Love Proposal Day Look: ಲವ್‌ ಪ್ರಪೋಸ್‌ ಮಾಡುವ ಯುವಕರ ಸ್ಟೈಲಿಂಗ್‌ಗೆ 5 ಸಿಂಪಲ್‌ ಟಿಪ್ಸ್ - Vistara News

ಫ್ಯಾಷನ್

Love Proposal Day Look: ಲವ್‌ ಪ್ರಪೋಸ್‌ ಮಾಡುವ ಯುವಕರ ಸ್ಟೈಲಿಂಗ್‌ಗೆ 5 ಸಿಂಪಲ್‌ ಟಿಪ್ಸ್

ವ್ಯಾಲೆಂಟೈನ್ಸ್ ವೀಕ್‌ನಲ್ಲಿ ಎರಡನೇಯ ದಿನ ಪ್ರಪೋಸ್‌ ಡೇ. ಈ ದಿನದಂದು ಸಾಕಷ್ಟು ಯುವಕರು ಲವ್‌ ಪ್ರಪೋಸ್ ಮಾಡಲು ಬಯಸುತ್ತಾರೆ. ಅಂತಹ ಯುವಕರು ಹೇಗೆಲ್ಲಾ ಇಂಪ್ರೆಸ್ಸಿವ್‌ ಸ್ಟೈಲಿಂಗ್‌ ಮಾಡಬಹುದು ಎಂಬುದರ (Love proposal day look) ಬಗ್ಗೆ ಮೆನ್ಸ್ ಸ್ಟೈಲಿಸ್ಟ್‌ಗಳು ಒಂದೈದು ಸಿಂಪಲ್‌ ಟಿಪ್ಸ್‌ ತಿಳಿಸಿದ್ದಾರೆ.

VISTARANEWS.COM


on

Love Proposal Day Look
ಚಿತ್ರಕೃಪೆ : ಪಿಕ್ಸೆಲ್‌
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಶೀಲಾ ಸಿ. ಶೆಟ್ಟಿ, ಬೆಂಗಳೂರು
ಈ ವರ್ಷದ ವ್ಯಾಲೆಂಟೈನ್ಸ್ ವೀಕ್‌ನಲ್ಲಿ ಎರಡನೇಯ ದಿನ ಪ್ರಪೋಸ್‌ ಡೇ. ಈ ದಿನದಂದು ಲೆಕ್ಕವಿಲ್ಲದಷ್ಟು ಯುವಕರು ಲವ್‌ ಪ್ರಪೋಸ್ ಮಾಡುತ್ತಾರೆ ಎನ್ನುತ್ತದೆ ಸಮೀಕ್ಷೆಯೊಂದು. ಇನ್ನು ಈ ದಿನದಂದು ಪ್ರೇಮಿಯನ್ನು ಇಂಪ್ರೆಸ್‌ ಮಾಡಲು ಹುಡುಗರ ಕೇವಲ ಮಾತುಗಳು ಹಾಗೂ ಗಿಫ್ಟ್ ಮಾತ್ರ ಸಾಲುವುದಿಲ್ಲ! ಅದರೊಂದಿಗೆ ಧರಿಸುವ ಡ್ರೆಸ್‌ಕೋಡ್‌ ಹಾಗೂ ಡ್ರೆಸ್ಸಿಂಗ್‌ ಸೆನ್ಸ್ ಕೂಡ ಇಂಪ್ರೆಸ್ಸಿವ್‌ (Love proposal day look) ಆಗಿರಬೇಕಾಗುತ್ತದೆ. ಇದು ಎಂತಹ ಹುಡುಗಿಯರನ್ನು ಆಕರ್ಷಿಸಬಲ್ಲದು. ಹಾಗಾಗಿ ಈ ದಿನದಂದು ಪ್ರಪೋಸ್‌ ಮಾಡಲು ಬಯಸುವ ಪುರುಷರು ಯಾವ ಬಗೆಯ ಡ್ರೆಸ್‌ಕೋಡ್‌ನಲ್ಲಿ ಕಾಣಿಸಿಕೊಂಡರೇ ಉತ್ತಮ? ಹೇಗೆಲ್ಲಾ ಸ್ಟೈಲಿಂಗ್‌ ಮಾಡಿ ಇಂಪ್ರೆಸ್‌ ಮಾಡಬಹುದು ಎಂಬುದರ ಬಗ್ಗೆ ಮೆನ್ಸ್ ಸ್ಟೈಲಿಸ್ಟ್‌ಗಳು ಒಂದೈದು ಟಿಪ್ಸ್‌ ತಿಳಿಸಿದ್ದಾರೆ.

Dress code should suit the personality

ಪರ್ಸನಾಲಿಟಿಗೆ ತಕ್ಕಂತಿರಲಿ ಡ್ರೆಸ್‌ಕೋಡ್‌

ಯುವಕರ ಪರ್ಸನಾಲಿಟಗೆ ತಕ್ಕಂತೆ ಡ್ರೆಸ್‌ಕೋಡ್‌ ಆಯ್ಕೆ ಮಾಡುವುದು ಉತ್ತಮ. ಪ್ರಪೋಸ್‌ ಮಾಡುವ ಹುಡುಗಿಯನ್ನು ಇದು ಇಂಪ್ರೆಸ್‌ ಮಾಡುವಂತಿರಬೇಕು. ಉದಾಹರಣೆಗೆ., ಯುವಕರ ಎತ್ತರ ಹಾಗೂ ಬಾಡಿ ಮಾಸ್‌ ಇಂಡೆಕ್ಸ್‌ಗೆ ಹೊಂದುವಂತಿರಬೇಕು.

ಯುವತಿಯ ಅಭಿರುಚಿಗೆ ಹೊಂದುವಂತಿರಲಿ

ಪ್ರಪೋಸ್‌ ಮಾಡುವ ಯುವತಿಯ ಅಭಿರುಚಿಯನ್ನು ಮೊದಲೇ ತಿಳಿದುಕೊಂಡಿರಬೇಕು. ಆಕೆ ಫಾರ್ಮಲ್ಸ್, ಕ್ಯಾಶುವಲ್‌ ಅಥವಾ ದೇಸಿ ಲುಕ್‌ ಪ್ರಿಯಳೇ ಎಂಬುದನ್ನುಮೊದಲೇ ಅರಿತುಕೊಂಡು ಆಕೆಗೆ ಇಷ್ಟವಾಗುವಂತಹ ರೀತಿಯಲ್ಲಿ ಔಟ್‌ಫಿಟ್‌ ಧರಿಸಿ ಪ್ರಪೋಸ್‌ ಮಾಡುವುದು ಉತ್ತಮ.

Dress code should be trendy

ಡ್ರೆಸ್‌ಕೋಡ್‌ ಟ್ರೆಂಡಿಯಾಗಿರಲಿ

ಹಳೆ ಜಮಾನದಂತಿರುವ ಔಟ್‌ಫಿಟ್‌ ಸೈಡಿಗಿಟ್ಟು, ಇದೀಗ ಟ್ರೆಂಡಿಯಾಗಿರುವ ಡ್ರೆಸ್‌ಕೋಡ್‌ ಧರಿಸಿ. ಅದು ಟ್ರೆಂಡ್‌ನಲ್ಲಿದ್ದರೇ, ನೀವೂ ಕೂಡ ಅಪ್‌ಡೇಟೆಡ್‌ ಎಂದು ತಿಳಿದುಕೊಳ್ಳುತ್ತಾರೆ. ಇದು ನಿಮಗೆ ಸಹಕಾರಿಯಾಗಬಹುದು.

