Neha Murder Case: ನೇಹಾ ಕೊಲೆ ಪ್ರಕರಣ ಸಿಐಡಿ ಹೆಗಲಿಗೆ; ಆಕ್ರೋಶಕ್ಕೆ ಮಣಿದ ರಾಜ್ಯ ಸರ್ಕಾರ - Vistara News

ಕರ್ನಾಟಕ

Neha Murder Case: ನೇಹಾ ಕೊಲೆ ಪ್ರಕರಣ ಸಿಐಡಿ ಹೆಗಲಿಗೆ; ಆಕ್ರೋಶಕ್ಕೆ ಮಣಿದ ರಾಜ್ಯ ಸರ್ಕಾರ

Neha Murder Case: ಹುಬ್ಬಳ್ಳಿಯಲ್ಲಿ ನೇಹಾ ಹಿರೇಮಠ ಅವರ ಕೊಲೆ ಕುರಿತು ರಾಜ್ಯಾದ್ಯಂತ ಆಕ್ರೋಶ ವ್ಯಕ್ತವಾಗಿತ್ತು. ಆರೋಪಿ ಫಯಾಜ್‌ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು ಎಂದು ಬಿಜೆಪಿ ನಾಯಕರು ಆಗ್ರಹಿಸಿದ್ದರು. ಲವ್‌ ಜಿಹಾದ್‌ ಆರೋಪವೂ ಕೇಳಿಬಂದಿದೆ. ಇದರ ಬೆನ್ನಲ್ಲೇ ರಾಜ್ಯ ಸರ್ಕಾರವು ನೇಹಾ ಕೊಲೆ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಲು ತೀರ್ಮಾನಿಸಿದೆ.

VISTARANEWS.COM


on

Neha Murder Case
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಶಿವಮೊಗ್ಗ: ಹುಬ್ಬಳ್ಳಿಯ ಬಿವಿಬಿ ಕಾಲೇಜಿನಲ್ಲಿ ನಡೆದ ನೇಹಾ ಹಿರೇಮಠ ಅವರ ಭೀಕರ ಕೊಲೆ (Neha Murder Case) ಪ್ರಕರಣದ ಕುರಿತು ರಾಜ್ಯಾದ್ಯಂತ ಆಕ್ರೋಶ ವ್ಯಕ್ತವಾಗುತ್ತಿದೆ. ಕೊಲೆ ಆರೋಪಿ ಫಯಾಜ್‌ನನ್ನು (Fayaz) ಎನ್‌ಕೌಂಟರ್‌ ಮಾಡಬೇಕು ಎಂಬುದಾಗಿ ನೇಹಾ ಹಿರೇಮಠ ಅವರ ತಂದೆ ನಿರಂಜನ್‌ ಹಿರೇಮಠ ಅವರು ಆಗ್ರಹಿಸಿದ್ದಾರೆ. ಪ್ರಕರಣದ ಕುರಿತು ತನಿಖೆಯಾಗಬೇಕು ಎಂಬುದಾಗಿ ಬಿಜೆಪಿ ನಾಯಕರು ಆಗ್ರಹಿಸುತ್ತಿದ್ದಾರೆ. ಇದರ ಬೆನ್ನಲ್ಲೇ, ನೇಹಾ ಹಿರೇಮಠ ಕೊಲೆ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸಲಾಗುವುದು ಎಂಬುದಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಹೇಳಿದ್ದಾರೆ.

ಶಿವಮೊಗ್ಗದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, “ನೇಹಾ ಹಿರೇಮಠ ಕೊಲೆ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸುತ್ತೇವೆ. ಪ್ರಕರಣದ ಕುರಿತು ಕೂಲಂಕಷ ತನಿಖೆಯಾಗಲಿ ಎಂಬ ದೃಷ್ಟಿಯಿಂದ ಸಿಐಡಿ ತನಿಖೆಗೆ ವಹಿಸಲು ತೀರ್ಮಾನಿಸಿದ್ದೇವೆ” ಎಂಬುದಾಗಿ ಹೇಳಿದ್ದಾರೆ. ನೇಹಾ ಹಿರೇಮಠ ಕೊಲೆ ಪ್ರಕರಣದಲ್ಲಿ ಲವ್‌ ಜಿಹಾದ್‌ ಆರೋಪವೂ ಕೇಳಿಬಂದಿವೆ. ಅದರಲ್ಲೂ, ನೇಹಾ ಹಿರೇಮಠ ಪ್ರಕರಣವು ಚುನಾವಣೆ ಹೊತ್ತಿನಲ್ಲಿ ರಾಜ್ಯ ಸರ್ಕಾರಕ್ಕೆ ಮುಜುಗರ ತಂದಿದೆ. ಹಾಗಾಗಿ, ರಾಜ್ಯ ಸರ್ಕಾರವು ಕೊಲೆ ಪ್ರಕರಣದ ತನಿಖೆಯ ಹೊಣೆಯನ್ನು ಸಿಐಡಿಗೆ ನೀಡಲು ತೀರ್ಮಾನಿಸಿದೆ ಎಂದು ತಿಳಿದುಬಂದಿದೆ.

9 ಸಲ ಅಲ್ಲ 14 ಬಾರಿ ಇರಿದು ಕೊಂದ ಫಯಾಜ್

ವಿದ್ಯಾರ್ಥಿನಿ ನೇಹಾಳಿಗೆ ಪಾಗಲ್‌ ಫಯಾಜ್‌ 9 ಬಾರಿ ಅಲ್ಲ, 14 ಬಾರಿ ಇರಿದು ಕೊಲೆ ಮಾಡಿದ್ದಾನೆ ಎಂಬುದಾಗಿ ಮರಣೋತ್ತರ ಪರೀಕ್ಷೆ ವರದಿಯಲ್ಲಿ ಬಹಿರಂಗವಾಗಿದೆ. ಇದಕ್ಕೂ ಮೊದಲು, ನೇಹಾ ಹಿರೇಮಠ್‌ಗೆ ಫಯಾಜ್‌ 9 ಬಾರಿ ಚಾಕು ಇರಿದು ಕೊಲೆ ಮಾಡಿದ್ದ ಎಂಬುದಾಗಿ ಹೇಳಲಾಗಿತ್ತು. ಆದರೆ, ಈಗ 14 ಬಾರಿ ಚಾಕು ಇರಿದು ಕೊಲೆ ಮಾಡಿದ್ದಾಣೆ ಎಂದು ಮರಣೋತ್ತರ ವರದಿ ತಿಳಿಸಿದೆ. ಏಪ್ರಿಲ್‌ 19ರಂದು ಬಿವಿಬಿ ಕಾಲೇಜು ಆವರಣದಲ್ಲಿ ಭೀಕರವಾಗಿ ಕೊಲೆ ನಡೆದಿತ್ತು.

