Homemade Protein Smoothie: ಬೇಸಿಗೆಗೆ ಬೇಕು ತಂಪಾದ ಪ್ರೊಟೀನ್‌ ಸ್ಮೂದಿಗಳು - Vistara News

ಆರೋಗ್ಯ

Homemade Protein Smoothie: ಬೇಸಿಗೆಗೆ ಬೇಕು ತಂಪಾದ ಪ್ರೊಟೀನ್‌ ಸ್ಮೂದಿಗಳು

ಬೇಸಿಗೆಯಲ್ಲಿ ತಿನ್ನುವುದೇ ಬೇಡ ಎನಿಸಬಹುದು. ಹಾಗೆಂದು ಬರೀ ನೀರು ಕುಡಿಯುತ್ತ ಉಪವಾಸ ಇರಲಾದೀತೆ? ಬದಲಿಗೆ, ಒಂದಿಷ್ಟು ಆರೋಗ್ಯಕರ ಸ್ಮೂದಿಗಳನ್ನು (Homemade protein smoothie) ಮಾಡಿಕೊಂಡರೆ ದಾಹವೂ ತಣಿಯುತ್ತದೆ, ಹೊಟ್ಟೆಯೂ ತುಂಬುತ್ತದೆ.

VISTARANEWS.COM


on

Homemade Protein Smoothie
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೇಸಿಗೆ ಬಂತೆಂದರೆ ಮುಗಿಯದ ದಾಹ. ಎಷ್ಟು ನೀರು ಕುಡಿದರೂ ಬಾಯಾರಿಕೆ ತಣಿಯುವುದಿಲ್ಲ. ಇದರಲ್ಲೇ ಹೊಟ್ಟೆ ತುಂಬಿದಂತಾಗಿ ಸುಸ್ತು, ಆಯಾಸ ಶುರುವಾಗುತ್ತದೆ. ಇದಕ್ಕಾಗಿ ನಾನಾ ರೀತಿಯ ಆರೋಗ್ಯಕರ ಪೇಯಗಳನ್ನು ಹುಡುಕಿಕೊಳ್ಳದಿದ್ದರೆ, ಬೇಸಿಗೆಯಲ್ಲಿ ಅಕಾರಣವಾಗಿ ದಣಿಯುವುದು ಖಚಿತ. ಮಕ್ಕಳಿಗಂತೂ ಬೆಳಗ್ಗೆ ಏಳುತ್ತಿದ್ದಂತೆಯೇ ಸೆಕೆ ಎನಿಸಿ, ತಿಂಡಿ ಬೇಡ ಎನ್ನುವುದೂ ಇದೆ. ಇಂಥ ಸಂದರ್ಭಗಳಲ್ಲಿ ನೆರವಿಗೆ ಬರುವುದು ತರಹೇವಾಗಿ ಸ್ಮೂದಿಗಳು. ಈ ಸ್ಮೂದಿಗಳಿಗೆ ಹಲವು ರೀತಿಯಲ್ಲಿ ಪ್ರೊಟೀನ್‌ ಅಂಶಗಳನ್ನು ಸೇರಿಸುತ್ತಾ ಬಂದರೆ ದಾಹವೂ ಇಂಗುತ್ತದೆ, ಹೊಟ್ಟೆಯೂ ತುಂಬುತ್ತದೆ. ಸ್ಮೂದಿಗಳನ್ನು ತಯಾರಿಸುವಾಗ (Homemade protein smoothie) ಹೆಚ್ಚುವರಿ ಸಕ್ಕರೆಯನ್ನು ಸೇರಿಸದಂತೆ ಎಚ್ಚರ ವಹಿಸಬೇಕು. ಹಾಗಿಲ್ಲದಿದ್ದರೆ ತೂಕ ಹೆಚ್ಚುವುದರ ಜೊತೆಗೆ ಅಧಿಕ ಸಕ್ಕರೆಯಿಂದಾಗಿ ದಾಹವೂ ಹೆಚ್ಚುತ್ತದೆ. ಸಕ್ಕರೆಯಂಶದ ಬದಲು ನಾರು ಮತ್ತು ಪ್ರೊಟೀನ್‌ ಸೇರಿಸುತ್ತಾ ಬಂದರೆ ಹೆಚ್ಚು ಸಮಯದವರೆಗೆ ಹಸಿವಾಗದಂತೆ ತಡೆಯುವುದೂ ಸಾಧ್ಯ. ಸ್ಮೂದಿಗಳಿಗೆ ಪ್ರೊಟೀನ್‌ ಪೂರಕಗಳನ್ನು ಸೇರಿಸುವುದು ಸುಲಭದ ಕೆಲಸವೇನೋ ಹೌದು. ಆದರೆ ಅವುಗಳ ಬದಲಿಗೆ ನಿಸರ್ಗದತ್ತ ವಸ್ತುಗಳನ್ನೇ ಆಯ್ದುಕೊಂಡರೆ ಆರೋಗ್ಯ ಕ್ಷೇಮ. ಹಾಗಾದರೆ ಏನು ಮಾಡಬಹುದು?

ಹಾಲು, ಮೊಸರು

ಹೆಚ್ಚಿನ ಬಾರಿ ಸ್ಮೂದಿಗೆ ದಪ್ಪನೆಯ ಹಾಲು ಸೇರಿಸುವ ಕ್ರಮವಿರುತ್ತದೆ. ಬೆಳಗಿನ ತಿಂಡಿಯ ಬದಲಿಗೆ ಸ್ಮೂದಿ ಹೀರುವ ಅಭ್ಯಾಸವಿದ್ದರೆ, ಜೊತೆಗೆ ಹಾಲು ಸೇರಿಸಿಕೊಳ್ಳುವುದು ಆರೋಗ್ಯಕರ ಆಯ್ಕೆ. ಇದರಿಂದ ಪೇಯದ ಪ್ರೊಟೀನ್‌ ಅಂಶವನ್ನು ಗಣನೀಯ ಪ್ರಮಾಣದಲ್ಲಿ ಹೆಚ್ಚಿಸಬಹುದು. ಆದರೆ ಹುಳಿ ಹಣ್ಣುಗಳ ಸ್ಮೂದಿಯಲ್ಲಿ ಹಾಲು ಸೇರಿಸಲಾಗದು. ಅಂಥ ಸಂದರ್ಭದಲ್ಲಿ ಹುಳಿಯಿಲ್ಲದ ಮೊಸರು ಸೇರಿಸುವುದು ಸೂಕ್ತ. ಇದಕ್ಕಾಗಿ ಸಕ್ಕರೆಭರಿತ ಫ್ಲೇವರ್ಡ್‌ ಯೋಗರ್ಟ್‌ ಗಳನ್ನು ಆಶ್ರಯಿಸಬೇಕಿಲ್ಲ. ಮನೆಯಲ್ಲಿರುವ ಮಾಮೂಲಿ ಮೊಸರೇ ಸಾಕಾಗುತ್ತದೆ. ಆ ಮೊಸರು ಹುಳಿಯಿಲ್ಲದಿದ್ದರೆ ಆಯಿತಷ್ಟೆ.

Almond butter

ಬಾದಾಮಿ ಬೆಣ್ಣೆ

ಸಾಮಾನ್ಯವಾಗಿ ಪೀನಟ್‌ ಬಟರ್‌ ಅಥವಾ ಶೇಂಗಾ ಬೆಣ್ಣೆಯನ್ನು ಕೇಳಿರುತ್ತೇವೆ. ಆದರೆ ಬಾದಾಮಿ ಬೆಣ್ಣೆಯನ್ನು ಕೇಳಿರುವುದು ಕಡಿಮೆ. ಒಂದು ಟೇಬಲ್‌ ಚಮಚ ಬೆಣ್ಣೆಯಲ್ಲಿ ೪ ಗ್ರಾಂಗಳಷ್ಟು ಪ್ರೊಟೀನ್‌ ದೊರೆಯುತ್ತದೆ. ಜೊತೆಗೆ, ಬಾದಾಮಿಯಲ್ಲಿರುವ ಆರೋಗ್ಯಕರ ಅಂಶಗಳು ಮತ್ತು ಉತ್ತಮ ಕೊಬ್ಬು ಸಹ ಸುಲಭದಲ್ಲಿ ದೊರೆಯುತ್ತದೆ. ಈ ಮೂಲಕ ಸ್ಮೂದಿಗಳ ರುಚಿಯನ್ನೂ ಹೆಚ್ಚಿಸಿ, ಮಕ್ಕಳನ್ನು ಮೆಚ್ಚಿಸಲು ಸಾಧ್ಯವಿದೆ.

Chia Seeds Black Foods

ಚಿಯಾ ಬೀಜ

ಇವುಗಳನ್ನು ಸ್ವಲ್ಪ ಹೊತ್ತಿಗೆ ಮುಂಚೆ ನೆನೆಸಿಕೊಳ್ಳಬೇಕಷ್ಟೆ. ಸ್ಮೂದಿ ಸಿದ್ಧವಾದ ಮೇಲೆಯೂ ಇದನ್ನು ಮೇಲಿನಿಂದಲೂ ಸೇರಿಸಬಹುದು. ಈ ಮೂಲಕ ಪ್ರೊಟೀನ್‌, ಆರೋಗ್ಯಕರ ಕೊಬ್ಬು ಮಾತ್ರವಲ್ಲ, ಸಾಕಷ್ಟು ನಾರೂ ಹೊಟ್ಟೆ ಸೇರುತ್ತದೆ. ಇದನ್ನು ಯಾವುದೇ ಹಣ್ಣಿನ ಸ್ಮೂದಿಯ ಜೊತೆಗೆ ಸೇರಿಸಿದರೂ, ಬಾಯಲ್ಲಿ ಕರುಂಕುರುಂ ರುಚಿ ಉಳಿಯುವುದು ಖಾತ್ರಿ.

