MI vs SRH: ಸೋತವರ ಮಧ್ಯೆ ಗೆಲ್ಲೋರ್ಯಾರು?; ಮುಂಬೈ-ಹೈದರಾಬಾದ್ ಹಣಾಹಣಿ - Vistara News

ಕ್ರೀಡೆ

MI vs SRH: ಸೋತವರ ಮಧ್ಯೆ ಗೆಲ್ಲೋರ್ಯಾರು?; ಮುಂಬೈ-ಹೈದರಾಬಾದ್ ಹಣಾಹಣಿ

MI vs SRH: ಸನ್​ರೈಸರ್ಸ್​ ಹೈದರಾಬಾದ್​(Sunrisers Hyderabad) ಮತ್ತು ಮುಂಬೈ ಇಂಡಿಯನ್ಸ್​ ಇದುವರೆಗಿನ ಐಪಿಎಲ್​ ಟೂರ್ನಿಗಳಲ್ಲಿ ಒಟ್ಟು 21 ಬಾರಿ ಮುಖಾಮುಖಿಯಾಗಿವೆ. ಈ ಪೈಕಿ ಮುಂಬಯಿ ಇಂಡಿಯನ್ಸ್​ 12 ಪಂದ್ಯಗಳನ್ನು ಗೆದ್ದರೆ, ಹೈದರಾಬಾದ್​ 9 ಪಂದ್ಯಗಳನ್ನು ಗೆದ್ದಿದೆ.

VISTARANEWS.COM


on

MI vs SRH
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಹೈದರಾಬಾದ್​: ಈಗಾಗಕೇ ಆಡಿದ ಮೊದಲ ಪಂದ್ಯದಲ್ಲಿ ಸೋಲು ಕಂಡಿರುವ ಸನ್​ರೈಸರ್ಸ್ ಹೈದರಾಬಾದ್MI vs SRH​) ಮತ್ತು ಮುಂಬೈ ಇಂಡಿಯನ್ಸ್​(Mumbai Indians) ಗೆಲುವಿನ ಹಳಿ ಏರಲು ನಾಳೆ ನಡೆಯುವ ಐಪಿಎಲ್​ನ(IPL 2024) 8ನೇ ಪಂದ್ಯದಲ್ಲಿ ಕಣಕ್ಕಿಳಿಯಲಿದೆ. ಪಂದ್ಯದಲ್ಲಿ ಒಂದು ತಂಡಕ್ಕೆ ಸೋಲು ಖಚಿತ. ಯಾರೇ ಸೋತರು ಸತತ 2 ಸೋಲಿಗೆ ತುತ್ತಾಗುತ್ತಾರೆ. ಈ ತಂಡ ಯಾವುದು ಎನ್ನುವುದು ಪಂದ್ಯದ ಕುತೂಹಲ.

ಸಿಡಿಯಬೇಕಿದೆ ಇಶಾನ್​ ಕಿಶನ್​


ಮುಂಬೈ ಮೇಲ್ನೋಟಕ್ಕೆ ಹೈದರಾಬಾದ್‌ಗಿಂತ(Sunrisers Hyderabad) ಬಲಿಷ್ಠ ತಂಡ ಎಂಬುದರಲ್ಲಿ ಎರಡು ಮಾತಿಲ್ಲ. ಬ್ಯಾಟಿಂಗ್‌ನಲ್ಲಿ ರೋಹಿತ್‌ ಶರ್ಮ, ನೂತನ ನಾಯಕ ಹಾರ್ದಿಕ್​ ಪಾಂಡ್ಯ ಬೌಲಿಂಗ್‌ನಲ್ಲಿ ಜಸ್​ಪ್ರೀತ್​ ಬುಮ್ರಾ, ಇಶಾನ್​ ಕಿಶನ್​, ಟಿಮ್​ ಡೇವಿಡ್​, ಪಿಯೂಷ್​ ಚಾವ್ಲಾ, ಜೆರಾಲ್ಡ್ ಕೋಟ್ಜಿ ಅವರೆಲ್ಲ ಮುಂಬೈ ತಂಡದ ಶಕ್ತಿಯಾಗಿದ್ದಾರೆ. ಆದರೆ ಇವರೆಲ್ಲ ಸಂಘಟಿತ ಪ್ರದರ್ಶನ ತೋರಬೇಕಿದೆ. ಕಳೆದ ಪಂದ್ಯದಲ್ಲಿ ಮಿಂಚಿದ್ದು ಮಾತ್ರ ರೋಹಿತ್​ ಶರ್ಮ ಅಮತ್ತು ಜಸ್​ಪ್ರೀತ್​ ಬುಮ್ರಾ ಮಾತ್ರ. ರಣಜಿ ಆಡಲು ಅಸಡ್ಡೆ ತೋರಿದ ಇಶಾನ್​ ಹಿಂದಿನ ಐಪಿಎಲ್‌ನಲ್ಲಿ ತೋರಿದ ಚಾರ್ಮ್ ತೋರುವಲ್ಲಿ ವಿಫಲರಾಗಿದ್ದಾರೆ. ಕಳೆದ ಪಂದ್ಯದಲ್ಲಿ ಅವರದ್ದು ಶೂನ್ಯ ಸಂಪಾದನೆ. ಈ ಪಂದ್ಯದಲ್ಲಿ ಸಿಡಿದು ನಿಲ್ಲುವ ಅನಿವಾರ್ಯ ಇವರ ಮೇಲಿದೆ.

ಮುಂಬೈ ಪಾಳಯದಲ್ಲಿ ಸೂರ್ಯಕುಮಾರ್​ ಯಾದವ್​ ಅವರ ಅನುಪಸ್ಥಿತಿ ಎದು ಕಾಣುತ್ತಿದೆ. ಮಧ್ಯಮ ಕ್ರಮಾಂಕದಲ್ಲಿ ಸಿಡಿದು ನಿಲ್ಲುವ ಸೂರ್ಯ ಕಳೆದ ಪಂದ್ಯದಲ್ಲಿ ಇರುತ್ತಿದ್ದರೆ ಮುಂಬೈಗೆ ಗೆಲುವು ಖಚಿತವಾಗಿರುತ್ತಿತ್ತು. ಸದ್ಯ ಸೂರ್ಯಕುಮಾರ್​ ಬಿಸಿಸಿಐ ಕಡೆಯಿಂದ ಇನ್ನೂ ಫಿಟ್​ನೆಸ್​ ಕ್ಲೀಯರೆನ್ಸ್​ ಪಡೆದಿಲ್ಲ. ಹೀಗಾಗಿ ಅವರ ಆಗಮನ ಇನ್ನೂ ತಡವಾಗುವ ಸಾಧ್ಯತೆ ಇದೆ.

ಇದನ್ನೂ ಓದಿ IPL 2024 Points Table: ಆರ್​ಸಿಬಿ ಗೆಲುವಿನ ಬಳಿಕ ಅಂಕಪಟ್ಟಿ ಹೇಗಿದೆ?

ಪ್ರಯೋಗ ಸಲ್ಲದು


ಹಿಂದಿನ ಪಂದ್ಯದಲ್ಲಿ ಹಲವು ಪ್ರಯೋಗ ಮಾಡಿ ಕೈ ಸುಟ್ಟುಕೊಂಡ ನಾಯಕ ಹಾರ್ದಿಕ್​ ಪಾಂಡ್ಯ ಈ ಪಂದ್ಯದಲ್ಲಿ ಯಾವುದೇ ಪ್ರಯೋಗಕ್ಕೆ ಮುಂದಾಗಬಾರದು. ಇನಿಂಗ್ಸ್​ನ ಮೊದಲ ಓವರನ್ನು ಅನುಭವಿ ಜಸ್​ಪ್ರೀತ್​ ಬುಮ್ರಾಗೆ ನೀಡಬೇಕು.