ಹುಬ್ಬಳ್ಳಿಯ ಬಿವಿಬಿ ಕಾಲೇಜು ಆವರಣದಲ್ಲಿ ನೇಹಾ ಹಿರೇಮಠ ಮೇಲೆ ದಾಳಿ ಮಾಡಿದ್ದ ಫಯಾಜ್‌ ಕೇವಲ 30 ಸೆಕೆಂಡ್‌ಗಳಲ್ಲಿ 14 ಬಾರಿ ಇರಿದಿದ್ದಾನೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. ನೇಹಾ ದೇಹದ ಮೇಲೆ 14 ಗಾಯಗಳ ಗುರುತು ಪತ್ತೆಯಾಗಿದೆ. ಪ್ರೀತಿ ನಿರಾಕರಿಸಿದ ನೇಹಾಳ ಹೃದಯಕ್ಕೆ ಮೊದಲು ಚಾಕು ಇರಿದ ಆತ, 30 ಸೆಕೆಂಡ್‌ಗಳಲ್ಲೇ 14 ಬಾರಿ ಇರಿದು ಬರ್ಬರವಾಗಿ ಹತ್ಯೆ ಮಾಡಿದ್ದಾನೆ. ಕತ್ತಿನ ಬಳಿ ಚಾಕು ಇರಿಯುತ್ತಿದ್ದಂತೆ ರಕ್ತನಾಳ ಕತ್ತರಿಸಿದ್ದು, ಇದರಿಂದ ತೀವ್ರ ರಕ್ತಸ್ರವಾ ಉಂಟಾಗಿದೆ. ಅತಿಯಾದ ರಕ್ತಸ್ರಾವದಿಂದ ನೇಹಾ ಹಿರೇಮಠ ನಿಧನರಾಗಿದ್ದಾರೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: Neha Murder Case: ನೇಹಾಗೆ 9 ಬಾರಿ ಅಲ್ಲ, 14 ಸಲ ಇರಿದಿದ್ದ ಫಯಾಜ್;‌ ಪೋಸ್ಟ್‌ ಮಾರ್ಟಮ್‌ ವರದಿ ಬಹಿರಂಗ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಬೆಂಗಳೂರು

Traffic Violation : ಪೆಟ್ರೋಲ್ ಖಾಲಿಯಾಗಿ ರಸ್ತೆಯಲ್ಲಿ ವಾಹನ ನಿಂತುಬಿಟ್ಟರೆ ಚಾಲಕನ ಮೇಲೆ ಕೇಸ್!

Traffic Violation : ಟ್ರಾಫಿಕ್‌ ಇರುವ ಪ್ರಮುಖ ರಸ್ತೆಗಳಲ್ಲಿ ಪೆಟ್ರೋಲ್ ಖಾಲಿಯಾಗಿ ರಸ್ತೆಯಲ್ಲಿ ಏನಾದರೂ ವಾಹನ ನಿಂತುಬಿಟ್ಟರೆ ಬೆಂಗಳೂರು ಸಂಚಾರಿ ಪೊಲೀಸರು ಚಾಲಕನ ಮೇಲೆ ಕೇಸ್ ದಾಖಲಿಸಲಿದ್ದಾರೆ. ಜತೆಗೆ ಮಕ್ಕಳ ಅಪಾಯಕಾರಿ ವ್ಹೀಲಿಂಗ್‌ ಶೋಕಿಗೆ ಪೋಷಕರ ತಲೆದಂಡವಾಗಲಿದೆ.

VISTARANEWS.COM


on

By

Traffic Violation Case filed against driver if petrol runs out and vehicle stops on road
ಸಾಂದರ್ಭಿಕ ಚಿತ್ರ
Koo

ಬೆಂಗಳೂರು: ಬೆಂಗಳೂರಲ್ಲಿ ಟ್ರಾಫಿಕ್‌ ಸಮಸ್ಯೆಯನ್ನು ತಪ್ಪಿಸಲು ಸಂಚಾರಿ ಪೊಲೀಸರ (Traffic Violation) ಸರ್ಕಸ್ ಮುಂದುವರಿದಿದೆ. ಸದ್ಯ ಗಾಡಿ ಓಡಿಸುವಾಗ ಪೆಟ್ರೋಲ್‌ ಇಲ್ಲದೆ ರಸ್ತೆ ಮಧ್ಯೆ ಏನಾದರೂ ನಿಂತರೆ ಕೇಸ್‌ ಬೀಳುವುದು ಗ್ಯಾರಂಟಿ.. ಹೌದು ಅತಿ ಹೆಚ್ಚು ಟ್ರಾಫಿಕ್‌ ಇರುವ ರಸ್ತೆಗಳಲ್ಲಿ ಏನಾದರೂ ಪೆಟ್ರೋಲ್ ಖಾಲಿಯಾಗಿ ರಸ್ತೆಯಲ್ಲಿ ವಾಹನ ನಿಂತುಬಿಟ್ಟರೆ, ಚಾಲಕನ ಮೇಲೆ ಕೇಸ್ ಹಾಕಲಾಗುತ್ತದೆ.

ಸೆಕ್ಷನ್ 283ರ ಅಡಿಯಲ್ಲಿ ಪ್ರಕರಣ ದಾಖಲು ಮಾಡಲು ಬೆಂಗಳೂರು ಸಂಚಾರಿ ಪೊಲೀಸರು ಮುಂದಾಗಿದ್ದಾರೆ. ಬೆಂಗಳೂರಿನಲ್ಲಿ ಅತಿ ಹೆಚ್ಚು ಸಂಚಾರ ದಟ್ಟಣೆ ಇರುವ ರಸ್ತೆಗಳಲ್ಲಿ ಪೆಟ್ರೋಲ್‌ ಖಾಲಿಯಾಗಿ ಗಾಡಿಗಳು ನಿಂತು ಹೋದರೆ, ಇದರಿಂದ ಇನ್ನಷ್ಟು ಟ್ರಾಫಿಕ್‌ ಜಾಮ್‌ ಉಂಟಾಗುತ್ತದೆ. ಹೀಗಾಗಿ ಟ್ರಾಫಿಕ್‌ ಸಮಸ್ಯೆಯನ್ನು ಸೃಷ್ಟಿಸಿದ ಗಾಡಿ ಚಾಲಕನ ಮೇಲೆ ಕೇಸ್ ದಾಖಲು ಮಾಡಲು ಮುಂದಾಗಿದ್ದಾರೆ.

ಪ್ರಮುಖವಾಗಿ ಹೆಬ್ಬಾಳ, ಏರ್‌ಪೋಟ್‌ ರೋಡ್, ಗೋರಗುಂಟೆ ಪಾಳ್ಯ ರೋಡ್ ಸೇರಿದಂತೆ ಪ್ರಮುಖ ರಸ್ತೆಗಳಲ್ಲಿ ಪೇಟ್ರೋಲ್ ಇಲ್ಲದೆ ನಿಂತು ಹೋದಲ್ಲಿ ಪ್ರಕರಣ ದಾಖಲಿಸಿವುದಾಗಿ, ಸಂಚಾರಿ ಜಂಟಿ ಪೊಲೀಸ್ ಆಯುಕ್ತ ಅನುಚೇತ್ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: School Reopen: ನಾಳೆಯಿಂದ ಶಾಲೆ ಮರು ಆರಂಭ; ಮೊದಲ ದಿನವೇ ಮಕ್ಕಳಿಗೆ ಸಿಹಿ ಸುದ್ದಿ

ಮಕ್ಕಳ ವ್ಹೀಲಿಂಗ್‌ ಶೋಕಿಗೆ ಪೋಷಕರಿಗೆ ದಂಡ

ವ್ಹೀಲಿಂಗ್‌ ಶೋಕಿಗೆ (Bike Wheeling) ಪೋಷಕರು ಶಿಕ್ಷೆ ಅನುಭವಿಸಬೇಕಾಗುತ್ತದೆ. ರಾಜಧಾನಿ ಬೆಂಗಳೂರು ಸೇರಿದಂತೆ ಹೊರವಲಯದಲ್ಲಿ ಬೈಕ್ ವ್ಹೀಲಿಂಗ್ (Wheeling Stunt) ಮಿತಿ ಮೀರಿದೆ. ಮೀಸೆ ಚಿಗುರದ ಯುವಕರ ಹುಚ್ಚಾಟಕ್ಕೆ ವಾಹನ ಸವಾರರು ಕಿರಿಕಿರಿ ಅನುಭವಿಸುತ್ತಿದ್ದು ಮಾತ್ರವಲ್ಲ, ಅದೆಷ್ಟೋ ಅಮಾಯಕರು ಪ್ರಾಣಬಿಟ್ಟಿದ್ದಾರೆ.

