Theft Case : ಚಿನ್ನದಂಗಡಿಗೆ ಕನ್ನ; ಮೈ ತುಂಬ ಪಂಚೆ, ಬೆಡ್ ಶೀಟ್ ಧರಿಸಿ ಬರುವ ಖತರ್ನಾಕ್‌ ಗ್ಯಾಂಗ್‌ - Vistara News

ಬೆಂಗಳೂರು

Theft Case : ಚಿನ್ನದಂಗಡಿಗೆ ಕನ್ನ; ಮೈ ತುಂಬ ಪಂಚೆ, ಬೆಡ್ ಶೀಟ್ ಧರಿಸಿ ಬರುವ ಖತರ್ನಾಕ್‌ ಗ್ಯಾಂಗ್‌

Theft Case: ಇವರು ಮೈ ತುಂಬ ಪಂಚೆ, ಬೆಡ್‌ ಶೀಟ್‌ ಹಿಡಿದು ರಸ್ತೆಗಿಳಿದರೆ ಯಾವುದಾದರೂ ಚಿನ್ನದಂಗಡಿಗೆ ಕನ್ನ ಹಾಕುವುದು ಪಕ್ಕಾ. ಸಾಕ್ಷಿ ಸಿಗದಂತೆ ಕೃತ್ಯವನ್ನೆಸಗಿ ಕಳ್ಳರು ಮಾಲು ಸಮೇತ ಪರಾರಿ ಆಗಿದ್ದಾರೆ.

VISTARANEWS.COM


on

Burglary at Benaka Jewellers near Netkalappa Circle
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಇತ್ತೀಚೆಗಂತೂ ಕಳ್ಳತನ ಪ್ರಕರಣಗಳು (Theft Case) ಹೆಚ್ಚಾಗುತ್ತಿದ್ದು, ಸಾಕ್ಷಿಗಳು ಸಿಗದ ರೀತಿಯಲ್ಲಿ ಕೃತ್ಯವನ್ನು ಎಸಗುತ್ತಿದ್ದಾರೆ. ಕಣ್ಣು ಮುಚ್ಚಿ ತೆರೆಯುವುದರಲ್ಲಿ ಕಳ್ಳರು ತಮ್ಮ ಕೈ ಚಳಕ ತೋರುತ್ತಾರೆ. ಬೆಂಗಳೂರಿನ ಬಸವನಗುಡಿ ನೆಟ್ಕಲಪ್ಪ ಸರ್ಕಲ್ ಬಳಿ ಇರುವ ಬೆನಕ ಜ್ಯುವೆಲ್ಲರಿಯಲ್ಲಿ ಕಳ್ಳರು ಕೈಚಳಕ ತೋರಿದ್ದಾರೆ.

ಸುಮಾರು 250 ಗ್ರಾಂ ಚಿನ್ನ, 1.8 ಲಕ್ಷ ರೂ. ನಗದು ಜತೆಗೆ ಒಂದಷ್ಟು ಬೆಳ್ಳಿ ಪದಾರ್ಥಗಳನ್ನು ಕಳ್ಳರು ಕದ್ದೊಯ್ದಿದ್ದಾರೆ. ಮಧ್ಯರಾತ್ರಿ 12 ಗಂಟೆಗೆ ಎಂಟ್ರಿ ಕೊಟ್ಟ ಕಳ್ಳರು ಯಾವುದೇ ಆತಂಕವಿಲ್ಲದೆ ಅನಾಯಾಸವಾಗಿ ಕೆಲಸ ಮುಗಿಸಿದ್ದಾರೆ. ಇವರ ನಡವಳಿಕೆಯನ್ನು ಗಮನಿಸಿದರೆ ಇವರೆಲ್ಲರೂ ಪ್ರೊಫೆಷನಲ್ ಕಳ್ಳರು ಎಂಬುದು ಮೇಲ್ನೋಟಕ್ಕೆ ತಿಳಿದು ಬಂದಿದೆ. ಕೃತ್ಯ ನಡೆಸುವಾಗ ಪೊಲೀಸರಿಗೆ ಸಾಕ್ಷಿ ಸಿಗಬಾರೆಂದು ಸಂಪೂರ್ಣ ದೇಹವನ್ನು ಪಂಚೆ ಹಾಗೂ ಬೆಡ್ ಶೀಟ್‌ನಲ್ಲಿ ಸುತ್ತಿಕೊಂಡು ಕಳ್ಳತನ ಮಾಡಿದ್ದಾರೆ. ಜತೆಗೆ ಫಿಂಗರ್ ಪ್ರಿಂಟ್ ಸಿಗದಂತೆ ನೋಡಿಕೊಂಡಿದ್ದಾರೆ.

ಬೆನಕ ಜ್ಯೂವೆಲ್ಲರ್ಸ್‌ ಅನ್ನು ಟಾರ್ಗೆಟ್ ಮಾಡಿಯೇ ಈ ರೀತಿ ಕೃತ್ಯ ನಡೆಸಿದ್ದರಾ ಎಂಬ ಅನುಮಾನ ಕೂಡ ಮೂಡಿದೆ. ಯಾಕೆಂದರೆ ಇದೇ ಬೆನಕ ಜ್ಯೂವೆಲ್ಲರ್ಸ್‌ನ ಮತ್ತೊಂದು ಬ್ರಾಂಚ್ ರಾಮಮೂರ್ತಿನಗರದಲ್ಲಿದೆ. ಅಲ್ಲಿ ಕೂಡ ಕಳೆದ ಬುಧವಾರ (ಫೆ.7) ಇದೇ ಮಾದರಿಯಲ್ಲೇ ಕಳ್ಳತನವಾಗಿದೆ‌. ನೆಟ್ಕಲಪ್ಪ ಸರ್ಕಲ್‌ನಲ್ಲಿರುವ ಸಿಸಿಟಿವಿಯಲ್ಲಿ ಕಳ್ಳರ ಕೃತ್ಯ ಸೆರೆಯಾಗಿದೆ. ಆದರೆ ರಾಮಮೂರ್ತಿನಗರದ ಬ್ರಾಂಚ್‌ನಲ್ಲಿ ಸಿಸಿಟಿವಿಗಳನ್ನೂ ಧ್ವಂಸ ಮಾಡಿ ಪರಾರಿಯಾಗಿದ್ದಾರೆ.

ಡಾಕ್ಯುಮೆಂಟ್‌ಗಳನ್ನು ಕದ್ದಿರುವ ಕಳ್ಳರು

ಸಾಮಾನ್ಯವಾಗಿ ಕಳ್ಳರು ಬೆಲೆಬಾಳುವ ವಸ್ತುಗಳನ್ನು ಕದ್ದು ಹೋಗುತ್ತಾರೆ. ಆದರೆ ಈ ಕಳ್ಳರು ಶಾಪ್‌ನಲ್ಲಿದ್ದ ಕೆಲ ಡಾಕ್ಯುಮೆಂಟ್‌ಗಳನ್ನೂ ಕಳ್ಳತನ ಮಾಡಿದ್ದಾರೆ. ಹೀಗಾಗಿ ಈ ಪ್ರಕರಣದಲ್ಲಿ ಹಲವಾರು ಅನುಮಾನಗಳು ಮೂಡಿವೆ. ಚಿನ್ನಂಗಡಿ , ಬ್ಯಾಂಕ್‌ಗಳಲ್ಲಿ ಬಲವಂತವಾಗಿ ಒಳ ನುಗ್ಗಲು ಪ್ರಯತ್ನಿಸಬಾರದು ಎಂದು ಅಲಾರಂ ಸಿಸ್ಟಂಗಳನ್ನು ಅಳವಡಿಕೆ ಮಾಡಲಾಗುತ್ತದೆ. ಆದರೆ ಇಲ್ಲಿ ಅಂತಹ ಯಾವುದೇ ಸೆಕ್ಯೂರಿಟಿ ಇರಲಿಲ್ಲ ಎನ್ನಲಾಗಿದೆ. ಸದ್ಯ ಈ ಸಂಬಂಧ ಬಸವನಗುಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ಕಳ್ಳರಿಗಾಗಿ ಹುಡುಕಾಟ ನಡೆಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕರ್ನಾಟಕ

Petrol Diesel Price Hike: ಬಿಜೆಪಿಯವರು ಪ್ರತಿಭಟನೆ ಮಾಡಬೇಕಿರೋದು ಕೇಂದ್ರದ ವಿರುದ್ಧ: ಸಿಎಂ ತಿರುಗೇಟು

Petrol Diesel Price Hike: ಕೇಂದ್ರ ಸರ್ಕಾರದ ನಡೆ ಬಗ್ಗೆ ಬಿಜೆಪಿ ನಾಯಕರು ಒಂದೇ ಒಂದು ದಿನ ಮಾತನಾಡಲಿಲ್ಲ, ಇವತ್ತು ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚು ಮಾಡಿದರು ಎಂದು ಪ್ರತಿಭಟನೆ ಮಾಡುತ್ತಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ.