Pumpkin seeds Pumpkin Seeds Benefits

ಕುಂಬಳಕಾಯಿ ಬೀಜ

ಪ್ರೊಟೀನ್‌ ಪೂರಕಗಳ ಬದಲೀ ಆಯ್ಕೆಗಳನ್ನು ನೋಡುತ್ತಿರುವವರು ನೀವಾಗಿದ್ದರೆ, ನಾನಾ ರೀತಿಯ ಬೀಜದ ಪುಡಿಗಳು ಅತ್ತ್ಯುತ್ತಮ ಆಯ್ಕೆಗಳು. ಒಂದೋ ಈ ಬೀಜಗಳನ್ನು ನೆನೆಸಿ ಪೇಸ್ಟ್‌ ಮಾಡಿಕೊಳ್ಳಬಹುದು. ಅದಿಲ್ಲದಿದ್ದರೆ, ಅವುಗಳನ್ನು ಮೊದಲೇ ಪುಡಿ ಮಾಡಿಸಿಕೊಂಡು ಸ್ಮೂದಿಗಳಿಗೆ ಸೇರಿಸಿಕೊಳ್ಳಬಹುದು. ಮೂರು ಟೇಬಲ್‌ ಚಮಚ ಕುಂಬಳ ಬೀಜದ ಪುಡಿಯಲ್ಲಿ ಸುಮಾರು ೮ ಗ್ರಾಂ ಪ್ರೊಟೀನ್‌ ದೊರೆಯುತ್ತದೆ. ಜೊತೆಗೆ ಬಹಳಷ್ಟು ರೀತಿಯ ಖನಿಜಗಳು ಮತ್ತು ವಿಟಮಿನ್‌ಗಳು ಲಭ್ಯವಾಗುತ್ತವೆ.

Peanut butter

ಶೇಂಗಾ ಬೆಣ್ಣೆ

ಇದರಲ್ಲೂ ಪ್ರೊಟೀನ್‌ ಸಾಂದ್ರತೆ ಉತ್ತಮವಾಗಿದೆ. ಒಂದು ಟೇಬಲ್‌ ಚಮಚ ಶೇಂಗಾ ಬೆಣ್ಣೆಯಲ್ಲಿ ೪ ಗ್ರಾಂನಷ್ಟು ಪ್ರೊಟೀನ್‌ ದೊರೆಯುತ್ತದೆ. ಈ ಮಾರುಕಟ್ಟೆಯಲ್ಲಿ ದೊರೆಯುವ ಉತ್ಪನ್ನಗಳು ಬೇಡ ಎನಿಸಿದರೆ, ಇವುಗಳನ್ನು ಮನೆಯಲ್ಲೇ ಪುಡಿ ಮಾಡಿ ಸ್ಮೂದಿಗಳಿಗೆ ಸೇರಿಸಿಕೊಳ್ಳಬಹುದು.

ಸೂರ್ಯಕಾಂತಿ ಬೀಜ, ಅಗಸೆ ಬೀಜ, ಎಳ್ಳು

ಇಂಥ ಸಣ್ಣ ಬೀಜಗಳು ಸಹ ಸ್ಮೂದಿಗಳ ರುಚಿಯನ್ನು ಹೆಚ್ಚಿಸುವುದರ ಜೊತೆಗೆ, ಪ್ರೊಟೀನ್‌ ಅಂಶವನ್ನೂ ಏರಿಸಬಲ್ಲವು. ಈ ಬೀಜಗಳನ್ನು ರಾತ್ರಿ ನೀರಿಗೆ ಹಾಕಿ, ಬೆಳಗ್ಗೆ ರುಬ್ಬಿಕೊಳ್ಳಬಹುದು. ಹಾಗೆ ಬೇಡದಿದ್ದರೆ ಮೊದಲೇ ಪುಡಿ ಮಾಡಿರಿಸಿಕೊಂಡು, ಸ್ಮೂದಿಗೆ ಸೇರಿಸಿಕೊಳ್ಳಬಹುದು. ಯಾವುದೇ ಕೃತಕ ವಸ್ತುಗಳಿಲ್ಲ ಇಂಥ ಆಯ್ಕೆಗಳಿಂದ ಆರೋಗ್ಯಕರ ಸ್ಮೂದಿಗಳನ್ನು ಮಾಡಿ ಬೇಸಿಗೆಯ ಬಿಸಿಯನ್ನು ತಣಿಸಿಕೊಳ್ಳಬಹುದು.

ಇದನ್ನೂ ಓದಿ: Harmful Effects Of Cotton Candy: ಕಾಟನ್‌ ಕ್ಯಾಂಡಿಯ ಅಸಲಿ ಬಣ್ಣ ಭಯಾನಕ!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಲೈಫ್‌ಸ್ಟೈಲ್

Washing Machine Cleaning Tips: ವಾಷಿಂಗ್ ಮೆಷಿನ್ ಹೆಚ್ಚು ಬಾಳಿಕೆ ಬರಬೇಕೆ? ಈ ರೀತಿ ಸ್ವಚ್ಛಗೊಳಿಸಿ

ಮನೆಯಲ್ಲಿರುವ ವಾಷಿಂಗ್ ಮೆಷಿನ್ ಅನ್ನು ತಿಂಗಳಿಗೊಮ್ಮೆಯಾದರೂ ಚೆನ್ನಾಗಿ ಸ್ವಚ್ಛ ಮಾಡಲೇಬೇಕು. ಇಲ್ಲವಾದರೆ ಇದು ಸೋಂಕು ಹರಡುವ ಮೂಲವಾಗಬಹುದು. ವಾಷಿಂಗ್ ಮೆಷಿನ್ ಸ್ವಚ್ಛಗೊಳಿಸಲು ಕೆಲವು ಸರಳ ಟಿಪ್ಸ್ (Washing Machine Cleaning Tips) ಇಲ್ಲಿದೆ.

VISTARANEWS.COM


on

By

Washing Machine Cleaning Tips
Koo

ಮನೆಯಲ್ಲಿರುವ ವಾಷಿಂಗ್ ಮೆಷಿನ್ (Washing Machine Cleaning Tips) ಚೆನ್ನಾಗಿ ಕೆಲಸ ಮಾಡುತ್ತಿದ್ದರೂ ಅದು ಸೂಕ್ಷ್ಮಜೀವಿಗಳಿಂದ (germs) ಮುಕ್ತವಾಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳುವುದು ಬಹುಮುಖ್ಯ, ಇಲ್ಲವಾದರೆ ಬಟ್ಟೆಯ (cloth) ಮೂಲಕ ಅದು ನಮ್ಮ ದೇಹವನ್ನು ಪ್ರವೇಶಿಸಬಹುದು. ಇದರಿಂದ ಚರ್ಮದ ಕಾಯಿಲೆಗಳು (skin problem) ಕಾಣಿಸಿಕೊಳ್ಳಬಹುದು. ಹೀಗಾಗಿ ವಾಷಿಂಗ್ ಮೆಷಿನ್ ಅನ್ನು ಸ್ವಚ್ಛವಾಗಿಟ್ಟುಕೊಳ್ಳುವುದು ಮುಖ್ಯವಾಗಿದೆ.

ವಾಷಿಂಗ್ ಮೆಷಿನ್ ಚೆನ್ನಾಗಿ ಕಾರ್ಯ ನಿರ್ವಹಿಸಲು ಆಗಾಗ್ಗೆ ಸ್ವಚ್ಛಗೊಳಿಸುವುದು ಅತ್ಯಗತ್ಯ. ತಿಂಗಳಿಗೊಮ್ಮೆ ಸ್ವಚ್ಛಗೊಳಿಸಿದರೆ ಉತ್ತಮ. ಇದಕ್ಕಾಗಿ ಕೆಲವೊಂದು ಸರಳ ವಿಧಾನಗಳಿವೆ.

ಯಾವುದರಿಂದ ಸ್ವಚ್ಛಗೊಳಿಸಬಹುದು?

ವಾಷಿಂಗ್ ಮೆಷಿನ್ ಅನ್ನು ಸ್ವಚ್ಛಗೊಳಿಸುವ ಮೊದಲು ಯಾವುದರಿಂದ ಸ್ವಚ್ಛ ಮಾಡುವುದು ಎಂಬುದನ್ನು ನೋಡಿಕೊಳ್ಳಿ. ವಾಷಿಂಗ್ ಮೆಷಿನ್ ಸ್ವಚ್ಛಗೊಳಿಸಲು ಬಿಳಿ ವಿನೆಗರ್, ಅಡಿಗೆ ಸೋಡಾ, ಮೈಕ್ರೋಫೈಬರ್ ಬಟ್ಟೆ ಅಥವಾ ಸ್ಪಾಂಜ್, ಹಳೆಯ ಹಲ್ಲುಜ್ಜುವ ಬ್ರಷ್, ಬಿಸಿ ನೀರು, ಸೌಮ್ಯವಾದ ಸಾಬೂನು ಮತ್ತು ಬಕೆಟ್ ಅಗತ್ಯವಾಗಿರುತ್ತದೆ.

