Rushikonda Palace: 500 ಕೋಟಿಯ ʼಋಷಿಕೊಂಡ ಅರಮನೆʼ ಖರೀದಿಸಲು ಕ್ರಿಮಿನಲ್‌ ಸುಕೇಶ್ ಚಂದ್ರಶೇಖರ್ ರೆಡಿ! - Vistara News

ರಾಜಕೀಯ

Rushikonda Palace: 500 ಕೋಟಿಯ ʼಋಷಿಕೊಂಡ ಅರಮನೆʼ ಖರೀದಿಸಲು ಕ್ರಿಮಿನಲ್‌ ಸುಕೇಶ್ ಚಂದ್ರಶೇಖರ್ ರೆಡಿ!

ಮಾಜಿ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅಧಿಕಾರದಲ್ಲಿದ್ದಾಗ ಸುಮಾರು 500 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿರುವ ಋಷಿಕೊಂಡ ಹಿಲ್‌ಟಾಪ್ ಪ್ಯಾಲೇಸ್ ಬಗ್ಗೆ ಟಿಡಿಪಿ ಆಕ್ಷೇಪ ವ್ಯಕ್ತಪಡಿಸಿ ಸಾಕಷ್ಟು ಆರೋಪಗಳನ್ನು ಮಾಡಿತ್ತು. ಇದೀಗ ಈ ಅರಮನೆಯನ್ನು (Rushikonda Palace) ಖರೀದಿ ಮಾಡಲು ಸದ್ಯ ದೆಹಲಿಯ ಮಂಡೋಲಿ ಜೈಲಿನಲ್ಲಿರುವ ಕುಖ್ಯಾತ ಕ್ರಿಮಿನಲ್ ಸುಕೇಶ್ ಚಂದ್ರಶೇಖರ್‌ ಆಸಕ್ತಿ ತೋರಿಸಿದ್ದಾನೆ.

VISTARANEWS.COM


on

Rushikonda Palace
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವದೆಹಲಿ: ಆಂಧ್ರಪ್ರದೇಶದ ಋಷಿಕೊಂಡ ಬೆಟ್ಟದಲ್ಲಿ (Rushikonda Hilltop) ಈ ಹಿಂದಿನ ಜಗನ್ ರೆಡ್ಡಿ ಸರ್ಕಾರ ನಿರ್ಮಿಸಿರುವ ವಿವಾದಾತ್ಮಕ ಅರಮನೆಯನ್ನು (Rushikonda Palace) ಮಾರುಕಟ್ಟೆ ದರಕ್ಕಿಂತ ಶೇ.20ರಷ್ಟು ಹೆಚ್ಚು ಹಣ ಕೊಟ್ಟು ಖರೀದಿಸಲು ತಾನು ಸಿದ್ಧ ಎಂದು ಅಕ್ರಮ ಹಣ ವರ್ಗಾವಣೆ, ವಂಚನೆ ಮತ್ತು ಸುಲಿಗೆ ಪ್ರಕರಣ ಸಂಬಂಧ ದೆಹಲಿಯ ಜೈಲಿನಲ್ಲಿರುವ ಆರೋಪಿ ಸುಕೇಶ್ ಚಂದ್ರಶೇಖರ್ (Sukesh Chandrashekhar) ಹೇಳಿಕೊಂಡಿದ್ದಾನೆ. ಈ ಕುರಿತು ಆತ ಆಂಧ್ರಪ್ರದೇಶದ (Andhra Pradesh) ಮುಖ್ಯಮಂತ್ರಿ (Chief Minister) ಎನ್. ಚಂದ್ರಬಾಬು ನಾಯ್ಡು (N Chandrababu Naidu) ಅವರಿಗೆ ಪತ್ರ ಬರೆದಿದ್ದಾನೆ.

ಮಾಜಿ ಮುಖ್ಯಮಂತ್ರಿ ಜಗನ್ ಮೋಹನ್ ರೆಡ್ಡಿ ಅಧಿಕಾರದಲ್ಲಿದ್ದಾಗ ಸುಮಾರು 500 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಿರುವ ಋಷಿಕೊಂಡ ಹಿಲ್‌ಟಾಪ್ ಪ್ಯಾಲೇಸ್ ಬಗ್ಗೆ ಟಿಡಿಪಿ ಆಕ್ಷೇಪ ವ್ಯಕ್ತಪಡಿಸಿ ಸಾಕಷ್ಟು ಆರೋಪಗಳನ್ನು ಮಾಡಿತ್ತು. ಇದೀಗ ಈ ಅರಮನೆಯನ್ನು ಖರೀದಿ ಮಾಡಲು ಸದ್ಯ ದೆಹಲಿಯ ಜೈಲಿನಲ್ಲಿರುವ ಸುಕೇಶ್ ಆಸಕ್ತಿ ತೋರಿದ್ದಾನೆ.

ಆಂಧ್ರಪ್ರದೇಶದ ಈಗಿನ ಚಂದ್ರಬಾಬು ನಾಯ್ಡು ನೇತೃತ್ವದ ಟಿಡಿಪಿ ಸರ್ಕಾರವು ಆ ಆಸ್ತಿಯನ್ನು ಮಾರಾಟ ಮಾಡಲು ಅಥವಾ ಗುತ್ತಿಗೆಗೆ ನೀಡಲು ನಿರ್ಧರಿಸಿದರೆ ಮಾರುಕಟ್ಟೆ ಬೆಲೆಗಿಂತ ಶೇ. 20 ಹೆಚ್ಚಿನ ದರ ನೀಡುವುದಾಗಿ ಆತ ಹೇಳಿದ್ದಾನೆ. ಮಾಜಿ ಮುಖ್ಯಮಂತ್ರಿ ರೆಡ್ಡಿ ವೈಜಾಗ್‌ನಲ್ಲಿ 500 ಕೋಟಿ ರೂಪಾಯಿ ವೆಚ್ಚದ ಬೆಟ್ಟದ ಅರಮನೆಯನ್ನು ತಮ್ಮ ಸ್ವಾರ್ಥಕ್ಕಾಗಿ ನಿರ್ಮಿಸಿದ್ದಾರೆ ಎಂದು ತೆಲುಗು ದೇಶಂ ಪಕ್ಷ (ಟಿಡಿಪಿ) ಆರೋಪಿಸಿದೆ. ರಾಜ್ಯದ ಆರ್ಥಿಕ ಪರಿಸ್ಥಿತಿ ಕೆಟ್ಟದಾಗಿದ್ದರೂ ಈ ಅರಮನೆ ಮತ್ತು ಅಲ್ಲಿನ ಐಷಾರಾಮಿ ಸೌಕರ್ಯಗಳಿಗೆ ದುಂದು ವೆಚ್ಚ ಮಾಡಲಾಗಿದೆ ಎಂದು ಆರೋಪಿಸಿದೆ.

Rushikonda Palace


ಇದು ನನಗೆ, ನನ್ನ ಕುಟುಂಬಕ್ಕೆ ಮತ್ತು ನನ್ನ ಸಮುದಾಯಕ್ಕೆ ಬಹಳ ವಿಶೇಷವಾಗಿದೆ ಎಂದು ಸುಕೇಶ್ ಆಂಧ್ರಪ್ರದೇಶ ಮುಖ್ಯಮಂತ್ರಿಗೆ ಬರೆದ ಪತ್ರದಲ್ಲಿ ತಿಳಿಸಿದ್ದಾನೆ ಎಂದು ಅವರ ವಕೀಲ ಅನಂತ್ ಮಲಿಕ್ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ.