VISTARANEWS.COM


on

Petrol Diesel Price Hike
Koo

ಬೆಂಗಳೂರು: ತೈಲ ದರ ಏರಿಕೆ (Petrol Diesel Price Hike) ಖಂಡಿಸಿ ಬಿಜೆಪಿಯಿಂದ ಬೆಂಗಳೂರು ಸೇರಿ ರಾಜ್ಯಾದ್ಯಂತ ಪ್ರತಿಭಟನೆ ನಡೆಸಲಾಗುತ್ತಿದೆ. ಬೆಲೆ ಏರಿಕೆ ವಿಚಾರ ಪ್ರಸ್ತಾಪಿಸಿ ಮಾಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್‌, ಈಗ ಗ್ಯಾರಂಟಿಗಳಿಗಾಗಿ ಬಡ ಜನರ ಹೊಟ್ಟೆ ಮೇಲೆ ಹೊಡೆಯುತ್ತಿದ್ದಾರೆ ಎಂದು ಕಮಲ ನಾಯಕರು ಆಕ್ರೋಶ ಹೊರಹಾಕಿದ್ದಾರೆ. ಮತ್ತೊಂದೆಡೆ ಸಿಎಂ ಸಿದ್ದರಾಮಯ್ಯ (CM Siddaramaiah) ಅವರು ಸುದ್ದಿಗೋಷ್ಠಿ ನಡೆಸಿ, ಬೆಲೆ ಏರಿಕೆ ಸಮರ್ಥನೆ ಮಾಡಿಳ್ಳುವ ಮೂಲಕ ತಿರುಗೇಟು ನೀಡಿದರು.

ಬೆಲೆ ಏರಿಕೆ ಮಾಡಿರುವುದು ಪಿಎಂ ಮೋದಿ, ನಮ್ಮ ಪರಿಹಾರದ ಹಣ ಪಡೆಯಲು ಕೋರ್ಟ್‌ಗೆ ಹೋಗಬೇಕಾಯಿತು. ಆದರೆ, ಕೇಂದ್ರ ಸರ್ಕಾರದ ನಡೆ ಬಗ್ಗೆ ಬಿಜೆಪಿ ನಾಯಕರು ಒಂದೇ ಒಂದು ದಿನ ಮಾತನಾಡಲಿಲ್ಲ, ಇವತ್ತು ಪೆಟ್ರೋಲ್, ಡೀಸೆಲ್ ಬೆಲೆ ಹೆಚ್ಚು ಮಾಡಿದರು ಎಂದು ಪ್ರತಿಭಟನೆ ಮಾಡುತ್ತಿದ್ದಾರೆ. ಬಿಜೆಪಿ, ಜೆಡಿಎಸ್‌ನವರು ಪ್ರತಿಭಟನೆ ಮಾಡಬೇಕಾಗಿರುವುದು ಕೇಂದ್ರ ಸರ್ಕಾರದ ವಿರುದ್ಧ ಎಂದು ಹೇಳಿದರು.

ಮೋದಿಯವರು ಗುಜರಾತ್ ಸಿಎಂ ಆಗಿದ್ದಾಗ ಕೇಂದ್ರದಲ್ಲಿ ತೈಲ ಬೆಲೆ ಏರಿಕೆಯಾಗಿದೆ ಎಂದು ಹೇಳಿಕೆ ಕೊಡುತ್ತಿದ್ದರು. ನಾನು ಪಿಎಂ ಆದ ಮೇಲೆ ತೈಲ ಬೆಲೆ ಕಡಿಮೆ ಮಾಡುತ್ತೀನಿ ಅಂತ ಹೇಳಿದ್ದರು. ಆದರೆ ಅದರ ವಿರುದ್ಧವಾಗಿ ಮೋದಿ ನಡೆದುಕೊಂಡಿದ್ದಾರೆ. ಮೋದಿ ಪಿಎಂ ಆದಾಗ ಪೆಟ್ರೋಲ್ ಬೆಲೆ 72.26 ರೂ ಇತ್ತು. ಅದು ಜೂನ್ 24ರಲ್ಲಿ 104 ಆಗಿತ್ತು ಈಗ ಕಡಿಮೆ ಆಗಿದೆ. ಡೀಸೆಲ್ ಬೆಲೆ 57.28 ಇತ್ತು, ಅದನ್ನು 98 ರೂಪಾಯಿ ಮಾಡಿದರು. ಯಾರು ಹೆಚ್ಚು ಮಾಡಿದ್ದು? ಮನಮೋಹನ್ ಸಿಂಗ್ ಕಾಲದಲ್ಲಿ ಕಚ್ಚಾ ತೈಲ ಬೆಲೆ ಬ್ಯಾರೆಲ್‌ 113 ಡಾಲರ್ ಇತ್ತು, ಈಗ ಎಷ್ಟು ಇದೆ? 82 ಡಾಲರ್ ಇದೆ. ಹೀಗಾಗಿ ಮೋದಿಯೇ ದರ ಕಡಿತ ಮಾಡಬೇಕು ಎಂದು ಆಗ್ರಹಿಸಿದರು.

ಇದನ್ನೂ ಓದಿ | Petrol Diesel Price: ನೆರೆ ರಾಜ್ಯಗಳಿಗಿಂತ ಕರ್ನಾಟಕದಲ್ಲೇ ಪೆಟ್ರೋಲ್, ಡಿಸೇಲ್ ಬೆಲೆ ಕಡಿಮೆ: ಸಿಎಂ ಸಮರ್ಥನೆ

ಗ್ಯಾಸ್ ಬೆಲೆ 805.50 ಇದೆ, ಇದನ್ನ ಹೆಚ್ಚು ಮಾಡಿದ್ದು ಯಾರು? ಕಚ್ಚಾ ತೈಲ ಬೆಲೆ ಕಡಿಮೆ ಇದ್ದರೂ ಪೆಟ್ರೋಲ್-ಡೀಸೆಲ್ ಬೆಲೆ ಹೆಚ್ಚಿದೆ. ಯಾರ ವಿರುದ್ಧ ಪ್ರತಿಭಟನೆ ಮಾಡಬೇಕು. ಕೇಂದ್ರ GST ಆದ ಮೇಲೆ ರಾಜ್ಯ ಸರ್ಕಾರ ತೆರಿಗೆ ಹೆಚ್ಚು ಮಾಡುವ ಸ್ವಾತಂತ್ಯ ಕಡಿಮೆ ಆಗಿದೆ. ಮದ್ಯ, ಪೆಟ್ರೋಲ್, ಡೀಸೆಲ್, ಸೇರಿದಂತೆ ಕೆಲವು ಮಾತ್ರ ಹೆಚ್ಚು ಮಾಡಬಹುದು. GST ಅವರೇ ಕಲೆಕ್ಟ್ ಮಾಡುತ್ತಾರೆ. ನಮಗೆ ಅದರಲ್ಲಿ ರಾಜ್ಯದ ಪಾಲು ಕೂಡ ಕಡಿಮೆ ಕೊಡುತ್ತಾರೆ. 14, 15ನೇ ಹಣಕಾಸು ಆಯೋಗದಲ್ಲಿ ಒಂದು ಲಕ್ಷ 87 ಸಾವಿರ ಕೋಟಿ ನಷ್ಟ ಆಗಿದೆ. ಕೇಂದ್ರದಿಂದ ಬರುವ ಹಣ ಕಡಿಮೆ ಆಯ್ತು. ಒಂದು ದಿನ ಬಿಜೆಪಿಯವರು ಸಂಸತ್ತ್‌ನಲ್ಲಿ ಮಾತನಾಡಲಿಲ್ಲ. ವಿಶೇಷ ಅನುದಾನ ಕೊಡ್ತೀನಿ ಅಂದ್ರು ಕೊಡಲಿಲ್ಲ ಎಂದು ಕಿಡಿಕಾರಿದರು.

ಸಂಪನ್ಮೂಲ ಕ್ರೋಡೀಕರಣ ಎಂದರೆ ಏನು ಹೇಳಿ ಎಂದು ಮಾಧ್ಯಮದವರನ್ನು ಪ್ರಶ್ನಿಸಿದ ಅವರು, ಬೆಲೆ ಹೆಚ್ಚಳ ಮಾಡಿದಾಗ ಕೇಂದ್ರದ ವಿರುದ್ಧ ಎಷ್ಟು ಬಾರಿ ಸುದ್ದಿ ಹಾಕಿದ್ದೀರಿ? ಕಚ್ಚಾ ತೈಲ ಬೆಲೆ ಕಡಿಮೆಯಾದರೂ ಪೆಟ್ರೋಲ್‌, ಡೀಸೆಲ್ ದರ ಇಳಿಕೆ ಮಾಡದ ಬಗ್ಗೆ ಯಾರು ಕೂಡ ಬರೆಯಲಿಲ್ಲ ಎಂದು ಅಸಮಾಧಾನ ಹೊರಹಾಕಿದರು.

