Viral News : ಗೋವಾದಲ್ಲಿ ಬಳೆ ಮಾರುವ ಮಹಿಳೆಯ ಇಂಗ್ಲಿಷ್ ಗೆ ಫಾರಿನರೇ ಫಿದಾ! - Vistara News

ವೈರಲ್ ನ್ಯೂಸ್

Viral News : ಗೋವಾದಲ್ಲಿ ಬಳೆ ಮಾರುವ ಮಹಿಳೆಯ ಇಂಗ್ಲಿಷ್ ಗೆ ಫಾರಿನರೇ ಫಿದಾ!

Viral News : ತಮ್ಮ ಬಳಿ ಮಾತನಾಡುವ ವ್ಯಕ್ತಿಯೊಂದಿಗೆ ಇಂಗ್ಲಿಷ್​ನಲ್ಲಿ ಅವರು ತಮ್ಮ ವ್ಯಾಪಾರದ ಅನುಭವವನ್ನು ಹಂಚಿಕೊಳ್ಳುತ್ತಾರೆ.

VISTARANEWS.COM


on

Goa Bangel seller
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಇಂಗ್ಲಿಷ್​ ಸುಲಭ ಅಂಥ ಹೇಳೋದಷ್ಟೇ ಸುಲಭ. ಆದರೆ, ಸರಿಯಾಗಿ ಇಂಗ್ಲಿಷ್ ಮಾತನಾಡಲು ಇರುವ ತೊಡಕು ಅನುಭವಿಸಿದವರಿಗೇ ಮಾತ್ರ ಗೊತ್ತು. ಆದರೆ, ಒಂದು ಬಾರಿ ಇಂಗ್ಲಿಷ್​ ಅನ್ನು ಅರಗಿಸಿಕೊಂಡರೆ ಆ ಮೇಲೆ ಅದರಷ್ಟು ಸುಲಭ ಇನ್ನೊಂದಿಲ್ಲ ಎಂಬುದನ್ನೂ ಕೇಳಿದ್ದೇವೆ. ಇಂಥದ್ದೇ ಒಂದು ವಿಡಿಯೊ ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿದೆ.(Viral News) ಗೋವಾದಲ್ಲಿ ಬಳೆ ಮಾರುವ ಮಹಿಳೆಯೊಬ್ಬಳು ಸೂಪರ್​ ಇಂಗ್ಲಿಷ್ ಮಾತನಾಡುವ ವಿಡಿಯೊ ಅದಾಗಿದೆ. ಮಹಿಳೆಯ ಇಂಗ್ಲಿಷ್​​ಗೆ ವಿಡಿಯೊ ಮಾಡುವ ಫಾರಿನರೇ ಫಿದಾ ಆಗಿದ್ದಾನೆ.

ಗೋವಾದ ಸುಂದರವಾದ ವಗಾಟರ್​ ಬೀಚ್​ನಲ್ಲಿ ಮಹಿಳೆ ಬಳೆ ಮಾರುವವರು. ಅವರು ಇಂಗ್ಲಿಷ್​ನಲ್ಲಿ ಮಾತನಾಡುವ ಶೈಲಿ ಜನರನ್ನು ಆಕರ್ಷಿಸಿದೆ. ಸುಶಾಂತ್ ಪಾಟೀಲ್ ಎಂಬುವರು ವಿಡಿಯೊ ಹಂಚಿಕೊಂಡಿದ್ದಾರೆ. ಈ ಕ್ಲಿಪ್​ನಲ್ಲಿ ಬಳೆ ಮಾರುವ ಮಹಿಳೆ ಕೋವಿಡ್ ನಂತರದ ಕಡಲತೀರದ ತಮ್ಮ ಕಷ್ಟಗಳನ್ನು ನಿರರ್ಗಳವಾಗಿ ಇಂಗ್ಲಿಷ್​​ನಲ್ಲಿ ವ್ಯಕ್ತಪಡಿಸಿದ್ದಾರೆ.

ಕಪ್ಪು ಬಂಡೆಯ ಬಂಡೆಗಳು ಮತ್ತು ಪ್ರಶಾಂತ ನೀರಿಗೆ ಹೆಸರುವಾಸಿಯಾದ ವಾಗೇಟರ್ ಬೀಚ್, ಗೋವಾದ ಹೆಚ್ಚು ಜನದಟ್ಟಣೆಯ ಕಡಲತೀರಗಳಿಂದ ದೂರವಿರುವ ಪ್ರಶಾಂತತೆಯನ್ನು ಬಯಸುವ ಪ್ರವಾಸಿಗರಿಗೆ ಬಹಳ ಹಿಂದಿನಿಂದಲೂ ಇಷ್ಟ. ವಿಡಿಯೊದಲ್ಲಿ, ಮಹಿಳೆ ಬಳೆಗಳು ಮತ್ತು ಮಣಿಯ ಹಾರಗಳನ್ನು ಮಾರಾಟ ಮಾಡುತ್ತಿರುವುದನ್ನು ಕಾಣಬಹುದು. ಕಡಲತೀರದ ಬದಲಾಗುತ್ತಿರುವ ಸನ್ನಿವೇಶಗಳನ್ನು ವಿಡಿಯೊ ಮಾಡುವ ವ್ಯಕ್ತಿಗೆ ಇಂಗ್ಲಿಷ್​ನಲ್ಲಿ ವಿವರಿಸಿದ್ದಾರೆ.

ಇದನ್ನೂ ಓದಿ: ಎಂತ ‘ಸಾವ್‌’ ಮರ‍್ರೆ; ‘ನಾನು ಸತ್ತಿಲ್ಲ’ ಎಂದ ಪೂನಂ ಪಾಂಡೆಯನ್ನು ಬಂಧಿಸಿ ಎಂದ ಜನ!

ಈ ವೀಡಿಯೊ 828 ಸಾವಿರಕ್ಕೂ ಹೆಚ್ಚು ಲೈಕ್ಸ್ ಮತ್ತು ಹಲವಾರು ಕಾಮೆಂಟ್ ಗಳನ್ನು ಗಳಿಸಿದೆ. ಇಂಗ್ಲಿಷ್ ಭಾಷೆಯ ಮೇಲಿನ ಮಹಿಳೆಯ ಹಿಡಿತದಿಂದ ಜನರು ಸಾಕಷ್ಟು ಪ್ರಭಾವಿತರಾಗಿದ್ದಾರೆ. ಅವರು ಇಂಗ್ಲಿಷ್ ಮೀಡಿಯಂನಲ್ಲಿ ಕಲಿತರವರಿಗಿಂತಲೂ ಹೆಚ್ಚು ನಿರರ್ಗಳವಾಗಿ ಇಂಗ್ಲಿಷ್​ ಮಾತನಾಡಿದ್ದನ್ನು ಗಮನಿಸಿದ್ದಾರೆ. ಕಡಲತೀರದಲ್ಲಿ ಕಂಡುಬಂದ ಬದಲಾವಣೆಗಳನ್ನು ವಿವರಿಸುವ ಅವರ ಸಾಮರ್ಥ್ಯ, ವಿಶೇಷವಾಗಿ ಕೊರೊನಾ ರೋಗದ ನಂತರ, ವೀಕ್ಷಕಕರ ಕುರಿತಾಗಿದೆ.

