Lok Sabha Election 2024: ಯತೀಂದ್ರ, ಸಿಎಂಗೆ ನ್ಯಾಯಾಂಗ ವ್ಯವಸ್ಥೆ ಮೇಲೆ ನಂಬಿಕೆ ಇಲ್ಲವೇ? ಪ್ರಲ್ಹಾದ್ ಜೋಶಿ ಪ್ರಶ್ನೆ - Vistara News

Lok Sabha Election 2024

Lok Sabha Election 2024: ಯತೀಂದ್ರ, ಸಿಎಂಗೆ ನ್ಯಾಯಾಂಗ ವ್ಯವಸ್ಥೆ ಮೇಲೆ ನಂಬಿಕೆ ಇಲ್ಲವೇ? ಪ್ರಲ್ಹಾದ್ ಜೋಶಿ ಪ್ರಶ್ನೆ

Lok Sabha Election 2024: ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಪ್ರಚಾರ ಮಾಡುವ ಭರದಲ್ಲಿ ಯತೀಂದ್ರ ಸಿದ್ದರಾಮಯ್ಯ ಅವರು ಅಮಿತ್ ಶಾ ಅವರನ್ನು ರೌಡಿ ಎಂದು ಕರೆದಿರುವ ಬಗ್ಗೆ ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೋರ್ಟ್ ತೀರ್ಪು ಕೊಟ್ಟ ಮೇಲೂ ಒಬ್ಬ ಮುಖ್ಯಮಂತ್ರಿ ಮಗನಾಗಿ, ಒಮ್ಮೆ ಶಾಸಕ ಆದವರು ಹೀಗೆ ಬಾಲಿಶ ಹೇಳಿಕೆ ನೀಡುವುದು ಅವರ ಸಂಸ್ಕೃತಿಯನ್ನು ತೋರಿಸುತ್ತದೆ. ಯತೀಂದ್ರ ಸಿದ್ದರಾಮಯ್ಯ ಅವರು ನ್ಯಾಯಾಂಗವನ್ನು ಮೀರಿ ಸರ್ಟಿಫಿಕೆಟ್ ಕೊಡುವ ಮಟ್ಟಕ್ಕೆ ಬಂದಿದ್ದಾರೆ ಎಂದ ಖಂಡಿಸಿದ್ದಾರೆ.

VISTARANEWS.COM


on

Lok Sabha Election 2024 Does Yathindra Siddaramaiah not have faith in the judicial system Pralhad Joshi question
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಹುಬ್ಬಳ್ಳಿ: ಸಿಎಂ ಸಿದ್ದರಾಮಯ್ಯ (CM Siddaramaiah) ಮತ್ತು ಪುತ್ರ ಯತೀಂದ್ರ (Yathindra Siddaramaiah) ಅವರೇ, ತಮಗೆ ದೇಶದ ನ್ಯಾಯಾಂಗ ವ್ಯವಸ್ಥೆ ಮೇಲೆ ನಂಬಿಕೆಯಿಲ್ಲವೇ? ಎಂದು ಕೇಂದ್ರ ಸಚಿವ ಪ್ರಲ್ಹಾದ್‌ ಜೋಶಿ ಪ್ರಶ್ನಿಸಿದ್ದಾರೆ. ಲೋಕಸಭಾ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಪ್ರಚಾರ ಮಾಡುವ ಭರದಲ್ಲಿ ಯತೀಂದ್ರ ಸಿದ್ದರಾಮಯ್ಯ ಅವರು ಅಮಿತ್ ಶಾ ಅವರನ್ನು ರೌಡಿ ಎಂದು ಕರೆದಿರುವ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಹುಬ್ಬಳ್ಳಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಪ್ರಲ್ಹಾದ್‌ ಜೋಶಿ, ಅಮಿತ್ ಶಾ ಅವರನ್ನು ಇವರ ಸರ್ಕಾರ ಫೇಕ್ ಎನ್ ಕೌಂಟರ್ ಪ್ರಕರಣದಲ್ಲಿ ಸಿಲುಕಿಸಿತ್ತು. ಟ್ರಯಲ್ ಕೋರ್ಟ್, ಹೈಕೋರ್ಟ್, ಕೊನೆಗೆ ಸುಪ್ರೀಂ ಕೋರ್ಟ್ ಹೀಗೆ ನ್ಯಾಯಾಲಯ ಅವರನ್ನು ಆ ಪ್ರಕರಣದಿಂದ ಖುಲಾಸೆಗೊಳಿಸಿದೆ. ಹಾಗಿದ್ದರೂ ಅಮಿತ್ ಶಾ ಬಗ್ಗೆ ನಾಲಿಗೆ ಹರಿ ಬಿಡುತ್ತಿದ್ದಾರೆ. ದೇಶದ ನ್ಯಾಯಾಂಗದ ಮೇಲೆ ನಂಬಿಕೆಯೇ ಇಲ್ಲದಂತೆ ವರ್ತಿಸುತ್ತಿದ್ದಾರೆಂದು ಕಿಡಿಕಾರಿದರು.

ನ್ಯಾಯಾಂಗವನ್ನು ಮೀರಿದ್ದಾರೆ

ಕೋರ್ಟ್ ತೀರ್ಪು ಕೊಟ್ಟ ಮೇಲೂ ಒಬ್ಬ ಮುಖ್ಯಮಂತ್ರಿ ಮಗನಾಗಿ, ಒಮ್ಮೆ ಶಾಸಕ ಆದವರು ಹೀಗೆ ಬಾಲಿಶ ಹೇಳಿಕೆ ನೀಡುವುದು ಅವರ ಸಂಸ್ಕೃತಿಯನ್ನು ತೋರಿಸುತ್ತದೆ. ಯತೀಂದ್ರ ಸಿದ್ದರಾಮಯ್ಯ ಅವರು ನ್ಯಾಯಾಂಗವನ್ನು ಮೀರಿ ಸರ್ಟಿಫಿಕೆಟ್ ಕೊಡುವ ಮಟ್ಟಕ್ಕೆ ಬಂದಿದ್ದಾರೆ ಎಂದು ಪ್ರಲ್ಹಾದ್‌ ಜೋಶಿ ಖಂಡಿಸಿದರು.

ಮಳೆ ಬರದಿದ್ದರೂ ಕೇಂದ್ರವೇ ತಡೆದಿದೆ ಎನ್ನದಿದ್ದರೆ ಸಾಕು

ಅಪ್ಪ-ಮಗ ಇಬ್ಬರೂ ಮಳೆ ಆಗುವುದನ್ನೂ ಕೇಂದ್ರ ಸರ್ಕಾರವೇ ತಡೆಡಿದೆ ಎನ್ನದಿದ್ದರೆ ಸಾಕು! ಎಂದು ಸಿಎಂ ಸಿದ್ದರಾಮಯ್ಯ ಮತ್ತು ಪುತ್ರ ಯತೀಂದ್ರ ವಿರುದ್ಧ ಸಚಿವ ಪ್ರಲ್ಹಾದ್‌ ಜೋಶಿ ಲೇವಡಿ ಮಾಡಿದರು.

