Rajyasabha Elections 2024 : ಬಿಜೆಪಿ, ಜೆಡಿಎಸ್‌ ಅಭ್ಯರ್ಥಿಗಳ ರಂಗ ಪ್ರವೇಶ, ಎರಡೂ ಸೀಟು ಗೆಲ್ತೀವಿ ಅಂದ ಅಶೋಕ್‌ - Vistara News

ರಾಜಕೀಯ

Rajyasabha Elections 2024 : ಬಿಜೆಪಿ, ಜೆಡಿಎಸ್‌ ಅಭ್ಯರ್ಥಿಗಳ ರಂಗ ಪ್ರವೇಶ, ಎರಡೂ ಸೀಟು ಗೆಲ್ತೀವಿ ಅಂದ ಅಶೋಕ್‌

Rajyasabha Elections 2024 : ಬಿಜೆಪಿ ಮತ್ತು ಜೆಡಿಎಸ್‌ ಅಭ್ಯರ್ಥಿಗಳು ಕಣಕ್ಕೆ ಇಳಿದಿದ್ದಾರೆ. ಈ ಮೂಲಕ ರಾಜ್ಯಸಭಾ ಚುನಾವಣೆ ರಂಗೇರಿದೆ. ಜೆಡಿಎಸ್‌ ಕುಪೇಂದ್ರ ರೆಡ್ಡಿ ಅವರನ್ನು ಕಣಕ್ಕಿಳಿಸುವ ಮೂಲಕ ರಾಜಕೀಯದಾಟ ಶುರು ಮಾಡಿದೆ.

VISTARANEWS.COM


on

Rajyasabha Elections 2024 BJP Nomination
ಜೆಡಿಎಸ್‌ ಅಭ್ಯರ್ಥಿ ಕುಪೇಂದ್ರ ರೆಡ್ಡಿ ಅವರಿಂದ ನಾಮಪತ್ರ ಸಲ್ಲಿಕೆ
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ರಾಜ್ಯ ವಿಧಾನಸಭೆಯಿಂದ ರಾಜ್ಯಸಭೆಯ ನಾಲ್ಕು ಸ್ಥಾನಗಳಿಗಾಗಿ ನಡೆಯಲಿರುವ ಚುನಾವಣೆಯಲ್ಲಿ (Rajyasabha Elections 2024) ಬಿಜೆಪಿ – ಜೆಡಿಎಸ್‌ ಮೈತ್ರಿಕೂಟ (BJP-JDS Alliance) ಎರಡು‌ ಸ್ಥಾನಗಳಿಗಾಗಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿದೆ. ಬಿಜೆಪಿ ಅಭ್ಯರ್ಥಿ ನಾರಾಯಣ ಬಾಂಡಗೆ (Narayana Bandage) ಮತ್ತು ಬಿಜೆಪಿ-ಜೆಡಿಎಸ್ ಅಭ್ಯರ್ಥಿ ಕುಪೇಂದ್ರ ರೆಡ್ಡಿ (Kupendra Reddy) ಅವರು ಗುರುವಾರ ನಾಮಪತ್ರ ಸಲ್ಲಿಸಿದರು.

ವಿಧಾನಸೌಧದ ಕೊಠಡಿ ಸಂಖ್ಯೆ 121ರಲ್ಲಿ ವಿಧಾನಸಭೆಯ ಕಾರ್ಯದರ್ಶಿ ಅವರಿಗೆ ನಾಮಪತ್ರ ಸಲ್ಲಿಸಲಾಯಿತು. ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ. ವಿಜಯೇಂದ್ರ, ವಿರೋಧ ಪಕ್ಷದ ನಾಯಕ ಆರ್. ಅಶೋಕ್, ಜೆಡಿಎಸ್ ಮುಖಂಡ ಮತ್ತು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಸುನೀಲ್‍ಕುಮಾರ್, ಇಬ್ಬರೂ ಅಭ್ಯರ್ಥಿಗಳು ಉಪಸ್ಥಿತರಿದ್ದರು.

Rajyasabha Elections 2024 BJP Nomination1

Rajyasabha Elections 2024 : ಮೋದಿ ಸರ್ಕಾರದಿಂದ ರೈತರಿಗೆ ಶಕ್ತಿ ತುಂಬುವ ಕೆಲಸ

ಬಳಿಕ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ವಿಜಯೇಂದ್ರ ಅವರು, ನರೇಂದ್ರ ಮೋದಿಯವರ ನೇತೃತ್ವದ ಬಿಜೆಪಿ ಸರಕಾರ ಅತ್ಯುತ್ತಮ ಯೋಜನೆಗಳನ್ನು ಅನುಷ್ಠಾನಗೊಳಿಸಿದೆ. ಕರ್ನಾಟಕ ರಾಜ್ಯದಲ್ಲೂ ಬಿಜೆಪಿ ಸರಕಾರವು ರೈತರಿಗೆ ಶಕ್ತಿ ತುಂಬುವ ಕೆಲಸ ಮಾಡುತ್ತ ಬಂದಿದೆ. ಹಿಂದೆ ಬಿಜೆಪಿ ಸರಕಾರವು ರಾಜ್ಯ ಬಜೆಟ್‍ನಲ್ಲಿ ಕೃಷಿ ಕ್ಷೇತ್ರಕ್ಕೆ 7500 ಕೋಟಿ ರೂಪಾಯಿಯನ್ನು ಮೀಸಲಿಟ್ಟಿತ್ತು. ಸಿದ್ದರಾಮಯ್ಯನವರ ಸರಕಾರವು 4,500 ಕೋಟಿ ಮೀಸಲಿಟ್ಟು, ಕೃಷಿ ಕ್ಷೇತ್ರಕ್ಕೂ ಮೊತ್ತ ಕಡಿಮೆ ಮಾಡಿ ರೈತರಿಗೆ ಅನ್ಯಾಯ ಮಾಡಿದೆ ಎಂದು ಆಕ್ಷೇಪಿಸಿದರು.

ಕೇಂದ್ರದ ವಿರುದ್ಧ ಹೋರಾಟಕ್ಕೆ ಬೀದಿಗೆ ಇಳಿದಿರುವುದು ಕಾಂಗ್ರೆಸ್ ಷಡ್ಯಂತ್ರ ಎಂದು ಟೀಕಿಸಿದ ಅವರು, ಕೇಂದ್ರದಲ್ಲಿ ಬಿಜೆಪಿ, ಎನ್‍ಡಿಎ ಸ್ಪಷ್ಟ ಬಹುಮತದೊಂದಿಗೆ ಮತ್ತೆ ಅಧಿಕಾರಕ್ಕೆ ಬರುತ್ತದೆ; ಮೋದಿಜೀ ಅವರು ಮೂರನೇ ಬಾರಿಗೆ ಪ್ರಧಾನಿ ಆಗುತ್ತಾರೆ ಎಂಬುದನ್ನು ಸಹಿಸಲಾಗದೆ ಈ ಷಡ್ಯಂತ್ರ ಮಾಡುತ್ತಿದ್ದಾರೆ. ರೈತರ ಬೇಡಿಕೆ ಈಡೇರಿಸುವ ಕಡೆಗೆ ಪ್ರಯತ್ನ ನಡೆದಿದೆ. ಇದರ ನಡುವೆ ಕಾಂಗ್ರೆಸ್ ರಾಜಕೀಯ ಪಿತೂರಿ ಮಾಡುತ್ತಿರುವುದು ಮೇಲ್ನೋಟಕ್ಕೆ ಸ್ಪಷ್ಟವಾಗುತ್ತದೆ ಎಂದು ವಿವರಿಸಿದರು.

