CWG- 2022 | ಭಾರತ ಬ್ಯಾಡ್ಮಿಂಟನ್‌ ತಂಡಕ್ಕೆ ಬೆಳ್ಳಿಯ ಬೆಡಗು, ಮಲೇಷ್ಯಾ ಚಾಂಪಿಯನ್‌ - Vistara News

ಕಾಮನ್​ವೆಲ್ತ್​ ಗೇಮ್ಸ್​

CWG- 2022 | ಭಾರತ ಬ್ಯಾಡ್ಮಿಂಟನ್‌ ತಂಡಕ್ಕೆ ಬೆಳ್ಳಿಯ ಬೆಡಗು, ಮಲೇಷ್ಯಾ ಚಾಂಪಿಯನ್‌

ಕಾಮನ್ವೆಲ್ತ್‌ ಗೇಮ್ಸ್‌ನಲ್ಲಿ (CWG- 2022) ಭಾರತ ಬ್ಯಾಡ್ಮಿಂಟನ್‌ ಮಿಶ್ರ ತಂಡ ಬೆಳ್ಳಿ ಪದಕ ಗೆದ್ದಿದೆ. ಮಲೇಷ್ಯಾ ವಿರುದ್ಧ ಫೈನಲ್‌ನಲ್ಲಿ ೩-೧ ಅಂತರದಿಂದ ಭಾರತ ಸೋತಿತು.

VISTARANEWS.COM


on

CWG-2022
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬರ್ಮಿಂಗ್ಹಮ್‌: ಭಾರತ ಮಿಶ್ರ ಬ್ಯಾಡ್ಮಿಂಟನ್‌ ತಂಡ ಕಾಮನ್ವೆಲ್ತ್‌ ಗೇಮ್ಸ್‌ನಲ್ಲಿ (CWG- 2022) ಬೆಳ್ಳಿಯ ಪದಕ ಗೆದ್ದುಕೊಂಡಿದೆ. ಇದರೊಂದಿಗೆ ಭಾರತದ ಒಟ್ಟಾರೆ ಪದಕಗಳ ಸಂಖ್ಯೆ ೧೩ಕ್ಕೆ ಏರಿಕೆಯಾಗಿದೆ. ಫೈನಲ್ ಪಂದ್ಯದಲ್ಲಿ ಕಳೆದ ಬಾರಿಯ ರನ್ನರ್‌ಅಪ್‌ ಮಲೇಷ್ಯಾ ವಿರುದ್ಧ ೩-೧ ಅಂತರದಿಂದ ಸೋಲು ಕಂಡ ಭಾರತದ ಸ್ಪರ್ಧಿಗಳು ರಜತ ಪದಕಕ್ಕೆ ತೃಪ್ತಿಪಟ್ಟುಕೊಂಡರು.

ಮಂಗಳವಾರ ತಡರಾತ್ರಿ ನಡೆದ ಪ್ರಶಸ್ತಿ ಸುತ್ತಿನ ಫೈಟ್‌ನ ಮೊದಲ ಪಂದ್ಯದಲ್ಲಿ ಭಾರತದ ಪುರುಷರ ಡಬಲ್ಸ್‌ ತಂಡ ಮೊದಲ ಸೋಲಿಗೆ ಒಳಗಾದರೆ, ಸ್ಟಾರ್‌ ಆಟಗಾರ್ತಿ ಪಿ.ವಿ ಸಿಂಧೂ ಗೆಲುವು ಕಂಡರು. ಹೀಗಾಗಿ ಇತ್ತಂಡಗಳ ನಡುವೆ ೧-೧ರ ಸಮಬಲದ ಸಾಧನೆ ಕಂಡುಬಂತು. ಬಳಿಕ ಕಿಡಂಬಿ ಶ್ರೀಕಾಂತ್‌ ಸಿಂಗಲ್ಸ್‌ನಲ್ಲಿ ಎದುರಾಳಿ ತಂಡದ ವಿರುದ್ಧ ಸೋಲುಕಂಡರು .ಅಂತೆಯೇ ನಾಲ್ಕನೇ ಪಂದ್ಯದಲ್ಲಿ ತ್ರಿಸಾ ಜೊಲ್ಲಿ ಹಾಗೂ ಗಾಯತ್ರಿ ಗೋಪಿಚಂದ್‌ ಅವರಿದ್ದ ಮಹಿಳೆಯರ ಡಬಲ್ಸ್‌ ಬಳಗವೂ ಪರಾಭವಗೊಂಡಿತು. ಹೀಗಾಗಿ ಭಾರತಕ್ಕೆ ಸುಲಭ ಸೋಲಿಗೆ ಒಳಗಾಯಿತು.

ಮಲೇಷ್ಯಾ ತಂಡ ೨೦೧೮ ರ ಗೋಲ್ಡ್‌ ಕೋಸ್ಟ್‌ ಕಾಮನ್ವೆಲ್ತ್‌ ಗೇಮ್ಸ್‌ನಲ್ಲಿ ಭಾರತ ವಿರುದ್ಧ ೩-೧ ಅಂತರದಿಂದ ಸೋಲು ಕಂಡಿತ್ತು. ಇದೀಗ ಅದೇ ಅಂತರದಿಂದ ಭಾರತವನ್ನು ಸೋಲಿಸಿ ಸೇಡು ತೀರಿಸಿಕೊಂಡಿತು.

ಸ್ಟಾರ್‌ ಆಟಗಾರ್ತಿ ಪಿ.ವಿ. ಸಿಂಧೂ ಸೋಲಿಗೆ ಬೇಸರ ವ್ಯಕ್ತಪಡಿಸಿದ್ದಾರೆ. ಆದರೆ, ಪುಟಿದೇಳುವ ಭರವಸೆಯನ್ನೂ ವ್ಯಕ್ತಪಡಿಸಿದ್ದಾರೆ.

ಈ ಬೆಳ್ಳಿಯೊಂದಿಗೆ ಭಾರತಕ್ಕೆ ಒಟ್ಟಾರೆ ೫ ರಜತ ಪದಕಗಳ ಸಿಕ್ಕಂತಾಗಿದೆ. ಅಂತೆಯೇ ಐದು ಚಿನ್ನ ಹಾಗೂ ಮೂರು ಕಂಚು ಸೇರಿ ಒಟ್ಟಾರೆ ೧೩ ಪದಕಗಳು ಲಭಿಸಿವೆ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕಾಮನ್​ವೆಲ್ತ್​ ಗೇಮ್ಸ್​

Wrestler | ಆಪ್‌ ನಾಯಕನ ಹೇಳಿಕೆಗೆ ತಿರುಗೇಟು ಕೊಟ್ಟ ಕಾಮನ್ವೆಲ್ತ್‌ ಪದಕ ವಿಜೇತೆ ದಿವ್ಯಾ ಕಾಕ್ರನ್‌

ಕುಸ್ತಿಪಟು ದಿವ್ಯಾ ಕಾಕ್ರನ್‌ ದಿಲ್ಲಿಯ ಆಪ್‌ ಶಾಸಕ ಸೌರಭ್‌ ಭಾರದ್ವಾಜ್‌ ಹೇಳಿಕೆಗೆ ತಿರುಗೇಟು ಕೊಟ್ಟಿದ್ದಾರೆ.