ನಾನು ಬಾಲ್ಯದ ರಜಾ ದಿನಗಳಲ್ಲಿ ಅಜ್ಜಿಯ ಬಳಿ ಕರೆದುಕೊಂಡು ಹೋದಾಗ ಆ ಪ್ರದೇಶದ ಸುತ್ತಮುತ್ತ ಆಟವಾಡುತ್ತಿದ್ದೆ. ಆ ಸೆಂಟಿಮೆಂಟ್‌ ನನಗೆ ಅಲ್ಲಿಯ ಆಸ್ತಿ ಖರಿದಿಸುವ ಬಯಕೆ ಹುಟ್ಟಿಸಿದೆ. ಸರ್ಕಾರ ಆ ಆಸ್ತಿ ಮಾರಿದರೆ ಹಣವನ್ನು ಶೇ. 100ರಷ್ಟು ನ್ಯಾಯಸಮ್ಮತ ರೀತಿಯಲ್ಲಿ ಪಾವತಿಸುತ್ತೇನೆ ಎಂದು ಸುಕೇಶ್ ಪತ್ರದಲ್ಲಿ ತಿಳಿಸಿದ್ದಾನೆ.

ನನ್ನ ಆತಿಥ್ಯ ಉದ್ಯಮವು ಚೆನ್ನೈ, ಗೋವಾ, ದುಬೈ ಮತ್ತು ಬಾರ್ಸಿಲೋನಾದಲ್ಲಿ ಹೊಟೇಲ್ ರೂಪದಲ್ಲಿ ಯಶಸ್ವಿಯಾಗಿ ನಡೆಯುತ್ತಿದೆ. ಈ ಎಲ್ಲಾ ವಿವರಗಳನ್ನು ನಾನು ದಾಖಲೆ ಸಮೇತ ನೀಡುವೆ. ಮಧ್ಯಮ ವರ್ಗದ ಕುಟುಂಬದ ಹುಡುಗನೊಬ್ಬ ಋಷಿಕೊಂಡ ಅರಮನೆಯಂತಹ ಪ್ರತಿಷ್ಠಿತ ಆಸ್ತಿಯನ್ನು ಪಡೆಯುವ ಹಂತಕ್ಕೆ ಬೆಳೆದಿದ್ದಾನೆ. ನನ್ನ ವಿರುದ್ಧದ ಆರೋಪಗಳು ಸಾಬೀತಾಗಿಲ್ಲ. ಹೀಗಾಗಿ ಅರಮನೆಯನ್ನು ಖರೀದಿಸಲು ಅಥವಾ ಬಾಡಿಗೆಗೆ ನೀಡಲು ನನಗೆ ಅವಕಾಶವನ್ನು ನೀಡುವುದರಿಂದ ಅಲ್ಲಿರುವ ಎಲ್ಲಾ ಯುವಕರಿಗೆ ಇದು ಸ್ಫೂರ್ತಿಯಾತ್ತದೆ. ಯಾಕೆಂದರೆ ಜಗತ್ತು ನಿಮ್ಮ ಯಶಸ್ಸಿಗೆ ವಿರುದ್ಧವಾಗಿದ್ದರೂ ಯಾವುದೂ ಅಸಾಧ್ಯವಲ್ಲ ಎಂದು ಸುಕೇಶ್ ಪತ್ರದಲ್ಲಿ ವಿವರಿಸಿದ್ದಾನೆ.

ಆರೋಪವೇನು?

ವೈ.ಎಸ್.ಜಗನ್‌ ಮೋಹನ್‌ ರೆಡ್ಡಿ ಅವರು ಈ ಮೊದಲು ಮೂರು ನಗರಗಳನ್ನು ರಾಜಧಾನಿ ಎಂದು ಘೋಷಿಸಿದ್ದರು. ವಿಶಾಖಪಟ್ಟಣಂ ಅಥವಾ ವೈಜಾಗ್‌ ಅನ್ನೇ ಈ ಮೊದಲು ಆಂಧ್ರಪ್ರದೇಶದ ರಾಜಧಾನಿ ಎಂದು ಘೋಷಿಸಲಾಗಿತ್ತು. ಹಾಗಾಗಿ, ಇಲ್ಲಿ ಪತ್ನಿಯ ಆಸೆಯಂತೆಯೇ ಜಗನ್‌ ಮೋಹನ್‌ ರೆಡ್ಡಿ ಅವರು ಐಷಾರಾಮಿ ಬಂಗಲೆ ಕಟ್ಟಿಸಿದ್ದಾರೆ ಎಂದು ಟಿಡಿಪಿ ಆರೋಪಿಸಿದೆ.

ಇದನ್ನೂ ಓದಿ: Actor Darshan: ದರ್ಶನ್‌ ತುಂಬ ಮುಗ್ದ, ತಾಯಿ ಕಣ್ಣೀರು ಹಾಕೊಂಡು ಮಗನನ್ನು ಬೆಳಸಬೇಕು ಎಂದಿದ್ರು ಎಂದ ಲಹರಿ ವೇಲು!

ಋಷಿಕೊಂಡ ಹಿಲ್ಸ್‌ ಪ್ರವಾಸಿ ತಾಣವಾಗಿತ್ತು. ಇಲ್ಲಿಗೆ ಹೆಚ್ಚಿನ ಸಂಖ್ಯೆಯ ಪ್ರವಾಸಿಗರು ಭೇಟಿ ನೀಡುತ್ತಿದ್ದರು. ಆದರೆ, 9.88 ಎಕರೆ ಜಾಗದಲ್ಲಿ ಜಗನ್‌ ಮೋಹನ್‌ ರೆಡ್ಡಿ ಅವರು ಬಂಗಲೆ ನಿರ್ಮಿಸಿದ್ದಾರೆ. ಸುಮಾರು 36 ಲಕ್ಷ ರೂ. ವೆಚ್ಚದಲ್ಲಿ ಬಾತ್‌ ಟಬ್‌ ನಿರ್ಮಿಸಿದ್ದಾರೆ. ಹತ್ತಾರು ಐಷಾರಾಮಿ ಕೋಣೆಗಳು, ಸೌಕರ್ಯಗಳು ಬಂಗಲೆಯಲ್ಲಿವೆ. ಇದನ್ನೇ ಪಾರ್ಟಿ ಕಚೇರಿ ಮಾಡುವುದು ಜಗನ್‌ ಮೋಹನ್‌ ರೆಡ್ಡಿ ಅವರ ಉದ್ದೇಶವಾಗಿತ್ತು ಎಂದು ಆರೋಪಿಸಲಾಗಿದೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರಮುಖ ಸುದ್ದಿ

KPCC President: ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಸುಳಿವು; ಲಿಂಗಾಯತರಿಗೆ ಅವಕಾಶ ನೀಡಲು ಒತ್ತಾಯ

KPCC President: ದೆಹಲಿ‌ ಮಟ್ಟದಲ್ಲಿ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಚರ್ಚೆ ನಡೆದಿದೆ. ಡಿ.ಕೆ. ಶಿವಕುಮಾರ್ ಅವರನ್ನು ಬದಲಾವಣೆ ಮಾಡುವುದು ಸೂಕ್ತ ಎಂದು ರಾಜ್ಯ ನಾಯಕರಿಂದ ಒತ್ತಾಯ ಕೇಳಿಬಂದಿದೆ.

