಪಡೆದೆ. ಆದರೆ ಲಿಖಿತ ಪರೀಕ್ಷೆಯನ್ನು ಇಂಗ್ಲಿಷ್‌ ಅಥವಾ ಹಿಂದಿಯಲ್ಲಿ ಮಾತ್ರ ಬರೆಯಬೇಕೆಂದು ಕೇಳಿದಾಗಲೇ ನಾನು ಕುಸಿದು ಹೋಗಿದ್ದೆ. ಕನ್ನಡ ಮಾಧ್ಯಮದಲ್ಲಿ ಓದಿದ ನನಗೆ ಈ ಪರೀಕ್ಷೆಯಲ್ಲಿ ಅರ್ಹತೆ ಪಡೆಯಲು ಸಾಧ್ಯವೇ ಆಗಲಿಲ್ಲ. ಸೇನೆ ಸೇರಿ ದೇಶ ಸೇವೆ ಮಾಡಬೇಕೆಂಬ ನನ್ನ ಕನಸು ಕನಸಾಗಿಯೇ ಉಳಿಯಿತುʼʼ ಎಂದು ಗದಗ ಜಿಲ್ಲೆ ಬೆಟಗೇರಿಯ ಎನ್‌. ಶಿವಕುಮಾರ್‌ ಹೇಳಿದ್ದಾರೆ.

ʼʼಹಿಂದಿನಿಂದಲೂ ಸೇನೆಯಲ್ಲಿ ಹಿಂದಿಯನ್ನೇ ಹೆಚ್ಚಾಗಿ ಬಳಸಲಾಗುತ್ತದೆ. ಇಲ್ಲಿ ಎಲ್ಲ ವ್ಯವಹಾರಗಳೂ ಹಿಂದಿಯಲ್ಲಿಯೇ ಇರುತ್ತವೆ. ಹೀಗಾಗಿ ಸೇನೆ ಸೇರುವ ಸೈನಿಕರು ಹಿಂದಿ ಕಲಿತಿರಬೇಕೆಂಬುದು ಸರಿ ಇರಬಹುದು. ಆದರೆ ಹಿಂದಿ ಅಥವಾ ಇಂಗ್ಲಿಷ್‌ ಗೊತ್ತಿದ್ದರೆ ಮಾತ್ರ ಸೇನೆಗೆ ಸೇರಬಹುದು ಎನ್ನುವುದು ಸರಿಯಲ್ಲ. ಸೇನೆಗೆ ನೇಮಕ ಮಾಡಿಕೊಳ್ಳುವಾಗ ಸ್ಥಳೀಯ ಭಾಷೆಯಲ್ಲಿ ಪರೀಕ್ಷೆ ನಡೆಸಿ, ಆ ನಂತರ ಬೇಕಾದರೆ ಹಿಂದಿ ಕಲಿಯಲು ಅವಕಾಶ ಮಾಡಿಕೊಡಬಹುದು. ಇದರಿಂದ ಎಲ್ಲ ಭಾಷಿಗರಿಗೂ ಸೇನೆ ಸೇರಲು ಅವಕಾಶ ಸಿಕ್ಕಂತಾಗುತ್ತದೆʼʼ ಎನ್ನುತ್ತಾರೆ ಹೆಸರು ಹೇಳಲಿಚ್ಛಿಸದ ಸೇನೆಯ ನಿವೃತ್ತ ಅಧಿಕಾರಿಯೊಬ್ಬರು.

Agneepath Recruitment 2022

ರಾಜ್ಯ ಸರ್ಕಾರವೇ ಉಚಿತ ತರಬೇತಿ ನೀಡಲಿ
ಸೇನಾ ನೇಮಕಾತಿ ರ‍್ಯಾಲಿಗಳಲ್ಲಿ ಭಾಗವಹಿಸುವವರು ಶೇ.90 ರಷ್ಟು ಗ್ರಾಮೀಣ ಪ್ರದೇಶದವರು. ಅವರಿಗೆ ಒಂದು ಪರೀಕ್ಷೆಯನ್ನು ಎದುರಿಸುವಷ್ಟು ಇಂಗ್ಲಿಷ್‌ ಅಥವಾ ಹಿಂದಿಯ ಜ್ಞಾನವಿರುವುದು ಕಡಿಮೆ. ಹೀಗಾಗಿ ಹೆಚ್ಚಿನವರಿಗೆ ಸೇನೆಯ ತಳಮಟ್ಟದ ಹುದ್ದೆಗಳಿಗೆ ಸೇರಲೂ ಆಗುತ್ತಿಲ್ಲ. ಸ್ಥಳೀಯ ಭಾಷೆಗಳಲ್ಲಿಯೇ ಈ ಪರೀಕ್ಷೆ ನಡೆಸಿದರೆ ಹೆಚ್ಚಿನ ಕನ್ನಡಿಗರು ಇದರ ಲಾಭ ಪಡೆಯಬಹುದು. ಹಾಗೆಯೇ ರಾಜ್ಯ ಸರ್ಕಾರ ವಿವಿಧ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸಲು ಉಚಿತವಾಗಿ ತರಬೇತಿ ನೀಡುವಂತೆ ಸೇನೆಯ ಹುದ್ದೆಗಳಿಗೂ ಉಚಿತವಾಗಿ ತರಬೇತಿ ನೀಡಲು ಕ್ರಮ ತೆಗೆದುಕೊಳ್ಳಬೇಕು.
ಗುರುರಾಜ ಎಮ್‌. ಬುಲಬುಲೆ | ಬುಲಬುಲೆ ಕರಿಯರ್‌ ಅಕಾಡೆಮಿ ಮತ್ತು ಸ್ಕೂಲ್‌ ಆಫ್‌ ಬ್ಯಾಂಕಿಂಗ್‌, ಧಾರವಾಡ

ರಾಜ್ಯದಲ್ಲಿ ನಡೆಯುವ ನೇಮಕಾತಿ ರ‍್ಯಾಲಿ ಕೂಡ ಹಿಂದಿಮಯವಾಗಿರುತ್ತದೆ. ಸಹಿಷ್ಣುತೆ ಮತ್ತು ದೇಹದಾಢ್ಯತೆ ಪರೀಕ್ಷೆ ಸಂದರ್ಭದಲ್ಲಿ ಹಿಂದಿಯಲ್ಲಿ ಮಾತನಾಡುವ ಅಭ್ಯರ್ಥಿಗಳಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡಲಾಗುತ್ತದೆ. ಹಿಂದಿ ಗೊತ್ತಿಲ್ಲದವರು ರ‍್ಯಾಲಿಯ ಸಂದರ್ಭದಲ್ಲಿಯೇ ಪರದಾಡಬೇಕಾಗುತ್ತದೆ ಇದು ಬದಲಾದರೆ ಹೆಚ್ಚಿನ ಅಭ್ಯರ್ಥಿಗಳು ಸೇನೆ ಸೇರಲು ಮುಂದಾಗಬಹುದು ಎಂದು ಅವರು ವಿವರಿಸಿದ್ದಾರೆ.