ರಾಜ್ಯದಲ್ಲಿ ಏನೇ ಆದರೂ ಕೇಂದ್ರ ಸರ್ಕಾರವೇ ಕಾರಣ ಎಂದು ಬೊಟ್ಟು ಮಾಡುತ್ತಿದ್ದಾರೆ. ಒಳ್ಳೆಯದಾದರೆ ತಾವು, ಕೆಟ್ಟದ್ದೇನಾದರು ಘಟಿಸಿದರೆ ಕೇಂದ್ರ ಕಾರಣ ಎನ್ನುವುದು ಅಪ್ಪ-ಮಗರಿಬ್ಬರಿಗೂ ಒಂದು ಹವ್ಯಾಸವಾಗಿಬಿಟ್ಟಿದೆ. ಪ್ರತಿಯೊಂದಕ್ಕೂ ಕೇಂದ್ರವನ್ನು ದೂಷಿಸುವ ಇವರು, ನಾಳೆ ಮಳೆ ಬರದಿದ್ದರೂ ಕೇಂದ್ರದತ್ತ ಬೊಟ್ಟು ತೋರಿದರು ಅಚ್ಚರಿ ಪಡಬೇಕಿಲ್ಲ. ಮಳೆ ಆಗಿಲ್ರಿ.. ಮೋದಿ ಅವರೇ ಬಂದ್ ಮಾಡಿಸಿದ್ದಾರೆ ಎನ್ನುವಂಥ ಸ್ವಭಾವ ಇವರದ್ದು ಎಂದು ಸಚಿವ ಜೋಶಿ ಲೇವಡಿ ಮಾಡಿದರು.

ಇದನ್ನೂ ಓದಿ: Lok Sabha Election 2024: ಯಾರೂ ಗೆರೆ ದಾಟುವಂತಿಲ್ಲ: ಕೈ ಒಳಜಗಳಕ್ಕೆ ಡಿಕೆಶಿ ವಾರ್ನಿಂಗ್;‌ ಮೋದಿ ಬಂದರೂ ಹೆದರಲ್ಲ!

ಎಚ್‌ಡಿಕೆ ಆರೋಗ್ಯದ ಮೇಲೆ ಲೇವಡಿ ಸರಿಯಲ್ಲ

ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಅವರ ಆರೋಗ್ಯ ವಿಚಾರದಲ್ಲಿ ಕಾಂಗ್ರೆಸ್‌ ಕ್ಷುಲ್ಲಕ ರಾಜಕಾರಣ ಸರಿಯಲ್ಲ. ಎಚ್‌ಡಿಕೆ ಅಲ್ಲ, ಯಾವುದೇ ಪಕ್ಷದವರ ಆರೋಗ್ಯ ವಿಚಾರದಲ್ಲಿ ಸಹಾನುಭೂತಿ ತೋರಬೇಕು. ರಾಜಕೀಯ ಸೌಜನ್ಯ ತೋರಬೇಕೆ ಹೊರತು ಕ್ಷುಲ್ಲಕವಾಗಿ ವರ್ತಿಸುವುದಲ್ಲ ಎಂದು ಕಾಂಗ್ರೆಸ್ಸಿಗರಿಗೆ ಪ್ರಲ್ಹಾದ್‌ ಜೋಶಿ ತಿರುಗೇಟು ನೀಡಿದರು.

ಚೆನ್ನೈನಂತಹ ಆಸ್ಪತ್ರೆಯಲ್ಲಿ ಯಾರಾದರೂ ಫೇಕ್ ಆಪರೇಷನ್ ಮಾಡಿಸಿಕೊಂಡು ಬರಲು ಸಾಧ್ಯವೇ? ಮೆಡಿಕಲ್ ಸೈನ್ಸ್ ತುಂಬಾ ಅಡ್ವಾನ್ಸ್ ಆಗಿದೆ ಎಂಬ ಅರಿವು ಇವರಿಗಿಲ್ಲವೇ? ಯಾವ ಕಾಲದಲ್ಲಿ ಇದ್ದಾರಿವರು? ಆರೋಗ್ಯದ ವಿಷಯದಲ್ಲಿ ಮಾನವೀಯತೆ ಮರೆತು ವರ್ತಿಸುವುದು ಸರಿಯಲ್ಲ ಎಂದು ಸಚಿವ ಜೋಶಿ ಆಕ್ಷೇಪವನ್ನು ವ್ಯಕ್ತಪಡಿಸಿದರು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ದೇಶ

Lok Sabha Election: 6ನೇ ಹಂತದಲ್ಲಿ 59% ಮತದಾನ ; ಬಂಗಾಳದಲ್ಲಿ ವೋಟಿಂಗ್‌ ಹೆಚ್ಚು, ಹಿಂಸೆಯ ಕಿಚ್ಚು

Lok Sabha Election: ರಾಷ್ಟ್ರಪತಿ ದ್ರೌಪದಿ ಮುರ್ಮು, ವಿದೇಶಾಂಗ ವ್ಯವಹಾರಗಳ ಸಚಿವ ಎಸ್‌.ಜೈಶಂಕರ್‌, ಕ್ರಿಕೆಟಿಗ ಗೌತಮ್‌ ಗಂಭೀರ್‌, ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ, ನಾಯಕ ರಾಹುಲ್‌ ಗಾಂಧಿ ಸೇರಿ ಹಲವರು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಮತದಾನ ಮಾಡಿದರು. ಇದರೊಂದಿಗೆ ಆರನೇ ಹಂತದ ಮತದಾನ ಮುಕ್ತಾಯಗೊಂಡಿದ್ದು, ಜೂನ್‌ 1ರಂದು ಏಳನೇ ಅಥವಾ ಕೊನೆಯ ಹಂತದ ಮತದಾನ ನಡೆಯಲಿದೆ.

VISTARANEWS.COM


on

Lok Sabha Election
Koo

ನವದೆಹಲಿ: ಲೋಕಸಭೆ ಚುನಾವಣೆಯು (Lok Sabha Election 2024) ಅಂತಿಮ ಹಂತಕ್ಕೆ ಬಂದಿದೆ. ಶನಿವಾರ ಆರನೇ ಹಂತದಲ್ಲಿ 8 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಮತದಾನ ನಡೆದಿದ್ದು, ಸಂಜೆ 5 ಗಂಟೆ ಸುಮಾರಿಗೆ ಶೇ.59.05ರಷ್ಟು ಮತದಾನ (Voter Turnout) ನಡೆದಿದೆ. ದೆಹಲಿಯಲ್ಲಿ ಶೇ.54.48ರಷ್ಟು ಮತದಾನ ದಾಖಲಾದರೆ, ಪಶ್ಚಿಮ ಬಂಗಾಳದಲ್ಲಿ (West Bengal) 78.19ರಷ್ಟು ಮತದಾನ ದಾಖಲಾಗಿದೆ. ಆ ಮೂಲಕ ಆರನೇ ಹಂತದಲ್ಲಿ ಅತಿಹೆಚ್ಚು ಮತದಾನ ದಾಖಲಾದ ರಾಜ್ಯ ಎಂಬ ಖ್ಯಾತಿ ಪಶ್ಚಿಮ ಬಂಗಾಳದ್ದಾಗಿದೆ.

