Benefits Of Oral Health: ನಿಮಗೆ ಗೊತ್ತೆ? ಹಲ್ಲಿನ ಸ್ವಚ್ಛತೆಗೂ ಹೃದಯಾಘಾತಕ್ಕೂ ಸಂಬಂಧ ಇದೆ! - Vistara News

ಆರೋಗ್ಯ

Benefits Of Oral Health: ನಿಮಗೆ ಗೊತ್ತೆ? ಹಲ್ಲಿನ ಸ್ವಚ್ಛತೆಗೂ ಹೃದಯಾಘಾತಕ್ಕೂ ಸಂಬಂಧ ಇದೆ!

ಬಾಯಿಯ ಶುಚಿತ್ವವನ್ನು (Benefits of Oral health) ಕಾಪಾಡಿಕೊಂಡು, ಹಲ್ಲುಗಳ ಆರೋಗ್ಯವನ್ನು ಕಾಪಾಡಿಕೊಳ್ಳುವುದರಿಂದ ಮುಂದೆ ಬರಬಹುದಾದ ಒಂದಿಷ್ಟು ರೋಗಗಳನ್ನು ಮುಂದೂಡಬಹುದು.

VISTARANEWS.COM


on

Benefits Of Oral Health
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನಮ್ಮ ಹಲ್ಲುಗಳು (Benefits of Oral health) ಸಹ ನಮ್ಮ ಬೆರಳಚ್ಚಿನಂತೆಯೇ ಅನನ್ಯ; ಒಬ್ಬರದ್ದಿರುವಂತೆ ಇನ್ನೊಬ್ಬರದ್ದು ಇರುವುದಿಲ್ಲ. ಅವಳಿ ಮಕ್ಕಳ ಹಲ್ಲುಗಳು ಸಹ ಒಂದೇ ರೀತಿ ಇರುವುದಿಲ್ಲ. ಆದರೆ ಬಾಯಿ ಸ್ವಚ್ಛ ಮಾಡುವ ರೀತಿಯಲ್ಲಿ ಭಿನ್ನತೆಯಿಲ್ಲ, ಅದು ಎಲ್ಲರಿಗೂ ಸಮಾನ. ಬಾಯಿಯ ಶುಚಿತ್ವವನ್ನು ಕಾಪಾಡಿಕೊಂಡು, ಹಲ್ಲುಗಳ ಆರೋಗ್ಯವನ್ನು ಕಾಪಾಡಿಕೊಳ್ಳುವುದರಿಂದ ಮುಂದೆ ಬರಬಹುದಾದ ಒಂದಿಷ್ಟು ರೋಗಗಳನ್ನು ಮುಂದೂಡಬಹುದು ಅಥವಾ ಮುಂದಿನ ಹಲವು ಆರೋಗ್ಯ ಸಮಸ್ಯೆಗಳ ಮುನ್ಸೂಚನೆಯನ್ನೂ ಪಡೆಯಬಹುದು. ಉದಾ, ಒಸಡುಗಳು ಪದೇಪದೆ ಅನಾರೋಗ್ಯಕ್ಕೆ ಒಳಗಾಗುತ್ತಿದ್ದರೆ ಅಥವಾ ಪೆರಿಯೊಡಾಂಟೈಟಿಸ್‌ ಬಾಧಿಸುತ್ತಿದ್ದರೆ ಟೈಪ್-‌2 ಮಧುಮೇಹದ ಬಗ್ಗೆ ಜಾಗೃತರಾಗಿರುವುದು ಒಳ್ಳೆಯದು. ಕೆಲವು ವಿಟಮಿನ್‌ಗಳ ಕೊರತೆಯನ್ನು ದಂತ, ಒಸಡುಗಳು ಸ್ಪಷ್ಟವಾಗಿ ತಿಳಿಸುತ್ತವೆ. ಏನಿದು? ಹೇಗೆ?

Oral Hygiene and Health Care

ಪೋಷಕಾಂಶಗಳ ಕೊರತೆ

ಕೆಲವು ಪೋಷಕಸತ್ವಗಳ ಕೊರತೆಯನ್ನೂ ಬಾಯಿಯ ಮೂಲಕ ತಿಳಿಯಬಹುದು. ಉದಾ, ವಿಟಮಿನ್‌ ಬಿ ಕೊರತೆಯಿದ್ದರೆ ಹಲ್ಲುಗಳ ಎನಾಮಲ್‌ ಕವಚ ಬಲಹೀನವಾಗಿರುತ್ತದೆ. ಮಾತ್ರವಲ್ಲ, ತುಟಿ ಮತ್ತು ಕೆನ್ನೆಯ ಒಳಭಾಗದಲ್ಲಿ ಬಿರುಕುಗಳು ಇರಬಹುದು. ಬಾಯಲ್ಲಿ ಪದೇಪದೆ ಹುಣ್ಣಾಗುವುದು ಸಹ ಇಂಥದ್ದನ್ನೇ ಸೂಚಿಸುತ್ತದೆ. ವಿಟಮಿನ್‌ ಡಿ ಕೊರತೆಯಿದ್ದರೆ ಹಲ್ಲುಗಳು ಸೊಟ್ಟಾಗಿರುವುದು, ಹುಳುಕು ಮತ್ತು ಒಸಡುಗಳ ಸಮಸ್ಯೆಗೆ ಕಾರಣವಾಗಬಹುದು.

ಆಸ್ಟಿಯೊಪೊರೋಸಿಸ್

ಈ ರೋಗ ಮೂಳೆಗಳನ್ನು ಮಾತ್ರವಲ್ಲ, ಹಲ್ಲುಗಳನ್ನೂ ಬಾಧಿಸುತ್ತದೆ. ಅಂದರೆ ಹಲ್ಲುಗಳ ಆಧಾರವಾದ ಮೂಳೆಗಳು ಶಕ್ತಿಗುಂದುತ್ತಿದ್ದಂತೆಯೇ ಆ ಹಲ್ಲುಗಳು ಶಕ್ತಿಹೀನವಾಗಿ ಉದುರಿಹೋಗಬಹುದು. ಹಾಗಾಗಿ ಹಲ್ಲುಗಳ ಬಲ ಕುಂದುವುದು ಮತ್ತು ದೇಹದ ಮೂಳೆಗಳ ಬಲ ಕುಂದುವುದರ ನಡುವೆ ನೇರ ನಂಟನ್ನು ತಜ್ಞರು ಗುರುತಿಸಿದ್ದಾರೆ.

ಗರ್ಭಾವಸ್ಥೆಯ ಸೂಚನೆ

ಇದ್ದಕ್ಕಿದ್ದಂತೆ ಒಸಡುಗಳಿಂದ ರಕ್ತಸ್ರಾವ, ಹಲ್ಲುಗಳ ಬುಡ ಊದಿಕೊಳ್ಳುವಂಥ ತೊಂದರೆ ಆರಂಭವಾಗಿದೆಯೇ? ಗರ್ಭಾವಸ್ಥೆಯಲ್ಲಿ ಬಾಧಿಸುವ ಜಿಂಜವೈಟಿಸ್‌ ಇದಕ್ಕೆ ಕಾರಣವಾಗಿರಬಹುದು. ಗರ್ಭಿಣಿಯಲ್ಲಿ ಆಗುವ ಹಲವು ರೀತಿ ಹಾರ್ಮೋನ್‌ ಬದಲಾವಣೆಗಳಿಂದ ಮತ್ತು ಆಗಾಗ ಮೆಲ್ಲುವುದರಿಂದ ಒಸಡುಗಳ ಸಮಸ್ಯೆ ಬಾಧಿಸುವುದು ಸಾಮಾನ್ಯ

Heart Health In Winter

ಹೃದಯ ಜೋಪಾನ

ಹಲ್ಲು ಉದುರುವುದು, ಒಸಡುಗಳ ರೋಗಗಳು ಮತ್ತು ಹೃದ್ರೋಗಗಳ ನಡುವೆಯೂ ನಂಟಿದೆ ಎನ್ನುತ್ತದೆ ವೈದ್ಯ ವಿಜ್ಞಾನ. ಹಲ್ಲುಗಳ ಮೇಲೆ ಪದೇಪದೆ ಪ್ಲೇಕ್‌ ಅಂದರೆ ಪದರದಂತೆ ಕಟ್ಟಿಕೊಳ್ಳುವುದು ಮತ್ತು ಒಸಡುಗಳ ಅನಾರೋಗ್ಯ ಕಾಡುತ್ತಿದ್ದರೆ ಹೃದಯಾಘಾತ ಮತ್ತು ಪಾರ್ಶ್ವವಾಯುವಿನ ಭೀತಿ ಅಂಥವರಿಗೆ ಹೆಚ್ಚು. ಹಾಗಾಗಿ ಈ ರೋಗಗಳನ್ನು ದೂರವಿಡುವಂಥ ಆರೋಗ್ಯಕರ ಜೀವನಶೈಲಿ ರೂಢಿಸಿಕೊಳ್ಳುವುದು ಅಗತ್ಯ.

grind your teeth

ಹಲ್ಲು ಕಡಿಯುತ್ತೀರೇ?