ಇದನ್ನೂ ಓದಿ: Rajya Sabha Election: ರಾಜ್ಯಸಭೆಗೆ 5ನೇ ಅಭ್ಯರ್ಥಿಯಾಗಿ ಕುಪೇಂದ್ರ ರೆಡ್ಡಿ; ನಿಜ ಕಾರಣ ಬಿಚ್ಚಿಟ್ಟ ಬಿ.ವೈ. ವಿಜಯೇಂದ್ರ

ಪ್ರಧಾನಮಂತ್ರಿ ಕಿಸಾನ್ ಸಮ್ಮಾನ್ ಯೋಜನೆಯಡಿ ಕೇಂದ್ರವು 6 ಸಾವಿರ ಕೊಡುತ್ತಿದೆ. ಯಡಿಯೂರಪ್ಪ ಅವರು 4 ಸಾವಿರ ಸೇರಿಸಿ ನೀಡುತ್ತಿದ್ದರು. ಸಿದ್ದರಾಮಯ್ಯನವರು ಅದನ್ನೂ ನಿಲ್ಲಿಸಿದ್ದಾರೆ. ರೈತರ ಬಗ್ಗೆ ಮಾತನಾಡುವ ನೈತಿಕತೆ ಕಾಂಗ್ರೆಸ್ ಪಕ್ಷಕ್ಕೆ ಇಲ್ಲ ಎಂದು ವಿಜಯೇಂದ್ರ ಟೀಕಿಸಿದರು.

Rajyasabha Elections 2024 : ಎರಡೂ ಅಭ್ಯರ್ಥಿಗಳ ಗೆಲುವು: ಅಶೋಕ್

ಬಿಜೆಪಿ ಮತ್ತು ಮಿತ್ರ ಕೂಟದಿಂದ ಇಬ್ಬರು ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದು, ಇಬ್ಬರೂ ಗೆಲ್ಲುವ ವಿಶ್ವಾಸವಿದೆ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ತಿಳಿಸಿದರು. ದೆಹಲಿಯಲ್ಲಿ ರೈತರ ಚಳವಳಿ, ಪ್ರತಿಭಟನೆ ಹಿಂದೆ ಕಾಂಗ್ರೆಸ್ ಟೂಲ್ ಕಿಟ್ ಕೆಲಸ ಮಾಡುತ್ತಿದೆ ಎಂದು ಅವರು ಆರೋಪಿಸಿದರು.

ಇಂಡಿ ಒಕ್ಕೂಟದಲ್ಲಿ ಎಲ್ಲ ಪಕ್ಷಗಳು ಒಂದೊಂದಾಗಿ ಖಾಲಿ ಆಗುತ್ತಿವೆ. ಕೊನೆಗೆ ಐ ಮಾತ್ರ ಉಳಿಯಲಿದೆ ಎಂದ ಅವರು, ಮಮತಾ ಖಾಲಿ, ಒಕ್ಕೂಟ ಹುಟ್ಟು ಹಾಕಿದ ನಿತೀಶ್ ಖಾಲಿ, ಕೇಜ್ರಿವಾಲ್ ಖಾಲಿ ಎಂದು ವಿವರಿಸಿದರು. ಮಹಾರಾಷ್ಟ್ರದಲ್ಲಿ ಅಶೋಕ್ ಚೌಹಾಣ್ ಕಾಂಗ್ರೆಸ್ ತೊರೆದಿದ್ದಾರೆ. ಹತಾಶವಾದ ಕಾಂಗ್ರೆಸ್ ಪಕ್ಷವು, ರೈತರನ್ನು ಟೂಲ್ ಕಿಟ್ ಆಗಿ ಬಳಸಿಕೊಂಡಿದೆ. ಇದನ್ನು ಖಂಡಿಸುತ್ತೇವೆ ಎಂದು ಆರ್.‌ ಅಶೋಕ್‌ ಹೇಳಿದರು.

ರೈತರು ಬೆಂಬಲ ಕೇಳುವ ಮೊದಲೇ ಕಾಂಗ್ರೆಸ್ ಅವರಿಗೆ ತನ್ನ ಬೆಂಬಲ ಘೋಷಿಸಿದೆ. ಇದು ಹತಾಶೆಯ ಸಂಕೇತ ಎಂದು ವಿವರಿಸಿದರು. ಇವರೇ ಇದರ ಸೂತ್ರಧಾರರು ಎಂದರು. ಮೋದಿಯವರು ಪ್ರಧಾನಿಯಾದ ಬಳಿಕ ರೈತರಿಗೆ ಕಿಸಾನ್ ಸಮ್ಮಾನ್ ಯೋಜನೆ, ರಸಗೊಬ್ಬರಕ್ಕೆ ಗರಿಷ್ಠ ಸಬ್ಸಿಡಿ ಕೊಡುತ್ತಿರುವುದನ್ನು ಪ್ರಸ್ತಾಪಿಸಿದರು.

ನಾಲ್ಕು ಸ್ಥಾನಕ್ಕೆ ಐವರು ಅಭ್ಯರ್ಥಿಗಳು? ಗೆಲುವು ಯಾರಿಗೆ?

ರಾಜ್ಯ ವಿಧಾನಸಭೆಯ ನಾಲ್ಕು ಸ್ಥಾನಗಳಿಗಾಗಿ ಚುನಾವಣೆ ನಡೆಯಲಿದೆ. ಹಾಲಿ ರಾಜ್ಯ ಸಭೆಯಲ್ಲಿ ಮೂರು ಸ್ಥಾನ ಕಾಂಗ್ರೆಸ್‌ ಕೈಯಲ್ಲಿ, ಒಂದು ಸ್ಥಾನ ಬಿಜೆಪಿ ಕೈಯಲ್ಲಿದೆ. ಕಾಂಗ್ರೆಸ್‌ 135 ಶಾಸಕರನ್ನು ಹೊಂದಿದ್ದು ತಲಾ 45 ಮತಗಳಂತೆ ಮೂವರನ್ನು ಗೆಲ್ಲಿಸುವ ಶಕ್ತಿ ಹೊಂದಿದೆ. ಬಿಜೆಪಿ-ಜೆಡಿಎಸ್‌ ಮೈತ್ರಿಕೂಟ 84 ಮತಗಳನ್ನು ಹೊಂದಿದ್ದು, ಇನ್ನು ಆರು ಶಾಸಕರನ್ನು ವ್ಯವಸ್ಥೆ ಮಾಡಿಕೊಂಡರೆ ಎರಡನೇ ಸ್ಥಾನವನ್ನು ಗೆಲ್ಲಬಹುದು. ಆದರೆ, ಈ ಆರು ಮತಗಳು ಪಕ್ಷೇತರರ ಜತೆಗೆ ಕಾಂಗ್ರೆಸ್‌ನಿಂದಲೂ ಕಿತ್ತುಕೊಳ್ಳಬೇಕಾಗುತ್ತದೆ. ಇದು ಸಾಧ್ಯವೇ ಎನ್ನುವುದರ ಆಧಾರದ ಮೇಲೆ ರಾಜಕೀಯ ನಿಂತಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕರ್ನಾಟಕ

