Tigers fasting: ವಾರದಲ್ಲೊಂದು ದಿನ ಉಪವಾಸ ಮಾಡುತ್ತಿವೆ ಈ ಹುಲಿಗಳು! - Vistara News

ಪರಿಸರ

Tigers fasting: ವಾರದಲ್ಲೊಂದು ದಿನ ಉಪವಾಸ ಮಾಡುತ್ತಿವೆ ಈ ಹುಲಿಗಳು!

Tigers fasting: ನೇಪಾಳದ ಮೃಗಾಲಯವೊಂದರಲ್ಲಿ ಹುಲಿಗಳು ವಾರದಲ್ಲೊಂದು ದಿನ ಉಪವಾಸ ಮಾಡುತ್ತಿದೆ. ಆಹಾರದ ಕೊರತೆ ಇಲ್ಲದೇ ಇದ್ದರೂ ಮಾಂಸಹಾರಿ ಪ್ರಾಣಿಯಾದ ಹುಲಿಗಳು ಇಲ್ಲಿ ಉಪವಾಸ ಮಾಡಲು ಹಲವು ಕಾರಣಗಳಿವೆ. ಅದು ಏನು ಗೊತ್ತೇ ?

VISTARANEWS.COM


on

Tigers fasting
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ

ಹುಲಿ (tiger), ಚಿರತೆ (Leopard), ಸಿಂಹ (lion) ಇವುಗಳನ್ನು ನೋಡಿದರೆ (Tigers fasting) ಎಷ್ಟು ಗಟ್ಟಿ ಹೃದಯವಾದರೂ ಒಮ್ಮೆ ಮೈ ನಡುಗುತ್ತದೆ. ಯಾಕೆಂದರೆ ಇವುಗಳು ಯಾರ ಮೇಲೂ ಕರುಣೆಯನ್ನು ತೋರುವುದಿಲ್ಲ. ಅವುಗಳ ಆಕ್ರಮಣದಿಂದ ಬದುಕಿ ಉಳಿದರೆ ಅದು ಇನ್ನೊಂದು ಜನ್ಮ ಸಿಕ್ಕಿದಂತೆಯೇ.. ಇವುಗಳನ್ನು ಪಳಗಿಸುವುದು,. ಕೂಡಿ ಹಾಕುವುದು ಅಷ್ಟು ಸುಲಭವಲ್ಲ. ಆದರೂ ಪ್ರಾಣಿ ಸಂಗ್ರಹಾಲಯದಲ್ಲಿ ಅತ್ಯಂತ ಎಚ್ಚರಿಕೆಯಿಂದ ಇವುಗಳನ್ನು ಸಂರಕ್ಷಿಸಿ ಇಡಲಾಗುತ್ತದೆ.
ಪ್ರಕೃತಿಯೇ ಕೆಲವೊಂದು ಪ್ರಾಣಿಗಳನ್ನು ಸಂಪೂರ್ಣವಾಗಿ ಮಾಂಸಹಾರಿಗಳನ್ನಾಗಿ ಮಾಡಿದೆ. ಇದರಲ್ಲಿ ಹುಲಿಗಳು ಸೇರಿವೆ. ಇದು ಬೇಟೆಯಾಡುವಾಗ ಮಾತ್ರ ಯಾರ ಮೇಲೂ ಕರುಣೆ ತೋರಿಸುವುದಿಲ್ಲ. ಹೊಟ್ಟೆ ತುಂಬಿದಾಗ ಮಾತ್ರ ಸುಮ್ಮನಿರುತ್ತವೆ.

ಹುಲಿಗಳು ಸಂಪೂರ್ಣವಾಗಿ ಮಾಂಸಾಹಾರಿಗಳು ಮತ್ತು ಬದುಕಲು ಮಾಂಸವನ್ನು ಅವಲಂಬಿಸಿರುತ್ತವೆ. ಆದರೆ ಈ ಹುಲಿಗಳು ಇದೀಗ ಮೃಗಾಲಯದಲ್ಲಿ ವಾರದಲ್ಲಿ ಒಂದು ದಿನ ಉಪವಾಸ (Tigers fasting) ಮಾಡುತ್ತಿವೆ. ಆ ದಿನ ಮಾಂಸಾಹಾರವನ್ನು ಅದು ಸೇವಿಸುವುದೇ ಇಲ್ಲ.


ಎಲ್ಲಿ?

ನೇಪಾಳದ (nepal) ಕೇಂದ್ರ ಮೃಗಾಲಯದಲ್ಲಿರುವ (Central Zoo) ಹುಲಿಗಳು ಉಪವಾಸ ಆಚರಿಸುತ್ತಿರುವುದಾಗಿ ತಿಳಿದು ಬಂದಿದೆ. ಇದು ಆಹಾರದ ಕೊರತೆಯಿಂದ ಅಂತೂ ಅಲ್ಲ.

ಇದನ್ನೂ ಓದಿ: Health Benefits of Walnuts: ವಾಲ್‌ನಟ್‌ ತಿಂದರೆ ಆಗುವ ಪ್ರಯೋಜನಗಳು ಹಲವು!

ಉಪವಾಸ ಯಾಕೆ?

ನೇಪಾಳದ ಮೃಗಾಲಯದಲ್ಲಿ ಹುಲಿಗಳನ್ನು ಉದ್ದೇಶಪೂರ್ವಕವಾಗಿ ವಾರದಲ್ಲಿ ಒಂದು ದಿನ ಉಪವಾಸ ಇರುವಂತೆ ಮಾಡಲಾಗುತ್ತದೆ. ಯಾಕೆಂದರೆ ಇದು ಅವುಗಳ ಅರೋಗ್ಯಕ್ಕಾಗಿ.

ಏನಾಗಿದೆ?

ಈ ಕುರಿತು ಮಾಹಿತಿ ನೀಡಿರುವ ಮೃಗಾಲಯದ ಮಾಹಿತಿ ಅಧಿಕಾರಿ ಗಣೇಶ್ ಕೊಯಿರಾಲಾ, ಹುಲಿಗಳ ಆರೋಗ್ಯವನ್ನು ಸುಧಾರಿಸುವ ಸಲುವಾಗಿ ಪ್ರತಿ ಶನಿವಾರ ಉಪವಾಸ ಇರಿಸಲಾಗುತ್ತದೆ. ಈ ಸಂದರ್ಭದಲ್ಲಿ ಅವುಗಳಿಂದ ಯಾವುದೇ ಪ್ರಾಣಿಗಳಿಗೂ ತೊಂದರೆಯಾಗುವುದಿಲ್ಲ. ಹುಲಿಗಳನ್ನು ಉಪವಾಸಕ್ಕೆ ಹಾಕಲು ಮುಖ್ಯ ಕಾರಣ ತೂಕ ಹೆಚ್ಚಳ ಸಮಸ್ಯೆ. ಹೀಗಾಗಿ ಅವುಗಳನ್ನು ಒಂದು ದಿನ ಉಪವಾಸವಿಟ್ಟು ಅವುಗಳ ಜೀರ್ಣಕ್ರಿಯೆ ಚೆನ್ನಾಗಿ ಇರುವಂತೆ ನೋಡಿಕೊಳ್ಳಲಾಗುತ್ತದೆ ಎನ್ನುತ್ತಾರೆ.

ಎಷ್ಟು ಆಹಾರ ಸೇವಿಸುತ್ತದೆ?

ಮೃಗಾಲಯದಲ್ಲಿ ಹೆಣ್ಣು ಹುಲಿಗಳಿಗೆ ಐದು ಕೆ.ಜಿ ಎಮ್ಮೆ ಮಾಂಸ ಮತ್ತು ಗಂಡು ಹುಲಿಗಳು ದಿನಕ್ಕೆ 6 ಕೆ.ಜಿ ಮಾಂಸವನ್ನು ತಿನ್ನುತ್ತವೆ. ಆದರೆ ಶನಿವಾರದಂದು ಅವುಗಳ ಜೀರ್ಣಾಂಗ ವ್ಯವಸ್ಥೆಯನ್ನು ಬಲಪಡಿಸುವ ಸಲುವಾಗಿ ಮಾಂಸವನ್ನು ತಿನ್ನುವುದಿಲ್ಲ.

ಯಾವ ಸಮಸ್ಯೆ ?