ಕಂಡಕ್ಟರ್​ ಸಾಹಸಕ್ಕೆ ಕ್ಷಣಾರ್ಧದಲ್ಲೇ ಉಳಿಯಿತು ಯುವತಿಯ ಪ್ರಾಣ; ಇಲ್ಲಿದೆ ವಿಡಿಯೊ

ಬೆಂಗಳೂರು: ತಮಿಳುನಾಡಿನಲ್ಲಿ ಚಲಿಸುತ್ತಿದ್ದ ಖಾಸಗಿ ಬಸ್​ ಒಂದರಿಂದ ಕೆಳಕ್ಕೆ ಬೀಳುತ್ತಿದ್ದ ಮಹಿಳೆಯನ್ನು ಆ ಬಸ್​ನ ಕಂಡಕ್ಟರ್ ಕಾಪಾಡಿದ ವಿಡಿಯೊವೊಂದು ವೈರಲ್ ಆಗಿದೆ. ಬಸ್ ಒಳಗೆ ಅಳವಡಿಸಲಾಗಿದ್ದ ಸಿಸಿಟಿವಿ ಕ್ಯಾಮೆರಾದಲ್ಲಿ ಈ ಭಯಾನಕ ದೃಶ್ಯ ಸೆರೆಯಾಗಿದೆ. ಈರೋಡ್ ಮತ್ತು ಮೆಟ್ಟೂರು ನಡುವೆ ಪ್ರಯಾಣಿಸುವ ಖಾಸಗಿ ಬಸ್ ನಲ್ಲಿ ಈ ಘಟನೆ ಸಂಭವಿಸಿದೆ. ಕಂಡಕ್ಟರ್ ಏನಾದರೂ ತಮ್ಮ ಚಾತುರ್ಯ ತೋರದೇ ಹೋಗಿದ್ದರೆ ಕೆಳಕ್ಕೆ ಬಿದ್ದ ಮಹಿಳೆ ಪ್ರಾಣ ಕಳೆದುಕೊಳ್ಳುವ ಸಾಧ್ಯತೆಗಳಿದ್ದವು.

ವೀಡಿಯೊದಲ್ಲಿ, ಯುವತಿಯೊಬ್ಬಳು ಬಸ್ಸಿನೊಳಗೆ ನಿಂತಿರುವುದನ್ನು ನಾವು ಕಾಣಬಹುದು. ಕಂಡಕ್ಟರ್ ಬಸ್ಸಿನ ಮುಂಭಾಗದ ಬಾಗಿಲ ಬಳಿ ನಿಂತು ಹೊರಗೆ ನೋಡುತ್ತಿರುತ್ತಾರೆ. ಮಹಿಳೆ ಸೀಟಿನಿಂದ ಎದ್ದು ಇಳಿಯಲೆಂದು ಮುಂಭಾಗಕ್ಕೆ ನಡೆಯಲು ಪ್ರಾರಂಭಿಸಿದ್ದರು. ಆಕೆ ಮುಂಭಾಗದ ಕಡೆಗೆ ನಡೆಯುತ್ತಿರುವಾಗ ಸಮತೋಲನ ಕಳೆದುಕೊಂಡು ಬೀಳುತ್ತಾರೆ. ಅವರ ಮುಂದಿನ ಬಾಗಿಲ ಮೂಲಕ ಹೊರಕ್ಕೆ ಬೀಳುವ ಹಂತಕ್ಕೆ ತಲುಪಿದ್ದರು.

ಕಂಡಕ್ಟರ್ ಯುವತಿ ಬೀಳುವುದನ್ನು ನೋಡಿ ತಕ್ಷಣ ಆಕೆಯನ್ನು ಹಿಡಿದಿದ್ದಾನೆ. ಈ ಎಲ್ಲ ದೃಶ್ಯಗಳು ಕೆಲವೇ ಕ್ಷಣಗಳಲ್ಲಿ ಮುಗಿದು ಹೋಗಿದೆ. ಕಂಡಕ್ಟರ್ ಯುವತಿಯ ಚೀಲ ಮತ್ತು ಕೂದಲನ್ನು ಹಿಡಿದು ಕಾಪಾಡುತ್ತಾನೆ. ಕ್ಯಾಬಿನ್ ನಿಂದ ಕಿರುಚಾಟ ಕೇಳಿದ ನಂತರ ಬಸ್ ಚಾಲಕ ನಿಧಾನಗೊಳಿಸುತ್ತಾಣೆ. ಕಂಡಕ್ಟರ್ ಮಹಿಳೆಯನ್ನು ಮೇಲಕ್ಕೆ ಎಳೆದಿದ್ದಾರೆ ಬಳಿಕ ಬಸ್​​ನೊಳಗಿದ್ದ ಇತರ ಪ್ರಯಾಣಿಕರು ಆಕೆಗೆ ಮೇಲಕ್ಕೆ ಬರಲು ಸಹಾಯ ಮಾಡುತ್ತಾರೆ. ಘಟನೆಯಲ್ಲಿ ಮಹಿಳೆ ಯಾವುದೇ ಗಾಯಗಳಿಲ್ಲದೆ ಪಾರಾಗಿರುವುದು ಅದೃಷ್ಟವೇ ಸರಿ. ವರದಿಗಳ ಪ್ರಕಾರ ಮಹಿಳೆ ನಂತರ ತನ್ನ ವಸ್ತುಗಳನ್ನು ಸಂಗ್ರಹಿಸಿ ಮುಂದಿನ ನಿಲ್ದಾಣದಲ್ಲಿ ಬಸ್ ಇಳಿದಿದ್ದರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ವೈರಲ್ ನ್ಯೂಸ್

Viral Video: KSRTC ಬಸ್‌ನಲ್ಲೇ ಮಹಿಳೆಗೆ ಹೆರಿಗೆ ಮಾಡಿಸಿದ ವೈದ್ಯರು! ಡ್ರೈವರ್‌ ಕಾರ್ಯಕ್ಕೆ ಮೆಚ್ಚುಗೆಯ ಮಹಾಪೂರ

Viral Video:37 ವರ್ಷದ ಮಹಿಳೆ ವೈದ್ಯರನ್ನು ಕಾಣಲೆಂದು ತ್ರಿಶೂರ್‌ನನಿಂದ ಕೋಜಿಕ್ಕೊಡ್‌ನ ತೊಟ್ಟಿಲ್‌ಪಾಲಂಗೆ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದರು. ಬಸ್‌ ಪೇರಮಂಗಲಂ ಎಂಬಲ್ಲಿ ತಲುಪುತ್ತಿದ್ದಂತೆ ಮಹಿಳೆಗೆ ತೀವ್ರವಾಗಿ ಹೆರಿಗೆ ನೋವು ಕಾಣಸಿಕೊಂಡಿದೆ. ಈ ವಿಚಾರ ಬಸ್‌ ನಿರ್ವಾಹಕನ ಗಮನಕ್ಕೆ ತಂದ ತಕ್ಷಣ ಆತ ಡ್ರೈವರ್‌ಗೆ ಪರಿಸ್ಥಿತಿಯ ಗಂಭೀರತೆ ತಿಳಿಸಿದ್ದಾನೆ. ತಕ್ಷಣ ಬಸ್‌ ತಿರುಗಿಸಿದ ಡ್ರೈವರ್ ನೇರವಾಗಿ ಬಸ್ಸನ್ನು ಸಮೀಪದ ಆಸ್ಪತ್ರೆಯೊಂದಕ್ಕೆ ತೆಗೆದುಕೊಂಡು ಬಂದಿದ್ದಾನೆ.