ಡ್ರಾಯರ್‌ಗಳನ್ನು ಸ್ವಚ್ಛಗೊಳಿಸಿ

ವಾಷಿಂಗ್ ಮೆಷಿನ್‌ನಲ್ಲಿ ಮೊದಲು ಡ್ರಾಯರ್‌ಗಳನ್ನು ತೆಗೆದು ಸ್ವಚ್ಛಗೊಳಿಸಿ. ಬಿಸಿ ಸಾಬೂನು ನೀರಿನಿಂದ ಚೆನ್ನಾಗಿ ತೊಳೆಯಿರಿ. ಯಾವುದೇ ಕಲೆಗಳು ಇದ್ದರೆ ಸ್ಕ್ರಬ್ ಮಾಡಲು ಹಳೆಯ ಟೂತ್ ಬ್ರಷ್ ಅನ್ನು ಬಳಸಿ. ಡ್ರಾಯರ್‌ಗಳನ್ನು ಚೆನ್ನಾಗಿ ತೊಳೆಯಿರಿ ಮತ್ತು ಅವುಗಳನ್ನು ಯಂತ್ರಕ್ಕೆ ಮರುಸೇರಿಸುವ ಮೊದಲು ಒಣಗಲು ಬಿಡಿ.

ವಿನೆಗರ್‌ನೊಂದಿಗೆ ಬಿಸಿ ನೀರು

ಎರಡು ಕಪ್ ಬಿಳಿ ವಿನೆಗರ್ ಅನ್ನು ನೇರವಾಗಿ ವಾಷಿಂಗ್ ಮೆಷಿನ್‌ಗೆ ಹಾಕಿ. ಬಿಸಿ ನೀರು ಹಾಕಿ ತಿರುಗಿಸಿ. ವಿನೆಗರ್ ಮೆಷಿನ್‌ನ ಒಳಗೆ ಇರುವ ಶಿಲೀಂಧ್ರವನ್ನು ಕರಗಿಸಲು ಸಹಾಯ ಮಾಡುತ್ತದೆ. ಜೊತೆಗೆ ಅಹಿತಕರ ವಾಸನೆಯನ್ನು ತೊಡೆದುಹಾಕುತ್ತದೆ.

ಬಾಗಿಲನ್ನು ಸ್ವಚ್ಛಗೊಳಿಸಿ

ವಾಷಿಂಗ್ ಮೆಷಿನ್‌ನ ಬಾಗಿಲಿನ ಸಂಧುಗಳನ್ನು ಸ್ವಚ್ಛಗೊಳಿಸಲು ಮರೆಯದಿರಿ. ಇದಕ್ಕಾಗಿ ಸ್ಪ್ರೇ ಬಾಟಲಿಯಲ್ಲಿ ನೀರು ಮತ್ತು ವಿನೆಗರ್‌ ಅನ್ನು ಸಮ ಪ್ರಮಾಣದಲ್ಲಿ ಹಾಕಿ ದ್ರಾವಣವನ್ನು ಬಾಗಿಲಿಗೆ ಸಿಂಪಡಿಸಿ. ಬಳಿಕ ಮೈಕ್ರೋಫೈಬರ್ ಬಟ್ಟೆ ಅಥವಾ ಸ್ಪಂಜನ್ನು ಬಳಸಿ ಉಜ್ಜಿ. ಕೊಳಕು ಸಂಗ್ರಹಗೊಳ್ಳುವ ಭಾಗಗಳತ್ತ ವಿಶೇಷ ಗಮನಕೊಡಿ.

ಇದನ್ನೂ ಓದಿ: Toothpaste Hacks: ಟೂತ್‌ಪೇಸ್ಟ್‌ನಿಂದ ಯಾವೆಲ್ಲ ವಸ್ತುಗಳನ್ನು ಹೊಳೆಯುವಂತೆ ಮಾಡಬಹುದು ನೋಡಿ!

ಫಿಲ್ಟರ್ ತೆಗೆದು ಸ್ವಚ್ಛಗೊಳಿಸಿ

ವಾಷಿಂಗ್ ಮೆಷಿನ್‌ನಲ್ಲಿ ತೆಗೆಯಬಹುದಾದ ಫಿಲ್ಟರ್ ಹೊಂದಿದ್ದರೆ ಅದನ್ನು ಪತ್ತೆ ಮಾಡಿ. ಅದರಲ್ಲಿರುವ ಸಂಗ್ರಹವಾಗಿರುವ ಕೊಳಕು ವಸ್ತುಗಳನ್ನು ತೆಗೆಯಿರಿ. ಫಿಲ್ಟರ್ ಅನ್ನು ಸ್ವಚ್ಛಗೊಳಿಸಲು ಬಿಸಿ ಸಾಬೂನು ನೀರು ಮತ್ತು ಬ್ರಷ್ ಅನ್ನು ಬಳಸಿ. ಅನಂತರ ಅದನ್ನು ಮರುಸ್ಥಾಪಿಸುವ ಮೊದಲು ಅದನ್ನು ಸಂಪೂರ್ಣವಾಗಿ ತೊಳೆಯಿರಿ.

ಬೇಕಿಂಗ್ ಸೋಡಾ ಬಳಸಿ

ವಿನೆಗರ್‌ನಿಂದ ಸ್ವಚ್ಛಗೊಳಿಸಿದ ಬಳಿಕ ಒಂದು ಕಪ್ ಅಡಿಗೆ ಸೋಡಾವನ್ನು ನೇರವಾಗಿ ತೊಳೆಯುವ ಯಂತ್ರಕ್ಕೆ ಹಾಕಿ ಬಿಸಿ ನೀರು ಬೆರೆಸಿ ತಿರುಗಿಸಿ. ಇದು ವಾಷಿಂಗ್ ಮೆಷಿನ್‌ನಲ್ಲಿರುವ ದುರ್ಗಂಧವನ್ನು ದೂರ ಮಾಡುತ್ತದೆ.

ಹೊರಭಾಗ ಸ್ವಚ್ಛತೆ

ವಾಷಿಂಗ್ ಮೆಷಿನ್‌ನ ಮೇಲ್ ಭಾಗವನ್ನು ಸ್ವಚ್ಛವಾದ ಒದ್ದೆ ಬಟ್ಟೆಯಿಂದ ಚೆನ್ನಾಗಿ ಒರೆಸಿ. ಇದರಲ್ಲಿರುವ ಬಟನ್ ಗಳ ಬಗ್ಗೆ ಎಚ್ಚರವಿರಲಿ. ಯಾಕೆಂದರೆ ಈ ಪ್ರದೇಶಗಳು ಕಾಲಾನಂತರದಲ್ಲಿ ಧೂಳು ಮತ್ತು ಕೊಳೆಯನ್ನು ಸಂಗ್ರಹಿಸಬಹುದು.

ಗಾಳಿಯಲ್ಲಿ ಒಣಗಲು ಬಿಡಿ

ವಾಷಿಂಗ್ ಮೆಷಿನ್ ಸ್ವಚ್ಛತೆ ಪೂರ್ಣಗೊಂಡ ಬಳಿಕ ಒಳಭಾಗವನ್ನು ಗಾಳಿಯಲ್ಲಿ ಸಂಪೂರ್ಣವಾಗಿ ಒಣಗಲು ಬಿಡಿ. ಇದಕ್ಕಾಗಿ ಬಾಗಿಲು ತೆರೆದಿಡಿ. ಇದು ಶಿಲೀಂಧ್ರ ಬೆಳವಣಿಗೆಯನ್ನು ತಡೆಯಲು ಸಹಾಯ ಮಾಡುತ್ತದೆ.

ವಾಷಿಂಗ್ ಮೆಷಿನ್ ಅನ್ನು ತಿಂಗಳಿಗೊಮ್ಮೆಯಾದರೂ ಈ ರೀತಿ ಸ್ವಚ್ಛ ಮಾಡಿದರೆ ಇದು ವಾಷಿಂಗ್ ಮೆಷಿನ್ ಹೆಚ್ಚು ಕಾಲ ಬಾಳಿಕೆ ಬರಲು ಸಹಾಯ ಮಾಡುವುದು.

Continue Reading

ಪ್ರಮುಖ ಸುದ್ದಿ

Ebola Virus: ಲ್ಯಾಬ್‌ನಲ್ಲಿ ಮತ್ತೊಂದು ಡೆಡ್ಲಿ ವೈರಸ್‌ ಸೃಷ್ಟಿಸಿದ ಚೀನಾ; ಈ ಲಕ್ಷಣ ಕಂಡರೆ ಮರಣ ನಿಶ್ಚಿತ!

