Sushant Singh: ಕೇದಾರನಾಥಕ್ಕೆ ಭೇಟಿ ಕೊಟ್ಟಾಗ ಸುಶಾಂತ್ ಸಿಂಗ್ ನೆನೆದು ಕಣ್ಣೀರಿಟ್ಟ ಸಹೋದರಿ! - Vistara News

ಬಾಲಿವುಡ್

Sushant Singh: ಕೇದಾರನಾಥಕ್ಕೆ ಭೇಟಿ ಕೊಟ್ಟಾಗ ಸುಶಾಂತ್ ಸಿಂಗ್ ನೆನೆದು ಕಣ್ಣೀರಿಟ್ಟ ಸಹೋದರಿ!

Sushant Singh: ನಟ ಸುಶಾಂತ್‌ ಸಿಂಗ್‌ (Sushant Singh Rajput) ಅವರು 2020ರ ಜೂನ್‌ 14ರಂದು ಆತ್ಮಹತ್ಯೆಗೆ ಶರಣಾಗಿದ್ದರು. ಸುಶಾಂತ್ ಸಿಂಗ್ ರಜಪೂತ್ ಅವರ ಕುರಿತಾಗಿ ಅವರ ಸಹೋದರಿಯರು ಯಾವಾಗಲೂ ಮಾಧ್ಯಮಗಳ ಸಂದರ್ಶನದಲ್ಲಿ ಅನೇಕ ವಿಚಾರಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ.ಸಹೋದರಿ ಶ್ವೇತಾ ಸಿಂಗ್ ಕೀರ್ತಿ ಅವರು ತಮ್ಮ ಹೊಸ ಪುಸ್ತಕ “ಪೇನ್: ಎ ಪೋರ್ಟಲ್ ಟು ಎನ್‌ಲೈಟ್‌ಮೆಂಟ್” (Pain: A Portal to Enlightenment) ನಲ್ಲಿ ಸುಶಾಂತ್ ಅವರ ಬಗ್ಗೆ ಬರೆದಿದ್ದಾರೆ. ಪುಸ್ತಕ ಬಿಡುಗಡೆ ಕೂಡ ಆಗಿದೆ.

VISTARANEWS.COM


on

Sushant Singh Rajput's sister cries as she visits Kedarnath
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ದಿವಂಗತ ನಟ ಸುಶಾಂತ್ ಸಿಂಗ್ (Sushant Singh) ರಜಪೂತ್ ಅವರ ಸಹೋದರಿ ಶ್ವೇತಾ ಸಿಂಗ್ ಕೀರ್ತಿ ಅವರು ಕೇದಾರನಾಥಕ್ಕೆ ಭೇಟಿ ಕೊಟ್ಟ ಫೋಟೊಗಳನ್ನು ಶೇರ್‌ ಮಾಡಿಕೊಂಡಿದ್ದಾರೆ. ಜತೆಗೆ ಸಹೋದರ ಸುಶಾಂತ್ ಸಿಂಗ್ ಅವರನ್ನು ನೆನೆಸಿ ಭಾವುಕ ಪೋಸ್ಟ್‌ ಶೇರ್‌ ಮಾಡಿದ್ದಾರೆ. ಈ ಮುಂಚೆ ಸುಶಾಂತ್‌ ಅವರು ಕೇದಾರನಾಥಕ್ಕೆ ಭೇಟಿ ಕೊಟ್ಟ ಫೋಟೊಗಳನ್ನು ಶೇರ್‌ ಮಾಡಿಕೊಂಡಿದ್ದಾರೆ. ಹಳೆಯ ಫೋಟೊದಲ್ಲಿ ಸುಶಾಂತ್‌ ದೇಗುಲದ ಮುಂದೆ ‘ಸಾಧು ಜತೆ ಪೋಸ್ ನೀಡಿದ್ದಾರೆ.

ನಟ ಸುಶಾಂತ್‌ ಸಿಂಗ್‌ (Sushant Singh Rajput) ಅವರು 2020ರ ಜೂನ್‌ 14ರಂದು ಆತ್ಮಹತ್ಯೆಗೆ ಶರಣಾಗಿದ್ದರು. ಸುಶಾಂತ್ ಸಿಂಗ್ ರಜಪೂತ್ ಅವರ ಕುರಿತಾಗಿ ಅವರ ಸಹೋದರಿಯರು ಯಾವಾಗಲೂ ಮಾಧ್ಯಮಗಳ ಸಂದರ್ಶನದಲ್ಲಿ ಅನೇಕ ವಿಚಾರಗಳನ್ನು ಹಂಚಿಕೊಳ್ಳುತ್ತಲೇ ಇರುತ್ತಾರೆ. ಸುಶಾಂತ್‌ ಸಿಂಗ್‌ ಅವರ ಪರವಾಗಿ ನಿಲ್ಲುತ್ತಾರೆ. ನಾಲ್ಕನೇ ವರ್ಷದ ಪುಣ್ಯತಿಥಿಯಂದು ಸಹೋದರನನ್ನು ನೆನಪಿಸಿಕೊಂಡು ಶ್ವೇತಾ ಹೀಗೆ ಬರೆದಿದ್ದಾರೆ.

“ಇದು ಜೂನ್ 1, ಮತ್ತು ನಾಲ್ಕು ವರ್ಷಗಳ ಹಿಂದೆ ಈ ತಿಂಗಳ 14 ರಂದು ಸುಶಾಂತ್ ಬಾರದ ಲೋಕಕ್ಕೆ ಹೋದ. ಆ ದುರಂತದ ದಿನ ಏನಾಯಿತು ಎಂಬುದರ ಕುರಿತು ನಾವು ಇನ್ನೂ ಉತ್ತರಗಳನ್ನು ಹುಡುಕುತ್ತಲೇ ಇದ್ದೇವೆ. ಇತ್ತೀಚೆಗೆ ಕೇದಾರನಾಥಕ್ಕೆ ಪ್ರಾರ್ಥನೆ ಸಲ್ಲಿಸಲು ಹೋಗಿದ್ದೆ. ಸಹೋದರ ಸುಶಾಂತ್‌ ನೆನಪಾದ. ನಾನು ಕೇದಾರನಾಥಕ್ಕೆ ಇಳಿದ ತಕ್ಷಣ ಕಣ್ಣೀರಿಟ್ಟೆ. ಆ ಕ್ಷಣ ನನ್ನೊಂದಿಗೆ ಅವನು ಇದ್ದಿದ್ದರೆ ಚೆಂದ ಎನಿಸಿತು. .ಅವನು ಧ್ಯಾನಿಸಿದ ಸ್ಥಳದಲ್ಲಿ ನಾನು ಕುಳಿತು ಧ್ಯಾನಿಸಿದೆ, ಮತ್ತು ಆ ಕ್ಷಣಗಳಲ್ಲಿ, ಅವನು ಇನ್ನೂ ನನ್ನೊಂದಿಗೆ, ನನ್ನೊಳಗೆ, ನನ್ನ ಮೂಲಕ ವಾಸಿಸುತ್ತಿದ್ದಾನೆ ಎಂದು ನಾನು ಭಾವಿಸಿದೆʼʼಎಂದು ಬರೆದುಕೊಂಡಿದ್ದಾರೆ.

ಇದನ್ನೂ ಓದಿ: Adah Sharma: ಸುಶಾಂತ್ ಸಿಂಗ್ ರಜಪೂತ್  ಆತ್ಮಹತ್ಯೆ ಮಾಡಿಕೊಂಡ ಮನೆ ಖರೀದಿಸಿದ್ರಾ `ದಿ ಕೇರಳ ಸ್ಟೋರಿ’ ನಟಿ?

ಸುಶಾಂತ್‌ ಅವರು ಕೇದಾರನಾಥ್ (2018) ಸಿನಿಮಾದಲ್ಲಿ ಸಾರಾ ಅಲಿ ಖಾನ್ ಅವರೊಂದಿಗೆ ನಟಿಸಿದ್ದರು. ಸುಶಾಂತ್‌ ಕೇದಾರನಾಥ್‌ಗೆ ಆಗಗ ಶೂಟಿಂಗ್‌ಗಾಗಿ ಹೋಗುತ್ತಲೇ ಇರುತ್ತಿದ್ದರು.

ಸಹೋದರಿ ಶ್ವೇತಾ ಸಿಂಗ್ ಕೀರ್ತಿ ಅವರು ತಮ್ಮ ಹೊಸ ಪುಸ್ತಕ “ಪೇನ್: ಎ ಪೋರ್ಟಲ್ ಟು ಎನ್‌ಲೈಟ್‌ಮೆಂಟ್” (Pain: A Portal to Enlightenment) ನಲ್ಲಿ ಸುಶಾಂತ್ ಅವರ ಬಗ್ಗೆ ಬರೆದಿದ್ದಾರೆ. ಪುಸ್ತಕ ಬಿಡುಗಡೆ ಕೂಡ ಆಗಿದೆ.