ಕಳೆದ ಕೆಕೆಆರ್​ ಪರ ದೊಡ್ಡ ಮೊತ್ತದ ಹೋರಾಟದಲ್ಲಿ ಅಸಾಮಾನ್ಯ ಬ್ಯಾಟಿಂಗ್​ ಪ್ರದರ್ಶನ ತೋರುವ ಮೂಲಕ ತಂಡವನ್ನು ಗೆಲುವಿನಂಚಿನವರೆಗೆ ತಂದಿದ್ದ ಹಾರ್ಡ್​ ಹಿಟ್ಟರ್​ ಹೆನ್ರಿಚ್ ಕ್ಲಾಸೆನ್ ಮೇಲೆ ಈ ಪಂದ್ಯದಲ್ಲಿಯೂ ತಂಡ ಹೆಚ್ಚು ಭರವಸೆ ಇರಿಸಿದೆ. ಭುವನೇಶ್ವರ್​ ಕುಮಾರ್​ ಕಳೆದ ಪಂದ್ಯದಲ್ಲಿ ಆರಂಭಿಕ 2 ಓವರ್​ ಉತ್ತಮ ದಾಳಿ ಸಂಘಟಿಸಿ ಆ ಬಳಿಕದ 2 ಓವರ್​ನಲ್ಲಿ ದುಬಾರಿ ರನ್​ ನೀಡಿದ್ದರು. ಹೀಗಾಗಿ ಈ ಪಂದ್ಯದಲ್ಲಿ ಸ್ಥಿರ ಬೌಲಿಂಗ್​ ಕಾಯ್ದುಕೊಳ್ಳುವ ಅಗತ್ಯವಿದೆ. ಉಳಿದಂತೆ ಆರಂಭಿಕ ಸ್ಥಾನದಲ್ಲಿ ಲೋಪವಿಲ್ಲ. ಕನ್ನಡಿಗ ಮಯಾಂಕ್​ ಅಗರ್ವಾಲ್​ ಮತ್ತು ಅಭಿಷೇಕ್​ ಶರ್ಮ ಉತ್ತಮ ಆರಂಭ ಒದಗಿಸುವಲ್ಲಿ ಸಮರ್ಥರಿದ್ದಾರೆ. ಐಡೆನ್​ ಮಾರ್ಕ್ರಮ್​ ಬ್ಯಾಟಿಂಗ್​ ಫಾರ್ಮ್​ ಕಂಡುಕೊಳ್ಳಬೇಕಿದೆ. 20 ಕೋಟಿ ಪಡೆದ ನಾಯಕ ಕಮಿನ್ಸ್​ ಈ ಸಂಭಾವನೆಗೆ ತಕ್ಕ ಪ್ರದರ್ಶನ ತೋರಬೇಕಿದೆ.

ಮುಖಾಮುಖಿ


ಸನ್​ರೈಸರ್ಸ್​ ಹೈದರಾಬಾದ್​(Sunrisers Hyderabad) ಮತ್ತು ಮುಂಬೈ ಇಂಡಿಯನ್ಸ್​ ಇದುವರೆಗಿನ ಐಪಿಎಲ್​ ಟೂರ್ನಿಗಳಲ್ಲಿ ಒಟ್ಟು 21 ಬಾರಿ ಮುಖಾಮುಖಿಯಾಗಿವೆ. ಈ ಪೈಕಿ ಮುಂಬಯಿ ಇಂಡಿಯನ್ಸ್​ 12 ಪಂದ್ಯಗಳನ್ನು ಗೆದ್ದರೆ, ಹೈದರಾಬಾದ್​ 9 ಪಂದ್ಯಗಳನ್ನು ಗೆದ್ದಿದೆ. ಕಳೆದ ಆವೃತ್ತಿಯಲ್ಲಿ ಆಡಿದ ಎರಡೂ ಪಂದ್ಯಗಳನ್ನು ಕೂಡ ಮುಂಬೈ ಗೆದ್ದಿತ್ತು. ಆದರೆ, ಈ ಬಾರಿ ಹೈದರಾಬಾದ್​ ಪಡೆ ಬಲಿಷ್ಠವಾಗಿದೆ. ಜತೆಗೆ ತವರಿನ ಪಂದ್ಯ ಕೂಡ ಆಗಿದೆ. ಹೀಗಾಗಿ ತವರಿನ ಲಾಭ ಇದ್ದೇ ಇದೆ.

ಸಂಭಾವ್ಯ ತಂಡ


ಹೈದರಾಬಾದ್​: ಮಯಾಂಕ್ ಅಗರ್ವಾಲ್, ರಾಹುಲ್ ತ್ರಿಪಾಠಿ, ಐಡೆನ್ ಮಾರ್ಕ್ರಾಮ್, ಹೆನ್ರಿಚ್ ಕ್ಲಾಸೆನ್ (ವಿಕೆಟ್​ ಕೀಪರ್​), ಅಬ್ದುಲ್ ಸಮದ್, ಶಹಬಾಜ್ ಅಹ್ಮದ್, ಮಾರ್ಕೊ ಜಾನ್ಸೆನ್, ಪ್ಯಾಟ್ ಕಮಿನ್ಸ್ (ನಾಯಕ), ಭುವನೇಶ್ವರ್ ಕುಮಾರ್, ಮಯಾಂಕ್ ಮಾರ್ಕಾಂಡೆ, ಟಿ ನಟರಾಜನ್.

ಮುಂಬೈ ಇಂಡಿಯನ್ಸ್​: ರೋಹಿತ್ ಶರ್ಮಾ, ಇಶಾನ್ ಕಿಶನ್ (ವಿಕೆಟ್​ ಕೀಪರ್​), ತಿಲಕ್ ವರ್ಮಾ, ನಮನ್ ಧೀರ್, ಹಾರ್ದಿಕ್ ಪಾಂಡ್ಯ (ನಾಯಕ), ಟಿಮ್ ಡೇವಿಡ್, ಶಮ್ಸ್ ಮುಲಾನಿ, ಪಿಯೂಷ್ ಚಾವ್ಲಾ, ಜೆರಾಲ್ಡ್ ಕೋಟ್ಜಿ, ಜಸ್​ಪ್ರೀತ್ ಬುಮ್ರಾ, ಲ್ಯೂಕ್ ವುಡ್

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕ್ರೀಡೆ

Sandeep Lamichhane: ಅತ್ಯಾಚಾರ ಆರೋಪದಲ್ಲಿ 8 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದ ಕ್ರಿಕೆಟಿಗ ಲಮಿಚಾನೆಗೆ ರಿಲೀಫ್; ನಿರಪರಾಧಿ ಎಂದ ಕೋರ್ಟ್​

Sandeep Lamichhane: ಇದೇ ವರ್ಷದ ಜನವರಿಯಲ್ಲಿ ಕಠ್ಮಂಡು ಜಿಲ್ಲಾ ನ್ಯಾಯಾಲಯವು ಲಮಿಚಾನೆಗೆ 8 ವರ್ಷಗಳ ಜೈಲು ಶಿಕ್ಷೆ ಪ್ರಕಟಿಸಿತ್ತು. ಶಿಶಿರ್ ರಾಜ್ ಧಾಕಲ್ ಅವರ ಪೀಠವು ವಿಚಾರಣೆಯ ಬಳಿಕ 8 ವರ್ಷಗಳ ಜೈಲು ಶಿಕ್ಷೆ, ಪರಿಹಾರ ಮತ್ತು ದಂಡದ ತೀರ್ಪು ನೀಡಿತ್ತು. ಈ ತೀರ್ಪಿನ ವಿರುದ್ಧ ಸಂದೀಪ್ ಲಮಿಚಾನೆ ಹೈಕೋರ್ಟ್ ಮೆಟ್ಟಿಲ್ಲೇರಿದ್ದರು. ಇದೀಗ ದೋಷಮುಕ್ತರಾಗಿದ್ದಾರೆ.

VISTARANEWS.COM


on

Sandeep Lamichhane
Koo

ಕಠ್ಮಂಡು: 18 ವರ್ಷದ ಯುವತಿಯೊಬ್ಬಳ ಮೇಲೆ ಅತ್ಯಾಚಾರ ಎಸಗಿದ ಆರೋಪದಲ್ಲಿ 8 ವರ್ಷಗಳ ಜೈಲು ಶಿಕ್ಷೆಗೆ ಗುರಿಯಾಗಿದ್ದ ನೇಪಾಳ ಕ್ರಿಕೆಟ್ ತಂಡದ ಮಾಜಿ ನಾಯಕ ಸಂದೀಪ್ ಲಮಿಚಾನೆ(Sandeep Lamichhane)ಗೆ ದೊಡ್ಡ ರಿಲೀಫ್​ ಸಿಕ್ಕಿದೆ. ನೇಪಾಳ ಹೈಕೋರ್ಟ್(Nepal High Court) ನಿರಪರಾಧಿ ಎಂದು ಘೋಷಿಸಿದೆ.

ಇದೇ ವರ್ಷದ ಜನವರಿಯಲ್ಲಿ ಕಠ್ಮಂಡು ಜಿಲ್ಲಾ ನ್ಯಾಯಾಲಯವು ಲಮಿಚಾನೆಗೆ 8 ವರ್ಷಗಳ ಜೈಲು ಶಿಕ್ಷೆ ಪ್ರಕಟಿಸಿತ್ತು. ಶಿಶಿರ್ ರಾಜ್ ಧಾಕಲ್ ಅವರ ಪೀಠವು ವಿಚಾರಣೆಯ ಬಳಿಕ 8 ವರ್ಷಗಳ ಜೈಲು ಶಿಕ್ಷೆ, ಪರಿಹಾರ ಮತ್ತು ದಂಡದ ತೀರ್ಪು ನೀಡಿತ್ತು. ಈ ತೀರ್ಪಿನ ವಿರುದ್ಧ ಸಂದೀಪ್ ಲಮಿಚಾನೆ ಹೈಕೋರ್ಟ್ ಮೆಟ್ಟಿಲ್ಲೇರಿದ್ದರು. ಇದೀಗ ದೋಷಮುಕ್ತರಾಗಿದ್ದಾರೆ.