Ebola Virus: ಎಬೋಲಾ ಸಾಂಕ್ರಾಮಿಕವಾಗಿದ್ದು, ಇದು ವೈರಾಣುವಿನಿಂದ ಹರಡುವ ಕಾಯಿಲೆಯಾಗಿದೆ. ಕೋತಿ, ಬಾವಲಿಯ ರಕ್ತ, ಸೋಂಕಿನಿಂದ ಕೂಡಿದ ಗಾಳಿ ಅಥವಾ ಎಬೋಲಾ ಸೋಂಕಿತನ ವೀರ್ಯದಿಂದ ಹರಡುತ್ತದೆ ಎಂದು ತಿಳಿದುಬಂದಿದೆ. ಸೋಂಕು ತಗುಲಿದವರು ಬಹು ಅಂಗಾಂಗ ವೈಫಲ್ಯದಿಂದ ಮೃತಪಡುತ್ತಾರೆ ಎಂಬುದಾಗಿ ಚೀನಾದ ವಿಜ್ಞಾನಿಗಳು ಹೇಳಿದ್ದಾರೆ. ಇದರಿಂದಾಗಿ ಭಾರತ ಸೇರಿ ಜಗತ್ತಿನಾದ್ಯಂತ ಭೀತಿ ಎದುರಾಗಿದೆ.

VISTARANEWS.COM


on

Ebola Virus
Koo

ಬೀಜಿಂಗ್: ಜಗತ್ತಿಗೇ ಕೊರೊನಾ (Corona Virus) ಎಂಬ ಮಹಾಮಾರಿಯನ್ನು ಹರಡಿ, ಕೋಟ್ಯಂತರ ಜನರ ಪ್ರಾಣಕ್ಕೆ ಕುತ್ತು ತಂದ ಚೀನಾ ಈಗ ಮತ್ತೊಂದು ಜೈವಿಕ ಯುದ್ಧಕ್ಕೆ ಮುಂದಾಗಿದೆ. ಮಾರಣಾಂತಿಕ ಎಬೋಲಾ ರೂಪಾಂತರಿ ಸೋಂಕನ್ನು (Ebola Mutant Virus) ಚೀನಾದ ವಿಜ್ಞಾನಿಗಳು ಸೃಷ್ಟಿಸಿದ್ದು, ಇದರಿಂದ ಜಗತ್ತಿಗೇ ಆತಂಕ ಎದುರಾಗಿದೆ. ಹೆಬೈ ಮೆಡಿಕಲ್‌ ಯುನಿವರ್ಸಿಟಿಯಲ್ಲಿ ವಿಜ್ಞಾನಿಗಳು ಎಬೋಲಾ ರೂಪಾಂತರಿ ವೈರಸ್‌ಅನ್ನು ಸೃಷ್ಟಿಸಿದ್ದಾರೆ. ಹ್ಯಾಮ್‌ಸ್ಟರ್‌ಗಳಿಗೆ (ಕಿರುಕಡಿಗ-ಇಲಿಯಂತ ಚಿಕ್ಕ ಪ್ರಾಣಿ) ವೈರಸ್‌ ಇಂಜೆಕ್ಟ್‌ ಮಾಡಿದರೆ, ಮೂರೇ ದಿನಗಳಲ್ಲಿ ಅವರು ಸಾಯುತ್ತವೆ ಎಂದು ಸೈನ್ಸ್‌ ಡೈರೆಕ್ಟ್‌ ಜರ್ನಲ್‌ನಲ್ಲಿ ವರದಿ ಪ್ರಕಟವಾಗಿದೆ.

ಸಿರಿಯಾ ಮೂಲದ, ಮೂರು ವಾರಗಳ ಹಿಂದೆ ಜನಿಸಿದ ಹ್ಯಾಮ್‌ಸ್ಟರ್‌ಗಳಿಗೆ ಎಬೋಲಾ ರೂಪಾಂತರಿ ತಳಿಯ ವೈರಸ್‌ಅನ್ನು ಇಂಜೆಕ್ಟ್‌ ಮಾಡಲಾಗಿತ್ತು. 5 ಗಂಡು ಹಾಗೂ 5 ಹೆಣ್ಣು ಹ್ಯಾಮ್‌ಸ್ಟರ್‌ಗಳಿಗೆ ಸೋಂಕನ್ನು ಇಂಜೆಕ್ಷನ್‌ ಮೂಲಕ ನೀಡಲಾಗಿತ್ತು. ಮೂರು ದಿನಗಳಲ್ಲಿಯೇ ಅವರು ಮೃತಪಟ್ಟವು” ಎಂಬುದಾಗಿ ವಿಜ್ಞಾನಿಗಳೇ ಹೇಳಿದ್ದಾರೆ. ಹಾಗಾಗಿ, ಇದು ಕೂಡ ಕೊರೊನಾ ಸಾಂಕ್ರಾಮಿಕದಂತೆ ಮಾರಣಾಂತಿಕವಾಗಿದ್ದು, ಭಾರತ ಸೇರಿ ಜಗತ್ತಿನ ಹಲವು ರಾಷ್ಟ್ರಗಳಿಗೆ ಕಮ್ಯುನಿಸ್ಟ್‌ ರಾಷ್ಟ್ರವು ಸೋಂಕು ಹರಡುವ ಸಾಧ್ಯತೆ ಹೆಚ್ಚಾಗಿದೆ.

ಮನುಷ್ಯರಿಗೆ ಹೇಗೆ ಅಪಾಯ?

ಹ್ಯಾಮ್‌ಸ್ಟರ್‌ಗಳಿಗೆ ಉಂಟಾದ ಪರಿಣಾಮವೇ ಮನುಷ್ಯರಿಗೂ ಆಗಲಿದೆ. ಮೊದಲು ಜೀವಕೋಶಗಳಿಗೆ ಹರಡುವ ಸೋಂಕು, ಹೃದಯ, ಶ್ವಾಸಕೋಶ, ಹೊಟ್ಟೆ, ಲಿವರ್‌ ಸೇರಿ ಹಲವು ಅಂಗಗಳನ್ನು ನಿಷ್ಕ್ರಿಯಗೊಳಿಸುತ್ತದೆ. ಕೊನೆಗೆ, ಬಹು ಅಂಗಾಂಗ ವೈಫಲ್ಯದಿಂದ ಮನುಷ್ಯನು ಕೂಡ ಮೂರ್ನಾಲ್ಕು ದಿನಗಳಲ್ಲಿಯೇ ಮೃತಪಡಲಿದ್ದಾನೆ ಎಂಬುದಾಗಿ ಚೀನಾ ವಿಜ್ಞಾನಿಗಳು ಮಾಹಿತಿ ನೀಡಿದ್ದಾರೆ. ಇದರಿಂದಾಗಿ ಜಗತ್ತಿನಾದ್ಯಂತ ಭೀತಿ ಎದುರಾಗಿದೆ.

ಎಬೋಲಾ ಹರಡುವುದು ಹೇಗೆ?

ಎಬೋಲಾ ಸಾಂಕ್ರಾಮಿಕವಾಗಿದ್ದು, ಇದು ವೈರಾಣುವಿನಿಂದ ಹರಡುವ ಕಾಯಿಲೆಯಾಗಿದೆ. ಕೋತಿ, ಬಾವಲಿಯ ರಕ್ತ, ಸೋಂಕಿನಿಂದ ಕೂಡಿದ ಗಾಳಿ ಅಥವಾ ಎಬೋಲಾ ಸೋಂಕಿತನ ವೀರ್ಯದಿಂದ ಹರಡುತ್ತದೆ ಎಂದು ತಿಳಿದುಬಂದಿದೆ. ಗಂಟಲು ನೋವು, ಸ್ನಾಯು ನೋವು ಮತ್ತು ತಲೆನೋವು, ಯಕೃತ್ತು ಮತ್ತು ಮೂತ್ರ ಕಾರ್ಯನಿರ್ವಹಣೆಯ ಹದಗೆಡುತ್ತದೆ. ಸಾಮಾನ್ಯವಾಗಿ ವಾಕರಿಕೆ, ವಾಂತಿ ಮತ್ತು ಭೇದಿ ಇದರ ಲಕ್ಷಣಗಳಾಗಿವೆ. ಬಾವಲಿ, ಕೋತಿಯಂತಹ ಪ್ರಾಣಿಗಳಿಂದ ದೂರ ಇರುವುದು ಒಳಿತು ಎಂದು ಹೇಳಲಾಗುತ್ತಿದೆ.

ಇದನ್ನೂ ಓದಿ: Chocolate: ಏನಿದು ಮೀಲಿಬಗ್‌ ವೈರಸ್‌? ಚಾಕೊಲೇಟ್ ದರ ಏರಿಕೆಗೂ ಇದಕ್ಕೂ ಏನು ಸಂಬಂಧ?

Continue Reading

ಆರೋಗ್ಯ

Fruit Juice Side Effects: ಹಣ್ಣು ತಿಂದರೆ ಒಳ್ಳೆಯದೋ, ಹಣ್ಣಿನ ಜ್ಯೂಸ್‌ ಕುಡಿದರೆ ಒಳ್ಳೆಯದೋ?

ಬೇಸಿಗೆಯಲ್ಲಿ ಹಣ್ಣಿನ ಜ್ಯೂಸ್‌ಗೆ ಭಾರಿ ಬೇಡಿಕೆ. ಆದರೆ ತಾಜಾ ಹಣ್ಣುಗಳ ಜ್ಯೂಸ್‌ಗಳಿಂದಲೂ ಕೆಲವು ಸಮಸ್ಯೆಗಳಿವೆ. ಇವೂ ಕೂಡಾ ನಾವು ಅಂದುಕೊಂಡಷ್ಟು ಆರೋಗ್ಯಕರವಲ್ಲ. ಬನ್ನಿ, ಹಣ್ಣುಗಳ ಜ್ಯೂಸ್‌ ಕೂಡಾ ಅತಿಯಾಗಬಾರದು (Fruit Juice Side Effects) ಯಾಕೆ ಎಂಬುದನ್ನು ನೋಡೋಣ.