ರಾಷ್ಟ್ರಪತಿ ದ್ರೌಪದಿ ಮುರ್ಮು, ವಿದೇಶಾಂಗ ವ್ಯವಹಾರಗಳ ಸಚಿವ ಎಸ್‌.ಜೈಶಂಕರ್‌, ಕ್ರಿಕೆಟಿಗ ಗೌತಮ್‌ ಗಂಭೀರ್‌, ಕಾಂಗ್ರೆಸ್‌ ನಾಯಕಿ ಸೋನಿಯಾ ಗಾಂಧಿ, ನಾಯಕ ರಾಹುಲ್‌ ಗಾಂಧಿ ಸೇರಿ ಹಲವರು ತಮ್ಮ ತಮ್ಮ ಕ್ಷೇತ್ರಗಳಲ್ಲಿ ಮತದಾನ ಮಾಡಿದರು. ಇದರೊಂದಿಗೆ ಆರನೇ ಹಂತದ ಮತದಾನ ಮುಕ್ತಾಯಗೊಂಡಿದ್ದು, ಜೂನ್‌ 1ರಂದು ಏಳನೇ ಅಥವಾ ಕೊನೆಯ ಹಂತದ ಮತದಾನ ನಡೆಯಲಿದೆ. ಜೂನ್‌ 4ರಂದು ಸಾರ್ವತ್ರಿಕ ಚುನಾವಣೆ ಹಾಗೂ ಆಂಧ್ರಪ್ರದೇಶ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟವಾಗಲಿದೆ.

ಯಾವ ರಾಜ್ಯದಲ್ಲಿ ಎಷ್ಟು ಮತದಾನ?

ರಾಜ್ಯಮತದಾನ ಪ್ರಮಾಣ
ಬಿಹಾರ53.30%
ಹರಿಯಾಣ58.37%
ಜಮ್ಮು-ಕಾಶ್ಮೀರ52.28%
ಜಾರ್ಖಂಡ್62.74%
ದೆಹಲಿ54.48%
ಒಡಿಶಾ60.07%
ಉತ್ತರ ಪ್ರದೇಶ54.03%
ಪಶ್ಚಿಮ ಬಂಗಾಳ78.19%

ಯಾವ ರಾಜ್ಯಗಳ ಎಷ್ಟು ಕ್ಷೇತ್ರಗಳಲ್ಲಿ ಮತದಾನ?

ಆರನೇ ಹಂತದಲ್ಲಿ 5.84 ಕೋಟಿ ಪುರುಷರು, 5.29 ಕೋಟಿ ಮಹಿಳೆಯರು, 5120 ತೃತೀಯ ಲಿಂಗಿಗಳು ಸೇರಿ ಒಟ್ಟು 11.13 ಕೋಟಿ ಮತದಾರರು ನೋಂದಣಿ ಮಾಡಿಕೊಂಡಿದ್ದರು. 8 ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳ 58 ಕ್ಷೇತ್ರಗಳಿಗೆ ಮತದಾನ ನಡೆದಿದೆ. ಬಿಹಾರದ 8 ಸ್ಥಾನಗಳು, ಹರಿಯಾಣದ ಎಲ್ಲ 10 ಸ್ಥಾನ, ಜಾರ್ಖಂಡ್‌ 4, ಜಮ್ಮು-ಕಾಶ್ಮೀರ 1, ದೆಹಲಿಯ ಎಲ್ಲ 7 ಸ್ಥಾನ, ಒಡಿಶಾ 6, ಉತ್ತರ ಪ್ರದೇಶ 14 ಹಾಗೂ ಪಶ್ಚಿಮ ಬಂಗಾಳದ 8 ಕ್ಷೇತ್ರಗಳಲ್ಲಿ ವೋಟಿಂಗ್‌ ನಡೆದಿದೆ. ಒಟ್ಟು 889 ಅಭ್ಯರ್ಥಿಗಳು ಚುನಾವಣಾ ಅಖಾಡದಲ್ಲಿ ಇದ್ದಾರೆ.

ಪಶ್ಚಿಮ ಬಂಗಾಳದಲ್ಲಿ ಹಿಂಸಾಚಾರ

ಪಶ್ಚಿಮ ಬಂಗಾಳದಲ್ಲಿ ಎಂದಿನಂತೆ ಕೆಲವೆಡೆ ಹಿಂಸಾಚಾರ ನಡೆದಿದೆ. ಅದರಲ್ಲೂ ಝಾರ್‌ಗ್ರಾಮ್‌ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಣತ್‌ ತುಡು ಅವರ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಮಂಗಳಪೋಟಾ ಗ್ರಾಮದಲ್ಲಿ ಅವರ ಮೇಲೆ ಕಲ್ಲುತೂರಾಟ ನಡೆಸಿದ್ದಾರೆ. ಭದ್ರತಾ ಸಿಬ್ಬಂದಿಯು ಅವರಿಗೆ ಭದ್ರತೆ ಒದಗಿಸಿದರೂ, ಕೆಲ ದುಷ್ಕರ್ಮಿಗಳು ಅವರನ್ನು ಬೆನ್ನತ್ತಿ, ಅವರ ಮೇಲೆ ಕಲ್ಲುತೂರಾಟ ನಡೆಸಿದ್ದಾರೆ. ಪ್ರಣತ್‌ ತುಡು, ಭದ್ರತಾ ಸಿಬ್ಬಂದಿ ಹಾಗೂ ಪತ್ರಕರ್ತರು ಓಡಿ ಹೋಗುವ ವಿಡಿಯೊ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಇದನ್ನೂ ಓದಿ: Narendra Modi: 10 ವರ್ಷ ಬಲಿಷ್ಠ ಪ್ರತಿಪಕ್ಷ ಇರಲಿಲ್ಲ ಎಂಬುದೇ ನೋವು ತಂದಿದೆ; ಮೋದಿ ಬೇಸರ

Continue Reading

ಪ್ರಮುಖ ಸುದ್ದಿ

West Bengal: ಬಂಗಾಳದಲ್ಲಿ ಎಲೆಕ್ಷನ್‌ ಹಿಂಸಾಚಾರ; ಬಿಜೆಪಿ ಅಭ್ಯರ್ಥಿಯನ್ನು ಕಲ್ಲೆಸೆದು ಓಡಿಸಿದ ಟಿಎಂಸಿ ಕಾರ್ಯಕರ್ತರು, Video ಇದೆ

