Actor Darshan : ದರ್ಶನ್‌ ಪರ ವಹಿಸಿ ಸಿಎಂ, ಗೃಹ ಸಚಿವರಿಗೆ ಮನವಿ ಮಾಡಿದ್ರಾ ರಾಜಕೀಯ ನಾಯಕರು? - Vistara News

ಸ್ಯಾಂಡಲ್ ವುಡ್

Actor Darshan : ದರ್ಶನ್‌ ಪರ ವಹಿಸಿ ಸಿಎಂ, ಗೃಹ ಸಚಿವರಿಗೆ ಮನವಿ ಮಾಡಿದ್ರಾ ರಾಜಕೀಯ ನಾಯಕರು?

Actor Darshan : ದರ್ಶನ್ ಅವರನ್ನು ಬಚಾವ್ ಮಾಡಲು ಸಚಿವರು ಪ್ರಯತ್ನಿಸುತ್ತಿದ್ದಾರೆ ಎನ್ನುತ್ತಿದ್ದಂತೆ ಅವರು ಯಾರಾಗಿರಬಹುದು ಎನ್ನುವ ಚರ್ಚೆಯೂ ಜೋರಾಗಿದೆ. ಬೆಂಗಳೂರಿನ ಸಚಿವರ ಬಳಿ ಸಹಾಯ ಕೇಳಲಾಗಿದೆ ಎಂದೂ ವರದಿಯಾಗಿದೆ. ಆದರೆ ಅದು ಯಾರು ಎನ್ನುವುದು ರಿವೀಲ್ ಆಗಿಲ್ಲ. ನಟ ದರ್ಶನ್ ಹಾಗೂ ಪವಿತ್ರಾ ಗೌಡ ಸೇರಿ 13 ಜನರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.

VISTARANEWS.COM


on

Actor Darshan political leaders appeal to the CM and Home Minister not to twist case
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಬೆಂಗಳೂರು: ತನ್ನದೇ ಅಭಿಮಾನಿ ರೇಣುಕಾ ಸ್ವಾಮಿ ಎಂಬುವರನ್ನು ಕ್ರೂರವಾಗಿ ಕೊಲೆ ಮಾಡಿರುವ ಪ್ರಕರಣದಲ್ಲಿ ಜೈಲು ಸೇರಿದ್ದಾರೆ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ (Actor Darshan ). ಬುಧವಾರದಿಂದ ಆರಂಭಗೊಂಡಂತೆ ದರ್ಶನ್ ಗ್ಯಾಂಗ್​​ಗೆ ಆರು ದಿನಗಳ ಕಾಲ ಪೊಲೀಸ್ ವಿಚಾರಣೆ ನಡೆಯಲಿದೆ. ಕೊಲೆ ಕೇಸ್ ಸಂಬಂಧ ಪೊಲೀಸರು ಸಾಕ್ಷ್ಯಗಳನ್ನು ಒಟ್ಟು ಮಾಡಲಿದ್ದಾರೆ. ದರ್ಶನ್‌ ರಕ್ಷಣೆಗೆ ರಾಜಕೀಯ ನಾಯಕರು ಎಂಟ್ರಿ ಕೊಡುತ್ತಿದ್ದಾರೆ ಎನ್ನಲಾಗಿದೆ. ಕೆಲ ನಾಯಕರು ನಿನ್ನೆಯಿಂದ (ಜೂ.11)ದರ್ಶನ್ ಮೇಲೆ ಕರುಣೆ ತೋರಿ ಎಂದು ಗೃಹ ಸಚಿವ ಪರಮೇಶ್ವರ್ ಹಾಗೂ ಸಿಎಂ ಸಿದ್ದರಾಮಯ್ಯಗೆ ಮನವಿ ಮಾಡಿದ್ದಾರೆ ಎನ್ನಲಾಗಿದೆ.

ದರ್ಶನ್ ಅವರನ್ನು ಬಚಾವ್ ಮಾಡಲು ಸಚಿವರು ಪ್ರಯತ್ನಿಸುತ್ತಿದ್ದಾರೆ ಎನ್ನುತ್ತಿದ್ದಂತೆ ಅವರು ಯಾರಾಗಿರಬಹುದು ಎನ್ನುವ ಚರ್ಚೆಯೂ ಜೋರಾಗಿದೆ. ಬೆಂಗಳೂರಿನ ಸಚಿವರ ಬಳಿ ಸಹಾಯ ಕೇಳಲಾಗಿದೆ ಎಂದೂ ವರದಿಯಾಗಿದೆ. ಆದರೆ ಅದು ಯಾರು ಎನ್ನುವುದು ರಿವೀಲ್ ಆಗಿಲ್ಲ. ನಟ ದರ್ಶನ್ ಹಾಗೂ ಪವಿತ್ರಾ ಗೌಡ ಸೇರಿ 13 ಜನರನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.ದರ್ಶನ್, ಪವಿತ್ರಾ ಗೌಡ ಅವರ ಜೊತೆ ಪವನ್, ವಿನಯ್, ಪ್ರದೋಷ್, ನಂದೀಶ, ದೀಪಕ್, ಲಕ್ಷ್ಮಣ್, ನಾಗರಾಜು, ಕಾರ್ತಿಕ್, ನಿಖಿಲ್, ಕೇಶವಮೂರ್ತಿ,ರಾಘವೇಂದ್ರ ಅವರನ್ನು ಅರೆಸ್ಟ್ ಮಾಡಲಾಗಿದೆ. ಪವಿತ್ರಾ ಗೌಡ ಅವರು ಆರೋಪಿ 1, ದರ್ಶನ್ ಆರೋಪಿ 2 ಎಂದು ಹೇಳಲಾಗಿದೆ.

ಇದನ್ನೂ ಓದಿ: Actor Darshan Arrested : ದರ್ಶನ್​ನ ಅನ್​ಫಾಲೋ ಮಾಡಿ ಡಿಪಿ ಡಿಲೀಟ್‌ ಮಾಡಿದ ದರ್ಶನ್‌ ಪತ್ನಿ ವಿಜಯಲಕ್ಷ್ಮಿ!

ಇದೀಗ ದರ್ಶನ್ ಆಪ್ತರಿರುವ ರಾಜಕಾರಣಿಗಳಿಂದ ದಚ್ಚು ಅವರನ್ನು ರಕ್ಷಿಸಲು ಒತ್ತಡ ಹೇರಲಾಗುತ್ತಿದೆ ಎನ್ನಲಾಗಿದೆ. ಕೇಸ್ ಟ್ವೀಸ್ಟ್ ಮಾಡದಂತೆ ನಾಯಕರು ಮನವಿ ಕೂಡ ಮಾಡಿದ್ದಾರಂತೆ. ಹಳೆ ಮೈಸೂರು ಭಾಗದ ನಾಯಕರಿಂದ ಮನವಿ ಮಾಡಲಾಗಿದೆ ಎನ್ನಲಾಗಿದೆ. ʻದರ್ಶನ್ ತನ್ನ ಅಭಿಮಾನಿಯನ್ನ ಸಾಯಿಸುವಷ್ಟು ಕ್ರೂರಿಯಲ್ಲ. ಹೀಗಾಗಿ ಈ ಪ್ರಕರಣದಲ್ಲಿ ದರ್ಶನ್ ಪಾತ್ರ ಇರುವುದಿಲ್ಲ. ದರ್ಶನ್ ಮೇಲೆ ಕರುಣೆ ತೋರಿ ಎಂದು ಗೃಹ ಸಚಿವ ಪರಮೇಶ್ವರ್ ಹಾಗೂ ಸಿಎಂ ಸಿದ್ದರಾಮಯ್ಯ ನಿನ್ನೆ ಸಂಜೆಯಿಂದಲೇ ಕೆಲ ನಾಯಕರು ಮನವಿ ಮಾಡಿದ್ದಾರೆ ಎನ್ನಲಾಗಿದೆ.