ಮೃಗಾಲಯದ ಹುಲಿಗಳು ಇತ್ತೀಚಿಗೆ ಸ್ಥೂಲಕಾಯ ಸಮಸ್ಯೆಗಳನ್ನು ಎದುರಿಸಿವೆ. ಇದಕ್ಕಾಗಿ ಔಷಧವನ್ನು ಅವಲಂಬಿಸುವುದು ಅವುಗಳ ಅರೋಗ್ಯ ದೃಷ್ಟಿಯಿಂದ ಒಳ್ಳೆಯದಲ್ಲ. ಹೀಗಾಗಿ ಒಂದು ದಿನ ಉಪವಾಸ ಮಾಡಿಸಿ ಅವುಗಳ ಅರೋಗ್ಯ ರಕ್ಷಣೆ ಮಾಡಲಾಗುತ್ತಿದೆ. ಇದು ಅವುಗಳ ಆರೋಗ್ಯವನ್ನು ನಿರ್ವಹಿಸಲು ಸುಲಭವಾದ ಮಾರ್ಗ. ಇದು ಅವುಗಳ ದೀರ್ಘಾವಧಿಯ ಮೇಲೆ ಪರಿಣಾಮ ಬೀರುತ್ತದೆ ಎನ್ನಲಾಗುತ್ತಿದೆ. ಯಾಕೆಂದರೆ ಮಾಂಸಾಹಾರಿ ಪ್ರಾಣಿಗಳು ಒಂದು ದಿನದ ಉಪವಾಸ ಮಾಡುವಾಗ ಅದು ಅವರ ಆರೋಗ್ಯದ ಮೇಲೆ ಗಮನಾರ್ಹವಾದ ಧನಾತ್ಮಕ ಪರಿಣಾಮ ಬಿರುವುದಾಗಿ ತಜ್ಞರು ಗಮನಿಸಿದ್ದಾರೆ.

ಆಹಾರ ಹೇಗಿರುತ್ತದೆ ?

ಸಾಮಾನ್ಯವಾಗಿ ಹುಲಿಗಳು ಗೆದ್ದಲುಗಳಂತಹ ಸಣ್ಣ ಕೀಟಗಳಿಂದ ಹಿಡಿದು ದೊಡ್ಡ ಆನೆ, ಕರುಗಳನ್ನೂ ಸೇವಿಸುತ್ತದೆ. ಜಿಂಕೆ, ಹಂದಿ, ಹಸು, ಕುದುರೆ, ಎಮ್ಮೆ ಮತ್ತು ಮೇಕೆಗಳಂತಹ ಪ್ರಾಣಿಗಳನ್ನು ಅವು ಬೇಟೆಯಾಡಿ ತಿನ್ನುತ್ತವೆ. ಸಾಮಾನ್ಯವಾಗಿ ಅವುಗಳ ಆಹಾರ ಕನಿಷ್ಠ 20 ಕೆ.ಜಿ. (45 ಪೌಂಡ್) ನಷ್ಟಿರುತ್ತದೆ.
ನೇಪಾಳದ ಕೇಂದ್ರ ಮೃಗಾಲಯ

ನೇಪಾಳದ ಕೇಂದ್ರ ಮೃಗಾಲಯವು ಜವಾಲಾಖೇಲ್‌ನ ಹತ್ತಿರದಲ್ಲಿದೆ. ಇಲ್ಲಿ 109 ವಿಭಿನ್ನ ಜಾತಿಗಳ 969 ಪ್ರಾಣಿಗಳ ಆವಾಸಸ್ಥಾನವಾಗಿದೆ. ಪ್ರಸ್ತುತ ನ್ಯಾಷನಲ್ ಟ್ರಸ್ಟ್ ಫಾರ್ ನೇಚರ್ ಕನ್ಸರ್ವೇಶನ್ (NTNC) ನಿಂದ ನಿರ್ವಹಿಸಲ್ಪಡುತ್ತಿದೆ. 15 ಎಕರೆ ಪ್ರದೇಶದಲ್ಲಿ ವ್ಯಾಪಿಸಿರುವ ಈ ಮೃಗಾಲಯವು ಮೊದಲು ಖಾಸಗಿ ಸಂಸ್ಥೆಯಿಂದ ನಡೆಸಲ್ಪಡುತ್ತಿತ್ತು. 1956 ರಲ್ಲಿ ಇದನ್ನು ಸಾರ್ವಜನಿಕರಿಗಾಗಿ ತೆರೆಯಲಾಯಿತು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
Continue Reading
Click to comment

Leave a Reply

Your email address will not be published. Required fields are marked *

ಪರಿಸರ

Samyukta Hornad: ಸಿಂಚನ ಎಂಬ ಹುಲಿಯನ್ನೂ ದತ್ತು ಪಡೆದ ಸಂಯುಕ್ತ ಹೊರನಾಡು

Samyukta Hornad: ಸಂಯುಕ್ತ ಹೊರನಾಡು ಅವರು ಟೆಕೆಯಾನ್ ಸಂಸ್ಥೆ ಜೊತೆಗೂಡಿ 28 ತಿಂಗಳ ಸಿಂಚನ ಎಂಬ ಹೆಣ್ಣು ಹುಲಿ‌ ಮರಿಯನ್ನು ದತ್ತು ಪಡೆದಿದ್ದಾರೆ. ಇದರ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.

VISTARANEWS.COM


on

Samyukta Hornad

ಸಿನಿಮಾಗಳ ಹೊರತಾಗಿ ಸಾಮಾಜಿಕ ಕೆಲಸಗಳಲ್ಲಿ ತೊಡಗಿಸಿಕೊಂಡಿರುವ ನಟಿ ಸಂಯುಕ್ತ ಹೊರನಾಡು (Samyukta Hornad). ಪ್ರಾಣ ಅನಿಮಲ್ ಫೌಂಡೇಶನ್ ಅಡಿಯಲ್ಲಿ ಪ್ರಾಣಿಗಳ ರಕ್ಷಣೆಗೆ ಅಂಬುಲೆನ್ಸ್ ಸೇವೆ ಒದಗಿಸುವ ಮೂಲಕ ಪ್ರಾಣಿ ಪ್ರಿಯರ ಮೆಚ್ಚುಗೆ ಪಡೆದವರು ಈ ನಟಿ. ಸಂಯುಕ್ತಾ ಕೂಡ ಪ್ರಾಣಿ ಪ್ರಿಯೆ. ನಾಯಿ, ಮೊಲ ಎಂದರೆ ಸಂಯುಕ್ತಾ ಹೊರನಾಡುಗೆ ಎಲ್ಲಿಲ್ಲದ ಪ್ರೀತಿ. ಇಂತಿಪ್ಪ ಸಂಯುಕ್ತ ಹೊರನಾಡು ತಮ್ಮದೇ ಪ್ರಾಣ ಹಾಗೂ ಟೆಕೆಯಾನ್ ಸಹಯೋಗದಲ್ಲಿ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಹುಲಿಯನ್ನು ದತ್ತು ಪಡೆದಿದ್ದಾರೆ.

Samyukta Hornad

28 ತಿಂಗಳ ಸಿಂಚನ ಎಂಬ ಹೆಣ್ಣು ಹುಲಿ‌ ಮರಿಯನ್ನು ದತ್ತು ಪಡೆದಿದ್ದಾರೆ. ಇದು ನರದೌರ್ಬಲ್ಯ ಸಮಸ್ಯೆ ಎದುರಿಸುತ್ತಿರುವುದರಿಂದ ಕಾಡಿನಲ್ಲಿ ಸ್ವಾತಂತ್ರ್ಯವಾಗಿ ವಾಸಿಸಲು ಕಷ್ಟ ಸಾಧ್ಯವಾಗಿರುವುದರಿಂದ ಬನ್ನೇರುಘಟ್ಟ ಜೈವಿಕ ಉದ್ಯಾನವನದಲ್ಲಿ ಸಂರಕ್ಷಣಾ ಕೇಂದ್ರ ಕಾಳಜಿ ವಹಿಸಲಾಗುತ್ತಿದೆ. ದತ್ತು ಸ್ವೀಕೃತಿಯಲ್ಲಿ ಅದರ ದಿನನಿತ್ಯದ ಆಹಾರ, ನಿರ್ವಹಣೆ ಮತ್ತು ಪಶು ಚಿಕಿತ್ಸಾವನ್ನು ಭರಿಸಲಾಗುತ್ತದೆ. ಟೆಕೆಯಾನ್ ಸಂಸ್ಥೆ ಮುಖ್ಯಸ್ಥ ರಾಣಾ ರೊಬಿಲ್ಡ್ ಮಾತನಾಡಿ, ಪ್ರಾಣ ಅನಿಮಲ್ ಫೌಂಡೇಶನ್ ಹಾಗೈ ಬನ್ನೇರುಘಟ್ಟ ಜೈವಿಕ‌ ಉದ್ಯಾನದ ಅಧಿಕಾರಿಗಳಿಗೆ ಈ ಅವಕಾಶ ಕೊಟ್ಟಿದ್ದಕ್ಕೆ ಧನ್ಯವಾದಗಳು. ಆರೋಗ್ಯ, ಶಿಕ್ಷಣ ಹಾಗೂ ಸಮಾನತೆ ಮತ್ತು ಸುಸ್ಥಿರತೆ CSR ಮೂಲ ಉದ್ದೇಶ ಎಂದರು.