VISTARANEWS.COM


on

Viral Video
Koo

ಕೇರಳ: ಏಳು ತಿಂಗಳು ಕಳೆಯುತ್ತಿದ್ದಂತೆ ಗರ್ಭಿಣಿ(Pregnant)ಯರನ್ನು ದೂರ ಪ್ರಯಾಣಿಸದಂತೆ ಎಚ್ಚರಿಕೆ ವಹಿಸಲಾಗುತ್ತದೆ. ಅದರಲ್ಲೂ ಪ್ರಸವ ದಿನ ಸಮೀಪಿಸುತ್ತಿದ್ದಂತೆ ಮನೆಯಿಂದ ಹೊರಗಡೆ ಕಾಲಿಡಲೂ ಹಿರಿಯರು ಬಿಡುವುದಿಲ್ಲ. ಅಂತಹದ್ರಲ್ಲಿ ಬಸ್‌(KSRTC Bus), ಕಾರಿನಲ್ಲ ಪ್ರಯಾಣ ಬಹಳ ದೂರದ ಮಾತಾಯ್ತು. ಈ ರೀತಿ ಮಾಡುವುದಕ್ಕೆ ಕಾರಣವೂ ಇದೆ. ಕೆಲವೊಮ್ಮೆ ಪ್ರಯಾಣ ಮಧ್ಯೆಯೆ ಹೆರಿಗೆ ಕಾಣಿಸಿಕೊಂಡು ಅವಾಂತರಗಳು ಸಂಭವಿಸಿರುವ ಘಟನೆಗಳೂ ನಡೆದಿವೆ. ಇದೀಗ ಅಂತಹದ್ದೇ ಒಂದು ಘಟನೆ ಕೇರಳದಲ್ಲಿ ನಡೆದಿದೆ. ಕೆಎಸ್‌ಆರ್ಟಿಸಿ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದ ತುಂಬು ಗರ್ಭಿಣಿಗೆ ಮಾರ್ಗ ಮಧ್ಯೆಯೇ ಪ್ರಸವ ವೇದನೆ ಕಾಣಿಸಿಕೊಂಡಿದ್ದು, ಬಸ್ಸಿನಲ್ಲೇ ಹೆರಿಗೆ ಆಗಿದೆ. ಇದೀಗ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್‌(Viral Video) ಆಗಿದೆ.

ಘಟನೆ ವಿವರ:

37 ವರ್ಷದ ಮಹಿಳೆ ವೈದ್ಯರನ್ನು ಕಾಣಲೆಂದು ತ್ರಿಶೂರ್‌ನನಿಂದ ಕೋಜಿಕ್ಕೊಡ್‌ನ ತೊಟ್ಟಿಲ್‌ಪಾಲಂಗೆ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದರು. ಬಸ್‌ ಪೇರಮಂಗಲಂ ಎಂಬಲ್ಲಿ ತಲುಪುತ್ತಿದ್ದಂತೆ ಮಹಿಳೆಗೆ ತೀವ್ರವಾಗಿ ಹೆರಿಗೆ ನೋವು ಕಾಣಸಿಕೊಂಡಿದೆ. ಈ ವಿಚಾರ ಬಸ್‌ ನಿರ್ವಾಹಕನ ಗಮನಕ್ಕೆ ತಂದ ತಕ್ಷಣ ಆತ ಡ್ರೈವರ್‌ಗೆ ಪರಿಸ್ಥಿತಿಯ ಗಂಭೀರತೆ ತಿಳಿಸಿದ್ದಾನೆ. ತಕ್ಷಣ ಬಸ್‌ ತಿರುಗಿಸಿದ ಡ್ರೈವರ್ ನೇರವಾಗಿ ಬಸ್ಸನ್ನು ಸಮೀಪದ ಆಸ್ಪತ್ರೆಯೊಂದಕ್ಕೆ ತೆಗೆದುಕೊಂಡು ಬಂದಿದ್ದಾನೆ.

ಬಸ್‌ನಲ್ಲಿದ್ದ ಮಹಿಳೆಗೆ ಪ್ರಸವ ವೇದನೆ ಆರಂಭವಾಗಿದೆ ಅನ್ನೋ ವಿಚಾರವನ್ನು ಬಸ್‌ ನಲ್ಲಿದ್ದ ಪ್ರಯಾಣಿಕರೊಬ್ಬರು ಆಸ್ಪತ್ರೆಗೆ ಮಾಹಿತಿ ನೀಡಿದ್ದರು. ಹೀಗಾಗಿ ಬಸ್‌ ಬರುತ್ತಿದ್ದಂತೆ ಸ್ಟ್ರಚ್ಚರ್‌ ತೆಗೆದುಕೊಂಡು ಸಿದ್ಧವಾಗಿದ್ದ ಆಸ್ಪತ್ರೆಯ ಸಿಬ್ಬಂದಿ ಮಹಿಳೆಯನ್ನು ಆಸ್ಪತ್ರೆಗೆ ಶಿಫ್ಟ್‌ ಮಾಡಲು ರೆಡಿ ಆಗಿದ್ದಾರೆ. ಆದ್ರೆ ಆ ವೇಳೆಗಾಗಲೇ ಸಮಯ ಮೀರಿದ್ದ ಕಾರಣ ಮಹಿಳೆಯನ್ನು ಪರೀಕ್ಷಿಸಿದ ವೈದ್ಯರು ಮಹಿಳೆಗೆ ಬಸ್‌ ಒಳಗಡೆಯೇ ಹೆರಿಗೆ ಮಾಡಿಸಿದ್ದಾರೆ. ಬಳಿಕ ತಾಯಿ ಮಗುವನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಇನ್ನು ಮಹಿಳೆಗೆ ಹೆರಿಗೆ ಮಾಡಿಸುವವರೆಗೂ ಬಸ್ ಹಾಗೂ ಪ್ರಯಾಣಿಕರು ಕಾದು ಕುಳಿತಿದ್ದು, ಪ್ರಸವದ ಬಳಿಕ ಬಸ್ ಮುಂದಕ್ಕೆ ಚಲಿಸಿದೆ. ಬಸ್‌ ನಿರ್ವಾಹಕ ಹಾಗೂ ಡ್ರೈವರ್ ಅವರ ಸಮಯ ಪ್ರಜ್ಞೆಗೆ ಪ್ರಯಾಣಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ತಾಯಿ ಮಗು ಇಬ್ಬರು ಆರೋಗ್ಯವಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.