Congress Guarantee: ಗ್ಯಾರಂಟಿ ನಿಲ್ಲಿಸುವ ಮಾತು ಬೇಡ: ಕೈ ನಾಯಕರಿಗೆ ಎಚ್.ಎಂ ರೇವಣ್ಣ ಎಚ್ಚರಿಕೆ

Congress Guarantee: ಲೋಕಸಭಾ ಚುನಾವಣೆಯಲ್ಲಿ ನಿರೀಕ್ಷಿತ ಸ್ಥಾನಗಳು ಬರದ ಹಿನ್ನೆಲೆಯಲ್ಲಿ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವುದೇ ಒಳಿತು ಎಂದು ಕೆಲ ಕೈ ನಾಯಕರು ಅಭಿಪ್ರಾಯ ಹೊರಹಾಕುತ್ತಿದ್ದಾರೆ. ಹೀಗಾಗಿ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ಎಂ ರೇವಣ್ಣ ಪ್ರತಿಕ್ರಿಯಿಸಿದ್ದಾರೆ.

VISTARANEWS.COM


on

Congress Guaratee
Koo

ಬೆಂಗಳೂರು: ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳನ್ನು (Congress Guarantee) ನಿಲ್ಲಿಸಬೇಕೆಂಬ ಚರ್ಚೆ ಹಿನ್ನೆಲೆ ಮುನ್ನೆಲೆಗೆ ಬಂದ ಹಿನ್ನೆಲೆಯಲ್ಲಿ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ಎಂ ರೇವಣ್ಣ (HM Revanna) ಪ್ರತಿಕ್ರಿಯಿಸಿದ್ದಾರೆ. ಗ್ಯಾರಂಟಿಗಳು ನಿಲ್ಲಿಸಿ ಎಂದು ಹೇಳಬೇಡಿ. ಎಷ್ಟೇ ದೊಡ್ಡ ನಾಯಕರು ಆದರೂ ನಿಲ್ಲಿಸುವ ಬಗ್ಗೆ ಮಾತನಾಡಬೇಡಿ. ನಾವು ಗ್ಯಾರಂಟಿಗಳನ್ನ ನಿಲ್ಲಿಸುವುದಿಲ್ಲ‌. ಸಣ್ಣ ಪುಟ್ಟ ತಪ್ಪುಗಳು ಇದ್ದರೆ ಸರಿಪಡಿಸುತ್ತೇವೆ ಎಂದು ಕೈ ನಾಯಕರಿಗೆ ಎಚ್ಚರಿಕೆ ನೀಡಿದ್ದಾರೆ.

ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿರುವ ಅವರು, ಗ್ಯಾರಂಟಿಗಳಿಗಾಗಿ 36 ಸಾವಿರ ಕೋಟಿ ಖರ್ಚು ಆಗುತ್ತಿತ್ತು, ಅದು‌ 46 ಸಾವಿರ ಕೋಟಿಗೆ ಏರಿಕೆ ಆಗಿದೆ. ಆದರೂ ಅದು ನಮ್ಮ ಬದ್ಧತೆ. ನಾವು ಬದುಕಿಗಾಗಿ ಇದ್ದೇವೆ, ಬಿಜೆಪಿಯವರು ಭಾವನೆಗಳಿಗಾಗಿ ಇದ್ದಾರೆ ಎಂದು ತಿಳಿಸಿದ್ದಾರೆ.

ಎಲ್ಲ ಕಡೆಗಳಿಂದ ದೂರು ಬಂದಿವೆ. ಒಂದೇ ಮನೆಯಲ್ಲಿ ಇಬ್ಬರು ಫಲಾನುಭವಿಗಳ ಇರುವ ಬಗ್ಗೆ ದೂರು ಬಂದಿವೆ. ಅವುಗಳನ್ನು ಪರಿಶೀಲನೆ ಮಾಡುತ್ತೇವೆ ಎಂದು ಹೇಳಿದ್ದಾರೆ.

ಲೋಕಸಭಾ ಚುನಾವಣೆಯಲ್ಲಿ ನಿರೀಕ್ಷಿತ ಸ್ಥಾನಗಳು ಬರದ ಹಿನ್ನೆಲೆಯಲ್ಲಿ ಗ್ಯಾರಂಟಿ ಯೋಜನೆಗಳನ್ನು ನಿಲ್ಲಿಸುವುದೇ ಒಳಿತು ಎಂದು ಕೆಲ ಕೈ ನಾಯಕರು ಅಭಿಪ್ರಾಯ ಹೊರಹಾಕುತ್ತಿದ್ದಾರೆ. ಇತ್ತೀಚೆಗೆ ಮೈಸೂರು-ಕೊಡಗು ಕ್ಷೇತ್ರದ ಪರಾಜಿತ ಕೈ ಅಭ್ಯರ್ಥಿ ಎಂ.ಲಕ್ಷ್ಮಣ್‌ ಅವರು ಮತದಾರರ ವಿರುದ್ಧ ಅಸಮಾಧಾನ ಹೊರಹಾಕುತ್ತಾ, ಜನರಿಗೆ ಗ್ಯಾರಂಟಿಗಳು ಬೇಕಿಲ್ಲ, ಇದರ ಬಗ್ಗೆ ಸಿಂ ಸಿದ್ದರಾಮಯ್ಯ ಅವರು ಮರು ಪರಿಶೀಲನೆ ನಡೆಸಬೇಕು ಎಂದು ಹೇಳಿದ್ದರು. ಹೀಗಾಗಿ ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಎಚ್.ಎಂ ರೇವಣ್ಣ ಪ್ರತಿಕ್ರಿಯಿಸಿದ್ದಾರೆ.

ಇದನ್ನೂ ಓದಿ | Election Commission : ಜುಲೈ 10ರಂದು 7 ರಾಜ್ಯಗಳ 13 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ

“ಒಕ್ಕೂಟ ವ್ಯವಸ್ಥೆಯ ಆಶಯ…” ಪ್ರಧಾನಿ ಮೋದಿಗೆ ಶುಭ ಕೋರಿದ ಸಿಎಂ ಸಿದ್ದರಾಮಯ್ಯ

Budget Session Siddaramaiah Narendra Modi

ಬೆಂಗಳೂರು: ಪ್ರಧಾನ ಮಂತ್ರಿಯಾಗಿ (Prime minister) ಮೂರನೇ ಬಾರಿಗೆ ಪ್ರಮಾಣ ವಚನ (Oath) ಸ್ವೀಕರಿಸಿದ ನರೇಂದ್ರ ಮೋದಿ (Narendra Modi) ಅವರಿಗೆ ಕರ್ನಾಟಕ (Karnataka) ಸಿಎಂ ಸಿದ್ದರಾಮಯ್ಯ (CM Siddaramaiah) ಸಾಮಾಜಿಕ ಜಾಲತಾಣ X ಖಾತೆ ಮೂಲಕ ಶುಭ ಕೋರಿದ್ದಾರೆ.