VISTARANEWS.COM


on

wrestling
Koo

ನವ ದೆಹಲಿ : ಕಾಮನ್ವೆಲ್ತ್‌ ಗೇಮ್ಸ್‌ ಕಂಚಿನ ಪದಕ ವಿಜೇತೆ ಕುಸ್ತಿಪಟು ದಿವ್ಯಾ ಕಾಕ್ರನ್‌, ದಿಲ್ಲಿ ಆಪ್‌ ಪಕ್ಷದ ಶಾಸಕನೊಬ್ಬನ ಹೇಳಿಕೆಗೆ ತಿರುಗೇಟು ಕೊಟ್ಟಿದ್ದು, ತಾವು ದಿಲ್ಲಿಯ ಪರವಾಗಿಯೇ ಸ್ಪರ್ಧಿಸಿರುವ ಬಗ್ಗೆ ದಾಖಲೆ ಬಿಡುಗಡೆ ಮಾಡಿದ್ದಾರೆ. ಜತೆಗೆ ದಿಲ್ಲಿ ಸರಕಾರ ತಮಗೆ ಯಾವುದೇ ಆರ್ಥಿಕ ನೆರವು ನೀಡಿಲ್ಲ ಎಂಬ ತಮ್ಮ ಹೇಳಿಕೆಯನ್ನು ಸಮರ್ಧಿಸಿಕೊಂಡಿದ್ದಾರೆ.

ಆಗಸ್ಟ್‌ ೬ರಂದು ಕಾಮನ್ವೆಲ್ತ್‌ ಗೇಮ್ಸ್‌ನ ೬೮ ಕೆ.ಜಿ ಮಹಿಳೆಯರ ಕುಸ್ತಿ ಸ್ಪರ್ಧೆಯಲ್ಲಿ ದಿವ್ಯಾ ಕಾಕ್ರನ್‌ ಅವರು ಕಂಚಿನ ಪದಕ ಗೆದ್ದುಕೊಂಡಿದ್ದರು. ಈ ಸಾಧಕಿ ಇದೀಗ ಭಾರತಕ್ಕೆ ವಾಪಸಾಗಿದ್ದು, ಭರ್ಜರಿ ಸ್ವಾಗತ ಪಡೆದುಕೊಂಡಿದ್ದಾರೆ. ಈ ವೇಳೆ ಅವರು ಮಾಧ್ಯಮಗಳ ಮುಂದೆ ಮಾತನಾಡಿದ ದಿವ್ಯಾ ಅವರು ತಮಗೆ ದಿಲ್ಲಿ ಸರಕಾರದಿಂದ ಯಾವುದೇ ಆರ್ಥಿಕ ನೆರವು ನೀಡಿಲ್ಲ ಎಂದು ಹೇಳಿಕೆ ನೀಡಿದ್ದರು. ಇದಕ್ಕೆ ದಿಲ್ಲಿಯ ಆಪ್‌ ಶಾಸಕ ಸೌರಭ್‌ ಭಾರದ್ವಾಜ್‌ ಅವರು ಪ್ರತಿಕ್ರಿಯಿಸಿ, ದಿವ್ಯಾ ಅವರ ದಿಲ್ಲಿ ಪರವಾಗಿ ಅಡಿವುದು ಕಡಿಮೆ. ಉತ್ತರ ಪ್ರದೇಶವನ್ನು ಪ್ರತಿನಿಧಿಸುತ್ತಿದ್ದರು ಎಂದು ಹೇಳಿಕೆ ನೀಡಿದ್ದಾರೆ.

ಇದಕ್ಕೆ ಪ್ರತಿಕ್ರಿಯೆ ನೀಡಿದ ದಿವ್ಯಾ ಅವರು ೨೦೧೧ರಿಂದ ೨೦೧೭ರವರೆಗೆ ತಾವು ದಿಲ್ಲಿ ಪರವಾಗಿ ಆಡುತ್ತಿದ್ದೆ. ಸಾಕ್ಷಿಯಾಗಿ ಇಲ್ಲಿದೆ ನೋಡಿ ಪ್ರಮಾಣಪತ್ರ ಎಂದು ಟ್ವೀಟ್‌ ಮಾಡಿದ್ದಾರೆ. ಜತೆಗೆ ಇನ್ನೂ ನಿಮಗೆ ನೆನಪಾಗದಿದ್ದರೆ ದಿಲ್ಲಿ ಪರವಾಗಿ ೧೭ ಬಂಗಾರದ ಪದಕ ಗೆದ್ದಿರುವ ಪ್ರಮಾಣಪತ್ರವನ್ನು ಇಲ್ಲಿ ಲಗತ್ತಿಸಿದ್ದೇನೆ ಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ | CWG-2022 | ಮಹಿಳೆಯರ ಕುಸ್ತಿಯಲ್ಲಿ ಕಂಚಿನ ಪದಕ ಗೆದ್ದ ದಿವ್ಯಾ ಕಾಕ್ರನ್‌

Continue Reading

ಕಾಮನ್​ವೆಲ್ತ್​ ಗೇಮ್ಸ್​

CWG- 2022 | ಬರ್ಮಿಂಗ್ಹಮ್‌ ಕಾಮನ್ವೆಲ್ತ್‌ ಗೇಮ್ಸ್‌ನಲ್ಲಿ ಭಾರತದ ಅಥ್ಲೀಟ್‌ಗಳ ಸಾಧನೆಗಳೇನು?

ಬರ್ಮಿಂಗ್ಹಮ್‌ ಕಾಮನ್ವೆಲ್ತ್‌ ಗೇಮ್ಸ್‌ನಲ್ಲಿ (CWG-2022) ಭಾರತದ ಕ್ರೀಡಾಪುಟುಗಳು ಮಾಡಿರುವ ಸಾಧನೆಗಳು ಕುರಿತು ಸಂಕ್ಷಿಪ್ತ ವಿವರ ಇಲ್ಲಿದೆ

VISTARANEWS.COM


on

CWG-2022
Koo

ನವ ದೆಹಲಿ : ಕಾಮನ್ವೆಲ್ತ್‌ ಒಕ್ಕೂಟಗಳ ಮಹಾ ಕ್ರೀಡಾ ಸಂಗ್ರಾಮ ಕಾಮನ್ವೆಲ್ತ್‌ ಗೇಮ್ಸ್‌ ಸೋಮವಾರ ಸಮಾಪ್ತಿಗೊಂಡಿದೆ. ಇಂಗ್ಲೆಂಡ್‌ನ ಬರ್ಮಿಂಗ್ಹಮ್ ನಗರದಲ್ಲಿ ಉದ್ಘಾಟನಾ ಸಮಾರಂಭ ಸೇರಿ ಒಟ್ಟು ೧೧ ದಿನಗಳ ಕಾಲ ಈ ಪ್ರತಿಷ್ಠಿತ ಕ್ರೀಡಾಕೂಟ ನಡೆಯಿತು. ವಿಶ್ವದ ೫೦೫೪ ಕ್ರೀಡಾಪಟುಗಳು ಭಾಗವಹಿಸಿದ್ದ ಈ ಕ್ರೀಡಾ ಜಾತ್ರೆಗೆ ಭಾರತವೂ ೧೦೬ ಪುರುಷರ ಹಾಗೂ ೧೦೪ ಮಹಿಳೆಯರು ಸೇರಿ ೨೧೦ ಕ್ರೀಡಾಪಟುಗಳನ್ನು ಕಳುಹಿಸಿತ್ತು. ಇವರೆಲ್ಲರ ಸಾಧನೆಯ ಹಿನ್ನೆಲೆಯಲ್ಲಿ ಭಾರತಕ್ಕೆ ೬೧ ಪದಕಗಳು ಸಿಕ್ಕಿವೆ. ೨೨ ಚಿನ್ನದ ಪದಕ, ೧೬ ರಜತ ಪದಕ, ೨೩ ಕಂಚಿನ ಪದಕಗಳು ಭಾರತೀಯರ ಮುಡಿಗೇರಿಗೆ. ಅಂಕಪಟ್ಟಿಯಲ್ಲೂ ಭಾರತಕ್ಕೆ ೪ನೇ ಸ್ಥಾನ ದೊರಕಿದ್ದು ಕೂಡ ಕಡಿಮೆ ಸಾಧನೆಯೇನು ಅಲ್ಲ.