ಇದನ್ನೂ ಓದಿ:Viral Video: “ನೀವು ಅಲ್ಲಿಂದ ದಾಳಿ ಮಾಡಿ..ನಾವು ಇಲ್ಲಿಂದ ಅಟ್ಯಾಕ್‌ ಮಾಡ್ತೇವೆ..ಪಾಕ್‌ ಧ್ವಂಸ ಆಗೋದು ಪಕ್ಕಾ”-ಆಫ್ಗನ್‌ ವೃದ್ಧನ ಈ ವಿಡಿಯೋ ಫುಲ್‌ ವೈರಲ್‌

Continue Reading

ವೈರಲ್ ನ್ಯೂಸ್

Viral Video: ಮುಂಬಯಿ ವಿಮಾನ ನಿಲ್ದಾಣದಲ್ಲಿ ಯುವತಿಯ ರೀಲ್ಸ್ ಹುಚ್ಚಾಟ; ಸಿಡಿದೆದ್ದ ನೆಟ್ಟಿಗರು

ಮುಂಬಯಿ ವಿಮಾನ ನಿಲ್ದಾಣದಲ್ಲಿ ರೀಲ್ಸ್ ಮಾಡಿದ ಮಹಿಳೆಯೊಬ್ಬಳ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ (Viral Video) ಆಗಿದ್ದು, ನೆಟ್ಟಿಗರಿಂದ ಭಾರೀ ಟೀಕೆಗೆ ಗುರಿಯಾಗಿದೆ. ಆಕೆಯ ವಿರುದ್ಧ ಕ್ರಮಕ್ಕೆ ಸಾಕಷ್ಟು ಮಂದಿ ಒತ್ತಾಯಿಸಿದ್ದಾರೆ.

VISTARANEWS.COM


on

By

Viral Video
Koo

ಸಾರ್ವಜನಿಕ ಸ್ಥಳಗಳಲ್ಲಿ (public areas) ಇತ್ತೀಚೆಗೆ ವಿಡಿಯೋ ಮಾಡುವವರ ಹಾವಳಿ ಹೆಚ್ಚಾಗಿದೆ. ಮುಂಬಯಿ ವಿಮಾನ ನಿಲ್ದಾಣದಲ್ಲಿ (Mumbai Airport) ಮಹಿಳೆಯೊಬ್ಬರು ನೃತ್ಯ ಮಾಡಿರುವ ವಿಡಿಯೋವನ್ನು (Viral Video) ಸಾಮಾಜಿಕ ಜಾಲತಾಣದಲ್ಲಿ (social media) ಹಂಚಿಕೊಂಡಿದ್ದು, ಸಾಕಷ್ಟು ಟೀಕೆಗೆ ಗುರಿಯಾಗಿದೆ. ಕೆಲವರು ಆಕೆಯ ವಿರುದ್ಧ ಕ್ರಮಕ್ಕೆ ಆಗ್ರಹಿಸಿದ್ದಾರೆ.

ಮೆಟ್ರೋ ರೈಲುಗಳು, ರೈಲು ಪ್ಲಾಟ್‌ಫಾರ್ಮ್‌ಗಳು ಮತ್ತು ಇತರ ಸಾರ್ವಜನಿಕ ಸ್ಥಳಗಳಲ್ಲಿ ಜನರು ನೃತ್ಯ ಮಾಡುವ ಪ್ರವೃತ್ತಿಯಲ್ಲಿ ಇತ್ತೀಚೆಗೆ ಸಾರ್ವಜನಿಕರಿಗೆ ಕಿರಿಕಿರಿ ಉಂಟು ಮಾಡುತ್ತಿದೆ. ಈ ಕುರಿತು ಕಾನೂನು ಕ್ರಮ ಕೈಗೊಳ್ಳಬೇಕಿದೆ ಎನ್ನುವ ಒತ್ತಾಯಗಳೂ ಕೇಳಿ ಬರುತ್ತಿದೆ.

ಇತರ ಪ್ರಯಾಣಿಕರಿಗೆ ತೊಂದರೆ ಉಂಟು ಮಾಡುವ, ಕಿರಿಕಿರಿ ಮಾಡುವ ವಿಡಿಯೋವೊಂದನ್ನು ಮುಂಬಯಿ ವಿಮಾನ ನಿಲ್ದಾಣದಲ್ಲಿ ಚಿತ್ರೀಕರಿಸಲಾಗಿದೆ. ಬಾಲಿವುಡ್ ಹಾಡಿಗೆ ಮಹಿಳೆಯೊಬ್ಬರು ನೃತ್ಯ ಮಾಡುತ್ತಿರುವ ಈ ಹೊಸ ವಿಡಿಯೋ ಎಕ್ಸ್‌ನಲ್ಲಿ ಹಂಚಿಕೊಳ್ಳಲಾಗಿದೆ.

ಕುರುಕ್ಷೇತ್ರದ ‘ಆಪ್ ಕಾ ಆನಾ’ ಹಾಡಿನಲ್ಲಿ ಮಹಿಳೆಯೊಬ್ಬಳು ಸಲ್ವಾರ್ ಕುರ್ತಾ ಧರಿಸಿ ನೃತ್ಯ ಮಾಡಿದ್ದಾಳೆ. ಆಕೆಯ ಕೆಲವು ಭಂಗಿಗಳು ಸಾರ್ವಜನಿಕರಿಗೆ ಮುಜುಗರ ಉಂಟು ಮಾಡಿದೆ. ಅನೇಕ ಜನರು ಅವಳನ್ನು ಕುತೂಹಲದಿಂದ ನೋಡುತ್ತಿದ್ದರೆ, ಇತರರು ನೋಡಿಯೂ ನೋಡದಂತೆ ಮಾಡಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.

”ವೈರಸ್ ವಿಮಾನ ನಿಲ್ದಾಣವನ್ನು ತಲುಪಿದೆ” ಎಂಬ ಶೀರ್ಷಿಕೆಯಡಿ @desimojito ಎಂಬ ಹೆಸರಿನ ಬಳಕೆದಾರ ಎಕ್ಸ್ ನಲ್ಲಿ ಈ ವಿಡಿಯೋವನ್ನು ಹಂಚಿಕೊಂಡಿದ್ದಾನೆ.

ಇದಕ್ಕೆ ಪ್ರತಿಕ್ರಿಯಿಸಿರುವ ಅನೇಕರು ಆಕೆಯನ್ನು ಟೀಕಿಸಿದ್ದಾರೆ. ಇದೊಂದು ಸಾರ್ವಜನಿಕ ಉಪದ್ರವ ಎಂದು ಹೇಳಿದ್ದಾರೆ. ಆಕೆಯ ವಿರುದ್ಧ ಕ್ರಮ ಕೈಗೊಳ್ಳುವಂತೆ ವಿಮಾನ ನಿಲ್ದಾಣದ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ.
ಕೆಲವರು ತಮಾಷೆ ಮಾಡಿದ್ದಾರೆ. ಇನ್ನು ಕೆಲವರು ಹೆಚ್ಚುತ್ತಿರುವ ಈ ಪ್ರವೃತ್ತಿಯ ಬಗ್ಗೆ ಕಳವಳ ವ್ಯಕ್ತಪಡಿಸಿದರು. ಇದು ಶೀಘ್ರದಲ್ಲೇ ನಿಲ್ಲುವಂತೆ ತೋರುತ್ತಿಲ್ಲ ಎಂದು ಹೇಳಿದ್ದಾರೆ.