ಬಡವರು, ಅಭಿವೃದ್ಧಿ ಬಗ್ಗೆ ಕಾಳಜಿ ಬಿಜೆಪಿಗೆ ಇಲ್ಲ. ಮೋದಿ ಬೆಲೆ ಹೆಚ್ಚು ಮಾಡಿದರೂ ಬಿಜೆಪಿ ನಾಯಕರು ಮಾತನಾಡಲಿಲ್ಲ. ಅವರಿಗೆ ಈಗ ಕೇಳಲು ಏನು ಅಧಿಕಾರ ಇದೆ. ಲೋಕಸಭಾ ಚುನಾವಣೆಯಲ್ಲಿ ಶೇ.45ಗಿಂತ ವೋಟ್ ಜಾಸ್ತಿ ಆಗಿದೆ. ಒಂದು ಸೀಟ್‌ನಿಂದ 9ಕ್ಕೆ ಬಂದಿದ್ದೇವೆ. ಅವರು 25ರಿಂದ‌ 19ಕ್ಕೆ ಬಂದಿದ್ದಾರೆ ಅವರಾ? ನಾವಾ ಸೋತಿದ್ದು. ವೋಟ್ ಪರ್ಸೆಂಟೇಜ್ ಶೇ. 13 ಜಾಸ್ತಿ ಆಗಿದೆ ನಮಗೆ, ಕೇಂದ್ರದಲ್ಲಿ ಸೀಟ್ ಕಡಿಮೆ ಆಗಿದೆ ಯಾರು ಸೋತಿದ್ದು ಎಂದು ಪ್ರಶ್ನಿಸಿದರು.

ಯಾರು ಕೂಡ ಅಭಿವೃದ್ಧಿಗೆ ಹಣ ಕೊಟ್ಟಿಲ್ಲ ಅಂತ ಹೇಳಿಲ್ಲ. ವೋಟ್‌ಗಾಗಿ ಗ್ಯಾರಂಟಿಗಳನ್ನು ಮಾಡಿಲ್ಲ, ಬಡವರಿಗೆ ಅರ್ಥಿಕ ಶಕ್ತಿ ಕೊಡಲು ಜಾರಿ ಮಾಡಿದ್ದೇವೆ. ಇದಕ್ಕೂ ಚುನಾವಣೆಗೂ ಸಂಬಂಧವಿಲ್ಲ. ನಾವು ಎಲ್ಲಾ ಗ್ಯಾರಂಟಿ ಯೋಜನೆಗಳನ್ನು ಮುಂದುವರಿಸುತ್ತೇವೆ ಎಂದು ಮತ್ತೊಮ್ಮೆ ಸ್ಪಷ್ಟನೆ‌‌ ನೀಡಿದರು.

ಇದನ್ನೂ ಓದಿ | Petrol Diesel Price Hike: ಪೆಟ್ರೋಲ್‌ ಬೆಲೆ ಏರಿಕೆ ಖಂಡಿಸಿ ಬಿಜೆಪಿ ವ್ಯಾಪಕ ಪ್ರತಿಭಟನೆ; ಎತ್ತಿನಗಾಡಿ, ಹೆಣ ಮೆರವಣಿಗೆ

ಸದ್ಯಕ್ಕೆ ಬಸ್ ಟಿಕೆಟ್ ದರ ಹೆಚ್ಚಳ ಮಾಡಲ್ಲ

ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ನಂತರ ಮುಂದೆ ಮತ್ತೆ ಯಾವುದು ಏರಿಕೆ ಮಾಡುತ್ತಾರೋ ಎಂಬ ಅತಂಕ ಜನರಲ್ಲಿದೆ ಎಂಬ ಪ್ರಶ್ನೆಗೆ ಉತ್ತರಿಸಿ, ಜನರಿಗೆ ತೊಂದರೆ ಆಗುವ ರೀತಿ ಯಾವುದೇ ತೆರಿಗೆ ಹೆಚ್ಚಳ ಮಾಡಲ್ಲ. ಟಿಕೆಟ್ ದರ ಏರಿಕೆಯಾಗುತ್ತಾ ಎಂಬ ಪ್ರಶ್ನೆಗೆ ಉತ್ತರಿಸಿ, ಕೊನೇ ಬಾರಿ ಯಾವಾಗ ಟಿಕೆಟ್ ದರ ಏರಿಕೆಯಾಗಿದೆ ಎಂಬುವುದು ಗೊತ್ತಾ? ಈಗ ಸದ್ಯಕ್ಕೆ ಬಸ್ ಟಿಕೆಟ್ ದರ ಹೆಚ್ಚಳ ಮಾಡಲ್ಲ. ನಾನು ಇನ್ನೂ ಇಲಾಖೆಯ ಜೊತೆ ಚರ್ಚೆ ಮಾಡಬೇಕು ಎನ್ನುವ ಮೂಲಕ ಪರೋಕ್ಷವಾಗಿ ಮುಂದೆ ಟಿಕೆಟ್ ದರ ಹೆಚ್ಚಳದ ಸುಳುವು ನೀಡಿದರು. ಆದರೆ ಸದ್ಯಕ್ಕೆ ಯಾವುದೇ ಟಿಕೆಟ್ ದರ ಹೆಚ್ಚಳ ಮಾಡಲ್ಲ ಎಂದಿದ್ದಾರೆ.

Continue Reading

ಪ್ರಮುಖ ಸುದ್ದಿ

Petrol Diesel Price Hike: ಪೆಟ್ರೋಲ್‌ ಬೆಲೆ ಏರಿಕೆ ಖಂಡಿಸಿ ಬಿಜೆಪಿ ವ್ಯಾಪಕ ಪ್ರತಿಭಟನೆ; ಎತ್ತಿನಗಾಡಿ, ಹೆಣ ಮೆರವಣಿಗೆ

Petrol Diesel Price Hike: ಫ್ರೀಡಂ ಪಾರ್ಕಿನಲ್ಲಿ ಪ್ರತಿಭಟನೆ ಬಳಿಕ ಎತ್ತಿನಗಾಡಿ ಮೂಲಕ ಸಿಎಂ ಸಿದ್ದರಾಮಯ್ಯ ನಿವಾಸ ಕಾವೇರಿಗೆ ಮುತ್ತಿಗೆ ಹಾಕಲು ಹೊರಟ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಪ್ರತಿಪಕ್ಷ ನಾಯಕ ಆರ. ಅಶೋಕ್ ಮತ್ತು ಇತರ ಕಾರ್ಯಕರ್ತರನ್ನು ಪೊಲೀಸರು ತಡೆದರು.

VISTARANEWS.COM


on

petrol diesel price hike bjp protest
Koo

ಬೆಂಗಳೂರು: ಪೆಟ್ರೋಲ್‌ ಹಾಗೂ ಡೀಸೆಲ್‌ ಬೆಲೆ ಏರಿಸಿದ (Petrol Diesel Price Hike) ರಾಜ್ಯ ಸರಕಾರದ (Karnataka Govt) ಕ್ರಮವನ್ನು ಖಂಡಿಸಿದ ಪ್ರತಿಪಕ್ಷ ಬಿಜೆಪಿ (BJP protest) ಇಂದು ರಾಜ್ಯಾದ್ಯಂತ ಪ್ರತಿಭಟನೆ ನಡೆಸಿತು. ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ (Freedom park) ಬಿಜೆಪಿಯ ರಾಜ್ಯ ಪದಾಧಿಕಾರಿಗಳು ಹಾಗೂ ಇತರ ನಾಯಕರು ಪ್ರತಿಭಟಿಸಿ ಭಾಷಣ ಮಾಡಿದರು. ಪ್ರತಿಭಟನೆ ಮಾಡಿ ಸಿಎಂ ಸಿದ್ದರಾಮ‌ಯ್ಯ (CM Siddarmaiah) ಕಚೇರಿಗೆ ಮುತ್ತಿಗೆ ಹಾಕಲು ಹೊರಟ ಆರ್.‌ ಅಶೋಕ್‌ (R Ashok) ಸೇರಿದಂತೆ ಬಿಜೆಪಿ ನಾಯಕರನ್ನು ಪೊಲೀಸರು ಬಂಧಿಸಿದರು.

