World Bicycle Day: ಸೈಕಲ್‌ ಹೊಡೆಯುವುದರ ಲಾಭಗಳು ನಾವು ಅಂದುಕೊಂಡಿದ್ದಕ್ಕಿಂತ ಹೆಚ್ಚು! - Vistara News

ಆರೋಗ್ಯ

World Bicycle Day: ಸೈಕಲ್‌ ಹೊಡೆಯುವುದರ ಲಾಭಗಳು ನಾವು ಅಂದುಕೊಂಡಿದ್ದಕ್ಕಿಂತ ಹೆಚ್ಚು!

ಶತಮಾನಗಳ ಹಿಂದೆ ಯಾಂತ್ರೀಕೃತ ಸಾರಿಗೆಯ ಆರಂಭದ ದಿನಗಳಲ್ಲೇ ಆವಿಷ್ಕಾರಗೊಂಡಿದ್ದ ಸರಳ ವಾಹನ ಸೈಕಲ್‌. ಇಂದಿಗೂ ವಿಶ್ವದೆಲ್ಲೆಡೆ ಜನಪ್ರಿಯವಾಗಿದ್ದು, ಕಡಿಮೆ ಖರ್ಚಿನಲ್ಲಿ ಒಳ್ಳೆಯ ವ್ಯಾಯಾಮವನ್ನು ನೀಡಿ, ಪರಸರಕ್ಕೆ ಹಾನಿ ಮಾಡದಿರುವ ಹೆಗ್ಗಳಿಕೆಯನ್ನೂ ಇದು ಪಡೆದಿದೆ. ಅಂದಹಾಗೆ, ಇಂದು ವಿಶ್ವ ಬೈಸಿಕಲ್‌ (World Bicycle Day) ದಿನ.

VISTARANEWS.COM


on

World Bicycle Day
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಕುವೆಂಪು ಅವರ ʻಮಲೆಗಳಲ್ಲಿ ಮದುಮಗಳುʼ ಕಾದಂಬರಿಯಲ್ಲಿ ಸೈಕಲ್‌ನ ದೃಶ್ಯವೊಂದು ಬರುತ್ತದೆ. ಮಲೆನಾಡಿನ ಆ ಪ್ರಾಂತ್ಯಕ್ಕೇ ಹೊಸದಾಗಿ ಸೈಕಲ್‌ ಅಥವಾ ʻಬೀಸೆಕಲ್ಲುʼ ಪ್ರವೇಶ ಮಾಡಿದಾಗ, ಅದನ್ನು ಏರಿ ಚಲಾಯಿಸುವುದನ್ನು ಹೇಳಿಕೊಡುವ ಸನ್ನಿವೇಶವೊಂದು ಇನ್ನಿಲ್ಲದಂತೆ ನಗೆಯುಕ್ಕಿಸುತ್ತದೆ. ಶತಮಾನಗಳ ಹಿಂದೆ ಯಾಂತ್ರೀಕೃತ ಸಾರಿಗೆಯ ಆರಂಭದ ದಿನಗಳಲ್ಲೇ ಆವಿಷ್ಕಾರಗೊಂಡು ಸರಳ ವಾಹನವಿದು. ಇಂದಿಗೂ ವಿಶ್ವದೆಲ್ಲೆಡೆ ಜನಪ್ರಿಯವಾಗಿದ್ದು, ಕಡಿಮೆ ಖರ್ಚಿನಲ್ಲಿ ಒಳ್ಳೆಯ ವ್ಯಾಯಾಮವನ್ನು ನೀಡಿ, ಪರಸರಕ್ಕೆ ಹಾನಿ ಮಾಡದಿರುವ ಹೆಗ್ಗಳಿಕೆಯನ್ನೂ ಇದು ಪಡೆದಿದೆ. ಅಂದಹಾಗೆ, ಇಂದು ವಿಶ್ವ ಬೈಸಿಕಲ್‌ (World Bicycle Day) ದಿನ. ಮೊದಲ ಬಾರಿಗೆ, 2018ರ ಜೂನ್‌ 3ರಂದು ಈ ದಿನ ಆಚರಣೆಗೊಂಡಿತು. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಸ್ವೀಕಾರಗೊಂಡ ಈ ದಿನದ ಆಚರಣೆಯ ನಿರ್ಣಯವನ್ನು ಎಲ್ಲ ಸದಸ್ಯರಾಷ್ಟ್ರಗಳೂ ಬೆಂಬಲಿಸಿದ್ದವು. ಜಗತ್ತಿನ ಎಲ್ಲ ರಾಷ್ಟ್ರಗಳು ಬೈಸಿಕಲ್‌ ದಿನದ ಆಚರಣೆಗೆ ಮತ್ತು ವರ್ಷದ ಉಳಿದ ದಿನಗಳಲ್ಲೂ ಸೈಕಲ್‌ ಬಳಕೆಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು ಎಂಬುದು ಈ ದಿನದ ನಿರ್ಣಯಗಳಲ್ಲಿ ಒಂದಾಗಿತ್ತು.

Cycling Benefits

ಏನಿದರ ಮಹತ್ವ?

ದೈಹಿಕ ಚಟುವಟಿಕೆಯನ್ನು ಉತ್ತೇಜಿಸುವುದರ ಜೊತೆಗೆ, ಇದನ್ನು ನಿಯಮಿತವಾಗಿ ಬಳಸುವುದರಿಂದ ವಾತಾವರಣದ ಮಾಲಿನ್ಯವನ್ನು ಸಹ ತಗ್ಗಿಸಬಹುದು. ಎಲ್ಲರಿಗೂ ಕೈಗೆಟುಕುವಂಥ ಸರಳ, ಸುಂದರ, ಆಹ್ಲಾದಕರ ಸಾರಿಗೆಯಿದು. ಸೈಕಲ್‌ ಹೊಡೆಯುವುದು ಮಧ್ಯಮ ಪ್ರಮಾಣದ ವ್ಯಾಯಾಮ. ಹೃದಯದ ಆರೋಗ್ಯವನ್ನು ಗಟ್ಟಿಗೊಳಿಸುವಂಥ ಲಘು ಕಾರ್ಡಿಯೊ ಸಹ ಹೌದು. ದೇಹದ ಕೆಳಭಾಗಕ್ಕೆ ಹೆಚ್ಚಿನ ವ್ಯಾಯಾಮ ನೀಡುವ ಈ ಕ್ರಿಯೆಯನ್ನು ಸುಮ್ಮನೆ ಖುಷಿಗಾಗಿಯೂ ಮಾಡಬಹುದು. ಮನೆಯಲ್ಲಿ ಮಕ್ಕಳಿದ್ದರೆ ಅವರೊಂದಿಗೆ ಸೈಕಲ್‌ ಹೊಡೆಯುವುದು, ಸ್ನೇಹಿತರು ಸುಮ್ಮನೇ ಗೊತ್ತುಗುರಿಯಿಲ್ಲದೆ ಸೈಕಲ್‌ನಲ್ಲಿ ಅಡ್ಡಾಡುವುದು, ಕಿವಿಗೊಂದು ಇಯರ್‌ಪ್ಲಗ್‌ ಸಿಕ್ಕಿಸಿ ಬೇಕಾದ್ದನ್ನು ಕೇಳುತ್ತಲೇ ಸೈಕಲ್‌ನಲ್ಲಿ ಸುತ್ತಾಡುವುದು- ಹೀಗೆ ಸೈಕಲ್‌ ಹೊಡೆಯುವುದಕ್ಕೆ ಎಷ್ಟೊಂದು ಆಯಾಮಗಳು ಉಂಟಲ್ಲವೇ?

ಆರೋಗ್ಯಕ್ಕೆ ಇನ್ನೇನು ಲಾಭಗಳಿವೆ?

ಸೈಕಲ್‌ ಹೊಡೆಯುವುದನ್ನು ಲಘು ಕಾರ್ಡಿಯೊ ವ್ಯಾಯಾಮ ಎಂದು ಪರಿಗಣಿಸಲಾಗುತ್ತದೆ. ಅಂದರೆ ಸೈಕಲ್‌ ಹೊಡೆಯುವಷ್ಟೂ ಹೊತ್ತು ನಮ್ಮ ಹೃದಯ ಹೆಚ್ಚಿನ ಪ್ರಮಾಣದ ರಕ್ತವನ್ನು ಪಂಪ್‌ ಮಾಡುತ್ತಿರುತ್ತದೆ. ಇದರಿಂದ ದೇಹದ ಒಟ್ಟಾರೆ ಶಕ್ತಿ ಮತ್ತು ತ್ರಾಣ ಕ್ರಮೇಣ ಹೆಚ್ಚುತ್ತಾ ಹೋಗುತ್ತದೆ. ಹಾಗೆಂದು ಕಠಿಣವಾದ ಕಾರ್ಡಿಯೊ ಇದಲ್ಲ, ಹೃದಯವನ್ನು ಕ್ರಮೇಣ ಬಲಗೊಳಿಸುವ ಲಘು ವ್ಯಾಯಾಮ.

Increases muscle strength and body flexibility Cycling Benefit

ಬಲವರ್ಧನೆ

ಕಾಲಿನ ಮಾಂಸಪೇಶಿಗಳು, ಅಂದರೆ ಕ್ವಾಡ್‌, ಕಾಫ್‌, ಶಿನ್‌ ಮತ್ತು ಹ್ಯಾಮ್‌ಸ್ಟ್ರಿಂಗ್‌ ಭಾಗಗಳಲ್ಲಿರುವ ಮಾಂಸಖಂಡಗಳು ಸುದೃಢಗೊಳ್ಳುತ್ತವೆ. ಕಟಿಯಿಂದ ಕೆಳಗಿನ ದೇಹಭಾಗ ಸದಾ ಕಾಲ ಸಕ್ರಿಯವಾಗಿ ಇರುವುದರಿಂದ ದೇಹದ ಕೆಳಭಾಗದ ಮಾಂಸಖಂಡಗಳ ಬಲವರ್ಧನೆಗೆ ಒಳ್ಳೆಯ ವ್ಯಾಯಾಮವಿದು. ಇದಕ್ಕಾಗಿಯೇ ಸೈಕ್ಲಥಾನ್‌ಗಳು ನಿಮ್ಮ ಸಮೀಪದಲ್ಲಿ ನಡೆಯುತ್ತಿದ್ದರೆ ತಪ್ಪದೆ ಭಾಗವಹಿಸಿ. ಆಗ ಒಂದಿಷ್ಟು ಸಮಾನ ಮನಸ್ಕರ ಸ್ನೇಹ ದೊರೆತು, ನಿಯಮಿತವಾಗಿ ಸೈಕಲ್‌ ಹೊಡೆಯುವ ಅವಕಾಶವಾಗುತ್ತದೆ.