VISTARANEWS.COM


on

KPCC President
Koo

ಬೆಂಗಳೂರು: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ ಅಧ್ಯಕ್ಷರ (KPCC President) ಬದಲಾವಣೆ ಸುಳಿವು ಸಿಕ್ಕಿದ್ದು, ಅಧಿವೇಶನದ ಬಳಿಕ ಕೆಪಿಸಿಸಿ ನೂತನ ಸಾರಥಿ ಆಯ್ಕೆ ಸಾಧ್ಯತೆ ಇವೆ ಎನ್ನಲಾಗುತ್ತಿದೆ. ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಕೈ ಹೈಕಮಾಂಡ್ ಇಂಗಿತ ಹೊಂದಿದ್ದು, ಇದರ ಸುಳಿವು ಸಿಗುತ್ತಿದ್ದಂತೆ ಅಧ್ಯಕ್ಷಗಿರಿ ಪಟ್ಟಕ್ಕಾಗಿ ಲಾಬಿ ಜೋರಾಗಿದೆ. ದಲಿತರು, ಬ್ರಾಹ್ಮಣರು, ಒಕ್ಕಲಿಗರ ಕೋಟಾ ಮುಗಿದಿದೆ, ಈ ಬಾರಿ ಲಿಂಗಾಯತರಿಗೆ ಅವಕಾಶ ನೀಡಬೇಕು ಎಂಬ ಒತ್ತಾಯ ಕೇಳಿಬಂದಿದೆ. ಜತೆಗೆ ನಮಗೂ ಅವಕಾಶ ಕೊಡಿ ಎಂದು ವಾಲ್ಮೀಕಿ ಸಮುದಾಯದ ನಾಯಕರೂ ಆಗ್ರಹಿಸಿದ್ದಾರೆ.

ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಸಚಿವ ಈಶ್ವರ್ ಖಂಡ್ರೆ, ಸತೀಶ್ ಜಾರಕಿಹೊಳಿ‌, ಬಿ.ಕೆ. ಹರಿಪ್ರಸಾದ್ ಲಾಬಿ ನಡೆಸುತ್ತಿದ್ದಾರೆ. ಅಲ್ಲದೇ ಸತೀಶ್ ಜಾರಕಿಹೊಳಿ‌, ಕೆ.ಎನ್. ರಾಜಣ್ಣ ಹೆಸರುಗಳು ಮುನ್ನೆಲೆಗೆ ಬಂದಿವೆ. ಈಗಾಗಲೇ ನಾನು ಅಧ್ಯಕ್ಷನಾಗಲು ಸಿದ್ಧ ಎಂದು ಸಚಿವ ಕೆ.ಎನ್. ರಾಜಣ್ಣ ಹೇಳಿದ್ದಾರೆ. ಮತ್ತೊಂದೆದೆ ಹಿಂದುಳಿದ ವರ್ಗಗಳ ಕೋಟಾದಡಿ ಬಿ.ಕೆ. ಹರಿಪ್ರಸಾದ್ ಹೆಸರು ಚರ್ಚೆಯಾಗುತ್ತಿದೆ. ಆದರೆ ಜಾತಿ ಮತ್ತು ಪ್ರಾದೇಶಿಕ ಆಧಾರಿತವಾಗಿ ಅಧ್ಯಕ್ಷರ ಆಯ್ಕೆ ಮಾಡಲು ಹೈ ಕಮಾಂಡ್‌ ಚಿಂತನೆ ನಡೆಸುತ್ತಿದೆ ಎನ್ನಲಾಗಿದೆ.

ಈ ಬಾರಿ ಲಿಂಗಾಯತ ಹಾಗೂ ಕಲ್ಯಾಣ ಕರ್ನಾಟಕದ ನಾಯಕರಿಗೆ ಮಣೆ ಹಾಕುವ ಸಾಧ್ಯತೆ ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ಈಶ್ವರ್ ಖಂಡ್ರೆ ಅವರ ಹೆಸರು ಮುನ್ನೆಲೆಯಲ್ಲಿದೆ.

ದೆಹಲಿ‌ ಮಟ್ಟದಲ್ಲಿ ನಡೆದಿದೆ ಚರ್ಚೆ

ಸಿಎಂ ಸಿದ್ದರಾಮಯ್ಯ ಅವರು ರಾಹುಲ್‌ ಗಾಂಧಿ ಅವರನ್ನು ನವ ದೆಹಲಿಯಲ್ಲಿ ಭೇಟಿಯಾದ ಬೆನ್ನಲ್ಲೇ ಮತ್ತೊಂದೆಡೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಡಿಸಿಎಂ ಡಿ.ಕೆ.ಶಿವಕುಮಾರ್‌ ಭೇಟಿಯಾಗಿ ಮಾತುಕತೆ ನಡೆಸಿದ್ದಾರೆ.

ದೆಹಲಿ‌ ಮಟ್ಟದಲ್ಲಿ ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಚರ್ಚೆ ನಡೆದಿದ್ದು, ಡಿ.ಕೆ. ಶಿವಕುಮಾರ್ ಬಳಿಯೇ ಎರಡು ಪ್ರಬಲ ಖಾತೆಗಳಿವೆ, ಇದು ಪಕ್ಷ ಸಂಘಟನೆಗೆ ಅನುಕೂಲವಲ್ಲ. ಹೀಗಾಗಿ ಅಧ್ಯಕ್ಷರ ಬದಲಾವಣೆ ಮಾಡಿದರೆ ಸೂಕ್ತ ಎಂದು ರಾಜ್ಯ ನಾಯಕರಿಂದ ಒತ್ತಾಯ ಕೇಳಿಬಂದಿದೆ.

ಇನ್ನು ಹೈ ಕಮಾಂಡ್ ನಾಯಕರಿಂದಲೂ ಕೆಪಿಸಿಸಿಗೆ ನೂತನ ಸಾರಥಿ ನೀಡುವ ಬಗ್ಗೆ ಒಲವು ಹೆಚ್ಚಿದೆ ಎನ್ನಲಾಗಿದೆ. ನೂತನ ಅಧ್ಯಕ್ಷರ ಆಯ್ಕೆಯಾದರೇ ಕಾಂಗ್ರೆಸ್ ಒಳಗಿನ ಸಮಸ್ಯೆಗಳಿಗೆ ಇತಿಶ್ರೀ ಹಾಡಬಹುದು ಎಂದು ದೆಹಲಿ ಭೇಟಿ ವೇಳೆ ರಾಜ್ಯ ನಾಯಕರು ಹೇಳಿದ್ದಾರೆ. ಹೀಗಾಗಿ ರಾಜ್ಯ ನಾಯಕರ ಮಾತಿಗೆ ಬಹುತೇಕ ಮನ್ನಣೆ ಸಿಗುವ ಸಾಧ್ಯತೆ ದಟ್ಟವಾಗಿದೆ.