Samyukta Hornad adopted a tiger

ಸಂಯುಕ್ತ ಹೊರನಾಡು ಮಾತನಾಡಿ, ಟೆಕೆಯಾನ್ ಜೊತೆ ಕೈ ಜೋಡಿಸಿರುವುದು ಖುಷಿ ಕೊಟ್ಟಿದೆ. ತೊಂದರೆ ಒಳಗಾದ ಪ್ರಾಣಿಗಳನ್ನು ದತ್ತು ಸ್ವೀಕರಿಸದಕ್ಕೆ ಟೆಕೆಯಾನ್ ಗೆ ಧನ್ಯವಾದ ಎಂದರು. ಟೆಕೆಯಾನ್ ಸಂಸ್ಥೆ ಮುಖ್ಯಸ್ಥ ರಾಣಾ ರೊಬಿಲ್ಡ್ ಮಾತನಾಡಿ, ಪ್ರಾಣ ಅನಿಮಲ್ ಫೌಂಡೇಶನ್ ಹಾಗೂ ಬನ್ನೇರುಘಟ್ಟ ಜೈವಿಕ‌ ಉದ್ಯಾನವನದ ಅಧಿಕಾರಿಗಳಿಗೆ ಈ ಅವಕಾಶ ಕೊಟ್ಟಿದ್ದಕ್ಕೆ ಧನ್ಯವಾದಗಳು. ಆರೋಗ್ಯ, ಶಿಕ್ಷಣ ಹಾಗೂ ಸಮಾನತೆ ಮತ್ತು ಸುಸ್ಥಿರತೆ CSR ಮೂಲ ಉದ್ದೇಶ ಎಂದರು.

ಸಂಯುಕ್ತ ಹೊರನಾಡು ಮಾತನಾಡಿ, ಟೆಕೆಯಾನ್ ಜೊತೆ ಕೈ ಜೋಡಿಸಿರುವುದು ಖುಷಿ ಕೊಟ್ಟಿದೆ. ತೊಂದರೆ ಒಳಗಾದ ಪ್ರಾಣಿಗಳನ್ನು ದತ್ತು ಸ್ವೀಕರಿಸದಕ್ಕೆ ಟೆಕೆಯಾನ್ ಗೆ ಧನ್ಯವಾದ ಎಂದರು. ಉಪ ಅರಣ್ಯಾಧಿಕಾರಿ ಎವಿ ಸೂರ್ಯಸೆನ್ ಮಾತನಾಡಿ, ಡೈಮ್ಯಾಂಡ್ ಕ್ಲಾಸ್ ವಿಭಾಗದಲ್ಲಿ ಟೆಕೆಯಾನ್ ಮತ್ತು ಪ್ರಾಣ ಸಂಸ್ಥೆ ಅತಿ ಹೆಚ್ಚು ವೆಚ್ಚದಲ್ಲಿ ಪ್ರಾಣಿಗಳನ್ನು ದತ್ತು ಪಡೆದಿದೆ. ಅವರ ಕೆಲಸ ಇತರರಿಗೂ ಮಾದರಿ ಎಂದು ತಿಳಿಸಿದರು. ಟೆಕೆಯಾನ್ ಹಾಗೂ ಪ್ರಾಣ ಸಂಸ್ಥೆ ಜೊತೆಗೂಡಿ ದಿನದ 24 ಘಂಟೆ ಪ್ರಾಣಿಗಳ ರಕ್ಷಣೆಗೆ ಆಂಬ್ಯುಲೆನ್ಸ್ ಸೇವೆ ಒದಗಿಸಿದೆ. ಇದೂವರೆಗೆ 500 ಪ್ರಾಣಿಗಳನ್ನು ಈ ಸಂಸ್ಥೆ ರಕ್ಷಣೆ ಮಾಡಿವೆ. ಕನಕಪುರ ರಸ್ತೆಯಲ್ಲಿ ಟೆಕೆಯಾನ್ ಸಂಸ್ಥೆ ಪ್ರಾಣಿ ರಕ್ಷಣೆಗೆ ಪುನರ್ ವಸತಿ ಕೇಂದ್ರ ಸ್ಥಾಪಿಸಿಕೊಟ್ಟಿದೆ.

Continue Reading

ಪರಿಸರ

Areca Nut Price: ವಿದೇಶಿ ಅಕ್ರಮ ಅಡಿಕೆ ಸಾಗಾಣಿಕೆಯಿಂದ ದೇಶಿಯ ಅಡಿಕೆ ದರ ಕುಸಿತ; ರೈತರಲ್ಲಿ ಆತಂಕ

Domestic Areca Nut Price: ಕಳೆದ ಮೂರು ವರ್ಷಗಳ ಈ ವಿದೇಶಿ ಕಳ್ಳ ಸಾಗಾಣಿಕೆಯ ಸಂಖ್ಯೆ ಮತ್ತು ತೂಕದ ಪ್ರಮಾಣ ಗಮನಿಸಿದರೆ ಅದು ಸ್ಟಾಕ್ ಮಾರ್ಕೇಟ್‌ನ ಏರು ಗತಿಯ ಗ್ರಾಫ್‌ ನಂತೆಯೇ ಇದೆ! ಅಂದರೆ ದಿನದಿಂದ ದಿನಕ್ಕೆ ವಿದೇಶಿ ಕಳಪೆ ಗುಣ ಮಟ್ಟದ ಕಳ್ಳ ಅಡಿಕೆ ದೇಶದ ಒಳಗೆ ಬರುತ್ತಲೇ ಇದೆ. ದೇಶೀಯ ಅಡಿಕೆ ಜತೆ ಈ ಅಡಿಕೆಯನ್ನು ಮಿಶ್ರಣ ಮಾಡಿ ಮಾರುವ ಪ್ರಕ್ರಿಯೆ ಎಡಬಿಡದೆ ನೆಡೆಯುತ್ತಿದೆ. ಅಡಿಕೆ ಬೆಳೆಗಾರರನ್ನು ಇದು ಕಂಗಾಲು ಮಾಡಿದೆ.

VISTARANEWS.COM


on

Areca nut

-ಅರವಿಂದ ಸಿಗದಾಳ್, ಮೇಲುಕೊಪ್ಪ
ಇದು ಪ್ರತೀ ಅಡಿಕೆ ಬೆಳೆಗಾರನೂ ಗಂಭೀರವಾಗಿ ಚಿಂತಿಸಬೇಕಾದ ವಿಚಾರ. ಡಾ. ವೀರೇಂದ್ರ ಹೆಗ್ಗಡೆಯವರು ಸಂಸದ್‌ನಲ್ಲಿ ಕೇಳಿ ಪಡೆದ ಅಧಿಕೃತ ಮಾಹಿತಿ ಪ್ರಕಾರ ಮೂರು ತಿಂಗಳಲ್ಲಿ 184 ಪ್ರಕರಣಗಳಲ್ಲಿ ವಿದೇಶಿ ಅಡಿಕೆ ಕಳ್ಳ ದಾರಿಯಲ್ಲಿ ದೇಶದ ಒಳಗೆ ಬಂದು ಉದುರಿದೆ! ಮೂರು ತಿಂಗಳ ಹಿಂದಕ್ಕೆ ಹೋಗಿ ಕಳೆದ ಮೂರು ವರ್ಷಗಳ ಈ ವಿದೇಶಿ ಕಳ್ಳ ಸಾಗಾಣಿಕೆಯ ಸಂಖ್ಯೆ ಮತ್ತು ತೂಕದ ಪ್ರಮಾಣ ಗಮನಿಸಿದರೆ ಅದು ಸ್ಟಾಕ್ ಮಾರ್ಕೇಟ್‌ನ ಏರು ಗತಿಯ ಗ್ರಾಫ್‌ ನಂತೆಯೇ ಇದೆ! ಅಂದರೆ ದಿನದಿಂದ ದಿನಕ್ಕೆ ವಿದೇಶಿ ಕಳಪೆ ಗುಣ ಮಟ್ಟದ ಕಳ್ಳ ಅಡಿಕೆ ದೇಶದ (Areca Nut Price) ಒಳಗೆ ಬರುತ್ತಲೇ ಇದೆ. ದೇಶೀಯ ಅಡಿಕೆ ಜತೆ ಈ ಅಡಿಕೆಯನ್ನು ಮಿಶ್ರಣ ಮಾಡಿ ಮಾರುವ ಪ್ರಕ್ರಿಯೆ ಎಡಬಿಡದೆ ನೆಡೆಯುತ್ತಿದೆ.