VISTARANEWS.COM


on

Fruit Juice Side Effects
Koo

ಬೇಸಿಗೆ ಕಾಲ ಹಾಗೂ ಜ್ಯೂಸ್‌ಗಳಿಗೆ ಇರುವ ಸಂಬಂಧ ದೊಡ್ಡದು. ಬೇಸಿಗೆಯ ಬಿಸಿಲಿಗೆ ತಂಪಾದ ಜ್ಯೂಸ್‌ ಹೀರಿದರೆ ಆಗುವ ನೆಮ್ಮದಿ, ಸುಖ ಪದಗಳಲ್ಲಿ ವರ್ಣಿಸುವುದು ಕಷ್ಟವೇ. ಆದರೂ, ಆರೋಗ್ಯದ ವಿಚಾರಕ್ಕೆ ಬಂದರೆ, ಹಲವರು, ನೈಸರ್ಗಿಕವಾದ ಜ್ಯೂಸ್‌ಗಳನ್ನು ಮಾಡಿ ಕುಡಿಯುವುದು ಒಳ್ಳೆಯದೇ ಹೊರತು, ಹೊರಗೆ ರೆಡಿಮೇಡ್‌ ಆಗಿ ಟೆಟ್ರಾ ಪ್ಯಾಕ್‌ಗಳಲ್ಲಿ ಸಿಗುವ ಕೃತಕ ರುಚಿಗಳ ಹಣ್ಣುಗಳ ಪೇಯಗಳು ಒಳ್ಳೆಯದಲ್ಲ ಎಂಬ ಸತ್ಯ ಎಲ್ಲರಿಗೂ ತಿಳಿದಿದೆ. ಜ್ಯೂಸ್‌ ಅಂಗಡಿಗಳಲ್ಲಿ ಬೇಸಿಗೆಯಲ್ಲಿ ನೆರೆದಿರುವ ಕಿಕ್ಕಿರಿದ ಜನಸಂದಣಿಯೇ ಇದಕ್ಕೆ ಸಾಕ್ಷಿ. ಆದರೆ, ತಾಜಾ ಹಣ್ಣುಗಳ ಜ್ಯೂಸ್‌ಗಳಿಂದಲೂ ಕೆಲವು ಸಮಸ್ಯೆಗಳಿವೆ. ಇವೂ ಕೂಡಾ ನಾವು ಅಂದುಕೊಂಡಷ್ಟು ಆರೋಗ್ಯಕರವಲ್ಲ. ಬನ್ನಿ, ಹಣ್ಣುಗಳ ಜ್ಯೂಸ್‌ ಕೂಡಾ ಅತಿಯಾಗಬಾರದು (Fruit Juice Side Effects) ಯಾಕೆ ಎಂಬುದನ್ನು ನೋಡೋಣ.

Drinking Glasses with Fruit Juice

ಅಧಿಕ ಸಕ್ಕರೆಯ ಅಂಶ

ತಾಜಾ ಹಣ್ಣಿನ ಜ್ಯೂಸ್‌ಗಳನ್ನು, ಮಿಲ್ಕ್‌ ಶೇಕ್‌ಗಳನ್ನು ಮಾಡಲು ಒಂದಷ್ಟು ಸಕ್ಕರೆ ಸುರಿದಿರುತ್ತೇವೆ. ಅಧಿಕವಾಗಿ ಸಕ್ಕರೆ ಸುರಿದು ಜ್ಯೂಸ್‌ಗಳನ್ನು ಮಾಡುವಿದರಿಂದ ಹಣ್ಣುಗಳು ತಾಜಾ ಆಗಿದ್ದರೂ ಕೂಡಾ ಅದರಲ್ಲಿರುವ ಸಕ್ಕರೆಯಿಂದಾಗಿ ಇವು ನಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತವೆ. ಜೊತೆಗೆ ಹಣ್ಣಿನ ಜ್ಯೂಸ್‌ ದ್ರವರೂಪದಲ್ಲಿರುವುದರಿಂದ ಬಹುಬೇಗನೆ ಸಕ್ಕರೆಯ ಅಂಶ ನೇರವಾಗಿ ರಕ್ತಕ್ಕೆ ಸೇರ್ಪಡೆಯಾಗುತ್ತದೆ. ಸಕ್ಕರೆಯ ಮಟ್ಟ ಏರಲು ಇದೂ ಕಾರಣವಾಗಬಹುದು. ಹೀಗಾಗಿ, ಹಣ್ಣನ್ನು ಜ್ಯೂಸ್‌ ಮಾಡಿ ಕುಡಿಯುವ ಬದಲು, ಹಾಗೆಯೇ ತಿನ್ನಬಹುದು. ಹಣ್ಣುಗಳಲ್ಲಿರುವ ನಾರಿನಂಶವೂ ಹೊಟ್ಟೆ ಸೇರುವುದರಿಂದ ಸಕ್ಕರೆ ಬಹುಬೇಗನೆ ರಕ್ತಕ್ಕೆ ಸೇರದು. ಹೀಗಾಗಿ ಜ್ಯೂಸ್‌ ಕುಡಿಯುವ ಯೋಚನೆಯಿದ್ದರೆ ಆರೋಗ್ಯದ ದೃಷ್ಟಿಯಿಂದ ತರಕಾರಿಗಳ ಜ್ಯೂಸ್‌ ಹಣ್ಣಿನ ಜ್ಯೂಸ್‌ಗಳಿಗಿಂತ ಒಳ್ಳೆಯದು. ಇವುಗಳಲ್ಲಿ ಸಕ್ಕರೆಯ ಅಂಶ ಅತ್ಯಂತ ಕಡಿಮೆ ಇರುತ್ತದೆ.

ನಾರಿನಂಶ ಕಡಿಮೆ ಇರುತ್ತದೆ

ಜ್ಯೂಸ್‌ ಮಾಡಿದಾಗ, ಹಣ್ಣುಗಳಲ್ಲಿರುವ ನಾರಿನಂಶ ವ್ಯರ್ಥವಾಗುತ್ತದೆ. ಹಣ್ಣಿನಿಂದ ಜ್ಯೂಸನ್ನು ಹಿಂಡಿ ಉಳಿದೆಲ್ಲವನ್ನೂ ಸೋಸಿ ಎಸೆಯುವುದರಿಂದ ಇದರ ನಾರಿನಂಶವು ನಷ್ಟವಾಗುತ್ತದೆ. ಒಳ್ಳೆಯ ಪೋಷಕಾಂಶಗಳು ನಷ್ಟವಾಗುವುದರಿಂದ ಜ್ಯೂಸ್‌ನಲ್ಲಿರುವ ಸಕ್ಕರೆಯ ಅಂಶ ನೇರವಾಗಿ ರಕ್ತಕ್ಕೆ ಸೇರುತ್ತದೆ. ಹಾಗಾಗಿ ಜ್ಯೂಸ್‌ ಕುಡಿಯುವ ಇರಾದೆಯಿದ್ದರೆ, ಹೆಚ್ಚು ಸೋಸಬೇಡಿ. ಸೋಸಿದರೂ ಬೀಜ ಬೇರ್ಪಡಿಸಿ ಹಣ್ಣಿನ ನಾರಿನಂಶವನ್ನು ಮತ್ತೆ ಜ್ಯೂಸ್‌ಗೆ ಹಾಕಿ.

Image Of Fruit Juices Role in Managing Blood Sugar Levels

ಪೋಷಕಾಂಶ ನಷ್ಟವಾಗಬಹುದು

ಜ್ಯೂಸ್‌ ಮಾಡುವುದರಿಂದ ಹಣ್ಣನ್ನು ಮಿಕ್ಸಿಯಲ್ಲಿ ತಿರುಗಿಸಿ ಸೋಸುವ ಕಾರಣ ಅದರ ಪೋಷಕಾಂಶ ನಷ್ಟವಾಗುವ ಸಾಧ್ಯತೆ ಹೆಚ್ಚು. ಹಣ್ಣಿನಲ್ಲಿರುವ ನಾರಿನಂಶ ಮಾತ್ರ ನಷ್ಟವಾಗುವುದಲ್ಲ, ಅದರಲ್ಲಿರುವ ವಿಟಮಿನ್‌ಗಳು, ಖನಿಜಾಂಶಗಳು, ಆಂಟಿ ಆಕ್ಸಿಡೆಂಟ್‌ಗಳೂ ನಾಶವಾಗುತ್ತವೆ. ಹಾಗಾಗಿ ಹಣ್ಣನ್ನು ಹಾಗೆಯೇ ತಿನ್ನುವುದೇ ಬಹಳ ಉತ್ತಮ.