ರಾಜ್ಯದಲ್ಲಿ ಸದ್ಯವೇ ಅಗ್ನಿಪಥ್‌ ರ‍್ಯಾಲಿಗಳು ನಡೆಯಲಿವೆ. ಮೊದಲ ರ‍್ಯಾಲಿಯು ಆಗಸ್ಟ್‌ 10 ರಿಂದ 22ರವರೆಗೆ ಕೋಲಾರದಲ್ಲಿ ನಡೆಯಲಿದೆ. ಬೆಂಗಳೂರು (ನಗರ ಮತ್ತು ಗ್ರಾಮೀಣ), ಕೋಲಾರ, ಮಂಡ್ಯ, ತುಮಕೂರು, ಮೈಸೂರು, ಚಾಮರಾಜನಗರ, ರಾಮನಗರ, ಚಿಕ್ಕಬಳ್ಳಾಪುರ, ಕೊಡಗು, ಚಿತ್ರದುರ್ಗ, ಹಾಸನ, ಬಳ್ಳಾರಿ ಮತ್ತು ಹೊಸ ಜಿಲ್ಲೆ ವಿಜಯನಗರದ ಅಭ್ಯರ್ಥಿಗಳು ಈ ರ‍್ಯಾಲಿಯಲ್ಲಿ ಭಾಗವಹಿಸಬಹುದಾಗಿದೆ. ಹಾವೇರಿಯಲ್ಲಿ ಸೆಪ್ಟೆಂಬರ್‌ 1 ರಿಂದ 20ರವರೆಗೆ ರ‍್ಯಾಲಿ ನಡೆಯಲಿದೆ. ಮಂಗಳೂರು ವಿಭಾಗೀಯ ನೇಮಕಾತಿ ಕಚೇರಿಯ ಅಡಿಯಲ್ಲಿ ನಡೆಯುವ ಈ ರ‍್ಯಾಲಿಯಲ್ಲಿ ಉತ್ತರಕನ್ನಡ, ಶಿವಮೊಗ್ಗ, ಉಡುಪಿ, ಚಿಕ್ಕಮಗಳೂರು, ದಕ್ಷಿಣ ಕನ್ನಡ, ದಾವಣಗೆರೆ, ವಿಜಯಪುರ, ಧಾರವಾಡ, ಹಾವೇರಿ, ಗದಗ, ಬಾಗಲಕೋಟದ ಅಭ್ಯರ್ಥಿಗಳು ಭಾಗವಹಿಸಬಹುದಾಗಿದೆ.

ಕನ್ನಡದಲ್ಲಿಯೇ ಪರೀಕ್ಷೆ ನಡೆಸಿ
ಉದ್ಯೋಗದ ದೃಷ್ಟಿಯಿಂದ ಅಗ್ನಿಪಥ್ ಮಹತ್ವಾಕಾಂಕ್ಷೆಯ ಯೋಜನೆ. ಇದರ ಅಡಿಯಲ್ಲಿ ಸೇನಾ ನೇಮಕಾತಿಗೆ ನಡೆಸುವ ಸಾಮಾನ್ಯ ಪ್ರವೇಶ ಪರೀಕ್ಷೆಯನ್ನು ಇಂಗ್ಲಿಶ್ ಮತ್ತು ಹಿಂದಿ ಮಾಧ್ಯಮದಲ್ಲಿ ಮಾತ್ರ ನಡೆಸುತ್ತಿರುವುದು ದುರದೃಷ್ಟಕರ. ಬಹುತೇಕ ಕಡಿಮೆ ಶಿಕ್ಷಣ ಪಡೆದಿರುವವರೇ ಬರೆಯುವ ಈ ಪರೀಕ್ಷೆಯನ್ನು ಕನ್ನಡವೂ ಸೇರಿದಂತೆ ಸಂವಿಧಾನದ ಎಂಟನೆ ಪರಿಚ್ಛೇದದಲ್ಲಿ ಮಾನ್ಯ ಮಾಡಿರುವ ಇಪ್ಪತ್ತೆರಡು ಭಾಷೆಗಳಲ್ಲಿಯೂ ನಡೆಸಬೇಕು.
ಗಿರೀಶ್ ಮತ್ತೇರ | ಕನ್ನಡ ಪರ ಹೋರಾಟಗಾರ,ಹೊಳಲ್ಕೆರೆ

ಈಗಾಗಲೇ ಅರ್ಜಿ ಸಲ್ಲಿಕೆ ಪ್ರಕ್ರಿಯೆ ಆರಂಭಗೊಂಡಿದ್ದು, ಕೋಲಾದರಲ್ಲಿ ನಡೆಯುವ ರ‍್ಯಾಲಿಗೆ ಅರ್ಜಿ ಸಲ್ಲಿಸಲು ಜುಲೈ 30 ಕೊನೆಯ ದಿನವಾಗಿದೆ. ಹಾವೇರಿಯಲ್ಲಿ ನಡೆಯಲಿರುವ ರ‍್ಯಾಲಿಗೆ ಅರ್ಜಿ ಸಲ್ಲಿಸಲು ಆಗಸ್ಟ್‌ 4ರವರೆಗೆ ಅವಕಾಶವಿರುತ್ತದೆ. 8ನೇ ತರಗತಿಯಲ್ಲಿ ಮತ್ತು ಎಸ್‌ಎಸ್‌ಎಲ್‌ಸಿಯಲ್ಲಿ ಉತ್ತೀರ್ಣರಾದವರು ಈ ರ‍್ಯಾಲಿಯಲ್ಲಿ ಭಾಗವಹಿಸಬಹುದಾಗಿರುತ್ತದೆ. ಕಡಿಮೆ ವಿದ್ಯಾರ್ಹತೆ ಬೇಡುವ ಹುದ್ದೆಗಳಿಗೆ ಸ್ಥಳೀಯ ಭಾಷೆಯಲ್ಲಿಯೇ ಪರೀಕ್ಷೆ ನಡೆಸಬೇಕೆಂದು ಸಂವಿಧಾನವೇ ಹೇಳಿದೆ. ಹೀಗಿರುವಾಗ ಸೈನಿಕ ಹುದ್ದೆಗಳಿಗೆ ಏಕೆ ಹಿಂದಿ ಅಥವಾ ಇಂಗ್ಲಿಷ್‌ ಭಾಷೆಯಲ್ಲಿಮಾತ್ರ ಪರೀಕ್ಷೆ ನಡೆಸಲಾಗುತ್ತಿದೆ ಎಂಬುದು ದೊಡ್ಡ ಪ್ರಶ್ನೆಯಾಗಿದೆ.

ಇದನ್ನೂ ಓದಿ | Agnipath | ಅಗ್ನಿವೀರರ ನೇಮಕಕ್ಕೆ ರಾಜ್ಯದಲ್ಲಿ ನಡೆಯಲಿದೆ ನಾಲ್ಕು ರ‍್ಯಾಲಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಉದ್ಯೋಗ

Job Alert: ಟೆಕ್ಸ್‌ಟೈಲ್ಸ್‌ ಕಮಿಟಿಯಿಂದ 40 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ; ಬೆಂಗಳೂರಿನಲ್ಲೂ ಇದೆ ಪೋಸ್ಟಿಂಗ್‌

Job Alert: ಭಾರತ ಸರ್ಕಾರದ ಜವಳಿ ಸಚಿವಾಲಯದ ಟೆಕ್ಸ್‌ಟೈಲ್ಸ್‌ ಕಮಿಟಿ ತನ್ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ದೇಶಾದ್ಯಂತ ಒಟ್ಟು 40 ಪ್ರಾಜೆಕ್ಟ್‌ ಅಸಿಸ್ಟಂಟ್‌ ಹುದ್ದೆ ಖಾಲಿ ಇದ್ದು, ಪದವೀಧರರು ಅರ್ಜಿ ಸಲ್ಲಿಸಬಹುದು. ಬೆಂಗಳೂರಿನಲ್ಲಿಯೂ ಹುದ್ದೆ ಖಾಲಿ ಇದ್ದು, ಆಸಕ್ತರು ಆಫ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕು. ಅರ್ಜಿ ಮೇ 31ರೊಳಗೆ ತಲುಪುವಂತಿರಬೇಕು. ಬಿಎಸ್‌ಸಿ (ಫಿಸಿಕ್ಸ್‌ ಅಥವಾ ಕೆಮಿಸ್ಟ್ರಿ) ಅಥವಾ ಟೆಕ್ಸ್‌ಟೈಲ್ಸ್‌ ಟೆಕ್ನಾಲಜಿಯಲ್ಲಿ ಬಿ.ಟೆಕ್‌ ಪದವಿ ಪಡೆದವರು ಅರ್ಜಿ ಸಲ್ಲಿಸಲು ಅರ್ಹರು. ಅರ್ಜಿ ಸಲ್ಲಿಸುವವರ ಕನಿಷ್ಠ ವಯಸ್ಸು 21 ವರ್ಷ ಮತ್ತು ಗರಿಷ್ಠ ವಯಸ್ಸು 35 ವರ್ಷ.