“3ನೇ ಬಾರಿಗೆ ದೇಶದ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಿದ ಪ್ರಧಾನಿ @narendramodi ಅವರಿಗೆ ಅಭಿನಂದನೆಗಳು. ಕರುನಾಡಿನ ಅಭಿವೃದ್ಧಿಯ ನಮ್ಮ ಸಂಕಲ್ಪಕ್ಕೆ ನಿಮ್ಮ ಸಹಕಾರ ಇರಲಿದೆ, ಒಕ್ಕೂಟ ವ್ಯವಸ್ಥೆಯ ಆಶಯಗಳನ್ನು ಎತ್ತಿಹಿಡಿಯುತ್ತಾ ರಾಜ್ಯಗಳ ಹಿತಾಸಕ್ತಿಯನ್ನು ನೀವು ಗೌರವಿಸುತ್ತೀರೆಂದು ಭಾವಿಸಿದ್ದೇನೆ. ಸಂಪದ್ಭರಿತ ಕರ್ನಾಟಕದ ಮೂಲಕ ಸದೃಢ ಭಾರತ ನಿರ್ಮಾಣಕ್ಕಾಗಿ ನಿಮ್ಮ ಜೊತೆಯಾಗಿ ಶ್ರಮಿಸುವ ದಿನಗಳನ್ನು ಎದುರು ನೋಡುತ್ತಿದ್ದೇನೆ” ಎಂದು ಸಿದ್ದರಾಮಯ್ಯ ಹಾರೈಸಿದ್ದಾರೆ.

Continue Reading

ದೇಶ

Suresh Gopi : ಪ್ರಮಾಣವಚನ ಸ್ವೀಕರಿಸಿದ ಒಂದೇ ಗಂಟೆಯೊಳಗೆ ಸಚಿವ ಸ್ಥಾನ ಬೇಡ ಎಂದ ಸುರೇಶ್​ ಗೋಪಿ!

Suresh GopiL

VISTARANEWS.COM


on

Suresh Gopi
Koo

ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವುದಕ್ಕೆ ಟಿಕೆಟ್​ ಪಡೆಯುವುದೇ ಹರಸಾಹಸ. ಅದಕ್ಕೆ ನೂರಾರು ಮಾದರಿಯಲ್ಲಿ ಪ್ರಭಾವ ಬೀರಬೇಕು. ಸಿಕ್ಕಿ ಗೆದ್ದರಂತೂ ಆಕಾಶಕ್ಕೆ ಮೂರೇ ಗೇಣು. ಗೆದ್ದ ಮೇಲೆ ಸಚಿವ ಸ್ಥಾನ ದೊರೆತರೆ ಅದು ಅವರ ಜೀವನ ಅತ್ಯುನ್ನತ ಸಾಧನೆಯಾಗುತ್ತದೆ. ರಾಜಕಾರಣಿಗಳ ಪರಿಸ್ಥಿತಿ ಈ ರೀತಿ ಇದೆ ಎಂಬುದು ರಾಜಕಾರಣದಲ್ಲಿ ಇಲ್ಲದವರಿಗೂ ಗೊತ್ತಿರುವ ಸಂಗತಿ. ಇಂಥದ್ದರಲ್ಲಿ ಮೊದಲ ಪ್ರಯತ್ನದಲ್ಲೇ ಗೆದ್ದು ಸಚಿವ ಸ್ಥಾನ ದೊರೆತರೆ ಅದನ್ನು ಒಲ್ಲೆ ಎನ್ನುವುದುಂಟೆ? ಆದರೆ, ಅಚ್ಚರಿ ಎಂಬಂತೆ ಕೇರಳದ ತ್ರಿಶ್ಯೂರ್​ ಸಂಸದ, ಸಿನಿಮಾ ನಟ ಸುರೇಶ್​ ಗೋಪಿ (Suresh Gopi) ಈ ರೀತಿಯ ಹೇಳಿಕೆಯೊಂದನ್ನು ನೀಡಿದ್ದಾರೆ. ಅದೂ ಮೋದಿ 3.0 ಸರ್ಕಾರದಲ್ಲಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಿದ ಒಂದೇ ಗಂಟೆಯೊಳಗೆ. ನನಗೆ ಕೇಂದ್ರದಲ್ಲಿ ಸಚಿವ ಸ್ಥಾನದ ಜವಾಬ್ದಾರಿ ಬೇಡ, ನಾನು ತ್ರಿಶ್ಯೂರ್​ ಸಂಸದನಾಗಿಯೇ ಇರುತ್ತೇನೆ. ಅದಕ್ಕಿಂತಲೂ ಮಿಗಿಲಾಗಿ ನಾನು ಸಿನಿಮಾಗಳನ್ನು ಒಪ್ಪಿಕೊಂಡಿದ್ದು ಅದನ್ನು ಮುಗಿಸಬೇಕಾಗಿದೆ ಎಂದು ಹೇಳಿದ್ದಾರೆ.

ಮೋದಿ 3.0 ಕ್ಯಾಬಿನೆಟ್​ನಲ್ಲಿ ಭಾನುವಾರ ಕೇಂದ್ರ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ಕೆಲವೇ ಗಂಟೆಗಳ ನಂತರ, ಸುರೇಶ್ ಗೋಪಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಹುದ್ದೆಯಿಂದ ಮುಕ್ತರಾಗಲು ಮತ್ತು ತ್ರಿಶೂರ್ ಜನರಿಗಾಗಿ ಸಂಸದರಾಗಿ ಕೆಲಸ ಮಾಡಲು ಬಯಸುವುದಾಗಿ ಹೇಳಿದ್ದಾರೆ. ನಟ-ರಾಜಕಾರಣಿ ಸುರೇಶ್ ಗೋಪಿ ಅವರು ಚಲನಚಿತ್ರಗಳಿಗೆ ಸಹಿ ಹಾಕಿದ್ದಾರೆ. ಅವುಗಳನ್ನು ಮುಗಿಸಲೇಬೇಕು ಎಂದು ಹೇಳಿದ್ದಾರೆ.

ಸಂಸದನಾಗಿ ಕೆಲಸ ಮಾಡುವುದು ನನ್ನ ಗುರಿ. ನಾನು ಏನನ್ನೂ ಕೇಳಲಿಲ್ಲ. ನನಗೆ ಈ ಹುದ್ದೆ ಅಗತ್ಯವಿಲ್ಲ ಎಂದು ನಾನು ಹೇಳಿದ್ದೆ. ನಾನು ಶೀಘ್ರದಲ್ಲೇ ಹುದ್ದೆಯಿಂದ ಮುಕ್ತನಾಗುತ್ತೇನೆ ಎಂದು ನಾನು ಭಾವಿಸುತ್ತೇನೆ. ತ್ರಿಶೂರ್ ಮತದಾರರಿಗೆ ಯಾವುದೇ ಸಮಸ್ಯೆ ಇಲ್ಲ. ಅವರಿಗೆ ಅದು ತಿಳಿದಿದೆ ಮತ್ತು ಸಂಸದನಾಗಿ ನಾನು ಅವರಿಗಾಗಿ ಕಾರ್ಯನಿರ್ವಹಿಸುತ್ತೇನೆ. ನಾನು ನನ್ನ ಚಲನಚಿತ್ರಗಳನ್ನು ಮುಗಿಸಬೇಕು ಎಂದು ಪ್ರಮಾಣ ವಚನ ಸ್ವೀಕಾರ ಸಮಾರಂಭದ ನಂತರ ದೆಹಲಿಯಲ್ಲಿ ಮನೋರಮಾ ಜತೆ ಮಾತನಾಡಿದ ಸುರೇಶ್ ಗೋಪಿ ಹೇಳಿದ್ದಾರೆ.

