Viral Video: ಖೈದಿ ಜೊತೆಗೆ ಮಹಿಳಾ ಪೊಲೀಸ್‌ ಅಧಿಕಾರಿ ಲೈಂಗಿಕ ಕ್ರಿಯೆ; ಭಾರೀ ವೈರಲ್‌ ಆಗ್ತಿದೆ ಈ ವಿಡಿಯೋ - Vistara News

ವೈರಲ್ ನ್ಯೂಸ್

Viral Video: ಖೈದಿ ಜೊತೆಗೆ ಮಹಿಳಾ ಪೊಲೀಸ್‌ ಅಧಿಕಾರಿ ಲೈಂಗಿಕ ಕ್ರಿಯೆ; ಭಾರೀ ವೈರಲ್‌ ಆಗ್ತಿದೆ ಈ ವಿಡಿಯೋ

Viral Video: ಎಕ್ಸ್‌ನಲ್ಲಿ ಭಾರೀ ವೈರಲ್‌ ಆಗಿರುವ ಈ ವಿಡಿಯೋದಲ್ಲಿ ಪೊಲೀಸ್‌ ಸಮವಸ್ತ್ರದಲ್ಲಿರುವ ಜೈಲಿನ ಸಿಬ್ಬಂದಿ ಅಲ್ಲಿನ ಕೈದಿ ಜೊತೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿರುವುದನ್ನು ನೋಡಬಹುದಾಗಿದೆ. ಇದನ್ನು ಅದೇ ಕೋಣೆಯಲ್ಲಿದ್ದ ಮತ್ತೊರ್ವ ಖೈದಿ ತನ್ನ ಮೊಬೈಲ್‌ನಲ್ಲಿ ಶೂಟ್‌ ಮಾಡಿಕೊಂಡಿದ್ದಾನೆ.

VISTARANEWS.COM


on

Viral Video
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಲಂಡನ್‌: ಜೈಲಿನ ಮಹಿಳಾ ಸಿಬ್ಬಂದಿ ಕೈದಿಯ ಜೊತೆ ಲೈಂಗಿಕ ಕ್ರಿಯೆ(Physical relationship) ನಡೆಸಿರುವ ಶಾಕಿಂಗ್‌ ಘಟನೆ ಇಂಗ್ಲೆಂಡ್‌ನ ವಾಂಡ್‌ವರ್ಥ್‌ನ ಎಚ್‌ಎಂಪಿ ಜೈಲಿನಲ್ಲಿ ನಡೆದಿದೆ. ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್‌(Viral Video) ಆಗಿದ್ದು, ಪೊಲೀಸರು ತನಿಖೆ ಶುರು ಮಾಡಿದ್ದಾರೆ. ವಿಡಿಯೋ ನೋಡಿದ ನೆಟ್ಟಿಗರು ಆಘಾತ ವ್ಯಕ್ತಪಡಿಸಿದ್ದು, ಜೈಲಿನಲ್ಲೇ ಇಂತಹ ಸ್ಥಿತಿ ಇದ್ದರೆ ಹೇಗೆ ಎಂದು ಪ್ರಶ್ನಿಸಿದ್ದಾರೆ.

ವೈರಲ್‌ ಆಗಿರುವ ವಿಡಿಯೋದಲ್ಲೇನಿದೆ?

ಎಕ್ಸ್‌ನಲ್ಲಿ ಭಾರೀ ವೈರಲ್‌ ಆಗಿರುವ ಈ ವಿಡಿಯೋದಲ್ಲಿ ಪೊಲೀಸ್‌ ಸಮವಸ್ತ್ರದಲ್ಲಿರುವ ಜೈಲಿನ ಸಿಬ್ಬಂದಿ ಅಲ್ಲಿನ ಕೈದಿ ಜೊತೆ ಲೈಂಗಿಕ ಕ್ರಿಯೆಯಲ್ಲಿ ತೊಡಗಿರುವುದನ್ನು ನೋಡಬಹುದಾಗಿದೆ. ಇದನ್ನು ಅದೇ ಕೋಣೆಯಲ್ಲಿದ್ದ ಮತ್ತೊರ್ವ ಖೈದಿ ತನ್ನ ಮೊಬೈಲ್‌ನಲ್ಲಿ ಶೂಟ್‌ ಮಾಡಿಕೊಂಡಿದ್ದಾನೆ. ಕೈಯಲ್ಲಿ ಸಿಗರೇಟ್‌ ಹಿಡಿದು ವಿಡಿಯೋ ಮಾಡುತ್ತಿರುವ ಆ ವ್ಯಕ್ತಿ ” ಹಾಯ್‌.. ನಾವು ಇವತ್ತು ಇತಿಹಾಸ ಸೃಷ್ಟಿಸಿದ್ದೇವೆ. ನಾನು ಹೇಳುತ್ತಿರುವುದು ಇದೇ ವಿಚಾರವನ್ನು ಎಂದು ಹೇಳುತ್ತಾ ಕ್ಯಾಮೆರಾವನ್ನು ತಿರುಗಿಸುತ್ತಾನೆ. ಅಲ್ಲಿ ಜೈಲಿನ ಸಿಬ್ಬಂದಿ ಮತ್ತು ಕೈದಿ ಲೈಂಗಿಕ ಚಟುವಟಿಕೆಯಲ್ಲಿ ಭಾಗಿರುವುದನ್ನು ಕಾಣಬಹುದಾಗಿದೆ. ಅದೂ ಅಲ್ಲೇ ಇದ್ದ ಬೆಡ್‌ ಮೇಲೆ ಕೈದಿಗಳ ಬಟ್ಟೆ ಬಿದ್ದಿರುವುದನ್ನು ಕಾಣಬಹುದಾಗಿದೆ.

ಇನ್ನು ಇದೇ ಸಂದರ್ಭದಲ್ಲಿ ಮತ್ತೊರ್ವ ಖೈದಿ ಸೆಲ್‌ ಒಳಗೆ ಬರಲು ಯತ್ನಿಸುತ್ತಾರೆ. ಆಗ ವಿಡಿಯೋ ಮಾಡುತ್ತಿದ್ದವನು “ಸ್ವಲ್ಪ ಹೊತ್ತು ಇರು” ಅಂತಾನೆ. ಆಮೇಲೆ ಕ್ಯಾಮೆರಾವನ್ನು ಸುತ್ತ ತಿರುಗಿಸುತ್ತಾ “ಇದು ವಾಂಡ್‌ವರ್ಥ್‌ ಜೈಲು” ಎಂದು ಹೇಳುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ.

ಇನ್ನು ಈ ಘಟನೆ ಬಗ್ಗೆ ಲಂಡನ್‌ ಪೊಲೀಸರು ಪ್ರತಿಕ್ರಿಯಿಸಿದ್ದು, ಇದು ವಾಂಡ್‌ವರ್ಥ್‌ನ ಎಚ್‌ಎಂಪಿ ಜೈಲಿನಲ್ಲೆ ನಡೆದಿರುವ ಘಟನೆ ಎಂಬುದು ಸ್ಪಷ್ಟವಾಗಿದೆ. ಕೇಸ್‌ ದಾಖಲಿಸಿಕೊಳ್ಳಲಾಗಿದ್ದು, ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಇದುವರೆಗೆ ಯಾವುದೇ ಬಂಧನವಾಗಿಲ್ಲ. ಕಾನೂನು ಸಚಿವಾಲಯದ ಜೊತೆಗೂ ಮಾತುಕತೆ ನಡೆದಿದೆ ಎಂದು ಹೇಳಿದ್ದಾರೆ.

