Actor Pranitha | ಮುದ್ದು ಮಗಳ ಹೆಸರನ್ನು ತಿಳಿಸಿದ ಬಹುಭಾಷಾ ನಟಿ ಪ್ರಣಿತಾ ಸುಭಾ‍ಷ್‌ - Vistara News

ಲೈಫ್‌ಸ್ಟೈಲ್

Actor Pranitha | ಮುದ್ದು ಮಗಳ ಹೆಸರನ್ನು ತಿಳಿಸಿದ ಬಹುಭಾಷಾ ನಟಿ ಪ್ರಣಿತಾ ಸುಭಾ‍ಷ್‌

ಬಹುಭಾಷಾ ನಟಿ ಪ್ರಣಿತಾ ಸುಭಾಷ್‌ (Actor Pranitha) ತಮ್ಮಹೆಣ್ಣು ಮಗುವಿನ ಹೆಸರನ್ನು ಬಹಿರಂಗಗೊಳಿಸಿದ್ದಾರೆ.

VISTARANEWS.COM


on

Actor Pranitha
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು : ಬಹುಭಾಷಾ ನಟಿ ಪ್ರಣಿತಾ ಸುಭಾಷ್‌ ಅವರು ತಮ್ಮ ಹೆಣ್ಣು ಮಗುವಿನ ಹೆಸರನ್ನು ಬಹಿರಂಗ ಮಾಡಿದ್ದಾರೆ. ಜತೆಗೆ ಮುದ್ದು ಮಗುವಿನ ಹಲವು ಚಿತ್ರಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ. ಮಗುವಾಗಿ ಹಲವು ದಿನಗಳು ಕಳೆದರೂ ಅವರು ಹೆಸರನ್ನು ಪ್ರಕಟಿಸಿರಲಿಲ್ಲ. ಇದೀಗ ಫೊಟೊ ಶೂಟ್‌ ಮಾಡಿರುವ ಚಿತ್ರವನ್ನು ಹಾಕುವ ಜತೆಗೆ ಹೆಸರನ್ನು ತಿಳಿಸಿದ್ದಾರೆ. ಮಗುವಿನ ಚಿತ್ರವನ್ನು ನೋಡಿದ ಅವರ ಲಕ್ಷಾಂತರ ಅಭಿಮಾನಿಗಳು ಶುಭಾಶಯಗಳನ್ನು ತಿಳಿಸಿದ್ದಾರೆ.

ತಮ್ಮ ಜೀವನದ ಖುಷಿಯ ಕ್ಷಣಗಳ ಚಿತ್ರವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವುದೆಂದರೆ ಪ್ರಣಿತಾ ಅವರಿಗೆ ಖುಷಿಯ ವಿಚಾರ. ಅವರ ಇನ್‌ಸ್ಟಾಗ್ರಾಮ್‌ ಖಾತೆಗೆ ಪ್ರವೇಶ ಪಡೆದರೆ ಇಂತಹ ಹಲವಾರು ಚಿತ್ರಗಳು ಸಿಗುತ್ತವೆ. ಅಂತೆಯೇ ಮದುವೆಯಿಂದ ಹಿಡಿದು, ಗರ್ಭಧಾರಣೆ, ಸೀಮಂತ, ಹೆರಿಗೆ ಸೇರಿದಂತೆ ಹಲವು ಚಿತ್ರಗಳು ಹಾಗೂ ವಿಡಿಯೊಗಳು ಅವರ ಇನ್‌ಸ್ಟಾ ಖಾತೆಯಲ್ಲಿದೆ. ಆದರೆ, ತಮ್ಮ ಹೆಣ್ಣು ಮಗುವಿನ ಮುಖವನ್ನು ಇದುವರೆಗೆ ಅವರು ತೋರಿಸಿರಲಿಲ್ಲ. ಇದೀಗ ಅವರು ಮಗುವಿನ ಫೋಟೊ ಶೂಟ್‌ ಮಾಡಿ ಹೆಸರಿನೊಂದಿಗೆ ತಿಳಿಸಿದ್ದಾರೆ.

ಪ್ರಣಿತಾ ಅವರು ತಮ್ಮ ಮಗುವಿಗೆ ಅರ್ನಾ ಎಂದು ಹೆಸರಿಟ್ಟಿದ್ದಾರೆ. ಅರ್ನಾಳನ್ನು ನಾನು ಪರಿಚಯಿಸುತ್ತಿದ್ದೇನೆ ಎಂದು ಚಿತ್ರಕ್ಕೆ ಅವರು ಒಕ್ಕಣೆ ಬರೆದಿದ್ದಾರೆ. ಪ್ರಣಿತಾ ಅವರು ೨೦೨೧ರಲ್ಲಿ ಉದ್ಯಮಿ ನಿತಿನ್‌ ರಾಜು ಅವರನ್ನು ವಿವಾಹವಾಗಿದ್ದರು. ಅವರಿಬ್ಬರದ್ದು ಪ್ರೀತಿಯ ಬಂಧ. ಅಂತೆಯೇ ಅವರು ಕೆಲವು ತಿಂಗಳ ಹಿಂದೆ ಅರ್ನಾಗಳಿಗೆ ಜನ್ಮ ನೀಡಿದ್ದರು. ಆರಂಭದಲ್ಲಿ ಮಗುವಿನ ಮುಖವನ್ನು ತೋರಿಸಿರಲಿಲ್ಲ. ಇದೀಗ ಹೆಸರು ಹಾಗೂ ಚಿತ್ರವನ್ನು ಹಾಕಿದ್ದಾರೆ.

ಪ್ರಣಿತಾ ಅವರು ಹೆರಿಗೆ ಸಂದರ್ಭದದಲ್ಲೂ ವಿಶೇಷ ಪೋಸ್ಟ್‌ ಹಾಕಿ ತಮ್ಮ ತಾಯಿಗೆ ಧನ್ಯವಾದ ಹೇಳಿದ್ದರು. “ತಾಯಿ ಸ್ವಯಂ ಸ್ತ್ರಿರೋಗ ತಜ್ಞೆಯಾಗಿದ್ದರಿಂದ ಮಗುವಿನ ಜನ್ಮ ನೀಡುವ ಪ್ರಕ್ರಿಯೆ ಸರಳವಾಯಿತು. ಆದರೆ, ನನ್ನ ತಾಯಿಗೆ ಅದು ಭಾವನಾತ್ಮಕ ಸಂದರ್ಭವಾಗಿತ್ತು,” ಎಂದು ಬರೆದುಕೊಂಡಿದ್ದರು.

ಪ್ರಣಿತಾ ಅವರು ಸಮಾಜ ಸೇವೆಯಲ್ಲೂ ಹೆಸರುವಾಸಿಯಾಗಿದ್ದಾರೆ. ಶಾಲೆಗಳನ್ನು ದತ್ತು ತೆಗೆದುಕೊಂಡು ಅಲ್ಲಿನ ವಿದ್ಯಾರ್ಥಿಗಳ ಶ್ರೇಯಸ್ಸಿಗಾಗಿಯೂ ಪ್ರಯತ್ನಿಸುತ್ತಿದ್ದಾರೆ.

ಇದನ್ನೂ ಓದಿ | Actor Pranitha | ಬಹುಭಾಷಾ ನಟಿಯ ಭೀಮನ ಅಮವಾಸ್ಯೆ ಆಚರಣೆಗೆ ಹಿತೈಷಿಗಳ ಶಹಬ್ಬಾಸ್‌

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಲೈಫ್‌ಸ್ಟೈಲ್

Floral Jumpsuit fashion: ಔಟಿಂಗ್‌ಗೆ ಪರ್ಫೆಕ್ಟ್ ಔಟ್‌ ಫಿಟ್‌ ಈ ಫ್ಲೋರಲ್‌ ಜಂಪ್‌ ಸೂಟ್‌!