ರೆಡ್‌ ಶೇಡ್‌ ಔಟ್‌ಫಿಟ್‌ಗೆ ಜೋತು ಬೀಳಬೇಡಿ

ಕೆಲವರು ವ್ಯಾಲೆಂಟೈನ್ಸ್ ವೀಕ್‌ ಎಂದಾಕ್ಷಣಾ ರೆಡ್‌ ಶೇಡ್‌ಗೆ ಜೋತು ಬೀಳುತ್ತಾರೆ. ಇದು ಹುಡುಗಿಯರಿಗೆ ಚೆನ್ನಾಗಿ ಕಾಣುತ್ತದೆ. ಯುವಕರು ಈ ಶೇಡ್‌ ಆಯ್ಕೆ ಮಾಡುವಾಗ ಎಚ್ಚರವಹಿಸಬೇಕಾಗುತ್ತದೆ. ಯಾಕೆಂದರೇ, ರೆಡ್‌ಮಯವಾಗಿರುವ ಡ್ರೆಸ್‌ಕೋಡ್‌ ಹುಡುಗರನ್ನು ಜೋಕರ್‌ನಂತೆ ಬಿಂಬಿಸಬಹುದು. ಹಾಗಾಗಿ ಎಚ್ಚರವಹಿಸಿ ಆಯ್ಕೆ ಮಾಡಿ.

Prefer a smart look

ಸ್ಮಾರ್ಟ್ ಲುಕ್‌ಗೆ ಆದ್ಯತೆ ನೀಡಿ

ಎಲ್ಲದಕ್ಕಿಂತ ಹೆಚ್ಚಾಗಿ ನೀವು ಧರಿಸುವ ಉಡುಪು ನೋಡಿದಾಕ್ಷಣ ಆಕರ್ಷಕವಾಗಿ ಕಾಣಬೇಕು. ನಿಮಗೆ ಫಿಟ್‌ ಆಗಿರುವಂತೆ ಬಿಂಬಿಸಬೇಕು. ಪ್ಲಂಪಿಯಾಗಿದ್ದಲ್ಲೂ ಯೋಚನೆ ಬೇಡ. ನಿಮಗೆ ಹೊಂದುವಂತಹ ಔಟ್‌ಫಿಟ್‌ ಆಯ್ಕೆ ಮಾಡಿ. ಮುಖದಲ್ಲಿ ಮಂದಹಾಸ ತುಂಬಿರಲಿ. ಉಡುಪಿನೊಂದಿಗೆ ನಿಮ್ಮ ಮಾತುಗಳು ಸಕಾರತ್ಮಕವಾಗಿರಲಿ.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Model Fashion Life: ಕಲಾವಿದೆ ಸ್ಮಿತಾ ಪ್ರಕಾಶ್ ವಿಂಟರ್‌ ಫ್ಯಾಷನ್‌ ಝಲಕ್‌ ಹೀಗಿದೆ!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಫ್ಯಾಷನ್

Anant Ambani Radhika Merchant Pre Wedding: ಅಂಬಾನಿ ಫ್ಯಾಮಿಲಿಯ ಕ್ರ್ಯೂಸ್ ಟೂರ್‌ನಲ್ಲಿ ಸ್ಟಾರ್‌ಗಳ ಮಕ್ಕಳ ಲುಕ್‌ ಹೇಗಿದೆ ನೋಡಿ!

ಅಂಬಾನಿ ಫ್ಯಾಮಿಲಿಯ 2ನೇ ಲಕ್ಷುರಿ ಕ್ರ್ಯೂಸ್‌ ಪ್ರಿ -ವೆಡ್ಡಿಂಗ್‌ ಸೆಲೆಬ್ರೇಷನ್‌ನ (Anant Ambani Radhika Merchant Pre Wedding) ಟೂರಿಂಗ್‌ ಸಮಯದಲ್ಲಿ ಬಾಲಿವುಡ್‌ ತಾರೆಯರ ಮಕ್ಕಳು ಮಾತ್ರ ಜೆನ್‌ ಜಿ ಹಾಲಿ ಡೇ ಲುಕ್‌ನಲ್ಲಿ ಕಾಣಿಸಿಕೊಂಡರು. ಹಾಗಾದಲ್ಲಿ, ಅವರೆಲ್ಲರ ಡ್ರೆಸ್‌ಕೋಡ್‌ ಹೇಗಿತ್ತು? ಏನಿದು ಜೆನ್‌ ಜಿ ಹಾಲಿ ಡೇ ಲುಕ್‌? ಈ ಕುರಿತಂತೆ ಫ್ಯಾಷನ್‌ ವಿಮರ್ಶಕರು ವಿವರಿಸುವುದರೊಂದಿಗೆ ವಿಶ್ಲೇಷಿಸಿದ್ದಾರೆ.

VISTARANEWS.COM


on

Anant Ambani Radhika Merchant Pre Wedding
ಚಿತ್ರಗಳು: ಲಕ್ಷುರಿ ಕ್ರ್ಯೂಸ್‌ ಪ್ರಿ-ವೆಡ್ಡಿಂಗ್‌ ಸೆಲೆಬ್ರೇಷನ್‌ನಲ್ಲಿ ಜೆನ್‌ ಜಿ ಹಾಲಿ ಡೇ ಲುಕ್‌ನಲ್ಲಿ ಸ್ಟಾರ್‌ಗಳ ಮಕ್ಕಳು.
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಲಕ್ಷುರಿ ಕ್ರ್ಯೂಸ್‌ ಪ್ರಿ -ವೆಡ್ಡಿಂಗ್‌ ಸೆಲೆಬ್ರೇಷನ್‌ನ (Anant Ambani Radhika Merchant Pre Wedding) ಹಾಲಿ ಡೇ ಲುಕ್‌ನಲ್ಲಿ ಸ್ಟಾರ್ಸ್ ಮಕ್ಕಳು ಅತ್ಯಾಕಷರ್ಕವಾಗಿ ಕಾಣಿಸಿಕೊಂಡರಲ್ಲದೇ, ತಮ್ಮದೇ ಆದ ಟ್ರಾವೆಲ್‌ ಡ್ರೆಸ್‌ಕೋಡ್‌ ಥೀಮ್‌ ಪಾಲಿಸಿದರು. ಹೌದು, ಮೂರು ದಿನಗಳ ಕಾಲ ಇಟಲಿಯಿಂದ ದಕ್ಷಿಣ ಫ್ರಾನ್ಸ್‌ ತನಕ ನೀರಿನ ಮೇಲೆ ಲಕ್ಷುರಿ ಕ್ರ್ಯೂಸ್‌ನಲ್ಲಿ ನಡೆದ ಅಂಬಾನಿ ಫ್ಯಾಮಿಲಿಯ ರಾಧಿಕಾ ಮರ್ಚೆಂಟ್‌-ಆನಂತ್‌ ಅಂಬಾನಿಯ ಪ್ರಿ –ವೆಡ್ಡಿಂಗ್‌ನ ನಾನಾ ಕಾರ್ಯಕ್ರಮಗಳಲ್ಲಿ , ಹಾಲಿ ಡೇ ಎಂಜಾಯ್‌ ಮಾಡುವಂತಹ ಥೀಮ್‌ಗಳಿಗೆ ತಕ್ಕಂತೆ ಸೆಲೆಬ್ರೆಟಿಗಳೆಲ್ಲರೂ ಕಾಣಿಸಿಕೊಂಡರು. ಆದರೆ, ಅವರಲ್ಲಿ ಈ ಜನರೇಷನ್‌ನ ಸ್ಟಾರ್ ಮಕ್ಕಳು ಮಾತ್ರ, ಜೆನ್‌ ಜಿ ಟ್ರಾವೆಲ್‌ ಡ್ರೆಸ್‌ಕೋಡ್‌ನಲ್ಲಿ ಕಾಣಿಸಿಕೊಂಡು ಬಿಂದಾಸ್‌ ಸ್ಟೈಲ್‌ ಸ್ಟೇಟ್‌ಮೆಂಟ್‌ಗೆ ನಾಂದಿ ಹಾಡಿದರು. ಪ್ರತಿಯೊಬ್ಬರ ಡ್ರೆಸ್‌ಕೋಡ್‌ ಕೂಡ ಟ್ರೆಂಡಿಯಾಗಿತ್ತಲ್ಲದೇ ಟೀನೇಜ್‌ ಹುಡುಗ-ಹುಡುಗಿಯರನ್ನು ಆಕರ್ಷಿಸುವಲ್ಲಿ ಯಶಸ್ವಿಯಾದವು ಎನ್ನುತ್ತಾರೆ ಫ್ಯಾಷನ್‌ ವಿಮರ್ಶಕರಾದ ಜಿನತ್‌.

