Lok Sabha Election 2024: ಈ ಬಾರಿ 74 ಮಹಿಳಾ ಸಂಸದರು, ಯಾವ ಪಕ್ಷದಲ್ಲಿ ಎಷ್ಟು ಮಂದಿ? - Vistara News

ರಾಜಕೀಯ

Lok Sabha Election 2024: ಈ ಬಾರಿ 74 ಮಹಿಳಾ ಸಂಸದರು, ಯಾವ ಪಕ್ಷದಲ್ಲಿ ಎಷ್ಟು ಮಂದಿ?

18ನೇ ಲೋಕಸಭೆಗೆ (Lok Sabha Election 2024) ಈ ಬಾರಿ 74 ಮಹಿಳೆಯರು ಸಂಸದರಾಗಿ ಪ್ರವೇಶ ಪಡೆದಿದ್ದರೆ. ಇದರಲ್ಲಿ ಬಹುಪಾಲು ಬಿಜೆಪಿಯದ್ದಾಗಿದ್ದು, ಬಳಿಕ ಕಾಂಗ್ರೆಸ್ ನವರದ್ದಾಗಿದೆ. ಬಿಜೆಪಿ 31, ಕಾಂಗ್ರೆಸ್ 13, ಟಿಎಂಸಿ 11 ಮಹಿಳಾ ಸಂಸದರು ಸೇರಿದಂತೆ ಒಟ್ಟು 74 ಮಹಿಳೆಯರು ಲೋಕಸಭೆಯಲ್ಲಿ ತಮ್ಮ ಪಕ್ಷಗಳನ್ನು ಪ್ರತಿನಿಧಿಸಲಿದ್ದಾರೆ.

VISTARANEWS.COM


on

Lok Sabha Election 2024
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಲೋಕಸಭಾ ಚುನಾವಣೆಯಲ್ಲಿ (Lok Sabha Election 2024) ಈ ಬಾರಿ 74 ಮಹಿಳೆಯರು ಸಂಸದರಾಗಿ (Women MPs) ಆಯ್ಕೆಯಾಗಿದ್ದಾರೆ. ಈ ಸಂಖ್ಯೆಯು 2019ಕ್ಕಿಂತ ಸ್ವಲ್ಪ ಕಡಿಮೆಯಾಗಿದೆ. 2019ರಲ್ಲಿ ಒಟ್ಟು 78 ಮಹಿಳೆಯರು ಸಂಸದರಾಗಿದ್ದರು. 1952ರ ಚುನಾವಣೆಗೆ (election) ಹೋಲಿಸಿದರೆ ಮಹಿಳಾ ಸಂಸದರ ಸಂಖ್ಯೆಯಲ್ಲಿ ಗಮನಾರ್ಹ ಹೆಚ್ಚಳವಾಗಿದೆ.

ಸಂಸತ್ತಿನಲ್ಲಿ ಮಹಿಳಾ ಮೀಸಲಾತಿ (Women’s reservation) ಮಸೂದೆ ಅಂಗೀಕಾರವಾದ ಅನಂತರ ಮಹಿಳೆಯರಿಗೆ ಮೂರನೇ ಒಂದು ಭಾಗದಷ್ಟು ಸ್ಥಾನಗಳನ್ನು ಮೀಸಲಿಡುವ ಮೊದಲ ಚುನಾವಣೆ ಇದಾಗಿದೆ. ಈ ಕಾನೂನು ಇನ್ನೂ ಜಾರಿಗೆ ಬರಬೇಕಿದೆ.

ಮಹಿಳಾ ಸಂಸದರು ಸಂಖ್ಯೆ ಒಟ್ಟು ಚುನಾಯಿತ ಸದಸ್ಯರಲ್ಲಿ ಕೇವಲ ಶೇ. 13.63ರಷ್ಟಿದೆ. ಇದು ಮಹಿಳೆಯರಿಗೆ ಪ್ರಸ್ತಾಪಿಸಲಾಗಿರುವ ಶೇ. 33 ಮೀಸಲಾತಿಗಿಂತ ಕಡಿಮೆಯಾಗಿದೆ. ದೇಶಾದ್ಯಂತ ಕೆಳಮನೆಗೆ ಆಯ್ಕೆಯಾಗಿರುವ ಒಟ್ಟು ಮಹಿಳಾ ಸಂಸದರ ಪೈಕಿ 11 ಮಂದಿ ಪಶ್ಚಿಮ ಬಂಗಾಳದವರಾಗಿರುವುದು ವಿಶೇಷ.

ಯಾವ ಪಕ್ಷದಿಂದ ಎಷ್ಟು?

ಈ ಬಾರಿ ಲೋಕಸಭೆಯಲ್ಲಿ 14 ರಾಜಕೀಯ ಪಕ್ಷಗಳ ಮಹಿಳಾ ಸಂಸದರು ತಮ್ಮ ಕ್ಷೇತ್ರಗಳನ್ನು ಪ್ರತಿನಿಧಿಸಲಿದ್ದಾರೆ. ಇದರಲ್ಲಿ ಬಿಜೆಪಿ 31 ಮಹಿಳಾ ಸಂಸದರನ್ನು ಹೊಂದಿದ್ದು, ಕಾಂಗ್ರೆಸ್ 13, ತೃಣಮೂಲ ಕಾಂಗ್ರೆಸ್ (ಟಿಎಂಸಿ) 11, ಸಮಾಜವಾದಿ ಪಕ್ಷ (ಎಸ್‌ಪಿ) 5, ದ್ರಾವಿಡ ಮುನ್ನೇತ್ರ ಕಳಗಂ (ಡಿಎಂಕೆ) 3 ಮಹಿಳಾ ಸಂಸದರನ್ನು ಹೊಂದಿದೆ.

ಮೊದಲ ಬಾರಿ ಸಂಸದರಾದವರು

74 ಮಹಿಳಾ ಸಂಸದರಲ್ಲಿ 43 ಮಂದಿ ಮೊದಲ ಬಾರಿಗೆ ಸಂಸದರಾಗಿ ಆಯ್ಕೆಯಾಗಿದ್ದಾರೆ. ರಾಷ್ಟ್ರೀಯ ಜನತಾ ದಳದಿಂದ (ಆರ್‌ಜೆಡಿ) ಆಯ್ಕೆಯಾಗಿರುವ ಮಿಸಾ ಭಾರತಿ ಚೊಚ್ಚಲ ಲೋಕಸಭಾ ಸಂಸದರಾಗಿದ್ದಾರೆ.

ಕಣದಲ್ಲಿ ಇದದ್ದು ಎಷ್ಟು ಮಂದಿ ?

ಒಟ್ಟು 797 ಮಹಿಳಾ ಅಭ್ಯರ್ಥಿಗಳು ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸಿದ್ದು, ಬಿಜೆಪಿ ಗರಿಷ್ಠ 69 ಮತ್ತು ಕಾಂಗ್ರೆಸ್ 41 ಅಭ್ಯರ್ಥಿಗಳನ್ನು ಕಣಕ್ಕಿಳಿಸಿತ್ತು.

ಪಿಆರ್ ಎಸ್ ನ ವಿಶ್ಲೇಷಣೆಯ ಪ್ರಕಾರ ಮಹಿಳಾ ಸಂಸದರಲ್ಲಿ ಶೇ. 16ರಷ್ಟು ಮಂದಿ 40 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದಾರೆ. ಶೇ. 41ರಷ್ಟು ಮಂದಿ ಈ ಹಿಂದೆ ಲೋಕಸಭೆಯ ಸದಸ್ಯರಾಗಿದ್ದರು. ಉಳಿದವರಲ್ಲಿ ಒಬ್ಬ ಸಂಸದರು ಮಾತ್ರ ರಾಜ್ಯಸಭಾ ಸದಸ್ಯರಾಗಿದ್ದರು.

ಕಿರಿಯ ಮಹಿಳಾ ಸಂಸದರು

ಸಮಾಜವಾದಿ ಪಕ್ಷದ ಮಚ್ಲಿಶಹರ್‌ನ 25 ವರ್ಷದ ಪ್ರಿಯಾ ಸರೋಜ್ ಮತ್ತು ಕೈರಾನಾ ಕ್ಷೇತ್ರದ 29 ವರ್ಷದ ಇಕ್ರಾ ಚೌಧರಿ ಗೆಲುವು ಸಾಧಿಸಿದ ಅತ್ಯಂತ ಕಿರಿಯ ಸಂಸದರಾಗಿದ್ದಾರೆ.

ಇದನ್ನೂ ಓದಿ: Rahul Gandhi: ರಾಯ್‌ ಬರೇಲಿ V/S ವಯನಾಡ್‌-ರಾಹುಲ್‌ ಆಯ್ಕೆ ಯಾವುದು?

ಮಹಿಳಾ ಮೀಸಲಾತಿ ಎಷ್ಟು?

ಗಮನಾರ್ಹ ಸಂಗತಿ ಎಂದರೆ ನಾಮ್ ತಮಿಲರ್ ಕಚ್ಚಿಯಂತಹ ಪಕ್ಷಗಳು ಶೇ. 50ರಷ್ಟು ಮಹಿಳಾ ಅಭ್ಯರ್ಥಿ ಗಳನ್ನು ಕಣಕ್ಕೆ ಇಳಿಸಿತ್ತು. ಮಹಿಳಾ ಪ್ರಾತಿನಿಧ್ಯವನ್ನು ಹೊಂದಿರುವ ಇತರ ಪಕ್ಷಗಳಲ್ಲಿ ಲೋಕ ಜನಶಕ್ತಿ ಪಕ್ಷ (ರಾಮ್ ವಿಲಾಸ್) ಮತ್ತು ನ್ಯಾಶನಲಿಸ್ಟ್ ಕಾಂಗ್ರೆಸ್ ಪಾರ್ಟಿ ಕೂಡ ಸೇರಿದೆ. ಈ ಎರಡೂ ಪಕ್ಷಗಳು ಶೇ. 40ರಷ್ಟು ಮಹಿಳಾ ಅಭ್ಯರ್ಥಿಗಳನ್ನು ಹೊಂದಿದೆ.

ಜಾರ್ಖಂಡ್ ಮುಕ್ತಿ ಮೋರ್ಚಾ (ಜೆಎಂಎಂ) ಮತ್ತು ಬಿಜು ಜನತಾ ದಳ (ಬಿಜೆಡಿ) ಶೇ. 33 ರಷ್ಟು, ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಶೇ.29, ಸಮಾಜವಾದಿ ಪಕ್ಷವು ಶೇ. 20 ಮತ್ತು ತೃಣಮೂಲ ಕಾಂಗ್ರೆಸ್ (ಟಿಎಂಸಿ) ಶೇ. 25ರಷ್ಟು ಮಹಿಳಾ ಅಭ್ಯರ್ಥಿಗಳನ್ನು ಹೊಂದಿತ್ತು.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಕರ್ನಾಟಕ

DCM Post: ಒನ್ ಮ್ಯಾನ್ ಒನ್ ಪೋಸ್ಟ್ ಕೂಗಿಗೆ ಡಿಕೆಶಿ ಡೋಂಟ್ ಕೇರ್‌; ಕೇಡರ್ ಬೇಸ್ ಪಾರ್ಟಿ ಕಟ್ಟಲು ಪಣ!