Floral Jumpsuit fashion: ಇದೀಗ ಟ್ರೆಂಡಿಯಾಗಿರುವ ಫ್ಲೋರಲ್‌ ಜಂಪ್‌ ಸೂಟ್‌ಗಳು ಕಾಲೇಜು ಹುಡುಗಿಯರನ್ನು ಆಕರ್ಷಿಸಿವೆ. ನೋಡಲು ಲೈವ್ಲಿಯಾಗಿ ಬಿಂಬಿಸುವ ಈ ಔಟ್‌ಫಿಟ್‌ಗಳು ಯಾವ್ಯಾವ ವಿನ್ಯಾಸದಲ್ಲಿ ಹೆಚ್ಚು ಟ್ರೆಂಡಿಯಾಗಿವೆ? ಹೇಗೆಲ್ಲಾ ಧರಿಸಬಹುದು ಎಂಬುದರ ಬಗ್ಗೆ ಸ್ಟೈಲಿಸ್ಟ್‌ಗಳು ಇಲ್ಲಿ ವಿವರಿಸಿದ್ದಾರೆ.

VISTARANEWS.COM


on

Floral Jumpsuit fashion
ಚಿತ್ರಗಳು: ಕರೀಷ್ಮಾ ತನ್ನಾ , ನಟಿ
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಮನೋಲ್ಲಾಸ ಹೆಚ್ಚಿಸುವಂತಹ ವೈವಿಧ್ಯಮಯ ಪ್ರಿಂಟ್ಸ್‌ನ ಫ್ಲೋರಲ್‌ ಜಂಪ್‌ಸೂಟ್‌ಗಳು (Floral Jumpsuit fashion) ಇದೀಗ ಕಾಲೇಜು ಹುಡುಗಿಯರನ್ನು ಸವಾರಿ ಮಾಡತೊಡಗಿವೆ. ಈಗಾಗಲೇ ಫ್ಯಾಷನ್‌ನಲ್ಲಿ ಲೆಕ್ಕವಿಲ್ಲದಷ್ಟು ಬಗೆಯ ಜಂಪ್‌ಸೂಟ್‌ಗಳು ಲಗ್ಗೆ ಇಟ್ಟಿದ್ದು, ಅವುಗಳಲ್ಲಿ ನೋಡಲು ಲೈವ್ಲಿಯಾಗಿ ಬಿಂಬಿಸುವಂತಹ ವೆರೈಟಿ ಫ್ಲೋರಲ್‌ ಪ್ರಿಂಟ್ಸ್ನವು ಹೆಚ್ಚು ಬೇಡಿಕೆ ಸೃಷ್ಟಿಸಿಕೊಂಡಿವೆ.

Floral Jumpsuit fashion

ಆಕರ್ಷಕ ಫ್ಲೋರಲ್‌ ಜಂಪ್‌ಸೂಟ್ಸ್

“ಜಂಪ್‌ಸೂಟ್‌ ಎಂದಿಗೂ ಫ್ಯಾಷನ್‌ನಿಂದ ಆಚೆ ಹೋಗದ ಔಟ್‌ಫಿಟ್‌ಗಳು. ಇವುಗಳ ಒಂದಲ್ಲ ಒಂದು ಡಿಸೈನ್ಸ್ ಅಥವಾ ವಿಭಿನ್ನ ಪ್ರಿಂಟ್ಸ್‌ನಿಂದಾಗಿ ಆಗಾಗ್ಗೆ ಫ್ಯಾಷನ್‌ ಲೋಕದಲ್ಲಿ ಸುದ್ದಿ ಮಾಡುತ್ತಿರುತ್ತವೆ. ಸೆಲೆಬ್ರೆಟಿಗಳು ಕೂಡ ತಮ್ಮ ಔಟಿಂಗ್‌ನಲ್ಲಿ ಹಾಗೂ ರಿಲಾಕ್ಸೇಷನ್‌ ಸಮಯದಲ್ಲಿ ಹಾಗೂ ಮಕ್ಕಳೊಂದಿಗೆ ಟ್ವಿನ್ನಿಂಗ್‌ ಮಾಡುವ ಸಮಯದಲ್ಲಿ ಈ ಫ್ಲೋರಲ್‌ ಜಂಪ್‌ ಸೂಟ್‌ಗಳನ್ನು ಧರಿಸುವುದು ಕಂಡು ಬರುತ್ತಿದೆ. ಎಲ್ಲದಕ್ಕಿಂತ ಹೆಚ್ಚಾಗಿ ಈ ಮೊದಲು ಸೀಸನ್‌ಗೆ ತಕ್ಕಂತೆ ಬಿಡುಗಡೆಯಾಗುತ್ತಿದ್ದ ಈ ಜಂಪ್‌ಸೂಟ್‌ಗಳು ಇದೀಗ ಎಲ್ಲಾ ಸೀಸನ್‌ಗೂ ಮ್ಯಾಚ್‌ ಆಗುವಂತಹ ಡಿಸೈನ್‌ನಲ್ಲಿ ಬಿಡುಗಡೆಗೊಳ್ಳುತ್ತಿವೆ. ಅದರಲ್ಲೂ ಮಕ್ಕಳು ಹಾಗೂ ಯುವತಿಯರ ಅಭಿರುಚಿಗೆ ಹೊಂದುವಂತಹ ಕಲರ್ಸ್ ಹಾಗೂ ಪ್ರಿಂಟ್ಸ್‌ನಲ್ಲಿ ಬರುತ್ತಿರುವುದು ಟ್ರೆಂಡಿಯಾಗಲು ಕಾರಣವಾಗುತ್ತಿದೆ” ಎಂದು ಹೇಳುತ್ತಾರೆ ವೆಸ್ಟರ್ನ್ ಔಟ್‌ಫಿಟ್ಸ್ ಸ್ಟೈಲಿಸ್ಟ್ ಗಾನ. ಅವರ ಪ್ರಕಾರ, ಇವು ಧರಿಸುವವರಿಗೆ ಯಂಗ್‌ ಲುಕ್‌ ನೀಡುತ್ತವಂತೆ.

ಟ್ರೆಂಡಿಯಾಗಿರುವ ಫ್ಲೋರಲ್‌ ಜಂಪ್‌ಸೂಟ್‌ಗಳಿವು

ಮೊದಲೆಲ್ಲಾ ಕೇವಲ ವಿದೇಶೀ ಹೂವುಗಳ ಪ್ರಿಂಟ್ಸ್‌ನಲ್ಲಿ ಲಭ್ಯವಿದ್ದ ಇವು ಇದೀಗ ದೇಸಿ ಹೂವುಗಳ ಪ್ರಿಂಟ್ಸ್‌ನಲ್ಲೂ ಕಾಣಬಹುದು. ಲಿಲ್ಲಿ, ಆರ್ಕಿಡ್‌, ಟುಲಿಪ್‌, ಸೇವಂತಿ, ಸನ್‌ಫ್ಲವರ್ಸ್ ಬಂಚ್‌, ರೋಸ್‌ ಗಾರ್ಡನ್‌, ಬಟನ್‌ ರೋಸ್‌, ಕಲರ್‌ಫುಲ್‌ ರೋಸ್‌ ಹೀಗೆ ನಾನಾ ಹೂವುಗಳ ಚಿಕ್ಕ ಹಾಗೂ ದೊಡ್ಡ ಫ್ಲೋರಲ್‌ ಪ್ರಿಂಟ್ಸ್ ಇದೀಗ ಚಾಲ್ತಿಯಲ್ಲಿವೆ.

ಇದನ್ನೂ ಓದಿ: Mini Coins Jewel Fashion: ಹುಡುಗಿಯರನ್ನು ಸೆಳೆಯುತ್ತಿರುವ ಮಿನಿ ಕಾಯಿನ್ಸ್ ನೆಕ್ಲೇಸ್‌

