CM Siddaramaiah: ಮೇಕೆದಾಟು ಯೋಜನೆಗೆ ತಮಿಳುನಾಡಿನ ತಕರಾರಿಲ್ಲ, ಕೇಂದ್ರ ಅನುಮತಿ ನೀಡಬೇಕು: ಸಿಎಂ ಸಿದ್ದರಾಮಯ್ಯ ಆಗ್ರಹ - Vistara News

ಕರ್ನಾಟಕ

CM Siddaramaiah: ಮೇಕೆದಾಟು ಯೋಜನೆಗೆ ತಮಿಳುನಾಡಿನ ತಕರಾರಿಲ್ಲ, ಕೇಂದ್ರ ಅನುಮತಿ ನೀಡಬೇಕು: ಸಿಎಂ ಸಿದ್ದರಾಮಯ್ಯ ಆಗ್ರಹ

CM Siddaramaiah: ಮುಂದಿನ ದಿನಗಳಲ್ಲಿ ಸಂಸತ್ತಿನ ಒಳಗೆ ಹಾಗೂ ಹೊರಗೆ ರಾಜ್ಯದ ಸಂಸದರು ಇನ್ನಷ್ಟು ಪರಿಣಾಮಕಾರಿಯಾಗಿ ದನಿ ಎತ್ತಿ ರಾಜ್ಯದ ಹಿತ ಕಾಪಾಡಬೇಕು ಎಂದು ನವ ದೆಹಲಿಯಲ್ಲಿ ನಡೆದ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.

VISTARANEWS.COM


on

ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ನವ ದೆಹಲಿ: ನಗರದ ಕರ್ನಾಟಕ‌ ಭವನದಲ್ಲಿ ರಾಜ್ಯವನ್ನು ಪ್ರತಿನಿಧಿಸುವ ಸಂಸದರು ಹಾಗೂ ಕೇಂದ್ರ ಸಚಿವರೊಂದಿಗೆ ಕೇಂದ್ರ ಸರ್ಕಾರದಲ್ಲಿ ಅನುಮೋದನೆಗೆ ಬಾಕಿ ಇರುವ ಪ್ರಸ್ತಾವನೆಗಳು ಹಾಗೂ ರಾಜ್ಯದ ಹಿತದೃಷ್ಟಿಯಿಂದ ಆಗಬೇಕಾಗಿರುವ ಕೆಲಸಗಳ ಕುರಿತು ಸಿಎಂ ಸಿದ್ದರಾಮಯ್ಯ ಅವರು ಗುರುವಾರ ಸಭೆ ನಡೆಸಿದರು. ರಾಜಕೀಯ ಉದ್ದೇಶವಿಲ್ಲದ, ಅದಕ್ಕೂ ಮೀರಿ ನಮ್ಮ ರಾಜ್ಯದ ಹಿತಾಸಕ್ತಿ ಕಾಯ್ದುಕೊಳ್ಳುವ ನಿಟ್ಟಿನಲ್ಲಿ ಕೇಂದ್ರ ಸಚಿವರು ಹಾಗೂ ಸಂಸದರು ಸದನದ ಒಳಗೆ ಹಾಗೂ ಹೊರಗೆ ಒಕ್ಕೊರಲಿನಿಂದ ಸೌಹಾರ್ದಯುತವಾಗಿ ದನಿ ಎತ್ತಲು ಸಿಎಂ ಸಿದ್ದರಾಮಯ್ಯ (CM Siddaramaiah) ಕರೆ ನೀಡಿದ್ದಾರೆ.

ನಾವು ಬೇರೆ ಬೇರೆ ರಾಜಕೀಯ ಪಕ್ಷಗಳನ್ನು ಪ್ರತಿನಿಧಿಸುತ್ತಿರಬಹುದು. ಆದರೆ ಕರ್ನಾಟಕದ ಹಿತಾಸಕ್ತಿಯ ವಿಷಯ ಬಂದಾಗ ನಾವೆಲ್ಲರೂ ಒಂದೇ ವೇದಿಕೆಯವರು. ಈ ವಿಷಯದಲ್ಲಿ ನಮ್ಮ ಹಿಂದಿನವರೂ ಸಹ ಮಾದರಿಗಳಾಗಿದ್ದಾರೆ.
ನೆಲ, ಜಲ, ಸಂಪನ್ಮೂಲ, ಭಾಷೆ, ಸಂಸ್ಕೃತಿ, ಐಡೆಂಟಿಟಿ ಇತ್ಯಾದಿ ವಿಚಾರಗಳಿಗೆ ಬಂದಾಗ ನಮಗೆ ಪಕ್ಷಗಳಿಲ್ಲ. ಕರ್ನಾಟಕ ಹಿತಾಸಕ್ತಿಯ ರಕ್ಷಣೆ ನಮ್ಮ ಆದ್ಯತೆ ಎಂದು ಸಂಸದರು, ಸಚಿವರಿಗೆ ಸಿಎಂ ತಿಳಿಸಿದ್ದಾರೆ.

ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ ಸಿದ್ದರಾಮಯ್ಯ ಅವರು, ಮಹದಾಯಿ ಕುಡಿಯುವ ನೀರಿನ ಯೋಜನೆ ಸಂಬಂಧ ಕೋರ್ಟ್‌ನಲ್ಲಿ ಕೇಸ್ ಇದೆ ಅಂತ ಬಿಜೆಪಿ ಹೇಳಿದೆ. ಆದರೆ, ನಾವು ಡಿಪಿಆರ್ ಕಳುಹಿಸಿದ್ದೇವೆ. ಟೆಂಡರ್ ಕೂಡ ಕರೆದಿದ್ದೇವೆ, ಗೆಜೆಟ್ ನೋಟಿಫಿಕೇಟಿನ್ ಕೂಡ ಆಗಿದೆ. ಅಲ್ಲಿ ಅಡ್ಡಿ ಇರುವುದು ಅರಣ್ಯ ಮತ್ತು ಪರಿಸರ ಕ್ಲಿಯರೆನ್ಸ್ ಅಷ್ಟೇ ಬೇಕು. ಇದು ಕೇಂದ್ರ ಸರ್ಕಾರದ ಕೆಲಸ. ಕೋರ್ಟ್‌ನಲ್ಲಿ ಇದೆ ಅಂತ ಹೇಳೋದು ಸರಿ ಅಲ್ಲ. ಆ ಕೆಲಸ ಮಾಡಿಕೊಡಬೇಕು ಎಂದು ಹೇಳಿದರು.

ಅಪ್ಪರ್ ಭದ್ರಾ ಯೋಜನೆ 5300 ಕೋಟಿ ಘೋಷಣೆ ಮಾಡಿದ್ದಾರೆ. 23-24ನೇ ಆರ್ಥಿಕ ವರ್ಷ ಮುಗಿದಿದೆ. ಆದರೆ ಇವತ್ತಿನವರೆಗೆ ದುಡ್ಡು ಬಿಡುಗಡೆ ಮಾಡಿಲ್ಲ. ನಿರ್ಮಲಾ ಸೀತಾರಾಮನ್ ಅವರು ನಿಮ್ಮಲ್ಲೇ ಟೆಕ್ನಿಕಲ್ ಪ್ರಾಬ್ಲಮ್ ಇದೆ ಅಂತ ಹೇಳುತ್ತಾರೆ. ಇನ್ನು ಮೇಕೆದಾಟು ಯೋಜನೆ 2018ರಿಂದ ಪೆಂಡಿಂಗ್ ಇದೆ. ನಾವು ಅಂದಾಜು ಮೊತ್ತ 9000 ಕೋಟಿ ಮಾಡಿ ಡಿಪಿಆರ್ ಮಾಡಿದ್ದೇವೆ. ಕೇಂದ್ರ ಸರ್ಕಾರ, ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರಕ್ಕೂ ನೀಡಿದ್ದೇವೆ.

ಮೇಕೆದಾಟು ಯೋಜನೆಗೆ ತಮಿಳುನಾಡಿನ ತಕರಾರು ಇಲ್ಲ ಅಂತ ನಾವು ಭಾವಿಸುತ್ತೇವೆ. ತಮಿಳುನಾಡಿಗೆ ಕೊಡುವ ನೀರು ಕೊಟ್ಟು, ನಾವು ಸಹ ನೀರು ಇಟ್ಟುಕೊಳ್ಳಬಹುದು. ಇದರಿಂದ ತಮಿಳುನಾಡಿಗೂ ಅನುಕೂಲ ಆಗುತ್ತೆ. ಈ ವಿಚಾರವನ್ನು ಕೇಂದ್ರ ತೀರ್ಮಾನ ಮಾಡಬೇಕು ಅಂತ ಗಮನಕೆ ತಂದಿದ್ದೇವೆ. ಬೆಂಗಳೂರಿಗೆ ಕುಡಿಯುವ ನೀರು, ವಿದ್ಯುತ್ ತಯಾರಿಕೆ ಮಾಡೋಕೆ ಅನುಕೂಲ ಆಗುತ್ತದೆ. 2022ರಲ್ಲಿ 177 ಟಿಎಂಸಿ ನೀರು ಜೊತೆಗೆ ಹೆಚ್ಚುವರಿ ನೀರು ಅವರಿಗೆ ಹೋಗಿದೆ. 2010ರಲ್ಲಿ ಅಪ್ಪರ್ ಕೃಷ್ಣಾ ಪ್ರಾಜೆಕ್ಟ್ ಟ್ರಿಬ್ಯುನಲ್‌ನಲ್ಲಿ ತೀರ್ಮಾನ ಆಗಿದೆ. ಆದರೆ, ಗೆಜೆಟ್ ನೋಟಿಫಿಕೇಟಿನ್ ಆಗಿಲ್ಲ, ಅದಕ್ಕೆ ಗೆಜೆಟ್ ನೋಟಿಫಿಕೇಷನ್ ಮಾಡಲು ಕೇಂದ್ರ ಸರ್ಕಾರಕ್ಕೆ ಹೇಳಲು ಸುಪ್ರೀಂ ಕೋರ್ಟ್‌ಗೆ ಮನವಿ ಮಾಡುತ್ತೇವೆ ಎಂದರು.

ಇದನ್ನೂ ಓದಿ | ಒಕ್ಕಲಿಗ ಆಯ್ತು, ಈಗ ಲಿಂಗಾಯತ ಮುಖ್ಯಮಂತ್ರಿಗೆ ಪಂಚ ಪೀಠ ಶ್ರೀಗಳಿಂದ ಬೇಡಿಕೆ!