ಭಾರೀ ಭದ್ರತೆ

ದರ್ಶನ್​ ಹಾಗೂ ಆತನ ಗ್ಯಾಂಗ್​ನ ಸದಸ್ಯರು ಇದ್ದ ಪೊಲೀಸ್ ಠಾಣೆಗೆ ಭದ್ರತೆಯನ್ನು ಹೆಚ್ಚಿಸಲಾಗಿತ್ತು . ವಿಐಪಿ ಆರೋಪಿಗಳ ಮೇಲೆ ದಾಳಿಯಾಗುವ ಅಥವಾ ಇನ್ಯಾವುದೇ ಅನಾಹುತಗಳನ್ನು ತಪ್ಪಿಸುವ ಉದ್ದೇಶದಿಂದ ಠಾಣೆಯ ಹೊರಗಡೆ ಕೆಎಸ್​ಆರ್​​ಪಿ ಪೊಲೀಸ್​ ತಂಡವೊಂದನ್ನು ನಿಯೋಜಿಸಲಾಗಿತ್ತು. ದರ್ಶನ್​ಗೆ ದೊಡ್ಡ ಪ್ರಮಾಣದ ಅಭಿಮಾನಿ ಬಳಗವಿದೆ. ಹುಚ್ಚು ಅಭಿಮಾನ ದರ್ಶನ್ ಆರೋಪಿಯೇ ಅಲ್ಲ ಎಂದು ವಾದಿಸುವ ಮಟ್ಟಕ್ಕೆ ಬಂದಿದೆ. ಹೀಗಾಗಿ ಡಿ ಬಾಸ್ ನೋಡಲು ಪೊಲೀಸ್​ ಠಾಣೆಗೆ ಬರಬಹುದು ಎಂಬ ಊಹೆ ಮೇಲೆ ಪೊಲೀಸ್ ಭದ್ರತೆ ಹೆಚ್ಚಿಸಲಾಗಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಸ್ಯಾಂಡಲ್ ವುಡ್

Actor Darshan: ʻಚಿತ್ರಾಲ್ʼ ಬಿಕಿನಿ ಮಾಡೆಲ್‌, ಕೆಟ್ಟ ಕಮೆಂಟ್‌ ಮಾಡಬೇಡಿ ಎಂದ ವಿನಯ್ ಗೌಡ !

Actor Darshan: ರೇಣುಕಾಸ್ವಾಮಿ ಕೆಟ್ಟದಾಗಿ ಮೆಸೇಜ್ ಮಾಡಿದ್ದು ತಪ್ಪು ಎಂಬುದು ಕೆಲವರ ವಾದ. ಬಿಗ್‌ಬಾಸ್ ಖ್ಯಾತಿಯ ಚಿತ್ರಾಲ್ ರಂಗಸ್ವಾಮಿ (Chitral Rangaswamy) ಕೂಡ ತಮಗೂ ಈ ಅಕೌಂಟ್‌ನಿಂದ ಕೆಟ್ಟ ಮೆಸೇಜ್ ಬಂದಿತ್ತು ಎಂದು ಆರೋಪಿಸಿದ್ದರು. ಈ ಬಗ್ಗೆ ಬಿಗ್‌ಬಾಸ್ ಮಾಜಿ ಸ್ಪರ್ಧಿ ವಿನಯ್ ವಿಸ್ತಾರ ನ್ಯೂಸ್ ಸಂದರ್ಶನದಲ್ಲಿ ಮಾತನಾಡಿದ್ದಾರೆ.

VISTARANEWS.COM


on

Actor Darshan Renuka swamy case chitral support by vinay gowda
Koo

ಬೆಂಗಳೂರು: ರೇಣುಕಾ ಸ್ವಾಮಿ ಕೊಲೆ ವಿಚಾರಕ್ಕೆ (Actor Darshan) ಸಂಬಂಧಪಟ್ಟಂತೆ ದರ್ಶನ್‌ 14 ದಿನ ನ್ಯಾಯಾಂಗ ಬಂಧನದಲ್ಲಿದ್ದಾರೆ. ರೇಣುಕಾಸ್ವಾಮಿ ಕೆಟ್ಟದಾಗಿ ಮೆಸೇಜ್ ಮಾಡಿದ್ದು ತಪ್ಪು ಎಂಬುದು ಕೆಲವರ ವಾದ. ಬಿಗ್‌ಬಾಸ್ ಖ್ಯಾತಿಯ ಚಿತ್ರಾಲ್ ರಂಗಸ್ವಾಮಿ (Chitral Rangaswamy) ಕೂಡ ತಮಗೂ ಈ ಅಕೌಂಟ್‌ನಿಂದ ಕೆಟ್ಟ ಮೆಸೇಜ್ ಬಂದಿತ್ತು ಎಂದು ಆರೋಪಿಸಿದ್ದರು. ಈ ಬಗ್ಗೆ ಬಿಗ್‌ಬಾಸ್ ಮಾಜಿ ಸ್ಪರ್ಧಿ ವಿನಯ್ ಗೌಡ ವಿಸ್ತಾರ ನ್ಯೂಸ್ ಸಂದರ್ಶನದಲ್ಲಿ ಮಾತನಾಡಿದ್ದಾರೆ.

ʻʻಈಗ ಪ್ರೋಪೈಲ್‌ ಯಾವುದು ಎಂದು ಎಲ್ಲರಿಗೂ ಗೊತ್ತಾಗಿದೆ. ಸಾಕಷ್ಟು ಜನಕ್ಕೆ ಮೆಸೆಜ್‌ ಹೋಗಿರುವುದು ಗೊತ್ತಾಗಿದೆ. ಮೀಡಿಯಾದಿಂದಲೇ ಗೊತ್ತಾಯ್ತು. ಪ್ರತಿ ಒಬ್ಬರು ಚೆಕ್‌ ಮಾಡಿದಾಗ ಗೊತ್ತಾಗಿದೆ. ಈಗ ಎಲ್ಲಾ ಹೊರಗೆ ಬರುತ್ತಿದೆ. ಚಿತ್ರಾಲ್ ಬಹಳ ಸ್ಟ್ರಾಂಗ್ ವುಮೆನ್. ಆಕೆ ಧೈರ್ಯವಾಗಿ ಬಂದು ನನಗೆ ಈ ರೀತಿ ಕೆಟ್ಟ ಕಾಮೆಂಟ್ ಮಾಡಿದ್ದ ಈ ಫೇಕ್ ಅಕೌಂಟ್ ಇಂದ ಎಂದಾಗ ಯಾಕೆ ಅದನ್ನು ಜನ ಒಪ್ಪುತ್ತಿಲ್ಲ. ಅವರೇ ಸರಿ ಇಲ್ಲ ಎಂದು ಅಂತಾರೆ.” ಎಂದು ವಿನಯ್ ಪ್ರಶ್ನಿಸಿದ್ದಾರೆ.