VISTARANEWS.COM


on

Job Alert
Koo

ಬೆಂಗಳೂರು: ಭಾರತ ಸರ್ಕಾರದ ಜವಳಿ ಸಚಿವಾಲಯ (Ministry of Textiles)ದ ಟೆಕ್ಸ್‌ಟೈಲ್ಸ್‌ ಕಮಿಟಿ (Textiles Committee) ತನ್ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ದೇಶಾದ್ಯಂತ ಒಟ್ಟು 40 ಪ್ರಾಜೆಕ್ಟ್‌ ಅಸಿಸ್ಟಂಟ್‌ (Project Assistant) ಹುದ್ದೆ ಖಾಲಿ ಇದ್ದು, ಪದವೀಧರರು ಅರ್ಜಿ ಸಲ್ಲಿಸಬಹುದು (Textiles Committee Recruitment 2024). ಬೆಂಗಳೂರಿನಲ್ಲಿಯೂ ಹುದ್ದೆ ಖಾಲಿ ಇದ್ದು, ಆಸಕ್ತರು ಆಫ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕು. ಅರ್ಜಿ ಮೇ 31ರೊಳಗೆ ತಲುಪುವಂತಿರಬೇಕು ಎಂದು ಪ್ರಕಟಣೆ ತಿಳಿಸಿದೆ. ಸರ್ಕಾರಿ ಉದ್ಯೋಗದ ಕನಸು ಕಾಣುತ್ತಿರುವವರು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳಬಹುದು (Job Alert).

ಹುದ್ದೆಗಳ ವಿವರ

ಬೆಂಗಳೂರು – 4, ಮುಂಬೈ – 7, ನವಿ ಮುಂಬೈ – 3, ಚೆನ್ನೈ – 3, ಕಾನ್ಪುರ – 1, ಕಣ್ಣೂರು – 1, ಕರೂರು – 1, ಹೈದರಾಬಾದ್‌ – 4, ಗುರುಗ್ರಾಮ – 3, ಜೈಪುರ – 2, ತಿರುಪುರ – 3, ಗುಂಟೂರು – 1, ಕೊಯಂಬತ್ತೂರು – 5, ಲುಧಿಯಾನ – 1, ಕೋಲ್ಕತ್ತಾ – 1 ಹುದ್ದೆಗಳಿವೆ.

ವಿದ್ಯಾರ್ಹತೆ ಮತ್ತು ವಯೋಮಿತಿ

ಬಿಎಸ್‌ಸಿ (ಫಿಸಿಕ್ಸ್‌ ಅಥವಾ ಕೆಮಿಸ್ಟ್ರಿ) ಅಥವಾ ಟೆಕ್ಸ್‌ಟೈಲ್ಸ್‌ ಟೆಕ್ನಾಲಜಿಯಲ್ಲಿ ಬಿ.ಟೆಕ್‌ ಪದವಿ ಪಡೆದವರು ಅರ್ಜಿ ಸಲ್ಲಿಸಲು ಅರ್ಹರು. ಅರ್ಜಿ ಸಲ್ಲಿಸುವವರ ಕನಿಷ್ಠ ವಯಸ್ಸು 21 ವರ್ಷ ಮತ್ತು ಗರಿಷ್ಠ ವಯಸ್ಸು 35 ವರ್ಷ.

ಆಯ್ಕೆ ವಿಧಾನ ಮತ್ತು ಮಾಸಿಕ ವೇತನ

ಲಿಖಿತ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ. ಆಯ್ಕೆಯಾದವರಿಗೆ 26 ಸಾವಿರ ರೂ. ಮಾಸಿಕ ವೇತನ ದೊರೆಯಲಿದೆ. ಆಯ್ಕೆಯಾದವರನ್ನು 3 ವರ್ಷಗಳ ಅವಧಿಗೆ ತಾತ್ಕಾಲಿಕವಾಗಿ ನೇಮಿಸಲಾಗುತ್ತದೆ ಎಂದು ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

ಇದನ್ನು ಗಮನಿಸಿ

  • 2024ರ ಮಾರ್ಚ್‌ 31ಕ್ಕೆ ಹೊಂದಿಕೊಂಡು ಕನಿಷ್ಠ ಮತ್ತು ಗರಿಷ್ಠ ವಯಸ್ಸನ್ನು ನಿರ್ಧರಿಸಲಾಗುತ್ತದೆ.
  • ವಾರಕ್ಕೆ ಒಂದು ದಿನ ರಜೆ ಇರಲಿದ್ದು, ವರ್ಷಕ್ಕೆ 8 ಕ್ಯಾಶುವಲ್‌ ಲೀವ್‌ ನಿಗದಿಪಡಿಸಲಾಗಿದೆ.
  • ಟಿಎ / ಡಿಎ ಪಾವತಿಸಲಾಗುವುದಿಲ್ಲ.
  • ಅಭ್ಯರ್ಥಿಗಳು ಒಂದು ಕಡೆಗೆ ಮಾತ್ರ ಅರ್ಜಿ ಸಲ್ಲಿಸಬೇಕು.

Textiles Committee Recruitment 2024 ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್‌ ಮಾಡಿ.

Textiles Committee Recruitment 2024 ಅಪ್ಲಿಕೇಷನ್‌ ಫಾರಂಗಾಗಿ ಇಲ್ಲಿ ಕ್ಲಿಕ್‌ ಮಾಡಿ.

ಅರ್ಜಿ ಸಲ್ಲಿಸುವ ವಿಧಾನ

  • ಅಪ್ಲಿಕೇಷನ್‌ ಫಾರಂ ಅನ್ನು ಡೌನ್‌ಲೋಡ್‌ ಮಾಡಿ ಪ್ರಿಂಟ್‌ ತೆಗೆದು ಭರ್ತಿ ಮಾಡಿ.
  • ಫೋಟೊ ಲಗತ್ತಿಸಿ.
  • ಸೆಲ್ಫ್‌ ಎಟೆಸ್ಟ್‌ ಮಾಡಿದ ಡಾಕ್ಯುಮೆಂಟ್‌ಗಳನ್ನು ಲಗತ್ತಿಸಿ ಈ ಕೆಳಗಿನ ವಿಳಾಸಕ್ಕೆ ಕಳುಹಿಸಿ:

Textiles Committee, FKCCI,
WTC Building, 1st Floor, Kempe Gowda Road,
Bangaluru – 560 009, Karnataka.

ಹೆಚ್ಚಿನ ವಿವರಗಳಿಗೆ ಫೋನ್‌ ನಂಬರ್‌: (080) 2226 1401, ಇಮೇಲ್‌: blr.tc@nic.inಗೆ ಸಂಪರ್ಕಿಸಿ. ಗಮನಿಸಿ ನಿಮ್ಮ ಅಪ್ಲಿಕೇಷನ್‌ ಫಾರಂ ಮೇ 31ರೊಳಗೆ ತಲುಪುವಂತಿರಬೇಕು.