ಫ್ರೀಡಂ ಪಾರ್ಕಿನಲ್ಲಿ ಪ್ರತಿಭಟನೆ ಬಳಿಕ ಎತ್ತಿನಗಾಡಿ ಮೂಲಕ ಸಿಎಂ ಸಿದ್ದರಾಮಯ್ಯ ನಿವಾಸ ಕಾವೇರಿಗೆ ಮುತ್ತಿಗೆ ಹಾಕಲು ಹೊರಟ ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ, ಪ್ರತಿಪಕ್ಷ ನಾಯಕ ಆರ. ಅಶೋಕ್ ಮತ್ತು ಇತರ ಕಾರ್ಯಕರ್ತರನ್ನು ಪೊಲೀಸರು ತಡೆದರು. ʼʼಪೆಟ್ರೋಲ್ ರೇಟ್‌ ಹೆಚ್ಚಾಗಿದೆ. ಬಸ್‌ವರೆಗೂ ಎತ್ತಿನಗಾಡಿ ಬಿಡಿ” ಎಂದು ಅಶೋಕ್ ಆಗ್ರಹಿಸಿದರು. ಪೊಲೀಸರು ಮತ್ತು ಅಶೋಕ್ ನಡುವೆ ಮಾತಿನ ಚಕಮಕಿ ನಡೆಯಿತು. ಬಳಿಕ ಬಸ್‌ವರೆಗೂ ಎತ್ತಿನ ಗಾಡಿ ಬಿಟ್ಟು ನಂತರ ಅವರನ್ನು ಬಂಧಿಸಿದ ಪೊಲೀಸರು, ಉಪ್ಪಾರಪೇಟೆ ಪೊಲೀಸ್ ಠಾಣೆಗೆ ಕರೆದೊಯ್ದರು.

ವಿಭಿನ್ನ ರೀತಿಯ ಪ್ರತಿಭಟನೆ ನಡೆಸಿದ ಬಿಜೆಪಿ ಕಾರ್ಯಕರ್ತರು, ಚಟ್ಟ ಕಟ್ಟಿ ರಾಜ್ಯ ಸರ್ಕಾರದ ಹೆಣದ ಮೆರವಣಿಗೆ ಮಾಡಿದರು. ʼಐದು ಗ್ಯಾರಂಟಿಗಳ ಗೋವಿಂದ, ಸಿದ್ದರಾಮಯ್ಯ, ಡಿಕೆ ಶಿವಕುಮಾರ್ ಗೋವಿಂದʼ ಎಂದು ಚಟ್ಟ ಹಿಡಿದು ಮೆರವಣಿಗೆ ಮಾಡಿದರು.

ಢೋಂಗಿ ಮುಖ್ಯಮಂತ್ರಿ ಸಿದ್ದರಾಮಯ್ಯ: ಆರ್.‌ ಅಶೋಕ್

“ಸಿದ್ದರಾಮಯ್ಯ ಅವರಿಗೆ ಎರಡು ನಾಲಿಗೆ.‌ ಅಂದು ಒಂದು ರೂಪಾಯಿ ಪೆಟ್ರೋಲ್ ಬೆಲೆ ಏರಿಸಿದ್ದಕ್ಕೆ, ನಿಮಗೆ ಮಾನ ಮರ್ಯಾದೆ ಇದೆಯಾ ಅಂತ ಸಿದ್ದರಾಮಯ್ಯ ಹೇಳಿದ್ರು. ಸಿದ್ದರಾಮಯ್ಯ ಈಗ ಮೂರುವರೆ ರೂಪಾಯಿ ಏರಿಸಿದ್ದೀರಿ, ನಿಮಗೆ ಮಾನಮರ್ಯಾದೆ ಇದೆಯಾ?” ಎಂದು ಅಶೋಕ್‌ ಹರಿಹಾಯ್ದರು.

“ಮೊನ್ನೆ ಒಂದು ವಿಕೆಟ್ ಬಿದ್ದಿದೆ. 187 ಕೋಟಿ ಹಣ ನುಂಗಿ, ನಾಗೇಂದ್ರ ಔಟ್ ಆಗಿದ್ದಾನೆ. ನೆಕ್ಸ್ಟ್ ವಿಕೆಟ್ ಸಿದ್ದರಾಮಯ್ಯ. ನಾಗೇಂದ್ರ ಪಾಪದವನು, ಜೇನು ಕಿತ್ತ ಅಷ್ಟೇ. ನಾಗೇಂದ್ರ ಪಾಲು ಬರೀ 20%, 80% ಸಿದ್ದರಾಮಯ್ಯ ಪಾಲಾಗಿದೆ. ನಿಗಮದ ದಲಿತರ ಹಣ, ಬಾರ್‌ಗೆ ಹೋಗಿದೆ. ತರಕಾರಿ ಅಂಗಡಿಗೆ ಕೊಡಬೇಕಾದ್ದು, ವೈನ್ ಸ್ಟೋರಿಗೆ ಹೋಯ್ತು. ಅಮಾಯಕ ಅಧಿಕಾರಿ ಒಬ್ಬ ಸತ್ತೋದ. ನಿಷ್ಠಾವಂತ ಅಧಿಕಾರಿಗಳಿಗೆ ಇಲ್ಲಿ ಭದ್ರತೆ ಇಲ್ಲ. ಪೆಟ್ರೋಲ್ ಬೆಲೆ ಹೆಚ್ಚಾದ್ರೆ ಸೆಮೆಂಟ್ ಬೆಲೆ ಹೆಚ್ಚಾಗುತ್ತೆ ಅಂದ್ರು. ಮೂರುವರೆ ರೂಪಾಯಿ ಹೆಚ್ಚು ಮಾಡಿದ್ರಿ, ಈಗ ಏನು ಬೆಲೆ ಹೆಚ್ಚಾಗುತ್ತೆ ಹೇಳಿ?” ಎಂದು ಅಶೋಕ್‌ ಆಕ್ಷೇಪಿಸಿದರು.

“ಪೆಟ್ರೋಲ್ ಬೆಲೆ ಹೆಚ್ಚು ಮಾಡಿದ್ದಾರೆ. ನಾಳೆ ಇಂದ ಕಾಫಿ ಕುಡಿಯಲು ಹೋದ್ರೆ ಬೆಲೆ ಹೆಚ್ಚಾಗಿರುತ್ತೆ. ಈ ಸರ್ಕಾರ ಎಣ್ಣೇನು ನಮ್ಮದು, ಬಾರು ನಮ್ದು, ಚೇರು ನಮ್ಮದು,‌ ದುಡ್ಡು ಮಾತ್ರ ನಿಮ್ಮದು ಅಂತ ಬರ್ತಾರೆ. ಟೀಚರ್‌ಗಳಿಗೆ ಒಂದು ವರ್ಷದಿಂದ ಸಂಬಳ‌ ಕೊಟ್ಟಿಲ್ಲ. ಪಾಟ್ ಹೋಲ್ ಬಗ್ಗೆ ನಮಗೆ ಹೇಳಿದ್ರು, ಈಗ ಎಲ್ಲಿ ನೋಡಿದ್ರೂ ಗುಂಡಿ ಇದೆ. ಡಿಕೆ‌ ಶಿವಕುಮಾರ್ ಅವರೇ ಬ್ರಾಂಡ್ ಬೆಂಗಳೂರು ಅಂದ್ರಿ, ಬರೀ ಗುಂಡಿ ಬೆಂಗಳೂರು ಆಗಿದೆ. ನೀರು ಕುಡಿದು ಆರು ಜನ ಸತ್ತಿದ್ದಾರೆ. ಕಿಡ್ನಿ ಸರಿ ಇಲ್ಲ ಅಂತ ಹೇಳಿದ್ದಾರೆ. ಶಾಲೆ ಆರಂಭವಾಗಿ ಇಷ್ಟು ದಿನ ಆದ್ರೂ ಪಠ್ಯ ಪುಸ್ತಕ ಕೊಟ್ಟಿಲ್ಲ. ಕಳ್ಳ ಕಾಂಗ್ರೆಸ್‌ನವರು, ದರೋಡೆಕೋರರು. ಆಲಿಬಾಬ ಮತ್ತು 40 ಕಳ್ಳರ ಥರ ಈ ಕಾಂಗ್ರೆಸ್ ಸರ್ಕಾರ” ಎಂದು ಟೀಕಿಸಿದರು.