DCM Post: ಪಕ್ಷ ಸಂಘಟನೆಗೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರು ಸರಣಿ ಸಭೆಗಳನ್ನು ಮುಂದುವರಿಸಿದ್ದಾರೆ. ಕಳೆದ ವಾರ ಬೆಂಗಳೂರು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರ ಸಭೆ ನಡೆದಿತ್ತು, ಸೋಮವಾರ ಕೆಪಿಸಿಸಿ ಕಚೇರಿಯಲ್ಲಿ ಪದಾಧಿಕಾರಿಗಳ ಸಭೆ ನಡೆಸಿದ್ದಾರೆ.

VISTARANEWS.COM


on

DCM Post
Koo

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ರಾಜ್ಯ ಕಾಂಗ್ರೆಸ್‌ ನಾಯಕರಿಂದಲೇ ಒತ್ತಾಯ ಕೇಳಿಬರುತ್ತಿದೆ. ಡಿಸಿಎಂ ಹಾಗೂ ಕೆಪಿಸಿಸಿ ಅಧ್ಯಕ್ಷ (DCM Post) ಸ್ಥಾನವನ್ನು ಒಬ್ಬರಿಗೆ ನೀಡಿರುವುದಕ್ಕೆ ಪಕ್ಷದಲ್ಲಿ ಭಿನ್ನಮತ ಭುಗಿಲೆದ್ದಿದೆ. ಆದರೆ, ಒನ್ ಮ್ಯಾನ್ ಒನ್ ಪೋಸ್ಟ್ ಕೂಗಿಗೆ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಮಾತ್ರ ಡೋಂಟ್ ಕೇರ್ ಎನ್ನುತ್ತಿದ್ದು, ಕೇಡರ್ ಬೇಸ್ ಪಾರ್ಟಿ ಕಟ್ಟಲು ಅವರು ಪಣತೊಟ್ಟಿದ್ದಾರೆ. ಇದಕ್ಕಾಗಿ ಸರಣಿ ಸಭೆಗಳನ್ನು ನಡೆಸುತ್ತಿದ್ದಾರೆ.

ಚುನಾವಣೆ ದೃಷ್ಟಿಯಿಂದ ಪ್ರತ್ಯೇಕ ಆ್ಯಕ್ಷನ್ ಪ್ಲ್ಯಾನ್ ಸಿದ್ಧಪಡಿಸಿ ಪದಾಧಿಕಾರಿಗಳ ಸಭೆಯಲ್ಲಿ ಮಂಡನೆ ಮಾಡಿದ್ದಾರೆ. ಇನ್ನು ಲೋಕಸಭೆ ಫಲಿತಾಂಶದ ಹಿನ್ನಡೆ ಹಿನ್ನೆಲೆಯಲ್ಲಿ ವಲಯವಾರು ಸತ್ಯ ಶೋಧನಾ ಸಮಿತಿ ರಚನೆಗೆ ನಿರ್ಧಾರ ಮಾಡಿದ್ದಾರೆ.

ಲೋಕಸಭೆಯಲ್ಲಿ ಹಿನ್ನಡೆ ಅನುಭವಿಸಿದ ವಿಧಾನಸಭಾ ಕ್ಷೇತ್ರಗಳ ಪ್ರಗತಿ ಪರಿಶೀಲನೆ, ಕಾರಣಗಳನ್ನು ಪತ್ತೆ ಹಚ್ಚುವುದು, ಮುಂಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗೂ ರೂಪುರೇಷೆ ಸಿದ್ಧಪಡಿಸಲು ವಲಯವಾರು ಸಮಿತಿ ರಚನೆ ಮಾಡಲು ಹಾಗೂ ಬಿಬಿಎಂಪಿ, ಜಿಪಂ, ತಾಪಂ ಚುನಾವಣೆಗೆ ಹಾಗೂ ಉಪ ಚುನಾವಣೆಯಲ್ಲಿ ಸಕ್ರಿಯವಾಗಿ ಕೆಲಸ ಮಾಡುವಂತೆ ಸೂಚನೆ ನೀಡಿದ್ದಾರೆ.

ಇದನ್ನೂ ಓದಿ | Hosur Airport: ಹೊಸೂರಿನಲ್ಲಿ ವಿಮಾನ ನಿಲ್ದಾಣ ನಿರ್ಮಾಣದ ಹೊಣೆ ಬಿಐಎಎಲ್‌ಗೆ! ಕರ್ನಾಟಕಕ್ಕೆ ಟಕ್ಕರ್‌ ಕೊಟ್ಟ ತಮಿಳುನಾಡು

ಪ್ರತಿ ಜಿಲ್ಲೆ ಹಾಗೂ ವಿಧಾನಸಭಾ ಕ್ಷೇತ್ರವಾರು ಸಂಚಾಲನ ಸಮಿತಿ ರಚನೆಗೂ ನಿರ್ಧಾರ ಮಾಡಲಾಗಿದೆ. ಇದಕ್ಕಾಗಿ ಮಾಜಿ ಜಿಲ್ಲಾ ಪಂಚಾಯತ್‌, ತಾಲೂಕು ಪಂಚಾಯತ್ ಸದಸ್ಯರ ಪ್ರತ್ಯೇಕ ಸಭೆಯನ್ನು ಡಿಕೆಶಿ ನಡೆಸಲಿದ್ದಾರೆ. ಕೆಳಹಂತದಲ್ಲಿ ಪಕ್ಷ ಬಲವರ್ಧನೆಗೆ ಸಲಹೆ ನೀಡಲು ಪದಾಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.

ಹಾಗೆಯೇ ಬೂತ್ ಮಟ್ಟದ ಸಮಸ್ಯೆ ಬಗೆಹರಿಸಲು ವಾರ್ಡ್ ಸಮಿತಿ/ ಪಂಚಾಯತ್ ಸಮಿತಿಗಳ ರಚನೆಗೆ ತೀರ್ಮಾನ ಮಾಡಿದ್ದು, ಗ್ಯಾರಂಟಿ ಫಲಾನುಭವಿಗಳ ದಾಖಲೆ ಹಾಗೂ ಮೊಬೈಲ್ ಸಂಖ್ಯೆ ಸಂಗ್ರಹಿಸಲು ಸೂಚನೆ ನೀಡಿದ್ದಾರೆ ಎನ್ನಲಾಗಿದೆ. ಕೆಪಿಸಿಸಿ ಮಟ್ಟದಲ್ಲಿ ಅಪಾರ್ಟ್ಮೆಂಟ್ ಸೆಲ್ ಹಾಗೂ ರೆಸಿಡೆಂಟ್ ವೆಲ್ಫೆರ್ ಅಸೋಸಿಯೇಷನ್‌ಗೆ ಪುನಶ್ಚೇತನ ನೀಡಲು ಯೋಜಿಸಿದ್ದು, ಉಪ ಚುನಾವಣೆಗಳಿಗೆ ಸಚಿವರು, ಶಾಸಕರನ್ನು ಹೋಬಳಿ ಮಟ್ಟದಲ್ಲಿ ನಿಯೋಜನೆಗೆ ನಿರ್ಧಾರ ಮಾಡಿದ್ದಾರೆ. ಅಲ್ಲದೇ ಸ್ಥಳೀಯ ಶಾಸಕರು, ಹಿರಿಯ ನಾಯಕರ ನೇತೃತ್ವದಲ್ಲಿ ಎಲೆಕ್ಷನ್ ಕ್ಯಾಂಪ್ ಆಫೀಸ್, ವಾರ್ ರೂಂ ಸ್ಥಾಪನೆ ಮಾಡಲು ನಿರ್ಧರಿಸಿದ್ದಾರೆ.

ಪದಾಧಿಕಾರಿಗಳ ಸಭೆಯಲ್ಲಿ ಎರಡು‌ ರೀತಿಯ ಪ್ಲ್ಯಾನ್ ಆಫ್ ಆ್ಯಕ್ಷನ್ ಮಾಡಲು ಮುಂದಾಗಿದ್ದು, ಪಕ್ಷ ಸಂಘಟನೆ ಮತ್ತು ಮುಂಬರುವ ಚುನಾವಣೆ ಕುರಿತು ಕಾರ್ಯ ಯೋಜನೆ ಮಾಡಲು ತೀರ್ಮಾನಿಸಿದ್ದಾರೆ.

ಪಕ್ಷ ಸಂಘಟನೆಯ ಕಾರ್ಯ ಯೋಜನೆ ಏನು?

1.ಉಸ್ತುವಾರಿಗಳ ಹಂಚಿಕೆ
ಜಿಲ್ಲೆಗಳು, ಅಸೆಂಬ್ಲಿ ಕ್ಷೇತ್ರಗಳಿಗೆ ನಿಯೋಜಿಸಲಾದ ಕೆಪಿಸಿಸಿ ಪದಾಧಿಕಾರಿಗಳಗೆ ಜವಾಬ್ದಾರಿ ಹಂಚುವುದು

2.ಹೊಣೆಗಾರಿಕೆ
ಎಲ್ಲಾ ಕೆಪಿಸಿಸಿ ಪದಾಧಿಕಾರಿಗಳಿಂದ ಮಾಸಿಕ ಕೆಲಸದ ವರದಿಗಳನ್ನು ಸಂಗ್ರಹಿಸುವುದು

    3.ವಿಭಾಗೀಯ ಸಭೆಗಳು
    ಕೆಪಿಸಿಸಿ ವಿಭಾಗೀಯ ಸಭೆಗಳು ಜುಲೈ 2024 ರಲ್ಲಿ ನಡೆಯಲಿವೆ
    ಆಗಸ್ಟ್ 2024 ರಲ್ಲಿ ಬ್ಲಾಕ್, ಜಿಲ್ಲೆ ಮತ್ತು ಅಸೆಂಬ್ಲಿ ಹಂತಗಳಲ್ಲಿ ಸಾಂಸ್ಥಿಕ ಕಾರ್ಯಾಗಾರಗಳನ್ನು ನಡೆಸುವುದು.