ಕ್ರೀಡಾಕೂಟದ ಸಮಾರೋಪ ಸಮಾರಂಭದ ದೃಶ್ಯಗಳು

೨೦೧೮ಕ್ಕೆ ಹೋಲಿಸಿದರೆ ಭಾರತದ ಸಾಧನೆ ಸ್ವಲ್ಪ ಪ್ರಮಾಣದಲ್ಲಿ ಮಂಕಾಗಿದೆ. ಅದಕ್ಕೆ ಶೂಟಿಂಗ್‌ ಸ್ಪರ್ಧೆಯನ್ನು ಕ್ರೀಡಾಕೂಟದಿಂದ ಹೊರಗಿಟ್ಟಿರುವುದೇ ಕಾರಣ ಎಂಬುದರಲ್ಲಿ ಅನುಮಾನವೇ ಇಲ್ಲ. ಯಾಕೆಂದರೆ, ಕಳೆದ ಆವೃತ್ತಿಯಲ್ಲಿ ಭಾರತದ ಶೂಟರ್‌ಗಳು ಏಳು ಚಿನ್ನ ಸೇರಿದಂತೆ ೧೬ ಪದಕಗಳನ್ನು ಗೆದ್ದಿದ್ದರು. ಇಷ್ಟೊಂದು ಪದಕಗಳು ಹಾಲಿ ಪಟ್ಟಿಗೆ ಸೇರ್ಪಡೆಯಾಗಿದ್ದರೆ ಭಾರತದ ಕ್ರೀಡಾ ಕ್ಷೇತ್ರದ ಸುಧಾರಣೆ ಎಲ್ಲರ ಅರಿವಿಗೆ ಬಂದಿರುತ್ತಿತ್ತು. ಆದರೆ, ವಾಸ್ತವನ್ನು ಒಪ್ಪಿಕೊಳ್ಳಲೇಬೇಕು. ಆದರೆ, ಲಾನ್‌ಬೌಲ್ಸ್‌ ಎಂಬ ಕ್ರೀಡೆಯಲ್ಲಿ ಭಾರತ ಒಂದು ಚಿನ್ನ ಹಾಗೂ ಒಂದು ಬೆಳ್ಳಿ ಗೆದ್ದಿರುವುದು ಆಶಾದಾಯಕ. ಅಂತೆಯೇ ಅಥ್ಲೆಟಿಕ್ಸ್‌ನಲ್ಲೂ ಸಾಕಷ್ಟು ಸುಧಾರಣೆ ಕಂಡಿದೆ. ಕೆಲವೊಬ್ಬರು ಪದಕ ಗೆದ್ದಿದ್ದರೆ, ಇನ್ನೂ ಕೆಲವರು ಮಿಲಿ ಸೆಕೆಂಡ್‌ಗಳ ಅಂತರದಿಂದ ಪದಕ ಕಳೆದುಕೊಂಡಿದ್ದರು. ಹಿಮಾ ದಾಸ್‌ ಇದಕ್ಕೆ ಸ್ಪಷ್ಟ ಉದಾಹರಣೆ. ಅದೇನೆ ಇದ್ದರೂ, ದಿನದಿಂದ ದಿನಕ್ಕೆ ಬೆಳಗುತ್ತಿರುವ ಭಾರತದ ಕ್ರೀಡಾ ಕ್ಷೇತ್ರದ ಸಾಧನೆ ಬಗ್ಗೆ ಹೆಮ್ಮೆ ಪಡಲೇಬೇಕು. ಅದಕ್ಕಾಗಿ, ೨೦೨೨ರ ಕಾಮನ್ವೆಲ್ತ್‌ ಗೇಮ್ಸ್‌ನಲ್ಲಿ ಭಾರತ ಗೆದ್ದಿರುವ ಪದಕಗಳ ಪಟ್ಟಿಯ ಮೇಲೆ ಕಣ್ಣು ಹಾಯಿಸೋಣ.

ಕುಸ್ತಿ: ಭಾರತಕ್ಕೆ ಹೆಚ್ಚು ಚಿನ್ನದ ಪದಕಗಳನ್ನು ತಂದುಕೊಟ್ಟಿರುವುದು ಕುಸ್ತಿ. ಈ ಕ್ರೀಡೆಯ ಸಾಧಕರ ಪಟ್ಟಿ ಇಂತಿದೆ.

ಸಾಕ್ಷಿ ಮಲಿಕ್‌

ಚಿನ್ನ ಗೆದ್ದವರು: ಬಜರಂಗ್ ಪುನಿಯಾ (ಪುರುಷರ 65 ಕೆ.ಜಿ), ಸಾಕ್ಷಿ ಮಲಿಕ್‌ (ಮಹಿಳೆಯರ 62 ಕೆ.ಜಿ), ದೀಪಕ್ ಪುನಿಯಾ (ಪುರುಷರ86 ಕೆ.ಜಿ), ರವಿ ಕುಮಾರ್ ದಹಿಯಾ (ಪುರುಷರ 57 ಕೆ.ಜಿ) ವಿನೇಶ್ ಫೋಗಾಟ್‌ (ಮಹಿಳೆಯರ 53 ಕೆ.ಜಿ) ನವೀನ್ ಕುಮಾರ್‌ (ಪುರುಷರ 74 ಕೆ.ಜಿ). ಬೆಳ್ಳಿ ಗೆದ್ದವರು: ಅಂಶು ಮಲಿಕ್ (ಮಹಿಳೆಯರ 57 ಕೆ.ಜಿ), ಕಂಚು ಗೆದ್ದವರು: ದಿವ್ಯಾ ಕಾಕ್ರನ್‌ (ಮಹಿಳೆಯರ 68 ಕೆ.ಜಿ), ಮೋಹಿತ್ ಗ್ರೇವಾಲ್ (ಪುರುಷರ 125 ಕೆ.ಜಿ) , ಪೂಜಾ ಗೆಹ್ಲೋಟ್ (ಮಹಿಳೆಯರ 50 ಕೆ.ಜಿ), ಪೂಜಾ ಸಿಹಾಗ್ (ಮಹಿಳೆಯರ 76 ಕೆ.ಜಿ)

ಅಥ್ಲೆಟಿಕ್ಸ್: ಅಥ್ಲೆಟಿಕ್ಸ್‌ನಲ್ಲಿ ಭಾರತ ಈ ಸಲ ಸುಧಾರಣೆ ಕಂಡಿದ್ದು, ಭವಿಷ್ಯದಲ್ಲಿ ಇನ್ನಷ್ಟು ಪದಕಗಳನ್ನು ಗೆಲ್ಲುವ ಭರವಸೆ ಮೂಡಿಸಿದೆ.