West Bengal: ಪಶ್ಚಿಮ ಬಂಗಾಳದ ಝಾರ್‌ಗ್ರಾಮ್‌ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಣತ್‌ ತುಡು ಅವರ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಮಂಗಳಪೋಟಾ ಗ್ರಾಮದಲ್ಲಿ ಅವರ ಮೇಲೆ ಕಲ್ಲುತೂರಾಟ ನಡೆಸಿದ್ದಾರೆ. ಭದ್ರತಾ ಸಿಬ್ಬಂದಿಯು ಅವರಿಗೆ ಭದ್ರತೆ ಒದಗಿಸಿದರೂ, ಕೆಲ ದುಷ್ಕರ್ಮಿಗಳು ಅವರನ್ನು ಬೆನ್ನತ್ತಿ, ಅವರ ಮೇಲೆ ಕಲ್ಲುತೂರಾಟ ನಡೆಸಿದ್ದಾರೆ. ಪ್ರಣತ್‌ ತುಡು, ಭದ್ರತಾ ಸಿಬ್ಬಂದಿ ಹಾಗೂ ಪತ್ರಕರ್ತರು ಓಡಿ ಹೋಗುವ ವಿಡಿಯೊ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

VISTARANEWS.COM


on

West Bengal
Koo

ಕೋಲ್ಕೊತಾ: ಪಶ್ಚಿಮ ಬಂಗಾಳದಲ್ಲಿ (West Bengal) ಚುನಾವಣೆ ಇರಲಿ, ಮತ ಎಣಿಕೆ ದಿನವೇ ಇರಲಿ, ಹಿಂಸಾಚಾರ ನಡೆದೇ ನಡೆಯುತ್ತವೆ. ಮತಯಂತ್ರಗಳನ್ನು ಧ್ವಂಸಗೊಳಿಸುವುದು, ಎದುರಾಳಿ ಪಕ್ಷದ ಅಭ್ಯರ್ಥಿ ಮೇಲೆ ಹಲ್ಲೆ ನಡೆಸುವುದು ಸೇರಿ ಹಲವು ರೀತಿಯಲ್ಲಿ ಹಿಂಸಾಚಾರ ನಡೆಯುತ್ತವೆ. ಇದಕ್ಕೆ ನಿದರ್ಶನ ಎಂಬಂತೆ, ಲೋಕಸಭೆ ಚುನಾವಣೆಯ (Lok Sabha Election 2024) ಆರನೇ ಹಂತದ ಮತದಾನದ ವೇಳೆ ಟಿಎಂಸಿ ಪಕ್ಷದ ದುಷ್ಕರ್ಮಿಗಳು ಬಿಜೆಪಿ ಅಭ್ಯರ್ಥಿಯ (BJP Candidate) ಮೇಲೆಯೇ ಕಲ್ಲು ತೂರಾಟ ನಡೆಸಿದ್ದಾರೆ. ಇದರಿಂದ ಗಲಿಬಿಲಿಗೊಂಡ ಬಿಜೆಪಿ ಅಭ್ಯರ್ಥಿಯು ಗ್ರಾಮದಿಂದಲೇ ಓಡಿ ಹೋಗುವಂತಾಯಿತು.

ಹೌದು, ಝಾರ್‌ಗ್ರಾಮ್‌ ಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಪ್ರಣತ್‌ ತುಡು ಅವರ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಮಂಗಳಪೋಟಾ ಗ್ರಾಮದಲ್ಲಿ ಅವರ ಮೇಲೆ ಕಲ್ಲುತೂರಾಟ ನಡೆಸಿದ್ದಾರೆ. ಭದ್ರತಾ ಸಿಬ್ಬಂದಿಯು ಅವರಿಗೆ ಭದ್ರತೆ ಒದಗಿಸಿದರೂ, ಕೆಲ ದುಷ್ಕರ್ಮಿಗಳು ಅವರನ್ನು ಬೆನ್ನತ್ತಿ, ಅವರ ಮೇಲೆ ಕಲ್ಲುತೂರಾಟ ನಡೆಸಿದ್ದಾರೆ. ಪ್ರಣತ್‌ ತುಡು, ಭದ್ರತಾ ಸಿಬ್ಬಂದಿ ಹಾಗೂ ಪತ್ರಕರ್ತರು ಓಡಿ ಹೋಗುವ ವಿಡಿಯೊ ಈಗ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ. ಇದರ ವಿರುದ್ಧ ಬಿಜೆಪಿ ಆಕ್ರೋಶ ವ್ಯಕ್ತಪಡಿಸಿದ್ದು, ಇದೆಲ್ಲ ಟಿಎಂಸಿ ಕೃತ್ಯ ಎಂದು ದೂರಿದೆ.

ಬಿಜೆಪಿ ನಾಯಕ ಅಮಿತ್‌ ಮಾಳವೀಯ ಅವರು ಕಲ್ಲುತೂರಾಟದ ವಿಡಿಯೊವನ್ನು ಎಕ್ಸ್‌ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಟಿಎಂಸಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ. “ಮಮತಾ ಬ್ಯಾನರ್ಜಿ ಅವರು ಪಶ್ಚಿಮ ಬಂಗಾಳದಲ್ಲಿ ಪ್ರಜಾಪ್ರಭುತ್ವವನ್ನು ಕೊಲೆ ಮಾಡುತ್ತಿದ್ದಾರೆ. ಟಿಎಂಸಿಯ ಗೂಂಡಾಗಳು ಬಿಜೆಪಿ ಅಭ್ಯರ್ಥಿ ಮೇಲೆ ಕಲ್ಲುತೂರಾಟ ನಡೆಸಿದ್ದಾರೆ. ಜನರು ಮತಗಟ್ಟೆಗಳಿಗೆ ಆಗಮಿಸಿ ಮತದಾನ ಮಾಡಲು ಅವಕಾಶ ನೀಡುತ್ತಿಲ್ಲ. ಇಷ್ಟಾದರೂ, ರಾಜ್ಯದಿಂದ ಟಿಎಂಸಿಯನ್ನು ಕಿತ್ತೆಸೆಯುವ ದಿಸೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಮತದಾನ ಮಾಡುತ್ತಿದ್ದಾರೆ” ಎಂಬುದಾಗಿ ಪೋಸ್ಟ್‌ ಮಾಡಿದ್ದಾರೆ.