    4.ದತ್ತಾಂಶ ಪರಿಶೀಲನೆ
    ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಬೂತ್ ಸಮಿತಿ ಮತ್ತು BLA 2 ನೇಮಕಾತಿಗಳನ್ನು ಪರಿಶೀಲಿಸುವುದು

    5.ಖಾಲಿ ಹುದ್ದೆಗಳನ್ನು ಭರ್ತಿ ಮಾಡುವುದು
    ಪ್ರತಿ ಜಿಲ್ಲೆ/ಬ್ಲಾಕ್/ಬೂತ್‌ನಲ್ಲಿ ಪದಾಧಿಕಾರಿಗಳನ್ನು ನೇಮಿಸಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳುವುದು
    ಖಾಲಿ ಇರುವ ಹುದ್ದೆಗಳನ್ನ ಒಂದು ಅಥವಾ ಎರಡು ತಿಂಗಳಿನಲ್ಲಿ ಡಿಸಿಸಿ ಅಧ್ಯಕ್ಷರು, ಸ್ಥಳೀಯ ಸಂಸದರು/ಶಾಸಕರು ಮತ್ತು ಹಿರಿಯ ಪದಾಧಿಕಾರಿಗಳು ಅಭಿಪ್ರಾಯ ಪಡೆದು ಭರ್ತಿ ಮಾಡುವುದು

      6.ಡಿಜಿಟಲೈಸೇಶನ್
      ಬ್ಲಾಕ್, ಹಿರಿಯ ನಾಯಕರು, ಮುಂಚೂಣಿ ಘಟಕಗಳು, ಇಲಾಖೆಗಳ ಮುಖ್ಯಸ್ಥರು ಹೀಗೆ ಎಲ್ಲರ ಸಂಪರ್ಕ ವಿವರಗಳೊಂದಿಗೆ ಕೆಪಿಸಿಸಿ ಡೇಟಾ ಡಿಜಿಟಲೈಸೇಷನ್ ಮಾಡುವುದು

      7.ವೆಬ್‌ಸೈಟ್ ಮತ್ತು ಸೋಶಿಯಲ್ ಮೀಡಿಯಾ
      ಕೆಪಿಸಿಸಿ ವೆಬ್‌ಸೈಟ್‌ನಲ್ಲಿ ಪಕ್ಷದ ಕಾರ್ಯಕ್ರಮಗಳ ಕುರಿತು ಅಪ್‌ಡೇಟ್‌ ಆಗುತ್ತಿರಬೇಕು

      8.ಪ್ರಚಲಿತ ವಿದ್ಯಮಾನಗಳು
      ಕೆಪಿಸಿಸಿ ಪದಾಧಿಕಾರಿಗಳನ್ನು ಬೆಂಬಲಿಸುವಂತ, ನರೇಟಿವ್ ಸೆಟ್ ಮಾಡುವ ಕೌಂಟರ್ ಮಾಡಬೇಕು

      9.ಗ್ರೌಂಡ್ ಲೆವೆಲ್ ರೀಚ್
      ಬ್ಲಾಕ್ ಮತ್ತು ಬೂತ್ ಮಟ್ಟದ ನಡುವೆ ಮಧ್ಯವರ್ತಿಗಳಾಗಿ ಪಂಚಾಯತಿವಾರು ಸಮಿತಿಗಳು ಕೆಲಸ ಮಾಡಬೇಕು

        10.ಸಾಧನೆಗಳ ಮಾಹಿತಿ
        ಕಾಂಗ್ರೆಸ್ ಸರ್ಕಾರದ ಸಾಧನೆಗಳನ್ನ ಬ್ಲಾಕ್ ಮತ್ತು ಬೂತ್ ಸಮಿತಿಗಳ ಮೂಲಕ ಸ್ಥಳೀಯವಾಗಿ ಪ್ರಚಾರ ಮಾಡಬೇಕು

          11.ಬೂತ್ ಮಟ್ಟದ ಫಲಾನುಭವಿ ಕಾರ್ಯಕ್ರಮ
          ಸರ್ಕಾರವು ಕೋಟಿಗಟ್ಟಲೆ ಫಲಾನುಭವಿಗಳನ್ನು ಸೃಷ್ಟಿಸಿದೆ
          ಹೀಗಾಗಿ ರಾಜ್ಯಾದ್ಯಂತ ತಳಮಟ್ಟದ ಆಂದೋಲನವನ್ನು ರಚಿಸಲು ಫಲಾನುಭವಿ ಆಧಾರಿತ ಕಾರ್ಯಕ್ರಮವನ್ನು ಪ್ರಾರಂಭಿಸುವುದು

          12.ಡಿಜಿಟಲ್ ಯೂತ್
          ತ್ವರಿತ ಮಾಹಿತಿ ಒದಗಿಸಲು ಹಾಗೂ ಪ್ರಚಾರ ಮಾಡಲು ಪ್ರತಿ ಬೂತ್‌ನಲ್ಲಿ “ಡಿಜಿಟಲ್ ಯೂತ್” ಸ್ಥಾಪಿಸುವುದು.
          ಕೆಪಿಸಿಸಿ ಸಾಮಾಜಿಕ ಮಾಧ್ಯಮ ವಿಭಾಗ ಇದನ್ನ ನಿರ್ವಹಿಸುವುದು.

            13.ಸದಸ್ಯತ್ವ ನೋಂದಣಿ
            ಪಕ್ಷದ ಸದಸ್ಯರನ್ನು ಹೆಚ್ಚಿಸುವ ಸಲುವಾಗಿ ಮತ್ತೊಮ್ಮೆ ಸದಸ್ಯತ್ವ ನೋಂದಣಿ ಮರುಪ್ರಾರಂಭಿಸುವುದು

              14. AIPC ಮತ್ತು ವೃತ್ತಿಪರರ ಕೋಶ ಪುನರುಜ್ಜೀವನ
              ವೃತ್ತಿಪರರ ಕೋಶ ಮತ್ತು AIPC ಅನ್ನು ಪುನರುಜ್ಜೀವನಗೊಳಿಸಲಾಗುವುದು
              ನಗರ ಕಾರ್ಯನಿರತ ವೃತ್ತಿಪರರನ್ನ ಹೆಚ್ಚೆಚ್ಚು ತಲುಪುವಂತೆ ಮಾಡುವುದು ಇದರ ಉದ್ದೇಶ

              ಚುನಾವಣಾ ಸಿದ್ಧತೆಯ ಪ್ಲಾನ್ ಆಫ್ ಆ್ಯಕ್ಷನ್

              1.ವಿಭಾಗೀಯ ಸತ್ಯಶೋಧನೆ ಮತ್ತು ತಯಾರಿ ಸಮಿತಿ
              ಇತ್ತೀಚಿನ ಚುನಾವಣೆಗಳಲ್ಲಿ ಪಕ್ಷದ ಸೋಲಿನ ಕಾರಣಗಳನ್ನು ತನಿಖೆ ಮಾಡಲು ಸಮಿತಿಯನ್ನು ನೇಮಿಸುವುದು.
              ಇತ್ತೀಚಿನ ಚುನಾವಣೆಯಲ್ಲಿ ನಮ್ಮ ಕಾರ್ಯಕ್ಷಮತೆಗೆ ಕಾರಣಗಳನ್ನು ಅಳೆಯಲು ವಿಭಾಗವಾರು ಸಮಿತಿಗಳು ಕೆಲಸ ಮಾಡುತ್ತವೆ.
              ಮುಂಬರುವ ಸ್ಥಳೀಯ ಸಂಸ್ಥೆ ಮತ್ತು ಪಂಚಾಯತ್ ಚುನಾವಣೆಗಳಿಗೆ ನಿಖರ ಮಾಹಿತಿ ಒದಗಿಸುವುದು.

                2.ಕ್ರಿಯಾಶೀಲ ಪಾತ್ರ
                ಮುಂಬರುವ BBMP/ZP/TP ಚುನಾವಣೆಗಳು ಮತ್ತು ಉಪಚುನಾವಣೆಗಳಲ್ಲಿ ಉತ್ತಮ ಫಲಿತಾಂಶಕ್ಕಾಗಿ ಕೆಪಿಸಿಸಿ ಕಚೇರಿ ಪೂರ್ವಭಾವಿಯಾಗಿ ಸಂಪೂರ್ಣವಾಗಿ ತೊಡಗಿಸಿಕೊಳ್ಳುವುದು

                3.ಸಮನ್ವಯ ತಂಡಗಳು
                ಪ್ರತಿ ಜಿಲ್ಲೆ, ವಿಧಾನಸಭಾ ಕ್ಷೇತ್ರವು ಅಭ್ಯರ್ಥಿಗಳಿಗೆ ಸಹಾಯ ಮಾಡಲು ಮತ್ತು ಕೆಪಿಸಿಸಿಗೆ ವರದಿ ಮಾಡಲು ಹಿರಿಯ ನಾಯಕರ ನೇತೃತ್ವದಲ್ಲಿ ಕಾರ್ಯನಿರತ ತಂಡ ರಚಿಸುವುದು
                ಸಮನ್ವಯ ತಂಡಕ್ಕೆ ಆಯಾ ಚುನಾವಣೆಗೆ ನಿರ್ಣಾಯಕ ಬೂತ್‌ಗಳನ್ನು ಗುರುತಿಸುವ ಜವಾಬ್ದಾರಿ ಇರುತ್ತದೆ

                4.ವಿಭಾಗೀಯ ಸಭೆಗಳು
                ಎಲ್ಲಾ ಮಾಜಿ TP/ZP ಅಧ್ಯಕ್ಷರು, ಉಪಾಧ್ಯಕ್ಷರು ಮತ್ತು ವಿರೋಧ ಪಕ್ಷದ ನಾಯಕರು/ಉಪ ನಾಯಕರ ಸಭೆಗಳನ್ನ ಮಾಡಿ ಸಲಹೆ ಸೂಚನೆ ಪಡೆಯುವುದು

                5.ಮತದಾರರ ಪಟ್ಟಿಯನ್ನು ನವೀಕರಿಸುವುದು
                ಮತದಾರರ ಪಟ್ಟಿಯಿಂದ ಮತದಾರರ ಸೇರ್ಪಡೆ ಮತ್ತು ಅಳಿಸುವಿಕೆ ಮತ್ತು ಅದರ ನಿರಂತರ ಮೇಲ್ವಿಚಾರಣೆ ಮಾಡಬೇಕು

                6.ಸಮನ್ವಯ ಸಮಿತಿಗಳು
                ಬಿ.ಬಿ.ಎಂ.ಪಿ ಮತ್ತು ಗ್ರಾಮ ಪಂಚಾಯತಿಗಾಗಿ ವಾರ್ಡ್/ಪಂಚಾಯತ್ ವಾರು ಕಮಿಟಿಗಳನ್ನು ಮಾಡುವುದು
                ಗ್ರೌಂಡ್ ಲೆವೆಲ್‌ಗೆ ತಲುಪಿ ಸ್ಥಳೀಯ ಸಮಸ್ಯೆಗಳಿಗೆ ಪರಿಹಾರ ರೂಪಿಸುವುದು

                7.ಫಲಾನುಭವಿ ಡೇಟಾ
                ಗ್ಯಾರಂಟಿ ಯೋಜನೆಯ ಫಲಾನುಭವಿಗಳ ಡೇಟಾವನ್ನು ಸಂಗ್ರಹಿಸುವುದು ಮತ್ತು ಪ್ರತ್ಯೇಕಿಸುವುದು
                ನಿರ್ದಿಷ್ಟ ಸಂದೇಶವನ್ನು ಕಳುಹಿಸುವ ಸಲುವಾಗಿ ಡೇಟಾ ಬಳಕೆ ಮಾಡುವುದು.