ಶ್ವೇತಾ ಸಿಂಗ್ ಕೀರ್ತಿ ಅವರು ತಮ್ಮ ಪುಸ್ತಕಲ್ಲಿ ಸುಶಾಂತ್‌ ಅವರ ವೃತ್ತಿ ಜೀವನ, ವೈಯಕ್ತಿಕ ಜೀವನ ಬಗ್ಗೆ ಬರೆದುಕೊಂಡಿದ್ದಾರೆ. ʻಸುಶಾಂತ್ ಬಾಲಿವುಡ್‌ನಲ್ಲಿ ಬ್ಯುಸಿಯಾಗಿಬಿಟ್ಟಿದ್ದ. ನನಗೆ ಅವನನ್ನು ಭೇಟಿ ಮಾಡಲು ಸಾಧ್ಯವಾಗುತ್ತಿರಲ್ಲಿಲ್ಲ. 2014 ರಿಂದ 2017 ರವರೆಗೆ ನಾನು ಪ್ರತಿ ವರ್ಷ ಭಾರತಕ್ಕೆ ತೆರಳಿ ಅವನನ್ನು ಭೇಟಿಯಾಗುತ್ತಿದ್ದೆ. ದುರದೃಷ್ಟವಶಾತ್, 2018 ಮತ್ತು 2019ರಲ್ಲಿ ಭೇಟಿ ನೀಡಲು ಸಾಧ್ಯವಾಗಲಿಲ್ಲ. ಜನವರಿ 2020ರಲ್ಲಿ ಪ್ಲ್ಯಾನ್‌ ಕೂಡ ಮಾಡಿಕೊಂಡಿದ್ದೆ. ಕೊನೆಗೂ ಅವನನ್ನು ಮೀಟ್‌ ಆಗಲು ಆಗಲೇ ಇಲ್ಲ. 2020 ರ ಜೂನ್‌ 14ರಂದು ಅವನು ಬಾರದ ಲೋಕಕ್ಕೆ ಹೋಗೆ ಬಿಟ್ಟಿದ್ದ. ಸಾವಿಗೂ ಮುಂಚೆ ನಾಲ್ಕು ದಿನಗಳ ಮೊದಲು ನಾನು ಕಾಲ್‌ ಮಾಡಿದ್ದೆ, ಅಮೆರಿಕಾಗೆ ಬರುವಂತೆ ಹೇಳಿದ್ದೆ. ಜೂನ್‌ 13ರ ರಾತ್ರಿ ನನಗೆ ಸುಶಾಂತ್‌ ಮೃತಪಟ್ಟ ಸುದ್ದಿ ತಿಳಿಯಿತು. ನಾನು ಕೂಗಾಡಲಿಲ್ಲ. ಅಳಲಿಲ್ಲ. ಅಲ್ಲಿಯೇ ಆಘಾತದಲ್ಲಿ ಕುಸಿದು ಬಿದ್ದೆʼʼ ಎಂದು ಪುಸ್ತಕದಲ್ಲಿ ಉಲ್ಲೇಖಿಸಿದ್ದಾರೆ.

ಸುಶಾಂತ್‌ ಸಿಂಗ್‌ ಅವರು ʻಕಾಯ್‌ ಪೋ ಚೆʼ, ʻಎಂಎಸ್ ಧೋನಿʼ, ʻದಿ ಅನ್‌ ಟೋಲ್ಡ್ ಟೇಲ್ʼ, ʻಕೇದಾರನಾಥ್ʼ ಮತ್ತು ʻಚಿಚೋರೆʼಯಂತಹ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದರು. ಸುಶಾಂತ್ ಅವರ ವೈವಿಧ್ಯಮಯ ಸಿನಿಮಾ ಜೀವನ 2020 ರಲ್ಲಿ ಕೊನೆಗೊಂಡಿತು. 2020ರ ಜೂನ್ 14ರಂದು ಬಾಂದ್ರಾದ ತಮ್ಮ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಾಗ ಅವರ ವಯಸ್ಸು 34 ಅಷ್ಟೇ. ಈ ಸಾವು ದೇಶಾದ್ಯಂತ ಭಾರಿ ಆಘಾತವನ್ನುಂಟು ಮಾಡಿತ್ತು.

ಸುಶಾಂತ್‌ ಸಿಂಗ್‌ ರಜಪೂತ್‌ ಸಾವಿನ ಬಗ್ಗೆ ಹಲವಾರು ಅನುಮಾನಗಳು ಇದ್ದವು. ಚಿತ್ರರಂಗದಲ್ಲಿ ನಡೆಯುತ್ತಿರುವ ಸ್ವಜನ ಪಕ್ಷಪಾತದಿಂದ ಅವರಿಗೆ ಅನ್ಯಾಯವಾಗುತ್ತಿದೆ. ಆ ಕಾರಣಕ್ಕೆ ಪ್ರಾಣವನ್ನೇ ಕಳೆದುಕೊಂಡಿದ್ದಾರೆ ಎನ್ನುವುದು ಒಂದು ಅನುಮಾನವಾದರೆ, ಯಾರೋ ಆತ್ಮೀಯರೇ ಕೊಲೆ ಮಾಡಿದ್ದಾರೆ ಎಂಬ ವಾದವೂ ಇತ್ತು. ಸಾವಿನ ಸುತ್ತ ಮಾದಕ ವ್ಯಸನ, ಡ್ರಗ್ಸ್‌ ಜಾಲ ಮತ್ತು ಅಕ್ರಮ ಹಣ ವರ್ಗಾವಣೆ ಹೀಗೆ ಹಲವು ಸಂಶಯದ ಹುತ್ತಗಳು ಬೆಳೆದಿದ್ದವು. ಸಿಬಿಐ, ಇ.ಡಿ, ಎನ್‌ಸಿಬಿ ಸೇರಿದಂತೆ ಹಲವು ತನಿಖಾ ತಂಡಗಳು ನಾನಾ ಆಯಾಮಗಳಲ್ಲಿ ತನಿಖೆಯನ್ನು ನಡೆಸುತ್ತಿವೆ. ಪೋಸ್ಟ್‌ ಮಾರ್ಟಂ ವರದಿಗಳ ಪ್ರಕಾರ ಸುಶಾಂತ್‌ ಆತ್ಮಹತ್ಯೆಯೇ ಹೌದಾಗಿದ್ದರೂ ಅದರ ಹಿಂದಿನ ಶಕ್ತಿಗಳು, ಸಿನಿಮಾ ರಾಜಕಾರಣ ಹೊರಬರಬೇಕು ಎನ್ನುವುದು ಅಭಿಮಾನಿಗಳ ಆಗ್ರಹವಾಗಿತ್ತು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಬಾಲಿವುಡ್

Munjya Movie: ಸ್ಟಾರ್​ ಕಲಾವಿದರೇ ಇಲ್ಲದೇ ಬರೋಬ್ಬರಿ 100 ಕೋಟಿ ರೂ. ಗಳಿಕೆ ಕಂಡ ʻಮುಂಜ್ಯʼ!

Munjya Movie: ಮುಂಜ್ಯಾʼ ಟೀಸರ್‌ ಒಂದು ನಿಮಿಷ ಇದ್ದು, CGI ಪಾತ್ರವಾದ ಮುಂಜ್ಯನನ್ನು ಪರಿಚಯಿಸಲಾಗಿತ್ತು. ಟೀಸರ್‌ನಲ್ಲಿ ಬಾಲಿವುಡ್ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ಅವರ 2010ರ ಬ್ಲಾಕ್‌ಬಸ್ಟರ್ ಚಿತ್ರ ದಬಾಂಗ್‌ನ ಜನಪ್ರಿಯ ಗೀತೆ ಮುನ್ನಿ ಬದ್ನಾಮ್ ಹುಯಿ ಹಾಡು ಟಿವಿಯಲ್ಲಿ ಪ್ಲೇ ಆಗುತ್ತಿದ್ದಂತೆ ʻಮುಂಜ್ಯಾʼ ಅನಾವರಣ ಆಗಿತ್ತು.

VISTARANEWS.COM


on

Munjya Movie Box Office Collection Rs 100 Cr
Koo

ಬೆಂಗಳೂರು: ಅಭಯ್ ವರ್ಮಾ ಮತ್ತು ಶಾರ್ವರಿ ಅಭಿನಯದ ಹಾರರ್-ಕಾಮಿಡಿ ಚಲನಚಿತ್ರ ʻಮುಂಜ್ಯʼ ಜೂನ್ 7 ರಂದು ತೆರೆ ಕಂಡಿತ್ತು. ಸ್ಟಾರ್​ ಕಲಾವಿದರೇ ಇಲ್ಲದ ಸಿನಿಮಾವೊಂದು ಬರೋಬ್ಬರಿ 100 ಕೋಟಿ ರೂಪಾಯಿ ಕಲೆಕ್ಷನ್​ ಮಾಡಿ ಗಮನ ಸೆಳೆದಿದೆ. ಪ್ರಭಾಸ್​ ನಟನೆಯ ‘ಕಲ್ಕಿ 2898 ಎಡಿ’ (Munjya Movie) ಸಿನಿಮಾ ಇತ್ತೀಚೆಗೆ ಬಿಡುಗಡೆ ಆಯಿತು. ಹಿಂದಿ ಪ್ರೇಕ್ಷಕರ ವಲಯದಲ್ಲಿ ಕೂಡ ಈ ಸಿನಿಮಾ ಸದ್ದು ಮಾಡುತ್ತಿವೆ. ಬಹುತೇಕ ಚಿತ್ರಮಂದಿಗಳನ್ನು ‘ಕಲ್ಕಿ 2898 ಎಡಿ’ ಆವರಿಸಿಕೊಂಡಿದೆ. ಹಾಗಾಗಿ ಈ ಸಿನಿಮಾ ಬಿಡುಗಡೆ ಆದ ನಂತರ ‘ಮುಂಜ್ಯ’ ಕಲೆಕ್ಷನ್​ ಕುಸಿದಿದೆ.