ʻʻʻಅವರು ಬಿಕಿನಿ ಮಾಡೆಲ್‌. ಅವರ ಪ್ರೊಷನಲ್‌ ಅದು. ಆದರೆ ಈ ಬಗ್ಗೆ ಕೆಟ್ಟ ಕಮೆಂಟ್‌ ಮಾಡಿದ್ದಾರೆ. ಆದರೆ ಈ ರೀತಿ ಅವರಿಗೆ ಕಮೆಂಟ್‌ ಮಾಡೋದು ತಪ್ಪು. ಯಾರು ಕಾಮೆಂಟ್ ಮಾಡಿದ್ದಾರೋ ಅವರಿಗೆಲ್ಲಾ ಕೇಳ್ತಿದ್ದೀನಿ ನೀವು ಮಾಡೋದು ಸರೀನಾ? ಅವರ ಮನೆಯಲ್ಲೂ ಹೆಣ್ಣು ಮಕ್ಕಳು ಇರ್ತಾರೆ. ಯಾರಾದರೂ ಫೋಟೊ ಕಳ್ಸಿ ಅಂತಹ ಮಸೇಜ್ ಕಳ್ಸಿದರೆ ನೋವಾಗುತ್ತದೆ ಅಲ್ಲವೇ?ʼʼಎಂದರು.

ಇದನ್ನೂ ಓದಿ: Actor Darshan: ರೇಣುಕಾಸ್ವಾಮಿ ನನಗೂ ಅಶ್ಲೀಲ ಮೆಸೇಜ್ ಕಳುಹಿಸಿದ್ದ ಎಂದ ಬಿಗ್‌ಬಾಸ್ ಖ್ಯಾತಿಯ ಚಿತ್ರಾಲ್ ರಂಗಸ್ವಾಮಿ!

ಚಿತ್ರಾಲ್ ರಂಗಸ್ವಾಮಿ ಹೇಳಿದ್ದೇನು?

ʻಎಲ್ಲರಿಗೂ ನಮಸ್ಕಾರ, ಪಸ್ತುತ ಏನು ನಡೆಯುತ್ತಿದೆ ಎಂದು ಎಲ್ಲರಿಗೂ ಗೊತ್ತಿದೆ. ಈ ಕೊಲೆ ವಿಚಾರವಾಗಿ ಎಲ್ಲರಿಗೂ ಡಿಸ್ಟರ್ಬ್‌ ಕೂಡ ಆಗಿದೆ. ಇಲ್ಲಿ ಯಾರಿಗೂ ನಾನು ಸಪೋರ್ಟ್‌ ಮಾಡಲು ಬಂದಿಲ್ಲ. ದೇವರು ರೇಣುಕಾ ಸ್ವಾಮಿ ಕುಟುಂಬಕ್ಕೆ ಶಕ್ತಿ ಕೊಡಲಿ. ಆದರೆ ರೇಣುಕಾ ಸ್ವಾಮಿ ಅವರು ಈ ತರ ಹಲವರಿಗೆ ಮೆಸೆಜ್ ಕಳುಹಿಸಿದ್ದರು. ಈ ಬಗ್ಗೆ ಮಾರ್ಚ್‌ನಲ್ಲಿ ಪೊಲೀಸ್‌ ಸ್ಟೇಷನ್‌ನಲ್ಲಿ ಕಂಪ್ಲೇಟ್‌ ಕೂಡ ಆಗಿದೆ. ಅವರ ಅಕೌಂಟ್‌ ಈ ರೀತಿ ಗೌತಮ್‌ ಅನ್ನುವ ಹೆಸರಲ್ಲಿ ಇತ್ತು. ಈ ಅಕೌಂಟ್ ಇಂದ ಅದೇ ರೀತಿಯ ಕೆಟ್ಟ ಮೆಸೇಜ್‌ಗಳನ್ನು ಇನ್ನು ಸಾಕಷ್ಟು ಜನರಿಗೆ ಕಳುಹಿಸಿದ್ದರಂತೆ. ನನಗೆ ಅಚ್ಚರಿ ಆಯಿತು. ನಾನು ಅದರ ಸ್ಕ್ರೀನ್‌ ಶಾಟ್ ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡರೆ ತಪ್ಪಾಗುತ್ತದೆ. ಹಾಗಾಗಿ ಹಾಕಲಿಲ್ಲ. ನನಗೆ ಆ ರೀತಿ ಮರ್ಮಾಂಗದ ಚಿತ್ರ ಆಗಲಿ, ಬೆತ್ತಲೆ ಫೋಟೊ ಆಗಲಿ ಅಥವಾ ಹಸ್ತ ಮೈಥುನ ವೀಡಿಯೋ ಆಗಲಿ ಬಂದರೆ ನಾನು ಕೂಡಲೇ ಆ ಅಕೌಂಟ್ ಬ್ಲಾಕ್ ಮಾಡ್ತೀನಿ. ನನ್ನ ಇನ್‌ಸ್ಟಾಗ್ರಾಮ್ ಬ್ಲಾಕ್ ಲಿಸ್ಟ್ ಅಲ್ಲಿ ನೋಡಿದಾಗ ಈ ಅಕೌಂಟ್ ಇದೆ. ಇಷ್ಟು ದಿನ ನಾನು ಸುಮ್ಮನಿದ್ದೆ. ಆದರೆ ಇದನ್ನು ನೋಡಿದ ಮೇಲೆ ಹೇಳಬೇಕು ಎಂದು ಮುಂದೆ ಬಂದೆ. ಭಯ ಅನ್ನಿಸಿತು. ಬೇಸರ ಆಗುತ್ತದೆ. ಅಂತಹ ಸುಂದರ ಹೆಂಡತಿ ಇರುವಾಗ ಈ ರೀತಿ ಸರೀನಾ? ಛೀ ಎನಿಸುತ್ತದೆ. ನನಗೆ ಪ್ರತಿದಿನ ಇಂತಹ ಸಾಕಷ್ಟು ಕೆಟ್ಟ ಮೆಸೇಜ್, ಟ್ರೋಲ್ ಎದುರಾಗುತ್ತಿರುತ್ತದೆ” ಎಂದು ಚಿತ್ರಾಲ್ ವಿವರಿಸಿದ್ದರು.

