Summer Storage Tips: ಬೇಸಿಗೆಯಲ್ಲಿ ತರಕಾರಿಗಳನ್ನು ರಕ್ಷಿಸಿಕೊಳ್ಳಲು ಇಲ್ಲಿದೆ ಸುಲಭ ಉಪಾಯ - Vistara News

ಆರೋಗ್ಯ

Summer Storage Tips: ಬೇಸಿಗೆಯಲ್ಲಿ ತರಕಾರಿಗಳನ್ನು ರಕ್ಷಿಸಿಕೊಳ್ಳಲು ಇಲ್ಲಿದೆ ಸುಲಭ ಉಪಾಯ

ಅಂಗಡಿಯಿಂದ ತರುವಾಗ ನಳನಳಿಸುತ್ತಿದ್ದ ತರಕಾರಿಗಳನ್ನೇ ಆಯ್ಕೆ ಮಾಡಿಕೊಂಡರೂ, ಅವು ಅಷ್ಟೊಂದು ಅಲ್ಪಾಯುಗಳೇ ಎಂದು ಯೋಚಿಸುವಂತಾಗುತ್ತದೆ. ಬೇಸಿಗೆಯಲ್ಲಿ ತರಕಾರಿಗಳು ಯಾವ ಮಟ್ಟಿಗೆ ಬಾಡುತ್ತವೆ ಎಂದರೆ, ಕ್ಯಾರೆಟ್‌, ಹುರುಳಿಕಾಯಿ, ಆಲೂಗಡ್ಡೆ, ಸೋರೇಕಾಯಿಯಂಥವು ರಬ್ಬರಿನಂತಾಗಿ ಬಿಡುತ್ತದೆ. ಧಗೆಯ ದಿನಗಳಲ್ಲಿ ಕ್ಷಣಮಾತ್ರದಲ್ಲಿ ಬಾಡಿ, ಒಣಗಿ ಹೋಗುವಂತಾಗುತ್ತವೆ ತರಕಾರಿ, ಹಣ್ಣುಗಳು. ಅವುಗಳಲ್ಲಿ ಸಂರಕ್ಷಿಸಿಕೊಳ್ಳುವುದೇ ಸವಾಲು. ಅವುಗಳ ಸತ್ವ ನಶಿಸದಂತೆ ಕಾಪಾಡಿಕೊಳ್ಳುವುದು (Select Summer Storage Tips) ಹೇಗೆ? ಈ ಲೇಖನ ಓದಿ.

VISTARANEWS.COM


on

Summer Storage Tips
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೇಸಿಗೆಯ ಉರಿ ತಾಪಕ್ಕೆ ಕಾಯಿಪಲ್ಲೆಗಳು ಬಾಡುವುದು ಸಹಜ. ಹಾಗೆಂದು ದುಡ್ಡು ಕೊಟ್ಟು ತಂದ ಹಣ್ಣು-ತರಕಾರಿಗಳು ಒಣಗಿ, ನಾರಿನಂತಾದರೆ ಅವುಗಳನ್ನು ತಿನ್ನುವುದು ಹೇಗೆ? ತಿಂದರೂ, ಸತ್ವಹೀನವಾದ ಅವುಗಳ ಸತ್ವ ನಮಗೆಲ್ಲಿ ದೊರೆಯುತ್ತದೆ? ಅಂಗಡಿಯಿಂದ ತರುವಾಗ ನಳನಳಿಸುತ್ತಿದ್ದ ತರಕಾರಿಗಳನ್ನೇ ಆಯ್ಕೆ ಮಾಡಿಕೊಂಡರೂ, ಅವು ಅಷ್ಟೊಂದು ಅಲ್ಪಾಯುಗಳೇ ಎಂದು ಯೋಚಿಸುವಂತಾಗುತ್ತದೆ. ಬೇಸಿಗೆಯಲ್ಲಿ ತರಕಾರಿಗಳು ಯಾವ ಮಟ್ಟಿಗೆ ಬಾಡುತ್ತವೆ ಎಂದರೆ, ಕ್ಯಾರೆಟ್‌, ಹುರುಳಿಕಾಯಿ, ಆಲೂಗಡ್ಡೆ, ಸೋರೇಕಾಯಿಯಂಥವು ರಬ್ಬರಿನಂತಾಗಿ ಎಳೆದಷ್ಟೂ ಹಿಗ್ಗಿ ಮತ್ತೆ ಮೊದಲಿನ ಗಾತ್ರಕ್ಕೇ ಕುಗ್ಗುವ ಸ್ಥಿತಿಸ್ಥಾಪಕ ಗುಣವನ್ನು ಹೊಂದಿಬಿಡುತ್ತವೆ.
ಸ್ವಲ್ಪ ಎಳೆಯ ತರಕಾರಿಗಳ ಕಥೆ ಹೀಗಾದರೆ, ಚೆನ್ನಾಗಿ ಬಲಿತವು ಮರದಂತಾಗಿ, ಅದನ್ನು ಕತ್ತರಿಸುವುದಕ್ಕೆ ಗರಗಸವೇ ಬೇಕು ಎಂಬ ಸ್ಥಿತಿ ಬರುತ್ತದೆ. ಇನ್ನು ಹಣ್ಣುಗಳಲ್ಲಂತೂ ರಸವೇ ಉಳಿಯದೆ, ನಿಸ್ಸಾರವಾಗಿ ಬಿಡುತ್ತವೆ. ಮಳೆಗಾಲದಲ್ಲಿ ಕೊಳೆಯುವುದು ಸಹಜ, ಅಂತೆಯೇ ಬೇಸಿಗೆಯಲ್ಲಿ ಬಾಡುವುದು. ಕಾಲಕ್ಕೆ ತಕ್ಕಂತೆ ಹಣ್ಣು-ತರಕಾರಿಗಳು ಇರುತ್ತವೆ ಎಂಬುದು ಸರಿಯಾದರೂ ಬಾಡಿದ್ದು, ಬೆಳೆದಿದ್ದು, ಕೊಳೆತಿದ್ದನ್ನೆಲ್ಲಾ ತಿನ್ನಲಾದೀತೇ? ಅವುಗಳ ಪೋಷಕಾಂಶಗಳನ್ನು ಸಂರಕ್ಷಿಸಿಟ್ಟುಕೊಳ್ಳುವುದು ಸಾಧ್ಯವೇ? ಬೇಸಿಗೆಯ ತಾಪಕ್ಕೆ ಒಣಗಿ, ಮುರುಟಿದಂತಾಗುವ ಹಣ್ಣು, ತರಕಾರಿಗಳನ್ನು ಕಾಪಾಡಿಕೊಳ್ಳುವುದು (Select Summer Storage Tips) ಹೇಗೆ?

Fresh Vegetables

ದಾರಿ ಯಾವುದು?

ಮೊದಲನೆಯದಾಗಿ, ಸ್ಥಳೀಯವಾಗಿ ಬೆಳೆಯುವ ಕಾಯಿಪಲ್ಲೆಗಳಿಗೆ ಆದ್ಯತೆ ನೀಡಿ. ಯಾವುದೋ ದೂರದ ಊರಿನ ತರಕಾರಿಗಳು, ಬೇರೆ ದೇಶದ ಹಣ್ಣುಗಳನ್ನು ದುಬಾರಿ ಬೆಲೆ ತೆತ್ತು ತಂದರೂ, ಅವುಗಳ ಆಯಸ್ಸು ಹೆಚ್ಚಿರುವುದಿಲ್ಲ. ಕಾರಣ, ಶೀತಲ ಪೆಟ್ಟಿಗೆಯಲ್ಲೋ ಅಥವಾ ಪ್ರಿಸರ್ವೇಟಿವ್‌ ಹೊತ್ತೋ ಬರುವ ಈ ವಸ್ತುಗಳು ವಾರಗಟ್ಟಲೆ ಅಥವಾ ತಿಂಗಳುಗಟ್ಟಲೆ ಹಿಂದೆಯೇ ಮೂಲ ಸಸ್ಯದಿಂದ ಬೇರೆಯಾದಂಥವು. ಹಾಗಾಗಿ ಸ್ಥಳೀಯ ಉತ್ಪನ್ನಗಳೇ ಹೆಚ್ಚು ತಾಜಾ ಆಗಿರಲು ಸಾಧ್ಯ. ಜೊತೆಗೆ, ತರಕಾರಿ-ಹಣ್ಣುಗಳನ್ನು ಮುಂದಿನ ನಾಲ್ಕಾರು ದಿನಗಳಿಗೆ ಮಾತ್ರವೇ ಖರೀದಿಸಿ. ವಾರಗಟ್ಟಲೆ ಆಗುವಷ್ಟು ಫ್ರಿಜ್‌ನಲ್ಲಿ ಇರಿಸಿದರೆ, ಶೇಖರಣೆ ಕಷ್ಟವಾದೀತು. ಅವುಗಳ ಸತ್ವಗಳೂ ಉಳಿಯುವುದಿಲ್ಲ.

Greens vegetables

ಸೊಪ್ಪುಗಳು

ಸೊಪ್ಪುಗಳನ್ನು ತಂದಾಗ, ಅವುಗಳ ಬೇರಿಗೆ ಮಣ್ಣು ಅಂಟಿದ್ದರೆ, ಅದನ್ನು ತೊಳೆದು ಶುಚಿ ಮಾಡಿ. ನಂತರ ಆ ಸೊಪ್ಪಿನ ಕಂತೆ ಬಿಚ್ಚಿ ಅದನ್ನು ಯಥಾವತ್‌ ಒಂದು ಪಾತ್ರೆ ನೀರಿನಲ್ಲಿ, ಬೇರು ಮುಳುಗುವಂತೆ ಇಡಿ. ಎಲೆಗಳಿಗೆ ನೀರು ತಾಗುವುದು ಬೇಡ. ಹೀಗಿಟ್ಟರೆ ಒಂದೆರಡು ದಿನಗಳವರೆಗೂ ಸೊಪ್ಪುಗಳು ಅಗ್ದಿ ತಾಜಾ ಆಗಿರಬಲ್ಲವು. ಬೇರು ಇಲ್ಲದಿದ್ದರೆ, ಅವುಗಳನ್ನು ಸೋಸಿ, ನೀರಿದ್ದರೆ ಆರಿಸಿ, ಫ್ರಿಜ್‌ನಲ್ಲಿ ಇಡಬಹುದು. ಆದರೆ ಈರುಳ್ಳಿ, ಆಲೂಗಡ್ಡೆ, ಗೆಣಸು, ಬೆಳ್ಳುಳ್ಳಿ, ಟೊಮೇಟೊಗಳನ್ನು ಫ್ರಿಜ್‌ನಲ್ಲಿ ಇರಿಸದೆ, ತಂಪಾದ ಸ್ಥಳದಲ್ಲಿ ಶೇಖರಿಸುವುದೇ ಸರಿ.