Image Of Cycling Benefit

ಲವಲವಿಕೆ

ಎಂಥ ಟ್ರಾಫಿಕ್‌ ಜಾಮ್‌ನಲ್ಲೂ ಸಿಳ್ಳೆ ಹೊಡೆಯುತ್ತಾ ಮುಂದೆ ಸಾಗುವ ಸೈಕಲ್‌ ಸವಾರರನ್ನು ಕಾಣುವ ಉಳಿದವರಿಗೆ ಒಂದೆಳೆ ಹೊಟ್ಟೆಕಿಚ್ಚಾದರೆ ಅಚ್ಚರಿಯೇನಿಲ್ಲ. ಲೋಕದ ಚಿಂತೆಯನ್ನೇ ಬಿಟ್ಟು ನಮ್ಮಷ್ಟಕ್ಕೆ ನಾವು ಸೈಕಲ್‌ ಹೊಡೆಯುವ ಈ ಕ್ರಿಯೆ ಮನಸ್ಸಿನ ಲವಲವಿಕೆಯನ್ನು ಹೆಚ್ಚಿಸುತ್ತದೆ. ಅದರಲ್ಲೂ ಟ್ರಾಫಿಕ್‌ ಕಿರಿಕಿರಿಯಿಲ್ಲದ ಸುಂದರ ದಾರಿಗಳಲ್ಲಿ ಸೈಕಲ್‌ ಹೊಡೆಯುವ ಅಭ್ಯಾಸವಿದ್ದರೆ ಖಿನ್ನತೆ, ಆತಂಕ, ಒತ್ತಡಗಳನ್ನು ದೂರ ಮಾಡಲು ಸಾಧ್ಯವಿದೆ.

Weight Loss Slim Body Healthy Lifestyle Concept Benefits Of Saffron

ತೂಕ ಇಳಿಕೆ

ಒಂದು ತಾಸು ಮಧ್ಯಮ ವೇಗದಲ್ಲಿ ಸೈಕಲ್‌ ಹೊಡೆಯುವುದರಿಂದ ಅಂದಾಜು 300 ಕ್ಯಾಲರಿ ಕರಗಿಸಬಹುದಂತೆ. ಹಾಗಾಗಿ ತೂಕ ಇಳಿಸುವವರಿಗೆ ಇದೊಂದು ಖುಷಿ ಕೊಡುವ ವ್ಯಾಯಾಮ. ಮಾತ್ರವಲ್ಲ, ಇದರಿಂದ ದೇಹದ ಹಲವಾರು ಕೀಲುಗಳು ಗಟ್ಟಿಯಾಗಿ ಆರ್ಥರೈಟಿಸ್‌ನಂಥ ಸಮಸ್ಯೆಗಳನ್ನು ದೂರ ಇರಿಸಬಹುದು. ಮಧುಮೇಹಿಗಳಿಗೂ ಇದು ಒಳ್ಳೆಯ ವ್ಯಾಯಾಮ. ಇನ್ನೇಕೆ ತಡ, ಹೊರಡಿ ಸೈಕಲ್‌ ಹಿಡಿದು!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ಪ್ರವಾಸ

Baby Moon: ಹನಿಮೂನ್‌ನಂತೆ ಬೇಬಿಮೂನ್; ಜನಪ್ರಿಯವಾಗುತ್ತಿರುವ ಹೊಸ ಟ್ರೆಂಡ್!

ಹೊಸ ಕುಟುಂಬದ ಸದಸ್ಯರ ಆಗಮನದ ಮೊದಲು ಮಾಡುವ ಸಣ್ಣ ವಿಶ್ರಾಂತಿಯನ್ನು ಬೇಬಿಮೂನ್ (Baby Moon) ಎಂದು ಕರೆಯಲಾಗುತ್ತದೆ. ಈ ಸಂದರ್ಭ ಪ್ರತಿಯೊಬ್ಬರ ಜೀವನದಲ್ಲಿ ಪ್ರಮುಖ ಘಟ್ಟವಾಗಿದೆ. ಬದುಕಿನಲ್ಲಿ ಹೊಸ ಅಧ್ಯಯನವೊಂದು ಪ್ರಾರಂಭಿಸುವ ಮೊದಲು ತಯಾರಿ ಮಾಡಿಕೊಳ್ಳಲು ಸಾಕಷ್ಟು ಅವಕಾಶವನ್ನು ಇದು ಸೃಷ್ಟಿ ಮಾಡುತ್ತದೆ ಮತ್ತು ಸುಂದರ ನೆನಪುಗಳನ್ನು ನಮ್ಮದಾಗಿಸುತ್ತದೆ.

VISTARANEWS.COM


on

By

Baby Moon
Koo

ಇತ್ತೀಚಿನ ವರ್ಷಗಳಲ್ಲಿ ಹನಿಮೂನ್‌ನಂತೆ (Honeymoon) ಬೇಬಿಮೂನ್ (Baby Moon) ಕೂಡ ಹೆಚ್ಚು ಪ್ರಚಲಿತದಲ್ಲಿದೆ. ಹೊಸದಾಗಿ ಮದುವೆಯಾದ ದಂಪತಿ ಹನಿಮೂನ್‌ಗೆ ತೆರಳಿದರೆ ಮಗುವಿನ ನಿರೀಕ್ಷೆಯಲ್ಲಿರುವ ಪೋಷಕರು (parents) ಬೇಬಿಮೂನ್‌ಗೆ ತೆರಳುತ್ತಾರೆ. ಗರ್ಭಧಾರಣೆಯ (pregnancy) ಬಳಿಕ ಅಲ್ಲಿ ಇಲ್ಲಿ ಸುತ್ತಾಡುವುದಕ್ಕೆ ನಿರ್ಬಂಧವಿದ್ದರೂ ಸುರಕ್ಷಿತ ಪ್ರಯಾಣದ ಸದುಪಯೋಗ ಪಡೆದುಕೊಂಡು ಹೆಚ್ಚಿನವರು ಬೇಬಿ ಮೂನ್‌ಗಾಗಿ ತೆರಳುತ್ತಿದ್ದಾರೆ.

bipasha basu and karan grover
ಬಿಪಾಶಾ ಬಸು ಮತ್ತು ಕರಣ್ ಗ್ರೋವರ್

ಬೇಬಿಮೂನ್ ಎಂದರೇನು?

ಮಗುವಿನ ನಿರೀಕ್ಷೆಯಲ್ಲಿರುವ ಪೋಷಕರು ಸಂಭ್ರಮ ಮತ್ತು ವಿಶ್ರಾಂತಿಗಾಗಿ ಪ್ರವಾಸ ಹೋಗುವುದನ್ನು ಬೇಬಿ ಮೂನ್ ಎಂದು ಕರೆಯಲಾಗುತ್ತದೆ. ಇದು ಇತ್ತೀಚಿನ ಟ್ರೆಂಡ್. ಮಗು ಹುಟ್ಟುವ ಮೊದಲು ಪ್ರವಾಸದ ಕಲ್ಪನೆಯು ವಿವಿಧ ಸಂಸ್ಕೃತಿಗಳಲ್ಲಿ ಬಹಳ ಹಿಂದಿನಿಂದಲೇ ಆಚರಣೆ ಮಾಡಲಾಗುತ್ತದೆ. ಈಗ ಇದನ್ನು ಪ್ರಪಂಚದಾದ್ಯಂತ ಪಾಲಿಸಲಾಗುತ್ತಿದೆ. ಬೇಬಿ ಮೂನ್ ಗಾಗಿ ಕೆಲವು ರೆಸಾರ್ಟ್‌ಗಳು ವಿಶೇಷ ಪ್ಯಾಕೇಜ್‌ಗಳನ್ನು ನೀಡುತ್ತಿದೆ. ಸ್ವಯಂ-ಆರೈಕೆಗೆ ಹೆಚ್ಚು ಒತ್ತು ನೀಡುವುದು ಇದರ ಆದ್ಯತೆಯಾಗಿದೆ. ಪೋಷಕರಿಗೆ ತಮ್ಮ ಸಂಬಂಧಗಳನ್ನು ಬಲಪಡಿಸಲು ಇದು ಅಮೂಲ್ಯ ಕ್ಷಣಗಳನ್ನು ಒದಗಿಸುತ್ತದೆ.

alia bhatt and ranbir kapoor
ಆಲಿಯಾ ಭಟ್ ಮತ್ತು ರಣಬೀರ್ ಕಪೂರ್

ಬೇಬಿ ಮೂನ್ ಪ್ರಾಮುಖ್ಯತೆ ಏನು?

ಗರ್ಭಾವಸ್ಥೆಯ ದೈಹಿಕ ಮತ್ತು ಭಾವನಾತ್ಮಕ ಸವಾಲುಗಳ ನಡುವೆ ವಿಶ್ರಾಂತಿ ಮತ್ತು ಪುನರ್ಯೌವನಗೊಳಿಸುವಿಕೆಗೆ ನಿರ್ಣಾಯಕ ಅವಕಾಶವನ್ನು ಒದಗಿಸುವ ಮೂಲಕ ಬೇಬಿಮೂನ್ ಮಗುವಿನ ನಿರೀಕ್ಷೆಯಲ್ಲಿರುವ ನಿರೀಕ್ಷಿತ ದಂಪತಿಗೆ ಅಪಾರ ಪ್ರಾಮುಖ್ಯತೆಯನ್ನು ಹೊಂದಿದೆ. ಪೋಷಕರಾಗಲು ಸಿದ್ಧತೆ ಮಾಡಿಕೊಳ್ಳಲು ಇದು ಅವಕಾಶ ನೀಡುತ್ತದೆ. ಮಗುವಿನ ಜನನ ಯೋಜನೆಗಳು ಮತ್ತು ಶಿಶುಪಾಲನಾ ವ್ಯವಸ್ಥೆಗಳ ಕುರಿತು ಚರ್ಚೆ, ಸನ್ನದ್ಧತೆ ಮತ್ತು ಏಕತೆಯ ಪ್ರಜ್ಞೆಯನ್ನು ಇದು ಬೆಳೆಸುತ್ತವೆ. ಅಲ್ಲದೇ ಇದು ತಮ್ಮ ಜೀವನದ ಮುಂದಿನ ಅಧ್ಯಾಯವನ್ನು ಪ್ರಾರಂಭಿಸುವ ಮೊದಲು ಅವರ ಬಂಧವನ್ನು ಬಲಪಡಿಸಲು ಮತ್ತು ಅವರ ಹುಟ್ಟಲಿರುವ ಮಗುವಿನೊಂದಿಗೆ ಪ್ರೀತಿ ಮತ್ತು ಸಂಪರ್ಕದ ಅಡಿಪಾಯವನ್ನು ಹಾಕಲು, ಪಾಲಿಸಬೇಕಾದ ಕರ್ತವ್ಯಗಳ ಬಗ್ಗೆ ತಮ್ಮ ಸಂಗಾತಿಯೊಂದಿಗೆ ಮುಕ್ತವಾಗಿ ಚರ್ಚಿಸಲು ಅಮೂಲ್ಯವಾದ ಅವಕಾಶವನ್ನು ನೀಡುತ್ತದೆ.