ಕಟಕಟನೆ ಹಲ್ಲು ಕಡಿಯುವುದನ್ನು ಕೋಪದ ಲಕ್ಷಣ ಎನ್ನುತ್ತೇವೆ. ಆದರೆ ಇದು ಬದುಕಿನಲ್ಲಿ ಕಾಡುತ್ತಿರುವ ಅತಿ ಒತ್ತಡದ ಚಿಹ್ನೆಯೂ ಆಗಿರಬಹುದು. ಅದರಲ್ಲೂ ಬಿಗಿದುಕೊಂಡಂಥ ಬಾಯಿ ಖಂಡಿತವಾಗಿ ನಮ್ಮ ಮಾನಸಿಕ ಸ್ಥಿತಿಯ ಸಂಕೇತ. ಒತ್ತಡವನ್ನು ಮೊದಲು ಇಳಿಸಿಕೊಳ್ಳಿ. ಹಲ್ಲುಗಳನ್ನು ಉಳಿಸಿಕೊಳ್ಳಿ.

ತಿನ್ನುವ ಕಾಯಿಲೆ

ಬುಲಿಮಿಯದಂಥ ರೋಗವನ್ನು ತಿನ್ನದಿರುವ ಕಾಯಿಲೆ ಎಂದರೂ ತಪ್ಪೇನಿಲ್ಲ! ಅತಿಯಾಗಿ ತಿನ್ನುವುದು ಮತ್ತು ದೇಹ ತೂಕವನ್ನು ನಿಯಂತ್ರಿಸುವ ಭರದಲ್ಲಿ ಎಲ್ಲವನ್ನೂ ವಾಂತಿ ಮಾಡಿಕೊಳ್ಳುವ ಇದೊಂದು ಮಾನಸಿಕ ಸಮಸ್ಯೆಯೂ ಹೌದು. ಈ ತೊಂದರೆ ಇರುವವರಿಗೆ ಎನಾಮಲ್‌ ಕವಚಕ್ಕೆ ಸಾಕಷ್ಟು ಹಾನಿಯಾಗಿರುತ್ತದೆ. ವಾಂತಿ ಮೂಲಕ ಹೊಟ್ಟೆಯಲ್ಲಿರುವ ಪಿತ್ತರಸ ಬಾಯಿಗೆ ಬಂದು, ಹಲ್ಲುಗಳಿಗೆ ಸೋಕಿದಾಗ, ಅದರಲ್ಲಿರುವ ಆಮ್ಲೀಯ ಗುಣದಿಂದಾಗಿ ಎನಾಮಲ್‌ ಹಾಳಾಗಲು ಪ್ರಾರಂಭಿಸುತ್ತದೆ. ಇದರಿಂದ ಹಲ್ಲುಗಳ ಬಣ್ಣ ಮತ್ತು ಆಕಾರದಲ್ಲಿ ವ್ಯತ್ಯಾಸ ಕಂಡುಬರುತ್ತದೆ.

ನರರೋಗಗಳಿಗೂ ದಿಕ್ಸೂಚಿ

ಜೀವನವಿಡೀ ಮತ್ತೆಮತ್ತೆ ಒಸಡು ಮತ್ತು ಹಲ್ಲುಗಳ ಸೋಂಕುಗಳಿಂದ ಬಳಲಿದ ವೃದ್ಧರಲ್ಲಿ ಡಿಮೆನ್ಶಿಯ ಅಥವಾ ಅಲ್‌ಜೈಮರ್ಸ್‌ನಂಥ ನರರೋಗಗಳು ಅಮರಿಕೊಳ್ಳುವುದು, ಆರೋಗ್ಯವಂತ ಹಲ್ಲುಗಳಿರುವವರಿಗಿಂತ ಅಧಿಕ ಎನ್ನುತ್ತವೆ ಅಧ್ಯಯನಗಳು. ಹಾಗಾಗಿ ಬಾಯಿಯ ಆರೋಗ್ಯವನ್ನು ಶುಚಿಯಾಗಿ ಇಟ್ಟುಕೊಳ್ಳುವುದರಿಂದ ವೃದ್ಧಾಪ್ಯದಲ್ಲಿ ಬರಬಹುದಾದ ಘೋರ ಕಾಯಿಲೆಗಳನ್ನೂ ದೂರ ಇರಿಸಬಹುದು.

child fever

ಅಲರ್ಜಿ

ಬಿಟ್ಟೂಬಿಡದೆ ಕಾಡುವ ನೆಗಡಿ, ಮೂಗು ಕಟ್ಟುವಂಥ ಅಲರ್ಜಿಯ ಸಮಸ್ಯೆಯಿಂದಾಗಿ ಹಲ್ಲುನೋವು ಬರುವ ಸಾಧ್ಯತೆಯೂ ಇಲ್ಲದಿಲ್ಲ. ಕಟ್ಟಿದ ಮೂಗಿನ ಉಪಟಳದಿಂದ ಸದಾ ಕಾಲ ಬಾಯಿಯಿಂದಲೇ ಉಸಿರಾಡು ಅವಸ್ಥೆಯಲ್ಲಿದ್ದರೆ, ಬಾಯಿಯ ಜೊಲ್ಲು ಒಣಗುವುದು ಸಹಜ. ಬಾಯಿಯಲ್ಲಿ ಉಳಿಯುವ ಆಹಾರದ ಕಣಗಳು, ಆಮ್ಲೀಯ ರಸಗಳನ್ನೆಲ್ಲಾ ಸ್ಚಚ್ಛಮಾಡಲು ಲಾಲಾ ರಸ ಇಲ್ಲದಿದ್ದರೆ, ಅದರಿಂದಲೂ ಹಲ್ಲು ಹುಳುಕಾಗುತ್ತದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಆರೋಗ್ಯ

West Nile fever : ಕೇರಳದಲ್ಲಿ ವೆಸ್ಟ್‌ ನೈಲ್ ಭೀತಿ; ಮೈಸೂರು ಗಡಿಭಾಗದಲ್ಲಿ ಆರೋಗ್ಯ ಇಲಾಖೆ ಅಲರ್ಟ್‌

West Nile fever : ಕೇರಳದಲ್ಲಿ ವೆಸ್ಟ್‌ ನೈಲ್‌ ಜ್ವರವು ಹೆಚ್ಚಾಗಿ ಆವರಿಸುತ್ತಿದೆ. ಮೈಸೂರಿನ ಗಡಿಭಾಗದಲ್ಲೂ ಜ್ವರ ಹರಡುವ ಕಾರಣಕ್ಕೆ ಆರೋಗ್ಯ ಇಲಾಖೆ ಅಲರ್ಟ್‌ ಆಗಿದೆ. ಈಗಾಗಲೇ ಗಡಿ ಭಾಗದಲ್ಲಿ ಚೆಕ್‌ಪೋಸ್ಟ್‌ಗಳನ್ನು ನಿರ್ಮಿಸಿ ಈ ಕುರಿತು ಜನರಲ್ಲಿ ಜಾಗೃತಿಯನ್ನು ಮೂಡಿಸಲಾಗುತ್ತಿದೆ.

VISTARANEWS.COM


on

By

West Nile fever Health department on alert
Koo

ಮೈಸೂರು: ನಿಫಾ, ಕೋವಿಡ್, ಹಕ್ಕಿ ಜ್ವರ, ಹಂದಿ ಜ್ವರ ಬಳಿಕ ಈಗ ವೆಸ್ಟ್ ನೈಲ್ ಜ್ವರದ ಭೀತಿ ಹೆಚ್ಚಾಗಿದೆ. ನೆರೆಯ ಕೇರಳದಲ್ಲಿ ವೆಸ್ಟ್‌ ನೈಲ್ ಜ್ವರ (West Nile fever) ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ಕೇರಳದ ಗಡಿ ಹಂಚಿಕೊಂಡಿರುವ ಮೈಸೂರು ಜಿಲ್ಲೆಯಲ್ಲಿ ಆರೋಗ್ಯ ಇಲಾಖೆ (Health department) ಅಲರ್ಟ್ ಆಗಿದೆ.

ಎಚ್‌ಡಿ ಕೋಟೆ ತಾಲೂಕಿನ ಡಿ.ಬಿ ಕುಪ್ಪೆ ಸೇರಿದಂತೆ ಕೇರಳಕ್ಕೆ ಸಂಪರ್ಕ ಕಲ್ಪಿಸುವ ಚೆಕ್ ಪೋಸ್ಟ್‌ಗಳಲ್ಲಿ ತೀವ್ರ ನಿಗಾವಹಿಸಲಾಗಿದೆ. ಗಡಿ ಭಾಗದಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿಯಿಂದ ತಪಾಸಣೆಯೊಂದಿಗೆ ಜಾಗೃತಿಯನ್ನು ಮೂಡಿಸಲಾಗುತ್ತಿದೆ. ಈ ಹಿಂದೆ ಕೋವಿಡ್, ಹಂದಿಜ್ವರ, ನಿಫಾ ವೈರಸ್‌ ಕೇರಳದಲ್ಲಿ ಕಾಣಿಸಿಕೊಂಡು ನಂತರ ಕರ್ನಾಟಕಕ್ಕೂ ಹರಡಿತ್ತು. ಹೀಗಾಗಿ ಕೇರಳ ಗಡಿ ಮೂಲಕ ಮೈಸೂರಿಗೆ ಪ್ರವೇಶ ಪಡೆಯುವ ರೋಗಿಗಳಿಂದ ರಾಜ್ಯಕ್ಕೂ ಹರಡುವ ಸಾಧ್ಯತೆ ಇದೆ. ಹೀಗಾಗಿ ಹೆಚ್ಚಿನ ಮುಂಜಾಗ್ರತೆಯನ್ನು ವಹಿಸಲಾಗುತ್ತಿದೆ.

