Lok Sabha Election 2024 : ಪ್ರತಾಪ್‌ಸಿಂಹ, ಕಟೀಲ್‌ ಸಹಿತ 8 ಹಾಲಿ ಸಂಸದರಿಗೆ ಟಿಕೆಟ್‌ ಮಿಸ್‌ - Vistara News

ರಾಜಕೀಯ

Lok Sabha Election 2024 : ಪ್ರತಾಪ್‌ಸಿಂಹ, ಕಟೀಲ್‌ ಸಹಿತ 8 ಹಾಲಿ ಸಂಸದರಿಗೆ ಟಿಕೆಟ್‌ ಮಿಸ್‌

Lok Sabha Election 2024 : ಬಿಜೆಪಿ ಪ್ರಕಟಿಸಿದ 20 ಅಭ್ಯರ್ಥಿಗಳ ಮೊದಲ ಪಟ್ಟಿಯಲ್ಲಿ ಎಂಟು ಮಂದಿ ಹಾಲಿ ಸಂಸದರಿಗೆ ಟಿಕೆಟ್‌ ಮಿಸ್‌ ಅಗಿದೆ.

VISTARANEWS.COM


on

BJP Candidates list missing stars
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ಲೋಕಸಭಾ ಚುನಾವಣೆಗಾಗಿ (Lok Sabha Election 2024) ಬಿಜೆಪಿ ರಾಜ್ಯದ 20 ಸ್ಥಾನಗಳಿಗಾಗಿ (20 Candidates list) ಅಭ್ಯರ್ಥಿಗಳನ್ನು ಘೋಷಿಸಲಾಗಿದೆ. ಇದರಲ್ಲಿ ಒಟ್ಟು ಎಂಟು ಮಂದಿ ಹಾಲಿ ಸಂಸದರಿಗೆ ಟಿಕೆಟ್‌ ಮಿಸ್‌ ಆಗಿದೆ. ಟಿಕೆಟ್‌ ಮಿಸ್‌ ಆಗಿರುವ ಪ್ರಮುಖರಲ್ಲಿ ಬಿಜೆಪಿ ರಾಜ್ಯಾಧ್ಯಕ್ಷರಾಗಿದ್ದ ದಕ್ಷಿಣ ಕನ್ನಡ ಸಂಸದ ನಳಿನ್‌ ಕುಮಾರ್‌ ಕಟೀಲ್‌ (Nalin kumar Kateel), ಮೈಸೂರು-ಕೊಡಗು ಸಂಸದ ಪ್ರತಾಪ್‌ ಸಿಂಹ ಮತ್ತು ಬೆಂಗಳೂರು ಉತ್ತರ ಕ್ಷೇತ್ರದ ಸಂಸದ ಡಿ.ವಿ. ಸದಾನಂದ ಗೌಡ (DV Sadananda Gowda) ಸೇರಿದ್ದಾರೆ.

ಟಿಕೆಟ್‌ ಮಿಸ್‌ ಆಗಿರುವ ಆ ಎಂಟು ಮಂದಿ ಯಾರು?

  1. ಡಿ.ವಿ. ಸದಾನಂದಗೌಡ: ಬೆಂಗಳೂರು ಉತ್ತರ
  2. ನಳಿನ್‌ ಕುಮಾರ್‌ ಕಟೀಲ್‌: ದಕ್ಷಿಣ ಕನ್ನಡ
  • ಪ್ರತಾಪ್‌ ಸಿಂಹ: ಮೈಸೂರು-ಕೊಡಗು
  • ಶಿವಕುಮಾರ್‌ ಉದಾಸಿ: ಹಾವೇರಿ
  • ದೇವೇಂದ್ರಪ್ಪ: ಬಳ್ಳಾರಿ
  • ಜಿ.ಎಸ್.‌ ಬಸವರಾಜು: ತುಮಕೂರು
  • ಜಿ.ಎಂ. ಸಿದ್ದೇಶ್ವರ್‌: ದಾವಣಗೆರೆ
  • ಶ್ರೀನಿವಾಸ್‌ ಪ್ರಸಾದ್: ಚಾಮರಾಜನಗರ

ಇವರಲ್ಲಿ ಚಾಮರಾಜನಗರದ ಸಂಸದ ಶ್ರೀನಿವಾಸ್‌ ಪ್ರಸಾದ್‌, ತುಮಕೂರಿನ ಜಿ.ಎಸ್.‌ ಬಸವರಾಜು, ಹಾವೇರಿಯ ಶಿವಕುಮಾರ್‌ ಉದಾಸಿ ಮೊದಲೇ ಚುನಾವಣಾ ನಿವೃತ್ತಿಯನ್ನು ಘೋಷಣೆ ಮಾಡಿದ್ದರು.

ಬೆಂಗಳೂರು ಉತ್ತರದಲ್ಲಿ ಡಿ.ವಿ. ಸದಾನಂದ ಅವರ ಬದಲಿಗೆ ಶೋಭಾ ಕರಂದ್ಲಾಜೆ ಅವರಿಗೆ ಟಿಕೆಟ್‌ ನೀಡಲಾಗಿದೆ.
ದಕ್ಷಿಣ ಕನ್ನಡದಲ್ಲಿ ನಳಿನ್‌ ಕುಮಾರ್‌ ಕಟೀಲ್‌ ಅವರ ಬದಲು ಬ್ರಿಗೇಡಿಯರ್‌ ಬ್ರಿಜೇಶ್‌ ಚೌಟ ಆಯ್ಕೆಯಾಗಿದ್ದಾರೆ.
ಮೈಸೂರು-ಕೊಡಗಿನಲ್ಲಿ ಪ್ರತಾಪ್‌ಸಿಂಹ ಅವರ ಬದಲು ಯದುವೀರ್‌ ಒಡೆಯರ್‌ ಅವರಿಗೆ ಟಿಕೆಟ್‌ ನೀಡಲಾಗಿದೆ.
ಹಾವೇರಿಯಲ್ಲಿ ಶಿವಕುಮಾರ್‌ ಉದಾಸಿ ಅವರ ಬದಲಿಗೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಟಿಕೆಟ್‌ ಪಡೆದಿದ್ದಾರೆ.
ಬಳ್ಳಾರಿ ಕ್ಷೇತ್ರದಲ್ಲಿ ಹಾಲಿ ಸಂಸದ ದೇವೇಂದ್ರಪ್ಪ ಅವರ ಬದಲು ಶ್ರೀರಾಮುಲು ಟಿಕೆಟ್‌ ಪಡೆದಿದ್ದಾರೆ.
ತುಮಕೂರಿನಲ್ಲಿ ಹಾಲಿ ಸಂಸದರಾದ ಜಿ.ಎಸ್.‌ ಬಸವರಾಜ ಅವರ ಬದಲಿಗೆ ವಿ ಸೋಮಣ್ಣ ಅವರಿಗೆ ಟಿಕೆಟ್‌ ಸಿಕ್ಕಿದೆ.
ದಾವಣಗೆರೆ ಕ್ಷೇತ್ರದಲ್ಲಿ ಜಿ.ಎಂ. ಸಿದ್ದೇಶ್ವರ್‌ ಅವರಿಗೆ ಟಿಕೆಟ್‌ ಮಿಸ್‌ ಆಗಿದ್ದರೂ ಅವರ ಪತ್ನಿ ಗಾಯತ್ರಿ ಸಿದ್ದೇಶ್ವರ್‌ ಅವರಿಗೆ ಟಿಕೆಟ್‌ ಸಿಕ್ಕಿದೆ.
ಚಾಮರಾಜನಗರದಲ್ಲಿ ಶ್ರೀನಿವಾಸ ಪ್ರಸಾದ್‌ ಅವರ ಬದಲಿಗೆ ಮಾಜಿ ಶಾಸಕ ಬಾಲರಾಜು ಟಿಕೆಟ್‌ ಪಡೆದಿದ್ದಾರೆ.

BJP Candidates list1

ಇವರೇ ಬಿಜೆಪಿ ಘೋಷಣೆ ಮಾಡಿದ 20 ಅಭ್ಯರ್ಥಿಗಳು

  • ಚಿಕ್ಕೋಡಿ: ಅಣ್ಣಾ ಸಾಹೇಬ್‌ ಜೊಲ್ಲೆ
  • ಬಾಗಲಕೋಟೆ: ಪಿ.ಸಿ. ಗದ್ದಿಗೌಡರ್‌
  • ವಿಜಯಪುರ: ರಮೇಶ್‌ ಜಿಗಜಿಣಗಿ
  • ಕಲಬುರಗಿ: ಡಾ. ಉಮೇಶ್‌ ಜಾಧವ್‌
  • ಬೀದರ್‌: ಭಗವಂತ್‌ ಖೂಬಾ
  • ಕೊಪ್ಪಳ: ಡಾ. ಬಸವರಾಜ ಕ್ಯಾವತೂರು
  • ಬಳ್ಳಾರಿ: ಬಿ. ಶ್ರೀರಾಮುಲು
  • ಹಾವೇರಿ: ಬಸವರಾಜ ಬೊಮ್ಮಾಯಿ
  • ಧಾರವಾಡ: ಪ್ರಹ್ಲಾದ್‌ ಜೋಶಿ
  • ದಾವಣಗೆರೆ: ಗಾಯತ್ರಿ ಸಿದ್ದೇಶ್ವರ್‌
  • ಶಿವಮೊಗ್ಗ: ಬಿವೈ ರಾಘವೇಂದ್ರ
  • ಉಡುಪಿ ಚಿಕ್ಕಮಗಳೂರು: ಕೋಟ ಶ್ರೀನಿವಾಸ ಪೂಜಾರಿ
  • ದಕ್ಷಿಣ ಕನ್ನಡ: ಕ್ಯಾಪ್ಟನ್‌ ಬ್ರಿಜೇಶ್‌ ಚೌಟ
  • ತುಮಕೂರು: ವಿ ಸೋಮಣ್ಣ
  • ಮೈಸೂರು: ಯದುವೀರ್‌ ಕೃಷ್ಣ ದತ್ತ ಒಡೆಯರ್‌
  • ಚಾಮರಾಜನಗರ: ಎಸ್‌. ಬಾಲರಾಜ್‌
  • ಬೆಂಗಳೂರು ಗ್ರಾಮಾಂತರ: ಡಾ. ಸಿ.ಎನ್‌. ಮಂಜುನಾಥ್‌
  • ಬೆಂಗಳೂರು ಉತ್ತರ: ಶೋಭಾ ಕರಂದ್ಲಾಜೆ
  • ಬೆಂಗಳೂರು ಸೆಂಟ್ರಲ್‌: ಪಿ.ಸಿ. ಮೋಹನ್‌
  • ಬೆಂಗಳೂರು ದಕ್ಷಿಣ: ತೇಜಸ್ವಿ ಸೂರ್ಯ