ಏನಿದು ಜೆನ್‌ ಜಿ ಹಾಲಿ ಡೇ ಲುಕ್‌

ಜೆನ್‌ ಜಿ ಜನರೇಷನ್‌ ಹಾಲಿ ಡೇ ಲುಕ್‌ ಅವರವರ ಚಾಯ್ಸ್ಗೆ ಸಂಬಂಧಿಸಿದ್ದು, ಅದು ಫಂಕಿಯಾಗಿರಬಹುದು, ಅವುಗಳಲ್ಲಿ ಜಂಕ್ ಜ್ಯುವೆಲರಿ, ಆಕ್ಸೆಸರೀಸ್‌ ಸೇರಿರಬಹುದು ಇಲ್ಲವೇ ಮಾಡರ್ನ್ ಫ್ಯಾಷನ್‌ ಜೊತೆ ವಿಂಟೇಜ್‌ ಕೂಡ ಮಿಕ್ಸ್ ಆಗಿರಬಹುದು. ಈ ಫ್ಯಾಷನ್‌ನಲ್ಲಿ ಯಾವುದೇ ಸ್ಟೈಲ್‌ ಸ್ಟೇಟ್‌ಮೆಂಟ್‌ಗಳಿಗೆ ರೂಲ್ಸ್ ಇಲ್ಲ! ತಮಗೆ ಇಷ್ಟ ಬಂದಂತಹ ಕಲರ್ಸ್ ಹಾಗೂ ಸ್ಟೈಲ್‌ ಪಾಲಿಸುವುದೇ ಈ ಜೆನ್ ಜಿ ಹಾಲಿ ಡೇ ಲುಕ್‌ನ ವಿಶೇಷತೆ! ಇತ್ತ, ಥೀಮ್‌ಗೂ ಹೊಂದಬೇಕು, ತಮ್ಮಿಷ್ಟದಂತೆಯೂ ಕೂಡ ಧರಿಸಬೇಕು ಎನ್ನುವ ಎರಡು ಕಾನ್ಸೆಪ್ಟ್‌ಗಳನ್ನು ಮಿಕ್ಸ್ ಮ್ಯಾಚ್‌ ಮಾಡಿದ ಸ್ಟಾರ್ಸ್ ಮಕ್ಕಳು, ಹಾಲಿ ಡೇ ಲುಕ್‌ನಲ್ಲಿ ಅಂದವಾಗಿ ಕಾಣಿಸಿಕೊಳ್ಳುವುದರೊಂದಿಗೆ ತಮ್ಮಜನರೇಷನ್‌ನ ಫ್ಯಾಷನ್‌ ಸ್ಟೇಟ್‌ಮೆಂಟ್‌ ಇದೆ ಎಂದು ಬಿಂಬಿಸಿದರು. ಇದು ಇಂದಿನ ಜನರೇಷನ್‌ ಮಕ್ಕಳ ಸ್ಟೈಲ್‌ ಹಾಗೂ ಫ್ಯಾಷನ್‌ ಯಾವುದೇ ಡಿಸೈನರ್‌ ಹಾಗೂ ಸ್ಟೈಲಿಸ್ಟ್‌ಗಳ ಅಭಿಲಾಷೆಯಂತೆ ನಡೆಯುವುದಿಲ್ಲ ಎಂಬುದನ್ನು ತೋರಿಸಿತು. ಹಾಲಿ ಡೇಗೆ ಡಿಸೈನರ್‌ಗಳ ಅಗತ್ಯವಿಲ್ಲ ಎಂಬುದನ್ನು ಕೂಡ ಪ್ರೂವ್‌ ಮಾಡಿತು ಎಂದು ಹೇಳುವ ಫ್ಯಾಷನ್‌ ವಿಮರ್ಶಕರಾದ ಸನಾ ಜೈನ್‌ ಹೇಳುವಂತೆ, ಜೆನ್‌ ಜಿ ಜನರೇಷನ್‌ ಫ್ಯಾಷನ್‌ ಇದೀಗ ಹಿಂದಿನ ಜನರೇಷನ್‌ರವರನ್ನು ಸೆಳೆಯುತ್ತಿದೆ ಎನ್ನುತ್ತಾರೆ.

Bindas Holi day look of children of Bollywood stars

ಬಾಲಿವುಡ್‌ ತಾರೆಯರ ಮಕ್ಕಳ ಬಿಂದಾಸ್‌ ಹಾಲಿ ಡೇ ಲುಕ್‌

ನಟಿ ಸಾರಾ ಅಲಿ ಖಾನ್‌, ಇಬ್ರಾಹಿಂ ಖಾನ್‌, ಶಾರೂಖ್‌ ಮಗಳಾದ ಸುಹಾನಾ ಖಾನ್‌, ನಟಿ ಅನನ್ಯಾ ಪಾಂಡೇ, ನಟಿ ಶನಾಯಾ ಕಪೂರ್‌ ಸೇರಿದಂತೆ ಬಾಲಿವುಡ್‌ ತಾರೆಯರ ಮಕ್ಕಳು ಥೀಮ್‌ ಹೊರತುಪಡಿಸಿಯೂ ಹಾಲಿ ಡೇ ಫ್ಯಾಷನ್‌ನಲ್ಲಿ ಕಾಣಿಸಿಕೊಂಡದ್ದು ಕಂಡು ಬಂದಿತು. ಕ್ರ್ಯೂಸ್‌ ಲ್ಯಾಂಡಿಂಗ್‌ ನಂತರ ಪೋರ್ಟರ್ಸ್‌ಗಳಲ್ಲಿ, ರೋಮ್‌ ಹಾಗೂ ಫ್ರಾನ್ಸ್‌ನ ನಾನಾ ಸ್ಥಳಗಳಲ್ಲಿ ಟ್ರೆಂಡಿ ಹಾಲಿ ಡೇ ಲುಕ್‌ನಲ್ಲಿ ಕಾಣಿಸಿಕೊಂಡದ್ದು, ಅವರಲ್ಲಿನ ಟ್ರಾವೆಲ್‌ ಡ್ರೆಸ್‌ಕೋಡ್‌ ಪ್ರೇಮವನ್ನು ಪ್ರತಿಬಿಂಬಿಸಿತು. ಇದು ಬದಲಾದ ಜನರೇಷನ್‌ನ ಹಾಲಿ ಡೇ ಫ್ಯಾಷನ್‌ ಅನ್ನು ಹೈಲೈಟ್‌ ಮಾಡಿದೆ ಎಂದು ವಿಮರ್ಶಕರು ವಿಶ್ಲೇಷಿಸಿದ್ದಾರೆ.

( ಲೇಖಕಿ : ಫ್ಯಾಷನ್‌ ಲೇಖಕಿ )

ಇದನ್ನೂ ಓದಿ: Anant Ambani Radhika Merchant Pre Wedding: ಹೀಗಿದೆ ಅಂಬಾನಿ ಫ್ಯಾಮಿಲಿಯ ಲಕ್ಷುರಿ ಕ್ರ್ಯೂಸ್‌ ಪ್ರಿ-ವೆಡ್ಡಿಂಗ್‌ ಸೆಲೆಬ್ರೇಷನ್‌ನ ಡ್ರೆಸ್‌ ಕೋಡ್ಸ್!