ಪ್ರಸಕ್ತ ಲೋಕಸಭೆ ಚುನಾವಣೆಯ ಪ್ರತಿಯೊಂದು ಹಂತದ ಮತದಾನದ ವೇಳೆಯೂ ಪಶ್ಚಿಮ ಬಂಗಾಳದಲ್ಲಿ ಭಾರಿ ಹಿಂಸಾಚಾರ ಸಂಭವಿಸಿದೆ. ಮತಗಟ್ಟೆಗಳ ಬಳಿ ಜನ ಶಾಂತಿಯಿಂದ ಮತದಾನ ಮಾಡಲೂ ಆಗದಂತಹ ಪರಿಸ್ಥಿತಿಯೂ ನಿರ್ಮಾಣವಾಗಿದೆ. ವಿಧಾನಸಭೆ ಚುನಾವಣೆ ಫಲಿತಾಂಶದ ಬಳಿಕವೂ ಪಶ್ಚಿಮ ಬಂಗಾಳದಲ್ಲಿ ಭಾರಿ ಪ್ರಮಾಣದ ಹಿಂಸಾಚಾರ ನಡೆದಿತ್ತು. ಸುಪ್ರೀಂ ಕೋರ್ಟ್‌ ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುವ ಜತೆಗೆ ತನಿಖೆಗೂ ಆದೇಶಿಸಿತ್ತು.

ಇದನ್ನೂ ಓದಿ: Narendra Modi: 10 ವರ್ಷ ಬಲಿಷ್ಠ ಪ್ರತಿಪಕ್ಷ ಇರಲಿಲ್ಲ ಎಂಬುದೇ ನೋವು ತಂದಿದೆ; ಮೋದಿ ಬೇಸರ

Continue Reading

ದೇಶ

Narendra Modi: 10 ವರ್ಷ ಬಲಿಷ್ಠ ಪ್ರತಿಪಕ್ಷ ಇರಲಿಲ್ಲ ಎಂಬುದೇ ನೋವು ತಂದಿದೆ; ಮೋದಿ ಬೇಸರ

Narendra Modi: 10 ವರ್ಷಗಳ ಆಡಳಿತದ ಅವಧಿಯಲ್ಲಿ ಕಾಂಗ್ರೆಸ್‌ನಿಂದ ಸಕಾರಾತ್ಮಕ ಸ್ಪಂದನೆ ದೊರೆಯಲಿಲ್ಲ. ಅವರು 60 ವರ್ಷ ದೇಶವನ್ನು ಆಳಿದ್ದರು. ನಾನು ಅವರ ಸಲಹೆ-ಸೂಚನೆಗಳನ್ನು ಕೇಳಲು ಬಯಸಿದ್ದೆ. ಪ್ರಣಬ್‌ ಮುಖರ್ಜಿ ಅವರು ಇರುವವರೆಗೆ ನನಗೆ ಅವರ ಅನುಭವದ ಉಪಯೋಗ ಆಯಿತು. ಅವರ ನಂತರ ಬೇರೆ ನಾಯಕರಿಂದ ಉತ್ತಮ ಸಹಕಾರ ಸಿಗಲಿಲ್ಲ ಎಂಬುದಾಗಿ ನರೇಂದ್ರ ಮೋದಿ ಅವರು ಬೇಸರ ವ್ಯಕ್ತಪಡಿಸಿದ್ದಾರೆ.

VISTARANEWS.COM


on

Narendra Modi
Koo

ನವದೆಹಲಿ: ಲೋಕಸಭೆ ಚುನಾವಣೆ (Lok Sabha Election 2024) ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಸಾಲು ಸಾಲು ಸುದ್ದಿ ವಾಹಿನಿಗಳಿಗೆ ಸಂದರ್ಶನ ನೀಡುತ್ತಿದ್ದಾರೆ. ಇದೇ ರೀತಿ, ನ್ಯೂಸ್‌ 18ಗೆ ಸಂದರ್ಶನ ನೀಡಿದ ಮೋದಿ, “ಕಳೆದ 10 ವರ್ಷಗಳಲ್ಲಿ ಬಲಿಷ್ಠ ಪ್ರತಿಪಕ್ಷವೇ ಇರಲಿಲ್ಲ. ಕೇಂದ್ರ ಸರ್ಕಾರಕ್ಕೆ ಸರಿಯಾಗಿ ಸವಾಲು ಒಡ್ಡಲಿಲ್ಲ. ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ (Rahul Gandhi) ಅವರು ಕೂಡ ಆಳುವ ಸರ್ಕಾರಕ್ಕೆ ಸವಾಲು ಹಾಕಲಿಲ್ಲ. ಇದು ನನಗೆ ಅಪಾರ ನೋವು ತಂದಿದೆ” ಎಂಬುದಾಗಿ ಹೇಳಿದ್ದಾರೆ.

“ಪ್ರಜಾಪ್ರಭುತ್ವದಲ್ಲಿ ಬಲಿಷ್ಠ ಪ್ರತಿಪಕ್ಷ ಇರುವುದು ಅತ್ಯವಶ್ಯಕ. ಪ್ರಬಲ ಪ್ರತಿಪಕ್ಷ ಇದರೆ ಸರ್ಕಾರವು ಎಚ್ಚರದಿಂದ, ಪ್ರತಿಪಕ್ಷಗಳ ತೂಗುಗತ್ತಿಯ ಭೀತಿಯಲ್ಲಿ ಸರಿಯಾದ ರೀತಿ ಕೆಲಸ ಮಾಡುತ್ತದೆ. ಹಾಗಂತ, ದೇಶದಲ್ಲಿ ಪ್ರಬಲ ಪ್ರತಿಪಕ್ಷ ನಾಯಕರಾಗುವ ಅರ್ಹತೆ ಇಲ್ಲ ಎಂದಲ್ಲ. ತುಂಬ ನಾಯಕರು ಅದಕ್ಕೆ ಅರ್ಹರಾಗಿದ್ದಾರೆ. 2014ರಿಂದ 2024ರ ಅವಧಿಯಲ್ಲಿ ನಮಗೆ ಬಲಿಷ್ಠ ಪ್ರತಿಪಕ್ಷ ಸಿಗಬೇಕಿತ್ತು. ಆದರೆ, ನನಗೆ ಅಂತಹ ಪ್ರತಿಪಕ್ಷ ಸಿಗಲಿಲ್ಲ. ಸರ್ಕಾರಕ್ಕೆ ಸವಾಲು ಒಡ್ಡಲಿಲ್ಲ ಎಂಬುದೇ ನನಗೆ ನೋವು ತಂದಿದೆ” ಎಂಬುದಾಗಿ ಬೇಸರ ವ್ಯಕ್ತಪಡಿಸಿದ್ದಾರೆ.