ಅಭ್ಯರ್ಥಿ ಘೋಷಣೆಯಾಗದ ಕ್ಷೇತ್ರಗಳು:

  1. ಉತ್ತರ ಕನ್ನಡ
  2. ಬೆಳಗಾವಿ
  3. ಚಿಕ್ಕಬಳ್ಳಾಪುರ
  4. ಚಿತ್ರದುರ್ಗ
  5. ರಾಯಚೂರು

ಇದುವರೆಗೂ ಚುನಾವಣೆಯಲ್ಲಿ ಸ್ಪರ್ಧಿಸದ ಅಭ್ಯರ್ಥಿಗಳು

ಕ್ಯಾಪ್ಟನ್‌ ಬೃಜೇಶ್‌ ಚೌಟ: ದಕ್ಷಿಣ ಕನ್ನಡ

ಡಾ. ಸಿಎನ್‌. ಮಂಜುನಾಥ್‌: ಬೆಂಗಳೂರು ಗ್ರಾಮಾಂತರ

ಬಸವರಾಜ ಕ್ಯಾವಟೂರ್‌: ಕೊಪ್ಪಳ

ಗಾಯತ್ರಿ ಸಿದ್ದೇಶ್ವರ್‌: ದಾವಣಗೆರೆ

ಯದುವೀರ್‌ ಒಡೆಯರ್‌: ಮೈಸೂರು

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕರ್ನಾಟಕ

MLC Election: ಜಗತ್ತು ತೆವಳುತ್ತಿದ್ದರೆ ಮೋದಿ ಭಾರತ ಓಡುತ್ತಿದೆ; ಸಚಿವ ಪ್ರಲ್ಹಾದ್‌ ಜೋಶಿ ವ್ಯಾಖ್ಯಾನ

MLC Election: ಕಾಂಗ್ರೆಸ್ ಆಡಳಿತದ 60 ವರ್ಷಗಳಲ್ಲಿ ಭ್ರಷ್ಟ ರಾಜಕಾರಣದಿಂದಾಗಿ ಭಾರತ ಜಗತ್ತಿನ 5 ಅತ್ಯಂತ ದುರ್ಬಲ ರಾಷ್ಟ್ರಗಳಲ್ಲಿ ಒಂದಾಗಿತ್ತು. ಆದರೆ, 2014ರಲ್ಲಿ ಮೋದಿ ಪ್ರಧಾನಿಯಾದ ಬಳಿಕ ಈಗ 2024ರ ಹೊತ್ತಿಗೆ ಭಾರತವನ್ನು ಜಗತ್ತಿನ 5ನೇ ಅತ್ಯಂತ ಆರ್ಥಿಕ ಪ್ರಬಲ ರಾಷ್ಟ್ರವನ್ನಾಗಿಸಿದ್ದಾರೆ ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಹೇಳಿದ್ದಾರೆ.

VISTARANEWS.COM


on

union minister pralhad joshi spoke in North East Graduate Constituency Electoral Convention at ballari
Koo

ಹುಬ್ಬಳ್ಳಿ: ಇಡೀ ಜಗತ್ತು ನಿಧಾನಗತಿಯಲ್ಲಿ ಸಾಗುತ್ತಿದ್ದು, ಪ್ರಧಾನಿ ನರೇಂದ್ರ ಮೋದಿ ಆಡಳಿತದಲ್ಲಿ ಭಾರತವೊಂದೇ ವೇಗವಾಗಿ ದಾಪುಗಾಲು ಹಾಕುತ್ತಿದೆ ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ (MLC Election) ಹೇಳಿದರು.

ಬಳ್ಳಾರಿಯಲ್ಲಿ ಶುಕ್ರವಾರ ವಿಧಾನ ಪರಿಷತ್ ಈಶಾನ್ಯ ಪದವೀಧರರ ಕ್ಷೇತ್ರದ ಅಭ್ಯರ್ಥಿ ಪರ ಮತದಾರರ ಸಮಾವೇಶದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ದೇಶದಲ್ಲಿ ವಿಮಾನ ನಿಲ್ದಾಣಗಳನ್ನು ಹೆಚ್ಚಿಸಲಾಗಿದೆ. ಅಂತೆಯೇ ಭಾರತೀಯರಿಗೆ ಹೆಚ್ಚಿನ ಸೌಲಭ್ಯಗಳನ್ನೂ ಕಲ್ಪಿಸಲಾಗಿದೆ. ಭಾರತ 1000 ವಿಮಾನಗಳ ಆರ್ಡರ್ ಕೊಟ್ಟಿದೆ ಎಂದು ಹೇಳಿದರು.

ನಾಡಿನ ಏಳಿಗೆಗೆ ಬಿಜೆಪಿ ನಾಯಕತ್ವ ಅಗತ್ಯ

ಪ್ರಧಾನಿ ನರೇಂದ್ರ ಮೋದಿ ಅವರ ನಾಯಕತ್ವದಲ್ಲಿ ಭಾರತ ಇಂದು ಅತ್ಯಂತ ಪ್ರಬಲ ರಾಷ್ಟ್ರವಾಗಿ ಹೊರ ಹೊಮ್ಮುತ್ತಿದೆ. ನಾಡಿನ ಏಳಿಗೆಗೆ ಬಿಜೆಪಿ ನಾಯಕತ್ವ ಅಗತ್ಯವಾಗಿದೆ ಎಂದು ಪ್ರತಿಪಾದಿಸಿದರು.

ಇದನ್ನೂ ಓದಿ: Bengaluru News: ಬೆಂಗಳೂರಿನಲ್ಲಿ ಮೇ 26ರಂದು ʼಭಾರತದ ಧೀರ ಚೇತನಗಳುʼ ಕೃತಿ ಲೋಕಾರ್ಪಣೆ

ಕಾಂಗ್ರೆಸ್ ಆಡಳಿತದ 60 ವರ್ಷಗಳಲ್ಲಿ ಭ್ರಷ್ಟ ರಾಜಕಾರಣದಿಂದಾಗಿ ಭಾರತ ಜಗತ್ತಿನ 5 ಅತ್ಯಂತ ದುರ್ಬಲ ರಾಷ್ಟ್ರಗಳಲ್ಲಿ ಒಂದಾಗಿತ್ತು. ಆದರೆ, 2014ರಲ್ಲಿ ಮೋದಿ ಪ್ರಧಾನಿಯಾದ ಬಳಿಕ ಈಗ 2024ರ ಹೊತ್ತಿಗೆ ಭಾರತವನ್ನು ಜಗತ್ತಿನ 5ನೇ ಅತ್ಯಂತ ಆರ್ಥಿಕ ಪ್ರಬಲ ರಾಷ್ಟ್ರವನ್ನಾಗಿಸಿದ್ದಾರೆ ಎಂದು ಜೋಶಿ ಹೇಳಿದರು.

ಕಳೆದು ಹೋಗುತ್ತಿದೆ ಕಾಂಗ್ರೆಸ್

ದೇಶದಾದ್ಯಂತ ಎಲ್ಲ ರಾಜ್ಯಗಳಲ್ಲಿ ಕಾಂಗ್ರೆಸ್ ಕಳೆದು ಹೋಗುತ್ತಿದೆ. ತನ್ನ ಸ್ಥಾನಗಳನ್ನೆಲ್ಲ ಕಳೆದುಕೊಳ್ಳುತ್ತಿದೆ. ಅಧಿಕೃತ ವಿರೋಧ ಪಕ್ಷವಾಗುವತ್ತ ವಾಲುತ್ತಿದೆ ಎಂದ ಅವರು, ಕಾಂಗ್ರೆಸ್ ಆಡಳಿತದ ಎಲ್ಲ ರಾಜ್ಯಗಳಲ್ಲಿ ಅಪರಾಧಗಳ ಸಂಖ್ಯೆ ಮಿತಿ ಮೀರಿದೆ. ಕರ್ನಾಟಕದಲ್ಲೇ ಕಳೆದ ಕೆಲ ತಿಂಗಳುಗಳಲ್ಲಿ 400ಕ್ಕೂ ಹೆಚ್ಚು ಪ್ರಕರಣಗಳು ಘಟಿಸಿವೆ ಎಂದು ಸಚಿವ ಜೋಶಿ ಕಳವಳ ವ್ಯಕ್ತಪಡಿಸಿದರು.