ಫ್ಲೋರಲ್‌ ಜಂಪ್‌ಸೂಟ್‌ ಪ್ರಿಯರಿಗೆ 7 ಟಿಪ್ಸ್

  • ಈ ಶೈಲಿಯ ಜಂಪ್‌ಸೂಟ್‌ ಧರಿಸುವಾಗ ಆದಷ್ಟೂ ಸೀಸನ್‌ಗೆ ಹೊಂದುವ ಫ್ಯಾಬ್ರಿಕ್‌ನದ್ದನ್ನು ಆಯ್ಕೆ ಮಾಡಬಹುದು. ಇದರಿಂದ ಕಂಫರ್ಟಬಲ್‌ ಫೀಲ್‌ ಆಗುತ್ತದೆ.
  • ಹೈ ಹೀಲ್ಸ್ ಈ ಔಟ್‌ಫಿಟ್‌ನ ಸೌಂದರ್ಯ ಹೆಚ್ಚಿಸುತ್ತದೆ.
  • ಆಕ್ಸೆಸರೀಸ್‌ ಧರಿಸುವ ಅಗತ್ಯವಿಲ್ಲ.
  • ಸ್ಲಿವ್‌ಲೆಸ್‌ ಹಾಗೂ ಸ್ಲೀವ್‌ ಡಿಸೈನ್‌ ಇರುವಂತವು ದೊರೆಯುತ್ತವೆ.
  • ಜಿಪ್‌ ಹಾಗೂ ಬಟನ್‌ನ ಫ್ಲೋರಲ್‌ ಜಂಪ್‌ಸೂಟ್‌ಗಳಲ್ಲಿ ಜಿಪ್‌ನದ್ದು ಬೆಸ್ಟ್. ಇವನ್ನು ಇನ್ನರ್‌ ಫ್ಯಾಷನ್‌ವೇರ್‌ ಮೇಲೆ ಧರಿಸಬಹುದು.
  • ಒಮ್ಮೆ ಧರಿಸಿದರೇ ಇದನ್ನು ಸುಲಭವಾಗಿ ಬಿಚ್ಚಲು ಸಾಧ್ಯವಿಲ್ಲ.
  • ಆದಷ್ಟೂ ದೊಗಲೆಯಾದ್ದನ್ನು ಆವಾಯ್ಡ್ ಮಾಡಿ. ಸ್ಲಿಮ್‌ ಫಿಟ್‌ ಆಕರ್ಷಕವಾಗಿ ಕಾಣಿಸುತ್ತದೆ.

( ಲೇಖಕಿ ಫ್ಯಾಷನ್‌ ಪತ್ರಕರ್ತೆ )

Continue Reading

ಆರೋಗ್ಯ

International Yoga Day 2024: ದೇಹ ತೂಕ ಇಳಿಕೆಗೆ ಈ 5 ಆಸನಗಳು ಸೂಕ್ತ

International Yoga Day 2024: ಯೋಗದ ಬೇರುಗಳು ಭಾರತದಲ್ಲಿ ಇರುವುದು ಹೌದಾದರೂ ಅದರ ರೆಂಬೆ-ಕೊಂಬೆಗಳು ಜಗತ್ತಿನೆಲ್ಲೆಡೆ ಹರಡಿವೆ. ಕೆಲವರು ಆಧ್ಯಾತ್ಮದ ವಿಕಾಸಕ್ಕೆ, ಹಲವರು ಮಾನಸಿಕ ಸ್ವಾಸ್ಥ್ಯಕ್ಕೆ, ಬಹಳಷ್ಟು ಮಂದಿ ವ್ಯಾಯಾಮದಂತೆ ಇದನ್ನು ಅಳವಡಿಸಿಕೊಂಡಿದ್ದಾರೆ. ಇರಲಿ, ಎಲ್ಲ ಅವರವರ ಭಕುತಿಗೆ ಬಿಟ್ಟಿದ್ದು. ಆದರೆ ತೂಕ ಇಳಿಸುವ ಉದ್ದೇಶವಿದ್ದರೆ, ಅದು ಯೋಗದಿಂದ ಸಾಧ್ಯವೇ? ಹೌದಾದರೆ, ಅದಕ್ಕೆ ಸೂಕ್ತವಾದಂಥ ಆಸನಗಳು ಯಾವುವು? ಮುಂತಾದ ಹಲವು ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ.

VISTARANEWS.COM


on

Weight Loss tension
Koo

ತೂಕ ಇಳಿಕೆಗೆ ಯೋಗವನ್ನು (International Yoga Day 2024) ನೆಚ್ಚಿಕೊಳ್ಳಬಹುದೇ? ಖಂಡಿತಾ! ದೇಹದ ಚಯಾಪಚಯವನ್ನು ಹೆಚ್ಚಿಸುವ ಮೂಲಕ ದೇಹದ ತೂಕವನ್ನು ಇಳಿಸುವುದಕ್ಕೆ ಯೋಗ ನೆರವಾಗುತ್ತದೆ. ಜೊತೆಗೆ, ಸ್ನಾಯು- ಕೀಲುಗಳ ಸ್ವಾಸ್ಥ್ಯ ಹೆಚ್ಚಿಸಿ, ಆರೋಗ್ಯಕರ ಆಹಾರಾಭ್ಯಾಸ ರೂಢಿಸಿಕೊಳ್ಳುವುದಕ್ಕೆ ನೆರವಾಗುತ್ತದೆ.
ಯೋಗದ ಬೇರುಗಳು ಭಾರತದಲ್ಲಿ ಇರುವುದು ಹೌದಾದರೂ ಅದರ ರೆಂಬೆ-ಕೊಂಬೆಗಳು ಜಗತ್ತಿನೆಲ್ಲೆಡೆ ಹರಡಿವೆ. ಕೆಲವರು ಆಧ್ಯಾತ್ಮದ ವಿಕಾಸಕ್ಕೆ, ಹಲವರು ಮಾನಸಿಕ ಸ್ವಾಸ್ಥ್ಯಕ್ಕೆ, ಬಹಳಷ್ಟು ಮಂದಿ ವ್ಯಾಯಾಮದಂತೆ ಇದನ್ನು ಅಳವಡಿಸಿಕೊಂಡಿದ್ದಾರೆ. ಇರಲಿ, ಎಲ್ಲ ಅವರವರ ಭಕುತಿಗೆ ಬಿಟ್ಟಿದ್ದು. ಆದರೆ ತೂಕ ಇಳಿಸುವ ಉದ್ದೇಶವಿದ್ದರೆ, ಅದು ಯೋಗದಿಂದ ಸಾಧ್ಯವೇ? ಹೌದಾದರೆ, ಅದಕ್ಕೆ ಸೂಕ್ತವಾದಂಥ ಆಸನಗಳು ಯಾವುವು? ಮುಂತಾದ ಹಲವು ಪ್ರಶ್ನೆಗಳಿಗೆ ಇಲ್ಲಿದೆ ಉತ್ತರ. ಆಸನಗಳು, ಉಸಿರಾಟ, ಧ್ಯಾನ ಮುಂತಾದ ಹಲವು ಅಂಗಗಳನ್ನು ಏಕತ್ರಗೊಳಿಸಿಕೊಂಡು ಮುನ್ನಡೆಯುವ ಪದ್ಧತಿ ಯೋಗದಲ್ಲಿದೆ. ಹಾಗಾಗಿ ದೇಹ ಮತ್ತು ಮನಸ್ಸುಗಳೆರಡರ ಆರೋಗ್ಯ ಸುಧಾರಣೆಗೆ ಇದನ್ನು ಬಳಸಬಹುದು. ಇದೇ ಹಿನ್ನೆಲೆಯಲ್ಲಿ, ತೂಕ ಇಳಿಕೆಗೂ ಯೋಗವನ್ನು ನೆಚ್ಚಿಕೊಳ್ಳಬಹುದೇ? ಖಂಡಿತಾ! ದೇಹದ ಚಯಾಪಚಯವನ್ನು ಹೆಚ್ಚಿಸುವ ಮೂಲಕ ದೇಹದ ತೂಕವನ್ನು ಇಳಿಸುವುದಕ್ಕೆ ಯೋಗ ನೆರವಾಗುತ್ತದೆ. ಜೊತೆಗೆ, ಸ್ನಾಯುಗಳು ಸಡಿಲ ಆಗದಂತೆ ಕಾಪಾಡಿ, ಕೀಲುಗಳ ಸ್ವಾಸ್ಥ್ಯ ಹೆಚ್ಚಿಸಿ, ಆರೋಗ್ಯಕರ ಆಹಾರಾಭ್ಯಾಸ ರೂಢಿಸಿಕೊಳ್ಳುವುದಕ್ಕೆ ನೆರವಾಗುತ್ತದೆ. ಇವೆಲ್ಲವೂ ತೂಕ ಇಳಿಕೆಗೆ ಅತ್ಯಂತ ಪೂರಕವಾದ ಅಂಶಗಳು. ಅಂಥ ಕೆಲವು ಆಸನಗಳು ಇಲ್ಲಿವೆ