                8.ಅಪಾರ್ಟ್‌ಮೆಂಟ್ ಸೆಲ್
                ಬಿಬಿಎಂಪಿ ಚುನಾವಣೆ ಅನುಕೂಲಕ್ಕಾಗಿ ಆರ್‌ಡಬ್ಲ್ಯೂಎ ಮತ್ತು ಅಪಾರ್ಟ್‌ಮೆಂಟ್ ಅಸೋಸಿಯೇಷನ್‌ ತಲುಪಲು ಕೆಪಿಸಿಸಿ ಅಪಾರ್ಟ್‌ಮೆಂಟ್ ಸೆಲ್ ಪುನರುಜ್ಜೀವನಗೊಳಿಸುವುದು

                9.ಉಪಚುನಾವಣೆಗಳ ಗಮನ
                ವಿಧಾನಸಭೆ ಮತ್ತು ಪರಿಷತ್ ಉಪಚುನಾವಣೆಗಳಲ್ಲಿ ಗೆಲುವು ಸಾಧಿಸಲು ಪಕ್ಷದ ಹಿರಿಯ ನಾಯಕರು, ಶಾಸಕರು ಮತ್ತು ಇತರ ಪ್ರಮುಖ ನಾಯಕರನ್ನು ನಿಯೋಜಿಸುವುದು

                  10.ಚುನಾವಣಾ ಶಿಬಿರ ಕಚೇರಿಗಳು
                  ಹಿರಿಯ ಕೆಪಿಸಿಸಿ ನಾಯಕರು ಮತ್ತು ಸ್ಥಳೀಯ ಶಾಸಕರ ನೇತೃತ್ವದಲ್ಲಿ ಉಪ-ಚುನಾವಣೆ ಸ್ಥಾನಗಳಲ್ಲಿ ಚುನಾವಣಾ ಶಿಬಿರ ಕಚೇರಿಗಳು/ವಾರ್ ರೂಮ್‌ಗಳನ್ನು ಸ್ಥಾಪಿಸಿ.

                  11.ಪರಿಶೀಲನಾ ಸಭೆಗಳು
                  ಮಾಜಿ TP/ZP ಅಧ್ಯಕ್ಷರು/ಉಪಾಧ್ಯಕ್ಷರು ಮತ್ತು ವಿರೋಧ ಪಕ್ಷದ ನಾಯಕರು/ಉಪ ನಾಯಕರ ಸಭೆಗಳನ್ನು ನಡೆಸಿ ಜಬಾವ್ದಾರಿ ಹಂಚುವುದು ಹಾಗೂ ಸಲಹೆ ಪಡೆಯುವುದು

                  12.ಕಾರ್ಯಕ್ಷಮತೆಯ ವಿಮರ್ಶೆ
                  ಇತ್ತೀಚಿನ ಲೋಕಸಭೆ ಚುನಾವಣೆಗಳಲ್ಲಿನ ಕಾರ್ಯಕ್ಷಮತೆಯನ್ನು ಕೂಲಂಕಷವಾಗಿ ಪರಿಶೀಲಿಸುವುದು
                  ಯಾವ ಅಸೆಂಬ್ಲಿ ಸ್ಥಾನಗಳು ಕಳಪೆ ಸಾಧನೆ ಮಾಡಿವೆ ಎಂಬುದನ್ನು ಗುರುತಿಸುವುದು ಮತ್ತು ಅದಕ್ಕೆ ಕಾರಣ ತಿಳಿದುಕೊಳ್ಳುವುದು (important)

                  13.ಸದಸ್ಯತ್ವ ಡ್ರೈವ್ ಬಳಕೆ
                  ರಾಜ್ಯದಾದ್ಯಂತ ಕೆಪಿಸಿಸಿ ಸದಸ್ಯರನ್ನು ತಲುಪಲು, ಕೆಪಿಸಿಸಿ ಸದಸ್ಯತ್ವ ಡ್ರೈವ್‌ನಿಂದ ಡೇಟಾವನ್ನು ಬಳಸಿಕೊಳ್ಳುವುದು

                    14.ವಿಷನ್ ಡಾಕ್ಯುಮೆಂಟ್
                    ಸ್ಥಳೀಯ ಸಂಸ್ಥೆಗಳ ಚುನಾವಣೆಗಾಗಿ ವಿಷನ್ ಡಾಕ್ಯುಮೆಂಟ್/ಪ್ರಣಾಳಿಕೆಯನ್ನು ರಚಿಸುವುದು

                    ಇದನ್ನೂ ಓದಿ | DV Sadananda Gowda: ಬಿಜೆಪಿ ರಾಜ್ಯ ನಾಯಕರ ಮೇಲೆ ಸಿಡಿದೆದ್ದ ಸದಾನಂದ ಗೌಡ; ಪಕ್ಷವಿರೋಧಿಗಳಿಗೆ ಮಣೆ ಹಾಕಿದ್ದಕ್ಕೆ ಕಿಡಿ

                    ಕೆಪಿಸಿಸಿ ಕಚೇರಿಯ ಭಾರತ್ ಜೋಡೋ ಭವನದಲ್ಲಿ ಸೋಮವಾರ ಡಿ.ಕೆ. ಶಿವಕುಮಾರ್ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಕೆಪಿಸಿಸಿ ಕಾರ್ಯಾಧ್ಯಕ್ಷ ವಸಂತಕುಮಾರ್, ಜಿ.ಸಿ. ಚಂದ್ರಶೇಖರ್, ವಿ.ಎಸ್. ಉಗ್ರಪ್ಪ, ರಮಾನಾಥ್ ರೈ ಸೇರಿದಂತೆ ಕೆಪಿಸಿಸಿ ಪದಾಧಿಕಾರಿಗಳು ಉಪಸ್ಥಿತರಿದ್ದರು.

                    Continue Reading

                    ದೇಶ

                    Sheikh Abdul Rashid: ಸೆರೆಮನೆಯಿಂದ ನೇರ ಸಂಸತ್‌ಗೆ ಎಂಟ್ರಿ! ಜೈಲಿನಿಂದಲೇ ಸ್ಪರ್ಧಿಸಿ ಗೆದ್ದ ಸಂಸದನ ಪ್ರಮಾಣವಚನಕ್ಕೆ NIA ಅಸ್ತು

                    Sheikh Abdul Rashid: ಜೈಲಿನಲ್ಲಿರುವ ಕಾರಣ ಜೂ.24ರಂದು ನಡೆದ ಪ್ರಮಾಣವಚನ ಸ್ವೀಕಾರ ಸಭಾರಂಭದಲ್ಲಿ ರಶೀದ್‌ಗೆ ಪ್ರಮಾಣ ವಚನ ಸ್ವೀಕರಿಸಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಪ್ರಮಾಣವಚನಕ್ಕೆ ಅವಕಾಶ ಕಲ್ಪಿಸುವಂತೆ ಆತ ಕೋರ್ಟ್‌ ಮೊರೆ ಹೋಗಿದ್ದು, ಇದಕ್ಕೆ ಪ್ರತಿಕ್ರಿಯಿಸುವಂತೆ ಕೋರ್ಟ್‌ ಹೇಳಿತ್ತು. 2017 ರ ಜಮ್ಮು ಮತ್ತು ಕಾಶ್ಮೀರ ಭಯೋತ್ಪಾದನೆ ನಿಧಿ ಪ್ರಕರಣದಲ್ಲಿ ಬಂಧಿತರಾಗಿರುವ ಬಾರಾಮುಲ್ಲಾ ಸಂಸದ ರಶೀದ್ ಅವರು ಪ್ರಮಾಣ ವಚನ ಸ್ವೀಕರಿಸಲು ಮತ್ತು ಸಂಸತ್ತಿನ ಕಾರ್ಯಗಳನ್ನು ನಿರ್ವಹಿಸಲು ಮಧ್ಯಂತರ ಜಾಮೀನು ಅಥವಾ ಪರ್ಯಾಯವಾಗಿ ಕಸ್ಟಡಿ ಪೆರೋಲ್ ಕೋರಿ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದ.

                    VISTARANEWS.COM


                    on

                    Sheikh Abdul Rashid
                    Koo

                    ಹೊಸದಿಲ್ಲಿ: ಲೋಕಸಭೆ ಚುನಾವಣೆಯಲ್ಲಿ ಜೈಲಿನಿಂದಲೇ ಸ್ಪರ್ಧಿಸಿ ಸಂಸದರಾಗಿ ಆಯ್ಕೆಯಾಗಿರುವ ಕಾಶ್ಮೀರಿ ನಾಯಕ ಶೇಖ್ ಅಬ್ದುಲ್ ರಶೀದ್ (Sheikh Abdul Rashid) ಸಂಸದನಾಗಿ ಪ್ರಮಾಣವಚನ ಸ್ವೀಕರಿಸಲು ಎನ್‌ಐಎ ಅನುಮತಿ ನೀಡಿದೆ. ಭಯೋತ್ಪಾದಕರಿಗೆ ಹಣಕಾಸಿನ ನೆರವು ಒದಗಿಸಿದ ಆರೋಪ ಎದುರಿಸುತ್ತಿರುವ ಎಂಜಿನಿಯರ್ ರಶೀದ್ ಎಂದೇ ಜನಪ್ರಿಯವಾಗಿರುವ ಶೇಖ್ ಅಬ್ದುಲ್ ರಶೀದ್ ಜು. 25ರಂದು ಪ್ರಮಾಣವಚನ ಸ್ವೀಕರಿಸಲಿದ್ದು, ಈ ಬಗ್ಗೆ ದಿಲ್ಲಿ ಕೋರ್ಟ್‌ನ ಹೆಚ್ಚುವರಿ ನ್ಯಾಯಾಧೀಶ ಚಂದರ್‌ ಜಿತ್‌ ಸಿಂಗ್‌(Chander Jit Singh) ಆದೇಶ ಹೊರಡಿಸಲಿದ್ದಾರೆ.

                    ಜೈಲಿನಲ್ಲಿರುವ ಕಾರಣ ಜೂ.24ರಂದು ನಡೆದ ಪ್ರಮಾಣವಚನ ಸ್ವೀಕಾರ ಸಭಾರಂಭದಲ್ಲಿ ರಶೀದ್‌ಗೆ ಪ್ರಮಾಣ ವಚನ ಸ್ವೀಕರಿಸಲು ಸಾಧ್ಯವಾಗಿರಲಿಲ್ಲ. ಹೀಗಾಗಿ ಪ್ರಮಾಣವಚನಕ್ಕೆ ಅವಕಾಶ ಕಲ್ಪಿಸುವಂತೆ ಆತ ಕೋರ್ಟ್‌ ಮೊರೆ ಹೋಗಿದ್ದು, ಇದಕ್ಕೆ ಪ್ರತಿಕ್ರಿಯಿಸುವಂತೆ ಕೋರ್ಟ್‌ ಹೇಳಿತ್ತು. 2017 ರ ಜಮ್ಮು ಮತ್ತು ಕಾಶ್ಮೀರ ಭಯೋತ್ಪಾದನೆ ನಿಧಿ ಪ್ರಕರಣದಲ್ಲಿ ಬಂಧಿತರಾಗಿರುವ ಬಾರಾಮುಲ್ಲಾ ಸಂಸದ ರಶೀದ್ ಅವರು ಪ್ರಮಾಣ ವಚನ ಸ್ವೀಕರಿಸಲು ಮತ್ತು ಸಂಸತ್ತಿನ ಕಾರ್ಯಗಳನ್ನು ನಿರ್ವಹಿಸಲು ಮಧ್ಯಂತರ ಜಾಮೀನು ಅಥವಾ ಪರ್ಯಾಯವಾಗಿ ಕಸ್ಟಡಿ ಪೆರೋಲ್ ಕೋರಿ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿದ್ದ.

                    ಇದೀಗ ಎನ್‌ಐಎ ಅನುಮತಿ ನೀಡಿದ್ದು, ಸೋಮವಾರ, ಎನ್‌ಐಎ ಪರ ವಕೀಲರು ರಶೀದ್ ಪ್ರಮಾಣ ವಚನ ಸ್ವೀಕಾರವು ಮಾಧ್ಯಮಗಳೊಂದಿಗೆ ಮಾತನಾಡದಂತಹ ಕೆಲವು ಷರತ್ತುಗಳಿಗೆ ಒಳಪಟ್ಟಿರುತ್ತದೆ ಎಂದು ಹೇಳಿದರು. ಒಂದು ದಿನದೊಳಗೆ ರಶೀದ್ ಎಲ್ಲವನ್ನೂ ಪೂರ್ಣಗೊಳಿಸಬೇಕು ಎಂದು ಅವರು ತಿಳಿಸಿದ್ದಾರೆ.