ishita dutta and vatsal sheth
ಇಶಿತಾ ದತ್ತಾ ಮತ್ತು ವತ್ಸಲ್ ಶೇತ್

ಮಾನಸಿಕ ಪ್ರಯೋಜನಗಳು

ಬೇಬಿಮೂನ್ ಮಗುವಿನ ನಿರೀಕ್ಷೆಯಲ್ಲಿರುವ ಪೋಷಕರಿಗೆ ಮಾನಸಿಕ ಪ್ರಯೋಜನಗಳನ್ನು ನೀಡುತ್ತದೆ. ಒತ್ತಡದಿಂದ ವಿರಾಮವನ್ನು ಒದಗಿಸುತ್ತದೆ. ದಂಪತಿ ತಮ್ಮ ಮಗುವಿನ ಮೇಲೆ ಹೆಚ್ಚಿನ ಗಮನ ಕೇಂದ್ರೀಕರಿಸಲು ಅನುವು ಮಾಡಿಕೊಡುತ್ತದೆ. ತಾಯಿಯ ಯೋಗಕ್ಷೇಮವನ್ನು ಉತ್ತೇಜಿಸುತ್ತದೆ ಮತ್ತು ಮಗುವಿಗೆ ಶಾಂತ ವಾತಾವರಣವನ್ನು ನೀಡುತ್ತದೆ. ಆತಂಕಗಳನ್ನು ಪರಿಹರಿಸಲು ಮತ್ತು ಭಾವನೆಗಳನ್ನು ಹಂಚಿಕೊಳ್ಳಲು ಪೋಷಕರಿಗೆ ಭರವಸೆ ಮತ್ತು ವಿಶ್ವಾಸವನ್ನು ತುಂಬಲು ಇದು ಸಹಕರಿಸುತ್ತದೆ. ಬೇಬಿ ಮೂನ್ ಸಮಯದಲ್ಲಿ ಪೇರೆಂಟ್ ಹುಡ್ ಅನ್ನು ನಿರೀಕ್ಷಿಸುವುದು ದಂಪತಿಯ ಉತ್ಸಾಹವನ್ನು ಸಕಾರಾತ್ಮಕ ಅನುಭವಗಳಾಗಿ ಪರಿವರ್ತಿಸಲು ಅನುವು ಮಾಡಿಕೊಡುತ್ತದೆ. ಇದರಿಂದ ತಾಯಿಯ ಸಂಪೂರ್ಣ ಯೋಗಕ್ಷೇಮವನ್ನು ಹೆಚ್ಚಿಸುತ್ತದೆ. ಒತ್ತಡವನ್ನು ಕಡಿಮೆ ಮಾಡುತ್ತದೆ ಮತ್ತು ನಿರೀಕ್ಷೆಯನ್ನು ಉತ್ತೇಜಿಸುತ್ತದೆ.

ಸಂಬಂಧಗಳನ್ನು ಬಲಪಡಿಸುವುದು

ಬೇಬಿಮೂನ್ ಸಮಯದಲ್ಲಿ ಕುಟುಂಬದ ಬಂಧ ಬಲವಾಗುತ್ತದೆ. ನಿರೀಕ್ಷಿತ ಪೋಷಕರಿಗೆ ಸಹಾಯ, ಮಾರ್ಗದರ್ಶನ ಮತ್ತು ಭಾವನಾತ್ಮಕ ಬೆಂಬಲವನ್ನು ನೀಡಲು ಇದು ಸಹಾಯ ಮಾಡುತ್ತದೆ. ಈ ವಿಶೇಷ ಸಂದರ್ಭದಲ್ಲಿ ಒಟ್ಟಿಗೆ ಸಮಯ ಕಳೆಯುವುದು, ಮುಕ್ತ ಸಂವಹನ ಮತ್ತು ಕುಟುಂಬಕ್ಕೆ ಮುಂಬರುವ ಮಗುವಿನ ಸೇರ್ಪಡೆಗಾಗಿ ಉತ್ಸಾಹ ಮತ್ತು ನಿರೀಕ್ಷೆಯನ್ನು ಹೆಚ್ಚಿಸಲು ಅನುವು ಮಾಡಿಕೊಡುತ್ತದೆ. ಮಗುವಿನ ನಿರೀಕ್ಷೆಯಲ್ಲಿರುವ ದಂಪತಿಗೆ ತಮ್ಮ ಬೆಂಬಲ ಮತ್ತು ಬದ್ಧತೆಯನ್ನು ಪುನರುಚ್ಚರಿಸುವ ಸಮಯವಾಗಿ ಇದು ಕಾರ್ಯನಿರ್ವಹಿಸುತ್ತದೆ. ದಂಪತಿಯ ಸಂಬಂಧವನ್ನು ಬಲಪಡಿಸುತ್ತದೆ.

shriya saran and Andrei Koscheev
ಶ್ರಿಯಾ ಸರನ್ ಮತ್ತು ಆಂಡ್ರೇ ಕೊಸ್ಚೆವ್

ಬೇಬಿ ಮೂನ್ ಯೋಜನೆ

ಬೇಬಿಮೂನ್ ಅನ್ನು ಯೋಜಿಸಲು ಪ್ರಯಾಣವನ್ನು ಪ್ರಾರಂಭಿಸುವಾಗ ಪ್ರತಿ ತಿರುವಿನಲ್ಲಿ ವಿಶ್ರಾಂತಿ ಮತ್ತು ಸೌಕರ್ಯಗಳಿಗೆ ಆದ್ಯತೆ ನೀಡುವುದು ಅತ್ಯಗತ್ಯ. ನಿರೀಕ್ಷಿತ ಪೋಷಕರ ಅಗತ್ಯತೆಗಳನ್ನು ಪೂರೈಸುವ ಗಮ್ಯಸ್ಥಾನ ಮತ್ತು ವಸತಿಗಳನ್ನು ಆಯ್ಕೆ ಮಾಡುವುದರೊಂದಿಗೆ ಇದು ಪ್ರಾರಂಭವಾಗುತ್ತದೆ. ವಿಶ್ರಾಂತಿಗೆ ಅನುಕೂಲಕರವಾದ ಪ್ರಶಾಂತ ಪರಿಸರವನ್ನು ಒದಗಿಸುವ ಸ್ಥಳಗಳನ್ನು ಆರಿಸಿಕೊಳ್ಳಿ. ಅದು ಶಾಂತವಾದ ಬೀಚ್‌ಸೈಡ್ ರಿಟ್ರೀಟ್, ಸ್ನೇಹಶೀಲ ಪರ್ವತ ಕ್ಯಾಬಿನ್ ಅಥವಾ ಐಷಾರಾಮಿ ಸ್ಪಾ ರೆಸಾರ್ಟ್ ಹೀಗೆ.. ಯಾವುದಾದರೊಂದನ್ನು ಆಯ್ಕೆ ಮಾಡಬಹುದು. ಪ್ರಯಾಣದ ಅಪಾಯ ಮತ್ತು ಗರ್ಭಧಾರಣೆಯ ಹಂತವನ್ನು ಆಧರಿಸಿ ಮುನ್ನೆಚ್ಚರಿಕೆಗಳ ಬಗ್ಗೆ ಆರೋಗ್ಯ ವೃತ್ತಿಪರರನ್ನು ಸಂಪರ್ಕಿಸಿ. ದೂರದ ಪ್ರಯಾಣ ಮಾಡಲು ಸಾಧ್ಯವಾಗದವರಿಗೆ ಅಥವಾ ಮನೆಯ ಹತ್ತಿರ ಇರಲು ಇಷ್ಟಪಡುವವರಿಗೆ ಸ್ಮರಣೀಯ ಬೇಬಿಮೂನ್ ಅನುಭವವನ್ನು ರಚಿಸಲು ಇನ್ನೂ ಸಾಕಷ್ಟು ಆಯ್ಕೆಗಳಿವೆ. ಬಜೆಟ್ ಸ್ನೇಹಿ ಸ್ಥಳೀಯ ವಿಹಾರಗಳನ್ನು ಅನ್ವೇಷಿಸಿ.

deepika padukone and ranbir kapoor
ದೀಪಿಕಾ ಪಡುಕೋಣೆ ಮತ್ತು ರಣಬೀರ್ ಕಪೂರ್

ಬೇಬಿಮೂನ್‌ಗೆ ನವೀನ ಯೋಜನೆ

ಬೇಬಿಮೂನ್ ಪ್ರಯಾಣದಲ್ಲಿನ ಅನುಭವ ಹೆಚ್ಚಿಸಲು ಕೆಲವು ಟ್ರಾವೆಲ್ ಕಂಪೆನಿಗಳು ಈಗ ನವೀನ ಸೇವೆಗಳು ಮತ್ತು ಪ್ಯಾಕೇಜ್‌ಗಳನ್ನು ನಿರೀಕ್ಷಿತ ಪೋಷಕರ ಅಗತ್ಯಗಳಿಗೆ ಅನುಗುಣವಾಗಿ ನೀಡುತ್ತವೆ. ವಿಶೇಷ ಸೌಕರ್ಯ, ಪ್ರಸವಪೂರ್ವ ಆರೈಕೆ ಆಯ್ಕೆ ಮತ್ತು ವಿಶ್ರಾಂತಿ-ಕೇಂದ್ರಿತ ಚಟುವಟಿಕೆಗಳನ್ನು ಒದಗಿಸುತ್ತವೆ.