ಸೋಮವಾರ ನಡೆಯಲಿರುವ ಕೇಂದ್ರ ಸಚಿವ ಸಂಪುಟದ ಮೊದಲ ನಿಗದಿತ ಸಭೆಗೆ ಮುಂಚಿತವಾಗಿ ಗೋಪಿ ಅವರ ಹೇಳಿಕೆ ಬಂದಿದೆ. ಗೋಪಿ ಮತ್ತು ಪಕ್ಷದ ಹಿರಿಯ ನಾಯಕ ಜಾರ್ಜ್ ಕುರಿಯನ್ ಅವರು ಕೇರಳದಿಂದ ಕೇಂದ್ರ ಸಚಿವ ಸಂಪುಟಕ್ಕೆ ಸೇರ್ಪಡೆಗೊಂಡಿದ್ದರು.

ಇದನ್ನೂ ಓದಿ: Election Commission : ಜುಲೈ 10ರಂದು 7 ರಾಜ್ಯಗಳ 13 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ

ಎಡರಂಗದ ಭದ್ರಕೋಟೆಯಾಗಿದ್ದ ತ್ರಿಶೂರ್ ಲೋಕಸಭಾ ಕ್ಷೇತ್ರದಲ್ಲಿ ಸುರೇಶ್ ಗೋಪಿ ಗೆಲುವು ಸಾಧಿಸಿದ್ದು, ಕೇರಳದ ಮೊದಲ ಬಿಜೆಪಿ ಸಂಸದರಾಗಿ ಇತಿಹಾಸ ನಿರ್ಮಿಸಿದ್ದಾರೆ. ಸುರೇಶ್ ಗೋಪಿ ಅವರು ಸಿಪಿಐನ ವಿ.ಎಸ್.ಸುನಿಲ್ ಕುಮಾರ್ ಅವರನ್ನು 74,000 ಮತಗಳ ಅಂತರದಿಂದ ಸೋಲಿಸಿದ್ದಾರೆ. ತ್ರಿಶೂರ್ ಲೋಕಸಭಾ ಕ್ಷೇತ್ರದಿಂದ ಕಾಂಗ್ರೆಸ್ ಕೆ ಮುರಳೀಧರನ್ ಅವರನ್ನು ಕಣಕ್ಕಿಳಿಸಿತ್ತು.

2024 ರ ಲೋಕಸಭಾ ಚುನಾವಣಾ ಪ್ರಚಾರದ ಸಮಯದಲ್ಲಿ, ಸುರೇಶ್ ಗೋಪಿ ‘ತ್ರಿಶೂರ್​ಗೆ ಕೇಂದ್ರ ಸಚಿವ ಸ್ಥಾನ, ಮೋದಿಯವರ ಗ್ಯಾರಂಟಿ’ ಎಂಬ ಘೋಷಣೆಯೊಂದಿಗೆ ಪ್ರಚಾರ ಮಾಡಿದ್ದನ್ನು ಇಲ್ಲಿ ಸ್ಮರಿಸಬಹುದು.

Continue Reading

ಪ್ರಮುಖ ಸುದ್ದಿ

Election Commission : ಜುಲೈ 10ರಂದು 7 ರಾಜ್ಯಗಳ 13 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ

Election Commission :ಜುಲೈ 10 ರಂದು ಉಪಚುನಾವಣೆ ನಡೆಯಲಿದ್ದು, ಜುಲೈ 13 ರಂದು ಮತ ಎಣಿಕೆ ನಡೆಯಲಿದೆ. ಜುಲೈ 15 ರೊಳಗೆ ಉಪಚುನಾವಣೆಗಳನ್ನು ಪೂರ್ಣಗೊಳಿಸಬೇಕು ಎಂದು ಚುನಾವಣಾ ಆಯೋಗ ಹೇಳಿದೆ. ಹಾಲಿ ಸದಸ್ಯರ ಮರಣ ಅಥವಾ ರಾಜೀನಾಮೆಯಿಂದ ಉಂಟಾಗಿರುವ ಖಾಲಿ ಸ್ಥಾನಗಳಿಗೆ ಉಪಚುನಾವಣೆ ನಡೆಯಲಿದೆ.

VISTARANEWS.COM


on

Election Commission
Koo

ಬೆಂಗಳೂರು: ಜುಲೈ 10, 2024 ರಂದು ಏಳು ರಾಜ್ಯಗಳ 13 ವಿಧಾನಸಭಾ ಸ್ಥಾನಗಳಿಗೆ ಉಪಚುನಾವಣೆ ನಡೆಯಲಿದೆ ಎಂದು ಭಾರತದ ಚುನಾವಣಾ ಆಯೋಗ (Election Commission ) ಘೋಷಿಸಿದೆ. ಬಿಹಾರ, ತಮಿಳುನಾಡು ಮತ್ತು ಮಧ್ಯಪ್ರದೇಶದ ತಲಾ ಒಂದು, ಪಶ್ಚಿಮ ಬಂಗಾಳದ ನಾಲ್ಕು ಮತ್ತು ಉತ್ತರಾಖಂಡ, ಪಂಜಾಬ್ ಮತ್ತು ಹಿಮಾಚಲ ಪ್ರದೇಶದ ತಲಾ ಎರಡು ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಲಿದೆ.

ಜುಲೈ 10 ರಂದು ಉಪಚುನಾವಣೆ ನಡೆಯಲಿದ್ದು, ಜುಲೈ 13 ರಂದು ಮತ ಎಣಿಕೆ ನಡೆಯಲಿದೆ. ಜುಲೈ 15 ರೊಳಗೆ ಉಪಚುನಾವಣೆಗಳನ್ನು ಪೂರ್ಣಗೊಳಿಸಬೇಕು ಎಂದು ಚುನಾವಣಾ ಆಯೋಗ ಹೇಳಿದೆ. ಹಾಲಿ ಸದಸ್ಯರ ಮರಣ ಅಥವಾ ರಾಜೀನಾಮೆಯಿಂದ ಉಂಟಾಗಿರುವ ಖಾಲಿ ಸ್ಥಾನಗಳಿಗೆ ಉಪಚುನಾವಣೆ ನಡೆಯಲಿದೆ.