ಇದು ಭಾರತದ ಮೊದಲ CGI ನಾಯಕನನ್ನು ಒಳಗೊಂಡಿರುವ ಸಿನಿಮಾ ಎಂದು. (first computer generated actor) . ಸಿನಿಮಾ ಬಿಡುಗಡೆ ಮುಂಚೆ ಟೀಸರ್‌ ಬಿಡುಗಡೆಯಾಗಿದ್ದರೂ ಅಷ್ಟಾಗಿ ಸದ್ದು ಮಾಡಿರಲಿಲ್ಲ. ಯಾವಾಗ ಥಿಯೇಟರ್‌ನಲ್ಲಿ ರಿಲೀಸ್‌ ಆಯ್ತೋ ಸಿನಿಮಾ ಒಳ್ಳೆಯ ಕಲೆಕ್ಷನ್‌ ಮಾಡಿದೆ.

`ಮುಂಜ್ಯಾʼ ಟೀಸರ್‌ ಒಂದು ನಿಮಿಷ ಇದ್ದು, CGI ಪಾತ್ರವಾದ ಮುಂಜ್ಯನನ್ನು ಪರಿಚಯಿಸಲಾಗಿತ್ತು. ಟೀಸರ್‌ನಲ್ಲಿ ಬಾಲಿವುಡ್ ಸೂಪರ್‌ಸ್ಟಾರ್ ಸಲ್ಮಾನ್ ಖಾನ್ ಅವರ 2010ರ ಬ್ಲಾಕ್‌ಬಸ್ಟರ್ ಚಿತ್ರ ದಬಾಂಗ್‌ನ ಜನಪ್ರಿಯ ಗೀತೆ ಮುನ್ನಿ ಬದ್ನಾಮ್ ಹುಯಿ ಹಾಡು ಟಿವಿಯಲ್ಲಿ ಪ್ಲೇ ಆಗುತ್ತಿದ್ದಂತೆ ʻಮುಂಜ್ಯಾʼ ಅನಾವರಣ ಆಗಿತ್ತು. ʻಮುಂಜ್ಯಾʼ ನಗರಕ್ಕೆ ಪ್ರವೇಶಿಸುವ , ಹಾಗೇ ಟಿವಿ ನೋಡುತ್ತಿದ್ದವ ಏಕಾಏಕಿ ಟಿವಿ ಆಫ್‌ ಮಾಡುವಾಗ ಕೋಪಗೊಂಡ ʻಮುಂಜ್ಯಾʼ ಕೋಣೆಯಲ್ಲಿದ್ದವರ ಮೇಲೆ ಹಲ್ಲೆ ನಡೆಸುವ ಸನ್ನಿವೇಶ ಟೀಸರ್‌ನಲ್ಲಿತ್ತು. ಮೇ 24 ರಂದು ಚಿತ್ರತಂಡ ಟ್ರೈಲರ್‌ ಅನಾವರಣಗೊಳಿಸಲಿದೆ. ಟೀಸರ್‌ ನೋಡಿದರೆ ಹಾರರ್‌ ಜತೆ ಕಾಮಿಡಿ ಕೂಡ ಇತ್ತು.

ಇದನ್ನೂ ಓದಿ: Highest Collection Movie: ಅತೀ ಹೆಚ್ಚು ಗಳಿಕೆ ದಾಖಲಿಸಿದ ಭಾರತದ ಟಾಪ್‌ 10 ಸಿನಿಮಾಗಳಿವು

ಮುಂಜ್ಯ’ ಸಿನಿಮಾಗೆ ಮೊದಲ ದಿನ 4.21 ಕೋಟಿ ರೂಪಾಯಿ ಕಲೆಕ್ಷನ್​ ಆಗಿತ್ತು. ಎರಡನೇ ದಿನ 7.40 ಕೋಟಿ ರೂಪಾಯಿ ಗಳಿಕೆ ಆಯಿತು. ಮೂರನೇ ದಿನ 8.43 ಕೋಟಿ ರೂಪಾಯಿ ಹರಿದುಬಂತು. ನಂತರ ಪ್ರತಿ ದಿನ 3 ಅಥವಾ 4 ಕೋಟಿ ರೂಪಾಯಿ ಗಳಿಸುತ್ತಾ ಈ ಸಿನಿಮಾ ಮುನ್ನುಗ್ಗಿತು. ನಂತರದ ವಾರಾಂತ್ಯದಲ್ಲಿ ಕಲೆಕ್ಷನ್​ ಹೆಚ್ಚಾಯಿತು. 25 ದಿನಗಳ ಯಶಸ್ವಿ ಪ್ರದರ್ಶನ ಕಂಡು ಈ ಸಿನಿಮಾದ ಒಟ್ಟು ಕಲೆಕ್ಷನ್​ 100 ಕೋಟಿ ರೂಪಾಯಿ ಮೀರಿತ್ತು.

ಮುಂಜ್ಯ ಚಿತ್ರವನ್ನು ಆದಿತ್ಯ ಸರ್ಪೋತದಾರ್ ನಿರ್ದೇಶಿಸಿದ್ದಾರೆ ಮತ್ತು ಶಾರ್ವರಿ, ಅಭಯ್ ವರ್ಮಾ, ಮೋನಾ ಸಿಂಗ್ ಮತ್ತು ಬಾಹುಬಲಿ ಚಲನಚಿತ್ರ ಖ್ಯಾತಿಯ ಸತ್ಯರಾಜ್ ಅವರ ಸಮಗ್ರ ತಾರಾಗಣವನ್ನು ಒಳಗೊಂಡಿದೆ. ನಿರೇನ್ ಭಟ್ ಅವರ ಚಿತ್ರಕಥೆ, ಯೋಗೇಶ್ ಚಂಡೇಕರ್ ಸಂಭಾಷಣೆ ಇದೆ. ಸಚಿನ್-ಜಿಗರ್ ಸಂಗೀತ ಸಂಯೋಜಿಸಿದ್ದಾರೆ. ಅಮಿತಾಭ್‌ ಭಟ್ಟಾಚಾರ್ಯ ಸಾಹಿತ್ಯ ಇದೆ. ಮ್ಯಾಡಾಕ್ ಫಿಲ್ಮ್ಸ್ ನಿರ್ಮಾಣದ ಮುಂಜ್ಯವನ್ನು ದಿನೇಶ್ ವಿಜನ್ ಮತ್ತು ಅಮರ್ ಕೌಶಿಕ್ ನಿರ್ಮಿಸಿದ್ದಾರೆ.  ಇದೀಗ ಕಲ್ಕಿ ಬಿಡುಗಡೆಯಾದ ಕಾರಣ ಸಿನಿಮಾ ಕಲೆಕ್ಷನ್‌ನಲ್ಲಿ ಭಾರಿ ಹೊಡೆತ ಬಿದ್ದಿದಂತಾಗಿದೆ.

Continue Reading

ಸಿನಿಮಾ

Highest Collection Movie: ಅತೀ ಹೆಚ್ಚು ಗಳಿಕೆ ದಾಖಲಿಸಿದ ಭಾರತದ ಟಾಪ್‌ 10 ಸಿನಿಮಾಗಳಿವು

Highest Collection Movie: ಭಾರತೀಯ ಸಿನಿಮಾ (Indian Movies) ರಂಗದಲ್ಲಿ ಕೆಲವು ಚಿತ್ರಗಳು ಗಳಿಕೆಯಲ್ಲಿ ವಿಶ್ವ ದಾಖಲೆಯನ್ನೇ ಮಾಡಿದೆ. ಅದರಲ್ಲಿ ಅತಿ ಹೆಚ್ಚು ಗಳಿಕೆಯನ್ನು ಮಾಡಿ ಗಲ್ಲಾ ಪೆಟ್ಟಿಗೆಯಲ್ಲಿ ದಾಖಲೆ ಬರೆದಿರುವ ಹತ್ತು ಸಿನಿಮಾಗಳನ್ನು ಇಂದಿಗೂ ಹಲವು ಮಂದಿ ಪದೇ ಪದೇ ನೋಡುತ್ತಿರುತ್ತಾರೆ. ಆ ಚಿತ್ರಗಳು ಯಾವುದು, ಗಳಿಕೆ ಎಷ್ಟಾಗಿತ್ತು ಎನ್ನುವ ಮಾಹಿತಿ ಇಲ್ಲಿದೆ.

VISTARANEWS.COM


on

By

Highest Collection Movie
Koo

ಭಾರತೀಯ ಸಿನಿಮಾ (Indian Movies) ರಂಗದಲ್ಲಿ ಬಾಲಿವುಡ್ (Highest Collection Movie) ದಾಖಲೆಗಳು ನಿರಂತರವಾಗಿವೆ. ಹಲವಾರು ಚಿತ್ರಗಳು ಸಾರ್ವಕಾಲಿಕವಾಗಿ ಅತಿ ಹೆಚ್ಚು ಗಳಿಕೆಯನ್ನು ಪಡೆದಿವೆ. ದಂಗಲ್‌ (Dangal), ಜವಾನ್ (Jawan), ಪಠಾಣ್ (Pathaan), ಬಜರಂಗಿ ಭಾಯಿಜಾನ್ (Bajrangi Bhaijaan), ಸೀಕ್ರೆಟ್ ಸೂಪರ್‌ಸ್ಟಾರ್ (Secret Superstar), ಪಿಕೆ (PK) ಈ ಚಿತ್ರಗಳು ತೆರೆಗೆ ಬಂದು ಹತ್ತು ವರ್ಷಗಳೇ ಕಳೆದರೂ ಇಂದಿಗೂ ಬಹುತೇಕ ಮಂದಿಯ ಮೆಚ್ಚಿನ ಚಿತ್ರವಾಗಿ ಉಳಿದಿದೆ.