ಚರ್ಚಿಸಿದ ಪ್ರಮುಖ ವಿಷಯಗಳು

  1. ಬೆಂಗಳೂರು ಮತ್ತು ಸುತ್ತಮುತ್ತಲ ಜನ ವಸತಿ ಪ್ರದೇಶಗಳಿಗೆ ನಿರಾತಂಕವಾಗಿ ಕುಡಿಯುವ ನೀರನ್ನು ಪೂರೈಸಲು ಹಾಗೂ ಆಣೆಕಟ್ಟೆಯಿಂದ ಹರಿಯುವ ನೀರಿನಿಂದ ವಿದ್ಯುತ್ ಉತ್ಪಾದಿಸಲು ರಾಜ್ಯ ಸರ್ಕಾರವು 67 ಟಿಎಂಸಿ ಸಾಮರ್ಥ್ಯದ ಮೇಕೆದಾಟು ಯೋಜನೆಯನ್ನು ರೂಪಿಸಿದೆ. ಈ ಪ್ರಸ್ತಾವನೆಯು 2018 ರಿಂದ ಕೇಂದ್ರ ಸರ್ಕಾರದಲ್ಲಿ ಬಾಕಿ ಇದೆ. ಈ ಯೋಜನೆಗೆ ಹಲವು ಹಂತಗಳ ಅನುಮತಿ ಅಗತ್ಯವಿದೆ. ಪ್ರಸ್ತುತ ಕೇಂದ್ರ ಸರ್ಕಾರದ ಅರಣ್ಯ ಮತ್ತು ಪರಿಸರ ಮಂತ್ರಾಲಯವು environmental clearance ಅನ್ನು ಶೀಘ್ರವಾಗಿ ಮಾಡಿಕೊಡುವಂತೆ ಒತ್ತಾಯಿಸುವುದು.
  2. ಭದ್ರಾ ಯೋಜನೆ ಮೂಲಕ 2.25 ಲಕ್ಷ ಹೆಕ್ಟೇರ್ ಎತ್ತುವರಿ ನೀರಾವರಿ ಮೂಲಕ ವ್ಯವಸಾಯಕ್ಕಾಗಿ / ಕುಡಿಯುವ ನೀರಿಗಾಗಿ ನೀರನ್ನು ಒದಗಿಸುವ ಪ್ರಸ್ತಾವನೆಯು 2020 ರಿಂದ ಕೇಂದ್ರ ಸರ್ಕಾರದಲ್ಲಿ ಬಾಕಿ ಇದೆ. ಇದಕ್ಕಾಗಿ 2023-24ರ ಕೇಂದ್ರ ಸರ್ಕಾರದ ಆಯವ್ಯಯದಲ್ಲಿ 5,300 ರೂ. ಕೋಟಿ ಅನುದಾನವನ್ನು ಘೋಷಿಸಲಾಗಿದೆ. ಆದರೆ ಇದುವರೆಗೆ ಯಾವುದೇ ಅನುದಾನವನ್ನು ಕೇಂದ್ರ ಸರ್ಕಾರವು ಬಿಡುಗಡೆ ಮಾಡಿರುವುದಿಲ್ಲ. ಈ ಅನುದಾನವನ್ನು ಬಿಡುಗಡೆ ಮಾಡಿಸಲು ನೆರವಾಗಬೇಕು. ಜೊತೆಗೆ, ಈ ಯೋಜನೆಯನ್ನು ಕೂಡಲೆ ರಾಷ್ಟ್ರೀಯ ಯೋಜನೆ ಎಂದು ಘೋಷಿಸಬೇಕೆಂದು ಕೇಂದ್ರದ ಮೇಲೆ ಒತ್ತಡ ಹೇರುವುದು.
  3. ಕಳಸಾ ಬಂಡೂರಿ ನಾಲಾ ಯೋಜನೆಗೆ ಮಹಾದಾಯಿ ಜಲ ವಿವಾದ ನ್ಯಾಯಮಂಡಳಿ ಅವಾರ್ಡ್ 2018 ರಲ್ಲಿ ಘೋಷಿಸಲಾಗಿತ್ತು. ರಾಜ್ಯ ಸರ್ಕಾರದ ವತಿಯಿಂದ ವಿಸ್ತೃತ ಯೋಜನಾ ವರದಿಯನ್ನು (DPR) ಈಗಾಗಲೆ ಒದಗಿಸಲಾಗಿದೆ. ಅದನ್ನು ಅನುಮೋದಿಸಲು ದಿನಾಂಕ: 30.01.2024 ರಂದು ನ್ಯಾಷನಲ್ ಬೋರ್ಡ್ ಆಫ್ ವೈಲ್ಡ್ ಲೈಫ್ ಸಮಿತಿ ಸಭೆ ಸೇರಿ ದಿನಾಂಕ: 08.01.2024 ರಂದು ವರದಿಯನ್ನು ಸಲ್ಲಿಸಿದೆ. ಈ ವಿಷಯವನ್ನು 77 ನೆ ಸಭೆಯ ಮುಂದೆ ಮಂಡಿಸಲಾಗಿತ್ತು. ಆದರೆ ಸಮಿತಿಯು ಈ ಕುರಿತು ತೀರ್ಮಾನ ಮಾಡಲು ಸಹ ಈ ವಿಷಯವನ್ನು ವಿನಾ ಕಾರಣ ಮುಂದೂಡಲಾಗಿದೆ [ಡೆಫರ್]. ಕಿತ್ತೂರು ಕರ್ನಾಟಕದ ಒಣ ಪ್ರದೇಶಗಳ ಜನರಿಗೆ ನೀರನ್ನು ಒದಗಿಸುವ ಉದ್ದೇಶದಿಂದ ಈ ಯೋಜನೆಯನ್ನು ರೂಪಿಸಲಾಗಿದೆ. ಆದ್ದರಿಂದ ಅತಿ ಶೀಘ್ರವಾಗಿ ತೊಡಕುಗಳು ನಿವಾರಣೆಯಾಗುವಂತೆ ನೋಡಿಕೊಳ್ಳುವುದು.
  4. ನಮ್ಮ ಮೆಟ್ರೋ ರೈಲು ಯೋಜನೆಯಡಿಯಲ್ಲಿ ಹಂತ-3 ರ ಕಾಮಗಾರಿಗೆ ರೂ.15611 ಕೋಟಿಗಳ ಪ್ರಸ್ತಾವನೆಯನ್ನು ಕೇಂದ್ರದ ವಸತಿ ಮತ್ತು ನಗರಾಭಿವೃಧ್ಧಿ ಮಂತ್ರಾಲಯಕ್ಕೆ ದಿನಾಂಕ:03.08.2023 ರಂದು ಸಲ್ಲಿಸಲಾಗಿದೆ. ಹಾಗೂ ಡಿಪಿಆರ್ ಅನ್ನೂ ಸಹ ಸಲ್ಲಿಸಲಾಗಿದೆ. ಈ ಯೋಜನೆಯ ಕುರಿತು ಸಾರ್ವಜನಿಕ ಹೂಡಿಕೆಗಳ ಮಂಡಳಿಯು ದಿನಾಂಕ 6-5.2024 ರಂದು ಸಭೆ ನಡೆಸಿದೆ. 17-5-2024 ರಂದು ಶಿಫಾರಸನ್ನೂ ಮಾಡಲಾಗಿದೆ. ಪಿಐಬಿಯು ಕೇಳಿದ್ದ ಎಲ್ಲ ಮಾಹಿತಿಯನ್ನು ಒದಗಿಸಲಾಗಿದೆ. ಈ ಪ್ರಸ್ತಾವನೆಯು ಸದ್ಯ ಕೇಂದ್ರ ಸರ್ಕಾರದ ಮುಂದೆ ಇದೆ. ಈ ಪ್ರಸ್ತಾವನೆಯನ್ನು ಶೀಘ್ರವಾಗಿ ಅನುಮೋದನೆ ಮಾಡಿಸುವುದು.
  5. 15ನೆ ಹಣಕಾಸು ಆಯೋಗವು ಎರಡು ವರದಿಗಳನ್ನು ನೀಡಿದೆ. ಎರಡೂ ವರದಿಗಳೂ ಅಂತಿಮ ವರದಿಗಳೆ ಮೊದಲನೆಯದು 2020-21 ವರ್ಷಕ್ಕೆ ಸಂಬಂಧಿಸಿದ್ದು, ಎರಡನೆಯದು 2021 ರಿಂದ 2026 ವರ್ಷಗಳಿಗೆ ಸಂಬಂಧಿಸಿದ್ದು. ಮೊದಲ ವರದಿಯಲ್ಲಿ 5,495 ಕೋಟಿ ರೂಪಾಯಿಗಳ ವಿಶೇಷ ಅನುದಾನವನ್ನು ಕರ್ನಾಟಕಕ್ಕೆ ಕೊಡಬೇಕೆಂದು ಶಿಫಾರಸು ಮಾಡಲಾಗಿದೆ. ಎರಡನೆಯ ವರದಿಯಲ್ಲಿ ಫೆರಿಫೆರಲ್ ರಿಂಗ್ ರಸ್ತೆಗೆ 3,000 ಕೋಟಿ ರೂ ಮತ್ತು ಕೆರೆ ಹಾಗೂ ಜಲಮೂಲಗಳ ಅಭಿವೃದ್ಧಿಗೆ 3,000 ಕೋಟಿ ಸೇರಿ ಒಟ್ಟಿಗೆ 11,495 ಕೋಟಿ ರೂಪಾಯಿಗಳನ್ನು ನೀಡಲು ಶಿಫಾರಸು ಮಾಡಲಾಗಿದೆ. ಈ ಅನುದಾನ / ವಿಶೇಷ ಅನುದಾನ ಕೂಡಲೇ ಬಿಡುಗಡೆ ಮಾಡುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಬೇಕಾಗಿದೆ.
  6. ಕಲ್ಯಾಣ ಕರ್ನಾಟಕ ಅಭಿವೃದ್ಧಿ ಪ್ರದೇಶಗಳಲ್ಲೊಂದಾದ ಮಹಾತ್ವಾಕಾಂಕ್ಷೆ ಜಿಲ್ಲೆಯಾದ ರಾಯಚೂರಿನಲ್ಲಿ All India Institute of Medical Sciences (AIIMS) ಸ್ಥಾಪಿಸಲು ಕೇಂದ್ರ ಸರ್ಕಾರಕ್ಕೆ ವಿವಿಧ ದಿನಾಂಕಗಳಲ್ಲಿ ಪ್ರಸ್ತಾವನೆ ಸಲ್ಲಿಸಲಾಗಿದೆ. ಈ ಪ್ರಸ್ತಾವನೆಗೆ ಕೇಂದ್ರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮಂತ್ರಾಲಯದಿಂದ ತ್ವರಿತ ಅನುಮೋದನೆ ನೀಡಲು ಕೋರಲಾಗಿದೆ.
  7. ಮೈಸೂರು ಅಥವಾ ಹಾಸನಕ್ಕೆ ಮತ್ತೊಂದು IIT ಬೇಕು ಎನ್ನುವ ಪ್ರಸ್ತಾವನೆ ಸಲ್ಲಿಕೆ ಮಾಡಿದ್ದೇವೆ. ಇದು ಈಡೇರಿಸಬೇಕಾಗಿದೆ.