Surya Namaskar

ಸೂರ್ಯ ನಮಸ್ಕಾರ

ಹಲವು ಆಸನಗಳ ಸರಣಿಯನ್ನು ಇಲ್ಲಿ ಅಭ್ಯಾಸ ಮಾಡಬೇಕಾಗುತ್ತದೆ. ಆ ಎಲ್ಲಾ ಆಸನಗಳು ದೇಹದ ಹಲವಾರು ಸ್ನಾಯು, ಕೀಲುಗಳನ್ನು ಬಳಸಿಕೊಳ್ಳುತ್ತವೆ. ಈ ಮೂಲಕ ಇಡೀ ದೇಹವನ್ನು ಹಿಗ್ಗಿಸಿ, ಬಗ್ಗಿಸಿ, ತಗ್ಗಿಸಿ, ಮಟ್ಟಸವಾಗಿ ಮಾಡುವ, ಬಲಗೊಳಿಸುವ ಸಾಧ್ಯತೆ ಸೂರ್ಯ ನಮಸ್ಕಾರಕ್ಕಿದೆ. ಜೊತೆಗೆ ಇಡೀ ದೇಹದ ರಕ್ತ ಪರಿಚಲನೆಯನ್ನು ಸುಧಾರಿಸಿ, ಚಯಾಪಚಯವನ್ನು ಹೆಚ್ಚಿಸುತ್ತದೆ. ದಿನಕ್ಕೆ 10-15 ಸೂರ್ಯ ನಮಸ್ಕಾರಗಳು ಪರಿಣಾಮಕಾರಿ ಎನಿಸುತ್ತವೆ.

Veerabhadrasana

ವೀರಭದ್ರಾಸನ

ಈ ಆಸನವನ್ನು ಒಂದಕ್ಕಿಂತ ಹೆಚ್ಚಿನ ಕ್ರಮದಲ್ಲಿ ಅಭ್ಯಾಸ ಮಾಡಲಾಗುತ್ತದೆ. ಈ ಎಲ್ಲಾ ಆಸನಗಳು ಕಾಲು, ತೋಳು ಮತ್ತು ಹೊಟ್ಟೆ, ಬೆನ್ನಿನ ಸ್ನಾಯುಗಳನ್ನು ಬಲಗೊಳಿಸುವಂಥವು. ನಿಯಮಿತವಾಗಿ ಈ ಆಸನ ಅಭ್ಯಾಸ ಮಾಡುವುದರಿಂದ ಬಹಳಷ್ಟು ಕ್ಯಾಲರಿಗಳನ್ನು ಕರಗಿಸಿ, ದೇಹದ ಅದಷ್ಟೂ ಭಾಗಗಳ ಕೊಬ್ಬು ಇಳಿಸಬಹುದು.

Utkatasana Yoga For Stamina Chair pose works on the lower body, particularly the quadriceps and glutes. Holding this pose for an extended period helps build leg strength and stamina.

ಉತ್ಕಟಾಸನ

ನೋಡುವುದಕ್ಕೆ ಸರಳವಾಗಿ ಕಂಡರೂ, ಅಷ್ಟೇನೂ ಸರಳವಲ್ಲ ಈ ಆಸನ. ತೊಡೆ, ಪೃಷ್ಠ, ಹೊಟ್ಟೆ, ಬೆನ್ನುಗಳ ಸ್ನಾಯುಗಳನ್ನು ಹುರಿಗಟ್ಟಿಸುವುದು ಇದರಿಂದ ಸಾಧ್ಯ. ಯಾವುದೇ ಕುರ್ಚಿ ಇಲ್ಲದೆಯೂ ಕುರ್ಚಿಯ ಮೇಲೆ ಕುಳಿತಂತೆ ಕಾಣುತ್ತದೆ ಈ ಆಸನದಲ್ಲಿ. ಮೊದಲಿಗೆ ಹತ್ತಿಪ್ಪತ್ತು ಸೆಕೆಂಡುಗಳಷ್ಟೇ ಹೀಗೆ ದೇಹವನ್ನು ಹಿಡಿಯಲು ಸಾಧ್ಯವಾಗಬಹುದು. ಕ್ರಮೇಣ ನಿಮಿಷದವರೆಗೆ ಇದನ್ನು ಹೆಚ್ಚಿಸಿಕೊಳ್ಳಬಹುದು. ಇದರಿಂದ ಅಧಿಕ ಪ್ರಮಾಣದಲ್ಲಿ ಶಕ್ತಿ ವ್ಯಯವಾಗುತ್ತದೆ.

Phalakasana Yoga For Reduce Belly Fat

ಫಲಕಾಸನ

ಇದನ್ನು ಫ್ಲಾಂಕ್‌ ಪೋಸ್‌ ಎಂದೇ ಹೇಳಲಾಗುತ್ತದೆ. ಇಡೀ ಶರೀರಕ್ಕೆ ಆಗುವಂಥ ವ್ಯಾಯಾಮವಿದು. ಇದರಿಂದ ಕಾಲು, ಕೈ, ಹೊಟ್ಟೆ, ಬೆನ್ನು, ಪೃಷ್ಠದ ಭಾಗವನ್ನು ಬಲಗೊಳಿಸಬಹುದು. ನೆಲಕ್ಕೆ ಸಮಾನಾಂತರವಾಗಿ ದೇಹವನ್ನು ಕೈ-ಕಾಲುಗಳ ಮೇಲೆ ನಿಲ್ಲಿಸುವಂಥ ಆಸನವಿದು. ಮೊದಲಿಗೆ 30 ಸೆಕೆಂಡ್‌ ಹಿಡಿಯುವುದೂ ಕಠಿಣ ಎನಿಸಬಹುದು. ನಿಯಮಿತವಾಗಿ ಅಭ್ಯಾಸ ಮಾಡಿದರೆ, ಎರಡು ನಿಮಿಷಗಳವರೆಗೆ ಈ ಆಸನದಲ್ಲಿ ಇರುವುದನ್ನು ಕ್ರಮೇಣ ಸಾಧ್ಯವಾಗಿಸಿಕೊಳ್ಳಬಹುದು.

International Yoga Day 2024

ಪಶ್ಚಿಮೋತ್ತಾಸನ

ಕುಳಿತು ಮುಂಬಾಗಿ ಪಾದ ಮುಟ್ಟುವ ಆಸನವಿದು. ಇದೂ ಸಹ ರಕ್ತ ಪರಿಚಲನೆಯನ್ನು ವೃದ್ಧಿಸಿ, ಹೃದಯದ ಆರೋಗ್ಯ ಸುಧಾರಿಸುತ್ತದೆ. ದೇಹ ಬಿಗಿಯಾಗಿದ್ದರೆ ಈ ಆಸನಗಳು ಕಷ್ಟ ಎನ್ನುವುದು ಹೌದಾದರೂ, ಇವುಗಳನ್ನು ಅಭ್ಯಾಸ ಮಾಡುತ್ತಲೇ ಕ್ರಮೇಣ ದೇಹ ಸಡಿಲವಾಗುತ್ತದೆ. ಶಕ್ತಿ ಕರಗಿಸುವುದೇ ಅಲ್ಲದೆ ಶರೀರದ ರೋಗನಿರೋಧಕ ಶಕ್ತಿಯನ್ನೂ ಇದು ಹೆಚ್ಚಿಸುತ್ತದೆ. ಕಾಲು ಚಾಚಿ ಕುಳಿತು, ನಿಧಾನಕ್ಕೆ ಮುಂದೆ ಬಾಗಬೇಕು, ಕುತ್ತಿಗೆಯಿಂದಲ್ಲ, ಕಟಿಯ ಭಾಗದಿಂದ ಮುಂಬಾಗುವುದು ಸರಿಯಾದ ರೀತಿ. ಬಾಗುತ್ತಾ ಕೈಯಿಂದ ಪಾದಗಳನ್ನು ಹಿಡಿಯುವಷ್ಟು ಬಾಗುವುದು ಜೊತೆಗೆ ಕಿಬ್ಬೊಟ್ಟೆಯನ್ನು ತೊಡೆಗಳಿಗೆ ತಾಗಿಸುವುದು ಇದರ ಕ್ರಮ.