ಇದನ್ನೂ ಓದಿ: Solo Trip: ಒಂಟಿಯಾಗಿ ಪ್ರವಾಸ ಹೊರಡುವ ಯೋಚನೆಯೇ? ಹಾಗಿದ್ದರೆ ಇಲ್ಲಿಗೊಮ್ಮೆ ಭೇಟಿ ನೀಡಿ!

ಸ್ವಯಂ ಕಾಳಜಿ ಆದ್ಯತೆಯಾಗಿರಲಿ

ನಿರೀಕ್ಷಿತ ತಾಯಂದಿರ ಯೋಗಕ್ಷೇಮವನ್ನು ಉತ್ತೇಜಿಸಲು ಬೇಬಿ ಮೂನ್ ಅನುಭವದಲ್ಲಿ ಸ್ವಯಂ-ಆರೈಕೆಯನ್ನು ಸೇರಿಸುವುದು ನಿರ್ಣಾಯಕವಾಗಿದೆ. ಗರ್ಭಾವಸ್ಥೆಯು ದೈಹಿಕ ಅಸ್ವಸ್ಥತೆ, ಹಾರ್ಮೋನುಗಳ ಬದಲಾವಣೆಗಳು ಮತ್ತು ಹೆಚ್ಚಿನ ಒತ್ತಡದ ಮಟ್ಟವನ್ನು ಉಂಟು ಮಾಡಬಹುದು. ಈ ವಿಶೇಷ ಸಮಯದಲ್ಲಿ ತಾಯಿ ಮತ್ತು ಮಗುವಿನ ಯೋಗಕ್ಷೇಮಕ್ಕೆ ಆದ್ಯತೆ ನೀಡುವುದು ಅತ್ಯಗತ್ಯ. ಪ್ರಸವಪೂರ್ವ ಮಸಾಜ್‌ಗಳು ಮತ್ತು ಧ್ಯಾನದಂತಹ ವಿಶ್ರಾಂತಿ ತಂತ್ರಗಳಿಗೆ ಆದ್ಯತೆ ನೀಡುವುದರಿಂದ ಒತ್ತಡವನ್ನು ನಿವಾರಿಸಬಹುದು ಮತ್ತು ಗರ್ಭಾವಸ್ಥೆಯಲ್ಲಿ ಒಟ್ಟಾರೆ ಆರೋಗ್ಯವನ್ನು ಉತ್ತಮಗೊಳಿಸುತ್ತದೆ. ಪ್ರಸವಪೂರ್ವ ಮಸಾಜ್‌ಗಳು ಗರ್ಭಿಣಿಯರಿಗೆ ಹಲವಾರು ಪ್ರಯೋಜನಗಳನ್ನು ನೀಡುತ್ತವೆ. ಅವರು ಸ್ನಾಯುವಿನ ಒತ್ತಡವನ್ನು ನಿವಾರಿಸಲು, ಕಾಲು ಮತ್ತು ಪಾದಗಳಲ್ಲಿ ಊತವನ್ನು ಕಡಿಮೆ ಮಾಡಲು, ಬೆನ್ನುನೋವು ಮತ್ತು ಕೀಲು ನೋವನ್ನು ನಿವಾರಿಸಲು ಮತ್ತು ರಕ್ತಪರಿಚಲನೆಯನ್ನು ಸುಧಾರಿಸಲು ಇದು ಸಹಾಯ ಮಾಡಬಹುದು. ಗರ್ಭಾವಸ್ಥೆಯಲ್ಲಿ ಮತ್ತು ಬೇಬಿಮೂನ್ ಸಮಯದಲ್ಲಿ ಸ್ವಯಂ-ಆರೈಕೆಯನ್ನು ಉತ್ತೇಜಿಸಲು ಧ್ಯಾನವು ಮತ್ತೊಂದು ಪ್ರಬಲ ಸಾಧನವಾಗಿದೆ. ಇದು ನಿರೀಕ್ಷಿತ ತಾಯಂದಿರಿಗೆ ತಮ್ಮ ಮನಸ್ಸನ್ನು ಶಾಂತಗೊಳಿಸಲು, ಆತಂಕವನ್ನು ಕಡಿಮೆ ಮಾಡಲು ಮತ್ತು ಆಂತರಿಕ ಶಾಂತಿಯ ಭಾವವನ್ನು ಬೆಳೆಸಲು ಅನುವು ಮಾಡಿಕೊಡುತ್ತದೆ.

Continue Reading

ಆರೋಗ್ಯ

Smoking Effects: ಮಹಿಳೆಯರೇ, ಧೂಮಪಾನದಿಂದ ನಿಮ್ಮ ಆರೋಗ್ಯದ ಮೇಲಾಗುವ ಪರಿಣಾಮದ ಅರಿವಿದೆಯೇ?

Smoking effects: ಪುರುಷರು ಮಹಿಳೆಯರೆಂಬ ಭೇದವಿಲ್ಲದೆ ಇತ್ತೀಚೆಗಿನ ದಿನಗಳಲ್ಲಿ ಸಾಕಷ್ಟು ಮಂದಿ ಧೂಮಪಾನದ ಚಟಕ್ಕೆ ದಾಸರಾಗುತ್ತಿದ್ದಾರೆ. ಪುರುಷರ ಆರೋಗ್ಯವನ್ನು ಕಾಡುವಂತೆಯೇ ಸಹಜವಾಗಿಯೇ ಮಹಿಳೆಯರ ಆರೋಗ್ಯಕ್ಕೂ ಇದು ಮಾರಕ. ಆದರೆ ಮಹಿಳೆಯ ವಿಚಾರಕ್ಕೆ ಬಂದರೆ, ಈ ಚಟದ ಪರಿಣಾಮ ಮಹಿಳೆಯರನ್ನು ಸ್ವಲ್ಪ ಹೆಚ್ಚೇ ಕಾಡುತ್ತದೆ. ಕಾರಣ ಮಹಿಳೆಯರ ಹಾರ್ಮೋನು, ಆಕೆಗೆ ಪ್ರಕೃತಿದತ್ತವಾಗಿ ಬಂದಿರುವ ತಾಯಿಯಾಗುವ ಹೊಣೆ ಇತ್ಯಾದಿ. ಬನ್ನಿ, ಮಹಿಳೆಯರು ಧೂಮಪಾನಿಗಳಾದರೆ, ಯಾವೆಲ್ಲ ಆರೋಗ್ಯ ಸಮಸ್ಯೆಗಳು ಅವರನ್ನು ಕಾಡುವ ಅಪಾಯ ಹೆಚ್ಚು. ಈ ಕುರಿತ ವಿವರ ಇಲ್ಲಿದೆ.

VISTARANEWS.COM


on

Smoking Effects
Koo

ಧೂಮಪಾನ, ಮದ್ಯಪಾನಗಳೆಂಬ ಚಟವು ಆರೋಗ್ಯಕ್ಕೆ ಹಾನಿಕರ ಎಂಬ ಸತ್ಯ ಎಲ್ಲರಿಗೂ ತಿಳಿದಿದೆ. ಆದರೂ, ಚಟದಿಂದ ಹೊರಕ್ಕೆ ಬರುವುದು ಸಾಧ್ಯವಾಗುವುದು ಕೆಲವರಿಗೆ ಮಾತ್ರ. ಹೊರಕ್ಕೆ ಬರಬೇಕು ಅಂದುಕೊಳ್ಳುವಷ್ಟರಲ್ಲಿ, ಆರೋಗ್ಯವು ಸರಿಪಡಿಸಲಾಗದ ಹಂತಕ್ಕೆ ತಲುಪಿರುತ್ತದೆ. ಪುರುಷರು ಮಹಿಳೆಯರೆಂಬ ಬೇಧವಿಲ್ಲದೆ ಇತ್ತೀಚೆಗಿನ ದಿನಗಳಲ್ಲಿ ಧೂಮಪಾನದ ಚಟಕ್ಕೆ ದಾಸರಾಗುತ್ತಿದ್ದಾರೆ. ಪುರುಷರ ಆರೋಗ್ಯವನ್ನು ಕಾಡುವಂತೆಯೇ ಸಹಜವಾಗಿಯೇ ಮಹಿಳೆಯರ ಆರೋಗ್ಯಕ್ಕೂ ಇದು ಮಾರಕ. ಆದರೆ ಮಹಿಳೆಯ ವಿಚಾರಕ್ಕೆ ಬಂದರೆ, ಈ ಚಟದ ಪರಿಣಾಮ ಮಹಿಳೆಯರನ್ನು ಸ್ವಲ್ಪ ಹೆಚ್ಚೇ ಕಾಡುತ್ತದೆ. ಕಾರಣ ಮಹಿಳೆಯರ ಹಾರ್ಮೋನು, ಆಕೆಗೆ ಪ್ರಕೃತಿದತ್ತವಾಗಿ ಬಂದಿರುವ ತಾಯಿಯಾಗುವ ಹೊಣೆ ಇತ್ಯಾದಿ. ಬನ್ನಿ, ಮಹಿಳೆಯರು ಧೂಮಪಾನಿಗಳಾದರೆ, ಯಾವೆಲ್ಲ ಆರೋಗ್ಯ ಸಮಸ್ಯೆಗಳು ಆಕೆಯನ್ನು ಕಾಡುವ ಅಪಾಯ ಹೆಚ್ಚು ಎಂಬುದನ್ನು (smoking effects) ವಿವರವಾಗಿ ನೋಡೋಣ.

Cancer Patient Resting Spinach Benefits

ಕ್ಯಾನ್ಸರ್‌

ಧೂಮಪಾನದಿಂದ ಕಾರ್ಸಿನೋಜೆನ್‌ಗಳು ಡಿಎನ್‌ಎ ಮಟ್ಟದಲ್ಲಿ ದೇಹಕ್ಕೆ ಹಾನಿ ಮಾಡುವುದಲ್ಲದೆ, ಕ್ಯಾನ್ಸರ್‌ನ ಜೀವಕೋಶಗಳು ಬೆಳೆಯುವುದನ್ನು ಪ್ರೋತ್ಸಾಹಿಸುತ್ತದೆ. ಮುಖ್ಯವಾಗಿ, ಶ್ವಾಸಕೋಶಗಳು, ಸ್ತನ, ಕಿಡ್ನಿ ಹಾಗೂ ಗರ್ಭಕಂಠದ ಕ್ಯಾನ್ಸರ್‌ ಧೂಮಪಾನದಿಂದಲೂ ಬರುವ ಸಾಧ್ಯತೆಗಳು ಹೆಚ್ಚು. ಧೂಮಪಾನವನ್ನು ತ್ಯಜಿಸುವುದರಿಂದ ಕ್ಯಾನ್ಸರ್‌ನ ಭಯದಿಂದ ಖಂಡಿತವಾಗಿಯೂ ದೂರವಿರಬಹುದು. ಆಗಾಗ ಪರೀಕ್ಷೆ, ವ್ಯಾಯಾಮ, ಸರಿಯಾದ ಆಹಾರ ಹಾಗೂ ಆರೋಗ್ಯಕರ ಜೀವನಶೈಲಿಯಿಂದ ಆರೋಗ್ಯ ಸಾಧ್ಯ.