  8. ಉಡಾನ್ ಯೋಜನೆಯಡಿ ‘SEA PLANE’ ಕಾರ್ಯಕ್ರಮವನ್ನು ಮಲ್ಪೆ, ಬೈಂದೂರು, ಮಂಗಳೂರು, ಕಾಳಿ ನದಿ ಮುಂತಾದ ಕಡೆ ಪ್ರಾರಂಭಿಸಿ ಪ್ರವಾಸೋದ್ಯಮವನ್ನು ಉತ್ತೇಜಿಸುವ ದೃಷ್ಟಿಯಿಂದ ಪ್ರಸ್ತಾವನೆಗಳನ್ನು ಕೇಂದ್ರ ಸರ್ಕಾರದ ನಾಗರಿಕ ವಿಮಾನಯಾನ ಇಲಾಖೆಗೆ ಸಲ್ಲಿಸಲಾಗಿದೆ. ಈ ಪ್ರಸ್ತಾವನೆಗಳು ಸದರಿ ಇಲಾಖೆಯಲ್ಲಿ ಬಾಕಿ ಇದ್ದು ಅವುಗಳನ್ನು ಆದಷ್ಟು ಶೀಘ್ರವಾಗಿ ಬಗೆಹರಿಸಿ ಅನುಮೋದನೆ ಕೊಡಿಸುವುದು.
  9. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು Air Cargo ಕಾಂಪ್ಲೆಕ್ಸ್ ಆಗಿ ಪರಿಗಣಿಸಲು ಸಿವಿಲ್ ಏವಿಯೇಷನ್ ಮಂತ್ರಾಲಯಕ್ಕೆ ಪ್ರಸ್ತಾವನೆಯನ್ನು ದಿನಾಂಕ:05.06.2024 ರಂದು ಕಳುಹಿಸಲಾಗಿದೆ. ಇದರಿಂದ ರಾಜ್ಯದಲ್ಲಿ ಹೆಚ್ಚು ರಫ್ತು ಮತ್ತು ಆರ್ಥಿಕ ಬೆಳವಣಿಗೆ ಸುಧಾರಿಸುವುದು. ಆದ್ದರಿಂದ ಈ ಪ್ರಸ್ತಾವನೆಗೆ ಅನುಮೋದನೆ ದೊರೆಯುವಂತೆ ನೋಡಿಕೊಳ್ಳುವುದು.
  10. ಪಶ್ಚಿಮ ಘಟ್ಟಗಳ ಜನರ ರಕ್ಷಣೆಗಾಗಿ ಕಸ್ತೂರಿ ರಂಗನ್ ವರದಿಯನ್ನು ತಿರಸ್ಕರಿಸುವಂತೆ ನಿರ್ಧರಿಸಿ ಪ್ರಸ್ತಾವನೆಯನ್ನು ಕಳಿಸಲಾಗಿದೆ. ರಾಜ್ಯ ಸರ್ಕಾರದ ಪ್ರಸ್ತಾವನೆಯನ್ನು ಅಂಗೀಕರಿಸಿ ಸೂಕ್ತ ತೀರ್ಮಾನಗಳನ್ನು ಹೊರಡಿಸಬೇಕಾಗಿರುತ್ತದೆ.
  11. ರಾಜ್ಯವು ರೈಲ್ವೆ ನೆಟ್‌ವರ್ಕಿನಲ್ಲಿ ಉತ್ತರದ ರಾಜ್ಯಗಳಿಗೆ ಹೋಲಿಸಿದರೆ ಬಹಳ ಹಿಂದುಳಿದಿದೆ. ಹಾಗಾಗಿ ರೈಲ್ವೆ ಯೋಜನೆಗಳಿಗೆ ಆದ್ಯತೆ ನೀಡಬೇಕಾಗಿದೆ.
  12. ಗ್ರಾಮ ಸಡಕ್ ಯೋಜನೆಯಲ್ಲಿ ದೇಶದ ಅನೇಕ ರಾಜ್ಯಗಳಿಗೆ ಹೋಲಿಕೆ ಮಾಡಿದರೆ ನಮ್ಮ ರಾಜ್ಯಕ್ಕೆ ಕಡಿಮೆ ಪ್ರಮಾಣದ ರಸ್ತೆಗಳನ್ನು ಮಂಜೂರು ಮಾಡಲಾಗಿದೆ. ಹಾಗಾಗಿ ತಾವುಗಳು ಈ ಕುರಿತು ಕೇಂದ್ರ ಸರ್ಕಾರದ ಗಮನ ಸೆಳೆದು ಹೆಚ್ಚು ಅನುದಾನಗಳನ್ನು ಒದಗಿಸಿಕೊಡಬೇಕು.
  13. ಪ್ರಧಾನ ಮಂತ್ರಿ ಕೃಷಿ ಸಿಂಚಾಯಿ ಯೋಜನೆಯಡಿಯಲ್ಲಿ ಬೆಳಗಾವಿಯಲ್ಲಿ 70 ಕಾಮಗಾರಿಗಳು, ಯಾದಗಿರಿಯಲ್ಲಿ 70 ಕಾಮಗಾರಿಗಳು, ಕಲಬುರ್ಗಿಯಲ್ಲಿ 106 ಕಾಮಗಾರಿಗಳು, ಧಾರವಾಡದಲ್ಲಿ 50 ಕಾಮಗಾರಿಗಳು, ಒಟ್ಟು 296 ಕಾಮಗಾರಿಗಳ ಅಂದಾಜು ಮೊತ್ತ ರೂ.770 ಕೋಟಿಗಳು ಬಿಡುಗಡೆಯಾಗಬೇಕಾಗಿರುತ್ತದೆ. ಕೇಂದ್ರ ಸರ್ಕಾರದ ಜಲಶಕ್ತಿ ಮಂತ್ರಾಲಯದಿಂದ ತ್ವರಿತ ಅನುದಾನ ಬಿಡುಗಡೆ ಮಾಡುವಂತೆ ಒತ್ತಾಯಿಸುವುದು.
  14. ದೇಶದಲ್ಲಿ 12 ಅತಿ ಹೆಚ್ಚು ಬರಪೀಡಿತ ರಾಜ್ಯಗಳಲ್ಲಿ ಕರ್ನಾಟಕ ರಾಜ್ಯವು ಇದ್ದು, ಬರವನ್ನು ತಡೆಗಟ್ಟುವ ಸಲುವಾಗಿ National Disaster Risk Management Fund (NDRMF) ಅಡಿಯಲ್ಲಿ ರೂ.100 ಕೋಟಿಗಳ ಅನುದಾನವನ್ನು ಒದಗಿಸುವಂತೆ ಕೋರಿ ದಿನಾಂಕ: 30.10.2023 ರಂದು ಪ್ರಸ್ತಾವನೆ ಸಲ್ಲಿಸಲಾಗಿದೆ. ಇದಲ್ಲದೆ, ಬೆಂಗಳೂರು ನಗರದಲ್ಲಿ ಅತಿ ಹೆಚ್ಚು ನೆರೆ ಸಂಭವಿಸಿದ್ದು, ಅವುಗಳನ್ನು ತಡೆಗಟ್ಟಲು 15ನೇ ಹಣಕಾಸು ಆಯೋಗವು ರೂ.250 ಕೋಟಿಗಳ ಅನುದಾನವನ್ನು ಮೀಸಲಿಟ್ಟಿದ್ದು, ಈ ಅನುದಾನವು ಇನ್ನೂ ಬಿಡಗಡೆಯಾಗಿರುವುದಿಲ್ಲ. ಆದ್ದರಿಂದ ತುರ್ತಾಗಿ ಈ ಅನುದಾನ ಬಿಡುಗಡೆಯಾಗುವಂತೆ ನೋಡಿಕೊಳ್ಳುವುದು.
  15. ಕೇಂದ್ರದ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದ ಮನವಿಯಂತೆ ದಿನಾಂಕ:20.07.2023 ರಂದು ರಾಜ್ಯ ಸರ್ಕಾರದ ಶಿರಾಡಿ ಘಾಟ್‌ನಲ್ಲಿ 30 ಕಿ.ಮೀ.ನ ಎರಡು ಲೇನ್ ರಸ್ತೆಯನ್ನಾಗಿ ಪರಿವರ್ತಿಸಲು ರೂ.2,580 ಕೋಟಿ ಪ್ರಸ್ತಾವನೆಯನ್ನು NHAIಗೆ ದಿನಾಂಕ: 03.08.2023 ರಂದು ಸಲ್ಲಿಸಲಾಗಿದ್ದು, ಇದನ್ನು ತ್ವರಿತಗೊಳಿಸಲು ಅನುಮೋದನೆ ನೀಡಿದಲ್ಲಿ ರಾಜ್ಯದ ವಾಣಿಜ್ಯ ಚಟುವಟಿಕೆಗಳನ್ನು ಮಂಗಳೂರು ಬಂದರಿಗೆ ರಫ್ತು ಮಾಡಲು ಉಪಯೋಗವಾಗುತ್ತದೆ. ಇದರ ಜೊತೆಗೆ ರಾಜ್ಯದಿಂದ ದಿನಾಂಕ 28.07.2017 ಮತ್ತು 7.3.2018] ಒಟ್ಟು 38 ಹೆದ್ದಾರಿ ಕಾಮಗಾರಿಗಳನ್ನು ತೆಗೆದುಕೊಳ್ಳಲು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆಗಳನ್ನು ಕಳಿಸಲಾಗಿದೆ. ಈ ಪ್ರಸ್ತಾವನೆಗಳಲ್ಲಿ ಒಟ್ಟಾರೆ 4,807 ಕಿ.ಮೀ. ರಸ್ತೆ ಒಳಗೊಂಡಿದೆ. ಈ ಪ್ರಸ್ತಾವನೆಗಳು ಕೇಂದ್ರ ಸರ್ಕಾರದ ಮುಂದೆ ಇವೆ. ಇವುಗಳನ್ನು ಶೀಘ್ರವಾಗಿ ಬಗೆಹರಿಸಿಕೊಡುವುದು.
  16. MGNREGA ಅಡಿಯಲ್ಲಿ ಕೆಲವು ಅಗತ್ಯವಿರುವ ಶಾಲಾ ಕಟ್ಟಡ, ತರಗತಿ ಕೊಠಡಿ, ಗ್ರಂಥಾಲಯ, ಇತರೆ ಗ್ರಾಮೀಣ ಅಭಿವೃದ್ಧಿ ಯೋಜನೆಗಳಿಗೆ ಉಪಯೋಗಿಸಲು ಸುಮಾರು ಪ್ರಸ್ತಾವನೆಗಳನ್ನು ನೀಡಲಾಗಿದೆ. ಇದರಿಂದ ಗ್ರಾಮ ಮಟ್ಟದಲ್ಲಿ ಹೆಚ್ಚು ಸಾಮಾಜಿಕ ಹಾಗೂ ಆರ್ಥಿಕ ಅಭಿವೃದ್ಧಿ ಮಾಡಲು ಕೇಂದ್ರದ ಭೂ ಸಂಪನ್ಮೂಲ ಮತ್ತು ಗ್ರಾಮೀಣಾಭಿವೃದ್ಧಿ ಮಂತ್ರಾಲಯವನ್ನು ಕೋರಲಾಗಿದೆ.