184 ಪ್ರಕರಣಗಳು ಎನ್ನುವುದು ಸೆರೆ ಸಿಕ್ಕ ದಾಖಲಾದ ಪ್ರಕರಣಗಳು. ದಾಖಲಾಗದ ಪ್ರಕರಣಗಳು ಇದರ ಹತ್ತರಷ್ಟಿವೆಯೋ? ನೂರರಷ್ಟಿವೆಯೋ! ವಿದೇಶಿ ಅಕ್ರಮ ಅಡಿಕೆ ಆಮದಿನ ವಿಚಾರದಲ್ಲಿ ಸ್ಪಷ್ಟವಾದ ಕ್ರಮ ಕೈಗೊಳ್ಳಲು ಕೇಂದ್ರ ಸರಕಾರ ಮುಂದಾಗಿಲ್ಲ ಎನ್ನುವುದು ಪ್ರಕರಣಗಳು ಹೆಚ್ಚುತ್ತಿರುವ ಮಾಹಿತಿಯಿಂದ ಸ್ಪಷ್ಟ. ವಿದೇಶಿ ಅಧಿಕೃತ ನೇರ ಆಮದು ಸಾಧ್ಯವೇ ಇಲ್ಲ. ಯಾಕೆಂದರೆ, ಆಮದು ದರ ₹.351 + 100% (₹.752 ಪ್ರತಿ ಕೆಜಿ) ಆಮದು ಸುಂಕ ಇರುವುದರಿಂದ ಯಾರೂ ವಿದೇಶಿ ಅಡಿಕೆಯನ್ನು ಅಷ್ಟು ದುಬಾರಿಯಲ್ಲಿ ಕೊಟ್ಟು ಖರೀಧಿಸುತ್ತಾರೆ? ಪರಿಣಾಮ ಅಕ್ರಮ ವಿದೇಶಿ ಅಡಿಕೆ ಆಮದು ಕಳ್ಳರು ಹುಟ್ಟಿಕೊಂಡಿರುವುದು. ಅವರ ಮೇಲೆ ಯಾವುದೇ ಕಠಿಣ ಕಾನೂನು ಕ್ರಮ ಇಲ್ಲದಿರುವುದು ಮತ್ತು ಆ ಅಡಿಕೆ ಬರುತ್ತಿರುವ ಕಳ್ಳ ದಾರಿ ಗೆ ನಿಯಂತ್ರಣದ ಚಕ್ ಪೋಸ್ಟ್ ಇಲ್ಲದಿರುವುದು.

arecanut price

ಅಕ್ರಮ ವಿದೇಶಿ ಅಡಿಕೆ ಆಮದು ಕಳ್ಳರ ಮೇಲೆ FIR, ವಿಚಾರಣೆ, ಜೈಲೂಟ, ಪ್ರಾಸಿಕ್ಯುಷನ್ ತನಿಖೆ ಅನುಮತಿ, ತನಿಖೆ ಆದೇಶ, ಜಾಮೀನು, ವಿಚಾರಣೆಗೆ ನೋಟೀಸು, ಪ್ರಕರಣ ಸಿವಿಲ್ ಕೋರ್ಟ್‌‌ನಿಂದ ಹೈ ಕೋರ್ಟಿಗೆ-ಸುಪ್ರೀಮ್ ಕೋರ್ಟ್‌ಗೆ, ಕಠಿಣ ಜೈಲು ಶಿಕ್ಷೆ…….. ಉಹೂಂ ಒಂದೇ ಒಂದು ಪ್ರಕರಣದ ಸುದ್ದಿ ಪತ್ರಿಕೆಗಳಲ್ಲಿ ಬಂದಿಲ್ಲ, ಟಿವಿಯಲ್ಲಿ ‘ದರ್ಶನ’ ವಾಗಿಲ್ಲ. ಎಷ್ಟು ‘ಶೆಡ್‌ಗಳಲ್ಲಿ’ ಈ ವಿದೇಶಿ ಅಕ್ರಮ ಅಡಿಕೆಯನ್ನು ಸಂಗ್ರಹಿಸಿಟ್ಟಿದ್ದರ ಮೇಲೆ ದಾಳಿ ಆದ ಸುದ್ದಿಗಳಿಲ್ಲ! ಎಲ್ಲದರ ಪರಿಣಾಮ ಕಳಪೆ ಗುಣಮಟ್ಟದ ಅಡಿಕೆ ಮಂಗಳೂರಿನಲ್ಲಿ ಬೇಕಾಬಿಟ್ಟಿಯಾಗಿ ದೊರೆಯುತ್ತದೆ ಎಂದು ಹೇಳಲಾಗುತ್ತಿದೆ. ಅದನ್ನು ತಂದು ದೇಶೀಯ ರೈತರ ಅಡಿಕೆ ಜೊತೆ ಹದವಾಗಿ ಮಿಶ್ರಣ ಮಾಡಿ ಅಡಿಕೆ ಮಾರುಕಟ್ಟೆಗೆ ಬಿಡಲಾಗುತ್ತಿದೆ. ಮಾಧ್ಯಮಗಳಲ್ಲಿ ಆಗಾಗ ಪ್ರಕಟವಾಗಿ, ಅಲ್ಲೇ ಸೈಲಂಟ್ ಆಗುವ ಉಡುಪಿ, ಮಂಗಳೂರು, ಶಿವಮೊಗ್ಗ, ಬೆಂಗಳೂರು ಕಾಲೇಜ್‌ಗಳಲ್ಲಿನ ವಿದೇಶಿ ಡ್ರಗ್ಸ್ ದಂದೆಯಂತೆ, ಈ ವಿದೇಶಿ ಕಳಪೆ ಅಡಿಕೆ ಸುಲಭವಾಗಿ ದೊರೆಯುವಂತಾಗಿದೆ ಎನ್ನುವುದು ಸ್ಪಷ್ಟ. ವಿದೇಶಿ ಡ್ರಗ್ಸ್ ಮತ್ತು ವಿದೇಶಿ ಕಳ್ಳ ಅಡಿಕೆ ಅಮದು ನಿಲ್ಲಿಸಲು ಕೇಂದ್ರ ತನ್ನ ಭೀಮ ಶಕ್ತಿಯನ್ನು ಪ್ರಯೋಗಿಸಬೇಕಿದೆ. ಇಲ್ಲದೇ ಇದ್ದರೆ, ಅಡಿಕೆ ದರ ಇನ್ನಷ್ಟು ನೆಲ ಕಚ್ಚುವುದು ನಿಶ್ಚಿತ. ಮಲೆನಾಡು, ಕರಾವಳಿಯ ಎಲ್ಲ ಸಂಸದರು ಅಡಿಕೆ ಬೆಳೆಗಾರರ ಪರವಾಗಿ ಒಂದು ದಿಟ್ಟ ಕ್ರಮದ ಹೆಜ್ಜೆಗೆ ಮುಂದಾಗಬಹುದಾ?

ಇದನ್ನೂ ಓದಿ: Arecanut Research Centre: ಹೊಸ ಅಡಿಕೆ ಸಂಶೋಧನಾ ಕೇಂದ್ರ ಮತ್ತೊಂದು ಮದುವೆ ಛತ್ರ ಆಗದಿರಲಿ!

Continue Reading

ಪರಿಸರ

Wildlife: ಹುಟ್ಟಿದ ತಕ್ಷಣ ತಾಯಿಯನ್ನೇ ಕೊಂದು ತಿನ್ನುವ ಜೀವಿ ಇದು!

ಪ್ರತಿಯೊಂದು ಜೀವಿಗೂ (wildlife) ತಾಯಿಯೇ ದೇವರಾಗಿರುತ್ತದೆ. ತಾಯಿಯ ಆಶ್ರಯ ಇಲ್ಲದೆ ಬೆಳೆಯುವ ಜೀವಿಗಳು ಅಪರೂಪವೆಂದೇ ಹೇಳಬಹುದು. ಆದರೆ ಇದೊಂದು ಜೀವಿ ಮಾತ್ರ ಹುಟ್ಟಿದ ಕ್ಷಣವೇ ತಾಯಿಯನ್ನು ಕೊಂದು ತಿನ್ನುತ್ತದೆ ಎಂದರೆ ಎಲ್ಲರಿಗೂ ಅಚ್ಚರಿಯಾಗಬಹುದು. ಈ ಕುರಿತ ಕುತೂಹಲಕರ ಮಾಹಿತಿ ಇಲ್ಲಿದೆ.