                    ಯಾರು ಈ ಶೇಖ್ ಅಬ್ದುಲ್ ರಶೀದ್?

                    ಇಂಜಿನಿಯರ್ ರಶೀದ್ ಪ್ರಸ್ತುತ ಭಯೋತ್ಪಾದನೆ ನಿಧಿ ಪ್ರಕರಣದಲ್ಲಿ ದೆಹಲಿಯ ತಿಹಾರ್ ಜೈಲಿನಲ್ಲಿದ್ದಾನೆ. ಅವಾಮಿ ಇತ್ತೆಹಾದ್ ಪಕ್ಷದ ಮುಖ್ಯಸ್ಥ, ಎರಡು ಬಾರಿ ಶಾಸಕನಾಗಿದ್ದ ರಶೀದ್‌ನನ್ನು ರಾಷ್ಟ್ರೀಯ ತನಿಖಾ ಸಂಸ್ಥೆ (NIA) 2019 ರಲ್ಲಿ ಭಯೋತ್ಪಾದನೆ-ಧನಸಹಾಯ ಚಟುವಟಿಕೆಗಳ ಆರೋಪದ ಮೇಲೆ ಬಂಧಿಸಿತ್ತು. ಈ ಬಾರಿಯ ಚುನಾವಣೆಯಲ್ಲಿ ಆತ ನ್ಯಾಷನಲ್‌ ಕಾನ್ಫರೆನ್ಸ್‌ನ ಓಮರ್‌ ಅಬ್ದುಲ್ಲಾ ವಿರುದ್ಧ ಸ್ಪರ್ಧಿಸಿ 4,7,2481 ಮತಗಳನ್ನು ಗಳಿಸಿದ್ದಾನೆ. ಒಮ್ಮೆಯೂ ಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ಮಾಡದ ರಶೀದ್ 2,04,142 ಮತಗಳ ಭಾರೀ ಅಂತರದಿಂದ ಗೆದ್ದಿದ್ದಾನೆ.

                    ಅಮೃತ್‌ ಸಿಂಗ್‌ ಪ್ರಮಾಣವಚನ ಸ್ವೀಕರಿಸಿಲ್ಲ

                    ಇನ್ನು ಜೈಲಿನಿಂದಲೇ ಸ್ಪರ್ಧಿಸಿ ಅಭೂತಪೂರ್ವ ಗೆಲುವು ಸಾಧಿಸಿರುವ ಖಲಿಸ್ತಾನಿ ಪ್ರತ್ಯೇಕತಾವಾದಿ ಅಮೃತಪಾಲ್‌ ಸಿಂಗ್‌ ಕೂಡ ಪ್ರಮಾಣವಚನ ಸ್ವೀಕರಿಸಿಲ್ಲ. ಅಮೃತಸರದ ಜಲ್ಲುಪುರ್‌ ಖೇರಾ ಎಂಬ ಗ್ರಾಮದಲ್ಲಿ 1993ರಲ್ಲಿ ಜನಿಸಿದ ಅಮೃತ್‌ಪಾಲ್‌, 12ನೇ ತರಗತಿವರೆಗೆ ಓದಿದ್ದಾನೆ. 2012ರಲ್ಲಿ ಭಾರತ ತೊರೆದು, ದುಬೈಯಲ್ಲಿ ತನ್ನ ಚಿಕ್ಕಪ್ಪನ ಟ್ರಾನ್ಸ್‌ಪೋರ್ಟ್‌ ಕಂಪನಿಯಲ್ಲಿ ದುಡಿದ. ಈತ ಪಂಜಾಬ್‌ನ ಪೊಲೀಸರ ಹಾಗೂ ರಾಜಕಾರಣಿಗಳ ಗಮನಕ್ಕೆ ಬಂದುದೇ ಕೆಲವು ದಿನಗಳ ಹಿಂದೆ- ʼವಾರಿಸ್‌ ಪಂಜಾಬ್‌ ದೇʼ ಸಂಘಟನೆಯ ಮುಖ್ಯಸ್ಥನಾಗಿ ನಿಯುಕ್ತನಾದ ಸಂದರ್ಭದಲ್ಲಿ. ಈ ಸಂಘಟನೆಯನ್ನು ಸ್ಥಾಪಿಸಿದವನು ನಟ, ಚಳವಳಿಗಾರ ದೀಪ್‌ ಸಿಧು. ಇವನು 2022ರ ಫೆಬ್ರವರಿಯಲ್ಲಿ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದ. ಇವನನ್ನು ಸರ್ಕಾರ ಸಾಯಿಸಿದೆ ಎಂದು ಅಮೃತ್‌ಪಾಲ್‌ ಮತ್ತು ಬೆಂಬಲಿಗರು ಆರೋಪಿಸುತ್ತ ಬಂದಿದ್ದಾರೆ. ಅಮೃತ್‌ಪಾಲ್‌ ಯಾವತ್ತೂ ಸಿಧುವನ್ನು ಭೇಟಿ ಮಾಡಿದವನೇ ಅಲ್ಲ. ಆದರೆ ಆನ್‌ಲೈನ್‌ನಲ್ಲಿ ತನ್ನನ್ನು ಅತ್ಯಂತ ಪ್ರಭಾವಿಸಿದ್ದ ಎಂದು ಹೇಳಿಕೊಳ್ಳುತ್ತಾನೆ. ಸಿಧುವಿನ ಸಾವಿನ ವಾರ್ಷಿಕೋತ್ಸವದ ಸಂದರ್ಭದಲ್ಲಿ, ಸಿಧುವಿನ ಸಲಹೆಯಂತೆ ತಾನು ಗಡ್ಡ ಟ್ರಿಮ್‌ ಮಾಡಿಕೊಳ್ಳುವುದು ಬಿಟ್ಟಿರುವುದಾಗಿ ಹೇಳಿದ್ದ.

                    ಹಲವು ಸಮಯದಿಂದ ಆತ ಫೇಸ್‌ಬುಕ್‌ ಸೇರಿದಂತೆ ಸಾಮಾಜಿಕ ಜಾಲತಾಣಗಳಲ್ಲಿ ಖಲಿಸ್ತಾನ್ ಪರ ಪೋಸ್ಟ್‌ಗಳನ್ನು ಹಾಕುತ್ತಿದ್ದ. 2021ರಲ್ಲಿ ಕೆಂಪು ಕೋಟೆಯ ಮೇಲೆ ನಡೆದ ಗುಂಪು ದಾಳಿಯ ವೇಳೆ ಅದರ ನೇತೃತ್ವ ವಹಿಸಿದ್ದ ದೀಪ್‌ ಸಿಧುವಿನ ಕೃತ್ಯವನ್ನು ಈತ ಸಮರ್ಥಿಸಿಕೊಂಡಿದ್ದ. 2022ರಲ್ಲಿ ಪಂಜಾಬ್‌ನಲ್ಲಿ ಅಮೃತ್‌ಪಾಲ್‌ನನ್ನು ಅರೆಸ್ಟ್‌ ಮಾಡಲಾಗಿತ್ತು.

                    ಇದನ್ನೂ ಓದಿ: Indian Armed Forces: ಸಹಪಾಠಿಗಳು ಈ ಭಾರತೀಯ ಸೇನೆ ಮತ್ತು ನೌಕಾಪಡೆ ಮುಖ್ಯಸ್ಥರು; ಇದು ದೇಶದ ಇತಿಹಾಸದಲ್ಲೇ ಮೊದಲು!

                    Continue Reading

                    ದೇಶ

                    Parliament Sessions: ಲೋಕಸಭೆಯಲ್ಲಿ ನೀಟ್‌ ವಿವಾದ ಚರ್ಚೆಗೆ ಆಗ್ರಹಿಸಿ ಸಭಾತ್ಯಾಗ ಮಾಡಿದ ಪ್ರತಿಪಕ್ಷ

                    Parliament Sessions: 18ನೇ ಲೋಕಸಭೆಯ ಮೊದಲ ಅಧಿವೇಶನ ದ ಎರಡನೇ ವಾರದ ಮೊದಲ ದಿನವಾದ ಸೋಮವಾರ ನೀಟ್‌ ವಿಚಾರವಾಗಿ ಕೋಲಾಹಲ ಎದ್ದು, ಕಾಂಗ್ರೆಸ್‌ ನೇತೃತ್ವದ ಪ್ರತಿಪಕ್ಷದ ನಾಯಕರು ಸಭಾತ್ಯಾಗ ಮಾಡಿದರು. ಪ್ರಶ್ನೆ ಪತ್ರಿಕೆ ಸೋರಿಕೆ ಸೇರಿದಂತೆ ನೀಟ್‌ ವಿವಾದದ ಬಗ್ಗೆ ಚರ್ಚೆ ನಡೆಸಲು ಪ್ರತ್ಯೇಕ ಒಂದು ದಿನ ಮೀಸಲಿಡಬೇಕು ಎಂದು ಕಲಾಪ ಆರಂಭವಾಗುತ್ತಿದ್ದಂತೆ ಪ್ರತಿಪಕ್ಷದ ನಾಯಕರು ಬೇಡಿಕೆ ಮುಂಡಿಟ್ಟರು. ಆದರೆ ಸರ್ಕಾರ ಇದಕ್ಕೆ ಒಪ್ಪದೆ ರಾಷ್ಟ್ರಪತಿ ಭಾಷಣದ ಮೇಲಿನ ವಂದನಾ ನಿರ್ಣಯದ ಚರ್ಚೆಯನ್ನು ಮುಂದುವರಿಸಲು ಮುಂದಾಯಿತು.

                    VISTARANEWS.COM


                    on

                    Parliament Sessions
                    Koo

                    ನವದೆಹಲಿ: 18ನೇ ಲೋಕಸಭೆಯ ಮೊದಲ ಅಧಿವೇಶನ (Parliament Sessions)ದ ಎರಡನೇ ವಾರದ ಮೊದಲ ದಿನವಾದ ಸೋಮವಾರ (ಜುಲೈ 1) ನೀಟ್‌ (NEET) ವಿಚಾರವಾಗಿ ಕೋಲಾಹಲ ಎದ್ದು, ಕಾಂಗ್ರೆಸ್‌ ನೇತೃತ್ವದ ಪ್ರತಿಪಕ್ಷದ ನಾಯಕರು ಸಭಾತ್ಯಾಗ ಮಾಡಿದರು (Opposition walks out).