  17. ಇದೇ ರೀತಿ 207 ಸಬ್-ರಿಜಿಸ್ಟ್ರಾರ್ ಕಛೇರಿಗಳನ್ನು ಗಣಕೀಕರಣಗೊಳಿಸಲು, ಡಿಜಿಟಲ್ ಇಂಡಿಯಾ ಮಾಡ್ರನೈಸೇಷನ್ ಕಾರ್ಯಕ್ರಮದಡಿಯಲ್ಲಿ ರೂ.365 ಕೋಟಿಗಳ ಅನುದಾನದ ಪ್ರಸ್ತಾವನೆಯನ್ನು ದಿನಾಂಕ:07.06.2024 ರಂದು ಕಳುಹಿಸಲಾಗಿದೆ. ಇದರಿಂದ ಕಂದಾಯ ಇಲಾಖೆಯ ಮೂಲಕ ಉತ್ತಮ ಹಾಗೂ ನುರಿತ ಆಡಳಿತವನ್ನು ನೀಡಲು ಸಾಧ್ಯವಾಗುವುದು. ಈ ಪ್ರಸ್ತಾವನೆಯು ಸಹ ಭೂಸಂಪನ್ಮೂಲ ಹಾಗೂ ಗ್ರಾಮೀಣಾಭಿವೃದ್ಧಿ ಇಲಾಖೆಯಲ್ಲಿದೆ. ಇವುಗಳು ತುರ್ತಾಗಿ ಅನುಮೋದನೆಯಾಗುವಂತೆ ನೋಡಿಕೊಳ್ಳುವುದು.
  18. ಯುವಜನ ಸಬಲೀಕರಣ ಇಲಾಖೆಯಡಿಯಲ್ಲಿನ ಖೇಲೊ ಇಂಡಿಯಾ ಕಾರ್ಯಕ್ರಮಗಳಡಿಯಲ್ಲಿ ಒಟ್ಟು 16 ವಿವಿಧ ಕಾರ್ಯಕ್ರಮಗಳ ಪ್ರಸ್ತಾವನೆಗಳು ಅನುಮೋದನೆಗಾಗಿ ಕಳೆದ ವರ್ಷದ ನವೆಂಬರ್ ತಿಂಗಳಿನಿಂದ ಕೇಂದ್ರ ಸರ್ಕಾರದಲ್ಲಿ ಬಾಕಿ ಇವೆ. ಖೇಲೊ ಇಂಡಿಯಾ ಯೋಜನೆ [ ಅಕ್ಟೋಬರ್-2017 ] ಪ್ರಾರಂಭವಾದಾಗಿದ ಅತ್ಯಂತ ಕಡಿಮೆ ಅನುದಾನ ಪಡೆದ ರಾಜ್ಯ ಕರ್ನಾಟಕವಾಗಿದೆ. ಕರ್ನಾಟಕವು ಅನೇಕ ಹೆಸರಾಂತ ಕ್ರೀಡಾಪಟುಗಳನ್ನು ದೇಶಕ್ಕೆ ಕೊಡುಗೆಯಾಗಿ ಕೊಟ್ಟಿದೆ. ಆದ್ದರಿಂದ ಕೇಂದ್ರ ಸರ್ಕಾರದ ಮುಂದೆ ಬಾಕಿ ಇರುವ ಈ 16 ಕಾರ್ಯಕ್ರಮಗಳು ಅನುಮೋದನೆಯಾಗುವಂತೆ ನೋಡಿಕೊಳ್ಳಬೇಕು.
  19. ಕೇಂದ್ರದ ಆಹಾರ ಮತ್ತು ನಾಗರೀಕ ಸರಬರಾಜು ಮಂತ್ರಾಲಯ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ ಯೋಜನೆ (PMGKAY) ಅಡಿಯಲ್ಲಿ ಒಟ್ಟು ರೂ.584 ಕೋಟಿ ಅನುದಾನ ಬಿಡುಗಡೆಯಾಗಬೇಕಾಗಿದೆ ಹಾಗೂ ರಾಜ್ಯ ಸರ್ಕಾರಕ್ಕೆ 2.17 ಲಕ್ಷ ಮೆಟ್ರಿಕ್ ಟನ್ ಲಭ್ಯವಿದ್ದು, ಪ್ರಸ್ತುತ 30,000 ಮೆಟ್ರಿಕ್ ಟನ್‌ಗಳನ್ನು ಹೆಚ್ಚುವರಿಯಾಗಿ ನೀಡಲು ಕೋರಲಾಗಿದೆ.
  20. ಬುಡಕಟ್ಟು ವ್ಯವಹಾರಗಳ ಸಚಿವಾಲಯದಲ್ಲಿ ನೈಜ ದುರ್ಬಲ ಬುಡಕಟ್ಟು ಸಮುದಾಯಗಳ ಜನರಿಗೆ ಮನೆ ಕೊಡುವ ಪ್ರಸ್ತಾವನೆಯು ದಿನಾಂಕ:23.3.2023 ರಿಂದ ಬಾಕಿಯಾಗಿರುತ್ತದೆ. ಇವುಗಳನ್ನು ಶೀಘ್ರವಾಗಿ ಬಗೆಹರಿಸಿಕೊಡುವುದು. ಇದೇ ಸಚಿವಾಲಯದಲ್ಲಿ ಹೊಸ ಪೋಸ್ಟ್ ಮೆಟ್ರಿಕ್ ಬಾಲಕಿಯರ ಮತ್ತು ಬಾಲಕರ ವಸತಿ ನಿಲಯಗಳಿಗೆ ಅನುಮೋದನೆ ನೀಡುವಂತೆ ಕೋರಿ ಪ್ರಸ್ತಾವನೆಯನ್ನು ದಿನಾಂಕ:06-06-2023 ರಂದು ಕಳುಹಿಸಲಾಗಿದೆ.
  21. ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಇಲಾಖೆಯ ವ್ಯಾಪ್ತಿಯಲ್ಲಿ ವಸತಿ, ವಸತಿ ನಿಲಯ ಮುಂತಾದ 5 ಪ್ರಸ್ತಾವನೆಗಳು 2023 ರ ಜೂನ್ ತಿಂಗಳಿಂದ ಬಾಕಿಯಾಗಿವೆ.
  22. ಅಲ್ಪ ಸಂಖ್ಯಾತ ವ್ಯವಹಾರಗಳ ಸಚಿವಾಲಯಕ್ಕೆ 52 ಯೋಜನೆಗಳನ್ನು ಸಲ್ಲಿಸಲಾಗಿತ್ತು. ಇವುಗಳ ಒಟ್ಟು ಮೊತ್ತ 659 ಕೋಟಿ ರೂ.ಗಳಷ್ಟಾಗಿರುತ್ತದೆ. 32 ವಸತಿ ಶಾಲೆಗಳು, 11 ವಸತಿ ನಿಲಯಗಳು, 4 ಡೇ ಸ್ಕೂಲ್‌ಗಳು, 4 ಕೌಶಲ್ಯ ಕೇಂದ್ರಗಳು ಸೇರಿವೆ. ಇವುಗಳಲ್ಲಿ 12 ಯೋಜನೆಗಳು ಅನುಮೋದನೆಯಾಗಿವೆ. ಆದರೆ ಹಣ ಬಿಡುಗಡೆಯಾಗಿಲ್ಲ. ಉಳಿದ 40 ಯೋಜನೆಗಳು ಬಾಕಿ ಉಳಿದಿವೆ.
  23. MSP ಅಡಿಯಲ್ಲಿ ಕೇಂದ್ರ ಸರ್ಕಾರಕ್ಕೆ ಮರುಪಾವತಿಗೆ ಕಳುಹಿಸಿರುವ ದಾಖಲೆಗಳ ಮೊತ್ತವು ರೂ.1,027.82 ಕೋಟಿಗಳಾಗಿರುತ್ತದೆ. ಅದನ್ನು ಬಿಡುಗಡೆ ಮಾಡಲು ಕೋರಲಾಗಿದೆ.
  24. ಮೀನುಗಾರಿಕೆಗೆ ಸಂಬಂಧಿಸಿದಂತೆ ಉತ್ತರ ಕನ್ನಡ ಜಿಲ್ಲೆಯ ಮಾಜಳಿಯಲ್ಲಿ ಹೊಸದಾಗಿ ಮೀನುಗಾರಿಕಾ ಬಂದರನ್ನು ನಿರ್ಮಿಸುವುದು ಮತ್ತು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈಗಾಗಲೇ ನಿರ್ಮಿಸಿರುವ ಮೀನುಗಾರಿಕಾ ಬಂದರನ್ನು ವಿಸ್ತರಿಸುವ ಪ್ರಸ್ತಾವನೆಯನ್ನು ಸಲ್ಲಿಸಲಾಗಿದೆ. 2023 ರಿಂದ ಈ ವಿಷಯ ಬಾಕಿಯಾಗಿದೆ.
  25. 15ನೇ ಹಣಕಾಸು ಆಯೋಗದಿಂದ ರಾಜ್ಯಕ್ಕೆ ಭರಿಸಲಾಗದ ನಷ್ಟವುಂಟಾಗಿದೆ. ಮೊದಲಿನ ಹಣಕಾಸು ಆಯೋಗಗಳು 1971 ರ ಜನಗಣತಿ ವರದಿಯನ್ನು ಆಧರಿಸಿ ಸಂಪನ್ಮೂಲಗಳನ್ನು ಹಂಚಿಕೆ ಮಾಡುತ್ತಿದ್ದವು. ಆದರೆ 15 ನೆ ಹಣಕಾಸು ಆಯೋಗವು 2011 ರ ಜನಗಣತಿಯನ್ನು ಆಧರಿಸಿ ಸಂಪನ್ಮೂಲಗಳನ್ನು ಹಂಚಿಕೆ ಮಾಡಿದೆ. ಜನಸಂಖ್ಯಾ ನಿಯಂತ್ರಣವನ್ನು ಸಾಧಿಸಿ ದೇಶದ ಅಭಿವೃದ್ಧಿಗೆ ಶ್ರಮಿಸಿದ ಕಾರಣದಿಂದಾಗಿಯೆ ನಮ್ಮ ರಾಜ್ಯಕ್ಕೆ ಸಮಸ್ಯೆಯಾಗಿದೆ. ಈ ಕಾರಣದಿಂದ ನಮಗೆ 2017-18 ನೆ ಸಾಲಿನ ಬಜೆಟ್‌ಗೆ ಹೋಲಿಸಿದರೆ ಬೃಹತ್ ಪ್ರಮಾಣದಲ್ಲಿ [ಅರ್ಧಕ್ಕರ್ಧ] ತೆರಿಗೆ ಹಂಚಿಕೆ ಹಾಗೂ ಇನ್ನಿತರೆ ಸಂಪನ್ಮೂಲಗಳ ಹಂಚಿಕೆಯು ಕಡಿಮೆಯಾಗಿದೆ. ಈಗ 16 ಹಣಕಾಸು ಆಯೋಗವು ರಚನೆಯಾಗಿದೆ. 16 ನೆ ಹಣಕಾಸು ಆಯೋಗದಲ್ಲಿ ರಾಜ್ಯಕ್ಕೆ ಯಾವುದೇ ಅನ್ಯಾಯವಾಗದಂತೆ ತಾವುಗಳು ನೋಡಿಕೊಳ್ಳಬೇಕೆಂದು ಮನವಿ ಮಾಡುತ್ತೇವೆ.
  26. ಈ ಎಲ್ಲಾ ಬೇಡಿಕೆ, ಯೋಜನೆ, ಪ್ರಸ್ತಾವನೆಗಳ ಮಂಜೂರಾತಿಗೆ ಮನವಿ ಮಾಡುತ್ತೇನೆ. ಈ ಮನವಿಗಾಗಿ ಈ ಸೌಹಾರ್ದ ಸಭೆ ನಡೆಸುತ್ತಿದ್ದೇವೆ. ರಾಜ್ಯದ ಅಭಿವೃದ್ಧಿ ಒಂದೇ ನಮ್ಮ ಗುರಿ. ಇದರಲ್ಲಿ ರಾಜಕೀಯ, ಟೀಕೆ, ಭಾವನಾತ್ಮಕ ಆರೋಪಗಳ ಅಗತ್ಯವಿಲ್ಲ. ರಾಜ್ಯದ ಅಭಿವೃದ್ಧಿಗೆ ಸೌಹಾರ್ದಯುತವಾಗಿ ಪ್ರಯತ್ನಿಸೋಣ ಎಂದು ಮನವಿ ಮಾಡಿದ್ದೇನೆ ಎಂದು ಸಿಎಂ ಸಿದ್ದರಾಮಯ್ಯ ತಿಳಿಸಿದ್ದಾರೆ.