ಭಾರತೀಯ ಸಿನಿಮಾ ರಂಗದಲ್ಲಿ ಕೆಲವು ಚಿತ್ರಗಳು ಗಳಿಕೆಯಲ್ಲಿ ವಿಶ್ವ ದಾಖಲೆಯನ್ನೇ ಮಾಡಿದೆ. ಅದರಲ್ಲಿ ಅತಿ ಹೆಚ್ಚು ಗಳಿಕೆಯನ್ನು ಮಾಡಿ ಗಲ್ಲಾ ಪೆಟ್ಟಿಗೆಯಲ್ಲಿ (box office) ದಾಖಲೆ ಬರೆದಿರುವ ಹತ್ತು ಸಿನಿಮಾಗಳನ್ನು ಇಂದಿಗೂ ಹಲವು ಮಂದಿ ಪದೇ ಪದೇ ನೋಡುತ್ತಿರುತ್ತಾರೆ. ಆ ಚಿತ್ರಗಳು ಯಾವುದು, ಗಳಿಕೆ ಎಷ್ಟಾಗಿತ್ತು ಎನ್ನುವ ಮಾಹಿತಿ ಇಲ್ಲಿದೆ.

1. ದಂಗಲ್

ಕುಸ್ತಿ ಪಟುಗಳಾದ ಗೀತಾ ಫೋಗಟ್ ಮತ್ತು ಬಬಿತಾ ಫೋಗಟ್ ಅವರ ಜೀವನಾಧಾರಿತ ಚಿತ್ರದಲ್ಲಿ ಮಹಾವೀರ್ ಸಿಂಗ್ ಪಾತ್ರಧಾರಿಯಾಗಿ ಆಮೀರ್ ಖಾನ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದರು. 2016ರಲ್ಲಿ ತೆರೆಗೆ ಬಂದ ಈ ಚಿತ್ರ 30 ಕೋಟಿ ರೂ. ಬಜೆಟ್‌ನದ್ದಾಗಿದ್ದು, ವಿಶ್ವಾದ್ಯಂತ ಗಲ್ಲಾ ಪೆಟ್ಟಿಗೆಯಲ್ಲಿ 2,024 ಕೋಟಿ ರೂ. ಗಳಿಸಿ ದಾಖಲೆ ಬರೆದು ಭಾರತೀಯ ಚಿತ್ರರಂಗದಲ್ಲಿ ಅತೀ ಹೆಚ್ಚು ಆದಾಯಗಳಿಸಿದ ಸಿನೆಮಾ ಎಂಬ ಖ್ಯಾತಿಯನ್ನು ಪಡೆದಿದೆ. ಅದರಲ್ಲೂ ಚೀನಾದಲ್ಲಿ ಈ ಸಿನಿಮಾ ಅತಿ ಹೆಚ್ಚು ಆದಾಯವನ್ನು ಗಳಿಸಿದ ಅನ್ಯ ಭಾಷೆಯ ಮೂರನೇ ಸಿನಿಮಾ ಇದು ಎನ್ನುವ ಖ್ಯಾತಿಯೂ ʼದಂಗಲ್ʼ ಚಿತ್ರದ್ದಾಗಿದೆ.


2. ಬಾಹುಬಲಿ 2

ಪ್ರಭಾಸ್ ಅಭಿನಯದ ‘ಬಾಹುಬಲಿ 2’ ಚಿತ್ರ 2012ರಲ್ಲಿ ತೆರೆಗೆ ಬಂದಿದ್ದು, ಎಸ್.ಎಸ್. ರಾಜಮೌಳಿ ಮತ್ತು ವಿ. ವಿಜಯೇಂದ್ರ ಪ್ರಸಾದ್ ಬರೆದು ನಿರ್ದೇಶಿಸಿದ್ದಾರೆ. 250 ಕೋಟಿ ರೂ. ಬಜೆಟ್ ನ ಈ ಚಿತ್ರ ಗಲ್ಲಾ ಪೆಟ್ಟಿಗೆಯಲ್ಲಿ 1,810.60 ಕೋಟಿ ರೂ. ಆದಾಯ ಗಳಿಸಿ ದಾಖಲೆ ಬರೆದಿದೆ. ಅತ್ಯಂತ ಕಡಿಮೆ ಅವಧಿಯಲ್ಲಿ ಹೆಚ್ಚು ಆದಾಯ ಗಳಿಸಿರುವ ಚಿತ್ರ ಎಂಬ ಖ್ಯಾತಿ ಈ ಸಿನೆಮಾದ್ದಾಗಿದೆ. ಚಿತ್ರ ಬಿಡುಗಡೆಯಾದ ಮೊದಲ ಆರು ದಿನದಲ್ಲಿ 789 ಕೋಟಿ ರೂ. ಗಳಿಸಿರುವುದು ಮಾತ್ರವಲ್ಲ 10 ದಿನದಲ್ಲಿ 1 ಸಾವಿರ ಕೋಟಿ ರೂ. ಆದಾಯ ಪಡೆದ ಸಿನೆಮಾ ಇದಾಗಿದೆ.


3. ಆರ್ ಆರ್ ಆರ್

ರಾಮ್ ಚರಣ್ ಮತ್ತು ಜ್ಯೂ. ಎನ್ ಟಿ ಆರ್ ಅಭಿನಯದ ಆರ್ ಆರ್ ಆರ್ ಚಿತ್ರ 2022ರಲ್ಲಿ ತೆರೆಗೆ ಬಂದಿದ್ದು, 550 ಕೋಟಿ ರೂ. ಬಜೆಟ್ ನದ್ದಾಗಿದೆ. ಅತ್ಯಂತ ದುಬಾರಿ ಖರ್ಚು ಮಾಡಿ ನಿರ್ಮಿಸಿರುವ ಈ ಚಿತ್ರ ಆಂಧ್ರ ಪ್ರದೇಶ ಮತ್ತು ತೆಲಂಗಾಣದಲ್ಲಿ 405.9 ಕೋಟಿ ರೂ. ಗಳಿಸಿದೆ. ವಿಶ್ವದಾದ್ಯಂತ 1,387.26 ಕೋಟಿ ರೂ. ಆದಾಯ ಗಳಿಸಿದೆ. ಭಾರತದಲ್ಲಿ ಮೂರನೇ ಅತಿ ಹೆಚ್ಚು ಆದಾಯ ಗಳಿಸಿದ ಚಿತ್ರವಾಗಿ ಮಾತ್ರವಲ್ಲ ತೆಲುಗಿನಲ್ಲಿ ಎರಡನೇ ಅತಿ ಹೆಚ್ಚು ಆದಾಯಗಳಿಸಿರುವ ಚಿತ್ರವಾಗಿ ಗುರುತಿಸಿಕೊಂಡಿದೆ.


4. ಕೆಜಿಎಫ್ ಚಾಪ್ಟರ್ 2

2022ರಲ್ಲಿ ತೆರೆಗೆ ಬಂದ ಯಶ್ ಅಭಿನಯದ ಕನ್ನಡ ಚಿತ್ರ ಕೆಜಿಎಫ್ ಚಾಪ್ಟರ್ 2 ಅನ್ನು ಪ್ರಶಾಂತ್ ನೀಲ್ ಅವರು ನಿರ್ದೇಶಿಸಿದ್ದಾರೆ. ವಿಜಯ ಕಿರಗಂದೂರ್ ನಿರ್ಮಿಸಿದ್ದಾರೆ.

100 ಕೋಟಿ ಬಜೆಟ್‌ನ ಈ ಚಿತ್ರ ಗಲ್ಲಾ ಪೆಟ್ಟಿಗೆಯಲ್ಲಿ 1,250 ಕೋಟಿ ರೂ. ಆದಾಯ ಗಳಿಸಿದೆ. ವಿಶ್ವದಲ್ಲಿ (ಭಾರತೀಯ ಚಿತ್ರ) ನಾಲ್ಕನೇ ಹಾಗೂ ಭಾರತದಲ್ಲಿ ಎರಡನೇ ಅತಿ ಹೆಚ್ಚು ಆದಾಯ ಗಳಿಸಿರುವ ಚಿತ್ರವಾಗಿ ಇದು ಗುರುತಿಸಿಕೊಂಡಿದೆ.

5. ಜವಾನ್

ಶಾರುಖ್ ಖಾನ್ ಅಭಿನಯದ ‘ಜವಾನ್’ ಚಿತ್ರ 2023ರಲ್ಲಿ ತೆರೆಗೆ ಬಂದಿದ್ದು, 1,148.32 ಕೋಟಿ ರೂ. ಆದಾಯ ಗಳಿಸಿದೆ. 300 ಕೋಟಿ ರೂ. ಬಜೆಟ್‌ನ ಈ ಚಿತ್ರದಲ್ಲಿ ನಯನತಾರಾ, ದೀಪಿಕಾ ಪಡುಕೋಣೆ, ವಿಜಯ್ ಸೇತುಪತಿ, ಪ್ರಿಯಾಮಣಿ, ಸಾನ್ಯಾ ಮಲ್ಹೋತ್ರ ಕೂಡ ಕಾಣಿಸಿಕೊಂಡಿದ್ದಾರೆ.