HMP ಜೈಲು ಸೇವೆಯ ವಕ್ತಾರರು ಮಾತನಾಡಿ, ಘಟನೆಯು ಇತ್ತೀಚೆಗೆ ಸಂಭವಿಸಿದೆ ಎಂದು ಭಾವಿಸಲಾಗಿದೆ, ಮಹಿಳಾ ಸಿಬ್ಬಂದಿಯನ್ನು ಸೇವೆಯಿಂದ ಅಮಾನತುಗೊಳಿಸಲಾಗಿದೆ. ಸಿಬ್ಬಂದಿ ಭ್ರಷ್ಟಾಚಾರವನ್ನು ಸಹಿಸಲಾಗುವುದಿಲ್ಲ ಮತ್ತು ಈ ವೀಡಿಯೊದಲ್ಲಿ ಕಾಣಿಸಿಕೊಂಡಿರುವ ಜೈಲು ಅಧಿಕಾರಿಯ ವಿರುದ್ಧ ಪೊಲೀಸರಿಗೆ ದೂರು ದಾಖಲಿಸಲಾಗಿದೆ ಎಂದಿದ್ದಾರೆ.

ಇದನ್ನೂ ಓದಿ: Vikram Misri: ವಿದೇಶಾಂಗ ಕಾರ್ಯದರ್ಶಿಯಾಗಿ ವಿಕ್ರಮ್‌ ಮಿಸ್ರಿ ಆಯ್ಕೆ; ಚೀನಾ ವಿಷಯದಲ್ಲಿ ಇವರು ಎಕ್ಸ್‌ಪರ್ಟ್!

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App

ವೈರಲ್ ನ್ಯೂಸ್

Viral News: ʼತುರ್ತಾಗಿ ಒಂದು ಅಪಘಾತ ಮಾಡಿʼ ಅನ್ನುತ್ತಿದೆ ಈ ಸೈನ್‌ಬೋರ್ಡ್‌!

Viral News: ʼಕೊಡಗು ಕನೆಕ್ಟ್’ ಎಂಬ ಹೆಸರಿನ ಬಳಕೆದಾರರು ಸಾಮಾಜಿಕ ಮಾಧ್ಯಮದಲ್ಲಿ ಸೈನ್‌ಬೋರ್ಡ್‌ನ ಚಿತ್ರವನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ “ಅವಸರವೇ ಅಪಘಾತಕ್ಕೆ ಕಾರಣ” ಹಾಗೂ “Urgent Make An Accident” ಎಂದು ಬರೆಯಲಾಗಿದೆ. ಈ ಇಂಗ್ಲಿಷ್‌ ವಾಕ್ಯದ ಕನ್ನಡ ಅರ್ಥ ʼತುರ್ತಾಗಿ ಒಂದು ಅಪಘಾತ ಮಾಡಿʼ ಎಂದಾಗುತ್ತದೆ!

VISTARANEWS.COM


on

viral news signboard
Koo

ಬೆಂಗಳೂರು: ಕರ್ನಾಟಕದ ಕೊಡಗಿನ (Coorg) ಬಳಿಯ ಹೆದ್ದಾರಿಯಲ್ಲಿ ಅಳವಡಿಸಲಾಗಿರುವ ತುರ್ತು ಸೂಚನಾ ಫಲಕವೊಂದು (Sign Board) ಇದೀಗ ಅಂತರ್ಜಾಲವನ್ನು (Internet) ನಗೆಗಡಲಿನಲ್ಲಿ (Viral News) ತೇಲಿಸುತ್ತಿದೆ. ಕನ್ನಡದಿಂದ ಇಂಗ್ಲಿಷ್‌ಗೆ ತಪ್ಪಾಗಿ ಅನುವಾದ (Translation) ಮಾಡಿರುವುದರಿಂದ ಉಂಟಾದ ಅವಾಂತರವಿದು. ಮಂಗಳೂರು- ಮೈಸೂರು ರಾಷ್ಟ್ರೀಯ ಹೆದ್ದಾರಿ (Mangalore Mysore National Highway) ಹಾದುಹೋಗುವ ಸಂಪಾಜೆಯಲ್ಲಿ (Sampaje) ಈ ಫಲಕವಿದೆ.

ʼಕೊಡಗು ಕನೆಕ್ಟ್’ ಎಂಬ ಹೆಸರಿನ ಬಳಕೆದಾರರು ಸಾಮಾಜಿಕ ಮಾಧ್ಯಮದಲ್ಲಿ ಸೈನ್‌ಬೋರ್ಡ್‌ನ ಚಿತ್ರವನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ “ಅವಸರವೇ ಅಪಘಾತಕ್ಕೆ ಕಾರಣ” ಹಾಗೂ “Urgent Make An Accident” ಎಂದು ಬರೆಯಲಾಗಿದೆ. ಈ ಇಂಗ್ಲಿಷ್‌ ವಾಕ್ಯದ ಕನ್ನಡ ಅರ್ಥ ʼತುರ್ತಾಗಿ ಒಂದು ಅಪಘಾತ ಮಾಡಿʼ ಎಂದಾಗುತ್ತದೆ! ಈ ಸೂಚನಾ ಫಲಕವನ್ನು ವಾಹನ ಚಾಲಕರು ಅಕ್ಷರಶಃ ಪಾಲಿಸಲು ಹೋದರೆ ಅನರ್ಥವೇ ಆಗುತ್ತದೆ!

ಕಳಪೆ ಇಂಗ್ಲಿಷ್‌ನಲ್ಲಿ ಅನುವಾದ ಮಾಡಲಾಗಿರುವ ಈ ಫಲಕದಲ್ಲಿ ಇಂಗ್ಲಿಷ್‌ ವಾಕ್ಯ ʼOverspeeding Causes accidents’ ಎಂದು ಇರಬೇಕಾಗಿತ್ತು. ಇಂಟರ್ನೆಟ್ ಬಳಕೆದಾರರು ಇದರ ಬಗ್ಗೆ ಹಾಸ್ಯಮಯ ಕಾಮೆಂಟ್‌ಗಳನ್ನು ಹಂಚಿಕೊಂಡಿದ್ದಾರೆ. ಸೈನ್‌ಬೋರ್ಡ್‌ಗಳನ್ನು ಇಂಗ್ಲಿಷ್‌ಗೆ ಭಾಷಾಂತರಿಸುವ ಸರ್ಕಾರದ ಪ್ರಯತ್ನವನ್ನು ಕೆಲವರು ಪ್ರಶ್ನಿಸಿದ್ದಾರೆ. ಇತರರು ಈ ದೋಷವನ್ನು ತಮಾಷೆಯಾಗಿ, ಸ್ವಾರಸ್ಯಕರವಾಗಿ ತೆಗೆದುಕೊಂಡಿದ್ದಾರೆ.