ಕಾಂಗ್ರೆಸ್‌ ಸಹಕಾರ ನೀಡಲಿಲ್ಲ

“10 ವರ್ಷಗಳ ಆಡಳಿತದ ಅವಧಿಯಲ್ಲಿ ಕಾಂಗ್ರೆಸ್‌ನಿಂದ ಸಕಾರಾತ್ಮಕ ಸ್ಪಂದನೆ ದೊರೆಯಲಿಲ್ಲ. ಅವರು 60 ವರ್ಷ ದೇಶವನ್ನು ಆಳಿದ್ದರು. ನಾನು ಅವರ ಸಲಹೆ-ಸೂಚನೆಗಳನ್ನು ಕೇಳಲು ಬಯಸಿದ್ದೆ. ಪ್ರಣಬ್‌ ಮುಖರ್ಜಿ ಅವರು ಇರುವವರೆಗೆ ನನಗೆ ಅವರ ಅನುಭವದ ಉಪಯೋಗ ಆಯಿತು. ಆದರೆ, ಬೇರೆ ನಾಯಕರಿಂದ ನಮ್ಮ ಆಡಳಿತಕ್ಕೆ ಸಲಹೆ-ಸೂಚನೆ ಸಿಗಲಿಲ್ಲ. ನಾನು ಗುಜರಾತ್‌ ಮುಖ್ಯಮಂತ್ರಿ ಆಗಿದ್ದಾಗಿನ ಅನುಭವ ಹಾಗೂ ನನ್ನ ಪಕ್ಷದ ನಾಯಕರಿಂದ ಮಾತ್ರ ಸಲಹೆ ಸಿಕ್ಕಿತು” ಎಂದು ತಿಳಿಸಿದರು.

ಇದಕ್ಕೂ ಮೊದಲು ಎನ್‌ಡಿಟಿವಿಗೆ ನೀಡಿದ ಸಂದರ್ಶನದ ವೇಳೆ ಮಮತಾ ಬ್ಯಾನರ್ಜಿ ಹೇಳಿಕೆ ಕುರಿತ ಪ್ರಶ್ನೆಗೆ ಅವರು ಉತ್ತರಿಸಿದ್ದರು. “ಮಮತಾ ಬ್ಯಾನರ್ಜಿ ಅವರು ಹೇಳಿದ್ದು ನಿಜ. ಜೂನ್‌ 4ರಂದು ಲೋಕಸಭೆ ಅವಧಿ ಮುಗಿಯಲಿದೆ. ಆದರೆ, ಬಿಜೆಪಿ ನೇತೃತ್ವದ ಎನ್‌ಡಿಎ ಹೊಸ ಸರ್ಕಾರ ರಚಿಸಲಿದೆ. ನಾನು ಕಾಶಿಯವ (ಅವರ ಲೋಕಸಭೆ ಕ್ಷೇತ್ರ), ನಾನು ಅವಿನಾಶಿ. ಕಾಶಿಯನ್ನು ಹೇಗೆ ನಾಶಪಡಿಸಲು ಆಗುವುದಿಲ್ಲವೋ, ಹಾಗೆಯೇ, ನನ್ನನ್ನು ಕೂಡ ಯಾರಿಂದಲೂ ನಾಶಪಡಿಸಲು ಆಗುವುದಿಲ್ಲ” ಎಂಬುದಾಗಿ ಹೇಳಿದ್ದರು.

ಇದನ್ನೂ ಓದಿ: PM Narendra Modi: ಇಂಡಿಯಾ ಮೈತ್ರಿಕೂಟ ಮತ ಬ್ಯಾಂಕ್‌ಗಾಗಿ ಅಶ್ಲೀಲ ಡ್ಯಾನ್ಸ್‌ ಮಾಡುತ್ತಿದೆ: ಮೋದಿ

Continue Reading

ಪ್ರಮುಖ ಸುದ್ದಿ

PM Narendra Modi: ಇಂಡಿಯಾ ಮೈತ್ರಿಕೂಟ ಮತ ಬ್ಯಾಂಕ್‌ಗಾಗಿ ಅಶ್ಲೀಲ ಡ್ಯಾನ್ಸ್‌ ಮಾಡುತ್ತಿದೆ: ಮೋದಿ

ಯಾವುದೇ ಸಂದರ್ಭದಲ್ಲಿಯೂ ಭಾರತದ ಸಂವಿಧಾನ ಎಸ್‌ಸಿ/ಎಸ್ ಟಿ, ಒಬಿಸಿಗಳಿಗೆ ನೀಡಿರುವ ಮೀಸಲಾತಿ ಪ್ರಯೋಜನಗಳನ್ನು ಕಸಿದುಕೊಳ್ಳಲು ನಾನು ಬಿಡುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಹೇಳಿದ್ದಾರೆ.

VISTARANEWS.COM


on

pm Narendra Modi
Koo

ಹೊಸದಿಲ್ಲಿ: ಇಂಡಿಯಾ ಮೈತ್ರಿಕೂಟ (INDIA bloc) ತನ್ನ ಮತ ಬ್ಯಾಂಕ್‌ಗಾಗಿ ʼಮುಜ್ರಾʼ (ಒಂದು ಪ್ರಕಾರದ ನೃತ್ಯ) ಮಾಡುತ್ತಿದೆ ಎಂದ ಪ್ರಧಾನಿ ನರೇಂದ್ರ ಮೋದಿ (PM Narendra Modi) ಟೀಕಿಸಿದ್ದಾರೆ.

ಬಿಹಾರದ (Bihar) ಪಾಟಲೀಪುತ್ರದಲ್ಲಿ ಚುನಾವಣಾ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ, ಇಂಡಿಯಾ ಮೈತ್ರಿಕೂಟ ತನ್ನ ಮತ ಬ್ಯಾಂಕ್‌ನ ಗುಲಾಮಗಿರಿಯನ್ನು ಸ್ವೀಕರಿಸಲು ಬಯಸುತ್ತದೆ. ಆದರೆ ನಮಗೆ ಸಂವಿಧಾನವು ಸರ್ವೋಚ್ಚವಾಗಿದೆ ಎಂದು ಹೇಳಿದರು. ಯಾವುದೇ ಸಂದರ್ಭದಲ್ಲಿಯೂ ಭಾರತದ ಸಂವಿಧಾನ ಎಸ್‌ಸಿ/ಎಸ್ ಟಿ, ಒಬಿಸಿಗಳಿಗೆ ನೀಡಿರುವ ಮೀಸಲಾತಿ ಪ್ರಯೋಜನಗಳನ್ನು ಕಸಿದುಕೊಳ್ಳಲು ನಾನು ಬಿಡುವುದಿಲ್ಲ ಎಂದು ಹೇಳಿದ್ದಾರೆ.

ಮುಜ್ರಾ ಎಂದರೆ ಮೊಗಲ್ ಆಡಳಿತದ ಕಾಲದಲ್ಲಿ ಬಂದ ನೃತ್ಯ ಪ್ರಕಾರ. ಇದನ್ನು ಮೊದಲು ಹೆಚ್ಚಾಗಿ ರಾಜರು ಮತ್ತು ಗಣ್ಯರ ಆಸ್ಥಾನಗಳಲ್ಲಿ ವೇಶ್ಯೆಯರು ಪ್ರದರ್ಶಿಸುತ್ತಿದ್ದರು. ಹಿಂದಿ ಸಿನಿಮಾಗಳಲ್ಲಿ ಇದು ವ್ಯಾಪಕವಾಗಿದೆ.