ಕಾಂಗ್ರೆಸ್ ಪಕ್ಷವನ್ನು ಜನರೇ ಧಿಕ್ಕರಿಸುತ್ತಿದ್ದಾರೆ. ವಿಧಾನಪರಿಷತ್ ಚುನಾವಣೆಯಲ್ಲಿ ಪದವೀಧರರು ಎಚ್ಚೆತ್ತುಕೊಂಡು ಮತ ಚಲಾಯಿಸಬೇಕು. ಸುಭದ್ರ ದೇಶಕ್ಕಾಗಿ ತಮ್ಮ ಆಯ್ಕೆ ಬಿಜೆಪಿ ಆಗಿರಬೇಕು ಎಂದು ಅವರು ಕರೆ ನೀಡಿದರು.

ಇದನ್ನೂ ಓದಿ: Toothpaste Hacks: ಟೂತ್‌ಪೇಸ್ಟ್‌ನಿಂದ ಯಾವೆಲ್ಲ ವಸ್ತುಗಳನ್ನು ಹೊಳೆಯುವಂತೆ ಮಾಡಬಹುದು ನೋಡಿ!

ಸಮಾವೇಶದಲ್ಲಿ ಮಾಜಿ ಸಚಿವ ಬಿ.ಶ್ರೀರಾಮುಲು, ಜಿ.ಸೋಮಶೇಖರರೆಡ್ಡಿ, ಮುಖಂಡರಾದ ಮಹಿಪಾಲ್, ರಾಮಲಿಂಗಪ್ಪ, ಗುರುಲಿಂಗನಗೌಡ ಹಾಗೂ ಬಿಜೆಪಿ ಮತ್ತು ಜೆಡಿಎಸ್ ಪಕ್ಷದ ಪ್ರಮುಖರು, ಮುಖಂಡರು, ಕಾರ್ಯಕರ್ತರು ಉಪಸ್ಥಿತರಿದ್ದರು.

Continue Reading

ಕರ್ನಾಟಕ

D‌rinking Water: ಅಧಿಕಾರಿಗಳೇ ಹುಷಾರ್! ನೀರಿನಿಂದ ಆರೋಗ್ಯ ಕೈಕೊಟ್ರೆ ಶಿಸ್ತು ಕ್ರಮ: ಡಿಕೆಶಿ ವಾರ್ನಿಂಗ್

D‌rinking Water: ರಾಜ್ಯದ ಕೆಲವು ಕಡೆ ಕಲುಷಿತ ನೀರು ಕುಡಿಯುವ ನೀರಿನ ಜತೆ ಮಿಶ್ರವಾಗಿ ಜನರು ಅಸ್ವಸ್ಥಗೊಂಡು ವಿವಿಧ ರೋಗಗಳಿಗೆ ತುತ್ತಾಗುತ್ತಿದ್ದಾರೆ ಎಂಬ ವರದಿಗಳು ಬರುತ್ತಿವೆ. ಈ ವಿಚಾರ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾಧಿಕಾರಿಗಳ ವಿಡಿಯೊ ಸಂವಾದ ಸಭೆಯಲ್ಲಿ ಚರ್ಚೆಯಾಗಿದೆ. ಹೀಗಾಗಿ, ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಶುದ್ಧ ಕುಡಿಯುವ ನೀರಿನ ಘಟಕಗಳಿಗೆ ಅಧಿಕಾರಿಗಳು ಖುದ್ದಾಗಿ ಭೇಟಿ ನೀಡಿ ನೀರಿನ ಘಟಕಗಳ ಸಮರ್ಪಕ ಕಾರ್ಯನಿರ್ವಹಣೆ, ಉತ್ತಮ ಗುಣಮಟ್ಟದ ನೀರಿನ ಬಗ್ಗೆ ಖಾತರಿ ಮಾಡಿಕೊಳ್ಳಬೇಕು. ಆ ಘಟಕಗಳಿಂದ ಸರಬರಾಜಾಗುವ ನೀರನ್ನು ಪ್ರಯೋಗಾಲಯದಲ್ಲಿ ಪರೀಕ್ಷೆ ಮಾಡಿ ಕುಡಿಯಲು ಯೋಗ್ಯವೇ ಎಂದು ಖಚಿತಪಡಿಸಿಕೊಳ್ಳಬೇಕು ಎಂದು ಡಿ.ಕೆ. ಶಿವಕುಮಾರ್‌ ಸೂಚಿಸಿದ್ದಾರೆ.

VISTARANEWS.COM


on

Drinking Water in Bangalore DK Shivakumar warns of disciplinary action against officials if Water causes health problem
Koo

ಬೆಂಗಳೂರು: ಬೆಂಗಳೂರಿನ ಜನರಿಗೆ ಉತ್ತಮ ಗುಣಮಟ್ಟದ ಕುಡಿಯುವ ನೀರನ್ನು (D‌rinking Water) ಸರಬರಾಜು ಮಾಡಬೇಕು. ಒಂದು ವೇಳೆ ಕುಡಿಯುವ ನೀರಿನಿಂದ ಯಾವುದೇ ಸಮಸ್ಯೆ ಉಂಟಾದರೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಶಿಸ್ತು ಕ್ರಮ ಜರುಗಿಸಲಾಗುವುದು ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ (DCM DK Shivakumar) ಎಚ್ಚರಿಕೆ ನೀಡಿದ್ದಾರೆ.

ಈ ವಿಚಾರವಾಗಿ ಬಿಬಿಎಂಪಿ ಆಯುಕ್ತರು, ಬೆಂಗಳೂರಿನ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ, ಬಿಡಬ್ಲ್ಯೂಎಸ್‌ಎಸ್‌ಬಿ ಮುಖ್ಯಸ್ಥರಿಗೆ ಪತ್ರ ಬರೆದಿರುವ ಶಿವಕುಮಾರ್, ಬೆಂಗಳೂರಿನ ನಾಗರಿಕರಿಗೆ ಕುಡಿಯುವ ನೀರಿನಿಂದ ಯಾವುದೇ ಸಮಸ್ಯೆ ಎದುರಾಗಬಾರದು ಎಂದು ಸ್ಪಷ್ಟ ಸೂಚನೆ ನೀಡಿದ್ದಾರೆ.

ರಾಜ್ಯದ ಕೆಲವು ಕಡೆ ಕಲುಷಿತ ನೀರು ಕುಡಿಯುವ ನೀರಿನ ಜತೆ ಮಿಶ್ರವಾಗಿ ಜನರು ಅಸ್ವಸ್ಥಗೊಂಡು ವಿವಿಧ ರೋಗಗಳಿಗೆ ತುತ್ತಾಗುತ್ತಿದ್ದಾರೆ ಎಂಬ ವರದಿಗಳು ಬರುತ್ತಿವೆ. ಈ ವಿಚಾರ ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲಾಧಿಕಾರಿಗಳ ವಿಡಿಯೊ ಸಂವಾದ ಸಭೆಯಲ್ಲಿ ಚರ್ಚೆಯಾಗಿದೆ. ಹೀಗಾಗಿ, ಬೆಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಶುದ್ಧ ಕುಡಿಯುವ ನೀರಿನ ಘಟಕಗಳಿಗೆ ಅಧಿಕಾರಿಗಳು ಖುದ್ದಾಗಿ ಭೇಟಿ ನೀಡಿ ನೀರಿನ ಘಟಕಗಳ ಸಮರ್ಪಕ ಕಾರ್ಯನಿರ್ವಹಣೆ, ಉತ್ತಮ ಗುಣಮಟ್ಟದ ನೀರಿನ ಬಗ್ಗೆ ಖಾತರಿ ಮಾಡಿಕೊಳ್ಳಬೇಕು. ಆ ಘಟಕಗಳಿಂದ ಸರಬರಾಜಾಗುವ ನೀರನ್ನು ಪ್ರಯೋಗಾಲಯದಲ್ಲಿ ಪರೀಕ್ಷೆ ಮಾಡಿ ಕುಡಿಯಲು ಯೋಗ್ಯವೇ ಎಂದು ಖಚಿತಪಡಿಸಿಕೊಳ್ಳಬೇಕು ಎಂದು ಡಿ.ಕೆ. ಶಿವಕುಮಾರ್‌ ಸೂಚಿಸಿದ್ದಾರೆ.

ಬೆಂಗಳೂರಿನ ಜನರಿಗೆ ಕುಡಿಯುವ ನೀರಿನಿಂದ ಯಾವುದೇ ಆರೋಗ್ಯ ಸಮಸ್ಯೆ ಉಂಟಾಗದಂತೆ ಸೂಕ್ತ ಕ್ರಮ ಕೈಗೊಳ್ಳಬೇಕು. ಜನರಿಗೆ ತೊಂದರೆಯಾದರೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಶಿಸ್ತುಕ್ರಮ ಜರುಗಿಸಲಾಗುವುದು ಎಂದು ಈ ಪತ್ರದಲ್ಲಿ ಡಿ.ಕೆ. ಶಿವಕುಮಾರ್ ಎಚ್ಚರಿಕೆ ನೀಡಿದ್ದಾರೆ.