“ಇದಕ್ಕೂ ಸಹ ಅನುವಾದಕರು ಚಾಟ್‌ಜಿಪಿಟಿ ಬಳಸಿದ್ದಾರೆ” ಎಂದು ಒಬ್ಬ ಬಳಕೆದಾರರು ತಮಾಷೆ ಮಾಡಿದ್ದಾರೆ. “ಕನ್ನಡವು ಇಂಗ್ಲಿಷ್ ಅಲ್ಲ” ಎಂದು ಮತ್ತೊಬ್ಬರು ಟೀಕಿಸಿದ್ದಾರೆ. “urgent ನಂತರ ಒಂದು ಅಲ್ಪವಿರಾಮ ಹಾಕಿದರೆ ಅರ್ಥ ಸಂಪೂರ್ಣವಾಗಿ ಬದಲಾಗುತ್ತದೆ” ಎಂದು ಬೇರೊಬ್ಬರು ಬಳಕೆದಾರರು ಬರೆದಿದ್ದಾರೆ. ಮತ್ತೊಬ್ಬ ಬಳಕೆದಾರರು, “ಇನ್ಶುರೆನ್ಸ್ ಏಜೆಂಟ್ಸ್ ಅನ್ನು ಟ್ಯಾಗ್ ಮಾಡಿ. ಅವರು ಇದನ್ನು ವೇಗವಾಗಿ ಸರಿಪಡಿಸುತ್ತಾರೆ” ಎಂದು ತಮಾಷೆ ಮಾಡಿದ್ದಾರೆ.

ಮಾರ್ಚ್‌ನಲ್ಲಿ, ಕೊಡಗು ಜಿಲ್ಲೆಯ ಒಂದು ಕಡೆಯ ಸ್ಥಳೀಯರು ಗೂಗಲ್‌ನ ನ್ಯಾವಿಗೇಷನ್ ತಪ್ಪಿನ ಬಗ್ಗೆ ಪ್ರಯಾಣಿಕರಿಗೆ ಎಚ್ಚರಿಕೆ ನೀಡುವ ತಾತ್ಕಾಲಿಕ ಸೈನ್‌ಬೋರ್ಡ್ ಅನ್ನು ಹಾಕಿದ್ದರು. ʼಗೂಗಲ್ ತಪ್ಪು ಮಾಡಿದೆ. ಈ ರಸ್ತೆ ಕ್ಲಬ್ ಮಹೀಂದ್ರಾ ರೆಸಾರ್ಟ್‌ಗೆ ಹೋಗುವುದಿಲ್ಲ’ ಎಂದು ಫಲಕದಲ್ಲಿತ್ತು. ಗೂಗಲ್‌ ಮ್ಯಾಪ್‌ನಿಂದಾಗಿ ದಾರಿ ತಪ್ಪಿದ ಪ್ರಯಾಣಿಕರು ಸದಾ ದಾರಿ ಕೇಳುವುದರಿಂದ ಬೇಸತ್ತ ಸ್ಥಳೀಯ ಗ್ರಾಮಸ್ಥರು ಆ ಸೈನ್‌ಬೋರ್ಡ್ ಅನ್ನು ಹಾಕಿದ್ದರು.

ಇದನ್ನೂ ಓದಿ: Viral News: ನೀವೂ ಕೂಡ ನಿಮ್ಮ ಹೆಂಡತಿಯನ್ನು ಇವರಂತೆ ಪ್ರೀತಿಸಬಲ್ಲಿರಾ? ಈ ಫೋಟೊ, ವಿಡಿಯೊ ನೋಡಿ ಹೇಳಿ!

Continue Reading

Latest

Amarnath Tragedy: ಬಸ್‌ ಬ್ರೇಕ್ ಫೇಲ್; ಜೀವ ಉಳಿಸಿಕೊಳ್ಳಲು ಬಸ್‌ನಿಂದ ಜಿಗಿದ ಅಮರನಾಥ ಯಾತ್ರಿಕರು! ವಿಡಿಯೊ ಇದೆ

Amarnath Tragedy: ಅಮರನಾಥ ಯಾತ್ರೆಗೆ ತೆರಳಿದವರಿಗೆ ದುರಂತವೊಂದು ಎದುರಾಗಿದೆ. ಅಮರನಾಥ ಯಾತ್ರೆಯಿಂದ ಹಿಂದಿರುಗುತ್ತಿದ್ದ ಕೆಲವು ಯಾತ್ರಾರ್ಥಿಗಳು ಜಮ್ಮು ಮತ್ತು ಕಾಶ್ಮೀರದ ರಂಬನ್ ಜಿಲ್ಲೆಯಲ್ಲಿ ಚಲಿಸುತ್ತಿರುವ ಬಸ್ಸಿನಿಂದ ಜಿಗಿದು ಗಾಯಗೊಂಡಿದ್ದಾರೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಬಸ್‌ ಬ್ರೇಕ್ ಫೇಲ್ ಆದ ಕಾರಣ ಬನಿಹಾಲ್ ಬಳಿಯ ನಾಚ್ಲಾನಾ ಬಳಿ ಚಾಲಕನಿಗೆ ಬಸ್ ಅನ್ನು ನಿಯಂತ್ರಿಸಲು ಆಗಲಿಲ್ಲ. ಇದರಿಂದ ಬಸ್‌ನಲ್ಲಿದ್ದ ಪ್ರಯಾಣಿಕರು ಭಯಗೊಂಡು ತಮ್ಮ ಜೀವ ಉಳಿಸಿಕೊಳ್ಳಲು ಬಸ್ಸಿನಿಂದ ಜಿಗಿದು ಗಾಯಗೊಂಡಿದ್ದಾರೆ.

VISTARANEWS.COM


on

Amarnath Tragedy
Koo

ಶ್ರೀನಗರ : ಪ್ರತಿವರ್ಷ ಅಮರನಾಥ ಯಾತ್ರೆಗೆ (Amarnath Tragedy) ಹಲವಾರು ಮಂದಿ ಯಾತ್ರಾರ್ಥಿಗಳು ಪ್ರಯಾಣ ಮಾಡುತ್ತಿರುತ್ತಾರೆ. ಆದರೆ ಇತ್ತೀಚೆಗೆ ಅಮರನಾಥ ಯಾತ್ರೆಗೆ ತೆರಳಿದವರಿಗೆ ದುರಂತವೊಂದು ಎದುರಾಗಿದೆ. ಅಮರನಾಥ ಯಾತ್ರೆಯಿಂದ ಹಿಂದಿರುಗುತ್ತಿದ್ದ ಕೆಲವು ಯಾತ್ರಾರ್ಥಿಗಳು ಜಮ್ಮು ಮತ್ತು ಕಾಶ್ಮೀರದ ರಂಬನ್ ಜಿಲ್ಲೆಯಲ್ಲಿ ಚಲಿಸುತ್ತಿರುವ ಬಸ್ಸಿನಿಂದ ಜಿಗಿದು ಗಾಯಗೊಂಡಿದ್ದಾರೆ. ಇದಕ್ಕೆ ಸಂಬಂಧಪಟ್ಟ ವಿಡಿಯೊ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅನೇಕರು ವಿಡಿಯೊ ನೋಡಿ ಶಾಕ್ ಆಗಿದ್ದಾರೆ.