ಎಚ್‌ಡಿ ಕೋಟೆಯ ಗಡಿ ಭಾಗದಲ್ಲಿ ಹಲವರ ಅನಾರೋಗ್ಯಕ್ಕೆ ತುತ್ತಾಗಿದ್ದಾರೆ. ಜ್ವರ, ತಲೆನೋವು, ಶೀತದಿಂದ ಬಳಲುತ್ತಿದ್ದಾರೆ. ಹೀಗಾಗಿ ಎಚ್‌ಡಿಕೋಟೆಯ ತಾಲೂಕು ಆರೋಗ್ಯಾಧಿಕಾರಿಗಳು ಪುಣೆಯ ರಾಷ್ಟ್ರೀಯ ವೈರಾಲಜಿ ಸಂಸ್ಥೆಗೆ ಸ್ಯಾಂಪಲ್ ರವಾನಿಸಿದ್ದಾರೆ.

West Nile fever  Health department on alert
ಜನರಲ್ಲಿ ವೆಸ್ಟ್‌ ನೈಲ್‌ ಜ್ವರದ ಕುರಿತು ಜಾಗೃತಿ ಮೂಡಿಸುತ್ತಿರುವ ಆರೋಗ್ಯಾಧಿಕಾರಿಗಳು

ಈ ಬಗ್ಗೆ ಮೈಸೂರು ಜಿಲ್ಲೆಯ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ ಪಿ.ಸಿ ಕುಮಾರಸ್ವಾಮಿ ಮಾಹಿತಿ ನೀಡಿದ್ದಾರೆ. ಈಗಾಗಲೇ ಆರೋಗ್ಯ ಇಲಾಖೆಯು ಕಾಡಂಚಿನ ಗ್ರಾಮದ ಮನೆ – ಮನೆಗೆ ತೆರಳಿ ಮಾಹಿತಿ ನೀಡುತ್ತಿದ್ದೇವೆ. ಸಾಮಾನ್ಯ ಜ್ವರಕ್ಕೆ ನೀಡುವಂತೆ ವೆಸ್ಟ್ ನೈಲ್ ಜ್ವರಕ್ಕೂ ಚಿಕಿತ್ಸೆ ನೀಡಲಾಗುತ್ತದೆ.

ವೆಸ್ಟ್‌ ನೈಲ್‌ ಜ್ವರದ ಲಕ್ಷಣಗಳಿವು

1) ದಿಢೀರ್‌ ಜ್ವರ ಬರುವುದು
2) ವಿಪರೀತ ಮೈ-ಕೈ ನೋವು, ತಲೆನೋವು ಕಾಣಿಸಿಕೊಳ್ಳುವುದು
3) ದೇಹದ ಮೇಲೆ ದದ್ದುಗಳು ಕಾಣಿಸಿಕೊಳ್ಳುವುದು
4) ಕೆಲವೊಮ್ಮೆ ವಾಂತಿ ಆಗಲಿದೆ. ಇವು ವೆಸ್ಟ್ ನೈಲ್ ಜ್ವರದ ಲಕ್ಷಣಗಳಾಗಿವೆ. ಸಾಮಾನ್ಯವಾಗಿ ಈ ವೈರಸ್‌ ಸೊಳ್ಳೆಗಳಿಂದ ಹರಡುತ್ತದೆ. ಸೋಂಕಿತ ಪಕ್ಷಿಗಳನ್ನು ತಿನ್ನುವಾಗ ಸೋಂಕಿಗೆ ಒಳಗಾಗುತ್ತವೆ. ಅವು ಮನುಷ್ಯನನ್ನು ಕಚ್ಚಿದಾಗ ಈ ವೆಸ್ಟ್‌ ಬೈಲ್‌ ಜ್ವರ ಕಾಣಿಸಿಕೊಳ್ಳುತ್ತದೆ.

ಈ ರೀತಿಯ ಲಕ್ಷಣಗಳು ಕಂಡು ಬಂದರೆ ಕೂಡಲೇ ಸಮೀಪದ ಆಸ್ಪತ್ರೆಗೆ ಭೇಟಿ ನೀಡಿ ಸೂಕ್ತ ಚಿಕಿತ್ಸೆ ಪಡೆದುಕೊಳ್ಳಬೇಕು. ವೆಸ್ಟ್ ನೈಲ್ ಜ್ವರ ಮಾರಣಾಂತಿಕವಲ್ಲ. ಹಾಗಾಗಿ ಜನರು ಆತಂಕಕ್ಕೆ ಒಳಗಾಗುವ ಅವಶ್ಯಕತೆ ಇಲ್ಲ, ಆದರೆ ಎಚ್ಚರಿಕೆಯಿಂದ ಇರಬೇಕು.

ಇದನ್ನೂ ಓದಿ: Uttara Kannada News: ಸಾಂಕ್ರಾಮಿಕ ರೋಗಗಳು ಹರಡದಂತೆ ಎಚ್ಚರ ವಹಿಸಿ: ಡಿಸಿ ಮಾನಕರ್‌

ಮೈಸೂರಿನಲ್ಲಿ ಕಾಲರಾ ಅಟ್ಟಹಾಸ; ಕಲುಷಿತ ನೀರು ಕುಡಿದು 114 ಜನಕ್ಕೆ ಕಾಯಿಲೆ!

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರ ವಿಧಾನಸಭೆ ಕ್ಷೇತ್ರವಾದ ವರುಣದಲ್ಲಿ (Varuna) ಶುದ್ಧ ಕುಡಿಯುವ ನೀರಿನ ಸಮಸ್ಯೆ ತಾಂಡವವಾಡುತ್ತಿದ್ದು, ತಗಡೂರು ಗ್ರಾಮದಲ್ಲಿ ಇದರಿಂದ ಜನ ಕಾಲರಾಗೆ ತುತ್ತಾಗುತ್ತಿದ್ದಾರೆ. ತಗಡೂರು ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಇಲ್ಲದೆ, ಕಲುಷಿತ ನೀರು ಸೇವಿಸಿದ ಕಾರಣ 25 ಗ್ರಾಮಸ್ಥರು ಸೇರಿ 114 ಮಂದಿ ಕಾಲರಾ (Cholera) ಕಾಯಿಲೆಯಿಂದ ಬಳಲುತ್ತಿದ್ದಾರೆ. ವಾಂತಿ-ಭೇದಿಯಿಂದ ಜನ ತತ್ತರಿಸಿ ಹೋಗಿದ್ದು, ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ವಿರುದ್ಧ ಜನಾಕ್ರೋಶ ವ್ಯಕ್ತವಾಗಿದೆ.

ತಗಡೂರು ಗ್ರಾಮವು ನಂಜನಗೂಡು ತಾಲೂಕಿಗೆ ಸೇರಿದರೂ ವರುಣ ವಿಧಾನಸಭೆ ಕ್ಷೇತ್ರದ ವ್ಯಾಪ್ತಿಗೆ ಬರುತ್ತದೆ. ತಗಡೂರು ಗ್ರಾಮ ಪಂಚಾಯಿತಿಯ 1, 2 ಹಾಗೂ 3ನೇ ವಾಸಿಸುತ್ತಿರುವ ಜನರು ಕಾಲರಾಗೆ ತುತ್ತಾಗಿದ್ದಾರೆ. 114 ರೋಗಿಗಳಲ್ಲಿ ಐವರ ಸ್ಥಿತಿ ಗಂಭೀರವಾದ ಕಾರಣ ಅವರನ್ನು ಮೈಸೂರು ಆಸ್ಪತ್ರೆಗೆ ರವಾನಿಸಲಾಗಿದೆ. ಉಳಿದವರಿಗೆ ತಗಡೂರು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇದರ ಮಧ್ಯೆಯೇ, ಕಾಲರಾ ಹರಡಲು ಅಧಿಕಾರಿಗಳ ನಿರ್ಲಕ್ಷ್ಯವೇ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

12 ಕೈ ಪಂಪ್‌ಗಳಿದ್ದರೂ ಪ್ರಯೋಜನ ಇಲ್ಲ

ಗ್ರಾಮದಲ್ಲಿ 12 ಕೈ ಪಂಪ್‌ಗಳಿದ್ದು, ನಾಲ್ಕು ಕೈಪಂಪ್‌ಗಳ ನೀರು ಕುಡಿಯಲು ಯೋಗ್ಯವಿಲ್ಲ. ಆತಂಕಕಾರಿ ವರದಿ ಇದ್ದರೂ ತಗಡೂರು ಗ್ರಾಮ ಪಂಚಾಯಿತಿ ಅಧಿಕಾರಿಗಳು ಎಚ್ಚೆತ್ತುಕೊಂಡು, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಿಲ್ಲ. ಹಾಗಾಗಿ, ಕಲುಷಿತ ನೀರು ಸೇವಿಸಿ ನೂರಾರು ಜನ ಅಸ್ವಸ್ಥರಾಗಿದ್ದಾರೆ. ಇದರಿಂದಾಗಿ ಗ್ರಾಮಸ್ಥರು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ವಿರುದ್ಧ ಕಿಡಿ ಕಾರುತ್ತಿದ್ದಾರೆ.

ಜನಾಕ್ರೋಶದ ಬಳಿಕ ಗ್ರಾಮಕ್ಕೆ ಭೇಟಿ ನೀಡಿದ ಅಧಿಕಾರಿಗಳು.