Heart Attack

ಹೃದಯದ ಕಾಯಿಲೆ

ಸಿಗರೇಟಿನಲ್ಲಿರುವ ನಿಕೋಟಿನ್‌ ಹಾಗೂ ಇತರ ರಾಸಾಯಿಕಗಳಿಂದ ರಕ್ತನಾಳಗಳು ಸಂಕುಚಿತವಾಗುವುದಲ್ಲದೆ, ಅಧಿಕ ರಕ್ತದೊತ್ತಡದಂಥ ಸಮಸ್ಯೆಗಳೂ ಆಗಬಹುದು. ಇದರಿಂದ ಹೃದಯಾಘಾತ, ಪಾರ್ಶ್ವವಾಯು ಮತ್ತಿತರ ಸಮಸ್ಯೆಗಳು ಬರುವ ಅಪಾಯ ಹೆಚ್ಚು.

Breathing problem

ಉಸಿರಾಟದ ಕಾಯಿಲೆಗಳು

ಧೂಮಪಾನದಿಂದ ಶ್ವಾಸಕೋಶದ ಕಾಯಿಲೆಗಳು ಬರುವ ಸಂಭವ ಅತ್ಯಂತ ಹೆಚ್ಚು. ಕ್ರೋನಿಕ್‌ ಅಬ್‌ಸ್ಟ್ರಕ್ಟಿವ್‌ ಪಲ್ಮನರಿ ಡಿಸೀಸ್‌ ಎಂಬ ಅಪಾಯಕಾರಿ ಶ್ವಾಸಕೋಶದ ಕಾಯಿಲೆ, ಶ್ವಾಸಕೋಶದ ಕ್ಯಾನ್ಸರ್‌ ಬರಬಹುದು. ಸಿಗರೇಟು ಬಿಟ್ಟು, ಉತ್ತಮ ಆಹಾರ ಶೈಲಿ ಹಾಗೂ ಆರೋಗ್ಯಕರ ಜೀವನಶೈಲಿಯಿಂದ ಈ ಅಪಾಯವನ್ನು ತಪ್ಪಿಸಬಹುದು.

ಸಂತಾನೋತ್ಪತ್ತಿಯ ಸಮಸ್ಯೆ

ಧೂಮಪಾನದ ಅಭ್ಯಾಸವು ನೇರವಾಗಿ ನಿಮ್ಮ ಹಾರ್ಮೋನುಗಳ ಮೇಲೆ ಪರಿಣಾಮ ಬೀರುವುದರಿಂದ ಸಂತಾನೋತ್ಪತ್ತಿಯ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ಬಹುಬೇಗನೆ ಮೆನೋಪಾಸ್‌ ಆಗುವುದು, ಮಕ್ಕಳನ್ನು ಮಾಡಿಕೊಳ್ಳಲು ತೊಂದರೆಯಾಗುವುದು, ಗರ್ಭದಲ್ಲಿರುವ ಮಗುವಿಗೆ ಸಮಸ್ಯೆಗಳಾಗುವುದು ಇತ್ಯಾದಿ ಸಮಸ್ಯೆಗಳು ಮಹಿಳೆಯರನ್ನು ತೀವ್ರವಾಗಿ ಕಾಡಬಹುದು.

Rheumatoid Arthritis

ಸಂಧಿವಾತ

ಧೂಮಪಾನವು ನಮ್ಮ ದೇಹದಲ್ಲಿ ಕ್ಯಾಲ್ಶಿಯಂ ಹೀರಿಕೆಗೆ ಅಡ್ಡಿ ಉಂಟು ಮಾಡುತ್ತದೆ. ಇದು ಎಲುಬಿನ ಸಾಂದ್ರತೆಯ ಮೇಲೆ ಪರಿಣಾಮ ಬೀರುವುದರಿಂದ ಕ್ಯಾಲ್ಶಿಯಂ ಕೊರತೆಯಿಂದಾಗಿ ಸಂಧಿವಾತ, ಮೂಳೆ ಸವೆತದಂತಹ ಸಮಸ್ಯೆಗಳು ಕಾಣಿಸಿಕೊಳ್ಳಬಹುದು.

ಬಹುಬೇಗನೆ ಮುಪ್ಪಿನ ಲಕ್ಷಣಗಳು

ಧೂಮಪಾನ ಮಾಡುವುದರಿಂದ ಚರ್ಮದಲ್ಲಿ ರಕ್ತಪರಿಚಲನೆಗೆ ಅಡ್ಡಿಯುಂಟಾಗುತ್ತದೆ. ಇದರಿಂದ ಚರ್ಮ ಸುಕ್ಕಾಗುವುದು, ನಿರಿಗೆಗಳು ಉಂಟಾಗಿ ಬಹುಬೇಗನೆ ನಿಜವಾದ ವಯಸ್ಸಿಗಿಂತ ಹೆಚ್ಚು ವಯಸ್ಸಾದಂತೆ ಕಾಣಿಸಬಹುದು. ಮಹಿಳೆಯರ ಸೌಂದರ್ಯದ ಮೇಲೆ ಇದು ಬೀರುವ ಪರಿಣಾಮ ಹೆಚ್ಚು.

Immunity Against Diseases Lemon Water Benefits

ರೋಗನಿರೋಧಕ ಶಕ್ತಿಯ ಕೊರತೆ

ಧೂಮಪಾನದಿಂದ ರೋಗನಿರೋಧಕತೆಯ ಮೇಲೆ ಪರಿಣಾಮ ಬೀರಬಹುದು. ರೋಗ ನಿರೋಧಕ ಶಕ್ತಿ ಕುಂಠಿತವಾಗಿ ಸುಲಭವಾಗಿ ರೋಗಗಳಿಗೆ ತುತ್ತಾಗಬಹುದು. ಸರಿಯಾದ ನಿದ್ದೆ, ಆರೋಗ್ಯಕರ ಆಹಾರ ಮತ್ತು ಜೀವನಶೈಲಿಯ ಜೊತೆಗೆ ಧೂಮಪಾನವನ್ನು ತ್ಯಜಿಸಿದರೆ, ಮತ್ತೆ ಮೊದಲಿನಂತಾಗಬಹುದು.

Pregnancy

ಗರ್ಭಧಾರಣೆ ಸಮಸ್ಯೆಗಳು

ಮಹಿಳೆಯರಲ್ಲಿ ಮುಖ್ಯವಾಗಿ ಕಾಣುವ ಸಮಸ್ಯೆ ಎಂದರೆ ಅದು ಗರ್ಭಧಾರಣೆಗೆ ಸಂಬಂಧಿಸಿದ್ದು. ಧೂಮಪಾನದ ಚಟವಿರುವ ಮಹಿಳೆಯರಲ್ಲಿ, ಗರ್ಭಸ್ರಾವ, ಗರ್ಭಪಾತ, ಮಗುವಿನ ಬೆಳವಣಿಗೆಯಲ್ಲಿ ಕುಂಠಿತ ಮತ್ತಿತರ ಸಮಸ್ಯೆಗಳು ಕಾಡಬಹುದು.

Girl lying on the bed, period, stomach pain, menstrual cycle

ಋತುಚಕ್ರದ ಸಮಸ್ಯೆಗಳು

ಧೂಮಪಾನದಿಂದಾಗಿ ಹಾರ್ಮೋನಿನ ಸಮಸ್ಯೆಗಳು ಸಹಜವಾಗಿರುವ ಕಾರಣ ಋತುಚಕ್ರದ ಸಮಸ್ಯೆಗಳೂ ಕೂಡಾ ಕಾಣಿಸಬಹುದು. ಬಹುಬೇಗನೆ ಮೆನೋಪಾಸ್‌ ಕೂಡಾ ಆಗಬಹುದು.

Weight Loss Tips: ನಲವತ್ತರ ನಂತರ ತೂಕ ಇಳಿಸುವುದು ಹೇಗೆ?ಇದನ್ನೂ ಓದಿ:

ದೈಹಿಕ ಫಿಟ್‌ನೆಸ್‌ ಕೊರತೆ

ಎಲ್ಲಕ್ಕಿಂತ ಮುಖ್ಯವಾಗಿ ಧೂಮಪಾನ ಮಾಡುವುದರಿಂದ ಫಿಟ್‌ನೆಸ್‌ನ ಸಮಸ್ಯೆಯೂ ಕಾಡಬಹುದು. ಶ್ವಾಸಕೋಶದ ಶಕ್ತಿ ಸಾಮರ್ಥ್ಯದಲ್ಲಿ ಇಳಿಮುಖವಾಗುವುದರಿಂದ ಇವು ನೇರವಾಗಿ ಇಡೀ ದೇಹದ ಮಾಂಸಖಂಡ ಹಾಗೂ ದೈಹಿಕ ಸಾಮರ್ಥ್ಯದ ಮೇಲೆ ಪರಿಣಾಮ ಬೀರುತ್ತದೆ.

Continue Reading

ದೇಶ

Serial Bride: ಹಲವು ಜನರನ್ನು ಮದುವೆಯಾಗಿ ವಂಚಿಸಿದ್ದ ಮಹಿಳೆಗೆ ಎಚ್‌ಐವಿ; ಮಾಜಿ ವರಗಳಿಗಾಗಿ ಶೋಧ!