ಬಿಗ್‌ಬಾಸ್ ಕನ್ನಡ ಸೀಸನ್ -10 ಮುಗಿದು ಬಹಳ ದಿನಗಳಾಯ್ತು.ವೇದಿಕೆಯಲ್ಲಿ ಲೈವ್ ಲೈವ್ ಆಡಿಯೆನ್ಸ್ ಬೆಂಬಲದ ಎಲ್ಲರನ್ನು ಮನೆಯೊಳಗೆ ಕಳುಹಿಸಲಾಗಿತ್ತು. ಆದರೆ ಈ ಪ್ರಕ್ರಿಯೆಯಲ್ಲಿ ನಟಿ ಹಾಗೂ ಬಾಡಿ ಬಿಲ್ಡರ್ ಚಿತ್ರಾಲ್ ರಂಗಸ್ವಾಮಿ ಸೋತು ಹೊರಬಂದಿದ್ದರು. ಚಿತ್ರಲ್‌ ರಂಗಸ್ವಾಮಿ ಕಿರುತೆರೆ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಸಿನಿಮಾಗಳಲ್ಲೂ ನಟಿಸಿದ್ದಾರೆ. ಜೊತೆಗೆ ಬಾಡಿ ಬಿಲ್ಡರ್‌ ಆಗಿಯೂ ಗುರುತಿಸಿಕೊಂಡಿದ್ದಾರೆ. 2017ರಿಂದ ಬಾಡಿ ಬಿಲ್ಡಿಂಗ್‌ನಲ್ಲಿ ತೊಡಗಿಸಿಕೊಂಡಿದ್ದಾರೆ. ರಾಜ್ಯ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ಗೆದ್ದಿದ್ದಾರೆ.

Continue Reading

ಕರ್ನಾಟಕ

Kannada New Movie: “ಯೂಟ್ಯೂಬ್ ಟ್ರೆಂಡಿಂಗ್” ಪಟ್ಟಿಯ 3ನೇ ಸ್ಥಾನದಲ್ಲಿ “ಕೃಷ್ಣಂ ಪ್ರಣಯ ಸಖಿ” ಚಿತ್ರದ “ಚಿನ್ನಮ್ಮ” ಹಾಡು!

Kannada New Movie: ಪ್ರಸ್ತುತ ಆಲ್ ಇಂಡಿಯಾ “ಯೂಟ್ಯೂಬ್ ಟ್ರೆಂಡಿಂಗ್” ಪಟ್ಟಿಯಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ನಾಯಕರಾಗಿ ನಟಿಸಿರುವ “ಕೃಷ್ಣಂ ಪ್ರಣಯ ಸಖಿ” ಚಿತ್ರದ “ಚಿನ್ನಮ್ಮ” ಹಾಡು ಬಿಡುಗಡೆಯಾದ ನಾಲ್ಕು ದಿನಗಳಲ್ಲಿ ಏಳು ಮಿಲಿಯನ್‌ಗೂ ಅಧಿಕ ವೀಕ್ಷಣೆಗೊಂಡು ಮೂರನೇ ಸ್ಥಾನದಲ್ಲಿದೆ.

VISTARANEWS.COM


on

Chinnamma song from Krishnam Pranaya Sakhi is at 3rd position in All India YouTube trending list
Koo

ಬೆಂಗಳೂರು: ಪ್ರಶಾಂತ್ ಜಿ. ರುದ್ರಪ್ಪ ನಿರ್ಮಾಣದ, ಶ್ರೀನಿವಾಸರಾಜು ಅವರ ನಿರ್ದೇಶನದದಲ್ಲಿ ಗೋಲ್ಡನ್ ಸ್ಟಾರ್ ಗಣೇಶ್ ನಾಯಕರಾಗಿ ನಟಿಸಿರುವ “ಕೃಷ್ಣಂ ಪ್ರಣಯ ಸಖಿ” ಚಿತ್ರದ “ಚಿನ್ನಮ್ಮ” ಹಾಡು ಇತ್ತೀಚಿಗೆ ಬಿಡುಗಡೆಯಾಗಿತ್ತು. ಪ್ರಸ್ತುತ ಆಲ್ ಇಂಡಿಯಾ “ಯೂಟ್ಯೂಬ್ ಟ್ರೆಂಡಿಂಗ್” ಪಟ್ಟಿಯಲ್ಲಿ “ಚಿನ್ನಮ್ಮ” ಹಾಡು ಬಿಡುಗಡೆಯಾದ (Kannada News Movie) 4 ದಿನಗಳಲ್ಲಿ ಏಳು ಮಿಲಿಯನ್‌ಗೂ ಅಧಿಕ ವೀಕ್ಷಣೆಗೊಂಡು 3ನೇ ಸ್ಥಾನದಲ್ಲಿದೆ.

ಕವಿರಾಜ್ ಅವರು ಬರೆದು ಅರ್ಜುನ್ ಜನ್ಯ ಸಂಗೀತ ನೀಡಿರುವ ಈ ಹಾಡನ್ನು ಖ್ಯಾತ ಗಾಯಕ ಕೈಲಾಶ್ ಖೇರ್ ಹಾಗೂ ಇಂದು ನಾಗರಾಜ್ ಹಾಡಿದ್ದಾರೆ.

ಪ್ರಸ್ತುತ ಆಲ್ ಇಂಡಿಯಾ “ಯೂಟ್ಯೂಬ್ ಟ್ರೆಂಡಿಂಗ್” ಪಟ್ಟಿಯಲ್ಲಿ “ಚಿನ್ನಮ್ಮ” ಹಾಡು ಬಿಡುಗಡೆಯಾದ ನಾಲ್ಕು ದಿನಗಳಲ್ಲಿ ಏಳು ಮಿಲಿಯನ್‌ಗೂ ಅಧಿಕ ವೀಕ್ಷಣೆಗೊಂಡು ಮೂರನೇ ಸ್ಥಾನದಲ್ಲಿದೆ.

ಇದನ್ನೂ ಓದಿ: Gold Rate Today: ತುಸು ಏರಿಕೆ ಕಂಡ ಚಿನ್ನದ ಬೆಲೆ; ಇಷ್ಟಿದೆ ಇಂದಿನ ದರ

ಮೊದಲ ಸ್ಥಾನದಲ್ಲಿ ದಳಪತಿ ವಿಜಯ್ ಅವರ “ಗ್ರೇಟೆಸ್ಟ್ ಆಫ್ ಆಲ್ ಟೈಮ್” ಚಿತ್ರದ “ಚಿನ್ನ ಚಿನ್ನ ಕಣ್ಗಳ್” ಹಾಗೂ ಎರಡನೇ ಸ್ಥಾನದಲ್ಲಿ ಪ್ರಭಾಸ್ ನಟನೆಯ “ಕಲ್ಕಿ 2898 AD” ಚಿತ್ರದ “ಥೀಮ್ ಆಫ್ ಕಲ್ಕಿ” ಹಾಡು ಇದೆ. ಇದೇ ವೇಗದಲ್ಲಿ ವೀಕ್ಷಣೆಯಾಗುತ್ತಿದ್ದರೆ “ಚಿನ್ನಮ್ಮ” ಹಾಡು ಮೊದಲ ಸ್ಥಾನಕ್ಕೆ ಬರುವ ಸಾಧ್ಯತೆ ಇದೆ.

Continue Reading

ಸ್ಯಾಂಡಲ್ ವುಡ್

Actor Darshan: 2024 ಡೇಂಜರಸ್ ಇಯರ್ ಫಾರ್ ಮಿ ಅನ್ನೋದು `ಡೆವಿಲ್‌’ಗೆ ಮೊದಲೇ ಗೊತ್ತಿತ್ತಾ?