ಮಂಗಳವಾರ ಮತ್ತು ಬುಧವಾರ (ಮೇ 14 ಮತ್ತು 15) ನಡೆದ ಕೋರ್ಟ್ ಕಲಾಪದ ನಂತರ, ನ್ಯಾಯಾಲಯವು ಸಂದೀಪ್ ಲಮಿಚಾನೆ ಅವರ ಹಿಂದಿನ ತೀರ್ಪನ್ನು ರದ್ದುಗೊಳಿಸಿದೆ. ಅಲ್ಲದೆ ಹೈಕೋರ್ಟ್ ನ್ಯಾಯಾಧೀಶರಾದ ಸುದರ್ಶನ್ ದೇವ್ ಭಟ್ಟ ಮತ್ತು ಅಂಜು ಉಪೇತ್ರಿ ಅವರು ಲಮಿಚಾನೆ ಅವರನ್ನು ಎಲ್ಲಾ ಆರೋಪಗಳಿಂದ ಮುಕ್ತಗೊಳಿಸಿದ್ದಾರೆ. ಲಮಿಚಾನೆ ಪರವಾಗಿ ಹಿರಿಯ ವಕೀಲರಾದ ರಾಮ್ ನಾರಾಯಣ ಬಿದರಿ, ರಾಮನ್ ಶ್ರೇಷ್ಠ, ಶಂಬು ಥಾಪಾ, ಮುರಾರಿ ಸಪ್ಕೋಟ ಮತ್ತು ಕೃಷ್ಣ ಸಪ್ಕೋಟ ತಮ್ಮ ವಾದವನ್ನು ಮಂಡಿಸಿದರು.

ಇದನ್ನೂ ಓದಿ 8 ವರ್ಷ ಜೈಲು ಶಿಕ್ಷೆ ಬೆನ್ನಲ್ಲೇ ಲಮಿಚಾನೆ ಅಮಾನತುಗೊಳಿಸಿದ ನೇಪಾಳ ಕ್ರಿಕೆಟ್ ಸಂಸ್ಥೆ

ವಿಶ್ವಕಪ್​ನಲ್ಲಿ ಅವಕಾಶ


ನಿರಪರಾಧಿ ಎಂದು ಸಾಬೀತಾದ ನಂತರ ಸಂದೀಪ್ ಇದೀಗ ಇದೇ ಜೂನ್​ 1ರಿಂದ ಆರಂಭಗೊಳ್ಳಲಿರುವ ಟಿ20 ವಿಶ್ವಕಪ್(T20 World Cup) ತಂಡಕ್ಕೆ ಲಭ್ಯವಾಗಿದ್ದಾರೆ ಎನ್ನಲಾಗಿದೆ. ನೇಪಾಳ ತನ್ನ ತಂಡವನ್ನು ಈಗಾಗಲೇ ಘೋಷಿಸಿದ್ದರೂ ಕೂಡ ಮೇ 25 ರವರೆಗೆ ತಂಡದಲ್ಲಿ ಆಟಗಾರರ ಬದಲಾವಣೆಗೆ ಅವಕಾಶವಿರುವ ಕಾರಣ ಲಾಮಿಚಾನೆ ಆಯ್ಕೆಯಾಗುವುದು ಬಹುತೇಕ ಖಚಿತವಾಗಿದೆ.

ಏನಿದು ಪ್ರಕರಣ?

2022ರಲ್ಲಿ ಲಾಮಿಚಾನೆ ವಿರುದ್ಧ ಹದಿಹರೆಯದ ಹುಡುಗಿಯೊಬ್ಬಳು ಅತ್ಯಾಚಾರದ ಆರೋಪ ಮಾಡಿ ಪ್ರಕರಣ ದಾಖಲಿಸಿದ್ದಳು. ಈ ಆರೋಪದ ಬಳಿಕ ಲಾಮಿಚಾನೆ ಬಂಧನ ಕೂಡ ಆಗಿತ್ತು. ಕ್ರಿಮಿನಲ್ ಕೋಡ್ 2074 ರ ಸೆಕ್ಷನ್ 219 ರ ಅಡಿಯಲ್ಲಿ ಕ್ರಿಕೆಟಿಗನ ಮೇಲೆ ಆರೋಪ ಹೊರಿಸಲಾಗಿತ್ತು.

2022ರಲ್ಲಿ ಲಾಮಿಚಾನೆ ಅವರು ವೆಸ್ಟ್​ ಇಂಡೀಸ್​ನಲ್ಲಿ ನಡೆಯುತ್ತಿದ್ದ ಕೆರಿಬಿಯನ್​ ಕ್ರಿಕೆಟ್​ ಲೀಗ್​ನಲ್ಲಿ ಪಾಲ್ಗೊಳ್ಳುತ್ತಿದ್ದರು. ಈ ವೇಳೆ ಅವರ ಮೇಲೆ ಅತ್ಯಾಚಾರದ ದೂರು ದಾಖಲಾಗಿತ್ತು. ತನಿಖೆಗೆ ಹಾಜರಾಗದ ಕಾರಣ ಅವರ ವಿರುದ್ಧ ಕೋರ್ಟ್​ ಜಾಮೀನು ರಹಿತ ವಾರಂಟ್​ ಹೊರಡಿಸಿತ್ತು. ಬಳಿಕ ಅವರು ತವರಿಗೆ ಮರಳಿದ್ದರು. ಅವರನ್ನು ವಿಮಾನ ನಿಲ್ದಾಣದಲ್ಲೇ ಪೊಲೀಸರು ವಶಪಡಿಸಿಕೊಂಡು ಕೋರ್ಟ್​ಗೆ ಹಾಜರುಪಡಿಸಿದ್ದರು.

ಕೆಳ ಹಂತದ ನ್ಯಾಯಾಲಯ ಲಾಮಿಚಾನೆಯನ್ನು ನ್ಯಾಯಾಂಗ ಬಂಧನದಲ್ಲಿ ಇಡುವಂತೆ ಆದೇಶಿಸಿತ್ತು. ಹೀಗಾಗಿ ಮೂರು ತಿಂಗಳಿಂದ ಜೈಲಿನಲ್ಲಿದ್ದರು. ತಮಗೆ ನೀಡಿದ್ದ ಶಿಕ್ಷೆಯನ್ನು ಪ್ರಶ್ನಿಸಿ ಸಂದೀಪ್​ ಮೇಲ್ಮನವಿ ಸಲ್ಲಿಸಿದ್ದರು. ಹೈಕೋರ್ಟ್​ ಅವರಿಗೆ ಜಾಮೀನು ನೀಡಿತ್ತು. ಈ ವೇಳೆ 20 ಲಕ್ಷ ರೂಪಾಯಿ ಬಾಂಡ್​ ಕೂಡ ಪಡೆದುಕೊಂಡಿತ್ತು. ಕಳೆದ ವರ್ಷ ಜನವರಿ 12 ರಿಂದ ಲಾಮಿಚಾನೆ ಜಾಮೀನಿನ ಮೇಲೆ ಹೊರಬಂದಿದ್ದರು. ಅಲ್ಲದೆ ನೇಪಾಳ ಪರ ಕ್ರಿಕೆಟ್​ ಕೂಡ ಆಡುತ್ತಿದ್ದರು.

ಐಪಿಎಲ್​ ಟೂರ್ನಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್​ ಪರ ಆಡಿದ್ದ ಸಂದೀಪ್ ಲಮಿಚಾನೆ ಒಟ್ಟು 9 ಪಂದ್ಯಗಳನ್ನು ಆಡಿ 13 ವಿಕೆಟ್​ ಪಡೆದಿದ್ದಾರೆ. 2018 ಮತ್ತು 2019ರ ಆವೃತ್ತಿಯಲ್ಲಿ ಅವರು ಆಡಿದ್ದರು.

Continue Reading

ಕ್ರೀಡೆ

DP Manu: ಫೆಡರೇಷನ್ ಕಪ್‌ನಲ್ಲಿ ನೀರಜ್​ ಚೋಪ್ರಾಗೆ ಬೆವರಿಳಿಯುವಂತೆ ಮಾಡಿದ ಕನ್ನಡಿಗ ಮನು; ಇವರ ಹಿನ್ನೆಲೆ, ಸಾಧನೆ ಏನೇನು?