ಇದನ್ನೂ ಓದಿ | ಹಾವೇರಿ ಅಪಘಾತ ಪ್ರಕರಣ; 13 ಮೃತರಿಗೆ ತಲಾ 2 ಲಕ್ಷ ರೂ. ಪರಿಹಾರ ಘೋಷಿಸಿದ ಸಿಎಂ

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಬೆಂಗಳೂರು

Bengaluru News: ಬೆಂಗಳೂರಿನ ವಿದ್ಯಾರ್ಥಿನಿಗೆ ಐಐಟಿ ಬಾಂಬೆಯ ಪ್ರತಿಷ್ಠಿತ ಪ್ರಶಸ್ತಿ

Bengaluru News: ಐಐಟಿ ಬಾಂಬೆಯ ಐಡಿಸಿ ಸ್ಕೂಲ್‌ ಆಫ್‌ ಡಿಸೈನ್‌ ಆಯೋಜಿಸಿದ್ದ ಡಿʼಸೋರ್ಸ್-ಡಿಐಸಿ, ಬಿಎಚ್‌ಯುಎಸ್‌ ಡಿಜಿ ಡಿಸೈನ್‌ ಚಾಲೆಂಜ್‌ನಲ್ಲಿ ಗೋಪಾಲನ್‌ ಆರ್ಕಿಟೆಕ್ಚರ್‌ ಮತ್ತು ಪ್ಲಾನಿಂಗ್‌ ವಿಭಾಗದ ವಿದ್ಯಾರ್ಥಿನಿ ಬೆಂಗಳೂರಿನ ವೈಷ್ಣವಿ ಎಂ. ವಿಜೇತರಾಗಿದ್ದಾರೆ.

VISTARANEWS.COM


on

bengaluru student Vaishnavi M who won the prestigious award from IIT Bombay
Koo

ಬೆಂಗಳೂರು: ಐಐಟಿ ಬಾಂಬೆಯ ಐಡಿಸಿ ಸ್ಕೂಲ್‌ ಆಫ್‌ ಡಿಸೈನ್‌ ಆಯೋಜಿಸಿದ್ದ ಡಿʼಸೋರ್ಸ್-ಡಿಐಸಿ, ಬಿಎಚ್‌ಯುಎಸ್‌ ಡಿಜಿ ಡಿಸೈನ್‌ ಚಾಲೆಂಜ್‌ನಲ್ಲಿ ಗೋಪಾಲನ್‌ ಆರ್ಕಿಟೆಕ್ಚರ್‌ ಮತ್ತು ಪ್ಲಾನಿಂಗ್‌ ವಿಭಾಗದ ವಿದ್ಯಾರ್ಥಿನಿ ಬೆಂಗಳೂರಿನ ವೈಷ್ಣವಿ ಎಂ. ವಿಜೇತರಾಗಿದ್ದಾರೆ.

ಸುಸ್ಥಿರ ಅಭಿವೃದ್ಧಿಯ ಗುರಿಯ ನಿಟ್ಟಿನಲ್ಲಿ ಕ್ರಿಯಾಶೀಲ ಹಾಗೂ ವಿನೂತನ ಪರಿಹಾರಗಳನ್ನು ನೀಡುವ ನಿಟ್ಟಿನಲ್ಲಿ ಡಿಡಿಎಸ್‌ಡಿಸಿ ಸ್ಪರ್ಧಿಗಳನ್ನು ಪ್ರೋತ್ಸಾಹಿಸುವ ಕಾರ್ಯ ಮಾಡುತ್ತಿದೆ.

ಇದನ್ನೂ ಓದಿ: Yuva Sambhrama 2024: ಬೆಂಗಳೂರಿನಲ್ಲಿ ಜು.12ರಿಂದ 3 ದಿನ ಯುವ ಸಂಭ್ರಮ

ಸ್ಪರ್ಧಿಗಳು ರಚನಾತ್ಮಕ ವಿನ್ಯಾಸ ಪ್ರಕ್ರಿಯೆಯಲ್ಲಿ ತೊಡಗಿಕೊಳ್ಳುವುದರಿಂದ ಸಮಸ್ಯೆಗಳನ್ನು ಅರ್ಥ ಮಾಡಿಕೊಳ್ಳಲು, ವಿಶ್ಲೇಷಿಸಲು ಮತ್ತು ಅಂತಿಮವಾಗಿ ಕಲ್ಪನೆಯ ರೂಪಕೊಡಲು ನೆರವಾಗುತ್ತದೆ. ಶಬ್ದದ ತೀರ್ಪಿನ ಮೇಲೆ ಪರಿಹಾರಗಳನ್ನು ಖಾತರಿಪಡಿಸಿಕೊಳ್ಳುವುದು ಈ ಕಾರ್ಯಕ್ರಮದ ಉದ್ದೇಶವಾಗಿದೆ.

Continue Reading

ಕರ್ನಾಟಕ

Kannada New Movie: ಗೋಪಿನಾಥ ಬೆಟ್ಟದಲ್ಲಿ ನಡೆದ ಧರ್ಮ ಕೀರ್ತಿರಾಜ್ ಅಭಿನಯದ ʼಪ್ರೊಡಕ್ಷನ್ ನಂ 1ʼ ಚಿತ್ರದ ಮುಹೂರ್ತ

Kannada New Movie: ಧರ್ಮ ಕೀರ್ತಿರಾಜ್ ನಾಯಕನಾಗಿ ನಟಿಸುತ್ತಿರುವ “ಪ್ರೊಡಕ್ಷನ್ ನಂ 1” ಚಿತ್ರದ ಮುಹೂರ್ತ ಸಮಾರಂಭ ಇತ್ತೀಚಿಗೆ ಚಿಕ್ಕಬಳ್ಳಾಪುರದ ಗೋಪಿನಾಥ ಬೆಟ್ಟದಲ್ಲಿರುವ ಶ್ರೀಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನದಲ್ಲಿ ನೆರವೇರಿತು.

VISTARANEWS.COM


on

Dharma Keerthiraj starrer production No 1 movie Muhurta
Koo

ಬೆಂಗಳೂರು: ಲಿತನ್ಯ ಗೋಲ್ಡ್ ಲೀಫ್ ಮೀಡಿಯಾ ವೆಂಚರ್ಸ್ ಪ್ರೈ.ಲಿ. ಹಾಗೂ ಸಾರ್ಥಕ್ ಕ್ರಿಯೇಟರ್ಸ್ ಲಾಂಛನದಲ್ಲಿ ಜಿ.ಎಚ್. ಜನಾರ್ದನ್ ಹಾಗೂ ಸಿ.ಎಲ್. ಹರ್ಷವರ್ಧನ್ ನಿರ್ಮಿಸುತ್ತಿರುವ ರಮೇಶ್ ರಾಜ್ ಅವರ ನಿರ್ದೇಶನದಲ್ಲಿ ಧರ್ಮ ಕೀರ್ತಿರಾಜ್ ನಾಯಕನಾಗಿ ನಟಿಸುತ್ತಿರುವ “ಪ್ರೊಡಕ್ಷನ್ ನಂ 1” ಚಿತ್ರದ (Kannada New Movie) ಮುಹೂರ್ತ ಸಮಾರಂಭ ಇತ್ತೀಚಿಗೆ ಚಿಕ್ಕಬಳ್ಳಾಪುರದ ಗೋಪಿನಾಥ ಬೆಟ್ಟದಲ್ಲಿರುವ ಶ್ರೀಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನದಲ್ಲಿ ನೆರವೇರಿತು.

ಮಾಜಿ ಶಾಸಕ ಕೆ.ಪಿ.ಬಚ್ಚೇಗೌಡ, ಆರಂಭ ಫಲಕ ತೋರಿದರು. ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕೆ.ಎಂ. ಮುನೇಗೌಡ ಕ್ಯಾಮೆರಾ ಚಾಲನೆ ಮಾಡಿದರು.