ನಗರದಲ್ಲಿ ಪುಂಡರ ವ್ಹೀಲಿಂಗ್ ಶೋಕಿ ಇನ್ನೂ ನಿಲ್ಲುತ್ತಲೇ ಇಲ್ಲ. ಮುಖ್ಯ ರಸ್ತೆಯಲ್ಲೇ ಯುವಕರು ವ್ಹೀಲಿಂಗ್ ಮಾಡಿ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್​ಲೋಡ್​ ಮಾಡುವುದು ಹೆಚ್ಚಾಗಿದೆ. ವ್ಹೀಲಿಂಗ್‌ ಮಾಡುವ ಸವಾರರ ವಿರುದ್ಧ ಪೊಲೀಸರು ಅದೆಷ್ಟೇ ಕಾರ್ಯಾಚರಣೆ ನಡೆಸಿದರೂ, ಪುಂಡರು ಡೋಂಟ್‌ ಕೇರ್‌ ಅಂತಿದ್ದರು.

ಬೈಕ್ ಜತೆ ಸರ್ಕಸ್ ಮಾಡುತ್ತಾ, ಜನಸಂದಣಿಯಿರುವ ರಸ್ತೆಯಲ್ಲೇ ವ್ಹೀಲಿಂಗ್ ಮಾಡುತ್ತಾ ಸಾರ್ವಜನಿಕರಿಗೆ ಟಾರ್ಚರ್ ಕೊಡುತ್ತಿದ್ದರು. ವ್ಹೀಲಿಂಗ್ ಮಾಡುತ್ತಿರುವ ಪುಂಡರ ಹಾವಳಿಗೆ ಸಾರ್ವಜನಿಕರು ಭಯಭೀತರಾಗಿದ್ದರು. ಸದ್ಯ ಬೆಂಗಳೂರಿನಲ್ಲಿ ವ್ಹೀಲಿಂಗ್‌ ಪುಂಡಾಟ ಮಾಡುತ್ತಿದ್ದವರಿಗೆ ಸಂಚಾರಿ ಪೊಲೀಸರು ಶಾಕ್ ಕೊಟ್ಟಿದ್ದಾರೆ.

ವ್ಹೀಲಿಂಗ್‌ಗೆ ಬ್ರೇಕ್‌ ಹಾಕಲು ಹೊಸ ಮಾರ್ಗವನ್ನು ಕಂಡು ಕೊಂಡಿರುವ ಸಂಚಾರಿ ಪೊಲೀಸರು, ವ್ಹೀಲಿಂಗ್‌ ಕೇಸ್‌ನಲ್ಲಿ ಅಪ್ರಾಪ್ತರು ಕಂಡು ಬಂದರೆ ಪೋಷಕರ ಮೇಲೆ ಕೇಸ್ ದಾಖಲಾಗುತ್ತದೆ. ಜೆಜೆ ಆಕ್ಟ್ ಅಡಿಯಲ್ಲಿ ಪೋಷಕರ ಮೇಲೆ ಪ್ರಕರಣ ದಾಖಲು ಮಾಡಲಾಗುವುದು ಎಂದು ಬೆಂಗಳೂರು ಸಂಚಾರಿ ಜಂಟಿ ಪೊಲೀಸ್ ಆಯುಕ್ತ ಅನುಚೇತ್ ಎಚ್ಚರಿಕೆಯನ್ನು ನೀಡಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Continue Reading

ಕೃಷಿ

Success Story: ಎರಡೇ ತಿಂಗಳಲ್ಲಿ ಆನ್ ಲೈನ್ ಮೂಲಕ 1,800 ಕೆ.ಜಿ. ಮಾವು ಮಾರಿದ ರಾಯಚೂರಿನ ರೈತ!

ರಾಯಚೂರಿನ ಗುಡಿಪಾಡು ಆಂಜನೇಯ (Success Story) ಅವರು ಆನ್‌ಲೈನ್‌ನಲ್ಲಿ ಎರಡು ತಿಂಗಳಲ್ಲಿ 1,800 ಕೆ.ಜಿ. ಮಾವು ಮಾರಾಟ ಮಾಡಿ ಸುದ್ದಿಯಲ್ಲಿದ್ದಾರೆ. ಡಿಪ್ಲೊಮಾ ಪೂರ್ಣಗೊಳಿಸಿರುವ ಆಂಜನೇಯ ಅವರು ಬೆಂಗಳೂರಿನ ಖಾಸಗಿ ಕಂಪೆನಿಯಲ್ಲಿ ಏಳು ವರ್ಷಗಳ ಕಾಲ ಕೆಲಸ ಮಾಡಿ ಈಗ ಸಂಪೂರ್ಣವಾಗಿ ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ. ಮಾವು ಮಾರಾಟದ ಇವರ ಸಕ್ಸೆಸ್ ಸ್ಟೋರಿ ಇಲ್ಲಿದೆ.

VISTARANEWS.COM


on

By

Success Story
Koo

ಕೃಷಿ ಕೆಲಸಗಳಲ್ಲಿ ಕೇವಲ ಕಷ್ಟ ಪಟ್ಟು ದುಡಿದರೆ ಸಾಲದು, ಬುದ್ದಿವಂತಿಕೆಯೂ ಬೇಕು. ಆಗ ಮಾತ್ರ ಉತ್ತಮ ಆದಾಯ ಗಳಿಸಬಹುದು ಎಂಬುದನ್ನು ರೈತನೊಬ್ಬ (Success Story) ಸಾಬೀತು ಮಾಡಿದ್ದಾನೆ. ಈ ರೈತ ಬೇರೆಯಾರೂ ಅಲ್ಲ ನಮ್ಮ ಕರ್ನಾಟಕದವರೇ (karnataka) ಆಗಿದ್ದಾರೆ. ಮಾವಿನ ಕೃಷಿ (Mango Cultivation) ಮಾಡಿ ರಾಯಚೂರಿನ (Raichur) ಗುಡಿಪಾಡು ಆಂಜನೇಯ (Gudipadu Anjaneya) ಅವರು ಈಗ ಎಲ್ಲೆಡೆ ಸುದ್ದಿ ಮಾಡುತ್ತಿದ್ದಾರೆ. ಗುಡಿಪಾಡು ಆಂಜನೇಯ ಅವರು ಆನ್‌ಲೈನ್‌ನಲ್ಲಿ ಎರಡು ತಿಂಗಳಲ್ಲಿ 1,800 ಕೆ.ಜಿ. ಮಾವು ಮಾರಾಟ ಮಾಡಿ ಸುದ್ದಿಯಾಗುತ್ತಿದ್ದಾರೆ. ಡಿಪ್ಲೊಮಾ ಪೂರ್ಣಗೊಳಿಸಿರುವ ಆಂಜನೇಯ ಅವರು ಬೆಂಗಳೂರಿನ ಖಾಸಗಿ ಕಂಪೆನಿಯಲ್ಲಿ ಏಳು ವರ್ಷಗಳ ಕಾಲ ಕೆಲಸ ಮಾಡಿದ್ದರು. ಬಳಿಕ ಕೃಷಿಯಲ್ಲಿ ಸಂಪೂರ್ಣವಾಗಿ ತೊಡಗಿಕೊಂಡರು.