ಇದನ್ನೂ ಓದಿ: International Yoga Day 2024: ಯೋಗಾಭ್ಯಾಸಕ್ಕೆ ಪುರುಷರ ಉಡುಗೆಗಳು ಹೀಗಿರಬೇಕು

Continue Reading

ಫ್ಯಾಷನ್

International Yoga Day 2024: ಯೋಗಾಭ್ಯಾಸಕ್ಕೆ ಪುರುಷರ ಉಡುಗೆಗಳು ಹೀಗಿರಬೇಕು

International Yoga Day 2024: ಪುರುಷರ ಯೋಗ ಔಟ್‌ಫಿಟ್ಸ್‌ಗಳು ತೀರಾ ಸಿಂಪಲ್‌! ಇವುಗಳನ್ನು ಧರಿಸಿದಾಗ ಫ್ಯಾಷನಬಲ್‌ ಆಗಿ ಕಾಣಿಸುವುದಿಲ್ಲ, ಬದಲಿಗೆ ಸಿಂಪಲ್‌ ಲುಕ್‌ ಜೊತೆಗೆ ಕಂಫರ್ಟಬಲ್‌ ಫೀಲ್‌ ನೀಡುತ್ತವೆ. ಈ ಲಿಸ್ಟ್‌ನಲ್ಲಿ ಯಾವ್ಯಾವ ಔಟ್‌ಫಿಟ್‌ಗಳಿವೆ ಎಂಬುದರ ಬಗ್ಗೆ ಇಲ್ಲಿದೆ ಡಿಟೇಲ್ಸ್.

VISTARANEWS.COM


on

International Yoga Day 2024
ಚಿತ್ರ ಕೃಪೆ : ಪಿಕ್ಸೆಲ್‌
Koo

-ಶೀಲಾ ಸಿ. ಶೆಟ್ಟಿ, ಬೆಂಗಳೂರು
ಮೆನ್ಸ್ ಯೋಗ ಔಟ್‌ಫಿಟ್ಸ್‌ನಲ್ಲಿ (International Yoga Day 2024) ಸಿಂಪಲ್‌ ಹಾಗೂ ಆರಾಮದಾಯಕ ಎಂದೆನಿಸುವ ಔಟ್‌ಫಿಟ್ಸ್‌ಗಳು ಮಾತ್ರ ಈ ಸೀಸನ್‌ನಲ್ಲಿ ಬೇಡಿಕೆ ಸೃಷ್ಟಿಸಿಕೊಂಡಿವೆ. ಹೌದು. ಪುರುಷರು ಧರಿಸುವ ಯೋಗಾಭ್ಯಾಸದ ಔಟ್‌ಫಿಟ್ಸ್‌ಗಳು ಯುವತಿಯರ ಯೋಗ ಸೆಟ್‌ ಫ್ಯಾಷನ್‌ವೇರ್‌ಗಳಂತೆ ಟ್ರೆಂಡಿಯೂ ಆಗಿಲ್ಲ! ಫ್ಯಾಷೆನಬಲ್‌ ಕೂಡ ಇಲ್ಲ! ಬದಲಿಗೆ ನಾನಾ ಸಂದರ್ಭಗಳಿಗೆ ಧರಿಸಬಹುದಾಗಿದೆ.

International Yoga Day 2024

ಆರಾಮದಾಯಕ ಉಡುಪುಗಳಿಗೆ ಪ್ರಾಮುಖ್ಯತೆ

“ಸಿಂಪಲ್‌ ಶಾರ್ಟ್ಸ್ ಕುರ್ತಾ-ಕಾಟನ್‌ ಪ್ಯಾಂಟ್‌ ಹೊರತುಪಡಿಸಿದಲ್ಲಿ, ಪುರುಷರಿಗೆ ನೋಡಲು ಸಿಂಪಲ್‌ ಲುಕ್‌ ನೀಡುವುದರೊಂದಿಗೆ ಕಂಫರ್ಟಬಲ್‌ ಫೀಲ್‌ ನೀಡುವಂತಹ ಕೆಲವು ವೆಸ್ಟರ್ನ್‌ ಔಟ್‌ಫಿಟ್‌ಗಳು ಯೋಗಾಭ್ಯಾಸದ ಪ್ರಾಕ್ಟೀಸ್‌ಗೆ ಸಾಥ್‌ ನೀಡುತ್ತಿವೆ. ಪುರುಷರು ಮೊದಲು ಪ್ರಾಮುಖ್ಯತೆ ನೀಡುವುದು ಆರಾಮದಾಯಕ ಉಡುಗೆಗಳಿಗೆ ಮಾತ್ರ. ಅದು ಯಾವುದೇ ದೊಡ್ಡ ಬ್ರಾಂಡ್‌ನದ್ದಾದರೂ ಸರಿಯೇ ಸಿಂಪಲ್‌ & ಕಂಫರ್ಟಬಲ್‌ ಎಂದೆನಿಸುವಂತಹ ಔಟ್‌ಫಿಟ್‌ಗಳು ಆಯ್ಕೆ ಅವರದ್ದಾಗಿರುತ್ತದೆ” ಎನ್ನುತ್ತಾರೆ ಮೆನ್ಸ್ ಸ್ಟೈಲಿಸ್ಟ್‌ಗಳು.

International Yoga Day 2024

ಜಾಗರ್ಸ್ ಆಯ್ಕೆ

ಬಹುತೇಕ ಪುರುಷರು ತಮ್ಮ ಯೋಗಾಭ್ಯಾಸಕ್ಕೆ ಅತಿ ಸಾಮಾನ್ಯವಾಗಿ ಧರಿಸುವ ಜಾಗರ್ಸ್ ಸೆಟ್‌ಗಳನ್ನು ಧರಿಸುವುದು ಸಾಮಾನ್ಯವಾಗಿದೆ. ಇದಕ್ಕೆ ಪ್ರಮುಖ ಕಾರಣ, ಧರಿಸಿದಾಗ ಇವು ಆರಾಮದಾಯಕ ಎನಿಸುತ್ತವೆ. ಜೊತೆಗೆ ಬ್ರಿಥಬಲ್‌ ಫ್ಯಾಬ್ರಿಕ್‌ನಿಂದ ಇವು ಸಿದ್ಧಗೊಂಡಿರುವುದರಿಂದ ದೇಹವನ್ನು ಉಸಿರುಗಟ್ಟಿಸುವುದಿಲ್ಲ. ಹಾಗಾಗಿ ಅತಿ ಹೆಚ್ಚು ಪುರುಷರು ಇವನ್ನೇ ಚೂಸ್‌ ಮಾಡತೊಡಗಿದ್ದಾರೆ.

International Yoga Day 2024

ಹುಡುಗರ ಆಯ್ಕೆಯಲ್ಲಿ ಬರ್ಮುಡಾ ಶಾರ್ಟ್ಸ್

ಇನ್ನು, ಕಾಲೇಜು ಯುವಕರು ಹಾಗೂ ಈ ಜನರೇಷನ್‌ನವರು ಯೋಗಾಭ್ಯಾಸಕ್ಕಾಗಿ ಆಯ್ಕೆ ಮಾಡಿಕೊಂಡಿರುವ ಔಟ್‌ಫಿಟ್‌ಗಳಲ್ಲಿ ಬರ್ಮುಡಾ ಶಾರ್ಟ್ಸ್ ಪ್ರಥಮ ಸ್ಥಾನ ಪಡೆದಿದೆ. ಇವು ಕಂಫರ್ಟಬಲ್‌ ಫೀಲ್‌ ನೀಡುವುದರೊಂದಿಗೆ ತಮ್ಮ ಜನರೇಷನ್‌ಗೆ ಮ್ಯಾಚ್‌ ಆಗುತ್ತವೆ ಎಂಬುದು ಅವರ ಯೋಚನೆಯಾಗಿದೆ ಎನ್ನುತ್ತಾರೆ ಯೋಗ ಎಕ್ಸ್‌ಫರ್ಟ್‌ ರಾಜ್‌ ವಿರಾಜ್‌. ಅವರ ಪ್ರಕಾರ, ಅವರವರ ವಯಸ್ಸಿಗೆ ತಕ್ಕಂತೆ ಇವುಗಳ ಆಯ್ಕೆಯಲ್ಲಿ ಬದಲಾವಣೆ ಕಾಣಬಹುದಂತೆ.