ಇದನ್ನೂ ಓದಿ: Eshwar Khandre: ಚಾರಣಪಥಗಳ ಆನ್‌ಲೈನ್ ಟಿಕೆಟ್‌ಗೆ ಶೀಘ್ರ ಚಾಲನೆ; ಸಚಿವ ಈಶ್ವರ ಖಂಡ್ರೆ

ಆಕ್ಷನ್ ಡ್ರಾಮ ಜಾನರ್‌ನ ಈ ಚಿತ್ರಕ್ಕೆ ನಿರ್ದೇಶಕ ರಮೇಶ್ ರಾಜ್ ಅವರೇ ಕಥೆ, ಚಿತ್ರಕಥೆ ಬರೆದಿದ್ದಾರೆ. “ಗ್ಯಾಂಗ್ ಲೀಡರ್”, ” ತವರಿನ ಋಣ” ಚಿತ್ರಗಳನ್ನು ನಿರ್ದೇಶಿಸಿರುವ ರಮೇಶ್ ರಾಜ್ ಅವರಿಗೆ ಇದು ಮೂರನೇ ಚಿತ್ರ.

ಈಶ್ವರಿ ಸುರೇಶ್ ಛಾಯಾಗ್ರಹಣ, ಶಶಿ ಸಂಕಲನ, ಬಿ.ವಿ. ರೆಡ್ಡಿ ಸಹ ನಿರ್ದೇಶನ ಹಾಗೂ ಮಂಜುನಾಥ್ ಅವರ ನಿರ್ಮಾಣ ನಿರ್ವಹಣೆ ಈ ಚಿತ್ರಕ್ಕಿದೆ. ವಂಟೂರು ಶ್ರೀನಿವಾಸ್ ನಿರ್ದೇಶನ ವಿಭಾಗದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ.

ಇದನ್ನೂ ಓದಿ: Yuva Sambhrama 2024: ಬೆಂಗಳೂರಿನಲ್ಲಿ ಜು.12ರಿಂದ 3 ದಿನ ಯುವ ಸಂಭ್ರಮ

ಧರ್ಮ ಕೀರ್ತಿರಾಜ್ ಅವರಿಗೆ ಪ್ರಿಯಾ ಹೆಗ್ಡೆ ನಾಯಕಿಯಾಗಿ ನಟಿಸುತ್ತಿದ್ದಾರೆ. ಉಳಿದ ತಾರಾಬಳಗದ ಆಯ್ಕೆ ನಡೆಯುತ್ತಿದೆ. ಮುಂದಿನ ವಾರದಿಂದ ಚಿತ್ರೀಕರಣ ಆರಂಭವಾಗುತ್ತಿದೆ. ಚಿಕ್ಕಬಳ್ಳಾಪುರ, ಬೆಂಗಳೂರು, ಮಡಿಕೇರಿ ಹಾಗೂ ಚಿಕ್ಕಮಗಳೂರಿನಲ್ಲಿ ಚಿತ್ರೀಕರಣ ನಡೆಯಲಿದೆ.

Continue Reading

ಕರ್ನಾಟಕ

Koppala News: ಅಂಜನಾದ್ರಿ ದೇಗುಲ ಹುಂಡಿಯಲ್ಲಿ 32.95 ಲಕ್ಷ ರೂ; ವಿವಿಧ ದೇಶಗಳ ನೋಟುಗಳು

Koppala News: ಗಂಗಾವತಿ ತಾಲೂಕಿನ ಪ್ರಮುಖ ಧಾರ್ಮಿಕ ತಾಣವಾಗಿರುವ ಚಿಕ್ಕರಾಂಪುರದ ಅಂಜನಾದ್ರಿ ಬೆಟ್ಟದ ಆಂಜನೇಯ ದೇಗುಲದ ಹುಂಡಿ ಎಣಿಕೆ ಕಾರ್ಯವು ಮಂಗಳವಾರ ನಡೆಯಿತು. ಕಾಣಿಕೆ ಹುಂಡಿಯಲ್ಲಿ 32.95 ಲಕ್ಷ ರೂಪಾಯಿ ಮೊತ್ತದ ಕಾಣಿಕೆ ಸಂಗ್ರಹವಾಗಿದೆ. ನಾನಾ ದೇಶಗಳ ನೋಟುಗಳು ಮತ್ತು ನಾಣ್ಯಗಳು ಪತ್ತೆಯಾಗಿರುವುದು ವಿಶೇಷವಾಗಿದೆ.

VISTARANEWS.COM


on

Anjanadri Temple Hundi Count
Koo

ಗಂಗಾವತಿ: ತಾಲೂಕಿನ ಪ್ರಮುಖ ಧಾರ್ಮಿಕ ತಾಣವಾಗಿರುವ ಚಿಕ್ಕರಾಂಪುರದ ಅಂಜನಾದ್ರಿ (Anjanadri) ಬೆಟ್ಟದ ಆಂಜನೇಯ ದೇಗುಲದ ಹುಂಡಿ ಎಣಿಕೆ ಕಾರ್ಯವು ಮಂಗಳವಾರ (Koppala News) ನಡೆಯಿತು. ಸಹಾಯಕ ಆಯುಕ್ತ ಕ್ಯಾಪ್ಟನ್ ಮಹೇಶ ಮಾಲಗತ್ತಿ ಸೂಚನೆ ಮೇರೆಗೆ ತಹಸೀಲ್ದಾರ್ ನಾಗರಾಜ್ ನೇತೃತ್ವದಲ್ಲಿ ಹುಂಡಿ ಕಾಣಿಕೆ ಹಣದ ಎಣಿಕೆ ಕಾರ್ಯವು ನಡೆಯಿತು. ಕಾಣಿಕೆ ಹುಂಡಿಯಲ್ಲಿ 32.95 ಲಕ್ಷ ರೂಪಾಯಿ ಮೊತ್ತದ ಕಾಣಿಕೆ ಸಂಗ್ರಹವಾಗಿದೆ.

ಇದನ್ನೂ ಓದಿ: Eshwar Khandre: ಚಾರಣಪಥಗಳ ಆನ್‌ಲೈನ್ ಟಿಕೆಟ್‌ಗೆ ಶೀಘ್ರ ಚಾಲನೆ; ಸಚಿವ ಈಶ್ವರ ಖಂಡ್ರೆ

ವಿವಿಧ ದೇಶಗಳ ಮೂರು ನೋಟು ಮತ್ತು ಏಳು ನಾಣ್ಯಗಳು ಪತ್ತೆ

ಅಂಜನಾದ್ರಿ ಆಂಜನೇಯ ದೇಗುಲದ ಹುಂಡಿಯಲ್ಲಿ ಸಂಗ್ರವಾಗಿದ್ದ ಕಾಣಿಕೆ ಹಣದ ಎಣಿಕೆಯ ಸಂದರ್ಭದಲ್ಲಿ ಸೌದಿ ಅರೇಬಿಯಾ ಸೇರಿದಂತೆ ವಿವಿಧ ದೇಶಗಳ ಮೂರು ನೋಟು ಮತ್ತು ಏಳು ನಾಣ್ಯಗಳು ಪತ್ತೆಯಾಗಿವೆ.

ಈ ಪೈಕಿ ಸೌತ್ ಆಫ್ರಿಕಾದ ಒಂದು ನೂರು ರಾಂಡ್ ಮೊತ್ತದ ಒಂದು ನೋಟು, ಮತ್ತು ಯುನೈಟೆಡ್ ಸ್ಟೇಟ್ಸ್‌ ಆಫ್ ಅಮೆರಿಕಾದ ತಲಾ ಹತ್ತು ಡಾಲರ್ ಮೊತ್ತದ ಎರಡು ನೋಟು ಪತ್ತೆಯಾಗಿವೆ ಹಾಗೂ ಸೌದಿ ಅರೇಬಿಯಾ, ಥೈಲ್ಯಾಂಡ್, ಇಟಲಿ, ಓಮನ್, ಯುಕೆ ಮತ್ತು ನೇಪಾಳದ ನಾನಾ ಮುಖಬೆಲೆಯ ನಾಣ್ಯಗಳು ಪತ್ತೆಯಾಗಿವೆ.

ಇದನ್ನೂ ಓದಿ: Yuva Sambhrama 2024: ಬೆಂಗಳೂರಿನಲ್ಲಿ ಜು.12ರಿಂದ 3 ದಿನ ಯುವ ಸಂಭ್ರಮ

ಕಳೆದ ಮೇ 21ರಂದು ಹಣ ಎಣಿಕೆ ಮಾಡಿದ ಸಂದರ್ಭದಲ್ಲಿ 30.21 ಲಕ್ಷ ರೂ. ಮೊತ್ತದ ಹಣ ಸಂಗ್ರವಾಗಿತ್ತು.

Continue Reading

ಉತ್ತರ ಕನ್ನಡ

Uttara Kannada News: ಮಾನವೀಯ ದೃಷ್ಟಿಯಿಂದ ಕಾರ್ಯನಿರ್ವಹಿಸುವಂತೆ ಅಧಿಕಾರಿಗಳಿಗೆ ಶಾಸಕ ಶಿವರಾಮ ಹೆಬ್ಬಾರ್ ಸೂಚನೆ

Uttara Kannada News: ಯಲ್ಲಾಪುರ ಪಟ್ಟಣದ ಗಾಂಧಿ ಕುಟೀರದಲ್ಲಿ ಮಂಗಳವಾರ ತಾಲೂಕು ಮಟ್ಟದ ಜನಸ್ಪಂದನಾ ಕಾರ್ಯಕ್ರಮಕ್ಕೆ ಶಾಸಕ ಶಿವರಾಮ ಹೆಬ್ಬಾರ್ ಚಾಲನೆ ನೀಡಿದರು. ಅಧಿಕಾರಿಗಳು ಮಾನವೀಯ ದೃಷ್ಟಿಯಿಂದ ಕಾರ್ಯನಿರ್ವಹಿಸಬೇಕು. ಸಮಯಕ್ಕೆ ಸರಿಯಾಗಿ ಕೆಲಸಗಳನ್ನು ಮುಗಿಸಿ ಎಂದು ಶಾಸಕರು ಅಧಿಕಾರಿಗಳಿಗೆ ಸೂಚಿಸಿದರು.

VISTARANEWS.COM


on

MLA Shivaram Hebbar spoke in Taluk level janaspandana programme yallapur
Koo

ಯಲ್ಲಾಪುರ: ಶಾಸಕಾಂಗ ಮತ್ತು ಕಾರ್ಯಾಂಗ ಒಂದು ರಥದ ಎರಡು ಗಾಲಿಯಿದ್ದಂತೆ. ನಾವೆಷ್ಟೇ ವೇಗವಾಗಿ ಮುನ್ನಡೆದರೂ, ಅಧಿಕಾರಿಗಳು ಅದನ್ನು ಅಷ್ಟೇ ವೇಗವಾಗಿ ಜಾರಿಗೆ ತರದಿದ್ದರೆ, ಅಭಿವೃದ್ಧಿ ಸಾಧಿಸಲು ಸಾಧ್ಯವಾಗದು ಎಂದು ಶಾಸಕ ಶಿವರಾಮ ಹೆಬ್ಬಾರ್ (Uttara Kannada News) ಹೇಳಿದರು.