Summer Fruits

ಹಣ್ಣುಗಳು

ಇನ್ನೇನು ಮಾವಿನ ಋತು ಪ್ರಾರಂಭವಾಗುತ್ತದೆ. ಆದರೆ ಇದನ್ನು ಶೇಖರಿಸಲು ಸಮಸ್ಯೆಯಿಲ್ಲ. ಮಾವು, ಬಾಳೆ, ಅವಕಾಡೊ, ಕಿವಿ, ಪೇರ್‌, ಪ್ಲಮ್‌ ಮುಂತಾದ ಹಣ್ಣುಗಳು ಕಳಿತಾಗ ಇಥಲೀನ್‌ ಅನಿಲ ಬಿಡುಗಡೆಯಾಗುತ್ತದೆ. ಇದರಿಂದ ಈ ಹಣ್ಣುಗಳಿಗೆ ಯಾವುದೇ ಸಮಸ್ಯೆಯಿಲ್ಲ. ಆದರೆ ಸೇಬುಹಣ್ಣು, ಕಲ್ಲಂಗಡಿ, ಗಜ್ಜರಿ, ಬ್ರೊಕೊಲಿಯಂಥ ಹಸಿರು ತರಕಾರಿ ಮುಂತಾದವುಗಳು ಇಥಲೀನ್‌ನಿಂದಾಗಿ ಅವಧಿಗೆ ಮೊದಲೇ ಆಯಸ್ಸು ಕಳೆದುಕೊಳ್ಳುತ್ತವೆ. ಹಾಗಾಗಿ ಈ ಎರಡು ಜಾತಿಯ ಹಣ್ಣ-ತರಕಾರಿಗಳನ್ನು ಒಟ್ಟಾಗಿಸದೆ ಪ್ರತ್ಯೇಕವಾಗಿಯೇ ಶೇಖರಿಸಿಡಿ.

wash fruits

ತೊಳೆಯಬೇಡಿ

ತಂದ ಹಣ್ಣು-ತರಕಾರಿಗಳನ್ನೆಲ್ಲಾ ತೊಳೆದು ಶುಚಿ ಮಾಡಿ ಶೇಖರಿಸುವ ಅಭ್ಯಾಸವಿದೆಯೇ? ಆದರೆ ಬೆರ್ರಿಗಳು, ದ್ರಾಕ್ಷಿಯಂಥವನ್ನು ತಿನ್ನುವ ಮೊದಲಷ್ಟೇ ತೊಳೆದರೆ ಸಾಕು. ಮೊದಲೇ ಅವುಗಳನ್ನು ನೀರಿಗೆ ಹಾಕಿದರೆ, ಎಷ್ಟು ಪ್ರಯತ್ನಿಸಿದರೂ, ಅವುಗಳಲ್ಲಿನ ನೀರು ಆರಿಸುವುದು ಸಾಧ್ಯವಿಲ್ಲ. ಹಾಗಾಗಿ ಈ ಫಲಗಳು ಶೀಘ್ರವೇ ಕೊಳೆಯಲಾರಂಭಿಸುತ್ತವೆ. ಶುಂಠಿಯನ್ನು ಸಹ ಮಣ್ಣಿನೊಂದಿಗೇ ತಂಪಾದ ಜಾಗದಲ್ಲಿರಿಸಿ, ಬೇಕಾದಾಗ ತೊಳೆದು ಉಪಯೋಗಿಸಿದರೆ ಅದರ ಆಯಸ್ಸು ಹೆಚ್ಚು.

ಡಬ್ಬಿಗಳಲ್ಲಿ ಮುಚ್ಚಿಡಿ

ಹೂ ಹೋಸು, ಎಲೆಕೋಸು, ಬ್ರೊಕೊಲಿಯಂಥ ತರಕಾರಿಗಳನ್ನು ಡಬ್ಬಿಗಳಲ್ಲಿ ಬಿಗಿಯಾಗಿ ಮುಚ್ಚಿಡಿ. ಕತ್ತರಿಸದೇ ಇರುವುದನ್ನು ಪ್ಲಾಸ್ಟಿಕ್‌ ಚೀಲಗಳಲ್ಲಿ ಇರಿಸಬಹುದು. ಒಮ್ಮೆ ಕತ್ತರಿಸಿಯಾದ ಮೇಲೆ ಡಬ್ಬಿಗಳಲ್ಲಿ ಸೀಲ್‌ ಮಾಡಿ ಶೇಖರಿಸಿ. ಹಾಗಿಲ್ಲದಿದ್ದರೆ ಅವುಗಳು ಬೇಗನೇ ಕಪ್ಪಾಗುತ್ತವೆ. ಕ್ಯಾರೆಟ್‌, ಮೂಲಂಗಿ, ಬೀಟ್‌ನಂಥ ಗಡ್ಡೆಗಳನ್ನು ತಂದಾಗ, ಅವುಗಳ ಮೇಲೆ ಸೊಪ್ಪುಗಳಿರಬಹುದು. ಈ ಸೊಪ್ಪನ್ನು ಬೇರ್ಪಡಿಸಿಯೇ ಶೇಖರಿಸಿಡಿ. ಪ್ಲಾಸ್ಟಿಕ್‌ ಚೀಲಗಳಲ್ಲಿ ಫ್ರಿಜ್‌ನಲ್ಲಿಟ್ಟರೆ ಇವುಗಳನ್ನು ವಾರಗಟ್ಟಲೆ ಕೆಡದಂತೆ ಕಾಪಾಡಿಕೊಳ್ಳಬಹುದು.

ಇದನ್ನೂ ಓದಿ: Summer Storage Tips: ಬೇಸಿಗೆಯಲ್ಲಿ ಸೊಪ್ಪು- ತರಕಾರಿಗಳು ತಾಜಾ ಇರುವಂತೆ ಮಾಡಲು ಹೀಗೆ ಮಾಡಿ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಆರೋಗ್ಯ

Most Costly Medicine: ಒಂದೇ ಒಂದು ಡೋಸ್ ಗೆ 17 ಕೋಟಿ ರೂ! ಈ ಔಷಧ ಏಕೆ ಇಷ್ಟೊಂದು ದುಬಾರಿ?

ಒಂದೂವರೆ ವರ್ಷದ ಬಾಲಕ ಸೊಂಟದ ಕೆಳಗಿನ ದೈಹಿಕ ಬಲವನ್ನು ಕಳೆದುಕೊಂಡಿದ್ದ. ಆತನ ಸಾಮಾನ್ಯ ಜೀವನ ನಡೆಸುವಂತೆ ಸಾಧ್ಯವಾಗಿಸಲು ಆತನಿಗೆ ಒಂದು ಚುಚ್ಚು ಮದ್ದು ನೀಡಲೇ ಬೇಕಿತ್ತು. ಇದರ ಮೌಲ್ಯ ಬರೋಬ್ಬರಿ 17.5 ಕೋಟಿ ರೂಪಾಯಿ. ತಂದೆ ತಾಯಿ ತಮ್ಮಿಂದ ಇದು ಸಾಧ್ಯವಾಗದು (Most costly medicine) ಎಂದು ಕೈಚೆಲ್ಲಿದ್ದರು. ಆದರೂ ಕೊನೆಯ ಪ್ರಯತ್ನವೆಂಬಂತೆ ಸಾರ್ವಜನಿಕರ ನೆರವು ಕೇಳಲು ಮುಂದಾಗಿ ಅದರಲ್ಲಿ ಯಶಸ್ವಿಯಾಗಿದ್ದಾರೆ.

VISTARANEWS.COM


on

By

Most costly medicine
Koo

ಜೈಪುರ: ಜನಪ್ರಿಯ ನಟ (actor), ಭಾರತ ತಂಡದ ಕ್ರಿಕೆಟಿಗ (cricketer), ವ್ಯಾಪಾರಿಗಳು (Vendor), ತರಕಾರಿ ಮಾರಾಟಗಾರರು ಮತ್ತು ಸಾಮಾನ್ಯ ಜನರು ಒಗ್ಗಟ್ಟಾಗಿ 22 ತಿಂಗಳ ಮಗುವೊಂದರ ಜೀವ ಉಳಿಸಲು ದುಬಾರಿ ಔಷಧ ಖರೀದಿಗಾಗಿ (Most costly medicine) ಹೊರಡಿರುವ ಹೃದಯಸ್ಪರ್ಶಿ ಕಥೆ ರಾಜಸ್ಥಾನದ (Rajasthan) ಜೈಪುರದಲ್ಲಿ (jaipur) ನಡೆದಿದೆ. ಈ ಔಷಧದ ಹಿನ್ನೆಲೆ ಕುತೂಹಲಕರವಾಗಿದೆ.

ಒಂದೂವರೆ ವರ್ಷದ ಬಾಲಕ ಸೊಂಟದ ಕೆಳಗಿನ ದೈಹಿಕ ಬಲವನ್ನು ಕಳೆದುಕೊಂಡಿದ್ದ. ಆತನ ಸಾಮಾನ್ಯ ಜೀವನ ನಡೆಸುವಂತೆ ಸಾಧ್ಯವಾಗಿಸಲು ಆತನಿಗೆ ಒಂದು ಚುಚ್ಚು ಮದ್ದು ನೀಡಲೇ ಬೇಕಿತ್ತು. ಇದರ ಮೌಲ್ಯ ಬರೋಬ್ಬರಿ 17.5 ಕೋಟಿ ರೂಪಾಯಿ. ತಂದೆ ತಾಯಿ ತಮ್ಮಿಂದ ಇದು ಸಾಧ್ಯವಾಗದು ಎಂದು ಕೈಚೆಲ್ಲಿದ್ದರು. ಆದರೂ ಕೊನೆಯ ಪ್ರಯತ್ನವೆಂಬಂತೆ ಸಾರ್ವಜನಿಕರ ನೆರವು ಕೇಳಲು ಮುಂದಾದರು.

ರಾಜಸ್ಥಾನ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ನರೇಶ್ ಶರ್ಮಾ ಅವರ ಪುತ್ರ ಹೃದಯಾಂಶ್ ಶರ್ಮಾ ಬೆನ್ನುಮೂಳೆಯ ಸ್ನಾಯು ಕ್ಷೀಣತೆ ಎಂಬ ಅಪರೂಪದ ಆನುವಂಶಿಕ ಕಾಯಿಲೆಯಿಂದ ಬಳಲುತ್ತಿದ್ದಾರೆ. ಇದನ್ನು ವಿಶ್ವದ ಅತ್ಯಂತ ದುಬಾರಿ ಔಷಧಿಗಳಲ್ಲಿ ಒಂದಾದ ಝೋಲ್ಗೆನ್ಸ್ಮಾ (Zolgensma) ಎಂಬ ಜೀನ್ ಥೆರಪಿ ಇಂಜೆಕ್ಷನ್‌ನೊಂದಿಗಿನ ಚಿಕಿತ್ಸೆಯಿಂದ ಮಾತ್ರ ಗುಣಪಡಿಸಬಹುದಾಗಿದೆ. ಇದರ ಬೆಲೆ 17.5 ಕೋಟಿ ರೂ.