ಜಮ್ಮು-ಶ್ರೀನಗರ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಘಟನೆ ನಡೆದಿದ್ದು, ಪಂಜಾಬ್‌ನ ಹೋಶಿಯಾರ್ಪುರಕ್ಕೆ ತೆರಳುತ್ತಿದ್ದ ಬಸ್‌ನಲ್ಲಿ ಹದಿನೇಳು ಮಂದಿ ಮಹಿಳೆಯರು ಮತ್ತು ಒಂದು ಮಗು ಸೇರಿದಂತೆ ಒಟ್ಟು 45 ಪ್ರಯಾಣಿಕರು ಪ್ರಯಾಣಿಸುತ್ತಿದ್ದರು. ಆದರೆ ರಸ್ತೆ ಮಧ್ಯದಲ್ಲಿ ಬಸ್‌ನ ಬ್ರೇಕ್ ಫೇಲ್ ಆಗಿದೆ. ಇದರ ಪರಿಣಾಮ ಬನಿಹಾಲ್ ಬಳಿಯ ನಾಚ್ಲಾನಾ ಬಳಿ ಚಾಲಕನಿಗೆ ಬಸ್ ಅನ್ನು ನಿಯಂತ್ರಿಸಲು ಆಗಲಿಲ್ಲ. ಇದರಿಂದ ಬಸ್‌ನಲ್ಲಿದ್ದ ಪ್ರಯಾಣಿಕರು ಭಯಗೊಂಡು ತಮ್ಮ ಜೀವ ಉಳಿಸಿಕೊಳ್ಳಲು ಮೂವರು ಮಹಿಳೆಯರು ಮತ್ತು ಒಂದು ಮಗು ಸೇರಿದಂತೆ ಹಲವಾರು ಪ್ರಯಾಣಿಕರು ಬಸ್ಸಿನಿಂದ ಜಿಗಿದ ಗಾಯಗೊಂಡಿದ್ದಾರೆ.

ವಿಡಿಯೊದಲ್ಲೊ ರಸ್ತೆಯಲ್ಲಿ ಚಲಿಸುತ್ತಿದ್ದ ಬಸ್‌ನಿಂದ ಪ್ರಯಾಣಿಕರು ಒಬ್ಬರಾಗಿಯೇ ಜಿಗಿದು ಕೆಳಗೆ ಬೀಳುತ್ತಿದ್ದಾರೆ. ಹಾಗೇ ಬಿದ್ದ ಪ್ರಯಾಣಿಕರಲ್ಲಿ ಕೆಲವರು ತಮ್ಮವರನ್ನು ಕಾಪಾಡಲು ಬಸ್ಸಿನ ಹಿಂದೆ ಓಡುತ್ತಿರುವುದು ಕಂಡುಬಂದಿದೆ. ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ ಹಿನ್ನಲೆಯಲ್ಲಿ ಪೊಲೀಸರು ಸೇನೆಯ ಜೊತೆಗೆ ಬಸ್ ಇದ್ದ ಕಡೆ ಬಂದು ತ್ವರಿತ ಕ್ರಮ ತೆಗೆದುಕೊಂಡಿದ್ದಾರೆ. ಸೈನಿಕರು ಬಸ್ ಅನ್ನು ನಿಲ್ಲಿಸಲು ಮತ್ತು ಹತ್ತಿರದ ಹೊಳೆಗೆ ಹೋಗದಂತೆ ತಡೆಯಲು ಕಲ್ಲುಗಳನ್ನು ಬಸ್‌ ನ ಚಕ್ರದ ಕೆಳಗೆ ಇಟ್ಟಿದ್ದಾರೆ. ಇದರಿಂದ ಆಗಬಹುದಾದ ದೊಡ್ಡ ಅನಾಹುತವನ್ನು ತಪ್ಪಿಸಿದ್ದಾರೆ. ಸೇನೆಯ ತಂಡಗಳು, ಆಂಬ್ಯುಲೆನ್ಸ್ ನೊಂದಿಗೆ ಘಟನಾ ಸ್ಥಳಕ್ಕೆ ಆಗಮಿಸಿ ಗಾಯಾಳುಗಳಿಗೆ ವೈದ್ಯಕೀಯ ನೆರವು ಮತ್ತು ಪ್ರಥಮ ಚಿಕಿತ್ಸೆಯನ್ನು ನೀಡಿದ್ದಾರೆ.

Amarnath Tragedy

ಇದನ್ನೂ ಓದಿ: ನೀವೂ ಕೂಡ ನಿಮ್ಮ ಹೆಂಡತಿಯನ್ನು ಇವರಂತೆ ಪ್ರೀತಿಸಬಲ್ಲಿರಾ? ಈ ಫೋಟೊ, ವಿಡಿಯೊ ನೋಡಿ ಹೇಳಿ!

ಈ ಹಿಂದೆ ಈ ವರ್ಷದ ಜೂನ್ ತಿಂಗಳಿನಲ್ಲಿ ಭಯೋತ್ಪಾದಕರು ಶಿವಖೋರಿ ದೇವಸ್ಥಾನದಿಂದ ಮಾತಾ ವೈಷ್ಣೋದೇವಿ ದೇಗುಲಕ್ಕೆ ಹಿಂದಿರುಗುತ್ತಿದ್ದ ಪ್ರಯಾಣಿಕರಿದ್ದ ಬಸ್‌ನ ಮೇಲೆ ಗುಂಡಿನ ದಾಳಿ ನಡೆಸಿದ್ದರು. ಭಯೋತ್ಪಾದಕರ ಗುಂಡಿನ ದಾಳಿಯಿಂದಾಗಿ ಚಾಲಕನ ನಿಯಂತ್ರಣ ತಪ್ಪಿ ಬಸ್ ಅಪಘಾತಕ್ಕೀಡಾಗಿ ಕಂದಕಕ್ಕೆ ಬಿದ್ದಿದೆ. ಈ ಅಪಘಾತದಲ್ಲಿ 10 ಜನರು ಸಾವನ್ನಪ್ಪಿದ್ದರು.

Continue Reading

ಕ್ರೀಡೆ

Hardik Pandya: ಬಹುಮಾನ ಮೊತ್ತವನ್ನು ತಾಯಿಯ ಖಾತೆಗೆ ಹಾಕುವಂತೆ ಬಿಸಿಸಿಐಗೆ ಮನವಿ ಮಾಡಿದ ಹಾರ್ದಿಕ್​ ಪಾಂಡ್ಯ; ಕಾರಣವೇನು?