ಇದನ್ನೂ ಓದಿ: Job Alert: ಇಂಡಿಯಾ ಪೋಸ್ಟ್‌ ಪೇಮೆಂಟ್‌ ಬ್ಯಾಂಕ್‌ನಲ್ಲಿದೆ ಉದ್ಯೋಗಾವಕಾಶ; ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಿ

Continue Reading

ಉದ್ಯೋಗ

Job News: ಗುಡ್‌ನ್ಯೂಸ್‌; ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾದಿಂದ ಶೀಘ್ರ 12,000 ಉದ್ಯೋಗಿಗಳ ನೇಮಕ

Job News: ಬ್ಯಾಂಕ್‌ ಉದ್ಯೋಗ ಹೊಂದಬೇಕು ಎಂದು ಕನಸು ಕಾಣುತ್ತಿರುವವರಿಗೆ ಇಲ್ಲಿದೆ ಗುಡ್‌ನ್ಯೂಸ್‌. ದೇಶದ ಅತಿ ದೊಡ್ಡ ಬ್ಯಾಂಕ್‌ ಎನಿಸಿಕೊಂಡಿರುವ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ ಬರೋಬ್ಬರಿ 12,000 ಉದ್ಯೋಗಿಗಳನ್ನು ನೇಮಿಸಿಕೊಳ್ಳಲು ಮುಂದಾಗಿದೆ. ಮಾಹಿತಿ ತಂತ್ರಜ್ಞಾನ ಮತ್ತು ಇತರ ವಿಭಾಗಗಳಲ್ಲಿ ಈ ನೇಮಕಾತಿ ನಡೆಲಿದೆ ಎಂದು ಮೂಲಗಳು ತಿಳಿಸಿವೆ. ಈ ಬಗ್ಗೆ ಅಧಿಸೂಚನೆ ಶೀಘ್ರದಲ್ಲಿಯೇ ಹೊರ ಬೀಳಲಿದೆ.

VISTARANEWS.COM


on

Job News
Koo

ನವದೆಹಲಿ: ದೇಶದ ಅತಿ ದೊಡ್ಡ ಬ್ಯಾಂಕ್‌ ಎನಿಸಿಕೊಂಡಿರುವ ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾ (State Bank of India) ಬರೋಬ್ಬರಿ 12,000 ಉದ್ಯೋಗಿಗಳನ್ನು ನೇಮಿಸಿಕೊಳ್ಳಲು ಮುಂದಾಗಿದೆ. ಮಾಹಿತಿ ತಂತ್ರಜ್ಞಾನ (Information Technology) ಮತ್ತು ಇತರ ವಿಭಾಗಗಳಲ್ಲಿ ಈ ನೇಮಕಾತಿ ನಡೆಲಿದೆ ಎಂದು ಅಧ್ಯಕ್ಷ ದಿನೇಶ್‌ ಖರಾ (Dinesh Khara) ಮಾಹಿತಿ ನೀಡಿದ್ದಾರೆ (Job News).

”ಸುಮಾರು 11,000ರಿಂದ 12,000 ಉದ್ಯೋಗಿಗಳ ನೇಮಕಾತಿಯ ಪ್ರಕ್ರಿಯೆ ನಡೆಯುತ್ತಿದೆ. ಈ ನೇಮಕಾತಿ ಬ್ಯಾಂಕ್‌ನ ತಾಂತ್ರಿಕ ಸಾಮರ್ಥ್ಯವನ್ನು ಹೆಚ್ಚಿಸುವ ಗುರಿ ಹೊಂದಿದೆ. ಜತೆಗೆ ಸೇವೆಯ ಗುಣಮಟ್ಟವನ್ನು ವೃದ್ಧಿಸಲು ಈ ಕ್ರಮ ಕೈಗೊಳ್ಳಲಾಗುತ್ತಿದೆʼʼ ಎಂದು ಅವರು ವಿವರಿಸಿದ್ದಾರೆ. ʼʼನೇಮಕಗೊಂಡವರಿಗೆ ಆರಂಭದಲ್ಲಿ ಬ್ಯಾಂಕಿಂಗ್‌ ವ್ಯವಸ್ಥೆಯ ಬಗ್ಗೆ ಸೂಕ್ತ ಮಾಹಿತಿ ನೀಡಿ ಬಳಿಕ ಅವರನ್ನು ಐಟಿ ವಿಭಾಗಕ್ಕೆ ಶಿಫಾರಸ್ಸು ಮಡಲಾಗುವುದುʼʼ ಎಂದು ಅವರು ಹೇಳಿದ್ದಾರೆ. ಈ ಮೂಲಕ ಬ್ಯಾಂಕ್‌ ಉದ್ಯೋಗ ಹೊಂದಬೇಕು ಎನ್ನುವವರ ಕನಸು ನನಸಾಗಲಿದೆ.

ಉದ್ಯೋಗಿಗಳ ಸಂಖ್ಯೆಯಲ್ಲಿ ಕುಸಿತ

ಮಾರ್ಚ್‌ ಅಂತ್ಯಕ್ಕೆ ಎಸ್‌ಬಿಐ ಉದ್ಯೋಗಿಗಳ ಸಂಖ್ಯೆ 2,32,296ಕ್ಕೆ ಕುಸಿದಿದೆ. ಕಳೆದ ವರ್ಷ ಇದೇ ವೇಳೆಗೆ 2,35,858 ಉದ್ಯೋಗಿಗಳಿ ಕಾರ್ಯ ನಿರ್ವಹಿಸುತ್ತಿದ್ದರು. ಇನ್ನು 2024ರ ಮಾರ್ಚ್‌ 31ಕ್ಕೆ ಕೊನೆಗೊಂಡ ತ್ರೈ ಮಾಸಿಕದಲ್ಲಿ ಎಸ್‌ಬಿಐಯ ನಿವ್ವಳ ಲಾಭ ಶೇ. 24ರಷ್ಟು ಏರಿಕೆ ದಾಖಲಿಸಿ 20,698 ಕೋಟಿ ರೂ.ಗೆ ತಲುಪಿದೆ. ಕಳೆದ ವರ್ಷ ಈ ಅವಧಿಯಲ್ಲಿ ಎಸ್‌ಬಿಐ 16,695 ಕೋಟಿ ರೂ. ನಿವ್ವಳ ಲಾಭ ಗಳಿಸಿತ್ತು. ಬಡ್ಡಿಯ ಆದಾಯ ಶೇ. 19ರಷ್ಟು ವೃದ್ಧಿಸಿ 92,951 ಕೋಟಿ ರೂ.ಯಿಂದ 1.11 ಲಕ್ಷ ಕೋಟಿ ರೂ.ಗೆ ತಲುಪಿದೆ. ದೇಶದಲ್ಲಿ ಉದ್ಯಮ ಆಧಾರಿತ ಚಟುವಟಿಕೆ ಹೆಚ್ಚುತ್ತಿರುವುದೇ ಇದಕ್ಕೆ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ.

ಎಸ್‌ಬಿಐಯ ಒಟ್ಟು ಆದಾಯವೂ ಏರುಗತಿಯಲ್ಲಿದೆ. 1.06 ಲಕ್ಷ ಕೋಟಿ ರೂ.ಯಿಂದ 1.28 ಲಕ್ಷ ಕೋಟಿ ರೂ.ಗೆ ಜಿಗಿತ ಕಂಡಿದೆ. ಜತೆಗೆ ನಿರ್ವಹಣಾ ವೆಚ್ಚವೂ ಹಿಂದಿನ ವರ್ಷದ 29,732 ಕೋಟಿ ರೂ.ಗಳಿಂದ 30,276 ಕೋಟಿ ರೂ.ಗೆ ಏರಿಕೆ ಕಂಡಿದೆ ಎಂದು ಅಂಕಿ-ಅಂಶಗಳು ತಿಳಿಸಿವೆ.