VISTARANEWS.COM


on

By

Wildlife

ಭೂಮಿ ಮೇಲೆ ಅಸಂಖ್ಯಾತ ಜೀವಿಗಳಿವೆ. ಕಣ್ಣಿಗೆ ಕಾಣದ ಜೀವಿಗಳಿಂದ (wildlife) ಹಿಡಿದು ಬೃಹತ್ ಗಾತ್ರದವರೆಗಿನ ಜೀವರಾಶಿಗಳು ತಮ್ಮದೇ ಆದ ಜೀವನಶೈಲಿ (Lifestyle), ಆಹಾರ ಶೈಲಿಯನ್ನು (food style) ಹೊಂದಿದೆ. ಭೂಮಿ (earth) ಮೇಲೆ ಇರುವ ಎಲ್ಲ ಜೀವರಾಶಿಗಳ ಪರಿಚಯ ಮಾನವನಿಗೆ ಇನ್ನೂ ಆಗಿಲ್ಲ. ಕೆಲವು ಜೀವಿಗಳ ಪರಿಚಯವಿದ್ದರೆ ಇನ್ನು ಕೆಲವು ನಮಗೆ ತಿಳಿದೇ ಇಲ್ಲ. ನಾವು ಗುರುತಿಸಬಲ್ಲ ಅನೇಕ ಜೀವಿಗಳ ಬಗ್ಗೆ ನಮಗೆ ಇನ್ನೂ ಸ್ಪಷ್ಟತೆ ಇಲ್ಲ.

ಪ್ರತಿಯೊಂದು ಜೀವಿಗೂ ತಾಯಿಯೇ ದೇವರಾಗಿರುತ್ತದೆ. ತಾಯಿಯ ಆಶ್ರಯ ಇಲ್ಲದೆ ಬೆಳೆಯುವ ಜೀವಿಗಳು ಅಪರೂಪವೆಂದೇ ಹೇಳಬಹುದು. ಆದರೆ ಇದೊಂದು ಜೀವಿ ಮಾತ್ರ ಹುಟ್ಟಿದ ಕ್ಷಣವೇ ತಾಯಿಯನ್ನು ಕೊಂದು ತಿನ್ನುತ್ತದೆ ಎಂದರೆ ಎಲ್ಲರಿಗೂ ಅಚ್ಚರಿಯಾಗಬಹುದು.

Wildlife


ಹುಟ್ಟಿದ ಕ್ಷಣದಿಂದ ತಾಯಿಗೇ ಅಪಾಯವನ್ನುಂಟು ಮಾಡುವ ಜೀವಿಯೆಂದರೆ ಚೇಳು (scorpions). ಅತ್ಯಂತ ಪ್ರಬಲ ವಿಷವನ್ನು ಹೊಂದಿರುವ ಚೇಳಿನ ಸಣ್ಣ ಪ್ರಮಾಣ ವಿಷವೂ ಮನುಷ್ಯನಿಗೆ ಅಪಾಯ ತರಬಹುದು. ಚಿಕಿತ್ಸೆ ನೀಡದೆ ಬಿಟ್ಟರೆ ಚೇಳು ಕಡಿತವು ಮರಣದ ಅಪಾಯವನ್ನು ಹೆಚ್ಚಿಸುತ್ತದೆ.

ಚೇಳುಗಳು ಸಾಮಾನ್ಯವಾಗಿ ಸಣ್ಣ ಜೀವಿಗಳನ್ನು ಬೇಟೆಯಾಡುತ್ತವೆ. ಕುಟುಕು ಮೂಲಕ ತಮ್ಮ ವಿಷವನ್ನು ಉಣಿಸುತ್ತದೆ. ಈ ವಿಷವು ಪಾರ್ಶ್ವವಾಯುವಿಗೆ ಕಾರಣವಾಗುತ್ತದೆ. ಚೇಳು ತನ್ನ ಬೇಟೆಯನ್ನು ಜೀವಂತವಾಗಿ ಸೇವಿಸಲು ಅನುವು ಮಾಡಿಕೊಡುತ್ತದೆ. ಇದಲ್ಲದೆ ಹೆಣ್ಣು ಚೇಳುಗಳು ಒಂದೇ ಬಾರಿಗೆ ಸರಿಸುಮಾರು 100 ಮರಿಗಳಿಗೆ ಜನ್ಮ ನೀಡುತ್ತವೆ. ಅವುಗಳು ಸೇರಿ ಅಂತಿಮವಾಗಿ ತಾಯಿಯನ್ನೇ ತಿನ್ನುತ್ತದೆ. ಆಶ್ಚರ್ಯಕರ ಸಂಗತಿಯೆಂದರೆ ತಾಯಿ ಚೇಳು ತನ್ನ ಮರಿಗಳನ್ನು ಪೋಷಿಸುತ್ತದೆ ಮತ್ತು ರಕ್ಷಿಸುತ್ತದೆ.


ಹೆಣ್ಣು ಚೇಳು ಮರಿಗಳನ್ನು ಬೆನ್ನಿನ ಮೇಲೆ ಇರಿಸಿ ಸಾಕುತ್ತದೆ. ಕ್ರಮೇಣ ಅವುಗಳು ತಾಯಿಯನ್ನೇ ಸಂಪೂರ್ಣವಾಗಿ ತಿನ್ನುತ್ತವೆ. ಮರಿಗಳು ಜನನದ ಅನಂತರ ತಕ್ಷಣವೇ ತಾಯಿಯ ಬೆನ್ನಿಗೆ ಅಂಟಿಕೊಳ್ಳುತ್ತವೆ. ತಾಯಿ ಕ್ಷೀಣಿಸಿ ನಾಶವಾಗುವವರೆಗೆ ಅದರ ಮಾಂಸವನ್ನು ತಿನ್ನುತ್ತವೆ. ತಾಯಿಯ ಎಲ್ಲಾ ಮಾಂಸವನ್ನು ಕಬಳಿಸಿದ ಅನಂತರವೇ ಚೇಳುಗಳು ಬೆನ್ನಿನಿಂದ ಬೇರ್ಪಟ್ಟು ಸ್ವತಂತ್ರವಾಗಿ ಬದುಕಲು ಪ್ರಾರಂಭಿಸುತ್ತವೆ!

ಇದನ್ನೂ ಓದಿ: Mosquito Repellent Plants: ನಿಮಗೆ ಗೊತ್ತೆ? ಈ 5 ಬಗೆಯ ಗಿಡಗಳು ಸೊಳ್ಳೆಗಳನ್ನು ಓಡಿಸುತ್ತವೆ!


ಚೇಳುಗಳು ಸಾಮಾನ್ಯವಾಗಿ ಕೀಟಗಳು ಮತ್ತು ಇತರ ಅಕಶೇರುಕಗಳನ್ನು ಬೇಟೆಯಾಗಿ ಗುರಿಯಾಗಿಸಿಕೊಳ್ಳುತ್ತವೆ. ಆದರೆ ಕೆಲವು ಪ್ರಭೇದಗಳು ಕಶೇರುಕಗಳನ್ನು ಬೇಟೆಯಾಡುತ್ತವೆ. ಅವುಗಳ ವಿಷಕಾರಿ ಕುಟುಕು ಆಕ್ರಮಣಕಾರಿ ಮತ್ತು ರಕ್ಷಣಾತ್ಮಕ ಉದ್ದೇಶಗಳಿಗಾಗಿ ಕಾರ್ಯನಿರ್ವಹಿಸುತ್ತದೆ.

ಪ್ರಣಯದ ಸಮಯದಲ್ಲಿ ಗಂಡು ಮತ್ತು ಹೆಣ್ಣು ಚೇಳುಗಳು ನೃತ್ಯದಲ್ಲಿ ತೊಡಗುತ್ತವೆ. ಎಲ್ಲಾ ಪ್ರಭೇದದ ಚೇಳುಗಳು ಮರಿಗಳಿಗೆ ಜನ್ಮ ನೀಡುತ್ತವೆ.