Serial Bride: ಅರೇಂಜ್‌ ಮ್ಯಾರೇಜ್‌ ಹೆಸರಿನಲ್ಲಿ ಮಹಿಳೆಯು ಹಲವರಿಗೆ ವಂಚಿಸಿದ್ದಳು. ತಾನು ಸೇರಿ ಏಳು ಜನರ ಗ್ಯಾಂಗ್‌ ಕಟ್ಟಿದ್ದ ಮಹಿಳೆಯು, ವಯಸ್ಸಾದರೂ ಮದುವೆಯಾಗದವರು, ಕಂಕಣ ಭಾಗ್ಯ ಕೂಡಿ ಬರದವರು, ಹೆಂಡತಿ ತೀರಿಕೊಂಡ ಬಳಿಕ ಒಂಟಿಯಾದವರನ್ನು ಗುರುತಿಸಿ, ಅವರನ್ನು ಮದುವೆಯಾಗುತ್ತಿದ್ದಳು. ಬಳಿಕ ಅವರ ಹಣ, ಚಿನ್ನ ಕದ್ದು ಪರಾರಿಯಾಗುತ್ತಿದ್ದಳು. ಈಗ ಈಕೆ ಜೈಲಿನಲ್ಲಿದ್ದು, ಎಚ್‌ಐವಿ ದೃಢಪಟ್ಟಿದೆ. ಇದು ಈಗ ಪೊಲೀಸರು ಹಾಗೂ ವೈದ್ಯಾಧಿಕಾರಿಗಳಿಗೆ ಹೊಸ ಆತಂಕ ತಂದೊಡ್ಡಿದೆ.

VISTARANEWS.COM


on

Serial Bride
Koo

ಲಖನೌ: ದೇಶದ ಹಲವೆಡೆ ಹತ್ತಾರು ಜನರನ್ನು ನಂಬಿಸಿ, ಅವರನ್ನು ಮದುವೆಯಾಗಿ, ಬಳಿಕ ಅವರ ಚಿನ್ನ ಹಾಗೂ ನಗದನ್ನು ದೋಚಿ ಪರಾರಿಯಾಗುತ್ತಿದ್ದ, ಸೀರಿಯಲ್‌ ಬ್ರೈಡ್‌ (ಸರಣಿ ಮದುಮಗಳು ಅಥವಾ Serial Bride) ಎಂದೇ ಖ್ಯಾತಿಯಾಗಿದ್ದ ಮಹಿಳೆಗೆ ಈಗ ಎಚ್‌ಐವಿ ದೃಢಪಟ್ಟಿರುವುದು ವೈದ್ಯಕೀಯ ವರದಿಗಳಿಂದ ಸಾಬೀತಾಗಿದೆ. ಇದು ಈಗ ಪೊಲೀಸರಿಗೆ ಮತ್ತೊಂದು ಸವಾಲಾಗಿದ್ದು, ಈಕೆಯನ್ನು ಮದುವೆಯಾಗಿದ್ದ ಮಾಜಿ ಪತಿಯರನ್ನು ಹುಡುಕಲು ಉತ್ತರ ಪ್ರದೇಶ (Uttar Pradesh) ಹಾಗೂ ಉತ್ತರಾಖಂಡದಲ್ಲಿ ಕಾರ್ಯಾಚರಣೆ ಆರಂಭಿಸಲಾಗಿದೆ.

ಅರೇಂಜ್‌ ಮ್ಯಾರೇಜ್‌ ಹೆಸರಿನಲ್ಲಿ ಮಹಿಳೆಯು ಹಲವರಿಗೆ ವಂಚಿಸಿದ್ದಳು. ತಾನು ಸೇರಿ ಏಳು ಜನರ ಗ್ಯಾಂಗ್‌ ಕಟ್ಟಿದ್ದ ಮಹಿಳೆಯು, ವಯಸ್ಸಾದರೂ ಮದುವೆಯಾಗದವರು, ಕಂಕಣ ಭಾಗ್ಯ ಕೂಡಿ ಬರದವರು, ಹೆಂಡತಿ ತೀರಿಕೊಂಡ ಬಳಿಕ ಒಂಟಿಯಾದವರನ್ನು ಗುರುತಿಸಿ, ಅವರನ್ನು ಮದುವೆಯಾಗುತ್ತಿದ್ದಳು. ಮದುವೆಯಾದ ಬಳಿಕ ಗ್ಯಾಂಗ್‌ನ ಸದಸ್ಯರನ್ನು ತನ್ನ ಸಂಬಂಧಿಕರು ಎಂದು ನೂತನ ವರಗಳಿಗೆ ಪರಿಚಯ ಮಾಡಿಸುತ್ತಿದ್ದಳು. ಇದಾದ ಬಳಿಕ, ಆ ವ್ಯಕ್ತಿಯ ಬಳಿಯ ನಗದು, ಚಿನ್ನಾಭರಣಗಳನ್ನು ಕದ್ದು ಪರಾರಿಯಾಗುತ್ತಿದ್ದಳು.

World Aids Vaccine Day

ಹೀಗೆ, ಉತ್ತರ ಪ್ರದೇಶ, ಉತ್ತರಾಖಂಡದಲ್ಲಿ ಹಲವರಿಗೆ ಮೋಸ ಮಾಡಿದ ಹಿನ್ನೆಲೆಯಲ್ಲಿ ಪೊಲೀಸರು ಕಾರ್ಯಾಚರಣೆ ನಡೆಸಿ ಮಹಿಳೆ ಹಾಗೂ ಆರು ಆರೋಪಿಗಳನ್ನು ಬಂಧಿಸಿದ್ದರು. ಮಹಿಳೆಯ ಸೇರಿ ಏಳು ಜನರನ್ನು ಮುಜಫ್ಫರ್‌ನಗರ ಜೈಲಿನಲ್ಲಿ ಇರಿಸಲಾಗಿದೆ. ಇತ್ತೀಚೆಗೆ ಮಹಿಳೆಯನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿದ್ದು, ಜಿಲ್ಲಾಸ್ಪತ್ರೆಯ ವೈದ್ಯರು ನೀಡಿದ ವರದಿಯಲ್ಲಿ, ಮಹಿಳೆಗೆ ಏಡ್ಸ್‌ ಇರುವುದು ಪತ್ತೆಯಾಗಿದೆ. ಇದು ಈಗ ಭೀಕರ ಪ್ರಮಾಣದಲ್ಲಿ ಆರೋಗ್ಯ ಸಮಸ್ಯೆಯನ್ನು ತಂದೊಡ್ಡಿದೆ.

“ಮಹಿಳೆಯು ಹಲವು ಜನರಿಗೆ ವಂಚಿಸಿದ್ದು, ಹತ್ತಾರು ಜನರು ಈಕೆಯ ಜತೆ ದೈಹಿಕ ಸಂಪರ್ಕಕ್ಕೆ ಬಂದಿದ್ದಾರೆ. ಈಗ ಮಹಿಳೆಗೆ ಎಚ್‌ಐವಿ ಇದೆ ಎಂಬುದು ಇತ್ತೀಚಿನ ವೈದ್ಯಕೀಯ ವರದಿಯಿಂದ ತಿಳಿದುಬಂದಿದೆ. ಈಕೆಯ ಜತೆ ಲೈಂಗಿಕ ಸಂಪರ್ಕ ಹೊಂದಿದವರು, ಮದುವೆಯಾದವರನ್ನು ಉತ್ತರ ಪ್ರದೇಶ ಹಾಗೂ ಉತ್ತರಾಖಂಡದಲ್ಲಿ ಹುಡುಕಲಾಗುತ್ತಿದೆ” ಎಂದು ಮುಜಫ್ಫರ್‌ನಗರ ಜೈಲು ಎಸ್‌ಪಿ ಸೀತಾರಾಮ್‌ ಶರ್ಮಾ ಅವರು ಸುದ್ದಿಗಾರರರಿಗೆ ಮಾಹಿತಿ ನೀಡಿದ್ದಾರೆ. ಇನ್ನು, ಈಕೆಯನ್ನು ಮದುವೆಯಾದವರು ಕೂಡಲೇ ಎಚ್‌ಐವಿ ತಪಾಸಣೆ ಮಾಡಿಸಿಕೊಳ್ಳಿ ಎಂಬುದಾಗಿ ವೈದ್ಯಾಧಿಕಾರಿಗಳು ಕರೆ ನೀಡಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: Sebi Fines: ವಂಚನೆ ಪ್ರಕರಣ; ಟಿವಿ ನಿರೂಪಕ, ವಿಶ್ಲೇಷಕನಿಗೆ ತಲಾ 1 ಕೋಟಿ ರೂ. ದಂಡ ವಿಧಿಸಿದ ಸೆಬಿ

Continue Reading

ಆರೋಗ್ಯ

Weight Loss Tips: ನಲವತ್ತರ ನಂತರ ತೂಕ ಇಳಿಸುವುದು ಹೇಗೆ?

Weight loss Tips: ವಯಸ್ಸೆಂಬುದು ಒಂದು ಸಂಖ್ಯೆ ಮಾತ್ರ ಎನ್ನುವವರು ಲೋಕದ ತುಂಬೆಲ್ಲ ಇದ್ದಾರೆ. ಹಾಗಾದರೆ ವಯಸ್ಸೆಷ್ಟು ಎಂದು ಕೇಳಿದರೆ, ಅದೊಂದು ಸಂಖ್ಯೆಯನ್ನು ಹೇಳಲು ಸಿದ್ಧರಿರುವುದಿಲ್ಲ! ವಯಸ್ಸನ್ನು ಹೇಳಿದರೂ ಹೇಳದಿದ್ದರೂ ಆಗುವುದಂತೂ ಹೌದಲ್ಲ? ಅದರಲ್ಲೂ ನಮ್ಮ ಅಂಗಾಂಗಗಳು ತಮ್ಮ ಕ್ಷಮತೆಯಲ್ಲಿ ಅದನ್ನು ತೋರಿಸಿಯೇ ಬಿಡುತ್ತವೆ. ಉದಾ, ಹಿಂದೊಮ್ಮೆ ಕಲ್ಲನ್ನಾದರೂ ತಿಂದು ಕರಗಿಸುತ್ತಿದ್ದ ಹೊಟ್ಟೆ, ಈಗೀಗ ಊಟವನ್ನೇ ಅರಗಿಸುವುದಕ್ಕೆ ಉಸ್ಸಪ್ಪ ಎನ್ನುವುದಾದರೆ, ವಯಸ್ಸು 40 ದಾಟಿದ್ದು ಹೌದು ಎಂದರ್ಥ. ಹಾಗಾದರೆ ಪ್ರಾಯ 40 ಆದ ಮೇಲೆ ದೇಹದ ಕೊಬ್ಬು ಕರಗಿಸುವುದು ಹೇಗೆ?