                    ಪ್ರಶ್ನೆ ಪತ್ರಿಕೆ ಸೋರಿಕೆ ಸೇರಿದಂತೆ ನೀಟ್‌ ವಿವಾದದ ಬಗ್ಗೆ ಚರ್ಚೆ ನಡೆಸಲು ಪ್ರತ್ಯೇಕ ಒಂದು ದಿನ ಮೀಸಲಿಡಬೇಕು ಎಂದು ಕಲಾಪ ಆರಂಭವಾಗುತ್ತಿದ್ದಂತೆ ಪ್ರತಿಪಕ್ಷದ ನಾಯಕರು ಬೇಡಿಕೆ ಮುಂಡಿಟ್ಟರು. ಆದರೆ ಸರ್ಕಾರ ಇದಕ್ಕೆ ಒಪ್ಪದೆ ರಾಷ್ಟ್ರಪತಿ ಭಾಷಣದ ಮೇಲಿನ ವಂದನಾ ನಿರ್ಣಯದ ಚರ್ಚೆಯನ್ನು ಮುಂದುವರಿಸಲು ಮುಂದಾಯಿತು. ಇದರಿಂದ ಲೋಕಸಭೆಯಲ್ಲಿ ಕೋಲಾಹಲವೇ ಸೃಷ್ಟಿಯಾಯಿತು.

                    ರಾಹುಲ್‌ ಗಾಂಧಿ ಹೇಳಿದ್ದೇನು?

                    ನೀಟ್‌ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿ ದೇಶಾದ್ಯಂತ ಸುಮಾರು 2 ಕೋಟಿ ವಿದ್ಯಾರ್ಥಿಗಳು ತೊಂದರೆಗೆ ಸಿಲುಕಿದ್ದಾರೆ. ಹೀಗಾಗಿ ನೀಟ್‌ ವಿವಾದದ ಬಗ್ಗೆ ಚರ್ಚೆ ನಡೆಸಲು ಅವಕಾಶ ಒದಗಿಸಬೇಕು ಎಂದು ಪ್ರತಿಪಕ್ಷಗಳ ನಾಯಕ ರಾಹುಲ್‌ ಗಾಂಧಿ ಅವರು ಲೋಕಸಭಾ ಸ್ಪೀಕರ್‌ ಓಂ ಬಿರ್ಲಾ ಅವರ ಬಳಿ ಮನವಿ ಮಾಡಿದರು. “ನಾವು ನೀಟ್ ಬಗ್ಗೆ ಒಂದು ದಿನದ ಚರ್ಚೆ ನಡೆಸಲು ಆಗ್ರಹಿಸುತ್ತಿದ್ದೇವೆ. ಇದು ಒಂದು ಪ್ರಮುಖ ವಿಷಯವಾಗಿದ್ದು, ಎರಡು ಕೋಟಿಗೂ ಹೆಚ್ಚು ವಿದ್ಯಾರ್ಥಿಗಳ ಮೇಲೆ ಪರಿಣಾಮ ಬೀರಿದೆ. 70 ಬಾರಿ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿದೆ. ಈ ವಿಷಯದ ಬಗ್ಗೆ ಪ್ರತ್ಯೇಕ ಚರ್ಚೆಗೆ ನೀವು ಅವಕಾಶ ನೀಡಬೇಕು” ಎಂದು ರಾಹುಲ್ ಗಾಂಧಿ ಹೇಳಿದರು.

                    ರಾಹುಲ್ ಗಾಂಧಿ ಅವರ ಬೇಡಿಕೆಗೆ ಪ್ರತಿಕ್ರಿಯಿಸಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್ ಅವರು, ಸದನವು ವಂದನಾ ನಿರ್ಣಯವನ್ನು ಪೂರ್ಣಗೊಳಿಸುವವರೆಗೆ ಚರ್ಚೆಗೆ ಅವಕಾಶ ನೀಡುವುದಿಲ್ಲ ಎಂದು ತಿಳಿಸಿದರು. “ಸಂಸದನಾಗಿ ನನ್ನ ದಶಕಗಳ ಅನುಭವದಲ್ಲಿ ರಾಷ್ಟ್ರಪತಿಗಳ ಭಾಷಣದ ಮೇಲಿನ ವಂದನಾ ನಿರ್ಣಯದ ಸಮಯದಲ್ಲಿ ಬೇರೆ ಯಾವುದೇ ವಿಷಯವನ್ನು ಕೈಗೆತ್ತಿಕೊಂಡಿರುವುದನ್ನು ನೋಡಿಲ್ಲ. ವಂದನಾ ನಿರ್ಣಯವನ್ನು ಅಂಗೀಕರಿಸಿದ ನಂತರ ಇತರ ಸಮಸ್ಯೆಗಳನ್ನು ಎತ್ತಬಹುದು” ಎಂದು ಅವರು ತಿಳಿಸಿದರು.

                    ಇಷ್ಟಕ್ಕೆ ತೃಪ್ತರಾಗದ ರಾಹುಲ್ ಗಾಂಧಿ ಮತ್ತು ಇತರ ಪ್ರತಿಪಕ್ಷದ ನಾಯಕರು ವಂದನಾ ನಿರ್ಣಯದ ಮೇಲಿನ ಚರ್ಚೆಯ ನಂತರ ನೀಟ್ ವಿಷಯವನ್ನು ಚರ್ಚಿಸಲಾಗುವುದು ಎಂದು ಸರ್ಕಾರ ಭರವಸೆ ನೀಡುವಂತೆ ಆಗ್ರಹಿಸಿದರು.

                    ʼʼವಂದನಾ ನಿರ್ಣಯದ ಮೇಲಿನ ಚರ್ಚೆಯ ಸಮಯದಲ್ಲಿ ಬೇರೆ ಯಾವುದೇ ವಿಷಯವನ್ನು ತೆಗೆದುಕೊಳ್ಳುವ ಸಂಪ್ರದಾಯವಿಲ್ಲ ಮತ್ತು ಸದಸ್ಯರು ನೀಟ್ ಮೇಲಿನ ಚರ್ಚೆಗೆ ಪ್ರತ್ಯೇಕ ನೋಟಿಸ್ ನೀಡಬಹುದುʼʼ ಎಂದು ಸ್ಪೀಕರ್ ಓಂ ಬಿರ್ಲಾ ಹೇಳಿದರು. ಬಳಿಕ ಅವರು ವಂದನಾ ನಿರ್ಣಯದ ಮೇಲಿನ ಚರ್ಚೆಯನ್ನು ಪ್ರಾರಂಭಿಸುವಂತೆ ಬಿಜೆಪಿ ಸಂಸದ ಅನುರಾಗ್ ಠಾಕೂರ್ ಅವರಿಗೆ ಸೂಚಿಸಿದರು. ಈ ವೇಳೆ ಪ್ರತಿಪಕ್ಷಗಳು ಸರ್ಕಾರ ಸ್ಪಷ್ಟ ಭರವಸೆ ನೀಡುವಂತೆ ಒತ್ತಾಯಿಸಿ ಸಭಾತ್ಯಾಗ ಮಾಡಿದವು.

                    ಇದನ್ನೂ ಓದಿ: Karnataka Politics: ಸ್ಥಾನ ಭದ್ರಪಡಿಸಲು ದೆಹಲಿಯಲ್ಲಿ ಸಿಎಂ, ಡಿಸಿಎಂ ಪ್ರಯತ್ನ: ಎನ್.ರವಿಕುಮಾರ್ ಟೀಕೆ

                    ನೀಟ್‌ ಪ್ರಶ್ನೆ ಪತ್ರಿಕೆ ಸೋರಿಕೆ ಮತ್ತು ಪರೀಕ್ಷೆಯ ನಿರ್ವಹಣೆಯಲ್ಲಿನ ಇತರ ಅಕ್ರಮಗಳ ಬಗ್ಗೆ ಸಿಬಿಐ ತನಿಖೆ ನಡೆಸುತ್ತಿದೆ.

                    Continue Reading

                    ಪ್ರಮುಖ ಸುದ್ದಿ

                    DV Sadananda Gowda: ಬಿಜೆಪಿ ರಾಜ್ಯ ನಾಯಕರ ಮೇಲೆ ಸಿಡಿದೆದ್ದ ಸದಾನಂದ ಗೌಡ; ಪಕ್ಷವಿರೋಧಿಗಳಿಗೆ ಮಣೆ ಹಾಕಿದ್ದಕ್ಕೆ ಕಿಡಿ

                    DV Sadananda Gowda: ವಿಪಕ್ಷ ನಾಯಕನಾಗಿ ಇರುವವರು ಅಧ್ಯಯನ ಮಾಡಬೇಕು. ಜನರ ವಿಶ್ವಾಸ ಗಳಿಸಬೇಕು. ನಾನೂ ಪರಿಷತ್ ವಿಪಕ್ಷ ನಾಯಕ‌ನಾಗಿದ್ದೆ. ನನ್ನ ಇಡೀ ಅವಧಿಯಲ್ಲಿ ಸಮರ್ಥ ವಿಪಕ್ಷ ನಾಯಕನಾಗಿದ್ದಾಗ, ಸಿದ್ದರಾಮಯ್ಯ ಅವರೇ ಕ್ಷಮೆ‌ ಕೇಳಿದ್ದರು. ವಿಪಕ್ಷ ನಾಯಕನಾದವನಿಗೆ ತಾಳ್ಮೆ ಇರಬೇಕು ಎಂದಿದ್ದಾರೆ ಸದಾನಂದ ಗೌಡ.

                    VISTARANEWS.COM


                    on

                    Lok sabha Election 2024 DV Sadananda Gowda
                    Koo

                    ಬೆಂಗಳೂರು: ಮಾಜಿ ಕೇಂದ್ರ ಸಚಿವ, ಮಾಜಿ ಮುಖ್ಯಮಂತ್ರಿ, ಬಿಜೆಪಿ ನಾಯಕ (BJP Leader) ಸದಾನಂದ ಗೌಡ (DV Sadananda Gowda) ಸಿಡಿದೆದ್ದಿದ್ದಾರೆ. ಪಕ್ಷವಿರೋಧಿಗಳ ಮೇಲೆ ಕ್ರಮ ಕೈಗೊಳ್ಳದಿದ್ದುದಕ್ಕೆ ಪಕ್ಷದ ರಾಜ್ಯ ನಾಯಕತ್ವವನ್ನು ಟೀಕಿಸಿದ್ದಾರೆ. ‌ʼಆರ್.ಅಶೋಕ್‌ (R Ashok) ಅವರಿಗೆ ಆಡಳಿತ ಪಕ್ಷದಲ್ಲಿದ್ದು ಗೊತ್ತೇ ಹೊರತು ವಿಪಕ್ಷ ನಾಯಕನಾಗಿ (Opposition Leader) ಅನುಭವವಿಲ್ಲʼ ಎಂದಿದ್ದಾರೆ.

                    “ನಮ್ಮ ಪಕ್ಷ ಇಷ್ಟು ಇಷ್ಟು ಹಾಳಾಗಲು ಕಾರಣ ಪಕ್ಷ ವಿರೋಧಿ ಚಟುವಟಿಕೆ ಮಾಡಿದವರ ಮೇಲೆ ಕ್ರಮ ತೆಗೆದುಕೊಳ್ಳದಿರುವುದು. ಮಾತಾಡುವವರಿಗೆ ಮಣೆ ಹಾಕ್ತಾರೆ. ಹಾಗೆ ಮಾತಾಡುವವರನ್ನು ಹಾಗೆ ಮಾಡಬೇಡ ಅಂತ ವಿಶ್ವಾಸಕ್ಕೆ ತೆಗೆದುಕೊಳ್ಳಬೇಕು. ಇಲ್ಲವೇ ಅವರನ್ನು ಪಕ್ಷದಿಂದ ದೂರ ಇಡಬೇಕು. ನಾನು ಪಕ್ಷದ ಅಧ್ಯಕ್ಷ ಆಗಿದ್ದಾಗ ಜನಾರ್ದನ ರೆಡ್ಡಿ, ರೇಣುಕಾಚಾರ್ಯ, ಯತ್ನಾಳ್ ಅವರನ್ನ ಸಸ್ಪೆಂಡ್ ಮಾಡಿದ್ದೇನೆ. ಎಷ್ಟೇ ದೊಡ್ಡವರಾಗಿದ್ರೂ ಪಕ್ಷ ವಿರೋಧಿ ಆದವರನ್ನು ಬಿಡುತ್ತಿರಲಿಲ್ಲ” ಎಂದು ಸದಾನಂದ ಗೌಡ ಹೇಳಿದ್ದಾರೆ.