ಸ್ವೆಟ್‌ ಪ್ಯಾಂಟ್ಸ್–ಟೀ ಶರ್ಟ್ಸ್

ಸ್ವೆಟ್‌ ಪ್ಯಾಂಟ್ಸ್ ಹಾಗೂ ಕೊಂಚ ಲೂಸಾಗಿರುವ ಕಾಲರ್‌ ಇಲ್ಲದ ಟೀ ಶರ್ಟ್‌ಗಳನ್ನು ಕೂಡ ಅತಿ ಹೆಚ್ಚು ಪುರುಷರು ಯೋಗಾಭ್ಯಾಸಕ್ಕಾಗಿ ಧರಿಸುತ್ತಾರಂತೆ. ಇದಕ್ಕೆ ಕಾರಣವೂ ಇದೆ. ಈ ಔಟ್‌ಫಿಟ್‌ ಯೋಗ ಮಾತ್ರವಲ್ಲದೇ, ಇತರೇ ಸಮಯದಲ್ಲೂ ಧರಿಸಬಹುದು. ಟು ಇನ್‌ ವನ್‌ ಔಟ್‌ಫಿಟ್‌ಗಳಂತೆ ಬಳಬಹುದು ಹಾಗೂ ಮಿಕ್ಸ್‌ ಮ್ಯಾಚ್‌ ಕೂಡ ಮಾಡಬಹುದು. ಹಾಗಾಗಿ ಇವುಗಳ ಬಳಕೆ ಕೂಡ ಹೆಚ್ಚು ಎನ್ನುತ್ತಾರೆ ಸ್ಟೈಲಿಸ್ಟ್ ಧವನ್‌.

ಇದನ್ನೂ ಓದಿ: Yoga Fashion: ಯೋಗ ಕೋ-ಆರ್ಡ್ ಸೆಟ್‌ಗೆ ಸಿಕ್ತು ಗ್ಲಾಮರ್‌ ಟಚ್‌!

ಮೆನ್ಸ್ ಯೋಗ ಔಟ್‌ಫಿಟ್ಸ್ ಟಿಪ್ಸ್

  • ಟೈಟ್‌ ಫಿಟ್‌ ಔಟ್‌ಫಿಟ್ಸ್ ಧರಿಸುವುದು ನಾಟ್‌ ಓಕೆ.
  • ಫ್ಯಾಷನ್‌ಗಿಂತ ಕಂಫರ್ಟಬಲ್‌ ಆಗಿರುವುದು ಮುಖ್ಯ.
  • ಈ ಔಟ್‌ಫಿಟ್‌ ಜೊತೆ ಆಕ್ಸೆಸರೀಸ್‌ ಧರಿಸಕೂಡದು.

( ಲೇಖಕಿ ಫ್ಯಾಷನ್‌ ಪತ್ರಕರ್ತೆ )

Continue Reading

ಆರೋಗ್ಯ

Health Tips Kannada: ಊಟದ ನಂತರ ಮೊಸರು ಸೇವಿಸಿದರೆ ಎಷ್ಟೊಂದು ಪ್ರಯೋಜನ ಗೊತ್ತೆ?

Health Tips Kannada: ಮೊಸರನ್ನುಸೇವಿಸಿದರೆ ಅದು ಶಕ್ತಿಯನ್ನು ಹೆಚ್ಚಿಸುವುದು ಮಾತ್ರವಲ್ಲದೇ ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸುವುದರಿಂದ ಹಿಡಿದು ಹೃದಯದ ಆರೋಗ್ಯವನ್ನು ಉತ್ತೇಜಿಸುವ ಮೊಸರನ್ನು ಊಟದ ಬಳಿಕ ಸೇವಿಸುವುದರಿಂದ (Health Benefits) ಐದು ಪ್ರಮುಖ ಪ್ರಯೋಜನಗಳಿವೆ.

VISTARANEWS.COM


on

By

Health Tips Kannada
Koo

ಕ್ಯಾಲ್ಸಿಯಂ, ಪ್ರೊಟೀನ್, ವಿಟಮಿನ್ ಬಿ2, (Health Tips Kannada) ವಿಟಮಿನ್ ಬಿ12, ಪೊಟ್ಯಾಸಿಯಮ್ ಮತ್ತು ಮೆಗ್ನೀಸಿಯಮ್‌ಗಳು ಹೇರಳವಾಗಿರುವ ಮೊಸರನ್ನು (curd) ಊಟದ ಅನಂತರ (After Meal ) ಸೇವಿಸುವುದರಿಂದ ಸಾಕಷ್ಟು (Health Benefits) ಪ್ರಯೋಜನಗಳಿವೆ. ಮೊಸರು ಸೇವನೆಯು ಜೀರ್ಣಕ್ರಿಯೆಗೆ (digestion) ಸಹಾಯ ಮಾಡುತ್ತದೆ, ಕರುಳಿನ ಆರೋಗ್ಯವನ್ನು (gut health) ಹೆಚ್ಚಿಸುತ್ತದೆ, ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ.

ಅನೇಕ ಆರೋಗ್ಯ ಪ್ರಯೋಜನಗಳನ್ನು ಒದಗಿಸುವ ಮೊಸರು ದೇಹವನ್ನು ತಂಪಾಗಿಸುವ ಪರಿಣಾಮವನ್ನು ಹೊಂದಿದೆ. ದೇಹದ ಪೋಷಣೆ ಮಾಡುವುದರ ಜೊತೆಗೆ ಮನಸ್ಸನ್ನು ಶಾಂತಗೊಳಿಸುತ್ತದೆ. ಲ್ಯಾಕ್ಟಿಕ್ ಆಸಿಡ್ ಬ್ಯಾಕ್ಟೀರಿಯಾವನ್ನು ಸೇರಿಸುವ ಮೂಲಕ ಹುದುಗಿಸಿದ ಹಾಲಿನಲ್ಲಿ ಮೊಸರನ್ನು ತಯಾರಿಸಲಾಗುತ್ತದೆ. ಇದು ಮೂಳೆಯ ಆರೋಗ್ಯ ಮತ್ತು ತೂಕವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

ಆರೋಗ್ಯ ಪ್ರಯೋಜನಗಳನ್ನು ಉತ್ತೇಜಿಸಲು ದಿನಕ್ಕೆ 100- 200 ಗ್ರಾಂ ಮೊಸರನ್ನು ಮಾತ್ರ ಸೇವಿಸಬೇಕು. ಆದರೂ ಅತಿಯಾಗಿ ಮೊಸರು ತಿನ್ನುವುದು ಜೀರ್ಣಕ್ರಿಯೆಯಲ್ಲಿ ಅಸ್ವಸ್ಥತೆ, ತೂಕ ಹೆಚ್ಚಳ ಮತ್ತು ಲ್ಯಾಕ್ಟೋಸ್ ವೈಪರೀತ್ಯಕ್ಕೆ ಕಾರಣವಾಗುತ್ತದೆ.

ಮೊಸರು ಸೇವಿಸುವುದರಿಂದ ಆರೋಗ್ಯಕ್ಕೆ ಸಾಕಷ್ಟು ಲಾಭವಿದೆ. ಯಾಕೆಂದರೆ ಇದು ಪ್ರೋಬಯಾಟಿಕ್‌ಗಳ ಪೂರೈಕೆಗೆ ಸಹಾಯ ಮಾಡುತ್ತದೆ. ಕರುಳಿನ ಆರೋಗ್ಯವನ್ನು ಕಾಪಾಡುತ್ತದೆ. ಅದರಲ್ಲಿರುವ ಪೌಷ್ಟಿಕಾಂಶದ ಅಂಶ ಮತ್ತು ಪ್ರೋಬಯಾಟಿಕ್ ಗುಣಲಕ್ಷಣಗಳಿಂದಾಗಿ ಒಟ್ಟಾರೆ ಆರೋಗ್ಯಕ್ಕೆ ಇದು ತುಂಬಾ ಪ್ರಯೋಜನಕಾರಿಯಾಗಿದೆ.