Continue Reading

ಫ್ಯಾಷನ್

Saree Fashion: ರಫಲ್‌ ಡಿಸೈನ್‌ನಲ್ಲಿ ಬಂದಿದೆ ಜಾರ್ಜೆಟ್ ಲೆಹೆಂಗಾ ಸೀರೆ!

ಇದೀಗ ಜಾರ್ಜೆಟ್‌ ಫ್ಯಾಬ್ರಿಕ್‌ನಲ್ಲಿ ಫ್ಲೋರಲ್‌ ಪ್ರಿಂಟ್ಸ್‌ನ ರಫಲ್‌ ವಿನ್ಯಾಸದ ಲೆಹೆಂಗಾ ಸೀರೆಗಳು (Saree Fashion) ಸೀರೆಲೋಕಕ್ಕೆ ಕಾಲಿಟ್ಟಿವೆ. ಉಟ್ಟಾಗ ಡಿಫರೆಂಟಾಗಿ ಕಾಣಿಸುವ ಈ ಸೀರೆಗಳಲ್ಲಿ ಯಾವ್ಯಾವ ಪ್ರಿಂಟ್ಸ್ ಚಾಲ್ತಿಯಲ್ಲಿವೆ? ಎಂಬುದರ ಕುರಿತಂತೆ ಇಲ್ಲಿದೆ ಡಿಟೇಲ್ಸ್.

VISTARANEWS.COM


on

Saree Fashion
ಚಿತ್ರಗಳು: ಉದಿತಿ ಸಿಂಗ್‌, ನಟಿ
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಜಾರ್ಜೆಟ್‌ ರಫಲ್‌ ಲೆಹೆಂಗಾ ಸೀರೆಗಳು (Saree Fashion) ಸೀರೆ ಲೋಕಕ್ಕೆ ಲಗ್ಗೆ ಇಟ್ಟಿವೆ. ಹೌದು. ಇದೀಗ ಜಾರ್ಜೆಟ್‌ ಫ್ಯಾಬ್ರಿಕ್‌ನಲ್ಲಿ, ಫ್ಲೋರಲ್‌ ಪ್ರಿಂಟ್ಸ್ ಇರುವಂತಹ ರಫಲ್‌ ವಿನ್ಯಾಸದ ಬಗೆಬಗೆಯ ಲೆಹೆಂಗಾ ಸೀರೆಗಳು ನಾರಿಯರನ್ನು ಆವರಿಸಿಕೊಂಡಿವೆ. ಉಟ್ಟಾಗ ವಿಭಿನ್ನವಾಗಿ ಕಾಣಿಸುವ ಈ ಸೀರೆಗಳು ಲೆಕ್ಕವಿಲ್ಲದಷ್ಟು ಹೂವುಗಳ ಚಿತ್ತಾರದ ಪ್ರಿಂಟ್ಸ್‌ನಲ್ಲಿ ಬಂದಿವೆ. “ಲೆಹೆಂಗಾ ಸೀರೆಗಳಲ್ಲಿ ಇದೀಗ ಜಾರ್ಜೆಟ್ ಫ್ಯಾಬ್ರಿಕ್‌ನವಕ್ಕೆ ಬೇಡಿಕೆ ಹೆಚ್ಚು. ಅದರಲ್ಲೂ ಫ್ಲೋರಲ್‌ ವಿನ್ಯಾಸದವು ಈ ಸೀಸನ್‌ಗೆ ಹೇಳಿ ಮಾಡಿಸಿದಂತಿರುತ್ತವೆ. ಅಲ್ಲದೇ ಅವುಗಳ ಶೇಡ್‌ಗಳು ಕೂಡ ಮನಸ್ಸನ್ನು ಉಲ್ಲಾಸಿತಗೊಳಿಸುತ್ತವೆ. ಅಂತಹ ಕಲರ್‌ ಕಾಂಬಿನೇಷನ್‌ಗಳಲ್ಲಿ ಈ ಸೀರೆಗಳು ಮಾರುಕಟ್ಟೆಗೆ ಕಾಲಿಟ್ಟಿವೆ” ಎನ್ನುತ್ತಾರೆ ಸೀರೆ ಡಿಸೈನರ್ಸ್ ಚರಿತಾ. ಅವರ ಪ್ರಕಾರ ಜಾರ್ಜೆಟ್‌ ಲೆಹೆಂಗಾ ಸೀರೆಗಳು ಎಲ್ಲರಿಗೂ ಡಿಫರೆಂಟ್‌ ಲುಕ್‌ ನೀಡುತ್ತವೆ ಎನ್ನುತ್ತಾರೆ.

Saree Fashion

ಏನಿದು ಜಾರ್ಜೆಟ್‌ ಲೆಹೆಂಗಾ ಸೀರೆ?

ಇದು ಹೆಸರಿಗೆ ಮಾತ್ರ ಸೀರೆಯಷ್ಟೇ! ಇದನ್ನು ರೆಡಿ ಸೀರೆ ಕೂಡ ಎನ್ನಬಹುದು. ಲೆಹೆಂಗಾ ಶೈಲಿಯಲ್ಲಿ ಅಥವಾ ರಫಲ್‌ ಲೆಹೆಂಗಾ ವಿನ್ಯಾಸದಲ್ಲಿ ಸ್ಟಿಚ್‌ ಮಾಡಲಾಗಿರುತ್ತದೆ. ರೆಡಿಯಾಗಿರುವ ಉಡುಪಿನಂತೆ ಧರಿಸಿದರೇ ಸಾಕು. ನೋಡಲು ಸೀರೆಯಂತೆಯೂ ಕಾಣುತ್ತದೆ. ಇತ್ತ ಲೆಹೆಂಗಾದಂತೆಯೂ ಬಿಂಬಿಸುತ್ತದೆ. ಬ್ಲೌಸ್‌ ಕೂಡ ಈ ಸೆಟ್‌ನೊಳಗೆ ಸೇರಿರುತ್ತದೆ. ಹುಡುಗಿಯರ ಚಾಯ್ಸ್‌ನಲ್ಲಿ ಇದೀಗ ಈ ಸೀರೆಗಳು ಸೇರಿವೆ ಎನ್ನುತ್ತಾರೆ ಸೀರೆ ಎಕ್ಸ್‌ಫರ್ಟ್ಸ್‌. ಅವರು ಹೇಳುವಂತೆ, ಈ ಸೀಸನ್‌ನಲ್ಲಿ ಲೈಟ್‌ವೈಟ್‌ ಇರುವ ಜಾರ್ಜೆಟ್‌ ಫ್ಯಾಬ್ರಿಕ್‌ನವು ಹೆಚ್ಚು ಬೇಡಿಕೆ ಪಡೆದುಕೊಂಡಿವೆ. ಈ ಮೊದಲು ಸಾದಾ ವರ್ಣದವು ಹೆಚ್ಚು ಟ್ರೆಂಡಿಯಾಗಿದ್ದವು. ಇದೀಗ ಪ್ರಿಂಟ್ಸ್ ಅದರಲ್ಲೂ ಸಮ್ಮರ್‌ ಫ್ಲೋರಲ್‌ ಪ್ರಿಂಟ್ಸ್‌ನವು ಹೆಚ್ಚು ಬೇಡಿಕೆ ಸೃಷ್ಟಿಸಿಕೊಂಡಿವೆ. ಲಿಲ್ಲಿ, ಸೇವಂತಿ, ವೆರೈಟಿ ರೋಸ್‌, ಟುಲಿಪ್‌ ಸೇರಿದಂತೆ ನಾನಾ ಬಗೆಯ ಗಾರ್ಡನ್‌ ಪ್ರಿಂಟ್ಸ್ ಕೂಡ ಪ್ರಚಲಿತದಲ್ಲಿವೆ.