DP Manu: ಫೆಡರೇಷನ್ ಕಪ್‌ನಲ್ಲಿ (82.06 ಮೀ) ಭರ್ಜಿ ಎಸೆದು ಭರವಸೆ ಮೂಡಿಸಿರುವ 23 ವರ್ಷದ ಡಿ.ಪಿ. ಮನು ಅವರು ಹಾಸನ(D. P. Manu Hassan) ಜಿಲ್ಲೆ ಬೇಲೂರು ತಾಲೂಕು ಕುಪ್ಪಗೋಡು ಗ್ರಾಮದವರು. ಹೊಯ್ಸಳ ಶಾಲೆಯಲ್ಲಿ ಓದುವಾಗಲೇ ಭರ್ಜಿಯತ್ತ ಆಕರ್ಷಣೆ ಬೆಳೆಸಿಕೊಂಡ ಮನು ಮೂಡುಬಿದಿರೆಯ ಆಳ್ವಾಸ್‌ ಕಾಲೇಜಿನಲ್ಲಿ ಕಠಿಣ ತರಬೇತಿ ಪಡೆದರು. ಇಲ್ಲಿ ತೋರಿದ ಪ್ರದರ್ಶನವು ಇಂದು ಚಿಗುರು ಮೀಸೆ ಹುಡುಗನನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದಿದೆ.

VISTARANEWS.COM


on

DP Manu
Koo

ಬೆಂಗಳೂರು: ಬುಧವಾರ ನಡೆದ ಫೆಡರೇಷನ್ ಕಪ್‌ನಲ್ಲಿ(Federation Cup 2024) ಒಲಿಂಪಿಕ್​ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ(Neeraj Chopra) ಅವರಿಗೆ ಬೆವರಿಳಿಸುಂತೆ ಮಾಡಿ ಸಣ್ಣ ಅಂತರದಿಂದ ಚಿನ್ನದ ಪದಕದಿಂದ ವಂಚಿತರಾಗಿ ಬೆಳ್ಳಿ ಪದಕ ಗೆದ್ದ ಡಿ.ಪಿ ಮನು(DP Manu) ಅಪ್ಪಟ ಕನ್ನಡಿಗ. ಇವರ ಪೂರ್ಣ ಹೆಸರು ದೇವರಕೇಶವಿ ಪ್ರಕಾಶ ಮನು (ಡಿ.ಪಿ. ಮನು ಎಂದೇ ಖ್ಯಾತಿ). ಈಗಾಗಲೇ ಇವರು ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದಲ್ಲಿ ಉತ್ತಮ ಸಾಧನೆಗೈದಿದ್ದಾರೆ. ಇದೇ ರೀತಿಯ ಪ್ರದರ್ಶನ ತೋರಿದರೆ ಮುಂದಿನ ದಿನಗಳಲ್ಲಿ ಜಾಗತಿಕ ಮಟ್ಟದಲ್ಲಿ ಇನ್ನೂ ಉತ್ತಮ ಸಾಧನೆ ಮಾಡುವುದರಲ್ಲಿ ಎರಡು ಮಾತಿಲ್ಲ ಎಂದೇ ವಿಶ್ಲೇಷಿಸಲಾಗುತ್ತಿದೆ. 

ಡಿ.ಪಿ. ಮನು ಹಿನ್ನೆಲೆ


ಫೆಡರೇಷನ್ ಕಪ್‌ನಲ್ಲಿ (82.06 ಮೀ) ಭರ್ಜಿ ಎಸೆದು ಭರವಸೆ ಮೂಡಿಸಿರುವ 23 ವರ್ಷದ ಡಿ.ಪಿ. ಮನು ಅವರು ಹಾಸನ(D. P. Manu Hassan) ಜಿಲ್ಲೆ ಬೇಲೂರು ತಾಲೂಕು ಕುಪ್ಪಗೋಡು ಗ್ರಾಮದವರು. ತಂದೆ ಪ್ರಕಾಶ ಹಾಗೂ ತಾಯಿ ಸುಜಾತಾ. ಹೊಯ್ಸಳ ಶಾಲೆಯಲ್ಲಿ ಓದುವಾಗಲೇ ಭರ್ಜಿಯತ್ತ ಆಕರ್ಷಣೆ ಬೆಳೆಸಿಕೊಂಡ ಮನು ಮೂಡುಬಿದಿರೆಯ ಆಳ್ವಾಸ್‌ ಕಾಲೇಜಿನಲ್ಲಿ ಕಠಿಣ ತರಬೇತಿ ಪಡೆದರು. ಇದೇ ವೇಳೆ ಮನು ಅವರು ಅಂತಾರಾಜ್ಯ, ಜೂನಿಯರ್‌ ರಾಷ್ಟ್ರೀಯ ಕೂಟಗಳಲ್ಲಿ ಭಾಗವಹಿಸಿ ಸೈ ಎನಿಸಿಕೊಂಡರು. ಆಳ್ವಾಸ್‌ ಕಾಲೇಜಿನಲ್ಲಿ ಅವರು ಪಡೆದ ತರಬೇತಿ, ನೀಡಿದ ಪ್ರದರ್ಶನವು ಚಿಗುರು ಮೀಸೆ ಹುಡುಗನನ್ನು ಅಂತಾರಾಷ್ಟ್ರೀಯ ಮಟ್ಟಕ್ಕೆ ಕೊಂಡೊಯ್ದಿದೆ.

ಕಳೆದ ವರ್ಷ ನಡೆದಿದ್ದ ವಿಶ್ವ ಆ್ಯತ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ನಲ್ಲಿ ಮನು (84.14 ಮೀ.) 6ನೇ ಸ್ಥಾನ ಪಡೆದು ಭಾರೀ ಸಂಚಲನ ಮೂಡಿಸಿದ್ದರು. ಅಲ್ಲದೆ 2023ರಲ್ಲಿ ನಡೆದ ಏಶ್ಯನ್​ ಆ್ಯತ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ನಲ್ಲಿ ಬೆಳ್ಳಿ ಪದಕ ಗೆದ್ದ ಸಾಧನೆ ಮಾಡಿದ್ದರು. ಇಂದು ನಡೆದ ಫೆಡರೇಷನ್ ಕಪ್‌ನಲ್ಲಿ (82.06 ಮೀ) ಬೆಳ್ಳಿ ಗೆದ್ದಿದ್ದಾರೆ. ಮೂರನೇ ಸುತ್ತಿನ ವರೆಗೂ ಅಗ್ರಸ್ಥಾನ ಕಾಯ್ದುಕೊಂಡು ಅನುಭವಿ ನೀರಜ್​ಗೆ ಒಂದು ಕ್ಷಣ ಬೆವರಿಳಿಸುವಂತೆ ಮಾಡಿದ್ದು ನಿಜಕ್ಕೂ ಸಣ್ಣ ಮಾತಲ್ಲ. ನೀರಜ್​ ಗೆಲುವಿನ ಅಂತರ 82.27 ಮೀ.

ಇದನ್ನೂ ಓದಿ Federation Cup 2024: ಕನ್ನಡಿಗ ಮನು ಎದುರು ತೀವ್ರ ಪೈಪೋಟಿ ಎದುರಿಸಿ ಚಿನ್ನ ಗೆದ್ದ ನೀರಜ್ ಚೋಪ್ರಾ

ಕಾಶಿನಾಥ ನಾಯ್ಕ್ ಗರಡಿಯಲ್ಲಿ ಬೆಳೆದ ಪ್ರತಿಭೆ


ಮನು ಅವರು ಕಾಶಿನಾಥ ನಾಯ್ಕ್​ ಅವರ ಗರಡಿಯಲ್ಲಿ ಬೆಳೆದು ಬಂದ ಪ್ರತಿಭೆ. 2020ರಲ್ಲಿ ಡಿ.ಪಿ.ಮನು ಅವರಿಗೆ ಮಹತ್ವದ ತಿರುವು ಸಿಕ್ಕಿತು. ಅವರು ಪುಣೆಯಲ್ಲಿರುವ ಆರ್ಮಿ ಸ್ಪೋರ್ಟ್ಸ್‌ ಇನ್‌ಸ್ಟಿಟ್ಯೂಟ್‌ನಲ್ಲಿ ಹವಾಲ್ದಾರ್‌ ಕೆಲಸಕ್ಕೆ ಸೇರಿದರು. ಇದೇ ವೇಳೆ ಕಾಶಿನಾಥ ನಾಯ್ಕ್​ ಅವರ ಪರಿಚಯವಾಯಿತು. ಕಾಶಿನಾಥ ಅವರ ಬಳಿ ಸತತ ತರಬೇತಿ ಪಡೆದ ಮನು, 65 ಮೀಟರ್‌ ದೂರ ಭರ್ಜಿ ಎಸೆತದಿಂದ 80 ಮೀಟರ್‌ ದಾಟುವಂತಾದರು. ಇದೀಗ ವಿಶ್ವ ಚಾಂಪಿಯನ್​ ನೀರಜ್​ಗೆ ತೀವ್ರ ಪೈಪೋಟಿ ನೀಡುವಷ್ಟರ ಮಟ್ಟಿಗೆ ಬೆಳೆದು ನಿಂತಿದ್ದಾರೆ. ನೀರಜ್​ ಕೂಡ ಕಾಶಿನಾಥ ನಾಯ್ಕ್ ಮಾರ್ಗದರ್ಶನದಲ್ಲೇ ಬೆಳೆದು ಬಂದ ಪ್ರತಿಭೆಯಾಗಿದ್ದಾರೆ. ಒಟ್ಟಿನಲ್ಲಿ ಕನ್ನಡಿಗರೊಬ್ಬರು ಜಾವೆಲಿನ್‌ ಥ್ರೋ ಮೂಲಕ ಜಾಗತಿಕ ಮಟ್ಟದಲ್ಲಿ ಹೆಸರು ಮಾಡುತ್ತಿದ್ದು, ಅವರು ಒಲಿಂಪಿಕ್ಸ್‌ಗೂ ಆಯ್ಕೆಯಾಗಲಿ, ಅಲ್ಲೂ ರಾಜ್ಯ, ದೇಶದ ಘನತೆ ಹೆಚ್ಚಿಸಲಿ ಎಂದು ಆಶಿಸೋಣ.