ಎಲ್ದೋಸ್‌ ಪಾಲ್‌

ಚಿನ್ನ ಗೆದ್ದವರು: ಎಲ್ದೋಸ್ ಪಾಲ್(ಪುರುಷರ ಟ್ರಿಪಲ್ ಜಂಪ್). ಬೆಳ್ಳಿ ಗೆದ್ದವರು: ಅಬ್ದುಲ್ಲಾ ಅಬೂಬಕರ್ಪು (ಪುರುಷರ ಟ್ರಿಪಲ್ ಜಂಪ್), ಅವಿನಾಶ್ ಸಾಬ್ಲೆ (ಪುರುಷರ 3000ಮೀ ಸ್ಟೀಪಲ್‌ಚೇಸ್), ಪ್ರಿಯಾಂಕಾ ಗೋಸ್ವಾಮಿ (ಮಹಿಳೆಯರ 10 ಕಿಮೀ ರೇಸ್‌ವಾಕ್‌), ಎಂ ಶ್ರೀಶಂಕರ್ (ಪುರುಷರ ಲಾಂಗ್ ಜಂಪ್), ತೇಜಸ್ವಿನ್ ಶಂಕರ್ (ಪುರುಷರ ಹೈ ಜಂಪ್). ಕಂಚು ಗೆದ್ದವರು: ಅನ್ನು ರಾಣಿ (ಮಹಿಳೆಯರ ಜಾವೆಲಿನ್ ಥ್ರೋ), ಸಂದೀಪ್ ಕುಮಾರ್ (ಪುರುಷರ 10 ಕಿ.ಮೀ ರೇಸ್‌ ವಾಕ್‌_

ಬ್ಯಾಡ್ಮಿಂಟನ್: ಭಾರತದ ಜನಪ್ರಿಯ ಆಟ. ಈ ಕ್ಷೇತ್ರದ ಕ್ರೀಡಾಪಟುಗಳು ವಿಶ್ವ ಮಟ್ಟದಲ್ಲಿ ತಮ್ಮ ಸಾಮರ್ಥ್ಯ ಸಾಬೀತು ಮಾಡುತ್ತಿದ್ದು, ಇದೀಗ ಕಾಮನ್ವೆಲ್ತ್‌ನಲ್ಲೂ ಮಿಂಚಿದ್ದಾರೆ.

ಪಿ ವಿ ಸಿಂಧೂ

ಬಂಗಾರ ಗೆದ್ದವರು : ಪಿ. ವಿ ಸಿಂಧೂ (ಮಹಿಳೆಯರ ಸಿಂಗಲ್ಸ್) , ಲಕ್ಷ್ಯ ಸೇನ್ (ಪುರುಷರ ಸಿಂಗಲ್ಸ್), ಸಾತ್ವಿಕ್ ಸಾಯಿರಾಜ್ ಮತ್ತು ಚಿರಾಗ್ ಶೆಟ್ಟಿ (ಪುರುಷರ ಡಬಲ್ಸ್). ಬೆಳ್ಳಿ ಗೆದ್ದವರು : ಕಿಡಂಬಿ ಶ್ರೀಕಾಂತ್ (ಪುರುಷರ ಸಿಂಗಲ್ಸ್‌), ಸಾತ್ವಿಕ್ ಸಾಯಿರಾಜ್, ಬಿ ಸುಮೀತ್ ರೆಡ್ಡಿ, ಲಕ್ಷ್ಯ ಸೇನ್, ಚಿರಾಗ್ ಶೆಟ್ಟಿ, ತ್ರಿಸಾ ಜೊಲ್ಲಿ, ಆಕರ್ಷಿ ಕಶ್ಯಪ್, ಅಶ್ವಿನಿ ಪೊನ್ನಪ್ಪ, ಗಾಯತ್ರಿ ಗೋಪಿಚಂದ್, ಪಿ.ವಿ ಸಿಂಧೂ (ಮಿಶ್ರ ತಂಡ). ಕಂಚು ಗೆದ್ದವರು: ತ್ರಿಸಾ ಜೊಲ್ಲಿ ಮತ್ತು ಗಾಯತ್ರಿ ಗೋಪಿಚಂದ್ (ಮಹಿಳೆಯರ ಡಬಲ್ಸ್) ಕಿಡಂಬಿ ಶ್ರೀಕಾಂತ್ (ಪುರುಷರ ಸಿಂಗಲ್ಸ್).

ಬಾಕ್ಸಿಂಗ್: ಭಾರತಕ್ಕೆ ಪದಕಗಳ ಸುರಿಮಳೆಗೈದ ಇನ್ನೊಂದು ಸ್ಪರ್ಧೆ ಬಾಕ್ಸಿಂಗ್‌. ಕುಸ್ತಿಯಂತೆ ಬಾಕ್ಸಿಂಗ್‌ನಲ್ಲೂ ಭಾರತ ಆಟಗಾರ ವಿಶ್ವ ಮಟ್ಟದಲ್ಲಿ ಪ್ರಭಾವ ಬೀರುತ್ತದೆ.

ನಿಖತ್‌ ಜರೀನ್‌


ಬಂಗಾರ ಗೆದ್ದವರು: ನಿಖತ್ ಜರೀನ್ (ಮಹಿಳೆಯರ 50 ಕೆ.ಜಿ), ನೀತೂ ಗಂಗಾಸ್‌ (ಮಹಿಳೆಯರ 48 ಕೆ.ಜಿ), ಅಮಿತ್ ಪಂಘಾಲ್‌ (ಪುರುಷರ 51 ಕೆ.ಜಿ), ಬೆಳ್ಳಿ ಗೆದ್ದವರು: ಸಾಗರ್ ಅಹ್ಲಾವತ್ (ಪುರುಷರ 92 ಕೆ.ಜಿ). ಕಂಚು ಗೆದ್ದವರು: ರೋಹಿತ್ ಟೋಕಸ್‌ (ಪುರುಷರ 67 ಕೆ.ಜಿ), ಜಾಸ್ಮಿನ್‌ (ಮಹಿಳೆಯರ 60 ಕೆ.ಜಿ), ಮೊಹಮ್ಮದ್ ಹುಸಾಮುದ್ದೀನ್ (ಪುರುಷರ 57 ಕೆ.ಜಿ).

ವೇಟ್​ಲಿಫ್ಟಿಂಗ್: ಈ ಸ್ಪರ್ಧೆಯಲ್ಲಿ ಹಲವು ಪದಕಗಳು ಭಾರತಕ್ಕೆ ಬರಲಿವೆ ಎಂದು ಮೊದಲೇ ನಿರೀಕ್ಷಿಸಲಾಗಿತ್ತು. ಅದು ನಿಜವಾಗಿದೆ. ಬರ್ಮಿಂಗ್ಹಮ್‌ನಲ್ಲಿ ಈ ಕ್ರೀಡೆಯ ಸಾಧಕರು ಇವರು.