“ನಾನು ಬಿಹಾರ, ಎಸ್‌ಸಿ/ಎಸ್‌ಟಿ/ಒಬಿಸಿ ಸಮುದಾಯಗಳಿಗೆ ಭರವಸೆ ನೀಡುತ್ತಿದ್ದೇನೆ. ಮೋದಿ ಬದುಕಿರುವವರೆಗೆ ಅವರ ಹಕ್ಕುಗಳನ್ನು ಕಸಿದುಕೊಳ್ಳಲು ನಾನು ಬಿಡುವುದಿಲ್ಲ. ಮೋದಿಗೆ ಸಂವಿಧಾನ ಸರ್ವಶ್ರೇಷ್ಠ, ಮೋದಿಗೆ ಬಾಬಾಸಾಹೇಬ್ ಅಂಬೇಡ್ಕರ್ ಅವರ ಭಾವನೆಗಳು ಸರ್ವೋಚ್ಚ. ಇಂಡಿಯಾ ಮೈತ್ರಿಕೂಟ ತನ್ನ ಮತ ಬ್ಯಾಂಕ್‌ನ ಜೀತ ಸ್ವೀಕರಿಸಲು ಬಯಸುತ್ತದೆ, ಅವರು ಹಾಗೆ ಮಾಡಲು ಸ್ವತಂತ್ರರು. ಅವರು ಮುಜ್ರಾ (ನೃತ್ಯ) ಮಾಡಲು ಬಯಸಿದರೆ ಅವರು ಸ್ವತಂತ್ರರು. ನಾನು ಯಾವಾಗಲೂ ಎಸ್‌ಸಿ/ಎಸ್‌ಟಿ/ಒಬಿಸಿ ಮೀಸಲಾತಿ ಪರವಾಗಿ ನಿಂತಿದ್ದೇನೆ” ಎಂದು ಹೇಳಿದ್ದಾರೆ.

ತಮ್ಮ ವೋಟ್ ಬ್ಯಾಂಕ್ ಅನ್ನು ಸಂತೋಷಪಡಿಸಲು ಕಾಂಗ್ರೆಸ್ ಅಲ್ಪಸಂಖ್ಯಾತ ಸಂಸ್ಥೆಗಳಿಗೆ ಸಂಬಂಧಿಸಿದ ಕಾನೂನನ್ನು ಬದಲಾಯಿಸಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಆರೋಪಿಸಿದ್ದಾರೆ. ಈ ಮೊದಲು ಎಸ್‌ಸಿ/ಎಸ್‌ಟಿ/ಒಬಿಸಿಗಳು ಸಂಪೂರ್ಣ ಮೀಸಲಾತಿಯನ್ನು ಪಡೆಯುತ್ತಿದ್ದರು. ನಂತರ ಸಾವಿರಾರು ಸಂಸ್ಥೆಗಳನ್ನು ಅಲ್ಪಸಂಖ್ಯಾತ ಸಂಸ್ಥೆಗಳೆಂದು ಘೋಷಿಸಲಾಯಿತು ಎಂದು ಮೋದಿ ಹೇಳಿದರು.

“ಭಾರತದಲ್ಲಿ ಧರ್ಮದ ಆಧಾರದ ಮೇಲೆ ಮೀಸಲಾತಿ ಇರುವುದಿಲ್ಲ ಎಂದು ನಮ್ಮ ಸಂವಿಧಾನ ಹೇಳುತ್ತದೆ. ಬಾಬಾಸಾಹೇಬ್ ಅಂಬೇಡ್ಕರ್ ಅವರು ಧರ್ಮದ ಆಧಾರದ ಮೇಲೆ ಮೀಸಲಾತಿ ಇರುವುದಿಲ್ಲ ಎಂದು ಹೇಳುತ್ತಿದ್ದರು. ಆದರೆ ಆರ್​​ಜೆಡಿ-ಕಾಂಗ್ರೆಸ್ SC/ST/OBC ಕೋಟಾವನ್ನು ಕೊನೆಗೊಳಿಸುವ ಮೂಲಕ ತಮ್ಮ ಮತಬ್ಯಾಂಕ್‌ಗೆ ಧರ್ಮದ ಆಧಾರದ ಮೇಲೆ ಮೀಸಲಾತಿಯನ್ನು ನೀಡಲು ಬಯಸುತ್ತಿವೆ” ಎಂದು ಮೋದಿ ನುಡಿದರು.

ಲಾಲೂ ಯಾದವ್ ಅವರ ಆರ್‌ಜೆಡಿಯ ಚುನಾವಣಾ ಚಿಹ್ನೆಯಾದ ಲಾಟೀನು ದೀಪವನ್ನೂ ಮೋದಿ ಗೇಲಿ ಮಾಡಿದ್ದಾರೆ. “ಇದು ಎಲ್‌ಇಡಿ ಬಲ್ಬ್‌ಗಳ ಯುಗ. ಅದರೆ ಬಿಹಾರದಲ್ಲಿ ಜನರು ಲಾಟೀನಿನೊಂದಿಗೆ ತಿರುಗಾಡುತ್ತಿದ್ದಾರೆ. ಇದು ಕೇವಲ ಒಂದು ಮನೆಯನ್ನು ಬೆಳಗಿಸುವ ಲಾಟೀನು. ಈ ಲಾಟೀನು ಬಿಹಾರದಾದ್ಯಂತ ಕತ್ತಲೆಯನ್ನು ಹರಡಿದೆ” ಎಂದಿದ್ದಾರೆ ಮೋದಿ.

ಕಳೆದ ತಿಂಗಳು, ಪ್ರಧಾನಿ ಮೋದಿ ಅವರು ಕಾಂಗ್ರೆಸ್ ದೇಶದ ಜನರ ಸಂಪತ್ತನ್ನು ಕಸಿದುಕೊಂಡು ಅನೇಕ ಮಕ್ಕಳನ್ನು ಹೊಂದಿರುವವರಿಗೆ ಹಂಚುತ್ತದೆ ಎಂದು ನೀಡಿದ ಹೇಳಿಕೆ ವಿವಾದಕ್ಕೆ ಕಾರಣವಾಗಿತ್ತು. ನಂತರ ನೀಡಿದ ಸಂದರ್ಶನವೊಂದರಲ್ಲಿ ಈ ಬಗ್ಗೆ ಸ್ಪಷ್ಟನೆ ನೀಡಿದ್ದ ಮೋದಿ, ನನ್ನ ಹೇಳಿಕೆಯು ನಿರ್ದಿಷ್ಟವಾಗಿ ಮುಸ್ಲಿಂ ಸಮುದಾಯವನ್ನು ಉದ್ದೇಶಿಸಿಲ್ಲ. ನಾನು ಎಂದಿಗೂ ಹಿಂದೂ-ಮುಸ್ಲಿಂ ರಾಜಕೀಯ ಮಾಡುವುದಿಲ್ಲ ಎಂದು ಹೇಳಿದ್ದಾರೆ.