ಇದನ್ನೂ ಓದಿ: Excise revenue: ಇದು ಎಣ್ಣೆ ಮಹಿಮೆ! ಟಾರ್ಗೆಟ್‌ ಮೀರಿ ಹೋದ ಅಬಕಾರಿ ಇಲಾಖೆ; 15 ಪರ್ಸೆಂಟ್‌ ಹೆಚ್ಚು ವರಮಾನ

ಬೆಂಗಳೂರು ಸೇರಿದಂತೆ ಎಲ್ಲೆಡೆ ಕುಡಿಯುವ ನೀರಿನ ಪರೀಕ್ಷೆಗೆ ಸೂಚನೆ

ಕುಡಿಯುವ ನೀರಿಗೆ ಕಲುಷಿತ ನೀರು ಬೆರೆಯುತ್ತಿರುವ ಬಗ್ಗೆ ಮಾಹಿತಿ ಬಂದ ಹಿನ್ನೆಲೆಯಲ್ಲಿ ಬೆಂಗಳೂರು ಸೇರಿದಂತೆ ಎಲ್ಲೆಡೆ ಕುಡಿಯುವ ನೀರನ್ನು ಪರೀಕ್ಷೆ ಒಳಪಡಿಸುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಶುಕ್ರವಾರವಷ್ಟೇ ತಿಳಿಸಿದ್ದರು. ಮುಖ್ಯಮಂತ್ರಿಗಳು ನಿನ್ನೆ ನಗರ ಪ್ರದಕ್ಷಿಣೆ ಮಾಡಿ ವಿವಿಧ ಕ್ರಮಗಳ ಬಗ್ಗೆ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡಿದ್ದಾರೆ. ಶೀಘ್ರದಲ್ಲೇ ಕಾರ್ಯಪಡೆ ರಚನೆಗೆ ಸೂಚನೆ ನೀಡಿದ್ದು, ಎಲ್ಲೆಲ್ಲಿ ಯಾವ ಕಾರ್ಯಗಳು ಸಾಗಬೇಕು ಎಂದು ತಿಳಿಸಿದ್ದಾರೆ. ರಾಜ್ಯದಲ್ಲಿ ಕೆಲವು ಕಡೆ ಕುಡಿಯುವ ನೀರು ಕಲುಷಿತವಾಗಿ ಕಾಲರಾ ಸಂಭವಿಸಿರುವ ಪ್ರಕರಣಗಳು ಗಮನಕ್ಕೆ ಬಂದಿವೆ. ಹೀಗಾಗಿ ಬೆಂಗಳೂರಿನ ಎಲ್ಲೆಡೆ ಕುಡಿಯುವ ನೀರಿನ ಪರಿಶೀಲನೆ ನಡೆಸಲು ವ್ಯವಸ್ಥೆ ಮಾಡಬೇಕಾಗಿದೆ. ಈ ಬಗ್ಗೆ ಮುಖ್ಯಮಂತ್ರಿಗಳ ಜತೆ ಚರ್ಚೆ ಮಾಡಲಾಗಿದೆ ಎಂದು ತಿಳಿಸಿದ್ದರು.

Continue Reading

ರಾಜಕೀಯ

CM Siddaramaiah: ತಾಲೂಕು, ಜಿಲ್ಲಾ ಪಂಚಾಯಿತಿ, ಬಿಬಿಎಂಪಿ ಚುನಾವಣೆಗೆ ನಾವು ಸಿದ್ಧ: ಮುಖ್ಯಮಂತ್ರಿ ಸಿದ್ದರಾಮಯ್ಯ

CM Siddaramaiah: ತಾಲೂಕು, ಜಿಲ್ಲಾ ಪಂಚಾಯತಿ ಹಾಗೂ ಬಿಬಿಎಂಪಿ ಚುನಾವಣೆಗೆ ನಾವು ಸಿದ್ಧರಿದ್ದೇವೆ. ಆದರೆ, ಲೋಕಸಭಾ ಚುನಾವಣೆ ಫಲಿತಾಂಶ ಬರಬೇಕಿದೆ ಎಂದ ಸಿಎಂ ಸಿದ್ದರಾಮಯ್ಯ, ಕ್ಷೇತ್ರ ಪುನರ್ವಿಗಂಡನೆಗೆ ಜನವರಿವರೆಗೆ ಗಡುವು ಇದ್ದುದರ ಬಗ್ಗೆ ಮಾತನಾಡಿ ಈ ಬಗ್ಗೆ ಅಡ್ವೋಕೇಟ್ ಜನರಲ್ ಜೊತೆ ಚರ್ಚೆ ಮಾಡಿ ಅವರು ಕಾನೂನು ಪ್ರಕಾರ ಏನು ಮಾಡಬೇಕೆಂದು ಹೇಳುತ್ತಾರೋ ಹಾಗೆ ಮಾಡುತ್ತೇವೆ. ಪುನರ್ ವಿಂಗಡಣೆಯಾದ ಮೇಲೆ ಮೀಸಲಾತಿ ಮಾಡಲೇಬೇಕು ಎಂದು ಹೇಳಿದ್ದಾರೆ.

VISTARANEWS.COM


on

We are ready for taluk and zilla panchayat and BBMP elections Says CM Siddaramaiah
Koo

ಮೈಸೂರು: ಲೋಕಸಭಾ ಚುನಾವಣೆ (Lok Sabha Election 2024) ಫಲಿತಾಂಶದ ನಂತರ ತಾಲೂಕು, ಜಿಲ್ಲಾ ಪಂಚಾಯಿತಿಗಳ ಚುನಾವಣೆ (Taluk and Zilla panchayat Election) ಹಾಗೂ ಬಿಬಿಎಂಪಿ ಚುನಾವಣೆಯನ್ನು (BBMP Election) ನಡೆಸಲಾಗುವುದು. ಸರ್ಕಾರ ಚುನಾವಣೆ ನಡೆಸಲು ಸಿದ್ಧವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ತಿಳಿಸಿದರು.

ಶುಕ್ರವಾರ ಮೈಸೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ ಸಿದ್ದರಾಮಯ್ಯ, ಸ್ಥಳೀಯ ಸಂಸ್ಥೆಗಳ ಚುನಾವಣೆಗೆ ಸಂಬಂಧಿಸಿದಂತೆ ಚುನಾವಣಾ ಆಯೋಗವು ಉಚ್ಚ ನ್ಯಾಯಾಲಯಕ್ಕೆ ಹೋಗಲಿರುವ ಬಗ್ಗೆ ಕೇಳಲಾದ ಪ್ರಶ್ನೆಗೆ ಹೀಗೆ ಉತ್ತರಿಸಿದರು.

ಕ್ಷೇತ್ರ ಪುನರ್ವಿಂಗಡನೆಗೆ ಜನವರಿವರೆಗೆ ಗಡುವು ಇದ್ದುದರ ಬಗ್ಗೆ ಮಾತನಾಡಿ ಈ ಬಗ್ಗೆ ಅಡ್ವೋಕೇಟ್ ಜನರಲ್ ಜತೆ ಚರ್ಚೆ ಮಾಡಿ ಅವರು ಕಾನೂನು ಪ್ರಕಾರ ಏನು ಮಾಡಬೇಕೆಂದು ಹೇಳುತ್ತಾರೋ ಹಾಗೆ ಮಾಡುತ್ತೇವೆ. ಪುನರ್ ವಿಂಗಡಣೆಯಾದ ಮೇಲೆ ಮೀಸಲಾತಿ ಮಾಡಲೇಬೇಕು ಎಂದು ಹೇಳಿದರು.

ಹೈಕಮಾಂಡ್ ನಿರ್ಧಾರದ ಬಗ್ಗೆ ತಿಳಿದಿಲ್ಲ

ಈ ಬಾರಿ ಡಾ. ಯತೀಂದ್ರ ಅವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿಸುವ ಬಗ್ಗೆ ಕಾಂಗ್ರೆಸ್‌ನಲ್ಲಿ ಚಟುವಟಿಕೆ ನಡೆಯುತ್ತಿರುವುದರ ಬಗ್ಗೆ ಮಾಧ್ಯಮದವರು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಸಿಎಂ ಸಿದ್ದರಾಮಯ್ಯ, ಹೈಕಮಾಂಡ್‌ನವರು ಯತೀಂದ್ರ ಅವರನ್ನು ಎಂ.ಎಲ್.ಸಿ ಮಾಡುವುದಾಗಿ ಹೇಳಿದ್ದರು. ಏನು ಮಾಡುತ್ತಾರೆ ಎಂದು ನನಗೆ ಗೊತ್ತಿಲ್ಲ. ಹೋದ ನಾನು ಬಾರಿ ವರುಣಾದಲ್ಲಿಯೇ ನಿಲ್ಲಬೇಕು ಎಂದು ತೀರ್ಮಾನವಾದಾಗ ಕ್ಷೇತ್ರ ಬಿಟ್ಟುಕೊಡಲು ಸೂಚಿಸಿದ್ದರು. ಈಗ ಏನು ಮಾಡುತ್ತಾರೆ ಎಂದು ತಿಳಿದಿಲ್ಲ ಎಂದು ಹೇಳಿದರು.

ಪ್ರಕರಣ ದುರ್ಬಲಗೊಳಿಸಲು ಹೇಳಿಕೆ

ಪ್ರಜ್ವಲ್ ರೇವಣ್ಣ ಅವರ ಪ್ರಕರಣದಲ್ಲಿ ಡಿ.ಕೆ.ಶಿವಕುಮಾರ್ ಅವರ ಆಡಿಯೊ ಇರುವುದರಿಂದ ಅವರನ್ನೇ ವಿಚಾರಣೆ ಮಾಡಬೇಕೆಂದು ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಆಗ್ರಹ ಮಾಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ ಸಿದ್ದರಾಮಯ್ಯ, ಎಚ್‌ಡಿಕೆ ಅಣ್ಣನ ಮಗ ಅತ್ಯಾಚಾರ ಪ್ರಕರಣದಲ್ಲಿ ಆರೋಪಿ. ಅತ್ಯಾಚಾರದ ವಿಡಿಯೊ ಹರಿದಾಡಿತು ಎನ್ನುವುದಕ್ಕಿಂತ, ಅತ್ಯಾಚಾರ ಘೋರ ಅಪರಾಧ. ಅತ್ಯಾಚಾರದ ಸಂಗತಿಯನ್ನು ದುರ್ಬಲಗೊಳಿಸಲು ಡಿ.ಕೆ. ಶಿವಕುಮಾರ್ ಹಾಗೂ ಮತ್ತೊಬ್ಬರ ಮೇಲೆ ಹೇಳುತ್ತಿದ್ದಾರೆ. ಅವರು ಈ ನೆಲದ ಕಾನೂನಿಗೆ ಗೌರವ ಕೊಡಬೇಕು. ಅಣ್ಣನ ಮಗ ಅಪರಾಧಿಯಲ್ಲ, ಆರೋಪಿ ಅಷ್ಟೇ ಎಂದಿದ್ದಾರೆ. ನ್ಯಾಯಾಲಯದಲ್ಲಿ ವಿಚಾರಣೆಗೆ ಒಳಪಟ್ಟಂತೆ ನಾನೂ ಕೂಡ ಆರೋಪಿ ಎಂದೇ ಹೇಳಿದ್ದೇನೆ ಎಂದರು.