ಚುಚ್ಚು ಮದ್ದು ನೀಡಲು ಗಡುವು

ಬಾಲಕ 20 ತಿಂಗಳ ಮಗುವಾಗಿದ್ದಾಗ ಫೆಬ್ರವರಿಯಲ್ಲಿ ರಾಜಸ್ಥಾನ ಪೊಲೀಸರು ಕಟ್ಟುನಿಟ್ಟಾದ ಗಡುವನ್ನು ಹೊಂದಿದ್ದ ಕ್ರೌಡ್‌ಫಂಡಿಂಗ್ ಅಭಿಯಾನವನ್ನು ಪ್ರಾರಂಭಿಸಿದರು. ಏಕೆಂದರೆ ಮಗುವಿಗೆ 2 ವರ್ಷ ವಯಸ್ಸಿನವರೆಗೆ ಮಾತ್ರ ಈ ಚುಚ್ಚುಮದ್ದನ್ನು ನೀಡಬಹುದು.

ನಟ, ಕ್ರಿಕೆಟಿಗನ ಬೆಂಬಲ

ಇವರ ಈ ಅಭಿಯಾನಕ್ಕೆ ಕ್ರಿಕೆಟಿಗ ದೀಪಕ್ ಚಾಹರ್ ಮತ್ತು ನಟ ಸೋನು ಸೂದ್ ಅವರೂ ಬೆಂಬಲ ನೀಡಿದರು. ಅವರು ಸಾಮಾಜಿಕ ಮಾಧ್ಯಮದಲ್ಲಿ ಮನವಿಗಳನ್ನು ಪೋಸ್ಟ್ ಮಾಡಿದರು ಮತ್ತು ಜೈಪುರದಾದ್ಯಂತ ಜನರಿಂದ ಹಣವನ್ನು ಸಂಗ್ರಹಿಸುವ ಚಾಲನೆ ನೀಡಲಾಯಿತು.

ಹಣ್ಣು, ತರಕಾರಿ ಮಾರಾಟಗಾರರು, ವ್ಯಾಪಾರಿಗಳು ಸೇರಿದಂತೆ ಎಲ್ಲಾ ವರ್ಗಗಳ ಜನರಿಂದ ಹಣದ ಸಹಾಯ ಪಡೆಯಲಾಯಿತು. ವಿವಿಧ ಎನ್‌ಜಿಒಗಳು ಮತ್ತು ಸಾಮಾಜಿಕ ಸಂಸ್ಥೆಗಳು ಪ್ರಚಾರಕ್ಕಾಗಿ ಹಣವನ್ನು ಸಂಗ್ರಹಿಸಲು ಸಹಾಯ ಮಾಡಿದವು.


ಮೂರು ತಿಂಗಳಲ್ಲಿ 9 ಕೋಟಿ ರೂ. ಸಂಗ್ರಹ

ರಾಜಸ್ಥಾನದಲ್ಲಿ ಈ ಪ್ರಮಾಣದಲ್ಲಿ ಕ್ರೌಡ್‌ಫಂಡಿಂಗ್ ನಡೆಯುತ್ತಿರುವುದು ಇದೇ ಮೊದಲು. ಮೂರು ತಿಂಗಳಿಗಿಂತ ಕಡಿಮೆ ಅವಧಿಯಲ್ಲಿ 9 ಕೋಟಿ ರೂ. ಸಂಗ್ರಹವಾಗಿದ್ದು, ಜೈಪುರದ ಜೆಕೆ ಲೋನ್ ಆಸ್ಪತ್ರೆಯಲ್ಲಿ ಹೃದಯಾಂಶ್‌ಗೆ ಚುಚ್ಚುಮದ್ದನ್ನು ನೀಡಲಾಯಿತು. ಉಳಿದ ಮೊತ್ತವನ್ನು ಮೂರು ಕಂತುಗಳಲ್ಲಿ ಒಂದು ವರ್ಷದೊಳಗೆ ಆಸ್ಪತ್ರೆಗೆ ಜಮಾ ಮಾಡಬೇಕಿದೆ.

ಬೆನ್ನುಮೂಳೆಯ ಸ್ನಾಯು ಕ್ಷೀಣತೆ ಎಂದರೇನು?

ಬೆನ್ನುಮೂಳೆಯ ಸ್ನಾಯುವಿನ ಕ್ಷೀಣತೆ ಅಥವಾ ಸ್ಪೈನಲ್ ಮಸ್ಕ್ಯುಲರ್ ಅಟ್ರೋಫಿ (SMA) ಎಂಬುದು ಒಂದು ಆನುವಂಶಿಕ ಅಸ್ವಸ್ಥತೆಯಾಗಿದೆ. ಇದರಲ್ಲಿ ಬೆನ್ನುಹುರಿ ಮತ್ತು ಮೆದುಳಿನ ಕಾಂಡದಲ್ಲಿನ ನರ ಕೋಶಗಳ ನಷ್ಟದಿಂದಾಗಿ ವ್ಯಕ್ತಿಯು ಸ್ನಾಯುಗಳ ಚಲನೆಯನ್ನು ನಿಯಂತ್ರಿಸಲು ಸಾಧ್ಯವಾಗುವುದಿಲ್ಲ. ಇದು ಸ್ನಾಯು ದೌರ್ಬಲ್ಯಕ್ಕೆ ಕಾರಣವಾಗುತ್ತದೆ ಮತ್ತು ಕೈಕಾಲುಗಳ ಚಲನೆ ಮತ್ತು ಉಸಿರಾಟದ ಮೇಲೆ ಪರಿಣಾಮ ಬೀರುತ್ತದೆ.

ಬೆನ್ನುಮೂಳೆಯ ಸ್ನಾಯುವಿನ ಕ್ಷೀಣತೆಯು ಸರ್ವೈವಲ್ ಮೋಟಾರ್ ನ್ಯೂರಾನ್‌ಗಳು 1 ಎಂಬ ಜೀನ್‌ನ ನಷ್ಟದಿಂದ ಉಂಟಾಗುತ್ತದೆ. ಇದು ಪ್ರೋಟೀನ್ ತಯಾರಿಸಲು ಅಗತ್ಯವಾದ ಮಾಹಿತಿಯನ್ನು ಹೊಂದಿರುತ್ತದೆ. ಇದು ದೇಹದ ಪ್ರತಿಯೊಂದು ಜೀವಕೋಶಕ್ಕೂ ಅಗತ್ಯವಾಗಿರುತ್ತದೆ. ಮಾನವ ಸಾಮಾನ್ಯವಾಗಿ ಹೆಚ್ಚುವರಿ ಜೀನ್ (SMN2) ಅನ್ನು ಹೊಂದಿರುತ್ತಾನೆ. ಆದರೆ ಅದು SMN1 ನಷ್ಟವನ್ನು ಭಾಗಶಃ ಸರಿದೂಗಿಸುತ್ತದೆ.

SMN1 ಗೆ ಹೋಲಿಸಿದರೆ SMN2 ಕೇವಲ ಒಂದು ಸಣ್ಣ ಪ್ರಮಾಣದ ಅಗತ್ಯ ಪ್ರೋಟೀನ್ ಅನ್ನು ಉತ್ಪಾದಿಸುತ್ತದೆ ಮತ್ತು ದೇಹದಲ್ಲಿನ ಅನೇಕ ಜೀವಕೋಶಗಳು ಮತ್ತು ಅಂಗಗಳು ಈ ಕಡಿಮೆ ಪೂರೈಕೆಯೊಂದಿಗೆ ಕಾರ್ಯನಿರ್ವಹಿಸಲು ಸಾಧ್ಯವಾಗುತ್ತದೆ ಎಂದು ತೋರುತ್ತದೆಯಾದರೂ ಮೆದುಳಿನಿಂದ ಸ್ನಾಯುಗಳಿಗೆ ಸಂದೇಶಗಳನ್ನು ಕಳುಹಿಸುವ ಜವಾಬ್ದಾರಿಯುತ ಮೋಟಾರ್ ನ್ಯೂರಾನ್ ಗಳು ಕಡಿಮೆ ಮಟ್ಟದ SMNಗೆ ಸ್ಪಂದಿಸುವುದಿಲ್ಲ. ಹೀಗಾಗಿ ಇದು ಸ್ನಾಯು ನಿಯಂತ್ರಣವನ್ನು ಕಳೆದುಕೊಳ್ಳುವಂತೆ ಮಾಡುತ್ತದೆ.

17 ಕೋಟಿ ರೂ. ನ ದುಬಾರಿ ಔಷಧ

ಐಎಎನ್ ಎಸ್ ವರದಿ ಮಾಡಿದಂತೆ 17 ಕೋಟಿ ರೂ. ವೆಚ್ಚದ ವಿಶ್ವದ ಅತ್ಯಂತ ದುಬಾರಿ ಚುಚ್ಚುಮದ್ದನ್ನು ಬೆನ್ನುಮೂಳೆಯ ಸ್ನಾಯು ಕ್ಷೀಣತೆಯಿಂದ ಬಳಲುತ್ತಿರುವ ಎರಡು ವರ್ಷದೊಳಗಿನ ಮಕ್ಕಳಿಗೆ ನೀಡಬೇಕು. ಈ ಔಷಧವನ್ನು ಕ್ರೌಡ್‌ಫಂಡಿಂಗ್ ಸಹಾಯದಿಂದ ಝೋಲ್ಗೆನ್ಸ್ಮಾ ಎಂಬ ಈ ಇಂಜೆಕ್ಷನ್ ಅನ್ನು ಯುಎಸ್ ನಿಂದ ಜೈಪುರಕ್ಕೆ ತರಲಾಯಿತು. ಈ ಔಷಧ ಪಡೆಯಲು ಹಲವಾರು ಭಾರತೀಯ ಕುಟುಂಬಗಳು ಪರದಾಡುತ್ತಿವೆ.