Hardik Pandya: ಭಾರತ ತಂಡ ಟಿ20 ವಿಶ್ವಕಪ್ ಟ್ರೋಫಿ ಗೆಲುವಿನಲ್ಲಿ ಹಾರ್ದಿಕ್ ಪಾಂಡ್ಯ ಕೊಡುಗೆ ಅತ್ಯಂತ ಮಹತ್ವದ್ದಾಗಿತ್ತು. ಟೂರ್ನಿಯುದ್ದಕ್ಕೂ ಬ್ಯಾಟಿಂಗ್​ ಮತ್ತು ಬೌಲಿಂಗ್​ ಮೂಲಕ ತಂಡಕ್ಕೆ ಉತ್ತಮ ಕೊಡುಗೆ ನೀಡಿದ್ದರು.

VISTARANEWS.COM


on

Hardik Pandya
Koo

ಮುಂಬಯಿ: ಹಾರ್ದಿಕ್ ಪಾಂಡ್ಯ(Hardik Pandya) ಹಾಗೂ ಪತ್ನಿ, ಸರ್ಬಿಯಾದ ನಟಿ ನತಾಶಾ ಸ್ಟಾನ್‌ಕೋವಿಕ್‌(Natasa Stankovic) ಡಿವೋರ್ಸ್ ಸುದ್ದಿಗಳ ಬೆನ್ನಲ್ಲೇ ಇದೀಗ ಮತ್ತೆ ಹಾರ್ದಿಕ್ ಪಾಂಡ್ಯ ಮೀಮ್ಸ್ ಹರಿದಾಡುತ್ತಿದೆ. ಬಿಸಿಸಿಐ ಘೋಷಿಸಿರುವ ಬಹುಮಾನ ಮೊತ್ತವನ್ನೂ ತಾಯಿ ಖಾತೆಗೆ ಹಾಕಿಬಿಡಿ ಅನ್ನೋ ಮೀಮ್ಸ್ ಭಾರಿ ವೈರಲ್ ಆಗುತ್ತಿದೆ.

ಹೌದು, ಹಾರ್ದಿಕ್​ ಪಾಂಡ್ಯ ಬಗ್ಗೆ ಮೀಮ್ಸ್​ಗಳು ವೈರಲ್​ ಆಗಲು ಕೂಡ ಒಂದು ಕಾರಣವಿದೆ. ಆಲ್​ರೌಂಡರ್​ ಹಾರ್ದಿಕ್ ಪಾಂಡ್ಯ ಅವರು ಪತ್ನಿ ನತಾಶಾಗೆ ವಿಚ್ಛೇದನ ನೀಡಿದರೆ(Hardik Pandya and Natasa Stankovic divorce) ಪತ್ನಿಗೆ ಜೀವನಾಂಶವಾಗಿ ತಮ್ಮ ಆಸ್ತಿಯಲ್ಲಿ ಶೇ. 70 ರಷ್ಟು ಭಾಗವನ್ನು ನೀಡಬೇಕಾಗಬಹುದು ಎಂದು ಹೇಳಲಾಗಿತ್ತು. ಈ ವೇಳೆ ಪಾಂಡ್ಯ ತಾವು ತಮ್ಮ ಆಸ್ತಿಗಳನ್ನೆಲ್ಲ ತಾಯಿಯ ಹೆಸರಿನಲ್ಲಿ ಮಾಡಿಟ್ಟಿರುವುದಾಗಿ ಹಿಂದೊಮ್ಮೆ ಸಂದರ್ಶನದಲ್ಲಿ ಹೇಳಿದ್ದ ವಿಡಿಯೊ ವೈರಲ್​ ಆಗಿತ್ತು.

ಆ ಸಂದರ್ಶನದಲ್ಲಿ ಮುಕ್ತವಾಗಿ ಮಾತನಾಡಿದ್ದ ಪಾಂಡ್ಯ “ನಾನು ಜಾಹಿರಾತು, ಕ್ರಿಕೆಟ್​ ಸೇರಿ ಇನ್ನಿತರ ಮೂಲಗಳಿಂದ ಎಷ್ಟೇ ಹಣ ಸಂಪಾದಿಸಿದರೂ ಕೂಡ ಇದನೆಲ್ಲ ನನ್ನ ಹೆಸರಿನಲ್ಲಿ ಇಟ್ಟಿಲ್ಲ. ನನ್ನ ಬಳಿ ದುಬಾರಿ ಕಾರು, ಬಂಗಲೆ ಇದ್ದರೂ ಕೂಡ ಇದೆಲ್ಲ ನನ್ನ ತಾಯಿಯ ಹೆಸರಿನಲ್ಲಿದೆ. ಹೀಗಾಗಿ ನಾನು ಯಾವುದೇ ಸಮಸ್ಯೆ ಬಂದರೂ ಕೂಡ ಯಾರೀಗೂ ನನ್ನ ಆಸ್ತಿಯಲ್ಲಿ ಶೇ. 50ರಷ್ಟು ಜೀವನಾಂಶ ಕೊಡುವ ಪ್ರಮೇಯವೇ ಬರುವುದಿಲ್ಲ ಎಂದು ಹೇಳಿದ್ದರು. ಇದೇ ಕಾರಣದಿಂದ ಇದೀಗ ನೆಟ್ಟಿಗರು ವಿಶ್ವಕಪ್​ ಗೆದ್ದ ಬಹುಮಾನ ಮೊತ್ತ ಮತ್ತು ಬಿಸಿಸಿಐ ನೀಡಿದ ಮೊತ್ತವನ್ನು ಪಾಂಡ್ಯ ಅವರು ದಯಮಾಡಿ ಇದನ್ನು ನನ್ನ ತಾಯಿಯ ಖಾತೆಗೆ ಹಾಲಿ ಎಂದು ಹೇಳುವ ರೀತಿಯಲ್ಲಿ ಮೀಮ್ಸ್​ಗಳನ್ನು ಮಾಡಿ ಹರಿಬಿಟ್ಟಿದ್ದಾರೆ.

ಭಾರತ ತಂಡ ಟಿ20 ವಿಶ್ವಕಪ್ ಟ್ರೋಫಿ ಗೆಲುವಿನಲ್ಲಿ ಹಾರ್ದಿಕ್ ಪಾಂಡ್ಯ ಕೊಡುಗೆ ಅತ್ಯಂತ ಮಹತ್ವದ್ದಾಗಿತ್ತು. ಟೂರ್ನಿಯುದ್ದಕ್ಕೂ ಬ್ಯಾಟಿಂಗ್​ ಮತ್ತು ಬೌಲಿಂಗ್​ ಮೂಲಕ ತಂಡಕ್ಕೆ ಉತ್ತಮ ಕೊಡುಗೆ ನೀಡಿದ್ದರು. ಅದರಲ್ಲೂ ಫೈನಲ್​ನಲ್ಲಿ ಸೋಲುವ ಭೀತಿಯಲ್ಲಿದ್ದ ಭಾರತ ತಂಡವನ್ನು ಕಾಪಾಡಿದ್ದೇ ಪಾಂಡ್ಯ. ಅಪಾಯಕಾರಿ ಹೆನ್ರಿಚ್​ ಕ್ಲಾಸೆನ್​ ವಿಕೆಟ್​ ಕೀಳದೇ ಹೋಗಿದ್ದರೆ ಭಾರತದ ಕಪ್​ ಆಸೆ ಮತ್ತೆ ನಿರಾಸೆಯಾಗುತ್ತಿತ್ತು.