VISTARANEWS.COM


on

Weight Loss Tips
Koo

ಹಿಂದೆ ಕಲ್ಲನ್ನಾದರೂ ತಿಂದು (Weight loss Tips) ಕರಗಿಸುತ್ತಿದ್ದ ಹೊಟ್ಟೆ, ಈಗೀಗ ಊಟವನ್ನೇ ಅರಗಿಸುವುದಕ್ಕೆ ಉಸ್ಸಪ್ಪ ಎನ್ನುವುದಾದರೆ, ವಯಸ್ಸು 40 ದಾಟಿದ್ದು ಹೌದು ಎಂದರ್ಥ. ಈ ಗುಟ್ಟನ್ನು ದೇಹದ ಚಯಾಪಚಯ ಹೇಳಿಯೇ ಬಿಡುತ್ತದೆ. ತಿಂದಿದ್ದು ಕರಗುತ್ತಿಲ್ಲ ಎಂದಾದರೆ ಆ ಕೊಬ್ಬೆಲ್ಲ ಕುಳಿತುಕೊಳ್ಳುವುದು ದೇಹದಲ್ಲೇ ತಾನೆ? ಹಾಗಾದರೆ ಪ್ರಾಯ 40 ಆದ ಮೇಲೆ ದೇಹದ ಕೊಬ್ಬು ಕರಗಿಸುವುದು ಹೇಗೆ?

Weight Loss Benefits Of Eating Roasted Peanuts Daily

ವಯಸ್ಸೆಂಬುದು ಒಂದು ಸಂಖ್ಯೆ ಮಾತ್ರ ಎನ್ನುವವರು ಲೋಕದ ತುಂಬೆಲ್ಲ ಇದ್ದಾರೆ. ಹಾಗಾದರೆ ವಯಸ್ಸೆಷ್ಟು ಎಂದು ಕೇಳಿದರೆ, ಅದೊಂದು ಸಂಖ್ಯೆಯನ್ನು ಹೇಳಲು ಸಿದ್ಧರಿರುವುದಿಲ್ಲ! ಇರಲಿ, ವಿಷಯ ಅದಲ್ಲ. ವಯಸ್ಸನ್ನು ಹೇಳಿದರೂ ಹೇಳದಿದ್ದರೂ, ಆಗುವುದಂತೂ ಹೌದಲ್ಲ. ಅದರಲ್ಲೂ ನಮ್ಮ ಅಂಗಾಂಗಗಳು ತಮ್ಮ ಕ್ಷಮತೆಯಲ್ಲಿ ಅದನ್ನು ತೋರಿಸಿಯೇ ಬಿಡುತ್ತವೆ. ಉದಾ, ಹಿಂದೊಮ್ಮೆ ಕಲ್ಲನ್ನಾದರೂ ತಿಂದು ಕರಗಿಸುತ್ತಿದ್ದ ಹೊಟ್ಟೆ, ಈಗೀಗ ಊಟವನ್ನೇ ಅರಗಿಸುವುದಕ್ಕೆ ಉಸ್ಸಪ್ಪ ಎನ್ನುವುದಾದರೆ, ವಯಸ್ಸು ೪೦ ದಾಟಿದ್ದು ಹೌದು. ಈ ಗುಟ್ಟನ್ನು ದೇಹದ ಚಯಾಪಚಯ ಹೇಳಿಯೇ ಬಿಡುತ್ತದೆ. ತಿಂದಿದ್ದು ಕರಗುತ್ತಿಲ್ಲ ಎಂದಾದರೆ ಆ ಕೊಬ್ಬೆಲ್ಲ ಕುಳಿತುಕೊಳ್ಳುವುದು ದೇಹದಲ್ಲೇ ತಾನೆ? ಹಾಗಾದರೆ ಪ್ರಾಯ 40 ಆದ ಮೇಲೆ ದೇಹದ ಕೊಬ್ಬು ಕರಗಿಸುವುದು ಹೇಗೆ? ಹೆಚ್ಚಿನ ಸಾರಿ ತೂಕ ಕರಗಿಸುವ ಭರದಲ್ಲಿ ಚುಟುಕು ಡಯೆಟ್‌ಗಳ ಮೊರೆ ಹೋಗುತ್ತೇವೆ. ಆಗದಿರುವಂಥ ಸರ್ಕಸ್‌ಗಳಲ್ಲಿ ತೊಡಗಿಸಿಕೊಳ್ಳುತ್ತೇವೆ. ಇದರ ಪರಿಣಾಮವೇನೆಂದರೆ ದೇಹದಲ್ಲಿ ಕೊಬ್ಬು ಕರಗುವ ಬದಲು, ನೀರಿನಿಂದ ಇರುವಂಥ ತೂಕ ಮಾತ್ರವೇ ಕ್ಷಿಪ್ರವಾಗಿ ಕರಗುತ್ತದೆ. ಅದೂ ಇಲ್ಲದಿದ್ದರೆ ಸ್ನಾಯುಗಳು ಮಾಯವಾಗಿ ದೇಹ ತೊಂದರೆಗೆ ಸಿಲುಕುತ್ತದೆ. ಇದರ ಜೊತೆಗೆ ತಪ್ಪಾಗಿ ವ್ಯಾಯಾಮಗಳನ್ನೂ ಮಾಡಿದರೆ, ಗಾಯಗಳ ಸಮಸ್ಯೆ ತಲೆದೋರುತ್ತದೆ. ಪ್ರಾಯ ಹೆಚ್ಚುತ್ತಿದ್ದಂತೆ ಗಾಯ ಮಾಯುವುದು ನಿಜಕ್ಕೂ ಕಷ್ಟ. ಹಾಗಾದರೆ ಸುಸ್ಥಿರವಾಗಿ ಮತ್ತು ಸುರಕ್ಷಿತವಾಗಿ ತೂಕ ಇಳಿಸುವುದಕ್ಕೆ 40ರ ನಂತರ ಏನು ಮಾಡಬೇಕು?

Dieting concept. Healthy Food. Beautiful Young Asian Woman

ಆಹಾರದ ಬಗ್ಗೆ ಗಮನ

ಬೆಳಗಿನ ಉಪಾಹಾರದಲ್ಲಿ ದೇಹಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಪ್ರೊಟೀನ್‌ ಒದಗಿಸಬೇಕು ಜೊತೆಗೆ ಕ್ಯಾಲರಿ ಇಳಿಸಬೇಕು. ಅಂದರೆ, ನಿಮಗೆ ಬೆಳಗ್ಗೆ 1200 ಕ್ಯಾಲರಿಯ ಆಹಾರ ಬೇಕು ಎಂದಿದ್ದರೆ, ಅದನ್ನು ಅಂದಾಜು 900 ಕ್ಯಾಲರಿಗಳಿಗೆ ಇಳಿಸುವುದು. ಈ ಆಹಾರದಲ್ಲಿ ಪ್ರೊಟೀನ್‌ ಮತ್ತು ಸಂಕೀರ್ಣ ಪಿಷ್ಟಗಳು ಭರಿತವಾಗಿ ಇರಬೇಕು. ಇದರಿಂದ ಶರೀರ ಸೊರಗುವುದಿಲ್ಲ ಮತ್ತು ಹಸಿವೂ ಆಗುವುದಿಲ್ಲ. ದೇಹಕ್ಕೆ ಬೇಕಾದ ಉಳಿದ 300 ಕ್ಯಾಲರಿಯನ್ನು ಶರೀರ ತನ್ನ ಕೊಬ್ಬಿನ ದಾಸ್ತಾನಿನಿಂದ ತೆಗೆದುಕೊಳ್ಳುತ್ತದೆ. ಇದನ್ನು ಎಲ್ಲಾ ಹೊತ್ತಿನ ಆಹಾರಗಳಲ್ಲೂ ಕ್ರಮೇಣ ಅಳವಡಿಸಿಕೊಳ್ಳಬಹುದು. ಋತುಮಾನದ ಸೊಪ್ಪು-ಹಣ್ಣು-ತರಕಾರಿಗಳು ಊಟದಲ್ಲಿ ಸಾಕಷ್ಟಿರಲಿ. ಇದರಿಂದ ನಾರು ಭರಪೂರ ದೊರೆಯುತ್ತದೆ. ಖನಿಜಗಳು ಕೊರತೆಯಾಗದಂತೆ ನೋಡಿಕೊಳ್ಳಲು ಇದಿಷ್ಟು ಆಹಾರಗಳು ಸಾಕಾಗುತ್ತವೆ. ಜೊತೆಗೆ ಚೆನ್ನಾಗಿ ನೀರು ಕುಡಿಯಿರಿ.

Asia woman doing yoga fitness exercise Inflammation

ವ್ಯಾಯಾಮ

ಯೋಗದಂಥ ವ್ಯಾಯಾಮಗಳು ಸರಳ ಎನ್ನಿಸಿದರೂ ಹಲವು ರೀತಿಯಲ್ಲಿ ಪ್ರಯೋಜನಕಾರಿ. ದೇಹ-ಮನಸ್ಸುಗಳನ್ನು ಶಾಂತವಾಗಿಸುವುದರ ಜೊತೆಗೆ, ದೇಹದ ವಿವಿಧ ಸ್ನಾಯುಗಳನ್ನು ಸಶಕ್ತಗೊಳಿಸುತ್ತವೆ. ಕೀಲುಗಳ ಆರೋಗ್ಯ ಸುಧಾರಿಸಿ ದೇಹದ ನಮ್ಯತೆಯನ್ನೂ ಹೆಚ್ಚಿಸುತ್ತದೆ. ಇವೆಲ್ಲ ಕ್ರಮೇಣ ನೆರವಾಗುವುದು ದೇಹದ ಕೊಬ್ಬು ಕರಗಿಸುವಲ್ಲಿ.

ಇದನ್ನೂ ಓದಿ: Seeds For Men Sexual Power: ಪುರುಷರ ಲೈಂಗಿಕ ಶಕ್ತಿ ಹೆಚ್ಚಳಕ್ಕೆ ಈ ಬೀಜಗಳು ಪರಿಣಾಮಕಾರಿ!