ಭಾರತದಲ್ಲಿ ಬೆನ್ನುಮೂಳೆಯ ಸ್ನಾಯು ಕ್ಷೀಣತೆ

ಬೆನ್ನುಮೂಳೆಯ ಸ್ನಾಯು ಕ್ಷೀಣತೆ ಕಾಯಿಲೆ ಹೊಂದಿರುವ ಭಾರತೀಯರ ಸಂಖ್ಯೆಯ ಬಗ್ಗೆ ಯಾವುದೇ ಅಧಿಕೃತ ಮಾಹಿತಿಯಿಲ್ಲದಿದ್ದರೂ, ಅಸ್ತಿತ್ವದಲ್ಲಿರುವ ಪ್ರಕಾರ 10,000 ಜೀವಂತವಾಗಿ ಜನಿಸಿದ ಶಿಶುಗಳಲ್ಲಿ 1ರಲ್ಲಿ ಬೆನ್ನುಮೂಳೆಯ ಸ್ನಾಯು ಕ್ಷೀಣತೆ ಕಾಣಿಸಿಕೊಳ್ಳುತ್ತಿದೆ. ಒಂದು ಅಧ್ಯಯನದ ಪ್ರಕಾರ 38 ಭಾರತೀಯರಲ್ಲಿ ಒಬ್ಬರು ಬೆನ್ನುಮೂಳೆಯ ಸ್ನಾಯು ಕ್ಷೀಣತೆಗೆ ಒಳಗಾಗುತ್ತಾರೆ.

ಅತ್ಯಂತ ದುಬಾರಿ ಔಷಧ ಇದು

ಅಪರೂಪದ ಆನುವಂಶಿಕ ಕಾಯಿಲೆಯಾದ ಬೆನ್ನುಮೂಳೆಯ ಸ್ನಾಯು ಕ್ಷೀಣತೆಯೊಂದಿಗೆ ಜನಿಸಿದ ಶಿಶುಗಳು ಚಿಕಿತ್ಸೆಯಿಲ್ಲದೆ ಎರಡು ವರ್ಷ ಕೂಡ ಪೂರ್ಣಗೊಳಿಸುವುದಿಲ್ಲ. 1990ರ ದಶಕದವರೆಗೂ ಇದಕ್ಕೆ ಯಾವುದೇ ಚಿಕಿತ್ಸೆಗಳು ಇರಲಿಲ್ಲ. ಇದನ್ನು ತಡೆಗಟ್ಟಲು ಇತ್ತೀಚೆಗೆ ಪರವಾನಗಿ ಪಡೆದ ಎರಡು ಔಷಧಿಗಳಿವೆ. ಇದರಲ್ಲಿ ಒಂದು Zolgensma, ಯುಕೆಯಲ್ಲಿ ಶಿಶುಗಳಿಗೆ ಚಿಕಿತ್ಸೆ ನೀಡಲು ಇದು ಇತ್ತೀಚೆಗೆ ಅಷ್ಟೇ ಲಭ್ಯವಾಗುತ್ತಿದೆ. ಇದನ್ನು “ವಿಶ್ವದ ಅತ್ಯಂತ ದುಬಾರಿ ಔಷಧ” ಎಂದು ಕರೆಯಲಾಗುತ್ತದೆ. ಯಾಕೆಂದರೆ ಇದರ ಒಂದು ಡೋಸ್ ಗೆ ಸುಮಾರು 1.79 ಮಿಲಿಯನ್ ಡಾಲರ್ ಅಂದರೆ ಭಾರತೀಯ ಕರೆನ್ಸ್ ಮೌಲ್ಯ 17 ಕೋಟಿ ರೂ. ಪಾವತಿಸಬೇಕು.

ಇದನ್ನೂ ಓದಿ: Covaxin: ಕೋವಾಕ್ಸಿನ್‌ ಲಸಿಕೆ ಪಡೆದವರಿಗೂ ಬಿಗ್‌ ಶಾಕ್‌! ಆಘಾತಕಾರಿ ವರದಿ ಔಟ್‌

ಈ ಕಾಯಿಲೆಗೆ ಲಭ್ಯವಿರುವ ಇನ್ನೊಂದು ಔಷಧ ಸ್ಪಿನ್ರಾಜಾ (ಜೆನೆರಿಕ್ ಹೆಸರು ನುಸಿನೆರ್ಸೆನ್) ಇದು SMN2 ಜೀನ್ ದೇಹಕ್ಕೆ ಅಗತ್ಯವಿರುವ ಪ್ರೋಟೀನ್ ಅನ್ನು ಒದಗಿಸಲು ಸಹಾಯ ಮಾಡುವ ಡಿಎನ್‌ಎಯ ಒಂದು ಸಣ್ಣ ಭಾಗವಾಗಿದೆ. ಇದನ್ನು ನೇರವಾಗಿ ಬೆನ್ನುಮೂಳೆಯ ನಿರ್ಧಿಷ್ಟ ಭಾಗಕ್ಕೆ ಚುಚ್ಚಬೇಕಾಗುತ್ತದೆ. ಇದನ್ನು ನಿಯಮಿತವಾಗಿ ವರ್ಷದಲ್ಲಿ ಆರು ಬಾರಿ ಮಾಡಬೇಕು. ಚಿಕಿತ್ಸೆಯ ಮೊದಲ ವರ್ಷದಲ್ಲಿ ಆರು ಚುಚ್ಚುಮದ್ದುಗಳು ಪ್ರತಿ ಇಂಜೆಕ್ಷನ್‌ಗೆ 75,000 ಡಾಲರ್ ಪಾವತಿಸಬೇಕಾಗುತ್ತದೆ.

2021 ರಿಂದ ಲಭ್ಯವಿರುವ Zolgensma ಮಾನವನ SMN1 ಜೀನ್ ನ ನಕಲು ಮಾಡಲು ಸಹಾಯ ಮಾಡುತ್ತದೆ. SMN1 ಜೀನ್ ಅನ್ನು ರಕ್ತಪ್ರವಾಹಕ್ಕೆ ಚುಚ್ಚಿದಾಗ ಇದು ವ್ಯಕ್ತಿಗೆ ಅಗತ್ಯವಿರುವ ಹೆಚ್ಚಿನ ಪ್ರೋಟೀನ್‌ಗಳನ್ನು ಉತ್ಪಾದಿಸುತ್ತದೆ. ನಿರ್ವಹಣೆಗೆ ಸುಲಭ ಮತ್ತು ಕಡಿಮೆ ಅಡ್ಡ ಪರಿಣಾಮ ಉಂಟು ಮಾಡುವ Zolgensmaನ ಕೇವಲ ಒಂದು ಡೋಸ್ ಸಾಕಾಗುತ್ತದೆ.

ಭಾರತಕ್ಕೆ ಈ ಔಷಧ ತರಿಸಲು ಯಾವುದೇ ತೆರಿಗೆ ಪಾವತಿಸಬೇಕಿಲ್ಲ. ಆದರೆ ತೆರಿಗೆ ಇಲ್ಲದೇ ಇಲ್ಲಿ ಈ ಔಷಧೀಯ ದರ ಸುಮಾರು 17 ಕೋಟಿ ರೂ. ಆಗುತ್ತದೆ!

ನೊವಾರ್ಟಿಸ್ ವೆಬ್‌ಸೈಟ್‌ನ ಪ್ರಕಾರ, ಈ ಔಷಧವನ್ನು 45 ದೇಶಗಳಲ್ಲಿ ಅನುಮೋದಿಸಲಾಗಿದೆ. 2 500 ಕ್ಕೂ ಹೆಚ್ಚು ರೋಗಿಗಳು ಜಾಗತಿಕವಾಗಿ ಇದರ ಚಿಕಿತ್ಸೆ ಪಡೆಯುತ್ತಾರೆ. ಕಂಪೆನಿಯು 36 ದೇಶಗಳಲ್ಲಿ ಸುಮಾರು 300 ಮಕ್ಕಳಿಗೆ ಇದರ ಥೆರಪಿಯನ್ನು ಉಚಿತವಾಗಿ ನೀಡಿದೆ.

Continue Reading

ದೇಶ

Covaxin: ಕೋವಾಕ್ಸಿನ್‌ ಲಸಿಕೆ ಪಡೆದವರಿಗೂ ಬಿಗ್‌ ಶಾಕ್‌! ಆಘಾತಕಾರಿ ವರದಿ ಔಟ್‌

Covaxin: ಇತ್ತೀಚೆಗೆ ಕೋವಿಶೀಲ್ಡ್ ಅನ್ನು ಅಭಿವೃದ್ಧಿಪಡಿಸಿದ ಬ್ರಿಟಿಷ್ ಕಂಪನಿಯಾದ ಅಸ್ಟ್ರಾಜೆನೆಕಾ ಇತ್ತೀಚೆಗೆ ಅಲ್ಲಿನ ನ್ಯಾಯಾಲಯದಲ್ಲಿ ಅದರ ಲಸಿಕೆ ಕೆಲವು ಜನರಲ್ಲಿ ಗಂಭೀರ ಕಾಯಿಲೆಗೆ ಕಾರಣವಾಗಬಹುದು ಎಂದು ಒಪ್ಪಿಕೊಂಡಿತ್ತು. ಇದೀಗ ಅದೇ ರೀತಿ ನಮ್ಮ ದೇಶದಲ್ಲಿ ಭಾರತ್ ಬಯೋಟೆಕ್ ಕಂಪನಿ ಅಭಿವೃದ್ಧಿಪಡಿಸಿರುವ ‘ಕೋವಾಕ್ಸಿನ್’ ಲಸಿಕೆಯ ಅಡ್ಡ ಪರಿಣಾಮಗಳ ಬಗ್ಗೆ ವರದಿ ಬಂದಿದೆ. ಈ ಲಸಿಕೆಯನ್ನು ಪಡೆದ ಸುಮಾರು ಒಂದು ವರ್ಷದ ನಂತರ, ಅದರ ಅಡ್ಡಪರಿಣಾಮಗಳು ಸಾಕಷ್ಟು ಜನರಲ್ಲಿ ಕಂಡುಬಂದಿದೆ ಎಂದು ಹೇಳಲಾಗಿದೆ.

VISTARANEWS.COM


on

Covaxin
Koo

ನವದೆಹಲಿ: ಕೊರೋನಾ ವೈರಸ್‌(Corona Virus) ಎದುರಿಸಲು ತೆಗೆದುಕೊಂಡಿರುವ ಕೋವಿಶೀಲ್ಡ್‌(Covishield Vaccine) ಲಸಿಕೆ ಅಡ್ಡಪರಿಣಾಮ(Side Effects) ಹೊಂದಿದೆ ಎಂಬುದು ಬಯಲಾದ ಬೆನ್ನಲ್ಲಿ ಕೋವಾಕ್ಸಿನ್‌ (Covaxin) ತೆಗೆದುಕೊಂಡಿರುವ ಜನ ತಮಗೇನು ಅಪಾಯವಿಲ್ಲ ಎಂದು ನಿರಾಳವಾಗಿದ್ದರು. ಆದರೆ ಇದೀಗ ವರದಿಯೊಂದು ಹೊರಬಿದ್ದಿದ್ದು, ಕೋವಾಕ್ಸಿನ್‌ ಪಡೆದಿರುವ ಜನರಿಗೆ ಬಿಗ್‌ ಶಾಕ್‌ ಕೊಟ್ಟಿದೆ. ಕೋವಾಕ್ಸಿನ್‌ ಲಸಿಕೆಯೂ ಅಡ್ಡಪರಿಣಾಮ ಹೊಂದಿದೆ ಎಂಬುದು ಅಧ್ಯಯನದಲ್ಲಿ ಬಯಲಾಗಿದೆ.