ಇದನ್ನೂ ಓದಿ: Ujjivan Small Finance Bank : ಉಜ್ಜೀವನ್ ಸ್ಮಾಲ್ ಫೈನಾನ್ಸ್ ಸಿಇಒ ಆಗಿ ಸಂಜೀವ್ ನೌಟಿಯಾಲ್ ನೇಮಕ

ನಿರೀಕ್ಷೆ ಮೀರಿದ ಲಾಭಾಂಶ

ಆರ್ಥಿಕ ತಜ್ಞರು ಈ ತ್ರೈಮಾಸಿಕದಲ್ಲಿ ಎಸ್‌ಬಿಐ 13,400 ಕೋಟಿ ರೂ. ಲಾಭ ದಾಖಲಿಸಬಹುದು ಎಂದು ನಿರೀಕ್ಷಿಸಿದ್ದರು. ಆದರೆ ಫಲಿತಾಂಶ ಈ ಎಲ್ಲ ನಿರೀಕ್ಷೆಗಳನ್ನೂ ಮೀರಿದ್ದು, ಬರೋಬ್ಬರಿ 20,698 ಕೋಟಿ ರೂ. ನಿವ್ವಳ ಲಾಭ ಘೋಷಿಸಿದೆ. ಈ ಹಿನ್ನೆಲೆಯಲ್ಲಿ ಎಸ್‌ಬಿಐ ತನ್ನ ಪ್ರತಿ ಈಕ್ವಿಟಿ ಷೇರಿಗೆ 13.70 ರೂ. ಲಾಭಾಂಶ ಘೋಷಿಸಿದೆ. ತ್ರೈ ಮಾಸಿಕ ಫಲಿತಾಂಶ ಹೊರಬೀಳುತ್ತಿದ್ದಂತೆಯೇ ಎಸ್‌ಬಿಐ ಷೇರುಗಳಲ್ಲಿ ಜಿಗಿತ ಕಂಡು ಬಂದಿದೆ. ಮೇ 9ರಂದು ಎಸ್‌ಬಿಐ ಷೇರುಗಳು ಸುಮಾರು ಶೇ. 3ರಷ್ಟು ಹೆಚ್ಚಾಗಿ 834.40 ರೂ.ನಲ್ಲಿ ವಹಿವಾಟು ನಡೆಸುವುದು ಕಂಡುಬಂತು. ಎಸ್‌ಬಿಐನ ಒಟ್ಟು ಅನುತ್ಪಾದಕ ಆಸ್ತಿ (ಜಿಎನ್‌ಪಿಎ) ಪ್ರಮಾಣ ಶೇ.2.24ಕ್ಕೆ ಇಳಿಕೆಯಾಗಿದೆ. ಇದು ಕಳೆದ ವರ್ಷ ಶೇ . 2.78ರಷ್ಟು ಇತ್ತು.

Continue Reading

ಉದ್ಯೋಗ

Job Alert: 506 ಹುದ್ದೆಗಳ ಭರ್ತಿಗೆ ಯುಪಿಎಸ್‌ಸಿಯಿಂದ ಅರ್ಜಿ ಆಹ್ವಾನ; ಮೇ 14ರೊಳಗೆ ಅಪ್ಲೈ ಮಾಡಿ

Job Alert: ಸರ್ಕಾರಿ ಉದ್ಯೋಗ ಹೊಂದಬೇಕು ಎಂದು ಕನಸು ಕಾಣುವವರಿಗೆ ಯೂನಿಯನ್‌ ಪಬ್ಲಿಕ್‌ ಸರ್ವಿಸ್‌ ಕಮಿಷನ್‌ ಗುಡ್‌ನ್ಯೂಸ್‌ ನೀಡಿದೆ. ಕೇಂದ್ರ ಸಶಸ್ತ್ರ ಪೊಲೀಸ್ ಪಡೆಯ 506 ಅಸಿಸ್ಟಂಟ್‌ ಕಮಾಂಡೆಂಟ್‌ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಕೆಗೆ ಕೊನೆಯ ದಿನ ಮೇ 14. ಪದವಿ ಪಡೆದ ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳು ಅರ್ಜಿ ಸಲ್ಲಿಸಬಹುದು.

VISTARANEWS.COM


on

Job Alert
Koo

ನವದೆಹಲಿ: ಯೂನಿಯನ್‌ ಪಬ್ಲಿಕ್‌ ಸರ್ವಿಸ್‌ ಕಮಿಷನ್‌ (UPSC) ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಕೇಂದ್ರ ಸಶಸ್ತ್ರ ಪೊಲೀಸ್ ಪಡೆ (Central Armed Police Forces)ಗಳಲ್ಲಿನ ಅಸಿಸ್ಟಂಟ್‌ ಕಮಾಂಡೆಂಟ್‌ಗಳು (ಎ ಹುದ್ದೆಗಳು) ಹುದ್ದೆ ಇದಾಗಿದೆ. ಬಾರ್ಡರ್‌ ಸೆಕ್ಯುರಿಟಿ ಫೋರ್ಸ್‌ (BSF), ಸೆಂಟ್ರಲ್‌ ರಿಸರ್ವ್‌ ಪೊಲೀಸ್‌ ಫೋರ್ಸ್‌ (CRPF), ಸೆಂಟ್ರಲ್‌ ಇಂಡಸ್ಟ್ರೀಯಲ್‌ ಸೆಕ್ಯುರಿಟಿ ಫೋರ್ಸ್‌ (CISF), ಇಂಡೋ-ಟಿಬೆಟಿಯನ್ ಬಾರ್ಡರ್‌ ಪೋಲೀಸ್‌ (ITBP) ಮತ್ತು ಸಶಸ್ತ್ರ ಸೀಮಾ ಬಲ್‌ (SSB)ಗಳಲ್ಲಿ 506 ಹುದ್ದೆಗಳಿವೆ (UPSC CAPF Recruitment 2024). ಆಸಕ್ತರು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕಿದ್ದು ಕೊನೆಯ ದಿನ ಮೇ 14 (Job Alert).

ಹುದ್ದೆಗಳ ವಿವರ

ಗಡಿ ಭದ್ರತಾ ಪಡೆ (ಬಿಎಸ್ಎಫ್)-186, ಕೇಂದ್ರ ಮೀಸಲು ಪೊಲೀಸ್ ಪಡೆ (ಸಿಆರ್‌ಪಿಎಫ್‌)- 120, ಕೇಂದ್ರ ಕೈಗಾರಿಕಾ ಭದ್ರತಾ ಪಡೆ (ಸಿಐಎಸ್ಎಫ್)- 100, ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸ್ (ಐಟಿಬಿಪಿ)- 58, ಸಶಸ್ತ್ರ ಸೀಮಾ ಬಲ್ (ಎಸ್ಎಸ್‌ಬಿ)- 42 ಹುದ್ದೆಗಳಿವೆ. ಪುರುಷರು ಮತ್ತು ಮಹಿಳೆಯರು ಅರ್ಜಿ ಸಲ್ಲಿಸಬಹುದು.

ವಿದ್ಯಾರ್ಹತೆ ಮತ್ತು ವಯೋಮಿತಿ

ಅಭ್ಯರ್ಥಿಗಳು ಅಂಗೀಕೃತ ವಿಶ್ವ ವಿದ್ಯಾನಿಲಯದಿಂದ ಪದವಿ ಪಡೆದಿರಬೇಕು. ಅರ್ಜಿ ಸಲ್ಲಿಕೆಯ ಕನಿಷ್ಠ ವಯಸ್ಸು 20 ವರ್ಷ ಮತ್ತು ಗರಿಷ್ಠ ವಯಸ್ಸು 25 ವರ್ಷ. ಮೀಸಲಾತಿಗೆ ಅನುಗುಣವಾಗಿ ವಯೋಮಿತಿಯಲ್ಲಿ ಸಡಿಲಿಕೆ ಲಭ್ಯ. ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಎಸ್‌ಸಿ / ಎಸ್‌ಟಿ, ಕೇಂದ್ರ ಸರ್ಕಾರಿ ನೌಕರ ಅಭ್ಯರ್ಥಿಗಳಿಗೆ 5 ವರ್ಷಗಳ ಸಡಿಲಿಕೆ ಇದೆ.