ಅಧಿಕ ಕ್ಯಾಲರಿ ಇರುತ್ತವೆ

ಜ್ಯೂಸ್‌ಗೆ ಒಂದಷ್ಟು ಸಕ್ಕರೆಯನ್ನೂ ಹಾಕಿರುವುದರಿಂದ ಕ್ಯಾಲರಿಯ ವಿಚಾರಕ್ಕೆ ಬಂದರೆ ಇದರಲ್ಲಿ ಅಧಿಕ ಕ್ಯಾಲರಿ ಇರುತ್ತದೆ. ಹೀಗಾಗಿ ಫಿಟ್‌ನೆಸ್‌ ಬಯಸುವ ಮಂದಿಗೆ, ಹೃದ್ರೋಗ, ಮಧುಮೇಹ, ಕೊಲೆಸ್ಟೆರಾಲ್‌ ಇತ್ಯಾದಿಗಳ ಸಮಸ್ಯೆ ಇರುವ ಮಂದಿಗೆ ಇದು ಖಂಡಿತವಾಗಿ ಒಳ್ಳೆಯದಲ್ಲ.

Acidity sourness flatulence are constant guests of sleepless persons Sleeping Tips

ಅಸಿಡಿಟಿ ಸಮಸ್ಯೆ

ಕೆಲವು ಹಣ್ಣಿನ ಜ್ಯೂಸ್‌ಗಳು, ಬಹಳ ಮುಖ್ಯವಾಗಿ ಸಿಟ್ರಸ್‌ ಹಣ್ಣಿನ ಜ್ಯೂಸ್‌ಗಳು ಕೆಲವು ಮಂದಿಯಲ್ಲಿ ಅಸಿಡಿಟಿ ಸಮಸ್ಯೆಯನ್ನೂ ಹುಟ್ಟು ಹಾಕುತ್ತದೆ. ಅಸಿಡಿಕ್‌ ಜ್ಯೂಸ್‌ಗಳು ಈ ಸಮಸ್ಯೆ ತರುತ್ತವೆ ಎಂದಾದಲ್ಲಿ ಅವಕ್ಕೆ ಹೆಚ್ಚು ನೀರು ಸೇರಿಸಿ ಜ್ಯೂಸ್‌ ಮಾಡಿ. ನೀರು ಸಾಕಷ್ಟು ಕುಡಿಯಿರಿ.

ಇದನ್ನೂ ಓದಿ: Tips On Tea: ಚಹಾ ಅತಿಯಾಗಿ ಕುದಿಸುವುದು ಒಳ್ಳೆಯದಲ್ಲ! ಏಕೆ ಗೊತ್ತಾ?

ಹಲ್ಲು ಹುಳುಕಾಗಬಹುದು

ಜ್ಯೂಸ್‌ನಲ್ಲಿ ಸಕ್ಕರೆಯ ಅಂಶ ಹೆಚ್ಚಿರುವುದರಿಂದ ನೇರವಾಗಿ ಹಲ್ಲಿನ ಸಂಪರ್ಕಕ್ಕೆ ಬರುವುದರಿಂದ ಜ್ಯೂಸ್‌ನ ಸಕ್ಕರೆಯ ಅಂಶ ಹಲ್ಲಿನ ಭಾಗದಲ್ಲಿ ಸೇರಿಕೊಳ್ಳುವುದರಿಂದ ಹಲ್ಲು ಹುಳುಕಾಗಬಹುದು.
ಇವಿಷ್ಟಲ್ಲದೆ, ಸರಿಯಾದ ಶುದ್ಧ ನೀರಿನ ಬಳಕೆಯಿಲ್ಲದೆ ಮಾಡಿದ ರಸ್ತೆ ಬದಿಯ ಹಣ್ಣಿನ ಜ್ಯೂಸ್‌ ಅಂಗಡಿಗಳಲ್ಲಿ ಕುಡಿಯುವುದರಿಂದ ಆರೋಗ್ಯ ಕೈಕೊಡುವ ಸಂಭವವೂ ಅಧಿಕ. ಐಸ್‌ ಹಾಕಿ ಕುಡಿಯುವುದರಿಂದ ನೆಗಡಿ, ಗಂಟಲು ನೋವು, ಜ್ವರ ಇತ್ಯಾದಿಗಳ ಸಂಭವವೂ ಇರುತ್ತದೆ. ಜೊತೆಗೆ ಈಗಾಗಲೇ ನಿತ್ಯವೂ ತಮ್ಮ ಆರೋಗ್ಯ ಸಮಸ್ಯೆಗಳಿಗಾಗಿ ಮಾತ್ರೆಗಳನ್ನು ತಿನ್ನುವ ಮಂದಿ ಹಣ್ಣಿನ ಜ್ಯೂಸ್‌ ಕುಡಿಯುವುದರಿಂದ ಮತ್ತಷ್ಟು ಸಮಸ್ಯೆಗಳನ್ನೂ ಆಹ್ವಾನಿಸುವ ಸಂದರ್ಭಗಳೂ ಬರಬಹುದು. ಉದಾಹರಣೆಗೆ ಮಧುಮೇಹ, ಹೃದ್ರೋಗ ಅಥವಾ ಇನ್ನೂ ಅನೇಕ ಸಮಸ್ಯೆಗಳಿರುವ ಮಂದಿ ನಿತ್ಯವೂ ಮಾತ್ರೆಗಳನ್ನು ಸೇವಿಸುತ್ತಿರುವಾಗ ಆರೋಗ್ಯಕರ ಆಹಾರದ ಕಾಳಜಿ ವಹಿಸಲೇ ಬೇಕಾಗುತ್ತದೆ. ಇಂಥವರೂ ಜ್ಯೂಸ್‌ ಬದಲು ಹಣ್ಣನ್ನೇ ನೆಚ್ಚಿದರೆ ಒಳ್ಳೆಯದು.

Continue Reading

ಆರೋಗ್ಯ

Tips On Tea: ಚಹಾ ಅತಿಯಾಗಿ ಕುದಿಸುವುದು ಒಳ್ಳೆಯದಲ್ಲ! ಏಕೆ ಗೊತ್ತಾ?

ಚಹಾ ಸಿದ್ಧಪಡಿಸಿದ ಮೇಲೆ ಅದನ್ನು ಮತ್ತೆ ಮತ್ತೆ ಬಿಸಿ ಮಾಡುವುದು, ಹಾಲು ಹಾಕಿದ ಮೇಲೆ ದೀರ್ಘಕಾಲ ಕುದಿಸುವುದು- ಇಂಥ ಅಭ್ಯಾಸಗಳು ಬಹಳಷ್ಟು ಜನರಿಗೆ ಇರುತ್ತವೆ. ಇಂಥ ಅಭ್ಯಾಸಗಳು ಅನಾರೋಗ್ಯಕರ ಪರಿಣಾಮಗಳನ್ನು ಆರೋಗ್ಯದ ಮೇಲೆ ಉಂಟು ಮಾಡಬಹುದು. ಈ ಬಗೆಗಿನ (Tips On Tea) ವಿವರಗಳು ಇಲ್ಲಿವೆ.

VISTARANEWS.COM


on

Tips On Tea
Koo

ಚಹಾ ಮಾಡುವುದೆಂದರೆ ರಾಕೆಟ್‌ ಹಾರಿಸಿದಂತೇನಲ್ಲ, ಸುಲಭದ ಕೆಲಸ. ಮಾಡುವ ರೀತಿಗಳಲ್ಲಿ ಒಬ್ಬರಿಂದೊಬ್ಬರಿಗೆ ಭಿನ್ನತೆ ಇರಬಹುದೇ ಹೊರತು, ಚಹಾವನ್ನು ಪಾಯಸ ಮಾಡಿದಂತೆ ಮಾಡುವುದಕ್ಕಂತೂ ಸಾಧ್ಯವಿಲ್ಲ. ಅಂದರೆ, ಚಹಾ ಡಿಕಾಕ್ಷನ್‌ಗೆ ಹಾಲು ಹಾಕಿದ ಮೇಲೆ ಪಾಯಸದಂತೆ ಕುದಿಸುವವರಿದ್ದಾರೆ; ಡಿಕಾಕ್ಷನ್‌ ಕುದಿಸಿ ಕೊನೆಗೆ ಹಾಲು ಹಾಕುವವರಿದ್ದಾರೆ- ಹೀಗೆ. ದಿನಕ್ಕೊಂದೆರಡು ಬಾರಿ ಚಹಾ ಕುಡಿಯುವುದರಲ್ಲಿ ಸಮಸ್ಯೆಗಳಿಲ್ಲ. ಅದರಲ್ಲೂ ಏಕ್ಕಿ, ಶುಂಠಿ ಮುಂತಾದ ಮಸಾಲೆಗಳನ್ನು ಹಾಕಿ ಚಹಾ ಮಾಡುವುದರಿಂದ ಆರೋಗ್ಯಕ್ಕೆ ಹಲವು ರೀತಿಯಲ್ಲಿ ಲಾಭಗಳಿವೆ. ಆದರೆ ಇದನ್ನು ಮಾಡುವ ಕ್ರಮ ತಪ್ಪಾಗಿದ್ದರೆ, ಆರೋಗ್ಯಕ್ಕೆ ಸಮಸ್ಯೆಗಳು (Tips On Tea) ಎದುರಾಗಬಹುದು.

Cup of Tea

ಏನು ಹಾಗೆಂದರೆ?