ಇತ್ತೀಚೆಗೆ ಕೋವಿಶೀಲ್ಡ್ ಅನ್ನು ಅಭಿವೃದ್ಧಿಪಡಿಸಿದ ಬ್ರಿಟಿಷ್ ಕಂಪನಿಯಾದ ಅಸ್ಟ್ರಾಜೆನೆಕಾ ಇತ್ತೀಚೆಗೆ ಅಲ್ಲಿನ ನ್ಯಾಯಾಲಯದಲ್ಲಿ ಅದರ ಲಸಿಕೆ ಕೆಲವು ಜನರಲ್ಲಿ ಗಂಭೀರ ಕಾಯಿಲೆಗೆ ಕಾರಣವಾಗಬಹುದು ಎಂದು ಒಪ್ಪಿಕೊಂಡಿತ್ತು. ಇದೀಗ ಅದೇ ರೀತಿ ನಮ್ಮ ದೇಶದಲ್ಲಿ ಭಾರತ್ ಬಯೋಟೆಕ್ ಕಂಪನಿ ಅಭಿವೃದ್ಧಿಪಡಿಸಿರುವ ‘ಕೋವಾಕ್ಸಿನ್’ ಲಸಿಕೆಯ ಅಡ್ಡ ಪರಿಣಾಮಗಳ ಬಗ್ಗೆ ವರದಿ ಬಂದಿದೆ. ಈ ಲಸಿಕೆಯನ್ನು ಪಡೆದ ಸುಮಾರು ಒಂದು ವರ್ಷದ ನಂತರ, ಅದರ ಅಡ್ಡಪರಿಣಾಮಗಳು ಸಾಕಷ್ಟು ಜನರಲ್ಲಿ ಕಂಡುಬಂದಿದೆ ಎಂದು ಹೇಳಲಾಗಿದೆ.

BHU ಅಧ್ಯಯನ ವರದಿಯಲ್ಲಿ ಬಹಿರಂಗ

ಬನಾರಸ್‌ ಹಿಂದೂ ವಿಶ್ವವಿದ್ಯಾಲಯ ನಡೆಸಿದ ಅಧ್ಯಯನದಲ್ಲಿ ಈ ಅಂಶ ಬೆಳಕಿಗೆ ಬಂದಿದ್ದು, ಈ ವರದಿಯ ಪ್ರಕಾರ, ಕೊವಾಕ್ಸಿನ್‌ ತೆಗೆದುಕೊಂಡಿರುವ ಹದಿ ಹರೆಯದವರು ಮತು ಯುವಕರಲ್ಲಿ ಈ ಅಡ್ಡ ಪರಿಣಾಮ ಹೆಚ್ಚಾಗಿ ಕಂಡು ಬಂದಿದೆ. ಈ ಸಂಶೋಧನೆಗಾಗಿ ಒಟ್ಟು 1024 ಜನರನ್ನು ಅಧ್ಯಯನಕ್ಕೆ ಒಳಪಡಿಸಲಾಗಿತ್ತು. ಅವರಲ್ಲಿ 635 ಹದಿಹರೆಯದವರು ಮತ್ತು 391 ಯುವಕರು ಇದ್ದರು. 304 ಹದಿಹರೆಯದವರು ಅಥವಾ ಸುಮಾರು 48 ಪ್ರತಿಶತದಷ್ಟು ಜನರು ಶ್ವಾಸನಾಳದ ಸೋಂಕುಗೆ ತುತ್ತಾಗಿರುವುದು ಅಧ್ಯಯನದಲ್ಲಿ ಬಯಲಾಗಿದೆ.

ಇದಲ್ಲದೆ, ‘ಹೊಸ-ಆರಂಭದ ಚರ್ಮ ಮತ್ತು ಸಬ್ಕ್ಯುಟೇನಿಯಸ್ ಅಸ್ವಸ್ಥತೆ’ 10.5 ಪ್ರತಿಶತ ಹದಿಹರೆಯದವರಲ್ಲಿ ಕಂಡುಬಂದಿದೆ, ಸಾಮಾನ್ಯ ಅಸ್ವಸ್ಥತೆ ಅಂದರೆ ಸಾಮಾನ್ಯ ಸಮಸ್ಯೆ 10.2 ಪ್ರತಿಶತ, ನರಮಂಡಲದ ಅಸ್ವಸ್ಥತೆ ಅಂದರೆ ನರ ಸಂಬಂಧಿತ ಸಮಸ್ಯೆ 4.7 ಪ್ರತಿಶತ. ಅದೇ ರೀತಿ ಶೇ.8.9ರಷ್ಟು ಯುವಜನರಲ್ಲಿ ಸಾಮಾನ್ಯ ಸಮಸ್ಯೆಗಳು, ಮಸ್ಕ್ಯುಲೋಸ್ಕೆಲಿಟಲ್ ಡಿಸಾರ್ಡರ್ಸ್ ಅಂದರೆ ಸ್ನಾಯುಗಳು, ನರಗಳು, ಕೀಲುಗಳಿಗೆ ಸಂಬಂಧಿಸಿದ ಸಮಸ್ಯೆಗಳು ಶೇ.5.8ರಷ್ಟು ಮತ್ತು ನರವ್ಯೂಹಕ್ಕೆ ಸಂಬಂಧಿಸಿದ ಸಮಸ್ಯೆಗಳು ಶೇ.5.5ರಲ್ಲಿ ಕಂಡುಬರುತ್ತವೆ.

ಇದಲ್ಲದೆ, ಹದಿಹರೆಯದವರಲ್ಲಿ 10.5 ಪ್ರತಿಶತದಷ್ಟು ಜನರು ‘ಹೊಸದಾಗಿ ಪ್ರಾರಂಭವಾಗುವ ಚರ್ಮ ಮತ್ತು ಚರ್ಮದ ಅಸ್ವಸ್ಥತೆ’, 10.2 ಸಾಮಾನ್ಯ ಅಸ್ವಸ್ಥತೆಗಳು ಅಂದರೆ ಸಾಮಾನ್ಯ ಅಸ್ವಸ್ಥತೆಗಳು, 4.7 ಪ್ರತಿಶತದಷ್ಟು ಜನರು ನರಮಂಡಲದ ಅಸ್ವಸ್ಥತೆಗಳನ್ನು ಹೊಂದಿರುವುದು ಕಂಡುಬಂದಿದೆ. ಅಂತೆಯೇ, 8.9 ಪ್ರತಿಶತದಷ್ಟು ಯುವಕರು ಸಾಮಾನ್ಯ ಸಮಸ್ಯೆಗಳನ್ನು ಹೊಂದಿದ್ದರು, 5.8 ಪ್ರತಿಶತದಷ್ಟು ಜನರು ಸ್ನಾಯು ಅಸ್ಥಿಪಂಜರದ ಅಸ್ವಸ್ಥತೆಗಳನ್ನು (ಸ್ನಾಯುಗಳು, ನರಗಳು, ಕೀಲುಗಳಿಗೆ ಸಂಬಂಧಿಸಿದ ಸಮಸ್ಯೆಗಳು) ಮತ್ತು 5.5 ಪ್ರತಿಶತದಷ್ಟು ಜನರು ನರಮಂಡಲಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಹೊಂದಿದ್ದರು.

ವರದಿಯ ಪ್ರಕಾರ, ಕೋವಾಕ್ಸಿನ್ ಅಡ್ಡಪರಿಣಾಮಗಳು ಯುವತಿಯರಲ್ಲಿಯೂ ಕಂಡುಬಂದಿವೆ. 4.6 ರಷ್ಟು ಮಹಿಳೆಯರಲ್ಲಿ ಮುಟ್ಟಿನ ಸಮಸ್ಯೆಗಳು ವರದಿಯಾಗಿವೆ ಮತ್ತು 2.7 ಪ್ರತಿಶತದಷ್ಟು ಮಹಿಳೆಯರಲ್ಲಿ ಕಣ್ಣಿನ ಸಮಸ್ಯೆಗಳನ್ನು ತೋರಿಸಿದೆ. 0.6 ರಷ್ಟು ಜನರಲ್ಲಿ ಹೈಪೋಥೈರಾಯ್ಡಿಸಮ್ ಕಂಡುಬಂದಿದೆ.

ಇದನ್ನೂ ಓದಿ: GT vs SRH: ಇಂದು ಲ್ಯಾವೆಂಡರ್ ಜೆರ್ಸಿಯಲ್ಲಿ ಕಣಕ್ಕಿಳಿಯಲಿದೆ ಗುಜರಾತ್​ ತಂಡ; ಇದರ ಉದ್ದೇಶವೇನು?

ಒಂದು ವರ್ಷದ ನಂತರ ಪರಿಣಾಮ

ಲಸಿಕೆ ಹಾಕಿದ ಒಂದು ವರ್ಷದ ನಂತರ ಇವರನ್ನು ಬಹುತೇಕರಲ್ಲಿ ಈ ಕಾಯಿಲೆಗಳು ಕಾಣಿಸಿಕೊಂಡಿದೆ. Covaxin ನ ಅಡ್ಡಪರಿಣಾಮಗಳ ಮಾದರಿಯು ಇತರ ಕರೋನಾ ಲಸಿಕೆಗಳ ಅಡ್ಡಪರಿಣಾಮಗಳ ಮಾದರಿಗಿಂತ ಭಿನ್ನವಾಗಿದೆ ಎಂದು ಅದು ಹೇಳುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ಲಸಿಕೆಯ ಪರಿಣಾಮವನ್ನು ಆಳವಾಗಿ ತಿಳಿದಕೊಳ್ಳಲು ಅಧ್ಯಯನ ನಡೆಸಲಾಗುತ್ತಿದೆ ಎಂದು ಸಲಹೆ ನೀಡಲಾಗಿದೆ.