ಹಿಂದಿ ಭಾಷೆಯಲ್ಲಿ ಎರಡನೇ ಅತಿ ಹೆಚ್ಚು ಆದಾಯ ಗಳಿಸಿರುವ ಚಿತ್ರವಾಗಿ ಇದು ಗುರುತಿಸಿಕೊಂಡಿದ್ದು, ಭಾರತೀಯ ಸಿನಿಮಾದಲ್ಲಿ ಐದನೇ ಸ್ಥಾನ ಪಡೆದಿದೆ.


6. ಪಠಾಣ್

ಸಿದ್ಧಾರ್ಥ್ ಆನಂದ್ ನಿರ್ದೇಶನ ಮಾಡಿರುವ ಚಿತ್ರ ʼಪಠಾಣ್ʼ ವಿಶ್ವದಾದ್ಯಂತ 1,050.30 ಕೋಟಿ ರೂ. ಆದಾಯ ಗಳಿಸಿದೆ. ಶಾರುಖ್ ಖಾನ್ ಅಭಿನಯದ ಈ ಚಿತ್ರ ಗಳಿಕೆಯಲ್ಲಿ ಹಿಂದಿ ಭಾಷೆಯಲ್ಲಿ ಮೂರನೇ ಸ್ಥಾನ ಹಾಗೂ ಭಾರತೀಯ ಸಿನಿಮಾ ರಂಗದಲ್ಲಿ ಆರನೇ ಸ್ಥಾನವನ್ನು ಗಳಿಸಿದೆ. 240 ಕೋಟಿ ರೂ. ಬಜೆಟ್ ನ ಚಿತ್ರ ಇದಾಗಿದೆ.


7. ಬಜರಂಗಿ ಭಾಯಿಜಾನ್

ಭಾರತದಾದ್ಯಂತ ಬಾಯಿಜಾನ್ ಎಂದೇ ಕರೆಯಲ್ಪಡುವ ಸಲ್ಮಾನ್ ಖಾನ್, ಕರೀನಾ ಕಪೂರ್ ಅಭಿನಯದ ಈ ಚಿತ್ರ 2015ರಲ್ಲಿ ತೆರೆಗೆ ಬಂದಿದ್ದು, ಕಬೀರ್ ಖಾನ್ ನಿರ್ದೇಶಿಸಿದ್ದಾರೆ. ವಿಶ್ವದಾದ್ಯಂತ 969 ಕೋಟಿ ರೂ. ಆದಾಯವನ್ನು ಈ ಚಿತ್ರ ಗಳಿಸಿದ್ದು, ಅತಿ ಹೆಚ್ಚು ಆದಾಯ ಗಳಿಸಿದ ಭಾರತದ 7ನೇ ಚಿತ್ರ ಹಾಗೂ ಹಿಂದಿ ಭಾಷೆಯ 4ನೇ ಚಿತ್ರವಾಗಿ ಗುರುತಿಸಿಕೊಂಡಿದೆ.


8. ಅನಿಮಲ್

ರಣಬೀರ್ ಕಪೂರ್, ರಶ್ಮಿಕಾ ಮಂದಣ್ಣ, ಅನಿಲ್ ಕಪೂರ್, ಬಾಬಿ ಡಿಯೋಲ್, ತೃಪ್ತಿ ದಿಮ್ರಿ ಅಭಿನಯದ ಈ ಚಿತ್ರ ವಿಶ್ವದಾದ್ಯಂತ 917.36 ಕೋಟಿ ರೂ. ಆದಾಯ ಗಳಿಸಿದೆ. ಈ ಚಿತ್ರವನ್ನು 200 ಕೋಟಿ ರೂ. ಬಜೆಟ್ ನಲ್ಲಿ ಸಂದೀಪ್ ರೆಡ್ಡಿ ವಂಗಾ ನಿರ್ದೇಶಿಸಿದ್ದಾರೆ.


9. ಸೀಕ್ರೆಟ್ ಸೂಪರ್ ಸ್ಟಾರ್

2017ರಲ್ಲಿ ತೆರೆಗೆ ಬಂದ ‘ಸೀಕ್ರೆಟ್ ಸೂಪರ್ ಸ್ಟಾರ್’ ಚಿತ್ರವನ್ನು ಅದ್ವತ್ ಚಂದನ್ ನಿರ್ದೇಶಿಸಿದ್ದು, ಆಮೀರ್ ಖಾನ್ ಮುಖ್ಯ ಭೂಮಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ವಿಶ್ವದಾದ್ಯಂತ 905.7 ಕೋಟಿ ರೂ. ಆದಾಯ ಗಳಿಸಿರುವ ಈ ಚಿತ್ರವನ್ನು ಅತೀ ಕಡಿಮೆ ಬಜೆಟ್ 15 ಕೋಟಿ ರೂ.ನಲ್ಲಿ ನಿರ್ಮಿಸಲಾಗಿದೆ.


ಇದನ್ನೂ ಓದಿ: Kalki 2898 AD: ಬಾಕ್ಸ್‌ ಆಫೀಸ್‌ನಲ್ಲಿ ದಾಖಲೆ ಬರೆದ ʼಕಲ್ಕಿʼ; ಬಿಡುಗಡೆಯಾದ 5ನೇ ದಿನ ಗಳಿಸಿದ್ದು ಬರೋಬ್ಬರಿ 84 ಕೋಟಿ ರೂ.

10. ಪಿಕೆ

ಆಮೀರ್ ಖಾನ್, ಅನುಷ್ಕಾ ಶರ್ಮಾ, ಸುಶಾಂತ್ ಸಿಂಗ್ ರಜಪೂತ್ ಅಭಿನಯದ ಈ ಚಿತ್ರ 2014ರಲ್ಲಿ ತೆರೆಗೆ ಬಂದಿತ್ತು. ರಾಜಕುಮಾರ್ ಹಿರಾನಿ ನಿರ್ದೇಶಿರುವ ಈ ಚಿತ್ರವನ್ನು 122 ಕೋಟಿ ರೂ. ಬಜೆಟ್ ನಲ್ಲಿ ನಿರ್ಮಿಸಲಾಗಿದ್ದು, ವಿಶ್ವದಾದ್ಯಂತ 769.89 ಕೋಟಿ ರೂ. ಆದಾಯವನ್ನು ಗಳಿಸಿದೆ.

Continue Reading

Latest

Sha Rukh Khan: ಸಾಲದ ಇಎಂಐ ಕಟ್ಟಲಾಗದೆ ಕಾರನ್ನು ಕಳೆದುಕೊಂಡಿದ್ದ ಶಾರುಖ್ ಖಾನ್!

Sha Rukh Khan: ಕೋಟಿ ಕೋಟಿ ಸಂಭಾವನೆ ಪಡೆಯುವ ಬಾಲಿವುಡ್ ಬಾದ್ ಶಾ ಶಾರುಕ್ ಖಾನ್ ಕೂಡ ಒಂದು ಕಾಲದಲ್ಲಿ ಆರ್ಥಿಕ ಸಮಸ್ಯೆಯಿಂದ ಬಳಲಿದ್ದರಂತೆ. ಕಾರಿನ ಇಎಂಐ ಪಾವತಿಸಲು ಸಾಧ್ಯವಾಗದ ಕಾರಣ ಶಾರುಖ್ ಖಾನ್ ಅವರ ಕಾರನ್ನು ಬ್ಯಾಂಕ್‌ನವರು ತೆಗೆದುಕೊಂಡು ಹೋಗಿದ್ದರು ಎಂದು ಶಾರುಖ್ ಖಾನ್ ಬಗ್ಗೆ ಅವರ ಸ್ನೇಹಿತೆ ನಟಿ ಜೂಹಿ ಚಾವ್ಲಾ ಶಾಕಿಂಗ್ ಹೇಳಿಕೆ ನೀಡಿದ್ದಾರೆ. ಆಗ ಶಾರುಕ್ ಖಾನ್ ನಟಿ ಜೂಹಿ ಚಾವ್ಲಾ ಹಾಗೂ ನಟ ಜಾಕಿಶ್ರಾಫ್ ಅವರ ಕಾರಿನಲ್ಲಿ ಓಡಾಡುತ್ತಿದ್ದರಂತೆ.