ಹಾರ್ದಿಕ್‌ ಮತ್ತು ನತಾಶಾ ಕಳೆದ 2020ರಲ್ಲೇ ರಿಜಿಸ್ಟರ್‌ ರೀತಿಯಲ್ಲಿ ವಿವಾಹವಾಗಿದ್ದರು. ಮದುವೆಗೂ ಮುನ್ನವೇ ನತಾಶಾ ಅವರನ್ನು ಪಾಂಡ್ಯ ಗರ್ಭಿಣಿ ಮಾಡಿದ್ದರು. ಈ ಜೋಡಿಗೆ ಒಬ್ಬ ಪುತ್ರನಿದ್ದಾನೆ. ಈತನ ಹೆಸರು ಅಗಸ್ತ್ಯ. ಕಳೆದ ವರ್ಷ ಫೆ.14 ರಂದು ರಾಜಸ್ಥಾನದ ಉದಯ್‌ಪುರದಲ್ಲಿ ಕ್ರಿಷ್ಚಿಯನ್‌ ಸಂಪ್ರದಾಯದಂತೆ ಹಾರ್ದಿಕ್‌ ಮತ್ತು ನತಾಶಾ ಮತ್ತೊಮ್ಮೆ ಅದ್ದೂರಿಯಾಗಿ ಪುನರ್‌ ವಿವಾಹವಾಗಿದ್ದರು. ಕುಟುಂಬಸ್ಥರು ಮತ್ತು ಗೆಳೆಯರ ಸಮ್ಮುಖದಲ್ಲಿ ಮತ್ತೊಮ್ಮೆ ವಿವಾಹವಾಗಿದ್ದರು. ಇವರ ವಿವಾಹ ಸಮಾರಂಭದಲ್ಲಿ ಕೊಹ್ಲಿ-ಅನುಷ್ಕಾ, ರಾಹುಲ್‌-ಅಥಿಯಾ, ರಾಕಿಣಗ್​ ಸ್ಟಾರ್ ಯಶ್​ ಸೇರಿ ಹಲವು ಗಣ್ಯರೂ ಭಾಗಿಯಾಗಿದ್ದರು.

Continue Reading

ಕ್ರೀಡೆ

Virat- Anushka: ಬೆರಿಲ್ ಚಂಡಮಾರುತದ ದೃಶ್ಯವನ್ನು ವಿಡಿಯೊ ಕಾಲ್​ ಮೂಲಕ ಪತ್ನಿ ಅನುಷ್ಕಾಗೆ ತೋರಿಸಿದ ಕೊಹ್ಲಿ; ವಿಡಿಯೊ ವೈರಲ್​ 

Virat- Anushka: ವಿರಾಟ್​ ಕೊಹ್ಲಿ ತಾವು ತಂಗಿರುವ ಹೊಟೇಲ್‌ ಕಿಟಕಿಯಿಂದ ಸಮುದ್ರದಲ್ಲಿ ಅಪ್ಪಳಿಸುತ್ತಿರುವ ಭಾರೀ ಗಾತ್ರದ ಅಲೆಗಳನ್ನು, ಮತ್ತು ಅಲ್ಲಿನ ಪರಿಸ್ಥಿತಿ ಹೇಗಿದೆ ಎನ್ನುವುದನ್ನು ಪತ್ನಿ ಅನುಷ್ಕಾಗೆ(anushka sharma) ವಿಡಿಯೊ ಕಾಲ್​ ಮೂಲಕ ತೋರಿಸಿದ್ದಾರೆ. ಈ ವಿಡಿಯೊ ವೈರಲ್​ ಆಗಿದೆ.

VISTARANEWS.COM


on

Virat- Anushka
Koo

ಬಾರ್ಬಡೋಸ್​: ದ್ವೀಪ ರಾಷ್ಟ್ರ ಬಾರ್ಬಡೋಸ್‌ನಲ್ಲಿ ಅಬ್ಬರಿಸುತ್ತಿರುವ ಅಪಾಯಕಾರಿ ಬೆರಿಲ್ ಚಂಡಮಾರುತದ(Hurricane Beryl) ಪ್ರಭಾವದಿಂದ ಬಾರ್ಬಡೋಸ್​ನಲ್ಲಿಯೇ ತಂಗಿರುವ ಟಿ20 ವಿಶ್ವ ಚಾಂಪಿಯನ್​ ಟೀಮ್​ ಇಂಡಿಯಾ ಆಟಗಾರರು ಗುರುವಾರ ಭಾರತಕ್ಕೆ ವಿಮಾನ ಏರುವ ಸಾಧ್ಯತೆ ಇದೆ ಎಂದು ವರದಿಯಾಗಿದೆ. ಚಂಡಮಾರುತದ ಅಬ್ಬರದ ದೃಶ್ಯವನ್ನು ವಿರಾಟ್​ ಕೊಹ್ಲಿ(virat kohli) ಅವರು ತಮ್ಮ ಪತ್ನಿ ಅನುಷ್ಕಾ ಶರ್ಮಗೆ(Virat- Anushka) ವಿಡಿಯೊ ಕಾಲ್ ಮೂಲಕ ತೋರಿಸುತ್ತಿರುವ ವಿಡಿಯೊ ಇದೀಗ ವೈರಲ್​ ಆಗಿದೆ.​

ಸದ್ಯ ಟೀಮ್​ ಇಂಡಿಯಾದ ಆಟಗಾರರು ಮತ್ತವರ ಕುಟುಂಬಸ್ಥರು, ಬಿಸಿಸಿಐ ಅಧಿಕಾರಿಗಳು ಸೇರಿ ಇಡೀ ತಂಡ ಬಾರ್ಬಡೋಸ್​ನ ಹೊಟೇಲ್‌ನಲ್ಲಿ ತಂಗಿದೆ. ಚಂಡಮಾರುತದ ಕಾರಣ, ಭಾರತೀಯ ಆಟಗಾರರಿರುವ ಹೊಟೇಲ್‌ ಸೇವೆಯಲ್ಲೂ ವ್ಯತ್ಯಯವಾಗಿದೆ ಎಂದು ವರದಿಯಾಗಿದೆ. ಟಿ 20 ವಿಶ್ವಕಪ್ ಫೈನಲ್​​ನಲ್ಲಿ ಭಾರತ ಗೆದ್ದ ಕೆಲವೇ ಗಂಟೆಗಳ ನಂತರ ಬೆರಿಲ್ ಚಂಡಮಾರುತವು ದ್ವೀಪ ರಾಷ್ಟ್ರಕ್ಕೆ ಅಪ್ಪಳಿಸಿತ್ತು.