Continue Reading

ದೇಶ

Hepatitis-A: ಅಲರ್ಟ್‌..ಅಲರ್ಟ್‌! ಜನರ ನಿದ್ದೆಗೆಡಿಸ್ತಿದೆ ಮತ್ತೊಂದು ಡೆಡ್ಲಿ ವೈರಸ್‌

Hepatitis-A:ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್‌ ಬುಧವಾರ ಮಾಹಿತಿ ನೀಡಿದ್ದು, ರಾಜ್ಯದಲ್ಲಿ ಹೆಪಟಿಟಿಸ್‌-ಎ ವ್ಯಾಪಕವಾಗಿ ಹರಡುತ್ತಿದೆ. ಅದರಲ್ಲೂ ವಿಶೇಷವಾಗಿ ಮಣಪ್ಪುರಂ, ಎರ್ನಾಕುಲಂ, ಕೋಯಿಕ್ಕೋಡ್‌ ಮತ್ತು ತ್ರಿಶೂರ್‌ ಜಿಲ್ಲೆಗಳಲ್ಲಿ ಹೆಪಟಿಟಿಸ್‌-ಎ ಕೇಸ್‌ ದಿನೇ ದಿನೇ ಹೆಚ್ಚಾಗುತ್ತಿದೆ ಎಂದು ಹೇಳಿದ್ದಾರೆ. ಅಲ್ಲದೇ ಈ ವೈರಾಣು ವೇಗವಾಗಿ ಹರಡುವುದನ್ನು ತಪ್ಪಿಸಲು ತಲಮಟ್ಟದಲ್ಲೇ ಸೂಕ್ತ ಕ್ರಮ ಕೈಗೊಳ್ಳುವಂತೆ ಸಚಿವೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

VISTARANEWS.COM


on

Hepatitis-A
Koo

ಕೇರಳ: ಕೊರೋನಾ ವೈರಸ್‌ನಿಂದ ವರ್ಷಾನುಗಟ್ಟಲೇ ಬಳಲಿ ಇನ್ನೇನು ಚೇತರಿಸಿಕೊಳ್ಳುತ್ತಿರುವಾಗಲೇ ಕೇರಳ(Kerala)ದಲ್ಲಿ ಮತ್ತೊಂದು ವೈರಸ್‌(Virus) ಜನರ ನಿದ್ದೆಗೆಡಿಸಿದೆ. ಹೆಪಟಿಟಿಸ್‌-ಎ(Hepatitis-A) ಖಾಯಿಲೆ ಪ್ರಮಾಣ ದಿನೇ ದಿನೇ ಹೆಚ್ಚಾಗುತ್ತಿದ್ದು, ನಾಲ್ಕು ಜಿಲ್ಲೆಗಳಲ್ಲಿ ಹೈ ಅಲರ್ಟ್‌ ಘೋಷಿಸಲಾಗಿದೆ. ಇನ್ನು ಕೇರಳ ಗಡಿ ರಾಜ್ಯವಾಗಿರುವುದರಿಂದ ಕರ್ನಾಟಕದಲ್ಲೂ ಇದರ ಭೀತಿ ಹೆಚ್ಚಾಗಿದೆ.

ಇನ್ನು ಈ ಬಗ್ಗೆ ಕೇರಳ ಆರೋಗ್ಯ ಸಚಿವೆ ವೀಣಾ ಜಾರ್ಜ್‌ ಬುಧವಾರ ಮಾಹಿತಿ ನೀಡಿದ್ದು, ರಾಜ್ಯದಲ್ಲಿ ಹೆಪಟಿಟಿಸ್‌-ಎ ವ್ಯಾಪಕವಾಗಿ ಹರಡುತ್ತಿದೆ. ಅದರಲ್ಲೂ ವಿಶೇಷವಾಗಿ ಮಣಪ್ಪುರಂ, ಎರ್ನಾಕುಲಂ, ಕೋಯಿಕ್ಕೋಡ್‌ ಮತ್ತು ತ್ರಿಶೂರ್‌ ಜಿಲ್ಲೆಗಳಲ್ಲಿ ಹೆಪಟಿಟಿಸ್‌-ಎ ಕೇಸ್‌ ದಿನೇ ದಿನೇ ಹೆಚ್ಚಾಗುತ್ತಿದೆ ಎಂದು ಹೇಳಿದ್ದಾರೆ. ಅಲ್ಲದೇ ಈ ವೈರಾಣು ವೇಗವಾಗಿ ಹರಡುವುದನ್ನು ತಪ್ಪಿಸಲು ತಲಮಟ್ಟದಲ್ಲೇ ಸೂಕ್ತ ಕ್ರಮ ಕೈಗೊಳ್ಳುವಂತೆ ಸಚಿವೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಆರೋಗ್ಯ ಇಲಾಖೆ ಅಧಿಕಾರಿಗಳು ಕೂಡ ಎಲ್ಲಾ ಜಿಲ್ಲ ಮತ್ತು ತಾಲೂಕು ಮಟ್ಟದಲ್ಲಿ ಈ ಸಂಬಂಧ ಸಭೆ ನಡೆಸಿದ್ದು, ಮುಂಜಾಗೃತಾ ಕ್ರಮಗಳ ಬಗ್ಗೆ ಚರ್ಚೆ ನಡೆಸಿದ್ದಾರೆ. ಮಣಪ್ಪುರಣನ ಚಲಿಯಾರ್‌ ಮತ್ತು ಪೋತುಕಲ್ಲು ಪ್ರದೇಶದಲ್ಲಿ ಹೆಪಟಿಟಿಸ್‌-ಎ ಗೆ ಜನ ಬಲಿಯಾಗಿರುವ ಬಗ್ಗೆಯೂ ವರದಿಯಾಗಿದೆ. ಹೀಗಾಗಿ ಈ ಪ್ರದೇಶಗಳಲ್ಲಿ ರೋಗಾಣುಗಳನ್ನು ತಡೆಯಲು ಮತ್ತು ಜನರಲ್ಲಿ ಅರಿವು ಮೂಡಿಸಲು ಶೀಘ್ರದಲ್ಲಿಯೇ ಸೂಕ್ತ ಕ್ರಮ ಜರುಗಿಸುವ ಬಗ್ಗೆ ಚರ್ಚೆ ನಡೆಸಲಾಗಿದೆ.

ಪೋತುಕಲ್ಲು ಪ್ರದೇಶದಲ್ಲಿ ಈ ಖಾಯಿಲೆ ನಿಯಂತ್ರಣಕ್ಕೆ ಬಂದಿತ್ತು. ಆದರೆ ಹೊಸ ಕೇಸ್‌ಗಳು ಮತ್ತೆ ಪತ್ತೆಯಾಗುತ್ತಿರುವುದು ಜನರಲ್ಲಿ ಆತಂಕ ಸೃಷ್ಟಿಸಿದೆ. ಈ ನಿಟ್ಟಿನಲ್ಲಿ ಜಿಲ್ಲೆ ಆರೋಗ್ಯ ಇಲಾಖೆ ಮತ್ತು ಜನಪ್ರತಿನಿಧಿಗಳು ಚಲಿಯಾರ್‌ ಮತ್ತು ಪೋಲುಕಲ್ಲು ಪ್ರದೇಶದಲ್ಲಿ ತುರ್ತು ಸಭೆ ನಡೆಸಿದ್ದಾರೆ. ಈ ಪ್ರದೇಶಗಳಲ್ಲಿ ಕುಡಿಯುವ ನೀರಿನ ಮೂಲಗಳಾದ ಕೆರೆ, ಬಾವಿಗಳನ್ನು ಸ್ವಚ್ಛಗೊಳಿಸುವಂತೆ ಆದೇಶ ಹೊರಡಿಸಲಾಗಿದೆ. ಅಲ್ಲದೇ ಕೇವಲ ಬಿಸಿ ನೀರನ್ನಷ್ಟೇ ಗ್ರಾಹಕರಿಗೆ ನೀಡುವಂತೆ ಎಲ್ಲಾ ಹೊಟೇಲ್‌, ರೆಸ್ಟೋರೆಂಟ್‌ಗಳಿಗೆ ಖಡಕ್‌ ಸೂಚನೆ ಹೊರಡಿಸಲಾಗಿದೆ.

ಇದನ್ನೂ ಓದಿ:Amit Shah: ಭಾರತದ ಜತೆ ಪಿಒಕೆ ವಿಲೀನ ಮಾಡುವುದೇ ನಮ್ಮ ಗುರಿ, ಬದ್ಧತೆ; ಅಮಿತ್‌ ಶಾ ಘೋಷಣೆ

ಹೆಪಟಿಟಿಸ್‌-ಎ ಅಂದರೆ ಏನು?

ಹೆಪಟೈಟಿಸ್ ಎ ವೈರಸ್ ಯಕೃತ್ತಿನ ಮೇಲೆ ಪರಿಣಾಮ ಬೀರುತ್ತದೆ ಮತ್ತು ಕಲುಷಿತ ಆಹಾರ ಮತ್ತು ನೀರಿನ ಮೂಲಕ ಅಥವಾ ಸಾಂಕ್ರಾಮಿಕ ವ್ಯಕ್ತಿಯೊಂದಿಗೆ ನೇರ ಸಂಪರ್ಕದ ಮೂಲಕ ಹರಡುತ್ತದೆ. ಈ ರೋಗವು ಮುಖ್ಯವಾಗಿ ರೋಗನಿರೋಧಕ ಶಕ್ತಿ ಇರದ ವ್ಯಕ್ತಿಗಳಲ್ಲಿ ಮತ್ತು ಎಚ್ಐವಿ ಮತ್ತು ಯಕೃತ್ತಿನ ಕಾಯಿಲೆಯಂತಹ ಅಸ್ವಸ್ಥತೆಗಳನ್ನು ಹೊಂದಿರುವವರಿಗೆ ಬಹಳ ಬೇಗ ತಗುಲುತ್ತದೆ. ಆಯಾಸ, ಜ್ವರ, ಹೊಟ್ಟೆ ನೋವು, ವಾಕರಿಕೆ, ವಾಂತಿ, ಅತಿಸಾರ, ಹಸಿವಿನ ಕೊರತೆ, ತುರಿಕೆ ಮತ್ತು ಕಾಮಾಲೆ ಸೇರಿವೆ. ಕಣ್ಣುಗಳು, ಮೂತ್ರ, ಚರ್ಮ ಮತ್ತು ಉಗುರುಗಳ ಬಿಳಿಯ ಹಳದಿ ಬಣ್ಣಕ್ಕೆ ತಿರುಗುವುದು ಇವೆಲ್ಲಾ ಈ ಖಾಯಿಲೆಯ ಲಕ್ಷಣಗಳು. ಕೇವಲ ಬಿಸಿ ನೀರು ಕುಡಿಯುವುದು, ಆಹಾರ ಸೇವೆನೆಗೂ ಮುನ್ನ ಕೈಗಳನ್ನು ಚೆನ್ನಾಗಿ ತೊಳೆಯುವುದರಿಂದ ಈ ಖಾಯಿಲೆಯನ್ನು ತಡೆಯಬಹುದಾಗಿದೆ.