Saree Fashion

ಆನ್‌ಲೈನ್‌ನಲ್ಲಿ ಹೆಚ್ಚು ಡಿಸೈನ್ಸ್ ಲಭ್ಯ

ಅಂದಹಾಗೆ, ಈ ಸೀರೆಗಳು ಆನ್‌ಲೈನ್‌ ಸೀರೆ ಶಾಪ್‌ಗಳಲ್ಲಿ ಅತಿ ಹೆಚ್ಚು ಡಿಸೈನ್‌ನಲ್ಲಿ ಲಭ್ಯ. ಈ ಸೀಸನ್‌ನ ಸನ್‌ ಕಲರ್‌ನಿಂದಿಡಿದು, ಪೀಚ್‌, ಪಿಂಕ್‌ ಸೇರಿದಂತೆ ನಾನಾ ಬಗೆಯ ಪಾಸ್ಟೆಲ್‌ ಶೇಡ್‌ಗಳಲ್ಲೂ ದೊರೆಯುತ್ತಿವೆ. ಸೀರೆ ಖರೀದಿಸುವವರು ಅವರವರ ಪರ್ಸನಾಲಿಟಿಗೆ ತಕ್ಕಂತೆ ಸೈಝ್‌ಗೆ ತಕ್ಕಂತೆ ಆಯ್ಕೆ ಮಾಡಿ, ಖರೀದಿಸುವ ಸೌಲಭ್ಯಗಳನ್ನು ಆನ್‌ಲೈನ್‌ ಸೀರೆ ಶಾಪಿಗ್‌ ಸೆಂಟರ್‌ಗಳು ನೀಡಿವೆ ಎನ್ನುತ್ತಾರೆ ಸೀರೆ ಎಕ್ಸ್‌ಫರ್ಟ್‌ ರಕ್ಷಾ.

ಇದನ್ನೂ ಓದಿ: Denim Tube Tops Fashion: ಡೆನಿಮ್‌ನಲ್ಲೂ ಬಂತು ಟ್ಯೂಬ್‌ ಟಾಪ್ ಫ್ಯಾಷನ್‌!

ಜಾರ್ಜೆಟ್‌ ಲೆಹೆಂಗಾ ಸೀರೆ ಆಯ್ಕೆಗೆ 5 ಟಿಪ್ಸ್

  • ಆದಷ್ಟೂ ಲೈಟ್‌ವೈಟ್‌ ಜಾರ್ಜೆಟ್‌ ಖರೀದಿಸಿ.
  • ಗಾರ್ಡನ್‌ ಪ್ರಿಂಟ್ಸ್ ಎಲ್ಲಾ ಸೀಸನ್‌ಗೂ ಹೊಂದುತ್ತವೆ.
  • ಬ್ಲೌಸ್‌ ಸಮೇತ ಸೆಟ್‌ನಲ್ಲಿ ದೊರಕುತ್ತವೆ.
  • ಡ್ರೇಪಿಂಗ್‌ ನೋಡಲು ಆಕರ್ಷಕವಾಗಿರಲಿ.
  • ಫಾಲ್ಸ್ ಹಾಕಿಸುವ ಅಗತ್ಯವಿರುವುದಿಲ್ಲ.

( ಲೇಖಕಿ ಫ್ಯಾಷನ್‌ ಪತ್ರಕರ್ತೆ )

Continue Reading

ಫ್ಯಾಷನ್

Denim Tube Tops Fashion: ಡೆನಿಮ್‌ನಲ್ಲೂ ಬಂತು ಟ್ಯೂಬ್‌ ಟಾಪ್ ಫ್ಯಾಷನ್‌!

ಡೆನಿಮ್‌ನಲ್ಲೂ ಟ್ಯೂಬ್‌ ಟಾಪ್‌ ಫ್ಯಾಷನ್‌ (Denim Tube Tops Fashion) ಬಂದಿದೆ. ಶಾರ್ಟ್ಸ್ ಹಾಗೂ ಪ್ಯಾಂಟ್‌ನೊಂದಿಗೆ ಧರಿಸಿದಾಗ ನೋಡಲು ಕೋ-ಆರ್ಡ್ ಸೆಟ್‌ನಂತೆ ಕಾಣುವ ಇವನ್ನು ಹೇಗೆಲ್ಲಾ ಧರಿಸಬಹುದು? ಯಾವ ಡಿಸೈನ್‌ನವು ಹೆಚ್ಚು ಚಾಲ್ತಿಯಲ್ಲಿವೆ? ಎಂಬುದರ ಬಗ್ಗೆ ಇಲ್ಲಿದೆ ಡಿಟೇಲ್ಸ್.

VISTARANEWS.COM


on

Denim Tube Tops Fashion
ಚಿತ್ರಗಳು: ಸೌಮ್ಯಾ ಟಂಡನ್‌, ನಟಿ
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಡೆನಿಮ್‌ ಟ್ಯೂಬ್‌ ಟಾಪ್‌ಗಳು (Denim Tube Tops Fashion) ಇದೀಗ ಜೆನ್‌ ಜಿ ಹುಡುಗಿಯರನ್ನು ಸವಾರಿ ಮಾಡತೊಡಗಿವೆ. ಹೌದು, ಅಲ್ಟ್ರಾ ಮಾಡರ್ನ್‌ ಹುಡುಗಿಯರ ಫೆವರೇಟ್‌ ಲಿಸ್ಟ್‌ನಲ್ಲಿರುವ ಇವು ಗ್ಲಾಮರಸ್‌ ಲುಕ್‌ ನೀಡುತ್ತಿವೆ. ಮೊದಲೆಲ್ಲಾ ಸಾಫ್ಟ್ ಫ್ಯಾಬ್ರಿಕ್‌ನಲ್ಲಿದ್ದ ಈ ಟ್ಯೂಬ್ ಟಾಪ್‌ಗಳು ಇದೀಗ ಡೆನಿಮ್‌ನಲ್ಲೂ ಬಂದಿರುವುದು ಯುವತಿಯರ ವಾರ್ಡ್ರೋಬ್‌ ಲಿಸ್ಟ್‌ಗೆ ಸೇರಿವೆ ಎನ್ನುತ್ತಾರೆ ಫ್ಯಾಷನಿಸ್ಟ್‌ ನ್ಯಾಸ. ಅವರ ಪ್ರಕಾರ, ಟೀನೇಜ್‌ ಹುಡುಗಿಯರಿಂದಿಡಿದು ಕಾರ್ಪೋರೇಟ್‌ ಕ್ಷೇತ್ರದವರು ಕೂಡ ಈ ಟಾಪ್‌ಗಳ ಪ್ರೇಮಿಗಳು.