ಇದನ್ನೂ ಓದಿ Virat Kohli: ಬುರ್ಜ್‌ ಖಲೀಫಾದಲ್ಲಿ ಕಣ್ಮನ ಸೆಳೆದ ವಿರಾಟ್​ ಕೊಹ್ಲಿಯ ಫೋಟೊ; ವಿಡಿಯೊ ವೈರಲ್​

ವಿರಾಟ್​ ಕೊಹ್ಲಿ ತಾವು ತಂಗಿರುವ ಹೊಟೇಲ್‌ ಕಿಟಕಿಯಿಂದ ಸಮುದ್ರದಲ್ಲಿ ಅಪ್ಪಳಿಸುತ್ತಿರುವ ಭಾರೀ ಗಾತ್ರದ ಅಲೆಗಳನ್ನು, ಮತ್ತು ಅಲ್ಲಿನ ಪರಿಸ್ಥಿತಿ ಹೇಗಿದೆ ಎನ್ನುವುದನ್ನು ಪತ್ನಿ ಅನುಷ್ಕಾಗೆ(anushka sharma) ವಿಡಿಯೊ ಕಾಲ್​ ಮೂಲಕ ತೋರಿಸಿದ್ದಾರೆ. ಈ ವಿಡಿಯೊ ವೈರಲ್​ ಆಗಿದೆ. ಕುಟುಂಬಕ್ಕೆ ಮೊದಲ ಪ್ರಾಧಾನ್ಯತೆ ನೀಡುವ ಕೊಹ್ಲಿ ಯಾವುದೇ ಪಂದ್ಯ ಇರಲಿ ಇದು ಮುಕ್ತಾಯಗೊಂಡ ತಕ್ಷಣ ಪತ್ನಿಗೆ ವಿಡಿಯೊ ಕಾಲ್​ ಮಾಡಿ ಮಾತನಾಡುತ್ತಾರೆ. ಕೆಲವೊಮ್ಮೆ ಕ್ರಿಕೆಟ್​ ಸರಣಿ ಇದ್ದರೂ ಕೂಡ ಇದರಿಂದ ಹಿಂದೆ ಸರಿದು ಕುಟುಂಬದ ಜತೆ ಕಾಲ ಕಳೆಯುತ್ತಾರೆ.

ಟಿ20 ವಿಶ್ವಕಪ್​ ಗೆದ್ದ ಬಳಿಕವೂ ಕೂಡ ಕೊಹ್ಲಿ ಪತ್ನಿಗೆ ಕರೆ ಮಾಡಿ ಮಕ್ಕಳ ಬಗ್ಗೆ ವಿಚಾರಿಸಿದ್ದಾರೆ. ಜತೆಗೆ ಪುಟ್ಟ ಮಗುವಿಗೆ ಫ್ಲೈಯಿಂಗ್ ಕಿಸ್ ನೀಡಿದ ವಿಡಿಯೊ ಕೂಡ ವೈರಲ್​ ಆಗಿತ್ತು.

ಕೊಹ್ಲಿ ಮತ್ತು ಅನುಷ್ಕಾ ಅದೆಷ್ಟೋ ಜನರಿಗೆ ಸ್ಫೂರ್ತಿಯಾಗಿದ್ದಾರೆ. ಈ ಜೋಡಿ ಸೇವಾ (seVVA) ಎಂಬ ಹೆಸರಿನ ಎನ್​ಜಿವೊ ನಡೆಸುತ್ತಿದ್ದು ಈ ಮೂಲಕ ಹಲವರಿಗೆ ಸಹಾಯವನ್ನು ಮಾಡುತ್ತಿದ್ದಾರೆ. ಕೊಹ್ಲಿಯ ಎಲ್ಲ ಏರಿಳಿತದಲ್ಲಿಯೂ ಪತ್ನಿ ಅನುಷ್ಕಾ ಬೆಂಬಲಕ್ಕೆ ನಿಂತು ಅವರಿಗೆ ಸಾದಾ ಪ್ರೋತ್ಸಾಹವನ್ನು ನೀಡುತ್ತಲೇ ಬಂದಿದ್ದಾರೆ. ಕೊಹ್ಲಿ ಕೂಡ ತನ್ನ ಬದುಕಿನಲ್ಲಿ ಅನುಷ್ಕಾ ಮುಖ್ಯ ಪಾತ್ರಹಿಸಿರುದಾಗಿ ಹಿಂದೊಮ್ಮೆ ಸಂದರ್ಶನದಲ್ಲಿ ಹೇಳಿದ್ದರು. “ಅನುಷ್ಕಾ ಅವರ ಭೇಟಿ ನನ್ನ ಜೀವನದಲ್ಲಿ ಹೊಸ ದೃಷ್ಟಿಕೋನವನ್ನು ಕೊಟ್ಟಿದೆ. ಹಾಗೇ ಎಲ್ಲವನ್ನೂ ಸ್ವೀಕರಿಸುವ ಭಾವನೆಯನ್ನು ಬೆಳೆಸಿಕೊಳ್ಳಲು ಸಹಕರಿಸಿದೆ” ಎಂದು ಕೊಹ್ಲಿ ಹೇಳಿದ್ದರು.

“ನನ್ನ ಜೀವನವು ಸಂಪೂರ್ಣವಾಗಿ ವಿಭಿನ್ನ ದೃಷ್ಟಿಕೋನವನ್ನು ಹೊಂದಿತ್ತು. ನೀವು ಒಬ್ಬ ವ್ಯಕ್ತಿಯೊಂದಿಗೆ ಪ್ರೀತಿಯಲ್ಲಿ ಬಿದ್ದಾಗ, ನಿಮ್ಮೊಳಗೆ ಆ ಬದಲಾವಣೆಗಳನ್ನು ಪ್ರಕ್ರಿಯೆಗೊಳಿಸಲು ಪ್ರಾರಂಭಿಸುತ್ತೀರಿ. ಅವಳ ಜೀವನದ ದೃಷ್ಟಿಕೋನವು ವಿಭಿನ್ನವಾಗಿತ್ತು ಮತ್ತು ಅದು ನನ್ನನ್ನು ಉತ್ತಮವಾಗಿ ಬದಲಾಯಿಸಲು ಮತ್ತು ವಿಷಯಗಳನ್ನು ಹೆಚ್ಚು ಒಪ್ಪಿಕೊಳ್ಳುವಂತೆ ಪ್ರೇರೇಪಿಸಿತು. ತಾಯಿಯಾಗಿ ಅನುಷ್ಕಾ ಮಾಡಿದ ತ್ಯಾಗಗಳು ದೊಡ್ಡವು. ಅವಳನ್ನು ನೋಡಿದಾಗ, ನನಗೆ ಏನೇ ಸಮಸ್ಯೆಗಳಿದ್ದರೂ ಏನೂ ಅಲ್ಲ ಎಂದು ಎನಿಸಿಬಿಡುತ್ತದೆ” ಎಂದು ಕೊಹ್ಲಿ ಪತ್ನಿ ಅನುಷ್ಕಾ ಬಗ್ಗೆ ಮೆಚ್ಚುಗೆಯ ಮಾತುಗಳನಾಡಿದ್ದರು.