ಇದನ್ನೂ ಓದಿ | CM Siddaramaiah: ಡಾ.ರಾಜ್‍ಕುಮಾರ್ ಕನಸಿನಂತೆ ಫಿಲ್ಮ್ ಸಿಟಿ ನಿರ್ಮಾಣ ಮಾಡ್ತೇವೆ ಎಂದ ಸಿದ್ದರಾಮಯ್ಯ

ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಚುನಾವಣೆ ತನಕ ಕೆಪಿಸಿಸಿ ಅಧ್ಯಕ್ಷ ಸ್ಥಾನದಲ್ಲಿ ಡಿ.ಕೆ.ಶಿವಕುಮಾರ್ ಮುಂದುವರಿಯುವ ಇರಾದೆ ಹೊಂದಿದ್ದಾರೆ. ಆದರೆ, ಮತ್ತೊಂದೆಡೆ ರಾಜ್ಯ ನಾಯಕರು ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಒತ್ತಡ ಹೇರುತ್ತಿದ್ದಾರೆ. ಹೀಗಾಗಿ ಕೆಪಿಸಿಸಿ ಅಧ್ಯಕ್ಷ ಬದಲಾವಣೆ ಹೈ ಕಮಾಂಡ್‌ ಒಲವು ಹೊಂದಿದೆ ಎನ್ನಲಾಗಿದ್ದು, ಹೆಚ್ಚುವರಿ ಡಿಸಿಎಂ ಹುದ್ದೆ ಸೃಷ್ಟಿಗೆ ಇನ್ನೂ ಯಾವುದೇ ಸ್ಪಷ್ಟತೆ ಸಿಕ್ಕಿಲ್ಲ.

Continue Reading

ಸ್ಯಾಂಡಲ್ ವುಡ್

CM Siddaramaiah: ಡಾ.ರಾಜ್‍ಕುಮಾರ್ ಕನಸಿನಂತೆ ಫಿಲ್ಮ್ ಸಿಟಿ ನಿರ್ಮಾಣ ಮಾಡ್ತೇವೆ ಎಂದ ಸಿದ್ದರಾಮಯ್ಯ

CM Siddaramaiah: ಈ ಕಾರ್ಯಕ್ರಮದಲ್ಲಿ ಜಗ್ಗೇಶ್‌, ಶಿವರಾಜ್‌ ಕುಮಾರ್‌ ಸೇರಿದಂತೆ ಅನೇಕ ಗಣ್ಯ ವ್ಯಕ್ತಿಗಳು ಭಾಗಿಯಾಗಿದ್ದರು. ಹೊಂಬಾಳೆ ಫಿಲಂಸ್‍, ಆರ್‌.ಎಸ್‌. ಗೌಡ, ವಾಣಿಜ್ಯ ಮಂಡಳಿ ಸೇರಿದಂತೆ ಅನೇಕರು ಈ ನೂತನ ಕಟ್ಟಡ ನಿರ್ಮಾಣಕ್ಕೆ ಸಹಾಯ ಮಾಡಿದ್ದಾರೆ. ನಿರ್ಮಾಪಕ ರಮೇಶ್‌ ರೆಡ್ಡಿ ಕಟ್ಟಡ ನಿರ್ಮಾಣ ಜವಾಬ್ದಾರಿ ಹೊತ್ತು ನೆರವಾಗಿದ್ದಾರೆ.

VISTARANEWS.COM


on

CM Siddaramaiah To Inaugurate Film Producers Association Building says build film city
Koo

ಬೆಂಗಳೂರು: ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘದ ನೂತನ ಕಟ್ಟಡ (ಶಿವಾನಂದ ಸರ್ಕಲ್) ಉದ್ಘಾಟನಾ ಸಮಾರಂಭವನ್ನು ನಡೆದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ಅವರು ಹೊಸ ಕಟ್ಟಡವನ್ನು ಉದ್ಘಾಟಿಸಿದರು. ಈ ವೇಳೆ ಸಿದ್ದರಾಮಯ್ಯ (Inaugurate Film Producers Association Building) ಅವರು ʻʻಚಿತ್ರಮಂದಿರಗಳು, ಸಬ್ಸಿಡಿ ಬಗ್ಗೆ ಗಮನ ಹರಿಸಿ ಆರ್ಥಿಕ ನೆರವು ನೀಡುತ್ತೇವೆ. ಜತೆಗೆ ಕನ್ನಡದಲ್ಲಿ ಒಟಿಟಿ ವೇದಿಕೆ ತರಲು, ಸಂಬಂಧ ಪಟ್ಟವರ ಜತೆ ಮಾತನಾಡುತ್ತೇವೆ. ರಾಜ್‌ಕುಮಾರ್‌ ಕನಸಿನಂತೆ ಫಿಲ್ಮ್ ಸಿಟಿ ನಿರ್ಮಾಣ ಮಾಡ್ತೇವೆ ʼʼಎಂದರು.

ಸಿದ್ದರಾಮಯ್ಯ ಮಾತನಾಡಿ ʻʻನಿನ್ನೆ ದೆಹಲಿಗೆ ಹೋಗಿದ್ದೆ.. ಇವತ್ತು ಈ ಕಾರ್ಯಕ್ರಮಕ್ಕೆ ಬರುವ ಸಾಧ್ಯತೆ ಕಡಿಮೆ ಇತ್ತು. ಕನ್ನಡ ಚಿತ್ರರಂಗದ ಮೇಲೆ ನನಗೆ ಅಪಾರ ಗೌರವ ಇದೆ. ಮಿಸ್ ಮಾಡದೇ ಬರಬೇಕು ಎಂದು ಬಂದೆ. ಕನ್ನಡ ಚಿತ್ರರಂಗದ ಬೆಳವಣಿಗೆಗೆ ಎಷ್ಟು ಸಾಧ್ಯವೋ ಅಷ್ಟು ಸಹಕಾರ ನಮ್ಮಿಂದ ಇರುತ್ತದೆ. ಚಿತ್ರಮಂದಿರಗಳು, ಸಬ್ಸಿಡಿ ಬಗ್ಗೆ ಗಮನ ಹರಿಸಿ ಆರ್ಥಿಕ ನೆರವು ನೀಡುತ್ತೇವೆ. ಜತೆಗೆ ಕನ್ನಡದಲ್ಲಿ ಒಟಿಟಿ ವೇದಿಕೆ ತರಲು, ಸಂಬಂಧ ಪಟ್ಟವರ ಜತೆ ಮಾತನಾಡುತ್ತೇವೆ. ಡಾ.ರಾಜ್‍ಕುಮಾರ್ ಕನಸಿನಂತೆ ಖಂಡಿತಾ ಒಂದು ಫಿಲ್ಮ್ ಸಿಟಿ ನಿರ್ಮಾಣ ಮಾಡುತ್ತೇವೆ. ಕನ್ನಡ ಭಾಷೆಯ ಚಿತ್ರಗಳಿಗೆ ಸರ್ಕಾರ ಸಹಾಯ ಮಾಡುತ್ತದೆ. ಫಿಲ್ಮಿ ಸಿಟಿಗೆ ಜಾಗ ಕೊಟ್ಟಿದ್ದೆ ನಮ್ಮ ಸರ್ಕಾರ. ನೂರು ಎಕೆರೆಗೂ ಹೆಚ್ಚು ಜಮೀನು ಕೊಟ್ಟಿದ್ದೇವೆ.ʼʼಎಂದರು.