ಒಬ್ಬ ಬಳಕೆದಾರನು ಹೀಗೆ ಬರೆದಿದ್ದಾನೆ, ಅಷ್ಟು ಗಟ್ಟಿಯಾಗಿ ನನ್ನ ಕರುಳನ್ನು ಗಂಟುಗೆ ತಿರುಗಿಸಿದೆ. ಇದು ಯಾವಾಗಲೂ ಭಯಾನಕ, ಅಸ್ಪಷ್ಟ 90ರ ಬಾಲಿವುಡ್ ಹಾಡು ಎಂದು ಹೇಳಿದ್ದು, ಮತ್ತೊಬ್ಬರು, ಮಾನವೀಯತೆ ಮತ್ತು ವಿವೇಕ ಎಲ್ಲಿಗೆ ಹೋಗುತ್ತಿದೆ?’ ಎಂದು ಪ್ರಶ್ನಿಸಿದ್ದಾರೆ. ಇನ್ನೊಬ್ಬರು ‘ಇವರಂತಹ ಜನರಿಗೆ ಕಠಿಣ ಕಾನೂನು ಮತ್ತು ದಂಡದ ಅಗತ್ಯವಿದೆ. ಅವರು ಪ್ರತಿ ಸ್ಥಳವನ್ನು ಸರ್ಕಸ್ ಆಗಿ ಪರಿವರ್ತಿಸಿದ್ದಾರೆ ಎಂದು ತಿಳಿಸಿದ್ದಾರೆ.


ಮತ್ತೊಬ್ಬರು ಪ್ರಧಾನಿ ಮೋದಿ ಅವರ ಮುಂದಿನ ಅವಧಿಯಲ್ಲಿ ಎಲ್ಲಾ ಸಾರ್ವಜನಿಕ ಸ್ಥಳಗಳಲ್ಲಿ ಈ ವಿದೂಷಕರನ್ನು ನಿಷೇಧಿಸುವಂತೆ ನಾನು ಒತ್ತಾಯಿಸುತ್ತೇನೆ ಎಂದು ಹೇಳಿದ್ದು, ಇನ್ನೊಬ್ಬರು ವಿಮಾನ ನಿಲ್ದಾಣದ ಒಳಗೆ ಮತ್ತು ಹೊರಗೆ ಇಂತಹ ಪ್ರದರ್ಶನಕ್ಕೆ ಅನುಮತಿ ಇರುವುದಿಲ್ಲ. ಜನರು ಗಂಭೀರ ವ್ಯವಹಾರಕ್ಕಾಗಿ ವಿಮಾನ ನಿಲ್ದಾಣಗಳಿಗೆ ಭೇಟಿ ನೀಡುವುದು. ಟೈಮ್ ಪಾಸ್ ಮತ್ತು ಮನರಂಜನೆಗಾಗಿ ಅಲ್ಲ ಎಂದು ತಿಳಿಸಿದ್ದಾರೆ.

ಇದನ್ನೂ ಓದಿ: Viral News: ಸರ ಕದ್ದು ಪರಾರಿಯಾಗಲು ಬೈಕ್‌ ಏರಿದವರಿಗೆ ಕಾದಿತ್ತು ಶಾಕ್‌; ವಿಡಿಯೊ ಇಲ್ಲಿದೆ

ಈ ಬಗ್ಗೆ ಇಲ್ಲಿಯವರೆಗೆ ಯಾವುದೇ ಅಧಿಕಾರಿಗಳಿಂದ ಪ್ರತಿಕ್ರಿಯೆ ಬಂದಿಲ್ಲ.

ಈ ಹಿಂದೆ ಮುಂಬಯಿನಲ್ಲಿ ಚಲಿಸುತ್ತಿರುವ ಲೋಕಲ್ ರೈಲಿನೊಳಗೆ ಯುವತಿಯೊಬ್ಬಳು ಭೋಜ್‌ಪುರಿ ಹಾಡುಗಳಿಗೆ ಡ್ಯಾನ್ಸ್ ಮಾಡಿದ್ದು ಆಕ್ರೋಶಕ್ಕೆ ಕಾರಣವಾಗಿತ್ತು.

Continue Reading

ವೈರಲ್ ನ್ಯೂಸ್

Viral Video: ಪ್ರಜ್ಞೆ ಕಳೆದುಕೊಂಡು ಬಿದ್ದ ಕೋತಿಗೆ ಮರುಜೀವ ನೀಡಿದ ಪೊಲೀಸ್ ಅಧಿಕಾರಿ; ಮನ ಮಿಡಿಯೋ ವಿಡಿಯೊ ಇಲ್ಲಿದೆ

ಮರದಿಂದ ಪ್ರಜ್ಞೆ ಕಳೆದುಕೊಂಡು ಬಿದ್ದ ಕೋತಿಗೆ ಉತ್ತರಪ್ರದೇಶದ ಬುಲಂದ್‌ಶಹರ್‌ನಲ್ಲಿಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ಸಿಪಿಆರ್ ತುರ್ತು ಚಿಕಿತ್ಸೆ ನೀಡಿ ಜೀವ ಉಳಿಸಿದ ಘಟನೆ ನಡೆದಿದೆ. ಇದರ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ (Viral Video) ಆಗಿದೆ.

VISTARANEWS.COM


on

By

Viral Video
Koo

ಮರದಿಂದ ಪ್ರಜ್ಞೆ ಕಳೆದುಕೊಂಡು ಬಿದ್ದ ಕೋತಿಗೆ (monkey) ಪೊಲೀಸ್ ಅಧಿಕಾರಿಯೊಬ್ಬರು (police officer) ಮರುಜೀವ ನೀಡಿದ ಘಟನೆ ಉತ್ತರಪ್ರದೇಶದ (uttarpradesh) ಬುಲಂದ್‌ಶಹರ್‌ನಲ್ಲಿ (Bulandshahr) ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಇದರ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ (social media) ಭಾರೀ ವೈರಲ್ (Viral Video) ಆಗಿದ್ದು, ಪೊಲೀಸ್ ಅಧಿಕಾರಿಯ ನಡೆಗೆ ಭಾರಿ ಪ್ರಶಂಸೆ ಕೇಳಿ ಬರುತ್ತಿದೆ.

ಪೊಲೀಸ್ ಠಾಣೆ ಆವರಣದೊಳಗೆ ನಿರ್ಜೀವವಾಗಿ ಬಿದ್ದಿದ್ದ ಕೋತಿಯನ್ನು ಕಂಡ ಪೊಲೀಸ್ ಅಧಿಕಾರಿ ಕೂಡಲೇ ಅದಕ್ಕೆ ಪ್ರಾಥಮಿಕ ಚಿಕಿತ್ಸೆ ನೀಡಿ ಮರುಜೀವ ನೀಡಿದ್ದಾರೆ. ಮೇ 24 ರಂದು ತೀವ್ರವಾದ ಬಿಸಿಲಿನಿಂದ ಕೋತಿ ಪ್ರಜ್ಞೆ ಕಳೆದುಕೊಂಡು ಮರದಿಂದ ಕೆಳಗೆ ಬಿದ್ದಿತ್ತು. ಇದನ್ನು ನೋಡಿದ ಛಾತಾರಿ ಪೊಲೀಸ್ ಠಾಣೆಯ ಹೆಡ್ ಕಾನ್‌ಸ್ಟೆಬಲ್ ವಿಕಾಸ್ ತೋಮರ್ ಅವರು ಕೋತಿಗೆ ಮರುಜೀವ ನೀಡಲು ಕಾರ್ಡಿಯೋಪಲ್ಮನರಿ ರೆಸಸಿಟೇಶನ್ (CPR) ಅನ್ನು ನೀಡಿದರು. ಈ ಕುರಿತು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿದೆ.