ಅರ್ಜಿ ಶುಲ್ಕ ಮತ್ತು ಆಯ್ಕೆ ವಿಧಾನ

ಮಹಿಳಾ / ಎಸ್‌ಸಿ / ಎಸ್‌ಟಿ ಅಭ್ಯರ್ಥಿಗಳಿಗೆ ಅರ್ಜಿ ಶುಲ್ಕವಿಲ್ಲ. ಉಳಿದ ಅಭ್ಯರ್ಥಿಗಳು ಅರ್ಜಿ ಶುಲ್ಕವಾಗಿ 200 ರೂ. ಪಾವತಿಸಬೇಕು. ಲಿಖಿತ ಪರೀಕ್ಷೆ, ದೈಹಿಕ ದಕ್ಷತೆ ಪರೀಕ್ಷೆ (Physical Efficiency Test) ಅಥವಾ ದೈಹಿಕ ಮಾಪನ ಪರೀಕ್ಷೆ (Physical Measurement Test), ಸಂದರ್ಶನದ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ. ಲಿಖಿತ ಪರೀಕ್ಷೆ ಆಗಸ್ಟ್‌ 4ರಂದು ನಡೆಯಲಿದೆ. ಕರ್ನಾಟಕದ ಅಭ್ಯರ್ಥಿಗಳು ಬೆಂಗಳೂರು ಪರೀಕ್ಷಾ ಕೇಂದ್ರವನ್ನು ಆಯ್ಕೆ ಮಾಡಿಕೊಳ್ಳಬಹುದು.

UPSC CAPF Recruitment 2024 ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್‌ ಮಾಡಿ.

ಅರ್ಜಿ ಸಲ್ಲಿಸುವ ವಿಧಾನ

  • ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್‌ ಮಾಡಿ.
  • Registration ಆಯ್ಕೆ ಮೇಲೆ ಕ್ಲಿಕ್‌ ಮಾಡಿ ಹೆಸರು ನೋಂದಾಯಿಸಿ. ಇದಕ್ಕಾಗಿ ನಿಮ್ಮ ಮೊಬೈಲ್‌ ನಂಬರ್‌, ಇ ಮೇಲ್‌ ಐಡಿ ನಮೂದಿಸಿ.
  • ಹೆಸರು ನೋಂದಾಯಿಸಿಕೊಂಡ ಬಳಿಕ ರಿಜಿಸ್ಟ್ರೇಷನ್‌ ನಂಬರ್‌ ಮತ್ತು ಪಾಸ್‌ವರ್ಡ್‌ ಬಳಿಸಿ ಲಾಗಿನ್‌ ಆಗಿ.
  • ವಿವರಗಳನ್ನು ನೀಡಿ ಅಪ್ಲಿಕೇಷನ್‌ ಫಾರಂ ಭರ್ತಿ ಮಾಡಿ.
  • ಅಗತ್ಯ ದಾಖಲೆಗಳು, ಸಹಿ ಮತ್ತು ಫೋಟೊವನ್ನು ನಿಗದಿತ ಅಳತೆಯಲ್ಲಿ ಅಪ್‌ಲೋಡ್‌ ಮಾಡಿ.
  • ಆನ್‌ಲೈನ್‌ ಮೂಲಕ ಅರ್ಜಿ ಶುಲ್ಕವನ್ನು ಪಾವತಿಸಿ (ಅಗತ್ಯವಿದ್ದರು ಮಾತ್ರ).
  • ವಿವರಗಳನ್ನು ಮತ್ತೊಮ್ಮೆ ಪರಿಶೀಲಿಸಿ ಎಲ್ಲವೂ ಸರಿಯಾಗಿದ್ದರೆ ಅಪ್ಲಿಕೇಷನ್‌ ಫಾರಂ ಸಲ್ಲಿಸಿ.
  • ಭವಿಷ್ಯದ ಅಗತ್ಯಗಳಿಗಾಗಿ ಅಪ್ಲಿಕೇಷನ್‌ ಫಾರಂನ ಪ್ರಿಂಟ್‌ ಔಟ್‌ ತೆಗೆದಿಡಿ.

ಇದನ್ನೂ ಓದಿ: Job Alert: ಕೋರ್ಟ್‌ನಲ್ಲಿದೆ 41 ಹುದ್ದೆ; ಎಸ್ಸೆಸ್ಸೆಲ್ಸಿ ಪಾಸಾದವರು ಅರ್ಜಿ ಸಲ್ಲಿಸಿ

Continue Reading

ಉದ್ಯೋಗ

Job Alert: ಇಂಡಿಯಾ ಪೋಸ್ಟ್‌ ಪೇಮೆಂಟ್‌ ಬ್ಯಾಂಕ್‌ನಲ್ಲಿದೆ ಉದ್ಯೋಗಾವಕಾಶ; ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಿ

Job Alert: ಉದ್ಯೋಗಕ್ಕಾಗಿ ಹುಡುಕಾಡುತ್ತಿದ್ದರೆ ಇಲ್ಲಿದೆ ಗೋಲ್ಡನ್‌ ಚಾನ್ಸ್‌. ಇಂಡಿಯಾ ಪೋಸ್ಟ್‌ ಪೇಮೆಂಟ್‌ ಬ್ಯಾಂಕ್‌ ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ. ಒಟ್ಟು 54 ಸ್ಥಾನಗಳನ್ನು ಭರ್ತಿ ಮಾಡಲಾಗುತ್ತಿದ್ದು, ಆಸಕ್ತರು ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕಿದೆ. ಕೊನೆಯ ದಿನ ಮೇ 24. ಬಿಸಿಎ, ಬಿ.ಎಸ್‌ಸಿ, ಬಿ.ಇ. ಅಥವಾ ಬಿ.ಟೆಕ್‌, ಎಂಸಿಎ ಪದವಿ ಪಡೆದವರು ಈ ಸುವರ್ಣಾವಕಾಶ ಬಳಸಿಕೊಳ್ಳಿ.

VISTARANEWS.COM


on

Job Alert
Koo

ಬೆಂಗಳೂರು: ಉದ್ಯೋಗಕ್ಕಾಗಿ ಹುಡುಕಾಡುತ್ತಿದ್ದರೆ ಇಲ್ಲಿದೆ ಗೋಲ್ಡನ್‌ ಚಾನ್ಸ್‌. ಇಂಡಿಯಾ ಪೋಸ್ಟ್‌ ಪೇಮೆಂಟ್‌ ಬ್ಯಾಂಕ್‌ (India Post Payments Bank) ಖಾಲಿ ಇರುವ ವಿವಿಧ ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನಿಸಿದೆ (IPPB Recruitment 2024). ಇನ್ಫರ್ಮೇಷನ್‌ ಟೆಕ್ನಾಲಜಿ ಎಕ್ಸಿಕ್ಯೂಟಿವ್‌ ಹುದ್ದೆ ಇದಾಗಿದ್ದು, ಒಟ್ಟು 54 ಸ್ಥಾನಗಳನ್ನು ಭರ್ತಿ ಮಾಡಲು ಅಧಿಸೂಚನೆ ಹೊರಡಿಸಲಾಗಿದೆ. ಉದ್ಯೋಗದ ಸ್ಥಳ: ಚೆನ್ನೈ, ಮುಂಬೈ, ದೆಹಲಿ. ಬಿಸಿಎ, ಬಿಎಸ್‌ಸಿ ಓದಿದವರು ಅರ್ಜಿ ಸಲ್ಲಿಸಬಹುದು. ಆನ್‌ಲೈನ್‌ ಮೂಲಕ ಅರ್ಜಿ ಸಲ್ಲಿಸಬೇಕಿದ್ದು, ಕೊನೆಯ ದಿನ ಮೇ 24 (Job Alert)