Success Story

ತೋಟಗಾರಿಕೆ ಕೃಷಿಯಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವ ಅವರು ಹಣ್ಣು, ತರಕಾರಿ, ಹೂವು, ಅಲಂಕಾರಿಕ ಸಸ್ಯಗಳನ್ನು ಬೆಳೆಯುವ ವಿಜ್ಞಾನ ಮತ್ತು ಕಲೆಯನ್ನು ಕಲಿತು ಆನ್‌ಲೈನ್ ಪೋರ್ಟಲ್ ಮೂಲಕ ಮಾವಿನ ಹಣ್ಣುಗಳನ್ನು ಮಾರಾಟ ಮಾಡುತ್ತಿದ್ದಾರೆ. ಆಂಜನೇಯ ಅವರು ಆನ್‌ಲೈನ್ ನಲ್ಲಿ ಗ್ರಾಹಕರಿಗೆ ಮಾರಾಟ ಮಾಡುವ ಮಾವಿನ ತಳಿಗಳಲ್ಲಿ ಪ್ರಮುಖವಾದವು ಬನಗನಪಲ್ಲಿ, ಮಲ್ಲಿಕಾ ಮತ್ತು ಕೇಸರಿ ಮಾವುಗಳು. ಇವರು ತಮ್ಮ ಮಾವಿನ ಹಣ್ಣುಗಳ ಮಾರಾಟ ಜಾಲವನ್ನು ರಾಯಚೂರಿನ ಹೊರಗೂ ವಿಸ್ತರಿಸಿದ್ದಾರೆ. ಬೆಂಗಳೂರಿನ ಜಯನಗರ, ವೈಟ್‌ಫೀಲ್ಡ್ ಮತ್ತು ಲಾಲ್ ಬಾಗ್‌ನ ಎಂಇಎಸ್ ಮೈದಾನದಲ್ಲಿ ಮಾವು ಮೇಳದಲ್ಲಿ ಪಾಲ್ಗೊಂಡಿರುವ ಇವರು, ಆನ್ ಲೈನ್ ಮೂಲಕ ರಾಜ್ಯದ ಮೂಲೆಮೂಲೆ ಮಾತ್ರವಲ್ಲ ಹೊರರಾಜ್ಯ, ವಿದೇಶಗಳಿಗೂ ಹಣ್ಣುಗಳನ್ನು ಮಾರಾಟ ಮಾಡುತ್ತಿದ್ದಾರೆ. ವಿದೇಶಗಳೊಂದಿಗೆ ವ್ಯಾಪಾರ ಸಂಬಂಧಗಳನ್ನು ರೂಪಿಸುವ ಗುರಿ ಹೊಂದಿರುವ ಅವರು ಇತರ ಕೃಷಿಕರಿಗೂ ಪ್ರೇರಣೆಯಾಗಿದ್ದಾರೆ.

ಸಾಕಷ್ಟು ಶ್ರಮ

ಆಂಜನೇಯ ತಮ್ಮ ವ್ಯವಹಾರದ ಆರಂಭದಲ್ಲಿ ಹೆಚ್ಚಿನ ಪ್ರಗತಿ ಸಾಧಿಸಲು ಸಾಕಷ್ಟು ಶ್ರಮಿಸಿದ್ದಾರೆ. ಅವರು ಗ್ರಾಹಕರ ವಿಳಾಸವನ್ನು ಆನ್‌ಲೈನ್‌ನಲ್ಲಿ ಸಂಗ್ರಹಿಸಿ, ಪ್ರತಿಯೊಂದು ಹಂತವನ್ನು ಅನುಸರಿಸಿ, ಗ್ರಾಹಕರ ಬೇಡಿಕೆಗೆ ಅನುಗುಣವಾಗಿ ಅದನ್ನು ಅವರ ಮನೆ ಬಾಗಿಲಿಗೆ ತಲುಪಿಸುವ ಮಾರ್ಗಗಳನ್ನು ಹುಡುಕುತ್ತಿದ್ದರು. ಮಾವಿನ ಹಣ್ಣುಗಳನ್ನು ಮಾರಾಟ ಮಾಡುವ ಮೊದಲು, ಆಂಜನೇಯ ಅವರು ಮೋಸಂಬಿ ಮತ್ತು ನಿಂಬೆಯನ್ನು ಮಾರುಕಟ್ಟೆ ಮತ್ತು ಆನ್‌ಲೈನ್‌ನಲ್ಲಿ ಮಾರಾಟ ಮಾಡುತ್ತಿದ್ದರು.

Mango Breeds

ಆನ್ ಲೈನ್ ಪೋರ್ಟಲ್ ಪ್ರಾರಂಭ

ಬಳಿಕ ಆಂಜನೇಯ ಅವರು ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ ಲಿಮಿಟೆಡ್ (KSMDMCL) ಅಂಚೆ ಇಲಾಖೆಯ ಸಹಯೋಗದೊಂದಿಗೆ ತಮ್ಮ ಪೋರ್ಟಲ್ ಅನ್ನು ಪ್ರಾರಂಭಿಸಿದರು. ಕರ್ನಾಟಕ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮ ಲಿಮಿಟೆಡ್ ಪ್ರಾರಂಭಿಸಿರುವ ಕರ್ ಸಿರಿ ಮ್ಯಾಂಗೋಸ್ (https://www.karsirimangoes.karnataka.gov.in) ವೆಬ್‌ಸೈಟ್ 2022ರಲ್ಲಿ ವಿವಿಧ ಬಗೆಯ ಹಣ್ಣುಗಳಿಗಾಗಿ ಆರ್ಡರ್‌ಗಳನ್ನು ತೆಗೆದುಕೊಳ್ಳಲು ಪ್ರಾರಂಭಿಸಿತು. ಈ‌ ವೆಬ್ ಸೈಟ್ ಮೂಲಕವೇ ಈ ರೈತ ಮಾವು ಮಾರಿ ಲಾಭ ಗಳಿಸುತ್ತಿದ್ದಾರೆ.

ಇದನ್ನೂ ಓದಿ: Mysore News: ಮೈಸೂರಿನಲ್ಲಿ ಪಾಲಿಕೆಯಿಂದ ನಿಷೇಧಿತ ಪ್ಲಾಸ್ಟಿಕ್‌ ವಶ; 1.61 ಲಕ್ಷ ರೂ. ದಂಡ

ಇದು ಗ್ರಾಹಕರ ಮನೆ ಬಾಗಿಲಿಗೆ ಹಣ್ಣುಗಳನ್ನು ತಲುಪಿಸುತ್ತದೆ. ಹಣ್ಣುಗಳ ಚಿತ್ರಗಳು ಮತ್ತು ಹೆಸರುಗಳ ಜೊತೆಗೆ ವೆಬ್‌ಸೈಟ್ ಮಾವಿನ ಸರಬರಾಜಿಗೆ ಕಾರಣರಾದ ರೈತರ ಹೆಸರು ಮತ್ತು ಸಂಖ್ಯೆಗಳನ್ನು ಸಹ ಪ್ರದರ್ಶಿಸುತ್ತದೆ. ಮಾವು ಬೆಳೆಗಾರರಿಗೆ ಈ ವೆಬ್‌ಸೈಟ್ ಆಶಾದಾಯಕವಾಗಿದೆ. ಇದನ್ನು ಬಳಸಿಕೊಂಡೇ ಆಂಜನೇಯ ಅವರು ಎರಡು ತಿಂಗಳಲ್ಲಿ 1,800 ಕೆ.ಜಿ. ಮಾವು ಮಾರಾಟ ಮಾಡಿದ್ದಾರೆ.