VISTARANEWS.COM


on

Sha Rukh Khan
Koo

ಮುಂಬೈ : ಹಣದ ಸಮಸ್ಯೆ ಎನ್ನುವುದು ಬಡವರಿಗೆ, ಮಧ್ಯಮವರ್ಗದವರಿಗೆ ಮಾತ್ರವಲ್ಲ, ಕೆಲವೊಮ್ಮೆ ಶ್ರೀಮಂತರು, ಸ್ಟಾರ್ ನಟರೂ ಕೂಡ ಆರ್ಥಿಕ ಸಮಸ್ಯೆಯಿಂದ ಬಳಲುತ್ತಾರೆ. ಶಾರುಖ್ ಖಾನ್ (Sha Rukh Khan) ಅವರು ಬಾಲಿವುಡ್ ಸ್ಟಾರ್ ನಟರಲ್ಲಿ ಒಬ್ಬರು. ಕೋಟಿ ಕೋಟಿ ಸಂಭಾವನೆ ಪಡೆಯುವ ಈ ಸ್ಟಾರ್ ನಟ ಕೂಡ ಆರ್ಥಿಕ ಸಮಸ್ಯೆಯಿಂದ ಒಂದು ಕಾಲದಲ್ಲಿ ಬಳಲಿದ್ದರು ಎಂದು ಅವರ ಸ್ನೇಹಿತೆ ನಟಿ ಜೂಹಿ ಚಾವ್ಲಾ ಹೇಳಿಕೆ ನೀಡಿದ್ದಾರೆ. ಈ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

Sha Rukh Khan

ಶಾರುಖ್ ಖಾನ್ ಮತ್ತು ಜೂಹಿ ಚಾವ್ಲಾ 90ರ ದಶಕದಲ್ಲಿ ಬಾಲಿವುಡ್‌ನ ಹಲವಾರು ಚಿತ್ರಗಳಲ್ಲಿ ಜೊತೆಯಾಗಿ ನಟಿಸಿದ್ದರು. ಆವಾಗಿನಿಂದ ಇವರಿಬ್ಬರು ಆಪ್ತ ಸ್ನೇಹಿತರಾಗಿದ್ದರು. ಇಬ್ಬರೂ ಸೇರಿ ಡ್ರೀಮ್ಸ್‌ ಅನ್‌ಲಿಮಿಟೆಡ್‌ ಎಂಬ ಚಿತ್ರ ನಿರ್ಮಾಣ ಸಂಸ್ಥೆಯನ್ನೂ ಸ್ಥಾಪಿಸಿದ್ದರು.

Sha Rukh Khan

ಅಲ್ಲದೇ ಇವರಿಬ್ಬರು ಐಪಿಎಲ್ ತಂಡದ ಮಾಲೀಕರಾಗಿ ಸಹ ಜೊತೆಯಾಗಿದ್ದರು. ಇತ್ತೀಚೆಗೆ, ಕಾರ್ಯಕ್ರಮವೊಂದರಲ್ಲಿ, ನಟಿ ಜೂಹಿ ಚಾವ್ಲಾ ಅವರು ಮಾತನಾಡಿ ಇಎಂಐ ಪಾವತಿಸಲು ಸಾಧ್ಯವಾಗದ ಕಾರಣ ಶಾರುಖ್ ಖಾನ್ ಅವರ ಕಾರನ್ನು ಬ್ಯಾಂಕ್‌ನವರು ತೆಗೆದುಕೊಂಡು ಹೋಗಿದ್ದರು ಎಂಬ ಸಂಗತಿಯನ್ನು ಶಾರುಖ್ ಖಾನ್ ವೃತ್ತಿ ಜೀವನದ ಆರಂಭದ ದಿನಗಳನ್ನು ಸ್ಮರಿಸಿಕೊಂಡು ಹೇಳಿದ್ದಾರೆ.

Sha Rukh Khan

ಶಾರುಖ್ ಖಾನ್ ಅವರ ಬಳಿ ಕಪ್ಪು ಜಿಪ್ಸಿ ಕಾರ್ ಇತ್ತು. ಶಾರುಖ್ ಖಾನ್ ಅವರು ಹಗಲಿರುಳು ತಮ್ಮ ಸಿನಿಮಾ ಶೂಟಿಂಗ್‌ಗಾಗಿ ಆ ಕಾರಿನಲ್ಲೇ ಹೋಗುತ್ತಿದ್ದರು. ಆದರೆ ಕೆಲವು ಕಾರಣಗಳಿಂದಾಗಿ, ಅವರು ತಮ್ಮ ಕಾರಿಗೆ ಇಎಂಐ ಪಾವತಿಸಲು ಸಾಧ್ಯವಾಗಲಿಲ್ಲ. ಹಾಗಾಗಿ ಅವರ ಕಾರನ್ನು ತೆಗೆದುಕೊಂಡು ಹೋದರು ಎಂದು ಹೇಳಿದ್ದಾರೆ. ಅಲ್ಲದೇ ಅವರಿಗೆ ಮುಂಬೈನಲ್ಲಿ ಮನೆ ಇರಲಿಲ್ಲ. ಹಾಗೇ ಅವರಿಗೆ ಅಡುಗೆ ಮಾಡಲು ಯಾರೂ ಇರಲಿಲ್ಲ. ಅವರ ಬಗ್ಗೆ ಚಿಂತಿಸುತ್ತಿದ್ದೆ ಎಂದು ನಟಿ ಹಿಂದೆ ನಡೆದ ಘಟನೆಗಳ ಬಗ್ಗೆ ಮೆಲುಕು ಹಾಕಿದ್ದಾರೆ. ಆದರೆ ಈಗ ಅವರು ದೊಡ್ಡ ನಟ ಆಗಿದ್ದಾರೆ ಎಂದು ಅವರು ಖುಷಿ ಪಟ್ಟಿದ್ದಾರೆ.

2015ರಲ್ಲಿ ಇದೇ ವಿಚಾರದ ಬಗ್ಗೆ ನಟ ಶಾರುಖ್ ಖಾನ್‌ವರು ಕೂಡ ಟಿವಿ ಚಾನೆಲ್‌ವೊಂದರಲ್ಲಿ ಹೇಳಿದ್ದರು. ತಾನು ಖರೀದಿಸಿದ ಮೊದಲ ಕಾರಿಗೆ ಇಎಂಐ ಕಟ್ಟಲು ಆಗದ ಕಾರಣ ಬ್ಯಾಂಕಿನವರು ತೆಗೆದುಕೊಂಡು ಹೋಗಿದ್ದರು. ಆಗ ನಟಿ ಜೂಹಿ ಚಾವ್ಲಾ ತಮ್ಮ ಕಾರನ್ನು ನೀಡಿರುವುದಾಗಿ ಹೇಳಿದ್ದರು. ಮತ್ತು ಕೆಲವೊಮ್ಮೆ ನಟ ಜಾಕಿಶ್ರಾಫ್ ಅವರ ಕಾರಿನಲ್ಲಿ ಓಡಾಡುತ್ತಿದ್ದೆ ಎಂದು ತಿಳಿಸಿದ್ದರು.

Sha Rukh Khan

ಇದನ್ನೂ ಓದಿ: ದಳಪತಿ ವಿಜಯ್‌ಗೆ ಭುಜದ ಮೇಲಿನ ಕೈ ತೆಗೆಯಲು ಹೇಳಿದ ಹುಡುಗಿ; ವಿಡಿಯೊ ವೈರಲ್

ಇತ್ತೀಚಿಗೆ ನಡೆದ ಸಂದರ್ಶನವೊಂದರಲ್ಲಿ ಹಿರಿಯ ನಟ ಗೋವಿಂದ್ ನಾಮದೇವ್ ಅವರು 2000ರಲ್ಲಿ ಬಿಡುಗಡೆಯಾದ “ಫಿರ್ ಭಿ ದಿಲ್ ಹೈ ಹಿಂದೂಸ್ತಾನಿ” ಚಿತ್ರದ ಚಿತ್ರೀಕರಣ ಸಮಯದಲ್ಲಿ ಶಾರುಖ್ ಖಾನ್ ಅವರ ಜೊತೆ ಕಳೆದ ದಿನಗಳನ್ನು ಅವರು ಮೆಲುಕು ಹಾಕಿದ್ದಾರೆ. ಆ ವೇಳೆ ಅವರು ಕೆಲಸದ ಒತ್ತಡದಿಂದ ಅವರು ಧೂಮಪಾನ ಮಾಡುತ್ತಿದ್ದರು ಎಂದು ಶಾಕಿಂಗ್ ಹೇಳಿಕೆ ನೀಡಿದ್ದರು.

Continue Reading

ಬಾಲಿವುಡ್

Munawar Faruqui: ಮೊದಲ ಬಾರಿಗೆ ಪತ್ನಿ ಜತೆ ಇರುವ ಫೋಟೊ ಹಂಚಿಕೊಂಡ  ʻಬಿಗ್ ಬಾಸ್ 17ʼರ ವಿಜೇತ  ಮುನಾವರ್ ಫಾರೂಕಿ!

Munawar Faruqui: ಕೊನೆಯ ಚಿತ್ರವು ಮುನಾವರ್ ಮತ್ತು ಮೆಹಜಬೀನ್ ಕೋಟ್ವಾಲಾ ಸಂಜೆ ಪರಸ್ಪರ ಕೈ ಹಿಡಿದುಕೊಂಡು ನಿಂತಿರುವುದು ಇದೆ. ಫೋಟೋದಲ್ಲಿ, ಮುನಾವರ್ ಕಪ್ಪು ಟೀ ಶರ್ಟ್, ಆಲಿವ್ ಹಸಿರು ಪ್ಯಾಂಟ್, ಶೂ ಮತ್ತು ಕ್ಯಾಪ್ ಧರಿಸಿದ್ದರು. ಮುದ್ರಿತ ಟಿ-ಶರ್ಟ್, ಡೆನಿಮ್ಸ್ ಮತ್ತು ಸ್ನೀಕರ್ಸ್‌ನಲ್ಲಿ ಮೆಹಜಬೀನ್ ಕಾಣಿಸಿಕೊಂಡಿದ್ದಾರೆ. ಮುನಾವರ್ ಅವರ ಪತ್ನಿಗೂ ಪೋಟೊವನ್ನು ಟ್ಯಾಗ್ ಮಾಡಿದ್ದಾರೆ.