ದಿಢೀರ್‌ ಕ್ರಮಕ್ಕೆ ಮುಂದಾದ ಅಧಿಕಾರಿಗಳು

ಗ್ರಾಮದಲ್ಲಿ ನೂರಾರು ಜನ ಕಾಲರಾಗೆ ತುತ್ತಾಗಿರುವ ಸುದ್ದಿ ತಿಳಿಯುತ್ತಲೇ ಅಧಿಕಾರಿಗಳ ದಂಡೇ ಗ್ರಾಮಕ್ಕೆ ತೆರಳಿದೆ. ಗ್ರಾಮಕ್ಕೆ ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ಕುಮಾರಸ್ವಾಮಿ, ನಂಜನಗೂಡು ತಹಸೀಲ್ದಾರ್ ಶಿವಕುಮಾರ್ ಕಾಸ್ನೂರು, ಜಿಲ್ಲಾ ಕಾಲರಾ ವೈದ್ಯಾಧಿಕಾರಿ ಡಾ. ಪುಟ್ಟತಾಯಮ್ಮ, ತಾಲೂಕು ವೈದ್ಯಾಧಿಕಾರಿ ಡಾ. ಈಶ್ವರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ, ಗ್ರಾಮದಲ್ಲಿರುವ ಸಾರ್ವಜನಿಕರಿಗೆ ಕೂಡ ಪ್ರತಿರೋಧಕ ಚುಚ್ಚುಮದ್ದು ನೀಡಲಾಗುತ್ತಿದೆ. ಪ್ರತಿ ಮನೆ ಮನೆಗೆ ಒಆರ್‌ಎಸ್ ಪೌಡರ್ ವಿತರಣೆ ಮಾಡಲಾಗಿದೆ. ಮನೆಯಲ್ಲಿ ಬಿಸಿ ನೀರು ಸೇವನೆ ಮಾಡಲು ಪ್ರತ್ಯೇಕವಾಗಿ ಕುಡಿಯುವ ನೀರಿನ ಟ್ಯಾಂಕ್ ವ್ಯವಸ್ಥೆ ಮಾಡಲಾಗಿದೆ.

ಗ್ರಾಮದಲ್ಲಿ ಅಧಿಕಾರಿಗಳು ಬೀಡು ಬಿಟ್ಟಿದ್ದು, ದಿನಕ್ಕೆ ಮೂರು ಬಾರಿ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರ ಜತೆಗೂಡಿ ವೈದ್ಯಾಧಿಕಾರಿಗಳು ಮನೆ ಮನೆಗೆ ಭೇಟಿ ನೀಡುತ್ತಿದ್ದಾರೆ. ಇಷ್ಟಾದರೂ ಪಿಡಿಒ ದಿವಾಕರ್, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಪೂರ್ಣಿಮಾ ನಾಪತ್ತೆಯಾಗಿದ್ದು, ಸಂಬಂಧಪಟ್ಟ ಜಿಲ್ಲಾ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಶಿಸ್ತು ಕ್ರಮ ಕೈಗೊಳ್ಳಬೇಕಿದೆ ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಆರೋಗ್ಯ

FSSAI Warning: ನೀವು ತಿನ್ನುವ ಮಾವಿನ ಹಣ್ಣು ಸುರಕ್ಷಿತವಾಗಿದೆಯೇ?

ಮಾವಿನ ಹಣ್ಣನ್ನು ಕೃತಕವಾಗಿ ಮಾಗಿಸಲು ಕ್ಯಾಲ್ಸಿಯಂ ಕಾರ್ಬೈಡ್ ಅನ್ನು ಬಳಸಲಾಗುತ್ತದೆ. ಇದರ ವಿರುದ್ಧ ವರ್ತಕರಿಗೆ ಗಂಭೀರ ಆರೋಗ್ಯ ಅಪಾಯಗಳನ್ನು ಉಲ್ಲೇಖಿಸಿ ಎಚ್ಚರಿಕೆಯನ್ನು ( FSSAI Warning) ನೀಡಲಾಗಿದೆ.

VISTARANEWS.COM


on

By

FSSAI alert
Koo

ಮಾರುಕಟ್ಟೆಯಲ್ಲಿ (market) ಮಾವಿನ (mango) ಹಣ್ಣುಗಳ ರಾಶಿ ಕಂಡಾಗ ಎಂಥವರ ಬಾಯಲ್ಲೂ ನೀರೂರುವಂತೆ ಮಾಡುತ್ತದೆ. ಆದರೆ ನಾವು ಹಣ ಕೊಟ್ಟು ಖರೀದಿ ಮಾಡಿ ತಂದ ಮಾವಿನ ಹಣ್ಣುಗಳು ಸುರಕ್ಷಿತವಾಗಿ ಇದೆಯೇ? ಯಾಕೆಂದರೆ ಮಾವಿನ ಹಣ್ಣುಗಳಲ್ಲಿರುವ ಕ್ಯಾಲ್ಸಿಯಂ ಕಾರ್ಬೈಡ್ (calcium carbide) ಅಪಾಯಗಳ ವಿರುದ್ಧ ಕೇಂದ್ರ ಆಹಾರ ನಿಯಂತ್ರಣ ಸಂಸ್ಥೆಯಾದ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ (FSSAI Warning) ವ್ಯಾಪಾರಿಗಳಿಗೆ ಎಚ್ಚರಿಕೆ ನೀಡಿದೆ.

ಮಾವಿನ ಹಣ್ಣಿನ ಋತುವಿನಲ್ಲಿ ಕ್ಯಾಲ್ಸಿಯಂ ಕಾರ್ಬೈಡ್ ಬಳಸುವುದರ ಬಗ್ಗೆ ನಿಷೇಧವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ರೈಪನಿಂಗ್ ಚೇಂಬರ್‌ಗಳನ್ನು ನಿರ್ವಹಿಸುವ ವ್ಯಾಪಾರಿಗಳಿಗೆ ಎಫ್‌ಎಸ್‌ಎಸ್‌ಎಐ ಎಚ್ಚರಿಕೆ ನೀಡಿದೆ.
ಮಾವಿನ ಹಣ್ಣನ್ನು ಕೃತಕವಾಗಿ ಮಾಗಿಸಲು ಕ್ಯಾಲ್ಸಿಯಂ ಕಾರ್ಬೈಡ್ ಅನ್ನು ಬಳಸಲಾಗುತ್ತದೆ. ಇದರ ವಿರುದ್ಧ ವರ್ತಕರಿಗೆ ಗಂಭೀರ ಆರೋಗ್ಯ ಅಪಾಯಗಳನ್ನು ಉಲ್ಲೇಖಿಸಿ ಎಚ್ಚರಿಕೆಯನ್ನು ನೀಡಲಾಗಿದೆ.

ಮಾವಿನ ಹಣ್ಣಿನ ಋತುವಿನಲ್ಲಿ ಕ್ಯಾಲ್ಸಿಯಂ ಕಾರ್ಬೈಡ್ ಅನ್ನು ಬಳಸುವುದರ ಮೇಲಿನ ನಿಷೇಧವನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಎಫ್‌ಎಸ್‌ಎಸ್‌ಎಐ ಹಣ್ಣಿನ ವ್ಯಾಪಾರಿಗಳು, ಹ್ಯಾಂಡ್ಲರ್‌ಗಳು ಮತ್ತು ಫುಡ್ ಬ್ಯುಸಿನೆಸ್ ಆಪರೇಟರ್‌ಗಳು (ಎಫ್‌ಬಿಒಗಳು) ಪಕ್ವಗೊಳಿಸುವ ಕೋಣೆಗಳನ್ನು ನಿರ್ವಹಿಸುವ ಎಚ್ಚರಿಕೆ ನೀಡಿದೆ.

ಕ್ಯಾಲ್ಸಿಯಂ ಕಾರ್ಬೈಡ್‌ನ ಪರಿಣಾಮ?

ಮಾವಿನಹಣ್ಣಿನಂತಹ ಹಣ್ಣುಗಳನ್ನು ಹಣ್ಣಾಗಲು ಬಳಸುವ ಕ್ಯಾಲ್ಸಿಯಂ ಕಾರ್ಬೈಡ್, ಆರ್ಸೆನಿಕ್ ಮತ್ತು ಫಾಸ್ಪರಸ್‌ನ ಹಾನಿಕಾರಕ ಕುರುಹುಗಳನ್ನು ಹೊಂದಿರುವ ಅಸಿಟಿಲೀನ್ ಅನಿಲವನ್ನು ಬಿಡುಗಡೆ ಮಾಡುತ್ತದೆ. ‘ಮಸಾಲಾ’ ಎಂದು ಕರೆಯಲ್ಪಡುವ ಈ ಪದಾರ್ಥಗಳು ತಲೆತಿರುಗುವಿಕೆ, ಆಗಾಗ್ಗೆ ಬಾಯಾರಿಕೆ, ಕಿರಿಕಿರಿ, ದೌರ್ಬಲ್ಯ, ನುಂಗಲು ತೊಂದರೆ, ವಾಂತಿ ಮತ್ತು ಚರ್ಮದ ಹುಣ್ಣುಗಳನ್ನು ಉಂಟುಮಾಡಬಹುದು. ಅಸಿಟಿಲೀನ್ ಅನಿಲವು ಹ್ಯಾಂಡ್ಲರ್‌ಗಳಿಗೆ ಅಪಾಯಕಾರಿಯಾಗಿದೆ ಮತ್ತು ಆರ್ಸೆನಿಕ್ ಮತ್ತು ರಂಜಕದ ಅವಶೇಷಗಳು ಹಣ್ಣುಗಳ ಮೇಲೆ ಉಳಿಯಬಹುದು.

