Karnataka Tour: ಮಳೆಗಾಲದಲ್ಲಿ ಭೇಟಿ ನೀಡಬಹುದಾದ ಕರ್ನಾಟಕದ 15 ರಮಣೀಯ ತಾಣಗಳು - Vistara News

ಪ್ರವಾಸ

Karnataka Tour: ಮಳೆಗಾಲದಲ್ಲಿ ಭೇಟಿ ನೀಡಬಹುದಾದ ಕರ್ನಾಟಕದ 15 ರಮಣೀಯ ತಾಣಗಳು

ಜಲಪಾತ, ಗಿರಿಧಾಮ, ಕಡಲ ತೀರಗಳು ಮಳೆಗಾಲದಲ್ಲಿ ಅನ್ವೇಷಿಸಬಹುದಾದ ಸಾಕಷ್ಟು ಆಕರ್ಷಣೆಗಳು (Karnataka Tour) ಕರ್ನಾಟಕದಲ್ಲಿವೆ. ಮಾನ್ಸೂನ್ ನಲ್ಲಿ ಈ ಸ್ಥಳಗಳ ಮಾಂತ್ರಿಕ ಮೋಡಿಯನ್ನು ಮಾಡುವುದು. ಮಳೆಗಾಲದಲ್ಲಿ ಕರ್ನಾಟಕದಲ್ಲಿ ನೋಡಲೇ ಬೇಕಾದ 15 ಪ್ರಮುಖ ಸ್ಥಳಗಳಿವೆ. ಇದರ ಸೌಂದರ್ಯವನ್ನು ಈ ಮಳೆಗಾಲದಲ್ಲಿ ಅನುಭವಿಸದೇ ಇದ್ದರೆ ಮುಂದಿನ ಮಳೆಗಾಲದವರೆಗೂ ಕಾಯಬೇಕಾದೀತು!

VISTARANEWS.COM


on

Karnataka Tour
ಮಹತ್ವದ, ಕುತೂಹಲಕರ ಸುದ್ದಿಗಾಗಿ ಫಾಲೊ ಮಾಡಿ
Koo

ಕರ್ನಾಟದಲ್ಲಿ ಮಳೆಗಾಲ ಆರಂಭವಾಗಿದೆ. ಕೆಲವು ಪ್ರವಾಸಿ (Karnataka Tour) ತಾಣಗಳಂತೂ ನಯನ ಮನೋಹರವಾಗಿ ಕಂಗೊಳಿಸುತ್ತಿವೆ. ಮಾಂತ್ರಿಕವಾಗಿ ಸಿಂಗಾರಗೊಂಡಂತಿವೆ. ದೂರದೂರದ ಪ್ರವಾಸಿಗರನ್ನು (tourists) ತನ್ನತ್ತ ಆಕರ್ಷಿಸುತ್ತಿವೆ. ಒಂದೆಡೆ ಪಶ್ಚಿಮ ಘಟ್ಟಗಳು (Western Ghats), ಇನ್ನೊಂದೆಡೆ ಅರಬ್ಬಿ ಸಮುದ್ರದ (arabian sea) ಸಮೀಪವಿರುವ ಕರಾವಳಿ ಪ್ರದೇಶಗಳು ಮಳೆಯ ಧಾರೆಯಲ್ಲಿ ತೋಯ್ದು ತನ್ನನ್ನು ತಾನು ಸ್ವಚ್ಛ, ಸುಂದರ ಮತ್ತಷ್ಟು ಸಿಂಗಾರಗೊಳಿಸಿದಂತೆ ಭಾಸವಾಗುತ್ತಿದೆ.

ಭಾರೀ ಮಳೆಯ ಆರಂಭದ ದಿನಗಳಲ್ಲಿ ಕರ್ನಾಟಕದ ಹವಾಮಾನವು ಆರ್ದ್ರವಾಗಿರುತ್ತದೆ ಮತ್ತು ಆಹ್ಲಾದಕರವಾಗಿರುತ್ತದೆ. ಕರ್ನಾಟಕದ ಕರಾವಳಿ ಪ್ರದೇಶಗಳು ಮತ್ತು ದಕ್ಷಿಣ ಪ್ರದೇಶಗಳಲ್ಲಿ ಹಸಿರಿನಿಂದ ಚಿತ್ರಿಸಲ್ಪಟ್ಟಂತೆ ಭಾಸವಾಗುತ್ತದೆ. ಪಶ್ಚಿಮ ಘಟ್ಟಗಳಂತೂ ಆಕರ್ಷಣೆಯ ಕೇಂದ್ರವಾಗುತ್ತದೆ.

ಹಗಲಿನಲ್ಲಿ ತಾಪಮಾನವು 28 ಡಿಗ್ರಿ ಸೆಲ್ಸಿಯಸ್‌ಗೆ ಇಳಿದರೆ ರಾತ್ರಿಯಲ್ಲಿ ತಾಪಮಾನವು 20 ಡಿಗ್ರಿ ಸೆಲ್ಸಿಯಸ್‌ನಷ್ಟು ಕಡಿಮೆಯಾಗುವುದು. ಹಗಲು ಸುರಿಯುವ ಮಳೆಯಲ್ಲೂ ಹೊರಗೆ ಸುತ್ತಾಡಲು ಮನ ಬಯಸಿದರೆ, ರಾತ್ರಿ ತಂಪನೆಯ ವಾತಾವರಣ ಬೆಚ್ಚನೆ ಹೊದಿಕೆ ಹೊದ್ದು ಮಲಗಲು ಪ್ರೇರೇಪಿಸುತ್ತದೆ.

ಜಲಪಾತ, ಗಿರಿಧಾಮ, ಕಡಲ ತೀರಗಳು ಮಳೆಗಾಲದಲ್ಲಿ ಅನ್ವೇಷಿಸಬಹುದಾದ ಸಾಕಷ್ಟು ಆಕರ್ಷಣೆಗಳು ಕರ್ನಾಟಕದಲ್ಲಿವೆ. ಮಾನ್ಸೂನ್ ನಲ್ಲಿ ಈ ಸ್ಥಳಗಳ ಮಾಂತ್ರಿಕ ಮೋಡಿಯನ್ನು ಮಾಡುವುದು. ಮಳೆಗಾಲದಲ್ಲಿ ಕರ್ನಾಟಕದಲ್ಲಿ ನೋಡಲೇ ಬೇಕಾದ 15 ಪ್ರಮುಖ ಸ್ಥಳಗಳಿವೆ. ಇದರ ಸೌಂದರ್ಯವನ್ನು ಈ ಮಳೆಗಾಲದಲ್ಲಿ ಅನುಭವಿಸದೇ ಇದ್ದರೆ ಮುಂದಿನ ಮಳೆಗಾಲದವರೆಗೂ ಕಾಯಬೇಕಾಗುವುದು.


1. ಹಂಪಿ

ಹಂಪಿ ಕರ್ನಾಟಕದ ಅತ್ಯುತ್ತಮ ಮಾನ್ಸೂನ್ ಸ್ಥಳಗಳಲ್ಲಿ ಒಂದಾಗಿದೆ. ಇದ್ದಕ್ಕಿದ್ದಂತೆ, ಹಂಪಿಯ ಶುಷ್ಕ ಪ್ರದೇಶಗಳು ಹಸಿರು ವಿಸ್ತಾರವಾದ ಹುಲ್ಲುಗಾವಲುಗಳಾಗಿ ಬದಲಾಗುತ್ತವೆ. ಹಂಪಿಯ ರಮಣೀಯ ಭೂದೃಶ್ಯವನ್ನು ಹೊಂದಿರುವ ಹೇರಳವಾದ ದೇವಾಲಯಗಳು ಮಳೆಯಲ್ಲಿ ರುದ್ರರಮಣೀಯವಾಗಿ ಕಾಣುತ್ತವೆ. ಇಲ್ಲಿನ ಆಹ್ಲಾದಕರ ವಾತಾವರಣವು ಅದ್ಭುತವಾದ ಫೋಟೋಗಳನ್ನು ಒದಗಿಸುವುದು. ಮೋಡ ಕವಿದ ಆಕಾಶವು ದೇವಾಲಯಗಳ ಫೋಟೋಗಳಿಗೆ ಅದ್ಭುತವಾದ ಹಿನ್ನೆಲೆಯನ್ನು ಉಂಟು ಮಾಡುತ್ತದೆ. ಪ್ರಬಲವಾದ ಹಂಪಿ ನದಿಯಲ್ಲಿ ಕೊರಾಕಲ್ ದೋಣಿ ಸವಾರಿ ಮತ್ತು ರಾಕ್ ಕ್ಲೈಂಬಿಂಗ್ ಹೆಚ್ಚು ರೋಮಾಂಚನಕಾರಿಯಾಗಿರುತ್ತದೆ.


2. ಮರವಂತೆ

ಕರ್ನಾಟಕದ ಎನ್ ಹೆಚ್ 66ರಲ್ಲಿರುವ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಒಂದು ಸಣ್ಣ ಹಳ್ಳಿ ಮರವಂತೆಯಲ್ಲಿ ಸಮುದ್ರ ಮತ್ತು ನದಿ ಒಟ್ಟಿಗೆ ಸೇರುವ ದೃಶ್ಯ ನಯನಮನೋಹರವಾಗಿರುತ್ತದೆ. ಒಂದು ಕಡೆ ಗ್ರಾಮವು ಅರಬ್ಬೀ ಸಮುದ್ರದಿಂದ ಆವೃತವಾಗಿದ್ದರೆ ಇನ್ನೊಂದು ಬದಿಯಲ್ಲಿ ಸೌಪರ್ಣಿಕಾ ನದಿಯು ಶಾಂತವಾಗಿ ಹರಿಯುತ್ತಿರುತ್ತದೆ. ಮಾನ್ಸೂನ್ ಸಮಯದಲ್ಲಿ ಮರವಂತೆಯ ಬೀಚ್ ರಸ್ತೆಯಲ್ಲಿ ನಡೆಯುವುದು ಅತ್ಯುತ್ತಮ ಅನುಭವವನ್ನು ಕೊಡುವುದು.


3. ಆಗುಂಬೆ

ಆಗುಂಬೆಯು ಹಲವಾರು ಜಲಪಾತಗಳು, ನೈಸರ್ಗಿಕ ವೈಭವ ಮತ್ತು ಶ್ರೀಮಂತ ಜೀವವೈವಿಧ್ಯಕ್ಕೆ ಹೆಸರುವಾಸಿಯಾಗಿದೆ. ಶಿವಮೊಗ್ಗ ಜಿಲ್ಲೆಯ ಎತ್ತರದ ಗ್ರಾಮವನ್ನು ‘ದಕ್ಷಿಣದ ಚಿರಾಪುಂಜಿ’ ಎಂದೂ ಕರೆಯುತ್ತಾರೆ. ಯಾಕೆಂದರೆ ಇದು ಕರ್ನಾಟಕದಲ್ಲಿ ಅತಿ ಹೆಚ್ಚು ಮಳೆ ಬೀಳುವ ಸ್ಥಳವಾಗಿದೆ. ಅನೇಕ ಜಲಪಾತಗಳಾದ ಒನಕೆ ಅಬ್ಬಿ, ಜೋಗಿ ಗುಂಡಿ ಜಲಪಾತ ಮತ್ತು ಬರ್ಕಾನ ಜಲಪಾತಗಳು ಕರ್ನಾಟಕದಲ್ಲಿ ಮಾನ್ಸೂನ್ ಸಮಯದಲ್ಲಿ ಅದ್ಭುತಗಳಾಗಿ ರೂಪಾಂತರಗೊಳ್ಳುತ್ತವೆ. ಹಚ್ಚ ಹಸಿರಿನ ಮಳೆಕಾಡುಗಳಲ್ಲಿನ ಹಲವಾರು ಟ್ರೆಕ್ಕಿಂಗ್ ಟ್ರೇಲ್‌ಗಳು ಈ ಸ್ಥಳವನ್ನು ಒದಗಿಸುವ ಇತರ ಆಹ್ಲಾದಕರ ಸಂಗತಿಯಾಗಿದೆ.


4. ಬೀದರ್ ಕೋಟೆ

ಒಂದು ಕಾಲದಲ್ಲಿ ದಕ್ಷಿಣದ ರಾಜಧಾನಿಯಾಗಿದ್ದು 98 ಸ್ಮಾರಕಗಳನ್ನು ಹೊಂದಿರುವ ಜನಪ್ರಿಯ ತಾಣವಾಗಿದೆ. ಬೆಟ್ಟದ ತುದಿಯಲ್ಲಿ ನೆಲೆಸಿರುವ ‘ಸಿಟಿ ಆಫ್ ವಿಸ್ಪರಿಂಗ್ ಸ್ಮಾರಕಗಳು’ ಕರ್ನಾಟಕದಲ್ಲಿ ಮಾನ್ಸೂನ್ ಸಮಯದಲ್ಲಿ ಭೇಟಿ ನೀಡಲು ಅತ್ಯುತ್ತಮ ಸ್ಥಳಗಳಲ್ಲಿ ಒಂದಾಗಿದೆ. 500 ವರ್ಷಗಳಷ್ಟು ಹಳೆಯದಾದ ಬೀದರ್ ಕೋಟೆಯು ಭಾರತದ ಪುರಾತತ್ತ್ವ ಭೂಪಟದಲ್ಲಿ ಪ್ರಮುಖ ಸ್ಥಾನವನ್ನು ಗಳಿಸಿದೆ.