ಮುಂದಿನ ವಾರ ರಸ್ತೆ ತಡೆ: ವಿಜಯೇಂದ್ರ

“ಜನವಿರೋಧಿ ಸರ್ಕಾರ, ರಾಜ್ಯದಲ್ಲಿರೋ ಜನವಿರೋಧಿ ಸಿಎಂ ವಿರುದ್ಧ ಬಿಜೆಪಿ ಪ್ರತಿಭಟನೆ ಕೈಗೆತ್ತಿಕೊಂಡಿದೆ. ಬೆಂಗಳೂರು ಮಹಾನಗರದಲ್ಲಿ ಮತ್ತು ರಾಜ್ಯದಲ್ಲಿ ಬಿಜೆಪಿ ಜನವಿರೋಧಿ ಸರ್ಕಾರದ ವಿರುದ್ಧ ಹೋರಾಟಕ್ಕೆ ಮುಂದಾಗಿದೆ. ರಾಜ್ಯ ಸರ್ಕಾರದ ಆತುರದ ನಿರ್ಧಾರ, ಅವಿವೇಕದ ನಿರ್ಧಾರ ವಿರೋಧಿಸಿ ಹೋರಾಟ ತೆಗೆದುಕೊಂಡಿದೆ. ಏಕಾಏಕಿ ಪೆಟ್ರೋಲ್, ಡೀಸೆಲ್ ತೆರಿಗೆ ಹೆಚ್ಚಳ ಆಗಿದೆ. ಲೋಕಸಭಾ ಚುನಾವಣೆ ಮೊದಲು, ಕಾಂಗ್ರೆಸ್ ಪಕ್ಷದ ಶಾಸಕರು ಹೇಳಿಕೆ ನೀಡಿದ್ರು. ಲೋಕಸಭಾ ಚುನಾವಣೆ ಸಂಧರ್ಭದಲ್ಲಿ ಕಾಂಗ್ರೆಸ್ ಪಕ್ಷ 18-20 ಸ್ಥಾನ ಗೆಲ್ಲದಿದ್ರೆ ಗ್ಯಾರಂಟಿ ನಿಲ್ಲಿಸೋದಾಗಿ ಹೇಳಿದ್ರು. ಲೋಕಸಭಾ ಚುನಾವಣೆ ಆಯ್ತು. 18-20 ಸ್ಥಾನ ಗೆಲ್ಲುವ ನಿರೀಕ್ಷೆ ಇದ್ದ ಸಿಎಂ, ಡಿಸಿಎಂಗೆ ಮುಖಭಂಗ ಆಯ್ತು. ಗ್ಯಾರಂಟಿ ನಿಲ್ಲಿಸಿದ್ರೆ ಜನ ದಂಗೆ ಏಳ್ತಾರೆ ಅಂತ ಗೊತ್ತಾಯಿತು. ಹಾಗೆ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮಾಡಿದ್ರು” ಎಂದು ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಟೀಕಿಸಿದರು.

ವಿಪಕ್ಷ ನಾಯಕರಾಗಿದ್ದಾಗ ಸಿದ್ದರಾಮಯ್ಯ ಅವರಿಗಿದ್ದ ಜನಪರ ಕಾಳಜಿ, ಸಿಎಂ‌ ಆದ ಮೇಲೆ ಎಲ್ಲಿ ಹೋಯ್ತು? ನೀವು ಅಧಿಕಾರಕ್ಕೆ ಬಂದ ಮೇಲೆ ಒಂದೇ ಒಂದು ರೂಪಾಯಿ ಅಭಿವೃದ್ಧಿ ಕಾರ್ಯ ಆಗಿಲ್ಲ. ಬೊಮ್ಮಾಯಿ ಅವರು ಸಿಎಂ ಸ್ಥಾನದಿಂದ ಕೆಳಗೆ ಇಳಿಯುವಾಗ ರೆವಿನ್ಯೂ ಪ್ಲಸ್ ಇತ್ತು. ಕಾಂಗ್ರೆಸ್ ಬಂದ ಒಂದೇ ವರ್ಷದಲ್ಲಿ ದಿವಾಳಿ ಅಂಚಿಗೆ ಬಂದಿದೆ. ನಿಮ್ಮನ್ನು ಅಧಿಕಾರದಿಂದ ಕೆಳಗಿಳಿಸೋ ತಾಕತ್ತು ರಾಜ್ಯದ ಜನರಿಗಿದೆ. ನಮ್ಮ‌ ಪಕ್ಷದ‌ ಮುಖಂಡರು, ಕಾರ್ಯಕರ್ತರು ಕುಳಿತು ತೀರ್ಮಾನ ಮಾಡಿದ್ದೇವೆ. ಮುಂದಿನ ಗುರುವಾರ ರಾಜ್ಯಾದ್ಯಂತ ರಸ್ತೆ ತಡೆ ನಡೆಸಲಿದ್ದೇವೆ. ಜೆಡಿಎಸ್‌, ವ್ಯಾಪಾರಸ್ಥರು, ಸಂಘಟನೆಗಳ ಬೆಂಬಲ ಪಡೆಯಲಿದ್ದೇವೆ. ರಾಜ್ಯದ ಜನರು ಇವರಿಗೆ ತಕ್ಕ ಪಾಠ ಕಲಿಸಬೇಲಿದೆ” ಎಂದು ಅವರು ಆಕ್ರೋಶಿಸಿದರು.

ಮಂಗಳೂರು, ಉಡುಪಿ, ಹುಬ್ಬಳ್ಳಿ, ಬೆಳಗಾವಿ, ಮೈಸೂರು ಸೇರಿದಂತೆ ಎಲ್ಲ ಪ್ರಮುಖ ನಗರಗಳಲ್ಲಿಯೂ ಬಿಜೆಪಿ ನಾಯಕರು ಹಾಗೂ ಕಾರ್ಯಕರ್ತರು ಸೇರಿ ತೈಲ ಬೆಲೆ ಏರಿಕೆಯನ್ನು ವಿರೋಧಿಸಿ ಪ್ರತಿಭಟಿಸಿದರು. ಹಲವು ಕಡೆ ಬಿಜೆಪಿ ನಾಯಕರನ್ನು ಪೊಲೀಸರು ಬಂಧಿಸಿ ಬಿಡುಗಡೆ ಮಾಡಿದರು.

ಇದನ್ನೂ ಓದಿ: Water Price Hike : ತೈಲ ದರ ಬಳಿಕ ಕುಡಿಯುವ ನೀರು ದುಬಾರಿ! ನೀರಿನ ದರ ಏರಿಕೆಗೆ ಜಲಮಂಡಳಿ ಪ್ರಸ್ತಾವನೆ!

Continue Reading

ಕರ್ನಾಟಕ

GPF Interest: ಸರ್ಕಾರಿ ನೌಕರರೇ ಗಮನಿಸಿ; 5 ಲಕ್ಷ ಮೀರಿದ ಜಿಪಿಎಫ್‌ಗೆ ಬಡ್ಡಿ ಪಾವತಿಸಲು ಸರ್ಕಾರ ಆದೇಶ

GPF Interest: ಸಾಮಾನ್ಯ ಭವಿಷ್ಯ ನಿಧಿಯು (General Provident Fund) ರಾಜ್ಯ ಮತ್ತು ಕೇಂದ್ರ ಸರ್ಕಾರದ ಭವಿಷ್ಯ ನಿಧಿ ಯೋಜನೆಯಾಗಿದ್ದು, ಕೇವಲ ಸರ್ಕಾರಿ ನೌಕರರಿಗೆ (ಗ್ರೂಪ್‌ ಡಿ ಹೊರತುಪಡಿಸಿ) ಇದನ್ನು ಒದಗಿಸಲಾಗುತ್ತದೆ.

VISTARANEWS.COM


on

GPF Interest
Koo

ಬೆಂಗಳೂರು: ಕರ್ನಾಟಕ ರಾಜ್ಯ ಸರ್ಕಾರದ ಸಾಮಾನ್ಯ ಭವಿಷ್ಯ ನಿಧಿ (General Provident Fund) ಚಂದಾದಾರರ ಪ್ರಕರಣಗಳಲ್ಲಿ 2023-24 ನೇ ಆರ್ಥಿಕ ವರ್ಷದಲ್ಲಿ 5 ಲಕ್ಷ ರೂ.ಗಳಿಗೂ ಮೀರಿ ಜಿಪಿಎಫ್ ವಂತಿಗೆ ಕಟಾವಣೆಯಾಗಿರುವ ಮೊತ್ತಕ್ಕೆ ಬಡ್ಡಿಯನ್ನು (GPF Interest) ಪಾವತಿಸಲು ರಾಜ್ಯ ಸರ್ಕಾರ ಆದೇಶ ನೀಡಿದೆ.

ಈ ಬಗ್ಗೆ ಆರ್ಥಿಕ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ನೇತ್ರಪ್ರಭಾ ಎಂ.ಧಾಯಪುಲೆ ಅವರು ಆದೇಶ ಹೊರಡಿಸಿದ್ದು, 2023-24 ನೇ ಸಾಲಿಗೆ ಅನ್ವಯಿಸುವಂತೆ ಕರ್ನಾಟಕ ರಾಜ್ಯದ ಜಿಪಿಎಫ್ ಚಂದಾದಾರರ ಖಾತೆಗಳಿಗೆ 5 ಲಕ್ಷ ರೂ. ಮೀರಿ ಜಮಾವಣೆ ಮಾಡಿರುವ ಮೊತ್ತಕ್ಕೆ ಆದಾಯ ತೆರಿಗೆ ಅನ್ವಯಿಕೆಗೊಳಪಟ್ಟು ಬಡ್ಡಿಯನ್ನು ಪಾವತಿಸಲು ಸರ್ಕಾರದ ಮಂಜೂರಾತಿಯನ್ನು ನೀಡಲಾಗಿದೆ. ಅದರಂತೆ ಖಜಾನೆಗಳಲ್ಲಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ರಾಜ್ಯದ ಎಲ್ಲಾ ಖಜಾನೆಗಳ ಪ್ರಭಾರಾಧಿಕಾರಿಗಳಿಗೆ ತಿಳಿಸಿದ್ದಾರೆ.