ನಾವು ತುರ್ತು ಪರಿಸ್ಥಿತಿಗಳನ್ನು ನಿಭಾಯಿಸಲು ತರಬೇತಿ ಪಡೆದಿದ್ದೇವೆ. ಮನುಷ್ಯರು ಮತ್ತು ಕೋತಿಗಳ ದೇಹಗಳು ತುಂಬಾ ಹೋಲುವುದರಿಂದ ಈ ರೀತಿ ಮಾಡಿದೆ. ಸಹೋದ್ಯೋಗಿಗಳು ಉದ್ರೇಕಗೊಂಡ ಗುಂಪಿನಿಂದ ಈ ಕೋತಿಯನ್ನು ರಕ್ಷಿಸಲು ನಾನು ಪ್ರಯತ್ನಿಸಿದೆ. ಸುಮಾರು 45 ನಿಮಿಷಗಳ ಕಾಲ ಎದೆಯನ್ನು ಉಜ್ಜಿ ಸ್ವಲ್ಪ ಪ್ರಮಾಣದ ನೀರನ್ನು ಬಾಯಿಗೆ ಸುರಿದೆ. ಅಂತಿಮವಾಗಿ ಅದಕ್ಕೆ ಜೀವ ಬಂದಿತ್ತು ಎಂದು ಅವರು ತಿಳಿಸಿದ್ದಾರೆ.

ಕೋತಿಗೆ ಪ್ರಜ್ಞೆ ಮರಳಿದ ಬಳಿಕ ಪಶುವೈದ್ಯ ಡಾ. ಹರಿ ಓಂ ಶರ್ಮಾ ಅವರು ಅದಕ್ಕೆ ಚಿಕಿತ್ಸೆ ಮುಂದುವರಿಸಿದರು.
ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾದ ಈ ವಿಡಿಯೋ ಸಾಕಷ್ಟು ವೈರಲ್ ಆಗಿದೆ. ಇದರ ವಿಡಿಯೊವನ್ನು ಸುದ್ದಿ ಸಂಸ್ಥೆ ಐಎಎನ್‌ಎಸ್ ಹಂಚಿಕೊಂಡಿದ್ದು, ವ್ಯಾಪಕ ಗಮನ ಸೆಳೆದಿದೆ.

ಬುಲಂದ್‌ಶಹರ್‌ ಪೊಲೀಸ್ ಠಾಣೆಯ ಆವರಣದಲ್ಲಿ ಶಾಖದಿಂದ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ನಿರ್ಜೀವ ಕೋತಿಯನ್ನು ಪೋಲೀಸ್ ಅಧಿಕಾರಿಯೊಬ್ಬರು ಪುನರುಜ್ಜೀವನಗೊಳಿಸಿದ್ದಾರೆ, ಅದಕ್ಕೆ ನೀರು ನೀಡಿ, ಅದರ ಜೀವವನ್ನು ಉಳಿಸಿದ್ದಾರೆ ಎಂಬ ಶೀರ್ಷಿಕೆ ನೀಡಿ ಇದರ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದೆ.

ವಿಡಿಯೋದಲ್ಲಿ ಪ್ರಜ್ಞಾಹೀನ ಕೋತಿಯ ಮೇಲೆ ತೋಮರ್ ಸಿಪಿಆರ್ ಮಾಡುತ್ತಿರುವುದು, ಹಿನ್ನಲೆಯಲ್ಲಿ ಯಾರೋ “ಇಸ್ಕೋ ಥೋಡಾ ಸಾ ಪಾನಿ ಔರ್ ದೋ. ಥೋಡಾ ಪಾನಿ ಡಾಲ್ ದೋ ಅಂದರೆ ಇನ್ನಷ್ಟು ನೀರು ಕೊಡಿ. ಅದರ ಮೇಲೆ ಸ್ವಲ್ಪ ನೀರು ಸುರಿಯಿರಿ ಎಂದು ಹೇಳುತ್ತಿರುವುದು ಕೇಳುತ್ತದೆ.


ವಿಡಿಯೋ ಮುಂದುವರಿದಂತೆ, ತೋಮರ್ ಕೋತಿಯ ಮುಂಭಾಗದ ಕಾಲುಗಳನ್ನು ಹಿಡಿದುಕೊಂಡು ಅದರ ಹಿಂಗಾಲುಗಳ ಮೇಲೆ ನಿಲ್ಲಲು ಸಹಾಯ ಮಾಡಿದರು. ಕ್ಲಿಪ್‌ನ ಕೊನೆಯಲ್ಲಿ ಕೋತಿಗೆ ಪ್ರಜ್ಞೆ ಮರಳಿ ಬಂದಿದೆ. ತೋಮರ್ ಅದರ ಮೇಲೆ ನೀರನ್ನು ಸುರಿಯುತ್ತಿದ್ದಂತೆ ಅದು ಅತ್ತಿತ್ತ ಜಿಗಿಯ ತೊಡಗುತ್ತದೆ. ಗುರುವಾರ ಹಂಚಿಕೊಳ್ಳಲಾದ ಈ ವಿಡಿಯೋ ಹಲವಾರು ವೀಕ್ಷಣೆಗಳನ್ನು ಗಳಿಸಿದೆ. ಅನೇಕ ವೀಕ್ಷಕರು ಅಧಿಕಾರಿಯ ಪ್ರಯತ್ನಗಳನ್ನು ಶ್ಲಾಘಿಸಲು ಕಾಮೆಂಟ್‌ ಮಾಡಿದ್ದಾರೆ.

Continue Reading

ಕ್ರಿಕೆಟ್

Team India T20 World Cup: ಚಿಂಟುವಿನ ಆಸೆ ನೆರವೇರಿಸಲು ಟೀಮ್​ ಇಂಡಿಯಾ ಜತೆ ನ್ಯೂಯಾರ್ಕ್​ಗೆ ತೆರಳಿದ ತಾಯಿ

Team India T20 World Cup: 2007ರಲ್ಲಿ ನಡೆದಿದ್ದ ಚೊಚ್ಚಲ ಆವೃತ್ತಿಯಲ್ಲಿ ಕಪ್​ ಗೆದ್ದ ಬಳಿಕ ಇದುವರೆಗೆ ಭಾರತ(Team India) ಕಪ್​ ಗೆದಿಲ್ಲ. 17 ವರ್ಷಗಳ ಬಳಿಕ ಮತ್ತೊಂದು ಕಪ್​ ಗೆಲ್ಲುವ ಇರಾದೆಯೊಂದಿಗೆ ಆಟಗಾರರು ಕಣಕ್ಕಿಳಿಯಲಿದ್ದಾರೆ. ಇದೀಗ ಡ್ರೀಮ್​ ಇಲೆವೆನ್​ನ(Dream11) ಜಾಹೀರಾತೊಂದು ಭಾರೀ ಸದ್ದು ಮಾಡುತ್ತಿದೆ.