5. ಕೊಡಗು

ಮಳೆಗಾಲದಲ್ಲಿ ಭೇಟಿ ನೀಡಲು ಅತ್ಯುತ್ತಮ ತಾಣ ಕೊಡಗು. ದಟ್ಟವಾದ ಮಂಜಿನ ವಾತಾವರಣದಲ್ಲಿ ಹಸಿರು ಕಾಫಿ ತೋಟಗಳು ತುಂಬಾ ಆಕರ್ಷಣೀಯವಾಗಿ ಕಾಣುತ್ತದೆ. ಮಡಿಕೇರಿ ಪಟ್ಟಣದ ಅತ್ಯುನ್ನತ ಸ್ಥಳವಾದ ರಾಜಾ ಸೀಟ್‌ನಿಂದ ಮಳೆಯಲ್ಲಿ ಮುಳುಗಿರುವ ನಗರ ಸೌಂದರ್ಯವನ್ನು ವೀಕ್ಷಿಸುವುದು ರೋಮಾಂಚಕ ಅನುಭವವನ್ನು ಕೊಡುತ್ತದೆ.

ಕೂರ್ಗ್‌ನ ಮತ್ತೊಂದು ಪ್ರಸಿದ್ಧ ಪ್ರವಾಸಿ ಆಕರ್ಷಣೆಯಾಗಿರುವ ಅಬ್ಬೆ ಜಲಪಾತ. ಜಲಪಾತದ ಸೌಂದರ್ಯ ಸವಿಯುತ್ತಾ ಬಿಸಿಬಿಸಿ ಕಪ್ ಕಾಫಿ ಸೇವನೆ ಮಾಡುತ್ತ ಕೂರ್ಗ್‌ ನಲ್ಲಿ ಬೈಕ್ ಸವಾರಿ ಮಾಡುವುದು ಅತ್ಯಂತ ಅದ್ಭುತವಾದ ಅನುಭವವನ್ನು ಕೊಡುತ್ತದೆ.


6. ದಾಂಡೇಲಿ

ಕರ್ನಾಟಕದಲ್ಲಿ ಮಾನ್ಸೂನ್ ಸಮಯದಲ್ಲಿ ಸಸ್ಯ ಮತ್ತು ಪ್ರಾಣಿಗಳ ಸೌಂದರ್ಯ ಸವಿಯಲು ದಾಂಡೇಲಿಯ ಕಾಡುಗಳು ಅತ್ಯುತ್ತಮ ಸ್ಥಳಗಳಲ್ಲಿ ಒಂದಾಗಿದೆ. ದಾಂಡೇಲಿ ವನ್ಯಜೀವಿ ಅಭಯಾರಣ್ಯವು ಕರ್ನಾಟಕದ ಎರಡನೇ ಅತಿ ದೊಡ್ಡ ವನ್ಯಜೀವಿ ಅಭಯಾರಣ್ಯವಾಗಿದೆ. ಮಳೆಗಾಲದಲ್ಲಿ ಅನೇಕ ಸರೀಸೃಪಗಳು, ಪಕ್ಷಿಗಳು ಮತ್ತು ಕಾಡು ಪ್ರಾಣಿಗಳ ಆವಾಸಸ್ಥಾನವಾಗಿದೆ. ಕಪ್ಪು ಪ್ಯಾಂಥರ್, ಚಿರತೆ ಅಥವಾ ಆನೆಯನ್ನು ಇಲ್ಲಿ ಕಾಣಬಹುದು.


7. ಮೈಸೂರು

ಮಳೆಗಾಲದಲ್ಲಿ ಪ್ರವಾಸ ಹೊರಡುವ ಯೋಚನೆ ಇದ್ದರೆ ಮೈಸೂರನ್ನು ಆಯ್ಕೆ ಮಾಡಬಹುದು. ವಾರಾಂತ್ಯವನ್ನು ಮೈಸೂರಿನ ಐಷಾರಾಮಿ ರೆಸಾರ್ಟ್‌ನಲ್ಲಿ ಕಳೆಯುವುದು ಅದ್ಭುತ ಆಯ್ಕೆಯಾಗಿದೆ. ಹೊರಗೆ ಮಳೆ ಸುರಿಯುವಾಗ ಬಲಿನೀಸ್, ಸ್ವೀಡಿಷ್ ಮತ್ತು ಆಯುರ್ವೇದಿಕ್ ಸ್ಪಾ ಚಿಕಿತ್ಸೆಗಳ ಆನಂದ ಸವಿಯಬಹುದು.


8. ನಂದಿ ಹಿಲ್‌

ಮಾನ್ಸೂನ್ ಸಮಯದಲ್ಲಿ ನಂದಿ ಬೆಟ್ಟದಲ್ಲಿ ಮಂತ್ರಮುಗ್ಧಗೊಳಿಸುವ ದೃಶ್ಯಗಳನ್ನು ಕಣ್ತುಂಬಿಕೊಳ್ಳಬಹುದು. ನಯನಮನೋಹರ ಸೂರ್ಯಾಸ್ತ, ಸೂರ್ಯೋದಯದ ದೃಶ್ಯಾವಳಿಗಳು ಮನದಲ್ಲಿ ವರ್ಣಚಿತ್ರದಂತೆ ಅಚ್ಚಳಿಯದೆ ಉಳಿಯುವುದು. ಮಳೆಗಾಲದಲ್ಲಿ ಬೈಕ್ ಸವಾರರು ಬೆಟ್ಟಗಳ ಮೇಲೆ ಹೋಗಿ ಪ್ರಕೃತಿಯ ಸೌಂದರ್ಯ ಸವಿಯಬಹುದು.


9. ಸ್ಕಂದಗಿರಿ ಬೆಟ್ಟ

ಸ್ಕಂದಗಿರಿ ಬೆಟ್ಟಗಳ ಶಿಖರದಲ್ಲಿ ನಿಂತಿರುವಾಗ ಮೋಡಗಳ ಮೇಲೆ ಏರಿದಂತ ಅನುಭವ ಕೊಡುತ್ತದೆ. ಆಗಸ್ಟ್‌ನಲ್ಲಿ ಇಲ್ಲಿ ಚಾರಣಕ್ಕೆ ಹೋಗಲು ಸೂಕ್ತ ಸಮಯ. ಹತ್ತಿಯಂತೆ ಕಾಣುವ ಮೋಡಗಳು ಅಲೌಕಿಕವಾಗಿ ಕಾಣುತ್ತವೆ. ಸ್ಕಂದಗಿರಿಯಿಂದ ಸೂರ್ಯೋದಯದ ಸುಂದರ ದೃಶ್ಯವನ್ನು ಕಣ್ತುಂಬಿಕೊಳ್ಳಬಹುದು. ರಾತ್ರಿ ಆಕಾಶದ ಅದ್ಭುತಗಳ ಅಡಿಯಲ್ಲಿ ಕ್ಯಾಂಪಿಂಗ್ ಮಾಡುವುದು ಉತ್ತಮ ಅನುಭವವನ್ನು ನೀಡುತ್ತದೆ.


10. ಗೋಕರ್ಣ

ಹಿಪ್ಪಿಗಳ ಸ್ವರ್ಗ ಗೋಕರ್ಣದ ಕಡಲತೀರಗಳು ರಮಣೀಯ ದೃಶ್ಯಗಳಿಗೆ ಹೆಸರುವಾಸಿಯಾಗಿದೆ. ಒಂದು ಕಡೆ ಕಲ್ಲಿನ ಪರ್ವತ ಮತ್ತು ಇನ್ನೊಂದು ಕಡೆ ಅರೇಬಿಯನ್ ಸಮುದ್ರದೊಂದಿಗೆ ಇರುವ ಧಾರ್ಮಿಕ ಪಟ್ಟಣವು ಅತ್ಯಂತ ಸುಂದರವಾದ ಭೂದೃಶ್ಯಗಳನ್ನು ನೀಡುತ್ತದೆ.

11. ಜೋಗ ಜಲಪಾತ

ಮಳೆಗಾಲದಲ್ಲಿ ತುಂಬಿ ಹರಿಯುವ ಜೋಗ ಜಲಪಾತವು ಕನಸಿನ ಪ್ರಪಂಚವನ್ನು ಮಳೆಗಾಲದಲ್ಲಿ ತೋರಿಸುತ್ತದೆ. ಮಾನ್ಸೂನ್ ಸಮಯದಲ್ಲಿ ಆಗೊಮ್ಮೆ ಈಗೊಮ್ಮೆ ಮಳೆಬಿಲ್ಲುಗಳೊಂದಿಗೆ ಭವ್ಯವಾದ ಪ್ರಕೃತಿಯನ್ನು ಇಲ್ಲಿ ಆನಂದಿಸಬಹುದು. ಶರಾವತಿ ನದಿಯಿಂದ ರೂಪುಗೊಂಡಿರುವ ಜಲಪಾತವು ಕರ್ನಾಟಕದ ಅತ್ಯಂತ ಪ್ರಸಿದ್ಧವಾದ ಜಲಪಾತಗಳಲ್ಲಿ ಒಂದಾಗಿದೆ ಮತ್ತು ಭಾರತದ ಅತಿ ಎತ್ತರದ ಜಲಪಾತಗಳಲ್ಲಿ ಒಂದಾಗಿದೆ.

ಇದನ್ನೂ ಓದಿ: Assam Tour: ಅಸ್ಸಾಂನ ಪೆಲ್ಲಿಂಗ್‌ನಲ್ಲಿ ಮೋಡಿ ಮಾಡುವ 8 ಆಕರ್ಷಕ ಸಂಗತಿಗಳಿವು


12. ಕೆಮ್ಮಣ್ಣುಗುಂಡಿ

ಕರ್ನಾಟಕದ ಪ್ರಸಿದ್ಧ ಗಿರಿಧಾಮಗಳಲ್ಲಿ ಒಂದಾಗಿರುವ ಕೆಮ್ಮಣ್ಣುಗುಂಡಿ ಚಿಕ್ಕಮಗಳೂರು ಜಿಲ್ಲೆಯಲ್ಲಿರುವ ಸುಂದರವಾದ ಗಿರಿಧಾಮವಾಗಿದೆ. ಇಲ್ಲಿ ನೋಡುವಂತ ಹಲವಾರು ಭೂದೃಶ್ಯಗಳು ಮತ್ತು ಸೊಂಪಾದ ಪ್ರದೇಶಗಳಿವೆ. ಕೆಮ್ಮನಗುಂಡಿಯಲ್ಲಿರುವ ಇತರ ಕೆಲವು ಪ್ರಮುಖ ಆಕರ್ಷಣೆಗಳೆಂದರೆ ಹೆಬ್ಬೆ ಜಲಪಾತ, ಶಾಂತಿ ಜಲಪಾತ, ಝೆಡ್ ಪಾಯಿಂಟ್ ಮತ್ತು ಅತ್ಯಂತ ಪ್ರಸಿದ್ಧವಾದ ಬಾಬಾ ಬುಡನ್ ಗಿರಿ ಮತ್ತು ಮುಳ್ಳಯ್ಯನಗಿರಿ ಬೆಟ್ಟಗಳು.


13. ಕುದುರೆಮುಖ

ಕುದುರೆಮುಖ ಗಿರಿಧಾಮ ಮಾನ್ಸೂನ್ ಸಮಯದಲ್ಲಿ ಉತ್ತಮ ಅನುಭವವನ್ನು ನೀಡುತ್ತದೆ. ಕುದುರೆಮುಖ ರಾಷ್ಟ್ರೀಯ ಉದ್ಯಾನವನದಲ್ಲಿರುವ ಶೋಲಾ ಹುಲ್ಲುಗಾವಲು ಮತ್ತು ಕಾಡುಗಳು ಮಾನ್ಸೂನ್ ಸಮಯದಲ್ಲಿ ಭೇಟಿ ನೀಡಲು ಅತ್ಯಂತ ಆಸಕ್ತಿದಾಯಕ ತಾಣಗಳಾಗಿವೆ. ಹನುಮಾನ್ ಗುಂಡಿ ಮತ್ತು ಕದಂಬಿ ಜಲಪಾತ ಇಲ್ಲಿನ ಎರಡು ಪ್ರಮುಖ ತಾಣಗಳಾಗಿವೆ. ಮಾನ್ಸೂನ್ ಸಮಯದಲ್ಲಿ ಕರ್ನಾಟಕದಲ್ಲಿ ಭೇಟಿ ನೀಡಲು ಇದು ಅತ್ಯಂತ ಸುಂದರವಾದ ಸ್ಥಳಗಳಲ್ಲಿ ಒಂದಾಗಿದೆ.