Actor Darshan: ನಕಾರಾತ್ಮಕ ಅಂಶಗಳನ್ನ ನಾಶಮಾಡಲು ಸುದರ್ಶನ ಹೋಮ ಮಾಡಿಸಲಾಗುತ್ತೆ, ಶತ್ರುಗಳ ಮೇಲೆ ವಿಜಯ ಪ್ತಾಪ್ತಿಗೆ, ದುಷ್ಟ ಕಣ್ಣಿನಿಂದ ರಕ್ಷಣೆಗೆ ಈ‌ಹೋಮ ಮಾಡಲಾಗುತ್ತದೆ. ಹೀಗಾಗಿ ಡೆವಿಲ್ ಶೂಟಿಂಗ್ ನಲ್ಲೂ ಹೈ ಆಕ್ಷನ್ ಸೀನ್ ಇಡದಂತೆ ಮಿಲನಾ ಪ್ರಕಾಶ್‌ಗೆ ದರ್ಶನ್ ಆಪ್ತರು ಹೇಳಿದ್ದರಂತೆ. ಇಷ್ಟು ಜಾಗ್ರತೆ ವಹಿಸಿದ್ದರೂ ಸಿನಿಮಾ ಮಾಡುವಾಗ ಎಡಗೈಗೆ ಪ್ರ್ಯಾಕ್ಚರ್ ಆಗಿತ್ತು ಎನ್ನಲಾಗಿದೆ.

VISTARANEWS.COM


on

Actor Darshan Suffering From Sade Sati
Koo

ಬೆಂಗಳೂರು: ರೇಣುಕಾ ಸ್ವಾಮಿ ಕೊಲೆ ಕೇಸ್‌ನಲ್ಲಿ ದರ್ಶನ್‌ (Actor Darshan) ಅವರು ನ್ಯಾಯಾಗ ಬಂಧನದಲ್ಲಿದ್ದಾರೆ. ಈಗಾಗಲೇ ದರ್ಶನ್‌ ಅವರಿಗೆ ಜಾಮೀನು ಸಿಗುವುದಂತೂ ಕಷ್ಟಕರ ಎನ್ನಲಾಗುತ್ತಿದೆ. ಇದರ ಜತೆಗೆ ಇದೀಗ ಈ ವರ್ಷ ಅಪಾಯ ಇದೆ ಎನ್ನುವುದು ದರ್ಶನ್​ಗೆ ಮೊದಲೇ ಗೊತ್ತಿತ್ತ ಎನ್ನುವ ಪ್ರಶ್ನೆ ಮೂಡಿದೆ. 13 ವರ್ಷಗಳಿಂದ ದಚ್ಚುಗೆ ಸಾಡೇಸಾತಿ ಕಾಟ ಇತ್ತು ಎನ್ನಲಾಹಿದೆ. ಸಾಡೇಸತಿ ಶುರುವಾದಗಲೂ ಸೆರೆವಾಸ ಅನುಭವಿಸಿದ್ದ ದಾಸ ಇದೀಗ ಸಾಡೇಸತಿ ಮುಗಿಯುವ ಸಮಯದಲ್ಲಿ ದರ್ಶನ್ ಜೈಲು ಪಾಲು ಆಗಿದ್ದಾರೆ ಎನ್ನಲಾಗಿದೆ.

ಎರಡು ತಿಂಗಳ ಹಿಂದೆ ನಟ ದರ್ಶನ್ ಸುದರ್ಶನ ಹೋಮ ಮಾಡಿಸಿದ್ದರು. ಅರೆಸ್ಟ್ ಆಗುವುದಕ್ಕೂ ಮುನ್ನ ಅವರು ಮನೆಯನ್ನು ಹೊಸದಾಗಿ ರಿನೋವೇಷನ್ ಮಾಡಿದ್ದರು. ಹೀಗಾಗಿ, ಅವರು ವಿಶೇಷ ಪೂಜೆ ಇಟ್ಟುಕೊಂಡಿದ್ದರು. ಈ ಕಾರಣದಿಂದಲೇ ವಿಜಯಲಕ್ಷ್ಮಿ ಅವರನ್ನು ಪೊಲೀಸರು ವಿಚಾರಣೆ ನಡೆಸಿದ್ದರು. ಕೊಲೆ ನಡೆದ ಬಳಿಕ ದರ್ಶನ್ ಪೂಜೆಯಲ್ಲಿ ಭಾಗಿ ಆಗಿದ್ದರು.

ನಕಾರಾತ್ಮಕ ಅಂಶಗಳನ್ನ ನಾಶಮಾಡಲು ಸುದರ್ಶನ ಹೋಮ ಮಾಡಿಸಲಾಗುತ್ತೆ, ಶತ್ರುಗಳ ಮೇಲೆ ವಿಜಯ ಪ್ತಾಪ್ತಿಗೆ, ದುಷ್ಟ ಕಣ್ಣಿನಿಂದ ರಕ್ಷಣೆಗೆ ಈ‌ ಹೋಮ ಮಾಡಲಾಗುತ್ತದೆ. ಹೀಗಾಗಿ ಡೆವಿಲ್ ಶೂಟಿಂಗ್ ನಲ್ಲೂ ಹೈ ಆಕ್ಷನ್ ಸೀನ್ ಇಡದಂತೆ ಮಿಲನಾ ಪ್ರಕಾಶ್‌ಗೆ ದರ್ಶನ್ ಆಪ್ತರು ಹೇಳಿದ್ದರಂತೆ. ಇಷ್ಟು ಜಾಗ್ರತೆ ವಹಿಸಿದ್ದರೂ ಸಿನಿಮಾ ಮಾಡುವಾಗ ಎಡಗೈಗೆ ಪ್ರ್ಯಾಕ್ಚರ್ ಆಗಿತ್ತು ಎನ್ನಲಾಗಿದೆ. 2017-18ರಿಂದ ದರ್ಶನ್ ಅವರಿಗೆ ಸಾಡೇ ಸಾತಿ ಇದೆ. ಜೂನ್-ನವೆಂಬರ್ 15ವರೆಗೆ ಅವರು ಮತ್ತಷ್ಟು ತೊಂದರೆ ಅನುಭವಿಸಲಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ: Kalki 2898 AD: ʻಕಲ್ಕಿʼ ಸಿನಿಮಾ ಹಾಡಿ ಹೊಗಳಿದ ರಾಕಿಂಗ್‌ ಸ್ಟಾರ್‌ ಯಶ್‌!

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು (Parappana Agrahara) ಸೇರಿರುವ ನಟ ದರ್ಶನ್‌ (Actor Darshan) ಅವರಿಗೆ ಜೈಲಿನ ಮೆನು ಪ್ರಕಾರವೇ ಊಟ ನೀಡಲಾಗುತ್ತಿದೆ. ಅದರಂತೆ, ಶುಕ್ರವಾರ (ಜೂನ್‌ 28) ರಾತ್ರಿ ದರ್ಶನ್‌ ಅವರಿಗೆ ಚಿಕನ್‌ ಸಾಂಬಾರ್‌, ಮುದ್ದೆ ಹಾಗೂ ಅನ್ನವನ್ನು ನೀಡಲಾಗಿದೆ. ಜೈಲಿನ ಅನ್ನ-ಸಾಂಬಾರ್‌ ತಿಂದು ಬಸವಳಿದಿದ್ದ ದರ್ಶನ್‌ ಅವರಿಗೆ ಚಿಕನ್‌ ಸಾಂಬಾರ್‌ ನೀಡಿರುವುದು ತುಸು ಸಮಾಧಾನ ತಂದಿದೆ. ಮುದ್ದೆ, ಚಿಕನ್‌ ಸಾಂಬಾರ್‌ ಸೇವಿಸಿದ ದರ್ಶನ್‌ ತಡವಾಗಿ ನಿದ್ದೆಗೆ ಜಾರಿದರು ಎಂದು ತಿಳಿದುಬಂದಿದೆ.