ಕರ್ನಾಟಕ ಸಾಮಾನ್ಯ ಭವಿಷ್ಯ ನಿಧಿ ನಿಯಮಗಳು, 2016ರ ಅಡಿಯಲ್ಲಿ ರಾಜ್ಯ ಸರ್ಕಾರವು ಈ ಭವಿಷ್ಯ ನಿಧಿಯನ್ನು ಸ್ಥಾಪಿಸಿದೆ. ಪ್ರತಿ ನೌಕರರು ಮಾಸಿಕ ವಂತಿಗೆಯನ್ನು ಪಾವತಿಸುವ ಮೂಲಕ ಈ ನಿಧಿಯ ಚಂದಾದಾರಾಗಬಹುದು. ತಾವು ಹೊಂದಿರುವ ಹುದ್ದೆಯ ಗರಿಷ್ಠ ಮೂಲ ವೇತನಕ್ಕೆ ಒಳಪ್ಟಟ ಕನಿಷ್ಠ ಪ್ರಮಾಣಕ್ಕಿಂತ ಹೆಚ್ಚಿನ ವಂತಿಗೆಯನ್ನು ಆಯ್ಕೆಮಾಡಿಕೊಳ್ಳಬಹುದು.

ಕೇಂದ್ರ ಮತ್ತು ರಾಜ್ಯ ಸರ್ಕಾರಿ ನೌಕರರ ಸಾಮಾನ್ಯ ಭವಿಷ್ಯ ನಿಧಿಯ ಬಡ್ಡಿದರವನ್ನು ಮೂರು ತಿಂಗಳಿಗೊಮ್ಮೆ ಪರಿಷ್ಕರಿಸಲಾಗುತ್ತದೆ. 01-04-2006 ಕ್ಕಿಂತ ಮೊದಲು ರಾಜ್ಯದ ಸೇವೆಗೆ ಸೇರಿದ ರಾಜ್ಯ ಸರ್ಕಾರಿ ನೌಕರರು ಈ ಭವಿಷ್ಯ ನಿಧಿಯ ವಂತಿಕೆದಾರರಾಗಿರುತ್ತಾರೆ. 2024ರ ಜನವರಿ 1ರಿಂದ ಮಾರ್ಚ್‌ 31ರವರೆಗೆ ಶೇ.7.1 ಬಡ್ಡಿ ದರ ನಿಗದಿಯಾಗಿತ್ತು.

ಸಾಮಾನ್ಯ ಭವಿಷ್ಯ ನಿಧಿಯು ರಾಜ್ಯ ಮತ್ತು ಕೇಂದ್ರ ಸರ್ಕಾರದ ಭವಿಷ್ಯ ನಿಧಿ ಯೋಜನೆಯಾಗಿದ್ದು, ಕೇವಲ ಸರ್ಕಾರಿ ನೌಕರರಿಗೆ (ಗ್ರೂಪ್‌ ಡಿ ಹೊರತುಪಡಿಸಿ) ಇದನ್ನು ಒದಗಿಸಲಾಗುತ್ತದೆ. ಪ್ರತಿ ತಿಂಗಳು ನೌಕರರು ಇಂತಿಷ್ಟು ಎಂದು ತಮ್ಮ ವೇತನದಲ್ಲಿ ಹಣವನ್ನು ಇದಕ್ಕೆ ತೆಗೆದಿರಿಸುತ್ತಾರೆ. ಹೀಗೆ ಸಂಗ್ರಹವಾದ ಮೊತ್ತವನ್ನು ಅಗತ್ಯವಿರುವಾಗ ನೌಕರರು ಮನೆ ಅಥವಾ ನಿವೇಶನ ಕೊಳ್ಳುವ ಸಂದರ್ಭದಲ್ಲಿ, ಮನೆ ಕಟ್ಟುವಾಗ, ಮದುವೆಯಾಗುವ, ಕಾರು ಕೊಳ್ಳುವಾಗ ಅಥವಾ ಮಕ್ಕಳ ಶೈಕ್ಷಣಿಕ ಉದ್ದೇಶಗಳಿಗಾಗಿ ಈ ಹಣವನ್ನು ಹಿಂದಕ್ಕೆ ಪಡೆಯಲು ಅವಕಾಶ ನೀಡಲಾಗಿರುತ್ತದೆ. ಪಡೆದುಕೊಳ್ಳಬಹುದು, ಇಲ್ಲವೇ, ನಿವೃತ್ತಿ ಸಂದರ್ಭದಲ್ಲಿ ಒಟ್ಟಾಗಿ ಪಡೆದುಕೊಳ್ಳಬಹುದಾಗಿದೆ. ಮಹಾಲೇಖಪಾಲಕರ ಕಚೇರಿಯು ಈ ನಿಧಿಯನ್ನು ನಿರ್ವಹಿಸುತ್ತದೆ.

ಇದನ್ನೂ ಓದಿ | EPF Account Rules: ಕ್ಲೈಮ್ ಇತ್ಯರ್ಥ ಇನ್ನು ಸುಲಭ; ಇಪಿಎಫ್‌ಒ ಮಾಡಿದೆ ಹಲವು ಹೊಸ ಬದಲಾವಣೆ

ಇತ್ತೀಚೆಗೆ ಕೇಂದ್ರ ಸರ್ಕಾರವು ಈ ನಿಧಿಗೆ ಸಂಬಂಧಿಸಿದ ನಿಯಮಗಳಲ್ಲಿ ಬದಲಾವಣೆ ಮಾಡಿದ್ದು, ಈಗ ಜಿಪಿಎಫ್‌ ಅನ್ನು ಕಾರು, ಸ್ಕೂಟರ್‌ನಂಥ ಗ್ರಾಹಕೋತ್ಪನ್ನಗಳ ಖರೀದಿ ಸಲುವಾಗಿಯೂ ಬಳಸಬಹುದಾಗಿದೆ. ಈ ಹೊಸ ನಿಯಮದ ಪ್ರಕಾರ ಜಿಪಿಎಫ್‌ನಿಂದ ಹಣ ತೆಗೆಯುವ ಸಂದರ್ಭದಲ್ಲಿ ಅದನ್ನು ಮಂಜೂರು ಮಾಡುವ ಮತ್ತು ಕೈಗೆ ನೀಡುವ ಅವಧಿಯನ್ನು 15 ದಿನಗಳಿಗೆ ಸೀಮಿತಗೊಳಿಸಲಾಗಿದೆ. ಅನಾರೋಗ್ಯದಂಥ ತುರ್ತು ಸಂದರ್ಭಗಳಲ್ಲಿ 7 ದಿನದೊಳಗೆ ಹಣವನ್ನು ಪಡೆಯಬಹುದಾಗಿದೆ.

Continue Reading

ಬೆಂಗಳೂರು

Bakrid 2024 : ಮತ್ತೊಂದು ಧರ್ಮವನ್ನೂ ಪ್ರೀತಿಸಿ; ಬಕ್ರೀದ್‌ ಪ್ರಾರ್ಥನೆಯಲ್ಲಿ ಸಿಎಂ ಸಿದ್ದರಾಮಯ್ಯ ಕರೆ

Bakrid 2024 : ನಾವೆಲ್ಲರೂ ಇನ್ನೊಂದು ಧರ್ಮವನ್ನು ಪ್ರೀತಿಸುವ ಮನೋಭಾವ ಬೆಳಸಿಕೊಳ್ಳಬೇಕು. ಆಗಲೇ ರಾಷ್ಟ್ರ ಹಾಗೂ ಸಮಾಜದ ಏಳಿಗೆ ಸಾಧ್ಯವಾಗುತ್ತದೆ ಎಂದು ಬಕ್ರೀದ್‌ ( Eid al Adha ) ಪ್ರಾರ್ಥನೆಯಲ್ಲಿ ಪಾಲ್ಗೊಂಡು ಸಿದ್ದರಾಮಯ್ಯ ಮಾತನಾಡಿದರು.