ಮನು ಮಾಡಿದ ಸಾಧನೆಗಳು

  1. 1. 2023ರ ಜುಲೈನಲ್ಲಿ ಬ್ಯಾಂಕಾಕ್‌ನಲ್ಲಿ ನಡೆದ ಏಷ್ಯನ್‌ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್ಸ್‌ನಲ್ಲಿ ಬೆಳ್ಳಿ

    2. 2023ರಲ್ಲಿ ನಡೆದಿದ್ದ ವಿಶ್ವ ಆ್ಯತ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ನಲ್ಲಿ 6ನೇ ಸ್ಥಾನ
  2. 3. 2024ರಲ್ಲಿ ನಡೆದ ಫೆಡರೇಷನ್ ಕಪ್‌ನಲ್ಲಿ ಬೆಳ್ಳಿ ಪದಕ

    4. 2022ರ ಜೂನ್‌ನಲ್ಲಿ ನಡೆದ ರಾಷ್ಟ್ರೀಯ ಅಂತಾರಾಜ್ಯ ಹಿರಿಯ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್ಸ್‌ನಲ್ಲಿ ಚಿನ್ನದ ಪದಕ
  3. 5. 2023ರ ಏಪ್ರಿಲ್‌ನಲ್ಲಿ ಬೆಂಗಳೂರಿನ ಶ್ರೀ ಕಂಠೀರವ ಹೊರಾಂಗಣ ಕ್ರೀಡಾಂಗಣದಲ್ಲಿ ನಡೆದ ಇಂಡಿಯನ್‌ ಗ್ರ್ಯಾಂಡ್‌ ಪ್ರಿಕ್ಸ್‌ನಲ್ಲಿ ಚಿನ್ನ
  4. 6. 2022ರ ಏಪ್ರಿಲ್‌ನಲ್ಲಿ ಕೇರಳದ ತಿರುವನಂಪುರಂನಲ್ಲಿ ನಡೆದ ಇಂಡಿಯನ್‌ ಗ್ರ್ಯಾಂಡ್‌ ಪ್ರಿಕ್ಸ್‌ನಲ್ಲಿ ಬಂಗಾರದ ಪದಕ
  5. 7. 2022ರ ಆಗಸ್ಟ್‌ನಲ್ಲಿ ನಡೆದ ಬರ್ಮಿಂಗ್‌ಹ್ಯಾಮ್‌ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಐದನೇ ಸ್ಥಾನಕ್ಕೆ ತೃಪ್ತಿ
  6. 8. 2022ರ ಅಕ್ಟೋಬರ್‌ನಲ್ಲಿ ಗುಜರಾತ್‌ನಲ್ಲಿ ನಡೆದ ಇಂಡಿಯನ್‌ ನ್ಯಾಷನಲ್‌ ಗೇಮ್ಸ್‌ನಲ್ಲಿ ಚಿನ್ನ

Continue Reading

ಕ್ರೀಡೆ

Federation Cup 2024: ಕನ್ನಡಿಗ ಮನು ಎದುರು ತೀವ್ರ ಪೈಪೋಟಿ ಎದುರಿಸಿ ಚಿನ್ನ ಗೆದ್ದ ನೀರಜ್ ಚೋಪ್ರಾ

Federation Cup 2024: ಫೆಡರೇಷನ್ ಕಪ್‌ನಲ್ಲಿ(Federation Cup)ಭಾರತದ ಸ್ಟಾರ್ ಜಾವೆಲಿನ್ ಎಸೆತಗಾರ, ಒಲಿಂಪಿಕ್​ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ(Neeraj Chopra) ಕನ್ನಡಿಗ ಡಿಪಿ ಮನು ಅವರಿಂದ ತೀವ್ರ ಪೈಪೋಟಿ ಎದುರಿಸಿ ಕೊನೆಗೂ ಚಿನ್ನದ ಪದಕ ಗೆದ್ದರು

VISTARANEWS.COM


on

Federation Cup 2024
Koo

ಭುವನೇಶ್ವರ: ಮೂರು ವರ್ಷದ ಬಳಿಕ ತವರಿನಲ್ಲಿ ನಡೆದ ಫೆಡರೇಷನ್ ಕಪ್‌ನಲ್ಲಿ(Federation Cup) ಕಣಕ್ಕಿಳಿದ್ದ ಭಾರತದ ಸ್ಟಾರ್ ಜಾವೆಲಿನ್ ಎಸೆತಗಾರ, ಒಲಿಂಪಿಕ್​ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ(82.27 ಮೀ.), ಕನ್ನಡಿಗ ಡಿಪಿ ಮನು ಅವರಿಂದ ತೀವ್ರ ಪೈಪೋಟಿ ಎದುರಿಸಿ ಕೊನೆಗೂ ಚಿನ್ನದ ಪದಕ ಗೆದ್ದರು. ಮನು(82.06 ಮೀ) ಬೆಳ್ಳಿ ಪದಕ್ಕೆ ತೃಪ್ತಿಪಟ್ಟರು. ಮತೋರ್ವ ಪದಕ ಭರವಸೆಯ ಕಿಶೋರ್ ಜೆನಾ ಅತ್ಯಂತ ಕಳಪೆ ಪ್ರದರ್ಶನ ತೋರುವ ಮೂಲಕ ಪದಕ ಗೆಲ್ಲುವಲ್ಲಿ ವಿಫಲರಾದರು. ಉತ್ತಮ್ ಪಾಟೀಲ್(78.39 ಮೀ) ಮೂರನೇ ಸ್ಥಾನ ಪಡೆದರು.

ವಿಶ್ವ ಆ್ಯತ್ಲೆಟಿಕ್ಸ್‌ ಚಾಂಪಿಯನ್‌ಶಿಪ್‌ನಲ್ಲಿ (84.14 ಮೀ.) 6ನೇ ಸ್ಥಾನ ಪಡೆದಿದ್ದ ಮನು ಒಲಿಂಪಿಕ್​ ಚಿನ್ನದ ಪದಕ ವಿಜೇತ ನೀರಜ್​ಗೆ ತೀವ್ರ ಪೈಪೋಟಿ ನೀಡಿದರು. ನೀರಜ್ ಚೋಪ್ರಾ ತಮ್ಮ ಮೊದಲ ಪ್ರಯತ್ನದಲ್ಲಿ 82 ಮೀ. ದೂರ ಜಾವೆಲಿನ್​​ ಎಸೆದರೆ, ಡಿಪಿ ಮನು 82.06 ಮೀ ದೂರಕ್ಕೆ ಜಾವೆಲಿನ್ ಎಸೆದು ಮೊದಲ ಸುತ್ತಿನಲ್ಲಿ ಮುನ್ನಡೆ ಕಾಯ್ದುಕೊಂಡರು. ದ್ವಿತೀಯ ಸುತ್ತಿನಲ್ಲಿ ಮನು 77.23 ದೂರ ಎಸೆದರು. ಆದರೆ ಇವರ ಪ್ರತಿಸ್ಪರ್ಧಿ ನೀರಜ್​ ಈ ಎಸೆತವನ್ನು ಉದ್ದೇಶಪೂರ್ವಕವಾಗಿ ಫೌಲ್ ಮಾಡಿದರು. ಈ ಥ್ರೋ ಅಷ್ಟು ಉತ್ತಮವಾಗಿರದ ಕಾರಣ ನೀರಜ್​ ಈ ತಂತ್ರ ಬಳಸಿದರು.