ಶನಿವಾರ (ಜೂನ್‌ 29) ಬೆಳಗ್ಗೆ 6 ಗಂಟೆಗೆ ಎದ್ದ ದರ್ಶನ್‌, ಕೆಲಹೊತ್ತು ಜೈಲಿನ ಕೊಠಡಿಯಲ್ಲಿಯೇ ವಾಕಿಂಗ್‌ ಮಾಡಿದರು. ಇದರ ಮಧ್ಯೆಯೇ, ಪದೇಪದೆ ಅನಾರೋಗ್ಯದ ನೆಪ ಹೇಳಿ ಜೈಲು ಆಸ್ಪತ್ರೆ ಕಡೆ ಸುಳಿಯುತ್ತಿದ್ದು, ಜೈಲಧಿಕಾರಿಗಳಿಗೆ ನಟ ತಲೆನೋವಾಗಿದ್ದಾರೆ. ಹೊಟ್ಟೆ ನೋವು, ತಲೆನೋವು ಸೇರಿ ಹಲವು ನೆಪಗಳನ್ನು ಹೇಳಿಕೊಂಡು ಅವರು ಆಸ್ಪತ್ರೆಗೆ ಹೋಗುತ್ತಿದ್ದಾರೆ. ಇದರ ಮಧ್ಯೆಯೇ, ನಟ ದರ್ಶನ್‌ ಅವರನ್ನು ನೋಡಲು ಜೈಲಿನಲ್ಲಿರುವ ಕೈದಿಗಳು ಹರಸಾಹಸ ಪಡುತ್ತಿದ್ದಾರೆ ಎಂದು ಕೂಡ ತಿಳಿದುಬಂದಿದೆ.

Continue Reading

ಸ್ಯಾಂಡಲ್ ವುಡ್

Actor Darshan: ‘ಶಾಂತಂ ಪಾಪಂ’ ಕಿರುತೆರೆ ಶೋನಲ್ಲಿ ದರ್ಶನ್‌ ಕಥೆ? ಏನಿದು ಡೇರ್ ಡೆವಿಲ್ ದೇವದಾಸ್‌ ಡೆಡ್ಲಿ ಕಹಾನಿ?

Actor Darshan: ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಬಗ್ಗೆ ನಿರ್ದೇಶಕ ರಾಮ್‌ಗೋಪಾಲ್ ವರ್ಮಾ ಸಿನಿಮಾ ಮಾಡುತ್ತಾರಾ? ಎನ್ನುವ ಚರ್ಚೆ ನಡೀತಿತ್ತು. ಕಾರಣ ಆರ್‌ಜಿವಿ ಈ ಪ್ರಕರಣದ ಬಗ್ಗೆ ಮಾತನಾಡಿದ್ದಾರೆ. ಇದೀಗ ರೇಣುಕಾಸ್ವಾಮಿ ಹತ್ಯೆ ಪ್ರಕರಣವನ್ನು ನೆನೆಪಿಸುವ ಕಾರ್ಯಕ್ರಮ ಕಿರುತೆರೆಯಲ್ಲಿ ಪ್ರಸಾರವಾಗಿದೆ.

VISTARANEWS.COM


on

Actor Darshan Renuka Swamy case In colorskannada shantam Paapam
Koo

ಬೆಂಗಳೂರು: ರೇಣುಕಾ ಸ್ವಾಮಿ ಕೊಲೆ ಪ್ರಕರಣ ಆದ ಬಳಿಕ ದರ್ಶನ್‌ (Actor Darshan) ಅವರ ಕೈದಿ ನಂಬರ್‌ ಸಖತ್‌ ಚರ್ಚೆ ಆಗಿತ್ತು. ಇದೀಗ ಈ ಮಧ್ಯೆ ಧಾರಾವಾಹಿಯಲ್ಲಿ ದರ್ಶನ್ ಕಥೆ ಬಂತೇ ಎನ್ನುವ ಪ್ರಶ್ನೆ ಮೂಡಿದೆ. ಕಲರ್ಸ್ ಕನ್ನಡದಲ್ಲಿ ‘ಶಾಂತಂ ಪಾಪಂ’ ಧಾರಾವಾಹಿ ಪ್ರಸಾರ ಕಾಣುತ್ತಿದೆ. ಈ ಧಾರಾವಾಹಿ ನೋಡಿದ ಅನೇಕರಿಗೆ ರೇಣುಕಾ ಸ್ವಾಮಿ ಕೊಲೆ ಕೇಸ್ ನೆನಪಾಗಿದೆ. ಇದೀಗ ಕಲರ್ಸ್‌ ಕನ್ನಡ ಪ್ರೋಮೊ ಹಂಚಿಕೊಂಡಿದೆ.

ರೇಣುಕಾಸ್ವಾಮಿ ಹತ್ಯೆ ಪ್ರಕರಣದ ಬಗ್ಗೆ ನಿರ್ದೇಶಕ ರಾಮ್‌ಗೋಪಾಲ್ ವರ್ಮಾ ಸಿನಿಮಾ ಮಾಡುತ್ತಾರಾ? ಎನ್ನುವ ಚರ್ಚೆ ನಡೀತಿತ್ತು. ಕಾರಣ ಆರ್‌ಜಿವಿ ಈ ಪ್ರಕರಣದ ಬಗ್ಗೆ ಮಾತನಾಡಿದ್ದಾರೆ. ಇದೀಗ ರೇಣುಕಾಸ್ವಾಮಿ ಹತ್ಯೆ ಪ್ರಕರಣವನ್ನು ನೆನೆಪಿಸುವ ಕಾರ್ಯಕ್ರಮ ಕಿರುತೆರೆಯಲ್ಲಿ ಪ್ರಸಾರವಾಗಿದೆ.