Denim Tube Tops Fashion

ಟ್ರೆಂಡಿಯಾಗಿರುವ ಡೆನಿಮ್‌ ಟ್ಯೂಬ್‌ ಟಾಪ್ಟ್

ಇಡೀ ಭುಜವನ್ನು ಎಕ್ಸ್‌ಫೋಸ್‌ ಮಾಡುವ ಆಫ್‌ ಶೋಲ್ಡರ್, ಬಾಡಿಕಾನ್‌, ಕಾರ್ಸೆಟ್ ಶೈಲಿಯವು ಟ್ಯೂಬ್‌ ಟಾಪ್‌ ಡಿಸೈನ್‌ನಲ್ಲಿ ಬಿಡುಗಡೆಗೊಂಡಿವೆ. ಇವುಗಳ ವಿಶೇಷ ಎಂದರೇ, ಬಟನ್‌ ಇರುವಂತವು ಆಗಮಿಸಿವೆ. ವಿಂಟೇಜ್‌ ಬಟನ್‌ನವು ಹೆಚ್ಚು ಬೇಡಿಕೆ ಪಡೆದುಕೊಂಡಿವೆ. ಇನ್ನು ಇತರೇ ಟ್ಯೂಬ್‌ ಟಾಪ್‌ಗಳಿಗೆ ಬಟನ್‌ ಇರುವುದಿಲ್ಲ. ಬದಲಿಗೆ ಸ್ಟ್ರೆಚಬಲ್‌ ಫ್ಯಾಬ್ರಿಕ್‌ ಹೊಂದಿರುತ್ತವೆ. ಎಲಾಸ್ಟಿಕ್‌ನಂತೆ ಎಳೆದಾಗ ಸ್ಟ್ರೆಚ್‌ ಆಗುತ್ತವೆ. ಆದರೆ, ಡೆನಿಮ್‌ನವು ಕೊಂಚ ದಪ್ಪ ಫ್ಯಾಬ್ರಿಕ್‌ ಹೊಂದಿರುವುದರಿಂದ ಇವಕ್ಕೆ ಬಟನ್‌ಗಳನ್ನು ಫಿಕ್ಸ್ ಮಾಡಲಾಗಿರುತ್ತದೆ ಎನ್ನುತ್ತಾರೆ ಸ್ಟೈಲಿಸ್ಟ್ ಜೀವನ್‌.

Denim Tube Tops Fashion

ಡೆನಿಮ್‌ ಟ್ಯೂಬ್‌ ಟಾಪ್‌ ಮಿಕ್ಸ್-ಮ್ಯಾಚ್‌

ಡೆನಿಮ್‌ ಟ್ಯೂಬ್‌ ಟಾಪ್‌ಗಳನ್ನು ನಾನಾ ರೀತಿಯಲ್ಲಿ ಧರಿಸಬಹುದು. ಕೋ ಆರ್ಡ್ ಸೆಟ್‌ನಂತೆ ಬಿಂಬಿಸಬೇಕಾದಲ್ಲಿ ಅವನ್ನು ನಾನಾ ಬಗೆಯ ಜೀನ್ಸ್ ಪ್ಯಾಂಟ್‌ಗಳೊಂದಿಗೆ ಧರಿಸಬಹುದು. ಡೆನಿಮ್‌ ಶಾರ್ಟ್ಸ್ ಹಾಗೂ ಸ್ಕರ್ಟ್ಸ್‌ನೊಂದಿಗೂ ಧರಿಸಬಹುದು. ಡಿಫರೆಂಟ್‌ ಲುಕ್‌ ನೀಡಲು ಇತರೇ ಫ್ಯಾಬ್ರಿಕ್‌ನ ಸ್ಕರ್ಟ್ಸ್ ಅಥವಾ ಪ್ಯಾಂಟ್‌ ಜೊತೆಯೂ ಧರಿಸಬಹುದು. ನಿಮಗೆ ಮಿಕ್ಸ್-ಮ್ಯಾಚ್‌ ಮಾಡುವ ಸ್ಟೈಲಿಂಗ್‌ ಬಗ್ಗೆ ಬೇಸಿಕೆ ಅರಿವಿರಬೇಕಷ್ಟೇ! ಎನ್ನುತ್ತಾರೆ ಸ್ಟೈಲಿಸ್ಟ್‌ಗಳು.

Denim Tube Tops Fashion

ಲೈಟ್‌ವೈಟ್‌ ಫ್ಯಾಬ್ರಿಕ್‌ನ ಆಯ್ಕೆ

“ಡೆನಿಮ್‌ ಟ್ಯೂಬ್‌ ಟಾಪ್‌ಗಳಲ್ಲೂ ಇದೀಗ ಲೈಟ್‌ ವೈಟ್ ಇರುವಂತಹ ಭಾರವಿಲ್ಲದ ಫ್ಯಾಬ್ರಿಕ್‌ನವನ್ನು ನಾನಾ ಬ್ರಾಂಡ್‌ಗಳು ಮಾರಾಟ ಮಾಡುತ್ತಿವೆ. ಖರೀದಿಸುವಾಗ ನೋಡಿ ಕೊಳ್ಳಬೇಕು” ಎಂದು ಸಲಹೆ ನೀಡುತ್ತಾರೆ ಸ್ಟೈಲಿಸ್ಟ್ ರಾಜ್‌.

Denim Tube Tops Fashion

ಡೆನಿಮ್‌ ಟ್ಯೂಬ್‌ ಟಾಪ್‌ ಪ್ರಿಯರಿಗೆ 5 ಟಿಪ್ಸ್

  • ಟ್ರಯಲ್‌ ನೋಡದೇ ಯಾವುದೇ ಕಾರಣಕ್ಕೂ ಖರೀದಿಸಬೇಡಿ.
  • ನಿಮ್ಮ ಬಾಡಿ ಮಾಸ್‌ ಇಂಡೆಕ್ಸ್‌ಗೆ ಫಿಟ್‌ ಆಗಿ ಕೂರುವುದಾದಲ್ಲಿ ಮಾತ್ರ ಧರಿಸಿ.
  • ತೀರಾ ಸ್ಲಿಮ್‌ ಅಥವಾ ತೀರಾ ಪ್ಲಂಪಿಯಾಗಿರುವವರಿಗೂ ಇವು ಸೂಕ್ತವಲ್ಲ.
  • ಟ್ಯೂಬ್‌ ಟಾಪ್ಸ್‌ನೊಳಗೆ ಟೈಟ್‌ ಇನ್ನರ್‌ ಧರಿಸುವುದು ಅಗತ್ಯ.
  • ಎಕ್ಸ್ ಪೋಸ್ ಆಗುವುದರಿಂದ ಸಂದರ್ಭಕ್ಕೆ ತಕ್ಕಂತೆ ಚೂಸ್‌ ಮಾಡಿ.

( ಲೇಖಕಿ: ಫ್ಯಾಷನ್‌ ಪತ್ರಕರ್ತೆ )

ಇದನ್ನೂ ಓದಿ: Star Fashion: ಪಂಚೆ ಜೊತೆ ಟ್ರೋಫಿ ಜಾಕೆಟ್‌ ಧರಿಸಿದ ನಟಿ ತಮನ್ನಾಳ ಯೂನಿಕ್‌ ಫ್ಯಾಷನ್‌!

Continue Reading

ಫ್ಯಾಷನ್

Star Saree Fashion: ಡಿಸೈನರ್‌ ಸೀರೆಯಲ್ಲಿ ನಟಿ ತಾನ್ಯಾ ಹೋಪ್‌ರಂತೆ ಕಾಣಲು ಈ 5 ಸಿಂಪಲ್‌ ರೂಲ್ಸ್ ಫಾಲೋ ಮಾಡಿ!

ಡಿಸೈನರ್‌ ಪಾರ್ಟಿವೇರ್‌ ಸೀರೆಯಲ್ಲಿ (Star Saree Fashion) ನಟಿ ತಾನ್ಯಾ ಹೋಪ್‌ರಂತೆ ಗ್ಲಾಮರಸ್‌ ಆಗಿ ಕಾಣಿಸಲು ನಿಮಗೂ ಆಸೆಯಾಗಿದೆಯೇ! ಹಾಗಾದಲ್ಲಿ, 5 ಸಿಂಪಲ್‌ ರೂಲ್ಸ್ ಫಾಲೋ ಮಾಡಿ ಎನ್ನುವ ಸ್ಟೈಲಿಸ್ಟ್ ಗಳು ಒಂದಿಷ್ಟು ಸಲಹೆ ನೀಡಿದ್ದಾರೆ.