ಈ ಕಾರ್ಯಕ್ರಮದಲ್ಲಿ ಜಗ್ಗೇಶ್‌, ಶಿವರಾಜ್‌ ಕುಮಾರ್‌ ಸೇರಿದಂತೆ ಅನೇಕ ಗಣ್ಯ ವ್ಯಕ್ತಿಗಳು ಭಾಗಿಯಾಗಿದ್ದರು. ಹೊಂಬಾಳೆ ಫಿಲಂಸ್‍, ಆರ್‌.ಎಸ್‌. ಗೌಡ, ವಾಣಿಜ್ಯ ಮಂಡಳಿ ಸೇರಿದಂತೆ ಅನೇಕರು ಈ ನೂತನ ಕಟ್ಟಡ ನಿರ್ಮಾಣಕ್ಕೆ ಸಹಾಯ ಮಾಡಿದ್ದಾರೆ. ನಿರ್ಮಾಪಕ ರಮೇಶ್‌ ರೆಡ್ಡಿ ಕಟ್ಟಡ ನಿರ್ಮಾಣ ಜವಾಬ್ದಾರಿ ಹೊತ್ತು ನೆರವಾಗಿದ್ದಾರೆ. ದಕ್ಷಿಣ ಭಾರತದಲ್ಲಿ ನಿರ್ಮಾಪಕರಿಗೆ ಎಂದೇ ಸ್ವಂತ ಕಟ್ಟಡ ಹೊಂದಿರುವುದು ಕರ್ನಾಟಕದಲ್ಲಿ ಮಾತ್ರ ಎಂದು ನಿರ್ಮಾಪಕರ ಸಂಘದ ಕಟ್ಟಡ ನಿರ್ಮಾಣ ಸಮಿತಿಯ ಅಧ್ಯಕ್ಷ ಸಾರಾ ಗೋವಿಂದು ತಿಳಿಸಿದರು.

ಇದನ್ನೂ ಓದಿ: Kalki 2898 AD: ಮೂರನೇ ದಿನ ಭರ್ಜರಿ ಗಳಿಕೆ ಕಂಡ ‘ಕಲ್ಕಿ 2898 ಎಡಿ’ ಸಿನಿಮಾ ! 

ನಿರ್ಮಾಪಕರ ಸಂಘದ ಕಾರ್ಯದರ್ಶಿ ಪ್ರವೀಣ್ ಕುಮಾರ್, ರಮೇಶ್‍ ಯಾದವ್‍, ಎಂ.ಜಿ. ರಾಮಮೂರ್ತಿ, ಆರ್.ಎಸ್. ಗೌಡ ಸೇರಿದಂತೆ ಹಲವರು ಭಾಗವಹಿಸಿದ್ದರು. ನಿರ್ಮಾಪಕರ ಸಂಘದ ಕಟ್ಟಡ ನಿರ್ಮಾಣದ ಸಮಿತಿಯ ಅಧ್ಯಕ್ಷರಾಗಿ ಸಾರಾ ಗೋವಿಂದು ಅವರು ಕೆಲಸ ಮಾಡಿದ್ದಾರೆ. ‘ಕನ್ನಡ ಚಲನಚಿತ್ರ ನಿರ್ಮಾಪಕರ ಸಂಘ’ದ (Kannada Film Producers Association) ನೂತನ ಕಟ್ಟಡ ಶಿವಾನಂದ ಸರ್ಕಲ್ ಬಳಿ ಇದೆ.

Continue Reading

Latest

Stop Drinking: ಗಂಡನ ಕುಡಿತ ನಿಲ್ಲಿಸಬೇಕೆ? ಹಾಗಾದ್ರೆ ಬಿಜೆಪಿ ಸಚಿವರೊಬ್ಬರ ಈ ಟಿಪ್ಸ್‌ ಟ್ರೈ ಮಾಡಿ ನೋಡಿ!

Stop Drinking ಪುರುಷರ ಕುಡಿತದ ಅಭ್ಯಾಸವನ್ನು ನಿಗ್ರಹಿಸಲು ಮಹಿಳೆಯರಿಗೆ ಮಧ್ಯಪ್ರದೇಶದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ, ಬಿಜೆಪಿ ನಾಯಕ ನಾರಾಯಣ್ ಸಿಂಗ್ ಕುಶ್ವಾಹ ಸಲಹೆಯೊಂದನ್ನು ನೀಡಿದ್ದಾರೆ. ಹೊರಗೆಲ್ಲೊ ಕುಡಿಯುವ ಬದಲು ಆಲ್ಕೋಹಾಲ್ ಅನ್ನು ಮನೆಗೆ ತಂದು ನಿಮ್ಮ ಮುಂದೆ ಕುಡಿಯಲು ಗಂಡನಿಗೆ ತಿಳಿಸಿ. ಅವರು ತಮ್ಮ ಕುಟುಂಬಗಳ ಮುಂದೆ ಕುಡಿದರೆ, ಅವರ ಆಲ್ಕೋಹಾಲ್ ಸೇವನೆ ಕ್ರಮೇಣ ಕಡಿಮೆಯಾಗುತ್ತದೆ, ಮತ್ತು ಕೊನೆಯಲ್ಲಿ ಅವರು ಕುಡಿಯುವುದನ್ನು ನಿಲ್ಲಿಸುತ್ತಾರೆ. ಅವರು ತಮ್ಮ ಹೆಂಡತಿ ಮಕ್ಕಳ ಮುಂದೆ ಕುಡಿಯಲು ನಾಚಿಕೆಪಡುತ್ತಾರೆ ಎಂದಿದ್ದಾರೆ.

VISTARANEWS.COM


on

Stop Drinking
Koo

ಕುಡಿತ ತಮ್ಮ ಜೀವನದ ಜೊತೆಗೆ ನಮ್ಮ ಕುಟುಂಬದವರ ಜೀವನವನ್ನು ಹಾಳು ಮಾಡುತ್ತದೆ ಎಂದು ತಿಳಿದರೂ ಕೂಡ ಹಲವು ಗಂಡಸರು ಕುಡಿತದ ದಾಸರಾಗಿದ್ದಾರೆ. ಕುಡುಕ ಗಂಡನಿಂದ ಕಿರುಕುಳಕ್ಕೆ ಒಳಗಾಗುವಂತಹ ಮಹಿಳೆಯರು ಇನ್ನೂ ನಮ್ಮ ದೇಶದಲ್ಲಿ ಇದ್ದಾರೆ. ಹಾಗಾಗಿ ಇಂತಹ ಕುಡುಕ ಗಂಡನನ್ನು ಸರಿಮಾಡುವುದು ಹೇಗೆ, ಅವರ ಕುಡಿತ ನಿಲ್ಲಿಸುವುದು ಹೇಗೇ (Stop Drinking) ಎಂದು ಒದ್ದಾಡುತ್ತಿರುವ ಮಹಿಳೆಯರಿಗೆ ಮಧ್ಯಪ್ರದೇಶದ ಸಚಿವರೊಬ್ಬರು ಸಲಹೆ ನೀಡಿದ್ದಾರೆ.

ಮಾದಕ ದ್ರವ್ಯ ಮತ್ತು ಮದ್ಯಪಾನದ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಭೋಪಾಲ್‌ನಲ್ಲಿ ಶುಕ್ರವಾರ ನಡೆದ ಕಾರ್ಯಕ್ರಮದಲ್ಲಿ ಮಧ್ಯಪ್ರದೇಶದ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವ, ಬಿಜೆಪಿ ನಾಯಕ ನಾರಾಯಣ್ ಸಿಂಗ್ ಕುಶ್ವಾಹ ಅವರು ಭಾಗವಹಿಸಿದ್ದರು. ಈ ವೇಳೆ ಅವರು ಪುರುಷರ ಕುಡಿತದ ಅಭ್ಯಾಸವನ್ನು ನಿಗ್ರಹಿಸಲು ಮಹಿಳೆಯರಿಗೆ ಅಸಾಮಾನ್ಯ ವಿಧಾನವೊಂದನ್ನು ತಿಳಿಸಿದ್ದಾರೆ. ಅದೇನೆಂದರೆ ಮಹಿಳೆಯರು ತಮ್ಮ ಗಂಡಂದಿರಿಗೆ ಮನೆಯಲ್ಲಿ ಕುಡಿಯಲು ಹೇಳಬೇಕಂತೆ. ಯಾಕೆಂದರೆ ಪುರುಷರು ತಮ್ಮ ಹೆಂಡತಿ ಮತ್ತು ಮಕ್ಕಳ ಮುಂದೆ ಕುಡಿಯಲು ನಾಚಿಕೆಪಡುತ್ತಾರೆ ಎಂದು ಅವರು ತಿಳಿಸಿದ್ದಾರೆ.