VISTARANEWS.COM


on

Munawar Faruqui shares first pic with new wife
Koo

ಬೆಂಗಳೂರು:  ಬಿಗ್ ಬಾಸ್ 17 ವಿನ್ನರ್ ಮತ್ತು ಸ್ಟ್ಯಾಂಡ್-ಅಪ್ ಕಮಿಡಿಯನ್ಮು ಮುನಾವರ್ ಫಾರೂಕಿ (Munawar Faruqui) ಎರಡನೇ ಬಾರಿಗೆ ವಿವಾಹವಾದರು ಎಂದು ವರದಿಯಾಗಿತ್ತು. ಮೇಕಪ್ ಕಲಾವಿದೆ ಮೆಹಜಬೀನ್ ಕೋಟ್ವಾಲಾ ಅವರೊಂದಿಗೆ ಮದುವೆಯಾಗಿದ್ದರು. ಇದೀಗ ಇದೇ ಮೊದಲ ಬಾರಿಗೆ ಪತ್ನಿ ಜತೆ ಇರುವ ಫೋಟೊವನ್ನು ಸೋಷಿಯಲ್‌ ಮೀಡಿಯಾದಲ್ಲಿ ಪೋಸ್ಟ್‌ ಮಾಡಿಕೊಂಡಿದ್ದಾರೆ. ಒಂದು ತಿಂಗಳ ವಿವಾಹ ವಾರ್ಷಿಕೋತ್ಸವವನ್ನು ದುಬೈನಲ್ಲಿ ಸೆಲೆಬ್ರೆಟ್‌ ಮಾಡಿರುವ ಫೋಟೊವನ್ನು ಶೇರ್‌ ಮಾಡಿಕೊಂಡಿದ್ದಾರೆ.

ಮೊದಲ ಫೋಟೊದಲ್ಲಿ , ಮುನಾವರ್ ಅವರು ವಿಶ್ರಾಂತಿ ತೆಗೆದುಕೊಳ್ಳುವ, ಶಾಪಿಂಗ್ ಮುಗಿಸಿ ದುಬೈನ ಸ್ಟ್ರೀಟ್‌ನಲ್ಲಿ ಸುತ್ತಾಡುವ. ಸಂಜೆಯ ವಿಹಾರಕ್ಕೆ ಹೋವ, ಉಪಹಾರದ ಫೋಟೋ ಹಾಗೇ ತಮ್ಮ ಶೋ ಒಂದರ ಫೋಟೋವನ್ನು ಸಹ ಹಂಚಿಕೊಂಡಿದ್ದಾರೆ.

ಕೊನೆಯ ಚಿತ್ರವು ಮುನಾವರ್ ಮತ್ತು ಮೆಹಜಬೀನ್ ಕೋಟ್ವಾಲಾ ಸಂಜೆ ಪರಸ್ಪರ ಕೈ ಹಿಡಿದುಕೊಂಡು ನಿಂತಿರುವುದು ಇದೆ. ಫೋಟೋದಲ್ಲಿ, ಮುನಾವರ್ ಕಪ್ಪು ಟೀ ಶರ್ಟ್, ಆಲಿವ್ ಹಸಿರು ಪ್ಯಾಂಟ್, ಶೂ ಮತ್ತು ಕ್ಯಾಪ್ ಧರಿಸಿದ್ದರು. ಮುದ್ರಿತ ಟಿ-ಶರ್ಟ್, ಡೆನಿಮ್ಸ್ ಮತ್ತು ಸ್ನೀಕರ್ಸ್‌ನಲ್ಲಿ ಮೆಹಜಬೀನ್ ಕಾಣಿಸಿಕೊಂಡಿದ್ದಾರೆ. ಮುನಾವರ್ ಅವರ ಪತ್ನಿಗೂ ಪೋಟೊವನ್ನು ಟ್ಯಾಗ್ ಮಾಡಿದ್ದಾರೆ.

ಇದನ್ನೂ ಓದಿ: Samarjit Lankesh: ಇಂದ್ರಜಿತ್ ಲಂಕೇಶ್ ಪುತ್ರ ಸಮರ್ಜಿತ್ ಅಭಿನಯದ `ಗೌರಿ’ ಸಿನಿಮಾ ರಿಲೀಸ್‌ ಡೇಟ್‌ ಅನೌನ್ಸ್‌!

ಇದೀಗ ಈ ಫೋಟೊಗೆ ಮುನಾವರ್‌ ಫ್ಯಾನ್ಸ್‌ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ʻಕೊನೆಯ ಫೋಟೋ ನಮ್ಮ ಹೃದಯ ಕದ್ದಿದೆʼʼಎಂದು ಒಬ್ಬರು ಕಮೆಂಟ್‌ ಮಾಡಿದ್ದಾರೆ. ಇನ್ನೊಬ್ಬರು ʻʻನಿಮ್ಮಿಬ್ಬರ ಮುಂದಿನ ಜೀವನಕ್ಕಾಗಿ ದೇವರು ಆಶೀರ್ವದಿಸಲಿʼʼಎಂದು ಕಮೆಂಟ್‌ ಮಾಡಿದ್ದಾರೆ.

ಮೇಕಪ್ ಕಲಾವಿದೆ ಮೆಹಜಬೀನ್ ಕೋಟ್ವಾಲಾ

ಮೆಹಜಬೀನ್ ಮೇಕಪ್ ಕಲಾವಿದೆ. ಆರ್ ಮಾಧವನ್, ವರುಣ್ ಧವನ್, ಯುಜ್ವೇಂದ್ರ ಚಾಹಲ್ ನಂತಹ ನಟರುಗಳ ಪತ್ನಿಯರಿಗೆ, ನೃತ್ಯಗಾರ್ತಿ ಧನಶ್ರೀ ವರ್ಮಾ ಅವರಂತಹ ಅನೇಕ ಗಣ್ಯ ವ್ಯಕ್ಯಿಗಳಿಗೆ ಮೇಕಪ್‌ ಮಾಡಿದ್ದಾರೆ. ಸಾಕಷು ಫ್ಯಾನ್ಸ್‌ ಫಾಲೋವರ್ಸ್‌ ಕೂಡ ಹೊಂದಿದ್ದಾರೆ. ವರದಿಯ ಪ್ರಕಾರ, ಮುನಾವರ್‌ನಂತೆ, ಮೆಹಜಬೀನ್ ಅವರಿಗೆ ಕೂಡ ಇದು ಎರಡನೇ ಮದುವೆ. ಮುನಾವರ್ ಅವರಿಗೆ ಈಗಾಗಲೇ ಒಬ್ಬ ಮಗನೂ ಇದ್ದಾನೆ. ಮೊದಲ ಹೆಂಡತಿ ಜತೆ ವಿಚ್ಛೇದನ ಕೂಡ ಪಡೆದುಕೊಂಡಿದ್ದಾರೆ ಮುನಾವರ್‌.

ಇನ್ನು ಮೇಕಪ್ ಕಲಾವಿದೆ ಮೆಹಜಬೀನ್ ಕೋಟ್ವಾಲಾ ಕೂಡ ಸಿಂಗಲ್‌ ಪೇರೆಂಟ್‌ ಎಂದು ವರದಿಯಾಗಿದೆ. ಮೆಹಜಬೀನ್‌ಗೆ ಈಗಾಗಲೇ 10 ವರ್ಷದ ಮಗಳಿದ್ದಾಳೆ ಎಂದು ವರದಿಯಾಗಿದೆ. ಮೆಹಜಬೀನ್ ಕೋಟ್ವಾಲಾ ಆಗಗಾಗ ಮಗಳ ಜತೆ ಇರುವ ಫೋಟೊವನ್ನು ಸೋಷಿಯಲ್‌ ಮೀಡಿಯಾದಲ್ಲಿ ಶೇರ್‌ ಮಾಡಿಕೊಳ್ಳುತ್ತಿರುತ್ತಾರೆ. ಮೆಹಜಬೀನ್ ಕೋಟ್ವಾಲಾ ಕೂಡ ಮೊದಲ ಗಂಡನಿಂದ ಡಿವೋರ್ಸ್‌ ಪಡೆದುಕೊಂಡಿದ್ದಾರೆ.

ಮುನಾವರ್‌ 2017ರಲ್ಲಿ ಜಾಸ್ಮಿನ್‌ ಎಂಬುವರನ್ನು ಮುನಾವರ್‌ ವಿವಾಹವಾಗಿದ್ದರು. ವಿಚ್ಛೇದನ ಬಳಿಕ ಮಗನನ್ನು ಇವರೇ ನೋಡಿಕೊಳ್ಳುತ್ತಿದ್ದಾರೆ. ಇದಾದ ಬಳಿಕ ಮುನಾವರ್‌ ನಾಜಿಲ್‌ ಸಿತೈಶಿ ಎಂಬುವರ ಜತೆ ಡೇಟಿಂಗ್‌ ನಡೆಸುತ್ತಿದ್ದರು. ಮುನಾವರ್‌ ಅವರು ಸಾಕಷ್ಟು ವಿವಾದಾತ್ಮಕ ಸುದ್ದಿಗಳಿಗೆ ಹೆಸರುವಾಸಿ. ಮುಂಬೈ ಬಂದರು ಪ್ರದೇಶದ ಹುಕ್ಕಾ ಬಾರ್‌ನಲ್ಲಿ ಪೊಲೀಸರು ಮಾ.26ರ ಮಂಗಳವಾರ ದಾಳಿ ನಡೆಸಿದ್ದರು. ಬಿಗ್ ಬಾಸ್ 17ರ ವಿಜೇತ ಮುನಾವರ್ ಫಾರೂಕಿ (Munawar Faruqui) ಸೇರಿದಂತೆ ಕೆಲವರನ್ನು ಬಂಧಿಸಲಾಗಿತ್ತು. ಈ ಪ್ರಕರಣದಲ್ಲಿ ಜಾಮೀನು ಮೂಲಕ ಹೊರಗೆ ಬಂದಿದ್ದರು ಮುನಾವರ್.