ಕಾರ್ಡಿಯೊ

ಇದಕ್ಕಾಗಿ ಥ್ರೆಡ್‌ಮಿಲ್‌ಗಳ ಮೇಲೆ ಉಸಿರುಗಟ್ಟಿ ಓಡಬೇಕೆಂದಿಲ್ಲ. ಸರಳವಾಗಿ ಬೀಸು ನಡಿಗೆ, ಜಾಗಿಂಗ್‌ ಸಹ ಸಾಕಾಗುತ್ತದೆ. ನಿಮ್ಮಿಷ್ಟದ ಇಂಥ ಯಾವುದೇ ವ್ಯಾಯಾಮ ಮಾಡಬಹುದು. ಕಾರ್ಡಿಯೊ ವ್ಯಾಯಾಮಗಳು ದೇಹಕ್ಕೆ ಆಮ್ಲಜನಕದ ಪ್ರಮಾಣವನ್ನು ಹೆಚ್ಚಿಸಿ, ಹೃದಯದ ಆರೋಗ್ಯ ಹೆಚ್ಚಿಸುತ್ತವೆ. ಎಲ್ಲಕ್ಕಿಂತ ಮುಖ್ಯವಾಗಿ ಕ್ಯಾಲರಿ ಕರಗುವ ಪ್ರಮಾಣವನ್ನು ಅಧಿಕಗೊಳಿಸುತ್ತವೆ.

May Improve Sleep Quality Fish Benefits

ನಿದ್ದೆ

ಆರೋಗ್ಯದ ವಿಷಯ ಹೇಳುವಾಗ ನಿದ್ದೆಯನ್ನುಳಿದು ಮುಂದೆ ಹೋಗುವಂತೆಯೇ ಇಲ್ಲ. ತೂಕ ಇಳಿಸುವುದು, ಫಿಟ್‌ನೆಸ್‌ ಇತ್ಯಾದಿಗಳ ವಿಷಯ ಮಾತಾಡುವಾಗ ನಿದ್ದೆಯನ್ನು ಸಂಪೂರ್ಣ ಮರೆತೇ ಬಿಟ್ಟಿರುತ್ತೇವೆ. ದೇಹದ ರಿಪೇರಿಗೆ ಅಗತ್ಯ ಅವಕಾಶವನ್ನು ನೀಡದಿದ್ದರೆ ಯಾವುದೂ ಸರಿಯಾಗಿ ಆಗುವುದಿಲ್ಲ. ಆದರೆ ದಿನಕ್ಕೆ ಕಡ್ಡಾಯ 7-8 ತಾಸು ನಿದ್ದೆ ಮಾಡಿ. ಜೊತೆಗೆ, ನಿದ್ರೆಗೆಟ್ಟರೆ ತೂಕ ಹೆಚ್ಚುತ್ತದೆ. ನಿದ್ದೆ ಇಲ್ಲದಿದ್ದರೆ ಮಾನಸಿಕ ಒತ್ತಡ ಹೆಚ್ಚುತ್ತದೆ, ಇದರಿಂದಲೂ ತೂಕ ಏರುತ್ತದೆ. ಮತ್ತೆ ತೂಕ ಇಳಿಸುವುದು ಹೇಗೆ ಸಾಧ್ಯ?

Continue Reading
Advertisement
Baby Moon
ಪ್ರವಾಸ2 mins ago

Baby Moon: ಹನಿಮೂನ್‌ನಂತೆ ಬೇಬಿಮೂನ್; ಜನಪ್ರಿಯವಾಗುತ್ತಿರುವ ಹೊಸ ಟ್ರೆಂಡ್!

icc-t20-ranking
ಕ್ರೀಡೆ8 mins ago

ICC T20 Ranking : ಸೂರ್ಯಕುಮಾರ್​ ಯಾದವ್​ ಹಿಂದಿಕ್ಕಿ ರ್ಯಾಂಕಿಂಗ್​​ನಲ್ಲಿ ನಂಬರ್ 1 ಸ್ಥಾನ ಪಡೆದ ಹೆಡ್​​​

murder case anekal
ಕ್ರೈಂ30 mins ago

Murder Case: ಬಾರ್‌ನಲ್ಲಿ ಗುರಾಯಿಸಿದ್ದಕ್ಕೆ ವ್ಯಕ್ತಿಯ ಬರ್ಬರ ಹತ್ಯೆ

lk advani
ಪ್ರಮುಖ ಸುದ್ದಿ53 mins ago

LK Advani: ಮಾಜಿ ಉಪ ಪ್ರಧಾನಿ ಎಲ್‌ ಕೆ ಆಡ್ವಾಣಿ ಅಸ್ವಸ್ಥ, ಏಮ್ಸ್‌ಗೆ ದಾಖಲು

Smoking Effects
ಆರೋಗ್ಯ1 hour ago

Smoking Effects: ಮಹಿಳೆಯರೇ, ಧೂಮಪಾನದಿಂದ ನಿಮ್ಮ ಆರೋಗ್ಯದ ಮೇಲಾಗುವ ಪರಿಣಾಮದ ಅರಿವಿದೆಯೇ?

Vastu Tips
ಧಾರ್ಮಿಕ2 hours ago

Vastu Tips: ಬಾತ್ ರೂಮ್‌ನಲ್ಲಿ ಈ ವಸ್ತುಗಳಿದ್ದರೆ ಕುಟುಂಬಕ್ಕೆ ಭಾರಿ ಸಂಕಷ್ಟ!

Karnataka Weather
ಕರ್ನಾಟಕ2 hours ago

Karnataka Weather: ಇಂದು ಕೊಡಗು, ಹಾಸನ, ಕರಾವಳಿ ಜಿಲ್ಲೆಗಳಲ್ಲಿ ಅಬ್ಬರಿಸಲಿದ್ದಾನೆ ವರುಣ; ಹಲವೆಡೆ ಶಾಲೆಗಳಿಗೆ ರಜೆ!

Dina Bhavishya
ಪ್ರಮುಖ ಸುದ್ದಿ3 hours ago

Dina Bhavishya: ಈ ರಾಶಿಯವರು ತಮಗೆ ಸಂಬಂಧಪಡದ ವಿಷಯದಲ್ಲಿ ಮೂಗು ತೂರಿಸುವುದು ಬೇಡ!

ollie robinson
ಪ್ರಮುಖ ಸುದ್ದಿ8 hours ago

Ollie Robinson: 6, 6nb, 4, 6, 4, 6nb, 4, 6nb, 1; ಒಂದೇ ಓವರ್‌ನಲ್ಲಿ 43 ರನ್‌ ಕೊಟ್ಟ ಇಂಗ್ಲೆಂಡ್‌ ಬೌಲರ್; Video ಇದೆ

Serial Bride
ದೇಶ9 hours ago

Serial Bride: ಹಲವು ಜನರನ್ನು ಮದುವೆಯಾಗಿ ವಂಚಿಸಿದ್ದ ಮಹಿಳೆಗೆ ಎಚ್‌ಐವಿ; ಮಾಜಿ ವರಗಳಿಗಾಗಿ ಶೋಧ!

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Weather Forecast
ಮಳೆ3 days ago

Karnataka Weather : ಕರಾವಳಿಯಲ್ಲಿ ಮುಂದುವರಿದ ವರುಣಾರ್ಭಟ; ಸಾಂಪ್ರದಾಯಿಕ ಮೀನುಗಾರಿಕೆಗೂ ಬ್ರೇಕ್

karnataka weather Forecast
ಮಳೆ6 days ago

Karnataka Weather : ರಭಸವಾಗಿ ಹರಿಯುವ ನೀರಲ್ಲಿ ಸಿಲುಕಿದ ಬೊಲೆರೋ; ಬಿರುಗಾಳಿ ಸಹಿತ ಮಳೆ ಎಚ್ಚರಿಕೆ

International Yoga Day 2024
ಕರ್ನಾಟಕ6 days ago

International Yoga Day 2024: ಎಲ್ಲೆಲ್ಲೂ ಯೋಗಾಯೋಗ‌ಕ್ಕೆ ಮಂಡಿಯೂರಿದ ಜನತೆ

Karnataka Weather Forecast
ಮಳೆ7 days ago

Karnataka Weather : ಬಾಗಲಕೋಟೆ, ಬೆಂಗಳೂರು ಸೇರಿ ಚಿಕ್ಕಮಗಳೂರಲ್ಲಿ ಸುರಿದ ಗಾಳಿ ಸಹಿತ ಮಳೆ

Actor Darshan
ಮೈಸೂರು1 week ago

Actor Darshan : ಕೊಲೆ ಕೇಸ್‌ ಬೆನ್ನಲ್ಲೇ ನಟ ದರ್ಶನ್‌ ಸೇರಿ ಪತ್ನಿ ವಿಜಯಲಕ್ಷ್ಮಿಗೆ ಬಾರ್ ಹೆಡೆಡ್ ಗೂಸ್ ಸಂಕಷ್ಟ!

Bakrid 2024
ಬೆಂಗಳೂರು1 week ago

Bakrid 2024 : ಮತ್ತೊಂದು ಧರ್ಮವನ್ನೂ ಪ್ರೀತಿಸಿ; ಬಕ್ರೀದ್‌ ಪ್ರಾರ್ಥನೆಯಲ್ಲಿ ಸಿಎಂ ಸಿದ್ದರಾಮಯ್ಯ ಕರೆ

Renukaswamy murder case The location of the accused is complete
ಸಿನಿಮಾ2 weeks ago

Renuka Swamy murder : ಭೀಕರವಾಗಿ ಕೊಂದರೂ ಆರೋಪಿಗಳಿಗೆ ಕಾಡುತ್ತಿಲ್ವಾ ಪಾಪಪ್ರಜ್ಞೆ? ನಗುತ್ತಲೇ ಹೊರಬಂದ ಪವಿತ್ರಾ ಗೌಡ, ಪವನ್‌

Renuka swamy murder
ಚಿತ್ರದುರ್ಗ2 weeks ago

Renuka swamy Murder : ರೇಣುಕಾಸ್ವಾಮಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಾಳೆಹೊನ್ನೂರು ಶ್ರೀಗಳು

Vijayanagara News
ವಿಜಯನಗರ2 weeks ago

Vijayanagara News : ಕೆಲಸಕ್ಕೆ ಚಕ್ಕರ್, ಸಂಬಳಕ್ಕೆ ಹಾಜರ್! ಹಾರಕನಾಳು ಗ್ರಾಪಂ ಪಿಡಿಓಗಾಗಿ ಗ್ರಾಮಸ್ಥರ ಹುಡುಕಾಟ

Actor Darshan
ಯಾದಗಿರಿ2 weeks ago

Actor Darshan : ಬಾಸ್‌ ಅಂತ ಯಾಕ್‌ ಬಕೆಟ್‌ ಹಿಡಿಯುತ್ತೀರಾ ಅಂದವನಿಗೆ ದರ್ಶನ್ ಅಭಿಮಾನಿಯಿಂದ ಜೀವ ಬೆದರಿಕೆ!

ಟ್ರೆಂಡಿಂಗ್‌