Continue Reading
Advertisement
Physical Abuse
ಕರ್ನಾಟಕ23 mins ago

Physical Abuse: ಬೆಂಗಳೂರಲ್ಲಿ 6 ವರ್ಷದ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ ಎಸಗಿ ಕೊಲೆ

Narendra Modi
ದೇಶ28 mins ago

Narendra Modi: ಮುಂದಿನ 5 ವರ್ಷ ಬಡತನ ವಿರುದ್ಧದ ಹೋರಾಟಕ್ಕೆ ಮೀಸಲು; ರಾಜ್ಯಸಭೆಯಲ್ಲಿ ಮೋದಿ ಭರವಸೆ

Double Ismart Steppa Maar electrifies with mass beats
ಟಾಲಿವುಡ್31 mins ago

Double Ismart: ಪ್ರಚಾರ ಅಖಾಡದಲ್ಲಿ ‘ಡಬಲ್ ಇಸ್ಮಾರ್ಟ್’: ಮೊದಲ ಹಾಡು ರಿಲೀಸ್!

Actor Darshan
ಕರ್ನಾಟಕ55 mins ago

Actor Darshan: ಮಗುವನ್ನು ಕೈದಿ ಮಾಡಿದವರಿಗೆ ಕಾನೂನು ಕಂಟಕ; ಪಾಲಕರಿಗೆ ನೋಟಿಸ್‌!

IPL 2025
ಕ್ರೀಡೆ1 hour ago

IPL 2025: ಮುಂದಿನ ವರ್ಷ ಆರ್​ಸಿಬಿಗೆ ವಿರಾಟ್​ ಕೊಹ್ಲಿ ನಾಯಕ?

Kannada New Movie kannnajaru teaser teaser Out
ಸಿನಿಮಾ1 hour ago

Kannada New Movie: ‘ಕಣಂಜಾರು’ ಟೀಸರ್ ಮೆಚ್ಚಿದ ಚಂದನವನ!

viral news signboard
ವೈರಲ್ ನ್ಯೂಸ್1 hour ago

Viral News: ʼತುರ್ತಾಗಿ ಒಂದು ಅಪಘಾತ ಮಾಡಿʼ ಅನ್ನುತ್ತಿದೆ ಈ ಸೈನ್‌ಬೋರ್ಡ್‌!

Hijab Row
ದೇಶ1 hour ago

Hijab Row: ಹಿಬಾಬ್‌ ನಿಷೇಧದ ಬೆನ್ನಲ್ಲೇ ಜೀನ್ಸ್‌, ಟೀ-ಶರ್ಟ್‌ ಬ್ಯಾನ್‌- ಪ್ರಕಟಣೆ ಹೊರಡಿಸಿದ ಮುಂಬೈ ಕಾಲೇಜು

Stray Dogs Attack
ಕರ್ನಾಟಕ1 hour ago

Stray Dogs Attack: ಸುರಪುರದಲ್ಲಿ ಬೀದಿ ನಾಯಿಗಳ ದಾಳಿಗೆ 15 ಕುರಿಗಳು ಬಲಿ

Gold Rate Today
ಚಿನ್ನದ ದರ2 hours ago

Gold Rate Today: ಯಥಾಸ್ಥಿತಿ ಕಾಯ್ದುಕೊಂಡ ಚಿನ್ನದ ದರ; ಇಷ್ಟಿದೆ ಇಂದಿನ ಬೆಲೆ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka weather Forecast
ಮಳೆ19 hours ago

Karnataka Weather : ಮಳೆ ಅಬ್ಬರಕ್ಕೆ ಹೆಚ್ಚಾದ ಗುಡ್ಡ ಕುಸಿತ; ಬಂಗ್ರ ಕೂಳೂರಿನಲ್ಲಿ ರಸ್ತೆ ಬಂದ್‌

karnataka Weather Forecast
ಮಳೆ2 days ago

Karnataka Weather : ಕೊಡಗು, ದಾವಣಗೆರೆಯಲ್ಲಿ ಮಳೆಯಾಟ; ಬೆಂಗಳೂರಲ್ಲಿ ಮೋಡ ಕವಿದ ವಾತಾವರಣ

karnataka Weather Forecast
ಮಳೆ3 days ago

Karnataka Weather : ಬೆಂಗಳೂರು, ಕಲಬುರಗಿ ಸೇರಿದಂತೆ ಹಲವೆಡೆ ವರ್ಷಧಾರೆ; ನಾಳೆಗೂ ಮಳೆ ಅಲರ್ಟ್‌

Actor Darshan
ಬೆಂಗಳೂರು3 days ago

Actor Darshan : ಖೈದಿ ನಂ.6106ಕ್ಕೆ ಡಿಮ್ಯಾಂಡ್‌! ದರ್ಶನ್‌ ಫ್ಯಾನ್ಸ್‌ಗೆ ಕಾನೂನು ಕಂಟಕ, ರೂಲ್ಸ್‌ ಬ್ರೇಕ್‌ ಮಾಡಿದ್ರೆ ಬೀಳುತ್ತೆ ಕೇಸ್‌‌!

karnataka weather Forecast
ಮಳೆ4 days ago

Karnataka Weather : ಮಳೆಗೆ ಸ್ಕಿಡ್‌ ಆಗಿ ಹೇಮಾವತಿ ನದಿಗೆ ಹಾರಿದ ಕಾರು; ಕರಾವಳಿಗೆ ಎಚ್ಚರಿಕೆ ಕೊಟ್ಟ ತಜ್ಞರು

karnataka Rain
ಮಳೆ4 days ago

Karnataka Rain: ಭಾರಿ ಮಳೆಗೆ ಮನೆಗಳ ಗೋಡೆ ಕುಸಿತ; ಕೂದಲೆಳೆ ಅಂತರದಲ್ಲಿ ವೃದ್ಧ ಪಾರು

karnataka Weather Forecast
ಮಳೆ5 days ago

Karnataka Weather : ಅಬ್ಬಬ್ಬಾ.. ಮುಲ್ಕಿಯಲ್ಲಿ 30 ಸೆಂ.ಮೀ ಮಳೆ ದಾಖಲು; ವಾರಾಂತ್ಯದಲ್ಲೂ ಭಾರಿ ವರ್ಷಧಾರೆ

karnataka Rain
ಮಳೆ5 days ago

Karnataka Rain : ಭಾರಿ ಮಳೆಗೆ ಪಾತಾಳ ಸೇರಿದ ಬಾವಿ; ಅಲೆಗಳ ಹೊಡೆತಕ್ಕೆ ಸಮುದ್ರಪಾಲಾದ ಮನೆ

Karnataka Weather Forecast
ಮಳೆ6 days ago

Karnataka Weather : ಭಾರಿ ಮಳೆ ಹಿನ್ನೆಲೆ ದಕ್ಷಿಣ ಕನ್ನಡಕ್ಕೆ ರೆಡ್ ಅಲರ್ಟ್; ಶುಕ್ರವಾರವೂ ಶಾಲೆಗಳಿಗೆ ರಜೆ ಘೋಷಣೆ

karnataka Weather Forecast
ಮಳೆ6 days ago

Karnataka Weather : ಭಾರಿ ಮಳೆಗೆ ಸೇತುವೆಯಿಂದ ಹೊಳೆಗೆ ಬಿದ್ದ ಕಾರು; ಮರ ಹಿಡಿದು ಪ್ರಾಣ ಉಳಿಸಿಕೊಂಡ ಸವಾರರು

ಟ್ರೆಂಡಿಂಗ್‌