ಸಾಮಾನ್ಯವಾಗಿ ಕಾರ್ಬೈಡ್ ಗ್ಯಾಸ್ ಎಂದು ಕರೆಯಲ್ಪಡುವ ಅಸಿಟಿಲೀನ್ ಅನಿಲದ ಬಳಕೆಯಿಂದ ಕೃತಕವಾಗಿ ಮಾಗಿದ ಹಣ್ಣುಗಳನ್ನು ಯಾವುದೇ ವ್ಯಕ್ತಿಯು ಮಾರಾಟ ಮಾಡಬಾರದು ಎಂದು ಆಹಾರ ಸುರಕ್ಷತೆ ಮತ್ತು ಮಾನದಂಡಗಳು ನಿಷೇಧ ಮತ್ತು ಮಾರಾಟದ ಮೇಲಿನ ನಿರ್ಬಂಧಗಳ ನಿಯಮಗಳು-2011 ಹೇಳುತ್ತವೆ.


ಯಾವುದಕ್ಕೆ ಅನುಮತಿ ಇದೆ?

ಎಫ್‌ಎಸ್‌ಎಸ್‌ಎಐ ಪ್ರಕಾರ ಹಣ್ಣು ಹಣ್ಣಾಗಿಸಲು ಸುರಕ್ಷಿತ ಪರ್ಯಾಯವಾಗಿ ಎಥಿಲೀನ್ ಅನಿಲವನ್ನು ಬಳಸಲು ಅನುಮತಿ ನೀಡುತ್ತದೆ. ಎಥಿಲೀನ್ ಅನಿಲ, 100ಪಿಪಿಎಂವರೆಗಿನ ಸಾಂದ್ರತೆಗಳಲ್ಲಿ ಹಣ್ಣಾಗುವುದನ್ನು ನಿಯಂತ್ರಿಸುವ ನೈಸರ್ಗಿಕ ಹಾರ್ಮೋನ್ ಆಗಿದೆ. ಹಣ್ಣು ಎಥಿಲೀನ್ ಅನ್ನು ಗಣನೀಯ ಪ್ರಮಾಣದಲ್ಲಿ ಉತ್ಪಾದಿಸುವವರೆಗೆ ಇದು ನೈಸರ್ಗಿಕ ಮಾಗಿದ ಪ್ರಕ್ರಿಯೆಯನ್ನು ಪ್ರಚೋದಿಸುತ್ತದೆ. ಹೆಚ್ಚುವರಿಯಾಗಿ ಕೇಂದ್ರೀಯ ಕೀಟನಾಶಕ ಮಂಡಳಿ ಮತ್ತು ನೋಂದಣಿ ಸಮಿತಿ (CIB & RC) ಮಾವು ಮತ್ತು ಇತರ ಹಣ್ಣುಗಳ ಏಕರೂಪದ ಪಕ್ವತೆಗಾಗಿ ಎಥೆಫೋನ್ 39 ಪ್ರತಿಶತ ಎಸ್ ಎಲ್ ಅನ್ನು ಅನುಮೋದಿಸಿದೆ.

ಗುರುತಿಸುವುದು ಹೇಗೆ?

ಕ್ಯಾಲ್ಸಿಯಂ ಕಾರ್ಬೈಡ್‌ನಿಂದ ಹಣ್ಣಾದ ಮಾವಿನ ಹಣ್ಣನ್ನು ಗುರುತಿಸುವುದು ಸುಲಭ.

ವಿಶ್ವಾಸಾರ್ಹ ಮೂಲಗಳಿಂದ ಖರೀದಿಸಿ

ಹಣ್ಣುಗಳು ಮತ್ತು ತರಕಾರಿಗಳನ್ನು ತಿಳಿದಿರುವ ಮಾರಾಟಗಾರರು, ಪ್ರತಿಷ್ಠಿತ ಅಂಗಡಿಗಳು ಅಥವಾ ವಿತರಕರು ತಮ್ಮ ಉತ್ಪನ್ನಗಳನ್ನು ಹಾನಿಕಾರಕ ಅಥವಾ ನಿಷೇಧಿತ ರಾಸಾಯನಿಕಗಳಿಂದ ಹಣ್ಣಾಗಿಲ್ಲ ಎಂದು ಹೇಳಿಕೊಳ್ಳುತ್ತಾರೆ.

ಸಂಪೂರ್ಣವಾಗಿ ತೊಳೆಯುವುದು

ಯಾವುದೇ ಸಂಭಾವ್ಯ ಮೇಲ್ಮೈ ಮಾಲಿನ್ಯಕಾರಕಗಳನ್ನು ತೆಗೆದುಹಾಕಲು ತಿನ್ನುವ ಮೊದಲು ಕುಡಿಯುವ ನೀರಿನಲ್ಲಿ ಹಣ್ಣುಗಳನ್ನು ಚೆನ್ನಾಗಿ ತೊಳೆಯಿರಿ.

ಕಪ್ಪು ಕಲೆಗಳನ್ನು ತಪ್ಪಿಸಿ

ಮಾವಿನ ಹಣ್ಣುಗಳ ಚರ್ಮದ ಮೇಲೆ ಕಪ್ಪು ಮಚ್ಚೆಗಳಿರುವ ಹಣ್ಣುಗಳಿಂದ ದೂರವಿರಿ. ಏಕೆಂದರೆ ಇವುಗಳು ಕ್ಯಾಲ್ಸಿಯಂ ಕಾರ್ಬೈಡ್‌ನಿಂದ ಅಸಿಟಿಲೀನ್ ಅನಿಲದಿಂದ ಹಣ್ಣಾಗುತ್ತವೆ.

ಇದನ್ನೂ ಓದಿ: Tips for Mothers: ಆಹಾರ- ಆರೋಗ್ಯ; ದುಡಿಯುವ ಬ್ಯುಸಿ ತಾಯಂದಿರಿಗೆ ಇಲ್ಲಿದೆ ಕಿವಿಮಾತು!

ವಿನ್ಯಾಸವನ್ನು ಪರಿಶೀಲಿಸಿ

ಏಕರೂಪದ ಬಣ್ಣದ ವಿನ್ಯಾಸದೊಂದಿಗೆ ಮಾವಿನಹಣ್ಣು ಮತ್ತು ಇತರ ಹಣ್ಣುಗಳ ಬಗ್ಗೆ ಜಾಗರೂಕರಾಗಿರಿ. ಏಕೆಂದರೆ ಇದು ಸಂಭವನೀಯ ರಾಸಾಯನಿಕ ಪಕ್ವತೆಯ ಸಂಕೇತವಾಗಿದೆ.

ವಾಸನೆ ಮತ್ತು ಶೆಲ್ಫ್ ಲೈಫ್

ಕಲಬೆರಕೆ ಹಣ್ಣುಗಳು ಸ್ವಲ್ಪ ಕಟುವಾದ ವಾಸನೆ ಮತ್ತು ಕಡಿಮೆ ಶೆಲ್ಫ್ ಜೀವಿತಾವಧಿಯನ್ನು ಹೊಂದಿರುತ್ತದೆ ಎಂಬುದು ತಿಳಿದಿರಲಿ. ಸಾಮಾನ್ಯವಾಗಿ ಮಾಗಿದ ಕ್ಯಾಲ್ಸಿಯಂ ಕಾರ್ಬೈಡ್ ಬಳಕೆಯನ್ನು ಸೂಚಿಸುತ್ತದೆ.

Continue Reading

ಕರ್ನಾಟಕ

Cholera: ಸಿದ್ದರಾಮಯ್ಯ ತವರು ಕ್ಷೇತ್ರದಲ್ಲಿ ಕಾಲರಾ ಅಟ್ಟಹಾಸ; ಕಲುಷಿತ ನೀರು ಕುಡಿದು 114 ಜನಕ್ಕೆ ಕಾಯಿಲೆ!

Cholera: ಗ್ರಾಮದಲ್ಲಿ 12 ಕೈ ಪಂಪ್‌ಗಳಿದ್ದು, ನಾಲ್ಕು ಕೈಪಂಪ್‌ಗಳ ನೀರು ಕುಡಿಯಲು ಯೋಗ್ಯವಿಲ್ಲ. ಆತಂಕಕಾರಿ ವರದಿ ಇದ್ದರೂ ತಗಡೂರು ಗ್ರಾಮ ಪಂಚಾಯಿತಿ ಅಧಿಕಾರಿಗಳು ಎಚ್ಚೆತ್ತುಕೊಂಡು, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಿಲ್ಲ. ಹಾಗಾಗಿ, ಕಲುಷಿತ ನೀರು ಸೇವಿಸಿ ನೂರಾರು ಜನ ಅಸ್ವಸ್ಥರಾಗಿದ್ದಾರೆ. ಇದರಿಂದಾಗಿ ಗ್ರಾಮಸ್ಥರು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ವಿರುದ್ಧ ಕಿಡಿ ಕಾರಿದ್ದಾರೆ.