“ತಾಯಂದಿರು ಮತ್ತು ಸಹೋದರಿಯರು ತಮ್ಮ ಗಂಡಂದಿರು ಕುಡಿಯುವುದನ್ನು ನಿಲ್ಲಿಸಬೇಕೆಂದು ಬಯಸಿದರೆ, ಮೊದಲು ಹೊರಗೆ ಕುಡಿಯಬೇಡಿ ಎಂದು ಹೇಳಿ. ಆಲ್ಕೋಹಾಲ್ ಅನ್ನು ಮನೆಗೆ ತಂದು ನಿಮ್ಮ ಮುಂದೆ ಕುಡಿಯಲು ಅವರಿಗೆ ತಿಳಿಸಿ. ಅವರು ತಮ್ಮ ಕುಟುಂಬಗಳ ಮುಂದೆ ಕುಡಿದರೆ, ಅವರ ಸೇವನೆ ಕ್ರಮೇಣ ಕಡಿಮೆಯಾಗುತ್ತದೆ, ಮತ್ತು ಕೊನೆಯಲ್ಲಿ ಅವರು ಕುಡಿಯುವುದನ್ನು ನಿಲ್ಲಿಸುತ್ತಾರೆ. ಅವರು ತಮ್ಮ ಹೆಂಡತಿ ಮಕ್ಕಳ ಮುಂದೆ ಕುಡಿಯಲು ನಾಚಿಕೆಪಡುತ್ತಾರೆ. ಅಲ್ಲದೆ, ಅವರ ಉದಾಹರಣೆಯನ್ನು ಅನುಸರಿಸುವ ಮೂಲಕ ಅವರ ಮಕ್ಕಳು ಕುಡಿಯಲು ಪ್ರಾರಂಭಿಸಬಹುದು ಎಂದು ಅವರಿಗೆ ನೆನಪಿಸಿ. ಈ ವಿಧಾನವು ಪ್ರಾಯೋಗಿಕವಾಗಿದೆ, ಮತ್ತು ಗಂಡಂದಿರು ಕುಡಿತವನ್ನು ತ್ಯಜಿಸುತ್ತಾರೆ” ಎಂದು ಸಚಿವರು ಹೇಳಿದ್ದಾರೆ.

ಇದನ್ನೂ ಓದಿ:ನಡುರಸ್ತೆಯಲ್ಲಿ ಬಟ್ಟೆ ಕಳಚಿ ಬೆತ್ತಲೆಯಾಗಿ ನಡೆದ ಮಹಿಳೆ; ಪುರುಷರು ಕಕ್ಕಾಬಿಕ್ಕಿ!

ಆದರೆ ಸಚಿವರ ಹೇಳಿಕೆಗೆ ತಕ್ಷಣ ಪ್ರತಿಕ್ರಿಯಿಸಿದ ಕಾಂಗ್ರೆಸ್, ಅವರ ಮಾತನ್ನು ಟೀಕಿಸಿದೆ. ಕಾಂಗ್ರೆಸ್ ಮಾಧ್ಯಮ ವಿಭಾಗದ ಅಧ್ಯಕ್ಷ ಮುಖೇಶ್ ನಾಯಕ್, “ಸಚಿವರ ಉದ್ದೇಶ ಸರಿಯಾಗಿದೆ, ಆದರೆ ಅದನ್ನು ತಿಳಿಸುವ ಅವರ ವಿಧಾನ ತಪ್ಪು. ಮನೆಯಲ್ಲಿ ಮದ್ಯಪಾನ ಮಾಡುವುದರಿಂದ ಮನೆಯಲ್ಲಿ ಸಂಘರ್ಷ ಮತ್ತು ಕೌಟುಂಬಿಕ ಹಿಂಸಾಚಾರ ಶುರುವಾಗಬಹುದು. ಅವರು ಜನರಿಗೆ ಕುಡಿಯದಂತೆ ಸಲಹೆ ನೀಡಬೇಕಿತ್ತು” ಎಂದು ಸಚಿವರ ಹೇಳಿಕೆಯನ್ನು ಟೀಕಿಸಿದ್ದಾರೆ.

Continue Reading

ದೇಶ

Lalu Prasad Yadav: “ಇಂದಿರಾ ಗಾಂಧಿ ನಮ್ಮನ್ನು ಜೈಲಿಗಟ್ಟಿದರು, ಆದರೆ…” ಎಮರ್ಜೆನ್ಸಿ ಬಗ್ಗೆ ಲಾಲೂ ಹೇಳಿದ್ದೇನು?

Lalu Prasad Yadav:ತುರ್ತು ಪರಿಸ್ಥಿತಿ ಹೇರಿಕೆಯಾದ ಸಂದರ್ಭದಲ್ಲಿ ತಾವು ಎದುರಿಸಿದ ಕರಾಳ ದಿನಗಳನ್ನು ಲಾಲು ಪ್ರಸಾದ್ ಯಾದವ್ ನೆನಪಿಸಿಕೊಂಡಿದ್ದು, ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ಅನೇಕ ನಾಯಕರನ್ನು ಜೈಲು ಕಂಬಿಯ ಹಿಂದೆ ಹಾಕಿದ್ದರು. ಆದರೆ ಎಂದಿಗೂ ಅವರನ್ನು ನಿಂದಿಸಿರಲಿಲ್ಲ ಎಂದು ಲಾಲು ಹೇಳಿದ್ದಾರೆ.

VISTARANEWS.COM


on

Indira Gandhi's Emergency
Koo

ಹೊಸದಿಲ್ಲಿ: ಕಳೆದ ಕೆಲವು ದಿನಗಳಿಂದ ತುರ್ತು ಪರಿಸ್ಥಿತಿ(Emergency) ಹೇರಿಕೆಯ ವಿಚಾರವನ್ನಿಟ್ಟುಕೊಂಡು ಆಡಳಿತ ಪಕ್ಷ ಕಾಂಗ್ರೆಸ್‌ ವಿರುದ್ಧ ವಾಗ್ದಾಳಿ ನಡೆಸುತ್ತಲೇ ಇದೆ. ಇದು ಸಾಲದೆನ್ನುವಂತೆ ಸ್ಪೀಕರ್‌ ಓಂ ಬಿರ್ಲಾ(Om birla), ರಾಷ್ಟ್ರಪತಿ ದ್ರೌಪದಿ ಮುರ್ಮು(Droupadi Murmu) ಕೂಡ ಎಮರ್ಜೆನ್ಸಿ ಬಗ್ಗೆ ಸದನದಲ್ಲಿ ಪ್ರಸ್ತಾಪಿಸಿದ್ದರು. ಇದೀಗ ಇದೇ ವಿಚಾರವನ್ನಿಟ್ಟುಕೊಂಡು ರಾಷ್ಟ್ರೀಯ ಜನತಾ ದಳದ (ಆರ್‌ಜೆಡಿ) ಮುಖ್ಯಸ್ಥ ಲಾಲು ಪ್ರಸಾದ್ ಯಾದವ್(Lalu Prasad Yadav) ಬಿಜೆಪಿ ವಿರುದ್ಧ ಕಿಡಿಕಾರಿದ್ದಾರೆ.