VISTARANEWS.COM


on

Team India Dream 11
Koo

ಮುಂಬಯಿ: ಟಿ20 ವಿಶ್ವಕಪ್​ ಟೂರ್ನಿ(T20 World Cup 2024) ಇನ್ನೆರಡು ದಿನಗಳಲ್ಲಿ ಕಾವೇರಲಿದೆ. ಭಾರತ(Team India T20 World Cup) ತನ್ನ ಮೊದಲ ಪಂದ್ಯವನ್ನು ಜೂನ್​ 5ರಂದು ಐರ್ಲೆಂಡ್​ ವಿರುದ್ಧ ಆಡುವ ಮೂಲಕ ಅಭಿಯಾನ ಆರಂಭಿಸಲಿದೆ. 2007ರಲ್ಲಿ ನಡೆದಿದ್ದ ಚೊಚ್ಚಲ ಆವೃತ್ತಿಯಲ್ಲಿ ಕಪ್​ ಗೆದ್ದ ಬಳಿಕ ಇದುವರೆಗೆ ಭಾರತ(Team India) ಕಪ್​ ಗೆದಿಲ್ಲ. 17 ವರ್ಷಗಳ ಬಳಿಕ ಮತ್ತೊಂದು ಕಪ್​ ಗೆಲ್ಲುವ ಇರಾದೆಯೊಂದಿಗೆ ಆಟಗಾರರು ಕಣಕ್ಕಿಳಿಯಲಿದ್ದಾರೆ. ಇದೀಗ ಡ್ರೀಮ್​ ಇಲೆವೆನ್​ನ(Dream11) ಜಾಹೀರಾತೊಂದು ಭಾರೀ ಸದ್ದು ಮಾಡುತ್ತಿದೆ.

ಭಾರತ ತಂಡ ಉತ್ತಮವಾಗಿ ಆಡು ಕಪ್​ ಗೆಲ್ಲಲಿ ಎನ್ನುವ ಪ್ರಧಾನ ಗುರಿಯೊಂದಿಗೆ ಡ್ರೀಮ್​ ಇಲೆವೆನ್​ ಜಾಹೀರಾತೊಂದನ್ನು ಬಿಡುಗಡೆ ಮಾಡಿದೆ. ಇದಲ್ಲಿ ಪುಟ್ಟ ಮಗು ಭಾರತ ತಂಡ ಜೆರ್ಸಿ ತೊಟ್ಟು ತನ್ನ ತಾಯಿಯ ಬಳಿ ನನ್ನ ತಂದೆ, ಸಹೋದರ ಭಾರತ ತಂಡ ವಿಶ್ವಕಪ್​ ಗೆದ್ದಿರುವುದನ್ನು ನೋಡಿದ್ದಾರೆ. ಆದರೆ ನಾನು ಯಾವಾಗ ಈ ಸುಂದರ ಕ್ಷಣವನ್ನು ನೋಡಲು ಸಾಧ್ಯ. ಈ ಬಾರಿ ಖಂಡಿತವಾಗಿಯೂ ನೋಡಲು ಸಾಧ್ಯವೇ? ಎಂದು ಪ್ರಶ್ನೆ ಮಾಡುತ್ತಾನೆ. ಈ ವಿಡಿಯೊವನ್ನು ತಾಯಿ ಟೀಮ್​ ಇಂಡಿಯಾದ ಆಟಗಾರರಿಗೆ ತೋರಿಸಿ ನೀವು ಏನು ಮಾಡುತ್ತೀರಾ ಎಂದು ನನಗೆ ತಿಳಿದಿಲ್ಲ ನನ್ನ ಮಗ ಚಿಂಟುವಿನ ಆಸೆಯನ್ನು ಈ ಬಾರಿ ಈಡೇರಿಸಲೇ ಬೇಕೆಂದು ಮಗುವಿನ ತಾಯಿ ಆಟಗಾರರಿಗೆ ಖಡಕ್​ ಎಚ್ಚರಿಕೆಯ ಸಂದೇಶ ನೀಡಿದ್ದಾರೆ.

ಇದನ್ನೂ ಓದಿ T20 World Cup 2007: ಚೊಚ್ಚಲ ಟಿ20 ವಿಶ್ವಕಪ್ ಭಾರತ-ಪಾಕ್​ ಫೈನಲ್​ ಪಂದ್ಯದ ಮೆಲುಕು ನೋಟ

ಈ ಬಾರಿಯ ಟೂರ್ನಿಗೆ ಸಿದ್ಧತೆ ಹೇಗಿದೆ ಎಂದು ಕೇಳಿದಾಗ ರೋಹಿತ್​ ನಾವು ಕಠಿಣ ತರಬೇತಿ ಪಡೆಯುತ್ತಿದ್ದೇವೆ ಎನ್ನುತ್ತಾರೆ. ಈ ವೇಳೆ ಚಿಂಟು ತಾಯಿ ನೋಡುತ್ತಿದ್ದೇನೆ ನಿಮ್ಮ ತಯಾರಿಯನ್ನು… ಹೀಗೆ ಅಭ್ಯಾಸ ನಡೆಸಿದರೆ ಕಪ್​ ಗೆಲ್ಲಲು ಸಾಧ್ಯವೇ ಎನ್ನುತ್ತಾರೆ. ಈ ವೇಳೆ ಉಪನಾಯಕ ಹಾರ್ದಿಕ್​ ಪಾಂಡ್ಯ ನೀವು ಆಶೀರ್ವಾದ ಮಾಡಿ ಸಾಕು ಉಳಿದದ್ದು ನಾವು ನೋಡಿಕೊಳ್ಳುತ್ತೇವೆ ಎನ್ನುತ್ತಾರೆ. ನಾವು ವಿಶ್ವದ ನಂ.1 ತಂಡ ಎಂದು ರೋಹಿತ್​ ಹೇಳುತ್ತಾರೆ. ಆಗ ಈ ತಾಯಿ ತಾನು ಈ ವಿಶ್ವದ ನಂ.1 ಮಮ್ಮಿ ಎಂದು ಹೇಳುತ್ತಾರೆ. ಈ ವೇಳೆ ಜಡೇಜಾ ಮಮ್ಮಿಜೀ ಇದು ಕ್ರಿಕೆಟ್​ ಎಂದು ಹೇಳುತ್ತಾರೆ. ಇದಕ್ಕೆ ಮಮ್ಮಿ ಹಾ… ಇದು ಕ್ರಿಕೆಟ್..​ ಬ್ಯಾಟ್​, ವಿಕೆಟ್​ ಮತ್ತು ಚೆಂಡು ತಂದು ಅಭ್ಯಾಸ ಆರಂಭಿಸಿ ಎಂದು ಹೇಳುವ ಮೂಲಕ ಕೋಚಿಂಗ್​ ಮಾಡುತ್ತಾರೆ.