14. ಬಾಲೂರು

ಚಿಕ್ಕಮಗಳೂರು ಜಿಲ್ಲೆಯ ಒಂದು ಗ್ರಾಮವಾದ ಬಾಲೂರು ಮಾನ್ಸೂನ್ ಋತುವಿನಲ್ಲಿ ಭೇಟಿ ನೀಡಲು ಅತ್ಯುತ್ತಮ ತಾಣವಾಗಿದೆ. ವಿಶಾಲವಾದ ಕಾಫಿ ಎಸ್ಟೇಟ್ ಗಳು ಭೂಮಿಯ ಮೇಲಿನ ಅತ್ಯಂತ ಪರಿಶುದ್ಧ ಸ್ಥಳ ಎಂಬಂತೆ ಭಾಸವಾಗುತ್ತದೆ. ಚಾರ್ಮಾಡಿ ಘಾಟ್, ಚಾರ್ಮಾಡಿ ಜಲಪಾತ ಮತ್ತು ಕೊಡೆ ಕಲ್ಲು ಇಲ್ಲಿನ ಅದ್ಭುತ ಸ್ಥಳಗಳಾಗಿವೆ.

ಕ್ಷಣ ಕ್ಷಣದ ಮಾಹಿತಿಗಾಗಿ Vistara News FaceBook ಪೇಜ್ ಫಾಲೋ ಮಾಡಿ
ಮಹತ್ವದ ಮಾಹಿತಿಗಾಗಿ ವಿಸ್ತಾರ ನ್ಯೂಸ್ ಆ್ಯಪ್ ಉಚಿತವಾಗಿ ಡೌನ್ ಲೋಡ್ ಮಾಡಿಕೊಳ್ಳಿ: Andriod App | IOS App
Continue Reading
Click to comment

Leave a Reply

Your email address will not be published. Required fields are marked *

ಪ್ರವಾಸ

Dharamshala Tour: ಪರಿಪೂರ್ಣ ಪ್ರವಾಸದ ಅನುಭವ ಕೊಡುವ ಧರ್ಮಶಾಲಾ

ಧರ್ಮಶಾಲಾ (Dharamshala Tour) ಸುತ್ತಮುತ್ತ ಇರುವ ವಿವಿಧ ಆಕರ್ಷಣೆಗಳು ಪ್ರತಿಯೊಬ್ಬ ಪ್ರವಾಸಿಗನ ವಿಭಿನ್ನ ಆಸಕ್ತಿಗಳನ್ನು ಪೂರೈಸುತ್ತದೆ. ಆಧ್ಯಾತ್ಮಿಕ ಜ್ಞಾನೋದಯ, ಹೊರಾಂಗಣ ಸಾಹಸ ಅಥವಾ ನೈಸರ್ಗಿಕ ಸೌಂದರ್ಯದಿಂದ ಸುತ್ತುವರಿದ ಶಾಂತಿಯುತ ಧಾಮ ಇದಾಗಿದೆ. ಇಲ್ಲಿರುವ ಹತ್ತು ಪ್ರಮುಖ ಸ್ಥಳಗಳು ಸೌಂದರ್ಯ, ಸಂಸ್ಕೃತಿ ಮತ್ತು ನೆಮ್ಮದಿಯ ಪೂರ್ಣ ಅನುಭವವನ್ನು ನೀಡುತ್ತದೆ. ಇದನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ. ಇಲ್ಲಿಯ ಅಪೂರ್ವ ಸ್ಥಳಗಳ ಪರಿಚಯ ಇಲ್ಲಿದೆ.

VISTARANEWS.COM


on

By

Dharamshala Tour
Koo

ಭಾರತದ (india) ಉತ್ತರ (north) ಭಾಗದ ಹಿಮಾಚಲ ಪ್ರದೇಶದಲ್ಲಿರುವ (himachal pradesh) ಅತ್ಯಂತ ಸುಂದರ ಸ್ಥಳ ಧರ್ಮಶಾಲಾ (Dharamshala Tour). ಶ್ರೀಮಂತ ಸಂಸ್ಕೃತಿ, ಶಾಂತಿಯುತ ಮತ್ತು ಆಧ್ಯಾತ್ಮಿಕ ಪಟ್ಟಣವಾಗಿರುವ ಧರ್ಮಶಾಲಾಕ್ಕೆ ಹೆಚ್ಚಿನ ಪ್ರವಾಸಿಗರು ಮನಸ್ಸಿನ ಶಾಂತಿ ಮತ್ತು ರೋಮಾಂಚಕ ಅನುಭವವನ್ನು ಪಡೆಯಲು ಬರುತ್ತಾರೆ.

ಧರ್ಮಶಾಲಾ ಎಷ್ಟು ರೋಮಾಂಚನಕಾರಿಯಾಗಿದೆಯಾಗಿದೆ ಎಂದರೆ ಈ ಪ್ರದೇಶದ ಸುತ್ತಮುತ್ತಲಿನ ಆಕರ್ಷಣೆಗಳನ್ನು ಅನ್ವೇಷಿಸುವ ಮೂಲಕ ನಾವು ಅದನ್ನು ಇನ್ನಷ್ಟು ಸ್ಮರಣೀಯಗೊಳಿಸಬಹುದು. ಧರ್ಮಶಾಲಾ ಸಮೀಪ ಹಲವು ಅತ್ಯಾಕರ್ಷಕ ಸ್ಥಳಗಳಿವೆ. ಚಿಕ್ಕ ಗಿರಿಧಾಮಗಳಿಂದ ಹಿಡಿದು ಹಳೆಯ ಮಠಗಳು, ರಮಣೀಯ ಸೌಂದರ್ಯ ಗಣಿಗಳು ಇಲ್ಲಿವೆ.


ಮೆಕ್ಲಿಯೋಡ್ ಗಂಜ್

ದಲೈ ಲಾಮಾ ಅವರ ನಿವಾಸ ಮೆಕ್ಲಿಯೋಡ್ ಗಂಜ್ ಧರ್ಮಶಾಲಾದಿಂದ ಕೆಲವು ಕೆಲವು ಕಿಲೋ ಮೀಟರ್ ದೂರದಲ್ಲಿದೆ. ಟಿಬೆಟಿಯನ್ ಕಲೆ, ಪಾಕಪದ್ಧತಿ ಮತ್ತು ಟಿಬೆಟಿಯನ್ ಸಂಸ್ಕೃತಿಯನ್ನು ಒಂದೇ ಸ್ಥಳದಲ್ಲಿ ನಾವಿಲ್ಲಿ ಕಾಣಬಹುದು. ಅತ್ಯಂತ ರೋಮಾಂಚಕ ಸಾಂಸ್ಕೃತಿಕ ಜೀವನವನ್ನು ಹೊಂದಿರುವ ಇಲ್ಲಿಗೆ ಭೇಟಿ ನೀಡಿದಾಗ ನಮ್ ಗ್ಯಾಲ್ ಮಠ, ಸುಗ್ಲಾಗ್‌ಖಾಂಗ್ ಕಾಂಪ್ಲೆಕ್ಸ್ ಮತ್ತು ಟಿಬೆಟಿಯನ್ ಮ್ಯೂಸಿಯಂ ಗೆ ಭೇಟಿ ನೀಡಲು ಮರೆಯದಿರಿ.


ಟ್ರಯಂಡ್

ಸಾಹಸ ಪ್ರಿಯರಿಗೆ ಟ್ರಿಯುಂಡ್ ಭೂಮಿಯ ಮೇಲಿನ ಸ್ವರ್ಗದಂತಿದೆ. ಯಾಕೆಂದರೆ ಇದು ಅತ್ಯುತ್ತಮ ಟ್ರೆಕ್ಕಿಂಗ್ ಅವಕಾಶವನ್ನು ನೀಡುತ್ತದೆ. ಮೆಕ್ಲಿಯೋಡ್‌ಗಂಜ್ ಪಟ್ಟಣದಿಂದ ಸುಮಾರು 9 ಕಿ.ಮೀ. ದೂರದಲ್ಲಿರುವ ಈ ಚಾರಣ ಪ್ರದೇಶವು ಧೌಲಾಧರ್ ಶ್ರೇಣಿ ಮತ್ತು ಕಾಂಗ್ರಾ ಕಣಿವೆಯ ಸೌಂದರ್ಯವನ್ನು ಬಣ್ಣಿಸುತ್ತದೆ. ಇಲ್ಲಿ ಚಾರಣವನ್ನು ಒಂದೇ ದಿನದಲ್ಲಿ ಪೂರ್ಣಗೊಳಿಸಬಹುದು. ಆರಂಭಿಕ ಮತ್ತು ಅನುಭವಿ ಚಾರಣಿಗರಿಗೆ ಇದು ಅನುಕೂಲಕರವಾಗಿರುತ್ತದೆ.


ಭಗ್ಸು ಜಲಪಾತ

ಮೆಕ್ಲಿಯೋಡ್ ಗಂಜ್‌ನ ಆಚೆ ಸ್ವಲ್ಪ ದೂರದಲ್ಲಿ ಭಗ್ಸು ಜಲಪಾತವಿದೆ. ಇದು ಪ್ರವಾಸಿಗರಿಗೆ ಪಿಕ್ನಿಕ್ ಮತ್ತು ನಡಿಗೆಗಳಿಗೆ ಆಹ್ವಾನಿಸುವ ಮೋಡಿಮಾಡುವ ಸ್ಥಳವಾಗಿದೆ. ಹಚ್ಚ ಹಸಿರಿನ ಸುತ್ತಮುತ್ತಲಿನ ಮತ್ತು ಪ್ರಶಾಂತ ವಾತಾವರಣದ ನಡುವೆ ಹತ್ತಿರದ ಭಾಗ್ಸುನಾಥ ದೇವಾಲಯವು ಪ್ರದೇಶದಲ್ಲಿ ಧಾರ್ಮಿಕತೆ ಮತ್ತು ಶಾಂತಿಯನ್ನು ಹೆಚ್ಚಿಸಿದೆ.


ದಾಲ್ ಸರೋವರ

ಧರ್ಮಶಾಲಾದಿಂದ ಸುಮಾರು 11 ಕಿಲೋ ಮೀಟರ್ ದೂರದಲ್ಲಿರುವ ದಾಲ್ ಸರೋವರವು ದಟ್ಟವಾದ ದೇವದಾರು ಮರಗಳಿಂದ ಸುತ್ತುವರೆದಿರುವ ಪ್ರಶಾಂತ ಜಲರಾಶಿಯಾಗಿದೆ ಮತ್ತು ಅದರ ಸುತ್ತಲೂ ಹಸಿರಿನಿಂದ ಕೂಡಿದೆ. ಸರೋವರದಲ್ಲಿ ಬೋಟಿಂಗ್ ಸೌಲಭ್ಯವಿದೆ. ಇಲ್ಲಿ ಜನರು ನೀರಿನ ಶಾಂತತೆಯನ್ನು ಆನಂದಿಸಬಹುದು ಮತ್ತು ಅದರ ಸುತ್ತಲೂ ಪ್ರಕೃತಿಯ ಪ್ರಶಾಂತತೆಯನ್ನು ಅನುಭವಿಸಬಹುದು.


ನಡ್ಡಿ ಗ್ರಾಮ

ಕ್ಲಿಯೋಡ್ ಗಂಜ್ ನಿಂದ ಸ್ವಲ್ಪ ದೂರದಲ್ಲಿರುವ ನಡ್ಡಿ ಗ್ರಾಮದಿಂದ ಮೋಡಗಳ ಬಿಳಿ ಹೊದಿಕೆ ಹೊದ್ದ ಶಿಖರಗಳು ಮತ್ತು ಕಾಂಗ್ರಾ ಕಣಿವೆಯ ನೋಟವನ್ನು ಪಡೆಯಬಹುದು. ಈ ಗ್ರಾಮವು ನಗರ ಜೀವನದಿಂದ ದೂರ ಕೊಂಡೊಯ್ದು ಮನಸ್ಸಿಗೆ ಶಾಂತಿಯನ್ನು ನೀಡುತ್ತದೆ. ಪ್ರಕೃತಿ ಪ್ರಿಯರಿಗೆ ಮತ್ತು ಛಾಯಾಗ್ರಾಹಣ ಇಷ್ಟ ಪಡುವವರಿಗೆ ಇದು ಸೂಕ್ತ ಸ್ಥಳವಾಗಿದೆ.