ಮೀರಾ ಬಾಯಿ ಚಾನು

ಚಿನ್ನ ಗೆದ್ದವರು : ಮೀರಾಬಾಯಿ ಚಾನು–(ಮಹಿಳೆಯರ 49 ಕೆ.ಜಿ), ಜೆರೆಮಿ ಲಾಲ್‌ರಿನುಂಗಾ (ಪುರುಷರ 67 ಕೆ.ಜಿ), ಅಚಿಂತಾ ಶೆಯುಲಿ (ಪುರುಷರ 73 ಕೆ.ಜಿ) ಬೆಳ್ಳಿ ಗೆದ್ದವರು: ಸಂಕೇತ್ ಮಹದೇವ್‌ ಸರ್ಗರ್ (ಪುರುಷರ 55 ಕೆ.ಜಿ), ಬಿಂದ್ಯಾರಾಣಿ ದೇವಿ (ಮಹಿಳೆಯರ 55 ಕೆ.ಜಿ), ವಿಕಾಸ್ ಠಾಕೂರ್ (ಪುರುಷರ 96 ಕೆ.ಜಿ) ಕಂಚು ಗೆದ್ದವರು: ಗುರುರಾಜ ಪೂಜಾರಿ (ಪುರುಷರ 61 ಕೆ.ಜಿ), ಹರ್ಜಿಂದರ್ ಕೌರ್–(ಮಹಿಳೆಯರ 71 ಕೆ.ಜಿ),–ಲವ್‌ಪ್ರೀತ್‌ ಸಿಂಗ್‌ (ಪುರುಷರ 109 ಕೆ.ಜಿ), ಗುರುದೀಪ್ ಸಿಂಗ್ (ಪುರುಷರ 109 ಕೆ.ಜಿ).

ಕ್ರಿಕೆಟ್ ತಂಡಕ್ಕೆ ಬೆಳ್ಳಿ : ಆಸ್ಟ್ರೇಲಿಯಾ ವಿರುದ್ಧ ಫೈನಲ್‌ನಲ್ಲಿ ಸೋತು ರಜತ ಪದಕ ಗೆದ್ದ ಮಹಿಳೆಯರ ಟಿ೨೦ ಸದಸ್ಯರು ಇವರು..

ಮಹಿಳೆಯರ ಟಿ೨೦ ತಂಡ

ಹರ್ಮನ್​ಪ್ರೀತ್ ಕೌರ್, ಸ್ಮೃತಿ ಮಂಧಾನಾ, ತಾನಿಯಾ ಭಾಟಿಯಾ, ಯಸ್ತಿಕಾ ಭಾಟಿಯಾ, ಹರ್ಲೀನ್ ದೇವಲ್, ರಾಜೇಶ್ವರಿ ಗಾಯಕ್ವಾಡ್, ಸಬ್ಬಿನೇನಿ ಮೇಘನಾ, ಸ್ನೇಹ್‌ ರಾಣಾ, ಜೆಮಿಮಾ ರೋಡ್ರಿಗಸ್, ದೀಪ್ತಿ ಶರ್ಮಾ, ಮೇಘನಾ ಸಿಂಗ್, ರೇಣುಕಾ ಸಿಂಗ್ ಠಾಕೂರ್, ಪೂಜಾ ವಸ್ತ್ರಾಕರ್, ರಾಧಾ ಯಾದವ್‌.

ಪುರುಷರ ಹಾಕಿ ತಂಡಕ್ಕೆ ಬೆಳ್ಳಿ : ಆಸ್ಟ್ರೇಲಿಯಾ ವಿರುದ್ಧ ಫೈನಲ್‌ನಲ್ಲಿ ೦-೭ ಗೋಲ್‌ಗಳಿಂದ ಸೋತು ರಜತ ಪದಕ ತಮ್ಮದಾಗಿಸಿಕೊಂಡ ಭಾರತ ಹಾಕಿ ತಂಡದ ಸದಸ್ಯರು ಇವರು…

ಪುರುಷರ ಹಾಕಿ ತಂಡ

ಮನ್‌ಪ್ರೀತ್ ಸಿಂಗ್, ಹರ್ಮನ್‌ಪ್ರೀತ್ ಸಿಂಗ್, ಜರ್ಮನ್‌ಪ್ರೀತ್ ಸಿಂಗ್, ಅಭಿಷೇಕ್ ನೈನ್, ಸುರೇಂದರ್ ಕುಮಾರ್, ಹಾರ್ದಿಕ್ ಸಿಂಗ್, ಗುರ್ಜಂತ್ ಸಿಂಗ್, ಮನದೀಪ್ ಸಿಂಗ್, ಕ್ರಿಶನ್ ಬಹದ್ದೂರ್ ಪಾಠಕ್, ಲಲಿತ್ ಕುಮಾರ್ ಉಪಾಧ್ಯಾಯ, ಪಿ.ಆರ್ ಶ್ರೀಜೇಶ್, ನೀಲಕಂಠ ಶರ್ಮಾ, ಶಂಶೇರ್ ಸಿಂಗ್, ವರುಣ್ ಕುಮಾರ್, ಆಕಾಶದೀಪ್ ಸಿಂಗ್, ಅಮಿತ್ ರೋಹಿದಾಸ್, ಜಿಗರಾಜ್ ಸಿಂಗ್, ವಿವೇಕ್ ಸಾಗರ್ ಪ್ರಸಾದ್.

ಕಂಚು ಗೆದ್ದ ಮಹಿಳಾ ಹಾಕಿ ತಂಡ : ಕಂಚಿನ ಪದಕದ ಪಂದ್ಯದಲ್ಲಿ ನ್ಯೂಜಿಲೆಂಡ್‌ ತಂಡವನ್ನು ಪೆನಾಲ್ಟಿ ಶೂಟೌಟ್‌ ಗೋಲ್‌ ಮೂಲಕ ಸೋಲಿಸಿ ಕಂಚು ಗೆದ್ದ ಭಾರತ ಮಹಿಳೆಯರ ತಂಡದ ಸದಸ್ಯರು ಇವರು…

ಮಹಿಳೆಯರ ಹಾಕಿ ತಂಡ

ಸವಿತಾ ಪುನಿಯಾ, ಗುರ್ಜಿತ್ ಕೌರ್, ದೀಪ್ ಗ್ರೇಸ್ ಎಕ್ಕಾ, ಮೋನಿಕಾ, ಸೋನಿಕಾ, ಶರ್ಮಿಳಾ ದೇವಿ, ನಿಕ್ಕಿ ಪ್ರಧಾನ್, ರಜನಿ ಎಟಿಮಾರ್ಪು, ಸಂಗೀತಾ ಕುಮಾರಿ, ನಿಶಾ, ವಂದನಾ ಕಟಾರಿಯಾ, ಉದಿತಾ, ಲಾಲ್‌ರೆಮ್ಸಿಯಾಮಿ, ಜ್ಯೋತಿ, ನವನೀತ್ ಕೌರ್, ಸುಶೀಲಾ ಚಾನು, ಸಲಿಮಾ ಟೆಟೆ.

ಜುಡೊ: ಮಾರ್ಷಲ್‌ ಆರ್ಟ್‌ ಗುಂಪಿಗೆ ಸೇರಿದ ಈ ಕ್ರೀಡೆಯಲ್ಲೂ ಭಾರತ ಭರವಸೆ ಮೂಡಿಸಿದೆ.

ಸುಶೀಲಾ ದೇವಿ

ಬೆಳ್ಳಿ ಗೆದ್ದವರು: ಸುಶೀಲಾ ದೇವಿ ಲಿಕ್ಮಾಬಮ್ (ಮಹಿಳೆಯರ 48 ಕೆ.ಜಿ), ತುಲಿಕಾ ಮಾನ್ (ಮಹಿಳೆಯರ 78 ಕೆ.ಜಿ) ಕಂಚು ಗೆದ್ದವರು: ವಿಜಯ್ ಕುಮಾರ್ ಯಾದವ್ (ಪುರುಷರ 60 ಕೆ.ಜಿ)

ಲಾನ್ ಬೌಲ್ಸ್: ಮೊಟ್ಟ ಮೊದಲ ಬಾರಿಗೆ ಈ ಕ್ರೀಡೆಯಲ್ಲಿ ಭಾರತ ಸಾಧನೆ ಮಾಡಿದೆ. ಸಾಧಕರು ಇವರು..