Continue Reading
Advertisement
Team India
ಕ್ರಿಕೆಟ್5 hours ago

Team India: ಟಿ-20 ವಿಶ್ವಕಪ್‌ ಗೆದ್ದು ಭಾರತದತ್ತ ಟೀಮ್‌ ಇಂಡಿಯಾ; ಫ್ಲೈಟ್‌ ಟ್ರ್ಯಾಕರ್‌ನಲ್ಲಿ ಹೊಸ ದಾಖಲೆ

LK Advani
ದೇಶ5 hours ago

LK Advani: ಎಲ್‌ ಕೆ ಅಡ್ವಾಣಿ ಆರೋಗ್ಯದಲ್ಲಿ ಮತ್ತೆ ಏರುಪೇರು; ಆಸ್ಪತ್ರೆಗೆ ದಾಖಲು

Ashika Ranganath
ಸ್ಯಾಂಡಲ್ ವುಡ್6 hours ago

Ashika Ranganath: ಪುಷ್ಪ 2 ಹಾಡಿಗೆ ದಿಲ್‌ ಖುಷ್‌ ಆಗಿ ಕುಣಿದ ಆಶಿಕಾ ರಂಗನಾಥ್;‌ Video ಇದೆ ನೋಡಿ

Lokayukta Raid Honnavara Pattana Panchayat Chief Executive Engineer caught by lokayukta while recieving money
ಉತ್ತರ ಕನ್ನಡ6 hours ago

Lokayukta Raid: ಹೊನ್ನಾವರ ಪ.ಪಂ ʼಲಂಚ ಪ್ರವೀಣʼ ಮುಖ್ಯ ಕಾರ್ಯನಿರ್ವಾಹಕ ಎಂಜಿನಿಯರ್ ಲೋಕಾಯುಕ್ತ ಬಲೆಗೆ

Viral Video
ವೈರಲ್ ನ್ಯೂಸ್6 hours ago

Viral Video: ಸರ್ಕಾರಿ ಕಚೇರಿಯಲ್ಲಿ ಡ್ಯಾನ್ಸ್‌ ಮಾಡಿ ರೀಲ್ಸ್; 8 ನೌಕರರಿಗೆ ನೋಟಿಸ್‌ ಬಿಸಿ!

Pradhan Mantri Awas Yojana CM Siddaramaiah instructs to complete work on incomplete houses on priority
ಪ್ರಮುಖ ಸುದ್ದಿ6 hours ago

CM Siddaramaiah: ಪ್ರಧಾನಮಂತ್ರಿ ಆವಾಸ್‌ ಯೋಜನೆ; ಅಪೂರ್ಣ ಮನೆಗಳ ಕಾಮಗಾರಿ ಪೂರ್ಣಗೊಳಿಸಲು ಸಿಎಂ ಸೂಚನೆ

Toyota Kirloskar Motor has joined hands with the IISC to support the establishment of a Mobility Engineering Laboratory
ಬೆಂಗಳೂರು7 hours ago

Toyota Kirloskar Motor: ಮೊಬಿಲಿಟಿ ಎಂಜಿನಿಯರಿಂಗ್ ಲ್ಯಾಬ್ ಸ್ಥಾಪಿಸಲು ಐಐಎಸ್‌ಸಿಯೊಂದಿಗೆ ಕೈಜೋಡಿಸಿದ ಟಿಕೆಎಂ

BJP Muslim Candidate
ಪ್ರಮುಖ ಸುದ್ದಿ7 hours ago

BJP Muslim Candidate: ಉತ್ತರ ಪ್ರದೇಶದಲ್ಲಿ ಮೊದಲ ಬಾರಿಗೆ ಮುಸ್ಲಿಂ ಅಭ್ಯರ್ಥಿಗೆ ಬಿಜೆಪಿ ಟಿಕೆಟ್? ಏನಿದರ ಗುಟ್ಟು?

Uttar pradesh Politics
ದೇಶ7 hours ago

Uttar Pradesh Politics: ಉತ್ತರಪ್ರದೇಶದಲ್ಲಿ ಬಿಜೆಪಿಗೆ ಹೀನಾಯ ಸೋಲು; ಟಾಸ್ಕ್‌ಫೋರ್ಸ್‌ ವರದಿಯಲ್ಲಿ ಗಂಭೀರ ಅಂಶಗಳು ಬಯಲು

Mangalore News
ಕರ್ನಾಟಕ7 hours ago

Mangalore News: ಫಲಿಸದ ಸತತ 6-7 ಗಂಟೆ ಕಾರ್ಯಾಚರಣೆ; ಮಣ್ಣಿನಡಿ ಸಿಲುಕಿದ್ದ ಕಾರ್ಮಿಕ ಸಾವು

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka weather Forecast
ಮಳೆ1 day ago

Karnataka Weather : ಮಳೆ ಅಬ್ಬರಕ್ಕೆ ಹೆಚ್ಚಾದ ಗುಡ್ಡ ಕುಸಿತ; ಬಂಗ್ರ ಕೂಳೂರಿನಲ್ಲಿ ರಸ್ತೆ ಬಂದ್‌

karnataka Weather Forecast
ಮಳೆ2 days ago

Karnataka Weather : ಕೊಡಗು, ದಾವಣಗೆರೆಯಲ್ಲಿ ಮಳೆಯಾಟ; ಬೆಂಗಳೂರಲ್ಲಿ ಮೋಡ ಕವಿದ ವಾತಾವರಣ

karnataka Weather Forecast
ಮಳೆ3 days ago

Karnataka Weather : ಬೆಂಗಳೂರು, ಕಲಬುರಗಿ ಸೇರಿದಂತೆ ಹಲವೆಡೆ ವರ್ಷಧಾರೆ; ನಾಳೆಗೂ ಮಳೆ ಅಲರ್ಟ್‌

Actor Darshan
ಬೆಂಗಳೂರು4 days ago

Actor Darshan : ಖೈದಿ ನಂ.6106ಕ್ಕೆ ಡಿಮ್ಯಾಂಡ್‌! ದರ್ಶನ್‌ ಫ್ಯಾನ್ಸ್‌ಗೆ ಕಾನೂನು ಕಂಟಕ, ರೂಲ್ಸ್‌ ಬ್ರೇಕ್‌ ಮಾಡಿದ್ರೆ ಬೀಳುತ್ತೆ ಕೇಸ್‌‌!

karnataka weather Forecast
ಮಳೆ4 days ago

Karnataka Weather : ಮಳೆಗೆ ಸ್ಕಿಡ್‌ ಆಗಿ ಹೇಮಾವತಿ ನದಿಗೆ ಹಾರಿದ ಕಾರು; ಕರಾವಳಿಗೆ ಎಚ್ಚರಿಕೆ ಕೊಟ್ಟ ತಜ್ಞರು

karnataka Rain
ಮಳೆ5 days ago

Karnataka Rain: ಭಾರಿ ಮಳೆಗೆ ಮನೆಗಳ ಗೋಡೆ ಕುಸಿತ; ಕೂದಲೆಳೆ ಅಂತರದಲ್ಲಿ ವೃದ್ಧ ಪಾರು

karnataka Weather Forecast
ಮಳೆ5 days ago

Karnataka Weather : ಅಬ್ಬಬ್ಬಾ.. ಮುಲ್ಕಿಯಲ್ಲಿ 30 ಸೆಂ.ಮೀ ಮಳೆ ದಾಖಲು; ವಾರಾಂತ್ಯದಲ್ಲೂ ಭಾರಿ ವರ್ಷಧಾರೆ

karnataka Rain
ಮಳೆ6 days ago

Karnataka Rain : ಭಾರಿ ಮಳೆಗೆ ಪಾತಾಳ ಸೇರಿದ ಬಾವಿ; ಅಲೆಗಳ ಹೊಡೆತಕ್ಕೆ ಸಮುದ್ರಪಾಲಾದ ಮನೆ

Karnataka Weather Forecast
ಮಳೆ6 days ago

Karnataka Weather : ಭಾರಿ ಮಳೆ ಹಿನ್ನೆಲೆ ದಕ್ಷಿಣ ಕನ್ನಡಕ್ಕೆ ರೆಡ್ ಅಲರ್ಟ್; ಶುಕ್ರವಾರವೂ ಶಾಲೆಗಳಿಗೆ ರಜೆ ಘೋಷಣೆ

karnataka Weather Forecast
ಮಳೆ6 days ago

Karnataka Weather : ಭಾರಿ ಮಳೆಗೆ ಸೇತುವೆಯಿಂದ ಹೊಳೆಗೆ ಬಿದ್ದ ಕಾರು; ಮರ ಹಿಡಿದು ಪ್ರಾಣ ಉಳಿಸಿಕೊಂಡ ಸವಾರರು

ಟ್ರೆಂಡಿಂಗ್‌