VISTARANEWS.COM


on

By

Bakrid 2024
Koo

ಬೆಂಗಳೂರು: ಸಮಾಜದಲ್ಲಿ ನಾವೆಲ್ಲರೂ ಅಣ್ಣ ತಮ್ಮಂದಿರ ರೀತಿ ಬಾಳಬೇಕು. ನಾವೆಲ್ಲರೂ ಇನ್ನೊಂದು ಧರ್ಮವನ್ನು ಪ್ರೀತಿಸುವ ಮನೋಭಾವ ಬೆಳಸಿಕೊಳ್ಳಬೇಕು ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ. ಬಕ್ರೀದ್ (Eid al Adha) ಅಂಗವಾಗಿ ಚಾಮರಾಜಪೇಟೆ ಮೈದಾನದಲ್ಲಿ ನಡೆದ ಸಾಮೂಹಿಕ ಪ್ರಾರ್ಥನೆಯಲ್ಲಿ (Bakrid 2024 ) ಪಾಲ್ಗೊಂಡು ಮಾತನಾಡಿದರು.

ತ್ಯಾಗ ಬಲಿದಾನದ ಪ್ರತೀಕವಾಗಿರುವ ಬಕ್ರೀದ್ ಹಬ್ಬವನ್ನು ರಾಜ್ಯಾದ್ಯಂತ ಸಂಭ್ರಮದಿಂದ ಆಚರಿಸಲಾಯಿತು.ಮುಸ್ಲಿಮರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿ, ಒಬ್ಬರಿಗೊಬ್ಬರು ಶುಭಕೋರಿದರು. ಬೆಂಗಳೂರಿನ ಚಾಮರಾಜಪೇಟೆಯ ಈದ್ಗಾ ಮೈದಾನದಲ್ಲಿ ಸಾವಿರಾರು ಜನರು ಸಾಮೂಹಿಕ ಪ್ರಾರ್ಥನೆ ನೆರವೇರಿಸಿದರು. ಸಾಮೂಹಿಕ ಪ್ರಾರ್ಥನೆಯಲ್ಲಿ ಸಿಎಂ ಸಿದ್ದರಾಮಯ್ಯ, ಸಚಿವ ಜಮೀರ್ ಅಹಮದ್ ಉಪಸ್ಥಿತಿ ಇದ್ದರು. ಮುಸಲ್ಮಾನರ ಅಮಾಮ್ ಶಾಲು (ಟೋಪಿ) ಹಾಕಿ ಸಿದ್ದರಾಮಯ್ಯರಿಗೆ ಸನ್ಮಾನ ಮಾಡಿದರು.

bakrid 2024

ಬಳಿಕ ಮಾತನಾಡಿದ ಸಿಎಂ ಸಿದ್ಧರಾಮಯ್ಯ, ಇಡೀ ಭಾರತದಲ್ಲಿ ಬಕ್ರೀದ್ ಹಬ್ಬವನ್ನು ಆಚರಣೆ ಮಾಡಲಾಗುತ್ತಿದೆ. ಮನುಕುಲಕ್ಕೆ ಒಳ್ಳೆಯದಾಗಲಿ ಎಂದು ನೀವೆಲ್ಲರೂ ಪ್ರಾರ್ಥನೆ ಮಾಡಿದ್ದೀರಿ. ಸಮಾಜದಲ್ಲಿ ನಾವೆಲ್ಲರೂ ಅಣ್ಣ ತಮ್ಮಂದಿರ ರೀತಿ ಬಾಳಬೇಕು. ಎಲ್ಲಾ ಭಾಷೆ, ಧರ್ಮಕ್ಕೆ ಸಮಾನತೆ ಕೊಡುವ ಬಹುತ್ವದ ದೇಶವಿದು. ನಾವೆಲ್ಲರೂ ಇನ್ನೊಂದು ಧರ್ಮವನ್ನು ಪ್ರೀತಿಸುವ ಮನೋಭಾವ ಬೆಳಸಿಕೊಳ್ಳಬೇಕು. ಆಗಲೇ ರಾಷ್ಟ್ರ ಹಾಗೂ ಸಮಾಜದ ಏಳಿಗೆ ಸಾಧ್ಯವಾಗುತ್ತದೆ. ನಾವು ಸಂವಿಧಾನದ ಮೇಲೆ ನಂಬಿಕೆ ಇಟ್ಟವರು, ಯಾವುದೇ ತಾರತಮ್ಯ ಮಾಡಲ್ಲ ಎಂದರು.

ಕೊಪ್ಪಳದಲ್ಲೂ ತ್ಯಾಗ ಬಲಿದಾನದ ಪ್ರತೀಕವಾಗಿರುವ ಬಕ್ರೀದ್ ಹಬ್ಬವನ್ನು ಆಚರಿಸಲಾಯಿತು. ಈದ್ಗಾ ಮೈದಾನದಲ್ಲಿ ಸಾವಿರಾರು ಜನರು ಸಾಮೂಹಿಕ ಪ್ರಾರ್ಥನೆ ಸಲ್ಲಿಸಿದರು. ಈ ವೇಳೆ ಸಂಸದ ಕೆ. ರಾಜಶೇಖರ ಹಿಟ್ನಾಳ, ಶಾಸಕ ಕೆ. ರಾಘವೇಂದ್ರ ಹಿಟ್ನಾಳ ಸೇರಿ ಹಲವರು ಭಾಗಿಯಾಗಿದ್ದರು.

ಇದನ್ನೂ ಓದಿ: Bakrid: ಬಕ್ರೀದ್ ಹಿನ್ನೆಲೆಯಲ್ಲಿ ಮಾರಾಟಕ್ಕಿಟ್ಟಿದ್ದ ಈ ಮೇಕೆಯ ಬೆಲೆ 69 ಲಕ್ಷ ರೂ!

ಬೆಳಗಾವಿ ಅಂಜುಮಾನ ಮೈದಾನ ಹಾಗೂ ಶಿವಮೊಗ್ಗ, ವಿಜಯನಗರ ಹೊಸಪೇಟೆಯ ಅಂಬೇಡ್ಕರ್ ಸರ್ಕಲ್ ಬಳಿ ಇರುವ ಈದ್ಗಾ ಮೈದಾನದಲ್ಲೂ ಸಾಮೂಹಿಕ ಪ್ರಾರ್ಥನೆ ನಡೆಯಿತು. ಹೂಡಾ ಅಧ್ಯಕ್ಷ ಇಮಾಮ್, ಆನಂದ್ ಸಿಂಗ್ ಪುತ್ರ ಸಿದ್ದಾರ್ಥ ಸಿಂಗ್ ಸೇರಿ ಹಲವರು ಭಾಗಿಯಾಗಿದ್ದರು.

ಬಳ್ಳಾರಿ ನಗರದ ಈದ್ಗಾ ಮೈದಾನದಲ್ಲಿ ಸಾಮೂಹಿಕ ಪ್ರಾರ್ಥನೆ ನಡೆದಿದೆ. ಇದೇ ವೇಳೆ ಧರ್ಮಗುರುಗಳಿಂದ ಪ್ರವಾದಿ ಮಹಮದ್ ಪೈಗಂಬರರ ಜೀವನದ ಮಹತ್ವ ಬೋಧನೆ ಮಾಡಲಾಯಿತು. ತ್ಯಾಗ ಹಾಗೂ ಬಲಿದಾನಗಳ ಬಗ್ಗೆ ಧರ್ಮ ಗುರು ವಿವರಿಸಿದರು. ಪ್ರಾರ್ಥನೆ ನಂತರ ಪರಸ್ಪರ ಶುಭಾಶಯ ಕೋರಿದರು.

ಬಾಗಲಕೋಟೆಯ ಮುಧೋಳ ನಗರದಲ್ಲಿ ನಡೆದ ಸಾಮೂಹಿಕ ಪ್ರಾರ್ಥನೆಯಲ್ಲಿ ಮುಧೋಳ ಶಾಸಕ, ಅಬಕಾರಿ ಸಚಿವ ಆರ್.ಬಿ. ತಿಮ್ಮಾಪುರ ಭಾಗಿಯಾದರು. ಪ್ರಾರ್ಥನೆ ಬಳಿಕ ಮುಸ್ಲಿಂ ಬಾಂಧವರಿಗೆ ಶುಭಾಶಯ ತಿಳಿಸಿದರು. ಹುಬ್ಬಳ್ಳಿಯ ರಾಣಿ ಚೆನ್ನಮ್ಮ ವೃತ್ತದ ಈದ್ಗಾ ಮೈದಾನದಲ್ಲೂ ನಮಾಜ್‌ ಮಾಡಲಾಯಿತು.