ಈ ವಿಡಿಯೊವನ್ನು ಬಿಸಿಸಿಐ ತನ್ನ ಅಧಿಕೃತ ಟ್ವಿಟರ್​ ಎಕ್ಸ್​ನಲ್ಲಿ ಹಂಚಿಕೊಂಡು, ವಿಶ್ವಕಪ್‌ಗಳು ಅಭಿಮಾನಿಗಳ ಶಕ್ತಿಯ ಜತೆಗೆ ಈ ಬಾರಿ ತಾಯಂದಿರ ಹರ್ಷೋದ್ಗಾರ ಜೋರಾಗಿರಲಿವೆ. ‘ಮಮ್ಮಿ ಕೆ ಮ್ಯಾಜಿಕ್ ಕೆ ಸಾಥ್'(ತಾಯಿಯ ವಿಶೇಷ ಬೆಂಬಲದೊಂದಿಗೆ) ಟೀಮ್​ ಇಂಡಿಯಾ ವಿಶ್ವಕಪ್​ ಗೆಲ್ಲಲು ಸಜ್ಜಾಗಿದೆ ಎಂದು ಬರೆದುಕೊಂಡಿದೆ.

ಭಾರತ ತಂಡ: ರೋಹಿತ್ ಶರ್ಮಾ (ನಾಯಕ), ಹಾರ್ದಿಕ್ ಪಾಂಡ್ಯ (ಉಪನಾಯಕ), ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್, ರಿಷಭ್ ಪಂತ್ (ವಿಕೆಟ್​ ಕೀಪರ್​), ಸಂಜು ಸ್ಯಾಮ್ಸನ್ (ವಿಕೆಟ್​ ಕೀಪರ್​), ಶಿವಂ ದುಬೆ, ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲದೀಪ್ ಯಾದವ್, ಯುಜ್ವೇಂದ್ರ ಚಾಹಲ್, ಅರ್ಶದೀಪ್​ ಸಿಂಗ್​, ಜಸ್​ಪ್ರೀತ್​ ಬುಮ್ರಾ, ಮೊಹಮ್ಮದ್​ ಸಿರಾಜ್. ಮೀಸಲು ಆಟಗಾರರು ಶುಭಮನ್ ಗಿಲ್, ರಿಂಕು ಸಿಂಗ್, ಖಲೀಲ್ ಅಹ್ಮದ್ ಮತ್ತು ಅವೇಶ್ ಖಾನ್.

Continue Reading
Advertisement
Viral Video
ವೈರಲ್ ನ್ಯೂಸ್1 min ago

Viral Video: KSRTC ಬಸ್‌ನಲ್ಲೇ ಮಹಿಳೆಗೆ ಹೆರಿಗೆ ಮಾಡಿಸಿದ ವೈದ್ಯರು! ಡ್ರೈವರ್‌ ಕಾರ್ಯಕ್ಕೆ ಮೆಚ್ಚುಗೆಯ ಮಹಾಪೂರ

Donald Trump
ವಿದೇಶ7 mins ago

ʼಹಷ್‌ ಮನಿʼ ಪ್ರಕರಣದಲ್ಲಿ ಟ್ರಂಪ್‌ ದೋಷಿ; ತೀರ್ಪು ಪ್ರಕಟಗೊಂಡ ಬೆನ್ನಲ್ಲೇ ಅಮೆರಿಕದ ಮಾಜಿ ಅಧ್ಯಕ್ಷರಿಗೆ ಶತಕೋಟಿ ರೂ. ನಷ್ಟ

Nandamuri Balakrishna pushed incident Anjali breaks silence
South Cinema15 mins ago

Nandamuri Balakrishna: ವೇದಿಕೆ ಮೇಲೆ ತಳ್ಳಿದ್ದ ಬಾಲಯ್ಯ ಬಗ್ಗೆ ಕೊನೆಗೂ ಪ್ರತಿಕ್ರಿಯೆ ಕೊಟ್ಟ ನಟಿ ಅಂಜಲಿ!

T20 World Cup 2024
ಕ್ರಿಕೆಟ್16 mins ago

T20 World Cup 2024: ಟಿ20 ವಿಶ್ವಕಪ್​ ಪಂದ್ಯ ನಡೆಯುವ ತಾಣ,ಭಾರತದ ಪಂದ್ಯಗಳ ಪ್ರಸಾರದ ಮಾಹಿತಿ ಹೀಗಿದೆ

Shatru Bhairavi yaga ಶತ್ರು ಭೈರವಿ ಯಾಗ
ರಾಜಕೀಯ37 mins ago

ಮಾರಣ ಶತ್ರು ಭೈರವಿ ಯಾಗ ಎದುರಿಸಲು ರಕ್ಷಣಾಕವಚ ಮಾಡಿಸಿದ ಡಿಕೆಶಿ! ಹೀಗಿರುತ್ತೆ ನೋಡಿ ಯಾಗ

T20 World Cup 2024
ಕ್ರಿಕೆಟ್53 mins ago

T20 World Cup 2024: ಟಿ20 ವಿಶ್ವಕಪ್​ಗೆ ಕ್ಷಣಗಣನೆ; ಭಾರತ ಸೇರಿ ಬಲಿಷ್ಠ ತಂಡಗಳ ಪಂದ್ಯದ ವೇಳಾಪಟ್ಟಿ ಇಲ್ಲಿದೆ

Shilpa Shetty Shares Special Video From KD Kannada Movie
ಸ್ಯಾಂಡಲ್ ವುಡ್55 mins ago

Shilpa Shetty: ʻಕೆಡಿʼಸಿನಿಮಾ ಶೂಟಿಂಗ್‌ ಮುಗಿಸಿ ಹೊಸ ವಿಡಿಯೊ ಹಂಚಿಕೊಂಡ ಶಿಲ್ಪಾ ಶೆಟ್ಟಿ!

World No Tobacco Day
ಆರೋಗ್ಯ1 hour ago

World No Tobacco Day: ಇಂದು ವಿಶ್ವ ತಂಬಾಕು ರಹಿತ ದಿನ; ತಂಬಾಕು ಸೇವನೆಯಿಂದ ವರ್ಷಕ್ಕೆ 60 ಲಕ್ಷ ಜನರ ಸಾವು!

Air India Flight
ದೇಶ1 hour ago

Air India Flight: ಏರ್ ಇಂಡಿಯಾ ವಿಮಾನ 20 ಗಂಟೆ ವಿಳಂಬ; ಎಸಿ ಇಲ್ಲದೆ ಪ್ರಜ್ಞೆ ತಪ್ಪಿ ಬಿದ್ದ ಪ್ರಯಾಣಿಕರು

PM Narendra Modi
ದೇಶ1 hour ago

PM Narendra Modi: ಕನ್ಯಾಕುಮಾರಿಯಲ್ಲಿ ʼನಮೋʼ- ಪ್ರಧಾನಿ ಮೋದಿಯ 33 ವರ್ಷ ಹಳೆಯ ಫೊಟೋ ವೈರಲ್‌

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Assault Case in Shivamogga
ಕ್ರೈಂ21 hours ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ3 days ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

tumkur murder
ತುಮಕೂರು3 days ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

Karnataka Weather Forecast
ಮಳೆ4 days ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ5 days ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

Basavanagudi News
ಬೆಂಗಳೂರು5 days ago

Basavanagudi News : ಪೂಜಾ ಸಾಮಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

Karnataka Rain
ಮಳೆ6 days ago

Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

dina bhavishya read your daily horoscope predictions for May 23 2024
ಭವಿಷ್ಯ1 week ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ1 week ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ1 week ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

ಟ್ರೆಂಡಿಂಗ್‌