ಮೂರನೇ ಎಸೆತದಲ್ಲಿ ಮನು 81.43 ಮೀ. ದೂರ ದಾಖಲಿಸಿದರೆ, ಮತ್ತೆ ಎಡವಿದ ನೀರಜ್​ 81.29 ಮೀ ದಾಖಲಿಸಿ ಹಿನ್ನಡೆಯಲ್ಲೇ ಉಳಿದರು. ಆದರೆ, ನಾಲ್ಕನೇ ಪ್ರಯತ್ನದಲ್ಲಿ ಪುಟಿದೆದ್ದ ನೀರಜ್​ 82.27 ಮೀ ದೂರ ಜಾವೆಲಿನ್​ ಎಸೆದು ಅಗ್ರಸ್ಥಾನವನ್ನು ವಶಪಡಿಸಿಕೊಂಡರು. ಮನು ಈ ಸುತ್ತಿನಲ್ಲಿ 81.47 ಮೀ. ಎಸೆದರು. 28 ವರ್ಷದ ಕಿಶೋರ್ ಜೆನಾ ತಾವೆಸೆದ 4 ಎಸೆತಗಳ ಪೈಲಿ ಮೂರರಲ್ಲಿ ಫೌಲ್ ಆಗಿ ಅತ್ಯಂತ ಕಳಪೆ ಪ್ರದರ್ಶನ ತೋರಿದರು. ಕನಿಷ್ಠ ಮೂರನೇ ಸ್ಥಾನ ಪಡೆಯುವಲ್ಲಿಯೂ ವಿಫಲರಾದರು.

ಉತ್ತಮವಾಗಿ ಆಡುತ್ತಿದ್ದ ಮನು 5ನೇ ಮತ್ತು ಅಂತಿಮ 6 ಸುತ್ತಿನ ಎಸೆತವನ್ನು ಫೌಲ್ ಮಾಡಿದರು. ಅಂತಿಮವಾಗಿ ದ್ವಿತೀಯ ಸ್ಥಾನಿಯಾಗಿ ಹೊರಹೊಮ್ಮಿದರು. ನೀರಜ್​ ಬಹಳ ಕಷ್ಟಪಟ್ಟು ಚಿನ್ನದ ಪದಕ ತಮ್ಮದಾಗಿಸಿಕೊಂಡರು. ಚೋಪ್ರಾ ಅವರು ಈ ಟೂರ್ನಿಯಲ್ಲಿ ಕೊನೆಯ ಬಾರಿಗೆ ಸ್ಪರ್ಧಿಸಿದ್ದು ಮಾರ್ಚ್ 17, 2021 ರಲ್ಲಿ. ಈ ವೇಳೆ ಅವರು 87.80 ಮೀ ಎಸೆಯುವ ಮೂಲಕ ಚಿನ್ನ ಗೆದಿದ್ದರು. ಈ ಬಾರಿ 82.27 ಮೀ. ಎಸೆದರು. ಕಳೆದ ಕೆಲವು ಟೂರ್ನಿಗೆ ಹೋಲಿಸಿದರೆ ನೀರಜ್​ ಅವರ ಕಳಪೆ ಪ್ರದರ್ಶನ ಇದಾಗಿದೆ.

ಕಾಶಿನಾಥ ನಾಯ್ಕ್ ತರಬೇತಿ

2020ರಲ್ಲಿ ಡಿ.ಪಿ.ಮನು ಅವರಿಗೆ ಮಹತ್ವದ ತಿರುವು ಸಿಕ್ಕಿತು. ಅವರು ಪುಣೆಯಲ್ಲಿರುವ ಆರ್ಮಿ ಸ್ಪೋರ್ಟ್ಸ್‌ ಇನ್‌ಸ್ಟಿಟ್ಯೂಟ್‌ನಲ್ಲಿ ಹವಾಲ್ದಾರ್‌ ಕೆಲಸಕ್ಕೆ ಸೇರಿದರು. ಇದೇ ವೇಳೆ ಕಾಶಿನಾಥ ನಾಯ್ಕ್​ ಎಂಬ ಜಾವೆಲಿನ್‌ ತರಬೇತುದಾರರ ಪರಿಚಯವೂ ಆಯಿತು. ಕಾಶಿನಾಥ ಅವರ ಬಳಿ ಸತತ ತರಬೇತಿ ಪಡೆದ ಡಿ.ಪಿ. ಮನು, 65 ಮೀಟರ್‌ ದೂರ ಭರ್ಜಿ ಎಸೆತದಿಂದ 80 ಮೀಟರ್‌ ದಾಟುವಂತಾದರು.

ನೀರಜ್​ ಮತ್ತು ಕಿಶೋರ್​ ಈಗಾಗಲೇ ಪ್ಯಾರಿಸ್​ ಒಲಿಂಪಿಕ್ಸ್​ ಟಿಕೆಟ್​ ಪಡೆದಿದ್ದರು. ಮನು ಭಾರತದ ಮೂರನೇ ಸ್ಫರ್ಧಿಯಾಗಿ ಒಲಿಂಪಿಕ್ಸ್​ ಅರ್ಹತೆ ಪಡೆಲು ಅವರಿಗೆ ಈ ಟೂರ್ನಿಯಲ್ಲಿ 85.50 ಮೀ. ಎಸೆತದ ಮಾನದಂಡ ನೀಡಲಾಗಿತ್ತು. ಆದರೆ ಈ ಗುರಿಯನ್ನು ತಲುಪಲು ಅವರಿಂದ ಸಾಧ್ಯವಾಗಲಿಲ್ಲ.

ಮನು ಮಾಡಿದ ಸಾಧನೆಗಳು

  1. 2022ರ ಜೂನ್‌ನಲ್ಲಿ ನಡೆದ ರಾಷ್ಟ್ರೀಯ ಅಂತಾರಾಜ್ಯ ಹಿರಿಯ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್ಸ್‌ನಲ್ಲಿ ಚಿನ್ನದ ಪದಕ
  2. 2023ರ ಏಪ್ರಿಲ್‌ನಲ್ಲಿ ಬೆಂಗಳೂರಿನ ಶ್ರೀ ಕಂಠೀರವ ಹೊರಾಂಗಣ ಕ್ರೀಡಾಂಗಣದಲ್ಲಿ ನಡೆದ ಇಂಡಿಯನ್‌ ಗ್ರ್ಯಾಂಡ್‌ ಪ್ರಿಕ್ಸ್‌ನಲ್ಲಿ ಚಿನ್ನ
  3. 2022ರ ಏಪ್ರಿಲ್‌ನಲ್ಲಿ ಕೇರಳದ ತಿರುವನಂಪುರಂನಲ್ಲಿ ನಡೆದ ಇಂಡಿಯನ್‌ ಗ್ರ್ಯಾಂಡ್‌ ಪ್ರಿಕ್ಸ್‌ನಲ್ಲಿ ಬಂಗಾರದ ಪದಕ
  4. 2022ರ ಆಗಸ್ಟ್‌ನಲ್ಲಿ ನಡೆದ ಬರ್ಮಿಂಗ್‌ಹ್ಯಾಮ್‌ ಕಾಮನ್‌ವೆಲ್ತ್‌ ಗೇಮ್ಸ್‌ನಲ್ಲಿ ಐದನೇ ಸ್ಥಾನಕ್ಕೆ ತೃಪ್ತಿ
  5. 2023ರ ಜುಲೈನಲ್ಲಿ ಬ್ಯಾಂಕಾಕ್‌ನಲ್ಲಿ ನಡೆದ ಏಷ್ಯನ್‌ ಅಥ್ಲೆಟಿಕ್ಸ್‌ ಚಾಂಪಿಯನ್‌ಶಿಪ್ಸ್‌ನಲ್ಲಿ ಬೆಳ್ಳಿ
  6. 2022ರ ಅಕ್ಟೋಬರ್‌ನಲ್ಲಿ ಗುಜರಾತ್‌ನಲ್ಲಿ ನಡೆದ ಇಂಡಿಯನ್‌ ನ್ಯಾಷನಲ್‌ ಗೇಮ್ಸ್‌ನಲ್ಲಿ ಚಿನ್ನ

Continue Reading

ಕ್ರೀಡೆ

IPL 2024: ಆರ್​ಸಿಬಿ ಪಂದ್ಯದ ವೇಳೆ ಕಳಪೆ ಆಹಾರ ವಿತರಣೆ: ಕೆಎಸ್​ಸಿಎ ವಿರುದ್ಧ ಎಫ್ಐಆರ್

IPL 2024: ಆರೋಗ್ಯ ಹದಗೆಡಲು ಸ್ಟೇಡಿಯಂನ ಕ್ಯಾಂಟಿನ್​ನಲ್ಲಿ ನೀಡಿದ ಆಹಾರವೇ ಕಾರಣ ಎಂದು ಚೈತನ್ಯ ಕೆಎಸ್​ಸಿಎ ಆಡಳಿತ ಮಂಡಳಿ ವಿರುದ್ಧ ಕಬ್ಬನ್ ಪಾರ್ಕ್ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ದೂರಿನ ಅನ್ವಯ ಕೆಎಸ್​ಸಿಎ ವಿರುದ್ಧ ಎಫ್ಐಆರ್ ದಾಖಲಾಗಿದೆ