ನಂಬಿರುವುದು ನಿಮ್ಮ ತಪ್ಪು

ಪ್ರಜ್ವಲ್ ರೇವಣ್ಣ ಅವರ ಪಾಸ್‌ಪೋರ್ಟ್ ರದ್ದತಿಗೆ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದು, ಈವರೆಗೆ ಅವರಿಂದ ಪ್ರತಿಕ್ರಿಯೆ ಬಂದಿಲ್ಲ. ಇನ್ನು ಎಲ್ಲರಿಗೂ ಪ್ರಧಾನ ಮಂತ್ರಿಗಳ ಕಚೇರಿಯಿಂದ ಕೂಡಲೇ ಉತ್ತರ ದೊರಕುತ್ತದೆ ಎಂದು ನೀವೆಲ್ಲ ನಂಬಿರುವುದೇ ನಿಮ್ಮ ತಪ್ಪು ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ನಾವು ಬರೆದಿರುವ ಅನೇಕ ಪತ್ರಗಳಿಗೆ ಅವರು ಉತ್ತರ ಕೊಟ್ಟಿಲ್ಲ. ಮೋದಿಯವರು ಸೆಲೆಕ್ಟಿವ್ ಎಂದು ಹೇಳುವುದಿಲ್ಲ. ಪ್ರಧಾನಿ ನರೇಂದ್ರ ಮೋದಿ ಅವರು ಉತ್ತರ ಕೊಡುತ್ತಾರೆ ಎಂಬ ನಂಬಿಕೆ ಇದೆ. ಚುನಾಯಿತ ಸರ್ಕಾರದ ಮುಖ್ಯಮಂತ್ರಿಯೊಬ್ಬರು ಪ್ರಧಾನಿಗಳಿಗೆ ಪತ್ರ ಬರೆದಾಗ ಸ್ವಾಭಾವಿಕವಾಗಿ ಉತ್ತರ ಕೊಡುತ್ತಾರೆ ಎಂಬ ನಂಬಿಕೆ ಇದೆ. ರಾಜತಾಂತ್ರಿಕ ಪಾಸ್‌ಪೋರ್ಟ್ ರದ್ದು ಮಾಡಲು ಬರೆದ ಮೊದಲ ಪತ್ರಕ್ಕೆ ಉತ್ತರ ಕೊಟ್ಟಿಲ್ಲ. ಎರಡನೇ ಪತ್ರಕ್ಕೆ ಉತ್ತರ ಕೊಡುತ್ತಾರೆನೋ ನೋಡೋಣ ಎಂದು ಸಿಎಂ ಸಿದ್ದರಾಮಯ್ಯ ಹೇಳಿದರು.

ಬಿಜೆಪಿಯವರನ್ನು ಪ್ರಶ್ನಿಸಿ

ಲೋಕಸಭಾ ಚುನಾವಣಾ ಫಲಿತಾಂಶಕ್ಕಾಗಿ ಪಾಸ್‌ಪೋರ್ಟ್‌ ರದ್ದತಿ ವಿಚಾರವಾಗಿ ವಿಳಂಬ ಧೋರಣೆಯನ್ನು ಅನುಸರಿಸಲಾಗುತ್ತಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯೆ ನೀಡಿದ ಸಿಎಂ ಸಿದ್ದರಾಮಯ್ಯ, ಈ ಪ್ರಶ್ನೆಯನ್ನು ಬಿಜೆಪಿಯ ಪ್ರಲ್ಹಾದ್‌ ಜೋಶಿ ಅವರನ್ನು ಕೇಳಿ ಎಂದರು.

ಮನೆಯವರಿಗೆ ಹೇಳದೆ ವಿದೇಶಕ್ಕೆ ತೆರಳಿದರೇ?

ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡ ಅವರು ಪ್ರಜ್ವಲ್‌ ರೇವಣ್ಣ ಅವರಿಗೆ ಪತ್ರ ಬರೆದು ಶರಣಾಗಬೇಕು. ಇಲ್ಲದಿದ್ದರೆ ಒಬ್ಬಂಟಿಯಾಗಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ ಸಿದ್ದರಾಮಯ್ಯ, ಇವರಿಗೆ ಗೊತ್ತಿಲ್ಲದೆ ಪ್ರಜ್ವಲ್‌ ರೇವಣ್ಣ ವಿದೇಶಕ್ಕೆ ಹೊರಟು ಹೋಗಿದ್ದಾರಾ? ಎಂದು ಪ್ರಶ್ನೆ ಮಾಡಿದರು.

ಪ್ರಚಾರಕ್ಕೆ ಏಕೆ ಹೋಗಿದ್ದರು?

ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರು ಮೊದಲಿನಿಂದಲೂ ಪ್ರಜ್ವಲ್ ರೇವಣ್ಣ ನಮ್ಮ ಸಂಪರ್ಕದಲ್ಲಿ ಇಲ್ಲ ಎಂದು ಹೇಳಿಕೆ ನೀಡುತ್ತಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ ಸಿದ್ದರಾಮಯ್ಯ, ಹಾಗಾದರೆ ನನ್ನ ಮಗ ಎಂದು ಮತ ನೀಡಲು ಪ್ರಚಾರ ಮಾಡಿದ್ದು ಏನು? ಇದು ಸಂಪರ್ಕವೋ? ಅಲ್ಲವೋ ಎಂದು ಪ್ರಶ್ನಿಸಿದರು.

ಇದನ್ನೂ ಓದಿ: Bank fraud: ಕಾರವಾರ ಅರ್ಬನ್ ಕೋ-ಆಪರೇಟಿವ್ ಬ್ಯಾಂಕ್‌ನಲ್ಲಿ‌ ಹಗರಣ! 54 ಸಾವಿರ ಕೋಟಿ ರೂ. ಗುಳುಂ; ಮ್ಯಾನೇಜರ್ ಸಾವಿಂದ ಹೊರಬಂತು ಅವ್ಯವಹಾರ!

ಪ್ರಕರಣದ ಬಗ್ಗೆ ಗಮನ ಕೇಂದ್ರೀಕರಿಸಲು ಎಸ್.ಐ.ಟಿ ರಚನೆ

ಎಸ್.ಐ.ಟಿ ತನಿಖೆ ತಾತ್ವಿಕ ಅಂತ್ಯ ಪಡೆಯುವುದಿಲ್ಲ ಎಂದು ಎಚ್.ಡಿ. ಕುಮಾರಸ್ವಾಮಿ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ ಸಿದ್ದರಾಮಯ್ಯ, ನಮಗೆ ಎಸ್.ಐ.ಟಿ ಬಗ್ಗೆ ಸಂಪೂರ್ಣ ವಿಶ್ವಾಸವಿದೆ. ಕುಮಾರಸ್ವಾಮಿ ಕಾಲದಲ್ಲಿ ಎಷ್ಟು ಪ್ರಕರಣಗಳನ್ನು ಎಸ್ಐಟಿಗೆ ವಹಿಸಿದ್ದಾರೆ ಎನ್ನುವ ಬಗ್ಗೆ ನನಗೆ ತಿಳಿದಿಲ್ಲ. ಎಸ್ಐಟಿ ರಚನೆ ಮಾಡುವುದು ಪ್ರಕರಣದ ಬಗ್ಗೆ ಗಮನವನ್ನು ಕೇಂದ್ರೀಕರಿಸಲು ಎಂದು ಹೇಳಿದರು.

ಕಾವೇರಿ ನದಿ ಮಲಿನವಾಗುತ್ತಿದೆ ಎಂದು ಪತ್ರ ಬರೆದಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಸಿಎಂ ಸಿದ್ದರಾಮಯ್ಯ, ಕೆಲವು ಕಡೆ ಕೈಗಾರಿಕೆಗಳಿಂದ ಬಿಡುವ ನೀರಿನಿಂದ ಮಲಿನವಾಗಿರುವ ಸಾಧ್ಯತೆ ಇರುತ್ತದೆ. ಈ ಬಗ್ಗೆ ಪರಿಶೀಲಿಸಲಾಗುವುದು ಎಂದರು.