ಕಾಂಗ್ರಾ ಕೋಟೆ

ಕಾಂಗ್ರಾ ಕೋಟೆಯು ಭಾರತದ ಅತ್ಯಂತ ಹಳೆಯ ಮತ್ತು ದೊಡ್ಡ ಕೋಟೆಗಳಲ್ಲಿ ಒಂದಾಗಿದೆ. ಇತಿಹಾಸದ ಮೇಲೆ ಆಸಕ್ತಿ ಇರುವವರು ಇಲ್ಲಿಗೆ ಭೇಟಿ ನೀಡುವುದನ್ನು ತಪ್ಪಿಸಿಕೊಳ್ಳಬಾರದು. ಈ ಪುರಾತನ ಕೋಟೆಯು ಧರ್ಮಶಾಲಾ ಸಮೀಪದಲ್ಲಿ ಸುಮಾರು 20 ಕಿಲೋಮೀಟರ್ ದೂರದಲ್ಲಿದೆ. ಇದು ಇತಿಹಾಸ ಮತ್ತು ಪರಂಪರೆಯ ಬಗ್ಗೆ ಮಾಹಿತಿಯ ಉತ್ತಮ ಮೂಲವಾಗಿದೆ. ಈ ಕೋಟೆಯ ಸಂಕೀರ್ಣದಲ್ಲಿ ಹಲವಾರು ದೇವಾಲಯ, ಅರಮನೆ ಮತ್ತು ವಸ್ತುಸಂಗ್ರಹಾಲಯಗಳು ಪ್ರಾಚೀನ ಕಾಲದಲ್ಲಿ ವಾಸ್ತುಶಿಲ್ಪದ ಶ್ರೇಷ್ಠತೆಯನ್ನು ಪ್ರದರ್ಶಿಸುತ್ತವೆ.


ಪಾಲಂಪುರ್

ಉತ್ತರ ಭಾರತದ ಚಹಾ ರಾಜಧಾನಿ ಎಂದೂ ಕರೆಯಲ್ಪಡುವ ಪಾಲಂಪುರ್ ಧರ್ಮಶಾಲಾದಿಂದ ಸುಮಾರು 35 ಕಿ.ಮೀ. ದೂರದಲ್ಲಿರುವ ಒಂದು ಆಕರ್ಷಕ ಪಟ್ಟಣವಾಗಿದೆ. ಟೀ ತೋಟಗಳು ಅದರ ಸುತ್ತಲೂ ಹಿಮದಿಂದ ಆವೃತವಾದ ಪರ್ವತಗಳಿವೆ. ಸುಂದರ ಪ್ರಕೃತಿಯ ನಡುವೆ ಶಾಂತಿಯುತ ನಡಿಗೆಗೆ ಇದು ಸೂಕ್ತ ಸ್ಥಳವಾಗಿದೆ. ಆಂಡ್ರೆಟ್ಟಾ ಪಾಟರಿ ಸ್ಟುಡಿಯೋ, ತಾಶಿ ಜೊಂಗ್ ಮೊನಾಸ್ಟರಿ, ನ್ಯೂಗಲ್ ಖಾಡ್ ಇಲ್ಲಿನ ಕೆಲವು ಜನಪ್ರಿಯ ಆಕರ್ಷಣೆಗಳಾಗಿವೆ.


ಚಾಮುಂಡಾ ದೇವಿ ದೇವಸ್ಥಾನ

ಧರ್ಮಶಾಲಾದಿಂದ ಸುಮಾರು 15 ಕಿಲೋ ಮೀಟರ್ ದೂರದಲ್ಲಿರುವ ಚಾಮುಂಡಾ ದೇವಿ ದೇವಸ್ಥಾನವು ಹಿಂದೂಗಳಿಗೆ ಪವಿತ್ರ ಕ್ಷೇತ್ರವಾಗಿದೆ. ಯಾಕೆಂದರೆ ಇದು ದುರ್ಗಾ ದೇವಿಯ ಅವತಾರವೆಂದು ಪರಿಗಣಿಸಲ್ಪಟ್ಟ ಚಾಮುಂಡಾ ದೇವಿಗೆ ಸಮರ್ಪಿಸಲಾಗಿದೆ. ಬೆಟ್ಟದ ಮೇಲೆ ನೆಲೆಸಿರುವ ಸುತ್ತಮುತ್ತಲಿನ ಬೆಟ್ಟಗಳು ಮತ್ತು ಕಣಿವೆಗಳ ವಿಹಂಗಮ ನೋಟಗಳನ್ನು ನೀಡುವುದರಿಂದ ಇದು ಭೇಟಿ ನೀಡಲು ಯೋಗ್ಯವಾದ ಆಧ್ಯಾತ್ಮಿಕ ಮತ್ತು ರಮಣೀಯ ತಾಣವಾಗಿದೆ.

ಇದನ್ನೂ ಓದಿ: Karnataka Tour: ಮಳೆಗಾಲದಲ್ಲಿ ಭೇಟಿ ನೀಡಬಹುದಾದ ಕರ್ನಾಟಕದ 15 ರಮಣೀಯ ತಾಣಗಳು


ಕರೇರಿ ಸರೋವರ

ಧರ್ಮಶಾಲಾದಿಂದ ಸುಮಾರು 22 ಕಿಲೋ ಮೀಟರ್ ದೂರದಲ್ಲಿರುವ ಕರೇರಿ ಸರೋವರಕ್ಕೆ ಪ್ರವಾಸ ಮಾಡುವುದನ್ನು ತಪ್ಪಿಸಿಕೊಳ್ಳಬೇಡಿ. ಎತ್ತರದ ಆಲ್ಪೈನ್ ಕಾಡುಗಳು ಮತ್ತು ಹಿಮದಿಂದ ಆವೃತವಾದ ಶಿಖರಗಳಿಂದ ಸುತ್ತುವರೆದಿರುವ ದೊಡ್ಡ ಸರೋವರ ಇದಾಗಿದೆ. ಇದು ಕ್ಯಾಂಪಿಂಗ್ ಮತ್ತು ಪಕ್ಷಿ ವೀಕ್ಷಣೆ ಅಥವಾ ಛಾಯಾಗ್ರಹಣಕ್ಕೆ ಸೂಕ್ತವಾದ ಸ್ಥಳವಾಗಿದೆ.


ಮಸ್ರೂರ್ ರಾಕ್ ಕಟ್ ದೇವಸ್ಥಾನ

ಮಸ್ರೂರ್ ರಾಕ್ ಕಟ್ ಟೆಂಪಲ್ ಎಂಟನೇ ಶತಮಾನಕ್ಕೂ ಹಿಂದಿನ ಪ್ರಾಚೀನ ರಾಕ್-ಕಟ್ ವಾಸ್ತುಶಿಲ್ಪಕ್ಕೆ ಉತ್ತಮ ಉದಾಹರಣೆಯಾಗಿದೆ. ಧರ್ಮಶಾಲಾದಿಂದ ಸರಿಸುಮಾರು 40 ಕಿಮೀ ದೂರದಲ್ಲಿರುವ ಈ ಪುರಾತತ್ತ್ವ ಶಾಸ್ತ್ರದ ತಾಣವು ಸಂಕೀರ್ಣವಾದ ಕೆತ್ತಿದ ಮರಳುಗಲ್ಲಿನ ದೇವಾಲಯವಾಗಿದೆ. ಇದು ಹಿಂದೂ ದೇವರಿಗೆ ಅರ್ಪಿತವಾಗಿದೆ. ಐತಿಹಾಸಿಕ ಹಿನ್ನೆಲೆಯ ಇಣುಕು ನೋಟವನ್ನು ಇಲ್ಲಿ ಕಾಣಬಹುದು. ಪುರಾತನ ಪರಂಪರೆಯನ್ನು ಹುಡುಕುವವರಿಗೆ ಇದು ಭೇಟಿ ನೀಡಲೇಬೇಕಾದ ತಾಣವಾಗಿದೆ.

Continue Reading

ಪ್ರವಾಸ

Rainy Season Tourism: ಮಳೆಗಾಲದ ಪ್ರವಾಸ ಮಾಡುವ ಮುನ್ನ ಈ 10 ಎಚ್ಚರಿಕೆಗಳನ್ನು ಪಾಲಿಸಿ

Rainy Season Tourism: ಪ್ರತಿ ಮಳೆಗಾಲದಲ್ಲೂ ಅನಾಹುತದ ಒಂದಿಲ್ಲೊಂದು ಪ್ರಕರಣಗಳು ಪದೇ ಪದೇ ನಡೆಯುತ್ತಲೇ ಇರುತ್ತವೆ. ಈ ಪ್ರಕೃತಿಯ ಹಸಿರು ಸೆರಗಿನಲ್ಲಿ ಕಳೆದುಹೋಗುವ ಮುನ್ನ ಮೈಮರೆಯಬಾರದು ಎಂಬ ಎಚ್ಚರಿಕೆ ಸದಾ ನಮಗೆ ಇರಬೇಕು. ಕಾರಣ, ಮಳೆ ಭೋರ್ಗರೆದು ಸುರಿದರೆ, ಪ್ರವಾಹ, ನೆರೆ, ಭೂಕುಸಿತ ಇತ್ಯಾದಿ ಅವಘಡಗಳು ಸರ್ವೇಸಾಮಾನ್ಯ. ಕೊಂಚ ಎಡವಿದರೂ ಪ್ರಾಣಕ್ಕೇ ಕುತ್ತು. ಮಳೆಗಾಲದಲ್ಲಿ ಪ್ರವಾಸ ಮಾಡುವ ಮುನ್ನ ಈ ಎಚ್ಚರಿಕೆಯನ್ನು ಸದಾ ವಹಿಸಿ.

VISTARANEWS.COM


on

Rainy Season Tourism
Koo

ಮಹಾರಾಷ್ಟ್ರದ ಲೋನವಾಲದ ಬುಶಿ ಅಣೆಕಟ್ಟಿನ ಬಳಿ ಮಳೆಗಾಲದ ಪ್ರವಾಹದಲ್ಲಿ (Rainy Season Tourism) ಕೊಚ್ಚಿಹೋದ ಕುಟುಂಬದ ಮನಮಿಡಿಯುವ ದೃಶ್ಯಗಳು ವೈರಲ್‌ ಆಗುವ ಮೂಲಕ, ಇದೀಗ ಮಳೆಗಾಲದಲ್ಲಿ ಪ್ರವಾಸದ ಸಂದರ್ಭ ನಾವು ವಹಿಸಬೇಕಾದ ಎಚ್ಚರಿಕೆಯ ಕರೆಗಂಟೆಯಾಗಿದೆ. ಪ್ರತಿ ಮಳೆಗಾಲದಲ್ಲೂ ಇಂತಹ ಒಂದಿಲ್ಲೊಂದು ಪ್ರಕರಣಗಳು, ಪದೇ ಪದೇ, ಪ್ರಕೃತಿಯ ಶಕ್ತಿಯ ಮುಂದೆ ನಾವು ಎಂದಿಗೂ ಹುಲು ಮಾನವರೇ ಎಂಬ ಸತ್ಯವನ್ನು ನಮಗೆ ನೆನಪಿಸುತ್ತಲೇ ಇರುತ್ತವೆ. ಮಳೆಗಾಲ ಎಂತಹ ಕಲ್ಲು ಹೃದಯಿಯನ್ನೂ ಕರಗಿಸುತ್ತದೆ. ಎಂತಹ ಅರಸಿಕನಲ್ಲೂ ರಸಿಕತೆಯನ್ನು ಚಿಗುರಿಸುತ್ತದೆ. ಮಳೆಯಲ್ಲಿ ಪ್ರಕೃತಿಯ ಸೊಬಗಿಗೆ ಮಾರು ಹೋಗದವರಾರಿಲ್ಲ ಹೇಳಿ! ಇನ್ನು ಪ್ರವಾಸ ಪ್ರಿಯರ ಮಾತೇಕೆ? ಪ್ರವಾಸವನ್ನು ಇಷ್ಟಪಡುವವರು ಮಳೆಗಾಲದಲ್ಲೊಮ್ಮೆ ಪ್ರಕೃತಿಯಲ್ಲಿ ಆಂದವಾಗಿ ಕಾಲ ಕಳೆಯಲು, ಮಳೆನೀರಲ್ಲಿ ಮನಸೋ ಇಚ್ಛೆ ಮೀಯಲು, ಮಳೆಯ ಸೊಬಗನ್ನು ಕಣ್ತುಂಬಿಕೊಳ್ಳಲು ಸದಾ ತುದಿಗಾಲಲ್ಲಿ ನಿಂತಿರುತ್ತಾರೆ. ಆದರೆ, ಈ ಪ್ರಕೃತಿಯ ಹಸಿರ ಸೆರಗಿನಲ್ಲಿ ಕಳೆದುಹೋಗುವ ಮುನ್ನ ಮೈಮರೆಯಬಾರದು ಎಂಬ ಎಚ್ಚರಿಕೆ ಸದಾ ನಮಗೆ ಇರಬೇಕು. ಕಾರಣ, ಮಳೆ ಭೋರ್ಗರೆದು ಸುರಿದರೆ, ಪ್ರವಾಹ, ನೆರೆ, ಭೂಕುಸಿತ ಇತ್ಯಾದಿ ಅವಘಡಗಳು ಸರ್ವೇಸಾಮಾನ್ಯ. ಕೊಂಚ ಎಡವಿದರೂ ಪ್ರಾಣಕ್ಕೇ ಕುತ್ತು. ಬನ್ನಿ, ಮಳೆಗಾಲದಲ್ಲಿ ಪ್ರವಾಸ ಮಾಡುವ ಮುನ್ನ ಈ ಎಚ್ಚರಿಕೆಯನ್ನು ಸದಾ ನೀವು ವಹಿಸಿ. ಮರೆಯದಿರಿ.