Continue Reading

ಆರೋಗ್ಯ

Health Tips in Kannada: ಬೆಂಡೆಕಾಯಿ ನೀರನ್ನು ಕುಡಿಯೋದರಿಂದ ಏನೆಲ್ಲ ಲಾಭಗಳಿವೆ ತಿಳಿದುಕೊಳ್ಳಿ

Health Tips in Kannada:  ಬೆಂಡೆಕಾಯಿಯನ್ನು ಕತ್ತರಿಸಿ ನೀರಿನಲ್ಲಿ ರಾತ್ರಿ ಹಾಕಿಟ್ಟು ಬೆಳಗ್ಗೆ ಅದ್ದ ಮೇಲೆ ಆ ನೀರನ್ನು ಕುಡಿಯುವುದರಿಂದ ಸಾಕಷ್ಟು ಆರೋಗ್ಯಕರ ಲಾಭಗಳಿವೆ. ಬೆಂಡೆಕಾಯಿಯಲ್ಲಿ ಸಾಕಷ್ಟು ಪೋಷಕಾಂಶಗಳಿರುವುದರಿಂದ ಹೀಗೆ ಮಾಡುವ ಮೂಲಕ ನಿತ್ಯವೂ ಬೆಂಡೆಕಾಯಿಯ ಪೋಷಕಾಂಶಗಳನ್ನು ದೇಹಕ್ಕೆ ಲಭಿಸುವಂತೆ ಮಾಡಬಹುದು. ಬನ್ನಿ, ಇದರಿಂದ ಆಗುವ ಪ್ರಯೋಜನಗಳ ಬಗ್ಗೆ ತಿಳಿಯೋಣ.

VISTARANEWS.COM


on

Health Tips in Kannada lady finger okra benefits
Koo

ನಿಮಗೆ ಬೆಂಡೆಕಾಯಿ ನೀರು ಕುಡಿದು ಗೊತ್ತೇ? ಅರೆ, ಇದೇನಿದು (Health Tips in Kannada) ಬೆಂಡೆಕಾಯಿ ನೀರು ಎಂದು ಆಶ್ಚರ್ಯಪಡಬೇಡಿ. ಬೆಂಡೆಕಾಯಿಯನ್ನು (Lady finger okra) ಕತ್ತರಿಸಿ ನೀರಿನಲ್ಲಿ ರಾತ್ರಿ ಹಾಕಿಟ್ಟು ಬೆಳಗ್ಗೆ ಅದ್ದ ಮೇಲೆ ಆ ನೀರನ್ನು ಕುಡಿಯುವುದರಿಂದ ಸಾಕಷ್ಟು ಆರೋಗ್ಯಕರ ಲಾಭಗಳಿವೆ. ಬೆಂಡೆಕಾಯಿಯಲ್ಲಿ ಸಾಕಷ್ಟು ಪೋಷಕಾಂಶಗಳಿರುವುದರಿಂದ ಹೀಗೆ ಮಾಡುವ ಮೂಲಕ ನಿತ್ಯವೂ ಬೆಂಡೆಕಾಯಿಯ ಪೋಷಕಾಂಶಗಳನ್ನು ದೇಹಕ್ಕೆ ಲಭಿಸುವಂತೆ ಮಾಡಬಹುದು. ಬನ್ನಿ, ಇದರಿಂದ ಆಗುವ ಪ್ರಯೋಜನಗಳೇನು ಎಂಬುದನ್ನು ನೋಡೋಣ ಬನ್ನಿ.

ಆ್ಯಂಟಿ ಆಕ್ಸಿಡೆಂಟ್‌ಗಳು ಹೇರಳ

ಬೆಂಡೆಕಾಯಿಯಲ್ಲಿ ಆ್ಯಂಟಿ ಆಕ್ಸಿಡೆಂಟ್‌ಗಳು ಹೇರಳವಾಗಿವೆ. ಇವು ಫ್ರೀ ರ್ಯಾಡಿಕಲ್ಸ್‌ಗಳನ್ನು ಕಡಿಮೆ ಮಾಡಿ, ಆಕ್ಸಿಡೇಟಿವ್‌ ಒತ್ತಡವನ್ನೂ ಇಳಿಸುವ ಜೊತೆಗೆ ಅಂಗಾಂಶ ಮಟ್ಟದಲ್ಲಿ ಹಾನಿಯಾಗುವುದನ್ನು ತಪ್ಪಿಸುತ್ತದೆ. ಇದರಿಂದ ಕ್ಯಾನ್ಸರ್‌, ಹೃದಯದ ಕಾಯಿಲೆ ಸೇರಿದಂತೆ ಮಾರಣಾಂತಿಕ ಕಾಯಿಲೆಗಳ ರಿಸ್ಕ್‌ ಕಡಿಮೆಯಾಗುತ್ತದೆ.

ಮಧುಮೇಹ ಕಾಯಿಲೆ ಹತೋಟಿ

ಬೆಂಡೆಕಾಯಿಯಲ್ಲಿ ನಾರಿನಂಶ ಹೇರಳವಾಗಿ ಇರುವುದರಿಂದ ಸಕ್ಕರೆಯ ಹೀರಿಕೆಯನ್ನು ಇದು ತಡೆಯುತ್ತದೆ. ಪರಿಣಾಮವಾಗಿ ಮಧುಮೇಹದಂತಹ ಕಾಯಿಲೆ ಹತೋಟಿಗೆ ಬರುತ್ತದೆ.

ಇದನ್ನೂ ಓದಿ: Health Tips in Kannada: ಕುತ್ತಿಗೆ ನೋವಿನಿಂದ ಬಳಲುತ್ತಿದ್ದೀರಾ? ಈ ಸಂಗತಿ ತಿಳಿದುಕೊಂಡಿರಿ

ಜೀರ್ಣಕ್ರಿಯೆ ಆಗುವಲ್ಲಿ ಸಹಾಯ

ಜೀರ್ಣಾಂಗವ್ಯೂಹ ವ್ಯವಸ್ಥೆಗೆ ಬೆಂಡೆಕಾಯಿ ಒಳ್ಳೆಯದು. ಜೀರ್ಣಾಂಗನಾಳಗಳನ್ನು ಇದು ಸರಿಯಾಗಿಡುವ ಜೊತೆಗೆ, ಸಹಜವಾಗಿ ಜೀರ್ಣಕ್ರಿಯೆ ಆಗುವಲ್ಲಿ ಸಹಾಯ ಮಾಡುತ್ತದೆ.

ಕೊಲೆಸ್ಟೆರಾಲ್‌ ಕಡಿಮೆ ಮಾಡುತ್ತದೆ

ಬೆಂಡೆಕಾಯಿಯಲ್ಲಿರುವ ನಾರಿನಂಶ ಕೊಲೆಸ್ಟೆರಾಲ್‌ ಅನ್ನು ಕಡಿಮೆಗೊಳಿಸುವಲ್ಲಿ ಸಹಾಯ ಮಾಡುತ್ತದೆ. ಕೊಲೆಸ್ಟೆರಾಲ್‌ ಕಡಿಮೆಯಾಗುವ ಮೂಲಕ ಸಹಜವಾಗಿಯೇ ಹೃದಯಕ್ಕೆ ಬೆಂಡೆಕಾಯಿ ಒಳ್ಳೆಯದನ್ನೇ ಮಾಡುತ್ತದೆ.

ಚರ್ಮದ ಆರೋಗ್ಯಕ್ಕೆ ಒಳ್ಳೆಯದು

ಚರ್ಮದ ಆರೋಗ್ಯಕ್ಕೆ ಬೆಂಡೆಕಾಯಿ ಬಹಳ ಒಳ್ಳೆಯದು. ಚರ್ಮಕ್ಕೆ ಬೇಕಾದ ನೀರಿನಂಶವನ್ನು ಇದು ನೀಡುವ ಮೂಲಕ ಸದಾ ಚರ್ಮವನ್ನು ನಯವಾಗಿ ಆರೋಗ್ಯವಾಗಿ ಇರಿಸುತ್ತದೆ.

ರೋಗನಿರೋಧಕ ಶಕ್ತಿ ಹೆಚ್ಚಿಸುತ್ತದೆ

ಬೆಂಡೆಕಾಯಿಯಲ್ಲಿ ವಿಟಮಿನ್‌ ಸಿ ಹಾಗೂ ಎ ಧಾರಾಳವಾಗಿ ಇರುವುದರಿಂದ ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಹೊರಗಿನಿಂದ ದಾಳಿ ಮಾಡುವುದರ ವಿರುದ್ಧ ಪ್ರತಿದಾಳಿ ನಡೆಸಿ ದೇಹವನ್ನು ರೋಗ ಬರದಂತೆ ಕಾಪಾಡುತ್ತದೆ.

ಎಲುಬಿನ ಆರೋಗ್ಯಕ್ಕೆ ಒಳ್ಳೆಯದು

ಬೆಂಡೆಕಾಯಿಯಲ್ಲಿ ವಿಟಮಿನ್‌ ಕೆ ಹಾಗೂ ಕ್ಯಾಲ್ಸಿಯಂ ಇರುವುದರಿಂದ ಎಲುಬಿನ ಆರೋಗ್ಯಕ್ಕೆ ಇದು ಒಳ್ಳೆಯದನ್ನೇ ಮಾಡುತ್ತದೆ. ಎಲುಬಿನ ಸವೆತವಾಗದಂತೆ ತಡೆಯುತ್ತದೆ. ಹಾಗೂ ಎಲುಬಿನ ಸಾಂದ್ರತೆ ಕಡಿಮೆಯಾಗದಂತೆ ನೋಡಿಕೊಳ್ಳುತ್ತದೆ.

ಇದನ್ನೂ ಓದಿ: Health Tips Kannada: ಅನಾರೋಗ್ಯದ ಮೂಲ ಕೊಲೆಸ್ಟ್ರಾಲ್‌ ತಗ್ಗಿಸಬೇಕೆ? ಬೆಳಗ್ಗೆ ಈ ಪೇಯ ಕುಡಿಯಿರಿ

ತಿನ್ನುವ ಚಟ ಕಡಿಮೆ

ಬೆಂಡೆಕಾಯಿ ನೀರು ಕುಡಿಯುವುದರಿಂದ ಹೊಟ್ಟೆ ತುಂಬಿರುವ ಅನುಭವವಾಗಿ, ಅನಗತ್ಯ ತಿನ್ನುವ ಚಟ ಕಡಿಮೆಯಾಗುತ್ತದೆ. ಆ ಮೂಲಕ ತೂಕ ಇಳಿಯುತ್ತದೆ.

ಬೆಂಡೆಕಾಯಿಯಲ್ಲಿ ವಿಟಮಿನ್‌ ಎ ಗೂ ಬೀಟಾ ಕೆರಟಿನ್‌ ಇರುವುದರಿಂದ ಇದು ಕಣ್ಣಿನ ಆರೋಗ್ಯವನ್ನು ಚೆನ್ನಾಗಿಡುವಲ್ಲಿ ಸಹಾಯ ಮಾಡುತ್ತದೆ. ಕಣ್ಣಿನ ಸಮಸ್ಯೆಗಳು ಬರದಂತೆ ತಡೆಯುತ್ತದೆ.