Continue Reading

ಕ್ರೈಂ

Rave party: ರೇವ್‌ ಪಾರ್ಟಿ ಕೇಸ್‌; ಹೆಬ್ಬಗೋಡಿ ಠಾಣೆಯ ಎಎಸ್‌ಐ ಸೇರಿ ಮೂವರ ಸಸ್ಪೆಂಡ್‌

Rave party: ಗ್ರಾಮಾಂತರ ಎಸ್‌ಪಿ ಮಲ್ಲಿಕಾರ್ಜುನ್ ಬಾಲದಂಡಿ ಅವರು ಮೂವರು ಸಿಬ್ಬಂದಿಯನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ. ರೇವ್ ಪಾರ್ಟಿ ಬಗ್ಗೆ ಮಾಹಿತಿ ಕಲೆ ಹಾಕಲು ವಿಫಲವಾಗಿರುವ ಆರೋಪದ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ. ಇದೇ ವೇಳೆ ಡಿವೈಎಸ್ಪಿ ಹಾಗೂ ಇನ್ಸ್‌ಪೆಕ್ಟರ್‌ಗಳಿಗೂ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ್‌ ಬಾಲದಂಡಿ ಚಾರ್ಜ್ ಮೆಮೋ‌ ನೀಡಿದ್ದು, ಇಷ್ಟೆಲ್ಲ ಆಗುತ್ತಿದ್ದರೂ ನಿಮ್ಮ ಗಮನಕ್ಕೆ ಯಾಕೆ ಬಂದಿಲ್ಲ? ಇದಕ್ಕೆ ಕಾರಣ ನೀಡಿ ಎಂದು ವಿವರಣೆಯನ್ನು ಕೇಳಿದ್ದಾರೆ. ಡಿವೈಎಸ್ಪಿ ಹಾಗೂ ಇನ್ಸ್‌ಪೆಕ್ಟರ್‌ ಅವರ ಉತ್ತರ ಆಧರಿಸಿ ಅವರ ಮೇಲೂ ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ.

VISTARANEWS.COM


on

Rave party case Three persons including a PSI of Hebbagodi police station have been suspended
Koo

ಬೆಂಗಳೂರು: ಮೇ 19ರ ತಡರಾತ್ರಿ ಎಲೆಕ್ಟ್ರಾನಿಕ್‌ ಸಿಟಿಯ (electronic city) ಫಾರಂ ಹೌಸ್‌ನಲ್ಲಿ (Farm house) ನಡೆದಿದ್ದ ರೇವ್‌ ಪಾರ್ಟಿಗೆ (Rave party) ಸಂಬಂಧಪಟ್ಟಂತೆ ಹೆಬ್ಬಗೋಡಿ ಪೊಲೀಸ್ ಠಾಣೆಯಲ್ಲಿನ ಎಎಸ್ಐ ಸೇರಿ ಮೂವರನ್ನು ಅಮಾನತು ಮಾಡಿ ಆದೇಶಿಸಲಾಗಿದೆ.

ಗ್ರಾಮಾಂತರ ಎಸ್‌ಪಿ ಮಲ್ಲಿಕಾರ್ಜುನ್ ಬಾಲದಂಡಿ ಅವರು ಮೂವರು ಸಿಬ್ಬಂದಿಯನ್ನು ಅಮಾನತುಗೊಳಿಸಿ ಆದೇಶ ಹೊರಡಿಸಿದ್ದಾರೆ. ರೇವ್ ಪಾರ್ಟಿ ಬಗ್ಗೆ ಮಾಹಿತಿ ಕಲೆ ಹಾಕಲು ವಿಫಲವಾಗಿರುವ ಆರೋಪದ ಮೇಲೆ ಈ ಕ್ರಮ ಕೈಗೊಳ್ಳಲಾಗಿದೆ.

ಇದೇ ವೇಳೆ ಡಿವೈಎಸ್ಪಿ ಹಾಗೂ ಇನ್ಸ್‌ಪೆಕ್ಟರ್‌ಗಳಿಗೂ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ್‌ ಬಾಲದಂಡಿ ಚಾರ್ಜ್ ಮೆಮೋ‌ ನೀಡಿದ್ದು, ಇಷ್ಟೆಲ್ಲ ಆಗುತ್ತಿದ್ದರೂ ನಿಮ್ಮ ಗಮನಕ್ಕೆ ಯಾಕೆ ಬಂದಿಲ್ಲ? ಇದಕ್ಕೆ ಕಾರಣ ನೀಡಿ ಎಂದು ವಿವರಣೆಯನ್ನು ಕೇಳಿದ್ದಾರೆ. ಡಿವೈಎಸ್ಪಿ ಹಾಗೂ ಇನ್ಸ್‌ಪೆಕ್ಟರ್‌ ಅವರ ಉತ್ತರ ಆಧರಿಸಿ ಅವರ ಮೇಲೂ ಕ್ರಮ ಕೈಗೊಳ್ಳಲು ನಿರ್ಧರಿಸಲಾಗಿದೆ.

ಠಾಣೆಯ ಎಸ್.ಬಿ. ಗಿರೀಶ್, ಎಎಸ್ಐ ನಾರಾಯಣ ಸ್ವಾಮಿ ಮತ್ತು ಬೀಟ್ ಕಾನ್ಸ್‌ಟೇಬಲ್ ದೇವರಾಜು ಅಮಾನತಾದವರು. ಸಿಸಿಬಿ ಪೊಲೀಸರಿಗೆ ಸಿಕ್ಕ ಮಾಹಿತಿ ಸ್ಥಳೀಯ ಪೊಲೀಸರಿಗೆ ಯಾಕೆ ಇರಲಿಲ್ಲ ಎಂದು ಪ್ರಶ್ನೆ ಮಾಡಲಾಗಿದ್ದು, ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಕ್ರಮ ಕೈಗೊಳ್ಳಲಾಗಿದೆ.

ಹೇಮಾ, ಆಶಿ ಸೇರಿ 86 ಮಂದಿಯಿಂದ ಮಾದಕ ವಸ್ತು ಸೇವನೆ; ಬ್ಲಡ್‌ ರಿಪೋರ್ಟ್‌ ಪಾಸಿಟಿವ್‌

ರೇವ್‌ ಪಾರ್ಟಿಯಲ್ಲಿ ತೆಲುಗು ನಟಿಯರಾದ ಹೇಮಾ (Telugu actress Hema) ಹಾಗೂ ಆಶಿ ರಾಯ್ (Aashi Roy) ಒಳಗೊಂಡಂತೆ 103 ಮಂದಿ ಭಾಗಿಯಾಗಿದ್ದರು. ಇಲ್ಲಿ ಮಾದಕ ವಸ್ತುಗಳನ್ನು ಸೇವನೆ ಮಾಡಲಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಹೀಗಾಗಿ ಅಷ್ಟೂ ಮಂದಿಯನ್ನು ತಪಾಸಣೆಗೊಳಪಡಿಸಲಾಗಿತ್ತು. ಈಗ ವೈದ್ಯಕೀಯ ವರದಿ ಬಂದಿದ್ದು, ಅವರಲ್ಲಿ 86 ಮಂದಿಯ ರಿಪೋರ್ಟ್ ಪಾಸಿಟಿವ್ ಬಂದಿದೆ. ನಟಿಯರಾದ ಹೇಮಾ ಹಾಗೂ ಆಶಿ ರಾಯ್‌ ಸಹ ಮಾದಕ ವಸ್ತುಗಳನ್ನು ಸೇವಿಸಿದ್ದಾರೆಂಬುದು ಸಾಬೀತಾಗಿವೆ ಎನ್ನಲಾಗಿದೆ.

ಈಗಾಗಲೇ ಪಾರ್ಟಿ ಮಾಡಿದ ಐವರನ್ನು ಬಂಧಿಸಲಾಗಿದೆ. 73 ಮಂದಿ ಪುರುಷರಲ್ಲಿ 59 ಮಂದಿ ಬ್ಲಡ್ ರಿಪೋರ್ಟ್ ಪಾಸಿಟಿವ್ ಬಂದಿದ್ದರೆ, 30 ಮಂದಿ ಯುವತಿಯರ ಪೈಕಿ 27 ಮಂದಿಯ ಬ್ಲಡ್ ರಿಪೋರ್ಟ್ ಪಾಸಿಟಿವ್ ಬಂದಿದೆ. ಹೀಗಾಗಿ ಪಾರ್ಟಿಯಲ್ಲಿ ಸೇರಿದ್ದ ಬಹುತೇಕ ಮಂದಿ ಮಾದಕ ವಸ್ತು ಸೇವನೆ ಮಾಡಿದ್ದಾರೆ.

ವಾಸು ಎಂಬಾತನ ಬರ್ತ್‌ ಡೇ ಪಾರ್ಟಿಗಾಗಿ ಏರ್ಪಡಿಸಲಾಗಿದ್ದ ಈ ರೇವ್ ಪಾರ್ಟಿಯಲ್ಲಿ ದೊಡ್ಡ ಮಟ್ಟದ ಮಾದಕ ವಸ್ತು ಬಳಕೆ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಮೇರೆಗೆ ಪೊಲೀಸರು ದಾಳಿ ನಡೆಸಿದ್ದರು. ಈ ವೇಳೆ ದೊಡ್ಡ ಪ್ರಮಾಣದಲ್ಲಿ ಎಂಡಿಎಂಎ, ಕೊಕೇನ್, ಹೈಡ್ರೋ ಗಾಂಜಾ ಪತ್ತೆಯಾಗಿದ್ದವು.

Sunset To Sun Rise victory ಶೀರ್ಷಿಕೆಯಲ್ಲಿ ಈ ರೇವ್ ಪಾರ್ಟಿಯನ್ನು ಆಯೋಜನೆ ಮಾಡಲಾಗಿತ್ತು. ಪಾರ್ಟಿಯಲ್ಲಿ ಸುಮಾರು ನೂರೈವತ್ತು ಮಂದಿ ಸೇರಿದ್ದರು. ಪೊಲೀಸ್‌ ದಾಳಿ ವೇಳೆ ಕೆಲವರು ತಪ್ಪಿಸಿಕೊಂಡು ಓಡಿದ್ದರು. ಆದರೆ, ಬಹುತೇಕ ಮಂದಿ ಸಿಕ್ಕಿಬಿದ್ದಿದ್ದರು. ಈಗ ಸಿಕ್ಕಿಬಿದ್ದವರಲ್ಲಿ ಬಹುತೇಕರ ಬ್ಲಡ್ ರಿಪೋರ್ಟ್‌ನಲ್ಲಿ ಮಾದಕ ವಸ್ತು ಸೇವನೆ ಸಂಬಂಧ ಪಾಸಿಟಿವ್ ಅಂಶ ಪತ್ತೆಯಾಗಿದೆ. ಹೀಗಾಗಿ ಪಾಸಿಟಿವ್‌ ರಿಪೋರ್ಟ್‌ ಬಂದವರಿಗೆ ಸಿಸಿಬಿ ನೋಟಿಸ್ ನೀಡಲಿದ್ದು, ಅವರನ್ನು ಕರೆಸಿ ವಿಚಾರಣೆ ನಡೆಸಲಾಗುತ್ತದೆ.