VISTARANEWS.COM


on

IPL 2024
Koo

ಬೆಂಗಳೂರು: 17ನೇ ಆವೃತ್ತಿಯ ಐಪಿಎಲ್​ನಲ್ಲಿ(IPL 2024) ಡೆಲ್ಲಿ ಮತ್ತು ಆರ್​ಸಿಬಿ(DC vs RCB) ನಡುವೆ ಮೇ 12ರಂದು ಎಂ.ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ(M.Chinnaswamy Stadium) ನಡೆದಿದ್ದ ಪಂದ್ಯದ ವೇಳೆ ಪ್ರೇಕ್ಷಕರಿಗೆ ಕಳಪೆ ಆಹಾರ ನೀಡಿದ ಆರೋಪದಡಿ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ(Karnataka State Cricket Association) ಆಡಳಿತ ಮಂಡಳಿ (KSCA) ವಿರುದ್ಧ ಎಫ್ಐಆರ್ ದಾಖಲಾಗಿದೆ. ಕಬ್ಬನ್ ಪಾರ್ಕ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಮೇ 12ರಂದು ಐಪಿಎಲ್ ವೀಕ್ಷಣೆ ಬಂದಿದ್ದ 23 ವರ್ಷದ ಚೈತನ್ಯ ಕತಾರ್ ಏರ್ ವೇಸ್ ಫ್ಯಾನ್ಸ್ ಟರೇಸ್ ಸ್ಟ್ಯಾಂಡಿನ ಕ್ಯಾಂಟಿನ್ ನಿಂದ ಊಟ ಸೇವಿಸಿದ್ದ ನಂತರ ಕೆಲವೇ ನಿಮಿಷಗಳಲ್ಲಿ ಆತನಿಗೆ ಹೊಟ್ಟೆ ನೋವು ಕಾಣಿಸಿಕೊಂಡಿತ್ತು. ತಾನು ಕುಳಿತುಕೊಂಡಿದ್ದ ಜಾಗದಲ್ಲಿಯೇ ಚೈತನ್ಯ ಕುಸಿದುಬಿದ್ದಿದ್ದಾನೆ. ತಕ್ಷಣ ಸ್ಟೇಡಿಯಂ ಸಿಬ್ಬಂದಿ ನೆರವಿನಿಂದ ಆತನಿಗೆ ಆ್ಯಂಬುಲೆನ್ಸ್ ನಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿತ್ತು‌. ಬಳಿಕ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿದಾಗ ಚೈತನ್ಯರನ್ನು ಪರೀಕ್ಷಿಸಿದ ವೈದ್ಯರು ಫುಡ್ ಪಾಯಿಸನ್ ಆಗಿದೆ ಎಂದು ಹೇಳಿದ್ದಾರೆ.

ಇದನ್ನೂ ಓದಿ IPL 2024: ಲಕ್ನೋಗೆ ಸೋಲು; ಪ್ಲೇ ಆಫ್​ ಪ್ರವೇಶಿಸಿದ ರಾಜಸ್ಥಾನ್​ ರಾಯಲ್ಸ್​

ಈ ಸಂಬಂಧ ತಮ್ಮ ಆರೋಗ್ಯ ಹದಗೆಡಲು ಕ್ಯಾಂಟಿನ್​ನಲ್ಲಿ ನೀಡಿದ ಆಹಾರವೇ ಕಾರಣ ಎಂದು ಚೈತನ್ಯ ಕೆಎಸ್​ಸಿಎ ಆಡಳಿತ ಮಂಡಳಿ ವಿರುದ್ಧ ಕಬ್ಬನ್ ಪಾರ್ಕ್ ಪೊಲೀಸ್​ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಈ ದೂರಿನ ಅನ್ವಯ ಕೆಎಸ್​ಸಿಎ ವಿರುದ್ಧ ಎಫ್ಐಆರ್ ದಾಖಲಾಗಿದೆ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯುವ ಪಂದ್ಯದ ವೇಳೆ ಕಳಪೆ ಆಹಾರ ನೀಡುತ್ತಿರುವ ಆರೋಪ ಕೇಳಿಬರುತ್ತಿರುವುದು ಇದೇ ಮೊದಲೇನಲ್ಲ. ಹಲವು ಬಾರಿ ಇಲ್ಲಿ ಪಂದ್ಯ ವೀಕ್ಷಣೆಗೆ ಬಂದಿದ್ದ ಪ್ರೇಕ್ಷಕರು ಇಲ್ಲಿನ ಆಹಾರ ವಿತರಣೆಯ ಕುರಿತು ಸಾಮಾಜಿಕ ಜಾಲತಾಣದಲ್ಲಿ ಗಂಭೀರ ಆರೋಪ ಮಾಡಿದ್ದರು. ಇನ್ನಾದರೂ ಕೆಎಸ್​ಸಿಎ ಈ ಬಗ್ಗೆ ಎಚ್ಚೆತ್ತುಕೊಂಡು ಉತ್ತಮ ಆಹಾರ ನೀಡುವ ಕೆಲಸವನ್ನು ಮಾಡಬೇಕಿದೆ. ಡೆಲ್ಲಿ ವಿರುದ್ಧದ ಈ ಪಂದ್ಯವನ್ನು ಆರ್​ಸಿಬಿ 47 ರನ್​ ಅಂತರದಿಂದ ಗೆದ್ದು ಬೀಗಿತ್ತು.

ಚಿನ್ನಸ್ವಾಮಿ ಸ್ಟೇಡಿಯಂನ ಎಲ್ಲ ನೀರಿನ ಮೂಲದ ವಿವರ ಕೇಳಿದ ಎನ್‌ಜಿಟಿ!


ಬೆಂಗಳೂರಲ್ಲಿ ನೀರಿನ ಸಮಸ್ಯೆ ತೀವ್ರಗೊಂಡಿದ್ದ ವೇಳೆಯೂ(bangalore water crisis) ಚಿನ್ನಸ್ವಾಮಿ(m chinnaswamy) ಕ್ರೀಡಾಂಗಣದಲ್ಲಿ ಕರ್ನಾಟಕ ರಾಜ್ಯ ಕ್ರಿಕೆಟ್‌ ಸಂಸ್ಥೆ (ಕೆಎಸ್‌ಸಿಎ) 17ನೇ ಆವೃತ್ತಿಯ ಐಪಿಎಲ್(IPL 2024) ಟೂರ್ನಿಯ​ ಪಂದ್ಯಾವಳಿಗಳನ್ನು ನಡೆಸಿತ್ತು. ಇದಕ್ಕೆ ಸಾರ್ವಜನಿಕ ವಲಯದಿಂದ ಭಾರೀ ವಿರೋಧ ಕೂಡ ವ್ಯಕ್ತವಾಗಿತ್ತು. 3 ವಾರಗಳ ಹಿಂದೆ ನೀರಿನ ಬಳಕೆ ಕುರಿತು ರಾಷ್ಟ್ರೀಯ ಹಸಿರು ಪ್ರಾಧಿಕಾರ(ಎನ್‌ಜಿಟಿ) ವರದಿ ಕೇಳಿತ್ತು. ಪಂದ್ಯಗಳಿಗೆ ಬಳಸಿರುವ ನೀರಿನ ಮೂಲ ಹಾಗೂ ಕ್ರೀಡಾಂಗಣದಲ್ಲಿರುವ 400 ಅಡಿ ಆಳದ ನಾಲ್ಕು ಕೊಳವೆ ಬಾವಿಗಳ ಬಗ್ಗೆ ವರದಿ ಸಲ್ಲಿಸುವಂತೆ ಸೂಚಿಸಿದೆ. ಎನ್‌ಜಿಟಿ ಮುಖ್ಯಸ್ಥ ನ್ಯಾ. ಪ್ರಕಾಶ್ ಶ್ರೀವಾಸ್ತವ ಅವರಿದ್ದ ಪೀಠವು, ಕ್ರೀಡಾಂಗಣದಲ್ಲಿ ಬಳಕೆಯಾಗುತ್ತಿರುವ ನೀರಿನ ಎಲ್ಲಾ ಮೂಲ, ಕ್ರೀಡಾಂಗಣದಲ್ಲಿರುವ ಬೋರ್‌ವೆಲ್‌, ಒಳಚರಂಡಿ ಸಂಸ್ಕರಣಾ ಘಟಕದ ಬಳಕೆ ಬಗ್ಗೆ 4 ವಾರಗಳಲ್ಲಿ ಉತ್ತರಿಸುವಂತೆ ಸೂಚಿಸಿದೆ. ಮುಂದಿನ ವಿಚಾರಣೆಯನ್ನು ಆಗಸ್ಟ್​ 13ಕ್ಕೆ ನಿಗದಿಪಡಿಸಿದೆ.