ತುರ್ತು ಪರಿಸ್ಥಿತಿ ಹೇರಿಕೆಯಾದ ಸಂದರ್ಭದಲ್ಲಿ ತಾವು ಎದುರಿಸಿದ ಕರಾಳ ದಿನಗಳನ್ನು ಲಾಲು ಪ್ರಸಾದ್ ಯಾದವ್ ನೆನಪಿಸಿಕೊಂಡಿದ್ದು, ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರು ಅನೇಕ ನಾಯಕರನ್ನು ಜೈಲು ಕಂಬಿಯ ಹಿಂದೆ ಹಾಕಿದ್ದರು. ಆದರೆ ಎಂದಿಗೂ ಅವರನ್ನು ನಿಂದಿಸಿರಲಿಲ್ಲ ಎಂದು ಲಾಲು ಹೇಳಿದ್ದಾರೆ. ಎಕ್ಸ್‌ನಲ್ಲಿ ಪೋಸ್ಟ್‌ವೊಂದನ್ನು ಮಾಡಿರುವ ಲಾಲೂ, ಆಗಿನ ಪ್ರಧಾನಿ ಇಂದಿರಾ ಗಾಂಧಿ ಅವರು ಹೇರಿದ್ದ ತುರ್ತು ಪರಿಸ್ಥಿತಿ ವಿರುದ್ಧದ ಚಳವಳಿಯನ್ನು ಮುಂದುವರಿಸಲು ಜಯಪ್ರಕಾಶ್ ನಾರಾಯಣ್ ರಚಿಸಿದ್ದ ಸಮಿತಿಯಲ್ಲಿ ನಾನು ಸಂಚಾಲಕನಾಗಿದ್ದೆ. ನನ್ನನ್ನು 15 ತಿಂಗಳ ಕಾಲ ಭದ್ರತಾ ನಿರ್ವಹಣಾ ಕಾಯ್ದೆ (ಮಿಸಾ) ಅಡಿ ಜೈಲಿನಲ್ಲಿ ಇರಿಸಲಾಗಿತ್ತು ಎಂದರು.

ಇದೇ ವೇಳೆ ಅವರು ಬಿಜೆಪಿ ಮುಖಂಡರ ವಿರುದ್ಧ ಕಿಡಿ ಕಾರಿದ್ದು, ಇಂದು ಎಮರ್ಜೆನ್ಸಿ ಕುರಿತು ಮಾತನಾಡುತ್ತಿರುವ ಬಿಜೆಪಿ ಸಚಿವರ ಬಗ್ಗೆ ನನಗೆ ಹಾಗೂ ನನ್ನ ಸಹೋದ್ಯೋಗಿಗಳಿಗೆ ಗೊತ್ತೇ ಇರಲಿಲ್ಲ. ಮೋದಿ, ಜೆಪಿ ನಡ್ಡಾ ಹಾಗೂ ಇಂದು ಸ್ವಾತಂತ್ರ್ಯದ ಮೌಲ್ಯಗಳ ಬಗ್ಗೆ ನಮಗೆ ಉಪದೇಶ ನೀಡುತ್ತಿರುವ ಪ್ರಧಾನಿಯ ಇತರೆ ಸಚಿವ ಸಹೋದ್ಯೋಗಿಗಳ ಹೆಸರನ್ನೇ ನಾವು ಕೇಳಿರಲಿಲ್ಲ” ಎಂದು ವ್ಯಂಗ್ಯವಾಡಿದ್ದಾರೆ.

ಇಂದಿರಾ ಗಾಂಧಿ ನಮ್ಮನ್ನು ಕಂಬಿಗಳ ಹಿಂದೆ ಇರಿಸಿದ್ದು ಎಷ್ಟು ನಿಜವೂ ಅವರು ನಮ್ಮನ್ನು ನಿಂದಿಸಿರಲಿಲ್ಲ ಎಂಬುದು ಕೂಡ ಅಷ್ಟೇ ಸತ್ಯ. ಅವರಾಗಲೀ ಅಥವಾ ಅವರ ಸಚಿವರಾಗಲೀ ನಮ್ಮನ್ನು ದೇಶ ದ್ರೋಹಿಗಳು ಅಥವಾ ದೇಶಪ್ರೇಮಿಗಳಲ್ಲ ಎಂದು ಕರೆದಿರಲಿಲ್ಲ. ನಮ್ಮ ಸಂವಿಧಾನ ಶಿಲ್ಪಿ ಬಾಬಾಸಾಹೇಬ್ ಅಂಬೇಡ್ಕರ್ ಅವರ ಆದರ್ಶಕ್ಕೆ ಧಕ್ಕೆ ತರುವ ವಿಧ್ವಂಸಕ ಕೃತ್ಯಗಳಿಗೆ ಅವಕಾಶ ನೀಡಿರಲಿಲ್ಲ. 1975 ನಮ್ಮ ಪ್ರಜಾಪ್ರಭುತ್ವಕ್ಕೆ ಒಂದು ಕಪ್ಪು ಚುಕ್ಕೆ ಹೌದು. ಹಾಗಂದ ಮಾತ್ರಕ್ಕೆ ವಿರೋಧ ಪಕ್ಷದವರನ್ನು ಅಗೌರವದಿಂದ ನಡೆಸಿಕೊಳ್ಳುವುದು ಎಷ್ಟರ ಮಟ್ಟಿಗೆ ಸರಿ ಎಂದು ಅವರು ಕಟುವಾಗಿ ಪ್ರಶ್ನಿಸಿದ್ದಾರೆ.

ಇದನ್ನೂ ಓದಿ:Prajwal Revanna Case: ಮಾಜಿ ಶಾಸಕ ಪ್ರೀತಂ ಗೌಡಗೆ ರಿಲೀಫ್‌; ಬಂಧಿಸದಂತೆ ಹೈಕೋರ್ಟ್ ಆದೇಶ

Continue Reading
Advertisement
KPCC President
ಪ್ರಮುಖ ಸುದ್ದಿ5 mins ago

KPCC President: ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಸುಳಿವು; ಲಿಂಗಾಯತರಿಗೆ ಅವಕಾಶ ನೀಡಲು ಒತ್ತಾಯ

Jayam Ravi married to superstar rajinikanth daughter
ಕಾಲಿವುಡ್8 mins ago

Jayam Ravi: ರಜನಿಕಾಂತ್‌ ಮಗಳ ಜತೆ ಜಯಂ ರವಿ ಮದುವೆ?