ಮೈಸೂರು ಹಾಗೂ ಮಂಡ್ಯದಲ್ಲೂ ಬಕ್ರೀದ್ ಅಂಗವಾಗಿ ವಿವಿಧೆಡೆಗಳಲ್ಲಿರುವ ಮಸೀದಿಗಳಲ್ಲಿ ಮುಸ್ಲಿಮರಿಂದ ಸಾಮೂಹಿಕ ಪ್ರಾರ್ಥನೆ ನಡೆಯಿತು. ಮೈಸೂರಿನ ತಿಲಕ್ ನಗರದಲ್ಲಿರುವ ಈದ್ಗಾ ಮೈದಾನದಲ್ಲಿ ಮುಸ್ಲಿಂ ಧರ್ಮಗುರು ಉಸ್ಮಾನ್ ಷರೀಫ್ ಅವರು ಭಾಗಿಯಾಗಿದ್ದರು. ಮಂಡ್ಯದ ಈದ್ಗಾ ಮೈದಾನದಲ್ಲಿ ನಗರಸಭೆ ಸದಸ್ಯ ನಹೀಮ್ ಪ್ರಾರ್ಥನೆ ಸಲ್ಲಿಸಿದರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading
Advertisement
Hunters Arrest
ಕ್ರೈಂ19 mins ago

Hunters Arrest : ಶಿವಮೊಗ್ಗದಲ್ಲಿ ಕಾಡುಕೋಣಗಳು ಬಲಿ; ಚಿಕ್ಕಬಳ್ಳಾಪುರ, ಬಾಗಲಕೋಟೆಯಲ್ಲಿ ಬೇಟೆಗಾರರು ಸೆರೆ

Petrol Diesel Price Hike
ಕರ್ನಾಟಕ19 mins ago

Petrol Diesel Price Hike: ಬಿಜೆಪಿಯವರು ಪ್ರತಿಭಟನೆ ಮಾಡಬೇಕಿರೋದು ಕೇಂದ್ರದ ವಿರುದ್ಧ: ಸಿಎಂ ತಿರುಗೇಟು

Kisan Samman Nidhi
ದೇಶ42 mins ago

Kisan Samman Nidhi: ರೈತರಿಗೆ ಗುಡ್‌ನ್ಯೂಸ್‌; ಕಿಸಾನ್‌ ಸಮ್ಮಾನ್‌ ನಿಧಿಯ 17ನೇ ಕಂತು ನಾಳೆ ನಿಮ್ಮ ಅಕೌಂಟ್‌ಗೆ; ಹೀಗೆ ಪರಿಶೀಲಿಸಿ

petrol diesel price hike bjp protest
ಪ್ರಮುಖ ಸುದ್ದಿ48 mins ago

Petrol Diesel Price Hike: ಪೆಟ್ರೋಲ್‌ ಬೆಲೆ ಏರಿಕೆ ಖಂಡಿಸಿ ಬಿಜೆಪಿ ವ್ಯಾಪಕ ಪ್ರತಿಭಟನೆ; ಎತ್ತಿನಗಾಡಿ, ಹೆಣ ಮೆರವಣಿಗೆ

Actor Darshan tagadu word umapathy counter now
ಕ್ರೈಂ49 mins ago

Actor Darshan: ಅಂದು `ತಗಡು’ ಅಂದಿದ್ದ ದರ್ಶನ್‌ಗೆ ಇಂದು ಉಮಾಪತಿ ಕೌಂಟರ್!

MS Dhoni
ಕ್ರೀಡೆ53 mins ago

MS Dhoni: ಕಾರಿನಲ್ಲಿ ಬರುತ್ತಿದ್ದ ಧೋನಿಯನ್ನು ತಡೆದು ನಿಲ್ಲಿಸಿ ಫೋಟೊ ತೆಗೆಸಿಕೊಂಡ ಅಭಿಮಾನಿ; ವಿಡಿಯೊ ವೈರಲ್​

Road Accident
ರಾಯಚೂರು53 mins ago

Road Accident : ನಿಂತಿದ್ದ ಟ್ಯಾಂಕರ್‌ ಟ್ಯಾಲಿಗೆ ಬೈಕ್‌ ಡಿಕ್ಕಿ; ಸವಾರ ಸಾವು, ಮತ್ತೋರ್ವ ಗಂಭೀರ

Actor Darshan support by Anusha Rai
ಸ್ಯಾಂಡಲ್ ವುಡ್1 hour ago

Actor Darshan: ದಾನ ಧರ್ಮಗಳೇ ದರ್ಶನ್‌ರನ್ನ ಕಾಪಾಡುತ್ತೆ ಎಂದ ʻನಾಗಕನ್ನಿಕೆʼ ಸೀರಿಯಲ್‌ ನಟಿ!

Gold Rate Today
ಚಿನ್ನದ ದರ1 hour ago

Gold Rate Today: ಆಭರಣ ಖರೀದಿಸುವವರಿಗೆ ರಿಲೀಫ್‌; ಇಳಿದ ಚಿನ್ನದ ದರ

GPF Interest
ಕರ್ನಾಟಕ1 hour ago

GPF Interest: ಸರ್ಕಾರಿ ನೌಕರರೇ ಗಮನಿಸಿ; 5 ಲಕ್ಷ ಮೀರಿದ ಜಿಪಿಎಫ್‌ಗೆ ಬಡ್ಡಿ ಪಾವತಿಸಲು ಸರ್ಕಾರ ಆದೇಶ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Bakrid 2024
ಬೆಂಗಳೂರು2 hours ago

Bakrid 2024 : ಮತ್ತೊಂದು ಧರ್ಮವನ್ನೂ ಪ್ರೀತಿಸಿ; ಬಕ್ರೀದ್‌ ಪ್ರಾರ್ಥನೆಯಲ್ಲಿ ಸಿಎಂ ಸಿದ್ದರಾಮಯ್ಯ ಕರೆ

Renukaswamy murder case The location of the accused is complete
ಸಿನಿಮಾ20 hours ago

Renuka Swamy murder : ಭೀಕರವಾಗಿ ಕೊಂದರೂ ಆರೋಪಿಗಳಿಗೆ ಕಾಡುತ್ತಿಲ್ವಾ ಪಾಪಪ್ರಜ್ಞೆ? ನಗುತ್ತಲೇ ಹೊರಬಂದ ಪವಿತ್ರಾ ಗೌಡ, ಪವನ್‌

Renuka swamy murder
ಚಿತ್ರದುರ್ಗ21 hours ago

Renuka swamy Murder : ರೇಣುಕಾಸ್ವಾಮಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಾಳೆಹೊನ್ನೂರು ಶ್ರೀಗಳು

Vijayanagara News
ವಿಜಯನಗರ1 day ago

Vijayanagara News : ಕೆಲಸಕ್ಕೆ ಚಕ್ಕರ್, ಸಂಬಳಕ್ಕೆ ಹಾಜರ್! ಹಾರಕನಾಳು ಗ್ರಾಪಂ ಪಿಡಿಓಗಾಗಿ ಗ್ರಾಮಸ್ಥರ ಹುಡುಕಾಟ

Actor Darshan
ಯಾದಗಿರಿ2 days ago

Actor Darshan : ಬಾಸ್‌ ಅಂತ ಯಾಕ್‌ ಬಕೆಟ್‌ ಹಿಡಿಯುತ್ತೀರಾ ಅಂದವನಿಗೆ ದರ್ಶನ್ ಅಭಿಮಾನಿಯಿಂದ ಜೀವ ಬೆದರಿಕೆ!

Karnataka Weather Forecast
ಮಳೆ3 days ago

Karnataka Weather : ಕರಾವಳಿ, ಉತ್ತರ ಒಳನಾಡಿನಲ್ಲಿ ವರುಣಾರ್ಭಟ; ನಾಳೆಯು ಹಲವೆಡೆ ಸಿಕ್ಕಾಪಟ್ಟೆ ಮಳೆ

Actor Darshan
ಬೆಂಗಳೂರು3 days ago

Actor Darshan : ರೇಣುಕಾಸ್ವಾಮಿಯನ್ನು ಕಿಡ್ನ್ಯಾಪ್ ಮಾಡಿ ಕರೆತರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ!

actor Darshan
ಬೆಂಗಳೂರು3 days ago

Actor Darshan : ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಮತ್ತಿಬ್ಬರು ಸರೆಂಡರ್‌; ಆರೋಪಿಗಳ ಸಂಖ್ಯೆ 16ಕ್ಕೆ ಏರಿಕೆ

Actor Darshan
ಸಿನಿಮಾ3 days ago

Actor Darshan : ರೇಣುಕಾಸ್ವಾಮಿ ‌ಮೃತದೇಹ ಬಿಸಾಡಿ ಬಳಿಕ ಸಾಕ್ಷ್ಯಇದ್ದ 2 ಮೊಬೈಲ್‌ಗಳನ್ನು ಮೋರಿಗೆ ಎಸೆದ್ರಾ ಆರೋಪಿಗಳು?

karnataka weather Forecast
ಮಳೆ6 days ago

Karnataka Weather : ಭಾರಿ ಮಳೆಗೆ ಗುಡ್ಡದಿಂದ ಉರುಳಿ ಬಿದ್ದ ಬಂಡೆಗಲ್ಲು; ಬೆಂಗಳೂರಲ್ಲೂ ಸಂಜೆ ವರ್ಷಧಾರೆ

ಟ್ರೆಂಡಿಂಗ್‌