                    “ನಾನು ಮೊನ್ನೆ ರಾಜ್ಯಾಧ್ಯಕ್ಷ ವಿಜಯೇಂದ್ರ (BY Vijayendra) ಅವರ ಜೊತೆ ಇದೇ ವಿಚಾರ ಚರ್ಚೆ ಮಾಡಿದ್ದೇನೆ. ತಪ್ಪು ಮಾಡಿದವರ ವಿರುದ್ಧ ಕ್ರಮ ತೆಗೆದುಕೊಳ್ಳುವುದರಿಂದ ಪಕ್ಷದ ಸಂಘಟನೆಗೆ ಆಕ್ಸಿಲರೇಟರ್ ಕೊಟ್ಟಂತೆ ಆಗ್ತಿತ್ತು. ನಾನು ಅಧ್ಯಕ್ಷ ಆಗಿದ್ದಾಗ ಯಡಿಯೂರಪ್ಪ ಅವರದ್ದು ಒಂದು ಗುಂಪು, ಅನಂತ್ ಕುಮಾರ್ ಅವರದ್ದು ಒಂದು ಗುಂಪು ಇತ್ತು. ನಾನು ಯಾವ ಗುಂಪನ್ನೂ ಸೇರದೆ ಕೆಲಸ ಮಾಡಿದೆ. ಇದರಿಂದಾಗಿ ನನ್ನನ್ನು ದೂರ ಮಾಡಿದರು. ಮೊನ್ನೆ ಕಾಂಗ್ರೆಸ್ ಪಕ್ಷದ ನಾಯಕ ನನ್ನನ್ನು ಅವರ ಪಕ್ಷಕ್ಕೆ ಆಹ್ವಾನಿಸಿದರು. ನಾಲ್ಕು ಶರ್ಟು, ಪ್ಯಾಂಟ್ ತನ್ನಿ ಅಂತ ಅಂದರು. ನಾನು ಮತ್ತೊಬ್ಬ ಜಗದೀಶ್ ಶೆಟ್ಟರ್ ಆಗಲು ಇಷ್ಟ ಇಲ್ಲ ಎಂದೆ” ಎಂದು ಗೌಡ ಹೇಳಿದರು.

                    “ನನ್ನನ್ನು ಭ್ರಷ್ಟಾಚಾರ ಹೆಸರಲ್ಲಿ ಮುಖ್ಯಮಂತ್ರಿ ಮಾಡಲಾಯಿತು. ಆದರೆ ನಾನು ಭ್ರಷ್ಟಾಚಾರ ರಹಿತ ಆಡಳಿತ ಮಾಡಿದೆ. ಸಕಾಲವನ್ನು ಜಾರಿಗೆ ತಂದು ಕೆಲಸ ಮಾಡಿದೆ. ಜನರಿಗೆ ಸಕಾಲದಲ್ಲಿ ಸೇವೆ ಸಿಗುವ ಕೆಲಸ ಮಾಡಿದೆ. ಆದರೆ ನಂತರ ಬಂದ ಬಿಜೆಪಿಯವರು, ಕಾಂಗ್ರೆಸ್ ಅವರು ಅದನ್ನು ಮಾಡಿದ್ರಾ? ಇವರೇ ಭ್ರಷ್ಟಾಚಾರ ಆಡಳಿತ ಶುರು ಮಾಡಿದರು” ಎಂದು ಅವರು ಕಿಡಿ ಕಾರಿದರು.

                    ವಿಪಕ್ಷ ನಾಯಕ ಆರ್. ಅಶೋಕ್ ಬಗ್ಗೆ ಕಾಂಗ್ರೆಸ್ ನಾಯಕರ ಹೇಳಿಕೆ ವಿಚಾರದಲ್ಲಿ ಕೇಳಲಾದ ಪ್ರಶ್ನೆಗೆ, “ಸಂಘಟನೆಯಲ್ಲಿ ಬಲಿಷ್ಠತೆ ಇಲ್ಲದಾಗ ಆರೋಪ ಬರುತ್ತದೆ. ಸಂಘಟನೆ ಬಲಿಷ್ಠ ಆಗಬೇಕು. ಆಡಳಿತ ಪಕ್ಷದವರ ಮನಸ್ಸಿಗೂ ಇವರ ಸಂಘಟನೆ ಬಲಿಷ್ಠ ಇಲ್ಲ ಎನಿಸಿರಬೇಕು. ಹಾಗಾಗಿ ಅವರು ಅಶೋಕ್ ಬಗ್ಗೆ ಹೇಳಿರಬಹುದು. ಅಶೋಕ್ ಅವರು ಹಿಂದಿನಿಂದಲೂ ಪ್ರತೀ ಬಾರಿ ಆಡಳಿತ ಪಕ್ಷದಲ್ಲಿ ಇದ್ದರು. ಹಾಗಾಗಿ ಆಡಳಿತದ ಕಡೆ ಅವರ ಮನಸ್ಸಿದೆ. ವಿಪಕ್ಷ ನಾಯಕನಾಗಿ ಇರುವವರು ಅಧ್ಯಯನ ಮಾಡಬೇಕು. ಜನರ ವಿಶ್ವಾಸ ಗಳಿಸಬೇಕು. ನಾನೂ ಪರಿಷತ್ ವಿಪಕ್ಷ ನಾಯಕ‌ನಾಗಿದ್ದೆ. ನನ್ನ ಇಡೀ ಅವಧಿಯಲ್ಲಿ ಸಮರ್ಥ ವಿಪಕ್ಷ ನಾಯಕನಾಗಿದ್ದಾಗ, ಸಿದ್ದರಾಮಯ್ಯ ಅವರೇ ಕ್ಷಮೆ‌ ಕೇಳಿದ್ದರು. ವಿಪಕ್ಷ ನಾಯಕನಾದವನಿಗೆ ತಾಳ್ಮೆ ಇರಬೇಕು” ಎಂದು ಉತ್ತರಿಸಿದರು.

                    “ಪಕ್ಷ ಸಂಘಟನೆ ತಳಮಟ್ಟದಿಂದ ಆಗಬೇಕು. ಕೇವಲ ಸ್ಥಾನದಲ್ಲಿ ಕೂರಿಸಿದ್ರೆ ಆಗಲ್ಲ. ತಳಮಟ್ಟದಲ್ಲಿ ಕೆಲಸ ಮಾಡುವ ಟೀಮ್ ಕೊರತೆ ಇದೆ. ರಾಜ್ಯಾಧ್ಯಕ್ಷ ವಿಜಯೇಂದ್ರ ಮೇಲೆ ನಾನು ಆರೋಪ ಮಾಡಲ್ಲ. ಅವರು ಈಗಷ್ಟೇ ಬಂದಿದ್ದಾರೆ, ಬಂದ ತಕ್ಷಣ ಚುನಾವಣೆ ಬಂದಿದೆ. ಕರ್ನಾಟಕದಲ್ಲಿ ಬಿಜೆಪಿ ಕೇಡರ್ ಬೇಸ್ ಪಾರ್ಟಿ. ಕಾರ್ಯಕರ್ತರನ್ನು ಕಳೆದುಕೊಳ್ತಿದ್ದೇವೆ‌. ಇದು ನಮಗೆ ಎಚ್ಚರಿಕೆಯ ಗಂಟೆ. ನಮಲ್ಲಿ ಶಕ್ತಿ ಇದೆ, ಕಮಿಟೆಡ್ ಕಾರ್ಯಕರ್ತರಿದ್ದಾರೆ. ಆದರೆ ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವಲ್ಲಿ ಫೇಲ್ಯೂರ್ ಆಗಿದ್ದಾರೆ” ಎಂದು ನುಡಿದರು.

                    “ಚುನಾವಣೆಯಲ್ಲಿ ನಮ್ಮ ನಿರೀಕ್ಷೆಯ ಫಲಿತಾಂಶ ಸಿಕ್ಕಲಿಲ್ಲ. ವಿಧಾನಸಭೆ ಚುನಾವಣೆ ಬಳಿಕ ರಾಜ್ಯದಲ್ಲಿ ಗಂಭೀರವಾಗಿ ತೆಗೆದುಕೊಳ್ಳಲಿಲ್ಲ. ಕಾಂಗ್ರೆಸ್ ಅಭೂತಪೂರ್ವ ಗೆಲುವಿನ ಬಳಿಕ, ಪಕ್ಷದಲ್ಲಿ ವಿಶ್ವಾಸಕ್ಕೆ ತೆಗೆದುಕೊಳ್ಳಲಿಲ್ಲ. ಮೋದಿ ಇಮೇಜ್ ಮೇಲೆ ಚುನಾವಣೆ ನಡೆದುಬಿಡುತ್ತೆ ಅಂತ ಓವರ್ ಕಾನ್ಪಿಡೆನ್ಸ್‌ನಿಂದಾಗಿ ನಮ್ಮ 9 ಸ್ಥಾನ ಕಳೆದುಕೊಳ್ಳಬೇಕಾಯ್ತು. ಕಾರ್ಯಕರ್ತರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಬೇಕಿತ್ತು” ಎಂದು ಗೌಡ ವಿಶ್ಲೇಷಿಸಿದರು.

                    “ಕಾಂಗ್ರೆಸ್ ಇದ್ದಾಗಲೂ ಅನೇಕ ಬಾರಿ ಬಿಜೆಪಿ ಗೆದ್ದಿದೆ. ಆದರೆ ಈ ಬಾರಿ ಸಾಕಷ್ಟು ವಿಫಲವಾಗಿದೆ. ಇದಕ್ಕೆ ನನ್ನನ್ನೂ ಸೇರಿದಂತೆ ಎಲ್ಲರ ತಪ್ಪಿದೆ. ಕೋಹ್ಲಿ 76 ರನ್ ಹೊಡೆದ್ರೂ, ಕಪ್ ತಗೊಂಡಿದ್ದು ರೋಹಿತ್ ಶರ್ಮ. ಹಾಗೆ ಎಲ್ಲರ ತಪ್ಪು ಪಕ್ಷಕ್ಕೆ ಹಿನ್ನಡೆಯಾಗಿದೆ. ನಮಗೆ ಹಳೆ ಮೈಸೂರಿನಲ್ಲಿ ಜೆಡಿಎಸ್‌ ಇತ್ತು. ಅವರ ಜೊತೆ ಸೇರಿದ್ದಕ್ಕೆ ಬಿಜೆಪಿ ಗೆದ್ದಿತು ಅಂತ ಜನ ಮಾತಾಡ್ತಿದ್ದಾರೆ. ತುಮಕೂರು, ಚಿಕ್ಕಮಗಳೂರು, ಚಿಕ್ಕಬಳ್ಳಾಪುರ ಎಲ್ಲೆಡೆ ಕಷ್ಟ ಆಗಿತ್ತು. ಜೆಡಿಎಸ್‌ ಜೊತೆ ಸೇರಿದ್ರೂ ಕೂಡ ನಮ್ಮ ಗೆಲುವಿನ ಮಾರ್ಜಿನ್ ಕಡಿಮೆ ಆಗಿದೆ. 4ರಂದು ರಾಜ್ಯ ಕಾರ್ಯಕಾರಿಣಿ ಸಭೆ ಇದೆ. ಎಲ್ಲಾ ಮಾಹಿತಿ ಪಡೆದು ಚರ್ಚೆ ಮಾಡಬೇಕಿದೆ” ಎಂದು ಗೌಡ ತಿಳಿಸಿದರು.