ʼರೇವ್‌ ಪಾರ್ಟಿಯಲ್ಲಿ ನಾನಿಲ್ಲʼ ಎಂದು ವಿಡಿಯೋ ಮಾಡಿದ್ದ ಹೇಮಾ!

ಈ ರೇವ್‌ ಪಾರ್ಟಿಯಲ್ಲಿ ತೆಲುಗು ನಟಿ ಹೇಮಾ ಭಾಗಿಯಾಗಿದ್ದು, ಪೊಲೀಸ್‌ ವಶದಲ್ಲಿದ್ದಾರೆ ಎಂದು ಸುದ್ದಿಯಾಗಿದ್ದಂತೆ ವಿಡಿಯೊವೊಂದನ್ನು ಮಾಡಿ ಸೋಷಿಯಲ್‌ ಮೀಡಿಯಾದಲ್ಲಿ ಅಪ್ಲೋಡ್‌ ಮಾಡಿದ್ದ ಹೇಮಾ, ನಾನು ಆ ರೇವ್‌ ಪಾರ್ಟಿಯಲ್ಲಿ ಭಾಗಿಯಾಗಲೇ ಇಲ್ಲ. ಹೈದರಾಬಾದ್‌ನ ಫಾರ್ಮ್‌ ಹೌಸ್‌ನಲ್ಲಿದ್ದೇನೆ ಎಂದು ವಿಡಿಯೊ ಸಂದೇಶವನ್ನು ಹರಿಬಿಟ್ಟಿದ್ದರು. ಆದರೆ, ಮುಜುಗರ ತಪ್ಪಿಸಲು ಅವರು ಅದೇ ಫಾರಂ ಹೌಸ್‌ನ ಒಂದು ಕಡೆ ಬಂದು ವಿಡಿಯೊ ಮಾಡಿದ್ದಾರೆ ಎಂದು ಹಲವರು ಅಂದೇ ಹೇಳಿದ್ದರು. ಹೆಬ್ಬಗೋಡಿ ಫಾರ್ಮ್ ಹೌಸ್ ಒಳಗಡೆಯೇ ವಿಡಿಯೋ ಮಾಡಿ, ತಾನು ಹೈದರಾಬಾದ್‌ ಫಾರ್ಮ್ ಹೌಸ್‌ನಲ್ಲಿದ್ದೀನಿ ಎಂದು ಸುಳ್ಳು ಹೇಳುತ್ತಿದ್ದಾರೆ ಎಂದು ಹಲವರು ವಾದಿಸಿದ್ದರು. ಈಗ ಈ ಸಂಬಂಧ ಪೊಲೀಸರಿಗೆ ಬಂದಿರುವ ರಿಪೋರ್ಟ್‌ ವೈರಲ್‌ ಆಗಿದ್ದು, ಅವರು ಸಹ ಮಾದಕ ವಸ್ತು ಸೇವನೆ ಮಾಡಿರುವುದು ಸಾಬೀತಾಗಿದೆ ಎಂದು ತಿಳಿದುಬಂದಿದೆ.

ಕಮೋಡ್‌ನಲ್ಲಿ ಫ್ಲಶ್‌ ಮಾಡಿದರು!

ಸಿಸಿಬಿ ಪೊಲೀಸರು ದಾಳಿ ಮಾಡಿದ ಸಂದರ್ಭದಲ್ಲಿ ಪಾರ್ಟಿ ಆಯೋಜಕರು ಸ್ಥಳದ ಡೋರ್‌ಲಾಕ್ ಮಾಡಿಕೊಂಡಿದ್ದಲ್ಲದೆ, ಎಂಡಿಎಂಎ ಮತ್ತು ಇನ್ನಿತರೆ ಮಾದಕ ವಸ್ತುಗಳನ್ನು ಸಿಕ್ಕಸಿಕ್ಕಲ್ಲಿ ಎಸೆದಿದ್ದರು. ಪೊಲೀಸರು ಎಂದು ಗೊತ್ತಾಗುತ್ತಿದ್ದಂತೆ ಓಡಿಹೋಗಲು ಯತ್ನಿಸಿದ್ದರು. ಡ್ರಗ್ಸ್‌ ಅನ್ನು ಬಾತ್ ರೂಂನ ಕಮೋಡ್‌ನಲ್ಲಿ ಹಾಕಿ ಫ್ಲಶ್ ಮಾಡಿದ್ದರು.. ಪೊಲೀಸರು ಬಲವಂತವಾಗಿ ಡೋರ್ ತೆಗಿಸಿ ಒಳಹೋಗಿದ್ದು, ಫಾರ್ಮ್ ಹೌಸ್‌ನ ಇಂಚಿಂಚನ್ನೂ ಜಾಲಾಡಿದ್ದರು.

3 ಜನ ಡ್ರಗ್ ಪೆಡ್ಲರ್‌ಗಳು, ಆಯೋಜಕ ವಾಸು ಸೇರಿ ಐದು ಜನರನ್ನು ಅಂದೇ ಪೊಲೀಸರು ಬಂಧಿಸಿದ್ದರು. ಪಾರ್ಟಿಯಲ್ಲಿ ಡ್ರಗ್ ಪೆಡ್ಲರ್‌ಗಳೂ ಭಾಗಿಗಳಾಗಿದ್ದರು. ಇವರು ಯಥೇಚ್ಛವಾಗಿ ಮಾದಕ ವಸ್ತುಗಳನ್ನು ಪೂರೈಸುತ್ತಿದ್ದರು. ವಾಸು ಹುಟ್ಟಿದ ಹಬ್ಬಕ್ಕೆ ಪಾರ್ಟಿ ಆಯೋಜಿಸಿದ ಆರ್ಗನೈಸರ್ ಅರುಣ್, ಸಿದ್ಧಿಕಿ, ರಣಬೀರ್, ನಾಗಬಾಬುರನ್ನು ಪೊಲೀಸರು ವಶಕ್ಕೆ ತೆಗೆದುಕೊಂಡಿದ್ದರು. ಮಾದಕ ವಸ್ತು ಸಿಕ್ಕಿದಂತಹ ಐಷಾರಾಮಿ ಮರ್ಸಿಡಿಸ್‌ ಬೆಂಜ್‌, ರೇಂಜ್ ರೋವರ್, ಆಡಿ ಕಾರುಗಳನ್ನು ವಶಕ್ಕೆ ಪಡೆಯಲಾಗಿತ್ತು.

ಎಂಟ್ರಿಗೆ ಪಾಸ್‌ವರ್ಡ್‌ ನೀಡಿದ್ದ ವಾಸು

ಪಾರ್ಟಿ ಆಯೋಜಕ, ಆರೋಪಿ ವಾಸು ಪೊಲೀಸರಿಂದ ಬಚಾವಾಗಲು ʼನಾನು ಪಾರ್ಟಿಗೆ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಅನುಮತಿ ಪಡೆದಿದ್ದೇನೆಂದುʼ ಸುಳ್ಳು ಹೇಳಿಕೆ ನೀಡಿದ್ದ. ಆದರೆ, ಫಾರ್ಮ್ ಹೌಸ್ ಹೆಬ್ಬಗೋಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿದೆ. ಪಾರ್ಟಿಗೆ ಬಂದವರು ಫಾರ್ಮ್ ಹೌಸ್ ಒಳಗೆ ಹೋಗಬೇಕಾದರೆ ಸೆಕ್ಯೂರಿಟಿಗೆ ಪಾಸ್ ವರ್ಡ್ ಹೇಳಬೇಕಿತ್ತು. ವಾಸು ನೀಡಿದ ಪಾಸ್‌ವರ್ಡ್ ಹೇಳಿದರೆ ಮಾತ್ರ ಒಳಗೆ ಎಂಟ್ರಿಯಾಗಬಹುದಿತ್ತು. ಡ್ರಗ್ ಪಾರ್ಟಿ ಹಿನ್ನೆಲೆಯಲ್ಲಿ ಬೇರೆ ಯಾರೂ ಬಾರದಿರಲಿ ಎಂಬ ಕಾರಣಕ್ಕೆ ವಾಸು ಪಾಸ್‌ವರ್ಡ್ ನೀಡಿದ್ದ.