ಲಾನ್‌ ಬೌಲ್ಸ್‌ ಮಹಿಳೆಯರ ತಂಡ

ಚಿನ್ನ ಗೆದ್ದವರು : ಮಹಿಳೆಯರ ಫೋರ್‌ ತಂಡದ ಸದಸ್ಯರಾದ ಲವ್ಲಿ ಚೌಬೆ, ರೂಪಾ ರಾಣಿ ಟಿರ್ಕಿ, ನೈನ್ಮೋನಿ ಸೈಕಿಯಾ, ಪಿಂಕಿ. ಬೆಳ್ಳಿ ಗೆದ್ದವರು : ಪುರುಷರ ಫೋರ್‌ ತಂಡದ ಸದಸ್ಯರಾದ ಚಂದನ್ ಕುಮಾರ್ ಸಿಂಗ್, ದಿನೇಶ್ ಕುಮಾರ್, ನವನೀತ್ ಸಿಂಗ್, ಸುನಿಲ್ ಬಹದ್ದೂರ್.

ಪವರ್ಲಿಫ್ಟಿಂಗ್: ಇಲ್ಲೂ ಒಂದು ಚಿನ್ನ ಗೆದ್ದ ಭಾರತ ಹೊಸ ಸಂಚಲನ ಮೂಡಿಸಿದೆ.
ಚಿನ್ನ ಗೆದ್ದವರು: ಸುಧೀರ್‌ (ಪುರುಷರ ಹೆವಿವೇಟ್)

ಸ್ಕ್ವ್ಯಾಷ್: ಭಾರತ ಈ ಕ್ರೀಡೆಯಲ್ಲಿ ಸ್ವಲ್ಪ ಮಟ್ಟಿಗೆ ಪ್ರಭಾವ ಹೊಂದಿದೆ. ಹೊಸ ಪೀಳಿಗೆಯ ಕ್ರೀಡಾಪಟುಗಳು ಈ ಮಾದರಿಯನ್ನು ಅಪ್ಪಿಕೊಳ್ಳುತ್ತಿದ್ದಾರೆ.

ದೀಪಿಕಾ ಪಲ್ಲಿಕಲ್‌ ಮತ್ತು ಸೌರವ್‌ ಘೋಷಾಲ್‌

ಕಂಚು ಗೆದ್ದವರು : ಸೌರವ್ ಘೋಷಾಲ್‌ (ಪುರುಷರ ಸಿಂಗಲ್ಸ್) ದೀಪಿಕಾ ಪಲ್ಲಿಕಲ್ ಮತ್ತು ಸೌರವ್ ಘೋಷಾಲ್‌ (ಮಿಶ್ರ ಡಬಲ್ಸ್).

ಟೇಬಲ್ ಟೆನಿಸ್ ಮತ್ತು ಪ್ಯಾರಾ ಟೇಬಲ್ ಟೆನಿಸ್: ಹಿಂದಿನ ಹಲವು ಕಾಮನ್ವೆಲ್ತ್‌ನಲ್ಲಿ ಭಾರತದ ಟಿಟಿ ಪಟುಗಳು ಸಾಧನೆ ಮಾಡಿದ್ದಾರೆ. ಅಂತೆಯೇ ಈ ಬಾರಿಯೂ ಉತ್ತಮ ಫಲಿತಾಂಶ ದೊರಕಿದೆ. ಈ ಕ್ರೀಡೆಯ ಸಾಧಕರು ಇಂತಿದ್ದಾರೆ.

ಶ್ರೀಜಾ ಅಕುಲಾ ಮತ್ತು ಅಚಂತಾ ಶರತ್‌ ಕಮಲ್‌

ಚಿನ್ನ ಗೆದ್ದವರು : ಅಚಂತ ಶರತ್ ಕಮಲ್ ಮತ್ತು ಶ್ರೀಜಾ ಅಕುಲಾ (ಮಿಶ್ರ ಡಬಲ್ಸ್), ಅಚಂತ ಶರತ್ ಕಮಲ್, ಸತ್ಯನ್ ಜ್ಞಾನಶೇಖರನ್, ಹರ್ಮೀತ್ ದೇಸಾಯಿ, ಸನಿಲ್ ಶೆಟ್ಟಿ (ಪುರುಷರ ತಂಡ) ಭಾವಿನಾ ಪಟೇಲ್–(ಮಹಿಳೆಯರ ಪ್ಯಾರಾ ಸಿಂಗಲ್ಸ್‌), ಅಚಂತ ಶರತ್ ಕಮಲ್ (ಪುರುಷರ ಸಿಂಗಲ್ಸ್). ಬೆಳ್ಳಿ ಗೆದ್ದವರು: ಅಚಂತ ಶರತ್ ಕಮಲ್ ಮತ್ತು ಸತ್ಯನ್ ಜ್ಞಾನಶೇಖರನ್ (ಪುರುಷರ ಡಬಲ್ಸ್). ಕಂಚು ಗೆದ್ದವರು : ಸತ್ಯನ್ ಜ್ಞಾನಶೇಖರನ್–(ಪುರುಷರ ಸಿಂಗಲ್ಸ್), ಸೋನಾಲ್ ಪಟೇಲ್ (ಮಹಿಳೆಯರ ಪ್ಯಾರಾ ಸಿಂಗಲ್ಸ್).

Continue Reading

ಕಾಮನ್​ವೆಲ್ತ್​ ಗೇಮ್ಸ್​

CWG- 2022 | ಕಾಮನ್ವೆಲ್ತ್‌ ಪದಕ ವಿಜೇತ ಕನ್ನಡಿಗನಿಗೆ ಕೊಲ್ಲೂರು ದೇಗುಲದಲ್ಲಿ ಪುಷ್ಟ ವೃಷ್ಟಿ

ಕೊಲ್ಲೂರು ದೇಗುಲಕ್ಕೆ ಹೋದ ಕಾಮನ್ವೆಲ್ತ್‌ ಗೇಮ್ಸ್‌ ಕಂಚಿನ ವಿಜೇತ ವೇಟ್‌ಲಿಫ್ಟರ್‌ ಗುರುರಾಜ ಪೂಜಾರಿಗೆ ಅವರಿಗೆ ಭಕ್ತರಿಂದ ಪುಷ್ಪವೃಷ್ಟಿ ಮಾಡಿಸಲಾಯಿತು.

VISTARANEWS.COM


on

CWG-2022
Koo

ಕೊಲ್ಲೂರು (ಉಡುಪಿ) : ಬರ್ಮಿಂಗ್ಹಮ್‌ ಕಾಮನ್ವೆಲ್ತ್‌ ಗೇಮ್ಸ್‌ನ ವೇಟ್‌ ಲಿಫ್ಟಿಂಗ್‌ ಸ್ಪರ್ಧೆಯಲ್ಲಿ ಕಂಚಿನ ಪದಕ ಗೆದ್ದಿದ್ದ ಕನ್ನಡಿಗ ಗುರುರಾಜ ಪೂಜಾರಿ ಅವರು ಸೋಮವಾರ ಕೊಲ್ಲೂರಿನ ಮೂಕಾಂಬಿಕಾ ದೇಗುಲಕ್ಕೆ ಬೇಟಿ ನೀಡಿದ್ದ ವೇಳೆ ಸ್ಥಳದಲ್ಲಿದ್ದ ಸಾರ್ವಜನಿಕರು ಅವರಿಗೆ ಪುಷ್ಪ ವೃಷ್ಟಿ ಮಾಡಿ ಅಭಿನಂದಿಸಿದರು.