Island During Golden Hour And Upcoming Storm

ಹವಾಮಾನ ಚೆಕ್‌ ಮಾಡಿಕೊಳ್ಳಿ

ಮಳೆಗಾಲದ ಪ್ರವಾಸ ಖುಷಿ ಕೊಡುತ್ತದೆ ನಿಜ. ಆದರೆ, ನೀವು ಪ್ರವಾಸ ಮಾಡುವ ಮೊದಲು ನೀವು ಹೋಗುವ ಜಾಗದ ಸುತ್ತಮುತ್ತಲ ಹವಾಮಾನ ಹೇಗಿದೆ ಎಂದು ಚೆಕ್‌ ಮಾಡಿಕೊಳ್ಳಿ. ಈಗೆಲ್ಲ ಮುಂಚಿತವಾಗಿ ಹವಾಮಾನ ಚೆಕ್‌ ಮಾಡಿಕೊಳ್ಳುವುದು ಕಷ್ಟವೇನಲ್ಲ. ಬೆರಳ ತುದಿಗೇ ಎಲ್ಲ ಮಾಹಿತಿಗಳನ್ನೂ ನೀವು ನಿಮ್ಮ ಫೋನ್‌ ಮೂಲಕವೇ ಪಡೆಯಬಹುದು. ಹೋಗುವ ಜಾಗದ ಬಗೆಗಿನ ವರ್ತಮಾನದ ಮಾಹಿತಿ ತಿಳಿದಿರುವುದೂ ಕೂಡಾ ಅತ್ಯಂತ ಮುಖ್ಯ. ಅತಿಯಾದ ಮಳೆ ಸಂಭವ ಇದ್ದರೆ ಹೊರಡಲೇಬೇಡಿ. ಮನೆಯಲ್ಲೇ ಸೇಫ್‌ ಆಗಿರಿ.

When changing direction on wet ground change the direction of the leg first then turn the body Avoid Slips Trips And Falls In Rainy Seasons

ಸೂಕ್ತ ಬಟ್ಟೆ ಹಾಗೂ ಶೂ ಜೊತೆಗಿರಲಿ

ಮಳೆಗಾಲದ ಪ್ರವಾಸಕ್ಕೆ ಯಾವಾಗಲೂ ಸೂಕ್ತ ಬಟ್ಟೆ ಹಾಗೂ ಶೂ ನಿಮ್ಮ ಜೊತೆಗಿರಲಿ. ಸರಿಯಾದ ಶೂ ಇಲ್ಲದಿದ್ದರೆ ಜಾರುವ ಸಂಭವ ಹೆಚ್ಚು. ಬೇಗನೆ ಒಣಗಬಹುದಾದ ಬಟ್ಟೆ, ರೇನ್‌ಕೋಟ್‌ ಇತ್ಯಾದಿಗಳಿರಲಿ.

ಸೂಚನಾ ಫಲಕ ಗಮನಿಸಿ

ಪ್ರವಾಸಕ್ಕೆ ಹೋದ ಜಾಗದಲ್ಲಿ ಸೂಚನಾ ಫಲಕ, ಸೆಕ್ಯೂರಿಟಿಯವರು, ಪೊಲೀಸ್‌ ಹಾಗೂ ಸ್ಥಳೀಯರು ನೀಡುವ ಎಚ್ಚರಿಕೆಯನ್ನು ಪಾಲನೆ ಮಾಡಿ. ಅವರ ಎಚ್ಚರಿಕೆಯ ಮಾತುಗಳಿಗೆ ಗೌರವ ಕೊಡಿ.

 Landscape During Rainy Season

ಬಂಡೆ ಹತ್ತುವಾಗ ಎಚ್ಚರ

ಹರಿಯುತ್ತಿರುವ ಹೊಳೆ, ತೊರೆ, ನದಿ, ಜಲಪಾತ ಇತ್ಯಾದಿಗಳಲ್ಲಿ ಮಳೆಗಾಲದಲ್ಲಿ ಇಳಿಯುವುದು, ಫೋಟೋಗಾಗಿ ನೀರಲ್ಲೇ ನಿಂತು ಪೋಸ್‌ ಕೊಡುವುದು, ಜಾರುವ ಬಂಡೆಗಳ ಮೇಲೆ ಹತ್ತಿ ಫೋಟೋ ತೆಗೆಯುವುದು ಹಾಗೂ ತೆಗೆಸಿಕೊಳ್ಳುವುದು, ಈಜುವ ವಿಡಿಯೋ, ರೀಲ್‌ ಮಾಡುವುದು, ಡೈವ್‌ ಮಾಡುವುದು ಇತ್ಯಾದಿಗಳನ್ನು ಮಾಡಬೇಡಿ. ಮಳೆಗಾಲದಲ್ಲಿ ಇವೆಲ್ಲ ಖಂಡಿತವಾಗಿಯೂ ಸೇಫ್‌ ಅಲ್ಲ.

trekking

ಚಾರಣ ಮಾಡುವಾಗ ಎಚ್ಚರ ವಹಿಸಿ

ಮಳೆಗಾಲದಲ್ಲಿ ಚಾರಣ ಮಾಡುತ್ತಿದ್ದರೂ ಎಚ್ಚರ ವಹಿಸಿ. ಹವಾಮಾನ ಪರೀಕ್ಷೆ ಮಾಡಿಕೊಳ್ಳಿ. ಮಳೆಯಿದ್ದರೆ, ಸೂಕ್ತ ಸಾಧನ ಸಲಕರಣೆಗಳು ನಿಮ್ಮ ಬಳಿ ಇರಲಿ. ಗೈಡ್‌ ಹೇಳಿದ ನಿಯಮಗಳನ್ನು ಪಾಲಿಸಿ. ಭೂಕುಸಿತ, ನೆರೆ ಇತ್ಯಾದಿಗಳ ಮುನ್ಸೂಚನೆಯಿದ್ದರೆ ಅಂತಹ ಸಂದರ್ಭ ಸುರಕ್ಷಿತ ಜಾಗಕ್ಕೆ ತೆರಳಿ. ಪರ್ವತ ಪ್ರದೇಶದಲ್ಲಿ ಕೆಲವೊಮ್ಮೆ ಯಾವ ಸುಳಿವೂ ಇಲ್ಲದೆ ಥಟ್ಟನೆ ಏನು ಬೇಕಾದರೂ ಸಂಭವಿಸಬಹುದು. ಅನವಶ್ಯಕ ಪರಿಸ್ಥಿತಿಗಳನ್ನು ನೀವೇ ಸೃಷ್ಟಿಸಬೇಡಿ.

ಸುರಕ್ಷಿತ ಜಾಗಕ್ಕೆ ತೆರಳಿ

ಜಲಪಾತಗಳು, ನದಿ ತೊರೆಯ ಸಮೀಪ ಹೋಗಿದ್ದರೆ, ಮಳೆ ಬರಲು ಆರಂಭವಾದರೆ, ಬರುವ ಸೂಚನೆಯಿದ್ದರೆ, ಅಲ್ಲೇ ನಿಂತಿರಬೇಡಿ. ಸುರಕ್ಷಿತ ಜಾಗಕ್ಕೆ ತೆರಳಿ. ನೀವು ನಿಂತ ಜಾಗದಲ್ಲಿ ಆಗಷ್ಟೇ ಮಳೆ ಬರಲು ಆರಂಭವಾದರೂ ಕೂಡಾ, ನದಿಯ ಹರಿವಿರುವ ಬೇರೆ ಜಾಗದಲ್ಲಿ ಅಗಾಧ ಮಳೆಯಾಗಿರಬಹುದು. ಒಡನೆಯೇ ನೆರೆ ಉಕ್ಕಿ ಹರಿದು ಬರಬಹುದು. ಮಿಂಚಿನ ವೇಗದಲ್ಲಿ ಇವು ಸಂಭವಿಸಬಹುದು. ಹಾಗಾಗಿ ಜಾಗರೂಕರಾಗಿ ಇರುವುದು ಅತ್ಯಂತ ಮುಖ್ಯ. ಫ್ಲ್ಯಾಶ್‌ ಫ್ಲಡ್‌ ಯಾವಾಗಲೂ ಮಿಂಚಿನ ವೇಗದಲ್ಲಿ ಸಂಭವಿಸುತ್ತದೆ.

Swimming in the lake

ಈಜಲು ಹೋಗಬೇಡಿ

ಮಳೆಗಾಲದಲ್ಲಿ ತೆರೆದ ನದಿ, ತೊರೆ, ಕೆರೆ, ಹೊಳೆಗಳಲ್ಲಿ ಈಜುವ ಸಾಹಸಕ್ಕೆ ಕೈ ಹಾಕಲೇಬೇಡಿ. ನಿಮಗೆಷ್ಟೇ ಈಜು ಗೊತ್ತಿದೆ ಎಂಬ ಧೈರ್ಯವಿದ್ದರೂ, ಮಳೆಗಾಲದಲ್ಲಿ ಇಂತ ನೀರಿನಲ್ಲಿ, ಶಕ್ತಿಯುತವಾದ ಸೆಳೆತ ಇರುವ ಸಂಭವವಿದ್ದು, ನಿಮ್ಮ ಯಾವ ನೈಪುಣ್ಯವೂ ಅದರ ಜೊತೆ ಸೋಲಬಹುದು. ಪ್ರಕೃತಿಗೆ ಸವಾಲೆಸೆಯುವುದು, ಅತಿಯಾದ ಆತ್ಮವಿಶ್ವಾಸ ಒಳ್ಳೆಯದಲ್ಲ. ಸಮುದ್ರ ತೀರದ ವಿಚಾರದಲ್ಲಿಯೂ ಇದೇ ಮಾತನ್ನು ನೆನಪಿಡಿ.

ಅನುಭವಿಗಳ ಸಲಹೆ ಅಗತ್ಯ

ಮಳೆಗಾಲದಲ್ಲಿ, ನಮಗೆ ಈ ಜಾಗ ಗೊತ್ತಿದೆ ಎಂಬ ಭಂಡಧೈರ್ಯದಿಂದ ಯಾರೂ ಅಷ್ಟಾಗಿ ಹೋಗದ, ಕಾಡಿನ ನಡುವಿನ ಜಲಪಾತಕ್ಕೆ ಚಾರಣ ಹೋಗುವುದು, ಬೆಟ್ಟ ಹತ್ತುವುದು ಮಾಡಬೇಡಿ. ಅನುಭವಿಗಳ ಸಲಹೆ ಅತ್ಯಂತ ಅಗತ್ಯ. ದಾರಿ ಗೊತ್ತಿದೆ ಎಂದು ನಿಮ್ಮಷ್ಟಕ್ಕೆ ಈ ಸಾಹಸಕ್ಕೆ ಇಳಿಯಬೇಡಿ. ಮಳೆಗಾಲದಲ್ಲಿ ಏನು ಬೇಕಾದರೂ ಸಂಭವಿಸಬಹುದು.

ಹುಚ್ಚು ಸಾಹಸ ಮಾಡಬೇಡಿ

ಯುವಕರು ದಯವಿಟ್ಟು ಬಿಸಿರಕ್ತದ ಉತ್ಸಾಹದಲ್ಲಿ ಹುಚ್ಚು ಸಾಹಸ ಮಾಡಬೇಡಿ. ಮನೆಯವರ ಮಾತಿಗೆ ಬೆಲೆಕೊಡಿ. ಇಂತಹ ಪ್ರವಾಸಗಳಿಗೆ ಮನೆಯವರಿಗೆ ತಿಳಿಸದೆ ಗೆಳೆಯರ ಜೊತೆಗೆ ಹೋಗುವುದು, ಹುಚ್ಚುಗಟ್ಟುವುದು ಇತ್ಯಾದಿಗಳನ್ನು ಮಾಡಬೇಡಿ. ನಿಮ್ಮನ್ನು ಬೆಟ್ಟದಷ್ಟು ಪ್ರೀತಿಸುವ ಹೆತ್ತವರಿದ್ದಾರೆ, ಅವರಿಗೆ ನಿಮ್ಮ ಭವಿಷ್ಯದ ಬಗ್ಗೆ ಕನಸು ಕಂಗಳಿವೆ, ಅದರ ಹಿಂದೆ ಅವರ ಅಪಾರ ಶ್ರಮವೂ ಇದೆ ಎಂಬುದನನ್ನು ಸದಾ ನೆನೆಪಿಡಿ.