Continue Reading

ಬೆಂಗಳೂರು

Chakravarthy Sulibele: ಮೈಸೂರಿನಲ್ಲಿ ಇಂದು ಸಂಜೆ ಚಕ್ರವರ್ತಿ ಸೂಲಿಬೆಲೆಗೆ ವೀರ ಸಾವರ್ಕರ್‌ ಸಮ್ಮಾನ್‌ ಪ್ರಶಸ್ತಿ ಪ್ರದಾನ

Chakravarthy Sulibele: ಮೈಸೂರಿನ ಕಲಾಮಂದಿರದಲ್ಲಿ ಮೇ 28 ಸಂಜೆ 5.30ಕ್ಕೆ ‘ವೀರ ಸಾವರ್ಕರ್ ಸಮ್ಮಾನ್’ ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಯುವ ಜನರಲ್ಲಿ ದೇಶಭಕ್ತಿ ಜಾಗೃತಿ ಜತೆಗೆ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿರುವ ಚಿಂತಕ ಚಕ್ರವರ್ತಿ ಸೂಲಿಬೆಲೆ ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.

VISTARANEWS.COM


on

chakravarthy sulibele
Koo

ಮೈಸೂರು: ಭಾಷಣ ಹಾಗೂ ಲೇಖನಗಳಿಂದ ಯುವ ಪೀಳಿಗೆಯ ಜನರಲ್ಲಿ ದೇಶಭಕ್ತಿ ಜಾಗೃತಗೊಳಿಸುವ ಕಾರ್ಯದ ಜತೆಗೆ ವಿವಿಧ ಸಮಾಜ ಸೇವಾ ಕಾರ್ಯಗಳಲ್ಲಿ ತೊಡಗಿರುವ ಯುವ ಬ್ರಿಗೇಡ್ ಮಾರ್ಗದರ್ಶಕ, ಚಿಂತಕ ಚಕ್ರವರ್ತಿ ಸೂಲಿಬೆಲೆ (Chakravarthy Sulibele) ಅವರು ವೀರ ಸಾವರ್ಕರ್ ಪ್ರತಿಷ್ಠಾನದಿಂದ ನೀಡುವ ‘ವೀರ ಸಾವರ್ಕರ್ ಸಮ್ಮಾನ್’ ಪ್ರಶಸ್ತಿಗೆ ಆಯ್ಕೆಯಾಗಿದ್ದು, ಇಂದು (ಮೇ 28) ಸಂಜೆ 5.30ಕ್ಕೆ ನಗರದ ಕಲಾಮಂದಿರದಲ್ಲಿ ಆಯೋಜಿಸಿರುವ 141ನೇ ಸಾವರ್ಕರ್‌ ಜಯಂತಿಯಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ.

ಈ ಬಗ್ಗೆ ಸುದ್ದಿಗೋಷ್ಠಿಯಲ್ಲಿ ವೀರ ಸಾವರ್ಕರ್ ಪ್ರತಿಷ್ಠಾನದ ಸದಸ್ಯ ರಾಕೇಶ್ ಭಟ್ ಅವರು ಮಾಹಿತಿ ನೀಡಿದ್ದಾರೆ. ಪ್ರತಿಷ್ಠಿತ ವೀರ ಸಾವರ್ಕರ್ ಸಮ್ಮಾನ್ ಪ್ರಶಸ್ತಿಯು ಒಂದು ಲಕ್ಷ ನಗದು, ವೀರ ಸಾವರ್ಕರ್ ಅವರ ಪುತ್ಥಳಿ ಹಾಗೂ ಪ್ರಶಸ್ತಿ ಪತ್ರವನ್ನು ಒಳಗೊಂಡಿದೆ.

ಯುವ ಜನರಲ್ಲಿ ದೇಶಭಕ್ತಿ ಜಾಗೃತಿ, ನದಿ ಸ್ವಚ್ಛತೆ, ದೇಗುಲ ಜೀರ್ಣೋದ್ದಾರ, ಗೋಪಾಲನೆ, ಬಡವರಿಗೆ ಮನೆ ನಿರ್ಮಾಣ, ಸರ್ಕಾರಿ ಶಾಲೆಗಳಿಗೆ ಸುಣ್ಣ-ಬಣ್ಣ ಸೇರಿ ಸೇವಾ ಕ್ಷೇತ್ರದೆಡೆಗೆ ಆಕರ್ಷಿಸಿ ಯುವ ಬ್ರಿಗೇಡ್ ಸಂಘಟನೆಯನ್ನು ಕಟ್ಟುತ್ತಿರುವ ಚಕ್ರವರ್ತಿ ಸೂಲಿಬೆಲೆ ಅವರಿಗೆ ಈ ವರ್ಷದ ವೀರ ಸಾವರ್ಕರ್ ಸಮ್ಮಾನ್ ಪ್ರಶಸ್ತಿ – 2024ಯನ್ನು ನೀಡಲಾಗುತ್ತಿದೆ ಎಂದು ತಿಳಿಸಿದ್ದಾರೆ.

ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ಖ್ಯಾತ ಕಾದಂಬರಿಕಾರ ಡಾ.ಎಸ್.ಎಲ್. ಭೈರಪ್ಪ ಪಾಲ್ಗೊಳ್ಳಲಿದ್ದಾರೆ. ಸುವರ್ಣ ನ್ಯೂಸ್‌ನ ಮುಖ್ಯಸ್ಥ ಅಜಿತ್ ಹನುಮಕ್ಕನವರ್ ಮುಖ್ಯ ಭಾಷಣಕಾರರಾಗಿ ಆಗಮಿಸಲಿದ್ದಾರೆ. ಮಧ್ಯಾಹ್ನ 2 ಗಂಟೆಗೆ ಸಾವರ್ಕರ್ ವೇಷಭೂಷಣ, ಚಿತ್ರಕಲೆ ಹಾಗೂ ರಂಗೋಲಿ ಸ್ಪರ್ಧೆ ನಡೆಯಲಿದೆ. ಈಗಾಗಲೇ ಮೊಬೈಲ್ ಮೂಲಕ ಸಾವರ್ಕರ್ ಕುರಿತು ಮಾಡಿರುವ ರೀಲ್ಸ್‌ಗಳನ್ನು ಪಡೆಯಲಾಗುತ್ತಿದೆ. ಪ್ರತಿ ಸ್ಪರ್ಧೆಯ ವಿಜೇತರಿಗೆ ಪ್ರಥಮ ಬಹುಮಾನವಾಗಿ 5 ಸಾವಿರ ರೂ., ದ್ವಿತೀಯ ಬಹುಮಾನವಾಗಿ 3 ಸಾವಿರ ರೂ., ತೃತೀಯ ಬಹುಮಾನವಾಗಿ 1000 ರೂ. ನಗದು ಬಹುಮಾನದ ಜತೆಗೆ ನೆನಪಿನ ಕಾಣಿಕೆ ಹಾಗೂ ಪ್ರಶಸ್ತಿ ಪತ್ರ ನೀಡಲಾಗುತ್ತದೆ.