ಪಟ್ಟಣದ ಗಾಂಧಿ ಕುಟೀರದಲ್ಲಿ ಮಂಗಳವಾರ ನಡೆದ ತಾಲೂಕು ಮಟ್ಟದ ಜನಸ್ಪಂದನಾ ಕಾರ್ಯಕ್ರಮವನ್ನು ಉದ್ಘಾಟಿಸಿ, ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಅಧಿಕಾರಿಗಳು ಮಾನವೀಯ ದೃಷ್ಟಿಯಿಂದ ಕಾರ್ಯನಿರ್ವಹಿಸಬೇಕು. ನೀವು ಮಾಡುವ ಕೆಲಸದಿಂದ ಬಡವರ ಕಷ್ಟ ದೂರವಾಗುವುದಿದ್ದರೆ, ಅದಕ್ಕಾಗಿ ಕಾನೂನಿನ ತೊಡಕನ್ನು ಮಧ್ಯ ತಾರದಿರಿ. ಕಷ್ಟವನ್ನು ಅರಿತವರು ಮಾತ್ರ ಜನಸಾಮಾನ್ಯರ ಕಷ್ಟಗಳಿಗೆ ಸ್ಪಂದಿಸಲು ಸಾಧ್ಯ. ಸಮಯಕ್ಕೆ ಸರಿಯಾಗಿ ಕೆಲಸಗಳನ್ನು ಮುಗಿಸಿ ಎಂದು ತಿಳಿಸಿದರು.

ಇದನ್ನೂ ಓದಿ: Eshwar Khandre: ಚಾರಣಪಥಗಳ ಆನ್‌ಲೈನ್ ಟಿಕೆಟ್‌ಗೆ ಶೀಘ್ರ ಚಾಲನೆ; ಸಚಿವ ಈಶ್ವರ ಖಂಡ್ರೆ

ಸಭೆಯುದ್ದಕ್ಕೂ ಹೆಸ್ಕಾಂ ಹಾಗೂ ಕೆಎಸ್‌ಆರ್‌ಟಿಸಿ ಚರ್ಚೆಯ ವಿಷಯವಾಗಿತ್ತು. ಹೆಸ್ಕಾಂ ಗ್ರಾಮೀಣ ಭಾಗದಲ್ಲಿ ಕರೆಂಟ್‌ ಕಣ್ಣಾಮುಚ್ಚಾಲೆಯಾಡುತ್ತಿದೆ. ಕಳಚೆ ಭಾಗದಲ್ಲಿ ಭೂಕುಸಿತದ ನಂತರ 3 ಕಿಮೀ ಹೊಸದಾಗಿ ಲೈನ್‌ ಎಳೆಯಲಾಗಿದ್ದು, ಈವರೆಗೂ ಸಹ ಅದರಿಂದ ಮನೆಗಳಿಗೆ ವಿದ್ಯುತ್‌ ಸಂಪರ್ಕ ನೀಡಲಾಗಿಲ್ಲ ಎಂದು ಗ್ರಾಮಸ್ಥರು ದೂರಿದರು. ಯು.ಕೆ. ನೇಚರ್‌ ಸ್ಟೇ ಮಾಲಿಕ ನಿರಂಜನ ಹೆಗಡೆ, ಪ್ರವಾಸೋದ್ಯಮವನ್ನು ಬೆಳೆಸಬೇಕೆಂದು ಎಲ್ಲರೂ ಹೇಳುತ್ತಾರೆ. ಆದರೆ ಗ್ರಾಮೀಣ ಭಾಗದಲ್ಲಿರುವ ಹೋಂ ಸ್ಟೇಗಳಿಗೆ ವಿದ್ಯುತ್‌ ವ್ಯತ್ಯಯ ದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಪಟ್ಟಣ ಪ್ರದೇಶದಲ್ಲಿ ಕರೆಂಟ್‌ ಇದ್ದರೂ, ಗ್ರಾಮೀಣ ಭಾಗದಲ್ಲಿ ಸಂಜೆ ಹೋದರೆ ಬೆಳಗ್ಗಿನವರೆಗೂ ಬರುವುದಿಲ್ಲ. ಇದರಿಂದ ನಾವು ಉದ್ಯಮ ನಡೆಸುವುದು ಕಷ್ಟಸಾಧ್ಯವಾಗಿದೆ ಎಂದು ಆರೋಪಿಸಿದರು.

ಆನಗೋಡು ಗ್ರಾ.ಪಂ. ವ್ಯಾಪ್ತಿಯಲ್ಲಿ ಕೆಲ ಮನೆಗಳ ಮೇಲೆ ವಿದ್ಯುತ್‌ ತಂತಿ ಹಾದುಹೋಗುತ್ತಿದ್ದು, ಇದನ್ನು ತೆರವುಗೊಳಿಸುವಂತೆ ಪಂಚಾಯಿತಿ ಉಪಾಧ್ಯಕ್ಷೆ ಕೋರಿದರು. ತಾಲೂಕಿನಲ್ಲಿ ವಿದ್ಯುತ್‌ ಸಂಪರ್ಕಕ್ಕಾಗಿ ಕೋಟ್ಯಾಂತರ ರೂ.ಗಳನ್ನು ವ್ಯಯಿಸಲಾಗುತ್ತಿದ್ದು, ಸಾರ್ವಜನಿಕರಿಗೆ ತೊಂದರೆಯಾಗದಂತೆ ಸಮರ್ಪಕ ಸಂಪರ್ಕ ಒದಗಿಸಿ ಎಂದು ಶಾಸಕ ಶಿವರಾಮ ಹೆಬ್ಬಾರ್‌ ಸೂಚಿಸಿದರು.

ಇನ್ನು ಗ್ರಾಮೀಣ ಭಾಗದಲ್ಲಿ ಬಸ್‌ ಸೌಲಭ್ಯ ಸಮರ್ಪಕವಾಗಿಲ್ಲದಿದ್ದು, ಇದರಿಂದ ಪಟ್ಟಣಕ್ಕೆ ಬರುವ ಜನರಿಗೆ ಹಾಗೂ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ಹೆಚ್ಚುವರಿ ಬಸ್‌ಗಳನ್ನು ಬಿಡಬೇಕೆಂದು ಸಾರ್ವಜನಿಕರು ಆಗ್ರಹಿಸಿದರು.

ಇದನ್ನೂ ಓದಿ: Karnataka Weather : ಮಳೆ ಅಬ್ಬರಕ್ಕೆ ಹೆಚ್ಚಾದ ಗುಡ್ಡ ಕುಸಿತ; ಬಂಗ್ರ ಕೂಳೂರಿನಲ್ಲಿ ರಸ್ತೆ ಬಂದ್‌

ಇದೇ ಸಂದರ್ಭದಲ್ಲಿ ಕೆಎಸ್‌ಆರ್‌ಟಿಸಿ ಸಿಬ್ಬಂದಿಗಳ ಕುಟುಂಬಸ್ಥರು, ಇಲ್ಲಿನ ಸಿಬ್ಬಂದಿಗೆ ವಸತಿ ವ್ಯವಸ್ಥೆ ಇಲ್ಲದಾಗಿದೆ. ಇಲ್ಲಿ ಕಾರ್ಯ ನಿರ್ವಹಿಸುವ ಬಹುತೇಕರು ಉತ್ತರ ಕರ್ನಾಟಕ ಭಾಗದಿಂದ ಆಗಮಿಸಿರುತ್ತಾರೆ. ಬಾಡಿಗೆ ಮನೆ ನಿರ್ವಹಣೆ ಕಷ್ಟವಾಗಿದೆ. ಹೀಗಾಗಿ ಸಿಬ್ಬಂದಿಗಳಿಗಾಗಿ ವಸತಿ ಸಮುಚ್ಛಯ ನಿರ್ಮಾಣ ಮಾಡಿಕೊಡುವಂತೆ ಅವರು ತಮ್ಮ ಅಹವಾಲು ಸಲ್ಲಿಸಿದರು.

ತಾಲೂಕಿನ ಪ್ರವಾಸಿ ಸ್ಥಳಗಳಿಗೆ ಹೆಚ್ಚುವರಿ ವಾಹನ ಶುಲ್ಕ ವಸೂಲಾತಿ ಮಾಡಲಾಗುತ್ತಿರುವ ಕುರಿತು ದೂರು ಕೇಳಿಬಂದ ಹಿನ್ನೆಲೆಯಲ್ಲಿ, ಯಾವುದೇ ಕಾರಣಕ್ಕೂ ಜಿಲ್ಲಾಧಿಕಾರಿಗಳ ಆದೇಶ ಇಲ್ಲದೇ ಶುಲ್ಕ ವಸೂಲಾತಿ ಮಾಡಬಾರದು. ಪ್ರವಾಸೋದ್ಯಮವನ್ನು ಪ್ರೋತ್ಸಾಹಿಸಬೇಕೆ ಹೊರತು ಪ್ರವಾಸಿಗರ ಮೇಲೆ ಹೊರೆ ಹೇರಬಾರದು ಎಂದು ಶಾಸಕ ಶಿವರಾಮ ಹೆಬ್ಬಾರ್‌ ಎಚ್ಚರಿಸಿದರು. ಈ ಕುರಿತು ವಿಎಫ್‌ಸಿ ಅಧ್ಯಕ್ಷರು ಹಾಗೂ ಪೊಲೀಸ್‌ ಇಲಾಖೆಯ ಒಂದು ಸಭೆ ಕರೆಯುವಂತೆ ಸಿಪಿಐ ಅವರಿಗೆ ಸೂಚಿಸಿದರು.

ಬೇಡ್ತಿ ಕುಡಿಯುವ ನೀರಿನ ಯೋಜನೆಗೆ ಬಳಸಲಾದ ಯಂತ್ರೋಪಕರಣಗಳು ಲಕ್ಷಾಂತರ ಮೌಲ್ಯದ್ದಾಗಿದ್ದು, ಅವುಗಳು ಕಳುವಾಗಿರುವ ಕುರಿತು ಸಮರ್ಪಕ ತನಿಖೆಯಾಗಬೇಕು ಎಂದು ಶಾಸಕರು ಆಗ್ರಹಿಸಿದರು. ಅಂತೆಯೇ ಸರ್ಕಾರಿ ಅಧಿಕಾರಿಗಳು, ಕೃಷಿ ಜಮೀನಿನಲ್ಲಿ ನಿರ್ಮಿಸಲಾದ ನಿವೇಶನಗಳನ್ನು ಕೊಂಡು, ಮನೆ ನಿರ್ಮಿಸುವ ಮುನ್ನ ಯೋಚಿಸಬೇಕು. ಅವುಗಳಿಗೆ ಈ ಸ್ವತ್ತು ಮಾಡಲು ಸಾಧ್ಯವಿಲ್ಲ. ಹೀಗಾಗಿ ಇನ್ನು ಮುಂದೆ ಆಲೋಚಿಸಿ ತಮ್ಮ ಹಣ ಹೂಡಿಕೆ ಮಾಡಿ ಎಂದು ತಿಳಿಸಿದರು.