ಒಮ್ಮೆ ಚಹಾ ಸಿದ್ಧಪಡಿಸಿದ ಮೇಲೆ ಅದನ್ನು ಮತ್ತೆ ಮತ್ತೆ ಬಿಸಿ ಮಾಡುವುದು, ಹಾಲು ಹಾಕಿದ ಮೇಲೆ ದೀರ್ಘಕಾಲ ಕುದಿಸುವುದು- ಇಂಥ ಅಭ್ಯಾಸಗಳು ಬಹಳಷ್ಟು ಜನರಿಗೆ ಇರುತ್ತವೆ. ಇಂಥ ಯಾವುದೇ ಅಭ್ಯಾಸಗಳು ಅನಾರೋಗ್ಯಕರ ಪರಿಣಾಮಗಳನ್ನು ಆರೋಗ್ಯದ ಮೇಲೆ ಉಂಟು ಮಾಡಬಹುದು. ಈ ಬಗೆಗಿನ ವಿವರಗಳು ಇಲ್ಲಿವೆ.

ಏಕೆ ಕುದಿಸಬಾರದು?

ಚಹಾದಲ್ಲಿ ಟ್ಯಾನಿನ್‌ ಅಂಶಗಳಿವೆ. ಟ್ಯಾನಿನ್‌ಗಳೆಂದು ಪಾಲಿಫೆನಾಲ್‌ನಂಥ ಜೈವಿಕ ಕಣಗಳು. ಇವು ಹಣ್ಣುಗಳು, ತರಕಾರಿಗಳು, ಬೀಜಗಳು, ವೈನ್‌, ಚಹಾ ಇಂಥವುಗಳು ಕಂಡುಬರುತ್ತವೆ. ಪ್ರೊಟೀನ್‌, ಸೆಲ್ಯುಲೋಸ್‌, ಖನಿಜಗಳ ಜೊತೆಗೆಲ್ಲ ಟ್ಯಾನಿನ್‌ಗಳು ಅಂಟಿಕೊಂಡಿರುತ್ತವೆ. ಚಹಾದಲ್ಲೂ ಈ ಟ್ಯಾನಿನ್‌ಗಳು ಹೇರಳವಾಗಿರುವುದರಿಂದ, ದೀರ್ಘಕಾಲದವರೆಗೆ ಚಹಾ ಕುದಿಸಿದರೆ, ಕಬ್ಬಿಣದಂಶ ಹೀರಿಕೊಳ್ಳುವುದಕ್ಕೆ ದೇಹಕ್ಕೆ ಸಂಕಷ್ಟವನ್ನು ನೀಡುತ್ತವೆ. ಚಹಾವನ್ನು ಅತಿಯಾಗಿ ಕುದಿಸುವುದರಿಂದ ಸತ್ವಗಳು ನಾಶವಾಗಿ, ಹೊಟ್ಟೆಯಲ್ಲಿ ಆಸಿಡಿಟಿಯನ್ನು ಮಾತ್ರವೇ ಆಹ್ವಾನಿಸಿಕೊಂಡಂತಾಗುತ್ತದೆ. ಇದಲ್ಲದೆ, ಚಹಾವನ್ನು ಅತಿಯಾಗಿ ಕುದಿಸುವುದರ ಅಡ್ಡ ಪರಿಣಾಮಗಳು ಇನ್ನೂ ಏನೇನಿವೆ?

ICMR Dietary Guidelines

ಸತ್ವಗಳ ನಾಶ

ಇಲ್ಲೀಗ ಕೇವಲ ಚಹಾ ಡಿಕಾಕ್ಷನ್‌ ಕುದಿಸುತ್ತಿರುವುದರ ಬಗ್ಗೆಯಲ್ಲ ಹೇಳುತ್ತಿರುವುದು. ಡಿಕಾಕ್ಷನ್‌ಗೆ ಹಾಲು ಹಾಕಿ, ಚಹಾ ಸಿದ್ಧವಾದ ಮೇಲೆ ಕುದಿಸುವುದರ ಬಗೆಗಿನ ಮಾತಿದು. ಹಾಲಿನಲ್ಲಿರುವ ಕ್ಯಾಲ್ಶಿಯಂ, ವಿಟಮಿನ್‌ ಸಿ, ವಿಟಮಿನ್‌ ಬಿ12 ಮುಂತಾದ ಪೋಷಕಾಂಶಗಳು ನಾಶವಾಗಿ ಬಿಡುತ್ತವೆ. ಹಾಗಾಗಿ ಚಹಾ ಅತಿಯಾಗಿ ಕುದಿಸುವುದು ಸಲ್ಲದು.

ರುಚಿಗೆಡುತ್ತದೆ

ಚಹಾವನ್ನು ಅತಿಯಾಗಿ ಕುದಿಸುವುದರಿಂದ ರುಚಿಗೆಟ್ಟಂತಾಗುತ್ತದೆ. ಅದರಲ್ಲೂ ಚಹಾ ರುಚಿಯನ್ನು ಸೂಕ್ಷ್ಮವಾಗಿ ಆಸ್ವಾದಿಸುವವರಿಗಂತೂ ಅರೆಘಳಿಗೆ ಹೆಚ್ಚು ಕುದಿಸಿದರೂ ಇಷ್ಟವಾಗದು. ಹೆಚ್ಚು ಕುದಿಸುವುದರಿಂದ ಸಣ್ಣದೊಂದು ಒಗರು, ಕಹಿ ರುಚಿಗಳು ಚಹಾದಲ್ಲಿ ಸೇರಿಕೊಳ್ಳುತ್ತವೆ. ಮಸಾಲೆ ಚಹಾಗಳಾದರೆ ಅದರ ಘಮವನ್ನೂ ಕೆಡಿಸುವಂತೆ ಕಹಿವಾಸನೆ ಚಹಾದಲ್ಲಿ ಸೇರಿಕೊಳ್ಳುತ್ತದೆ.

ealthy internal organs of human digestive system / highlighted blue organs

ಜೀರ್ಣಾಂಗಗಳ ಸಮಸ್ಯೆ

ಚಹಾ ಅತಿಯಾಗಿ ಕುದಿಸುವುದರಿಂದ ಅದರ ಪಿಎಚ್‌ ಹೆಚ್ಚುತ್ತದೆ. ಇದರಿಂದ ಆಸಿಡಿಟಿಯ ತೊಂದರೆ ಅಂಟಿಕೊಳ್ಳಬಹುದು. ಜೊತೆಗೆ, ಹಾಲಿನಲ್ಲಿರುವ ಪ್ರೊಟೀನ್‌ಗಳ ಸ್ವರೂಪ ವ್ಯತ್ಯಾಸವಾಗುತ್ತದೆ. ಇದರಿಂದ ಜೀರ್ಣವಾಗುವುದು ಕಷ್ಟವಾಗಿ, ಅಜೀರ್ಣ, ಹೊಟ್ಟೆಯುಬ್ಬರ, ಹೊಟ್ಟೆನೋವಿಗೆ ಕಾರಣವಾಗಬಹುದು.

ಹಾನಿಕಾರಕ ಅಂಶಗಳು

ಕೆಫೇನ್‌ ಅಂಶವನ್ನು ಅತಿಯಾಗಿ ಕುದಿಸುವುದರ ಅಡ್ಡ ಪರಿಣಾಮಗಳು ಇದ್ದೇಇವೆ. ಜೊತೆಗೆ, ಹೆಚ್ಚಿನ ಉಷ್ಣತೆಯಲ್ಲಿ ಹಾಲಿನಲ್ಲಿರುವ ಲ್ಯಾಕ್ಟೋಸ್‌ ಅಂಶವು ಚಹಾ ಅಂಶಗಳು ಮತ್ತು ಪ್ರೊಟೀನ್‌ಗಳ ಜೊತೆಗೂಡಿ ಇನ್ನಷ್ಟು ತೊಂದರೆ ನೀಡುತ್ತವೆ. ಹಾಗಾಗಿ ಹೆಚ್ಚಿನ ಪ್ರಮಾಣದಲ್ಲಿ ಚಹಾ ಕುಡಿಯುವುದರಿಂದ ಆರೋಗ್ಯ ಹದಗೆಡಬಹುದು.

ಕಾರ್ಸಿನೋಜೆನ್‌ಗಳು

ಅತಿಯಾಗಿ ಕುದಿಸುವುದು ಅಕ್ರಿಲಮೈಡ್‌ನಂಥ ಕಾರ್ಸಿನೋಜೆನ್‌ಗಳನ್ನು ಸೃಷ್ಟಿ ಮಾಡಬಹುದು. ಆದರೆ ಇದು ಅತಿ ಕಡಿಮೆ ಪ್ರಮಾಣದಲ್ಲಿ ಸೃಷ್ಟಿಯಾಗುವುದರಿಂದ, ಈ ಮೂಲಕ ಕ್ಯಾನ್ಸರ್‌ನಂಥ ರೋಗಗಳು ಬರುವಂಥ ಸಾಧ್ಯತೆ ಅಸಾಧ್ಯ. ಆದರೂ ಹೀಗೊಂದು ಸಾಧ್ಯತೆ ಇರುವುದನ್ನು ತಳ್ಳಿ ಹಾಕುವಂತಿಲ್ಲ.

Masala tea or chai

ಎಷ್ಟು ಕುದಿಸಬೇಕು?