ಸಾವರ್ಕರ್ ಕುರಿತು ಅನೇಕ ಅಧ್ಯಯನ ಮಾಡಿ ಕೃತಿ ರಚಿಸಿರುವ ವಿಕ್ರಂ ಸಂಪತ್ ಅವರಿಗೆ ಕಳೆದ ವರ್ಷ ವೀರ ಸಾವರ್ಕರ್ ಸಮ್ಮಾನ್ ಪ್ರಶಸ್ತಿ- 2023ಯನ್ನು ನೀಡಲಾಗಿತ್ತು. ಸಾವರ್ಕರ್ ಪ್ರತಿಷ್ಠಾನ ಕಾರ್ಯಕ್ರಮಗಳ ಮೂಲಕ ಸಾವರ್ಕರ್ ವಿಚಾರಧಾರೆಯನ್ನು ಜನರ ಮುಂದಿಡುತ್ತಾ ಬಂದಿದೆ. ಸಾವರ್ಕರ್ ರಥಯಾತ್ರೆ ಮೈಸೂರು, ಚಾಮರಾಜನಗರ, ಮಂಡ್ಯ ಜಿಲ್ಲೆಗಳಲ್ಲಿ ಸಂಚರಿಸಿ ಸಾವರ್ಕರ್ ಕುರಿತ ಮಾಹಿತಿ, ಸಾಹಿತ್ಯ ಹಾಗೂ ಪುಸ್ತಕಗಳ ಮೂಲಕ 10 ಲಕ್ಷಕ್ಕೂ ಅಧಿಕ ಜನರನ್ನು ತಲುಪಿತು, ಸಾವರ್ಕರ್ ಕುರಿತ ಕನ್ನಡದ ನಾಟಕ ಕರಿನೀರ ವೀರ ರಾಜ್ಯಾದ್ಯಂತ ಅನೇಕ ಪ್ರದರ್ಶನ ನಡೆಸಿ ಜನಮನ ಗೆದ್ದಿದೆ, ವಿದ್ಯಾರ್ಥಿಗಳಿಗಾಗಿ ಸಾವರ್ಕರ್ ಪ್ರಬಂಧ, ಭಾಷಣ, ಚಿತ್ರಕಲೆ ಹೀಗೆ ಅನೇಕ ಸ್ಪರ್ಧೆಗಳನ್ನು ಹಲವಾರು ಶಾಲಾ ಕಾಲೇಜು ಗಳಲ್ಲಿ ಆಯೋಜಿಸಿ ಅವರುಗಳಲ್ಲಿ ಸಾವರ್ಕರ್ ವ್ಯಕ್ತಿ ಹಾಗೂ ವಿಚಾರಗಳನ್ನು ಪರಿಚಯಿಸುವ ಕೆಲಸಗಳನ್ನು ಸಾವರ್ಕರ್ ಪ್ರತಿಷ್ಠಾನ ಮಾಡುತ್ತಿದೆ ಎಂದು ಅವರು ತಿಳಿಸಿದ್ದಾರೆ.

ಇದನ್ನೂ ಓದಿ | ಧವಳ ಧಾರಿಣಿ ಅಂಕಣ: ಗೌತಮ ಬುದ್ಧ; ಭಾರತೀಯ ತತ್ತ್ವಶಾಸ್ತ್ರದ ಮುನ್ನುಡಿ

ಕಾರ್ಯಕ್ರಮದ ಕುರಿತು ಹೆಚ್ಚಿನ ಮಾಹಿತಿಗೆ ರಾಕೇಶ್‌ ಭಟ್ ಮೊ. 99162 21184, ರಜತ್ 63634 43699, ಶಿವಕುಮಾರ್ 86602 19746 ಸಂಪರ್ಕಿಸಬುಹುದು ಎಂದು ಮಾಹಿತಿ ನೀಡಿದ್ದಾರೆ.

Continue Reading

ಚಿನ್ನದ ದರ

Gold Rate Today: ಚಿನ್ನದ ಬೆಲೆಯಲ್ಲಿ ಕೊಂಚ ಏರಿಕೆ; ಬಂಗಾರದ ಮಾರುಕಟ್ಟೆಯಲ್ಲಿ ಇಂದಿನ ಧಾರಣೆ ಹೀಗಿದೆ

Gold Rate Today: ಇಂದು ನೀವು ಬೆಂಗಳೂರಿನಲ್ಲಿ ಒಂದು ಗ್ರಾಂ 22 ಕ್ಯಾರಟ್‌ ಚಿನ್ನವನ್ನು ₹6,685ಕ್ಕೆ ಖರೀದಿಸಬಹುದು. ಎಂಟು ಗ್ರಾಂ ಬೆಲೆ ₹53,480 ಇದೆ. 24 ಕ್ಯಾರಟ್‌ ಬೆಲೆ ಎಷ್ಟಿದೆ ನೋಡಿ.

VISTARANEWS.COM


on

gold rate today bipasha
Koo

ಬೆಂಗಳೂರು: ರಾಜ್ಯದ ಚಿನ್ನದ ಮಾರುಕಟ್ಟೆಯಲ್ಲಿ ಶುಕ್ರವಾರ 22 ಕ್ಯಾರಟ್‌ ಮತ್ತು 24 ಕ್ಯಾರಟ್‌ ಬಂಗಾರದ ಧಾರಣೆ (Gold Rate Today) ಸ್ವಲ್ಪ ಮಟ್ಟಿಗೆ ಏರಿದೆ. ಇಂದು (ಸೋಮವಾರ) 10 ಗ್ರಾಂ 22 ಕ್ಯಾರಟ್‌ ಮತ್ತು 24 ಕ್ಯಾರಟ್‌ ಚಿನ್ನದ ಬೆಲೆ ಕ್ರಮವಾಗಿ ₹200 ಹಾಗೂ ₹220 ಏರಿಕೆಯಾಗಿವೆ. ಇಂದಿನ ಬೆಂಗಳೂರು ಸುವರ್ಣ ಮಾರುಕಟ್ಟೆಯ ದರಗಳು ಹೀಗಿವೆ.

ಇಂದು ನೀವು ಬೆಂಗಳೂರಿನಲ್ಲಿ ಒಂದು ಗ್ರಾಂ 22 ಕ್ಯಾರಟ್‌ ಚಿನ್ನವನ್ನು ₹6,685ಕ್ಕೆ ಖರೀದಿಸಬಹುದು. ಎಂಟು ಗ್ರಾಂ ಬೆಲೆ ₹53,480 ಇದೆ. 10 ಗ್ರಾಂ ಮತ್ತು 100 ಗ್ರಾಂನ 22 ಕ್ಯಾರಟ್‌ ಚಿನ್ನವನ್ನು ₹66,850 ಮತ್ತು ₹6,68,500 ದರದಲ್ಲಿ ಖರೀದಿಸಬಹುದು. ಒಂದು ಗ್ರಾಂ 24 ಕ್ಯಾರಟ್‌ ಚಿನ್ನದ ಬೆಲೆ ₹7,293 ಆಗಿದ್ದರೆ, ಎಂಟು ಗ್ರಾಂ ಬೆಲೆ ₹58,344 ಆಗಿದೆ. 10 ಗ್ರಾಂ ಮತ್ತು 100 ಗ್ರಾಂ 24 ಕ್ಯಾರಟ್‌ ಚಿನ್ನವನ್ನು ಖರೀದಿಸಲು ಕ್ರಮವಾಗಿ ₹72,930 ಮತ್ತು ₹7,29,300 ವೆಚ್ಚವಾಗಲಿದೆ.