ಹಾಗಾದರೆ, ಈ ಬೆಂಡೆಕಾಯಿ ನೀರನ್ನು ಮಾಡುವುದು ಹೇಗೆ ಎಂಬ ಪ್ರಶ್ನೆ ನಿಮ್ಮಲ್ಲಿದ್ದರೆ, ಇಲ್ಲಿ ಉತ್ತರವಿದೆ:
ಬೆಂಡೆಕಾಯಿಯನ್ನು ಅದರ ಮೈಮೇಲಿರುವ ಕೊಳೆ ಹಾಗೂ ರಾಸಾಯನಿಕಗಳು ಹೋಗುವಂತೆ ಚೆನ್ನಾಗಿ ತೊಳೆಯಿರಿ. ನಂತರ ಅದರ ತುದಿಗಳನ್ನು ಕತ್ತರಿಸಿ ತೆಗೆದು ಸಣ್ಣ ಸಣ್ಣ ತುಂಡುಗಳನ್ನಾಗಿ ಮಾಡಿ. ಕತ್ತರಿಸಿದ ಬೆಂಡೆಕಾಯಿಯನ್ನು ಒಂದು ಬಾಟಲಿಯಲ್ಲಿ ಅಥವಾ ಲೋಟದಲ್ಲಿ ಹಾಕಿಟ್ಟು ನೀರು ಹಾಕಿ ಮುಚ್ಚಿಡಿ. ರಾತ್ರಿ ಹೀಗೆ ಮಾಡಿಟ್ಟು ಮಲಗಿದರೆ, ಬೆಳಗ್ಗೆ ಎದ್ದ ಮೇಲೆ ಬೆಂಡೆಕಾಯಿಗಳನ್ನು ಅದರಿಂದ ತೆಗೆದು ಅದರ ನೀರನ್ನು ಕುಡಿಯಿರಿ. ಬೆಳಗ್ಗೆ ಸಾಧ್ಯವಾಗದಿದ್ದರೆ ದಿನದ ಬೇರೆ ಹೊತ್ತಿನಲ್ಲೂ ಇದನ್ನು ನೀರಿಗೆ ಬದಲಾಗಿ ಕುಡಿಯಬಹುದು. ಇದರ ಮೂಲಕ ಸಾಕಷ್ಟು ಆರೋಗ್ಯ ಲಾಭಗಳನ್ನು ನೀವು ಪಡೆಯಬಹುದು.

Continue Reading
Advertisement
Most costly medicine
ಆರೋಗ್ಯ30 seconds ago

Most Costly Medicine: ಒಂದೇ ಒಂದು ಡೋಸ್ ಗೆ 17 ಕೋಟಿ ರೂ! ಈ ಔಷಧ ಏಕೆ ಇಷ್ಟೊಂದು ದುಬಾರಿ?

Cannes 2024 Fashion celebrities trend
ಫ್ಯಾಷನ್6 mins ago

Cannes 2024 Fashion: ಕಾನ್‌ ಫಿಲ್ಮ್‌ ಫೆಸ್ಟಿವಲ್‌ನಲ್ಲಿ ಸೆಲೆಬ್ರೆಟಿಗಳ ಫ್ಯಾಷನ್‌ ಟ್ರೆಂಡ್‌ ಹೇಗಿದೆ ನೋಡಿ!

PM Narendra Modi
ದೇಶ10 mins ago

PM Narendra Modi:”ಅಬ್ಬಾ.. ಎಂಥಾ ಮೇಕಪ್!”- ಮತ್ತೆ ಗಮನ ಸೆಳೆದ ಮೋದಿ; ವಿಡಿಯೋ ವೈರಲ್‌

viral video
ಕ್ರಿಕೆಟ್14 mins ago

Viral Video: ವಿಚ್ಛೇದನ ಕೇಸ್​ ಹೆಚ್ಚಳಕ್ಕೆ ಇದುವೇ ಪ್ರಮುಖ ಕಾರಣ ಎಂದ ಪಾಕ್​ ಕ್ರಿಕೆಟ್​ ತಂಡದ ಮಾಜಿ ನಾಯಕ

Sita Temple
ದೇಶ16 mins ago

Sita Temple: ಬಿಜೆಪಿಯಿಂದ ಶೀಘ್ರವೇ ಸೀತೆಗಾಗಿ ಮಂದಿರ ನಿರ್ಮಾಣ; ಅಮಿತ್‌ ಶಾ ಮಹತ್ವದ ಘೋಷಣೆ

Prajwal Revanna Case pen drive and hard disk were found during the raids in Hassan and Bengaluru
ಕ್ರೈಂ25 mins ago

Prajwal Revanna Case: ಹಾಸನ, ಬೆಂಗಳೂರು ದಾಳಿ ವೇಳೆ ಸಿಕ್ಕ ಪೆನ್‌ಡ್ರೈವ್‌, ಹಾರ್ಡ್‌ ಡಿಸ್ಕ್‌ ಎಷ್ಟು? ಎಫ್‌ಎಸ್‌ಎಲ್‌ಗೆ ರವಾನೆ

Chandu Champion Injured Kartik Aaryan looks intense
ಸಿನಿಮಾ30 mins ago

Chandu Champion: ಗುರುತೇ ಸಿಗದಂತೆ ಬದಲಾದ ಈ ಸ್ಟಾರ್‌ ನಟ ಯಾರು? ಪೋಸ್ಟರ್​ ವೈರಲ್​!

Money Guide
ಮನಿ-ಗೈಡ್39 mins ago

Money Guide: ಎನ್‌ಪಿಎಸ್‌ಗೆ 15 ವರ್ಷ; ಇಲ್ಲಿದೆ ಯೋಜನೆಯ ಸಂಪೂರ್ಣ ವಿವರ

Hoarding Collapse
ದೇಶ45 mins ago

Hoarding Collapse: 16 ಜನರ ಸಾವಿಗೆ ಕಾರಣವಾದ ಯಮಸ್ವರೂಪಿ ಹೋರ್ಡಿಂಗ್‌ ಕುಸಿತದ ವಿಡಿಯೊ ಇಲ್ಲಿದೆ!

Covaxin
ದೇಶ51 mins ago

Covaxin: ಕೋವಾಕ್ಸಿನ್‌ ಲಸಿಕೆ ಪಡೆದವರಿಗೂ ಬಿಗ್‌ ಶಾಕ್‌! ಆಘಾತಕಾರಿ ವರದಿ ಔಟ್‌

Sharmitha Gowda in bikini
ಕಿರುತೆರೆ7 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Suspicious Case
ಬೆಂಗಳೂರು5 hours ago

Suspicious Case : ಬಾತ್‌ ರೂಂನಲ್ಲಿತ್ತು ಕಾಲೇಜು ಹುಡುಗಿ ಡೆಡ್‌ ಬಾಡಿ; ಕುತ್ತಿಗೆ ಕೊಯ್ದು ಸಾಯಿಸಿದವರು ಯಾರು?

Prajwal Revanna Case
ಕರ್ನಾಟಕ1 day ago

Prajwal Revanna Case: ಪ್ರಜ್ವಲ್‌ ರೇವಣ್ಣ ಇಂದೇ ಜರ್ಮನಿಯಿಂದ ಭಾರತಕ್ಕೆ? ಎಸ್‌ಐಟಿ ಅಲರ್ಟ್‌

Dina Bhavishya
ಭವಿಷ್ಯ1 day ago

Dina Bhavishya : ಭೂ ವ್ಯವಹಾರಕ್ಕೆ ಇದು ಸೂಕ್ತ ಸಮಯ; ವ್ಯಾಪಾರದಲ್ಲಿ ಡಬಲ್‌ ಲಾಭ

HD Revanna Released first reaction after release will be acquitted of all charges
ರಾಜಕೀಯ2 days ago

HD Revanna Released: ರಿಲೀಸ್‌ ಬಳಿಕ ರೇವಣ್ಣ ಫಸ್ಟ್‌ ರಿಯಾಕ್ಷನ್;‌ ನ್ಯಾಯಾಂಗದ ಮೇಲೆ ನಂಬಿಕೆ ಇದೆ; ಆರೋಪ ಮುಕ್ತನಾಗುವೆ

CM Siddaramaiah says Our government is stable for 5 years BJP will disintegrate
Lok Sabha Election 20242 days ago

CM Siddaramaiah: ನಮ್ಮ ಸರ್ಕಾರ 5 ವರ್ಷ ಸುಭದ್ರ; ಚುನಾವಣೆ ಬಳಿಕ ಬಿಜೆಪಿ ಛಿದ್ರ ಎಂದ ಸಿಎಂ ಸಿದ್ದರಾಮಯ್ಯ!

I dont want to go to other states for Lok Sabha Election 2024 campaign for Congress says CM Siddaramaiah
Lok Sabha Election 20242 days ago

CM Siddaramaiah: ಕಾಂಗ್ರೆಸ್‌ ಪರ ಬೇರೆ ರಾಜ್ಯಗಳಿಗೆ ಪ್ರಚಾರಕ್ಕೆ ಹೋಗಲು ನನಗೆ ಇಷ್ಟವಿಲ್ಲ: ಸಿಎಂ ಸಿದ್ದರಾಮಯ್ಯ!

HD Revanna Bail I am not happy that Revanna has been released says HD Kumaraswamy
ರಾಜಕೀಯ2 days ago

HD Revanna Bail: ರೇವಣ್ಣ ಬಿಡುಗಡೆಯಾಗಿದ್ದಕ್ಕೆ ನಾನಂತೂ ಖುಷಿ ಪಡಲ್ಲ ಎಂದ ಎಚ್‌ಡಿಕೆ!

karnataka Rain Effected
ಬೆಂಗಳೂರು2 days ago

Karnataka Rain: ಮಿಡ್‌ನೈಟ್‌ ಮಳೆ ಅವಾಂತರ; ಮರಗಳು, ವಿದ್ಯುತ್‌ ಕಂಬಗಳು ಧರೆಗೆ, ಕುಸಿದು ಬಿದ್ದ ಮನೆ

Dina Bhavishya
ಭವಿಷ್ಯ2 days ago

Dina Bhavishya : ಉದ್ಯೋಗದ ಸ್ಥಳದಲ್ಲಿ ನಿಮ್ಮ ವಿರುದ್ಧ ಪಿತೂರಿ ಮಾಡ್ಬಹುದು ಎಚ್ಚರ!

HD Revanna Bail Revanna will not leave the country condition imposed by the court
ಕ್ರೈಂ3 days ago

HD Revanna Bail: ರೇವಣ್ಣ ದೇಶ ಬಿಡಂಗಿಲ್ಲ, ಕೆ.ಆರ್‌. ನಗರಕ್ಕೆ ಎಂಟ್ರಿ ಕೊಡಂಗಿಲ್ಲ! ಕೋರ್ಟ್‌ ವಿಧಿಸಿದ ಷರತ್ತು ಏನು?

ಟ್ರೆಂಡಿಂಗ್‌