Continue Reading

ಪರಿಸರ

International Cat Day: ಇಂದು ಬೆಕ್ಕಿನ ದಿನ; ಇದರ ಆಯುಷ್ಯ, ನಿದ್ದೆ, ಶೃಂಗಾರ ಇತ್ಯಾದಿ ಸಂಗತಿಗಳು ಕುತೂಹಲಕರ!

International Cat Day: ನಿರ್ಭೀತ ಮತ್ತು ಸ್ನೇಹ ಮನೋಭಾವದಿಂದ ಮನೆಯಲ್ಲಿ ಎಲ್ಲರನ್ನೂ ಆಕರ್ಷಿಸುವ ಬೆಕ್ಕುಗಳ ಕುರಿತ ಹಲವು ಸಂಗತಿಗಳು ಕುತೂಹಲಕರ. ಮಾನವನ ಬದುಕಿನಲ್ಲಿ ಬೆಕ್ಕುಗಳು ವಿಶೇಷ ಸ್ಥಾನವನ್ನು ಪಡೆದಿವೆ. ಸ್ನೇಹಿತನಂತೆ ಒಲವು ತೋರುವ ಬೆಕ್ಕುಗಳು ಬೇಗನೆ ಹೊಂದಿಕೊಂಡು, ಮಾನವನ ಭಾಷೆಯನ್ನು ಅರ್ಥೈಸಿಕೊಳ್ಳುತ್ತವೆ. ಇಂದು ಅಂತಾರಾಷ್ಟ್ರೀಯ ಬೆಕ್ಕು ದಿನಾಚರಣೆ (International Cat Day). ಈ ವಿಶೇಷ ಸಂದರ್ಭದಲ್ಲಿ ಬೆಕ್ಕುಗಳ ಕುರಿತು ಹಲವು ಆಸಕ್ತಿದಾಯಕ ಸಂಗತಿಗಳು ಇಲ್ಲಿವೆ.

VISTARANEWS.COM


on

By

International Cat Day

ನಾವು ಸಾಕುವ ಮುದ್ದಿನ ಪ್ರಾಣಿಗಳಲ್ಲಿ ಬೆಕ್ಕು (cat) ಕೂಡ ಒಂದಾಗಿದೆ. ವಿಶ್ವದಾದ್ಯಂತ ಇಂದು ಬೆಕ್ಕಿನ ದಿನವನ್ನು (International Cat Day) ಆಚರಿಸಲಾಗುತ್ತದೆ. ಪ್ರತಿ ವರ್ಷ ಆಗಸ್ಟ್ 8ರಂದು ಆಚರಿಸಲಾಗುವ ಈ ದಿನದಂದು ಮಾನವನ ಅತ್ಯಂತ ಹಳೆಯ ಮತ್ತು ಪ್ರೀತಿಯ ಪ್ರಾಣಿ ಸಹಚರರಲ್ಲಿ ಒಂದಾದ ಬೆಕ್ಕನ್ನು ಗೌರವಿಸಲಾಗುತ್ತದೆ.

ಮಾನವನ ಬದುಕಿನಲ್ಲಿ ಬೆಕ್ಕುಗಳು ವಿಶೇಷ ಸ್ಥಾನವನ್ನು ಪಡೆದಿವೆ. ಸ್ನೇಹಿತನಂತೆ ಒಲವು ತೋರುವ ಬೆಕ್ಕುಗಳು ಕೂಡ ಬೇಗನೆ ಹೊಂದಿಕೊಂಡು, ಮಾನವನ ಭಾಷೆಯನ್ನು ಅರ್ಥೈಸಿಕೊಳ್ಳುತ್ತವೆ. ಪ್ರಾಚೀನ ಈಜಿಪ್ಟ್‌ನಲ್ಲಿ ಬೆಕ್ಕುಗಳನ್ನು ದೈವಿಕ ಜೀವಿಯಾಗಿ ಪೂಜಿಸಲಾಗುತ್ತಿತ್ತು. ಅವುಗಳು ತಮ್ಮ ಸ್ವಾತಂತ್ರ್ಯ, ಕುತೂಹಲ ಮತ್ತು ನಿರ್ಭೀತ ಮನೋಭಾವದಿಂದ ಎಲ್ಲರನ್ನೂ ಆಕರ್ಷಿಸುತ್ತವೆ. ಅವುಗಳ ಸೊಗಸಾದ ದೈಹಿಕ ಲಕ್ಷಣಗಳು ಮತ್ತು ಸಣ್ಣಪುಟ್ಟ ಗಾಯ, ಆರೋಗ್ಯ ಸಮಸ್ಯೆಗಳನ್ನು ಸ್ವಯಂ ಗುಣಪಡಿಸುವ ಸಾಮರ್ಥ್ಯವು ಅವುಗಳನ್ನು ವಿಶೇಷವನ್ನಾಗಿ ಮಾಡಿವೆ.

ಅಂತಾರಾಷ್ಟ್ರೀಯ ಬೆಕ್ಕು ದಿನಾಚರಣೆಯ ಈ ಸಂದರ್ಭದಲ್ಲಿ ಬೆಕ್ಕುಗಳ ಕುರಿತು ಹಲವು ಆಸಕ್ತಿದಾಯಕ ಸಂಗತಿಗಳನ್ನು ತಿಳಿಯೋಣ.


ಬೆಕ್ಕುಗಳ ವಯಸ್ಸು ಎಷ್ಟು?

ಸಾಮಾನ್ಯವಾಗಿ ಬೆಕ್ಕುಗಳು ಮಾನವನ ವಯಸ್ಸಿಗೆ ಹೋಲಿಸಿದರೆ 116 ವರ್ಷಗಳ ಕಾಲ ಬದುಕುತ್ತವೆ. ಅವುಗಳ ಜೀವನವು ಆರು ಹಂತಗಳನ್ನು ಹೊಂದಿರುತ್ತದೆ. ಅದರಲ್ಲಿ ಆರು ತಿಂಗಳವರೆಗೆ ಅದು ಮಗುವಾಗಿರುತ್ತದೆ. ಬಳಿಕ 7 ತಿಂಗಳಿನಿಂದ 2 ವರ್ಷಗಳವರೆಗೆ ಜೂನಿಯರ್, 3ರಿಂದ 6 ವರ್ಷಗಳವರೆಗೆ ವಯಸ್ಕ, 7 ರಿಂದ 10 ವರ್ಷಗಳವರೆಗೆ ಪ್ರಬುದ್ಧ, 11ರಿಂದ 14 ವರ್ಷಗಳವರೆಗೆ ಹಿರಿಯ, 15 ರಿಂದ 25 ವರ್ಷಗಳವರೆಗೆ ಬಹು ಹಿರಿಯ ವಯಸ್ಕ ಆಗಿರುತ್ತದೆ.


ವಿಶೇಷ ಸಾಮರ್ಥ್ಯ

ಬೆಕ್ಕುಗಳು ಹೆಚ್ಚು ಪ್ರಭಾವಶಾಲಿ ಕಿವಿಗಳ ಸಾಮರ್ಥ್ಯವನ್ನು ಹೊಂದಿವೆ. ಅವುಗಳು ತಮ್ಮ ಕಿವಿಗಳನ್ನು 180 ಡಿಗ್ರಿಗಳಷ್ಟು ತಿರುಗಿಸಬಲ್ಲವು! ಪ್ರತಿ ಕಿವಿಯಲ್ಲಿ 32 ಸ್ನಾಯುಗಳಿವೆ. ಮಾನವನಲ್ಲಿ ಕೇವಲ ಆರು ಕಿವಿ ಸ್ನಾಯುಗಳಿವೆ. ಅವುಗಳು ಮನುಷ್ಯರಂತೆ ಶಬ್ದಗಳ ಮೂಲವನ್ನು ನಿಖರವಾಗಿ ಗುರುತಿಸುತ್ತವೆ.

ಅತ್ಯುತ್ತಮ ದೃಷ್ಟಿಯ ಹೊರತಾಗಿ ಬೆಕ್ಕುಗಳು ಉತ್ತಮ ಗ್ರಹಿಕಾ ಸಾಮರ್ಥ್ಯ ಹೊಂದಿರುತ್ತವೆ. ಬೇಟೆಯು ಸಮೀಪಿಸಿದಾಗ ಅವುಗಳ ವಾಸನೆಯ ಪ್ರಜ್ಞೆ ಜಾಗೃತವಾಗುತ್ತದೆ. ಅವುಗಳ ವಾಸನೆಯ ಅಸಾಧಾರಣ ಪ್ರಜ್ಞೆಯಿಂದ 200 ವಿಭಿನ್ನ ಪರಿಮಳಗಳನ್ನು ನೆನಪಿಸಿಕೊಳ್ಳುತ್ತವೆ.