ಇದನ್ನೂ ಓದಿ: Narendra Modi: ನನ್ನನ್ನು ನಾಶಪಡಿಸಲು ಯಾರಿಂದಲೂ ಸಾಧ್ಯವಿಲ್ಲ; ಮಮತಾ ಬ್ಯಾನರ್ಜಿಗೆ ಮೋದಿ ಚಾಟಿ

Continue Reading
Advertisement
Fire Accident
ಸಂಪಾದಕೀಯ2 hours ago

ವಿಸ್ತಾರ ಸಂಪಾದಕೀಯ: ಗುಜರಾತ್ ಬೆಂಕಿ ದುರಂತ ನಮಗೆ ಎಚ್ಚರಿಕೆಯ ಪಾಠವಾಗಲಿ

election commission
ಪ್ರಮುಖ ಸುದ್ದಿ2 hours ago

Election Commission : ಶೀಘ್ರದಲ್ಲೇ ಜಮ್ಮು ಕಾಶ್ಮೀರದಲ್ಲಿ ವಿಧಾನಸಭೆ ಚುನಾವಣೆ; ಚುನಾವಣಾ ಆಯೋಗ

Fire Accident
ಪ್ರಮುಖ ಸುದ್ದಿ2 hours ago

Fire Accident: 9 ಮಕ್ಕಳು ಸೇರಿ 27 ಜನರ ಸಾವಿಗೆ ಕಾರಣವಾದ ಗೇಮಿಂಗ್‌ ಜೋನ್‌ಗೆ NOCಯೇ ಇರ್ಲಿಲ್ಲ!

Virat kohli
ಪ್ರಮುಖ ಸುದ್ದಿ3 hours ago

Virat kohli : ಕೊಹ್ಲಿ ಹೆಸರು ಕೂಗಿ ಪಾಕಿಸ್ತಾನ ಬೌಲರ್​​ನನ್ನು ಲೇವಡಿ ಮಾಡಿದ ಅಭಿಮಾನಿಗಳು; ಇಲ್ಲಿದೆ ವಿಡಿಯೊ

Union Minister Pralhad Joshi latest statement about channagiri case
ಕರ್ನಾಟಕ3 hours ago

Pralhad Joshi: ನೇಹಾ, ಅಂಜಲಿ ಹತ್ಯೆ ಪ್ರಕರಣದಲ್ಲಿ ಕೈಗೊಳ್ಳದ ಕ್ರಮ ಚನ್ನಗಿರಿ ಪ್ರಕರಣದಲ್ಲಿ ಏಕೆ ಎಂದ ಪ್ರಲ್ಹಾದ್‌ ಜೋಶಿ

childrens summer camp closing ceremony at yallapur
ಉತ್ತರ ಕನ್ನಡ4 hours ago

Uttara Kannada News: ಭಾರತದ ಭವಿಷ್ಯ ಸಣ್ಣ ಸಣ್ಣ ಊರುಗಳಲ್ಲಿದೆ: ಹರಿಪ್ರಕಾಶ್‌ ಕೋಣೆಮನೆ

Hardik Pandya
ಪ್ರಮುಖ ಸುದ್ದಿ4 hours ago

Hardik Pandya : ಮೊದಲ ಲವ್​ ಬ್ರೇಕ್​ಅಪ್​ ಮಾಡಿಕೊಂಡಿದ್ದ ಪಾಂಡ್ಯ; ಇಲ್ಲಿದೆ ಆರಂಭದ ಪ್ರೇಮ ಕಹಾನಿ!

Siddaramaiah
ಕರ್ನಾಟಕ4 hours ago

Siddaramaiah: ನೀವು 2 ಸಾವಿರ ಕೊಟ್ಟಿದ್ದಕ್ಕೆ ದೇವರ ದರ್ಶನ; ಧರ್ಮಸ್ಥಳದಲ್ಲಿ ಸಿದ್ದರಾಮಯ್ಯಗೆ ಸ್ತ್ರೀಯರ ಮೆಚ್ಚುಗೆ

Shikhar Dhawan
ಪ್ರಮುಖ ಸುದ್ದಿ4 hours ago

Shikhar Dhawan : ಶಿಖರ್ ಧವನ್ ಮಿಥಾಲಿ ರಾಜ್ ಮದುವೆ? ಬಗ್ಗೆ ಮೌನ ಮುರಿದ ಭಾರತದ ಸ್ಟಾರ್

Union Minister Pralhad Joshi statement about Prajwal revanna case
ಕರ್ನಾಟಕ4 hours ago

Pralhad Joshi: ಸಿಎಂ ಪತ್ರ ಬರೆದು ರಾಜಕಾರಣ ಮಾಡಿದರೆ ಪ್ರಜ್ವಲ್ ಪಾಸ್‌ಪೋರ್ಟ್ ರದ್ದಾಗಲ್ಲ: ಪ್ರಲ್ಹಾದ್‌ ಜೋಶಿ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ10 hours ago

Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

dina bhavishya read your daily horoscope predictions for May 23 2024
ಭವಿಷ್ಯ3 days ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ4 days ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ4 days ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

Love Case Father throws hot water on man who loved his daughter for coming home
ಕೊಡಗು5 days ago

Love Case : ಮನೆಗೆ ಬಂದ ಪ್ರೇಮಿಗೆ ಕೊತ ಕೊತ ಕುದಿಯುವ ನೀರು ಎರಚಿದ ಯುವತಿ ತಂದೆ!

Contaminated Water
ಮೈಸೂರು5 days ago

Contaminated Water : ಡಿ ಸಾಲುಂಡಿಯಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡಿದ್ದ ಯುವಕ ಸಾವು

Karnataka Rain
ಮಳೆ6 days ago

Karnataka Rain : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

Karnataka Rain
ಮಳೆ6 days ago

Karnataka Rain : ಒಂದೇ ಮಳೆಗೆ ಹೊಳೆಯಂತಾದ ಬೆಂಗಳೂರು ರಸ್ತೆಗಳು! ಕಳಸದಲ್ಲೂ ಮುಂದುವರಿದ ಅಬ್ಬರ

Karnataka rain
ಮಳೆ6 days ago

Karnataka Rain : ವಿಜಯನಗರದಲ್ಲಿ ಸಿಡಿಲಿಗೆ ಜಾನುವಾರು ಬಲಿ; ಬೆಂಗಳೂರು ಸೇರಿ ಹಲವೆಡೆ ಭಾರಿ ಮಳೆ

Karnataka Rain
ಮಳೆ7 days ago

Karnataka Rain: ಧಾರಾಕಾರ ಮಳೆಗೆ ಕಾಂಪೌಂಡ್ ಕುಸಿದು 4 ಬೈಕ್‌ಗಳು ಜಖಂ; ಮದುವೆ ಮಂಟಪಕ್ಕೆ ನುಗ್ಗಿದ ನೀರು‌

ಟ್ರೆಂಡಿಂಗ್‌