ಗುರುರಾಜ ಪೂಜಾರಿ ಅವರು ಕಾಮನ್ವೆಲ್ತ್‌ ಗೇಮ್ಸ್‌ನಲ್ಲಿ ಭಾರತಕ್ಕೆ ಎರಡನೇ ಪದಕ ತಂದುಕೊಟ್ಟವರು. ಅಂತೆಯೇ ಅವರು ೨೦೧೮ರ ಕಾಮನ್ವೆಲ್ತ್‌ ಗೇಮ್ಸ್‌ನಲ್ಲಿಯೂ ಬೆಳ್ಳಿಯ ಪದಕ ಗೆದ್ದುಕೊಂಡಿದ್ದರು. ಹೀಗೆ ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಭಾರತದ ಕೀರ್ತಿ ಪತಾಕೆಯನ್ನು ಹಾರಿಸುತ್ತಿರುವ ಕನ್ನಡಿಗನಿಗೆ ಕೊಲ್ಲೂರಿನ ಜನತೆ ಅಕ್ಕರೆ ತೋರಿದರು.

ಗುರುರಾಜ ಅವರು ದೇವಳದ ಒಳಾಂಗಣ ಪ್ರವೇಶ ಮಾಡಿದಾಗ ಜೈಕಾರ ಕೂಗಿದರಲ್ಲದೆ, ಪುಷ್ಪ ವೃಷ್ಟಿ ಮಾಡಿ ಅಭಿನಂದಿಸಿದರು. ಬಳಿಕ ದೇಗುಲದ ವತಿಯಿಂದ ಕಾಮನ್ವೆಲ್ತ್‌ ವೀರನಿಗೆ ಅಭಿನಂದನೆ ಮಾಡಲಾಯಿತು.

ಗುರುರಾಜ ಪೂಜಾರಿ ಕುಂದಾಪುರ ಸಮೀಪದ ಚಿತ್ತೂರಿನ‌ ನಿವಾಸಿ. ಎಸ್‌ಡಿಎಂ ಶಿಕ್ಷಣ ಸಂಸ್ಥೆಯ ಹಳೆ ವಿದ್ಯಾರ್ಥಿಯಾಗಿರುವ ಅವರು ಬಾಲ್ಯದಿಂದಲೇ ಕ್ರೀಡೆಯ ಕಡೆಗೆ ಒಲವು ಹೊಂದಿದ್ದರು.

ಇದನ್ನೂ ಓದಿ | CWG-2022 | ಕಂಚು ಗೆದ್ದ ಗುರುರಾಜ ಪೂಜಾರಿ ಮನೆಯಲ್ಲಿ ಸಂಭ್ರಮ

Continue Reading

ಕಾಮನ್​ವೆಲ್ತ್​ ಗೇಮ್ಸ್​

CWG- 2022 | ಆಸ್ಟ್ರೇಲಿಯಾ ತಂಡಕ್ಕೆ ಶರಣಾದ ಭಾರತ ತಂಡಕ್ಕೆ ಬೆಳ್ಳಿ ಪದಕ

ಆಸ್ಟ್ರೇಲಿಯಾ ತಂಡದ ವಿರುದ್ಧ ಫೈನಲ್‌ ಪಂದ್ಯದಲ್ಲಿ 0-7 ಗೋಲ್‌ಗಳಿಂದ ಸೋತ ಭಾರತ ತಂಡ ಬೆಳ್ಳಿ ಪದಕವನ್ನು ಗೆದ್ದುಕೊಂಡಿದೆ.

VISTARANEWS.COM


on

CWG-2022
Koo

ಬರ್ಮಿಂಗ್ಹಮ್‌ : ಕಾಮನ್ವೆಲ್ತ್‌ ಗೇಮ್ಸ್‌ನ ಪುರುಷರ ಹಾಕಿಯ ಫೈನಲ್‌ ಪಂದ್ಯದಲ್ಲಿ ಭಾರತ ತಂಡ ಆಸ್ಟ್ರೇಲಿಯಾ ವಿರುದ್ಧ ೭-೦ ಗೋಲ್‌ಗಳ ಹೀನಾಯ ಸೋಲಿಗೆ ಒಳಗಾಗಿದೆ. ಇದರೊಂದಿಗೆ ಮನ್‌ಪ್ರೀತ್‌ ಬಳಗ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟಿತು. ಬರ್ಮಿಂಗ್ಹಮ್‌ನಲ್ಲಿ ಭಾರತದ ಪಾಲಿನ ಕೊನೇ ಸ್ಪರ್ಧೆ ಇದಾಗಿತ್ತು. ಹೀಗಾಗಿ ರಜತ ಪದಕದೊಂದಿಗೆ ಭಾರತದ ಅಥ್ಲೀಟ್‌ಗಳು ಅಭಿಯಾನ ಮುಗಿಸಿದ್ದಾರೆ.

೧೯೯೮ರಿಂದ ಸತತವಾಗಿ ಕಾಮನ್ವೆಲ್ತ್‌ ಗೇಮ್ಸ್‌ನಲ್ಲಿ ಬಂಗಾರದ ಪದಕ ಗೆಲ್ಲುತ್ತಿರುವ ಆಸ್ಟ್ರೇಲಿಯಾ ತಂಡದ ವಿರುದ್ಧ ಭಾರತ ಹೀನಾಯ ಪ್ರದರ್ಶನ ನೀಡಿತು. ೦-೭ ಅಂತರದಿಂದ ಸೋಲು ಕಾಣುವ ಮೂಲಕ ಬೆಳ್ಳಿಯ ಪದಕವನ್ನು ಅನಿವಾರ್ಯವಾಗಿ ಒಪ್ಪಿಕೊಳ್ಳಬೇಕಾಯಿತು. ಗುಂಪು ಹಂತದಲ್ಲಿ ಗರ್ಜಿಸಿದ್ದ ಭಾರತದ ಆಟಗಾರರು ಪ್ರಶಸ್ತಿ ಸುತ್ತಿನಲ್ಲಿ ಕನಿಷ್ಠ ಪ್ರತಿರೋಧ ಒಡ್ಡಲಿಲ್ಲ. ಹೀಗಾಗಿ ಏಳು ಬಾರಿಯ ಚಾಂಪಿಯನ್‌ ಆಸ್ಟ್ರೇಲಿಯಾ ಸುಲಭವಾಗಿ ಪ್ರಶಸ್ತಿ ಗೆದ್ದುಕೊಂಡಿತು.