ಹುದ್ದೆಗಳ ವಿವರ ಮತ್ತು ವಿದ್ಯಾರ್ಹತೆ

ಎಕ್ಸಿಕ್ಯೂಟಿವ್‌ (ಅಸೋಸಿಯೇಟ್‌ ಕನ್ಸಲ್‍ಟೆಂಟ್‍) (Executive (Associate Consultant)- 28, ಎಕ್ಸಿಕ್ಯೂಟಿವ್‌ (ಕನ್ಸಲ್‍ಟೆಂಟ್‍) (Executive (Consultant) – 21 ಮತ್ತು ಎಕ್ಸಿಕ್ಯೂಟಿವ್‌ (ಸೀನಿಯರ್ ಕನ್ಸಲ್‍ಟೆಂಟ್‍)‌ (Executive (Senior Consultant) – 5 ಹುದ್ದೆಗಳಿವೆ. IPPB official notification ಪ್ರಕಾರ ಅಭ್ಯರ್ಥಿಗಳು ಅಂಗೀಕೃತ ವಿಶ್ವವಿದ್ಯಾನಿಲಯದಿಂದ ಬಿಸಿಎ, ಬಿ.ಎಸ್‌ಸಿ, ಬಿ.ಇ. ಅಥವಾ ಬಿ.ಟೆಕ್‌, ಎಂಸಿಎ ಪದವಿ ಪಡೆದಿರಬೇಕು. ಜತೆಗೆ 1ರಿಂದ 6 ವರ್ಷದವರೆಗೆ ಅನುಭವ ಹೊಂದಿರುವುದು ಕಡ್ಡಾಯ.

ವಯೋಮಿತಿ ಮತ್ತು ಅರ್ಜಿ ಶುಲ್ಕ

ಅಭ್ಯರ್ಥಿಗಳ ಕನಿಷ್ಠ ವಯಸ್ಸು 22 ವರ್ಷ ಮತ್ತು ಗರಿಷ್ಠ ವಯಸ್ಸು 45 ವರ್ಷ. ಮೀಸಲಾತಿಗೆ ಅನುಗುಣವಾಗಿ ವಯೋಮಿತಿಯಲ್ಲಿ ಸಡಿಲಿಕೆ ಲಭ್ಯ. ಒಬಿಸಿ ಅಭ್ಯರ್ಥಿಗಳಿಗೆ 3 ವರ್ಷ, ಎಸ್‌ಸಿ / ಎಸ್‌ಟಿ ಅಭ್ಯರ್ಥಿಗಳಿಗೆ 5 ವರ್ಷ ಮತ್ತು ಪಿಡಬ್ಲ್ಯುಡಿ ಅಭ್ಯರ್ಥಿಗಳಿಗೆ 10 ವರ್ಷಗಳ ಸಡಿಲಿಕೆ ಇದೆ. ಅರ್ಜಿ ಶುಲ್ಕವಾಗಿ ಎಸ್‌ಸಿ / ಎಸ್‌ಟಿ / ಪಿಡಬ್ಲ್ಯುಡಿ ಅಭ್ಯರ್ಥಿಗಳು 150 ರೂ. ಮತ್ತು ಉಳಿದೆಲ್ಲ ವರ್ಗಗಳ ಅಭ್ಯರ್ಥಿಗಳು 750 ರೂ. ಪಾವತಿಸಬೇಕು. ಇದಕ್ಕಾಗಿ ಆನ್‌ಲೈನ್‌ ವಿಧಾನ ಬಳಸಬೇಕು ಎಂದು ಪ್ರಕಟಣೆ ತಿಳಿಸಿದೆ.

ಆಯ್ಕೆ ವಿಧಾನ ಮತ್ತು ಮಾಸಿಕ ವೇತನ

ಆನ್‌ಲೈನ್‌ ಪರೀಕ್ಷೆ, ಗ್ರೂಪ್‌ ಡಿಸ್ಕಷನ್‌ ಮತ್ತು ಸಂದರ್ಶನದ ಮೂಲಕ ಅಭ್ಯರ್ಥಿಗಳ ಆಯ್ಕೆ ನಡೆಯಲಿದೆ. ಗುತ್ತಿಗೆ ಆಧಾರದಲ್ಲಿ ಈ ನೇಮಕಾತಿ ನಡೆಯಲಿದ್ದು, ಆಯ್ಕೆಯಾದವರಿಗೆ 10,00,000 ರೂ.-25,00,000 ರೂ. ವಾರ್ಷಿಕ ವೇತನ ದೊರೆಯಲಿದೆ.

IPPB Recruitment 2024 ಅಧಿಸೂಚನೆಗಾಗಿ ಇಲ್ಲಿ ಕ್ಲಿಕ್‌ ಮಾಡಿ.

ಅರ್ಜಿ ಸಲ್ಲಿಕೆ ವಿಧಾನ

  • ಅರ್ಜಿ ಸಲ್ಲಿಸಲು ಇಲ್ಲಿ ಕ್ಲಿಕ್‌ ಮಾಡಿ.
  • ಮೊದಲು ನಿಮ್ಮ ಹೆಸರು ನೋಂದಾಯಿಸಿ.
  • ಪಾಸ್‌ವರ್ಡ್‌ ಬಳಸಿ ಲಾಗಿನ್‌ ಆಗಿ.
  • ಈಗ ತೆರೆದುಕೊಳ್ಳುವ IPPB Online Application Form ಅನ್ನು ಸರಿಯಾದ ಮಾಹಿತಿ ನೀಡಿ ಭರ್ತಿ ಮಾಡಿ.
  • ಅಗತ್ಯವಾದ ಡಾಕ್ಯುಮೆಂಟ್‌, ಫೋಟೊ, ಸಹಿ ಇತ್ಯಾದಿಯನ್ನು ಸರಿಯಾದ ಗಾತ್ರದಲ್ಲಿ ಅಪ್‌ಲೋಡ್‌ ಮಾಡಿ.
  • ಆನ್‌ಲೈನ್‌ ಮೂಲಕ ಅರ್ಜಿ ಶುಲ್ಕ ಪಾವತಿಸಿ.
  • ನೀಡಿದ ಮಾಹಿತಿಯನ್ನು ಮತ್ತೊಮ್ಮೆ ಪರಿಶೀಲಿಸಿ ಎಲ್ಲವೂ ಸರಿಯಾಗಿದ್ದರೆ Submit ಬಟನ್‌ ಕ್ಲಿಕ್‌ ಮಾಡಿ.
  • ಅಪ್ಲಿಕೇಷನ್‌ ನಂಬರ್‌ ಅಥವಾ ರಿಕ್ವೆಸ್ಟ್‌ ನಂಬರ್‌ ನೋಟ್‌ ಮಾಡಿಟ್ಟುಕೊಳ್ಳಿ.

ಹೆಚ್ಚಿನ ವಿವರಗಳಿಗೆ ಇಲ್ಲಿ ಕ್ಲಿಕ್‌ ಮಾಡಿ.

ಇದನ್ನೂ ಓದಿ: Job Alert: ಕೋರ್ಟ್‌ನಲ್ಲಿದೆ 41 ಹುದ್ದೆ; ಎಸ್ಸೆಸ್ಸೆಲ್ಸಿ ಪಾಸಾದವರು ಅರ್ಜಿ ಸಲ್ಲಿಸಿ

Continue Reading
Advertisement
Hoarding
ಸಂಪಾದಕೀಯ1 min ago

ವಿಸ್ತಾರ ಸಂಪಾದಕೀಯ: ಹೋರ್ಡಿಂಗ್ ಕುಸಿತ ಬೆಂಗಳೂರಿಗರಿಗೂ ಎಚ್ಚರಿಕೆಯ ಗಂಟೆ

Sushil Kumar Modi
ಪ್ರಮುಖ ಸುದ್ದಿ1 min ago

Sushil Kumar Modi : ಬಿಹಾರದ ಮಾಜಿ ಡಿಸಿಎಂ ಸುಶೀಲ್ ಕುಮಾರ್ ಮೋದಿ ನಿಧನ

Tejasvi Surya
ದೇಶ12 mins ago

Tejasvi Surya: ಈ ದಲಿತ ನಾಯಕನ ಜತೆ ಚರ್ಚೆಗೆ ಬನ್ನಿ ರಾಹುಲ್‌ ಗಾಂಧಿ; ತೇಜಸ್ವಿ ಸೂರ್ಯ ಪಂಥಾಹ್ವಾನ!