VISTARANEWS.COM


on

Star Saree Fashion
ಚಿತ್ರಗಳು: ತಾನ್ಯಾ ಹೋಪ್‌, ನಟಿ
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಸ್ಯಾಂಡಲ್‌ವುಡ್‌ ಹಾಗೂ ಬಹುಭಾಷಾ ನಟಿ ತಾನ್ಯಾ ಹೋಪ್‌ ಸೀರೆಯಲ್ಲಿ (Star Saree Fashion) ಸಖತ್‌ ಗ್ಲಾಮರಸ್‌ ಆಗಿ ಕಾಣಿಸಿಕೊಂಡಿದ್ದಾರೆ. ಡಿಸೈನರ್‌ ಪಾರ್ಟಿವೇರ್‌ ಸೀರೆಯುಟ್ಟರೂ ಆಕರ್ಷಕವಾಗಿ ಹಾಗೂ ಗ್ಲಾಮರಸ್‌ ಆಗಿ ಕಾಣಿಸಬಹುದು ಎಂಬುದನ್ನು ನಟಿ ತಾನ್ಯಾ ಪ್ರೂವ್‌ ಮಾಡಿದ್ದಾರೆ. ಅವರು ಧರಿಸಿರುವ ಸೀರೆ ಅವರ ಸೌಂದರ್ಯವನ್ನು ಇಮ್ಮಡಿಗೊಳಿಸಿದೆ. “ಪಾರ್ಟಿವೇರ್‌ ಸೀರೆಗಳು ಇದೀಗ ಅತಿ ಹೆಚ್ಚು ಟ್ರೆಂಡಿಯಾಗಿರುವ ಸೀರೆಗಳು! ಶಿಮ್ಮರ್‌ ಸೀರೆಗಳನ್ನು ಹೊರತುಪಡಿಸಿದಲ್ಲಿ, ಜಾರ್ಜೆಟ್ ಶೈಲಿಯ ಡಿಸೈನರ್‌ ಸೀರೆಗಳು ಇದೀಗ ಪಾರ್ಟಿ ಪ್ರಿಯ ಮಾನಿನಿಯರನ್ನು ಆಕರ್ಷಿಸಿವೆ. ಹಾಗೆಂದು ಇವುಗಳ ಬೆಲೆಯೇನೂ ಕಡಿಮೆಯೇನಿಲ್ಲ! ಎಂಬ್ರಾಯ್ಡರಿ ಹಾಗೂ ಅವುಗಳ ಡಿಸೈನ್‌ ಮತ್ತು ಫ್ಯಾಬ್ರಿಕ್‌ನ ಆಧಾರದ ಮೇಲೆ ಬೆಲೆ ನಿಗಧಿಯಾಗಿರುತ್ತವೆ. ಇನ್ನು ಇತ್ತೀಚೆಗೆ ಸೆಲೆಬ್ರೆಟಿಗಳು ಕೂಡ ಇಂತಹ ಸೀರೆಗಳತ್ತ ವಾಲಿದ್ದಾರೆ. ಮಾಮೂಲಿಯಂತೆ ಸ್ಟೈಲಿಂಗ್‌ ಮಾಡುವ ಬದಲು ಗ್ಲಾಮರಸ್‌ ಆಗಿ ಮಾಡುತ್ತಾರೆ. ಹಾಗಾಗಿ ನೋಡಲು ಚೆಂದನಾಗಿ ಕಾಣಿಸುತ್ತಾರೆ” ಎನ್ನುತ್ತಾರೆ ಸೀರೆ ಡ್ರೇಪಿಸ್ಟ್ ಧವನ್‌. ಇನ್ನು, ನಟಿ ತಾನ್ಯಾ ಹೋಪ್‌ರಂತೆ ಡಿಸೈನರ್‌ ಪಾರ್ಟಿವೇರ್‌ ಸೀರೆಯಲ್ಲಿ ಗ್ಲಾಮರಸ್‌ ಆಗಿ ಕಾಣಿಸಲು ಯಾರಿಗೆ ಇಷ್ಟವಿಲ್ಲ ಹೇಳಿ! ಹಾಗಾದಲ್ಲಿ ಒಂದಿಷ್ಟು ಸಿಂಪಲ್‌ ಟಿಪ್ಸ್ ಫಾಲೋ ಮಾಡಿ ಎನ್ನುತ್ತಾರೆ ಸ್ಟೈಲಿಸ್ಟ್‌ಗಳು. ಈ ಕುರಿತಂತೆ 5 ಟಿಪ್ಸ್ ನೀಡಿದ್ದಾರೆ.

Star Saree Fashion

ಪಾರ್ಟಿ ಥೀಮ್‌ಗೆ ತಕ್ಕ ಸೀರೆ ಆಯ್ಕೆ ಮಾಡಿ

ನೀವು ಭಾಗವಹಿಸುವ ಕಾಯರ್ಕ್ರಮಕ್ಕೆ ತಕ್ಕಂತೆ ಮ್ಯಾಚ್‌ ಆಗುವಂತಹ ಡಿಸೈನರ್‌ ಪಾರ್ಟಿವೇರ್ ಸೀರೆಗಳನ್ನು ಆಯ್ಕೆ ಮಾಡಿ. ಅದು ಟ್ರೆಡಿಷನಲ್‌ ಸಮಾರಂಭವೇ ಅಥವಾ ಕ್ಯಾಶುವಲ್‌ ಪಾರ್ಟಿಯಾ ಎಂಬುದು ತಿಳಿದು ಆರಿಸಿ.

ಮಿನುಗುವ ಡಿಸೈನ್ಸ್/ ಹ್ಯಾಂಡ್‌ವರ್ಕ್ ಸೀರೆಯ ಆಯ್ಕೆ

ಪಾರ್ಟಿಗೆ ಧರಿಸುವ ಸೀರೆಗಳು ಆದಷ್ಟೂ ಮಿನುಗುವ ಡಿಸೈನ್ಸ್ ಹೊಂದಿರಲಿ. ಎಂಬ್ರಾಯ್ಡರಿ ಹ್ಯಾಂಡ್‌ ವರ್ಕ್, ಕಟ್‌ವರ್ಕ್ ಡಿಸೈನ್ಸ್ ಇರುವಂತಹ ಡಿಸೈನರ್‌ ಸೀರೆ ಆಯ್ಕೆ ಮಾಡಿ. ಟ್ರೆಡಿಷನಲ್‌ ಲುಕ್‌ ಇರುವಂತವು ಬೇಡ!

Star Saree Fashion

ಡಿಸೈನರ್ ಸೀರೆಗೆ ಗ್ಲಾಮರಸ್‌ ಬ್ಲೌಸ್‌

ಡಿಸೈನರ್‌ ಸೀರೆಗೆ ಯಾವುದೇ ಕಾರಣಕ್ಕೂ ಟ್ರೆಡಿಷನಲ್‌ ಲುಕ್‌ ನೀಡುವಂತಹ ಎಥ್ನಿಕ್‌ ಡಿಸೈನ್‌ನ ಬ್ಲೌಸ್‌ ಆಯ್ಕೆ ಮಾಡಬೇಡಿ. ಹಾಲ್ಟರ್‌ ನೆಕ್‌ ಬ್ಲೌಸ್‌, ಸ್ಲಿವ್‌ಲೆಸ್‌ ಬ್ಲೌಸ್‌, ಬ್ಯಾಕ್‌ ಬಟನ್‌ ಬ್ಲೌಸ್‌, ಸ್ಟ್ರಾಪ್‌ ಬ್ಲೌಸ್‌ ಹಾಗೂ ಡಿಸೈನರ್‌ ಸ್ಲೀವ್‌ ಬ್ಲೌಸ್‌ಗಳನ್ನು ಸೆಲೆಕ್ಟ್ ಮಾಡಿ, ಧರಿಸಿ.