ರೇಣುಕಾ ಸ್ವಾಮಿ ಹತ್ಯೆ ಪ್ರಕರಣ ಹೋಲುವ ಡೇರ್ ಡೆವಿಲ್ ದೇವದಾಸ್ ಎಪಿಸೋಡ್‌ನಲ್ಲಿ ದಾಸ್ ಒಬ್ಬ ಶ್ರೀಮಂತ. ಆದರೆ ಕೊಲೆ ಆರೋಪದಲ್ಲಿ ಆತನನ್ನು ಪೊಲೀಸರು ಬಂಧಿಸುತ್ತಾರೆ. ಮದುವೆ ಆಗಿದ್ದರೂ ಖ್ಯಾತ ಉದ್ಯಮಿ ದಾಸ್ ಒಬ್ಬ ನಟಿಯ ಮೋಹಕ್ಕೆ ಸಿಲುಕಿರುತ್ತಾನೆ. ಆ ನಟಿಗೆ ಒಬ್ಬನಿಂದ ಕೆಟ್ಟ ಕೆಟ್ಟ ಮೆಸೇಜ್‌ಗಳು ಬರಲು ಆರಂಭಿಸುತ್ತದೆ. ಫೇಕ್‌ ಅಕೌಂಟ್‌ಗಳಿಂದ ಅಸಭ್ಯ ಮೆಸೇಜ್ ಮಾಡಿ ಕಿರುಕುಳ ನೀಡುತ್ತಿರುತ್ತಾನೆ. ಅದನ್ನು ಆಕೆ ದಾಸ್ ಮುಂದಿಡುತ್ತಾಳೆ. ಅದನ್ನು ಕೇಳಿದ ಆತ ಕೊಲೆ ಮಾಡುತ್ತಾನೆ. ಆತನನ್ನು ಕರೆತಂದು ಒಂದು ಶೆಡ್‌ ಮುಂದೆ ಥಳಿಸುವುದನ್ನು ಪ್ರೋಮೊದಲ್ಲಿ ನೋಡಬಹುದು. ಇದೀಗ ಈ ಪ್ರೋಮೊ ಸಖತ್‌ ವೈರಲ್‌ ಆಗುತ್ತಿದೆ. ಇದು ಪಕ್ಕಾ ರೇಣುಕಾ ಸ್ವಾಮಿ ಕಥೆನೇ ಎಂದು ನೆಟ್ಟಿಗರು ಕಮೆಂಟ್‌ ಮಾಡುತ್ತಿದ್ದಾರೆ.

ಇದನ್ನೂ ಓದಿ: Actor Darshan: ಜೈಲಲ್ಲಿ ಮುದ್ದೆ-ಚಿಕನ್‌ ಸಾಂಬಾರ್‌ ಸವಿದ ದರ್ಶನ್;‌ ನಟನ ನೋಡಲು ಮುಗಿಬಿದ್ದ ಕೈದಿಗಳು!

ಈ ಧಾರಾವಾಹಿ ಎಪಿಸೋಡ್ ನೋಡಿದ ಅನೇಕರು ದರ್ಶನ್ ಕಥೆಗೆ ಹೋಲಿಕೆ ಮಾಡಿಕೊಂಡಿದ್ದಾರೆ. ಆಪ್ತೆ ಪವಿತ್ರಾಗೆ ಕಿರುಕುಳ ನೀಡಿದ್ದಕ್ಕೆ ರೇಣುಕಾ ಸ್ವಾಮಿಯನ್ನು ದರ್ಶನ್ ಅವರು ಕೊಲೆ ಮಾಡಿದರು ಎನ್ನಲಾಗಿದೆ. ಈ ಆರೋಪದಲ್ಲಿ ಅರೆಸ್ಟ್ ಆಗಿ ಅವರು ವಿಚಾರಣೆ ಎದುರಿಸುತ್ತಿದ್ದಾರೆ.

ಚಿತ್ರದುರ್ಗದ ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲು (Parappana Agrahara) ಸೇರಿರುವ ನಟ ದರ್ಶನ್‌ (Actor Darshan) ಅವರಿಗೆ ಜೈಲಿನ ಮೆನು ಪ್ರಕಾರವೇ ಊಟ ನೀಡಲಾಗುತ್ತಿದೆ. ಅದರಂತೆ, ಶುಕ್ರವಾರ (ಜೂನ್‌ 28) ರಾತ್ರಿ ದರ್ಶನ್‌ ಅವರಿಗೆ ಚಿಕನ್‌ ಸಾಂಬಾರ್‌, ಮುದ್ದೆ ಹಾಗೂ ಅನ್ನವನ್ನು ನೀಡಲಾಗಿದೆ. ಜೈಲಿನ ಅನ್ನ-ಸಾಂಬಾರ್‌ ತಿಂದು ಬಸವಳಿದಿದ್ದ ದರ್ಶನ್‌ ಅವರಿಗೆ ಚಿಕನ್‌ ಸಾಂಬಾರ್‌ ನೀಡಿರುವುದು ತುಸು ಸಮಾಧಾನ ತಂದಿದೆ. ಮುದ್ದೆ, ಚಿಕನ್‌ ಸಾಂಬಾರ್‌ ಸೇವಿಸಿದ ದರ್ಶನ್‌ ತಡವಾಗಿ ನಿದ್ದೆಗೆ ಜಾರಿದರು ಎಂದು ತಿಳಿದುಬಂದಿದೆ.

ಶನಿವಾರ (ಜೂನ್‌ 29) ಬೆಳಗ್ಗೆ 6 ಗಂಟೆಗೆ ಎದ್ದ ದರ್ಶನ್‌, ಕೆಲಹೊತ್ತು ಜೈಲಿನ ಕೊಠಡಿಯಲ್ಲಿಯೇ ವಾಕಿಂಗ್‌ ಮಾಡಿದರು. ಇದರ ಮಧ್ಯೆಯೇ, ಪದೇಪದೆ ಅನಾರೋಗ್ಯದ ನೆಪ ಹೇಳಿ ಜೈಲು ಆಸ್ಪತ್ರೆ ಕಡೆ ಸುಳಿಯುತ್ತಿದ್ದು, ಜೈಲಧಿಕಾರಿಗಳಿಗೆ ನಟ ತಲೆನೋವಾಗಿದ್ದಾರೆ. ಹೊಟ್ಟೆ ನೋವು, ತಲೆನೋವು ಸೇರಿ ಹಲವು ನೆಪಗಳನ್ನು ಹೇಳಿಕೊಂಡು ಅವರು ಆಸ್ಪತ್ರೆಗೆ ಹೋಗುತ್ತಿದ್ದಾರೆ. ಇದರ ಮಧ್ಯೆಯೇ, ನಟ ದರ್ಶನ್‌ ಅವರನ್ನು ನೋಡಲು ಜೈಲಿನಲ್ಲಿರುವ ಕೈದಿಗಳು ಹರಸಾಹಸ ಪಡುತ್ತಿದ್ದಾರೆ ಎಂದು ಕೂಡ ತಿಳಿದುಬಂದಿದೆ.

Continue Reading
Advertisement
V Somanna
ಪ್ರಮುಖ ಸುದ್ದಿ1 min ago

V Somanna: ಹೆಜ್ಜಾಲ- ಚಾಮರಾಜನಗರ ರೈಲ್ವೆ ಕಾರ್ಯ ಶೀಘ್ರದಲ್ಲಿ: ಸಚಿವ ಸೋಮಣ್ಣ

Actor Darshan Renuka swamy case chitral support by vinay gowda
ಸ್ಯಾಂಡಲ್ ವುಡ್6 mins ago

Actor Darshan: ʻಚಿತ್ರಾಲ್ʼ ಬಿಕಿನಿ ಮಾಡೆಲ್‌, ಕೆಟ್ಟ ಕಮೆಂಟ್‌ ಮಾಡಬೇಡಿ ಎಂದ ವಿನಯ್ ಗೌಡ !