IPL 2024
ಪ್ರಮುಖ ಸುದ್ದಿ19 mins ago

IPL 2024 : ಮಳೆಯಿಂದಾಗಿ ಪಂದ್ಯ ರದ್ದು, ಕೆಕೆಆರ್​ಗೆ ಮೊದಲೆರಡಲ್ಲೊಂದು ಸ್ಥಾನ ಫಿಕ್ಸ್​

Vidyarthi Vidyarthiniyare Movie
ಕರ್ನಾಟಕ24 mins ago

Vidyarthi Vidyarthiniyare Movie: ವಿದ್ಯಾರ್ಥಿ ವಿದ್ಯಾರ್ಥಿನಿಯರೇ ಚಿತ್ರದ ಟ್ರೈಲರ್ ಔಟ್; ಧುಮ್ಮಿಕ್ಕಿದ ಹರೆಯದ ತೊರೆ!

Road Accident Head on collision between bikes One person died on the spot
ಉತ್ತರ ಕನ್ನಡ26 mins ago

Road Accident: ಬೈಕ್‌ಗಳ ನಡುವೆ ಡಿಕ್ಕಿ; ಒಬ್ಬ ಸ್ಥಳದಲ್ಲೇ ಸಾವು, ಇಬ್ಬರಿಗೆ ಗಂಭೀರ ಗಾಯ

Lok Sabha Election
ದೇಶ2 hours ago

Lok Sabha Election: 28 ವರ್ಷಗಳಲ್ಲೇ ಶ್ರೀನಗರದಲ್ಲಿ ಅಧಿಕ ಮತದಾನ; 370ನೇ ವಿಧಿ ರದ್ದು ಎಫೆಕ್ಟ್?

Award Ceremony
ಬೆಂಗಳೂರು2 hours ago

Award Ceremony: ಬೆಂಗಳೂರಿನಲ್ಲಿ ಮೇ 19ರಂದು ಕಾದಂಬರಿ ಸಾರ್ವಭೌಮ ಅ.ನ.ಕೃ. ಪ್ರಶಸ್ತಿ ಪ್ರದಾನ

Muhammad Waseem
ಕ್ರೀಡೆ2 hours ago

Muhammad Waseem : ಇತಿಹಾಸ ಸೃಷ್ಟಿಸಿದ ಯುಎಇ ಕ್ರಿಕೆಟ್​ ತಂಡದ ನಾಯಕ ವಸೀಮ್​

Narendra Modi
ದೇಶ2 hours ago

Narendra Modi: ವಾರಾಣಸಿಯಲ್ಲಿ ಹೊಸ ಅಲೆ ಸೃಷ್ಟಿಸಿದ ಮೋದಿ, ಶಕ್ತಿ ಪ್ರದರ್ಶನ; ರೋಡ್‌ ಶೋ Photos ಇಲ್ಲಿವೆ

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

HD Revanna Bail Revanna will not leave the country condition imposed by the court
ಕ್ರೈಂ5 hours ago

HD Revanna Bail: ರೇವಣ್ಣ ದೇಶ ಬಿಡಂಗಿಲ್ಲ, ಕೆ.ಆರ್‌. ನಗರಕ್ಕೆ ಎಂಟ್ರಿ ಕೊಡಂಗಿಲ್ಲ! ಕೋರ್ಟ್‌ ವಿಧಿಸಿದ ಷರತ್ತು ಏನು?

Prajwal Revanna case HD Revanna finally gets bail What was the argument like
ಕ್ರೈಂ5 hours ago

HD Revanna Bail: ಎಚ್‌.ಡಿ ರೇವಣ್ಣಗೆ ಕೊನೆಗೂ ಜಾಮೀನು; ಎಸ್‌ಐಟಿಗೆ ಮುಖಭಂಗ!

Prajwal Revanna Case Revanna bail plea to be heard Judge reprimands SIT cops for their behaviour
ಕ್ರೈಂ5 hours ago

Prajwal Revanna Case: ರೇವಣ್ಣ ಜಾಮೀನು ಅರ್ಜಿ ವಿಚಾರಣೆ; ಎಸ್‌ಐಟಿ ಪೊಲೀಸರ ವರ್ತನೆಗೆ ಜಡ್ಜ್‌ ಗರಂ!

Karnataka Weather Forecast
ಮಳೆ6 hours ago

Karnataka Weather : ನಾಳೆ ಮುಕ್ಕಾಲು ಕರ್ನಾಟಕದಲ್ಲಿ ಬಿರುಗಾಳಿ ಜತೆಗೆ ವಿಪರೀತ ಮಳೆ

Modi Roadshow Live
ದೇಶ6 hours ago

Modi Roadshow Live: ವಾರಾಣಸಿಯಲ್ಲಿ ಮೋದಿ ಭರ್ಜರಿ ರೋಡ್‌ ಶೋ; ಲೈವ್‌ ಇಲ್ಲಿ ವೀಕ್ಷಿಸಿ

Karnataka Rain
ಮಳೆ12 hours ago

Karnataka Rain : ಕುರಿಗಾಹಿಗಳ ಪ್ರಾಣ ಕಸಿದ ಸಿಡಿಲು; 20ಕ್ಕೂ ಹೆಚ್ಚು ಕುರಿಗಳು ಸಾವು

karnataka weather forecast karnataka rains
ಮಳೆ17 hours ago

Karnataka Weather : ವಾಯುಭಾರ ಕುಸಿತ; ಕರಾವಳಿ, ಮಲೆನಾಡು ಸೇರಿ ಹಲವೆಡೆ ಭಾರಿ ಮಳೆ ಎಚ್ಚರಿಕೆ

Dina Bhavishya
ಭವಿಷ್ಯ19 hours ago

Dina Bhavishya : ಇಂದು ಹೂಡಿಕೆ ಮಾಡಿದರೆ ಗಳಿಸುವಿರಿ ಭಾರಿ ಲಾಭ; ಅನಿರೀಕ್ಷಿತ ಸುದ್ದಿಯಿಂದ ಸಂತಸ

Prajwal Revanna Case I was never kidnapped and son has made a false complaint Video of victim goes viral
ಕ್ರೈಂ1 day ago

Prajwal Revanna Case: ರೇವಣ್ಣ ಕೇಸ್‌ಗೆ ಟ್ವಿಸ್ಟ್‌! ನನ್ನ ಕಿಡ್ನ್ಯಾಪ್‌ ಮಾಡಿಯೇ ಇಲ್ಲ; ಮಗ ತಪ್ಪು ದೂರು ಕೊಟ್ಟಿದ್ದಾನೆ; ಸಂತ್ರಸ್ತೆಯ ವಿಡಿಯೊ ವೈರಲ್

Karnataka Weather Forecast Heavy rain in chikkmagalur
ಮಳೆ1 day ago

Karnataka Weather : ಚಿಕ್ಕಮಗಳೂರಲ್ಲಿ ಅಬ್ಬರಿಸುತ್ತಿರುವ ಮಳೆ; ಬೃಹತ್‌ ಮರ ಬಿದ್ದು ಮಹಿಳೆ ಸ್ಥಳದಲ್ಲೇ ಸಾವು

ಟ್ರೆಂಡಿಂಗ್‌