ಇದನ್ನೂ ಓದಿ: Travel Tips: ಪ್ರವಾಸಪ್ರಿಯರೇ, ನಿಮ್ಮ ವಿಮಾನ ಪ್ರಯಾಣ ಆರಾಮದಾಯಕವಾಗಬೇಕಿದ್ದರೆ ಈ ಟಿಪ್ಸ್‌‌ ಪಾಲಿಸಿ!

ತುರ್ತು ಕರೆಯ ಫೋನ್‌ ನಂಬರ್‌ ಗೊತ್ತಿರಲಿ

ಸದಾ ಸ್ಥಳೀಯ ತುರ್ತು ಕರೆಯ ಫೋನ್‌ ನಂಬರ್‌ ನಿಮಗೆ ಗೊತ್ತಿರಲಿ. ಯಾವುದೇ ಸಮಸ್ಯೆ ಬಂದಾಗಲೂ ತುರ್ತುಕರೆಯ ಮೊರೆ ಹೋಗಿ. ನಿಮ್ಮಷ್ಟಕ್ಕೆ ಏನೇನೋ ಊಹನೆಯಲ್ಲಿ ಕಷ್ಟದಲ್ಲಿರುವಾಗ ತಪ್ಪು ಹಾದಿ ಹಿಡಿದು ನಿಮ್ಮ ಪ್ರಾಣವನ್ನು ಅಪಾಯಕ್ಕೆ ಒಡ್ಡಿಕೊಳ್ಳಬೇಡಿ.

Continue Reading

Latest

Railway Rules: ರೈಲು ಪ್ರಯಾಣಿಕರು ತಿಳಿದುಕೊಳ್ಳಲೇಬೇಕಾದ ನಿಯಮಗಳು

Railway Rules: ರೈಲಿನ ಪ್ರಯಾಣ ಆರಾಮದಾಯಕವಾಗಿರುತ್ತದೆ. ಇನ್ನು ಖರ್ಚು ಕೂಡ ಕಡಿಮೆ ಎನ್ನಬಹುದು. ಮಕ್ಕಳು, ವಯಸ್ಸಾದವರಿಗೆ ಈ ರೈಲಿನ ಪ್ರಯಾಣ ಉತ್ತಮವಾಗಿರುತ್ತದೆ. ಆದರೆ ಪ್ರತಿಯೊಬ್ಬ ರೈಲ್ವೆ ಪ್ರಯಾಣಿಕರು ತಿಳಿದುಕೊಳ್ಳಬೇಕಾದ 7 ಪ್ರಮುಖ ಭಾರತೀಯ ರೈಲ್ವೆ ನಿಯಮಗಳು ಇಲ್ಲಿವೆ. ಈ ನಿಯಮಗಳ ಬಗ್ಗೆ ಅರಿವಿದ್ದರೆ ಇನ್ಮುಂದೆ ಖುಷಿಯಾಗಿ ರೈಲಿನ ಪ್ರಯಾಣವನ್ನು ಎಂಜಾಯ್ ಮಾಡಬಹುದು.ಆ ನಿಯಮಗಳು ಏನು ಎಂಬ ಮಾಹಿತಿ ಇಲ್ಲಿದೆ.

VISTARANEWS.COM


on

Railway Rules
Koo

ಬೆಂಗಳೂರು: ರೈಲಿನಲ್ಲಿ ಪ್ರಯಾಣಿಸುವುದೆಂದರೆ ಎಲ್ಲರಿಗೂ ತುಂಬಾ ಇಷ್ಟ. ಯಾಕೆಂದರೆ ಅಲ್ಲಿ ನಿಮಗೆ ಪ್ರಯಾಣದ ವೇಳೆ ವಾಂತಿ, ತಲೆ ಸುತ್ತುವುದು, ಶೌಚಾಲಯದಂತಹ ಯಾವುದೇ ರೀತಿಯ ಸಮಸ್ಯೆ ಇರುವುದಿಲ್ಲ. ಮತ್ತು ಇದರ ದರ ಕೂಡ ತುಂಬಾ ಕಡಿಮೆ ಇರುತ್ತದೆ. ಹಾಗಾಗಿ ನಿಮಗೆ ಇಡೀ ಭಾರತವನ್ನು ಅನ್ವೇಷಣೆ ಮಾಡಲು ಭಾರತೀಯ ರೈಲ್ವೆ ಒಂದು ಅತ್ಯುತ್ತಮ ಮಾರ್ಗವಾಗಿದೆ. ಭಾರತೀಯ ರೈಲ್ವೆ 7,000ಕ್ಕೂ ಹೆಚ್ಚು ನಿಲ್ದಾಣಗಳು ಮತ್ತು ಪ್ರತಿದಿನ 23 ದಶಲಕ್ಷಕ್ಕೂ ಹೆಚ್ಚು ಪ್ರಯಾಣಿಕರು ಪ್ರಯಾಣಿಸುತ್ತಾರೆ. ಆದರೆ ಈ ಸಂಸ್ಥೆ ಪ್ರಯಾಣಿಕರಿಗೆ ಕೆಲವು ನಿಯಮಗಳು ಮತ್ತು ನಿಬಂಧನೆಗಳನ್ನು ಹಾಕುತ್ತದೆ. ಹಾಗಾಗಿ ಪ್ರತಿಯೊಬ್ಬ ಪ್ರಯಾಣಿಕರು ತಿಳಿದುಕೊಳ್ಳಬೇಕಾದ 7 ಪ್ರಮುಖ ಭಾರತೀಯ ರೈಲ್ವೆ ನಿಯಮಗಳು(Railway Rules) ಇಲ್ಲಿವೆ:

ಟಿಕೆಟ್ ಬುಕಿಂಗ್:

ರೈಲಿನಲ್ಲಿ ಪ್ರಯಾಣಿಸುವಾಗ ಎಲ್ಲಾ ಪ್ರಯಾಣಿಕರು ತಮ್ಮ ಟಿಕೆಟ್ ಮರೆಯದೆ ಕೊಂಡೊಯ್ಯಬೇಕು. ಟಿಕೆಟ್‌ಗಳನ್ನು ಆನ್‌ಲೈನ್‌, ರೈಲ್ವೆ ನಿಲ್ದಾಣಗಳಲ್ಲಿ ಅಥವಾ ಅಧಿಕೃತ ಟ್ರಾವೆಲ್ ಏಜೆಂಟ್‌ಗಳ ಮೂಲಕ ಕಾಯ್ದಿರಿಸಬಹುದು. ಟಿಕೆಟ್ ಇಲ್ಲದೆ ಪ್ರಯಾಣಿಸುವುದು ದಂಡ ಮತ್ತು ಶಿಕ್ಷೆಗೆ ಕಾರಣವಾಗುತ್ತದೆ.

ಲಗೇಜ್:

ಪ್ರಯಾಣಿಕರು ತಮ್ಮೊಂದಿಗೆ ಸಾಮಾನುಗಳನ್ನು ಲಗೇಜ್‌ನಲ್ಲಿ ಕೊಂಡೊಯ್ಯಲು ಅವಕಾಶವಿದೆ, ಆದರೆ ತೂಕವು ಅನುಮತಿಸಲಾದ ತೂಕದ ಮಿತಿಯನ್ನು ಮೀರಬಾರದು. ಫಸ್ಟ್ ಎಸಿ ಮತ್ತು 2ನೇ ಎಸಿಗೆ 40 ಕೆಜಿ, 3ನೇ ಎಸಿ ಮತ್ತು ಚೇರ್ ಕಾರ್ ಗೆ 35 ಕೆಜಿ, ಸ್ಲೀಪರ್ ಕ್ಲಾಸ್ ಗೆ 15 ಕೆಜಿ ಲಗೇಜ್ ಸಾಗಿಸಲು ಮಿತಿ ಇದೆ. ಪ್ರಯಾಣಿಕರು ಯಾವುದೇ ಅಪಾಯಕಾರಿ ಸರಕುಗಳನ್ನು ಸಾಗಿಸಲು ಅನುಮತಿ ಇಲ್ಲ.

ಮದ್ಯಪಾನ:

ರೈಲಿನಲ್ಲಿ ಮದ್ಯ ಸೇವನೆಗೆ ಅವಕಾಶವಿಲ್ಲ. ರೈಲಿನಲ್ಲಿ ಆಲ್ಕೋಹಾಲ್ ಸೇವನೆಯನ್ನು ನಿಷೇಧಿಸಲಾಗಿದೆ. ಮದ್ಯ ಸೇವಿಸಿ ಸಿಕ್ಕಿ ಬಿದ್ದರೆ ಶಿಕ್ಷೆಗೆ ಗುರಿಯಾಗಬೇಕಾಗುತ್ತದೆ.

ಧೂಮಪಾನ:

ರೈಲುಗಳು, ಪ್ಲಾಟ್ ಫಾರ್ಮ್‌ಗಳು ಮತ್ತು ನಿಲ್ದಾಣದ ಆವರಣದಲ್ಲಿ ಧೂಮಪಾನವನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ.

ಆಹಾರ:

ಪ್ರಯಾಣಿಕರು ತಮ್ಮದೇ ಆದ ಆಹಾರವನ್ನು ತೆಗೆದುಕೊಂಡು ಹೋಗಬಹುದು ಅಥವಾ ಪ್ಲಾಟ್‌ಫಾರ್ಮ್‌ನಲ್ಲಿರುವ ಆಹಾರ ಮಳಿಗೆಗಳಿಂದ ಆಹಾರವನ್ನು ಖರೀದಿಸಬಹುದು.

ರದ್ದತಿ ಮತ್ತು ಮರುಪಾವತಿ:

ಪ್ರಯಾಣಿಕರು ತಮ್ಮ ಟಿಕೆಟ್ ಅನ್ನು ರದ್ದುಗೊಳಿಸಲು ಬಯಸಿದರೆ, ಅವರು ಅದನ್ನು ರೈಲು ನಿರ್ಗಮನ ಸಮಯದ ಮೊದಲು ಮಾಡಬೇಕು. ಮತ್ತು ಭಾರತೀಯ ರೈಲ್ವೆಯ ರದ್ದತಿ ನೀತಿಯ ಪ್ರಕಾರ ಮರುಪಾವತಿ ನೀಡಲಾಗುವುದು.

ಸುರಕ್ಷತೆ:

ಪ್ರಯಾಣಿಕರು ತಮ್ಮ ವಸ್ತುಗಳ ಬಗ್ಗೆ ಅವರೇ ಕಾಳಜಿ ವಹಿಸಬೇಕು ಮತ್ತು ಪ್ರಯಾಣಿಸುವಾಗ ಅಮೂಲ್ಯವಾದ ವಸ್ತುಗಳನ್ನು ಒಯ್ಯುವುದನ್ನು ತಪ್ಪಿಸಬೇಕು. ಈ ವಿಚಾರದಲ್ಲಿ ಅವರು ಸಹ ಪ್ರಯಾಣಿಕರೊಂದಿಗೆ ವಾದಗಳು ಅಥವಾ ಜಗಳಗಳಲ್ಲಿ ತೊಡಗುವುದನ್ನು ತಪ್ಪಿಸಬೇಕು.

ಪ್ರಶ್ನೆ-ಉತ್ತರಗಳು:

  • ಪ್ರಶ್ನೆ 1: ಭಾರತೀಯ ರೈಲ್ವೆಯಲ್ಲಿ ನಾನು ರೈಲು ಟಿಕೆಟ್ ಗಳನ್ನು ಹೇಗೆ ಕಾಯ್ದಿರಿಸಬಹುದು?
  • ನೀವು ಭಾರತೀಯ ರೈಲ್ವೆಯಲ್ಲಿ ರೈಲು ಟಿಕೆಟ್‌ಗಳನ್ನು ಆನ್‌ಲೈನ್‌ನಲ್ಲಿ ಕಾಯ್ದಿರಿಸಬಹುದು. ಅದಕ್ಕಾಗಿ ಐಆರ್‌ಟಿಸಿ ವೆಬ್‌ಸೈಟ್‌ ಅಥವಾ ಮೊಬೈಲ್ ಅಪ್ಲಿಕೇಶನ್ ಮೂಲಕ ಅಥವಾ ವಿವಿಧ ರೈಲ್ವೆ ನಿಲ್ದಾಣಗಳಲ್ಲಿನ ರೈಲ್ವೆ ಮೀಸಲಾತಿ ಕೌಂಟರ್‌ಗಳಲ್ಲಿ ಟಿಕೆಟ್ ಪಡೆಯಬಹುದು.
  • ಪ್ರಶ್ನೆ 2: ನಾನು ಭಾರತೀಯ ರೈಲ್ವೆಯಲ್ಲಿ ಆಹಾರವನ್ನು ಸಾಗಿಸಬಹುದೇ?
  • ಎ 2: ಹೌದು, ನೀವು ನಿಮ್ಮ ಮನೆಯಲ್ಲಿ ತಯಾರಿಸಿದ ಆಹಾರವನ್ನು ಒಯ್ಯಬಹುದು ಅಥವಾ ಪ್ಯಾಂಟ್ರಿ ಕಾರು ಅಥವಾ ಪ್ಲಾಟ್ ಫಾರ್ಮ್‌ನಲ್ಲಿರುವ ಆಹಾರ ಮಳಿಗೆಗಳಿಂದ ಆಹಾರವನ್ನು ಖರೀದಿಸಬಹುದು.
Continue Reading

ಪ್ರವಾಸ

Assam Tour: ಅಸ್ಸಾಂನ ಪೆಲ್ಲಿಂಗ್‌ನಲ್ಲಿ ಮೋಡಿ ಮಾಡುವ 8 ಆಕರ್ಷಕ ಸಂಗತಿಗಳಿವು

Assam Tour: ಪ್ರಕೃತಿ, ಸಂಸ್ಕೃತಿ ಮತ್ತು ಸಾಹಸವು ಪರಸ್ಪರ ಸಾಮರಸ್ಯದಿಂದ ಹೇಗೆ ಸಹಬಾಳ್ವೆ ನಡೆಸಬಹುದು ಎಂಬುದರ ಸಂಕೇತವೇ ಪೆಲ್ಲಿಂಗ್. ವಿಸ್ಮಯ-ಸ್ಫೂರ್ತಿದಾಯಕ ಹಲವು ತಾಣಗಳು, ಆಳವಾಗಿ ಬೇರೂರಿರುವ ಸಂಪ್ರದಾಯ ಮತ್ತು ಸ್ನೇಹಪರ ದಾರಿಗಳು ಪೆಲ್ಲಿಂಗ್‌ ಪ್ರವಾಸವನ್ನು (Pelling Tour) ಶಾಶ್ವತವಾಗಿ ನನಪಿನಲ್ಲಿ ಉಳಿಯುವಂತೆ ಮಾಡುತ್ತದೆ.