ಉಪಚುನಾವಣೆಯ ಸಂಪೂರ್ಣ ವೇಳಾಪಟ್ಟಿ ಇಲ್ಲಿದೆ

  • ಅಧಿಸೂಚನೆ ಪ್ರಕಟಣೆ: ಜೂನ್ 14
  • ನಾಮಪತ್ರ ಸಲ್ಲಿಕೆಗೆ ಕೊನೆಯ ದಿನಾಂಕ: ಜೂನ್ 21
  • ನಾಮಪತ್ರ ಪರಿಶೀಲನೆ: ಜೂನ್ 24
  • ನಾಮಪತ್ರ ಹಿಂಪಡೆಯಲು ಕೊನೆಯ ದಿನಾಂಕ: ಜೂನ್ 26
  • ಮತದಾನದ ದಿನಾಂಕ: ಜುಲೈ 10
  • ಫಲಿತಾಂಶ: ಜುಲೈ 13

ಇದನ್ನೂ ಓದಿ: Narendra Modi 3.0 : ಅಧಿಕಾರ ಸ್ವೀಕರಿಸಿದ ಮರುದಿನವೇ ಮೊದಲ ಫೈಲ್​ಗೆ ಸಹಿ ಹಾಕಿದ ಪ್ರಧಾನಿ ಮೋದಿ; ಯಾವ ಕಡತ ಅದು?

ಜುಲೈ 10 ರಂದು ಉಪಚುನಾವಣೆ ನಡೆಯಲಿರುವ ಕ್ಷೇತ್ರಗಳ ಪಟ್ಟಿ

ಬಿಹಾರ: ಬಿಮಾ ಭಾರತಿ ರಾಜೀನಾಮೆಯಿಂದ ತೆರವಾಧ ರುಪೌಲಿ ಕ್ಷೇತ್ರ
ಪಶ್ಚಿಮ ಬಂಗಾಳ: ಶ್ರೀ ಕೃಷ್ಣ ಕಲ್ಯಾಣಿ ರಾಜೀನಾಮೆಯಿಂದ ತೆರವಾದ ರಾಯ್​ಗಂಜ್ ಸ್ಥಾನ
ಪಶ್ಚಿಮ ಬಂಗಾಳ: ಮುಕುಟ್​​ ಮಣಿ ಅಧಿಕಾರಿ ರಾಜೀನಾಮೆಯಿಂದ ತೆರವಾದ ರಣಘಾಟ್ ದಕ್ಷಿಣ ಕ್ಷೇತ್ರ
ಪಶ್ಚಿಮ ಬಂಗಾಳ: ಬಿಸ್ವಜಿತ್ ದಾಸ್ ರಾಜೀನಾಮೆಯಿಂದ ಬಾಗ್ಡಾ ಸ್ಥಾನ
ಪಶ್ಚಿಮ ಬಂಗಾಳ: ಸಾಧನ್ ಪಾಂಡೆ ನಿಧನದಿಂದ ತೆರವಾದ ಮಣಿಕ್​ತಾಲ್​ ಕ್ಷೇತ್ರ
ತಮಿಳುನಾಡು: ತಿರು ಎನ್​ ಪುಗಳೆಂದಿ ನಿಧನದಿಂದ ತೆರವಾದ ವಿಕ್ರಾವಂಡಿ ಕ್ಷೇತ್ರ
ಮಧ್ಯಪ್ರದೇಶ: ಕಮಲೇಶ್ ಪ್ರತಾಪ್ ಶಾ ರಾಜೀನಾಮೆಯಿಂದಾಗಿ ಅಮರವಾರಾ ಸ್ಥಾನ
ಉತ್ತರಾಖಂಡ: ರಾಜೇಂದ್ರ ಸಿಂಗ್ ಭಂಡಾರಿ ರಾಜೀನಾಮೆಯಿಂದಾಗಿ ಬದರೀನಾಥ್ ಸ್ಥಾನ
ಉತ್ತರಾಖಂಡ: ಸರ್ವತ್ ಕರೀಂ ಅನ್ಸಾರಿ ಅವರ ನಿಧನದಿಂದಾಗಿ ಮಂಗಳೌರ್ ಕ್ಷೇತ್ರ
ಪಂಜಾಬ್​: ಶೀತಲ್ ಅಂಗುರಾ ಅವರ ರಾಜೀನಾಮೆಯಿಂದ ತೆರವಾದ ಪಂಜಾಬ್ ಜಲಂಧರ್ ಪಶ್ಚಿಮ ಸ್ಥಾನ
ಹಿಮಾಚಲ ಪ್ರದೇಶ: ಹೋಶ್ಯಾರ್ ಸಿಂಗ್ ಅವರ ರಾಜೀನಾಮೆಯಿಂದಾಗಿ ಡೆಹ್ರಾಡೂನ್ ಕ್ಷೇತ್ರ
ಹಿಮಾಚಲ ಪ್ರದೇಶ: ಆಶಿಶ್ ಶರ್ಮಾ ಅವರ ರಾಜೀನಾಮೆಯಿಂದಾಗಿ ತೆರವಾದ ಹಮೀರ್ಪುರ ಸ್ಥಾನ
ಹಿಮಾಚಲ ಪ್ರದೇಶ: ಕೆ.ಎಲ್.ಠಾಕೂರ್ ಅವರ ರಾಜೀನಾಮೆಯಿಂದಾಗಿ ತೆರವಾದ ನಲಘರ್ ಸ್ಥಾನ

ಚುನಾವಣೆಗೆ ನಡೆಯುವ ವಿಧಾನಸಭಾ ಕ್ಷೇತ್ರದ ಸಂಪೂರ್ಣ ಅಥವಾ ಯಾವುದೇ ಭಾಗವನ್ನು ಒಳಗೊಂಡಿರುವ ಜಿಲ್ಲೆಗಳಲ್ಲಿ ಮಾದರಿ ನೀತಿ ಸಂಹಿತೆ (ಎಂಸಿಸಿ) ತಕ್ಷಣದಿಂದ ಜಾರಿಗೆ ಬರಲಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.ಜುಲೈ 15 ರೊಳಗೆ ಉಪಚುನಾವಣೆಗಳನ್ನು ಪೂರ್ಣಗೊಳಿಸಬೇಕು ಎಂದು ಅದು ಹೇಳಿದೆ.

Continue Reading

ರಾಜಕೀಯ

8th Pay Commission: ಭಾರಿ ವೇತನ ಹೆಚ್ಚಳ ನಿರೀಕ್ಷೆಯಲ್ಲಿ ಕೇಂದ್ರ ಸರ್ಕಾರಿ ನೌಕರರು

ಹೊಸ ಸರ್ಕಾರವು ಶೀಘ್ರದಲ್ಲೇ 8 ನೇ ವೇತನ ಆಯೋಗದ (8th Pay Commission) ಬಗ್ಗೆ ಚರ್ಚೆಗಳನ್ನು ಪ್ರಾರಂಭಿಸಬಹುದು ಎನ್ನಲಾಗುತ್ತಿದೆಯಾದರೂ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ. ಇನ್ನು ಕೆಲವೇ ತಿಂಗಳುಗಳಲ್ಲಿ ಮೋದಿ ಸರ್ಕಾರ ಕೇಂದ್ರ ಸರ್ಕಾರಿ ನೌಕರರಿಗೆ ದೊಡ್ಡ ಘೋಷಣೆ ಮಾಡಬಹುದು ಎನ್ನುವ ನಿರೀಕ್ಷೆಯಿದೆ.