T20 World Cup 2024
ಕ್ರೀಡೆ17 mins ago

T20 World Cup 2024: ಸಂಭ್ರಮಾಚರಣೆ ವೇಳೆ ದುರಂತ: ಧ್ವಜ ಹಾರಿಸಲು ಹೋಗಿ ಬಿದ್ದ ಅಭಿಮಾನಿ; ವೈರಲ್‌ ವಿಡಿಯೊ ಇಲ್ಲಿದೆ

ಕ್ರೀಡೆ37 mins ago

Rohit Sharma: ವಿಶ್ವಕಪ್​ ಗೆದ್ದ ನಾಯಕ ರೋಹಿತ್​ಗೆ ಆಶೀರ್ವಾದ ಮಾಡಿದ ಕಾಂತಾರದ ‘ಪಂಜುರ್ಲಿ’ ದೈವ!

Actor Darshan
ಬೆಂಗಳೂರು40 mins ago

Actor Darshan : ಖೈದಿ ನಂ.6106ಕ್ಕೆ ಡಿಮ್ಯಾಂಡ್‌! ದರ್ಶನ್‌ ಫ್ಯಾನ್ಸ್‌ಗೆ ಕಾನೂನು ಕಂಟಕ, ರೂಲ್ಸ್‌ ಬ್ರೇಕ್‌ ಮಾಡಿದ್ರೆ ಬೀಳುತ್ತೆ ಕೇಸ್‌‌!

CM Siddaramaiah To Inaugurate Film Producers Association Building says build film city
ಸ್ಯಾಂಡಲ್ ವುಡ್44 mins ago

CM Siddaramaiah: ಡಾ.ರಾಜ್‍ಕುಮಾರ್ ಕನಸಿನಂತೆ ಫಿಲ್ಮ್ ಸಿಟಿ ನಿರ್ಮಾಣ ಮಾಡ್ತೇವೆ ಎಂದ ಸಿದ್ದರಾಮಯ್ಯ

Gold Rate Today
ಚಿನ್ನದ ದರ1 hour ago

Gold Rate Today: ಆಭರಣ ಖರೀದಿಗೆ ಇದು ಸೂಕ್ತ ಸಮಯ; ಯಥಾಸ್ಥಿತಿ ಕಾಯ್ದುಕೊಂಡ ಚಿನ್ನದ ದರ

Mann Ki Baat
ದೇಶ1 hour ago

Mann Ki Baat: ʼಸಂವಿಧಾನದ ಬಗ್ಗೆ ಅಚಲ ನಂಬಿಕೆ ಇರಿಸಿದ್ದಕ್ಕೆ ಧನ್ಯವಾದʼ-ಮೋದಿ ಮನ್‌ ಕೀ ಬಾತ್‌ ಹೈಲೈಟ್ಸ್‌ ಹೀಗಿದೆ ನೋಡಿ

Road Accident
ಬೆಂಗಳೂರು1 hour ago

Road Accident : ಬೆಂಗಳೂರಲ್ಲಿ ಬೈಕ್‌ ಸವಾರರಿಬ್ಬರ ಪ್ರಾಣ ಕಸಿದ ಹೈ ಸ್ಪೀಡ್‌

Hardik Pandya
ಕ್ರೀಡೆ1 hour ago

Hardik Pandya: ವಿಶ್ವಕಪ್​ ಗೆಲುವಿನ ಬಳಿಕ ಹಾರ್ದಿಕ್​ ಪಾಂಡ್ಯ ಕರೆ ಮಾಡಿದ್ದು ಯಾರಿಗೆ?; ನೆಟ್ಟಿಗರ ಉತ್ತರವೇನು?

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ8 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ7 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

Actor Darshan
ಬೆಂಗಳೂರು40 mins ago

Actor Darshan : ಖೈದಿ ನಂ.6106ಕ್ಕೆ ಡಿಮ್ಯಾಂಡ್‌! ದರ್ಶನ್‌ ಫ್ಯಾನ್ಸ್‌ಗೆ ಕಾನೂನು ಕಂಟಕ, ರೂಲ್ಸ್‌ ಬ್ರೇಕ್‌ ಮಾಡಿದ್ರೆ ಬೀಳುತ್ತೆ ಕೇಸ್‌‌!

karnataka weather Forecast
ಮಳೆ21 hours ago

Karnataka Weather : ಮಳೆಗೆ ಸ್ಕಿಡ್‌ ಆಗಿ ಹೇಮಾವತಿ ನದಿಗೆ ಹಾರಿದ ಕಾರು; ಕರಾವಳಿಗೆ ಎಚ್ಚರಿಕೆ ಕೊಟ್ಟ ತಜ್ಞರು

karnataka Rain
ಮಳೆ1 day ago

Karnataka Rain: ಭಾರಿ ಮಳೆಗೆ ಮನೆಗಳ ಗೋಡೆ ಕುಸಿತ; ಕೂದಲೆಳೆ ಅಂತರದಲ್ಲಿ ವೃದ್ಧ ಪಾರು

karnataka Weather Forecast
ಮಳೆ2 days ago

Karnataka Weather : ಅಬ್ಬಬ್ಬಾ.. ಮುಲ್ಕಿಯಲ್ಲಿ 30 ಸೆಂ.ಮೀ ಮಳೆ ದಾಖಲು; ವಾರಾಂತ್ಯದಲ್ಲೂ ಭಾರಿ ವರ್ಷಧಾರೆ

karnataka Rain
ಮಳೆ2 days ago

Karnataka Rain : ಭಾರಿ ಮಳೆಗೆ ಪಾತಾಳ ಸೇರಿದ ಬಾವಿ; ಅಲೆಗಳ ಹೊಡೆತಕ್ಕೆ ಸಮುದ್ರಪಾಲಾದ ಮನೆ

Karnataka Weather Forecast
ಮಳೆ3 days ago

Karnataka Weather : ಭಾರಿ ಮಳೆ ಹಿನ್ನೆಲೆ ದಕ್ಷಿಣ ಕನ್ನಡಕ್ಕೆ ರೆಡ್ ಅಲರ್ಟ್; ಶುಕ್ರವಾರವೂ ಶಾಲೆಗಳಿಗೆ ರಜೆ ಘೋಷಣೆ

karnataka Weather Forecast
ಮಳೆ3 days ago

Karnataka Weather : ಭಾರಿ ಮಳೆಗೆ ಸೇತುವೆಯಿಂದ ಹೊಳೆಗೆ ಬಿದ್ದ ಕಾರು; ಮರ ಹಿಡಿದು ಪ್ರಾಣ ಉಳಿಸಿಕೊಂಡ ಸವಾರರು

Heart Attack
ಕೊಡಗು3 days ago

Heart Attack : ಕೊಡಗಿನಲ್ಲಿ ಹೃದಯಾಘಾತಕ್ಕೆ ಯುವತಿ ಬಲಿ; ಹೆಚ್ಚಾಯ್ತು ಅಲ್ಪಾಯುಷ್ಯದ ಭಯ

karnataka Rains Effected
ಮಳೆ3 days ago

Karnataka Rain : ಧಾರಾಕಾರ ಮಳೆಗೆ ಸಡಿಲಗೊಂಡ ಗುಡ್ಡಗಳು; ಧರೆ ಕುಸಿದು ಮಣ್ಣಿನಡಿ ಸಿಲುಕಿದ ಇಬ್ಬರು ಮಕ್ಕಳು

karnataka Weather Forecast
ಮಳೆ6 days ago

Karnataka Weather : ಕರಾವಳಿಯಲ್ಲಿ ಮುಂದುವರಿದ ವರುಣಾರ್ಭಟ; ಸಾಂಪ್ರದಾಯಿಕ ಮೀನುಗಾರಿಕೆಗೂ ಬ್ರೇಕ್

ಟ್ರೆಂಡಿಂಗ್‌