ನಗರ22 ಕ್ಯಾರಟ್24 ಕ್ಯಾರಟ್
ದಿಲ್ಲಿ67,00073,080
ಮುಂಬಯಿ66,850 72,930
ಬೆಂಗಳೂರು66,850 72,930
ಚೆನ್ನೈ67,40073,530

ಒಂದು ಗ್ರಾಂ ಬೆಳ್ಳಿಯ ಬೆಲೆ (Silver rate today) ₹92, ಎಂಟು ಗ್ರಾಂ ₹736 ಮತ್ತು 10 ಗ್ರಾಂ ₹920ರಷ್ಟಿದೆ. 100 ಗ್ರಾಂಗೆ ಗ್ರಾಹಕರು ₹9,200 ಮತ್ತು 1 ಕಿಲೋಗ್ರಾಂಗೆ ₹92,000 ಪಾವತಿಸಬೇಕಿದೆ. ಇಲ್ಲಿ ನೀಡಲಾದ ದರಗಳು GST, TCS ಮತ್ತು ಇತರ ಲೆವಿಗಳನ್ನು ಒಳಗೊಂಡಿಲ್ಲ.

ಚಿನ್ನದ ದರದ ಮೇಲೆ ಪರಿಣಾಮ ಬೀರುವ ಅಂಶಗಳು

ಬೇಡಿಕೆ ಮತ್ತು ಪೂರೈಕೆ: ಮಾರುಕಟ್ಟೆಯಲ್ಲಿ ಚಿನ್ನದ ಬೇಡಿಕೆ ಮತ್ತು ಪೂರೈಕೆಯಿಂದ ಚಿನ್ನದ ದರವನ್ನು ಹೆಚ್ಚಾಗಿ ನಿರ್ಧರಿಸಲಾಗುತ್ತದೆ. ಚಿನ್ನಕ್ಕೆ ಬೇಡಿಕೆ ಹೆಚ್ಚಾದರೆ ದರವೂ ಹೆಚ್ಚಾಗಲಿದೆ. ವ್ಯತಿರಿಕ್ತವಾಗಿ, ಚಿನ್ನದ ಪೂರೈಕೆ ಹೆಚ್ಚಾದರೆ, ದರ ಕಡಿಮೆಯಾಗುತ್ತದೆ.

ಜಾಗತಿಕ ಆರ್ಥಿಕ ಪರಿಸ್ಥಿತಿಗಳು: ಚಿನ್ನದ ದರದ ಮೇಲೆ ಜಾಗತಿಕ ಆರ್ಥಿಕ ಪರಿಸ್ಥಿತಿಗಳು ಕೂಡ ಪರಿಣಾಮ ಬೀರುತ್ತದೆ. ಉದಾಹರಣೆಗೆ, ಜಾಗತಿಕ ಆರ್ಥಿಕತೆಯು ಕಳಪೆಯಾಗಿ ಕಾರ್ಯನಿರ್ವಹಿಸುತ್ತಿದ್ದರೆ, ಹೂಡಿಕೆದಾರರು ಚಿನ್ನವನ್ನು ಸುರಕ್ಷಿತ ಹೂಡಿಕೆಯಾಗಿ ಕಾಣಬಹುದು. ಇದು ಚಿನ್ನದ ದರವನ್ನು ಹೆಚ್ಚಿಸುತ್ತದೆ.

ರಾಜಕೀಯ ಅಸ್ಥಿರತೆ: ರಾಜಕೀಯ ಅಸ್ಥಿರತೆ ಚಿನ್ನದ ದರದ ಮೇಲೂ ಪರಿಣಾಮ ಬೀರಬಹುದು. ಉದಾಹರಣೆಗೆ, ಒಂದು ದೊಡ್ಡ ದೇಶದಲ್ಲಿ ರಾಜಕೀಯ ಬಿಕ್ಕಟ್ಟು ಉಂಟಾದರೆ, ಹೂಡಿಕೆದಾರರು ಅನಿಶ್ಚಿತತೆಯ ವಿರುದ್ಧ ಸುರಕ್ಷಿತರಾಗಲು ಚಿನ್ನವನ್ನು ಖರೀದಿಸಬಹುದು, ಇದು ಚಿನ್ನದ ದರವನ್ನು ಹೆಚ್ಚಿಸುತ್ತದೆ.

ಇದಲ್ಲದೆ, ಭಾರತದಲ್ಲಿನ ಚಿಲ್ಲರೆ ಚಿನ್ನದ ಬೆಲೆಯು ಭಾರತದಲ್ಲಿ ಗ್ರಾಹಕರಿಗೆ ಚಿನ್ನವನ್ನು ಮಾರಾಟ ಮಾಡುವ ಬೆಲೆಯಾಗಿದೆ. ಜಾಗತಿಕ ಚಿನ್ನದ ಬೆಲೆ, ಭಾರತೀಯ ರೂಪಾಯಿ, ಮತ್ತು ಚಿನ್ನದ ಆಭರಣಗಳ ತಯಾರಿಕೆಯಲ್ಲಿ ತೊಡಗಿರುವ ಕಾರ್ಮಿಕ ಮತ್ತು ಸಾಮಗ್ರಿಗಳ ವೆಚ್ಚ ಸೇರಿದಂತೆ ಹಲವಾರು ಅಂಶಗಳಿಂದ ಇದನ್ನು ನಿರ್ಧರಿಸಲಾಗುತ್ತದೆ. ಭಾರತದಲ್ಲಿ ಚಿಲ್ಲರೆ ಚಿನ್ನದ ಬೆಲೆಯು ಸಾಮಾನ್ಯವಾಗಿ ಜಾಗತಿಕ ಚಿನ್ನದ ಬೆಲೆಗಿಂತ ಹೆಚ್ಚಾಗಿರುತ್ತದೆ, ಏಕೆಂದರೆ ಇದು ಆಭರಣ ಮತ್ತು ಇತರ ವೆಚ್ಚ ಒಳಗೊಂಡಿರುತ್ತದೆ.

ಇದನ್ನೂ ಓದಿ: Gold Rate : ಏರುಗತಿಯಲ್ಲಿದೆ ಬಂಗಾರದ ಬೆಲೆ; ಇನ್ನೂ ಏರುವ ಮೊದಲು ಖರೀದಿ ಸೂಕ್ತ

Continue Reading
Advertisement
Pushpa 2
ಸಿನಿಮಾ11 mins ago

Pushpa 2: ʼಪುಷ್ಪ 2ʼ ಸಿನಿಮಾ ತಂಡದಿಂದ ಅಲ್ಲು ಅರ್ಜುನ್‌ ಫ್ಯಾನ್ಸ್‌ಗೆ ಗುಡ್‌ನ್ಯೂಸ್‌; ಎರಡನೇ ಹಾಡು ರಿಲೀಸ್‌ಗೆ ಮುಹೂರ್ತ ಫಿಕ್ಸ್‌

Traffic Violation Case filed against driver if petrol runs out and vehicle stops on road
ಬೆಂಗಳೂರು19 mins ago

Traffic Violation : ಪೆಟ್ರೋಲ್ ಖಾಲಿಯಾಗಿ ರಸ್ತೆಯಲ್ಲಿ ವಾಹನ ನಿಂತುಬಿಟ್ಟರೆ ಚಾಲಕನ ಮೇಲೆ ಕೇಸ್!