ಹಾಗಾದರೆ ಎಷ್ಟು ಕುದಿಸಬೇಕು? ಹಾಲು ಹಾಕುವ ಮುನ್ನ ಮತ್ತು ಹಾಕಿದ ಮೇಲೆ- ಎಲ್ಲವೂ ಸೇರಿ ಅತಿ ಹೆಚ್ಚೆಂದರೆ 4-5 ನಿಮಿಷಗಳವರೆಗೆ ಕುದಿಸಿದರೆ ಸಾಕು. ಆದರೆ ಎಷ್ಟು ಕಡಿಮೆ ಕುದಿಸಿದರೂ ಅಷ್ಟು ಒಳ್ಳೆಯದು. ತಜ್ಞರ ಪ್ರಕಾರ, ಚಹಾವನ್ನು ಕುದಿಸುವುದಕ್ಕಿಂತ ನಿಧಾನ ವಿಧಾನದಲ್ಲಿ ಬ್ರೂ ಮಾಡುವುದು ಒಳ್ಳೆಯ ವಿಧಾನ. ಏನು ಹಾಗೆಂದರೆ? ಹೇಗೆ ಮಾಡುವುದು ಅದನ್ನು?

ಇದನ್ನೂ ಓದಿ: Drinks for Summer: ಬೇಸಿಗೆಯಲ್ಲಿ ತಂಪಾಗಿರಬೇಕೆ? ಈ ಪೇಯಗಳನ್ನು ತಪ್ಪದೇ ಕುಡಿಯಿರಿ

ಟೀ ಬ್ರೂ ಮಾಡುವುದೆಂದರೆ

ಚಹಾ ಮಾಡುವಾಗ ಅದಕ್ಕೆ ಹಾಲು, ಸಕ್ಕರೆ ಹಾಕಿ ಪಾಯಸದಂತೆ ಕುದಿಸುವದಲ್ಲ. ಬದಲಿಗೆ, ಕುದಿಯುವ ನೀರಿಗೆ ಚಹಾ ಪುಡಿಯನ್ನು ಹಾಕಿ. ಉರಿ ಆರಿಸಿ, ಮುಚ್ಚಿಡಿ. ಐದು ನಿಮಿಷದ ನಂತರ ಅದು ಕುಡಿಯಲು ಸಿದ್ಧವಾಗಿರುತ್ತದೆ. ಒಂದೊಮ್ಮೆ ಹಾಲು ಮತ್ತು ಸಕ್ಕರೆ ಬೇಕೆಂದರೆ, ಅದನ್ನು ಪ್ರತ್ಯೇಕವಾಗಿ ಬಿಸಿ ಮಾಡಿ, ಕಡೆಯ ಹಂತದಲ್ಲಿ ಬೆರೆಸಿಕೊಳ್ಳಿ.

Continue Reading
Advertisement
Phalodi Satta Bazar
ದೇಶ7 mins ago

Phalodi Satta Bazar: ಚುನಾವಣೆಯಲ್ಲಿ ಮೋದಿ ಹ್ಯಾಟ್ರಿಕ್ ಖಚಿತ; ಸಟ್ಟಾ ಬಜಾರ್‌ ಸಮೀಕ್ಷಾ ವರದಿ ಇಲ್ಲಿದೆ

Sara Tendulkar
ಕ್ರಿಕೆಟ್14 mins ago

Sara Tendulkar: ಲಂಡನ್​ ಯೂನಿವರ್ಸಿಟಿಯಿಂದ ಪದವಿ ಪಡೆದ ಸಾರಾ ತೆಂಡೂಲ್ಕರ್​; ಮಗಳ ಸಾಧನೆ ಕೊಂಡಾಡಿದ ಸಚಿನ್​

Liquor ban
ಕರ್ನಾಟಕ39 mins ago

Liquor ban: ಜೂ. 1ರಿಂದ ಐದು ದಿನ ಮದ್ಯ ಮಾರಾಟ ನಿಷೇಧ; ಖರೀದಿಗೆ ಮುಗಿಬಿದ್ದ ಎಣ್ಣೆ ಪ್ರಿಯರು!

Narendra Modi
ದೇಶ41 mins ago

Narendra Modi: 2047ರವರೆಗೆ ದೇಶಕ್ಕಾಗಿ ನನ್ನ ಸೇವೆ; ಇದು ದೇವರ ಆದೇಶ ಎಂದ ಮೋದಿ

HD Kumaraswamy slams CM Siddaramaiah about devegowda statement
ರಾಜಕೀಯ47 mins ago

HD Kumaraswamy: ರಾಕೇಶ್‌ನನ್ನು ವಿದೇಶಿ ಪಾರ್ಟಿಗೆ ನೀವೇ ಕಳಿಸಿ ಸಾವಿಗೆ ಕಾರಣರಾದಿರಿ ಎಂದರೆ ಹೇಗೆ? ಸಿದ್ದರಾಮಯ್ಯಗೆ ಎಚ್‌ಡಿಕೆ ಪ್ರಶ್ನೆ

Former DGP Arrested
ಕ್ರೈಂ1 hour ago

Former DGP Arrested: ವಿಚ್ಛೇದಿತ ಪತ್ನಿಯ ದೂರು; ಮಾಜಿ ಡಿಜಿಪಿ ಜೈಲು ಪಾಲು

ಕ್ರೈಂ1 hour ago

Rameshwaram Cafe Blast: ರಾಮೇಶ್ವರಂ ಕೆಫೆ ಬ್ಲಾಸ್ಟ್ ಪ್ರಕರಣದ 5ನೇ ಆರೋಪಿಗೆ ಲಷ್ಕರ್–ಎ–ತಯ್ಬಾ ಜತೆ ಲಿಂಕ್‌!

CSK vs RC
ಕ್ರೀಡೆ1 hour ago

CSK vs RCB: ಮತ್ತೆ ಆರ್​ಸಿಬಿ, ಕೊಹ್ಲಿಯ ಬಗ್ಗೆ ಕಿಡಿಕಾರಿದ ಚೆನ್ನೈ ತಂಡದ ಮಾಜಿ ಆಟಗಾರ

BSNL network problem in Hosanagara The lawyer decided to climb the tower and protest
ಕರ್ನಾಟಕ1 hour ago

Hosanagara News: ಹೊಸನಗರದಲ್ಲಿ ಬಿಎಸ್‌ಎನ್‌ಎಲ್‌ ನೆಟ್‌ವರ್ಕ್‌ ಸಮಸ್ಯೆ; ಟವರ್‌ ಏರಿ ಪ್ರತಿಭಟನೆಗೆ ಮುಂದಾದ ವಕೀಲ!

union minister pralhad joshi spoke in North East Graduate Constituency Electoral Convention at ballari
ಕರ್ನಾಟಕ1 hour ago

MLC Election: ಜಗತ್ತು ತೆವಳುತ್ತಿದ್ದರೆ ಮೋದಿ ಭಾರತ ಓಡುತ್ತಿದೆ; ಸಚಿವ ಪ್ರಲ್ಹಾದ್‌ ಜೋಶಿ ವ್ಯಾಖ್ಯಾನ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

dina bhavishya read your daily horoscope predictions for May 23 2024
ಭವಿಷ್ಯ2 days ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ3 days ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ3 days ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

Love Case Father throws hot water on man who loved his daughter for coming home
ಕೊಡಗು3 days ago

Love Case : ಮನೆಗೆ ಬಂದ ಪ್ರೇಮಿಗೆ ಕೊತ ಕೊತ ಕುದಿಯುವ ನೀರು ಎರಚಿದ ಯುವತಿ ತಂದೆ!

Contaminated Water
ಮೈಸೂರು3 days ago

Contaminated Water : ಡಿ ಸಾಲುಂಡಿಯಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡಿದ್ದ ಯುವಕ ಸಾವು

Karnataka Rain
ಮಳೆ4 days ago

Karnataka Rain : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

Karnataka Rain
ಮಳೆ5 days ago

Karnataka Rain : ಒಂದೇ ಮಳೆಗೆ ಹೊಳೆಯಂತಾದ ಬೆಂಗಳೂರು ರಸ್ತೆಗಳು! ಕಳಸದಲ್ಲೂ ಮುಂದುವರಿದ ಅಬ್ಬರ

Karnataka rain
ಮಳೆ5 days ago

Karnataka Rain : ವಿಜಯನಗರದಲ್ಲಿ ಸಿಡಿಲಿಗೆ ಜಾನುವಾರು ಬಲಿ; ಬೆಂಗಳೂರು ಸೇರಿ ಹಲವೆಡೆ ಭಾರಿ ಮಳೆ

Karnataka Rain
ಮಳೆ5 days ago

Karnataka Rain: ಧಾರಾಕಾರ ಮಳೆಗೆ ಕಾಂಪೌಂಡ್ ಕುಸಿದು 4 ಬೈಕ್‌ಗಳು ಜಖಂ; ಮದುವೆ ಮಂಟಪಕ್ಕೆ ನುಗ್ಗಿದ ನೀರು‌

Prajwal Revanna Case JDS calls CD Shivakumar pen drive gang
ರಾಜಕೀಯ1 week ago

Prajwal Revanna Case: CD ಶಿವಕುಮಾರ್ ಪೆನ್ ಡ್ರೈವ್ ಗ್ಯಾಂಗ್ ಎಂದ ಕುಟುಕಿದ ಜೆಡಿಎಸ್‌!

ಟ್ರೆಂಡಿಂಗ್‌