VISTARANEWS.COM


on

By

Assam Tour
Koo

ಆಕರ್ಷಕ ಪರಿಸರ, ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು (Assam Tour) ಹೊಂದಿರುವ ಪುಟ್ಟ ಗ್ರಾಮ ಪೆಲ್ಲಿಂಗ್ (Pelling Tour) ಹಿಮಾಲಯದ (himalaya) ಇಳಿಜಾರಿನಲ್ಲಿದೆ. ತನ್ನ ಸೌಂದರ್ಯದಿಂದಲೇ ಸಿಕ್ಕಿಂಗೆ (sikkim) ಬರುವ ಪ್ರವಾಸಿಗರನ್ನು (tourist) ತನ್ನತ್ತ ಸೆಳೆಯುತ್ತದೆ. ಪ್ರಕೃತಿಯ ಮಡಿಲಲ್ಲಿ ಮನ ಶಾಂತಿಯನ್ನು ಹುಡುಕುವವರಿಗೆ ಇದು ಸೂಕ್ತ ಸ್ಥಳವಾಗಿದೆ. ಪೆಲ್ಲಿಂಗ್ನಲ್ಲಿ ಅತ್ಯಂತ ಆಸಕ್ತಿದಾಯಕ ಹಲವಾರು ತಾಣಗಳಿವೆ. ಈ ತಾಣಗಳು ನಿಮ್ಮ ಪ್ರವಾಸದ ಅನುಭವ1ವನ್ನು ರೋಮಾಂಚಕಗೊಳಿಸುವುದು ಮಾತ್ರವಲ್ಲ ಸ್ಮರಣೀಯಗೊಳಿಸುತ್ತದೆ.

ಕಾಂಚನಜುಂಗಾ

ಪ್ರಪಂಚದ ಮೂರನೇ ಅತೀ ಎತ್ತರದ ಶಿಖರವಾದ ಕಾಂಚನಜುಂಗಾವನ್ನು ಪೆಲ್ಲಿಂಗ್‌ನಿಂದ ಅತ್ಯಂತ ಹತ್ತಿರದಿಂದ ನೋಡಬಹುದು. ಸೂರ್ಯೋದಯ ಮತ್ತು ಸೂರ್ಯಾಸ್ತದ ಸಮಯದಲ್ಲಿ ಪರ್ವತವು ಗುಲಾಬಿ ಬಣ್ಣಕ್ಕೆ ತಿರುಗುವುದು ಕಣ್ಣಿಗೆ ಹಬ್ಬವನ್ನು ಉಂಟು ಮಾಡುತ್ತದೆ. ಹಚ್ಚ ಹಸಿರಿನ ಕಾಡುಗಳ ನಡುವೆ ಹರಿಯುವ ಜಲಪಾತಗಳು ತನ್ನ ಸೌಂದರ್ಯದಿಂದ ಮೋಡಿಮಾಡುವುದು ಮಾತ್ರವಲ್ಲ ಎಲ್ಲರನ್ನೂ ಬೆರಗುಗೊಳಿಸುತ್ತದೆ.

ಸಾಂಸ್ಕೃತಿಕ ವೈಭವ

ಲೆಪ್ಚಾಗಳು, ಭುಟಿಯಾಗಳು ಮತ್ತು ನೇಪಾಳಿಗಳು ಸೇರಿದಂತೆ ವಿವಿಧ ಸಮುದಾಯಗಳ ಜನರು ಪೆಲ್ಲಿಂಗ್‌ನಲ್ಲಿ ವಾಸಿಸುತ್ತಿದ್ದಾರೆ. ಹೀಗಾಗಿ ಇಲ್ಲಿ ಶ್ರೀಮಂತ ಸಾಂಸ್ಕೃತಿಕ ವೈವಿಧ್ಯತೆಯ ಸಂಗಮವಾಗಿದೆ. ಇಲ್ಲಿನ ಜನರು ತಮ್ಮ ಧಾರ್ಮಿಕತೆ ಮತ್ತು ಅವರಲ್ಲಿ ಐಕ್ಯತೆಯನ್ನು ತೋರಿಸಲು ಆಚರಿಸುವ ಬುಮ್ಚು ಹಬ್ಬದ ಸಂದರ್ಭದಲ್ಲಿ ಪಾಂಗ್ಟೋಡ್ ಚಾಮ್ ನೃತ್ಯ ಕಣ್ಣಿಗೆ ಹಬ್ಬವನ್ನು ಉಂಟು ಮಾಡುತ್ತದೆ. ಈ ವೇಳೆ ಸಿಕ್ಕಿಮರ ಆತಿಥ್ಯವನ್ನು ಅನುಭವಿಸಬಹುದು.


ಸಾಹಸ ಪ್ರಿಯರಿಗಾಗಿ ಸಾಕಷ್ಟು ಅವಕಾಶ

ಜೀವನದಲ್ಲಿ ರೋಮಾಂಚನವನ್ನು ಬಯಸುವವರಿಗೆ ಪೆಲ್ಲಿಂಗ್‌ನಲ್ಲಿ ಸಾಕಷ್ಟು ಉತ್ಸಾಹ ತುಂಬುವ ತಾಣಗಳಿವೆ. ಯುಕ್ಸೋಮ್ ಅಥವಾ ಖೆಚಿಯೋಪಾಲ್ರಿ ಸರೋವರವಿರುವ ಹತ್ತಿರದ ಹಳ್ಳಿಗಳಿಗೆ ಪಾದಯಾತ್ರೆ ಮಾಡುವಾಗ ವಿವಿಧ ಜಾತಿಯ ಪ್ರಾಣಿಗಳನ್ನು ಕಣ್ತುಂಬಿಕೊಳ್ಳಬಹುದು. ಸಾಹಸ ಪ್ರಿಯ ಪ್ರವಾಸಿಗರು ಪ್ಯಾರಾಗ್ಲೈಡಿಂಗ್, ರಿವರ್ ರಾಫ್ಟಿಂಗ್ ಅಥವಾ ಮೌಂಟೇನ್ ಬೈಕಿಂಗ್‌ನಂತಹ ಚಟುವಟಿಕೆಗಳನ್ನು ನಡೆಸಬಹುದು.

ಆಧ್ಯಾತ್ಮಿಕ ಧಾಮ

ಪೆಲ್ಲಿಂಗ್ ಸುತ್ತಮುತ್ತ ಇರುವ ಅನೇಕ ಹಳೆಯ ಮಠಗಳಲ್ಲಿ ಪೆಮಯಾಂಗಟ್ಸ್ ಮಠವು ಒಂದಾಗಿದೆ. ಸಂಕೀರ್ಣವಾದ ಧಾರ್ಮಿಕ ಕಲಾಕೃತಿಗಳು ಮತ್ತು ಶಿಲ್ಪಗಳನ್ನು ಹೊಂದಿರುವ ಇದು ಸಂದರ್ಶಕರನ್ನು ಮೋಡಿ ಮಾಡುತ್ತದೆ. ಮನ ಶಾಂತಿ ಬಯಸುವವರು ಇಲ್ಲಿ ಸನ್ಯಾಸಿಗಳಂತೆ ಜೀವನ ನಡೆಸಬಹುದು.

ಸುಸ್ಥಿರ ಪ್ರವಾಸೋದ್ಯಮ

ಪೆಲ್ಲಿಂಗ್ ಸುಸ್ಥಿರ ಪ್ರವಾಸೋದ್ಯಮಕ್ಕೆ ಮೀಸಲಾಗಿದೆ. ಪರಿಸರ ಸ್ನೇಹಿ ಯೋಜನೆಗಳಿಗೆ ಇದು ಒತ್ತು ನೀಡುತ್ತದೆ. ಸ್ಥಳೀಯ ಜನರ ಜೀವನೋಪಾಯವನ್ನು ಬೆಂಬಲಿಸುವ ಜೊತೆಗೆ ಜವಾಬ್ದಾರಿಯುತ ಪ್ರಯಾಣವನ್ನು ಪ್ರೋತ್ಸಾಹಿಸುವ ಹಲವಾರು ಸಮುದಾಯ ಆಧಾರಿತ ಪ್ರವಾಸೋದ್ಯಮಗಳಿಗೆ ಇಲ್ಲಿ ಅವಕಾಶ ನೀಡಲಾಗಿದೆ.


ಸ್ಥಳೀಯ ಖಾದ್ಯಗಳನ್ನು ಸವಿಯಬಹುದು

ಸಿಕ್ಕಿಮೀಸ್ ಪಾಕಪದ್ಧತಿ ಬಾಯಲ್ಲಿ ನೀರುಣಿಸುತ್ತದೆ. ವಿಶಿಷ್ಟವಾದ ರುಚಿ ಮತ್ತು ಪದಾರ್ಥಗಳನ್ನು ಇದು ಒಳಗೊಂಡಿದೆ. ಸ್ಥಳೀಯ ಆಹಾರಗಳಾದ ಮೊಮೊಸ್, ತುಕ್ಪಾ ಮತ್ತು ಗುಂಡ್ರುಕ್ ಹಾಗೂ ಟಿಬೆಟಿಯನ್ನರು ಮತ್ತು ನೇಪಾಳಿಗಳ ಭಕ್ಷ್ಯಗಳನ್ನು ಸವಿಯಬಹುದು. ಸಾವಯವ ಹಣ್ಣು, ತರಕಾರಿಗಳ ಅಧಿಕೃತ ಪಾಕವಿಧಾನಗಳನ್ನು ಆನಂದಿಸಬಹುದು.

ಇದನ್ನೂ ಓದಿ: Baby Moon: ಹನಿಮೂನ್‌ನಂತೆ ಬೇಬಿಮೂನ್; ಜನಪ್ರಿಯವಾಗುತ್ತಿರುವ ಹೊಸ ಟ್ರೆಂಡ್!

ಹಕ್ಕಿಗಳ ಕಲರವ

ಪೆಲ್ಲಿಂಗ್ ಸುತ್ತಮುತ್ತ ನಿತ್ಯಹರಿದ್ವರ್ಣ ಪರಿಸರದ ನಡುವೆ ಹಲವಾರು ಪಿಕ್ನಿಕ್ ತಾಣಗಳಿವೆ. ಮೋಡಿ ಮಾಡುವ ಚಿಲಿಪಿಲಿ ಹಕ್ಕಿಗಳ ಕಲರವವನ್ನು ಕೇಳಿ ಆನಂದಿಸುತ್ತಾ ಆಧುನಿಕ ಒತ್ತಡದ ಬದುಕಿನಿಂದ ದೂರವಾಗಿ ಮನಃಶಾಂತಿಯನ್ನು ಆನಂದಿಸಬಹುದು.