ಇದೇ ಸಂದರ್ಭದಲ್ಲಿ ಶಿಕ್ಷಣ ಇಲಾಖೆಯಿಂದ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ ಹೆಚ್ಚಿನ ಅಂಕ ಪಡೆದ 3 ವಿದ್ಯಾರ್ಥಿಗಳಿಗೆ ಲ್ಯಾಪ್ ಟಾಪ್, ಅಂಗನವಾಡಿ ಕಾರ್ಯಕರ್ತೆಯರಿಗೆ ಮೊಬೈಲ್ ಸೇರಿದಂತೆ ವಿವಿಧ ಇಲಾಖೆಯ ಫಲಾನುಭವಿಗಳಿಗೆ ಆದೇಶ ಪತ್ರ ಹಂಚಲಾಯಿತು. ಸಭೆಯಲ್ಲಿ 43 ಅರ್ಜಿ ಸಲ್ಲಿಕೆಯಾಗಿದ್ದು ಈ ಪೈಕಿ 17 ಅರ್ಜಿಯನ್ನು ಸ್ಥಳದಲ್ಲಿಯೇ ಪರಿಹರಿಸಿ ಆದೇಶ ಪತ್ರ ನೀಡಲಾಯಿತು.

ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಎನ್.ಆರ್. ಹೆಗಡೆ, ಇಡಗುಂದಿ ಗ್ರಾ.ಪಂ. ಅಧ್ಯಕ್ಷ ಶ್ರೀಕಾಂತ ಶೆಟ್ಟಿ, ಪ.ಪಂ. ಸದಸ್ಯೆ ಸುನಂದಾ ದಾಸ್, ಗ್ರಾ.ಪಂ. ಅಧ್ಯಕ್ಷರು ಹಾಗೂ ಸದಸ್ಯರು, ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.

ಇದನ್ನೂ ಓದಿ: Yuva Sambhrama 2024: ಬೆಂಗಳೂರಿನಲ್ಲಿ ಜು.12ರಿಂದ 3 ದಿನ ಯುವ ಸಂಭ್ರಮ

ತಹಸೀಲ್ದಾರ್ ಅಶೋಕ್ ಭಟ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ದಿಲೀಪ್‌ ದೊಡ್ಮನಿ ನಿರ್ವಹಿಸಿದರು.

Continue Reading
Advertisement
bengaluru student Vaishnavi M who won the prestigious award from IIT Bombay
ಬೆಂಗಳೂರು6 mins ago

Bengaluru News: ಬೆಂಗಳೂರಿನ ವಿದ್ಯಾರ್ಥಿನಿಗೆ ಐಐಟಿ ಬಾಂಬೆಯ ಪ್ರತಿಷ್ಠಿತ ಪ್ರಶಸ್ತಿ

IPL 2025
ಪ್ರಮುಖ ಸುದ್ದಿ12 mins ago

IPL 2025 : ಐಪಿಎಲ್​ ತಂಡಗಳಲ್ಲಿ ಉಳಿಸಿಕೊಳ್ಳುವ ಆಟಗಾರರ ವಿಚಾರದಲ್ಲಿ ಫ್ರಾಂಚೈಸಿಗಳ ನಡುವೆ ಭಿನ್ನಾಭಿಪ್ರಾಯ

Dharma Keerthiraj starrer production No 1 movie Muhurta
ಕರ್ನಾಟಕ14 mins ago

Kannada New Movie: ಗೋಪಿನಾಥ ಬೆಟ್ಟದಲ್ಲಿ ನಡೆದ ಧರ್ಮ ಕೀರ್ತಿರಾಜ್ ಅಭಿನಯದ ʼಪ್ರೊಡಕ್ಷನ್ ನಂ 1ʼ ಚಿತ್ರದ ಮುಹೂರ್ತ

Anjanadri Temple Hundi Count
ಕರ್ನಾಟಕ16 mins ago

Koppala News: ಅಂಜನಾದ್ರಿ ದೇಗುಲ ಹುಂಡಿಯಲ್ಲಿ 32.95 ಲಕ್ಷ ರೂ; ವಿವಿಧ ದೇಶಗಳ ನೋಟುಗಳು

Pancreatitis
ಆರೋಗ್ಯ19 mins ago

Pancreatitis: ಏನಿದು ಪ್ಯಾಂಕ್ರಿಯಾಟೈಟಿಸ್‌ನಿಂದ ಉಂಟಾಗುವ ಉರಿಯೂತ? ಇದಕ್ಕೇನು ಪರಿಹಾರ?

MLA Shivaram Hebbar spoke in Taluk level janaspandana programme yallapur
ಉತ್ತರ ಕನ್ನಡ21 mins ago

Uttara Kannada News: ಮಾನವೀಯ ದೃಷ್ಟಿಯಿಂದ ಕಾರ್ಯನಿರ್ವಹಿಸುವಂತೆ ಅಧಿಕಾರಿಗಳಿಗೆ ಶಾಸಕ ಶಿವರಾಮ ಹೆಬ್ಬಾರ್ ಸೂಚನೆ

Advocate G Devarajegowda
ಕರ್ನಾಟಕ21 mins ago

Advocate G Devarajegowda: ಅತ್ಯಾಚಾರ ಕೇಸ್‌; ಜೈಲಿನಿಂದ ವಕೀಲ ದೇವರಾಜೇಗೌಡ ರಿಲೀಸ್‌

Uttara Kannada News Meeting by DC Gangubai Manakar in Karwar
ಉತ್ತರ ಕನ್ನಡ23 mins ago

Uttara Kannada News: ಉತ್ತರ ಕನ್ನಡ ಸ್ಥಳೀಯ ಸಂಸ್ಥೆಗಳ ಕಾಮಗಾರಿ ಚುರುಕುಗೊಳಿಸಲು ಡಿಸಿ ಸೂಚನೆ

Minister Lakshmi Hebbalkar has submitted various proposals to the Union Minister seeking grant for the strengthening of the department
ಕರ್ನಾಟಕ25 mins ago

Lakshmi Hebbalkar: ಅಂಗನವಾಡಿ ಬಲವರ್ಧನೆಗೆ ಕೇಂದ್ರದ ನೆರವು ಕೋರಿದ ಲಕ್ಷ್ಮೀ ಹೆಬ್ಬಾಳಕರ್

Hathras Stampede
ದೇಶ32 mins ago

Hathras Stampede: ಹತ್ರಾಸ್‌ನಲ್ಲಿ ಕಾಲ್ತುಳಿತ ಹೇಗಾಯ್ತು? ಸತ್ಸಂಗ ನಡೆಸಿದ ಭೋಲೆ ಬಾಬಾ ಯಾರು? ಇಲ್ಲಿದೆ ಮಾಹಿತಿ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka weather Forecast
ಮಳೆ2 hours ago

Karnataka Weather : ಮಳೆ ಅಬ್ಬರಕ್ಕೆ ಹೆಚ್ಚಾದ ಗುಡ್ಡ ಕುಸಿತ; ಬಂಗ್ರ ಕೂಳೂರಿನಲ್ಲಿ ರಸ್ತೆ ಬಂದ್‌

karnataka Weather Forecast
ಮಳೆ1 day ago

Karnataka Weather : ಕೊಡಗು, ದಾವಣಗೆರೆಯಲ್ಲಿ ಮಳೆಯಾಟ; ಬೆಂಗಳೂರಲ್ಲಿ ಮೋಡ ಕವಿದ ವಾತಾವರಣ

karnataka Weather Forecast
ಮಳೆ2 days ago

Karnataka Weather : ಬೆಂಗಳೂರು, ಕಲಬುರಗಿ ಸೇರಿದಂತೆ ಹಲವೆಡೆ ವರ್ಷಧಾರೆ; ನಾಳೆಗೂ ಮಳೆ ಅಲರ್ಟ್‌

Actor Darshan
ಬೆಂಗಳೂರು2 days ago

Actor Darshan : ಖೈದಿ ನಂ.6106ಕ್ಕೆ ಡಿಮ್ಯಾಂಡ್‌! ದರ್ಶನ್‌ ಫ್ಯಾನ್ಸ್‌ಗೆ ಕಾನೂನು ಕಂಟಕ, ರೂಲ್ಸ್‌ ಬ್ರೇಕ್‌ ಮಾಡಿದ್ರೆ ಬೀಳುತ್ತೆ ಕೇಸ್‌‌!

karnataka weather Forecast
ಮಳೆ3 days ago

Karnataka Weather : ಮಳೆಗೆ ಸ್ಕಿಡ್‌ ಆಗಿ ಹೇಮಾವತಿ ನದಿಗೆ ಹಾರಿದ ಕಾರು; ಕರಾವಳಿಗೆ ಎಚ್ಚರಿಕೆ ಕೊಟ್ಟ ತಜ್ಞರು

karnataka Rain
ಮಳೆ3 days ago

Karnataka Rain: ಭಾರಿ ಮಳೆಗೆ ಮನೆಗಳ ಗೋಡೆ ಕುಸಿತ; ಕೂದಲೆಳೆ ಅಂತರದಲ್ಲಿ ವೃದ್ಧ ಪಾರು

karnataka Weather Forecast
ಮಳೆ4 days ago

Karnataka Weather : ಅಬ್ಬಬ್ಬಾ.. ಮುಲ್ಕಿಯಲ್ಲಿ 30 ಸೆಂ.ಮೀ ಮಳೆ ದಾಖಲು; ವಾರಾಂತ್ಯದಲ್ಲೂ ಭಾರಿ ವರ್ಷಧಾರೆ

karnataka Rain
ಮಳೆ4 days ago

Karnataka Rain : ಭಾರಿ ಮಳೆಗೆ ಪಾತಾಳ ಸೇರಿದ ಬಾವಿ; ಅಲೆಗಳ ಹೊಡೆತಕ್ಕೆ ಸಮುದ್ರಪಾಲಾದ ಮನೆ

Karnataka Weather Forecast
ಮಳೆ5 days ago

Karnataka Weather : ಭಾರಿ ಮಳೆ ಹಿನ್ನೆಲೆ ದಕ್ಷಿಣ ಕನ್ನಡಕ್ಕೆ ರೆಡ್ ಅಲರ್ಟ್; ಶುಕ್ರವಾರವೂ ಶಾಲೆಗಳಿಗೆ ರಜೆ ಘೋಷಣೆ

karnataka Weather Forecast
ಮಳೆ5 days ago

Karnataka Weather : ಭಾರಿ ಮಳೆಗೆ ಸೇತುವೆಯಿಂದ ಹೊಳೆಗೆ ಬಿದ್ದ ಕಾರು; ಮರ ಹಿಡಿದು ಪ್ರಾಣ ಉಳಿಸಿಕೊಂಡ ಸವಾರರು

ಟ್ರೆಂಡಿಂಗ್‌