VISTARANEWS.COM


on

Cholera
Koo

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರ ವಿಧಾನಸಭೆ ಕ್ಷೇತ್ರವಾದ ವರುಣದಲ್ಲಿ (Varuna) ಶುದ್ಧ ಕುಡಿಯುವ ನೀರಿನ ಸಮಸ್ಯೆ ತಾಂಡವವಾಡುತ್ತಿದ್ದು, ತಗಡೂರು ಗ್ರಾಮದಲ್ಲಿ ಇದರಿಂದ ಜನ ಕಾಲರಾಗೆ ತುತ್ತಾಗುತ್ತಿದ್ದಾರೆ. ತಗಡೂರು ಗ್ರಾಮದಲ್ಲಿ ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಇಲ್ಲದೆ, ಕಲುಷಿತ ನೀರು ಸೇವಿಸಿದ ಕಾರಣ 25 ಗ್ರಾಮಸ್ಥರು ಸೇರಿ 114 ಮಂದಿ ಕಾಲರಾ (Cholera) ಕಾಯಿಲೆಯಿಂದ ಬಳಲುತ್ತಿದ್ದಾರೆ. ವಾಂತಿ-ಭೇದಿಯಿಂದ ಜನ ತತ್ತರಿಸಿ ಹೋಗಿದ್ದು, ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ವಿರುದ್ಧ ಜನಾಕ್ರೋಶ ವ್ಯಕ್ತವಾಗಿದೆ.

ತಗಡೂರು ಗ್ರಾಮವು ನಂಜನಗೂಡು ತಾಲೂಕಿಗೆ ಸೇರಿದರೂ ವರುಣ ವಿಧಾನಸಭೆ ಕ್ಷೇತ್ರದ ವ್ಯಾಪ್ತಿಗೆ ಬರುತ್ತದೆ. ತಗಡೂರು ಗ್ರಾಮ ಪಂಚಾಯಿತಿಯ 1, 2 ಹಾಗೂ 3ನೇ ವಾಸಿಸುತ್ತಿರುವ ಜನರು ಕಾಲರಾಗೆ ತುತ್ತಾಗಿದ್ದಾರೆ. 114 ರೋಗಿಗಳಲ್ಲಿ ಐವರ ಸ್ಥಿತಿ ಗಂಭೀರವಾದ ಕಾರಣ ಅವರನ್ನು ಮೈಸೂರು ಆಸ್ಪತ್ರೆಗೆ ರವಾನಿಸಲಾಗಿದೆ. ಉಳಿದವರಿಗೆ ತಗಡೂರು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಇದರ ಮಧ್ಯೆಯೇ, ಕಾಲರಾ ಹರಡಲು ಅಧಿಕಾರಿಗಳ ನಿರ್ಲಕ್ಷ್ಯವೇ ಎಂದು ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

12 ಕೈ ಪಂಪ್‌ಗಳಿದ್ದರೂ ಪ್ರಯೋಜನ ಇಲ್ಲ

ಗ್ರಾಮದಲ್ಲಿ 12 ಕೈ ಪಂಪ್‌ಗಳಿದ್ದು, ನಾಲ್ಕು ಕೈಪಂಪ್‌ಗಳ ನೀರು ಕುಡಿಯಲು ಯೋಗ್ಯವಿಲ್ಲ. ಆತಂಕಕಾರಿ ವರದಿ ಇದ್ದರೂ ತಗಡೂರು ಗ್ರಾಮ ಪಂಚಾಯಿತಿ ಅಧಿಕಾರಿಗಳು ಎಚ್ಚೆತ್ತುಕೊಂಡು, ಶುದ್ಧ ಕುಡಿಯುವ ನೀರಿನ ವ್ಯವಸ್ಥೆ ಮಾಡಿಲ್ಲ. ಹಾಗಾಗಿ, ಕಲುಷಿತ ನೀರು ಸೇವಿಸಿ ನೂರಾರು ಜನ ಅಸ್ವಸ್ಥರಾಗಿದ್ದಾರೆ. ಇದರಿಂದಾಗಿ ಗ್ರಾಮಸ್ಥರು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ವಿರುದ್ಧ ಕಿಡಿ ಕಾರುತ್ತಿದ್ದಾರೆ.

ಜನಾಕ್ರೋಶದ ಬಳಿಕ ಗ್ರಾಮಕ್ಕೆ ಭೇಟಿ ನೀಡಿದ ಅಧಿಕಾರಿಗಳು.

ದಿಢೀರ್‌ ಕ್ರಮಕ್ಕೆ ಮುಂದಾದ ಅಧಿಕಾರಿಗಳು

ಗ್ರಾಮದಲ್ಲಿ ನೂರಾರು ಜನ ಕಾಲರಾಗೆ ತುತ್ತಾಗಿರುವ ಸುದ್ದಿ ತಿಳಿಯುತ್ತಲೇ ಅಧಿಕಾರಿಗಳ ದಂಡೇ ಗ್ರಾಮಕ್ಕೆ ತೆರಳಿದೆ. ಗ್ರಾಮಕ್ಕೆ ಜಿಲ್ಲಾ ಆರೋಗ್ಯ ಅಧಿಕಾರಿ ಡಾ. ಕುಮಾರಸ್ವಾಮಿ, ನಂಜನಗೂಡು ತಹಸೀಲ್ದಾರ್ ಶಿವಕುಮಾರ್ ಕಾಸ್ನೂರು, ಜಿಲ್ಲಾ ಕಾಲರಾ ವೈದ್ಯಾಧಿಕಾರಿ ಡಾ. ಪುಟ್ಟತಾಯಮ್ಮ, ತಾಲೂಕು ವೈದ್ಯಾಧಿಕಾರಿ ಡಾ. ಈಶ್ವರ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ, ಗ್ರಾಮದಲ್ಲಿರುವ ಸಾರ್ವಜನಿಕರಿಗೆ ಕೂಡ ಪ್ರತಿರೋಧಕ ಚುಚ್ಚುಮದ್ದು ನೀಡಲಾಗುತ್ತಿದೆ. ಪ್ರತಿ ಮನೆ ಮನೆಗೆ ಒಆರ್‌ಎಸ್ ಪೌಡರ್ ವಿತರಣೆ ಮಾಡಲಾಗಿದೆ. ಮನೆಯಲ್ಲಿ ಬಿಸಿ ನೀರು ಸೇವನೆ ಮಾಡಲು ಪ್ರತ್ಯೇಕವಾಗಿ ಕುಡಿಯುವ ನೀರಿನ ಟ್ಯಾಂಕ್ ವ್ಯವಸ್ಥೆ ಮಾಡಲಾಗಿದೆ.

ಗ್ರಾಮದಲ್ಲಿ ಅಧಿಕಾರಿಗಳು ಬೀಡು ಬಿಟ್ಟಿದ್ದು, ದಿನಕ್ಕೆ ಮೂರು ಬಾರಿ ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರ ಜತೆಗೂಡಿ ವೈದ್ಯಾಧಿಕಾರಿಗಳು ಮನೆ ಮನೆಗೆ ಭೇಟಿ ನೀಡುತ್ತಿದ್ದಾರೆ. ಇಷ್ಟಾದರೂ ಪಿಡಿಒ ದಿವಾಕರ್, ತಾಪಂ ಕಾರ್ಯನಿರ್ವಾಹಕ ಅಧಿಕಾರಿ ಪೂರ್ಣಿಮಾ ನಾಪತ್ತೆಯಾಗಿದ್ದು, ಸಂಬಂಧಪಟ್ಟ ಜಿಲ್ಲಾ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಶಿಸ್ತು ಕ್ರಮ ಕೈಗೊಳ್ಳಬೇಕಿದೆ ಎಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಇದನ್ನೂ ಓದಿ: SSLC Grace Marks: ಯಾರನ್ನು ಕೇಳಿ ಶೇ. 20 ಗ್ರೇಸ್‌ ಮಾರ್ಕ್ಸ್‌ ಕೊಟ್ಟಿರಿ? ಶಿಕ್ಷಣ ಇಲಾಖೆ ವಿರುದ್ಧ ಹರಿಹಾಯ್ದ ಸಿದ್ದರಾಮಯ್ಯ!

Continue Reading

ಆರೋಗ್ಯ

Tips for Mothers: ಆಹಾರ- ಆರೋಗ್ಯ; ದುಡಿಯುವ ಬ್ಯುಸಿ ತಾಯಂದಿರಿಗೆ ಇಲ್ಲಿದೆ ಕಿವಿಮಾತು!

Tips for Mothers: ಕೆಲಸದ ಧಾವಂತದಲ್ಲಿ, ಗಡಿಬಿಡಿಯಲ್ಲಿ ಇಂಥ ಅಮ್ಮಂದಿರು ಮನೆಯವರಿಗೆ ಬೇಕಾದ್ದೆಲ್ಲವನ್ನೂ ಮಾಡಿ ಕೊಟ್ಟರೂ ತಮ್ಮ ಆಹಾರ, ಕಾಳಜಿಯ ಬಗ್ಗೆ ಅತ್ಯಂತ ಕಡಿಮೆ ಗಮನ ಹರಿಸುತ್ತಾರೆ. ಎಲ್ಲರ ಬೇಕು ಬೇಡಗಳ ಬಗ್ಗೆ ಗಮನ ಹರಿಸುವುದರಲ್ಲೇ ಅವರ ದಿನ ಕಳೆದು ಹೋಗುತ್ತದೆ. ಆದರೆ ದುಡಿಯುವ ತಾಯಂದಿರು ತಮ್ಮ ಆಹಾರ, ಆರೋಗ್ಯದ ಕಾಳಜಿಯನ್ನು ಮೊದಲು ಮಾಡಿಕೊಳ್ಳಬೇಕು. ಯಾಕೆಂದರೆ ಅವರು ಆರೋಗ್ಯವಾಗಿದ್ದರೆ ಮಾತ್ರ ಮನೆ ಮಂದಿ ಎಲ್ಲ ಆರೋಗ್ಯ ಚೆನ್ನಾಗಿರಲು ಸಾಧ್ಯ.