Aravind Kejriwal
ದೇಶ25 mins ago

Arvind Kejriwal: ಕೇಜ್ರಿವಾಲ್‌ಗೆ ಮತ್ತೆ ಹಿನ್ನಡೆ; ಜಾಮೀನು ವಿಸ್ತರಣೆಗೆ ಕೋರಿ ಸಲ್ಲಿಸಿದ್ದ ಅರ್ಜಿ ವಿಚಾರಣೆಗೆ ಸುಪ್ರೀಂ ನಕಾರ

Success Story
ಕೃಷಿ48 mins ago

Success Story: ಎರಡೇ ತಿಂಗಳಲ್ಲಿ ಆನ್ ಲೈನ್ ಮೂಲಕ 1,800 ಕೆ.ಜಿ. ಮಾವು ಮಾರಿದ ರಾಯಚೂರಿನ ರೈತ!

Radhika Pandit
ಸ್ಯಾಂಡಲ್ ವುಡ್54 mins ago

Radhika Pandit: ಅಭಿಮಾನಿಗಳ ಪ್ರಶ್ನೆ ಎದುರಿಸಲು ನಟಿ ರಾಧಿಕಾ ಪಂಡಿತ್ ಸಿದ್ಧ; ಹೊಸ ಸಿನಿಮಾ ಘೋಷಿಸ್ತಾರಾ ಸ್ಯಾಂಡಲ್‌ವುಡ್‌ ಸಿಂಡ್ರೆಲ್ಲಾ?

chakravarthy sulibele
ಬೆಂಗಳೂರು1 hour ago

Chakravarthy Sulibele: ಮೈಸೂರಿನಲ್ಲಿ ಇಂದು ಸಂಜೆ ಚಕ್ರವರ್ತಿ ಸೂಲಿಬೆಲೆಗೆ ವೀರ ಸಾವರ್ಕರ್‌ ಸಮ್ಮಾನ್‌ ಪ್ರಶಸ್ತಿ ಪ್ರದಾನ

gold rate today bipasha
ಚಿನ್ನದ ದರ1 hour ago

Gold Rate Today: ಚಿನ್ನದ ಬೆಲೆಯಲ್ಲಿ ಕೊಂಚ ಏರಿಕೆ; ಬಂಗಾರದ ಮಾರುಕಟ್ಟೆಯಲ್ಲಿ ಇಂದಿನ ಧಾರಣೆ ಹೀಗಿದೆ

Team India Coach
ಕ್ರೀಡೆ1 hour ago

Team India Coach: ಟೀಮ್​ ಇಂಡಿಯಾದ ಕೋಚ್​ ಹುದ್ದೆಗೆ ಅರ್ಜಿ ಸಲ್ಲಿಸಿದ ಪ್ರಧಾನಿ ಮೋದಿ, ಅಮಿತ್ ಶಾ!

Gurmeet Ram Rahim
ದೇಶ1 hour ago

Gurmeet Ram Rahim: 22ವರ್ಷಗಳ ಹಳೆಯ ಕೊಲೆ ಕೇಸ್‌; ಗುರ್ಮೀತ್ ರಾಮ್​ ರಹೀಮ್​ ಖುಲಾಸೆ

School reopen
ಬೆಂಗಳೂರು1 hour ago

School Reopen: ನಾಳೆಯಿಂದ ಶಾಲೆ ಮರು ಆರಂಭ; ಮೊದಲ ದಿನವೇ ಮಕ್ಕಳಿಗೆ ಸಿಹಿ ಸುದ್ದಿ

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Weather Forecast
ಮಳೆ20 hours ago

Karnataka Weather : ಕಡಲತೀರದಲ್ಲಿ ಅಲೆಗಳ ಅಬ್ಬರ, ಪ್ರವಾಸಿಗರಿಗೆ ಕಟ್ಟೆಚ್ಚರ; ನಾಳೆಯೂ ಗಾಳಿ ಸಹಿತ ಮಳೆ ಅಬ್ಬರ

Karnataka Rain
ಮಳೆ2 days ago

Karnataka Rain : ಯಾದಗಿರಿಯಲ್ಲಿ ಬಿರುಗಾಳಿ ಸಹಿತ ಮಳೆ; ಸಿಡಿಲು ಬಡಿದು ಎಮ್ಮೆಗಳು ಸಾವು

Basavanagudi News
ಬೆಂಗಳೂರು2 days ago

Basavanagudi News : ಪೂಜಾ ಸಾಮಗ್ರಿಗೆ ಒನ್‌ ಟು ಡಬಲ್‌ ರೇಟ್‌; ದೊಡ್ಡ ಗಣಪತಿ ದೇಗುಲದಲ್ಲಿ ಕೈ ಕೈ ಮಿಲಾಯಿಸಿದ ಭಕ್ತರು-ವ್ಯಾಪಾರಿಗಳು

Karnataka Rain
ಮಳೆ3 days ago

Karnataka Rain : ಭಾರಿ ಮಳೆಗೆ ರಸ್ತೆ ಕಾಣದೆ ರಾಜಕಾಲುವೆಗೆ ಉರುಳಿದ ಆಟೋ; ಚಾಲಕ ಸ್ಥಳದಲ್ಲೇ ಸಾವು

dina bhavishya read your daily horoscope predictions for May 23 2024
ಭವಿಷ್ಯ5 days ago

Dina Bhavishya : 12 ರಾಶಿಯವರ ಇಂದಿನ ಭವಿಷ್ಯ ಹೇಗಿದೆ? ಯಾರಿಗೆ ಶುಭ, ಯಾರಿಗೆ ಅಶುಭ ಫಲ?

Karnataka Weather Forecast
ಮಳೆ6 days ago

Karnataka Weather : ಮುಂದುವರಿಯಲಿದೆ ವರುಣಾರ್ಭಟ; ಬೆಂಗಳೂರಲ್ಲೂ ಭಾರಿ ಮಳೆ ನಿರೀಕ್ಷೆ!

Karnataka Rain
ಮಳೆ7 days ago

Karnataka Rain : ಭಾರಿ ಮಳೆಗೆ ಕರೆಂಟ್‌ ಕಟ್‌, ಕತ್ತಲಲ್ಲೇ ರೋಗಿಗಳಿಗೆ ಟ್ರೀಟ್‌ಮೆಂಟ್‌; ಮರ ಬಿದ್ದರೂ ಪಾರಾದ ತಾಯಿ-ಮಗ

Love Case Father throws hot water on man who loved his daughter for coming home
ಕೊಡಗು1 week ago

Love Case : ಮನೆಗೆ ಬಂದ ಪ್ರೇಮಿಗೆ ಕೊತ ಕೊತ ಕುದಿಯುವ ನೀರು ಎರಚಿದ ಯುವತಿ ತಂದೆ!

Contaminated Water
ಮೈಸೂರು1 week ago

Contaminated Water : ಡಿ ಸಾಲುಂಡಿಯಲ್ಲಿ ಕಲುಷಿತ ನೀರು ಸೇವಿಸಿ ಅಸ್ವಸ್ಥಗೊಂಡಿದ್ದ ಯುವಕ ಸಾವು

Karnataka Rain
ಮಳೆ1 week ago

Karnataka Rain : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

ಟ್ರೆಂಡಿಂಗ್‌