ಇದನ್ನೂ ಓದಿ | CWG- 2022 | ಬ್ಯಾಡ್ಮಿಂಟನ್‌ ಡಬಲ್ಸ್‌ನಲ್ಲಿ ಬಂಗಾರ ಗೆದ್ದ ಚಿರಾಗ್‌- ಸಾತ್ವಿಕ್‌ ಜೋಡಿ

Continue Reading
Advertisement
Liquid Nitrogen Paan
ದೇಶ2 mins ago

Liquid Nitrogen Paan: ನೀವು ಲಿಕ್ವಿಡ್ ನೈಟ್ರೋಜನ್‌ ಪಾನ್‌ ಸೇವಿಸ್ತೀರಾ? ಹಾಗಿದ್ರೆ ಎಚ್ಚರ.. ಎಚ್ಚರ

road Accident in Mandya
ಮಂಡ್ಯ9 mins ago

Road Accident : ಬಸ್‌ ಗುದ್ದಿದ ರಭಸಕ್ಕೆ ಕಾರು ಛಿದ್ರ ಛಿದ್ರ; ಚಾಲಕ ಸ್ಪಾಟ್‌ ಡೆತ್‌, ನಾಲ್ವರಿಗೆ ಗಾಯ

CET result only after II PU 2nd exam Published on May 30 or 31
ಶಿಕ್ಷಣ9 mins ago

CET Result: ದ್ವಿತೀಯ ಪಿಯು 2ನೇ ಪರೀಕ್ಷೆ ಬಳಿಕವೇ ಸಿಇಟಿ ಫಲಿತಾಂಶ; ಮೇ 30 ಅಥವಾ 31ಕ್ಕೆ ಪ್ರಕಟ?

pretha maduve
ಧಾರ್ಮಿಕ11 mins ago

Pretha Maduve: ವಧುವಿನ ಆತ್ಮಕ್ಕೆ ದೊರೆತ ವರ, ಆಷಾಢದಲ್ಲಿ ʻಪ್ರೇತ ಮದುವೆ’ ಫಿಕ್ಸ್

Kannada New Movie Hondisi Bareyiri in youtube
ಸಿನಿಮಾ23 mins ago

Kannada New Movie: ಯೂಟ್ಯೂಬ್‌ನಲ್ಲಿ ಉಚಿತವಾಗಿ ನೋಡಬಹುದು ʻಹೊಂದಿಸಿ ಬರೆಯಿರಿʼ; ಆದರೆ ಇರಲಿದೆ ಬ್ಯಾಂಕ್ ಡಿಟೇಲ್ಸ್‌!

Prajwal should appear before SIT and face probe says Nikhil Kumaraswamy
ಕರ್ನಾಟಕ31 mins ago

Nikhil Kumaraswamy: ಪ್ರಜ್ವಲ್‌ ಎಸ್‌ಐಟಿ ಮುಂದೆ ಹಾಜರಾಗಿ ತನಿಖೆ ಎದುರಿಸುವುದೇ ಸೂಕ್ತ: ನಿಖಿಲ್‌ ಕುಮಾರಸ್ವಾಮಿ

Karnataka Rain
ಮಳೆ34 mins ago

Karnataka Rain : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

Survival Story
ವಿದೇಶ44 mins ago

Survival Story: ಆ 17 ದಿನಗಳು…ಥೈಲ್ಯಾಂಡ್‌ನ ಥಾಮ್ ಲುವಾಂಗ್ ಗುಹೆಯಲ್ಲಿ ಸಿಕ್ಕಿಬಿದ್ದ 13 ಮಂದಿಯ ರಕ್ಷಣೆಯ ರೋಚಕ ಕಹಾನಿ

Lok Sabha Election 2024
ದೇಶ45 mins ago

Lok Sabha Election 2024: ರ್‍ಯಾಲಿಯಲ್ಲಿ ಕಾಲ್ತುಳಿತದ ಸ್ಥಿತಿ ನಿರ್ಮಾಣ; ಭಾಷಣ ಮಾಡದೇ ವೇದಿಕೆಯಿಂದ ತೆರಳಿದ ರಾಹುಲ್‌, ಅಖಿಲೇಶ್‌

ಲಕ್ಕೂರು ಆನಂದ lakkuru Anand
ಶ್ರದ್ಧಾಂಜಲಿ1 hour ago

ಕೇಂದ್ರ ಸಾಹಿತ್ಯ ಅಕಾಡೆಮಿ ಪುರಸ್ಕೃತ ಕವಿ ಲಕ್ಕೂರು ಆನಂದ ನಿಧನ, ಅನುಮಾನಾಸ್ಪದ ಸಾವು ಕೇಸು

Sharmitha Gowda in bikini
ಕಿರುತೆರೆ8 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ7 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ7 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ6 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ8 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ7 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ5 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ6 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Rain
ಮಳೆ34 mins ago

Karnataka Rain : ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಸಮುದ್ರಕ್ಕಿಳಿಯದಂತೆ ಮೀನುಗಾರರಿಗೆ ಎಚ್ಚರಿಕೆ

Karnataka Rain
ಮಳೆ22 hours ago

Karnataka Rain : ಒಂದೇ ಮಳೆಗೆ ಹೊಳೆಯಂತಾದ ಬೆಂಗಳೂರು ರಸ್ತೆಗಳು! ಕಳಸದಲ್ಲೂ ಮುಂದುವರಿದ ಅಬ್ಬರ

Karnataka rain
ಮಳೆ23 hours ago

Karnataka Rain : ವಿಜಯನಗರದಲ್ಲಿ ಸಿಡಿಲಿಗೆ ಜಾನುವಾರು ಬಲಿ; ಬೆಂಗಳೂರು ಸೇರಿ ಹಲವೆಡೆ ಭಾರಿ ಮಳೆ

Karnataka Rain
ಮಳೆ1 day ago

Karnataka Rain: ಧಾರಾಕಾರ ಮಳೆಗೆ ಕಾಂಪೌಂಡ್ ಕುಸಿದು 4 ಬೈಕ್‌ಗಳು ಜಖಂ; ಮದುವೆ ಮಂಟಪಕ್ಕೆ ನುಗ್ಗಿದ ನೀರು‌

Prajwal Revanna Case JDS calls CD Shivakumar pen drive gang
ರಾಜಕೀಯ3 days ago

Prajwal Revanna Case: CD ಶಿವಕುಮಾರ್ ಪೆನ್ ಡ್ರೈವ್ ಗ್ಯಾಂಗ್ ಎಂದ ಕುಟುಕಿದ ಜೆಡಿಎಸ್‌!

Karnataka weather Forecast
ಮಳೆ3 days ago

Karnataka Weather : ಮೈಸೂರು, ಮಂಡ್ಯ ಸೇರಿ ಈ 7 ಜಿಲ್ಲೆಗಳಲ್ಲಿ ವ್ಯಾಪಕ ಮಳೆ ಸಂಭವ

Dina Bhavishya
ಭವಿಷ್ಯ3 days ago

Dina Bhavishya : ಈ ರಾಶಿಯ ಪ್ರೇಮಿಗಳಿಗೆ ಮನೆಯಿಂದ ಸಿಗುತ್ತೆ ಗ್ರೀನ್‌ ಸಿಗ್ನಲ್‌

Karnataka Weather Forecast
ಮಳೆ4 days ago

Karnataka Weather : ಭಾರಿ ಮಳೆಗೆ ಕೊಟ್ಟೂರು ಬಸ್ ಸ್ಟ್ಯಾಂಡ್‌ ಜಲಾವೃತ; ‌ ತಾಯಿ-ಮಗ ಗ್ರೇಟ್‌ ಎಸ್ಕೇಪ್‌

Drowned in water
ಹಾಸನ4 days ago

Drowned in water : ಕೆರೆಯಲ್ಲಿ ಈಜಲು ಹೋದ ನಾಲ್ವರು ನೀರುಪಾಲು; ಓರ್ವ ಬಾಲಕ ಪಾರು

Suspicious Case
ಬೆಂಗಳೂರು4 days ago

Suspicious Case : ಬಾತ್‌ ರೂಂನಲ್ಲಿತ್ತು ಕಾಲೇಜು ಹುಡುಗಿ ಡೆಡ್‌ ಬಾಡಿ; ಕುತ್ತಿಗೆ ಕೊಯ್ದು ಸಾಯಿಸಿದವರು ಯಾರು?

ಟ್ರೆಂಡಿಂಗ್‌