Opposition party leader r ashok latest statement in chikkaballapur
ಕರ್ನಾಟಕ7 mins ago

R Ashok: ಪ್ರತಿ ಕುಟುಂಬದಿಂದ 8-10 ಸಾವಿರ ರೂ. ದರೋಡೆ ಮಾಡುತ್ತಿರುವ ಕಾಂಗ್ರೆಸ್‌ ಸರ್ಕಾರ: ಆರ್‌.ಅಶೋಕ್ ಆರೋಪ

Video conference meeting with Tehsildars by DC Gangubai Manakar
ಉತ್ತರ ಕನ್ನಡ9 mins ago

Uttara Kannada News: ಜಿಲ್ಲೆಯ ಮಾಜಿ ಸೈನಿಕರು, ಅಶಕ್ತರಿಗೆ ಭೂಮಿ ಒದಗಿಸಲು ಕ್ರಮ: ಡಿಸಿ ಗಂಗೂಬಾಯಿ ಮಾನಕರ್‌

VSK Media Awards 2024 Programme in Bengaluru on June 30
ಕರ್ನಾಟಕ9 mins ago

VSK Media Awards 2024: ಬೆಂಗಳೂರಿನಲ್ಲಿ ಜೂ.30 ರಂದು “ವಿಎಸ್‌ಕೆ ಮಾಧ್ಯಮ ಪ್ರಶಸ್ತಿ” ಪ್ರದಾನ

Prajwal Revanna Case
ಪ್ರಮುಖ ಸುದ್ದಿ26 mins ago

Prajwal Revanna Case: ಪ್ರಜ್ವಲ್ ರೇವಣ್ಣಗೆ ಜುಲೈ 8ರವರೆಗೆ ನ್ಯಾಯಾಂಗ ಬಂಧನ

Stabbing
ದೇಶ26 mins ago

Stabbing: ಕೋಪದ ಕೈಗೆ ಬುದ್ದಿ ಕೊಟ್ರೆ ಹೀಗೇ ಆಗೋದು! ಸಹಪಾಠಿಯನ್ನೇ ಇರಿದು ಕೊಂದ ವಿದ್ಯಾರ್ಥಿ

IND vs SA Final
ಕ್ರೀಡೆ31 mins ago

IND vs SA Final: ಭಾರತ ಸೋತರೆ ರೋಹಿತ್ ಈ ಅನಾಹುತ ಮಾಡಿಕೊಳ್ಳಬಹುದು; ಮಾಜಿ ನಾಯಕನಿಂದ ಶಾಕಿಂಗ್​ ಹೇಳಿಕೆ ​

Road Accident
ಕ್ರೈಂ36 mins ago

Road Accident : ಬೆಂ-ಮೈ ಎಕ್ಸ್‌ಪ್ರೆಸ್‌ ವೇನಲ್ಲಿ ಡಿವೈಡರ್‌ಗೆ ಗುದ್ದಿ ಹಳ್ಳಕ್ಕೆ ಜಿಗಿದ ಕೆಎಸ್‌ಆರ್‌ಟಿಸಿ; ಶಿರಾಡಿಘಾಟ್‌ನಲ್ಲಿ ಸರಣಿ ಅಪಘಾತ

Job Alert
ಉದ್ಯೋಗ1 hour ago

Job Alert: 10ನೇ ತರಗತಿ ಪಾಸಾದವರಿಗೆ ಗುಡ್‌ನ್ಯೂಸ್‌; SSCಯಿಂದ ಬರೋಬ್ಬರಿ 8,326 ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka Rain
ಮಳೆ6 hours ago

Karnataka Rain: ಭಾರಿ ಮಳೆಗೆ ಮನೆಗಳ ಗೋಡೆ ಕುಸಿತ; ಕೂದಲೆಳೆ ಅಂತರದಲ್ಲಿ ವೃದ್ಧ ಪಾರು

karnataka Weather Forecast
ಮಳೆ22 hours ago

Karnataka Weather : ಅಬ್ಬಬ್ಬಾ.. ಮುಲ್ಕಿಯಲ್ಲಿ 30 ಸೆಂ.ಮೀ ಮಳೆ ದಾಖಲು; ವಾರಾಂತ್ಯದಲ್ಲೂ ಭಾರಿ ವರ್ಷಧಾರೆ

karnataka Rain
ಮಳೆ1 day ago

Karnataka Rain : ಭಾರಿ ಮಳೆಗೆ ಪಾತಾಳ ಸೇರಿದ ಬಾವಿ; ಅಲೆಗಳ ಹೊಡೆತಕ್ಕೆ ಸಮುದ್ರಪಾಲಾದ ಮನೆ

Karnataka Weather Forecast
ಮಳೆ2 days ago

Karnataka Weather : ಭಾರಿ ಮಳೆ ಹಿನ್ನೆಲೆ ದಕ್ಷಿಣ ಕನ್ನಡಕ್ಕೆ ರೆಡ್ ಅಲರ್ಟ್; ಶುಕ್ರವಾರವೂ ಶಾಲೆಗಳಿಗೆ ರಜೆ ಘೋಷಣೆ

karnataka Weather Forecast
ಮಳೆ2 days ago

Karnataka Weather : ಭಾರಿ ಮಳೆಗೆ ಸೇತುವೆಯಿಂದ ಹೊಳೆಗೆ ಬಿದ್ದ ಕಾರು; ಮರ ಹಿಡಿದು ಪ್ರಾಣ ಉಳಿಸಿಕೊಂಡ ಸವಾರರು

Heart Attack
ಕೊಡಗು2 days ago

Heart Attack : ಕೊಡಗಿನಲ್ಲಿ ಹೃದಯಾಘಾತಕ್ಕೆ ಯುವತಿ ಬಲಿ; ಹೆಚ್ಚಾಯ್ತು ಅಲ್ಪಾಯುಷ್ಯದ ಭಯ

karnataka Rains Effected
ಮಳೆ2 days ago

Karnataka Rain : ಧಾರಾಕಾರ ಮಳೆಗೆ ಸಡಿಲಗೊಂಡ ಗುಡ್ಡಗಳು; ಧರೆ ಕುಸಿದು ಮಣ್ಣಿನಡಿ ಸಿಲುಕಿದ ಇಬ್ಬರು ಮಕ್ಕಳು

karnataka Weather Forecast
ಮಳೆ5 days ago

Karnataka Weather : ಕರಾವಳಿಯಲ್ಲಿ ಮುಂದುವರಿದ ವರುಣಾರ್ಭಟ; ಸಾಂಪ್ರದಾಯಿಕ ಮೀನುಗಾರಿಕೆಗೂ ಬ್ರೇಕ್

karnataka weather Forecast
ಮಳೆ1 week ago

Karnataka Weather : ರಭಸವಾಗಿ ಹರಿಯುವ ನೀರಲ್ಲಿ ಸಿಲುಕಿದ ಬೊಲೆರೋ; ಬಿರುಗಾಳಿ ಸಹಿತ ಮಳೆ ಎಚ್ಚರಿಕೆ

International Yoga Day 2024
ಕರ್ನಾಟಕ1 week ago

International Yoga Day 2024: ಎಲ್ಲೆಲ್ಲೂ ಯೋಗಾಯೋಗ‌ಕ್ಕೆ ಮಂಡಿಯೂರಿದ ಜನತೆ

ಟ್ರೆಂಡಿಂಗ್‌