VISTARANEWS.COM


on

By

Tips for Mothers
Koo

ದುಡಿಯುವ ಅಮ್ಮಂದಿರಿಗೆ (Tips for Mothers) ತಮ್ಮ ವೃತ್ತಿಯನ್ನೂ ಮಕ್ಕಳನ್ನೂ (children) ಸಂಸಾರವನ್ನೂ (family) ತೂಗಿಸಿಕೊಂಡು ಹೋಗುವುದೇ ದೊಡ್ಡ ಸವಾಲು. ಕೆಲಸದ (work) ಧಾವಂತದಲ್ಲಿ, ಗಡಿಬಿಡಿಯಲ್ಲಿ ಇಂಥ ಅಮ್ಮಂದಿರು ಮನೆಯವರಿಗೆ ಬೇಕಾದ್ದೆಲ್ಲವನ್ನೂ ಮಾಡಿ ಕೊಟ್ಟರೂ ತಮ್ಮ ಆಹಾರ, ಕಾಳಜಿಯ ಬಗ್ಗೆ ಅತ್ಯಂತ ಕಡಿಮೆ ಗಮನ ಹರಿಸುತ್ತಾರೆ.

ಮಕ್ಕಳಿಗೆ ಬೇಕಾದ ಆಹಾರವನ್ನು, ಅವರ ಬೇಕು ಬೇಡಗಳನ್ನು ಗಮನ ಹರಿಸುವುದರಲ್ಲೇ ದಿನ ಕಳೆದು ಹೋಗಿ ತಮ್ಮ ಆಹಾರದ, ಆರೋಗ್ಯದ ಕಾಳಜಿಯನ್ನು ಮಾಡುವುದು ಗೌಣವಾಗುತ್ತದೆ. ಆದರೆ, ಮಹಿಳೆಯರ ಅತ್ಯಂತ ಅಗತ್ಯವಿರುವ ಇಂಥ ನಡುವಯಸ್ಸಿನಲ್ಲಿಯೇ ಬೇಕಾದ ಅಗತ್ಯ ಪೋಷಕಾಂಶಗಳು ಮಹಿಳೆಯರಿಗೆ ದಕ್ಕದೆ, ಹಲವಾರು ಆರೋಗ್ಯದ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಹಾಗಾಗಿ, ಈ ಸುಲಭ ಅಭ್ಯಾಸಗಳನ್ನಾದರೂ ಬೆಳೆಸಿಕೊಳ್ಳುವ ಮೂಲಕ ದುಡಿಯುವ ಮಹಿಳೆಯರು ತಮ್ಮ ಆರೋಗ್ಯದ ಕಾಳಜಿಯನ್ನು ವಹಿಸಿಕೊಳ್ಳಬಗಹುದು. ಅವು ಯಾವುವು ಎಂಬುದನ್ನು ನೋಡೋಣ.

ಬಾದಾಮಿ ಗೆಳೆಯನಾಗಲಿ

ಬಾದಾಮಿ ನಿಮ್ಮ ಗೆಳೆಯನಾಗಲಿ. ಕಚೇರಿಗೆ ಹೋಗುವಾಗ ಒಂದಿಷ್ಟು ಬಾದಾಮಿ ನಿಮ್ಮ ಬ್ಯಾಗ್‌ನಲ್ಲಿರಲಿ. ಇದು ನಿಮ್ಮ ಆಪತ್ಬಾಂಧವನಾಗಿ, ಗೆಳೆಯನಾಗಿ ಸದಾ ನಿಮಮ ಸಹಾಯಕ್ಕೆ ಬರುತ್ತದೆ. ಪ್ರೊಟೀನ್‌, ಆರೋಗ್ಯಯುತ ಕೊಬ್ಬು, ನಾರಿನಂಶ ಹಾಗೂ ಸಾಕಷ್ಟು ಪೋಷಕಾಂಶಗಳನ್ನು ಹೊಂದಿರುವ ಬಾದಾಮಿಯನ್ನು ಕಚೇರಿಯ ಬಿಡುವಿನಲ್ಲಿ ಹೊಟ್ಟೆಗಿಳಿಸಬಹುದು. ಆಗ, ಏನೋ ಸಿಕ್ಕಿದ್ದನ್ನು ತಿನ್ನುವ ಅಭ್ಯಾಸಕ್ಕೆ ಕಡಿವಾಣ ಬೀಳುತ್ತದೆ. ಮಹಿಳೆಯರ ದೇಹಕ್ಕೆ ಅಗತ್ಯ ಪೋಷಕಾಂಶಗಳೂ ದಕ್ಕುತ್ತದೆ. ರೋಗ ನಿರೋಧಕ ಶಕ್ತಿ ಹೆಚ್ಚುವುದಲ್ಲದೆ, ಚರ್ಮ, ಕೂದಲ ಆರೋಗ್ಯವೂ ಇಮ್ಮಡಿಗೊಳ್ಳುತ್ತದೆ.

ಸಮಯ ಮೀಸಲಿಡಿ

ವಾರಾಂತ್ಯದಲ್ಲಿ ಒಂದಿಷ್ಟು ಸಮಯ ಕೇವಲ ನಿಮಗಾಗಿ ಮೀಸಲಿಡಿ. ಆ ವಾರವಿಡೀ, ಕಚೇರಿಯಲ್ಲಿ ನೀವು ತಿನ್ನಬಹುದಾದ ಆರೋಗ್ಯಯುತ ಆಹಾರಗಳ ಸೇವನೆಗಾಗಿ ಪಟ್ಟಿ ತಯಾರಿಸಿ. ಮುಂಚಿತವಾಗಿ ಪಟ್ಟಿ ರೆಡಿ ಮಾಡುವುದರಿಂದ ಪ್ರತಿ ದಿನ ಯಾವ ಸ್ನ್ಯಾಕ್ಸ್‌ ತಾನು ತಿನ್ನಬೇಕೆಂಬ ಮುಂಚಿತ ಅರಿವು ಇರುತ್ತದೆ.

ಸರಳ ಆಹಾರ ತಯಾರಿಸಿ

ಸುಲಭ ಹಾಗೂ ಸರಳವಾದ ಆಹಾರ ತಯಾರಿಸಿ. ವಾರಾಂತ್ಯದಲ್ಲೇ, ಈ ಬಗ್ಗೆ ತಯಾರಿ ನಡೆಸಿ, ಒಂದಿಷ್ಟು ಅಡುಗೆಗೆ ಪೂರಕ ತಯಾರಿಯನ್ನು ಮಾಡಿಡಬಹುದು. ಉದಾಹರಣೆಗೆ ಮಾರುಕಟ್ಟೆಯ ಕೆಚಪ್‌ ಪದೇ ಪದೇ ಬಳಸುವ ಮೊದಲು ಟೊಮೇಟೋ ಚಟ್ನಿ ತಯಾರಿಸಿ ಇಟ್ಟುಕೊಳ್ಳಬಹದು. ಒಂದಿಷ್ಟು ಚಟ್ನಿಪುಡಿಗಳು, ತರಕಾರಿ ಕತ್ತರಿಸಿಡುವುದು, ಹಿಟ್ಟು ಮೊದಲೇ ರೆಡಿ ಮಾಡಿಡುವುದು ಇತ್ಯಾದಿ ಕೆಲಸಗಳನ್ನು ಮಾಡಿದರೆ, ಕೆಲಸ ಸುಲಭವಾಗುತ್ತದೆ.


ಆರೋಗ್ಯಕರ ಸ್ನ್ಯಾಕ್

ಕಚೇರಿಗೆ ಒಯ್ಯುವಾಗ ಆರೋಗ್ಯಕರ ಸ್ನ್ಯಾಕ್‌ ತೆಗೆದುಕೊಂಡು ಹೋಗಿ. ಉದಾಹರಣೆ, ಒಂದು ಹಣ್ಣು, ಒಂದಿಷ್ಟು ಬಾದಾಮಿ ಅಥವಾ ಬೀಜಗಳು, ಒಣ ಹಣ್ಣುಗಳು, ಮೊಳಕೆಕಾಳು ಹಸಿ ತರಕಾರಿಗಳು, ಸಲಾಡ್‌ ಇತ್ಯಾದಿಗಳನ್ನು ತೆಗೆದುಕೊಂಡು ಹೋಗಬಹುದು.

ಇದನ್ನೂ ಓದಿ: Food Tips Kannada: ಶಕ್ತಿವರ್ಧಕಗಳಲ್ಲ, ನಿಮ್ಮ ಶಕ್ತಿಯನ್ನೇ ಬಸಿದು ತೆಗೆಯುವ ಆಹಾರಗಳಿವು!

ಪೋಷಕಾಂಶಗಳ ಆಹಾರ

ಆಹಾರದ ಆಯ್ಕೆ ಮಾಡುವಾಗ ಪೋಷಕಾಂಶಗಳಿಂದ ಸಮೃದ್ಧವಾದ್ದನ್ನೇ ಆಯ್ಕೆ ಮಾಡಿ. ಸಂಪೂರ್ಣ ಆಹಾರದತ್ತ ಗಮನ ಇರಲಿ. ನಿತ್ಯವೂ ಬಗೆಬಗೆಯ ಪೋಷಕಾಂಶಗಳ ವೆರೈಟಿ ಆಹಾರಗಳು ಹೊಟ್ಟೆ ಸೇರಲಿ. ಒಂದೇ ಬಗೆಯ ನೀರಸ ಆಹಾರಗಳ ಅಭ್ಯಾಸವಿದ್ದರೆ ಬಿಟ್ಟುಬಿಡಿ.