Continue Reading
Advertisement
Dalita Sangharsha samiti demands that Minister HK Patil should be dismissed from the Cabinet
ರಾಯಚೂರು3 mins ago

Raichur News: 371 ಜೆ ಮೀಸಲಾತಿ ಮುಂದುವರಿಸದಂತೆ ಸಿಎಂಗೆ ಪತ್ರ ಬರೆದ ಎಚ್.ಕೆ. ಪಾಟೀಲ್ ವಜಾಗೆ ದಸಂಸ ಆಗ್ರಹ

Sandeep Lamichhane
ಕ್ರೀಡೆ15 mins ago

Sandeep Lamichhane: ಅತ್ಯಾಚಾರ ಆರೋಪದಲ್ಲಿ 8 ವರ್ಷ ಜೈಲು ಶಿಕ್ಷೆಗೆ ಗುರಿಯಾಗಿದ್ದ ಕ್ರಿಕೆಟಿಗ ಲಮಿಚಾನೆಗೆ ರಿಲೀಫ್; ನಿರಪರಾಧಿ ಎಂದ ಕೋರ್ಟ್​

Shyam Rangeela
ದೇಶ23 mins ago

Shyam Rangeela: ವಾರಾಣಸಿಯಲ್ಲಿ ಮೋದಿ ವಿರುದ್ಧ ಕಣಕ್ಕಿಳಿದ ಕಲಾವಿದನ ನಾಮಪತ್ರ ತಿರಸ್ಕಾರ!

Terrorist Arrested
ಕರ್ನಾಟಕ1 hour ago

Terrorist Arrested: ಬೆಂಗಳೂರಿನ ಇಸ್ರೇಲ್ ರಾಯಭಾರ ಕಚೇರಿ ಸ್ಫೋಟಕ್ಕೆ ಸಂಚು ರೂಪಿಸಿದ್ದ ಶಂಕಿತ ಉಗ್ರನ ಬಂಧನ

Monsoon 2024
ದೇಶ1 hour ago

Monsoon 2024: ರೈತರಿಗೆ ಗುಡ್‌ ನ್ಯೂಸ್;‌ ಮುಂಗಾರು ಮಳೆ ಆಗಮನಕ್ಕೆ ಫಿಕ್ಸ್‌ ಆಯ್ತು ದಿನಾಂಕ!

DP Manu
ಕ್ರೀಡೆ1 hour ago

DP Manu: ಫೆಡರೇಷನ್ ಕಪ್‌ನಲ್ಲಿ ನೀರಜ್​ ಚೋಪ್ರಾಗೆ ಬೆವರಿಳಿಯುವಂತೆ ಮಾಡಿದ ಕನ್ನಡಿಗ ಮನು; ಇವರ ಹಿನ್ನೆಲೆ, ಸಾಧನೆ ಏನೇನು?

Davanagere News
ಕರ್ನಾಟಕ2 hours ago

Davanagere News: ದಾವಣಗೆರೆ ಸಮೀಪದ ಕೆರೆಯಲ್ಲಿ ಲಕ್ಷಕ್ಕೂ ಅಧಿಕ ಮೀನುಗಳ ಮಾರಣಹೋಮ; ವಿಷಪ್ರಾಶನ ಶಂಕೆ

Robert Fico
ವಿದೇಶ2 hours ago

Robert Fico: ಸ್ಲೊವಾಕಿಯಾ ಪ್ರಧಾನಿ ರಾಬರ್ಟ್‌ ಫಿಕೊ ಮೇಲೆ ಗುಂಡಿನ ದಾಳಿ; ಭೀಕರ ವಿಡಿಯೊ ಇಲ್ಲಿದೆ

Federation Cup 2024
ಕ್ರೀಡೆ2 hours ago

Federation Cup 2024: ಕನ್ನಡಿಗ ಮನು ಎದುರು ತೀವ್ರ ಪೈಪೋಟಿ ಎದುರಿಸಿ ಚಿನ್ನ ಗೆದ್ದ ನೀರಜ್ ಚೋಪ್ರಾ

Tips For Healthy Skin
ಆರೋಗ್ಯ3 hours ago

Tips For Healthy Skin: ಈ ಐದು ಸಲಹೆಗಳನ್ನು ಪಾಲಿಸಿ, ಮೊಡವೆಗಳಿಂದ ಪಾರಾಗಿ!

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Prajwal Revanna Case
ಕರ್ನಾಟಕ15 hours ago

Prajwal Revanna Case: ಪ್ರಜ್ವಲ್‌ ರೇವಣ್ಣ ಇಂದೇ ಜರ್ಮನಿಯಿಂದ ಭಾರತಕ್ಕೆ? ಎಸ್‌ಐಟಿ ಅಲರ್ಟ್‌

Dina Bhavishya
ಭವಿಷ್ಯ18 hours ago

Dina Bhavishya : ಭೂ ವ್ಯವಹಾರಕ್ಕೆ ಇದು ಸೂಕ್ತ ಸಮಯ; ವ್ಯಾಪಾರದಲ್ಲಿ ಡಬಲ್‌ ಲಾಭ

HD Revanna Released first reaction after release will be acquitted of all charges
ರಾಜಕೀಯ1 day ago

HD Revanna Released: ರಿಲೀಸ್‌ ಬಳಿಕ ರೇವಣ್ಣ ಫಸ್ಟ್‌ ರಿಯಾಕ್ಷನ್;‌ ನ್ಯಾಯಾಂಗದ ಮೇಲೆ ನಂಬಿಕೆ ಇದೆ; ಆರೋಪ ಮುಕ್ತನಾಗುವೆ

CM Siddaramaiah says Our government is stable for 5 years BJP will disintegrate
Lok Sabha Election 20241 day ago

CM Siddaramaiah: ನಮ್ಮ ಸರ್ಕಾರ 5 ವರ್ಷ ಸುಭದ್ರ; ಚುನಾವಣೆ ಬಳಿಕ ಬಿಜೆಪಿ ಛಿದ್ರ ಎಂದ ಸಿಎಂ ಸಿದ್ದರಾಮಯ್ಯ!

I dont want to go to other states for Lok Sabha Election 2024 campaign for Congress says CM Siddaramaiah
Lok Sabha Election 20241 day ago

CM Siddaramaiah: ಕಾಂಗ್ರೆಸ್‌ ಪರ ಬೇರೆ ರಾಜ್ಯಗಳಿಗೆ ಪ್ರಚಾರಕ್ಕೆ ಹೋಗಲು ನನಗೆ ಇಷ್ಟವಿಲ್ಲ: ಸಿಎಂ ಸಿದ್ದರಾಮಯ್ಯ!

HD Revanna Bail I am not happy that Revanna has been released says HD Kumaraswamy
ರಾಜಕೀಯ1 day ago

HD Revanna Bail: ರೇವಣ್ಣ ಬಿಡುಗಡೆಯಾಗಿದ್ದಕ್ಕೆ ನಾನಂತೂ ಖುಷಿ ಪಡಲ್ಲ ಎಂದ ಎಚ್‌ಡಿಕೆ!

karnataka Rain Effected
ಬೆಂಗಳೂರು1 day ago

Karnataka Rain: ಮಿಡ್‌ನೈಟ್‌ ಮಳೆ ಅವಾಂತರ; ಮರಗಳು, ವಿದ್ಯುತ್‌ ಕಂಬಗಳು ಧರೆಗೆ, ಕುಸಿದು ಬಿದ್ದ ಮನೆ

Dina Bhavishya
ಭವಿಷ್ಯ2 days ago

Dina Bhavishya : ಉದ್ಯೋಗದ ಸ್ಥಳದಲ್ಲಿ ನಿಮ್ಮ ವಿರುದ್ಧ ಪಿತೂರಿ ಮಾಡ್ಬಹುದು ಎಚ್ಚರ!

HD Revanna Bail Revanna will not leave the country condition imposed by the court
ಕ್ರೈಂ2 days ago

HD Revanna Bail: ರೇವಣ್ಣ ದೇಶ ಬಿಡಂಗಿಲ್ಲ, ಕೆ.ಆರ್‌. ನಗರಕ್ಕೆ ಎಂಟ್ರಿ ಕೊಡಂಗಿಲ್ಲ! ಕೋರ್ಟ್‌ ವಿಧಿಸಿದ ಷರತ್ತು ಏನು?

HD Revanna Bail
ಕ್ರೈಂ2 days ago

HD Revanna Bail: ಎಚ್‌.ಡಿ ರೇವಣ್ಣಗೆ ಕೊನೆಗೂ ಜಾಮೀನು; ಎಸ್‌ಐಟಿಗೆ ಮುಖಭಂಗ!

ಟ್ರೆಂಡಿಂಗ್‌