ಬೆಕ್ಕುಗಳು ಕಾಲ್ಬೆರಳುಗಳ ಸಂಖ್ಯೆಯಲ್ಲಿ ವ್ಯತ್ಯಾಸಗಳಿರುತ್ತವೆ. ಕೆಲವು ಹೆಚ್ಚುವರಿ ಕಾಲ್ಬೆರಳುಗಳನ್ನು ಹೊಂದಿರುತ್ತವೆ. ಒಂದು ಬೆಕ್ಕಿನ ಮೇಲೆ ಅತಿ ಹೆಚ್ಚು ಕಾಲ್ಬೆರಳುಗಳ ದಾಖಲೆ 32 ಆಗಿದೆ.

ದಿನಚರಿ ಏನು?

ಸಾಕು ಬೆಕ್ಕುಗಳು ತಮ್ಮ ದಿನದಲ್ಲಿ ಶೇ. 70ರಷ್ಟು ಸಮಯವನ್ನು ನಿದ್ದೆಯಲ್ಲಿ ಕಳೆಯುತ್ತವೆ. ಶೇ. 15ರಷ್ಟು ಸಮಯವನ್ನು ಶೃಂಗಾರದಲ್ಲಿ ಕಳೆಯುತ್ತವೆ. ಮನೆಯಲ್ಲಿ ಬೇಟೆಯಾಡದೇ ಇದ್ದರೂ ಬೇಟೆಗಾಗಿ ತಮ್ಮನ್ನು ತಾವು ಸಜ್ಜುಗೊಳಿಸುತ್ತವೆ ಮತ್ತು ಶಕ್ತಿಯನ್ನು ಉಳಿಸುತ್ತದೆ. ವಯಸ್ಕ ಬೆಕ್ಕುಗಳು ದಿನಕ್ಕೆ 16- 20 ಗಂಟೆಗಳ ಕಾಲ ನಿದ್ರಿಸುತ್ತವೆ. ವಯಸ್ಸಾದ ಬೆಕ್ಕುಗಳು ಸುಮಾರು 24 ಗಂಟೆಗಳ ಕಾಲ ಮಲಗುವುದೂ ಉಂಟು!


ತಳಿಗಳು

ಬೆಕ್ಕುಗಳಲ್ಲಿ ಸೈಬೀರಿಯನ್, ರಾಗ್ಡಾಲ್, ಮೈನೆ ಕೂನ್ ಮತ್ತು ಬ್ರಿಟಿಷ್ ಶೋರ್ಥೈರ್‌ನಂತಹ ಪ್ರಮುಖ ತಳಿಗಳಿವೆ. ದೊಡ್ಡ ಗಂಡು ಬೆಕ್ಕುಗಳು ಸುಮಾರು 20 ಪೌಂಡ್ ತೂಗುತ್ತವೆ. ಈ ತಳಿಗಳು ತಮ್ಮ ದೊಡ್ಡ ಗಾತ್ರ ಮತ್ತು ಸ್ನೇಹಪರ ವ್ಯಕ್ತಿತ್ವಗಳಿಗೆ ಹೆಸರುವಾಸಿಯಾಗಿದೆ.


ಸಂವಹನ ಹೇಗೆ?

ಮಿಯಾಂವ್ ಎನ್ನುವುದು ಬೆಕ್ಕುಗಳಿಗೆ ಸಹಜ ಭಾಷೆಯಲ್ಲ. ಅವು ಮನುಷ್ಯರೊಂದಿಗೆ ಸಂವಹನ ನಡೆಸಲು ಇದನ್ನು ಅಭಿವೃದ್ಧಿಪಡಿಸಲಾಯಿತು. ಕಾಡಿನಲ್ಲಿ ವಯಸ್ಕ ಬೆಕ್ಕುಗಳು ವಾಸನೆ, ಮುಖದ ಅಭಿವ್ಯಕ್ತಿ, ದೇಹ ಭಾಷೆ ಮತ್ತು ಸ್ಪರ್ಶದಂತಹ ವಿವಿಧ ಮೌಖಿಕ ಸೂಚನೆಗಳೊಂದಿಗೆ ಸಂವಹನ ನಡೆಸುತ್ತವೆ. ಆದರೆ ಸಾಕು ಬೆಕ್ಕುಗಳು ತಮ್ಮ ಅಗತ್ಯಗಳನ್ನು ಮನುಷ್ಯರಿಗೆ ತಿಳಿಸಲು ಮಿಯಾಂವ್ ಶಬ್ದದ ಬಳಕೆ ಮಾಡುತ್ತವೆ.


ನಂಬಿಕೆ

ಅನೇಕ ಸಂಸ್ಕೃತಿ ಮತ್ತು ಪುರಾಣಗಳಲ್ಲಿ ಬಿಳಿ ಬೆಕ್ಕುಗಳು ಶುದ್ಧತೆ ಮತ್ತು ಸಂತೋಷವನ್ನು ಸಂಕೇತಿಸುತ್ತವೆ. ಬಿಳಿ ಬೆಕ್ಕಿನ ಕನಸು ಬಿದ್ದರೆ ಅದೃಷ್ಟವನ್ನು ತರುತ್ತದೆ ಎಂದು ನಂಬಲಾಗುತ್ತದೆ.

ಇದನ್ನೂ ಓದಿ:International Tiger Day 2024: 150 ವರ್ಷಗಳಲ್ಲಿ ಹುಲಿಗಳ ಸಂಖ್ಯೆ ಶೇ. 95ರಷ್ಟು ಕುಸಿತ!

ಇದರ ಬಳಕೆ ಹೇಗೆ?

ಬೆಕ್ಕುಗಳನ್ನು ಸಂಚಾರ ಮತ್ತು ಸಂವಹನಕ್ಕೆ ಮಾರ್ಗದರ್ಶಿಯಾಗಿ ಬಳಸಲಾಗುತ್ತದೆ. ವಿಶೇಷ ಕೂದಲುಗಳಿರುವ ಬೆಕ್ಕುಗಳು ಇತರ ಪ್ರಾಣಿಗಳು ಮತ್ತು ಮನುಷ್ಯರಿಗೆ ಸಂದೇಶಗಳನ್ನು ರವಾನಿಸಲು ಅನುವು ಮಾಡಿಕೊಡುತ್ತದೆ. ಉದಾಹರಣೆಗೆ ಬೆಕ್ಕಿನ ಮೀಸೆಯನ್ನು ಮುಂದಕ್ಕೆ ತೋರಿಸಿದಾಗ ಅದು ಆತ್ಮವಿಶ್ವಾಸ ಮತ್ತು ನಿರಾಳತೆಯ ಭಾವನೆಯನ್ನು ಸೂಚಿಸುತ್ತದೆ. ವ್ಯತಿರಿಕ್ತವಾಗಿ, ಅವುಗಳನ್ನು ಹಿಂದಕ್ಕೆ ಎಳೆದರೆ ಅದು ಹೆದರಿಕೆ ಅಥವಾ ಬೆದರಿಕೆಯನ್ನು ಅನುಭವಿಸುತ್ತಿದೆ ಎಂಬುದು ಅರ್ಥ.

ಬೆಕ್ಕುಗಳ ಗುಂಪನ್ನು “ಕ್ಲೋಡರ್” ಎಂದು ಕರೆಯಲಾಗುತ್ತದೆ ಮತ್ತು ಗಂಡು ಬೆಕ್ಕನ್ನು ಸಾಮಾನ್ಯವಾಗಿ “ಟಾಮ್” ಎಂದು ಕರೆಯಲಾಗುತ್ತದೆ. ಆದರೆ ಹೆಣ್ಣು ಬೆಕ್ಕನ್ನು ಸಾಮಾನ್ಯವಾಗಿ ʼರಾಣಿʼ ಎಂದು ಕರೆಯಲಾಗುತ್ತದೆ.

Continue Reading
Advertisement
Latest53 minutes ago

ಟೆಹರಾನ್‌ನಲ್ಲಿ ವಿಮಾನ ಹಾರಾಟ ಪುನರಾರಂಭ: ಪಾಕ್‌ಗೆ ಆಗಮಿಸಿದ ಇರಾನ್‌ ನಿಯೋಗ: ಯುದ್ಧದ ಅಂತ್ಯದ ಮುನ್ಸೂಚನೆಯೇ ?