ಮಾದಕ ವಸ್ತುಗಳ ವಶಕ್ಕೆ

ಫಾರಂ ಹೌಸ್‌ನಲ್ಲಿ ಸದ್ಯ ಭಾರಿ ಪ್ರಮಾಣದಲ್ಲಿ ಎಂಡಿಎಂಎ, ಕ್ಯಾಪ್ಸೂಲ್, ಕೊಕೇನ್ ಇತ್ಯಾದಿ ಮಾದಕ ವಸ್ತುಗಳು ದೊರೆತಿದ್ದವು. 45 ಗ್ರಾಂನಷ್ಟು ಡ್ರಗ್ ವಶಕ್ಕೆ ಪಡೆಯಲಾಗಿತ್ತು. 1 ಗ್ರಾಂ ಕೊಕೇನ್‌ಗೆ 8ರಿಂದ 9 ಸಾವಿರ ರೂ. ದರವಿದೆ. ಇಂತಹ ಕೊಕೇನ್ ಭಾರಿ ಪ್ರಮಾಣದಲ್ಲಿ ಪಾರ್ಟಿಯಲ್ಲಿ ಪತ್ತೆಯಾಗಿದೆ. ಸದ್ಯ ಸಿಕ್ಕಿರುವ ಡ್ರಗ್ಸ್‌ನ ಮೌಲ್ಯ ಪರಿಶೀಲನೆಯನ್ನು ಸಿಸಿಬಿ ನಡೆಸುತ್ತಿದೆ.

ಇದನ್ನೂ ಓದಿ: Prajwal Revanna Case: ತಾಳ್ಮೆ ಪರೀಕ್ಷಿಸಬೇಡ, ಈಗಲೇ ಬಂದು ಶರಣಾಗು; ಪ್ರಜ್ವಲ್‌ಗೆ ದೇವೇಗೌಡರ ವಾರ್ನಿಂಗ್‌

ನಟಿ ಆಶಿ ರಾಯ್ ಹೇಳಿದ್ದೇನು?

ಈ ಪಾರ್ಟಿಯಲ್ಲಿ ಭಾಗಿಯಾಗಿದ್ದ ಆಶಿ ರಾಯ್‌ ಸಹ ವಿಡಿಯೊವೊಂದನ್ನು ಮಾಡಿ ಸ್ಪಷ್ಟನೆ ನೀಡಿದ್ದಾರೆ. ʻʻಅದೊಂದು ಬರ್ತ್‌ಡೇ ಪಾರ್ಟಿಯಾಗಿತ್ತು. ಒಳಗೆ ಏನು ನಡೀತಿತ್ತು ಎಂದು ಗೊತ್ತಿಲ್ಲ. ನಾನು ಯಾವುದೇ ತಪ್ಪು ಮಾಡಿಲ್ಲ. ದಯವಿಟ್ಟು ನೀವೆಲ್ಲ ನನ್ನ ಬೆಂಬಲಿಸಿ. ನಾನು ಕಷ್ಟಪಟ್ಟು ಉದ್ಯಮದಲ್ಲಿ ಬೆಳೆಯುತ್ತಿರುವ ಹುಡುಗಿ. ದಯವಿಟ್ಟು ನನಗೆ ಸಹಾಯ ಮಾಡಿʼʼ ಎಂದು ವಿಡಿಯೊವನ್ನು ಹಂಚಿಕೊಂಡಿದ್ದರು. ಆಶಿ ರಾಯ್‌ ಹಲವು ಸಂದರ್ಶನದಲ್ಲಿ ಪಾರ್ಟಿಯಲ್ಲಿ ಹೇಮಾ ಅವರನ್ನು ನೋಡಿಲ್ಲ ಎಂದಿದ್ದಾರೆ. ಆಶಿರಾಯ್‌ ಅವರು ಹಲವು ತೆಲುಗು ಸಿನಿಮಾಗಳಲ್ಲಿ ನಟಿಸಿದ್ದಾರೆ.

Continue Reading
Advertisement
Former DGP Arrested
ಕ್ರೈಂ8 mins ago

Former DGP Arrested: ವಿಚ್ಛೇದಿತ ಪತ್ನಿಯ ದೂರು; ಮಾಜಿ ಡಿಜಿಪಿ ಜೈಲು ಪಾಲು

ಕ್ರೈಂ8 mins ago

Rameshwaram Cafe Blast: ರಾಮೇಶ್ವರಂ ಕೆಫೆ ಬ್ಲಾಸ್ಟ್ ಪ್ರಕರಣದ 5ನೇ ಆರೋಪಿಗೆ ಲಷ್ಕರ್–ಎ–ತಯ್ಬಾ ಜತೆ ಲಿಂಕ್‌!

CSK vs RC
ಕ್ರೀಡೆ14 mins ago

CSK vs RCB: ಮತ್ತೆ ಆರ್​ಸಿಬಿ, ಕೊಹ್ಲಿಯ ಬಗ್ಗೆ ಕಿಡಿಕಾರಿದ ಚೆನ್ನೈ ತಂಡದ ಮಾಜಿ ಆಟಗಾರ

BSNL network problem in Hosanagara The lawyer decided to climb the tower and protest
ಕರ್ನಾಟಕ16 mins ago

Hosanagara News: ಹೊಸನಗರದಲ್ಲಿ ಬಿಎಸ್‌ಎನ್‌ಎಲ್‌ ನೆಟ್‌ವರ್ಕ್‌ ಸಮಸ್ಯೆ; ಟವರ್‌ ಏರಿ ಪ್ರತಿಭಟನೆಗೆ ಮುಂದಾದ ವಕೀಲ!

union minister pralhad joshi spoke in North East Graduate Constituency Electoral Convention at ballari
ಕರ್ನಾಟಕ20 mins ago

MLC Election: ಜಗತ್ತು ತೆವಳುತ್ತಿದ್ದರೆ ಮೋದಿ ಭಾರತ ಓಡುತ್ತಿದೆ; ಸಚಿವ ಪ್ರಲ್ಹಾದ್‌ ಜೋಶಿ ವ್ಯಾಖ್ಯಾನ

Crocodile Attack
ಕರ್ನಾಟಕ26 mins ago

Crocodile Attack: ಕೃಷ್ಣಾ ನದಿಯಲ್ಲಿ ಬಾಲಕನನ್ನು ಎಳೆದೊಯ್ದ ಮೊಸಳೆ

Washing Machine Cleaning Tips
ಲೈಫ್‌ಸ್ಟೈಲ್28 mins ago

Washing Machine Cleaning Tips: ವಾಷಿಂಗ್ ಮೆಷಿನ್ ಹೆಚ್ಚು ಬಾಳಿಕೆ ಬರಬೇಕೆ? ಈ ರೀತಿ ಸ್ವಚ್ಛಗೊಳಿಸಿ

Ebola Virus
ಪ್ರಮುಖ ಸುದ್ದಿ36 mins ago

Ebola Virus: ಲ್ಯಾಬ್‌ನಲ್ಲಿ ಮತ್ತೊಂದು ಡೆಡ್ಲಿ ವೈರಸ್‌ ಸೃಷ್ಟಿಸಿದ ಚೀನಾ; ಈ ಲಕ್ಷಣ ಕಂಡರೆ ಮರಣ ನಿಶ್ಚಿತ!

Karnataka Weather Forecast
ಮಳೆ44 mins ago

Karnataka Weather : ಕೈಯಲ್ಲಿ ಛತ್ರಿ ಹಿಡಿದು ಬಸ್ ಡ್ರೈವಿಂಗ್; ಮಳೆಗೆ ಕುಸಿದು ಬಿದ್ದ ಮಾಳಿಗೆ ಮನೆ

Murder Attempt
ಕ್ರೈಂ45 mins ago

Murder Attempt: ಮಗು ಹೆಣ್ಣೋ ಗಂಡೋ ನೋಡಲು ಹೆಂಡತಿಯ ಹೊಟ್ಟೆ ಸೀಳಿದವನಿಗೆ ಜೀವಾವಧಿ ಶಿಕ್ಷೆ!

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

dina bhavishya read your daily horoscope predictions for May 23 2024
ಭವಿಷ್ಯ2 days ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ3 days ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ3 days ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

Love Case Father throws hot water on man who loved his daughter for coming home
ಕೊಡಗು3 days ago

Love Case : ಮನೆಗೆ ಬಂದ ಪ್ರೇಮಿಗೆ ಕೊತ ಕೊತ ಕುದಿಯುವ ನೀರು ಎರಚಿದ ಯುವತಿ ತಂದೆ!

Contaminated Water
ಮೈಸೂರು3 days ago

Contaminated Water : ಡಿ ಸಾಲುಂಡಿಯಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡಿದ್ದ ಯುವಕ ಸಾವು

Karnataka Rain
ಮಳೆ4 days ago

Karnataka Rain : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

Karnataka Rain
ಮಳೆ5 days ago

Karnataka Rain : ಒಂದೇ ಮಳೆಗೆ ಹೊಳೆಯಂತಾದ ಬೆಂಗಳೂರು ರಸ್ತೆಗಳು! ಕಳಸದಲ್ಲೂ ಮುಂದುವರಿದ ಅಬ್ಬರ

Karnataka rain
ಮಳೆ5 days ago

Karnataka Rain : ವಿಜಯನಗರದಲ್ಲಿ ಸಿಡಿಲಿಗೆ ಜಾನುವಾರು ಬಲಿ; ಬೆಂಗಳೂರು ಸೇರಿ ಹಲವೆಡೆ ಭಾರಿ ಮಳೆ

Karnataka Rain
ಮಳೆ5 days ago

Karnataka Rain: ಧಾರಾಕಾರ ಮಳೆಗೆ ಕಾಂಪೌಂಡ್ ಕುಸಿದು 4 ಬೈಕ್‌ಗಳು ಜಖಂ; ಮದುವೆ ಮಂಟಪಕ್ಕೆ ನುಗ್ಗಿದ ನೀರು‌

Prajwal Revanna Case JDS calls CD Shivakumar pen drive gang
ರಾಜಕೀಯ7 days ago

Prajwal Revanna Case: CD ಶಿವಕುಮಾರ್ ಪೆನ್ ಡ್ರೈವ್ ಗ್ಯಾಂಗ್ ಎಂದ ಕುಟುಕಿದ ಜೆಡಿಎಸ್‌!

ಟ್ರೆಂಡಿಂಗ್‌