ಮೈಂಡ್‌ಫುಲ್‌ ಈಟಿಂಗ್‌

ಮೈಂಡ್‌ಫುಲ್‌ ಈಟಿಂಗ್‌ ಬಗ್ಗೆ ಗಮನ ಹರಿಸಿ. ಅಂದರೆ ಪ್ರತಿ ತುತ್ತನ್ನೂ ಅನುಭವಿಸಿ ತಿನ್ನಿ. ನಿಧಾನವಾಗಿ ತಿನ್ನಲು ಅಭ್ಯಾಸ ಮಾಡಿ. ಊಟ ಮಾಡುವಾಗ ಬೇರೆ ಕೆಲಸಗಳ ಮೇಲೆ ಗಮನ ಹರಿಸಬೇಡಿ. ಊಟವನ್ನು ಅನುಭವಿಸಿ ಚೆನ್ನಾಗಿ ಜಗಿದು ನಿಧಾನವಾಗಿ ತಿನ್ನಿ. ನಿಧಾನವಾಗಿ ತಿನ್ನುವುದರಿಂದ ಹೆಚ್ಚು ತಿನ್ನುವ ಬಯಕೆಯಾಗುವುದಿಲ್ಲ. ಅಗತ್ಯಕ್ಕಿಂದ ಹೆಚ್ಚು ಉಣ್ಣುವುದು ತಪ್ಪುತ್ತದೆ. ಸರಿಯಾಗಿ ನಮ್ಮ ದೇಹಕ್ಕೆ ಎಷ್ಟು ಬೇಕೋ ಅಷ್ಟೇ ಆಹಾರ ಸೇರುತ್ತದೆ.

Continue Reading
Advertisement
Pralhad Joshi
ಕರ್ನಾಟಕ4 hours ago

Pralhad Joshi: ರಾಜ್ಯದಲ್ಲಿ ಹತ್ಯೆ, ಆತ್ಮಹತ್ಯೆಗಳೇ ಅಧಿಕ, ಅಭಿವೃದ್ಧಿ ಸಮಾಧಿ: ಪ್ರಲ್ಹಾದ್‌ ಜೋಶಿ ಟೀಕೆ

Ebrahim Raisi
ವಿದೇಶ4 hours ago

Ebrahim Raisi: ಪತನದ ಬಳಿಕ ಹೆಲಿಕಾಪ್ಟರ್‌ ನಾಪತ್ತೆ; ಇರಾನ್ ಅಧ್ಯಕ್ಷ ಇಬ್ರಾಹಿಂ ರೈಸಿ ಸಾವು?

Mrs India Karnataka
ದಕ್ಷಿಣ ಕನ್ನಡ4 hours ago

Mrs India Karnataka: ಮಿಸಸ್ ಕರ್ನಾಟಕ ಮಂಗಳೂರು ಗ್ರ್ಯಾಂಡ್ ಫಿನಾಲೆ; ಸಾಂಪ್ರದಾಯಿಕ, ಮಾಡರ್ನ್ ಉಡುಗೆಯಲ್ಲಿ ಮಿಂಚಿದ ನಾರಿಯರು

IPL 2024 Eliminato
ಕ್ರೀಡೆ5 hours ago

IPL 2024 Eliminator: ಎಲಿಮಿನೇಟರ್​ ಪಂದ್ಯಕ್ಕೂ ಮುನ್ನ ಆರ್​ಸಿಬಿಗೆ ಆಘಾತ; ಇಬ್ಬರು ಸ್ಟಾರ್​ ಆಟಗಾರರು ಅಲಭ್ಯ!

Tourist boat capsizes
ಕರ್ನಾಟಕ5 hours ago

Tourist Boat Capsizes: ತದಡಿ ಬಳಿ ಮಗುಚಿದ ಪ್ರವಾಸಿಗರ ಬೋಟ್; 40 ಪ್ರವಾಸಿಗರ ರಕ್ಷಣೆ

RR vs KKR
ಕ್ರೀಡೆ5 hours ago

RR vs KKR: ಮಳೆಯಿಂದ​ ಪಂದ್ಯ ರದ್ದು; ಎಲಿಮಿನೇಟರ್‌ ಪಂದ್ಯದಲ್ಲಿ​ ಆರ್​ಸಿಬಿಗೆ ರಾಜಸ್ಥಾನ್​ ಎದುರಾಳಿ

Parliament Security
ದೇಶ5 hours ago

Parliament Security: ನಾಳೆಯಿಂದ ಸಂಸತ್‌ಗೆ ಸಿಆರ್‌ಪಿಎಫ್‌ ಬದಲು ಸಿಐಎಸ್‌ಎಫ್‌ ಭದ್ರತೆ; ಏಕಿಂಥ ನಿರ್ಧಾರ?

Dangerous Bike Stunt
ಕರ್ನಾಟಕ6 hours ago

Dangerous Bike Stunt: ಯುವತಿಯನ್ನು ತೊಡೆ ಮೇಲೆ ಕೂರಿಸಿಕೊಂಡು ಬೈಕ್‌ ಓಡಿಸಿದ ಯುವಕ ಅರೆಸ್ಟ್‌

Narendra Modi
ದೇಶ6 hours ago

Narendra Modi: ಮುಸ್ಲಿಮರ ವೋಟಿಗಾಗಿ ಮಮತಾ ಬ್ಯಾನರ್ಜಿ ಹಿಂದು ಸಂಘಟನೆಗಳ ವಿರುದ್ಧ ಆರೋಪ; ಮೋದಿ ಟೀಕೆ

SRH vs PBKS
ಕ್ರೀಡೆ7 hours ago

SRH vs PBKS: ಆರ್​ಸಿಬಿಯ ಸಿಕ್ಸರ್​ ದಾಖಲೆ ಮುರಿದ ಹೈದರಾಬಾದ್​

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ12 hours ago

Karnataka Rain : ಒಂದೇ ಮಳೆಗೆ ಹೊಳೆಯಂತಾದ ಬೆಂಗಳೂರು ರಸ್ತೆಗಳು! ಕಳಸದಲ್ಲೂ ಮುಂದುವರಿದ ಅಬ್ಬರ

Karnataka rain
ಮಳೆ13 hours ago

Karnataka Rain : ವಿಜಯನಗರದಲ್ಲಿ ಸಿಡಿಲಿಗೆ ಜಾನುವಾರು ಬಲಿ; ಬೆಂಗಳೂರು ಸೇರಿ ಹಲವೆಡೆ ಭಾರಿ ಮಳೆ

Karnataka Rain
ಮಳೆ14 hours ago

Karnataka Rain: ಧಾರಾಕಾರ ಮಳೆಗೆ ಕಾಂಪೌಂಡ್ ಕುಸಿದು 4 ಬೈಕ್‌ಗಳು ಜಖಂ; ಮದುವೆ ಮಂಟಪಕ್ಕೆ ನುಗ್ಗಿದ ನೀರು‌

Prajwal Revanna Case JDS calls CD Shivakumar pen drive gang
ರಾಜಕೀಯ2 days ago

Prajwal Revanna Case: CD ಶಿವಕುಮಾರ್ ಪೆನ್ ಡ್ರೈವ್ ಗ್ಯಾಂಗ್ ಎಂದ ಕುಟುಕಿದ ಜೆಡಿಎಸ್‌!

Karnataka weather Forecast
ಮಳೆ3 days ago

Karnataka Weather : ಮೈಸೂರು, ಮಂಡ್ಯ ಸೇರಿ ಈ 7 ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಸಂಭವ

Dina Bhavishya
ಭವಿಷ್ಯ3 days ago

Dina Bhavishya : ಈ ರಾಶಿಯ ಪ್ರೇಮಿಗಳಿಗೆ ಮನೆಯಿಂದ ಸಿಗುತ್ತೆ ಗ್ರೀನ್‌ ಸಿಗ್ನಲ್‌

Karnataka Weather Forecast
ಮಳೆ3 days ago

Karnataka Weather : ಭಾರಿ ಮಳೆಗೆ ಕೊಟ್ಟೂರು ಬಸ್ ಸ್ಟ್ಯಾಂಡ್‌ ಜಲಾವೃತ; ‌ ತಾಯಿ-ಮಗ ಗ್ರೇಟ್‌ ಎಸ್ಕೇಪ್‌

Drowned in water
ಹಾಸನ4 days ago

Drowned in water : ಕೆರೆಯಲ್ಲಿ ಈಜಲು ಹೋದ ನಾಲ್ವರು ನೀರುಪಾಲು; ಓರ್ವ ಬಾಲಕ ಪಾರು

Suspicious Case
ಬೆಂಗಳೂರು4 days ago

Suspicious Case : ಬಾತ್‌ ರೂಂನಲ್ಲಿತ್ತು ಕಾಲೇಜು ಹುಡುಗಿ ಡೆಡ್‌ ಬಾಡಿ; ಕುತ್ತಿಗೆ ಕೊಯ್ದು ಸಾಯಿಸಿದವರು ಯಾರು?

Prajwal Revanna Case
ಕರ್ನಾಟಕ5 days ago

Prajwal Revanna Case: ಪ್ರಜ್ವಲ್‌ ರೇವಣ್ಣ ಇಂದೇ ಜರ್ಮನಿಯಿಂದ ಭಾರತಕ್ಕೆ? ಎಸ್‌ಐಟಿ ಅಲರ್ಟ್‌

ಟ್ರೆಂಡಿಂಗ್‌