Latest2 hours ago

ಪರಮಾಣು ಶಸ್ತ್ರಾಸ್ತ್ರಗಳು ಶಾಂತಿಯ ಉದ್ದೇಶಕ್ಕೆ ಬಳಕೆಯಾಗಲಿ: ವಿಶ್ವಸಂಸ್ಥೆ ಕಳಕಳಿ

Latest2 hours ago

ರಾಜಕುಮಾರ್‌ ಸಮಾಧಿಗೆ ಭೂಮಿ: ವಿವಾದ ಹುಟ್ಟು ಹಾಕಿದ ನಟ ಚೇತನ್‌ ವಿರುದ್ಧ ಅಭಿಮಾನಿಗಳ ಆಕ್ರೋಶ; ದೂರು ದಾಖಲು

Latest3 hours ago

ಯೋಗೇಶ್‌ ಗೌಡ ಕೊಲೆ ಪ್ರಕರಣ: ಅನರ್ಹತೆ ಭೀತಿ; ಶಿಕ್ಷೆ ರದ್ದುಕೋರಿ ಹೈಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಿದ ಶಾಸಕ ವಿನಯ್‌ ಕುಲಕರ್ಣಿ

Latest3 hours ago

ಕಲಬುರಗಿ ಜಿಲ್ಲೆಯ ಮಕ್ಕಳನ್ನು ಅವಮಾನಿಸಬೇಡಿ, ಅವರೂ ಬುದ್ದಿವಂತರು; ಬಿಜೆಪಿ ಮುಖಂಡರಿಗೆ ಸಚಿವ ಪ್ರಿಯಾಂಕ್‌ ಖರ್ಗೆ ತಿರುಗೇಟು

Latest3 hours ago

ಕಾಂತಾರ ಚಾಪ್ಟರ್‌-1 ಮಿಮಿಕ್ರಿ: ಬಾಲಿವುಡ್‌ ನಟ ರಣವೀರ್‌ ಸಿಂಗ್‌ ಮೇಲಿನ ಪ್ರಕರಣ ಇತ್ಯರ್ಥ; ಕೋರ್ಟ್‌ ಆದೇಶವೇನು?

Latest4 hours ago

ಒಳಮೀಸಲಾತಿ ಜಾರಿ: ಕೊಟ್ಟ ಮಾತು ಈಡೇರಿಸಿದ ದಲಿತರಾಮಯ್ಯ; ಸಚಿವ ಆರ್.ಬಿ. ತಿಮ್ಮಾಪುರ

Latest4 hours ago

ಒಳ ಮೀಸಲಾತಿಯಿಂದ ಅನ್ಯಾಯ: ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಹೋರಾಟ; ಬಿಜೆಪಿ ಘೋಷಣೆ

Latest5 hours ago

ದೆಹಲಿಯಲ್ಲಿ ಬೀಡುಬಿಟ್ಟ ಡಿಕೆ ಶಿವಕುಮಾರ್;‌ ಪ್ರತಿತಂತ್ರ ಹೆಣೆಯುತ್ತಿರುವ ಸಿದ್ದರಾಮಯ್ಯ ಟೀಂ; ಮುಂದುವರೆದ ಹಾವು ಏಣಿಯಾಟ

Latest6 hours ago

ಕೇಜ್ರಿವಾಲ್‌ ನೀಲಿಕಣ್ಣಿನ ಹುಡಗನಿಗೆ ಕೇಂದ್ರ ಮಂತ್ರಿ ಸ್ಥಾನ ಸುಲಭ ಸಾಧ್ಯವೇ?

galipata neetu
ಕಿರುತೆರೆ2 years ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ3 years ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Sharmitha Gowda in bikini
ಕಿರುತೆರೆ3 years ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ3 years ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Bigg Boss- Saregamapa 20 average TRP
ಕಿರುತೆರೆ3 years ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

Kannada Serials
ಕಿರುತೆರೆ3 years ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ2 years ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ2 years ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

Kannada Serials
ಕಿರುತೆರೆ3 years ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

varun
ಕಿರುತೆರೆ2 years ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Action Prince Dhruva Sarja much awaited film Martin to hit the screens on October 11
ಸಿನಿಮಾ2 years ago

Martin Movie : ಆ್ಯಕ್ಷನ್‌ ಪ್ರಿನ್ಸ್‌ ಧ್ರುವ ಸರ್ಜಾ ಅಭಿನಯದ ಬಹು ನಿರೀಕ್ಷಿತ ʻಮಾರ್ಟಿನ್ʼ ಚಿತ್ರ ಅಕ್ಟೋಬರ್ 11ರಂದು ತೆರೆಗೆ

Sudeep's birthday location shift
ಸ್ಯಾಂಡಲ್ ವುಡ್2 years ago

Kichcha Sudeepa: ಸುದೀಪ್‌ ಬರ್ತ್‌ ಡೇ ಲೊಕೇಶನ್‌ ಶಿಫ್ಟ್; ದರ್ಶನ್‌ ಭೇಟಿಗೆ ಬಳ್ಳಾರಿ ಜೈಲಿಗೆ ಹೋಗ್ತಾರಾ ಕಿಚ್ಚ

Actor Darshan
ಸ್ಯಾಂಡಲ್ ವುಡ್2 years ago

Actor Darshan : ಬಿಗಿ ಭದ್ರತೆಯಲ್ಲಿ ಪರಪ್ಪನ ಅಗ್ರಹಾರದಿಂದ ದರ್ಶನ್‌ ಬಳ್ಳಾರಿಗೆ ಸ್ಥಳಾಂತರ; ಸೆಲ್‌ನಲ್ಲಿ ಏನೆಲ್ಲ ವ್ಯವಸ್ಥೆ ಇದೆ ಗೊತ್ತಾ?

ಮಳೆ2 years ago

Karnataka rain : ವಿಜಯನಗರದಲ್ಲಿ ಮಳೆ ಅವಾಂತರ; ಹರಿಯುವ ಹಳ್ಳದಲ್ಲೇ ಶವ ಸಾಗಿಸಿದ ಗ್ರಾಮಸ್ಥರು

karnataka Weather Forecast
ಮಳೆ2 years ago

Karnataka Weather : ಭೀಮಾನ ಅಬ್ಬರಕ್ಕೆ ನಲುಗಿದ ನೆರೆ ಸಂತ್ರಸ್ತರು; ನಾಳೆಗೆ ಇಲ್ಲೆಲ್ಲ ಮಳೆ ಅಲರ್ಟ್‌

Bellary news
ಬಳ್ಳಾರಿ2 years ago

Bellary News : ಫಿಲ್ಮಂ ಸ್ಟೈಲ್‌ನಲ್ಲಿ ಕಾಡಿನಲ್ಲಿ ನಿಧಿ ಹುಡುಕಾಟ; ಅತ್ಯಾಧುನಿಕ ಟೆಕ್ನಾಲಜಿ ಬಳಕೆ ಮಾಡಿದ ಖದೀಮರ ಗ್ಯಾಂಗ್‌

Maravoor bridge in danger Vehicular traffic suspended
ದಕ್ಷಿಣ ಕನ್ನಡ2 years ago

Maravoor Bridge : ಕಾಳಿ ನದಿ ಸೇತುವೆ ಬಳಿಕ ಅಪಾಯದಲ್ಲಿದೆ ಮರವೂರು ಸೇತುವೆ; ವಾಹನ ಸಂಚಾರ ಸ್ಥಗಿತ

Wild Animals Attack
ಚಿಕ್ಕಮಗಳೂರು2 years ago

Wild Animals Attack : ಮಲೆನಾಡಲ್ಲಿ ಕಾಡಾನೆಯ ದಂಡು; ತೋಟಕ್ಕೆ ತೆರಳುವ ಕಾರ್ಮಿಕರಿಗೆ ಎಚ್ಚರಿಕೆ

Karnataka Weather Forecast
ಮಳೆ2 years ago

Karnataka Weather : ಮಳೆಯಾಟಕ್ಕೆ ಮುಂದುವರಿದ ಮಕ್ಕಳ ಗೋಳಾಟ; ಆಯ ತಪ್ಪಿದರೂ ಜೀವಕ್ಕೆ ಅಪಾಯ

assault case
ಬೆಳಗಾವಿ2 years ago

Assault Case : ಬೇರೊಬ್ಬ ಯುವತಿ ಜತೆಗೆ ಸಲುಗೆ; ಪ್ರಶ್ನಿಸಿದ್ದಕ್ಕೆ ಪತ್ನಿಗೆ ಮನಸೋ ಇಚ್ಛೆ ಥಳಿಸಿದ ಪಿಎಸ್‌ಐ

ಟ್ರೆಂಡಿಂಗ್‌