ವರ್ಷ ಪೂರ್ತಿ ವಿಶಿಷ್ಟ ಅನುಭವ

ಪೆಲ್ಲಿಂಗ್ ನಲ್ಲಿ ವರ್ಷ ಪೂರ್ತಿ ವಿಭಿನ್ನ ಋತುಗಳನ್ನು ಇಲ್ಲಿ ಆನಂದಿಸಬಹುದು. ವಸಂತಕಾಲದಲ್ಲಿ ಆಕಾಶವು ಸ್ಪಷ್ಟವಾಗಿರುವಾಗ ಪ್ರವಾಸಿಗರು ಪ್ರಕೃತಿಯ ನಡುವೆ ಹೆಜ್ಜೆ ಹಾಕಬಹುದು. ಆಕರ್ಷಕ ಛಾಯಾಚಿತ್ರಗಳನ್ನು ತೆಗೆದುಕೊಳ್ಳಬಹುದು. ಮಳೆಗಾಲದಲ್ಲಿ ಪ್ರಕೃತಿ ಪ್ರಿಯರು ಇಲ್ಲಿ ಅದ್ಭುತ ನೋಟಗಳನ್ನು ಕಣ್ತುಂಬಿಕೊಳ್ಳಬಹುದು. ಶರತ್ಕಾಲ ಮತ್ತು ಚಳಿಗಾಲದಲ್ಲಿ ಪ್ರವಾಸಿಗರು ಹಿಮಾಲಯದ ಸೌಂದರ್ಯವನ್ನು ಕಣ್ಮನದಲ್ಲಿ ತುಂಬಿಕೊಳ್ಳಬಹುದು.

Continue Reading
Advertisement
Vasishtha Simha starrer VIP Kannada movie
ಕರ್ನಾಟಕ2 mins ago

Kannada New Movie: ಖ್ಯಾತ ಗಾಯಕಿ ಕೆ.ಎಸ್.ಚಿತ್ರಾ ಕಂಠಸಿರಿಯಲ್ಲಿ ವಸಿಷ್ಠ ಸಿಂಹ ಅಭಿನಯದ ‘ವಿಐಪಿ’ ಚಿತ್ರದ ಹಾಡು

Asia Cup 2024
ಪ್ರಮುಖ ಸುದ್ದಿ25 mins ago

Asia Cup 2024 : ಮಹಿಳಾ ಏಷ್ಯಾಕಪ್ ಟೂರ್ನಿಗೆ ಭಾರತ ತಂಡ ಪ್ರಕಟ

Viral Video
Latest31 mins ago

Viral Video: ಪ್ರಶ್ನೆ ಪತ್ರಿಕೆ ಸೋರಿಕೆ ಆರೋಪ; ಪ್ರಾಂಶುಪಾಲರನ್ನು ಕುರ್ಚಿ ಸಹಿತ ಹೊರಗೆಳೆದ ಸಿಬ್ಬಂದಿ

Kashmir Encounter
ದೇಶ45 mins ago

Kashmir Encounter: ಕಾಶ್ಮೀರದಲ್ಲಿ ಸೇನೆ ಭರ್ಜರಿ ಬೇಟೆ; ನಾಲ್ವರು ಉಗ್ರರ ಹತ್ಯೆ, ಇಬ್ಬರು ಯೋಧರು ಹುತಾತ್ಮ

Viral Video
Latest49 mins ago

Viral Video : ಹೀಗೆಲ್ಲಾ ಸ್ವಾತಂತ್ರ್ಯ ದಿನಾಚರಣೆಯನ್ನು ಆಚರಿಸುತ್ತಾರಾ…? ವಿಡಿಯೊ ನೋಡಿ

Viral News
Latest57 mins ago

Viral News: ಆಸ್ಪತ್ರೆಯಲ್ಲಿ ಕಣ್ಣಿನ ಪೊರೆ ಶಸ್ತ್ರಚಿಕಿತ್ಸೆ ವೇಳೆ ಅಚಾತುರ್ಯ; ದೃಷ್ಟಿ ಕಳೆದುಕೊಂಡ 16 ರೋಗಿಗಳು

Dengue cases in Karnataka
ಪ್ರಮುಖ ಸುದ್ದಿ1 hour ago

Dengue cases in Karnataka: ರಾಜ್ಯದಲ್ಲಿಂದು 175 ಡೆಂಗ್ಯೂ ಕೇಸ್‌ಗಳು ಪತ್ತೆ; ಸಕ್ರಿಯ ಪ್ರಕರಣಗಳ ಸಂಖ್ಯೆ 352ಕ್ಕೆ ಏರಿಕೆ!

Farmers record crop details through mobile app
ತುಮಕೂರು1 hour ago

Tumkur News: ರೈತರು ಮೊಬೈಲ್ ಆ್ಯಪ್ ಮೂಲಕ ಬೆಳೆ ವಿವರ ದಾಖಲಿಸಬೇಕು

Vanamahotsava Programme at Shira
ತುಮಕೂರು1 hour ago

Shira News: ಶಿರಾದಲ್ಲಿ ವನಮಹೋತ್ಸವ ಕಾರ್ಯಕ್ರಮಕ್ಕೆ ಶಾಸಕ ಟಿ.ಬಿ.ಜಯಚಂದ್ರ ಚಾಲನೆ

26 people sheltered in 8 care centers of Uttara Kannada district says DC Lakshmipriya
ಉತ್ತರ ಕನ್ನಡ1 hour ago

Uttara Kannada News: ಉ.ಕ ಜಿಲ್ಲೆಯಲ್ಲಿ ಕಡಿಮೆಯಾದ ಮಳೆ, 8 ಕಾಳಜಿ ಕೇಂದ್ರಗಳಲ್ಲಿ 26 ಜನರಿಗೆ ಆಶ್ರಯ: ಡಿಸಿ

Sharmitha Gowda in bikini
ಕಿರುತೆರೆ9 months ago

Geetha Serial Kannada: ನಿದ್ದೆ ಕದ್ದ ಚೋರಿ! ನಟಿ `ಭಾನುಮತಿ’ ಹಾಟ್‌ ಪೋಟೊಗಳಿಗೆ ಫ್ಯಾನ್ಸ್ ಫುಲ್ ಫಿದಾ

Kannada Serials
ಕಿರುತೆರೆ9 months ago

Kannada Serials TRP: 2ನೇ ಸ್ಥಾನದಲ್ಲಿ 2 ಧಾರಾವಾಹಿಗಳು; ಟಿಆರ್‌ಪಿ ರೇಸ್‌ನಲ್ಲಿಲ್ಲ ಭಾಗ್ಯಲಕ್ಷ್ಮೀ!

Bigg Boss- Saregamapa 20 average TRP
ಕಿರುತೆರೆ9 months ago

Kannada Serials TRP: ಏಳನೇ ಸ್ಥಾನಕ್ಕೆ ʻಅಮೃತಧಾರೆʼ ಕುಸಿತ; ಬಿಗ್‌ ಬಾಸ್‌-ಸರಿಗಮಪ ಟಿಆರ್‌ಪಿ ಎಷ್ಟು?

galipata neetu
ಕಿರುತೆರೆ7 months ago

Kanyadana Serial: ಕಿರುತೆರೆಗೆ ಮತ್ತೆ ಎಂಟ್ರಿ ಕೊಟ್ಟ ʻಗಾಳಿಪಟʼ ಖ್ಯಾತಿಯ ʻನೀತುʼ!

Kannada Serials
ಕಿರುತೆರೆ9 months ago

Kannada Serials TRP: ನಾಲ್ಕನೇ ಸ್ಥಾನಕ್ಕೆ ಕುಸಿತ ಕಂಡ ʻಸೀತಾ ರಾಮʼ; ಟಿಆರ್‌ಪಿ ರೇಸ್‌ಗೆ ʻಭಾಗ್ಯಲಕ್ಷ್ಮಿʼ ಬ್ಯಾಕ್‌!

Kannada Serials
ಕಿರುತೆರೆ9 months ago

Kannada Serials TRP: ಟಿಆರ್‌ಪಿಯಲ್ಲಿ ʻಭಾಗ್ಯಲಕ್ಷ್ಮೀʼ ಹವಾ; ʻಪುಟ್ಟಕ್ಕನ ಮಕ್ಕಳುʼ ಧಾರಾವಾಹಿಗೆ ಸಂಕಷ್ಟ!

Bigg Boss' dominates TRP; Sita Rama fell to the sixth position
ಕಿರುತೆರೆ8 months ago

Kannada Serials TRP: ಟಿಆರ್‌ಪಿಯಲ್ಲಿ ʻಬಿಗ್ ಬಾಸ್ʼದೇ ಮೇಲುಗೈ; 6ನೇ ಸ್ಥಾನಕ್ಕೆ ಕುಸಿದ ʻಸೀತಾ ರಾಮʼ

geetha serial Dhanush gowda engagement
ಕಿರುತೆರೆ7 months ago

Dhanush Gowda: ಗೀತಾ ಧಾರಾವಾಹಿ ನಟನ ನಿಶ್ಚಿತಾರ್ಥ; ಭವ್ಯಾಳ ಕಮೆಂಟ್‌ ಬಾಕ್ಸ್‌ ಆಫ್‌!

varun
ಕಿರುತೆರೆ8 months ago

Brindavana Serial: ʼಬೃಂದಾವನʼ ಧಾರಾವಾಹಿಯಲ್ಲಿ ದೊಡ್ಡ ಟ್ವಿಸ್ಟ್‌; ಪ್ರಮುಖ ಪಾತ್ರಧಾರಿಯೇ ಬದಲು

Kannada Serials
ಕಿರುತೆರೆ10 months ago

Kannada Serials TRP: ಟಿಆರ್‌ಪಿಯಲ್ಲಿ ಏರಿಕೆ ಕಂಡ ʻಅಮೃತಧಾರೆʼ; ʻಗಟ್ಟಿಮೇಳʼಕ್ಕೆ ನಾಲ್ಕನೇ ಸ್ಥಾನ!

karnataka weather Forecast
ಮಳೆ4 hours ago

Karnataka Weather : ಚಾರಣಪ್ರಿಯರಿಗೆ ಶಾಕ್‌; ಭಾರಿ ಮಳೆಯಿಂದಾಗಿ ಈ ಜಾಗಗಳಿಗೆ ಟ್ರೆಕ್ಕಿಂಗ್‌ ನಿಷೇಧ

Murder case
ಯಾದಗಿರಿ6 hours ago

Murder case : ಯಾದಗಿರಿಯಲ್ಲಿ ಹಸುಗೂಸನ್ನು ಬಾವಿಗೆ ಎಸೆದು ಕೊಂದರು ಹಂತಕರು

karnataka Rain
ಮಳೆ7 hours ago

Karnataka Rain : ಭಾರಿ ಗಾಳಿ- ಮಳೆಗೆ ಹಾರಿದ ಅಂಗಡಿಯ ತಗಡು; ಮಾಗುಂಡಿ-ಬಾಳೆಹೊನ್ನೂರು ಮಾರ್ಗ ಬಂದ್

Food Poisoning
ರಾಯಚೂರು9 hours ago

Food Poisoning : ಮೊರಾರ್ಜಿ ವಸತಿ ಶಾಲೆ ಅವ್ಯವಸ್ಥೆ; ಊಟ ಸೇವಿಸಿದ 25ಕ್ಕೂ ಹೆಚ್ಚು ವಿದ್ಯಾರ್ಥಿಗಳು ಅಸ್ವಸ್ಥ

Wild Animal Attack Elephant attack
ರಾಮನಗರ11 hours ago

Wild Animal Attack : ತೋಟದಲ್ಲಿ ನೀರು ಹಾಯಿಸುತ್ತಿದ್ದವನ ತುಳಿದು ಸಾಯಿಸಿದ ಆನೆ

karnataka Weather Forecast
ಮಳೆ16 hours ago

Karnataka Weather : ಕರಾವಳಿ, ಮಲೆನಾಡಿನಲ್ಲಿ ಇಂದು ನಾನ್‌ ಸ್ಟಾಪ್‌ ಮಳೆ; ಬೆಂಗಳೂರಲ್ಲಿ ಹೇಗೆ?

karnataka Weather Forecast
ಮಳೆ1 day ago

Karnataka Weather: ಧಾರಾಕಾರ ಮಳೆಗೆ ಜನರ ಒದ್ದಾಟ- ಸೇತುವೆಗಳು ಮುಳುಗಿ ಪರದಾಟ; ಶಾಲಾ-ಕಾಲೇಜುಗಳಿಗೆ ರಜೆ

Lovers Fighting
ಚಿಕ್ಕಬಳ್ಳಾಪುರ1 day ago

Lovers Fighting: ಪ್ರೀತಿಸಿ ಕೈಕೊಟ್ಟವನಿಗೆ ನಡುರಸ್ತೆಯಲ್ಲೇ ಚಳಿ ಬಿಡಿಸಿದ ಗರ್ಭಿಣಿ

Medical negligence
ದಾವಣಗೆರೆ1 day ago

Medical negligence: ಸಿಸೇರಿಯನ್ ಮಾಡುವಾಗ ಶಿಶುವಿನ ಮರ್ಮಾಂಗವನ್ನೇ ಕತ್ತರಿಸಿ ಸಾಯಿಸಿದ ವೈದ್ಯ!

karnataka rain
ಮಳೆ1 day ago

Karnataka Rain: ಮಳೆಗೆ ಮನೆಗಳಿಗೆ ನುಗ್ಗುತ್ತಿವೆ ಹಾವುಗಳು! ಕುಸಿದು ಬಿತ್ತು ಮನೆಗಳು

ಟ್ರೆಂಡಿಂಗ್‌