                    ಇದನ್ನೂ ಓದಿ: DV Sadananda Gowda : ಕಾಂಗ್ರೆಸ್‌ ಸೇರಲ್ಲ ಎಂದ ಡಿ.ವಿ ಸದಾನಂದ ಗೌಡ; ಇನ್ನು ಬಿಜೆಪಿ ಶುದ್ಧೀಕರಣ ಮಾಡ್ತಾರಂತೆ!

                    Continue Reading
                    Advertisement
                    DCM Post
                    ಕರ್ನಾಟಕ12 mins ago

                    DCM Post: ಒನ್ ಮ್ಯಾನ್ ಒನ್ ಪೋಸ್ಟ್ ಕೂಗಿಗೆ ಡಿಕೆಶಿ ಡೋಂಟ್ ಕೇರ್‌; ಕೇಡರ್ ಬೇಸ್ ಪಾರ್ಟಿ ಕಟ್ಟಲು ಪಣ!

                    Sheikh Abdul Rashid
                    ದೇಶ14 mins ago

                    Sheikh Abdul Rashid: ಸೆರೆಮನೆಯಿಂದ ನೇರ ಸಂಸತ್‌ಗೆ ಎಂಟ್ರಿ! ಜೈಲಿನಿಂದಲೇ ಸ್ಪರ್ಧಿಸಿ ಗೆದ್ದ ಸಂಸದನ ಪ್ರಮಾಣವಚನಕ್ಕೆ NIA ಅಸ್ತು

                    karnataka Weather Forecast
                    ಮಳೆ18 mins ago

                    Karnataka Rain :‌ ಮುಂದುವರಿದ ಮಳೆ ಅಬ್ಬರ; ಸಿಡಿಲು ಬಡಿದು ಹೊತ್ತಿ ಉರಿದ ಮನೆ, ಸೇತುವೆ ಮುಳುಗಡೆ

                    reels obsession
                    ಕ್ರೈಂ23 mins ago

                    Reels Obsession: ಎಕೆ 47, ಬಾಡಿಗಾರ್ಡ್ಸ್‌, ಸುಂದರಿಯರ ನಡುವೆ ರೀಲ್ಸ್‌ ಶೋಕಿ ಮಾಡಿದವನು ಜೈಲುಪಾಲು!

                    Parliament Sessions
                    ದೇಶ25 mins ago

                    Parliament Sessions: ಲೋಕಸಭೆಯಲ್ಲಿ ನೀಟ್‌ ವಿವಾದ ಚರ್ಚೆಗೆ ಆಗ್ರಹಿಸಿ ಸಭಾತ್ಯಾಗ ಮಾಡಿದ ಪ್ರತಿಪಕ್ಷ

                    Darshan support by Adviti Shetty Block the bad commenter
                    ಸ್ಯಾಂಡಲ್ ವುಡ್33 mins ago

                    Actor Darshan: ಕೆಟ್ಟ ಕಮೆಂಟ್‌ ಮಾಡೋರನ್ನ ಬ್ಲಾಕ್‌ ಮಾಡಿ, ದರ್ಶನ್‌ ನಿರಪರಾಧಿ ಆಗಿ ಹೊರ ಬರಲಿ ಎಂದ ಅದ್ವಿತಿ ಶೆಟ್ಟಿ

                    Inspirational Story
                    ಬೆಂಗಳೂರು50 mins ago

                    Inspirational Story: ಕಣ್ಣೆದುರೆ ಸುಟ್ಟು ಕರಕಲಾದ ಮಗಳ ದುರಂತ ಅಂತ್ಯ; ಬಡಮಕ್ಕಳಿಗೆ ದಾರಿದೀಪವಾದ ಎಎಸ್‌ಐ

                    Doctor's Day
                    ದೇಶ1 hour ago

                    Doctor’s Day: ಆರೋಗ್ಯ ಕ್ಷೇತ್ರದ ಮೂಲ ಸೌಕರ್ಯ ವೃದ್ಧಿಗೆ ಕ್ರಮ; ಪ್ರಧಾನಿ ಮೋದಿ ಭರವಸೆ

                    Munawar Faruqui shares first pic with new wife
                    ಬಾಲಿವುಡ್1 hour ago

                    Munawar Faruqui: ಮೊದಲ ಬಾರಿಗೆ ಪತ್ನಿ ಜತೆ ಇರುವ ಫೋಟೊ ಹಂಚಿಕೊಂಡ  ʻಬಿಗ್ ಬಾಸ್ 17ʼರ ವಿಜೇತ  ಮುನಾವರ್ ಫಾರೂಕಿ!

                    Lok sabha Election 2024 DV Sadananda Gowda
                    ಪ್ರಮುಖ ಸುದ್ದಿ1 hour ago

                    DV Sadananda Gowda: ಬಿಜೆಪಿ ರಾಜ್ಯ ನಾಯಕರ ಮೇಲೆ ಸಿಡಿದೆದ್ದ ಸದಾನಂದ ಗೌಡ; ಪಕ್ಷವಿರೋಧಿಗಳಿಗೆ ಮಣೆ ಹಾಕಿದ್ದಕ್ಕೆ ಕಿಡಿ

                    Sharmitha Gowda in bikini
                    ಕಿರುತೆರೆ9 months ago

                    Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

                    Kannada Serials
                    ಕಿರುತೆರೆ9 months ago

                    Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

                    Bigg Boss- Saregamapa 20 average TRP
                    ಕಿರುತೆರೆ9 months ago

                    Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

                    galipata neetu
                    ಕಿರುತೆರೆ7 months ago

                    Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

                    Kannada Serials
                    ಕಿರುತೆರೆ9 months ago

                    Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

                    Kannada Serials
                    ಕಿರುತೆರೆ9 months ago

                    Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

                    Bigg Boss' dominates TRP; Sita Rama fell to the sixth position
                    ಕಿರುತೆರೆ8 months ago

                    Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

                    geetha serial Dhanush gowda engagement
                    ಕಿರುತೆರೆ7 months ago

                    Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

                    varun
                    ಕಿರುತೆರೆ7 months ago

                    Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

                    Kannada Serials
                    ಕಿರುತೆರೆ10 months ago

                    Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

                    karnataka Weather Forecast
                    ಮಳೆ20 hours ago

                    Karnataka Weather : ಬೆಂಗಳೂರು, ಕಲಬುರಗಿ ಸೇರಿದಂತೆ ಹಲವೆಡೆ ವರ್ಷಧಾರೆ; ನಾಳೆಗೂ ಮಳೆ ಅಲರ್ಟ್‌

                    Actor Darshan
                    ಬೆಂಗಳೂರು1 day ago

                    Actor Darshan : ಖೈದಿ ನಂ.6106ಕ್ಕೆ ಡಿಮ್ಯಾಂಡ್‌! ದರ್ಶನ್‌ ಫ್ಯಾನ್ಸ್‌ಗೆ ಕಾನೂನು ಕಂಟಕ, ರೂಲ್ಸ್‌ ಬ್ರೇಕ್‌ ಮಾಡಿದ್ರೆ ಬೀಳುತ್ತೆ ಕೇಸ್‌‌!

                    karnataka weather Forecast
                    ಮಳೆ2 days ago

                    Karnataka Weather : ಮಳೆಗೆ ಸ್ಕಿಡ್‌ ಆಗಿ ಹೇಮಾವತಿ ನದಿಗೆ ಹಾರಿದ ಕಾರು; ಕರಾವಳಿಗೆ ಎಚ್ಚರಿಕೆ ಕೊಟ್ಟ ತಜ್ಞರು

                    karnataka Rain
                    ಮಳೆ2 days ago

                    Karnataka Rain: ಭಾರಿ ಮಳೆಗೆ ಮನೆಗಳ ಗೋಡೆ ಕುಸಿತ; ಕೂದಲೆಳೆ ಅಂತರದಲ್ಲಿ ವೃದ್ಧ ಪಾರು

                    karnataka Weather Forecast
                    ಮಳೆ3 days ago

                    Karnataka Weather : ಅಬ್ಬಬ್ಬಾ.. ಮುಲ್ಕಿಯಲ್ಲಿ 30 ಸೆಂ.ಮೀ ಮಳೆ ದಾಖಲು; ವಾರಾಂತ್ಯದಲ್ಲೂ ಭಾರಿ ವರ್ಷಧಾರೆ

                    karnataka Rain
                    ಮಳೆ3 days ago

                    Karnataka Rain : ಭಾರಿ ಮಳೆಗೆ ಪಾತಾಳ ಸೇರಿದ ಬಾವಿ; ಅಲೆಗಳ ಹೊಡೆತಕ್ಕೆ ಸಮುದ್ರಪಾಲಾದ ಮನೆ

                    Karnataka Weather Forecast
                    ಮಳೆ4 days ago

                    Karnataka Weather : ಭಾರಿ ಮಳೆ ಹಿನ್ನೆಲೆ ದಕ್ಷಿಣ ಕನ್ನಡಕ್ಕೆ ರೆಡ್ ಅಲರ್ಟ್; ಶುಕ್ರವಾರವೂ ಶಾಲೆಗಳಿಗೆ ರಜೆ ಘೋಷಣೆ

                    karnataka Weather Forecast
                    ಮಳೆ4 days ago

                    Karnataka Weather : ಭಾರಿ ಮಳೆಗೆ ಸೇತುವೆಯಿಂದ ಹೊಳೆಗೆ ಬಿದ್ದ ಕಾರು; ಮರ ಹಿಡಿದು ಪ್ರಾಣ ಉಳಿಸಿಕೊಂಡ ಸವಾರರು

                    Heart Attack
                    ಕೊಡಗು4 days ago

                    Heart Attack : ಕೊಡಗಿನಲ್ಲಿ ಹೃದಯಾಘಾತಕ್ಕೆ ಯುವತಿ ಬಲಿ; ಹೆಚ್ಚಾಯ್ತು ಅಲ್ಪಾಯುಷ್ಯದ ಭಯ

                    karnataka Rains Effected
                    ಮಳೆ4 days ago

                    Karnataka Rain : ಧಾರಾಕಾರ ಮಳೆಗೆ ಸಡಿಲಗೊಂಡ ಗುಡ್ಡಗಳು; ಧರೆ ಕುಸಿದು ಮಣ್ಣಿನಡಿ ಸಿಲುಕಿದ ಇಬ್ಬರು ಮಕ್ಕಳು

                    ಟ್ರೆಂಡಿಂಗ್‌