VISTARANEWS.COM


on

By

8th Pay Commission
Koo

ನವದೆಹಲಿ: ಪ್ರಧಾನಿ (PM) ನರೇಂದ್ರ ಮೋದಿ (Narendra Modi) ನೇತೃತ್ವದ 3.0 ಸರ್ಕಾರ ರಚನೆಯಾಗಿದ್ದು, ಸಂಪುಟ ಸಚಿವರು (Cabinet Ministers) ಭಾನುವಾರ ಪ್ರಮಾಣ ವಚನ ಸ್ವೀಕರಿಸಿದರು. ಹೊಸದಾಗಿ ರಚನೆಯಾಗಿರುವ ಸರಕಾರದಿಂದ ಈಗ 8ನೇ ವೇತನ ಆಯೋಗ (8th Pay Commission) ರಚನೆ ಸೇರಿದಂತೆ ಹಲವಾರು ನಿರೀಕ್ಷೆಗಳಿವೆ.

ಹೊಸ ಸರ್ಕಾರವು ಶೀಘ್ರದಲ್ಲೇ 8ನೇ ವೇತನ ಆಯೋಗದ ಬಗ್ಗೆ ಚರ್ಚೆಗಳನ್ನು ಪ್ರಾರಂಭಿಸಬಹುದು ಎನ್ನಲಾಗುತ್ತಿದೆಯಾದರೂ ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿ ಇಲ್ಲ. ಇನ್ನು ಕೆಲವೇ ತಿಂಗಳುಗಳಲ್ಲಿ ಮೋದಿ ಸರ್ಕಾರ ಕೇಂದ್ರ ಸರ್ಕಾರಿ ನೌಕರರಿಗೆ ದೊಡ್ಡ ಘೋಷಣೆ ಮಾಡಬಹುದು ಎನ್ನುವ ನಿರೀಕ್ಷೆಯಿದೆ.

ಸರ್ಕಾರಿ ನೌಕರರು, ಪಿಂಚಣಿದಾರರಿಗೆ ಅನುಕೂಲ

ಸರ್ಕಾರಿ ಸಿಬ್ಬಂದಿಯ ವೇತನ ಹೆಚ್ಚಳಕ್ಕೆ ಸಂಬಂಧಿಸಿ 8ನೇ ವೇತನ ಆಯೋಗವು ತನ್ನ ಶಿಫಾರಸುಗಳನ್ನು ಕೇಂದ್ರ ಸರ್ಕಾರಕ್ಕೆ ಸಲ್ಲಿಸಲಿದೆ. ಇದು ಜಾರಿಯಾದರೆ ಕೋಟ್ಯಂತರ ಸರ್ಕಾರಿ ನೌಕರರು ಮತ್ತು ಪಿಂಚಣಿದಾರರಿಗೆ ಅನುಕೂಲವಾಗಲಿದೆ.

ಈ ಹಿಂದೆ ಕೇಂದ್ರ ಸರ್ಕಾರವು ಪ್ರತಿ 10 ವರ್ಷಗಳಿಗೊಮ್ಮೆ ಹೊಸ ವೇತನ ಆಯೋಗದ ಶಿಫಾರಸುಗಳನ್ನು ಜಾರಿಗೆ ತರುತ್ತಿತ್ತು. 7ನೇ ವೇತನ ಆಯೋಗವು ಜನವರಿ 2016ರಲ್ಲಿ ಜಾರಿಗೆ ಬಂದಿತು. ಆದ್ದರಿಂದ ಭಾರತದಲ್ಲಿ 8 ನೇ ವೇತನ ಆಯೋಗವು ಜನವರಿ 2026ರಿಂದ ಜಾರಿಗೆ ಬರುವ ಸಾಧ್ಯತೆಯಿದೆ.

ಮುಂದಿನ 8ನೇ ವೇತನ ಆಯೋಗ 2025ರಲ್ಲೇ ರಚನೆಯಾಗಬೇಕು. ಇದು ನಡೆದರೆ ಕೇಂದ್ರ ಸರ್ಕಾರಿ ನೌಕರರ ವೇತನದಲ್ಲಿ ಭಾರಿ ಏರಿಕೆಯಾಗುವ ಸಾಧ್ಯತೆ ಇದೆ ಎಂಬುದು ತಜ್ಞರ ಅಭಿಪ್ರಾಯ.

ಹಲವು ಬದಲಾವಣೆ

8ನೇ ವೇತನ ಆಯೋಗದಲ್ಲಿ ಫಿಟ್‌ಮೆಂಟ್ ಅಂಶ ಸೇರಿದಂತೆ ಹಲವು ಬದಲಾವಣೆಗಳು ನಡೆಯುವ ಸಾಧ್ಯತೆ ಇದೆ. ಫಿಟ್‌ಮೆಂಟ್ ಅಂಶವೆಂದರೆ ಹಿಂದಿನ ವೇತನದಿಂದ ವೇತನ ಪರಿಷ್ಕೃರಣೆ ಮಾಡಲು ಪರಿಷ್ಕೃತ ವೇತನದ ಲೆಕ್ಕಾಚಾರ ನಡೆಸಲು ವೇತನ ಆಯೋಗವು ಸೂಚಿಸುವ ನಿರ್ದಿಷ್ಟ ಮೌಲ್ಯವಾಗಿದೆ. ಇದು ಒಂದು ವಿಶಿಷ್ಟ ಅಂಶದ ಮೂಲಕ ಮೂಲ ವೇತನದಲ್ಲಿನ ಪರಿಷ್ಕರಣೆಯನ್ನು ಸೂಚಿಸುತ್ತದೆ. ಫಿಟ್‌ಮೆಂಟ್ ಅಂಶವು ಕೇಂದ್ರ ಸರ್ಕಾರಿ ಸೇವೆಗಳಲ್ಲಿರುವ ಎಲ್ಲಾ ಉದ್ಯೋಗಿಗಳಿಗೆ ಅನ್ವಯಿಸುತ್ತದೆ.

ಉದ್ಯೋಗಿಗಳ ಫಿಟ್‌ಮೆಂಟ್ ಅಂಶವು 3.68 ಪಟ್ಟು ಹೆಚ್ಚಾಗುವ ಸಾಧ್ಯತೆ ಇದೆ. ಸರ್ಕಾರಿ ನೌಕರರ ಕನಿಷ್ಠ ಮೂಲ ವೇತನ 18,000 ರೂ. ಗಳಾಗಿದೆ. ಫಿಟ್‌ಮೆಂಟ್ ಅಂಶ ಹೆಚ್ಚಳದಿಂದ ಅವರ ಮೂಲ ವೇತನ 18,000 ರೂ. ನಿಂದ 26,000 ರೂ. ಗೆ ಏರಿಕೆಯಾಗಲಿದೆ.