ಮಿನಿಮಲ್‌ ಆಭರಣ ಧರಿಸಿ

ಮೊದಲೇ ಪಾರ್ಟಿವೇರ್‌ ಡಿಸೈನರ್‌ ಸೀರೆಗಳು ಜಗಮಗಿಸುತ್ತಿರುತ್ತವೆ. ಇಲ್ಲವೇ ಎಂಬ್ರಾಯ್ಡರಿ ಹೈಲೈಟಾಗುತ್ತಿರುತ್ತವೆ. ಇವುಗಳನ್ನು, ಮಾಸುವಂತೆ ಮಾಡುವ ಹೆವ್ವಿ ಜ್ಯುವೆಲರಿಗಳನ್ನು ಧರಿಸುವುದು ಬೇಡ. ಬದಲಿಗೆ ಮಿನಿಮಲ್‌ ಆಭರಣಗಳನ್ನು ಧರಿಸಿ. ಸೀರೆ ಎದ್ದು ಕಾಣಿಸುವುದು.

Star Saree Fashion

ಸೀರೆಯ ಡ್ರೇಪಿಂಗ್‌

ಉಡುವ ಸೀರೆಯ ಡ್ರೇಪಿಂಗ್‌ ಬಾಡಿ ಮಾಸ್‌ ಇಂಡೆಕ್ಸ್ ಹೈ ಲೈಟ್‌ ಮಾಡುವಂತಿರಲಿ. ಆಗಷ್ಟೇ ಬಳುಕುವ ಬಳ್ಳಿಯಂತೆ ಕಾಣಬಹುದು. ಡ್ರೇಪಿಂಗ್‌ ಮಾಡುವ ಶೈಲಿ ಸೀರೆಯ ಇಡೀ ಲುಕ್ಕನ್ನು ಬದಲಿಸಬಲ್ಲದು.

(ಲೇಖಕಿ ಫ್ಯಾಷನ್‌ ಪತ್ರಕರ್ತೆ)

ಇದನ್ನೂ ಓದಿ: Holiday Fashion: ಹಾಲಿ ಡೇ ಫ್ಯಾಷನ್‌ಗೆ ಮರಳಿ ಬಂತು ಹಿಪ್ಪಿ ಪ್ಯಾಂಟ್ಸ್!

Continue Reading
Advertisement
K Kavitha
ದೇಶ2 mins ago

K Kavitha: ಬಿಆರ್‌ಎಸ್‌ ನಾಯಕಿ ಕವಿತಾ ಬಂಧನ ಜುಲೈ 3ರವರೆಗೆ ವಿಸ್ತರಣೆ; ಸಾಕ್ಷ್ಯ ನಾಶದ ಆರೋಪ

MS Dhoni Europe Trip
ಕ್ರೀಡೆ11 mins ago

MS Dhoni Europe Trip: ಐಪಿಎಲ್​ ಮುಗಿಸಿ ಕುಟುಂಬದ ಜತೆ ಯುರೋಪ್​ಗೆ ಪ್ರವಾಸ ಹೋದ ಧೋನಿ

Lok Sabha Election Result 2024 Live
ದೇಶ46 mins ago

Lok Sabha Election Result 2024 Live: ಲೋಕಸಭೆ ಚುನಾವಣೆ ಫಲಿತಾಂಶಕ್ಕೆ ಕ್ಷಣಗಣನೆ; ಇಲ್ಲಿದೆ ಪ್ರತಿಕ್ಷಣದ ಮಾಹಿತಿ

Job Alert
ಉದ್ಯೋಗ55 mins ago

Job Alert: ಭಾರತೀಯ ವಾಯುಪಡೆಯಲ್ಲಿದೆ ಉದ್ಯೋಗಾವಕಾಶ; ದ್ವಿತೀಯ ಪಿಯು ಪಾಸಾದವರೂ ಅರ್ಜಿ ಸಲ್ಲಿಸಿ

Viral News
ವೈರಲ್ ನ್ಯೂಸ್55 mins ago

Viral News: ಕದಿಯಲು ಬಂದ ಮನೆಯಲ್ಲೇ ನಿದ್ದೆಹೋದ ಕಳ್ಳ; ಪೊಲೀಸರೇ ಎಬ್ಬಿಸಬೇಕಾಯಿತು!

Grantha Lokarpane and award ceremony on June 5 in Bengaluru
ಬೆಂಗಳೂರು59 mins ago

Book Release: ಬೆಂಗಳೂರಿನಲ್ಲಿ ಜೂ. 5ರಂದು ಗ್ರಂಥ ಲೋಕಾರ್ಪಣೆ, ಪ್ರಶಸ್ತಿ ಪ್ರದಾನ

Valmiki Corporation Scam
ಕರ್ನಾಟಕ1 hour ago

Valmiki Corporation Scam: ವಾಲ್ಮೀಕಿ ನಿಗಮದ ಅಕ್ರಮಕ್ಕೆ ಸಿಎಂ ಸಿದ್ದರಾಮಯಯ್ಯ ನೇರ ಹೊಣೆ ಎಂದ ಎಚ್‌ಡಿಕೆ

T20 World Cup 2024 Prize Money
ಕ್ರೀಡೆ1 hour ago

T20 World Cup 2024 Prize Money: ದಾಖಲೆಯ ಬಹುಮಾನ ಮೊತ್ತ ಘೋಷಿಸಿದ ಐಸಿಸಿ

Bagalkot Lok Sabha Constituency
ಪ್ರಮುಖ ಸುದ್ದಿ2 hours ago

Bagalkot Lok Sabha Constituency: ಬಿಜೆಪಿಯ ಭದ್ರಕೋಟೆ ಭೇದಿಸುವರೇ ಸಂಯುಕ್ತಾ ಪಾಟೀಲ್?

karnataka weather Forecast Putur rain
ಮಳೆ2 hours ago

Karnataka Weather : ತೊಯ್ದು ತೊಪ್ಪೆಯಾದ ಪುತ್ತೂರು; ನಾಳೆ ಮಳೆ ಅಬ್ಬರ 17 ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್‌

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ5 hours ago

Karnataka Rain : 133 ವರ್ಷದ ರೆಕಾರ್ಡ್ ಬ್ರೇಕ್ ಮಾಡಿದ ʻಬೆಂಗಳೂರು ಮಳೆʼ

Snake Rescue Snakes spotted in heavy rain
ಮಳೆ6 hours ago

Snake Rescue: ಮಳೆ ನೀರಿನಲ್ಲಿ ಹರಿದು ಬಂದು ಬೈಕ್‌ನಲ್ಲಿ ಸೇರಿಕೊಂಡ ಹಾವು; ಮನೆಗಳಲ್ಲೂ ಪ್ರತ್ಯಕ್ಷ

Karnataka Rain
ಮಳೆ1 day ago

Karnataka Rain : ವೀಕೆಂಡ್‌ ಮೋಜಿಗೆ ವರುಣ ಅಡ್ಡಿ; ಭಾನುವಾರ ಸಂಜೆಗೆ ಮಳೆ ಕಾಟ

Liquor ban
ಬೆಂಗಳೂರು2 days ago

Liquor Ban : ಮುಂದಿನ ಏಳು ದಿನಗಳಲ್ಲಿ ನಾಲ್ಕೂವರೆ ದಿನ ಬಾರ್ ಕ್ಲೋಸ್; ಎಣ್ಣೆ ಸಿಗೋದು ಯಾವ ದಿನ?

Assault Case in Shivamogga
ಕ್ರೈಂ4 days ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ6 days ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

tumkur murder
ತುಮಕೂರು6 days ago

Tumkur Murder : ಮಗುವಿನ ಮುಂದೆಯೇ ಹೆಂಡತಿಯ ಕತ್ತು, ದೇಹವನ್ನು ಕತ್ತರಿಸಿ ಬಿಸಾಡಿದ ದುಷ್ಟ

Karnataka Weather Forecast
ಮಳೆ1 week ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ1 week ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

Basavanagudi News
ಬೆಂಗಳೂರು1 week ago

Basavanagudi News : ಪೂಜಾ ಸಾಮಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

ಟ್ರೆಂಡಿಂಗ್‌