ಮೊಸರನ್ನು ಊಟದ ನಂತರ ಸೇವಿಸಿದರೆ ಅದು ಶಕ್ತಿಯನ್ನು ಹೆಚ್ಚಿಸುವುದು. ಊಟದ ಅನಂತರ ಸೇವಿಸಿದರೆ ಜೀರ್ಣಕ್ರಿಯೆಯನ್ನು ವರ್ಧಿಸಲು ಸಹಾಯ ಮಾಡುತ್ತದೆ. ಆದರೆ ರಾತ್ರಿಯ ಅನಂತರ ಮೊಸರು ತೆಗೆದುಕೊಳ್ಳುವುದು ಒಳ್ಳೆಯದಲ್ಲ. ಯಾಕೆಂದರೆ ಅದು ನಿದ್ರೆಗೆ ಸಮಸ್ಯೆಯಾಗಬಹುದು ಮತ್ತು ಅಜೀರ್ಣಕ್ಕೆ ಕಾರಣವಾಗಬಹುದು.
ರಕ್ತದಲ್ಲಿನ ಸಕ್ಕರೆಯನ್ನು ನಿಯಂತ್ರಿಸುವುದರಿಂದ ಹಿಡಿದು ಹೃದಯದ ಆರೋಗ್ಯವನ್ನು ಉತ್ತೇಜಿಸುವ ಮೊಸರನ್ನು ಊಟದ ಬಳಿಕ ಸೇವಿಸುವುದರಿಂದ ಐದು ಪ್ರಮುಖ ಪ್ರಯೋಜನಗಳಿವೆ.


ಆರೋಗ್ಯಕರ ಜೀರ್ಣಕ್ರಿಯೆ

ಮೊಸರು ಆರೋಗ್ಯಕ್ಕೆ ಪ್ರಯೋಜನಕಾರಿಯಾಗಿದೆ. ಯಾಕೆಂದರೆ ಇದರಲ್ಲಿರುವ ವಿಟಮಿನ್, ಪ್ರೋಟೀನ್ ಮತ್ತು ಲ್ಯಾಕ್ಟೋಬಾಸಿಲಸ್ ಬ್ಯಾಕ್ಟೀರಿಯಾಗಳು ಸಮೃದ್ಧವಾಗಿವೆ.

ರೋಗನಿರೋಧಕ ಶಕ್ತಿ ಹೆಚ್ಚಳ

ಮೊಸರಿನಲ್ಲಿರುವ ಪ್ರೋಬಯಾಟಿಕ್ ಕರುಳನ್ನು ಆರೋಗ್ಯಕರವಾಗಿಡಲು ಸಹಾಯ ಮಾಡುತ್ತದೆ ಮತ್ತು ಅದರ ಸಕ್ರಿಯ ಬ್ಯಾಕ್ಟೀರಿಯಾ ಗುಣಲಕ್ಷಣಗಳು ಸೂಕ್ಷ್ಮಜೀವಿಗಳಿಂದ ಉಂಟಾಗುವ ಕಾಯಿಲೆಯ ವಿರುದ್ಧ ಹೋರಾಡಲು ಸಹಾಯ ಮಾಡುತ್ತದೆ.

ಮಧುಮೇಹ ನಿಯಂತ್ರಣ

ಮೊಸರಿನಲ್ಲಿರುವ ಜೀರ್ಣವಾಗುವ ಪ್ರೋಟೀನ್‌ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಗ್ರೀಕ್ ಮೊಸರು ಹೃದ್ರೋಗದ ಅಪಾಯವನ್ನು ಕಾಪಾಡಿಕೊಳ್ಳಲು ಬಹಳ ಸಹಾಯಕವಾಗಿದೆ.

ತೂಕ ನಷ್ಟ

ಮೊಸರಿನಲ್ಲಿ ಕ್ಯಾಲ್ಸಿಯಂ ಸಮೃದ್ಧವಾಗಿದೆ. ಅದು ಕಾರ್ಟಿಸೋಲ್ ಅನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಮೊಸರಿನ ಸೇವನೆಯು ಕಾರ್ಟಿಸೋಲ್ ಉತ್ಪಾದನೆಯನ್ನು ಕಡಿಮೆ ಮಾಡುತ್ತದೆ. ಯಾಕೆಂದರೆ ಇದು ಅಸಮತೋಲಿತ ಜೀವನಶೈಲಿಯಿಂದ ಉತ್ತುಂಗಕ್ಕೇರುವ ಹಾರ್ಮೋನ್ ಆಗಿದ್ದು, ಸೊಂಟದ ರೇಖೆಯಲ್ಲಿ ಕೊಬ್ಬನ್ನು ಸಂಗ್ರಹಿಸಲು ಸಹಾಯ ಮಾಡುತ್ತದೆ.

ಹೃದಯದ ಆರೋಗ್ಯ

ದೈನಂದಿನ ದಿನಚರಿಯಲ್ಲಿ ಮೊಸರು ಸೇರಿಸುವುದರಿಂದ ಕೊಲೆಸ್ಟ್ರಾಲ್ ಮಟ್ಟವನ್ನು ಗಮನಾರ್ಹವಾಗಿ ಕಡಿಮೆ ಮಾಡಬಹುದು.

ರಕ್ತದೊತ್ತಡ ನಿಯಂತ್ರಣ

ದೇಹದಲ್ಲಿನ ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡುವುದರಿಂದ ರಕ್ತದೊತ್ತಡವನ್ನು ನಿಯಂತ್ರಿಸಿ ಹೃದಯವನ್ನು ಆರೋಗ್ಯಕರವಾಗಿಡಬಹುದು.

ಹಲ್ಲಿನ ಆರೋಗ್ಯ

ಮೊಸರು ಕ್ಯಾಲ್ಸಿಯಂ ಮತ್ತು ರಂಜಕದ ಮೂಲವಾಗಿದೆ. ಇದು ಹಲ್ಲುಗಳ ಎನಾಮೆಲ್‌ಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ ಮತ್ತು ಹಲ್ಲಿನ ಕೊಳೆತವನ್ನು ತಡೆಯುತ್ತದೆ. ದೈನಂದಿನ ಆಹಾರದಲ್ಲಿ ಮೊಸರನ್ನು ಸೇರಿಸುವುದರಿಂದ ಬಾಯಿಯ ನೈರ್ಮಲ್ಯವನ್ನು ಸುಧಾರಿಸಲು ಸಹಾಯ ಮಾಡುತ್ತದೆ ಮತ್ತು ಹಲ್ಲಿನ ಸಮಸ್ಯೆಗಳ ಅಪಾಯವನ್ನು ಕಡಿಮೆ ಮಾಡುತ್ತದೆ.

ಇದನ್ನೂ ಓದಿ: Mobile Addiction: ನಿಮ್ಮ ಮಗುವನ್ನು ಮೊಬೈಲ್ ಚಟದಿಂದ ತಪ್ಪಿಸಬೇಕೆ? ಈ 5 ಸಲಹೆ ಅನುಸರಿಸಿ

ಊಟದ ಅನಂತರ ಮೊಸರು ಯಾಕೆ ಸೇವಿಸಬೇಕು?

ಮೊಸರನ್ನು ಯಾವಾಗಲೂ ಊಟದ ಅನಂತರ ಸೇವಿಸಿದರೆ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾಗಿದೆ. ಯಾಕೆಂದರೆ ಇದು ಕರುಳಿನ ಆರೋಗ್ಯವನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ ಮತ್ತು ಜೀರ್ಣಕ್ರಿಯೆಯನ್ನು ಸುಧಾರಿಸುವುದು. ಅದರಲ್ಲಿ ಪ್ರೋಬಯಾಟಿಕ್ ಅಂಶ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
ಮೊಸರು ಶೀತವನ್ನು ಉಂಟು ಮಾಡುತ್ತದೆ. ಹೀಗಾಗಿ ಇದನ್ನು ಬೆಚ್ಚಗಿನ ವಾತಾವರಣದಲ್ಲಿ ದೇಹವನ್ನು ತಂಪಾಗಿರಿಸಲು ಸೇವಿಸುವುದು ಉತ್ತಮ. ಯಾವುದೇ ರೀತಿಯ ಡೈರಿ ಉತ್ಪನ್ನದ ಅಲರ್ಜಿ ಇದ್ದರೆ ಮೊಸರು ತಿನ್ನಬಾರದು ಅಥವಾ ತಿನ್ನುವ ಮೊದಲು ವೈದ್ಯರನ್ನು ಸಂಪರ್ಕಿಸಿ.