Continue Reading
Advertisement
Reasi Terror Attack
ಪ್ರಮುಖ ಸುದ್ದಿ6 mins ago

Reasi Terror Attack : ಉಗ್ರರ ಮುಂದೆ ಸತ್ತಂತೆ ನಟಿಸಿ ಬದುಕುಳಿದ ಹಿಂದೂ ಯಾತ್ರಿಗಳು…

murder case
ಮೈಸೂರು22 mins ago

Murder Case : ಮೈಸೂರಿನಲ್ಲಿ ಅನ್ನದಾನೇಶ್ವರ ಮಠದ ಹಿರಿಯ ಸ್ವಾಮೀಜಿಯ ಬರ್ಬರ ಕೊಲೆ

pm narendra modi leopord
ಪ್ರಮುಖ ಸುದ್ದಿ23 mins ago

PM Narendra Modi: ಮೋದಿ ಪ್ರಮಾಣ ವಚನ ಸಮಾರಂಭದಲ್ಲಿ ಕಾಣಿಸಿಕೊಂಡ ನಿಗೂಢ ಪ್ರಾಣಿ! ವಿಡಿಯೋ ಇದೆ ನೋಡಿ

Yuva Rajkumar son of raghavendra Rajkumar yuva divorce
ಸ್ಯಾಂಡಲ್ ವುಡ್28 mins ago

Yuva Rajkumar: ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ಯುವ ರಾಜ್​ಕುಮಾರ್​ ; ಅಣ್ಣಾವ್ರ ಕುಟುಂಬದಲ್ಲಿ ಇದೇ ಮೊದಲ ಪ್ರಕರಣ!

Congress Guaratee
ಕರ್ನಾಟಕ37 mins ago

Congress Guarantee: ಗ್ಯಾರಂಟಿ ನಿಲ್ಲಿಸುವ ಮಾತು ಬೇಡ: ಕೈ ನಾಯಕರಿಗೆ ಎಚ್.ಎಂ ರೇವಣ್ಣ ಎಚ್ಚರಿಕೆ

Suresh Gopi
ದೇಶ38 mins ago

Suresh Gopi : ಪ್ರಮಾಣವಚನ ಸ್ವೀಕರಿಸಿದ ಒಂದೇ ಗಂಟೆಯೊಳಗೆ ಸಚಿವ ಸ್ಥಾನ ಬೇಡ ಎಂದ ಸುರೇಶ್​ ಗೋಪಿ!

Physical Abuse
ಮೈಸೂರು57 mins ago

Physical Abuse : ಪಿಕ್‌ ಅಪ್, ಡ್ರಾಪ್ ನೆಪದಲ್ಲಿ ಸಲುಗೆ; ಅಂಕಲ್ ಗಾಳಕ್ಕೆ ಸಿಲುಕಿದ ಬಾಲಕಿಯ ನರಳಾಟ

Election Commission
ಪ್ರಮುಖ ಸುದ್ದಿ1 hour ago

Election Commission : ಜುಲೈ 10ರಂದು 7 ರಾಜ್ಯಗಳ 13 ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ

bhavani revanna prajwal revanna case
ಪ್ರಮುಖ ಸುದ್ದಿ1 hour ago

Prajwal Revanna Case: ಎಸ್‌ಐಟಿಯಿಂದ ಪ್ರಜ್ವಲ್‌ ರೇವಣ್ಣ ಕೋಣೆ ತಲಾಶ್‌, ಭವಾನಿ ತುಳಸಿ ಪೂಜೆ! ಅಲ್ಲೇ ಇದ್ದರೂ ಮುಖಾಮುಖಿಯಾಗದ ಅಮ್ಮ- ಮಗ

Niveditha Gowda Chandan Shetty Joint Pressmeet For The First Time
ಕಿರುತೆರೆ1 hour ago

Niveditha Gowda : ಡಿವೋರ್ಸ್‌ ಬಳಿಕ ಒಟ್ಟಾಗಿ ಸುದ್ದಿಗೋಷ್ಠಿ ಕರೆದ ಚಂದನ್-ನಿವೇದಿತಾ!

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka weather Forecast
ಮಳೆ3 days ago

Karnataka weather : ಮಳೆಯಲ್ಲೆ ತಪಸ್ಸಿಗೆ ಕುಳಿತ ವೃದ್ಧ; ಇನ್ನೊಂದು ವಾರ ನಾನ್‌ ಸ್ಟಾಪ್‌ ವರುಣನ ಅಬ್ಬರ

Sigandur launch
ಶಿವಮೊಗ್ಗ3 days ago

Sigandur launch: ಸಿಗಂದೂರು ಲಾಂಚ್‌ನಲ್ಲಿ ಭಾರಿ ವಾಹನಗಳಿಗೆ ನಿರ್ಬಂಧ

Karnataka Rain
ಮಳೆ4 days ago

Karnataka Rain : ಭಾರಿ ಮಳೆಗೆ ಮರ ಬಿದ್ದು ಮೇಕೆಗಳು ಸಾವು; ಸಿಡಿಲಿಗೆ ಎಲೆಕ್ಟ್ರಿಕ್‌ ಅಂಗಡಿ ಸುಟ್ಟು ಭಸ್ಮ

Lok Sabha Election Result 2024 Live
ದೇಶ6 days ago

Lok Sabha Election Result 2024 Live: ಲೋಕಸಭೆ ಚುನಾವಣೆ ಫಲಿತಾಂಶದ ಲೈವ್‌ ಇಲ್ಲಿ ವೀಕ್ಷಿಸಿ

Karnataka Rain
ಮಳೆ7 days ago

Karnataka Rain : 133 ವರ್ಷದ ರೆಕಾರ್ಡ್ ಬ್ರೇಕ್ ಮಾಡಿದ ʻಬೆಂಗಳೂರು ಮಳೆʼ

Snake Rescue Snakes spotted in heavy rain
ಮಳೆ7 days ago

Snake Rescue: ಮಳೆ ನೀರಿನಲ್ಲಿ ಹರಿದು ಬಂದು ಬೈಕ್‌ನಲ್ಲಿ ಸೇರಿಕೊಂಡ ಹಾವು; ಮನೆಗಳಲ್ಲೂ ಪ್ರತ್ಯಕ್ಷ

Karnataka Rain
ಮಳೆ1 week ago

Karnataka Rain : ವೀಕೆಂಡ್‌ ಮೋಜಿಗೆ ವರುಣ ಅಡ್ಡಿ; ಭಾನುವಾರ ಸಂಜೆಗೆ ಮಳೆ ಕಾಟ

Liquor ban
ಬೆಂಗಳೂರು1 week ago

Liquor Ban : ಮುಂದಿನ ಏಳು ದಿನಗಳಲ್ಲಿ ನಾಲ್ಕೂವರೆ ದಿನ ಬಾರ್ ಕ್ಲೋಸ್; ಎಣ್ಣೆ ಸಿಗೋದು ಯಾವ ದಿನ?

Assault Case in Shivamogga
ಕ್ರೈಂ2 weeks ago

Assault Case : ಶಿವಮೊಗ್ಗದಲ್ಲಿ ಮತ್ತೆ ಬಾಲ ಬಿಚ್ಚಿದ ಪುಂಡರು; ಗಾಂಜಾ ನಶೆಯಲ್ಲಿ ವಾಹನಗಳು ಪೀಸ್‌ ಪೀಸ್‌

Karnataka weather Forecast
ಮಳೆ2 weeks ago

Karnataka Weather : ಚಿಕ್ಕಮಗಳೂರಲ್ಲಿ ಭಾರಿ ಮಳೆ; ಯಾದಗಿರಿಯಲ್ಲಿ ಕರೆಂಟ್‌ ಕಟ್‌, ಜನರೇಟರ್‌ನಿಂದ ಮೊಬೈಲ್‌ಗಳಿಗೆ ಚಾರ್ಜಿಂಗ್‌!

ಟ್ರೆಂಡಿಂಗ್‌