Continue Reading
Advertisement
CM Siddaramaiah
ಪ್ರಮುಖ ಸುದ್ದಿ7 mins ago

CM Siddaramaiah: ಕರ್ನಾಟಕದಲ್ಲಿ ವಾಸಿಸುತ್ತಿರುವ ಪರ ಭಾಷಿಕರು ಕನ್ನಡ ಕಲಿಯಲೇಬೇಕು: ಸಿದ್ದರಾಮಯ್ಯ

Tumkur DC Shubha Kalyan inaugurated the Janaspandana programme in Koratagere
ತುಮಕೂರು17 mins ago

Koratagere News: ಸಮಸ್ಯೆಗಳಿಗೆ ಸ್ಥಳದಲ್ಲಿಯೇ ಪರಿಹಾರಕ್ಕೆ ಜನಸ್ಪಂದನ ಕಾರ್ಯಕ್ರಮ; ಡಿಸಿ ಶುಭ‌ ಕಲ್ಯಾಣ್

Power cut There will be power outage in various parts of Bengaluru on June 22
ಕರ್ನಾಟಕ19 mins ago

Power Cut: ಬೆಂಗಳೂರಿನ ವಿವಿಧ ಕಡೆ ಜೂ. 22ರಂದು ವಿದ್ಯುತ್‌ ವ್ಯತ್ಯಯ

Arvind Kejriwal
ದೇಶ20 mins ago

Arvind Kejriwal: ಅರವಿಂದ್‌ ಕೇಜ್ರಿವಾಲ್‌ಗೆ ಬಿಗ್‌ ರಿಲೀಫ್;‌ ಕೊನೆಗೂ ಸಿಕ್ಕಿತು ಜಾಮೀನು

Vijayanagara DC MS Diwakar meeting with officials of various departments
ವಿಜಯನಗರ22 mins ago

Vijayanagara News: ಜೂ. 21ರಂದು ಮುಖ್ಯಮಂತ್ರಿಗಳಿಂದ ಕೆಡಿಪಿ ಸಭೆ; ಡಿಸಿ ಎಂ.ಎಸ್.ದಿವಾಕರ್‌

Action will be taken to ensure that the Anganwadi workers do not suffer in any way says Minister Lakshmi Hebbalkar
ಬೆಂಗಳೂರು27 mins ago

Lakshmi Hebbalkar: ಲಕ್ಷ್ಮೀ ಹೆಬ್ಬಾಳಕರ್ ಭರವಸೆ; ಅಂಗನವಾಡಿ ನೌಕರರ ಮುಷ್ಕರ ವಾಪಸ್‌

Mecca Heatwave Death
ಪ್ರಮುಖ ಸುದ್ದಿ51 mins ago

Mecca Heatwave Death : ಮೆಕ್ಕಾದಲ್ಲಿ ನಿಧನ ಹೊಂದಿದ ಹಜ್​ ಯಾತ್ರಿಗಳಿಗೆ ಅಲ್ಲೇ ಸಂಸ್ಕಾರ; ಹಜ್​ ಕಮಿಟಿ ಮಾಹಿತಿ

CM Siddaramaiah
ಕರ್ನಾಟಕ1 hour ago

CM Siddaramaiah: ಪೆಟ್ರೋಲ್‌ ಬೆಲೆ ಏರಿಸಿದ್ದು ಗ್ಯಾರಂಟಿಗೋ? ಅಭಿವೃದ್ಧಿಗೋ? ಸಿದ್ದರಾಮಯ್ಯ ಹೀಗಂತಾರೆ!

Virat kohli
ಪ್ರಮುಖ ಸುದ್ದಿ1 hour ago

Virat kohli : ಕೊಹ್ಲಿಯನ್ನು ಮತ್ತೆ ಸ್ವಾರ್ಥಿ ಎಂದು ದೂರಿದ ಪಾಕಿಸ್ತಾನದ ಮೊಹಮ್ಮದ್ ಹಫೀಜ್​

Darshan Arrested
ಕರ್ನಾಟಕ2 hours ago

Darshan Arrested: ದರ್ಶನ್‌ ಸೇರಿ ನಾಲ್ವರನ್ನೇ ಪೊಲೀಸರು ಕಸ್ಟಡಿಗೆ ಪಡೆದಿದ್ದೇಕೆ? ಯಾವೆಲ್ಲ ತನಿಖೆ ಬಾಕಿ ಇದೆ?

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ8 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ6 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Karnataka Weather Forecast
ಮಳೆ2 hours ago

Karnataka Weather : ಬಾಗಲಕೋಟೆ, ಬೆಂಗಳೂರು ಸೇರಿ ಚಿಕ್ಕಮಗಳೂರಲ್ಲಿ ಸುರಿದ ಗಾಳಿ ಸಹಿತ ಮಳೆ

Actor Darshan
ಮೈಸೂರು3 days ago

Actor Darshan : ಕೊಲೆ ಕೇಸ್‌ ಬೆನ್ನಲ್ಲೇ ನಟ ದರ್ಶನ್‌ ಸೇರಿ ಪತ್ನಿ ವಿಜಯಲಕ್ಷ್ಮಿಗೆ ಬಾರ್ ಹೆಡೆಡ್ ಗೂಸ್ ಸಂಕಷ್ಟ!

Bakrid 2024
ಬೆಂಗಳೂರು3 days ago

Bakrid 2024 : ಮತ್ತೊಂದು ಧರ್ಮವನ್ನೂ ಪ್ರೀತಿಸಿ; ಬಕ್ರೀದ್‌ ಪ್ರಾರ್ಥನೆಯಲ್ಲಿ ಸಿಎಂ ಸಿದ್ದರಾಮಯ್ಯ ಕರೆ

Renukaswamy murder case The location of the accused is complete
ಸಿನಿಮಾ4 days ago

Renuka Swamy murder : ಭೀಕರವಾಗಿ ಕೊಂದರೂ ಆರೋಪಿಗಳಿಗೆ ಕಾಡುತ್ತಿಲ್ವಾ ಪಾಪಪ್ರಜ್ಞೆ? ನಗುತ್ತಲೇ ಹೊರಬಂದ ಪವಿತ್ರಾ ಗೌಡ, ಪವನ್‌

Renuka swamy murder
ಚಿತ್ರದುರ್ಗ4 days ago

Renuka swamy Murder : ರೇಣುಕಾಸ್ವಾಮಿ ಕುಟುಂಬಸ್ಥರಿಗೆ ಸಾಂತ್ವನ ಹೇಳಿದ ಬಾಳೆಹೊನ್ನೂರು ಶ್ರೀಗಳು

Vijayanagara News
ವಿಜಯನಗರ4 days ago

Vijayanagara News : ಕೆಲಸಕ್ಕೆ ಚಕ್ಕರ್, ಸಂಬಳಕ್ಕೆ ಹಾಜರ್! ಹಾರಕನಾಳು ಗ್ರಾಪಂ ಪಿಡಿಓಗಾಗಿ ಗ್ರಾಮಸ್ಥರ ಹುಡುಕಾಟ

Actor Darshan
ಯಾದಗಿರಿ5 days ago

Actor Darshan : ಬಾಸ್‌ ಅಂತ ಯಾಕ್‌ ಬಕೆಟ್‌ ಹಿಡಿಯುತ್ತೀರಾ ಅಂದವನಿಗೆ ದರ್ಶನ್ ಅಭಿಮಾನಿಯಿಂದ ಜೀವ ಬೆದರಿಕೆ!

Karnataka Weather Forecast
ಮಳೆ6 days ago

Karnataka Weather : ಕರಾವಳಿ, ಉತ್ತರ ಒಳನಾಡಿನಲ್ಲಿ ವರುಣಾರ್ಭಟ; ನಾಳೆಯು ಹಲವೆಡೆ ಸಿಕ್ಕಾಪಟ್ಟೆ ಮಳೆ

Actor Darshan
ಬೆಂಗಳೂರು6 days ago

Actor Darshan : ರೇಣುಕಾಸ್ವಾಮಿಯನ್ನು ಕಿಡ್ನ್ಯಾಪ್ ಮಾಡಿ ಕರೆತರುವ ದೃಶ್ಯ ಸಿಸಿ ಕ್ಯಾಮೆರಾದಲ್ಲಿ ಸೆರೆ!

actor Darshan
ಬೆಂಗಳೂರು6 days ago

Actor Darshan : ರೇಣುಕಾಸ್ವಾಮಿ ಕೊಲೆ ಕೇಸ್‌ನಲ್ಲಿ ಮತ್ತಿಬ್ಬರು ಸರೆಂಡರ್‌; ಆರೋಪಿಗಳ ಸಂಖ್ಯೆ 16ಕ್ಕೆ ಏರಿಕೆ

ಟ್ರೆಂಡಿಂಗ್‌